೦೦೦ ಸೂ ಉಭಯ ...{Loading}...
ಸೂ. ಉಭಯ ಕಟಕಾಚಾರ್ಯ ಪಾಂಡವ
ವಿಭುವ ಹಿಡಿತಹೆನೆಂದು ಕೌರವ
ಸಭೆಗೆ ಭಾಷೆಯ ಕೊಟ್ಟು ಸಮರಕೆ ದ್ರೋಣನನುವಾದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪಾಂಡವರಿಗೂ, ಕೌರವರಿಗೂ ಧನುರ್ವಿದ್ಯಾ ಗುರುವಾಗಿದ್ದ ದ್ರೋಣಾಚಾರ್ಯ ಧರ್ಮರಾಯನನ್ನು ಅಂದಿನ ಯುದ್ಧದಲ್ಲಿ ಸೆರೆ ಹಿಡಿದು ತರುವುದಾಗಿ ಕೌರವನ ಸಭೆಯಲ್ಲಿ ಪ್ರತಿಜ್ಞೆ ಮಾಡಿ ಯುದ್ಧಕ್ಕೆ ಸಿದ್ಧನಾದನು.
ಪದಾರ್ಥ (ಕ.ಗ.ಪ)
ಕಟಕಾಚಾರ್ಯ-ಯುದ್ಧವಿದ್ಯಾಗುರು
ಮೂಲ ...{Loading}...
ಸೂ. ಉಭಯ ಕಟಕಾಚಾರ್ಯ ಪಾಂಡವ
ವಿಭುವ ಹಿಡಿತಹೆನೆಂದು ಕೌರವ
ಸಭೆಗೆ ಭಾಷೆಯ ಕೊಟ್ಟು ಸಮರಕೆ ದ್ರೋಣನನುವಾದ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳೆಗದ ಹದನೇನೆನುತ ಕುರುರಾಯ ಬೆಸಗೊಂಡ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂದಿನ ಯುದ್ಧವನ್ನು ಪೂರೈಸಿ ತಮ್ಮ ತಮ್ಮ ಬಿಡಾರಗಳಿಗೆ ತೆರಳಿದ ಮೇಲೆ ಅಂದು ರಾತ್ರಿ ದುರ್ಯೋಧನನು ತನ್ನ ಸೇನೆಯ ಮುಖ್ಯರನ್ನು ಕರೆಸಿ ಸಭೆಯನ್ನು ನಡೆಸಿದನು. ಈ ಸಭೆಯಲ್ಲಿ ಕುರಿತು ಅಂದಿನ ಯುದ್ಧದಲ್ಲಿ ಶತ್ರು ರಾಜನಾಗಿರುವ ಧರ್ಮರಾಯನನ್ನು ದ್ರೋಣನು ಹೊಡೆದಟ್ಟದನಲ್ಲವೇ? ಕರ್ಣ, ಯುದ್ಧದ ಸಂಗತಿಯನ್ನು ತಿಳಿಸು. ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಅರೆಯಟ್ಟಿದನು-ಹೊಡೆದಟ್ಟಿದನು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳೆಗದ ಹದನೇನೆನುತ ಕುರುರಾಯ ಬೆಸಗೊಂಡ ॥1॥
೦೦೨ ಏನ ಹೇಳಲುಬಹುದು ...{Loading}...
ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಬೆಂಕಿಯು ಹತ್ತಿಕೊಂಡು ಉರಿಯುವ ಹಾಗೆ ಸೇನೆಯ ಖ್ಯಾತ ವೀರರನ್ನು ದ್ರೋಣನು ಎಲ್ಲ ಕಡೆಯಲ್ಲಿಯೂ ನಾಶ ಮಾಡುತ್ತಿದ್ದನು. ಸಮುದ್ರದ ನೀರು ಒಣಗಿ ಹೋದಾಗ ಹೇಗೆ ಮೀನುಗಳು ಸಾಯುವುವೋ ಹಾಗೆ ಶತ್ರು ಸೇನೆಯ ಭಟರು ಪ್ರಾಣ ಬಿಟ್ಟರು. ಇವರು ತಮ್ಮ ಶಕ್ತಿಯ ಭರವಸೆಯ ಮೇಲೆ ಧರ್ಮರಾಯನನ್ನು ಹಿಂಬಾಲಿಸಿದರು.
ಪದಾರ್ಥ (ಕ.ಗ.ಪ)
ಕೃಶಾನು-ಬೆಂಕಿ, ನಿರೂಢಿ -ಪ್ರಸಿದ್ಧಿ. ಖ್ಯಾತಿ
ಮೂಲ ...{Loading}...
ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ ॥2॥
೦೦೩ ಅಳವಿಗೊಟ್ಟನು ನೃಪತಿ ...{Loading}...
ಅಳವಿಗೊಟ್ಟನು ನೃಪತಿ ಗುರು ಕೈ
ಚಳಕದಲಿ ತೆಗೆದೆಸುತ ನಡೆದಿ
ಟ್ಟಳಿಸಿ ಹಿಡಿಹಿಂಗೊಳಗುಮಾಡಿ ವಿಘಾತಿಯ ತಡೆಯೆ
ಎಲೆಲೆ ದೊರೆ ಸಿಕ್ಕಿದನು ಸಿಕ್ಕಿದ
ನಳಿದುದೋ ದ್ರೌಪದಿಯ ಸಿರಿಯೆಂ
ಬುಲುಹ ಕೇಳುತ ಪಾರ್ಥ ಬಂದನು ಬಿಟ್ಟ ಸೂಠಿಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಪರಾಕ್ರಮದಿಂದ ಯುದ್ಧ ಮಾಡಿದನಾದರೂ ದ್ರೋಣಾಚಾರ್ಯರ ಕೈಚಳಕ ಮೇಲಾಯಿತು. ದ್ರೋಣರು ಬಾಣದ ಮೇಲೆ ಬಾಣಗಳನ್ನು ಬಿಟ್ಟು ಧರ್ಮರಾಯನನ್ನು ಅಟ್ಟಿಸಿ ಅವನು ಬಿಟ್ಟ ಬಾಣಗಳನ್ನು ತಡೆದು ಸೆರೆ ಹಿಡಿಯಲು ಮುಂದಾದಾಗ ಪಾಂಡವ ಸೇನೆಯು “ಅಯ್ಯೋ, ದೊರೆಯಾದ ಧರ್ಮರಾಯನು ಸೆರೆಯಾಗುತ್ತಿದ್ದಾನೆ. ದ್ರೌಪದಿಯ ಸೌಭಾಗ್ಯ ನಾಶವಾಗುವ ಕಾಲ ಸನ್ನಿಹಿತವಾಯಿತು” ಎಂದು ಕೂಗಿದರು. ಈ ಕೂಗನ್ನು ಕೇಳಿಸಿಕೊಂಡ ಅರ್ಜುನನು ತಕ್ಷಣ ಮಹಾವೇಗದಿಂದ ಧರ್ಮರಾಯನಿದ್ದ ಕಡೆಗೆ ಧಾವಿಸಿದನು ಎಂದು ಹೇಳಿದನು.
ಮೂಲ ...{Loading}...
ಅಳವಿಗೊಟ್ಟನು ನೃಪತಿ ಗುರು ಕೈ
ಚಳಕದಲಿ ತೆಗೆದೆಸುತ ನಡೆದಿ
ಟ್ಟಳಿಸಿ ಹಿಡಿಹಿಂಗೊಳಗುಮಾಡಿ ವಿಘಾತಿಯ ತಡೆಯೆ
ಎಲೆಲೆ ದೊರೆ ಸಿಕ್ಕಿದನು ಸಿಕ್ಕಿದ
ನಳಿದುದೋ ದ್ರೌಪದಿಯ ಸಿರಿಯೆಂ
ಬುಲುಹ ಕೇಳುತ ಪಾರ್ಥ ಬಂದನು ಬಿಟ್ಟ ಸೂಠಿಯಲಿ ॥3॥
೦೦೪ ವೀರರಿದ್ದೇಗುವರು ದೈವದ ...{Loading}...
ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಾದ ಕರ್ಣನು ಅಂದಿನ ಯುದ್ಧದ ಸ್ವರೂಪದ ಬಗ್ಗೆ ಪರಾಮರ್ಶೆ ಮಾಡುತ್ತಾ ಕೌರವನ ಸೇನೆಯಲ್ಲಿ ವೀರಾಧಿವೀರರು ಅಸಂಖ್ಯಾತರಾಗಿದ್ದರೂ, ಅವರು ಪರಾಕ್ರಮದಿಂದ ಯುದ್ಧ ಮಾಡಿದರೂ, ದೇವರ ಕೃಪೆ ಶತ್ರುಗಳ ಮೇಲಿದ್ದುದರಿಂದ ಯುದ್ಧವು ಸಫಲವಾಗುತ್ತಿಲ್ಲ, ನಮ್ಮ ಕಡೆಗೆ ವೀರಾಧಿವೀರರು ಪ್ರೀತಿಯಿಂದ ಬಂದು ಸೇರಿದರೂ ಫಲವಾಗಲಿಲ್ಲವೆಂದು ನಿಟ್ಟುಸಿರು ಬಿಟ್ಟನು. ಆಗ ಆ ಸಭೆಯಲ್ಲಿದ್ದ ದೊಡ್ಡ ದೊಡ್ಡ ಮಹಾರಾಜರು ವಿಸ್ತಾರವಾದ ಸಮುದ್ರದಂತೆ ಗಂಭೀರವಾಗಿ ಕುಳಿತಿದ್ದರು. ಆಗ ರಣಧೀರರೆನಿಸಿದ ತ್ರಿಗರ್ತರು ರಾಜನ ಸಭೆಯಲ್ಲಿ ಎದ್ದು ನಿಂತು ಮಾತನಾಡಲಾರಂಭಿಸಿದರು.
ಪದಾರ್ಥ (ಕ.ಗ.ಪ)
ಕೂರುಮೆ-ಪ್ರೀತಿ,
ಮೂಲ ...{Loading}...
ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ ॥4॥
೦೦೫ ಕೇಳು ಸೇನಾನಾಥ ...{Loading}...
ಕೇಳು ಸೇನಾನಾಥ ಕುರುಪತಿ
ಕೇಳು ಕೇಳೈ ಕರ್ಣ ಸುಭಟರು
ಕೇಳಿರೈ ದೇಶಾಧಿನಾಥರು ವೀರಪರಿವಾರ
ನಾಳೆ ಮೊದಲಾಗರ್ಜುನನ ನಾವ್
ಕಾಳೆಗಕೆ ಬರಲೀಯೆವೆಮ್ಮಯ
ಕಾಳೆಗದಲೇ ಸವೆಯಬೇಹುದು ಪಾರ್ಥನಂಬುಗಳು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ, ಸೇನಾಪತಿಯಾದ ದ್ರೋಣರೆ, ರಾಜನಾದ ದುರ್ಯೋಧನನೆ, ಕರ್ಣನೆ, ವೀರರೆ, ರಾಜಾಧಿರಾಜರೆ, ಹಾಗೂ ಶೂರರ ಪರಿವಾರದವರೆ ನಾವು ಹೇಳುವುದನ್ನು ಕೇಳಿರಿ; ನಾಳೆಯ ದಿನ ನಾವು ಅರ್ಜುನನು ಯುದ್ಧಕ್ಕೆ ಬರದೆ ಇರುವ ಹಾಗೆ ಮಾಡುತ್ತೇವೆ ; ಅರ್ಜುನನ ಯುದ್ಧವು ನಮಗೇ ಮೀಸಲಾಗಿರುತ್ತದೆ. " ಎಂದು ತ್ರಿಗರ್ತರು ಹೇಳಿದರು.
ಮೂಲ ...{Loading}...
ಕೇಳು ಸೇನಾನಾಥ ಕುರುಪತಿ
ಕೇಳು ಕೇಳೈ ಕರ್ಣ ಸುಭಟರು
ಕೇಳಿರೈ ದೇಶಾಧಿನಾಥರು ವೀರಪರಿವಾರ
ನಾಳೆ ಮೊದಲಾಗರ್ಜುನನ ನಾವ್
ಕಾಳೆಗಕೆ ಬರಲೀಯೆವೆಮ್ಮಯ
ಕಾಳೆಗದಲೇ ಸವೆಯಬೇಹುದು ಪಾರ್ಥನಂಬುಗಳು ॥5॥
೦೦೬ ಹಿನ್ದೆ ಹಿಡಿ ...{Loading}...
ಹಿಂದೆ ಹಿಡಿ ನೀ ಮೇಣು ಬಿಡು ಯಮ
ನಂದನನನೊಲಿದಂತೆ ಮಾಡಿ
ಲ್ಲಿಂದ ಮೇಲರ್ಜುನನ ಭಯ ನಿಮಗಿಲ್ಲ ನಂಬುವುದು
ಎಂದು ಶಪಥವ ತಮ್ಮಿನಿಬರೈ
ತಂದು ವಿಪ್ರರ ಕರಸಿ ವೈದಿಕ
ದಿಂದ ರಚಿಸಿದರಗ್ನಿಯನು ಮಾಡಿದರು ಭಾಷೆಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನಿಗೆ ಜಯದ ಭರವಸೆಯನ್ನು ಕೊಡುತ್ತಾ " ಧರ್ಮರಾಯನನ್ನು ಇಂದು ಅಥವಾ ಎಂದಾದರೂ ನಿಮಗೆ ಬೇಕಾದಂತೆ ಸೆರೆ ಹಿಡಿಯಿರಿ. ನೀವು ಅರ್ಜುನನ ಬಗ್ಗೆ ಭಯವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ನಮ್ಮ ಮಾತುಗಳನ್ನು ನಂಬಿ. É” ಎಂದು ಆಶ್ವಾಸನೆಯನ್ನು ಕೊಟ್ಟು, ತ್ರಿಗರ್ತರ ಗುಂಪಿನವರೆಲ್ಲರೂ ಬ್ರಾಹ್ಮಣರನ್ನು ಕರೆಸಿ ವೇದೋಕ್ತ ರೀತಿಯಲ್ಲಿ ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದರು.
ಮೂಲ ...{Loading}...
ಹಿಂದೆ ಹಿಡಿ ನೀ ಮೇಣು ಬಿಡು ಯಮ
ನಂದನನನೊಲಿದಂತೆ ಮಾಡಿ
ಲ್ಲಿಂದ ಮೇಲರ್ಜುನನ ಭಯ ನಿಮಗಿಲ್ಲ ನಂಬುವುದು
ಎಂದು ಶಪಥವ ತಮ್ಮಿನಿಬರೈ
ತಂದು ವಿಪ್ರರ ಕರಸಿ ವೈದಿಕ
ದಿಂದ ರಚಿಸಿದರಗ್ನಿಯನು ಮಾಡಿದರು ಭಾಷೆಗಳ ॥6॥
೦೦೭ ನರನ ಬಿಡಲಾಗದು ...{Loading}...
ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಂದು ಸಾರಿದರು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರಿಗರ್ತರು ವೀರಾವೇಶದಿಂದ ತಾವು ಯುದ್ಧ ಮಾಡುವ ಬಗೆಯನ್ನು ಸಭೆಗೆ ವಿವರಿಸಿದರು. ಮಾರನೆಯ ದಿನ ನಡೆಯುವ ಯುದ್ಧದಲ್ಲಿ ಅರ್ಜುನನು ಹತ್ತಿರ ಬರದ ಹಾಗೆ ತಡೆಯಲಾಗುವುದು. ಮಹಾಯುದ್ಧದಲ್ಲಿ ತ್ರಿಗರ್ತರ ಗುಂಪಿನಲ್ಲಿ ಒಬ್ಬರನ್ನೊಬ್ಬರು ಬಿಡದೆ ಒಗ್ಗಟ್ಟಿನಿಂದ ಹೋರಾಡುತ್ತೇವೆ. . ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ದಾರಿಯಲ್ಲಿ ಹೆಣಗಳು ಬಿದ್ದಿದ್ದರೆ ಅದನ್ನು ಮೆಟ್ಟಿಕೊಂಡೇ ರಣರಂಗದಲ್ಲಿ ಮುಂದೆ ಹೋಗುವುದು; ಈ ಮಾತುಗಳಲ್ಲಿ ಯಾವುದೇ ಒಂದನ್ನು ಯಾರು ಯಾವುದೇ ಕಾರಣಕ್ಕೆ ಮೀರಿದರೂ ಅವರಿಗೆ ನರಕ ತಪ್ಪುವುದಿಲ್ಲ ಎಂದು ತ್ರಿಗರ್ತರೆಲ್ಲರೂ ಒಟ್ಟಾಗಿ ಹೇಳಿದರು.
ಮೂಲ ...{Loading}...
ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಂದು ಸಾರಿದರು ॥7॥
೦೦೮ ನುಡಿದ ನುಡಿಗೇಡುಗನ ...{Loading}...
ನುಡಿದ ನುಡಿಗೇಡುಗನ ವಿಪ್ರರ
ಮಡುಹಿದಾತನನಮಳ ಗುರುವಿನ
ಮಡದಿಯರಿಗಳುಪಿದನ ಸಾಕಿದ ಪತಿಗೆ ತಪ್ಪಿದನ
ಹಿಡಿದ ಶರಣಾಗತರ ಕಾಯದೆ
ಬಿಡುವವನ ನಾಸ್ತಿಕನ ವಿಪ್ರರ
ಜಡಿದು ನುಡಿದನ ಗತಿಗಳಾಗಲಿ ರಣದೊಳೋಡಿದರೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರನ್ನು ಕೊಂದವನ, ಪರಿಶುದ್ಧವಾದ ಮನಸ್ಸುಳ್ಳ ಗುರುವಿನ ಮಡದಿಯ ಮೇಲೆ ಮೋಹಗೊಂಡವನ, ಅನ್ನ ಆಹಾರಗಳನ್ನು ಕೊಟ್ಟು ಸಾಕಿದ ಯಜಮಾನನಿಗೆ ವಿರುದ್ಧವಾಗಿ ವರ್ತಿಸಿದವನ, ಶರಣು ಎಂದು ಬಂದವನನ್ನು ರಕ್ಷಿಸದೆ ಇರುವವನ, ದೇವರು ಇಲ್ಲ ಎಂದು ಪ್ರತಿಪಾದಿಸುವನ, ಬ್ರಾಹ್ಮಣರನ್ನು ಬಯ್ಯುವವನ ಗತಿಯು ಯುದ್ಧ ಭೂಮಿಯಲ್ಲಿ ಯುದ್ಧ ಮಾಡದೆ ಹೇಡಿಯಾಗಿ ಹಿಂದಕ್ಕೆ ಓಡಿದರೆ ನಮಗೆ ಆಗಲಿ ;
ಪದಾರ್ಥ (ಕ.ಗ.ಪ)
ನುಡಿಗೇಡುಗ-ಭಾಷೆಗೆ ತಪ್ಪುವವನು, ಮಡುಹಿದಾತನ-ಕೊಂದವನ,
ಮೂಲ ...{Loading}...
ನುಡಿದ ನುಡಿಗೇಡುಗನ ವಿಪ್ರರ
ಮಡುಹಿದಾತನನಮಳ ಗುರುವಿನ
ಮಡದಿಯರಿಗಳುಪಿದನ ಸಾಕಿದ ಪತಿಗೆ ತಪ್ಪಿದನ
ಹಿಡಿದ ಶರಣಾಗತರ ಕಾಯದೆ
ಬಿಡುವವನ ನಾಸ್ತಿಕನ ವಿಪ್ರರ
ಜಡಿದು ನುಡಿದನ ಗತಿಗಳಾಗಲಿ ರಣದೊಳೋಡಿದರೆ ॥8॥
೦೦೯ ಎನ್ದು ಸಮಸಪ್ತಕರು ...{Loading}...
ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಹೆದರೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಸಮಸಪ್ತಕರು ಪ್ರತಿಜ್ಞೆಯನ್ನು ಮಾಡಿ ಬ್ರಾಹ್ಮಣರಿಗೆ ಗೋವು, ಬಂಗಾರ ಹಾಗೂ ಇತರ ಸಮಸ್ತ ವಸ್ತುಗಳನ್ನು ದಾನ ಮಾಡಿ, ಸೂರ್ಯ, ಚಂದ್ರ, ನೀರು, ಬೆಂಕಿ ಹಾಗೂ ಗಾಳಿ ಎಂಬ ಪಂಚ ಭೂತಗಳ ಸಾಕ್ಷಿಯನ್ನು ಹೇಳಿ, ತಾವು ಹೇಳಿರುವ ಮಾತುಗಳಿಗೆ ಇಂದ್ರನೇ ಮೊದಲಾದ ದೇವತೆಗಳೇ ಸಾಕ್ಷಿಯೆಂದು ಘೋಷಿಸಿ ಬಾಹುಗಳನ್ನು ಝಾಡಿಸಿದರು. ಆ ಧ್ವನಿಗೆ ಸಿಡಿಲುಗಳೇ ಹೆದರುವಂತಾಯಿತು.
ಮೂಲ ...{Loading}...
ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಹೆದರೆ ॥9॥
೦೧೦ ಇವರ ಮೊದಲಿಗ ...{Loading}...
ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರದ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸಪ್ತಕರಲ್ಲಿ ಒಬ್ಬನಾದ ಸತ್ಯರಥನಲ್ಲಿ ಹತ್ತು ಸಾವಿರ ರಥಗಳಿವೆ; ಲೋಕದಲ್ಲಿ ಮಹಾವೀರನೆನಿಸಿದ ಸುಶರ್ಮನು ಇವನೊಡನೆ ಮೂವತ್ತು ಸಾವಿರ ರಥ ಹಾಗೂ ರಥಿಕರೊಡನೆ ಸೇರಿದ್ದಾನೆ. ಮಾಳವ ಹಾಗೂ ಯವನ ರಾಜರಲ್ಲಿ ಹತ್ತು ಸಾವಿರ ಅತಿರಥರಿದ್ದಾರೆ. ಈ ರೀತಿ ಸಮಸಪ್ತಕರು ಐವತ್ತು ಸಾವಿರ ರಥಿಕರೊಡನೆ ಯುದ್ಧಕ್ಕೆ ಸಿದ್ಧರಾದರು.
ಪದಾರ್ಥ (ಕ.ಗ.ಪ)
ಭುವನ-ಲೋಕ, ಒಗ್ಗಾಯ್ತು-ಒಗ್ಗಟ್ಟಾಗಿದೆ.
ಮೂಲ ...{Loading}...
ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರದ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು ॥10॥
೦೧೧ ಸಭೆ ಬೆದರೆ ...{Loading}...
ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸಪ್ತಕರ ಪ್ರತಿಜ್ಞೆಯನ್ನು ಕೇಳಿ ಸಭೆ ಬೆಚ್ಚಿತು. ಆಗ ಪ್ರಳಯಕಾಲದ ಸಮುದ್ರದ ಮೊರೆದಂತೆ ಸಭೆಯಲ್ಲಿ ಕೋಲಾಹಲವಾಯಿತು. ಆಗ ದ್ರೋಣಾಚಾರ್ಯರು " ಸಮಸಪ್ತಕರು ಮಹಾವೀರರೆಂದು ಹೇಳಿಕೊಳ್ಳುತ್ತಿರುವುದು ನಿಜವಾಗಿಯೇ ಇದೆ.ಅವರ ಪರಾಕ್ರಮ ಪ್ರತಿಜ್ಞೆಗಳು ಮೆಚ್ಚಬಹುದಾದುದೇ ಆಗಿದೆ. ನಾಳೆಯ ದಿನದ ಯುದ್ಧದಲ್ಲಿ ಸಾಕ್ಷಾತ್ ಶಿವನೇ ಅಡ್ಡವಾಗಿ ಬಂದು ನಿಂತರೂ ಧರ್ಮರಾಯನನ್ನು ಸೆರೆ ಹಿಡಿದೇ ಹಿಡಿಯುತ್ತೇನೆ. ಯುದ್ಧದಲ್ಲಿ ಕೇವಲ ಅರ್ಜುನನೊಬ್ಬನ ಪರಾಕ್ರಮಕ್ಕೆ ಹೆದರುತ್ತೇನೆ. ಉಳಿದ ವೀರರನ್ನು ಲೆಕ್ಕಕ್ಕೆ ಇಡುವುದಿಲ್ಲ." ಎಂದು ಘೋಷಿಸಿದರು.
ಮೂಲ ...{Loading}...
ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ ॥11॥
೦೧೨ ನಯವಿದನು ಹೊಮ್ಬಟ್ಟಲಲಿ ...{Loading}...
ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹವದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು , ಸಮಸಪ್ತಕರ ಸಾಮಥ್ರ್ಯದ ಬಗ್ಗೆ ಇನ್ನು ಹೆಚ್ಚಿಗೆ ಮಾತುಬೇಡ, ನೀವು ವಿಜಯವನ್ನು ಸಾಧಿಸುತ್ತೀರಿ. ಇನ್ನು ಯುದ್ಧದಲ್ಲಿ ಜಯವು ನಮಗೆ ನಿಶ್ಚಿತ ಎಂದು ಹೇಳಿ ಎಲ್ಲರಿಗೂ ಬಂಗಾರದ ಬಟ್ಟಲಿನಲ್ಲಿ ವೀಳೆಯದೆಲೆ, ಅಡಿಕೆಯನ್ನು ಕೊಟ್ಟರು. ನಂತರ ಸಭೆ ಮುಕ್ತಾಯವಾಯಿತು.
ಪದಾರ್ಥ (ಕ.ಗ.ಪ)
ನಯವಿದ-ನೀತಿಜ್ಞ
ಮೂಲ ...{Loading}...
ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹವದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ ॥12॥
೦೧೩ ಸಸಿ ವರುಣದಿಗುವಧುವನಾಲಿಂ ...{Loading}...
ಸಸಿ ವರುಣದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀನಾರಿ ಹಿಂಗಿದಳು
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತ ಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರನು ಪಶ್ಚಿಮ ದಿಕ್ಕಿನಲ್ಲಿ ಮುಳುಗಲು ಕುಮುದ ಪುಷ್ಪಗಳು ಕೋಪಿಸಿಕೊಂಡವೋ ಎಂಬಂತೆ ಕುಮುದಗಳು ಮುಚ್ಚಿಕೊಂಡವು. ಆಕಾಶದಲ್ಲಿದ್ದ ನಕ್ಷತ್ರಗಳು ಕಾಂತಿಯನ್ನು ಕಳೆದುಕೊಂಡವು. ಸೂರ್ಯೋದಯದಿಂದ ಕಮಲ ಪುಷ್ಪವೆಂಬ ವಧು ನಗಲಾರಂಭಿಸಿತು, ಪೂರ್ವ ದಿಕ್ಕಿನ ಹೆಣ್ಣು ಅಪಾರ ಕೋಪವನ್ನು ತಾಳಿ ಕಿರಣಗಳೆಂಬ ಕಿಡಿಯನ್ನು ಉಗುಳುತ್ತಿದ್ದಾಳೆಯೋ ಎಂಬಂತೆ ಸೂರ್ಯನು ಉದಯಿಸಿದನು.
ಪದಾರ್ಥ (ಕ.ಗ.ಪ)
ಸಸಿ-ಚಂದ್ರ, ವರುಣ-ಪಶ್ಚಿಮ
ಮೂಲ ...{Loading}...
ಸಸಿ ವರುಣದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀನಾರಿ ಹಿಂಗಿದಳು
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತ ಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ ॥13॥
೦೧೪ ಜೋಡು ಮಾಡಿತು ...{Loading}...
ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘುಮ್ಮಿಡೆ ದೆಸೆ ದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯೋದಯವಾಗುತ್ತಿದ್ದಂತೆಯೇ ಉಭಯ ಪಕ್ಷದ ರಾಜರುಗಳು ಯುದ್ಧಕ್ಕೆ ಸಿದ್ಧರಾದರು. ರಥಕ್ಕೆ ಕಟ್ಟಿದ ಕುದುರೆಗಳನ್ನು ಹೂಡಿದರು. ಆನೆಗಳನ್ನು ಗುಳಗಳಿಂದ ಅಲಂಕರಿಸಿದರು. ಅಲ್ಲಿನ ಕೋಲಾಹಲಕ್ಕೆ ದಿಕ್ಕು ದಿಕ್ಕುಗಳು ಅಲ್ಲಾಡಿದವು. ಸೇನಾ ಸಮುದ್ರದ ರಣವಾದ್ಯಗಳ ಧ್ವನಿಗೆ ಪರ್ವತಗಳ ಸಮೂಹ ಘೋರವಾಗಿ ಪ್ರತಿಧ್ವನಿಸಿದವು.
ಮೂಲ ...{Loading}...
ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘುಮ್ಮಿಡೆ ದೆಸೆ ದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ ॥14॥
೦೧೫ ಉದಯವಾಗದ ಮುನ್ನ ...{Loading}...
ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂದು ಸಮಸಪ್ತಕರು ಸೂರ್ಯೋದಯಕ್ಕೆ ಮೊದಲೇ ಎದ್ದು ರಣರಂಗದಲ್ಲಿ ಸೇರಿದರು. ತಮ್ಮ ಜೊತೆ ಯುದ್ಧ ಮಾಡಬೇಕೆಂದು ಮದಿಸಿದ ವೀರಶತ್ರುಗಳಿಗೆ ಭೈರವನಂತಿದ್ದ ಅರ್ಜುನನಿಗೆ ದೂತರ ಮೂಲಕ ಹೇಳಿ ಕಳುಹಿಸಿದರು. ಸಮಸಪ್ತಕರು ಹೇಳಿದುದನ್ನು ದೂತರು ಅರ್ಜುನನ್ನು ಭೇಟಿ ಮಾಡಿ ತಿಳಿಸಿ ಸಮಸಪ್ತ್ತಕರ ಬಿರುದುಗಳನ್ನು ವಿವರಿಸಿದರು.
ಮೂಲ ...{Loading}...
ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ ॥15॥
೦೧೬ ಏಳು ಫಲುಗುಣ ...{Loading}...
ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದೂತರು “ಎಲೈ ಅರ್ಜುನ, ಯುದ್ಧಕ್ಕೆ ಸಿದ್ಧನಾಗು; ಗೋಪಾಲಕನಾದ ಕೃಷ್ಣನು ಯಾವ ರೀತಿಯ ದೊಡ್ಡ ವೀರ? ನೀನು ಬೇಕಾದರೆ ನಿನ್ನ ಸಹಾಯಕ್ಕೆ ಈಶ್ವರನನ್ನೇ ಕರೆದುಕೋ; ಚಿಂತೆ ಮಾಡುವುದೇಕೆ? ಯುದ್ಧಕ್ಕೆ ಸಿದ್ಧವಾಗಿ ಶೌರ್ಯವನ್ನು ಮೆರೆ;” ಎಂದು ಹೇಳಲು ಅರ್ಜುನನು ನಗುತ್ತಾ ಸಂತೋಷದಿಂದ ಅವರಿಗೆ ತಾಂಬೂಲವನ್ನು ಕೊಟ್ಟನು.
ಮೂಲ ...{Loading}...
ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ ॥16॥
೦೧೭ ನಡೆಯಿ ನೀವಾಹವಕೆ ...{Loading}...
ನಡೆಯಿ ನೀವಾಹವಕೆ ಮೆಚ್ಚಿಸಿ
ಕೊಡುವೆನೀ ಬಹೆನೆಂದು ಮುರಹರ
ನೊಡನೆ ಮುದದಲಿ ರಥಕೆ ಬಂದನು ಬಿಲ್ಲನೊದರಿಸುತ
ನುಡಿದನಂತಕಸೂನು ಕಳಶಜ
ಹಿಡಿಯಲೆಂದೇರಿಸಿದ ನುಡಿ ತ
ನ್ನೊಡನೆ ನಿಂದಾವವನು ಕಾದುವ ಪಾರ್ಥ ಹೇಳೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಸಮಸಪ್ತಕರ ದೂತರನ್ನು ಕಳುಹಿಸಿಕೊಡುತ್ತಾ “ನೀವು ಹೊರಡಿರಿ; ನಾನು ಯುದ್ಧಕ್ಕೆ ಬಂದು ನಿಮ್ಮ ಇಷ್ಟದಂತೆ ಸಮಸಪ್ತಕರೊಡನೆ ಯುದ್ಧ ಮಾಡುತ್ತೇನೆ:” ಎಂದು ಹೇಳಿ ಕೃಷ್ಣನೊಡನೆ ಸಂತೋಷದಿಂದ ರಥವನ್ನು ಏರಿ ಬಿಲ್ಲನ್ನು ಠೇಂಕಾರ ಮಾಡಿದನು. ಆಗ ಧರ್ಮರಾಯನು ಅರ್ಜುನನ್ನು ತಡೆದು, ತನ್ನನ್ನು ದ್ರೋಣನು ಸೆರೆ ಹಿಡಿಯಬೇಕೆಂದು ಸಂಕಲ್ಪ ಮಾಡಿದ್ದಾನೆ, ಅರ್ಜುನನು ಅತ್ತ ಹೋದರೆ ನನ್ನನ್ನು ಕಾಪಾಡುವವರು ಯಾರು ಹೇಳು ಎಂದ.
ಪದಾರ್ಥ (ಕ.ಗ.ಪ)
ಈ ಬಹೆನು-ಈಗ ಬರುತ್ತೇನೆ,
ಮೂಲ ...{Loading}...
ನಡೆಯಿ ನೀವಾಹವಕೆ ಮೆಚ್ಚಿಸಿ
ಕೊಡುವೆನೀ ಬಹೆನೆಂದು ಮುರಹರ
ನೊಡನೆ ಮುದದಲಿ ರಥಕೆ ಬಂದನು ಬಿಲ್ಲನೊದರಿಸುತ
ನುಡಿದನಂತಕಸೂನು ಕಳಶಜ
ಹಿಡಿಯಲೆಂದೇರಿಸಿದ ನುಡಿ ತ
ನ್ನೊಡನೆ ನಿಂದಾವವನು ಕಾದುವ ಪಾರ್ಥ ಹೇಳೆಂದ ॥17॥
೦೧೮ ಕರಸಿದರೆ ಕಾಳೆಗದೊಳೆನಗೆಡೆ ...{Loading}...
ಕರಸಿದರೆ ಕಾಳೆಗದೊಳೆನಗೆಡೆ
ಮುರಿಯಬಾರದು ನಿಮ್ಮ ಕಾಹಿಂ
ಗಿರಲಿ ನೀಲನು ಸತ್ಯಜಿತು ಕೌಶಲ ಶತಾನೀಕ
ವರ ಘಟೋತ್ಕಚ ದ್ರುಪದ ಕೈಕೆಯ
ರಿರಲಿ ಪವನಜ ನಕುಲ ಸಹದೇ
ವರಿಗೆ ದ್ರೋಣನ ಬವರವಾಗಲಿ ಎಂದನಾ ಪಾರ್ಥ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಜೊತೆ ಯುದ್ಧ ಮಾಡಲು ಬಯಸಿ ನನ್ನನ್ನು ಸಮಸಪ್ತಕರು ಕರೆಸಿದ್ದಾರೆ. ಅವರ ಜೊತೆಗಿನ ನನ್ನ ಯುದ್ಧದ ಮೀಸಲು ಮುರಿಯಬಾರದು. ನಿಮ್ಮ ರಕ್ಷಣೆಗೆ ನೀಲ, ಸತ್ಯಜಿತು, ಕೌಶಲ, ಶತಾನೀಕ, ಶ್ರೇಷ್ಠನಾದ ಘಟೋತ್ಕಚ, ದ್ರುಪದ ರಾಜ, ಕೈಕೇಯ ಮೊದಲಾದ ರಾಜರು ಜೊತೆಯಲ್ಲಿರಲಿ; ಭೀಮಸೇನ, ನಕುಲ, ಸಹದೇವರು ದ್ರೋಣಾಚಾರ್ಯರೊಡನೆ ಯುದ್ಧವನ್ನು ಮಾಡಲಿ" ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಕರಸಿದರೆ ಕಾಳೆಗದೊಳೆನಗೆಡೆ
ಮುರಿಯಬಾರದು ನಿಮ್ಮ ಕಾಹಿಂ
ಗಿರಲಿ ನೀಲನು ಸತ್ಯಜಿತು ಕೌಶಲ ಶತಾನೀಕ
ವರ ಘಟೋತ್ಕಚ ದ್ರುಪದ ಕೈಕೆಯ
ರಿರಲಿ ಪವನಜ ನಕುಲ ಸಹದೇ
ವರಿಗೆ ದ್ರೋಣನ ಬವರವಾಗಲಿ ಎಂದನಾ ಪಾರ್ಥ ॥18॥
೦೧೯ ಎನ್ದು ಸಮಸಪ್ತಕರ ...{Loading}...
ಎಂದು ಸಮಸಪ್ತಕರ ಮೋಹರ
ಕಂದು ತಿರುಗಿದ ಪಾರ್ಥನಿತ್ತಲು
ಸಂದಣಿಸಿತರಿರಾಯದಳ ಜಲರಾಸಿ ಜರಿವಂತೆ
ಮುಂದೆ ತವಕಿಗ ಭಟರ ತೆರಳಿಕೆ
ಯಿಂದ ಮೊರೆವ ಗಭೀರ ಭೇರಿಯ
ಮಂದರದ ಮುರಿಗಡಲ ಗಜರಿನೊಲೊದರಿತರಿಸೇನೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಅರ್ಜುನನು ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡು ಸಮಸಪ್ತಕರಿದ್ದ ಸೇನಾ ಸಮೂಹದ ಕಡೆಗೆ ತಿರುಗಿದನು. ಈ ಕಡೆಗೆ ಶತ್ರು ಸೇನಾ ಸಮೂಹ ಸಮುದ್ರದಂತೆ ಮೆರೆಯಿತು. ಉತ್ಸಾಹದಿಂದ ಯುದ್ಧ ಮಾಡುವ ತವಕದಿಂದ ಜೋರಾಗಿ ಕೂಗುತ್ತಿದ್ದ ಸೇನಾ ಸಮೂಹದೊಡನೆ ಭಯಂಕರವಾದ ಧ್ವನಿಗೈಯುವ ಭೇರಿ ವಾದ್ಯಗಳ ಶಬ್ದದಿಂದ ಹೊರಟ ನಾದವು ಮಂದರ ಪರ್ವತದಿಂದ ಸಮುದ್ರವನ್ನು ಮಥಿಸುವಾಗ ಉಂಟಾಗುತ್ತಿದ್ದ ಧ್ವನಿಯನ್ನು ಹೋಲುತ್ತಿತ್ತು.
ಮೂಲ ...{Loading}...
ಎಂದು ಸಮಸಪ್ತಕರ ಮೋಹರ
ಕಂದು ತಿರುಗಿದ ಪಾರ್ಥನಿತ್ತಲು
ಸಂದಣಿಸಿತರಿರಾಯದಳ ಜಲರಾಸಿ ಜರಿವಂತೆ
ಮುಂದೆ ತವಕಿಗ ಭಟರ ತೆರಳಿಕೆ
ಯಿಂದ ಮೊರೆವ ಗಭೀರ ಭೇರಿಯ
ಮಂದರದ ಮುರಿಗಡಲ ಗಜರಿನೊಲೊದರಿತರಿಸೇನೆ ॥19॥
೦೨೦ ಬಳಿಯ ಸುಮಹಾರಥರ ...{Loading}...
ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ತಮ್ಮ ಸುತ್ತ ಮುತ್ತ ಮಹಾರಥರ ಪರಿವಾರವನ್ನು ಹೊಂದಿದ್ದರು. ಆ ರಾಜ ಸಮೂಹ ಸಾಲು ಸಾಲಾಗಿ ಚಾಮರ, ಛತ್ರಿಗಳಿಂದ ಮೆರೆಯುತ್ತಿತ್ತು. ದೊಡ್ಡ ದೊಡ್ಡ ಆಯುಧಗಳನ್ನು ಸೆಳೆದು ಹಿಡಿದ, ಒಬ್ಬರ ಹೆಗಲಿಗೆ ಮತ್ತೊಬ್ಬರ ಹೆಗಲು ತಾಕುವ ಹಾಗೆ ಸಂದಣಿಸಿದ ಕುದುರೆಯ ಸವಾರರು ಅಲ್ಲಿದ್ದರು. ಹೊಳೆಯುತ್ತಿರುವ ಬಂಗಾರದ ರಥಕ್ಕೆ, ತಿಲಕವನ್ನು ಹಚ್ಚಿಸಿಕೊಂಡು ಮೆರೆಯುತ್ತಿದ್ದ ಕುದುರೆಗಳು ಮುಖವನ್ನು ಮೇಲೆತ್ತಿ ಮುಂದುವರಿಯುತ್ತಿದ್ದವು. ಮಂಗಳವಾದ ಕಲಶಗಳು, ಬಾವುಟಗಳನ್ನು ಹೊಂದಿದ ದ್ರೋಣಾಚಾರ್ಯರು ಅಂದು ಯುದ್ಧರಂಗವನ್ನು ಪ್ರವೇಶಿಸಿದರು.
ಮೂಲ ...{Loading}...
ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ ॥20॥
೦೨೧ ಗರುಡನಾಕಾರದಲಿ ಬಲವನು ...{Loading}...
ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಶಾಸನನ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀ ಬಲವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ಗರುಡ ಪಕ್ಷಿಯ ಆಕಾರದಲ್ಲಿ ಸೈನ್ಯವನ್ನು ವ್ಯೂಹಗೊಳಿಸಿ ನಿಲ್ಲಿಸಿದರು. ಈ ಗರುಡಾಕಾರದ ಸೈನ್ಯವನ್ನು ನಿಲ್ಲಿಸಿದಾಗ ಸೇನಾಮಧ್ಯದ ಶಿರದ ಭಾಗದಲ್ಲಿ ಕೃಪಾಚಾರ್ಯ, ದುರ್ಯೋಧನ, ದುಶ್ಶಾಸನರನ್ನು ನಿಲ್ಲಿಸಿದರು. ಭೂರಿಶ್ರವ, ಶಲ್ಯ, ಭಗದತ್ತ ಹಾಗೂ ಸುಬಾಹು ಇವರನ್ನು ಗರುಡವ್ಯೂಹದ ಬಲರೆಕ್ಕೆಯ ಭಾಗದಲ್ಲಿ ನಿಲ್ಲಿಸಿ ಅವರೊಡನೆ ಒಂದು ಅಕ್ಷೋಹಿಣಿ ಸೈನ್ಯವನ್ನು ಬೆಂಬಲವಾಗಿ ನಿಲ್ಲುವ ಹಾಗೆ ಮಾಡಿದರು.
ಪದಾರ್ಥ (ಕ.ಗ.ಪ)
ಎರಕೆ-ರೆಕ್ಕೆ
ಮೂಲ ...{Loading}...
ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಶಾಸನನ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀ ಬಲವ ॥21॥
೦೨೨ ವಿನ್ದ್ಯನಶ್ವತ್ಥಾಮ ಕರ್ಣನ ...{Loading}...
ವಿಂದ್ಯನಶ್ವತ್ಥಾಮ ಕರ್ಣನ
ನಂದನರು ಕಾಂಭೋಜ ಕೌಶಲ
ಸಿಂಧು ನೃಪರಕ್ಷೋಹಿಣಿಯ ತಂದೆಡದ ಪಕ್ಕದಲಿ
ನಿಂದುದಾ ಮೋಹರದ ಜೋಕೆಯ
ಹಿಂದೆ ಲಕ್ಷ ಕಳಿಂಗ ಘಟೆಗಳು
ಸಂದಣಿಸಿದವು ದ್ರೋಣ ನಿಂದನು ಬಲದ ಕಾಹಿನಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದ್ಯ, ಅಶ್ವತ್ಥಾಮ, ಕರ್ಣನ ಮಕ್ಕಳು, ಕಾಂಭೋಜರಾಜ, ಕೌಶಲರಾಜ, ಸಿಂಧುರಾಜರೇ ಮೊದಲಾದವರ ಅಕ್ಷೋಹಿಣಿ ಸೈನ್ಯವನ್ನು ಎಡಭಾಗದಲ್ಲಿ ನಿಲ್ಲಿಸಿದರು. ಆ ಮಹಾ ಸೈನ್ಯದ ಹಿಂದೆ ಕಳಿಂಗರಾಜನ ಒಂದು ಲಕ್ಷ ಆನೆಗಳು ನಿಂತವು. ಈ ಮಹಾ ಸೈನ್ಯದ ರಕ್ಷಕನಾಗಿ ದ್ರೋಣಾಚಾರ್ಯರು ನಿಂತರು.
ಮೂಲ ...{Loading}...
ವಿಂದ್ಯನಶ್ವತ್ಥಾಮ ಕರ್ಣನ
ನಂದನರು ಕಾಂಭೋಜ ಕೌಶಲ
ಸಿಂಧು ನೃಪರಕ್ಷೋಹಿಣಿಯ ತಂದೆಡದ ಪಕ್ಕದಲಿ
ನಿಂದುದಾ ಮೋಹರದ ಜೋಕೆಯ
ಹಿಂದೆ ಲಕ್ಷ ಕಳಿಂಗ ಘಟೆಗಳು
ಸಂದಣಿಸಿದವು ದ್ರೋಣ ನಿಂದನು ಬಲದ ಕಾಹಿನಲಿ ॥22॥
೦೨೩ ಆರಿ ಬೊಬ್ಬಿರಿದಖಿಳ ...{Loading}...
ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದೊರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯನು ತನ್ನ ಕಡೆಗಿದ್ದ ಸೇನೆಯ ಪ್ರಮುಖರನ್ನು ಹಾಗೂ ಸೇನೆಯನ್ನು ವಿಶಿಷ್ಟವಾದ ರೀತಿಯಲ್ಲಿ ನಿಲ್ಲಿಸಿದ ಮೇಲೆ ಆ ಮಹಾಸೇನೆ ಅತಿಯಾದ ಆರ್ಭಟದಿಂದ ಕೂಗಲಾರಂಭಿಸಿತು. ಆಗ ದ್ರೋಣಾಚಾರ್ಯರು ಕೈಯನ್ನು ಬೀಸುವುದರ ಮೂಲಕ ಸೇನಾನಾಯಕನಿಗೆ ಯುದ್ಧಕ್ಕೆ ಆಹ್ವಾನವನ್ನು ಕೊಟ್ಟು ಭೀಮಸೇನನನ್ನು ಯುದ್ಧಕ್ಕೆ ಬರಬೇಕೆಂದು ಹೇಳಿ, ಧರ್ಮರಾಯನು ವೀರನಾಗಿದ್ದರೆ ಅವನೇ ಯುದ್ಧಕ್ಕೆ ಮೊದಲು ಬರಬಹುದೆಂದು ತಿಳಿಸಿ, ಆ ದಿನ ತನ್ನನ್ನು ಯಾರು ಬೇಕಾದರೂ ತಡೆಯಲು ಮುಂದೆ ಬರಬಹುದು, ತಾನು ಧರ್ಮರಾಯನನ್ನು ಹಿಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗದು ಎಂದು ದ್ರೋಣಾಚಾರ್ಯರು ಕೌರವನ ಮೇಲೆ ಆಣೆ ಇಟ್ಟು ಹೇಳಿದರು.
ಪದಾರ್ಥ (ಕ.ಗ.ಪ)
ಆರು -ಗರ್ಜಿಸು,
ಮೂಲ ...{Loading}...
ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದೊರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ ॥23॥
೦೨೪ ಕರಸಿ ಧೃಷ್ಟದ್ಯುಮ್ನ ...{Loading}...
ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧ ಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರಗ ರಾಜಿಯ ತೇರ ಗಮನದ ಗಜರು ಘಾಡಿಸಿತು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆಗೆ ಧೃಷ್ಟದ್ಯುಮ್ನನು ತನ್ನ ಸಕಲ ಸೇನೆಯನ್ನು ಕರೆಸಿ ಅರ್ಧಚಂದ್ರಾಕಾರದಲ್ಲಿ ಸೈನ್ಯ ನಿಲ್ಲುವ ಹಾಗೆ ಸೂಚನೆಯನ್ನು ಕೊಟ್ಟನು. ಆಗ ಕೋಟಿ ಕೋಟಿ ಸಂಖ್ಯೆಯಲ್ಲಿ ರಣಭೇರಿ ವಾದ್ಯಗಳು ಭೋರ್ಗರೆದು ಕಿವಿಯ ಪಟಲಗಳು ಛಿದ್ರ ಛಿದ್ರವಾಗುವ ಹಾಗೆ ಮಾಡಿತು. ಯಾವ ಕ್ಷಣದಲ್ಲಿ ಯುದ್ಧ ಮಾಡಿ ಶತ್ರುಗಳನ್ನು ಸಂಹರಿಸುವೆವೋ ಎಂಬ ಕಾತರವನ್ನು ಹೊಂದಿದ್ದ ಕಾಲಾಳು, ಕುದುರೆ, ಆನೆ ಹಾಗೂ ರಥದ ಸೇನೆಯು ಅಸಾಧ್ಯವಾದ ಗರ್ಜನೆಯನ್ನು ಮಾಡುತ್ತಿದ್ದವು.
ಮೂಲ ...{Loading}...
ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧ ಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರಗ ರಾಜಿಯ ತೇರ ಗಮನದ ಗಜರು ಘಾಡಿಸಿತು ॥24॥
೦೨೫ ಒದೆದುದಬುಧಿಯನಬುಧಿಯೆನೆ ಹೊ ...{Loading}...
ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಹಾಗೂ ಕೌರವರ ಸೇನೆಯಲ್ಲಿದ್ದ ಸೈನಿಕರು ತಮ್ಮ ಶಕ್ತಿ ಮೀರಿದ ಪರಾಕ್ರಮದಿಂದ ಪರಸ್ಪರ ಹೋರಾಡಲಾರಂಭಿಸಿದರು. ಒಂದು ಸಮುದ್ರ ಮತ್ತೊಂದು ಸಮುದ್ರವನ್ನು ಒದೆಯುತ್ತಿದೆ ಎಂಬಂತೆ ಆ ಸೈನ್ಯಗಳ ಯುದ್ಧ ಕಾಣುತ್ತಿತ್ತು. ಚತುರಂಗ ಸೇನೆಯಲ್ಲಿದ್ದ ಪ್ರತಿಯೊಬ್ಬರೂ ಜೋರಾಗಿ ಹೊಡೆದಾಡುತ್ತಾ, ತಲೆಯನ್ನು ಒತ್ತುತ್ತಾ ಕೇಶರಾಶಿಗಳನ್ನು ಹಿಡಿದು ಎಳೆದಾಡುತ್ತಾ, ಮಹಾ ಸೇಡಿನಿಂದ ಜೋರಾಗಿ ಹೋರಾಡುತ್ತಿದ್ದರು. ಶತ್ರು ಸೈನ್ಯವು ಗುಂಪಿನಿಂದ ಚದರಿ ಮತ್ತೆ ಗುಂಪಾಗಿ ಸೇರಿ ಪರಸ್ಪರ ಹೊಡೆದಾಡುತ್ತಿದ್ದಾಗ ಅಪಾರ ಸಂಖ್ಯೆಯ ಸೈನಿಕರು ಪ್ರಾಣ ಬಿಟ್ಟರು. ಉಭಯ ಸೈನ್ಯಗಳೂ ಮಹಾ ರೋಷಾವೇಶದಿಂದ ಹೋರಾಡುತ್ತಿದ್ದವು.
ಮೂಲ ...{Loading}...
ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ ॥25॥
೦೨೬ ಹಳಚುವಸಿಗಳ ಖಣಿಖಟಿಲು ...{Loading}...
ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳುಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಭಸದಿಂದ ಕತ್ತಿಗಳನ್ನು ಅಪ್ಪಳಿಸಿದಾಗ ಖಣಿ, ಖಟಲ್ ಎಂಬ ಧ್ವನಿ ಎಲ್ಲೆಡೆ ಪ್ರತಿಧ್ವನಿಸುತ್ತಿತ್ತು. ಸೈನಿಕರು ಹೋರಾಡುವಾಗ ತಲೆಗಳು ಉರುಳುತ್ತಿದ್ದವು; ಹೆಣಗಳು ಬೀಳುತ್ತಿದ್ದವು; ರಕ್ತದ ಧಾರೆ ಕಾಲುವೆಯಂತೆ ಎಲ್ಲೆಡೆ ಹರಿಯುತ್ತಿತ್ತು. ಕೊಬ್ಬಿದ ಮಾಂಸಖಂಡಗಳು ಮತ್ತು ಕರುಳು ಎಲ್ಲೆಡೆಯಲ್ಲಿಯೂ ತುಂಡು ತುಂಡಾಗಿ ಬಿದ್ದಿದ್ದವು, ಎಲುಬುಗಳು ಪುಡಿ ಪುಡಿಯಾಗಿ ಬೀಳುತ್ತಿದ್ದವು. ರುಂಡದಿಂದ ಬೇರ್ಪಟ್ಟ ಮುಂಡಗಳು ಕುಣಿಯುತ್ತಿದ್ದವು ರಣರಂಗದಲ್ಲಿ ಕ್ಷಣಕ್ಷಣಕ್ಕೆ ಸಾವಿನ ಸಂಖ್ಯೆ ಏರುತ್ತಾ ಯಮನ ಪುರಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿತ್ತು.
ಪದಾರ್ಥ (ಕ.ಗ.ಪ)
ಹಳಚು - ಅಪ್ಪಳಿಸು
ಕೊಳಗುಳ - ಯುದ್ಧ
ಮೂಲ ...{Loading}...
ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳುಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ ॥26॥
೦೨೭ ಉಲಿದು ಸೂಠಿಯೊಳೇರಿದರು ...{Loading}...
ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾವ್ತರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೋರಾಗಿ ಕೂಗುತ್ತಾ ಶ್ರೇಷ್ಠ ರಾವುತರು ಆಕ್ರಮಣ ಮಾಡಿದರು. ಸೊಕ್ಕಿದ ಆನೆಗಳ ಕುಂಭಸ್ಥಳಕ್ಕೆ ಅಂಕುಶವನ್ನು ಹಾಕಿ ತಿವಿದು ಅವನ್ನು ಶತ್ರುಗಳ ಮೇಲೆ ಓಡಿಸುತ್ತಿದ್ದರು. ರಥಗಳಂತೂ ನೆಲವು ಕಾಣದ ಹಾಗೆ ತುಂಬಿ ಹೋಗಿದ್ದವು; ಕಾಲಾಳುಗಳು ಯುದ್ಧ ಭೂಮಿಯ ಮುಂಭಾಗದಲ್ಲಿ ವೀರಾವೇಶದಿಂದ ಶತ್ರುಗಳೊಳಗೆ ಹೊಕ್ಕು ಹೋರಾಡಿದರು. ಮುಂಭಾಗದ ಸೇನೆಯು ನಾಶವಾಯಿತು.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ವೆಗ್ಗಳೆಯ-ಶ್ರೇಷ್ಠರಾದ, ಗಜರಿ-ಕೂಗಿ, ಮಸ್ತಕ-ತಲೆ, ಹಿಳಿಯಲಿ-ಕುಂಭ ಸ್ಥಳ , ಡುಬ್ಬದ ಭಾಗದಲ್ಲಿ, ಜಡಿಯೆ-ತುಂಬಿ ಕೊಳ್ಳಲು, ಒಡೆಗಲಿಸಿ-ಒಬ್ಬರೊಡನೊಬ್ಬರು ಸೇರಿ, ಚೂಣಿ-ಮುಂಭಾಗ, ಅರೆದುದು-ನುಚ್ಚುನೂರಾಗಿಸಿತು, ಕಳನ-ಯುದ್ಧ ಭೂಮಿಯ
ಮೂಲ ...{Loading}...
ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾವ್ತರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ ॥27॥
೦೨೮ ಇತ್ತಲರ್ಜುನನಾ ತ್ರಿಗರ್ತರಿ ...{Loading}...
ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತನವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆಗೆ ಅರ್ಜುನನು ತ್ರಿಗರ್ತರ ಜೊತೆಗೆ ಯುದ್ಧವನ್ನು ಪ್ರಾರಂಭಿಸಿದನು. ಬಾಣಗಳ ಪ್ರಯೋಗದಿಂದ ಯಮಭಟರಿಗೆ ಒಳ್ಳೆಯ ಔತಣವನ್ನು ಮಾಡಿದನು. ಅರ್ಜುನನು ಪ್ರಯೋಗಿಸಿದ ಚೂಪಾದ ಬಾಣಗಳು ಆ ತ್ರಿಗರ್ತ ರಾಜರನ್ನು ಮುತ್ತಿಕೊಂಡವು. ಅರ್ಜುನನ ಬಾಣಗಳ ಏಟನ್ನು ತಡೆಯಲಾರದ ತ್ರಿಗರ್ತರು ಒಂದೇ ನಿಮಿಷದಲ್ಲಿ ಹಿಮ್ಮೆಟ್ಟುವಂತಾಯಿತು. ವೀರನಾದ ಅರ್ಜುನನು ಬಾಣಗಳಿಂದ ಶತ್ರುಗಳ ಬಾಣಸಮುದ್ರವನ್ನು ಒಣಗಿ ಹೋಗುವ ಹಾಗೆ ಮಾಡಿದನು.
ಮೂಲ ...{Loading}...
ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತನವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ ॥28॥
೦೨೯ ಏನ ಹೇಳುವೆನಿತ್ತಲಾದುದು ...{Loading}...
ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುದ್ಧವು ರಾಕ್ಷಸರಿಗೂ, ದೇವತೆಗಳಿಗೂ ನಡೆದ ಯುದ್ಧದಂತೆ ತುಂಬ ಭೀಕರವಾಗಿತ್ತು. ಆ ಯುದ್ಧದಲ್ಲಿ ನಿರಂತರವಾಗಿ ಉನ್ನತವಾದ ಪೌರುಷವನ್ನು ವೀರರು ತಮ್ಮ ಶೌರ್ಯವನ್ನು ಅತ್ಯಧಿಕವಾಗಿಯೇ ಪ್ರದರ್ಶಿಸುತ್ತಿದ್ದರು. ಅಂತಹ ಯುದ್ಧದಲ್ಲಿ ಗೆಲ್ಲುವುದು ಯಾರಿಗೆ ಸಾಧ್ಯ? ಧೃತರಾಷ್ಟ್ರನೆ, ನಿನ್ನ ಮಗನಾದ ದುರ್ಯೋಧನನ ಸೈನಿಕರು ಪರಾಕ್ರಮ ಹೀನರೇ? ದ್ರೋಣರ ಕಾಳಗವನ್ನು ಕೇಳು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಆನಲು - ತಡೆದುಕೊಳ್ಳಲು
ಮೂಲ ...{Loading}...
ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ ॥29॥
೦೩೦ ಬಿಲ್ಲನೊದರಿಸಿ ಕೆಲಬಲದ ...{Loading}...
ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಠೇಂಕಾರ ಮಾಡಿ ಅಕ್ಕ ಪಕ್ಕದಲ್ಲಿದ್ದ ಎಲ್ಲ ಸೈನಿಕರಿಗೆ ಕೈಬೀಸಿ ವೀರಾಗ್ರಣಿಯಾದ ದ್ರೋಣಾಚಾರ್ಯರು ತನ್ನ ಕಡೆಗೆ ಗಮನವನ್ನು ಹರಿಸಲು ಸೂಚಿಸಿ, ತನ್ನ ಸಾರಥಿಗೆ ತಾಂಬೂಲವನ್ನು ಕೊಟ್ಟು ಈ ಸಾಮಾನ್ಯ ವೀರರೊಡನೆ ಮಾಡಿದ ಯುದ್ಧ ಸಾಕು; ನಿಸ್ಸತ್ವರಾದ ಸೈನಿಕರೊಡನೆ ಹೋರಾಡುವುದನ್ನು ತ್ಯಜಿಸಿ ಧರ್ಮರಾಜ ಯುದ್ಧ ಮಾಡುತ್ತಿರುವಲ್ಲಿಗೆ ರಥವನ್ನು ಓಡಿಸಬೇಕೆಂದು ಸಾರಥಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಒದರಿಸಿ-ಝಾಡಿಸಿ-ಠೇಂಕಾರ ಮಾಡಿ, ಚೌಪಟಮಲ್ಲ-ಮಹಾವೀರ, ಹೊಳ್ಳುಗರನು-ಸತ್ವ ಹೀನರನ್ನು, ಒಡೆಹಾಯ್ಸಿ-ನಿರಾಕರಿಸಿ,
ಮೂಲ ...{Loading}...
ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ ॥30॥
೦೩೧ ರಥವ ಬಿಟ್ಟನು ...{Loading}...
ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮೆಳೆಯ ಹೊಕ್ಕಂತೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯು ದ್ರೋಣರ ಆಜ್ಞೆಯಂತೆ ರಥವನ್ನು ಮಹಾವೇಗದಿಂದ ಓಡಿಸಿದನು. ಆಗ ಎದುರಾದ ಅಜೇಯ ವೀರರೆಲ್ಲರನ್ನು ದ್ರೋಣರು ಹಿಮ್ಮೆಟ್ಟಿಸಿದರು. ದ್ರೋಣನ ಸಾಹಸದ ಮುಂದೆ ಬಾಹು ಬಲದಲ್ಲಿ ಕೊರತೆ ಇರುವವರು ನಿಲ್ಲಲಾಗಲಿಲ್ಲ. ದ್ರೋಣನ ಯುದ್ಧ ವೈಖರಿಗೆ ನೆಲ ನೆಗ್ಗಿ ಹೋಯಿತು. ಭೂಮಂಡಲವನ್ನು ಹೊತ್ತ ಆಮೆಯು ದ್ರೋಣರ ರಭಸದ ತುಳಿತದಿಂದ ನೋವನ್ನನುಭವಿಸುವಂತಾಯಿತು. ಬಿದಿರ ಮೆಳೆಗೆ ಬೆಂಕಿ ನುಗ್ಗಿದ ಹಾಗೆ ದ್ರೋಣನು ಮಹಾರಥರ ಗುಂಪಿನಲ್ಲಿ ನುಗ್ಗಿದನು.
ಪದಾರ್ಥ (ಕ.ಗ.ಪ)
ನಿರ್ಮಥಿತ - ಅಜೇಯ
ಮೂಲ ...{Loading}...
ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮೆಳೆಯ ಹೊಕ್ಕಂತೆ ॥31॥
೦೩೨ ಆಳ ಹೊಗಿಸೋ ...{Loading}...
ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈ ತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೋಣನ ರಥ ಮಹಾವೇಗದಿಂದ ಬರುತ್ತಿದೆ. ಅದನ್ನು ತಡೆಗಟ್ಟಲು ಅಗತ್ಯವಾದ ಸೇನೆಯನ್ನು ಮುನ್ನುಗ್ಗಿಸು. ಇದು ಯಮನ ಧಾಳಿಯಂತೆ ತೋರುತ್ತಿದೆ. ಆದರೆ ಯಾರೊಬ್ಬರೂ ಧೈರ್ಯವನ್ನು ಕಳೆದುಕೊಳ್ಳಬಾರದೆಂದು ತಿಳಿಸಬೇಕು. ಇಲ್ಲವಾದರೆ ಧರ್ಮರಾಯನಿಗೆ ತಪ್ಪಿಸಿಕೊಳ್ಳಲು ಆಗಲಾರದು. " ಎಂದು ಧರ್ಮರಾಯನ ಮಂತ್ರಿಗಳು ಸಲಹೆಯನ್ನು ನೀಡಿದರು.
ಪದಾರ್ಥ (ಕ.ಗ.ಪ)
ಕೈ ತಪ್ಪು - ನುಣುಚಿಕೊಳ್ಳು ಹೊಗಿಸೊ-ಮುನ್ನುಗ್ಗಿಸು, ದುವ್ವಾಳಿಯಲಿ-ನಾಗಾಲೋಟದಿಂದ.
ಮೂಲ ...{Loading}...
ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈ ತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು ॥32॥
೦೩೩ ಫಡ ಫಡಾನಿರುತಿರಲು ...{Loading}...
ಫಡ ಫಡಾನಿರುತಿರಲು ರಾಯನ
ಹಿಡಿವವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ಧೃಷ್ಟದ್ಯುಮ್ನನಿದಿರಾದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಹಾ, ನಾನಿರುವಾಗ ಧರ್ಮರಾಯನನ್ನು ಸೆರೆಹಿಡಿಯುವೆನೆಂದು ಹೇಳಿದವನ ಹೆಸರೇನು? ಆ ಶತ್ರುವಿನ ದೇಹವನ್ನು ಹೋಳು ಮಾಡಿ ಅವನ ದೇಹದ ಕೊಬ್ಬನ್ನು ರಾಕ್ಷಸರಿಗೆ ಆಹಾರವನ್ನಾಗಿ ಕೊಡುತ್ತೇನೆ ತಕ್ಷಣ ರಥವನ್ನು ದ್ರೋಣನ ಎದುರಿಗೆ ಬಿಡು. ತಡೆ.” ಎಂದು ಸಾರಥಿಗೆಸೂಚಿಸಿ ಧೃಷ್ಟದ್ನುಮ್ಯನು ಬಿಲ್ಲನ್ನು ಹಿಡಿದು ದ್ರೋಣನ ಎದುರಾದನು.
ಪದಾರ್ಥ (ಕ.ಗ.ಪ)
ಫಡಾ-ಆಹಾ, ಆನ್ ಇರುತಿರಲು-ನಾನಿರುವಾಗ, ರಾಯನ-ಧರ್ಮರಾಯನ, ಹೊಳ್ಳಿಸಿ-ಹೋಳುಮಾಡಿ , ನೆಣನನು-ಕೊಬ್ಬನ್ನು, ತುಡುಕಿದನು-ಹಿಡಿದನು.
ಮೂಲ ...{Loading}...
ಫಡ ಫಡಾನಿರುತಿರಲು ರಾಯನ
ಹಿಡಿವವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ಧೃಷ್ಟದ್ಯುಮ್ನನಿದಿರಾದ ॥33॥
೦೩೪ ಬಲ್ಲೆನೀತನ ಬಲುಹ ...{Loading}...
ಬಲ್ಲೆನೀತನ ಬಲುಹ ಸಾಕೀ
ಯೊಳ್ಳೆಗನನೆಡಕಿಕ್ಕಿ ಹಾಯಿಸು
ಕಲ್ಲೆಯಲಿ ಮುರಿನೂಕು ನಡೆ ಭೂಪತಿಯ ಸಮ್ಮುಖಕೆ
ನಿಲ್ಲದೊಡ್ಡೈಸೆನುತ ಸಾಹಸ
ಮಲ್ಲ ಸಾರಥಿಗರುಹೆ ಬಲವ
ಲ್ಲಲ್ಲಿ ಭಯಗೊಳೆ ದ್ರೋಣ ಹೊಕ್ಕನು ರಾಯಮೋಹರವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಧೃಷ್ಟದ್ಯುಮ್ನನ ಅರ್ಹತೆ ಏನೆಂದು ತಿಳಿದೇ ಇದೆ; ಇವನು ನೀರ ಹಾವಿನಂತೆ ವಿಷವಿಲ್ಲದವನು; ಇವನಿಂದ ಯಾವ ಅಪಾಯವೂ ಇಲ್ಲ. ಇವನನ್ನು ನೀರಿಗೆ ನೂಕಿ ರಥವನ್ನು ಪಕ್ಕಕ್ಕೆ ತಿರುಗಿಸಿ ರಾಜನಾದ ಧರ್ಮರಾಯನಿರುವ ಕಡೆಗೆ ರಥವನ್ನು ಬೇಗನೆ ಓಡಿಸು ಎಂದು ಸಾಹಸ ವೀರವಾದ ದ್ರೋಣನು ಸಾರಥಿಗೆ ಹೇಳಿದನು. ಆಗ ದ್ರೋಣನ ಪ್ರವೇಶವನ್ನು ನೋಡಿ ಸೈನ್ಯವು ಹೆದರುವಂತಾಯಿತು. ದ್ರೋಣನು ಧರ್ಮರಾಯನ ಸೈನ್ಯವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಒಳ್ಳೆ -ವಿಷವಿಲ್ಲದ ನೀರು ಹಾವು . ಕಲ್ಲೆ -ನೀರಿನ ಹರವಿ , ಮುರಿ-ಪಕ್ಕಕ್ಕೆ ಹೊರಳು,
ಮೂಲ ...{Loading}...
ಬಲ್ಲೆನೀತನ ಬಲುಹ ಸಾಕೀ
ಯೊಳ್ಳೆಗನನೆಡಕಿಕ್ಕಿ ಹಾಯಿಸು
ಕಲ್ಲೆಯಲಿ ಮುರಿನೂಕು ನಡೆ ಭೂಪತಿಯ ಸಮ್ಮುಖಕೆ
ನಿಲ್ಲದೊಡ್ಡೈಸೆನುತ ಸಾಹಸ
ಮಲ್ಲ ಸಾರಥಿಗರುಹೆ ಬಲವ
ಲ್ಲಲ್ಲಿ ಭಯಗೊಳೆ ದ್ರೋಣ ಹೊಕ್ಕನು ರಾಯಮೋಹರವ ॥34॥
೦೩೫ ಶಿವಶಿವಾ ಸಿಕ್ಕಿದನು ...{Loading}...
ಶಿವಶಿವಾ ಸಿಕ್ಕಿದನು ಸಿಕ್ಕಿದ
ನವನಿಪತಿಯೆನಲೌಂಕಿದರು ಗಜ
ನಿವಹವಗಿದಬ್ಬರಿಸೆ ಮುಕ್ಕುರುಕಿದವು ಕುದುರೆಗಳು
ತವಕದಲಿ ಬದ್ದರದ ಬಂಡಿಗ
ಳವುಚಿದವು ತಲೆವರಿಗೆಗಳಲಾ
ಹವವ ಹೊಕ್ಕುದು ಪಾಯದಳವಾಚಾರ್ಯನಿದಿರಿನಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಎಲ್ಲರೂ “ಶಿವಶಿವಾ, ಅಯ್ಯೋ ಧರ್ಮರಾಯನು ಸೆರೆಸಿಕ್ಕುತ್ತಿದ್ದಾನೆ. ಎಂದು ಧರ್ಮರಾಯನ ಸುತ್ತ ಗಜಸೇನೆ ಆವರಿಸಿ ರಕ್ಷಿಸಲು ಯತ್ನಿಸಿತು. ಆಗ ಆತಂಕದಿಂದ ಕುದುರೆಯ ಸೈನ್ಯವೂ ಸುತ್ತ ಮುತ್ತ ಸೇರಿ. ಧರ್ಮರಾಯನಿಗೆ ರಕ್ಷಣೆಯನ್ನೊದಗಿಸಿದವು. ಅನಂತರ ಕಾಲಾಳು ಸೇನೆಯು ಅತ್ಯಂತ ತವಕದಿಂದ ಮುಂದೆ ಸರಿದವು. ಆಯುಧದ ಬಂಡಿಗಳು ಮುತ್ತಿಕೊಂಡವು. ಆಗ ದ್ರೋಣಾಚಾರ್ಯರೆದುರಿಗೆ ಚತುರಂಗದ ಅಖಂಡ ಸೇನೆ ಮುಂದೆ ಬಂದು ನಿಂತು ಧರ್ಮರಾಜನು ಕಾಣದಂತಾದನು.
ಪದಾರ್ಥ (ಕ.ಗ.ಪ)
ಅವನಿಪತಿ-ರಾಜ, ಗಜನಿವಹ-ಆನೆಯ ಗುಂಪು, ಔಂಕಿ-ಒತ್ತಿ, ಅಬ್ಬರಿಸೆ-ಕೂಗಲು, ಮುಕ್ಕುರಿದವು-ಮುತ್ತಿಕೊಂಡವು, ಬದ್ದರ-ಆಯುಧ ಅವುಚಿದವು-ಹಿಡಿದವು, ಆಹವ-ಯುದ್ಧ, ಪಾಯದಳ-ಕಾಲಾಳು ಸೈನ್ಯ
ಮೂಲ ...{Loading}...
ಶಿವಶಿವಾ ಸಿಕ್ಕಿದನು ಸಿಕ್ಕಿದ
ನವನಿಪತಿಯೆನಲೌಂಕಿದರು ಗಜ
ನಿವಹವಗಿದಬ್ಬರಿಸೆ ಮುಕ್ಕುರುಕಿದವು ಕುದುರೆಗಳು
ತವಕದಲಿ ಬದ್ದರದ ಬಂಡಿಗ
ಳವುಚಿದವು ತಲೆವರಿಗೆಗಳಲಾ
ಹವವ ಹೊಕ್ಕುದು ಪಾಯದಳವಾಚಾರ್ಯನಿದಿರಿನಲಿ ॥35॥
೦೩೬ ಪಟುಗಳೋ ಮಝ ...{Loading}...
ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯವಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವೆನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನಿಕರು ಬಹಳ ಶೂರರೇ ನಿಜ! ಯುಧಿಷ್ಠಿರನು ಮೋಸಹೋಗಿ ಇವರನ್ನು ವೀರರೆಂದು ಗಣಿಸಿದ್ದು ಒಳ್ಳೆಯದಾಯಿತು! ನಾನು ಮೋಸದಿಂದ ಗೆಲ್ಲಬೇಕಿಲ್ಲ. ಈ ಹುಲುಸೈನಿಕರನ್ನು ಹೊಡೆದು ಹಾಕುವೆನು. ತನಗೆ ಈಶ್ವರನೇ ಅಡ್ಡ ಬಂದರೂ ನಾನು ಧರ್ಮರಾಯನನ್ನು ಸೆರೆ ಹಿಡಿಯುವೆನು ಎಂದು ಹೇಳುತ್ತಾ ದ್ರೋಣನು ಬಾಣವನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಅಟಮಟಿಸಿ-ಮೋಸಹೋಗಿ
ನಿಟಿಲಲೋಚನ-ಹಣೆಯಲ್ಲಿ ಕಣ್ಣುಳ್ಳವನು, ಈಶ್ವರ
ಹುಲುಕುಟಿಗ- ಕ್ಷುದ್ರವ್ಯಕ್ತಿ
ಮೂಲ ...{Loading}...
ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯವಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವೆನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ ॥36॥
೦೩೭ ನೂಕಿ ಹರಿತಹ ...{Loading}...
ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿವ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ತನ್ನ ಎದುರಿನಲ್ಲಿ ಮುನ್ನುಗ್ಗಿ ಬಂದ ಕುದುರೆಗಳ ಗೊರಸುಗಳನ್ನು ಕತ್ತರಿಸಿ ಹಾಕಿದನು. ಮುತ್ತುತ್ತಿದ್ದ ಆನೆಗಳ ಸಮೂಹವನ್ನು ಹೊಡೆದು ಬೀಳಿಸಿದನು. ರಥಗಳ ಗುಂಪನ್ನು ಕತ್ತರಿಸಿ ಹಾಕಿದನು. ಶಿರಸ್ತ್ರಾಣವನ್ನು ಧರಿಸಿದ ಅನೇಕ ಮಹಾವೀರರನ್ನು ಸೀಳಿ ಜಯರತ್ನಾಕರ ಎಂಬ ಬಿರುದನ್ನು ಪಡೆದಿದ್ದ ದ್ರೋಣನು ಪಾಂಡವರ ಸೇನಾ ಸಮುದ್ರವನ್ನು ಕಲಕಿದನು.
ಪದಾರ್ಥ (ಕ.ಗ.ಪ)
ಖುರ-ಗೊರಸು
ನಾಗಾನೀಕ -ಆನೆಗಳ ಸಮೂಹ
ಮೂಲ ...{Loading}...
ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿವ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ ॥37॥
೦೩೮ ಬಲವ ಬರಿಕೈದೆವು ...{Loading}...
ಬಲವ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಅಳಿದರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಮೂದಲಿಕೆಯ ಮಾತುಗಳನ್ನಾಡುತ್ತಾ ಯುದ್ಧವನ್ನು ಮಹೋತ್ಸಾಹದಿಂದ ಮುಂದುವರಿಸಿದನು. ಎದುರಿಗೆ ಬಂದ “ಸೈನ್ಯವೆಲ್ಲವನ್ನು ಬರಿದುಮಾಡಿದ್ದೇವೆ. ಯುಧಿಷ್ಠಿರಾ ಬಿಲ್ಲು ಹಿಡಿದು ನಿಲ್ಲು. ಯುದ್ಧದಿಂದ ಓಡುವುದು ಸಾಕು. ಇದು ಕ್ಷತ್ರಿಯರಿಗೆ ಹೆಮ್ಮೆಯ ಸಂಗತಿಯಲ್ಲ. ಯುದ್ಧದಲ್ಲಿ ಸತ್ತರೆ ಸ್ವರ್ಗಲೋಕದಲ್ಲಿ ದೇವತೆಗಳಿಗೆ ಒಡೆಯನಾಗುವೆ. ಗೆದ್ದರೆ ಭೂಮಿಪತಿಯಾಗುವೆ. ಈ ಯುದ್ಧವು ಇಹ ಮತ್ತು ಪರಗಳೆರಡಕ್ಕೂ ಒಳ್ಳೆಯದು " ಎಂದು ದ್ರೋಣನು ಧರ್ಮರಾಜನಿಗೆ ಹೇಳಿ ವೇಗದಿಂದ ಮುನ್ನುಗ್ಗಿದನು.
ಮೂಲ ...{Loading}...
ಬಲವ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಅಳಿದರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ ॥38॥
೦೩೯ ಫಡ ಫಡುರವಣೆ ...{Loading}...
ಫಡ ಫಡುರವಣೆ ಬೇಡ ತೆಗೆ ಬಾ
ಯ್ಬಡಿಕತನವಿದು ಗುರುವರಂಗವೆ
ಕಡುಹ ನಾಲಗೆಯರುಹಲೇತಕೆ ಕೈಯ ಧನುವಿರಲು
ಒಡನೆ ತಾನಿರುತಿರಲು ರಾಯನ
ಹಿಡಿವ ಭಟನೇ ನೀನೆನುತ ಬಿಲು
ದುಡುಕಿ ಮುಂದೆ ಶಿಖಂಡಿ ದ್ರೋಣನ ರಥಕೆ ಮಾರಾಂತ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವನೊಡನೆ ಬೇಡ; ನನ್ನೊಡನೆ ಯುದ್ಧಕ್ಕೆ ಬಾ; ಕೇವಲ ಬಾಯಿ ಮಾತಿನ ಆರ್ಭಟ ಶ್ರೇಷ್ಠರಿಗೆ ಸಲ್ಲದು. ಸಾಮಥ್ರ್ಯವೇನು ಎಂಬುದನ್ನು ನಿನ್ನ ಕೈಯಲ್ಲಿರುವ ಬಿಲ್ಲು ಹೇಳಬೇಕೇ ಹೊರತು ನಾಲಗೆಯಲ್ಲ. ಕೈಯಲ್ಲಿ ಬಿಲ್ಲಿದೆ; ಯುದ್ಧ ಮಾಡಲು ನಾನು ನಿಂತಿದ್ದೇನೆ; ಧರ್ಮರಾಯನಂತಹವನನ್ನು ಹೇಗೆ ಸೆರೆಹಿಡಿಯುತ್ತೀ ? ಎನ್ನುತ್ತಾ ಶಿಖಂಡಿಯು ಬಿಲ್ಲು ಹಿಡಿದು ದ್ರೋಣನೊಡನೆ ಯುದ್ಧ ಮಾಡಲು ಎದುರು ನಿಂತನು.
ಮೂಲ ...{Loading}...
ಫಡ ಫಡುರವಣೆ ಬೇಡ ತೆಗೆ ಬಾ
ಯ್ಬಡಿಕತನವಿದು ಗುರುವರಂಗವೆ
ಕಡುಹ ನಾಲಗೆಯರುಹಲೇತಕೆ ಕೈಯ ಧನುವಿರಲು
ಒಡನೆ ತಾನಿರುತಿರಲು ರಾಯನ
ಹಿಡಿವ ಭಟನೇ ನೀನೆನುತ ಬಿಲು
ದುಡುಕಿ ಮುಂದೆ ಶಿಖಂಡಿ ದ್ರೋಣನ ರಥಕೆ ಮಾರಾಂತ ॥39॥
೦೪೦ ಅಕಟ ಸಿಂಹಕೆ ...{Loading}...
ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥೀ ನೋಡು ನರಿಯು ಸಿಂಹವನ್ನು ಎದುರಿಸುತ್ತಿದೆಯಲ್ಲಾ. ಭೀಷ್ಮನ ಎದುರು ಹಿಂದೆ ಶಿಖಂಡಿಯು ಬಂದು ನಿಂತಂದಿನಂತೆ ಅದೇ ಮದದಲ್ಲಿ ಮುಂದುಗಾಣದವನಾಗಿದ್ದಾನೆ. " ಬಿಲ್ಲನ್ನು ಹಿಡಿದಿರುವ ಶಿಖಂಡಿಯೇ ನಿಲ್ಲು. ಬಾಣದ ತುದಿಯಿಂದಲೇ ಮಾತನಾಡುವುದೇ ಯುಕ್ತವಾದದ್ದು. ಮಾತಿನ ಚಪಲವೇಕೆ ಎಂದು ಬಾಣಗಳನ್ನು ಸುರಿಸಿದನು.
ಪದಾರ್ಥ (ಕ.ಗ.ಪ)
ಅಕಟ-ಆಹಾ, ಮಲೆತುದೊ-ಗರ್ವಿಸಿತೊ, ಜಂಬೂಕ-ನರಿ, ಮುಂದುಗಾಣನು-ಬುದ್ಧಿ ಇಲ್ಲದವನು, ಚಾಪ-ಬಿಲ್ಲು, ನಿಲು-ನಿಂತುಕೊ, ಸಾಯಕದ-ಬಾಣದ, ಮೊನೆ-ಚೂಪು, ಚಾಪಳಿ-ಚಪಲ, ಕಣೆ-ಬಾಣ, ಕೆದರಿದನು-ಸುರಿಸಿದನು.
ಮೂಲ ...{Loading}...
ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ ॥40॥
೦೪೧ ಗುರುವಿನಮ್ಬಿನ ಬಮ್ಬಲನು ...{Loading}...
ಗುರುವಿನಂಬಿನ ಬಂಬಲನು ಕ
ತ್ತರಿಸಿ ಕೈದೋರಿದನು ದಿಗುತಟ
ಬಿರಿಯೆ ದಿಙ್ಮಯವಾದವಂಬುಗಳೇನನುಸುರುವೆನು
ಅರಿ ಶಿಖಂಡಿಯ ಕೈಚಳಕ ಕಾ
ಹುರವಲೇ ಲೇಸಾಯ್ತು ಬಿಲ್ಲಿನ
ಭರವಸಿಕೆಯಹುದೆನುತ ಕೈಕೊಂಡೆಚ್ಚನಾ ದ್ರೋಣ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿಖಂಡಿಯು ದ್ರೋಣಾಚಾರ್ಯನು ಬಿಟ್ಟ ಬಾಣಗಳೆಲ್ಲವನ್ನು ಮಾರ್ಗ ಮಧ್ಯದಲ್ಲಿಯೇ ಕತ್ತರಿಸಿ ಹಾಕಿದನು. ಆಗ ದಿಕ್ತಟವೇ ಬಿರಿಯುವ ಹಾಗೆ ಪಾಂಡವರ ಕಡೆ ಇದ್ದವರು ಜಯ ಜಯಕಾರ ಮಾಡಿದರು. ಆಗ ದ್ರೋಣನು ಶತ್ರುವಾದ ಶಿಖಂಡಿಯ ಕೈಚಳಕ ಅಧಿಕವಾಗಿಯೇ ಇದೆ ಅವನ ಬಿಲ್ಲುಗಾರಿಕೆ ಮೆಚ್ಚುವಂಥದು. ಎನ್ನುತ್ತ ದಿಕ್ಕುಗಳೇ ಕಾಣದಿರುವ ಹಾಗೆ ಸಾವಿರ ಸಾವಿರ ಬಾಣಗಳನ್ನು ಶಿಖಂಡಿಯ ಮೇಲೆ ಪ್ರಯೋಗ ಮಾಡಿದನು.
ಮೂಲ ...{Loading}...
ಗುರುವಿನಂಬಿನ ಬಂಬಲನು ಕ
ತ್ತರಿಸಿ ಕೈದೋರಿದನು ದಿಗುತಟ
ಬಿರಿಯೆ ದಿಙ್ಮಯವಾದವಂಬುಗಳೇನನುಸುರುವೆನು
ಅರಿ ಶಿಖಂಡಿಯ ಕೈಚಳಕ ಕಾ
ಹುರವಲೇ ಲೇಸಾಯ್ತು ಬಿಲ್ಲಿನ
ಭರವಸಿಕೆಯಹುದೆನುತ ಕೈಕೊಂಡೆಚ್ಚನಾ ದ್ರೋಣ ॥41॥
೦೪೨ ಸಾಕು ಷಣ್ಡನ ...{Loading}...
ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಷಂಡನಾದ ಶಿಖಂಡಿಯೊಡನೆ ಹೆಚ್ಚು ಕಾಲ ಯುದ್ಧವನ್ನು ಮುಂದುವರಿಸಲು ಅಪೇಕ್ಷಿಸದೆ, ಶಿಖಂಡಿಯ ರಥವನ್ನು ನಾಲ್ಕು ಬಾಣಗಳಿಂದ ಹೊಡೆದು ಪುಡಿಪುಡಿ ಮಾಡಿದನು, ಎರಡು ಬಾಣಗಳಿಂದ ಶಿಖಂಡಿಯ ರಥದ ಸಾರಥಿಯ ತಲೆಯನ್ನು ಕತ್ತರಿಸಿ ಹಾಕಿದನು. ಶಿಖಂಡಿಯು ಹಿಡಿದಿದ್ದ ಬಿಲ್ಲನ್ನು ಮೂರು ಬಾಣಗಳಿಂದ ಕತ್ತರಿಸಿ ಹಾಕಿ, “ನೀನು ಯುದ್ಧ ಮಾಡಿದ್ದು ಸಾಕು; ನಿನ್ನ ಕಡೆಗಿರುವ ವೀರನನ್ನು ಹುಡುಕಿ ಯುದ್ಧಕ್ಕೆ ಕರೆದುಕೊಂಡು ಬಾ” ಎಂದು ಶಿಖಂಡಿಗೆ ಹೇಳಿದನು.
ಮೂಲ ...{Loading}...
ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ ॥42॥
೦೪೩ ಎಲೆ ಯುಧಿಷ್ಠಿರ ...{Loading}...
ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲ್ಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರಕ ಶತಾನೀಕಾದಿ ನಾಯಕರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಧರ್ಮರಾಜನಿದ್ದೆಡೆಗೆ ಬಂದು “ಎಲೈ ಧರ್ಮರಾಜ, ಬಿಲ್ಲನ್ನು ಹಿಡಿದುಕೊ; ಹುಳುಗಳಂತಿರುವ ಈ ಸಾಮಾನ್ಯ ಮನುಷ್ಯರನ್ನು ಯುದ್ಧದಲ್ಲಿ ಮುಂದೆ ಕಳುಹಿಸಿ ವೃಥಾ ಕಾಲಹರಣ ಮಾಡುವುದು ಸರಿಯಲ್ಲ. ಈಗ ನೀನು ನನ್ನ ಕೈಗೆ ಸಿಕ್ಕಿ ಹಾಕಿಕೊಂಡಿದ್ದೀಯೆ. ನಿಲ್ಲು,” ಎಂದು ಹೇಳುವ ಹೊತ್ತಿಗೆ ಚಿತ್ರಕ, ಶತಾನೀಕ, ಸತ್ಯಜಿತು ಮೊದಲಾದವರು ಬಾಣ ಸಮೂಹವನ್ನು ಪ್ರಯೋಗ ಮಾಡುತ್ತ ಧರ್ಮರಾಯನ ರಕ್ಷಣೆಗೆ ಧಾವಿಸಿದರು.
ಪದಾರ್ಥ (ಕ.ಗ.ಪ)
ಶರಾಳಿ-ಬಾಣ ಸಮೂಹ, ನರಹುಳುಗಳು-ಹುಳದಂತೆ ಶಕ್ತಿ ಹೀನರಾದ ಮನುಷ್ಯರು, ಇಟ್ಟಣಿಸು-ಹಿಂಸೆಗೊಳಿಸು
ಮೂಲ ...{Loading}...
ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲ್ಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರಕ ಶತಾನೀಕಾದಿ ನಾಯಕರು ॥43॥
೦೪೪ ಬರಿಯ ಕಾರ್ಪಣ್ಯದಲಿ ...{Loading}...
ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ದೈನ್ಯಭಾವದಿಂದ ಮೋಡದ ಹಿಂದೆ ಅವಿತುಕೊಂಡರೂ ರಾಹು ಗ್ರಹಣದ ಕಾಲದಲ್ಲಿ ಹೇಗೆ ಸೂರ್ಯನಿಗೆ ಅಡ್ಡವಾಗಿಬರುವನೋ ಹಾಗೆ ಶತಾನೀಕರೇ ಮೊದಲಾದವರ ಹಿಂದೆ ಅವಿತುಕೊಂಡರೆ ಬಿಟ್ಟು ಬಿಡುವಂತಹ ವ್ಯಕ್ತಿ ತಾನಲ್ಲ; ತನ್ನ ಮುಂದೆ ಇರುವ ಶತಾನೀಕರೇ ಮೊದಲಾದವರನ್ನು ಕೊಂದು ಧರ್ಮರಾಜನ ಜೊತೆ ಯುದ್ಧ ಮಾಡುವುದಾಗಿ ನುಡಿದು, ಅಂದು ಧರ್ಮರಾಯನು ತನ್ನ ಜೊತೆ ಯುದ್ಧ ಮಾಡುವುದರ ಮೂಲಕ ಶಕ್ತಿ ಸಾಮಥ್ರ್ಯಗಳನ್ನು ಪ್ರದರ್ಶಿಸಬೇಕೆಂದು ಹೇಳುತ್ತ ದ್ರೋಣನು ಬಾಣ ಪ್ರಯೋಗವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಕಾರ್ಪಣ್ಯ-ದೈನ್ಯತೆ, ಮೇಘ-ಮೋಡ, ಇರಿದು-ಯುದ್ಧಮಾಡಿ, ಮುಕ್ಕುರಿಕಿದ-ಮುತ್ತಿಕೊಂಡ, ಇವದಿರ-ಇವರನ್ನು, ತಿದ್ದಿ-ನಾಶಮಾಡಿ, ಬಹೆನು-ಬರುತ್ತೇನೆ, ಎಚ್ಚ-ಬಾಣವನ್ನು ಹೊಡೆದನು
ಮೂಲ ...{Loading}...
ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ ॥44॥
೦೪೫ ಏನು ತರಹರಿಸುವುದು ...{Loading}...
ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತ ಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳ್ ಎಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂತಹ ಗಾಡಾಂಧಕಾರವೂ ಸೂರ್ಯನ ಕಿರಣಗಳ ಮುಂದೆ ಸೈರಿಸಿ ನಿಲ್ಲಲಾಗುತ್ತದೆಯೇ? ದ್ರೋಣನ ಲೆಕ್ಕವಿಲ್ಲದ ಸಂಖ್ಯೆಯ ಅನೂನವಾದ ಬಾಣಗಳ ಮಳೆಯಲ್ಲಿ ಸೈನಿಕರ ದೇಹಗಳು ನಾದಿಹೋದವು. ಆ ನಿರಂತರವಾದ ಬಾಣಗಳ ಘಾತಕ್ಕೆ ಈ ಸೈನಿಕರು ಲಕ್ಷ್ಯವೆ? ನಿನ್ನ ಮಕ್ಕಳಿಗೆ ಇದರು ನಿಲ್ಲಬಲ್ಲವರು ಯಾವನಿದ್ದಾನೆ ಹೇಳು ಎಂದು ಧೃತರಾಷ್ಟ್ರನಿಗೆ ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ತರಹರಿಸು-ಸೈರಿಸು
ನಾದು - ಉಜ್ಜು
ಮೂಲ ...{Loading}...
ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತ ಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ ॥45॥
೦೪೬ ಕೋಲಿಗೊಬ್ಬರ ಕೆಡಹಿದನು ...{Loading}...
ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕ ಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೊಂದು ಬಾಣಕ್ಕೆ ಒಬ್ಬೊಬ್ಬ ಮಹಾವೀರನನ್ನು ದ್ರೋಣರು ಕೊಲ್ಲುತ್ತಿದ್ದರು. ಧೃಷ್ಟದ್ಯುಮ್ನನ ನೇತೃತ್ವದಲ್ಲಿ ಯುದ್ಧ ಮಾಡುತ್ತಿದ್ದ ಪಾಂಡವ ಸೇನೆಯಲ್ಲಿ ಸತ್ಯಜಿತು, ಶತಾನೀಕರೇ ಮೊದಲಾದ ರಾಜರನ್ನು ಸೀಳಿ ಹಾಕಿದರು. ಅಂದು ಪ್ರಬಲವಾಗಿ ಯುದ್ಧ ಮಾಡುತ್ತಿದ್ದ ಏಳು ನೂರು ಮಹಾರಥರನ್ನು ಕೊಂದರು. ಆ ಯುದ್ಧದಲ್ಲಿ ಸತ್ತ ಶತ್ರುಪಕ್ಷದ ಆನೆ, ಕುದುರೆ ಹಾಗೂ ಸೈನಿಕರ ಸಂಖ್ಯೆಯನ್ನು ಯಾರು ಎಣಿಸಬಲ್ಲರು ?
ಮೂಲ ...{Loading}...
ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕ ಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ ॥46॥
೦೪೭ ಹೊಳ್ಳುಗಳ ತೂರಿದೆವು ...{Loading}...
ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಂತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ್ತ “ಎಲೈ ಧರ್ಮರಾಯ, ನೀನು ಕಳುಹಿಸಿದ ಎಲ್ಲ ನಿಸ್ಸತ್ವ ಸೈನಿಕರನ್ನು ರಥಿಕರನ್ನು ಕೊಂದದ್ದಾಯಿತು. ಇಂದು ನೀನು ಬೇರೆಲ್ಲೂ ಹೋಗಲಾರೆ, ಓಡಿ ಹೋಗಿ ಮರೆಯಾಗಬೇಕೆನಿಸಿದರೆ ನಿನಗೆ ಈಗ ಕುಂತಿಯ ಗರ್ಭ ಬಹಳ ಚಿಕ್ಕದಲ್ಲವೆ? ಈಗ ನೀನೇ ಬಾಣಗಳನ್ನು ಸುರಿಯಬೇಕು ನಿಲ್ಲು, ಇನ್ನೆಲ್ಲೂ ಹೋಗಬೇಡ” ಎಂದು ಆರ್ಭಟಿಸುತ್ತಾ ದ್ರೋಣನು ಮುಂದೆ ಮುಂದೆ ಬಂದಾಗ ಪಾಂಡವರ ಸೇನೆ “ಅಯ್ಯೋ ಮುಂದೇನು ಗತಿ” ಎಂದು ಯೋಚಿಸುವಂತಾಯಿತು. ಆಗ ಸಾಹಸ ಮಲ್ಲನೆನಿಸಿದ ದ್ರುಪದನು ಬಿಲ್ಲನ್ನು ಠೇಂಕಾರ ಮಾಡುತ್ತಾ ದ್ರೋಣರನ್ನು ಎದುರಿಸಲು ನುಗ್ಗಿ ಬಂದನು.
ಪದಾರ್ಥ (ಕ.ಗ.ಪ)
ಹೊಳ್ಳು-ನಿಸ್ಸತ್ವ,
ಮೂಲ ...{Loading}...
ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಂತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ ॥47॥
೦೪೮ ರಾಯನಾಪತ್ತಿನ್ದ ಮುನ್ನವೆ ...{Loading}...
ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಳಗಳ್ಳಿರಿಯೆ ನೂಕಿದರು ತೇರುಗಳ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಆಪತ್ತಿಗೆ ಸಿಲುಕುವ ಮುನ್ನವೇ ನಾನು ಸಾವನ್ನು ಪಡೆಯಬೇಕು ಎಂದುಕೊಂಡ ಮತ್ಸ್ಯದೇಶದ ರಾಜನಾಗಿದ್ದ ವಿರಾಟನು ತನ್ನ ಸಮಸ್ತ ಬಂಧುಗಳನ್ನು ಕೂಡಿಕೊಂಡು ದ್ರೋಣನೆದುರಾಗಿ ಅಡ್ಡಬಂದು. ಇವರಿಗೆ ಮೊದಲು ನಾವು ನೋವನ್ನು ಅನುಭವಿಸಬೇಕೆಂದು ಬೆಳ್ಳಿಯಂತೆ ಹೊಳೆಯುತ್ತಿರುವ ಆಯುಧಗಳೊಡನೆ ಪಂಚಕೈಕಯರು ತೀವ್ರವಾಗಿ ಬಂದು ದ್ರೋಣನಿಗೆ ಇದಿರಾದರು.
ಪದಾರ್ಥ (ಕ.ಗ.ಪ)
ಆಯತಿಕೆಯಲಿ-ತೀವ್ರವಾಗಿ
ಮೂಲ ...{Loading}...
ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಳಗಳ್ಳಿರಿಯೆ ನೂಕಿದರು ತೇರುಗಳ ॥48॥
೦೪೯ ತಲೆಗೆ ಕೊಣ್ಡೆವು ...{Loading}...
ತಲೆಗೆ ಕೊಂಡೆವು ಹಣವನಿನ್ನಿದ
ನುಳುಹಿಕೊಂಡಿರಲಾಗದೆಂದಿ
ಟ್ಟಳಿಸಿ ಹೊಕ್ಕುದು ಯವನ ಸಂವೀರರು ಸುಷೇಣಕರು
ಅಳವಿಗಳುಕುವುದಾಳುತನದ
ಗ್ಗಳಿಕೆಯೇ ಸುಡಲೆನುತ ಮನ ಮುಂ
ಕೊಳಿಸಿ ಕುಂತೀಭೋಜ ಹೊಕ್ಕನು ಸಕಲದಳ ಸಹಿತ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣಕ್ಕಾಗಿ ತಲೆಯನ್ನು ನೀಡಿದ್ದೇವೆ. ಇದನ್ನು ಇನ್ನು (ಧರ್ಮರಾಯನನ್ನು ಕಾಪಾಡದೆ) ಉಳಿಸಿಕೊಳ್ಳುವುದು ಸಾಧ್ಯವಾಗದು ಎನ್ನುತ್ತ ಯವನ ರಾಜ ಹಾಗೂ ಅವನ ಸೈನ್ಯ ಮತ್ತು ಸುಷೇಣರು ಸಂದಣಿಸಿದರು. ಯುದ್ಧಕ್ಕೆ ಅಳುಕುವುದು ಶೂರರ ಹಿರಿಮೆಯೇ ಅದು ಸುಡಲಿ ಎಂದು ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡು ಕುಂತೀಭೋಜ ತನ್ನ ಸಕಲ ಸೈನ್ಯದ ಸಹಿತ ಅಲ್ಲಿಗೆ ಬಂದನು.
ಪದಾರ್ಥ (ಕ.ಗ.ಪ)
ಇಟ್ಟಳಿಸಿ-ಇಟ್ಟಣಿಸಿ -ಒಟ್ಟಾಗಿ, ಅಳವಿ-ಯುದ್ಧ
ಮೂಲ ...{Loading}...
ತಲೆಗೆ ಕೊಂಡೆವು ಹಣವನಿನ್ನಿದ
ನುಳುಹಿಕೊಂಡಿರಲಾಗದೆಂದಿ
ಟ್ಟಳಿಸಿ ಹೊಕ್ಕುದು ಯವನ ಸಂವೀರರು ಸುಷೇಣಕರು
ಅಳವಿಗಳುಕುವುದಾಳುತನದ
ಗ್ಗಳಿಕೆಯೇ ಸುಡಲೆನುತ ಮನ ಮುಂ
ಕೊಳಿಸಿ ಕುಂತೀಭೋಜ ಹೊಕ್ಕನು ಸಕಲದಳ ಸಹಿತ ॥49॥
೦೫೦ ಹರೆದ ಬಲವೊಗ್ಗಾಯ್ತು ...{Loading}...
ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆದುರಿ ಹೋದ ಸೇನೆಯು ಒಟ್ಟಾಗಿ ಸೇರಿತು, ಧರ್ಮ ರಾಯನನ್ನು ಮುಂದೆ ಹೋಗಲು ಬಿಡದೆ ಪಾಂಡವರ ಕಡೆಯ ರಾಜರು ಶತ್ರುಸೇನೆಗೆ ಕಾಲಭೈರವನಂತಿದ್ದ ದ್ರೋಣನನ್ನು ತಡೆದರು. ಸಾಲು ತಪ್ಪದಂತೆ ಪ್ರಳಯಕಾಲದ ಸಮುದ್ರದಂತೆ ಪಾಂಡವರ ಸೇನೆ ದ್ರೋಣರ ಸೇನೆಯನ್ನು ಅತಿಶಯದಿಂದ ಆವರಿಸಿತು.
ಪದಾರ್ಥ (ಕ.ಗ.ಪ)
ಹರೆದ ಬಲ-ಚೆದುರಿದ ಸೇನೆ, ಒಗ್ಗಾಯ್ತು-ಒಂದಾಯಿತು,
ಮೂಲ ...{Loading}...
ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ ॥50॥
೦೫೧ ತೊಲಗು ವಿಪ್ರಾಧಮ ...{Loading}...
ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ತೊಲಗು; ಬ್ರಾಹ್ಮಣಾಧಮನೆ, ದುರ್ಯೋಧನನ ಸೇನೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಬಂದು ಬಿಟ್ಟರೆ ಯುಧಿಷ್ಠಿರನನ್ನು ಸೆರೆ ಹಿಡಿಯಲು ಸಾಧ್ಯವೆ? ಕಂಠದ ಸತ್ವವನ್ನು ಅರಿಯದೆ ಬೆಟ್ಟಕ್ಕೆ ತಲೆಯನ್ನು ಚಚ್ಚಿಕೊಳ್ಳುವರೇ? ಗೌರವಾನ್ವಿತರು ವ್ಯರ್ಥವಾಗಿ ಜೋರು ಧ್ವನಿಯಿಂದ ಮಾತನಾಡಿ ಪ್ರಯೋಜನವಿಲ್ಲ” ಎಂದು ದ್ರೋಣನ್ನು ಬೈದು ದ್ರುಪದನು ಯುದ್ಧವನ್ನಾರಂಭಿಸಿದನು.
ಮೂಲ ...{Loading}...
ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ ॥51॥
೦೫೨ ದಿಟ್ಟನಹೆಯೋ ದ್ರುಪದ ...{Loading}...
ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಚೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು “ದ್ರುಪದ, ನೀನು ನಿಜವಾಗಲೂ ಧೀರನೇ ಆಗಿರುವೆ; ಜಗದ ಜಟ್ಟಿಗಳಲ್ಲಿ ನಮಗೆ ಹಾಸ್ಯವೆ? ಉತ್ಸಾಹದಿಂದ ಮುನ್ನುಗ್ಗಿ ಬಂದು ಧರ್ಮರಾಯನನ್ನು ಹಿಡಿಯದ ಹಾಗೆ ಮಾಡಿದ್ದೀರಿ, ನೀನು ತೊಟ್ಟಿರುವ ವೇಷಕ್ಕೆ ತಕ್ಕಂತೆ ಮಾತುಗಳನ್ನು ಆಡಿದ್ದೀಯೆ. ನಿಮ್ಮ ಧರ್ಮರಾಯನನ್ನು ನಾನು ಕಟ್ಟಿಹಾಕಲು ಸಾಧ್ಯವಿಲ್ಲವೆಂದು ಭಾವಿಸಿರುವೆಯಲ್ಲವೆ ?” ಎನ್ನುತ್ತಾ ಬಾಣದ ಮಳೆಯನ್ನು ದ್ರುಪದನ ಮೇಲೆ ಸುರಿಸಿದನು.
ಪದಾರ್ಥ (ಕ.ಗ.ಪ)
ದಿಟ್ಟ-ಧೀರ, ಆಹೆ-ಆಗಿದ್ದೀಯೆ, ಗರಿಗಟ್ಟಿದಿರಿ-ಉತ್ಸಾಹದಿಂದ ಬಂದಿದ್ದೀರಿ, ಚೋಹ-ರೂಪ, ಸರಳ-ಬಾಣದ, ಸರಿವಳೆಯ-ಒಂದೇ ಸಮನೆ ಮಳೆಯನ್ನು
ಮೂಲ ...{Loading}...
ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಚೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ ॥52॥
೦೫೩ ದರ್ಪದಾಭರಣಕ್ಕೆ ಸೂಸಿದ ...{Loading}...
ದರ್ಪದಾಭರಣಕ್ಕೆ ಸೂಸಿದ
ವೊಪ್ಪ ಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿಕದಂಬವನೀತನಂಬುಗಳು ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದನ ದರ್ಪವೆಂಬ ಆಭರಣಕ್ಕೆ ಶೋಭಿಸುವಂತಹ ದ್ರೋಣನ ಬಾಣದ ಗರಿಗಳು ಸಲೀಸಾಗಿ ಶತ್ರು ಸೇನಾ ಸಮುದ್ರದ ಮೇಲೆ ಅಪ್ಪಳಿಸಿದವು. ಸತ್ವ ಹೀನರನ್ನು ಸದೆ ಬಡಿಯುವುದರ ಮೂಲಕ ಚೂಪಾದ ಶಸ್ತ್ರಾಸ್ತ್ರಗಳು ಶತ್ರುಗಳ ದೇಹದಲ್ಲಿದ್ದ ಕರುಳುಗಳನ್ನು ಹೊರಹಾಕಿದವು. ಪಾಂಡವರ ಸೈನ್ಯಸಮೂಹವನ್ನು ಈ ಬಾಣಗಳು ಅಂದಗೆಡಿಸಿದವು.
ಪದಾರ್ಥ (ಕ.ಗ.ಪ)
ತುರುಗು-ಮುತ್ತಿಕೊ, ಹಿಪ್ಪೆಗರ-ಸತ್ವ ಹೀನರ, ಹೊಗರು-ಕಾಂತಿ, ಅಲಗು-ಕತ್ತಿ, ಒಪ್ಪಗೆಡಿಸು-ಅಂದವನ್ನು ಹಾಳು ಮಾಡು, ಕದಂಬ-ಗುಂಪು, ಅಂಬು-ಬಾಣ
ಮೂಲ ...{Loading}...
ದರ್ಪದಾಭರಣಕ್ಕೆ ಸೂಸಿದ
ವೊಪ್ಪ ಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿಕದಂಬವನೀತನಂಬುಗಳು ॥53॥
೦೫೪ ಮರುಳೆ ಮಞ್ಜಿನ ...{Loading}...
ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದುವು ದಿಗುತಟವ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹುಚ್ಚನೆ, ಮಂಜಿನ ಮಳೆಗೆ ಕುಲಪರ್ವತಗಳು ಹೇಗೆ ಕರಗುವುದಿಲ್ಲವೋ ಹಾಗೆಯೇ ನೀನು ಹೊಡೆದ ಬಾಣಗಳ ಪಂಜರಕ್ಕೆ ಪಾಂಡವರ ಕಡೆಗಿರುವ ವೀರರಾಗಲೀ, ಮಹಾರಥರಾಗಲೀ ಸಿಕ್ಕಿ ಹಾಕಿಕೊಳ್ಳುವುದಿಲ್ಲ ಈಗ ನಾವು ಬಿಡುವ ಬಾಣಗಳಿಂದ ನಿನ್ನನ್ನು ನೀನು ರಕ್ಷಿಸಿಕೊ” ಎನ್ನುತ್ತಾ ದ್ರುಪದ ಹಾಗೂ ವಿರಾಟ ರಾಜರು ಚಪ್ಪರಿಸಿ ಬಾಣಗಳ ಕಿರಣ ಮಾಲೆಯನ್ನು ದ್ರೋಣನ ಕಡೆಗೆ ಸುರಿಸಿದರು. ಬಾಣಗಳ ಹೊಳಪು ಎಲ್ಲ ದಿಕ್ಕುಗಳನ್ನೂ ತುಂಬಿದವು.
ಪದಾರ್ಥ (ಕ.ಗ.ಪ)
ಮರುಳೆ-ಹುಚ್ಚ, ನೀನೆಚ್ಚ-ನೀನು ಬಾಣಬಿಟ್ಟ, ಚಪ್ಪರಿಸಿ-ಕೂಗಿ, ಸರಳ-ಬಾಣದ, ರಶ್ಮಿ-ಕಿರಣ, ಮುಕ್ಕುರುಕಿದವು-ಮುತ್ತಿಕೊಂಡವು
ಮೂಲ ...{Loading}...
ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದುವು ದಿಗುತಟವ ॥54॥
೦೫೫ ಗಿರಿಯ ಮಕ್ಕಳು ...{Loading}...
ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ಧಾರೆಗಳ ಕಿಡಿ
ಹೊರಳಿಗಳ ಹೊಗರಂಬು ಹೊಕ್ಕವು ಪಾಂಡು ಸೈನ್ಯದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹತರಾದ ಕುಲಪರ್ವತಗಳ ಮಕ್ಕಳು ವಜ್ರಾಯುಧದೊಡನೆ ಸರಸವಾಡುವ ಕಾಲಬಂದಂತಾಯಿತು. ಹರ ಹರ, ಇದು ಅತ್ಯಂತ ಆಶ್ಚರ್ಯಕರವಾದುದಾಗಿದೆ. ಎಂದು ಹೇಳುತ್ತಾ ಅತಿಯಾದ ಹುರುಪು ಹೆಚ್ಚಿ ಅತಿಶಯವಾದ ಕೋಪ ಉಂಟಾಗಿ ಬಿಲ್ಲಿನಿಂದ ಬಾಣಗಳು ಒಂದೇ ಸಮನೆ ಕಕ್ಕುತ್ತಿವೆ ಎಂಬಂತೆ, ಅತ್ಯಂತ ಕಠಿಣವಾದ, ಚೂಪಾದ, ಫಳಫಳನೆ ಹೊಳೆಯುವಂತಹ ಕಿಡಿಗಳನ್ನು ಉಗುಳುತ್ತಿವೆ ಎಂಬಂತಹ ಬಾಣಗಳನ್ನು ಪಾಂಡವರ ಸೇನೆಯ ಮೇಲೆ ಹರಿಸಿದನು.
ಮೂಲ ...{Loading}...
ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ಧಾರೆಗಳ ಕಿಡಿ
ಹೊರಳಿಗಳ ಹೊಗರಂಬು ಹೊಕ್ಕವು ಪಾಂಡು ಸೈನ್ಯದಲಿ ॥55॥
೦೫೬ ನರರ ಕಡಿಯಾನೆಗಳ ...{Loading}...
ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೂಳಿದವು ನಿಮಿಷಕೆ ಪಾಂಡು ಸೇನೆಯಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಕಡೆಗಿದ್ದ ಆನೆಗಳು ಕಡಿತಕ್ಕೊಳಗಾದವು. ಇದರೊಡನೆ ಕುದುರೆಗಳು ಕಡಿದು ಬಿದ್ದು ಅವುಗಳ ದೇಹದ ಕರುಳುಗಳು ಆನೆಗಳ ದೇಹದ ಕರುಳಿನೊಡನೆ ಮಿಳಿತವಾಯಿತು. ಈ ಆನೆ, ಕುದುರೆಗಳ ಕರುಳುಗಳೆಂಬ ಹಗ್ಗಕ್ಕೆ ಸಿಲುಕಿದ ರಥಗಳ ಚಕ್ರಗಳು ಚಲಿಸಲಾಗದೆ ನಿಲ್ಲುವಂತಾಯಿತು. ಎಲ್ಲಿ ನೋಡಿದರೂ ಕತ್ತರಿಸಿ ಹೋದ ಆಯುಧದ ತುಂಡುಗಳು, ಕಡಿದು ಬಿದ್ದ ಬಾವುಟಗಳಲ್ಲಿ ಹೊರಳಾಡುವಂತಾಗಿ ಪಾಂಡವ ಸೇನೆಯ ರಥಗಳು ನೆಲದಲ್ಲಿ ಹೂತು ಹೋದವು.
ಪದಾರ್ಥ (ಕ.ಗ.ಪ)
ತೇಜಿ-ಕುದುರೆ, ಕರಿಘಟ-ಆನೆ, ಉಡಿದ-ಮುರಿದ, ಸಿಂಧ-ಬಾವುಟ
ಮೂಲ ...{Loading}...
ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೂಳಿದವು ನಿಮಿಷಕೆ ಪಾಂಡು ಸೇನೆಯಲಿ ॥56॥
೦೫೭ ನೊರೆ ರಕುತ ...{Loading}...
ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತದ ಹೊಳೆ ಹರಿದು ನೊರೆ ನೊರೆಯಾಗಿ ಪ್ರವಹಿಸಿತು. ಸತ್ತವರ ತಲೆಗಳಲ್ಲಿದ್ದ ಮಿದುಳುಗಳು ಈಚೆಗೆ ಬಂದು ರಣಾಂಗಣದಲ್ಲಿ ಉರುಳಿ ಹೋದವು. ಎಲ್ಲಿ ನೋಡಿದರೂ ಸತ್ತ ಸೈನಿಕರ ದೇಹದ ಕೊಬ್ಬು, ಗುಲ್ಮ ಹಾಗೂ ಮೆದಕುಗಳು ಸೇರಿ ಅದರೊಡನೆ ದೇಹದಿಂದ ಒಸರುವ ರಕ್ತ, ಪುಡಿಪುಡಿಯಾದ ಮೂಳೆಗಳ ರಾಶಿ, ಕರಳುಗಳ ಜೊಂಪೆಗಳು , ಮಾಂಸಖಂಡಗಳ ರಾಶಿ. ಕತ್ತರಿಸಿ ಹೋದ ಚರ್ಮ, ಒಡೆದು ಹೋದ ತಲೆಗಳು ಶತ್ರುಗಳಾದ ಪಾಂಡವರ ಸೇನೆಯಲ್ಲಿ ರಾಶಿರಾಶಿಯಾಗಿ ತುಂಬಿಕೊಂಡಿದ್ದು ರಕ್ತದ ನದಿ ಇವೆಲ್ಲವನ್ನು ಮೀರಿ ಹರಿಯುತ್ತಿತ್ತು.
ಪದಾರ್ಥ (ಕ.ಗ.ಪ)
ಉಬ್ಬಣದ-ಹೆಚ್ಚಿನ, ಬಂಬಲು ಕರುಳು -ಜೊಂಪೆಜೊಂಪೆಯಾಗಿ ಹೆಣೆದುಕೊಂಡಿರುವ ಕರುಳು ಖಂಡದಿಂಡೆಯ-ಮಾಂಸ ಖಂಡಗಳ ರಾಶಿ, ತುರುಗಿದ-ಹೆಚ್ಚಾದ, ತಳಿತ-ಒತ್ತಡ, ತಡಿ-ದಡ, ಅಡಸಿ-ಮೇಲೇರಿ, ಮೆದಕು-? ವಸೆದೊರಳೆ-ಕೊಬ್ಬು ಮತ್ತು ಗುಲ್ಮ
ಮೂಲ ...{Loading}...
ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ ॥57॥
೦೫೮ ಕೂಡೆ ತಳಪಟವಾಯ್ತು ...{Loading}...
ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೆಯ್ಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆಗಿದ್ದ ಸೇನೆ ನಾಶವಾಗಿ ನೆಲಸಮವಾಯಿತು. ವೀರರು ಒಗ್ಗಟ್ಟಾಗಿದ್ದವರು ಯುದ್ಧದ ಭೀಕರತೆಯ ನಿಮಿತ್ತ ಚದುರಿಹೋದರು. ದುರ್ಯೋಧನನ ಅದೃಷ್ಟ ಚೆನ್ನಾಗಿತ್ತು; ದ್ರೋಣನು ನಿರ್ದಾಕ್ಷಿಣ್ಯವಾಗಿ ಹೋರಾಟವನ್ನು ಮುಂದುವರಿಸಿದನು. ಆಗ ಶತ್ರುಗಳ ದೇಹದಲ್ಲಿ ಚೂಪಾದ ಬಾಣಗಳು ನೆಟ್ಟವು. ಪಾಂಡವರ ಪರವಾಗಿ ನಿಂತ ಮಹಾರಾಜರೂ ಹಾಗೂ ಮಹಾರಥರು ಒಟ್ಟೊಟ್ಟಿಗೆ ರಣರಂಗದಿಂದ ತೆಗೆದೋಡುವಂತಾಯಿತು.
ಪದಾರ್ಥ (ಕ.ಗ.ಪ)
ತಳಪಟ-ನೆಲಸಮ ಬಯಲಾಗುವುದು ಖೋಡಿ-ಕೊರತೆ, ನ್ಯೂನತೆ, ಹೊಗರಂಬು-ಹೊಳೆಯುವ ಬಾಣ, ತೆಕ್ಕೆ-ಗುಂಪು
ಮೂಲ ...{Loading}...
ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೆಯ್ಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು ॥58॥
೦೫೯ ಘಾಯವಡೆದನು ದ್ರುಪದ ...{Loading}...
ಘಾಯವಡೆದನು ದ್ರುಪದ ಮತ್ಸ್ಯನ
ಬಾಯೊಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ಬಿಲ್ವಿದ್ಯಾಗುರುವಲ್ಲವೆ ? ಇವರ ಗರಿಮೆಯಿಂದ ದ್ರುಪದ ಮಹಾರಾಜನು ಏಟು ತಿಂದು ಗಾಯವನ್ನು ಹೊಂದಿನು. ಮತ್ಸ್ಯರಾಜನಾದ ವಿರಾಟನಿಗೆ ಏಟು ಬಿದ್ದು ಬಾಯಲ್ಲಿ ರಕ್ತ ಚಿಮ್ಮಿತು. ಕೇಕಯ ರಾಜ್ಯದ ರಾಜರು ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತಾಯಿತು; ಅವರು ರಥದಿಂದಿಳಿದು ಓಡಿ ಹೋಗಿ ಜೀವವನ್ನುಳಿಸಿಕೊಂಡರು. ಧೃಷ್ಟಕೇತು ಸಾಯುವ ಸ್ಥಿತಿಯನ್ನು ಪಡೆದನು. ಭೋಜರಾಜನು ಶಕ್ತಿಯನ್ನು ಕಳೆದುಕೊಂಡನು. ಆಗ ದ್ರೋಣ ಧರ್ಮರಾಜನ ಕಡೆಗೆ ರಥವನ್ನು ವೇಗವಾಗಿ ಓಡಿಸಿದ.
ಪದಾರ್ಥ (ಕ.ಗ.ಪ)
ಒಕ್ಕುದು-ಚಿಮ್ಮಿತು, ವಿಡಾಯಿ-ಬಲ, ವಿಡಾಯಿಗೆಟ್ಟನು-ಶಕ್ತಿಗುಂದಿದನು, ದುವ್ವಾಳಿಸು-ವೇಗವಾಗಿ ಓಡಿಸು
ಟಿಪ್ಪನೀ (ಕ.ಗ.ಪ)
ಧೃಷ್ಟಕೇತು - ಚೇದಿರಾಜನಾದ ಶಿಶುಪಾಲನ ಮಗ ಧೃಷ್ಟಕೇತು. ಸುಕೇತು, ಶರಭ ಇವನ ತಮ್ಮಂದಿರು. ರೇಣುಮತಿ ಅಥವಾ ಕರೇಣುಮತಿ ಇವನ ತಂಗಿ. ಈಕೆ ನಕುಲನ ಪತ್ನಿ. ವಾಸ್ತವವಾಗಿ ಈತ ರಾಕ್ಷಸ ಕುಲದವನು. ಹಿರಣ್ಯಕಶಿಪುವಿನ ಮಗನಾದ ಅನುಹ್ಲಾದನೆಂಬ ರಾಕ್ಷಸನ ಅಂಶಾವತಾರಿ ಇವನು. ಆದರೆ ತಂದೆಯ ಮರಣಾಂತರ ಧರ್ಮರಾಯನು ಧೃಷ್ಟಕೇತುವಿಗೆ ರಾಜ್ಯಾಭಿಷೇಕ ಮಾಡಿದ್ದರಿಂದ ಈತ ಕೊನೆಯತನಕ ಧರ್ಮರಾಯನ ಅಧೀನರಾಜನಾಗಿ ಕೊನೆಗೆ ಪಾಂಡವರ ಕಡೆ ಇದ್ದುಕೊಂಡು ಹೋರಾಡಿದ. ಪಾಂಡವರು ವನವಾಸದಲ್ಲಿದ್ದಾಗ ಅವರನ್ನು ಕಂಡು ನಕುಲನ ಪತ್ನಿ ಕರೇಣುಮತಿಯನ್ನು ತನ್ನ ರಾಜಧಾನಿಯಾದ ಶುಕ್ತಿಮತಿ ನಗರಕ್ಕೆ ಕರೆತಂದನು. ಪಾಂಡವರ ಅಜ್ಞಾತವಾಸ ಮುಗಿದ ಮೇಲೆ ಮಂತ್ರಾಲೋಚನೆಗೆ ಕರೆಸಿದ್ದ ರಾಜಪ್ರಮುಖರಲ್ಲಿ ಈತನೂ ಒಬ್ಬ. ಒಂದು ಅಕ್ಷೋಹಿಣಿ ಸೇನೆಯ ಸಮೇತ ಪಾಂಡವರ ಪಕ್ಷವನ್ನು ಸೇರಿ ಪಾಂಡವರ ಸಪ್ತಮಹಾಸೇನಾ ನಾಯಕರಲ್ಲಿ ಒಬ್ಬನಾಗಿದ್ದುಕೊಂಡು ಶಲ್ಯ, ಕೃಪ, ಬಾಹ್ಲಿಕ, ಭೂರಿಶ್ರವ, ಪೌರವಾದಿಗಳೊಡನೆ ಹೋರಾಡಿ ಕೊನೆಗೆ ಯುದ್ಧದ ಹದಿನಾಲ್ಕನೇ ದಿನ ದ್ರೋಣರಿಂದ ಹತನಾದ. ಅನಂತರ ವೀರಸ್ವರ್ಗ ಪಡೆದು ವಿಶ್ವೇದೇವನಾಗಿ ಸ್ವರ್ಗದಲ್ಲಿ ಸ್ಥಾನಪಡೆದ. ಯುದ್ದ ಮುಗಿದ ಮೇಲೆ ಒಂದು ದಿನ ವೇದವ್ಯಾಸರು ಎರಡೂ ಕಡೆಯ ಮೃತ ನಾಯಕರುಗಳನ್ನು ಆವಾಹನಗೊಳಿಸಿದಾಗ ಗಂಗೆಯಲ್ಲಿ ಎದ್ದು ಬಂದ ಮೃತ ವೀರರುಗಳಲ್ಲಿ ಧೃಷ್ಟಕೇತುವೂ ಒಬ್ಬನಾಗಿದ್ದಾನೆ. ‘ಚೇದಿ, ಕಾಶಿ, ಕರೂಷ ನೇತಾರ’ ಎನ್ನಿಸಿಕೊಂಡ ಈ ವೀರ ಅರ್ಧ ಚಂದ್ರವ್ಯೂಹದ ಬಲಭಾಗದಲ್ಲಿ ಇದ್ದು ಹೋರಾಡಿದನು. ಇವನ ರಥಾಶ್ವಗಳ ವರ್ಣನೆ ಉಜ್ಜಲವಾಗಿದೆ. ಹಾಗೆಯೇ ಸಂಜಯನೇ ಈತನ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾನೆ. ಚೇದಿಗಳೆಲ್ಲ ಇವನ ಕೈ ಬಿಟ್ಟರ ವಿಚಲಿತನಾಗದೆ ಈತ ಒಬ್ಬನೇ ಪಾಂಡವರ ಬಳಿಗೆ ಬಂದನೆಂದೂ ಹೇಳಲಾಗಿದೆ.
ರಾಕ್ಷಸ ವಂಶದವನಾಗಿದ್ದುಕೊಂಡೂ ಪ್ರಜ್ಞಾವಂತನಾಗಿ ಪಾಂಡವರನ್ನು ಆಶ್ರಯಿಸಿ ಕೊನೆಯತನಕ ಪಾಂಡವರಿಗೆ ನಿಷ್ಠನಾಗಿ ಉಳಿದು ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಧೃಷ್ಟಕೇತು ಒಂದು ಮಾದರಿ ಪಾತ್ರವಾಗಿ ಉಳಿದಿದ್ದಾನೆ. ಪಾಂಡವ ಬಂಧುವಾಗಿ ಪಾಂಡವ ಹಿತೈಷಿಯಾಗಿ ಈತ ನಮ್ಮ U್ಪಮನ ಸೆಳೆಯುತ್ತಾನೆ.ಚೇದಿರಾಜನಾದ ಶಿಶುಪಾಲನ ಮಗ ಧೃಷ್ಟಕೇತು. ಸುಕೇತು, ಶರಭ ಇವನ ತಮ್ಮಂದಿರು. ರೇಣುಮತಿ ಅಥವಾ ಕರೇಣುಮತಿ ಇವನ ತಂಗಿ. ಈಕೆ ನಕುಲನ ಪತ್ನಿ. ವಾಸ್ತವವಾಗಿ ಈತ ರಾಕ್ಷಸ ಕುಲದವನು. ಹಿರಣ್ಯಕಶಿಪುವಿನ ಮಗನಾದ ಅನುಹ್ಲಾದನೆಂಬ ರಾಕ್ಷಸನ ಅಂಶಾವತಾರಿ ಇವನು. ಆದರೆ ತಂದೆಯ ಮರಣಾಂತರ ಧರ್ಮರಾಯನು ಧೃಷ್ಟಕೇತುವಿಗೆ ರಾಜ್ಯಾಭಿಷೇಕ ಮಾಡಿದ್ದರಿಂದ ಈತ ಕೊನೆಯತನಕ ಧರ್ಮರಾಯನ ಅಧೀನರಾಜನಾಗಿ ಕೊನೆಗೆ ಪಾಂಡವರ ಕಡೆ ಇದ್ದುಕೊಂಡು ಹೋರಾಡಿದ. ಪಾಂಡವರು ವನವಾಸದಲ್ಲಿದ್ದಾಗ ಅವರನ್ನು ಕಂಡು ನಕುಲನ ಪತ್ನಿ ಕರೇಣುಮತಿಯನ್ನು ತನ್ನ ರಾಜಧಾನಿಯಾದ ಶುಕ್ತಿಮತಿ ನಗರಕ್ಕೆ ಕರೆತಂದನು. ಪಾಂಡವರ ಅಜ್ಞಾತವಾಸ ಮುಗಿದ ಮೇಲೆ ಮಂತ್ರಾಲೋಚನೆಗೆ ಕರೆಸಿದ್ದ ರಾಜಪ್ರಮುಖರಲ್ಲಿ ಈತನೂ ಒಬ್ಬ. ಒಂದು ಅಕ್ಷೋಹಿಣಿ ಸೇನೆಯ ಸಮೇತ ಪಾಂಡವರ ಪಕ್ಷವನ್ನು ಸೇರಿ ಪಾಂಡವರ ಸಪ್ತಮಹಾಸೇನಾ ನಾಯಕರಲ್ಲಿ ಒಬ್ಬನಾಗಿದ್ದುಕೊಂಡು ಶಲ್ಯ, ಕೃಪ, ಬಾಹ್ಲಿಕ, ಭೂರಿಶ್ರವ, ಪೌರವಾದಿಗಳೊಡನೆ ಹೋರಾಡಿ ಕೊನೆಗೆ ಯುದ್ಧದ ಹದಿನಾಲ್ಕನೇ ದಿನ ದ್ರೋಣರಿಂದ ಹತನಾದ. ಅನಂತರ ವೀರಸ್ವರ್ಗ ಪಡೆದು ವಿಶ್ವೇದೇವನಾಗಿ ಸ್ವರ್ಗದಲ್ಲಿ ಸ್ಥಾನಪಡೆದ. ಯುದ್ದ ಮುಗಿದ ಮೇಲೆ ಒಂದು ದಿನ ವೇದವ್ಯಾಸರು ಎರಡೂ ಕಡೆಯ ಮೃತ ನಾಯಕರುಗಳನ್ನು ಆವಾಹನಗೊಳಿಸಿದಾಗ ಗಂಗೆಯಲ್ಲಿ ಎದ್ದು ಬಂದ ಮೃತ ವೀರರುಗಳಲ್ಲಿ ಧೃಷ್ಟಕೇತುವೂ ಒಬ್ಬನಾಗಿದ್ದಾನೆ. ‘ಚೇದಿ, ಕಾಶಿ, ಕರೂಷ ನೇತಾರ’ ಎನ್ನಿಸಿಕೊಂಡ ಈ ವೀರ ಅರ್ಧ ಚಂದ್ರವ್ಯೂಹದ ಬಲಭಾಗದಲ್ಲಿ ಇದ್ದು ಹೋರಾಡಿದನು. ಇವನ ರಥಾಶ್ವಗಳ ವರ್ಣನೆ ಉಜ್ಜಲವಾಗಿದೆ. ಹಾಗೆಯೇ ಸಂಜಯನೇ ಈತನ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾನೆ. ಚೇದಿಗಳೆಲ್ಲ ಇವನ ಕೈ ಬಿಟ್ಟರ ವಿಚಲಿತನಾಗದೆ ಈತ ಒಬ್ಬನೇ ಪಾಂಡವರ ಬಳಿಗೆ ಬಂದನೆಂದೂ ಹೇಳಲಾಗಿದೆ.
ರಾಕ್ಷಸ ವಂಶದವನಾಗಿದ್ದುಕೊಂಡೂ ಪ್ರಜ್ಞಾವಂತನಾಗಿ ಪಾಂಡವರನ್ನು ಆಶ್ರಯಿಸಿ ಕೊನೆಯತನಕ ಪಾಂಡವರಿಗೆ ನಿಷ್ಠನಾಗಿ ಉಳಿದು ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಧೃಷ್ಟಕೇತು ಒಂದು ಮಾದರಿ ಪಾತ್ರವಾಗಿ ಉಳಿದಿದ್ದಾನೆ. ಪಾಂಡವ ಬಂಧುವಾಗಿ ಪಾಂಡವ ಹಿತೈಷಿಯಾಗಿ ಈತ ನಮ್ಮ U್ಪಮನ ಸೆಳೆಯುತ್ತಾನೆ.
ಮೂಲ ...{Loading}...
ಘಾಯವಡೆದನು ದ್ರುಪದ ಮತ್ಸ್ಯನ
ಬಾಯೊಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ ॥59॥
೦೬೦ ತೀರಿತಿನ್ನೇನರಿನೃಪನ ಸಂ ...{Loading}...
ತೀರಿತಿನ್ನೇನರಿನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿಯಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥಕುಮಾರರನುವಾಯ್ತು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನರ್ಧ ಘಳಿಗೆಯಲ್ಲಿ ಧರ್ಮರಾಜನ ಜೀವನ ಕೊನೆಗಾಣುತ್ತದೆ, ಗಾಂಧಾರಿ ಯಾವ ವ್ರತವನ್ನು ಮಾಡಿ ದುರ್ಯೋಧನನನ್ನು ಪಡೆದಿದ್ದಾಳೊ ? ಜಯ ಕೌರವನ ಕಡೆಗೆ ವಾಲುತ್ತಿದೆ, ಎಂದು ಕೌರವ ಪಡೆಯ ಸಾಹಸಿಗರು ಮಾತನಾಡಿಕೊಳ್ಳುತ್ತಿರುವಾಗ ಯುದ್ಧರಂಗದ ಮತ್ತೊಂದು ಭಾಗದಿಂದ ಧೀರನಾದ ಸಾತ್ಯಕಿ, ಭೀಮ ಹಾಗೂ ಅರ್ಜುನನ ಮಗ ಅಭಿಮನ್ಯು ದ್ರೋಣನನ್ನು ಎದುರಿಸಲು ಸಿದ್ಧರಾದರು.
ಪದಾರ್ಥ (ಕ.ಗ.ಪ)
ನೋಂಪಿ-ವ್ರತ, ಆರುತಿರೆ-ಕೂಗುತ್ತಿರಲು,
ಮೂಲ ...{Loading}...
ತೀರಿತಿನ್ನೇನರಿನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿಯಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥಕುಮಾರರನುವಾಯ್ತು ॥60॥
೦೬೧ ಗೆಲಿದನೈ ಮಝ ...{Loading}...
ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿ ಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘು ಭುಜಬಲ ಭಾನುನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಪರಮಾನಂದದಿಂದ ಕರ್ಣನಿಗೆ “ಆಹಾ, ಭಲೇ, ಭೇಷ್, ದ್ರೋಣನ ಪರಾಕ್ರಮವು ಈಶ್ವರನ ಪರಾಕ್ರಮವನ್ನು ಹೋಲುತ್ತಿದೆ. ಯುಧಿಷ್ಠಿರ ಇನ್ನೇನು ಸೆರೆ ಸಿಕ್ಕಂತೆಯೇ ಸರಿ;” ಎಂದು ಕೂಗಿದಾಗ ಮಹಾಬಲಶಾಲಿಯಾದ ಸೂರ್ಯಪುತ್ರನಾದ ಕರ್ಣನು ಹೆದರದೆ ನೀತಿಸಮ್ಮತವಾದ ವಿಚಾರಗಳನ್ನು ದುರ್ಯೋಧನನಿಗೆ ಹೇಳಲಾರಂಭಿಸಿದನು.
ಪದಾರ್ಥ (ಕ.ಗ.ಪ)
ಅಲಘು-ಅಪಾರ, ಭರ್ಗ - ಶಿವ
ಮೂಲ ...{Loading}...
ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿ ಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘು ಭುಜಬಲ ಭಾನುನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ ॥61॥
೦೬೨ ಗೆಲವು ನಮಗೆಲ್ಲಿಯದು ...{Loading}...
ಗೆಲವು ನಮಗೆಲ್ಲಿಯದು ಧರ್ಮಜ
ಸಿಲುಕುವುದು ತಾನಿಲ್ಲ ಕೃಷ್ಣನ
ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು
ನೆಲನ ತಿಣ್ಣವ ತಿದ್ದಲೋಸುಗ
ಸುಳಿದನರಿಯಾ ಕೃಷ್ಣನೀತನ
ಬಲದವರಿಗೆಂತಹುದು ಬಾಧೆಗಳೆಂದನಾ ಕರ್ಣ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಯೋಧನ, ನಮಗೆಲ್ಲಿ ಜಯ ದೊರಕುತ್ತದೆ ? ಧರ್ಮರಾಯನನ್ನು ನಾವು ಸೆರೆ ಹಿಡಿಯುವುದು ಸಾಧ್ಯವೇ ಇಲ್ಲ. ಏಕೆಂದರೆ ಕೃಷ್ಣನ ಅಭಯಹಸ್ತವೆಂಬ ನೆರಳು ಪಾಂಡವರಿಗುಂಟು; ಕೃಷ್ಣನು ಈ ಭೂಮಿಯ ಮೇಲಿರುವ ಜನರ ಭಾರವನ್ನು ಕಡಿಮೆ ಮಾಡಲೆಂದೇ ಅವತರಿಸಿರುವನು. ಇಂತಹ ಕೃಷ್ಣನ ಬೆಂಬಲವಿರುವವರಿಗೆ ಪಾಂಡವರಿಗೆ ಯಾವ ತೊಂದರೆಯೂ ಆಗದೆನಿಸುತ್ತದೆ” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ನೆಲನ ತಿಣ್ಣನ ತಿದ್ದುವ-ಭೂಮಿಯ ಭಾರವನ್ನು ಇಳಿಸುವ
ಮೂಲ ...{Loading}...
ಗೆಲವು ನಮಗೆಲ್ಲಿಯದು ಧರ್ಮಜ
ಸಿಲುಕುವುದು ತಾನಿಲ್ಲ ಕೃಷ್ಣನ
ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು
ನೆಲನ ತಿಣ್ಣವ ತಿದ್ದಲೋಸುಗ
ಸುಳಿದನರಿಯಾ ಕೃಷ್ಣನೀತನ
ಬಲದವರಿಗೆಂತಹುದು ಬಾಧೆಗಳೆಂದನಾ ಕರ್ಣ ॥62॥
೦೬೩ ಗಿರಿಯ ಕೊರಳಿಗೆ ...{Loading}...
ಗಿರಿಯ ಕೊರಳಿಗೆ ವಜ್ರಮಣಿಯಾ
ಭರಣವೇ ದಳ್ಳುರಿಯ ಜೋಡುಗ
ಳರಗಿನೋಲೆಯಕಾರರಿಗೆ ಸುಯಿಧಾನವೇ ನೃಪತಿ
ವರ ತಿಮಿರ ರಾಜಂಗೆ ಮಂಗಳ
ಕರವೆ ಆ ರವಿ ಕೃಷ್ಣ ಭಕ್ತರ
ಪರಿಭವವು ಜೀವರಿಗೆ ಪಥ್ಯವೆ ಎಂದನಾ ಕರ್ಣ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತದ ಕೊರಳಿಗೆ ವಜ್ರಾಯುಧ ಆಭರಣವಾಗುವುದೇ? ಅರಗಿನಲ್ಲಿ ಮಾಡಿದ ಓಲೆಯಕಾರರಿಗೆ ಬೆಂಕಿಯ ಕವಚದ ರಕ್ಷಣೆಯೇ? ಕತ್ತಲೆಯ ರಾಜ ಲೋಕವನ್ನೇ ಬೆಳಗಿಸುವ ಸೂರ್ಯನು ಮಂಗಳಕರನಾಗುತ್ತಾನೆಯೇ? ಕೃಷ್ಣನ ಭಕ್ತರಿಗೆ ಸೋಲನ್ನುಂಟು ಮಾಡುವುದು ಯಾವ ಜೀವರಿಗಾದರೂ ಸಾಧ್ಯವೆ? ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಜೋಡು - ಕವಚ
ಮೂಲ ...{Loading}...
ಗಿರಿಯ ಕೊರಳಿಗೆ ವಜ್ರಮಣಿಯಾ
ಭರಣವೇ ದಳ್ಳುರಿಯ ಜೋಡುಗ
ಳರಗಿನೋಲೆಯಕಾರರಿಗೆ ಸುಯಿಧಾನವೇ ನೃಪತಿ
ವರ ತಿಮಿರ ರಾಜಂಗೆ ಮಂಗಳ
ಕರವೆ ಆ ರವಿ ಕೃಷ್ಣ ಭಕ್ತರ
ಪರಿಭವವು ಜೀವರಿಗೆ ಪಥ್ಯವೆ ಎಂದನಾ ಕರ್ಣ ॥63॥
೦೬೪ ಇರಲಿ ಮೇಣ್ ...{Loading}...
ಇರಲಿ ಮೇಣ್ ದೂರದಲಿ ಹತ್ತಿರೆ
ಯಿರಲಿ ತನ್ನವರೆಂದರತ್ತಲೆ
ಹರಹಿಕೊಂಬನು ಕೃಷ್ಣನದು ತನಗೇರಿಸಿದ ಬಿರುದು
ಹರಿ ಸಮೀಪದೊಳಿಲ್ಲ ದ್ರೋಣಂ
ಗರಸ ಸಿಲುಕಿದನೆಂದು ಬಗೆದೈ
ಮರುಳೆ ಮುರವೈರಿಯ ಕಟಾಕ್ಷದ ಕಾಹು ಘನವೆಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೃಷ್ಣನು ಹತ್ತಿರದಲ್ಲಿರಲಿ ಅಥವಾ ದೂರದಲ್ಲಿರಲಿ, ಅವನಿಗೆ ತನ್ನವರನ್ನು ಕಾಪಾಡುವ ದೃಷ್ಟಿ ಇರುವುದರಿಂದ ಅವನು “ಭಕ್ತ ಜನ ಸಂರಕ್ಷಕ” ಎಂಬ ಬಿರುದನ್ನುಳಿಸಿಕೊಳ್ಳಲು ದೂರದಲ್ಲಿದ್ದೇ ರಕ್ಷಣೆ ಮಾಡುತ್ತಾನೆ. ಕೃಷ್ಣನು ಧರ್ಮರಾಯನ ಹತ್ತಿರದಲ್ಲಿಲ್ಲ; ಆದ್ದರಿಂದ ಧರ್ಮರಾಯನನ್ನು ಸೆರೆ ಹಿಡಿಯಬಹುದು ಎಂದು ಯೋಚಿಸುವುದು ಮೂರ್ಖತನ. ಮುರ ವೈರಿಯಾದ ಕೃಷ್ಣನ ರಕ್ಷಣಾ ಕ್ರಮ ಯಾವಾಗಲೂ ಬಹಳ ಅದ್ಭುತವಾಗಿರುತ್ತದೆ ಎಂದು ಕರ್ಣನು ದುರ್ಯೋಧನನಿಗೆ ಹೇಳಿದನು.
ಮೂಲ ...{Loading}...
ಇರಲಿ ಮೇಣ್ ದೂರದಲಿ ಹತ್ತಿರೆ
ಯಿರಲಿ ತನ್ನವರೆಂದರತ್ತಲೆ
ಹರಹಿಕೊಂಬನು ಕೃಷ್ಣನದು ತನಗೇರಿಸಿದ ಬಿರುದು
ಹರಿ ಸಮೀಪದೊಳಿಲ್ಲ ದ್ರೋಣಂ
ಗರಸ ಸಿಲುಕಿದನೆಂದು ಬಗೆದೈ
ಮರುಳೆ ಮುರವೈರಿಯ ಕಟಾಕ್ಷದ ಕಾಹು ಘನವೆಂದ ॥64॥
೦೬೫ ಆ ಹದನದನ್ತಿರಲಿ ...{Loading}...
ಆ ಹದನದಂತಿರಲಿ ನಮ್ಮೀ
ಯಾಹವಕೆ ಕಲಿ ಭೀಮ ಸಾತ್ಯಕಿ
ರೂಹುದೋರಿದರದೆ ಘಟೋತ್ಕಚ ಪಾರ್ಥಸುತರೊಡನೆ
ಸಾಹಸಿಕರೊಗ್ಗಾಯ್ತು ದ್ರೋಣಂ
ಗೀ ಹದನು ಭಾರಾಂಕವೀಗಳೆ
ಬೇಹ ಸುಭಟರ ಕಳುಹು ಕಾಳೆಗಕೆಂದನಾ ಕರ್ಣ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಂಗತಿ ಹಾಗಿರಲಿ; ನಮ್ಮ ಈ ಯುದ್ಧಕ್ಕೆ ವೀರನಾದ ಭೀಮ, ಸಾತ್ಯಕಿಯರು ಕಾಣಿಸಿಕೊಂಡಿದ್ದಾರೆ ಅಭಿಮನ್ಯು ಹಾಗೂ ಘಟೋತ್ಕಚರೂ ಒಟ್ಟಾಗಿ ಸೇರಿ ಸಾಹಸಿಗರು ಒಗ್ಗಟ್ಟಿನಿಂದ ದ್ರೋಣನ ಮೇಲೆ ಯುದ್ಧ ಮಾಡಲು ನುಗ್ಗುತ್ತಿದ್ದಾರೆ. ಆದ್ದರಿಂದ ಇವರೆಲ್ಲರನ್ನು ಎದುರಿಸಬಲ್ಲ ಮಹಾಬಲಶಾಲಿಗಳಾದ ವೀರರನ್ನು ದ್ರೋಣರ ಸಹಾಯಕ್ಕೆ ಕೂಡಲೆ ಕಳುಹಿಸಬೇಕೆಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಆ ಹದನ-ಆ ವಿಚಾರ
ಮೂಲ ...{Loading}...
ಆ ಹದನದಂತಿರಲಿ ನಮ್ಮೀ
ಯಾಹವಕೆ ಕಲಿ ಭೀಮ ಸಾತ್ಯಕಿ
ರೂಹುದೋರಿದರದೆ ಘಟೋತ್ಕಚ ಪಾರ್ಥಸುತರೊಡನೆ
ಸಾಹಸಿಕರೊಗ್ಗಾಯ್ತು ದ್ರೋಣಂ
ಗೀ ಹದನು ಭಾರಾಂಕವೀಗಳೆ
ಬೇಹ ಸುಭಟರ ಕಳುಹು ಕಾಳೆಗಕೆಂದನಾ ಕರ್ಣ ॥65॥
೦೬೬ ಎನಲು ನೂಕಿದನರಸ ...{Loading}...
ಎನಲು ನೂಕಿದನರಸ ದುಶ್ಶಾ
ಸನ ಜಯದ್ರಥನಿನತನುಜ ಗುರು
ತನುಜ ಕೃಪ ಮಾದ್ರೇಶ ಭಗದತ್ತಾದಿಗಳು ಸಹಿತ
ತನತನಗೆ ನಾಯಕರು ದ್ರೋಣನ
ಮೊನೆಯಬಲಿದರು ಹಿಡಿ ಯುಧಿಷ್ಠಿರ
ಜನಪತಿಯನೆನುತುರುಬಿದರು ತರುಬಿದರು ಪರಬಲವ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಹೀಗೆನ್ನಲು ತಕ್ಷಣ ದುರ್ಯೋಧನನು ದುಶ್ಶಾಸನ, ಜಯದ್ರಥ, ಕರ್ಣ ದ್ರೋಣರ ಮಗನಾದ ಅಶ್ವತ್ಥಾಮ, ಕೃಪಾಚಾರ್ಯ, ಮಾದ್ರದೇಶದ ರಾಜನಾದ ಶಲ್ಯ, ಭಗದತ್ತನೇ ಮೊದಲಾದವರನ್ನು ದ್ರೋಣರ ಸಹಾಯಕ್ಕೆ ತೆರಳಲು ಆದೇಶಿಸಿದನು. ಉಳಿದ ನಾಯಕರೂ ತಾವು ತಾವೇ ಇವರೆಲ್ಲರೊಡನೆ ಸೇರಿಕೊಂಡು ದ್ರೋಣನ ಅಕ್ಕ ಪಕ್ಕ ನಿಂತು. “ಯುಧಿಷ್ಠಿರನನ್ನು ಹಿಡಿಯಿರಿ” ಎಂದು ಕೂಗುತ್ತಾ ಅತ್ಯುತ್ಸಾಹದಿಂದ ಮುನ್ನುಗ್ಗಿ ಶತ್ರು ಸೇನೆಯ ಮೇಲೆ ದಾಳಿ ಮಾಡಿದರು.
ಪದಾರ್ಥ (ಕ.ಗ.ಪ)
ಇನತನುಜ-ಕರ್ಣ, ಬಲಿದರು-ಬಲವಾಗಿ ನಿಂತರು,
ಮೂಲ ...{Loading}...
ಎನಲು ನೂಕಿದನರಸ ದುಶ್ಶಾ
ಸನ ಜಯದ್ರಥನಿನತನುಜ ಗುರು
ತನುಜ ಕೃಪ ಮಾದ್ರೇಶ ಭಗದತ್ತಾದಿಗಳು ಸಹಿತ
ತನತನಗೆ ನಾಯಕರು ದ್ರೋಣನ
ಮೊನೆಯಬಲಿದರು ಹಿಡಿ ಯುಧಿಷ್ಠಿರ
ಜನಪತಿಯನೆನುತುರುಬಿದರು ತರುಬಿದರು ಪರಬಲವ ॥66॥
೦೬೭ ಫಡಫಡಾರೋ ಧರ್ಮಪುತ್ರನ ...{Loading}...
ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದ ವೋಲವ
ಗಡಿಸಿ ಹೊಕ್ಕನು ಗದೆಯ ಘಾಡದ ಹೊದರ ಹೊಯ್ಲಿನಲಿ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಓಹೋ, ಯಾರು ಯಮಧರ್ಮರಾಯನ ಮಗನಾದ ಧರ್ಮರಾಯನನ್ನು ಹಿಡಿಯಿರೆಂದು ಕೂಗುತ್ತಿರುವರು ? ಇದು ಕೇವಲ ಬಾಯಿ ಮಾತಿನ ಜಂಭ ಅಷ್ಟೆ. ಕೇವಲ ಕೆಟ್ಟ ಮಾತುಗಳನ್ನಾಡುವುದರಿಂದೇನು ಪ್ರಯೋಜನ ?” ಎನ್ನುತ್ತಾ ಭೀಮನು ಉತ್ಸಾಹದಿಂದ ಸಮುದ್ರವನ್ನು ಮಂದರ ಪರ್ವತವು ಕಡೆದ ಹಾಗೆ ಶತ್ರು ಸೇನಾ ಸಮುದ್ರವನ್ನು ಗದೆಯ ಹೊಡೆತಗಳಿಂದ ಕಡೆಯಲಾರಂಭಿಸಿದನು.
ಪದಾರ್ಥ (ಕ.ಗ.ಪ)
ಘಡ-ಆಹಾ, ಕಾಳ್ಗಡೆದಡೆ-ಕೆಟ್ಟ ಮಾತುಗಳನ್ನಾಡಿದರೆ, ಅವಗಡಿಸಿ-ನಿರ್ಲಕ್ಷಿಸಿ, ಹೊಯ್ಲು-ಏಟು, ಘಾಡದ-ತೀವ್ರವಾದ
ಟಿಪ್ಪನೀ (ಕ.ಗ.ಪ)
ಸಮುದ್ರ ಮಥನ - ವಿಷ್ಣುವು ಮೋಹಿನಿಯ ರೂಪವನು ಧರಿಸಿದ ಬಂದು ಅಮೃತವನ್ನು ದೇವ-ದಾವನರಿಗೆ ಸಮನಾಗಿ ಹಂಚುವುದಾಗಿ ಹೇಳಿ ವಂಚಿಸಿದ ಪ್ರಸಂಗ ಸಮುದ್ರ ಮಥನದ್ದು. ದೇವದಾನವರಿಬ್ಬರೂ ಅಮೃತಕ್ಕಾಗಿ ಹಾಲುಗಡಲನ್ನು ಮಥಿಸುವ ತೀರ್ಮಾನ ಕೈಗೊಂಡರು. ಮಥನದ ಕ್ರಮವನನು ಮೇರುಪರ್ವತದಲ್ಲಿ ಕುಳಿತು ತೀರ್ಮಾನಿಸಿದರು. ಕೂಲಂಕಷವಾಗಿ ಚರ್ಚಿಸಿದ ಬಳಿಕ ಭಾರಿಯ ಮಂದರ ಪರ್ವತವನ್ನು ಕಡೆಗೋಲಾಗಿ ವಾಸುಕಿಯನ್ನು ಹಗ್ಗವಾಗಿ ಕೆಳಗೆ ಕೂರ್ಮನನ್ನು ಆಧಾರವಾಗಿ ಇರಿಸಿದರು. ಹನ್ನೊಂದು ಸಾವಿರ ಯೋಜನ ಉದ್ದಗಲಗಳಿಂದ ಮಂದರ ಪರ್ವತವನ್ನು ಆದಿಶೇóಷನು ಎತ್ತಿ ತಂದನು. ಅಧಿಕೋತ್ಸಾಹದಿಂದ ದೇವದಾನವರು ಮಥಿಸುವ ಕ್ರಿಯೆಯಲ್ಲಿ ತೊಡಗಿದರು.
ಈ ಅದ್ಭುತ ಮಥನ ನಡೆದದ್ದು ಅಮೃತದ ಸಲುವಾಗಿ ತಾನೇ! ಆದರೆ ಮೊದಲು ಬಂದದ್ದು ಘೋರ ವಿಷ! ಹಾಲಾಹಲ! ಆ ವಿಷಾಗ್ನಿಯಿಂದ ಹೊರಟ ಕೆಂಡದ ಉಂಡೆಗಳು ಲೋಕಕ್ಕೇ ಅಪಾಯಕಾರಿಯಾಗುವ ಸಂಭವವಿತ್ತು. ಆದರೆ ಅಪಾರ ಕರುಣೆಯಿಂದ ಮಹೇಶ್ವರನು ಆ ಘೋರ ವಿಷವನ್ನು ತಾನೇ ಗಂಟಲಲ್ಲಿರಿಸಿಕೊಂಡ. ಆದುದರಿಂದಲೇ ಅವನಿಗೆ ನೀಲಕಂಠ, ವಿಷಕಂಠ ಎಂಬ ಹೆಸರುಗಳು ಬಂದಿವೆ.
ಅಮೃತ ಬರುವ ಮುನ್ನ ಸಮುದ್ರದಿಂದ ಮೇಲೆದ್ದ ಕೆಲವು ವ್ಯಕ್ತಿಗಳೂ ಉಪವಸ್ತುಗಳು ಸೊಗಸಾದುವೇ. ಚಂದ್ರ, ಜ್ಯೇಷ್ಠಾದೇವಿ, ಲಕ್ಷ್ಮೀದೇವಿ, ಉಚ್ಚೈಶ್ರವಸ್ಸು, ಕೌಸ್ತುಭ, ಧನ್ವಂತರಿ, ಐರಾವತ, ಮದ್ಯ ಮೊದಲಾದವುಗಳು ಉದ್ಭವಿಸಿದುವು. ಲಕ್ಷ್ಮಿ ಮತ್ತು ಕೌಸ್ತುಭಗಳು ವಿಷ್ಣುನ ಪಾಲಾದವು. ಲಕ್ಷ್ಮಿ ಕೌಸ್ತುಭಗಳಿಗೆ ಅವನ ಎದೆಯಲ್ಲಿ ಜಾಗ! ಐರಾವತ ಎಂಬ ಅನೆ ಉಚ್ಚೈಶ್ರವಸ್ ಎಂಬ ಕುದುರೆ ದೇವೇಂದ್ರನಿಗೆ ಸೇರಿದವು.
ಕೊನೆಗೆ ಉಳಿದದ್ದು ಅಮೃತ ತಾನೆ! ಇದನ್ನು ಮಾತ್ರ ದೇವದಾನವರಿಬ್ಬರೂ ತಮಗೆ ಬೇಕೆಂದು ಜಗಳವಾಡಿದರು. ಕೊನೆಗೆ ವಿಷ್ಣುವು ಮೋಹಿನಿಯ ರೂಪದಲ್ಲಿ ಅಮೃತವನ್ನು ಹಂಚಲು ಬಂದು ನಿಂತಳು. ಆ ಭುವನ ಮೋಹಿನಿಯ ರೂಪಕ್ಕೆ ಮರುಳಾದ ರಾಕ್ಷಸರು ಆಕೆ ಅಮೃತವನ್ನು ಹಂಚಲಿ ಎಂದು ಹೇಳಿದರು. ಎರಡು ವರ್ಗಗಳವರನ್ನೂ ಎರಡು ಸಾಲಾಗಿ ಕುಳ್ಳಿರಿಸಿದ ಮೋಹಿನಿ ನಾಟ್ಯಭಂಗಿಯಲ್ಲಿ ವಿನಿಯೋಗದ ನಾಟಕವಾಡುತ್ತಾ ಮೊದಲ ಪಂಕ್ತಿಯಲ್ಲಿದ್ದ ದೇವತೆಗಳಿಗೇ ಎಲ್ಲವನ್ನೂ ಬಡಿಸಿ ಖಾಲಿಯಾದ ಮಡಕೆಯನ್ನು ಉಳಿಸಿದಳು. ಈ ಮಧ್ಯೆ ರಾಹು ಎಂಬುವನು ದೇವತೆಗಳ ಸಾಲಿನಲ್ಲಿಯೇ ಕುಳಿತು ಅಮೃತವನ್ನು ಸೇವಿಸಲಾರಂಭಿಸಿದ. ಈ ದೃಶ್ಯವನ್ನು ನೋಡಿದ ಸೂರ್ಯಚಂದ್ರ ವಿಷ್ಣುವಿಗೆ ಸಂಗತಿಯನ್ನು ತಿಳಿಸಿದರು. ಕೂಡಲೇ ಆ ಅಮೃತವೂ ರಾಹುವಿನ ಕಂಠರಂದ್ರವನ್ನು ಸೇರುವುದಕ್ಕಿಂತ ಮುಂಚೆಯೇ ತನ್ನ ಚಕ್ರದಿಂದ ಕುತ್ತಿಗೆಯನ್ನು ಉರುಳಿಸಿದ. ಮುಖಭಾಗವು ಅಮೃತವನ್ನು ಕುಡಿದಿದ್ದುದರಿಂದ ಅದು ಚಿರಂಜೀವಿಯಾಗಿ ಉಳಿದುಕೊಂಡು ಕಂಠದ ಕೆಳಗಿನ ಭಾಗವೆಲ್ಲ ಕತ್ತರಿಸಿ ಬಿತ್ತು.
ಈ ವಂಚನೆಯಿಂದ ಕುಪಿತರಾದ ದಾನವರಿಗೂ ದೇವತೆಗಳಿಗೂ ಘೋರವಾದ ಯುದ್ಧ ನಡೆಯಿತು. ಸಮುದ್ರ ತೀರದಲ್ಲಿ ನಡೆದ ಈ ಯುದ್ಧದಲ್ಲಿ ರಾಕ್ಷಸ ಪಡೆ ನಿರ್ನಾಮವಾಯಿತು. ಅಳಿದುಳಿದ ರಾಕ್ಷಸರು ಸಮುದ್ರದಲ್ಲಿ ಅಡಗಿ ಜೀವ ಉಳಿಸಿಕೊಂಡರು.
ಮೂಲ ...{Loading}...
ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದ ವೋಲವ
ಗಡಿಸಿ ಹೊಕ್ಕನು ಗದೆಯ ಘಾಡದ ಹೊದರ ಹೊಯ್ಲಿನಲಿ ॥67॥
೦೬೮ ಗದೆಯ ಘಾತಾಘಾತಿಕಾರನ ...{Loading}...
ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡಜೋಡು ಬಲು ಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬಿದುದು ನಿಬ್ಬರವಾಗಿ ಬಹುವಿಧ ವಾದ್ಯ ನಿರ್ಘೋಷ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆ ಗದೆಯಿಂದ ಬಡಿಯುವ ಭೀಮಸೇನನನ್ನು ಎದುರುಗೊಂಡಿತು. ದಿಕ್ಕು ದಿಕ್ಕುಗಳಿಂದ ಹಬ್ಬಿದ ಸೇನೆ ಭೀಮನ ಮೇಲೆ ಅಡರಿತು. ವೀರಾಧಿವೀರರು ಎಡಬಲಗಳಿಂದ ಕವಿದರು. ಮದ್ದಾನೆಯನ್ನೇರಿ ಬರುತ್ತಿದ್ದ ವೀರರು, ರಥದಲ್ಲಿ ಬರುತ್ತಿದ್ದವರು, ಕುದುರೆಯ ಸೇನೆಯ ರಕ್ಷಣೆಯಲ್ಲಿ ಮುಂದುವರಿಯುತ್ತಿರುವಾಗ ರಣವಾದ್ಯಗಳ ಘೋಷ ಎಲ್ಲೆಡೆ ವ್ಯಾಪಿಸಿ ರಣಭೂಮಿಯು ಭಯಂಕರವಾಯಿತು.
ಪದಾರ್ಥ (ಕ.ಗ.ಪ)
ಭಾರಣೆ-ಜವಾಬ್ದಾರಿ, ನಿಡುವರಿಯ-ವ್ಯಾಪಕವಾಗಿ, ಕಾಹಿನಲಿ-ರಕ್ಷಣೆಯಲಿ, ನಿಬ್ಬರವಾಗಿ-ಬೆರಗಾಗುವಂತೆ, ನಿರ್ಘೋಷ-ಭಾರಿಧ್ವನಿ
ಮೂಲ ...{Loading}...
ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡಜೋಡು ಬಲು ಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬಿದುದು ನಿಬ್ಬರವಾಗಿ ಬಹುವಿಧ ವಾದ್ಯ ನಿರ್ಘೋಷ ॥68॥
೦೬೯ ತೆತ್ತಿಗರ ಬರಹೇಳು ...{Loading}...
ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನಿಗೆ ಜಯ ದೊರಕಲು ಸಾಧ್ಯವಿಲ್ಲ. ಪಾಂಡವರ ಋಣವನ್ನು ತಿಂದು ಪ್ರಾಣ ತ್ಯಾಗಕ್ಕೆ ಸಿದ್ಧರಾಗಿ ಯುದ್ಧ ಮಾಡಬಲ್ಲ ವೀರರನ್ನು ಕರೆಸು’ ಎನ್ನುತ್ತಾ ದಶದಿಕ್ಕುಗಳಿಂದಲೂ ಭೀಮನನ್ನು ಮುತ್ತಿಕೊಂಡು ಬಾಣಗಳನ್ನು ಹೊಡೆದರು, ಆಗ ಭೀಮನು ಕತ್ತಲೆಯೇ ಸೂರ್ಯನನ್ನು ನಾಶಮಾಡುವಂತಹ ಕಾಲ ಬಂದಿತೆಂದು (ವ್ಯಂಗ್ಯವಾಗಿ) ಹೇಳುತ್ತಾ ಎದುರಾದ ಸೇನೆಯ ಮೇಲೆ ಬಿದ್ದು ಎಲ್ಲರನ್ನೂ ನೆಲಸಮ ಮಾಡಿದನು.
ಪದಾರ್ಥ (ಕ.ಗ.ಪ)
ತೆತ್ತಿಗರ-ಋಣಿಗಳ, ಎತ್ತಣ-ಎಲ್ಲಿ ಸಾಧ್ಯ ? ಸರಳು-ಬಾಣ, ತಳಪಟ-ನೆಲಸಮ, ಹೇರಾಸಿ-ದೊಡ್ಡರಾಸಿ
ಮೂಲ ...{Loading}...
ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ ॥69॥
೦೭೦ ಒನ್ದು ಕಡೆಯಲಿ ...{Loading}...
ಒಂದು ಕಡೆಯಲಿ ಭೀಮ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಶರ
ವೊಂದು ಕಡೆಯಲಿ ಪಾರ್ಥನಂದನ ಭೀಮನಂದನರು
ಒಂದು ಕಡೆಯಲಿ ನಕುಲ ಪಾಂಡವ
ನಂದನರು ಮತ್ತೊಂದು ದೆಸೆಯಲಿ
ಮುಂದುವರಿದರು ಮುರಿದರರಿಗಳ ಹೊದರ ಹೊಸ ಮೆಳೆಯ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಉತ್ಸಾಹದಿಂದ ಮುನ್ನುಗ್ಗಿ ಯುದ್ಧವನ್ನು ಮುಂದುವರಿಸಿದಾಗ ಅವನು ನುಗ್ಗಿದೆಡೆಯಲ್ಲಿ ವೀರರು ಪ್ರಾಣವನ್ನು ಕಳೆದುಕೊಂಡರು ಬೇರೆ ಬೇರೆ ದಿಕ್ಕುಗಳಿಂದ ಬಂದ ಸಾತ್ಯಕಿ, ಅರ್ಜುನನ ಮಕ್ಕಳು, ಭೀಮನ ಮಕ್ಕಳು, ನಕುಲ ಹಾಗೂ ಧರ್ಮರಾಯ, ಸಹದೇವಾದಿ ಮಕ್ಕಳು ಮುನ್ನುಗ್ಗಿ ಶತ್ರು ಸೇನೆಯ ವೀರರು ಎಂಬ ಬಿದಿರ ಮೆಳೆಯನ್ನು ಕತ್ತರಿಸಲಾರಂಭಿಸಿದರು.
ಪದಾರ್ಥ (ಕ.ಗ.ಪ)
ಸವರಿದನು-ಕೊಂದು ಹಾಕಿದನು, ದೆಸೆ-ದಿಕ್ಕು, ಶರ-ಬಾಣ, ನಂದನ-ಮಗ, ಮುರಿದರು-ಸೋಲಿಸಿದರು, ಹೊದರ-ಗುಂಪಿನ, ಮೆಳೆ-ಬಿದಿರಿನ ಗಿಡಗಳ ಗುಂಪು, ಅರಿ-ಶತ್ರು
ಮೂಲ ...{Loading}...
ಒಂದು ಕಡೆಯಲಿ ಭೀಮ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಶರ
ವೊಂದು ಕಡೆಯಲಿ ಪಾರ್ಥನಂದನ ಭೀಮನಂದನರು
ಒಂದು ಕಡೆಯಲಿ ನಕುಲ ಪಾಂಡವ
ನಂದನರು ಮತ್ತೊಂದು ದೆಸೆಯಲಿ
ಮುಂದುವರಿದರು ಮುರಿದರರಿಗಳ ಹೊದರ ಹೊಸ ಮೆಳೆಯ ॥70॥
೦೭೧ ಥಟ್ಟು ನುಗ್ಗಾಯಿತು ...{Loading}...
ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆ ನುಚ್ಚು ನೂರಾಯಿತು. ದ್ರೋಣನು ಶತ್ರುಗಳ ಹೊಡೆತಕ್ಕೆ ಸಿಲುಕಿದ್ದಾನೆ. ಶತ್ರು ಸೇನೆಯು ತಮ್ಮ ಸೇನೆಯನ್ನು ಬಗ್ಗು ಬಡಿಯುತ್ತಿದೆ. ದ್ರೋಣನೊಬ್ಬನನ್ನೆ ಹೋರಾಡಲು ಬಿಡುವುದು ಸರಿಯಲ್ಲ; ದ್ರೋಣನಿಗೆ ಬೆಂಬಲವಾಗಿ ನಿಲ್ಲಬೇಕು ಎಂದುಕೊಂಡ ದುರ್ಯೋಧನನು ತನ್ನ ರಥವನ್ನು ದ್ರೋಣನಿರುವ ಕಡೆಗೆ ಓಡಿಸಲು ಹೇಳಿ ಅವನ ಸುತ್ತಲಿದ್ದ ದುರ್ಬಲ ವೀರರನ್ನು ಪಕ್ಕಕ್ಕೆ ಹೊರಳಲು ತಿಳಿಸಿ ದ್ರೋಣನ ನೆರವಿಗೆ ಬಂದನು.
ಪದಾರ್ಥ (ಕ.ಗ.ಪ)
ಥಟ್ಟು-ಸೇನೆ, ಇಟ್ಟಣಿಸು-ಆಕ್ರಮಿಸು, ಹೊಟ್ಟುಗರ-ಸತ್ವವಿಲ್ಲದವರ,
ಮೂಲ ...{Loading}...
ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ ॥71॥
೦೭೨ ಮಗನ ತೆಗೆಯೋ ...{Loading}...
ಮಗನ ತೆಗೆಯೋ ಸಾತ್ಯಕಿಯ ಹೆರ
ತೆಗೆಯ ಹೇಳೋ ಬೇಡ ನಕುಲಾ
ದಿಗಳ ನೂಕಭಿಮನ್ಯುವನು ಹಿಮ್ಮೆಟ್ಟ ಹೇಳೆನುತ
ಮೊಗದ ಹೊಗರಿನ ಕೆಂಪನುಗುಳ್ವಾ
ಲಿಗಳ ದಂತದಲೌಕಿದಧರದ
ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಮನು, " ಮಗನನ್ನು (ಘಟೋತ್ಕಚನನ್ನು) ಹೊರಕ್ಕೆ ಕಳುಹಿಸು” ಎಂದು ನುಡಿದು ಸಾತ್ಯಕಿ ನಕುಲಾದಿಗಳನ್ನು. ಹಿಂದೆ ಸರಿಯುವಂತೆ ಹೇಳಿ “ಆ ಅಭಿಮನ್ಯುವನ್ನು ಹಿಂದಕ್ಕೆ ಬರ ಹೇಳಿರಿ” ಎಂದು ಅವರೆಲ್ಲರನ್ನು ರಕ್ಷಿಸುವ ಉಪಾಯವನ್ನು ಮಾಡಿ, ಮುಖವನ್ನು ಹೊರತೆಗೆಯಿರಿ ಎನ್ನುತ್ತಾ ಭೀಮನು ರಕ್ತ ಕಾರುವನಂತೆ ಕಣ್ಣನ್ನು ಕೆಂಪಾಗಿಸಿಕೊಂಡು, ಹಲ್ಲನ್ನು ಒಂದೇ ಸಮನೆ ಕಡಿಯುತ್ತಾ, ಹುಬ್ಬು ಗಂಟಿಕ್ಕಿಕೊಂಡು, ತುಟಿಗಳನ್ನು ನಡುಗಿಸುತ್ತಾ ಗದೆಯನ್ನು ತಿರುಗಿಸುತ್ತಾ ರಣಾಂಗಣದಲ್ಲಿ ಕೋಲಾಹಲವನ್ನುಂಟು ಮಾಡಿದನು.
ಪದಾರ್ಥ (ಕ.ಗ.ಪ)
ಹೆರತೆಗೆ-ಹೊರಗೆ ಕಳುಹಿಸು, ಹಿಮ್ಮೆಟ್ಟ-ಹಿಂದಕ್ಕೆ, ಹೊಗರು-ಕಾಂತಿ, ಆಲಿ-ಕಣ್ಣು, ಔಕಿ-ಒತ್ತಿ, ಅಧರದ-ತುಟಿಯ
ಮೂಲ ...{Loading}...
ಮಗನ ತೆಗೆಯೋ ಸಾತ್ಯಕಿಯ ಹೆರ
ತೆಗೆಯ ಹೇಳೋ ಬೇಡ ನಕುಲಾ
ದಿಗಳ ನೂಕಭಿಮನ್ಯುವನು ಹಿಮ್ಮೆಟ್ಟ ಹೇಳೆನುತ
ಮೊಗದ ಹೊಗರಿನ ಕೆಂಪನುಗುಳ್ವಾ
ಲಿಗಳ ದಂತದಲೌಕಿದಧರದ
ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ ॥72॥
೦೭೩ ಸಿಲುಕಿದನು ತಿವಿ ...{Loading}...
ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಯೋಧನನು ಸಿಕ್ಕಿ ಹಾಕಿಕೊಂಡಂತಾಯಿತು. ಅವನನ್ನು ತಿವಿಯಿರಿ, ಸ್ವಾಮಿ ದ್ರೋಹಿಯಾದ ಇವನ ಕೊರಳಿನ ರಕ್ತಕ್ಕೆ ಬಾಯನ್ನು ಒಡ್ಡಿ” ಎನ್ನುತ್ತಾ ಭೀಮನು ಅಲ್ಲಲ್ಲಿ ನಿಂತು, ನುಗ್ಗಿ, ಆನೆ, ಕುದುರೆಗಳನ್ನು ಗುಂಪುಗುಂಪಾಗಿ ಇರಿದು “ಎಲೈ ದುರಾತ್ಮನಾದ ದುರ್ಯೋಧನನೆ, ಜೂಜಾಡುವುದರಲ್ಲಿಯೂ, ಜಗಳವಾಡುವುದರಲ್ಲಿಯೂ ನಿಸ್ಸೀಮನೆ, ನಿಲ್ಲು, ನಿಲ್ಲು, ಎನ್ನುತ್ತಾ ಮುಂದೆ ನುಗ್ಗಿ ದುರ್ಯೋಧನನ ರಥ ಪುಡಿ ಪುಡಿಯಾಗುವ ಹಾಗೆ ಹೊಡೆದನು.
ಪದಾರ್ಥ (ಕ.ಗ.ಪ)
ಸಿಲುಕಿದನು-ಸಿಕ್ಕಿಹಾಕಿಕೊಂಡನು, ಅಳವಿಯಲಿ-ಪರಾಕ್ರಮದಿಂದ, ಗಳ-ಕೊರಳು
ಮೂಲ ...{Loading}...
ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ ॥73॥
೦೭೪ ತೋಳನಳವಿಗೆ ಸಿಕ್ಕಿತೋ ...{Loading}...
ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರು ಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಯಾಸನಾದಿಗಳು ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ “ಅಯ್ಯೋ ತೋಳನ ಹಿಡಿತಕ್ಕೆ ಪ್ರಾಣಿಸಮೂಹ ಸಿಕ್ಕಿದಂತಾಯಿತು. ಶಿವಶಿವಾ, ದೇವತಾಸ್ತ್ರೀಯರ ಉಪಚಾರಕ್ಕೆ ದುರ್ಯೋಧನ ಸಿಗುವಂತಾಗುತ್ತಿದೆ ದುರ್ಯೋಧನನ ಪ್ರಾಣ ಹೋಗುವ ಸಮಯ ಸನ್ನಿಹಿತವಾದಂತಿದೆ. ದುರ್ಯೋಧನನು ಭೀಮನಿಂದ ಹತನಾಗುತ್ತಾನೆ.” ಎಂದು ದುಶ್ಶಾಸನನೇ ಮೊದಲಾದವರು ಕಳವಳಗೊಂಡು ದುರ್ಯೋಧನನಿದ್ದ ಕಡೆಗೆ ಮಿಂಚಿನಂತೆ ಧಾವಿಸಿ ಕೌರವನನ್ನು ಹಿಂದಿರಿಸಿ ಕಿವಿಯವರೆಗೆ ಬಿಲ್ಲನ್ನೆಳೆದು ಭೀಮನೆಡೆಗೆ ಬಾಣ ಪ್ರಯೋಗವನ್ನು ಮಾಡಿದರು.
ಮೂಲ ...{Loading}...
ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರು ಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಯಾಸನಾದಿಗಳು ॥74॥
೦೭೫ ವರ ವಿಕರ್ಣ ...{Loading}...
ವರ ವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಶಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತು
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ವಿಕರ್ಣ, ದುಶ್ಶಾಸನ, ದುರ್ಮರ್ಷಣ, ಸುಲೋಚನರೇ ಮೊದಲಾದವರು ಕೌರವನ ರಕ್ಷಣೆಗಾಗಿ ರಣರಂಗಕ್ಕೆ ಧುಮುಕಿ ವಾಯು ಕುಮಾರನನ್ನು ಕೆಣಕಿದರು. " ನುಸಿ ಹುಳಗಳು ಬೆಟ್ಟವನ್ನು ಕಾಡುವ ರೀತಿಯನ್ನು ನೋಡಿರಿ ಭಲೆ " ಎನ್ನುತ್ತಾ ಭೀಮನು ನಗುನಗುತ್ತಾ ತನ್ನ ಕೈಚಳಕವನ್ನು ಅವರಿಗೆ ತೋರಲಾರಂಭಿಸಿದನು.
ಪದಾರ್ಥ (ಕ.ಗ.ಪ)
ಹರಿಬ - ರಕ್ಷಣೆ
ಮೂಲ ...{Loading}...
ವರ ವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಶಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತು
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ ॥75॥
೦೭೬ ಎಚ್ಚ ಶರವನು ...{Loading}...
ಎಚ್ಚ ಶರವನು ಗದೆಯಲಣೆದಿಡು
ಗಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚುಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳ್ ಎಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮನ ಮೇಲೆ ಯಾರೇ ಎಷ್ಟೇ ಬಾಣಗಳನ್ನು ಬಿಟ್ಟರೂ ಅವೆಲ್ಲವನ್ನು ಗದೆಯಿಂದ ತಡೆದು ಹಾಕಿದನಲ್ಲದೆ, ತನ್ನೆದುರು ಬಂದವರ ಬಳಿ ಬೆಂಕಿ ನುಗ್ಗುವ ಹಾಗೆ ನುಗ್ಗಿ ರಥವನ್ನು ಸೀಳಿಹಾಕಿ, ಕುದುರೆಗಳನ್ನು ಬಿಲ್ಲನ್ನು ಕೊಚ್ಚಿ ಹಾಕಿದನು. ಕೈಯಲ್ಲಿ ಹಿಡಿದ ಬಿಲ್ಲನ್ನು ಗದೆಯಿಂದ ಕೊಚ್ಚಿ ಹಾಕಿದನು. ಕೊಲೆಗಡುಕನಾದ ಭೀಮನೆದುರು ಧೈರ್ಯದಿಂದ ಮುಂದೆ ಬರುವ ಮನಸ್ಸು ಅಲ್ಲಿದ್ದವರಲ್ಲಿ ಯಾರಿಗಿರುತ್ತದೆ? ನಿಮ್ಮ ಸೇನೆಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಿತಿಯಾಯಿತು” ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಣೆದಿಡು-ಅಡ್ಡಗಟ್ಟು, ಒಚ್ಚತ-ಸಿದ್ಧ, ಮುಡಿಪು, ನಿಶ್ಚಿತ,
ಮೂಲ ...{Loading}...
ಎಚ್ಚ ಶರವನು ಗದೆಯಲಣೆದಿಡು
ಗಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚುಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ ॥76॥
೦೭೭ ಸರಿದರೀ ನಾಲುವರು ...{Loading}...
ಸರಿದರೀ ನಾಲುವರು ರಾಯನ
ಮರಳಲೀಯದೆ ಮತ್ತೆ ಮಾರುತಿ
ಹರಿಸಿದನು ನಿಜರಥವನತಿರಥರೊಡ್ಡು ಲಟಕಟಿಸೆ
ದೊರೆಯ ತೆಗೆಯೋ ನೂಕು ನೂಕಲಿ
ಕರಿ ಘಟೆಯನೆನೆ ಮುಗಿಲ ಮೋಹರ
ಧರೆಗೆ ತಿರುಗಿದವೆನಲು ಜೋಡಿಸಿದರು ಗಜವ್ರಜವ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನೇ ಮೊದಲಾದ ನಾಲ್ವರು ಪಕ್ಕಕ್ಕೆ ಸರಿದರು. ಆದರೆ ಕೌರವನು ಹಾಗೆ ಹಿಂದೆ ಸರಿಯಲು ಬಿಡದೆ ಭೀಮ ರಥವನ್ನು ಮುಂದೆ ಬಿಟ್ಟ. ಕೌರವನ ಅತಿರಥರ ಗುಂಪು ಲಟಕಟಿಸಿತು. ಕೌರವನನ್ನು ಬಿಡಿಸಿಕೊಳ್ಳಿರೊ. ಆನೆಗಳನ್ನು ನುಗ್ಗಿಸಿ ಎಂದು ಕೂಗಾಡಿದಾಗ ಮೋಡಗಳ ಗುಂಪೇ ಧರೆಗಿಳಿಯಿತೆಂಬಂತೆ ಆನೆಗಳ ಸೇನೆ ಭೀಮನನ್ನು ಎದುರಿಸಿತು.
ಪದಾರ್ಥ (ಕ.ಗ.ಪ)
ಲಟಕಟಿಸು - ಆಯಾಸಗೊಳ್ಳು, ತವಕಿಸು
ಮೂಲ ...{Loading}...
ಸರಿದರೀ ನಾಲುವರು ರಾಯನ
ಮರಳಲೀಯದೆ ಮತ್ತೆ ಮಾರುತಿ
ಹರಿಸಿದನು ನಿಜರಥವನತಿರಥರೊಡ್ಡು ಲಟಕಟಿಸೆ
ದೊರೆಯ ತೆಗೆಯೋ ನೂಕು ನೂಕಲಿ
ಕರಿ ಘಟೆಯನೆನೆ ಮುಗಿಲ ಮೋಹರ
ಧರೆಗೆ ತಿರುಗಿದವೆನಲು ಜೋಡಿಸಿದರು ಗಜವ್ರಜವ ॥77॥
೦೭೮ ವಙ್ಗನಮ್ಬಟ್ಟನು ವರಾಳ ...{Loading}...
ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಂಗ, ಅಂಬಟ್ಟು, ವರಾಳ, ಕಳಿಂಗ ಬರ್ಬರ ಮೊದಲಾದ ದೇಶಗಳ ರಾಜರು ತಮ್ಮ ಆನೆಯ ಸೇನೆಗಳೆಲ್ಲವನ್ನು ಕೈಬೀಸಿ ಕರೆದರು, ಕೊಳವೆಯಾಕಾರದ ಬಿದಿರಿನ ಬಿಲ್ಲುಗಳನ್ನು ಹಿಡಿದರು. ಒಟ್ಟಾದ ಎಂಬತ್ತು ಸಾವಿರದಷ್ಟು ಸೇನೆ , ಶ್ರೇಷ್ಠವಾದ ಆನೆಯ ಸೇನೆಯೊಂದಿಗೆ ಮುತ್ತಿಗೆ ಹಾಕಿತು. ಈ ಮಹಾಚತುರಂಗ ಸೇನೆಯನ್ನು ಹೇಗೆ ಎದುರಿಸುವುದು ಎಂದು ಶತ್ರು ಸೇನೆಯು ಗಲಿಬಿಲಿಗೊಂಡಿತು.
ಪದಾರ್ಥ (ಕ.ಗ.ಪ)
ನಾಳಿವಿಲ್ಲು-ಬಿದಿರಿನ ಕೊಳವೆಯಾಕಾರದ ಬಿಲ್ಲು, ವಂಗಡದಲಿ-ಒಟ್ಟಾಗಿ, ತುಂಗ-ಎತ್ತರವಾದ, ಅಂಗವಿಸುವವರು-ಎದುರಿಸುವವರು, ಗಜಬಜಿಸಿತು-ಗಲಿಬಿಲಿಗೊಂಡಿತು.
ಮೂಲ ...{Loading}...
ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ ॥78॥
೦೭೯ ಆಳ ಹೆದರಿಸಿ ...{Loading}...
ಆಳ ಹೆದರಿಸಿ ನುಡಿವ ನಾಯ್ಗಳ
ಬೀಳ ಬಡಿ ಬಡಬಾಗ್ನಿ ನೊರಜಿನ
ದಾಳಿಗಳುಕುವುದುಂಟೆ ಫಡ ಫಡಯೆನುತ ಬೊಬ್ಬಿರಿದ
ಕಾಲ ದಂಡವ ತಿರುಹಿ ಭುವನದ
ಲೂಳಿಗವ ಮಾಡುವ ಕೃತಾಂತನ
ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯ ಸೈನಿಕನನ್ನು ಹೆದರಿಸಿ ಮಾತನಾಡುವ ನಾಯಿಗಳಂತಿರುವ ಇವರನ್ನು ಸಾಯುವ ಹಾಗೆ ಬಡಿಯಬೇಕು. ಸಮುದ್ರದೊಳಗಿರುವ ಬೆಂಕಿಯು ಸೊಳ್ಳೆಗಳ ದಾಳಿಗೆ ಹೆದರುವುದುಂಟೇ. ಅದರಂತೆ ತಾನು ಈ ಚತುರಂಗ ಸೇನೆಗೆ ಹೆದರುವುದಿಲ್ಲವೆಂದು ಗರ್ಜಿಸುತ್ತಾ, ಸಾಕ್ಷಾತ್ ಯಮನು ತನ್ನ ಕಾಲದಂಡವನ್ನು ಬೀಸಿ ಭೂಲೋಕದ ಸಮಸ್ತ ಜೀವರನ್ನು ಸೆಳೆಯುವ ಹಾಗೆ ಗದಾದಂಡವನ್ನು ಬೀಸುತ್ತಾ ಶತ್ರು ಸೇನೆಯನ್ನು ನುಚ್ಚು ನೂರು ಮಾಡಲು ಭೀಮನು ಉದ್ಯುಕ್ತನಾದನು.
ಪದಾರ್ಥ (ಕ.ಗ.ಪ)
ನೊರಜು - ಸೊಳ್ಳೆ , ಕಾಲದಂಡ-ಯಮನ ಕೋಲು,
ಮೂಲ ...{Loading}...
ಆಳ ಹೆದರಿಸಿ ನುಡಿವ ನಾಯ್ಗಳ
ಬೀಳ ಬಡಿ ಬಡಬಾಗ್ನಿ ನೊರಜಿನ
ದಾಳಿಗಳುಕುವುದುಂಟೆ ಫಡ ಫಡಯೆನುತ ಬೊಬ್ಬಿರಿದ
ಕಾಲ ದಂಡವ ತಿರುಹಿ ಭುವನದ
ಲೂಳಿಗವ ಮಾಡುವ ಕೃತಾಂತನ
ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ ॥79॥
೦೮೦ ಗದೆಯಲಪ್ಪಳಿಸಿದನು ಕೋದಂ ...{Loading}...
ಗದೆಯಲಪ್ಪಳಿಸಿದನು ಕೋದಂ
ಡದಲಿ ಕಾದಿದ ಮುದ್ಗರದಲೊರ
ಸಿದನು ಲೌಡಿಯಲರೆದನುರೆ ತರಿದನು ಕೃಪಾಣದಲಿ
ಒದೆದು ಕೆಲವನು ಮುಷ್ಟಿಯಲಿ ಮೋ
ದಿದನು ಕೆಲವನು ನಿಖಿಳ ಶಸ್ತ್ರಾ
ಸ್ತ್ರದಲಿ ಕಾದಿದನನಿಲಸುತನಿಭಬಲವ ಬರಿಕೈದು ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೇನೆಯನ್ನು ಭೀಮನು ಗದೆಯಿಂದ ಅಪ್ಪಳಿಸಿ, ಬಿಲ್ಲಿನಿಂದ ಹೊಡೆದು ಕೊಲ್ಲುತ್ತಾ, ಕತ್ತಿಯಿಂದ ಕತ್ತರಿಸುತ್ತಾ, ಲೌಡಿ ಎಂಬ ದೊಣ್ಣೆಯ ಆಯುಧದಿಂದ ಚೆನ್ನಾಗಿ ಅರೆದು, ಕೃಪಾಣದಿಂದ ಪ್ರಾಣವನ್ನು ತೆಗೆಯುತ್ತಾ ಸೇನೆಯನ್ನು ನಿರ್ನಾಮ ಮಾಡಿದನು. ಕೆಲವರನ್ನು ಕಾಲಿನಲ್ಲಿ ಒದ್ದು, ಕೆಲವರನ್ನು ಮುಷ್ಟಿಯಿಂದ ಗುದ್ದಿ, ಎಲ್ಲ ರೀತಿಯ ಶಸ್ತ್ರಾಸ್ತ್ರಗಳ ಪ್ರಯೋಗದಿಂದ ಕಾದಿ ಎದುರಾದ ಗಜಸೇನೆಯನ್ನು ಭೀಮನು ನಾಶಪಡಿಸಿದನು.
ಪದಾರ್ಥ (ಕ.ಗ.ಪ)
ಉರೆ-ಚೆನ್ನಾಗಿ, ಕೃಪಾಣ-ಕತ್ತಿ, ಮೋದಿದನು-ಗುದ್ದಿದನು, ನಿಖಿಳ-ಎಲ್ಲ, ಇಭಬಲದ-ಆನೆಯ ಸೇನೆಯನ್ನು
ಮೂಲ ...{Loading}...
ಗದೆಯಲಪ್ಪಳಿಸಿದನು ಕೋದಂ
ಡದಲಿ ಕಾದಿದ ಮುದ್ಗರದಲೊರ
ಸಿದನು ಲೌಡಿಯಲರೆದನುರೆ ತರಿದನು ಕೃಪಾಣದಲಿ
ಒದೆದು ಕೆಲವನು ಮುಷ್ಟಿಯಲಿ ಮೋ
ದಿದನು ಕೆಲವನು ನಿಖಿಳ ಶಸ್ತ್ರಾ
ಸ್ತ್ರದಲಿ ಕಾದಿದನನಿಲಸುತನಿಭಬಲವ ಬರಿಕೈದು ॥80॥
೦೮೧ ಗಿಳಿಯ ಹಿಣ್ಡುಗಳೆತ್ತ ...{Loading}...
ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳ್ ಎಂದ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆ ಎಂಬ ಗಿಳಿಗಳನ್ನು ಪಾಂಡವ ಸೇನೆಯೆಂಬ ಗಿಡುಗಗಳ ಸಮೂಹ ನಾಶ ಪಡಿಸುತ್ತಿದೆ, ಭೀಮನು ಕಾಲಿಟ್ಟ ಕಡೆಗೆ ಆನೆಗಳೇ ಗುಂಪುಗುಂಪಾಗಿ ಒಂದರ ಮೇಲೊಂದು ಸತ್ತು ಬೀಳುತ್ತಿದ್ದವು. ಚೆನ್ನಾಗಿ ಅರಳಿದ ರಾಶಿ ಹೂವುಗಳು ಗಿಡಗಳಿಂದ ಉರುಳುವ ಹಾಗೆ ಕೌರವನ ಸೇನೆ ಭೀಮನ ಶಕ್ತಿ ಎಂಬ ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿದವು. ‘ವೃಕೋದರ’ ಎನಿಸಿದ ಭೀಮನ ಶಕ್ತಿ ಇಷ್ಟೆಂದು ಹೇಳಲು ಸಾಧ್ಯವೇ ಇಲ್ಲವೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ದಳ ದುಳವು- ಗುಂಪು , ತೊಡಬೆ- ರಾಶಿ.
ಟಿಪ್ಪನೀ (ಕ.ಗ.ಪ)
- ವೃಕೋದರ : ಭೀಮ. ಹೆಬ್ಬೆರಳಿನ ಅರ್ಧಗಾತ್ರಕ್ಕೆ ವೃಕ ಎನ್ನುತ್ತಾರೆ. ಭೀಮಸೇನನಿಗೆ ಹೊಟ್ಟೆಯಲ್ಲಿ ಅರ್ಧ ಹೆಬ್ಬೆರಳಿನ ಗಾತ್ರದಷ್ಟು ಅಗ್ನಿ ಇತ್ತು. ಆದ್ದರಿಂದ ಅವನು ಅಪಾರವಾಗಿ ತಿನ್ನುವ ಮತ್ತು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದನು. ಆದ್ದರಿಂದ ಅವನನ್ನು ವೃಕೋದರ ಎನ್ನುತ್ತಿದ್ದರು. ಸಾಮಾನ್ಯ ಮನುಷ್ಯನಿಗೆ ಹೊಟ್ಟೆಯಲ್ಲಿ ಜಠರಾಗ್ನಿಯು ಒಂದು ಸಾಸಿವೆ ಕಾಳಿನಷ್ಟಿರುತ್ತದೆ ಎಂಬ ಗ್ರಹಿಕೆ ಇದೆ.
- ವೃಕೋದರ : ತೋಳದಂತಹ ಹೊಟ್ಟೆಯುಳ್ಳವನು.
ಮೂಲ ...{Loading}...
ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ॥81॥
೦೮೨ ಹೋಯಿತಾ ಮಾತೇಕೆ ...{Loading}...
ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಜಸೈನ್ಯ ನಾಶವಾಯಿತು. ವಂಗದೇಶದ ರಾಜನ ಬಾಯಲ್ಲಿ ಭೀಮನು ಗದೆಯನ್ನು ಒತ್ತಿ ಕೊಂದು ಹಾಕಿದನು, ಉಳಿದ ನಾಲ್ವರನ್ನು ಸಾಯುವ ಹಾಗೆ ಗದೆಯಿಂದ ಬಡಿದನು. ಅನಂತರ ಭೀಮನು ಕೌರವರಾಯನನ್ನು ಬಡಿಯಲು ಮುನ್ನುಗ್ಗಿದನು. ಆಗ ಕೌರವನ ಸೇನೆ ಮುಂದೇನು ಗತಿ ಎಂದು ಭಯದಿಂದ ಆತಂಕವನ್ನು ಹೊಂದಿ ನಡುಗಿ ಹೋಯಿತು.
ಪದಾರ್ಥ (ಕ.ಗ.ಪ)
ಬೆಟ್ಟಿದನು-ಒತ್ತಿದನು
ಮೂಲ ...{Loading}...
ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ ॥82॥