೧೧

೦೦೦ ಸೂ ರಾಯ ...{Loading}...

ಸೂ. ರಾಯ ರಿಪುರವಿರಾಹು ಪಾಂಡವ
ರಾಯ ಸೇನಾಜಲಧಿ ವಡಬನ
ಜೇಯ ರವಿನಂದನನು ಗೆಲಿದನು ಧರ್ಮನಂದನನ

೦೦೧ ಮಗನ ತೊಲಗಿಸಿ ...{Loading}...

ಮಗನ ತೊಲಗಿಸಿ ಮಿಗುವ ಚೂಣಿಯ
ತೆಗಸಿ ಬಲವಂಕದ ಭಟಾಳಿಗೆ
ಮೊಗದ ಸನ್ನೆಯ ಮಾಡುತೆಡವಂಕದ ಕಟಾಕ್ಷದಲಿ
ತೆಗೆದು ತೂರಂಬಿನಲಿ ಭೀಮನ
ಬಿಗಿದನಾವೆಡೆ ಧರಣಿಯಾವೆಡೆ
ಗಗನವಾವೆಡೆ ದೆಸೆಗಳೆನೆ ತುರುಗಿದವು ಶರಜಾಳ ॥1॥

೦೦೨ ಭೀಮನೋ ನಿಮಿಷಾರ್ಧದಲಿ ...{Loading}...

ಭೀಮನೋ ನಿಮಿಷಾರ್ಧದಲಿ ನಿ
ರ್ನಾಮನೋ ತಡವೇಕೆ ರಿಪುವೇ
ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
ತಾಮಸದ ಭುಲ್ಲವಣೆಯಲಿ ಕುರು
ಭೂಮಿಪನ ಬಲವೊದರಿ ವೈರಿ
ಸ್ತೋಮ ಕಂಡುದು ಪವನತನಯನ ರಣದ ಭಾರಣೆಯ ॥2॥

೦೦೩ ಉಲಿವುತಿದೆ ಕೌರವನ ...{Loading}...

ಉಲಿವುತಿದೆ ಕೌರವನ ಸೇನಾ
ಜಲಧಿ ಹರುಷದಲಿತ್ತಲನಿಲಜ
ನಳುಕದೊಬ್ಬನೆ ಕಾದುತೈದನೆ ಕರ್ಣನೊಡನೆನುತ
ತಳಿತ ಧವಳಚ್ಛತ್ರ ಚಮರಾ
ವಳಿಯ ಮಧ್ಯದಲವನಿಪತಿ ನಿಜ
ಬಲಸಹಿತ ನೂಕಿದನು ಬಹುವಿಧವಾದ್ಯ ರಭಸದಲಿ ॥3॥

೦೦೪ ಒನ್ದು ಕಡೆಯಲಿ ...{Loading}...

ಒಂದು ಕಡೆಯಲಿ ಭೀಮ ಸಾತ್ಯಕಿ
ಯೊಂದು ಕಡೆಯಲಿ ನಕುಳ ದ್ರೌಪದ
ರೊಂದು ಕಡೆಯಲಿ ಚೇಕಿತಾನ ಶಿಖಂಡಿ ಶೃಂಜಯರು
ಒಂದು ಕಡೆ ಸಹದೇವನೀ ಪರಿ
ಹಿಂದೆ ಮುಂದಿಕ್ಕೆಲದೊಳೀತನ
ಸಂದಣಿಸಿ ಮುತ್ತಿದರು ಮುಕ್ಕುರಿಕಿತ್ತು ರಿಪುಸೇನೆ ॥4॥

೦೦೫ ರಾಯದಳವುಬ್ಬೆದ್ದುದೋ ಪಡಿ ...{Loading}...

ರಾಯದಳವುಬ್ಬೆದ್ದುದೋ ಪಡಿ
ನಾಯಕರನಪ್ಪಳಿಸುವೆನು ರಿಪು
ವಾಯುಜನ ಗಾಢಣೆಯ ಗರ್ವಗ್ರಹವ ಕಳಚುವೆನು
ರಾಯಕೌರವ ಸಹಿತ ನೀವ್ ನಿ
ಮ್ಮಾಯತದಲಿರಿಯೆನುತ ಸಾರದ
ಸಾಯಕದ ಸರಿವಳೆಯ ಸುರಿದನು ಭಾನುಸುತ ಮುಳಿದು ॥5॥

೦೦೬ ಧನುವಿನಲಿ ಸಾತ್ಯಕಿಯ ...{Loading}...

ಧನುವಿನಲಿ ಸಾತ್ಯಕಿಯ ಮಾದ್ರೀ
ತನುಜರನು ತೇರಿನಲಿ ದ್ರುಪದನ
ತನಯನನು ಸಾರಥಿಗಳಲಿ ಜೋಡಿನಲಿ ಪವನಜನ
ಬಿನುಗರವರವರಂಗದಲಿ ಕೈ
ಮನವ ಖಂಡಿಸಿ ಸಕಲ ರಿಪುಸಾ
ಧನವನೊಬ್ಬನೆ ಕರ್ಣ ಗೆಲಿದನು ನೃಪತಿ ಕೇಳ್ ಎಂದ ॥6॥

೦೦೭ ಮುನ್ದುಗೆಟ್ಟುದು ದೊರೆಗಳೆನೆ ...{Loading}...

ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಶೃಂಜಯ ಮತ್ಸ್ಯ ಕೈಕೆಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ ॥7॥

೦೦೮ ಒದೆವ ಮನ್ದರವನು ...{Loading}...

ಒದೆವ ಮಂದರವನು ತರಂಗದ
ಲುದಧಿ ಹೊಯ್ವಂದದಲಿ ಹೊಕ್ಕವು
ಕುದುರೆ ತೂಳಿದವಾನೆ ಕವಿದರು ರಥಿಕರೊಳಬಿದ್ದು
ಒದರಿ ವಿವಿಧಾಯುಧದ ಕಾಲಾ
ಳೊದಗಿ ಕೈದೋರಿಸಿದರಿನಿಬರ
ಸದೆದನೊಬ್ಬನ ಕರ್ಣ ಕೆದರಿದನಾ ಮಹಾಬಲವ ॥8॥

೦೦೯ ಬೀಳುವಮ್ಬಿನ ಹೊಯ್ವ ...{Loading}...

ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ತೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ ॥9॥

೦೧೦ ತುರಗ ರಾವ್ತರಿಗವರ ...{Loading}...

ತುರಗ ರಾವ್ತರಿಗವರ ಖಡ್ಗಕೆ
ಕರಿಗೆ ಜೋಧರಿಗವರ ಶಸ್ತ್ರಕೆ
ವರ ರಥಕೆ ಸಾರಥಿಗೆ ರಥಿಕರ ಚಾಪ ಮಾರ್ಗಣಕೆ
ಸರಳನೊಂದೊಂದೆಚ್ಚು ನೆರೆ ಕ
ತ್ತರಿಸಿದನು ಕಾಲಾಳನೊಂದೇ
ಸರಳಲೈನೂರಳಿಯೆ ಕೊಂದನು ಕರ್ಣ ಪರಬಲವ ॥10॥

೦೧೧ ನಕುಳನನು ಹದಿನೆಣ್ಟರಲಿ ...{Loading}...

ನಕುಳನನು ಹದಿನೆಂಟರಲಿ ಸಾ
ತ್ಯಕಿಯನೈದಂಬಿನಲಿ ಸಹದೇ
ವಕನನೊಂಬತ್ತರಲಿ ಭೀಮನನೆಂಟು ಕೋಲಿನಲಿ
ಸಕಲ ರಥಿಕರನೆಲ್ಲ ಶತ ಸಾ
ಯಕದಲೊರಗಿಸಿ ಚೈದ್ಯ ಪಾಂಚಾ
ಲಕರ ಥಟ್ಟಿನೊಳೊಕ್ಕಲಿಕ್ಕಿದನರಸ ಕೇಳ್ ಎಂದ ॥11॥

೦೧೨ ಅದು ಬಳಿಕ ...{Loading}...

ಅದು ಬಳಿಕ ಹೇರಾಳ ದಳವಾಂ
ತುದು ಮಹಾರಥರೆಸುಗೆಯಲಿ ಹೂ
ಳಿದುದು ನಭ ನುಗ್ಗಾಯ್ತು ನೆಲ ಚತುರಂಗ ಪದಹತಿಗೆ
ಕುದುರೆ ಕರಿ ತೇರಾಳ ತೆಕ್ಕೆಯ
ಹೊದರಿನಲಿ ಮುಳುಗಿದನು ನಿನ್ನವ
ನದುಭುತವನೇನೆಂಬೆನೈ ಧೃತರಾಷ್ಟ್ರ ಕೇಳ್ ಎಂದ ॥12॥

೦೧೩ ತಾರಕನ ಥಟ್ಟಿನಲಿ ...{Loading}...

ತಾರಕನ ಥಟ್ಟಿನಲಿ ಹರನ ಕು
ಮಾರ ಹೊಕ್ಕಂದದಲಿ ವೃತ್ರನ
ತಾರಕಾಕ್ಷನ ಜೋಡಿಯನು ಜಂಭಾರಿ ತರಿವಂತೆ
ಆರಿದೆಚ್ಚನು ಶಿವಶಿವಾ ಕಾ
ಮಾರಿಯೋ ಪಾಂಡವ ಬಲದ ಹೆ
ಮ್ಮಾರಿಯೋ ನಿನ್ನಾನೆ ಸವರಿತು ವೈರಿಭಟವನವ ॥13॥

೦೧೪ ವಾಘೆ ಸರಿಸದ ...{Loading}...

ವಾಘೆ ಸರಿಸದ ರಾವುತೋ ದೃಢ
ವಾಘೆಯೆನುತೇರಿದ ಹಯೌಘದ
ಮೇಘಪಟಲದ ಪಾಡೆ ಫಡಯೆನೆ ಹೊಕ್ಕ ಗಜದಳದ
ಲಾಘವದ ಲುಳಿಸಾರತನದ ಶ
ರೌಘ ರಚನೆಯ ರಥಿಕಯೂಥ
ಶ್ಲಾಘೆಗಳ ನಾ ಕಾಣೆನೊಂದು ವಿಘಳಿಗೆ ಮಾತ್ರದಲಿ ॥14॥

೦೧೫ ಬೇರೆ ಲಗ್ಗೆಯ ...{Loading}...

ಬೇರೆ ಲಗ್ಗೆಯ ಮಾಡಿ ಭೋಯೆಂ
ದೇರಿ ಹಳಚುವ ರಭಸ ಕಿವಿಗಳ
ಕೀರಿದುದು ಬಳಿಕವರು ಕರ್ಣನ ತಾಗಿದಾಕ್ಷಣಕೆ
ತಾರು ಥಟ್ಟಿಗೆ ಹರೆದು ರೌದ್ರವ
ಹಾರಿದವು ಕಣ್ಣುಗಳು ರಿಪುಬಲ
ದೇರ ನಾಲಗೆ ಹೊಗಳಲಮ್ಮದು ನೃಪತಿ ಕೇಳ್ ಎಂದ ॥15॥

೦೧೬ ಆಳ ಕೊನ್ದನು ...{Loading}...

ಆಳ ಕೊಂದನು ಲಕ್ಕವನು ತುರ
ಗಾಳಿಯನು ನಾಲ್ಸಾವಿರವ ಶುಂ
ಡಾಲ ಘಟೆಗಳ ತುಂಡಿಸಿದನೊಂದೆರಡು ಸಾವಿರವ
ಮೌಳಿಮಣಿಯಲಿ ಹೊಳೆಹೊಳೆವ ನರ
ಪಾಲರನು ನಾನೂರರೋಲೆಯ
ಸೀಳಿದನಲೈ ಚೈದ್ಯ ಪಾಂಚಾಲರಲಿ ಕಲಿಕರ್ಣ ॥16॥

೦೧೭ ತೆರಳಿದನು ಸಹದೇವ ...{Loading}...

ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥವ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ ॥17॥

೦೧೮ ಇಟ್ಟಣಿಸಿಕೊಣ್ಡೊತ್ತಿ ರಾಯನ ...{Loading}...

ಇಟ್ಟಣಿಸಿಕೊಂಡೊತ್ತಿ ರಾಯನ
ಥಟ್ಟ ಹೊಕ್ಕನು ಜರುಹಿದನು ಜಗ
ಜಟ್ಟಿ ಜೋಡಿಸಿದಂಗಸುಯ್ದಾನದ ಮಹಾರಥರ
ಕೆಟ್ಟ ದಳವನಘಾಟದವರೊಳ
ಗಿಟ್ಟು ಕೊಳ್ಳರದೇನು ರಾಯನ
ಮುಟ್ಟುತಿದಲಾ ರೌದ್ರರಣವೆನುತೆಚ್ಚನಾ ಕರ್ಣ ॥18॥

೦೧೯ ಕುರುಬಲದ ಸುಮ್ಮಾನ ...{Loading}...

ಕುರುಬಲದ ಸುಮ್ಮಾನ ಕಹಳೆಯ
ಬಿರಿವ ನಿಸ್ಸಾಳದ ನೃಪಾಲರ
ಹರುಷ ಪುಳಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ
ಅರಿಬಲದೊಳಕಟಕಟ ವಿಧಿ ನಿ
ಷ್ಕರುಣಿ ಹಾಹಾಯೆಂಬ ರವದ
ಬ್ಬರದ ನಿಬ್ಬರ ಕೇಳಲಾದುದು ನೃಪತಿ ಕೇಳ್ ಎಂದ ॥19॥

೦೨೦ ಎಲೆಲೆ ರಾಯನ ...{Loading}...

ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾರಾಯ ಸೋನೆಯಲಿ ॥20॥

೦೨೧ ಕೊಮ್ಬನೇ ಬಳಿಕೀ ...{Loading}...

ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳ್ ಎಂದ ॥21॥

೦೨೨ ರಾಯದಳದೊಳು ಮಡಿವ ...{Loading}...

ರಾಯದಳದೊಳು ಮಡಿವ ಕರಿವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ ॥22॥

೦೨೩ ತರಿದ ಹೊಸ ...{Loading}...

ತರಿದ ಹೊಸ ಕುಮ್ಮರಿಯೊಳಗೆ ರಥ
ಹರಿಯಬಲ್ಲುದೆ ಕರ್ಣ ನಾವಿಂ
ದರಿದೆವೈ ನೀ ನೆಟ್ಟನೋಲೆಯಕಾರನೆಂಬುದನು
ಇರಿತಕಿವರಾರಿದಿರಹರು ನಿ
ನ್ನುರವಣಿಯನಾರಾನುವರು ಮ
ತ್ಸರವ ಬಿಸುಟೆನು ಪೂತು ರವಿಸುತ ಎಂದನಾ ಶಲ್ಯ ॥23॥

೦೨೪ ಕಾಲಿಡುವಡಿದು ದುರ್ಗವೆನುತಾ ...{Loading}...

ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ ॥24॥

೦೨೫ ಗಳಹದಿರು ಕೆಲಬಲದ ...{Loading}...

ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದೆ ಬೆರತೆಯಲ
ಉಲುಕಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾ ಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ ॥25॥

೦೨೬ ಆಲಿಕಲುಗಳು ಸಿಡಿಲಮರಿಗಳ ...{Loading}...

ಆಲಿಕಲುಗಳು ಸಿಡಿಲಮರಿಗಳ
ಮೇಲುವಾಯ್ದವು ಗಡ ಯುಧಿಷ್ಠಿರ
ನಾಳುತನದಲಿ ನಮ್ಮ ಜರೆದನು ಶಲ್ಯ ನೋಡೆನುತ
ಬೋಳೆಯಂಬೈದರಲಿ ರಾಯನ
ತೋಳನೆಚ್ಚನು ಜಡಿವ ಜೋಡಿನ
ಮೇಲೆ ಮುರಿದವು ಬಾಣ ನೃಪ ಮಗುಳೆಚ್ಚನಿನಸುತನ ॥26॥

೦೨೭ ಬಲುಹು ಕೈಗಳಲುಣ್ಟೆ ...{Loading}...

ಬಲುಹು ಕೈಗಳಲುಂಟೆ ತೋರುವು
ದುಲಿವ ಹೊತ್ತದು ಬೇರೆನುತ ಮುಂ
ಕೊಳಿಸಿ ಕರ್ಣನ ಶರವ ಕಡದೀರೇಳು ಬಾಣದಲಿ
ಅಳುಕದೆಚ್ಚನು ತೇರು ತುರಗಾ
ವಳಿಯ ಧವಳಚ್ಛತ್ರ ಚಮರಿಯ
ನಿಳುಹಿದನು ಧ್ವಜದಂಡ ಸಹಿತೈವತ್ತು ಬಾಣದಲಿ ॥27॥

೦೨೮ ಬೇಗೆವರಿ ಬೆಳುದಿಙ್ಗಳಲಿ ...{Loading}...

ಬೇಗೆವರಿ ಬೆಳುದಿಂಗಳಲಿ ನಮ
ಗೀಗ ತೋರಿತಲಾ ಎನುತ ಮುರಿ
ದಾಗಳೇ ಸಂಧಿಸಿದ ತನ್ನಯ ಹಯ ರಥಾದಿಗಳ
ಈಗಲರಿಯಾದರೆಯೆನುತ ಕಿವಿ
ಗಾಗಿ ತೆಗೆದನು ನಿಶಿತಬಾಣವ
ತೂಗಿ ಬಿಟ್ಟನು ಬೀಳೆನುತ ಕಲಿಕರ್ಣ ಬೊಬ್ಬಿರಿದ ॥28॥

೦೨೯ ಅರಸ ಕೇಳಾಶ್ಚರಿಯವನು ...{Loading}...

ಅರಸ ಕೇಳಾಶ್ಚರಿಯವನು ರಿಪು
ಶರವನೆಡೆಯಲಿ ಕಡಿದು ರವಿಸುತ
ನುರವನೆಚ್ಚನು ಧರ್ಮನಂದನನೆಂಟು ಬಾಣದಲಿ
ಬಿರಿಯೆ ಬಲುವಜ್ರಾಂಗಿ ಹಾಯ್ದವು
ಗರಿಸಹಿತಲುಚ್ಚಳಿಸಿ ನೆಲದಲಿ
ಸರಳು ನೆಟ್ಟವು ಕರ್ಣ ನನೆದನು ರುಧಿರಧಾರೆಯಲಿ ॥29॥

೦೩೦ ತೂಗುವೊಡಲರೆಮುಚ್ಚುಗಙ್ಗಳ ...{Loading}...

ತೂಗುವೊಡಲರೆಮುಚ್ಚುಗಂಗಳ
ಸೂಗುರಿಸುವಂಗದಲಿ ತಾಳದ
ಮೂಗಿನುಸುರಿನ ಮೂರ್ಛೆಯಲಿ ರವಿಸೂನು ಮೈಮರೆದ
ಆಗಳಂತಿರೆ ಹೊರೆಯವರ ಕೈ
ಲಾಗುಮದ್ದಿನ ಕಮಳಜಲ ಮಂ
ತ್ರಾಗಮದಲೆಚ್ಚತ್ತನೊಂದೇ ನಿಮಿಷದಲಿ ಕರ್ಣ ॥30॥

೦೩೧ ಬಸಿವ ರಕುತವ ...{Loading}...

ಬಸಿವ ರಕುತವ ತೊಳೆತೊಳೆದು ಮಂ
ತ್ರಿಸಿದ ಸಲಿಲವ ಮುಕ್ಕುಳಿಸಿಯುಗು
ಳ್ದಸಮ ಸಾಹಸಿ ಕೊಂಡ ವರ ಕರ್ಪುರದ ವೀಳೆಯವ
ಮುಸುಡ ದುಗುಡದ ತನ್ನ ಸೇನಾ
ಪ್ರಸರಕಭಯವನಿತ್ತು ಮಾರಿಯ
ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ ॥31॥

೦೩೨ ಮನ್ದಿ ಕವಿಯಲಿ ...{Loading}...

ಮಂದಿ ಕವಿಯಲಿ ಘಾಯ ತಾಗಿದ
ಹಂದಿಯೋ ರಾಧೇಯನರಸನ
ಮುಂದುಗೆಡಿಸದೆ ಮಾಣನೋ ತೆಗೆ ನೂಕು ನೂಕೆನುತ
ಸಂದಣಿಸಿತತಿರಥರು ರಾಯನ
ಮುಂದೆ ತಲೆವರಿಗೆಯಲಿ ಸೇನಾ
ವೃಂದ ತುಡುಕಿತು ಕುಪಿತಕಾಳೋರಗನ ನಾಲಗೆಯ ॥32॥

೦೩೩ ರಾಯನಳಲಿಗರಿವರಘಾಟದ ನಾಯಕರು ...{Loading}...

ರಾಯನಳಲಿಗರಿವರಘಾಟದ
ನಾಯಕರು ಕಾಣಿರೆ ಸಮೀರನ
ಲಾಯದಲಿ ಲಂಬಿಸಿದವಕಟ ತುಷಾರ ವಾಜಿಗಳು
ಆಯಿತದು ತಪ್ಪೇನೆನುತ ಕ
ರ್ಣಾಯತಾಸ್ತ್ರದಿ ಹರೆಗಡಿದು ರಿಪು
ರಾಯನಲ್ಲಿಗೆ ರಥವ ಬಿಟ್ಟನು ಸೂಠಿಯಲಿ ಕರ್ಣ ॥33॥

೦೩೪ ಹೊಟ್ಟ ನೂಕಿ ...{Loading}...

ಹೊಟ್ಟ ನೂಕಿ ವೃಥಾಹವದ ಜಗ
ಜಟ್ಟಿ ನೀ ಹೊರಕಾಲುಗೊಂಡರೆ
ಬಿಟ್ಟೆನೇ ತಾ ಕರ್ಣನರಿಯಾ ಕಾಯ್ದುಕೊಳ್ಳೆನುತ
ಕಟ್ಟಳವಿಯಲಿ ವೈರಿ ರಾಯನ
ನಿಟ್ಟಳಿಸಿ ಮುರಿಯೆಸುತ ಬರಲಡ
ಗಟ್ಟಿ ತಡೆದರು ಮತ್ತೆ ಸಕಲ ಮಹಾರಥರು ಭಟನ ॥34॥

೦೩೫ ನಿಲ್ಲು ಸೈರಿಸು ...{Loading}...

ನಿಲ್ಲು ಸೈರಿಸು ಸೂತಸುತ ಜವ
ನಲ್ಲಿ ಮೇಳವೆ ಜೀವರಿಗೆ ಭೂ
ವಲ್ಲಭನ ಸಮಜೋಳಿಯೇ ನೀ ಸಾರು ಸಾರೆನುತ
ಚೆಲ್ಲಿದರು ಕೂರಂಬುಗಳನೆಡ
ದಲ್ಲಿ ಬಲದಲಿ ಹಿಂದೆ ಮುಂದೆಸೆ
ಝಲ್ಲರಿಯ ಶರಜಾಳ ಝೊಂಪಿಸಿತಬುಜಸಖಸುತನ ॥35॥

೦೩೬ ತುರಗ ದಳವೊನ್ದೆಸೆಯಲೌಕಿತು ...{Loading}...

ತುರಗ ದಳವೊಂದೆಸೆಯಲೌಕಿತು
ಕರಿಘಟೆಗಳೊಂದೆಸೆಯಲತಿರಥ
ರುರವಣೆಯ ಪದಹತಿಯ ಧೂಳಿಯ ಮಬ್ಬಿನುಬ್ಬರದ
ಧರಧುರವದೊಂದೆಸೆ ಪದಾತಿಯ
ಹೊರಳಿಗಳದೊಂದೆಸೆ ವಿಘಾತಿಸಿ
ತರಿಭಟನನೇನೆಂಬೆನೈ ಧೃತರಾಷ್ಟ್ರ ಕೇಳ್ ಎಂದ ॥36॥

೦೩೭ ಮುಸುಕುವುದು ಮುಗಿಲೊಮ್ಮೆ ...{Loading}...

ಮುಸುಕುವುದು ಮುಗಿಲೊಮ್ಮೆ ಸೂರ್ಯನ
ಮಸಕ ಮಿಗಿಲಹುದೊಮ್ಮೆ ಮೇಘ
ಪ್ರಸರಕೊಳಗಹನೊಮ್ಮೆ ರವಿ ತೋರುವನು ಮತ್ತೊಮ್ಮೆ
ಅಸಮಸಮರದೊಳೀತನಾ ಪರಿ
ಮಸುಳುವನು ತೋರುವನು ತೊಡೆವನು
ದೆಸೆಗೆಡಿಸುವನು ಬಳಿಕ ಮುಳಿಸಿನೊಳಾ ಮಹಾರಥರ ॥37॥

೦೩೮ ಬಿದ್ದುದೈನೂರಾನೆ ರುಧಿರದೊ ...{Loading}...

ಬಿದ್ದುದೈನೂರಾನೆ ರುಧಿರದೊ
ಳದ್ದರಿನ್ನೂರರಸು ಮಕ್ಕಳು
ಕದ್ದನಂತಕನಾರು ಸಾವಿರ ಕುದುರೆಯುಸುರುಗಳ
ಬಿದ್ದವರನೊಡೆತುಳಿದು ಮೇಲು
ಬ್ಬೆದ್ದು ಕವಿಕವಿದಾಳುಕುದುರೆಯ
ಬಿದ್ದಿನಲಿ ಬೇಸರಿಸಿದನು ಪಿತೃಪತಿಯ ಪರಿಜನವ ॥38॥

೦೩೯ ಆಳ ನೋಯಿಸಿ ...{Loading}...

ಆಳ ನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ ॥39॥

೦೪೦ ಪೂತು ಮಝರೇ ...{Loading}...

ಪೂತು ಮಝರೇ ಭೀಮ ಸಾತ್ಯಕಿ
ಯಾತರೋ ತಮ್ಮೊಡೆಯನಿದಿರಲಿ
ಘಾತಕರ ಘಟ್ಟಿಸುವೆನೀಗಳೆ ಶಲ್ಯ ನೋಡೆನುತ
ಭೂತನಾಥನ ಭಾಳನಯನೋ
ದ್ಧೂತಧೂಮಧ್ವಜ ಶಿಖಾ ಸಂ
ಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ ॥40॥

೦೪೧ ಪವನಸುತ ಮುಖದಿರುಹಿದನು ...{Loading}...

ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ ॥41॥

೦೪೨ ಅಞ್ಜುವೆವು ನಿಮಗರಸರೇ ...{Loading}...

ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ನಿಮಗೀ
ಮಂಜರನ ಪಡಿಮುಖಕೆ ನಿಲುವುದು ನೀತಿಯೇ ನಿಮಗೆ
ಭಂಜನೆಗೆ ಬಲುಹುಳ್ಳಡೆಯು ನಿಮ
ಗಂಜುವರು ಗುರು ಭೀಷ್ಮರಾ ಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ ॥42॥

೦೪೩ ಕಲಿತನವೆ ಹೃದಯದಲಿ ...{Loading}...

ಕಲಿತನವೆ ಹೃದಯದಲಿ ಕಾರ್ಯದ
ಬಳಕೆ ಕೈಯಲಿ ನಡುವೆ ನಾಲಗೆ
ಯುಲಿದಡೇನಗ್ಗಳಿಕೆಯಹುದೋ ವೀರ ಸಿರಿಯಹುದೊ
ಕಲಿತನದ ಕೆಚ್ಚುಳ್ಳಡೆಸುಗೆಯ
ಸುಳಿವ ತೋರಾದರೆಯೆನುತ ನೃಪ
ತಿಲಕ ಬತ್ತಳಿಕೆಯಲಿ ಸೆಳೆದನು ಹೂಡಿದನು ಶರವ ॥43॥

೦೪೪ ರೂಪಿದೊಳ್ಳಿತು ರೇಖೆಯುಚಿತ ...{Loading}...

ರೂಪಿದೊಳ್ಳಿತು ರೇಖೆಯುಚಿತ ಕ
ಳಾಪವತಿ ಹಸನಾಯ್ತು ಬಾಣ
ಸ್ಥಾಪನಕೆ ಮೆಚ್ಚಿದೆನು ಮೇಲಣ ತೂಕದಾಳವನು
ಈ ಪರಿಯಲೆಂದರಿಯೆನಹುದೈ
ಚಾಪವಿದ್ಯಾಪಾತ್ರವಿಂದವ
ನೀಪತಿಯಲಾ ಪೂತು ಮಝ ಎಂದೆಚ್ಚನಾ ಕರ್ಣ ॥44॥

೦೪೫ ಗಣ್ಡು ಗರ್ವವನೆಮ್ಮೊಡನೆ ...{Loading}...

ಗಂಡು ಗರ್ವವನೆಮ್ಮೊಡನೆ ಕೋ
ದಂಡದಲಿ ಮೆರೆ ಸಾಕು ನಿನ್ನಯ
ಭಂಡವಿದ್ಯವ ಮೆರೆವಡದಲಾ ಕೌರವಾಸ್ಥಾನ
ದಿಂಡುದರಿವೆನು ಸೈರಿಸೆನುತವ
ಖಂಡಶರನಿಕರದಲಿ ರಿಪುಮಾ
ರ್ತಂಡತನಯನನೆಚ್ಚು ಬೊಬ್ಬಿರಿದನು ಮಹೀಪಾಲ ॥45॥

೦೪೬ ಇರಿತ ಮುನ್ನವೊ ...{Loading}...

ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ ॥46॥

೦೪೭ ಕಾಯಲಾಪರೆ ಕರೆದುಕೊಳ್ಳಾ ...{Loading}...

ಕಾಯಲಾಪರೆ ಕರೆದುಕೊಳ್ಳಾ
ವಾಯುಜನನರ್ಜುನನ ನಕುಲನ
ನಾಯಕರೊಳುಬ್ಬಾಳುಗಳನತಿರಥಮಹಾರಥರ
ಸಾಯಲಂಜುವಡಿಳುಹು ಧನುವನು
ನೋಯಿಸೆನು ನುಡಿಸಿದಡೆ ಕೌರವ
ರಾಯನಾಣೆ ನೃಪಾಲ ಕೇಳೆನುತೆಚ್ಚನಾ ಕರ್ಣ ॥47॥

೦೪೮ ಅರಸನೆಚ್ಚನು ಕರ್ಣ ...{Loading}...

ಅರಸನೆಚ್ಚನು ಕರ್ಣ ಶರವನು
ಪರಿಹರಿಸಿ ಮಗುಳೆಚ್ಚನೀತನು
ಧರಣಿಪನನವನೀಶನೆಚ್ಚನು ಹಗೆಯ ರಥ ಹಯವ
ಮರಳಿ ಶಲ್ಯನನೆಚ್ಚಡೀತನ
ಹೊರೆಯವರನೆಚ್ಚನು ರಥಾಂಗವ
ಹುರುಳುಗೆಡಿಸಿ ಮಹೀಶನೆಚ್ಚನು ಭಾನುನಂದನನ ॥48॥

೦೪೯ ಅಕಟ ಚನ್ದ್ರಿಕೆ ...{Loading}...

ಅಕಟ ಚಂದ್ರಿಕೆ ಗೆದ್ದುದೋ ಪಾ
ವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣ ನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿ ನೋಡಾದಡೆನುತೆಚ್ಚನು ಮಹೀಪತಿಯ ॥49॥

೦೫೦ ಏನ ಹೇಳುವೆನವನಿಪತಿ ...{Loading}...

ಏನ ಹೇಳುವೆನವನಿಪತಿ ನಿ
ನ್ನಾನೆಯಗ್ಗಳಿಕೆಯನು ಪಾಂಡವ
ಸೇನೆ ಮಗುಳಡ್ಡವಿಸಿತವನೀಶನ ರಥಾಗ್ರದಲಿ
ಆನೆ ಹೊಕ್ಕವು ಬದ್ದರದ ಬಲು
ವಾನಿಸದ ಬಂಡಿಗಳನೊಡ್ಡಿದ
ರಾ ನಿರಂತರ ಶರವ ತಡೆದರು ತೆಕ್ಕೆವರಿಗೆಯಲಿ ॥50॥

೦೫೧ ಕಡಿದು ಬಿಸುಟನು ...{Loading}...

ಕಡಿದು ಬಿಸುಟನು ತೆಕ್ಕೆವರಿಗೆಯ
ಗಡಣವನು ಬದ್ದರದ ಬಂಡಿಗ
ಳಡಗಿದವು ನಿಜಸೇನೆಸಹಿತರುಣಾಂಬುಪೂರದಲಿ
ಅಡಿಗಡಿಗೆ ಮುಕ್ಕುರಿಕಿ ತನ್ನನು
ತಡೆವ ರಿಪುಚತುರಂಗವಿಪಿನದ
ಕಡಿತ ತೀರಿತು ಮತ್ತೆ ರಾಯನ ಕೆಣಕಿದನು ಕರ್ಣ ॥51॥

೦೫೨ ಕಾವನಾರೈ ಕರ್ಣ ...{Loading}...

ಕಾವನಾರೈ ಕರ್ಣ ಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರ ಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆಮ
ಗಾವುದಂತರವತಿಬಳರು ನೀವೆನುತ ತೆಗೆದೆಚ್ಚ ॥52॥

೦೫೩ ಅರಿಯ ಶರಹತಿಗಡ್ಡವರಿಗೆಯ ...{Loading}...

ಅರಿಯ ಶರಹತಿಗಡ್ಡವರಿಗೆಯ
ನರಸನಭಿಮುಖಕೊಡ್ಡಿದರು ರಥ
ತುರಗವನು ಚಪ್ಪರಿಸಿ ಸಾರಥಿ ನೂಕಿದನು ರಥವ
ಧರಣಿಪತಿ ಕೇಳೈದು ಶರದಲಿ
ಹರಿಗೆಯನು ಮುರಿಯೆಚ್ಚು ಸೂತನ
ಶಿರವನಿಳುಹಿದಡೊದೆದುಕೊಂಡುದು ಮುಂಡ ಸಾರಥಿಯ ॥53॥

೦೫೪ ಕೆದರಿದನು ಮಾರ್ಗಣೆಯೊಳರಸನ ...{Loading}...

ಕೆದರಿದನು ಮಾರ್ಗಣೆಯೊಳರಸನ
ಹೊದಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯಲೌಕಿದ ಬಾಣ ಬೆನ್ನಲಿ
ತುದಿಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ ॥54॥

೦೫೫ ಅರೆಮರಳುವಾಲಿಗಳ ಹೆಗಲಲಿ ...{Loading}...

ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬ ಕಿತ್ತರು ಬಹಳ ಶೋಕದಲಿ ॥55॥

೦೫೬ ಮನ್ತ್ರಜಲದಲಿ ತೊಳೆದು ...{Loading}...

ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತಶತ
ತಂತ್ರನೋ ಭೂಪತಿ ವಿರೋದಿಭ
ಟಾಂತ್ರಭಂಜನನೀಗಳೆಂದುದು ರಾಯನಾಪ್ತಜನ ॥56॥

೦೫೭ ಸಿಕ್ಕಿದೆಯಲಾ ...{Loading}...

ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವ ರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾ ಎಂದನಾ ಕರ್ಣ ॥57॥

೦೫೮ ಸಾಳುವನ ಕೂಡರಗಿಳಿಗೆ ...{Loading}...

ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞ ನಾದಡೆ
ಸೋಲುವುದೆ ವರ ಶಸ್ತ್ರವಿದ್ಯಾ ಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ ॥58॥

೦೫೯ ಶ್ರುತಿರಹಸ್ಯವನರಿವ ಧರ್ಮ ...{Loading}...

ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥ ವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ ॥59॥

೦೬೦ ವರ ನದಿಗಳಲಿ ...{Loading}...

ವರ ನದಿಗಳಲಿ ಮುಳುಗಿ ಮೂಗಿನ
ಬೆರಳಲೂಧ್ರ್ವಶ್ವಾಸ ಪವನನ
ಧರಿಸಿ ಕಾಲತ್ರಯಜಪಾನುಷ್ಠಾನಹೋಮದಲಿ
ಪರಮಋಷಿ ಮಧ್ಯದಲಿ ನೀವಾ
ಚರಿಸುವುದು ಬಿಸುಟುಗಿವಡಾಯ್ದದ
ಹೊರಳಿಗಿಡಿಗಳ ಹೊದರೊಳಾಚರಿಸುವರೆ ನೀವೆಂದ ॥60॥

೦೬೧ ಕೊಲುವಡವ್ವೆಗೆ ಕೊಟ್ಟ ...{Loading}...

ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೆಡೆನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ ॥61॥

+೧೧ ...{Loading}...