೦೦೦ ಸೂ ಭೀಮ ...{Loading}...
ಸೂ. ಭೀಮ ವಿಕ್ರಮಕುರುಬಲದೊಳು
ದ್ದಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
sಸೂ : ಭಯಂಕರ ಪರಾಕ್ರಮಶಾಲಿಯಾದ ಕುರುಬಲದಲ್ಲಿ ಶ್ರೇಷ್ಠವಾದ ಕರ್ಣನ ಯುದ್ಧದಲ್ಲಿ ಪ್ರಸಿದ್ಧನಾದ ಕ್ಷೇಮಧೂರ್ತಿ ರಾಜನನ್ನು ಕಲಿಭೀಮನು ಕೆಡವಿದನು.
ಪದಾರ್ಥ (ಕ.ಗ.ಪ)
ಉದ್ದಾಮ-ಶ್ರೇಷ್ಠ, ಪ್ರಸಿದ್ಧ
ಮೂಲ ...{Loading}...
ಸೂ. ಭೀಮ ವಿಕ್ರಮಕುರುಬಲದೊಳು
ದ್ದಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ
೦೦೧ ಮಗನು ದಳಪತಿಯಾದ ...{Loading}...
ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನು ದಳಪತಿಯಾದನಲ್ಲವೆ? ಯುದ್ಧವನ್ನು ನೋಡುತ್ತೇನೆ ಎನ್ನುವ ಹಾಗೆ ರವಿಯು ಉದಯಾಚಳಕ್ಕೆ ಬಂದನು. ಅವನ ಕಿರಣಗಳು ಜಗದ ಅಗಲದಲ್ಲಿ ತುಂಬಿದ್ದ ಕತ್ತಲೆಯನ್ನು ನಾಶಮಾಡಿತು. ಕನ್ನೈದಿಲೆಗೆ ಕಾಂತಿ ಅಳಿಯಿತು. ಕಮಲಕ್ಕೆ ಚೆಲುವಿನ ನಗೆ ಹೊಮ್ಮಿತು. ಚಕ್ರವಾಕದ ವಿರಹದ ಬೇಗೆ ಅಳಿಯಿತು.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ರಥಾಂಗ-ಚಕ್ರವಾಕ
ಮೂಲ ...{Loading}...
ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ॥1॥
೦೦೨ ಸೂಳು ಮಿಗಲಳ್ಳಿರಿದವುರು ...{Loading}...
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಿಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಸಿದ್ಧವಾದ ನಿಸ್ಸಾಳಕೋಟಿಗಳು ಆರ್ಭಟಿಸಿದವು. ಉದಯದಲ್ಲಿ ದಿಕ್ಕಿನಜಾಲವು ಸರಿಯಲು ಹೊಳೆಯುತ್ತಿದ್ದ ದೊಡ್ಡ ಕಹಳೆಗಳು, ಬಾರಿಸುವ ತಮಟೆಗಳು , ದೊಡ್ಡವಾದ್ಯಗಳು, ಕುದುರೆಗಳು ಇವುಗಳ ಘೋರ ಘೋಷವು ಭೂಮಿಯನ್ನು ಸೀಳುತ್ತ್ತಿರಲು ರವಿನಂದನನ ನೇಮದಲ್ಲಿ ಸೇನೆಯು ನಡೆಯಿತು.
ಪದಾರ್ಥ (ಕ.ಗ.ಪ)
ಗೌರುಗಹಳೆ-ದೊಡ್ಡ ಶಬ್ದಮಾಡುವ ಕಹಳೆ,
ತೂಳುವರೆ-ರಣವಾದ್ಯ,
ಘೋಳ-ಕುದುರೆ,
ರಾಯಗಿಡಿಗ-ಒಂದು ದೊಡ್ಡ ವಾದ್ಯ
ಮೂಲ ...{Loading}...
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಿಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ॥2॥
೦೦೩ ಮೋಹರಿಸಿತಿದು ನಡೆದು ...{Loading}...
ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ನಡೆದ ಸೇನೆಯು ಮಕರವ್ಯೂಹದಲ್ಲಿ ದಾಳಿಗೆ ಸಜ್ಜಾಗಿ ನಿಂತಿತು. ಬಳಿಕ ಪಾಂಡವರ ಸೇನೆ ಬಂದು ಅರ್ಧಚಂದ್ರವ್ಯೂಹ ಒಡ್ಡಿ ನಿಂತಿತು. ಯುದ್ಧ ಪ್ರಾರಂಭವಾಗಲು ಎರಡೂ ಸೈನ್ಯಗಳಲ್ಲಿ ಮುಂಚೂಣಿಯ ಖ್ಯಾತ ಸಾಹಸಿಗರು ಮುತ್ತಿಗೆಹಾಕಿದರು. ಮೋಸ ಕಪಟಗಳನ್ನು ಬಿಟ್ಟು ಒಟ್ಟಾಗಿ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಮಕರವ್ಯೂಹ-ಮೊಸಳೆಯ ಆಕಾರದ ಸೇನಾ ವ್ಯೂಹ, ಅರ್ಧಚಂದ್ರವ್ಯೂಹ-ಅರ್ಧಚಂದ್ರಾಕಾರದ ಸೇನಾ ವ್ಯೂಹ, ಒಡವೆರಸು-ಜೊತೆಗೂಡು, U್ಫಹುಗತಕ-ಮೋಸ, ಭ್ರಾಂತಿ,
ಮೂಲ ...{Loading}...
ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ॥3॥
೦೦೪ ಹೊಯ್ದು ಮುಗ್ಗಿತು ...{Loading}...
ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಡೆಯು ಚತುರಂಗದ ಮುಂಚೂಣಿಯಲ್ಲಿ ಭಟರು ಹೋರಾಡಿ ಮುಗ್ಗರಿಸಿದರು. ಅತಿಶಯದ ಕೈದುಕಾರರು ಪ್ರಾಣವನ್ನು ಬಿಟ್ಟರು. ಯುದ್ಧವನ್ನು ತಾವೇ ಅಪೇಕ್ಷಿಸಿದ ವೀರರು ಹಿಮ್ಮೆಟ್ಟದೆ ಒಟ್ಟಾಗಿ ಹೊಕ್ಕರು. ಯುದ್ಧರಂಗದಲ್ಲಿ ಹಲವು ಭಟರ ಕೊರಳು ಕತ್ತರಿಸಿದವು. ಹಲವರ ತೋಳುಗಳು ಕತ್ತರಿಸಿದವು. ಇನ್ನು ಕೆಲವರ ಮೂಳೆಗಳು ಮುರಿದುಹೋದವು. ಕೆಲವರ ಕರುಳುಗಳು ಹೊರಬಂದವು. ಹೀಗೆ ಚತುರಂಗಬಲದಲ್ಲಿ ವಿಶೇಷವಾಗಿ ಹಾನಿಯಾಯಿತು.
ಪದಾರ್ಥ (ಕ.ಗ.ಪ)
ಮುಗ್ಗು-ಮುಗ್ಗರಿಸು, ನಾಶವಾಗು, ವೆಗ್ಗಳ-ಶ್ರೇಷ್ಠ, ಅತಿಶಯ, ಮೈದೆಗೆ-ಹಿಮ್ಮೆಟ್ಟು
ಮೂಲ ...{Loading}...
ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ॥4॥
೦೦೫ ಇನ್ದು ಬರಹೇಳರ್ಜುನನ ...{Loading}...
ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದುಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂದು ಅರ್ಜುನನನ್ನು ಬರಹೇಳು. ಭೀಮನಿಗೆ ಇಂದೇ ಯುದ್ಧ. ಮನದಲ್ಲಿ ಶಂಕೆ, ಅನುಮಾನ ಬೇಡ. ಧರ್ಮನಂದನನು ಯುದ್ಧ ಮಾಡಲಿ. ಹಿಂದೆ ಭೀಷ್ಮ, ಗುರುಗಳನ್ನು ನಂಬಿಸಿ ಕೊಂದ ಗೆಲುವಿನಲ್ಲಿ ಉಬ್ಬುವುದು ಬೇಡ. ಇಂದು ನಮಗೆ ಕರ್ಣ ದಳವಾಯಿ” ಎಂದು ಭಟರು ಬೊಬ್ಬಿರಿದರು.
ಪದಾರ್ಥ (ಕ.ಗ.ಪ)
ಕಂದುಕಸರಿಕೆ- ಅನುಮಾನ, ಶಂಕೆ
ಮೂಲ ...{Loading}...
ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದುಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ॥5॥
೦೦೬ ತೇರು ಬಿಟ್ಟವು ...{Loading}...
ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೇರುಗಳು ವೇಗವಾಗಿ ಹೊರಟವು. ವೀರರಾದ ಸವಾರರು ಕಡಿವಾಣ ಹಿಡಿದು ವೇಗವಾಗಿ ಕುದುರೆಯನ್ನು ಏರಿದರು. ಕಪ್ಪುಮೋಡಗಳ ಸೈನ್ಯ ಎನ್ನುವ ಹಾಗೆ ಆನೆಗಳು ಕವಿದವು. ನೆಲ ಬಿರಿಯುವ ಹಾಗೆ ಘರ್ಜಿಸಿದರು. ಸಾಮಾನ್ಯರು, ಈಟಿವೀರರು, ಬಿಲ್ಲಿನ ಮಹಾಭಟರು ಶತ್ರುಸೈನ್ಯವನ್ನು ಚೆದುರಿಸುತ್ತ ಆರ್ಭಟಿಸುತ್ತಾ ಕೆಣಕಿದರು.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ಜಜ್ಝಾರ-ಪರಾಕ್ರಮಿ, ಶೂರ, ಸರಿಸ-ವೇಗ, ಆರು-ಘರ್ಜಿಸು, ಬೆರಸು-ಬೆನ್ನಟ್ಟು
ಮೂಲ ...{Loading}...
ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ॥6॥
೦೦೭ ಮುರಿಯದಹಿತರ ಥಟ್ಟು ...{Loading}...
ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಿಯದ ಶತ್ರುಗಳ ಸೇನೆಯನ್ನು ನಮ್ಮ ಸೇನೆಯು ಬಿಡುವುಕೊಡದೆ ಒತ್ತಿತು. ದೊರೆಗಳು ಹೊರಗೆ ಲಗ್ಗೆಯನ್ನು ಮಾಡಿ ತೋರಿಸಿದರೆ ಕೂಡಲೆ ವೃಷಸೇನ, ಸೌಬಲ, ಅಶ್ವತ್ಥಾಮ, ಕೃಪ, ಕೃತವರ್ಮ, ದುರ್ಮುಖ, ಶ್ರೇಷ್ಠರಾದ ವಿಕರ್ಣ, ಕ್ಷೇಮಧೂರ್ತಿ, ಬೃಹದ್ರಥ ಮೊದಲಾದವರು ಶತ್ರುಗಳ ಸೈನ್ಯವನ್ನು ಓಡಿಸಿದರು.
ಮೂಲ ...{Loading}...
ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ॥7॥
೦೦೮ ಸೂತಸುತ ದಳಪತಿಯೆ ...{Loading}...
ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂತಸುತ ದಳಪತಿಯೆ? ಫಡ! ಮುಂಚೂಣಿಯಲ್ಲಿರುವವರು ಪ್ರತಿಭಟಿಸುತ್ತಿದ್ದಾರೆಯೇ ? ನಾಚಿಕೆಗೆಟ್ಟ ಬಿರುದಿನವರು ಬೊಬ್ಬಾಟ ಬಿಡಲಿಲ್ಲವಲ್ಲ. ಇವರು ಕಂಡೂ ಕಾಣಲಿಲ್ಲವೆ! ಸೋತ ಯುದ್ಧದ ಗುತ್ತಿಗೆಗಾರರು ಕುಳಿತರೊ? ಇವರುಗಳು ಜಯಸಿರಿಗೆ ಹೊಯ್ಕಯ್! ಎನ್ನುತ್ತ ಪಾಂಡವ ಮಹಾರಥರು ಮುಂದೆ ನುಗ್ಗಿದರು.
ಪದಾರ್ಥ (ಕ.ಗ.ಪ)
ಮುಯ್ಯಾನು-ಒಪ್ಪು, ಮುಂಬಿಗರು-ಮುಂದಾಳುಗಳು, ಕೇಣಿಕಾರ-ಗುತ್ತಿಗೆದಾರ
ಮೂಲ ...{Loading}...
ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ॥8॥
೦೦೯ ನೂಕಿತೊನ್ದೇ ವಾಘೆಯಲಿ ...{Loading}...
ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕುಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ನಿಯಂತ್ರಣದಲ್ಲಿ, ನಾಲ್ಕು ಸಾವಿರ ರಥಗಳು, ಹದಿನಾಲ್ಕು ಸಾವಿರ ಶಕ್ತಿಯುತ ಕುದುರೆಗಳು, ನೂರು ಆನೆಗಳು, ಒಂದು ಲಕ್ಷ ಪದಾತಿದಳಗಳು ಮುನ್ನುಗ್ಗಿದವು. ರಕ್ಷಣೆ ಇಲ್ಲದೆ ಬಲದ ವೀರರು ಸೋತು ಹಿಮ್ಮಟ್ಟಿದರು. ಇದರಿಂದ ಕೌರವರಾಯನ ಸೇನೆಯಲ್ಲಿ ಸೋಲು ಅವರಿಸಿಕೊಂಡಿತು.
ಪದಾರ್ಥ (ಕ.ಗ.ಪ)
ವಾಘೆ-ಲU್ಫಮು
ಮೂಲ ...{Loading}...
ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕುಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ॥9॥
೦೧೦ ಫಡಫಡೆತ್ತಲು ಸ್ವಾಮಿದ್ರೋಹರು ...{Loading}...
ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಡ ಫಡ! ಸ್ವಾಮಿದ್ರೋಹಿಗಳು ಯಾವ ಕಡೆ ಸಿಡಿದರೋ? ಕುರುಬಲದ ರಕ್ಷಣೆಯ ಪಟ್ಟದಾನೆಗಳು ತಮ್ಮ ವಂಶದ ಬೇರುಗಳನ್ನೇ ಕಡಿದವೋ ? ನನ್ನ ಸೈನ್ಯವು ಘಟಸರ್ಪ . ಇದನ್ನು ಪಾಂಡವರ ಸೈನ್ಯವು ಮುಟ್ಟಬಲ್ಲುದೆ ಎನ್ನುತ್ತ ಕ್ಷೇಮಧೂರ್ತಿಯು ಸಾವಿರ ಆನೆಗಳೊಂದಿಗೆ ಶತ್ರುಸೇನೆಯನ್ನು ತಡೆದು ನಿಂತನು.
ಮೂಲ ...{Loading}...
ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ॥10॥
೦೧೧ ತರಿಸಿ ಲೋಹದ ...{Loading}...
ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಹದ ಜತ್ತರಟ್ಟ ಯಂತ್ರವನ್ನು ತರಿಸಿ ರಣರಂಗದಲ್ಲಿ ಹರಹಿದರು. ಸೂಲಿಗೆಯ ಬಂಡಿಯನ್ನು ನಿಲ್ಲಿಸಿದರು. ಅಕ್ಕಪಕ್ಕಗಳಲ್ಲಿ ಈಟಿವೀರರನ್ನು ನಿಲ್ಲಿಸಿ ಕುದುರೆ, ರಥ, ಬಿಲ್ಲಾಳುಗಳನ್ನು ಒತ್ತಾಗಿರಿಸಿ ಲಗ್ಗೆಯ ಲಹರಿಯಲ್ಲಿ ತಮ್ಮ ಸೇನೆಯೊಂದಿಗೆ ಪಾಂಚಾಲ ಕೇಕೆಯರ ಸೈನ್ಯದ ಮೇಲೆ ಮುತ್ತಿದರು.
ಪದಾರ್ಥ (ಕ.ಗ.ಪ)
ಜತ್ತರಟ್ಟ-ಯುದ್ಧಯಂತ್ರ
ಸೂಲಿಗೆ - ಒಂದು ಬಗೆಯ ಆಯುಧ
ಮೂಲ ...{Loading}...
ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ॥11॥
೦೧೨ ನೀಡಿ ಬರಿಕೈಗಳಲಿ ...{Loading}...
ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿನೃಪಾಲನಾನೆಗಳು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷೇಮಧೂರ್ತಿ ನೃಪಾಲನ ಆನೆಗಳು ಸೊಂಡಿಲನ್ನು ಚಾಚಿ ಬಂಡಿಗಳನ್ನು ಸೆಳೆದು ಜಜ್ಜಿದವು. ಕೊಂಬಿನಲ್ಲಿ ಈಟಿವೀರರನ್ನು ಸೀಳಿ ದಿಕ್ಕುದಿಕ್ಕಿಗೆ ಎಸೆದವು. ಜತ್ತರಟ್ಟ ಮತ್ತು ಹೂಡುಜಂತ್ರಗಳ ಮಾತಿನ್ನೇಕೆ? ಅ ಆನೆಗಳು ಹಿಂದಿನ ಸೈನ್ಯವನ್ನು ಝಾಡಿಸಿದವು.
ಪದಾರ್ಥ (ಕ.ಗ.ಪ)
ಒಡ್ಡು-ಸೈನ್ಯ
ಮೂಲ ...{Loading}...
ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿನೃಪಾಲನಾನೆಗಳು ॥12॥
೦೧೩ ರಾಯದಳ ಕಳವಳಿಸೆ ...{Loading}...
ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರ ಕೆಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದರು ತಮ್ಮೊಳಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯ ಕಳವಳಿಸಿತು. ಅವರ ಗುಂಪಿನ ಆನೆಗಳು ಗಾಯಗೊಂಡು ನೆಲಕ್ಕೆ ಉರುಳಿದವು, ರಥಗಳ ಮಧ್ಯೆ ಹಾಯ್ದು ಓಡಿದವು. ಕುದುರೆಗಳ ಮೇಲೆ ಬಿದ್ದು ಅವುಗಳ ಗುಂಪನ್ನು ನಾಶ ಮಾಡಿದವು . (ನೀವು) ನಮ್ಮ ನಾಯಕರನ್ನು ಬೈದು ಕೆಟ್ಟದ್ದನ್ನು ನುಡಿಯುವ, ಬಾಯಿಬೊಬ್ಬೆಯ, ಕೈಯಹೊಡೆತಗಳ ದಾಯಾದಿಗಳಲ್ಲವೇ ಎನ್ನುತ್ತ ಕ್ಷೇಮಧೂರ್ತಿಯ ಸೈನಿಕರು ಶತ್ರುಸೈನ್ಯದವರನ್ನು ಮೂದಲಿಸಿದರು.
ಪಾಠಾನ್ತರ (ಕ.ಗ.ಪ)
ಮೂದಲಿಸಿದನು - ಮೂದಲಿಸಿದರು
ಅ ರಾ ಸೇ
ಮೂಲ ...{Loading}...
ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರ ಕೆಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದರು ತಮ್ಮೊಳಗೆ ॥13॥
೦೧೪ ಕೆದರಿತರನೆಲೆ ರಾಯ ...{Loading}...
ಕೆದರಿತರನೆಲೆ ರಾಯ ಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರಳ ತುಟಿಯಬ್ಬರಕೆ ಗಜ
ಬೆದರೆ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ವ್ಯೂಹದ ಹಿಂಬದಿಯಲ್ಲಿದ್ದ ಅರಸನ ನೆಲೆ ಚೆದುರಿತು. ರಾಜನ ಸೈನ್ಯವನ್ನು ಆನೆಗಳು ಚೆಲ್ಲಾಪಿಲ್ಲಿ ಮಾಡಿದವು. ಮದಿಸಿದ ಶತ್ರುಗಳ ವ್ಯೂಹಕ್ಕೆ ಪ್ರತಿವ್ಯೂಹವನ್ನು ಮೆರೆದರೆ? ಭಲೆ! ಎನ್ನುತ್ತ ತುದಿಬೆರಳ ತುಟಿಯ ಅಬ್ಬರದಿಂದ ಅನೆಯನ್ನು ಬೆದರಿಸುತ್ತ, ಗಜಯೋಧರ ಮೇಲೆ ಗರ್ಜಿಸುತ್ತ, ಗದೆಯನ್ನು ತಿರುವುತ್ತ ಕಲಿಭೀಮನು ಇವರ ವ್ಯೂಹವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಅರನೆಲೆ-ಸೇನಾವ್ಯೂಹದ ಹಿಂದೆ ಇರುವ ಅರಸನ ನೆಲೆ, ಮಾರೊಡ್ಡು-ಪ್ರತಿವ್ಯೂಹ
ಮೂಲ ...{Loading}...
ಕೆದರಿತರನೆಲೆ ರಾಯ ಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರಳ ತುಟಿಯಬ್ಬರಕೆ ಗಜ
ಬೆದರೆ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ॥14॥
೦೧೫ ಗರುಡನೂರವರೆರೆವರೇ ನಾ ...{Loading}...
ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುದೈಸಾವಿರ ಮಹಾರಥರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರುಡನ ಊರಿನವರೇನಾದರೂ ನಾಗರಿಗೆ ತಂಪನ್ನು ಎರೆಯುತ್ತಾರೆಯೆ? ಭೀಮಸೇನನ ಬಿರುದುಳ್ಳ ಓಲೆಯಕಾರರು ಶತ್ರು ಸೈನ್ಯಕ್ಕೆ ಅಂಜುತ್ತಾರೆಯೆ? ಅವರು ಆನೆಗಳ ಸಮೂಹವನ್ನು ಕೆದರಿದರು. ಅಂಥವರು ಯುದ್ಧದಲ್ಲಿ ಸಣ್ಣತನವನ್ನು ಬಲ್ಲರೆ? ಆನೆಯ ಕರುಳಿನಲ್ಲಿ ತಮ್ಮ ಕರುಳನ್ನು ತೊಡಗಿಸಲು ( ಜೀವದ ಹಂಗನ್ನು ತೊರೆದು) ಸಿದ್ಧವಾಗಿ ಐದು ಸಾವಿರ ಮಹಾರಥರು ಆನೆಗಳ ಮೆಲೆ ಬಿದ್ದರು.
ಪದಾರ್ಥ (ಕ.ಗ.ಪ)
ತನಿ-ಹಾಲು
ಮೂಲ ...{Loading}...
ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುದೈಸಾವಿರ ಮಹಾರಥರು ॥15॥
೦೧೬ ಮುಙ್ಗುಡಿಯ ಮುರಿದೌಕಿ ...{Loading}...
ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲುನಾರಾಚ ಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಮುಂದಿನ ಸಾಲನ್ನು ಮುರಿದು ನಾಶಮಾಡಿ ಕ್ಷೇಮಧೂರ್ತಿಯು ಆನೆಯ ಮೇಲೆ ಕುಳಿತು ಬಾಣಬಿಡುತ್ತ ಭೀಮನ ಮೇಲೆ ಬಿದ್ದನು. ‘ನಿನ್ನ ಪರಾಕ್ರಮವನ್ನೆದುರಿಸಲು ಮಹಾದೇವನಿಗೂ ಸಾಧ್ಯವಿಲ್ಲ! ನೀನು (ಪೂತು ! ಮಝರೆ ! ಯ) ಅಜೇಯನೋ’ ಎಂದು ಕಲಿಭೀಮನು ಮೂದಲಿಸಿದನು.
ಮೂಲ ...{Loading}...
ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲುನಾರಾಚ ಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ॥16॥
೦೧೭ ಮೇಲುವಾಯ್ದಾರೋಹಕರ ಹಿಂ ...{Loading}...
ಮೇಲುವಾಯ್ದಾರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮೇಲೆ ಹಾಯ್ದು ಆನೆಯ ಮೇಲಿದ್ದ ವೀರರ ಹಿಂಗಾಲನ್ನು ಹಿಡಿದು ಚೆಲ್ಲಾಡಿ, ಶತ್ರುಗಳ ಆನೆಗಳ ಜಾಲದೊಳಗಿನ ಒಂದು ಆನೆಯನ್ನು ತಾನು ಏರಿ, ಬೊಬ್ಬೆಹಾಕಿ ಘೀಳಿಡುತ್ತಿರುವ ಆನೆಯು ಅತ್ತಿತ್ತ ಹರಿದಾಡಲು, ಅಂಕುಶದಿಂದ ಅದರ ನೆತ್ತಿಯನ್ನು ಚುಚ್ಚಿ ಆ ಆನೆಯನ್ನು ಕ್ಷೇಮಧೂರ್ತಿಯ ಆನೆಗೆ ಎದುರಾಗುವಂತೆ ಮುಂದಕ್ಕೆ ನುಗ್ಗಿಸಿದನು.
ಪದಾರ್ಥ (ಕ.ಗ.ಪ)
ಅಂಕುಶವಾಳೆ-ಅಂಕುಶದ ಕತ್ತಿ
ಮೂಲ ...{Loading}...
ಮೇಲುವಾಯ್ದಾರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ॥17॥
೦೧೮ ಇದು ವಿನೋದವಲೇ ...{Loading}...
ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ವಿನೋದವಲ್ಲವೆ! ಇದು ನನ್ನ ಅಭ್ಯುದಯವಲ್ಲವೆ! ನಮ್ಮ ಕೋಪವನ್ನು ಇದಿರುಗೊಂಡವನು ಇವನಲ್ಲವೆ? ಎನ್ನುತ್ತ ಭೀಮನು ಬಾಣಗಳನ್ನು ಬಿಟ್ಟನು. ‘ನೀಚ, ನೀನು ದೂರ ಸರಿ. ಆ ಭಾರಿಯ ಮದಗಜದ ಬಡಿಹೋರಿ ಹೋಗು ಎನ್ನುತ್ತ ಕೂಗಿ ಕ್ಷೇಮಧೂರ್ತಿಯು ಬಾಣಗಳ ಸೋನೆಮಳೆಯಿಂದ ಭೀಮನನ್ನು ಮುತ್ತಿದನು.
ಪದಾರ್ಥ (ಕ.ಗ.ಪ)
ಸದೆಗ-ಕ್ಷುದ್ರ, ಅಲ್ಪ, ನೀಚ, ಬಡಿಹೋರಿ - ಜೀತದ ಎತ್ತು
ಮೂಲ ...{Loading}...
ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ॥18॥
೦೧೯ ಆಗಲೀ ನಾಲಗೆಯ ...{Loading}...
ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗಲಿ. ನಾಲಗೆಯ ಸಾಲವನ್ನು ಈಗ ಕೈಯಲ್ಲಿ ಹಿಂದಿರುಗಿಸದೆ ಸುಮ್ಮನೆ ಇರುತ್ತೇನೆಯೇ? ಹೇಳು ಎನ್ನುತ್ತ ಭೀಮನು ಬಾಣಗಳನ್ನು ಬಿಟ್ಟನು. ಅದರಿಂದಾಗಿ ನೆಲ ಆಕಾಶ ದಿಕ್ಕುಗಳೊಂದೂ ಕಾಣದಂತಾದವು. ಆ ಬಾಣಗಳು ಶತ್ರುವಿನ ಆನೆಗಳ ಸಮೂಹದ ಮೈಗಳಲ್ಲಿ ತೂಗಿ ದಟ್ಟೈಸಿದವು.
ಪದಾರ್ಥ (ಕ.ಗ.ಪ)
ತಿದ್ದಿಕೊಡು-ಹಿಂದಿರುಗಿಸು
ಮೂಲ ...{Loading}...
ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ॥19॥
೦೨೦ ಸರಳ ಮಳೆಯಲಿ ...{Loading}...
ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳ ಮಳೆಯಲ್ಲಿ ನೆನೆದು ಆನೆಗಳು ಉರುಳಿದವು. ವೈರಿಗಳ ಆನೆಗಳು ಕಲ್ಪಾಂತವರುಷದಲ್ಲಿ ಉರುಳುವ ಪರ್ವತಗಳಂತೆ ಕಾಣಿಸುತ್ತಿದ್ದವು. ಕ್ಷೇಮಧೂರ್ತಿಯ ಆನೆ ಎರಡು ಸೀಳಾಯಿತು. ಭೂಮಿಗೆ ದೊಪ್ಪನೆ ಬಿದ್ದ ಕ್ಷೇಮಧೂರ್ತಿಯು ಅಡಾಯುಧವನ್ನು ಸೆಳೆದು ಕೋಪದಿಂದ ಮುನ್ನುಗ್ಗಿದನು.
ಮೂಲ ...{Loading}...
ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ॥20॥
೦೨೧ ಕುಣಿದು ಪುಟನೆಗೆದರಿ ...{Loading}...
ಕುಣಿದು ಪುಟನೆಗೆದರಿ ಗಜವ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಣಿದು ಪುಟನೆಗೆದು ಶತ್ರುವಿನ ಆನೆಯನ್ನು ಹೊಯ್ದು ಅಣೆದು ಸಂಹರಿಸುವ ಮೊದಲೇ ಕ್ಷೇಮಧೂರ್ತಿಯ ತಲೆಯು ಮೇಲಕ್ಕೆ ಚಿಗಿಯಿತು. ಮುಂಡ ನೂರು ಹೆಜ್ಜೆ ನಡೆಯಿತು. Wಳಿಗೇಡಿ ನೀನು, ಅಕಟಕಟ, ಭೀಮನನ್ನು ಕೆಣಕಿ ಬದುಕಿದೆ ಎನ್ನುತ್ತ ಅಪ್ಸರ ಗಣಿಕೆಯರು ನಗುತ್ತ ಅವನನ್ನು ವಿಮಾನದಲ್ಲಿ ಕೊಂಡೊಯ್ದರು.
ಪದಾರ್ಥ (ಕ.ಗ.ಪ)
ಬಣಗು-ತಿಳಿಗೇಡಿ
ಮೂಲ ...{Loading}...
ಕುಣಿದು ಪುಟನೆಗೆದರಿ ಗಜವ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ॥21॥