೦೦೦ ಬೆಗಡುಗೊಣ್ಡುದು ದ್ರೋಣ ...{Loading}...
ಬೆಗಡುಗೊಂಡುದು ದ್ರೋಣ ಶಲ್ಯಾ
ದಿಗಳು ಪಾರ್ಥನ ವಿಕ್ರಮಾನಲ
ಮೊಗೆದು ಸುರಿದುದು ಸಕಲ ಕೌರವಸೈನ್ಯ ಸಾಗರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರ್ಜುನನ ಪರಾಕ್ರಮವೆಂಬ ಅಗ್ನಿ ಸಮಸ್ತ ಕೌರವ ಸೇನಾ ಸಾಗರವನ್ನು ಆಹುತಿ ತೆಗೆದುಕೊಂಡಿತು. ಇದು ದ್ರೋಣ ಶಲ್ಯ ಮೊದಲಾದವರನ್ನು ಅಚ್ಚರಿಗೊಳಿಸಿತು.
ಪದಾರ್ಥ (ಕ.ಗ.ಪ)
ಬೆಗಡು-ಅಚ್ಚರಿ, ವಿಕ್ರಮಾನಲ-ಸಾಹಸವೆಂಬ ಅಗ್ನೀ, ಮೊಗೆದು-ಬಾಚಿ, ಸುರಿದುದು-ಹೊರಹಾಕಿತು
ಮೂಲ ...{Loading}...
ಬೆಗಡುಗೊಂಡುದು ದ್ರೋಣ ಶಲ್ಯಾ
ದಿಗಳು ಪಾರ್ಥನ ವಿಕ್ರಮಾನಲ
ಮೊಗೆದು ಸುರಿದುದು ಸಕಲ ಕೌರವಸೈನ್ಯ ಸಾಗರವ
೦೦೧ ಸೂಳು ಮಿಗಲಳ್ಳಿರಿದವುರು ...{Loading}...
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಿನ ಜಾವದಲ್ಲಿ ಎರಡು ಕಡೆಯ ಪಾಳೆಯಗಳಲ್ಲಿ ದೊಡ್ಡ ಭೇರಿಗಳು ಕ್ರಮವಾಗಿ ಧ್ವನಿಗೈದವು. ದೊಡ್ಡ ದೊಡ್ಡ ಕಹಳೆಗಳು ಭೋರ್ಗರೆದವು. ಆನೆ ಕುದುರೆಗಳು ಕುಣಿದಾಡಿ, ಘೀಂಕರಿಸಿದವು ಮತ್ತು ಕೆನೆದವು. ಭಟರ ಕೋಲಾಹಲ, ರೋಷಾವೇಶ ಉಂಟುಮಾಡುವ ರಣವಾದ್ಯಗಳ ಗದ್ದಲ ದಿಕ್ಕುಗಳನ್ನು ಭೇದಿಸಲು. ಪೂರ್ವ ದಿಕ್ಕಿನ ಬೆಟ್ಟವೆಂಬ ಮಂಚದಲ್ಲಿ ಸೂರ್ಯನು ನಿದ್ರೆಯನ್ನು ತೊರೆದು ಮೇಲೆದ್ದನು (ಉದಯವಾದನು)
ಪದಾರ್ಥ (ಕ.ಗ.ಪ)
ತೂಳುವರೆ-ರೋಷಾವೇಶ ಉಂಟುಮಾಡುವ ರಣವಾದ್ಯ, ಅಳ್ಳಿರಿದವು-ಎತ್ತರದ ಧ್ವನಿಗೈದವು, ನಿಸ್ಸಾಳತತಿ-ಭೇರಿ ಸಮೂಹ, ಸೂಳು-ಸರದಿ, ಗಜರಿದವು-ಘೀಂಕರಿಸಿದವು ಮತ್ತು ಕೆನೆದವು, ಘೋಳಾಘೋಳಿ-ಗದ್ದಲ, ಉಪ್ಪವಡಿಸಿದನು-ಮೇಲೆದ್ದನು/ಉದಯವಾದನು
ಮೂಲ ...{Loading}...
ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ ॥1॥
೦೦೨ ಲಳಿ ಮಸಗಿ ...{Loading}...
ಲಳಿ ಮಸಗಿ ಹನುಮಿಸುತ ಖುರದಲಿ
ನೆಲನ ಕೆರೆದವು ಕುದುರೆ ಬರಿಕೈ
ಯೊಲೆದು ಕಂಭವ ಕೊಂಡು ಮಿಕ್ಕವು ಸೊಕ್ಕಿದಾನೆಗಳು
ಹೊಳೆಹೊಳೆದು ಹೊಂದೇರು ಹರಿದವು
ತಳಪಟಕೆ ಹೊದರೆದ್ದು ಗಗನದ
ಹೊಲಿಗೆ ಬಿಡೆ ಬೊಬ್ಬಿರಿದು ಕವಿದುದು ವಿಗಡ ಪಾಯದಳ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ಉತ್ಸಾಹದಿಂದ ವಿಜೃಂಭಿಸುತ್ತ ಕೆನೆಯುತ್ತ ಗೊರಸಿನಲ್ಲಿ ನೆಲವನ್ನು ಕೆರೆದವು (ಹೊರಡಲು ಸಿದ್ಧವಾದವು). ಮದದಾನೆಗಳು ಸೊಂಡಿಲನ್ನು ಅತ್ತಿತ್ತ ಬೀಸಿ ಕಟ್ಟಿದ ಕಂಬವನ್ನು ಕಿತ್ತುಕೊಂಡು ಮುಂದೆ ಸಾಗಿದವು. ರಣಭೂಮಿಗೆ ಚಿನ್ನದ ತೇರುಗಳು ಗುಂಪಾಗಿ ಫಳಫಳಿಸುತ್ತ ಸಾಗಿದವು. ಧೀರರಾದ ಕಾಲ್ದಳದವರು (ಆಕಾಶದ ಹೊಲಿಗೆ ಬಿಡುವಂತೆ) ತೂತಾಗುವಂತೆ ಘರ್ಜಿಸುತ್ತಾ ಮುನ್ನುಗ್ಗಿದ್ದರು.
ಪದಾರ್ಥ (ಕ.ಗ.ಪ)
ಲಳಿಮಸಗಿ-ಉತ್ಸಾಹದಲ್ಲಿ ವಿಜೃಂಭಿಸುತ್ತ, ಹನುಮಿಸಲು-ಕೆನೆಯುತ್ತ, ಖುರ-ಗೊರಸು, ಬರಿಕೈ-ಸೊಂಡಿಲು, ಒಲೆದು-ತೂಗಾಡಿ, ತಳಪಟ-ರಣಭೂಮಿ, ಹೊದರೆದ್ದು-ಗುಂಪಾಗಿ
ಮೂಲ ...{Loading}...
ಲಳಿ ಮಸಗಿ ಹನುಮಿಸುತ ಖುರದಲಿ
ನೆಲನ ಕೆರೆದವು ಕುದುರೆ ಬರಿಕೈ
ಯೊಲೆದು ಕಂಭವ ಕೊಂಡು ಮಿಕ್ಕವು ಸೊಕ್ಕಿದಾನೆಗಳು
ಹೊಳೆಹೊಳೆದು ಹೊಂದೇರು ಹರಿದವು
ತಳಪಟಕೆ ಹೊದರೆದ್ದು ಗಗನದ
ಹೊಲಿಗೆ ಬಿಡೆ ಬೊಬ್ಬಿರಿದು ಕವಿದುದು ವಿಗಡ ಪಾಯದಳ ॥2॥
೦೦೩ ಲಲಿತ ಮಙ್ಗಳ ...{Loading}...
ಲಲಿತ ಮಂಗಳ ಪಾಠಕರ ಕಳ
ಕಳಿಕೆಗುಪ್ಪವಡಿಸಿದನವನಿಪ
ತಿಲಕನನುಜರು ಸಹಿತ ವೈದಿಕ ಕ್ರಿಯೆಯನನುಕರಿಸಿ
ನಳಿನನಾಭನ ಮಧುರವಾಣೀ
ಲುಳಿತ ಪರಮಾಶೀರ್ವಚನ ಪರಿ
ಕಲಿತ ಕವಚಿತಕಾಯ ಪಾಂಡವರಾಯ ಹೊರವಂಟ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲ್ವಾದ ಉದಯರಾಗ ಪಾಡುವ ವಂದಿ ಮಾಗಧರು ಮಾಡಿದ ಸ್ತುತಿಯನ್ನು ಕೇಳಿ ದೊರೆಯಾದ ಧರ್ಮಜನು ತಮ್ಮಂದಿರ ಸಹಿತ ನಿದ್ರೆಯಿಂದ ಎಚ್ಚರಗೊಂಡನು. ಅನಂತರ ಉಚಿತ ವೇದೋಕ್ತ ಕಾರ್ಯಗಳನ್ನು ಆಚರಿಸಿ ಶ್ರೀಹರಿಯ ಮಧುರವಾಣಿಯಿಂದ ಶೋಭಿಸುವ ಶ್ರೇಷ್ಠರಾದ ಹಿರಿಯರ ಆಶೀರ್ವಾದವೇ ರಕ್ಷಾಕವಚವಾಗಿರುವ ಧರ್ಮಜನು ಹೊರಹೊರಟನು.
ಪದಾರ್ಥ (ಕ.ಗ.ಪ)
ಮಂಗಳ ಪಾಠಕರ-ಉದಯರಾಗ ಪಾಡುವವರ, ಪರಿಕಲಿತ-ಒಳಗೊಂಡ, ಹೊಂದಿದ, ಕಾಯ-ಶರೀರ, ಲುಳಿತ-ಶೋಭಿಸುವ, ವೈದಿಕಕ್ರಿಯೆ-ವೇದೋಕ್ತ ಕಾರ್ಯ, ಉಪ್ಪವಡಿಸಿ-ನಿದ್ರೆಯಿಂದ ಎಚ್ಚರಗೊಂಡು, ಅನುಜರು-ಸೋದರರು, ಕಳಕಳಿಕೆ-ಶಬ್ದ ,ಉಲಿ,
ಮಂಗಳ ಪಾಠಕ-ವಂದಿ ಮಾಗಧ
ಮೂಲ ...{Loading}...
ಲಲಿತ ಮಂಗಳ ಪಾಠಕರ ಕಳ
ಕಳಿಕೆಗುಪ್ಪವಡಿಸಿದನವನಿಪ
ತಿಲಕನನುಜರು ಸಹಿತ ವೈದಿಕ ಕ್ರಿಯೆಯನನುಕರಿಸಿ
ನಳಿನನಾಭನ ಮಧುರವಾಣೀ
ಲುಳಿತ ಪರಮಾಶೀರ್ವಚನ ಪರಿ
ಕಲಿತ ಕವಚಿತಕಾಯ ಪಾಂಡವರಾಯ ಹೊರವಂಟ ॥3॥
೦೦೪ ಗಗನ ಸರಸಿಯ ...{Loading}...
ಗಗನ ಸರಸಿಯ ಪುಂಡರೀಕಾ
ಳಿಗಳೊ ಧವಳಚ್ಛತ್ರ ಪಂಕ್ತಿಯೊ
ಗಗನ ಗಂಗೆಯ ಬಹಳ ಕಾಲುವೆಗಳೊ ಪತಾಕೆಗಳೊ
ಗಗನ ಕುಂಭಿಯ ಗುಳದ ಕೆಲ ಚೌ
ರಿಗಳೊ ಸೀಗುರಿಗಳೊ ಕೃಪಾಣವೊ
ಗಗನ ಪೀವರ ತಾಳಪತ್ರಾವಳಿಯೊ ಹೊಸತಾಯ್ತು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳ್ಗೊಡೆಗಳ ಸಾಲು ಆಕಾಶವೆಂಬ ಸರೋವರದಲ್ಲಿ ಅರಳಿದ ಬೆಳ್ದಾವರೆಗಳ ಸಮೂಹದಂತೆ, ಬಾವುಟಗಳು ಆಕಾಶಗಂಗೆಯ ಅನೇಕ ಕಾಲುವೆಗಳಂತೆ, ಸೀಗುರಿಗಳು ಆಕಾಶವೆಂಬ ಗಜದ ಹಕ್ಕರಿಕೆಯ ಪಕ್ಕ ಇರುವ ಚಾಮರಗಳಂತೆ, ಖಡ್ಗಗಳು ಆಕಾಶದಲ್ಲಿನ ದೊಡ್ಡದಾದ ತಾಳ ಪತ್ರಗಳಂತೆ ಶೋಭಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಸೀಗುರಿ-ಒಂದು ಬಗೆಯ ಚಾಮರ, ಚೌರಿ-ಚಾಮರ (ಚಮರಿಮೃಗದ ಕೂದಲಿಂದ ಮಾಡಿದ ಬೀಸಣಿಗೆ), ಧವ¼ಚ್ಛ್ಚತ್ರ-ಬೆಳ್ಗೊಡೆ, ಪುಂಡರೀಕ-ಬೆಳ್ದಾವರೆ, ಪತಾಕೆ-ಬಾವುಟ, ಗುಳ-ಹಕ್ಕರಿಕೆ, ಕೃಪಾಣ-ಖಡ್ಗ, ತಾಳಪತ್ರ-ತಾಳೆಗರಿ
ಮೂಲ ...{Loading}...
ಗಗನ ಸರಸಿಯ ಪುಂಡರೀಕಾ
ಳಿಗಳೊ ಧವಳಚ್ಛತ್ರ ಪಂಕ್ತಿಯೊ
ಗಗನ ಗಂಗೆಯ ಬಹಳ ಕಾಲುವೆಗಳೊ ಪತಾಕೆಗಳೊ
ಗಗನ ಕುಂಭಿಯ ಗುಳದ ಕೆಲ ಚೌ
ರಿಗಳೊ ಸೀಗುರಿಗಳೊ ಕೃಪಾಣವೊ
ಗಗನ ಪೀವರ ತಾಳಪತ್ರಾವಳಿಯೊ ಹೊಸತಾಯ್ತು ॥4॥
೦೦೫ ಉಬ್ಬಿದವು ಬೊಬ್ಬೆಗಳು ...{Loading}...
ಉಬ್ಬಿದವು ಬೊಬ್ಬೆಗಳು ಬಿಲುದನಿ
ಗಬ್ಬರಿಸಿದವು ನಭವ ಗಜ ಹಯ
ದಬ್ಬರಣೆ ಗರುವಾಯಿಗೆಡಿಸಿತು ಸಿಡಿಲ ಸಡಗರವ
ಕೊಬ್ಬಿ ಹರಿದುದು ವಿವಿಧ ವಾದ್ಯದ
ನಿಬ್ಬರದ ನಿಡುದನಿಯು ಜಲನಿಧಿ
ಗಬ್ಬವಿಕ್ಕಿತು ಸೈನ್ಯಜಲಧಿಯ ಬಹಳ ಗರ್ಜನೆಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರ ಆರ್ಭಟಗಳು ಹೆಚ್ಚಿದವು. ಭಟರು ಮಾಡಿದ ಬಿಲ್ಲಿನ ಠೇಂಕಾರದನಿ ಆಕಾಶಕ್ಕೆ ಅಬ್ಬರಿಸಿತು. ಆನೆ ಕುದುರೆಗಳ ಘೀಂಕಾರ ಹೇಷಾರವಗಳು ಸಿಡಿಲಿನ ಸಡಗರದ ಗರ್ವವನ್ನು ಅಡಗಿಸಿತು. ವಿವಿಧ ವಾದ್ಯಗಳ ಉಚ್ಚ ದನಿಗಳು ಉಕ್ಕಿ ಹರಿದವು. ಆ ಸೇನಾ ಸಾಗರದ ಘನ ಗರ್ಜನೆಗೆ ಜಲಸಾಗರ ಧೈರ್ಯಗುಂದಿತು.
ಪದಾರ್ಥ (ಕ.ಗ.ಪ)
ಉಬ್ಬಿದವು-ಹೆಚ್ಚಿದವು, ಗರುವಾಯಿ-ಗರ್ವ, ಹಯ ಅಬ್ಬರಣೆ-ಅಶ್ವದ ಹೇಷಾರವ, ಗಜ ಅಬ್ಬರಣೆ-ಆನೆಯ ಘೀಂಕಾರ, ಗಬ್ಬವಿಕ್ಕಿತು-ಧೈರ್ಯಗುಂದಿತು.
ಮೂಲ ...{Loading}...
ಉಬ್ಬಿದವು ಬೊಬ್ಬೆಗಳು ಬಿಲುದನಿ
ಗಬ್ಬರಿಸಿದವು ನಭವ ಗಜ ಹಯ
ದಬ್ಬರಣೆ ಗರುವಾಯಿಗೆಡಿಸಿತು ಸಿಡಿಲ ಸಡಗರವ
ಕೊಬ್ಬಿ ಹರಿದುದು ವಿವಿಧ ವಾದ್ಯದ
ನಿಬ್ಬರದ ನಿಡುದನಿಯು ಜಲನಿಧಿ
ಗಬ್ಬವಿಕ್ಕಿತು ಸೈನ್ಯಜಲಧಿಯ ಬಹಳ ಗರ್ಜನೆಗೆ ॥5॥
೦೦೬ ಕುಣಿದು ಮುಞ್ಚಿತು ...{Loading}...
ಕುಣಿದು ಮುಂಚಿತು ಚೂಣಿ ಸಮರಾಂ
ಗಣದ ಕೇಳೀಬಾಲಕರು ಸಂ
ದಣಿಸಿ ಹೊಕ್ಕರು ಜಯವಧೂಟೀವಿರಹ ಕಾತರರು
ಗಣನೆಯಿಲ್ಲದ ಗಜಹಯದ ಭಾ
ರಣೆಯ ಭಾರಿಯ ಭಟರೊಡನೆ ಥ
ಟ್ಟಣೆಯ ಮೇಲೆ ಮಹೀಶ ಹೊಕ್ಕನು ಕಾಳೆಗದ ಕಳನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಭಾಗದ ಸೇನೆ ಕುಣಿ ಕುಣಿದು ಮಿಗಿಲೆನಿಸಿತು, ರಣರಂಗದ ವಿನೋದದ ಬಾಲಕರು ಜಯಲಕ್ಷ್ಮಿಯ ವಿರಹದಲ್ಲಿ ಆತುರರಾದವರು ಒಂದಾಗಿ ಪ್ರವೇಶಿಸಿದರು. (ರಣರಂಗದ ಹೋರಾಟವನ್ನು ಆಟವನ್ನಾಗಿ ಭಾವಿಸಿದ ಧೀರರು ಗೆಲುವೆಂಬ ನಾರಿಯನ್ನು ಕೂಡಲೇ ದರ್ಶಿಸುತ್ತೇವೆ ಎಂದರೆ ಶೀಘ್ರದಲ್ಲೇ ಗೆಲುವನ್ನು ಪಡೆಯುತ್ತೇವೆ ಎಂದು ರಣರಂಗ ಪ್ರವೇಶಿಸಿದರು). ಅಸಂಖ್ಯಾತ ಆನೆ ಕುದುರೆಗಳ ಶ್ರೇಷ್ಠ ವೀರರೊಡನೆ ಧರ್ಮಜನು ಸಮಸ್ತ ಪರಿವಾರದೊಡನೆ ರಣರಂಗವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಥಟ್ಟಣೆ-ಸಮಸ್ತ ಸೈನ್ಯ, ಭಾರಣೆ-ಆಟಾಟೋಪ, ಮಹೀಶ-ರಾಜ, ಇಲ್ಲಿ ಧರ್ಮಜ, ಗಣನೆಯಿಲ್ಲದ-ಅಸಂಖ್ಯಾತ, ಭಾರಿಯ-ಶ್ರೇಷ್ಠ, ಮುಂಚಿತು-ಮಿಗಿಲೆನಿಸಿತು.
ಮೂಲ ...{Loading}...
ಕುಣಿದು ಮುಂಚಿತು ಚೂಣಿ ಸಮರಾಂ
ಗಣದ ಕೇಳೀಬಾಲಕರು ಸಂ
ದಣಿಸಿ ಹೊಕ್ಕರು ಜಯವಧೂಟೀವಿರಹ ಕಾತರರು
ಗಣನೆಯಿಲ್ಲದ ಗಜಹಯದ ಭಾ
ರಣೆಯ ಭಾರಿಯ ಭಟರೊಡನೆ ಥ
ಟ್ಟಣೆಯ ಮೇಲೆ ಮಹೀಶ ಹೊಕ್ಕನು ಕಾಳೆಗದ ಕಳನ ॥6॥
೦೦೭ ಉದಯವಾಗದ ಮುನ್ನ ...{Loading}...
ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಾಗುವುದಕ್ಕೆ ಮುಂಚೆ ರಣರಂಗದಲ್ಲಿ ಗುಂಪುಗೂಡಿದ ಶತ್ರುಸೇನೆಯ ಸಂಗತಿಯು ಧರ್ಮಜನ ಬೀಡಿಗೆ ಸುದ್ದಿಯಾಗಿ ಬಂದಿತು, ಸೇನೆಗೆ ಉತ್ಸಾಹ ತಟ್ಟಿತು. ಎಲ್ಲರ ಕಿವಿಗಳಲ್ಲೂ ನಗಾರಿ, ಭೇರಿಗಳ ದನಿ ಕಿವಿ ಬಿರಿಯುವಂತೆ ತುಂಬಿತು. ಮಿತಿ ಮೀರಿದ ದನಿಯ ದೊಡ್ಡ ಕಹಳೆಗಳು ದಿಕ್ಕು ದಿಕ್ಕುಗಳಿಗೆಲ್ಲಾ ಹಬ್ಬಿತು.
ಪದಾರ್ಥ (ಕ.ಗ.ಪ)
ಸದೆದುದು-ತಟ್ಟಿತು, ತಿವಿದವು-ಹಬ್ಬಿತು, ಗೌರುಗಹಳೆ-ದೊಡ್ಡ ದನಿಯ ಕಹಳೆ, ನಿಸ್ಸಾಳೌಘ-ನಗಾರಿ, ಭೇರಿ ದನಿ, ಉದಯವಾಗದ ಮುನ್ನ-ಬೆಳಗಾಗುವುದಕ್ಕೆ ಮುಂಚೆ
ಮೂಲ ...{Loading}...
ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು ॥7॥
೦೦೮ ಅರಸನುಪ್ಪವಡಿಸಿದನವನೀ ಶ್ವರ ...{Loading}...
ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸಂಧ್ಯಾಭಿವಂದನ
ವರಮಹೀಸುರವರ್ಗ ಸತ್ಕಾರವನು ನೆರೆ ಮಾಡಿ
ಸುರನದೀಜನ ಮನೆಗೆ ಬರಲಂ
ದಿರುಳ ಕಡೆಯಲಿ ನೃಪತಿಗಾ ವಿ
ಸ್ತರವ ವಿರಚಿಸಿ ಜೋಡ ತೊಟ್ಟನು ರಥದಿ ಮಂಡಿಸಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಕೌರವನು ನಿದ್ದೆಯಿಂದ ಎಚ್ಚರಗೊಂಡನು. ರಾಜೋಚಿತ ಕರ್ತವ್ಯಗಳಾದ ಸಂಧ್ಯಾವಂದನೆ, ಬ್ರಾಹ್ಮಣೋತ್ತಮರಿಗೆ ಸತ್ಕಾರ ಮೊದಲಾದುವನ್ನು ಚೆನ್ನಾಗಿ ಮಾಡಿದನು. ಭೀಷ್ಮನ ಮನೆಗೆ ಬಂದಾಗ (ಇರುಳ ಕಡೆಯಲ್ಲಿ) ಆ ಬೆಳಗಿನ ಸಮಯದಲ್ಲಿ. ದುರ್ಯೋಧನನಿಗೆ ಸೈನ್ಯ ವ್ಯೂಹ ವಿಸ್ತಾರದ ರಚನೆಯನ್ನು ವಿವರಿಸಿದನು. ಅನಂತರ ಭೀಷ್ಮನು ಮೈಕವಚ ತೊಟ್ಟು ರಥಾರೋಹಣ ಮಾಡಿದನು.
ಪದಾರ್ಥ (ಕ.ಗ.ಪ)
ಸಂಧ್ಯಾಭಿವಂದನ-ಸಂಧ್ಯಾವಂದನೆ, ವರಮಹೀಸುರವರ್ಗ-ಶ್ರೇಷ್ಠ ಬ್ರಾಹ್ಮಣ ವರ್ಗ, ಸುರನದೀಜ-ಭೀಷ್ಮ, ಇರುಳ ಕಡೆ-ಬೆಳಿಗ್ಗೆ, ವಿಸ್ತರವ-ಸೈನ್ಯ ವ್ಯೂಹದ ವಿಸ್ತಾರ ರಚನೆ, ಜೋಡು-ಮೈ ಕವಚ
ಮೂಲ ...{Loading}...
ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸಂಧ್ಯಾಭಿವಂದನ
ವರಮಹೀಸುರವರ್ಗ ಸತ್ಕಾರವನು ನೆರೆ ಮಾಡಿ
ಸುರನದೀಜನ ಮನೆಗೆ ಬರಲಂ
ದಿರುಳ ಕಡೆಯಲಿ ನೃಪತಿಗಾ ವಿ
ಸ್ತರವ ವಿರಚಿಸಿ ಜೋಡ ತೊಟ್ಟನು ರಥದಿ ಮಂಡಿಸಿದ ॥8॥
೦೦೯ ಇನ್ದಲೇ ಪಾಣ್ಡವರ ...{Loading}...
ಇಂದಲೇ ಪಾಂಡವರ ಚಿತ್ತಾ
ನಂದಚಿತ್ರಕೆ ಧೂಮದರುಶನ
ವಿಂದಲೇ ಕೌಂತೇಯರಿಗೆ ಸುರಪುರದ ವೈಹಾಳಿ
ಇಂದಲೇ ಪವನಜನ ಪಾರ್ಥನ
ಸಂದ ವಿಕ್ರಮವಿಷಕೆ ಗಾರುಡ
ವೆಂದೆನುತ ಬೊಬ್ಬಿರಿದು ಕವಿದುದು ಸಕಲ ಕುರುಸೇನೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯೋದಯವಾದ ಕೂಡಲೇ ಭೀಷ್ಮನ ಸಾಹಸದ ಸ್ಫೂರ್ತಿಯಿಂದ ಕೌರವನ ಸೇನೆ ಉತ್ಸಾಹಗೊಂಡು ಈ ದಿನ ಪಾಂಡವರ ಮನದಾನಂದವೆಂಬ ಚಿತ್ರಕ್ಕೆ ಹೊಗೆಯ ಮಸಿ ಬಳಿದಂತಾಗುತ್ತದೆ. ಪಾಂಡವರನ್ನು ಸ್ವರ್ಗ ಲೋಕಕ್ಕೆ ಸೇರಿಸುತ್ತೇವೆ. ಭೀಮಾರ್ಜುನ ಪರಾಕ್ರಮವೆಂಬ ವಿಷವನ್ನು ನಮ್ಮ ಪರಾಕ್ರಮವೆಂಬ ಗರುಡ ಮಂತ್ರದಿಂದ ಪರಿಹರಿಸುತ್ತೇವೆ (ಅವರನ್ನು ಸೋಲಿಸುತ್ತೇವೆ) ಎಂದು ಹೇಳುತ್ತಾ ಪಾಂಡವರ ಮೇಲೆ ಧಾಳಿ ನಡೆಸಿತು.
ಪದಾರ್ಥ (ಕ.ಗ.ಪ)
ಧೂಮ ದರುಶನ-ಹೊಗೆಹಾಕುವುದು (ಮಸಿ ಬಳಿಯುವುದು) ವೈಹಾಳಿ-ವಿಹಾರ, ಬೊಬ್ಬಿರಿದು-ಗರ್ಜಿಸಿ, ಕವಿದುದು-ಧಾಳಿ ಮಾಡಿತು, ಗಾರುಡ-ಗರುಡ ಮಣಿ (ವಿಷಾಪಹಾರಿ)
ಮೂಲ ...{Loading}...
ಇಂದಲೇ ಪಾಂಡವರ ಚಿತ್ತಾ
ನಂದಚಿತ್ರಕೆ ಧೂಮದರುಶನ
ವಿಂದಲೇ ಕೌಂತೇಯರಿಗೆ ಸುರಪುರದ ವೈಹಾಳಿ
ಇಂದಲೇ ಪವನಜನ ಪಾರ್ಥನ
ಸಂದ ವಿಕ್ರಮವಿಷಕೆ ಗಾರುಡ
ವೆಂದೆನುತ ಬೊಬ್ಬಿರಿದು ಕವಿದುದು ಸಕಲ ಕುರುಸೇನೆ ॥9॥
೦೧೦ ತರುಣ ರವಿಗಳ ...{Loading}...
ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊರಳಲ್ಲಿ ಧರಿಸಿರುವ ಮಾಣಿಕ್ಯಗಳನ್ನಿಟ್ಟು ನಾನಾ ಬಗೆಯ ರೇಖಾ ವಿನ್ಯಾಸಗಳಿಂದ ಕೆತ್ತನೆ ಮಾಡಿದ ಚಿನ್ನದ ಕುಸುರಿಗೆಲಸದ ಹೀರಾವಳಿ ಸರಗಳಿಂದ ಹೊರಹೊಮ್ಮುತ್ತಿದ್ದ ಕಾಂತಿಯು ಕಿರಣಗಳು, ಅವನು ಧರಿಸಿದ ಕವಚಗಳಲ್ಲಿ ಪ್ರತಿಬಿಂಬಿಸುತ್ತಿರಲು ಅರಿದಿಶಾಪಟನೆನಿಸಿದ. (ಶತ್ರುಗಳನ್ನು ಧೂಳೀಪಟ ಮಾಡುವ ಧೀರ) ಭೀಷ್ಮನು ರಥದಲ್ಲಿ ಕಂಗೊಳಿಸಿದನು.
ಪದಾರ್ಥ (ಕ.ಗ.ಪ)
ಕೀಲಣೆ-ಕೆತ್ತನೆ, ಹೊಂಗೆಲಸ-ಚಿನ್ನದ ಕೆಲಸ, ಅರಿದಿಶಾಪಟ-ಶತ್ರುಗಳನ್ನು ಧೂಳಿಪಟ ಮಾಡುವವ, ಎಸೆ-ಶೋಭಿಸು
ಮೂಲ ...{Loading}...
ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ ॥10॥
೦೧೧ ವೀರ ಸೇನಾಪತಿಯ ...{Loading}...
ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಸೇನಾಪತಿಯಾದ ಭೀಷ್ಮನ ಕೈ ಸನ್ನೆಗೆ ಆ ಮಹಾಸೇನೆ ಹಿಗ್ಗಿತು. ಸೇನೆ ಹಿಗ್ಗುತ್ತಿರಲು ದಿಕ್ಕುಗಳು ಬಾಗಿ ಹಿಗ್ಗಿದವು. ಅಮಮ! ಆದಿಶೇಷ, ಕೂರ್ಮರು ಸೇನಾಭಾರಕ್ಕೆ ಕುಸಿದರು. ಸೊಗಸಾದ ಚಾಮರ, ಧ್ವಜ, ಬೆಳ್ಗೊಡೆ ಒಪ್ಪವಾಗಿ ಹಿಡಿದಿರಲು ಪ್ರಳಯ ಕಾಲದ ಮೋಡಗಳ ಭಾರವೆಲ್ಲ ಒಟ್ಟೈಸಿದಂತೆ ಕುರುಸೇನೆ ದಟ್ಟವಾಗಿ ಕೂಡಿತ್ತು.
ಪದಾರ್ಥ (ಕ.ಗ.ಪ)
ಭೂರಿಬಲ-ಮಹಾಸೇನೆ, ಹಬ್ಬಿದುದು-ಹಿಗ್ಗಿತು, ಅಹಿಪ-ಆದಿಶೇಷ, ಕೂರುಮ-ಆಮೆ, ತಗ್ಗಿದರು-ಕುಸಿದರು, ಸಿಂಧ-ಧ್ವಜ, ಸತ್ತಿಗೆ-ಬೆಳ್ಗೊಡೆ, ಕಲ್ಪಾಂತ-ಪ್ರಳಯಕಾಲದ, ಒಟ್ಟೈಸಿ-ಒಟ್ಟಾಗಿ, ಥಟ್ಟಯಿಸಿತ್ತು-ದಟ್ಟವಾಗಿ ಕೂಡಿತ್ತು
ಮೂಲ ...{Loading}...
ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ ॥11॥
೦೧೨ ಭುವನಗರ್ಭಿತವಾದುದಾ ಮಾ ...{Loading}...
ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ಜಗತ್ತನ್ನು ಒಳಗೊಂಡ ಮಾಧವನ ಉದರದ ಹಾಗೆ ಎಲ್ಲವನ್ನು ಒಳಗೊಂಡಿತು ಎಂಬಂತೆ. ವಿಷ್ಣು ಭಕ್ತನ ಹಾಗೆ ಹರಿಯಪಾದಗಳಲ್ಲಿ ಸಂಪರ್ಕ ಹೊಂದಿದ ಶರೀರ ಆಯಿತು ಎಂಬಂತೆ, ತಾವರೆಗಳ ಸಮೂಹವನ್ನು ಪಾದದಲ್ಲಿ ಸೋಂಕಿ ಕೆಂಧೂಳು ವ್ಯಾಪಿಸಿದ ಸೂರ್ಯನ ಹಾಗೆ ಕುರುಸೇನೆ ರಣರಂಗವನ್ನು ಹೊಕ್ಕಿತು.
ಪದಾರ್ಥ (ಕ.ಗ.ಪ)
ಗರ್ಭಿತ-ಒಳಗೊಂಡಂತೆ, ಮಾಧವ-ವಿಷ್ಣು, ಭಾಗವತ-ವಿಷ್ಣು ಭಕ್ತ, ಶತಪತ್ರ-ತಾವರೆ ,ಸಂಘಾತ -ಸಮೂಹ, ಅಣೆದು-ಸೋಂಕಿ, ಅವಗಡಿಸೆ-ವ್ಯಾಪಿಸಿದಂತೆ, ಕೆಂಧೂಳಿ-(ಸೈನ್ಯದ ಚಲನೆಯಿಂದ ಎದ್ದ) ಕೆಂಪಾದ ಧೂಳು
ಮೂಲ ...{Loading}...
ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ ॥12॥
೦೧೩ ಹೊಗರೊಗುವ ಝಳಪಿಸುವಡಾಯುಧ ...{Loading}...
ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಂತಿಯ ಕಿರಣಗಳು ಹೊರಹೊಮ್ಮುವ ಅಡಾಯುಧಗಳನ್ನು ಝಳಪಿಸುವಂಥ, ಲೌಡಿಗಳ ತುದಿಗಳನ್ನು ಮೇಲಕ್ಕೆತ್ತಿ ತೂಗುತ್ತಿರುವಂಥ, ಝಗಝಗನೇ ಸಬಳಗಳನ್ನು ಝಳಪಿಸುವಂಥ, ಅಂಕುಶಗಳನ್ನು ತಿರುವುವಂಥ, ಬಿಲ್ಲಿಗೆ ಹಗ್ಗ ಬಿಗಿದು ಸಿದ್ಧವಾಗಿ ಚೂಪಾದ ಬಾಣಗಳನ್ನು ಬೆರಳುಗಳಿಂದ ಚಿಮ್ಮಿಸುತ್ತಿರುವಂಥ ಸುಭಟರ ಸಮೂಹದೊಡನೆ ರಣರಂಗಕ್ಕೆ ಭೀಷ್ಮನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ನೆಗಹಿ-ಮೇಲಕ್ಕೆತ್ತಿ, ಒಗುವ-ಹೊರಹೊಮ್ಮುವ, ಕಾಳಗದಕಣ-ರಣರಂಗ, ಝಾಡಿಸುವ-ಝಳಪಿಸುವ, ಬೀಸುವ,
ಮೂಲ ...{Loading}...
ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ ॥13॥
೦೧೪ ವಿತತ ವಾಜಿವ್ರಜದ ...{Loading}...
ವಿತತ ವಾಜಿವ್ರಜದ ಘನ ಹೇ
ಷಿತದ ಘಲ್ಲಣೆ ಗಜದಳದ ಬೃಂ
ಹಿತದ ಬಹಳಿಕೆ ರಥಚಯದ ಚೀತ್ಕೃತಿಯ ಚಪ್ಪರಣೆ
ನುತಪದಾತಿಯ ಗರ್ಜನೆ ಸಮು
ದ್ಧತ ಧನುಷ್ಟಂಕಾರ ರೌದ್ರಾ
ಯತ ಛಡಾಳಿಸಲೊಡ್ಡಿದರು ಮಂಡಳಿಸಿ ಮೋಹರವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹು ದೊಡ್ಡ ಅಶ್ವ ಸೇನೆಯ ಹಿರಿದಾದ ಕೆನೆತಗಳ ಗದ್ದಲ, ಆನೆ ಪಡೆಯ ಘೀಂಕಾರದ ಆಧಿಕ್ಯ, ರಥ ಸಮೂಹಗಳ ಚಕ್ರಗಳ ಚೀತ್ಕಾರ ಮತ್ತು ಕುದುರೆಗಳನ್ನು ಬೆನ್ನು ತಟ್ಟುವ ಹುರಿದುಂಬಿಸುವ ದನಿ, ಶ್ರೇಷ್ಠ ಕಾಲ್ದಳದ ಘನಘೋಷ, ಗರ್ವಿಷ್ಠರಾದವರ ಬಿಲ್ಲಿನ ಠೇಂಕಾರ ಇವೆಲ್ಲ ದನಿಗಳೂ ರೌದ್ರಾಕಾರತಾಳಿ ಉಕ್ಕಿ ಹರಿಯುತ್ತಿರಲು ಸೇನೆಯನ್ನು ಒಗ್ಗೂಡಿಸಿ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಘಲ್ಲಣೆ-ಗದ್ದಲ, ಮೋಹರ-ಸೇನೆ, ಛಡಾಳಿಸಲು-ಉಕ್ಕಿ ಹಬ್ಬಲು, ಚಪ್ಪರಣೆ-ಬೆನ್ನುತಟ್ಟುವ ಹುರಿದುಂಬಿಸುವ ದನಿ, ರಥಚಯ-ರಥಸಮೂಹ, ಬಹಳಿಕೆ-ಆಧಿಕ್ಯ, ಬೃಂಹಿತ-ಘೀಂಕಾರ
ಮೂಲ ...{Loading}...
ವಿತತ ವಾಜಿವ್ರಜದ ಘನ ಹೇ
ಷಿತದ ಘಲ್ಲಣೆ ಗಜದಳದ ಬೃಂ
ಹಿತದ ಬಹಳಿಕೆ ರಥಚಯದ ಚೀತ್ಕೃತಿಯ ಚಪ್ಪರಣೆ
ನುತಪದಾತಿಯ ಗರ್ಜನೆ ಸಮು
ದ್ಧತ ಧನುಷ್ಟಂಕಾರ ರೌದ್ರಾ
ಯತ ಛಡಾಳಿಸಲೊಡ್ಡಿದರು ಮಂಡಳಿಸಿ ಮೋಹರವ ॥14॥
೦೧೫ ಚೂಣಿ ತಲೆಯೊತ್ತಿದುದು ...{Loading}...
ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ದಾಡಿದರು ಘನ
ಶೋಣಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಭಾಗದ ಸೇನೆ ಮುಂದೊತ್ತಿ ಸಾಗಿತು. ಪ್ರಾಣ ಹೋದೀತೆಂಬ ಹೆದರಿಕೆ ಮೋಸದ ಒಪ್ಪಂದಗಳಿಲ್ಲದೆ, ಪ್ರಾಮಾಣಿಕರಾಗಿ ಹಣಕ್ಕೆ ತಮ್ಮನ್ನು ಮಾರಿಕೊಂಡ ವೀರರು ಸೆಣಸಿದರು. ರಾಜರಿಂದ ಪಡೆದ ಹಣದ ಋಣವನ್ನು ಹೋರಾಡಿ ತೀರಿಸಿದರು (ಹಾಣಾಹಾಣಿಯಿಂದ). ಪ್ರತಿಜ್ಞಾ ವೀರರು ದೃಢ ಚಿತ್ತರಾಗಿ ಉತ್ಸಾಹದಿಂದ ಮಾರಾಮಾರಿಯಾಗಿ ಹೊಡೆದಾಡಿದರು. ಈ ಹೋರಾಟದಲ್ಲಿ ಉಂಟಾದ ರಕ್ತದ ಪ್ರವಾಹವು ಮುನ್ನುಗ್ಗಿಬಂದ ವೀರರನ್ನು ಕೊಚ್ಚಿಹಾಕಿತು.
ಪದಾರ್ಥ (ಕ.ಗ.ಪ)
ಗೋಣುಮಾರಿ-ಹಣಕ್ಕಾಗಿ ತಮ್ಮನ್ನು ಮಾರಿಕೊಂಡ ವೀರರು, ಹೂಣಿಗರು-ಶಪಥವೀರರು, ಪ್ರತಿಜ್ಞಾ ವೀರರು, ಹರಣದವಾಣಿ-ಪ್ರಾಣದ ಅಂಜಿಕೆಯುಳ್ಳವರು, ಕೇಣಿ-ಒಪ್ಪಂದ, ತಲೆಯೆತ್ತಿದುದು-ಮುಂದೊತ್ತಿ ಸಾಗಿತು, ಬವರಿಗರು-ವೀರರು, ಶೋಣ ಸಲಿಲ-ಕೆಂಪುನೀರು, ರಕ್ತ, ಹಾಣಾಹಾಣಿ-ಹಣೆಯಿಂದ ಹಣೆಗೆ ಹೊಡೆದಾಡುತ್ತಾ ಮಾಡುವ ಯುದ್ಧ
ಮೂಲ ...{Loading}...
ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ದಾಡಿದರು ಘನ
ಶೋಣಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ ॥15॥
೦೧೬ ಕೋಡಕೈಗಳ ಭಟರಲಲಗೆಡೆ ...{Loading}...
ಕೋಡಕೈಗಳ ಭಟರಲಲಗೆಡೆ
ಯಾಡಿದವು ಹೆಗಲಡ್ಡವರಿಗೆಯ
ನೀಡಿ ಮೈಮಣಿದೌಕಿ ತಿವಿದಾಡಿದರು ಸಬಳಿಗರು
ಕೂಡೆ ತಲೆವರಿಗೆಗಳಲುರೆ ಕೈ
ಮಾಡಿದರು ಖಡ್ಗಿಗಳು ಥಟ್ಟಿನ
ಜೋಡು ಜರಿಯಲು ಹೊಕ್ಕು ಬೆರಸಿದವಾನೆ ಕುದುರೆಗಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರ ಕೊಂಬಿನ ಆಯುಧಗಳ ಚೂಪಾದ ತುದಿಗಳು ಹಾರಾಡಿದವು. ಸಬಳಿಗರು ಹೆಗಲ ಮೇಲಿನ ಅಡ್ಡ ಹಲಗೆಗಳನ್ನು ಮೀಟಿ ಮೈಬಾಗಿಸಿ ಅವುಕುತ್ತ ತಿವಿದಾಡಿದರು. ಖಡ್ಗಧಾರಿಗಳು ಗುರಾಣಿಗಳನ್ನು ಹಿಡಿದು ವಿಶೇಷವಾಗಿ ಹೋರಾಡಿದರು. ಬದಿಯಲ್ಲಿ ಒತ್ತಿ ಕಟ್ಟಿದ್ದ ಮೈ ಜೋಡು ಸಡಿಲಗೊಂಡು ಜಾರುವ ರೀತಿಯಲ್ಲಿ ಆವೇಶದಿಂದ ಆನೆ ಕುದುರೆಗಳು ನುಗ್ಗಿ ಧಾಳಿ ಮಾಡಿದವು.
ಪದಾರ್ಥ (ಕ.ಗ.ಪ)
ಅಲಗು-ಚೂಪಾದ ತುದಿ, ಅಡ್ಡವರಿಗೆ-ಅಡ್ಡ ಹಲಗೆ, ಮೈಮಣಿದು-ಮೈಬಾಗಿಸಿ, ಖಡ್ಗಿ-ಖಡ್ಗಧಾರಿ, ಥಟ್ಟಿನ-ಬದಿಯ
ಮೂಲ ...{Loading}...
ಕೋಡಕೈಗಳ ಭಟರಲಲಗೆಡೆ
ಯಾಡಿದವು ಹೆಗಲಡ್ಡವರಿಗೆಯ
ನೀಡಿ ಮೈಮಣಿದೌಕಿ ತಿವಿದಾಡಿದರು ಸಬಳಿಗರು
ಕೂಡೆ ತಲೆವರಿಗೆಗಳಲುರೆ ಕೈ
ಮಾಡಿದರು ಖಡ್ಗಿಗಳು ಥಟ್ಟಿನ
ಜೋಡು ಜರಿಯಲು ಹೊಕ್ಕು ಬೆರಸಿದವಾನೆ ಕುದುರೆಗಳು ॥16॥
೦೧೭ ಪಿರಿದು ಮೊನೆಗುತ್ತಿನಲಿ ...{Loading}...
ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯ ಮೊನೆಯಿಂದ ಕುತ್ತಿದಾಗ ಅಧಿಕವಾಗಿ ನೆತ್ತರು ಸುರಿಯ ತೊಡಗಿತು. ಅಡ್ಡಗಟ್ಟಿ ಹೊಡೆದ ಪೆಟ್ಟುಗಳಲ್ಲಿ ಮಾಂಸಖಂಡಗಳ ರಾಶಿ ಉದ್ಭವಿಸಿತು. ಲೌಡಿಯ ಆಯುಧದಲ್ಲಿ ಶರೀರ ಜಝರ್ರಿತವಾಯಿತು. ನಾಲ್ಕು ಅಲಗುಗಳ ಬಾಣಗಳನ್ನು ಪ್ರಯೋಗಿಸಿದಾಗ ಕರುಳುಗಳು ಹೊರಬಂದವು. ಕಬ್ಬಿಣದ ಹಾರೆಗಳಲ್ಲಿ ಶತ್ರುಗಳ ಕಾಲುಗಳನ್ನು ಕತ್ತರಿಸಿದರು. ಹೀಗೆ ಬಗೆಬಗೆಯ ಹೊಡೆದಾಟ ನಡೆದಾಗ ರಣರಂಗ ಕುತೂಹಲಕಾರಿಯಾಗಿ ಕಾಣಿಸಿತು.
ಪದಾರ್ಥ (ಕ.ಗ.ಪ)
ಕಬ್ಬುನ ಕೋಲು-ಹಾರೆ, ಚೌಧಾರೆ-ನಾಲ್ಕು ಅಲಗುಗಳು, ಅಡ್ಡ ಹೊಯ್ಲು-ಅಡ್ಡಲಾಗಿ ಹೊಡೆದ ಪೆಟ್ಟು,
ಮೂಲ ...{Loading}...
ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ ॥17॥
೦೧೮ ಕಡಿದು ಚಿಮ್ಮಿದ ...{Loading}...
ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತರಿಸಿದಾಗ ರಕ್ತ ಚಿಮ್ಮಿದ ಬೆರಳುಗಳು, ಗಾಯಗೊಂಡ ಹಿಮ್ಮಡಿಗಳು, ನರಗಳು ಹರಿದು ಮುರಿದ ಕುತ್ತಿಗೆಗಳು, ಬೆಸುಗೆ ಬಿಚ್ಚಿ ಬಿರಿದ ಕಪಾಲದ ಓಡುಗಳು, ಮುರಿದ ತೊಡೆಗಳು, ಸೀಳಿ ಹೋದ ಹೊಟ್ಟೆಗಳು, ತೇಲು ಮೇಲಾದ (ಮಗುಚಿದ) ಕಣ್ಣು ಗುಡ್ಡೆಗಳು, ತುಂಡಾಗಿ ಬಿದ್ದ ತೋಳಿನ ಭಾಗಗಳು ಇವುಗಳಿಂದ ಕೂಡಿದ ರಣರಂಗ ಭಯಾನಕ ನೆಲೆಯಾಗಿ ಕಾಣಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಭಯಾನಕರಸ-ಭಯವೆಂಬ ಸ್ಥಾಯೀ ಭಾವದಿಂದ ಉಂಟಾದ ರಸ, ಹೊಡೆ ಮರಳಿದ-ಅಡಿ ಮೇಲಾದ, ಉಡಿದ-ಮುರಿದ, ಗೋಣು-ಕುತ್ತಿಗೆ, ರಣಮಹಿ-ರಣರಂಗ, ನಾಳ-ನರ
ಮೂಲ ...{Loading}...
ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು ॥18॥
೦೧೯ ಕೊರಳ ತೆತ್ತುದು ...{Loading}...
ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ಚೂಣಿದಳ (ಸೇನೆಯ ಮುಂಭಾಗದ ದಳ) ಕಾಳಗ ಮಾಡಿ ಮಡಿಯಿತು. ದಳದ ಮುಖ್ಯರಿಗೆ ಉಭಯ ಪಕ್ಷದ ಸೇನೆಗಳಲ್ಲೂ ನಾಯಕವಾಡಿಯಲ್ಲೂ ಈ ಸಂಗತಿ ತಿಳಿಸಲಾಯಿತು. ಆನೆ ಕುದುರೆ ರಥ ಕಾಲ್ದಳಗಳಲ್ಲಿ ಗುಂಪು ಕುಗ್ಗಿತು. ಹೋರಾಟದ ರಭಸ ಆರ್ಭಟಗಳ ತೀವ್ರತೆಯಿಂದ ಉಳಿದ ದಳದವರು ಸಂಗ್ರಾಮಕ್ಕೆ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ದೆಖ್ಖಾಳ-ರಭಸ, ಧರಧುರ-ಆರ್ಭಟ, ಹೊರಳಿ-ಗುಂಪು, ಮೋಹರ-ಸೇನೆ, ಚೂಣಿ-ಮುಂಭಾಗದ ದಳ,
ಮೂಲ ...{Loading}...
ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ ॥19॥
೦೨೦ ತಳಿತ ಸತ್ತಿಗೆಗಳ ...{Loading}...
ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡುಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಳಿದ ಬೆಳ್ಗೊಡೆಗಳ ಬಾವುಟಗಳ ಹೆಗ್ಗಳಿಕೆಯ ಬಿರುದಿನ ಘೋಷಣೆಗಳು ಸೊಗಸುತ್ತಿರಲು, ಗುಂಪು ಗುಂಪಾದ ಧ್ವಜಗಳು, ಧ್ವಜ ದಂಡಗಳು ಸೀಗುರಿಗಳು ಕಾಣಿಸುತ್ತ ಉತ್ಸಾಹ ಅಧಿಕವಾಗಿ ಉಕ್ಕುತ್ತಿರಲು ರಣರಂಗದಲ್ಲಿ ದ್ರೋಣನೇ ಮೊದಲಾದ ನಾಯಕರು ಫಡಫಡ ! ಅರ್ಜುನನನ್ನು ಬರಹೇಳು ಎನ್ನುತ್ತ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಕಳಕಳಿಕೆ-ಉತ್ಸಾಹ, ವಿಡಾಯಿ-ಸೊಗಸು, ಪಡಪು-ಹೆಗ್ಗಳಿಕೆ, ಸತ್ತಿಗೆ-ಛತ್ರಿ
ಮೂಲ ...{Loading}...
ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡುಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು ॥20॥
೦೨೧ ದೊದ್ದೆ ತೆಗೆಯಲಿ ...{Loading}...
ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬಲಹೀನ ಸೇನಾದಳ ದೂರ ಸರಿಯಲಿ. ಅರ್ಜುನ ಭೀಮರು ಬದುಕಿರುವವರಾದರೆ ಯುದ್ಧಕ್ಕೆ ಬರಲು ಶಕ್ತರಾದರೆ ರಣರಂಗ ಪ್ರವೇಶಿಸಲಿ. ಶ್ರೀಕೃಷ್ಣ ಬೇಕಾದರೆ ತನ್ನ ನೆರವನ್ನು ನೀಡಲಿ. ಸಮರ ವಿಜಯ ದೇವತೆಗೆ ಹತ್ತಿರದವರಾಗಿರುವ ದ್ರುಪದನೇ ಮೊದಲಾದ ರಾಜರನ್ನು ಹತ್ತಿರಬರಗೊಳಿಸಬೇಡ ಅವರಿಗೆ ಅಂಜುವೆವು ಎನ್ನುತ್ತ ನುಗ್ಗಿದರು.
ಪದಾರ್ಥ (ಕ.ಗ.ಪ)
ಹರಿ-ಶ್ರೀಕೃಷ್ಣ, ದೊದ್ದೆ-ಬಲಹೀನ ಸೇನಾದಳ, ಪವನಜ-ಭೀಮ, ಹೊಗಲಿ-ಪ್ರವೇಶಿಸಲಿ, ಹೊದ್ದಿಗ - ಹತ್ತಿರದವನು, ನೆಂಟ
ಮೂಲ ...{Loading}...
ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು ॥21॥
೦೨೨ ಗುರುತನುಜ ವೃಷಸೇನ ...{Loading}...
ಗುರುತನುಜ ವೃಷಸೇನ ಮಾದ್ರೇ
ಶ್ವರ ಜಯದ್ರಥ ಶಕುನಿ ದುಸ್ಸಹ
ಗುರು ಸುಶರ್ಮ ವಿಕರ್ಣ ಭೂರಿಶ್ರವ ಸುಲೋಚನರು
ಧರಣಿಪತಿ ಭಗದತ್ತ ಯವನೇ
ಶ್ವರ ಕಳಿಂಗ ಸುಕೇತು ದುರ್ಜಯ
ದುರುಳ ದುಶ್ಶಾಸನನಲಂಬುಸರೈದಿದರು ರಣವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ, ವೃಷಸೇನ, ಮಾದ್ರೇಶ್ವರ, ಜಯದ್ರಥ, ಶಕುನಿ, ದ್ರೋಣ, ಸುಶರ್ಮ, ವಿಕರ್ಣ, ಭೂರಿಶ್ರವ, ಸುಲೋಚನ, ದೊರೆ ಭಗದತ್ತ, ಯವನೇಶ್ವರ, ಕಳಿಂಗ, ಸುಕೇತು ದುರ್ಜಯ, ದುಷ್ಟ ದುಶ್ಶಾಸನ ಅಲಂಬುಸ ಇವರೆಲ್ಲಾ ರಣರಂಗವನ್ನು ಪ್ರವೇಶಿಸಿದರು.
ಮೂಲ ...{Loading}...
ಗುರುತನುಜ ವೃಷಸೇನ ಮಾದ್ರೇ
ಶ್ವರ ಜಯದ್ರಥ ಶಕುನಿ ದುಸ್ಸಹ
ಗುರು ಸುಶರ್ಮ ವಿಕರ್ಣ ಭೂರಿಶ್ರವ ಸುಲೋಚನರು
ಧರಣಿಪತಿ ಭಗದತ್ತ ಯವನೇ
ಶ್ವರ ಕಳಿಂಗ ಸುಕೇತು ದುರ್ಜಯ
ದುರುಳ ದುಶ್ಶಾಸನನಲಂಬುಸರೈದಿದರು ರಣವ ॥22॥
೦೨೩ ಗೆದ್ದರೆಯು ಗೆಲವಿಲ್ಲ ...{Loading}...
ಗೆದ್ದರೆಯು ಗೆಲವಿಲ್ಲ ಹಾರುವ
ರುದ್ದುರುಟುತನಕೇನನೆಂಬೆನು
ಗದ್ದುಗೆಯ ಹೊರೆಗರಸ ಕರೆದರೆ ಭವವ ಮರೆದಿರಲ
ಹದ್ದು ಕಾಗೆಯ ಮನೆಯ ಬಾಣಸ
ವಿದ್ಯೆಯೆಮ್ಮದು ಯಮನ ನಿಳಯಕೆ
ಬಿದ್ದಿನರು ನೀವೆಂದೆನುತ ಕಲಿ ಮತ್ಸ್ಯನಿದಿರಾದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮನ್ನು ಗೆದ್ದರೂ ಜಯ ನಮ್ಮದಾಗದು. ಈ ಬ್ರಾಹ್ಮಣರ ಅಸಭ್ಯ ಒರಟುತನಕ್ಕೆ ಏನೆಂದು ಹೇಳಲಿ, ಸಿಂಹಾಸನದ ಬಳಿಗೆ ಅರಸ ಕರೆದ ಮಾತ್ರಕ್ಕೆ ಆ ಮನ್ನಣೆಯಲ್ಲಿ ಹಿಗ್ಗಿ ನಿಮ್ಮ ಹುಟ್ಟನ್ನೇ ಮರೆತು ಹೋದಿರಲ್ಲ, ಏನೆನ್ನೋಣ ! “ನಾವು ಕ್ಷತ್ರಿಯರು, ಶತ್ರುಗಳನ್ನು ಯುದ್ಧದಲ್ಲಿ ಕೊಂದು ಹದ್ದು ಕಾಗೆಗಳಿಗೆ ಹಾಕುವ ಮನೆಯ ಅಡಿಗೆ ವಿದ್ಯೆ ಕಲಿತವರುÅ, ನೀವು ಯಮಲೋಕದವರಿಗೆ ಅತಿಥಿಗಳು”. ಎಂದು ದ್ರೋಣಾದಿನಾಯಕರಿಗೆ ಹೇಳುತ್ತಾ ವೀರ ಮತ್ಸ್ಯರಾಜನು ಅವರ ಎದುರಾಗಿ ಹೋರಾಟಕ್ಕೆ ನಿಂತನು.
ಪದಾರ್ಥ (ಕ.ಗ.ಪ)
ಹೊರೆಗೆ-ಹತ್ತಿರಕ್ಕೆ, ಭವ-ಹುಟ್ಟು, ಬಾಣಸವಿದ್ಯೆ-ಅಡಿಗೆ ವಿದ್ಯೆ, ಬಿದ್ದಿನರು-ಅತಿಥಿಗಳು, ಮತ್ಸ್ಯ-ಮತ್ಸ್ಯದೇಶದ ದೊರೆ
ಮೂಲ ...{Loading}...
ಗೆದ್ದರೆಯು ಗೆಲವಿಲ್ಲ ಹಾರುವ
ರುದ್ದುರುಟುತನಕೇನನೆಂಬೆನು
ಗದ್ದುಗೆಯ ಹೊರೆಗರಸ ಕರೆದರೆ ಭವವ ಮರೆದಿರಲ
ಹದ್ದು ಕಾಗೆಯ ಮನೆಯ ಬಾಣಸ
ವಿದ್ಯೆಯೆಮ್ಮದು ಯಮನ ನಿಳಯಕೆ
ಬಿದ್ದಿನರು ನೀವೆಂದೆನುತ ಕಲಿ ಮತ್ಸ್ಯನಿದಿರಾದ ॥23॥
೦೨೪ ನಕುಲ ಕುನ್ತೀಭೋಜಸುತ ...{Loading}...
ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು
ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಚ್ಚರಿಯ ಬಿಲ್ಲುಗಾರರಾದ ನಕುಲ, ಕುಂತೀಭೋಜಸುತ ಸೋಮಕ, ಘಟೋತ್ಕಚ, ದ್ರುಪದ, ಪ್ರತಿವಿಂಧ್ಯಕ, ಶತಾನೀಕ, ಅಭಿಮನ್ಯು, ಯುಯುತ್ಸು, ಸೃಂಜಯರು ಸಕಲ ಸಿದ್ಧತೆಗಳಿಂದ ಬಿಲ್ಲನ್ನೊದರಿಸುತ್ತ, ಬಾಣಗಳನ್ನು ಸುರಿಸುತ್ತ ಶಸ್ತ್ರಗಳ ಸುರಿಮಳೆಯ ಮಳೆಗಾಲವನ್ನು ಉಂಟುಮಾಡುತ್ತಾ ಯುದ್ಧ ಕಾರ್ಯದಲ್ಲಿ ನಿರತರಾದರು.
ಪದಾರ್ಥ (ಕ.ಗ.ಪ)
ಸನ್ನಾಹ-ಸಿದ್ಧತೆ, ಚಕಿತಚಾಪರು-ಅಚ್ಚರಿಯ ಬಿಲ್ಲುಗಾರರು, ಉದ್ಯುಕ್ತರು-ನಿರತರು
ಟಿಪ್ಪನೀ (ಕ.ಗ.ಪ)
ಸೋಮಕ - ಸೋಮಕ ಒಬ್ಬ ಪಾಂಚಾಲ ದೊರೆ. ಸಹದೇವ ಎಂಬ ಪಾಚೀನ ದೊರೆಯ ಮಗ. ದಿವೋ ದಾಸನ ಮೊಮ್ಮಗ. ಇವನಿಗೆ ನೂರ್ವರು ಪತ್ನಿಯರೂ, ನೂರು ಜನ ಮಕ್ಕಳೂ ಇದ್ದರು. ಹಿರಿಯ ರಾನೀಯಲ್ಲಿ ಜಂತು ಎಂಬ ಮಗನಿದ್ದ. ಇರುವೆಗಳಿಂದ ಕಚ್ಚಿಸಿಕೊಂಡು ಈ ಮಗ ತುಂಬ ಬಾಧೆಪಟ್ಟ. ಋತ್ವಿಜರ ಸಲಹೆಯಂತೆ ಈ ಜಂತು ಎಂಬ ಮಗನನ್ನು ಬಲಿಕೊಡಲು ಯಮುನಾ ನದೀ ತೀರದಲ್ಲಿ ಒಂದು ದೊಡ್ಡ ಯಾಗ ಮಾಡಿದ. ಮತ್ತೆ ನೂರು ಮಕ್ಕಳನ್ನು ಪಡೆಯುವುದೇ ಈ ಬಲಿಯ ಉದ್ದೇಶವಾಗಿತ್ತು. ಮಹಾಭಾರತದ ಸಭಾಪರ್ವ ಮತ್ತು ವಿರಾಟಪರ್ವಗಳಲ್ಲಿ ಈತನ ಯಜ್ಞದ ಪ್ರಸಕ್ತಿಯಿದೆ. ಫಲವಾಗಿ ಸೋಮಕ ನೂರು ಮಕ್ಕಳನ್ನೇನೋ ಪಡೆದ ಆದರೆ ಜಂತು ಎಂಬ ಮಗನನ್ನು ಬಲಿಕೊಟ್ಟ. ಪಾತಕಕ್ಕಾಗಿ ಯಾಗ ಮಾಡಿಸಿದ ಪುರೋಹಿತನಿಗೆ ರೌರವ ಶಿಕ್ಷೆ ಕಾದಿತ್ತು. ಇದನ್ನು ತಿಳಿದ ಸೊಮಕ ತನಗೂ ಅದೇ ಬಗೆಯ ಭಿಕ್ಷೆ ಬೇಕೆಂದು ಕೋರಿಕೊಂಡ.
ಮಗನನ್ನೇ ಬಲಿ ಕೊಡುವಷ್ಟು ನೀಚ ಮಟ್ಟಕ್ಕೆ ಹಿಂದಿನ ರಾಜರುಗಳೂ ಇಳಿದಿದ್ದರು ಎಂಬ ಸಂಗತಿ ಮತ್ತು ದೇವತೆಗಳು ನರಬಲಿಯನ್ನು ತಿರಸ್ಕಾರದಿಂದ ಕಾಣುತ್ತಾರೆಂಬ ಸಂಗತಿ ಇಲ್ಲಿ ತಿಳಿದುಬರುತ್ತದೆ.ಸೋಮಕ ಒಬ್ಬ ಪಾಂಚಾಲ ದೊರೆ. ಸಹದೇವ ಎಂಬ ಪಾಚೀನ ದೊರೆಯ ಮಗ. ದಿವೋ ದಾಸನ ಮೊಮ್ಮಗ. ಇವನಿಗೆ ನೂರ್ವರು ಪತ್ನಿಯರೂ, ನೂರು ಜನ ಮಕ್ಕಳೂ ಇದ್ದರು. ಹಿರಿಯ ರಾನೀಯಲ್ಲಿ ಜಂತು ಎಂಬ ಮಗನಿದ್ದ. ಇರುವೆಗಳಿಂದ ಕಚ್ಚಿಸಿಕೊಂಡು ಈ ಮಗ ತುಂಬ ಬಾಧೆಪಟ್ಟ. ಋತ್ವಿಜರ ಸಲಹೆಯಂತೆ ಈ ಜಂತು ಎಂಬ ಮಗನನ್ನು ಬಲಿಕೊಡಲು ಯಮುನಾ ನದೀ ತೀರದಲ್ಲಿ ಒಂದು ದೊಡ್ಡ ಯಾಗ ಮಾಡಿದ. ಮತ್ತೆ ನೂರು ಮಕ್ಕಳನ್ನು ಪಡೆಯುವುದೇ ಈ ಬಲಿಯ ಉದ್ದೇಶವಾಗಿತ್ತು. ಮಹಾಭಾರತದ ಸಭಾಪರ್ವ ಮತ್ತು ವಿರಾಟಪರ್ವಗಳಲ್ಲಿ ಈತನ ಯಜ್ಞದ ಪ್ರಸಕ್ತಿಯಿದೆ. ಫಲವಾಗಿ ಸೋಮಕ ನೂರು ಮಕ್ಕಳನ್ನೇನೋ ಪಡೆದ ಆದರೆ ಜಂತು ಎಂಬ ಮಗನನ್ನು ಬಲಿಕೊಟ್ಟ. ಪಾತಕಕ್ಕಾಗಿ ಯಾಗ ಮಾಡಿಸಿದ ಪುರೋಹಿತನಿಗೆ ರೌರವ ಶಿಕ್ಷೆ ಕಾದಿತ್ತು. ಇದನ್ನು ತಿಳಿದ ಸೊಮಕ ತನಗೂ ಅದೇ ಬಗೆಯ ಭಿಕ್ಷೆ ಬೇಕೆಂದು ಕೋರಿಕೊಂಡ.
ಮಗನನ್ನೇ ಬಲಿ ಕೊಡುವಷ್ಟು ನೀಚ ಮಟ್ಟಕ್ಕೆ ಹಿಂದಿನ ರಾಜರುಗಳೂ ಇಳಿದಿದ್ದರು ಎಂಬ ಸಂಗತಿ ಮತ್ತು ದೇವತೆಗಳು ನರಬಲಿಯನ್ನು ತಿರಸ್ಕಾರದಿಂದ ಕಾಣುತ್ತಾರೆಂಬ ಸಂಗತಿ ಇಲ್ಲಿ ತಿಳಿದುಬರುತ್ತದೆ.
ಮೂಲ ...{Loading}...
ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು
ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ ॥24॥
೦೨೫ ಹಿಡಿದನಶ್ವತ್ಥಾಮ ದ್ರುಪದನ ...{Loading}...
ಹಿಡಿದನಶ್ವತ್ಥಾಮ ದ್ರುಪದನ
ಪಡೆಯೊಡನೆ ಬವರವನು ಕೃಪ ಮುಂ
ಗುಡಿಯೊಡನೆ ಹೊಕ್ಕಿರಿದು ತಡೆದನು ಸಾತ್ಯಕಿಯ ರಥವ
ಕಡುಹು ಮಿಗೆ ಕೈದೋರಿ ಪವನಜ
ನೊಡನೆ ಗುರು ಕಾದಿದನು ರಾಯನ
ನುಡಿಸಿ ಕೌರವರಾಯ ತಾಗಿದನಾಹವಾಗ್ರದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ದ್ರುಪದನ ಸೇನೆಯೊಡನೆ ಯುದ್ಧವನ್ನು ಕೈಕೊಂಡನು. ಕೃಪಾಚಾರ್ಯನು ಮುಂಚೂಣಿಯ ಸೇನೆ ಮೇಲೆ ನುಗ್ಗಿ ಅವರನ್ನು ಕೊಂದು ಸಾತ್ಯಕಿಯ ರಥವನ್ನು ಸೆರೆ ಹಿಡಿದನು. ಗುರುವಾದ ದ್ರೋಣಾಚಾರ್ಯನು ಸಾಮಥ್ರ್ಯ ಮೀರಿ ಸಾಹಸ ಪ್ರದರ್ಶನ ಮಾಡಿ ಭೀಮನೊಡನೆ ಹೋರಾಡಿದನು. ಕೌರವನು ಧರ್ಮರಾಯನನ್ನು ಕೆಣಕಿ ವಾಗ್ಯುದ್ಧ ಮಾಡಿ ರಣರಂಗದ ಅಗ್ರಭಾಗಕ್ಕೆ ನುಗ್ಗಿದನು.
ಪದಾರ್ಥ (ಕ.ಗ.ಪ)
ಮುಂಗುಡಿ-ಮುಂಚೂಣಿ, ಕಡುಹುಮಿಗೆ-ಸಾಮಥ್ರ್ಯಮೀರಿ,
ಮೂಲ ...{Loading}...
ಹಿಡಿದನಶ್ವತ್ಥಾಮ ದ್ರುಪದನ
ಪಡೆಯೊಡನೆ ಬವರವನು ಕೃಪ ಮುಂ
ಗುಡಿಯೊಡನೆ ಹೊಕ್ಕಿರಿದು ತಡೆದನು ಸಾತ್ಯಕಿಯ ರಥವ
ಕಡುಹು ಮಿಗೆ ಕೈದೋರಿ ಪವನಜ
ನೊಡನೆ ಗುರು ಕಾದಿದನು ರಾಯನ
ನುಡಿಸಿ ಕೌರವರಾಯ ತಾಗಿದನಾಹವಾಗ್ರದಲಿ ॥25॥
೦೨೬ ಸೆಣಸು ಮಿಗಲಭಿಮನ್ಯು ...{Loading}...
ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಶಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಶರ್ಮ ತಾಗಿದನರಸ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಾಟ ಅತಿಶಯವಾಗುವಂತೆ ಭೀಷ್ಮನನ್ನು ಅಭಿಮನ್ಯು ಕೆರಳಿಸಿದನು. ದುಶ್ಶಾಸನನು ಅರ್ಜುನನನ್ನು ಅಡ್ಡಗಟ್ಟಿದನು. ಆ ಘಟೋತ್ಕಚನೊಡನೆ ಭಗದತ್ತ ಬಾಣದ ಮಳೆಗರೆದನು. ಸಹದೇವ ನಾರಾಯಣ ಸೇನೆಯೊಡನೆ ಕಾದಿದನು. ಮತ್ಸ್ಯದೊರೆಯೊಡನೆ ಸುಶರ್ಮನು ಶಪಥ ಪೂರ್ಣನಾಗಿ ಹೋರಾಡಿದನು.
ಪದಾರ್ಥ (ಕ.ಗ.ಪ)
ಹೊಣಕೆಯಿಂದ-ಶಪಥಪೂರ್ಣನಾಗಿ, ಕಣೆಗೆದರಿ-ಬಾಣದ ಮಳೆ ಸುರಿಸಿ, ತರುಬಿದನು-ಅಡ್ಡಗಟ್ಟಿದನು,
ಟಿಪ್ಪನೀ (ಕ.ಗ.ಪ)
ನಾರಾಯಣಬಲ : ನೋಡಿ ಉದ್ಯೋಗ ಪರ್ವ, 1-33
ಮೂಲ ...{Loading}...
ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಶಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಶರ್ಮ ತಾಗಿದನರಸ ಕೇಳೆಂದ ॥26॥
೦೨೭ ಬೆರಸಿ ಹೊಯ್ದರು ...{Loading}...
ಬೆರಸಿ ಹೊಯ್ದರು ತಿವಿದರೆಚ್ಚರು
ಹರೆಗಡಿದರರೆಗಡಿದರೆತ್ತಿದ
ರರೆದರಿಟ್ಟೊರಸಿದರು ತರಿದರು ತುಳುಕಿ ತೂರಿದರು
ಸರಳು ಸರಿಯಲು ಜೋಡು ಜರಿಯಲು
ತುರಗ ಧೂಪಿಸೆ ಸಾರಥಿಯ ಕೈ
ಹರಿಯೆ ಕಾದಿತು ವೀರ ನಾಯಕವಾಡಿ ಧೈರ್ಯದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಸೇನೆಯ ಯೋಧರು ಪರಸ್ಪರ ಸಂಧಿಸಿ ಗದೆಯಿಂದ ಬಡಿದಾಡಿದರು, (ಈಟಿಗಳಿಂದ) ತಿವಿದಾಡಿದರು. (ಬಾಣಗಳನ್ನು) ಪ್ರಯೋಗಿಸಿದರು. (ಹರಡಿಕೊಂಡು ಬೀಳುವಂತೆ ಕತ್ತಿಗಳಿಂದ) ಕಡಿದಾಡಿದರು (ಸಣ್ಣಕತ್ತಿಗಳಿಂದ) ಕೊಚ್ಚಿದರು (ದೊಡ್ಡ ದೊಡ್ಡ ಈಟಿಗಳಿಂದ) ಚುಚ್ಚಿ ಮೇಲಕ್ಕೆ ಎತ್ತಿದರು (ರೋಣುಗಲ್ಲಿನಂಥ ಕಬ್ಬಿಣದ ಗುಂಡುಗಳಿಂದ) ನುಣ್ಣಗೆ ಅರೆದರು. (ಶಕ್ತ್ಯಾಯುಧಗಳನ್ನು) ಪ್ರಯೋಗಿಸಿ ಕೊಂದರು. ಕತ್ತರಿಸಿ ಉರುಳಿಸಿದರು (ವಾಯುವ್ಯಾಸ್ತ್ರ ಮೊದಲಾದವುಗಳಿಂದ) ದೂರ ಹೋಗಿ ಬೀಳುವಂತೆ ಮಾಡಿದರು. ಬಾಣಗಳು ಮುಗಿಯುವಂತೆಯೂ, ಕವಚ ಹರಿದು ಹೋಗುವಂತೆಯೂ, ತೇರಿನ ಕುದುರೆಗಳು ನಡುಗುವಂತೆಯೂ, ಸಾರಥಿ ಕೈ ಮುರಿದು ಬೀಳುವಂತೆಯೂ ಪ್ರಸಿದ್ಧ ಸೇನಾನಾಯಕರ ಗುಂಪು ಧೈರ್ಯದಿಂದ ಹೋರಾಡಿತು.
ಮೂಲ ...{Loading}...
ಬೆರಸಿ ಹೊಯ್ದರು ತಿವಿದರೆಚ್ಚರು
ಹರೆಗಡಿದರರೆಗಡಿದರೆತ್ತಿದ
ರರೆದರಿಟ್ಟೊರಸಿದರು ತರಿದರು ತುಳುಕಿ ತೂರಿದರು
ಸರಳು ಸರಿಯಲು ಜೋಡು ಜರಿಯಲು
ತುರಗ ಧೂಪಿಸೆ ಸಾರಥಿಯ ಕೈ
ಹರಿಯೆ ಕಾದಿತು ವೀರ ನಾಯಕವಾಡಿ ಧೈರ್ಯದಲಿ ॥27॥
೦೨೮ ಕೆಲಬರಾಯುಧ ಮುರಿದು ...{Loading}...
ಕೆಲಬರಾಯುಧ ಮುರಿದು ಸಾರಥಿ
ಯಳಿದು ಕೆಲಬರು ರಥ ವಿಸಂಚಿಸಿ
ಕೆಲರು ಕೆಲಬರು ಬಳಲಿದರು ಪೂರಾಯ ಘಾಯದಲಿ
ಕೆಲರು ಜುಣುಗಿತು ಕಂಡ ಮುಖದಲಿ
ಕೆಲರು ಹರೆದರು ಕೈಮನದ ಕಡು
ಗಲಿಗಳಚ್ಚಾಳಾಗಿ ನಿಂದರು ಕೆಲರು ಕಾಳೆಗಕೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರ ಆಯುಧ ಮುರಿಯಿತು. ಕೆಲವರ ಸಾರಥಿಗಳು ಅಳಿದುಹೋದರು. ಕೆಲವರ ರಥಗಳು ಪುಡಿಪುಡಿಯಾದವು. ಕೆಲವರು ಅತ್ಯಧಿಕವಾದ ಗಾಯಗಳಿಂದ ದಣಿದರು ಕೆಲವರು ಶತ್ರುಗಳನ್ನು ಕಂಡೊಡನೆ ಜಾರಿಕೊಂಡರು. ಮತ್ತೆ ಕೆಲವರು ದಿಕ್ಕಾಪಾಲಾಗಿ ಓಡಿದರು. ಕಾಳಗಕ್ಕೆ ಹೊಯ್ಕೈ ಆದ ಕೆಲ ಸಾಹಸಿಗಳು ಧೈರ್ಯಶಾಲಿಗಳಾಗಿ ನಿಂತು ಹೋರಾಡಿದರು.
ಪದಾರ್ಥ (ಕ.ಗ.ಪ)
ಅಚ್ಚಾಳು-ಧೈರ್ಯಶಾಲಿ, ಹರೆದರು-ಓಡಿದರು, ಪೂರಾಯ-ಅತ್ಯಧಿಕವಾದ, ವಿಸಂಚಿಸಿ-ಪುಡಿಪುಡಿಮಾಡಿ, ಜುಣುಗು-ಜಾರು
ಮೂಲ ...{Loading}...
ಕೆಲಬರಾಯುಧ ಮುರಿದು ಸಾರಥಿ
ಯಳಿದು ಕೆಲಬರು ರಥ ವಿಸಂಚಿಸಿ
ಕೆಲರು ಕೆಲಬರು ಬಳಲಿದರು ಪೂರಾಯ ಘಾಯದಲಿ
ಕೆಲರು ಜುಣುಗಿತು ಕಂಡ ಮುಖದಲಿ
ಕೆಲರು ಹರೆದರು ಕೈಮನದ ಕಡು
ಗಲಿಗಳಚ್ಚಾಳಾಗಿ ನಿಂದರು ಕೆಲರು ಕಾಳೆಗಕೆ ॥28॥
೦೨೯ ಏರ ಸೂರೆಯ ...{Loading}...
ಏರ ಸೂರೆಯ ಕಟ್ಟಿ ಹಿಂಗುವ
ಗಾರುತನ ತಾನೇನು ಸುಡು ಮುಂ
ಮಾರಿಗಳ ಮಾತೆತ್ತಲಡಸಿತು ಬಿರುದ ಸೈರಿಸುತ
ಆರಿಹೋಯಿತೆ ವೀರರಸ ತಲೆ
ದೋರ ಹೇಳಾ ರಣಕೆನುತ ಕೈ
ಮೀರಿ ಕವಿದರು ದ್ರುಪದ ಕೈಕಯ ಮತ್ಸ್ಯ ಸೃಂಜಯರು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗಳನ್ನು ಸೂರೆಗಟ್ಟಿಕೊಂಡು ಹಿಂಜರಿದು ಹೋಗುವ ಹೇಡಿತನ ತಾನೇನು ಮಾಡಿತು ! ಅಂಥವರ ಜನ್ಮ ಸುಡಲಿ ! ಮುಂದೆ ನುಗ್ಗುವ ಧೀರರ ಮಾತು ಎತ್ತ ಹೋಯಿತು ? ತಮ್ಮ ಸಾಹಸ ಬಿರುದುಗಳನ್ನು ಒಪ್ಪಿಕೊಳ್ಳುತ್ತ ಎಲ್ಲಿ ಅಡಗಿದರು ? ಅವರ ಧೈರ್ಯ ಸಾಹಸಗಳು ಇಂಗಿ ಹೋಯಿತೇ ? ಅವರೆಲ್ಲರನ್ನು ರಣರಂಗಕ್ಕೆ ಯುದ್ಧ ಮಾಡಲು ಬರಹೇಳು ಎನ್ನುತ್ತ ದ್ರುಪದ, ಕೈಕೆಯ, ಮತ್ಸ್ಯ, ಸೃಂಜಯ ದೇಶದ ವೀರರು ಸಾಮಥ್ರ್ಯ ಮೀರಿ ನುಗ್ಗಿದರು.
ಪದಾರ್ಥ (ಕ.ಗ.ಪ)
ಕೈಮೀರಿ-ಸಾಮಥ್ರ್ಯಮೀರಿ, ತಲೆದೋರ ಕಾಣಿಸಿಕೊಳ್ಳಲು, ಮುಂಮಾರಿ-ಮುನ್ನುಗ್ಗುವ ಧೀರರು, ಗಾರುತನ-ಹೇಡಿತನ
ಮೂಲ ...{Loading}...
ಏರ ಸೂರೆಯ ಕಟ್ಟಿ ಹಿಂಗುವ
ಗಾರುತನ ತಾನೇನು ಸುಡು ಮುಂ
ಮಾರಿಗಳ ಮಾತೆತ್ತಲಡಸಿತು ಬಿರುದ ಸೈರಿಸುತ
ಆರಿಹೋಯಿತೆ ವೀರರಸ ತಲೆ
ದೋರ ಹೇಳಾ ರಣಕೆನುತ ಕೈ
ಮೀರಿ ಕವಿದರು ದ್ರುಪದ ಕೈಕಯ ಮತ್ಸ್ಯ ಸೃಂಜಯರು ॥29॥
೦೩೦ ಕಡುಹು ಮುರಿದುದು ...{Loading}...
ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಶಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಪಡೆಯ ಸಾಮಥ್ರ್ಯ ಕುಸಿಯಿತು. ಸೇನೆಯ ಸ್ಥೈರ್ಯ ದಿಕ್ಕುಪಾಲಾಯಿತು. ದುಶ್ಶಾಸನನೇ ಮೊದಲಾದವರು ಹಿಮ್ಮೆಟ್ಟಲು ಮನಸ್ಸು ಮಾಡಿದರು. ಕಡಲು ಉಕ್ಕಿ ಬರುವಂತೆ ಬರುತ್ತಿದ್ದ ಅಪಾರ ಸಂಖ್ಯೆಯ ಪಾಂಡವರ ಸೇನೆಯನ್ನು ದ್ರೋಣ ಕಂಡನು. ಆಗ ಅವನು ಫಡ ಫಡ ! ಸೇನೆಯನ್ನು ಹಿಂತೆಗೆಯಬೇಡಿ ದುರ್ಯೋಧನನ ಆಣೆ ಎನ್ನುತ್ತ ಪಾಂಡವರ ಮೇಲೆ ಬಿದ್ದನು.
ಪದಾರ್ಥ (ಕ.ಗ.ಪ)
ಮಾರಾಂತ-ಮೇಲೆ ಬಿದ್ದನು, ಮೈದೆಗೆವಂತೆ-ಉಕ್ಕಿಬರುವಂತೆ, ಅಂಗೈಸಿದರು-ಸಮ್ಮತಿಸಿದರು, ಮಡ- ಹಿಮ್ಮಡಿ, ತರಹರ-ಸ್ಥೈರ್ಯ, ಕಡುಹು-ಸಾಮಥ್ರ್ಯ
ಮೂಲ ...{Loading}...
ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಶಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ ॥30॥
೦೩೧ ಸಾಹಸಿಕರೈ ದ್ರುಪದರಿವದಿರ ...{Loading}...
ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಹಸವಂತರು ದ್ರುಪದನ ಕಡೆಯವರು. ಇವರ ವೇಷದ ವೀರತನ ದೊಡ್ಡದು. ಮನಸ್ಸನ್ನು ಹಿಡಿದಿಟ್ಟುಕೊಂಡು ರಕ್ಷಿಸಿಕೊಳ್ಳುವಲ್ಲಿ ಇವರು ಹೆಣ್ಣು ಮಕ್ಕಳ ಸ್ವಭಾವ ಹೊಂದಿದ್ದಾರೆ. ಶಿವ ಶಿವಾ ! ಇವರಿಗೆ ಯುದ್ಧದಲ್ಲಿ ಅಂಜಿ ಹಿಂದಕ್ಕೆ ಸರಿದರೆ ವೀರರ ಸಾಮಥ್ರ್ಯಕ್ಕೆ ಕಳಂಕ ಅಂಟುವುದಿಲ್ಲವೇ ! ಸುಡಲಿ ಈ ಜನ್ಮ ! ಈ ದೇಹ ಏಕಿರಬೇಕು? ಆದದ್ದಾಗಲಿ ಎನ್ನುತ್ತ ದ್ರೋಣ ಕಾಳಗಕ್ಕೆ ನುಗ್ಗಿದನು.
ಪದಾರ್ಥ (ಕ.ಗ.ಪ)
ಚೋಹದ-ವೇಷದ, ಮನಕಾಹು-ಮನಸ್ಸನ್ನು ಹಿಡಿದಿಟ್ಟು ಕೊಳ್ಳುವುದು, ಆಹವ-ಸಮರ, ಓಸರಿಸಿದರೆ-ಹಿಂದಕ್ಕೆ ಸರಿದರೆ, ಕಲೆ-ಕಳಂಕ, ಹೆಮ್ಮಕ್ಕಳು-ಹೆಣ್ಣುಮಕ್ಕಳು, ಓಲೆಯಕಾರತನ-ವೀರತನ
ಮೂಲ ...{Loading}...
ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ ॥31॥
೦೩೨ ಆವುದನ್ತರ ವನಕಳಭಕೈ ...{Loading}...
ಆವುದಂತರ ವನಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನ ಆನೆಮರಿಗೂ ಐರಾವತಕ್ಕೂ ಎಷ್ಟು ಅಂತರವಿದೆ ? ಮಝ ! ಭಾಪು ! ಮಹಾದೇವ ! ದ್ರೋಣನ ಸಾಮಥ್ರ್ಯದ ಎದುರು ಪಾಂಚಾಲನು ಎಷ್ಟರವನು ? ನಮಗೆ ದ್ರುಪದ ಕಾಣದಾದನು. ಆ ವಿರಾಟನು ಯಾವ ಸ್ಥಳಕ್ಕೆ ಹೋಗಿ ಸೇರಿದ್ದಾನೊ ? ಸೃಂಜಯರು ಎತ್ತ ಹೋಗಿ ಸೇರಿದ್ದಾರೋ ? ದೊರೆಯೆ, ನಮಗೆ ಇದು ತಿಳಿಯದಾಗಿದೆ ಎಂದು ಧೃತರಾಷ್ಟ್ರನಿಗೆ ಸಂಜಯನೆಂದನು.
ಪದಾರ್ಥ (ಕ.ಗ.ಪ)
ಐಸರವನು-ಎಷ್ಟರವನು, ವನಕಳಭ-ಕಾಡಿನಾನೆಮರಿ, ಡಾವರ-ಸಾಮಥ್ರ್ಯ
ಮೂಲ ...{Loading}...
ಆವುದಂತರ ವನಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ ॥32॥
೦೩೩ ಒಗ್ಗೊಡೆದು ರಿಪುಸೇನೆ ...{Loading}...
ಒಗ್ಗೊಡೆದು ರಿಪುಸೇನೆ ಸರಿದುದು
ತಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಳೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ದಂಡು ಚದುರಿ ಹಿಮ್ಮೆಟ್ಟಿತು. ಉತ್ಸಾಹಿ ಶೂರರ ಗರ್ವದ ಮಾತುಗಳಿಂದ ಮನಸ್ಸು ಕುಂದಿದವು. ಸಾಮಂತರಾಜರಿಗೆ ಅವಮಾನದಿಂದ ತಲೆಗಳಿಗೆ ಮುಸುಕು ಹಾಕಿಕೊಳ್ಳುವಂತಹ ಸ್ಥಿತಿ ಎಲ್ಲೆಡೆ ಉಂಟಾಯಿತು (ಅವಮಾನ ಹೊಂದುವ ಸ್ಥಿತಿ ಬಂದಿತು). ರಣ ವಾದ್ಯಗಳ, ತಮಟೆಗಳ ಸದ್ದು ಅಡಗಿ ಮೌನಧರಿಸುವುದು ಹೆಚ್ಚಾಯಿತು. ಬಿರುದಾಂಕಿತ. ಶೂರರು ತಮ್ಮ ಹೆಗ್ಗಳಿಕೆಯ ಬಿರುದು ಬಾವಲಿಗಳನ್ನು ಮುಚ್ಚಿಟ್ಟುಕೊಳ್ಳುತ್ತ ದಂಡಿನೊಳಕ್ಕೆ ಸೇರಿಕೊಳ್ಳುವಂತಾಗಲು, ಈ ಸ್ಥಿತಿಯನ್ನು ಅರ್ಜುನನು ಕಂಡು ಸಿಟ್ಟಾದನು.
ಪದಾರ್ಥ (ಕ.ಗ.ಪ)
ಖತಿಗೊಂಡನು-ಸಿಟ್ಟಾದನು, ಅಗ್ಗಳೆಯರು-ಬಿರುದಾಂಕಿತ ವೀರರು, ಲಗ್ಗೆಪರೆ-ರಣತಮ್ಮಟೆ, ಬೈಚಿಡು-ಮುಚ್ಚಿಡು, ಮಂಡಳಿಕ-ಸಾಮಂತ, ಒಗ್ಗೊಡೆದು-ಚದುರಿ, ಉಬ್ಬಾಳು-ಉತ್ಸಾಹಿ ಶೂರ, ನೆಗ್ಗು-ಕುಂದು
ಮೂಲ ...{Loading}...
ಒಗ್ಗೊಡೆದು ರಿಪುಸೇನೆ ಸರಿದುದು
ತಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಳೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ ॥33॥
೦೩೪ ರಣಕೆ ತವಕಿಸಿ ...{Loading}...
ರಣಕೆ ತವಕಿಸಿ ಬಳಿಕ ತಾಗುವ
ಕಣೆಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ಮಾಡಲು ಸಡಗರಪಟ್ಟು ಯುದ್ಧ ಆರಂಭಿಸಿದ ಮೇಲೆ ತಮಗೆ ತಗಲುವ ಹಗೆಗಳ ಬಾಣಗಳ ಹೊಡೆತಕ್ಕೆ ಹಿಂದಕ್ಕೆ ಸರಿಯುವ (ತತ್ತರಿಸುವ) ಶೂರರ ಈ ಸ್ವಭಾವವು ಎಂಥಹುದೋ ! ಇವರೆಲ್ಲ ಮಾನಗೆಟ್ಟವರು ಇವರನ್ನು ಸೇನೆ ಬಿಟ್ಟು ಹೋಗಲು ಹೇಳು ಎಂದು ಹೀಯಾಳಿಸುತ್ತ ಅರ್ಜುನನು ತನ್ನ ಬಿಲ್ಲಿನ ಹುರಿಯನ್ನು ಎಳೆದು ಠೇಂಕಾರ ಮಾಡಿದನು. ಶ್ರೇಷ್ಠವಾದ ಬಾಣಗಳ ಕಟ್ಟನ್ನು ಬಿಚ್ಚಿ (ಪ್ರಯೋಗಿಸಲು ಸಿದ್ಧಮಾಡಿ) ಸಿಂಹನಾದ ಮಾಡುತ್ತ ಕೌರವರ ಸೇನೆಗೆ ಇದಿರಾದನು.
ಪದಾರ್ಥ (ಕ.ಗ.ಪ)
ಸಮ್ಮುಖನಾದನು-ಇದಿರಾದನು, ಸಿಂಹನಾದದಲಿ-ಗರ್ಜಿಸುತ್ತಾ, ಹೊದೆಗಳ ಕೆದರಿ-ಕಟ್ಟನ್ನು ಬಿಚ್ಚಿ, ಮಾರ್ಗಣ-ಬಾಣ, ಭಂಡರು-ಮಾನಗೆಟ್ಟವರು, ತಳ್ಳುವಾರುವ-ಹಿಂದಕ್ಕೆ ಸರಿಯುವ (ತತ್ತರಿಸುವ), ತವಕಿಸಿ-ಉತ್ಸಾಹಿಸಿ
ಮೂಲ ...{Loading}...
ರಣಕೆ ತವಕಿಸಿ ಬಳಿಕ ತಾಗುವ
ಕಣೆಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ ॥34॥
೦೩೫ ಹೋರಬೇಕೇ ದ್ರುಪದನಾನ ...{Loading}...
ಹೋರಬೇಕೇ ದ್ರುಪದನಾನ
ಲ್ಲಾರಯಿದು ಕಾದುವುದು ಚಾಪದ
ಚಾರುವಿದ್ಯೆಯ ನಿಮ್ಮೊಳರಿದುದ ನಿಮಗೆ ತೋರಿಸುವೆ
ಸೈರಿಸುವುದೀ ಬಾಲಭಾಷೆಗೆ
ವೈರಬಂಧವ ಬಿಡುವದೆನುತಾ
ಚಾರಿಯನ ರಥಹಯವ ಹೊದಿಸಿದನಸ್ತ್ರನಿಕರದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ದ್ರೋಣಾಚಾರ್ಯರಿಗೆ ಹೇಳಿದನು. ಆಚಾರ್ಯರೇ ನಾನು ಯುದ್ಧ ಮಾಡಬೇಕೇ ? ಮಾಡುತ್ತೇನೆ. ಆದರೆ ನಾನು ದ್ರುಪದನಲ್ಲ. ಯೋಚಿಸಿ ಯುದ್ಧ ಮಾಡಿ ನಿಮ್ಮಲ್ಲಿಯೆ ಕಲಿತ ಬಿಲ್ವಿದ್ಯೆಯನ್ನು ನಿಮಗೆ ಪ್ರದರ್ಶಿಸುವೆ. ಈ ನಿಮ್ಮ ಶಿಷ್ಯ ಬಾಲಕನ ಮಾತನ್ನು ಸಹಿಸಿಕೊಳ್ಳಿ, ದ್ವೇಷವನ್ನು ಸಾಧಿಸಬೇಡಿ, ಬಿಟ್ಟು ಬಿಡಿ ಎಂಬುದಾಗಿ ದ್ರೋಣಾಚಾರ್ಯರ ರಥ ಕುದುರೆಗಳ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಿ ಅವುಗಳನ್ನು ಮುಚ್ಚಿದನು.
ಪದಾರ್ಥ (ಕ.ಗ.ಪ)
ಹೋರಬೇಕೇ-ಯುದ್ಧ ಮಾಡಬೇಕೇ ? ಆರಯಿದು-ಯೋಚಿಸಿ, ಕಾದುವುದು-ಹೋರಾಡುವುದು, ಅರಿದುದ-ಕಲಿತ, ಬಾಲಭಾಷೆಗೆ- ಬಾಲಕನ ಮಾತಿಗೆ, ಆಚಾರಿಯ-ಆಚಾರ್ಯ-ದ್ರೋಣ
ಮೂಲ ...{Loading}...
ಹೋರಬೇಕೇ ದ್ರುಪದನಾನ
ಲ್ಲಾರಯಿದು ಕಾದುವುದು ಚಾಪದ
ಚಾರುವಿದ್ಯೆಯ ನಿಮ್ಮೊಳರಿದುದ ನಿಮಗೆ ತೋರಿಸುವೆ
ಸೈರಿಸುವುದೀ ಬಾಲಭಾಷೆಗೆ
ವೈರಬಂಧವ ಬಿಡುವದೆನುತಾ
ಚಾರಿಯನ ರಥಹಯವ ಹೊದಿಸಿದನಸ್ತ್ರನಿಕರದಲಿ ॥35॥
೦೩೬ ಕವಿವ ಕಣೆಗಳ ...{Loading}...
ಕವಿವ ಕಣೆಗಳ ದಡ್ಡಿಗಳನೊಡೆ
ತಿವಿದು ತುಳುಕಿದನಂಬಿನಬುಧಿಯ
ನವಿರಳಾಸ್ತ್ರಾನೀಕ ಡಾವರಿಸಿದವು ದಿಗುತಟವ
ಅವನಿಯೋ ದಿಕ್ಕುಗಳೊ ಪಾರ್ಥನೊ
ರವಿಯ ಕಾಣೆನು ಭಾಪು ಕಲಶೋ
ದ್ಭವನ ಕೈಮೈಯೆನುತ ಬೆರಗಿನೊಳಿರ್ದುದಮರಗಣ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನಗೆ ಮುತ್ತುವ ಬಾಣಗಳ ಸಮೂಹವನ್ನು ನಾಶಮಾಡಿ ಬಾಣ ಸಾಗರವನ್ನೇ ಹರಿಯಿಸಿದನು. ಅಪೂರ್ವವಾದ ಅಸ್ತ್ರ ಸಮೂಹವು ದಿಗಂತಗಳನ್ನು ಮುಸುಕಿದವು. ಇದರ ಫಲವಾಗಿ ಭೂಮಿಯೆತ್ತ ದಿಕ್ಕುಗಳೆತ್ತ ಅರ್ಜುನನೆಲ್ಲಿ ಸೂರ್ಯನೇ ಕಾಣುತ್ತಿಲ್ಲ ಎನ್ನುವಂತಾಯಿತು. ದ್ರೋಣನ ಮೈಯೆಲ್ಲ ಬಾಣಗಳಿಂದ ಮುಚ್ಚಿ ಕೈ ಯಾವುದು ಮೈ ಯಾವುದು ಎಂಬುದು ತಿಳಿಯದಂತಾದುದನ್ನು ಕಂಡು ದೇವತೆಗಳು ಅಚ್ಚರಿಗೊಂಡರು. ಭಲೆ ! ಎಂದು ಅರ್ಜುನನ ಸಾಹಸವನ್ನು ಮೆಚ್ಚಿದರು.
ಮೂಲ ...{Loading}...
ಕವಿವ ಕಣೆಗಳ ದಡ್ಡಿಗಳನೊಡೆ
ತಿವಿದು ತುಳುಕಿದನಂಬಿನಬುಧಿಯ
ನವಿರಳಾಸ್ತ್ರಾನೀಕ ಡಾವರಿಸಿದವು ದಿಗುತಟವ
ಅವನಿಯೋ ದಿಕ್ಕುಗಳೊ ಪಾರ್ಥನೊ
ರವಿಯ ಕಾಣೆನು ಭಾಪು ಕಲಶೋ
ದ್ಭವನ ಕೈಮೈಯೆನುತ ಬೆರಗಿನೊಳಿರ್ದುದಮರಗಣ ॥36॥
೦೩೭ ಈತನಸ್ತ್ರವ ಕಡಿದು ...{Loading}...
ಈತನಸ್ತ್ರವ ಕಡಿದು ಬಾಣ
ವ್ರಾತವನು ತೆರಳಿಚಿದನರ್ಜುನ
ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ
ಕೇತುವಾದವು ರವಿರಥಕೆ ಪುರು
ಹೂತನಾದವು ಗಿರಿಕುಳಕೆ ಕೈ
ಸೋತುವಿವ ತರಿದೊಟ್ಟಿ ಬಳಲಿದು ನಿಂದನಾ ದ್ರೋಣ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದ್ರೋಣನು ಬಿಟ್ಟ ಬಾಣ ಸಮೂಹಕ್ಕೆ ಪ್ರತಿಯಾಗಿ ಬಾಣಗಳ ಮಳೆ ಸುರಿಸಿ ಹಿಂದಕ್ಕಟ್ಟಿದನು. ಆ ಬಾಣಾವಳಿಗಳು ಆಕಾಶವೆಂಬ ಮಹಾಸಾಗರಕ್ಕೆ ಸೇತುವಾಯಿತು. ರವಿರಥಕ್ಕೆ ಧ್ವಜವಾಯಿತು. ಗಿರಿಗಳಿಗೆ ಇಂದ್ರನಂತಾದವು, ಅರ್ಜುನನ ಪ್ರತಿ ಬಾಣಗಳನ್ನು ನಾಶ ಮಾಡಿ ರಾಶಿ ಹಾಕುತ್ತಾ ಕೈ ಸೋತು ದ್ರೋಣನು ಬಳಲಿ ನಿಂತನು.
ಪದಾರ್ಥ (ಕ.ಗ.ಪ)
ಬಾಣವ್ರಾತ-ಬಾಣಸಮೂಹ, ವೈಹಾಯಸ-ಆಕಾಶ, ಕೇತು-ಧ್ವಜ, ಪುರುಹೂತ-ಇಂದ್ರ, ತರಿದೊಟ್ಟಿ-ಕತ್ತರಿಸಿ ರಾಶಿ ಹಾಕುತ್ತಾ
ಮೂಲ ...{Loading}...
ಈತನಸ್ತ್ರವ ಕಡಿದು ಬಾಣ
ವ್ರಾತವನು ತೆರಳಿಚಿದನರ್ಜುನ
ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ
ಕೇತುವಾದವು ರವಿರಥಕೆ ಪುರು
ಹೂತನಾದವು ಗಿರಿಕುಳಕೆ ಕೈ
ಸೋತುವಿವ ತರಿದೊಟ್ಟಿ ಬಳಲಿದು ನಿಂದನಾ ದ್ರೋಣ ॥37॥
೦೩೮ ತ್ರಾಣ ಕೋಮಲವಾಯ್ತು ...{Loading}...
ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ಶಕ್ತಿ ಗುಂದಿತು. ಆಗ ಅರ್ಜುನನು ದ್ರೋಣನು ಬಾಣಗಳಿಂದ ಮುಚ್ಚಿಹೋಗಿದ್ದಾನೆ ಕಾಲುದಳ ಬಿಡು, ಪ್ರತಿಜ್ಞಾ ವೀರರಿಗೆ ಸಾವಿರ ಬಂಡಿ ಬಾಣಗಳೊಡನೆ ಬರಹೇಳು ಎಂದನು. ನಂತರದ ಯುದ್ಧದಿಂದ ಹರಿದ ರಕ್ತ ಪ್ರವಾಹದಲ್ಲಿ, ಕಾಲಿನ ದೂಳಿಯರಾಶಿಯಲ್ಲಿ ಭೂಮಿ ಕಾಣದಾಯಿತು. ಅರೆರೆ! ಧೀರ ಪಾರ್ಥನು ಶತ್ರು ಸೇನೆಯನ್ನು ವಶಪಡಿಸಿಕೊಂಡನು.
ಪದಾರ್ಥ (ಕ.ಗ.ಪ)
ತ್ರಾಣ-ಶಕ್ತಿ, ಶೋಣಿತದ ಸಾಗರದಿ-ರಕ್ತ ಪ್ರವಾಹದಲ್ಲಿ, ಕೇಣಿಗೊಂಡನು-ವಶಪಡಿಸಿಕೊಂಡನು
ಮೂಲ ...{Loading}...
ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ ॥38॥
೦೩೯ ನರನೆ ಹೊಕ್ಕವನಾದಡಯ್ಯನ ...{Loading}...
ನರನೆ ಹೊಕ್ಕವನಾದಡಯ್ಯನ
ಹರಿಬವೆನ್ನದೆನುತ್ತ ಬಿಲುದಿರು
ಮೊರೆಯ ಮೋಹರಗಡಲ ಕವಿಸಿದನಂದು ಗುರುಸೂನು
ಗುರುಸುತನ ಬಳಿವಿಡಿದು ಕಡುಹಿನ
ಲುರವಣಿಸಿದರು ಶಕುನಿ ಯವನೇ
ಶ್ವರ ಕಳಿಂಗ ಸುಕೇತು ಭೂರಿಶ್ರವರು ಬಿಲುದುಡುಕಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರಾಗುವನು ಅರ್ಜುನನೇ ಎಂದಾದರೆ ತಂದೆಯಾದ ದ್ರೋಣನ ರಕ್ಷಣೆ ತನಗೆ ಸೇರಿದ್ದೆಂದು ಹೇಳುತ್ತಾ ಅಶ್ವತ್ಥಾಮ ಬಿಲ್ಲಿನ ಹೆದೆಯನ್ನು ಝೇಂಕರಿಸುತ್ತ ಶತ್ರುಸೇನಾ ಸಾಗರವನ್ನೇ ಬಾಣಗಳಿಂದ ಮುಸುಕಿದನು. ಅಶ್ವತ್ಥಾಮನನ್ನು ಬೆಂಬಲಿಸಿ ಸ್ಥೈರ್ಯದಿಂದ ಶಕುನಿ ಯವನೇಶ್ವರ, ಕಳಿಂಗ ಸುಕೇತು ಭೂರಿಶ್ರವರು ಧನುರ್ಧಾರಿಗಳಾಗಿ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಅಯ್ಯ-ತಂದೆ , ಹರಿಬ-ರಕ್ಷಣೆ, ಬಿಲುದಿರು-ಬಿಲ್ಲಿನ ಹಗ್ಗ
ಮೂಲ ...{Loading}...
ನರನೆ ಹೊಕ್ಕವನಾದಡಯ್ಯನ
ಹರಿಬವೆನ್ನದೆನುತ್ತ ಬಿಲುದಿರು
ಮೊರೆಯ ಮೋಹರಗಡಲ ಕವಿಸಿದನಂದು ಗುರುಸೂನು
ಗುರುಸುತನ ಬಳಿವಿಡಿದು ಕಡುಹಿನ
ಲುರವಣಿಸಿದರು ಶಕುನಿ ಯವನೇ
ಶ್ವರ ಕಳಿಂಗ ಸುಕೇತು ಭೂರಿಶ್ರವರು ಬಿಲುದುಡುಕಿ ॥39॥
೦೪೦ ಸಾಲ ಮಕುಟದ ...{Loading}...
ಸಾಲ ಮಕುಟದ ಮಾಣಿಕದ ಮಣಿ
ಮಾಲಿಕೆಯ ರಶ್ಮಿಗಳು ಸೂರ್ಯನ
ಸೋಲಿಸಲು ಸಮರವನು ಹೊಕ್ಕರು ಕುರುಹಿನತಿಬಳರು
ಕೋಲ ತೆಗಹಿನ ಕಿವಿಗಡಿಯ ಕ
ಣ್ಣಾಲಿಗಳ ಕೆಂಪುಗಳ ಹೊಗರು ಛ
ಡಾಳಿಸಲು ಬಲುಖತಿಯ ಸುಭಟರು ಹಳಚಿತರ್ಜುನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಲುಸಾಲಾದ ಕಿರೀಟಗಳಲ್ಲಿದ್ದ ಮಾಣಿಕ್ಯ ಮೊದಲಾದ ಮಣಿಗಳ ಸಾಲಿನ ಕಾಂತಿ ಸೂರ್ಯನನ್ನು ಮೀರಿಸುತ್ತಿರಲು ಪ್ರಸಿದ್ಧ ವೀರರು ರಣರಂಗವನ್ನು ಪ್ರವೇಶಿಸಿದರು. ಬಾಣಗಳನ್ನು ಬತ್ತಳಿಕೆಯಿಂದ ತೆಗೆದು ಕಿವಿಯ ಅಂಚಿನವರೆಗೂ ಎಳೆದು ಹೂಡಿದಾಗ ಕಣ್ಣುಗುಡ್ಡೆಗಳ ಕ್ರೋಧಭಾವದ ಕೆಂಪಿನ ಕಾಂತಿ ಹೊಮ್ಮಿ ಹರಿಯುತ್ತಿರಲು ಅತಿ ಕೋಪದಿಂದ ಭಟರು ಅರ್ಜುನನ್ನು ತಾಗಿದರು.
ಪದಾರ್ಥ (ಕ.ಗ.ಪ)
ಹಳಚು-ತಾಗು, ಛಡಾಳಿಸು-ಹೊಮ್ಮಿ ಹರಿ, ಕಣ್ಣಾಲಿ-ಕಣ್ಣುಗುಡ್ಡೆ, ಕುರುಹಿನ-ಪ್ರಸಿದ್ಧ, ತೆಗೆಹಿನ-ತೆಗೆದ,
ಮೂಲ ...{Loading}...
ಸಾಲ ಮಕುಟದ ಮಾಣಿಕದ ಮಣಿ
ಮಾಲಿಕೆಯ ರಶ್ಮಿಗಳು ಸೂರ್ಯನ
ಸೋಲಿಸಲು ಸಮರವನು ಹೊಕ್ಕರು ಕುರುಹಿನತಿಬಳರು
ಕೋಲ ತೆಗಹಿನ ಕಿವಿಗಡಿಯ ಕ
ಣ್ಣಾಲಿಗಳ ಕೆಂಪುಗಳ ಹೊಗರು ಛ
ಡಾಳಿಸಲು ಬಲುಖತಿಯ ಸುಭಟರು ಹಳಚಿತರ್ಜುನನ ॥40॥
೦೪೧ ಏನ ಹೇಳುವೆನವರ ...{Loading}...
ಏನ ಹೇಳುವೆನವರ ಶರ ಸಂ
ಧಾನವನು ಕಲಿ ಪಾರ್ಥನನುಸಂ
ಧಾನವನು ಕೈಯೊಡನೆಯನಿಬರ ಕಣೆಯ ಖಂಡಿಸಿದ
ದಾನವಾಮರರೊಳಗೆ ಸುಭಟ ನಿ
ಧಾನವನು ಪಡಿಗಟ್ಟಬಾರದು
ಮಾನವರ ಮಾತೇತಕೆಂದನು ಸಂಜಯನು ನಗುತ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಕಡೆಯವರ ಬಾಣ ಬಿಡುವ ಕೌಶಲ್ಯವನ್ನು ವೀರಪಾರ್ಥನ ಬಾಣ ಪ್ರಯೋಗವನ್ನು ಏನೆಂದು ಬಣ್ಣಿಸಲಿ ? ಎಲ್ಲಾ ಎದುರಾಳಿಗಳು ಬಿಟ್ಟ ಬಾಣಗಳನ್ನೂ ಕೂಡಲೆ ಪಾರ್ಥನು ಕತ್ತರಿಸುತ್ತಿದ್ದನು. ರಾಕ್ಷಸ ದೇವತಾ ವರ್ಗದೊಳಗೆ ಅರ್ಜುನನಂಥ ದೃಢ ನಿರ್ಧಾರದ ವೀರನನ್ನು ಸರಿಗಟ್ಟುವವರು ಯಾರೂ ಇಲ್ಲ ಎಂದ ಮೇಲೆ ಇನ್ನು ಮಾನವರ ಮಾತೇಕೆ ಬಂದೀತು? ಎಂದು ಸಂಜಯ ನಗುತ್ತ ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪಡಿ- ಸಮಾನ
ಮೂಲ ...{Loading}...
ಏನ ಹೇಳುವೆನವರ ಶರ ಸಂ
ಧಾನವನು ಕಲಿ ಪಾರ್ಥನನುಸಂ
ಧಾನವನು ಕೈಯೊಡನೆಯನಿಬರ ಕಣೆಯ ಖಂಡಿಸಿದ
ದಾನವಾಮರರೊಳಗೆ ಸುಭಟ ನಿ
ಧಾನವನು ಪಡಿಗಟ್ಟಬಾರದು
ಮಾನವರ ಮಾತೇತಕೆಂದನು ಸಂಜಯನು ನಗುತ ॥41॥
೦೪೨ ಹಿಳುಕು ಹಿಳುಕುಗಳಡಸಿ ...{Loading}...
ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣದ ಹಿಂಭಾಗದ ಗರಿಭಾಗಗಳು ಒಂದನ್ನೊಂದು ಒತ್ತರಿಸಿಕೊಂಡು ಬಂದು ದಟ್ಟಿಸಲು ಎಲ್ಲ ದಿಕ್ಕುಗಳಲ್ಲಿ ಕತ್ತಲೆ ಆವರಿಸಿತು. ಬಾಣಗಳ ಸಾಲು ಸಾಗುವಾಗ ಆ ವೇಗದಿಂದ ಎದ್ದ ಗಾಳಿಯ ಹೊಡೆತಕ್ಕೆ ಚೂಪಾದ ಬಾಣದ ತುದಿಗಳಿಂದ ಕಿಡಿಕಾರುತ್ತಿತ್ತು. ಬಾಣದ ಹಿಂದೆ ಬಾಣ ಬಿಡುವ ಬಿಲ್ಲಾಳುಗಳ ಗುಂಪಿನ ಸಾಮಥ್ರ್ಯ ಎದುರಾಳಿಗಳ ಗುಂಪಿನ ಬಾಣದ ಎಸೆತಗಳನ್ನು ಹಿಂದಕ್ಕಟ್ಟಿತು. ಅರರೆ ! ರಣರಂಗದ ಹೋರಾಟ ಸರಿಸಮನಾಗಿತ್ತು.
ಪದಾರ್ಥ (ಕ.ಗ.ಪ)
ಪತತ್ರಾವಳಿ-ಬಾಣಗಳ ಗುಂಪು, ಹಿಳುಕು-ಬಾಣದ ಹಿಂಭಾಗದ ಗರಿಭಾಗ, ಹೊಯ್ಲು-ಹೊಡೆತ, ದಡ್ಡಿ-ಗುಂಪು, ಪಡಿಮುಖ-ಎದುರಾಳಿ, ಎಸುಗೆ-ಎಸೆತ, ತರುಬಿತು-ಅಡ್ಡಗಟ್ಟಿತು, ಸಮತಳಿಸು-ಸರಿಸಮನಿಸು
ಮೂಲ ...{Loading}...
ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ ॥42॥
೦೪೩ ಎಸುವನೊಬ್ಬನೆ ಪಾರ್ಥನನಿತುವ ...{Loading}...
ಎಸುವನೊಬ್ಬನೆ ಪಾರ್ಥನನಿತುವ
ಕುಸುರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆಯಲ್ಲಿ ಹಗೆಗಳ ಮೇಲೆ ಬಾಣ ಬಿಡುವವನು ಒಬ್ಬನೇ. ಅರ್ಜುನ ಬಿಟ್ಟ ಎಲ್ಲಾ ಬಾಣಗಳನ್ನು ಅಶ್ವತ್ಥಾಮ ಕೃಪ ಮೊದಲಾದ ಹತ್ತಾರು ಮಂದಿ ಚೂರು ಚೂರು ಮಾಡುವರು. ದೇವೇಂದ್ರರನ ಮಗನಾದ ಅರ್ಜುನನೊಬ್ಬನೇ ಅಷ್ಟು ಮಂದಿಯ ಬಾಣಗಳನ್ನು ಕತ್ತರಿಸುತ್ತಿದ್ದನು. ಈ ಗುರುಸುತಾದಿಗಳು ಬಿಟ್ಟ ಬಾಣಗಳು ಅರ್ಜುನನನ್ನು ತಲಪುತ್ತಿರಲಿಲ್ಲವಾದ್ದರಿಂದ ಅವನ ಮೈಯಲ್ಲಿ ಬಾಣಗಳ ಗಾಯದ ಗುರುತು ಕಾಣುತ್ತಿರಲಿಲ್ಲ. ಅರ್ಜುನನು ಅಷ್ಟು ಮಂದಿಯ ಬಾಣಗಳನ್ನು ಪೂರ್ಣವಾಗಿ ಕತ್ತರಿಸಿ ಅಷ್ಟು ಮಂದಿಯ ಮೈಗಳಲ್ಲಿ ತನ್ನ ಬಾಣಗಳು ನಾಟಿಕೊಳ್ಳುವಂತೆ ಮಾಡುತ್ತಿದ್ದನು.
ಪದಾರ್ಥ (ಕ.ಗ.ಪ)
ಕೆತ್ತುವನು-ನಾಟುತ್ತಿದ್ದನು, ವಿಶಿಖ-ಬಾಣ, ತರಿ-ಕತ್ತರಿಸು, ಕುಸುರು ತರಿ-ಚೂರು ಚೂರು ಮಾಡು, ಎಸು-ಬಾಣ ಬಿಡು,
ಮೂಲ ...{Loading}...
ಎಸುವನೊಬ್ಬನೆ ಪಾರ್ಥನನಿತುವ
ಕುಸುರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ ॥43॥
೦೪೪ ಕೋಲ ಕೋಳಾಹಳಕೆ ...{Loading}...
ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಕೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿಯ ಬಾಣಗಳ ಕಾಳಗವನ್ನು ಸಹಿಸದೆ ವೀರನಾಯಕ ವೃಂದ ಹರಿಗೆಗಳನ್ನು ತರ ಹೇಳಿದರು. ಬಲವತ್ತರವಾದ ಆತ್ಮರಕ್ಷಣೆಯ ಆಯುಧಗಳ ಬಂಡಿಗಳನ್ನು ಮತ್ತು ಅಕ್ಕಪಕ್ಕಕ್ಕೆ ಬಿಗಿದ ಹಕ್ಕರಿಕೆಗಳುಳ್ಳ ಆನೆಗಳನ್ನು ಮುಂದಕ್ಕೆ ತಂದರು. ಸೇನೆ ಸೋತರೆ, ನಿಮಗೆ ಒತ್ತಾಸೆಯಾಗಿ ನಾವಿದ್ದೇವೆ ಹೆದರಬೇಡಿ ಎಂದು ಅಶ್ವತ್ಥಾಮ ಮೊದಲಾದವರು ಬೆಂಬಲವಾಗಿ ನಿಂತರು.
ಪದಾರ್ಥ (ಕ.ಗ.ಪ)
ಆಕೆ- ಒತ್ತಾಸೆ, ಬೆಂಬಲ, ಬದ್ದರದ ಬಂಡಿ-ಬಲವತ್ತರವಾದ ಆತ್ಮರಕ್ಷಣಾರ್ಥ ಆಯುಧಗಳ ಬಂಡಿ, ಆಳನಾಯಕವಾಡಿ-ವೀರನಾಯಕ ವೃಂದ, ಕೋಳಾಹಳ-ಕಾಳಗ, ಹೂಳೆ ಬೀಸಿದ ಗುಳ-ಬಲವಾಗಿ ಅಕ್ಕ ಪಕ್ಕಕ್ಕೆ ಬಿಗಿದ ಹಕ್ಕರಿಕೆ
ಮೂಲ ...{Loading}...
ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಕೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು ॥44॥
೦೪೫ ಹರಿಬದಾಹವವೆಮ್ಬರಾವೆಡೆ ...{Loading}...
ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ತವ್ಯ ನಿಷ್ಠೆಯಿಂದ ಹೋರಾಡಬೇಕಾದ ಕಾಳಗವಿದು ಎಂಬುವರು ಎಲ್ಲಿ ಹೋದರು ? ರಣ ಹೇಡಿಗಳಾಗಿ ತೊಲಗಿದರೇನು? ಇವರ ಮಾತು ಕೇಳಿದರೆ ಕೋಪ ಬರುತ್ತದೆ. ಇವರು ಹೋರಾಟದಲ್ಲಿ ಗಾಯಗೊಳಿಸಿದ್ದಕ್ಕಿನ್ನ ಬರಿಯ ಮಾತಿನಿಂದ ಉರಿ ಕಾರುತ್ತಿದ್ದಾರೆ. ಶಿವ ಶಿವಾ ! ಅರಮನೆಗೆ ಸೇರಿದ ಕಾಲಾಳು ಆನೆ, ರಥ ಕುದುರೆಗಳ ಚತುರಂಗ ಬಲ ನಾಶವಾದರೆ ಇವರಿಗೆ ನಷ್ಟವೇ? ಅಶ್ವತ್ಥಾಮ ನಿಜಕ್ಕೂ ಶ್ರೇಷ್ಠನು ಎನ್ನುತ್ತ ಅರ್ಜುನ ರಣದಲ್ಲಿ ಮುಂದೆ ಸಾಗಿದನು.
ಪದಾರ್ಥ (ಕ.ಗ.ಪ)
ಹರಿಬ-ಕರ್ತವ್ಯ ನಿಷ್ಠೆ, ಹರೆದರೆ-ತೊಲಗಿದರೆ, ಗರುವನೈ-ದೊಡ್ಡ ಮನುಷ್ಯ, ಶ್ರೇಷ್ಠ, ಐದಿದನು-ಮುಂದೆ ಸಾಗಿದನು, ಆಹವ-ಸಮರ, ಕಾಳಗ
ಮೂಲ ...{Loading}...
ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ ॥45॥
೦೪೬ ಒಗ್ಗಿ ಕವಿತಹ ...{Loading}...
ಒಗ್ಗಿ ಕವಿತಹ ತುರಗ ಸೇನೆಯ
ನಗ್ಗಡಲೊಳಿಕ್ಕಿದನು ಕರಿಗಳ
ಮೊಗ್ಗರವ ಮೆದೆಗೆಡಹಿದನು ಹುಡಿಮಾಡಿದನು ರಥವ
ಮುಗ್ಗಿ ಬೀಳುವ ಪಾಯದಳವನು
ನುಗ್ಗುನುಸಿಮಾಡಿದನು ರಕುತದ
ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಅರ್ಜುನನು) ಒಂದಾಗಿ ನುಗ್ಗಿ ಬರುತ್ತಿದ್ದ ಕುದುರೆ ಸೇನೆಯನ್ನು ರಕ್ತ ಸಾಗರದಲ್ಲಿ ಮುಳುಗಿಸಿದನು. ಆನೆಗಳ ಸಮೂಹವನ್ನು ರಾಶಿರಾಶಿಯಾಗಿ ನೆಲಕ್ಕೆ ಉರುಳಿಸಿದನು. ರಥಗಳನ್ನು ಪುಡಿಪುಡಿಮಾಡಿದನು. ನುಗ್ಗಿ ಬರುವ ಕಾಲದಳವನ್ನು ನುಚ್ಚು ನೂರು ಮಾಡಿದನು. ರಣರಂಗದಲ್ಲಿ ರಕ್ತ ಪಿಪಾಸುಗಳಾದ ಶಾಕಿನಿಯರಿಗೆ (ಕ್ಷುದ್ರ ದೇವತೆಗಳಿಗೆ) ರಕ್ತದ ಸುಗ್ಗಿ ಹಬ್ಬವಾಯಿತು.
ಪದಾರ್ಥ (ಕ.ಗ.ಪ)
ಅಗ್ಗಡಲು-ರಕ್ತಸಾಗರ, ಕೆಡಹು-ನೆಲಕ್ಕೆ ಉರುಳಿಸು, ನುಗ್ಗು ನುಸಿ-ನುಚ್ಚು ನೂರು, ಕಳನ ಚೌಕ-ರಣರಂಗ, ಶಾಕಿನಿಯರು-ರಕ್ತಪಾನ ಮಾಡುವ ಕ್ಷುದ್ರ ದೇವತೆಯರು
ಮೂಲ ...{Loading}...
ಒಗ್ಗಿ ಕವಿತಹ ತುರಗ ಸೇನೆಯ
ನಗ್ಗಡಲೊಳಿಕ್ಕಿದನು ಕರಿಗಳ
ಮೊಗ್ಗರವ ಮೆದೆಗೆಡಹಿದನು ಹುಡಿಮಾಡಿದನು ರಥವ
ಮುಗ್ಗಿ ಬೀಳುವ ಪಾಯದಳವನು
ನುಗ್ಗುನುಸಿಮಾಡಿದನು ರಕುತದ
ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ ॥46॥
೦೪೭ ಜೋಡನೊಡೆಹಾಯ್ದಮ್ಬು ಧರಣಿಯೊ ...{Loading}...
ಜೋಡನೊಡೆಹಾಯ್ದಂಬು ಧರಣಿಯೊ
ಳಾಡಿದವು ಗುಳ ಸರಿದ ಕರಿಗಳ
ತೋಡಿ ನೆಟ್ಟವು ಬದ್ಧರಂಗಳ ಬಾದಣವ ಕೊರೆದು
ಈಡಿರಿದವರಿಸುಭಟರೊಡಲಿನ
ಜೋಡುಗಳ ಜರಿಯೊಡೆದು ತಳಪಟ
ಮಾಡಿದವು ಚತುರಂಗಬಲವನು ಪಾರ್ಥನಂಬುಗಳು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನ ಬಾಣಗಳು ರಥದಲ್ಲಿದ್ದ ಶತ್ರುಗಳ ಮೈ ಜೋಡನ್ನು ಒಡೆದು ತೂರಿ ನೆಲಕ್ಕೆ ನೆಟ್ಟವು. ಬಾಣಗಳು ಗುಳ ಸರಿದ ಕರಿಗಳ ಮೈಯನ್ನು ಕೊರೆದವು. ಬದ್ದರಗಳನ್ನು ತೂತು ಮಾಡಿದವು. ಕಾಲಾಳುಗಳ ಮೈಜೋಡುಗಳನ್ನು ರಭಸದಿಂದ ಭೇದಿಸಿದವು. ಈ ರೀತಿ ಅರ್ಜುನನ ಬಾಣಗಳು ಚತುರಂಗ ಸೇನೆಯನ್ನು ನೆಲಸಮ ಮಾಡಿದವು.
ಪದಾರ್ಥ (ಕ.ಗ.ಪ)
ಅಂಬು-ಬಾಣ, ಜೋಡು-ಮೈಕವಚ, ಬಾದಣ-ರಂಧ್ರ, ಈಡಿರಿದವು-ನಾಟಿದವು, ಜರಿವೊಡೆ-ಭೇದಿಸು, ತಳಪಟ ಮಾಡು-ನೆಲಸಮಮಾಡು
ಮೂಲ ...{Loading}...
ಜೋಡನೊಡೆಹಾಯ್ದಂಬು ಧರಣಿಯೊ
ಳಾಡಿದವು ಗುಳ ಸರಿದ ಕರಿಗಳ
ತೋಡಿ ನೆಟ್ಟವು ಬದ್ಧರಂಗಳ ಬಾದಣವ ಕೊರೆದು
ಈಡಿರಿದವರಿಸುಭಟರೊಡಲಿನ
ಜೋಡುಗಳ ಜರಿಯೊಡೆದು ತಳಪಟ
ಮಾಡಿದವು ಚತುರಂಗಬಲವನು ಪಾರ್ಥನಂಬುಗಳು ॥47॥
೦೪೮ ತಾರು ಥಟ್ಟಿಗೆ ...{Loading}...
ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಂಪು ಗುಂಪಾಗಿ ಆರು ಸಾವಿರ ಆನೆಗಳು ಬಿದ್ದೊರಗಿದವು. ಹದಿನೆಂಟು ಸಾವಿರ ಅಶ್ವದಳ ಪಡೆಯ ಪ್ರಾಣ ಸೂರೆಯಾಯಿತು. ಆ ಘೋರ ಯುದ್ಧದಲ್ಲಿ ಆರು ಲಕ್ಷ ಕಾಲ್ದಳದವರು ಕರುಳುಕಾರಿ ಸತ್ತರು. ಮೊದಲ ಧಾಳಿಗೇ ಮೂರು ಸಾವಿರ ರಥಗಳು ಒಂದೇ ನಿಮಿಷದಲಿ ಪುಡಿಪುಡಿಯಾದವು.
ಮೂಲ ...{Loading}...
ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ ॥48॥
೦೪೯ ಹೆಣನ ತುಳಿದೊತ್ತೊತ್ತೆಯಲಿ ...{Loading}...
ಹೆಣನ ತುಳಿದೊತ್ತೊತ್ತೆಯಲಿ ಸಂ
ದಣಿಸಿ ಕವಿದುದು ಮತ್ತೆ ದಳ ಭಾ
ರಣೆಯ ಬಿಂಕವನೇನನೆಂಬೆನು ಬಲಿದ ಲಗ್ಗೆಯಲಿ
ಕೆಣಕಿದವು ಕರಿಘಟೆಗಳೊಂದೆಸೆ
ಯಣುಕಿದವು ಹಯರಥವದೊಂದೆಸೆ
ಕಣೆಗೆದರಿ ಕಾಲಾಳದೊಂದೆಸೆ ಮುಸುಕಿತರ್ಜುನನ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ರಾಶಿರಾಶಿಯಾಗಿ ಬಿದ್ದ ಹೆಣಗಳನ್ನು ತುಳಿದುಕೊಂಡೇ ಒತ್ತರಿಸಿಕೊಳ್ಳುತ್ತಾ ಸೇನೆ ಗುಂಪು ಗುಂಪಾಗಿ ಮೇಲೆ ಬಿತ್ತು. ಹಾಗೆ ಮೇಲೆಬಿದ್ದು ನಡೆಸಿದ ಭಾರಿ ಧಾಳಿಯಲ್ಲಿ ದಳದ ಸಾಮಥ್ರ್ಯದ ಕೆಚ್ಚನ್ನು ಏನೆಂದು ಬಣ್ಣಿಸೋಣ ! ಒಂದು ಕಡೆ ಆನೆಗಳ ಸಮೂಹ ಪಾರ್ಥನನ್ನು ಕೆರಳಿಸಿದವು ಮತ್ತೊಂದೆಡೆ ರಥದ ಕುದುರೆಗಳು ಆವರಿಸಿದವು. ಮಗದೊಂದೆಡೆ ಕಾಲ್ದಳವು ಬಾಣಗಳನ್ನು ಎಸೆಯುತ್ತಾ ಅರ್ಜುನನನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಅಣುಕು-ಆಕ್ರಮಿಸು, ಮುಸುಕು-ಮುತ್ತು
ಮೂಲ ...{Loading}...
ಹೆಣನ ತುಳಿದೊತ್ತೊತ್ತೆಯಲಿ ಸಂ
ದಣಿಸಿ ಕವಿದುದು ಮತ್ತೆ ದಳ ಭಾ
ರಣೆಯ ಬಿಂಕವನೇನನೆಂಬೆನು ಬಲಿದ ಲಗ್ಗೆಯಲಿ
ಕೆಣಕಿದವು ಕರಿಘಟೆಗಳೊಂದೆಸೆ
ಯಣುಕಿದವು ಹಯರಥವದೊಂದೆಸೆ
ಕಣೆಗೆದರಿ ಕಾಲಾಳದೊಂದೆಸೆ ಮುಸುಕಿತರ್ಜುನನ ॥49॥
೦೫೦ ಸವೆದು ಸವೆಯದು ...{Loading}...
ಸವೆದು ಸವೆಯದು ಪೂತು ಮಝ ಕೌ
ರವನ ಸೇನಾಜಲಧಿ ನಾಯಕ
ನಿವಹವನಿತುವ ನೂಕಿ ಸವೆಯರು ಗುರುಸುತಾದಿಗಳು
ಕವಿಯಲೀ ಬಲ ಮತ್ತೆ ಸಂದಣಿ
ತವಕಿಸಲಿ ತಾವನಿಬರುರೆ ಮಗು
ಳವಗಡಿಸಲಿ ವಿನೋದವೈಸಲೆಯೆನುತ ನರನೆಚ್ಚ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ ! ಭಪ್ಪರೆ ! ಕೌರವನ ಸೇನಾ ಸಮೂಹ ಎಷ್ಟು ನಶಿಸಿದರೂ ಇನ್ನೂ ಅಪಾರವಾಗಿ ಉಳಿದಿದೆ. ಅಶ್ವತ್ಥಾಮ ಮೊದಲಾದವರು ಸೇನಾ ನಾಯಕ ಸಮೂಹವನ್ನು ನುಗ್ಗಿಸಿದರೂ ಸೇನೆ ನಾಶವಾಗಲಿಲ್ಲ. ಇನ್ನಷ್ಟು ಕೌರವ ಸೇನೆ ಮೇಲೆ ಬೀಳಲಿ; ಮತ್ತೆ ಗುಂಪುಗೂಡಿ ಉತ್ಸಾಹ ತೋರಲಿ ಅಷ್ಟೂ ಮಂದಿ ಚೆನ್ನಾಗಿ ಮತ್ತೆ ಮತ್ತೆ ಸಾಹಸದಿಂದ ಅಡ್ಡಗಟ್ಟಲಿ, ಚಿಂತೆಯಿಲ್ಲ ನನಗೆ ಅದೊಂದು ಸರಸದ ಆಟವೇ ಸೈ ! ಎನ್ನುತ್ತ ಅರ್ಜುನನು ಕೌರವ ಸೇನೆ ಮೇಲೆ ಬಾಣ ಪ್ರಹಾರ ಮಾಡತೊಡಗಿದನು.
ಪದಾರ್ಥ (ಕ.ಗ.ಪ)
ಸವೆ-ನಾಶವಾಗು,
ಮೂಲ ...{Loading}...
ಸವೆದು ಸವೆಯದು ಪೂತು ಮಝ ಕೌ
ರವನ ಸೇನಾಜಲಧಿ ನಾಯಕ
ನಿವಹವನಿತುವ ನೂಕಿ ಸವೆಯರು ಗುರುಸುತಾದಿಗಳು
ಕವಿಯಲೀ ಬಲ ಮತ್ತೆ ಸಂದಣಿ
ತವಕಿಸಲಿ ತಾವನಿಬರುರೆ ಮಗು
ಳವಗಡಿಸಲಿ ವಿನೋದವೈಸಲೆಯೆನುತ ನರನೆಚ್ಚ ॥50॥
೦೫೧ ಅಗಲದಲಿ ದಿಗುವಲಯವೀಯಂ ...{Loading}...
ಅಗಲದಲಿ ದಿಗುವಲಯವೀಯಂ
ಬುಗಳನೀದುದೊ ಮೇಣು ಬಾಣದ
ಮುಗಿಲ ಮೂಲೆಯ ಕೊಯಿದರೋ ಜರುಹಿದರೊ ಶರನಿಧಿಯ
ಝಗಝಗಿಸಿ ಹೊಳೆಹೊಳೆವ ಬಾಯ್ಧಾ
ರೆಗಳ ಬೆಳಗಿನ ದಾಳಿ ಧೀಂಕಿಡೆ
ಮೊಗೆದವರ್ಜುನನಂಬು ರಿಪುಚತುರಂಗ ಜೀವನವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕುಗಳ ಮಂಡಲ (ಪ್ರದೇಶವೆಲ್ಲ) ವಿಸ್ತಾರವಾಗಿ ಬಾಣಗಳನ್ನು ಪ್ರಸವಿಸಿತೋ ಅಥವಾ ಆಕಾಶದ ಮೋಡದ ಮೂಲೆಯನ್ನು ಕೊಯ್ದರೋ, ಸಾಗರವನ್ನೇ ಬೀಳಿಸಿದರೊ ? ಥಳಥಳನೆ ಕಾಂತಿ ಬೀರುವ ಬಾಣದ ಹರಿತವಾದ ಅಲಗುಗಳ ಬೆಳಕಿನ ಧಾಳಿ ಚಿಮ್ಮುತ್ತಿರಲು ಅರ್ಜುನನ ಬಾಣಗಳು ಶತ್ರು ಸೇನೆಯ ಚತುರಂಗ ಬಲದ ಜೀವ ಜಲವನ್ನು ಬಾಚಿ ಬಾಚಿ ಹಾಕಿದವು.
ಮೂಲ ...{Loading}...
ಅಗಲದಲಿ ದಿಗುವಲಯವೀಯಂ
ಬುಗಳನೀದುದೊ ಮೇಣು ಬಾಣದ
ಮುಗಿಲ ಮೂಲೆಯ ಕೊಯಿದರೋ ಜರುಹಿದರೊ ಶರನಿಧಿಯ
ಝಗಝಗಿಸಿ ಹೊಳೆಹೊಳೆವ ಬಾಯ್ಧಾ
ರೆಗಳ ಬೆಳಗಿನ ದಾಳಿ ಧೀಂಕಿಡೆ
ಮೊಗೆದವರ್ಜುನನಂಬು ರಿಪುಚತುರಂಗ ಜೀವನವ ॥51॥
೦೫೨ ಮತ್ತೆ ಮುರಿದನು ...{Loading}...
ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿತಾತನ ವಿಕ್ರಮಾಗ್ನಿಗೆ
ಹತ್ತು ಕೋಟಿ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಕೌರವನ ಸೇನೆಯಲ್ಲಿ ಹತ್ತು ಸಾವಿರ ಮದ್ದಾನೆಗಳನ್ನು ನಾಶಮಾಡಿದನು. ಹನ್ನೆರಡು ಸಾವಿರ ರಥ ಸಮೂಹಗಳನ್ನು ಪುಡಿಪುಡಿ ಮಾಡಿದನು. ರಣರಂಗದಲ್ಲಿ ಆತನ ರಣ ಸಾಹಸವೆಂಬ ಅಗ್ನಿಗೆ ಹತ್ತು ಕೋಟಿ ಕಾಲ್ದಳ ನಾಶವಾಯಿತು. ಲಕ್ಷರಾವುತರು ಪ್ರಾಣ ಬಿಟ್ಟರು.
ಮೂಲ ...{Loading}...
ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿತಾತನ ವಿಕ್ರಮಾಗ್ನಿಗೆ
ಹತ್ತು ಕೋಟಿ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ ॥52॥
೦೫೩ ತೀರಿತಡವಿಯ ಕಡಿತ ...{Loading}...
ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆಯಲ್ಲಿ ಅಡವಿಯ ನಾಶ ಮುಗಿಯಿತು. ಇನ್ನು ಬೆಟ್ಟಗಳಲ್ಲಿ ಹೋರಾಟಕ್ಕೆ ಪ್ರವೇಶಿಸಬೇಕು. ಸೇನೆಗೆ ಈಗಾಗಲೆ ಅಶ್ವತ್ಥಾಮ ಮೊದಲಾzವರ ಪಡೆಗಳಿಗೆ ಈಗಾಗಲೇ ಉಡುಗೊರೆ ಕೊಟ್ಟಿದ್ದಾಗಿದೆ. ಅವರಿಗೆ ಕರ್ತವ್ಯ ನಿರ್ವಹಣೆಗೆ ಸಮಯ ನೀಡಬೇಕು, ಗರ್ಜಿಸುತ್ತ ಮೇಲೆ ಬೀಳಿ. ಇನ್ನು ಹೊಗಳಿಕೆ ಏಕೆ ಬೇಕು ? ಈ ದೇಹದ ಬಗ್ಗೆ ಚಿಂತೆಬೇಡ ಎಂದು ಅರ್ಜುನನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಪಾರುಖಾಣೆ-ಉಡುಗೊರೆ , ಭಾರಣೆ-ಕರ್ತವ್ಯ ನಿರ್ವಹಣೆ, ಕೈವಾರ-ಹೊಗಳಿಕೆ, ಕಕ್ಕುಲಿತೆ-ಚಿಂತೆ
ಮೂಲ ...{Loading}...
ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ ॥53॥
೦೫೪ ಜೇನ ಹುಟ್ಟಿನ ...{Loading}...
ಜೇನ ಹುಟ್ಟಿನ ಹುಳುವ ಬಡಿದ ಸ
ಘಾನತನ ತಾನೇನು ಚೂಣಿಯ
ಸೇನೆಗೀನೆಯ ಸವರಲಾಯಿತೆ ಶೌರ್ಯಸಿರಿ ನಿನಗೆ
ನಾನದಾರೆಂದರಿಯೆ ಫಡ ಗುರು
ಸೂನುವಲ್ಲಾ ವೈರಿತಿಮಿರಕೆ
ಭಾನು ಬಗೆಯೈಯೆನುತ ಹೊಕ್ಕನು ದ್ರೋಣನಂದನನು ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನಾಲಿಸಿ ದ್ರೋಣ ಪುತ್ರನಾದ ಅಶ್ವತ್ಥಾಮ ಕೋಪವುಕ್ಕಿ ಮುನ್ನುಗ್ಗಿದನು. ಜೇನು ಹುಟ್ಟಿನ ಹುಳುವನ್ನು ಬಡಿಯುವುದು ದೊಡ್ಡತನವೇ? ಮುಂಚೂಣಿಯಲ್ಲಿದ್ದ ಸೇನೆಯನ್ನು ನಾಶಗೊಳಿಸಲಾಯಿತೆ ? ನಿನಗೆ ಶೌರ್ಯದ ಭಾಗ್ಯ ದಕ್ಕಿತೇನು ? ನಾನು ಅಶ್ವತ್ಥಾಮನೆಂಬುದು ನಿನಗೆ ತಿಳಿದಿಲ್ಲವೇ? ಶತ್ರುಗಳೆಂಬ ಕತ್ತಲೆಗೆ ನಾನು ಸೂರ್ಯನಿದ್ದಂತೆ ಅರಿತುಕೊ ಎನ್ನುತ್ತ ಅಶ್ವತ್ಥಾಮನು ಮುನ್ನುಗ್ಗಿದನು.
ಮೂಲ ...{Loading}...
ಜೇನ ಹುಟ್ಟಿನ ಹುಳುವ ಬಡಿದ ಸ
ಘಾನತನ ತಾನೇನು ಚೂಣಿಯ
ಸೇನೆಗೀನೆಯ ಸವರಲಾಯಿತೆ ಶೌರ್ಯಸಿರಿ ನಿನಗೆ
ನಾನದಾರೆಂದರಿಯೆ ಫಡ ಗುರು
ಸೂನುವಲ್ಲಾ ವೈರಿತಿಮಿರಕೆ
ಭಾನು ಬಗೆಯೈಯೆನುತ ಹೊಕ್ಕನು ದ್ರೋಣನಂದನನು ॥54॥
೦೫೫ ಬಳಿಯಲೊಡಗವಿಯಿತ್ತು ಚಾತು ...{Loading}...
ಬಳಿಯಲೊಡಗವಿಯಿತ್ತು ಚಾತು
ರ್ಬಲ ಸಹಿತ ದ್ರೋಣಾದಿಗಳು ತೋ
ರಳವ ಹಿಡಿ ಹಿಡಿ ಧನುವ ಸುರಿ ಸುರಿ ಸರಳ ಸರಿವಳೆಯ
ಗಳಹದಿರು ಮೈದೋರು ದಾನವ
ಕುಲದಿಶಾಪಟ ಸಹಿತ ನೀನೆಸು
ಕಳೆಯದಿರು ಕಾಲವನೆನುತ ಕವಿದೆಚ್ಚರತಿರಥರು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ಬೆಂಬಳಿಯಲ್ಲೇ ಚತುರಂಗ ಬಲಸಹಿತ ದ್ರೋಣಾದಿಗಳು ಕೂಡಲೆ ಮುತ್ತಿಗೆ ಹಾಕಿದರು. ಸಾಹಸವನ್ನು ಪ್ರದರ್ಶಿಸುವ ಬಿಲ್ಲನ್ನು ಹಿಡಿ! ಬಾಣಗಳ ಸುರಿಮಳೆಯನ್ನು ಸುರಿಸು! ಹರಟಬೇಡ, ಸಾಮಥ್ರ್ಯ ತೋರಿಸು! ದಾನವ ಕಾಲ ದಿಶಾಪಟನಾದ ಕೃಷ್ಣ ಸಹಿತ ನಮ್ಮನ್ನು ಎದುರಿಸು. ವೃಥಾ ಕಾಲಹರಣ ಮಾಡಬೇಡ. ಎಂಬುದಾಗಿ ಘೋಷಿಸುತ್ತಾ ಅತಿರಥರು ಮುನ್ನುಗ್ಗಿ ಬಾಣಗಳನ್ನು ಬಿಟ್ಟರು.
ಮೂಲ ...{Loading}...
ಬಳಿಯಲೊಡಗವಿಯಿತ್ತು ಚಾತು
ರ್ಬಲ ಸಹಿತ ದ್ರೋಣಾದಿಗಳು ತೋ
ರಳವ ಹಿಡಿ ಹಿಡಿ ಧನುವ ಸುರಿ ಸುರಿ ಸರಳ ಸರಿವಳೆಯ
ಗಳಹದಿರು ಮೈದೋರು ದಾನವ
ಕುಲದಿಶಾಪಟ ಸಹಿತ ನೀನೆಸು
ಕಳೆಯದಿರು ಕಾಲವನೆನುತ ಕವಿದೆಚ್ಚರತಿರಥರು ॥55॥
೦೫೬ ಗುರುಸುತನ ಕೂರಮ್ಬು ...{Loading}...
ಗುರುಸುತನ ಕೂರಂಬು ದ್ರೋಣನ
ಸರಳಸಾಗರ ಶಲ್ಯನಂಬಿನ
ಹೊರಳಿ ಶಕುನಿಯ ಬಾಣಪಂಜರ ಕೃಪನ ಶರಮೇಘ
ಕುರುಪತಿಯ ನಾರಾಚ ವರ ದು
ರ್ಧರುಷ ಸೈಂಧವ ಶಕುನಿ ಕೃತವ
ರ್ಮರ ಶರಾವಳಿ ಹೂಳಿದವು ದ್ಯಾವಾಮಹೀತಳವ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನ ಕ್ರೂರ ಬಾಣ, ದ್ರೋಣನ ಬಾಣಾವಳಿ, ಶಲ್ಯನ ಬಾಣ ಸಮೂಹ ಶಕುನಿಯ ಬಾಣ ಪಂಜರ, ಕೃಪನ ಶರವೃಂದ, ಕುರುಪತಿಯ ಬಾಣ, ಅಪ್ರತಿಮರಾದ ಸೈಂಧವ, ಕೃತವರ್ಮರ ಬಾಣ ಸಮೂಹ ಆಕಾಶ ಭೂಮಿಗಳನ್ನು ಆವರಿಸಿದವು.
ಪದಾರ್ಥ (ಕ.ಗ.ಪ)
ಗುರುಸುತ-ಅಶ್ವತ್ಥಾಮ, ಕೂರಂಬು-ತೀಕ್ಷ್ಣಬಾಣ, ನಾರಾಚ-ಬಾಣ, ಶರಾವಳಿ-ಬಾಣ ಸಮೂಹ, ದ್ಯಾವಾ-ಆಕಾಶ, ದುರ್ಧರುಷ-ಪ್ರತಿಭಟಿಸಲಾಗದ, ಅಪ್ರತಿಮ, ಹೂಳಿದವು-ಆವರಿಸಿದವು, ಮಹೀತಳ-ಭೂಮಿ
ಮೂಲ ...{Loading}...
ಗುರುಸುತನ ಕೂರಂಬು ದ್ರೋಣನ
ಸರಳಸಾಗರ ಶಲ್ಯನಂಬಿನ
ಹೊರಳಿ ಶಕುನಿಯ ಬಾಣಪಂಜರ ಕೃಪನ ಶರಮೇಘ
ಕುರುಪತಿಯ ನಾರಾಚ ವರ ದು
ರ್ಧರುಷ ಸೈಂಧವ ಶಕುನಿ ಕೃತವ
ರ್ಮರ ಶರಾವಳಿ ಹೂಳಿದವು ದ್ಯಾವಾಮಹೀತಳವ ॥56॥
೦೫೭ ಉರಿಯ ರಾಜ್ಯವ ...{Loading}...
ಉರಿಯ ರಾಜ್ಯವ ಸೂರೆಗೊಳಲೆನು
ತರಗು ಪರಿದವೊಲಾಯ್ತು ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರೆನಾಯ್ತು
ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು ಪಾರ್ಥನ
ಸರಳ ಸೀಮೆಯ ಬೆರಸಿದವು ರಿಪುಸುಭಟರಂಬುಗಳು ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಮೇಲೆ ಬಿದ್ದು, ಅರ್ಜುನನ ಮೇಲೆ ಬಾಣದ ಮಳೆ ಸುರಿಸಿದ್ದು ಉರಿಯ ರಾಜ್ಯವನ್ನು ಲೂಟಿ ಮಾಡುವೆನೆಂದು ಅರಗಿನ ಪರಿವಾರ ಹರಿದು ಹೋದಂತೆ ಆಯಿತು. ಮೋಡಗಳ ಸಮೂಹ ಗಾಳಿಯ ಮನೆಗೆ ಔತಣಕ್ಕೆ ಬಂದಂತೆ ಆಯಿತು. ಗಿರಿಯ ಮಕ್ಕಳು (ಪುಟ್ಟ ಬೆಟ್ಟಗಳು) ನಗುತ್ತಾ ವಜ್ರಾಯುಧ ಹಸ್ತಕ್ಕೆ ಪೆಟ್ಟು ಕೊಡಲು ಹೋದಂತೆ ಆಯಿತು. ಈ ರೀತಿಯಾಗಿ ಅರ್ಜುನನ ಬಾಣಗಳ ವ್ಯಾಪ್ತಿಯಲ್ಲಿ ಶತ್ರು ಸೈನಿಕರ ಬಾಣಗಳು ತಾಗಿದಂತಾಯಿತು.
ಪದಾರ್ಥ (ಕ.ಗ.ಪ)
ಬೆರಸು-ತಾಗು, ವಜ್ರದ ಕರ-ವಜ್ರಾಯುಧ, ಬಿದ್ದಿನ-ಔತಣ, ನೆರವಿ-ಸಮೂಹ
ಮೂಲ ...{Loading}...
ಉರಿಯ ರಾಜ್ಯವ ಸೂರೆಗೊಳಲೆನು
ತರಗು ಪರಿದವೊಲಾಯ್ತು ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರೆನಾಯ್ತು
ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು ಪಾರ್ಥನ
ಸರಳ ಸೀಮೆಯ ಬೆರಸಿದವು ರಿಪುಸುಭಟರಂಬುಗಳು ॥57॥
೦೫೮ ಸಹಜಕೀತನು ಚಾಪಧರ ...{Loading}...
ಸಹಜಕೀತನು ಚಾಪಧರ ಗುರು
ವಹುದು ಗುರುಗಳ ಮಗನೆ ಗುರುವೆಮ
ಗಹುದು ನೋಳ್ಪಡೆ ಶಿವಶಿವಾ ಕಲಿ ಶಲ್ಯ ಮಾವನಲೆ
ಮಹಿಮರಿವರೆಮ್ಮೊಡನೆಯೋದಿದ
ರಹರು ನಾವಿನ್ನಾರ ಕಳೆವೆವು
ಸಹಸ ಲೇಸೆಂದೆಚ್ಚನವರವರಸ್ತ್ರ ರಥ ಧನುವ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಜದಲ್ಲಿ ಈತನು ಬಿಲ್ಗಾರರಿಗೆಲ್ಲಾ ಗುರುವಾದವನು. ವಿಚಾರ ಮಾಡಿದರೆ, ಗುರು ಪುತ್ರನು ಗುರುವೆ ಆಗಿರುತ್ತಾನೆ ನಮಗೆ. ಶಿವ ಶಿವ ವೀರನಾದ ಶಲ್ಯನು ಮಾವನೆ ಆಗಿದ್ದಾನಲ್ಲಾ ! ಇವರೆಲ್ಲಾ ಶ್ರೇಷ್ಠರು ಆಗಿದ್ದಾರೆ ಇವರು ನಮ್ಮೊಂದಿಗೆ ಓದಿದ ಸಹಪಾಠಿಗಳಾದವರು. ನಾವು ಇನ್ನಾರನ್ನು ಕೊಲ್ಲಲು ಸಾಧ್ಯ ? ಸಾಹಸವೇ ಮೇಲು ಎಂದು ಅವರೆಲ್ಲರ ಅಸ್ತ್ರಗಳನ್ನು ರಥಗಳನ್ನು ಬಿಲ್ಲುಗಳನ್ನು ತನ್ನ ಬಾಣಗಳಿಂದ ನಾಶಮಾಡಿದನು.
ಪದಾರ್ಥ (ಕ.ಗ.ಪ)
ನೋಳ್ಪಡೆ-ವಿಚಾರ ಮಾಡಿದರೆ, ಸಹಜಕೆ-ನಿಜದಲ್ಲಿ, ಚಾಪಧರ-ಬಿಲ್ಗಾರ,
ಮೂಲ ...{Loading}...
ಸಹಜಕೀತನು ಚಾಪಧರ ಗುರು
ವಹುದು ಗುರುಗಳ ಮಗನೆ ಗುರುವೆಮ
ಗಹುದು ನೋಳ್ಪಡೆ ಶಿವಶಿವಾ ಕಲಿ ಶಲ್ಯ ಮಾವನಲೆ
ಮಹಿಮರಿವರೆಮ್ಮೊಡನೆಯೋದಿದ
ರಹರು ನಾವಿನ್ನಾರ ಕಳೆವೆವು
ಸಹಸ ಲೇಸೆಂದೆಚ್ಚನವರವರಸ್ತ್ರ ರಥ ಧನುವ ॥58॥
೦೫೯ ಮತ್ತೆ ಹೊಸ ...{Loading}...
ಮತ್ತೆ ಹೊಸ ರಥ ನೂತನಾಸ್ತ್ರದ
ಲುತ್ತಮ ಪ್ರತ್ಯುಗ್ರ ಚಾಪದ
ಲೊತ್ತರಿಸಿ ಕವಿದುದು ಕಿರೀಟಿಯ ರಥವ ಮುರಿಯೆಸುತ
ಮತ್ತೆ ಕಡಿದನು ರಥವ ಚಾಪವ
ಮತ್ತೆ ಹೊಸ ಹೂಟೆಯೊಳು ಹೊಕ್ಕರು
ತೆತ್ತು ಸವೆಯರು ಶೌರ್ಯದಭಿಮಾನವನು ಪಟುಭಟರು ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಹೊಸ ರಥದಲ್ಲಿ ಬಂದು ಮತ್ತೆ ನೂತನ ಅಸ್ತ್ರಗಳನ್ನು ಉತ್ತಮ ತೀಕ್ಷ್ಣತರ ಬಿಲ್ಲಿನಲ್ಲಿ ಅರ್ಜುನನ ರಥವನ್ನು ನಾಶ ಮಾಡಲು ಬಾಣಗಳಿಂದ ಆವರಿಸಿದರು. ಮತ್ತೆ ಅವರ ರಥ ಮತ್ತು ಬಿಲ್ಲನ್ನು ಅರ್ಜುನನು ಕತ್ತರಿಸಿದನು. ಪುನಃ ಅವರು ಹೊಸದಾದ ಉತ್ಸಾಹದಿಂದ ರಣರಂಗ ಪ್ರವೇಶಿಸಿದರು. ವೀರಯೋಧರು ಶೌರ್ಯ ಅಭಿಮಾನವನ್ನು ಮತ್ತೆ ಮತ್ತೆ ಪ್ರದರ್ಶಿದರು. ಅವರ ಶೌರ್ಯ ಕ್ಷೀಣಿಸಲಿಲ್ಲ.
ಪದಾರ್ಥ (ಕ.ಗ.ಪ)
ಹೂಟÉ-ತಯಾರಿ , ಕಿರೀಟಿ-ಅರ್ಜುನ, ಒತ್ತರಿಸಿ-ತಳ್ಳುತ್ತಾ,
ಮೂಲ ...{Loading}...
ಮತ್ತೆ ಹೊಸ ರಥ ನೂತನಾಸ್ತ್ರದ
ಲುತ್ತಮ ಪ್ರತ್ಯುಗ್ರ ಚಾಪದ
ಲೊತ್ತರಿಸಿ ಕವಿದುದು ಕಿರೀಟಿಯ ರಥವ ಮುರಿಯೆಸುತ
ಮತ್ತೆ ಕಡಿದನು ರಥವ ಚಾಪವ
ಮತ್ತೆ ಹೊಸ ಹೂಟೆಯೊಳು ಹೊಕ್ಕರು
ತೆತ್ತು ಸವೆಯರು ಶೌರ್ಯದಭಿಮಾನವನು ಪಟುಭಟರು ॥59॥
೦೬೦ ಸರಳ ಕವಿಸಿದರಿವರು ...{Loading}...
ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಬಾಣಗಳನ್ನು ಬಿಟ್ಟರು. ಪಾರ್ಥನು ಮತ್ತೆ ಅವುಗಳನ್ನೆಲ್ಲ ನಿವಾರಿಸಿದನು. ಪ್ರತಿ ವೀರರು ಆತನ ಸರಳುಗಳನ್ನು ತಡೆಗಟ್ಟಿ ಅರ್ಜುನನ ರಥವನ್ನು ಆವರಿಸಿದರು ಮತ್ತೆ ಅರ್ಜುನನು ಅವರ ಬಾಣಗಳನ್ನು ಒಟ್ಟಾಗಿ ನಾಶಮಾಡಿದನು. ದ್ರೋಣನ ಗುರುಸುತನ ಸೈಂಧವನ ಮಾದ್ರೇಶ್ವರನ, ಬಿಲ್ಲುಗಳನ್ನು ಕಡಿದು ಅವರ ದೇಹಗಳಲ್ಲಿ ಬಾಣಗಳನ್ನು ನಾಟಿದನು.
ಪದಾರ್ಥ (ಕ.ಗ.ಪ)
ಹೂಳು-ನಾಟು, ಸಂವರಿಸಿ-ತಡೆಗಟ್ಟಿ
ಮೂಲ ...{Loading}...
ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ ॥60॥
೦೬೧ ಘಾಯವಡೆದರು ಸುರಿವ ...{Loading}...
ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಡೆಯಲ್ಲಿ ಮುಖ್ಯರಾದ ಅಶ್ವತ್ಥಾಮಾದಿ ಶೂರರು ಅರ್ಜುನನು ಸುರಿಸುವ ಬಾಣಗಳಿಗೆ ಗಾಯ ಹೊಂದಿ ಹಿಂದಿರುಗಿದರು. ಮತ್ತೆ ಬಂದು ಯುದ್ಧ ಮಾಡಲು ಅವರಲ್ಲಿ ಧೈರ್ಯ ಉಳಿಯಲಿಲ್ಲ. ದೇಹ ಅಡಿಗಡಿಗೆ ಗಡಗಡನೆ ನಡುಗಿತು; ಹೆದರಿಕೆ ಹೆಪ್ಪುಗಟ್ಟಿತು. ಬಿರುದನ್ನು ಹೇಳಿಕೊಳ್ಳುವ ಬಾಯಿ ಮಾತು ಶೂನ್ಯವಾಯಿತು; ತಮ್ಮ ತಮ್ಮ ಮನೆಗಳಲ್ಲಿದ್ದ ಹೆಂಡತಿಯರನ್ನು ನೆನೆದರು; ಆದ್ದರಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಹೆದರಿದರು.
ಪದಾರ್ಥ (ಕ.ಗ.ಪ)
ಡೆಂಡಣಿಸಿ-ಗಡಗಡನೆ ನಡುಗಿ, ಕಾಯಗಟ್ಟಿತು-ಹೆಪ್ಪುಗಟ್ಟಿತು, ಬಾಯೆಣಿಕೆ-ಬಾಯಿ ಮಾತು, ಬಯಲಾಯ್ತು-ಶೂನ್ಯವಾಯಿತು, ಬೀಯಕೆ-ನಾಶಕ್ಕೆ
ಮೂಲ ...{Loading}...
ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ ॥61॥
೦೬೨ ದಿಟ್ಟತನ ಪೊಳ್ಳಾಯ್ತು ...{Loading}...
ದಿಟ್ಟತನ ಪೊಳ್ಳಾಯ್ತು ಶೌರ್ಯದ
ಘಟ್ಟಿ ಕರಗಿತು ಸುಭಟಧರ್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟು ಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳು ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಧೈರ್ಯವೆಲ್ಲ ಕಂಗೆಟ್ಟಿತು. ಶೌರ್ಯದ ಸತ್ತ್ವ ಕರಗಿತು. ಶ್ರೇಷ್ಠ ವೀರ ಧರ್ಮದ ಮಾರ್ಗವನ್ನು ಕೈಬಿಟ್ಟರು (ನಾಶಮಾಡಿದರು). ಇಹಪರಗಳೆರಡಕ್ಕೂ ತಪ್ಪಿತಸ್ಥರು ಆದರು, ಅವಮಾನ ಹಿರಿದಾಯಿತು. ಜಗಜಟ್ಟಿಗಳಾದ ಭಗದತ್ತ ಸೈಂಧವ, ಗುರುಸುತಾದಿಗಳನ್ನು ಒಳಗೊಂಡ ದುರ್ಯೋಧನನ ಸೇನೆ ವೇಗದಿಂದ ರಣರಂಗ ಬಿಟ್ಟು ತೆರಳಿತು.
ಮೂಲ ...{Loading}...
ದಿಟ್ಟತನ ಪೊಳ್ಳಾಯ್ತು ಶೌರ್ಯದ
ಘಟ್ಟಿ ಕರಗಿತು ಸುಭಟಧರ್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟು ಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳು ॥62॥
೦೬೩ ಉಲಿವ ಭಟ್ಟರ ...{Loading}...
ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತುವದೆನುತ ತಿರುಗಿದರು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ದುರ್ಯೋಧನನ ಕಡೆಯವರು ಹಿನ್ನಡೆಯುವಾಗ, ಹೊಗಳುವ ವಂದಿ ಮಾಗಧರ ಬಾಯ್ ಮುಚ್ಚಿಸಿರಿ. ಧ್ವಜ ಮತ್ತು ಕಂಬಗಳನ್ನು ರಥದೊಳಗೆ ಮಲಗಿಸಿ ಬಿಡಲಿ. ರಥನಡೆಸುವ ಸಾರಥಿಗಳು ಸ್ವಲ್ಪವೂ ಸದ್ದು ಮಾಡದಂತೆ ರಥವನ್ನು ನಡೆಸಿರಿ. ತಲೆಗೆ ಮುಸುಕು ಹಾಕಿಕೊಂಡು ಸಾಗಿ; ಕೊಡೆ ಚಾಮರಗಳನ್ನು ನೆಲಕ್ಕೆ ಎಸೆಯಿರಿ. ನಮ್ಮ ಹೆಸರು ಹೇಳುವವರನ್ನು ಉಳಿಸಬಾರದು ಅವರನ್ನು ಬೀಳ ಹೊಡಿಯಿರಿ, ಎಂದು ಆಜ್ಞೆ ಮಾಡುತ್ತಾ ಹೋಗುತ್ತಿದ್ದರು.
ಪದಾರ್ಥ (ಕ.ಗ.ಪ)
ಬೀಳಕುತ್ತುವುದು-ಹೊಡೆದು ಕೆಡವಿರಿ (ಬೀಳ ಹೊಡೆಯಿರಿ), ಉಲುಕದಂತಿರೆ-ಸದ್ದು ಮಾಡದ ಹಾಗೆ, ಸೂತ ಕುನ್ನಿಗಳು-ಸಾರಥಿಗಳು, ಬಾಯ್ಹೊಯ್-ಬಾಯಿ ಬಡಿಯಿರಿ
ಮೂಲ ...{Loading}...
ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತುವದೆನುತ ತಿರುಗಿದರು ॥63॥
೦೬೪ ಒಟ್ಟಿದವು ಕೈದುಗಳು ...{Loading}...
ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯ ಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಅರ್ಜುನನ ಬಾಣದಿಂದ ಸತ್ತ ಅರಸರ) ಆಯುಧಗಳು ರಾಶಿ ಬಿದ್ದವು. ಬೆಳ್ಗೊಡೆಗಳು ಬೆಟ್ಟದಷ್ಟು ರಾಶಿ ಬಿದ್ದವು. ಯುದ್ಧ ರಂಗದ ಮುಂಭಾಗದಲ್ಲಿ ಮಧ್ಯೆ ಧ್ವಜಗಳೂ ಧ್ವಜಸ್ತಂಭಗಳೂ ಕಾಡು ಮಲಗಿದ ತರಹ ಆಯಿತು. ಸಾಗರದ ಸಾಲು ಸಾಲಾದ ತೆರೆಗಳಂತೆ ಸೇನೆ ಕೂಡಲೆ ಹಿಂದಿರುಗ ತೊಡಗಿತು. “ರಾಯಘರಟ್ಟ” (ಹಗೆಯರಸರನ್ನು (ಬೀಸುವ ಕಲ್ಲು ಹಿಟ್ಟು ಮಾಡುವಂತೆ) ಪುಡಿ ಪುಡಿ ಮಾಡುವನು) ಎಂಬ ಬಿರುದಿನ ದುರ್ಯೋಧನ ಹಿಂದಿರುಗುತ್ತಿದ್ದ ತನ್ನ ಸಮಸ್ತ ಸೇನೆಯನ್ನು ಕಂಡನು.
ಪದಾರ್ಥ (ಕ.ಗ.ಪ)
ಸಿಂಧ ಮತ್ತು ಸೆಳೆ-ಧ್ವಜ ಮತ್ತು ಧ್ವಜ ಸ್ತಂಭ,
ಮೂಲ ...{Loading}...
ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯ ಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ ॥64॥
೦೬೫ ಹೊರಳಿಯೊಡೆದು ಮಹಾಪ್ರಧಾನರು ...{Loading}...
ಹೊರಳಿಯೊಡೆದು ಮಹಾಪ್ರಧಾನರು
ಮರಳಿದರಲಾ ಪೂತು ಮಝ ಧರ
ಧುರವ ಮಾಡಿದರೇಕೆ ಕರೆಕರೆ ಬಿರುದ ಬೆಸಗೊಂಬ
ಗುರುತನಯನೋ ಚಾಪವಿದ್ಯಾ
ಧರನೊ ಶಲ್ಯನೊ ಕೃಪನೊ ಶಕುನಿಯೊ
ವರಮಹಾರಥರಿದ್ದರೋಡುವರಲ್ಲ ದಿಟವೆಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಂಪು ಒಡೆದು ಮುಖ್ಯ ನಾಯಕರು ಹಿಂತಿರುಗಿದರಲ್ಲಾ ! ಪೂತು ಮಝ ! ಯುದ್ಧ ಮಾಡಿದ್ದು ಏಕೆ ? ಕರೆ ಕರೆ, ಅವರ ಬಿರುದಾವಳಿಗಳನ್ನು ಸ್ವಲ್ಪ ಕೇಳೋಣ ! ಅಶ್ವತ್ಥಾಮನೋ, ದ್ರೋಣನೋ, ಶಲ್ಯನೊ, ಕೃಪನೊ, ಶಕುನಿಯೊ ಯಾರೇ ಆಗಲಿ ಇವರೆಲ್ಲ ಮಹಾರಥರಷ್ಟೆ. ಅವರಿದ್ದರೆ ದಿಟವಾಗಿಯೂ ಓಡುವವರಲ್ಲ ಎಂಬುದು ನಿಜ ಎಂದ.
ಪದಾರ್ಥ (ಕ.ಗ.ಪ)
ಧರಧುರ-ಯುದ್ಧ, ಹೊರಳಿ-ಗುಂಪು, ಚಾಪ ವಿದ್ಯಾಧರ-ದ್ರೋಣ
ಮೂಲ ...{Loading}...
ಹೊರಳಿಯೊಡೆದು ಮಹಾಪ್ರಧಾನರು
ಮರಳಿದರಲಾ ಪೂತು ಮಝ ಧರ
ಧುರವ ಮಾಡಿದರೇಕೆ ಕರೆಕರೆ ಬಿರುದ ಬೆಸಗೊಂಬ
ಗುರುತನಯನೋ ಚಾಪವಿದ್ಯಾ
ಧರನೊ ಶಲ್ಯನೊ ಕೃಪನೊ ಶಕುನಿಯೊ
ವರಮಹಾರಥರಿದ್ದರೋಡುವರಲ್ಲ ದಿಟವೆಂದ ॥65॥
೦೬೬ ಹೊರೆದವನ ಕಾರ್ಯಾರ್ಥಲಾಭವ ...{Loading}...
ಹೊರೆದವನ ಕಾರ್ಯಾರ್ಥಲಾಭವ
ಸರಕುಮಾಡರು ಜಯ ವಧುವನೆ
ದ್ದೆರಗಿ ನೋಡರು ವಾರ್ತೆಗೆಯ್ಯರು ಮುಕ್ತಿವಧುವಿಂಗೆ
ಧರೆಯ ಪರಮಖ್ಯಾತಿ ಪೂಜೆಯ
ಸರಕು ಗಣಿಸರು ಶಿವಶಿವಾ ಸಂ
ಗರಕೆ ದ್ರೋಣಾದಿಗಳವೋಲು ವಿರಕ್ತರಾರೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ತಮ್ಮನ್ನು ಪೋಷಿಸಿದವರ ಕಾರ್ಯಾರ್ಥ ಲಾಭವನ್ನು ಪರಿಗಣಿಸುವವರಲ್ಲ. ಜಯದೇವಿಯನ್ನು ಎದ್ದು ನಮಿಸುವವರಲ್ಲ. ಮುಕ್ತಿ ವಧುವಿನ ಮಾತನ್ನೆ ಆಡರು. ಲೋಕದಲ್ಲಿನ ಶ್ರೇಷ್ಠವೆನಿಸಿದ ಕೀರ್ತಿ ಪೂಜೆಗಳನ್ನು ಪರಿಗಣಿಸುವವರಲ್ಲ. ಶಿವ ಶಿವಾ ಸಂಗ್ರಾಮಕ್ಕೆ ದ್ರೋಣಾದಿಗಳ ಹಾಗೆ ವಿರಕ್ತರು ಯಾರಿದ್ದಾರೆ ?
ಪದಾರ್ಥ (ಕ.ಗ.ಪ)
ಹೊರೆದವನ-ಪೋಷಿಸಿದವರ, ಸರಕು ಮಾಡರು-ಪರಿಗಣಿಸುವವರಲ್ಲ ಜಯವಧು-ಜಯಲಕ್ಷ್ಮಿ,
ಮೂಲ ...{Loading}...
ಹೊರೆದವನ ಕಾರ್ಯಾರ್ಥಲಾಭವ
ಸರಕುಮಾಡರು ಜಯ ವಧುವನೆ
ದ್ದೆರಗಿ ನೋಡರು ವಾರ್ತೆಗೆಯ್ಯರು ಮುಕ್ತಿವಧುವಿಂಗೆ
ಧರೆಯ ಪರಮಖ್ಯಾತಿ ಪೂಜೆಯ
ಸರಕು ಗಣಿಸರು ಶಿವಶಿವಾ ಸಂ
ಗರಕೆ ದ್ರೋಣಾದಿಗಳವೋಲು ವಿರಕ್ತರಾರೆಂದ ॥66॥
೦೬೭ ಆನೆಗಳು ಮರಳಿದವು ...{Loading}...
ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕ್ಕೆ ವಾಂಛಿತವ
ಈ ನಪುಂಸಕರುಗಳ ನಂಬಿದ
ನಾನು ನೀತಿಜ್ಞನೆ ಮಹಾ ದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಶಾಲಿಗಳಾದ ಆನೆಗಳು ಹಿಂದಿರುಗಿದವು. ಶೂರರಲ್ಲಿ ಮೇಲಾದ ಸೈನಿಕರು ಪಕ್ಕಕ್ಕೆ ಜಾರಿಕೊಂಡರು. ಹಾಹಾ ! ನಮ್ಮ ಕಡೆಯವರು ಕೇಳಿದ್ದನ್ನು ಕೊಡುವ ಕಾಮಧೇನುಗಳಲ್ಲವೇ ! ಶತ್ರುಸೇನೆ ಬಯಸಿದ್ದನ್ನು ಕೊಡುವವರಲ್ಲವೇ ! ಈ ಪೌರುಷ ಹೀನರನ್ನು ಅವಲಂಬಿಸಿದ ನಾನು ರಾಜ ನೀತಿ ತಿಳಿದವನೇ ? (ಅಲ್ಲ) ಅಯ್ಯೋ ಶಿವನೇ ! ಏನೆಂದು ಹೇಳಲಿ ಎಂಬುದಾಗಿ ದುಃಖಿಸುತ್ತ ಭೀಷ್ಮನ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಸುಭಟ ನಿಧಾನರು-ಶೂರರಲ್ಲಿ ಮೇಲಾದವರು, ವಾಂಛಿತ-ಬಯಸಿದ್ದು, ಇಷ್ಟಾರ್ಥ, ನಪುಂಸಕ-ಪೌರುಷ ಹೀನ, ನೀತಿಜ್ಞ-ರಾಜನೀತಿ ತಿಳಿದವನು,
ಮೂಲ ...{Loading}...
ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕ್ಕೆ ವಾಂಛಿತವ
ಈ ನಪುಂಸಕರುಗಳ ನಂಬಿದ
ನಾನು ನೀತಿಜ್ಞನೆ ಮಹಾ ದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ ॥67॥