೦೮

೦೦೦ ಸೂ ಹಾ ...{Loading}...

ಸೂ. ಹಾ ಮಗನೆ ರಣರಂಗ ಧೀರನೆ
ಹಾ ಮದೀಯ ಕುಮಾರ ವೀರನೆ
ಬಾ ಮಗನೆ ಮೊಗದೋರೆನುತ ಹಲುಬಿದನು ಕಲಿ ಪಾರ್ಥ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಮಸಪ್ತಕರ ಬಲ ನಿಜ
ಪಾಳಯಕೆ ತಿರುಗಿದುದು ತೀರಿತು ತರಣಿಯಾಟೋಪ
ಕಾಳೆಗವ ತೆಗೆಸಿದರು ಕೌರವ
ರೇಳು ಫಲುಗುಣ ಎನುತ ಲಕ್ಷ್ಮೀ
ಲೋಲ ವಾಘೆಯ ಮರಳಿ ಕೊಂಡನು ಹಯವ ಬೋಳೈಸಿ ॥1॥

೦೦೨ ಅಳಿಯನಳಿವನು ಹೇಳಬಾರದು ...{Loading}...

ಅಳಿಯನಳಿವನು ಹೇಳಬಾರದು
ತಿಳಿಯಲಿದನಿನ್ನೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ವರ ಸರೋವರವ
ಇಳಿದು ರಥವನು ರಣ ಪರಿಶ್ರಮ
ಗಳೆವೆನೆನುತವೆ ಪಾರ್ಥ ಸಹಿತಾ
ಕೊಳನ ಹೊಕ್ಕನು ಜಗದುದರ ಲೀಲಾವತಾರಕನು ॥2॥

೦೦೩ ಧುರದ ಕೋಳಾಹಳದ ...{Loading}...

ಧುರದ ಕೋಳಾಹಳದ ಢಗೆ ಡಾ
ವರಿಸಿ ಬಳಲಿ ಧನಂಜಯನು ವರ
ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ
ನರನೊಳಿನ್ನರುಹುವೆನು ಘನ ಸಂ
ಗರದೊಳಡಗಿದ ರಾಜ ಕುವರನ
ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ ॥3॥

೦೦೪ ಎಲೆ ಸುರೇನ್ದ್ರ ...{Loading}...

ಎಲೆ ಸುರೇಂದ್ರ ಕುಮಾರ ಕೇಳ್ ನಿ
ನ್ನೊಲುಮೆಯಣುಗನು ರಣದೊಳಗೆ ರಿಪು
ಬಲವ ಕೋಳಾಹಳಿಸಿ ಕೌರವ ಸುತರು ನೂರ್ವರನು
ತಲೆಯನರಿದನು ಬಳಿಕ ತಾ ಸುರ
ಲಲನೆಯರ ಚೆಲುವಿಂಗೆ ಸೋತನು
ಕಳಿದನೆನುತವೆ ನುಡಿದು ಹರಿ ಮುಳುಗಿದನು ಜಲದೊಳಗೆ ॥4॥

೦೦೫ ಆ ಸುತನ ...{Loading}...

ಆ ಸುತನ ಶೋಕದ ಮರುಕವಾ
ಕಾಶ ವಚನದೊಳಾಯ್ತು ಶಿವ ಶಿವ
ವಾಸುದೇವ ಎನುತ್ತ ಫಲುಗುಣ ಜಲವ ಬಗಿದೆದ್ದು
ಘಾಸಿಯಾದನು ಮಗನಕಟ ಸಂ
ತೋಷವೆಲ್ಲಿಯದೆನುತ ಮಾಯಾ
ವೇಷಿಯನು ಕರೆದನು ವಿಲೋಚನ ವಾರಿಪೂರದಲಿ ॥5॥

೦೦೬ ಎನಲು ಧಿಮ್ಮನೆ ...{Loading}...

ಎನಲು ಧಿಮ್ಮನೆ ಕೊಳದೊಳಗೆ ನಿಂ
ದನು ಮುಕುಂದನು ಸುರಪ ಸುತನಾ
ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ
ತನಯನಳಿಯದೆ ಮಾಣ ಗಗನ
ಧ್ವನಿಯೊಳಾದುದು ವಾರ್ತೆ ಚಿತ್ತಕೆ
ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ ॥6॥

೦೦೭ ಹರಿ ಕಿರೀಟಿಗಳಿತ್ತ ...{Loading}...

ಹರಿ ಕಿರೀಟಿಗಳಿತ್ತ ಶಿಬಿರಕೆ
ತಿರುಗಿದರು ಸುತಶೋಕ ಸೂಚನೆ
ನರನ ಚಿತ್ತದೊಳಾಯ್ತು ವೆಂಠಣಿಸಿತ್ತು ಪರಿತಾಪ
ಕೊರಳ ಸೆರೆ ಹಿಗ್ಗಿದವು ಕಂಬನಿ
ದುರುಗಿದವು ಕಡುಶೋಕ ಜಠರದ
ಲುರವಣಿಸಲಾಕಸ್ಮಿಕದ ಭಯವಾಯ್ತು ಪಾರ್ಥಂಗೆ ॥7॥

೦೦೮ ತರಣಿ ತೊಲಗಿದ ...{Loading}...

ತರಣಿ ತೊಲಗಿದ ಗಗನವೋ ಪಂ
ಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ
ಪರಮತತ್ತ ್ವನಿಧಾನವರಿಯದ
ನರನ ವಿದ್ಯಾರಚನೆಯೋ ನಿ
ರ್ಭರ ಭಯಂಕರವಾಯ್ತು ಪಾಳಯವೆನುತ ಬರುತಿರ್ದ ॥8॥

೦೦೯ ದೆಸೆದೆಸೆಯ ನೋಡಿದರೆ ...{Loading}...

ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ ॥9॥

೦೧೦ ತನ್ದೆ ಧೃತಿಗೆಡಬೇಡ ...{Loading}...

ತಂದೆ ಧೃತಿಗೆಡಬೇಡ ನಡೆ ನಿಜ
ನಂದನನನಾರೈವೆವೆನುತೈ
ತಂದು ಕೋಟೆಯ ಕಳೆದು ಬಂದರು ರಾಜ ಬೀದಿಯಲಿ
ಕಂದನಿರವನು ಕಾಣಲಾಪೆನೊ
ಕೊಂದರೆಂಬುದ ಕೇಳುವೆನೊ ತನ
ಗಿಂದು ಗತಿಯೇನೆನುತ ಬಂದನು ರಾಜ ಮಂದಿರಕೆ ॥10॥

೦೧೧ ಸುರನಗರಿ ನಡುಗಿತ್ತು ...{Loading}...

ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ ॥11॥

೦೧೨ ವೀರರಿದಿರುಗ್ಗಡಣಿಗಳ ಕೈ ...{Loading}...

ವೀರರಿದಿರುಗ್ಗಡಣಿಗಳ ಕೈ
ವಾರಿಗಳ ಮಾಣಿಸುತಲೈತಹ
ನಾರಿಯರ ರತುನಾರತಿಯ ತಳಿಗೆಗಳ ನೂಕಿಸುತ
ಸಾರಿ ಕೈಗೊಡುವದಟರನು ಕ
ಣ್ಣೋರೆಯಲಿ ಕೋಪಿಸುತ ತನ್ನಯ
ತೇರನಿಳಿದನು ಪಾರ್ಥನಸುರಾರಿಯ ನಿರೂಪದಲಿ ॥12॥

೦೧೩ ಹರಿ ರಥವನಿಳಿದನ್ತೆ ...{Loading}...

ಹರಿ ರಥವನಿಳಿದಂತೆ ಪಾರ್ಥನ
ಭರದ ಕೋಪವ ಕಂಡು ನಿಜಮಂ
ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ
ವರ ಧನುವ ಶಸ್ತ್ರಾಸ್ತ್ರ ಕವಚವ
ನಿರಿಸಿ ಕೈಗೊಡುವವರ ಕನಲು
ತ್ತರಮನೆಯ ಹೊಕ್ಕನು ಯುಧಿಷ್ಠಿರ ರಾಯನೋಲಗವ ॥13॥

೦೧೪ ಧರಣಿಪನ ನಿರಿಗೆಯಲಿ ...{Loading}...

ಧರಣಿಪನ ನಿರಿಗೆಯಲಿ ಕಂದನ
ಮರಣವನು ನಿಶ್ಚಯಿಸಿ ಪ್ರಳಯದ
ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ
ಸುರಿವ ನಯನಾಂಬುಗಳ ಜಲನಿಧಿ
ಗುರವಣಿಸಿದನೊ ವಡಬನೆನೆ ಮುರ
ಹರನ ಮೈದುನನೊಯ್ಯನೈದಿದನವನಿಪಾಲಕನ ॥14॥

೦೧೫ ಉಕ್ಕಿ ಶೋಕದ ...{Loading}...

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ ॥15॥

೦೧೬ ತಲೆಯ ಮುಸುಕಿನ ...{Loading}...

ತಲೆಯ ಮುಸುಕಿನ ಕಂಗಳೊರತೆಯ
ಜಲದ ದುಗುಡದ ಮುಖದ ಜನಪತಿ
ಫಲುಗುಣನನೆತ್ತಿದನು ತಲೆಗುತ್ತಿದನು ಭೀತಿಯಲಿ
ಮಲಗಿದನು ವರ ಭೀಮ ಸಭೆ ತ
ಲ್ಲಳಿಸಿತರ್ಜುನ ಬಂದನೆನೆ ಬಸ
ವಳಿದು ಬಂದು ಸುಭದ್ರೆ ಪತಿಯಂಘ್ರಿಯಲಿ ಹೊರಳಿದಳು ॥16॥

೦೧೭ ಕನ್ದನಾವೆಡೆ ತನ್ನ ...{Loading}...

ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು ॥17॥

೦೧೮ ಪತಿಯಳಿದ ಸತಿಯಿರವು ...{Loading}...

ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ ॥18॥

೦೧೯ ಬರಲು ಬಹನಿದಿರಾಗಿ ...{Loading}...

ಬರಲು ಬಹನಿದಿರಾಗಿ ತನ್ನಯ
ವರ ರಥವ ಬಂದೇರುವನು ನಿಜ
ಕರತಳದಿ ಮೈದಡವಿ ಘಾಯವ ನೋಡಿ ಮರುಗುವನು
ತರುಣನಿದಿರೈತರಲು ತನ್ನಯ
ಧುರದ ಬಳಲಿಕೆ ಹಿಂಗುವುದು ಹೇ
ಳರಸ ಕಂದನ ಸುಳಿವ ಕಾಣೆನು ಕರೆಸಿ ತೋರೆಂದ ॥19॥

೦೨೦ ಮಗನ ಮಣಿರಥವೆಲ್ಲಿ ...{Loading}...

ಮಗನ ಮಣಿರಥವೆಲ್ಲಿ ಹೂಡಿದ
ವಿಗಡ ತೇಜಿಗಳೆಲ್ಲಿ ಮಣಿವೆಳ
ಗುಗಳ ಛತ್ರವದೆಲ್ಲಿ ಚಾಮರವೆಲ್ಲಿ ಧನುವೆಲ್ಲಿ
ಹಗೆಯರಲಿ ಹತವಾದನೇ ಹಾ
ಸುಗುಣನಿಲ್ಲಿಗೆ ಬಾರನೇ ತಾ
ಮೊಗವ ಕಾಣದೆ ಹೋದನೇ ಎನಗೇನು ಗತಿಯೆಂದ ॥20॥

೦೨೧ ಕನ್ದ ಬಾರೋ ...{Loading}...

ಕಂದ ಬಾರೋ ಎನ್ನ ಮನಕಾ
ನಂದ ಬಾರೋ ಬಾಲಕರ ಪೂ
ರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೊ
ತಂದೆ ನಿನಗೆನ್ನಲ್ಲಿ ಋಣ ಸಂ
ಬಂಧ ಸವೆದುದೆ ಶಿವ ಶಿವಾ ತಾ
ಮಂದಭಾಗ್ಯಂಗಣುಗ ದಕ್ಕುವನಲ್ಲ ಎನಗೆಂದ ॥21॥

೦೨೨ ಅಸಮ ಪದ್ಮವ್ಯೂಹವನು ...{Loading}...

ಅಸಮ ಪದ್ಮವ್ಯೂಹವನು ಭೇ
ದಿಸುವನಾವವನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನ ಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ ॥22॥

೦೨೩ ಅರಿನೃಪಾಲರ ನೂರು ...{Loading}...

ಅರಿನೃಪಾಲರ ನೂರು ಮಕ್ಕಳ
ಶಿರವನರಿದನು ಷಡುರಥರ ಮಿಗೆ
ಪರಿಭವಿಸಿದನು ರಿಪುಬಲವನಡಹಾಯ್ದಾನೆವರಿವರಿದು
ಧುರಕೆ ಹೆರತೆಗೆದೆಮ್ಮ ನಾಲ್ವರ
ಸರಿದು ಹೋದಭಿಮಾನವನು ಕಾ
ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ ॥23॥

೦೨೪ ಈ ನಕುಳನೀ ...{Loading}...

ಈ ನಕುಳನೀ ಭೀಮನೀ ಪಾಂ
ಚಾಲನೀ ಸಹದೇವನೀ ಭೂ
ಪಾಲನೀ ಸಾತ್ಯಕಿ ಯುಧಾಮನ್ಯೂತ್ತಮೌಂಜಸರು
ಕಾಳೆಗದೊಳಂಗೈಸಲಮ್ಮದೆ
ಬಾಲಕನ ನೂಕಿದಿರಲಾ ನಿ
ಮ್ಮಾಳುತನವನು ತೋರಿದಿರಲಾ ತನ್ನ ಮೇಲೆಂದ ॥24॥

೦೨೫ ವೀರರಿನಿಬರು ನೆರೆದು ...{Loading}...

ವೀರರಿನಿಬರು ನೆರೆದು ರಿಪುಪರಿ
ವಾರವನು ಹೊಗಲಂಜಿ ಹೊರಗಣ
ಮಾರಿಹೊರಹೊರಗೆಂಬವೊಲು ನಂದನನ ನೂಕಿದಿರಿ
ಆರ ನಂಬಲುಬಹುದು ನಿಮಿಷವು
ದೂರ ತಾ ತೊಲಗಿದರೆ ತನ್ನ ಕು
ಮಾರನಿದ್ದರೆ ಹರಿವ ಕಂಡಿರಿ ಹೊಲ್ಲಹೇನೆಂದ ॥25॥

೦೨೬ ಕೆಡೆನುಡಿದು ಫಲವೇನು ...{Loading}...

ಕೆಡೆನುಡಿದು ಫಲವೇನು ಸಾಕಿ
ನ್ನೊಡೆಯರಿಲ್ಲದ ವಸ್ತುವಾದೆನು
ಕಡೆಗೆ ಧರ್ಮಜ ಹೇಳು ಕೊಂದವನಾರು ನಂದನನ
ಕಡುವಗೆಯದಾರವರ ಬಲದಲಿ
ನುಡಿ ನಿದಾನವನವನ ಜೀವಕೆ
ಹಿಡಿ ಮಹೀಪತಿ ಸಂಚಕಾರವನೆಂದನಾ ಪಾರ್ಥ ॥26॥

೦೨೭ ಹೇಳಿ ಫಲವೇನಿನ್ನು ...{Loading}...

ಹೇಳಿ ಫಲವೇನಿನ್ನು ಶೋಕ
ಜ್ವಾಲೆಗಿಂಧನವೆನ್ನ ನುಡಿ ರಿಪು
ಜಾಲವನು ನೀ ಖಂಡಿಗಳೆ ಬಹೆವಾವು ಬಳಿಸಲಿಸಿ
ಕಾಳೆಗವ ಜಯಿಸುವೆವು ನಡೆಯೆನೆ
ಬಾಲನುರವಣಿಸಿದನು ಮಸಗಿದ
ಕಾಲರುದ್ರನ ರೂಪ ತಾಳ್ದನು ವೈರಿ ಸೇನೆಯಲಿ ॥27॥

೦೨೮ ಅರಸು ಮಕ್ಕಳ ...{Loading}...

ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ ॥28॥

೦೨೯ ವಿರಥನಾದನು ಭೀಮ ...{Loading}...

ವಿರಥನಾದನು ಭೀಮ ನಕುಳನು
ತಿರುಗಿದನು ಸಹದೇವ ಕೊರಳಿನ
ಹರಣದಲಿ ಹಿಮ್ಮೆಟ್ಟಿದನು ದ್ರುಪದಾದಿ ನಾಯಕರು
ಧುರದೊಳೋಸರಿಸಿದರು ಸೈಂಧವ
ಹರನ ವರದಲಿ ನಮ್ಮ ಗೆಲಿದನು
ಮರಣವನು ಕಂದಂಗೆ ತಂದವನವನು ಕೇಳ್ ಎಂದ ॥29॥

೦೩೦ ಇನ್ನು ಹೇಳುವುದೇನೆನುತ ...{Loading}...

ಇನ್ನು ಹೇಳುವುದೇನೆನುತ ಕೈ
ಸನ್ನೆಯಲಿ ಮಾತಾಡಿ ಭೂಪತಿ
ಬೆನ್ನತೆತ್ತನು ಭೀಮಸೇನನ ವಿಪುಲ ವಕ್ಷದಲಿ
ತನ್ನ ಮರೆದನು ನಯನ ಧಾರಾ
ಭಿನ್ನ ಚಾರು ಕಪೋಲನಿರೆ ಸಂ
ಪನ್ನ ಶೋಕಾಗ್ನಿಯಲಿ ಬೆಂದುದು ಸಕಲ ಜನಹೃದಯ ॥30॥

೦೩೧ ಮುಚ್ಚಿದನು ಕಙ್ಗಳನು ...{Loading}...

ಮುಚ್ಚಿದನು ಕಂಗಳನು ಧೈರ್ಯದ
ಕೆಚ್ಚಿನೆದೆ ಕರಗಿತ್ತು ಶೋಕದ
ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ
ಎಚ್ಚರಡಗಿತು ನೆಲಕೆ ಕೈಗಳ
ಬಿಚ್ಚಿ ಬಿದ್ದನು ಪುತ್ರವಿರಹದ
ಹೆಚ್ಚಿಗೆಯ ತಾಪವನು ಹೆಸರಿಡಲರಿಯೆನರ್ಜುನನ ॥31॥

೦೩೨ ಘನ ವಿಕರ್ಮದ ...{Loading}...

ಘನ ವಿಕರ್ಮದ ವಿಲಗದಲಿ ನಿಜ
ತನುಜಶೋಕದ ತಗಹಿನೊಳಗ
ರ್ಜುನನು ಧೈರ್ಯ ದರಿದ್ರನಾದನದೇನ ಹೇಳುವೆನು
ಮನ ಬಳಲಿ ಮೈ ಮರೆದು ತಾಪದಿ
ಕನಸ ಕಂಡನು ಝಡಿಕೆ ಮಿಗೆ ಝೊ
ಮ್ಮಿನ ಸುಷುಪ್ತಿಯೊಳಿದ್ದು ನಿಮಿಷದೊಳೆದ್ದು ಕಣ್ದೆರೆದ ॥32॥

೦೩೩ ಅಳಲ ಮುಕ್ಕುಳಿಸಿದನು ...{Loading}...

ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ ॥33॥

೦೩೪ ಹೇಳು ಹೇಳಿನ್ನೇನು ...{Loading}...

ಹೇಳು ಹೇಳಿನ್ನೇನು ಮಾರಿಯ
ಮೇಳವಾಡಿದನೇ ಜಯದ್ರಥ
ನಾಳುತನವನು ಬವರದಲಿ ತನ್ನೊಡನೆ ತೋರಿದನೆ
ನಾಳೆ ಬೈಗಿಂದೊಳಗೆ ರಿಪುವನು
ಸೀಳುವೆನು ಸೀಳದಿರೆ ಧರ್ಮಜ
ಕೇಳು ಭಾಷೆಯನೆಂದು ಮಿಗೆ ಗರ್ಜಿಸಿದನಾ ಪಾರ್ಥ ॥34॥

೦೩೫ ಹರನ ದುರ್ಗದಲಿರಲಿ ...{Loading}...

ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ ॥35॥

೦೩೬ ಕುರುಬಲವ ಬಿಟ್ಟರೆ ...{Loading}...

ಕುರುಬಲವ ಬಿಟ್ಟರೆ ಯುಧಿಷ್ಠಿರ
ನರಮನೆಯ ಹೊಕ್ಕರೆ ಮುರಾರಿಯ
ಶರಣುವೊಕ್ಕರೆ ಸರ್ವಥಾ ಕೊಲ್ಲೆನು ಜಯದ್ರಥನ
ಧುರದೊಳುಳಿದಂತಿಂದ್ರ ಯಮ ಭಾ
ಸ್ಕರ ವಿರಂಚಿಗಳಡ್ಡವಿಸಿದರೆ
ಶಿರವನರಿವೆನು ನಾಳೆ ಬೈಗಿಂದೊಳಗೆ ಸೈಂಧವನ ॥36॥

೦೩೭ ಗುರುವಿಘಾತಿಯ ವೇದನಿನ್ದಾ ...{Loading}...

ಗುರುವಿಘಾತಿಯ ವೇದನಿಂದಾ
ಪರನ ಪರದಾರಾಭಿಗಾಮಿಯ
ಹರ ಮುರಾರಿಯ ಭೇದವಾದಿಯ ವಿಪ್ರನಿಂದಕನ
ಪರಗುಣಾಸೂಯಕನ ಹಿಂಸಾ
ಪರನ ಹಿಸುಣನ ಶಠನ ಕೃಪಣನ
ನರಕವಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥37॥

೦೩೮ ಖಳನ ಧೂರ್ತನ ...{Loading}...

ಖಳನ ಧೂರ್ತನ ನಾಸ್ತಿಕನ ಚಂ
ಚಳನ ಪರನಿಕ್ಷೇಪಹಾರಿಯ
ದಳಿತ ಮರ್ಯಾದನ ಕೃತಘ್ನನ ಭರ್ತೃನಿಂದಕನ
ಸ್ಖಲಿತ ವಚನನ ಯೋಗಿ ನಿಂದಾ
ಕುಳನ ವಿಕಳವ್ರತನ ಲೋಕಾ
ವಳಿಗಳಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ ॥38॥

೦೩೯ ನಾಳೆ ಖಚರೀಜನದ ...{Loading}...

ನಾಳೆ ಖಚರೀಜನದ ತೊಡವಿನ
ತೋಳನವನಸು ನೆಮ್ಮದಿದ್ದರೆ
ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ
ಕೇಳು ಧರ್ಮಜ ಎಂಬ ನುಡಿಗಳು
ಕಾಳೆಗದ ಸೊಗಸಾಗೆ ಲಕ್ಷ್ಮೀ
ಲೋಲ ಕೇಳುತ ಬಂದು ಪಾರ್ಥನ ಬಿರುದ ಹೊಗಳಿದನು ॥39॥

೦೪೦ ತೀರಿತಿನ್ನೇನರಿ ನೃಪನ ...{Loading}...

ತೀರಿತಿನ್ನೇನರಿ ನೃಪನ ಸಂ
ಸಾರ ನೀನೇರಿಸಿದ ನುಡಿಗಳ
ನಾರು ಕಳಚಲು ಬಲ್ಲರಗ್ಗದ ದೇವ ದೈತ್ಯರಲಿ
ವೀರ ರಾಮನ ನುಡಿಗೆ ರಾಮನು
ದಾರ ಬಾಣಕೆ ನಿನ್ನ ನುಡಿಗಳು
ಕೂರಲಗು ಸಮಜೋಳಿ ಜಗದೊಳಗೆಂದನಸುರಾರಿ ॥40॥

೦೪೧ ನಳಿನನಾಭನು ಪಾಞ್ಚಜನ್ಯವ ...{Loading}...

ನಳಿನನಾಭನು ಪಾಂಚಜನ್ಯವ
ಮೊಳಗಿದನು ನಿಜದೇವದತ್ತವ
ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ
ಪ್ರಳಯ ದಿನದಲಿ ತಿವಿವ ಸಿಡಿಲ
ವ್ವಳಿಸುವಂತಿರೆ ರೌದ್ರರವ ಘುಳು
ಘುಳಿಸಿ ತಲ್ಲಣಿಸಿತ್ತು ಕೌರವ ರಾಯ ಪರಿವಾರ ॥41॥

೦೪೨ ಏನಿದೆತ್ತಣ ರಭಸ ...{Loading}...

ಏನಿದೆತ್ತಣ ರಭಸ ತ್ರೈಲೋ
ಕ್ಯಾನುಕಂಪನವಾಯ್ತು ಶಿವ ಎನು
ತಾ ನರೇಂದ್ರ ನಿಕಾಯ ನಡುಗಿತು ಕೌರವೇಶ್ವರನ
ಸೇನೆ ತಲೆಕೆಳಕಾಯ್ತು ಪಾರ್ಥನ
ಸೂನುವಿನ ಮರಣದಲಿ ಮಂತ್ರ
ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ ॥42॥

೦೪೩ ಎಲೆಲೆ ಕವಿ ...{Loading}...

ಎಲೆಲೆ ಕವಿ ಕಳ್ಳೇರಿ ಹಾಯ್ದರು
ಕೊಲೆಗಡಿಗರೋ ನೃಪರು ಮಗ ಮಡಿ
ದಳಲು ಮಿಗಲನ್ಯಾಯಕೆಳಸಿದನೇ ಯುಧಿಷ್ಠಿರನು
ಬಲವ ಕರೆ ಕರೆ ಎನುತ ಕಾಹಿನ
ತೊಳಲಿಕೆಯ ನಾಯಕರು ಗಜರಲು
ಬೆಳಗಿದವು ಬೊಂಬಾಳ ದೀವಿಗೆ ನೆರೆದುದತಿರಥರು ॥43॥

೦೪೪ ಪಾಳಯವು ಗಜಬಜಿಸೆ ...{Loading}...

ಪಾಳಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ಬೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ ॥44॥

೦೪೫ ಕಡಿವಣವನಾನೆಗಳ ಮೋರೆಗೆ ...{Loading}...

ಕಡಿವಣವನಾನೆಗಳ ಮೋರೆಗೆ
ತೊಡಸಿದರು ದಂತಿಗಳ ಹೆಗಲಲಿ
ನಿಡು ನೊಗನ ಕಟ್ಟಿದರು ಕಿವಿಯಲಿ ಕೀಲಿಗಳ ಸರಿಸಿ
ಜಡಿವ ಗುಳವನು ಹಾಯ್ಕಿ ಬೀಸಿದ
ರೊಡನೊಡನೆ ಹಕ್ಕರಿಕೆ ಜೋಡಿನ
ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ ॥45॥

೦೪೬ ಶಿರದೊಳಾನ್ತರು ಮೊಚ್ಚೆಯವನಾ ...{Loading}...

ಶಿರದೊಳಾಂತರು ಮೊಚ್ಚೆಯವನಾ
ಚರಣದಲಿ ಸೀಸಕವ ತೋಳಲಿ
ಬರಿಯ ಕವಚವ ಬೆನ್ನಿನಲಿ ಕಟ್ಟಿದರು ಕೈಹೊಡೆಯ
ಸುರಗಿಗಳನೀಡಾಡಿ ತಿರುಹಿದ
ರೊರೆಗಳನು ಬತ್ತಳಿಕೆಯನು ಬಿಲು
ದಿರುವಿನಲಿ ಮೋಹಿದರು ತಲ್ಲಣಿಸಿತ್ತು ತಮತಮಗೆ ॥46॥

೦೪೭ ಕರಿಗಳನು ರಾವುತರು ...{Loading}...

ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರಿಟ್ಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ ॥47॥

೦೪೮ ಹರಿದು ಬೇಹಿನ ...{Loading}...

ಹರಿದು ಬೇಹಿನ ಚರರು ಪಾಂಡವ
ರರಮನೆಯ ಹೊಕ್ಕರಿದು ಮರಳಿದು
ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ
ನೆರವಿ ನಗೆಗೆಡೆಯಾಗೆ ಮುಸುಕಿನ
ಮುರುವಿನಲಿ ಪಾಳಯವ ಹೊಕ್ಕರು
ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ ॥48॥

೦೪೯ ರವಿತನುಜ ಗುರುಸೂನು ...{Loading}...

ರವಿತನುಜ ಗುರುಸೂನು ಭೂರಿ
ಶ್ರವ ಸುಲೋಚನ ಶಲ್ಯ ಕೃಪ ಸೈಂ
ಧವ ವಿವಿಂಶತಿ ಚಿತ್ರಸೇನರು ಕರ್ಣನಂದನರು
ತವತವಗೆ ಬೆದರಿದರು ರಿಪು ಕೌ
ರವನ ಹೊರೆಗೈತಂದರಂದಿನ
ರವದ ರೌದ್ರದ ರಾಜಕಾರ್ಯವ ತಿಳಿವ ತವಕದಲಿ ॥49॥

೦೫೦ ಇರುಳು ಬೇಹಿನ ...{Loading}...

ಇರುಳು ಬೇಹಿನ ಚರರು ಪಾರ್ಥನ
ನಿರುಪಮಿತ ಗಾಢ ಪ್ರತಿಜ್ಞಾ
ಚರಿತವನು ಕೌರವನ ಸಭೆಯಲಿ ತಂದು ಹರಹಿದರು
ಮರಣ ಸೈಂಧವಗಲ್ಲದಿದ್ದರೆ
ಮರಣ ಪಾರ್ಥಂಗಲ್ಲದೆಡೆಯಲಿ
ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ ॥50॥

೦೫೧ ಲೇಸು ಲೇಸಭಿಮನ್ಯುವೀ ...{Loading}...

ಲೇಸು ಲೇಸಭಿಮನ್ಯುವೀ ದು
ಶ್ಯಾಸನನ ಮಗನಿಂದ ರಣದಲಿ
ಘಾಸಿಯಾದನು ನಾವು ಮಾಡಿದುದೇನು ಪಾರ್ಥಂಗೆ
ಈಸನೇರಿಸಿ ನುಡಿದ ಪಾರ್ಥನ
ಭಾಷೆ ಹೊಳ್ಳಾಗದು ಸುಯೋಧನ
ದೇಶವನು ಬೀಳ್ಕೊಂಡೆನೆಂದನು ಸೈಂಧವನು ಸಭೆಗೆ ॥51॥

೦೫೨ ಅಳಲಿ ಮನೆಯಲಿ ...{Loading}...

ಅಳಲಿ ಮನೆಯಲಿ ಕಾಳುಗೆಡೆದಡೆ
ಫಲವಹುದೆ ನಿಜಸತಿಯ ಹಿಡಿದಾ
ನೆಳಸುವಂದಿನ ಭೀಮ ಮಾಡಿದ ಭಾಷೆಯೇನಾಯ್ತು
ಅಳುಕದಿರು ಪರಿವಾರವಿದೆ ಕೊಳು
ಗುಳಕೆ ವಜ್ರದ ಜೋಡು ದ್ರೋಣನು
ಬಲವಿಹೀನನೆ ತಾನೆನುತ ಕುರುರಾಯ ಗರ್ಜಿಸಿದ ॥52॥

೦೫೩ ಅವನೋಲೆಯಕಾರತನ ಗಾಂ ...{Loading}...

ಅವನೋಲೆಯಕಾರತನ ಗಾಂ
ಡೀವಿಯಿದಿರಲಿ ಫಲಿಸುವುದು ಮೇ
ಣಾವನದ್ಭುತ ಮಂತ್ರಶಕ್ತಿಗೆ ಮಣಿವನಸುರಾರಿ
ಕಾವರಿಲ್ಲರ್ಜುನನ ಕೈಯಲಿ
ಸಾವವರು ನಾವಲ್ಲೆನಲು ನರ
ದೇವ ಕುರುಪತಿ ಮತ್ತೆ ನುಡಿದನು ನಗುತ ಸೈಂಧವಗೆ ॥53॥

೦೫೪ ಗರುಡನೂರವರೆರೆವರೇ ನಾ ...{Loading}...

ಗರುಡನೂರವರೆರೆವರೇ ನಾ
ಗರಿಗೆ ತನಿಯನು ನಮ್ಮ ಬಲದಲಿ
ಗುರುವಲಾ ಪಾಲಕನು ಕೈಕೊಂಬನೆ ಧನಂಜಯನ
ನರನ ನುಡಿಯನು ಹೊಳ್ಳುಗಳೆವರೆ
ಚರಣದಲಿ ಬೀಳುವೆವು ನಡೆಯೆಂ
ದಿರುಳು ದ್ರೋಣನ ಮನೆಗೆ ಬಂದನು ಕೌರವರ ರಾಯ ॥54॥

೦೫೫ ನೆಗಹಿದವು ಕೈದೀವಿಗೆಯ ...{Loading}...

ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ ॥55॥

೦೫೬ ಗರುಡಿಯೊಡೆಯನ ಪಾಳಯಕೆ ...{Loading}...

ಗರುಡಿಯೊಡೆಯನ ಪಾಳಯಕೆ ಕಡು
ಭರದಲೈತರೆ ಕೌರವೇಂದ್ರನ
ಬರವಿದೇನೆಂದಿದಿರು ಬಂದನು ದ್ರೋಣನಿದಿರಾಗಿ
ಧರಣಿಪನ ಸತ್ಕರಿಸಿ ನೆಲೆಯು
ಪ್ಪರಿಗೆಗೊಯ್ದನು ನುಸುಳುಗಂಡಿಯೊ
ಳುರವಣಿಸಿದರು ಕರ್ಣ ಕೃಪ ಮೊದಲಾದ ಬೇಹವರು ॥56॥

೦೫೭ ವೀಳೆಯವ ಕರ್ಪುರವನಿತ್ತು ...{Loading}...

ವೀಳೆಯವ ಕರ್ಪುರವನಿತ್ತು ನೃ
ಪಾಲರನು ಕರ್ಣಾದಿ ಸುಭಟರ
ಸಾಲ ಮನ್ನಿಸಿ ದ್ರೋಣ ಬೆಸಕೊಂಡನು ಸುಯೋಧನನ
ಕಾಳಿಕೆಯ ಕೈಕೊಂಡು ಸಿರಿಮೊಗ
ಹೇಳುತಿದೆ ಭೀತಿಯನು ನಿನ್ನಿನ
ಕಾಳೆಗದ ಜಯ ನಮ್ಮದೀ ದುಮ್ಮಾನವೇನೆಂದ ॥57॥

೦೫೮ ಏನ ಹೇಳುವೆನುರ್ಜುನನು ...{Loading}...

ಏನ ಹೇಳುವೆನುರ್ಜುನನು ನಿಜ
ಸೂನು ಮಡಿಯೆ ದುರಾಭಿಮಾನದ
ಲೇನನೆಂದನು ಕೇಳಿರೈ ಕರ್ಣಾದಿ ಮಂತ್ರಿಗಳು
ತಾನು ಗಡ ಸೈಂಧವನ ತಲೆಯನು
ಭಾನುವಡಗದ ಮುನ್ನ ಕೊಂಬೆನು
ಹೀನನಾದರೆ ಹೊಗುವೆನೆಂದನು ಹವ್ಯವಾಹನನ ॥58॥

೦೫೯ ಕೊನ್ದವನು ದುಶ್ಯಾಸನನ ...{Loading}...

ಕೊಂದವನು ದುಶ್ಯಾಸನನ ಮಗ
ಬಂದುದಪರಾಧವು ಜಯದ್ರಥ
ಗಿಂದಿವನ ಪತಿಕರಿಸಬೇಹುದು ರಣದೊಳರ್ಜುನನ
ಮುಂದುಗೆಡಿಸಲೆಬೇಕು ಭೀಷ್ಮರು
ಸಂದ ಬಳಿಕೆಮಗಾಪ್ತ ನೀನೇ
ತಂದೆ ನೀನೆಂದರಸನೆರಗಿದನವರ ಚರಣದಲಿ ॥59॥

೦೬೦ ಮಕುಟವನು ನೆಗಹಿದನು ...{Loading}...

ಮಕುಟವನು ನೆಗಹಿದನು ಭೂಪಾ
ಲಕ ನಿದಾನಿಸಿ ಕೇಳು ಶಶಿಕುಲ
ಮುಕುರವಿತ್ತಂಡದಲಿ ನೆನೆಯೆವು ಭೇದಬುದ್ಧಿಗಳ
ಯುಕುತಿಯಿನ್ನಿದಕಿಲ್ಲ ಪಾರ್ಥನ
ಶಕುತಿ ಘನವೀ ರಾಜಕಾರ್ಯಕೆ
ಚಕಿತರಾದೆವು ರಾಯ ಚಿತ್ತೈಸೆಂದನಾ ದ್ರೋಣ ॥60॥

೦೬೧ ಕಾವಡೆನ್ನಳವಲ್ಲ ಮೇಣ್ ...{Loading}...

ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ ॥61॥

೦೬೨ ಇದು ಮುರಾರಿಯ ...{Loading}...

ಇದು ಮುರಾರಿಯ ಲೀಲೆಗೋಸುಗ
ಉದಯಿಸಿದ ಜಗವಿದರೊಳೊಬ್ಬನ
ಸದೆವನೊಬ್ಬನ ಹಿಡಿದು ಸಲಹುವನೊಬ್ಬನೊಬ್ಬನಲಿ
ಇದರೊಳಾತಂಗಿಲ್ಲ ಕರುಣಾ
ಸ್ಪದತೆ ನಿಷ್ಕಾರುಣ್ಯ ಭೂಯಂ
ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ ॥62॥

೦೬೩ ನರನ ನುಡಿಯೆನ್ದಿರದಿರವು ...{Loading}...

ನರನ ನುಡಿಯೆಂದಿರದಿರವು ಮುರ
ಹರನ ನುಡಿಗಳು ಕೇಳು ಗಿರಿಗ
ಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು
ನರನ ನುಡಿ ಹೊಳ್ಳಾಗದಾ ಮುರ
ಹರನ ಬಲುಹುಳ್ಳನ್ನ ಬರವೆನ
ಲರಸನಾಲಿಸಿ ಕೇಳುತಿರ್ದನು ಕೈಯ ಗಲ್ಲದಲಿ ॥63॥

೦೬೪ ಕೇಳುತಿರ್ದೈ ಕರ್ಣ ...{Loading}...

ಕೇಳುತಿರ್ದೈ ಕರ್ಣ ಬೊಮ್ಮವ
ಕೇಳ ಬಂದೆವೆ ನಾವು ನಾಳಿನ
ಕಾಳೆಗದ ಜಯಮುಖವ ಬೆಸಗೊಳ ಬಂದೆವಿಂದೀಗ
ಹೇಳುತಿದ್ದರಸಂಗತವನಿದು
ಹೋಲುವುದಲೇ ಮುನಿ ಕುಮಾರರು
ಕಾಳೆಗವನೇಗುವರು ಬಳಿಕೇನೆಂದನಾ ಭೂಪ ॥64॥

೦೬೫ ಕಟಕಿಯೇಕಿದು ವಿಪ್ರರಹೆವು ...{Loading}...

ಕಟಕಿಯೇಕಿದು ವಿಪ್ರರಹೆವು
ತ್ಕಟದ ಶೌರಿಯವಿಲ್ಲ ನಾವ್ ದಿಟ
ಪುಟವ ನುಡಿದರೆ ಖಾತಿಯಾದುದೆ ನಿಮ್ಮ ಚಿತ್ತದಲಿ
ನಿಟಿಲಲೋಚನ ನೋಡುವರೆ ದು
ರ್ಘಟವೆನಿಪ ಮೋಹರದ ಬಲು ಸಂ
ಘಟನೆಯನು ತೋರುವೆನು ಚಿಂತಿಸಬೇಡ ನೀನೆಂದ ॥65॥

೦೬೬ ವ್ಯೂಹವನು ರಚಿಸುವೆನು ...{Loading}...

ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ ॥66॥

೦೬೭ ಸಾಕು ನೀ ...{Loading}...

ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ ॥67॥

೦೬೮ ಬೀಳುಕೊಣ್ಡುದು ರಾಜಸಭೆ ...{Loading}...

ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರ ನಾರಯಣ ॥68॥

+೦೮ ...{Loading}...