೦೦೦ ಸೂ ರಾಯದಳ ...{Loading}...
ಸೂ. ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ರಾಜನ ಸೈನ್ಯವು ಮಝ! ಪೂತುರೆ! ಎನ್ನಲು ಶತ್ರುರಾಜರ ಸೇನೆಯನ್ನು ಮುರಿದು ಧರ್ಮರಾಯನು ದುರ್ಯೋಧನನನ್ನು ಗೆದ್ದನು.
ಮೂಲ ...{Loading}...
ಸೂ. ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ
೦೦೧ ಫಡ ಫಡೆಲವೋ ...{Loading}...
ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಡ! ಫಡ! ಎಲವೋ ಶಲ್ಯ, ಮಕ್ಕಳನ್ನು ಬಡಿದು ಬಾಹುಬಲದಲ್ಲಿ ಬೀಗುತ್ತಿರುವೆ. ನಿನ್ನಂತಹ ಪರಾಕ್ರಮಿಗಳನ್ನು ಗೆದ್ದು ಧರಿಸುವಂತಹ ಬಿರುದಿನ ಪೆಂಡೆಯ ನನ್ನ ಎಡಗಾಲಿನಲ್ಲಿ ತೊಡರಿದೆ. ಘೂಡುಘುಡಿಸಿ ರೋಮಾಂಚಿತನಾದ ಕಡುಗಲಿ ಸಾತ್ಯಕಿಯು ತನ್ನ ರಥವನ್ನು ಒದ್ದು, ಘುಡುಘುಡಿಸಿ ಶಲ್ಯ ಭೂಪತಿಯನ್ನು ಏಕಾಕಿಯಾಗಿ ತಡೆದನು.
ಪದಾರ್ಥ (ಕ.ಗ.ಪ)
ಬೆರೆ-ಗರ್ವಿಸು, ಅಹಂಕಾರಪಡು,
ಮೂಲ ...{Loading}...
ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ॥1॥
೦೦೨ ಬಾಯಿಬಡಿಕರು ಯಾದವರು ...{Loading}...
ಬಾಯಿಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರು ಬಾಯಿಬಡುಕರು. ದೊಡ್ಡತನ ನಿನಗೆಲ್ಲಿಯದು. ಸುಭಟರಿಗೆ ಆಯುಧ ಸಿಂಗಾರವೋ ಅಥವಾ ಕಾಲಂದುಗೆಯೊ. ನೀನು ಬಾಣವನ್ನು ಹಿಡಿ, ಸಾಕು. ಸೋಲಿನ ತಾಯಿಮನೆ ನಿನಗೆ ಎದುರಾಗಲಿದೆ. ನಿನ್ನ ಸಾಮಥ್ರ್ಯವನ್ನು ನಾನು ಅರಿಯೆನೆ ಎನ್ನುತ್ತ ಶಲ್ಯನು ಒಂದೇಸಮನೆ (ಬಾಣಗಳನ್ನು) ತೆಗೆದು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನೇವುರ-ಕಾಲುಬಳೆ
ಮೂಲ ...{Loading}...
ಬಾಯಿಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ॥2॥
೦೦೩ ಎಲವೊ ಮಾದ್ರಾ ...{Loading}...
ಎಲವೊ ಮಾದ್ರಾ ಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲವೊ ಮಾದ್ರಾ, ಭ್ರಷ್ಟ ಬಿಡು. ನಮ್ಮೊಡನೆ ಹರಟುವುದೆ? ಸ್ವಲ್ಪ ಅಳುಕಿದರೂ ಹರಟುವ ನಾಲಗೆಯನ್ನು ಕೊಯ್ಯುತ್ತೇನೆ. ಬಿಡು, ಬಿಡು ಎನ್ನುತ್ತ ಸಾತ್ಯಕಿಯು ಬಿಲ್ಲನ್ನು ಹುರಿಮಾಡಿಕೊಂಡು " ನಿನ್ನ ಬಾಣಪ್ರಯೋಗವನ್ನು ತಡೆಯುವವರು ಯಾರು? ನಿನ್ನ ಬಾಣಗಳಿಗೆ ದಿಕ್ಕುಗಳೇ ಸಾಲವು. ಇದು ಎಲ್ಲಿಯ ಬಿಲ್ಲುಗಾರತನ’ ಎಂದನು.
ಪದಾರ್ಥ (ಕ.ಗ.ಪ)
ಗರಿನಾಲಗೆ- ಹರಟುವ ನಾಲಗೆ
ಮೂಲ ...{Loading}...
ಎಲವೊ ಮಾದ್ರಾ ಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ॥3॥
೦೦೪ ಬಾಯಿಬಡಿಕರು ನಾವು ...{Loading}...
ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಬಾಯಿಬಡಿಕರು. ನೀನು ದೊಡ್ಡಸ್ತಿಕೆಯವನು. ಬಯ್ಯುವ ಬಿರುದಿನ ಬಾಯನ್ನು ನೋಡು” ಎನ್ನುತ್ತ ಜಗಳಕ್ಕೆ ತೆರಹುಗೊಡದೆ ಶಲ್ಯನು ಬಾಣವನ್ನು ಬಿಡಲು, ಅವನ ಹಲವು ಬತ್ತಳಿಕೆಗಳು ಬರಿದಾದವು. ಬಳಿಕ ದುಶ್ಶಾಸನನು ಸಾತ್ಯಕಿಯ ರಥವನ್ನು ತಡೆದು ನಿಂತನು.
ಪದಾರ್ಥ (ಕ.ಗ.ಪ)
ತೋಟಿ-ಜಗಳ,
ಮೂಲ ...{Loading}...
ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ॥4॥
೦೦೫ ಹಳಚಿದವು ರಥವೆರಡು ...{Loading}...
ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ರಥಗಳೂ ತಾಗಿದವು. ಯುದ್ಧವು ಇಬ್ಬರು ಪರಾಕ್ರಮಿಗಳಿಗೆ ಏರ್ಪಟ್ಟಿತು. ಕೌರವ ಬಲದ ಭಟರಲ್ಲಿ ಹತ್ತು ಸಾವಿರ ರಥಿಕರು ಸಿದ್ಧರಾದರು. ಸಾತ್ಯಕಿಯನ್ನು ಒಳಗೆ ಸೇರಿಸಿಕೊಂಡು ಸಿಕ್ಕಿಸಿ ಗೆಲ್ಲುವ ಅವರ ತವಕವನ್ನು ಕಂಡು ನಕುಲ ಸಹದೇವರು ದುಶ್ಶಾಸನನನ್ನು ಬಲವಾಗಿ ಕೆಣಕಿದರು.
ಮೂಲ ...{Loading}...
ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ॥5॥
೦೦೬ ತೆಗಸಿದನು ಸಾತ್ಯಕಿಯನೀತನ ...{Loading}...
ತೆಗಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲನು ಸಾತ್ಯಕಿಯನ್ನು ಬಿಡಿಸಿ ದುಶ್ಶಾಸನನನ್ನು ಬಾಣಗಳಿಂದ ಕಟ್ಟಿಹಾಕಿದನು. ನಕುಲನ ಬಾಣಾವಳಿಗಳನ್ನು ದುಶ್ಶಾಸನನು ಕತ್ತರಿಸಿ ಅವನ ರಥ, ಕುದುರೆಗಳಿಗೆ ಘಾಸಿಮಾಡಿದನು. ಆಗ ಕಲಿ ನಕುಲನು ಜಾರಿಕೊಂಡನು. ನಂತರ ಸಹದೇವನು ದುಶ್ಶಾಸನನ ರಥ ಮತ್ತು ಕುದುರೆಗಳು ಬಿಚ್ಚಿ ಹೋಗುವಂತೆ ಹಾಗೂ ರಕ್ತ ಕಾರುವಂತೆ ಮಾಡಲು ನಿನ್ನ ಮಗ ದುಶ್ಶಾಸನನನ್ನು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ತೆಗಸು-ಬಿಡಿಸಿಕೊಂಡು
ಮೂಲ ...{Loading}...
ತೆಗಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ॥6॥
೦೦೭ ಸರಳ ಸೈರಿಸಿ ...{Loading}...
ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಮಗ ದುಶ್ಶಾಸನನು ಬಾಣವನ್ನು ತಡೆದು, ಅಬ್ಬರಿಸಿ ಸಹದೇವನನ್ನು ಬಾಣದಿಂದ ಹೊಡೆದನು. ಅವನು ತರಹರಿಸಿ ದುಶ್ಶಾಸನನನ್ನು ಮರಳಿ ಹೊಡೆದನು. ಮರುಳೆ, ಮಹಾಯುದ್ಧಕ್ಕೆ ನೀನೇನು ಸಲ್ಲುವೆ? ಕಳುಹಿಸು ಆ ನಿನ್ನ ಅಣ್ಣಂದಿರನ್ನು, ಎನ್ನುತ್ತ ರಕಾ್ಷಕವಚದ ಚಿಪ್ಪು ದೆಸೆದೆಸೆಗೆ ಸಿಡಿಯುವಂತೆ ಅವನ ಎದೆಗೆ ಬಾಣವನ್ನು ಹೊಡೆದನು.
ಪದಾರ್ಥ (ಕ.ಗ.ಪ)
ತರಹರಿಸು - ಸುಧಾರಿಸಿಕೊಂಡು
ಮೂಲ ...{Loading}...
ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ॥7॥
೦೦೮ ನೋವನೇ ನೊಣವೂರಿದರೆ ...{Loading}...
ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ಗಾವಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೊಣ ಚುಚ್ಚಿದರೆ ಸಹದೇವನು ನೋಯುತ್ತಾನೆಯೇ ? ಎಲವೋ ನಿನ್ನನ್ನು ಕೊಂದರೆ ಭೀಮನಿಗೆ ಪ್ರತಿಜ್ಞೆ ತಪ್ಪುವುದು " ಎನ್ನುತ್ತ, ಸಹದೇವನು, ಕೋಪದಲ್ಲಿ, ನಿನ್ನವನ ಸಾರಥಿಯ ರಥ, ಕುದುರೆ, ಅಯುಧಗಳನ್ನು ಖಂಡಿಸಲು ಜೀವಗಳ್ಳರ ದೇವ ದುಶ್ಶಾಸನನು ಪಲಾಯನ ಮಾಡಿದನು.
ಮೂಲ ...{Loading}...
ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ಗಾವಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ॥8॥
೦೦೯ ರಾಯನನುಜನ ಹರಿಬದಲಿ ...{Loading}...
ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನ ಸೋದರ ದುಃಶಾಸನನ ಸ್ಥಾನದಲ್ಲಿ ಕರ್ಣನು ಪ್ರವೇಶಿಸಿದನು. “ಸ್ವಾಮಿದ್ರೋಹರನ್ನು ಕಾಪಾಡಿದರೆ ಕೈಕೊಳ್ಳದ ಔಷಧವು ಇವರಿಗೆ ಯಾವುದು? ಒಮ್ಮೆ ನೋಯಿಸುತ್ತೇನೆ. " ಎನ್ನುತ್ತ ಕರ್ಣನು ಬಿಲ್ಲಿನ ಹೆದೆಯನ್ನು ಕಿವಿಯ ತುದಿಯವರೆಗೆ ಎಳೆದು ಸಹದೇವನ ರಥವನ್ನು ತರುಬಿದನು.
ಮೂಲ ...{Loading}...
ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ॥9॥
೦೧೦ ಸಾರು ನೀ ...{Loading}...
ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿವೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ, ನೀನು ಪಕ್ಕಕ್ಕೆ ಸರಿ. ಈ ಕರ್ಣನು ಜಗದ ವಿಕಾರಿ. ಇವನ ಕೊಬ್ಬಿ ಮಾತನಾಡುವ ಇವನ ನಾಲಗೆಯನ್ನು ಕತ್ತರಿಸಲು ನನ್ನಲ್ಲಿ ಶಸ್ತ್ರಗಳು ಇವೆ ಎನ್ನುತ್ತ ನಕುಲನು ಸಾರಥಿಯನ್ನು ಸಂತೈಸಿ ಬಿಲ್ಲಿನ ಹೆದೆಯನ್ನು ಧ್ವನಿಮಾಡಿ ಶ್ರೇಷ್ಠನಾದ ಕರ್ಣನನ್ನು ಸಮೀಪಿಸಲು ಬಂದು ರಥವನ್ನು ಮುನ್ನುಗ್ಗಿಸಿದನು.
ಪದಾರ್ಥ (ಕ.ಗ.ಪ)
ದೊಠಾರಿಸು-ಬಲಿಷ್ಠ
ಮೂಲ ...{Loading}...
ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿವೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ॥10॥
೦೧೧ ಆರಿವರು ನಕುಳಾಙ್ಕರೇ ...{Loading}...
ಆರಿವರು ನಕುಳಾಂಕರೇ ಜ
ಜ್ಝಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ನಸುನಗುತ್ತ, “ಇವರು ಯಾರು? ನಕುಳ ಎಂಬ ಹೆಸರಿನವರೆ ? ನಮ್ಮೊಡನೆ ಪರಾಕ್ರಮವೇ? ನೀವಾರು? ಪಾಂಡುವಿನ ಮಕ್ಕಳೊ? ಮಾದ್ರೀಮಕ್ಕಳೊ? ಘೋರಯುದ್ಧ ನಡೆಯುತ್ತಿರುವ ಕಡೆಗೆ ಉಪಾಯದಲ್ಲಿ ನಿಮ್ಮನ್ನು ಬಿಟ್ಟವರು ಯಾರು? ನಿಮ್ಮ ಮೇಲೆ ಯಾರಿಗೆ ಇಂತಹ ದ್ವೇಷ ? ಶಿವ ಶಿವ” ಎಂದನು.
ಮೂಲ ...{Loading}...
ಆರಿವರು ನಕುಳಾಂಕರೇ ಜ
ಜ್ಝಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ॥11॥
೦೧೨ ತೊಲತೊಲಗು ತರುವಲಿಗೆ ...{Loading}...
ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೊಲಗು ತೊಲಗು. ಬಾಲಕನಿಗೆ ಈ ಯುದ್ಧ ಸುಲಭವೇ? ಇದರೊಳಗೆ ಹಲವಾರು ಲೋಕೈಕವೀರರು ಹೊಕ್ಕು ಸಂತಾಪಗೊಂಡು ಹೋಗಿದ್ದಾರೆ ಕಣೊ! ಗೆಲ್ಲುವ ನಂಬಿಕೆ ನಿನ್ನನ್ನು ಕೊಲೆಗೆ ಕರೆ ತಂದಿದೆ. ಪ್ರಯತ್ನಿಸು! ಎನ್ನುತ್ತ ಕೈಚಳಕದಲ್ಲಿ ನಕುಲನನ್ನು ಚೂಪಾದ ಬಾಣಗಳಿಂದ ಮುತ್ತಿದನು.
ಪದಾರ್ಥ (ಕ.ಗ.ಪ)
ತರುವಲಿ-ಬಾಲಕ
ಹೊದಕುಳಿ-ಸಂತಾಪ
ಮೂಲ ...{Loading}...
ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ॥12॥
೦೧೩ ಬಿಗಿದ ಬಾಣದ ...{Loading}...
ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೊಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕಟ್ಟಿದ್ದ ಬಾಣದ ಮರೆಯನ್ನು ನಕುಲನು ನೂರು ಬಾಣಗಳಿಂದ ಬುಡಮೇಲಾಗಿಸಿದನು. ಬುಟ್ಟಿಯ ಮುಚ್ಚಳವನ್ನು ತೆಗೆದ ಹಾವಿನ ಹಾಗೆ ತೂಗುತ್ತ, ಕಾಂತಿಯನ್ನು ಬೀರುತ್ತಿರುವ, ಹೊಸದಾಗಿ ಮಸೆದ ಬಾಣಗಳನ್ನು ಕವಿಸಿದನು. ಕರ್ಣನು ಆತನ ಬಾಣಗಳ ಪ್ರಕಾಶದ ಬೇಗೆಯಲ್ಲಿ ಮುಳುಗಿ ಮೌನದಲ್ಲಿದ್ದನು.
ಪದಾರ್ಥ (ಕ.ಗ.ಪ)
ದಡ್ಡಿ-ಮರೆ
ಮೂಲ ...{Loading}...
ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೊಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ॥13॥
೦೧೪ ಆಳು ನೀನಹುದೆಲವೊ ...{Loading}...
ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯಿವೆ ಕೊಳ್ಳೆನುತ ನಕುಳನನೆಚ್ಚನಾ ಕರ್ಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ, ನೀನು ಯೋಧನೆÉಂಬುದು ಹೌದಲ್ಲವೆ? ನೀನು ವಿಶಾಲಮತಿ. ಒಳ್ಳೆಯದನ್ನೇ ಮಾಡಿದೆ. ನಾವು ಬಾಲಕರಾದರೆ ಕಷ್ಟವೇ? ಅಭಿಮನ್ಯು ಸಾಮಾನ್ಯನೇ?” ಎಂದು ನಕುಲನು ಬಾಣಗಳನ್ನು ಪ್ರಯೋಗಿಸಿದನು. " ಸೈರಿಸಲು ಸಾಧ್ಯವಾದರೆ ನಮ್ಮ ಬಾಣವನ್ನು ಸೈರಿಸು ! ನಿನ್ನ ವಿಧಿ ಬರೆಹವನ್ನು ತೊಡೆದು ಹಾಕುವ ವಿಪುಳ ಶರಾಳಿ ಇವೆ ತೆಗೆದುಕೊ ಎನ್ನುತ್ತ ನಕುಳನನ್ನು ಕರ್ಣನು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ಜಾವಳ-ಸಾಮಾನ್ಯ,
ಸಂಕರುಷ-ನಿವಾರಣೆ , ತೊಡೆದು ಹಾಕುವುದು
ಮೂಲ ...{Loading}...
ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯಿವೆ ಕೊಳ್ಳೆನುತ ನಕುಳನನೆಚ್ಚನಾ ಕರ್ಣ ॥14॥
೦೧೫ ತಾಗಿದವು ನಾಲ್ಕಮ್ಬು ...{Loading}...
ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಿಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜಮೋಹರಕೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕು ಬಾಣಗಳು ತಾಗಿದವು. ಎಂಟು ಬಾಣಗಳು ಶರೀರದ ಒಳಗೆ ನುಸುಳಿ ಗಾಯ ಮಾಡಿದವು. ಆಗ ಮತ್ತೆ ಅನುಸರಿಸಿ ಹದಿನಾರು ಬಾಣಗಳು ಹರಿದು ಬಂದವು. ಇದರಿಂದ ದಿU್ಪ್ಭ್ರಮೆಗೊಂಡು ನಕುಳನು ಮುಂದಕ್ಕೆ ಬಾಗಿ ಬಿದ್ದನು. ಸಾರಥಿಯ ತನ್ನ ಕೈಚಳಕದಿಂದ ನಕುಲನನ್ನು ರಾಜಸೈನ್ಯಕ್ಕೆ ಹಿಂತಿರುಗಿಸಿದನು.
ಪದಾರ್ಥ (ಕ.ಗ.ಪ)
ಬೇಗಡೆ-ರಂಧ್ರ,
ಝೊಮ್ಮಿನಲಿ -ಬಳಲಿಕೆಯಿಂದ,
ಸೂಗುರಿಸು-ದಿU್ಪ್ಭ್ರಮೆಗೊಳ್ಳು
ಮೂಲ ...{Loading}...
ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಿಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜಮೋಹರಕೆ ॥15॥
೦೧೬ ಹರಿಬದಾಹವವೆನಗೆ ತನಗೆಂ ...{Loading}...
ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಶೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸುಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದ ಕೆಲಸ ನನಗೆ ತನಗೆ ಎಂದು ಚೇಕಿತಾನಕ, ದುರುಳ ಧೃಷ್ಟದ್ಯುಮ್ನ, ಪಾಂಡ್ಯ, ಶಿಖಂಡಿ, ಸೃಂಜಯರು ಸಂಭ್ರಮಿಸಿದರು. ಬರಲಿ ಬರಲಿ ಈ ಹೊಟ್ಟನ್ನು ತೂರುವುದಾದರೆ ಅರಸುಸೈನ್ಯವು ಏಕೆ, ಸಾಕು ಎಂದು ಕೃಪ ಕೃತವರ್ಮ ಶಕುನಿಯರು ಮೊದಲಾದ ಶತ್ರುಯೋಧರು ಇವರನ್ನು ಅಡ್ಡಗಟ್ಟಿದರು.
ಪದಾರ್ಥ (ಕ.ಗ.ಪ)
ಹರಿಬ-ಕಾರ್ಯÉ
ಮೂಲ ...{Loading}...
ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಶೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸುಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ॥16॥
೦೧೭ ದಳಪತಿಯ ಹಿನ್ದಿಕ್ಕಿ ...{Loading}...
ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವ ಬಲದ ಮಹಾರಥರು ತಮ್ಮ ದಳಪತಿಯನ್ನು ಹಿಂದಿಕ್ಕಿ ಸಂಭ್ರಮದಿಂದ ಮೂದಲಿಸಿ ನಿಂತರು. ಎದುರು ಬಿದ್ದ ಚತುರ್ಬಲವನ್ನು ಕೊಂದರು. ಇವರು ಕೊಲೆಗೆ ಬೇಸರಿಸುವುದಿಲ್ಲ. ಸಾಯುವುದಕ್ಕೆ ಅಳುಕದವರು. ಧೃತರಾಷ್ಟ್ರನೇ, ಹೇಳುವಲ್ಲಿ ನಾವು ಆಯಾಸಗೊಂಡೆವು. " ಎಂದು ಸಂಜಯನು ನೃಪನಿಗೆ ಹೇಳಿದನು.
ಮೂಲ ...{Loading}...
ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ॥17॥
೦೧೮ ವಿರಥರಾದ ಶಿಖಣ್ಡಿ ...{Loading}...
ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದರು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರಧುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವನ್ನು ಕಳೆದುಕೊಂಡ ಶಿಖಂಡಿ ಮೊದಲಾದ ಶತ್ರುಸೈನಿಕರು ಹಿಂದಕ್ಕೆ ಸರಿದರು. ಕೌರವರ ಸುಭಟರನ್ನು ಒರೆಸಿಕೊಂದು ಶತ್ರು ಸೈನ್ಯದ ಮೇಲೆಬಿದ್ದು ಅದನ್ನು ಕೆದರಿದರು. ಕಾಳೆಗವು ದೊರೆಗೆ ಹತ್ತಿರವಾಯಿತು. ಯುದ್ಧ ಇನ್ನು ಅಸಾಧ್ಯ ಎನ್ನುವಷ್ಟರಲ್ಲಿ ನಿಸ್ಸಾಳಕೋಟಿಯು ಮೊಳಗುತ್ತಿರುವಾಗ ಪಾರ್ಥನು ಕಾಣಿಸಿಕೊಂಡನು.
ಪದಾರ್ಥ (ಕ.ಗ.ಪ)
ಧರಧುರದ ದೆಖ್ಖಾಳ, ಆರ್ಭಟದ-ಅತಿಶಯದಿಂದ
ಮೂಲ ...{Loading}...
ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದರು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರಧುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ॥18॥
೦೧೯ ಭಟರ ತೆಗೆತೆಗೆ ...{Loading}...
ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಧರನ್ನು ಹಿಂದಕ್ಕೆ ಕರೆದುಕೊ. ಪಾರ್ಥನೋ ಶತ್ರುಸೈನ್ಯದ ಭೈರವನೋ. ಸಂಕಟದ ಸನ್ನಾಹದಲ್ಲಿ ಒಳ್ಳೆಯ ಯೋಧರನ್ನು ಸುಮ್ಮನೆ ಮಾರಬೇಡ ಎನ್ನುತ್ತ ಲಟಕಟಿಸಿ ಸೈನ್ಯವು ಒದರಲು ಬಳಿಕ ಅಪ್ರತಿಭಟರಾದ ಇಪ್ಪತ್ತೈದು ಸಾವಿರ ಶ್ರೇಷ್ಠ ಮಹಾರಥರು ವಿಜಯದ ಉತ್ಕಟ ಬಯಕೆಯಲ್ಲಿ ಯುದ್ಧಸನ್ನದ್ಧರಾದರು.
ಮೂಲ ...{Loading}...
ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ॥19॥
೦೨೦ ನೂಕಿದರು ಸಂಶಪ್ತಕರು ...{Loading}...
ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚಳರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚರಿದಿರಾಗಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಶೂರರನ್ನು ಹಿಂದಕ್ಕೆ ತೆಗಸಿ ಚಲಿಸುತ್ತಿದ್ದ ಕುಲಗಿರಿಗಳಂತಿದ್ದ, ಉದ್ರೇಕ ಸಾಹಸಿಗಳಾದ ಸಂಶಪ್ತಕರು ಮುಂದಕ್ಕೆ ಬಂದರು. " ಅರ್ಜುನ ಸಾಕು ಹಿಂದಕ್ಕೆ ನಡೆ. ನಿನ್ನ ವಂಚನೆಯ, ಕೌಶಲದ ಯುದ್ಧವಲ್ಲ ಇದು” ಎನ್ನುತ್ತ ಎದುರಾಗಿ ಬಾಣದ ಮಳೆಯನ್ನು ಕರೆದರು.
ಪದಾರ್ಥ (ಕ.ಗ.ಪ)
ಜೊತ್ತು-ವಂಚನೆ,
ಮೂಲ ...{Loading}...
ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚಳರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚರಿದಿರಾಗಿ ॥20॥
೦೨೧ ಆರಿದಿಪ್ಪತ್ತೈದು ಸಾವಿರ ...{Loading}...
ಆರಿದಿಪ್ಪತ್ತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾವಿರವಿಪ್ಪತ್ತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರ್ಭಟಿಸಿದ ಇಪ್ಪತ್ತೈದು ಸಾವಿರ ತೇರು, ಒಂದೇ ಕಡಿವಾಣದಲ್ಲಿ ಎಂಬಂತೆ ವೇಗವಾಗಿ ಮುನ್ನುಗ್ಗಿದವು. “ಇದನ್ನು ಎದುರಿಸುವವನು ಯಾರು? ಬಾರಿಬಾರಿಗೂ ಇಪ್ಪತ್ತೈದು ಬಾಣಗಳನ್ನು ಪ್ರಯೋಗಿಸುತ್ತಿದ್ದ ಇವರನ್ನು ಸೈರಿಸಿ ನಿಲ್ಲಲು ಯಾರಿಗೆ ಸಾಧ್ಯ” ಎನ್ನುತ್ತಿತ್ತು ದೇವತೆಗಳ ಸಮೂಹ.
ಪದಾರ್ಥ (ಕ.ಗ.ಪ)
ಆರಿದ-ಆರ್ಭಟಿಸಿದ,
ಸರಿಸ-ಸಮೀಪ,
ನಿಪ್ಪಸರ-ಸಾಮಥ್ರ್ಯ
ಮೂಲ ...{Loading}...
ಆರಿದಿಪ್ಪತ್ತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾವಿರವಿಪ್ಪತ್ತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ॥21॥
೦೨೨ ಸುರಿದುದತಿವಳೆಯೆನ್ದು ...{Loading}...
ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಳೆ ಅತಿಯಾಗಿ ಸುರಿಯಿತೆಂದು ಕುಲಗಿರಿ ಕರಗುತ್ತದೆಯೆ? ಮೇಲು ಭಾಗದ ಶಿಲೆ ಎರಡು ಬೆರಳಿನಷ್ಟಾದರೂ ನೆನೆಯುತ್ತದೆಯೆ? ಸಾಮಾನ್ಯರ ಎದುರಿನಲ್ಲಿ ಅರ್ಜುನ ಅಳುಕುತ್ತಾನೆಯೆ ಶತ್ರುಗಳೆಲ್ಲರೂ ಮಹಾರಥರು. ಅವರುಗಳ ಬಾಣಗಳೂ ಸಂಖ್ಯಾತೀತ. ಅವುಗಳ ರಭಸಕ್ಕೆ ಅವನು ಹಿಮ್ಮೆಟ್ಟಿಲ್ಲ ಕೇಳು, ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಹಂತಿ-ಪಂಕ್ತಿ,
ಮೂಲ ...{Loading}...
ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳೆಂದ ॥22॥
೦೨೩ ಅವರ ಶರಸಙ್ಘಾತವನು ...{Loading}...
ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಪಾರ್ಥನು ನಿಮಿಷದಲ್ಲಿ ಅವರ ಶರ ಸಮೂಹವನ್ನು ಕಡಿದು, ಅವರ ಸಾರಥಿಗಳನ್ನು, ಕುದುರೆಗಳನ್ನು, ಧನುಸ್ಸನ್ನು, ಬಾವುಟವನ್ನು, ಚಾಮರವನ್ನು, ಕುಚ್ಚನ್ನು, ಅವರ ಪದಕ, ಕಿರೀಟ, ಕಂಕಣ, ವಿವಿಧ ಕರ್ಣಾಭರಣ, ತೋಳಬಳೆಗಳನ್ನು ಕಡಿಕಡಿದು ಒಟ್ಟಿದನು.
ಪದಾರ್ಥ (ಕ.ಗ.ಪ)
ರಥವಾಹ-ರಥದ ಕುದುರೆ,
ಮೂಲ ...{Loading}...
ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥23॥
೦೨೪ ಘಾಯವಡೆದರು ಘಾಸಿಯಾದರು ...{Loading}...
ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತ್ತೈದುಸಾವಿರ ವರ ಮಹಾರಥರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಯೋಧರು ಗಾಯಗೊಂಡರು, ಘಾಸಿಯಾದರು. ಅವರ ಕರುಳು ಬಾಯಲ್ಲಿ ಬಂದಿತು. ‘ಮಕ್ಕಳು ತಾಯಿಗಾಗದೆ ಕೆಟ್ಟರು’ ಎಂಬುದನ್ನು ಇಲ್ಲಿ ಕಾಣಲಾಯಿತು. ಕೆಲವು ನಾಯಕರು, ಉಳಿದರು. ಹೆಚ್ಚಿನವರು, ಪ್ರತಿಜ್ಞೆ ಮಾಡಿದವರು ಓಡಿಹೋದರು. ಇಪ್ಪತ್ತೈದುಸಾವಿರ ಶ್ರೇಷ್ಠ ಮಹಾರಥರು ಹರಿದುಹಂಚಿಹೋದರು.
ಪದಾರ್ಥ (ಕ.ಗ.ಪ)
ಹಾಯಿದರು-ಓಡಿಹೋದರು, ಹೂಣಿಗರು-ಪ್ರತಿಜ್ಞೆ ಮಾಡಿದವರು
ಮೂಲ ...{Loading}...
ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತ್ತೈದುಸಾವಿರ ವರ ಮಹಾರಥರು ॥24॥
೦೨೫ ಎಲೆಲೆ ಸಂಶಪ್ತಕರ ...{Loading}...
ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರತುದು ರಾಜಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ, ಸಂಶಪ್ತಕರ ಭಾರಿಯಾದ ಬಲವು ಸೋತು ಬರುತ್ತಿದೆ. ಆಕ್ರಮಣವನ್ನು ಎದುರಿಸುವವರಿಲ್ಲ. ದುರ್ಯೋಧನನ ಅಭಿಮಾನವು ಸೂರೆಹೋಯಿತು. ಸೈನ್ಯದ ಸಮುದ್ರ ಬತ್ತಿತು. ರಾಜಕಾರ್ಯಕ್ಕೆ ನೆರವಾಗುವುದಾದರೆ ಇದು ಸಮಯ ಎಂದು ಮಂತ್ರಿಗಳು ಹೇಳಲು ದುರ್ಯೋಧನನು ಪಾರ್ಥನ ರಭಸವನ್ನು ಕಂಡನು.
ಪದಾರ್ಥ (ಕ.ಗ.ಪ)
ಮುರಿ-ಸೋಲು
ಮೂಲ ...{Loading}...
ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರತುದು ರಾಜಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ॥25॥
೦೨೬ ಕರವ ನೆಗಹಿದನಕಟ ...{Loading}...
ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈ ಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಕೈಯನ್ನು ಮೇಲಕ್ಕೆ ಎತ್ತಿದನು. “ಹೋ ಹೋ, ವೀರರೇ , ಅಂಜದಿರಿ, ಅಂಜದಿರಿ. ನಿಮ್ಮ ಶತ್ರುವಿಗೆ ನಾಲ್ಕು ಕೈಗಳಿಲ್ಲ. ಹಣೆಯಲ್ಲಿ ಕಣ್ಣಿಲ್ಲ. ದೊರೆಯ ಕೈಯನ್ನು ಕಂಡ ಬಳಿಕ ಪಕ್ಕಕ್ಕೆ ಸರಿಯಿರಿ, ಪರಿವಾರದವರು ದೂರದಲ್ಲಿ ಇರಿ. ವೃಥಾ ಭಯವೇಕೆ?” ಎನ್ನುತ್ತ ದುರ್ಯೋಧನನು ಸಿದ್ಧನಾದ.
ಮೂಲ ...{Loading}...
ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈ ಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ॥26॥
೦೨೭ ಕೂಡೆ ಗರಿಗಟ್ಟಿತು ...{Loading}...
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೆ ಚತುರ್ಬಲಕ್ಕೆ ಉತ್ಸಾಹ ಬಂದಿತು. ರಾಜನ ಎದುರಿನಲ್ಲಿ ಒಟ್ಟಾಯಿತು. ರಾಜನ ಎದುರಿನಲ್ಲಿ ಹೇಡಿಗಳೂ ಕಲಿಗಳಾಗುತ್ತಾರೆ ಎನ್ನುತ್ತಾರೆ. ಇವರು ಮಾನಗೇಡಿಗಳೆ? ಬೀಸುವ ಕುಚ್ಚುಗಳ, ಮುಖಕ್ಕೆ ಚಾಚಿ ಮರಳುವ ಚಾಮರದ ಸಮೂಹವು ಕಲ್ಪಾಂತರಂಜಿತವಾದ ಮೋಡಗಳ ವೈಭವವನ್ನು ಹೀಗಳೆಯಿತು.
ಪದಾರ್ಥ (ಕ.ಗ.ಪ)
ಜೋಡುಮಾಡು-ಒಟ್ಟಾಗು, ಹೇವಮಾರಿ-ಮಾನಗೇಡಿ
ಮೂಲ ...{Loading}...
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ॥27॥
೦೨೮ ಸರಕಟಿಸಿ ದಳ ...{Loading}...
ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾಹವ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಫುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವು ರಭಸದಿಂದ ಮುನ್ನುಗ್ಗಿ ಸರ್ವಲಗ್ಗೆಯಲ್ಲಿ ಸಂಭ್ರಮಿಸಲು ಧರ್ಮರಾಯನು ಕಾಣಿಸಿಕೊಂಡನು. “ಅರ್ಜುನನ್ನು ತೆಗೆ ತೆಗೆ. ಇಂದಿನ ಯುದ್ಧವು ನಮ್ಮ ಮೇಲೆ” ಎನ್ನುತ್ತ ಧರ್ಮರಾಯ ನಡೆದನು, ಪ್ರಳಯ ಸಮರದಿಂದ ಹುಟ್ಟಿದ ಮಹಾಸಮುದ್ರದ ಅಲೆಗಳ ಆವೇಶದ ಲಗ್ಗೆಯಲ್ಲಿ ರಾಜ ಪರಿವಾರ ಒಟ್ಟಾಯಿತು.
ಪದಾರ್ಥ (ಕ.ಗ.ಪ)
ಸರಕಟಿಸು-ರಭಸದಿಂದ ಮುನ್ನುಗ್ಗು, ಲಳಿ-ರಭಸ, ಆವೇಶ, ಹೊರಳಿಗಟ್ಟು-ಒಟ್ಟುಸೇರು
ಮೂಲ ...{Loading}...
ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾಹವ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಫುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ॥28॥
೦೨೯ ಎರಡು ದಳ ...{Loading}...
ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ದಳಗಳು ಯುದ್ಧದಲ್ಲಿ ತೊಡಗಿದವು. ನೆಲ ಬಿರಿಯುವಂತೆ ಬೆನ್ನಟ್ಟಿದವು. ಹೊಡೆದಾಡಿದರು. ಉರುಳುವ ತಲೆಗಳು, ಬೀಳುವ ಭಟರು, ರಾಶಿಬೀಳುವ ಆನೆ ಕುದುರೆಗಳ ಪರಿವಿಡಿಯು ಹಾಗಿರಲಿ, ರಾಜರು ಪರಸ್ಪರ ರಭಸದಿಂದ ತಾಗಿದರು. ಧರ್ಮರಾಯ ದುಯೋಧನರು ಪರಸ್ಪರ ಮೂದಲಿಸುತ್ತ ಬಾಣಗಳನ್ನು ಬಿಟ್ಟು ಹೋರಾಡಿದರು.
ಮೂಲ ...{Loading}...
ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ॥29॥
೦೩೦ ಅರಸರಿವರೇ ಶಿವ ...{Loading}...
ಅರಸರಿವರೇ ಶಿವ ಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು, " ಇವರು ಅರಸರೆ? ಶಿವ ಶಿವಾ! ನೀವು ನಮ್ಮ ಹಾಗೆ ನಿಷ್ಕರುಣಿಗಳೇ? ಬಾಣದ ತುದಿ ಮಾನ್ಯರನ್ನು ಅರಿಯಬಲ್ಲವೆ? ನೀವೇಕೆ? ಯುದ್ಧವೇಕೆ? ಅರ್ಜುನ, ಭೀಮರು ಒರಟರು, ನಿಷ್ಠುರರು. ನಾವು ಅತಿ ನಿಷ್ಠುರರು. ನೀವು ಹಿಂದಿರುಗುವುದು" ಎಂದು ಹೇಳಿದನು.
ಮೂಲ ...{Loading}...
ಅರಸರಿವರೇ ಶಿವ ಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ॥30॥
೦೩೧ ಕೋಲ ಬಲುಹುಣ್ಟಾಗೆ ...{Loading}...
ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಲ್ಲಿಗೆ ಸಾಮಥ್ರ್ಯವಿದ್ದಾಗ ನಾಲಗೆ ಹೀಗೆ ಹೋಲಿಕೆಯ ಮಾತಾಡುವುದಿಲ್ಲ. ಹೊಲ್ಲದ್ದು ಏನಿದೆ ? ಕ್ರೂರ ವ್ಯಂಗ್ಯದ ಮಾತು ಬೇಡ. ಬಾಣಗಳಲ್ಲಿ ಮಾತಾಡು. ಈ ಮಾತಾಳಿತನವನ್ನು ಪ್ರದರ್ಶಿಸಬೇಡ. ಹೋರಾಡಿ ಗಾಯಗೊಂಡಿರುವ ಶತ್ರು ಸುಭಟರನ್ನು ಹೊಗಳಬೇಡ. " ಎಂದು ಧರ್ಮರಾಯ ಹೇಳಿದನು.
ಪದಾರ್ಥ (ಕ.ಗ.ಪ)
ಹೋಲ-ಹೊಲಿಕೆ
ಮೂಲ ...{Loading}...
ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ॥31॥
೦೩೨ ಖರೆಯರಲ್ಲಾ ನೀವು ...{Loading}...
ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಗನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯ ಶ್ರೇಷ್ಠ ಕುಮಾರರು ನೀವು, ಸತ್ಯವಂತರಲ್ಲವೆ? ನಾವು ಯುದ್ಧ ಸಾಮಥ್ರ್ಯದಲ್ಲಿ ನಿಮ್ಮ ಸಮೀಪ ಬರುವವರೆ? ಮಾನ್ಯರೆ? ಸಾಧ್ಯವಾದರೆ ಸಹಿಸಿಕೊಳ್ಳಿ ಎಂದು ಬಾಣವನ್ನು ಬಿಡಲು ಬಾಣಗಳು ಆಕಾಶವನ್ನು ಆವರಿಸಿದವು. ಹೂಂಕರಿಸಿದವು. ಶತ್ರುಸೈನಿಕರ ಗುಂಪನ್ನು ಮುತ್ತಿದವು. ಮುಸುಕಿದವು. ನುಂಗಿದವು.
ಪದಾರ್ಥ (ಕ.ಗ.ಪ)
ಹರೆಗಡಿ-ಚೆಲ್ಲಾಪಿಲ್ಲಿಯಾಗು,
ಮೂಲ ...{Loading}...
ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಗನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ॥32॥
೦೩೩ ಎಚ್ಚನೆಣ್ಟಮ್ಬಿನಲಿ ಕೌರವ ...{Loading}...
ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಎಂಟು ಬಾಣಗಳಲ್ಲಿ ಹೊಡೆದನು. ಅವನು ಬಿಟ್ಟ ಬಾಣವನ್ನು ಕತ್ತರಿಸಿ ಈತನ ರಥವನ್ನು. ನೂರು ಬಾಣಗಳಲ್ಲಿ ಧರ್ಮರಾಯನು ಹೊಡೆದನು. ಅದನ್ನು ಪರಿಹರಿಸಿದ ಕುರುರಾಯನು ಧರ್ಮರಾಯನನ್ನು ಹೊಡೆದನು. ಧರ್ಮರಾಯನು ಆ ಬಾಣವನ್ನು ಕಡಿದು ದುರ್ಯೋಧನನಿಗೆ ಹೊಡೆದನು. ಇಬ್ಬರು ರಾಜರ ಸಾಮಥ್ರ್ಯಕ್ಕೆ ಮೇಲಿದ್ದ ದೇವತೆಗಳ ಸಮೂಹವು ಮಝ ಪೂತುರೆ ಎಂದಿತು.
ಪದಾರ್ಥ (ಕ.ಗ.ಪ)
ನಿಚ್ಚಟ-ಸ್ಥಿರಚಿತ್ತ
ಮೂಲ ...{Loading}...
ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ॥33॥
೦೩೪ ದ್ಯುಮಣಿ ಪಡುವಣ ...{Loading}...
ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಅಮಿತ ರೋಷವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳ್ ಎಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಪಡುವಣ ಕಡಲನ್ನು ಸಮೀಪಿಸುವ ಸಮಯವಾಯಿತು. ಇಬ್ಬರು ರಾಜರ ಯುದ್ಧ ಸಂಭ್ರಮದ ಅತಿಶಯವು ಅಡಿಗಡಿಗೆ ಇಮ್ಮಡಿಸಿತು. ಅಮಿತ ರೋಷದಿಂದ ಕಂಪಿಸುತ್ತಿದ್ದ ಕೈಗಳಿಂದ, ಬಿಟ್ಟ ಬಾಣಗಳ ಕಿಡಿಗಳ ಸಮೂಹದಿಂದ ಮೂರುಲೋಕಗಳವರು ಭ್ರಮಿತರಾಗುವಂತೆ, ಹೋರಾಡಿದರು. ಅರಸನೇ ಕೇಳು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ದ್ಯುಮಣಿ-ಸೂರ್ಯ, ಸೌರಂಭ-ಸಂಭ್ರಮ,
ಮೂಲ ...{Loading}...
ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಅಮಿತ ರೋಷವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ ॥34॥
೦೩೫ ಗೆಲವು ನಮಗಾಯ್ತೆನ್ದು ...{Loading}...
ಗೆಲವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೆಲವು ನಮಗಾಯಿತು ಎಂದು ಕೌರವರು ಹೇಳಿದರೆ, ನಮಗೆ ಅಗ್ಗಳಿಕೆಯೆಂದು ಪಾಂಡವರು ಹೇಳುತ್ತಿದ್ದರಧಿಬ್ಬರೂ ಸಮಜೋಡಿಯಾಗಿ ಹೋರಾಡಿದರು. ಬಳಿಕ ಧರ್ಮರಾಯನ ಕೈ ಹೆಚ್ಚಿ ಅವನ ಬಾಣಗಳು ನಿನ್ನ ಮಗ ದುರ್ಯೋಧನನನ್ನು ತಾಗಿತು. ದುರ್ಯೋಧನನ ಬಿಲ್ಲು, ಬಾಣ, ರಥ, ಸೂತ, ಕುದುರೆಗಳು ಭೂಮಿಗೆ ಒರಗಿದವು.
ಪದಾರ್ಥ (ಕ.ಗ.ಪ)
ಸಮಜೋಳಿ-ಸಮಜೋಡಿ,
ಮೂಲ ...{Loading}...
ಗೆಲವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ॥35॥
೦೩೬ ಸೆಳೆದು ಹಿರಿಯುಬ್ಬಣವನವನಿಪ ...{Loading}...
ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಹಿರಿಯುಬ್ಬಣವನ್ನು ಸೆಳೆದು ಪಕ್ಕಕ್ಕೆ ಜಿಗಿದನು. ಹಾ ಮಹಾದೇವ! ಎಲೆಲೆ! ದೊರೆ, ದೊರೆ! ಹಗೆಗೆ ಸಿಕ್ಕಿದನು! ಎನುತ್ತ ಸೈನ್ಯವು ಬೆದರಲು ಕೃತವರ್ಮ, ಕೃಪ, ಶಕುನಿ, ಶಲ್ಯ, ಅಶ್ವತ್ಥಾಮ ಮೊದಲಾದ ನಾಯಕರು ಬಿಲ್ಲನ್ನು ಹಿಡಿದು ದುರ್ಯೋಧನನನ್ನು ಸುತ್ತುವರೆದರು.
ಮೂಲ ...{Loading}...
ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ॥36॥
೦೩೭ ದೊರೆಗೆ ಬಿದ್ದುದು ...{Loading}...
ದೊರೆಗೆ ಬಿದ್ದುದು ಭಾರಿಯಾಹವ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನಿಗೆ ಭಾರಿ ಯುದ್ಧವು ಒದಗಿದೆ. ಅರರೆ ಬರಹೇಳು ಎನ್ನುತ್ತ ಬಾಣ ಬತ್ತಳಿಕೆಗಳನ್ನು ಕೆದರಿ ಸಾತ್ಯಕಿ ಭೀಮ ಕೈಕೆಯರು ಮುತ್ತಿದರು. ದುರ್ಯೋಧನನನ್ನು ವೀರ ಧೃಷ್ಟದ್ಯುಮ್ನ, ನಕುಲ ಸಹದೇವರು, ಶಿಖಂಡಿ, ಯುಯುತ್ಸು ಸೃಂಜಯ, ಎಳೆಯರಾದ ಪಂಚದ್ರೌಪದೇಯರು ಮುತ್ತಿದರು.
ಮೂಲ ...{Loading}...
ದೊರೆಗೆ ಬಿದ್ದುದು ಭಾರಿಯಾಹವ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ॥37॥
೦೩೮ ಬಳಿಕ ಸಙ್ಕುಳ ...{Loading}...
ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಗುಂಪು ಯುದ್ಧ ವಿಜೃಂಭಿಸಿತು. ಅzನ್ನು ಏನೆಂದು ಹೇಳಲಿ? ಸೂರ್ಯನು ಸಮುದ್ರಕ್ಕೆ ಇಳಿದನು. ಅದರ ಹಿಂದೆ ಕತ್ತಲು ಹೆಚ್ಚಿತು. ಗೆದ್ದು ಹೋಗಬೇಡ ಎಂದು ಕೌರವನು ಯುದ್ಧಕ್ಕೆ ಮುಂದಾದನು. ಮತ್ತೆ ಧರ್ಮರಾಯನು ಬಿಲ್ಲನ್ನು ನೇವರಿಸಿ ಸಮರಕ್ಕೆ ಸಿದ್ಧನಾಗಿ ನಿಂತನು.
ಮೂಲ ...{Loading}...
ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ॥38॥
೦೩೯ ರಾಯರಿಬ್ಬರ ಮನದ ...{Loading}...
ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರು ರಾಜರ ಮನಸ್ಸಿನ ತಾಮಸದ ತವರು ಎನ್ನುವಹಾಗೆ ಕತ್ತಲೆಯು ನಿಮಿಷದಲ್ಲಿ ಜಗತ್ತನ್ನು ಪೂರ್ಣವಾಗಿ ಆವರಿಸಿತು. ಎರಡು ರಾಜಪರಿವಾರಗಳೂ ಕ್ರಮದಲ್ಲಿ ಹಿಂದಿರುಗಿದವು. ಬಹುವಿಧದ ವಾದ್ಯಗಳ ಹೊಸತನವು ಹೆಚ್ಚಲು ಪಾಳೆಯಗಳಿಗೆ ಸಂತೋಷದಿಂದ ಬಂದರು.
ಪದಾರ್ಥ (ಕ.ಗ.ಪ)
ನವಾಯಿ-ಹೊಸತನ
ಮೂಲ ...{Loading}...
ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ॥39॥