೧೩

೦೦೦ ಸೂ ಗಣ್ಡುಗಲಿ ...{Loading}...

ಸೂ. ಗಂಡುಗಲಿ ಕೋದಂಡ ರುದ್ರನ
ಕಂಡು ವಿರಥನ ಮಾಡಿದನು ಮಾ
ರ್ತಾಂಡತನಯನ ಗೆಲಿದು ರಣದಲಿ ನೊಂದನಾ ಭೀಮ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕಡುಗೋಪದಲಿ ಕಳಶಜ
ನಾಳ ಮೇಳೈಸಿದನು ನಿಜಮೋಹರವ ಹಿಂದಿಕ್ಕಿ
ಕಾಳೆಗದೊಳನಿಲಜನನರಸುತ
ಲೋಲುಪತಿ ಮಿಗೆ ಬರುತ ಭೀಮನ
ಕೋಲ ಕೋಳಾಹಳವನೀಕ್ಷಿಸುತಲ್ಲಿಗೈತಂದ ॥1॥

೦೦೨ ಇದೆ ಗದಾದಣ್ಡದ ...{Loading}...

ಇದೆ ಗದಾದಂಡದ ಹತಿಗೆ ಮು
ಗ್ಗಿದ ಮತಂಗ ವರೂಥಚಯವಿ
ಲ್ಲಿದೆ ಶರಾಳಿಯಲತಿರಥರ ಗೋನಾಳಿಗಡಿತವಿದೆ
ಇದೆ ರಥದ ಪದಘಾತದಲಿ ಹೆಣ
ಮೆದೆಯ ಪಾಯದಳೌಘ ಭೀಮನ
ಕದನ ಪಥವಿದೆಯೆನುತ ನಗುತೈತಂದನಾ ದ್ರೋಣ ॥2॥

೦೦೩ ಕಡಿದ ಖಡೆಯದ ...{Loading}...

ಕಡಿದ ಖಡೆಯದ ಕುಸುರಿಗಳ ಚಿನ
ಕಡಿಯ ಹೀರಾವಳಿಯ ಮುಕುಟದ
ಸಡಿಲಿದನುಪಮ ರತುನರಾಜಿಯ ಮುರಿದ ಕಂಕಣದ
ಕಡಿಕು ಪಸರಿಸೆ ಕೌರವಾನುಜ
ರಡೆಗೆಡೆದ ರಣ ಕಾಂಚನಾದ್ರಿಯ
ಸಿಡಿಲ ಕಾಳೆಗದಂತೆ ಮೆರೆದಿರೆ ಕಂಡನಾ ದ್ರೋಣ ॥3॥

೦೦೪ ಉಡಿದ ಬೆಳುಗೊಡೆಯಬುಜ ...{Loading}...

ಉಡಿದ ಬೆಳುಗೊಡೆಯಬುಜ ಪಂಕ್ತಿಯ
ಸಿಡಿದ ಚಮರಿಯ ಹಾವಸೆಯ ಕೆಸ
ರಿಡುವ ರಕುತಾಂಬುಗಳ ನರವಿನ ನಾಳದೇಳಿಗೆಯ
ಕಡುಮದದ ಕಾಡಾನೆ ಹೊಕ್ಕೊಡ
ನೊಡನೆ ಕಲಕಿದ ಕೊಳನವೊಲು ಭಯ
ವಡಸುತಿದೆ ಪವನಜನ ರಣಪಥವೆನುತ ಬರುತಿರ್ದ ॥4॥

೦೦೫ ಧುರದೊಳಗೆ ಗುರು ...{Loading}...

ಧುರದೊಳಗೆ ಗುರು ವಹಿಲ ಮಿಗಲೈ
ತರಲು ದೂರಕೆ ಕೇಳಲಾದುದು
ಹರಿಸುತನ ಹರಿನಾದ ತೇಜಿಯ ರಥದ ರೌದ್ರರವ
ತಿರುವಿನಬ್ಬರವಂಬಿನುಬ್ಬರ
ಧುರರಭಸ ಕಲ್ಪಾಂತ ಘನ ಸಾ
ಗರದ ಮೊರೆವಾಳಾಪ ಭೀಮನ ಸಮರದಾಟೋಪ ॥5॥

೦೦೬ ಅತ್ತಲದೆ ಪವನಜನ ...{Loading}...

ಅತ್ತಲದೆ ಪವನಜನ ಕಳಕಳ
ದತ್ತ ಹರಿಸೈ ರಥವನೆನುತು
ದ್ವೃತ್ತ ಭೀಮನನೈದಿದನು ಚಾಪಾಗಮಾಚಾರ್ಯ
ಇತ್ತಲಿತ್ತಲು ಭೀಮ ಬಣಗುಗ
ಳತ್ತಲೇಕೈ ವೀರ ಶೌರ್ಯೋ
ನ್ಮತ್ತನಹೆಯಿದಿರಾಗೆನುತ ಕೆಣಕಿದನು ಪವನಜನ ॥6॥

೦೦೭ ತಿರುಗಿನೋಡಿದನಸ್ತ್ರ ಶಿಕ್ಷಾ ...{Loading}...

ತಿರುಗಿನೋಡಿದನಸ್ತ್ರ ಶಿಕ್ಷಾ
ಗುರುವ ಕಂಡನು ಮನದೊಳಾತನ
ಚರಣಕಭಿನಮಿಸಿದನು ನುಡಿದನು ವಿನಯಪರನಾಗಿ
ಗುರುವೆ ಬಿಜಯಂಗೈದ ಹದನನು
ಕರುಣಿಸೈ ಕಾಳೆಗದ ಭಾರಿಯ
ಭರವಸದಲಾನಿದ್ದೆನೆಂದನು ನಗುತ ಕಲಿಭೀಮ ॥7॥

೦೦೮ ಅನಿಲಸುತ ಫಡ ...{Loading}...

ಅನಿಲಸುತ ಫಡ ಮರುಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತು ಶರವನು ಕಡಿದು ಬಿನ್ನಹಮಾಡಿದನು ನಗುತ ॥8॥

೦೦೯ ಗುರುವೆಮಗೆ ನೀವ್ ...{Loading}...

ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ ॥9॥

೦೧೦ ಎಲವೊ ದುಷ್ಟಗ್ರಹದ ...{Loading}...

ಎಲವೊ ದುಷ್ಟಗ್ರಹದ ಬಾಧೆಯ
ನಿಲಿಸಲರಿಯರೆ ಮಂತ್ರವಾದಿಗ
ಳಳಿಬಲವನಂಜಿಸಿದ ಕೊಬ್ಬುಗಳಕಟ ನಮ್ಮೊಡನೆ
ಗೆಲುವ ಕೊಡುವೆನು ವಾಸಿಯೇ ಮ
ಕ್ಕಳುಗಳೊಡನೆಂದಿರ್ದಡತಿ ವೆ
ಗ್ಗಳನು ನೀನೆಂದಂಬ ಸುರಿದನು ಪವನಜನ ಮೇಲೆ ॥10॥

೦೧೧ ನಿಲ್ಲು ಕಳಶಜ ...{Loading}...

ನಿಲ್ಲು ಕಳಶಜ ತಪ್ಪಿದವ ನಾ
ನಲ್ಲ ಫಲುಗುಣ ಸಾತ್ಯಕಿಯವೋ
ಲಿಲ್ಲ ತನ್ನಲಿ ವಿನಯ ಹಾರದಿರಿಲ್ಲಿ ಮನ್ನಣೆಯ
ಬಿಲ್ಲ ಗುರುವಿನ ಬಿಂಕ ಬಯಲಾ
ಯ್ತಿಲ್ಲಿಯೆಂಬಪಕೀರ್ತಿ ಹೊರುವುದು
ಬಲ್ಲೆನೆನುತುರವಣಿಸಿದನು ಮುಂಗೈಯ ಮರೆವಿಡಿದು ॥11॥

೦೧೨ ಮಳೆಗೆ ತೆರಳದೆ ...{Loading}...

ಮಳೆಗೆ ತೆರಳದೆ ಕೋಡ ಬಾಗಿಸಿ
ಕಲಿವೃಷಭ ಹೊಗುವಂತೆ ದ್ರೋಣನ
ಬಲುಸರಳ ಸರಿವಳೆಗೆ ದಂಡೆಯನೊಡ್ಡಿ ದಳವುಳಿಸಿ
ಅಳವಿದಪ್ಪದೆ ಕೆಲದ ಖಡ್ಗವ
ಸೆಳೆದು ಗುರುವಪ್ಪಳಿಸಿ ಕೈಯಲಿ
ಕಳೆದು ಕಟ್ಟಳವಿಯಲಿ ಹೊಕ್ಕನು ಭೀಮ ಬೊಬ್ಬಿರಿದು ॥12॥

೦೧೩ ಗಜರಿನಲಿ ಗಿರಿ ...{Loading}...

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ ॥13॥

೦೧೪ ಗಗನದಲಿ ರಥ ...{Loading}...

ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ ॥14॥

೦೧೫ ತೂಗಿ ಕೆಡೆದುದು ...{Loading}...

ತೂಗಿ ಕೆಡೆದುದು ತೇರು ಹುಡಿ ಹುಡಿ
ಯಾಗಿ ಹೋದುದು ದ್ರೋಣ ಮನದನು
ರಾಗ ಮಿಗೆ ಮತ್ತೊಂದು ಹೊಸರಥದೊಳಗೆ ವೆಂಠಣಿಸಿ
ಹೋಗಬಿಡೆನಿನ್ನ ನಿಲಜನ ತಲೆ
ವಾಗಿಸುವೆನಿನ್ನೆನುತ ಶಕಟದ
ಬಾಗಿಲಲಿ ಗಿರಿಯಂತೆ ನಿಂದನು ಸಮರಕನುವಾಗಿ ॥15॥

೦೧೬ ಕೊಲುವುದನುಚಿತವೆನ್ದು ಗಗನ ...{Loading}...

ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು ॥16॥

೦೧೭ ನಿಜವರೂಥದಲನ್ದು ಕೌರವ ...{Loading}...

ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಂದರುಹಿದನು ಪಾರ್ಥಂಗೆ ॥17॥

೦೧೮ ಭಕುತ ಮುಖ ...{Loading}...

ಭಕುತ ಮುಖ ದರ್ಪಣನು ಬಹ ಸಾ
ತ್ಯಕಿಯ ಕಂಡನು ಭೀಮಸೇನನ
ವಿಕಟ ಸಿಂಹಧ್ವನಿಯನಾಲಿಸಿ ಹಿಗ್ಗಿದನು ಪಾರ್ಥ
ವಿಕಳತನವನು ಮಾದು ಧರ್ಮಜ
ಸುಕರ ಪರಿತೋಷದಲಿರಲು ರಿಪು
ನಿಕರ ಮುರಿದುದು ಪವನಪುತ್ರನ ರಥದ ಖುರಪುಟಕೆ ॥18॥

೦೧೯ ಅರಿಭಟರು ಪವನಜನನಾನುತ ...{Loading}...

ಅರಿಭಟರು ಪವನಜನನಾನುತ
ಮರಳುತುಬ್ಬರ ಬವರವನು ತಂ
ದರನೆಲೆಗೆ ಹಾಯ್ಕಿದರು ಕರ್ಣಾದಿಗಳ ಮುಂಬಿನಲಿ
ಜರಿದುದತಿರಥರಾಜಿ ಬಾಯಲಿ
ಕರಿಷ ಹಾಯ್ದುದು ಭೂಮಿಪಾಲರ
ಬಿರುದು ಮುದ್ರಿಸಿದವು ಸಮೀರಕುಮಾರನುರವಣೆಗೆ ॥19॥

೦೨೦ ಓಡುವುದು ಗರುವಾಯಿಯೇ ...{Loading}...

ಓಡುವುದು ಗರುವಾಯಿಯೇ ಭಯ
ಬೇಡ ಭೂಮಿಪರೆನ್ನ ತೇರಿನ
ಕೂಡೆ ಗಡಣಿಸಿ ಸಾಕು ತಾರೆನು ನಿಮಗೆ ಕಾಳೆಗವ
ನೋಡಿ ನಿಮಿಷಕೆ ಭೀಮನಡಗಿನ
ಲೂಡುವೆನು ರಣಭೂತವನು ಭಯ
ಬೇಡೆನುತ್ತನಿಲಜನ ರಥವನು ತರುಬಿದನು ಕರ್ಣ ॥20॥

೦೨೧ ಬಿಗಿದ ಹುಬ್ಬಿನ ...{Loading}...

ಬಿಗಿದ ಹುಬ್ಬಿನ ಬಿಲ್ಲ ತೆಗಹಿನ
ಹೊಗರಲಗಿನುರವಣೆಯ ರಥದಲಿ
ಮಗುಳ್ದ ಮಂಡಿಯ ದೃಷ್ಟಿಯೋರೆಯ ಬಾಗಿದವಯವದ
ಅಗಿದು ಕಡುಗೋಪವನು ಬೆಸಲಹ
ನಗೆಯ ನಿರಿಗೆಯಲರಿಯ ನುಂಗುವ
ಬಗೆಯ ಬಲುಗೈ ಕರ್ಣ ಮೂದಲಿಸಿದನು ಪವನಜನ ॥21॥

೦೨೨ ಸಾರೆಲವೊ ಸಾಯದೆ ...{Loading}...

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಅರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನ ಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ ॥22॥

೦೨೩ ದೇವ ದಾನವ ...{Loading}...

ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮತ್ರ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ ॥23॥

೦೨೪ ಎಸಲು ಭೀಮನ ...{Loading}...

ಎಸಲು ಭೀಮನ ಬಾಣವನು ಖಂ
ಡಿಸಿದ ಮೂರಂಬಿನಲಿ ರವಿಸುತ
ನಸಮ ಸಾಹಸಿಯೆಚ್ಚಡೆಚ್ಚನು ಭೀಮ ಮರುಗಣೆಯ
ನಿಶಿತ ಶರವನು ಹತ್ತು ಶರದಲಿ
ಕುಸುರಿದರಿದನು ಕರ್ಣನಿಬ್ಬರ
ದೆಸೆಗೆ ದೇವಾನೀಕ ಮೆಚ್ಚಿತು ಭೂಪ ಕೇಳ್ ಎಂದ ॥24॥

೦೨೫ ತೋಳುವಲಕಿದಿರಿಲ್ಲ ಬಿನುಗು ...{Loading}...

ತೋಳುವಲಕಿದಿರಿಲ್ಲ ಬಿನುಗು ನೃ
ಪಾಲನೆಲವೋ ಕರ್ಣ ಫಡ ಫಡ
ಮೇಳವಾದರೆ ಮೊಗೆವೆನರುಣಾಂಬುವನು ನಿನ್ನೊಡಲ
ಕೋಲ ಸುರಿ ಸುರಿಯೆನುತ ಕುರುಭೂ
ಪಾಲಕನ ಮದದಾನೆಯನು ಹೀ
ಹಾಳಿಗೆಡಿಸಿ ತುರಂಗ ರಥ ಸಾರಥಿಯ ಖಂಡಿಸಿದ ॥25॥

೦೨೬ ಉಡಿದು ರಥ ...{Loading}...

ಉಡಿದು ರಥ ಸಾರಥಿಗಳವನಿಗೆ
ಕೆಡೆಯೆ ಕಾಲಾಳಾಗಿ ಭೀಮನ
ಬಿಡದೆ ಥಟ್ಟೈಸಿದನು ಶರನಿಕರದಲಿ ರವಿಸೂನು
ಕಡಿದು ಬಿಸುಡದೆ ಕರುಣಿಸಿದಡವ
ಗಡಿಸಿದನೆ ತಪ್ಪೇನೆನುತ ಕೈ
ಗಡಿಯ ಪವನಜನೆಚ್ಚು ಕರ್ಣನ ಧನುವ ಖಂಡಿಸಿದ ॥26॥

೦೨೭ ಕರದ ಬಿಲು ...{Loading}...

ಕರದ ಬಿಲು ಕಳಚಿದರೆ ಖಾತಿಯೊ
ಳಿರದೆ ಹೊಸ ಹೊಂದೇರ ತರಿಸಲು
ತಿರುಗಿದನು ನಿಜಮೋಹರಕೆ ದುಗುಡದಲಿ ಕಲಿಕರ್ಣ
ತೆರಹು ಕೊಡದಿರಿ ಸೋತ ಕರ್ಣನ
ಹರಿಬವೆಮ್ಮದು ನೂಕು ನೂಕೆಂ
ದುರವಣಿಸಿದರು ಮತ್ತೆ ಕೌರವನನುಜರವಗಡಿಸಿ ॥27॥

೦೨೮ ಎಲವೊ ಕರ್ಣನ ...{Loading}...

ಎಲವೊ ಕರ್ಣನ ಗೆಲಿದ ಗರ್ವವ
ಕಲಕುವೆವು ಫಡ ನಿಲ್ಲೆನುತ ಕೈ
ಚಳಕಿಗರು ಪೂರಾಯಚಾಪದ ಬೆರಳ ಕಿವಿಗಡಿಯ
ಬಲುಸರಳ ಸರಿವಳೆಯ ಸಾಹಸಿ
ಗಳುರವಣಿಸಿ ಕವಿದೆಸುತ ಬರೆ ಕಂ
ಡೆಲೆ ಮಿಡುಕನಾ ಭೀಮ ಮೂಗಿನ ಬೆರಳ ಬೆರಗಿನಲಿ ॥28॥

೦೨೯ ರಾಯನೊಡಹುಟ್ಟಿದರಲಾ ಪೂ ...{Loading}...

ರಾಯನೊಡಹುಟ್ಟಿದರಲಾ ಪೂ
ರಾಯವಿವದಿರ ಕೈ ಮಹಾದೇ
ವಾಯುಧದ ಮಳೆಗರೆದರೈ ನಿಲಲರಿದು ನಮಗೆನುತ
ವಾಯುಸುತನಬ್ಬರಿಸೆ ಗಾಳಿಯ
ಘಾಯ ಮೇಘದ ಮೇಲೆ ಬಿದ್ದವೊ
ಲಾಯಿತೇನೆಂಬೆನು ಕುಮಾರರ ಹೊಯಿಲ ಬೆಳೆ ಸಿರಿಯ ॥29॥

೦೩೦ ಬಲ್ಲಡಗ್ನಿಸ್ತಮ್ಭವನು ಸಿಡಿ ...{Loading}...

ಬಲ್ಲಡಗ್ನಿಸ್ತಂಭವನು ಸಿಡಿ
ಲಲ್ಲಿ ಮೇಳವೆ ಬಿನುಗುಗಳ ಗೆಲ
ಬಲ್ಲಡಿವರಿಗೆ ಭೀಮ ಸದರವೆ ಹೇಳಲೇನಿದನು
ಚೆಲ್ಲಿದರೆ ಬಳಿವರಿದು ಚೌಪಟ
ಮಲ್ಲ ಹೊಕ್ಕನು ಹೊಯ್ದ ಗದೆಯಲಿ
ಘಲ್ಲಿಸಿದನಸಿಯರೆದು ಕೊಂದನು ಕೌರವಾನುಜರ ॥30॥

೦೩೧ ವರ ಸುಲೋಚನ ...{Loading}...

ವರ ಸುಲೋಚನ ಚಿತ್ರರಥ ದು
ರ್ಮರುಷಣ ಶತಾನೀಕ ನೀಲಾಂ
ಬರ ವಿವಿಂಶತಿ ಚಿತ್ರಸೇನರ ದೀರ್ಘಲೋಚನನ
ತರಿದು ತಿರುಗಿ ಸುಯೋಧನನ ಮೋ
ಹರಕೆ ಮೊಳಗಲು ಮತ್ತೆ ಬಲ ಸಂ
ವರಣೆಯಲಿ ಕೈಗೈದು ಭೀಮನ ಹಳಚಿದನು ಕರ್ಣ ॥31॥

೦೩೨ ಫಡ ತೊಲಗು ...{Loading}...

ಫಡ ತೊಲಗು ಪವಮಾನಸುತ ನಿ
ನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು ಬದುಕುವರೆ ಹಿಮ್ಮೆಟ್ಟೆನುತ ಬಳಿಸಲಿಸೆ
ಕಡುನುಡಿಗೆ ಮೆಚ್ಚಿದನು ಹಿಂದಕೆ
ಮಿಡುಕುವವನೇ ಕರ್ಣನೀತನ
ಕಡುಹ ನೋಡು ವಿಶೋಕ ಎಂದನು ನಗುತ ಕಲಿಭೀಮ ॥32॥

೦೩೩ ತಗರು ತೊಲಗಿದಡೇನು ...{Loading}...

ತಗರು ತೊಲಗಿದಡೇನು ಬಲುಗಾ
ಳೆಗದ ಗಾಢಿಕೆ ಮೇಲೆ ಶೌರ್ಯದ
ಸೊಗಡ ಸೈರಿಸಲರಿಯೆ ಕಲಿತನದಂಗ ನಿನಗೇಕೆ
ಉಗಿ ಸರಳ ಬಿಲುಗಾರನಾದರೆ
ತೆಗೆದು ಕೈದುವ ಕೊಳ್ಳೆನುತ ತನಿ
ಹೊಗರುಗಣೆಗಳ ಸೂಸಿದನು ರವಿಸೂನು ಸಮರದಲಿ ॥33॥

೦೩೪ ಸರಳ ಸರಳಲಿ ...{Loading}...

ಸರಳ ಸರಳಲಿ ಕಡಿದನೆಚ್ಚರೆ
ತರಹರಿಸಿ ಮಗುಳೆಚ್ಚನೌಕಿದ
ಡುರವಣಿಸಿದನು ಸಿಂಹಗರ್ಜನದೊಡನೆ ಗರ್ಜಿಸಿದ
ತಿರುಗೆ ತಿರುಗಿದನೊತ್ತಲಗಿದೊ
ತ್ತರಿಸಿದನು ಭುಜಬಲಕೆ ಭುಜಬಲ
ಸರಿಯೆನಿಸಿ ಸಮ ಬೆಸನನೆಚ್ಚಾಡಿದನು ಕಲಿಕರ್ಣ ॥34॥

೦೩೫ ಬಳಲಿದವು ತೇಜಿಗಳು ...{Loading}...

ಬಳಲಿದವು ತೇಜಿಗಳು ಸಾರಥಿ
ಯಳುಕಿದನು ಶರಹತಿಗೆ ಭೀಮನ
ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು
ಹಿಳುಕ ಹೊದಿಸಿದನಖಿಲ ದೆಸೆಗಳ
ನಿಲುಕಲರಿದೆನೆ ನಿಮಿಷ ಮಾತ್ರಕೆ
ಕಳಚಿ ಕಳೆದನು ಭೀಮ ತೊಟ್ಟನು ಮತ್ತೆ ಮಾರ್ಗಣವ ॥35॥

೦೩೬ ತರಹರಿಸು ಬಿಲುಗಾರನಾದರೆ ...{Loading}...

ತರಹರಿಸು ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ ಪವನಜ
ಬಿರುಗಣೆಯಲಿರದೆಚ್ಚನಹಿತನ ಧನುವ ಸಾರಥಿಯ
ತುರಗವನು ಸಿಂಧವನು ಮಾರ್ಗಣ
ವೆರಡರಲಿ ನುಗ್ಗೊತ್ತೆ ರಥದಿಂ
ಧರಣಿಗಿಳಿದನು ಕರ್ಣ ಕೊಂಡನು ಹಲಗೆ ಖಂಡೆಯವ ॥36॥

೦೩೭ ಲುಳಿಯಲೊಲೆದಿದಿರಾಗಿ ತಾಗಿದ ...{Loading}...

ಲುಳಿಯಲೊಲೆದಿದಿರಾಗಿ ತಾಗಿದ
ಬಲುಕಣೆಯ ಕರವಾಳನಿಕ್ಕಡಿ
ಗಳೆದು ಹಲಗೆಯನೆಂಟು ಕಡಿ ಮಾಡಿದನು ಕಲಿಭೀಮ
ತೊಲಗು ಬಾಹಿರ ಮತ್ತೆ ಸಾರಥಿ
ಬಿಲು ರಥವನನುಮಾಡು ಪಾರ್ಥಗೆ
ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ ॥37॥

೦೩೮ ತೇರ ಚಾಚಲಿ ...{Loading}...

ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ ॥38॥

೦೩೯ ಬಿಲುದುಡುಕಿ ರಿಪುಭಟನೊಡನೆ ...{Loading}...

ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲವೇ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ ॥39॥

೦೪೦ ಕೀಲಿಸಿದನೆಣ್ಟಮ್ಬಿನಲಿ ತುರ ...{Loading}...

ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ ॥40॥

೦೪೧ ರಥವ ಮೇಳೈಸಿದನು ...{Loading}...

ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ ॥41॥

೦೪೨ ಗೆಲಿದು ಹೋಗದಿರಿನ್ನು ...{Loading}...

ಗೆಲಿದು ಹೋಗದಿರಿನ್ನು ಕರುಳನು
ಕಲಕುವೆನು ನಿಲ್ಲೆನುತ ರವಿಸುತ
ಸೆಳೆದು ಮುಷ್ಟಿಯ ಕೆನ್ನೆಗಡಿಯಂಬಿನಲಿ ಬರೆ ಕಂಡು
ಎಲವೊ ಲೋಕದ ಭಂಡ ನಿನ್ನೊಡ
ನುಲಿವವರು ನಾವಲ್ಲ ಮಲೆತರೆ
ತಲೆಯ ಕಾಯಿದು ಬಿಡುವೆನಲ್ಲದೆ ಕೊಲುವನಲ್ಲೆಂದ ॥42॥

೦೪೩ ಸರಳ ಸರಿಸೋನೆಯನು ...{Loading}...

ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ ॥43॥

೦೪೪ ಧನುವನಿಕ್ಕಡಿಗಳೆದು ರಿಪು ...{Loading}...

ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ ॥44॥

೦೪೫ ಪವನಜನ ಬಡಿಹೋರಿ ...{Loading}...

ಪವನಜನ ಬಡಿಹೋರಿ ಹೋದನೆ
ರವಿ ಸುತನು ಹೋಗಲಿ ವೃಕೋದರ
ನವಯವವ ಕೇಣಿಯನು ಕೊಟ್ಟೆವು ಬಾಣತತಿಗೆನುತ
ತವ ಕುಮಾರರು ಮತ್ತೆ ಬಹಳಾ
ಹವವ ಹೊಕ್ಕರು ಹಕ್ಕಲಾದವ
ರವಗಡಿಸಿ ಕೆಣಕಿದರು ರಿಪು ಕಲ್ಪಾಂತ ಭೈರವನ ॥45॥

೦೪೬ ವೀರರೆನ್ದೆನಿಸುವರು ತೊಡೆಹದ ...{Loading}...

ವೀರರೆಂದೆನಿಸುವರು ತೊಡೆಹದ
ಶೌರಿಯದ ಸಿರಿವಂತರರಸುಕು
ಮಾರಕರು ನಿನ್ನವರು ಕೋಮಲಧೈರ್ಯರಾಹವಕೆ
ಮಾರಿ ಮುಖದವ ಕಠಿನಮನ ನಿ
ಸ್ಸಾರ ಹೃದಯನು ಭೀಮನವನೊಳು
ಹೋರಿದವರೇನಹರು ಕೇಳೈ ನಿನ್ನವರ ವಿಧಿಯ ॥46॥

೦೪೭ ಒಳಗೊಳಗೆ ತನ್ನಾಣೆ ...{Loading}...

ಒಳಗೊಳಗೆ ತನ್ನಾಣೆ ಘೋಷಣೆ
ಸಲುವುದಲ್ಲದೆ ಸೊಡರು ಬೀದಿಗೆ
ಸುಳಿಯಲೆಲ್ಲಿಯ ಬೆಳಗು ತನ್ನುಳಿವಿಂಗೆ ಹೊಣೆಯಾರು
ಕೆಲಬಲದ ಮನ್ನೆಯರ ಹೊಯ್ವ
ಗ್ಗಳಿಕೆ ಕೊಂಬುದೆ ಭೀಮನಲಿ ಕೈ
ಹೊಲಸುಗಾರನು ಹಿಂಡಿದನು ಕೌರವ ಸಹೋದರರ ॥47॥

೦೪೮ ದ್ರುಮ ವಿಕರ್ಣ ...{Loading}...

ದ್ರುಮ ವಿಕರ್ಣ ಸುಷೇಣ ಚಾರು
ಕ್ರಮ ವಿವಿತ್ಸುಕ ವಜ್ರಬಾಹುಕ
ದಮನ ದೀರ್ಘೋದರ ಮಹೋದರ ಕುಂಡದಾರುಕನ
ಯಮನ ಕೈಯೆಡೆಗೊಟ್ಟು ಘನವಿ
ಕ್ರಮದ ಸಿರಿ ಹೊದರೇಳೆ ಜಯವಿ
ಕ್ರಮದೊಳಬ್ಬರಿಸಿದನು ನಿಷ್ಠುರ ಸಿಂಹನಾದದಲಿ ॥48॥

೦೪೯ ಇದೆ ಸಮೀರಕುಮಾರಕನ ...{Loading}...

ಇದೆ ಸಮೀರಕುಮಾರಕನ ಜಯ
ಮದದ ಸಿಂಹಧ್ವನಿಯೆನುತ ಹಿ
ಗ್ಗಿದನು ಧರ್ಮಜನೊದರಿದವು ಗಂಭೀರಭೇರಿಗಳು
ಕದನ ಲಗ್ಗೆಯ ಕಹಳೆ ಬಹು ವಾ
ದ್ಯದ ಮಹಾದ್ಭುತರಭಸ ಮಿಗೆ ಹೂ
ಡಿದನು ಸನ್ನಾಹದಲಿ ಹೊಕ್ಕನು ಮತ್ತೆ ಕಲಿಕರ್ಣ ॥49॥

೦೫೦ ನವ ವರೂಥ ...{Loading}...

ನವ ವರೂಥ ತುರಂಗ ಸಾರಥಿ
ಸವಗ ಮೊಚ್ಚಯದಲ್ಲಿ ಬಹಳಾ
ಹವದೊಳಗೆ ಮುಂಕೊಂಡು ಭೀಮನ ಹಳಚಿದನು ಕರ್ಣ
ತವಕ ಮಿಗಲೆಚ್ಚಾಡಿ ಪುನರಪಿ
ಪವನಜನ ಘಾಯದಲಿ ಸೋಲಿದು
ಬವರ ಮುಖದಲಿ ಹಿಂಗಿದನು ಹದಿನೆಂಟು ಸೂಳಿನಲಿ ॥50॥

೦೫೧ ಮುಳಿದು ಮೀಸೆಯ ...{Loading}...

ಮುಳಿದು ಮೀಸೆಯ ಮುರಿದು ಹುಬ್ಬನು
ಬಲಿದು ದಳ್ಳುರಿದಿರುಳನಕ್ಷಿಗ
ಳೊಳಗೆ ಪಸರಿಸಿ ಘುಡುಘುಡಿಸಿ ರೋಮಾಳಿ ಸೈನಿಮಿರೆ
ಹಲು ಮೊರೆದು ಹೊಗರಿಡುವ ಮೋರೆಯ
ಲಿಳಿವ ಬೆಮರನು ಬೆರಳ ಕೊನೆಯಲಿ
ಬಳಿದು ಭಾರ್ಗವದತ್ತಬಾಣಕೆ ನೀಡಿದನು ಕರವ ॥51॥

೦೫೨ ಎಲವೆಲವೊ ಕಲಿಯಾಗು ...{Loading}...

ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತ ವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ ॥52॥

೦೫೩ ಉಣ್ಟು ಶಿವ ...{Loading}...

ಉಂಟು ಶಿವ ಶಿವ ಹುಸಿಯ ನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ ॥53॥

೦೫೪ ಆದಡೆಲವೊ ದುರಾತ್ಮ ...{Loading}...

ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣೆಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ ॥54॥

೦೫೫ ಎರಡು ಶರದಲಿ ...{Loading}...

ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥55॥

೦೫೬ ಶರಹತಿಗೆ ಸೆಡೆಯದೆ ...{Loading}...

ಶರಹತಿಗೆ ಸೆಡೆಯದೆ ವೃಕೋದರ
ನೆರಡು ಕವಲಂಬಿನಲಿ ಕರ್ಣನ
ಶಿರವನೆಚ್ಚಡೆ ತರಿದನೆಡೆಯಲಿ ಭಾನುಸುತ ನಗುತ
ತಿರುಹಿ ಶಕ್ತಿಯಲಿಟ್ಟರೆಡೆಯಲಿ
ತರಿದು ಭೀಮನ ಕರದ ಚಾಪವ
ನೆರಡುಕಡಿ ಮಾಡಿದನು ಬಳಿಯಲಿ ನೊಸಲನೊಡೆಯೆಚ್ಚ ॥56॥

೦೫೭ ವಾಯುಸುತ ಖಾತಿಯಲಿ ...{Loading}...

ವಾಯುಸುತ ಖಾತಿಯಲಿ ಹಲಗೆಯ
ಡಾಯುಧವ ಕೊಂಡರಿಭಟನ ಮೇ
ಲ್ವಾಯಿದಡೆ ಸಮ್ಮುಖವ ಬಿಟ್ಟನು ಧ್ವಜದ ಕಂಭದಲಿ
ಆಯುಧವ ಕೊಂಡೈದಿದಡೆ ಹಗೆ
ಮಾಯವಾದನು ಪೂತುರೆನುತ ಗ
ದಾಯುಧನು ಮರಳಿದರೆ ಕೈಯೊಡನೆದ್ದನಾ ಕರ್ಣ ॥57॥

೦೫೮ ಆರಿ ಬೊಬ್ಬಿರಿದೆಚ್ಚನನಿಲಕು ...{Loading}...

ಆರಿ ಬೊಬ್ಬಿರಿದೆಚ್ಚನನಿಲಕು
ಮಾರಕನ ಖಂಡೆಯವನೊಂದೇ
ಕೂರಲಗಿನಲಿ ಕಡಿದು ಬಿಸುಟನು ಹಿಡಿದ ಹಲಗೆಯನು
ಆರುಭಟೆಯಲಿ ಭೀಮ ಕಾವವ
ರಾರು ಕರೆಯಾ ಕರ್ಣ ಕೊಲುವಡ
ದಾರು ಫಡ ಹಿಂದಿಕ್ಕಿ ಕೊಂಬವರೆನುತ ಗರ್ಜಿಸಿದ ॥58॥

೦೫೯ ಮಡಿದ ಕರಿಗಳ ...{Loading}...

ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ ॥59॥

೦೬೦ ಕೈದು ನೆರೆತೀರಿದರೆ ...{Loading}...

ಕೈದು ನೆರೆತೀರಿದರೆ ಹೆಣನೇ
ಕೈದುವಾದುವು ಪರಬಲಾಂತಕ
ಕೈದುಕಾರರ ಕೈಯ ಬಾಯಲಿ ಭೀಮ ಸಿಲುಕಿದೆಲಾ
ಕಾದುಕೊಳ್ಳನೆ ಕೃಷ್ಣ ನಿನ್ನಯ
ಮೈದುನನು ಗಡ ಮರೆಯ ಹೊಗು ಹೋ
ಗೈದೆಯಹಳೋ ವಿಧವೆಯೋ ಪಾಂಚಾಲಿ ಹೇಳೆಂದ ॥60॥

೦೬೧ ಬಿಲ್ಲ ಕೊಪ್ಪಿನಲಿರಿದು ...{Loading}...

ಬಿಲ್ಲ ಕೊಪ್ಪಿನಲಿರಿದು ಭೀಮನ
ಘಲ್ಲಿಸಿದನೆಲವೆಲವೊ ಮಾರುತಿ
ಯುಳ್ಳಿಗಡ್ಡದ ಹರಿದಲೆಯ ರಣಮೂಢ ಸಿಲುಕಿದೆಲಾ
ಎಲ್ಲಿ ನಿನ್ನಾಟೋಪ ಹಿಂದಣ
ಹೊಳ್ಳುನುಡಿ ಹಾರಿದವೆ ಕೌರವ
ರೆಲ್ಲರನು ಸವರಿದೆಯೆಲಾ ಸಂದೇಹವೇನೆಂದ ॥61॥

೦೬೨ ಒಡೆಯ ದುರಿಯೋಧನನ ...{Loading}...

ಒಡೆಯ ದುರಿಯೋಧನನ ತೊಡೆಗಳ
ನುಡಿವೆ ದುಶ್ಯಾಸನನ ರಕುತವ
ಕುಡಿವೆನೆಂದುಬ್ಬಟೆಯ ಭಾಷೆಯಲಾ ಮಹಾದೇವ
ನುಡಿದ ನುಡಿವಳಿ ಸಂದುದೇ ನಿ
ಮ್ಮಡಿಗಳಿಗೆ ಕಲಿಭೀಮ ದುಗುಡವ
ಬಿಡು ಮರುಳೆ ತಲೆಗುತ್ತಲೇತಕೆಯೆಂದನಾ ಕರ್ಣ ॥62॥

೦೬೩ ಎಲ್ಲಿ ಷಡುರಸಮಯದ ...{Loading}...

ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ ॥63॥

೦೬೪ ತಾಯ ಮಾತನು ...{Loading}...

ತಾಯ ಮಾತನು ಮೀರಿ ನಿನ್ನನು
ನೋಯಿಸಿದೆನದೆ ಸಾಕು ಜೀವವ
ಕಾಯಿದೆನು ಬಿಟ್ಟೆನು ವೃಕೋದರ ಹೋಗು ಹೋಗೆನಲು
ವಾಯುಸುತ ಸಿಲುಕಿದನಲಾ ಕಾ
ಳಾಯಿತೆನುತಸುರಾರಿ ರಥವನು
ಹಾಯಿಸಲು ಮುರಿಯೆಚ್ಚು ಕರ್ಣನ ತೆಗೆಸಿದನು ಪಾರ್ಥ ॥64॥

+೧೩ ...{Loading}...