೦೯

೦೦೦ ಸೂಚನೆ ಸೆಣಸು ...{Loading}...

ಸೂಚನೆ: ಸೆಣಸು ಮಿಗಲೊಳಗೊಳಗೆ ಖತಿಯಲಿ
ಕೆಣಕಿ ಬೈದಾಡಿದರು ಸಮರಾಂ
ಗಣಭಯಂಕರ ಶಲ್ಯಭಾಸ್ಕರಸುತರು ರಥದೊಳಗೆ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಖರೆಯದ ನುಡಿಯನಾಲಿಸಿ
ಕೇಳಿದನು ಕಲಿಶಲ್ಯ ಬೆರಳಲಿ ಮೀಸೆಗಳ ಮುರಿದು
ಹೇಳು ಹೇಳಿನ್ನೊಮ್ಮೆ ಪಾರ್ಥನ
ಹೇಳಿ ತೋರಿಸಲೇನ ಕೊಡುವೆ ನೃ
ಪಾಲಕನ ಪದದಾಣೆ ನುಡಿ ನುಡಿ ಕರ್ಣ ನುಡಿಯೆಂದ ॥1॥

೦೦೨ ಹಾರ ಖಡೆಯವ ...{Loading}...

ಹಾರ ಖಡೆಯವ ಬೇಹ ಗಜಹಯ
ನಾರಿಯರ ಕೊಡಬೇಡ ಪಾರ್ಥನ
ತೋರಿ ಕೊಡುವೆನು ತನಗೆ ಹೇಳದೆ ಬರಿದೆ ಹಲುಗಿರಿದೈ
ಸೈರಿಸೀಗಳೆ ನಿನ್ನ ಕರುಳಿನ
ತೋರಣದ ಬಾಗಿಲಲಿ ವಿಜಯ
ಶ್ರೀರಮಣಿಯನು ತಹ ಕಿರೀಟಿಯ ತೋರಿಸುವೆನೆಂದ ॥2॥

೦೦೩ ಮೊಲನ ಕಾಹಿನ ...{Loading}...

ಮೊಲನ ಕಾಹಿನ ಕಾಡಿನಲಿ ಹೆ
ಬ್ಬುಲಿ ವಿಭಾಡಿಸುವಂತೆ ನರಿಗಳು
ಬಲಿದ ಬೇಲಿಯ ಕದಳಿಯನು ಕಾಡಾನೆ ಹೊಗುವಂತೆ
ದಳವ ಬಗಿದು ಮಹಾರಥರನೊಡೆ
ದುಳಿದು ನಿನ್ನಯ ನಾಲಗೆಯ ಹೆಡ
ತಲೆಯಲುಗಿವರ್ಜುನನನೀಗಳೆ ತೋರಿಸುವೆನೆಂದ ॥3॥

೦೦೪ ಹೊರಗೆ ಕೊಡುವುದನಿತ್ತ ...{Loading}...

ಹೊರಗೆ ಕೊಡುವುದನಿತ್ತ ತಾ ನಾ
ನರಸಿ ತಹೆನರ್ಜುನನನೇತಕೆ
ಬರಿದೆ ಭಟರಿಗೆ ಬಾಯ ಬಿಡುತಿಹೆ ಕರ್ಣ ಖೂಳನಲ
ಅರಸಲೇತಕೆ ಕಾಲ ಮೃತ್ಯುವ
ನರಸುವರೆ ಕಾಲಾಗ್ನಿಯನು ನೀ
ನರಸಲೇಕರ್ಜುನನನೀಗಳೇ ತೋರಿಸುವೆನೆಂದ ॥4॥

೦೦೫ ಆವನೊಬ್ಬನ ಬಿಲ್ಲ ...{Loading}...

ಆವನೊಬ್ಬನ ಬಿಲ್ಲ ಬೊಬ್ಬೆಯ
ಡಾವರದಲೆದೆ ಬಿರಿವುದಹಿತರಿ
ಗಾವನೊಬ್ಬನ ದನಿಗೆ ಬಿರಿವುದು ಧೈರ್ಯಗಿರಿಶಿಖರ
ಆವನೊಬ್ಬನ ಕಂಡರರಿಗಳ
ಜೀವ ತಲೆಕೆಳಕಹುದು ಸುಭಟರ
ದೇವನಾತನು ಪಾರ್ಥ ಬೇಕೇ ತೋರಿಸುವೆನೆಂದ ॥5॥

೦೦೬ ಹಸುಳೆ ನಿದ್ದೆಯ ...{Loading}...

ಹಸುಳೆ ನಿದ್ದೆಯ ಹಾವ ಹೊಯ್ದ್ ಎ-
ಬ್ಬಿಸುವರೇ, ಮೈಮರೆದ ಮಾರಿಯ
ಮುಸುಕನುಗಿವುದು ಬುದ್ಧಿಯೇ ಜೀವಾಭಿಲಾಷರಿಗೆ
ನುಸಿಗಳುರಿಜಾಳಿಗೆಯೊಡನೆ ಝೊಂ
ಪಿಸುವುದುಚಿತವೆ ಕರ್ಣ ಪಾರ್ಥನ
ಘಸಣಿಯೇಕೈ ನಿನಗೆ ಬೇಕೇ ತೋರಿಸುವೆನೆಂದ ॥6॥

೦೦೭ ಗರುಡನೆತ್ತಲು ...{Loading}...

ಗರುಡನೆತ್ತಲು ಕೊಬ್ಬಿದೊಳ್ಳೆಯ
ಮರಿಯದೆತ್ತಲು ಸಿಂಹವೆತ್ತಲು
ನರಿಗಳೆತ್ತಲು ದಿಗಿಭವೆತ್ತಲು ನಾಯಮರಿಯೆತ್ತ
ನರನೊಡನೆ ಸಮದಂಡಿಯೇ ಜಗ
ವರಿಯದೇ ನಿನ್ನಾತನಭ್ಯಂ
ತರವನಕಟಾ ಕರ್ಣ ಸುಡು ನೀ ಕಷ್ಟ ಹೋಗೆಂದ ॥7॥

೦೦೮ ದಿಟಕೆ ಪಾರ್ಥನ ...{Loading}...

ದಿಟಕೆ ಪಾರ್ಥನ ತೋರಿದರೆ ಸಂ
ಕಟವ ಮಾಡದೆ ಮಾಣಲಾಕಟ
ಕಟ ಧನಂಜಯನೆಂದು ಸೋತನು ಹಿಂದೆ ನಿನ್ನೊಡನೆ
ಕುಟಿಲಮತಿ ಗೋಗ್ರಹಣದಲಿ ಲಟ
ಕಟಿಸಿದನಲಾ ಮದುವೆಯೊಳಗು
ಬ್ಬಟೆಯ ಬಿಲ್ಲಿನೊಳೊದಸಿಕೊಂಡವ ಪಾರ್ಥನಹುದೆಂದ ॥8॥

೦೦೯ ನರನ ತೋರಿಸಿದವಗೆ ...{Loading}...

ನರನ ತೋರಿಸಿದವಗೆ ಶತಸಾ
ಸಿರವ ಸೂಸುವೆನೆಂದಲಾ ನಿ
ನ್ನರಸನನು ಗಂಧರ್ವರೆಳೆದೊಯ್ದಂದು ಗಗನದಲಿ
ಅರಸಿಯರು ಸಚಿವರು ಕುಮಾರರು
ಮೊರೆಯಿಡಲು ಫಲುಗುಣನ
ಬಿಡಿಸಿದ ಪರಿಯ ನೀ ನೆರೆ ಕಂಡು ಮರೆವರೆ ಕರ್ಣ ಹೋಗೆಂದ

೦೧೦ ಕಣ್ಡು ಮಾಡುವುದೇನು ...{Loading}...

ಕಂಡು ಮಾಡುವುದೇನು ಭೀಷ್ಮರು
ಕಂಡುದಿಲ್ಲಾ ಚಾಪವಿದ್ಯಾ
ಖಂಡಪರಶು ದ್ರೋಣನರ್ಜುನನನು ರಣಾಗ್ರದಲಿ
ಕಂಡು ನೀನೇಗುವೆ ಸುಯೋಧನ
ಭಂಡನೋ ಸಾರಥಿತನದ ನಾ
ಭಂಡನೋ ನೀ ಭಂಡನೋ ನಾವರಿಯೆವಿದನೆಂದ ॥10॥

೦೧೧ ಕಡು ಪರಾಕ್ರಮಪಿತ್ತ ...{Loading}...

ಕಡು ಪರಾಕ್ರಮಪಿತ್ತ ನೆತ್ತಿಯ
ಹಿಡಿದು ನೀ ಗಳಹಿದರೆ ನಿನ್ನೀ
ಹಡಪದವರೀ ಚಮರದವರೀ ಛತ್ರಧಾರಿಗಳು
ಒಡೆಯ ನೀನೆಂದಂಜಿ ನಿರುತವ
ನುಡಿಯಲಮ್ಮರು ತಮ್ಮ ಮನದೊಳ
ಗೊಡಬಡುವರೇ ಕದನಬಾಹಿರ ಕರ್ಣ ಹೋಗೆಂದ ॥11॥

೦೧೨ ಕೇಳುತಿರ್ದನು ಕರ್ಣನಿವನಾ ...{Loading}...

ಕೇಳುತಿರ್ದನು ಕರ್ಣನಿವನಾ
ಭೀಳವಚನವನಧಿಕ ರೋಷ
ಜ್ವಾಲೆ ಝಳಪಿಸೆ ಮೀಸೆಗಡಿದನು ತೂಗಿದನು ಶಿರವ
ಖೂಳನಿವನನು ಹೊಯ್ದರೊಳಗೊಳ
ಗಾಳುದೋಟಿ ವಿಕಾರಿವಿಪ್ರನ
ಕಾಳುಶಾಪದ ಫಲವಲಾ ಸಂಪ್ರಾಪ್ತವಾಯ್ತೆಂದ ॥12॥

೦೧೩ ಈಸು ನೀನರ್ಜುನನ ...{Loading}...

ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀಶನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ ॥13॥

೦೧೪ ಸೆಣಸಿದೈ ತನ್ನೊಡನೆಯೀ ...{Loading}...

ಸೆಣಸಿದೈ ತನ್ನೊಡನೆಯೀ ಫಲು
ಗುಣನ ಭಟನೋ ನೀನು ನೃಪತಿಯ
ರಣವಿಜಯವಿದ್ವೇಷಿಯೋ ನಾವರಿಯೆವಿಂದೀಗ
ಅಣಕವೇ ತುರುಗಾಹಿ ಕಾಜಿನ
ಮಣಿಯ ಬಲ್ಲನು ಗಡ ಕಿರೀಟಿಯ
ಗುಣ ಪರಾಕ್ರಮತನವ ನೀನೇ ಬಲ್ಲೆ ದಿಟವೆಂದ ॥14॥

೦೧೫ ರೂಢಿಯೋಲೆಯಕಾರನರ್ಜುನ ನಾಡಿ ...{Loading}...

ರೂಢಿಯೋಲೆಯಕಾರನರ್ಜುನ
ನಾಡಿ ಪತಿಕರಿಸುವನು ನೀನದ
ನೋಡಿ ಸಂತಸಬಡುವರಿಬ್ಬರು ಕೃಪನು ಗುರುಸುತನು
ಕೋಡಗದ ಮೊಗಸಿರಿಗೆ ಕಾವಲಿ
ಯೋಡು ಕನ್ನಡಿಯಾಯ್ತು ಗಡ ಕೃತ
ಗೇಡಿಗುಚಿತವನೇನ ಮಾಡುವೆನೆಂದನಾ ಕರ್ಣ ॥15॥

೦೧೬ ಹಗೆಯನೇ ಕೊಣ್ಡಾಡಿ ...{Loading}...

ಹಗೆಯನೇ ಕೊಂಡಾಡಿ ಸ್ವಾಮಿಗೆ
ಬೆಗಡ ಬೆಳಸಿ ರಣಾಗ್ರ ಸುಭಟರ
ನಗಡುಮಾಡಿ ವೃಥಾತ್ಮ ಕುಕ್ಷಿಂಭರಿಕರೆಂದೆನಿಸಿ
ಹೊಗಳಿಕೆಗೆ ಹೊರಗಾದರೈವರು
ವಿಗಡರದರೊಳಗಿಬ್ಬರಳಿದರು
ಹಗೆಗಳುಳಿದಿರಿ ಮೂವರೆಂದನು ಭಾನುಸುತ ಮುಳಿದು ॥16॥

೦೧೭ ನಾವು ಭಣ್ಡರು ...{Loading}...

ನಾವು ಭಂಡರು ಗರುವ ರಾಯರು
ನೀವಲೇ ಭುವನದಲಿ ಬಾಹಿರ
ರಾವು ನೀವತಿ ಚದುರರಾದಿರಲಾ ಮಹಾದೇವ
ತಾವು ತಮ್ಮಯ ಹೆಚ್ಚು ಕುಂದಿನ
ಜೀವಕಳೆಯರಿಯದ ನಿರರ್ಥಕ
ಜೀವಿಗಳಹಂಕಾರತನಕೇನೆಂಬುದಿದಕೆಂದ ॥17॥

೦೧೮ ಮುನಿದೆನಾದರೆ ಕೋಟಿ ...{Loading}...

ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ ರಣಕೆ ದುರ್ಯೋ
ಧನಗೆ ಮಲೆವರ ಮಾರಿ ಪಾಂಡವಮೇಘ ಪವಮಾನ
ತನಗೆ ಸರಿ ಯಾರಿಲ್ಲ ನೆಣಗೊ
ಬ್ಬಿನಲಿ ನುಡಿದೈ ನಿನ್ನ ಬಾಂಧವ
ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ ॥18॥

೦೧೯ ಆರಿಗಾವುದು ದೇಶವಾ ...{Loading}...

ಆರಿಗಾವುದು ದೇಶವಾ ಸಂ
ಸ್ಕಾರವವರಿಗೆ ಬಿಡದು ಬುದ್ಧಿಗೆ
ಬೇರುಗೊಲೆಯಲ್ಲಾ ಕುದೇಶ ಕುವಂಶ ಸಂಭೂತಿ
ಊರುಗರಲಾ ಮಾದ್ರದೇಶದ
ಭೂರಿ ದುರಿತರು ಕ್ಷತ್ರ ತಿಮಿರ ವಿ
ಕಾರಿಗಳ ಜಾತಿಯಲಿ ಜನಿಸಿದೆ ಶಲ್ಯ ಕೇಳ್ ಎಂದ ॥19॥

೦೨೦ ಖೂಳರಿಗೆ ತಾ ...{Loading}...

ಖೂಳರಿಗೆ ತಾ ಜನ್ಮಭೂಮಿ ವಿ
ಟಾಳಚರಿತರ ತೌರುಮನೆ ದು
ಶ್ಶೀಲರಿಗೆ ದರ್ಪಣ ವಿಕಾರಿಗಳಿಗೆ ವಿಹಾರವನ
ಹೇಳುವರೆ ಪರಮಾಣು ಗುಣವಾ
ಬಾಲ ವೃದ್ಧರೊಳಿಲ್ಲ ಠಕ್ಕಿನ
ಠೌಳಿಕಾರರು ಮಾದ್ರದವರೆಲೆ ಶಲ್ಯ ಕೇಳ್ ಎಂದ ॥20॥

೦೨೧ ರಣದೊಳೊಡೆಯನ ಜರೆದು ...{Loading}...

ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳ್ ಎಂದ ॥21॥

೦೨೨ ಕುಟಿಲಸೃಷ್ಟಿಗೆ ನೀವರಸು ...{Loading}...

ಕುಟಿಲಸೃಷ್ಟಿಗೆ ನೀವರಸು ಚಾ
ವಟೆಯರಿಗೆ ಮನೆ ದುವ್ರ್ಯಸನ ಲಂ
ಪಟರಿಗಾಚಾರಿಯರು ಖಳರಿಗೆ ನಿಮ್ಮೊಳುಪದೇಶ
ಅಟಮಟದ ಘನದೇಹಸಿದ್ಧಿಯ
ಘುಟಿಕೆ ನಿಮ್ಮಲಿ ರಣಪಲಾಯನ
ಪಟುಭಟರಲಾ ಗುಣವಿಹೀನರು ಶಲ್ಯ ನೀವೆಂದ ॥22॥

೦೨೩ ಗರುಡ ಮತದಲಿ ...{Loading}...

ಗರುಡ ಮತದಲಿ ಸರ್ಪವಿಷ ಪರಿ
ಹರಿಸುವುದು ದುರ್ಜನ ವಚೋ ನಿ
ಷ್ಠುರ ಮಹಾ ವಿಷಕಾವ ಗಾರುಡವಾವ ಮಂತ್ರಮುಖ
ದುರುಳ ನೀ ದುರುದುಂಬಿತನದಲಿ
ಹುರುಳುಗೆಡಿಸಿದಡೀಸರಲಿ ನೀ
ಗರುವನೇ ಬಾಹಿರನು ನಾನೇ ಶಲ್ಯ ಕೇಳ್ ಎಂದ ॥23॥

೦೨೪ ಏಸು ಪರಿಯಲಿ ...{Loading}...

ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ ॥24॥

೦೨೫ ಅರಳಿದಮ್ಬುಜದೆಸಳಿನಲಿ ಕಡ ...{Loading}...

ಅರಳಿದಂಬುಜದೆಸಳಿನಲಿ ಕಡ
ದುರುವ ಕಂಡಡೆ ಕೂಡುವುದೆ ಮಧು
ಕರನಲಾಯದೊಳೆಲವೊ ಕರ್ಣ ದುರಾತ್ಮ ನಿನ್ನೊಡನೆ
ನರನ ಸರಿದೂಗುವರೆ ತೋರಿದ
ಪರಿಯಲೆಮ್ಮನು ಹೊಳ್ಳುಗಳೆ ಸಾ
ವಿರವನಿದರಲಿ ಖಾತಿಗೊಂಡಡೆ ಪಾರ್ಥನಾಣೆಂದ ॥25॥

೦೨೬ ಕ್ಷಣದೊಳೀಗಳೆ ಭೀಮ ...{Loading}...

ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳ್ ಎಂದ ॥26॥

೦೨೭ ಜಲಧಿ ಗಹನವೆ ...{Loading}...

ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾ ಪರಿ ಕಾಕಪೌರುಷ ಕರ್ಣ ನೀನೆಂದ ॥27॥

೦೨೮ ಆಡಲರಿಯದೆ ಬರಿದೆ ...{Loading}...

ಆಡಲರಿಯದೆ ಬರಿದೆ ಸೈನ್ಯವ
ಹೂಡಿ ಹಲಬರ ಕೊಲಿಸಿ ಬಲವ
ಕ್ಕಾಡೆ ಕುರುಪತಿ ಕಟ್ಟುವಡೆಯನೆ ಕಳನ ಮಧ್ಯದಲಿ
ಆಡಿದಾತನು ಗೆಲವನರಸಿಗೆ
ಮಾಡಿದಾತನು ಸಾಕು ಪಾರ್ಥನ
ಕೂಡೆ ವಿಗ್ರಹ ಬೇಡ ತೆಗೆ ಮರಳೆಂದನಾ ಶಲ್ಯ ॥28॥

೦೨೯ ಬರಿಯ ಪಕ್ಷಭ್ರಮೆಯಲಾಡಿದ ...{Loading}...

ಬರಿಯ ಪಕ್ಷಭ್ರಮೆಯಲಾಡಿದ
ಡುರುವ ನುಡಿಯೇ ಶಲ್ಯ ಪಾರ್ಥನ
ನರಿವೆ ನಾನೆನ್ನಂಘವಣೆಯನು ಬಲ್ಲನಾ ಪಾರ್ಥ
ಸರಿಹೃದಯ ನೀ ನಿನ್ನೊಡನೆ ಸರಿ
ಗೊರಲಲಾರೆನು ಭೀಮ ಪಾರ್ಥರ
ನೊರಲಿಸುವೆನೀ ಬಾಣದಲಿ ಮಾದ್ರೇಶ ಕೇಳ್ ಎಂದ ॥29॥

೦೩೦ ಝಳದ ಝಾಡಿಗೆ ...{Loading}...

ಝಳದ ಝಾಡಿಗೆ ಹೆದರಿ ಸೂರ್ಯನ
ನುಳುಹುವನೆ ಕಲಿ ರಾಹು ದಾವಾ
ನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ
ಫಲುಗುಣನ ಕಣೆಗಿಣೆಯ ಪವನಜ
ನಳಬಳವ ಕೈಕೊಂಬ ಕರ್ಣನೆ
ತಿಳಿಯಲಾ ಮಾದ್ರೇಶ ನನ್ನಯ ವ್ಯಥೆಯ ಕೇಳ್ ಎಂದ ॥30॥

೦೩೧ ಪರಶುರಾಮನ ಕಣ್ಡು ...{Loading}...

ಪರಶುರಾಮನ ಕಂಡು ಹೊಕ್ಕೆನು
ಗರುಡಿಯನು ದ್ವಿಜನೆಂದು ಕಲಿತೆನು
ವರಧನುರ್ವೇದವನು ಪಡೆದೆನು ದಿವ್ಯಮಾರ್ಗಣವ
ಸುರಪತಿಯ ಬೇಳಂಬವನು ವಿ
ಸ್ತರಿಸಲೇತಕೆ ವಜ್ರ ಕೀಟೋ
ತ್ಕರವ ಕಳುಹಿದರೆನ್ನ ತೊಡೆಗಳನುಗಿದವವು ಬಳಿಕ ॥31॥

೦೩೨ ಅರುಣಜಲ ಹೊನಲೆದ್ದು ...{Loading}...

ಅರುಣಜಲ ಹೊನಲೆದ್ದು ಮಗ್ಗುಲ
ಲುರವಣಿಸಲಾ ರಾಮ ನಿದ್ರಾ
ಭರದಲಿದ್ದವನೆದ್ದು ನೋಡಿದನೆನಗೆ ಕಡುಮುಳಿದು
ಧರಣಿಸುರನೆಂದೆನ್ನ ಠಕ್ಕಿಸಿ
ಶರವ ಬೇಡಿದೆ ಕಾಳೆಗದೊಳೀ
ಶರ ನಿರರ್ಥಕವಾಗಲೆಂದನು ಶಾಪಹಸ್ತದಲಿ ॥32॥

೦೩೩ ಅದರಿನೀ ದಿವ್ಯಾಸ್ತ್ರ ...{Loading}...

ಅದರಿನೀ ದಿವ್ಯಾಸ್ತ್ರ ಕಾಳೆಗ
ಕೊದಗಲರಿಯವು ಶಲ್ಯ ಪಾರ್ಥನ
ಸದೆವುದೇನರಿದಲ್ಲ ಕುರುಪತಿ ಹೀನಪುಣ್ಯನಲೆ
ಇದು ನಿದಾನವು ಬಾಣ ಮತ್ತೆನ
ಗೊದಗುವುವು ಬೇರುಂಟು ನೃಪನ
ಭ್ಯುದಯವುಳ್ಳಡೆ ಗೆಲುವೆನಹಿತರನೆಂದನಾ ಕರ್ಣ ॥33॥

೦೩೪ ಅರಸನಭ್ಯುದಯವನು ನೀನಧಿ ...{Loading}...

ಅರಸನಭ್ಯುದಯವನು ನೀನಧಿ
ಕರಿಸಿ ಗೆಲುವಡೆ ನಿನ್ನ ಹಂಗೇ
ಕರಿಗಳನು ಜಯಿಸುವರು ನಮ್ಮೀ ಛತ್ರಧಾರಕರು
ಸೊರಹದಿರು ಸಾರತ್ತ ತಾಗಿತು
ಪರಶುರಾಮನ ಶಾಪ ಗಡ ಮರು
ಳರಸು ಕೌರವ ನಿನ್ನ ಸಾಕಿದನೆಂದನಾ ಶಲ್ಯ ॥34॥

೦೩೫ ಕುಲಕೆ ಸೇರುವ ...{Loading}...

ಕುಲಕೆ ಸೇರುವ ಮಾತು ಮಾತಿನ
ಬಳಿಗೆ ಸೇರುವ ಬಾಹುಬಲ ಭುಜ
ಬಲದ ತೂಕದ ಕೀರ್ತಿ ಕೀರ್ತಿಯ ಪರಿಯ ಪರಲೋಕ
ಇಳೆಯೊಳಗೆ ನಿನಗಲ್ಲದಾರಿಗೆ
ಸಲುವುದೆಲವೋ ಸೂತಸುತ ನಿ
ರ್ಮಳ ಪುರುಷ ನಿನ್ನಂಗ ದೇಶದ ವಿಧಿಯ ಕೇಳ್ ಎಂದ ॥35॥

೦೩೬ ವೇದಕರ್ಮವಿರೋಧಿಗಳು ಪರಿ ...{Loading}...

ವೇದಕರ್ಮವಿರೋಧಿಗಳು ಪರಿ
ವಾದಶೀಲರು ವರ್ಣಜಾತಿವಿ
ಭೇದಹೀನರು ಸಾರಸಪ್ತವ್ಯಸನಸಂಗತರು
ಕಾದುವರು ಬೆನ್ನಿನಲಿ ಗೆಲುವರು
ಪಾದದಲಿ ಪರಬಲವನಿರಿವರು
ಬೀದಿಯಲಿ ನಿನ್ನಂಗದೇಶದ ಸಿರಿಯ ಕೇಳ್ ಎಂದ ॥36॥

೦೩೭ ನಿನಗೆ ಸಾರಥಿಯಾದ ...{Loading}...

ನಿನಗೆ ಸಾರಥಿಯಾದ ಬಾಹಿರ
ತನವೆ ತಾನದು ಸಾಲದೇ ಬೇ
ರೆನಗೆ ತಲೆಗುತ್ತಾವುದೆನುತವೆ ಬಿಸುಟು ವಾಘೆಯವ
ಮನಕತದ ಮೋರೆಯಲಿ ತತ್ಸ ್ಯಂ
ದನವನಿಳಿಯಲು ಭಂಡ ಫಡ ಹೋ
ಗೆನುತ ಖಡುಗವ ಜಡಿದು ನುಡಿದನು ಭಾನುಸುತ ಮುಳಿದು ॥37॥

೦೩೮ ಹೊಡೆದು ತಲೆಯನು ...{Loading}...

ಹೊಡೆದು ತಲೆಯನು ನಿನ್ನ ರಕುತವ
ಕುಡಿಸುವೆನು ಕೂರಸಿಗೆ ಪವನಜ
ನೊಡಲನೆತ್ತರ ತುಂಬುವೆನು ಪಾರ್ಥನ ಕಪಾಲದಲಿ
ಮಿಡುಕಬಾರದಲೇ ಸುಯೋಧನ
ತೊಡಗಿದಗ್ಗದ ರಾಜಕಾರಿಯ
ಕೆಡುವುದೆಂದೇ ನಿನ್ನನುಳಿಹಿದೆನೆಂದನಾ ಕರ್ಣ ॥38॥

೦೩೯ ಒಳಗೆ ಗಜಬಜವಾಯ್ತು ...{Loading}...

ಒಳಗೆ ಗಜಬಜವಾಯ್ತು ಶಲ್ಯನ
ಬಲುಭಟರು ಮುಕ್ಕುರುಕಿದರು ಕುರು
ಬಲದ ಮೆಳೆಯಲ್ಲಾಡಿತಲ್ಲಿಯದಲ್ಲಿ ಗುಜುಗುಜಿಸಿ
ಬಳಿಕ ಕೌರವರಾಯ ಹರಿತಂ
ದಿಳಿದು ದಂಡಿಗೆಯಿಂದ ಗುಣದಲಿ
ತಿಳುಹಿ ಶಲ್ಯನ ಬೇಡಿಕೊಂಡನು ರಥಕೆ ಮರಳಿಚಿದ ॥39॥

೦೪೦ ನುಡಿದು ಕರ್ಣನ ...{Loading}...

ನುಡಿದು ಕರ್ಣನ ತಿಳುಹಿ ಶಲ್ಯನ
ನೊಡಬಡಿಸಿ ರವಿಸುತನನಂಘ್ರಿಗೆ
ಕೆಡಹಿ ಮಾದ್ರೇಶನ ಮನಸ್ತಾಪವನು ನೆರೆ ಬಿಡಿಸೆ
ಕಡಹದಂಬುಧಿಯಂತೆ ವಾದ್ಯದ
ಗಡಣ ಮೊರೆದವು ಪ್ರಳಯಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳಕೋಟಿಗಳು ॥40॥

+೦೯ ...{Loading}...