೦೦೦ ಸೂ ಉಭಯಬಲದತಿರಥ ...{Loading}...
ಸೂ. ಉಭಯಬಲದತಿರಥ ಮಹಾರಥ
ವಿಭುಗಳುರೆ ಹಳಚಿದರು ರಣದಲಿ
ತ್ರಿಭುವನವು ರಂಜಿಸಿತು ಸವೆದುದು ಸಕಲ ಸನ್ನಾಹ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವ-ಪಾಂಡವ ಸೇನೆಗಳಲ್ಲಿ ಇದ್ದ ಅತಿರಥ ಮಹಾರಥ ಅರಸರು ಅಧಿಕ ಶೌರ್ಯದಿಂದ ಹೋರಾಡಿದರು. ರಣರಂಗವು ಮೂರು ಲೋಕಗಳವರನ್ನೂ ರಂಜಿಸಿತು. ಸಕಲ ಸಿದ್ಧತೆಗಳು ಪೂರ್ಣವಾದವು.
ಪದಾರ್ಥ (ಕ.ಗ.ಪ)
ಸನ್ನಾಹ-ಸಿದ್ಧತೆ, ಸವೆದುದು-ಪೂರ್ಣಗೊಂಡವು, ರಂಜಿಸಿತು-ರಂಜನೆಯನ್ನು ಕೊಟ್ಟಿತು. ಉರೆ-ಅಧಿಕ ಶೌರ್ಯದಿಂದ, ಹಳಚಿದರು-ಹೋರಾಡಿದರು, ವಿಭುಗಳು-ಅರಸರು,
ಮೂಲ ...{Loading}...
ಸೂ. ಉಭಯಬಲದತಿರಥ ಮಹಾರಥ
ವಿಭುಗಳುರೆ ಹಳಚಿದರು ರಣದಲಿ
ತ್ರಿಭುವನವು ರಂಜಿಸಿತು ಸವೆದುದು ಸಕಲ ಸನ್ನಾಹ
೦೦೧ ಅಳಿದುದೆರಡರ ಚೂಣಿ ...{Loading}...
ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರೆ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೇನೆ ನಾಶವಾಯಿತು ಮುಂಭಾಗದಲ್ಲಿ ಧ್ವಜ ಹೊಂದಿದ ಪರಿವಾರವೆಲ್ಲ ನಾಶವಾಗಿ ರಕ್ತದ ಕಡಲಾಯಿತು. ರಾಶಿ ರಾಶಿ ಮಾಂಸಖಂಡಗಳು ಕರುಳ ಗೊಂಚಲುಗಳು, ಕೆಸರಿನಂತೆ ಒಸರಿದ ಮಜ್ಜೆ ಮಾಂಸಗಳು, ಮಿದುಳುಗಳು, ರಣರಂಗದಲ್ಲಿ ಎಲ್ಲೆಡೆ ಹರಡಿದ ಹೆಣದ ರಾಶಿಗಳು ತುಂಬಿರುವ ರಣರಂಗದಲ್ಲಿ ಮುನ್ನುಗ್ಗಲು ಸಾಮಂತರಾಜರು ಅಳುಕಿದರು. ಅನಂತರ ಹಿಂದಿನರ್ಧ ಭಾಗದಲ್ಲಿದ್ದ ಸೇನೆಯ ನಿಸ್ಸಾಳ ವಾದ್ಯ ಸಮೂಹ ಭೋರ್ಗರೆದವು.
ಪದಾರ್ಥ (ಕ.ಗ.ಪ)
ಒಬ್ಬುಳಿ-ರಾಶಿರಾಶಿ, ಕಳ-ರಣರಂಗ, ಮನ್ನೆಯ-ಸಾಮಂತರಾಜರು, ದೊಂಡೆ-ಗೊಂಚಲು, ಒಟ್ಟಿಲು-ರಾಶಿ, ಮೊಗಸುವಡೆ-ಮುನ್ನುಗ್ಗಲು, ಅರೆನೆಲೆ-ಹಿಂಭಾಗದ ಸೇನೆ
ಮೂಲ ...{Loading}...
ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರೆ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು ॥1॥
೦೦೨ ನರನ ರಥ ...{Loading}...
ನರನ ರಥ ಕುಣಿದುದು ಯುಧಿಷ್ಠಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ರಥ ಚಿಮ್ಮಿತು. ಧರ್ಮರಾಜನ ಶ್ರೇಷ್ಠ ರಥವು ಗಟ್ಟಿಯಾಗಿ ಚೀತ್ಕಾರ ಮಾಡಿತು. ಭೀಮನ ರಥವು ಮುಂದೆ ಸಾಗುತ್ತಿರಲು, ರಭಸದಲ್ಲಿ ನಕುಲ ಸಹದೇವರ ರಥಗಳು ಮುನ್ನುಗ್ಗಲು ಅಭಿಮನ್ಯು ಸಾತ್ಯಕಿಯರು ಕೂಡಲೆ ಇತ್ತಕಡೆ ಸಮರ ಕಾರ್ಯಕ್ಕೆ ಸನ್ನದ್ಧರಾದರು.
ಪದಾರ್ಥ (ಕ.ಗ.ಪ)
ಉರು-ಶ್ರೇಷ್ಠ, ವರೂಥ-ರಥ, ಸ್ಯಂದನ-ತೇರು, ಸಗಾಢದೊಳು-ಗಟ್ಟಿಯಾಗಿ, ಅನಿಲಾತ್ಮಜ-ಭೀಮ, ಮಾದ್ರೀಸುತರು-ನಕುಲ ಸಹದೇವರು, ರವಣಿಸಲು-ಮುನ್ನುಗ್ಗಲು, ಉದ್ಯೋಗ ಕೈಕೊಳು-ಯುದ್ಧಕ್ಕೆ ಸಿದ್ಧರಾದರು.
ಮೂಲ ...{Loading}...
ನರನ ರಥ ಕುಣಿದುದು ಯುಧಿಷ್ಠಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ ॥2॥
೦೦೩ ವಿನುತ ಭೀಷ್ಮನು ...{Loading}...
ವಿನುತ ಭೀಷ್ಮನು ಗಜರೆ ದುರಿಯೋ
ಧನನು ಬಿಲುಗೊಳಲಾತನನುಜರು
ಧನುವ ತುಡುಕೆ ಸುಶರ್ಮ ಶಲ್ಯರು ಸರಳ ಹೊದೆಗೆದರೆ
ಮೊನೆಗಣೆಯನಳವಡಿಸೆ ಗುರು ಗುರು
ತನುಜನಸ್ತ್ರವ ತಿರುಹೆ ಸೇನಾ
ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಸನ್ನುತರಾದ ಭೀಷ್ಮರು ಗರ್ಜಿಸಲು ದುರ್ಯೋಧನ ಬಿಲ್ಲು ಹಿಡಿಯಲು ಅವನ ಸೋದರರು ಬಿಲ್ಲುಗಳನ್ನು ಹಿಡಿಯಲು, ಸುಶರ್ಮ, ಶಲ್ಯರು ಬಾಣಗಳನ್ನು ಬತ್ತಳಿಕೆಯಿಂದ ತೆಗೆದು ಬಿಲ್ಲಿಗೆ ಹೂಡಲು, ದ್ರೋಣನು ಚೂಪಾದ ಬಾಣಗಳನ್ನು ಸಿದ್ಧಪಡಿಸಿಕೊಳ್ಳಲು, ಅಶ್ವತ್ಥಾಮನು ಅಸ್ತ್ರಗಳನ್ನು ಹೂಡಲು, ಸೇನಾ ಸಾಗರವು ತುಮುಲಯುದ್ಧವನ್ನು ಸಂಭ್ರಮದಿಂದ ಘೋಷಿಸಿತು.
ಟಿಪ್ಪನೀ (ಕ.ಗ.ಪ)
ಸಂಕುಲ ಸಮರ-ತುಮುಲ ಯುದ್ಧ, ಗೊಂಚಲ ಯುದ್ಧ, ನೂಂಕಲ ಯುದ್ಧ, ಯುದ್ಧ ನಿಯಮ ಮೀರಿ, ಅಂತಿಮಮಟ್ಟದಲ್ಲಿ ಹೋರಾಡುವುದು, (ವಿವರಗಳು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧ ಕಲೆ ಗ್ರಂಥ ಪು 227)
ಮೂಲ ...{Loading}...
ವಿನುತ ಭೀಷ್ಮನು ಗಜರೆ ದುರಿಯೋ
ಧನನು ಬಿಲುಗೊಳಲಾತನನುಜರು
ಧನುವ ತುಡುಕೆ ಸುಶರ್ಮ ಶಲ್ಯರು ಸರಳ ಹೊದೆಗೆದರೆ
ಮೊನೆಗಣೆಯನಳವಡಿಸೆ ಗುರು ಗುರು
ತನುಜನಸ್ತ್ರವ ತಿರುಹೆ ಸೇನಾ
ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ ॥3॥
೦೦೪ ಶಕುನಿ ಸಹದೇವನೊಳು ...{Loading}...
ಶಕುನಿ ಸಹದೇವನೊಳು ಶಲ್ಯನು
ನಕುಲನೊಳು ದುಶ್ಯಾಸನನು ಸಾ
ತ್ಯಕಿಯೊಡನೆ ಸೈಂಧವನು ಕುಂತೀಭೋಜ ಭೂಪನೊಳು
ಸಕಲ ನಾಯಕರಂದು ಯುದ್ಧೋ
ದ್ಯುಕುತರಾದರು ಕೇಳು ನೃಪ ತಾ
ವಕರ ಕೌಂತೇಯರ ಸಮಗ್ರಾಹವದ ವಿಸ್ತರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಸಹದೇವನೊಡನೆ, ಶಲ್ಯನು ನಕುಲನೊಂದಿಗೆ, ದುಶ್ಶಾಸನನು ಸಾತ್ಯಕಿಯೊಡನೆ, ಸೈಂಧವನು ಕುಂತೀಭೋಜನೊಡನೆ, ಹೀಗೆ ಸಮಸ್ತ ನಾಯಕರೂ ಅಂದು ಯುದ್ಧ ಮಗ್ನರಾದರು. ನಮ್ಮವರು ಮತ್ತು ಪಾಂಡವರು ಯುದ್ಧದಲ್ಲಿ ನಿರತರಾದ ವಿವರವನ್ನು ಕೇಳುವಂಥವನಾಗು ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ತಾವಕರ-ನಮ್ಮವರ, ಯುದ್ಧೋದ್ಯುಕ್ತರು -ಯುದ್ಧ ಮಗ್ನರು, ಆಹವದ ವಿಸ್ತರ-ಯುದ್ಧದ ಸಮಗ್ರ ವಿವರ
ಮೂಲ ...{Loading}...
ಶಕುನಿ ಸಹದೇವನೊಳು ಶಲ್ಯನು
ನಕುಲನೊಳು ದುಶ್ಯಾಸನನು ಸಾ
ತ್ಯಕಿಯೊಡನೆ ಸೈಂಧವನು ಕುಂತೀಭೋಜ ಭೂಪನೊಳು
ಸಕಲ ನಾಯಕರಂದು ಯುದ್ಧೋ
ದ್ಯುಕುತರಾದರು ಕೇಳು ನೃಪ ತಾ
ವಕರ ಕೌಂತೇಯರ ಸಮಗ್ರಾಹವದ ವಿಸ್ತರವ ॥4॥
೦೦೫ ಕಣೆಗೆದರಿ ದ್ರುಪದಾಙ್ಕ ...{Loading}...
ಕಣೆಗೆದರಿ ದ್ರುಪದಾಂಕ ಗುರುವನು
ಕೆಣಕಿದನು ತತ್ತನುಜ ಭೀಷ್ಮನ
ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು
ರಣಕೆ ಕರೆದನು ಕೌರವಾನುಜ
ಗಣವನನಿಲತನೂಜನಿತ್ತಲು
ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದ ವೀರನು ಬಾಣ ಹೂಡಿ, ಗುರುದ್ರೋಣಾಚಾರ್ಯನನ್ನು ಕೆರಳಿಸಿದನು, ಅವನ ಮಗ (ಧೃಷ್ಟದ್ಯುಮ್ನನು) ಭೀಷ್ಮನನ್ನು ಕೆಣಕಿದನು. ಅಭಿಮನ್ಯು ಲಕ್ಷ್ಮಣ ಕುಮಾರನನ್ನು ಹೀಯಾಳಿಸಿದನು. ಭೀಮನು ಕೌರವನ ತಮ್ಮಂದಿರೆಲ್ಲರನ್ನು ಯುದ್ಧಕ್ಕೆ ಆಹ್ವಾನಿಸಿದನು. ಇತ್ತಕಡೆ ಭಗದತ್ತನೂ ಭೀಮ ಪುತ್ರರೂ ಕೆರಳಿ ಮೇಲೆ ಬಿದ್ದು ಹೆಣಗಾಡಿದರು.
ಪದಾರ್ಥ (ಕ.ಗ.ಪ)
ಅವಗಡಿಸಿ-ಕೆರಳಿ ಮೇಲೆ ಬಿದ್ದು, ಮೂದಲಿಸು-ಹೀಯಾಳಿಸು, ತತ್ತನುಜ-ಅವನ (ಇಲ್ಲಿ ದ್ರುಪದನ) ಮಗ, ಧೃಷ್ಟದ್ಯುಮ್ನ, ಗುರು-ದ್ರೋಣ, ಅನಿಲ ತನೂಜನು-ಭೀಮನು
ಮೂಲ ...{Loading}...
ಕಣೆಗೆದರಿ ದ್ರುಪದಾಂಕ ಗುರುವನು
ಕೆಣಕಿದನು ತತ್ತನುಜ ಭೀಷ್ಮನ
ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು
ರಣಕೆ ಕರೆದನು ಕೌರವಾನುಜ
ಗಣವನನಿಲತನೂಜನಿತ್ತಲು
ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ ॥5॥
೦೦೬ ಕಲಹದೊಳು ಕರಿಘಟೆಯ ...{Loading}...
ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಗಜ ಸೇನೆಯನ್ನು ಹೊಡೆದೊಡೆದು ಬೇಸತ್ತು, ಕೌರವನ ಸೋದರನನ್ನು ಹಿಂದಕ್ಕೆ ಓಡಿಸಿ ಕೆರಳಿ, ಭೀಮಸೇನನು, ರಾಜ್ಯಲೋಭಿಯಾದ ದುರ್ಯೋಧನನ ದುರಾಸೆಗೆ ಮರಣವನ್ನು ವಿಧಿಸಬೇಕಾಗಿದೆ, ಕರೆ ಅವನನ್ನು, ಆ ದುರ್ಯೋಧನ ಬಂದು ಯುದ್ಧಕ್ಕೆ ನನ್ನೆದುರು ನಿಲ್ಲಲಿ ಎಂದು ಗರ್ಜಿಸುತ್ತ ತನ್ನ ಗದೆಯನ್ನು ತೂಗಿದನು.
ಪದಾರ್ಥ (ಕ.ಗ.ಪ)
ಕರಿಘಟೆ-ಗಜದಳ, ಅಲಸಿ-ಬೇಸತ್ತು, ಕೌರವ ಅನುಜನನು-ದುಶ್ಶಾಸನನನ್ನು, ಮುಂಕೊಳಿಸಿಕೊಳ್ಳದೆ-ಮುಂದಕ್ಕೆ ಬರಮಾಡಿಕೊಂಡು ಯುದ್ಧ ಮಾಡದೆ, ಅನಿಲಸುತ-ಭೀಮ, ನೆಲನಲೋಭಿಯ ಬುದ್ಧಿ-ದುರ್ಯೋಧನ ನೆಲದಾಹದ ಬುದ್ಧಿ ,ಬವರ-ಯುದ್ಧ,
ಮೂಲ ...{Loading}...
ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ ॥6॥
೦೦೭ ಭುಜವನೊದರಿಸಿ ಸಿಂಹರವದಲಿ ...{Loading}...
ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಂತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭುಜ ಕುಣಿಸಿ, ಸಿಂಹಧ್ವನಿಯಲ್ಲಿ ಗರ್ಜಿಸಿ, ಗದೆಯನ್ನು ತಿರುಗಿಸುತ್ತಾ, ಶತ್ರುರಾಜರನ್ನು ಬೆನ್ನಟ್ಟಿದನು. ತನ್ನ ಮೇಲೆ ಯುದ್ಧಕ್ಕೆ ಬಂದ ಅತಿಬಲರನ್ನು ಕೊಂದನು. ಮೂರು ಲೋಕದ ಜನರೂ ಭಲೆ ಭೇಷ್ ಎಂದು ಕೊಂಡಾಡಲು, ಭೀಮನು ಸುತ್ತಮುತ್ತ ಸುತ್ತಿ ತಿರುಗುತ್ತ ತಾವರೆಯನ್ನು ಕಿತ್ತೆಸೆಯುವ ಆನೆಯಂತೆ ಸೇನೆಯನ್ನು ನಾಶಮಾಡಿದನು ಎಂದು ಜನಮೇಜಯನಿಗೆ ವೈಶಂಪಾಯನ ಹೇಳಿದನು.
ಪದಾರ್ಥ (ಕ.ಗ.ಪ)
ತಿರುಗುತ್ತ ಇಟ್ಟಣಿಸಿ-ಸುತ್ತ ಮುತ್ತ ಸುತ್ತಿ ತಿರುಗುತ್ತ, ಕುಂಜರ-ಆನೆ, ಅಂಬುಜ-ಕಮಲ, ಅಳವಿಗೆ-ಎದುರಿಗೆ, ಗಜರಿ-ಗರ್ಜಿಸಿ, ಒದರಿಸಿ-ಕೊಡವಿ, ಕುಣಿಸಿ,
ಮೂಲ ...{Loading}...
ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಂತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ ॥7॥
೦೦೮ ನಡೆದರಾಹವಕನಿಲ ನನ್ದನ ...{Loading}...
ನಡೆದರಾಹವಕನಿಲ ನಂದನ
ನೊಡನೆ ಸಾತ್ಯಕಿ ನಕುಲ ದ್ರುಪದರು
ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ
ಗಡಣಿಸುವ ಮುಂಮೊಗದ ಕೌರವ
ಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನೊಡನೆ ಸಾತ್ಯಕಿ, ನಕುಲ, ದ್ರುಪದ ಇವರು ಯುದ್ಧಕ್ಕೆ ಹೊರಟರು. ಭೀಮನ ಮುಂಭಾಗದ ಸೇನೆಯವರು ಬಿಲ್ಲು ಬಾಣಗಳನ್ನು ಹಿಡಿದು ಸಾಗಿದರು. ಗುಂಪು ಗುಂಪಾಗಿ ಬಂದು ಸೇರಿದ್ದ ಮುಂಭಾಗದಲ್ಲಿದ್ದ ಕೌರವನ ಸೇನೆಯೆಂಬ ದಟ್ಟಡವಿಯನ್ನು ನಾಶ ಮಾಡಲು (ತರಿದು ಹಾಕಲು) ಕಡಿತಕಾರರಾದ ನಕುಲ ಅಭಿಮನ್ಯು ಇವರುಗಳು ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಕಡಿತಕಾರರು-ಕತ್ತರಿಸುವವರು, ಹೇರಡವಿ-ದಟ್ಟಡವಿ, ಸವರು-ತರಿದು ಹಾಕು, ತುಡುಕಿದರು-ಸಾಗಿದರು, ಪಾರ್ಥಜ-ಅಭಿಮನ್ಯು
ಮೂಲ ...{Loading}...
ನಡೆದರಾಹವಕನಿಲ ನಂದನ
ನೊಡನೆ ಸಾತ್ಯಕಿ ನಕುಲ ದ್ರುಪದರು
ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ
ಗಡಣಿಸುವ ಮುಂಮೊಗದ ಕೌರವ
ಪಡೆಯ ಹೇರಡವಿಯನು ಸವರಲು
ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು ॥8॥
೦೦೯ ಕಡಿದರರಿಭಟಪಾದಪವನಡ ...{Loading}...
ಕಡಿದರರಿಭಟಪಾದಪವನಡ
ಗೆಡಹಿದರು ಗಜಗಿರಿಗಳನು ರಥ
ದೆಡೆದೆವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ
ಕಡಿದು ಹರಹಿದರನಿಲಸುತ ಕಾ
ಲಿಡಲು ತೆರಹಾಯ್ತಹಿತವಿಪಿನದ
ಕಡಿತ ತೀರಿತು ಹೊಕ್ಕನರೆನೆಲೆಗಾಗಿ ಕಲಿಭೀಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳೆಂಬ ಮರಗಳನ್ನು ಕತ್ತರಿಸಿದರು. ಆನೆಗಳೆಂಬ ಬೆಟ್ಟಗಳನ್ನು ಅಡ್ಡ ಉರುಳಿಸಿದರು. ದಾರಿಗೆ ಅಡ್ಡವಾದ ರಥಗಳೆಂಬ ದಿಣ್ಣೆಗಳನ್ನು ಛಿದ್ರ ವಿಚ್ಛಿದ್ರಗೊಳಿಸಿದರು. ಕುದುರೆ ದಳವೆಂಬ ಬಿದಿರಿನ ಮೆಳೆಗಳನ್ನು ಕತ್ತರಿಸಿ ಹರಡಿದರು. ಭೀಮನು ಕಾಲಿಡಲು ಅವಕಾಶವಾಯ್ತು. ಶತ್ರುಗಳೆಂಬ ಅಡವಿಯನಾಶ ಮುಗಿಯಿತು. ಕಲಿಭೀಮನು ಹಿಂಗಾವಲಿನ ಕಡೆಗೆ ಹೊರಟನು.
ಪದಾರ್ಥ (ಕ.ಗ.ಪ)
ಪಾದಪ-ಬೇರಿನಿಂದ ನೀರು ಕುಡಿಯವು, ಗಿಡ, ಮರ ಇತ್ಯಾದಿ, ತೆವರು-ದಿಣ್ಣೆ, ತೆರಹಾಯ್ತು-ಅವಕಾಶವಾಯಿತು, ಅನಿಲಸುತ-ಭೀಮ, ಆರೆನೆಲೆ-ಹಿಂಗಾವಲಿನ ಎಡೆ, ಅಹಿತವಿಪಿನ-ಶತ್ರುಗಳೆಂಬ ಕಾಡು
ಮೂಲ ...{Loading}...
ಕಡಿದರರಿಭಟಪಾದಪವನಡ
ಗೆಡಹಿದರು ಗಜಗಿರಿಗಳನು ರಥ
ದೆಡೆದೆವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ
ಕಡಿದು ಹರಹಿದರನಿಲಸುತ ಕಾ
ಲಿಡಲು ತೆರಹಾಯ್ತಹಿತವಿಪಿನದ
ಕಡಿತ ತೀರಿತು ಹೊಕ್ಕನರೆನೆಲೆಗಾಗಿ ಕಲಿಭೀಮ ॥9॥
೦೧೦ ಎಲೆಲೆ ವಿಲಯಕೃತಾನ್ತನೋ ...{Loading}...
ಎಲೆಲೆ ವಿಲಯಕೃತಾಂತನೋ ನ
ಮ್ಮಳವು ಕೊಳ್ಳದು ಬೆಂಗೊಡಲಿ ಮುಂ
ಕೊಳಿಸದಿರಿ ಮರುಳಾಗದಿರಿ ಹುರುಳಾಗಿ ಹೆಂಡಿರಿಗೆ
ಕೊಲೆಗಡಿಗನೋ ಭೀಮನೋ ರಿಪು
ಬಲಜಲಧಿಬಡಬಾನಲನೊ ತೊಲ
ತೊಲಗೆನುತ ತೆಗೆದೋಡಿತರೆನೆಲೆ ಕೌರವನ ಹೊರೆಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಹಿಂಗಾವಲಿನ ಸೇನೆಯವರು ಇವನನ್ನು ಕಂಡು “ಎಲೆಲೆ! ಈ ಭೀಮನು ಪ್ರಳಯ ಕಾಲದ ಯಮನಾಗಿದ್ದಾನೆ. ಇವನಲ್ಲಿ ನಮ್ಮ ಶಕ್ತಿ ಸಾಮಥ್ರ್ಯ ಸರಿಗಟ್ಟದು. ಇವನ ಎದುರಿಗೆ ನಿಲ್ಲಬೇಡಿ ಮುಂದಕ್ಕೆ ಸಾಗಬೇಡಿ (ಬೆನ್ನು ತೋರಿಸೋಣ). ಹೆಂಡಂದಿರಿಗಾಗಿ ಹಿಂದಿರುಗಿರಿ. ಹುಚ್ಚುತನ ಮಾಡಬೇಡಿರಿ. ಇವನನ್ನು ಏನೆಂದು ಅಂದುಕೊಳ್ಳೋಣ ? ಕೊಲೆಗಡಿಕನೋ, ಭೀಮನೋ ಶತ್ರು ಸೇನಾ ಸಾಗರದ ಕಾಳ್ಗಿಚ್ಚೋ ? ಇವನ ಬಳಿ ಸುಳಿಯಬೇಡಿ, ದೂರಸರಿಯಿರಿ, ದೂರ ಸರಿಯಿರಿ ಎಂದು ಕೂಗಿಕೊಳ್ಳುತ್ತಾ ಹಿಂಗಾವಲಿನ ಸೇನೆ (ಅರೆನೆಲೆ) ಕೌರವನ ಹತ್ತಿರಕ್ಕೆ ದೌಡಾಯಿಸಿತು.
ಪದಾರ್ಥ (ಕ.ಗ.ಪ)
ಹೊರೆಗೆ-ಹತ್ತಿರಕ್ಕೆ, ತೆಗೆದೋಡಿತು-ದೌಡಾಯಿಸಿತು, ರಿಪುಬಲಜಲಧಿ-ಶತ್ರುಸೇನೆಯೆಂಬ ಸಾಗರ, ಮರುಳಾಗದಿರಿ-ಹುಚ್ಚುತನ ಮಾಡಬೇಡಿ, ಬೆಂಗೊಡಲಿ-ಹಿಂತಿರುಗೋಣ, ವಿಲಯ ಕೃತಾಂತ-ಪ್ರಳಯ ಕಾಲದ ಯಮ
ಮೂಲ ...{Loading}...
ಎಲೆಲೆ ವಿಲಯಕೃತಾಂತನೋ ನ
ಮ್ಮಳವು ಕೊಳ್ಳದು ಬೆಂಗೊಡಲಿ ಮುಂ
ಕೊಳಿಸದಿರಿ ಮರುಳಾಗದಿರಿ ಹುರುಳಾಗಿ ಹೆಂಡಿರಿಗೆ
ಕೊಲೆಗಡಿಗನೋ ಭೀಮನೋ ರಿಪು
ಬಲಜಲಧಿಬಡಬಾನಲನೊ ತೊಲ
ತೊಲಗೆನುತ ತೆಗೆದೋಡಿತರೆನೆಲೆ ಕೌರವನ ಹೊರೆಗೆ ॥10॥
೦೧೧ ಅದಟನಡ್ಡೈಸಿದನು ದುರುಳನಬದ ...{Loading}...
ಅದಟನಡ್ಡೈಸಿದನು ದುರುಳನಬದ
ಮದವನಳಿವೆನು ಬಾಯ ಹೊಯ್ ಹೊಯ್
ಕದನದಲಿ ನಡುಗಿಸುವ ನಾಯಕವಾಡಿಗಳನೆನುತ
ಬದಗನಿದಿರಾದನು ಜಯಶ್ರೀ
ಮದನಕಾಯನು ಕಪಟದಾಯನು
ವಿದಿತಮಾಯನು ರಣದಜೇಯನು ಕೌರವರ ರಾಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಶೂರನಾದ ದುರ್ಯೋಧನನು ಬಂದು ಭೀಮನನ್ನು ಅಡ್ಡಗಟ್ಟಿದನು. ದುಷ್ಟನ ಗರ್ವವನ್ನು ಅಳಿಸಿ ಹಾಕುವೆನು, ಬರಿಯ ಮಾತಿನ ಹೊಯ್ದಾಟದಲ್ಲಿ ಬೆದರಿಸುವ, ಸೇನಾ ನಾಯಕರನ್ನು ಬೆದರಿಸುವ, ರಣರಂಗದಲ್ಲಿ ನಮ್ಮವರನ್ನು ಹೆದರಿಸುತ್ತಿರುವ ಸೇನಾ ನಾಯಕರನ್ನು ಕೊಲ್ಲಿರಿ ಕೊಲ್ಲಿರಿ ಎನ್ನುತ್ತ, ಜಯಲಕ್ಷ್ಮಿಗೆ ಪ್ರಿಯಕರವಾದವನು, ಮೋಸಗಾರನಾದವನು, ಮಾಯಾ ಮೋಸಗಳಲ್ಲಿ ಪ್ರಸಿದ್ಧನಾದವನು, ಯುದ್ಧದಲ್ಲಿ ಅಪ್ರತಿಮ ಶೂರನಾದವನು, ನೀಚನಾದ ಕೌರವನು ಶತ್ರುಗಣಕ್ಕೆ ಎದುರಾದನು.
ಪದಾರ್ಥ (ಕ.ಗ.ಪ)
ಬದಗ-ನೀಚ, ರಣದಜೇಯ-ಅಪ್ರತಿಮಶೂರ, ಅಡ್ಡೈಸಿದನು-ಅಡ್ಡಗಟ್ಟಿದರು.
ಪಾಠಾನ್ತರ (ಕ.ಗ.ಪ)
ಬದಗಿ —->ಬದಗ
ಮೂಲ ...{Loading}...
ಅದಟನಡ್ಡೈಸಿದನು ದುರುಳನಬದ
ಮದವನಳಿವೆನು ಬಾಯ ಹೊಯ್ ಹೊಯ್
ಕದನದಲಿ ನಡುಗಿಸುವ ನಾಯಕವಾಡಿಗಳನೆನುತ
ಬದಗನಿದಿರಾದನು ಜಯಶ್ರೀ
ಮದನಕಾಯನು ಕಪಟದಾಯನು
ವಿದಿತಮಾಯನು ರಣದಜೇಯನು ಕೌರವರ ರಾಯ ॥11॥
೦೧೨ ಎಲವೊ ಮಾರುತಿ ...{Loading}...
ಎಲವೊ ಮಾರುತಿ ನಿಮ್ಮೊಳಗೆ ಕೋ
ಮಳೆಯ ಹುದುವನು ಮೆಚ್ಚಿ ನಮ್ಮೊಳ
ಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ
ನೆಲನ ಬೇಟವ ಬಿಸುಟು ಜೀವದ
ಲುಳಿದು ತೊಲಗೆನೆ ಪವನಸುತ ಕಳ
ಕಳಿಸಿ ನಗುತವೆ ಕೌರವೇಂದ್ರಂಗೆಂದನುತ್ತರವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಭೀಮನೇ, (ಕೋತಿ ಎಂದು ವ್ಯಂಗ್ಯಾರ್ಥ) ನಿಮ್ಮಲ್ಲಿ ಹೆಂಡತಿಯ ಪಾಲನ್ನು ಹಂಚಿಕೊಂಡಿದ್ದನ್ನು ಮೆಚ್ಚಿದ ನೀನು ನಮ್ಮಲ್ಲಿ ಭೂಮಿಯ ಪಾಲನ್ನು ಹಂಚಿಕೊಳ್ಳಲು ಆಸೆ ಪಡುತ್ತಿದ್ದೀಯೆ ? ನಾನು ಛಲದಂಕಮಲ್ಲ (ಹಿಡಿದ ಛಲವನ್ನು ಸಾಧಿಸುವ ವೀರನೆಂದು ತಿಳಿದಿಲ್ಲವೇ ನೀನು) ? ಈ ಬಗೆಯ ನೆಲದ ಪಾಲಿನ ಆಸೆಯನ್ನು ತ್ಯಜಿಸಿ ಜೀವವುಳಿಸಿಕೊಂಡು ತೊಲಗಾಚೆ ಎಂದಾಗ, ಭೀಮನ ಗಹಗಹಿಸಿ ನಗುತ್ತಲೆ ದುರ್ಯೋಧನನಿಗೆ ಉತ್ತರಿಸಿದನು.
ಪದಾರ್ಥ (ಕ.ಗ.ಪ)
ಹುದು-ಪಾಲು, ಛಲದಂಕನು-ಹಠ ನೆರವೇರಿಸುವ ವೀರ, ನೆಲದ ಬೇಟ-ನೆಲದ ಕುರಿತಾದ ಆಸೆ
ಮೂಲ ...{Loading}...
ಎಲವೊ ಮಾರುತಿ ನಿಮ್ಮೊಳಗೆ ಕೋ
ಮಳೆಯ ಹುದುವನು ಮೆಚ್ಚಿ ನಮ್ಮೊಳ
ಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ
ನೆಲನ ಬೇಟವ ಬಿಸುಟು ಜೀವದ
ಲುಳಿದು ತೊಲಗೆನೆ ಪವನಸುತ ಕಳ
ಕಳಿಸಿ ನಗುತವೆ ಕೌರವೇಂದ್ರಂಗೆಂದನುತ್ತರವ ॥12॥
೦೧೩ ಕೆಡಹಿ ದುಶ್ಶಾಸನನ ...{Loading}...
ಕೆಡಹಿ ದುಶ್ಶಾಸನನ ರಕುತವ
ಕುಡಿದು ನಿನ್ನೂರುಗಳನೀಕ್ಷಣ
ವುಡಿದು ಕೊಂಬೆನು ಧರೆಯನಲ್ಲದೆ ಹುದುವ ಬಯಸುವೆನೆ
ಪೊಡವಿ ದ್ರುಪದಕುಮಾರಿಯೆಮ್ಮಯ
ಮಡದಿಗನ್ಯರು ಮನವಿಡಲು ಬಳಿ
ಕಡಗುದರಿವೆನೆನುತ್ತ ಹೊಕ್ಕನು ಭೀಮನವಗಡಿಸಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನನ್ನು ಕೆಳಕ್ಕೆ ಬೀಳಿಸಿಕೊಂಡು, ಅವನ ರಕ್ತ ಪಾನ ಮಾಡಿ, ನಿನ್ನ ತೊಡೆಗಳನ್ನು ಈಗಲೆ ಮುರಿದು ಈ ನಿನ್ನ ರಾಜ್ಯವನ್ನು ಪಡೆದುಕೊಳ್ಳುತ್ತೇನೆ ಹಾಗಲ್ಲದೆ ನಿನ್ನಲ್ಲಿ ಪಾಲನ್ನು ಕೇಳುತ್ತೇನೆಯೇ ? ಈ ಭೂಮಿಯೇ ದ್ರೌಪದಿ (ನಮ್ಮ ಹೆಂಡತಿ) ನಮ್ಮ ಹೆಂಡತಿಗೆ ಅನ್ಯರು ಕಣ್ಣಿಟ್ಟರೆ ಕೂಡಲೆ ಅವರ ಮಾಂಸ (ಖಂಡಗಳನ್ನು) ಕೊಚ್ಚುವೆನು (ಅವರನ್ನು ಛಿದ್ರ ಛಿದ್ರ ಗೊಳಿಸುವೆನು) ಎಂದು ಗರ್ಜಿಸುತ್ತ, ಭೀಮನು ಮೇಲು ನುಗ್ಗುತ್ತಾ ಕೌರವನ ಸೇನೆಯನ್ನು ಪ್ರವೇಶಿಸಿದನು.
ಮೂಲ ...{Loading}...
ಕೆಡಹಿ ದುಶ್ಶಾಸನನ ರಕುತವ
ಕುಡಿದು ನಿನ್ನೂರುಗಳನೀಕ್ಷಣ
ವುಡಿದು ಕೊಂಬೆನು ಧರೆಯನಲ್ಲದೆ ಹುದುವ ಬಯಸುವೆನೆ
ಪೊಡವಿ ದ್ರುಪದಕುಮಾರಿಯೆಮ್ಮಯ
ಮಡದಿಗನ್ಯರು ಮನವಿಡಲು ಬಳಿ
ಕಡಗುದರಿವೆನೆನುತ್ತ ಹೊಕ್ಕನು ಭೀಮನವಗಡಿಸಿ ॥13॥
೦೧೪ ಗಾಳಿಯುರುಬೆಗೆ ಮಲೆತ ...{Loading}...
ಗಾಳಿಯುರುಬೆಗೆ ಮಲೆತ ಮೇಘದ
ತೋಳುವಲ ನಗೆಗೆಡೆಯಲಾ ಕುರು
ಪಾಲನೆತ್ತಲು ಭೀಮನೆತ್ತಲು ಶಿವಶಿವಾ ಎನುತ
ಮೇಲಣಮರರ ಮಂದಿ ನಗೆ ನೃಪ
ಮೌಳಿ ಜವಗೆಡೆ ಖಾತಿಯೊಳು ಕ
ಟ್ಟಾಳು ಹೊಕ್ಕುದು ಭೀಮಸೇನನ ರಥವ ಮುರಿಯೆಸುತ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಯ ಆವೇಶದ ಎದುರಿಗೆ ಪ್ರತಿಭಟಿಸಿದ ಮೋಡದ ಬಲ, (ಶಕ್ತಿ ಪ್ರದರ್ಶನ) ನಗೆಪಾಟಲಾಗುತ್ತದೆ ಅಲ್ಲವೇ ? ದುರ್ಯೋಧನ ಎಲ್ಲಿ ? ರಭಸದ ಗಾಳಿಯಾದ ಪವಮಾನ ನಂದನ ಭೀಮನು ಎಲ್ಲಿ ? ಶಿವ ಶಿವಾ ಎಂದು ಸ್ವರ್ಗ ಲೋಕದ ದೇವತೆಗಳ ಸಮೂಹ ನಗುತ್ತಿರಲು, ದುರ್ಯೋಧನನು ಧೈರ್ಯಗೆಡಲು (ಕಂಗೆಡಲು), ಕೋಪಾವೇಶದಿಂದ ಶೂರರಾದ ಸೈನಿಕರು, ಭೀಮನಿದ್ದ ರಥಕ್ಕೆ ಚೂರು ಚೂರಾಗುವಂತೆ ಬಾಣ ಪ್ರಯೋಗ ಮಾಡುತ್ತ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಮುರಿಯೆಸೆತ-ಚೂರು ಚೂರಾಗುವಂತೆ ಬಾಣ ಪ್ರಯೋಗ ಮಾಡುವುದು, ಜವಗೆಡೆ-ಕಂಗೆಡು, ಧೈರ್ಯಗೆಡೆ, ಮೇಲಣ ಅಮರರು-ಸ್ವರ್ಗಲೋಕದ ದೇವತೆಗಳು, ಉರುಬೆ-ರಭಸಕ್ಕೆ, ಮಲೆತ-ಪ್ರತಿಭಟಿಸಿದ
ಮೂಲ ...{Loading}...
ಗಾಳಿಯುರುಬೆಗೆ ಮಲೆತ ಮೇಘದ
ತೋಳುವಲ ನಗೆಗೆಡೆಯಲಾ ಕುರು
ಪಾಲನೆತ್ತಲು ಭೀಮನೆತ್ತಲು ಶಿವಶಿವಾ ಎನುತ
ಮೇಲಣಮರರ ಮಂದಿ ನಗೆ ನೃಪ
ಮೌಳಿ ಜವಗೆಡೆ ಖಾತಿಯೊಳು ಕ
ಟ್ಟಾಳು ಹೊಕ್ಕುದು ಭೀಮಸೇನನ ರಥವ ಮುರಿಯೆಸುತ ॥14॥
೦೧೫ ಬಿಲುದುಡುಕಿ ಕೈಕೊಣ್ಡ ...{Loading}...
ಬಿಲುದುಡುಕಿ ಕೈಕೊಂಡ ರಥಿಕಾ
ವಳಿಯ ಗೋಣಡವಿಯಲಿ ಭೀಮಾ
ನಲನ ವಿಲಸತ್ಕೇಳಿ ಕಾಣಿಸಲಾಯ್ತು ನಿಮಿಷದಲಿ
ಇಳೆಯೊಳೀ ಪವಮಾನ ನಂದನ
ನುಳಿಯೆ ಯಮರಾಜಂಗೆ ಬೆಸಕೈ
ವಳವಿ ಹಲಬರಿಗಾಗದೆಂದುದು ಸಮರ ಭೂತಗಣ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಹಿಡಿದು, ಯುದ್ಧ ಕೈಕೊಂಡ ರಥಕಾರರ ಸೇನೆಯ ಕುತ್ತಿಗೆಗಳೆಂಬ ಕಾಡಿನಲ್ಲಿ (ಭೀಮನೆಂಬ) ಬಿರುಗಾಳಿಯ ವಿನೋದ ಕ್ರೀಡೆ ಕ್ಷಣ ಮಾತ್ರದಲ್ಲಿ ಕಾಣಿಸಿಕೊಂಡಿತು. ಈ ಭೂಮಿಯಲ್ಲಿ ಭೀಮನ ಹೊರತಾಗಿ ಯಮರಾಜನಿಗೆ ಸೇವೆ ಮಾಡುವ, ಸಾಮಥ್ರ್ಯ ಬೇರೆ ಯಾರೊಬ್ಬರಿಗೆ ಸಾಧ್ಯವಿಲ್ಲೆಂದು ಸಮರ ಭೂತಗಣಗಳು ಹೊಗಳತೊಡಗಿದವು.
ಪದಾರ್ಥ (ಕ.ಗ.ಪ)
ತುಡುಕಿ-ಹಿಡಿದು, ಗೋಣಡವಿ-ಕುತ್ತಿಗೆಗಳೆಂಬ ಕಾಡು, ವಿಲಸತ್ ಕೇಳಿ-ವಿನೋದ ಕ್ರೀಡೆ, ಪವಮಾನ ನಂದನ-ಭೀಮ, ಬೆಸಕೈವ-ಸೇವೆ ಸಲ್ಲಿಸುವ, ಅಳವಿ-ಸಾಮಥ್ರ್ಯ, ಸಮರ ಭೂತಗಳು-ಯುದ್ಧ ಭೂಮಿ, ಭೂತಪ್ರೇತಗಣ
ಮೂಲ ...{Loading}...
ಬಿಲುದುಡುಕಿ ಕೈಕೊಂಡ ರಥಿಕಾ
ವಳಿಯ ಗೋಣಡವಿಯಲಿ ಭೀಮಾ
ನಲನ ವಿಲಸತ್ಕೇಳಿ ಕಾಣಿಸಲಾಯ್ತು ನಿಮಿಷದಲಿ
ಇಳೆಯೊಳೀ ಪವಮಾನ ನಂದನ
ನುಳಿಯೆ ಯಮರಾಜಂಗೆ ಬೆಸಕೈ
ವಳವಿ ಹಲಬರಿಗಾಗದೆಂದುದು ಸಮರ ಭೂತಗಣ ॥15॥
೦೧೬ ಪವನಜನ ಕೈಘಾಸಿಗಾನದ ...{Loading}...
ಪವನಜನ ಕೈಘಾಸಿಗಾನದ
ಬವರಿಗರನೀಕ್ಷಿಸುತ ರಥವನು
ಕವಿಸಿದನು ಕೈನೆಗಹಿ ಮೋಹರಕಭಯವನು ಕೊಡುತ
ಹವಣಿಸೈ ಹೇರಾಳದಾಟೋ
ಪವನು ಹಾರೈ ಜಯವ ರಣದಲಿ
ತವಕಿಸೈ ತೆಗೆದೋಟಕೆನುತುರವಣಿಸಿದನು ಭೀಷ್ಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಕೈಯೇಟನ್ನು ತಾಳಲಾರದ, ಯೋಧರನ್ನು ನೋಡುತ್ತ, ಕೈಯೆತ್ತಿ ಸೇನೆಗೆ ಧೈರ್ಯವನ್ನು ಹೇಳುತ್ತ ಭೀಷ್ಮನು ರಥವನ್ನು ಮುನ್ನುಗ್ಗಿಸಿದನು. ಅಪಾರವಾದ ಪರಾಕ್ರಮವನ್ನು ಪ್ರದರ್ಶಿಸಲು ಸಿದ್ಧರಾಗಿ, ರಣರಂಗದಲ್ಲಿ ಜಯಗಳಿಸಲು ಬಯಸಿರಿ, ಧೈರ್ಯಗುಂದಿ ಹಿಂದಕ್ಕೋಡಲು ಪ್ರಯತ್ನಿಸು ಎಂದು ಹೇಳುತ್ತಾ ಭೀಮನ ಮೇಲೆ ಭೀಷ್ಮನು ಬಿದ್ದನು.
ಪದಾರ್ಥ (ಕ.ಗ.ಪ)
ಬವರಿಗರು-ಯೋಧರು, ಮೋಹರ-ಸೇನೆ, ಅಭಯ-ಧೈರ್ಯ, ಕವಿಸಿದನು-ಮುನ್ನುಗ್ಗಿಸಿದನು, ಆಟೋಪ-ಪರಾಕ್ರಮ, ಹವಣಿಸು-ಪ್ರಯತ್ನಿಸು, ತೆಗೆದೋಟಕೆ-ಹಿಂತೆಗೆದು ಓಡಲು, ಉರವಣಿಸು-ಮೇಲೆ ಬೀಳು
ಮೂಲ ...{Loading}...
ಪವನಜನ ಕೈಘಾಸಿಗಾನದ
ಬವರಿಗರನೀಕ್ಷಿಸುತ ರಥವನು
ಕವಿಸಿದನು ಕೈನೆಗಹಿ ಮೋಹರಕಭಯವನು ಕೊಡುತ
ಹವಣಿಸೈ ಹೇರಾಳದಾಟೋ
ಪವನು ಹಾರೈ ಜಯವ ರಣದಲಿ
ತವಕಿಸೈ ತೆಗೆದೋಟಕೆನುತುರವಣಿಸಿದನು ಭೀಷ್ಮ ॥16॥
೦೧೭ ಎಲೆ ಪಿತಾಮಹ ...{Loading}...
ಎಲೆ ಪಿತಾಮಹ ನೀವು ಕರುಣಿಸಿ
ದಳವ ನಿಮಗೊಪ್ಪಿಸುವೆ ಜಯವೆಮ
ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ
ಚಳಕದಲಿ ತೆಗೆದೆಚ್ಚಡಹಿತನ
ಹಿಳುಕ ಸೀಳಿದು ಬಿಸುಟು ಭೀಮನ
ಗೆಲಿದನೆಂಟಂಬಿನಲಿ ಗಂಗಾಸೂನು ಸಮರದಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ತಾತ, ನೀವು ನಮಗೆ ಕರುಣಿಸಿದ ವಿದ್ಯಾ ಸಾಮಥ್ರ್ಯವನ್ನು ನಿಮಗೆ ಒಪ್ಪಿಸುತ್ತೇವೆ. ನಮಗೆ ಜಯವಾಗಲಿ ಉಳಿವಾಗಲಿ ಬೇರೆ ಹೇಗಾದೀತು ? ಎಂದು ಭೀಮ ಬಿಲ್ಲನ್ನು ತೆಗೆದುಕೊಂಡನು. ಆಗ ಭೀಷ್ಮನು ಕರಕೌಶಲ್ಯದಿಂದ ಬಾಣವನ್ನು ಬತ್ತಳಿಕೆಯಿಂದ ತೆಗೆದು, ಶತ್ರು ಭೀಮನ ಬಾಣದ ತುದಿಯನ್ನು ಕತ್ತರಿಸಿದನು. ಎಂಟು ಬಾಣಗಳನ್ನು ಬಿಟ್ಟು ಭೀಷ್ಮನು ಭೀಮನನ್ನು ಯುದ್ಧದಲ್ಲಿ ಗೆದ್ದನು.
ಪದಾರ್ಥ (ಕ.ಗ.ಪ)
ಪಿತಾಮಹ-ತಾತ, ಚಳಕ-ಕರಕೌಶಲ, ಎಚ್ಚೆಡೆ-ಬಾಣಬಿಟ್ಟರೆ, ಅಹಿತನ-ಶತ್ರುವಿನ, ಹಿಳುಕ-ಬಾಣದ ತುದಿ, ಗಂಗಾಸೂನು-ಭೀಷ್ಮ
ಮೂಲ ...{Loading}...
ಎಲೆ ಪಿತಾಮಹ ನೀವು ಕರುಣಿಸಿ
ದಳವ ನಿಮಗೊಪ್ಪಿಸುವೆ ಜಯವೆಮ
ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ
ಚಳಕದಲಿ ತೆಗೆದೆಚ್ಚಡಹಿತನ
ಹಿಳುಕ ಸೀಳಿದು ಬಿಸುಟು ಭೀಮನ
ಗೆಲಿದನೆಂಟಂಬಿನಲಿ ಗಂಗಾಸೂನು ಸಮರದಲಿ ॥17॥
೦೧೮ ಮೇಲೆ ಹೇಳಿಕೆಯಾಯ್ತು ...{Loading}...
ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಪಾಂಚಾಲ, ಚೈದ್ಯ ಸೇನೆಗಳಿಗೆ, ಮತ್ಸ್ಯ ನೃಪಾಲ, ಸೃಂಜಯರೇ ಮೊದಲಾದವರ ಅಕ್ಷೋಹಿಣಿ ಸೇನೆಗೆ ಹೋರಾಡಲು ಅಪ್ಪಣೆಯಾಯಿತು. ಅವರೆಲ್ಲರೂ ಒಂದರ ಮೇಲೊಂದು ಭಾರಿಯಾದ ಅನಂತ ನಿಸ್ಸಾಳಗಳು ಒಟ್ಟಾಗಿ ಅಬ್ಬರಿಸುತ್ತಿರಲು ಕೆಂಪು ಗರಿಯ ಬಾಣಗಳ ಮಳೆ ಸುರಿಸುತ್ತ ಭೀಷ್ಮನನ್ನು ಕೆರಳಿಸಿದರು.
ಪದಾರ್ಥ (ಕ.ಗ.ಪ)
ನಿಸ್ಸಾಳ-ಭೇರಿ, ಕೆಂಗೋಲ-ಕಿಡಿ ಉದುರಿಸುತ್ತಿರುವ ಬಾಣ,
ಮೂಲ ...{Loading}...
ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು ॥18॥
೦೧೯ ಪೂತು ಮಝರೇ ...{Loading}...
ಪೂತು ಮಝರೇ ಪಾಂಡುಸೈನ್ಯ
ವ್ರಾತ ಕವಿದುದು ಕೇಳಿರೈ ಮು
ಯ್ಯಾಂತುದೇ ಬರಹೇಳಿ ವೈವಸ್ವತನ ಪರಿಜನವ
ಘಾತಿಸುವೆನದನೆನುತ ತೊಡಚಿದ
ನೂತನಾಸ್ತ್ರಂಗಳಲಿ ರಿಪು ಸಂ
ಘಾತವನು ಕೆಡೆಯೆಚ್ಚು ಪಲ್ಲಟಿಸಿದನು ಕಡಿಕಡಿಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲಾ ! ಭಪ್ಪರೆ ! ಪಾಂಡವರ ಸೇನಾ ಸಮೂಹ ಅವನನ್ನು ಬಂದು ಆವರಿಸಿತು. ಕೇಳಿರಯ್ಯಾ, ಅದು ನನಗೆ ಎದುರಾಗುವುದೇ? ಹಾಗಿದ್ದರೆ ಯಮನ ಪರಿವಾರಕ್ಕೆ ಬರಲು ಹೇಳಿ ಕಳಿಸಿ. ಅದನ್ನೇ ಸಂಹರಿಸುತ್ತೇನೆ. ಎಂದು ಹೇಳುತ್ತ ಬಿಲ್ಲಿನಲ್ಲಿ ಹೂಡಿದ ಹೊಸ ಹೊಸ ಅಸ್ತ್ರಗಳಿಂದ (ಮಂತ್ರ ಪೂರಿತ ಬಾಣಗಳಿಂದ) ಶತ್ರು ಸಮೂಹವನ್ನು ಹೊಡೆದು ಕೆಡವಿ ಸೇನೆಯನ್ನು ಛಿದ್ರ ಛಿದ್ರಗೊಳಿಸಿ ಅಸ್ತವ್ಯಸ್ತಗೊಳಿಸಿದನು.
ಪದಾರ್ಥ (ಕ.ಗ.ಪ)
ವೈವಸ್ವತ-ಯಮ, ಪರಿಜನ-ಪರಿವಾರ, ಕಡಿಕಡಿಯ-ಛಿದ್ರಛಿದ್ರಗೊಳಿಸಿ, ಪಲ್ಲಟಿಸಿದನು-ಚೆಲ್ಲಾಪಿಲ್ಲಿ ಮಾಡಿದನು
ಮೂಲ ...{Loading}...
ಪೂತು ಮಝರೇ ಪಾಂಡುಸೈನ್ಯ
ವ್ರಾತ ಕವಿದುದು ಕೇಳಿರೈ ಮು
ಯ್ಯಾಂತುದೇ ಬರಹೇಳಿ ವೈವಸ್ವತನ ಪರಿಜನವ
ಘಾತಿಸುವೆನದನೆನುತ ತೊಡಚಿದ
ನೂತನಾಸ್ತ್ರಂಗಳಲಿ ರಿಪು ಸಂ
ಘಾತವನು ಕೆಡೆಯೆಚ್ಚು ಪಲ್ಲಟಿಸಿದನು ಕಡಿಕಡಿಯ ॥19॥
೦೨೦ ಕಾಳೆಗಕ್ಕಿದಿರೊಡ್ಡಿ ಭೀಷ್ಮನ ...{Loading}...
ಕಾಳೆಗಕ್ಕಿದಿರೊಡ್ಡಿ ಭೀಷ್ಮನ
ಕೋಲ ಹತಿಯಲಿ ಮಡಿದ ರಿಪು ಭೂ
ಪಾಳಿ ಹರಿದುದು ಸುರರ ಹೆಂಡಿರ ಮುರಿದ ಮುಂದಲೆಯ
ಮೇಲೆ ಮೇಲೈತಪ್ಪ ವೀರ ಭ
ಟಾಳಿಯೊಡನಲ್ಲಿಂದ ಸುಭಟರು
ಸೂಳೆಬಂಟಿಕೆಯಿಂದ ಹೊಯ್ದಾಡಿದರು ನಾಕದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಪ್ರತಿಭಟಿಸಿ, ಭೀಷ್ಮನ ಬಾಣದ ಪೆಟ್ಟಿನಿಂದ ಮಡಿದ ಶತ್ರುರಾಜರು ದೇವತಾಸ್ತ್ರೀಯರ ಗುಂಗುರು ಮುಂಗೂದಲನ್ನು ಬಯಸಿ ಸಾಗಿದರು (ಸತ್ತು ಸ್ವರ್ಗ ಸೇರಿದರು). ಮೇಲೆ ಮೇಲಿಂದ ರಣದಲ್ಲಿ ಸತ್ತು ಬರುತ್ತಿದ್ದ ಸುಭಟರು ವೇಶ್ಯಾವಶೀಕರಣ ವಿದ್ಯಾಬಲದಿಂದ ಸ್ವರ್ಗದಲ್ಲಿದ್ದ ವೀರಯೋಧರೊಡನೆ ಸ್ಪರ್ಧಿಸಿ ಹೋರಾಡಿದರು.
ಪದಾರ್ಥ (ಕ.ಗ.ಪ)
ಸೂಳಬಂಟಿಕೆ-ಸೂಳೆಯರನ್ನು ಒಲಿಸಿಕೊಂಡು ಸೇವಿಸುವ ವಿದ್ಯೆ, ಹೊಯ್ದಾಡಿದರು-ಹೋರಾಡಿದರು, ಐತಪ್ಪ-ಬರುತ್ತಿದ್ದ, ಮುರಿದ ಮುಂದಲೆ-ಗುಂಗುರು ಕೂದಲು, ಕೋಲಹತಿ-ಬಾಣದ ಪೆಟ್ಟು
ಮೂಲ ...{Loading}...
ಕಾಳೆಗಕ್ಕಿದಿರೊಡ್ಡಿ ಭೀಷ್ಮನ
ಕೋಲ ಹತಿಯಲಿ ಮಡಿದ ರಿಪು ಭೂ
ಪಾಳಿ ಹರಿದುದು ಸುರರ ಹೆಂಡಿರ ಮುರಿದ ಮುಂದಲೆಯ
ಮೇಲೆ ಮೇಲೈತಪ್ಪ ವೀರ ಭ
ಟಾಳಿಯೊಡನಲ್ಲಿಂದ ಸುಭಟರು
ಸೂಳೆಬಂಟಿಕೆಯಿಂದ ಹೊಯ್ದಾಡಿದರು ನಾಕದಲಿ ॥20॥
೦೨೧ ಮುಡುಹುಗಳೊಳೊಡೆಹೊಯ್ವ ಕಾಲಲಿ ...{Loading}...
ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭುಜದ ತೋಳುಗಳ ಕತ್ತರಿಸುವ ಕಾಲಲ್ಲಿ ಶತ್ರು ತಲೆಗಳನ್ನು ಚಿಮ್ಮುತ ತುಳಿಯುವ, ತಾಂಬೂಲ ಉಗಿವ, ಸವಾಲೆಸೆದು ಕರೆ ಕರೆದು ಕತ್ತಿಯನ್ನು ಒರೆಯಿಂದ ತೆಗೆದು ಝಳಪಿಸುವ, ಕುನ್ನಿ ಎಂದು ಹೀಗಳೆವ, ಪ್ರತಿಭಟಿಸುವ, ಬೈಯುವ ವೀರರ, ಹೋಗಲಿ ಎಂದು ಬಿಡುವ, ಬೆನ್ನಟ್ಟಿ ಕಾಡುವ ಹೀಗೆ ವಿವಿಧ ರೀತಿಯಲ್ಲಿ ಯುದ್ಧ ಮಾಡಿ ಮಡಿದ ವೀರ ಯೋಧರಿಂದ ಸ್ವರ್ಗ ಲೋಕದ ರಾಜಧಾನಿ ಅಮರಾವತಿಯ ಸೊಗಸಿನ ವೇಶ್ಯಾವಾಟಿಕೆಗಳು ತುಂಬಿ ತುಳುಕಿತು.
ಪದಾರ್ಥ (ಕ.ಗ.ಪ)
ಸೊಂಪಿನ-ಸೊಗಸಿನ, ಇಡಿದುದು-ಕಿಕ್ಕಿರಿಯಿತು, ತೊಡರುಗಟ್ಟುವ-ಪ್ರತಿಭಟಿಸುವ, ನಾಯ ಹೆಸರಿಟ್ಟು-ಕುನ್ನಿ ಎಂದು ಹೀಗಳೆವ, ಮೆಟ್ಟುವ-ತುಳಿಯುವ, ಮಿಡಿವ-ಚಿಮ್ಮುವ, ಮುಡುಹು-ಭುಜ
ಮೂಲ ...{Loading}...
ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು ॥21॥
೦೨೨ ಸುರರಿಗತ್ತಣ ಗಜಬಜವ ...{Loading}...
ಸುರರಿಗತ್ತಣ ಗಜಬಜವ ಪರಿ
ಹರಿಸಲರಿಯದೆ ವೀರ ಭೀಷ್ಮನ
ಧುರವನೀಕ್ಷಿಸಲಿತ್ತಲಳವಡದೇನನುಸುರುವೆನು
ಅರರೆ ಅಂಬರಸರಸಿ ರಿಪುಭಟ
ವರರ ಮುಖಪಂಕರುಹವನ ವಿ
ಸ್ತರಣವಾದುದೆನಲ್ಕೆ ಗಂಗಾಸೂನು ಕೈಕೊಂಡ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳಿಗೆ ಸ್ವರ್ಗದಲ್ಲಿ ತಮ್ಮತ್ತ ಬರುತ್ತಿದ್ದ ವೀರರ ನೂಕು ನುಗ್ಗಲನ್ನು ನಿವಾರಿಸಲು ತಿಳಿಯಲಿಲ್ಲ. ಇತ್ತ ಕಡೆ ವೀರಭೀಷ್ಮನ ಸಮರವನ್ನು ಈಕ್ಷಿಸಲು ಶಕ್ಯವಿಲ್ಲದಾಯಿತು. ಇವೆರಡನ್ನು ಏನೆಂದು ಬಣ್ಣಿಸಲಿ ? ಅರರೆ ! ಸ್ವರ್ಗಲೋಕವೆಂಬ ಸರೋವರದಲ್ಲಿ ಶತ್ರು ವೀರರ ಮುಖ ಕಮಲಗಳ ಸಮೂಹವನ್ನು ಹೆಚ್ಚಿಸುವ ಹಾಗೆ ಭೀಷ್ಮನು ಯುದ್ಧವನ್ನು ಕೈಗೊಂಡ. (ಅಸಂಖ್ಯಾತ ವೀರ ಯೋಧರನ್ನು ಭೀಷ್ಮನು ಕೊಂದು ಸ್ವರ್ಗಕ್ಕೆ ಕಳಿಸಿದನು)
ಪದಾರ್ಥ (ಕ.ಗ.ಪ)
ಗಜಬಜ-ಗದ್ದಲ, ನೂಕುನುಗ್ಗಲು, ಧುರ-ಸಮರ, ಅಂಬರಸರಸಿ-ಗಗನ ಸರೋವರ, ಮುಖ ಪಂಕರುಹವನ-ವೀರರ ಮುಖ ಕಮಲಗಳವನ, ವಿಸ್ತರಣವಾದುದು-ಅಧಿಕಗೊಂಡಿತು, ಗಂಗಾಸುತ-ಭೀಷ್ಮ
ಮೂಲ ...{Loading}...
ಸುರರಿಗತ್ತಣ ಗಜಬಜವ ಪರಿ
ಹರಿಸಲರಿಯದೆ ವೀರ ಭೀಷ್ಮನ
ಧುರವನೀಕ್ಷಿಸಲಿತ್ತಲಳವಡದೇನನುಸುರುವೆನು
ಅರರೆ ಅಂಬರಸರಸಿ ರಿಪುಭಟ
ವರರ ಮುಖಪಂಕರುಹವನ ವಿ
ಸ್ತರಣವಾದುದೆನಲ್ಕೆ ಗಂಗಾಸೂನು ಕೈಕೊಂಡ ॥22॥
೦೨೩ ಕಡುಮನದ ಕೈಸೂರೆಗಾರರ ...{Loading}...
ಕಡುಮನದ ಕೈಸೂರೆಗಾರರ
ನಡಗೆಡಹಿದನು ಧುರದ ಗೆಲವಿಗೆ
ಮಿಡುಕುವರನಸಿಯರೆದು ನೆಗ್ಗಿದನೇನನುಸುರುವೆನು
ಗಡಣಿಗರನೊಂದೊಂದು ಶರದಲಿ
ತಡೆಗಡಿವ ಸಂರಂಭ ಭೀಷ್ಮನ
ಬಿಡುಧನುವಿನುಬ್ಬಟೆಗೆ ತೆರಳಿತು ಮಕುಟವರ್ಧನರು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೃಢ ಮನಸ್ಸಿನ ಕೊಳ್ಳೆಗಾರರನ್ನು ಕೆಳಕ್ಕೆ ಬೀಳಿಸಿದನು. ಯುದ್ಧದಲ್ಲಿ ಜಯಾಪೇಕ್ಷಿಗಳಾಗಿ ಹೋರಾಡಿದವರನ್ನು ಕತ್ತಿಯಲ್ಲಿ ಕೊಚ್ಚಿದನು. ವೀರರ ಸಮೂಹವನ್ನು ಒಂದೊಂದು ಬಾಣದಿಂದಲೂ ಕತ್ತರಿಸಿ ಹಾಕುತ್ತಿದ್ದ ಸಂಭ್ರಮವನ್ನು ಏನೆಂದು ಹೇಳಲಿ ? ಭೀಷ್ಮನ ಧನುಸ್ಸಿನಿಂದ ಬಿಡುತ್ತಿದ್ದ ಬಾಣಗಳ ಆರ್ಭಟಕ್ಕೆ ರಾಜರುಗಳು ಸ್ವರ್ಗಲೋಕ ಸೇರುತ್ತಿದ್ದರು.
ಪದಾರ್ಥ (ಕ.ಗ.ಪ)
ಧುರದ ಗೆಲುವು-ಸಮರಜಯ, ಕಡುಮನ-ಧೃಡಮನ, ಕೈಸೂರೆಗಾರರ-ಕೊಳ್ಳೆಗಾರರು, ಅಡಗೆಡಹಿದನು-ಕೆಳಕ್ಕೆ ಬೀಳಿಸಿದನು, ತಡೆಗಡಿವ-ಕತ್ತರಿಸಿ ಹಾರುವ, ಉಬ್ಬಟೆ-ಆರ್ಭಟ, ಮಕುಟವರ್ಧನರು-ರಾಜರು,
ಮೂಲ ...{Loading}...
ಕಡುಮನದ ಕೈಸೂರೆಗಾರರ
ನಡಗೆಡಹಿದನು ಧುರದ ಗೆಲವಿಗೆ
ಮಿಡುಕುವರನಸಿಯರೆದು ನೆಗ್ಗಿದನೇನನುಸುರುವೆನು
ಗಡಣಿಗರನೊಂದೊಂದು ಶರದಲಿ
ತಡೆಗಡಿವ ಸಂರಂಭ ಭೀಷ್ಮನ
ಬಿಡುಧನುವಿನುಬ್ಬಟೆಗೆ ತೆರಳಿತು ಮಕುಟವರ್ಧನರು ॥23॥
೦೨೪ ಬಳಸಿ ತಾರೆಗಳೆಸೆಯೆ ...{Loading}...
ಬಳಸಿ ತಾರೆಗಳೆಸೆಯೆ ಚಂದ್ರರು
ಹಲಬರಾದರೊ ನಭದೊಳೆನೆ ಹೊಳೆ
ಹೊಳೆವ ಮಣಿಮೌಳಿಗಳು ಸಂದಣಿಸಿದವು ಗಗನದೊಳು
ಗೆಲಿದನಹಿತಾನೀಕವನು ರಿಪು
ಬಲ ದಿಶಾಪಟ ಭೀಷ್ಮನಿತ್ತಲು
ಕಲಿ ಯುಧಿಷ್ಠಿರನೃಪನ ವಿರಥನ ಮಾಡಿದನು ಶಲ್ಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದಲ್ಲಿ ಸುತ್ತಲೂ ತಾರೆಗಳು ಬೆಳಗುತ್ತಿರುವ ಚಂದ್ರರು ಹಲವಾರು ಮಂದಿ ಆದರೋ ಎಂಬಂತೆ, ಥಳಿಥಳಿಸುವ ರತ್ನ ಕಿರೀಟಧಾರಿ ರಾಜರ ತಲೆಗಳು ಆಕಾಶದಲ್ಲಿ ಗುಂಪಾದವು. ಹೀಗೆ ಶತ್ರು ಸೇನೆಯನ್ನು ಧೂಳಿಪಟ ಮಾಡುವ ಭೀಷ್ಮನು ಗೆದ್ದನು. ಇತ್ತಕಡೆ ಶಲ್ಯನು ವೀರ ಧರ್ಮಜನ ರಥವನ್ನು ನಾಶಮಾಡಿದನು.
ಪದಾರ್ಥ (ಕ.ಗ.ಪ)
ವಿರಥನ ಮಾಡು-ರಥವನ್ನು ನಾಶಮಾಡು, ಅಹಿತಾನೀಕ-ಶತ್ರುಸೇನೆ, ರಿಪುಬಲ ದಿಶಾಪಟ-ಶತ್ರು ಸೇನೆಯ ಧೂಳೀಪಟ ಮಾಡುವವನು
ಮೂಲ ...{Loading}...
ಬಳಸಿ ತಾರೆಗಳೆಸೆಯೆ ಚಂದ್ರರು
ಹಲಬರಾದರೊ ನಭದೊಳೆನೆ ಹೊಳೆ
ಹೊಳೆವ ಮಣಿಮೌಳಿಗಳು ಸಂದಣಿಸಿದವು ಗಗನದೊಳು
ಗೆಲಿದನಹಿತಾನೀಕವನು ರಿಪು
ಬಲ ದಿಶಾಪಟ ಭೀಷ್ಮನಿತ್ತಲು
ಕಲಿ ಯುಧಿಷ್ಠಿರನೃಪನ ವಿರಥನ ಮಾಡಿದನು ಶಲ್ಯ ॥24॥
೦೨೫ ಅರಸನನು ಹಿನ್ದಿಕ್ಕಿ ...{Loading}...
ಅರಸನನು ಹಿಂದಿಕ್ಕಿ ನಡೆದು
ತ್ತರನು ಶಲ್ಯನೊಳಾಂತು ನಿಂದನು
ಸರಳ ಸರಿವಳೆಗರೆಯೆ ಕಡಿದನು ಶಲ್ಯಭೂಪಾಲ
ಧುರವಿಶಾರದನಹೆ ವಿರಾಟನ
ಹಿರಿಯಮಗ ನೀನಂದು ಗೋಕುಲ
ಹರಣದಲಿ ಕಲಿಯಾಗಿ ಕಾದಿದೆಯೆನುತ ತೆಗೆದೆಚ್ಚ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕಂಡು, ಅರಸನಾದ ಧರ್ಮಜನನ್ನು ಹಿಂದಕ್ಕೆ ಸರಿಸಿ, ಮುಂದೆ ನಿಂತ ಉತ್ತರನು, ಶಲ್ಯನೊಂದಿಗೆ ಹೋರಾಡುತ್ತ ನಿಂತನು. ಬಾಣಗಳ ಮಳೆ ಸುರಿಸಲು ಶಲ್ಯನು ಆ ಬಾಣಗಳನ್ನು ನಡು ಮಾರ್ಗದಲ್ಲಿಯೇ ಬಾಣ ಬಿಟ್ಟು ಕತ್ತರಿಸಿದನು. ಎಲೈ ಉತ್ತರನೇ ನೀನು ಯುದ್ಧ ವೀರನಾಗಿದ್ದೇಯೆ. ವಿರಾಟ ರಾಜನ ಹಿರಿಯ ಮಗನಾಗಿ ಅಂದು ಗೋಗ್ರಹಣ ಕಾಲದಲ್ಲಿ ವೀರನಾಗಿ ಹೋರಾಡಿದೆ. ಇಗೋ ಅದಕ್ಕೆ ಪ್ರತಿಫಲ ಎಂಬಂತೆ ಶಲ್ಯನು ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ಉತ್ತರನ ಮೇಲೆ ಬಿಟ್ಟನು.
ಪದಾರ್ಥ (ಕ.ಗ.ಪ)
ಸರಿಮಳೆ-ಬಾಣಗಳ ಮಳೆ, ಧುರವಿಶಾರದ-ರಣಕಲಿ
ಮೂಲ ...{Loading}...
ಅರಸನನು ಹಿಂದಿಕ್ಕಿ ನಡೆದು
ತ್ತರನು ಶಲ್ಯನೊಳಾಂತು ನಿಂದನು
ಸರಳ ಸರಿವಳೆಗರೆಯೆ ಕಡಿದನು ಶಲ್ಯಭೂಪಾಲ
ಧುರವಿಶಾರದನಹೆ ವಿರಾಟನ
ಹಿರಿಯಮಗ ನೀನಂದು ಗೋಕುಲ
ಹರಣದಲಿ ಕಲಿಯಾಗಿ ಕಾದಿದೆಯೆನುತ ತೆಗೆದೆಚ್ಚ ॥25॥
೦೨೬ ಎಸಲು ಶಲ್ಯನ ...{Loading}...
ಎಸಲು ಶಲ್ಯನ ಸರಳ ಖಂಡಿಸಿ
ನಿಶಿತ ಬಾಣದಲುತ್ತರನು ತೆಗೆ
ದೆಸಲು ಖತಿಯಲಿ ಶಲ್ಯನಭಿಮಂತ್ರಿಸಿ ಮಹಾಶರವ
ಅಸಮಬಲನಾಕರ್ಣಪೂರದಿ
ನೆಸೆ ವಿರಾಟಕುಮಾರನಸು ಲಂ
ಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಶಲ್ಯನು ಬಾಣ ಬಿಡಲು, ಅವನ ಬಾಣಗಳನ್ನು ಹರಿತವಾದ ಬಾಣಗಳಿಂದ ಉತ್ತರನು ಕತ್ತರಿಸಿ ಎಸೆದನು. ಆಗ ಕೋಪಾವೇಶದಿಂದ ಅಸಮಾನವೀರನಾದ ಶಲ್ಯನು ಶ್ರೇಷ್ಠ ಬಾಣವನ್ನು ಮಂತ್ರ ಪೂರಿತಗೊಳಿಸಿ ಕಿವಿಯವರೆಗೆ ಬಾಣ ಹೂಡಿದ ಬಿಲ್ಲಿನ ಹಗ್ಗ ಎಳೆದು ಬಾಣ ಬಿಡಲು ಉತ್ತರ ಕುಮಾರನ ಪ್ರಾಣ ದೇಹವನ್ನು ತೊರೆದು ದೇವಲೋಕದ ಸ್ತ್ರೀಯರ ವಕ್ಷಸ್ಥಳಕ್ಕೆ ಹಾರಿತು. (ಸತ್ತು ಸ್ವರ್ಗ ಸೇರಿದನು)
ಪದಾರ್ಥ (ಕ.ಗ.ಪ)
ಖತಿಯಲಿ-ಕೋಪದಲ್ಲಿ, ನಿಶಿತ-ಹರಿತವಾದ, ಆಕರ್ಣಪೂರ-ಕಿವಿಯವರೆಗೆ ಎಳೆದು, ಕಾಯವನು ಒದೆದು-ದೇಹ ತ್ಯಜಿಸಿ, ಖಚರೀಜನ-ಸ್ವರ್ಗ ಲೋಕದ ನಾರಿಯರ, ಕುಚಯುಗಕೆ-ವಕ್ಷಸ್ಥಳಕ್ಕೆ, ಲಂಘಿಸಿತು-ಹಾರಿತು
ಮೂಲ ...{Loading}...
ಎಸಲು ಶಲ್ಯನ ಸರಳ ಖಂಡಿಸಿ
ನಿಶಿತ ಬಾಣದಲುತ್ತರನು ತೆಗೆ
ದೆಸಲು ಖತಿಯಲಿ ಶಲ್ಯನಭಿಮಂತ್ರಿಸಿ ಮಹಾಶರವ
ಅಸಮಬಲನಾಕರ್ಣಪೂರದಿ
ನೆಸೆ ವಿರಾಟಕುಮಾರನಸು ಲಂ
ಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ ॥26॥
೦೨೭ ವೀರ ಶಲ್ಯ ...{Loading}...
ವೀರ ಶಲ್ಯ ದ್ರೋಣ ಕೃಪ ಭಾ
ಗೀರಥಿಯ ನಂದನರು ಪಾಂಡು ಕು
ಮಾರಕರ ಸೇನೆಯೊಳು ಗೆಲಿದಳು ಮುರಿದರತಿಬಲರ
ಧೀರ ಸುಭಟರ ರಕ್ತಧಾರಾ
ಸಾರ ಲೋಹಿತ ಬಿಂಬವನು ಘನ
ವಾರಿಯಲಿ ತೊಳೆದಂತೆ ಪಶ್ಚಿಮಜಲಧಿಗಿನನಿಳಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರರಾದ ಶಲ್ಯ, ದ್ರೋಣ, ಕೃಪ, ಭೀಷ್ಮ ಇವರು, ಪಾಂಡವರ ಸೇನೆಯ ಮೇಲೆ ವಿಜಯ ಸಾಧಿಸಿ, ಮಹಾಶೂರರನ್ನು ಧ್ವಂಸ ಮಾಡಿದರು. ವೀರಾಧಿವೀರರ ರಕ್ತಧಾರೆಯ ಜಡಿಮಳೆಯಿಂದ ಕೆಂಪಾದ ಬಿಂಬವನ್ನು ನೀರಿನಲ್ಲಿ ತೊಳೆದ ಹಾಗೆ ಪಶ್ಚಿಮ ಸಮುದ್ರದಲ್ಲಿ ಸೂರ್ಯನು ಮುಳುಗಿದನು.
ಪದಾರ್ಥ (ಕ.ಗ.ಪ)
ಭಾಗೀರಥಿ ನಂದನ -ಭೀಷ್ಮ, ಅತಿಬಲ-ವೀರಾಧಿವೀರ, ಲೋಹದಬಿಂಬ-ಕೆಂಪಾದ ಆಕೃತಿ, ಪಶ್ಚಿಮಜಲಧಿ-ಪಶ್ಚಿಮ ಸಮುದ್ರ
ಮೂಲ ...{Loading}...
ವೀರ ಶಲ್ಯ ದ್ರೋಣ ಕೃಪ ಭಾ
ಗೀರಥಿಯ ನಂದನರು ಪಾಂಡು ಕು
ಮಾರಕರ ಸೇನೆಯೊಳು ಗೆಲಿದಳು ಮುರಿದರತಿಬಲರ
ಧೀರ ಸುಭಟರ ರಕ್ತಧಾರಾ
ಸಾರ ಲೋಹಿತ ಬಿಂಬವನು ಘನ
ವಾರಿಯಲಿ ತೊಳೆದಂತೆ ಪಶ್ಚಿಮಜಲಧಿಗಿನನಿಳಿದ ॥27॥
೦೨೮ ಸೂಳವಿಸಿದವು ಸನ್ನೆಯಲಿ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಸೇನೆಯ ತೆಗೆಸಿದವು ಹೆ
ಗ್ಗಾಳೆ ಮೊಳಗಿದವಾನೆವರೆ ಗಜರಿದವು ಡೌಡೆಗಳು
ಪಾಳಯಕೆ ತಿರುಗಿದರಖಿಲ ಭೂ
ಪಾಲಕರು ಗಂಗಾಸುತನ ಪಾಂ
ಚಾಲಕನ ನೇಮದಲಿ ಕೌರವ ಪಾಂಡುನಂದನರು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗಾರಿಗಳು ಸನ್ನೆಯಲ್ಲಿ ಧ್ವನಿಗೈದವು. ಸೇನೆಗಳು ಹಿಂದಕ್ಕೆ ಬಂದವು. ದೊಡ್ಡ ಕಹಳೆಗಳು ಮೊಳಗಿದವು. ದೊಡ್ಡ ತಮಟೆ, ಡೌಡೆ ವಾದ್ಯಗಳನ್ನು ನುಡಿಸಲಾಯಿತು. ಭೀಷ್ಮನ ಮತ್ತು ದ್ರುಪದನ ಅಪ್ಪಣೆಯಂತೆ ಕೌರವರು ಮತ್ತು ಪಾಂಡವರು ಹಾಗೂ ಅವರಿಬ್ಬರ ಎಲ್ಲ ರಾಜರು ತಂತಮ್ಮ ಬಿಡಾರಗಳಿಗೆ ತೆರಳಿದರು.
ಪದಾರ್ಥ (ಕ.ಗ.ಪ)
ಸೂಳವಿಸು-ಗಜರು-ಗರ್ಜಿಸು-ಆರ್ಭಟಿಸು, ಮೊಳಗು-ಧ್ವನಿಗೆಯ್ದವು, ಆನೆಪರೆ-ದೊಡ್ಡ ತಮಟೆ , ಭೇರಿ
ಮೂಲ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಸೇನೆಯ ತೆಗೆಸಿದವು ಹೆ
ಗ್ಗಾಳೆ ಮೊಳಗಿದವಾನೆವರೆ ಗಜರಿದವು ಡೌಡೆಗಳು
ಪಾಳಯಕೆ ತಿರುಗಿದರಖಿಲ ಭೂ
ಪಾಲಕರು ಗಂಗಾಸುತನ ಪಾಂ
ಚಾಲಕನ ನೇಮದಲಿ ಕೌರವ ಪಾಂಡುನಂದನರು ॥28॥
೦೨೯ ಇತ್ತಲೀ ಸಙ್ಗ್ರಾಮ ...{Loading}...
ಇತ್ತಲೀ ಸಂಗ್ರಾಮ ಮಹಿಯೊಳು
ಮೃತ್ಯುವಿನ ಭಾಗ್ಯೋದಯವು ಕೈ
ವತ್ರ್ತಿಸಿತು ವೈವಸ್ವತಾಭಿಪ್ರಾಯ ಸಿದ್ಧಿಸಿತು
ಮುತ್ತಿಗೆಯ ಜಂಬುಕ ಖಗಾಳಿಯ
ಚಿತ್ತ ನಿಶ್ಚಲವಾಯ್ತು ಸಲೆ ಮನ
ವುತ್ತರೋತ್ತರವಾಯ್ತು ಶಾಕಿನಿ ಡಾಕಿನೀ ಜನದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆಯ ರಣಭೂಮಿಯಲ್ಲಿ ಮೃತ್ಯು ದೇವತೆಗೆ ಅದೃಷ್ಟದ ಭಾಗ್ಯ ಒದಗಿಬಂದಿತು. ವೈವಸ್ವತನ ಇಷ್ಟಾರ್ಥ ಸಿದ್ಧಿಸಿತು. ಮುತ್ತಿಗೆ ಹಾಕಲು ಬಂದ ನರಿ ಹದ್ದುಗಳಿಗೆ ಮನಸ್ಸು ಗಟ್ಟಿಯಾಯಿತು. ಮತ್ತೆ ಶಾಕಿನೀ ಡಾಕಿನೀ ಮೊದಲಾದ ರಣ ಪಿಶಾಚಿಗಳ ಮನಸ್ಸು ಹಿರಿ ಹಿಗ್ಗಿತು.
ಪದಾರ್ಥ (ಕ.ಗ.ಪ)
ವೈವಸ್ವತ-ಯಮ,, ಶಾಕಿನೀ ಡಾಕಿನೀ-ರಣ ಪಿಶಾಚಿಗಳು, ಖಗಾಳಿ -ಪಕ್ಷಿಗಳ ಗುಂಪು, ಜಂಬುಕ-ನರಿ, ಕೈವರ್ತಿಸಿತು-ಕೈವಶವಾಯಿತು, ಒದಗಿತು, ಉತ್ತರೋತ್ತರವಾಯ್ತು-ಹಿರಿಹಿಗ್ಗಿತು
ಮೂಲ ...{Loading}...
ಇತ್ತಲೀ ಸಂಗ್ರಾಮ ಮಹಿಯೊಳು
ಮೃತ್ಯುವಿನ ಭಾಗ್ಯೋದಯವು ಕೈ
ವತ್ರ್ತಿಸಿತು ವೈವಸ್ವತಾಭಿಪ್ರಾಯ ಸಿದ್ಧಿಸಿತು
ಮುತ್ತಿಗೆಯ ಜಂಬುಕ ಖಗಾಳಿಯ
ಚಿತ್ತ ನಿಶ್ಚಲವಾಯ್ತು ಸಲೆ ಮನ
ವುತ್ತರೋತ್ತರವಾಯ್ತು ಶಾಕಿನಿ ಡಾಕಿನೀ ಜನದ ॥29॥
೦೩೦ ಹೆಗಲ ಪಕ್ಕಲೆಗಳಲಿ ...{Loading}...
ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ರ್ದಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಗಲಿನ ಮೇಲೆ ತಪ್ಪಲೆಗಳನ್ನು ಹೊತ್ತುಕೊಂಡು, ಸಾಹಸಿ ಪೂತನಿಯರ ದಂಡು ಕವಿದು ಬಂತು. (ದುರ್ಗಂಧದ ರಾಕ್ಷಸಿಯರ ಗುಂಪು) ಶಾಕಿನಿಯರ ಸಮೂಹ ಪಿಚಕಾರಿಗಳ ಕೈರಾಟೆಗಳನ್ನು ಹಿಡಿದುಕೊಂಡು ರಣರಂಗಕ್ಕೆ ಬಂದಿತು. ರಾಕ್ಷಸರು ಚರ್ಮದ ಚೀಲಗಳ ಕೊಲ್ಲಾರದ ಬಂಡಿ (ಬಾಗಿದ ಕಮಾನುಗಳುಳ್ಳ ಬಂಡಿ)ಗಳಲ್ಲಿ ಅಬ್ಬರಿಸಿ ಗದ್ದಲ ಮಾಡುತ್ತಾ ರಣರಂಗವನ್ನು ಹೊಕ್ಕರು. ಗೂಬೆ, ನರಿ, ಕಾಗೆಗಳ ಸಮೂಹ ಬಾಯಿ ಬಿಟ್ಟುಕೊಂಡು ಬಂದವು.
ಪದಾರ್ಥ (ಕ.ಗ.ಪ)
ಪಕ್ಕಲೆ-ತಪ್ಪಲೆ, ಕೊಪ್ಪರಿಗೆ, ಪೂತನಿವೃಂದ-ದುರ್ಗಂಧದ ರಾಕ್ಷಸಿಯರ ತಂಡ, ಜೀರ್ಕೊಳವಿ-ಪಿಚಕಾರಿ, ಕೈರಾಟಳ-ಕೈರಾಟೆ, ಕುನಿಕಿಲ ಬಂಡಿ-ಕೊಲ್ಲಾರದ ಬಂಡಿ (ಬಾಗಿದ ಕಮಾನಿನ ಬಂಡಿ) ಉಲೂಕ-ಗೂಬೆ, ಜಂಬುಕ-ನರಿ, ಕಾಕ-ಕಾಗೆ,
ಮೂಲ ...{Loading}...
ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ರ್ದಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ ॥30॥
೦೩೧ ತಳಿತ ತಲೆಯೋಡಿನೊಳು ...{Loading}...
ತಳಿತ ತಲೆಯೋಡಿನೊಳು ಶೋಣಿತ
ಜಲವ ಕಾಸಿದರೆಳೆಯ ಕರುಳನು
ಹಿಳಿದು ಹಿಂಡಿದರಿಕ್ಕಿದರು ಕುಸುರಿಗಳ ಮೂಳೆಗಳ
ತೆಳುದೊಗಲ ಚಕ್ಕಳದ ಕೈ ಚ
ಪ್ಪಳೆಯವರು ಹಂತಿಯಲಿ ಕುಡಿದರು
ಕೆಳೆಯರಿಗೆ ಸವಿದೋರಿ ಪೂತನಿನಿಕರ ಗಡಣದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಣ ರಾಕ್ಷಸಿಯ ಸಮೂಹ, ಕೋಮಲ ತಲೆ ಬುರುಡೆಗಳಲ್ಲಿ ರಕ್ತವನ್ನು ಕಾಸಿದವು. ಅದರಲ್ಲಿ ಎಳೆಯ ಕರುಳುಗಳನ್ನು ಹಿಸುಕಿ ಹಿಂಡಿದರು. ಮೂಳೆಗಳನ್ನು ಪುಡಿ ಪುಡಿ ಮಾಡಿ ಹಾಕಿದರು. ತೆಳ್ಳನೆ ತೊಗಲಿನ ಚಕ್ಕಣಗಳನ್ನು ಚಪ್ಪಾಳೆ ತಟ್ಟುತ್ತ, ಸರದಿಯಲ್ಲಿ ಕೆಳೆಯರಿಗೆ ಆ ರಕ್ತಪಾಯಸದ ರುಚಿ ತೋರಿಸುತ್ತಾ ನೆರೆದಿದ್ದವರೆಲ್ಲ ಕುಡಿದರು.
ಪದಾರ್ಥ (ಕ.ಗ.ಪ)
ತಳಿತ-ಕೋಮಲ, ಪೂತನಿನಿಕರ-ಒಂದು ವರ್ಗದ ಹೆಣ್ಣು ರಾಕ್ಷಸಿಯರು, ತಲೆಯೋಡು-ತಲೆಬುರಡೆ, ಶೋಣಿತಜಲ-ರಕ್ತ, ಹಿಳಿದು-ಹಿಸುಕಿ, ಕುಸುರಿಗಳ-ಸಣ್ಣ ಚೂರುಗಳ-ಪುಡಿಯ, ಕೈಚಪ್ಪಳೆ-ಕೈಚಪ್ಪಾಳೆ
ಟಿಪ್ಪನೀ (ಕ.ಗ.ಪ)
ಚಕ್ಕಳ (ಚಕ್ಕಣ) - ಮಾಂಸದ ತುಂಡು
ಮದ್ಯಪಾನಕ್ಕೆ ಹೆಚ್ಚು ರುಚಿ ಕೊಡಲು ನಂಜಿಕೊಳ್ಳುವ ಖಾರದ (ಮಾಂಸದ) ಪದಾರ್ಥ.
ಚಕ್ಕಣ
‘ಪಂಪಭಾರತ’ದ 4-87ರ ಮುಂದಿನ ವಚನಭಾಗದ ಈ ಕೊನೆಯ ಸಾಲುಗಳನ್ನು ನೋಡಿ:
ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆಟದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಟಕಿಟದನೆಟದು ಕಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲ ವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು
ಈ ವಾಕ್ಯದ ಸರಣಿ ಮುಂದಿನ ವೃತ್ತದಲ್ಲಿ ಮುಂದುವರಿದು ‘’…… ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್’’ ಎಂಬ ಮಾತಿನಿಂದ ಕೊನೆಗೊಳ್ಳುತ್ತದೆ.
ಸೂಳೆಗೇರಿಯ ಒಂದೆಡೆಯಲ್ಲಿ ನಡೆದ ಮಧುಪಾನವೈಖರಿಯ ವರ್ಣನಾಂಶವನ್ನು ಮೇಲೆ ಉದ್ಧರಿಸಿದೆ. ಕಳ್ಳುಡಿಯಲೆಂದು ವಿಧಿವತ್ತಾಗಿ ಪಾತ್ರೆಗಳಿಗೆ ಕಳ್ಳೆರೆವ ಪರುಠವಣೆಯಾದ ಮೇಲೆ, ಕೆಲವು ಸಾಮಗ್ರಿಗಳ ಪಾಕವಾದ ಚಕ್ಕಣಗಳನ್ನು ಸವಿದು, ಕಳ್ಳಿನ ರುಚಿಯನ್ನು ಬಣ್ಣಿಸುತ್ತ, ಕಾಂತೆಯರು ಕಳ್ಗುಡಿದರೆಂಬುದು ಒಟ್ಟು ವಚನದ ಮತ್ತು ವೃತ್ತದ ತಾತ್ಪರ್ಯ.
ಮೇಲಣ ವಚನಭಾಗದಲ್ಲಿ, ಅರ್ಥಕ್ಲೇಶವಿರುವ ಶಬ್ದಗಳಲ್ಲಿ, ‘ಚಕ್ಕಣಂ’ ಎಂಬುದು ಸದ್ಯದ ವಿಚಾರಕ್ಕೆ ವಿಷಯ. ‘ಪಂಪಭಾರತ’ದ ಎರಡನೆಯ (ಹೊಸ) ಮುದ್ರಣದಲ್ಲಿ ಮಾತ್ರ ಈ ಶಬ್ದವು ಕಾಣುತ್ತದೆ. ಹಿಂದಿನ ಎಲ್ಲ ಮುದ್ರಣಗಳಲ್ಲಿಯೂ ಈಯೆಡೆಯಲ್ಲಿ ‘ಚಿಕ್ಕಣಂ’ ಎಂಬ ಶಬ್ದವಿದೆ. ಈ ಶಬ್ದಗಳು ಒಂದಕ್ಕೊಂದು ಪಾಠಾಂತರ, ಅರ್ಥಸಮಂಜಸತೆಯ ದೃಷ್ಟಿಯಿಂದ ಈಚಿನ ಪ್ರತಿಯಲ್ಲಿ ‘ಚಕ್ಕಣಂ’ ಎಂಬುದೇ ಸಂಪಾದಕರಿಗೆ ಗ್ರಾಹ್ಯಪಾಠವಾಗಿ ಕಂಡಿರಬಹುದು. ‘ಚಿಕ್ಕಣಂ’ ಶಬ್ದಕ್ಕೆ’ ‘ಪಂಪಭಾರತ’ದ ನಿಘಂಟಿನಲ್ಲಿ ಪ್ರಶ್ನಚಿಹ್ನೆಯಿದೆ. ಕಿಟ್ಟೆಲ್ ನಿಘಂಟಿನಲ್ಲಿಯೂ, ಸಂಸ್ಕೃತ ಮತ್ತು ಇತರ ಭಾಷೆಯ ಕೋಶಗಳಲ್ಲಿಯೂ ಈ ಶಬ್ದಕ್ಕೆ ‘ಸ್ನಿಗ್ಧವಾದ್ದು, ಜಿಗುಟಾದ್ದು’ ಎಂಬರ್ಥದ ಮಾತುಗಳಿವೆ. ಈ ಅರ್ಥವನ್ನಿಟ್ಟುಕೊಂಡು, ಕೆಲವು ಪದಾರ್ಥಗಳ ಮಿಶ್ರಣದ ಲೇಹ್ಯಪಾಕವನ್ನೋ ಸ್ನಿಗ್ಧಪಾಕವನ್ನೋ ಸವಿದರೆಂದು ಹೇಳಲಾಗದೇ ? ಇದು ಸಂಪಾದಕರಿಗೆ ಸಮ್ಮತವಾಗಿದ್ದರೆ ಪ್ರಶ್ನಚಿಹ್ನೆಯನ್ನು ಹಾಕುತ್ತಿರಲಿಲ್ಲ. ಹೋಗಲಿ, ಪಾಠಾಂತರದ ಸವರಣೆಯಿಂದ ಅರ್ಥದ ತೊಡಕು ಪರಿಹಾರವಾಯಿತೇ ?
ಈಗ ಪಂಪಭಾರತದ 7-90ನೆಯ ಈ ಪದ್ಯವನ್ನು ನೋಡಿ:
ಒದವಿದ ಕೆತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ
ಕ್ಕದ ಗತಿ ನಾಟಕಭಿನಯಮಾಯ್ತೆನೆ ಗೇಯದೊಳೀಕೆ ಸೊರ್ಕನಿ
ಕ್ಕಿದಳೆನ ಕಳ್ಗೆ ಚಿಕ್ಕಣಮೆನಿಪ್ಪುದು ಸಾಗೆನಿಸಲ್ಕೆ ಸಾಲ್ವ ಸ
ಗ್ಗದ ಪೊಸದೇಸಿಯೋಳಿಗಳನೊರ್ವಳೊಟಲ್ದು ನೆಟಲ್ದು ಪಾಡಿದಳ್ !!
ಇಂದ್ರಕೀಲ ನಗೇಂದ್ರದಲ್ಲಿ ತಪೋನಿಯಮನಿಯಮಿತನಾಗಿ ನಿಂತ, ನರೇಂದ್ರ ತಾಪಸನಾದ ಅರ್ಜುನನ ತಪೋವಿಘಾತವನ್ನು ಮಾಡಲೆಂದು ಇಂದ್ರನಪ್ಪಣೆಯಂತೆ ಬಂದ ದೇವಾಪ್ಸರೆಯರ ವೃಂದದಲ್ಲಿ ಒಬ್ಬಳು ಅವನೆದುರಿನಲ್ಲಿ ಕಾಣಿಸಿಕೊಂಡ ಪರಿಯನ್ನು ಇಲ್ಲಿ ಹೇಳಿದೆ. ‘‘ಕೈಬಳೆಗಳ ಮತ್ತು ಹುಬ್ಬುಗಳ ಮಿಡುಕಾಟ, ಲಯಾನುಸಾರಿಯಾದ ತ್ವರಿತ ಪದಗತಿ, ನೃತ್ಯಾಭಿನಯವಾಯಿತೆಂಬಂತೆ ಇತ್ತು; ಹಾಡಿದ ಹಾಡಿನಲ್ಲಿ ಮಾದಕತೆಯನ್ನು ತುಂಬಿದಂತೆ ಇತ್ತು; ಅವಳ ಸಾಗು 1 ಎಂದರೆ ಮುಂಬರಿವು (?) ಕಳ್ಳಿಗೆ ಚಕ್ಕಣವೆನಿಸುವುದು; ಹೀಗೆ ಹೇಳಬಹುದಾದ ಸ್ವರ್ಗದ ಹಲವು ಸೊಗಸುಗಳನ್ನು ಒಬ್ಬಳ ಪ್ರೀತಿಯಿಂದಲೂ ತನ್ಮಯತೆಯಿಂದಲೂ ಹಾಡಿದಳು’’ – ಎಂಬುದು ಈ ಪದ್ಯದ ಸಾರಾಂಶ.
ಪಂಪಭಾರತದ ಎರಡನೆಯ (ಹೊಸ) ಮುದ್ರಣದಲ್ಲಿ ಮಾತ್ರ ‘ಕಳ್ಗೆ ಚಕ್ಕಣ ಮೆನಿಪ್ಪುದು’ ಎಂದಿದೆ. ಹಿಂದಿನ ಇಲ್ಲ ಮುದ್ರಣಗಳಲ್ಲಿಯೂ ‘ಕಳ್ಗೆ’ ಎಂಬೆಡೆಯಲ್ಲಿ ‘ಕಣ್ಗೆ’ ಎಂದಿದೆ. ಈ ಮಾರ್ಪಾಟಿನಿಂದ ಅರ್ಥ ಸುಕರವಾಯಿತೆ ? ಕಣ್ಗೆ ಅಥವಾ ಕಳ್ಗೆ ‘ಚಕ್ಕಣಮೆನಿಪ್ಪುದು ಸಾಗು, ಎಂದರೇನು ? ಪಂಪಭಾ. ನಿಘಂಟಿನಲ್ಲಿ ‘ಚಕ್ಕಣಂ’ ಶಬ್ದಕ್ಕೆ ಪ್ರಶ್ನಚಿಹ್ನೆಯಿದೆ. ಕಿಟ್ಟೆಲ್ ಕೋಶದಲ್ಲಿ ಈ ಶಬ್ದವಿಲ್ಲ. ಸನ್ನಿವೇಶಬಲದಿಂದ ಇಲ್ಲಿ ಶಬ್ದಾರ್ಥವನ್ನು ಊಹಿಸುವುದು ಕಷ್ಟ. ಅರ್ಥಾನುಕೂಲದ ದೃಷ್ಟಿಯಿಂದ ಸಂಪಾದಕರು ಯೋಜಿಸಿರಬಹುದಾದ ಈ ಪಾಠಾಂತರ(?)ದ ಔಚಿತ್ಯವನ್ನು ಮನಗಾಣಬೇಕಾಗಿದೆ.
4-87ವ. ದ ಮಧುಪಾನಸಂದರ್ಭದಲ್ಲಿ ‘ಚಿಕ್ಕಣ’ವು ‘ಚಕ್ಕಣ’ವಾದುದನ್ನೂ, 7-90ರಲ್ಲಿ ‘ಕಣ್ಗೆ’ಯು ‘ಕಳ್ಗೆ’ ಆದುದನ್ನೂ, ಸನ್ನಿವೇಶಬಲದಿಂದ ನೋಡಿದರೆ ಕಳ್ಳಿಗೂ ಚಕ್ಕಣಕ್ಕೂ ಜಾತಿಸಂಬಂಧವಿರಬಹುದೆಂದು ತೋರುತ್ತದೆ. 2ನೆಯ ನಾಗವರ್ಮನ ‘ಅಭಿಧಾನ ವಸ್ತುಕೋಶ’ದ ಈ ತ್ರಿಪದಿಯಲ್ಲಿ ಆ ಸಂಬಂಧವನ್ನು ಕಾಣಬಹುದು:
ಪಾನಂ ಗೋಷ್ಠಿಕೆಯದಾಪಾನಂ ಶುಂಡಾಪ್ರ
ಪಾನಂ ಕಳ್ಗುಡಿಹ ಕಡುಸೊರ್ಕು ಚಕ್ರ್ಕಣಂ
ತಾನದು ಪೆಸರೊಳಿದುಂ !!( 93-6)
ಇಲ್ಲಿ ಬಂದಿರುವ ‘ಚಕ್ರ್ಕಣಂ’, ‘ಚಕ್ಕಣಂ’ ಎಂಬುದರ ಮೊದಲ ರೂಪವಿರಲು ಸಾಧ್ಯ. ಬಹುಶಃ ಪಂಪನಲ್ಲಿ, ರೂಢಿಯ ಶಬ್ದವಾಗಿದ್ದ ತರುವಾಯದ ರೂಪ ಬಳಕೆಯಾಗಿರಬಹುದು. ಈ ಪದ್ಯದಿಂದ ಚಕ್ಕಣವು ಕಳ್ಳಿನ ಅನುಬಂಧಿಶಬ್ದವೆಂದು ತಿಳಿಯಬಹುದಲ್ಲದೆ ಈ ಪದಾರ್ಥವಿಶೇಷದ ಪಾತ್ರವೇನೆಂದು ಸ್ಪಷ್ಟಪಡುವುದಿಲ್ಲ.
ಹಳಗನ್ನಡ ಕಾವ್ಯಗಳಲ್ಲಿ ಸಾದೃಶ್ಯಕ್ಕಾಗಿ ಎತ್ತಿಕೊಳ್ಳಲು ಈ ಶಬ್ದಗಳ ಅನ್ಯಪ್ರಯೋಗಗಳು ದೊರೆಯುವಂತೆ ಕಾಣುವುದಿಲ್ಲ. ಕನ್ನಡ, ತೆಲುಗು ಮತ್ತು ತುಳು ನುಡಿಗಳ ಪ್ರಮಾಣಿತ ನಿಘಂಟುಗಳಲ್ಲಿ ‘ಚಕ್ಕಣಂ’ ಶಬ್ದದ ಯಥಾರೂಪವಾಗಲಿ, ವಿಕೃತ ರೂಪವಾಗಲಿ ಕಾಣುವಂತೆ ತೋರಲಿಲ್ಲ. ತಮಿಳು ಕೋಶದಲ್ಲಿ (ಖಿಚಿmiಟ ಐexiಛಿoಟಿ) ಇದರ ವಿಕೃತರೂಪವನ್ನು ಕಾಣಬಹುದು. ‘ಚಾಕ್ಕಣಾಕ್ಕಟ’ ಎಂಬ ಒಂದು ಮಾತನ್ನು ಇಲ್ಲಿ ಕೊಟ್ಟು, ಅದಕ್ಕೆ ‘ಒeಚಿಣ ಠಿಡಿeಠಿಚಿಡಿeಜ ಚಿಟಿಜ soಟಜ ಚಿಣ ಣಚಿveಡಿಟಿs ಣo beಣಚಿಞeಟಿ bಥಿ ಜಡಿuಟಿಞಚಿಡಿಜs ಚಿಟoಟಿg ತಿiಣh ಣhe ಜಡಿiಟಿಞ’ಎಂದು ಅರ್ಥವನ್ನು ಬರೆದಿದೆ. ಕೋಶಕಾರರು ರೂಢಿಯಿಂದ ಈ ಮಾತನ್ನು ಸಂಗ್ರಹಿಸಿದಂತಿದೆ. ಇದು ‘ಚಾಖನಾ’ ಎಂಬ ಉರ್ದುಧಾತುವಿನಿಂದ ಜನ್ಯವಾದುದೆಂದು ಸೂಚಿಸಿ, ‘ಜಕ್ಷಣ’ ಎಂಬ ಸಂಸ್ಕೃತ ಶಬ್ದವನ್ನು ಹೋಲಿಕೆಗೆ ಕೊಟ್ಟಿದೆ.
ಗ್ರಂಥಾಧಾರಗಳು ಮತ್ತು ನಿಘಂಟುವಿನ ಉಲ್ಲೇಖ ದುರ್ಲಭವಾಗಿರುವ ಈ ಶಬ್ದ ಕಳ್ಳಂಗಡಿಯಲ್ಲಿ ಕಳ್ಳಿನಷ್ಟೇ ಸುಪರಿಚಿತ. ಪಡಖಾನೆಯಿರುವಲ್ಲಿ ಕಳ್ಳಿರುವಂತೆ, ಕಳ್ಳಿರುವೆಡೆ ಚಕ್ಕಣವಿರುತ್ತದೆ. ರೂಢಿಯಲ್ಲಿ ಇದನ್ನು ಚಾಕಣ ಎನ್ನುತ್ತಾರೆ. ಕನ್ನಡಿಗರೂ ತಮಿಳರೂ, ತೆಲುಗರೂ ತುಳುವರೂ ಸಮಾನವಾಗಿ ಈ ಶಬ್ದವನ್ನು ಬಳಸುತ್ತಾರೆ. ಉರ್ದು ತಾಯಿನುಡಿಯ ಜನರೂ ಹೇಳುತ್ತಾರೆ. ಕಳ್ಳಂಗಡಿಯ ವಿತರಣೆಗಾರರಾದ ನನ್ನ ಪರಿಚಯದ ಮಹನೀಯರೋಬ್ಬರು ಇದರ ಬಗೆಗೆ ಹೀಗೆ ಹೇಳುತ್ತಾರೆ: ‘‘ಕಳ್ಳುವ್ಯಾಪಾರದಲ್ಲಿ ಚಾಕಣದ ಪಾತ್ರ ಹಿರಿದು. ಆ ವ್ಯಾಪಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಇದು ಇರಲೇ ಬೇಕು. ಇದನ್ನು ಸಾಮಾನ್ಯವಾಗಿ ಮಾಂಸವ್ಯಾಪಾರಿಗಳು ಒದಗಿಸುತ್ತಾರೆ. ಕಳ್ಳಿನ ರುಚಿಯನ್ನು ಹೆಚ್ಚಿಸಲು ಚಾಕಣವು ಇಷ್ಟವಾದೊಂದು ವ್ಯಂಜಕದ್ರವ್ಯ. ಬಿರಿಯಾನಿಯಂತಹ ಉತ್ತಮದರ್ಜೆಯ ಮಾಂಸ ವ್ಯಂಜನಗಳಿಗಿಂತ ಚಾಕಣವನ್ನೇ ಕಳ್ಳಿನೊಡನೆ ಹೆಚ್ಚಾಗಿ ಕುಡುಕರು ಅಪೇಕ್ಷಿಸುತ್ತಾರೆ. ಚಾಕಣವು ಮೂರನೆಯ ದರ್ಜೆ ವ್ಯಂಜನವಾದರೂ ಬಳಸುವ ಸಾಮಗ್ರಿಗಳೇನೋ ಒಳೆಯವೆ. ಪ್ರಾಣಿಗಳ ಕಣ್ಣು, ನಾಲಿಗೆ, ಕರುಳು, ಕಾಲು ಮುಂತಾದ ಸೂಕ್ಷ್ಮಾಂಗಗಳನ್ನು ಕೆಲವು ಸಂಬಾರ ಪದಾರ್ಥಗಳೊಡನೆ ಬೇಯಿಸಿ ಮಾಡಲಾಗುತ್ತದೆ. ವಿಶೇಷವಾಗಿ ಖಾರದ ರುಚಿಗಾಗಿ ಮೆಣಸು ಕಡಲೆಗಳನ್ನು ಇದರೊಂದಿಗೆ ಸೇರಿಸಲಾಗುತ್ತದೆ (ನೋಡಿ: ‘ಮೆಣಸುಗಡಲೆಯ ಪುಡಿಯೊಳಡಸಿದ……’). ಇದನ್ನು ಕಳ್ಳಿನೊಡನೆ ಯಾವಾಗ ಬೇಕೆನಿಸಿದರೂ ಸ್ವೇಚ್ಛೆಯಿಂದ ಕುಡುಕರು ಉಪಯೋಗಿಸುತ್ತಾರೆ. ಆಗಾಗ ಇತರ ಸಂದರ್ಭಗಳಲ್ಲಿಯೂ ಚಾಕಣವನ್ನು ಮನೆಯಲ್ಲಿಯೂ ತಯಾರಿಸಿ ಬಳಸುವುದುಂಟು.2
ಈ ಹೇಳಿಕೆಗಳಿಂದ ನಾವು ‘ಚಕ್ಕಣ’ ಎಂದರೆ ‘ಕಳ್ಳಿನೊಡನೆ ರುಚಿಗಾಗಿ ನೆಂಜಿಕೊಳ್ಳುವ ಮಾಂಸದ ಒಂದು ವ್ಯಂಜಕದ್ರವ್ಯ’ ಎಂದು ತಿಳಿಯಬಹುದು. ಮೇಲೆ ಉದ್ಧರಿಸಿದ ಕಾವ್ಯಭಾಗಗಳಲ್ಲಿ ಈ ಶಬ್ದವು ಈ ಅರ್ಥದಲ್ಲಿಯೇ ಬಂದಿರುವುದೆಂದು ಹೇಳಬಹುದು. ಸೂಳೆಗೇರಿಯ ಒಂದೆಡೆಯಲ್ಲಿ ಕಾಂತೆಯರು ಮೊದಲು ಬಾಯಿಯ ರುಚಿ ಪಟುಗೊಳ್ಳಲು ‘ಚಕ್ಕಣ’ವನ್ನು ಸವಿದು, ಆಮೇಲೆ ಕಳ್ಳನ್ನು ಕುಡಿದರು ಎಂಬುದು ಸರಿ. ಅರ್ಜುನನ ಮುಂದೆ ಹಲವು ಹೊಸ ಸೊಗಸುಗಳನ್ನು ಹಾಡಿ ಹಿಡಿಯುವಂತೆ, ಸಾರಿ ಬಂದ ಪರಿ (?) ಗೀತೆಯ ಮೋಹಕತೆಗೂ ಮಿಗಿಲಾಗಿ ಕಳ್ಳಿನೊಡನೆ ಚಕ್ಕಣವನ್ನು ಸವಿದಂತೆ ಇದ್ದಿತೆಂಬುದು ಬಣ್ಣನೆಗೆ ಸಹಜ.
ಎರಡನೆಯ ನಿದರ್ಶನದಲ್ಲಿ ಪರಿಹಾರವಾಗಬೇಕಾದ ಒಂದು ಸಣ್ಣ ತೊಡಕುಂಟು. ಆಕ್ಷರಂ > ಅಕ್ಕರಂ, ಲಕ್ಷಣಂ > ಲಕ್ಕಣಂ ಎಂಬ ತದ್ಭವಶಬ್ದಗಳಂತೆ ಚಕ್ಷಣಂ > ಚಕ್ಕಣಮ ಆಗಬಹುದು. ‘ಚಕ್ಷಣಂ’ ಶಬ್ದಕ್ಕೆ ಸಂಸ್ಕೃತ ನಿಘಂಟಿನಲ್ಲಿ ತೋರುವಿಕೆ, ಕಾಣುವಿಕೆ ಎಂಬರ್ಥವೂ ಉಂಟು. ‘ಕಣ್ಗೆ’ ಎಂಬ ಪಾಠವನ್ನು ಈಯರ್ಥದ ಚಕ್ಕಣದೊಂದಿಗೆ ಹೊಂದಿಸಿದರೆ ಸರಿಯೊಂದದೆ ? ಆದರೆ ಇಲ್ಲಿ ಪುನರುಕ್ತಿಯ ಆಕ್ಷೇಪವಿರಲಿ, ‘ಗೇಯದೊಳೀಕೆ ಸೊರ್ಕನಿಕ್ಕಿದಳೆನೆ’ ಎಂಬ ಮಾತಿನ ಸ್ವಾರಸ್ಯವು ಅರ್ಧದಲ್ಲಿಯೇ ಕಡಿದಂತಾಗುತ್ತದೆ. ‘ಚಕ್ಷಣಂ’ ಶಬ್ದಕ್ಕೆ ಸಂಸ್ಕೃತ ನಿಘಂಟಿನಲ್ಲಿ ‘ಇಚಿಣiಟಿg ಚಿ ಡಿeಟish ಣo ಠಿಡಿomoಣe ಚಿಠಿಠಿeಣiಣe’ ಎಂದೂ (ಂಠಿಣe’s) ‘ಇಚಿಣiಟಿg ಚಿ ಡಿeಟish ಣo ಠಿಡಿomoಣe ಜಡಿiಟಿಞiಟಿg’ ಎಂದೂ (ಒoಟಿieಡಿ Wiಟಟiಚಿms) ಅರ್ಥಗಳನ್ನು ಹೇಳಿರುವುದು ನಮ್ಮ ಪೂರ್ವನಿರ್ಧಾರಕ್ಕೆ ಪೋಷಕವಾಗುತ್ತದೆ. ಅಲ್ಲದೆ 4-87 ವ.ದಲ್ಲಿ ಈ ಶಬ್ದದ ಔಚಿತ್ಯವನ್ನು ನಾವು ಮನಗಂಡಿದ್ದೇವೆ. ಆದುದರಿಂದ ಇಲ್ಲಿ ಈ ಶಬ್ದವನ್ನು ಕವಿಯು ಕಳ್ಳಿನ ಸಲುವಾಗಿ ಬಳಸಿರುವನಲ್ಲದೆ ಕಾಣ್ಕೆಯ ಸಲುವಾಗಿ ಬಳಸಿಲ್ಲವೆಂದು ಒಪ್ಪಬೇಕಾಗುತ್ತದೆ. ‘ಕಳ್ಗೆ ಚಕ್ಕಣಮೆನಿಪ್ಪುದು-’ ಎಂಬುದು ಉಚಿತಪಾಠವೆಂದು ಗ್ರಹಿಸಬೇಕು.
ಈ ಮಾರ್ಪಾಟು 1935ರ ಎರಡನೆಯ (ಹೊಸ) ಮುದ್ರಣದ ವೇಳೆಗೆ ಸಂಪಾದಕರಿಗೆ ಮನವರಿಗಕೆಯಾಗಿ ಹಿಂದಿನ ಪಾಠಗಳು ತಿದ್ದುಪಡಿಯಾಗಿದೆ. ಮತ್ತೆ ನಿಘಂಟಿನ ಪುನರ್ವಿಮರ್ಶೆಯಾಗಿ ಪೂರ್ಣಗ್ರಂಥದ ಹೊಸ ಮುದ್ರಣ ಹೊರಬೀಳದೆ, 1931ರ ‘ಪಂಪಭಾ. ನಿಘಂಟಿ’ನಲ್ಲಿ ‘ಚಕ್ಕಣ’ವು ಪ್ರಶ್ನಚಿಹ್ನೆಯ ಶಬ್ದವಾಗಿಯೇ ಉಳಿದುಕೊಂಡಿತು; ಈ ಟಿಪ್ಪಣಿಕಾರನಿಗೆ ಸತ್ತ ಹುಲಿಯ ಬಾಲವನ್ನೆಳೆದು ಶೂರನಾಗುವ ಪ್ರಸಂಗವೊಂದು ಹುಟ್ಟಿಕೊಂಡಿತು.
ಇನ್ನು ಈ ಶಬ್ದದ ವ್ಯುತ್ಪತ್ತಿಯನ್ನು ಕುರಿತು ತೋರಬಹುದಾದ ಒಂದೆರಡು ಸಂದೇಹಗಳು:
ಸಂಸ್ಕೃತ ನಿಘಂಟಿನಲ್ಲಿ ‘ಚಕ್ಷಣಂ’ ಶಬ್ದಕ್ಕೆ ಧಾತುಮೂಲದ ಸೂಚನೆಯಾಗಲಿ ಪ್ರಯೋಗವಾಗಲಿ ಕಾಣುವುದಿಲ್ಲ. ಬೇರೆ ನಿಘಂಟುವಿನ ಆಧಾರದಿಂದ ಈ ಶಬ್ದಾರ್ಥವನ್ನು ಸೂಚಿಸಿರುವುದು ಕಾಣುತ್ತದೆ. 3 ಚರ್, ಚಷ್, ಜಕ್ಷ್ (= ಜಕ್ಷಣಂ) ಧಾತುಗಳಿಗೆ ‘ತಿನ್ನು’ ಎಂಬರ್ಥವಿದೆಯಾದರೂ ಈ ಶಬ್ದವು ಇವುಗಳಿಂದಾದ ಜನ್ಯಶಬ್ದವಾಗಿ ಕಾಣುವುದಿಲ್ಲ. ಉರ್ದು ಹಿಂದಿಗಳಲ್ಲಿ ಚಖ(ನ), ಚಾಖ(ನ) ಎಂಬ ಧಾತುಗಳು ‘ರುಚಿನೋಡು’ ಎಂಬರ್ಥದಲ್ಲಿದ್ದು, ಇವುಗಳ ನಾಮರೂಪ ಚಿಖೌನಾ, ಚಿಖೌನೀ ಎಂದಾಗುತ್ತವೆ. ಸ್ವಾದಕ್ರಿಯೆ, ಸ್ವಾದವಸ್ತು ಎರಡರಲ್ಲಿಯೂ ಇವು ಪ್ರಯುಕ್ತ. ಸುರಾಸಹಚರಿಯಾದ ಈ ವ್ಯಂಜನಕ್ಕೆ ‘ಚಾಕಣ’ ಎಂಬ ಹೆಸರನ್ನು ದಾಕ್ಷಿಣಾತ್ಯರಾದ ಮುಸ್ಲಿಮರು ಹೇಳುವರಲ್ಲದೆ ಔತ್ತರೇಯರಾದವರು ಹೇಳುವುದಿಲ್ಲವೆಂದು ತಿಳಿದು ಬರುತ್ತದೆ. ಉರ್ದು, ಪರ್ಶಿಯನ್, ಹಿಂದಿ ನಿಘಂಟುಗಳಲ್ಲಿ ಈ ಶಬ್ದವಿದ್ದಂತಿಲ್ಲ. ಸಂ. ‘ಚಕ್ಷಣ’ ಶಬ್ದದ ತದ್ಭವರೂಪವೆಂದು ‘ಚಕ್ಕಣ’ ಶಬ್ದವನ್ನು ಒಪ್ಪಿಕೊಳ್ಳುವಲ್ಲಿ ನಾಗವರ್ಮನ ಪ್ರಯೋಗವಾದ ‘ಚಕ್ರ್ಕಣ’ ಶಬ್ದರೂಪ ಮಧ್ಯೆ ತೊಡಕಾಗಿ ನಿಲ್ಲುತ್ತದೆ. ಆದುದರಿಂದ ಇದು ದೇಶ್ಯವೇ, ತದ್ಭವರೂಪವೇ, ಅನ್ಯದೇಶ್ಯವೇ ಎಂಬುದು ತಿಳಿದವರು ನಿರ್ಧರಿಸಬೇಕಾದ ಅಂಶ.
[ವಸ್ತುಕೋಶದ ‘ಚಕ್ರ್ಕಣಂ’ ಎಂಬಲ್ಲಿಯ ರಕಾರ ‘ಕಡುಸೊರ್ಕು’ ಎಂಬಲ್ಲಿಯ ರಕಾರದ ಪ್ರಬಾವದಿಂದ ಘಟಿಸಿರಬಹುದೆಂದೂ ಸಂಸ್ಕೃತ ನಿಘಂಟುಕಾರರು ತೋರಿಸಿರುವ ಖಾದನಾರ್ಥದ ‘ಚಕ್ಷಣ’ ಎಂಬುದರ ತದ್ಭವಶಬ್ದವೇ ‘ಚಕ್ಕಣಂ’ ಆಗಿದೆಯೆಂದೂ ತಿಳಿಯುವುದು ಬಹುಶಃ ತಪ್ಪಾಗಲಾರದು; ಚಕ್ಷಣಂ > ಚಕ್ಕಣಂ.]
-ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ
ಶಾಸ್ತ್ರೀಯ ಸಂಪುಟ 4
ಮೂಲ ...{Loading}...
ತಳಿತ ತಲೆಯೋಡಿನೊಳು ಶೋಣಿತ
ಜಲವ ಕಾಸಿದರೆಳೆಯ ಕರುಳನು
ಹಿಳಿದು ಹಿಂಡಿದರಿಕ್ಕಿದರು ಕುಸುರಿಗಳ ಮೂಳೆಗಳ
ತೆಳುದೊಗಲ ಚಕ್ಕಳದ ಕೈ ಚ
ಪ್ಪಳೆಯವರು ಹಂತಿಯಲಿ ಕುಡಿದರು
ಕೆಳೆಯರಿಗೆ ಸವಿದೋರಿ ಪೂತನಿನಿಕರ ಗಡಣದಲಿ ॥31॥
೦೩೨ ಕರುಳನಣಲೊಳಗಡಸಿ ನಲಿದುದು ...{Loading}...
ಕರುಳನಣಲೊಳಗಡಸಿ ನಲಿದುದು
ಮರುಳ ಬಳಗ ಕಪಾಲ ಪಾತ್ರೆಯ
ನರೆನೆಗಹಿ ಕೊಂಕಿನಲಿ ಕುಡಿದರು ಮುಕ್ತಕೇಶಿಯರು
ಮೊರೆವೆಣನನೊಡೆ ಮೆಲುತ ಹಾಡಿತು
ದುರುಳ ದಾನವನಿಕರ ಪಾಂಡವ
ಕುರುನೃಪರ ಹರಸಿದುದು ಕೈಪರೆಗುಟ್ಟಿ ಭೂತಗಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಿಶಾಚ ಪರಿವಾರ ಕರುಳುಗಳನ್ನು ಗಂಟಲಲ್ಲಿ ಅಂಗುಳಲ್ಲಿ ಅಡಗಿಸಿಟ್ಟುಕೊಂಡು ಆನಂದಿಸಿತು. ಕೆದರಿದ ಕೇಶರಾಶಿಯ ಪಿಶಾಚಿಗಳು ತಲೆ ಬುರುಡೆಯ ಬಟ್ಟಲನ್ನು ಅರ್ಧ ಹಿಡಿದೆತ್ತಿ ಬಾಗಿಕೊಂಡು ಕುಡಿದವು. ಒರಲುತ್ತಿರುವ ಹೆಣವನ್ನು ಒಡೆಯುವಂತೆ ಅಗಿದು ಮೆಲುಕು ಹಾಕುತ್ತ ದುಷ್ಟ ರಾಕ್ಷಸ ಸಮೂಹ ಹಿಗ್ಗಿ ಹಾಡಿತು. ಇಂಥ ರಸದೌತಣ ನೀಡಿದ್ದಕ್ಕಾಗಿ ಪಿಶಾಚ ಪರಿವಾರಗಳು ಕೈಚಪ್ಪಾಳೆ ತಟ್ಟುತ್ತ ಪಾಂಡವ ಮತ್ತು ಕೌರವ ರಾಜರನ್ನು ಹರಸಿದವು.
ಪದಾರ್ಥ (ಕ.ಗ.ಪ)
ಅಣಲು-ಗಂಟಲು, ಅಂಗುಳು, ಮುಕ್ತ ಕೇಶಿ-ಕೆದರಿದ ತಲೆ ಕೂದಲಿನವರು, ಅರೆನೆಗಹಿ-ಅರ್ಧ ಹಿಡಿದೆತ್ತಿ, ಮೊರೆವೆಣ-ಒರಲುತ್ತಿರುವ ಹೆಣ, ಕೈಪರೆಗುಟ್ಟು-ಕೈಚಪ್ಪಾಳೆಯಿಕ್ಕು
ಮೂಲ ...{Loading}...
ಕರುಳನಣಲೊಳಗಡಸಿ ನಲಿದುದು
ಮರುಳ ಬಳಗ ಕಪಾಲ ಪಾತ್ರೆಯ
ನರೆನೆಗಹಿ ಕೊಂಕಿನಲಿ ಕುಡಿದರು ಮುಕ್ತಕೇಶಿಯರು
ಮೊರೆವೆಣನನೊಡೆ ಮೆಲುತ ಹಾಡಿತು
ದುರುಳ ದಾನವನಿಕರ ಪಾಂಡವ
ಕುರುನೃಪರ ಹರಸಿದುದು ಕೈಪರೆಗುಟ್ಟಿ ಭೂತಗಣ ॥32॥
೦೩೩ ಸಿಡಿದ ಕಣ್ಣಾಲಿಗಳನಾಯಿದು ...{Loading}...
ಸಿಡಿದ ಕಣ್ಣಾಲಿಗಳನಾಯಿದು
ಕುಡುಕುಗೊಂಡವು ಕಾಗೆಗಳು ಹಿ
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು
ಅಡಗ ಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕುತದ
ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿದ ಕಣ್ಣು ಗುಡ್ಡೆಗಳನ್ನು ಆಯ್ದುಕೊಂಡು ಕಾಗೆಗಳು ಗುಟುಕರಿಸಿದವು. (ತುತ್ತುಗೊಂಡವು) ನರಿಗಳು ಮೊದಲಾದ ಪ್ರಾಣಿಗಳು ಹಿಮ್ಮಡಿಯಲ್ಲಿರುವ ನರಸಮೂಹಗಳನ್ನು ಕಚ್ಚಿ ಕಚ್ಚಿ ಸೆಳೆದವು. ಮಾಂಸವನ್ನು ಸ್ವಲ್ಪಸ್ವಲ್ಪವಾಗಿ ಕುಕ್ಕಿ ಚಪ್ಪರಿಸಿ ತನ್ನ ಪರಿವಾರವನ್ನು ಗೂಬೆಗಳು ಕೂಗಿ ಕರೆದವು. ಬೇತಾಳಗಳು ಕಾಳಿಯರು ರಕ್ತದ ಪ್ರವಾಹದಲ್ಲಿ ಓಕುಳಿ ಆಟ (ಕೆನ್ನೀರಿನಾಟ) ಆಡಿದವು.
ಪದಾರ್ಥ (ಕ.ಗ.ಪ)
ಕಣ್ಣಾಲಿ-ಕಣ್ಣುಗುಡ್ಡೆ, ಕುಡುಕುಗೊಂಡವು-ಗುಟುಕು ಗುಟುಕಾಗಿ ಕುಡಿದವು, ಜಂಬುಕ-ನರಿ, ಹೊರಳಿಯ ನರವ-ನರಸಮೂಹವ, ಕದುಕಿರಿದು-ಸ್ವಲ್ಪ ಸ್ವಲ್ಪವಾಗಿ ಕುಕ್ಕಿ ಚಪ್ಪರಿಸಿ
ಮೂಲ ...{Loading}...
ಸಿಡಿದ ಕಣ್ಣಾಲಿಗಳನಾಯಿದು
ಕುಡುಕುಗೊಂಡವು ಕಾಗೆಗಳು ಹಿ
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು
ಅಡಗ ಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕುತದ
ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು ॥33॥
೦೩೪ ತೆಳುದೊಗಲ ನಿಡುಸೋಗೆಯುಡುಗೆಯ ...{Loading}...
ತೆಳುದೊಗಲ ನಿಡುಸೋಗೆಯುಡುಗೆಯ
ನೆಳಗರುಳ ಸಿಂಗಾರದುರುಬಿನ
ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ
ಎಳಮಿದುಳ ಕಜ್ಜಾಯ ಮೂಳೆಯ
ಹಳುಕು ಕಾಳಿಜದಟ್ಟುಗುಳಿಗಳ
ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತನಿ ರಾಕ್ಷಸಿ ಸಮೂಹ , ತೆಳುವಾದ ತೊಗಲನ್ನೆ ಉದ್ದನೆಯ ಸೋಗೆವಸ್ತ್ರವನ್ನಾಗಿ ಮಾಡಿಕೊಂಡು, ಎಳೆ ಕರುಳುಗಳನ್ನೇ ತಲೆಗೆ ಅಲಂಕಾರದ ತುರುಬನ್ನಾಗಿ ಮಾಡಿಕೊಂಡು (ಗಂಟಿಕ್ಕಿಕೊಂಡು), ಇತರರ ಕೈಯಲ್ಲಿರುವ ಹಗ್ಗದ ಚಿಕ್ಕ ತೊಟ್ಟಿಲಿನ ಬೊಂಬೆಗಳೊಂದಿಗೆ ಎಳೆ ಮಿದುಳನ್ನು ಕಜ್ಜಾಯಗಳನ್ನಾಗಿ ಮಾಡಿಕೊಂಡು, ಮೂಳೆಗಳನ್ನು ಕುರುಕಲನ್ನಾಗಿ ಮಾಡಿಕೊಂಡು, ಮೂತ್ರ ಪಿಂಡಗಳ (ಕಾಳಿಜ) ಪಿತ್ತಾಶಯ, (ಯಕೃತ್ತುಗಳ) ಗಳೊಂದಿಗೆ ಅಟ್ಟು ಗುಳಿಯಾಟವನ್ನು ಆಡುತ್ತಾ ಮೆರೆಯುತ್ತಿತ್ತು.
ಮೂಲ ...{Loading}...
ತೆಳುದೊಗಲ ನಿಡುಸೋಗೆಯುಡುಗೆಯ
ನೆಳಗರುಳ ಸಿಂಗಾರದುರುಬಿನ
ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ
ಎಳಮಿದುಳ ಕಜ್ಜಾಯ ಮೂಳೆಯ
ಹಳುಕು ಕಾಳಿಜದಟ್ಟುಗುಳಿಗಳ
ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು ॥34॥
೦೩೫ ತೂಳ ಬರೆ ...{Loading}...
ತೂಳ ಬರೆ ಕುಣಿದುದು ಕಬಂಧದ
ಜಾಲದೊಡನೆ ಪಿಶಾಚಗಣ ಭೇ
ತಾಳಗಣ ಕೈಪರೆಯ ಬಡಿದುದು ಶಾಕಿನೀನಿವಹ
ಸಾಲು ಮಿಗೆ ಸೊಗಸಿದುದು ರಣ ಭೂ
ತಾಳಿಯಲಿ ಮತ್ತಿತ್ತ ಕೇಳ್ದುದು
ಪಾಳಯಂಗಳೊಳೆರಡರಲಿ ಸಂಗರ ಮಹೋತ್ಸಾಹ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಿಶಾಚಗಣಗಳು ರುಂಡವಿಲ್ಲದ ಮುಂಡಗಳೊಡನೆ ಒಂದನ್ನೊಂದು ನೂಕಿ ಬೀಳಿಸುತ್ತ ಕುಣಿದವು. ಭೇತಾಳಗಳ ಗುಂಪು ಶಾಕಿನಿಗಳ ದಳ ಎರಡೂ ಕೈ ತಮಟೆಗಳನ್ನು ಬಡಿಯುತ್ತಿದ್ದವು. ರಣಭೂತಗಳ ಸಮೂಹದ ಸಾಲು ಬಹು ಸೊಗಸಾಯಿತು. ರಣರಂಗದಲ್ಲಿ ಹೀಗಿರಲಾಗಿ ಇತ್ತ ಕಡೆ ಎರಡೂ ಪಾಳೆಯಗಳಲ್ಲಿ ಯುದ್ಧಕ್ಕೆ ಅತಿ ಉತ್ಸಾಹಗೊಂಡ ದನಿ ಉಬ್ಬುಬ್ಬಿ ಕೇಳಿಸಿತು.
ಪದಾರ್ಥ (ಕ.ಗ.ಪ)
ಕಬಂಧ-ರುಂಡವಿಲ್ಲದ ಮುಂಡ , ತೂಳಬರೆ-ಒಂದನ್ನೊಂದು ನೂಕಿ ಬೀಳಿಸಲು, ಕೈದಿರೆ-ಕೈತಮಟೆ (ದಪ್ಪು?), ಸಂಗರ ಮಹೋತ್ಸಾಹ-ಯುದ್ಧಕ್ಕೆ ಅತಿ ಉತ್ಸಾಹಗೊಂಡ ದನಿ
ಮೂಲ ...{Loading}...
ತೂಳ ಬರೆ ಕುಣಿದುದು ಕಬಂಧದ
ಜಾಲದೊಡನೆ ಪಿಶಾಚಗಣ ಭೇ
ತಾಳಗಣ ಕೈಪರೆಯ ಬಡಿದುದು ಶಾಕಿನೀನಿವಹ
ಸಾಲು ಮಿಗೆ ಸೊಗಸಿದುದು ರಣ ಭೂ
ತಾಳಿಯಲಿ ಮತ್ತಿತ್ತ ಕೇಳ್ದುದು
ಪಾಳಯಂಗಳೊಳೆರಡರಲಿ ಸಂಗರ ಮಹೋತ್ಸಾಹ ॥35॥
೦೩೬ ಹಿಳಿದ ಲೋಹದ ...{Loading}...
ಹಿಳಿದ ಲೋಹದ ಸೀಸಕಂಗಳ
ಬಲಿಸಿದರು ಹೋಳಾದ ಕವಚವ
ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು
ಕಳಚಿದಾಯುಧದಾಯತದ ಕೀ
ಲ್ಗೊಳಿಸಿದರು ಖಡ್ಗಕ್ಕೆ ಕುಂತವ
ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೀಳಿ ಹೋದ ಲೋಹದ ಶಿರಸ್ತ್ರಾಣಗಳನ್ನು ಬಲಗೊಳಿಸಿದರು. ಹರಿದು ಹೋದ ಅಂಗ ಕವಚವನ್ನು ಹೊಲಿಸಿದರು. ಬಾಹು ರೆಕ್ಕೆ ಮತ್ತು ಕವಚಗಳ ಬಿರುಕುಗಳಿಗೆ ಎರಕ ಹೊಯ್ದರು. ಆಯುಧಗಳ ಕಳಚಿ ಹೋದ ಕೀಲುಗಳನ್ನು ಸರಿಮಾಡಿ ಜೋಡಿಸಿದರು. ಖಡ್ಗಕ್ಕೆ ಬೆಣೆಯನ್ನು ಕಳಚಿ ಅದರಲ್ಲಿ ಹಿಡಿಯನ್ನು ಕೂಡಿಸುತ್ತಿದ್ದರು. ಈ ರೀತಿ ಎರಡೂ ಸೇನೆಗಳಲ್ಲಿಯೂ ಆಯುಧಗಳನ್ನು ರಿಪೇರಿ ಮಾಡುತ್ತ ಇದ್ದರು.
ಪದಾರ್ಥ (ಕ.ಗ.ಪ)
ಕುಂತ-ಬೆಣೆ, ಬಾಹುರಕೆ-ಪಕ್ಕರಕ್ಕೆ, ಸವಗ-ಕವಚ, ಸೀಸಕ-ಶಿರಸ್ತ್ರಾಣ
ಮೂಲ ...{Loading}...
ಹಿಳಿದ ಲೋಹದ ಸೀಸಕಂಗಳ
ಬಲಿಸಿದರು ಹೋಳಾದ ಕವಚವ
ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು
ಕಳಚಿದಾಯುಧದಾಯತದ ಕೀ
ಲ್ಗೊಳಿಸಿದರು ಖಡ್ಗಕ್ಕೆ ಕುಂತವ
ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ ॥36॥
೦೩೭ ತಡಿಯ ಬಲಿಸುವ ...{Loading}...
ತಡಿಯ ಬಲಿಸುವ ಗುಳನ ರೆಂಚೆಯ
ಗಡಣಿಸುವ ಹಕ್ಕರಿಕೆಗಳನಾ
ಯ್ದಡಿಸಿ ಹೊಲಿಸುವ ಕಬ್ಬಿಗಳ ಕೊಂಡಿಗಳ ಮಿಗೆ ಬಲಿವ
ಒಡೆದ ದೂಹತ್ತಿಗೆಗೆ ಕೀಲ್ಗಳ
ನಡಸಿ ಬೆಟ್ಟಿದ ಗಾಲಿಗಚ್ಚನು
ತೊಡಿಸುತಿರಲಾಯ್ತೆರಡು ಬಲದೊಳು ನಿದ್ರೆಗವಮಾನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀನುಗಳನ್ನು ಬಲಗೊಳಿಸುಸುವುದು, ಆನೆ, ಕುದುರೆಗಳ ಪಕ್ಕ ರೆಕ್ಕೆಗಳನ್ನು ಒಂದುಗೂಡಿಸುವುದು, ಕಡಿವಾಣಗಳ ಕೊಂಡಿಗಳನ್ನು ಚೆನ್ನಾಗಿ ಬಲಪಡಿಸುವುದು, ಬಿರುಕು ಬಿಟ್ಟ ಇಬ್ಬಾಯಿ ಕತ್ತಿಯ ಹಿಡಿಗಳನ್ನು ಜೋಡಿಸುವುದು, ಬೃಹದ್ ಚಕ್ರಗಳಿಗೆ ಅಚ್ಚನ್ನು ಸೇರಿಸುವುದು ಇದೇ ಮೊದಲಾದ ಕೆಲಸಗಳಿಂದ ಕೌರವ ಪಾಂಡವ ಎರಡೂ ಸೇನೆಗಳಲ್ಲಿ ನಿದ್ರಾ ನಾಶವಾಯ್ತು.
ಪದಾರ್ಥ (ಕ.ಗ.ಪ)
ದೂಹತ್ತಿ-ಉದ್ದ ಕತ್ತಿ, ತಡಿ-.ಜೀನು,
ಗುಳ-ಆನೆ ಕುದುರೆಗಳ ಮೇಲೆ ಹಾಕುವ ಪಾವುಡ,
ಕಬ್ಬಿ-ಕಡಿವಾಣ
ಮೂಲ ...{Loading}...
ತಡಿಯ ಬಲಿಸುವ ಗುಳನ ರೆಂಚೆಯ
ಗಡಣಿಸುವ ಹಕ್ಕರಿಕೆಗಳನಾ
ಯ್ದಡಿಸಿ ಹೊಲಿಸುವ ಕಬ್ಬಿಗಳ ಕೊಂಡಿಗಳ ಮಿಗೆ ಬಲಿವ
ಒಡೆದ ದೂಹತ್ತಿಗೆಗೆ ಕೀಲ್ಗಳ
ನಡಸಿ ಬೆಟ್ಟಿದ ಗಾಲಿಗಚ್ಚನು
ತೊಡಿಸುತಿರಲಾಯ್ತೆರಡು ಬಲದೊಳು ನಿದ್ರೆಗವಮಾನ ॥37॥
೦೩೮ ಅಸಿಯ ಮಸೆಸುವ ...{Loading}...
ಅಸಿಯ ಮಸೆಸುವ ಮುರಿದ ಲೌಡಿಯ
ಬೆಸುವ ಕುಂತದ ಧಾರೆಗಳ ಢಾ
ಳಿಸುವ ನೆರೆಸೊಪ್ಪಾದ ಹಿಳುಕಿನ ಗರಿಯ ಕೀಲಿಸುವ
ಹೊಸ ತಿರುವ ಕಟ್ಟುವ ಕಠಾರಿಯ
ಮಸೆವ ಹಲಗೆಯ ಬಲಿವ ಸುರಗಿಯ
ಬಸೆಯ ಬೆಳಸುವ ವೀರ ಭಟರೊಪ್ಪಿದರು ಕಟಕದಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಗಳನ್ನು ಹರಿತಗೊಳಿಸುವ, ಮುರಿದ ಲಾಠಿಯ ಬೆಸುಗೆ ಹಾಕುವ, ಕುಂತದ ಮೊನೆಗಳನ್ನು ಉಜ್ಜಿ ಹೊಳಪಿಸುವ, ಸಡಿಲವಾಗಿ ಹೋದ ಬಾಣದ ತುದಿಯ ಗರಿಗಳನ್ನು ಸರಿಪಡಿಸಿ ಭದ್ರಗೊಳಿಸುವ, ಬಿಲ್ಲಿಗೆ ಹೊಸ ಹುರಿಯನ್ನು ಕಟ್ಟುವುದು, ಕಠಾರಿಯನ್ನು ಚೂಪುಗೊಳಿಸುವುದು, ಹಲಗೆಯನ್ನು ಬಲಪಡಿಸುವ, ಸುರಗಿ ಕತ್ತಿಗಳಿಗೆ ಬಳಿದ ನೆಣವನ್ನು ಹಚ್ಚಿಸುವ, ಈ ರೀತಿಯ ಕಾರ್ಯಗಳಲ್ಲಿ ತೊಡಗಿದ ವೀರಯೋಧರು ಸೇನೆಯಲ್ಲಿ ಮೆರೆದರು.
ಪದಾರ್ಥ (ಕ.ಗ.ಪ)
ಸುರಗಿಯ ಬಸೆಯ ಬೆಳಸುತ-ಸುರಗಿ ಕತ್ತಿಗಳಿಗೆ ನೆಣವನ್ನು ಹೆಚ್ಚಾಗಿ ಬಳೆವುದು ?
ಮೂಲ ...{Loading}...
ಅಸಿಯ ಮಸೆಸುವ ಮುರಿದ ಲೌಡಿಯ
ಬೆಸುವ ಕುಂತದ ಧಾರೆಗಳ ಢಾ
ಳಿಸುವ ನೆರೆಸೊಪ್ಪಾದ ಹಿಳುಕಿನ ಗರಿಯ ಕೀಲಿಸುವ
ಹೊಸ ತಿರುವ ಕಟ್ಟುವ ಕಠಾರಿಯ
ಮಸೆವ ಹಲಗೆಯ ಬಲಿವ ಸುರಗಿಯ
ಬಸೆಯ ಬೆಳಸುವ ವೀರ ಭಟರೊಪ್ಪಿದರು ಕಟಕದಲಿ ॥38॥
೦೩೯ ಹರಿದ ಕೊರಳನು ...{Loading}...
ಹರಿದ ಕೊರಳನು ಬಿಗಿವ ಉರದೊಳು
ಮುರಿದ ಬಾಣವ ಕೀಳ್ವ ಹೊಟ್ಟೆಯ
ನಿರಿಗರುಳನೊಳಗಿಕ್ಕಿ ಹೊಲಿಸುವ ಮದ್ದುಗಳನಿಡಿವ
ಉರುವ ಸೇಕದ ನಸ್ಯದೊಳು ಹದ
ನರಿವ ತುರಗದ ವೈದ್ಯ ತತಿಯೆ
ಚ್ಚರಿಕೆಯಲಿ ಸಂತೈಸಿದರು ವಾಜಿಗಳ ವೇದನೆಯ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಹರಿದ ಕುತ್ತಿಗೆಯನ್ನು ಹೊಲಿದು ಬಿಗಿಯುವುದು, ಎದೆಯಲ್ಲಿ ನಾಟಿದ ಬಾಣಗಳನ್ನು ಕೀಳುವುದು, ಹೊಟ್ಟೆಯಿಂದ ಹೊರಬಂದ ಕರುಳಿನ ಸುರುಳಿಗಳನ್ನು ಒಳಗಿಕ್ಕಿ ಹೊಲಿಯುವುದು. ಔಷಧಿಗಳನ್ನು ಒಳಗೆ ತುಂಬುವುದು, ಉತ್ತಮ ರೀತಿಯಲ್ಲಿ ಶಾಖ ಕೊಡುವುದು, ಮೂಗಿಗೇರಿಸುವ ಔಷಧ ದ್ರವ್ಯ (ನಶ್ಯ) ಹದನು ತಿಳಿಯುವ ಅಶ್ವ ವೈದ್ಯ ಸಮೂಹ ಎಚ್ಚರಿಕೆಯಿಂದ ಕುದುರೆಗಳ ನೋವನ್ನು ನಿವಾರಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ನಿರಿ ಕರುಳು-ಸುರುಳಿ ಕರುಳು, ಮದ್ದು-ಔಷಧಿ, ಉರುವ-ಉತ್ತಮ, ನಶ್ಯ-ಮೂಗಿಗೇರಿಸುವ ಔಷಧ ದ್ರವ್ಯ, ವಾಜಿ-ಕುದುರೆ
ಪಾಠಾನ್ತರ (ಕ.ಗ.ಪ)
ಉರಿವ ಎಂಬಕ್ಕಿಂತ ಉರುವ ಪಾಠಾಂತರ ಸ್ವೀಕರಿಸಿದೆ.
-ಭೀಷ್ಮಪರ್ವ ಸಂಗ್ರಹ
ಮೂಲ ...{Loading}...
ಹರಿದ ಕೊರಳನು ಬಿಗಿವ ಉರದೊಳು
ಮುರಿದ ಬಾಣವ ಕೀಳ್ವ ಹೊಟ್ಟೆಯ
ನಿರಿಗರುಳನೊಳಗಿಕ್ಕಿ ಹೊಲಿಸುವ ಮದ್ದುಗಳನಿಡಿವ
ಉರುವ ಸೇಕದ ನಸ್ಯದೊಳು ಹದ
ನರಿವ ತುರಗದ ವೈದ್ಯ ತತಿಯೆ
ಚ್ಚರಿಕೆಯಲಿ ಸಂತೈಸಿದರು ವಾಜಿಗಳ ವೇದನೆಯ ॥39॥
೦೪೦ ಒಡಲಿನೊಳು ಮುರಿದಿದ್ದ ...{Loading}...
ಒಡಲಿನೊಳು ಮುರಿದಿದ್ದ ಸಬಳವ
ನುಡಿಯಲೀಯದೆ ಕೀಳ್ವ ಮದ್ದನು
ಗಿಡಿವ ಜೇವಣಿಗೆಯೊಳು ಸಪ್ರಾಣಿಸುವ ದುವ್ರ್ರಣವ
ತೊಡೆದು ಕಟ್ಟುವ ಹಸ್ತಿವೈದ್ಯರ
ಗಡಣವುಭಯದೊಳೆಸೆವವಂತ್ಯದ
ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೈಯಲ್ಲಿ ನಾಟಿದ್ದ ಸಬಳವನ್ನು ಒಳಗೆ ಮುರಿಯಲೀಯದಂತೆ ಈಟಿಯನ್ನು ಹೊರತೆಗೆವ, ಹೊರತೆಗೆದ ಮೇಲೆ ಔಷಧ ತುಂಬುತ್ತಿದ್ದ ಚೈತನ್ಯ ತುಂಬುವ, ಔಷಧಯುಕ್ತ ಆಹಾರಗಳಿಂದ ಪ್ರಾಣ ಬರುವಂತೆ ಮಾಡುವ, ಕೆಟ್ಟ ಗಾಯಗಳನ್ನು ಹೋಗಲಾಡಿಸಿ ಮತ್ತೆ ಔಷಧಿಯಿಂದ ಕಟ್ಟುವ, ಆನೆ ವೈದ್ಯರ ಪರಿವಾರವು ಎರಡು ಕಡೆಯ ಸೈನ್ಯಗಳಲ್ಲಿ ಕಾರ್ಯ ನಿರತರಾಗಿದ್ದರು. ಇದರಿಂದ ಮತ್ತೆ ಚೇತರಿಸಿಕೊಂಡ ಗಜ ಸೇನೆಯೊಡಗೂಡಿದ ಸೇನಾ ಸಂಗರ, ಪ್ರಳಯ ಕಾಲದ ಸಾಗರದ ರಭಸವನ್ನೇ ಅಡ್ಡಗಟ್ಟುವಂತಾಯಿತು.
ಪದಾರ್ಥ (ಕ.ಗ.ಪ)
ತೊಡಕಾಯಿತು-ಅಡ್ಡಗಟ್ಟುವಂತಾಯಿತು, ದುವ್ರ್ರಣ-ದುರ್ವಾಸನೆಯ ಗಾಯ, ಕೆಟ್ಟ ಹುಣ್ಣು, ಸಬಳ-ಈಟಿ, ಉಡಿಯಲೀಯದೆ-ಮುರಿದು ಹೋಗದಂತೆ, ಜೇವಣಿಗೆ-ಆಹಾರ, ತುತ್ತು
ಮೂಲ ...{Loading}...
ಒಡಲಿನೊಳು ಮುರಿದಿದ್ದ ಸಬಳವ
ನುಡಿಯಲೀಯದೆ ಕೀಳ್ವ ಮದ್ದನು
ಗಿಡಿವ ಜೇವಣಿಗೆಯೊಳು ಸಪ್ರಾಣಿಸುವ ದುವ್ರ್ರಣವ
ತೊಡೆದು ಕಟ್ಟುವ ಹಸ್ತಿವೈದ್ಯರ
ಗಡಣವುಭಯದೊಳೆಸೆವವಂತ್ಯದ
ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ ॥40॥
೦೪೧ ಬಾದಣಿಸಿದೇರುಗಳ ಬಾಯೊಳು ...{Loading}...
ಬಾದಣಿಸಿದೇರುಗಳ ಬಾಯೊಳು
ಕಾದ ಬಾರಂಗಿಗಳನಳತೆಗೆ
ಕೋದು ವಾಮದೊಳೆಯ್ದೆ ಹಿಡಿದರು ತೈಲಧಾರೆಗಳ
ಆದ ಮೈಗಂಡಿಯೊಳು ರಕುತವ
ಶೋಧಿಸುತ ಹಳದುಪ್ಪವನು ತೊಡೆ
ದಾದರಿಸಿದುದು ವೈದ್ಯಸಂತತಿ ವೀರ ಭಟರುಗಳ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿರುಕು ಬಿಟ್ಟ ಗಾಯಗಳ ಬಾಯಲ್ಲಿ, ಕಾಯಿಸಿದ ಒಂದು ಬಗೆ ಔಷಧಿ ಸಸ್ಯವನ್ನು ಅಳತೆಗೆ ತಕ್ಕಂತೆ ಸೇರಿಸಿ ಎಡಭಾಗದಲ್ಲಿ ತೈಲಧಾರೆಗಳನ್ನು ಸುರಿಸಿದರು. ಮೈಯಲ್ಲಿ ಆದ ಗಾಯದ ರಂಧ್ರಗಳಲ್ಲಿ ಇದ್ದ ರಕ್ತವನ್ನು ಶೋಧಿಸಿ, ಹಳೆಯ ತುಪ್ಪವನ್ನು ಸವರಿ ವೈದ್ಯ ಸಮೂಹ ವೀರ ಯೋಧರನ್ನು ಉಪಚರಿಸಿತು.
ಪದಾರ್ಥ (ಕ.ಗ.ಪ)
ಬಾರಂಗಿ-ಒಂದು ಬಗೆಯ ಔಷಧಿ ಸಸ್ಯ, ಕನ್ನಡ-ಕನ್ನಡ ನಿಘಂಟು, ಕ.ಸಾ.ಪ (?), ಮೈಗಂಡಿ-ಮೈ ರಂಧ್ರಗಳಲ್ಲಿ,
ಹಳೆದುಪ್ಪ-ಒಂದು ಔಷಧಿ
ಮೂಲ ...{Loading}...
ಬಾದಣಿಸಿದೇರುಗಳ ಬಾಯೊಳು
ಕಾದ ಬಾರಂಗಿಗಳನಳತೆಗೆ
ಕೋದು ವಾಮದೊಳೆಯ್ದೆ ಹಿಡಿದರು ತೈಲಧಾರೆಗಳ
ಆದ ಮೈಗಂಡಿಯೊಳು ರಕುತವ
ಶೋಧಿಸುತ ಹಳದುಪ್ಪವನು ತೊಡೆ
ದಾದರಿಸಿದುದು ವೈದ್ಯಸಂತತಿ ವೀರ ಭಟರುಗಳ ॥41॥
೦೪೨ ಖಡುಗದಡವೊಯ್ಲುಗಳಲಡುಮ ...{Loading}...
ಖಡುಗದಡವೊಯ್ಲುಗಳಲಡುಮ
ದ್ದಡಸಿದರು ಸೂಕರನ ತುಪ್ಪವ
ತೊಡೆದರಿರಿದೇರಿನೊಳು ಬಿಟ್ಟರು ತೈಲಧಾರೆಗಳ
ಕುಡಿಸಿದರು ಮಂತ್ರೋದಕವನೊಳ
ಗಡಸಿ ಕರುಳನು ಮುಚ್ಚಿ ಮಂತ್ರಿಸಿ
ತೊಡೆದರಖಿಳೌಷಧಿಗಳನು ನೃಪಸೇನೆಯೆರಡರಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯ ಏಟುಗಳಿಂದಾದ ಗಾಯಕ್ಕೆ , ಔಷಧದ ಹುಡಿಯನ್ನು ತುಂಬಿದರು ಅದಕ್ಕೆ ಹಂದಿ ಕೊಬ್ಬನ್ನು ಹಚ್ಚಿದರು. ಇರಿದ ಗಾಯಗಳೊಳಕ್ಕೆ ಔಷಧಿ ತೈಲಧಾರೆಗಳನ್ನು ಬಿಟ್ಟರು. ಮಂತ್ರಿಸಿದ ಜಲವನ್ನು ಕುಡಿಸಿದರು. ಹೊರಬಂದ ಕರುಳನ್ನು ಒಳಕ್ಕೆ ನೂಕಿ ಮಂತ್ರಿಸಿ ಎಲ್ಲ ಬಗೆ ಔಷಧಿಗಳನ್ನು ಲೇಪಿಸಿದರು. ಈ ರೀತಿ ಎರಡೂ ಕಡೆಯ ಸೇನೆಗಳಲ್ಲಿ ಔಷಧೋಪಚಾರ ನಡೆಯಿತು.
ಪದಾರ್ಥ (ಕ.ಗ.ಪ)
ಅಡಸಿದರು-ತುಂಬಿದರು, ಸೂಕರನ ತುಪ್ಪ-ಹಂದಿಕೊಬ್ಬು, ಏರು- ಗಾಯ
ಮೂಲ ...{Loading}...
ಖಡುಗದಡವೊಯ್ಲುಗಳಲಡುಮ
ದ್ದಡಸಿದರು ಸೂಕರನ ತುಪ್ಪವ
ತೊಡೆದರಿರಿದೇರಿನೊಳು ಬಿಟ್ಟರು ತೈಲಧಾರೆಗಳ
ಕುಡಿಸಿದರು ಮಂತ್ರೋದಕವನೊಳ
ಗಡಸಿ ಕರುಳನು ಮುಚ್ಚಿ ಮಂತ್ರಿಸಿ
ತೊಡೆದರಖಿಳೌಷಧಿಗಳನು ನೃಪಸೇನೆಯೆರಡರಲಿ ॥42॥