೦೦೦ ಸೂ ರಾಯ ...{Loading}...
ಸೂ. ರಾಯ ಕಟಕಾಚಾರ್ಯನೊಡ್ಡಿದ
ರಾಯ ಥಟ್ಟಿನೊಳಿರುಳು ಕೊಂದನು
ವಾಯುತನಯನ ತನುಜನಗ್ಗದ ದೈತ್ಯಕೋಟಿಗಳ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಸೇನಾಪತಿ ದ್ರೋಣನು ಒಡ್ಡಿದ ದುರ್ಯೋಧನನ ಸೈನ್ಯದಲ್ಲಿ ಭೀಮಪುತ್ರನಾದ ಘಟೋತ್ಕಚನು ಶ್ರೇಷ್ಠರಾದ ಕೋಟ್ಯಾಂತರ ರಾಕ್ಷಸರನ್ನು ಕೊಂದನು.
ಮೂಲ ...{Loading}...
ಸೂ. ರಾಯ ಕಟಕಾಚಾರ್ಯನೊಡ್ಡಿದ
ರಾಯ ಥಟ್ಟಿನೊಳಿರುಳು ಕೊಂದನು
ವಾಯುತನಯನ ತನುಜನಗ್ಗದ ದೈತ್ಯಕೋಟಿಗಳ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣಾರ್ಜುನರು ಬರೆ ಭೂ
ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ
ಹೇಳಲರಿಯೆನು ಹರುಷದುದಯವ
ನಾಲಿ ಹೂಳಿದವಶ್ರುಜಲದಲಿ
ಮೇಲುವಾಯ್ದಪ್ಪಿದನು ದೇವನ ಪಾದಪಂಕಜವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು. ಕೃಷ್ಣಾರ್ಜುನರು ಬರಲಾಗಿ ಭೂಪಾಲನಾದ ಯುಧಿಷ್ಠಿರನು ತನ್ನ ಸಮೂಹದೊಂದಿಗೆ ಇದಿರಾಗಿ ಬಂದನು. ಅವನಿಗಾಗುತ್ತಿದ್ದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಕಣ್ಣುಗಳಲ್ಲಿ ಆನಂದಾಶ್ರು ಹೊಮ್ಮುತ್ತಿರಲು ಆತುರದಿಂದ ಮುಂದೆ ಬಂದು ದೇವನ ಪಾದಕಮಲಗಳನ್ನು ಅಪ್ಪಿದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣಾರ್ಜುನರು ಬರೆ ಭೂ
ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ
ಹೇಳಲರಿಯೆನು ಹರುಷದುದಯವ
ನಾಲಿ ಹೂಳಿದವಶ್ರುಜಲದಲಿ
ಮೇಲುವಾಯ್ದಪ್ಪಿದನು ದೇವನ ಪಾದಪಂಕಜವ ॥1॥
೦೦೨ ಮಾತುದೋರದು ಹೆಚ್ಚಿದಾನಂ ...{Loading}...
ಮಾತುದೋರದು ಹೆಚ್ಚಿದಾನಂ
ದಾತಿರೇಕಕೆ ಚಿತ್ತ ನೆರೆಯದು
ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ
ಕಾತರಿಸಿದನು ಮೇಲೆ ಮೇಲೆ ಮ
ಹೀತಳಾಧಿಪ ಮೈಮರೆಯೆ ತೆಗೆ
ದಾತನನು ತಕ್ಕೈಸಿದನು ಕಾರುಣ್ಯನಿಧಿ ನಗುತ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಚ್ಚಿದ ಆನಂದಾತಿರೇಕದಿಂದ ಮಾತುಗಳು ಹೊರಡಲಿಲ್ಲ. ಮನಸ್ಸನ್ನು ನಿಯಂತ್ರಿಸಿಕೊಳ್ಳಲಾರದೆ, ಸಂತೋಷದಲ್ಲೇ ಮೈಮರೆತಿರಲು ರೋಮಾಂಚನದ ಅನುಭವಕ್ಕೆ ದೇಹ ಕಿರಿದು ಎನ್ನುವಂತಾಯ್ತು. ರಾಜ ಧರ್ಮಜನು ಹೊರನೋಟಕ್ಕೆ ಕಾತರಿಸಿದನು. ಆನಂದದಲ್ಲೇ ಮೈಮರೆತಿರಲಾಗಿ ಕಾರುಣ್ಯ ನಿಧಿಯಾದ ಕೃಷ್ಣನು ನಗುತ್ತ ಆತನನ್ನು ಮೇಲೆತ್ತಿ ಬಿಗಿದು ಅಪ್ಪಿಕೊಂಡನು.
ಮೂಲ ...{Loading}...
ಮಾತುದೋರದು ಹೆಚ್ಚಿದಾನಂ
ದಾತಿರೇಕಕೆ ಚಿತ್ತ ನೆರೆಯದು
ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ
ಕಾತರಿಸಿದನು ಮೇಲೆ ಮೇಲೆ ಮ
ಹೀತಳಾಧಿಪ ಮೈಮರೆಯೆ ತೆಗೆ
ದಾತನನು ತಕ್ಕೈಸಿದನು ಕಾರುಣ್ಯನಿಧಿ ನಗುತ ॥2॥
೦೦೩ ಫಲಿಸಿತರಸಾ ನಿನ್ನ ...{Loading}...
ಫಲಿಸಿತರಸಾ ನಿನ್ನ ಭಾಗ್ಯದ
ಬೆಳಸು ನಿನ್ನೊಡವುಟ್ಟಿದನ ನುಡಿ
ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ
ಕಳಿದುದೊಂದಪಮೃತ್ಯುವೆನೆ ನೃಪ
ತಿಲಕ ನುಡಿದನು ನಿನ್ನ ಭಾಷೆಯ
ಬಲಿದೆ ನಿನ್ನಯ ಬಿರುದ ಸಲಿಸಿದೆ ನಮಗಿದೇನೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸಾ… ನಿನ್ನ ಭಾಗ್ಯದ ಬೆಳಸು ಫಲಕೊಟ್ಟಿತು. ನಿನ್ನ ಒಡಹುಟ್ಟಿದ ಅರ್ಜುನನ ಭಾಷೆ ನೆರವೇರಿ ಪರಿಪೂರ್ಣವಾಯಿತು. ಈ ಕದನ ಉಳಿದವರ ಪಾಲಿಗೆ ಮಹಾಯುದ್ಧ. ಒಂದು ಅಪಮೃತ್ಯು ಕಳೆದಂತಾಯ್ತು.” ಎಂದು ಕೃಷ್ಣನು ಹೇಳಲು , ರಾಜಶ್ರೇಷ್ಠನಾದ ಧರ್ಮರಾಯನು " ನಿನ್ನ ಭಾಷೆಯನ್ನು ಎತ್ತಿ ಹಿಡಿದೆ. ನಿನ್ನ ಬಿರುದನ್ನು ಸಾರ್ಥಕಗೊಳಿಸಿದೆ. ನಮಗೆ ಇದೇನು (ಕಷ್ಟ ಎನಿಸಿದೆ ) " ಎಂದನು.
ಪದಾರ್ಥ (ಕ.ಗ.ಪ)
ಕಳಸಗಂಡುದು-ಗೋಪುರ ಮೇಲ್ಭಾಗವನ್ನು ಕಂಡುದು ಅಂದರೆ ಕೆಲಸದಲ್ಲಿ ಪರಿಪೂರ್ಣತೆ ಸಿದ್ಧಿಸಿತು, ಭಾರಾಂಕ-ಮಹಾಯುದ್ಧ
ಮೂಲ ...{Loading}...
ಫಲಿಸಿತರಸಾ ನಿನ್ನ ಭಾಗ್ಯದ
ಬೆಳಸು ನಿನ್ನೊಡವುಟ್ಟಿದನ ನುಡಿ
ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ
ಕಳಿದುದೊಂದಪಮೃತ್ಯುವೆನೆ ನೃಪ
ತಿಲಕ ನುಡಿದನು ನಿನ್ನ ಭಾಷೆಯ
ಬಲಿದೆ ನಿನ್ನಯ ಬಿರುದ ಸಲಿಸಿದೆ ನಮಗಿದೇನೆಂದ ॥3॥
೦೦೪ ತೆಗೆಸು ದಳವನು ...{Loading}...
ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮ ಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೈನ್ಯವನ್ನು ಹಿಂತೆಗೆದುಕೊ ಸಾಕು. ನೀನು ನಮ್ಮನ್ನು ಸುಮ್ಮನೆ ಹೊಗಳುತ್ತಿರುವೆ. ಈ ಯುದ್ಧದಲ್ಲಿ ಶತ್ರುಗಳ ಏಳು ಅಕ್ಷೋಹಿಣೀ ಸೇನೆ ನಾಶವಾಗಿದೆ. ಭೀಮ-ಪಾರ್ಥರು ಹಿಂದು ಮುಂದು ನೋಡದೆ ಶತ್ರುಗಳನ್ನು ಇರಿದರು. ಜಗತ್ತಿನಲ್ಲಿ ಅದ್ಭುತ ವೀರರಿವರು” ಎಂದು ಶ್ರೀಕೃಷ್ಣನು ಭೀರ್ಮಾರ್ಜುನರನ್ನು ಮೆಚ್ಚಿ ನುಡಿದನು.
ಮೂಲ ...{Loading}...
ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮ ಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ ॥4॥
೦೦೫ ಇತ್ತ ದುಗುಡವ ...{Loading}...
ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ದುಃಖಿತನಾದ ರಾಜ ದುರ್ಯೋಧನನ ಕೋಪದಿಂದ ನಡುಗುವ ಮುಖವನ್ನು ಕಂಡು ಭಟರಿಗೆ ಎದೆಯಲ್ಲಿ ಕಿಚ್ಚು ಹೊತ್ತಿಕೊಂಡಂತಾಯ್ತು. ವೀರರ ಮುಖಗಳಲ್ಲಿ ಸೇಡಿನ ಹೊಗೆ ತೋರಿದವು. ಕರ್ಣನು ಕೋಪದಿಂದ “ಇತ್ತ ನೋಡು ರಾಜನೇ, ಸೈಂಧವನು ಈಗ ಎಲ್ಲಿದ್ದಾನೋ ಅಲ್ಲಿಗೇ ಶ್ರೀಕೃಷ್ಣನ ಸೇವಕರಾದ ಪಾಂಡವರನ್ನೂ ಕಳುಹಿಸುತ್ತೇನೆ”-ಎಂದನು.
ಪದಾರ್ಥ (ಕ.ಗ.ಪ)
ಕೆತ್ತ-ನಡುಗುವ,
ಮೂಲ ...{Loading}...
ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ ॥5॥
೦೦೬ ಇನ್ನು ನೋಡಾದಡೆ ...{Loading}...
ಇನ್ನು ನೋಡಾದಡೆ ಕಿರೀಟಿಯ
ಬೆನ್ನಲುಗಿವೆನು ಕರುಳನರ್ಜುನ
ಗನ್ನಗತಕದಲರಿಯ ಹೊಯ್ದನು ಹಾಯ್ಕು ವೀಳೆಯವ
ನಿನ್ನ ಕಂಗಳ ಬರನ ಕಳೆವೆನು
ಬೆನ್ನಲಿರು ನೃಪ ನೋಡು ಚಿತ್ರವ
ನಿನ್ನು ತೋರುವೆನೆನುತ ಭಾಷೆಯ ಕೊಟ್ಟನಾ ಕರ್ಣ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನು ನೋಡು, ಆ ಅರ್ಜುನನ ಬೆನ್ನಿನಿಂದ ಅವನ ಕರುಳನ್ನು ಹೊರಗೆ ತೆಗೆಯುತ್ತೇನೆ. ಅರ್ಜುನನು ಮೋಸದಿಂದ ಶತ್ರುವನ್ನು ಹೊಡೆದು ಕೊಂದನು. ಪುನಃ ಯುದ್ಧಕ್ಕೆ ಆಹ್ವಾನಿಸು. ನಿನ್ನ ಕಣ್ಣುಗಳಿಗೆ ಉಂಟಾಗಿರುವ ಸಂಭ್ರಮದ ಬರವನ್ನು ಕಳೆಯುತ್ತೇನೆ. ನನ್ನ ಜೊತೆಗಿರು. ರಾಜನೇ ನೋಡು ಇನ್ನು ವಿಚಿತ್ರವನ್ನು ತೋರುವೆನು” ಎನ್ನುತ್ತಾ ಆ ಕರ್ಣನು ಭಾಷೆ ಕೊಟ್ಟನು.
ಮೂಲ ...{Loading}...
ಇನ್ನು ನೋಡಾದಡೆ ಕಿರೀಟಿಯ
ಬೆನ್ನಲುಗಿವೆನು ಕರುಳನರ್ಜುನ
ಗನ್ನಗತಕದಲರಿಯ ಹೊಯ್ದನು ಹಾಯ್ಕು ವೀಳೆಯವ
ನಿನ್ನ ಕಂಗಳ ಬರನ ಕಳೆವೆನು
ಬೆನ್ನಲಿರು ನೃಪ ನೋಡು ಚಿತ್ರವ
ನಿನ್ನು ತೋರುವೆನೆನುತ ಭಾಷೆಯ ಕೊಟ್ಟನಾ ಕರ್ಣ ॥6॥
೦೦೭ ಉಣ್ಟು ಗರುಡನನೊಳ್ಳೆ ...{Loading}...
ಉಂಟು ಗರುಡನನೊಳ್ಳೆ ತುಡುಕುವ
ದುಂಟಲೇ ಲೋಕದಲಿ ರಾಯನ
ನಂಟರಿಷ್ಟರೊಳಧಿಕನಲ್ಲಾ ಕರ್ಣ ಕಿರುಕುಳನೆ
ಕಂಟಣಿಸಬೇಡಿನ್ನು ಭಾಷೆಗ
ಳುಂಟು ನಿನ್ನಲಿ ನಗುವರಾವ
ಲ್ಲೆಂಟುಮಡಿಯನು ಸೊರಹು ಸಾಕೆಂದನು ಕೃಪಾಚಾರ್ಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಜ. ಲೋಕದಲ್ಲಿ ಗರುಡನನ್ನು ನೀರ ಹಾವು ಹಿಡಿಯಲು ಪ್ರಯತ್ನಿಸುವುದು ಸಾಧ್ಯ. ರಾಯನ ನಂಟರಿಷ್ಟರೊಳಗೆ ಕರ್ಣನು ಅಧಿಕನಲ್ಲವೇ ? ಕರ್ಣನು ಸಾಮಾನ್ಯನೇ ? ಕುಗ್ಗಬೇಡ. ನಿನ್ನಲ್ಲಿ ಇನ್ನೂ ಭಾಷೆಗಳಿವೆ. ನಗುವವರು ನಾವಲ್ಲ. ಎಂಟರಷ್ಟು ಹರಟು, ಸಾಕು” ಎಂದು ಕೃಪಾಚಾರ್ಯರು ಹೇಳಿದರು.
ಪದಾರ್ಥ (ಕ.ಗ.ಪ)
ಕಂಟಣಿಸು-ಕುಗ್ಗು, ಸೊರಹು-ಹರಟು
ಮೂಲ ...{Loading}...
ಉಂಟು ಗರುಡನನೊಳ್ಳೆ ತುಡುಕುವ
ದುಂಟಲೇ ಲೋಕದಲಿ ರಾಯನ
ನಂಟರಿಷ್ಟರೊಳಧಿಕನಲ್ಲಾ ಕರ್ಣ ಕಿರುಕುಳನೆ
ಕಂಟಣಿಸಬೇಡಿನ್ನು ಭಾಷೆಗ
ಳುಂಟು ನಿನ್ನಲಿ ನಗುವರಾವ
ಲ್ಲೆಂಟುಮಡಿಯನು ಸೊರಹು ಸಾಕೆಂದನು ಕೃಪಾಚಾರ್ಯ ॥7॥
೦೦೮ ಗರುವರನು ಮಾನ್ಯರನು ...{Loading}...
ಗರುವರನು ಮಾನ್ಯರನು ರಣಧೀ
ರರನು ದೂರದಲಿರಿಸುವರು ಹ
ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು
ಅರಸುಗಳು ದುಶ್ಶೀಲರೆಂಬುದ
ನರಿಯದೇ ಜಗವಕಟ ಟೆಕ್ಕೆಯ
ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ್ಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿರಿಯರನ್ನು, ಮಾನ್ಯರನ್ನು, ಶೂರರನ್ನು ದೂರದಲ್ಲಿ ಇರಿಸುವರು. ಬಾಯಿ ಬಡಿಕರನ್ನು, ಭಂಡರನ್ನು ಹತ್ತಿರಕ್ಕೆ ಕರೆಯುವರು. ಅರಸರು ದುರ್ನಡತೆಯುಳ್ಳವರು ಎಂಬುದನ್ನು ಜಗತ್ತು ತಿಳಿದಿಲ್ಲವೇ ? ಅಯ್ಯೋ…. ಕಲ್ಲು ಹರಳು ಕೌಸ್ತುಭಕ್ಕೆ ಸರಿಯಾಗಬಲ್ಲುದೇ ? ಎಂದು ಕೃಪಾಚಾರ್ಯರು ಹೇಳಿದರು.
ಪದಾರ್ಥ (ಕ.ಗ.ಪ)
ಟೆಕ್ಕೆಯ ಹರಳು-ಕಲ್ಲು ಹರಳು,
ಮೂಲ ...{Loading}...
ಗರುವರನು ಮಾನ್ಯರನು ರಣಧೀ
ರರನು ದೂರದಲಿರಿಸುವರು ಹ
ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು
ಅರಸುಗಳು ದುಶ್ಶೀಲರೆಂಬುದ
ನರಿಯದೇ ಜಗವಕಟ ಟೆಕ್ಕೆಯ
ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ್ಯ ॥8॥
೦೦೯ ನೀವು ಮಾಡುವುದೇನು ...{Loading}...
ನೀವು ಮಾಡುವುದೇನು ರಣದಲಿ
ಕಾವೆವೆಂದಿರಿ ಸೈಂಧವನ ನಾ
ನಾವಿಧದ ವ್ಯೂಹದಲಿ ನಿಮ್ಮೀ ದ್ರೋಣನೇಗಿದನು
ತಾವು ಭಟರಾದರೆ ವಿಭಾಡಿಸಿ
ಹೇವಗೆಡಿಸುವುದುಚಿತ ಭಂಡರು
ತಾವು ಲೋಗರ ಚುನ್ನವಾಡುವರೆಂದನಾ ಕರ್ಣ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೀವು ರಣರಂಗದಲ್ಲಿ ಮಾಡಿದ್ದೇನು ? ಸೈಂಧವನನ್ನು ರಕ್ಷಿಸುವೆವು ಎಂದಿರಿ. ನಾನಾ ರೀತಿಯ ಸೇನಾವ್ಯೂಹದ ರಚನೆಯ ಮೂಲಕ ದ್ರೋಣನು ಏನು ಮಾಡಿದನು ? ನೀವು ನಿಜವಾದ ಭಟರಾದರೆ ಶತ್ರುಗಳನ್ನು ನಾಶಮಾಡಿ ಅವಮಾನಿಸಿ, ಧಿಕ್ಕರಿಸುವುದು ಉಚಿತವಾಗಿತ್ತು. ಜನರನ್ನು ನಿಂದಿಸುವ ತಾವು ಭಂಡರು ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವಿಭಾಡಿಸು-ಧಿಕ್ಕರಿಸು,
ಹೇವಗೆಡಿಸು-ಅವಮಾನಿಸು,
ಚುನ್ನುವಾಡು-ನಿಂದಿಸು
ಮೂಲ ...{Loading}...
ನೀವು ಮಾಡುವುದೇನು ರಣದಲಿ
ಕಾವೆವೆಂದಿರಿ ಸೈಂಧವನ ನಾ
ನಾವಿಧದ ವ್ಯೂಹದಲಿ ನಿಮ್ಮೀ ದ್ರೋಣನೇಗಿದನು
ತಾವು ಭಟರಾದರೆ ವಿಭಾಡಿಸಿ
ಹೇವಗೆಡಿಸುವುದುಚಿತ ಭಂಡರು
ತಾವು ಲೋಗರ ಚುನ್ನವಾಡುವರೆಂದನಾ ಕರ್ಣ ॥9॥
೦೧೦ ಎಲವೊ ಫಡ ...{Loading}...
ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ನೀಚನೇ ಮಾವನಾದ ಕೃಪಾಚಾರ್ಯನನ್ನು ಧಿಕ್ಕರಿಸಿ ಹರಟುವ ಈ ನಾಲಿಗೆಯನ್ನು ಸೀಳುವೆನು. ಎಲೆ ಮಹಾದೇವ… ಇಲ್ಲೇ ನಮ್ಮಿಬ್ಬರ ಕಾದಾಟ” ಎನ್ನುತ್ತಾ ತನ್ನ ಖಡ್ಗವನ್ನು ಸೆಳೆದು ಝೊಂಪಿಸಿ ಅಶ್ವತ್ಥಾಮನು ಕರ್ಣನನ್ನು ಅಪ್ಪಳಿಸಲು, ಕರ್ಣನು ತನ್ನ ಶ್ರೇಷ್ಠ ಅಡಾಯುಧವನ್ನು ತೆಗೆದು ಅಶ್ವತ್ಥಾಮನ ಮೇಲೆ ಬಿದ್ದನು.
ಮೂಲ ...{Loading}...
ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ ॥10॥
೦೧೧ ಬೆನ್ದುದೊಳತೋಟಿಯಲಿ ಕೌರವ ...{Loading}...
ಬೆಂದುದೊಳತೋಟಿಯಲಿ ಕೌರವ
ವೃಂದವಕಟಕಟೆನಲು ಜನವೈ
ತಂದು ನಿಂದನು ನಡುವೆ ಕೌರವರಾಯ ಖಾತಿಯಲಿ
ಇಂದಿನಾಹವ ಲೇಸು ಲೇಸಿದು
ಮಂದಭಾಗ್ಯನು ತಾನು ಸಾಕಿ
ನ್ನೆಂದು ಮಾಡುವುದೇನು ನಿಮ್ಮೊಳು ಕದನ ಬೇಡೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನರು “ಕೌರವಸೇನೆ ಒಳಜಗಳದಲ್ಲಿ ಬೆಂದುದು. ಅಯ್ಯೋ” ಎನ್ನಲು ಕೌರವರಾಯ ಕೋಪದಿಂದ ಮಧs್ಯದಲ್ಲಿ ಬಂದು ನಿಂತನು. “ಇಂದಿನ ಕದನ ಬಹಳ ಚೆನ್ನಾಗಿದೆ. ನಾನು ಮಂದ ಭಾಗ್ಯ. ಸಾಕು. ಮಾತನಾಡಿ ಇನ್ನು ಮಾಡುವುದೇನು ? ನಿಮ್ಮಲ್ಲಿ ಜಗಳ ಬೇಡ” ಎಂದನು.
ಮೂಲ ...{Loading}...
ಬೆಂದುದೊಳತೋಟಿಯಲಿ ಕೌರವ
ವೃಂದವಕಟಕಟೆನಲು ಜನವೈ
ತಂದು ನಿಂದನು ನಡುವೆ ಕೌರವರಾಯ ಖಾತಿಯಲಿ
ಇಂದಿನಾಹವ ಲೇಸು ಲೇಸಿದು
ಮಂದಭಾಗ್ಯನು ತಾನು ಸಾಕಿ
ನ್ನೆಂದು ಮಾಡುವುದೇನು ನಿಮ್ಮೊಳು ಕದನ ಬೇಡೆಂದ ॥11॥
೦೧೨ ಹೇವವುಳ್ಳರೆ ಭೀಮ ...{Loading}...
ಹೇವವುಳ್ಳರೆ ಭೀಮ ಪಾರ್ಥರ
ನೀವು ಕೊಲುವುದು ಮೇಣು ರಣದಲಿ
ಸಾವುದಲ್ಲದೆ ಗರುವರೊಳತೋಟಿಯಲಿ ತೊಡಕುವರೆ
ಕಾವೆವೆಂದಿರಿ ಸೈಂಧವನ ಸುಭ
ಟಾವಳಿಯ ಮೂಗುಗಳನರ್ಜುನ
ದೇವ ಕೊಯ್ದನು ಸಾರಿ ನೀವೆಂದರಸ ಮಾಣಿಸಿದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಚಿಕೆ, ಇರುವವರಾದರೆ ಭೀಮ-ಪಾರ್ಥರನ್ನು ನೀವು ಕೊಲ್ಲಿರಿ-ಅಥವಾ ಯುದ್ಧದಲ್ಲಿ ಸಾಯಿರಿ. ಅದಲ್ಲದೆ ಹಿರಿಯರಾದ ನೀವು ಒಳಜಗಳದಲ್ಲಿ ತೊಡಗುವರೇ ? ಸೈಂಧವನನ್ನು ಕಾಪಾಡುವೆವು ಎಂದಿರಿ. ಸುಭಟರ ಸಮೂಹದ ಮೂಗುಗಳನ್ನೇ ಅರ್ಜುನದೇವ ಕತ್ತರಿಸಿದನು. ಇನ್ನು ನೀವು ಹಿಂತಿರುಗಿರಿ” ಎಂದು ಅರಸನು ತಡೆದನು.
ಮೂಲ ...{Loading}...
ಹೇವವುಳ್ಳರೆ ಭೀಮ ಪಾರ್ಥರ
ನೀವು ಕೊಲುವುದು ಮೇಣು ರಣದಲಿ
ಸಾವುದಲ್ಲದೆ ಗರುವರೊಳತೋಟಿಯಲಿ ತೊಡಕುವರೆ
ಕಾವೆವೆಂದಿರಿ ಸೈಂಧವನ ಸುಭ
ಟಾವಳಿಯ ಮೂಗುಗಳನರ್ಜುನ
ದೇವ ಕೊಯ್ದನು ಸಾರಿ ನೀವೆಂದರಸ ಮಾಣಿಸಿದ ॥12॥
೦೧೩ ನೆರೆವಣಿಗೆಯುಳ್ಳರೆ ವಿರೋಧಿಯ ...{Loading}...
ನೆರೆವಣಿಗೆಯುಳ್ಳರೆ ವಿರೋಧಿಯ
ನಿರಿವುದೋಲೆಯಕಾರತನವನು
ಮೆರೆವುದುಚಿತವಿದೇಕೆ ಡೊಂಬಿನ ಶೌರ್ಯವೊಳಗೊಳಗೆ
ಕಿರುಕುಳರು ನೀವಲ್ಲ ನಿಮ್ಮಲಿ
ಕೊರvಯಿಲ್ಲದು ನಮ್ಮ ಪುಣ್ಯದ
ಬರನ ದಿನ ನೀವೇನ ಮಾಡುವಿರೆಂದು ಬಿಸುಸುಯ್ದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧದಲ್ಲಿ ಪರಿಪೂರ್ಣತೆಯನ್ನು ಪಡೆದಿರುವಿರಾದರೆ, ಶತ್ರುವನ್ನು ಇರಿಯುವುದು. ಪರಾಕ್ರಮವನ್ನು ಮೆರೆವುದು ಉಚಿತವು. ದೊಂಬರಾಟದ ಶೌರ್ಯವು ಒಳಗೊಳಗೆ ಇದೇಕೆ ? ನೀವೇನು ಸಾಮಾನ್ಯರಲ್ಲ. ನಿಮ್ಮಲ್ಲಿ ಯಾವ ಕೊರತೆಯೂ ಇಲ್ಲ. ಅದು ನಮ್ಮ ಪುಣ್ಯ ಕಡಿಮೆಯಾದ ದಿನ. ನೀವೇನು ಮಾಡಲು ಸಾಧ್ಯ ? " ಎಂದು ದುರ್ಯೋಧನನು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ನೆರವಣಿಗೆ-ಪರಿಪೂರ್ಣತೆ, ಓಲೆಯಕಾರತನ-ಪರಾಕ್ರಮ,
ಮೂಲ ...{Loading}...
ನೆರೆವಣಿಗೆಯುಳ್ಳರೆ ವಿರೋಧಿಯ
ನಿರಿವುದೋಲೆಯಕಾರತನವನು
ಮೆರೆವುದುಚಿತವಿದೇಕೆ ಡೊಂಬಿನ ಶೌರ್ಯವೊಳಗೊಳಗೆ
ಕಿರುಕುಳರು ನೀವಲ್ಲ ನಿಮ್ಮಲಿ
ಕೊರvಯಿಲ್ಲದು ನಮ್ಮ ಪುಣ್ಯದ
ಬರನ ದಿನ ನೀವೇನ ಮಾಡುವಿರೆಂದು ಬಿಸುಸುಯ್ದ ॥13॥
೦೧೪ ಖಾತಿಯೇಕೈ ಸೈನ್ಧವನ ...{Loading}...
ಖಾತಿಯೇಕೈ ಸೈಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
14.” ಕೋಪವೇಕೆ ? ಸೈಂಧವನನ್ನು ಕಾಪಾಡುವಾತನು ಯಾರು ? ತ್ರಿಪುರ ದಹನದ ಪರಶಿವನ ಬಾಣ ಅರ್ಜುನನ ಗಾಂಡೀವದಲ್ಲಿ ಬಂದು ಸೇರಿದೆ. ಆತನು ಪ್ರಯೋಗಿಸಿದ ಪಾಶುಪತ ಬಾಣವನ್ನು ತಡೆಯುವವರು ಯಾರು? ಸುಮ್ಮನೆ ನಮ್ಮ ಭಟರನ್ನು ಅತಿಶಯವಾಗಿ ತೇಜೋಹೀನರನ್ನಾಗಿಸುತ್ತಿದ್ದೀರಿ" ಎಂದು ದ್ರೋಣನು ಹೇಳಿದನು.
ಮೂಲ ...{Loading}...
ಖಾತಿಯೇಕೈ ಸೈಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ ॥14॥
೦೧೫ ಒನ್ದು ಹರ ...{Loading}...
ಒಂದು ಹರ ಹಿಡಿವಂಬು ಶಕ್ರನ
ದೊಂದು ಕೌಬೇರಾಗ್ನಿ ವಾಯುವ
ದೊಂದು ಪಾರ್ಥನ ಬತ್ತಳಿಕೆ ದಿವ್ಯಾಸ್ತ್ರ ತುಂಬಿಹವು
ಕೊಂದಡಲ್ಲದೆ ಮಾಣವವು ನಾ
ವೊಂದಕೊಬ್ಬರು ಗುರಿ ನಿದಾನಿಸ
ಲಿಂದು ನಮಗಳವಡದು ಜಯವಿಲ್ಲೆಂದನಾ ದ್ರೋಣ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ಹರನು ಹಿಡಿಯುವ ಬಾಣ. ಇನ್ನೊಂದು ದೇವೇಂದ್ರನದು. ಕುಬೇರ, ಅಗ್ನಿ ವಾಯುವಿನ ದಿವ್ಯಾಸ್ತ್ರಗಳು ಪಾರ್ಥನ ಬತ್ತಳಿಕೆಯಲ್ಲಿ ತುಂಬಿವೆ. ಈ ಬಾಣಗಳು ಶತ್ರುವನ್ನು ಕೊಂದಲ್ಲದೆ ಹಿಂದಿರುಗುವುದಿಲ್ಲ. ನಮ್ಮಲ್ಲಿ ಒಂದೊಂದಕ್ಕೆ ಒಬ್ಬೊಬ್ಬರು ಗುರಿ. ಇಂದು ಅವುಗಳನ್ನು ತಡೆಯಲು ನಮಗೆ ಸಾಧ್ಯವಿಲ್ಲ, ನಮಗೆ ಜಯವಿಲ್ಲ” ಎಂದು ದ್ರೋಣನು ಹೇಳಿದನು.
ಮೂಲ ...{Loading}...
ಒಂದು ಹರ ಹಿಡಿವಂಬು ಶಕ್ರನ
ದೊಂದು ಕೌಬೇರಾಗ್ನಿ ವಾಯುವ
ದೊಂದು ಪಾರ್ಥನ ಬತ್ತಳಿಕೆ ದಿವ್ಯಾಸ್ತ್ರ ತುಂಬಿಹವು
ಕೊಂದಡಲ್ಲದೆ ಮಾಣವವು ನಾ
ವೊಂದಕೊಬ್ಬರು ಗುರಿ ನಿದಾನಿಸ
ಲಿಂದು ನಮಗಳವಡದು ಜಯವಿಲ್ಲೆಂದನಾ ದ್ರೋಣ ॥15॥
೦೧೬ ಅರಸ ಮರುಳೈ ...{Loading}...
ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ…. ನೀನು ಮೂರ್ಖ. ಅರ್ಜುನನು ದೇವತೆಗಳನ್ನೂ ಲಕ್ಷಿಸುವುದಿಲ್ಲ. ಸಕಲ ದೈವದ ಒಡೆಯನಾದ ಹರನ ಅಸ್ತ್ರವನ್ನು ನಿಗ್ರಹಿಸುವವರಾರು ? ಆಗಲಿ. ಸೈಂಧವನಿಗಾಗಿ ಪಾಶುಪತ ಬಾಣವು ವ್ಯಯವಾಗಿದೆ. ಈಗ ಪಾರ್ಥನಲ್ಲಿ ಹರನ ಬಾಣವಿಲ್ಲ. ಇನ್ನು ಶತ್ರುಗಳನ್ನು ರಾತ್ರಿಯ ಯುದ್ಧದಲ್ಲಿ ಹಿಂಡುವೆನು. ಕೈದೀವಿಗೆಗಳನ್ನು ಸಿದ್ಧಪಡಿಸು ಎಂದು ದ್ರೋಣನು ಉದ್ವೇಗದಿಂದ ಮಾತನಾಡಿದನು.
ಮೂಲ ...{Loading}...
ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ ॥16॥
೦೧೭ ಘಾಯವಡೆದಾನೆಗಳ ಕೈ ...{Loading}...
ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗೊಂಡ ಆನೆಗಳನ್ನು , ಕೈ ಮೈ ನೋಯುವಂತೆ ಕಾದಾಡಿದ ರಾಜಪುತ್ರರನ್ನು, ಆಯುಧದ ಮಳೆಗಳಲ್ಲಿ ನೆನೆದ ವೇಗವಾದ ಕುದುರೆಗಳನ್ನು, ಮೇಲಕ್ಕೆ ನೆಗೆದು ಬಳಲಿದ ರಥಗಳ ಸಮೂಹವನ್ನು, ವಿಶೇಷವಾಗಿ ಗಾಯಗೊಂಡ ನಾಯಕರನ್ನು ದ್ರೋಣನು ಕರೆಕರೆದು ಹುರಿದುಂಬಿಸಿ ಯುದ್ಧಕ್ಕೆ ಕಳುಹಿಸಿದನು.
ಮೂಲ ...{Loading}...
ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ ॥17॥
೦೧೮ ಜರಿದ ಜೋಡನು ...{Loading}...
ಜರಿದ ಜೋಡನು ನೆರೆ ಹರಿದ ಹ
ಕ್ಕರಿಕೆಗಳ ನುಗ್ಗಾದ ಗುಳವನು
ಬಿರಿದ ಸೀಸಕ ಬಾಹುರಕ್ಕೆಯ ಮುರಿದ ಬಲ್ಲೆಹದ
ಅರೆಗಡಿದ ಬಿಲ್ಲುಗಳ ನೆಗ್ಗಿದ
ಹರಿಗೆಯನು ಮುಕ್ಕಾದ ಕೈದುವ
ತರಿಸಿ ಕಳುಹಿಸುತಿರ್ದನತಿರಭಸದಲಿ ಕಲಿದ್ರೋಣ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾರಿಬೀಳುವ ಕವಚ , (ಕಳಚಿದ ಕವಚ) ವಿಶೇಷವಾಗಿ ಹರಿದ ಆನೆ ಕುದುರೆಗಳ ಜೀನುಗಳು, ಪಕ್ಕರೆಕ್ಕೆಗಳು (ಪಕ್ಕವನ್ನು ರಕ್ಷಿಸುವ ಸಾಧನ,) ನುಗ್ಗಾದ ಗುಳ, ಬಿರಿದ ಶಿರಸ್ತ್ರಾಣ, ಬಾಹುಗಳೆಂಬ ರೆಕ್ಕೆಯನ್ನು ಮುರಿದ ಆಯುಧ ಭಲ್ಲೆ, ಅರ್ಧ ಕಡಿದ ಬಿಲ್ಲುಗಳು, ನೆಗ್ಗಿ ಹೋದ ಗುರಾಣಿ, ಮುಕ್ಕಾಗಿರುವ ಆಯುಧವನ್ನು ತರಿಸಿ, ಅವುಗಳನ್ನೆಲ್ಲಾ ಶೂರದ್ರೋಣನು ಅತಿರಭಸದಿಂದ ಯುದ್ಧಕ್ಕೆ ಕಳುಹಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಗುಳ-ಕುದುರೆಗಳ ಪಕ್ಕ ರಕ್ಕೆ, ಹಕ್ಕರಿಕೆ-ಕುದುರೆಯ ಜೇನು, ಹರಿಗೆ-ಗುರಾಣಿ.
ಮೂಲ ...{Loading}...
ಜರಿದ ಜೋಡನು ನೆರೆ ಹರಿದ ಹ
ಕ್ಕರಿಕೆಗಳ ನುಗ್ಗಾದ ಗುಳವನು
ಬಿರಿದ ಸೀಸಕ ಬಾಹುರಕ್ಕೆಯ ಮುರಿದ ಬಲ್ಲೆಹದ
ಅರೆಗಡಿದ ಬಿಲ್ಲುಗಳ ನೆಗ್ಗಿದ
ಹರಿಗೆಯನು ಮುಕ್ಕಾದ ಕೈದುವ
ತರಿಸಿ ಕಳುಹಿಸುತಿರ್ದನತಿರಭಸದಲಿ ಕಲಿದ್ರೋಣ ॥18॥
೦೧೯ ಎಣಿಸಲರಿಯೆನು ಬಣ್ಡಿಗಳು ...{Loading}...
ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಳದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ್ಯನಿದಿರಿನಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಣಿಸಲಾರದಷ್ಟು ಬಂಡಿಗಳು ಬಂದು ಸೇರಿದವು. ಹಕ್ಕರಿಕೆ, ಹಲ್ಲಣ, ಕವಚ, ಸೀಸಕ, ಜೋಡು, ರೆಂಚೆಗಳು, ಮಣಿಮಯದ ಹಿಡಿಕೆ, ಆಡಂಬರದ ಕತ್ತಿ, ಶೂಲ, ಸುರಗಿ-ಇವೇ ಮೊದಲಾದ ಬಾಣಗಳ ರಾಶಿ ಸೇನಾಪತಿ ದ್ರೋಣನ ಎದುರಿನಲ್ಲಿ ಶೋಭಿಸಿದವು.
ಪದಾರ್ಥ (ಕ.ಗ.ಪ)
ಜರಿದ ಜೋಡು-ಜಾರಿ ಬೀಳುವ ಕವಚ, ಹಕ್ಕರಿಕೆ-ಆನೆ, ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ, ಗುಳ-ಸಣ್ಣ ಆನೆಕುದುರೆಗಳ ಪಕ್ಕ ರಕ್ಷೆ, ಹರಿಗೆ-ಢಾಲು, ಸೀಸಕ-ಶಿರಸ್ತ್ರಾಣ, ಬಲ್ಲೆಹ-ಭಲ್ಲೆ, ಮೋಹಳ-ಹಿಡಿಕೆ, ಉಬ್ಬಣ-ಆಟೋಪ, ಹೆಚ್ಚಳ, ಸುರಗಿ-ಕಠಾರಿ, ರೆಂಚೆ-ಗುಳ, ಆನೆಯ ಜೂಲು
ಮೂಲ ...{Loading}...
ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಳದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ್ಯನಿದಿರಿನಲಿ ॥19॥
೦೨೦ ಕರೆಕರೆದು ರಥಿಕರಿಗೆ ...{Loading}...
ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡುಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರವನು ಕಲಿದ್ರೋಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಿಕರು, ಮಾವುತರು, ಕಾಲಾಳುಗಳು, ರಾವುತರು ಮೊದಲಾದವರನ್ನು ಕರೆಕರೆದು ಅವರವರಿಗೆ ಅವರವರ ಅಂಗದ ಆಯುಧಗಳನ್ನು ತರಿಸಿಕೊಟ್ಟು, ಸಾಧು, ಜವಾಜ, ಕರ್ಪೂರ ಮೊದಲಾದ ಸುಗಂಧ ದ್ರವ್ಯಗಳ ವೀಳೆಯದ ಉಡುಗೊರೆಗಳನ್ನು ನೀಡಿ ಶೂರ ದ್ರೋಣನು ಪರಿವಾರವನ್ನು ವಿಶೇಷವಾದ ರೀತಿಯಲ್ಲಿ ಮನ್ನಿಸಿದನು.
ಮೂಲ ...{Loading}...
ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡುಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರವನು ಕಲಿದ್ರೋಣ ॥20॥
೦೨೧ ಉರವಣಿಸುವುದು ಕೊಣ್ಡ ...{Loading}...
ಉರವಣಿಸುವುದು ಕೊಂಡ ಹಜ್ಜೆಗೆ
ಮುರಿಯಲಾಗದು ಶಸ್ತ್ರಧಾರಾ
ಪರಮತೀರ್ಥಸ್ನಾನ ತೊಳೆವುದು ಭವದ ಕಿಲ್ಬಿಷವ
ಹರಣದಲಿ ಕಕ್ಕುಲಿತೆ ಬೇಡು
ದ್ಧರಿಸುವುದು ಸತ್ಕುಲತೆಯನು ಸಂ
ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಸಂಭ್ರಮದಿಂದ ಮುಂದುವರಿಯುವುದು. ಮುಂದೆ ಇಟ್ಟಿ ಹೆಜ್ಜೆಯನ್ನು ಹಿಂದೆಗೆಯಲಾಗದು. ಆಯುಧಗಳ ಹೊಡೆತದಿಂದ ಹರಿಯುವ ರಕ್ತವೇ ಪುಣ್ಯ ತೀರ್ಥಕ್ಕೆ ಸಮಾನ, ಇದು ಜನ್ಮಾಂತರಗಳ ಕೊಳೆ, ಕಲಂಕವನ್ನು ತೊಳೆಯುತ್ತದೆ. ಆದ್ದರಿಂದ ಪ್ರಾಣದ ಮೇಲೆ ವ್ಯಾಮೋಹ ಬೇಡ. ಇದು ಸತ್ಕುಲವನ್ನು ಉದ್ಧರಿಸುತ್ತದೆ. ಸದ್ಗತಿಯನ್ನು ಉಂಟುಮಾಡುತ್ತದೆ ಎಂದು ದ್ರೋಣನು ತನ್ನ ಸೈನ್ಯವನ್ನು ಹುರಿದುಂಬಿಸಿದನು.
ಪದಾರ್ಥ (ಕ.ಗ.ಪ)
ಕಿಲ್ಬಿಷ-ಕಲಂಕ, ಪಾಪ, ಕಕ್ಕುಲಿತೆ-ವ್ಯಾಮೋಹ
ಮೂಲ ...{Loading}...
ಉರವಣಿಸುವುದು ಕೊಂಡ ಹಜ್ಜೆಗೆ
ಮುರಿಯಲಾಗದು ಶಸ್ತ್ರಧಾರಾ
ಪರಮತೀರ್ಥಸ್ನಾನ ತೊಳೆವುದು ಭವದ ಕಿಲ್ಬಿಷವ
ಹರಣದಲಿ ಕಕ್ಕುಲಿತೆ ಬೇಡು
ದ್ಧರಿಸುವುದು ಸತ್ಕುಲತೆಯನು ಸಂ
ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ ॥21॥
೦೨೨ ಲಟಕಟಿಸಿತಾಹವಕೆ ರಾಯನ ...{Loading}...
ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಮೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಯನ ಸೈನ್ಯವು ಸಂತೋಷದಿಂದ ಯುದ್ಧಕ್ಕೆ ಉತ್ಸಾಹಗೊಂಡಿತು. ಮೊಳಗುವ ಭೇರಿ, ತಮಟೆ, ಡಮರು, ಮೃದಂಗ, ಮೊದಲಾದ ವಾದ್ಯಗಳ ಘನ ಗಂಭೀರ ಭೇರಿಗಳ, ವೇಗದ-ಕಹಳೆಯ ಗರ್ಜನೆ ಅಧಿಕವಾಗಲು, ಬ್ರಹ್ಮನಿಂದ ನಿರ್ಮಿತವಾದ ಈ ಬ್ರಹ್ಮಾಂಡವೇ ಬಿರಿಯುವಂತಾಗಿ ದ್ರೋಣನ ಸಮರ ಸಿದ್ಧತೆ ಬಲವಾಯಿತು.
ಪದಾರ್ಥ (ಕ.ಗ.ಪ)
ಲಟಕಟಿಸು-ಉತ್ಸಾಹ,
ಚಟುಳ -ವೇಗದ,
ಗಜರು-ಗರ್ಜನೆ
ಮೂಲ ...{Loading}...
ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಮೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ ॥22॥
೦೨೩ ನರನ ಕರೆ ...{Loading}...
ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಿಷ್ಠಯೋಧರು ಕಾಳಗದಲ್ಲಿ ವಿಶೇಷವಾದ ಆಸಕ್ತಿಯನ್ನು ತೋರುತ್ತಾ ಅರ್ಜುನನನ್ನು ಕರೆ, ಕರೆ ಸಿಂಧುರಾಜನ ಹೊಣೆ ನಮ್ಮ ಮೇಲಿದೆ ಎಂದು ನುಗ್ಗಿದರು. ಸರಿಸಮಾನವಾದ ಉತ್ಸಾಹದಿಂದ ಪುನಃ ಯುದ್ದಕ್ಕೆ ಸೇರಿಕೊಂಡ ರಾತ್ರಿಯುದ್ಧದ ಸೈನ್ಯ ಶತ್ರುವೀರರ ಆರ್ಭಟವನ್ನು ತಗ್ಗಿಸಿತು.
ಪದಾರ್ಥ (ಕ.ಗ.ಪ)
ಸರಿಸ-ಸರಿಸಮಾನ
ಮೂಲ ...{Loading}...
ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ ॥23॥
೦೨೪ ಹಿನ್ದೆ ಸೆಳೆದುದು ...{Loading}...
ಹಿಂದೆ ಸೆಳೆದುದು ವೈರಿ ಬಲ ಭಟ
ವೃಂದ ನಿಲಲಿ ಕಿರೀಟಿ ಭೀಮರ
ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ
ಬಂದ ಜಯವಕ್ಕುವುದು ರಜನಿಯ
ಕೊಂದೆವಾದರೆ ನಮಗೆ ಸರಿಯ
ಲ್ಲೆಂದು ಧೃಷ್ಟದ್ಯುಮ್ನ ಕರೆಸಿದನಖಿಳನಾಯಕರ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೇನೆಯು ಸಜ್ಜಾಗಿ ಬಂದಿದೆ. ಭಟರ ಸಮೂಹ ಯುದ್ಧಕ್ಕೆ ನಿಲ್ಲಲಿ. ನಮ್ಮನ್ನು ಹಿಮ್ಮೆಟ್ಟಿಸಿದರೆ, ಲೋಕವು ಅರ್ಜುನ-ಭೀಮರಲ್ಲಿ ಕೊರತೆಯನ್ನು ಕಾಣುತ್ತದೆ ಅಲ್ಲದೆ ನಮ್ಮ ಗೆಲುವು ತಗ್ಗುತ್ತದೆ. ಈ ರಾತ್ರಿಯನ್ನು ಕಳೆದೆವಾದರೆ ನಮಗೆ ಸರಿಸಮ ಯಾರೂ ಇಲ್ಲವೆಂದು ಧೃಷ್ಟಧ್ಯುಮ್ನನು ಸಕಲ ನಾಯಕರನ್ನು ಕರೆಸಿದನು.
ಪದಾರ್ಥ (ಕ.ಗ.ಪ)
ಅಕ್ಕು - ಲಯವಾಗು, ನಾಶವಾಗು
ಮೂಲ ...{Loading}...
ಹಿಂದೆ ಸೆಳೆದುದು ವೈರಿ ಬಲ ಭಟ
ವೃಂದ ನಿಲಲಿ ಕಿರೀಟಿ ಭೀಮರ
ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ
ಬಂದ ಜಯವಕ್ಕುವುದು ರಜನಿಯ
ಕೊಂದೆವಾದರೆ ನಮಗೆ ಸರಿಯ
ಲ್ಲೆಂದು ಧೃಷ್ಟದ್ಯುಮ್ನ ಕರೆಸಿದನಖಿಳನಾಯಕರ ॥24॥
೦೨೫ ಸೋತ ಬಲ ...{Loading}...
ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋತ ಸೇನೆ ಸೈನ್ಯವನ್ನು ಒಟ್ಟುಗೂಡಿಸಿಕೊಂಡು ಯುದ್ಧಕ್ಕೆ ಸಿದ್ಧವಾಗಿದೆ. ಭಲೆ, ಯುದ್ಧವೆಂಬುದು ನಮ್ಮ ಸಹಜ ಪ್ರವೃತ್ತ್ತಿ. ಶೂರನು ರಾಜ್ಯ ಸಿರಿಯೇ ದೊರೆತಂತೆ ಮೂದಲಿಸಿ ಯುದ್ಧಕ್ಕೆ ಕರೆದರೆ ಮನದಲ್ಲಿ ಭೀತಿ ಏಕೆ ? ಪೌರುಷದ ಮಾತುಗಳು ಬಾಯಲ್ಲಿ, ಹೆಜ್ಜೆಗಳು ಮಾತ್ರ ಹಿಂದೆ. (ಹೇಡಿಯಂತೆ ಹಿಮ್ಮೆಟ್ಟುವುದು) ಕುರುವೀರರು ಭಂಡರು ಎನ್ನುತ್ತಾ ಶತ್ರುಸೇನೆ ಎದುರಾಯಿತು.
ಪದಾರ್ಥ (ಕ.ಗ.ಪ)
ಬೂತುಗಳು-ಭಂಡರು
ಮೂಲ ...{Loading}...
ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ ॥25॥
೦೨೬ ಇಳಿದುದೀ ಕಣನೊಳಗೆ ...{Loading}...
ಇಳಿದುದೀ ಕಣನೊಳಗೆ ದಿಗುಮಂ
ಡಲದ ಸಂಧ್ಯಾರಾಗವೆನೆ ಪರಿ
ದಳಿತ ಚತುರಂಗದಲಿ ಮಸಗಿದುದರುಣಜಲರಾಶಿ
ಕಲಿಗಳುಬ್ಬಿನ ರೋಷತಾಮಸ
ತುಳುಕಿತೆನೆ ದಿಗುವಳಯದಲಿ ಕುಡಿ
ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಣರಂಗದೊಳಗೆ ದಿಗುಮಂಡಲದ ಸಂಧ್ಯಾರಾಗವು ಇಳಿದಿದೆಯೋ ಎಂಬಂತೆ, ತುಂಡರಿಸಿ ಚೆಲ್ಲಾಪಿಲ್ಲಿಯಾದ ಚತುರಂಗ ಸೇನೆಯಲ್ಲಿ ಕೆಂಪು ನೀರಿನ ರಾಶಿ (ರಕ್ತ) ವ್ಯಾಪಿಸಿತು. ಶೂರರ ರೋಷ ತಾಮಸ ಪ್ರಕಟವಾಯಿತು ಎನ್ನುವಂತೆ ದಿಗ್ಮಂಡಲದಲ್ಲಿ ದೀಪದ ತುದಿಯ ಬೆಳಕನ್ನು ಪಾನಮಾಡುವ ರೀತಿಯಲ್ಲಿ ಕತ್ತಲ ಬಳ್ಳಿಯು ಜಗವನ್ನು ವ್ಯಾಪಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಪರಿದಳಿತ-ತುಂಡಾದ, ಚೆಲ್ಲಾಪಿಲ್ಲಿಯಾದ,
ಮೂಲ ...{Loading}...
ಇಳಿದುದೀ ಕಣನೊಳಗೆ ದಿಗುಮಂ
ಡಲದ ಸಂಧ್ಯಾರಾಗವೆನೆ ಪರಿ
ದಳಿತ ಚತುರಂಗದಲಿ ಮಸಗಿದುದರುಣಜಲರಾಶಿ
ಕಲಿಗಳುಬ್ಬಿನ ರೋಷತಾಮಸ
ತುಳುಕಿತೆನೆ ದಿಗುವಳಯದಲಿ ಕುಡಿ
ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ ॥26॥
೦೨೭ ಜಡಿವ ಖಡುಗದ ...{Loading}...
ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ಧಾಳಿ ದೆಸೆದೆಸೆಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರ್ಜಿಸಿ ಶಬ್ದ ಮಾಡುವ ಖಡ್ಗದ ಘರ್ಷಣೆಯಿಂದ ಹೊರಬರುವ ಕಿಡಿಗಳಿಂದ ಕತ್ತಲೆಯಲ್ಲಿ ರಂಧ್ರಗಳಾದವು. ರಾಜರುಗಳ ಕಿರೀಟದ ರತ್ನದ ಕಾಂತಿಯಿಂದ ಕತ್ತಲೆಯ ಶರೀರವು ಜರ್ಜರಿತವಾಯ್ತು. ಹರಿತವಾದ ಬಾಣದ ಸಮೂಹ ಹರಡಿ ಕ್ಷಣಕಾಲ ಬೆಳಕುಂಟಾಗಿ ಮತ್ತೆ ನಿಮಿಷದಲ್ಲಿ ನಸುಗತ್ತಲೆಯ ಆಕ್ರಮಣ ದಿಕ್ಕುದಿಕ್ಕುಗಳಿಗೂ ಹರಡಿ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಜಡಿವ-ಗರ್ಜಿಸುವ, ಬೇಗಡೆ-ತೂತು, ರಂಧ್ರ,
ಹೊಡಕರಿಸು-ಕಾಣಿಸಿಕೊಳ್ಳು,
ಮೂಲ ...{Loading}...
ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ಧಾಳಿ ದೆಸೆದೆಸೆಗೆ ॥27॥
೦೨೮ ಖಳರ ಹೃದಯದ ...{Loading}...
ಖಳರ ಹೃದಯದ ಗರುಡಿ ಘೂಕಾ
ವಳಿಯ ನಯನಾಂಜನ ಧರಿತ್ರಿಯ
ನಳಿನಕೆರಗಿದ ತುಂಬಿ ಸುಭಟಸ್ವಾಂತ ಶಶಿ ರಾಹು
ಪ್ರಳಯ ತಿಮಿರದ ಬೀಜ ನೀಲಾ
ಚಳದ ಸಾಯುಜ್ಯವೊ ನಭೋಮಂ
ಡಲದೊಳದನೇವೊಗಳುವೆನು ಮಸಗಿತು ತಮಸ್ತೋಮ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಚರ ಹೃದಯದ ಗರುಡಿಯಂತೆ, ಗೂಬೆಯ ಕಣ್ಣುಗಳ ಕಾಡಿಗೆಯಂತೆ, ಭೂಮಿಯೆಂಬ ಕಮಲಕ್ಕೆ ಎರಗಿದ ತುಂಬಿಯಂತೆ, ಸುಭಟರ ಮನಸ್ಸೆಂಬ ಚಂದ್ರನನ್ನು ಹಿಡಿದ ರಾಹುವಿನಂತೆ, ಪ್ರಳಯಕಾಲದ ಅಂಧಕಾರದ ಬೀಜವೋ, ನೀಲಾಚಳದ ಸಾನ್ನಿಧ್ಯವೋ ಎಂಬಂತೆ ಆಕಾಶಮಂಡಲದಲ್ಲಿ ದಟ್ಟವಾದ ಅಂಧಕಾರ ವ್ಯಾಪಿಸಿತು. ಅದನ್ನು ಏನೆಂದು ವರ್ಣಿಸಲಿ ?
ಮೂಲ ...{Loading}...
ಖಳರ ಹೃದಯದ ಗರುಡಿ ಘೂಕಾ
ವಳಿಯ ನಯನಾಂಜನ ಧರಿತ್ರಿಯ
ನಳಿನಕೆರಗಿದ ತುಂಬಿ ಸುಭಟಸ್ವಾಂತ ಶಶಿ ರಾಹು
ಪ್ರಳಯ ತಿಮಿರದ ಬೀಜ ನೀಲಾ
ಚಳದ ಸಾಯುಜ್ಯವೊ ನಭೋಮಂ
ಡಲದೊಳದನೇವೊಗಳುವೆನು ಮಸಗಿತು ತಮಸ್ತೋಮ ॥28॥
೦೨೯ ದಳದ ಬೊಬ್ಬೆಯ ...{Loading}...
ದಳದ ಬೊಬ್ಬೆಯ ಸಿಡಿಲ ಬಲುಗ
ತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ
ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ
ಬಲುಸರಿಯ ನಾರಾಚ ಜಾಳದ
ಮಳೆಯ ನೆತ್ತರ ಹೊನಲುಗಳ ರೌ
ಕುಳದ ಮಳೆಗಾಲದಲಿ ಹೆಚ್ಚಿತು ಭಟರ ಶೌರ್ಯಶಿಖಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಆರ್ಭಟವೆಂಬ ಸಿಡಿಲಿನ , ಬಲು ಕತ್ತಲೆಯನ್ನು ಎರಚುವ ಮೋಡದ, ರಾಜರ ಕಿರೀಟದ ಮಕುಟ ರತ್ನಗಳೆಂಬ ಹೊಳೆಯುವ ಬಳ್ಳಿ ಮಿಂಚುಗಳ, ಒಂದೇ ಸಮನೆ ಸುರಿಯುವ ಬಾಣಗಳ ಮಳೆಯ, ರಕ್ತದ ಹೊನಲುಗಳ ಅಧಿಕವಾದ ಮಳೆಗಾಲದಲ್ಲಿ ಭಟರ ಶೌರ್ಯವೆಂಬ ಶಿಖಿ (ಬೆಂಕಿ) ಹೆಚ್ಚಿತು.
ಪದಾರ್ಥ (ಕ.ಗ.ಪ)
ಝಾಡಿ-ಪ್ರಖರತೆ, ರೌಕುಳ-ಹೆಚ್ಚಳ, ಅಧಿಕ,
ಮೂಲ ...{Loading}...
ದಳದ ಬೊಬ್ಬೆಯ ಸಿಡಿಲ ಬಲುಗ
ತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ
ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ
ಬಲುಸರಿಯ ನಾರಾಚ ಜಾಳದ
ಮಳೆಯ ನೆತ್ತರ ಹೊನಲುಗಳ ರೌ
ಕುಳದ ಮಳೆಗಾಲದಲಿ ಹೆಚ್ಚಿತು ಭಟರ ಶೌರ್ಯಶಿಖಿ ॥29॥
೦೩೦ ಹೆಣಗಿ ಮಿಗೆ ...{Loading}...
ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು
ಹಣಿದದಲಿ ತಮ್ಮೊಳಗೊಳಗೆ ಸಂ
ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ
ರಣಮಹೀಸಂತಮಸಶಾಂತೇ
ಕ್ಷಣರು ದಿಗುಭ್ರಮೆಯಲಿ ಸ್ವಕೀಯ
ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಡೆದಾಟದಲ್ಲಿ ಶ್ರಮದಿಂದ ತಲೆಯೊತ್ತಿ ಹೊಡೆದರು. ತಮ್ಮೊಳಗೊಳಗೆ ಗುಂಪು ಗುಂಪಾಗಿ ಒಂದೇ ಸಮನೆ ಸಂಭ್ರಮದಿಂದ ಅಪರಿಮಿತವಾದ ಬಾಣಗಳು ದಟ್ಟವಾಗಿ ಬೀಳುವಂತೆ ಮಾಡಿದರು. ರಣಭೂಮಿಯ ದಟ್ಟವಾದ ಕತ್ತಲಿನಲ್ಲಿ ಯೋಧರು ಒಂದು ಕ್ಷಣ ಸ್ತಬ್ಧರಾಗಿ, ದಿಗ್ಭ್ರಮೆಯಿಂದ ತಮ್ಮ ತಮ್ಮಲ್ಲೇ ತಮ್ಮವರ ನಾಶದ ಕಾರ್ಯದಲ್ಲಿ ನಿರತರಾದರು. ರಾತ್ರಿ ಅತ್ಯಂತ ಭಯಂಕರವಾಯಿತು.
ಪದಾರ್ಥ (ಕ.ಗ.ಪ)
ರಣಮಹೀಸಂತಮಸ ಶಾಂತೇಕ್ಷಣರು-ರಣಭೂಮಿಯ ಕತ್ತಲಿನಲ್ಲಿÉೂಂದು ಕ್ಷಣ ಸ್ತಬ್ಧರಾದ ಯೋಧರು, ಸ್ವಕೀಯ ಕ್ಷಣನ-ತಮ್ಮ ತಮ್ಮವರ ನಾಶ.
ಮೂಲ ...{Loading}...
ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು
ಹಣಿದದಲಿ ತಮ್ಮೊಳಗೊಳಗೆ ಸಂ
ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ
ರಣಮಹೀಸಂತಮಸಶಾಂತೇ
ಕ್ಷಣರು ದಿಗುಭ್ರಮೆಯಲಿ ಸ್ವಕೀಯ
ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ ॥30॥
೦೩೧ ಆರ ವಙ್ಗಡದಾಳಿವನು ...{Loading}...
ಆರ ವಂಗಡದಾಳಿವನು ನೀ
ನಾರು ಹೇಸರೇನೆಂದು ಬಳಿಕ ವಿ
ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ
ಭಾರಿಸಿತು ಬಲುತಿಮಿರ ಬಲ ಸಂ
ಹಾರವನು ವಿವರಿಸುವನಾವನು
ಭೂರಿ ಭಟರಂಘವಣೆ ಬೀತುದು ಭೂಪ ಕೇಳ್ ಎಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರ ಪಕ್ಷದ ಶೂರನಿವನು ? ನೀನಾರು ? ಹೆಸರೇನೆಂದು ಬಳಿಕ ವಿಚಾರಿಸಿ ಕರೆಕರೆದು ಮೂದಲಿಸಿ ಹೊಡೆದಾಡಿದರು. ದಟ್ಟವಾದ ಕತ್ತಲು ಆವರಿಸಿತು. ಸೈನ್ಯದ ಸಂಹಾರವನ್ನು ವಿವರಿಸುವನು ಯಾರು ? ಹೆಚ್ಚಿನ ಭಟರ ಸಾಹಸ ನಷ್ಟವಾಯ್ತು. ರಾಜನೇ ಕೇಳು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವಂಗಡ-ಪಕ್ಷ,
ಮೂಲ ...{Loading}...
ಆರ ವಂಗಡದಾಳಿವನು ನೀ
ನಾರು ಹೇಸರೇನೆಂದು ಬಳಿಕ ವಿ
ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ
ಭಾರಿಸಿತು ಬಲುತಿಮಿರ ಬಲ ಸಂ
ಹಾರವನು ವಿವರಿಸುವನಾವನು
ಭೂರಿ ಭಟರಂಘವಣೆ ಬೀತುದು ಭೂಪ ಕೇಳೆಂದ ॥31॥
೦೩೨ ತೆಗೆಸು ಚೂಣಿಯ ...{Loading}...
ತೆಗೆಸು ಚೂಣಿಯ ಬಲವ ದೀವ
ಟ್ಟಿಗರ ಕರೆ ಕರೆ ತೈಲಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ
ಬಿಗಿದ ಮಳವೆಯನೆಣ್ಣೆಗೊಪ್ಪರಿ
ಗೆಗಳೊಳದ್ದಲಿ ಗಳೆಗಳಲಿ ಸೀ
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿದ್ರೋಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದಿನ ಸೈನ್ಯವನ್ನು ಹಿಂತಿರುಗಿಸು. ದೀವಟಿಗರನ್ನು ಕರೆ. ತೈಲ ತುಂಬಿದ ತೊಗಲ ಚೀಲದ ಬಂಡಿ ಕೋಟಿ ಸಂಖ್ಯೆಯಲ್ಲಿ ಬಂದು ಸೇರಲಿ. ಬಟ್ಟೆಸುತ್ತಿದ ಕೋಲನ್ನು ಎಣ್ಣೆ ಕೊಪ್ಪರಿಗೆಗಳಲ್ಲಿ ಅದ್ದಲಿ, ಗಳುಗಳಲ್ಲಿ ಬಟ್ಟೆಗಳನ್ನು ಸುತ್ತಲಿ - ಎಂದು ಶೂರದ್ರೋಣನು ಸೂಚನೆ ನೀಡಿದನು.
ಪದಾರ್ಥ (ಕ.ಗ.ಪ)
ಮಳವೆ-ಪಂಜಿಗಾಗಿ ಬಟ್ಟೆ ಸುತ್ತಿದ ಕೋಲು, ಗಳ-ಗಳು, ಕುನಿಕಿಲ-ಚೀಲ, ಸೀರೆ-ಬಟ್ಟೆ
ಮೂಲ ...{Loading}...
ತೆಗೆಸು ಚೂಣಿಯ ಬಲವ ದೀವ
ಟ್ಟಿಗರ ಕರೆ ಕರೆ ತೈಲಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ
ಬಿಗಿದ ಮಳವೆಯನೆಣ್ಣೆಗೊಪ್ಪರಿ
ಗೆಗಳೊಳದ್ದಲಿ ಗಳೆಗಳಲಿ ಸೀ
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿದ್ರೋಣ ॥32॥
೦೩೩ ಬೆಳಗಿದವು ಬೊಮ್ಬಾಳ ...{Loading}...
ಬೆಳಗಿದವು ಬೊಂಬಾಳ ದೀವಿಗೆ
ಬಲದೊಳಾನೆಗೆ ಹತ್ತು ರಥಿಕಾ
ವಳಿಗೆ ನಾಲುಕು ಹಯಕೆರಡು ಕಾಲಾಳಿಗೊಂದೊಂದು
ಬಲಸಮುದ್ರದೊಳೊಗೆದ ವಡಬಾ
ನಳನ ಝಳವೋ ಮೃತ್ಯುವಿನ ದೀ
ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದಲ್ಲಿ ಪಂಜಿನ ದೀವಿಗೆಗಳು ಆನೆಗೆ ಹತ್ತು, ರಥಿಕರ ಗುಂಪಿಗೆ ನಾಲ್ಕು, ಕುದುರೆಗಳಿಗೆ ಎರಡು, ಕಾಲಾಳಿಗೆ ಒಂದೊಂದರಂತೆ ಬೆಳಗಿದವು. ಸೇನಾಸಮುದ್ರದ ಒಳಗಿನಿಂದ ಹೊರಹೊಮ್ಮಿದ ಕಾಳ್ಗಿಚ್ಚಿನ ಪ್ರಕಾಶವೋ, ಮೃತ್ಯುವಿನ ದೀಪಾವಳಿಯ ರಾತ್ರಿಯೋ ತಿಳಿಯಲು ಅಸಾಧ್ಯ ಎನ್ನುಂತೆ ರಣರಂಗ ವಿಚಿತ್ರವಾಯಿತು.
ಪದಾರ್ಥ (ಕ.ಗ.ಪ)
ಪಂಜು-ದೀವಟಿಗೆ
ಬೊಂಬಾಳ ದೀವಿಗೆ-ಪೊಂಜು, ವಡಬಾನಳ-ಕಾಳ್ಗಿಚ್ಚು, ಅರಿದು-ಅಸಾಧ್ಯ
ಮೂಲ ...{Loading}...
ಬೆಳಗಿದವು ಬೊಂಬಾಳ ದೀವಿಗೆ
ಬಲದೊಳಾನೆಗೆ ಹತ್ತು ರಥಿಕಾ
ವಳಿಗೆ ನಾಲುಕು ಹಯಕೆರಡು ಕಾಲಾಳಿಗೊಂದೊಂದು
ಬಲಸಮುದ್ರದೊಳೊಗೆದ ವಡಬಾ
ನಳನ ಝಳವೋ ಮೃತ್ಯುವಿನ ದೀ
ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ ॥33॥
೦೩೪ ಬಗೆಯಲರಿದಿದು ಗರ್ಭ ...{Loading}...
ಬಗೆಯಲರಿದಿದು ಗರ್ಭ ಬಲಿಯದೆ
ಹಗಲನೀದುದೊ ರಾತ್ರಿ ಕುಡಿಕುಡಿ
ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
ಹೊಗರುಗೆಟ್ಟುದು ಕುಮುದ ಕಮಳದ
ಬಿಗುಹು ಬಿಟ್ಟುದು ಚಕ್ರವಾಕದ
ತಗಹು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಯೋಚಿಸಲು ಅಸಾಧ್ಯ. ಗರ್ಭ ಬಲಿಯದೆ ರಾತ್ರಿಯು ಹಗಲನ್ನು ಹುಟ್ಟಿಸಿತೋ ಎಂಬಂತೆ ಕೈಗಳಲ್ಲಿ ಹಿಡಿದಿದ್ದ ಪಂಜುಗಳ ಸಮೂಹ ಕತ್ತಲನ್ನು ಕುಡಿಕುಡಿದು ಉಗುಳುತ್ತಿದ್ದುವು. ನೈದಿಲೆ ಹೂ ಕಾಂತಿಹೀನವಾಯಿತು. ಕಮಲದ ಹೂವಿನ ಬಿಗಿ ಶಿಥಿಲವಾಯಿತು. ಚಕ್ರವಾಕ ಪಕ್ಷಿಗಳ ಅಡಚಣೆ ನಿವಾರಣೆಯಾಯಿತು ಎನ್ನುವಂತೆ ದೀಪಗಳ ಸಾಲು ಶೋಭಿಸಿತು.
ಮೂಲ ...{Loading}...
ಬಗೆಯಲರಿದಿದು ಗರ್ಭ ಬಲಿಯದೆ
ಹಗಲನೀದುದೊ ರಾತ್ರಿ ಕುಡಿಕುಡಿ
ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
ಹೊಗರುಗೆಟ್ಟುದು ಕುಮುದ ಕಮಳದ
ಬಿಗುಹು ಬಿಟ್ಟುದು ಚಕ್ರವಾಕದ
ತಗಹು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ ॥34॥
೦೩೫ ತಿಮಿರವಡಗಿತು ಮನದ ...{Loading}...
ತಿಮಿರವಡಗಿತು ಮನದ ರೋಷದ
ತಿಮಿರವಡಗದ ಮುನ್ನ ಭುಜವಿ
ಕ್ರಮದ ವಿತರಣೆಯುಳ್ಳಡವಸರವಿದು ನೃಪಾಲರಿಗೆ
ನಿಮನಿಮಗೆ ಮುಂಕೊಂಡು ವಂಶ
ಕ್ರಮ ಸಮಾಗತ ಕೀರ್ತಿಸತಿಯಲಿ
ಮಮತೆಗಳ ನೆರೆಮಾಡಿಯೆಂದನು ದ್ರೋಣ ನಿಜಬಲಕೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕತ್ತಲೆ ಮರೆಯಾಯಿತು. ಮನದ ರೋಷದ ಅಂಧಕಾರ ನಾಶವಾಗುವ ಮೊದಲೇ ಪರಾಕ್ರಮದಲ್ಲಿ ವಿಶ್ವಾಸವಿರುವುದಾದರೆ ಇದು ರಾಜರುಗಳಿಗೆ ಒಳ್ಳೆಯ ಅವಕಾಶ. ನೀವುಗಳೇ ಮುಂದೆ ಬಂದು ನಿಮ್ಮ ನಿಮ್ಮ ವಂಶಕ್ರಮಕ್ಕೆ ಅನುಗುಣವಾಗಿ ತಕ್ಕುದಾಗಿ ಕೀರ್ತಿಯೆಂಬ ಸತಿಯಲ್ಲಿ ಮಮತೆ ತೋರಿರಿ” ಎಂದು ದ್ರೋಣನು ತನ್ನ ಸೈನಿಕರಿಗೆ ಹೇಳಿದನು.
ಮೂಲ ...{Loading}...
ತಿಮಿರವಡಗಿತು ಮನದ ರೋಷದ
ತಿಮಿರವಡಗದ ಮುನ್ನ ಭುಜವಿ
ಕ್ರಮದ ವಿತರಣೆಯುಳ್ಳಡವಸರವಿದು ನೃಪಾಲರಿಗೆ
ನಿಮನಿಮಗೆ ಮುಂಕೊಂಡು ವಂಶ
ಕ್ರಮ ಸಮಾಗತ ಕೀರ್ತಿಸತಿಯಲಿ
ಮಮತೆಗಳ ನೆರೆಮಾಡಿಯೆಂದನು ದ್ರೋಣ ನಿಜಬಲಕೆ ॥35॥
೦೩೬ ಮತ್ತೆ ಹೊಕ್ಕುದು ...{Loading}...
ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಭಟರು ಮುನ್ನುಗ್ಗಿದರು. ಅಮಮ…. ದಿಕ್ಕೆಂಬ ಭಿತ್ತಿ ಬಿರಿಯಲು, ಮೊಳಗುವ ಭೇರಿಯ ಧ್ವನಿಯನ್ನು ಮೀರಿಸಿ ಭೂಮಿ ಬುಡ ಮೇಲಾಗಲಾಗಿ, ಮೊಳಗುವ ಪಟಹ, ಡಿಂಡಿಮ ಮೊದಲಾದ ವಾದ್ಯಗಳ ಧ್ವನಿಗಳೊಂದಿಗೆ ಹತ್ತು ಸಾವಿರ ರಾಜರು ಶತ್ರುಗಳನ್ನು ಮುತ್ತಿದರು, ಆಕ್ರಮಿಸಿದರು. ಪಾಂಡವರ ಸೈನ್ಯವನ್ನು ಮುತ್ತಿ, ಮುಸುಕಿ ಅವರ ಮೈಯಲ್ಲಿ ಹರಿತವಾದ ಬಾಣಗಳನ್ನು ಮೆತ್ತಿದರು.
ಪದಾರ್ಥ (ಕ.ಗ.ಪ)
ಹೊಡೆ ಮರಳೆ-ಬುಡ ಮೇಲಾಗು,
ಮೂಲ ...{Loading}...
ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ ॥36॥
೦೩೭ ಅಕಟ ಫಡ ...{Loading}...
ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾದರೆ ಜೋಡಿಸೆನುತಿದಿರಾದನಾ ದ್ರೋಣ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ… ಫಡ, ನಾಯಿಗಳಾದ ಪಾಂಡವರಿಗೆ ಶ್ರೀಕೃಷ್ಣನ ಕಪಟದ ಮಂತ್ರವೇ ಬಾಧಕವು. ಇದಲ್ಲದೆ ಕುರುಸೇನೆ ನಿಮಗೆ ಸೋಲುವುದುಂಟೇ ? ಸಕಲ ಸಿದ್ಧತೆಯಲ್ಲಿ ಯಾದವ ಸಮೂಹದ ಸಮೇತ ಈ ರಾತ್ರಿ ಯುದ್ಧದಲ್ಲಿ ಜಾಗೃತರಾದರೆ ಅವರಿಗೆ ಜೊತೆಯಾಗಿ ಯುದ್ಧಮಾಡಿ ಎನ್ನುತ್ತಾ ಆ ದ್ರೋಣನು ಇದಿರಾದನು.
ಮೂಲ ...{Loading}...
ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾದರೆ ಜೋಡಿಸೆನುತಿದಿರಾದನಾ ದ್ರೋಣ ॥37॥
೦೩೮ ತವಕ ತಗ್ಗಿತು ...{Loading}...
ತವಕ ತಗ್ಗಿತು ಭಟರ ತಾಳಿಗೆ
ಜವಳಿದೆಗೆದುದು ಮನಕೆ ಭೀತಿಯ
ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ
ಸವೆದ ಶೌರ್ಯದ ಘಾಯ ಘಲ್ಲಿಸಿ
ತವಯವದ ಮಡಮುರಿವ ಮೋಹರ
ದವನಿಪತಿಗಳ ನಿಲವ ನೋಡಿದನಸುರರಿಪು ನಗುತ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾತುರ ತಗ್ಗಿತು ಭಟರ ಗಂಟಲು ಒಣಗಿತು. ಮನಕ್ಕೆ ಭೀತಿಯ ಮುಸುಕು ವ್ಯಾಪಿಸಿತು. ಶೂರರು ಹಿಮ್ಮೆಟ್ಟುವಂತಾಯಿತು. ಶೌರ್ಯ ಕಡಿಮೆಯಾಗಿ ಗಾಯಗೊಂಡ ಅಂಗಾಂಗಗಳಿಂದ ಹಿಮ್ಮೆಟ್ಟುವ ಸೈನ್ಯದ ರಾಜರ ಸ್ಥಿತಿಯನ್ನು ಕೃಷ್ಣನು ನಗುತ್ತಾ ನೋಡಿದನು.
ಪದಾರ್ಥ (ಕ.ಗ.ಪ)
ತಾಳಿಗೆ-ಗಂಟಲು, ಜವಳಿದೆಗೆ-ಒಣಗು, ಅಪಸರಣ-ಹಿಂದೆ ಸರಿಯುವಿಕೆ, ಮಡಮುರಿವ-ಹಿಮ್ಮೆಟ್ಟುವ,
ಮೂಲ ...{Loading}...
ತವಕ ತಗ್ಗಿತು ಭಟರ ತಾಳಿಗೆ
ಜವಳಿದೆಗೆದುದು ಮನಕೆ ಭೀತಿಯ
ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ
ಸವೆದ ಶೌರ್ಯದ ಘಾಯ ಘಲ್ಲಿಸಿ
ತವಯವದ ಮಡಮುರಿವ ಮೋಹರ
ದವನಿಪತಿಗಳ ನಿಲವ ನೋಡಿದನಸುರರಿಪು ನಗುತ ॥38॥
೦೩೯ ನಿಲ್ಲಿ ಭಯ ...{Loading}...
ನಿಲ್ಲಿ ಭಯ ಬೇಡಾವ ರಣವಿದು
ತಲ್ಲಣಕೆ ತರುವಾಯೆ ದೀವಿಗೆ
ಪಲ್ಲವಿಸಿದರೆ ತಳಿತುದೇ ಭುಜಶೌರ್ಯ ಕುರುಬಲಕೆ
ಖುಲ್ಲರಾರೋ ಬಲವ ತಿರುಹಿದ
ರಿಲ್ಲಿ ನಿಲಲಂಜಿದರೆನುತ ಕರ
ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಲ್ಲಿ ಭಯಬೇಡ ಯಾವ ಯುದ್ಧ ಇದು ? ತಲ್ಲಣಗೊಳ್ಳಲು ಉಚಿತವಾದ ಸಮಯವೇ ? ದೀವಿಗೆ ಚಿಗುರಿದ ಮಾತ್ರಕ್ಕೆ ಕುರುಬಲಕ್ಕೆ ಭುಜಶೌರ್ಯವನ್ನುಂಟು ಮಾಡಿತೇ ? ಯಾರೋ ನೀಚರು ಸೈನ್ಯವನ್ನು ಹಿಂತಿರುಗಿಸಿದ್ದಾರೆ. ಹೆದರಿದವರು ಇಲ್ಲಿಯೇ ನಿಲ್ಲಿ " ಎನ್ನುತ್ತಾ ಲಕ್ಷ್ಮೀಕಾಂತನಾದ ಕೃಷ್ಣನು ಕರುಣೆಯಿಂದ ತನ್ನ ಅಭಯಹಸ್ತವನ್ನು ತೋರಿದನು.
ಮೂಲ ...{Loading}...
ನಿಲ್ಲಿ ಭಯ ಬೇಡಾವ ರಣವಿದು
ತಲ್ಲಣಕೆ ತರುವಾಯೆ ದೀವಿಗೆ
ಪಲ್ಲವಿಸಿದರೆ ತಳಿತುದೇ ಭುಜಶೌರ್ಯ ಕುರುಬಲಕೆ
ಖುಲ್ಲರಾರೋ ಬಲವ ತಿರುಹಿದ
ರಿಲ್ಲಿ ನಿಲಲಂಜಿದರೆನುತ ಕರ
ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ ॥39॥
೦೪೦ ಅವನೊಬ್ಬನ ಮಧುರವಚನ ...{Loading}...
ಅವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವನೊಬ್ಬನ ಮಧುರ ವಚನ ಕೃಪಾವಲೋಕನದಿಂದ ಶತಜನ್ಮಗಳ ದೊಡ್ಡ ಪಾಪವು ಅಗ್ನಿಯ ತೇಜಸ್ಸಿಗೆ ಬಲಿಯಾಗುವುದೋ. ಆ ದೇವರಾದ ಈತನ ಮಧುರವಾದ ಮಾತುಗಳೆಂಬ ಅಮೃತ ಸಿಂಚನದಿಂದ ಯೋಧರು ವಿಶೇಷವಾಗಿ ಚೈತನ್ಯ ಪಡೆಯುವುದು ಏನು ಅಸಾಧ್ಯವೇ ? ಜನಮೇಜಯ ರಾಜನೇ ಕೇಳು ಎಂದರು. (ಕೃಷ್ಣನ ಮಧುರವಾದ ಮಾತುಗಳಿಂದ ಯೋಧರು ಉತ್ತೇಜಿತರಾದರು)
ಮೂಲ ...{Loading}...
ಅವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ ॥40॥
೦೪೧ ಹಿಙ್ಗಿದುದು ಭಯ ...{Loading}...
ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೋಮಾಂಚನದ ರಣ
ರಂಗ ಧೀರರು ತರುಬಿ ನಿಂದರು ಮತ್ತೆ ಕಾಳೆಗವ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುತ್ತಿಗೆಯವರೆಗೆ ಬಂದಿದ್ದ ಯೋಧರ ಭಯ ನಾಶವಾಯಿತು. ಸರ್ವಾಂಗಗಳಲ್ಲೂ ಕಾಳಗದ ಪರಾಕ್ರಮದ ಆವೇಶ ವ್ಯಾಪಿಸಿತು. ಶೌರ್ಯ ಹೆಚ್ಚಾಗಿ ದಿಟ್ಟತನ ಆವೇಶಗಳು ವ್ಯಕ್ತವಾದವು. ಅವರು ಉತ್ಸಾಹಿಸಿದರು. ಹೆಚ್ಚು ರೋಮಾಂಚನಗೊಂಡರು. ಸೈನ್ಯದ ಮುಂಭಾಗದಲ್ಲಿದ್ದ ರಣರಂಗಧೀರರು ಪುನಃ ಕಾಳಗವನ್ನು ಎದುರಿಸಿ ನಿಂತರು.
ಮೂಲ ...{Loading}...
ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೋಮಾಂಚನದ ರಣ
ರಂಗ ಧೀರರು ತರುಬಿ ನಿಂದರು ಮತ್ತೆ ಕಾಳೆಗವ ॥41॥
೦೪೨ ಭಟರು ಬಳಲಿದರಿನ್ದು ...{Loading}...
ಭಟರು ಬಳಲಿದರಿಂದು ರಣವು
ತ್ಕಟವು ಧೀವಶಿಗಳು ಮಹಾರಥ
ರಟಕಟಿಸುತಿದೆ ಮತ್ತೆ ನಾವಿದನೇನ ಹೇಳುವೆವು
ಕುಟಿಲ ಭಾರದ್ವಾಜನಿವನು
ಬ್ಬಟಿಗೆ ಮದ್ದರೆವೆನು ನಿಶಾಪರಿ
ಯಟನಪಟುಗಳು ಬರಲಿ ಕಾಳೆಗಕೆಂದನಸುರಾರಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದು ಭಟರು ಆಯಾಸಗೊಂಡರು. ರಣವು ಉಗ್ರವಾಗಿದೆ ಸಾಹಸಿಗರು, ಮಹಾರಥರು ಉತ್ಸಾಹಗೊಳ್ಳುತ್ತಿದ್ದಾರೆ. ಪುನಃ ನಾವು ಇದನ್ನು ಏನೆಂದು ಹೇಳೋಣ. ಕುತಂತ್ರಿಯಾದ ಭಾರದ್ವಾಜನಿವನು. ಇವನ ಉಬ್ಬಟೆಗೆ ಔಷಧವನ್ನು ಕೊಡುವೆನು. ಇಂದಿನ ಕಾಳಗಕ್ಕೆ ರಾತ್ರಿಯ ವೇಳೆ ಸಂಚರಿಸಿ ಯುದ್ಧ ಮಾಡುವ ವೀರರು ಬರಲಿ ಎಂದು ಶ್ರೀಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಧೀವಶಿ-ಸಾಹಸಿ
ಮೂಲ ...{Loading}...
ಭಟರು ಬಳಲಿದರಿಂದು ರಣವು
ತ್ಕಟವು ಧೀವಶಿಗಳು ಮಹಾರಥ
ರಟಕಟಿಸುತಿದೆ ಮತ್ತೆ ನಾವಿದನೇನ ಹೇಳುವೆವು
ಕುಟಿಲ ಭಾರದ್ವಾಜನಿವನು
ಬ್ಬಟಿಗೆ ಮದ್ದರೆವೆನು ನಿಶಾಪರಿ
ಯಟನಪಟುಗಳು ಬರಲಿ ಕಾಳೆಗಕೆಂದನಸುರಾರಿ ॥42॥
೦೪೩ ಕರಸು ಧರ್ಮಜ ...{Loading}...
ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು “ಧರ್ಮಜನೇ, ಶೂರ ಘಟೋತ್ಕಚನನ್ನು ಕರೆಸು. ರಾತ್ರಿಯ ಕಾಳಗಕ್ಕೆ ನಿಲ್ಲಲಿ. ಸಾತ್ಯಕಿ, ಅರ್ಜುನ, ಭೀಮ, ನಕುಲ, ಸಹದೇವನೇ ಮೊದಲಾದವರಿಗೆ ಸಾಧ್ಯವಿಲ್ಲ. ರಾತ್ರಿಯ ಯುದ್ಧದ ಮರ್ಮವನ್ನು ಅವನೇ ಹೆಚ್ಚು ತಿಳಿದಿದ್ದಾನೆ. ಗೆಲ್ಲುತ್ತಾನೆ” ಎನ್ನಲು ಶ್ರೀಕೃಷ್ಣನ ಅಪ್ಪಣೆಯಂತೆ ವಾಯುಪುತ್ರ ಭೀಮನ ಮಗ ಘಟೋತ್ಕಚನು ಬಂದನು.
ಪದಾರ್ಥ (ಕ.ಗ.ಪ)
ರಣದಾಯತನ-ಸಾಮಥ್ರ್ಯ, ಕಾಳಗದ ಮರ್ಮ, ರಹಸ್ಯ
ಮೂಲ ...{Loading}...
ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ ॥43॥
೦೪೪ ಜಡಿವ ಹಿರಿಯುಬ್ಬಣದ ...{Loading}...
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮುರಿದಲೆಯ ಚರಣದ
ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ
ನಿಡಿಯೊಡಲ ಮುರಿಮೀಸೆಗಳ ಕೆಂ
ಪಡರ್ದ ಕಂಗಳ ಹೊಳೆವ ದಾಡೆಯ
ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈತಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಡಿವ ಆಯುಧದ, ದಷ್ಟ ಪುಷ್ಟವಾದ, ವಿಶಾಲವಾಗಿ ಹರಡಿರುವ ಬಾಹುಗಳ, ಓರೆಯಾಗಿ ನೋಡುವ ತಿರುಗಿರುವ ತಲೆಯ, ಪಾದಗಳಲ್ಲಿ ತೊಡುವ ಕಡಗದ ಧ್ವನಿ ಹಾಗೂ ಕಿವಿಯ ಆಭರಣದ ಧ್ವನಿಯ, ನೀಳವಾದ ದೇಹದ, ತಿರುಗಿಸಿದ ದಪ್ಪ ಮೀಸೆಯ, ಕೆಂಪಾದ ಕಣ್ಣುಗಳ, ಹೊಳೆಯುವಂಥ ಕೋರೆ ಹಲ್ಲುಗಳನ್ನುಳ್ಳ ಬಲಶಾಲಿಯಾದ ರಾಕ್ಷಸನು ಭೂಮಿ ನೆಗ್ಗುವ ಹಾಗೆ ಹೆಜ್ಜೆಯಿಡುತ್ತಾ ಬಂದನು.
ಪದಾರ್ಥ (ಕ.ಗ.ಪ)
ಬಾವುಲಿ-ಒಂದು ಬಗೆಯ ಕಿವಿಯ ಆಭರಣ, ದಡಿಗ-ಬಲಶಾಲಿ
ಮೂಲ ...{Loading}...
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮುರಿದಲೆಯ ಚರಣದ
ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ
ನಿಡಿಯೊಡಲ ಮುರಿಮೀಸೆಗಳ ಕೆಂ
ಪಡರ್ದ ಕಂಗಳ ಹೊಳೆವ ದಾಡೆಯ
ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈತಂದ ॥44॥
೦೪೫ ಏನು ಧರ್ಮಜ ...{Loading}...
ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಧರ್ಮಜ-ಕರೆಸಿದೆ ? ಕುರುಸೇನೆ ಪ್ರತಿಭಟಿಸಿತೇ ? ಬಿಡು ಬಿಡು ತಡವೇಕೆ ? ವೀಳೆಯವ ತಾ ಎನ್ನುತ್ತಾ ಎಡಗೈಯನ್ನು ಚಾಚುತ್ತಾ ಅರಳಿಸುತ್ತಾ ದೇವಾಸುರರೊಳಗೆ ನಿನ್ನ ವಂಶದ ತನಗೆ ಯಾರೂ ಸರಿಸಮರಿಲ್ಲ ಎನ್ನುವಂತೆ ಎದುರಿಸಿ ನಿಲ್ಲಲು ನಾನು ತಿಳಿದಿದ್ದೇನೆ. ನೋಡು ಎನ್ನುತ್ತಾ ಕತ್ತಿಯನ್ನು ಝಳಪಿಸಿದನು.
ಪದಾರ್ಥ (ಕ.ಗ.ಪ)
ಮಲೆ-ಪ್ರತಿಭಟಿಸು,
ಮೂಲ ...{Loading}...
ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ ॥45॥
೦೪೬ ಜಡಿದು ಝೊಮ್ಪಿಸಿ ...{Loading}...
ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ
ದಡಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯನ್ನು ಜಡಿದು ಝೊಂಪಿಸಿ, ವೀಳೆಯವನ್ನು ಪಡೆದು ಎಡದ ಕೈಯಿಂದ ನಮಸ್ಕರಿಸಿ, ಮದಿಸುವ ಮುಖದವನಾದ ಘಟೋತ್ಕಚನು ಎಡಬಲವನ್ನು ನೋಡಲಾಗಿ ಕೋಟ್ಯಂತರ ರಾಕ್ಷಸರು ಜೀಯ ಎನ್ನುತ್ತಾ ಸಿಡಿಲ ಸೆರೆ ಬಿಟ್ಟಂತೆ ಭುಜವನ್ನು ತಟ್ಟಿದರು. ದೈತ್ಯಬಲವು ಮುನ್ನುಗ್ಗಿತು. ಕಿರುಚುತ್ತ, ಆರ್ಭಟಿಸುತ್ತಾ ರಾಕ್ಷಸ ಸೇನೆ ಹೆಜ್ಜೆಹಾಕಲು ಆ ಭಾರಕ್ಕೆ ಆದಿಶೇಷ ಹಾಗೂ ಕೂರ್ಮನಿಗೆ ಮೇಲುಸಿರು ಬಂದಿತು.
ಪದಾರ್ಥ (ಕ.ಗ.ಪ)
ಫಣಿಪ–ಆದಿಶೇಷ, ಕಮಠ- ಕೂರ್ಮ,
ಮೂಲ ...{Loading}...
ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ
ದಡಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ ॥46॥
೦೪೭ ಕಾಳರಾತ್ರಿಯ ಕಟಕವೋ ...{Loading}...
ಕಾಳರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯಂಕರ ರಾತ್ರಿಯ ಸೈನ್ಯವೋ ಅಥವಾ ಕಾಲರುದ್ರನ ಪ್ರಳಯಾಗ್ನಿ ಸ್ವರೂಪಿಯಾದ ರುದ್ರನ ಸೈನ್ಯವೋ ? ರಾಕ್ಷಸನ ಶೌರ್ಯ ಹಿರಿತನ, ಸಾಮಥ್ರ್ಯವನ್ನು ಬಣ್ಣಿಸಬಲ್ಲ ಕವಿ ಯಾರು ? ಘಟೋತ್ಕಚನು ಸೈನಿಕರನ್ನು ಸಮಾಧಾನಪಡಿಸಿದನು. ಕರ್ಪೂರ, ವೀಳೆಯವನ್ನು ನೀಡಿ ಮನ್ನಿಸಿದನು. ರಥದ ಕಬ್ಬಿಣದ ಚಕ್ರ ಭಯಂಕರವಾಗಿ ಶಬ್ದ ಮಾಡಲು ವಾಯುಸುತನ ಸುತನಾದ ಘಟೋತ್ಕಚನು ರಥವನ್ನು ಏರಿದನು.
ಮೂಲ ...{Loading}...
ಕಾಳರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು ॥47॥
೦೪೮ ಸಾಲು ಮಿಗೆ ...{Loading}...
ಸಾಲು ಮಿಗೆ ಮೋಹರದೊಳಗೆ ಬೊಂ
ಬಾಳ ದೀವಿಗೆ ಬೆಳಗಿದವು ಶರ
ಜಾಳ ದೀಧಿತಿ ತೊಳಗಿದವು ರಕ್ಕಸರ ಕೈಗಳಲಿ
ಬಾಳ ಹೊಳಹನು ಜರೆದು ದಾಡೆಯ
ಢಾಳ ಮಿಗೆ ಗಜಗಲಿಸೆ ದಾನವ
ಕಾಳೆಗಕ್ಕನುವಾಗಿ ನಿಂದನು ಬಿಗಿದ ಬಿಲುದೆಗೆದು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದಲ್ಲಿ ಸಾಲಾಗಿ ಪಂಜುಗಳು ಬೆಳಗಿದವು. ಬಾಣಸಮೂಹದ ಬೆಳಕು ರಾಕ್ಷಸರ ಕೈಗಳಲ್ಲಿ ಪ್ರಕಾಶಿಸಿದುವು. ಕತ್ತಿಯ ಹೊಳಪನ್ನು ಮೂದಲಿಸುವಂತೆ ಕೋರೆಹಲ್ಲುಗಳ ಹೊಳಪು ಹೆಚ್ಚು ಪ್ರಕಾಶಿಸಲು ರಾಕ್ಷಸನು ಕಾಳಗಕ್ಕೆ ಸಿದ್ಧನಾಗಿ ಬಿಗಿದ ಬಿಲ್ಲನ್ನು ತೆಗೆದು ನಿಂತನು.
ಪದಾರ್ಥ (ಕ.ಗ.ಪ)
ಬೊಂಬಾಳ ದೀವಿಗೆ-ಪಂಜು
ದೀಧಿತಿ-ದೀಪ್ತಿ,
ತೊಳಗು-ಬೆಳಗು, ಬಾಳ್-ಕತ್ತಿ,
ಗಜಗಲಿಸು-ಹೊಳೆ, ಪ್ರಕಾಶಿಸು
ಮೂಲ ...{Loading}...
ಸಾಲು ಮಿಗೆ ಮೋಹರದೊಳಗೆ ಬೊಂ
ಬಾಳ ದೀವಿಗೆ ಬೆಳಗಿದವು ಶರ
ಜಾಳ ದೀಧಿತಿ ತೊಳಗಿದವು ರಕ್ಕಸರ ಕೈಗಳಲಿ
ಬಾಳ ಹೊಳಹನು ಜರೆದು ದಾಡೆಯ
ಢಾಳ ಮಿಗೆ ಗಜಗಲಿಸೆ ದಾನವ
ಕಾಳೆಗಕ್ಕನುವಾಗಿ ನಿಂದನು ಬಿಗಿದ ಬಿಲುದೆಗೆದು ॥48॥
೦೪೯ ಹಯಕೆ ಹಯ ...{Loading}...
ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಟರ ಗಡಣದಲಿ
ನಿಯತ ಚಾತುರ್ಬಲವೆರಡು ನಿ
ರ್ಭಯದಲೊದಗಿತು ಮಕುಟಮಸ್ತಕ
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗೆ ಕುದುರೆ, ರಥಕ್ಕೆ ರಥ, ಕಾಲಾಳುಪಡೆಗೆ ಕಾಲಾಳುಪಡೆ, ಗಜಸೇನೆಗೆ ಗಜಸೇನೆ. ಪ್ರತಿಜ್ಞೆ ಕೈಗೊಂಡ ಭಟರು ಪ್ರತಿಜ್ಞೆ ಕೈಗೊಂq ಭಟರ ಸಮೂಹದಲ್ಲಿ ಕಾದಾಡಿದರು. ಚಾತುರ್ಬಲವೆರಡೂ ನಿಯತವಾಗಿ, ನಿರ್ಭಯವಾಗಿ ಎದುರಾದವು. ಭೂಮಂಡಲವು ಮಕುಟಮಸ್ತಕ ಮಯವಾಯ್ತು ಎನ್ನುವಂತೆ ಎರಡೂ ಸೇನೆ ಹೊಡೆದಾಡಿ ಕಾದಾಡಿದರು.
ಮೂಲ ...{Loading}...
ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಟರ ಗಡಣದಲಿ
ನಿಯತ ಚಾತುರ್ಬಲವೆರಡು ನಿ
ರ್ಭಯದಲೊದಗಿತು ಮಕುಟಮಸ್ತಕ
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ ॥49॥
೦೫೦ ಕೌರವನ ತಳತನ್ತ್ರ ...{Loading}...
ಕೌರವನ ತಳತಂತ್ರ ಕಟಕಾ
ಚಾರಿಯನ ಕಾಹಿನಲಿ ರಿಪುಪರಿ
ವಾರ ನಿಂದುದು ಭೀಮಸೇನನ ಸುತನ ಬಳಸಿನಲಿ
ಆರಿದನು ಜಗ ನಡುಗೆ ಬೊಬ್ಬೆಯ
ಭಾರದಲಿ ವೈರಿಗಳ ಬಲಸಂ
ಹಾರ ರುದ್ರನು ಕಲಿಘಟೋತ್ಕಚ ಹೊಕ್ಕನಾಹವವ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನ್ಯ ದ್ರೋಣರ ರಕ್ಷಣೆಯಲ್ಲಿತ್ತು. ಶತ್ರು ಸೈನ್ಯ ಭೀಮ ಪುತ್ರ ಘಟೋತ್ಕಚನ ನೇತೃತ್ವದಲ್ಲಿ ಸಿದ್ಧವಾಗಿ ನಿಂತಿತು. ಘಟೋತ್ಕಚನು ಜಗತ್ತೇ ನಡುಗುವಂತೆ ಕೂಗಿದನು. ಆರ್ಭಟಸಹಿತವಾಗಿ ಶತ್ರುಸೈನ್ಯವನ್ನು ಸಂಹಾರ ಮಾಡುವ ರುದ್ರನಾದ ಶೂರ ಘಟೋತ್ಕಚನು ರಣರಂಗವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಆರಿದನು-ಕೂಗಿದನು
ಮೂಲ ...{Loading}...
ಕೌರವನ ತಳತಂತ್ರ ಕಟಕಾ
ಚಾರಿಯನ ಕಾಹಿನಲಿ ರಿಪುಪರಿ
ವಾರ ನಿಂದುದು ಭೀಮಸೇನನ ಸುತನ ಬಳಸಿನಲಿ
ಆರಿದನು ಜಗ ನಡುಗೆ ಬೊಬ್ಬೆಯ
ಭಾರದಲಿ ವೈರಿಗಳ ಬಲಸಂ
ಹಾರ ರುದ್ರನು ಕಲಿಘಟೋತ್ಕಚ ಹೊಕ್ಕನಾಹವವ ॥50॥
೦೫೧ ಬೆಳೆದವೋ ಕೈಕಾಲು ...{Loading}...
ಬೆಳೆದವೋ ಕೈಕಾಲು ನೀಲಾ
ಚಲಕೆ ಹೇಳೆನೆ ಮುಗಿಲ ತುಡುಕುವ
ತಲೆಯ ತೋಕೆಯ ತೋರಹತ್ತನ ಕಂಡು ಕುರುಸೇನೆ
ಕಳವಳಿಸಿದರು ಕಾಯದಲಿ ಕ
ಕ್ಕುಲಿತೆಗಾರರು ಕೈದೆಗೆದರ
ಗ್ಗಳೆಯನುರುಬೆಗೆ ಬೀಳುಕೊಟ್ಟರು ಭಟರು ಸೈರಣೆಯ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲಾಚಲಕ್ಕೆ ಕೈಕಾಲು ಬೆಳೆದವೋ ಎನ್ನುವಂತಿದ್ದ , ಆಕಾಶಕ್ಕೆ ತಾಗುವ ತಲೆಯ, ದೀರ್ಘಬಾಹುಗಳನ್ನು ಹೊಂದಿದ ಬಲಶಾಲಿಯನ್ನು ಕಂಡು ಕುರುಸೇನೆ ಕಳವಳಿಸಿತು. ಚಿಂತಿತರಾದ, ದೇಹದ ಮೇಲೆ ಆಸೆ ಹೊಂದಿದವರು ಕಾರ್ಯದಿಂದ ಹಿಂದೆಗೆದರು. ಘಟೋತ್ಕಚನ ಹಿರಿದಾದ ಪರಾಕ್ರಮವನ್ನು ನೋಡಿ ಯೋಧರು ತಮ್ಮ ಸಹಜ ಗುಣವಾದ ಯುದ್ಧವನ್ನು ಕೈಬಿಟ್ಟು ಹಿಮ್ಮೆಟ್ಟಿದರು. ಘಟೋತ್ಕಚನ ಶೌರ್ಯವನ್ನು ಎದುರಿಸಲಾರದೆ ಕುರುಸೈನ್ಯ ತಾಳ್ಮೆಗೆಟ್ಟಿತು.
ಪದಾರ್ಥ (ಕ.ಗ.ಪ)
ತೋಕೆ-ತುದಿ , ತೋರಹತ್ತ-ದೀರ್ಘಬಾಹು
ಕಕ್ಕುಲಿತೆ-ಆಸೆ
ಕೈದೆಗೆ-ಹಿಂದೆ ಸರಿ, ಉರುಬೆ-ರಭಸ
ಮೂಲ ...{Loading}...
ಬೆಳೆದವೋ ಕೈಕಾಲು ನೀಲಾ
ಚಲಕೆ ಹೇಳೆನೆ ಮುಗಿಲ ತುಡುಕುವ
ತಲೆಯ ತೋಕೆಯ ತೋರಹತ್ತನ ಕಂಡು ಕುರುಸೇನೆ
ಕಳವಳಿಸಿದರು ಕಾಯದಲಿ ಕ
ಕ್ಕುಲಿತೆಗಾರರು ಕೈದೆಗೆದರ
ಗ್ಗಳೆಯನುರುಬೆಗೆ ಬೀಳುಕೊಟ್ಟರು ಭಟರು ಸೈರಣೆಯ ॥51॥
೦೫೨ ಏನ ಹೇಳುವೆನವರ ...{Loading}...
ಏನ ಹೇಳುವೆನವರ ರಣಸು
ಮ್ಮಾನವನು ನಮ್ಮವರ ಮೊಗದು
ಮ್ಮಾನವನು ಪ್ರಥಮಪ್ರವೇಶದೊಳಾದುದೀ ಹದನು
ದಾನವರ ಥಟ್ಟಣೆಗೆ ನಿಲುವರ
ನಾನು ಕಾಣೆನು ದಿಟ್ಟತನದಲಿ
ತಾನೆ ನಿಂದನು ಕೌರವೇಂದ್ರನು ಸಕಲ ಬಲಸಹಿತ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಯುದ್ಧದಲ್ಲಿನ ಉತ್ಸಾಹ, ಸಂತೋಷಗಳನ್ನು ಹಾಗೂ ನಮ್ಮವರ ಮೊಗದ ದುಃಖವನ್ನು ಏನೆಂದು ಹೇಳಲಿ ? ಘಟೋತ್ಕಚನ ಮೊದಲ ಪ್ರವೇಶದಲ್ಲೇ ಈ ಸ್ಥಿತಿ ಉಂಟಾಯಿತು. ರಾಕ್ಷಸರ ಸೈನ್ಯಕ್ಕೆ ಎದುರಾಗಿ ನಿಲ್ಲುವವರನ್ನು ನಾನು ಕಾಣೆನು. ದಿಟ್ಟತನದಿಂದ ಕೌರವೇಂದ್ರನು ತಾನೇ ಸಕಲ ಸೈನ್ಯ ಸಮೇತನಾಗಿ ಯುದ್ಧಕ್ಕೆ ನಿಂತನು.
ಮೂಲ ...{Loading}...
ಏನ ಹೇಳುವೆನವರ ರಣಸು
ಮ್ಮಾನವನು ನಮ್ಮವರ ಮೊಗದು
ಮ್ಮಾನವನು ಪ್ರಥಮಪ್ರವೇಶದೊಳಾದುದೀ ಹದನು
ದಾನವರ ಥಟ್ಟಣೆಗೆ ನಿಲುವರ
ನಾನು ಕಾಣೆನು ದಿಟ್ಟತನದಲಿ
ತಾನೆ ನಿಂದನು ಕೌರವೇಂದ್ರನು ಸಕಲ ಬಲಸಹಿತ ॥52॥
೦೫೩ ಫಡ ನಿಶಾಚರ ...{Loading}...
ಫಡ ನಿಶಾಚರ ಹೋಗು ಹೋಗಳ
ವಡದು ಕರೆ ನಿಮ್ಮಯ್ಯನನು ಹೇ
ರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ
ಮಿಡುಕುವರೆ ಕರೆ ನಿಮ್ಮ ತೆತ್ತಿಗ
ನಡಗಲೇತಕೆ ಕೃಷ್ಣ ನಿಮಗಿ
ನ್ನೊಡಲ ಬಳಿನೆಳಲವಸಹಿತ ಬಾಯೆಂದು ಗರ್ಜಿಸಿದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಫಡ… ರಾಕ್ಷಸನೇ ಹೋಗು, ಹೋಗು. ನಿನಗೆ ನನ್ನನ್ನು ಎದುರಿಸಲು ಸಾಧ್ಯವಿಲ್ಲ. ನಿಮ್ಮಯ್ಯನನ್ನು ಕರೆ. ಹಿರಿದಾದ, ಬಲಿಷ್ಠವಾದ ದೇಹವನ್ನು ತೋರಿಸಿ, ಸೈನ್ಯವನ್ನು ಬೆದರಿಸುವುದರಲ್ಲಿ ಹಿರಿತನ ಉಂಟಾಗುವುದೇ ? ಇದಕ್ಕೆ ನಾವು ಅಳುಕುವವರೇ ? ಅಥವಾ ಹಿಂಜರಿಯುವರೇ ? ನಿಮ್ಮ ರಕ್ಷಕನಾದ ಕೃಷ್ಣನನ್ನು ಕರೆ. ಅವನು ಬಚ್ಚಿಟ್ಟುಕೊಳ್ಳುವುದೇಕೆ ? ನಿಮಗೆ ನೆರಳಿನಂತಿರುವ ಕೃಷ್ಣನ ಸಮೇತ ಬಾ” ಎಂದು ಕೌರವನು ಗರ್ಜಿಸಿದನು.
ಮೂಲ ...{Loading}...
ಫಡ ನಿಶಾಚರ ಹೋಗು ಹೋಗಳ
ವಡದು ಕರೆ ನಿಮ್ಮಯ್ಯನನು ಹೇ
ರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ
ಮಿಡುಕುವರೆ ಕರೆ ನಿಮ್ಮ ತೆತ್ತಿಗ
ನಡಗಲೇತಕೆ ಕೃಷ್ಣ ನಿಮಗಿ
ನ್ನೊಡಲ ಬಳಿನೆಳಲವಸಹಿತ ಬಾಯೆಂದು ಗರ್ಜಿಸಿದ ॥53॥
೦೫೪ ಮರಳು ಕೌರವ ...{Loading}...
ಮರಳು ಕೌರವ ಜಂಗಮ ಸ್ಥಾ
ವರದ ದೇಹಕೆ ನೆಳಲಹುದು ದಿನ
ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ
ಸುರ ನಿಶಾಚರ ಮತ್ರ್ಯರೊಳು ತಾ
ನೆರವ ಬಯಸುವುದುಂಟೆ ಹರಿಯಂ
ತಿರಲಿ ಚೈತನ್ಯಾತ್ಮನಾತನ ಮಾತದೇಕೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ… ಕೌರವನೇ ಹಿಂದಿರುಗು, ಚಲಿಸುವ ಅಥವಾ ಚಲಿಸದ ವಸ್ತುವಿಗೆ ನೆರಳುಂಟು. ಆದರೆ ಸೂರ್ಯನ ದೇಹಕ್ಕೆ ನೆರಳು ಎಂಬ ಮಾತನ್ನು ಕೇಳಿದ್ದೀಯೋ ಅಥವಾ ಕಂಡಿದ್ದೀಯೋ ಹೇಳು. ದೇವ, ರಾಕ್ಷಸ ಮಾನವರಲ್ಲಿ ತಾನು ಸಹಾಯವನ್ನು ಬಯಸುವುದುಂಟೇ? ಶ್ರೀಕೃಷ್ಣನ ಮಾತಿರಲಿ. ಚೈತನ್ಯಾತ್ಮನು ಆತನ ಮಾತು ಅದೇಕೆ ?” ಎಂದು ಘಟೋತ್ಕಚನು ಹೇಳಿದನು.
ಮೂಲ ...{Loading}...
ಮರಳು ಕೌರವ ಜಂಗಮ ಸ್ಥಾ
ವರದ ದೇಹಕೆ ನೆಳಲಹುದು ದಿನ
ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ
ಸುರ ನಿಶಾಚರ ಮತ್ರ್ಯರೊಳು ತಾ
ನೆರವ ಬಯಸುವುದುಂಟೆ ಹರಿಯಂ
ತಿರಲಿ ಚೈತನ್ಯಾತ್ಮನಾತನ ಮಾತದೇಕೆಂದ ॥54॥
೦೫೫ ಹೆಣನನರಸುತ ರಕುತಪಾನಕೆ ...{Loading}...
ಹೆಣನನರಸುತ ರಕುತಪಾನಕೆ
ಸೆಣಸಿ ಶಾಕಿನಿ ಢಾಕಿನಿಯರೊಳು
ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ
ರಣದೊಳಗ್ಗದ ಕೈದುಕಾರರ
ಕೆಣಕಿ ಗೆಲುವುದ ಕೇಳಿದರಿಯೆವು
ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೋಕ ತಿಳಿದಿರುವಂತೆ ಹೆಣಗಳನ್ನು ಹುಡುಕುತ್ತ ರಕ್ತಪಾನಕ್ಕೆ ಸ್ಪರ್ಧಿಸಿ, ಶಾಕಿನಿ-ಡಾಕಿನಿಯರಲ್ಲಿ ಯುದ್ಧಮಾಡಿ ಗೆಲ್ಲುವುದೆ ದಾನವ ವಿದ್ಯೆ. ಆದರೆ ಅವರು ಯುದ್ಧದಲ್ಲಿ ಶ್ರೇಷ್ಠ ಪರಾಕ್ರಮಿಗಳನ್ನು ಕೆಣಕಿ ಗೆಲ್ಲುವುದನ್ನು ಕೇಳಿ ತಿಳಿದಿಲ್ಲ. ಹೆಣ ತಿನ್ನುವವರು ಜಿಗುಪ್ಸೆ ಹುಟ್ಟಿಸುವ ಮಾರಿಗಳು” ಎಂದು ದುರ್ಯೋಧನನು ಹೇಳಿದನು
ಪದಾರ್ಥ (ಕ.ಗ.ಪ)
ಹೆಣದಿನಿಹಿ-ಹೆಣತಿನ್ನುವವರು,
ಹೇವ-ಲಜ್ಜೆ, ಅಸಹ್ಯ, ಜುಗುಪ್ಸೆ.
ಮೂಲ ...{Loading}...
ಹೆಣನನರಸುತ ರಕುತಪಾನಕೆ
ಸೆಣಸಿ ಶಾಕಿನಿ ಢಾಕಿನಿಯರೊಳು
ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ
ರಣದೊಳಗ್ಗದ ಕೈದುಕಾರರ
ಕೆಣಕಿ ಗೆಲುವುದ ಕೇಳಿದರಿಯೆವು
ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ ॥55॥
೦೫೬ ಬಯ್ಯಲರಿವೆ ದುರುಕ್ತಿ ...{Loading}...
ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯಬೇಡಾ ಸಿಂಹಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಟ್ಟ ಮಾತುಗಳೆಂಬ ಬಾಣದಲ್ಲಿ ಬಯ್ಯಲು ತಿಳಿದಿರುವೆ. ಆದರೆ ಶರೀರದ ಮೇಲೆ ಬಾಣಗಳನ್ನು ಪ್ರಯೋಗಿಸುವೆಯಾ ? ಅಥವಾ ಶಸ್ತ್ರಗಳು ಕೈಯಲ್ಲಿ ಇವೆಯೇ ? (ನಿನಗೆ ಶರಸಂಧಾನ ಶ್ರಮವುಂಟೋ) ಸಮರದಲ್ಲಿ ನಿನಗೆ ಯೋಗ್ಯತೆ ಎಷ್ಟು? ನನ್ನ ಅಯ್ಯನನ್ನು ಕರೆ ಎಂದು ಹೇಳುವ ನಿನ್ನ ಬಾಯನ್ನು ಕೊಯ್ಯಬೇಡವೇ ? ಸಿಂಹ ಕೇಸರವನ್ನು ಹಿಡಿದು ಉಯ್ಯಾಲೆಯಾಡುವ ಆನೆಯನ್ನು ನೋಡು ಎಂದು ರಾಜನನ್ನು ಕುರಿತು ರಭಸದಿಂದ ನುಡಿದನು. (ನನ್ನ ಕೇಸರದಲ್ಲಿ ಉಯ್ಯಾಲೆಯಾಡುವ ದುರ್ಯೋಧನನನ್ನು ನೋಡು ಎಂದು ವ್ಯಂಗ್ಯವಾಡಿದನು)
ಮೂಲ ...{Loading}...
ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯಬೇಡಾ ಸಿಂಹಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ ॥56॥
೦೫೭ ಎಸುತ ಹೊಕ್ಕನು ...{Loading}...
ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ
ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘಟೋತ್ಕಚನು ಬಾಣಗಳನ್ನು ಪ್ರಯೋಗಿಸುತ್ತಾ ಶತ್ರುಸೈನ್ಯವನ್ನು ಹೊಕ್ಕನು. ರಭಸದಿಂದ ಜ್ವಲಿಸುತ್ತಿರುವ ಹೊಸ ಹರಿತವಾದ ಬಾಣಗಳು ಆವರಿಸಿದುವು. ನಿಷ್ಠುರತೆಯಿಂದ ರಾಜನು ಪ್ರಯೋಗಿಸಿದ ಬಾಣಗಳು ವಿಫಲವಾದವು. ಘಟೋತ್ಕಚನ ಬಾಣಗಳ ಹರಿವಿನ ರಭಸದ ವ್ಯಾಪ್ತಿಯನ್ನು ತಿಳಿಯಲು ದುರ್ಯೋಧನನಿಗೆ ಸಾಧ್ಯವಾಗಲಿಲ್ಲ. ದುರ್ಯೋಧನನ ಕವಚ, ಶಿರಸ್ತ್ರಾಣ ಮೊದಲಾದುವುಗಳು ಒಡೆದು ಚೂರು ಚೂರಾದುವು. ಘಾಯದಿಂದ ಮೈಮೇಲೆ ರಕ್ತ ಸುರಿಯಲಾಗಿ ರಾಜನಿಗೆ ಶೌರ್ಯ ಅಡಗಿ, ಭೀತಿ ಹೆಚ್ಚಿತು.
ಟಿಪ್ಪನೀ (ಕ.ಗ.ಪ)
ಮಾಯಾಯುದ್ಧ - ರಾಮಾಯಣದಲ್ಲಿ ಮಯಾಯುದ್ಧದ ವಿವರಗಳಿವೆ. ಶ್ರೀಕೃಷ್ಣನು ಸಾಲ್ವನ ಮೇಲೆ ದಂಡೆತ್ತಿ ಹೋದಾಗಲೂ ಸೌಧ ವಿಮಾನದಿಂದಲೇ ಸಾಲ್ವನು ಶ್ರೀಕೃಷ್ಣನು ತಂದೆ ವಸುದೇವನ ಮಾಯಾಶಿರವನ್ನು ತೋರಿಸಿ ಅದನ್ನು ಕಡಿದು ಹಾಕಿದ ಮಾಯಾ ಪ್ರಸಂಗವಿದೆ. ದ್ರೋಣಪರ್ವದಲ್ಲಿ ಶಕುನಿ ಕೂಡ ಈ ಬಗೆಯ ಯುದ್ದ ಮಾಡುತ್ತಾನೆ. ಆದ್ದರಿಂದ ಮಾಯಾ ದುರೋದರ ಕ್ರೀಡಾಪಟು ಎಂದು ಪಗಡೆಯ ಜೂಜಿನ ಸಂದರ್ಭದಲ್ಲಿ ಹೆಸರು ಪಡೆದಿದ್ದ ಶಕುನಿ ತನ್ನ ಮಾಯಾತಂತ್ರವನ್ನು ಕ್ರೀಡೆಯಿಂದ ಯುದ್ಧಭೂಮಿಗೂ ವಿಸ್ತರಿಸಿರುವುದು ಸ್ಪಷ್ಟವಾಗುತ್ತದೆ.
ಸೈಂಧವ ವಧಾನಂತರ ಶಕುನಿಯ ಇಬ್ಬರು ವೀರಸೋದರರಾದ ಅಚಲ, ವೃಕ್ಷಕರು ಅರ್ಜುನನ ಮೇಲೆ ಯುದ್ಧಕ್ಕೆ ಬಂದರು. ಈ ಇಬ್ಬರೂ ಅವಳಿ ಸೋದರರೊ ಎಂಬಂತೆ ಒಂದೇ ರೂಪವಾಗಿ ಕಾಣುತ್ತಿದ್ದರು. ಅರ್ಜುನನು ವೃಷಕನ ರಥ ಅಶ್ವಧನಸ್ಸು ಸಾರಥಿ ಧ್ವಜಗಳನ್ನ ನಾಶಪಡಿಸಿದ. ಅನಂತರ ವೃಷಕನು ಅಚಲಿನ ಜೊತೆಗೆ ರಥವೇರಿ ಯುದ್ಧಕ್ಕೆ ನಿಂತ. ಘೋರಯುದ್ಧದಲ್ಲಿ ಅರ್ಜುನನು ಅವರಿಬ್ಬರನ್ನೂ 12ನೇ ದಿನ ಸಂಹರಿಸಿದಾಗ ಶಕುನಿ ಕ್ರೋಧಗೊಂಡು ಕೃಷ್ಣಾರ್ಜುನರ ಮೇಲೆ ಮಾಯಾಯುದ್ಧಕ್ಕೆ ನಿಂತ. ಕೃಷ್ಣಾರ್ಜುನರು ಭಯದಿಂದ ತತ್ತರಿಸುವಂತೆ ಮಾಡುವುದು ಮತ್ತು ಮೂಛೆ ಹೋಗುವಂತೆ ಮಾಡುವುದು ಅವನ ಉದ್ದೇಶವಾಗಿತ್ತು.
ಮಾಯಾ ಯುದ್ಧ ಎಂದರೆ ಕಣ್ಣಿಗೆ ನಿಜವೋ ಎಂಬಂತೆ ದೃಶ್ಯ ವಸ್ತುಗಳನ್ನು ಕಾಣಿಸುವುದು ಮತ್ತು ಚೀತ್ಕಾರ ಮಾಡುವುದು. ಮಾಯಾ ಕಬ್ಬಿಣದ ತುಂಡುಗಳು, ದಂಡಗಳು, ಶತಘ್ನಿ (ಫಿರಂಗಿ)ಗಳು ಶಕ್ತಿಗದೆ ಪರಿಘ, ಖಡ್ಗ, ಕಂಪನ, ನಖರ, ಮುಸಲ, ಗಂಡುಗೊಡಲಿ, ಕ್ಷುರಪ್ರ (ಅರ್ಧಚಂದ್ರಾಕೃತಿಯ ಬಾಣ) ನಾಳೀಕ, ವತ್, ದಂತ, ಅಸ್ಥಿಸಂಧಿ, ಚಕ್ರ, ಬಾಣ, ಪ್ರಾಸ (ಈಟಿ) ಮೊದಲಾದ ಶಸ್ತ್ರ ಆಯುಧ ವಿಶೇಷಗಳನ್ನು ಅರ್ಜುನನ ಮೇಲೆ ಸುರಿಸಿದ. ಇವೆಲ್ಲ ಎಲ್ಲ ದಿಕ್ಕುಗಳಲ್ಲಿಯೂ ಬಂದು ಬೀಳುತ್ತಿದ್ದುವು.
ಬರಿಯ ಶಸ್ತ್ರಾಸ್ತ್ರಗಳನ್ನೇ ಅಲ್ಲದೆ ಶಕುನಿಯು ಕತ್ತೆ, ಒಂಟೆ, ಕೋಣ, ಸಿಂಹ ಹುಲಿ, ಚಿರತೆ ಸ್ವಮರ (ದೊಡಡ ಚಮರ ಮೃಗಗಳು) ಕರಡಿಗಳು ಗೃದ್ಧ್ರಗಳು ಕೋತಿಗಳು ಹಾವುಗಳನ್ನು ಎಸೆದಾಡಿದ. ಅಲ್ಲದೆ ನಾನಾ ಬಗೆಯ ಹಸಿದ ಮೂಕ ರಾಕ್ಷಸರನ್ನು ವಿಧವಿಧ ಹದ್ದುಗಳನ್ನು ಅರ್ಜುನನ ಮೇಲೆ ಆಕ್ರಮಣಕ್ಕೆ ಇಳಿಸಿದ. ಅವನ ಮಾಯೆಯಿಂದ ಕಗ್ಗತ್ತಲು ಬೇರೆ ಸೃಷ್ಟಿಯಾಗಿತ್ತು. ಅಲ್ಲದೆ ಆ ಪಕ್ಷಿ ಪ್ರಾಣಿ ರಾಕ್ಷಸರೆಲ್ಲ ಕೆಟ್ಟಕೆಟ್ಟ ಮಾತುಗಳಿಂದ ಅರ್ಜುನನನ್ನು ನಿಂದಿಸುತ್ತಿದ್ದರು. ಅರ್ಜುನ ಇವಕ್ಕೆಲ್ಲ ಭಯಪಡುವವನಲ್ಲ. ತೇಜೋಮಯಾಸ್ತ್ರದಿಂದ ಕತ್ತಲನ್ನು ಹೋಗಲಾಡಿಸಿದನು. ಆಗ ಜಲಪ್ರವಾಹ ನುಗ್ಗಿತು. ಅದನ್ನು ಆದಿತ್ಯಾಸ್ತ್ರದಿಂದ ಒಣಗುವಂತೆ ಮಾಡಿದ. ಕೊನೆಗೆ ಎಲ್ಲ ಮಾಯೆಗಳೂ ನಶಿಸಿದ ನಂತರ ಅರ್ಜುನನ ಬಾಣಗಳಿಂದ ಏಟು ತಿಂದು ಶಕುನಿ ಅಲ್ಲಿಂದ ಪಲಾಯನ ಮಾಡಿದ.
ಮೂಲ ...{Loading}...
ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ
ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ ॥57॥
೦೫೮ ಅಕಟ ದೊರೆಯೋ ...{Loading}...
ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ… ದೊರೆಯೇ ಸಿಕ್ಕಿದನು. ನಮ್ಮ ಸೇನೆಯ ರಥಿಕರು ಪಾತಕರು. ಶಿವ… ಶಿವ… ಹಿಡಿಂಬಾಸುತನಾದ ಘಟೋತ್ಕಚನಿಗೆ ದೊರೆಯನ್ನು ಒಪ್ಪಿಸಿ ದ್ರೋಣ, ಕೃಪರು ಅವನನ್ನು ಕೊಂದರು ಎನ್ನುತ್ತಾ ಸಕಲ ಸೇವಕ ವರ್ಗದವರು ಮಂತ್ರಿ ಸಮೂಹ ಕಿರುಚಿದರು. ಅದನ್ನು ಕೇಳಿ, ಹುಬ್ಬುಗಳನ್ನು ಗಂಟಿಕ್ಕಿದ, ಭಯಂಕರವಾದ ಮುಖವುಳ್ಳ ದೈತ್ಯ ಸೈನ್ಯಸಮುದ್ರವು ವಿಜೃಂಭಿಸಿತು.
ಪದಾರ್ಥ (ಕ.ಗ.ಪ)
ಅರ್ಭಕ-ಸುತ, ಮಗ,
ಮೂಲ ...{Loading}...
ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ ॥58॥
೦೫೯ ಬಕನ ಮಕ್ಕಳು ...{Loading}...
ಬಕನ ಮಕ್ಕಳು ಜಟನ ಕಿಮ್ಮೀ
ರಕನ ಸುತರು ಹಿಡಿಂಬತನುಜರು
ವೃಕ ಜರಾಸಂಧಾತ್ಮಜರು ಶಿಶುಪಾಲನಂದನರು
ಸಕಲ ಸನ್ನಾಹದಲಿ ದೈತ್ಯ
ಪ್ರಕರ ಹೊಕ್ಕುದು ರಾಯ ರಥಪಾ
ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಕಾಸುರ, ಜಟ, ಕಿಮ್ಮೀರ - ಇವರ ಮಕ್ಕಳು, ಹಿಡಿಂಬ, ವೃಕ ಹಾಗೂ ಜರಾಸಂಧ -ಇವರ ಮಕ್ಕಳು, ಶಿಶುಪಾಲನ ಸುತರು ಮೊದಲಾದ ರಾಕ್ಷಸ ಸಮೂಹ ಸಕಲ ಸಿದ್ಧತೆಯಿಂದ ಮುನ್ನುಗ್ಗಿತು. ದುರ್ಯೋಧನನ ರಥ ಪಾಲಕರು ಆತುರದಿಂದ ಯುದ್ಧದಲ್ಲಿ ಘಟೋತ್ಕಚನನ್ನು ಮುತ್ತಿದರು.
ಮೂಲ ...{Loading}...
ಬಕನ ಮಕ್ಕಳು ಜಟನ ಕಿಮ್ಮೀ
ರಕನ ಸುತರು ಹಿಡಿಂಬತನುಜರು
ವೃಕ ಜರಾಸಂಧಾತ್ಮಜರು ಶಿಶುಪಾಲನಂದನರು
ಸಕಲ ಸನ್ನಾಹದಲಿ ದೈತ್ಯ
ಪ್ರಕರ ಹೊಕ್ಕುದು ರಾಯ ರಥಪಾ
ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ ॥59॥
೦೬೦ ಕೆಣಕಿದರಲಾ ರಣವ ...{Loading}...
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾವ ಸದರವೊ ನೋಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆ ಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಬಲ ರಕ್ಕಸರು ಯುದ್ಧವನ್ನು ಕೆಣಕಿದರಲ್ಲವೇ ? ಭಲೆ, ಯುದ್ಧಭೂಮಿಯಲ್ಲಿ ನಾವು ಯಾವ ರೀತಿಯಲ್ಲಿ ಸುಲಭರೋ ? ಭಟರೇ…. ನೋಡಿರಿ. ನಮ್ಮೊಡನೆ ಹೋರಾಟ, ಸ್ಪರ್ಧೆ ಅಲ್ಲವೇ ? ವಿಶೇಷವಾಗಿ ಯುದ್ಧಕ್ಕೋಸ್ಕರ ಆಕ್ರಮಿಸುವವರಲ್ಲವೇ ? ನಮ್ಮೊಡನೆ ಏರಾಟ ಅಲ್ಲವೇ ?” ಎನ್ನುತ್ತಾ ಘಟೋತ್ಕಚನು ಸಾರಥಿಯ ಕೈ ಮೇಲೆ ಕೈಯಿಂದ ಹೊಡೆದು ಉತ್ಸಾಹಿಸಿದನು.
ಪದಾರ್ಥ (ಕ.ಗ.ಪ)
ಹೊಣಕೆ-ಏರಾಟ
ಮೂಲ ...{Loading}...
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾವ ಸದರವೊ ನೋಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆ ಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ ॥60॥
೦೬೧ ಹೆಸರುಗೊಣ್ಡರೆ ಕಿವಿಗಳಿಗೆ ...{Loading}...
ಹೆಸರುಗೊಂಡರೆ ಕಿವಿಗಳಿಗೆ ಕ
ರ್ಕಶರು ರಕ್ಕಸರೆಂಬ ಹೆಸರಿದು
ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ
ಹೊಸ ಮಸೆಯ ಹೊಗರಂಬುಗಳನೆ
ಬ್ಬಿಸಿದನುಬ್ಬಿಸಿದನು ವಿರೋಧಿಗ
ಳಸು ಸಮೀರಣನಿಂದ ನಿಜಭುಜ ವಿಕ್ರಮಾನಳನ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಘಟೋತ್ಕಚ ಇತರ ರಾಕ್ಷಸರನ್ನು ಕುರಿತು ಹೀಗೆ ಹೇಳಿದನು) ಹೆಸರು ಕೇಳಿದ ಮಾತ್ರಕ್ಕೆ ರಕ್ಕಸರು ಕಿವಿಗಳಿಗೆ ಕರ್ಕಶರು ಎಂಬ ಹೆಸರಿದೆ. ಈ ರಾಕ್ಷಸರು ಸಣ್ಣ ಹುಳುಗಳನ್ನು ಆಶ್ರಯಿಸಿ ಆ ಹೆಸರನ್ನು ಕೆಡಿಸಿದರು. ಶಿವ ಶಿವಾ ಎನ್ನುತ್ತಾ ಹೊಸದಾದ, ಕಾಂತಿಯುಕ್ತವಾದ ಬಾಣಗಳನ್ನು ಪ್ರಯೋಗಿಸಿ ಶತ್ರುಗಳ ಪ್ರಾಣ ವಾಯುವಿನಿಂದ ತನ್ನ ಭುಜಪರಾಕ್ರಮವೆಂಬ ಅಗ್ನಿಯನ್ನು ಪ್ರಜ್ವಲಗೊಳಿಸಿದನು.
ಮೂಲ ...{Loading}...
ಹೆಸರುಗೊಂಡರೆ ಕಿವಿಗಳಿಗೆ ಕ
ರ್ಕಶರು ರಕ್ಕಸರೆಂಬ ಹೆಸರಿದು
ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ
ಹೊಸ ಮಸೆಯ ಹೊಗರಂಬುಗಳನೆ
ಬ್ಬಿಸಿದನುಬ್ಬಿಸಿದನು ವಿರೋಧಿಗ
ಳಸು ಸಮೀರಣನಿಂದ ನಿಜಭುಜ ವಿಕ್ರಮಾನಳನ ॥61॥
೦೬೨ ಓಡಲೀಯದೆ ಸದರಗೊಡುತ ...{Loading}...
ಓಡಲೀಯದೆ ಸದರಗೊಡುತ ವಿ
ಭಾಡಿಸುತ ಮೇಲಿಕ್ಕಿದರೆ ಕೈ
ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ
ಖೇಡತನವನು ಬಿಡಿಸಿ ಸಲೆ ಕೊಂ
ಡಾಡಿ ಕಾದಿದನಸುರಜಾತಿಯೊ
ಳೋಡೆ ಪರಿಭವ ತನ್ನದೆಂಬ ಪದಸ್ತತನದಿಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ರಾಕ್ಷಸರಿಗೆ ಹಿಮ್ಮೆಟ್ಟಲು ಅವಕಾಶಕೊಡದೆ ಸದರಕೊಡುತ್ತ, ಕೊಲ್ಲುತ್ತಾ, ಮೇಲೇರಿ ಬಂದರೆ, ಕೈಮಾಡಿದರೆ ಬಾಣಗಳ ಹೊಡೆತಕ್ಕೆ ಶರೀರವನ್ನೊಡ್ಡಿ ಸೈರಿಸಿಕೊಳ್ಳುತ್ತಾ, ಅಂಜಿಕೆಯನ್ನು ಬಿಡಿಸಿ ವಿಶೇಷವಾಗಿ ಕೊಂಡಾಡಿ, ರಾಕ್ಷಸ ಜಾತಿಯಲ್ಲಿ ಹಿಮ್ಮೆಟ್ಟಿದರೆ ಅವಮಾನ ತನ್ನದು ಎಂಬ ನಂಬಿಕೆಯಿಂದ ಶತ್ರುಗಳನ್ನು ಸಂಹರಿಸಿ ಘಟೋತ್ಕಚನು ಇಟ್ಟಕಾಲನ್ನು ತೆಗೆಯದ ಹಾಗೆ ಕಾದಿದನು.
ಪದಾರ್ಥ (ಕ.ಗ.ಪ)
ಪದಸ್ತತನ-ಇಟ್ಟ ಕಾಲನ್ನು ತೆಗೆಯದ ಹಾಗೆ.
ಮೂಲ ...{Loading}...
ಓಡಲೀಯದೆ ಸದರಗೊಡುತ ವಿ
ಭಾಡಿಸುತ ಮೇಲಿಕ್ಕಿದರೆ ಕೈ
ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ
ಖೇಡತನವನು ಬಿಡಿಸಿ ಸಲೆ ಕೊಂ
ಡಾಡಿ ಕಾದಿದನಸುರಜಾತಿಯೊ
ಳೋಡೆ ಪರಿಭವ ತನ್ನದೆಂಬ ಪದಸ್ತತನದಿಂದ ॥62॥
೦೬೩ ಎಸುಗೆಯೊಳ್ಳಿತಲಾಯುಧನಲಂ ...{Loading}...
ಎಸುಗೆಯೊಳ್ಳಿತಲಾಯುಧನಲಂ
ಬುಸನ ಪರಿ ತಪ್ಪಲ್ಲ ತಪ್ಪ
ಲ್ಲಸುರನಹೆಯೋ ಜಾಗು ಕಿಮ್ಮೀರಾತ್ಮಜಾಯೆನುತ
ಅಸಿ ಪರಶು ಪಟ್ಟಿಸ ಮುಸುಂಡಿ
ಪ್ರಸರ ಧಾರಾಪಾತದಲಿ ಮೈ
ಬಸಿಯೆ ರಕುತದ ಸಾರ ಸಾಲಿಡೆ ಬಲದೊಳೊಳಹೊಕ್ಕ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಣ ಪ್ರಯೋಗ ಚೆನ್ನಾಗಿದೆ…… ಅಲಾಯುಧ ಹಾಗೂ ಅಲಂಬುಸರೆಂಬ ರಾಕ್ಷಸರ ಯುದ್ಧದ ರೀತಿ ತಪ್ಪಲ್ಲ, ಕಿಮ್ಮೀರಸುತನೇ ರಾಕ್ಷಸನಾಗಿರುವೆ ಭಲೇ! " ಎನ್ನುತ್ತ ಕತ್ತಿ, ಕೊಡಲಿ, ಪಟ್ಟಿಸ, ಮುಸುಂಡಿ ಮೊದಲಾದ ಆಯುಧಗಳ ರಾಸಿಯ ಧಾರೆಯ ಹೊಡೆತದಲ್ಲಿ ಶತ್ರುಗಳ ಮೈಯಿಂದ ರಕ್ತದ ಸಾರ ಹರಿಯುತ್ತಿರಲು ಸೈನ್ಯದ ಒಳಗೆ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಜಾಗು-ಭಲೇ
ಟಿಪ್ಪನೀ (ಕ.ಗ.ಪ)
ಅಲಾಯುಧ - ಅಲಾಯುಧ ಒಬ್ಬ ರಾಕ್ಷಸ. ಬಕ, ಅಲಾಯುಧ ಇವರೆಲ್ಲ ಸೋದರರ. ಕಿಮ್ಮೀರ ಹಿಡಿಂಬ ರಾಕ್ಷಸ ಇವರೆಲ್ಲರ ಬಂದುವೂ ಸ್ನೇಹಿತರೂ ಆಗಿದ್ದ. ಏಕಚಕ್ರನಗರದ ಜನಗಳಿಗೆ ಹಿಂಸೆ ಕೊಡುತ್ತಿದ್ದ ಬಕಾಸುರನ್ನ್ನು ಭೀಮನು ಕೊಂದ ಸುದ್ದಿತಿಳಿದಂದಿನಿಂದ ಇವರೆಲ್ಲ ಭೀಮನಿಗೆ-ಪಾಂಡವರಿಗೆ ಬದ್ಧವೈರಿಗಳಾದರು. ಅರಣ್ಯವಾಸ ಸಂದರ್ಭದಲ್ಲಿ ಪಾಂಡವರು ಕಾಮ್ಯಕವನದಲ್ಲಿದ್ದಾಗ ಸಮಯ ಸಾಧಿಸಿ ಕಿಮ್ಮೀರನು ಪಾಂಡವರನ್ನು ಅಡ್ಡಗಟ್ಟಿ ಭೀಮನೊಂದಿಗೆ ಹೋರಾಡಿ ಸತ್ತನಷ್ಟೆ. ಆಗಿನಿಂದ ಸೇಡಿನ ಸರದಿ ಅಲಾಯುಧನದಾಯಿತು. ಮಹಾಭಾರತ ಯುದ್ಧದಲ್ಲಿ ಇವನು ತಾನಾಗಿ ರಾಕ್ಷಸಸೇನೆಯೊಂದಿಗೆ ಹೋಗಿ ಕೌರವನ ಪಕ್ಷವನ್ನು ಸೇರಿಕೊಂಡು ಪಾಂಡವರ ವಿರುದ್ಧದ ಪ್ರಚಂಡವಾಗಿ ಹೋರಾಡಿದ. ಇವನ ಪರಾಕ್ರಮವನ್ನು ಕಂಡು ಕೌರವಸೇನೆ ಹರ್ಷಗೊಂಡಿತು ಎಂದು ದ್ರೋಣಪರ್ವದ ಏಳನೇ ಅಧ್ಯಾಯದಲ್ಲಿ ಹೇಳಲಾಗಿದೆ.
ಮೂಲ ...{Loading}...
ಎಸುಗೆಯೊಳ್ಳಿತಲಾಯುಧನಲಂ
ಬುಸನ ಪರಿ ತಪ್ಪಲ್ಲ ತಪ್ಪ
ಲ್ಲಸುರನಹೆಯೋ ಜಾಗು ಕಿಮ್ಮೀರಾತ್ಮಜಾಯೆನುತ
ಅಸಿ ಪರಶು ಪಟ್ಟಿಸ ಮುಸುಂಡಿ
ಪ್ರಸರ ಧಾರಾಪಾತದಲಿ ಮೈ
ಬಸಿಯೆ ರಕುತದ ಸಾರ ಸಾಲಿಡೆ ಬಲದೊಳೊಳಹೊಕ್ಕ ॥63॥
೦೬೪ ಉರು ತಿಮಿಙ್ಗಿಳನಬುಧಿಯಲಿ ...{Loading}...
ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಶೇಷವಾದ, ದೊಡ್ಡ ತಿಮಿಂಗಿಲಗಳು ಸಮುದ್ರದಲ್ಲಿ ಸಾಮಾನ್ಯ ಮೀನುಗಳನ್ನು ನೋಯಿಸುವಂತೆ ಇರಲಾಗಿ ರಾಜನೇ ಹೇಳುವುದೇನು ? ಕೌರವರ ಬಳಿಯಿದ್ದ ರಾಕ್ಷಸ ಸಮುದ್ರವನ್ನು ಬೊಗಸೆಯಲ್ಲಿ ಕುಡಿದನು. ಕತ್ತರಿಸಿದ ಕೊರಳು, ಬಸಿಯುವ ಹಸಿ ಕರುಳ, ಕಪಾಲದ ಮೇಲೆ ಹರಿಯುವ ರಕ್ತದಿಂದ ತುಂಬಿದ ರಣಭೂಮಿ ರೌದ್ರಮಯ ರಸವನ್ನು ಹರಿಸುತ್ತಿತ್ತು.
ಪಾಠಾನ್ತರ (ಕ.ಗ.ಪ)
ಹುಲುಮೀನಿನಂತರಲರಸ – ಹುಲುಮೀನಿನಂತಿರಲರಸ
ದ್ರೋಣ ಪರ್ವ, ಮೈ.ವಿ.ವಿ
ಮೂಲ ...{Loading}...
ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ ॥64॥
೦೬೫ ಜಾಗು ದೈತ್ಯರ ...{Loading}...
ಜಾಗು ದೈತ್ಯರ ರಭಸದಲಿ ಲೇ
ಸಾಗಿ ಕಾದಿದಿರೀಸು ನಮ್ಮಲಿ
ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ
ಆಗಲಿನ್ನಾವುದು ನಮಗೆ ಕೈ
ಲಾಗು ನಿಮ್ಮಸುಗಳು ಶರೀರವ
ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೆ ದೈತ್ಯರ ರಭಸದಲ್ಲಿ ಚೆನ್ನಾಗಿ ಕಾದಾಡಿದಿರಿ. ಹೀಗೆ ಕಲಿತನದ ಕೆಚ್ಚುಳ್ಳವರು ನಮ್ಮಲ್ಲಿ ಎದುರಿಸಿ ನಿಂತವರಾರು ? ಆಗಲಿ, ಇನ್ನು ನಮಗೆ ಅಗತ್ಯವಾದ ಹಸ್ತಕೌಶಲ ಯಾವುದು ? ನಿಮ್ಮ ಪ್ರಾಣಗಳು ಶರೀರವನ್ನು ಬಿಟ್ಟು ತೊಲಗಲಿ” ಎಂದು ಬೊಬ್ಬಿರಿದು ಘಟೋತ್ಕಚನು ಅತಿರಥರ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಕೈಲಾಗು-ಹಸ್ತ ಕೌಶಲ
ಮೂಲ ...{Loading}...
ಜಾಗು ದೈತ್ಯರ ರಭಸದಲಿ ಲೇ
ಸಾಗಿ ಕಾದಿದಿರೀಸು ನಮ್ಮಲಿ
ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ
ಆಗಲಿನ್ನಾವುದು ನಮಗೆ ಕೈ
ಲಾಗು ನಿಮ್ಮಸುಗಳು ಶರೀರವ
ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ ॥65॥
೦೬೬ ಸಿಡಿಲು ಮೊರೆದರೆ ...{Loading}...
ಸಿಡಿಲು ಮೊರೆದರೆ ಸರ್ಪನಂಜುವು
ದಡಗುವನೆ ಗರುಡನ ವೃಥಾ ಕೆಡೆ
ನುಡಿಯ ನುಡಿದರೆ ದಿಟ್ಟನೆಂಬರೆ ವೀರರಾದವರು
ಫಡ ಫಡೆನುತ ಬಕಾಸುರನ ಮಗ
ನಡಸಿದನು ಕೂರಂಬನಾತನ
ಕಡುಹ ಹೊಗಳುತ ಹೊಕ್ಕು ಹಿಡಿದನು ಬೀಸಿದನು ಖಳನ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಲು ಆರ್ಭಟಿಸಿದರೆ ಸರ್ಪವು ಹೆದರುವುದು. ಗರುಡನು ಬಚ್ಚಿಟ್ಟುಕೊಳ್ಳುವನೇ ? ವ್ಯರ್ಥವಾಗಿ ಕೆಟ್ಟಮಾತುಗಳನ್ನಾಡಿದರೆ ವೀರರಾದವರು ಅಂಥವರನ್ನು ದಿಟ್ಟನೆನ್ನಲು ಸಾಧ್ಯವೇ ? ಭಲೆ, ಭಲೆ ಎನ್ನುತ್ತಾ ಬಕಾಸುರನ ಮಗನು ಹರಿತವಾದ ಬಾಣವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದನು. ಘಟೋತ್ಕಚನು ಆತನ ಪರಾಕ್ರಮವನ್ನು ಹೊಗಳುತ್ತಾ ಅವನನ್ನು ಸಮೀಪಿಸಿ ಹಿಡಿದು ಎತ್ತಿ ಬೀಸಿದನು.
ಮೂಲ ...{Loading}...
ಸಿಡಿಲು ಮೊರೆದರೆ ಸರ್ಪನಂಜುವು
ದಡಗುವನೆ ಗರುಡನ ವೃಥಾ ಕೆಡೆ
ನುಡಿಯ ನುಡಿದರೆ ದಿಟ್ಟನೆಂಬರೆ ವೀರರಾದವರು
ಫಡ ಫಡೆನುತ ಬಕಾಸುರನ ಮಗ
ನಡಸಿದನು ಕೂರಂಬನಾತನ
ಕಡುಹ ಹೊಗಳುತ ಹೊಕ್ಕು ಹಿಡಿದನು ಬೀಸಿದನು ಖಳನ ॥66॥
೦೬೭ ರಥಚಯವ ನುಗ್ಗೊತ್ತಿದನು ...{Loading}...
ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣಬೀದಿಯಲ್ಲಿ ರಥಸಮೂಹಗಳನ್ನು ಮುರಿಯುವ ಹಾಗೆ ಒತ್ತಿದನು ಸಾರಥಿಗಳನ್ನು ಸೀಳಿದನು. ದೊಡ್ಡ ಮಹಾರಥರ ಬಿಂಕ, ಬಿಗುಮಾನಗಳನ್ನು ಮುರಿದನು. ಶತ್ರುಸೈನ್ಯ ನಾಶವಾಯಿತು. ಅದು ರಾಕ್ಷಸನ ಯುದ್ಧದಿಂದ ಅತಿಯಾಗಿ ಕಡೆದಂತಾಗಿ ಚೆದುರಿತು. ಇದರಿಂದ ಭೂಭಾರ ಕಡಿಮೆಯಾಗಿ ಆದಿಶೇಷನ ಬಾಗಿದ್ದ ಕೊರಳು ನೇರವಾಯಿತು.
ಪದಾರ್ಥ (ಕ.ಗ.ಪ)
ಸೈನಿಮಿರೆ-ನೇರ
ಟಿಪ್ಪನೀ (ಕ.ಗ.ಪ)
ಮಹಾರಥ : ಒಬ್ಬನೇ ಹತ್ತು ಸಾವಿರ ಬಿಲ್ಲುಗಾರರನ್ನು ಎದುರಿಸಬಲ್ಲ ಯೋಧ. ತನ್ನನ್ನು ತನ್ನ ಸಾರಥಿಯನ್ನು, ತನ್ನ ಕುದುರೆಗಳನ್ನು ಕಾಪಾಡಿಕೊಂಡು ಯುದ್ಧ ಮಾಡುವ ರಥಿಕ.
ಮೂಲ ...{Loading}...
ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ ॥67॥
೦೬೮ ಒರಸಿದನು ರಣದಲಿ ...{Loading}...
ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಡಿಂಬಾಸುರನ ಮಕ್ಕಳನ್ನು ಚೈದ್ಯ, ಮಾಗಧ, ನರಕ, ಕಿಮ್ಮೀರಕ, ಜಟಾಸುರನ ಮಗ ಮೊದಲಾದ ರಾಕ್ಷಸ ಸಂತತಿಯನ್ನು ಯುದ್ಧದಲ್ಲಿ ಸಂಹಾರ ಮಾಡಿದನು. " ಬರಲಿ ಕರ್ಣ, ದ್ರೋಣರು. ಉಳಿದ ಅಲ್ಪರನ್ನು ನನ್ನೊಂದಿಗೆ ಯುದ್ಧಕ್ಕೆ ನೇಮಿಸಬೇಡ. ಭೀಮನನ್ನು ಅರ್ಜುನನನ್ನು ಬಯಸುವವರಿಗೆ ಮೊದಲು ನನ್ನೊಡನೆ ಕೈಮಾಡ ಹೇಳಿ” ಎಂದು. ಘಟೋತ್ಕಚನು ಹೇಳಿದನು.
ಪದಾರ್ಥ (ಕ.ಗ.ಪ)
ಜರಡು-ಅಲ್ಪ,
ಮೂಲ ...{Loading}...
ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ ॥68॥
೦೬೯ ಎನಲು ಕವಿದುದು ...{Loading}...
ಎನಲು ಕವಿದುದು ಸೇನೆ ಕಂಗನೆ
ಗನಲಿ ಕರ್ಣ ದ್ರೋಣರಿಗೆ ನೀ
ನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ
ತನತನಗೆ ಕಾಲಾಳು ಮೇಲಾ
ಳನುಪಮಿತರೌಕಿದರು ಚಾಪ
ಧ್ವನಿಯೊಳಗೆ ನೆರೆ ಮುಳುಗೆ ಬಹುವಿಧವಾದ್ಯ ನಿರ್ಘೋಷ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಲು ಅಧಿಕವಾಗಿ ಕೋಪಿಸಿ ಕುರುಸೇನೆ ಕವಿಯಿತು. ಕರ್ಣದ್ರೋಣರಿಗೆ ನೀನೆಷ್ಟರವನು ? ಭಲೆ, ಭೀಮಸುತನು ಬಾಯಿಬಡುಕನು ಎನ್ನುತ್ತಾ ತಮ್ಮ ತಮ್ಮಲ್ಲೇ ಮೇಲಾಳು, ಕಾಲಾಳುಗಳು, ಅನುಪಮ ವೀರರು ಮೆಲೆ ಬಿದ್ದರು. ಅವರ ಶಸ್ತ್ರಗಳ ಧ್ವನಿಯಲ್ಲಿ ಬಹುವಿಧ ವಾದ್ಯಘೋಷಗಳು ಮುಳುಗಿ ಹೋದವು.
ಪದಾರ್ಥ (ಕ.ಗ.ಪ)
ಕಂಗನೆ-ಅಧಿಕವಾಗಿ, ಕನಲಿ-ಕೋಪಿಸಿ, ಕಾಲಾಳು-ಭೂಮಿಯ ಮೇಲೆ ನಿಂತು ಯುದ್ಧ ಮಾಡುವ ಶೂರರು, ಮೇಲಾಳು-ರಥದ ಮೇಲಿನಿಂದ ಯುದ್ಧ ಮಾಡುವ ಶೂರರು, ಅನುಪಮಿತ-ಹೋಲಿಕೆಯಿಲ್ಲದ, ಚಾಪ-ಶಸ್ತ್ರ
ಮೂಲ ...{Loading}...
ಎನಲು ಕವಿದುದು ಸೇನೆ ಕಂಗನೆ
ಗನಲಿ ಕರ್ಣ ದ್ರೋಣರಿಗೆ ನೀ
ನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ
ತನತನಗೆ ಕಾಲಾಳು ಮೇಲಾ
ಳನುಪಮಿತರೌಕಿದರು ಚಾಪ
ಧ್ವನಿಯೊಳಗೆ ನೆರೆ ಮುಳುಗೆ ಬಹುವಿಧವಾದ್ಯ ನಿರ್ಘೋಷ ॥69॥
೦೭೦ ಆಳಹಿರಿ ನಿಮಗಞ್ಜುವೆನು ...{Loading}...
ಆಳಹಿರಿ ನಿಮಗಂಜುವೆನು ಕಾ
ಲಾಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಧರಾಗಿದ್ದೀರಿ ನಿಮಗೆ ಹೆದರುವೆನು. ಕಾಲಾಳುಗಳನ್ನು ಹೊಡೆಯುವುದಿಲ್ಲ. ಕುದುರೆ ಸವಾರರು ಮೇಲೆ ಬೀಳಲಿ. ರಥಿಕರು ತಮ್ಮ ರಥಗಳನ್ನು ವೇಗವಾಗಿ ಹಾಯಿಸಲಿ ಆನೆಗಳ ಗುಂಪನ್ನು ನುಗ್ಗಿಸಲಿ. ಅವರ ಮೇಲೆ ಬಾಣ ಹೂಡುವವನಲ್ಲ. ವಿಶೇಷವಾದ ಹುರುಡು ಇರುವುದಾದರೆ ಕರ್ಣ, ದ್ರೋಣ, ಕೃಪರು ಯುದ್ಧಕ್ಕೆ ಬರಲಿ ಎಂದನು.
ಪದಾರ್ಥ (ಕ.ಗ.ಪ)
ಹೀಹಾಳಿ-ಹುರುಡು, ಪೈಪೋಟಿ.
ಮೂಲ ...{Loading}...
ಆಳಹಿರಿ ನಿಮಗಂಜುವೆನು ಕಾ
ಲಾಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ ॥70॥
೦೭೧ ಹಲಬರಸುರರು ಮಡಿದರಿವನ ...{Loading}...
ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
71.” ಕೌರವರ ಕಡೆಯ ಹಲವು ರಾಕ್ಷಸರು ಮಡಿದರು. ಇವನ ಶ್ರೇಷ್ಠವಾದವನು. ರಾತ್ರಿ ಯುದ್ಧದ ತಂತ್ರ ಈತನಿಗೆ ಗೊತ್ತು " ಎನ್ನುತ್ತಾ ದ್ರೋಣಾದಿ ನಾಯಕರು ಹಿಂಜರಿದರು. ಮುಂದೇನು ? ಪಾಂಡವರು ಯದುಕುಲ ಶ್ರೇಷ್ಠನಾದ ಪರಿಶುದ್ಧನಾದ ಗದುಗಿನ ವೀರನಾರಾಯಣನನ್ನು ಭಕ್ತಿಯಿಂದ ಒಲಿಸಿಕೊಂಡಿದ್ದಾರಲ್ಲವೇ ? ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಆಯತ-ತಂತ್ರ
ಮೂಲ ...{Loading}...
ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ ॥71॥