೦೦೦ ಸೂ ವೀರ ...{Loading}...
ಸೂ. ವೀರ ರಿಪುಕದಳೀವನಕೆ ಮದ
ವಾರಣನು ಫಲುಗುಣನ ತನಯನು
ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವೀರ ಶತ್ರುಸೇನೆ ಎಂಬ ಬಾಳೆಯ ತೋಟಕ್ಕೆ ಮದಿಸಿದ ಆನೆಯಂತಿದ್ದ ಅರ್ಜುನನ ಮಗನಾದ ಅಭಿಮನ್ಯುವು ವಿಸ್ತಾರವಾದ ಪದ್ಮವ್ಯೂಹದಲ್ಲಿ ಕೌರವ ಕುಮಾರರನ್ನು ಗೆದ್ದನು.
ಪದಾರ್ಥ (ಕ.ಗ.ಪ)
ಮದವಾರಣ-ಮದಿಸಿದ ಆನೆ
ಮೂಲ ...{Loading}...
ಸೂ. ವೀರ ರಿಪುಕದಳೀವನಕೆ ಮದ
ವಾರಣನು ಫಲುಗುಣನ ತನಯನು
ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ
೦೦೧ ಅವಧರಿಸು ಧೃತರಾಷ್ಟ್ರ ...{Loading}...
ಅವಧರಿಸು ಧೃತರಾಷ್ಟ್ರ ನೃಪ ಸೈಂ
ಧವನ ಗೆಲಿದಾ ವ್ಯೂಹ ಭೇದಾ
ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ
ತಿವಿದನುರುಬುವ ರಥ ಪದಾತಿಯ
ಕವಿವ ಗರುವ ತುರಂಗಗಳ ಬಲು
ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ, ಸೈಂಧವನನ್ನು ಜಯಿಸಿ, ಪದ್ಮವ್ಯೂಹವನ್ನು ಗೆದ್ದ , ವಿಜಯನೆಂಬ ಹೆಸರುಳ್ಳ ಅರ್ಜುನನ ಮಗನಾದ ಅಭಿಮನ್ಯುವಿನ ಆಶ್ಚರ್ಯವನ್ನುಂಟು ಮಾಡುವ ಯುದ್ಧದ ಪ್ರಾರಂಭವನ್ನು ಕೇಳು. ಮೇಲೇರಿ ಬರುತ್ತಿದ್ದ ರಥ, ಕುದುರೆ, ಕಾಲಾಳು ಸೇನೆಯನ್ನು ವೇಗವಾಗಿ ಓಡುತ್ತಿದ್ದ ರಥಗಳನ್ನು ಕೋಟಿ ಸಂಖ್ಯೆಯ ಹೊಸ ಬಿದಿರು ಮೆಳೆಗಳ ಸಮೂಹವನ್ನು ಕತ್ತರಿಸುವಂತೆ ಅಭಿಮನ್ಯು ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ವಿಜಯಾತ್ಮಕ-ಅರ್ಜುನನ ಮಗ-ಅಭಿಮನ್ಯು
ಮೂಲ ...{Loading}...
ಅವಧರಿಸು ಧೃತರಾಷ್ಟ್ರ ನೃಪ ಸೈಂ
ಧವನ ಗೆಲಿದಾ ವ್ಯೂಹ ಭೇದಾ
ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ
ತಿವಿದನುರುಬುವ ರಥ ಪದಾತಿಯ
ಕವಿವ ಗರುವ ತುರಂಗಗಳ ಬಲು
ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ ॥1॥
೦೦೨ ಹರಿಯ ಚಕ್ರ ...{Loading}...
ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ ಚಕ್ರವು ಅಭಿಮನ್ಯುವಿನ ರಥದ ಗಾಲಿಗಳ ಚಕ್ರದಲ್ಲಿ ಉತ್ಸಾಹಿಸುತ್ತಿರುವ ಕುದುರೆಗಳ ಬಲವಾದ ಪಾದಗಳ ಹೊಡೆತದಲ್ಲಿ (ಹೊಡೆತವು) ಪ್ರಳಯಕಾಲದ ಬಿರುಗಾಳಿಯಲ್ಲಿ, ರುದ್ರನ ಮೂರನೆಯ ಕಣ್ಣಿನ ಜ್ವಾಲೆಯು ಅಭಿಮನ್ಯುವಿನ ಬಾಣದ ಕಿಡಿಯಲ್ಲಿ ಸೇರಿಹೋಯಿತೋ ಎನ್ನುವಂತೆ ಅಭಿಮನ್ಯುವು ಯುದ್ಧ ಭೂಮಿಯಲ್ಲಿ ಮುನ್ನುಗ್ಗಿ ಸಕಲ ಸೈನಿಕರನ್ನು ಪ್ರಹಾರ ಮಾಡಿದನು.
ಪದಾರ್ಥ (ಕ.ಗ.ಪ)
ಹರಿಯ-ಕೃಷ್ಣನ, ವರೂಥ-ರಥ, ಖುರ-ಗೊರಸು, ಹೊಯ್ಲಲಿ-ಏಟಿನಿಂದ, ಪಾರ್ಥಿಯ-ಅಭಿಮನ್ಯುವಿನ, ಸೈವರಿ-ನೇರವಾಗಿ ಹೋಗು, ಸದೆ-ಕೊಲ್ಲು
ಮೂಲ ...{Loading}...
ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ ॥2॥
೦೦೩ ಮಿಕ್ಕು ನೂಕುವ ...{Loading}...
ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಂಪು ಗುಂಪಾಗಿ ಬಂದು ಮೇಲೆ ಬಿದ್ದ ಕುದುರೆಯ ಸವಾರರು ನಾಶಹೊಂದಿದರು.ಹೋರಾಡಲು ಗುಂಪುಗುಂಪಾಗಿ ಬಂದ ಆನೆಗಳ ಗತಿಯನ್ನು ಏನು ಹೇಳಲಿ? ಕಣ್ಣಳತೆಯಲ್ಲಿ ಅವುಗಳನ್ನು ಕಾಣಲಾಗಲೇ ಇಲ್ಲ. ಮೇಲೆ ಬೀಳುತ್ತಿದ್ದ ರಥ ಹಾಗೂ ಪದಾತಿ ಸೈನ್ಯವನ್ನು ಅಭಿಮನ್ಯು ನಿರ್ನಾಮ ಮಾಡಿದನು. ಮಗುವಾದ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.
ಪದಾರ್ಥ (ಕ.ಗ.ಪ)
ತೆಕ್ಕೆಗೆಡೆ-ಒಟ್ಟಾಗಿ ಸಾಯಿ, ಒಕ್ಕಲಿಕ್ಕು-ಬತ್ತವನ್ನು ಹುಲ್ಲಿನಿಂದ ಬೇರ್ಪಡಿಸಲು ಬಡಿಯುವುದು.
ಮೂಲ ...{Loading}...
ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ ॥3॥
೦೦೪ ಕದಳಿಯೊಳು ಮದದಾನೆ ...{Loading}...
ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದಿಸಿದ ಆನೆಯು ಬಾಳೆಯವನಕ್ಕೆ ನುಗ್ಗಿ ಇಡೀ ತೋಟವನ್ನು ನಾಶಪಡಿಸುವ ಹಾಗೆ ಅತಿಶಯವಾದ ಕೌರವನ ಚತುರಂಗ ಸೇನೆಯನ್ನು ಶವಗಳನ್ನಾಗಿ ಮಾಡಿ ಪೇರಿಸಿದನು. ಸೈನ್ಯವನ್ನು ತುಳಿದು ಮುನ್ನುಗ್ಗಿದನು. ಎದುರಾಗಿ ಬಂದವರನ್ನು ಹೊಡೆದನು. ಅಕ್ಕ ಪಕ್ಕಗಳಿಂದ ಬಂದ ಕದನವೀರರನ್ನು ಸೀಳಿ ಹಾಕಿದನು. ಅಭಿಮನ್ಯುವಿನ ಭೀಕರ ಕಾಳUದಿಂದ ರಣರಂಗವು ಯಮನ ಆಟವೋ ಎಂಬಂತಾಯಿತು.
ಪದಾರ್ಥ (ಕ.ಗ.ಪ)
ಹೂಣೆ-ನುಗ್ಗು
ಮೂಲ ...{Loading}...
ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ॥4॥
೦೦೫ ಜೋಡೊಡೆದು ಥಟ್ಟುಗಿದು ...{Loading}...
ಜೋಡೊಡೆದು ಥಟ್ಟುಗಿದು ಬೆನ್ನಲಿ
ಮೂಡಲದಟರ ಸೀಳಿದನು ಖುರ
ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ
ನೋಡಲಮ್ಮುವರಿಲ್ಲ ಮಿಗೆ ಕೈ
ಮಾಡಲಮ್ಮುವರಿಲ್ಲ ಬಲವ
ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೈನಿಕರ ಕವಚಗಳು ಒಡೆದು, ಆಯುಧಗಳು ಎದೆಯಿಂದ ಪ್ರವೇಶಿಸಿ ಬೆನ್ನಿನಲ್ಲಿ ಮೂಡುವಂತೆ ವೀರರನ್ನು ಸೀಳಿದನು. ಕುದುರೆಗಳ ಪಾದಕ್ಕೆ ಕಟ್ಟಿದ್ದ ರಕ್ಷಾ ಕವಚಗಳು ಪುಡಿಪುಡಿಯಾಗುವಂತೆ ಕುದುರೆಗಳ ಸೈನ್ಯವನ್ನು ಕತ್ತರಿಸಿದ. ಅಭಿಮನ್ಯುವಿನ ಈ ಯುದ್ಧವನ್ನು ನೋಡುವವರೂ ಇಲ್ಲ, ಎದುರಿಸುವವರೂ ಇಲ್ಲವೆಂಬಂತಾಯಿತು. ಕೌರವ ಸೈನ್ಯ ನಡುಗಿತು. ಒಬ್ಬನೇ ಬಾಲಕನು ಶತ್ರುಸೇನೆಯನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಥಟ್ಟುಗಿ - ಜೋರಾಗಿ ಭೇದಿಸುವಂತೆ ಇರಿ, ನಟ್ಟು ಹೊರಬೀಳು
ಮೂಲ ...{Loading}...
ಜೋಡೊಡೆದು ಥಟ್ಟುಗಿದು ಬೆನ್ನಲಿ
ಮೂಡಲದಟರ ಸೀಳಿದನು ಖುರ
ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ
ನೋಡಲಮ್ಮುವರಿಲ್ಲ ಮಿಗೆ ಕೈ
ಮಾಡಲಮ್ಮುವರಿಲ್ಲ ಬಲವ
ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ ॥5॥
೦೦೬ ಆವ ವಹಿಲದೊಳಮ್ಬ ...{Loading}...
ಆವ ವಹಿಲದೊಳಂಬ ತೊಡಚುವ
ನಾವ ವೇಗದೊಳಿದಿರಲೆಸುವನ
ದಾವ ನಿರುತದಲೊಡ್ಡುವನು ಕೊರಳಿಂಗೆ ಕೋಲುಗಳ
ಆವ ದೃಢತೆಯೊ ದೃಷ್ಟಿವಾಳವಿ
ದಾವ ಗರುಡಿಶ್ರಮವೆನುತ ದಿವಿ
ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯು ಯಾವ ವೇಗದಲ್ಲಿ ಬಾಣವನ್ನು ಬಿಲ್ಲಿಗೆ ಜೋಡಿಸುತ್ತಿದ್ದ, ಯಾವ ವೇಗದಿಂದ ಎದುರು ಸೈನಿಕರ ಮೇಲೆ ಪ್ರಯೋಗಿಸುತ್ತಿದ್ದ, ಅವನು ಯಾವ ಕ್ರಮದಿಂದ. ಕೊರಳಿಗೆ ಸರಿಯಾಗಿ ಗುರಿ ಇಟ್ಟು ಬಾಣವನ್ನು ಬಿಡುತ್ತಿದ್ದ ? ಅವನದು ಯಾವ ದೃಢತೆಯೋ, ಅವನ ನೋಟ ಎಷ್ಟು ಸೂಕ್ಷ್ಮವೋ ?(ಎಂತಹ ಗುರಿಕಾರನೋ)) ಎಂತಹುದೋ, ಇದು ಯಾವ ಗರುಡಿಯಲ್ಲಿನ ಶಿಕ್ಷಣವೋ ಎಂದು ದೇವತೆಗಳು ಹೊಗಳುತ್ತಿರಲು ಅವನು ಶತ್ರುಗಳ ಗುಂಪನ್ನು ನಾಶಪಡಿಸಿದ.
ಪದಾರ್ಥ (ಕ.ಗ.ಪ)
ದೃಷ್ಟಿವಾಳ - ಸೂಕ್ಷ್ಮ ನೋಟ, ಗುರಿಕಾರ
ಮೂಲ ...{Loading}...
ಆವ ವಹಿಲದೊಳಂಬ ತೊಡಚುವ
ನಾವ ವೇಗದೊಳಿದಿರಲೆಸುವನ
ದಾವ ನಿರುತದಲೊಡ್ಡುವನು ಕೊರಳಿಂಗೆ ಕೋಲುಗಳ
ಆವ ದೃಢತೆಯೊ ದೃಷ್ಟಿವಾಳವಿ
ದಾವ ಗರುಡಿಶ್ರಮವೆನುತ ದಿವಿ
ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ ॥6॥
೦೦೭ ಎಡದಲೌಕುವ ರಾವುತರ ...{Loading}...
ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗದಿಂದ ನುಗ್ಗಿ ಬಂದು ಯುದ್ಧ ಮಾಡುತ್ತಿದ್ದ ಕುದುರೆಯ ಸವಾರರ ಸೇನೆಯನ್ನು ಕೊಚ್ಚಿ ಹಾಕುತ್ತಾ, ಎದುರಿನಿಂದ ಬಂದು ಮೇಲೆ ಬೀಳುವ ಕೋಟಿ ಸಂಖ್ಯೆಯ ಆನೆಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಕೊಂದನು. ಬಲ ಭಾಗದಿಂದ ಮೇಲೆ ಬೀಳುವ ರಥಿಕರನ್ನು ಕೆಡವುತ್ತಿದ್ದನು. ಕಾಲಾಳುಗಳು ಮತ್ತು ರಥಗಳ ಸಮೂಹವು ಪುಡಿಪುಡಿಯಾಯಿತೆನಲು ಅಭಿಮನ್ಯುವು ಶತ್ರು ಸೈನ್ಯವನ್ನು ಸವರಿ ಹಾಕಿದನು.
ಮೂಲ ...{Loading}...
ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ ॥7॥
೦೦೮ ಉರವಣಿಸಿದರು ಮತ್ತೆ ...{Loading}...
ಉರವಣಿಸಿದರು ಮತ್ತೆ ಭಟರ
ಬ್ಬರವ ಖತಿಯಲಿ ನಿಖಿಳ ಮನ್ವಂ
ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ
ಸರಳು ಕಡಿದವು ಸಕುತಿ ಸೆಲ್ಲೆಹ
ಪರಶು ಕವಿದವು ಖಡ್ಗ ತೋಮರ
ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೈನಿಕರ ಪುನಃ ಮೇಲೆ ಬಿದ್ದರು. ಅವರ ಅಬ್ಬರವನ್ನು ಸಮಸ್ತ ಮನ್ವಂತರದ ಕಡೆಯಲ್ಲಿ ಭೂಮಿಯನ್ನು ಮುಳುಗಿಸುವ ಕಡಲಿನ ರೀತಿಯಲ್ಲಿ, ಕೋಪದಿಂದ ಬಾಣಗಳು ಕತ್ತರಿಸಿದವು. ಶಕ್ತ್ಯಾಯುಧ, ಈಟಿ, ಕೊಡಲಿಗಳು ಮುತ್ತಿದವು. ಖಡ್ಗ, ತೋಮರ, ಕತ್ತಿಗಳು ಪ್ರಕಾಶಿಸಿದವು. ದಿಕ್ಕು ದಿಕ್ಕುಗಳಲ್ಲೂ ಆಯುಧಗಳು ತುಂಬಿದವು.
ಪದಾರ್ಥ (ಕ.ಗ.ಪ)
ತೋಮರ-ಒಂದು ಆಯುಧ
ಮೂಲ ...{Loading}...
ಉರವಣಿಸಿದರು ಮತ್ತೆ ಭಟರ
ಬ್ಬರವ ಖತಿಯಲಿ ನಿಖಿಳ ಮನ್ವಂ
ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ
ಸರಳು ಕಡಿದವು ಸಕುತಿ ಸೆಲ್ಲೆಹ
ಪರಶು ಕವಿದವು ಖಡ್ಗ ತೋಮರ
ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ ॥8॥
೦೦೯ ತೊಲಗಿರೈ ಕಾಲಾಳು ...{Loading}...
ತೊಲಗಿರೈ ಕಾಲಾಳು ಮೇಲಾ
ಳಳವಿಗೊಡಲಿ ಮಹಾರಥರು ಮುಂ
ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ
ಕೆಲದ ದೊರೆಗಳು ಬರಲಿ ಮಾರಿದ
ತಲೆಯ ಭಂಡವ ಹೊತ್ತಿರದೆ ಕೈ
ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಾಳುಗಳೆ ಹಿಂದಿರುಗಿರಿ, ಮಹಾವೀರರಾದ ಸೈನಿಕರು ಎದುರಿಸಲಿ. ಮಹಾರಥರು ಮುಂದೆ ಬರಲಿ, ಯೋಧರು ಧೈರ್ಯಸ್ಥರಾದರೆ ಆನೆಗಳ ಸೈನ್ಯವನ್ನು ನನ್ನ ಮೇಲೆ ಬಿಡಲಿ. ಅಕ್ಕಪಕ್ಕದ ರಾಜರು ಬರಲಿ. ತಾವು ದುರ್ಯೋಧನನಿಗೆ ಮಾರಾಟ ಮಾಡಿರುವ ತಮ್ಮ ತಲೆಗಳು ಇನ್ನೂ ಭಂಡತನವನ್ನು ಹೊತ್ತಿರದ ರೀತಿಯಲ್ಲಿ ಯುದ್ಧವನ್ನು ಕೈಗೊಂಡು (ತಲೆಯನ್ನು ಕೊಟ್ಟು) ಕರ್ಣಾದಿಗಳು ಯುದ್ಧ ಋಣವನ್ನು ತೀರಿಸಲಿ ಎಂದು ಅಭಿಮನ್ಯು ಸೈನ್ಯದ ಒಳ ಹೊಕ್ಕು ಹೊಡೆದನು.
ಪದಾರ್ಥ (ಕ.ಗ.ಪ)
ಮೇಲಾಳು-ಮಹಾವೀರ,
ಮೂಲ ...{Loading}...
ತೊಲಗಿರೈ ಕಾಲಾಳು ಮೇಲಾ
ಳಳವಿಗೊಡಲಿ ಮಹಾರಥರು ಮುಂ
ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ
ಕೆಲದ ದೊರೆಗಳು ಬರಲಿ ಮಾರಿದ
ತಲೆಯ ಭಂಡವ ಹೊತ್ತಿರದೆ ಕೈ
ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು ॥9॥
೦೧೦ ಕಾರಗಲಿಸಿದನಮಮ ರಾಜ ...{Loading}...
ಕಾರಗಲಿಸಿದನಮಮ ರಾಜ ಕು
ಮಾರ ಕಂಠೀರವನು ರಿಪು ಪರಿ
ವಾರವನು ನಡೆಗೊಳಿಸಿದನು ಯಮರಾಜನಾಲಯಕೆ
ಮಾರಿ ಮೊಗವಡದೆರೆದಳೋ ಕೈ
ವಾರವೋ ತರುವಲಿಗಿದೆತ್ತಣ
ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಕುಮಾರ ಕಂಠೀರವನೆನಿಸಿದ ಅಭಿಮನ್ಯುವು ಶತ್ರು ಸೇನೆಗೆ ರಕ್ತ ಕಾರುವುದನ್ನು ಕಲಿಸಿದನು. ಯಮರಾಜನ ಆಲಯಕ್ಕೆ ಶತ್ರು ಸೈನ್ಯದವರನ್ನು ನಡೆಸಿದ. ಮಾರಿ ದೇವತೆಯು ಬಾಯ್ದೆರೆದು ನುಂಗುತ್ತಿರುವಳೋ ಎನ್ನವಂತೆ ಅಭಿಮನ್ಯು ಶತ್ರುಸೇನೆಯನ್ನು ನಾಶಮಾಡುತ್ತಿದ್ದ. ಅವನದು ಎಂತಹ ಕೈಚಳಕವೋ ಎಂದು ದೇವತೆಗಳ ಸಮೂಹ ಬೆರಗಾಯಿತು. ಹುಡುಗನಾದ ಅಭಿಮನ್ಯುವಿಗೆ ಈ ರೀತಿಯ ಶಕ್ತಿ ಸಾಮಥ್ರ್ಯ ಹೇಗುಂಟಾಯಿತೆಂದು ಅವರು ಆಶ್ಚರ್ಯವನ್ನು ಹೊಂದಿದರು.
ಪದಾರ್ಥ (ಕ.ಗ.ಪ)
ಕಾರಗಲಿಸು-ರಕ್ತ ಕರುವುದನ್ನು ಕಲಿಸು. ತರುವಲಿ-ಹುಡುಗ,
ಮೂಲ ...{Loading}...
ಕಾರಗಲಿಸಿದನಮಮ ರಾಜ ಕು
ಮಾರ ಕಂಠೀರವನು ರಿಪು ಪರಿ
ವಾರವನು ನಡೆಗೊಳಿಸಿದನು ಯಮರಾಜನಾಲಯಕೆ
ಮಾರಿ ಮೊಗವಡದೆರೆದಳೋ ಕೈ
ವಾರವೋ ತರುವಲಿಗಿದೆತ್ತಣ
ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ ॥10॥
೦೧೧ ಕೊಡೆನೆಗೆದವಟ್ಟೆಗಳು ರಕುತದ ...{Loading}...
ಕೊಡೆನೆಗೆದವಟ್ಟೆಗಳು ರಕುತದ
ಕಡಲೊಳರೆಜೀವದ ಭಟರು ಬಾ
ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ
ಅಡಸಿ ನೆಗೆವಾನೆಗಳ ತಲೆಗಳ
ಗಡಣ ಮೆರೆದವು ಮಿಕ್ಕ ತೇಜಿಯ
ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತರಿಸಿದ ರುಂಡಗಳು ಪುಟನೆಗೆದು ಹಾರಿದುವು. ರಕ್ತದ ಕಡಲಿನಲ್ಲಿ, ಅರೆ ಜೀವ ಹೊಂದಿದ ಭಟರುಗಳು ಬಾಯಿ ಬಿಡುತ್ತ ತೇಲಾಡಿದರು. ಮುಂಡಗಳ ಸಮೂಹವು ರಕ್ತದಲ್ಲಿ ಮುಳುಗಾಡುತ್ತಿದ್ದವು. ಮೇಲೆ ಹಾರಿ ನೆಗೆಯುವ ಆನೆಗಳ ತಲೆಗಳ ಸಮೂಹವು ಕಾಣುತ್ತಿತ್ತು. ಉಳಿದ ಕುದುರೆಗಳ ಮಾಂಸದ ತುಂಡುಗಳು ಸಣ್ಣ ರಕ್ತದ ಸಮುದ್ರದಲ್ಲಿ ಕುಣಿದಾಡಿದವು.
ಪದಾರ್ಥ (ಕ.ಗ.ಪ)
ಕೊಡೆನೆಗೆ-ಪುಟಹಾರು, ಅಟ್ಟೆ-ರುಂಡವಿಲ್ಲದ ದೇಹ, ತೇಕಾಡು-ತೇಲು, ಅಡಸಿ-ಮೇಲೇರಿ, ಕಡಿಕು-ತುಂಡು, ಕಿಗ್ಗಡಲ-ಚಿಕ್ಕ ಸಮುದ್ರದ,
ಮೂಲ ...{Loading}...
ಕೊಡೆನೆಗೆದವಟ್ಟೆಗಳು ರಕುತದ
ಕಡಲೊಳರೆಜೀವದ ಭಟರು ಬಾ
ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ
ಅಡಸಿ ನೆಗೆವಾನೆಗಳ ತಲೆಗಳ
ಗಡಣ ಮೆರೆದವು ಮಿಕ್ಕ ತೇಜಿಯ
ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ ॥11॥
೦೧೨ ಕರಿಘಟೆಯ ಕಲಕಿದನು ...{Loading}...
ಕರಿಘಟೆಯ ಕಲಕಿದನು ಹಯ ಮೋ
ಹರವ ಜರುಹಿದನೌಕಿ ಹರಿತಹ
ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ
ಹುರಿಯೊಡೆದು ಮೈದೆಗೆದು ಸಲೆ ಕೈ
ಮರೆದು ಕೈದುವ ಹಾಯ್ಕಿ ಪಡೆ ಮೊಗ
ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಆನೆಗಳ ಹಿಂಡನ್ನು ಚೆದುರಿಸಿದನು; ಕುದುರೆಗಳ ಸೇನೆಯನ್ನು ಹಿಮ್ಮೆಟ್ಟಿಸಿದನು. ಮಹಾವೇಗದಿಂದ ಬರುತ್ತಿದ್ದ ರಥಗಳನ್ನು ಪುಡಿಗುಟ್ಟುತ್ತಿದ್ದನು. ಕಾಲಾಳು ಸೇನೆಯನ್ನು ಬೀಳಿಸಿದನು. ಶತ್ರುಗಳು ಶಕ್ತಿಗುಂದಿ, ಹಿಂದೆ ಸರಿದು, ಆಯುಧಗಳನ್ನು ಎಸೆದು ಮರೆಯಾಗಿ ಓಡುವಂತೆ ಹೊಡೆದನು. ಕೌರವ ಚತುರಂಗ ಬಲವನ್ನು ಕೊಚ್ಚಿದನು.
ಪದಾರ್ಥ (ಕ.ಗ.ಪ)
ಹುರಿಯೊಡೆದು-ಶಕ್ತಿಗುಂದಿ, ಕೈದುವ ಹಾಯ್ಕಿ-ಶಸ್ತ್ರಾಸ್ತ್ರಗಳನ್ನು ಬಿಸಾಕಿ, ಮೈದೆಗೆದು - ಹಿಮ್ಮೆಟ್ಟಿ
ಮೂಲ ...{Loading}...
ಕರಿಘಟೆಯ ಕಲಕಿದನು ಹಯ ಮೋ
ಹರವ ಜರುಹಿದನೌಕಿ ಹರಿತಹ
ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ
ಹುರಿಯೊಡೆದು ಮೈದೆಗೆದು ಸಲೆ ಕೈ
ಮರೆದು ಕೈದುವ ಹಾಯ್ಕಿ ಪಡೆ ಮೊಗ
ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ ॥12॥
೦೧೩ ತಳಿತ ಹೊಗರಿನ ...{Loading}...
ತಳಿತ ಹೊಗರಿನ ಬಾಯಿ ಧಾರೆಯ
ಹೊಳಹುಗಳ ಹೊಸ ಮಸೆಯ ತಳಪದ
ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ
ಲುಳಿಯ ಹಂಗನ ಗರಿಯ ಬಿಗುಹಿನ
ಹಿಳುಕುಗಳ ಹೊಗರಂಬು ಕವಿದವು
ತುಳುಕಿದವು ತೂರಿದವು ಕೆದರಿದವಹಿತ ಬಲದಸುವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ಆಯುಧದ ಅಲಗಿನ ಹೊಳಪಿನಲ್ಲಿ, ಆಗ ತಾನೆ ಮಸೆದ ಥಳಥಳಗುಟ್ಟುತ್ತಿರುವ, ಪಾದರಸವನ್ನು ಲೇಪಿಸಿದ, ಸುವರ್ಣ ರೇಖೆಗಳನ್ನು ಹೊಂದಿರುವ, ಶಕುನದ ಪಕ್ಷಿಯ ಗರಿಯನ್ನು ಬಿಗಿದಿರುವ, ಹಿಂಭಾಗವನ್ನುಳ್ಳ ಹರಿತವಾದ ಬಾಣಗಳು ಶತ್ರು ಸೈನ್ಯವನ್ನು ಮುಚ್ಚಿದುವು. ತುಂಬಿದುವು, ತೂರಿಬಂದವು; ಶತ್ರು ಸೈನ್ಯದ ಪ್ರಾಣಗಳನ್ನು ತೆಗೆದವು.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ತಳಿತ-ಹೊಸದಾದ, ತಳಪದ-ಥಳಥಳಗುಟ್ಟುತ್ತಿರುವ, ಲುಳಿಯ-ಹರಡಿದ, ಹಂಗನ ಗರಿ-ಶಕುನದ ಪಕ್ಷಿಯ ಗರಿ, ಇಂಗಲೀಕ-ಪಾದರಸದಿಂದಾದ ಅದಿರು, ಹೊಳೆವ ಲೋಹ
ಮೂಲ ...{Loading}...
ತಳಿತ ಹೊಗರಿನ ಬಾಯಿ ಧಾರೆಯ
ಹೊಳಹುಗಳ ಹೊಸ ಮಸೆಯ ತಳಪದ
ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ
ಲುಳಿಯ ಹಂಗನ ಗರಿಯ ಬಿಗುಹಿನ
ಹಿಳುಕುಗಳ ಹೊಗರಂಬು ಕವಿದವು
ತುಳುಕಿದವು ತೂರಿದವು ಕೆದರಿದವಹಿತ ಬಲದಸುವ ॥13॥
೦೧೪ ಅಳವಿಗೆಡೆ ಧುಮ್ಮಿಕ್ಕಿ ...{Loading}...
ಅಳವಿಗೆಡೆ ಧುಮ್ಮಿಕ್ಕಿ ರಥದವ
ರಿಳಿಯ ಬಿದ್ದರು ಭಯದಿ ತೇಜಿಯ
ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ
ಗುಳವ ಸಡಿಲಿಸಿ ಹಾಯ್ಕಿ ಜೋದಾ
ವಳಿಗಳಿಳಿದುದು ಕೈಯ ಕೈದುವ
ನಿಳುಹಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕ್ತಿಗುಂದಿದ ರಥಿಕರು ರಥದಿಂದ ನೆಲಕ್ಕೆ ಧುಮುಕಿದರು. ಕುದುರೆ ಸವಾರರು ಭಯದಿಂದ ಕುದುರೆಗಳಿಂದಿಳಿದು ತಮ್ಮ ಕೊರಳನ್ನು ಕಾಪಾಡೆಂದು ಅಭಿಮನ್ಯುವಿಗೆ ಕೈಮುಗಿದರು. ಕುದುರೆಗಳ ಬೆನ್ನ ಮೇಲೆ ಹಾಕಿದ್ದ ವಸ್ತ್ರಗಳನ್ನು ಸಡಿಲಿಸಿ ಯೋಧರು ಕೆಳಗಿಳಿದರು, ಪದಾತಿದಳದವರು ಆಯುಧಗಳನ್ನು ಕೆಳಗೆ ಹಾಕಿ ಬಾಯೊಳಗೆ ಬೆರಳಿಟ್ಟು ಶರಣದರು.
ಪದಾರ್ಥ (ಕ.ಗ.ಪ)
ಅಳವಿಗೆಡೆ-ಶಕ್ತಿಯು ಕುಂದಲು,
ಮೂಲ ...{Loading}...
ಅಳವಿಗೆಡೆ ಧುಮ್ಮಿಕ್ಕಿ ರಥದವ
ರಿಳಿಯ ಬಿದ್ದರು ಭಯದಿ ತೇಜಿಯ
ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ
ಗುಳವ ಸಡಿಲಿಸಿ ಹಾಯ್ಕಿ ಜೋದಾ
ವಳಿಗಳಿಳಿದುದು ಕೈಯ ಕೈದುವ
ನಿಳುಹಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ ॥14॥
೦೧೫ ಎಸಳ ಮೊನೆ ...{Loading}...
ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದ್ಮವ್ಯೂಹದ ದಳದ ಭಾಗದ ತುದಿಯಲ್ಲಿದ್ದ ವೀರರು ಪ್ರಾಣವನ್ನು ಕಳೆದುಕೊಂಡರು. ಪದ್ಮಪುಷ್ಪದ ಕೇಸರಗಳ ಆಕೃತಿಯಲ್ಲಿದ್ದ ವೀರರು ಆಕಾಶ ಮಾರ್ಗದ ಸಂಚಾರಿಗಳಾದರು.( ಪ್ರಾಣ ಕಳೆದುಕೊಂಡರು.) ಪದ್ಮವ್ಯೂಹದ ನಟ್ಟನಡು ಭಾಗದಲ್ಲಿದ್ದ (ಕಮಲ ಪುಷ್ಪದ ಬೀಜಕೋಶದಲ್ಲಿದ್ದ) ರಾಜರು ನುಸುಳಿ ಹೋದರು. ರಾಯನ ಬೆಂಬಲಕ್ಕಾಗಿ ಇದ್ದ ಸೈನಿಕರು ದಿಕ್ಕಾಪಾಲಾಗಲು, ಅಭಿಮನ್ಯುವು ಸಿಡಿಲಿನಂತೆ ಆರ್ಭಟಿಸಿದನು.
ಪದಾರ್ಥ (ಕ.ಗ.ಪ)
ಕೇಸರಾಕೃತಿ- ಪುಂಕೇಸರಗಳ ಆಕೃತಿ, , ಕರ್ಣಿಕೆ-ಕಮಲದ ಹೂವಿನ ಬೀಜಕೋಶ, ವಸುಮತೀಶ-ರಾಜ, ಅರೆನೆಲೆ-ಸೈನ್ಯಕ್ಕೆ ಬೆಂಬಲವಾಗಿ ಹಿಂದಿರುವ ಸೈನ್ಯ.
ಮೂಲ ...{Loading}...
ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ ॥15॥
೦೧೬ ಜರಿದುದಬ್ಜವ್ಯೂಹ ನೂಕಿದ ...{Loading}...
ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದ್ಮವ್ಯೂಹ ಒಡೆದು ಹೋಯಿತು. ರಥ, ಕುದುರೆ, ಆನೆ ಹಾಗೂ ಕಾಲಾಳುಗಳ ಸೇನೆ ಓಡಿ ಹೋzವು. ಮರಳಿ ಬರಲಿಲ್ಲ. ಕುರುಸೇನೆ ನುಗ್ಗಾಯಿತು. ನಾಯಕರಾದ ದ್ರೋಣಾದಿಗಳು ಕೈಸೋತು ಹಿಂದಿರುಗಿದರು. ಆಗ ದುರ್ಯೋಧನನು, ಈ ಅರ್ಜುನನ ಮಗನ ಜೊತೆ ಸರಿಸಮವಾಗಿ ಯುದ್ಧ ಮಾಡುವವರು ಯಾರಿದ್ದಾರೆಂದು ಆಶ್ಚರ್ಯ ಹೊಂದಿದ.
ಪದಾರ್ಥ (ಕ.ಗ.ಪ)
ಜರಿದುದು-ಸರಿಯಿತು, ನುಗ್ಗಾಯ್ತು-ಸೋತಿತು, ಸರಿಯೊರೆಗೆ-ಸಮಸಮವಾಗಿ
ಮೂಲ ...{Loading}...
ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ ॥16॥
೦೧೭ ತನ್ದೆ ಹಡೆಯನೆ ...{Loading}...
ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪ ಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಂದೆಯು ಮಗನನ್ನು ಪಡೆಯುವುದಿಲ್ಲವೇ ! (ಎಲ್ಲ ತಂದೆಯಂದಿರೂ ಮಕ್ಕಳನ್ನು ಪಡೆಯುತ್ತಾರೆ. ಆದರೆ ನೀನು ಎಲ್ಲರಂತಹ ಮಗನಲ್ಲ ಎಂದು ಭಾವ). ನಿನ್ನಂತಹ ವೀರ ಪುತ್ರನನ್ನು ಪಡೆಯಲು ನಿನ್ನ ತಾಯಿಯಾದ ಸುಭದ್ರೆ ಎಷ್ಟು ಸಾವಿರ ವರ್ಷ ಈಶ್ವರನನ್ನು ಕುರಿತು ತಪಸ್ಸು ಮಾಡಿದಳೋ. ಅಲ್ಲದಿದ್ದರೆ ಇಂದಿನ ಯುದ್ಧದಲ್ಲಿ ನಿನ್ನ ಶಕ್ತಿ, ಈ ಯುದ್ಧದಲ್ಲಿನ ಜಯದ ರೀತಿ, ಈ ಸಂಭ್ರಮ, ಈ ಬಾಣದ ರೀತಿ, ಈ ರೀತಿಯ ನಿನ್ನ ಚಲನೆಯ ಕೌಶಲಗಳು ಬೇರೆ ಯಾರಿಗುಂಟು” - ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ನೋಂತಳೊ-ವ್ರತ ಮಾಡಿದಳೊ, ಇಂದುಧರ-ಶಿವ, ಸೌರಂಭ-ವೈಭವ, ತೆರಳಿಕೆ-ತೆರಳುವಿಕೆ, ಚಲಿಸುವಿಕೆ (ಆದರೆ ಇಲ್ಲಿ ಆವೇಶವೆಂಬ ಅರ್ಥದಲ್ಲಿ ಬಳಕೆಯಾಗಿದೆ)
ಮೂಲ ...{Loading}...
ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪ ಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ ॥17॥
೦೧೮ ಹುರುಡ ಮರೆದೆನು ...{Loading}...
ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನ, ನಿನ್ನ ಮೇಲಿನ ಸ್ಪರ್ಧೆಯನ್ನು ಈಗ ಮರೆತೆ. ಭರತ ವಂಶದಲ್ಲಿ ನಿನ್ನ ಬೆಳವಣಿಗೆ ಪಾಂಡವ ಕೌರವ ಎರಡೂ ವಂಶಗಳಿಗೆ ಸದ್ಗತಿಯನ್ನು ತರುವುದಿಲ್ಲವೇ. ಹೊಟ್ಟೆಯಿಂದ ಕರುಳು ಬೀಳುವುದಿಲ್ಲವೇ (ಹಾಗೆ ಇತರ ಮಕ್ಕಳು ಹುಟ್ಟುವುದು) ಅದರಿಂದ ಏನು ಫಲ. ಅರ್ಜುನ ಕೃತಾರ್ಥ. ಅದಕ್ಕೆ ನನಗೆ ಮತ್ಸರವಿಲ್ಲ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಹುರುಡು-ಸ್ಪರ್ಧೆ, ಅನ್ವಯಕೆ-ವಂಶಕ್ಕೆ, ಸುಗತಿ-ಸದ್ಗತಿ
ಮೂಲ ...{Loading}...
ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ॥18॥
೦೧೯ ಎನುತ ಬಿಲುದುಡುಕಿದನು ...{Loading}...
ಎನುತ ಬಿಲುದುಡುಕಿದನು ಸೇನಾ
ವನಧಿಗಭಯವನಿತ್ತು ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ
ಮೊನೆಗಣೆಯ ತೂಗುತ್ತ ನರ ನಂ
ದನನ ರಥವನು ತರುಬಿ ನಿನ್ನಯ
ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ, ದುರ್ಯೋಧನನು ಬಿಲ್ಲನ್ನು ಕೈಗೆತ್ತಿಕೊಂಡು ಸಾಗರದಂತಿದ್ದ ಸೇನೆಗೆ ಧೈರ್ಯವನ್ನು ತುಂಬಿ ರಣರಂಗದಿಂದ ಪಲಾಯನ ಗೈಯುತ್ತಿದ್ದ ರಾಜರನ್ನು ಬೈದು ನಿಲ್ಲಿಸಿ, ಅಕ್ಕಪಕ್ಕಗಳಲ್ಲಿದ್ದ ಮಾಂಡಲಿಕರಿಗೆ ಮೂದಲಿಕೆಯ ಮಾತುಗಳನ್ನಾಡಿ, ಚೂಪಾದ ಬಾಣಗಳನ್ನು ಕೈಯಲ್ಲಿ ಹಿಡಿದು ತೂಗುತ್ತಾ, ಅರ್ಜುನನ ಮಗನಾದ ಅಭಿಮನ್ಯುವಿನ ರಥವನ್ನು ಎದುರಿಸಿ ನಿಂದು ನಿನ್ನ ಮಗ ಕೋಪಾತಿಶಯದಿಂದ ಯುದ್ಧವನ್ನಾರಂಭಿಸಿದನು ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಮೊನೆಗಣೆ-ಚೂಪಾದಬಾಣ
ಮೂಲ ...{Loading}...
ಎನುತ ಬಿಲುದುಡುಕಿದನು ಸೇನಾ
ವನಧಿಗಭಯವನಿತ್ತು ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ
ಮೊನೆಗಣೆಯ ತೂಗುತ್ತ ನರ ನಂ
ದನನ ರಥವನು ತರುಬಿ ನಿನ್ನಯ
ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ ॥19॥
೦೨೦ ಮಗುವು ನೀ ...{Loading}...
ಮಗುವು ನೀ ಕೆಡಬೇಡ ಹೋಗೆನು
ತಗಣಿತಾಸ್ತ್ರವ ಸುರಿವುತೈತರೆ
ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ
ಮಗುವು ತಾನಹೆ ತನ್ನ ಬಾಣಕೆ
ಮಗುವುತನ ಬೇರಿಲ್ಲ ನೋಡೆಂ
ದಗಲದಲಿ ಕೂರಂಬ ಸುರಿದನು ಪಾರ್ಥನಂದನನು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯು ನೀನು ಮಗು, ಅನ್ಯಾಯವಾಗಿ ಸಾಯಬೇಡ; ಯುದ್ಧವನ್ನು ಬಿಟ್ಟು ಹಿಂದಿರುಗು; “ಎನ್ನುತ್ತಾ ದುರ್ಯೋಧನನು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಬಾಣಗಳನ್ನು ಪ್ರಯೋಗಿಸುತ್ತ ಬರಲು, ಅಭಿಮನ್ಯುವು ನಗುತ್ತಾ ನಿಂತು ಕೌರವೇಶ್ವರನಿಗೆ, " ನಾನು ಮಗುವಾಗಿದ್ದೇನೆ. ಆದರೆ ನನ್ನ ಬಾಣಕ್ಕೆ ಮಗುತನವಿಲ್ಲ”, ಎನ್ನುತ್ತಾ ಚೂಪಾದ ಬಾಣಗಳನ್ನು ಅಪಾರ ಸಂಖ್ಯೆಯಲ್ಲಿ ದುರ್ಯೋಧನನ ಮೇಲೆ ಪ್ರಯೋಗಿಸಿದನು.
ಮೂಲ ...{Loading}...
ಮಗುವು ನೀ ಕೆಡಬೇಡ ಹೋಗೆನು
ತಗಣಿತಾಸ್ತ್ರವ ಸುರಿವುತೈತರೆ
ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ
ಮಗುವು ತಾನಹೆ ತನ್ನ ಬಾಣಕೆ
ಮಗುವುತನ ಬೇರಿಲ್ಲ ನೋಡೆಂ
ದಗಲದಲಿ ಕೂರಂಬ ಸುರಿದನು ಪಾರ್ಥನಂದನನು ॥20॥
೦೨೧ ಎಸಲು ಕಣೆ ...{Loading}...
ಎಸಲು ಕಣೆ ಮುಕ್ಕುರುಕಿದವು ಹೊಸ
ಮಸೆಯ ಧಾರೆಯ ತೋರ ಕಿಡಿಯಲಿ
ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು
ಬಸಿವ ರಕುತದ ಜರಿವ ಜೋಡಿನ
ನಸಿದ ಗರ್ವದ ನೆಗ್ಗಿದಾಳ್ತನ
ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯು ಬಿಟ್ಟ ಬಾಣಗಳು ದುರ್ಯೋಧನನನ್ನು ಮುತ್ತಿದುವು. ತಗುಲಿದವು, ಆಗ ತಾನೆ ಮಸೆದು ಚೂಪಾಗಿದ್ದ ಆ ಬಾಣಗಳ ಭಾರಿ ಕಿಡಿಗಳಲ್ಲಿ ಕೌರವನ ರಥವು ಮುಚ್ಚಿ ಹೋಯಿತು. ದೇಹದೊಳಗೆ ಬಾಣಗಳು ಹೊಕ್ಕವು. ಮೈಯಿಂದ ಬಸಿಯುತ್ತಿರುವ ರಕ್ತದ, ಜಾರುತ್ತಿರುವ ಕವಚದ, ಕುಗ್ಗಿದ ಗರ್ವದ, ಕುಗ್ಗಿದ ಶೌರ್ಯದ, ಒಣಗಿದ ಬಾಯಿನ ರಾಜನನ್ನು ದ್ರೋಣ ಕಂಡನು.
ಪದಾರ್ಥ (ಕ.ಗ.ಪ)
ಮುಕ್ಕುರುಕಿದವು-ಮುತ್ತಿಕೊಂಡವು. ನೆಗ್ಗಿದಾಳ್ತನ-ಕುಸಿದು ಹೋದ ದೇಹ; ಒಣಗಿಲ ಬಾಯ-ಒಣಗಿಹೋದ ಬಾಯಿಯ
ಮೂಲ ...{Loading}...
ಎಸಲು ಕಣೆ ಮುಕ್ಕುರುಕಿದವು ಹೊಸ
ಮಸೆಯ ಧಾರೆಯ ತೋರ ಕಿಡಿಯಲಿ
ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು
ಬಸಿವ ರಕುತದ ಜರಿವ ಜೋಡಿನ
ನಸಿದ ಗರ್ವದ ನೆಗ್ಗಿದಾಳ್ತನ
ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ ॥21॥
೦೨೨ ರಾಯ ಸಿಲುಕಿದನಕಟಕಟ ...{Loading}...
ರಾಯ ಸಿಲುಕಿದನಕಟಕಟ ರಾ
ಧೇಯ ನಡೆ ಕೃಪ ಹೋಗು ಮಗನೆ ನಿ
ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ
ರಾಯನನುಜರು ಕೈದುಗೊಳಿ ರಣ
ದಾಯ ತಪ್ಪಿತು ನೃಪತಿ ಮಾರಿಯ
ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಸಿಕ್ಕಿಕೊಂಡಿದ್ದಾನೆ. ಕರ್ಣನೇ, ನಡೆ, ಕೃಪಾಚಾರ್ಯನೆ ಹೋಗು, ಮಗನೇ (ಅಶ್ವತ್ಥಾಮನೇ) ನಿನ್ನ ಆಯುಧವನ್ನು ಕೈಗೆ ತೆಗೆದುಕೋ, ಶಲ್ಯ ತಡಮಾಡಬೇಡ ಏಳು, ಎಲೈ ಕೃತವರ್ಮನೆ, ಕೌರವನ ತಮ್ಮಂದಿರೇ, ಎಲ್ಲರೂ ಆಯುಧಗಳೊಡನೆ ಹೊರಡಿ, ಯುದ್ಧವು ನಮ್ಮ ಹಿಡಿತದಿಂದ ಜಾರುತ್ತಿದೆ. ರಾಜನಾದ ಕೌರವೇಶ್ವರನು ಮಾರಿಯ ಬಾಯಿಗೆ ತುತ್ತಾಗುತ್ತಿದ್ದಾನೆ. ಶಿವ ಶಿವಾ ಎಂದು ದ್ರೋಣ ಕೂಗಿದ.
ಮೂಲ ...{Loading}...
ರಾಯ ಸಿಲುಕಿದನಕಟಕಟ ರಾ
ಧೇಯ ನಡೆ ಕೃಪ ಹೋಗು ಮಗನೆ ನಿ
ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ
ರಾಯನನುಜರು ಕೈದುಗೊಳಿ ರಣ
ದಾಯ ತಪ್ಪಿತು ನೃಪತಿ ಮಾರಿಯ
ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ ॥22॥
೦೨೩ ಮಾತು ಹಿಞ್ಚಿತು ...{Loading}...
ಮಾತು ಹಿಂಚಿತು ಮುಂಚೆ ಸುಭಟ
ವ್ರಾತ ಹೊಕ್ಕುದು ಸಿಕ್ಕಿದರಸನ
ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ
ಸೋತೆವಾವ್ ನೀ ಗೆಲಿದೆ ಕರೆ ನಿ
ಮ್ಮಾತಗಳನೀ ಭ್ರೂಣಹತ್ಯಾ
ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ಮಾತುಗಳು ಮುಗಿಯುವ ಮುನ್ನವೇ ವೀರ ಸೈನಿಕರು ವೀರಾವೇಶದಿಂದ ಮುನ್ನುಗ್ಗಿದರು. ಅಭಿಮನ್ಯುವಿಗೆ ಸಿಕ್ಕಿಬಿದ್ದಿದ್ದ ದುರ್ಯೋಧನನ ಭೀತಿಯನ್ನು ಬಿಡಿಸಿದರು. ಸೈನಿಕರು ಬಾಣಗಳ ಮಳೆಯನ್ನು ಅಭಿಮನ್ಯುವಿನ ಮೇಲೆ ಸುರಿಸಿದರು, “ನಾವು ಸೋತೆವು, ನೀನೇ ಗೆದ್ದೆ, ಈಗ ನಿಮ್ಮವರುಗಳನ್ನು ಕರೆ. ನಾವು ಶಿಶು ಹತ್ಯಾ ಪಾತಕಕ್ಕಂಜುವೆವು” - ಎನ್ನುತ್ತಾ ದ್ರೋಣ ಯುದ್ಧವನ್ನು ಪ್ರಾರಂಭಿಸಿದ.
ಮೂಲ ...{Loading}...
ಮಾತು ಹಿಂಚಿತು ಮುಂಚೆ ಸುಭಟ
ವ್ರಾತ ಹೊಕ್ಕುದು ಸಿಕ್ಕಿದರಸನ
ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ
ಸೋತೆವಾವ್ ನೀ ಗೆಲಿದೆ ಕರೆ ನಿ
ಮ್ಮಾತಗಳನೀ ಭ್ರೂಣಹತ್ಯಾ
ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ ॥23॥
೦೨೪ ರಾಯನನು ತೊಲಗಿಸಿದರಾ ...{Loading}...
ರಾಯನನು ತೊಲಗಿಸಿದರಾ ಕ
ರ್ಣಾಯತಾಸ್ತ್ರರು ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭಟರಿಗೆ
ಸಾಯಕವ ಸರಿಗೊಳಿಸಿದರು ವ
ಜ್ರಾಯುಧನ ಮೊಮ್ಮನ ರಥವ ನಿ
ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನನ್ನು, ಅಭಿಮನ್ಯುವಿನ ಹಿಡಿತದಿಂದ ಬಿಡಿಸಿದರು. ರಾಹುವನ್ನು ಚಂದ್ರನಿಂದ ಬಿಡಿಸುವಷ್ಟು ಕಷ್ಟವಾಯಿತು. ಕಿವಿಯವರೆಗೂ ಬಿಲ್ಲಿನ ಹೆದೆಯನ್ನೆಳೆದು ನಿಂತ ಭಟರು ಬಿಲ್ಲನ್ನು ಸರಿಪಡಿಸಿಕೊಂಡರು. ಮಹಾರಥರು ವಜ್ರಾಯುಧನದ ಇಂದ್ರನ ಮೊಮ್ಮಗನಾದ ಅಭಿಮನ್ಯುವಿನ ರಥಕ್ಕೆ ದೃಢನಿಶ್ಚಯದಿಂದ ಮುತ್ತಿಗೆ ಹಾಕಿದರು.
ಪದಾರ್ಥ (ಕ.ಗ.ಪ)
ಕಟವಾಯ-ಬಾಯಿಯ ಎರಡು ತುದಿಗಳು, ಸಾಯಕ-ಬಾಣ, ವಜ್ರಾಯುಧ-ಇಂದ್ರು, ನಿರ್ದಾಯ-ನಿಶ್ಚಯ , ಕರ್ಣಾಯತಾಸ್ತ್ರರು-ಕಿವಿಯವರೆಗೂ ಬಿಲ್ಲಿನ ಹೆದೆಯೆಳೆದು ನಿಂತವರು.
ಮೂಲ ...{Loading}...
ರಾಯನನು ತೊಲಗಿಸಿದರಾ ಕ
ರ್ಣಾಯತಾಸ್ತ್ರರು ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭಟರಿಗೆ
ಸಾಯಕವ ಸರಿಗೊಳಿಸಿದರು ವ
ಜ್ರಾಯುಧನ ಮೊಮ್ಮನ ರಥವ ನಿ
ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು ॥24॥
೦೨೫ ಹಸುಳೆತನದಲಿ ಹರನ ...{Loading}...
ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳ್ ಎಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗುವಾಗಿರುವಾಗಲೇ ಶಿವನ ಮಗನಾದ ಕಾರ್ತಿಕೇಯನು ತಾರಕಾಸುರನೆಂಬ ಕೆಟ್ಟ ರಾಕ್ಷಸನನ್ನು ಸೀಳಿ ಬಿಸಾಡಲಿಲ್ಲವೆ ? ಪ್ರದ್ಯುಮ್ನನು ಮಗುವಾಗಿರುವಾಗಲೇ ಶಂಬರಾಸುರನನ್ನು ಸೋಲಿಸಲಿಲ್ಲವೆ ? ಅಭಿಮನ್ಯು ಬಾಲಕನೇ ? ಮಹಾ ವೀರಾಧಿವೀರರ ಸಮೂಹವನ್ನು ಒಂದೊಂದೇ ಏಟಿನಿಂದ ಉಸಿರು ಹೋಗುವ ಹಾಗೆ ಮಾಡಿದನೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ವಿಷಮ-ತೀಕ್ಷ್ಣ, ಪ್ರಸರ-ಗುಂಪು,
ಟಿಪ್ಪನೀ (ಕ.ಗ.ಪ)
ಹರನ ಮಗನಾ ವಿಷಮ ದೈತ್ಯನ…
ಪ್ರದ್ಯುಮ್ನ ಮುರಿಯನೆ…
ಮೂಲ ...{Loading}...
ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ ॥25॥
೦೨೬ ಗುರುಸುತನನೊಟ್ಟೈಸಿ ಶಲ್ಯನ ...{Loading}...
ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನನ್ನು ಮೂಲೆಗೆ ತಳ್ಳಿ, ಶಲ್ಯನ ಜಯದ ಭರವಸೆಯನ್ನು ನಿಲ್ಲಿಸಿ, ಕೃಪನ ಅತಿಶಯವಾದ ಗರ್ವವನ್ನು ಉತ್ಸಾಹವನ್ನು ಮುರಿದು, ಕೃತವರ್ಮನನ್ನು ನೋಯಿಸಿದ. ಕೌರವನ ಸೋದರರನ್ನು ಬಡಿದು, ಬಾಹ್ಲಿಕ, ಶಕುನಿ, ಸೋಮದತ್ತ ಮೊದಲಾದವರ ಶೌರ್ಯವನ್ನು ಹಾಳು ಮಾಡಿ ಬಾಲಕನಾದ ಅಭಿಮನ್ಯು ಒಬ್ಬನೇ ಮಹಾರಥರನ್ನು ಜಯಿಸಿದನು.
ಪದಾರ್ಥ (ಕ.ಗ.ಪ)
ಒಟ್ಟೈಸಿ-ಮೂಲೆಗೆತಳ್ಳಿ
ಮೂಲ ...{Loading}...
ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ॥26॥
೦೨೭ ಮುಳುಗಿದಮ್ಬಿನ ಮರುಮೊನೆಯ ...{Loading}...
ಮುಳುಗಿದಂಬಿನ ಮರುಮೊನೆಯ ಮೈ
ಗಳ ಮಹಾರಥರಾಜಿ ಕದನದ
ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ
ಬಿಲುದುಡುಕಿ ಸಾರಥಿಗೆ ಸೂಚಿಸಿ
ಮಲೆತ ನೋಡೈ ಮಗುವು ಫಡ ಫಡ
ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳಿಂದ ತುಂಬಿ ಹೋಗಿದ್ದ, ಬಾಣಗಳ ಹರಿತವಾದ ತುದಿಗಳು ಹೊರಗೆ ಕಾಣುತ್ತಿದ್ದ ಮಹಾರಥಿಕರ ಸಮೂಹವು ರಣರಂಗ ಸ್ಥಳವನ್ನು ಬಿಟ್ಟೋಡಲು, ಕರ್ಣನು ಕೋಪಗೊಂಡು, ತಿರುಗಿ ಓಡುವವರನ್ನು ಮೂದಲಿಸಿ, ಬಿಲ್ಲನ್ನು ತೆಗೆದುಕೊಂಡು, ಸಾರಥಿಗೆ ನಿರ್ದೇಶನ ನೀಡಿ, ಅವನೊಂದಿಗೆ ಮಗುವಾದ ಅಭಿಮನ್ಯುವು ಎಷ್ಟು ಕೊಬ್ಬಿದ್ದಾನೆ ನೋಡು - ಎಂದು ಹೇಳುತ್ತಾ “ಎಲೈ ಅಭಿಮನ್ಯುವೇ, ಯುದ್ಧರಂಗದಿಂದ ತೊಲಗು, ತೊಲಗು” ಎನ್ನುತ್ತಾ ಶತ್ರುವನ್ನು ಅಡ್ಡ ಹಾಕಿದ.
ಪದಾರ್ಥ (ಕ.ಗ.ಪ)
ಮೊನೆ-ತುದಿ, ರಾಜಿ-ಸಮೂಹ, ಖತಿ-ಕೋಪ, ಮುರಿದೋಡು-ಹಿಂದಕ್ಕೆ ಹೋಗು, ಬಿಲುದುಡುಕಿ-ಬಿಲ್ಲನ್ನು ಹಿಡಿದು, ಮಲೆತ-ಗರ್ವವನ್ನು ಹೊಂದಿದ, ತರುಬಿ-ಅಡ್ಡ ನಿಲ್ಲು
ಮೂಲ ...{Loading}...
ಮುಳುಗಿದಂಬಿನ ಮರುಮೊನೆಯ ಮೈ
ಗಳ ಮಹಾರಥರಾಜಿ ಕದನದ
ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ
ಬಿಲುದುಡುಕಿ ಸಾರಥಿಗೆ ಸೂಚಿಸಿ
ಮಲೆತ ನೋಡೈ ಮಗುವು ಫಡ ಫಡ
ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ ॥27॥
೦೨೮ ಗಾರುಗೆಡೆದರೆ ಮೆರೆಯದೋಲೆಯ ...{Loading}...
ಗಾರುಗೆಡೆದರೆ ಮೆರೆಯದೋಲೆಯ
ಕಾರತನವೆಮ್ಮೊಡನೆ ನೀ ಮೈ
ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು
ತೋರುವೆನು ಕೈಗುಣವನೆನುತೈ
ದಾರು ಶರದಲಿ ಕರ್ಣನೆದೆಯನು
ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧಿಕ್ಕರಿಸಿ ನುಡಿದರೆ ನಿನ್ನ ಶೌರ್ಯ ಮೆರೆಯುವುದಿಲ್ಲ. ನಮ್ಮೊಂದಿಗೆ ನೀನು ಎದುರು ಬಂದು ಹಿಂಜರಿಕೆಯಿಲ್ಲದೆ ಕಾದಾಡಿದರೆ ಸಫಲವಾಗುತ್ತದೆ. ನನ್ನ ಕೈಗುಣವನ್ನು ತೋರಿಸುತ್ತೇನೆ ಎಂದು ಐದಾರು ಬಾಣಗಳಲ್ಲಿ ಕರ್ಣನ ಎದೆಯನ್ನು ತೂತು ಮಾಡಲು ಅವನು ದೊಡ್ಡ ಗಾಯದಿಂದ ಬಳಲಿದ.
ಪದಾರ್ಥ (ಕ.ಗ.ಪ)
ಗಾರುಗೆಡೆ-ಧಿಕ್ಕರಿಸು , ಮಡಮುರಿವಿಲ್ಲದೆ-ಹಿಂಜರಿಯದೆ,
ಮೂಲ ...{Loading}...
ಗಾರುಗೆಡೆದರೆ ಮೆರೆಯದೋಲೆಯ
ಕಾರತನವೆಮ್ಮೊಡನೆ ನೀ ಮೈ
ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು
ತೋರುವೆನು ಕೈಗುಣವನೆನುತೈ
ದಾರು ಶರದಲಿ ಕರ್ಣನೆದೆಯನು
ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ ॥28॥
೦೨೯ ಬೆದರಿ ಭೂಕಮ್ಪದಲಿ ...{Loading}...
ಬೆದರಿ ಭೂಕಂಪದಲಿ ಕುಲಗಿರಿ
ಯದಿರುವಂತಿರೆ ಚರಿಸಿ ಕಾಯವ
ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ
ಕೆದರಿತೀ ಬಲವಕಟ ಕರ್ಣನ
ಸದೆದನೋ ಸಾಹಸಿಕ ಶಿಶು ಕಾ
ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಕಂಪದಿಂದ ಕುಲಪರ್ವತಗಳು ಹೆದರಿ ನಡುಗುವ ಹಾಗೆ ನಡುಗುತ್ತಾ, ಕಣ್ಣುಗಳು ಜೋಲಿ ಹೊಡೆಯುತ್ತಿರಲು ಕರ್ಣನು ಮೂರ್ಛೆ ಹೋದನು. ಆಗ ಕುರುಸೇನೆ ಚೆದುರಿ ಹೋಯಿತು. ಸೇನೆಯವರು ಕರ್ಣನನ್ನು ಸಾಹಸಿಗ ಬಾಲಕನು ಬಡಿದಿದ್ದಾನೆ. ನಾವು ಇವನೊಡನೆ ಇನ್ನು ಯುದ್ಧ ಮಾಡಿದ ಹಾಗೆಯೇ ಸರಿ ಎಂದುಕೊಳ್ಳುತ್ತಿರುವಾಗ ವೀರನಾದ ಶಲ್ಯನು ಅಭಿಮನ್ಯುವಿನೊಡನೆ ಯುದ್ಧ ಮಾಡಲು ಮುಂದೆ ಬಂದನು.
ಮೂಲ ...{Loading}...
ಬೆದರಿ ಭೂಕಂಪದಲಿ ಕುಲಗಿರಿ
ಯದಿರುವಂತಿರೆ ಚರಿಸಿ ಕಾಯವ
ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ
ಕೆದರಿತೀ ಬಲವಕಟ ಕರ್ಣನ
ಸದೆದನೋ ಸಾಹಸಿಕ ಶಿಶು ಕಾ
ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ ॥29॥
೦೩೦ ಬಾಲಕನೆ ಹಿಮ್ಮೆಟ್ಟು ...{Loading}...
ಬಾಲಕನೆ ಹಿಮ್ಮೆಟ್ಟು ಹಿಮ್ಮೆ
ಟ್ಟಾಳುತನವೆಮ್ಮೊಡನೆಯೇ ಮರು
ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ
ಮೇಲನರಿಯಾ ಶಲ್ಯನೊಡನೆಯು
ಕಾಳೆಗವೆ ನಿಮ್ಮಯ್ಯನಿಂದಿನ
ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಲಕನಾದ ಅಭಿಮನ್ಯುವೆ, ಹಿಂದಕ್ಕೆ ಹೋಗು, ನಿನ್ನ ಪರಾಕ್ರಮ ನನ್ನ ಮುಂದೆಯೆ ? ಕರ್ಣನನ್ನು ಸೋಲಿಸಿರುವ ಅಹಂಕಾರದಿಂದ ಉತ್ಸಾಹವನ್ನು ತಾಳಿ ಶಲ್ಯನೊಂದಿಗೆ ಯುದ್ಧವೆ ? ನನ್ನೊಡನೆ ಯುದ್ಧ ಮಾಡಿದರೆ ನಿನಗೆ ಜಯವಾಗದು. ನಿಮ್ಮ ತಂದೆಯ ಸಹಾಯವನ್ನು ತೆಗೆದುಕೊಳ್ಳುವ ಸ್ಥಿತಿ ನಿನಗೆ ಇಂದು ಉಂಟಾಗುತ್ತದೆ” ಎನ್ನುತ್ತಾ ಶಲ್ಯನು ಬಾಣಗಳ ಸುರಿಮಳೆ ಗೈದನು.
ಮೂಲ ...{Loading}...
ಬಾಲಕನೆ ಹಿಮ್ಮೆಟ್ಟು ಹಿಮ್ಮೆ
ಟ್ಟಾಳುತನವೆಮ್ಮೊಡನೆಯೇ ಮರು
ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ
ಮೇಲನರಿಯಾ ಶಲ್ಯನೊಡನೆಯು
ಕಾಳೆಗವೆ ನಿಮ್ಮಯ್ಯನಿಂದಿನ
ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ ॥30॥
೦೩೧ ಬಾಲತನವೇನೂಣಯವೆ ಕ ...{Loading}...
ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
31.” ಬಾಲಕತನ ಎಂಬುದು ಒಂದು ಕೊರತೆಯಲ್ಲ, ಕಟ್ಟಾಳುತನವೇ ರಾಜಕುಮಾರರಿಗೆ ಆಭರಣ. ಬ್ರಾಹ್ಮಣರಿಗೆ ವಿದ್ಯೆಯೇ ಅಲಂಕಾರ. ವೀರನ ಸಾಮಥ್ರ್ಯ ಎಂತಹದು ಎಂಬುದನ್ನು ನೀನೆತ್ತ ಬಲ್ಲೆ ? ಬಾಣಗಳ ಸಮೂಹದಿಂದ ನಿನ್ನ ಶಕ್ತಿಯನ್ನು ಮುಚ್ಚಿ ಹಾಕುವೆನು" ಎಂದು ಹೇಳುತ್ತಾ ಅಭಿಮನ್ಯು ಶಲ್ಯನ ಮೇಲೆ ಬಾಣಗಳನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಊಣಯ-ಕೊರತೆ, ಛಡಾಳತನ-ಅತಿಶಯತೆ, ಮುದ್ರಿಸು-ಮುಚ್ಚಿಹಾಕು
ಮೂಲ ...{Loading}...
ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು ॥31॥
೦೩೨ ಸರಳ ಸರಳಲಿ ...{Loading}...
ಸರಳ ಸರಳಲಿ ಕಡಿದು ಸವೆಯದೆ
ಸರಿ ಮಿಗಿಲ ಕಾದಿದರೆ ಶಲ್ಯನ
ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ
ಸರಳು ಹದಿನೈದರಲಿ ಶಲ್ಯನ
ಬರಿಯ ಕೆತ್ತಿದನೈದು ಬಾಣದೊ
ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಬಾಣಗಳನ್ನು, ಬಾಣಗಳಿಂದ ಕಡಿದು ಮುಗಿಸಲಾಗಲಿಲ್ಲ. ಸರಿಮಿಗಿಲಾಗಿ ಕಾದಿದರೂ, ಶಲ್ಯನ ಶೌರ್ಯವನ್ನು ನೋಡಿ ಅಭಿಮನ್ಯು ಕೋಪದಿಂದ ಹದಿನೈದು ಬಾಣಗಳಿಂದ ಅವನ ಪಕ್ಕೆಯನ್ನು ಕೆತ್ತಿದನು. ಐದು ಬಾಣಗಳಿಂದ ಎದೆಯನ್ನು ತೋಡಿದನು. ಮರುನಿಮಿಷದಲ್ಲಿ ಶಲ್ಯನು ಕುಸಿದು ಬಿದ್ದನು.
ಪದಾರ್ಥ (ಕ.ಗ.ಪ)
ಬರಿ-ಪಕ್ಕೆ, ಉರ-ಎದೆ. ಸೈಗೆಡೆದ-ಕುಸಿದು ಬಿದ್ದ.
ಮೂಲ ...{Loading}...
ಸರಳ ಸರಳಲಿ ಕಡಿದು ಸವೆಯದೆ
ಸರಿ ಮಿಗಿಲ ಕಾದಿದರೆ ಶಲ್ಯನ
ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ
ಸರಳು ಹದಿನೈದರಲಿ ಶಲ್ಯನ
ಬರಿಯ ಕೆತ್ತಿದನೈದು ಬಾಣದೊ
ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ ॥32॥
೦೩೩ ತಲೆ ತಿರುಗಿ ...{Loading}...
ತಲೆ ತಿರುಗಿ ತುಟಿಯೊಣಗಿ ಕಂಗಳ
ಬಳೆ ಮರಳಿ ಬಸವಳಿಯೆ ಸಾರಥಿ
ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ
ನಿಲುಕಿ ಕಂಡನು ಶಲ್ಯನನುಜನು
ಹಿಳುಕು ಹಿಳುಕಿನ ಮೇಲೆ ಸಂಧಿಸಿ
ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆತಿರುಗಿ, ತುಟಿಯು ಒಣಗಿ ಕಣ್ಣುಗಳ ರೆಪ್ಪೆ ಮುಚ್ಚಿ ಅಸಾಧ್ಯವಾದ ಆಯಾಸ ಹೊಂದಿ ಶಲ್ಯನು ದುಸ್ಥಿತಿಯಲ್ಲಿರುವುದನ್ನು ಗುರುತಿಸಿದ ಸಾರಥಿಯು ತಕ್ಷಣ ರಥವನ್ನು ಓಡಿಸಿದನು. ಶಲ್ಯನ ನೋವನ್ನು ಕಂಡ ಅವನ ಸೋದರನು ಅಭಿಮನ್ಯುವಿನ ಮೇಲೆ ಒಂದಾದ ಮೇಲೊಂದರಂತೆ ಬಾಣಗಳನ್ನು ಬಿಡುತ್ತಾ ಕೋಪಾತಿಶಯದಿಂದ ಹೋರಾಟವನ್ನಾರಂಭಿಸಿದನು.
ಪದಾರ್ಥ (ಕ.ಗ.ಪ)
ಬಸವಳಿ-ಆಯಾಸವನ್ನು ಹೊಂದು-ಮೂರ್ಛೆ ಹೋಗು
ಮೂಲ ...{Loading}...
ತಲೆ ತಿರುಗಿ ತುಟಿಯೊಣಗಿ ಕಂಗಳ
ಬಳೆ ಮರಳಿ ಬಸವಳಿಯೆ ಸಾರಥಿ
ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ
ನಿಲುಕಿ ಕಂಡನು ಶಲ್ಯನನುಜನು
ಹಿಳುಕು ಹಿಳುಕಿನ ಮೇಲೆ ಸಂಧಿಸಿ
ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ ॥33॥
೦೩೪ ಪೂತು ಶಲ್ಯನ ...{Loading}...
ಪೂತು ಶಲ್ಯನ ತಮ್ಮನೇ ಮಾ
ರಾಂತನಣ್ಣನ ಹರಿಬವನು ದಿಟ
ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ
ಆತನಂಬೈದಾರ ಮನ್ನಿಸಿ
ಸೋತವೊಲು ಮನಗೆಲವ ಮಾಡಿ ನಿ
ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೇ, ಶಲ್ಯನ ತಮ್ಮನೇ, ಅಣ್ಣನ ಹೊಣೆಯನ್ನು ತಾನು ಹೊತ್ತಿದ್ದಾನೆ. ನಿಜ. ಸೂತನೇ ನೋಡು, ಅವನು ಸಾಹಸಿಕನಾಗಿದ್ದಾನೆ.” ಎಂದು ಹೇಳುತ್ತಾ, ಅಭಿಮನ್ಯುವು ಶಲ್ಯನ ಸೋದರನ ಐದಾರು ಬಾಣಗಳ ಹೊಡೆತವನ್ನು ತಿಂದು ಸೋತಂತೆ ನಟಿಸಿದನು. ಇನ್ನೇನು ಅಭಿಮನ್ಯುವು ಸೋತನೆಂದು ಶಲ್ಯನ ಸೋದರನು ಉತ್ಸಾಹವನ್ನು ಹೊಂದಿದನು. ಆಗ ಅಭಿಮನ್ಯುವು ಹರಿತವಾದ ಬಾಣದೇಟಿನಿಂದ ಶಲ್ಯನ ಸೋದರನ ತಲೆಯನ್ನು ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಹರಿಬ-ಕೆಲಸ, ಮನಗೆಲವ-ಮನಸ್ಸಿನ ಉತ್ಸಾಹ , ಶರ-ಬಾಣ, ನಿಶಾತ-ಚೂಪಾದ
ಮೂಲ ...{Loading}...
ಪೂತು ಶಲ್ಯನ ತಮ್ಮನೇ ಮಾ
ರಾಂತನಣ್ಣನ ಹರಿಬವನು ದಿಟ
ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ
ಆತನಂಬೈದಾರ ಮನ್ನಿಸಿ
ಸೋತವೊಲು ಮನಗೆಲವ ಮಾಡಿ ನಿ
ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ ॥34॥
೦೩೫ ದೊರೆ ಮಡಿಯೆ ...{Loading}...
ದೊರೆ ಮಡಿಯೆ ಮಾದ್ರಾನುಜನ ಬಲ
ತಿರುಗಿತಭಿಮನ್ಯುವಿನ ಹೊಯ್ಲಲಿ
ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನುತ ಭರದಲಿ
ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಸೋದರನು ಸತ್ತುಹೋದ ತಕ್ಷಣ ಶಲ್ಯನ ಸೈನ್ಯ ರಣರಂಗದಿಂದ ಹಿಂದಿರುಗಿತು. “ಅಭಿಮನ್ಯುವಿನ ಏಟುಗಳಿಂದ ಹೆದರಿ ಹೆಸರಾಂತ ನಾಯಕರು ದುಃಖಿತರಾಗಿ ಧೈರ್ಯಗೆಟ್ಟರು. ಇದಕ್ಕೆ ಪರಿಹಾರವನ್ನು ನಾನು ಕಾಣೆ. ಇನ್ನು ಈ ಸೈನ್ಯಕ್ಕೆ ಇನ್ನೇನು ಗತಿ” ಎಂದು ಚಿಂತಿಸುತ್ತಾ ದ್ರೋಣ ಕೂಡಲೇ ಕೃಪಾಚಾರ್ಯನನ್ನು ಕರೆದು ಸೈನ್ಯದ ಸ್ಥಿತಿಯನ್ನು ತೋರಿಸಿದ.
ಪದಾರ್ಥ (ಕ.ಗ.ಪ)
ಹೊಯ್ಲಲಿ-ಏಟುಗಳಿಂದ, ಹುರುಳುಗೆಟ್ಟುದು-ಸತ್ವಹೀನವಾಯಿತು, ತರಹರ-ಪರಿಹರ, ಉಪಾಯ,
ಮೂಲ ...{Loading}...
ದೊರೆ ಮಡಿಯೆ ಮಾದ್ರಾನುಜನ ಬಲ
ತಿರುಗಿತಭಿಮನ್ಯುವಿನ ಹೊಯ್ಲಲಿ
ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನುತ ಭರದಲಿ
ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ ॥35॥
೦೩೬ ಮಗುವೆ ನೋಡಭಿಮನ್ಯು ...{Loading}...
ಮಗುವೆ ನೋಡಭಿಮನ್ಯು ನಮಗಿದು
ಹೊಗುವಡಳವೇ ಕಾಲರುದ್ರನ
ತಗಹು ಬಿಟ್ಟಂತಿದೆ ಕುಮಾರನ ಕೋಪದಾಟೋಪ
ಮೊಗಸಲರಿದು ಭುಜಪ್ರತಾಪದ
ಹೊಗರು ಹೊಸಪರಿಯೆನುತ ರಿಪುಗಳ
ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯುವನ್ನು ಯಾರು ತಾನೆ ಮಗು ಎಂದು ಕರೆಯಬಹುದು ? ನಮಗೆ ಇವನನ್ನು ಎದುರಿಸಿ ಯುದ್ಧ ಮಾಡಲು ಸಾಧ್ಯವಿಲ್ಲ. ಅಭಿಮನ್ಯುವಿನ ಕೋಪದ ಆವೇಶ ಶಿವನ ಕೋಪಾವೇಶಕ್ಕೆ ಇದ್ದ ತಡೆಯನ್ನು ತೆಗೆದುಬಿಟ್ಟ ಹಾಗಾಗಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಇವನ ಭುಜ ಪ್ರತಾಪದ ಹುರುಪು, ಹೊಸ ರೀತಿಯದಾಗಿದೆ.” ಎಂದು ದ್ರೋಣನು ಶತ್ರುವಾದ ಅಭಿಮನ್ಯುವನ್ನು ಹೊಗಳುತ್ತಿರುವುದನ್ನು ಕೌರವೇಶ್ವರನು ಕೇಳಿಸಿಕೊಂಡನು.
ಪದಾರ್ಥ (ಕ.ಗ.ಪ)
ತಗಹು-ತಡೆ, ಮೊಗಸಲು-ಎದುರಿಸಲು, ಅರಿದು-ಅಸಾಧ್ಯ,
ಮೂಲ ...{Loading}...
ಮಗುವೆ ನೋಡಭಿಮನ್ಯು ನಮಗಿದು
ಹೊಗುವಡಳವೇ ಕಾಲರುದ್ರನ
ತಗಹು ಬಿಟ್ಟಂತಿದೆ ಕುಮಾರನ ಕೋಪದಾಟೋಪ
ಮೊಗಸಲರಿದು ಭುಜಪ್ರತಾಪದ
ಹೊಗರು ಹೊಸಪರಿಯೆನುತ ರಿಪುಗಳ
ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ ॥36॥
೦೩೭ ಕೇಳುತಿರ್ದೈ ಕರ್ಣ ...{Loading}...
ಕೇಳುತಿರ್ದೈ ಕರ್ಣ ಸಲೆ ನ
ಮ್ಮಾಳ ಬೆದರಿಸಿ ನುಡಿದು ರಿಪು ಭಟ
ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು
ಖೂಳರೆಂಬೆವೆ ಗುರುಗಳಿಂದು ವಿ
ಶಾಲಮತಿಗಳು ತಮ್ಮ ಭಾಗ್ಯದ
ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೇಳುತ್ತಿದ್ದೀಯಾ ಕರ್ಣ ! ನಮ್ಮ ಸೈನಿಕರು ಬೆದರುವಂತೆ ಮಾತನಾಡಿ ಶತ್ರುಭಟನಾದ ಅಭಿಮನ್ಯುವನ್ನು ಹೊಗಳಿ (ಏರಿಸಿ) ಮಾತನಾಡುವ ಈ ಬಾಹಿರರನ್ನು (ದ್ರೋಣರನ್ನು) ಏನು ಹೇಳಲಿ ? ಅವರನ್ನು ಅಯೋಗ್ಯರೆನ್ನೋಣವೇ ಅವರು ಇಂದು ವಿಶಾಲಮತಿಗಳು ! ನಮ್ಮ ಭಾಗ್ಯದ ವಿರುದ್ಧವಾಗಿ ದೈವವನ್ನು ಬೈದು ಫಲವೇನು?” ಎನ್ನುತ್ತ ದುರ್ಯೋಧನ ನಿಟ್ಟುಸಿರು ಬಿಟ್ಟ.
ಪದಾರ್ಥ (ಕ.ಗ.ಪ)
ಸಲೆ-ಚೆನ್ನಾಗಿ, ಏರಿಸಿ-ಹೊಗಳಿ
ಮೂಲ ...{Loading}...
ಕೇಳುತಿರ್ದೈ ಕರ್ಣ ಸಲೆ ನ
ಮ್ಮಾಳ ಬೆದರಿಸಿ ನುಡಿದು ರಿಪು ಭಟ
ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು
ಖೂಳರೆಂಬೆವೆ ಗುರುಗಳಿಂದು ವಿ
ಶಾಲಮತಿಗಳು ತಮ್ಮ ಭಾಗ್ಯದ
ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ ॥37॥
೦೩೮ ವೀರರಙ್ಗವನೆತ್ತ ಬಲ್ಲರು ...{Loading}...
ವೀರರಂಗವನೆತ್ತ ಬಲ್ಲರು
ಹಾರುವರು ಬೆಳದಿಂಗಳಿನ ಬಿರು
ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು
ವೈರಿಭಟನಿವ ಮಗುವಲಾ ಮನ
ವಾರೆ ಕಾದಲು ಲಕ್ಷ್ಯವಿಲ್ಲೀ
ಯೂರುಗರ ಬೈದೇನು ಫಲವೆಂದರಸ ಹೊರವಂಟ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರು ವೀರರ ರೀತಿಯನ್ನೇನು ಬಲ್ಲರು? ಬೆಳುದಿಂಗಳಿನ ಬಿರುಸು ಯಾರನ್ನು ತಾನೆ ಸುಡಲು ಸಾಧ್ಯ ? ಆಯುಧವನ್ನು ಹಿಡಿದಾಕ್ಷಣ ಬ್ರಾಹ್ಮಣರು ವೀರರೆನಿಸಿಕೊಳ್ಳಲು ಸಾಧ್ಯವಿಲ್ಲ. ಶತ್ರುವೀರನು ಬಾಲಕನಲ್ಲವೇ. ಹಾಗಾಗಿ ಅವರಿಗೆ ಮನಸ್ಸಿಟ್ಟು ಯುದ್ಧ ಮಾಡಲು ಗಮನವಿಲ್ಲ ! ಈ ಅಪ್ರಯೋಜಕರನ್ನು (ದ್ರೋಣರನ್ನು) ಬೈದು ಫಲವೇನು - ಎನ್ನುತ್ತಾ ದುರ್ಯೋಧನ ಅಲ್ಲಿಂದ ಹೊರಟು ಹೋದ.
ಪದಾರ್ಥ (ಕ.ಗ.ಪ)
ವೀರರಂಗ-ವೀರರ ರೀತಿ, ಊರುಗರ-ಬೇರೆ ಬೇರೆಯವರನ್ನು, ಅಪ್ರಯೋಜಕರನ್ನು
ಮೂಲ ...{Loading}...
ವೀರರಂಗವನೆತ್ತ ಬಲ್ಲರು
ಹಾರುವರು ಬೆಳದಿಂಗಳಿನ ಬಿರು
ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು
ವೈರಿಭಟನಿವ ಮಗುವಲಾ ಮನ
ವಾರೆ ಕಾದಲು ಲಕ್ಷ್ಯವಿಲ್ಲೀ
ಯೂರುಗರ ಬೈದೇನು ಫಲವೆಂದರಸ ಹೊರವಂಟ ॥38॥
೦೩೯ ಎನಲು ದುಶ್ಯಾಸನನು ...{Loading}...
ಎನಲು ದುಶ್ಯಾಸನನು ರಾಯನು
ಕನಲಿದನು ಖತಿಯೇಕೆ ಜೀಯಿಂ
ದೆನೆಗೆ ಬೆಸಸಾ ಸಾಕು ಭಂಡರ ಬೈದು ಫಲವೇನು
ದಿನಪ ದೀವಿಗೆಯಾಗಲುಳಿದೀ
ಬಿನುಗು ಬೆಳಗಿನ ಹಂಗು ಬೇಹುದೆ
ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಹಾಗೆನ್ನಲು ದುಃಶ್ಶಾಸನನು ಕೋಪಗೊಂಡ. ಕೋಪವೇಕೆ ಜೀಯಾ ! ಇಂದು ನನಗೆ ಅಪ್ಪಣೆಕೊಡು ಸಾಕು. ಈ ಭಂಡರನ್ನು (ದ್ರೋಣಾದಿಗಳನ್ನು) ಬೈದು ಪ್ರಯೋಜನವೇನು. ಸೂರ್ಯನೇ ದೀಪವಾದಾಗ , ಈ ನಿಷ್ಪ್ರಯೋಜಕವಾದ ಕ್ಷುದ್ರ ಬೆಳಕಿನ ಹಂಗು ಬೇಕಾಗುವುದೇ. (ನಾನು ಸೂರ್ಯನಂತಿರಬೇಕಾದರೆ ದ್ರೋಣಾದಿಗಳೆಂಬ ಈ ಸಾಮಾನ್ಯ ಬೆಳಕು ಏಕೆ ಬೇಕು) ರಾಕ್ಷಸರ ದೇವತೆಗಳ ಸೈನ್ಯದೊಳಕ್ಕೆ ಬೇಕಾದರೂ ನನ್ನನ್ನು ಬಿಟ್ಟು ನೋಡು - ಎಂದು ದುಃಶ್ಶಾಸನ ಹೇಳಿದ.
ಮೂಲ ...{Loading}...
ಎನಲು ದುಶ್ಯಾಸನನು ರಾಯನು
ಕನಲಿದನು ಖತಿಯೇಕೆ ಜೀಯಿಂ
ದೆನೆಗೆ ಬೆಸಸಾ ಸಾಕು ಭಂಡರ ಬೈದು ಫಲವೇನು
ದಿನಪ ದೀವಿಗೆಯಾಗಲುಳಿದೀ
ಬಿನುಗು ಬೆಳಗಿನ ಹಂಗು ಬೇಹುದೆ
ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ ॥39॥
೦೪೦ ತಳಿತುದೆಡಬಲವಙ್ಕದಲಿ ಹೆ ...{Loading}...
ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙÂ್ತಯ
ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನ ಎಡ-ಬಲ ಭಾಗಗಳಲ್ಲಿ ಮಹಾಸೇನೆ ಸೇರಿತು. ಸಿಡಿಲಿನಂತೆ ಆರ್ಭಟಿಸುವ ಭೇರಿಗಳ ಶಬ್ದವನ್ನು ಇತರ ವಾದ್ಯಗಳ ಘುಳು-ಘುಳು ಶಬ್ದವು ಸೇರಿಕೊಳ್ಳಲು ಉಂಟಾದ ಶಬ್ದವು ಬ್ರಹ್ಮಾಂಡವನ್ನೇ ಜಾಡಿಸಿತು. ಬಾವುಟಗಳ, ಚಾಮರಗಳ ಶುಭ್ರವಾದ ಛತ್ರಗಳ ಸಾಲುಗಳ ಸಮೂಹದಲ್ಲಿ ಆಕಾಶವೇ ಮುಚ್ಚಿ ಹೋದಂತಾಗಿ ಸೈನ್ಯವು ಶತ್ರುವೀರನಾದ ಅಭಿಮನ್ಯುವನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ತಳಿತುದು-ತುಂಬಿಕೊಂಡಿತು, ಅಂಕ-ಭಾಗ, ಹೆಬ್ಬಲ-ದೊಡ್ಡ ಸೇನೆ, ಛಡಾಳಿಸಿ-ಉಗ್ರವಾಗಿ
ಮೂಲ ...{Loading}...
ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙÂ್ತಯ
ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ ॥40॥
೦೪೧ ತಿರುಹು ತೇಜಿಯನಿತ್ತಲಿವದಿರ ...{Loading}...
ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಥದ ಕುದುರೆಗಳನ್ನು ಇತ್ತ ತಿರುಗಿಸು. ಮೊದಲು ಇವರನ್ನು ಸವರಿ ಹಾಕಿ ಈ ದುಶ್ಶಾಸನನ ಕರುಳನ್ನು ಬೆನ್ನ ಕಡೆಯಿಂದ ತೆಗೆಯುತ್ತೇನೆ ; ನೀನು ಬೆಚ್ಚ ಬೇಡ” ಎಂದು ಅಭಿಮನ್ಯು ಸಾರಥಿಗೆ ಹೇಳಿದನು. ಅರಗಿನ ರಾಜನ ಮನೆಯ ಬಾಗಿಲಿನಲ್ಲಿ ದಳ್ಳುರಿಯ ಪ್ರವೇಶಕ್ಕೆ ತಡವೇ ! ದುಃಶ್ಶಾಸನನ ಸೈನ್ಯದೊಳಗೆ ಹೊಕ್ಕು ಒಂದು ನಿಮಿಷದಲ್ಲಿ ಅವನ ಚತುರಂಗ ಬಲವನ್ನು ಅಭಿಮನ್ಯುವು ಒರೆಸಿ ಹಾಕಿದನು.
ಪದಾರ್ಥ (ಕ.ಗ.ಪ)
ತೇಜಿ-ಕುದುರೆ, ಒರಸಿ-ಕೊಂದು,
ಮೂಲ ...{Loading}...
ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ ॥41॥
೦೪೨ ಎಲವೊ ಕೌರವ ...{Loading}...
ಎಲವೊ ಕೌರವ ಕೊಬ್ಬಿ ನರಿ ಹೆ
ಬ್ಬುಲಿಯ ಕೂಸನು ಬೇಡುವಂದದಿ
ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ
ಮಲೆತು ನೀನೆನ್ನೊಡನೆ ರಣದಲಿ
ಹಳಚಿ ನೀ ತಲೆವೆರಸಿ ಮರಳಿದ
ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಕೌರವನೇ, ನರಿಯು ಕೊಬ್ಬಿ ದೊಡ್ಡ ಹುಲಿಯ ಮರಿಯನ್ನು ಬಯಸಿದ ಹಾಗೆ ಅಧಮರು ಶಕ್ತಿಯನ್ನರಿಯದೆ, ರಥಿಕರೊಂದಿಗೆ ಯುದ್ಧಕ್ಕೆ ತೊಡಗುವುದೆ ! ನೀನು ಕೊಬ್ಬಿ ನನ್ನೊಂದಿಗೆ ಯುದ್ಧದಲ್ಲಿ ಹೋರಾಡಿ ತಲೆ ಉಳಿಸಿಕೊಂಡು ಹಿಂದಿರುಗಿದರೆ ನನ್ನ ಆಯುಧವನ್ನು ಕೆಳಗೆ ಹಾಕುತ್ತೇನೆ. ನಂತರ ನನಗೆ ಶಸ್ತ್ರ ಸನ್ಯಾಸ” ಎಂದು ಅಭಿಮನ್ಯು ಘೋಷಿಸಿದನು.
ಪದಾರ್ಥ (ಕ.ಗ.ಪ)
ಹೆಬ್ಬುಲಿ-ದೊಡ್ಡ ಹುಲಿ, ತೊಡಕು-ಎದುರಿಸು, ಮಲೆತು-ಕೊಬ್ಬಿ, ಹಳಚಿ-ಹೋರಾಡಿ, ತಲೆವೆರಸಿ-ಬದುಕಿ, ಶರಸನ್ಯಾಸ-ಶಸ್ತ್ರಾಸ್ತ್ರ ಹಿಡಿಯದಿರುವ ವ್ರತ,
ಮೂಲ ...{Loading}...
ಎಲವೊ ಕೌರವ ಕೊಬ್ಬಿ ನರಿ ಹೆ
ಬ್ಬುಲಿಯ ಕೂಸನು ಬೇಡುವಂದದಿ
ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ
ಮಲೆತು ನೀನೆನ್ನೊಡನೆ ರಣದಲಿ
ಹಳಚಿ ನೀ ತಲೆವೆರಸಿ ಮರಳಿದ
ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ ॥42॥
೦೪೩ ಸಾಕು ತರುವಲಿತನದ ...{Loading}...
ಸಾಕು ತರುವಲಿತನದ ಮಾತುಗ
ಳೇಕೆ ಗರುವರ ಮುಂದೆ ವೀರೋ
ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ
ಆ ಕಿರೀಟಿ ವೃಕೋದರರು ಮೈ
ಸೋಕಿದರೆ ಸಂತೋಷ ನೀನವಿ
ವೇಕಿ ಬಾಲಕನೇನ ಮಾಡುವೆನೆಂದನವ ನಗುತ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಕು ! ಹುಡುಗುತನದ ಮಾತುಗಳೇಕೆ, ವೀರರಾದ ಹಿರಿಯರ ಮುಂದೆ ವೀರನೆಂಬ ಉದ್ರೇಕದಿಂದ ಮೈ ಮರೆತು ಬಲಹೀನರನ್ನು ಹೊಡೆದರೆ ಏನಾಯಿತು? (ಇಂತಹ ಮಾತುಗಳೇಕೆ) ಅರ್ಜುನ, ಭೀಮಾದಿಗಳು ಬಂದು ಯುದ್ಧ ಮಾಡಿದರೆ ಸಂತೋಷ ಪಡಬಹುದು. ನೀನು ಅವಿವೇಕಿ; ಬಾಲಕ, ನಿನ್ನನ್ನು ಏನು ಮಾಡಲಿ ಎಂದು ದುಶ್ಶಾಸನನು ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ತರುವಲಿತನದ-ಬಾಲ್ಯದ, ಗರುವರು-ವೀರರು, ಹೊಟ್ಟುಗ-ಬಲಹೀನ, ಕಿರೀಟಿ-ಅರ್ಜುನ, ವೃಕೋದರ-ಭೀಮ
ಮೂಲ ...{Loading}...
ಸಾಕು ತರುವಲಿತನದ ಮಾತುಗ
ಳೇಕೆ ಗರುವರ ಮುಂದೆ ವೀರೋ
ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ
ಆ ಕಿರೀಟಿ ವೃಕೋದರರು ಮೈ
ಸೋಕಿದರೆ ಸಂತೋಷ ನೀನವಿ
ವೇಕಿ ಬಾಲಕನೇನ ಮಾಡುವೆನೆಂದನವ ನಗುತ ॥43॥
೦೪೪ ಕೊಳಚೆ ನೀರೊಳಗಾಳುತೇಳುತ ...{Loading}...
ಕೊಳಚೆ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೊಳಚೆ ನೀರಿನಲ್ಲಿ ಮುಳುಗುತ್ತಾ, ಏಳುತ್ತಾ, ಸಮುದ್ರವನ್ನು ಕಾಲು ಹೊಳೆ ಎನ್ನುವ ಭಂಡರ ಜೊತೆ ಕೋಪ ಮಾಡಿಕೊಂಡರೆ ಪ್ರಯೋಜನವಿಲ್ಲ. ಮೊದಲು ನೀನು ನನ್ನನ್ನು ಗೆದ್ದು ಅನಂತರ ಭೀಮಾರ್ಜುನರೊಡನೆ ಯುದ್ಧ ಮಾಡುವ ಬಯಕೆಯನ್ನು ತೋರು. ಎಲೆ ಮರುಳು ದುಶ್ಶಾಸನ, ನಿನ್ನ ದೇಹವನ್ನು ಸೀಳಿ ನಿನ್ನ ತಿಳಿಯಾದ ರಕ್ತದಲ್ಲಿ ನನ್ನ ತಾಯಿಯ ಕೇಶರಾಶಿಯನ್ನು ನಾದಿಸುತ್ತೇನೆ.” ಎಂದು ಅಭಿಮನ್ಯು ದುಶ್ಶಾಸನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಆಳುತ-ಮುಳುಗುತ್ತಾ, ಕಾಲ್ವೊಳೆ-ಕಾಲುಮುಳುಗುವಷ್ಟು ನೀರಿರುವ ನದಿ,
ಮೂಲ ...{Loading}...
ಕೊಳಚೆ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ ॥44॥
೦೪೫ ಕಾತರಿಸದಿರು ಬಾಲ ...{Loading}...
ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಿಲು ವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯುವೆ, ನೀನು ಕಾತರವನ್ನು ಹೊಂದಬೇಡ. ಬಾಲಭಾಷೆಗಳನ್ನಾಡುವುದರಿಂದ ಫಲವಿಲ್ಲ. ನೀನು ಬಿಲ್ಲು ವಿದ್ಯೆಯನ್ನು ಚೆನ್ನಾಗಿ ಕಲಿತಿದ್ದರೆ ನನ್ನೊಡನೆ ನಿನ್ನ ಕೈಚಳಕವನ್ನು ತೋರಿಸು. ಭಯವನ್ನು ಹೊಂದಿದ ಸಾಮಾನ್ಯ ಸೈನಿಕರನ್ನು ಸೋಲಿಸಿದ ಮದವನ್ನು ಮೆರೆಯುವ ಸ್ಥಳ ಇದಲ್ಲ” ಎಂದು ಹೇಳುತ್ತಾ ದುಶ್ಶಾಸನನು ನೂರು ಬಾಣಗಳನ್ನು ಇಂದ್ರನ ಮೊಮ್ಮಗನಾದ ಅಭಿಮನ್ಯುವಿನ ಮೇಲೆ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಕೈಗುಣ-ಕೈ ಚಳಕ, ಹೊಳ್ಳುಗಳೆ-ಸೋಲಿಸು,
ಮೂಲ ...{Loading}...
ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಿಲು ವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ ॥45॥
೦೪೬ ಬಿಲ್ಲ ಹಿಡಿಯಲು ...{Loading}...
ಬಿಲ್ಲ ಹಿಡಿಯಲು ಕೌರವಾನುಜ
ಬಲ್ಲ ನೋಡೈ ಸೂತ ಮಿಗೆ ತ
ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ
ನಿಲ್ಲು ನಿಲ್ಲಾದರೆಯೆನುತ ಬಲು
ಬಿಲ್ಲನುಗುಳಿಸಿದನು ಶರೌಘವ
ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಓಹೋ, ಕೌರವನ ತಮ್ಮನಾದ ದುಶ್ಶಾಸನನಿಗೆ ಬಿಲ್ಲನ್ನು ಹಿಡಿಯಲು ಬರುತ್ತದೆ. ಅಷ್ಟೇ ಅಲ್ಲ ಎಲ್ಲ ಬಾಣಗಳು ಸರಿಯಾಗಿ ಗುರಿಯ ಸಮೀಪದಲ್ಲಿಯೇ ಬೀಳುತ್ತಿವೆ. ತಪ್ಪಿಲ್ಲ ನೋಡು ಸೂತ ! ಆದರೇನು ನಿಲ್ಲು ನಿಲ್ಲು ಎನ್ನುತ್ತಾ ಭಾರಿ ಬಿಲ್ಲಿನಿಂದ ಬಾಣಗಳ ರಾಶಿಯನ್ನು ಉಗುಳಿಸಿದನು, ಆಕಾಶ , ದಿಕ್ಕುಗಳೆಲ್ಲಿವೆ ಎಂಬುದು ತಿಳಿಯದಂತೆ ಅಭಿಮನ್ಯುವಿನ ಬಾಣಗಳು ಎಲ್ಲೆಡೆ ತುಂಬಿ ಹೋದುವು.
ಮೂಲ ...{Loading}...
ಬಿಲ್ಲ ಹಿಡಿಯಲು ಕೌರವಾನುಜ
ಬಲ್ಲ ನೋಡೈ ಸೂತ ಮಿಗೆ ತ
ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ
ನಿಲ್ಲು ನಿಲ್ಲಾದರೆಯೆನುತ ಬಲು
ಬಿಲ್ಲನುಗುಳಿಸಿದನು ಶರೌಘವ
ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು ॥46॥
೦೪೭ ಅವನ ನೂರಮ್ಬುಗಳ ...{Loading}...
ಅವನ ನೂರಂಬುಗಳ ಕಡಿದವ
ನವಯವವ ಕೀಲಿಸಿದಡಾಕ್ಷಣ
ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ
ಅವಗಡಿಸಿ ಖಾತಿಯಲಿ ಖಳ ಶರ
ನಿವಹವನು ತುಡುಕಿದನು ಕೊಡಹಿದ
ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ದುಶ್ಶಾಸನನು ಬಿಟ್ಟ ನೂರು ಬಾಣಗಳನ್ನು ಕತ್ತರಿಸಿ ಅವನ ಅವಯವಗಳನ್ನು ಹೊಗಿಸಲು ಅವನ ಕಿಬ್ಬದಿಯಿಂದ ಕರುಳುಗಳು ಕತ್ತರಿಸಿ ಬಿದ್ದವು. ತನ್ನ ಬಾಣಗಳಿಂದ ಆಗ ದುಶ್ಶಾಸನನು ಅಭಿಮನ್ಯುವನ್ನು ಕಡೆಗಣಿಸಿ ಕೋಪವನ್ನು ಮಾಡಿಕೊಂಡು ಬಾಣಗಳನ್ನು ಕೈಗೆ ತೆಗೆದುಕೊಂಡು ಪ್ರಯೋಗಿಸಿದಾಗ ಮರು ನಿಮಿಷದಲ್ಲಿ ಅಭಿಮನ್ಯುವಿನ ಅಸಂಖ್ಯಾತವಾದ ಬಾಣಗಳು ದುಶ್ಶಾಸನನ ಬಾಣಗಳನ್ನು ಕೊಡಹಿದವು.
ಪದಾರ್ಥ (ಕ.ಗ.ಪ)
ಕೀಲಿಸಿದಡೆ- ಹೊಕ್ಕಾಗ , ಅವಗಡಿಸಿ-ನಿರ್ಲಕ್ಷಿಸಿ,
ಮೂಲ ...{Loading}...
ಅವನ ನೂರಂಬುಗಳ ಕಡಿದವ
ನವಯವವ ಕೀಲಿಸಿದಡಾಕ್ಷಣ
ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ
ಅವಗಡಿಸಿ ಖಾತಿಯಲಿ ಖಳ ಶರ
ನಿವಹವನು ತುಡುಕಿದನು ಕೊಡಹಿದ
ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು ॥47॥
೦೪೮ ತಾಯ ತುರುಬಿಗೆ ...{Loading}...
ತಾಯ ತುರುಬಿಗೆ ಹಾಯ್ದ ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿಯ ತುರುಬಿಗೆ (ಜಡೆಗೆ) ಕೈ ಹಾಕಿದ ಪಾಪಿ ನಾಯಿ ! ಇವನ ದೇಹವನ್ನು ಹಿಡಿದು ಆಡಿಸಬೇಕಾದರೆ ಇವನ ಕೊಬ್ಬಿದ ದೇಹವನ್ನು ಕತ್ತರಿಸಿ ರಕ್ತದ ನೊರೆಯನ್ನು ಬಾಚಿ ನಮ್ಮ ತಾಯಿಯಾದ ದ್ರೌಪದಿಯನ್ನು ಕರೆಸುತ್ತೇನೆಂದು ಕಮಲದಳದಂತೆ ಮನೋಹರವಾದ ವಿಶಾಲವಾದ ಕಣ್ಣುಗಳನ್ನು ಹೊಂದಿದ್ದ ಕೃಷ್ಣನ ಸೋದರಳಿಯನಾದ ಅಭಿಮನ್ಯು ಹೋಲಿಕೆಗೆ ದೊರಕದಂತಹ ಶ್ರೇಷ್ಠ ಬಾಣವನ್ನು ಬಿಲ್ಲಿಗೆ ಹೂಡಿದ ಮೇಲೆ ಮನಸ್ಸಿನಲ್ಲಿ ಆಲೋಚಿಸಿದನು.
ಪದಾರ್ಥ (ಕ.ಗ.ಪ)
ಕದುಕಿರಿದು-ಚುಚ್ಚಿ, ಕಮಲದಳಾಯತಾಂಬಕ-ಕಮಲದಂತೆ ವಿಶಾಲವಾದ ಕಣ್ಣುಳ್ಳವನು-ಕೃಷ್ಣ,
ಮೂಲ ...{Loading}...
ತಾಯ ತುರುಬಿಗೆ ಹಾಯ್ದ ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ ॥48॥
೦೪೯ ಇವನ ಕೊನ್ದರೆ ...{Loading}...
ಇವನ ಕೊಂದರೆ ತಂದೆ ಮಿಗೆ ಮೆ
ಚ್ಚುವನೊ ಮುನಿವನೊ ತನ್ನ ನುಡಿ ಸಂ
ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು
ಇವನ ತಾನೇ ಕೊಲಲಿ ನಮಗಿ
ನ್ನಿವನ ತೊಡಕೇ ಬೇಡ ಕದನದೊ
ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದುಶ್ಶಾಸನನನ್ನು ಕೊಂದರೆ ತಂದೆಯಾದ ಭೀಮನು ಸಂತೋಷ ಪಡುವನೊ ? ಅಥವಾ ಕೋಪಿಸಿಕೊಳ್ಳುವನೊ ? ತಾನು ದುಶ್ಶಾಸನನನ್ನು ಕೊಲ್ಲುತ್ತೇನೆಂದು ಮಾಡಿದ ಪ್ರತಿಜ್ಞೆಯನ್ನು ನೆರವೇರಿಸಲು ಸಾಧ್ಯವಾಗಲಿಲ್ಲವೆಂದು ಅಸಮಾಧಾನವನ್ನು ಹೊಂದುವನೊ? ಭೀಮನ ಪ್ರತಿಜ್ಞೆಗೆ ನಾನು ಹೆದರುತ್ತೇನೆ. ಭೀಮಸೇನನೇ ಇವನನ್ನು ಕೊಲ್ಲಲಿ ಈ ದುಶ್ಶಾಸನನ ಗೊಡವೆಯೇ ಬೇಡ. ಈ ಯುದ್ಧದಲ್ಲಿ ಇವನನ್ನು ಸೋಲಿಸಿ ಕಳುಹಿಸುವೆನು ಎಂದು ಮನಸ್ಸಿನಲ್ಲಿ ನಿರ್ಧರಿಸಿದನು.
ಮೂಲ ...{Loading}...
ಇವನ ಕೊಂದರೆ ತಂದೆ ಮಿಗೆ ಮೆ
ಚ್ಚುವನೊ ಮುನಿವನೊ ತನ್ನ ನುಡಿ ಸಂ
ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು
ಇವನ ತಾನೇ ಕೊಲಲಿ ನಮಗಿ
ನ್ನಿವನ ತೊಡಕೇ ಬೇಡ ಕದನದೊ
ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ ॥49॥
೦೫೦ ಕಾಯ್ದುಕೊಳ್ಳೈ ಕೌರವಾನುಜ ...{Loading}...
ಕಾಯ್ದುಕೊಳ್ಳೈ ಕೌರವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಶ್ಶಾಸನಾ, ಈ ಬಾಣವನ್ನು ತಡೆದುಕೊ, ನೋಡೋಣ. ನೀನು ನನ್ನನ್ನು ಹೊಡೆದು ಹಾಗೆಯೇ ಹೋಗಬಹುದೇ ಸಾಕ್ಷಾತ್ ಶಿವನೇ ಅಡ್ಡ ಬಂದರೂ ನಾನು ಗೆದ್ದೇ ಗೆಲ್ಲುತ್ತೇನೆ ; ನಿಲ್ಲು’ ಎನ್ನುತ್ತಾ ಬಾಣ ಪ್ರಯೋಗಿಸಿದನು. ಆ ಬಾಣವು ಬಾಯಿಬಿಟ್ಟು ಕೆಂಪಾದ ಬೆಂಕಿಯನ್ನು ಉಗುಳುತ್ತಾ ನುಗ್ಗಿ ದುಶ್ಶಾಸನನ ಎದೆಯನ್ನು ಸೀಳಿಕೊಂಡು ಬೆನ್ನಿನಿಂದ ಹೊರಗೆ ಹೋಗಲು ದುಶ್ಶಾಸನನು ಕುಸಿದು ಬಿದ್ದನು. ಕೌರವ ಸೇನೆ ಆತಂಕಕ್ಕೊಳಗಾಯಿತು.
ಪದಾರ್ಥ (ಕ.ಗ.ಪ)
ಓರ್ಗುಡಿಸು-ಓಱುಗುಡಿಸು - ಕುಸಿ,ಹೊರಳು, ಮುಗ್ಗರಿಸು
ಮೂಲ ...{Loading}...
ಕಾಯ್ದುಕೊಳ್ಳೈ ಕೌರವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ ॥50॥
೦೫೧ ಅಹಹ ಕೈತಪ್ಪಾಯ್ತು ...{Loading}...
ಅಹಹ ಕೈತಪ್ಪಾಯ್ತು ರಾಯನ
ಸಹಭವನು ನೊಂದನು ಶಿವಾ ಎನು
ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ
ಬಹಳ ಬಲ ನುಗ್ಗಾಯ್ತು ಶಿಶುವಿನ
ಸಹಸ ಕುಂದದೆನುತ್ತ ಖತಿಯಲಿ
ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ತಪ್ಪಾಯಿತು ! ಕೌರವನ ತಮ್ಮನಾದ ದುಶ್ಶಾಸನನು ನೋವನ್ನು ಅನುಭವಿಸಿದನು. ಶಿವಶಿವಾ” ಎಂದುಕೊಂಡು ಎಲ್ಲ ಸೈನಿಕರು ದೂರ ಸರಿದರು. ಆಗ ದುಶ್ಶಾಸನನ ಸಾರಥಿಯು ರಥವನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋದನು. “ಈ ಬಾಲಕನಾದ ಅಭಿಮನ್ಯುವಿನಿಂದ ಸೈನ್ಯ ಅಪಾರವಾಗಿ ನಷ್ಟವಾಯಿತು. ಇವನ ಸಾಹಸ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ.” ಎನ್ನುತ್ತ ಕರ್ಣನು ಕೋಪದಿಂದ ಅಭಿಮನ್ಯುವಿಗೆ ಮತ್ತೆ ಅಡ್ಡ ಬಂದು ಯುದ್ಧ ಮಾಡಲಾರಂಭಿಸಿದನು.
ಪದಾರ್ಥ (ಕ.ಗ.ಪ)
ಸಹಭವ-ತಮ್ಮ, ಮಿಹಿರಸುತ-ಕರ್ಣ, ಮಿಹಿರ-ಸೂರ್ಯ
ಮೂಲ ...{Loading}...
ಅಹಹ ಕೈತಪ್ಪಾಯ್ತು ರಾಯನ
ಸಹಭವನು ನೊಂದನು ಶಿವಾ ಎನು
ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ
ಬಹಳ ಬಲ ನುಗ್ಗಾಯ್ತು ಶಿಶುವಿನ
ಸಹಸ ಕುಂದದೆನುತ್ತ ಖತಿಯಲಿ
ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ ॥51॥
೦೫೨ ಸಾರು ಸಾರಭಿಮನ್ಯು ...{Loading}...
ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧನುರ್ಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಅಭಿಮನ್ಯು ರಣರಂಗದಿಂದ ಹಿಂದಕ್ಕೆ ಹೊರಟು ಹೋಗು, ಇಲ್ಲದಿದ್ದರೆ ನೀನು ಯಾರ ಗರ್ಭದಲ್ಲಿ ಅವಿತುಕೊಳ್ಳುವೆ. ನೀನು ಮರಣ ಹೊಂದಿದರೆ, ನಿನ್ನ ಅನುಪಸ್ಥಿತಿಯಲ್ಲಿ, ನಿನ್ನವರಾದ ಪಾಂಡವರು ಯಾರನ್ನು ತಮ್ಮ ಉತ್ತರಾಧಿಕಾರಿಯಾದ ಸಂತಾನವನ್ನಾಗಿ ಮಾಡಿಕೊಳ್ಳುತ್ತಾರೆ? ಕೌರವರ ಈ ಮಹಾ ಸೇನೆಯನ್ನು ಕೊಂದು ಹಾಕುವ ಅಹಂಕಾರ ಯಾರೊಂದಿಗೆ ? ನಿನ್ನೆದುರು ಇರುವವನು ಧನುರ್ಧರಾಗ್ರಣಿಯಾದ ವೀರ ಕರ್ಣ ಕಣಾ” ಎನ್ನುತ್ತ ಅತಿರಥನಾದ ಅಭಿಮನ್ಯುವನ್ನು ಬಾಣಗಳಿಂದ ಹೊಡೆದ.
ಪದಾರ್ಥ (ಕ.ಗ.ಪ)
ಸಾರು-ಹೋಗು, ಭೂರಿ-ದೊಡ್ಡ, ಸದೆವ-ನಾಶ ಪಡಿಸುವ, ಧನುರ್ಧರಾಗ್ರಣಿ-ಬಿಲ್ವಿದ್ಯೆಯ ನಿಪುಣ.
ಮೂಲ ...{Loading}...
ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧನುರ್ಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ ॥52॥
೦೫೩ ಬಲ್ಲೆನುಣ್ಟುಣ್ಟಖಿಳ ವೀರರೊ ...{Loading}...
ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡ ಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ವೀರರಲ್ಲಿಯೂ ನಿನಗೆ ಸರಿಸಮಾನರಾದವರು ಯಾರೂ ಇಲ್ಲ ಎಂಬುದನ್ನು ಬಲ್ಲೆ. ನೀನು ಬಾಯಲ್ಲಿ ಶಕ್ತಿಯುತನಾಗಿರುವೆ. ವೀರತ್ವದ ಮಾತು ಹಾಗಿರಲಿ, ನೀರಿನ ಹಾವು ಉಡುಗೊರೆಯನ್ನು ಆದಿಶೇಷನಿಗೆ ಕಳುಹಿಸಿ ಕೊಟ್ಟಿತು ! ನೀನು ಮಹಾಯುದ್ಧಮಲ್ಲ. ರಣರಂಗದಿಂದ ಹಿಂದಕ್ಕೆ ಓಡಬೇಡ ಎನ್ನುತ್ತಾ ಅಭಿಮನ್ಯು ಕರ್ಣನ ಮೇಲೆ ಬಾಣಪ್ರಯೋಗ ಮಾಡಿದನು.
ಪದಾರ್ಥ (ಕ.ಗ.ಪ)
ಒಳ್ಳೆ-ನೀರ ಹಾವು (ವಿಷವಿಲ್ಲದ ಹಾವು) ಪಾವುಡ-ಉಡುಗೊರೆ
ಮೂಲ ...{Loading}...
ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡ ಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು ॥53॥
೦೫೪ ಇರುಳುರಾಯನ ಮನೆಗೆ ...{Loading}...
ಇರುಳುರಾಯನ ಮನೆಗೆ ಕಪ್ಪವ
ತೆರುವುದೋ ಹಗಲೆಲವೊ ಕೆಲಬರ
ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ
ಕಿರುಮೊನೆಯ ಮುಗುಳಂಬುಗಳ ಸೈ
ಗರೆದನುಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿ ಎಂಬ ರಾಜನ ಮನೆಗೆ ಹಗಲು ಕಪ್ಪ ಕಾಣಿಕೆಯನ್ನು ಸಲ್ಲಿಸುವಂತೆ ಕೆಲವು ಸೈನಿಕರನ್ನು ಕೊಂದು ಉಂಟಾದ ಅಹಂಕಾರದಿಂದ ಯಾರೊಡನೆ ಈ ಗರ್ವವನ್ನು ತೋರಿಸುತ್ತಿರುವೆನೆಂಬುದನ್ನು ಮರೆತಿದ್ದೀಯೆ. ರಣರಂಗದಿಂದ ಹಿಂದಿರುಗುವುದು ಒಳ್ಳೆಯದು ಎನ್ನುತ್ತಾ ಚೂಪಾದ ತುದಿಯುಳ್ಳ ಮೊಗ್ಗಿನಂತಿರುವ ಬಾಣಗಳನ್ನು ಒಂದೇ ಸಮನೆ ಅಭಿಮನ್ಯುವಿನ ಮೇಲೆ ಕರ್ಣನು ಸುರಿಸಿದನು. ಮರಿದುಂಬಿಗಳು ಕೆಂದಾವರೆಯ ಹೂವಿಗೆ ಮುತ್ತಿಕೊಳ್ಳುವಂತೆ ಬಾಣಗಳು ಅಭಿಮನ್ಯುವಿನ ದೇಹವನ್ನು ಹೊಕ್ಕವು.
ಮೂಲ ...{Loading}...
ಇರುಳುರಾಯನ ಮನೆಗೆ ಕಪ್ಪವ
ತೆರುವುದೋ ಹಗಲೆಲವೊ ಕೆಲಬರ
ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ
ಕಿರುಮೊನೆಯ ಮುಗುಳಂಬುಗಳ ಸೈ
ಗರೆದನುಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ ॥54॥
೦೫೫ ಸುರಪನಙ್ಕುಶವೌಕಿದರೆ ಮೆ ...{Loading}...
ಸುರಪನಂಕುಶವೌಕಿದರೆ ಮೆ
ಯ್ಯರಿಯದೈರಾವತಕೆ ಕಬ್ಬಿನ
ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ
ತೆರಳುವನೆ ಅಭಿಮನ್ಯುವೆನುತ
ಬ್ಬರಿಸಿ ಕರ್ಣನ ಕಾಯವನು ಹುಗಿ
ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
55.” ದೇವೇಂದ್ರನು ಮಹಾ ಅಂಕುಶದಿಂದ ಒತ್ತಿದರೂ ಮೈಗೆ ನೋವಾಯಿತೆಂದು ಭಾವಿಸದ ಐರಾವತ ಕಬ್ಬಿನ ಜಲ್ಲೆಯಿಂದ ತಿವಿದರೆ ಹೆದರುವುದೆ ? ನಿನ್ನ ಬಾಣಗಳು ಒತ್ತಿದರೆ ಅಭಿಮನ್ಯು ಯುದ್ಧರಂಗದಿಂದ ಓಡಿ ಹೋಗುತ್ತಾನೆಯೆ ?" ಎಂದು ಅಭಿಮನ್ಯು ಅಬ್ಬರಿಸಿ ನುಡಿದು ಕರ್ಣನ ದೇಹವನ್ನು ಸೀಳುವ ಹಾಗೆ ಎಂಟು ಬಾಣಗಳನ್ನು ಹೊಡೆದಾಗ ರಕ್ತದಿಂದ ರಥ ನೆನೆಯಿತು.
ಪದಾರ್ಥ (ಕ.ಗ.ಪ)
ಹುಗಿಲು-ಸೀಳು, ತೋದುದು-ನೆನೆಯಿತು.
ಮೂಲ ...{Loading}...
ಸುರಪನಂಕುಶವೌಕಿದರೆ ಮೆ
ಯ್ಯರಿಯದೈರಾವತಕೆ ಕಬ್ಬಿನ
ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ
ತೆರಳುವನೆ ಅಭಿಮನ್ಯುವೆನುತ
ಬ್ಬರಿಸಿ ಕರ್ಣನ ಕಾಯವನು ಹುಗಿ
ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ ॥55॥
೦೫೬ ಮಳೆಗೆ ಮೊಗದಿರುಹುವುದೆ ...{Loading}...
ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಮುದ್ರದೊಳಗಿನ ಪ್ರಳಯಕಾಲದ ಅಗ್ನಿಯು ಮಳೆ ಬಂದಿತೆಂದು ಹೇಗೆ ಹೆದರಿ ಮುಖ ತಿರುಗಿಸಿ ಆರಿಹೋಗುವುದಿಲ್ಲವೋ ಹಾಗೆ ನಿನ್ನ ಬಾಣಗಳಿಂದ ನಾನು ಹೆದರುವವನಲ್ಲ.” ಎಂದು ಸೂರ್ಯ ಪುತ್ರನಾದ ಕರ್ಣನು ಹೇಳುತ್ತಾ ಅಭಿಮನ್ಯುವಿನ ಮೇಲೆ ಬಾಣಗಳನ್ನು ಹೊಡೆದನು. ಆ ಬಾಣಗಳು ರಾತ್ರಿಯ ಹೊತ್ತಿನಲ್ಲಿ ಮರವನ್ನು ಮಿಂಚು ಹುಳುಗಳು ಮೆತ್ತಿಕೊಂಡು ಮಿನುಗುವ ಹಾಗೆ ಅಭಿಮನ್ಯುವಿನ ಕೈ ಮೈ ದೇಹಗಳನ್ನು ಮುತ್ತಿದವು.
ಪದಾರ್ಥ (ಕ.ಗ.ಪ)
ಮಿಂಚುಬುಳು-ಮಿಂಚುಹುಳ
ಮೂಲ ...{Loading}...
ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ ॥56॥
೦೫೭ ಹೂಣಿಗರು ಕೆಲರಿವರು ...{Loading}...
ಹೂಣಿಗರು ಕೆಲರಿವರು ಇವದಿರ
ಗೋಣನರಿವರೆ ಇವರ ಜೀವದ
ಕೇಣಿಕಾರರು ಖಾತಿಗೊಂಬರು ಭೀಮ ಫಲುಗುಣರು
ಮಾಣದಿವದಿರು ಮತ್ತೆ ರಣದಲಿ
ಕಾಣೆನಿದಕಿನ್ನನುವನೆನುತ
ಕ್ಷೀಣಭುಜಬಲನೆಚ್ಚು ಕಡಿದನು ಸೂತಜನ ಧನುವ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೆಲವರು ಶಪಥ ಮಾಡಿದ್ದಾರೆ. ಕರ್ಣ ದುಶ್ಶಾಸನನರಂತಹವರ ಕೊರಳನ್ನು ಕತ್ತರಿಸಿ ಹಾಕಿದರೆ ಇವರ ಜೀವವನ್ನು ಗುತ್ತಿಗೆ ಹಿಡಿದಿರುವ ಭೀಮ ಅರ್ಜುನರು ಕೋಪಗೊಳ್ಳುತ್ತಾರೆ. ಇಂತಹವರನ್ನು ಯುದ್ಧರಂಗದಲ್ಲಿ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ” ಎಂದುಕೊಳ್ಳುತ್ತಾ ಕಡಿಮೆಯಾಗದ ಭುಜಬಲವನ್ನುಳ್ಳ ಅಭಿಮನ್ಯುವು ಕರ್ಣನ ಕೈಯಲ್ಲಿದ್ದ ಬಿಲ್ಲನ್ನು ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಹೂಣಿಗರು-ಪ್ರತಿಜ್ಞೆ ಗೈದವರು, ಕೇಣಿ-ಗುತ್ತಿಗೆ , ಅಕ್ಷೀಣ-ಕಡಿಮೆಯಾಗದ
ಮೂಲ ...{Loading}...
ಹೂಣಿಗರು ಕೆಲರಿವರು ಇವದಿರ
ಗೋಣನರಿವರೆ ಇವರ ಜೀವದ
ಕೇಣಿಕಾರರು ಖಾತಿಗೊಂಬರು ಭೀಮ ಫಲುಗುಣರು
ಮಾಣದಿವದಿರು ಮತ್ತೆ ರಣದಲಿ
ಕಾಣೆನಿದಕಿನ್ನನುವನೆನುತ
ಕ್ಷೀಣಭುಜಬಲನೆಚ್ಚು ಕಡಿದನು ಸೂತಜನ ಧನುವ ॥57॥
೦೫೮ ಕೈದು ಮುರಿಯಲು ...{Loading}...
ಕೈದು ಮುರಿಯಲು ಮುಂದೆ ನೂಕದೆ
ಹಾಯ್ದನಾ ರವಿಸೂನು ಬಳಿಕಡ
ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ
ಐದು ಬಾಣದಲವನ ಕೊರಳನು
ಕೊಯ್ದನರ್ಜುನ ಸೂನುವಾತನ
ನೊಯ್ದರಂತಕದೂತರದ್ಭುತವಾಯ್ತು ಸಂಗ್ರಾಮ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಕೈಯಲ್ಲಿದ್ದ ಬಿಲ್ಲು ಮುರಿದಾಗ ಯುದ್ಧವನ್ನು ಮುಂದುವರಿಸಲಾಗದೆ ಕರ್ಣನು ಯುದ್ಧದಿಂದ ಹಿಂದೆ ಸರಿದನು. ಆಗ ಕರ್ಣನ ಮಗನು ಕೋಪದಿಂದ ಅಭಿಮನ್ಯುವಿನ ಯುದ್ಧವನ್ನು ತಡೆದನು. ಅಭಿಮನ್ಯು ಐದು ಬಾಣಗಳಿಂದ ಅವನ ಕೊರಳನ್ನು ಕತ್ತರಿಸಿದನು. ಅವನ ಜೀವವನ್ನು ಯಮದೂತರು ಕೊಂಡುಹೋದರು. ಯುದ್ಧ ಅದ್ಭುತವಾಯಿತು.
ಮೂಲ ...{Loading}...
ಕೈದು ಮುರಿಯಲು ಮುಂದೆ ನೂಕದೆ
ಹಾಯ್ದನಾ ರವಿಸೂನು ಬಳಿಕಡ
ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ
ಐದು ಬಾಣದಲವನ ಕೊರಳನು
ಕೊಯ್ದನರ್ಜುನ ಸೂನುವಾತನ
ನೊಯ್ದರಂತಕದೂತರದ್ಭುತವಾಯ್ತು ಸಂಗ್ರಾಮ ॥58॥
೦೫೯ ಘಾಯವಡೆದನು ಶಲ್ಯ ...{Loading}...
ಘಾಯವಡೆದನು ಶಲ್ಯ ರವಿಸುತ
ನಾಯುಧವ ಬಿಟ್ಟೋಡಿದನು ಕುರು
ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು
ಸಾಯದುಳಿದವರಿಲ್ಲ ಮಿಕ್ಕಿನ
ನಾಯಕರೊಳಕಟೆನಲು ಕುರುಬಲ
ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಲ್ಯನಿಗೆ ಗಾಯವಾಯಿತು. ಸೂರ್ಯಪುತ್ರನಾದ ಕರ್ಣನು ಆಯುಧವನ್ನು ಬಿಟ್ಟು ಓಡಿಹೋದನು. ಕೌರವನ ಸೋದರನಾದ ದುಶ್ಶಾಸನನು ಮೈಯೆಲ್ಲ ಗಾಯವನ್ನು ಹೊಂದಿ ಬದುಕಿದ್ದರೂ ಬದುಕಿಲ್ಲ ಎನ್ನುವಂತಿದ್ದನು. ಸೇನೆಯಲ್ಲಿ ಉಳಿದ ನಾಯಕರಲ್ಲಿ ಸಾಯದೆ ಉಳಿದವರಿರಲಿಲ್ಲ” ಎಂದು ಕೌರವನ ಸೈನ್ಯವು ಗೋಳಿಡುತ್ತಿರಲು ಶಲ್ಯನ ಮಗನು ರಣರಂಗವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಬಾದಣ-ಗಾಯ
ಮೂಲ ...{Loading}...
ಘಾಯವಡೆದನು ಶಲ್ಯ ರವಿಸುತ
ನಾಯುಧವ ಬಿಟ್ಟೋಡಿದನು ಕುರು
ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು
ಸಾಯದುಳಿದವರಿಲ್ಲ ಮಿಕ್ಕಿನ
ನಾಯಕರೊಳಕಟೆನಲು ಕುರುಬಲ
ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ ॥59॥
೦೬೦ ಆ ಕುಮಾರನ ...{Loading}...
ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶಲ್ಯ ಕುಮಾರನ ಸೈನ್ಯ ಒಟ್ಟಾಗಿ ಮುಂದುವರಿಯಿತು. ಕುದುರೆಗಳ ಗುಂಪು ಉತ್ಸಾಹದಿಂದ ಮೇಲೆ ಬಿದ್ದುವು. ಆನೆಗಳ ಗುಂಪು ಮುಂದೆ ಬಂದುವು. ರಥ ಸಮೂಹವು ಮುಂದೆ ಹಾಯ್ದವು. ಆಯುಧಗಳ ಮಳೆ ಕರೆಯಿತು. ರಣವೀರರ ಕೈ ಸನ್ನೆಗಳಿಂದ ಯುದ್ಧಾತುರರು ಶತ್ರುಗಳಿಗೆ ಪ್ರಳಯಕಾಲದ ಕಾಲ ಭೈರವನಂತಿದ್ದ ಅಭಿಮನ್ಯುವನ್ನು ಕೆಣಕಿದರು.
ಮೂಲ ...{Loading}...
ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ ॥60॥
೦೬೧ ಭಟ ಛಡಾಳಿಸಿದನು ...{Loading}...
ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹ ನಾದದಲಿ
ನಿಟಿಲ ನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದತಿ ಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಸಿಡಿದೆದ್ದನು. ಹೋಮಕುಂಡಕ್ಕೆ ತುಪ್ಪವನ್ನು ಸುರಿದಾಗ ಅಗ್ನಿಯು ಪ್ರಜ್ವಲಿಸುವ ಹಾಗೆ ಅಭಿಮನ್ಯುವು ಸಿಂಹನಾದ ಗೈಯುತ್ತಾ ಚತುರಂಗ ಸೇನೆಯೊಳಗೆ ನುಗ್ಗಿದನು. ಹಣೆಗಣ್ಣಿನ ಶಿವನ ಕೋಪವು ಬೆಂಕಿಯನ್ನು ಚಿಮ್ಮಿಸಿ ಭಸ್ಮ ಮಾಡುವ ಹಾಗೆ, ಪಾರ್ಥನ ಮಗನಾದ ಅಭಿಮನ್ಯುವಿನ ಬಾಣಗಳ ಸಮೂಹವು ಶತ್ರುಸೇನೆ ಎಂಬ ಕಾಡನ್ನು ಸವರಿಹಾಕಿತು.
ಪದಾರ್ಥ (ಕ.ಗ.ಪ)
ಛಡಾಳಿಸು-ಉಗ್ರವಾಗಿ
ಮೂಲ ...{Loading}...
ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹ ನಾದದಲಿ
ನಿಟಿಲ ನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದತಿ ಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ ॥61॥
೦೬೨ ಧರೆ ಬಿರಿಯೆ ...{Loading}...
ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಭಯ ಸೇನೆಯ ಅಬ್ಬರದಿಂದ ಭೂಮಿಯು ಬಿರಿಯುವಂತಾಯಿತು. ಎಲ್ಲೆಡೆಯಲ್ಲಿಯೂ ಗೊಂದಲಮಯದ ವಾತಾವರಣ ಉಂಟಾಯಿತು. ಧರ್ಮರಾಜನು ಅಭಿಮನ್ಯುವಿನ ಸ್ಥಿತಿ ಏನಾಯಿತೋ ಎಂದು ಚಿಂತಿಸಿದನು. ಅವನು ಭೀಮ ನಕುಲರನ್ನು ದ್ರುಪದ, ಧೃಷ್ಟದ್ಯುಮ್ನರೊಡನೆ ಸೇರಿಸಿ, ಅಭಿಮನ್ಯುವಿಗೆ ನೆರವಾಗಲು ಹೆಚ್ಚಿನ ಸೈನ್ಯದೊಂದಿಗೆ ಕಳಿಸಿದನು.
ಪದಾರ್ಥ (ಕ.ಗ.ಪ)
ದೆಖ್ಖಾದೆಖ್ಖಿ-ಗೊಂದಲ, ಪರುಠವಿಸಿ-ಸಜ್ಜು ಮಾಡಿ ಸೌಭದ್ರ-ಅಭಿಮನ್ಯು, ಪಡಿಬಲ-ಹೆಚ್ಚಿನ ಸೇನೆ
ಮೂಲ ...{Loading}...
ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ ॥62॥
೦೬೩ ಗದೆಯ ತಿರುಹುತ ...{Loading}...
ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಗದೆಯನ್ನು ತಿರುಗಿಸುತ್ತಾ, ಸಿಂಹನಾದದಲ್ಲಿ ಗರ್ಜಿಸಿ ಮಗನಾದ ಅಭಿಮನ್ಯುವೆಲ್ಲಿ ಎನ್ನುತ್ತ ತನ್ನ ರಥವನ್ನು ನುಗ್ಗಿಸಿ, ತನ್ನ ಸೇನೆಗೆ (ಹಿಂಬಾಲಿಸಲು ಸೂಚಿಸುವ) ಸೀಗುರಿಯನ್ನು ಬೀಸಿದ. ಈ ವೀರನಿಗೆ ಪದ್ಮವ್ಯೂಹದ ಒಳಗೆ ಪ್ರವೇಶಿಸದಂತೆ ಮೊದಲ ಬಾಗಿಲಿನಲ್ಲಿ ಅಡ್ಡನಿಂತು ವೀರನಾದ ಜಯದ್ರಥನು ಭೀಮನೊಂದಿಗೆ ದೊಡ್ಡ ಕಾಳಗವನ್ನು ಕೈಗೊಂಡ.
ಮೂಲ ...{Loading}...
ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ ॥63॥
೦೬೪ ತೆರಹುಗೊಡು ಫಡ ...{Loading}...
ತೆರಹುಗೊಡು ಫಡ ಫಡ ಜಯದ್ರಥ
ಹೆರತೆಗೆದು ಸಾರೆನುತ ಹೂಣಿಗ
ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು
ಮರೆದು ಕಳೆಯಭಿಮನ್ಯುವನು ಮೈ
ಮರೆಯದೆನ್ನಲಿ ಕಾದು ಮಾತಿನ
ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದಾರಿಬಿಡು. ಜಯದ್ರಥ ಆಚೆ ಹೋಗು” ಎನ್ನುತ್ತ ಶೂರನಾದ ಭೀಮನು ನೂಕಲು, ಪ್ರತಿಭಟಿಸಿ ನಿಂತು ಜಯದ್ರಥ ಯುದ್ಧವನ್ನು ಪ್ರಾರಂಭಿಸಿದ. “ನೀನು ಅಭಿಮನ್ಯುವನ್ನು ಮರೆತು ಬಿಡುವುದು ಒಳ್ಳೆಯದು, ಮೈಮರೆಯದೆ ನನ್ನೊಡನೆ ಯುದ್ಧ ಮಾಡು ; ಕೇವಲ ಬಿರುಸಾದ ಮಾತುಗಳಿಂದ ಪ್ರಯೋಜನವಾಗದು” ಎನ್ನುತ್ತಾ ಜಯದ್ರಥನು ಕೆಂಪಾದ ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಹೆರತೆಗೆದು-ಜಾಗಬಿಟ್ಟು, ಹೂಣಿಗ-ಸಾಹಸಿ, ಶೂರ, ಪ್ರತಿಜ್ಞೆ ಮಾಡಿದವನು
ಬಿರುಬು-ಬಿರುಸು, ಕೆಂಗೋಲು -ಕೆಂಪಾಗಿರುವ ಬಾಣ,
ಮೂಲ ...{Loading}...
ತೆರಹುಗೊಡು ಫಡ ಫಡ ಜಯದ್ರಥ
ಹೆರತೆಗೆದು ಸಾರೆನುತ ಹೂಣಿಗ
ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು
ಮರೆದು ಕಳೆಯಭಿಮನ್ಯುವನು ಮೈ
ಮರೆಯದೆನ್ನಲಿ ಕಾದು ಮಾತಿನ
ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು ॥64॥
೦೬೫ ಬವರದಲಿ ಕಲಿ ...{Loading}...
ಬವರದಲಿ ಕಲಿ ಪಾರ್ಥನಲ್ಲದೆ
ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು
ಕವಲುಗೋಲಲಿ ಭೀಮನನು ಪರಿ
ಭವಿಸಿದನು ಸಹದೇವ ನಕುಳರ
ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧದಲ್ಲಿ ವೀರ ಪಾರ್ಥನನ್ನು ಬಿಟ್ಟು ಭೀಮಾದಿಗಳನ್ನು ಗೆಲ್ಲಲು ನನಗೆ ಮೊದಲೇ ಶಿವನ ಕೃಪೆ (ವರ) ಯುಂಟು” ಎಂದು ಹೇಳುತ್ತಾ ಕವಲುಗೋಲಿನಿಂದ ಹೊಡೆದು ಭೀಮನನ್ನು ಸೋಲಿಸಿದನು. ಅನಂತರ ಸಹದೇವ, ನಕುಲರನ್ನ ತಿವಿದು ಧೃಷ್ಟದ್ಯುಮ್ನನೇ ಮೊದಲಾದ ಅಗಣಿತ ಸಂಖ್ಯೆಯ ವೀರರನ್ನು ಜಯದ್ರಥನು ಸೋಲಿಸಿದನು.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಮುನ್ನ-ಮೊದಲು-ಹಿಂದೆ, ಪರಿಭವಿಸು-ಸೋಲಿಸು,
ಮೂಲ ...{Loading}...
ಬವರದಲಿ ಕಲಿ ಪಾರ್ಥನಲ್ಲದೆ
ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು
ಕವಲುಗೋಲಲಿ ಭೀಮನನು ಪರಿ
ಭವಿಸಿದನು ಸಹದೇವ ನಕುಳರ
ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ ॥65॥
೦೬೬ ಪಡಿಬಲವ ಬರಲೀಯದನಿಲಜ ...{Loading}...
ಪಡಿಬಲವ ಬರಲೀಯದನಿಲಜ
ನೊಡನೆ ಸೈಂಧವ ಕಾದುತಿರಲಿ
ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ
ಕಡುಗಿ ನೂಕುವ ಕದನರಾಗಿಗ
ಳೊಡನೆ ಕಾದುವ ಪಾರ್ಥತನಯನ
ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯದ್ರಥನು ಪದ್ಮವ್ಯೂಹದೊಳಗೆ ಹೋಗಲು ಪಾಂಡವರ ಸೇನೆಗೆ ಅವಕಾಶವನ್ನು ಕೊಡದೆ ಭೀಮನೊಡನೆ ಯುದ್ಧ ಮಾಡುತ್ತಿರುವಾಗ, ಈ ಕಡೆ ಅಭಿಮನ್ಯುವಿನ ಯುದ್ಧ ಎರಡರಷ್ಟು ತೀವ್ರತೆಯಿಂದ ಮುಂದುವರಿಯುತ್ತಿತ್ತು. ಪದ್ಮವ್ಯೂಹದ ಮಧ್ಯದಲ್ಲಿದ್ದ ಸೇನೆಯಲ್ಲಿ ಉತ್ಸಾಹದಿಂದ ಯುದ್ಧ ಮಾಡುತ್ತಿದ್ದ ವೀರರನ್ನು ಅರ್ಜುನನ ಪುತ್ರನಾದ ಅಭಿಮನ್ಯುವಿನ ಬಿಡಿಬಿಡಿಯಾದ ಬಾಣಗಳು, ದೇವಲೋಕದ ವಧುಗಳ ಕಡೆಗೆ ಕಳಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಪಡಿಬಲ-ಹೆಚ್ಚಿನ ಬಲ
ಮೂಲ ...{Loading}...
ಪಡಿಬಲವ ಬರಲೀಯದನಿಲಜ
ನೊಡನೆ ಸೈಂಧವ ಕಾದುತಿರಲಿ
ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ
ಕಡುಗಿ ನೂಕುವ ಕದನರಾಗಿಗ
ಳೊಡನೆ ಕಾದುವ ಪಾರ್ಥತನಯನ
ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ ॥66॥
೦೬೭ ತರಿದನಾನೆಯ ಥಟ್ಟುಗಳ ...{Loading}...
ತರಿದನಾನೆಯ ಥಟ್ಟುಗಳ ಮು
ಕ್ಕುರುಕಿದನು ಕಾಂಭೋಜ ತೇಜಿಯ
ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ
ಮುರಿದನೊಗ್ಗಿನ ಪಾಯ್ದಳವನ
ಳ್ಳಿರಿವ ಹೆಣ ಕುಣಿದಾಡೆ ಭಟ ಬೇ
ಸರದೆ ಕೊಂದನು ವೈರಿಸೇನೆಯನರಸ ಕೇಳ್ ಎಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಆನೆಗಳ ಸೈನ್ಯವನ್ನು ಕತ್ತರಿಸಿದನು. ಕಾಂಭೋಜ ಕುದುರೆಗಳ ಗುಂಪನ್ನು ಅತ್ಯುತ್ಸಾಹದಿಂದ ಮುತ್ತಿದನು. ಆಯುಧಗಳಿಂದ ತುಂಬಿದ್ದ ರಥಗಳ ಸಮೂಹವನ್ನು ಪುಡಿ ಪುಡಿ ಮಾಡಿದನು. ಕಾಲಾಳು ಸೈನ್ಯವನ್ನು ಮುರಿದನು. ಅಭಿಮನ್ಯುವು ಇರಿದ ಹೆಣಗಳು ಕುಣಿದಾಡುತ್ತಿರಲು ಬೇಸರಪಟ್ಟುಕೊಳ್ಳದೇ ವೈರಿ ಸೇನೆಯನ್ನು ಕೊಂದುಹಾಕಿದ ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಸೂನಿಗೆ-ಆಯುಧ, ತಿಂತಿಣಿ-ಗುಂಪು
ಮೂಲ ...{Loading}...
ತರಿದನಾನೆಯ ಥಟ್ಟುಗಳ ಮು
ಕ್ಕುರುಕಿದನು ಕಾಂಭೋಜ ತೇಜಿಯ
ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ
ಮುರಿದನೊಗ್ಗಿನ ಪಾಯ್ದಳವನ
ಳ್ಳಿರಿವ ಹೆಣ ಕುಣಿದಾಡೆ ಭಟ ಬೇ
ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ ॥67॥
೦೬೮ ಒರಸಿದನು ಹದಿನೆಣ್ಟು ...{Loading}...
ಒರಸಿದನು ಹದಿನೆಂಟು ಸಾವಿರ
ಕರಿ ಘಟೆಯನೈವತ್ತು ಸಾವಿರ
ತುರಗವನು ಮೂವತ್ತು ಸಾವಿರ ವರ ಮಹಾರಥರ
ಧುರದಿ ಲಕ್ಷ ಪದಾತಿಯನು ಸಂ
ಹರಿಸಿ ಶಲ್ಯ ಕುಮಾರಕನ ಕ
ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರ ಧಾರೆಯಲಿ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಹದಿನೆಂಟು ಸಾವಿರ ಆನೆಗಳನ್ನೂ, ಐವತ್ತು ಸಾವಿರ ಕುದುರೆಗಳನ್ನೂ, ಮೂವತ್ತು ಸಾವಿರ ಶ್ರೇಷ್ಠ ಮಹಾರಥರನ್ನೂ, ಒಂದು ಲಕ್ಷ ಕಾಲಾಳು ಸೇನೆಯನ್ನು ಸಂಹಾರ ಮಾಡಿದನಲ್ಲದೆ ಶಲ್ಯನ ಮಗನ ಕೊರಳ ನಾಳವನ್ನು ಹರಿತವಾದ ದಿವ್ಯಾಸ್ತ್ರದಿಂದ ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಗೋನಾಳಿ-ಕೊರಳಿನ ನಾಳ
ಮೂಲ ...{Loading}...
ಒರಸಿದನು ಹದಿನೆಂಟು ಸಾವಿರ
ಕರಿ ಘಟೆಯನೈವತ್ತು ಸಾವಿರ
ತುರಗವನು ಮೂವತ್ತು ಸಾವಿರ ವರ ಮಹಾರಥರ
ಧುರದಿ ಲಕ್ಷ ಪದಾತಿಯನು ಸಂ
ಹರಿಸಿ ಶಲ್ಯ ಕುಮಾರಕನ ಕ
ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರ ಧಾರೆಯಲಿ ॥68॥
೦೬೯ ಮಡಿದನಕಟಾ ತಮ್ಮ ...{Loading}...
ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ ತಮ್ಮ ಸ್ನೇಹಿತನು ಸತ್ತನೆಂಬ ದುಃಖದಿಂದ, ಕೋಪದ ಬಿಸಿಯಿಂದ ಕೂಡಿ, ಪ್ರಳಯಕಾಲದ ರುದ್ರನ ಕೆಂಡಗಳ ಕಣ್ಣನ್ನು ಹೋಲುವ ಕಣ್ಣುಗಳ, ನೆಗೆದ ಮೀಸೆಗಳ, ಗಂಟಿಕ್ಕಿದ ಹುಬ್ಬಿನ, ನಿಮಿರುತ್ತಿರುವ ರೋಮಗಳಿಂದ ಕೂಡಿ , ಕೋಪಾವೇಶಕ್ಕೆ ಒಳಗಾದ ದುರ್ಯೋಧನನ ಮಕ್ಕಳು ಎದ್ದು ಯುದ್ಧಕ್ಕೆ ಸಿದ್ಧರಾದರು.
ಮೂಲ ...{Loading}...
ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು ॥69॥
೦೭೦ ಚಣ್ಡ ಭುಜಬಲನೊಡನೆ ...{Loading}...
ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಹೆದೆಯಿಂದ ಬಿಗಿದ, ಹಲಗೆ ಮುಸುಡಿ, ಮುದ್ಗ, ಕಠಾರಿ ಉಬ್ಬಣ ಮೊದಲಾದ ಆಯುಧಗಳನ್ನು ಹಿಡಿದ ಪರಾಕ್ರಮಿಗಳು ಅಭಿಮನ್ಯುವನ್ನು ಮುತ್ತಿದರು. ಅದಿರುವ ಮಾಂಸ ಖಂಡಗಳ, ಗಂಧವನ್ನು ಲೇಪಿಸಿಕೊಂಡಿದ್ದ ಭುಜಗಳನ್ನು, ದೇಹ ಸೌಂದರ್ಯದ ಪರಿಮಳ ಪೂಸಿಕೊಂಡಿದ್ದ ದೇಹ ಸಂದರ್ಯವನ್ನು ಹೊಂದಿದ್ದ ಆ ವೀರರು ಒಟ್ಟಾಗಿ ಅಭಿಮನ್ಯುವಿನ ಮೇಲೆ ಮುತ್ತಿಗೆ ಹಾಕಿದರು.
ಪದಾರ್ಥ (ಕ.ಗ.ಪ)
ಚಂಡ-ತೀಕ್ಷ್ಣ, ಖಂಡೆಯ-ಮಾಂಸಖಂಡ,
ಮೂಲ ...{Loading}...
ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ ॥70॥
೦೭೧ ತಳಿತ ಸತ್ತಿಗೆಗಳ ...{Loading}...
ತಳಿತ ಸತ್ತಿಗೆಗಳ ವಿಡಾಯಿಯ
ಲೊಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಳಿದ ಛತ್ರಿಗಳ, ಗಾಳಿಗೆ ಹೊಸ ರೀತಿಯಲ್ಲಿ ತೂಗಾಡುವ ಚಾಮರಗಳ, ವಜ್ರಗಳನ್ನು ಜೋಡಿಸಿದ ಕಿರೀಟಗಳ ಕಾಂತಿಯ ಸಮೂಹ , ಕೆದರಿದ ಮೀಸೆಗಳ ಅಬ್ಬರದ ಬಿರುದುಗಳ, ಅಕ್ಕ ಪಕ್ಕಗಳಲ್ಲಿನ ಹೊಗಳು ಭಟ್ಟರೊಡನೆ ಶ್ರೇಷ್ಠರಾದ ಕುದುರೆ ಸವಾರರ, ಸಮೂಹ ನಾಲಗೆಯನ್ನು ತೆರೆಯಿತೋ ಎಂಬಂತೆ ಹೊಳೆವ ಆಯುಧಗಳನ್ನು ಹಿಡಿದ ವೀರಭಟರುಗಳು ಮುಂದೆ ಬರುತ್ತಿದ್ದರು.
ಪದಾರ್ಥ (ಕ.ಗ.ಪ)
ವೇಲಾಯತರ-ಹೊಗಳು ಭಟ್ಟರ, ವೆಗ್ಗಳ-ಶ್ರೇಷ್ಠ,
ಮೂಲ ...{Loading}...
ತಳಿತ ಸತ್ತಿಗೆಗಳ ವಿಡಾಯಿಯ
ಲೊಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ॥71॥
೦೭೨ ಭಾಪುರೇ ಕೌರವನ ...{Loading}...
ಭಾಪುರೇ ಕೌರವನ ಸುತರಾ
ಟೋಪವೊಳ್ಳಿತು ಬಂದ ಬರವಿನ
ಚಾಪಳದಲೊದಗಿದರೆ ಲೇಸಲ್ಲಿದರ ಫಲವೇನು
ಕಾಪುರುಷರೇ ಕಾಣಬಹುದೆಂ
ದಾ ಪುರಂದರ ಸುತನ ಸುತ ನಿಜ
ಚಾಪವನು ನೇವರಿಸುತಿದ್ದನು ಬಗೆಯದರಿಬಲವ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೇ ! ಕೌರವನ ಮಕ್ಕಳ ಆಟೋಪ ಚೆನ್ನಾಗಿದೆ. ಬಂದ ವೇಗದಿಂದಲೇ ಯುದ್ಧಕ್ಕೆ ಪ್ರಾರಂಭಿಸಿದರೆ ಅದರಿಂದ ಫಲವಿಲ್ಲ. ಇದರ ಫಲವೇನೆಂದು ಅಯೋಗ್ಯರು ಮಾತ್ರ ಕಾಣಬಲ್ಲರು” ಎಂದು ಇಂದ್ರನ ಮಗನಾದ ಅರ್ಜುನನ ಮಗ ಅಭಿಮನ್ಯುವು, ಶತ್ರುಬಲವನ್ನು ಲೆಕ್ಕಿಸದೆ, ತನ್ನ ಬಿಲ್ಲನ್ನು ನೇವರಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಪುರಂದರ-ಇಂದ್ರ,
ಮೂಲ ...{Loading}...
ಭಾಪುರೇ ಕೌರವನ ಸುತರಾ
ಟೋಪವೊಳ್ಳಿತು ಬಂದ ಬರವಿನ
ಚಾಪಳದಲೊದಗಿದರೆ ಲೇಸಲ್ಲಿದರ ಫಲವೇನು
ಕಾಪುರುಷರೇ ಕಾಣಬಹುದೆಂ
ದಾ ಪುರಂದರ ಸುತನ ಸುತ ನಿಜ
ಚಾಪವನು ನೇವರಿಸುತಿದ್ದನು ಬಗೆಯದರಿಬಲವ ॥72॥
೦೭೩ ಮಗುಳದಿರು ಶಲ್ಯಾತ್ಮಕನನುಗು ...{Loading}...
ಮಗುಳದಿರು ಶಲ್ಯಾತ್ಮಕನನುಗು
ಳುಗುಳು ನಿನ್ನಯ ಬಸಿರ ಸೀಳಿಯೆ
ತೆಗೆವೆವೆಮ್ಮಯ ಸಖನನೆನುತಾ ಲಕ್ಷಣಾದಿಗಳು
ತೆಗೆದೆಸುತ ಮೇಲಿಕ್ಕಿದರು ತಾ
ರೆಗಳು ನೆಣಗೊಬ್ಬಿನಲಿ ರಾಹುವ
ತೆಗೆದು ಬದುಕಲು ಬಲ್ಲವೇ ಧೃತರಾಷ್ಟ್ರ ಕೇಳ್ ಎಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಅಭಿಮನ್ಯು ! ಯುದ್ಧರಂಗದಿಂದ ಓಡಿಹೋಗಬೇಡ. ಶಲ್ಯನ ಮಗನನ್ನು ಉಗುಳು. ನಿನ್ನ ಹೊಟ್ಟೆಯನ್ನು ಸೀಳಿಯೇ ನಮ್ಮ ಸ್ನೇಹಿತನಾದ ಶಲ್ಯನ ಮಗನನ್ನು ತೆಗೆಯುತ್ತೇವೆ” ಎನ್ನುತ್ತಾ ಲಕ್ಷಣ ಕುಮಾರನೇ ಮೊದಲಾದವರು ಅಭಿಮನ್ಯುವಿನ ಮೇಲೆ ಬಾಣಗಳನ್ನು ಪ್ರಯೋಗಿಸುತ್ತಾ ಮೇಲೆ ಬಿದ್ದರು. ನಕ್ಷತ್ರಗಳು ಕೊಬ್ಬಿ ರಾಹುವನ್ನು ಆಕಾಶದಿಂದ ತೆಗೆದು ಬದುಕಬಲ್ಲವೇ ಕೇಳು ಧೃತರಾಷ್ಟ್ರ ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಮಗುಳದಿರು-ಹಿಂದಿರುಗಬೇಡ, ಲಕ್ಷಣ-ಲಕ್ಷಣಕುಮಾರ, ದುರ್ಯೋಧನನ ಮಗ.
ಮೂಲ ...{Loading}...
ಮಗುಳದಿರು ಶಲ್ಯಾತ್ಮಕನನುಗು
ಳುಗುಳು ನಿನ್ನಯ ಬಸಿರ ಸೀಳಿಯೆ
ತೆಗೆವೆವೆಮ್ಮಯ ಸಖನನೆನುತಾ ಲಕ್ಷಣಾದಿಗಳು
ತೆಗೆದೆಸುತ ಮೇಲಿಕ್ಕಿದರು ತಾ
ರೆಗಳು ನೆಣಗೊಬ್ಬಿನಲಿ ರಾಹುವ
ತೆಗೆದು ಬದುಕಲು ಬಲ್ಲವೇ ಧೃತರಾಷ್ಟ್ರ ಕೇಳೆಂದ ॥73॥
೦೭೪ ದಿಟ್ಟರೋ ಲಕ್ಷಣನವರು ...{Loading}...
ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಮಗನಾದ ಲಕ್ಷಣ ಕುಮಾರನ ಸೋದರರು ಧೈರ್ಯವಂತರಾಗಿದ್ದೀರಿ. ಜಗಜಟ್ಟಿಗಳಾಗಿದ್ದೀರಿ. ರಾಜಕುಲದಲ್ಲಿ ಹುಟ್ಟಿ ಈ ರೀತಿ ಯುದ್ಧ ಮಾಡುವ ಚಾಪಲ್ಯ ಯಾರಿಗಿರುತ್ತದೆ ಎನ್ನುತ್ತ ಅಭಿಮನ್ಯುವು ಅವರನ್ನು ಬಾಣದ ತಡಿಕೆಗಳಿಂದ ಬಂಧಿಸಿದನು. ಅಲ್ಲಿ ಶತ್ರು ಮೃಗಗಳಂತೆ ಬೆನ್ನಟ್ಟಿ ಪಾರ್ಥನಂದನನು ಅವರನ್ನು ಬೇಟೆಯಾಡಿದನು.
ಪದಾರ್ಥ (ಕ.ಗ.ಪ)
ತಟ್ಟಿವಲೆ-ಬಿದಿರಿನ ತಡಿಕೆ , ಸೋಹಿನಲಿ-ಸೆಳೆತದಲ್ಲಿ, ಸದೆ-ಬಡಿ
ಮೂಲ ...{Loading}...
ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ ॥74॥
೦೭೫ ಆ ಸುಯೋಧನ ...{Loading}...
ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡ ಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಮಕ್ಕಳು ಹೊಡೆದ ಬಾಣಗಳನ್ನು ಅಭಿಮನ್ಯು ಕತ್ತರಿಸಿ ಹಾಕಿದನು. ಅವರನ್ನು ಕಾಪಾಡಲು ಅಡ್ಡ ಬಂದ ವೀರರನ್ನು ಹೊಡೆದು ಕೆಡವಿದನು. ಆಗ ಕೋಪವೆಂಬ ಬೆಂಕಿಯನ್ನು ತಾಳಿದ ರಾಜರು ಮುನ್ನುಗ್ಗಿ ಅಭಿಮನ್ಯುವನ್ನು ಪ್ರತಿಭಟಿಸಿದಾಗ ಅವರನ್ನು ಸೋಲಿಸಿದನು. ಆ ಮಹಾಯುದ್ಧದಲ್ಲಿ ಇಂದ್ರನ ಮೊಮ್ಮಗನಾದ ಅಭಿಮನ್ಯುವಿನ ಮೇಲೆ ಬಿದ್ದ ರಾಜರು ಭೂಮಿಯ ವಾಸವನ್ನು ಕಳೆದುಕೊಳ್ಳುವ ಹಾಗೆ ಮಾಡಿದನು.
ಪದಾರ್ಥ (ಕ.ಗ.ಪ)
ಬೀಸರ-ನಾಶ, ಅವನೀವಾಸ-ಭೂಮಿಯಲ್ಲಿ ಜೀವಿಸುವ, ವಾಸವ-ಇಂದ್ರ, ಮೊಮ್ಮನು-ಮೊಮ್ಮಗನು,
ಮೂಲ ...{Loading}...
ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡ ಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ ॥75॥
೦೭೬ ಫಡ ಕುಮಾರಕ ...{Loading}...
ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯ ಸೈನಿಕರನ್ನು ಸದೆ ಬಡಿದ ಅಹಂಕಾರವು ನಮ್ಮೊಂದಿಗೆ ನಡೆಯುತ್ತದೆಯೆ. ನೋಡು ಇಲ್ಲಿ ನಮ್ಮೊಡನೆ ಸೇರಿಕೆಯೇ, ಹೋಗು, ಹೋಗು ಎನ್ನುತ್ತ, ಜೊತೆ ಜೊತೆಯಲ್ಲಿಯೇ ಬಾಣಗಳ ಸಮೂಹವನ್ನು ಪ್ರಯೋಗಿಸಿದರು. ರಣಭೂಮಿಯಲ್ಲಿ ಅವರ ಬಿಲ್ಲು ವಿದ್ಯಾ ವಿಶೇಷವನ್ನು ಏನು ಹೇಳಲಿ ಎಂದು ಸಂಜಯನು ನುಡಿದ.
ಪದಾರ್ಥ (ಕ.ಗ.ಪ)
ದೊದ್ದೆಗರ-ಸಾಮಾನ್ಯ ಸೈನಿಕ, ಉಗ್ಗಡದ-ಶ್ರೇಷ್ಠವಾದ,
ಮೂಲ ...{Loading}...
ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ ॥76॥
೦೭೭ ಸರಳ ಮೊನೆಯಲಿ ...{Loading}...
ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಬಾಣಗಳ ಚೂಪಾದ ತುದಿಯಿಂದ ಶತ್ರು ಸೈನಿಕರ ಕರುಳುಗಳು ಹೊರಗೆ ಕತ್ತರಿಸಿಕೊಂಡು ಬರುವ ಹಾಗೆ ಮಾಡಿದನು. ರಣರಂಗದಲ್ಲಿ ಕುಣಿಯುತ್ತಿದ್ದ ಭೂತಗಳ ಬಳಗಕ್ಕೆ ತೃಪ್ತಿಯಾಗುವ ಹಾಗೆ ಮಾಡಿದನು. ರಕ್ತವು ಸಮುದ್ರವಾಯಿತು. ಕೌರವನ ಮಕ್ಕಳನ್ನು ಅಭಿಮನ್ಯು ಅರೆದು ಬಿಟ್ಟನು. ದುರ್ಯೋಧನನ ಮಕ್ಕಳು ರಣರಂಗದಿಂದ ಹಿಂದಿರುಗಿ ಹೋಗದ ಹಾಗೆ ಒಪ್ಪಂದ ಮಾಡಿಕೊಂಡಿರುವವನಂತೆ ಅಭಿಮನ್ಯು ಇದ್ದನು.
ಪದಾರ್ಥ (ಕ.ಗ.ಪ)
ಮರುಳ-ಭೂತಗಳ,
ಮೂಲ ...{Loading}...
ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು ॥77॥
೦೭೮ ಉರಗನಿಕ್ಕಡಿಗಾರ ಹುಲ್ಲಿನ ...{Loading}...
ಉರಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾವುಗಳನ್ನೇ ನಿರಾತಂಕವಾಗಿ ಕತ್ತರಿಸಿ ಹಾಕುವ ಸಾಮಥ್ರ್ಯವನ್ನು ಹೊಂದಿರುವವನು ಕೇವಲ ಹುಲ್ಲಿನ ಹಗ್ಗಗಳಿಗೆ ಹೆದರುತ್ತಾನೆಯೆ ? ಕರ್ಣ ಹಾಗೂ ಅವನಂತಹ ವೀರರನ್ನು ತೃಣ ಸಮಾನವೆಂದು ಭಾವಿಸಬಹುದಾದ ಪರಾಕ್ರಮವನ್ನು ಹೊಂದಿದ್ದ ಅಭಿಮನ್ಯು ಈ ಬೊಂಬೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವನೆ ? ಎರಡು ಬಾಣಗಳಿಂದ ಅಭಿಮನ್ಯುವು ದುರ್ಯೋಧನನ ಮಗನಾದ ಲಕ್ಷಣ ಕುಮಾರನನ್ನು ಮತ್ತು ಹದಿನೈದು ಬಾಣಗಳಿಂದ ಲಕ್ಷಣ ಕುಮಾರನ ಇತರ ಸೋದರರನ್ನು ನಿಮಿಷಮಾತ್ರದಲ್ಲಿ ಕೊಂದು ಹಾಕಿದನು.
ಪದಾರ್ಥ (ಕ.ಗ.ಪ)
ಇಕ್ಕಡಿಗಾರ-ಕೊಲೆ ಮಾಡುವವನು, ಸರವಿ-ಹುಲ್ಲಿನ ಹಗ್ಗ, ಹೂಹೆ-ಬೊಂಬೆ,ಮಕ್ಕಳು, ಗಣಿಸು-ಲೆಕ್ಕಕ್ಕೆ ತೆಗೆದುಕೊ, ಶರ-ಬಾಣ, ಅರಿದನು-ಕತ್ತರಿಸಿದನು.
ಮೂಲ ...{Loading}...
ಉರಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ ॥78॥
೦೭೯ ತಳಿತ ಚೂತದ ...{Loading}...
ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆನ್ನಾಗಿ ಬೆಳೆದ ಮಾವಿನ ಸಸಿಗಳು ಭೂಮಿಯ ಮೇಲೆ ಮಲಗುವ ಹಾಗೆ ಕೌರವರಾಯನ ಮಕ್ಕಳು ಹೊಳೆಯುತ್ತಿರುವ ಪದಕಗಳನ್ನು ಧರಿಸಿದ ಕೊರಳುಗಳನ್ನು ಬಾಗಿಸಿ, ತಲೆಗೆ ತಮ್ಮ ತೋಳುಗಳನ್ನೆ ದಿಂಬನ್ನಾಗಿಸಿಕೊಂಡು, ಉಟ್ಟ ವಸ್ತ್ರವು ರಕ್ತದಿಂದ ನೆನೆದಿರಲು, ಕೊಬ್ಬಿದ ಮಾಂಸ ಖಂಡಗಳಿಂದ ಕೂಡಿದ, ಗಂಟಿಕ್ಕಿದ ಹುಬ್ಬು ಹಾಗೂ ಗಟ್ಟಿಯಾದ ಹಲ್ಲುಗಳಿಂದ ಕೂಡಿದ ಮುಖಗಳನ್ನುಳ್ಳವರು ಸಾಲಾಗಿ ನೆಲದ ಮೇಲೆ ಮಲಗಿದರು.
ಮೂಲ ...{Loading}...
ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ ॥79॥
೦೮೦ ಇಕ್ಕಿದಿರಲಾ ರಾಜಪುತ್ರರ ...{Loading}...
ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ರಾಜಪುತ್ರರೆಲ್ಲರನ್ನೂ ಯುದ್ಧಕ್ಕೆ ಇಕ್ಕಿ ಸಂಹರಿಸಿದಿರಲ್ಲಾ ಸ್ವಾಮಿದ್ರೋಹರು. ದ್ರೋಣಾದಿ ನಾಯಕರು ಹೊಕ್ಕ ಮನೆ ಹಾಳಾಗಿ ಹೋಗುವುದಲ್ಲಾ. ನಮ್ಮ ಸೈನ್ಯ ನಾಶವಾಗಿ ಹೋಯಿತು. ಶಿಶುವಾದ ಅಭಿಮನ್ಯು ಇನ್ನೂ ನಮ್ಮ ಕೈಗೆ ಸಿಕ್ಕಲಿಲ್ಲ. ಪಾಂಡವರ ಪುಣ್ಯಕ್ಕೆ ಎಣೆ ಇಲ್ಲದಂತಾಗಿದೆ” ಎಂದು ಕೌರವೇಶ್ವರನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಇಕ್ಕಿದರಲಾ-ಸಾಯಿಸಿದರಲ್ಲಾ, ಹಕ್ಕಲಾದುದು-ನಾಶವಾಯಿತು
ಮೂಲ ...{Loading}...
ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ ॥80॥
೦೮೧ ಕುಲವ ನೋಡಿದಡಿಲ್ಲ ...{Loading}...
ಕುಲವ ನೋಡಿದಡಿಲ್ಲ ತನ್ನಯ
ಬಲುಹ ನೋಡಿದಡಿಲ್ಲ ಕದನದೊ
ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ
ಇಳೆಯೊಳೋಲೆಯಕಾರರೆಂಬರ
ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಪಕ್ಷದ ನಾಯಕರ ಕುಲವನ್ನು ನೋಡಿದರೆ, ಅವರಿಗೆ ಸಮಾನರಿಲ್ಲ; ಅವರ ಸಾಮಥ್ರ್ಯವನ್ನು ನೋಡಿದರೆ ಸಮಾನರಿಲ್ಲ; ಆದರೆ ಯುದ್ಧದಲ್ಲಿ ತಮ್ಮ ಒಡೆಯನೆಂಬ ಪಾಪಿಯ ಉಳಿವನ್ನು ಇವರುಗಳು ನೋಡಲಿಲ್ಲ (ಲೆಕ್ಕಿಸಲಿಲ್ಲ). ಅಭಿಮನ್ಯುವು ಭೂಮಿಯ ಮೇಲೆ ವೀರರೆಂಬವರ ತಲೆಯನ್ನು ತೃಣಸಮಾನ ಮಾಡಿ ಸೋಲಿಸಿದ ಎಂದು ದುರ್ಯೋಧನ ತನ್ನ ಪಕ್ಷದ ವೀರರನ್ನು ಮೂದಲಿಸಿದ.
ಮೂಲ ...{Loading}...
ಕುಲವ ನೋಡಿದಡಿಲ್ಲ ತನ್ನಯ
ಬಲುಹ ನೋಡಿದಡಿಲ್ಲ ಕದನದೊ
ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ
ಇಳೆಯೊಳೋಲೆಯಕಾರರೆಂಬರ
ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ ॥81॥
೦೮೨ ಕೇಳುತಿದ್ದರು ಪತಿಯ ...{Loading}...
ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಅಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದು ಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವನ ವೀರಾಧಿವೀರರು ತಮ್ಮೊಡೆಯನ ಮೂದಲಿಕೆಯ ಮಾತುಗಳನ್ನು ಕೇಳುತ್ತಿದ್ದರು. ಮೂದಲೆಯೆಂಬ ಗಾಳಿಯಲ್ಲಿ ಅವರ ಉರಿಯುತ್ತಿದ್ದ ಪರಾಕ್ರಮ ಜ್ವಾಲೆ ಮೇಲಕ್ಕೆ ಏರಿತು. ಕೋಪದಿಂದ ಪ್ರಕಾಶವಾದ ಮುಖದ, ಶೌರ್ಯವು ಉಬ್ಬಿ ಹೆಚ್ಚಿ, ಸ್ಪರ್ಧೆಯೊಡ್ಡುವ ಆ ವೀರರು ಆಯುಧಗಳನ್ನು ಕೊಂಡು ಬಾಲಕನಾದ ಅಭಿಮನ್ಯುವನ್ನು ಅಡ್ಡಗಟ್ಟಿದರು. ಧೃತರಾಷ್ಟ್ರನೇ ಕೇಳು " ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಹೀಹಾಳಿಕಾರರು-ಸ್ಪರ್ಧೆಯೊಡ್ಡುವವರು.
ಮೂಲ ...{Loading}...
ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಅಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದು ಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ ॥82॥