೦೦೦ ಸೂ ರಾಯದನುಜಘರಟ್ಟನಮ್ಭೋ ...{Loading}...
ಸೂ. ರಾಯದನುಜಘರಟ್ಟನಂಭೋ
ಜಾಯತಾಕ್ಷನ ಖಾತಿಯನು ಗಾಂ
ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾಯದನುಜಘರಟ್ಟನೆಂಬ ಬಿರುದಿನ ಕಮಲಾಕ್ಷನಾದ ಶ್ರೀಕೃಷ್ಣನು ಕೋಪದಿಂದ ಸುದರ್ಶನ ಚಕ್ರವನ್ನು ಪ್ರಯೋಗಿಸಲು ಸಿದ್ಧನಾದಾಗ ಭೀಷ್ಮನು ಭಯಭಕ್ತಿಯಲ್ಲಿ ಅವನನ್ನು ಒಲಿಸಿದನು.
ಪದಾರ್ಥ (ಕ.ಗ.ಪ)
ರಾಯದನುಜಘರಟ್ಟ-ರಾಜರೆಂಬ ರಾಕ್ಷಸರನ್ನು ಪುಡಿ ಮಾಡುವಂತಹವನು.
ಮೂಲ ...{Loading}...
ಸೂ. ರಾಯದನುಜಘರಟ್ಟನಂಭೋ
ಜಾಯತಾಕ್ಷನ ಖಾತಿಯನು ಗಾಂ
ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನಕರನುದಯದಲಿ ಮುಂ
ಗಾಳೆಗದ ಗಾಢಾಭಿಲಾಷರು ಬಂದು ಕಣನೊಳಗೆ
ಮೇಲುನೆಲನರಿದಖಿಲ ಕುರುಭೂ
ಪಾಲನವರೊಡ್ಡಿದರು ಲಕ್ಷ್ಮೀ
ಲೋಲನಾಜ್ಞೆಯಲಿವರು ಬಲಿದರು ತಮ್ಮ ಮೋಹರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯಾ ಜನಮೇಜಯರಾಯನೇ ಮುಂದಿನ ಕಥೆ ಕೇಳು. ಮಾರನೆಯ ದಿನ ಸೂರ್ಯೋದಯವಾದ ಮೇಲೆ ಯುದ್ಧಕ್ಕೆ ತಾವು ಮೊದಲು ನುಗ್ಗಬೇಕು ಎಂಬ ಬಲವಾದ ಕುತೂಹಲವುಳ್ಳ ಕೌರವನ ಕಡೆಯ ಸೈನಿಕರು ಕಾಳೆಗದ ಬಯಲಿನಲ್ಲಿ ಬಂದು ಯುದ್ಧಕ್ಕೆ ಅನುಕೂಲವಾದ ಸ್ಥಳವನ್ನು ತಿಳಿದು ಇದಿರಾಗಿ ಹೋರಾಡಲು ಸಿದ್ಧರಾದರು. ಇತ್ತಕಡೆ ಪಾಂಡವರು, ಶ್ರೀಕೃಷ್ಣನ ಅಪ್ಪಣೆಯಂತೆ ತಮ್ಮ ಸೇನೆಯನ್ನು ಬಲವಾಗಿ ಅಣಿಮಾಡಿಕೊಂಡು ಯುದ್ಧಕ್ಕೆ ಸಿದ್ಧರಾದರು.
ಪದಾರ್ಥ (ಕ.ಗ.ಪ)
ಮುಂಗಾಳೆಗ-ಯುದ್ಧದ ಆರಂಭದಲ್ಲಿ ತಾ ಮುಂದು ನಾ ಮುಂದು ಎನ್ನುತ್ತ ನುಗ್ಗುವುದು, ಗಾಢಾಭಿಲಾಷರು-ತೀವ್ರ ಕುತೂಹಲಿಗಳು, ಮೇಲುನೆಲನ-ಉತ್ತಮನೆಲೆಯನ್ನು, ಮೋಹರ-ಸೇನೆ, ಒಡ್ಡಿದರು-ಹೋರಾಡಲು ಅಣಿಯಾದರು, ಬಲಿದರು-ಬಲವಾಗಿ ಸಿದ್ಧರಾದರು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನಕರನುದಯದಲಿ ಮುಂ
ಗಾಳೆಗದ ಗಾಢಾಭಿಲಾಷರು ಬಂದು ಕಣನೊಳಗೆ
ಮೇಲುನೆಲನರಿದಖಿಲ ಕುರುಭೂ
ಪಾಲನವರೊಡ್ಡಿದರು ಲಕ್ಷ್ಮೀ
ಲೋಲನಾಜ್ಞೆಯಲಿವರು ಬಲಿದರು ತಮ್ಮ ಮೋಹರವ ॥1॥
೦೦೨ ದಳವೆರಡು ದಳಪತಿಗಳಿಬ್ಬರ ...{Loading}...
ದಳವೆರಡು ದಳಪತಿಗಳಿಬ್ಬರ
ತಳಿತ ಸನ್ನೆಯ ಚೌರಿಯಲಿ ಬಿಡೆ
ಹಳಚಿದುದು ಹೊಯ್ದಾಡಿ ಬಿದ್ದುದು ಪಾಯದಳವಂದು
ತುಳಿದು ಹೊಕ್ಕವು ದಂತಿಘಟೆ ದಳ
ವುಳಿಸಿ ಹರಿದವು ತೇರುಗಳು ತೋಳ್
ಬಳಲೆ ಹೊಯ್ದಾಡಿದರು ರಾವುತರಸಮ ಸಮರದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಕೌರವ ಪಾಂಡವ ಸೇನೆಗಳ) ದಳವೆರಡೂ ಸಿದ್ಧವಾಗಿ ನಿಂತ ಮೇಲೆ ಎರಡೂ ಕಡೆಯ ಸೇನಾಧಿಪತಿಗಳು ಚಾಮರಗಳನ್ನು ಬೀಸಿ ಯುದ್ಧಕ್ಕೆ ಅಪ್ಪಣೆಯನ್ನು ಸಂಜ್ಞೆ ಮಾಡಿ ತೋರಲು, ಆಗ ಕಾಲಾಳು ಸೇನೆ ಮುನ್ನುಗ್ಗಿ ಮೇಲೆ ಬಿದ್ದು, ಹೊಡೆದಾಡಿ ಕೆಳಗೆ ಬಿದ್ದರು. ಆನೆ ಪರಿವಾರ ಮುನ್ನುಗ್ಗಿ ಸೈನಿಕರನ್ನು ತುಳಿದವು. ರಥಗಳು ಸೇನೆಯನ್ನು ತುಳಿದು ನುಗ್ಗಿದವು. ಕುದುರೆ ಸವಾರರು, ಆ ಘೋರ ಸಮರದಲ್ಲಿ, ತೋಳಿನ ಬಲ ಕುಂದುವವರೆಗೆ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಪಾಯದಳ-ಕಾಲ್ನಡಿಗೆ ಸೈನಿಕರು, ದಂತಿಘಟೆ-ಆನೆಗಳ ಗುಂಪು, ತೇರುಗಳು-ರಥಗಳು, ರಾವುತರು-ಕುದುರೆ ಸವಾರರು, ಹೊಯ್ದಾಡಿದರು-ಹೊಡೆದಾಡಿದರು.
ಮೂಲ ...{Loading}...
ದಳವೆರಡು ದಳಪತಿಗಳಿಬ್ಬರ
ತಳಿತ ಸನ್ನೆಯ ಚೌರಿಯಲಿ ಬಿಡೆ
ಹಳಚಿದುದು ಹೊಯ್ದಾಡಿ ಬಿದ್ದುದು ಪಾಯದಳವಂದು
ತುಳಿದು ಹೊಕ್ಕವು ದಂತಿಘಟೆ ದಳ
ವುಳಿಸಿ ಹರಿದವು ತೇರುಗಳು ತೋಳ್
ಬಳಲೆ ಹೊಯ್ದಾಡಿದರು ರಾವುತರಸಮ ಸಮರದಲಿ ॥2॥
೦೦೩ ಏನ ಹೇಳುವೆನುಭಯ ...{Loading}...
ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ-ಪಾಂಡವ ಸೇನೆಗಳಲ್ಲಿ ಕತ್ತರಿಸಿ ಬಿದ್ದ ಕಾಲಾಳು ಸಮೂಹವನ್ನು, ಮುಗ್ಗುರಿಸಿ ಅಲ್ಲಲ್ಲೆ ಬಿದ್ದುರುಳುತ್ತಿದ್ದ ಆನೆಗಳನ್ನು, ಗುಂಪುಗುಂಪಾಗಿ ಮುಗ್ಗಿರಿಸಿ ಬಿದ್ದ ರಥಗಳನ್ನು ಕುದುರೆಗಳನ್ನು, ಮಾನವರ ಕತ್ತರಿಸಿದ ಮಾಂಸಖಂಡ ರಾಶಿಯನ್ನು, ಪ್ರವಾಹವಾಗಿ ಹರಿಯುತ್ತಿದ್ದ ರಕ್ತಧಾರೆಗಳ ವಿಸ್ತಾರವಾದ ಸಾಗರವನ್ನು ಒಳಗೊಂಡ ಆ ಘೋರ ಸಮರವನ್ನು ಏನೆಂದು ವರ್ಣಿಸಲಿ ?
ಪದಾರ್ಥ (ಕ.ಗ.ಪ)
ಲೂನ-ಕತ್ತರಿಸಿದ, ಹೊದರೆದ್ದು ಮುಗಿದ-ಗುಂಪು ಗುಂಪಾಗಿ ಮುಗ್ಗರಿಸಿದ, ವಾಜಿ-ಕುದುರೆ, ದೊಂಡೆ-ರಾಶಿ, ರುಧಿರ-ರಕ್ತ, ಹರಹುಗಳ ಪೂರ-ಪ್ರವಾಹದ ಸಾಗರ, ವಿಗಡ ವಿಗ್ರಹ-ಘೋರಸಮರ
ಮೂಲ ...{Loading}...
ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ ॥3॥
೦೦೪ ಅಳಿದುದೆರಡರ ಚೂಣಿ ...{Loading}...
ಅಳಿದುದೆರಡರ ಚೂಣಿ ದೊರೆಗಳ
ಬಲಕೆ ಹೇಳಿಕೆಯಾಯ್ತು ಘನ ಸಂ
ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯೆ
ದಳವುಳಿಸಿದನು ಭೀಮ ಕೌರವ
ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ-ಪಾಂಡವ ಸೇನೆಗಳ ಮುಂಪಡೆ ನಾಶವಾಯಿತು. ದೊರೆಗಳ ಆಪ್ತ ಬಲಕ್ಕೆ ಸುದ್ದಿ ಹಬ್ಬಿತು. ಘೋರ ‘ಸಂಕುಲಯುದ್ಧ’ ದಲ್ಲಿ ಸಮರ್ಥರಾದವರು, ಹೋರಾಡಿ ಶತ್ರುಗಳನ್ನು ಕತ್ತರಿಸಿ ಎಸೆಯಲು ಅದನ್ನು ಕಂಡು ಭೀಮ ರಭಸದಿಂದ ಮುನ್ನುಗ್ಗಿದನು. ಕೌರವ ಸೇನೆಯನ್ನು ಹಿಂದಕ್ಕೆ ಅಟ್ಟಿ, ತನ್ನನ್ನು ಎದುರಿಸಿ ಹೋರಾಡಿದ ಶತ್ರುಸೇನಾ ವೀರರಿಗೆ ಇಂದ್ರಲೋಕದ ಸಿರಿಯನ್ನು ನೀಡಿದನು (ಕೊಂದನು).
ಪದಾರ್ಥ (ಕ.ಗ.ಪ)
ಚೂಣಿ-ಮುಂಪಡೆ, ಹೇಳಿಕೆ ಆಯ್ತು-ಸುದ್ದಿ ಹಬ್ಬಿತು, ದೊರೆಗಳ ಬಲಕೆ-ದೊರೆಗಳ ಆಪ್ತ ಬಲಕೆ, ಘನಸಂಕುಲಸುವಿಗ್ರಹ ಸಾಧನರು-ಘೋರ ಸಂಕುಲ ಯುದ್ಧ ನಿಪುಣರು, ಕೈಮಾಡಿ ಕಡಿವಡೆಯೆ-ಹೋರಾಡಿ ಸಾಯಿಸಲು, ದಳವುಳಿಸಿದನು-ರಭಸದಿಂದ ಮುನ್ನುಗ್ಗಿದದು, ಅಡ್ಡಬಿದ್ದ-ಪ್ರತಿಭಟಿಸಿದ,
ಟಿಪ್ಪನೀ (ಕ.ಗ.ಪ)
ಸಂಕುಲಯುದ್ಧ: ಯುದ್ಧರಂಗದಲ್ಲಿ ಅಂತಿಮವಾಗಿ ಆನೆಯ ಮೇಲೆ ರಾಜರು ಪರಸ್ಪರ ಎದುರಾಗುತ್ತಿದ್ದರು. ಸ್ವತಃ ಅರಸನು ಆನೆಯನ್ನೇರಿ ಹೋರಾಡಲು ತೊಡಗಿದನೆಂದರೆ ಯುದ್ಧ ನಿರ್ಣಾಯಕ ಹಂತದಲ್ಲಿದೆಯೆಂದು ಅರ್ಥ. ಇದು ಅಳಿವು ಉಳಿವಿನ ಕ್ಷಣವಾದ್ದರಿಂದ ಸೈನಿಕರು ಎದುರಾದವರನ್ನು ತಾಗುತ್ತಾರೆ. ಯುದ್ಧದ ನೀತಿ ನಿಯಮಗಳೆಲ್ಲವನ್ನು ಬದಿಗೊತ್ತಿ ಬಲ್ಲಿದರಾದವರು ಕೈಮಾಡಿ ರಿಪುಗಳನ್ನು ಕಡಿಯುತ್ತಾರೆ, ತಾವೂ ಕಡಿತಕ್ಕೆ ಒಳಗಾಗುತ್ತಾರೆ. ಈ ರೀತಿಯ ಯುದ್ಧವನ್ನು ಸಂಕುಲಸಮರ ಅಥವಾ ತುಮುಲಯುದ್ಧ ಎನ್ನುತ್ತಾರೆ.
ಮೂಲ ...{Loading}...
ಅಳಿದುದೆರಡರ ಚೂಣಿ ದೊರೆಗಳ
ಬಲಕೆ ಹೇಳಿಕೆಯಾಯ್ತು ಘನ ಸಂ
ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯೆ
ದಳವುಳಿಸಿದನು ಭೀಮ ಕೌರವ
ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ ॥4॥
೦೦೫ ಮುರಿದು ಬಹ ...{Loading}...
ಮುರಿದು ಬಹ ನಿಜಸೇನೆಗಭಯದ
ಸೆರಗ ಬೀಸುತ ಭೀಮಸೇನನ
ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ
ತೆರಹುಗೊಡವಂಬುಗಳು ಭೀಮಗೆ
ಬೆರಗು ಬಲಿದುದು ಹೊಕ್ಕು ಸಾತ್ಯಕಿ
ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮನು ಸೋತು ಹಿಮ್ಮೆಟ್ಟಿ ಬರುತ್ತಿದ್ದ ತನ್ನ ಸೈನಿಕರಿಗೆ ಧೈರ್ಯವನ್ನು ತುಂಬುತ್ತಾ ಭೀಮಸೇನನನ್ನು ತಡೆದನು. ಬಾಣಗಳ ಮಳೆ ಸುರಿಸಿ ಆಕಾಶವನ್ನು ಬಂಧಿಸಿದನು. ಭೀಷ್ಮನು ಬಿಟ್ಟ ಬಾಣಗಳು ಎಡಬಿಡದೆ ಬಂದವು. ಅದನ್ನು ಕಂಡು ಭೀಮನಿಗೆ ಭಯ ಹೆಚ್ಚಾಯಿತು. ಆಗ ಭೀಷ್ಮನ ಸೇನೆಯ ಒಳಗೆ ಸಾತ್ಯಕಿ ಪ್ರವೇಶಿಸಿ ಸೈನಿಕರನ್ನು ಕೊಂದು ಹದ್ದು ಮೊದಲಾದ ಆಕಾಶದಲ್ಲಿದ್ದ ಸಮಸ್ತ ಪಕ್ಷಿ ಸಂಕುಲಕ್ಕೆ ಔತಣವಿಕ್ಕಿದನು.
ಪದಾರ್ಥ (ಕ.ಗ.ಪ)
ಮುರಿದುಬಹ-ಸೋತು ಹಿಮ್ಮೆಟ್ಟಿಬರುವ, ಅಭಯದ ಸೆರಗು ಬೀಸು-ಧೈರ್ಯ ಹೇಳು, ತರುಬಿ-ಅಡ್ಡಗಟ್ಟಿ, ಬೆರಗು ಬಲಿದುದು-ಗಾಬರಿ ಹೆಚ್ಚಿತು.
ಮೂಲ ...{Loading}...
ಮುರಿದು ಬಹ ನಿಜಸೇನೆಗಭಯದ
ಸೆರಗ ಬೀಸುತ ಭೀಮಸೇನನ
ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ
ತೆರಹುಗೊಡವಂಬುಗಳು ಭೀಮಗೆ
ಬೆರಗು ಬಲಿದುದು ಹೊಕ್ಕು ಸಾತ್ಯಕಿ
ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ ॥5॥
೦೦೬ ಬಳಿಕ ಸಾತ್ಯಕಿ ...{Loading}...
ಬಳಿಕ ಸಾತ್ಯಕಿ ಭೀಷ್ಮರಿಗೆ ಬಲು
ಗಲಹ ಬಲಿದುದು ವಿಲಯ ರುದ್ರನ
ನಿಲವನೊಚ್ಚತಗೊಂಡ ಪರಬಲದೊಳಗೆ ಗಾಂಗೇಯ
ತಳಪಟವ ಮಾಡಿದನು ಭಾಷೆಯ
ಬಳಿಗೆ ಕೊಂದನು ಹತ್ತು ಸಾವಿರ
ನೆಲನ ವಲ್ಲಭರನು ಯುಧಿಷ್ಠಿರರಾಯ ಸೇನೆಯಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಭೀಷ್ಮರಿಗೆ ಮತ್ತು ಸಾತ್ಯಕಿಗೆ ಘೋರ ಸಮರ ಬಲವಾಯಿತು. ಭೀಷ್ಮನು ಪ್ರಳಯ ಕಾಲದಲ್ಲಿ ಈಶ್ವರನು ತಾಂಡವ ನೃತ್ಯ ಮಾಡುವ ರೀತಿಯಲ್ಲಿ ನಿಲವನ್ನು ತಳೆದನು. ಭೀಷ್ಮನು ಶತ್ರುಸೇನೆಯನ್ನು ಸವರಿ ಬಯಲು ಮಾಡಿದನು. ಕೊಟ್ಟ ಭಾಷೆಗೆ ಅನುಸಾರವಾಗಿ ಧರ್ಮಜನ ಸೈನ್ಯದಲ್ಲಿ ಹತ್ತು ಸಾವಿರ ರಾಜರನ್ನು ಕೊಂದನು.
ಪದಾರ್ಥ (ಕ.ಗ.ಪ)
ಭಾಷೆಯ ಬಳಿಗೆ-ಭಾಷೆಯ ಅನುಸಾರ , ನೆಲನ ವಲ್ಲಭ-ರಾಜ, ತಳಪಟ ಮಾಡು-ಸವರಿ ಬಯಲುಮಾಡಿ, ಬಚ್ಚತಗೊಳ್ಳು-ತಾಳಿಕೊ, ಬಲಿದುದು-ಬಲವಾಯಿತು.
ಮೂಲ ...{Loading}...
ಬಳಿಕ ಸಾತ್ಯಕಿ ಭೀಷ್ಮರಿಗೆ ಬಲು
ಗಲಹ ಬಲಿದುದು ವಿಲಯ ರುದ್ರನ
ನಿಲವನೊಚ್ಚತಗೊಂಡ ಪರಬಲದೊಳಗೆ ಗಾಂಗೇಯ
ತಳಪಟವ ಮಾಡಿದನು ಭಾಷೆಯ
ಬಳಿಗೆ ಕೊಂದನು ಹತ್ತು ಸಾವಿರ
ನೆಲನ ವಲ್ಲಭರನು ಯುಧಿಷ್ಠಿರರಾಯ ಸೇನೆಯಲಿ ॥6॥
೦೦೭ ಬೀಳಲವನೀಪತಿಗಳತಿ ಹೀ ...{Loading}...
ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗದವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಸೇನೆಯ ಕಡೆಯ ರಾಜರು ಸೋತು ಅವಮಾನಕ್ಕೆ ಒಳಗಾದಾಗ ಸಾತ್ಯಕಿ ಕೋಪಗೊಂಡು ಭೀಷ್ಮನ ಸಾರಥಿಯನ್ನು ಬಲವಾದ ಬಾಣಗಳಿಂದ ಘಾತಗೊಳಿಸಿದಾಗ ಕಾಳಗದ ಗೆಲವು ಪಾಂಡವರ ಪಾಲಾಯಿತು. ದುರ್ಯೋಧನನಿಗೆ ಸೋಲುಂಟಾಯಿತು. ಆ ವೇಳೆಗೆ ತನ್ನ ಕಾಂತಿಕಿರಣಗಳು ಪಶ್ಚಿಮ ಸಮುದ್ರಕ್ಕೆ ವಲಸೆ ಹೊರಟದ್ದರಿಂದ ಸೂರ್ಯನು ಪಶ್ಚಿಮ ಸಮುದ್ರಕ್ಕೆ ಇಳಿದನು. (ಬೆಳಕು ಕಂದಿ ಸೂರ್ಯ ಮುಳುಗಿದನು)
ಪದಾರ್ಥ (ಕ.ಗ.ಪ)
ಬಲುಗೋಲು-ಬಲವಾದ ಬಾಣ, ಅತಿಹೀಯಾಳಿ-ಅವಮಾನ, ಗೂಳೆಯ-ವಲಸೆಹೋಗು, ಇನ-ಸೂರ್ಯ
ಮೂಲ ...{Loading}...
ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗದವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ ॥7॥
೦೦೮ ದಿನವೆರಡು ಹಿನ್ದಾದುದಿದು ...{Loading}...
ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡುಗಳ ಗ
ರ್ಜನದಿ ಬಂದೊಡ್ಡಿದುವು ಕಳನೊಳು ಖತಿಯ ಪಡಪಿನಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಎರಡು ದಿನಗಳು ಕಳೆದವು. ಇದು ಮೂರನೆಯ ದಿವಸ. ಈ ದಿನದ ಘೋರ ಯುದ್ಧದ ರೀತಿಯ ವಿವರಗಳನ್ನು ದೊರೆ ಜನಮೇಜಯ ರಾಯನೇ ಕೇಳು. ಸೂರ್ಯನು ಉದಯಪರ್ವತದ (ಪೂರ್ವದಿಕ್ಕಿನ) ಓಲಗಶಾಲೆಗೆ ಬರಲು ಎರಡು ಕಡೆಯ ಸೇನೆಗಳು ಗಂಟಲು ಹರಿವಂತೆ ಗರ್ಜಿಸುತ್ತಾ ಅತ್ಯಾವೇಶದಲ್ಲಿ ರಣರಂಗದಲ್ಲಿ ಯುದ್ಧಕ್ಕೆ ಅಣಿಯಾದವು.
ಪದಾರ್ಥ (ಕ.ಗ.ಪ)
ಪಡಪು-ಆಧಿಕ್ಯ, ಚಾವಡಿ ಮನೆ-ಓಲಗ ಶಾಲೆ, ಗಳಗರ್ಜನ-ಗಂಟಲು ಹರಿವಂತೆ ಗರ್ಜಿಸುತ್ತ, ದಿನಪ-ಸೂರ್ಯ, .
ಮೂಲ ...{Loading}...
ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡುಗಳ ಗ
ರ್ಜನದಿ ಬಂದೊಡ್ಡಿದುವು ಕಳನೊಳು ಖತಿಯ ಪಡಪಿನಲಿ ॥8॥
೦೦೯ ಸೂಳು ಮಿಗಲಳ್ಳಿರಿವ ...{Loading}...
ಸೂಳು ಮಿಗಲಳ್ಳಿರಿವ ನಿಸ್ಸಾ
ಳೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ
ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊತ್ತು ಹೋಗುತ್ತಿರಲು ಎದೆಬಿರಿವ ಭೇರಿಗಳ ಸಮೂಹ, ತಮಟೆಗಳ, ಚಿಕ್ಕ ಕಹಳೆಗಳ, ಭಯಂಕರಶಬ್ದದ ದೊಡ್ಡ ಕಹಳೆಗಳ, ಅಧಿಕ ಶಬ್ದದ ಬಾಗಿದ ಕಹಳೆಗಳ ವಾದ್ಯ ನಲಿದಾಟದ ಧ್ವನಿ ಗಗನಕ್ಕೇರಲು, ಇವುಗಳೆಲ್ಲದರ ಗರ್ಜನೆಗಳು ಒಂದುಗೂಡಿದ ಘನಘೋರರವದ ತೀವ್ರತೆ ದಿಕ್ಕುಗಳನ್ನು ಭೇದಿಸಿದವು. (ಎಲ್ಲ ದಿಕ್ಕುಗಳಿಗೆ ಹಬ್ಬಿತು) ಎರಡೂ ಕಡೆಯ ಸೇನೆಗಳು ಸಿಡಿದೆದ್ದು ಒಂದಕ್ಕೊಂದು ಘರ್ಷಿಸಿ ಹೋರಾಡಿದವು.
ಪದಾರ್ಥ (ಕ.ಗ.ಪ)
ಅಳ್ಳಿರಿವ-ಎದೆಬಿರಿವ, ತಂಬಟ-ತಮಟೆ, ಕೊಂಬು-ಚಿಕ್ಕ ಕಹಳೆ, ಗಾಳುಗಜರಿನ-ಭಯಂಕರಶಬ್ದದ, ಬೊಗ್ಗು-ಬಾಗಿದ ಕಹಳೆ, ಮೇಳವಣೆ-ವಾದ್ಯಗಳ ನಲಿದಾಟ, ಘೋಳ ಘೋಷ-ಘನ ಘರ್ಜನೆ
ಮೂಲ ...{Loading}...
ಸೂಳು ಮಿಗಲಳ್ಳಿರಿವ ನಿಸ್ಸಾ
ಳೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ
ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ ॥9॥
೦೧೦ ಜೋಳವಾಳಿಯೊಳುಣ್ಡು ಮಾಡಿದ ...{Loading}...
ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ
ರಾಳು ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರಸ್ತ್ರೀ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ತಮ್ಮಲ್ಲಿ ಪ್ರತಿಯೊಬ್ಬರಿಗೂ ಉಡುಗೊರೆ, ಕಾಣಿಕೆಗಳನ್ನು. ಅನ್ನವನ್ನು ನೀಡಿ ತಮ್ಮ ಶರೀರವನ್ನು ಪೋಷಿಸಿ ತಮ್ಮನ್ನು ಸಮರಾಂಗಣಕ್ಕೆ ಕಳುಹಿದ ತಮ್ಮ ಒಡೆಯರ ಋಣವನ್ನು ಯುದ್ಧದಲ್ಲಿ ತಂತಮ್ಮ ತಲೆಗಳನ್ನು ಒಪ್ಪಿಸಿ ಪ್ರಾಣತೆತ್ತು ತೀರಿಸಿದರು. ಹೀಗೆ ಸತ್ತ ಶೂರರು ಅಸಂಖ್ಯಾತರಾಗಿದ್ದು ಯಮನಗರಿಯಲ್ಲಿ ಸ್ಥಳವಿಲ್ಲದಾಯಿತು. ಇನ್ನು ಅವರನ್ನು ವರಿಸುವ ಅಪ್ಸರೆ ಸ್ತ್ರೀ ಸಮೂಹ ಸಾಲದಾಯಿತು. ಆಕಾಶವು ಸ್ವರ್ಗಕೆ್ಕ ಹೋಗುತ್ತಿರುವ ಸೈನಿಕರ ಸಾಲಿನಿಂದ ಮುಚ್ಚಿಹೋಯಿತು. ಆಶ್ಚರ್ಯವೆನಿಸುವಂತೆ ಎರಡೂ ಕಡೆಯ ದಂಡುಗಳು ಹೊಡೆದಾಡಿದವು.
ಪದಾರ್ಥ (ಕ.ಗ.ಪ)
ಜೋಳವಾಳಿ-ಅನ್ನಋಣ, ನೆರೆಯದು-ಸಾಲದಾಯಿತು, ತಿದ್ದಿದರು-ತೀರಿಸಿದರು, ಅಡಗಿತು-ಮುಚ್ಚಿಹೋಯಿತು, ಐದದು-ಸ್ಥಳವಿಲ್ಲದಾಯಿತು, .
ಪಾಠಾನ್ತರ (ಕ.ಗ.ಪ)
ತಿದ್ದಿದ ರಾಳು (ಪಾ) ತಿದ್ದಿದರು + ಆಳು
ಟಿಪ್ಪನೀ (ಕ.ಗ.ಪ)
ಜೋಳವಾಳಿ-ಪುಲಿಗೆರೆಯ ತಿರುಳ್ಗನ್ನಡನಾಡಿನಲ್ಲಿ ಜೋಳ ಮುಖ್ಯ ಆಹಾರವಾಗಿತ್ತು. ಪಂಪಭಾರತದಲ್ಲಿ ಈ ಪದ ಬಳಕೆ ಆಗಿದೆ. ಒಡೆಯನ ಆಹರ ತಿಂದ ಹಂಗು, ಎಂಬರ್ಥದಲ್ಲಿ ಜೋಳವಾಳಿ ಪದ ಬಳಕೆ ಆಗಿದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಅನ್ನ ಋಣ ಎಂಬ ನುಡಿಗಟ್ಟನ್ನು ಇದಕ್ಕೆ ಪರ್ಯಾಯವಾಗಿ ಬಳಸುವ ಪರಿಪಾಠವಿದೆ.
ಮೂಲ ...{Loading}...
ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ
ರಾಳು ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರಸ್ತ್ರೀ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ ॥10॥
೦೧೧ ಬರಲಿ ಸಮರಕೆ ...{Loading}...
ಬರಲಿ ಸಮರಕೆ ಸಾತ್ಯಕಿಯ ನೀ
ಕರೆಯೆನುತ ಬಿಲುದುಡುಕಿ ರಥದಲಿ
ಸರಿಸತಾಳಧ್ವಜವನೆತ್ತಿಸಿ ಸಮರಥರ ನೆರಹಿ
ಸರಳ ತೂಗುತ ಮಾರುಬಲವನು
ತರುಬಿ ನಿಂದನು ಭೀಷ್ಮನಗ್ಗದ
ಬಿರುದ ಸಂಭಾವಿಸುತ ಪಾಠಕಕೋಟಿ ಗಡಬಡಿಸಿ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಲಿ ಯುದ್ಧಕ್ಕೆ, ಕರೆ ಸಾತ್ಯಕಿಯನ್ನು ಎನ್ನುತ್ತ ಭೀಷ್ಮನು ತಾಳ ಧ್ವಜವನ್ನು ರಥದ ಮುಂಭಾಗದಲ್ಲಿ ಎತ್ತಿ ಹಿಡಿಸಿ, ಸಮರಥರನ್ನು ತನ್ನ ಸುತ್ತ ಸೇರಿಸಿ ಕೊಂಡು ಪಾಠಕ ಕೋಟಿ (ವಂದಿಮಾಗಧರು) ಸಂಭ್ರಮದಿಂದ ಭೀಷ್ಮನ ಬಿರುದಾವಳಿಗಳನ್ನು ಹೊಗಳುತ್ತಿರಲು ಬಾಣಹೂಡುತ್ತಾ ಭೀಷ್ಮನು ಶತ್ರು ಸೇನೆಯನ್ನು ಅಟ್ಟಿ ನಿಂತನು.
ಪದಾರ್ಥ (ಕ.ಗ.ಪ)
ತಾಳಧ್ವಜ-ತಾಳವೃಕ್ಷದ ಸಂಕೇತವುಳ್ಳ ಧ್ವಜ-ಭೀಷ್ಮನದು, ಮಾರುಬಲ-ಶತ್ರುಸೇನೆ, ಸಂಭಾವಿಸುತ-ಉಗ್ಗಡಿಸುತ್ತ, ಗಡಬಡಿಸಿ-ಸಂಭ್ರಮದಿಂದ, ಅಗ್ಗದ-ಶ್ರೇಷ್ಠದ
ಟಿಪ್ಪನೀ (ಕ.ಗ.ಪ)
ಸಾತ್ಯಕಿ : ಯದುವಂಶದ ಶಿನಿರಾಜನ ಮಗನಾದ ಸತ್ಯಕನ ಮಗ. ಯುಯುಧಾನನಿಗೆ ಈ ಹೆಸರಿದೆ ಮರುತ್ತುಗಳ ಅಂಶದಿಂದ ಜನಿಸಿದನು ನಾಲ್ಕನೇ ಮತ್ತು 14ನೇ ದಿನ ಭೂರಿಶ್ರವನೊಂದಿಗೆ ಯುದ್ಧ ಮಾಡಿದನು ಈತನ ಹೆಂಡತಿ ಸರಸ್ವತಿ. ಶ್ರೀಕೃಷ್ಣಾರ್ಜುನರ ಶಿಷ್ಯ ಕೃತವರ್ಮನನ್ನು ಸೋಲಿಸಿ ಶಿರಚ್ಛೇದ ಮಾಡಿದನು.
ಮೂಲ ...{Loading}...
ಬರಲಿ ಸಮರಕೆ ಸಾತ್ಯಕಿಯ ನೀ
ಕರೆಯೆನುತ ಬಿಲುದುಡುಕಿ ರಥದಲಿ
ಸರಿಸತಾಳಧ್ವಜವನೆತ್ತಿಸಿ ಸಮರಥರ ನೆರಹಿ
ಸರಳ ತೂಗುತ ಮಾರುಬಲವನು
ತರುಬಿ ನಿಂದನು ಭೀಷ್ಮನಗ್ಗದ
ಬಿರುದ ಸಂಭಾವಿಸುತ ಪಾಠಕಕೋಟಿ ಗಡಬಡಿಸಿ ॥11॥
೦೧೨ ಕಾಲಯಮನೋ ಭೀಷ್ಮನೋ ...{Loading}...
ಕಾಲಯಮನೋ ಭೀಷ್ಮನೋ ಫಡ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ಯುದ್ಧಮಾಡುತ್ತಿರುವವನು ಪ್ರಳಯಕಾಲದ ರುದ್ರನೋ ಇಲ್ಲವೇ ಭೀಷ್ಮನೋ ಛೇ ! ತೆಗೆ, ಇವನೊಡನೆ ಸದರವೇ ? ಭಲೆ ! ಭೇಷ್ ! ರಣಮಾರಿಯ ಬಾಯಿಗೆ (ಅಂಗುಳಿಗೆ) ಆಹಾರವಾದೆವಲ್ಲಾ ! ಸಾವಕಾಶ ಏಕೆ ಇನ್ನು ಹಿಂದಿರುಗೋಣ ಎನ್ನುತ್ತ ವೀರಭಟರು ಹಿಂದಿರುಗಿದರು. ಯುದ್ಧ ಮಾಡುತ್ತಿದ್ದ ಮುಂಚೂಣಿಯ ರಾಜರು ಒಗ್ಗಟ್ಟು ತಪ್ಪಿ ಚದರಿ ಹಿನ್ನೆಲೆಯಲ್ಲಿದ್ದ ಮುಖ್ಯ ದೊರೆಗಳ ಮೇಲೆ ವೀರಾಧಿವೀರ ಭೀಷ್ಮನ ಹಿಂಸೆಯನ್ನು ಹರಿಯಬಿಟ್ಟರು.
ಪದಾರ್ಥ (ಕ.ಗ.ಪ)
ಫಡ-ಛೇ ತೆಗೆ, ಮಝ, ಭಾಪು-ಭಲೆ, ಭೇಷ್, ಮಾರಿಯ-ರಣಮಾರಿಯ, ತಾಳಿಗೆ-ಬಾಯಿ (ಅಂಗುಳ) ತುತ್ತಾದವೇ-ಬಲಿಯಾದವೇ, ಮೋಹರದ-ಯುದ್ಧದ, ಹುರಿಯೊಡೆದು-ಒಗ್ಗಟ್ಟು ತಪ್ಪಿ (ಹಿಮ್ಮೆಟ್ಟಿ), ಉಪಟಳ-ಹಿಂಸೆ, ಉಪದ್ರವ, ಬಿಸುಟರು-ಹರಿಯ ಬಿಟ್ಟರು
ಮೂಲ ...{Loading}...
ಕಾಲಯಮನೋ ಭೀಷ್ಮನೋ ಫಡ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ ॥12॥
೦೧೩ ಸೋಲ ಮಿಗಲೊಳಸರಿವ ...{Loading}...
ಸೋಲ ಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಚಂಡವಾದ ಸಿಟ್ಟಿನಿಂದ ಅತಿಭಯಂಕರ ವೀರನಾದ ಅರ್ಜುನನು, ಕಣ್ಣುಗುಡ್ಡೆಗಳಲ್ಲಿ ಕಿಡಿಗಳು (ಕೋಪೋದ್ರಿಕ್ತನಾಗಿ) ಹೊರಹೊಮ್ಮುತಿರಲು ಮೀಸೆಯನ್ನು ಮೇಲಕ್ಕೆ ಹುರಿಗೊಳಿಸುತ್ತ ತುಟಿಯನ್ನು ಕಡಿಯುತ್ತ, ಸೋಲು ಹೆಚ್ಚಾಗಲು ಒಳಗೆ ಅಡಗಿಕೊಳ್ಳುತ್ತಿದ್ದ ಕೌರವಸೇನೆಯ ಶೂರರನ್ನು ನೆಲದಲ್ಲಿ ಬೀಳುವಂತೆ ಉರುಳಿಸಿ, ಹನುಮಂತನು ಕುಳಿತಿದ್ದ ಬಾವುಟದ ಸ್ತಂಭವನ್ನು ರಥದಲ್ಲಿ ಎತ್ತರಕ್ಕೆ ನಿಲ್ಲಿಸಿ ಕೌರವನ ಅಕ್ಕಪಕ್ಕದಲ್ಲಿದ್ದ ಸಾಮಂತರಾಜರಿಗೆ ಯುದ್ಧಕ್ಕೆ ಮುಂದುವರೆಯುವಂತೆ ಭೀಷ್ಮನಿಗೆ ಇದಿರಾಗಿ ಬಂದು ನಿಂತನು.
ಪದಾರ್ಥ (ಕ.ಗ.ಪ)
ಆಲಿಯಲಿ ಕಿಡಿಸೂಸೆ-ಕಣ್ಣುಗಳಲ್ಲಿ ಕಿಡಿಕಾರಿ (ಕೋಪೋದ್ರಿಕ್ತನಾಗಿ) ಜಾಡುಗಟ್ಟಿ-ತುಟಿಕಟ್ಟಿ, ಬೀಳಗೆಡಹಿಸಿ-ನೆಲದಲ್ಲಿ ಬೀಳುವಂತೆ ಮಾಡಿ, ಕೈವೀಸಿ-ಸನ್ನೆ ಮಾಡಿ,
ಮೂಲ ...{Loading}...
ಸೋಲ ಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ ॥13॥
೦೧೪ ತೊಲತೊಲಗು ಕಲಿ ...{Loading}...
ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಲ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲ್ಕೆ ಕಲಿ ಪಾರ್ಥ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಭೀಷ್ಮನೇ ಹಿಂದಿರುಗು, ಹಿಂದಿರುಗು, ಶಕ್ತಿಗುಂದಿದ ಮುದುಕರಿಗೆ ಪ್ರಾಯದ ಶೂರರ ಸಂಗಡ ತಾರತಮ್ಯ ಎಷ್ಟೊಂದು ಇದೆ ಅಲ್ಲವೇ? ನೀನು ಮುದುಕ, ನಾನು ಹುಡುಗ. ಅಲ್ಪಶಕ್ತಿಯ ಸೈನಿಕರನ್ನು ಹೆದರಿಸಿದ ಸೊಕ್ಕು ಹೊಂದಿರುವೆ, ದೂರ ಸರಿ ಎಂದು ನುಡಿಯುತ್ತ ವೀರ ಅರ್ಜುನನು ಭೂಮಿ ಯಾವುದು ದಿಕ್ಕುಗಳು ಯಾವುವು, ಮತ್ತೆ ಆಕಾಶ ಎಲ್ಲಿದೆ ಎಂಬುದು ತಿಳಿಯದ ಹಾಗೆ ಎಲ್ಲ ಕಡೆ ಆವರಿಸುವಂತೆ ಕೆಂಗರಿಯ ಬಾಣಗಳ ಮಳೆ ಸುರಿಸಿದನು.
ಪದಾರ್ಥ (ಕ.ಗ.ಪ)
ಆವುದು ಅಂತರ-ವ್ಯತ್ಯಾಸವೇನು, ಅಳಿಬಲ-ಅಲ್ಪಬಲದ ಸೇನೆ, ಹೆಕ್ಕಳ-ಸೊಕ್ಕು, ಕೆಂಗೋಲು-ಕೆಂಪುಗರಿಯ ಬಾಣ
ಮೂಲ ...{Loading}...
ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಲ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲ್ಕೆ ಕಲಿ ಪಾರ್ಥ ॥14॥
೦೧೫ ಪೂತುರೇ ಕಲಿ ...{Loading}...
ಪೂತುರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ್ಮುಕ
ಭೂತನಾಥನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಆತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣ ಬೆರಗಾಗೆ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಹಭಾಷ್ ! ವೀರಾರ್ಜುನ ಭೂಮಿಯೆಲ್ಲಾ ಬಾಣ ಸಮೂಹದಿಂದ ತುಂಬಿ ಹೋಯಿತು. ಎಷ್ಟಾದರೂ ಬಿಲ್ಲು ವಿದ್ಯೆಯಲ್ಲಿ ಹರನಾಗಿರುವ ದ್ರೋಣಚಾರ್ಯನ ಬಿಲ್ವಿದ್ಯಶಾಲೆಯಲ್ಲಿ ಕಲಿತವನಲ್ಲವೇ ? ನೀನು ದ್ರೋಣ ಶಿಷ್ಯನೇ ಆಗಿದ್ದ ಪಕ್ಷದಲ್ಲಿ ಈ ನನ್ನ ಬಾಣ ವರ್ಷ ತಡೆದುಕೋ ಎಂದು ಹೇಳುತ್ತ ಆ ಭೀಷ್ಮನ ಮಾತು ಹಿಂದಾಯಿತು ಎನ್ನುವ ಮೊದಲೇ (ಅಷ್ಟು ಬೇಗನೆ). ಕಪಿಧ್ವಜನಾದ ಅರ್ಜುನನ ಬಾಣಗಳ ಸಮೂಹವನ್ನು ಕೃಷ್ಣನೇ ಬೆರಗಾಗುವ ಹಾಗೆ ತುಂಡು ಮಾಡಿ ಬಿಸಾಡಿದನು.
ಪದಾರ್ಥ (ಕ.ಗ.ಪ)
ಭೂತನಾಥ-ಈಶ್ವರ, ಗರುಡಿ-ಅಸ್ತ್ರವಿದ್ಯಾಶಾಲೆ, ವಿಶಿಖವ್ರಾತ-ಬಾಣ ಸಮೂಹ, ಆತುಕೇಳ್-ತಡೆದುಕೊ, ಕಪಿಕೇತನ-ಅರ್ಜುನ, ಶರಹತಿ-ಬಾಣಸಮೂಹ
ಮೂಲ ...{Loading}...
ಪೂತುರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ್ಮುಕ
ಭೂತನಾಥನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಆತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣ ಬೆರಗಾಗೆ ॥15॥
೦೧೬ ಆ ಸಮಯದೊಳು ...{Loading}...
ಆ ಸಮಯದೊಳು ರಣದೊಳೌಕಿದ
ರಾ ಸುಯೋಧನ ಶಲ್ಯ ಸಲೆ ದು
ಶ್ಯಾಸನನು ಕೃಪ ಶಕುನಿ ಗುರುಸುತರಾದಿಯಾದವರು
ಸೂಸಿದರು ಸರಳುಗಳನರ್ಜುನ
ಘಾಸಿಯಾದನು ವಿಲಯ ಮೇಘದ
ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹೊತ್ತಿನಲ್ಲಿ ದುರ್ಯೋಧನ, ಶಲ್ಯ, ದುಶ್ಶಾಸನ, ಕೃಪ, ವೀರ ಶಕುನಿ, ಅಶ್ವತ್ಥಾಮ ಮೊದಲಾಗಿ, ಯಾದವರೂ ರಣರಂಗದಲ್ಲಿ ನುಗ್ಗಿ ಬಾಣಗಳ ಮಳೆ ಸುರಿಸಿದರು. ಅರ್ಜುನ ಗಾಯಗೊಂಡನು. ಬಹುಕಾಲದಿಂದ ಮಳೆಯನ್ನು ಸುರಿಸದೆ ತಡೆಹಿಡಿದಿದ್ದ ಪ್ರಳಯಕಾಲದ ಮೋಡಗಳು ಒಂದೇ ಸಮನೆ ಮಳೆಯನ್ನು ಸುರಿಸಿದ ಹಾಗೆ ಬಾಣಗಳ ಸಮೂಹವು ಎಲ್ಲೆಡೆ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಔಕಿದರು-ನುಗ್ಗಿದರು, ಸೂಸಿದರು-ಸುರಿಸಿದರು, ಘಾಸಿಯಾದರು-ಗಾಯಗೊಂಡರು, ಮೋಹಿದುದು-ಆವರಿಸಿತು,
ಮೂಲ ...{Loading}...
ಆ ಸಮಯದೊಳು ರಣದೊಳೌಕಿದ
ರಾ ಸುಯೋಧನ ಶಲ್ಯ ಸಲೆ ದು
ಶ್ಯಾಸನನು ಕೃಪ ಶಕುನಿ ಗುರುಸುತರಾದಿಯಾದವರು
ಸೂಸಿದರು ಸರಳುಗಳನರ್ಜುನ
ಘಾಸಿಯಾದನು ವಿಲಯ ಮೇಘದ
ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ ॥16॥
೦೧೭ ಕುದುರೆ ಕಙ್ಗೆಟ್ಟವು ...{Loading}...
ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದು ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ತೇರಿನ ಕುದುರೆಗಳು ಮುಂಗಾಣದೆ ಹೋದವು ; ಶ್ರೀಕೃಷ್ಣನ ಎದೆ ನಡುಗಿತು. ರಥದ ಚಕ್ರಗಳು ಅಲ್ಲಾಡಿದವು ಧ್ವಜದ ಮೇಲಿದ್ದ ಹನುಮಂತನು ಧೈರ್ಯಗೆಟ್ಟನು. ಪಾಂಡವರ ಶೌರ್ಯ ನಶಿಸಿತು. ದೇವತೆಗಳು ಅರ್ಜುನನನ್ನು ವೀರಾಗ್ರೇಸರನೆಂದು ಅವನ ಕಡೆ ಒಲವು ತೋರಿದ್ದು ನಿಷ್ಪ್ರಯೋಜನವಾಯಿತೆಂದು ಚಿಂತಿಸಿ ಸಂತಾಪಗೊಂಡರು.
ಪದಾರ್ಥ (ಕ.ಗ.ಪ)
ಕಂಗೆಡು-ಮುಂಗಾಣದೆ ಹೋಗು, ಗರುವಾಯಿ-ಹೆಮ್ಮೆ, ಅದಟು-ಶೌರ್ಯ, ಮುರಿದುದು-ನಾಶವಾಯಿತು, ಸಂಚಲ-ನಡುಕ
ಮೂಲ ...{Loading}...
ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದು ॥17॥
೦೧೮ ತೆರಳುವನೆ ಬಿಲುಗಾರರಿಗೆ ...{Loading}...
ತೆರಳುವನೆ ಬಿಲುಗಾರರಿಗೆ ವರ
ಗುರುವಲಾ ಕಲಿ ಪಾರ್ಥನನಿಬರ
ಸರಳ ಕಡಿದನು ಕೃಪನನೆಚ್ಚನು ಗುರುಸುತನ ರಥವ
ಉರುಳೆಗಡಿದನು ಶಲ್ಯನನು ಹೇ
ವರಿಸಲೆಚ್ಚನು ಕೌರವನ ಹೇ
ರುರದಲಂಬನು ಹೂಳಿದನು ಸೀಳಿದನು ಸಮರಥರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರನಾದ ಅರ್ಜುನ ಘಾಸಿಯಾದ ಮಾತ್ರಕ್ಕೆ ರಣರಂಗಬಿಟ್ಟು ಸರಿವನೇ ? ಆತ ಬಿಲ್ವಿದ್ಯೆಯಲ್ಲಿ ಪರಿಣತರಾದವರಿಗೇ ಗುರುವಾದವನು. ಅವನು ಕೌರವರ ಕಡೆಯ ಅಷ್ಟು ಮಂದಿ ಶೂರರು ಬಿಟ್ಟ ಬಾಣಗಳನ್ನು ಕತ್ತರಿಸಿದನು. ಕೃಪನನ್ನು ಬಾಣಗಳಿಂದ ಗಾಯಗೊಳಿಸಿದನು. ಅಶ್ವತ್ಥಾಮನ ತೇರನ್ನು ಉರುಳಿ ಬೀಳುವಂತೆ ಕತ್ತರಿಸಿದನು. ಶಲ್ಯನನ್ನು ಹಿಂಜರಿಯುವಂತೆ ಬಾಣಬಿಟ್ಟನು. ದುರ್ಯೋಧನನ ವಿಶಾಲದೆದೆಯಲ್ಲಿ ಬಾಣವನ್ನು ನಾಟಿಸಿದನು. ಸಮರಥರೆಂದು ಪ್ರಸಿದ್ಧರಾದ ಶೂರರನ್ನು ಎರಡು ಭಾಗವಾಗುವಂತೆ ಕತ್ತರಿಸಿ ಎಸೆದನು.
ಪದಾರ್ಥ (ಕ.ಗ.ಪ)
ತೆರಳುವನೆ-ರಣರಂಗ ಬಿಟ್ಟು ಸರಿವನೆ, ಗುರುಸುತ-ಅಶ್ವತ್ಥಾಮ, ಹೇವರಿಸು-ಹಿಂಜರಿ, ಹೂಳಿದನು-ನಾಟಿಸಿದನು, ಹೇರುರ-ವಿಶಾಲವಾದ ಎದೆ
ಮೂಲ ...{Loading}...
ತೆರಳುವನೆ ಬಿಲುಗಾರರಿಗೆ ವರ
ಗುರುವಲಾ ಕಲಿ ಪಾರ್ಥನನಿಬರ
ಸರಳ ಕಡಿದನು ಕೃಪನನೆಚ್ಚನು ಗುರುಸುತನ ರಥವ
ಉರುಳೆಗಡಿದನು ಶಲ್ಯನನು ಹೇ
ವರಿಸಲೆಚ್ಚನು ಕೌರವನ ಹೇ
ರುರದಲಂಬನು ಹೂಳಿದನು ಸೀಳಿದನು ಸಮರಥರ ॥18॥
೦೧೯ ಏರುವಡೆದನು ಶಲ್ಯ ...{Loading}...
ಏರುವಡೆದನು ಶಲ್ಯ ರಕುತವ
ಕಾರಿದನು ದುಶ್ಯಾಸನನು ಕೈ
ಮೀರಿ ಕೈಕೊಂಡೆಚ್ಚು ನೊಂದನು ಮತ್ತೆ ಗುರುಸೂನು
ಹೇರಿದರು ಹಿಳುಕುಗಳ ಮೈಯಲಿ
ಜೋರು ಮಸಗಲು ಭೀಷ್ಮ ಕಡುಗಾ
ಹೇರಿದನು ರೋಷಾಗ್ನಿವಿಕಟಜ್ವಾಲೆಮುಖನಾದ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಗಾಯಗೊಂಡನು. ದುಶ್ಶಾಸನನು ರಕ್ತ ಕಕ್ಕಿದನು. ಅಶ್ವತ್ಥಾಮನು ತನ್ನ ಸಾಹಸವನ್ನು ಮೀರಿ ಅರ್ಜುನನ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ಒಡನೆಯೇ ಅರ್ಜುನನ ಬಾಣಗಳಿಂದ ಬಾಧೆಗೊಂಡನು. ಭೀಷ್ಮನ ಮೈಯಲ್ಲಿ ಬಾಣದ ತುದಿಗಳು ತುಂಬಿಕೊಂಡವು. ರಕ್ತದ ಧಾರೆ ಅಧಿಕವಾಗಿ ಸುರಿಯಲು ಭೀಷ್ಮ ವಿಪರೀತ ಕೋಪಗೊಂಡನು. ಕೋಪವೆಂಬ ಬೆಂಕಿಯ ಪ್ರಚಂಡವಾದ ಉರಿಯಿಂದ ಜ್ವಲಿಸುವ ಮುಖವುಳ್ಳವನು ಆದ.
ಪದಾರ್ಥ (ಕ.ಗ.ಪ)
ಕಾರು-ಕಕ್ಕು, ಹಿಳುಕು-ಬಾಣದ ತುದಿ, ಹೇರು-ತುಂಬು, ಜೋರು-ರಕ್ತದಧಾರೆ, ಗಾಹೇರು-ಕೋಪಗೊಳ್ಳು
ಮೂಲ ...{Loading}...
ಏರುವಡೆದನು ಶಲ್ಯ ರಕುತವ
ಕಾರಿದನು ದುಶ್ಯಾಸನನು ಕೈ
ಮೀರಿ ಕೈಕೊಂಡೆಚ್ಚು ನೊಂದನು ಮತ್ತೆ ಗುರುಸೂನು
ಹೇರಿದರು ಹಿಳುಕುಗಳ ಮೈಯಲಿ
ಜೋರು ಮಸಗಲು ಭೀಷ್ಮ ಕಡುಗಾ
ಹೇರಿದನು ರೋಷಾಗ್ನಿವಿಕಟಜ್ವಾಲೆಮುಖನಾದ ॥19॥
೦೨೦ ಮೊಗದ ಹೊಗರವಗಡಿಸೆ ...{Loading}...
ಮೊಗದ ಹೊಗರವಗಡಿಸೆ ಸುಯಿಲಲಿ
ಹೊಗೆಯ ಹೊದರಂಕುರಿಸೆ ಬಿಡುಗ
ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ
ತೆಗೆವೆನರ್ಜುನನಸುವನೆನುತಾ
ಳುಗಳ ದೇವನು ಭೀಷ್ಮನಡಿಗಡಿ
ಗೊಗುಮಿಗೆಯ ಕೋಪದಲಿ ಕೋದನು ಸರಳಿನಲಿ ನರನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಖದ ಕಾಂತಿ ಧಗಿಧಗಿಸಲು ಉಸಿರಿನಿಂದ ಹೊಗೆಯ ರಾಶಿ ಮೂಡಲು, ಅಗಲವಾಗಿ ಬಿಟ್ಟ ಕಣ್ಣುಗಳಿಂದ ಕೆಂಡಗಳು ಸುರಿಯಿತು (ಕೋಪಾಗ್ನಿ ಪ್ರಜ್ವಲಿಸಿತು). ಮುಖದಲ್ಲಿ ಕಾಣುತ್ತಿದ್ದ ಪ್ರೀತಿ ಕುಗ್ಗಿತು. ಅರ್ಜುನನ ಪ್ರಾಣವನ್ನು ತೆಗೆಯುತ್ತೇನೆ ಎನ್ನುತ್ತ ವೀರರ ಅಧಿಪತಿಯಾದ ಭೀಷ್ಮನು ಬಾರಿಬಾರಿಗೂ ಹೆಚ್ಚಿದ ಸಿಟ್ಟಿನಿಂದ ಅರ್ಜುನನ ಶರೀರದಲ್ಲಿ ಬಾಣಗಳನ್ನು ಪೋಣಿಸಿದನು.
ಮೂಲ ...{Loading}...
ಮೊಗದ ಹೊಗರವಗಡಿಸೆ ಸುಯಿಲಲಿ
ಹೊಗೆಯ ಹೊದರಂಕುರಿಸೆ ಬಿಡುಗ
ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ
ತೆಗೆವೆನರ್ಜುನನಸುವನೆನುತಾ
ಳುಗಳ ದೇವನು ಭೀಷ್ಮನಡಿಗಡಿ
ಗೊಗುಮಿಗೆಯ ಕೋಪದಲಿ ಕೋದನು ಸರಳಿನಲಿ ನರನ ॥20॥
೦೨೧ ನೊನ್ದು ಸೈರಿಸಿ ...{Loading}...
ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಭೀಷ್ಮನ ಬಾಣಗಳಿಂದ ನೋವನ್ನು ಹೊಂದಿ ಅದನ್ನು ಸಹಿಸಿಕೊಂಡು ಮತ್ತೆ ಬಾಣದ ಮಳೆಯನ್ನೇ ವಿಶೇಷವಾಗಿ ಸುರಿಸಿದನು. ಈಶ್ವರನು ಭಲೆ, ಭೇಷ್ ಎನ್ನುವಂತೆ ಶತ್ರುಗಳ ಮೇಲೆ ಬಾಣಗಳು ಹರಡಿಕೊಂಡವು. ಭೀಷ್ಮ ಅರ್ಜುನನ ಮುಂದೆ ನಿಲ್ಲಲು ಸಾಧ್ಯವಿಲ್ಲದೆ ತಳಮಳಗೊಂಡು ಮೆಲ್ಲನೆ ಪಕ್ಕಕ್ಕೆ ಜಾರಿಕೊಂಡ,ು ಇಂದ್ರನ ಮಗನಾದ ಅರ್ಜುನನ ಮೇಲೆ ಎಡೆಬಿಡದೆ ಸಿಟ್ಟಿನಿಂದ ಬಾಣಗಳನ್ನು ಬಿಡುತ್ತಾ ಬಂದನು.
ಪದಾರ್ಥ (ಕ.ಗ.ಪ)
ಸೈಗರೆ-ಸುರಿಸು, ಅಂಬು-ಬಾಣ, ವಿತಾಳಿಸಿ-ತಳಮಳಗೊಂಡು, ಕೆಲಸಿಡಿದು-ಪಕ್ಕಕ್ಕೆ ಸರಿದು, ಮುಳಿಸಿನಲಿ-ಕೋಪದಲ್ಲಿ, ಹರಿನಂದನ-ಇಂದ್ರ ಪುತ್ರ ಅರ್ಜುನ
ಮೂಲ ...{Loading}...
ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ ॥21॥
೦೨೨ ಎತ್ತಲೊಲೆದನದೆತ್ತ ಸರಿದನ ...{Loading}...
ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮುಖಕೆ ಬಿಡದೌಕಿದನು ಮುರವೈರಿ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಯಾವ ಕಡೆ ಚಲಿಸಿದನೋ, ಯಾವ ಕಡೆ ಸರಿದನೋ, ಅದಾವ ಕಡೆ ಜಾರಿಕೊಂಡನೋ, ಮತ್ತೆ ಎತ್ತ ಸಂಚರಿಸಿದನೊ, ಎತ್ತಕಡೆ ಅಡಗಿಕೊಂಡನೋ, ಎತ್ತಲು ನುಗ್ಗಿದನೋ, ಎತ್ತಕಡೆ ಉರವಣಿಸಿದನೋ ಆಯಾ ಕಡೆಗೆ ತೇರಿನ ಕುದುರೆಗಳನ್ನು ಬಿಡದೆ ನುಗ್ಗಿಸಿ, ಬೀದಿಗೆ ಮುಂದುವರೆಸಿ ಪಾರ್ಥನ ಅಜ್ಜನಾದ ಭೀಷ್ಮನ ಇದಿರಿಗೆ ತೇರನ್ನು ಬಿಡದೆ ನುಗ್ಗಿಸಿದನು.
ಪದಾರ್ಥ (ಕ.ಗ.ಪ)
ಹಿಂಗಿದನು-ಅಡಗಿದನು, ಸಮ್ಮುಖ-ಎದುರಿಗೆ, ಮುರವೈರಿ-ಕೃಷ್ಣ
ಮೂಲ ...{Loading}...
ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮುಖಕೆ ಬಿಡದೌಕಿದನು ಮುರವೈರಿ ॥22॥
೦೨೩ ಕೆರಳಿದನು ಕಲಿ ...{Loading}...
ಕೆರಳಿದನು ಕಲಿ ಭೀಷ್ಮನರ್ಜುನ
ನುರವಣೆಯ ಗೆಲುವರೆ ಮುರಾರಿಯ
ಭರವಸವ ತಗ್ಗಿಸಿದಡಲ್ಲದೆ ಕಾದಲರಿದೆನುತ
ಹರಿಯ ಸಿರಿಯೊಡಲಿನಲಿ ಸರಳಿನ
ಸರಿವಳೆಯ ಸೈಗರೆಯೆ ಜೋಡಿನ
ಸರಪಳಿಯಲಕ್ಕಾಡಿದವು ಕಲಿ ಭೀಷ್ಮನಂಬುಗಳು ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಭೀಷ್ಮನು ಸಿಟ್ಟುಗೊಂಡು, ಅರ್ಜುನನ ಪರಾಕ್ರಮದ ವಿಜೃಂಭಣೆಯನ್ನು ಗೆಲ್ಲಬೇಕಾದರೆ. ಶ್ರೀಕೃಷ್ಣನ ತೀವ್ರತೆ ಕುಗ್ಗಿಸಿದ ಹೊರತು ಅರ್ಜುನನೊಡನೆ ಯುದ್ಧ ಮಾಡುವುದು ಅಸಾಧ್ಯ ಎಂದು ಯೋಚಿಸುತ್ತಾ. ಶ್ರೀಕೃಷ್ಣನ ಮಂಗಳಕರವಾದ ಮೈಯಲ್ಲಿ ಬಾಣಗಳ ಜಡಿಮಳೆಯನ್ನು ಎಡೆಬಿಡದೆ ಸುರಿಸಲು, ಕಲಿಭೀಷ್ಮನ ಬಾಣಗಳು ಶ್ರೀಕೃಷ್ಣನ ಕಬ್ಬಿಣದ ಸರಪಳಿಯ ಅಂಗಿಯನ್ನು ಭೇದಿಸಿ ದೇಹದಲ್ಲಿ ನಾಟಿದವು.
ಪದಾರ್ಥ (ಕ.ಗ.ಪ)
ಉರವಣೆ-ವಿಜೃಂಭಣೆ, ಸರಿವಳೆ-ಸುರಿಮಳೆ, ಜೋಡಿನ ಸರಪಳಿ-ಕಬ್ಬಿಣದ ಸರಪಳಿಯಿಂದ ಮಾಡಿದ ಅಂಗಿ, ಅಕ್ಕಾಡಿದವು-ನಾಟಿದವು (ಅಳ್ಕಾಡಿದವು-ಪೂರ್ಣ ನಾಶವಾಯಿತು)
ಮೂಲ ...{Loading}...
ಕೆರಳಿದನು ಕಲಿ ಭೀಷ್ಮನರ್ಜುನ
ನುರವಣೆಯ ಗೆಲುವರೆ ಮುರಾರಿಯ
ಭರವಸವ ತಗ್ಗಿಸಿದಡಲ್ಲದೆ ಕಾದಲರಿದೆನುತ
ಹರಿಯ ಸಿರಿಯೊಡಲಿನಲಿ ಸರಳಿನ
ಸರಿವಳೆಯ ಸೈಗರೆಯೆ ಜೋಡಿನ
ಸರಪಳಿಯಲಕ್ಕಾಡಿದವು ಕಲಿ ಭೀಷ್ಮನಂಬುಗಳು ॥23॥
೦೨೪ ಮತ್ತೆ ರಥವನು ...{Loading}...
ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಭೀಷ್ಮನ ಬಾಣದ ಮಳೆಯನ್ನು ಲಕ್ಷಿಸದೆ ಮತ್ತೆ ಅರ್ಜುನನ ರಥವನ್ನು ಮುಂದಕ್ಕೆ ನಡೆಸಿ ಭೀಷ್ಮನ ಹತ್ತಿರಕ್ಕೆ ಬರಲು, ಕಷ್ಟ ! ಕಷ್ಟ ಬಹಳ ಹತ್ತಿರದಲ್ಲಿ ಅಜ್ಜನಾದ ಭೀಷ್ಮನು ಅರ್ಜುನನ ಕೈಲಿ ಸಿಕ್ಕಿಬಿದ್ದನು ಶಿವಶಿವಾ ! ಎಂಬುದಾಗಿ ಕೌರವನ ಸೇನೆ ಹೆದರಲು, ಆ ಸಂದರ್ಭದಲ್ಲಿ ಭೀಷ್ಮನು ಮತ್ತೆ ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಆವರಿಸಿದನು. ತನ್ನ ಗುರುವೂ ಶೂರನೂ ಆದ ಅತಿಶಯಗುಣದ ಪರಶುರಾಮನು ನೀಡಿದ್ದ ಬಾಣವನ್ನು ಬಿಲ್ಲಿನಲ್ಲಿ ಹೂಡಿ ಶ್ರೀಕೃಷ್ಣನ ಹಣೆಗೆ ನಾಟಿಸಿದನು.
ಪದಾರ್ಥ (ಕ.ಗ.ಪ)
ಕಟ್ಟಳವಿಯಲ್ಲಿ - ಬಹಳ ಹತ್ತಿರದಲ್ಲಿ, ಸಿಲುಕಿದನು-ಸಿಕ್ಕಿ ಬಿದ್ದನು, ಮುಸುಕಿದ-ಆವರಿಸಿದನು, ತೊಡಚಿ-ಹೂಡಿ, ಕೀಲಿಸಿದ-ನಾಟಿಸಿದನು.
ಮೂಲ ...{Loading}...
ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ ॥24॥
೦೨೫ ಕೆಙ್ಗರಿಯ ಮರಿದುಮ್ಬಿ ...{Loading}...
ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕ ರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಂಪಾದ ರೆಕ್ಕೆಗಳುಳ್ಳ ದುಂಬಿಮರಿಯು ಕಮಲಕ್ಕೆ ಅತ್ಯಾಸೆಯಿಂದ ಮುತ್ತುವಂತೆ, ರಾಕ್ಷಸರ ಹಗೆಯಾದ ಶ್ರೀಕೃಷ್ಣನ ಶುಭಕರವಾದ ಮುಖವೆಂಬ ಕಮಲದಲ್ಲಿ, ಬಾಣಗಳ ಕೆಂಪಾದ ಗರಿಗಳು ಮುಟ್ಟುವಂತೆ ಒಳಗೆ ನಾಟಿಕೊಳ್ಳಲು ಅತಿಪರಾಕ್ರಮಶಾಲಿಯಾದ ಭೀಷ್ಮನ ಬಾಣವನ್ನು ಕಿತ್ತು ಹಾಕಿ, ಕೃಷ್ಣನು ಆ ಬಾಣ ನಾಟಿದ್ದ ಹಣೆಯ ಗಾಯದಿಂದ ಸುರಿವ ರಕ್ತದಿಂದ ಕೋಪವನ್ನು ಅಪ್ಪಿದವನಾಗಿ ಭೀಷ್ಮನ ಕಾಟಕ್ಕೆ ಬಹಳ ಕೋಪಗೊಂಡನು.
ಪದಾರ್ಥ (ಕ.ಗ.ಪ)
ಕೆಂಗರಿಯ-ಕೆಂಪಾದ ರೆಕ್ಕೆಗಳುಳ್ಳ, ಆಳೆ-ನಾಟಿಕೊಳ್ಳಲು, ತುಂಗವಿಕ್ರಮನು-ಪರಾಕ್ರಮಶಾಲಿ, ತದಂಗರಕ್ತ ವಿಷಂಗ ರೌದ್ರಾಲಿಂಗಿತನು-ಆ ಅಂಗದಿಂದ ಸುರಿವ ರಕ್ತದಿಂದ ಕೋಪವನ್ನು ಅಪ್ಪಿದವನು=ಕುಪಿತನಾದ ಹರಿ.
ಮೂಲ ...{Loading}...
ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕ ರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ ॥25॥
೦೨೬ ಕೆಮ್ಪ ಕಾರಿದವಾಲಿಗಳು ...{Loading}...
ಕೆಂಪ ಕಾರಿದವಾಲಿಗಳು ಮೈ
ಕಂಪಿಸಿದುದಡಿಗಡಿಗೆ ರೋಷದ
ಬಿಂಪಿನೊಳು ತಗ್ಗಿದನು ಗಂಟಿಕ್ಕಿದನು ಹುಬ್ಬುಗಳ
ಸೊಂಪುಗೆಟ್ಟುದು ಸಿರಿವದನ ಮನ
ದಿಂಪು ಬೀತುದು ಭಕ್ತ ಮೋಹದ
ಲಂಪು ಮಸುಳಿತು ಬಿಸುಟು ಕಳೆದನು ಹಯದ ವಾಘೆಗಳ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ ಕಣ್ಣುಗಳು ಸಿಟ್ಟಿನಿಂದ ಕೆಂಡಕಾರಿದವು. ದೇಹವು ಬಾರಿಬಾರಿಗೂ ನಡುಗಿತು. ಕೋಪದ ಆಧಿಕ್ಯದಲ್ಲಿ ಹೂತು ಹೋದನು. ಹುಬ್ಬುಗಳನ್ನು ಗಂಟುಹಾಕಿಕೊಂಡನು. ಕಾಂತಿಯುಕ್ತ ವದನ ಕಳೆಗುಂದಿತು. ಮನಸ್ಸಿನೊಳಗಿನ ಪ್ರೀತಿ ನಶಿಸಿತು. ಭಕ್ತರ ಮೇಲಿನ ಮೋಹ ಮಾಸಿತು. ಒಡನೆಯೇ ತಾನು ಹಿಡಿದಿದ್ದ ಕುದುರೆಯ ಕಡಿವಾಣಗಳನ್ನು ಸಡಿಲಿಸಿ ಎಸೆದನು.
ಪದಾರ್ಥ (ಕ.ಗ.ಪ)
ಬಿಂಪು-ಆಧಿಕ್ಯ, ಗಂಟಿಕ್ಕಿದನು-ಬಿಗಿಮಾಡಿದನು, ಸೊಂಪುಗೆಟ್ಟುದು-ಕಳೆಗುಂದಿತು, ಬೀತುದು-ನಶಿಸಿತು, ಅಲಂಪು-ಮೋಹ, ಪ್ರೀತಿ ಮಸುಳಿತು-ಮಾಸಿತು, ವಾಘೆ-ಲಗಾಮು
ಮೂಲ ...{Loading}...
ಕೆಂಪ ಕಾರಿದವಾಲಿಗಳು ಮೈ
ಕಂಪಿಸಿದುದಡಿಗಡಿಗೆ ರೋಷದ
ಬಿಂಪಿನೊಳು ತಗ್ಗಿದನು ಗಂಟಿಕ್ಕಿದನು ಹುಬ್ಬುಗಳ
ಸೊಂಪುಗೆಟ್ಟುದು ಸಿರಿವದನ ಮನ
ದಿಂಪು ಬೀತುದು ಭಕ್ತ ಮೋಹದ
ಲಂಪು ಮಸುಳಿತು ಬಿಸುಟು ಕಳೆದನು ಹಯದ ವಾಘೆಗಳ ॥26॥
೦೨೭ ಕೆಣ್ಡವಾಗಲಿ ಲೋಕ ...{Loading}...
ಕೆಂಡವಾಗಲಿ ಲೋಕ ದಿವಿಜರ
ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ
ಗಂಡುಗೆಡಿಸಿದರಿಲ್ಲ ದಾನವ
ದಿಂಡೆಯರು ಹಲರೆಮ್ಮೊಡನೆ ಮಾ
ರ್ಕೊಂಡವರು ಮಾಮಾಪ್ರತಿಜ್ಞೆಯ ತೊಡಕು ಬೇಡೆಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹದಿನಾಲ್ಕು ಲೋಕಗಳೂ ಸುಟ್ಟು ಕೆಂಡವಾಗಿ ಹೋಗಲಿ. ಸ್ವರ್ಗದಲ್ಲಿರುವ ದೇವತೆಗಳ ಹೆಂಡತಿಯರ ಓಲೆ ಭಾಗ್ಯ ನಾಶವಾಗಲಿ. ಮೇರು ಪರ್ವತ ಭೂಮಿಯಲ್ಲಿ ದಿಂಡಿನಂತೆ ಉರುಳಲಿ. ವಿತಳ ಲೋಕಕ್ಕೆ ಮೆಟ್ಟುತ್ತೇನೆ. ನಮ್ಮನ್ನು ಪ್ರತಿಭಟಿಸಿದವರು ಕೆಲವೇ ಮಂದಿ ಅಷ್ಟೆ. ಆದರೆ ಆ ರಾಕ್ಷಸರಲ್ಲಿ ಶೂರರಾದವರು, ನನ್ನ ಪರಾಕ್ರಮವನ್ನು ಕುಂದಿಸಿದವರು ಇದುವರೆಗೂ ಯಾರೂ ಇಲ್ಲ. ಹೀಗಿರುವಾಗ ಈ ಭೀಷ್ಮನು ನನ್ನನ್ನು ಬಾಣಬಿಟ್ಟು ನೋಯಿಸಿದ್ದಾನೆ. ಆದ್ದರಿಂದ ನಾನು ಆಯುಧ ಹಿಡಿಯುವುದಿಲ್ಲವೆಂದು ಮಾಡಿದ ಅತಿಮಹತ್ತಾದ ಪ್ರತಿಜ್ಞೆಯ ಕಟ್ಟುಪಾಡು ಇನ್ನು ನನಗೆ ಬೇಡ. ಶಸ್ತ್ರವನ್ನು ಹಿಡಿಯುತ್ತೇನೆ ಎಂದು ಶ್ರೀಕೃಷ್ಣನು ಚಕ್ರಧಾರಿ ಆದನು.
ಪದಾರ್ಥ (ಕ.ಗ.ಪ)
ಹೆಂಡಿರ ಓಲೆಯ ಕಳೆದುಹೋಗಲಿ -(ಓಲೆ ಭಾಗ್ಯ ಹೋಗಲಿ - ವಿಧವೆಯಾಗಲಿ) ದಿಂಡುಗೆಡೆಯಲಿ-ದಿಂಡಿನಂತೆ ಉರುಳಲಿ, ವಿತಳ-ಭೂಲೋಕದ ಕೆಳಗಿರುವ 7 ಲೋಕಗಳಲ್ಲಿ 2ನೆಯದು (ಅತಳ, ವಿತಳ, ಸುತಲ, ರಸಾತಲ, ತಲಾತಲಾ, ಮಹಾತಲ, ಪಾತಾಳ)
ಮೂಲ ...{Loading}...
ಕೆಂಡವಾಗಲಿ ಲೋಕ ದಿವಿಜರ
ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ
ಗಂಡುಗೆಡಿಸಿದರಿಲ್ಲ ದಾನವ
ದಿಂಡೆಯರು ಹಲರೆಮ್ಮೊಡನೆ ಮಾ
ರ್ಕೊಂಡವರು ಮಾಮಾಪ್ರತಿಜ್ಞೆಯ ತೊಡಕು ಬೇಡೆಂದ ॥27॥
೦೨೮ ಸಕಲ ಜಗದಳಿವಿನಲಿ ...{Loading}...
ಸಕಲ ಜಗದಳಿವಿನಲಿ ರುದ್ರಾ
ತ್ಮಕನು ವಿಷ್ಣುವೆ ಎಂಬ ನುಡಿ ಸು
ವ್ಯಕುತವಾಗಲು ತೋರಿದನು ಘನರೋಷ ತಾಮಸವ
ಚಕಿತವದನದ ಕೆಂಪಿನಬುಜಾಂ
ಬಕಯುಗಳನೊಲೆದೊಲೆದು ರೋಷ
ಪ್ರಕಟಪಾವಕ ವಿಸ್ಫುಲಿಂಗಿತನಾದನಡಿಗಡಿಗೆ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯವಾಗಿ ಸಕಲ ಲೋಕಗಳು ನಾಶ ಮಾಡುವ ಪ್ರಳಯರುದ್ರನ ರೂಪವನ್ನು ಪಡೆದ ವಿಷ್ಣು ನಾನೇ ಎಂಬ ವೇದವಾಕ್ಯವನ್ನು ಎಲ್ಲರಿಗೂ ಚೆನ್ನಾಗಿ ತಿಳಿಸುವುದಕ್ಕಾಗಿ, ಅತಿ ಸಿಟ್ಟುಗೊಂಡು ತಮೋಗುಣವನ್ನು ವ್ಯಕ್ತಪಡಿಸಿದನು. ಕೋಪದಿಂದ ಚಂಚಲ ಮುಖವುಳ್ಳ ಕಮಲಾಕ್ಷನಾದ ಶ್ರೀಕೃಷ್ಣನು ಅಡಿಗಡಿಗೂ ಅತ್ತಿತ್ತ ಮೈಯನ್ನು ತೂಗಾಡಿಸುತ್ತ ರೋಷವನ್ನು ಸ್ಪಷ್ಟವಾಗಿ ತೋರುವ ಬೆಂಕಿಯ ಕಿಡಿಗಳುಳ್ಳ ಕ್ರೋಧಿ ಆದನು.
ಪದಾರ್ಥ (ಕ.ಗ.ಪ)
ಅಂಬುಜಾಂಬಕಯುಗಳ-ಕಮಲದಂತಹ ಎರಡು ಕಣ್ಣುಗಳುಳ್ಳ ್ಣ, ವಿಸ್ಫುಲಿಂಗ-ಕಿಡಿಗಳು, ತಾಮಸ-ತಮೋಗುಣ,
ಟಿಪ್ಪನೀ (ಕ.ಗ.ಪ)
ಭಗವಂತನು ಬ್ರಹ್ಮನಾಗಿ ಲೋಕಸೃಷ್ಟಿಯನ್ನು, ವಿಷ್ಣುವಾಗಿ ಲೋಕಪಾಲನೆಯನ್ನು, ರುದ್ರನಾಗಿ ಲೋಕಲಯವನ್ನು ಮಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಆದರೆ ಈ ಮೂರೂ ಕಾರ್ಯಗಳನ್ನಾಗಿ ವಿಷ್ಣುವೇ ಎಸಗುತ್ತಾನೆ ಎಂಬುದು ಅದ್ವೈತಿಗಳ ಮತ. ಆದ್ದರಿಂದ ರುದ್ರಾತ್ಮಕನು ವಿಷ್ಣುವೇ ಆಗಿದ್ದಾನೆ ಎಂದು ಕುಮಾರವ್ಯಾಸ ಹೇಳಿದ್ದಾನೆ.
ಮೂಲ ...{Loading}...
ಸಕಲ ಜಗದಳಿವಿನಲಿ ರುದ್ರಾ
ತ್ಮಕನು ವಿಷ್ಣುವೆ ಎಂಬ ನುಡಿ ಸು
ವ್ಯಕುತವಾಗಲು ತೋರಿದನು ಘನರೋಷ ತಾಮಸವ
ಚಕಿತವದನದ ಕೆಂಪಿನಬುಜಾಂ
ಬಕಯುಗಳನೊಲೆದೊಲೆದು ರೋಷ
ಪ್ರಕಟಪಾವಕ ವಿಸ್ಫುಲಿಂಗಿತನಾದನಡಿಗಡಿಗೆ ॥28॥
೦೨೯ ಎಲೆಲಿದೆತ್ತಣ ಧರಣಿಯೆತ್ತಣ ...{Loading}...
ಎಲೆಲಿದೆತ್ತಣ ಧರಣಿಯೆತ್ತಣ
ಕುಲಗಿರಿಗಳೆತ್ತಣ ದಿಶಾಗಜ
ಕುಲವಿದೆತ್ತಣ ಸುರರಿದೆತ್ತಣ ಹರ ಚತುರ್ಮುಖರು
ಸಲಹುವೈಯನು ಮುಳಿದು ಲೋಕದ
ಕೊಲೆಗೆಲಸಕಂಗೈಸಿದನೆ ಹಾ
ಪ್ರಳಯವಾದುದಕಾಲದಲಿಯೆಂದಮರರೆದೆಯಾರೆ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರೆರೇ ! ಇದೆಲ್ಲಿಯ ಭೂಮಿ ! ಎಲ್ಲಿಯ ಸಪ್ತಗಿರಿಗಳು! ಇವರೆಲ್ಲಿಯ ದೇವತೆಗಳು ಎಲ್ಲಿಯ ಶಿವ, ಬ್ರಹ್ಮರು, ಲೋಕಗಳನ್ನು ಕಾಪಾಡುವ ಒಡೆಯನೇ ಕೋಪಗೊಂಡು ಲೋಕನಾಶದ ಕಾರ್ಯಕ್ಕೆ ಕೈಹಾಕಿದನೇ ? ಹಾ ! ಅಕಾಲದಲ್ಲಿ ಪ್ರಳಯವಾಯಿತಲ್ಲಾ ಎಂಬುದಾಗಿ ದೇವತೆಗಳು ಎದೆಗುಂದಿದರು.
ಪದಾರ್ಥ (ಕ.ಗ.ಪ)
ಎದೆಯಾರೆ-ಎದೆಗುಂದಿದನು-ಧೈರ್ಯಗೆಟ್ಟರು, ಅಂಗೈಸಿದನೆ-ಕೈಹಾಕಿದನೆ,
ಟಿಪ್ಪನೀ (ಕ.ಗ.ಪ)
ಕುಲಗಿರಿಗಳು - ಸಪ್ತಪರ್ವತಗಳು
(ಮಹೇಂದ್ರ-ಮಲಯ-ಸಹ್ಯಾದ್ರಿ-ಶುಕ್ತಿ-ಋಕ್ಷ-ವಿಂಧ್ಯ-ಪಾರಿಯಾತ್ರ)
ದಿಶಾಗಜಕುಲ -ಅಷ್ಟಾದಿ ಗಜಗಳು
(ಐರಾವತ-ಪುಂಡರೀಕ-ವಾಮನ-ಕುಮುದ-ಅರ್ಜುನ-ಪುಷ್ಪದಂತ-ಸಾರ್ವಭೌಮ-ಸುಪ್ರತೀಕ ಭೂಭಾರವನ್ನು ಎಂಟು ದಿಕ್ಕುಗಳಲ್ಲಿ ಹೊತ್ತ ಆನೆಗಳು)
ಮೂಲ ...{Loading}...
ಎಲೆಲಿದೆತ್ತಣ ಧರಣಿಯೆತ್ತಣ
ಕುಲಗಿರಿಗಳೆತ್ತಣ ದಿಶಾಗಜ
ಕುಲವಿದೆತ್ತಣ ಸುರರಿದೆತ್ತಣ ಹರ ಚತುರ್ಮುಖರು
ಸಲಹುವೈಯನು ಮುಳಿದು ಲೋಕದ
ಕೊಲೆಗೆಲಸಕಂಗೈಸಿದನೆ ಹಾ
ಪ್ರಳಯವಾದುದಕಾಲದಲಿಯೆಂದಮರರೆದೆಯಾರೆ ॥29॥
೦೩೦ ನಳಿನಪತ್ರೋದಕದವೊಲು ಮಾ ...{Loading}...
ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾವರೆಯೆಲೆಯ ಮೇಲಿನ ನೀರಿನ ಹನಿಯಂತೆ ಬ್ರಹ್ಮಾಂಡ ಮಂಡಲವು ಹೊಯ್ದಾಡಿತು. ಸಾಗರಗಳು ಬತ್ತಿ ಹರಡಿನಷ್ಟು (ಪಾದದ ಹಿಮ್ಮಡಿಯ ಗಂಟಿಗೆ ಸಮ) ಆಯಿತು. ಈ ಭೂಮಂಡಲವನ್ನು ರಕ್ಷಿಸುವ ಶ್ರೇಷ್ಠರು ಯಾರಿದ್ದಾರೆ ? ಹರಹರಾ ! ಲೋಕನಾಶವಾಗುವ ಕಾಲಸನ್ನಿಹಿತವಾಯಿತು ಎಂಬುದಾಗಿ ಬ್ರಹ್ಮನು ಅಂದು ಹೆದರಿದನು.
ಪದಾರ್ಥ (ಕ.ಗ.ಪ)
ಮಾರೊಲೆದುದು-ಹೊಯ್ದಾಡಿದವು, ಗುಲ್ಫದ್ಪಯಸ-ಪಾದದ ಹಿಮ್ಮಡಿಯ ಮಣಿಗಂಟು, ಹರಡು- ಹಿಂದಿಕ್ಕಿ ಕೊಳ್ಳು,ರಕ್ಷಿಸು, ಅಗ್ಗಳೆ-ಶ್ರೇಷ್ಠರು, ಜೋಡಿಸಿತು-ಸನ್ನಿಹಿತವಾಯಿತು, ಅಬುಜಭವ-ಬ್ರಹ್ಮ
ಮೂಲ ...{Loading}...
ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು ॥30॥
೦೩೧ ಮುರಮಥನ ಕೆಲ್ಲೈಸಿ ...{Loading}...
ಮುರಮಥನ ಕೆಲ್ಲೈಸಿ ನೋಡಿದ
ನುರುಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀ ಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರರಾಕ್ಷಸನ್ನು ಕೊಂದ ಕೃಷ್ಣನಲ್ಲಿ ಅಧಿಕಾಧಿಕ ರೋಷವು ಅಂಕುರಿಸಿ ಉಕ್ಕುಕ್ಕಿ ಬರುತ್ತಿರಲು, ಅತ್ಯಂತ ಭಯಂಕರ ಚಕ್ರಾಯುಧವನ್ನು, ತಡೆಯಲು ಅಸಾಧ್ಯವಾದ ಅತಿ ತೀಕ್ಷ್ಣ ಅಲಗಿನಿಂದ ಕತ್ತರಿಸಲ್ಪಟ್ಟ ರಾಕ್ಷಸರ ಸಮೂಹವುಳ್ಳ ಚಕ್ರವನ್ನು, ಬಾಲಸೂರ್ಯ ಮಂಡಲದಂತಿರುವ ಚಕ್ರವನ್ನು, ಯುದ್ಧದಲ್ಲಿ ಶತ್ರುಗಳು ಜಯಿಸಲಾರದ ಚಕ್ರವನ್ನು, ಭಯರಹಿತವಾದ ಚಕ್ರವನ್ನು, ಕೈಗೆ ತೆಗೆದುಕೊಳ್ಳುವ ಬಯಕೆಯಿಂದ ಆವೇಶದಿಂದ ನೋಡಿದನು.
ಪದಾರ್ಥ (ಕ.ಗ.ಪ)
ಕೆಲ್ಲೈಸಿ-ಆವೇಶಗೊಂಡು, ಭಯಭರವಿವರ್ಜಿತ-ಭಯದಿಂದ ದೂರನಾದ, ನಿರ್ಭಯನಾದ
ಸಂಗರ ವಿನಿರ್ಜಿತ-ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವಂಥ
ಮೂಲ ...{Loading}...
ಮುರಮಥನ ಕೆಲ್ಲೈಸಿ ನೋಡಿದ
ನುರುಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀ ಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು ॥31॥
೦೩೨ ನಿಶಿತ ಧಾರೆಯ ...{Loading}...
ನಿಶಿತ ಧಾರೆಯ ಹೊಳಹು ಸೂರ್ಯನ
ಮುಸುಕಿದುದು ಪರಿಲೂನದೈತ್ಯ
ಪ್ರಸರಗಳನಾಳೀವಿನಿಸ್ಸೃತ ರುಧಿರ ಬಂಧುಗಳ
ಮಿಸುಪ ಮೊಳೆಗಳ ಮುರಿವುಗಳ ನೆಣ
ವಸೆಯ ತೊರಳೆಯ ತೊಂಗಲಿನೊಳಂ
ದೆಸೆವ ಚಕ್ರವ ನೋಡಿದನು ದೈತ್ಯಾರಿ ಕೋಪದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಕ್ರದ ತೀಕ್ಷ್ಣ ಅಲಗಿನ ಕಾಂತಿ ಸೂರ್ಯನ ಕಾಂತಿಯನ್ನೇ ಮಸುಕು ಮಾಡಿತು. ಅಷ್ಟು ಪ್ರಜ್ವಲಿಸುತ್ತಿದ್ದ ದೈತ್ಯ ಸಮೂಹವನ್ನು ಕತ್ತರಿಸಿದ (ಕೊಂದ) ಕಂಠನಾಳಗಳಿಂದ ಚಿಮ್ಮುವ ರಕ್ತಧಾರೆಗಳಿಂದ, ಹೊಳೆಯುವ ಹಲ್ಲುಗಳಿಂದ, ಮಾಂಸ ಮಜ್ಜೆಗಳ ತುಣಕುಗಳಿಂದ, ಪ್ಲೀಹದ ಗೊಂಚಲುಗಳಿಂದ ಶೋಭಿಸುತ್ತಿದ್ದ ಸುದರ್ಶನ ಚಕ್ರವನ್ನು ರಾಕ್ಷಸರ ಶತ್ರುವಾದ ಕೃಷ್ಣನು ಸಿಟ್ಟಿನಿಂದ ನೋಡಿದನು.
ಪದಾರ್ಥ (ಕ.ಗ.ಪ)
ನಿಶಿತಧಾರೆ-ತೀಕ್ಷ್ಣ ಅಲಗಿನ ಕಾಂತಿ, ಪರಿಲೂನ-ಕತ್ತರಿಸಿದ, ದೈತ್ಯರ ಪ್ರಸರ-ರಾಕ್ಷಸರ ಗುಂಪು, ಗಳನಾಳೀ ವಿನಿಸ್ಸೃತ-ಕಂಠನಾಳಗಳಿಂದ ಚಿಮ್ಮುವ, ರುಧಿರಬಂಧುಗಳ-ರಕ್ತಧಾರೆಗಳ, ಮಿಸುಪಮೊಳೆ-ಹೊಳೆವಹಲ್ಲು, ನೆಣಪಸೆ-ಮಾಂಸ ಮಜ್ಜೆ, ಮುರಿವುಗಳ-ತುಣುಕುಗಳ, ತೊರಳೆಯ ತೊಂಗಲು- ಪ್ಲೀಹದ (ಗುಲ್ಮ) ಗೊಂಚಲು, ದೈತ್ಯಾರಿ-ರಾಕ್ಷಸರ ಶತ್ರುವಾದ ಶ್ರೀಕೃಷ್ಣ
ಮೂಲ ...{Loading}...
ನಿಶಿತ ಧಾರೆಯ ಹೊಳಹು ಸೂರ್ಯನ
ಮುಸುಕಿದುದು ಪರಿಲೂನದೈತ್ಯ
ಪ್ರಸರಗಳನಾಳೀವಿನಿಸ್ಸೃತ ರುಧಿರ ಬಂಧುಗಳ
ಮಿಸುಪ ಮೊಳೆಗಳ ಮುರಿವುಗಳ ನೆಣ
ವಸೆಯ ತೊರಳೆಯ ತೊಂಗಲಿನೊಳಂ
ದೆಸೆವ ಚಕ್ರವ ನೋಡಿದನು ದೈತ್ಯಾರಿ ಕೋಪದಲಿ ॥32॥
೦೩೩ ಹರಿದು ಹಬ್ಬುವ ...{Loading}...
ಹರಿದು ಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತ ಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರ ನರೋರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕವ ಹುರಿದುದು ಚಕ್ರದೂಷ್ಮೆಯಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಚಕ್ರದಿಂದ ಹೊರಬಂದು ಹರಡುತ್ತಿರುವ ಬಳ್ಳಿಯಂಥ ಬೆಳಕಿನ ಬಾಗುಗಳು ಎಲ್ಲೆಡೆ ವ್ಯಾಪಿಸಿ ಸುತ್ತುಗಟ್ಟಿದವು. ಲಕ್ಷೋಪಲಕ್ಷ ಸೂರ್ಯರಷ್ಟು ಪ್ರಕಾಶಮಾನವಾದ ಬಿಂಬದಂತೆ ಕಂಗೊಳಿಸಿತು. ಆ ಸೂರ್ಯಬಿಂಬದ ಶಾಖ ಪ್ರವಾಹದಲ್ಲಿ ಸ್ವರ್ಗ ಮತ್ರ್ಯ ಪಾತಾಳ ಲೋಕಗಳ ತೆರೆದ ಕಣ್ಣುಗಳು ಮುಚ್ಚಿಕೊಂಡವು (ಕಣ್ಣನ್ನು ಕೋರೈಸಿತು) ಸಾಗರಗಳು ಬತ್ತಿದವು. ಅದರಲ್ಲಿದ್ದ ವರ್ಣದ ಕೆಂಪು ಮರಳು ಚಕ್ರದ ಕಾವಿನಲ್ಲಿ ಹುರಿದಂತಾಯಿತು.
ಪದಾರ್ಥ (ಕ.ಗ.ಪ)
ಹರಿದು ಹಬ್ಬುವ-ಹೊರಬಂದು ಹರಡುತ್ತಿದ್ದ, ಮುರಿವು-ಬಾಗುಗಳು, ಮಂಡಳಿಸಿದುದು-ವ್ಯಾಪಿಸಿ ಸುತ್ತುಗಟ್ಟಿದವು, ಝಳದ ಹೊಯ್ಲು-ಶಾಖ ಪ್ರವಾಹ, ಕೆತ್ತವು-ಮುಚ್ಚಿಕೊಂಡವು, ಊಷ್ಮೆ-ಕಾವು.
ಮೂಲ ...{Loading}...
ಹರಿದು ಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತ ಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರ ನರೋರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕವ ಹುರಿದುದು ಚಕ್ರದೂಷ್ಮೆಯಲಿ ॥33॥
೦೩೪ ನರನ ತೇರಿನ ...{Loading}...
ನರನ ತೇರಿನ ಕುದುರೆಗಳು ಡಾ
ವರಿಸಿದುವು ಡಗೆ ಹೊಯ್ದು ಮಿಗೆ ದ
ಳ್ಳುರಿಯ ಸಸಿಯಂತಾದನರ್ಜುನದೇವ ನಿಮಿಷದಲಿ
ಕರಗಿ ಕೊರಗಿತು ಲೋಕ ಕೌರವ
ಧರಣಿಪಾಲರಿದೆತ್ತಣುರಿಯೋ
ಹರನ ಕಣ್ಗಿಚ್ಚಲ್ಲಲೇ ಹಾಯೆನುತ ಹಲುಬಿದರು ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ ಚಕ್ರದ ಉರಿಯಿಂದ ಅರ್ಜುನನ ರಥದ ಕುದುರೆಗಳು ಬಾಯಾರಿದವು. ಅರ್ಜುನನು ನಿಮಿಷ ಮಾತ್ರದಲ್ಲಿ ಶಾಖವುತಟ್ಟಿ, ಅಧಿಕವಾದ ದಟ್ಟ ಬೆಂಕಿಯುರಿಯಲ್ಲಿ ಸಿಲುಕಿದ ಪೈರಿನಂತೆ ಆದನು (ಕರಕಲು ಆದನು - ಸೀದು ಹೋದನು) ಜಗತ್ತು ಕರಗಿ ದುಃಖಗೊಂಡಿತು ಕೌರವ ರಾಜರು, ಈ ಬೆಂಕಿ ಎಲ್ಲಿಂದ ಬಂತೋ, ಶಿವನ ಮೂರನೇ ಕಣ್ಣಿನ ಬೆಂಕಿ ಅಲ್ಲ ತಾನೇ, ಅಯ್ಯೋ ! ದೇವರೇ ಏನು ಕಷ್ಟ ಬಂತಪ್ಪಾ ಎಂದು ದುಃಖಿಸಿದರು.
ಪದಾರ್ಥ (ಕ.ಗ.ಪ)
ಡಾವರಿಸು-ಬಾಯಾರಿಸು, ಡಗೆ ಹೊಯ್ದು-ಶಾಖ ತಟ್ಟಿ, ದಳ್ಳುರಿ-ದಟ್ಟ ಬೆಂಕಿ, ಕೌರವಧರಣೀಪಾಲಕ-ಕೌರವರಾಜರು, ಹರನ ಕಣ್ಗಿಚ್ಚು -ಶಿವನ ಮೂರನೇ ಕಣ್ಣಿನ ಬೆಂಕಿ, ಹಲುಬಿದನು-ದುಃಖಿಸಿದನು.
ಮೂಲ ...{Loading}...
ನರನ ತೇರಿನ ಕುದುರೆಗಳು ಡಾ
ವರಿಸಿದುವು ಡಗೆ ಹೊಯ್ದು ಮಿಗೆ ದ
ಳ್ಳುರಿಯ ಸಸಿಯಂತಾದನರ್ಜುನದೇವ ನಿಮಿಷದಲಿ
ಕರಗಿ ಕೊರಗಿತು ಲೋಕ ಕೌರವ
ಧರಣಿಪಾಲರಿದೆತ್ತಣುರಿಯೋ
ಹರನ ಕಣ್ಗಿಚ್ಚಲ್ಲಲೇ ಹಾಯೆನುತ ಹಲುಬಿದರು ॥34॥
೦೩೫ ತುಡುಕಿದನು ಚಕ್ರವನು ...{Loading}...
ತುಡುಕಿದನು ಚಕ್ರವನು ರಥದಿಂ
ಪೊಡವಿಯೊಳು ದುಮ್ಮಿಕ್ಕಿದನು ಹ
ತ್ತಡವ ಹಾಯಿಕಿ ಹರಿದನೊ(ನ)ಡಬಿದ್ದವರನೊಡೆ ತುಳಿದು
ಸುಡುವೆನಹಿತಾನ್ವಯವ ಭೀಷ್ಮನ
ಕಡಿದು ಭೂತಗಣಕ್ಕೆ ಬೋನವ
ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಚಕ್ರವನ್ನು ಕೈಯಲ್ಲಿ ಹಿಡಿದುಕೊಂಡು, ತೇರಿನಿಂದ ಕೆಳಕ್ಕೆ ಜಿಗಿದನು. ಅಡ್ಡ ಬಂದವರನ್ನು ಸೀಳಿ ಕೆಳಗೆ ಹಾಕಿ ತುಳಿದು ಶತ್ರು ಪಾಳೆಯದ ದಂಡೆಯನ್ನು ದಾಟಿ ಮುಂದೆ ಸಾಗಿದನು. ಹಗೆಯ ವಂಶದವರನ್ನೆಲ್ಲಾ ಸುಟ್ಟು ಬಿಡುವೆನು, ಭೀಷ್ಮನನ್ನು ಕೊಂದು ಭೂತಪ್ರೇತಪಿಶಾಚಾದಿಗಳ ಸಮೂಹಕ್ಕೆ ಊಟಕ್ಕಿಡುವೆನು ನೋಡು : ಅರ್ಜುನ, ಇಲ್ಲಿ ನನ್ನೊಂದಿಗೆ ಭೀಷ್ಮನಿಗೆ ಸದರವೇ ಎಂದು ಹೇಳುತ್ತ ನೆಟ್ಟನೆ ವೇಗವಾಗಿ ಮುಂಬರಿದನು.
ಟಿಪ್ಪನೀ (ಕ.ಗ.ಪ)
ಹತ್ತಡ ಶಬ್ದಕ್ಕೆ ನಿಷ್ಕೃಷ್ಟವಾದ ಅರ್ಥವಿಲ್ಲ ಪ್ರಯೋಗದ ಸಾಮ್ಯದಿಂದ ದಂಡೆ ಎಂದು ಬರೆದಿದೆ. ಕುದುರೆಯನ್ನು ಹೊಡೆದ ಚಾವಟಿ ಎಂದೂ ಕೆಲವರು ಹೇಳಬಹುದು.
(ಹತ್ತಡ) ಪದಕ್ಕೆ ಕನ್ನಡ ನಿಘಂಟು (ಕಸಾಪ) ದಲ್ಲಿ ಉತ್ತರೀಯ, ಮೇಲುವಸ್ತ್ರ? ಹಚ್ಚಡ ಎಂದಿರಬಹುದೇ ? ಎಂದಿದ್ದಾರೆ (ಭೀ 6-35) ಇದೇ ಪದ್ಯ ಉದಾಹರಿಸಿದ್ದಾರೆ (ಹತ್ತಾಳ) ಬಾರುಕೋಲು, ಚಾಟಿ, ಒಂದು ಬಗೆ ಆಯುಧ ಎಂದಿದೆ (ಕನ್ನಡ ನಿಘಂಟು- ಕಸಾಪ- ದಲ್ಲಿ)
ಮೂಲ ...{Loading}...
ತುಡುಕಿದನು ಚಕ್ರವನು ರಥದಿಂ
ಪೊಡವಿಯೊಳು ದುಮ್ಮಿಕ್ಕಿದನು ಹ
ತ್ತಡವ ಹಾಯಿಕಿ ಹರಿದನೊ(ನ)ಡಬಿದ್ದವರನೊಡೆ ತುಳಿದು
ಸುಡುವೆನಹಿತಾನ್ವಯವ ಭೀಷ್ಮನ
ಕಡಿದು ಭೂತಗಣಕ್ಕೆ ಬೋನವ
ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ ॥35॥
೦೩೬ ಶಿವಶಿವೆನ್ದುದು ನಿಖಿಳ ...{Loading}...
ಶಿವಶಿವೆಂದುದು ನಿಖಿಳ ಜಗ ಕೌ
ರವರು ಕಂಪಿಸಿ ಥಟ್ಟುಗೆಡೆದರು
ಭುವನದಲಿ ಭಾರಿಸಿತು ಜಯಜಯ ಜಯಮಹಾಧ್ವಾನ
ತವತವಗೆ ತಳ್ಳಂಕದಲಿ ಪಾಂ
ಡವರು ನಡುಗಿತು ಪಾರ್ಥ ಬಲುಗರ
ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಸಮಸ್ತ ಜನರೂ ಅಯ್ಯೋ ಶಿವನೆ ಎಂದು ಕೂಗಿಕೊಂಡರು. ಕೌರವರು ಗಡಗಡನಡುಗಿ ದುರ್ಬಲರಾಗಿ ಕೆಳಗೆ ಬಿದ್ದರು. ಜಗತ್ತಿನಲ್ಲೆಲ್ಲಾ ಜಯ ಜಯ ಜಯ ಎಂಬ ಮಹಾಘೋಷ ಮೊಳಗಿತು. ಪಾಂಡವರು ಸಹ ತಮ್ಮ ತಮ್ಮಲ್ಲೇ ಹೆದರಿಕೆಯಿಂದ ಅಂಜಿದರು. ಅರ್ಜುನನು ದೊಡ್ಡಗ್ರಹ ಮೇಲೆ ಬಿದ್ದು ಆವರಿಸಿದಂತೆ ಬೆರಳನ್ನು ಮೂಗಿನ ಮೇಲಿಟ್ಟು (ಅಚ್ಚರಿಯಿಂದ ದಿಗ್ಭ್ರಾಂತನಾಗಿ) ಮೌನಿಯಾದನು.
ಪದಾರ್ಥ (ಕ.ಗ.ಪ)
ಥಟ್ಟುಗೆಡೆದನು-ಅಸಹಾಯಕನಾಗಿ ಕೆಳಗೆ ಬಿದ್ದನು, ಭಾರಿಸಿತು-ಮೊಳಗಿತು, ತಳ್ಳಂಕದಲಿ-ಹೆದರಿಕೆಯಿಂದ, ಅವಚಿದಂತಿರೆ-ಮೇಲೆ ಬಿದ್ದು ಆವರಿಸಿರಲು,
ಮೂಲ ...{Loading}...
ಶಿವಶಿವೆಂದುದು ನಿಖಿಳ ಜಗ ಕೌ
ರವರು ಕಂಪಿಸಿ ಥಟ್ಟುಗೆಡೆದರು
ಭುವನದಲಿ ಭಾರಿಸಿತು ಜಯಜಯ ಜಯಮಹಾಧ್ವಾನ
ತವತವಗೆ ತಳ್ಳಂಕದಲಿ ಪಾಂ
ಡವರು ನಡುಗಿತು ಪಾರ್ಥ ಬಲುಗರ
ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ ॥36॥
೦೩೭ ಹರಿ ಮುಕುನ್ದ ...{Loading}...
ಹರಿ ಮುಕುಂದ ಮುಕುಂದ ಲಕ್ಷ್ಮೀ
ವರ ನೃಕೇಸರಿಯೆನುತ ಚಾಪವ
ಶರವನವನಿಗೆ ಬಿಸುಟು ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುಗಿದೆದ್ದು ಮುರಹರ
ಸರಸಿಜಾಂಬಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಶೂರನಾದ ಭೀಷ್ಮನು ಹರಿ, ಮುಕುಂದ (ಮೋಕ್ಷವನ್ನೂ ಇಹ ಲೋಕದ ಸೌಖ್ಯವನ್ನು ನೀಡುವವನೇ) ಮುರಾರಿ ಲಕ್ಷ್ಮೀವರ (ಲಕ್ಷ್ಮೀಪತಿಯೇ) ನೃಕೇಸರಿ (ನರಸಿಂಹ ಸ್ವರೂಪನೆ) ಎಂದು ಸ್ತೋತ್ರಮಾಡುತ್ತ ಬಿಲ್ಲನ್ನು ಬಾಣವನ್ನು ನೆಲಕ್ಕೆ ಎಸೆದು ನಮಸ್ಕರಿಸಿದನು. ಕೈಗಳೆರಡನ್ನೂ ಜೋಡಿಸಿ ವಂದಿಸಿ ಮೇಲೆದ್ದು ಮುರಧ್ವಂಸಿಯೇ, ತಾವರೆಗಣ್ಣಿನವನೇ, ಮಂಗಳ ಸ್ವರೂಪಿ ರಾಮನೇ, ಕಾಪಾಡು ದೇವಾಧಿದೇವನೆ, ಬಾಲಕನಾದ ನನ್ನಲ್ಲಿ (ಮಗುವಿನಂತೆ ಮುಗ್ಧನಾದ ನನ್ನಲ್ಲಿ) ಒಳಿತು ಕೆಡುಕುಗಳನ್ನು ಹುಡುಕುವುದು ಸರಿಯೇ ಹೇಳು ಸ್ವಾಮಿ ಎಂದನು.
ಪದಾರ್ಥ (ಕ.ಗ.ಪ)
ನೃಕೇಸರಿ-ನರಸಿಂಹ, ಚಾಪ, ಶರ-ಬಿಲ್ಲು ಬಾಣ, ಮೈಯಿಕ್ಕು-ನಮಸ್ಕರಿಸು, ತರಳ-ಬಾಲಕ (ಮುಗ್ಧಮನಸ್ಸಿನವನು) ಅರಕೆಯೆ-ಹುಡುಕುವುದೇ ? ಕರಯುಗವ-ಕೈಗಳೆರಡನ್ನು
ಮೂಲ ...{Loading}...
ಹರಿ ಮುಕುಂದ ಮುಕುಂದ ಲಕ್ಷ್ಮೀ
ವರ ನೃಕೇಸರಿಯೆನುತ ಚಾಪವ
ಶರವನವನಿಗೆ ಬಿಸುಟು ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುಗಿದೆದ್ದು ಮುರಹರ
ಸರಸಿಜಾಂಬಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ ॥37॥
೦೩೮ ದೇವ ನಿಮ್ಮಯ ...{Loading}...
ದೇವ ನಿಮ್ಮಯ ಖಾತಿ ಪರಿಯಂ
ತಾವು ಲಕ್ಷ್ಯವೆ ಜೀಯ ನೊರಜಿನ
ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ
ದೇವ ಮುನಿಗಳ ನಗೆಯ ನೋಡದಿ
ದಾವುದುಚಿತವ ಮಾಡಿದಿರಿ ಮಹಿ
ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾ,ಮಿ, ನೀವು ಕೋಪಿಸಿಕೊಳ್ಳುವಷ್ಟು ನಾವು ನಿಮಗೆ ಲೆಕ್ಕಕ್ಕೆ ಬರುವವರೇ ? ಒಡೆಯಾ, ನನಗೂ ನಿಮಗೂ ಒಂದು ನುಸಿಗೂ (ಗುಂಗಾಡಿಗೂ) ಮೇರುಪರ್ವತಕ್ಕೂ ಇರುವಷ್ಟು ಅಂತರವಿರುವುದಲ್ಲವೆ ? ನನಗಿಷ್ಟು ಮನ್ನಣೆ ಸಲ್ಲುವುದೇ ? ದೇವತೆಗಳು ಮತ್ತು ಋಷಿಗಳು ನಮ್ಮನ್ನು ನೋಡಿ ನಗೆಯಾಡುತ್ತಿರುವುದನ್ನು ಗಮನಿಸು. ಇದಾವ ಯೋಗ್ಯ ಕಾರ್ಯವೆಂದು ಈ ಕೆಲಸಕ್ಕೆ ಕೈಹಾಕಿದಿರಿ? ನೀವು ಮಹಾವಿಷ್ಣು ಎಂಬ ಮಹಿಮೆಯನ್ನು ಉಳ್ಳವರು ಎಂಬಂಶವನ್ನು ಮರೆತು ಮನುಷ್ಯರಂತೆ ವರ್ತಿಸುವುದಕ್ಕೆ ನನಗೆ ನಗೆ ಬಂದಿತು ಎಂದು ಭೀಷ್ಮ ನುಡಿದನು.
ಪದಾರ್ಥ (ಕ.ಗ.ಪ)
ಲಕ್ಷ್ಯ-ಗುರಿ, ಜೀಯ-ಒಡೆಯ, ನೊರಜು-ಗುಂಗಾಡು (ನುಸಿ) ದೇವಗಿರಿ-ಮೇರುಪರ್ವತ, ಅಂತರ-ವ್ಯತ್ಯಾಸ, ಸಂಭಾವನೆ-ಮನ್ನಣೆ, ದೇವ ಮುನಿಗಳ ದೇವತೆಗಳು ಮತ್ತು ಋಷಿಗಳು
ಮೂಲ ...{Loading}...
ದೇವ ನಿಮ್ಮಯ ಖಾತಿ ಪರಿಯಂ
ತಾವು ಲಕ್ಷ್ಯವೆ ಜೀಯ ನೊರಜಿನ
ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ
ದೇವ ಮುನಿಗಳ ನಗೆಯ ನೋಡದಿ
ದಾವುದುಚಿತವ ಮಾಡಿದಿರಿ ಮಹಿ
ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ ॥38॥
೦೩೯ ಅಲಸಿಕೆಯೊಳೈನೂರು ಸಾವಿರ ...{Loading}...
ಅಲಸಿಕೆಯೊಳೈನೂರು ಸಾವಿರ
ನಳಿನಭವರಡೆಗೆಡೆವರೆಂಬ
ಗ್ಗಳಿಕೆಯೆತ್ತಲು ಹುಲುಮನುಜ ನಾನೆತ್ತಲಿದಿರಾಗಿ
ಮುಳಿದು ಹರಿತಹುದೆತ್ತಲಿದು ನಿ
ನ್ನಳತೆಗೈದುವುದಲ್ಲ ಲಜ್ಜೆಗೆ
ನೆಲೆಯ ಮಾಡಿದೆ ಹೂಡಿದೈ ದುರಿಯಶವನೆನಗೆಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನಗೆ ಬೇಸರವುಂಟಾಗಿ ಈ ಸೃಷ್ಟಿಯನ್ನು ನಾಶಮಾಡಬೇಕೆಂದೆನಿಸಿದಾಗ ಐನೂರು ಸಾವಿರ ಎಂದರೆ ಅಪಾರ ಬ್ರಹ್ಮರುಗಳನ್ನು ನಾಶಮಾಡುವಂಥ ಹಿರಿಮೆಯುಳ್ಳವನು ನೀನು, ಇಂಥ ನೀನೆಲ್ಲಿ ? ಕ್ಷುದ್ರಮಾನವನಾದ ನಾನೆಲ್ಲಿಯವನು ? ಇಂಥ ನನ್ನನ್ನು ವಿರೋಧಿಸುತ್ತಾ ಅಟ್ಟಿಸಿಕೊಂಡು ಬರುವಂಥ ಈ ಕೆಲಸ ಎಲ್ಲಿಯಾದರೂ ಉಂಟೆ? ನಿನ್ನ ಪರಾಕ್ರಮಕ್ಕೆ ಯುಕ್ತವಾದುದಲ್ಲ . ನನ್ನ ಮೇಲೆ ನಿನ್ನ ಅಪಾರಶಕ್ತಿಯನ್ನು ತೋರಿಸಿ ನಾಚಿಕೆಗೆ ಎಡೆಮಾಡಿಕೊಂಡೆ. ನನಗೂ ಕೆಟ್ಟ ಹೆಸರನ್ನು ಉಂಟು ಮಾಡಿದೆ.
ಪದಾರ್ಥ (ಕ.ಗ.ಪ)
ನಳಿನಭವರು-ಬ್ರಹ್ಮರು, ಅಗ್ಗಳಿಕೆ-ಹಿರಿಮೆ, ಅಲಸಿಕೆ-ಆಲಸ್ಯ, ಹುಲುಮನುಜ-ಕ್ಷುದ್ರಮಾನವ, ಹರಿತಹುದು-ಬೆನ್ನಟ್ಟಿಕೊಂಡು ಬರುವುದು, ಲಜ್ಜೆ-ನಾಚಿಕೆ, ದುರಿಯಶ-ಅಪಕೀರ್ತಿ, ನೆಲೆಯ ಮಾಡಿದೆ-ಅವಕಾಶಮಾಡಿದೆ, ಹೂಡಿದೈ-ಉಂಟುಮಾಡಿದೆ.
ಮೂಲ ...{Loading}...
ಅಲಸಿಕೆಯೊಳೈನೂರು ಸಾವಿರ
ನಳಿನಭವರಡೆಗೆಡೆವರೆಂಬ
ಗ್ಗಳಿಕೆಯೆತ್ತಲು ಹುಲುಮನುಜ ನಾನೆತ್ತಲಿದಿರಾಗಿ
ಮುಳಿದು ಹರಿತಹುದೆತ್ತಲಿದು ನಿ
ನ್ನಳತೆಗೈದುವುದಲ್ಲ ಲಜ್ಜೆಗೆ
ನೆಲೆಯ ಮಾಡಿದೆ ಹೂಡಿದೈ ದುರಿಯಶವನೆನಗೆಂದ ॥39॥
೦೪೦ ರೋಮ ರೋಮದೊಳಖಿಲ ...{Loading}...
ರೋಮ ರೋಮದೊಳಖಿಲ ಭುವನ
ಸ್ತೋಮ ನಲಿದಾಡುವುದು ಗಡ ನಿ
ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ
ಈ ಮರುಳುತನವೆತ್ತಲೀ ರಣ
ತಾಮಸಿಕೆ ತಾನೆತ್ತಣದು ರಘು
ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಒಂದೊಂದು ಕೂದಲಿನಲ್ಲೂ (ದೇಹದ ಕಣ ಕಣದಲ್ಲೂ) ಸಮಸ್ತ ಬ್ರಹ್ಮಾಂಡ ನಲಿದಾಡುವುದು ಅಲ್ಲವೇ ? ಸೀಮಾತೀತನು ನೀನು. ನಾನು ನಿನಗೆ ಶತ್ರುವೆಂದು ಭಾವಿಸಿ ನೀನು ನನ್ನ ಮೇಲೆ ಕೋಪಗೊಳ್ಳುವ ಈ ಹುಚ್ಚುತನ ನಿನಗೆಲ್ಲಿ ಬಂದಿತು? ಈ ಬಗೆಯ ಯುದ್ಧದ ತಾಮಸ ಗುಣ ನಿನಗೆ ಎಲ್ಲಿಯದು ? ರಾಮಾವತಾರಿಯಾದವನೇ ಕಾಪಾಡು, ಈ ಬಾಹ್ಯ ನಾಟಕ ಏತಕ್ಕೆ ಎಂದನು.
ಪದಾರ್ಥ (ಕ.ಗ.ಪ)
ಭುವನಸ್ತೋಮ-ಬ್ರಹ್ಮಾಂಡ, ರೋಮ-ಕೂದಲು, ನಿಸ್ಸೀಮತನ-ಆದ್ಯಂತರಹಿತ, ಮರುಳುತನ-ಹುಚ್ಚುತನ, ಬಯಲಿನ ಆಡಂಬರ-ಬೂಟಾಟಿಕೆ (ಬಾಹ್ಯ ನಾಟಕ)
ಮೂಲ ...{Loading}...
ರೋಮ ರೋಮದೊಳಖಿಲ ಭುವನ
ಸ್ತೋಮ ನಲಿದಾಡುವುದು ಗಡ ನಿ
ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ
ಈ ಮರುಳುತನವೆತ್ತಲೀ ರಣ
ತಾಮಸಿಕೆ ತಾನೆತ್ತಣದು ರಘು
ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ ॥40॥
೦೪೧ ನೀನು ಖತಿಯನು ...{Loading}...
ನೀನು ಖತಿಯನು ಹಿಡಿಯೆ ನಿನ್ನ ಸ
ಘಾನತನವನು ಬಲ್ಲೆ ಯೋಗಿಗ
ಳೇನನೆಂಬರು ತಮ್ಮೊಳಗೆ ಕೈಹೊಯ್ದು ಮಿಗೆ ನಗುತ
ಮಾನವರು ಕಡುಮೂರ್ಖರೆಂದೇ
ಮಾನಗರ್ವವ ತಳೆದ ಸಾಕಿ
ನ್ನೇನ ಹೇಳುವೆ ನಿನ್ನ ಠಕ್ಕನು ಬಲ್ಲೆ ಹೋಗೆಂದ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಕೋಪ ತಾಳಿದರೆ ನಿನ್ನ ದೊಡ್ಡಸ್ತಿಕೆ (ಘನತೆ) ಏನೆಂದು ನಾನು ಬಲ್ಲೆ. ಯೋಗಿಗಳು ತಮ್ಮ ತಮ್ಮಲ್ಲೆ ಚಪ್ಪಾಳೆ ತಟ್ಟಿ ನಗುತ್ತಾ ಏನೆಂದು ಮಾತಾಡಿಕೊಳ್ಳುತ್ತಾರೆ ಬಲ್ಲೆಯಾ ! ಮಾನವರು ಶುದ್ಧ ಮೂರ್ಖರೆಂದು ನೀನು ಭಾವಿಸಿ ಅವರಂತೆಯೇ ನೀನು ಮಾನವ ಸಹಜ ಅಹಂಕಾರವನ್ನು ತಳೆದಿದ್ದು ಸಾಕು. ಇನ್ನೆಷ್ಟು ಹೇಳಲಿ ! ನಿನ್ನ ಕಪಟನಾಟಕವನ್ನು ಬಲ್ಲೆ ಹೋಗು ಎಂದ.
ಪದಾರ್ಥ (ಕ.ಗ.ಪ)
ಸಘಾನತನ-ದೊಡ್ಡಸ್ತಿಕೆ, (ಘನತೆ) ಕೈಹೊಯ್ದು-ಚಪ್ಪಾಳೆತಟ್ಟಿ, ಮಾನ, ಗರ್ವ-ಮಾನ, ಸಹಜ ಅಹಂಕಾರ, ಠಕ್ಕು-ಕಪಟನಾಟಕ
ಮೂಲ ...{Loading}...
ನೀನು ಖತಿಯನು ಹಿಡಿಯೆ ನಿನ್ನ ಸ
ಘಾನತನವನು ಬಲ್ಲೆ ಯೋಗಿಗ
ಳೇನನೆಂಬರು ತಮ್ಮೊಳಗೆ ಕೈಹೊಯ್ದು ಮಿಗೆ ನಗುತ
ಮಾನವರು ಕಡುಮೂರ್ಖರೆಂದೇ
ಮಾನಗರ್ವವ ತಳೆದ ಸಾಕಿ
ನ್ನೇನ ಹೇಳುವೆ ನಿನ್ನ ಠಕ್ಕನು ಬಲ್ಲೆ ಹೋಗೆಂದ ॥41॥
೦೪೨ ಶತ ಪಿತಾಮಹರಡಗರೇ ...{Loading}...
ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಮನಸ್ಸು ಮಾಡಿದರೆ ನೂರು ಬ್ರಹ್ಮರು ಲಯವಾಗುವರಲ್ಲವೇ ಅಥವಾ ಹುಬ್ಬು ಹಾರಿಸಿದರೆ ಸಾಕು ಕೋಟಿ ಬ್ರಹ್ಮರು ಸೃಷ್ಟಿಯಾಗುವರು ಅಲ್ಲವೇ ? ನೀನು ಅಂಥಾ ಮಹಾಮಹಿಮಾವಂತನು, ಅತಿಗೂಢನು ಎಂಬ ಹಿರಿಮೆಗೆ ಈ ರೀತಿಯ ವರ್ತನೆ ಅಸಹಜವಲ್ಲವೇ ? ಕೃಷ್ಣ ನನ್ನಾಣೆಯಿದೆ ಹೇಳು ಎಂದ.
ಪದಾರ್ಥ (ಕ.ಗ.ಪ)
ಪಿತಾಮಹರು-ಬ್ರಹ್ಮರು, ಮತಿಮುರಿದರೆ-ಮನಸ್ಸು ಮಾಡಿದರೆ, ಅಗ್ಗಳಿಕೆ-ಹಿರಿಮೆ, ಕೃತಕ-ಅಸಹಜ.
ಮೂಲ ...{Loading}...
ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ ॥42॥
೦೪೩ ದೇವ ನೀ ...{Loading}...
ದೇವ ನೀ ದಿಟ ಕೊಲುವಡೆಯು ನಾ
ಸಾವೆನೇ ತಾನಾವನೆಂಬುದ
ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ
ದೇವನಾಮದ ಜೋಡು ನಮ್ಮನು
ಕಾವುದೈ ನೀ ಮುನಿದಡೆಯು ನಿಮ
ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿ, ನೀವು ನಿಜಕ್ಕೂ ನನ್ನನ್ನು ಕೊಲ್ಲಬೇಕೆಂದು ಸಂಕಲ್ಪಿಸಿದರೂ ನಾನು ಸಾಯುವನೇ ? ನಾನು ಯಾವಾಗ ಸಾಯುವೆನೆಂಬುದನ್ನು ದೇವರಾದ ನೀನು ತಿಳಿದಿರುವೆ ಅಲ್ಲವೇ. ಸುಮ್ಮನೆ ಉಕ್ಕಿ ಬಂದ ಕೋಪದಿಂದ ಏನಾಗುತ್ತದೆ! ನಿನ್ನ ನಾಮಸ್ಮರಣೆಯೆಂಬ ಕವಚ, ಭಕ್ತರಾದ ನಮ್ಮನ್ನು ಕಾಪಾಡುತ್ತದೆ. ಹೀಗಿರುವುದರಿಂದ ನೀನು ಕೋಪಗೊಂಡರೂ ನಾವು ಅಂಜುವುದಿಲ್ಲ. (ಹೀಗೆಂದ ಮಾತ್ರಕ್ಕೆ ನಾವು ಅತಿಬಲಶಾಲಿಗಳು ಎಂದಲ್ಲ) ನಿನ್ನ ಹೆಸರಿನ ಸ್ಮರಣೆಯಿಂದ ಮಾತ್ರ ಅಸದೃಶ ಶಕ್ತಿಯುಳ್ಳವರು ನಾವು ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ಸಂಭಿನ್ನ ರೋಷ-ಉಕ್ಕಿ ಬಂದ ಕೋಪ, ದೇವನಾಮದ ಜೋಡು-=ನಾಮಸ್ಮರಣೆಯೆಂಬ ಕವಚ,
ನಾಮಧಾರಿಗಳು-ನಾಮಸ್ಮರಣೆಯಭಕ್ತರು,
ಮೂಲ ...{Loading}...
ದೇವ ನೀ ದಿಟ ಕೊಲುವಡೆಯು ನಾ
ಸಾವೆನೇ ತಾನಾವನೆಂಬುದ
ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ
ದೇವನಾಮದ ಜೋಡು ನಮ್ಮನು
ಕಾವುದೈ ನೀ ಮುನಿದಡೆಯು ನಿಮ
ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ ॥43॥
೦೪೪ ಭಙ್ಗವಲ್ಲಿದು ನಿನ್ನ ...{Loading}...
ಭಂಗವಲ್ಲಿದು ನಿನ್ನ ಘನತೆಗೆ
ಡಿಂಗರಿಗರೇ ಮಿಗಿಲು ನಿನಗೆಯು
ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ
ಮಂಗಳಾತ್ಮಕ ಕೇಳು ನಿನ್ನಯ
ಹಂಗನೊಲ್ಲೆನು ಮುಕುತಿ ಪಥದೊಳ
ಭಂಗಪೆಂಡೆಯದಾಳಲೈ ನಿಮ್ಮಡಿಯ ಸಿರಿನಾಮ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಾ, ನನ್ನ ಬಾಣಗಳಿಂದ ನಿನ್ನನ್ನು ನೋಯಿಸಿದ್ದು ನಿನ್ನ ಗೌರವಕ್ಕೆ ಧಕ್ಕೆ ತರುವಂಥದ್ದಲ್ಲ. ಏಕೆಂದರೆ ನಿನಗಿಂತಲೂ ನಿನ್ನ ಭಕ್ತರೇ ಅಧಿಕರು, ಭಕ್ತರೇ ಶಕ್ತರು. ಈ ವಿಷಯದಲ್ಲಿ ಸಂಕೋಚವೇಕೆ ? ಮಂಗಳ ಮೂರ್ತಿಯೇ ಕೇಳು, ನಿಮ್ಮ ನೆನೆವ ನಾಮದ ಸಿರಿ, ಮುಕುತಿ ಮಾರ್ಗದಲ್ಲಿ ನಿರ್ಭಯದ ಸಾಧನವೆಸಿಸಿದ ಬಿರುದಿನ ಅಭಂಗಪೆಂಡೆಯ ಆಭರಣವಾಗಿದೆ.
ಪದಾರ್ಥ (ಕ.ಗ.ಪ)
ಡಿಂಗರಿಗ-ಭಕ್ತ, ದಾಕ್ಷಿಣ್ಯ-ಹಂಗು, ಸಿರಿನಾಮ-ಮಂಗಳಕರ ನಾಮಸ್ಮರಣೆ, ಮುಕುತಿ-ಮೋಕ್ಷ, ಅಭಂಗಪೆಂಡೆಯ-ರಕ್ಷಾ ಸಾಧನ, ಪಾದದಾಭರಣ
ಮೂಲ ...{Loading}...
ಭಂಗವಲ್ಲಿದು ನಿನ್ನ ಘನತೆಗೆ
ಡಿಂಗರಿಗರೇ ಮಿಗಿಲು ನಿನಗೆಯು
ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ
ಮಂಗಳಾತ್ಮಕ ಕೇಳು ನಿನ್ನಯ
ಹಂಗನೊಲ್ಲೆನು ಮುಕುತಿ ಪಥದೊಳ
ಭಂಗಪೆಂಡೆಯದಾಳಲೈ ನಿಮ್ಮಡಿಯ ಸಿರಿನಾಮ ॥44॥
೦೪೫ ಕಳುಹಿ ಕಳೆವುದು ...{Loading}...
ಕಳುಹಿ ಕಳೆವುದು ಖಾತಿಯನು ನೀ
ನುಳುಹಿಕೊಂಬುದು ತೇಜವನು ದಿಟ
ಕೊಲುವ ಮನವೇ ಬಿಸುಡು ಚಕ್ರವನೆನ್ನ ಕಾಯದಲಿ
ಅಳುಕಿ ಕೂದಲು ಹರಿದುದಾದರೆ
ಬಳಿಕ ನಾ ಡಿಂಗರಿಗನಲ್ಲೀ
ಕಳಕಳಕೆ ನಾನಂಜುವವನೇ ದೇವ ಮರಳೆಂದ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪವನ್ನು ದೂರ ಮಾಡು. ಭಕ್ತರನ್ನು ರಕ್ಷಿಸುವ ಶಕ್ತಿಯ ತೇಜಸ್ಸನ್ನು ಉಳಿಸಿಕೋ ನೀನು. ನಿಜಕ್ಕೂ ನಿನಗೆ ನನ್ನನ್ನು ಕೊಲ್ಲುವ ಮನಸ್ಸಿದೆಯೆ ? ಕೊಲ್ಲ ಬೇಕೆಂದಿರುವೆಯೊ ? ಹಾಗಾದರೆ ನಿನ್ನ ಸುದರ್ಶನ ಚಕ್ರವನ್ನು ನನ್ನ ಮೈಮೇಲೆ ಪ್ರಯೋಗಿಸು. ನಾನು ಹೆದರಿ ನನ್ನ ಮೈಯ ಒಂದು ಕೂದಲಾದರೂ ಕೊಂಕಿದರೆ ಆಮೇಲೆ ನಾನು ನಿನ್ನ ಭಕ್ತನೇ ಅಲ್ಲ ಎಂದು ತಿಳಿ. ಈ ನಿನ್ನ ಕೋಲಾಹಲಕ್ಕೆ ನಾನು ಹೆದರತಕ್ಕವನೇ ಸ್ವಾಮಿ, ಹಿಂದಿರುಗಿ ಎಂದನು.
ಪದಾರ್ಥ (ಕ.ಗ.ಪ)
ಖಾತಿ-ಕೋಪ, ತೇಜ-ರಕ್ಷಿಸುವ ಶಕ್ತಿ, ಡಿಂಗರಿಗ-ಭಕ್ತ ಕಳಕಳ-ಕೋಲಾಹಲ
ಪಾಠಾನ್ತರ (ಕ.ಗ.ಪ)
ಕಳುಹಿ ಕಳೆದವು - ಕಳುಹಿ ಕಳೆವುದು
-ಡಿ ಎಲ್ ಎನ್
ಮೂಲ ...{Loading}...
ಕಳುಹಿ ಕಳೆವುದು ಖಾತಿಯನು ನೀ
ನುಳುಹಿಕೊಂಬುದು ತೇಜವನು ದಿಟ
ಕೊಲುವ ಮನವೇ ಬಿಸುಡು ಚಕ್ರವನೆನ್ನ ಕಾಯದಲಿ
ಅಳುಕಿ ಕೂದಲು ಹರಿದುದಾದರೆ
ಬಳಿಕ ನಾ ಡಿಂಗರಿಗನಲ್ಲೀ
ಕಳಕಳಕೆ ನಾನಂಜುವವನೇ ದೇವ ಮರಳೆಂದ ॥45॥
೦೪೬ ನಚ್ಚಿದಾಳಿನ ಬಿನ್ನಹಕೆ ...{Loading}...
ನಚ್ಚಿದಾಳಿನ ಬಿನ್ನಹಕೆ ಹರಿ
ಮೆಚ್ಚಿ ಮನದಲಿ ನಾಚಿ ಚಕ್ರವ
ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ
ಹಚ್ಚಿಕೊಟ್ಟನು ವೀರಭೀಷ್ಮನ
ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ತನ್ನಲ್ಲಿ ಗಾಢಭಕ್ತಿಯುಳ್ಳ ಭೀಷ್ಮನ ಕೋರಿಕೆಗೆ ಸಂತೋಷಗೊಂಡು, ಇಂಥ ಭಕ್ತನ ಮೇಲೆ ಸಿಟ್ಟಾಗಿದ್ದಕ್ಕೆ ನಾಚಿಕೊಂಡು, ತನ್ನ ಚಕ್ರಾಯುಧವನ್ನು ಮರೆಮಾಡಿದನು. ಅರ್ಜುನನ ರಥದ ಬಳಿಗೆ ಹಿಂದಿರುಗಿದನು. ದಿಗಿಲುಗೊಂಡು ಹೆದರುತ್ತಿದ್ದ ತನ್ನ ಸೇನೆಯವರಿಗೆ ಧೈರ್ಯವನ್ನು ತಂದುಕೊಟ್ಟನು. ಶೂರಭೀಷ್ಮನ ದೃಢವಾದ ಭಕ್ತಿಯನ್ನು ಮತ್ತೆ ಮತ್ತೆ ನೆನೆಯುತ್ತಾ ಶ್ರೀಕೃಷ್ಣನು ತಲೆದೂಗಿದನು.
ಪದಾರ್ಥ (ಕ.ಗ.ಪ)
ನಚ್ಚಿದ-ಗಾಢಭಕ್ತಿಯುಳ್ಳ, ಮುಚ್ಚಿದನು-ಮರೆಮಾಡಿದನು, ಹೊರಗೆ-ಬಳಿಗೆ, ಮುರಿದನು-ಹಿಂದಿರುಗಿದನು, ಹಚ್ಚಿಕೊಟ್ಟನು-ತಂದುಕೊಟ್ಟನು, ನಿಚ್ಚಟದ-ದೃಢವಾದ, ಶಿರವ ಒಲೆದ-ತಲೆದೂಗಿದನು, ಅಚ್ಚರಿಪಟ್ಟನು.
ಮೂಲ ...{Loading}...
ನಚ್ಚಿದಾಳಿನ ಬಿನ್ನಹಕೆ ಹರಿ
ಮೆಚ್ಚಿ ಮನದಲಿ ನಾಚಿ ಚಕ್ರವ
ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ
ಹಚ್ಚಿಕೊಟ್ಟನು ವೀರಭೀಷ್ಮನ
ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ ॥46॥
೦೪೭ ಹೋದುದೊನ್ದಪಮೃತ್ಯು ಲೋಕಕೆ ...{Loading}...
ಹೋದುದೊಂದಪಮೃತ್ಯು ಲೋಕಕೆ
ತೀದುದಿಲ್ಲಾಯುಷ್ಯ ಮಹದಪ
ವಾದ ದೇವಂಗಾಗಿ ತಪ್ಪಿತು ಮುಚ್ಚು ಮರೆಯೇಕೆ
ಕಾದುಕೊಂಡನು ಭೀಷ್ಮನೀ ಕಮ
ಲೋದರನ ಕೆರಳಿಚಿಯು ಭಕುತಿಯ
ಲಾದರಿಸಿದನು ಪುಣ್ಯವೆಂದನು ಕಮಲಭವ ನಗುತ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಂದರ್ಭವನ್ನೆಲ್ಲಾ ಆಕಾಶದಲ್ಲಿದ್ದು ನೋಡುತ್ತಿದ್ದ ಬ್ರಹ್ಮನು ಪ್ರಪಂಚಕ್ಕೆ ಒದಗಿದ್ದ ಒಂದು ಘೋರ ಅಕಾಲಮರಣ ತಪ್ಪಿತು, ಪ್ರಪಂಚದ ಆಯುಷ್ಯ ಮುಗಿದು ಹೋಗಲಿಲ್ಲ. ಶ್ರೀಕೃಷ್ಣನಿಗೆ ರಣರಂಗದಲ್ಲಿ ಶಸ್ತ್ರವನ್ನು ಪ್ರಯೋಗಿಸುವುದಿಲ್ಲ ಮತ್ತು ಭಕ್ತರನ್ನು ವಧಿಸುವುದಿಲ್ಲ ಎಂಬ ಮಾತು ತಪ್ಪಿದ್ದರಿಂದ ಬರುತ್ತಿದ್ದ ಲೋಕನಿಂದನೆ ತಪ್ಪಿತು, ಮರೆಮಾಡುವುದೇನಿದೆ ? ಈ ಭೀಷ್ಮನು ಶ್ರೀಕೃಷ್ಣನನ್ನು ಸಿಟ್ಟಿಗೇಳಿಸಿದರೂ, ಅವನನ್ನು ಅಪವಾದದಿಂದ ತಪ್ಪಿಸಿ ತನ್ನನ್ನು ರಕ್ಷಿಸಿಕೊಂಡನು, ಭಕ್ತಿಯಿಂದ ಕೃಷ್ಣನನ್ನು ಗೌರವಿಸಿದನು. ಬ್ರಹ್ಮನು ಮಂದಸ್ಮಿತನಾಗಿ ಹೀಗಾದುದು ಜಗತ್ತಿನ ಪುಣ್ಯದಿಂದಲ್ಲದೆ ಬೇರಲ್ಲ ಎಂದನು.
ಪದಾರ್ಥ (ಕ.ಗ.ಪ)
ತೀದುದು-ಮುಗಿದುದು, ಅಪಮೃತ್ಯು-ಅಕಾಲಮರಣ, ಮಹದಪವಾದ-ಲೋಕನಿಂದೆ, ಜನಾಪವಾದ, ಕೆರಳಿಚಿಯು-ಕೆರಳಿಸಿಯೂ, ಸಿಟ್ಟುಗೊಳಿಸಿದರೂ, ಕಮಲಭವ-ಬ್ರಹ್ಮನು
ಮೂಲ ...{Loading}...
ಹೋದುದೊಂದಪಮೃತ್ಯು ಲೋಕಕೆ
ತೀದುದಿಲ್ಲಾಯುಷ್ಯ ಮಹದಪ
ವಾದ ದೇವಂಗಾಗಿ ತಪ್ಪಿತು ಮುಚ್ಚು ಮರೆಯೇಕೆ
ಕಾದುಕೊಂಡನು ಭೀಷ್ಮನೀ ಕಮ
ಲೋದರನ ಕೆರಳಿಚಿಯು ಭಕುತಿಯ
ಲಾದರಿಸಿದನು ಪುಣ್ಯವೆಂದನು ಕಮಲಭವ ನಗುತ ॥47॥
೦೪೮ ನಡುಗುವರ್ಜುನದೇವನನು ತೆಗೆ ...{Loading}...
ನಡುಗುವರ್ಜುನದೇವನನು ತೆಗೆ
ದಡಿಗಡಿಗೆ ತಕ್ಕೈಸಿ ಭೀತಿಯ
ಬಿಡಿಸಿ ವಾಘೆಯ ಕೊಂಡು ತುರಗವನೆಡಬಲಕೆ ತಿರುಹಿ
ನಡಸಿದನು ಕಾಳೆಗಕೆ ಬಳಿಕವ
ಗಡ ಮುರಾಂತಕ ಮರಳಿ ಚಕ್ರವ
ತುಡುಕದಿರನೆಂದಸ್ತಗಿರಿಯನು ಸೂರ್ಯ ಮರೆಗೊಂಡ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಕ್ಕೆ ಸಾಹಸಿ ಕೃಷ್ಣನು ಮರಳಿ ಬಂದ ಮೇಲೆ ಮುಂದೇನು ಆದೀತು ಎಂದು ಹೆದರಿ ನಡುಗುತ್ತಿದ್ದ ಅರ್ಜುನನನ್ನು ಹಿಡಿದು ಕೊಂಡು ಬಾರಿಬಾರಿಗೂ ಅಪ್ಪಿಕೊಂಡು, ಹೆದರಿಕೆಯನ್ನು ಹೋಗಲಾಡಿಸಿ, ರಥಹತ್ತಿ ಕುದುರೆಗಳ ಲಗಾಮುಗಳನ್ನು ಹಿಡಿದುಕೊಂಡು ಕುದುರೆಗಳನ್ನು ಅತ್ತಿತ್ತ ಚಲಿಸಿ ಮುಂದೆ ಸಾಗಿದನು. ಮತ್ತೆ ಶ್ರೀಕೃಷ್ಣ ಚಕ್ರಾಯುಧನನ್ನು ಹಿಡಿದೇ ಹಿಡಿಯುತ್ತಾನೆ. ಎಂದು ಸೂರ್ಯ ಪಶ್ಚಿಮ ಗಿರಿಯಲ್ಲಿ ಮರೆಯಾದನು (ಸೂರ್ಯ ಮುಳುಗಿದನು ಕತ್ತಲಾಯಿತು)
ಪದಾರ್ಥ (ಕ.ಗ.ಪ)
ಅವಗಡ-ಸಾಹಸ, ಪರಾಕ್ರಮ, ಮುರಾಂತಕ-ಶ್ರೀಕೃಷ್ಣನು, ತಕ್ಕೈಸಿ-ಆಲಿಂಗಿಸಿ, ಅಪ್ಪಿಕೊಂಡು, ವಾಘೆ-ಲಗಾಮು , ಅಸ್ತಗಿರಿ-ಪಶ್ಚಿಮದಿಕ್ಕು, ತುಡುಕು-ಹಿಡಿ, ಮರೆಗೊಂಡ-ಮುಳುಗಿದನು.
ಮೂಲ ...{Loading}...
ನಡುಗುವರ್ಜುನದೇವನನು ತೆಗೆ
ದಡಿಗಡಿಗೆ ತಕ್ಕೈಸಿ ಭೀತಿಯ
ಬಿಡಿಸಿ ವಾಘೆಯ ಕೊಂಡು ತುರಗವನೆಡಬಲಕೆ ತಿರುಹಿ
ನಡಸಿದನು ಕಾಳೆಗಕೆ ಬಳಿಕವ
ಗಡ ಮುರಾಂತಕ ಮರಳಿ ಚಕ್ರವ
ತುಡುಕದಿರನೆಂದಸ್ತಗಿರಿಯನು ಸೂರ್ಯ ಮರೆಗೊಂಡ ॥48॥