೦೦೦ ಸೂ ವೈರಿ ...{Loading}...
ಸೂ. ವೈರಿ ವಿಜಯಕೆ ತ್ರಿಪುರ ದಹನದ
ಚಾರು ಕಥನವನರುಹಿ ಶಲ್ಯನ
ಸಾರಥಿಯ ಮಾಡಿದನು ಕರ್ಣಗೆ ಕೌರವರರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ದುರ್ಯೋಧನನು ವೈರಿ ವಿಜಯಕ್ಕೆ ತ್ರಿಪುರ ದಹನದ ಸುಂದರವಾದ ಕಥೆಯನ್ನು ತಿಳಿಸಿ ಕರ್ಣನಿಗೆ ಶಲ್ಯನನ್ನು ಸಾರಥಿಯಾಗಿ ಮಾಡಿದನು.
ಮೂಲ ...{Loading}...
ಸೂ. ವೈರಿ ವಿಜಯಕೆ ತ್ರಿಪುರ ದಹನದ
ಚಾರು ಕಥನವನರುಹಿ ಶಲ್ಯನ
ಸಾರಥಿಯ ಮಾಡಿದನು ಕರ್ಣಗೆ ಕೌರವರರಾಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನವೊಂದಾಯ್ತು ಕರ್ಣನ
ಕಾಳೆಗದೊಳಲ್ಲಿಂದಮೇಲಣ ವರ ಕಥಾಮೃತವ
ಕೇಳಲಿಚ್ಛೈಸಿದ ಗತಾಕ್ಷನೃ
ಪಾಲಕಗೆ ವಿಸ್ತರಿಸಿ ಸಂಜಯ
ಹೇಳಿದನು ಬಳಿಕೆರಡನೆಯ ದಿವಸದ ರಣೋತ್ಸವವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಭೂಪಾಲನೇ ಕೇಳು. ಕರ್ಣನ ಕಾಳಗದಲ್ಲಿ ಒಂದು ದಿನ ಕಳೆಯಿತು. ಅಲ್ಲಿಂದ ಮುಂದಿನ ಶ್ರೇಷ್ಠ ಕಥಾಮೃತವನ್ನು ಕೇಳಲು ಬಯಸಿದ ಕುರುಡ ರಾಜನಿಗೆ ಸಂಜಯನು ಎರಡನೆಯ ದಿವಸದ ರಣೋತ್ಸವವನ್ನು ವಿಸ್ತರಿಸಿ ಹೇಳಿದನು.
ಪದಾರ್ಥ (ಕ.ಗ.ಪ)
ಗತಾಕ್ಷ-ಕುರುಡ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನವೊಂದಾಯ್ತು ಕರ್ಣನ
ಕಾಳೆಗದೊಳಲ್ಲಿಂದಮೇಲಣ ವರ ಕಥಾಮೃತವ
ಕೇಳಲಿಚ್ಛೈಸಿದ ಗತಾಕ್ಷನೃ
ಪಾಲಕಗೆ ವಿಸ್ತರಿಸಿ ಸಂಜಯ
ಹೇಳಿದನು ಬಳಿಕೆರಡನೆಯ ದಿವಸದ ರಣೋತ್ಸವವ ॥1॥
೦೦೨ ಹೊಗಳಿ ಕೆಲವರ ...{Loading}...
ಹೊಗಳಿ ಕೆಲವರ ಹೊಳ್ಳುಗಳೆವುತ
ನಗುತ ಕೆಲವರನವರ ಮೋಹರ
ತೆಗೆದು ಹೋಯಿತು ಬಂದುದಿದು ತಂತಮ್ಮ ಪಾಳಯಕೆ
ಹೊಗಳುಭಟ್ಟರ ಸಾಲ ಕೈದೀ
ವಿಗೆಯ ಕಹಳಾರವದ ಲಗ್ಗೆಯ
ಬಿಗುಹಿನಲಿ ಕುರುರಾಯ ಬಂದನು ರಾಜಮಂದಿರಕೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರನ್ನು ಹೊಗಳಿ, ಕೆಲವರನ್ನು ವ್ಯರ್ಥವೆಂದು ತಿರಸ್ಕರಿಸುತ್ತ, ಕೆಲವರ ಬಗ್ಗೆ ನಗುತ್ತ ಸೈನ್ಯಗಳು ತಮ್ಮ ತಮ್ಮ ಪಾಳಯಗಳಿಗೆ ಹಿಂದಿರುಗಿದವು. ಹೊಗಳುಭಟ್ಟರ ಸಾಲುಗಳ, ಕೈದೀವಿಗೆಯ, ಕಹಳೆಯ ದನಿಯ ಲಗ್ಗೆಯ ಬಿಗುವಿನಲ್ಲಿ ಕುರುರಾಯನು ರಾಜಮಂದಿರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಹೊಳ್ಳುಗಳೆ-ವ್ಯರ್ಥವೆಂದು ತಿರಸ್ಕರಿಸು
ಮೂಲ ...{Loading}...
ಹೊಗಳಿ ಕೆಲವರ ಹೊಳ್ಳುಗಳೆವುತ
ನಗುತ ಕೆಲವರನವರ ಮೋಹರ
ತೆಗೆದು ಹೋಯಿತು ಬಂದುದಿದು ತಂತಮ್ಮ ಪಾಳಯಕೆ
ಹೊಗಳುಭಟ್ಟರ ಸಾಲ ಕೈದೀ
ವಿಗೆಯ ಕಹಳಾರವದ ಲಗ್ಗೆಯ
ಬಿಗುಹಿನಲಿ ಕುರುರಾಯ ಬಂದನು ರಾಜಮಂದಿರಕೆ ॥2॥
೦೦೩ ಗುಳವನಿಳುಹಿದವಾನೆಗಳು ಹ ...{Loading}...
ಗುಳವನಿಳುಹಿದವಾನೆಗಳು ಹ
ಲ್ಲಳವ ಬಿಡೆ ಭುಲ್ಲೈಸಿದವು ಹಯ
ಕುಳ ವರೂಥವನಿಳಿದು ಸೂತರು ನಿಲಿಸಿದರು ರಥವ
ಕಳಚಿ ಸೀಸಕ ಜೋಡು ಕೈದುವ
ನಿಳುಹಿ ಸಮರ ಶ್ರಮವ ನಿಮಿಷಕೆ
ನಿಳಯ ವೇದಿಯಲಿದ್ದು ಕಳೆದುದು ಕೂಡೆ ಪರಿವಾರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಬೆನ್ನಿನ ರಕ್ಷೆಯನ್ನು ಇಳಿಸಿದರು. ಜೀನನ್ನು ತೆಗೆದಾಗ ಕುದುರೆಗಳು ಸಂತೋಷಪಟ್ಟವು. ಸೂತರು ರಥದಿಂದ ಇಳಿದು ರಥವನ್ನು ನಿಲ್ಲಿಸಿದರು. ಪರಿವಾರವು ಜೋಡುಗಳನ್ನು ಕಳಚಿ ಆಯುಧವನ್ನು ಇಳಿಸಿ ಮನೆಯ ಜಗಲಿಯನ್ನು ಸೇರಿ ಸಮರ ಶ್ರಮವನ್ನು ನಿಮಿಷಕ್ಕೆ ಕಳೆದುಕೊಂಡಿತು.
ಪದಾರ್ಥ (ಕ.ಗ.ಪ)
ಗುಳ-ಬೆಂಗಟ್ಟಿನ ರಂಚೆ, ಹಲ್ಲಳ-ಜೀನು, ನಿಳಯವೇದಿ-ಮನೆಯ ಜಗಲಿ
ಮೂಲ ...{Loading}...
ಗುಳವನಿಳುಹಿದವಾನೆಗಳು ಹ
ಲ್ಲಳವ ಬಿಡೆ ಭುಲ್ಲೈಸಿದವು ಹಯ
ಕುಳ ವರೂಥವನಿಳಿದು ಸೂತರು ನಿಲಿಸಿದರು ರಥವ
ಕಳಚಿ ಸೀಸಕ ಜೋಡು ಕೈದುವ
ನಿಳುಹಿ ಸಮರ ಶ್ರಮವ ನಿಮಿಷಕೆ
ನಿಳಯ ವೇದಿಯಲಿದ್ದು ಕಳೆದುದು ಕೂಡೆ ಪರಿವಾರ ॥3॥
೦೦೪ ಘಾಯವಡೆದಾನೆಗಳು ಗುಳವನು ...{Loading}...
ಘಾಯವಡೆದಾನೆಗಳು ಗುಳವನು
ಹಾಯಿಕಲು ನೆಲಕುರುಳಿದವು ವಾ
ನಾಯುಜಂಗಳು ಬಿಗುಹ ಬಿಡೆ ದೊಪ್ಪೆಂದವಾಚೆಯಲಿ
ಘಾಯದಲಿ ಮುರಿದಂಬನುಗುಳಿದು
ಸಾಯದಿಹರೇ ಭಟರು ಗಜ ಹಯ
ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗೊಂಡಿದ್ದ ಆನೆಗಳು ಗುಳವನ್ನು ತೆಗೆದುಹಾಕುತ್ತಿದ್ದಂತೆ ನೆಲಕ್ಕೆ ಉರುಳಿದವು. ಕಟ್ಟನ್ನು ಬಿಚ್ಚಲು ಕುದುರೆಗಳು ದೊಪ್ಪೆಂದು ಕುಸಿದವು. ಗಾಯದಲ್ಲಿ ಮುರಿದ ಬಾಣವನ್ನು ಹೊರಕ್ಕೆ ತೆಗೆದರೆ ಯೋಧರು ಸಾಯದೆ ಇರುತ್ತಾರೆಯೆ? ಕೌರವೇಶ್ವರನ ಆನೆ, ಕುದುರೆಗಳ ಲಾಯಗಳು ಹತ್ತು ಒಂದಾಯಿತು. (ತಗ್ಗಿದವು)
ಪದಾರ್ಥ (ಕ.ಗ.ಪ)
ವಾನಾಯಜ-ಕುದುರೆ
ಮೂಲ ...{Loading}...
ಘಾಯವಡೆದಾನೆಗಳು ಗುಳವನು
ಹಾಯಿಕಲು ನೆಲಕುರುಳಿದವು ವಾ
ನಾಯುಜಂಗಳು ಬಿಗುಹ ಬಿಡೆ ದೊಪ್ಪೆಂದವಾಚೆಯಲಿ
ಘಾಯದಲಿ ಮುರಿದಂಬನುಗುಳಿದು
ಸಾಯದಿಹರೇ ಭಟರು ಗಜ ಹಯ
ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ ॥4॥
೦೦೫ ಬನ್ದುದಿರುಳೋಲಗಕೆ ರಾಯನ ...{Loading}...
ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯ ಸಭೆಗೆ ಕರ್ಣ ಶಕುನಿ ಕೃಪ ಆಶ್ವತ್ಥಾಮ ಮೊದಲಾದ ಸಮೂಹದ ರಾಜನ ಮಂದಿ, ಹಾಗೂ ರಾಜಾಧಿಕಾರಿಗಳ ಸಹಿತ ಸಚಿವರು ಬಂದರು. ದುರ್ಯೋಧನನು ಇಂದಿನ ಯುದ್ಧದೊಳಗೆ ಕುಂತೀನಂದನರ ಬೊಬ್ಬಾಟವು ಹೆಚ್ಚಾಯಿತು ಎಂದು ಮೆಲ್ಲನೆ ಮಾತು ತೆಗೆದನು.
ಮೂಲ ...{Loading}...
ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ ॥5॥
೦೦೬ ಬಲುಹಲೇ ಬಳಿಕೇನು ...{Loading}...
ಬಲುಹಲೇ ಬಳಿಕೇನು ಹಗೆಯ
ಗ್ಗಳಿಕೆ ಮೆರೆಯದೆ ಮುರವಿರೋಧಿಯ
ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು
ಬಲುಹು ಸಾರಥಿಯಿಂದ ರಿಪುಗಳ
ಗೆಲವು ಸಾರಥಿಯಿಂದ ಸಾರಥಿ
ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ದುರ್ಯೋಧನನಿಗೆ, ಹೆಚ್ಚಾಗದೆ ಮತ್ತೇನು? ಶತ್ರುವಿನ ಅಗ್ಗಳಿಕೆ ಮೆರೆಯುವುದಿಲ್ಲವೆ? ಕೃಷ್ಣನ ಹೆಚ್ಚುಗಾರಿಕೆಯನ್ನು ಹೇಳು. ಆ ಅರ್ಜುನೆಂಬುವವನು ಯಾವ ಮನುಷ್ಯ? ಬಲುಹು ಸಾರಥಿಯಿಂದ. ಶತ್ರುಗಳ ಗೆಲವು ಸಾರಥಿಯಿಂದ. ಸಾರಥಿ ಒಲಿದರೆ ಏನೇನು ತಾನೆ ಆಗುವುದಿಲ್ಲ ಎಂದನು.
ಮೂಲ ...{Loading}...
ಬಲುಹಲೇ ಬಳಿಕೇನು ಹಗೆಯ
ಗ್ಗಳಿಕೆ ಮೆರೆಯದೆ ಮುರವಿರೋಧಿಯ
ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು
ಬಲುಹು ಸಾರಥಿಯಿಂದ ರಿಪುಗಳ
ಗೆಲವು ಸಾರಥಿಯಿಂದ ಸಾರಥಿ
ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ ॥6॥
೦೦೭ ಭಾರಿ ಧನುವಿದ್ದೇನು ...{Loading}...
ಭಾರಿ ಧನುವಿದ್ದೇನು ತೋಳಿನ
ತೋರದಲಿ ಫಲವೇನು ಕೈದುಗ
ಳಾರನಂಜಿಸಲಾಪವಾಹವರಂಗ ಮಧ್ಯದಲಿ
ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿ ಸಾಧನವಿವು ನಿರರ್ಥಕ
ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು, ಭಾರಿ ಧನುಸ್ಸು ಇದ್ದರೆ ತಾನೆ ಏನು? ತೋಳಿನ ಗಾತ್ರದಿಂದ ಏನು ಫಲ ? ಯುದ್ಧರಂಗದ ಮಧ್ಯದಲ್ಲಿ ಆಯುಧಗಳು ಯಾರನ್ನು ಹೆದರಿಸಲು ಸಮರ್ಥವಾಗಿವೆ? ಸಾರಥಿಯ ಬಲುಹು ಇಲ್ಲದಿದ್ದರೆ ಈ ಭೂರಿ ಸೈನ್ಯಗಳೂ ನಿರರ್ಥಕ. ನನ್ನ ಕೊರತೆಯನ್ನು ಯಾರಿಗೆ ಹೇಳಲಿ? ಎಂದನು.
ಮೂಲ ...{Loading}...
ಭಾರಿ ಧನುವಿದ್ದೇನು ತೋಳಿನ
ತೋರದಲಿ ಫಲವೇನು ಕೈದುಗ
ಳಾರನಂಜಿಸಲಾಪವಾಹವರಂಗ ಮಧ್ಯದಲಿ
ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿ ಸಾಧನವಿವು ನಿರರ್ಥಕ
ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ ॥7॥
೦೦೮ ತೃಣಕೆ ಕೊಮ್ಬೆನೆ ...{Loading}...
ತೃಣಕೆ ಕೊಂಬೆನೆ ಫಲುಗುಣನ ಕಣೆ
ಗಿಣೆಯನಾ ಸಾರಥಿಯ ಕೈ ಮೈ
ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ
ರಣದೊಳೆನಗತಿಶಯದ ಸಾರಥಿ
ಮಣಿದನಾದಡೆ ನಾಳೆ ಹೆಣದೌ
ತಣದಲುಣ ಬಡಿಸುವೆನು ಜಂಬುಕಕಾಕಸಂತತಿಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗೀಣಗಳನ್ನು ಹುಲ್ಲಿಗೆ ಸಮವೆಂದು ಪರಿಗಣಿಸುತ್ತೇನೆ. ಆ ಸಾರಥಿ ಕೃಷ್ಣನ ಕೈಗುಣ ಮೈಗುಣಗಳೇ ಮುಖ್ಯ ನಮ್ಮ ಯುದ್ಧದ ಗೌರವನ್ನು ಕೆಡಿಸಿದವು. ಯುದ್ಧದಲ್ಲಿ ನನಗೆ ಹೆಚ್ಚುಗಾರಿಕೆಯ ಸಾರಥಿ ದೊರೆತರೆ ನಾಳೆ ನರಿಕಾಗೆಗಳಿಗೆ ಹೆಣಗಳ ಔತಣವನ್ನು ಬಡಿಸುತ್ತೇನೆ ಎಂದು ಕರ್ಣನ ಹೇಳಿದನು.
ಮೂಲ ...{Loading}...
ತೃಣಕೆ ಕೊಂಬೆನೆ ಫಲುಗುಣನ ಕಣೆ
ಗಿಣೆಯನಾ ಸಾರಥಿಯ ಕೈ ಮೈ
ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ
ರಣದೊಳೆನಗತಿಶಯದ ಸಾರಥಿ
ಮಣಿದನಾದಡೆ ನಾಳೆ ಹೆಣದೌ
ತಣದಲುಣ ಬಡಿಸುವೆನು ಜಂಬುಕಕಾಕಸಂತತಿಗೆ ॥8॥
೦೦೯ ಲೇಸನಾಡಿದೆ ಕರ್ಣ ...{Loading}...
ಲೇಸನಾಡಿದೆ ಕರ್ಣ ನಿನಗಿ
ನ್ನೈಸಲೇ ಸಾರಥಿಯ ಕೊರತೆ ಸು
ರಾಸುರರ ಥಟ್ಟಿನಲಿ ತೊಡಕುವರಾರು ನಿನ್ನೊಡನೆ
ಈ ಸಮಸ್ತ ನೃಪಾಲ ವರ್ಗದೊ
ಳಾಸೆಯಾರಲಿ ಸೂತ ಕರ್ಮಾ
ಭ್ಯಾಸಿಯನು ಜೋಡಿಸುವೆನೆಂದನು ಕೌರವರರಾಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣ, ಒಳ್ಳೆಯ ಮಾತನಾಡಿದೆ. ನಿನಗೆ ಇನ್ನೂ ಸಾರಥಿಯ ಕೊರತೆ ಇದೆಯಲ್ಲವೆ? ಸುರಾಸುರರ ಪಾಳೆಯದಲ್ಲಿ ನಿನ್ನೊಡನೆ ಯುದ್ಧಮಾಡಲು ಯಾರು ಸಮರ್ಥರು? ಈ ಸಮಸ್ತ ರಾಜರ ಗುಂಪಿನಲ್ಲಿ ಯಾರು ಸಾರಥಿಯಾಗಬೇಕೆಂದು ನಿನ್ನ ಆಸೆ? ಸೂತ ಸಾರಥ್ಯವನ್ನು ಬಲ್ಲ ಪರಿಣತನನ್ನು ಜೊತೆಮಾಡುತ್ತೇನೆ " ಎಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಲೇಸನಾಡಿದೆ ಕರ್ಣ ನಿನಗಿ
ನ್ನೈಸಲೇ ಸಾರಥಿಯ ಕೊರತೆ ಸು
ರಾಸುರರ ಥಟ್ಟಿನಲಿ ತೊಡಕುವರಾರು ನಿನ್ನೊಡನೆ
ಈ ಸಮಸ್ತ ನೃಪಾಲ ವರ್ಗದೊ
ಳಾಸೆಯಾರಲಿ ಸೂತ ಕರ್ಮಾ
ಭ್ಯಾಸಿಯನು ಜೋಡಿಸುವೆನೆಂದನು ಕೌರವರರಾಯ ॥9॥
೦೧೦ ಹಲವು ಮಾತೇನರಸ ...{Loading}...
ಹಲವು ಮಾತೇನರಸ ನುಡಿದುದು
ಫಲಿಸಲರಿಯದು ದೈವಗತಿಯಲಿ
ಫಲಿಸಿತಾದಡೆ ರಾಜ್ಯಲಕ್ಷಿ ್ಮಗೆ ಸೂಳೆತನವಹುದೆ
ಸುಲಭವಾದಡೆ ಮಾದ್ರರಾಜನ
ತಿಳುಹಿ ಸೈರಿಸು ರಿಪುಗಳೈವರ
ತಲೆಗೆ ಹಾಯಿಕು ಸಂಚಕಾರವನೆಂದನಾ ಕರ್ಣ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಲವು ಮಾತೇನು ಅರಸ? ಮಾತನಾಡಿದರೂ ಪ್ರಯೋಜನವಿಲ್ಲ. ಅದೃಷ್ಟವಶದಿಂದ ಹಾಗೇನಾದರೂ ಆದರೆ ರಾಜ್ಯಲಕ್ಷ್ಮಿಗೆ ಸೂಳೆತನವಿರುವುದಿಲ್ಲ. ಸಾಧ್ಯವಾದರೆ ಶಲ್ಯನಿಗೆ ತಿಳಿಸಿ ಒಪ್ಪಿಸು. ಐವರು ಶತ್ರುಗಳ ತಲೆಗೆ ಸಂಚಕಾರವನ್ನು ಚಿಂತಿಸು. “ಎಂದು ಕರ್ಣನು ಹೇಳಿದನು
ಮೂಲ ...{Loading}...
ಹಲವು ಮಾತೇನರಸ ನುಡಿದುದು
ಫಲಿಸಲರಿಯದು ದೈವಗತಿಯಲಿ
ಫಲಿಸಿತಾದಡೆ ರಾಜ್ಯಲಕ್ಷಿ ್ಮಗೆ ಸೂಳೆತನವಹುದೆ
ಸುಲಭವಾದಡೆ ಮಾದ್ರರಾಜನ
ತಿಳುಹಿ ಸೈರಿಸು ರಿಪುಗಳೈವರ
ತಲೆಗೆ ಹಾಯಿಕು ಸಂಚಕಾರವನೆಂದನಾ ಕರ್ಣ ॥10॥
೦೧೧ ಉಬ್ಬಿದನು ರೋಮಾಞ್ಚ ...{Loading}...
ಉಬ್ಬಿದನು ರೋಮಾಂಚ ಮೆಯ್ಯಲಿ
ಹಬ್ಬಿದುದು ಹೊರೆಯೇರಿ ಮರವೆಯ
ಮಬ್ಬು ಕವಿದುದು ಕರ್ಣನಾಡಿದ ಮಾತ ಸವಿಸವಿದು
ಟೆಬ್ಬರಿಸುವಿಂದ್ರಿಯ ತುರಂಗದ
ಕಬ್ಬಿ ಕಳಚಿತು ಕೌರವೇಂದ್ರನು
ಸರ್ಬಲಗ್ಗೆಯ ಹರುಷದಲಿ ಹೊರವಂಟನರಮನೆಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನಾಡಿದ ಮಾತನ್ನು ಕೇಳಿ ದುರ್ಯೋಧನನು, ಉಬ್ಬಿದನು. ಅವನ ಮೆಯ್ಯಲ್ಲಿ ರೋಮಾಂಚನವಾಯಿತು. ಮನಸ್ಸಿನ ಸಂತೋಷ ಹೆಚ್ಚಿ ಮರವೆಯ ಮಬ್ಬು ಕವಿಯಿತು. ಆ ಮಾತುಗಳನ್ನು ಸವಿಸವಿದು ಇಂದ್ರಿಯ ಶಕ್ತಿ ಗುಂದಿದ್ದ ಅವನ ಮನಸ್ಸಿನ ಕುದುರೆಯ ಬಾಯಿಯಲ್ಲಿ ಸಿಕ್ಕಿಸಿದ್ದ ಕಡಿವಾಣ ಕಳಚಿತು. ದುರ್ಯೋಧನನು ಸರ್ವಲಗ್ಗೆಯ ದಾಳಿಯ ಹರ್ಷದಲ್ಲಿ ಅರಮನೆಯಿಂದ ಹೊರಟನು.
ಪದಾರ್ಥ (ಕ.ಗ.ಪ)
ಟೆಬ್ಬರಿಸು =ಶಕ್ತಿಗುಂದು
ಮೂಲ ...{Loading}...
ಉಬ್ಬಿದನು ರೋಮಾಂಚ ಮೆಯ್ಯಲಿ
ಹಬ್ಬಿದುದು ಹೊರೆಯೇರಿ ಮರವೆಯ
ಮಬ್ಬು ಕವಿದುದು ಕರ್ಣನಾಡಿದ ಮಾತ ಸವಿಸವಿದು
ಟೆಬ್ಬರಿಸುವಿಂದ್ರಿಯ ತುರಂಗದ
ಕಬ್ಬಿ ಕಳಚಿತು ಕೌರವೇಂದ್ರನು
ಸರ್ಬಲಗ್ಗೆಯ ಹರುಷದಲಿ ಹೊರವಂಟನರಮನೆಯ ॥11॥
೦೧೨ ಹರಿದರರಸಾಳುಗಳು ರಾಯನ ...{Loading}...
ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ಆಳುಗಳು ಓಡಿ ಬಂದು ದುರ್ಯೋಧನನ ಬರವನ್ನು ಶಲ್ಯನಿಗೆ ತಿಳಿಸಿದರು. ಕಲಿ ಶಲ್ಯನು ತುಂಬು ಹರುಷದಿಂದ ತನ್ನ ಮನೆಯಿಂದ ಹೊರ ಹೊರಟನು. ವಜ್ರಮಣಿಯ ಆಭರಣ ಕಿರಣಗಳ ಗುಂಪಿನಿಂದ ಕಾಂತಿ ಬೀರುತ್ತಿದ್ದ ಸ್ತೋಮ ದೀಪಸ್ಫುರಿತ ರಾಜಕುಮಾರನಾದ ಕೌರವೇಶ್ವರನನ್ನು ಜನರ ಮಧ್ಯದಲ್ಲಿ ಕಂಡನು.
ಮೂಲ ...{Loading}...
ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣ ಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ ॥12॥
೦೧೩ ಅನ್ದಣವನಿಳಿದರಸನಾತಗೆ ...{Loading}...
ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಬಾರಿಯಿಂದ ಇಳಿದ ದುರ್ಯೋಧನನು ಶಲ್ಯನಿಗೆ ವಂದಿಸಿದನು. ಶಲ್ಯನು ಅವನನ್ನು ಆನಂದದಿಂದ ಆಲಂಗಿಸಿ ರಾಜಮಂದಿರಕ್ಕೆ ಕರೆತಂದನು. ಇದೇನಿದು ಇಂದು ಇದ್ದಕ್ಕಿದ್ದ ಹಾಗೆ ನೀನೇ ಬಂದ ಕಾರ್ಯ ವಿಶೇಷವೇನಿದೆ? ಎಂದು ಶಲ್ಯನು ದುರ್ಯೋಧನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಅಂದಣ - ಅಂಬಾರಿ
ಟಿಪ್ಪನೀ (ಕ.ಗ.ಪ)
ಅಂದಣ : ಸಾಮಾನ್ಯವಾಗಿ ಅಂದಣ ಎಂಬ ಪದಕ್ಕೆ ಪಲ್ಲಕ್ಕಿ ಎಂಬ ಅರ್ಥವಿದೆ. ಆದರೆ ಕುಮಾರವ್ಯಸನ ಪ್ರದೇಶದಲ್ಲಿ ಇಂದಿಗೂ ಅಂದಣ ಎಂದರೆ ಅಂಬಾರಿ ಎನ್ನುವ ಅರ್ಥದಲ್ಲಿಯೇ ಬಳಕೆಯಲ್ಲಿದೆ. ಜೊತೆಗೆ ಅರಸರು ಪಲ್ಲಕ್ಕಿಯಲ್ಲಿ ಹೋಗುವುದು ಕಡಿಮೆಯೇ. ಅರಮನೆಯ ಹೆಂಗಸರು, ರಾಣಿಯರು ಮಾತ್ರ ಪಲ್ಲಕ್ಕಿ ಉಪಯೋಗಿಸುವ ಅನೇಕ ನಿದರ್ಶನಗಳನ್ನು ಕಾಣಬಹುದು.
ಮೂಲ ...{Loading}...
ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ ॥13॥
೦೧೪ ಏನ ಹೇಳುವೆ ...{Loading}...
ಏನ ಹೇಳುವೆ ನಮ್ಮ ಪುಣ್ಯದ
ಹಾನಿಯನು ನುಗ್ಗಾಯ್ತು ಬಲ ಸು
ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ
ಜೈನ ದೀಕ್ಷೆಯ ಹಿಡಿದುದೆನ್ನ ಸ
ಮಾನ ಸುಭಟರು ಜಯಸಿರಿಯ ಸಂ
ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು, “ನಮ್ಮ ಪುಣ್ಯದ ಹಾನಿಯನ್ನು ಏನು ಹೇಳಲಿ? ಚಲ ನುಗ್ಗಾಯಿತು. ನಮ್ಮ ಸೈನ್ಯದಲ್ಲಿ ಸಂತೋಷ ಎಂಬುದಿಲ್ಲವಾಯಿತು. ಬಿರುದುಳ್ಳವರಿಗೆ ಅಪಮಾನ. ನನ್ನ ಅಸಮಾನ ಸುಭಟರು ಅಹಿಂಸೆಯ ದೀಕ್ಷೆಯನ್ನು ಹಿಡಿದರು. ಜಯಲಕ್ಷ್ಮಿಯ ಸಂಧಾನ ಮುರಿಯಿತು. ಮಾವ, ನಿಮಗೆ ತಿಳಿಯದುದೆ” ಎಂದನು.
ಮೂಲ ...{Loading}...
ಏನ ಹೇಳುವೆ ನಮ್ಮ ಪುಣ್ಯದ
ಹಾನಿಯನು ನುಗ್ಗಾಯ್ತು ಬಲ ಸು
ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ
ಜೈನ ದೀಕ್ಷೆಯ ಹಿಡಿದುದೆನ್ನ ಸ
ಮಾನ ಸುಭಟರು ಜಯಸಿರಿಯ ಸಂ
ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ ॥14॥
೦೧೫ ಸಮರಜಯಸಾಧಕರು ಮನ್ತ್ರ ...{Loading}...
ಸಮರಜಯಸಾಧಕರು ಮಂತ್ರ
ಭ್ರಮಿತರಾಯ್ತಪಜಯವಧೂ ವಿ
ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು
ಸಮತೆಯಾಯಿತು ತವಕಿಗಳಿಗು
ದ್ಭ ್ರಮಿಗಳಿಗೆ ತಿಳಿವಾಯ್ತು ವಾಸಿಯ
ಮಮತೆಯವರು ವಿರಕ್ತರಾದರು ಮಾವ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಲಿನ ವಧುವಿನ ವಿಭ್ರಮ ಕಟಾಕ್ಷದ ಗಾಯದಲ್ಲಿ ಯುದ್ಧದಲ್ಲಿ ಜಯವನ್ನು ಸಾಧಿಸಬೇಕೆಂದು ಸಾಧನೆ ಮಾಡುತ್ತಿದ್ದವರು ಮಂತ್ರ ಭ್ರಮೆಗೆ ಒಳಗಾದರು. ಇದಕ್ಕೆ ಕಳವಳಿಸದವರಾರು? ಆತುರಗಾರರಿಗೆ ಮತ್ತು ಉದ್ಭ ್ರಮಿಗಳಿಗೆ ಸಮಾಧಾನವಾಯಿತು, ಛಲಹಿಡಿದವರು ವಿರಕ್ತರಾದರು, ಮಾವ ಕೇಳು ಎಂದ.
ಮೂಲ ...{Loading}...
ಸಮರಜಯಸಾಧಕರು ಮಂತ್ರ
ಭ್ರಮಿತರಾಯ್ತಪಜಯವಧೂ ವಿ
ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು
ಸಮತೆಯಾಯಿತು ತವಕಿಗಳಿಗು
ದ್ಭ ್ರಮಿಗಳಿಗೆ ತಿಳಿವಾಯ್ತು ವಾಸಿಯ
ಮಮತೆಯವರು ವಿರಕ್ತರಾದರು ಮಾವ ಕೇಳೆಂದ ॥15॥
೦೧೬ ಮುರಿವಡೆದು ಕಲಿ ...{Loading}...
ಮುರಿವಡೆದು ಕಲಿ ಭೀಷ್ಮನೇ ಕು
ಕ್ಕರಿಸಿದನು ದ್ರೋಣಂಗೆ ಬಂದುದ
ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ
ನೆರವಣಿಗೆಯುಂಟಾದಡೊಂದೇ
ಕೊರತೆಯಿದು ನಿಮ್ಮಿಂದ ಕಡೆಯಲಿ
ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿ ಭೀಷ್ಮನೇ ಭಂಗಗೊಂಡು ಕುಸಿದನು. ದ್ರೋಣನಿಗೆ ಬಂದ ಸ್ಥಿತಿಯನ್ನು ಹೇಳುವುದು ಏಕೆ? ಬಳಿಕ ಕರ್ಣನ ವೀರಪಟ್ಟದಲ್ಲಿ ಪರಿಪೂರ್ಣತೆಯುಂಟಾಗುತ್ತದೆ ಎಂದರೆ, ಒಂದೇ ಕೊರತೆ. ಇದು ನಿಮ್ಮಿಂದ ಕಡೆಯಲ್ಲಿ ಪೂರ್ಣವಾಗುತ್ತದೆ. ಅನಂತರ ಉತ್ತರೋತ್ತರ ಸಿದ್ಧಿ ಎಂದನು.
ಮೂಲ ...{Loading}...
ಮುರಿವಡೆದು ಕಲಿ ಭೀಷ್ಮನೇ ಕು
ಕ್ಕರಿಸಿದನು ದ್ರೋಣಂಗೆ ಬಂದುದ
ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ
ನೆರವಣಿಗೆಯುಂಟಾದಡೊಂದೇ
ಕೊರತೆಯಿದು ನಿಮ್ಮಿಂದ ಕಡೆಯಲಿ
ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ ॥16॥
೦೧೭ ದ್ರೋಣ ಭೀಷ್ಮರವೋಲು ...{Loading}...
ದ್ರೋಣ ಭೀಷ್ಮರವೋಲು ನೆಟ್ಟನೆ
ಹೂಣಿಗರು ರಾಧೇಯ ಮಾದ್ರ
ಕ್ಷೋಣಿಪತಿಯೆಂದೆಂಬ ನುಡಿಯುಂಟೆರಡು ಥಟ್ಟಿನಲಿ
ಕೇಣವಿಲ್ಲದ ರಥಗತಿಯ ಬಿ
ನ್ನಾಣವನು ತೋರಿದಡೆ ತನ್ನಯ
ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣ ಭೀಷ್ಮರ ಹಾಗೆ ಪ್ರತಿಜ್ಞೆ ಮಾಡಿದವರು ಕರ್ಣ ಶಲ್ಯರು ಸೇನಾಪತಿಗಳು ಎಂದೆಂಬ ನುಡಿ ಎರಡು ಸೇನೆಯಲ್ಲಿದೆ. ಅಸೂಯೆಯಿಲ್ಲದ ರಥಗತಿಯ ವಿಜ್ಞಾನವನ್ನು ತೋರಿಸಿದರೆ ನನ್ನ ಕುತ್ತಿಗೆಗೆ ಬಂದಿರುವ ಕುತ್ತನ್ನು, ಆಯುಧವನ್ನು ನೀನು ತೆಗೆಸಿದವನಾಗುವೆ ಎಂದನು.
ಮೂಲ ...{Loading}...
ದ್ರೋಣ ಭೀಷ್ಮರವೋಲು ನೆಟ್ಟನೆ
ಹೂಣಿಗರು ರಾಧೇಯ ಮಾದ್ರ
ಕ್ಷೋಣಿಪತಿಯೆಂದೆಂಬ ನುಡಿಯುಂಟೆರಡು ಥಟ್ಟಿನಲಿ
ಕೇಣವಿಲ್ಲದ ರಥಗತಿಯ ಬಿ
ನ್ನಾಣವನು ತೋರಿದಡೆ ತನ್ನಯ
ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ ॥17॥
೦೧೮ ಬರಿದೆ ಬೋಳೈಸದಿರು ...{Loading}...
ಬರಿದೆ ಬೋಳೈಸದಿರು ಕಾರ್ಯದ
ಹೊರಿಗೆಯೇನದ ಹೇಳು ಮೇಗಡೆ
ಮೆರೆವವರು ನಾವಲ್ಲ ನುಡಿಯಾ ಬಯಲ ಡೊಂಬೇಕೆ
ಅರುಹು ಕೇಳುವೆನೆನಲು ಶಲ್ಯನ
ಬಿರುನುಡಿಗೆ ಬೆಚ್ಚದೆ ಮಹೀಪತಿ
ಯರಿವು ತಪ್ಪದೆ ಬಿನ್ನವಿಸಿದನು ಮಾದ್ರ ರಾಜಂಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಮ್ಮನೆ ಸಮಾಧಾನ ಮಾಡಬೇಡ. ಕಾರ್ಯದ ಹೊರೆ ಏನು ಅದನ್ನು ಹೇಳು. ತೋರಿಕೆಗೆ ಮೆರೆವವರು ನಾವಲ್ಲ. ಮಾತಿನ ಬಡಾಯಿ ಏಕೆ? ತಿಳಿಸು, ಕೇಳುತ್ತೇನೆ ಎಂದು ಶಲ್ಯನು ಹೇಳಲು ಅವನ ಬಿರುನುಡಿಗೆ ಬೆಚ್ಚದೆ ದುರ್ಯೋಧನನು ಅರಿವು ತಪ್ಪದೆ ಬಿನ್ನವಿಸಿದನು.
ಮೂಲ ...{Loading}...
ಬರಿದೆ ಬೋಳೈಸದಿರು ಕಾರ್ಯದ
ಹೊರಿಗೆಯೇನದ ಹೇಳು ಮೇಗಡೆ
ಮೆರೆವವರು ನಾವಲ್ಲ ನುಡಿಯಾ ಬಯಲ ಡೊಂಬೇಕೆ
ಅರುಹು ಕೇಳುವೆನೆನಲು ಶಲ್ಯನ
ಬಿರುನುಡಿಗೆ ಬೆಚ್ಚದೆ ಮಹೀಪತಿ
ಯರಿವು ತಪ್ಪದೆ ಬಿನ್ನವಿಸಿದನು ಮಾದ್ರ ರಾಜಂಗೆ ॥18॥
೦೧೯ ಮಾವ ಸಾರಥಿಯಾಗಿ ...{Loading}...
ಮಾವ ಸಾರಥಿಯಾಗಿ ಕರ್ಣನ
ನೀವು ಕೊಂಡಾಡಿದಡೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾವ, ನೀವು ಕರ್ಣನ ಸಾರಥಿಯಾಗಿ ಕೊಂಡಾಡಿದರೆ, ಫಲುಗುಣನು ಯಾವ ಪಾಡು? ಅವನು ಸುರಾಸುರರನ್ನು ಲಕ್ಷ್ಯ ಮಾಡುವನೆ ? ಬಳಿಕ ಯಾವುದು ನಮಗೆ ಅಭ್ಯುದಯವೊ ಅದನ್ನು ನೀವು ಹೇಗಾದರೂ ಮನ್ನಿಸಿದರೆ, ಅರೆಜೀವವಾಗಿರುವ ಕೌರವ ವಂಶವೇ ಜೀವಂತವಾಗುತ್ತದೆ” ಎಂದನು.
ಮೂಲ ...{Loading}...
ಮಾವ ಸಾರಥಿಯಾಗಿ ಕರ್ಣನ
ನೀವು ಕೊಂಡಾಡಿದಡೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ ॥19॥
೦೨೦ ಕೇಳಿದನು ಕುರುಪತಿಯ ...{Loading}...
ಕೇಳಿದನು ಕುರುಪತಿಯ ಮಾತಿನ
ಗಾಳಿ ತುಡುಕಿತು ಮನದ ರೋಷ
ಜ್ವಾಲೆಯನು ಮೀಸೆಗಳು ಕುಣಿದವು ಕಾಯ ಕಂಪಿಸಿತು
ಮೇಲು ಮೂಗಿನ ಬೆರಳ ಕಡುಗಾ
ದಾಲಿಗಳ ಮಣಿಮಕುಟದೊಲಹಿನ
ನಾಲಗೆಯ ನಿದ್ರ್ರವದ ಮಾದ್ರಾಧೀಶನಿಂತೆಂದ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಮಾತುಗಳನ್ನು ಶಲ್ಯನು ಕೇಳಿದನು. ಕುರುಪತಿಯ ಮಾತಿನ ಗಾಳಿ ಮನದ ರೋಷ ಜ್ವಾಲೆಯನ್ನು ಹಿಡಿಯಿತು. ಮೀಸೆಗಳು ಕುಣಿದವು. ದೇಹ ಕಂಪಿಸಿತು. ಮೂಗಿನ ಮೇಲೆ ಬೆರಳಿನ, ಚೆನ್ನಾಗಿ ಕಾದ ಕಣ್ಣುಳ್ಳ, ಮಣಿಮಕುಟದ ತೂಗುವಿಕೆಯ, ಒಣಗಿದ ನಾಲಗೆಯ ಮಾದ್ರಾಧೀಶ ಶಲ್ಯನು ಹೀಗೆ ಹೇಳಿದನು.
ಮೂಲ ...{Loading}...
ಕೇಳಿದನು ಕುರುಪತಿಯ ಮಾತಿನ
ಗಾಳಿ ತುಡುಕಿತು ಮನದ ರೋಷ
ಜ್ವಾಲೆಯನು ಮೀಸೆಗಳು ಕುಣಿದವು ಕಾಯ ಕಂಪಿಸಿತು
ಮೇಲು ಮೂಗಿನ ಬೆರಳ ಕಡುಗಾ
ದಾಲಿಗಳ ಮಣಿಮಕುಟದೊಲಹಿನ
ನಾಲಗೆಯ ನಿದ್ರ್ರವದ ಮಾದ್ರಾಧೀಶನಿಂತೆಂದ ॥20॥
೦೨೧ ಖೂಳನೆಮ್ಬೆನೆ ನೀ ...{Loading}...
ಖೂಳನೆಂಬೆನೆ ನೀ ಸಮಸ್ತ ಕ
ಳಾಳಿ ನಿಪುಣನು ಬಾಲನೆಂಬೆನೆ
ಮೇಲೆ ಪಲಿತದ ಬೀಡು ಬಿಟ್ಟಿದೆ ತಳಿತ ತನುವಿನಲಿ
ಹೇಳು ಹೇಳಿನ್ನೊಮ್ಮೆ ನುಡಿ ನುಡಿ
ಕೇಳುವೆನು ಕಿವಿಯಾರೆ ಕರ್ಣನ
ಕಾಳೆಗಕೆ ನಾವ್ ಸಾರಥಿಗಳೇ ಶಿವಶಿವಾ ಎಂದ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನನ್ನು ನೀಚ ಎನ್ನಲೆ, ನೀನು ಸಮಸ್ತ ಕಲಾ ನಿಪುಣ. ಬಾಲಕ ಎನ್ನಲೆ, ತಳಿತ ತನುವಿನ ಮೇಲೆ ಹಣ್ಣಾದ ಕೂದಲು ಬೀಡು ಬಿಟ್ಟಿದೆ. ಹೇಳು ಹೇಳು. ಇನ್ನೊಮ್ಮೆ ನುಡಿ ನುಡಿ. ಕಿವಿಯಾರೆ ಕೇಳುತ್ತೇನೆ. ಕರ್ಣನ ಕಾಳೆಗಕ್ಕೆ ನಾವು ಸಾರಥಿಗಳೇ ಶಿವಶಿವಾ ಎಂದನು.
ಮೂಲ ...{Loading}...
ಖೂಳನೆಂಬೆನೆ ನೀ ಸಮಸ್ತ ಕ
ಳಾಳಿ ನಿಪುಣನು ಬಾಲನೆಂಬೆನೆ
ಮೇಲೆ ಪಲಿತದ ಬೀಡು ಬಿಟ್ಟಿದೆ ತಳಿತ ತನುವಿನಲಿ
ಹೇಳು ಹೇಳಿನ್ನೊಮ್ಮೆ ನುಡಿ ನುಡಿ
ಕೇಳುವೆನು ಕಿವಿಯಾರೆ ಕರ್ಣನ
ಕಾಳೆಗಕೆ ನಾವ್ ಸಾರಥಿಗಳೇ ಶಿವಶಿವಾ ಎಂದ ॥21॥
೦೨೨ ತಾರತಮತೆಯ ಬಲ್ಲೆ ...{Loading}...
ತಾರತಮತೆಯ ಬಲ್ಲೆ ಪುರುಷರ
ಚಾರುಚರಿತವನರಿವೆ ಸುಭಟರ
ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ
ಆರವನು ರಾಧೇಯ ದಿಟ ನಾ
ವಾರವರು ನಮ್ಮಂತರವ ನೀ
ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ತಾರತಮ್ಯವನ್ನು ಬಲ್ಲೆ. ಪುರುಷರ ಚಾರುಚರಿತವನ್ನು ಅರಿತಿರುವೆ. ಸುಭಟರ ವೀರವೃತ್ತಿಯನ್ನು ಬಲ್ಲೆ. ಮಾನ್ಯರ ಮೈಸಿರಿಯನ್ನು ತಿಳಿದಿರುವೆ. ನಿಜವಾಗಿ ಕರ್ಣ ಯಾವ ವಂಶದವನು? ನಾವು ಯಾವ ವಂಶದವರು? ನಮ್ಮ ಅಂತರವನ್ನು ನೀನು ಯಾರ ಬಳಿಯಲ್ಲಿಯಾದರೂ ಕೇಳಿ ತಿಳಿದಿರುವೆಯಾ? ಶಿವಶಿವಾ ಎಂದನು.
ಮೂಲ ...{Loading}...
ತಾರತಮತೆಯ ಬಲ್ಲೆ ಪುರುಷರ
ಚಾರುಚರಿತವನರಿವೆ ಸುಭಟರ
ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ
ಆರವನು ರಾಧೇಯ ದಿಟ ನಾ
ವಾರವರು ನಮ್ಮಂತರವ ನೀ
ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ ॥22॥
೦೨೩ ಖೂಳನನು ಹಿಡಿತನ್ದು ...{Loading}...
ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ನೀಚ ಕರ್ಣನನ್ನು ಹಿಡಿತಂದು ರಾಜನಿಗೆ ಸರಿಮಾಡಿ ರಾಜ್ಯದ ಮೇಲೆ ನಿಲ್ಲಿಸಿದೆ. ಬಳಿಕ ನಿನಗೆ ನೀಚತನ ಬಂದಿದೆ. ಕೀಳು ಮೇಲಿನ ಗಡಿ ನಿನ್ನಲ್ಲಿ ಬೀಳುಕೊಂಡಿದೆ. ಸಾಕು. ನಮಗಿನ್ನು ವೀರತ್ವವೇಕೆ ? ಎನ್ನುತ್ತ ಶಲ್ಯನು ಧಿಮ್ಮೆಂದು ನಿಂತನು.
ಮೂಲ ...{Loading}...
ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ ॥23॥
೦೨೪ ಒಡನೆ ನಿನ್ದನು ...{Loading}...
ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಕೂಡಲೆ ನಿಂತನು. ಶಲ್ಯನ ಉತ್ತರೀಯದ ಅಂಚನ್ನು ಹಿಡಿದು ಇನ್ನು ತಿರಸ್ಕರಿಸುವುದೇಕೆ ? ಎನ್ನುತ್ತ ಒಳ್ಳೆಯ ಮಾತಿನಲ್ಲ್ಲಿ ಹೇಳಿ ಅವನನ್ನು ಕುಳ್ಳಿರಿಸಿದನು. ವಿನಯದಿಂದ ಸಂತೈಸಿದನು. ಮಾತಿಗೆ ಕೋಪಿಸಕೊಳ್ಳುವುದು ಏಕೆ? ಮನಸ್ಸು ಒಪ್ಪಿದರೆ ಕೈಕೊಳ್ಳುವುದು ಅಲ್ಲದಿದ್ದರೆ ನಿಮಗಿಂತ ದೊಡ್ಡವರು ಯಾರಿದ್ದಾರೆ ? ಎಂದನು.
ಮೂಲ ...{Loading}...
ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ ॥24॥
೦೨೫ ಅರುಣ ಸಾರಥಿ ...{Loading}...
ಅರುಣ ಸಾರಥಿ ಭುವನಕಾರ್ಯದ
ಧುರವ ಹೊರನೇ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ್ಯದನುವರಿದು
ಹರನ ಸಾರಥಿ ಕಮಲಸಂಭವ
ಸುರರ ಕಾರ್ಯಕ್ಕೊದಗನೇ ಸ
ತ್ಪುರುಷರೇ ಪರಕಾರ್ಯನಿಷ್ಠರು ಕೋಪವೇಕೆಂದ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು “ಅರುಣನು ಸಾರಥಿಯಾಗಿ ಪ್ರಪಂಚದ ಜವಾಬ್ದಾರಿಯನ್ನು ಹೊರುವುದಿಲ್ಲವೆ? ಕೃಷ್ಣನು ಅಲ್ಲಿ ಆ ನರನ ಸಾರಥಿಯಾಗಿಲ್ಲವೆ? ಪರರ ಕಾರ್ಯದ ಅನುವನ್ನು ತಿಳಿದು ಬ್ರಹ್ಮನು ಹರನ ಸಾರಥಿಯಾಗಿ ಸುರರ ಕಾರ್ಯಕ್ಕೆ ಒದಗಲಿಲ್ಲವೆ? ಸತ್ಪುರುಷರೆಲ್ಲ ಪರಕಾರ್ಯನಿಷ್ಠರು ಕೋಪವೇಕೆ " ಎಂದನು.
ಮೂಲ ...{Loading}...
ಅರುಣ ಸಾರಥಿ ಭುವನಕಾರ್ಯದ
ಧುರವ ಹೊರನೇ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ್ಯದನುವರಿದು
ಹರನ ಸಾರಥಿ ಕಮಲಸಂಭವ
ಸುರರ ಕಾರ್ಯಕ್ಕೊದಗನೇ ಸ
ತ್ಪುರುಷರೇ ಪರಕಾರ್ಯನಿಷ್ಠರು ಕೋಪವೇಕೆಂದ ॥25॥
೦೨೬ ಸವರಿದರು ಕುರು ...{Loading}...
ಸವರಿದರು ಕುರು ವಂಶವನು ಪಾಂ
ಡವರು ಸಕಲ ಮಹಾರಥರು ಸಲೆ
ಸವೆದುದಿಲ್ಲಿ ನದೀಸುತ ದ್ರೋಣಾದಿಗಳು ಸಹಿತ
ಅವರೊಳಳಿದವರಿಬ್ಬರೇ ನೀ
ವವಸರಕೆ ಸಾರಥ್ಯವನು ನಿ
ಮ್ಮವರ ಮೇಲನುರಾಗವುಳ್ಳಡೆ ಮಾಡು ಮಾಣೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವರು ಕುರು ವಂಶವನ್ನು ಸವರಿದರು. ಇಲ್ಲಿ ಭೀಷ್ಮ ದ್ರೋಣಾದಿಗಳು ಸಹಿತ ಸಕಲ ಮಹಾರಥರು ಸವೆದುಹೋದರು. ಅªರಲ್ಲಿ ಅಳಿದವರಿಬ್ಬರೇ. ನಿಮ್ಮವರ ಮೇಲೆ ಅನುರಾಗವಿದ್ದರೆ ನೀವು ಈ ಸಂದರ್ಭದಲ್ಲಿ ಸಾರಥ್ಯವನ್ನು ಮಾಡಿ, ಇಲ್ಲವೇ ಬಿಡಿ " ಎಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಸವರಿದರು ಕುರು ವಂಶವನು ಪಾಂ
ಡವರು ಸಕಲ ಮಹಾರಥರು ಸಲೆ
ಸವೆದುದಿಲ್ಲಿ ನದೀಸುತ ದ್ರೋಣಾದಿಗಳು ಸಹಿತ
ಅವರೊಳಳಿದವರಿಬ್ಬರೇ ನೀ
ವವಸರಕೆ ಸಾರಥ್ಯವನು ನಿ
ಮ್ಮವರ ಮೇಲನುರಾಗವುಳ್ಳಡೆ ಮಾಡು ಮಾಣೆಂದ ॥26॥
೦೨೭ ನಿನ್ನ ಕೈಯಲಿ ...{Loading}...
ನಿನ್ನ ಕೈಯಲಿ ಬರಲಿ ಸತ್ತಿಗೆ
ಯೆನ್ನ ಕೈಯಲಿ ಹೊಡೆಸು ಬಂಡಿಯ
ನಿನ್ನ ತಮ್ಮನ ಹೆಗಲಲಾತನ ಹಡಪ ಹಾಯ್ಕಿರಲಿ
ನಿನ್ನ ಬಂಧುಗಳವನ ಬೇಂಟೆಯ
ಕುನ್ನಿಗಳ ಹಿಡಿಯಲಿ ಸುಯೋಧನ
ನಿನ್ನ ಭಾಗ್ಯವನೊದೆದು ಕಳೆ ಕೇಡಾವುದೆಮಗೆಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು, “ಕರ್ಣನ ಬೆಳ್ಗೊಡೆ ನಿನ್ನ ಕೈಯಲ್ಲಿ ಬರಲಿ. ನನ್ನ ಕೈಯಲ್ಲಿ ರಥವನ್ನು ಹೊಡೆಸು. ನಿನ್ನ ತಮ್ಮನ ಹೆಗಲಿನಲ್ಲಿ ಅವನ ಹಡಪ ಹಾಕಿರಲಿ. ನಿನ್ನ ಬಂಧುಗಳು ಅವನ ಬೇಟೆಯ ಕುನ್ನಿಗಳನ್ನು ಹಿಡಿದುಕೊಳ್ಳಲಿ. ಸುಯೋಧನ, ನಿನ್ನ ಭಾಗ್ಯವನ್ನು ಒದ್ದು ಕಳೆದುಕೊ. ಅದರಿಂದ ನನಗೆ ಯಾವ ಕೇಡು?” ಎಂದನು.
ಮೂಲ ...{Loading}...
ನಿನ್ನ ಕೈಯಲಿ ಬರಲಿ ಸತ್ತಿಗೆ
ಯೆನ್ನ ಕೈಯಲಿ ಹೊಡೆಸು ಬಂಡಿಯ
ನಿನ್ನ ತಮ್ಮನ ಹೆಗಲಲಾತನ ಹಡಪ ಹಾಯ್ಕಿರಲಿ
ನಿನ್ನ ಬಂಧುಗಳವನ ಬೇಂಟೆಯ
ಕುನ್ನಿಗಳ ಹಿಡಿಯಲಿ ಸುಯೋಧನ
ನಿನ್ನ ಭಾಗ್ಯವನೊದೆದು ಕಳೆ ಕೇಡಾವುದೆಮಗೆಂದ ॥27॥
೦೨೮ ಗೆಲುವೆನವದಿರನೆಮ್ಬ ಬರಿಕ ...{Loading}...
ಗೆಲುವೆನವದಿರನೆಂಬ ಬರಿಕ
ಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿ
ಗಳುಕದರಿಭಟರಿವನ ಕೊಂಬರೆ ಕಂಡು ಮರುಳಾದೈ
ಬಲುಬಿದಿರನುಚ್ಚಳಿಸುವಳಿಮುಖ
ಕೆಳೆಯ ಕಬ್ಬಾನುವುದೆ ಕೌರವ
ಕುಲವನದ್ದಿದೆ ಪಾಪಿ ಕಷ್ಟವ ನೆನೆದೆ ಹೋಗೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ‘ಅವರನ್ನು ಗೆಲ್ಲುವೆನೆಂಬ ಬರಿಯ ಕಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿಗೆ ಹೆದರದ ಶತ್ರುಭಟರು ಇವನಿಗೆ ಹೆದರುತ್ತಾರೆಯೆ? ಕಂಡು ಮರುಳಾದೆಯಲ್ಲ! ಬಿದಿರನ್ನು ಕೊರೆಯುವ ದುಂಬಿಯನ್ನು ಎಳೆಯ ಕಬ್ಬು ಎದುರಿಸಲು ಸಾದ್ಯವೇ? ಪಾಪಿ, ಕೌರವ ಕುಲವನ್ನು ಮುಳುಗಿಸಿದೆ. ಕಷ್ಟವನ್ನು ಆಹ್ವಾನಿಸಿದೆ, ಹೋಗು’ ಎಂದನು.
ಮೂಲ ...{Loading}...
ಗೆಲುವೆನವದಿರನೆಂಬ ಬರಿಕ
ಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿ
ಗಳುಕದರಿಭಟರಿವನ ಕೊಂಬರೆ ಕಂಡು ಮರುಳಾದೈ
ಬಲುಬಿದಿರನುಚ್ಚಳಿಸುವಳಿಮುಖ
ಕೆಳೆಯ ಕಬ್ಬಾನುವುದೆ ಕೌರವ
ಕುಲವನದ್ದಿದೆ ಪಾಪಿ ಕಷ್ಟವ ನೆನೆದೆ ಹೋಗೆಂದ ॥28॥
೦೨೯ ಅರಿಶಿರವ ಸೆಣ್ಡಾಡಿ ...{Loading}...
ಅರಿಶಿರವ ಸೆಂಡಾಡಿ ಎನ್ನೀ
ಕರವು ವಂದಿ ವ್ರಾತದೆಡರನು
ಪರಿಹರಿಸಿತೀ ಹದನು ನಾವ್ ಹಿಂದೀಸು ಕಾಲದಲಿ
ಧರಣಿಪತಿ ನಿನ್ನಿಂದ ಕರ್ಣನ
ತುರಗವಾಘೆಯ ಚಮ್ಮಟಿಗೆಗೀ
ಕರವು ಹೂಡುವುದಾಯ್ತು ಹರಹರ ಧನ್ಯರಾವೆಂದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು “ಶತ್ರುಗಳ ತಲೆಗಳನ್ನು ಚೆಂಡಾಡಿ ನನ್ನ ಈ ಕೈ ವಂದಿಸಮೂಹದ ತೊಂದರೆಗಳನ್ನು ಈ ರೀತಿ ಇಷ್ಟು ಕಾಲದಲ್ಲಿ ಪರಿಹರಿಸಿತ್ತು. ದುರ್ಯೋಧನ, ನಿನ್ನಿಂದ ಕರ್ಣನ ಕುದುರೆಯ ಲಗಾಮು , ಚಾವಟಿಗಳಿಗೆ ಈ ಕೈಯನ್ನು ಹೂಡುವುದಾಯಿತು. ಹರಹರ ನಾವು ಧನ್ಯರು!” ಎಂದನು.
ಮೂಲ ...{Loading}...
ಅರಿಶಿರವ ಸೆಂಡಾಡಿ ಎನ್ನೀ
ಕರವು ವಂದಿ ವ್ರಾತದೆಡರನು
ಪರಿಹರಿಸಿತೀ ಹದನು ನಾವ್ ಹಿಂದೀಸು ಕಾಲದಲಿ
ಧರಣಿಪತಿ ನಿನ್ನಿಂದ ಕರ್ಣನ
ತುರಗವಾಘೆಯ ಚಮ್ಮಟಿಗೆಗೀ
ಕರವು ಹೂಡುವುದಾಯ್ತು ಹರಹರ ಧನ್ಯರಾವೆಂದ ॥29॥
೦೩೦ ಜಾತಿಹೀನರ ಕರ್ಮವುತ್ತಮ ...{Loading}...
ಜಾತಿಹೀನರ ಕರ್ಮವುತ್ತಮ
ಜಾತಿಗಳ ಕರ್ತವ್ಯ ತಿರ್ಯ
ಗ್ಜಾತಿಗಳ ಗತಿ ಧರ್ಮವೃತ್ತಿಯ ಸೇರುವೆಯನರಿದು
ಆತನಳವಡಿಸಿದನು ವಿಧಿ ನಿಮ
ಗಾತ ಮಾಡಿದನಳಿವ ಸಾಮ
ಥ್ರ್ಯಾತಿಶಯವುಂಟೈಸಲೇ ಶಿವಯೆನುತ ಖತಿಗೊಂಡ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿಧಿಯು ಜಾತಿಹೀನರ ಕರ್ಮ, ಉತ್ತಮ ಜಾತಿಗಳ ಕರ್ತವ್ಯ, ತಿರ್ಯಗ್ಜಾತಿಗಳ ಗತಿ, ಧರ್ಮವೃತ್ತಿಯ ಸೇರುವೆಯನ್ನು ತಿಳಿದು ಅಳವಡಿಸಿದನು. ನಿಮಗೆ ಆತ ಮಾಡಿದ್ದನ್ನು ನಾಶಮಾಡುವ ಸಾಮಥ್ರ್ಯಾತಿಶಯ ಇದೆಯಲ್ಲವೆ! ಶಿವ! “ಎನ್ನುತ್ತ ಶಲ್ಯನು ಕೋಪಗೊಂಡನು.
ಮೂಲ ...{Loading}...
ಜಾತಿಹೀನರ ಕರ್ಮವುತ್ತಮ
ಜಾತಿಗಳ ಕರ್ತವ್ಯ ತಿರ್ಯ
ಗ್ಜಾತಿಗಳ ಗತಿ ಧರ್ಮವೃತ್ತಿಯ ಸೇರುವೆಯನರಿದು
ಆತನಳವಡಿಸಿದನು ವಿಧಿ ನಿಮ
ಗಾತ ಮಾಡಿದನಳಿವ ಸಾಮ
ಥ್ರ್ಯಾತಿಶಯವುಂಟೈಸಲೇ ಶಿವಯೆನುತ ಖತಿಗೊಂಡ ॥30॥
೦೩೧ ಆಸುರದ ಬೆರಗೇಕೆ ...{Loading}...
ಆಸುರದ ಬೆರಗೇಕೆ ನಮ್ಮೊಡ
ನೀಸು ಮಾತೇಕೆಮ್ಮ ರಕ್ಷಿಸು
ವಾಸೆಯುಂಟೇ ಮಾಡಿ ಮಾಣ್ಬುದು ಕರುಣವಿಲ್ಲದಡೆ
ವಾಸಿವಟ್ಟವ ನೋಡಿದನೆ ಲ
ಕ್ಷಿ ್ಮೀಶನವರಲಿ ಸೂತ ಕರ್ಮಾ
ಭ್ಯಾಸಿಯೇ ಮುರವೈರಿ ಮುನ್ನೆಂದನು ಸುಯೋಧನನು ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅತಿಯಾದ ಬೆರಗೇಕೆ? ನಮ್ಮೊಡನೆ ಇಷ್ಟು ಮಾತೇಕೆ? ನಮ್ಮನ್ನು ರಕ್ಷಿಸುವ ಆಸೆಯಿದ್ದರೆ ಮಾಡಿ. ಕರುಣವಿಲ್ಲದಿದ್ದರೆ ಬಿಡುವುದು. ಪಾಂಡವರಲ್ಲಿ ಲಕ್ಷ್ಮೀಶನು ತನ್ನ ಉತ್ತಮ ಪದವಿಯವನು ಎಂಬ ಯೋಚನೆ ಮಾಡಿದನೆ ? ಮುರವೈರಿ ಮುಂಚೆ ಸೂತನ ಕೆಲಸವನ್ನು ಮಾಡುತ್ತಿದ್ದನೇ? " ಎಂದು ಸುಯೋಧನನು ಕೇಳಿದನು.
ಮೂಲ ...{Loading}...
ಆಸುರದ ಬೆರಗೇಕೆ ನಮ್ಮೊಡ
ನೀಸು ಮಾತೇಕೆಮ್ಮ ರಕ್ಷಿಸು
ವಾಸೆಯುಂಟೇ ಮಾಡಿ ಮಾಣ್ಬುದು ಕರುಣವಿಲ್ಲದಡೆ
ವಾಸಿವಟ್ಟವ ನೋಡಿದನೆ ಲ
ಕ್ಷಿ ್ಮೀಶನವರಲಿ ಸೂತ ಕರ್ಮಾ
ಭ್ಯಾಸಿಯೇ ಮುರವೈರಿ ಮುನ್ನೆಂದನು ಸುಯೋಧನನು ॥31॥
೦೩೨ ಮುರಹರನ ಸಮಜೋಳಿ ...{Loading}...
ಮುರಹರನ ಸಮಜೋಳಿ ನೀವಾ
ನರನ ಸಮಗೈ ಕರ್ಣನಿಂತಿ
ಬ್ಬರನು ನೀವಿಬ್ಬರು ವಿಭಾಡಿಸಿ ಗೆಲುವುದೇನರಿದು
ಸುರರ ಕಾರ್ಯದಲಂದು ಸಾರಥಿ
ಸರಸಿಜೋದ್ಭವನಾಗನೇ ಎ
ನ್ನರಸುತನವಿಂದಳಿದುದಿದ ನೀನುಳುಹಬೇಕೆಂದ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಯೋಧನನು “ನೀವು ಆ ಕೃಷ್ಣನ ಸಮಜೋಡಿ. ಆ ಅರ್ಜುನನಿಗೆ ಸಮಗೈ ಕರ್ಣ. ಹೀಗೆ ಆ ಇಬ್ಬರನ್ನು ನೀವಿಬ್ಬರು ಎದುರಿಸಿ ಗೆಲುವುದು ಏನಸಾಧ್ಯವೇ? ಅಂದು ದೇವತೆಗಳ ಕಾರ್ಯದಲ್ಲಿ ಬ್ರಹ್ಮ ಸಾರಥಿಯಾಗಲಿಲ್ಲವೆ? ಇಂದು ನನ್ನ ಅರಸುತನ ಅಳಿಯುತ್ತಿದೆ. ಇದನ್ನು ನೀನು ಉಳಿಸಬೇಕು” ಎಂದನು
ಮೂಲ ...{Loading}...
ಮುರಹರನ ಸಮಜೋಳಿ ನೀವಾ
ನರನ ಸಮಗೈ ಕರ್ಣನಿಂತಿ
ಬ್ಬರನು ನೀವಿಬ್ಬರು ವಿಭಾಡಿಸಿ ಗೆಲುವುದೇನರಿದು
ಸುರರ ಕಾರ್ಯದಲಂದು ಸಾರಥಿ
ಸರಸಿಜೋದ್ಭವನಾಗನೇ ಎ
ನ್ನರಸುತನವಿಂದಳಿದುದಿದ ನೀನುಳುಹಬೇಕೆಂದ ॥32॥
೦೩೩ ಒಣಗುತಿದೆ ಕುರುವಂಶಲತೆ ...{Loading}...
ಒಣಗುತಿದೆ ಕುರುವಂಶಲತೆ ಫಲು
ಗುಣನ ಕೋಪಾನಳನ ನಾಲಗೆ
ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
ಅಣಕಿಸದೆ ಕಾರುಣ್ಯವರ್ಷವ
ನೊಣಗಲಲಿ ಸುರಿ ಪಾಪಿ ಮಕ್ಕಳ
ಹೆಣನ ಕಾಣುತ ದುಃಖವಿಲ್ಲ ದುರಾತ್ಮ ನೀನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕುರುವಂಶಲತೆ ಒಣಗುತ್ತಿದೆ. ಅರ್ಜುನನ ಕೋಪಾದ ಬೆಂಕಿಯ ನಾಲಗೆ ಆಹುತಿ ತೆಗೆದುಕೊಳ್ಳುತ್ತಿದೆ. ನಮ್ಮ ಮೇಲೆ ಯಾರು ಕಕ್ಕುಲಿತೆಪಟ್ಟರೂ ಕಾಯುವವರನ್ನು ಕಾಣೆ. ಅಣಕಿಸದೆ ಕಾರುಣ್ಯದ ಮಳೆಯನ್ನು ಬರಡು ಭೂಮಿಯಲ್ಲಿ ಸುರಿ. ಪಾಪಿ, ಮಕ್ಕಳ ಹೆಣವನ್ನು ಕಾಣುತ್ತಿದ್ದರೂ ದುಃಖವಿಲ್ಲದ ದುರಾತ್ಮ ನೀನು” ಎಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಒಣಗುತಿದೆ ಕುರುವಂಶಲತೆ ಫಲು
ಗುಣನ ಕೋಪಾನಳನ ನಾಲಗೆ
ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
ಅಣಕಿಸದೆ ಕಾರುಣ್ಯವರ್ಷವ
ನೊಣಗಲಲಿ ಸುರಿ ಪಾಪಿ ಮಕ್ಕಳ
ಹೆಣನ ಕಾಣುತ ದುಃಖವಿಲ್ಲ ದುರಾತ್ಮ ನೀನೆಂದ ॥33॥
೦೩೪ ದೇವಕೀಸುತನೇನು ಬಣ್ಡಿಯ ...{Loading}...
ದೇವಕೀಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೃಷ್ಣನು ಏನು ಬಂಡಿಯನ್ನು ಹೊಡೆಯುವವರ ಕುಲದಲ್ಲಿ ಜನಿಸಿದನೆ? ಮತ್ತೆ ಆ ಬ್ರಹ್ಮ ಅದಾವ ಸಾರಥಿಕುಲದ ಪೀಳಿಗೆಯೊ? ಒಬ್ಬರು ಇನ್ನೊಬ್ಬರನ್ನು ಕಾಪಾಡಬೇಕು. ಇದರೊಳಗೆ ಯಾವ ಹಾನಿ? ಸತ್ಪುರುಷರು ಪರಪ್ರಯೋಜನವನ್ನು ಭಾವಿಸುವವರು. ಈ ಕುರಿತು ನಿನ್ನ ಚಿಂತನೆ ಏನು” ಎಂದು ದುರ್ಯೋಧನನು ಶಲ್ಯನನ್ನು ಕೆಳಿದನು.
ಮೂಲ ...{Loading}...
ದೇವಕೀಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ ॥34॥
೦೩೫ ಗುರು ಪಿತಾಮಹರಿನ್ದ ...{Loading}...
ಗುರು ಪಿತಾಮಹರಿಂದ ಮೋರೆಯ
ಮುರಿದ ವಿಜಯ ವಧೂ ಕಟಾಕ್ಷವ
ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ
ಕುರು ಕುಲೋದ್ಧಾರಕನು ಮಾದ್ರೇ
ಶ್ವರನೆನಿಪ ವಿಖ್ಯಾತಿ ಬಂದುದು
ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣ, ಭೀಷ್ಮರಿಂದ ಮುಖವನ್ನು ತಿರುಗಿಸಿದ ವಿಜಯ ವಧುವಿನ ಕಟಾಕ್ಷವನ್ನು ತಿರುಗಿಸುವ ಪರಾಕ್ರಮಿಯು ನಿಮ್ಮನ್ನು ಬಿಟ್ಟರೆ ಬೇರೆ ಯಾರಿದ್ದಾರೆ? ‘ಕುರುಕುಲೋದ್ಧಾರಕ ಮಾದ್ರೇಶ್ವರ’ ಎನಿಸುವ ವಿಖ್ಯಾತಿ ಬರುತ್ತದೆ. ಅದನ್ನು ತಪ್ಪಿಸಬೇಡ, ಮಾವ, ಎಂದು ಚರಣದಲಿ ಎರಗಿದನು.
ಮೂಲ ...{Loading}...
ಗುರು ಪಿತಾಮಹರಿಂದ ಮೋರೆಯ
ಮುರಿದ ವಿಜಯ ವಧೂ ಕಟಾಕ್ಷವ
ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ
ಕುರು ಕುಲೋದ್ಧಾರಕನು ಮಾದ್ರೇ
ಶ್ವರನೆನಿಪ ವಿಖ್ಯಾತಿ ಬಂದುದು
ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ ॥35॥
೦೩೬ ಶಿವ ಶಿವಾ ...{Loading}...
ಶಿವ ಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವ ಶಿವಾ ಕೌರವನಿಂದ ಇಂತಹ ನಿರ್ಬಂಧಕ್ಕೆ ಒಳಗಾಗಬೇಕಾಯುತೇ? ಇದು ತುಂಬಿಗಳನ್ನು ಸೆರೆಹಿಡಿದು ಮದ್ಯಮಯ ಗಂಧವನ್ನು ಕುಡಿಸುವ ರೀತಿಯಾಯಿತು. ಮೊದಲಿಗೆ ರಾಜರ ಸೇವೆಯೇ ಕಷ್ಟವಲ್ಲವೆ! ಇನ್ನು ನಾವು ಪ್ರತಿಭಟಿಸಿದರೆ ಏನು ಆಗುತ್ತದೆ? ಸಾರಥಿಯಾದೆವು ಏಳು!” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಶಿವ ಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ ॥36॥
೦೩೭ ಆಯಿತೇ ಸನ್ತೋಷ ...{Loading}...
ಆಯಿತೇ ಸಂತೋಷ ಕಮಲದ
ಳಾಯತೇಕ್ಷಣನೊಡನೆ ಬಂಡಿಯ
ಬೋಯಿಕೆಗೆ ವೀಳೆಯವ ಹಿಡಿದೆವು ಹಲವು ಮಾತೇನು
ದಾಯ ಬಂದುದೆ ನಿನಗೆ ಬೊಮ್ಮಂ
ಗಾಯಿತೇ ಸೂತತ್ವವಾದಡೆ
ರಾಯ ಹೇಳೈ ತ್ರಿಪುರ ದಹನದ ಕಥೆಯ ನೀನೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಸಂತೋಷವಾಯಿತೆ? ಕೃಷ್ಣನೊಡನೆ ಬಂಡಿಯ ಬೋಯಿಕೆಗೆ ವೀಳೆಯವನ್ನು ಹಿಡಿದೆವು! ಹಲವು ಮಾತೇನು. ನಿನಗೆ ಬೇಕಾದ ಗರ ಬಿದ್ದಿತೆ ? ಬ್ರಹ್ಮನಿಗೆ ಸೂತತ್ವವಾಯಿತೆ? ಹಾಗಾದರೆ ರಾಯ, ನೀನು ತ್ರಿಪುರ ದಹನದ ಕಥೆಯನ್ನು ಹೇಳು” ಎಂದು ಶಲ್ಯನು ದುರ್ಯೋಧನನನ್ನು ಕೇಳಿದನು.
ಟಿಪ್ಪನೀ (ಕ.ಗ.ಪ)
ತ್ರಿಪುರ - ಮಹಾಭಾರತ ಒಂದು ಕಥೆಗಳ ಆಗರ. ಆನರಿಗೆ ಕಥಾಶ್ರವಣದಲ್ಲಿ ಇರುವ ಆಸಕ್ತಿಯನ್ನು ಬಳಸಿಕೊಂಡು ವ್ಯಾಸರು ಈ ಕಥೆ ಹೇಳಿದ್ದಾರೆ. ವಾಸ್ತವವಾಗಿ ಇದು ಕಥೆ ಹೇಳುತ್ತ ಕೂರುವ ಸಂದರ್ಭವಲ್ಲ. ಮಹಾಭಾರತ ಯುದ್ಧ ಆರಂಭವಾಗಿ ಈಗಾಗಲೇ ಹದಿನೈದು ದಿನ ಕಳೆದಿದೆ. ಶಲ್ಯನು ತನ್ನ ಸಾರಥಿಯಾದರೆ ಚೆನ್ನ ಎಂದು ಕರ್ಣ ಸಲಹೆ ಕೊಡುತ್ತಾನೆ. ಕೂಡಲೇ ಓಡಿಹೋಗಿ ಕೌರವನು ಶಲ್ಯನನ್ನು ಸಾರಥಿಯಾಗುವಂತೆ ಬೇಡುತ್ತಾನೆ. ಶಲ್ಯನು ಮೊದಲು ಕೊಸರಾಡಿದರೂ ಜಗ್ಗದೆ ಕೊನೆಗೆ ‘‘ಬ್ರಹ್ಮನೇ ತ್ರಿಪುರಸಚಿಹಾರ ಕಾಲದಲ್ಲಿ ಶಿವನಿಗೆ ಸಾರಥಿಯಾಗಿರಲಿಲ್ಲವೇ?’’ ಎಂದು ಹೇಳಿ ಕೌರವನು ಶಲ್ಯನನ್ನು ಒಪ್ಪಿಸುತ್ತಾನೆ. ಶಲ್ಯನೇನೋ ಒಪ್ಪಿಕೊಂಡ. ಆದರೆ ಆ ತ್ರಿಪುರಸಚಿಹಾರದ ಕಥೆಯನ್ನು ಹೇಳು ಎಂದು ಕೌರವನನ್ನು ಪೀಡಿಸಿದ. ಆಗ ಕೌರವನು ವಿಸ್ತಾರವಾಗಿ ಆ ಕಥೆಯನ್ನು ನಿರೂಪಿಸಿದ.
ಕುಮಾರಸ್ವಾಮಿಯಿಂದ ತಾರಕಾಸುರನ ಸಚಿಹಾರವಾದ ಮೆಲೆ ಅವನ ಮೂವರು ಮಕ್ಕಳು ತಾರಕಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿಗಳು ದೇವತೆಗಳನ್ನು ದ್ವೇಷಿಲಾರಂಭಿಸಿದರು. ಮಯನ ಸಹಾಯದಿಂದ ಕಬ್ಬಿಣನಗರ ಬೆಳ್ಳಿನಗರ ಮತ್ತು ಚಿನ್ನದ ನಗರಗಳನ್ನು ಕಟ್ಟಿಕೊಂಡು ಅಜೇಯರಾಗಿ ಬೆಳೆದರು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತಮಗೆ ಅಮರತ್ವ ಬೇಕೆಂದು ಪಟ್ಟು ಹಿಡಿದರು. ಆದರೆ ಅದೊಂದನ್ನು ಬಿಟ್ಟು ಏನು ಬೇಕಾದರೂ ಕೇಳಿ ಎಂದಾಗ ಮೇಲೆ ಹೇಳಿದ ಮೂರು ಬಗೆಯ ನಗರಗಳನ್ನು ಪಡೆದುಕೊಂಡರು. ಈ ಮೂರೂ ಲೋಕಗಳು ಒಂದು ಗೋಳದಲ್ಲಿ ಸುತ್ತಾಡುವ ತಂತ್ರವನ್ನು ಮಾಡಿಕೊಂಡರು. ಈ ಮೂರೂ ಲೋಕಗಳು ಒಂದು ಗೋಳದಲ್ಲಿ ಸುತ್ತಾಡುವ ತಂತ್ರವನ್ನು ಮಾಡಿಕೊಂಡರು. ಈ ಮೂರೂ ಲೋಕಗಳನ್ನು ಯಾರಾದರೂ ಒಂದೆ ಬಾಣದಿಂದ ಭೇದಿಸಿದರೆ ಆಗ ತ್ರಿಪುರ ನಾಶ ಎಂದು ಒಪ್ಪಿಕೊಂಡರು. ಮಯನಿಂದ ಮಾಯಾಸ್ತ್ರಗಳನ್ನು ಪಡೆದುಕೊಂಡು ತ್ರಿಪುರಗಳಿಂದಲೇ ದೇವಲೋಕದ ಮೇಲೆ ದಾಳಿಯನ್ನು ಆರಂಭಿಸಿದರು.
ದೇವತೆಗಳ ಸಂಕಟ ಹೇಳತೀರದಾಯಿತು. ಆದ್ದರಿಂದ ಶಿವನ ಬಳಿಗೆ ಹೋಗಿ ಪ್ರಾರ್ಥಿಸಿದರು. ಶಿವ ಒಪ್ಪಿದ. ತನ್ನ ಅರ್ಧಶಕ್ತಿಯನ್ನು ಅವರಿಗೆ ದಾನ ಮಾಡಿದ. ಉಳಿದರ್ದವನ್ನು ನೀವು ಹಾಕಿಕೊಂಡು ಯುದ್ದಮಾಡಿ ಎಂದ. ಆದರೆ ದೇವತೆಗಳು ‘‘ನಮ್ಮ ಪಾಲಿನ ಬಲವನ್ನೆಲ್ಲ ನಿನಗೆ ಕೊಡುತ್ತೇವೆ. ನೀನೇ ವ್ಯವಸ್ಥೆಗೊಳಿಸಿ ಯುದ್ಧಮಾಡು’’ ಎಂದು ಪ್ರಾರ್ಥಿಸಿದರು. ಶಿವ ಒಪ್ಪಿದ. ದೇವೆತೆಗಳೆಲ್ಲ ಸೇರಿ ಶಿವನಿಗೆ ಬೇಕಾದ ಬಿಲ್ಲುಬಾಣ, ರಥ, ಕವಚ ಮೊದಲಾದ ಆಯುಧಗಳನ್ನು ಜೋಡಿಸಿಕೊಟ್ಟರು. ವಿಶ್ವಕರ್ಮನು ಈ ಭೂಮಿಯನ್ನೇ ಒಂದು ರಥವಾಗಿ ಮಾಡಿಕೊಟ್ಟ. ಸೂರ್ಯಚಂದ್ರರೇ ರಥದ ಚಕ್ರಗಳಾದರು. ಹಿಮವತ್ ವಿಂಧ್ಯಗಳು ಉದಯಾಸ್ತ ಪರ್ವತಗಳಾದುವು. ದೃಢಾವಯಸದ ತ್ರೇತಾಗ್ನಿ ನೊಗವಾಯಿತು. ಮೇರುಪರ್ವತವು ಛತ್ರವಾಯಿತು. ವರ್ಷಗಳು ಬಿಲ್ಲಾದುವು. ವಾಸುದೇವನೇ ಬಾಣವಾದ. U್ಪ್ರಹಮಂಡಿತ ವ್ಯೋಮಮಂಡಲವು ಕವಚವಾಯಿತು. ಈ ಶಿವರಥವನ್ನು ನಡೆಸಲು ಬ್ರಹ್ಮನೇ ಸಾರಥಿಯಾದ. ಅಥರ್ವ ಅಂಗಿರಸರು ರಥಚಕ್ರದ ರಕ್ಷಾದೇವತೆಗಳಾದರು. ಹೀಗೆ ಶಿವನು ಯುದ್ಧ ಸನ್ನದ್ಧನಾಗಿ ನಿಂತು ಒಂದೇ ಒಂದು ಬಾಣವನ್ನು ಮೂರು ನಗರಗಳಿಗೂ ಏಕಕಾಲzಲ್ಲಿ ಗುರಿಯಿಟ್ಟು ಪ್ರಯೋಗಿಸಿದ. ಕೂಡಲೇ ಮೂರು ಊರುಗಳೂ ಸುಟ್ಟುಹೋದವು. ಸಮಸ್ತ ರಾಕ್ಷಸರೂ ಸತ್ತುಬಿದ್ದರು.
W್ರಪುರ ಸಚಿಹಾರ ಎಂಬುದು ಮಹಾಭಾರತದಲ್ಲಿ ಬರುವ ಒಂದು ಸುದೀರ್ಘ ಕಥನ. ಅನೇಕ ಪುರಾಣಗಳಲ್ಲಿಯೂ ಈ ಬಗೆಗೆ ಸೊಗಸಾದ ವರ್ಣನೆಗಳಿವೆ. ಯಕ್ಷಗಾನ, ಹರಿಕಥೆ, ಪೌರಾಣಿಕ ನಾಟಕಗಳಲ್ಲಿ ಈ ಪ್ರಸಂಗ ರಸಮಯವಾಗಿ ಚಿತ್ರಿಸಲ್ಪಟ್ಟಿದೆ. ಕನ್ನಡದಲ್ಲಿ ‘ತ್ರಿಪುರ ದಹನ ಸಾಂಗತ್ಯ’ ಎಂಬ ಗ್ರಂಥವೇ ಇದೆ.
ಮೂಲ ...{Loading}...
ಆಯಿತೇ ಸಂತೋಷ ಕಮಲದ
ಳಾಯತೇಕ್ಷಣನೊಡನೆ ಬಂಡಿಯ
ಬೋಯಿಕೆಗೆ ವೀಳೆಯವ ಹಿಡಿದೆವು ಹಲವು ಮಾತೇನು
ದಾಯ ಬಂದುದೆ ನಿನಗೆ ಬೊಮ್ಮಂ
ಗಾಯಿತೇ ಸೂತತ್ವವಾದಡೆ
ರಾಯ ಹೇಳೈ ತ್ರಿಪುರ ದಹನದ ಕಥೆಯ ನೀನೆಂದ ॥37॥