೦೮

೦೦೦ ಬೆಗಡುಗೊಣ್ಡುದು ದ್ರೋಣ ...{Loading}...

ಬೆಗಡುಗೊಂಡುದು ದ್ರೋಣ ಶಲ್ಯಾ
ದಿಗಳು ಪಾರ್ಥನ ವಿಕ್ರಮಾನಲ
ಮೊಗೆದು ಸುರಿದುದು ಸಕಲ ಕೌರವಸೈನ್ಯ ಸಾಗರವ

೦೦೧ ಸೂಳು ಮಿಗಲಳ್ಳಿರಿದವುರು ...{Loading}...

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ ॥1॥

೦೦೨ ಲಳಿ ಮಸಗಿ ...{Loading}...

ಲಳಿ ಮಸಗಿ ಹನುಮಿಸುತ ಖುರದಲಿ
ನೆಲನ ಕೆರೆದವು ಕುದುರೆ ಬರಿಕೈ
ಯೊಲೆದು ಕಂಭವ ಕೊಂಡು ಮಿಕ್ಕವು ಸೊಕ್ಕಿದಾನೆಗಳು
ಹೊಳೆಹೊಳೆದು ಹೊಂದೇರು ಹರಿದವು
ತಳಪಟಕೆ ಹೊದರೆದ್ದು ಗಗನದ
ಹೊಲಿಗೆ ಬಿಡೆ ಬೊಬ್ಬಿರಿದು ಕವಿದುದು ವಿಗಡ ಪಾಯದಳ ॥2॥

೦೦೩ ಲಲಿತ ಮಙ್ಗಳ ...{Loading}...

ಲಲಿತ ಮಂಗಳ ಪಾಠಕರ ಕಳ
ಕಳಿಕೆಗುಪ್ಪವಡಿಸಿದನವನಿಪ
ತಿಲಕನನುಜರು ಸಹಿತ ವೈದಿಕ ಕ್ರಿಯೆಯನನುಕರಿಸಿ
ನಳಿನನಾಭನ ಮಧುರವಾಣೀ
ಲುಳಿತ ಪರಮಾಶೀರ್ವಚನ ಪರಿ
ಕಲಿತ ಕವಚಿತಕಾಯ ಪಾಂಡವರಾಯ ಹೊರವಂಟ ॥3॥

೦೦೪ ಗಗನ ಸರಸಿಯ ...{Loading}...

ಗಗನ ಸರಸಿಯ ಪುಂಡರೀಕಾ
ಳಿಗಳೊ ಧವಳಚ್ಛತ್ರ ಪಂಕ್ತಿಯೊ
ಗಗನ ಗಂಗೆಯ ಬಹಳ ಕಾಲುವೆಗಳೊ ಪತಾಕೆಗಳೊ
ಗಗನ ಕುಂಭಿಯ ಗುಳದ ಕೆಲ ಚೌ
ರಿಗಳೊ ಸೀಗುರಿಗಳೊ ಕೃಪಾಣವೊ
ಗಗನ ಪೀವರ ತಾಳಪತ್ರಾವಳಿಯೊ ಹೊಸತಾಯ್ತು ॥4॥

೦೦೫ ಉಬ್ಬಿದವು ಬೊಬ್ಬೆಗಳು ...{Loading}...

ಉಬ್ಬಿದವು ಬೊಬ್ಬೆಗಳು ಬಿಲುದನಿ
ಗಬ್ಬರಿಸಿದವು ನಭವ ಗಜ ಹಯ
ದಬ್ಬರಣೆ ಗರುವಾಯಿಗೆಡಿಸಿತು ಸಿಡಿಲ ಸಡಗರವ
ಕೊಬ್ಬಿ ಹರಿದುದು ವಿವಿಧ ವಾದ್ಯದ
ನಿಬ್ಬರದ ನಿಡುದನಿಯು ಜಲನಿಧಿ
ಗಬ್ಬವಿಕ್ಕಿತು ಸೈನ್ಯಜಲಧಿಯ ಬಹಳ ಗರ್ಜನೆಗೆ ॥5॥

೦೦೬ ಕುಣಿದು ಮುಞ್ಚಿತು ...{Loading}...

ಕುಣಿದು ಮುಂಚಿತು ಚೂಣಿ ಸಮರಾಂ
ಗಣದ ಕೇಳೀಬಾಲಕರು ಸಂ
ದಣಿಸಿ ಹೊಕ್ಕರು ಜಯವಧೂಟೀವಿರಹ ಕಾತರರು
ಗಣನೆಯಿಲ್ಲದ ಗಜಹಯದ ಭಾ
ರಣೆಯ ಭಾರಿಯ ಭಟರೊಡನೆ ಥ
ಟ್ಟಣೆಯ ಮೇಲೆ ಮಹೀಶ ಹೊಕ್ಕನು ಕಾಳೆಗದ ಕಳನ ॥6॥

೦೦೭ ಉದಯವಾಗದ ಮುನ್ನ ...{Loading}...

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು ॥7॥

೦೦೮ ಅರಸನುಪ್ಪವಡಿಸಿದನವನೀ ಶ್ವರ ...{Loading}...

ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸಂಧ್ಯಾಭಿವಂದನ
ವರಮಹೀಸುರವರ್ಗ ಸತ್ಕಾರವನು ನೆರೆ ಮಾಡಿ
ಸುರನದೀಜನ ಮನೆಗೆ ಬರಲಂ
ದಿರುಳ ಕಡೆಯಲಿ ನೃಪತಿಗಾ ವಿ
ಸ್ತರವ ವಿರಚಿಸಿ ಜೋಡ ತೊಟ್ಟನು ರಥದಿ ಮಂಡಿಸಿದ ॥8॥

೦೦೯ ಇನ್ದಲೇ ಪಾಣ್ಡವರ ...{Loading}...

ಇಂದಲೇ ಪಾಂಡವರ ಚಿತ್ತಾ
ನಂದಚಿತ್ರಕೆ ಧೂಮದರುಶನ
ವಿಂದಲೇ ಕೌಂತೇಯರಿಗೆ ಸುರಪುರದ ವೈಹಾಳಿ
ಇಂದಲೇ ಪವನಜನ ಪಾರ್ಥನ
ಸಂದ ವಿಕ್ರಮವಿಷಕೆ ಗಾರುಡ
ವೆಂದೆನುತ ಬೊಬ್ಬಿರಿದು ಕವಿದುದು ಸಕಲ ಕುರುಸೇನೆ ॥9॥

೦೧೦ ತರುಣ ರವಿಗಳ ...{Loading}...

ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ ॥10॥

೦೧೧ ವೀರ ಸೇನಾಪತಿಯ ...{Loading}...

ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ ॥11॥

೦೧೨ ಭುವನಗರ್ಭಿತವಾದುದಾ ಮಾ ...{Loading}...

ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ ॥12॥

೦೧೩ ಹೊಗರೊಗುವ ಝಳಪಿಸುವಡಾಯುಧ ...{Loading}...

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ ॥13॥

೦೧೪ ವಿತತ ವಾಜಿವ್ರಜದ ...{Loading}...

ವಿತತ ವಾಜಿವ್ರಜದ ಘನ ಹೇ
ಷಿತದ ಘಲ್ಲಣೆ ಗಜದಳದ ಬೃಂ
ಹಿತದ ಬಹಳಿಕೆ ರಥಚಯದ ಚೀತ್ಕೃತಿಯ ಚಪ್ಪರಣೆ
ನುತಪದಾತಿಯ ಗರ್ಜನೆ ಸಮು
ದ್ಧತ ಧನುಷ್ಟಂಕಾರ ರೌದ್ರಾ
ಯತ ಛಡಾಳಿಸಲೊಡ್ಡಿದರು ಮಂಡಳಿಸಿ ಮೋಹರವ ॥14॥

೦೧೫ ಚೂಣಿ ತಲೆಯೊತ್ತಿದುದು ...{Loading}...

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ದಾಡಿದರು ಘನ
ಶೋಣಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ ॥15॥

೦೧೬ ಕೋಡಕೈಗಳ ಭಟರಲಲಗೆಡೆ ...{Loading}...

ಕೋಡಕೈಗಳ ಭಟರಲಲಗೆಡೆ
ಯಾಡಿದವು ಹೆಗಲಡ್ಡವರಿಗೆಯ
ನೀಡಿ ಮೈಮಣಿದೌಕಿ ತಿವಿದಾಡಿದರು ಸಬಳಿಗರು
ಕೂಡೆ ತಲೆವರಿಗೆಗಳಲುರೆ ಕೈ
ಮಾಡಿದರು ಖಡ್ಗಿಗಳು ಥಟ್ಟಿನ
ಜೋಡು ಜರಿಯಲು ಹೊಕ್ಕು ಬೆರಸಿದವಾನೆ ಕುದುರೆಗಳು ॥16॥

೦೧೭ ಪಿರಿದು ಮೊನೆಗುತ್ತಿನಲಿ ...{Loading}...

ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ ॥17॥

೦೧೮ ಕಡಿದು ಚಿಮ್ಮಿದ ...{Loading}...

ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು ॥18॥

೦೧೯ ಕೊರಳ ತೆತ್ತುದು ...{Loading}...

ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ ॥19॥

೦೨೦ ತಳಿತ ಸತ್ತಿಗೆಗಳ ...{Loading}...

ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡುಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು ॥20॥

೦೨೧ ದೊದ್ದೆ ತೆಗೆಯಲಿ ...{Loading}...

ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು ॥21॥

೦೨೨ ಗುರುತನುಜ ವೃಷಸೇನ ...{Loading}...

ಗುರುತನುಜ ವೃಷಸೇನ ಮಾದ್ರೇ
ಶ್ವರ ಜಯದ್ರಥ ಶಕುನಿ ದುಸ್ಸಹ
ಗುರು ಸುಶರ್ಮ ವಿಕರ್ಣ ಭೂರಿಶ್ರವ ಸುಲೋಚನರು
ಧರಣಿಪತಿ ಭಗದತ್ತ ಯವನೇ
ಶ್ವರ ಕಳಿಂಗ ಸುಕೇತು ದುರ್ಜಯ
ದುರುಳ ದುಶ್ಶಾಸನನಲಂಬುಸರೈದಿದರು ರಣವ ॥22॥

೦೨೩ ಗೆದ್ದರೆಯು ಗೆಲವಿಲ್ಲ ...{Loading}...

ಗೆದ್ದರೆಯು ಗೆಲವಿಲ್ಲ ಹಾರುವ
ರುದ್ದುರುಟುತನಕೇನನೆಂಬೆನು
ಗದ್ದುಗೆಯ ಹೊರೆಗರಸ ಕರೆದರೆ ಭವವ ಮರೆದಿರಲ
ಹದ್ದು ಕಾಗೆಯ ಮನೆಯ ಬಾಣಸ
ವಿದ್ಯೆಯೆಮ್ಮದು ಯಮನ ನಿಳಯಕೆ
ಬಿದ್ದಿನರು ನೀವೆಂದೆನುತ ಕಲಿ ಮತ್ಸ್ಯನಿದಿರಾದ ॥23॥

೦೨೪ ನಕುಲ ಕುನ್ತೀಭೋಜಸುತ ...{Loading}...

ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು
ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ ॥24॥

೦೨೫ ಹಿಡಿದನಶ್ವತ್ಥಾಮ ದ್ರುಪದನ ...{Loading}...

ಹಿಡಿದನಶ್ವತ್ಥಾಮ ದ್ರುಪದನ
ಪಡೆಯೊಡನೆ ಬವರವನು ಕೃಪ ಮುಂ
ಗುಡಿಯೊಡನೆ ಹೊಕ್ಕಿರಿದು ತಡೆದನು ಸಾತ್ಯಕಿಯ ರಥವ
ಕಡುಹು ಮಿಗೆ ಕೈದೋರಿ ಪವನಜ
ನೊಡನೆ ಗುರು ಕಾದಿದನು ರಾಯನ
ನುಡಿಸಿ ಕೌರವರಾಯ ತಾಗಿದನಾಹವಾಗ್ರದಲಿ ॥25॥

೦೨೬ ಸೆಣಸು ಮಿಗಲಭಿಮನ್ಯು ...{Loading}...

ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಶಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಶರ್ಮ ತಾಗಿದನರಸ ಕೇಳ್ ಎಂದ ॥26॥

೦೨೭ ಬೆರಸಿ ಹೊಯ್ದರು ...{Loading}...

ಬೆರಸಿ ಹೊಯ್ದರು ತಿವಿದರೆಚ್ಚರು
ಹರೆಗಡಿದರರೆಗಡಿದರೆತ್ತಿದ
ರರೆದರಿಟ್ಟೊರಸಿದರು ತರಿದರು ತುಳುಕಿ ತೂರಿದರು
ಸರಳು ಸರಿಯಲು ಜೋಡು ಜರಿಯಲು
ತುರಗ ಧೂಪಿಸೆ ಸಾರಥಿಯ ಕೈ
ಹರಿಯೆ ಕಾದಿತು ವೀರ ನಾಯಕವಾಡಿ ಧೈರ್ಯದಲಿ ॥27॥

೦೨೮ ಕೆಲಬರಾಯುಧ ಮುರಿದು ...{Loading}...

ಕೆಲಬರಾಯುಧ ಮುರಿದು ಸಾರಥಿ
ಯಳಿದು ಕೆಲಬರು ರಥ ವಿಸಂಚಿಸಿ
ಕೆಲರು ಕೆಲಬರು ಬಳಲಿದರು ಪೂರಾಯ ಘಾಯದಲಿ
ಕೆಲರು ಜುಣುಗಿತು ಕಂಡ ಮುಖದಲಿ
ಕೆಲರು ಹರೆದರು ಕೈಮನದ ಕಡು
ಗಲಿಗಳಚ್ಚಾಳಾಗಿ ನಿಂದರು ಕೆಲರು ಕಾಳೆಗಕೆ ॥28॥

೦೨೯ ಏರ ಸೂರೆಯ ...{Loading}...

ಏರ ಸೂರೆಯ ಕಟ್ಟಿ ಹಿಂಗುವ
ಗಾರುತನ ತಾನೇನು ಸುಡು ಮುಂ
ಮಾರಿಗಳ ಮಾತೆತ್ತಲಡಸಿತು ಬಿರುದ ಸೈರಿಸುತ
ಆರಿಹೋಯಿತೆ ವೀರರಸ ತಲೆ
ದೋರ ಹೇಳಾ ರಣಕೆನುತ ಕೈ
ಮೀರಿ ಕವಿದರು ದ್ರುಪದ ಕೈಕಯ ಮತ್ಸ್ಯ ಸೃಂಜಯರು ॥29॥

೦೩೦ ಕಡುಹು ಮುರಿದುದು ...{Loading}...

ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಶಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ ॥30॥

೦೩೧ ಸಾಹಸಿಕರೈ ದ್ರುಪದರಿವದಿರ ...{Loading}...

ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ ॥31॥

೦೩೨ ಆವುದನ್ತರ ವನಕಳಭಕೈ ...{Loading}...

ಆವುದಂತರ ವನಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ ॥32॥

೦೩೩ ಒಗ್ಗೊಡೆದು ರಿಪುಸೇನೆ ...{Loading}...

ಒಗ್ಗೊಡೆದು ರಿಪುಸೇನೆ ಸರಿದುದು
ತಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಳೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ ॥33॥

೦೩೪ ರಣಕೆ ತವಕಿಸಿ ...{Loading}...

ರಣಕೆ ತವಕಿಸಿ ಬಳಿಕ ತಾಗುವ
ಕಣೆಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ ॥34॥

೦೩೫ ಹೋರಬೇಕೇ ದ್ರುಪದನಾನ ...{Loading}...

ಹೋರಬೇಕೇ ದ್ರುಪದನಾನ
ಲ್ಲಾರಯಿದು ಕಾದುವುದು ಚಾಪದ
ಚಾರುವಿದ್ಯೆಯ ನಿಮ್ಮೊಳರಿದುದ ನಿಮಗೆ ತೋರಿಸುವೆ
ಸೈರಿಸುವುದೀ ಬಾಲಭಾಷೆಗೆ
ವೈರಬಂಧವ ಬಿಡುವದೆನುತಾ
ಚಾರಿಯನ ರಥಹಯವ ಹೊದಿಸಿದನಸ್ತ್ರನಿಕರದಲಿ ॥35॥

೦೩೬ ಕವಿವ ಕಣೆಗಳ ...{Loading}...

ಕವಿವ ಕಣೆಗಳ ದಡ್ಡಿಗಳನೊಡೆ
ತಿವಿದು ತುಳುಕಿದನಂಬಿನಬುಧಿಯ
ನವಿರಳಾಸ್ತ್ರಾನೀಕ ಡಾವರಿಸಿದವು ದಿಗುತಟವ
ಅವನಿಯೋ ದಿಕ್ಕುಗಳೊ ಪಾರ್ಥನೊ
ರವಿಯ ಕಾಣೆನು ಭಾಪು ಕಲಶೋ
ದ್ಭವನ ಕೈಮೈಯೆನುತ ಬೆರಗಿನೊಳಿರ್ದುದಮರಗಣ ॥36॥

೦೩೭ ಈತನಸ್ತ್ರವ ಕಡಿದು ...{Loading}...

ಈತನಸ್ತ್ರವ ಕಡಿದು ಬಾಣ
ವ್ರಾತವನು ತೆರಳಿಚಿದನರ್ಜುನ
ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ
ಕೇತುವಾದವು ರವಿರಥಕೆ ಪುರು
ಹೂತನಾದವು ಗಿರಿಕುಳಕೆ ಕೈ
ಸೋತುವಿವ ತರಿದೊಟ್ಟಿ ಬಳಲಿದು ನಿಂದನಾ ದ್ರೋಣ ॥37॥

೦೩೮ ತ್ರಾಣ ಕೋಮಲವಾಯ್ತು ...{Loading}...

ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ ॥38॥

೦೩೯ ನರನೆ ಹೊಕ್ಕವನಾದಡಯ್ಯನ ...{Loading}...

ನರನೆ ಹೊಕ್ಕವನಾದಡಯ್ಯನ
ಹರಿಬವೆನ್ನದೆನುತ್ತ ಬಿಲುದಿರು
ಮೊರೆಯ ಮೋಹರಗಡಲ ಕವಿಸಿದನಂದು ಗುರುಸೂನು
ಗುರುಸುತನ ಬಳಿವಿಡಿದು ಕಡುಹಿನ
ಲುರವಣಿಸಿದರು ಶಕುನಿ ಯವನೇ
ಶ್ವರ ಕಳಿಂಗ ಸುಕೇತು ಭೂರಿಶ್ರವರು ಬಿಲುದುಡುಕಿ ॥39॥

೦೪೦ ಸಾಲ ಮಕುಟದ ...{Loading}...

ಸಾಲ ಮಕುಟದ ಮಾಣಿಕದ ಮಣಿ
ಮಾಲಿಕೆಯ ರಶ್ಮಿಗಳು ಸೂರ್ಯನ
ಸೋಲಿಸಲು ಸಮರವನು ಹೊಕ್ಕರು ಕುರುಹಿನತಿಬಳರು
ಕೋಲ ತೆಗಹಿನ ಕಿವಿಗಡಿಯ ಕ
ಣ್ಣಾಲಿಗಳ ಕೆಂಪುಗಳ ಹೊಗರು ಛ
ಡಾಳಿಸಲು ಬಲುಖತಿಯ ಸುಭಟರು ಹಳಚಿತರ್ಜುನನ ॥40॥

೦೪೧ ಏನ ಹೇಳುವೆನವರ ...{Loading}...

ಏನ ಹೇಳುವೆನವರ ಶರ ಸಂ
ಧಾನವನು ಕಲಿ ಪಾರ್ಥನನುಸಂ
ಧಾನವನು ಕೈಯೊಡನೆಯನಿಬರ ಕಣೆಯ ಖಂಡಿಸಿದ
ದಾನವಾಮರರೊಳಗೆ ಸುಭಟ ನಿ
ಧಾನವನು ಪಡಿಗಟ್ಟಬಾರದು
ಮಾನವರ ಮಾತೇತಕೆಂದನು ಸಂಜಯನು ನಗುತ ॥41॥

೦೪೨ ಹಿಳುಕು ಹಿಳುಕುಗಳಡಸಿ ...{Loading}...

ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ ॥42॥

೦೪೩ ಎಸುವನೊಬ್ಬನೆ ಪಾರ್ಥನನಿತುವ ...{Loading}...

ಎಸುವನೊಬ್ಬನೆ ಪಾರ್ಥನನಿತುವ
ಕುಸುರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ ॥43॥

೦೪೪ ಕೋಲ ಕೋಳಾಹಳಕೆ ...{Loading}...

ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಕೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು ॥44॥

೦೪೫ ಹರಿಬದಾಹವವೆಮ್ಬರಾವೆಡೆ ...{Loading}...

ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ ॥45॥

೦೪೬ ಒಗ್ಗಿ ಕವಿತಹ ...{Loading}...

ಒಗ್ಗಿ ಕವಿತಹ ತುರಗ ಸೇನೆಯ
ನಗ್ಗಡಲೊಳಿಕ್ಕಿದನು ಕರಿಗಳ
ಮೊಗ್ಗರವ ಮೆದೆಗೆಡಹಿದನು ಹುಡಿಮಾಡಿದನು ರಥವ
ಮುಗ್ಗಿ ಬೀಳುವ ಪಾಯದಳವನು
ನುಗ್ಗುನುಸಿಮಾಡಿದನು ರಕುತದ
ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ ॥46॥

೦೪೭ ಜೋಡನೊಡೆಹಾಯ್ದಮ್ಬು ಧರಣಿಯೊ ...{Loading}...

ಜೋಡನೊಡೆಹಾಯ್ದಂಬು ಧರಣಿಯೊ
ಳಾಡಿದವು ಗುಳ ಸರಿದ ಕರಿಗಳ
ತೋಡಿ ನೆಟ್ಟವು ಬದ್ಧರಂಗಳ ಬಾದಣವ ಕೊರೆದು
ಈಡಿರಿದವರಿಸುಭಟರೊಡಲಿನ
ಜೋಡುಗಳ ಜರಿಯೊಡೆದು ತಳಪಟ
ಮಾಡಿದವು ಚತುರಂಗಬಲವನು ಪಾರ್ಥನಂಬುಗಳು ॥47॥

೦೪೮ ತಾರು ಥಟ್ಟಿಗೆ ...{Loading}...

ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ ॥48॥

೦೪೯ ಹೆಣನ ತುಳಿದೊತ್ತೊತ್ತೆಯಲಿ ...{Loading}...

ಹೆಣನ ತುಳಿದೊತ್ತೊತ್ತೆಯಲಿ ಸಂ
ದಣಿಸಿ ಕವಿದುದು ಮತ್ತೆ ದಳ ಭಾ
ರಣೆಯ ಬಿಂಕವನೇನನೆಂಬೆನು ಬಲಿದ ಲಗ್ಗೆಯಲಿ
ಕೆಣಕಿದವು ಕರಿಘಟೆಗಳೊಂದೆಸೆ
ಯಣುಕಿದವು ಹಯರಥವದೊಂದೆಸೆ
ಕಣೆಗೆದರಿ ಕಾಲಾಳದೊಂದೆಸೆ ಮುಸುಕಿತರ್ಜುನನ ॥49॥

೦೫೦ ಸವೆದು ಸವೆಯದು ...{Loading}...

ಸವೆದು ಸವೆಯದು ಪೂತು ಮಝ ಕೌ
ರವನ ಸೇನಾಜಲಧಿ ನಾಯಕ
ನಿವಹವನಿತುವ ನೂಕಿ ಸವೆಯರು ಗುರುಸುತಾದಿಗಳು
ಕವಿಯಲೀ ಬಲ ಮತ್ತೆ ಸಂದಣಿ
ತವಕಿಸಲಿ ತಾವನಿಬರುರೆ ಮಗು
ಳವಗಡಿಸಲಿ ವಿನೋದವೈಸಲೆಯೆನುತ ನರನೆಚ್ಚ ॥50॥

೦೫೧ ಅಗಲದಲಿ ದಿಗುವಲಯವೀಯಂ ...{Loading}...

ಅಗಲದಲಿ ದಿಗುವಲಯವೀಯಂ
ಬುಗಳನೀದುದೊ ಮೇಣು ಬಾಣದ
ಮುಗಿಲ ಮೂಲೆಯ ಕೊಯಿದರೋ ಜರುಹಿದರೊ ಶರನಿಧಿಯ
ಝಗಝಗಿಸಿ ಹೊಳೆಹೊಳೆವ ಬಾಯ್ಧಾ
ರೆಗಳ ಬೆಳಗಿನ ದಾಳಿ ಧೀಂಕಿಡೆ
ಮೊಗೆದವರ್ಜುನನಂಬು ರಿಪುಚತುರಂಗ ಜೀವನವ ॥51॥

೦೫೨ ಮತ್ತೆ ಮುರಿದನು ...{Loading}...

ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿತಾತನ ವಿಕ್ರಮಾಗ್ನಿಗೆ
ಹತ್ತು ಕೋಟಿ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ ॥52॥

೦೫೩ ತೀರಿತಡವಿಯ ಕಡಿತ ...{Loading}...

ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ ॥53॥

೦೫೪ ಜೇನ ಹುಟ್ಟಿನ ...{Loading}...

ಜೇನ ಹುಟ್ಟಿನ ಹುಳುವ ಬಡಿದ ಸ
ಘಾನತನ ತಾನೇನು ಚೂಣಿಯ
ಸೇನೆಗೀನೆಯ ಸವರಲಾಯಿತೆ ಶೌರ್ಯಸಿರಿ ನಿನಗೆ
ನಾನದಾರೆಂದರಿಯೆ ಫಡ ಗುರು
ಸೂನುವಲ್ಲಾ ವೈರಿತಿಮಿರಕೆ
ಭಾನು ಬಗೆಯೈಯೆನುತ ಹೊಕ್ಕನು ದ್ರೋಣನಂದನನು ॥54॥

೦೫೫ ಬಳಿಯಲೊಡಗವಿಯಿತ್ತು ಚಾತು ...{Loading}...

ಬಳಿಯಲೊಡಗವಿಯಿತ್ತು ಚಾತು
ರ್ಬಲ ಸಹಿತ ದ್ರೋಣಾದಿಗಳು ತೋ
ರಳವ ಹಿಡಿ ಹಿಡಿ ಧನುವ ಸುರಿ ಸುರಿ ಸರಳ ಸರಿವಳೆಯ
ಗಳಹದಿರು ಮೈದೋರು ದಾನವ
ಕುಲದಿಶಾಪಟ ಸಹಿತ ನೀನೆಸು
ಕಳೆಯದಿರು ಕಾಲವನೆನುತ ಕವಿದೆಚ್ಚರತಿರಥರು ॥55॥

೦೫೬ ಗುರುಸುತನ ಕೂರಮ್ಬು ...{Loading}...

ಗುರುಸುತನ ಕೂರಂಬು ದ್ರೋಣನ
ಸರಳಸಾಗರ ಶಲ್ಯನಂಬಿನ
ಹೊರಳಿ ಶಕುನಿಯ ಬಾಣಪಂಜರ ಕೃಪನ ಶರಮೇಘ
ಕುರುಪತಿಯ ನಾರಾಚ ವರ ದು
ರ್ಧರುಷ ಸೈಂಧವ ಶಕುನಿ ಕೃತವ
ರ್ಮರ ಶರಾವಳಿ ಹೂಳಿದವು ದ್ಯಾವಾಮಹೀತಳವ ॥56॥

೦೫೭ ಉರಿಯ ರಾಜ್ಯವ ...{Loading}...

ಉರಿಯ ರಾಜ್ಯವ ಸೂರೆಗೊಳಲೆನು
ತರಗು ಪರಿದವೊಲಾಯ್ತು ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರೆನಾಯ್ತು
ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು ಪಾರ್ಥನ
ಸರಳ ಸೀಮೆಯ ಬೆರಸಿದವು ರಿಪುಸುಭಟರಂಬುಗಳು ॥57॥

೦೫೮ ಸಹಜಕೀತನು ಚಾಪಧರ ...{Loading}...

ಸಹಜಕೀತನು ಚಾಪಧರ ಗುರು
ವಹುದು ಗುರುಗಳ ಮಗನೆ ಗುರುವೆಮ
ಗಹುದು ನೋಳ್ಪಡೆ ಶಿವಶಿವಾ ಕಲಿ ಶಲ್ಯ ಮಾವನಲೆ
ಮಹಿಮರಿವರೆಮ್ಮೊಡನೆಯೋದಿದ
ರಹರು ನಾವಿನ್ನಾರ ಕಳೆವೆವು
ಸಹಸ ಲೇಸೆಂದೆಚ್ಚನವರವರಸ್ತ್ರ ರಥ ಧನುವ ॥58॥

೦೫೯ ಮತ್ತೆ ಹೊಸ ...{Loading}...

ಮತ್ತೆ ಹೊಸ ರಥ ನೂತನಾಸ್ತ್ರದ
ಲುತ್ತಮ ಪ್ರತ್ಯುಗ್ರ ಚಾಪದ
ಲೊತ್ತರಿಸಿ ಕವಿದುದು ಕಿರೀಟಿಯ ರಥವ ಮುರಿಯೆಸುತ
ಮತ್ತೆ ಕಡಿದನು ರಥವ ಚಾಪವ
ಮತ್ತೆ ಹೊಸ ಹೂಟೆಯೊಳು ಹೊಕ್ಕರು
ತೆತ್ತು ಸವೆಯರು ಶೌರ್ಯದಭಿಮಾನವನು ಪಟುಭಟರು ॥59॥

೦೬೦ ಸರಳ ಕವಿಸಿದರಿವರು ...{Loading}...

ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ ॥60॥

೦೬೧ ಘಾಯವಡೆದರು ಸುರಿವ ...{Loading}...

ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ ॥61॥

೦೬೨ ದಿಟ್ಟತನ ಪೊಳ್ಳಾಯ್ತು ...{Loading}...

ದಿಟ್ಟತನ ಪೊಳ್ಳಾಯ್ತು ಶೌರ್ಯದ
ಘಟ್ಟಿ ಕರಗಿತು ಸುಭಟಧರ್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟು ಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳು ॥62॥

೦೬೩ ಉಲಿವ ಭಟ್ಟರ ...{Loading}...

ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತುವದೆನುತ ತಿರುಗಿದರು ॥63॥

೦೬೪ ಒಟ್ಟಿದವು ಕೈದುಗಳು ...{Loading}...

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯ ಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ ॥64॥

೦೬೫ ಹೊರಳಿಯೊಡೆದು ಮಹಾಪ್ರಧಾನರು ...{Loading}...

ಹೊರಳಿಯೊಡೆದು ಮಹಾಪ್ರಧಾನರು
ಮರಳಿದರಲಾ ಪೂತು ಮಝ ಧರ
ಧುರವ ಮಾಡಿದರೇಕೆ ಕರೆಕರೆ ಬಿರುದ ಬೆಸಗೊಂಬ
ಗುರುತನಯನೋ ಚಾಪವಿದ್ಯಾ
ಧರನೊ ಶಲ್ಯನೊ ಕೃಪನೊ ಶಕುನಿಯೊ
ವರಮಹಾರಥರಿದ್ದರೋಡುವರಲ್ಲ ದಿಟವೆಂದ ॥65॥

೦೬೬ ಹೊರೆದವನ ಕಾರ್ಯಾರ್ಥಲಾಭವ ...{Loading}...

ಹೊರೆದವನ ಕಾರ್ಯಾರ್ಥಲಾಭವ
ಸರಕುಮಾಡರು ಜಯ ವಧುವನೆ
ದ್ದೆರಗಿ ನೋಡರು ವಾರ್ತೆಗೆಯ್ಯರು ಮುಕ್ತಿವಧುವಿಂಗೆ
ಧರೆಯ ಪರಮಖ್ಯಾತಿ ಪೂಜೆಯ
ಸರಕು ಗಣಿಸರು ಶಿವಶಿವಾ ಸಂ
ಗರಕೆ ದ್ರೋಣಾದಿಗಳವೋಲು ವಿರಕ್ತರಾರೆಂದ ॥66॥

೦೬೭ ಆನೆಗಳು ಮರಳಿದವು ...{Loading}...

ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕ್ಕೆ ವಾಂಛಿತವ
ಈ ನಪುಂಸಕರುಗಳ ನಂಬಿದ
ನಾನು ನೀತಿಜ್ಞನೆ ಮಹಾ ದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ ॥67॥

+೦೮ ...{Loading}...