೦೪

೦೦೦ ಸೂ ರಾಯದಳ ...{Loading}...

ಸೂ. ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ

೦೦೧ ಫಡ ಫಡೆಲವೋ ...{Loading}...

ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ॥1॥

೦೦೨ ಬಾಯಿಬಡಿಕರು ಯಾದವರು ...{Loading}...

ಬಾಯಿಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ॥2॥

೦೦೩ ಎಲವೊ ಮಾದ್ರಾ ...{Loading}...

ಎಲವೊ ಮಾದ್ರಾ ಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ॥3॥

೦೦೪ ಬಾಯಿಬಡಿಕರು ನಾವು ...{Loading}...

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ॥4॥

೦೦೫ ಹಳಚಿದವು ರಥವೆರಡು ...{Loading}...

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ॥5॥

೦೦೬ ತೆಗಸಿದನು ಸಾತ್ಯಕಿಯನೀತನ ...{Loading}...

ತೆಗಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ॥6॥

೦೦೭ ಸರಳ ಸೈರಿಸಿ ...{Loading}...

ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ॥7॥

೦೦೮ ನೋವನೇ ನೊಣವೂರಿದರೆ ...{Loading}...

ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ಗಾವಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ॥8॥

೦೦೯ ರಾಯನನುಜನ ಹರಿಬದಲಿ ...{Loading}...

ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ॥9॥

೦೧೦ ಸಾರು ನೀ ...{Loading}...

ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿವೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ॥10॥

೦೧೧ ಆರಿವರು ನಕುಳಾಙ್ಕರೇ ...{Loading}...

ಆರಿವರು ನಕುಳಾಂಕರೇ ಜ
ಜ್ಝಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ॥11॥

೦೧೨ ತೊಲತೊಲಗು ತರುವಲಿಗೆ ...{Loading}...

ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ॥12॥

೦೧೩ ಬಿಗಿದ ಬಾಣದ ...{Loading}...

ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೊಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ॥13॥

೦೧೪ ಆಳು ನೀನಹುದೆಲವೊ ...{Loading}...

ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯಿವೆ ಕೊಳ್ಳೆನುತ ನಕುಳನನೆಚ್ಚನಾ ಕರ್ಣ ॥14॥

೦೧೫ ತಾಗಿದವು ನಾಲ್ಕಮ್ಬು ...{Loading}...

ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಿಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜಮೋಹರಕೆ ॥15॥

೦೧೬ ಹರಿಬದಾಹವವೆನಗೆ ತನಗೆಂ ...{Loading}...

ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಶೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸುಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ॥16॥

೦೧೭ ದಳಪತಿಯ ಹಿನ್ದಿಕ್ಕಿ ...{Loading}...

ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ॥17॥

೦೧೮ ವಿರಥರಾದ ಶಿಖಣ್ಡಿ ...{Loading}...

ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದರು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರಧುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ॥18॥

೦೧೯ ಭಟರ ತೆಗೆತೆಗೆ ...{Loading}...

ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ॥19॥

೦೨೦ ನೂಕಿದರು ಸಂಶಪ್ತಕರು ...{Loading}...

ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚಳರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚರಿದಿರಾಗಿ ॥20॥

೦೨೧ ಆರಿದಿಪ್ಪತ್ತೈದು ಸಾವಿರ ...{Loading}...

ಆರಿದಿಪ್ಪತ್ತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾವಿರವಿಪ್ಪತ್ತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ॥21॥

೦೨೨ ಸುರಿದುದತಿವಳೆಯೆನ್ದು ...{Loading}...

ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳ್ ಎಂದ ॥22॥

೦೨೩ ಅವರ ಶರಸಙ್ಘಾತವನು ...{Loading}...

ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥23॥

೦೨೪ ಘಾಯವಡೆದರು ಘಾಸಿಯಾದರು ...{Loading}...

ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತ್ತೈದುಸಾವಿರ ವರ ಮಹಾರಥರು ॥24॥

೦೨೫ ಎಲೆಲೆ ಸಂಶಪ್ತಕರ ...{Loading}...

ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರತುದು ರಾಜಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ॥25॥

೦೨೬ ಕರವ ನೆಗಹಿದನಕಟ ...{Loading}...

ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈ ಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ॥26॥

೦೨೭ ಕೂಡೆ ಗರಿಗಟ್ಟಿತು ...{Loading}...

ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ॥27॥

೦೨೮ ಸರಕಟಿಸಿ ದಳ ...{Loading}...

ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾಹವ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಫುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ॥28॥

೦೨೯ ಎರಡು ದಳ ...{Loading}...

ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ॥29॥

೦೩೦ ಅರಸರಿವರೇ ಶಿವ ...{Loading}...

ಅರಸರಿವರೇ ಶಿವ ಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ॥30॥

೦೩೧ ಕೋಲ ಬಲುಹುಣ್ಟಾಗೆ ...{Loading}...

ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ॥31॥

೦೩೨ ಖರೆಯರಲ್ಲಾ ನೀವು ...{Loading}...

ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಗನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ॥32॥

೦೩೩ ಎಚ್ಚನೆಣ್ಟಮ್ಬಿನಲಿ ಕೌರವ ...{Loading}...

ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ॥33॥

೦೩೪ ದ್ಯುಮಣಿ ಪಡುವಣ ...{Loading}...

ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಅಮಿತ ರೋಷವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳ್ ಎಂದ ॥34॥

೦೩೫ ಗೆಲವು ನಮಗಾಯ್ತೆನ್ದು ...{Loading}...

ಗೆಲವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ॥35॥

೦೩೬ ಸೆಳೆದು ಹಿರಿಯುಬ್ಬಣವನವನಿಪ ...{Loading}...

ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ॥36॥

೦೩೭ ದೊರೆಗೆ ಬಿದ್ದುದು ...{Loading}...

ದೊರೆಗೆ ಬಿದ್ದುದು ಭಾರಿಯಾಹವ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ॥37॥

೦೩೮ ಬಳಿಕ ಸಙ್ಕುಳ ...{Loading}...

ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ॥38॥

೦೩೯ ರಾಯರಿಬ್ಬರ ಮನದ ...{Loading}...

ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ॥39॥

+೦೪ ...{Loading}...