೦೦೦ ಸೂ ರಾಯಸೇನಾ ...{Loading}...
ಸೂ. ರಾಯಸೇನಾ ಸೂರೆಕಾರನ
ಜೇಯ ಮಾರುತ ಸುತನು ಕೌರವ
ರಾಯನನುಜರ ಸೀಳಿದನು ಕಳಶಜನ ಪರಿಹರಿಸಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾಜ ದುರ್ಯೋಧನನ ಸೇನೆಯನ್ನು ನಾಶ ಮಾಡಿದ ಅಜೇಯನಾದ , ವಾಯುಸುತ ಭೀಮನು ಯುದ್ಧದಲ್ಲಿ ದ್ರೋಣರನ್ನು ದಾಟಿಕೊಂಡು , ದುರ್ಯೋಧನನ ಸೋದರರನ್ನು ಸೀಳಿದನು.
ಮೂಲ ...{Loading}...
ಸೂ. ರಾಯಸೇನಾ ಸೂರೆಕಾರನ
ಜೇಯ ಮಾರುತ ಸುತನು ಕೌರವ
ರಾಯನನುಜರ ಸೀಳಿದನು ಕಳಶಜನ ಪರಿಹರಿಸಿ
೦೦೧ ದೃಗುಯುಗಳ ನೀರೇರಿದವು ...{Loading}...
ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನ ಕಣ್ಣುಗಳೆರಡರಲ್ಲೂ ನೀರು ತುಂಬಿದವು. ಕಂಠ ಬಿಗಿದು ಬಹಳವಾಗಿ ಪ್ರಲಾಪಿಸಿದನು. “ಅಯ್ಯೋ… ಪರದೇಶಿಯಾದ ತನ್ನೊಡನೆ ಪಾರ್ಥನು ಏಕೆ ಹುಟ್ಟಿದನೋ ? ಶತ್ರುಗಳ ನಾಶಕ್ಕೆ ಒಪ್ಪಿಗೆ ಕೊಟ್ಟೆನು. ಮಗನ ಸಾವಿನ ದುಃಖ ಹೆಚ್ಚಲಾಗಿ ಶಪಥಮಾಡಿ ರಣರಂಗವನ್ನು ಪ್ರವೇಶಿಸಿದನು. ಇದುವರೆಗೆ ತಮ್ಮನಿಗೆ ತಪ್ಪಿಸಿಕೊಂಡು ಬರಲಾಗಲಿಲ್ಲವಲ್ಲ” ಎಂದು ರಾಜನಾದ ಧರ್ಮಜ ಚಿಂತಿಸಿದನು.
ಪದಾರ್ಥ (ಕ.ಗ.ಪ)
ದೃಗುಯುಗಳ-ಎರಡು ಕಣ್ಣುಗಳು, ಸೆರೆ-ಕಂಠ
ಮೂಲ ...{Loading}...
ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ ॥1॥
೦೦೨ ಕಳುಹಲತ್ತಲು ಹೋಗಿ ...{Loading}...
ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನನ್ನು ನೋಡಿ ಬಾ ಎಂದು ಸಾತ್ಯಕಿಯನ್ನು ಕಳುಹಿಸಿದ್ದು, ಅವನು ಇನ್ನೂ ವಿಷಯವನ್ನು ತಿಳಿದು ಹಿಂತಿರುಗಿ ಬಂದಿಲ್ಲ. ಪಾರ್ಥನು ಯುದ್ಧದಲ್ಲಿ ನಾಶವಾದನೋ, ಉಳಿದಿರುವನೋ ಅಥವಾ ಬಾಣಗಳ ಏಟಿನಿಂದ ಆಯಾಸಗೊಂಡಿದ್ದಾನೋ ಎಂದು ತಿಳಿದು ಹೇಳುವವರು ಮಕುಟಧಾರಿಗಳಾದ ರಾಜರುಗಳಲ್ಲಿ ಯಾರು ?” ಎಂದು ಪ್ರಲಾಪಿಸಿ ರಾಜ ಧರ್ಮಜನು ಭೀಮನ ಮುಖವನ್ನು ನೋಡಿದನು.
ಮೂಲ ...{Loading}...
ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ ॥2॥
೦೦೩ ಎಲೆ ವೃಕೋದರ ...{Loading}...
ಎಲೆ ವೃಕೋದರ ವೈರಿಮೋಹರ
ದೊಳಗೆ ಸಿಲುಕಿದನೋ ಕಿರೀಟಿಗೆ
ನೆಲದ ಋಣಸಂಬಂಧ ಸವೆದುದೊ ಮೇಣು ಸಮರದಲಿ
ತಿಳಿಯಲಟ್ಟಿದ ಸಾತ್ಯಕಿಗೆ ಕೊಳು
ಗುಳದ ಭಾರಣೆಯಾಯ್ತು ಫಲುಗುಣ
ನಳಬಳವನರಿದಲ್ಲದೆನ್ನಸು ಸೈರಿಸದು ತನುವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಭೀಮನೇ….. ಶತ್ರುಸೇನೆಯೊಳಗೆ ಸಿಲುಕಿದನೋ ಅಥವಾ ಅರ್ಜುನನಿಗೆ ನೆಲದ ಋಣ ಸಂಬಂಧ ತೀರಿತೋ ಅಥವಾ ಸುದ್ಧಿಯನ್ನು ತಿಳಿದು ಬರಲು ಅಟ್ಟಿದ ಸಾತ್ಯಕಿಗೆ ಯುದ್ಧ ಎದುರಿಸಲು ಅಸಾಧ್ಯವಾಯಿತೋ ? ಒಟ್ಟಿನಲ್ಲಿ ಪಾರ್ಥನ ಸಂದರ್ಭವನ್ನು ತಿಳಿದಲ್ಲದೆ ನನ್ನ ಪ್ರಾಣ ಈ ಶರೀರವನ್ನು ಧರಿಸಲು ಸೈರಿಸದು” ಎಂದು ಧರ್ಮರಾಯನು ನುಡಿದನು.
ಪದಾರ್ಥ (ಕ.ಗ.ಪ)
ಅಳಬಳ-ಸನ್ನಿವೇಶ, ಶಕ್ತಿ,
ಟಿಪ್ಪನೀ (ಕ.ಗ.ಪ)
ಕಿರೀಟಿ-ಅರ್ಜುನನ ಹೆಸರು. ಪಾಶಪತಾಸ್ತ್ರವನ್ನು ಪಡೆದ ಅರ್ಜುನನನ್ನು ಇಂದ್ರನು ಸ್ವರ್ಗಕ್ಕೆ ಕರೆದುಕೊಂಡು ಹೋಗಿ ಸುಧರ್ಮೆ ಎಂಬ ತನ್ನ ಸಭೆಯಲ್ಲಿ ತನ್ನ ಸಿಂಹಾಸನದಲ್ಲಿ ಕೂರಿಸಿಕೊಂಡು ದಿವ್ಯವಾದ ಒಂದು ಕಿರೀಟವನ್ನು ಆತನ ತಲೆಯ ಮೇಲಿಟ್ಟು ಗೌರವಿಸಿದನು. ಅಂದಿನಿಂದ ಅರ್ಜುನನಿಗೆ ‘ಕಿರೀಟಿ’ - ಎಂಬ ಹೆಸರು ಪ್ರಾಪ್ತವಾಯಿತು.
ಮೂಲ ...{Loading}...
ಎಲೆ ವೃಕೋದರ ವೈರಿಮೋಹರ
ದೊಳಗೆ ಸಿಲುಕಿದನೋ ಕಿರೀಟಿಗೆ
ನೆಲದ ಋಣಸಂಬಂಧ ಸವೆದುದೊ ಮೇಣು ಸಮರದಲಿ
ತಿಳಿಯಲಟ್ಟಿದ ಸಾತ್ಯಕಿಗೆ ಕೊಳು
ಗುಳದ ಭಾರಣೆಯಾಯ್ತು ಫಲುಗುಣ
ನಳಬಳವನರಿದಲ್ಲದೆನ್ನಸು ಸೈರಿಸದು ತನುವ ॥3॥
೦೦೪ ಮುರವಿರೋಧಿಯ ಪಾಞ್ಚಜನ್ಯದ ...{Loading}...
ಮುರವಿರೋಧಿಯ ಪಾಂಚಜನ್ಯದ
ಪರಮ ರವ ಪಾರ್ಥನ ಪತಾಕೆಯ
ವರ ಕಪೀಂದ್ರನ ರಭಸವೇ ತುಂಬಿತು ಜಗತ್ರಯವ
ನರನ ಧನುವಿನ ದನಿಯ ಕೇಳೆನು
ಕರಗಿತಂತಃಕರಣವರ್ಜುನ
ನಿರವ ಕಾಣಿಸಿ ಬಾಯೆನಲು ಕೈಕೊಂಡನಾ ಭೀಮ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರೀಕೃಷ್ಣನ ಪಾಂಚಜನ್ಯದ ಶ್ರೇಷ್ಠ ಧ್ವನಿ, ಪಾರ್ಥನ ರಥದ ಬಾವುಟದಲ್ಲಿನ ಕಪಿ ಶ್ರೇಷ್ಠನಾದ ಹನುಮಂತನ ಗರ್ಜನೆಯೇ ಮೂರು ಲೋಕಗಳನ್ನು ತುಂಬಿತು. ಪಾರ್ಥನ ಗಾಂಡೀವವೆಂಬ ಧನುಸ್ಸಿನ ಧ್ವನಿಯು ಕೇಳುತ್ತಿಲ್ಲ. ನನ್ನ ಅಂತಃಕರಣ ಕರಗಿದೆ. ಅರ್ಜುನನ ಪರಿಸ್ಥಿತಿಯನ್ನು ತಿಳಿದು ಬಾ” ಎಂದು ಧರ್ಮರಾಯನು ಹೇಳಲು ಭೀಮನು ಅವನ ಅಪ್ಪಣೆಯನ್ನು ಸ್ವೀಕರಿಸಿದನು.
ಮೂಲ ...{Loading}...
ಮುರವಿರೋಧಿಯ ಪಾಂಚಜನ್ಯದ
ಪರಮ ರವ ಪಾರ್ಥನ ಪತಾಕೆಯ
ವರ ಕಪೀಂದ್ರನ ರಭಸವೇ ತುಂಬಿತು ಜಗತ್ರಯವ
ನರನ ಧನುವಿನ ದನಿಯ ಕೇಳೆನು
ಕರಗಿತಂತಃಕರಣವರ್ಜುನ
ನಿರವ ಕಾಣಿಸಿ ಬಾಯೆನಲು ಕೈಕೊಂಡನಾ ಭೀಮ ॥4॥
೦೦೫ ಅರನೆಲೆಯ ಸುಯ್ದಾನ ...{Loading}...
ಅರನೆಲೆಯ ಸುಯ್ದಾನ ಪಾಂಚಾ
ಲರಿಗೆ ನೇಮಿಸಿತನಿಲತನಯನ
ಬೆರಳ ಸನ್ನೆಗೆ ತೀವಿದಂಬಿನ ತೇರ ಚಾಚಿದರು
ಕರೆದು ತನ್ನ ವಿಶೋಕಗಖಿಳಾ
ಭರಣವನು ಕೊಟ್ಟನು ವರೂಥದ
ಹರಿಗೆ ಹೊಡವಂಟಡರಿದನು ನವ ರತುನಮಯ ರಥವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನ ಬೀಡಿನ ರಕ್ಷಣೆಯ ಕಾರ್ಯವನ್ನು ಪಾಂಚಾಲರಿಗೆ ನೇಮಿಸಿದ ಭೀಮಸೇನನು ಬೆರಳ ಸನ್ನೆ ಮಾಡಲು ಬಾಣಗಳಿಂದ ತುಂಬಿದ ರಥವನ್ನು ನೀಡಿದರು. ಭೀಮನು ತನ್ನ ಸಾರಥಿಯಾದ ವಿಶೋಕನಿಗೆ ಸಕಲ ಆಭರಣಗಳನ್ನು ಕೊಟ್ಟು ಮನ್ನಿಸಿ, ರಥದ ಕುದುರೆಗಳಿಗೆ ನಮಸ್ಕರಿಸಿ, ಆ ಹೊಸ ರತ್ನಮಯ ರಥವನ್ನು ಏರಿ ಹೊರಟನು.
ಟಿಪ್ಪನೀ (ಕ.ಗ.ಪ)
ವಿಶೋಕ-ಭೀಮಸೇನನ ಸಾರಥಿ, ಶ್ರೀಕೃಷ್ಣನಿಂದ ಕುಬ್ಜಾ ಅಥವಾ ತಿವಕ್ರೆಯೆಂಬುವಳಲ್ಲಿ ಜನಿಸಿದವ, ಇವನಿಗೆ ಅಶೋಕನೆಂಬುದು ನಾಮಾಂತರ
ಮೂಲ ...{Loading}...
ಅರನೆಲೆಯ ಸುಯ್ದಾನ ಪಾಂಚಾ
ಲರಿಗೆ ನೇಮಿಸಿತನಿಲತನಯನ
ಬೆರಳ ಸನ್ನೆಗೆ ತೀವಿದಂಬಿನ ತೇರ ಚಾಚಿದರು
ಕರೆದು ತನ್ನ ವಿಶೋಕಗಖಿಳಾ
ಭರಣವನು ಕೊಟ್ಟನು ವರೂಥದ
ಹರಿಗೆ ಹೊಡವಂಟಡರಿದನು ನವ ರತುನಮಯ ರಥವ ॥5॥
೦೦೬ ಸೂಳು ಮಿಗಲಳ್ಳರಿದವುರು ...{Loading}...
ಸೂಳು ಮಿಗಲಳ್ಳರಿದವುರು ನಿ
ಸ್ಸಾಳತತಿ ದಿಗುವಳೆಯದಲಿ ಕೈ
ಮೇಳವಿಸಿದವು ತಂಬಟಧ್ವನಿ ಜಡಿವ ಕಹಳೆಗಳು
ಕೀಳ ಬಗೆಯದೆ ಕೆರಳಿ ಹೊಯ್ದವು
ಕಾಲಲಿಳೆಯನು ಕುದುರೆ ಮೋರೆಯ
ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಬ್ಬರ ಹೆಚ್ಚುವಂತೆ ರಣಭೇರಿಗಳ ಶಬ್ದ ದಿಗ್ವಲಯವನ್ನೆಲ್ಲ ವ್ಯಾಪಿಸಿತು. ಅವುಗಳ ಜೊತೆಗೆ ತಮಟೆಯ ಧ್ವನಿ ಸೇರಿತು. ಅದರೊಡನೆ ಕಹಳೆಗಳು ಮೊಳಗತೊಡಗಿದವು. ಆ ಎಲ್ಲ ರಣವಾದ್ಯಗಳ ಆರ್ಭಟಕ್ಕೆ ಕೆರಳಿದ ಕುದುರೆಗಳು ಕಡಿವಾಣವನ್ನು ಲಕ್ಷಿಸದೆ ಭೂಮಿಯನ್ನು ಕಾಲುಗಳಿಂದ ಬಡಿದವು. ಮದಿಸಿದ ಆನೆಗಳು ತಮ್ಮ ಸೊಂಡಿಲಿನಿಂದ, ಭೂಮಿಯನ್ನು ಬಡಿದವು.
ಪದಾರ್ಥ (ಕ.ಗ.ಪ)
ಸೂಳು-ಗರ್ಜನೆ, ಬೊಬ್ಬೆ, ಅಳ್ಳಿರಿ-ಧ್ವನಿ ಮಾಡು,
ಕೀಳ್-ಕುದುರೆಯ ಬಾಯೊಳಗೆ ಇರುವ ಕಬ್ಬಿಣದ ಕಂಬಿ-ಕಡಿವಾಣ,
ಮೋದಿದವು-ಬಡಿದವು.
ಮೂಲ ...{Loading}...
ಸೂಳು ಮಿಗಲಳ್ಳರಿದವುರು ನಿ
ಸ್ಸಾಳತತಿ ದಿಗುವಳೆಯದಲಿ ಕೈ
ಮೇಳವಿಸಿದವು ತಂಬಟಧ್ವನಿ ಜಡಿವ ಕಹಳೆಗಳು
ಕೀಳ ಬಗೆಯದೆ ಕೆರಳಿ ಹೊಯ್ದವು
ಕಾಲಲಿಳೆಯನು ಕುದುರೆ ಮೋರೆಯ
ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು ॥6॥
೦೦೭ ಒದಗಿತೆಡಬಲವಙ್ಕದೊಯ್ಯಾ ರದಲಿ ...{Loading}...
ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕ್ಕ ಪಕ್ಕಗಳಲ್ಲಿ ಒಯ್ಯಾರದಿಂದ ಕುದುರೆ ಸೈನಿಕರು ಕಾಣಿಸಿದರು. ಸೇನೆಯ ಮುಂಭಾಗದಲ್ಲಿದ್ದವರು, ಸೈನ್ಯದ ಚತುರರು ತಲೆದೋರಿದರು. ಅದಿರುತ್ತಿದ್ದ ಖಡ್ಗದ ಕಾಂತಿ ರಾಸಿಯಾಗಿ ಗುಂಪಾಗಿ ಚದುರಿ ಸೂರ್ಯನನ್ನು ಆವರಿಸಿದವು. ಬರ್ಚಿಯ ತುದಿಗಳು ಸೂರ್ಯಮಂಡಲಕ್ಕೆ ರಾಹುಭಯವನ್ನು ಉಂಟು ಮಾಡಿದವು.
ಪದಾರ್ಥ (ಕ.ಗ.ಪ)
ಹೊಂತಕಾರಿ-ಚತುರರು,
ಕೊಂತ-ಬರ್ಚಿ
ಮೂಲ ...{Loading}...
ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ ॥7॥
೦೦೮ ಕೆಲಕೆ ಹೊಳೆದವು ...{Loading}...
ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟವ ತುಂಬಿತ್ತು ಪಯದಳ
ವುಲಿವ ಕಹಳೆಯ ಚೆಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಭಸದಿಂದ ನಡೆದ ಕುದುರೆಗಳು ಪಕ್ಕಕ್ಕೆ ಸರಿದವು. ಆನೆಗಳು ನೆಲ ಜಗ್ಗುವಂತೆ ನಡೆದವು. ದಿಕ್ಕುಗಳ ಹೊಲಿಗೆ ಕಿತ್ತು ಹೋಗದೆ ಇರದು ಎಂಬಂತೆ ರಥಗಳ ಸಮೂಹ ನುಗ್ಗಿದವು. ಕಾಲಾಳು ಸೈನ್ಯ ರಣರಂಗವನ್ನೆಲ್ಲ ತುಂಬಿಕೊಂಡಿತು. ಧ್ವನಿ ಮಾಡುತ್ತಿದ್ದ ಕಹಳೆಯ ಮತ್ತು ಚೆಂಬುಕವೆಂಬ ಚರ್ಮವಾದ್ಯದ ಕೋಲಾಹಲವು ಅತಿಶಯವಾಗಿ ಉಂಟಾಗಲು ಭೀಮಸೇನನ ಸೈನ್ಯ ಯುದ್ಧಕ್ಕೆ ತೊಡಗಿತು.
ಪದಾರ್ಥ (ಕ.ಗ.ಪ)
ಹೊಲಗೆ-ಹೊಲಿಗೆ,
ಚೆಂಬುಕ-ಒಂದು ಚರ್ಮ ವಾದ್ಯ,
ತಳಪಟ-ಯುದ್ಧದ ಬಯಲು
ಮೂಲ ...{Loading}...
ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟವ ತುಂಬಿತ್ತು ಪಯದಳ
ವುಲಿವ ಕಹಳೆಯ ಚೆಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ ॥8॥
೦೦೯ ಮುಸುಕಿದನು ರವಿ ...{Loading}...
ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರವಿಯು ಧೂಳಿನಿಂದ ಮರೆಯಾದನು. ಹೊಳೆಯುವ ಕತ್ತಿ, ಮುಸುಂಡಿ, ತ್ರಿಶೂಲ, ಭರ್ಜಿ ಇವೇ ಮೊದಲಾದ ಆಯುಧಗಳ ಕಾಂತಿ ಸೂರ್ಯನ ಪ್ರಕಾಶವನ್ನು ಮೀರಿಸಿತು. ಆಕಾಶದಲ್ಲಿ ಸೂರ್ಯ ಅಸ್ತಂಗತನಾದರೆ, ನಕ್ಷತ್ರಗಳು ಬೆಳಗುವಂತೆ ರಾಜರುಗಳ ಕಿರೀಟದ ಸುರತ್ನರಾಜಿಗಳು ಶೋಭಿಸಿದುವು.
ಪದಾರ್ಥ (ಕ.ಗ.ಪ)
ಮುಸುಂಡಿ-ಮೂರು ಮೊನೆಯ ಆಯುಧ, ಕೊಂತ-ಬರ್ಚಿ, ಖದ್ಯೋತ-ಸೂರ್ಯ, ದೀಧಿತಿ-ಪ್ರಕಾಶ, ಕಾಂತಿ,
ಮೂಲ ...{Loading}...
ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು ॥9॥
೦೧೦ ಎಲೆಲೆ ರಿಪುಸಂವರ್ತನೊಳು ...{Loading}...
ಎಲೆಲೆ ರಿಪುಸಂವರ್ತನೊಳು ಕೊಳು
ಗುಳಕೆ ವರ್ತಿಸಲರಿದೆನುತ ತ
ಲ್ಲಳಿಸಿ ತೆತ್ತುದು ಮನವನವನೀಪಾಲ ಸಂದೋಹ
ಹಳವಿನಬ್ಬರಕಂಜದಿರಿ ನಿಜ
ಗಳದ ಹಸುಗೆಯ ಹಾರದಿರಿಯೆಂ
ದಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ…. ಪ್ರಳಯಾಗ್ನಿ ಸ್ವರೂಪನಾದ ಭೀಮನ ಜೊತೆ ಯುದ್ಧದಲ್ಲಿ ಎದುರಾಗಿ ಹೋರಾಡುವುದು ಅಸಾಧ್ಯ ಎನ್ನುತ್ತಾ ರಾಜರುಗಳ ಸಮೂಹ ತಲ್ಲಣಿಸುತ್ತಾ ಮನಸ್ಸನ್ನು ತಿರುಗಿಸಿ ಬಿಟ್ಟವು. ವ್ಯರ್ಥವಾದ ಆರ್ಭಟಕ್ಕೆ ಹೆದರದಿರಿ. ನಿಮ್ಮ ನಿಮ್ಮ ಕತ್ತುಗಳನ್ನು ಕತ್ತರಿಸಿಕೊಳ್ಳಲು ಹಾತೊರೆಯಬೇಡಿ ಎಂದು ಹೇಳುತ್ತಲೇ ಅಲ್ಪ ಮನಸ್ಕರು ಹಿಮ್ಮೆಟ್ಟಿ ದ್ರೋಣರ ಮೊರೆಹೊಕ್ಕರು.
ಮೂಲ ...{Loading}...
ಎಲೆಲೆ ರಿಪುಸಂವರ್ತನೊಳು ಕೊಳು
ಗುಳಕೆ ವರ್ತಿಸಲರಿದೆನುತ ತ
ಲ್ಲಳಿಸಿ ತೆತ್ತುದು ಮನವನವನೀಪಾಲ ಸಂದೋಹ
ಹಳವಿನಬ್ಬರಕಂಜದಿರಿ ನಿಜ
ಗಳದ ಹಸುಗೆಯ ಹಾರದಿರಿಯೆಂ
ದಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ ॥10॥
೦೧೧ ಮಿಗೆ ವಿರೋಧಿಯ ...{Loading}...
ಮಿಗೆ ವಿರೋಧಿಯ ಬಸುರನುಗಿ ಕು
ನ್ನಿಗಳ ಕೆಡೆ ಬಡಿ ಸೀಳು ಹೆಣನುಂ
ಗಿಗಳ ಹೊಯ್ ಹೊಯ್ ರಣಕೆ ಹೆದರುವ ಕೌರವಾನುಜರ
ಹಗೆಯ ಶೋಣಿತ ಪಾನದರವ
ಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳನೆನುತ ಸುಧೈರ್ಯ ನಡೆದನು ಗರುಡಿಯಾಚಾರ್ಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿಶೇಷವಾಗಿ ಶತ್ರುಗಳ ಬಸುರನ್ನು ಸೀಳಿಹಾಕಿ, ನಾಯಿಗಳನ್ನು ಕೆಳಗೆ ಬೀಳುವಂತೆ ಬಡಿಯಿರಿ. ಹೆಣನುಂಗುವವರನ್ನು ಹೊಯ್ಯಿರಿ. ಯುದ್ಧ ಮಾಡಲು ಹೆದರುವ ಕೌರವನ ಸೋದರರನ್ನು ಹೊಡೆದು ನಿಲ್ಲಿಸಿ. ಶತ್ರುಗಳ ರಕ್ತಪಾನದ ಅರವಟ್ಟಿಗೆಗೆ ಭೂತ, ಪ್ರೇತ, ಪಿಶಾಚಿಗಳನ್ನು ಕರೆಯಿರಿ” ಎನ್ನುತ್ತಾ ಧೀರನಾದ ದ್ರೋಣನು ನಡೆದನು.
ಪದಾರ್ಥ (ಕ.ಗ.ಪ)
ಉಗಿ-ಸೀಳು, ಗರುಡಿಯಾಚಾರ್ಯ-ಶಸ್ತ್ರ ವಿದ್ಯಾಗುರು-ದ್ರೋಣ,
ಮೂಲ ...{Loading}...
ಮಿಗೆ ವಿರೋಧಿಯ ಬಸುರನುಗಿ ಕು
ನ್ನಿಗಳ ಕೆಡೆ ಬಡಿ ಸೀಳು ಹೆಣನುಂ
ಗಿಗಳ ಹೊಯ್ ಹೊಯ್ ರಣಕೆ ಹೆದರುವ ಕೌರವಾನುಜರ
ಹಗೆಯ ಶೋಣಿತ ಪಾನದರವ
ಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳನೆನುತ ಸುಧೈರ್ಯ ನಡೆದನು ಗರುಡಿಯಾಚಾರ್ಯ ॥11॥
೦೧೨ ಏನಿದೆತ್ತಣ ರಭಸವೆಲೆ ...{Loading}...
ಏನಿದೆತ್ತಣ ರಭಸವೆಲೆ ಪವ
ಮಾನಸುತ ಫಡ ಮರಳು ನಿನ್ನನು
ಮಾನವಾವುದು ಗಮನವೆಲ್ಲಿಗೆ ಮಾಡು ಬಿನ್ನಹವ
ಆನಿರಲು ಕೈಕೊಳ್ಳದುರುಬುವ
ದಾನವಾಮರರಿಲ್ಲ ನಿನ್ನಳ
ವೇನು ಸಾಕೊಮ್ಮಿಂಗೆ ಕಾವೆನು ಬೇಡ ಮರಳೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನಿದು ? ಎಲ್ಲಿಯ ರಭಸ ? ಎಲೆ ವಾಯುಪುತ್ರ ಭೀಮನೇ…. ಹಿಂತಿರುಗು, ನಿನ್ನ ಅನುಮಾನವೇನು ? ಎಲ್ಲಿಗೆ ಹೊರಟಿರುವೆ? ಮೊದಲು ಹೇಳು. ನಾನಿರಲಾಗಿ, ನನ್ನ ಅಪ್ಪಣೆಯನ್ನು ಸ್ವೀಕರಿಸದೆ ಪರಾಕ್ರಮ ತೋರುವ ರಾಕ್ಷಸರು, ದೇವತೆಗಳು ಯಾರೂ ಇಲ್ಲ. ಹೀಗಿರುವಾಗ ನಿನ್ನ ಸಾಮಥ್ರ್ಯವೆಷ್ಟರದು ? ಸಾಕು. ಒಮ್ಮೆ ಮಾತ್ರ ನಿನ್ನನ್ನು ಕಾಯುತ್ತೇನೆ. ಬೇಡ ಹಿಂತಿರುಗು” ಎಂದು ದ್ರೋಣನು ಭೀಮನಿಗೆ ಹೇಳಿದನು.
ಮೂಲ ...{Loading}...
ಏನಿದೆತ್ತಣ ರಭಸವೆಲೆ ಪವ
ಮಾನಸುತ ಫಡ ಮರಳು ನಿನ್ನನು
ಮಾನವಾವುದು ಗಮನವೆಲ್ಲಿಗೆ ಮಾಡು ಬಿನ್ನಹವ
ಆನಿರಲು ಕೈಕೊಳ್ಳದುರುಬುವ
ದಾನವಾಮರರಿಲ್ಲ ನಿನ್ನಳ
ವೇನು ಸಾಕೊಮ್ಮಿಂಗೆ ಕಾವೆನು ಬೇಡ ಮರಳೆಂದ ॥12॥
೦೧೩ ಎಲೆ ಮರುಳೆ ...{Loading}...
ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಮರುಳೆ… ನೀವು ನಮಗೆ ಗುರು ನಿಜ. ನೀವು ಗರ್ವದಿಂದ ಮಾತನಾಡಿದರೆ ಮೊದಲು ಹೆದರುವೆನು. ಮಾತಿನಿಂದೇನು ? ನಿಮ್ಮೊಡನೆ ಆ ಬಳಿಕ ಯುದ್ಧ ಮಾಡುವೆನು. ಮೊದಲು ನಿಮ್ಮ ಸೇನೆಯಲ್ಲಿ ಮುಂದುವರಿಯಲು ದಾರಿಯನ್ನು ಕೊಡಿ. ಸಿಕ್ಕಿ ಹಾಕಿಕೊಂಡಿರುವ ಪಾರ್ಥನನ್ನು ಕರೆತರುತ್ತೇನೆ. ಇದು ತನಗೆ ಅಣ್ಣನಾದ ಧರ್ಮಜನ ಅಪ್ಪಣೆ” ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಹೆಕ್ಕಳಿಸು-ಗರ್ವಪಡು,
ಮೂಲ ...{Loading}...
ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ ॥13॥
೦೧೪ ಆದರೆಲವೋ ಭೀಮ ...{Loading}...
ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪು ವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ ಎಲೆ ಭೀಮ-ಪಾರ್ಥನ ಹಾದಿಯನ್ನು ಹುಡುಕುತ್ತಾ ಹೋಗುವುದಾದರೆ, ಸಾತ್ಯಕಿಯಂತೆ ನೀನು ನಮಗೆ ವಂದಿಸಿ ಮಾರ್ಗವನ್ನು ಹಿಡಿದು ಹೋಗುವೆಯಾದರೆ ಒಪ್ಪುವೆನು. ಇಲ್ಲದೆ ಬಿರುಸಾಗಿ ಮಾತಾಡಿದರೆ ಸಾಧ್ಯವೇ ? ನನ್ನ ಪಾದಗಳಿಗೆ ವಂದಿಸು ಅಥವಾ ಯುದ್ಧ ಮಾಡುವುದಾದರೆ ಧನುವನ್ನು ಹಿಡಿ” ಎಂದು ಭೀಮನಿಗೆ ದ್ರೋಣನು ಇದಿರಾಡಿದನು.
ಮೂಲ ...{Loading}...
ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪು ವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ ॥14॥
೦೧೫ ತರಳರರ್ಜುನ ಸಾತ್ಯಕಿಗಳವ ...{Loading}...
ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಲಕರಾದ ಅರ್ಜುನ, ಸಾತ್ಯಕಿಗಳ ವಿಷಯದಲ್ಲಿ ಈ ಹಟವೇಕೆ ? ನಿಮ್ಮನ್ನು ಗರುಡಿಯಲ್ಲಿ ವಂದಿಸುವಂತೆ ಸಮರದಲ್ಲೂ ವಂದಿಸಬೇಕೇ ? ಇದು ಮೂರ್ಖತನವಲ್ಲವೇ ? ಅತ್ಯಂತ ವೃದ್ಧರ ಮುಂದೆ ಪ್ರತಿಯಾಗಿ ಮಾತನಾಡುವುದೇಕೆ ಎಂಬಂತೆ, ‘ನಿಮ್ಮ ಮನಸಲ್ಲೇನಿದೆ ಎಂಬುದನ್ನು ಬಲ್ಲೆನು’ - ದಾರಿ ಬಿಡಿ, ಪಕ್ಕಕ್ಕೆ ಸರಿಯಿರಿ ಸಾಕು” ಎಂದನು ಭೀಮ.
ಮೂಲ ...{Loading}...
ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ ॥15॥
೦೧೬ ಫಡ ಫಡೆಲವೋ ...{Loading}...
ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನನರಿಯಾ ದ್ರೋಣ ತಾನೆನುತೆಚ್ಚನನಿಲಜನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೆ, ಭಲೆ, ಎಲವೋ ಭೀಮ, ಅಲ್ಪರೊಡನೆ ಹೋಲಿಸಿ ನನ್ನನ್ನು ಲೆಕ್ಕಿಸದೆ ಉತ್ಸಾಹದಿಂದ ಮುನ್ನುಗ್ಗುತ್ತಿರುವೆಯಲ್ಲಾ ! ತಪ್ಪೇನು? ಒಳ್ಳೆಯದು. ಕಾಳಗಕ್ಕೆ ಸಿದ್ಧನಾಗು. ವಿನಯದಿಂದ ನಡೆದರೆ ಶರೀರವನ್ನೇ ಒಪ್ಪಿಸುವೆ ಪ್ರತಿಭಟಿಸಿದರೆ ಕೊಲ್ಲುವೆನು. ಈ ದ್ರೋಣನು ಶತ್ರುಸಮೂಹಕ್ಕೆ ಶಿವನೆಂಬುದನ್ನು ತಿಳಿಯಯ್ಯಾ !” ಎನ್ನುತ್ತಾ ವಾಯುಪುತ್ರನಾದ ಭೀಮನ ಮೇಲೆ ಅಸ್ತ್ರ ಪ್ರಯೋಗಿಸಿದನು.
ಮೂಲ ...{Loading}...
ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನನರಿಯಾ ದ್ರೋಣ ತಾನೆನುತೆಚ್ಚನನಿಲಜನ ॥16॥
೦೧೭ ಈತನೊಡನಮ್ಬಿನಲಿ ಕಾದಲು ...{Loading}...
ಈತನೊಡನಂಬಿನಲಿ ಕಾದಲು
ಭೂತನಾಥಂಗರಿದು ಸಾರಥಿ
ಪೂತುರೇ ಎನುತಿಳಿದು ರಥವನು ತುಡುಕಿದನು ಗದೆಯ
ಆತನಸ್ತ್ರಕೆ ದಂಡೆಯೊಡ್ಡಿ ಮ
ಹಾತಿಬಳ ಕವಿದನು ವಿರೋಧಿಯ
ಸೂತನನು ಕೆಡೆಹೊಯ್ದು ಕೊಂದನು ರಥದ ಕುದುರೆಗಳ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈತನೊಡನೆ ಬಾಣಗಳಿಂದ ಯುದ್ಧ ಮಾಡಲು ಶಿವನಿಗೂ ಅಸಾಧ್ಯ, ಸಾರಥಿ! " ಎಂದು ದ್ರೋಣನ ಅಸ್ತ್ರಪ್ರಯೋಗಕ್ಕೆ ಶಹಭಾಸ್ ಎನ್ನುತ್ತ ರಥದಿಂದ ಇಳಿದು ಗದೆಯನ್ನು ಹಿಡಿದನು. ದಂಡೆ ಹೊಡೆದು ಆತನ ಅಸ್ತ್ರದಿಂದ ತಪ್ಪಿಸಿಕೊಂಡು ಮಹಾಪರಾಕ್ರಮಿಯಾದ ಭೀಮನು ಶತ್ರು ದ್ರೋಣನ ರಥದ ಮೇಲೆ ಬಿದ್ದು ಸಾರಥಿಯನ್ನು ಕೆಳಗೆ ಬೀಳುವಂತೆ ಹೊಡೆದು ರಥದ ಕುದುರೆಗಳನ್ನು ಕೊಂದನು.
ಪದಾರ್ಥ (ಕ.ಗ.ಪ)
ದಂಡೆ-ಸಾಮು, ಕುಸ್ತಿಯ ಒಂದು ಪಟ್ಟು,
ಮೂಲ ...{Loading}...
ಈತನೊಡನಂಬಿನಲಿ ಕಾದಲು
ಭೂತನಾಥಂಗರಿದು ಸಾರಥಿ
ಪೂತುರೇ ಎನುತಿಳಿದು ರಥವನು ತುಡುಕಿದನು ಗದೆಯ
ಆತನಸ್ತ್ರಕೆ ದಂಡೆಯೊಡ್ಡಿ ಮ
ಹಾತಿಬಳ ಕವಿದನು ವಿರೋಧಿಯ
ಸೂತನನು ಕೆಡೆಹೊಯ್ದು ಕೊಂದನು ರಥದ ಕುದುರೆಗಳ ॥17॥
೦೧೮ ಇದು ನಿಮಗೆ ...{Loading}...
ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ನಿಮಗೆ ವಂದನೆ ಎನ್ನುತ್ತ ತನ್ನ ಗದೆಯಿಂದ ದ್ರೋಣನ ರಥವನ್ನು ಬಡಿದು ಪುಡಿ ಪುಡಿ ಮಾಡಿದನು. (ಸುತ್ತಣ ಸೈನಿಕರು) ಕತ್ತಿಯನ್ನು ಸೆಳೆಯಲು ಭೀಮನು ಗದೆಯಿಂದ ಸೇನೆಯನ್ನು ಅಪ್ಪಳಿಸಿದನು. ಭೀಮನನ್ನು ಎದುರಿಸಲು ಸಾಧ್ಯವಾಗದೆ ಗುರು ಹಿಮ್ಮೆಟ್ಟಿದನು. ಭೀಮನು ಶಕಟ ವ್ಯೂಹದ ಮಧ್ಯದಲ್ಲಿ ಸೈನ್ಯವನ್ನು ಚದುರಿಸಿ ಸಂಭ್ರಮಿಸುತ್ತ ಮುನ್ನಡೆದನು.
ಪದಾರ್ಥ (ಕ.ಗ.ಪ)
ಹಿಂಗು-ಹಿಮ್ಮೆಟ್ಟು,
ಮೂಲ ...{Loading}...
ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ ॥18॥
೦೧೯ ಹರಿಯ ಕುಲಿಶದ ...{Loading}...
ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿ ವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯಿದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನ ವಜ್ರಾಯುಧದ ಧಾಳಿಯಲ್ಲಿ ಕುಲ ಪರ್ವತಗಳು ಎರಡು ಭಾಗವಾದ ಹಾಗೆ, ಮಂದರ ಪರ್ವತದ ಘರ್ಷಣೆಯಿಂದ ಕ್ಷೀರಸಾಗರ ನಡುವೆ ಬಾಯಿ ತೆರೆದುಕೊಂಡು ಚದುರಿದಂತೆ ಶತ್ರು ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಆನೆ, ಕುದುರೆ, ರಥ, ಕಾಲಾಳು ಮೊದಲಾದ ನಾಲ್ಕು ಬಗೆಯ ಸೈನ್ಯ ಕೆದರಿ ಚೆಲ್ಲಾಪಿಲ್ಲಿಯಾಯಿತು. ಪ್ರತಿಜ್ಞೆಗೈದ ಭಟರ ಮನದ ಅಪಾರವಾದ ಉತ್ಸಾಹ ತಗ್ಗಿತು.
ಪದಾರ್ಥ (ಕ.ಗ.ಪ)
ಕುಲಿಶ-ವಜ್ರಾಯುಧ,
ಘಾರಾಘಾರಿ-ಘರ್ಷಣೆ,
ಮೂಲ ...{Loading}...
ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿ ವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯಿದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ ॥19॥
೦೨೦ ಹೊಸರಥವ ತಾ ...{Loading}...
ಹೊಸರಥವ ತಾ ಹೋದನೇ ಸಂ
ಧಿಸುವೆನಿನ್ನನಿಲಜನು ಕುಂತಿಯ
ಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ
ಕುಸುರಿದರಿದನು ಮುಂದೆ ವೈರಿ
ಪ್ರಸರವನು ಸಂವರ್ತ ರುದ್ರನೊ
ಹೊಸಬನಿವನಾರೆಂದು ತಲ್ಲಣಿಸಿತ್ತು ರಿಪುಸೇನೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊಸ ರಥವನ್ನು ತನ್ನಿ , ಭೀಮ ಹೋದನೇ ? ಅವನೆಲ್ಲಿದ್ದರೂ ಸಂಧಿಸುವೆನು. ಭೀಮನು ಕುಂತಿಯ ಬಸುರನ್ನು ಹೊಕ್ಕರೆ ಅಲ್ಲಿಗೂ ಪ್ರವೇಶಿಸುತ್ತೇನೆ” - ಎನ್ನುತ್ತಾ ದ್ರೋಣನು ಗಜಬಜಿಸುತ್ತಿರಲು ಇತ್ತ ಭೀಮನು ವೈರಿ ಸಮೂಹವನ್ನು ಚೂರು ಚೂರಾಗಿ ಕತ್ತರಿಸಿದನು. ಪ್ರಳಯಕಾಲದ ರುದ್ರನೋ ? ಹೊಸಬನಾದ ಇವನಾರೆಂದು ಶತ್ರುಸೇನೆ ತಲ್ಲಣಗೊಂಡಿತು.
ಟಿಪ್ಪನೀ (ಕ.ಗ.ಪ)
ಸಂವರ್ತ - ಮರುತ್ತರಾಯನು ಅಶ್ವಮೇಧಯಾಗಕ್ಕೆ ಸಚಿವರ್ತನನ್ನು ಉಪದ್ರಷ್ಟನನ್ನಾಗಿ ಮಾಡಲು ಎಷ್ಟು ಕಷ್ಟಪಟ್ಟನೆಂಬ ಅಂಶ ಈ ಕಥೆಯಲ್ಲಿ ಬರುತ್ತದೆ.
ವಾಸ್ತವವಾಗಿ ಯಜ್ಞಕ್ಕೆ ಬರಬೇಕೆಂದು ಮರುತ್ತನು ಕೇಳಿದ್ದು ಸಚಿವರ್ತನ ಅಣ್ಣನಾದ ದೇವಗುರು ಬೃಹಸ್ಪತಿಯನ್ನು. ಆದರೆ ಬೃಹಸ್ಪತಿಯು ಅವನ ಕೋರಿಕೆಯನ್ನು ತಿರಸ್ಕರಿಸಿದ. ಆಗ ಕರಂಧಮುನಿಯ ಮೊಮ್ಮಗನಾದ ಮರುತ್ತರಾಯನು ಬೃಹಸ್ಪತಿಯ ತಮ್ಮನಾದ ಸಚಿವರ್ತನನ್ನು ಒಪ್ಪಿಸಲು ತೀರ್ಮಾನಿಸಿದ. ಆದರೆ ಹೇಗೆ ಅವನನ್ನು ಸಂಪರ್ಕಿಸುವುದು? ಆಗ ನಾರದ ಅವನಿಗೆ ದಾರಿತೋರಿದ. ರಾಜನಿಗೆ ನಾರದ ಹೇಳಿದ:
‘‘ಬೃಹಸ್ಪತಿ ತಿರಸ್ಕರಿಸಿದರೆ ಏನೀಗ? ಅವನ ತಮ್ಮ, ಅಂಗಿರಸ ಉಪುತ್ರ, ಸಚಿವರ್ತ ಇಲ್ಲವೆ? ಅವನು ಬೃಹಸ್ಪತಿಯ ತಿರಸ್ಕೃತಿಯಿಂದ ನೊಂದು ಎಲ್ಲವನ್ನೂ ತ್ಯಜಿಸಿ ದಿಗಂಬರನಾಗಿ ಅಲೆಯುತ್ತಿದ್ದಾನೆ. ಅವನನ್ನು ಬಲವಾಗಿ ಹಿಡಿದು ಒಪ್ಪಿಸು…..’’ ಇಷ್ಟು ಹೇಳಿ ನಾರದನು ಮರುತ್ತನಿಗೆ ಸಚಿವರ್ತನನ್ನು ಕಾಣುವ ರೀತಿಯನ್ನೂ ತಿಳಿಸಿದ.
‘‘ಕಾಶಿ ಪಟ್ಟಣಕ್ಕೆ ಹೋಗು. ಅಲ್ಲಿ ಪುರದ್ವಾರದಲ್ಲಿ ಒಂದು ಹೆಣವನ್ನು ಇಟ್ಟುಕೊಂಡು ಕುಳಿತುಕೋ. ಯಾರು ಬಂದು ನಿನ್ನನ್ನು ನೋಡಿದ ಕೂಡಲೇ ಹೊರಟುಬಿಡುತ್ತಾನೋ ಅವನೇ ಸಚಿವರ್ತ. ಅವನನ್ನು ಏನು ಮಾಡಿದರೂ ಬಿಡದೆ ಹಿಂಬಾಲಿಸಿ ನಿಶ್ಚಲಭಕ್ತಿಯಿಂದ ಏಕಾಂತದಲ್ಲಿ ಶರಣಾಗು. ಅವನಿಗೆ ತನ್ನ ಹೆಸರು ಹೇಗೆ ಗೊತ್ತು? ಎಂಬ ಅನುಮಾನ ಕಾಡಿದಾಗ ನಾರದ ಹೇಳಿದ ಎಂದು ಹೇಳಿಬಿಡು. ನಾರದ ಎಲ್ಲಿ? ಎಂದು ಕೇಳಿದರೆ ನನ್ನ ಗುರುತು ಹೇಳಿ ಆಮೇಲೆ ನಾರದ ಅಗ್ನಿಪ್ರವೇಶ ಮಾಡಿದ ಎಂದು ಹೇಳು ಸಾಕು.’’
ಎಲ್ಲಾ ನಾರದ ಹೇಳಿದಂತೆಯೇ ನಡೆಯಿತು. ಮರದ ಕೆಳಗೆ ಒರಗಿದ್ದ ಸಚಿವರ್ತನನ್ನು ಹಿಂಬಾಲಿಸಿಕೊಂಡು ಬಂದ ಮರುತ್ತರಾಯನು ತನ್ನ ವಂಶ ವಿವರಗಳನ್ನೆಲ್ಲ ತಿಳಿಸಿ ತಾನು ಮಾಡಬೇಕಾದ ಯಾಗದ ಬಗೆಗೂ ತಿಳಿಸಿದ. ಎಲ್ಲವನ್ನೂ ನೇರವಾಗಿ ಮರೆಮಾಚದೆ ಹೇಳಿದ. ಕೊನೆಗೆ ಯಜ್ಞ ಮಾಡಿಸಲು ಒಪ್ಪಿಕೊಂಡ ಸಚಿವರ್ತನು ‘‘ನನ್ನ ಅಣ್ಣ ಬೃಹಸ್ಪತಿಯ ಅಪ್ಪಣೆ ಪಡೆದು ಬಾ. ನನ್ನಂಥ ಹೆಣ ಉಪದ್ರಷ್ಟನಾದರೆ ಏನು ಪ್ರಯೋಜನ? ಅವನನ್ನೇ ಏಕೆ ಕರೆಸಬಾರದು….?’’ ಎಂದು ಪ್ರಶ್ನಿಸಿದ.
ಆಗ ಮರುತ್ತನು ‘‘ನಾನು ಬೃಹಸ್ಪತಿಯನ್ನು ಕೇಳಿದೆ. ಆದರೆ ಮಾನವರು ಮಾಡುವ ಯಜ್ಞಕ್ಕೆ ನಾನು ಉಪದ್ರಷ್ಟನಾಗುವುದಿಲ್ಲ ಎಂದ. ನೀನೇನು ಕಡಮೆ ಇಲ್ಲವಲ್ಲ. ನಿನ್ನನ್ನು ನಂಬಿ ಬಂದಿದ್ದೇನೆ’’ ಎಂದು ಹೇಳಿದ. ಸಚಿವರ್ತನಿಗೆ ಯಜ್ಞ ಮಾಡಿಸುವ ಹುಮ್ಮಸ್ಸು ಬಂದಿತು. ಆದರೆ ಎಚ್ಚರಿಕೆಯ ಮಾತುಗಳನ್ನೂ ಅವನು ಮರುತ್ತನಿಗೆ ಹೇಳಬೇಕಾಯಿತು.
‘‘ಆಗಲಿ, ಬೃಹಸ್ಪತಿ, ದಿವಸ್ಪತಿ ಇಬ್ಬರೂ ವಿರೋಧ ಸೂಚಿಸುತ್ತಾರೆ. ಹೆದರಬೇಡ. ಧೈರ್ಯದಿಂದಿರು. ನೀನು ಒಂದು ವೇಳೆ ಯಾವುದೋ ಘಟ್ಟದಲ್ಲಿ ಹೆದರಿ ಹಿಂಜರಿದರೆ ನನ್ನ ಶಾಪಕ್ಕೆ ಗುರಿಯಾಗುತ್ತೀಯೆ.’’
ಮರುತ್ತರಾಯ ಇದಕ್ಕೆಲ್ಲ ಸಿದ್ಧನಾಗಿದ್ದ.
‘‘ನಿನ್ನ ಸಹಾಯ ಇದ್ದರೆ ಯಾರಿಗೂ ಹೆದರುವುದಿಲ್ಲ’’ ಎಂದು ಹೇಳಿದ. ಸಚಿವರ್ತನ ಆಜ್ಞೆಯಂತೆ ಮುಂಜವಂತ ಪರ್ವತಕ್ಕೆ ಹೋಗಿ ಶಿವನನ್ನು ಆರಾಧಿಸಿದ. ಅನಂತರ ಆ ಪ್ರದೇಶದಲ್ಲಿದ್ದ ಚಿನ್ನವನ್ನು ಅಗೆಸಿ ಹೊರಿಸಿಕೊಂಡು ‘‘ಪ್ಲಕ್ಞಾವತರಣ’’ ಎಂಬ ತೀರ್ಥಕ್ಷೇತ್ರಕ್ಕೆ ಬಂದು ಅಲ್ಲಿ ವೈಭವದಿಂದ ಯಾಗವನ್ನು ಮಾಡಿದ. ಸಚಿವರ್ತನ ಶಕ್ತಿಯನ್ನು ಬಲ್ಲ ಇಂದ್ರನು ಮರುತ್ತನ ಬಳಿಗೆ ಬಂದು ‘‘ಈ ಬಾರಿ ಕರೆದರೆ ಬೃಹಸ್ಪತಿ ಬರುತ್ತಾನೆ’’ ಎಂದು ಹೇಳಿದ. ಆದರೆ ಆ ಆಹ್ವಾನವನ್ನು ತಿರಸ್ಕರಿಸಿ ಮರುತ್ತರಾಯನು ಸಚಿವರ್ತನಿಂದಲೇ ಯಜ್ಞವನ್ನು ಮಾಡಿಸಿ ಯಶಸ್ವಿಯಾದ.
ಮರುತ್ತರಾಯ - ಮಹಾಭಾರತದ ದ್ರೋಣಪರ್ವದ ಅಭಿಮನ್ಯು ವಧಪರ್ವದಲ್ಲಿ ಹಾಗೂ ಅಶ್ವಮೇಧ ಪರ್ವದಲ್ಲಿ ಮರುತ್ತರಾಯನ ಯಜ್ಞದ ಪ್ರಸ್ತಾವವಿದೆ. ಮರುತ್ತರಾಯನು ಪ್ರಸಿದ್ಧ ದೊರೆ ಕರಂಧಮನ ಮೊಮ್ಮಗ, ಅವಿಕ್ಷಿತನ ಮಗ. ಈತ ವೇದಾಧ್ಯಯನ ಮಾಡಿದವ. ಸತ್ಯರ್ಮಾಚರಣೆಯವ, ದಯಾಪರ, ದಂಡನೀತಿ ವಿಶ್ರುತಮತಿ ಹಾಗೂ ದಾನಶೀಲ ಎಂದು ವ್ಯಾಸರು ಹೊಗಳಿದ್ದಾರೆ. ಮರುತ್ತರಾಯನು ಒಂದು ಯಾಗಕ್ಕೆ ಇಂದ್ರನನ್ನು ಕರೆಸದೆ ಬೃಹಸ್ಪತಿಯನ್ನು ಉಪದ್ರಷ್ಟನಾಗುವಂತೆ ಆಹ್ವಾನಿಸಿದ. ಮನುಷ್ಯರ ಯಾಗಕ್ಕೆ ತಾನು ಬರಲಾರೆ ಎಂದು ಬೃಹಸ್ಪತಿ ತಿರಸ್ಕರಿಸಿದಾಗ ಮರುತ್ತನು ಬೃಹಸ್ಪತಿಯ ತಮ್ಮ ಸಚಿವರ್ತನ ಬಳಿಗೆ ಓಡಿದ ಅಣ್ಣನಿಂದ ಭಂಗಿತನಾಗಿ ಮನೆ ಬಿಟ್ಟು ಬಂದಿದ್ದ ಸಚಿವರ್ತನನ್ನು ಒಲಿಸಿಕೊಳ್ಳಲು ಕಾಶಿಗೇ ಹೋಗಿ ತುಂಬ ಪಟ್ಟು ಹಿಡಿದು ಒಪ್ಪಿಸಿದ. ಸಚಿವರ್ತನು ಮಹಾಯಜ್ಞಕ್ಕೆ ಬೇಕಾದ ಧನಸಂಪತ್ತಿಗಾಗಿ ಮರುತ್ತರಾಯನು ಹಿಮಾಲಯದ ಉತ್ತರದಲ್ಲಿದ್ದ ‘ಮಂಜುವಂತ’ ಎಂಬ ಶಿವನ ಪರ್ವತ ನಿವಾಸಕ್ಕೆ ಕರೆದೊಯ್ದ. ಮರುತ್ತನು ಶಿವನನು ಪೂಜಿಸಿ ನಾನಾ ಬಗೆಯ ಯಜ್ಞಗಳನ್ನು ಮಾಡಲು ಸಹಾಯ ಮಾಡಬೇಕೆಂದು ಬೇಡಿದ. ಶಿವನು ಹಿಮಾಲಯದಲ್ಲಿನ ಒಂದು ಹಿರಣ್ಯಮಯ ಶಿಖರವನ್ನು ದಾನವಾಗಿ ಕೊಟ್ಟ. ಆ ಸ್ವರ್ಣ ಸಂಪತ್ತಿನ ಸಹಾಯದಿಂದ
ಮೂಲ ...{Loading}...
ಹೊಸರಥವ ತಾ ಹೋದನೇ ಸಂ
ಧಿಸುವೆನಿನ್ನನಿಲಜನು ಕುಂತಿಯ
ಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ
ಕುಸುರಿದರಿದನು ಮುಂದೆ ವೈರಿ
ಪ್ರಸರವನು ಸಂವರ್ತ ರುದ್ರನೊ
ಹೊಸಬನಿವನಾರೆಂದು ತಲ್ಲಣಿಸಿತ್ತು ರಿಪುಸೇನೆ ॥20॥
೦೨೧ ಎಚ್ಚನುಚ್ಚಳಿಸುವ ತುರಙ್ಗವ ...{Loading}...
ಎಚ್ಚನುಚ್ಚಳಿಸುವ ತುರಂಗವ
ನೊಚ್ಚತವೆ ಕೊಂದನು ರಥೌಘವ
ನಚ್ಚರಿಯರೊಡನಾಡಿಸಿದನುರವಣಿಪ ಕಾಲಾಳ
ಕಿಚ್ಚುಗಿಡಿಗೆದರುವ ಸಿಳೀಮುಖ
ಕೊಚ್ಚಲಿಭದವಯವವನಮರರಿ
ಗಚ್ಚರಿಯ ತನಿಸೂರೆಬಿಟ್ಟನು ಭೀಮ ಬವರದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ನೆಗೆಯುತ್ತಿರುವ ಕುದುರೆಗಳನ್ನು, ರಥ ಸಮೂಹವನ್ನು ಒಂದೇ ಸಮನೆ ನಾಶಪಡಿಸಿದ. ಆಕ್ರಮಿಸಿ ಬಂದ ಕಾಲಾಳುಗಳನ್ನು ಅಪ್ಸರ ಸ್ತ್ರೀಯರ ಒಡನಾಡುವಂತೆ ಮಾಡಿದ. ಬೆಂಕಿಯ ಕಿಡಿಗಳನ್ನು ಕೆದರುತ್ತಿದ್ದ ಬಾಣಗಳು ಆನೆಗಳ ಅವಯವಗಳನ್ನು ಕೊಚ್ಚುತ್ತಿರಲು ಭೀಮನು ಯುದ್ಧದಲ್ಲಿ ದೇವತೆಗಳಿಗೆ ಅತಿಶಯವಾದ ಆಶ್ಚರ್ಯಗೊಳ್ಳುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಉಚ್ಚಳ-ಚಿಮ್ಮುವ, ನೆಗೆಯುವ, ಬಚ್ಚತ-ಬಚ್ಚತವೆ-ಒಂದೇಸಮನೆ,
ಮೂಲ ...{Loading}...
ಎಚ್ಚನುಚ್ಚಳಿಸುವ ತುರಂಗವ
ನೊಚ್ಚತವೆ ಕೊಂದನು ರಥೌಘವ
ನಚ್ಚರಿಯರೊಡನಾಡಿಸಿದನುರವಣಿಪ ಕಾಲಾಳ
ಕಿಚ್ಚುಗಿಡಿಗೆದರುವ ಸಿಳೀಮುಖ
ಕೊಚ್ಚಲಿಭದವಯವವನಮರರಿ
ಗಚ್ಚರಿಯ ತನಿಸೂರೆಬಿಟ್ಟನು ಭೀಮ ಬವರದಲಿ ॥21॥
೦೨೨ ತನತನಗೆ ಮುಙ್ಕೊಣ್ಡು ...{Loading}...
ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತು ವಾತಾ
ಯನಿತ ವಿಗ್ರಹವಾಯ್ತು ನಿಗ್ರಹದತಿಮಹಾರಥರು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮಷ್ಟಕ್ಕೆ ತಾವೇ ಮುಂದಾಗಿ ಯುದ್ಧವು ನನಗೆ ತನಗೆಂಬ ರೀತಿಯಲ್ಲಿ ಸಕಲ ವೀರರಾಜರುಗಳು ಅಹಂಕಾರದಿಂದ ವಾಯುಸುತ ಭೀಮನನ್ನು ಹೊಡೆದರು. ಹರಿತವಾದ ಬಾಣದ ತುದಿಯ ಬಿರುಸಾದ ಮಳೆಗೆ ಎಲ್ಲರೂ ಅಂಗಾಂಗಗಳನ್ನು ಒಡ್ಡಬೇಕಾಯಿತು. ಬಾಣಗಳ ರಭಸಕ್ಕೆ ಒಳಪಟ್ಟ ಮಹಾರಥರು, ಶರೀರವೆಲ್ಲಾ ರಂಧ್ರಗಳಾಗಿ ಬೆಳಕಿಂಡಿಗಳಿಂದ ಕೂಡಿದ ವಿಗ್ರಹಗಳಂತಾದರು.
ಪದಾರ್ಥ (ಕ.ಗ.ಪ)
ವಾತಾಯನಿತ-ಬೆಳಕಿಂಡಿಗಳಿಂದ ಕೂಡಿದ.
ಮೂಲ ...{Loading}...
ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತು ವಾತಾ
ಯನಿತ ವಿಗ್ರಹವಾಯ್ತು ನಿಗ್ರಹದತಿಮಹಾರಥರು ॥22॥
೦೨೩ ಸಿಡಿದ ಕಣ್ಣಾಲಿಗಳ ...{Loading}...
ಸಿಡಿದ ಕಣ್ಣಾಲಿಗಳ ಮೀಂಗಳ
ಕೆಡೆದ ಸತ್ತಿಗೆಯಬುಜಪಂಕ್ತಿಯ
ಬಿಡುಮಿದುಳ ರಾಸಿಗಳ ರಚನೆಯ ರಾಜಹಂಸೆಗಳ
ಬಿಡದೆ ಬೆಂಡೆದ್ದೇಳ್ವ ತಲೆಗಳ
ಗಡಣ ನೀರ್ವಕ್ಕಿಗಳ ಸರಸಿಯ
ನಡುವೆ ನಲಿನಲಿದಾಡುತಿರ್ದುದು ಭೀಮ ವನದಂತಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿದ ಕಣ್ಣುಗುಡ್ಡೆಗಳೆಂಬ ಮೀನುಗಳುಳ್ಳ, ಕೆಳಗೆ ಬಿದ್ದ ಛತ್ರಿಗಳೆಂಬ ತಾವರೆಯ ಪಂಕ್ತಿಗಳುಳ್ಳ ಬಿಡಿ ಬಿಡಿಯಾದ ಮಿದುಳ ರಾಸಿಗಳೇ ರಾಜಹಂಸಗಳಂತೆ ರಚನೆಗೊಂಡ, ಬಿಡದೆ, ಬೆಂಡಾಗಿ ಎದ್ದೇಳ್ವ ತಲೆಗಳ ಸಮೂಹವೆಂಬ ನೀರುಹಕ್ಕಿಗಳ ಸರೋವರದ ಮಧ್ಯದಲ್ಲಿ ಭೀಮನೆಂಬ ಕಾಡಾನೆಯು ನಲಿದಾಡುತ್ತಿತ್ತು.
ಟಿಪ್ಪನೀ (ಕ.ಗ.ಪ)
(ರಣರಂಗವೆಂಬ ಸರೋವರದ ವರ್ಣನೆ ಇಲ್ಲಿದೆ).
ಮೂಲ ...{Loading}...
ಸಿಡಿದ ಕಣ್ಣಾಲಿಗಳ ಮೀಂಗಳ
ಕೆಡೆದ ಸತ್ತಿಗೆಯಬುಜಪಂಕ್ತಿಯ
ಬಿಡುಮಿದುಳ ರಾಸಿಗಳ ರಚನೆಯ ರಾಜಹಂಸೆಗಳ
ಬಿಡದೆ ಬೆಂಡೆದ್ದೇಳ್ವ ತಲೆಗಳ
ಗಡಣ ನೀರ್ವಕ್ಕಿಗಳ ಸರಸಿಯ
ನಡುವೆ ನಲಿನಲಿದಾಡುತಿರ್ದುದು ಭೀಮ ವನದಂತಿ ॥23॥
೦೨೪ ಮಕುಟಬದ್ಧ ಮಹೀಶವೇಣು ...{Loading}...
ಮಕುಟಬದ್ಧ ಮಹೀಶವೇಣು
ಪ್ರಕರದಲಿ ಛಟಛಟಿಸಿ ತುರಗ
ಪ್ರಕರ ಪಲ್ಲವ ಭೂಜರಾಜಿಗಳೊಳಗೆ ಘುಳುಘುಳಿಸಿ
ಸಕಲಗಜ ರಥ ಭೂಧರಾಧಿ
ತ್ಯಕೆಯೊಳಗೆ ಭುಗಿಭುಗಿಸಿ ರಿಪುವನ
ನಿಕರದಲಿ ಸಲೆ ಬೀದಿವರಿದುದು ಭೀಮ ದಾವಾಗ್ನಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕುಟಬದ್ಧರಾಜರೆಂಬ ಬಿದಿರಿನ ಮೆಳೆಗಳಲ್ಲಿ ಛಟಛಟಿಸಿ, ಕುದುರೆಗಳ ಸಮೂಹವೆಂಬ ಚಿಗುರುಮರಗಳ ಸಾಲುಗಳ ಮಧ್ಯೆ, ಘುಳುಘುಳಿಸಿ, ಎಲ್ಲಾ ಗಜರಥಗಳೆಂಬ ಬೆಟ್ಟದ ಮೇಲ್ಭಾಗದ ಕಾಡಿನಲ್ಲಿ ಭುಗಿಭುಗಿಸಿ ಶತ್ರುವನದ ಗುಂಪಿನಲ್ಲಿ ಭೀಮನೆಂಬ ದಾವಾಗ್ನಿ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಭೂಜರಾಜಿ-ಮರಗಳ ಸಾಲು,
ಆಧಿತ್ಯಕ-ಬೆಟ್ಟದ ಮೇಲ್ಗಡೆಯ ಕಾಡುಪ್ರದೇಶ.
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ಭೀಮನ ಯುದ್ಧವನ್ನು ಕಾಳ್ಗಿಚ್ಚಿಗೆ ಅನ್ವಯಿಸಿ ವರ್ಣಿಸಿದ್ದಾನೆ.
ಮೂಲ ...{Loading}...
ಮಕುಟಬದ್ಧ ಮಹೀಶವೇಣು
ಪ್ರಕರದಲಿ ಛಟಛಟಿಸಿ ತುರಗ
ಪ್ರಕರ ಪಲ್ಲವ ಭೂಜರಾಜಿಗಳೊಳಗೆ ಘುಳುಘುಳಿಸಿ
ಸಕಲಗಜ ರಥ ಭೂಧರಾಧಿ
ತ್ಯಕೆಯೊಳಗೆ ಭುಗಿಭುಗಿಸಿ ರಿಪುವನ
ನಿಕರದಲಿ ಸಲೆ ಬೀದಿವರಿದುದು ಭೀಮ ದಾವಾಗ್ನಿ ॥24॥
೦೨೫ ಕಲಕೆ ಚಕ್ರವ್ಯೂಹ ...{Loading}...
ಕಲಕೆ ಚಕ್ರವ್ಯೂಹ ಹಂಸಾ
ವಳಿಗೆ ಹಂಸವ್ಯೂಹ ಹಿಂದಣ
ಬಲದೊಳಾ ಮೋಹರಕೆ ತರಹರವಾಯ್ತು ಪದ್ಮದಲಿ
ಬಳಿಕ ಮಕರವ್ಯೂಹದಲಿ ಮಂ
ಡಳಿಕರಾಂತುದು ಭೀಮಸೇನನ
ಕೊಳುಗುಳಕೆ ಕೈಕೊಂಡರಾ ಕರ್ಣಾದಿ ಪಟುಭಟರು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಕ್ರವ್ಯೂಹ ಕದಡಿದಾಗ ಆ ಸೈನಿಕರು ನಡುಗಿದರು. ಆಕಾಶದಲ್ಲಿ ಹಂಸಗಳು ಚೆಲ್ಲಾಪಿಲ್ಲಿಯಾಗುವಂತೆ ಹಂಸವ್ಯೂಹ ಚದುರಿತು. ಹಿಂದಣ ಸೇನೆಗೆ ಪದ್ಮವ್ಯೂಹದಲ್ಲಿ ನಾಶವೊದಗಿತು. ಅನಂತರ ಶತ್ರುರಾಜರು ಮಕರವ್ಯೂಹದಲ್ಲಿ ಮೇಲೇರಿ ಬಂದರು. ಭೀಮಸೇನನ ಈ ಮಹಾ ಆಟೋಪದ ಯುದ್ಧದಲ್ಲಿ ಕರ್ಣನೇ ಮೊದಲಾದ ವೀರಯೋಧರು ಯುದ್ಧವನ್ನು ಕೈಗೊಂಡರು.
ಟಿಪ್ಪನೀ (ಕ.ಗ.ಪ)
ವ್ಯೂಹ ಎಂಬ ಮಾತಿನಲ್ಲಿ ಎದುರಾಳಿಯನ್ನು ಅತಂತ್ರಗೊಳಿಸುವ ಒಂದು ಪೂರ್ವಯೋಜಿತ ವ್ಯವಸ್ಥೆ ಎಂಬ ಅರ್ಥವಿದೆ. ‘‘ವಿವಿಧಾಭಿಖ್ಯಾ ವ್ಯೂಹಃ (ಅನೇಕ ಹೆಸರಿನ ವ್ಯೂಹಗಳಿವೆ) ಎಂದು ಶಕುನಿಕ ಮಗ ಉಲೂಕನು ಹೇಳುತ್ತಾನೆ. ಶಾಚಿತಿಪರ್ವದಲ್ಲಿ ಭೀಷ್ಮರು ಧರ್ಮರಾಜನಿಗೆ ಮಂತ್ರಿಗಳು ಖಾತಕವ್ಯೂಹ ತತ್ತ್ವಜ್ಞರಾಗಿರಬೇಕು’ ಎನ್ನುತ್ತಾರೆ. ಖಾತಕ ಎಂದರೆ ಎದುರಾಳಿಯನ್ನು ವಿಚ್ಛಿದ್ರಗೊಳಿಸುವ ವ್ಯೂಹ ರಚನೆ ಎಂದರ್ಥ. ಮಹಾಭಾರತ ಯುದ್ಧಲದಲ್ಲಿ ಬಳಕೆಗೊಂಡ ಅನೇಕ ವ್ಯೂಹಗಳ ಹೆಸರುಗಳಿವೆ. ಚಂದ್ರವ್ಯೂಹ, ಕ್ರೌಂಚವ್ಯೂಹ, ಗರುಡವ್ಹೂಹ, ಶಕಟವ್ಯೂಹ, ಅರ್ಧ ಚಂದ್ರವ್ಯೂಹ, ಮಂಡಲಾರ್ಧವ್ಯೂಹ ಇತ್ಯಾದಿ. ಇವುಗಳಲ್ಲಿ ಬಹಳ ಸಂಕೀರ್ಣವಾದದ್ದು ಪದ್ಮವ್ಯೂಹ ಅಥವ ಚಕ್ರವ್ಯೂಹ. ಅರ್ಜುನನಿಲ್ಲದಾಗ ದ್ರೋಣರು ಒಡ್ಡಿದ ವ್ಯೂಹ ಇದು. ಚಕ್ರದ ಅರಗಳ ಸ್ಥಾನದಲ್ಲಿ ಮಹಾವೀರರು ಸ್ಥಿರವಾಗಿ ನಿಂತು ಏನೇ ಆಗಲಿ ಯುದ್ಧ ಭೂಮಿ ತೊರೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅವರ ಧ್ವಜಗಳೆಲ್ಲ ಸ್ವರ್ಣಮಯ, ವಸ್ತ್ರಗಳೆಲ್ಲ ರಕ್ತವರ್ಣದವು. ಅವರು ರಕ್ತಾಭರಣಗಳನ್ನು ಧರಿಸಿರುತ್ತಾರೆ. ಎಲ್ಲರ ರಥಗಳ ಮೇಲೆ ರಕ್ತವರ್ಣದ ಬಾವುಟಳು ಅಗರು ಚಂದನದ ವಾಸನೆಯುಳ್ಳ ಹಾರಗಳನ್ನು ಧರಿಸಿ ನಿಂತಿರುತ್ತಾರೆ. ಚಕ್ರವ್ಯೂಹದಲ್ಲಿ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ ಒಳ ಹೋಗುತ್ತ ಹೋಗುತ್ತ ಎಲ್ಲ ದಾರಿಗಳೂ ಮುಚಿ????್ಚಕೊಂಡು ಶತ್ರುಗಳು ನಿರ್ಮಿಸಿದ ಒಂದೇ ದಾರಿಯಲ್ಲಿ ಪ್ರಯಾಣ ಮಾಡುವ ಸಂದರ್ಭ ಒದಗುತ್ತದೆ. ಹೊರಬರುವುದು ಕಷ್ಟ. ಅರ್ಜುನನಿಗಾದರೆ ಈ ಎನ್ನುವ ವ್ಯೂಹಗಳ ಒಳಶಿಲ್ಪದ ಪರಿಚಯವಿತ್ತು. ಆದರೆ ಅಭಿಮನ್ಯುವಿಗೆ ಪೂರ್ಣಪ್ರಮಾಣದ ಜ್ಞಾನವಿರಲಿಲ್ಲ.
ಇದು ಚಕ್ರಾಕೃತಿಯ ಅಥವಾ ಗೋಳಾಕೃತಿಯ ಸೇನಾ ರಚನೆ ಎನ್ನುತ್ತಾರೆ. ನಿರ್ದಿಷ್ಟ ಆಯಕಟ್ಟಿನ ಜಾಗಗಳಲ್ಲಿ ವೀರರು ಇರುತ್ತಾರೆ. ಉದಾಹರಣೆಗೆ ಚಕ್ರವ್ಯೂಹದಲ್ಲಿ ಕೃಪ, ಕರ್ಣ, ಕೌರವ ಮೊದಲಾದವರು ಆರಂಭದ ಮುಖ್ಯ ಸ್ಥಾನಗಳಲ್ಲಿದ್ದರು. ಸೇನಾ ಮುಖದಲ್ಲಿ ಸ್ವಯಂ ದ್ರೋಣರೇ ನಿಂತಿದ್ದರು. ಎರಡು ಪಾರ್ಶ್ವಗಳಲ್ಲಿ ಶಕುನಿ, ಕರ್ಣ, ಕೌರವ ಮೊದಲಾದವರು ಆರಂಭದ ಮುಖ್ಯ ಸ್ಥಾನಗಳಲ್ಲಿದ್ದರು. ಸೇನಾ ಮುಖದಲ್ಲಿ ಸ್ವಯಂ ದ್ರೋಣರೇ ನಿಂತಿದ್ದರು. ಎರಡು ಪಾರ್ಶ್ವಗಳಲ್ಲಿ ಶಕುನಿ ಶಲ್ಯ ಮೊದಲಾದವರಿದ್ದರು. ಎಡಭಾಗದಲ್ಲಿ ಅಶ್ವತ್ಥಾಮ ಜಯದ್ರಥರು ಕಾವಲಿದ್ದರು. ಅಭಿಮನ್ಯುವಿಗೆ ಒಳನುಗ್ಗುವ ಮಾರ್ಗ ತಿಳಿದಿರುವುದರಿಂದ, ಭೀಮ, ಧರ್ಮರಾಯ, ಸಾತ್ಯಕಿ, ಧೃಷ್ಟದ್ಯುಮ್ನ ಮೊದಲಾದವರೆಲ್ಲ ಅಭಿಮನ್ಯುವಿನ ಹಿಂದೆಯೇ ಒಳನುಗ್ಗಿ ಅಭಿಮನ್ಯುವಿಗೆ ಸಹಾಯಕರಾಗಿ ಹೋರಾಡುವುದೆಂದು ನಿಶ್ಚಯಿಸಿದ್ದರು. ಆದರೆ ಆ ದಿನ ಸೈಂಧವನು ಶಿವನಿಂದ ವರ ಪಡೆದು ಒಳಗೆ ಯಾರೂ ನುಗ್ಗದಂತೆ ಅವರನ್ನೆಲ್ಲ ತಡೆದುದರಿಂದ ಅಭಿಮನ್ಯು ಒಂಟಿಯಾದ. ಇಷ್ಟಾದರೂ ಕೌರವ ವೀರರಿಗೆ ಅಭಿಮನ್ಯುವನ್ನು ಎದುರಿಸಲಾಗಲಿಲ್ಲ. ಕೊನೆಗೆ ದ್ರೋಣರ ಸಲಹೆಯಂತೆ ಹಿಂದಿನಿಂದ ಬಂದು ಬಿಲ್ಲು ಕತ್ತರಿಸಿ, ಕತ್ತಿ ಕಿತ್ತುಕೊಂಡು ಅವನನ್ನು ಕೊಂದು ಹಾಕಿದರು.
ಯುದ್ಧದಲ್ಲಿ ಸೋಲುಗೆಲುವು ಮುಖ್ಯವಲ್ಲ. ಚಕ್ರವ್ಯೂಹವನ್ನು ಭೇದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ ಅಭಿಮನ್ಯು ಅದರಲ್ಲಿ ಸೋತರೂ ತನ್ನ ಧೈರ್ಯ, ಸಾಹಸ ಮತ್ತು ಆಕ್ರಮಣಶೀಲತೆಗಳ ಸತ್ವದಿಂದ ಶತ್ರು ಪಕ್ಷದವರ ಗ್ಪ್ಮನವನ್ನು ಸೆಳೆದು ಅವರಿಂದ ಹೊಗಳಿಸಿಕೊಳ್ಳುವಷ್ಟು ದೊಡ್ಡವನಾಗಿ ಬೆಳೆದಿದ್ದಾನೆ. ಅಭಿಮನ್ಯುವನ್ನು ಲಜ್ಜಾಶೀಲ, ಕ್ರುದ್ಧ, ಸನ್ಮಾನಕಾರ, ರೂಪವಂತ, ಶತ್ರುಭಯಂಕರ, ಸ್ವಜನ ವತ್ಸಲ, ಮೃತ್ಯುಭಯವಿಲ್ಲದವನು ಎಂದೆಲ್ಲ ಮಹಾಭಾರತವು ಹೊಗಳಿದೆ. ವ್ಯೂಹಗಳಲ್ಲೆಲ್ಲ ದುರ್ಗಮವೆನಿಸಿದ ಚಕ್ರವ್ಯೂಹವನ್ನು ಒಳಹೊಕ್ಕು ಧೈರ್ಯವಾಗಿ ಶತ್ರುಗಳನ್ನು ಎದುರಿಸಿದ ಕೀರ್ತಿ ಆ ಬಾಲಕನಿಗೆ ಸಲ್ಲುತ್ತದೆ.
ಮೂಲ ...{Loading}...
ಕಲಕೆ ಚಕ್ರವ್ಯೂಹ ಹಂಸಾ
ವಳಿಗೆ ಹಂಸವ್ಯೂಹ ಹಿಂದಣ
ಬಲದೊಳಾ ಮೋಹರಕೆ ತರಹರವಾಯ್ತು ಪದ್ಮದಲಿ
ಬಳಿಕ ಮಕರವ್ಯೂಹದಲಿ ಮಂ
ಡಳಿಕರಾಂತುದು ಭೀಮಸೇನನ
ಕೊಳುಗುಳಕೆ ಕೈಕೊಂಡರಾ ಕರ್ಣಾದಿ ಪಟುಭಟರು ॥25॥
೦೨೬ ನಿಲಿಸಿದರು ರವಿಸುತನನೀತನ ...{Loading}...
ನಿಲಿಸಿದರು ರವಿಸುತನನೀತನ
ತಲೆಯ ಮೀಸಲು ತಮ್ಮ ಸರಳದು
ಗೆಲವು ನಿಮಗಲ್ಲೆನುತ ಹೊಕ್ಕರು ಕೌರವಾನುಜರ
ಚಲಿಸಿತರನೆಲೆ ಕೋಡಕೈಯಲಿ
ಮೊಳಗಿದವು ನಿಸ್ಸಾಳ ಬಲುಮಂ
ಡಳಿಕರೆಡಬಲವಂಕದಲಿ ನೆರೆದುದು ಕುಮಾರಕರು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರವಿಸುತನಾದ ಕರ್ಣನನ್ನು ತಡೆದು, ಭೀಮನ ತಲೆ ತಮ್ಮ ಬಾಣಗಳಿಗೆ ಮೀಸಲು, ಗೆಲುವು ನಿಮಗಲ್ಲ ಎನ್ನುತ್ತ ಕೌರವ ಸೋದರರು ರಣರಂಗವನ್ನು ಪ್ರವೇಶಿಸಿದರು. ಅರನೆಲೆಯಲ್ಲಿದ್ದ ಅವರು ಆಯುಧಗಳ ಸಹಿತ ಹೊರಟರು. ಚರ್ಮವಾದ್ಯಗಳ ಧ್ವನಿ ಮೊಳಗಿದವು. ಹೆಚ್ಚಿನ ಸಂಖ್ಯೆಯಲ್ಲಿ ರಾಜಕುಮಾರರುಗಳು ಎಡಬಲಗಳಲ್ಲಿ ನೆರೆದರು.
ಪದಾರ್ಥ (ಕ.ಗ.ಪ)
ಕೋಡ-ಒಂದು ಬಗೆಯ ಆಯುಧ
ಮೂಲ ...{Loading}...
ನಿಲಿಸಿದರು ರವಿಸುತನನೀತನ
ತಲೆಯ ಮೀಸಲು ತಮ್ಮ ಸರಳದು
ಗೆಲವು ನಿಮಗಲ್ಲೆನುತ ಹೊಕ್ಕರು ಕೌರವಾನುಜರ
ಚಲಿಸಿತರನೆಲೆ ಕೋಡಕೈಯಲಿ
ಮೊಳಗಿದವು ನಿಸ್ಸಾಳ ಬಲುಮಂ
ಡಳಿಕರೆಡಬಲವಂಕದಲಿ ನೆರೆದುದು ಕುಮಾರಕರು ॥26॥
೦೨೭ ಸಾಲು ಗೋವಳಿಗಟ್ಟಿಗೆಯ ...{Loading}...
ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಾಕಾರದಂತೆ ನಿಂತಿರುವ ಚಾಮರಧಾರಿಗಳ, ಈಟಿ, ಭರ್ಜಿಗಳ ತೂಗಾಟ ಹೆಚ್ಚಾದವು. ಕುದುರೆಗಳು ಜಿಗಿದವು. ಆನೆ, ರಥ, ಕುದುರೆಗಳ ಸೇನೆಯಲ್ಲಿ ಗೊಂದಲ ಉಂಟಾಯಿತು. ಮೇಲೇರಿ ಯುದ್ಧ ಮಾಡುವ ರಾಜರು ಭೀಮನಿಗೆ ಪ್ರಾಣವನ್ನು ತೆತ್ತ ಸಾಲಿಗರಾದರು ಎಂಬ ಹೇಳಿಕೆಯ ಮಾತು ಕೇಳಿಬಂತು. ಪದ್ಮವ್ಯೂಹದ ಅಗ್ರಭಾಗದಲ್ಲಿ ಸೇನೆ ಸಂಭ್ರಮಿಸಿತು.
ಪದಾರ್ಥ (ಕ.ಗ.ಪ)
ಗೋವಳಿಗಟ್ಟಿಗೆ-ಸೀಗುರಿ, ಚಾಮರ,
ಸಾಲ-ಪ್ರಾಕಾರ,
ಮೂಲ ...{Loading}...
ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ ॥27॥
೦೨೮ ದುರುಳರುರವಣಿಸಿದರು ಜವ್ವನ ...{Loading}...
ದುರುಳರುರವಣಿಸಿದರು ಜವ್ವನ
ದುರು ಮದದ ಭರತಾನ್ವಯದ ದು
ರ್ಧರ ಮದದ ಘನಭುಜಮದದ ದಿವ್ಯಾಸ್ತ್ರದರಿಕೆಗಳ
ಭರಮದದ ಮರ್ಕಟವಿಲಾಸರು
ಧುರರಚಿತ ಪರಿಹಾಸರಭಿಜನ
ಕುರುವಿನಾಶರು ತಾವಕರು ಧೃತರಾಷ್ಟ್ರ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
28.” ದುಷ್ಟರು ಯುದ್ಧಕ್ಕಾಗಿ ಸಂಭ್ರಮಿಸಿದರು. ಯೌವನದ, ಭರತವಂಶದವರೆಂಬ , ಶೌರ್ಯದ , ದಿವ್ಯಾಸ್ತ್ರಗಳ ಜ್ಞಾನದ ಮದದಿಂದ, ಕೋತಿಯಷ್ಟೇ ಚಂಚಲಚಿತ್ತರಾದವರು ರಣರಂಗದಲ್ಲಿ ಪರಿಹಾಸ್ಯಮಾಡುತ್ತ ಕುರುಕುಲ ವಿನಾಶಕ್ಕೆಂದೇ ಹುಟ್ಟಿದವರು ತಮ್ಮವರು" ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಮೂಲ ...{Loading}...
ದುರುಳರುರವಣಿಸಿದರು ಜವ್ವನ
ದುರು ಮದದ ಭರತಾನ್ವಯದ ದು
ರ್ಧರ ಮದದ ಘನಭುಜಮದದ ದಿವ್ಯಾಸ್ತ್ರದರಿಕೆಗಳ
ಭರಮದದ ಮರ್ಕಟವಿಲಾಸರು
ಧುರರಚಿತ ಪರಿಹಾಸರಭಿಜನ
ಕುರುವಿನಾಶರು ತಾವಕರು ಧೃತರಾಷ್ಟ್ರ ಕೇಳೆಂದ ॥28॥
೦೨೯ ಎಳೆಯ ಬಾಳೆಯ ...{Loading}...
ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಳೆಯ ಬಾಳೆಯ ಸುಳಿಗೆ ಸೀಗೆಯ ಪೊದೆಯ ಜೊತೆ ಸರಸವೇ ? ಕೌರವ ಕುಮಾರರ ದಿಟ್ಟತನ ನೋಡು. ವಿಶೋಕಾ, ನಮ್ಮ ಜೊತೆ ಯುದ್ಧಕ್ಕೆ ತೊಡಗಿದ್ದಾರೆ” ಎಂದು ವ್ಯಂಗ್ಯವಾಡುತ್ತಾ…… “ಯುದ್ಧದಲ್ಲಿ ಕಾಣಿಸಿದ ಇವರುಗಳ ತಲೆ ಭೂಮಿಯ ಒಡೆಯನಾದ ರಾಜನಿಗೆ ಸಲ್ಲಬೇಕಾದ ಆಹಾರ. ಇವುಗಳನ್ನು ಅರ್ಧಗಳಿಗೆಯಲ್ಲೇ ತೆಗೆದುಕೊಳ್ಳುವೆನು” ಎಂದು ನಗುತ್ತ ಕಲಿಭೀಮ ಹೇಳಿದನು.
ಪದಾರ್ಥ (ಕ.ಗ.ಪ)
ಸುಳಿ-ಬಾಳೆಗಿಡದಲ್ಲಿ ಸುರುಳಿಯಾಗಿ ಸುತ್ತಿಕೊಂಡಿರುವ ಚಿಗುರೆಲೆ,
ವಾರ-ಭೂಮಿಯ ಒಡೆಯನಿಗೆ ಸಲ್ಲಬೇಕಾದ ಆಹಾರ
ಮೂಲ ...{Loading}...
ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ ॥29॥
೦೩೦ ಬಿಲುದೆಗಹಿನಾಕರ್ಣಪೂರದ ...{Loading}...
ಬಿಲುದೆಗಹಿನಾಕರ್ಣಪೂರದ
ಹಿಳುಕಿನನಿಲಜನಿರಲು ಸಿಂಹದ
ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ ಕಂಡು
ತೊಲಗದಿರಿ ತಮ್ಮಂದಿರಿರ ಕುರು
ಕುಲಲಲಾಮರು ಜಗದೊಳತಿ ವೆ
ಗ್ಗಳೆಯ ಸುಭಟರು ನೀವೆನುತ ತೆಗೆದೆಚ್ಚನಾ ಭೀಮ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿವಿಯವರೆಗೂ ಬಾಣದ ಹಿಳುಕನ್ನು (ಗರಿಭಾಗವನ್ನು) ತಂದು ಪ್ರಯೋಗಿಸಲು ಸಿದ್ಧನಾಗಿ ನಿಂತಿರಲು, ಸಿಂಹದ ಪ್ರದೇಶವನ್ನು ಪ್ರವೇಶಿಸುವ ಆನೆಯಂತೆ ಹಿಮ್ಮೆಟ್ಟುವುದನ್ನು ಕಂಡು. “ತಮ್ಮಂದಿರೇ, ಹೋಗಬೇಡಿ, ಕುರುಕುಲ ಶ್ರೇಷ್ಠರಾದ ನೀವು ಜಗತ್ತಿನಲ್ಲಿ ಅತಿ ಶ್ರೇಷ್ಠ ಯೋಧರು” ಎನ್ನುತ್ತಾ ಭೀಮನು ಬಾಣಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಬಿಲುದೆಗಹಿನಾಕರ್ಣಪೂರದ
ಹಿಳುಕಿನನಿಲಜನಿರಲು ಸಿಂಹದ
ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ ಕಂಡು
ತೊಲಗದಿರಿ ತಮ್ಮಂದಿರಿರ ಕುರು
ಕುಲಲಲಾಮರು ಜಗದೊಳತಿ ವೆ
ಗ್ಗಳೆಯ ಸುಭಟರು ನೀವೆನುತ ತೆಗೆದೆಚ್ಚನಾ ಭೀಮ ॥30॥
೦೩೧ ಸರಳ ಸೊಮ್ಪಿನ ...{Loading}...
ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ಭೂಮಿಯಲ್ಲಿ ಬಾಣಗಳ ಸೊಗಸಾದ ಬೇಟೆಯಲ್ಲಿ, ರಾಸಿಯಾಗಿ ಬಿದ್ದಿರುವ ಕರುಳುಗಳ ಸಾಲುಬಲೆಗಳಲ್ಲಿ, ಯುದ್ಧದ ಯೋಧರ ಗುಂಪಿನ ಮಧ್ಯೆ ಮಧ್ಯೆ ಬಿಟ್ಟಿರುವ ಜಾಗವೆಂಬ ಗೂಡು ಬಲೆಗಳಲ್ಲಿ, ಶ್ರೇಷ್ಠ ಗದೆಯ ಹೊಡೆತಗಳೆಂಬ ದಂಡಿ ಬಲೆಗಳಲ್ಲಿ, ಮುದ್ಗರದ ಸಿಡಿ ಬಲೆಯಲ್ಲಿ ಶತ್ರುಸೇನೆಯ, ಮೃಗಗಳ ಸಮೂಹವನ್ನು ಭೀಮನೆಂಬ ಬೇಡನು ಬೇಟೆಯಾಡತೊಡಗಿದ.
ಪದಾರ್ಥ (ಕ.ಗ.ಪ)
ದಾವಣಿ-ಸಾಲು, ನಿರಿ-ರಾಸಿ, ಮುದ್ಗರ-ಒನಕೆಯ ರೀತಿಯ ಮರದ ಆಯುಧ,
ದಡಿವಲೆ-ಕೋಲಿಗೆ ಕಟ್ಟಿದ ಒಂದು ರೀತಿಯ ಬಲೆ,
ಗುಂಡುವಲೆ-ಬುಟ್ಟಿ ಬಲೆ
ಮೂಲ ...{Loading}...
ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ ॥31॥
೦೩೨ ವಿನ್ದನನುವಿನ್ದನನು ಚಿತ್ರಕ ...{Loading}...
ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನು ವಿಂದರು, ಚಿತ್ರಕ, ನಂದನ, ಚಿತ್ರಾಂಗದ, ಸಾನಂದ, ದುಸ್ಸಹ, ಶಂಕುಕರ್ಣ, ಸುದೀರ್ಘಬಾಹುಕ, ನಂದ, ಚಿತ್ರಾಂಬಕನೇ ಮೊದಲಾದ ಕೌರವಾನುಜರನ್ನು ಕುಂತೀನಂದನನಾದ ಭೀಮನು ನಾಶಮಾಡಿದ, ಅನಂತರ ಕರ್ಣ, ಅಶ್ವತ್ಥಾಮರನ್ನು ಮೂದಲಿಸಿ ತಾಗಿದನು.
ಟಿಪ್ಪನೀ (ಕ.ಗ.ಪ)
ವಿಂದ - ಅನುವಿಂದರು- ಅವಂತೀ ದೇಶದ ರಾಜಪುತ್ರರು. ಭಾರತ ಯುದ್ಧದಲ್ಲಿ ದುರ್ಯೋಧನನ ಪರವಾಗಿ ಹೋರಾಡಿ ಯುದ್ಧದಲ್ಲಿ ಅರ್ಜುನನಿಂದ ಹತರಾದರು ಎಂಬ ಮಾತಿದೆ
ಮೂಲ ...{Loading}...
ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು ॥32॥
೦೩೩ ಕೆಡೆದುದನುಜರು ಕೇಣವಿಲ್ಲದೆ ...{Loading}...
ಕೆಡೆದುದನುಜರು ಕೇಣವಿಲ್ಲದೆ
ತೊಡಗಿದಾಹವದೊಳಗೆ ಕೊಂದವ
ಕೊಡನಮಗನೋ ದೂರುಹೊತ್ತುದು ಬರಿದೆ ಹಗೆಗಳಿಗೆ
ನುಡಿದು ಫಲವೇನಿನ್ನು ಭೀಮನ
ಬಿಡದೆ ಸುಭಟರು ನೂಕಿಯೆಂಬೀ
ನುಡಿಯ ಕೇಳಿದು ಖಾತಿಗೊಂಡನು ಮತ್ತೆ ಕಲಿ ದ್ರೋಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಸೋದರರು ನಿರ್ದಾಕ್ಷಿಣ್ಯವಾದ ರೀತಿಯಲ್ಲಿ ಕೆಳಗೆ ಬಿದ್ದರು. ನಡೆದ ಯುದ್ಧದಲ್ಲಿ ಕೊಂದವನು ದ್ರೋಣನೋ ಎಂದು ಶತ್ರುಪಾಳಯದಲ್ಲಿ ದ್ರೋಣನನ್ನು ದೂರಲಾಯಿತು. ಇನ್ನು ಮಾತನಾಡಿ ಫಲವೇನು ? ಬಿಡದೆ ಭಟರು ಭೀಮನನ್ನು ತಡೆಯಿರಿ ಎಂಬ ಮಾತನ್ನು ಕೇಳಿ ಶೂರ ದ್ರೋಣನು ಪುನಃ ಕೋಪಗೊಂಡನು.
ಮೂಲ ...{Loading}...
ಕೆಡೆದುದನುಜರು ಕೇಣವಿಲ್ಲದೆ
ತೊಡಗಿದಾಹವದೊಳಗೆ ಕೊಂದವ
ಕೊಡನಮಗನೋ ದೂರುಹೊತ್ತುದು ಬರಿದೆ ಹಗೆಗಳಿಗೆ
ನುಡಿದು ಫಲವೇನಿನ್ನು ಭೀಮನ
ಬಿಡದೆ ಸುಭಟರು ನೂಕಿಯೆಂಬೀ
ನುಡಿಯ ಕೇಳಿದು ಖಾತಿಗೊಂಡನು ಮತ್ತೆ ಕಲಿ ದ್ರೋಣ ॥33॥