೧೧

೦೦೦ ಸೂ ವಿಜಯ ...{Loading}...

ಸೂ. ವಿಜಯ ವಿಗ್ರಹ ವೀರನಾ ಧ
ರ್ಮಜನ ನೇಮದಲಂದು ವೈರಿ
ವ್ರಜವ ತೊತ್ತಳದುಳಿದು ಸಾತ್ಯಕಿ ಕಂಡನರ್ಜುನನ

೦೦೧ ಬವರದೊಳು ಹರಿಪಾಞ್ಚಜನ್ಯದ ...{Loading}...

ಬವರದೊಳು ಹರಿಪಾಂಚಜನ್ಯದ
ರವ ಭಯಂಕರವಾಯ್ತು ಬಹಳಾ
ಹವದೊಳಗೆ ಪಾರ್ಥಂಗೆ ಬಿದ್ದುದು ಭಟರ ಭಾರಾಂಕ
ಅವನಿ ಬಿರಿದುದು ಧರ್ಮಪುತ್ರನ
ಕಿವಿಗೆ ಸೆಲ್ಲೆಹವಾಯ್ತು ರಣರೌ
ರವದೊಳರ್ಜುನದೇವನಳಿಯದೆ ಮಾಣನಕಟೆಂದ ॥1॥

೦೦೨ ತನ್ದೆ ಸಾತ್ಯಕಿ ...{Loading}...

ತಂದೆ ಸಾತ್ಯಕಿ ಹೋಗು ಫಲುಗುಣ
ನೊಂದನೋ ಜೀವಿಸಿದನೋ ಸುರ
ವೃಂದವನು ಸೇರಿದನೊ ಮೇಣೆಂಬೀ ನಿಧಾನವನು
ತಂದು ನೀನೆನಗರುಹು ಪಾರ್ಥನ
ಹಿಂದೆ ಬದುಕಿಲ್ಲವನಿಯಲಿ ತನ
ಗೆಂದು ದುಗುಡವ ಹಿಡಿದು ಸಾತ್ಯಕಿಗರಸ ನೇಮಿಸಿದ ॥2॥

೦೦೩ ಮೊಲನ ಬಲೆಯಲಿ ...{Loading}...

ಮೊಲನ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ ॥3॥

೦೦೪ ದಾರುಕನು ನಿಜ ...{Loading}...

ದಾರುಕನು ನಿಜ ರಥವನೆಸಗಲು
ದಾರ ಸಾತ್ಯಕಿ ಭೀಮಸೇನಗೆ
ಧಾರುಣೀಶನ ಕೊಟ್ಟು ಭಾರಿಯ ಭಟರ ಗಡಣದಲಿ
ಭಾರಣೆಯಲೈತಪ್ಪ ನಿಜ ಪರಿ
ವಾರವನು ಬೋಳೈಸಿ ನಿಸ್ಸಾ
ಳಾರವದ ಥಟ್ಟಣೆಯಲಿದಿರಾದನು ರಿಪುವ್ರಜಕೆ ॥4॥

೦೦೫ ತಳಿತ ಬೆಳುಗೊಡೆಗಳಲಿ ...{Loading}...

ತಳಿತ ಬೆಳುಗೊಡೆಗಳಲಿ ದೆಸೆ ಕ
ತ್ತಲಿಸೆ ಕರಿ ರಥ ತುರಗ ಚರಣೋ
ಚ್ಚಲಿತ ಧೂಳಿಯ ದಂಡು ನಡೆದುದು ಸೂರ್ಯಮಂಡಲಕೆ
ಮೊಳಗಿದವು ಬರಸಿಡಿಲ ಕಣ್ಣಿಯ
ಕಳಚಿದಂತಿರೆ ವಾದ್ಯಚಯವರಿ
ಬಲಕೆ ನಡೆದನು ವೀರಸಾತ್ಯಕಿ ಸಕಲ ಬಲಸಹಿತ ॥5॥

೦೦೬ ಬರಬರಲು ಮುನ್ದುಭಯರಾಯರ ...{Loading}...

ಬರಬರಲು ಮುಂದುಭಯರಾಯರ
ಗರುಡಿಯಧಿಪತಿ ಕಂಡನೆಲೆ ಸಂ
ಗರ ಸಹಾಯಸಮಗ್ರ ಸಾತ್ಯಕಿ ಗಮನವಾವೆಡೆಗೆ
ಧುರದ ಬಡವರನೆಮ್ಮ ವಂದಿಸಿ
ಮರಳು ಮೇಣ್ ನೀ ಸರಳ ಮೊನೆಯಲಿ
ಪರಿಹರಿಸಿ ಹೋಗೆನುತ ಗುರು ಚಾಚಿದನು ನಿಜರಥವ ॥6॥

೦೦೭ ನಿನ್ದು ಕಾದುವ ...{Loading}...

ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ವಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ ॥7॥

೦೦೮ ಇತ್ತಲೀತನ ಕೂಡೆ ...{Loading}...

ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಖತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರ ಫಾಲನೇತ್ರಂಗೆ ॥8॥

೦೦೯ ಕಳುಹಿದನು ಯಮಸೂನು ...{Loading}...

ಕಳುಹಿದನು ಯಮಸೂನು ಪಾರ್ಥನ
ಬಳಿಗೆ ನೀ ಕೃಪೆಮಾಡಿ ತನ್ನನು
ಕಳುಹಬೇಹುದು ನಿಮ್ಮೊಳಿದಿರೇ ರಣಕೆ ತಾನೆನುತ
ಸೆಳೆದ ಬಾಣವನಿಳುಹಿದರೆ ಗುರು
ತೊಲಗಿ ಕೊಟ್ಟನು ಪದವನಹಿತಾ
ವಳಿಗೆ ಸಾತ್ಯಕಿ ಮೊಳಗಿದನು ಕಳಶಜನ ನೇಮದಲಿ ॥9॥

೦೧೦ ಪಾರಸಿಕ ನೇಪಾಳ ...{Loading}...

ಪಾರಸಿಕ ನೇಪಾಳ ಸಿಂಹಳ
ವೀರಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ ॥10॥

೦೧೧ ಚೀನ ಭೋಟ ...{Loading}...

ಚೀನ ಭೋಟ ವರಾಳ ಕೇಶಿ ಸು
ದೀನ ಖುರಸಾಣಾದಿ ದೇಶದ
ಮಾನನಿಧಿಗಳು ಕವಿದು ಮುತ್ತಿತು ಕೈಯ ಕೋಲ್ಗಳಲಿ
ಏನನೆಂಬೆನು ಸಮರದಲಿ ರಾ
ಜಾನುಮಿತ ಮಂತ್ರಣವೆನಿಪ ಮುನಿ
ಪಾನುಮತವರಿದಾಯ್ತು ಸಾತ್ಯಕಿಗಾ ಮಹಾಕದನ ॥11॥

೦೧೨ ಕಡಿದನನಿಬರ ಕೈಯ ...{Loading}...

ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸರಿಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ ॥12॥

೦೧೩ ಎಡಬಲಕೆ ತೂಳುವ ...{Loading}...

ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಳನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ ॥13॥

೦೧೪ ಒನ್ದು ದೆಸೆಯಲಿ ...{Loading}...

ಒಂದು ದೆಸೆಯಲಿ ಪಾರ್ಥ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಸರ
ಳಿಂದ ನೊಂದುದು ಸೇನೆಯೆನೆ ಕೃತವರ್ಮನಿದಿರಾಗಿ
ನಿಂದನೆಲವೋ ಮರುಳೆ ಮೀರಿದ
ಡಿಂದುಧರ ತಲೆಗಾವಡೀಗಳೆ
ಕೊಂದಡಲ್ಲದೆ ಬಿಡೆನೆನುತ ಮೂದಲಿಸುತೈತಂದ ॥14॥

೦೧೫ ನರನ ಮೈಗಣ್ಡೀತನಲಿ ...{Loading}...

ನರನ ಮೈಗಂಡೀತನಲಿ ಸಂ
ಗರವನಾದರಿಸುವೆನು ಬಳಿಕೆಂ
ದರಿದು ಕೃತವರ್ಮಕನ ರಥವನು ಧನುವ ಸಾರಥಿಯ
ಸರಳು ಮೂರರಲೆಚ್ಚು ರಿಪುವನು
ಧುರದಿ ಹಿಂಗಿಸಿ ಹಂಸಮಯ ಮೋ
ಹರದೊಳಗೆ ಮೊಳಗಿದನು ತಾಗಿದನತಿರಥಾವಳಿಯ ॥15॥

೦೧೬ ಹೊಗಿಸದಿರಿ ಸಾತ್ಯಕಿಯ ...{Loading}...

ಹೊಗಿಸದಿರಿ ಸಾತ್ಯಕಿಯ ಹಿಂದಕೆ
ತೆಗೆಸು ತೆಗಿಸೋ ಫಲುಗುಣನ ತೆ
ತ್ತಿಗನಿವನು ಹೊಯ್ ಹೊಯ್ಯೆನುತ ಹೊರವಂಟರತಿರಥರು
ಬಿಗಿದ ಬಿಲುಗಳ ತಿರುವೆರಳಬೊ
ಬ್ಬೆಗಳ ಕಿವಿಗಡಿಯಂಬುಗಳಿನಾ
ಳುಗಳ ದೇವನ ತರುಬಿದರು ಕೌರವ ಸಹೋದರರು ॥16॥

೦೧೭ ಅವರ ಬಲನೆಡವಙ್ಕದಲಿ ...{Loading}...

ಅವರ ಬಲನೆಡವಂಕದಲಿ ಸೈಂ
ಧವನ ಮೊನೆಯವರೌಕಿದರು ಕೌ
ರವನ ಬಳಿಯಲಿ ಸಂದಣಿಸಿದರು ಕರ್ಣ ನಂದನರು
ಬವರವಸದಳವಾಯ್ತು ರಿಪುಭಟ
ನಿವಹ ಮಧ್ಯದೊಳೀತ ಸಿಲುಕಿದ
ನವಿರಳಾಸ್ತ್ರವ ಸುರಿದು ಕಾಣನು ಹಗೆಗೆ ಹರಿವುಗಳ ॥17॥

೦೧೮ ಅತ್ತ ಸಾತ್ಯಕಿಗಾಯ್ತು ...{Loading}...

ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದ ॥18॥

+೧೧ ...{Loading}...