೦೩

೦೦೦ ಸೂ ರಾಯದನುಜಘರಟ್ಟ ...{Loading}...

ಸೂ. ರಾಯದನುಜಘರಟ್ಟ ಪಾಂಡವ
ರಾಯ ಜಂಗಮಜೀವ ನಿರ್ಜಿತ
ಮಾಯ ನಿಜವನು ತೋರಿ ಪಾರ್ಥನನೊಲಿದು ಬೋಧಿಸಿದ

೦೦೧ ಹಳಚಲನುವಾಯ್ತುಭಯಸೇನಾ ಜಲಧಿ ...{Loading}...

ಹಳಚಲನುವಾಯ್ತುಭಯಸೇನಾ
ಜಲಧಿ ಕಳಕಳ ಮಿಗಲು ಮಾರುತಿ
ಮೊಳಗಿದನು ಪೌಂಡ್ರಕವ ಭೂಪನನಂತವಿಜಯವನು
ಇಳೆ ಹಿಳೆಯೆ ಮಣಿಪುಷ್ಪಕದ ನಿ
ರ್ಮಲ ಸುಘೋಷದೊಳಮಮ ಕೋಳಾ
ಹಳಿಸಿದುದು ಸಹದೇವ ನಕುಲರು ಸಮರಕನುವಾಯ್ತು ॥1॥
ಕೇಳು ಜನಮೇಜಯ ಧರಿತ್ರೀ
ಪಾಳ ಹಿಮಕರಕುಲಲಲಾಮರು
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಬಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ ॥1 ಅ॥
ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ ॥1 ಆ॥

೦೦೨ ಮುರವಿಜಯ ನಿಜಪಾಞ್ಚಜನ್ಯವ ...{Loading}...

ಮುರವಿಜಯ ನಿಜಪಾಂಚಜನ್ಯವ
ನಿರದೆ ಫಲುಗುಣ ದೇವದತ್ತ
ಸ್ಫುರಿತರವವನು ರಚಿಸಿದನು ಮೂಲೋಕ ಮೈಮರೆಯೆ
ತುರಗವನು ಬೋಳಯಿಸಿ ವಾಘೆಯ
ತಿರುಹಿ ಚಮ್ಮಟಿಗೆಯಲಿ ತೇಜಿಯ
ಬರಿಯ ಬೆದರಿಸಿ ಕೃಷ್ಣ ಪಾರ್ಥನ ರಥವ ಲುಳಿವಡೆದ ॥2॥

೦೦೩ ಚಟುಳ ಹಯಖುರ ...{Loading}...

ಚಟುಳ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂಧರವ ॥3॥

೦೦೪ ಗತಿಗೆ ಕುಣಿದವು ...{Loading}...

ಗತಿಗೆ ಕುಣಿದವು ನಾಸಿಕದ ಹೂಂ
ಕೃತಿಯ ಫೇನೋನ್ನತಿಯ ಬಳಿಯವ
ಗತಿಯ ಕಬ್ಬಿಯ ಕೊಂಡಿಗಳ ಘಣಘಣಿತ ನಿಸ್ವನದ
ವಿರತ ಸೃಕ್ವದ ಲೋಳಿಗಳ ಸಂ
ಸೃತ ಜಠರಜ ಸ್ವೇದಜಲ ಲಾ
ಲಿತ ಹಯಾವಳಿ ಕಳನ ಗೆಲಿದವು ಹರಿಯ ನೇಮದಲಿ ॥4॥

೦೦೫ ನಿಲಿಸಿದನು ಫಲುಗುಣನ ...{Loading}...

ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ ॥5॥

೦೦೬ ಸಹಸವೇನದು ಜೀಯ ...{Loading}...

ಸಹಸವೇನದು ಜೀಯ ನೆರೆದಿ
ರ್ದಹಿತಬಲವೆನಗಾವ ಘನ ಬಿ
ನ್ನಹವ ಕೇಳೈ ಕೃಷ್ಣ ಕೌರವರಾಯರೊಡ್ಡಿನಲಿ
ಬಹಳ ಬಲರಿವರಾರು ಸೇನಾನಿ
ವಹದಲಿ ನಾಯಕರ ವಿವರಿಸ
ಬಹರೆ ಬೆಸಸೆನೆ ಕೃಷ್ಣ ನುಡಿದನು ನಗೆಯ ಮೊಳೆ ಮಿನುಗೆ ॥6॥

೦೦೭ ಆದಡರ್ಜುನ ನೋಡು ...{Loading}...

ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ ದುರಂತ ಪರಾಕ್ರಮನು ಗಂಗಾಕುಮಾರಕನು
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ ॥7॥

೦೦೮ ಮಿಸುಪ ತುದಿವೆರಳಮ್ಬುಗೊಲೆಗೇ ...{Loading}...

ಮಿಸುಪ ತುದಿವೆರಳಂಬುಗೊಲೆಗೇ
ರಿಸಿದ ಬಿಲು ಮಣಿಮಯದ ಗದ್ದುಗೆ
ರಸುಮೆಗಳ ಜೋಡಿನಲಿ ಹೊಂದೇರಿನ ವಿಡಾಯಿಯಲಿ
ಮಸೆಗಣೆಯ ಬತ್ತಳಿಕೆ ತಿಗುರೇ
ರಿಸಿದ ಮೈ ಕತ್ತುರಿಯ ತಿಲಕದ
ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು ॥8॥

೦೦೯ ರಾಯನಾತನ ಬಳಿಯಲಾ ...{Loading}...

ರಾಯನಾತನ ಬಳಿಯಲಾ ಕ
ರ್ಣಾಯತಾಸ್ತ್ರರು ಕಾರ್ಮುಕದ ಸ್ವಾ
ಧ್ಯಾಯಸಿದ್ಧರು ಹತ್ತುಸಾವಿರ ಮಕುಟವರ್ಧನರು
ಸಾಯಲಂಜದ ಸಿತಗರದೆ ತ
ನ್ನಾಯತದೊಳಪ್ರತಿಮ ರೌದ್ರದ
ನಾಯಕರ ನೆರವಿಯೊಳು ಶಲ್ಯನೃಪಾಲ ನೋಡೆಂದ ॥9॥

೦೧೦ ಗಣನೆಗೈದದ ಹೆಗಲ ...{Loading}...

ಗಣನೆಗೈದದ ಹೆಗಲ ಹಿರಿಯು
ಬ್ಬಣದ ಕನಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕೆಂಪಿನಾಲಿಗಳ
ಮಣಿಮಯದ ತೇರುಗಳಲಾ ಸಂ
ದಣಿಯವರು ಮಾದ್ರೇಶನದು ಫಲು
ಗುಣ ನಿರೀಕ್ಷಿಪುದಿತ್ತಲೊಂದಕ್ಷೋಹಿಣೀ ಬಲವ ॥10॥

೦೧೧ ಕಳಶ ಸಿನ್ಧದ ...{Loading}...

ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ ॥11॥

೦೧೨ ಈತನೊಡ್ಡಿನ ಸಾರೆ ...{Loading}...

ಈತನೊಡ್ಡಿನ ಸಾರೆ ಸಂಗರ
ಕಾತು ಕೊಂಡದೆ ಕೃಪನ ದಳಸಂ
ಘಾತವೊಂದಕ್ಷೋಣಿ ಸುಭಟರ ಸಾಲ ಮಧ್ಯದಲಿ
ಆತ ಗೌತಮನವನ ಬಳಿಯಲ
ಭೀತ ಬಾಹ್ಲಿಕ ವಿಂಧ್ಯರದೆ ವಿ
ಖ್ಯಾತರೊಂದಕ್ಷೋಣಿ ಕೌರವ ಸೈನ್ಯಶರಧಿಯಲಿ ॥12॥

೦೧೩ ಈತ ಮಾಳವನೀತ ...{Loading}...

ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ
ಈತ ಕೇರಳನೀತ ಸಿಂಹಳ
ನೀತ ಬೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳನೃಪ ॥13॥

೦೧೪ ಆಳುಗೆಲಸಕೆ ಕೆಲಬರರಸನ ...{Loading}...

ಆಳುಗೆಲಸಕೆ ಕೆಲಬರರಸನ
ಖೇಳಮೇಳಕೆ ಕೆಲರು ಕೆಲಬರು
ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ
ತೋಳ ಬಲುಹೊರೆಗಲಸಿ ಕೆಲಬರು
ಮೇಲೆ ನಮ್ಮಯ ಹಗೆಗೆ ಕೆಲಬರು
ಕಾಳಗದ ಕಾರ್ಮುಕ ನೃಪಾಲರ ನೆರವಿಯದೆಯೆಂದ ॥14॥

೦೧೫ ತಳಿತ ಪಲ್ಲವ ...{Loading}...

ತಳಿತ ಪಲ್ಲವ ಸತ್ತಿಗೆಯ ಹೊಳ
ಹೊಳೆವ ಮೌಳಿಯ ರತುನ ಲಹರಿಯ
ಚಲಿಸಿ ಚಿಮ್ಮುವ ಚಮರಿ ಸೀಗುರಿಗಳ ವಿಡಾಯಿಯಲಿ
ಹಲಗೆಯಲಿ ತೆತ್ತಿಸಿದ ಹಾವಿನ
ಹಳವಿಗೆಯ ಹೊಂದೇರ ನೃಪಮಂ
ಡಳಿಯ ಮಧ್ಯದೊಳಾತ ದುರ್ಯೋಧನ ಮಹೀಪಾಲ ॥15॥

೦೧೬ ಅಳಲಿದುರಗನ ನೆರವಿ ...{Loading}...

ಅಳಲಿದುರಗನ ನೆರವಿ ಟೊಪ್ಪಿಗೆ
ಗಳೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿ ಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ್ಯೋಧನ ಸಹೋದರರ ॥16॥

೦೧೭ ಲುಳಿಯ ಮಿಞ್ಚಿನ ...{Loading}...

ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ
ಬಳಿಗೆ ಪುರುಷಾಮೃಗದ ಗಾವಳಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ ॥17॥

೦೧೮ ತೋರದಲಿ ಕುಲಗಿರಿಯ ...{Loading}...

ತೋರದಲಿ ಕುಲಗಿರಿಯ ಸತ್ವದ
ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದುಮಾಡಿದನು
ವಾರಿಜೋದ್ಭವನೆನಲು ಝಾಡಿಯ
ಭಾರಿ ರೆಂಚೆಯ ಕೈಯ ಖಡ್ಗದ
ವಾರಣದ ಮಧ್ಯದಲಿಹನು ಭಗದತ್ತ ನೋಡೆಂದ ॥18॥

೦೧೯ ಹೊಗರೊಗುವ ಸೂನಿಗೆಯ ...{Loading}...

ಹೊಗರೊಗುವ ಸೂನಿಗೆಯ ಸುಪತಾ
ಕೆಗಳ ಸಿಂಧದ ಹೊಳೆವ ಹೊಂಗಂ
ಬುಗೆಯ ಹೂಡಿದ ಹಯದ ಸೂತರ ಗಳದ ಗರ್ಜನೆಯ
ಅಗಿವ ಚೀತ್ಕಾರದ ಛಡಾಳದ
ವಿಗಡ ರಥಿಕರ ರಹಿಯ ರಥವಾ
ಜಿಗಳ ನೋಡೈ ಪಾರ್ಥ ಭೂರಿಶ್ರವನ ಸೈನ್ಯವಿದು ॥19॥

೦೨೦ ಹಲಗೆ ಕಡಿತಲೆ ...{Loading}...

ಹಲಗೆ ಕಡಿತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನೀಕ್ಷಿಸು ಪಾರ್ಥ ದುಶ್ಶಾಸನನ ಪಯದಳವ ॥20॥

೦೨೧ ವೀರನಭಿಮನ್ಯುವಿನವೊಲು ರಣ ...{Loading}...

ವೀರನಭಿಮನ್ಯುವಿನವೊಲು ರಣ
ಧೀರನಾತನ ನೋಡು ಕರ್ಣಕು
ಮಾರಕರು ವೃಷಸೇನನಗ್ಗದ ಚಿತ್ರಸೇನಕರು
ಚಾರುಲಕ್ಷಣರವರು ನೂರು ಕು
ಮಾರರದೆ ದುರ್ಯೋಧನಾತ್ಮಜ
ರಾರುವನು ಕೈಕೊಳ್ಳರವದಿರು ಸುಬಲ ನಂದನರು ॥21॥

೦೨೨ ರಾಯನಣುಗರ ಗಣ್ಡ ...{Loading}...

ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು ತಾ ಕಲಿಕರ್ಣ ನೋಡೆಂದ ॥22॥

೦೨೩ ಕರಿಘಟೆಯ ಕುರುವದಲಿ ...{Loading}...

ಕರಿಘಟೆಯ ಕುರುವದಲಿ ಹಯಮೋ
ಹರದ ತೆರೆಮಾಲೆಯಲಿ ಬಲುಝ
ಲ್ಲರಿಯ ಬುದ್ಬುದ ತತಿಯಲಸ್ತ್ರದ ಕಿಡಿಯ ವಡಬನಲಿ
ಬಿರುದರಾಯರ ರತುನರಾಜಿಯ
ಲರಿಬಲಾರ್ಣವ ಗಜರು ಮಿಗಿಲ
ಳ್ಳಿರಿಯುತದೆ ಬಹುವಿಧದ ವಾದ್ಯವಿಡಾಯ ರಭಸದಲಿ ॥23॥

೦೨೪ ಆಳಮಯವಖಿಳೋರ್ವಿ ಪದಹತ ...{Loading}...

ಆಳಮಯವಖಿಳೋರ್ವಿ ಪದಹತ
ಧೂಳಿಮಯವಾಕಾಶ ರಥತುರ
ಗಾಳಿಮಯ ದಿಗುಜಾಲವೇನೆಂಬೆನು ಮಹಾದ್ಭುತವ
ಕಾಳೆಗಕೆ ನೀನಲ್ಲದವನಿಯೊ
ಳಾಳ ಕಾಣೆನು ಪಾರ್ಥ ಸಾಕಿ
ನ್ನೇಳು ಬಾಣವ ತೂಗು ಮಾತಾಡಿಸು ಮಹಾಧನುವ ॥24॥

೦೨೫ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನ ಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ ॥25॥

೦೨೬ ಮೆಟ್ಟಿ ನೋಡಿದನಹಿತ ...{Loading}...

ಮೆಟ್ಟಿ ನೋಡಿದನಹಿತ ರಾಯರ
ಥಟ್ಟುಗಳ ತೆರಳಿಕೆಯನುತ್ಸಹ
ಗೆಟ್ಟು ಫಲುಗುಣ ಸೆಡೆದು ಮನದಲಿ ನೊಂದು ತಲೆವಾಗಿ
ಕೆಟ್ಟ ಕಾಯದ ಸುಖಕಳುಪಿ ಒಡ
ಹುಟ್ಟಿದರ ಕೈಯಾರ ಕೊಂದರೆ
ಮುಟ್ಟದೇ ಕಡುಪಾಪ ಘನಪರಿತಾಪ ತನಗೆಂದ ॥26॥

೦೨೭ ಕೆಲಬರೊಡಹುಟ್ಟಿದರು ಗುರುಗಳು ...{Loading}...

ಕೆಲಬರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭವಸಿಂಧುವಿನೊಳಾನೆನುತ ಮನಮುರಿದ ॥27॥

೦೨೮ ಇದಿರುಗಾಣದೆ ಕೊಲೆಗೆ ...{Loading}...

ಇದಿರುಗಾಣದೆ ಕೊಲೆಗೆ ನಿರ್ಬಂ
ಧದಲಿ ಬೆಸಸುವ ಕೃಷ್ಣನಕಟಾ
ಮದಮುಖನೊ ದುರ್ಬೋಧಕನೊ ವಂಚಕನೊ ಘಾತಕನೊ
ಯದುಗಳನ್ವಯದೊಳಗೆ ಕರುಣಾ
ಸ್ಪದರು ಜನಿಸರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ ॥28॥

೦೨೯ ನರಕಕರ್ಮವ ಮಾಡಿ ...{Loading}...

ನರಕಕರ್ಮವ ಮಾಡಿ ಇಹದೊಳು
ದುರಿತ ಭಾಜನನಾಗಿ ಕಡೆಯಲಿ
ಪರಕೆ ಬಾಹಿರನಾಗಿ ನಾನಾಯೋನಿಯೊಳು ಸುಳಿದು
ಹೊರಳುವನುವನು ಕೃಷ್ಣದೇವನು
ಕರುಣಿಸಿದನೇ ಹಿತವನೇ ಹರ
ಹರ ಮಹಾದೇವೊಂದು ಬೋಳಕೆ ಬದುಕಿದೆನುಯೆಂದ ॥29॥

೦೩೦ ಮುಳಿಯಲಾಗದು ಕೃಷ್ಣ ...{Loading}...

ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದೆನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳ್ ಎಂದ ॥30॥

೦೩೧ ಎಡಹಿದರೆ ರುಜೆಯಾಗಿಯಾಪ ...{Loading}...

ಎಡಹಿದರೆ ರುಜೆಯಾಗಿಯಾಪ
ತ್ತಡಸಿದರೆ ಮೇಣಾವ ತೆರದಿಂ
ದೊಡಲುವಿಡಿದರೆ ಮರಣ ತಪ್ಪದು ಸುರರಿಗೊಳಗಾಗಿ
ಕೆಡುವ ಕಾಯವ ನಚ್ಚಿ ಬಂಧುಗ
ಳೊಡನೆ ವೈರವ ಮಸೆದು ನರಕಕೆ
ಕೆಡೆವೆನೇ ತಾನೆನುತ ರಥದೊಳು ಬಿಲ್ಲನಿಳುಹಿದನು ॥31॥

೦೩೨ ಕರಗಲನ್ತಃಕರಣ ಚಿನ್ತಾ ...{Loading}...

ಕರಗಲಂತಃಕರಣ ಚಿಂತಾ
ತುರನು ಸಂಗ್ರಾಮದ ವಿರಕ್ತಿಯೊ
ಳಿರಲು ಕಂಡನು ಕಮಲನಾಭನು ನಗುತ ಮನದೊಳಗೆ
ತರಳನಿವನದ್ವೈತಕಲೆಯಲಿ
ಪರಿಣತನು ತಾನಲ್ಲ ನೆವದಿಂ
ನರನ ಬೋಧಿಸಬೇಕೆನುತ ನುಡಿಸಿದನು ಫಲುಗುಣನ ॥32॥

೦೩೩ ಏನು ಫಲುಗುಣ ...{Loading}...

ಏನು ಫಲುಗುಣ ಸಮರದಲಿ ದು
ಮ್ಮಾನವಾವುದು ಹದನು ಶೌರ್ಯಕೆ
ಹಾನಿಯಲ್ಲಾ ತ್ರಿಜಗಚೌಪಟಮಲ್ಲ ನೀನೆನಿಪ
ಮಾನಗರ್ವವು ಮುರಿಯದೇ ರಿಪು
ಸೇನೆ ನಗದೇ ತೆತ್ತ ಸಮರವ
ನೀನುಪೇಕ್ಷಿಸಿ ನೋಡಲಹುದೇ ಬಿಲ್ಲ ಹಿಡಿಯೆಂದ ॥33॥

೦೩೪ ಆವ ನಿನ್ನಯ ...{Loading}...

ಆವ ನಿನ್ನಯ ಕ್ಷತ್ರಧರ್ಮವ
ಭಾವಿಸಿದೆ ಮೇಣಾವ ಶಶಿವಂ
ಶಾವಳಿಯ ನೆಮ್ಮುಗೆಯ ನೆಗಳಿದೆ ತೆತ್ತ ಕಾಳೆಗಕೆ
ಆವ ನಿನ್ನಗ್ಗಳಿಕೆಗುಚಿತವ
ತೀವಿ ಬಳಸಿದೆ ಕದನಮುಖದಲಿ
ಹೇವ ವೀರರೊಳಿಲ್ಲಲಾ ವಿಸ್ಮಯವಿದಕಟೆಂದ ॥34॥

೦೩೫ ಅಲಗಿನೊರಸೊರಸಿಲ್ಲ ಕೈಮೈ ...{Loading}...

ಅಲಗಿನೊರಸೊರಸಿಲ್ಲ ಕೈಮೈ
ಗಳಲಿ ಮುಳುಗಿದ ಬಾಣವಿಲ್ಲ
ಗ್ಗಳಿಸಿ ನೊಸಲಲಿ ಮುರಿದ ಭಲ್ಲೆಯವಿಲ್ಲ ನೋಡುವರೆ
ಕಲಹದಲಿ ಪಡಿಮುಖದ ಘಾಯದ
ಚಲರಕುತದೊರವಿಲ್ಲ ನೀ ಮು
ನ್ನಳುಕಿ ಕೈದುವ ಹಾಯ್ಕಿದೈ ಸರಿಯಲ್ಲ ನಿನಗೆಂದ ॥35॥

೦೩೬ ತರುಣಿಯರ ...{Loading}...

ತರುಣಿಯರ ಮುಂದಸ್ತ್ರಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳ್ ಎಂದ ॥36॥

೦೩೭ ಬನ್ಧುಹನನಕೆ ಮನದರಲು ...{Loading}...

ಬಂಧುಹನನಕೆ ಮನದರಲು ಭವ
ವಿಂಧ್ಯದಲಿ ಬೆಳ್ಳಾಗಿ ರೌರವ
ಸಿಂಧುವಿನೊಳೋಲಾಡದಿಹನೇ ಪರಮಪಾತಕನು
ಸಂಧಿಯಲಿ ನಮ್ಮವನಿ ಋಣಸಂ
ಬಂಧವುಂಟೇ ಬರಲಿ ರಣದಭಿ
ಸಂಧಿ ಸಾಕಿನ್ನೆನುತ ಫಲುಗುಣ ಶಿರವ ಬಾಗಿದನು ॥37॥

೦೩೮ ಎಲವೊ ಫಲುಗುಣ ...{Loading}...

ಎಲವೊ ಫಲುಗುಣ ನುಡಿದ ಭಾಷೆಯ
ಸಲಿಸಿ ಕಾನನದೊಳಗೆ ತೊಟ್ಟನೆ
ತೊಳಲಿ ಹದಿಮೂರಬುದ ಬಂದಾಪತ್ತನನುಭವಿಸಿ
ನೆಲನ ಭಾಗವ ಬೇಡಿ ಸಂಧಿಗೆ
ಕಳುಹಿದರೆ ಕೌರವನು ನೂಕಿಸಿ
ಕಳೆದ ನಿಮಗಿನ್ನಾವ ಹೊಲ್ಲೆಹವೆಂದನಸುರಾರಿ ॥38॥

೦೩೯ ಎವಗೆ ನೀನುತ್ತರನ ...{Loading}...

ಎವಗೆ ನೀನುತ್ತರನ ಕಥೆವೇ
ಳುವೆ ನಗುವೆಯಾತನಿಗೆ ನೀನೀ
ಬವರದೊಳು ಗುರುವಾದೆ ಲೋಗರ ನಿಂದೆ ತನಗಹುದು
ಲವಲವಿಕೆಯಲಿ ಕಾದಬೇಕೆ
ಮ್ಮವನಿಯನು ಕೈಕೊಳಲುಬೇಕೆಂ
ಬವಗಡೆಯತನವೆತ್ತಲಡಗಿತು ಪಾರ್ಥ ಹೇಳೆಂದ ॥39॥

೦೪೦ ಬಲುಹ ನೀ ...{Loading}...

ಬಲುಹ ನೀ ನೋಡುವರೆ ಪರಮಂ
ಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ
ಕೊಲುವೆನೆಂತೈ ಭೀಷ್ಮರನು ಮನ
ವಳುಕದೆಂತೈ ತಪ್ಪುವೆನು ಗುರು
ಗಳಿಗೆ ಕೃಪಗುರುಸುತರನಿರಿವುದಿದಾವ ನಯವೆಂದ ॥40॥

೦೪೧ ಹೊಳೆದು ಹೋಹೈಶ್ವರ್ಯಕೋಸುಗ ...{Loading}...

ಹೊಳೆದು ಹೋಹೈಶ್ವರ್ಯಕೋಸುಗ
ತಲೆಯ ಮಾರಿಯಧರ್ಮ ಕೋಟಿಯ
ಘಳಿಸಿ ಬಳಿಕಾ ಫಲವನಲಸದೆ ಭವಭವಂಗಳಲಿ
ತೊಳಲಿ ಬಳಲುವ ಜೀವಭಾವದೊ
ಳುಳಿವುದಾವುದು ಲಾಗು ಮೂಢರ
ಬಳಕೆಗಾವಂಜುವೆವು ಸಮರಕೆ ಶರಣು ಶರಣೆಂದ ॥41॥

೦೪೨ ಲಾಲಿಸದೆ ಕುಲಛಲವ ...{Loading}...

ಲಾಲಿಸದೆ ಕುಲಛಲವ ನೀತಿಯ
ಪಾಲಿಸದೆ ಕೊಲೆಗಡುಕತನದೊಳು
ಮೇಲುಗಾಣದೆ ಬಂಧುಗಳ ಗುರುಗಳ ಸಹೋದರರ
ಕೋಲ ಮೊನೆಯಲಿ ಕೊಂದು ನೆತ್ತರ
ಗೂಳನುಂಬವೊಲಖಿಳ ರಾಜ್ಯದ
ಮೇಲೆ ಸೊಗಸುವ ಸಿರಿಯನೊಲ್ಲೆನು ಕೊಲುವನಲ್ಲೆಂದ ॥42॥

೦೪೩ ಆರನೈ ನೀ ...{Loading}...

ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವನೊ ನಿಜ
ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತ ನಿಕರಕೆ
ವೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ ॥43॥

೦೪೪ ತನುವಳಿದ ಬಳಿಕಿನಲಿ ...{Loading}...

ತನುವಳಿದ ಬಳಿಕಿನಲಿ ತನು ಸಂ
ಜನಿಸುಗೆಂಬುದು ಭವವ ಬಳಸುವ
ತನುವಿನಲಿ ಕೌಮಾರ ಯೌವನ ವಾರ್ಧಿಕಂಗಳಲಿ
ತನು ವಿಕಾರಿಸುವದು ಸುಕರ್ಮದ
ವಿನುತ ದುಷ್ಕೃತವೆನಿಪ ಹುಸಿ ಕ
ಲ್ಪನೆ ಶರೀರಕ್ಕಲ್ಲದಾತ್ಮಂಗಿಲ್ಲ ಕೇಳ್ ಎಂದ ॥44॥

೦೪೫ ಅಳಿವನಲ್ಲುದಯಿಸುವನಲ್ಲ ...{Loading}...

ಅಳಿವನಲ್ಲುದಯಿಸುವನಲ್ಲ
ಗ್ಗಳಿಸುವವನಲ್ಲಡಗುವವನ
ಲ್ಲಳಿವ ದೇಹದ ಬಗೆಗೆ ಹೊಣೆಯೇ ಸಚ್ಚಿದಾತ್ಮಕನು
ಕಳಚಿದಡೆ ಕಳಚುವುದು ಕಾಯವಿ
ದುಳಿದಡುಳಿವುದು ಚಿನುಮಯಂಗೀ
ಕಳಕಳದ ಕಾಲಾಟ ಕೊಳ್ಳದು ಪಾರ್ಥ ಕೇಳ್ ಎಂದ ॥45॥

೦೪೬ ನಿನಗೆ ಸಾವವನಲ್ಲ ...{Loading}...

ನಿನಗೆ ಸಾವವನಲ್ಲ ನಿನ್ನಂ
ಬಿನಲಿ ನೋವವನಲ್ಲ ದಿಟ ನೀ
ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ
ತನುವಿನೀ ಗುಣಧರ್ಮ ಕರ್ಮದ
ಹೊನಲು ಹೊಗುವುದೆ ನಿತ್ಯನಿರ್ಮಲ
ಚಿನುಮಯಾತ್ಮನನೆಲೆ ವೃಥಾಹಂಕಾರವೇಕೆಂದ ॥46॥

೦೪೭ ಆದಡೆಲೆ ಮುರವೈರಿ ...{Loading}...

ಆದಡೆಲೆ ಮುರವೈರಿ ಕೇಳಿದಿ
ರಾದ ಬಾಂಧವರನಿಬರನು
ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ
ಈ ದುರಂತಕ್ಕೇನುಗತಿಯಪ
ವಾದವಾವಂಗಾದುದಾತನ
ವೈದಿಕನು ಇಹಪರಕೆ ಬಾಹಿರನೆಂದನಾ ಪಾರ್ಥ ॥47॥

೦೪೮ ಮರುಳೆ ಫಲುಗುಣ ...{Loading}...

ಮರುಳೆ ಫಲುಗುಣ ಕೇಳು ಸೂರ್ಯನ
ಕಿರಣ ಹೊಲೆಯನ ಚರಿಸಿದರೆ ಹೊಲೆ
ಹೊರುವುದೇ ಸ್ನಾನದಲಿ ವಿಧಿಸಲು ಬಹುದೆ ನೋಡಿದನ
ಪರಮತತ್ತ್ವಜ್ಞಾನ ನಿಷ್ಠನ
ಚರಿತವೇ ಸುಚರಿತ್ರವಾತಂ
ಗಿರದು ಕೇಳು ಸುಕರ್ಮದುಷ್ಕರ್ಮಾದಿ ಗುಣಲೇಪ ॥48॥

೦೪೯ ಕೊನ್ದೆ ನಾನೆನಗಾಯ್ತು ...{Loading}...

ಕೊಂದೆ ನಾನೆನಗಾಯ್ತು ಪಾತಕ
ವೆಂದು ಮನದಲಿ ಮರುಗುವಾತನ
ಬಂದಿಯಲಿ ಹೊಣೆಗೊಂಬವಾಹಂಕಾರ ಮಮಕಾರ
ಕಂದು ಕಲೆ ತನಗೆತ್ತಣದು ನಿ
ದ್ರ್ವಂದ್ವಕನು ಮೃತ ಜಾತ ತಾನ
ಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ ॥49॥

೦೫೦ ಹರಿಯೆ ಚಿತ್ತಯಿಸೈಯಹಿಂಸಾ ...{Loading}...

ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ ॥50॥

೦೫೧ ನಿರುತವರ್ಜುನ ಕೇಳಹಿಂಸಾ ...{Loading}...

ನಿರುತವರ್ಜುನ ಕೇಳಹಿಂಸಾ
ಪರಮಧರ್ಮದ ತತ್ಸ್ವರೂಪವ
ನೊರೆವೆನಾಲಿಸು ಸಚ್ಚಿದಾನಂದೈಕಘನವೆನಿಪ
ನಿರುಪಮಾತ್ಮನ ನಿಲವನರಿಯದೆ
ನರಕಿ ಜಡನಾಜೀವವೆಂಬೀ
ತರಳತನವೇ ಹಿಂಸೆಯರಿವಡಹಿಂಸೆ ಕೇಳ್ ಎಂದ ॥51॥

೦೫೨ ನೆರವಿ ಬೇರೊನ್ದಿಲ್ಲ ...{Loading}...

ನೆರವಿ ಬೇರೊಂದಿಲ್ಲ ಭೂತದ
ಹರಹು ಕರಣೇಂದ್ರಿಯದ ಸಂದಣಿ
ಮರುತ ಪಂಚಕ ಬುದ್ಧಿ ಕರ್ಮೇಂದ್ರಿಯದ ಕಾಲೆಣಿಕೆ
ನೆರೆಯಲೊಂದಾಗಿಹುದು ಕಲ್ಪನೆ
ಹರೆದು ಜೀವಭ್ರಾಂತಿ ಬೀತಡೆ
ಪರಮ ತಾನಿಹನಲ್ಲಿ ಕೊಲುವರೆ ಸಾವನಲ್ಲೆಂದ ॥52॥

೦೫೩ ಕರ್ಮವೇ ಹೂಡುವುದು ...{Loading}...

ಕರ್ಮವೇ ಹೂಡುವುದು ತನುವನು
ಕರ್ಮವೇ ಸಲಹುವುದು ಕಡೆಯಲಿ
ಕರ್ಮವೇ ಕಳಚುವುದು ಜೀವಭ್ರಮೆಯ ಬಾಹಿರರ
ಕರ್ಮ ತಾನೇನಾದಡಾಗಲಿ
ನಿರ್ಮಮತೆಯಲಿ ಮಾಡಿ ನಮ್ಮಲಿ
ನಿರ್ಮಿಸಲು ಕಲಿಪಾರ್ಥ ನೀ ನಿರ್ಲೇಪನಹೆಯೆಂದ ॥53॥

೦೫೪ ಅಸುರರಿಪು ಕೇಳಾದಿಯಲಿ ...{Loading}...

ಅಸುರರಿಪು ಕೇಳಾದಿಯಲಿ ಬಂ
ಚಿಸಿದ ಕರ್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸಿತಲಾ ಸ್ಮಾರ್ತ ಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ ॥54॥

೦೫೫ ಸುಕೃತ ದುಷ್ಕೃತವೆಮ್ಬವೇ ...{Loading}...

ಸುಕೃತ ದುಷ್ಕೃತವೆಂಬವೇ ಬಾ
ಧಕವು ಜೀವರಿಗೀಯಹಂಕೃತಿ
ವಿಕಳತೆಗೆ ತಾ ಬೀಜ ಜನ್ಮದ ಚುಟ್ಟುಮುರಿಗಳಿಗೆ
ಸಕಲಕರ್ತೃತ್ವಾದಿ ಭೋಕ್ತೃ
ತ್ವಕವಿದಾತ್ಮಂಗಿಲ್ಲ ಪಿತ್ತಾ
ಧಿಕನು ತಿರುಗುತ ಲೋಕ ತಿರುಗುವುದೆಂಬ ತೆರನಂತೆ ॥55॥

೦೫೬ ಮರುಳೆ ಫಲುಗುಣ ...{Loading}...

ಮರುಳೆ ಫಲುಗುಣ ಕೇಳು ಸಚರಾ
ಚರವೆನಿಪ ಜಗವೆನ್ನ ಲೀಲಾ
ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ
ನಿರುತ ನೀ ಕೇಳುವರೆ ತಿರ್ಯಙï
ನರಸುರಾದಿಗಳೆಂಬ ಸಚರಾ
ಚರವಿದಾನಲ್ಲದೆ ವಿಚಾರಿಸಲನ್ಯವಿಲ್ಲೆಂದ ॥56॥

೦೫೭ ಜಗದೊಳಾನೇ ಚರಿಸುವೆನು ...{Loading}...

ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರಸುವ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ ॥57॥

೦೫೮ ಬೀಸಿದರೆ ಸಿಲುಕುವರು ...{Loading}...

ಬೀಸಿದರೆ ಸಿಲುಕುವರು ಮಾಯಾ
ಪಾಶದೊಳಹಂಕಾರಿಗಳು ತ
ದ್ದೇಶಕಾಲಕ್ರಿಯೆಗಳಲಿ ನಿರ್ವಾಹವನು ಬೆದಕಿ
ಬೇಸರುವರಂತಿರಲಿ ಮಾಯಾ
ವೈಸಿಕದ ಸಮ್ಮೋಹನದ ಕಾ
ಳಾಸವರಿವವರೆನ್ನನರಿವರು ಪಾರ್ಥ ಕೇಳ್ ಎಂದ ॥58॥

೦೫೯ ಏಕನಾತ್ಮನನನ್ತನಚಲನ ...{Loading}...

ಏಕನಾತ್ಮನನಂತನಚಲನ
ಶೋಕನದ್ವಯನಮಲನಭವನ
ಲೋಕನಿಸ್ಪೃಹನಮಿತನಕ್ರಿಯನಹತನಭ್ರಮನು
ಲೋಕಗತಿ ಮಾಯಾವಿಲಾಸ ವಿ
ವೇಕಿಗಳಿಗಿದು ಬಯಲು ಫಲುಗುಣ
ಸಾಕು ಗರ್ವವ ಬೀಳುಕೊಡು ಸೆಳೆ ಶರವ ಹಿಡಿ ಧನುವ ॥59॥

೦೬೦ ಜಡನಲಾ ನರನೇಸ ...{Loading}...

ಜಡನಲಾ ನರನೇಸ ತಿಳುಹಲು
ಬಿಡ ವಿಕಾರವನೆಂದು ಖಾತಿಯ
ಹಿಡಿಯಲಾಗದು ಸಲುಗೆಗಂಜಿಕೆಯೇಕೆ ಬಿನ್ನಹವು
ಬಿಡು ಜಗೌಘಾನೀಕ ನಿಮ್ಮಡಿ
ಯೊಡಲೊಳಗಣಿತವಿಹವು ಗಡ ಮಿಗೆ
ನುಡಿಯಲಮ್ಮೆನು ತತ್ಸ್ವರೂಪವ ತೋರಬೇಕೆಂದ ॥60॥

೦೬೧ ಈ ದಿವಿಜರೀ ...{Loading}...

ಈ ದಿವಿಜರೀ ಚಂದ್ರ ಸೂರಿಯ
ರೀ ದಿಶಾವಳಿಯೀ ಗಗನವೀ
ಮೇದಿನೀತಳವೀ ಸಮೀರಣನೀ ಜಲಾನಲರು
ಈ ದನುಜರೀ ಮನುಜರೀ ನೀ
ನಾದಿಯಾಗಿಹ ಹರಹು ನಿನ್ನ ವಿ
ನೋದರೂಪಿನ ನಿರುಗೆಯನು ನೀ ತೋರಬೇಕೆಂದ ॥61॥

೦೬೨ ಹರೆದು ಮೋಹಿಸುವೀ ...{Loading}...

ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ ॥62॥

೦೬೩ ದಾಸನಾನೆನಗಮಲಮೂರ್ತಿವಿ ...{Loading}...

ದಾಸನಾನೆನಗಮಲಮೂರ್ತಿವಿ
ಲಾಸವನು ತೋರುವುದು ಸಲಹುವು
ದೈಸರವನೈ ತಾನು ಸಮ್ಯಗ್ಜ್ಞಾನಭಾಜನಕೆ
ಮೀಸಲಳಿಯದ ಮಿಕ್ಕ ಬಯಕೆಯ
ಪಾಶ ತಾಗದ ನಿನ್ನ ಲೀಲೆಯ
ಭಾಸುರ ಶ್ರೀಮೂರ್ತಿಯನು ಮೈದೋರಬೇಕೆಂದ ॥63॥

೦೬೪ ಆದಡರ್ಜುನ ನೋಡೆನುತ ...{Loading}...

ಆದಡರ್ಜುನ ನೋಡೆನುತ ಕಮ
ಲೋದರನು ಕೈಕೊಂಡನಗ್ಗದ
ನಾದಿಪುರುಷ ಶ್ರೀನಿಜವ ವಿಶ್ವಾತ್ಮಕಾಕೃತಿಯ
ವಾದಿಸುವ ಷಟ್ತರ್ಕಗಿರ್ಕದ
ಭೇದ ಕೊಳ್ಳದ ಸಕಲ ಲೋಕದ
ಬೀದಿ ವಿಸಟಂಬರಿವ ವಿಮಲ ವಿರಾಟ ರೂಪವನು ॥64॥

೦೬೫ ಬಿಳಿದು ಕರಿದೆಮ್ಬಾರು ...{Loading}...

ಬಿಳಿದು ಕರಿದೆಂಬಾರು ವರ್ಣದ
ಹೊಲಬು ಹೊದ್ದದ ಸೂರ್ಯಕೋಟಿಯ
ಹೊಳಹು ನಖದೀಧಿತಿಯ ಹೋಲದ ನಿಜದ ಹೊಸಪರಿಯ
ಅಳವಿನಳತೆಯ ಜಗದ ವಾರ್ತೆಯ
ಸುಳಿವು ಸೋಂಕದ ಸಕಲ ಲೋಕ
ಪ್ರಳಯ ಕಾರಣ ತೆಗೆದನಗ್ಗದ ವಿಶ್ವರೂಪವನು ॥65॥

೦೬೬ ಕಾಣರುಳಿದವರೀತನೊಬ್ಬನ ...{Loading}...

ಕಾಣರುಳಿದವರೀತನೊಬ್ಬನ
ಕಾಣಿಕೆಗೆ ಕೌತುಕವ ಕರೆದನು
ಶೋಣಿತಾಮಲಬಹಳತೇಜದ ಹೊದರ ಹೊಯಿಲಿನಲಿ
ಕಾಣಲರಿಯವನಂತವೇದ
ಶ್ರೇಣಿ ಶಿವಶಿವ ರಾಯ ಪಾರ್ಥನ
ಜಾಣತನವೆಂತುಟೊ ವಿರೂಪನ ರೂಪ ಸೆರೆವಿಡಿದ ॥66॥

೦೬೭ ಉಬ್ಬಿದನು ಹರುಷದಲಿ ...{Loading}...

ಉಬ್ಬಿದನು ಹರುಷದಲಿ ಕಂಗಳ
ಗಬ್ಬ ಮುರಿದುದು ಮದದ ನಿಗುರಿನ
ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ
ಸಬ್ಬಗತನೈ ಶಿವಶಿವಾ ಬಲು
ಮಬ್ಬಿನಲಿ ಮುಂದರಿಯದೆನ್ನಯ
ಕೊಬ್ಬನೇವಣ್ಣಿಸುವೆನೆನುತಡಿಗಡಿಗೆ ಬೆರಗಾದ ॥67॥

೦೬೮ ಇದೆ ನಿರಞ್ಜನತತ್ವ ...{Loading}...

ಇದೆ ನಿರಂಜನತತ್ವ ಸಾಮ್ರಾ
ಜ್ಯದ ಸಘಾಟಿಕೆ ನಾವು ಕಡು ಮೂ
ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ
ಯದುಗಳನ್ವಯದಾತ ನಮಗೊ
ಳ್ಳಿದನು ಸೋದರಭಾವನೆಂದೇ
ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ ॥68॥

೦೬೯ ಪರುಷ ಕಲ್ಲೆನ್ದಳುಕಿ ...{Loading}...

ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ ॥69॥

೦೭೦ ನೊರಜು ತಾನೆತ್ತಲು ...{Loading}...

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವದಾವುದ ಕಡೆಗೆ ಹಲುಬುವೆನು ॥70॥

೦೭೧ ಮೇಳ ಗಡ ...{Loading}...

ಮೇಳ ಗಡ ನಮಗೀತನಲಿ ಭೂ
ಪಾಲಕರು ಗಡ ನಾವು ಸಾರಥಿ
ಯಾಳು ಗಡ ಹರಿ ನಾವು ವೀರರು ಗಡ ವಿಚಿತ್ರವಲ
ಮೇಲುಗಾಣದ ಪಾರ್ಥನೆಂಬೀ
ಕಾಳುಮೂಳನ ವಿಧಿಯನೇಪರಿ
ವೇಳುವೆನು ಹರಯೆನುತ ಕಂಗಳನೆವೆಗಳಲಿ ಬಿಗಿದ ॥71॥

೦೭೨ ಅಡಿಗಡಿಗೆ ಕಣ್ದೆರೆದು ...{Loading}...

ಅಡಿಗಡಿಗೆ ಕಣ್ದೆರೆದು ಮುಚ್ಚುವ
ನಡಿಗಡಿಗೆ ಮೈಬೆದರಿ ಬೆರಗಹ
ನಡಿಗಡಿಗೆ ಮೆಯ್ಯೊಲೆವನುಬ್ಬಿದ ರೋಮ ಪುಳಕದಲಿ
ಅಡಿಗಡಿಗೆ ಮನನಲಿದು ಹೊಂಗುವ
ನಡಿಗಡಿಗೆ ಭಯಗೊಂಡು ಕರಗುವ
ನೊಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು ॥72॥

೦೭೩ ಮುರಹರ ತ್ರಾಯಸ್ವ ...{Loading}...

ಮುರಹರ ತ್ರಾಯಸ್ವ ಕರುಣಾ
ಕರ ಪರಿತ್ರಾಯಸ್ವ ಲಕ್ಷ್ಮೀ
ವರ ಪರಿತ್ರಾಯಸ್ವ ದನುಜಾಂತಕ ಪರಿತ್ರಾಹಿ
ಚರಣಭಜಕ ಕುಟುಂಬಕನೆ ಘನ
ದುರಿತ ವಿಪಿನ ಕೃಶಾನುವೇ ಭವ
ಹರ ನಿರೀಕ್ಷಿಸು ರಕ್ಷಿಸೆನ್ನನೆನುತ್ತ ಹೊರಳಿದನು ॥73॥

೦೭೪ ದೇವ ಭಕ್ತಜನಾರ್ತಪಾಲಕ ...{Loading}...

ದೇವ ಭಕ್ತಜನಾರ್ತಪಾಲಕ
ದೇವ ಬಹಳಕೃಪಾಮಹಾರ್ಣವ
ದೇವ ಸರ್ವೇಶ್ವರ ಸದಾತ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ ॥74॥

೦೭೫ ಲೋಕವರಿಯಲನನ್ತವೇದವು ...{Loading}...

ಲೋಕವರಿಯಲನಂತವೇದವು
ಮೂಕನಾದವು ಜೀಯ ಜಡನವಿ
ವೇಕಿ ಮಾನವ ಮಶಕವಿದು ನಿಮ್ಮಳತೆಗೈದುವುದೇ
ಸಾಕಿಕೊಳ್ಳೈ ಕೃಷ್ಣ ನೋಡಲು
ನೂಕದೆನ್ನೆವೆ ಸೀವುತಿವೆ ಕರು
ಣಾಕರನೆ ಕೈಗಾವುದೈ ಕೃಪೆಮಾಡಬೇಕೆಂದ ॥75॥

೦೭೬ ಎಳನಗೆಯ ಸಿರಿಮೊಗದ ...{Loading}...

ಎಳನಗೆಯ ಸಿರಿಮೊಗದ ಚೆಲುವಿನ
ಹೊಳೆಹೊಳೆವ ನಿಟ್ಟೆಸಳುಗಂಗಳ
ತೊಳಪ ಕದಪಿನ ಮಿಸುಪ ಕಾಂತಿಯ ಮಕರಕುಂಡಲದ
ಲಲಿತಕಂಠದ ಕೌಸ್ತುಭೋರ
ಸ್ಥಳದ ನಿಡುದೋಳುಗಳ ಕೋಮಲ
ತಳಿತ ಪೀತಾಂಬರದ ಮುನ್ನಿನ ರೂಪ ತೋರೆಂದ ॥76॥

೦೭೭ ಅಳಕ ನಿಚಯದ ...{Loading}...

ಅಳಕ ನಿಚಯದ ಕುಂಭಿನೊಸಲಿನ
ತಳಿತೆವೆಯ ನಿಡುಹುಬ್ಬುಗಳ ಕೋ
ಮಲ ಸುಮುಕ್ತಾಫಲಕೆ ಸೆಣಸುವ ದಂತಪಂಕ್ತಿಗಳ
ಲಲಿತಚುಬುಕದ ಚಾರುತರ ಕೆಂ
ದಳದ ಸುಳಿನಾಭಿಯ ಸವರ್ತುಳ
ವಿಳಸಿತೋರುದ್ವಯದ ಮುನ್ನಿನ ರೂಪ ತೋರೆಂದ ॥77॥

೦೭೮ ಪರಮಚಿನುಮಯ ನೀನು ...{Loading}...

ಪರಮಚಿನುಮಯ ನೀನು ಕರ್ಮದ
ಸರಣಿಯೆನ್ನದು ನೀ ಚರಾಚರ
ಭರಿತ ಭಾರಿಯ ವಿಶ್ವಮಯನವ್ಯಕ್ತನದ್ವಯನು
ನರನ ಮತಿಯಿದು ಮಂದಮತಿ ಗೋ
ಚರಿಸಲರಿವುದೆ ದೇವ ಕರುಣಿಸು
ಕರುಣಿಸೈ ಮೈದೋರು ತನ್ನೊಡನಾಡಿತನದನುವ ॥78॥

೦೭೯ ನಳಿನನಾಭ ಮುಕುನ್ದ ...{Loading}...

ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯ ಪಾವಕ ಭಕ್ತವತ್ಸಲ ಭಕ್ತ ಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಕ ಕೃಷ್ಣ ಕೇಶವ ಕರುಣಿಸೆನಗೆಂದ ॥79॥

೦೮೦ ಪರಮಪುಣ್ಯಶ್ಲೋಕ ಪಾವನ ...{Loading}...

ಪರಮಪುಣ್ಯಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿದ್ರ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ ॥80॥

೦೮೧ ದೇವ ಲಕ್ಷ್ಮೀಕಾನ್ತ ...{Loading}...

ದೇವ ಲಕ್ಷ್ಮೀಕಾಂತ ವರರಾ
ಜೀವಲೋಚನ ಭೂತಭಾವನ
ರಾವಣಾಂತಕ ಗೋಪವೇಷ ವಿಲಾಸ ಜಯವಾಸ
ದೇವಕೀನಂದನ ಯಶೋದಾ
ದೇವಿಯುನ್ನತಪುಣ್ಯಫಲ ತಲೆ
ಗಾವುದೈ ತರುವಲಿಗೆ ತೋರೈ ಮುನ್ನಿನಾಕೃತಿಯ ॥81॥

೦೮೨ ನಿಗಮನಿಕರವ ಸೆಳೆವ ...{Loading}...

ನಿಗಮನಿಕರವ ಸೆಳೆವ ತಿರುಗುವ
ನಗಕೆ ಬೆನ್ನನು ಕೊಡುವ ಜಲನಿಧಿ
ಮಗುಚೆ ಮಹಿಯನು ಮೊಗೆವ ಮಗುವಿನ ನುಡಿಗೆ ಮೈಗೊಡುವ
ಗಗನಕಂಘ್ರಿಯನಿಡುವ ತಾಯ
ಕ್ಕೆಗಳಿಗಕ್ಕೆಯ ತೋರ್ಪ ರಾಣಿಯ
ಸೊಗಸ ಸಲಿಸುವ ಕೃಪೆಯನೆನ್ನಲಿ ತೋರಬೇಕೆಂದ ॥82॥

೦೮೩ ಮರೆದು ನಾಲಗೆಗೊನೆಗೆ ...{Loading}...

ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರುಣ್ಯವರುಷವನೆನ್ನ ಮೇಲೆಂದ ॥83॥

೦೮೪ ಹಸುಳೆಗಮರಾಚಲದ ಹೊರೆ ...{Loading}...

ಹಸುಳೆಗಮರಾಚಲದ ಹೊರೆ ಸೈ
ರಿಸುವುದೇ ಮರಿಹುಲ್ಲೆ ಸಿಂಹದ
ಮಸಕಕಿದಿರೇ ಲತೆಯ ಎಳಗುಡಿ ಮಾಳಿಗೆಗೆ ತೊಲೆಯೆ
ಸಸಿದರಳೆ ಸಿಡಿಲೆರಗಿದರೆ ಜೀ
ವಿಸುವುದೇ ನಿಮ್ಮಡಿಯ ವಿಶ್ವ
ಪ್ರಸರರೂಪಿಂಗಾನು ಲಕ್ಷ್ಯವೆ ಸಲಹಬೇಕೆಂದ ॥84॥

೦೮೫ ಅಣಲೊಳಷ್ಟಾದಶ ಮಹಾಕ್ಷೋ ...{Loading}...

ಅಣಲೊಳಷ್ಟಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ ॥85॥

೦೮೬ ವಿಶ್ವ ನಿನ್ನಯ ...{Loading}...

ವಿಶ್ವ ನಿನ್ನಯ ಮಾಯೆ ನಿರ್ಮಲ
ವಿಶ್ವರೂಪನು ನೀನು ಬಗೆವಡೆ
ವಿಶ್ವ ನಿನ್ನೊಳು ಸುಳಿವುದಳಿವುದು ಲಲಿತಲೀಲೆಯಲಿ
ವಿಶ್ವವಲ್ಲಭ ನೀನು ನಿನ್ನದು
ವಿಶ್ವಪಾಲನೆ ವಿಶ್ವಚೇಷ್ಟಕ
ವಿಶ್ವದಾಧಾರನೆ ಜಡಾತ್ಮನ ಸಲಹಬೇಕೆಂದ ॥86॥

೦೮೭ ವೀರ ದೈತ್ಯಕುಠಾರ ...{Loading}...

ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ ॥87॥

೦೮೮ ಭಯದ ಬಿಗುಹಿನ ...{Loading}...

ಭಯದ ಬಿಗುಹಿನ ಭಾರ ಭಕುತಿಯ
ನಯದ ಬಿನ್ನಹದೋಜೆಯನು ಚಿನು
ಮಯನು ಕೇಳಿದು ಮೆಚ್ಚಿ ಡಿಂಗರಿಗಂಗೆ ನಗುತೆಂದ
ನಿಯತವೇ ನೀನಲ್ಲಲೇ ಸೇ
ನೆಯನು ಕೊಲುವನು ಕಾವವನು ನಿ
ಶ್ಚಯವ ನಿನ್ನೊಳು ತಿಳಿದು ಬಿನ್ನಹ ಮಾಡು ಸಾಕೆಂದ ॥88॥

೦೮೯ ಎನಿತು ಜಗವಡಗಿದವು ...{Loading}...

ಎನಿತು ಜಗವಡಗಿದವು ಕೌರವ
ರೆನಿಬರಡಗಿತು ನೋಡು ಧರ್ಮನ
ತನಯ ಭೀಮಾರ್ಜುನರು ಭೀಷ್ಮದ್ರೋಣ ಮೊದಲಾದ
ಎನಿಬರಡಗಿತು ನೋಡು ಬಾಂಧವ
ಹನನ ನಿನಗುಂಟಾದಡೀಗಳೆ
ನೆನೆದು ಬಿನ್ನಹ ಮಾಡೆನುತ ಪಾರ್ಥಂಗೆ ಹರಿ ನುಡಿದ ॥89॥

೦೯೦ ಗುರುಗಳಿಗೆ ನಾ ...{Loading}...

ಗುರುಗಳಿಗೆ ನಾ ತಪ್ಪೆನೆಂದೇ
ಮುರಿದಡೆನಗದು ಖಾತಿ ಭೀಷ್ಮನು
ವರಪಿತಾಮಹನೆಂದು ಹೊಳೆದರೆ ಬಳಿಕಸಹ್ಯವದು
ಅರಿಬಲವು ಮುನ್ನುರಿವುದೋ ನೀ
ನರಿವೆಯೋ ಲೇಸಾಗಿ ಎನ್ನೊಳು
ನರ ನಿರೀಕ್ಷಿಸೆನುತ್ತ ನುಡಿದನು ದಾನವಧ್ವಂಸಿ ॥90॥

೦೯೧ ನೆನೆದಡಜಕೋಟಿಗಳು ನಿಮ್ಮಯ ...{Loading}...

ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ ॥91॥

೦೯೨ ಮರಳಿ ಮುನ್ನಿನ ...{Loading}...

ಮರಳಿ ಮುನ್ನಿನ ರೂಪನಂಗೀ
ಕರಿಸಿ ವಾಘೆಯ ಕೊಂಡು ತುರಗವ
ತಿರುಹಿ ಲುಳಿವಡೆಸುತ್ತ ಪಾರ್ಥಗೆ ಮಾಯೆಯನು ಬೀಸಿ
ಶರ ಧನುವ ಕೊಳ್ಳೇಳು ಕೈಕೋ
ಪರಬಲದ ತೋಟಿಯನು ತೋರೈ
ಬಿರುದ ಘಾತಕತನವನೆಂದನು ನಗುತ ಮುರವೈರಿ ॥92॥

೦೯೩ ಮೋಹ ಮಿಗೆ ...{Loading}...

ಮೋಹ ಮಿಗೆ ಪಾಂಡವ ಮಮ ಪ್ರಾ
ಣಾಹಿಯೆಂಬೀ ಬಿರುದ ಸಲಿಸಲು
ಗಾಹಿನಲಿ ಮೇದಿನಿಯ ತಿಣ್ಣವನಿಳುಹಲೋಸುಗರ
ಆಹವದೊಳರ್ಜುನನ ರಥದೊಳು
ವಾಹಕನು ತಾನಾಗಿ ಶರಣ
ಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ ॥93॥

+೦೩ ...{Loading}...