೦೦೦ ಸೂ ವೈರಿ ...{Loading}...
ಸೂ. ವೈರಿ ಭಟಕುಲ ವಿಲಯ ರುದ್ರನು
ದಾರತೇಜೋಭ್ರದ್ನನಾ ಭಾ
ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುಪಕ್ಷದ ಸೇನಾಸಮೂಹಕ್ಕೆ ಪ್ರಳಯಕಾಲದ ಶಿವನಂತೆ, ಅತಿಶಯ ಪರಾಕ್ರಮದಿಂದ ಸೂರ್ಯನಂತೆಯೂ ಇದ್ದ ಗಂಗಾಸುತನಾದ ಭೀಷ್ಮನು ಕೌರವನ ಸೇನೆಯ ಮುಂದಾಳತ್ವವನ್ನು ವಹಿಸಿದನು.
ಪಾಠಾನ್ತರ (ಕ.ಗ.ಪ)
ಭದ್ರನು ಎಂಬುದಕ್ಕಿಂತ ಭ್ರದ್ನನು (ಸೂರ್ಯ) ಎಂಬ ಪಾಠವನ್ನು ಸ್ವೀಕರಿಸಲಾಗಿದೆ.
ಟಿಪ್ಪನೀ (ಕ.ಗ.ಪ)
ಸಂಧಿಯಲ್ಲಿ ಹೇಳಿರುವ ಕಥೆಯ ಭಾಗವನ್ನು ಬಹುಸಂಗ್ರಹವಾಗಿ (ಅರೆಷಟ್ಪದಿಯಲ್ಲಿ) ತಿಳಿಸುವುದು. ಪ್ರತಿಸಂಧಿಯ ಪ್ರಾರಂಭದಲ್ಲಿ ಸೂಚನಾ ಪದ್ಯ ಕಂಡುಬರುತ್ತದೆ.
ಮೂಲ ...{Loading}...
ಸೂ. ವೈರಿ ಭಟಕುಲ ವಿಲಯ ರುದ್ರನು
ದಾರತೇಜೋಭ್ರದ್ನನಾ ಭಾ
ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳೆಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು, ಯದ್ಧೋತ್ಸಾಹಿಗಳಾದ ಪಾಂಡವರು ದುರ್ಯೋಧನನ ಬಳಿಗೆ ದೂತರನ್ನು ಕಳಿಸಿದರು. ಕುರುಕುಲಶ್ರೇಷ್ಠನಾದ ದುರ್ಯೋಧನನು ಕುರುಕ್ಷೇತ್ರದಲ್ಲಿ ಹಗೆಗಳಾದ ಪಾಂಡವರು ಸಜ್ಜಾಗಿ ಬಂದಿರುವ ಸಂಗತಿಯನ್ನು ದೂತರಿಂದ ತಿಳಿದನು. ಆಗ ತನ್ನ ಅಂತರಂಗದ ಮಿತ್ರರನ್ನೂ ಸಚಿವರನ್ನೂ ಮಂತ್ರಾಲೋಚನೆಯ ಮಂದಿರಕ್ಕೆ ಕರೆಸಿದನು.
ಪಾಠಾನ್ತರ (ಕ.ಗ.ಪ)
ಪರಿಮಿತಕೆ - ಮಂತ್ರಾಲೋಚನೆಗೆ ಕೆಲವರೇ ಇರಬೇಕಾದ್ದರಿಂದ ಪರಿಮಿತಕೆ (ಆ ಸಭೆಗೆ) ಆಪ್ತರನ್ನು ಮಂತ್ರಿಗಳನ್ನು ಮಂತ್ರಾಲೋಚನೆಗೆ ಕರೆಸಿದನು. ಆದ್ದರಿಂದ ಕರೆಸಿದನಾಪ್ತರನು ಪರಿಮಿತದ ಮಂತ್ರಿಗಳ ಎಂದು ಪಾಠಾಂತರ ಸೂಕ್ತ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳೆಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ ॥1॥
೦೦೨ ರವಿಜ ಗುರುಸುತ ...{Loading}...
ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದರೆ ಬೆಸಸುವುದೆನಲು ನೃಪ ನುಡಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ, ಅಶ್ವತ್ಥಾಮ, ಶಲ್ಯ, ದ್ರೋಣ, ಶಕುನಿ ಮೊದಲಾದ ಕೌರವನ ಆಪ್ತರು ಮಂತ್ರಾಲೋಚನೆಯ ಮಂದಿರದಲ್ಲಿ ಕೌರವೇಂದ್ರನನ್ನು ಭೇಟಿಯಾದರು. ದೊರೆಯೇ, ನಮ್ಮನ್ನು ಕರೆಸಿದ ಸಂಗತಿಯೇನು ? ಶತ್ರುಗಳಾದ ಪಾಂಡವರ ಪಾಳೆಯದಲ್ಲಿಯ ರಹಸ್ಯ ಸಂಗತಿಗಳೇನಾದರೂ ಕಿವಿಗೆ ಬಿತ್ತೆ ? ಹಾಗಿದ್ದಲ್ಲಿ ಆ ಸಂಗತಿಗಳನ್ನು ನಮಗೆ ತಿಳಿಸಿ ಎಂದಾಗ ದುರ್ಯೋಧನ ಅವರಿಗೆ ಹೀಗೆಂದನು.
ಪದಾರ್ಥ (ಕ.ಗ.ಪ)
ಏಕಾಂತ ಭವನ - ರಹಸ್ಯ ಸಭೆಯ ಮಂದಿರ (ಮಂತ್ರಾಲೋಚನಾ ಮಂದಿರ) ಹದನು-ಸಂಗತಿ, ಗುಪ್ತದನುಮಾನ-ರಹಸ್ಯ ಸಂಗತಿ, ಬೆಸಸು-ತಿಳಿಸು
ಮೂಲ ...{Loading}...
ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದರೆ ಬೆಸಸುವುದೆನಲು ನೃಪ ನುಡಿದ ॥2॥
೦೦೩ ಸನ್ದಣಿಸಿ ಕುರುಭೂಮಿಯಲಿ ...{Loading}...
ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡ ಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದಡಹುದಪಕೀರ್ತಿಯಿದಕಿನ್ನೇನು ಹದನೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆಯ ಸೇನೆ ಒಟ್ಟಾಗಿ ಸೇರಿ ಕುರುಕ್ಷೇತ್ರದ ರಣಭೂಮಿಯಲ್ಲಿ ತಾವಾಗಿ ಬೀಡುಬಿಟ್ಟಿದೆ. ಆ ಪಾಂಡವರು ಬೀಡುಬಿಟ್ಟ ಸ್ಥಳಕ್ಕೆ ನಾಡಿನ ಜನಸಮೂಹ ಬಂದು ಜತೆಗೂಡಿತು. ದುಷ್ಟರಾದ ಪಾಂಡವರು ದೂತರನ್ನು ಯುದ್ಧಸಂದೇಶ ತಿಳಿಸಲು ಕಳುಹಿಸಿರುವರು. ನಂದಗೋಪನ ಮಗನಾದ ಕೃಷ್ಣನ ಚಾಡಿಮಾತಿನಿಂದ ಯುದ್ಧಕ್ಕೆ ಆವೇಶಭರಿತರಾಗಿದ್ದಾರೆ. ದೀನ-ದುರ್ಬಲರಾದ ಅವರನ್ನು ಕೊಂದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಈ ವಿಷಯದಲ್ಲಿ ಇನ್ನು ನಾವು ಮಾಡಬೇಕಾದ ಪ್ರಕೃತ ಕಾರ್ಯ ಯಾವುದು ? ತಿಳಿಸಿ ಎಂದು ಕರ್ಣಾದಿಗಳನ್ನು ಸಲಹೆ ಕೇಳಿದನು.
ಪದಾರ್ಥ (ಕ.ಗ.ಪ)
ಸಂದಣಿಸಿ-ಒಟ್ಟಾಗಿ ಸೇರಿ,
ನಾಡಗಾವಳಿ-ನಾಡಿನ ಸಮಾನ್ಯ
ಕೊಂಡೆಯ-ಚಾಡಿಮಾತು,
ಕೃಪಣರ-ದೀನ ದುರ್ಬಲರನ್ನು,
ಹದನು-ಪ್ರಕೃತ ಕಾರ್ಯ,
ಕಲಿಯೇರಿದರು-ಆವೇಶಭರಿತರಾದರು
ನಂದಗೋಪನಮಗ-ಕೃಷ್ಣ,
ಕುರುಭೂಮಿ-ರಣರಂಗ
ಮೂಲ ...{Loading}...
ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡ ಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದಡಹುದಪಕೀರ್ತಿಯಿದಕಿನ್ನೇನು ಹದನೆಂದ ॥3॥
೦೦೪ ಭೂರಿ ನೆರೆದುದು ...{Loading}...
ಭೂರಿ ನೆರೆದುದು ನಾಡ ಗಾವಳಿ
ಭಾರ ಧೃಷ್ಟದ್ಯುಮ್ನನದು ಗಡ
ಜಾರದೇವನ ಜೋಕೆ ಮಂದಿಯ ಕಾಹು ಕಟ್ಟು ಗಡ
ಧಾರುಣಿಯ ಲಂಪಟರು ಕದನವ
ಹಾರಿ ಬಂದರು ಗಡ ಕೃತಾಂತನ
ಭೂರಿ ಭೂತದ ಧಾತುವಾಯಿತು ಲೇಸು ಲೇಸೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಡಿನ ಜನಸಮೂಹ ಬಂದು ಪಾಂಡವರ ಕಡೆ ಸೇರಿಕೊಂಡಿದೆ. ಧೃಷ್ಟದ್ಯುಮ್ನನು ದಳಪತಿಯ ಭಾರವನ್ನು ಪೂರ್ಣವಾಗಿ ಹೊತ್ತಿದ್ದಾನೆ. ಜಾರದೇವನಾದ ಶ್ರೀಕೃಷ್ಣನು ಬಹು ಎಚ್ಚರಿಕೆಯ ಮೇಲ್ವಿಚಾರಣೆ ವಹಿಸಿದ್ದಾನೆ. ಪಾಂಡವರ ವಿಷಯದಲ್ಲಿ ಪ್ರೀತಿ, ಅಭಿಮಾನ ಹೊಂದಿದ್ದಾನೆ. ಸೈನಿಕರ ರಕ್ಷಣಾ ಕಾರ್ಯ ಕಟ್ಟುನಿಟ್ಟಾಗಿದೆ ಇನ್ನು ರಾಜ್ಯದಾಹದ ಪಾಂಡವರು ಯುದ್ಧ ಬಯಸಿ ಬಂದಿದ್ದಾರೆ! ಒಳ್ಳೆಯದೇ ಆಯಿತು. ಏಕೆಂದರೆ ಈಗ ಯಮನಿಗೂ ಶಕ್ತಿವರ್ಧಕ ಆಹಾರ ಸಿಗುವಂತಾಯಿತು ಭಲಾ ! ಭಲಾ ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ನಾಡಗಾವಳಿ-ಕೋಲಾಹಲದ ಮಂದಿ, ಭೂರಿ-ಅಪಾರ, ಧಾತು-ಸಪ್ತಧಾತುಗಳು (ಟಿಪ್ಪಣಿ ನೋಡಿ) ಕಾಹುಕಟ್ಟು-ಮೇಲ್ವಿಚಾರಣೆ, ಕೃತಾಂತ-ಯಮ, ಲಂಪಟರು-ಗೀಳಿನವರು
ಟಿಪ್ಪನೀ (ಕ.ಗ.ಪ)
ಗಾವಳಿ, ಹಾವಳಿ > ಗಾವಳಿ, ಕೋಲಾಹಲ ಎಂಬರ್ಥದ ಶಬ್ದವನ್ನು ಜನಗಳ ಗುಂಪು ಎಂಬರ್ಥದಲ್ಲೂ ಚಾಡಿ ಎಂಬರ್ಥದ ಕೊಂಡೆಯ ಶಬ್ದವನ್ನು ಪ್ರೋತ್ಸಾಹ ಎಂಬರ್ಥದಲ್ಲಿ ಬಳಸುತ್ತಾರೆ
ಧಾತು - ಶರೀರದಲ್ಲಿರುವ ಏಳು ಬಗೆಯ (ರಸ, ರಕ್ತ ಮಾಂಸ, ಮೇದಸ್ಸು ಅಸ್ಥಿ ಮಜ್ಜೆ, ಶುಕ್ರಗಳೆಂಬ) ಸಪ್ತಧಾತುಗಳನ್ನು ಸೂಚಿಸುವ ‘ಧಾತು’ ಎಂಬ ಶಬ್ದವನ್ನು ಪೋಷಣೆಯಿಂದಾಗುವ ಬಲ ಎಂಬರ್ಥದಲ್ಲೂ ಕವಿ ಪ್ರಯೋಗಿಸಿದಂತೆ ಕಾಣುವುದು. (ಶೇಷಯ್ಯಂಗಾರ್ ಟಿಪ್ಪಣಿ)
ಮೂಲ ...{Loading}...
ಭೂರಿ ನೆರೆದುದು ನಾಡ ಗಾವಳಿ
ಭಾರ ಧೃಷ್ಟದ್ಯುಮ್ನನದು ಗಡ
ಜಾರದೇವನ ಜೋಕೆ ಮಂದಿಯ ಕಾಹು ಕಟ್ಟು ಗಡ
ಧಾರುಣಿಯ ಲಂಪಟರು ಕದನವ
ಹಾರಿ ಬಂದರು ಗಡ ಕೃತಾಂತನ
ಭೂರಿ ಭೂತದ ಧಾತುವಾಯಿತು ಲೇಸು ಲೇಸೆಂದ ॥4॥
೦೦೫ ನಾಡ ಮನ್ನೆಯ ...{Loading}...
ನಾಡ ಮನ್ನೆಯ ಗಿನ್ನೆಯರುಗಳ
ಕೂಡಿಕೊಂಡೆಮ್ಮೊಡನೆ ಕಲಹವ
ಬೇಡಿ ಮಹಿಪಾಲನೆಯ ಪಟ್ಟಕೆ ನೊಸಲನೊಡ್ಡುವರು
ನೋಡಿರೈ ನಿರುಪಮವಲಾ ಕಾ
ಡಾಡಿಗಳ ಕಲಿತನವನೆನೆ ಮಾ
ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಸಾಮಂತರು ಮಾಂಡಲಿಕರನ್ನು ಸೇರಿಸಿಕೊಂಡು ನಮ್ಮೊಂದಿಗೆ ಯುದ್ಧ ಮಾಡಿ ಎಂದು ಕೇಳಿಕೊಂಡು ಬರುತ್ತಿದ್ದಾರೆ. ನೋಡಿದಿರಾ, ಕಾಡುಜನರಾದ ಈ ಪಾಂಡವರ ಸಾಹಸ ಅಸದಳವಾಗಿದೆ ಅಲ್ಲವೇ ? ಎಂದು ದುರ್ಯೋಧನ ಹೇಳಿದಾಗ ಕಲಿಕರ್ಣನು ತನ್ನ ಮನಸ್ಸಿನಲ್ಲಿದ್ದುದನ್ನು, ತನ್ನ ಶೌರ್ಯಕ್ಕೆ ತಕ್ಕಂತೆ ಮಾತಾಡಿದನು.
ಪದಾರ್ಥ (ಕ.ಗ.ಪ)
ಮನ್ನೆಯ ಗಿನ್ನೆಯ-ಸಾಮಂತ ಗೀಮಂತ, ನೊಸಲನೊಡ್ಡು-ಹಣೆಚಾಚು (ಕಾಲಿಗೆ ಬೀಳು), ಮೈಸಿರಿ-ಶೌರ್ಯ, ಕಲಿತನ-ಶೌರ್ಯ,
ಕಾಡಾಡಿ-ಕಾಡುಜನ
ಮೂಲ ...{Loading}...
ನಾಡ ಮನ್ನೆಯ ಗಿನ್ನೆಯರುಗಳ
ಕೂಡಿಕೊಂಡೆಮ್ಮೊಡನೆ ಕಲಹವ
ಬೇಡಿ ಮಹಿಪಾಲನೆಯ ಪಟ್ಟಕೆ ನೊಸಲನೊಡ್ಡುವರು
ನೋಡಿರೈ ನಿರುಪಮವಲಾ ಕಾ
ಡಾಡಿಗಳ ಕಲಿತನವನೆನೆ ಮಾ
ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ ॥5॥
೦೦೬ ನೆರೆದ ದೊದ್ದೆಯನೊರಸಬಹುದೇ ...{Loading}...
ನೆರೆದ ದೊದ್ದೆಯನೊರಸಬಹುದೇ
ನರಿದು ಜೀಯ ವಿರೋಧಿರಾಯರ
ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ
ಕರಿಗಳಿಗೆ ಪ್ರತ್ಯೇಕವಿವೆ ಕೇ
ಸರಿಗಳೆಮ್ಮನು ಕಳುಹು ನಿಮ್ಮಡಿ
ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯಾ, ರಣರಂಗದಲ್ಲಿ ಜಮಾಯಿಸಿರುವ ಬಲಹೀನರಾದ ಅರಸರ ಗುಂಪನ್ನು, ನಾಶಮಾಡಬಹುದು. ಅದೇನು ಕಷ್ಟದ ಕೆಲಸವೇ? ಅಲ್ಲ. ಶತ್ರುರಾಜರ ಸಮೂಹವನ್ನು ನಿಭಾಯಿಸುವುದು ನಿನ್ನ ವೀರರಿಗೆ ತಾನೇ ಕಷ್ಟವೇನು ? (ಕಷ್ಟವೇನಲ್ಲ)
ಪಾಂಡವರೆಂಬ ಆನೆಗಳನ್ನು ಎದುರಿಸಲು ನಮ್ಮ ಕಡೆಯ ವೀರ ಸಿಂಹಗಳು ಪ್ರತ್ಯೇಕವಾಗಿ ಸಿದ್ಧವಿವೆ. ನಮ್ಮನ್ನು ಯುದ್ಧಕ್ಕೆ. ಕಳಿಸಿಕೊಡು, ಇದು ನಿಮ್ಮ ಹತ್ತಿರಕ್ಕೆ ಬರುವಂಥ ಯುದ್ಧ ಕಾರ್ಯವೇನಲ್ಲ ಎಂದನು ಕರ್ಣ.
ಪದಾರ್ಥ (ಕ.ಗ.ಪ)
ದೊದ್ದೆ-ಗುಂಪು, ಕರಿ-ಆನೆ, ಏಗು-ನಿಭಾಯಿಸು, ಕೇಸರಿ-ಸಿಂಹ, ಪರಿಮಿತಕೆ -ಹತ್ತಿರಕ್ಕೆ
ಮೂಲ ...{Loading}...
ನೆರೆದ ದೊದ್ದೆಯನೊರಸಬಹುದೇ
ನರಿದು ಜೀಯ ವಿರೋಧಿರಾಯರ
ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ
ಕರಿಗಳಿಗೆ ಪ್ರತ್ಯೇಕವಿವೆ ಕೇ
ಸರಿಗಳೆಮ್ಮನು ಕಳುಹು ನಿಮ್ಮಡಿ
ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ ॥6॥
೦೦೭ ಕಲಕುವೆನು ಪಾಣ್ಡವರ ...{Loading}...
ಕಲಕುವೆನು ಪಾಂಡವರ ಸೇನಾ
ಜಲಧಿಯನು ತೇರಿನಲಿ ತಲೆಗಳ
ಕಳುಹುವೆನು ಕದನದಲಿ ಕೈದೋರಿದ ಕುಠಾರಕರ
ಹೊಳಲ ಹೊರಶೂಲದಲಿ ರಿಪುಗಳ
ಸೆಳಸುವೆನು ತಾ ವೀಳೆಯವನೆಂ
ದಲಘುಭುಜಬಲ ಕರ್ಣ ನುಡಿದನು ಕೌರವೇಂದ್ರಂಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೇನೆಯೆಂಬ ಸಾಗರವನ್ನು ಅಲ್ಲೋಲಕಲ್ಲೋಲ ಮಾಡುವೆನು. ನನ್ನ ವಿರುದ್ಧ ಹೋರಾಟದಲ್ಲಿ ಪರಾಕ್ರಮತೋರಿದ ಶೂರರ ಜೀವತೆಗೆದು ಅವರ ತಲೆಗಳನ್ನು ಅವರ ತೇರಿನಲ್ಲಿಯೇ ಹಿಂದಕ್ಕೆ ಕಳಿಸುವೆನು. ಶತ್ರುಗಳಾದ ಪಾಂಡವರನ್ನು (ಎಳೆತಂದು) ಪಟ್ಟಣದ ಹೊರಗಿರುವ ಶೂಲದ ಮೇಲೆ ಏರಿಸುತ್ತೇನೆ (ಶೂಲಕ್ಕೇರಿಸುತ್ತೇನೆ). ಇದಕ್ಕೆ ನನಗೆ ಅಪ್ಪಣೆಮಾಡು ಎಂದು ಸಾಹಸಿ ಕರ್ಣನು ದುರ್ಯೋಧನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕಲಕು-ಅಲ್ಲೋಲಕಲ್ಲೋಲ ಮಾಡು, ಹೊಳಲು-ಪಟ್ಟಣ, ಜಲಧಿ-ಸಾಗರ, ಕೈದೋರು-ಸಾಹಸತೋರು, ಅಲಘು ಭುಜಬಲ-ಅಧಿಕ ತೋಳ್ಬಲವುಳ್ಳವನು, ಕುಠಾರಕ-ನಾಶ ಮಾಡುವವರು , ಕೈದೋರು-ಪರಾಕ್ರಮ ತೋರು
ಟಿಪ್ಪನೀ (ಕ.ಗ.ಪ)
ತಾ ವೀಳೆಯವನು : ರಾಜರ ಆಸ್ಥಾನದಲ್ಲಿ ವೀರರಾಗಲಿ ವಿದ್ವಾಂಸರಾಗಲಿ ಸವಾಲು ಹಾಕಿದಾಗ ಅಥವಾ ರಾಜನೇ ಸವಾಲು ಹಾಕುವಂತೆ, ವೀಳೆಯವನ್ನು ನೀಡುತ್ತಿದ್ದನು. ವೀಳೆಯ ನೀಡಿದರೆ ರಾಜನು ಸವಾಲನ್ನು ನೀಡಿದಂತೆ, ಒಪ್ಪಿದಂತೆ. ಇಲ್ಲಿ ಕರ್ಣ ಅನುಮತಿಕೊಡು ನನ್ನ ಪ್ರತಿಜ್ಞೆ ನೆರವೇರಿಸಿಕೊಳ್ಳಲು ಎಂಬರ್ಥದಲ್ಲಿ ತಾ ವೀಳೆಯವನು ಎಂದಿದ್ದಾನೆ.
ಮೂಲ ...{Loading}...
ಕಲಕುವೆನು ಪಾಂಡವರ ಸೇನಾ
ಜಲಧಿಯನು ತೇರಿನಲಿ ತಲೆಗಳ
ಕಳುಹುವೆನು ಕದನದಲಿ ಕೈದೋರಿದ ಕುಠಾರಕರ
ಹೊಳಲ ಹೊರಶೂಲದಲಿ ರಿಪುಗಳ
ಸೆಳಸುವೆನು ತಾ ವೀಳೆಯವನೆಂ
ದಲಘುಭುಜಬಲ ಕರ್ಣ ನುಡಿದನು ಕೌರವೇಂದ್ರಂಗೆ ॥7॥
೦೦೮ ಕುಲಿಶ ಪರಿಯನ್ತೇಕೆ ...{Loading}...
ಕುಲಿಶ ಪರಿಯಂತೇಕೆ ನೇಗಿಲ
ಬಳಿಯ ಹುಲುವೆಟ್ಟಕೆ ವಿರೋಧಿಗ
ಳಳಿಬಲಕೆ ಕಲಿಕರ್ಣ ನೀ ಪರಿಯಂತ ಸಂಗರವೆ
ಹೊಳಲ ಪರಿವಾರಕ್ಕೆ ಸಾರಿಸು
ಕೆಲಬಲದ ರಾಯರಿಗೆ ದೂತರ
ಕಳುಹಿ ನೆರಹಿಸು ಕಾದಿಸೆಂದನು ಕೌರವರ ರಾಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯಾ ಮಿತ್ರ, ವೀರಕರ್ಣನೇ ಕೇಳು : ನೇಗಿಲಿನ ಹತ್ತಿರವಿರುವ ಮಣ್ಣಿನ ಹೆಂಟೆಯನ್ನು ಪುಡಿಪುಡಿ ಮಾಡಲು ವಜ್ರಾಯುಧ ಬಳಸುವವರೆಗೂ ಏಕೆ ಹೋಗಬೇಕು ? ಅಲ್ಪಬಲದ ಶತ್ರುಗಳನ್ನು ನಾಶಮಾಡಲು ನೀನು ಯುದ್ಧ ಮಾಡಬೇಕೇ ? ಬೇಕಿಲ್ಲ. ನಗರದಲ್ಲಿರುವ ಕಾವಲು ಸೇನೆಗೆ ಯುದ್ಧದ ವಿಷಯವನ್ನು ಸಾರಿ ಹೇಳು, ಇಲ್ಲವೇ ನಮ್ಮ ದೇಶದ ಅಕ್ಕಪಕ್ಕ ದೇಶದ ಸಾಮಂತ ರಾಜರಿಗೆ ದೂತರ ಕೈಲಿ ಹೇಳಿ ಕಳಿಸು. ಅವರನ್ನೆಲ್ಲ ಸೇರಿಸು. ಪಾಂಡವರೊಡನೆ ಯುದ್ಧ ಮಾಡಿಸು ಎಂದು ಕೌರವ ಕರ್ಣನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕುಲಿಶ-ವಜ್ರಾಯುಧ, ಕೆಲಬಲದ-ಅಕ್ಕಪಕ್ಕದಲ್ಲಿರುವ, ಅಳಿಬಲ-ಅಲ್ಪಸೇನೆ, ಹೊಳಲ ಪರಿವಾರ-ಕಾವಲು ಸೇನೆ
ಮೂಲ ...{Loading}...
ಕುಲಿಶ ಪರಿಯಂತೇಕೆ ನೇಗಿಲ
ಬಳಿಯ ಹುಲುವೆಟ್ಟಕೆ ವಿರೋಧಿಗ
ಳಳಿಬಲಕೆ ಕಲಿಕರ್ಣ ನೀ ಪರಿಯಂತ ಸಂಗರವೆ
ಹೊಳಲ ಪರಿವಾರಕ್ಕೆ ಸಾರಿಸು
ಕೆಲಬಲದ ರಾಯರಿಗೆ ದೂತರ
ಕಳುಹಿ ನೆರಹಿಸು ಕಾದಿಸೆಂದನು ಕೌರವರ ರಾಯ ॥8॥
೦೦೯ ಮೂಗಿನಲಿ ಬೆರಳಿಟ್ಟು ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಚತುರಂಗಬಲವನು
ಬೇಗದಲಿ ಕೊಳುಗುಳಕೆ ಕಳುಹಿಸು ಗೆಲಿಸು ಕಾಳೆಗವ
ತಾಗಿ ಬಾಗದ ಮರುಳುತನದು
ದ್ಯೋಗವಿದಕೇನೆಂಬೆನಕಟಕ
ಟೀಗಲದ್ದುದು ಕೌರವಾನ್ವಯವೆಂದನಾ ದ್ರೋಣ |9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಮಾತನ್ನು ಕೇಳಿದ ದ್ರೋಣನು ಮೂಗಿನ ಮೇಲೆ ಬೆರಳಿಟ್ಟುಕೊಂಡು, ತಲೆದೂಗಿದನು. ಆಗ ಕಾತರದ ದನಿಯಲ್ಲಿ ವ್ಯಂಗ್ಯವಾಗಿ ದುರ್ಯೋಧನನಿಗೆ ಹೇಳಿದನು. ಕರ್ಣ, ಆನೆ, ಕುದುರೆ, ರಥ ಕಾಲಾಳು ಸಹಿತವಾದ ಚತುರಂಗ ಬಲವನ್ನು ಆದಷ್ಟು ಬೇಗನೆ ಯುದ್ಧಕ್ಕೆ ಕಳಿಸು, ಜಯವನ್ನು ತಾ, ಸಾಧ್ಯವಾಗದ ಮತ್ತು ಹುಚ್ಚಾಟದ ಈ ಕೆಲಸವನ್ನು ಏನೆಂದು ಹೇಳಲಿ. ಅಯ್ಯೋ ! ಕೌರವನ ವಂಶ ನಾಶವಾಗುವಂತಾಯಿತು ಎಂದು ದ್ರೋಣ ದುಃಖಿಸಿದನು.
ಪದಾರ್ಥ (ಕ.ಗ.ಪ)
ಚತುರಂಗಬಲ-ಆನೆ, ಕುದುರೆ ರಥ ಪದಾತಿಯ ಸೇನೆ,
ಕೊಳಗುಳ-ರಣರಂಗ, ಮೂಗಿನಲಿ ಬೆರಳಿಡು-ಆಶ್ಚರ್ಯಪಡು, ಮುಕುಟ ತೂಗು - ಕಿರೀಟ ಓಲಾಡಿಸು (ತಲೆದೂಗು), ತಾಗಿಬಾಗದ-ಅಸಾಧ್ಯವಾದ, ಮರುಳುತನದ-ಹುಚ್ಚಾಟದ, ಅದ್ದುದು-ಮುಳುಗಿತು (ಹಾಳಾಯಿತು)
ಮೂಲ ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಚತುರಂಗಬಲವನು
ಬೇಗದಲಿ ಕೊಳುಗುಳಕೆ ಕಳುಹಿಸು ಗೆಲಿಸು ಕಾಳೆಗವ
ತಾಗಿ ಬಾಗದ ಮರುಳುತನದು
ದ್ಯೋಗವಿದಕೇನೆಂಬೆನಕಟಕ
ಟೀಗಲದ್ದುದು ಕೌರವಾನ್ವಯವೆಂದನಾ ದ್ರೋಣ |9॥
೦೧೦ ಹಿನ್ದೆ ಗಳಹುವನಿವನು ...{Loading}...
ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನಾ, ಈ ನಿನ್ನ ಕರ್ಣ, ಪಾಂಡವರು ಎದುರಿಗಿಲ್ಲದಾಗ ಪರೋಕ್ಷದಲ್ಲಿ ಅವರನ್ನು ಕುರಿತು ಬಾಯಿಗೆ ಬಂದಂತೆ ಬೊಗಳುತ್ತಿದ್ದಾನೆ. ಈಗ ಇವನು (ಮಾತಿನಲ್ಲಿ) ಪಾಂಡವರನ್ನು ಕೊಂದಿದ್ದಾನೆ. ಯುದ್ಧ ಮಾಡಲು ಇನ್ನಾರಿದ್ದಾರೆ ಶತ್ರುಗಳು ? ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಸಂಭವಿಸಿದ ಯುದ್ಧದಲ್ಲಿ ಚಿತ್ರಸೇನನೆಂಬ ಗಂಧರ್ವನು ಬಂಧಿಸಿದಾಗ ಆ ಸಮಯದಲ್ಲಿ ನಿನ್ನನ್ನು ಬಿಡಿಸಿದವನು ಅರ್ಜುನನೋ ಈ ಕರ್ಣನೋ ? ಎಂದು ದ್ರೋಣ ಕೇಳಿದನು.
ಪದಾರ್ಥ (ಕ.ಗ.ಪ)
ಗಳಹುವನು-ಹರಟುತ್ತಾನೆ, ಹಮ್ಮಿದ-ಸಂಭವಿಸಿದ, ಖೇಚರ-ಚಿತ್ರ ಸೇನ ಗಂಧರ್ವ
ಹಮ್ಮಿದ-ಹಮ್ಮಿನ
ಅಡಸಿಕಟ್ಟಿದ-ಅಡ್ಡಗಟ್ಟಿದ
ಟಿಪ್ಪನೀ (ಕ.ಗ.ಪ)
ಚಿತ್ರಸೇನ -ದುರಹಂಕಾರದಿಂದ ಮೆರೆಯುತ್ತಿದ್ದ ಕೌರವರಿಗೆ ಸರಿಯಾಗಿ ಅವಮಾನ ಮಾಡಿ ಬುದ್ದಿಕಲಿಸಿದ ಒಬ್ಬ ಗಂಧರ್ವನಾಯಕ ಚಿತ್ರಸೇನ. ನಿಷ್ಕಾರಣವಾಗಿ ಯಾರಿಗಾದರೂ ಮುಖಭಂಗ ಮಾಡಲು ಹೊರಟರೆ ಅಂಥವರೇ ಅವಮಾನದ ಸುಳಿಗೆ ಸಿಕ್ಕಿ ನರಳಬೇಕಾಗುತ್ತದೆ ಎಂಬುದಕ್ಕೆ ಈತನ ಮತ್ತು ಕೌರವನ ಕಥೆ ಒಂದು ಒಳ್ಳೆಯ ನಿದರ್ಶನ.
ಪಾಂಡವರು ಕಾಡಿನಲ್ಲಿ ಪಾಡುಪಡುತ್ತಿರುವ ಸಂಗತಿ ತಿಳಿದು ಕೌರವನು ಒಮ್ಮೆ ಅವರಿದ್ದಲ್ಲಿಗೆ ಹೊರಡಲು ತೀರ್ಮಾನಿಸಿದ. ಘೋಷಯಾತ್ರೆಯ ನೆವವನ್ನು ಒಡ್ಡಿದ. ಘೋಷ ಎಂದರೆ ಗೋವುಗಳು ಇರುವ ಹಳ್ಳಿ ಎಂದರ್ಥ ಗಡಿಯ ಹಳ್ಳಿಗಳಲ್ಲಿ ದನಕರುಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆಂಬುದನ್ನು ಪರೀಕ್ಷಿಸುವ ನೆವದಲ್ಲಿ ಹೋಗಲು ನಿರ್ದರಿಸಿದ. ಪಾಂಡವರ ಸ್ಥಿತಿಗತಿಗಳನ್ನು ತಿಳಿಯುವುದು, ಸಾಧ್ಯವಾದರೆ ತನ್ನ ವೈಭವವನ್ನು ಅವರ ಮುಂದೆ ಪ್ರದರ್ಶಿಸುವುದು ಅವನ ಉದ್ದೇಶವಾಗಿತ್ತು. ಭೀಷ್ಮ, ದ್ರೋಣ, ಕರ್ಣ, ಕೃಪ ಮೊದಲಾದ ವೀರರನ್ನೂ ದೊಡ್ಡ ಸೈನ್ಯವನ್ನೂ ಅಂತಃಪುರದವರನ್ನೂ ಅನೇಕ ಸುಂದರಿಯರನ್ನೂ ದಾಸದಾಸಿಯರನ್ನೂ ಕರೆದುಕೊಂಡು ಪಾಂಡವರಿದ್ದ ದ್ವೈತವನದ ಬಳಿಗೆ ಬಂದ. ಅಲ್ಲಿ ಗಂಧರ್ವನಿಗೆ ಸೇರಿದ ಒಂದು ಸೊಗಸಾದ ತೋಟವಿತ್ತು. ಅದು ಗಂಧರ್ವಪತಿ ಚಿತ್ರಸೇನನಿಗೆ ಸೇರಿದ್ದ ತೋಟ. ಕೌರವ ಪತ್ನಿಯರು, ಸುಂದರ ಸ್ತ್ರೀಯರು ಸ್ವಚ್ಛಂದವಾಗಿ ಆ ತೋಟದಲ್ಲಿ ವಿಹರಿಸಿ ಅಲ್ಲಿನ ಪುಷ್ಪ ಫಲಗಳನ್ನು ಸೂರೆಗೊಂಡರು. ಚಿತ್ರಸೇನನ ಸೇನೆಯನ್ನು ಕರ್ಣಾದಿಗಳು ಓಡಿಸಿದರು. ಸೇವಕರು ಈ ಹಾವಳಿಯ ಬಗೆಗೆ ವಿವರಿಸಿದ್ದರಿಂದ ಕೇಳಿ ಕ್ರುದ್ಧನಾದ ಚಿತ್ರಸೇನನು ತಾನೇ ಅಲ್ಲಿಗೆ ಹೋದ. ಬಂದ ಚಿತ್ರಸೇನನಿಗೆ ಸ್ವಲ್ಪವೂ ಗೌರವ ತೋರದೆ ಕೌರವರೆಲ್ಲ ನಿರ್ಲಕ್ಷ್ಯದಿಂದಿದ್ದುದರಿಂದ ಚಿತ್ರಸೇನನು ಅವರ ಮೇಲೆ ಯುದ್ಧ ಮಾಡಬೇಕಾಯಿತು. ಬಡಾಯಿಗಾರನಾದ ಕರ್ಣನು ಹೋರಾಡಿ ಸೋತು ಪಲಾಯನ ಮಾಡಿದ. ಉಳಿದಂತೆ ಕೌರವರ ಕಡೆಯ ಮಹಾವೀರರೆಲ್ಲ ಯುದ್ಧದಲ್ಲಿ ಸೋತರು. ಚಿತ್ರಸೇನನು ಕೌರವನನ್ನೂ ಸೋಲಿಸಿ ಹಿಂಗಟ್ಟು ಮುಂಗಟ್ಟುಕಟ್ಟಿ ತನ್ನ ರಥಕ್ಕೆ ಹಾಕಿಕೊಂಡುಹೊರಟ.
ಪಕ್ಕದಲ್ಲೇ ಇದ್ದ ಭೀಮಾರ್ಜುನರು ಈ ಸ್ಥಿತಿಯನ್ನೆಲ್ಲ ಮೂಕರಾಗಿ ನೋಡುತ್ತಿದ್ದರು. ಭೀಮನಿಗಂತೂ ಒಳಗೊಳಗೇ ಆನಂದವೂ ಆಗಿತ್ರು. ಆದರೆ ಕೆಲವರು ಸೈನಿಕರು ಅಳುತ್ತ ಬಂದು ಧರ್ಮರಾಯನ ಕಾಲಿಗೆ ಬಿದ್ದು ಕೌರವರನ್ನು ಕಾಪಾಡುವಂತೆ ಕೇಳಿದಾಗ ಧಮ್ರ್ರರಾಯನ ಕರುಳು ಕರಗಿತು. ‘‘ದುರ್ಯೋಧನನ ತಮ್ಮಂದಿರು ನೂರು ಜನ. ಅವನ ವಿರೋಧಿ ತಾವು ಐದು ಜನ. ಆದರೆ ಹೊರಗಿನವರು ಯಾರಾದರೂ ಯುದ್ಧಕ್ಕೆ ಬಂದರೆ ನಾವೆಲ್ಲ ಸೇರಿ 105 ಜನ’’ ಇದು ಧರ್ಮರಾಯನ ತರ್ಕ. ಕೊನೆಗೆ ಅರ್ಜುನಾದಿಗಳು ಅಣ್ಣನ ಆಜ್ಞೆಯಂತೆ ಚಿತ್ರಸೇನನನ್ನು ಅಟ್ಟಿಸಿಕೊಂಡು ಹೋಗಿ ಯುದ್ದ ಮಾಡಿದರು ಚಿತ್ರಸೇನನಿಗೆ ಪಾಂಡವರ ಮೇಲೆ ತುಂಬ ವಿಶ್ವಾಸವಿತ್ತಾದರೂ ಅವರು ಹೀಗೆ ತನ್ನ ವಿರುದ್ಧವೇ ಏರಿ ಬರುತ್ತಾರೆ ಎಂದು ಅವನು ಊಹಿಸಿರಲಿಲ್ಲ. ಯುದ್ಧವನ್ನು ಮುಂದುವರಿಸಿದರೆ ಪ್ರಸನ್ನಚಿತ್ರದಿಂದಲೇ ದುರ್ಯೋಧನನನ್ನು ಅರ್ಜುನನಿಗೆ ಒಪ್ಪಿಸಿಕೊಟ್ಟು ಹೊರಟುಹೋದ.
ಹೀಗೆ ಅವಮಾನಿಸಲೆಂದು ಬಂದ ಕೌರವ ತಾನೆ ಎಂಥ ದಯಾಭಿಕ್ಷೆಯ ಅವಮಾನಕ್ಕೆ ಒಳಗಾಗಬೇಕಾಯಿತೆಂದರೆ ಆ ಅವಮಾನವನ್ನು ತಾಳಲಾರದೆ ದುರ್ಯೋಧನನು ಗಂಗಾತೀರದಲ್ಲಿ ಪ್ರಾಯೋಪವೇಶ ಮಾಡಲು ನಿರ್ಧರಿಸಿದನೆಂದು ಅರಣ್ಯಪರ್ವ ಹೇಳುತ್ತದೆ. ಕರ್ಣಾದಿಗಳಿಗೂ ಮುಖಭಂಗವಾದುದನ್ನು ಈ ಪ್ರಕರಣವು ಸ್ಪಷ್ಟಪಡಿಸುತ್ತದೆ. ಧರ್ಮರಾಯನ ಭ್ರಾತೃವಾತ್ಸಲ್ಯ ಹಾಗೂ ಅರ್ಜುನನ ಭ್ರಾತೃವಿಧೇಯಗುಣ ಈ ಪ್ರಕರಣದಲ್ಲಿ ಎದ್ದು ಕಾಣುತ್ತವೆ.
ಪೂರ್ವಕಥೆ : ಚಿತ್ರಸೇನ ಒಬ್ಬ ಗಂಧರ್ವ ನಾಯಕ. ಅರಣ್ಯಪರ್ವದ ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಸಂಧಿಗಳಲ್ಲಿ ಇವನ ವಿವರಗಳು ಬಂದಿವೆ.
ಮೂಲ ...{Loading}...
ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ ॥10॥
೦೧೧ ಸಾಹಸಿಗಳಲ್ಲಿಲ್ಲ ಹರಿ ...{Loading}...
ಸಾಹಸಿಗಳಲ್ಲಿಲ್ಲ ಹರಿ ತುರು
ಗಾಹಿ ಪಾಂಡವರೈವರಡವಿಯ
ಮೇಹುಗಾರರು ಬಂದ ಭೂಭುಜರೆಲ್ಲ ತಾ ನೆರವಿ
ಆಹವಕೆ ನಿನ್ನೂರ ತಳವರ
ಗಾಹಿನವರನು ಕಳುಹುವುದು ಸಂ
ದೇಹವೇ ನೀನಿಲ್ಲಿ ಸುಖದಲಿ ರಾಜ್ಯ ಮಾಡೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೇನೆಯಲ್ಲಿ ಶೂರರು ಯಾರೂ ಇಲ್ಲ. ಅವರಲ್ಲಿರುವ ಶ್ರೀ ಹರಿ ದನಕಾಯುವ ಗೊಲ್ಲ, ಪಂಚಪಾಂಡವರು ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸು ತಿಂದು ಬದುಕುವ ಅಡವಿಜನರು. ಪಾಂಡವರ ಸಹಾಯಕ್ಕೆ ಬಂದ ರಾಜರಾದರೋ ಸಾಮಾನ್ಯ ಜನರು. ಆದ್ದರಿಂದ ಅವರೊಡನೆ ಯುದ್ಧಕ್ಕೆ ನಿಮ್ಮೂರಿನ ಕಾವಲು ತಿರುಗುವ ತಳವಾರರನ್ನು ಕಳಿಸು ಸಾಕು. ಈ ವಿಷಯದಲ್ಲಿ ಅನುಮಾನ ಬೇಡ. ನೀನಿಲ್ಲಿ ನೆಮ್ಮದಿಯಿಂದ ರಾಜ್ಯವಾಳಿಕೊಂಡಿರು ಎಂದು ದ್ರೋಣ ಕೌರವನಿಗೆ ವ್ಯಂಗ್ಯವಾಗಿ ಹೇಳಿದನು.
ಪದಾರ್ಥ (ಕ.ಗ.ಪ)
ಮೇಹುಗಾರರು-ಅಡವಿಜನರು, ನೆರವಿ-ಜನಸಾಮಾನ್ಯರು, ತುರುಗಾಹಿ-ದನಕಾಯುವವರು, ಆಹವ-ಯುದ್ಧ, ತಳವರಗಾಹಿ-ಊರಕಾವಲುಗಾರ
ಮೂಲ ...{Loading}...
ಸಾಹಸಿಗಳಲ್ಲಿಲ್ಲ ಹರಿ ತುರು
ಗಾಹಿ ಪಾಂಡವರೈವರಡವಿಯ
ಮೇಹುಗಾರರು ಬಂದ ಭೂಭುಜರೆಲ್ಲ ತಾ ನೆರವಿ
ಆಹವಕೆ ನಿನ್ನೂರ ತಳವರ
ಗಾಹಿನವರನು ಕಳುಹುವುದು ಸಂ
ದೇಹವೇ ನೀನಿಲ್ಲಿ ಸುಖದಲಿ ರಾಜ್ಯ ಮಾಡೆಂದ ॥11॥
೦೧೨ ಎಲೆ ಸುಯೋಧನ ...{Loading}...
ಎಲೆ ಸುಯೋಧನ ಕಾಳುಗೆಡೆದರೆ
ಫಲವನಿದರಲಿ ಕಾಣೆನಹಿತರ
ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು
ನಳಿನನಾಭನ ಮಂತ್ರಶಕ್ತಿಯ
ಬಲುಹು ನೀವ್ ನಿರ್ದೈವರವರ
ಗ್ಗಳ ಸದೈವರು ಕೆಟ್ಟಿರಿನ್ನೇನೆಂದನಾ ದ್ರೋಣ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ದುರ್ಯೋಧನನೆ, ಈ ವಿಚಾರದಲ್ಲಿ ಪಾಂಡವರು ದುರ್ಬಲರೆಂದು ಹರಟಿದರೆ ಪ್ರಯೋಜನವೇನನ್ನು ನಾನು ಕಾಣೆನು. ಶತ್ರುಗಳಾದ ಪಾಂಡವರ ಶಕ್ತಿಯ ಹಿರಿಮೆ ಬಲವತ್ತರವಾಗಿದೆ. ಭೀಮಾರ್ಜುನರು ಬಲಿಷ್ಠರಾಗಿದ್ದಾರೆ. ಕೃಷ್ಣನ ಮಂತ್ರಾಲೋಚನಾಶಕ್ತಿ ಸರ್ವಸಮರ್ಥವಾಗಿದೆ. ನೀವು ದೈವಹೀನರು, ಅವರು ದೈವಾನುಗ್ರಹಕ್ಕೆ ಪಾತ್ರರು. ನಿಮಗಿನ್ನು ಉಳಿಗಾಲವಿಲ್ಲ ನೀವು ನಾಶವಾದಂತೆಯೇ ಸರಿ ಎಂದನು ಆ ದ್ರೋಣ.
ಪದಾರ್ಥ (ಕ.ಗ.ಪ)
ಕಾಳುಗೆಡದರೆ-ವ್ಯರ್ಥನುಡಿಗಳನ್ನಾಡಿದರೆ, ಮಂತ್ರಶಕ್ತಿ-ಮಂತ್ರಾಲೋಚನಾಶಕ್ತಿ, ಭಾರಣೆ ಬಿಗುಹು-ಪರಾಕ್ರಮದ ಹಿರಿಮೆ,
ಬಲುಹು-ಬಲಿಷ್ಠವಾದುದು, ಬಲ್ಲಿದರು-ಬಲಿಷ್ಠರು, ಸದೈವರು-ದೈವಾನುಗ್ರಹ ಉಳ್ಳವರು.
ಮೂಲ ...{Loading}...
ಎಲೆ ಸುಯೋಧನ ಕಾಳುಗೆಡೆದರೆ
ಫಲವನಿದರಲಿ ಕಾಣೆನಹಿತರ
ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು
ನಳಿನನಾಭನ ಮಂತ್ರಶಕ್ತಿಯ
ಬಲುಹು ನೀವ್ ನಿರ್ದೈವರವರ
ಗ್ಗಳ ಸದೈವರು ಕೆಟ್ಟಿರಿನ್ನೇನೆಂದನಾ ದ್ರೋಣ ॥12॥
೦೧೩ ಅಸುರರಿಪುವಿನ ಮಾತ ...{Loading}...
ಅಸುರರಿಪುವಿನ ಮಾತ ನೀ ಮ
ನ್ನಿಸದೆ ಕೌರವಕುಲವನದ್ದಿದೆ
ನುಸಿಗಳಿವದಿರು ಮುನಿದು ಪಾರ್ಥನನೇನ ಮಾಡುವರು
ಅಸುರರಲಿ ಸುರರಲಿ ಭುಜಂಗ
ಪ್ರಸರದಲಿ ಭೀಮಾರ್ಜುನರ ಸೈ
ರಿಸುವರುಂಟೇ ಕೆಟ್ಟಿರಿನ್ನೇನೆಂದನಾ ದ್ರೋಣ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರ ಹಗೆಯಾದ ಶ್ರೀಕೃಷ್ಣನ ಮಾತನ್ನು ಕೇಳದೆ ನೀನು ಕೌರವ ಕುಲವನ್ನೇ ಮುಳುಗಿಸಿಬಿಟ್ಟೆ, ನುಸಿಹುಳುವಿನಂತೆ ಅಲ್ಪರಾದ ಕರ್ಣಾದಿಗಳು ಕೋಪಗೊಂಡು ಪಾರ್ಥನನ್ನು ಏನು ಮಾಡಿಯಾರು ? ರಾಕ್ಷಸರಾಗಲಿ ದೇವತೆಗಳಾಗಲಿ ನಾಗಲೋಕದವರಾಗಲಿ ಭೀಮಾರ್ಜುನರ ಪರಾಕ್ರಮವನ್ನು ಸಹಿಸಿದವರುಂಟೇ ? ಹೀಗಿರುವಲ್ಲಿ ಇನ್ನೇನು ನಿಮ್ಮ ಸರ್ವನಾಶ ಸನ್ನಿಹಿತವಾದಂತೆಯೇ ಸರಿ ಎಂದು ದ್ರೋಣ ನುಡಿದನು.
ಪದಾರ್ಥ (ಕ.ಗ.ಪ)
ಅಸುರರಿಪು-ಶ್ರೀಕೃಷ್ಣ, ನುಸಿಗಳು-ಕ್ಷುದ್ರರು, ಅಲ್ಪರು, ಭುಜಂಗ ಪ್ರಸರದಲಿ-ನಾಗಲೋಕದ ಜನರಲ್ಲಿ
ಮೂಲ ...{Loading}...
ಅಸುರರಿಪುವಿನ ಮಾತ ನೀ ಮ
ನ್ನಿಸದೆ ಕೌರವಕುಲವನದ್ದಿದೆ
ನುಸಿಗಳಿವದಿರು ಮುನಿದು ಪಾರ್ಥನನೇನ ಮಾಡುವರು
ಅಸುರರಲಿ ಸುರರಲಿ ಭುಜಂಗ
ಪ್ರಸರದಲಿ ಭೀಮಾರ್ಜುನರ ಸೈ
ರಿಸುವರುಂಟೇ ಕೆಟ್ಟಿರಿನ್ನೇನೆಂದನಾ ದ್ರೋಣ ॥13॥
೦೧೪ ಅವರಿಗಸುರಾನ್ತಕ ಸಹಾಯನು ...{Loading}...
ಅವರಿಗಸುರಾಂತಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವುದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವರ ರಾಯ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪಾಂಡವರಿಗೆ ಶ್ರೀಕೃಷ್ಣನು ಬೆಂಬಲಿಗನು. ನಿಮಗೆ ಭೀಷ್ಮನು ಸಹಾಯಕನು, ಯುದ್ಧವನ್ನು ಭೀಷ್ಮನ ಮಾರ್ಗದರ್ಶನದಲ್ಲಿ ಮಾಡುವುದು ಉಚಿತ ರೀತಿ ಆಗಿದೆ. ‘ರಾಜನೆ ಕೇಳು ಅವರಿವರ ಮಾತನ್ನು ಕೇಳಿದರೆ ಪ್ರಯೋಜನ ಆಗದು’ ಎಂದಾಗ ಕೌರವನು ದ್ರೋಣನ ಮಾತಿಗೆ ತಲೆಬಾಗಿದನು.
ಪದಾರ್ಥ (ಕ.ಗ.ಪ)
ಅಸುರಾಂತಕ-ಕೃಷ್ಣ, ಗಂಗಾಸುತ-ಭೀಷ್ಮ, ನೇಮದಲಿ ನೆಗಳು-ಆಜ್ಞಾನುಸಾರ ವರ್ತಿಸು, ಅವನಿಪತಿ-ದುರ್ಯೋಧನ, ಕಲಶೋದ್ಭವ-ದ್ರೋಣ,
ಟಿಪ್ಪನೀ (ಕ.ಗ.ಪ)
ನಡುಗನ್ನಡದಲ್ಲಿ ಪದಗಳಲ್ಲಿರುವ ಪವರ್ಗಕ್ಕೆ (ಪಪಬಭಮ) ವಕಾರವು ಬರುತ್ತದೆ. ನಿವಗೆ-ನಿಮಗೆ, ಬರ್ಪ-ವರ್ಪ, ತಮರೂರು-ತವರೂರು
ಮೂಲ ...{Loading}...
ಅವರಿಗಸುರಾಂತಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವುದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವರ ರಾಯ ॥14॥
೦೧೫ ಮತವಹುದು ತಪ್ಪಲ್ಲ ...{Loading}...
ಮತವಹುದು ತಪ್ಪಲ್ಲ ಗಂಗಾ
ಸುತನ ತಿಳುಹುವ ವೀರಪಟ್ಟವ
ನತುಳ ಬಲಭೀಷ್ಮಂಗೆ ಕಟ್ಟುವೆನೆನುತ ಕುರುರಾಯ
ಮತದ ನಿಶ್ಚಯದಿಂದ ಗುರು ಗುರು
ಸುತನ ಕಳುಹಿದನಿತ್ತಲಬುಜ
ಪ್ರತತಿಯುತ್ಸಹವಡಗೆ ಪಡುವಣ ಕಡಲೊಳಿನನಿಳಿದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಚಾರ್ಯರೆ, ನಿಮ್ಮ ಅಭಿಪ್ರಾಯ ಸಮ್ಮತವಾಗಿದೆ. ತಪ್ಪಲ್ಲ, ಭೀಷ್ಮನನ್ನು ಒಪ್ಪಿಸುತ್ತೇನೆ. ಅಸಮಾನ ಸಾಹಸಿಗಳಾದ ಅವರಿಗೆ ಸೇನಾಪತಿ ಪಟ್ಟವನ್ನು ಕಟ್ಟುತ್ತೇನೆ ಎಂದು ಕೌರವನು ದೃಢನಿರ್ಧಾರವನ್ನು ತಿಳಿಸಿ ದ್ರೋಣನನ್ನೂ ದ್ರೋಣಪುತ್ರ ಅಶ್ವತ್ಥಾಮನನ್ನೂ ಅವರ ಮನೆಗೆ ಕಳಿಸಿಕೊಟ್ಟನು. ಅಷ್ಟರಲ್ಲೇ ಇತ್ತ ಕಡೆ ಸೂರ್ಯನು ಪಶ್ಚಿಮ ಸಮುದ್ರದಲ್ಲಿ ಮುಳುಗಿದನು, ಕಮಲಗಳ ಸಮೂಹವು ಬಾಡಿ ಮುದುರಿದವು (ರಾತ್ರಿ ಆಯಿತು).
ಪದಾರ್ಥ (ಕ.ಗ.ಪ)
ಗಂಗಾಸುತ-ಭೀಷ್ಮ, ಗುರು-ದ್ರೋಣ, ಕುರುರಾಯ-ದುರ್ಯೋಧನ, ಗುರುಸುತ-ಅಶ್ವತ್ಥಾಮ, ಇನ-ಸೂರ್ಯ
ಮೂಲ ...{Loading}...
ಮತವಹುದು ತಪ್ಪಲ್ಲ ಗಂಗಾ
ಸುತನ ತಿಳುಹುವ ವೀರಪಟ್ಟವ
ನತುಳ ಬಲಭೀಷ್ಮಂಗೆ ಕಟ್ಟುವೆನೆನುತ ಕುರುರಾಯ
ಮತದ ನಿಶ್ಚಯದಿಂದ ಗುರು ಗುರು
ಸುತನ ಕಳುಹಿದನಿತ್ತಲಬುಜ
ಪ್ರತತಿಯುತ್ಸಹವಡಗೆ ಪಡುವಣ ಕಡಲೊಳಿನನಿಳಿದ ॥15॥
೦೧೬ ವಿನುತ ಸನ್ಧ್ಯಾದೇವಿಗಭಿವಂ ...{Loading}...
ವಿನುತ ಸಂಧ್ಯಾದೇವಿಗಭಿವಂ
ದನ ಜಪಾದಿ ಸಮಸ್ತ ದೇವಾ
ರ್ಚನೆಯ ಮಾಡಿಯೆ ರವಿತನೂಜನ ಕರಸಿ ಪಂತಿಯಲಿ
ಜನಪನಾರೋಗಿಸಿದನಾಪ್ತಾ
ವನಿಪ ಸಚಿವರು ಸಹಿತ ಭೀಷ್ಮನ
ಮನೆಗೆ ಬಂದನು ಕೌರವೇಶ್ವರನಂದಿನಿರುಳಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಸಂಧ್ಯಾವಂದನೆ ಜಪ ಮೊದಲಾದ ನಿತ್ಯಕರ್ಮಗಳಾದ ದೇವತಾರ್ಚನೆಯನ್ನು ಮುಗಿಸಿದ ಮೇಲೆ, ಕರ್ಣನನ್ನು ಕರೆಸಿಕೊಂಡು ತನ್ನ ಜೊತೆಯಲ್ಲಿ ಕೂರಿಸಿಕೊಂಡು ಭೋಜನ ಮಾಡಿದನು. ಅನಂತರ ಆ ರಾತ್ರಿ ತನ್ನ ಆಪ್ತ ರಾಜರೊಡನೆ ಹಾಗೂ ಮಂತ್ರಿಗಳೊಡನೆ ಭೀಷ್ಮನ ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಆರೋಗಣೆ-ಭೋಜನ, ಪಂತಿ-ಪಂಕ್ತಿ
ಮೂಲ ...{Loading}...
ವಿನುತ ಸಂಧ್ಯಾದೇವಿಗಭಿವಂ
ದನ ಜಪಾದಿ ಸಮಸ್ತ ದೇವಾ
ರ್ಚನೆಯ ಮಾಡಿಯೆ ರವಿತನೂಜನ ಕರಸಿ ಪಂತಿಯಲಿ
ಜನಪನಾರೋಗಿಸಿದನಾಪ್ತಾ
ವನಿಪ ಸಚಿವರು ಸಹಿತ ಭೀಷ್ಮನ
ಮನೆಗೆ ಬಂದನು ಕೌರವೇಶ್ವರನಂದಿನಿರುಳಿನಲಿ ॥16॥
೦೧೭ ಮುನ್ದೆ ಹರಿದರು ...{Loading}...
ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದುಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತವಚನದಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ತನ್ನ ಪರಿವಾರದೊಡನೆ ಭೀಷ್ಮನತ್ತ ಹೊರಟಾಗ ಕೈಯಲ್ಲಿ ಕೋಲುಗಳನ್ನು ಹಿಡಿದ ಪ್ರತೀಹಾರಿಗಳ ವೃಂದದವರು ಮುಂದಕ್ಕೆ ಸಾಗಿ ಭೀಷ್ಮನಿಗೆ ಕೌರವನು ಬರುತ್ತಿರುವ ಸುದ್ದಿಯನ್ನು ತಿಳಿಸಿದರು. ಆಗ ಭೀಷ್ಮನು ಕೌರವನನ್ನು ಸ್ವಾಗತಿಸಲು ಬಂದನು, ಕಳೆಗುಂದಿದ ಮುಖದ ದುರ್ಯೋಧನನನನ್ನು ಪಲ್ಲಕ್ಕಿಯಿಂದ ಇಳಿಸಿ ಅಪ್ಪಿಕೊಂಡು ಸಂತೋಷದಿಂದ ಗೌರವಿಸಿ, ತಕ್ಕ ಮಾತುಗಳಿಂದ ಉಪಚರಿಸಿ ತನ್ನ ಅರಮನೆಗೆ ಕರೆತಂದನು.
ಪದಾರ್ಥ (ಕ.ಗ.ಪ)
ಹರಿದರು-ಸಾಗಿದರು, ಕಂದುಮೋರೆ-ಕಳೆಗುಂದಿದಮುಖ, ಕಂಬಿ-ಕೋಲು, ಪಡೆವಳರು-ದ್ವಾರಪಾಲಕರು, ಅಂದಣ-ಪಲ್ಲಕ್ಕಿ
ಮೂಲ ...{Loading}...
ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದುಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತವಚನದಲಿ ॥17॥
೦೧೮ ಏನಿರುಳು ನೀ ...{Loading}...
ಏನಿರುಳು ನೀ ಬಂದ ಹದನೆಲೆ
ಮಾನನಿಧಿ ಬೇಕಾದರೆಮ್ಮನು
ನೀನು ಕರೆಸುವುದರಿಪುವುದು ನಿಜಕಾರ್ಯಸಂಗತಿಯ
ಏನ ಹೇಳುವೆ ನಗೆಯನನುಸಂ
ಧಾನದಲಿ ಪಾಂಡವರು ಕುರುಭೂ
ಮೀ ನಿವಾಸಕೆ ಬಂದು ಬಿಟ್ಟರು ಕಿರಿದು ದಳಸಹಿತ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯಾ ಮಾನಶಾಲಿ ಅರಸನೇ ಈ ನಡುರಾತ್ರಿಯಲ್ಲಿ ನೀನು ನನ್ನಲ್ಲಿಗೆ ಬಂದ ಸಮಾಚಾರ ಏನು ? ನನ್ನನ್ನು ಕಾಣುವ ಅಗತ್ಯವಿದ್ದಲ್ಲಿ ನನ್ನನ್ನೇ ನೀನಿದ್ದಲ್ಲಿಗೆ ಕರೆಸಬಹುದಾಗಿತ್ತು. ಈಗ ಆಗಬೇಕಿರುವ ಕಾರ್ಯವೇನಿದೆ ತಿಳಿಸು ಎಂದು ಭೀಷ್ಮನು ಕೇಳಿದನು. ಅದಕ್ಕೆ ಉತ್ತರವಾಗಿ ದುರ್ಯೋಧನನು ಏನೆಂದು ಹೇಳಲಿ ನಗೆಪಾಟಲಿನ ಸಂಗತಿಯನ್ನು, ಪಾಂಡವರು ತಮ್ಮ ಅಲ್ಪ ದಂಡಿನ ಸಹಿತ ಕುರುಕ್ಷೇತ್ರಕ್ಕೆ ಬಂದು ಬೀಡು ಬಿಟ್ಟಿದ್ದಾರೆ ಎಂದನು.
ಪದಾರ್ಥ (ಕ.ಗ.ಪ)
ಹದನು-ಸಮಾಚಾರ, ಸಂದರ್ಭ, ಸಂಗತಿ, ಅರಿಪುವುದು-ತಿಳಿಸುವುದು
ಮೂಲ ...{Loading}...
ಏನಿರುಳು ನೀ ಬಂದ ಹದನೆಲೆ
ಮಾನನಿಧಿ ಬೇಕಾದರೆಮ್ಮನು
ನೀನು ಕರೆಸುವುದರಿಪುವುದು ನಿಜಕಾರ್ಯಸಂಗತಿಯ
ಏನ ಹೇಳುವೆ ನಗೆಯನನುಸಂ
ಧಾನದಲಿ ಪಾಂಡವರು ಕುರುಭೂ
ಮೀ ನಿವಾಸಕೆ ಬಂದು ಬಿಟ್ಟರು ಕಿರಿದು ದಳಸಹಿತ ॥18॥
೦೧೯ ಹರಿಯ ಹಿಸುಣಿಕೆಯವರ ...{Loading}...
ಹರಿಯ ಹಿಸುಣಿಕೆಯವರ ಚಿತ್ತವ
ಬೆರಸಿ ವೈರವ ಬೆಳಸಿ ಬಂದರು
ಧರೆಯ ಭಾಗವ ಬೇಡಿ ಕದನವ ಮಸೆದರೆಮ್ಮೊಡನೆ
ಹರನ ಸಮದಂಡಿಗಳು ನೀವೆಮ
ಗಿರಲು ಜಯಿಸುವ ವೀರನಾವನು
ಮರುಳುತನವನು ಧರ್ಮಪುತ್ರನೊಳರಿಯಲಾಯ್ತೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ನಮ್ಮ ಬಗ್ಗೆ ಹೇಳಿದ ಚಾಡಿಯ ಮಾತು ಪಾಂಡವರ ಮನಸ್ಸಿನಲ್ಲಿ ನಾಟಿ ಆ ಪಾಂಡವರು ನಮ್ಮೊಡನೆ ಹಗೆತನವನ್ನು ಬೆಳಸಿಕೊಂಡು ಯುದ್ಧಕ್ಕಾಗಿ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿ ಪಾಲನ್ನು ಬಯಸಿ ನಮ್ಮೊಂದಿಗೆ ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಲಯಕರ್ತ ಈಶ್ವರನಿಗೆ ಸರಿಸಮರಾದ ಆದ ನೀವು ನಮ್ಮ ಕಡೆ ಇರುವಾಗ ನಮ್ಮನ್ನು ಜಯಿಸುವ ವೀರನು ಯಾರಿದ್ದಾನೆ ? ಇದನ್ನು ತಿಳಿದೂ ಯುದ್ಧಕ್ಕೆ ಬಂದಿರುವ ಧರ್ಮರಾಜನ ದಡ್ಡತನ ನಮಗೀಗ ತಿಳಿಯಿತು ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ಹಿಸುಣಿಕೆ-ಚಾಡಿ, ಮಸೆದರು-ಹೋರಾಟಕ್ಕೆ ಸಿದ್ಧರಾದರು, ಸಮದಂಡಿ-ಸರಿಸಮರು, ಮರುಳುತನ-ದಡ್ಡತನ
ಮೂಲ ...{Loading}...
ಹರಿಯ ಹಿಸುಣಿಕೆಯವರ ಚಿತ್ತವ
ಬೆರಸಿ ವೈರವ ಬೆಳಸಿ ಬಂದರು
ಧರೆಯ ಭಾಗವ ಬೇಡಿ ಕದನವ ಮಸೆದರೆಮ್ಮೊಡನೆ
ಹರನ ಸಮದಂಡಿಗಳು ನೀವೆಮ
ಗಿರಲು ಜಯಿಸುವ ವೀರನಾವನು
ಮರುಳುತನವನು ಧರ್ಮಪುತ್ರನೊಳರಿಯಲಾಯ್ತೆಂದ ॥19॥
೦೨೦ ಬನ್ದರೇ ಪಾಣ್ಡವರು ...{Loading}...
ಬಂದರೇ ಪಾಂಡವರು ಸುದ್ದಿಯ
ತಂದರೇ ನಿನ್ನವರು ನಿನಗೇ
ನೆಂದು ಭಾಷೆಯ ಕೊಟ್ಟರೀ ಕರ್ಣಾದಿ ನಾಯಕರು
ಇಂದು ಸಂತತಿಗುರುವರಲ್ಲಾ
ಬಂದರೇನಪರಾಧವೇ ಇ
ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕುರುಕ್ಷೇತ್ರಕ್ಕೆ ಬಂದಿಳಿದಿದ್ದಾರೆ ಎಂದೆಯಾ? ಕರ್ಣಾದಿಗಳು ನಿನ್ನ ಕಡೆಯ ಶೂರರು ನಿನಗೆ ಯಾವ ಬಗೆಯಲ್ಲಿ ಭಾಷೆ ಕೊಟ್ಟಿದ್ದಾರೆ ? ಚಂದ್ರವಂ±ದಲ್ಲಿ ಶ್ರೇಷ್ಠರಾದವರಲ್ಲವೇ ಅವರು ಬಂದರೆ ತಪ್ಪೇನಿದೆ? ಇನ್ನೆಷ್ಟು ಕಾಲದವರೆಗೆ ಅವರು ಕಷ್ಟದಲ್ಲಿ ನವೆಯಬೇಕು ? ಎಂದು ಭೀಷ್ಮ ದುರ್ಯೋಧನನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಭಾಷೆ (ಕೊಟ್ಟರೇ) - ಮಾತು (ಕೊಟ್ಟರೇ), ಉರುವರು-ಶ್ರೇಷ್ಠರು, ಪರಿಯಂತ-ವರೆಗೆ, ನವೆವರು-ಕಷ್ಟಪಡುವರು
ಮೂಲ ...{Loading}...
ಬಂದರೇ ಪಾಂಡವರು ಸುದ್ದಿಯ
ತಂದರೇ ನಿನ್ನವರು ನಿನಗೇ
ನೆಂದು ಭಾಷೆಯ ಕೊಟ್ಟರೀ ಕರ್ಣಾದಿ ನಾಯಕರು
ಇಂದು ಸಂತತಿಗುರುವರಲ್ಲಾ
ಬಂದರೇನಪರಾಧವೇ ಇ
ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ ॥20॥
೦೨೧ ಜಗದ ಗುರುವಲ್ಲಾ ...{Loading}...
ಜಗದ ಗುರುವಲ್ಲಾ ಮುರಾಂತಕ
ನಗಣಿತೋಪಮಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪನನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನೆ ಕೇಳು, ಆತ ಸಮಸ್ತ ಲೋಕಗಳಿಗೂ ಗುರುವಲ್ಲವೇ ? ಅಪಾರ ಮಹಿಮನಲ್ಲವೇ ? ಜ್ಞಾನ, ವೀರ್ಯ, ಬಲ, ಸಿರಿ, ಶಕ್ತಿ, ತೇಜಗಳೆಂಬ ಷಡ್ಗುಣಗಳಿಂದ ಕೂಡಿದವನೂ ಸಗುಣನೂ ನಿರ್ಗುಣನೂ ಶುದ್ಧ ಜ್ಞಾನ ಸ್ವರೂಪನೂ ಮಹಾತ್ಮನೂ ಆದ ಆ ವಿಶ್ವರೂಪಿಯನ್ನು ವಿರುದ್ಧವಾಗಿ ಹೋರಾಡಿದರೆ ನಮಗೆ ಜಯ ಸಿಕ್ಕೀತೇ ? ನಿನ್ನ ನೀತಿ ಬುದ್ಧಿಶಾಲಿಗಳು ಒಪ್ಪುವಂಥದ್ದೇ? ಅಹಂಕಾರದಿಂದ ಉನ್ಮತ್ತರಾದ ನಿನ್ನ ಜತೆಗಾರರ ಮಾತು ಕೇಳಿ, ಮೋಸ ಹೋದೆ ನೀನು ಎಂದನು ಭೀಷ್ಮನು.
ಪದಾರ್ಥ (ಕ.ಗ.ಪ)
ಮುರಾಂತಕ-ಮುರ ಎಂಬ ರಾಕ್ಷಸನನ್ನು ಕೊಂದವನು ಶ್ರೀ ಕೃಷ್ಣ, ವಿಗಡಿಸಲು-ವಿರೋಧಿಸಲು,
ಮೂಲ ...{Loading}...
ಜಗದ ಗುರುವಲ್ಲಾ ಮುರಾಂತಕ
ನಗಣಿತೋಪಮಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪನನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ ॥21॥
೦೨೨ ಮಿಕ್ಕ ಮಾತೇಕಿನ್ನು ...{Loading}...
ಮಿಕ್ಕ ಮಾತೇಕಿನ್ನು ನೀ ಹಿಂ
ದಿಕ್ಕಿ ಕೊಂಬರೆ ಕೊಲುವನಾವನು
ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ
ಹೊಕ್ಕು ಹಗೆಗಳ ಹೊಯ್ದ ದಿಗುಬಲಿ
ಯಿಕ್ಕಿ ನನ್ನಯ ಹರುಷಜಲಧಿಯ
ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಮಾತಿಗೆ ಪ್ರತ್ಯುತ್ತರವಾಗಿ ದುರ್ಯೋಧನ ಹೇಳಿದನು - ಪಾಂಡವರ ಬಗ್ಗೆ ಇನ್ನೆಷ್ಟೇ ಮಾತುಗಳನ್ನು ಹೇಳಿದರೂ ಪ್ರಯೋಜನವಿಲ್ಲ. ಏಕೆಂದರೆ ನೀನು ನಮ್ಮನ್ನು ರಕ್ಷಿಸಲು ನಿರ್ಧರಿಸಿದರೆ ನಮ್ಮನ್ನು ಕೊಲ್ಲ ತಕ್ಕವರು ಯಾರೂ ಇಲ್ಲ. ನಾವು ಏನೂ ತಿಳಿಯದ ಕಂದಮ್ಮಗಳು ಎಂದು ತಿಳಿಯಬೇಡ. ಭೀಷ್ಮನೇ ನಿನ್ನ ಸಾಹಸ ಸಾಮಥ್ರ್ಯ ನಾವು ಬಲ್ಲೆವು. ರಣರಂಗ ಪ್ರವೇಶಿಸಿ ಶತ್ರುಗಳನ್ನು ಸದೆಬಡಿದು ಅವರನ್ನು ದಿಗ್ಬಲಿಯಿಕ್ಕಿ ನನ್ನ ಸಂತೋಷವೆಂಬ ಸಾಗರವನ್ನು ಅಧಿಕಗೊಳಿಸಬೇಕು ಎಂದು ಕೌರವನು ಕೇಳಿಕೊಂಡಾಗ ಆ ಮಾತನ್ನು ಕೇಳಿದ ಭೀಷ್ಮನು ಹೀಗೆಂದು ಹೇಳತೊಡಗಿದನು.
ಪದಾರ್ಥ (ಕ.ಗ.ಪ)
ಹೊಯ್ದು-ಸದೆಬಡಿದು, ಹಿಂದಿಕ್ಕಿ ಕೊಂಬರೆ-ನಮ್ಮನ್ನು ರಕ್ಷಣೆಯಲ್ಲಿ ಇರಿಸಿಕೊಂಡರೆ, ಹೊಕ್ಕು-ರಣರಂಗ ಪ್ರವೇಶಿಸಿ, ಹರುಷಜಲಧಿ ಉಕ್ಕಿಸಲುಬೇಕು-ಸಂತೋಷಹುಟ್ಟಿಸಬೇಕು, ದಿಗ್ಬಲಿಯಿಕ್ಕಿ-ಕೊಂದು,
ಮೂಲ ...{Loading}...
ಮಿಕ್ಕ ಮಾತೇಕಿನ್ನು ನೀ ಹಿಂ
ದಿಕ್ಕಿ ಕೊಂಬರೆ ಕೊಲುವನಾವನು
ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ
ಹೊಕ್ಕು ಹಗೆಗಳ ಹೊಯ್ದ ದಿಗುಬಲಿ
ಯಿಕ್ಕಿ ನನ್ನಯ ಹರುಷಜಲಧಿಯ
ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ ॥22॥
೦೨೩ ದೈವಬಲವವರಲ್ಲಿ ನೀವೇ ...{Loading}...
ದೈವಬಲವವರಲ್ಲಿ ನೀವೇ
ದೈವಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪಾಂಡವರಿಗೆ ದೈವದ ನೆರವುಂಟು ನಿಮಗೆ ದೈವದ ನೆರವಿಲ್ಲ. ಆ ಪಂಚಪಾಂಡವರೂ ಧರ್ಮಮಾರ್ಗಾಸಕ್ತರು, ಒಳ್ಳೆಯ ನಡೆನುಡಿಯುಳ್ಳವರು. ನೀವು ಧರ್ಮಮಾರ್ಗಾಸಕ್ತರಲ್ಲ. ಅವರಿಗೆ ಈ ಲೋಕವೇ ಹೆಗಲು ನೀಡುತ್ತದೆ. ನಿಮ್ಮೆಲ್ಲರನ್ನು ಲೋಕ ದೂಷಿಸುತ್ತದೆ. ನಿಮಗಿಂತಐದುಪಟ್ಟು ಹೆಚ್ಚು ಸಾಹಸಿಗಳು ಅವರು. ನೀವು ಅವರ ಎದುರಿಗೆ ಅಶಕ್ತರು, ಎಂದನು ಭೀಷ್ಮನು.
ಪದಾರ್ಥ (ಕ.ಗ.ಪ)
ಮುಯ್ವುನು ಆನುವುದು-ನೆರವು ನೀಡುವುದು (ಭುಜಗೊಡುವುದು),
ಮೂಲ ...{Loading}...
ದೈವಬಲವವರಲ್ಲಿ ನೀವೇ
ದೈವಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ ॥23॥
೦೨೪ ದಯವನತ್ತಲು ತಿದ್ದಿ ...{Loading}...
ದಯವನತ್ತಲು ತಿದ್ದಿ ನಮ್ಮನು
ಭಯಮಹಾಬ್ಧಿಯೊಳದ್ದಿ ಸಮರದ
ಜಯವನವರಿಗೆ ಮಾಡಿ ನಮ್ಮಭಿಮತವ ನೀಗಾಡಿ
ನಯವ ನೀವೊಡ್ಡುವರೆ ನಿಮ್ಮನು
ನಿಯಮಿಸುವರಾರುಂಟು ಭಾಗ್ಯೋ
ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಕರುಣೆಯೆಲ್ಲವನ್ನು ಪಾಂಡವರಿಗೆ ತೋರಿ ನಮ್ಮನ್ನು ಭಯದ ಮಹಾಸಾಗರದಲ್ಲಿ ಮುಳುಗಿಸಿದಿರಿ. ಸಮರದಲ್ಲಿ ಅವರಿಗೆ ಗೆಲುವನ್ನು ಉಂಟು ಮಾಡಿ, ನಮ್ಮ ಇಷ್ಟಾರ್ಥವನ್ನು ಹೋಗಲಾಡಿಸಿದಿರಿ. ಇಂಥ ನೀತಿಯನ್ನು ನೀವು ಅನುಸರಿಸಿದರೆ ನಿಮಗೆ ಅಪ್ಪಣೆ ಮಾಡುವವರು ಇನ್ನಾರಿದ್ದಾರೆ. ಈ ಜಗತ್ತಿನಲ್ಲಿ ಅದೃಷ್ಟಹೀನನು ತಾನು ಎಂದು ಕೌರವನು ನಿಟ್ಟುಸುರು ಬಿಟ್ಟನು.
ಪದಾರ್ಥ (ಕ.ಗ.ಪ)
ನೀಗಾಡಿ-ಹೋಗಲಾಡಿಸಿ, ಒಡ್ಡುವರೆ-ಅನುಸರಿಸಿದರೆ,
ಮೂಲ ...{Loading}...
ದಯವನತ್ತಲು ತಿದ್ದಿ ನಮ್ಮನು
ಭಯಮಹಾಬ್ಧಿಯೊಳದ್ದಿ ಸಮರದ
ಜಯವನವರಿಗೆ ಮಾಡಿ ನಮ್ಮಭಿಮತವ ನೀಗಾಡಿ
ನಯವ ನೀವೊಡ್ಡುವರೆ ನಿಮ್ಮನು
ನಿಯಮಿಸುವರಾರುಂಟು ಭಾಗ್ಯೋ
ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ ॥24॥
೦೨೫ ಉಚಿತವನು ನಾನರಿಯೆ ...{Loading}...
ಉಚಿತವನು ನಾನರಿಯೆ ವಾರ್ಧಕ
ರಚಿತ ನಿಜವನು ನುಡಿಯೆ ನಿನಗವು
ರುಚಿಸವೇ ಮಾಣಲಿಯದಂತಿರಲೀ ಕುಮಂತ್ರಿಗಳ
ವಚನವತಿಗಾಢದಲಿ ನಟ್ಟುದು
ಸಚಿವ ನಯವಿನ್ನೇಕೆ ಸೇನಾ
ನಿಚಯಕೆಮ್ಮನು ಮೊದಲಿಗನ ಮಾಡರಸ ಹೋಗೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ನಿಟ್ಟುಸಿರಿಟ್ಟು ನಿರಾಸೆ ವ್ಯಕ್ತಪಡಿಸಿದ ಕೌರವನಿಗೆ ಭೀಷ್ಮ ಹೇಳಿದನು. ಎಲೈ ದುರ್ಯೋಧನ, ನಿನಗೆ ಯಾವ ಮಾರ್ಗಸರಿ ಎಂಬುದು ನನಗೆ ತಿಳಿಯುತ್ತಿಲ್ಲ. ದೀರ್ಘಕಾಲದ ಅನುಭವದಿಂದ ವಾಸ್ತವದ ನುಡಿಗಳನ್ನು ಹೇಳಿದರೆ ಅವು ನಿನಗೆ ಗ್ರಾಹ್ಯವಾಗುವುದಿಲ್ಲ ಬಿಡು, ಆ ಮಾತು, ಹಾಗಿರಲಿ. ಈ ಕೆಟ್ಟ ಮಂತ್ರಿಗಳಾದ ಕರ್ಣ, ದುಶ್ಶಾಸನ ಮುಂತಾದವರು ಹೇಳುವ ಮಾತುಗಳು ಬಹಳ ಆಳವಾಗಿ ನಿನ್ನ ಮನಸ್ಸಿನಲ್ಲಿ ನಾಟಿವೆ. ಹೀಗಿರುವಾಗ ಹಿರಿಯ ಮಂತ್ರಿಗಳ ಯೋಗ್ಯ ಸಲಹೆಗಳು ಇನ್ನೇಕೆ ಬೇಕು ನಿನಗೆ ? ನಮ್ಮನ್ನು ಸೇನಾಧಿಪತಿಯನ್ನಾಗಿ ಮಾಡು ಎಂದನು.
ಪದಾರ್ಥ (ಕ.ಗ.ಪ)
ಉಚಿತವನು-ಸೂಕ್ತ ಮಾರ್ಗವನ್ನು, ವಾರ್ಧಿಕ ರಚಿತ ನುಡಿಯನು-ದೀರ್ಘಕಾಲದ ಅನುಭವದ ಮಾತನ್ನು, ಅತಿಗಾಢದಲಿ-ಬಹಳ ಆಳವಾಗಿ, ನಯ-ಯೋಗ್ಯ ಸಲಹೆ, ಸೇನಾ ನಿಚಯಕೆ ಮೊದಲಿಗ-ಸೇನಾಧಿಪತಿ
ಮೂಲ ...{Loading}...
ಉಚಿತವನು ನಾನರಿಯೆ ವಾರ್ಧಕ
ರಚಿತ ನಿಜವನು ನುಡಿಯೆ ನಿನಗವು
ರುಚಿಸವೇ ಮಾಣಲಿಯದಂತಿರಲೀ ಕುಮಂತ್ರಿಗಳ
ವಚನವತಿಗಾಢದಲಿ ನಟ್ಟುದು
ಸಚಿವ ನಯವಿನ್ನೇಕೆ ಸೇನಾ
ನಿಚಯಕೆಮ್ಮನು ಮೊದಲಿಗನ ಮಾಡರಸ ಹೋಗೆಂದ ॥25॥
೦೨೬ ಖಳನ ಕಳುಹಿದನತಿಬಳನು ...{Loading}...
ಖಳನ ಕಳುಹಿದನತಿಬಳನು ತ
ನ್ನೊಳಗೆ ನೆನೆದನು ಪಾಂಡುನಂದನ
ರುಳಿವು ತನ್ನದು ಮೀರಿ ಕಾದುವಡಸುರರಿಪುವಿಹನು
ಅಳುಕಿ ಕಾದುವಡಿತ್ತ ಹಾವಿನ
ಹಳವಿಗೆಯ ಕಡುಮೂರ್ಖನಿಗೆ ಬೆಂ
ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕ್ತಿಶಾಲಿ ಭೀಷ್ಮನು ದುಷ್ಟನಾದ ದುರ್ಯೋಧನನಿಗೆ ಸಮಾಧಾನ ಹೇಳಿ ಅರಮನೆಗೆ ಕಳಿಸಿದನು. ಭೀಷ್ಮನು ತನ್ನ ಮನಸ್ಸಿನಲ್ಲಿ ಹೀಗೆ ಚಿಂತಿಸಿದನು. ಧರ್ಮಿಷ್ಠರಾದ ಪಾಂಡವಪುತ್ರರ ರಕ್ಷಣೆ ನನ್ನದಾಗಿದೆ. ಮಿತಿಮೀರಿ ಹೋರಾಡುವ ಪಕ್ಷಕ್ಕೆ ಅವರ ಕಡೆ ಶ್ರೀಕೃಷ್ಣನು ಇದ್ದಾನೆ. ಅಂಜುತ್ತ ಹೋರಾಡಿದರೆ, ಈ ಕಡೆ ಸರ್ಪಧ್ವಜನಾದ ಅತಿ ಹಠಮಾರಿ ದುರ್ಯೋಧನನಿಗೆ ಒತ್ತಾಸೆಯನ್ನು ಕಾಣೆನು. ಈಗ ನನ್ನ ಕರ್ತವ್ಯ ಏನೆಂದು ಚಿಂತಾಕ್ರಾಂತನಾದನು.
ಪದಾರ್ಥ (ಕ.ಗ.ಪ)
ಹಾವಿನ ಹಳವಿಗೆಯ ಕಡಮೂರ್ಖ-ಸರ್ಪಧ್ವಜನಾದ ದುಷ್ಟ ದುರ್ಯೋಧನ,
ಮೂಲ ...{Loading}...
ಖಳನ ಕಳುಹಿದನತಿಬಳನು ತ
ನ್ನೊಳಗೆ ನೆನೆದನು ಪಾಂಡುನಂದನ
ರುಳಿವು ತನ್ನದು ಮೀರಿ ಕಾದುವಡಸುರರಿಪುವಿಹನು
ಅಳುಕಿ ಕಾದುವಡಿತ್ತ ಹಾವಿನ
ಹಳವಿಗೆಯ ಕಡುಮೂರ್ಖನಿಗೆ ಬೆಂ
ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸಿದ ॥26॥
೦೨೭ ಆದಡೇನಿದಿರಾದ ರಿಪುಬಲ ...{Loading}...
ಆದಡೇನಿದಿರಾದ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನಾದರಾಗಲಿ, ಯುದ್ಧಭೂಮಿಯಲ್ಲಿ ನನ್ನನ್ನು ಇದಿರಿಸುವ ಹಗೆಗಳ ದಂಡನ್ನು ನನ್ನ ಕೈಲಾದ ಮಟ್ಟಿಗೆ ಕೊಂದು, ಮೊಮ್ಮಕ್ಕಳಾದ ಪಾಂಡವರನ್ನೂ ಅವರ ಮಕ್ಕಳನ್ನು ರಕ್ಷಿಸಿ ಆ ರಣರಂಗದಲ್ಲಿ ನನ್ನ ದೇಹವನ್ನು ತ್ಯಜಿಸುತ್ತೇನೆ. ಏನೇ ಆಗಲಿ, ಇದನ್ನು ಬಿಟ್ಟರೆ ಕಾರ್ಯಗತವಾಗುವ ಬೇರಾವ ಉಪಾಯವೂ ಇಲ್ಲ ಎಂದು ತನ್ನ ಮನಸ್ಸಿನ ಸ್ವಗತವನ್ನು ತೊರೆದು ಮಲಗಿ ನಿದ್ರಿಸಿದನು.
ಪದಾರ್ಥ (ಕ.ಗ.ಪ)
ಹೃತ್ಸಂವಾದ-ಮನಸ್ಸಿನ ಸ್ವಗತ
ಮೂಲ ...{Loading}...
ಆದಡೇನಿದಿರಾದ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ ॥27॥
೦೨೮ ಮಗನೊಡನೆ ಮೂದಲಿಸಿ ...{Loading}...
ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳೊಗೆದು ವಿರಹವ ಬೀಳುಕೊಟ್ಟುವು ಜಕ್ಕವಕ್ಕಿಗಳು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದಿನದ ಸಭೆಯಲ್ಲಿ ಮುದಿ ಭೀಷ್ಮನನ್ನು ತನ್ನ ಮಗನಾದ ಕರ್ಣನು ಮೂದಲಿಸಿ (ಹಂಗಿಸಿ) ಮಾತಾಡಿ ಯುದ್ಧರಂಗವನ್ನು ಪ್ರವೇಶಿಸಿ ಮಾಡುವ ಯುದ್ಧವನ್ನು ನೋಡಬೇಕೆಂಬ ಕುತೂಹಲದಿಂದ ಸೂರ್ಯನು ಉದಯಿಸಿದನು. ರಾತ್ರಿಯಲ್ಲಿ ಅಗಲಿದ್ದ ಹೆಣ್ಣು-ಗಂಡು ಚಕ್ರವಾಕ ಪಕ್ಷಿಗಳು ತಮಗೆ ಹರುಷವನ್ನು ಕೊಟ್ಟ ಸೂರ್ಯನಿಗೆ ಅರಳಿದ ಕಮಲಗಳೆಂಬ ಮೊದಲ ಕಾಣಿಕೆಯನ್ನು ನೀಡಿ ತಮ್ಮ ವಿರಹವನ್ನು ಹೋಗಲಾಡಿಸಿಕೊಂಡವು. ರಾತ್ರಿ ಅರಳಿದ್ದ ಕನ್ನೈದಿಲೆಗಳ ಸಂತೋಷ ಅಡಗಿ, ಮುಚ್ಚಿಕೊಂಡವು (ನಗೆಯಡಗಿ ನಾಚಿದವು).
ಪದಾರ್ಥ (ಕ.ಗ.ಪ)
ದಿನಪ-ಸೂರ್ಯ, ನಗೆಯಡಗಿ ನಾಚಿದವು ಕುಮುದಾಳಿಗಳು ಸಂತೋಷ ಅಡಗಿ ಮುದುರಿಕೊಂಡವು, ಕನ್ನೈದಿಲೆಗಳು, ಪರಸೇನೆ-ಹಗೆಗಳದಂಡು, ಜಕ್ಕವಕ್ಕಿ-ಚಕ್ರವಾಕಪಕ್ಷಿ, ಕುಮುದ-ಕನ್ನೈದಿಲೆ
ಪಾಠಾನ್ತರ (ಕ.ಗ.ಪ)
- ನಗೆಯಡಗಿ, 2. ಮುಂಗಾಣಿಕೆಯ, ಕಂಗಾಣಿಕೆಯ (ಶೇಷ), 3. ಳೊಗೆದು ಒಗೆದು = ಬಿಸುಟು ಳೊಗೆದ - ಬಿಸುಟ
ಮೂಲ ...{Loading}...
ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳೊಗೆದು ವಿರಹವ ಬೀಳುಕೊಟ್ಟುವು ಜಕ್ಕವಕ್ಕಿಗಳು ॥28॥
೦೨೯ ಅರಸನುಪ್ಪವಡಿಸಿದನವನೀ ...{Loading}...
ಅರಸನುಪ್ಪವಡಿಸಿದನವನೀ
ಶ್ವರವಿಹಿತಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹ ವಸ್ತುಗಳ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಹಾಸಿಗೆಬಿಟ್ಟು ಮೇಲೆದ್ದನು. ರಾಜರಿಗೆ ಯೋಗ್ಯವಾದ (ರಾಜರು ಮಾಡಬೇಕಾದ) ಸಂಧ್ಯಾವಂದನಾ ದಾನಾದಿ ನಿತ್ಯಕರ್ಮಗಳನ್ನು ಆಚರಿಸಿದನು. ಹರುಷದ ಉತ್ಸಾಹದಲ್ಲಿ ರಾಜಸಭಾಂಗಣಕ್ಕೆ ಆಗಮಿಸಿದನು. ಸಮಸ್ತ ರಾಜರ ಸಮೂಹಕ್ಕೆ ಸಭೆಗೆ ಬರಲು ದೂತರನ್ನು ಕಳಿಸಿದನು, ಎಲ್ಲಾ ವೀರಾಧಿವೀರರನ್ನು ಬರಮಾಡಿಕೊಂಡನು. ಭೀಷ್ಮನ ಪಟ್ಟಾಭಿಷೇಕಕ್ಕೆ ಬೇಕಾಗುವ ಪದಾರ್ಥಗಳನ್ನು ಸಿದ್ಧಮಾಡಿಸಿದನು
ಪದಾರ್ಥ (ಕ.ಗ.ಪ)
ಉಪ್ಪವಡಿಸು-ಹಾಸಿಗೆಬಿಟ್ಟು ಏಳು, ಚಾವಡಿ-ರಾಜಸಭೆ, ಆಸ್ಥಾನ-ಓಲಗಶಾಲೆ, ಪಟ್ಟಕೆ-ಪಟ್ಟಾಭಿಷೇಕಕ್ಕೆ, ಬೇಹ-ಬೇಕಾಗುವ, ನಿಕಾಯ-ಸಮೂಹ
ಮೂಲ ...{Loading}...
ಅರಸನುಪ್ಪವಡಿಸಿದನವನೀ
ಶ್ವರವಿಹಿತಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹ ವಸ್ತುಗಳ ॥29॥
೦೩೦ ಗುರುತನುಜ ರವಿಸೂನು ...{Loading}...
ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪದ್ರೋಣಾದಿಗಳು ಬಂ
ದರಮನೆಯ ಹೊಕ್ಕರು ನದೀನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣತರ ಮತದಿಂದ ವಿಸ್ತರಿಸಿದರು ಮಂಗಳವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಪುತ್ರನಾದ ಅಶ್ವತ್ಥಾಮ, ಸೂರ್ಯನ ಮಗನಾದ ಕರ್ಣ, ಮದ್ರದೇಶಾಧಿಪತಿ ಶಲ್ಯ, ದ್ರೋಣಾಚಾರ್ಯರ ಭಾವಮೈದುನನಾದ ಕೃಪಾಚಾರ್ಯ, ದ್ರೋಣಾಚಾರ್ಯರೇ ಮೊದಲಾದ ಕೌರವನ ಕಡೆಯ ವೀರರು, ಭೀಷ್ಮನನ್ನು ಹಿಂಬಾಲಿಸಿ ಬಂದು ಅರಮನೆಯನ್ನು ಪ್ರವೇಶಿಸಿದರು. ಬ್ರಾಹ್ಮಣರು ಸಿಂಹಾಸನವನ್ನು ಸಿದ್ಧಪಡಿಸಿ ವೇದೋಕ್ತಕರ್ಮಗಳಲ್ಲಿ ನಿಪುಣರಾದವರಿಂದ ಮಂಗಳ ಕಾರ್ಯವನ್ನು ಪ್ರಾರಂಭಿಸಿದರು.
ಮೂಲ ...{Loading}...
ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪದ್ರೋಣಾದಿಗಳು ಬಂ
ದರಮನೆಯ ಹೊಕ್ಕರು ನದೀನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣತರ ಮತದಿಂದ ವಿಸ್ತರಿಸಿದರು ಮಂಗಳವ ॥30॥
೦೩೧ ಕಮಲಜನ ಹೋಲುವೆಯ ...{Loading}...
ಕಮಲಜನ ಹೋಲುವೆಯ ಧಾರುಣಿ
ಯಮರಕರದಲಿ ನಿಗಮ ಪೂತೋ
ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ
ಕಮಲಜನ ಕರದಿಂದ ಗಂಗಾ
ವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
31.ಬ್ರಹ್ಮನಿಗೆ ಸಮಾನರಾದ ಭೂಸುರರು, ವೇದೋಕ್ತ ಮಂತ್ರಗಳಿಂದ ಕೂಡಿದ ಶ್ರೇಷ್ಠ ನದಿಗಳ ನೀರನ್ನು ಭೀಷ್ಮನ ತಲೆಯ ಮೇಲೆ ಅಭಿಷೇಕ ಮಾಡಿದರು. ಬ್ರಹ್ಮನ ಕೈಯಿಂದ ಪರಿಶುದ್ಧವಾದ ಗಂಗಾನದಿ ಇಳಿದು ಬಂದು ಹಿಮಾಲಯಪರ್ವತವನ್ನು ಸೇರಿತೋ ಎಂಬಂತೆ ಭೀಷ್ಮನಿಗೆ ಪಟ್ಟಾಭಿಷೇಕ ಮಾಡಿದ ನೀರು ಕೆಳಕ್ಕೆ ಹರಿಯಿತು.
ಟಿಪ್ಪನೀ (ಕ.ಗ.ಪ)
ಪೂರ್ವಕಥೆ - ಹಿಂದೆ ತ್ರಿವಿಕ್ರಮಾವತಾರದಲ್ಲಿ ಶ್ರೀಮನ್ನಾರಾಯಣನ ಪಾದಕಮಲದ ಮೇಲೆ ಬ್ರಹ್ಮನು ತನ್ನ ಕಮಂಡಲುವಿನಿಂದ ನೀರನ್ನು ಸುರಿಯಲು ಅದು ಗಂಗಾನದಿಯಾಗಿ ಹರಿದು ಹಿಮಗಿರಿಯ ಶಿಖರದ ಮೇಲಿಂದ ಕೆಳಕ್ಕೆ ಬಂದಿಳಿಯಿತು.
(ಕಮಲಜನ ಕರದಿಂದ ಗಂಗಾವಿಮಲನದಿ ಇಳಿತಂದು ಹಿಮಗಿರಿಯನು ಸಾರ್ದುದೋ)
ಮೂಲ ...{Loading}...
ಕಮಲಜನ ಹೋಲುವೆಯ ಧಾರುಣಿ
ಯಮರಕರದಲಿ ನಿಗಮ ಪೂತೋ
ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ
ಕಮಲಜನ ಕರದಿಂದ ಗಂಗಾ
ವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ ॥31॥
೦೩೨ ಆರತಿಯನೆತ್ತಿದರು ತನ್ದು ...{Loading}...
ಆರತಿಯನೆತ್ತಿದರು ತಂದು
ಪ್ಪಾರತಿಯ ಸೂಸಿದರು ನೃಪಪರಿ
ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ
ಕೌರವೇಂದ್ರನ ಮೋಹರದ ಗುರು
ಭಾರ ಭೀಷ್ಮಂಗಾಯ್ತು ಸಮರದ
ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುತ್ತೈದೆಯರು ಭೀಷ್ಮನಿಗೆ ಆರತಿಯನ್ನು ಎತ್ತಿದರು. ಅನಂತರ ದೃಷ್ಟಿ ಪರಿಹಾರಕ ಉಪ್ಪಾರತಿಯನ್ನು ನೀವಾಳಿಸಿದರು. ಕೌರವನ ಕಡೆಯ ರಾಜ ಪರಿವಾರವೆಲ್ಲ ಆಗಮಿಸಿ ಉಡುಗೊರೆ ಕಾಣಿಕೆಗಳನ್ನು ಅರ್ಪಿಸಿ ಭೀಷ್ಮನ ದರ್ಶನ ಮಾಡಿದರು. ದುರ್ಯೋಧನನ ಕಡೆಯ ಸೇನೆಯನ್ನು ಮುನ್ನಡೆಸುವ ಅಪಾರ ಹೊಣೆಗಾರಿಕೆ ಭೀಷ್ಮನ ಪಾಲಿಗೆ ಬಂತು. ದ್ರೋಣಾಚಾರ್ಯ ಮೊದಲಾದವರು ಭೀಷ್ಮನಿಗೆ ಪಟ್ಟವಾದುದನ್ನು ನೋಡಿ ಸಂತೋಷಪಡುತ್ತಿರಲು, ಭೀಷ್ಮನು ಯುದ್ಧದ ಹೊಣೆಗಾರಿಕೆಯ ಸೇನಾಧಿಪತ್ಯದ ಪಟ್ಟವನ್ನು ಧರಿಸಿದನು.
ಟಿಪ್ಪನೀ (ಕ.ಗ.ಪ)
ಉಪ್ಪಾರತಿ - ದೃಷ್ಟಿ ದೋಷ ನಿವಾರಣೆಗೆ (ಉಪ್ಪನ್ನು ನಿವಾಳಿಸುವ) ಆರತಿ.
ಸಮರದ ವೀರಪಟ್ಟ-ಸೇನಾಧಿಪತ್ಯಾಧಿಕಾರ ನೀಡಿದ್ದರ ಸೂಚಕವಾಗಿ ಧರಿಸುವ ಒಂದು ಬಗೆಯ ಕಿರೀಟ (ಪಟ್ಟ)
ಮೂಲ ...{Loading}...
ಆರತಿಯನೆತ್ತಿದರು ತಂದು
ಪ್ಪಾರತಿಯ ಸೂಸಿದರು ನೃಪಪರಿ
ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ
ಕೌರವೇಂದ್ರನ ಮೋಹರದ ಗುರು
ಭಾರ ಭೀಷ್ಮಂಗಾಯ್ತು ಸಮರದ
ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ ॥32॥
೦೩೩ ಈ ನದೀನನ್ದನನ ...{Loading}...
ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರಸ
ಮಾನಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಭೀಷ್ಮಾಚಾರ್ಯನ ಸಹಾಯದಿಂದ ನಮ್ಮ ದಂಡು ಈಶ್ವರನಿಗೂ ಅಂಜುವುದಿಲ್ಲ. ಕುಂತೀಪುತ್ರರಾದ ಪಾಂಡವರಿಗೆ ಅರಣ್ಯವೇ ಜಪವಾಗುತ್ತಿದೆ. (ಅರಣ್ಯಕ್ಕೆ ಹೋಗಬೇಕಾಗುವುದೆಂಬ ಚಿಂತೆ ಆವರಿಸುತ್ತದೆ) ಹೀಗಿರುವಾಗ ಅವರಿಗೆ ಇನ್ನೇಕೆ ರಾಜ್ಯದ ಚಿಂತೆ ? ಮಾನನಿಷ್ಠನಾದ ಭೀಷ್ಮಚಾರ್ಯರಿಗೆ ಯುದ್ಧದಲ್ಲಿ ಸರಿಗಟ್ಟುವ ಶೂರನು ಪಾಂಡವರಲ್ಲಿ ಯಾರಿದ್ದಾನೆ ಎಂಬುದಾಗಿ ತುಂಬು ಮನಸ್ಸಿನ ಉಲ್ಲಾಸದಲ್ಲಿ ದುರ್ಯೋಧನನು ಭೀಷ್ಮನನ್ನು ಹೊಗಳಿದನು.
ಮೂಲ ...{Loading}...
ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೆ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳೆಯೇಕೆ
ಮಾನನಿಧಿ ಭೀಷ್ಮಂಗೆ ಸಮರಸ
ಮಾನಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ ॥33॥
೦೩೪ ಎಲೆ ಮರುಳೆ ...{Loading}...
ಎಲೆ ಮರುಳೆ ಭೂಪಾಲ ಕೌರವ
ಕುಲಪಿತಾಮಹನಹನು ಧರ್ಮಂ
ಗಳಲಿ ಪರಿಣತನಹನು ಕಾಳೆಗವೆತ್ತಲಿವರೆತ್ತ
ಗಳದ ಗರಳನ ದೊರೆಯ ಭಟಮಂ
ಡಲಿಯೊಳಗೆ ಮನ್ನಣೆಯೆ ಹೇಳೈ
ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಭೀಷ್ಮನ ಹಿರಿಮೆಯನ್ನು ಸಹಿಸಲಾರದೆ ಹೇಳುತ್ತಾನೆ ಎಲೈ ಮಂದಮತಿ ದುರ್ಯೋಧನನೇ, ಭೀಷ್ಮನು ಕೌರವವಂಶಕ್ಕೆ ಹಿರಿಯ (ಅಜ್ಜ) ನಾಗಿದ್ದಾನೆ ನಿಜ. ಧರ್ಮಶಾಸ್ತ್ರಗಳನ್ನು ಅರಿತಂಥ ಪಂಡಿತನೂ ಆಗಿದ್ದಾನೆ. ಆದರೆ ಯುದ್ಧವೆಲ್ಲಿ ? ಇವರೆಲ್ಲಿ (ವಿಷಕಂಠನಾದ ಈಶ್ವರನಿಗೆ ಸಾಹಸದಲ್ಲಿ ಸಮಾನರಾದ) ಸೇನಾಮಂದಿಯಲ್ಲಿ ಪ್ರಾಯ ಕಳೆದು ಹೋದ ಮುದಿಯನಿಗೆ ಗೌರವಸ್ಥಾನವೇ ಹೇಳಯ್ಯ ದೊರೆಯೆ ? ಎಂದು ಹೇಳಿ ಕಲಿಕರ್ಣನು ಗಹಗಹಿಸಿ ನಕ್ಕನು.
ಪದಾರ್ಥ (ಕ.ಗ.ಪ)
ಗಳದಗgಳನ-ಈಶ್ವರನ, ದೊರೆಯ-ಸಮಾನನಾದ, ಕಳೆದಹರೆಯಂಗೆ-ಪ್ರಾಯ ಕಳೆದುಕೊಂಡ ಮುದಿಯನಿಗೆ
ಮೂಲ ...{Loading}...
ಎಲೆ ಮರುಳೆ ಭೂಪಾಲ ಕೌರವ
ಕುಲಪಿತಾಮಹನಹನು ಧರ್ಮಂ
ಗಳಲಿ ಪರಿಣತನಹನು ಕಾಳೆಗವೆತ್ತಲಿವರೆತ್ತ
ಗಳದ ಗರಳನ ದೊರೆಯ ಭಟಮಂ
ಡಲಿಯೊಳಗೆ ಮನ್ನಣೆಯೆ ಹೇಳೈ
ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ ॥34॥
೦೩೫ ತೊಗಲು ಸಡಿಲಿದ ...{Loading}...
ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುಕ್ಕುಬಿದ್ದ ಚರ್ಮ, ಬತ್ತಿಹೋಗಿರುವ ಗದ್ದ, ಜೋತು ಬಿದ್ದ ಭುಜಗಳು, ಮುಪ್ಪಿನಿಂದ ಬಿಳುಪಾದ ಮೀಸೆ, ಬಚ್ಚು ಬಾಯಿ, ಮುಂದಕ್ಕೆ ಚಾಚಿದ ಎಲುಬು, ಜರ್ಝರಿತವಾದ ಅಂಗಾಂಗಗಳು, ಬಾಯಲ್ಲಿ ಏನಾದರೂ ಹಾಕಿಕೊಂಡು ಜಗಿದರೆ ಅಲ್ಲಾಡುವ ತಲೆ, ಅರುಳು ಮರುಳಿನ ಇಂಥ ಮುದುಕನನ್ನು ಹೋರಾಡಲು ಹೇಳಿ, ಅವರನ್ನು ಈ ನಮ್ಮ ಕೌರವಸೇನೆಯಲ್ಲಿ ನಗೆಪಾಟಿಲಿಗೆ ಈಡುಮಾಡಿದೆ’ ಎಂದು ಕರ್ಣನು ದುರ್ಯೋಧನನ ಬಳಿ ಭೀಷ್ಮನನ್ನು ಕುರಿತು ಗೇಲಿ ಮಾಡಿದನು.
ಪದಾರ್ಥ (ಕ.ಗ.ಪ)
ನರುಕಿದ-ಜಗ್ಗಿದ, ನರೆತ-ಬಿಳುಪಾದ, ಜಗುಳಿದ-ಬಿದ್ದುಹೋದ (ಬಾಗಿದ), ನೆಗ್ಗಿದ-ಜಜ್ಜಿದ, ಮುಪ್ಪಿನ ಮುಗುದ-ಅರುಳು ಮರಳಾದವನು, ನಗೆಯ ಸುರಿದೈ-ನಗೆ ಉಂಟು ಮಾಡಿದೆ
ಮೂಲ ...{Loading}...
ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ ॥35॥
೦೩೬ ಇಲ್ಲಿ ಭೀಷ್ಮನು ...{Loading}...
ಇಲ್ಲಿ ಭೀಷ್ಮನು ರಾಘವನ ಬಲ
ದಲ್ಲಿ ಜಾಂಬವನುಭಯವೀರರು
ಬಲ್ಲಿದರು ಬಳಿಕುಳಿದ ಸುಭಟರ ಶೌರ್ಯವೊಪ್ಪುವುದೆ
ನಿಲ್ಲು ನೀ ಕೊಲಲೆಳಸುವರೆ ಹಗೆ
ಯಲ್ಲಿಗೊಪ್ಪಿಸಿ ಕೊಲಿಸಲೇತಕೆ
ಬಿಲ್ಲಿನಲಿ ಬಡಿದಡ್ಡಗೆಡಹುವೆನೆಂದನಾ ಕರ್ಣ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದು ದ್ವಾಪರಯುಗದಲ್ಲಿ ಭೀಷ್ಮನು, ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮನ ಸೇನೆಯಲ್ಲಿದ್ದ ಜಾಂಬವಂತನೆಂಬ ಕರಡಿ ಈ ಇಬ್ಬರು ವೀರರು ತುಂಬಾ ಬಲಶಾಲಿಗಳು. ಇವರನ್ನು ಬಿಟ್ಟರೆ ಉಳಿದ ಸುಭದ್ರರ ಸಾಹಸ ಹೇಳಿಕೊಳ್ಳಲು ಮನಸ್ಸೊಪ್ಪದು. ಸ್ವಲ್ಪ ತಡಿ, ನೀನು ಇವರನ್ನು ಕೊಲ್ಲಿಸಲು ಇಷ್ಟಪಟ್ಟಲ್ಲಿ, ಶತ್ರುಗಳ ಮೇಲೆ ಯುದ್ಧ ಮಾಡಲು ಒಪ್ಪಿಸಿ ಆ ಮೂಲಕ ಏಕೆ ಕೊಲ್ಲಿಸುವೆ ? ನಾನೇ ನನ್ನ ಬಿಲ್ಲಿನಿಂದ ಚಚ್ಚಿ ಕೆಳಗುರುಳಿಸುತ್ತೇನೆ ಎಂದು ಕರ್ಣ ದುರ್ಯೋಧನನಿಗೆ ವ್ಯಂಗ್ಯವಾಗಿ ಹೇಳಿದನು.
ಪದಾರ್ಥ (ಕ.ಗ.ಪ)
ಬಲ್ಲಿದರು-ಸಾಹಸವಂತರು, ಅಡ್ಡಗೆಡಹುವೆನು-ಕೆಳಗುರುಳಿಸುತ್ತೇನೆ.
ಮೂಲ ...{Loading}...
ಇಲ್ಲಿ ಭೀಷ್ಮನು ರಾಘವನ ಬಲ
ದಲ್ಲಿ ಜಾಂಬವನುಭಯವೀರರು
ಬಲ್ಲಿದರು ಬಳಿಕುಳಿದ ಸುಭಟರ ಶೌರ್ಯವೊಪ್ಪುವುದೆ
ನಿಲ್ಲು ನೀ ಕೊಲಲೆಳಸುವರೆ ಹಗೆ
ಯಲ್ಲಿಗೊಪ್ಪಿಸಿ ಕೊಲಿಸಲೇತಕೆ
ಬಿಲ್ಲಿನಲಿ ಬಡಿದಡ್ಡಗೆಡಹುವೆನೆಂದನಾ ಕರ್ಣ ॥36॥
೦೩೭ ಹಾ ನುಡಿಯದಿರು ...{Loading}...
ಹಾ ನುಡಿಯದಿರು ನಿನ್ನ ಹವಣಿನ
ಮಾನಿಸನೆ ಸುರಸಿಂಧುಜನು ತಾ
ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ
ನೀನು ಸರಿಯೇ ರಾಮಕಟಕದ
ಹಾನಿಯನು ತಲೆಗಾಯ್ದ ಜಾಂಬವ
ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ್ಯ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಕರ್ಣನೇ ಸಾಕು ಮಾತಾಡಬೇಡ. ದೇವಗಂಗೆಯ ಪುತ್ರನಾದ ಭೀಷ್ಮನು ನಿನ್ನ ಸಾಹಸಕ್ಕೆ ತಕ್ಕ ವ್ಯಕ್ತಿಯೆಂದು ತಿಳಿದೆಯಾ ? ನೀನು ಪ್ರಾಯದ ಅಧಿಕ ಕೊಬ್ಬಿನಿಂದ ವಿಶೇಷವಾಗಿ ಮುಂದಾಗುವುದನ್ನು ತಿಳಿಯಲಾರೆ. ನೀನು ಈ ಭೀಷ್ಮನಿಗೆ ಸಮಾನನೇ ? ರಾಮಸೇನೆಗೆ ಒದಗಿದ ಕೇಡನ್ನು ತಪ್ಪಿಸಿ ತಲೆ ಉಳಿಸಿದ ಜಾಂಬವನ ಶೌರ್ಯದಲ್ಲಿ ಏನು ಕೊರತೆಯಿತ್ತು ? ಈ ರೀತಿಯಾಗಿ ಹೇಳುತ್ತಾ ದ್ರೋಣನು ಕರ್ಣನನ್ನು ದೂಷಿಸಿದನು.
ಪದಾರ್ಥ (ಕ.ಗ.ಪ)
ಸಿಂಧುಜನು-ಭೀಷ್ಮ, ಹವಣಿನ-ಸಾಹಸಕ್ಕೆ ತಕ್ಕ, ಜವ್ವನ-ಪ್ರಾಯ, ಉಬ್ಬುಗೊಬ್ಬುನಲಿ-ಅತಿ ಅಹಂಕಾರದಿಂದ, ರಾಮ ಕಟಕ-ರಾಮಸೇನೆ
ಟಿಪ್ಪನೀ (ಕ.ಗ.ಪ)
ಜಾಂಬವ ಶಲ್ಯನು ಮದ್ರದೇಶದ ಒಡೆಯ. ಅವನ ತಂಗಿ ಮಾದ್ರಿ ಪಾಂಡುವನ್ನು ಮದುವೆಯಾಗಿದ್ದರಿಂದ ಪಾಂಡವರಿಗೆ ಇವನು ಮಾವನಾಗಬೇಕು. ಈತನಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿರುವುದು ಮಹಾಭಾರತ ಯುದ್ಧದ ಸಮಯದಲ್ಲಿ. ಪಾಂಡವರು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ಕಳಿಸಿದ್ದರು.
ಮೂಲ ...{Loading}...
ಹಾ ನುಡಿಯದಿರು ನಿನ್ನ ಹವಣಿನ
ಮಾನಿಸನೆ ಸುರಸಿಂಧುಜನು ತಾ
ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ
ನೀನು ಸರಿಯೇ ರಾಮಕಟಕದ
ಹಾನಿಯನು ತಲೆಗಾಯ್ದ ಜಾಂಬವ
ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ್ಯ ॥37॥
೦೩೮ ರಣದೊಳೊಡ್ಡಿದರಾತಿಗಳನೀ ಹಣೆಯ ...{Loading}...
ರಣದೊಳೊಡ್ಡಿದರಾತಿಗಳನೀ
ಹಣೆಯ ಪಟ್ಟದ ವೀರ ಜಯಿಸಲು
ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ
ರಣದೊಳಿವನಡಗೆಡೆದನಾದರೆ
ಮಣಿಯದಿರಿದಪೆನನ್ನೆಬರ ಮಾ
ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣೆಯಲ್ಲಿ ವೀರಪಟ್ಟವನ್ನು ಧರಿಸಿರುವ ಭೀಷ್ಮರು ಯುದ್ಧರಂಗದಲ್ಲಿ ಸಿದ್ಧರಾಗಿ ಇದಿರಿಸುವ ಹಗೆಗಳನ್ನು ಜಯಿಸಿದರೆ, ಆಗ ನಾನು ಹಣಕ್ಕಾಗಿ ಕೌರವನ ಸೇವೆ ಮಾಡಿಕೊಂಡಿರುವುದಿಲ್ಲ. ಕಾಡಿನಲ್ಲಿ ತಪಸ್ಸು ಮಾಡಲು ಹೋಗುತ್ತೇನೆ. ಇವರು ರಣರಂಗದಲ್ಲಿ ಕೆಳಗೆ ಬಿದ್ದು ಸತ್ತರೆ, ಸೋಲದೆ ಶತ್ರುಗಳನ್ನು ತಿವಿದು ಸಾಯಿಸುವೆ. ಅಲ್ಲಿಯವರೆಗೆ ಯುದ್ಧದಲ್ಲಿ ಬಾಣಗಳನ್ನು ಹೂಡುವುದಿಲ್ಲ ಎಂಬುದಾಗಿ ಕರ್ಣನು ಆ ಸಭೆಯಲ್ಲಿ ಸಿಟ್ಟುಗೊಂಡು ಪ್ರತಿಜ್ಞೆ ಮಾಡಿದನು.
ಪದಾರ್ಥ (ಕ.ಗ.ಪ)
ಹಣವಿಗೆ-ಹಣಕ್ಕಾಗಿ, ಓಲೈಸೆ-ಸೇವಿಸುವುದಿಲ್ಲ, ಅಡೆಗೆಡೆದನಾದರೆ-ಕೆಳಗೆ ಬಿದ್ದು ಸತ್ತರೆ, ಅನ್ನೆಬರ-ಅದುವರೆಗೆ, ಸಂಧಿಸೆನು-ಹೂಡುವುದಿಲ್ಲ.
ಮೂಲ ...{Loading}...
ರಣದೊಳೊಡ್ಡಿದರಾತಿಗಳನೀ
ಹಣೆಯ ಪಟ್ಟದ ವೀರ ಜಯಿಸಲು
ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ
ರಣದೊಳಿವನಡಗೆಡೆದನಾದರೆ
ಮಣಿಯದಿರಿದಪೆನನ್ನೆಬರ ಮಾ
ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ ॥38॥
೦೩೯ ಗಳಹದಿರು ರಾಧೇಯ ...{Loading}...
ಗಳಹದಿರು ರಾಧೇಯ ನಿನ್ನಯ
ಕುಲವ ನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಧೆಯೆಂಬ ಬೆಸ್ತಗಿತ್ತಿಯ ಮಗನೇ, ಬಾಯಿಗೆ ಬಂದಂತೆ ಮಾತನಾಡಬೇಡ ನಿನ್ನ ವಂಶದ ಬಗ್ಗೆ ಚಿಂತಿಸದೆ ಒಡೆಯ ಕೌರವ ನೀಡಿದ ಸಿರಿಯ ಅತಿಶಯದಿಂದಾಗಿ ಹದ್ದು ಮೀರಿ ಮಾತಾಡುವ ಸಲಿಗೆ ಇದಾಗಿದೆ ಅಲ್ಲವೇ ? ಉಳಿದ ಶೂರರ ವಿಚಾರ ಹಾಗಿರಲಿ, ದೇವತೆಗಳಲ್ಲಿ, ರಾಕ್ಷಸರಲ್ಲಿ ನನ್ನ ಸಮಕ್ಕೆ ಸಾಮಥ್ರ್ಯದಲ್ಲಿ ಇದಿರಿಸಿ ನಿಲ್ಲುವನು ಯಾರಿದ್ದಾನೆ ? ನಿನ್ನಂಥ ನಿಷ್ಪ್ರಯೋಜಕರಲ್ಲಿ ಹೇಳಿ ಫಲವೇನು ? ಎಂಬುದಾಗಿ ಕರ್ಣನನ್ನು ಭೀಷ್ಮನು ಧಿಕ್ಕರಿಸಿ ಮೂದಲಿಸಿದ.
ಪದಾರ್ಥ (ಕ.ಗ.ಪ)
ಸಗಾಢತನ-ಅತಿಶಯ, ಸ್ವಾಮಿಸಂಪತ್ತು-ದುರ್ಯೋಧನನ ಸಿರಿ, ಸರಿಸಕ್ಕೆ-ಸಮಕ್ಕೆ, ಮೇರೆದಪ್ಪುವ-ಹದ್ದು ಮೀರುವ,
ಮೂಲ ...{Loading}...
ಗಳಹದಿರು ರಾಧೇಯ ನಿನ್ನಯ
ಕುಲವ ನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ ॥39॥
೦೪೦ ಕೇಳು ಕೃಪ ...{Loading}...
ಕೇಳು ಕೃಪ ಕೇಳೈ ಜಯದ್ರಥ
ಕೇಳು ಗುರುಸುತ ಶಲ್ಯ ಕುಂಭಜ
ಕೇಳು ದುಶ್ಯಾಸನ ವಿಕರ್ಣ ಸುಲೋಚನಾದಿಗಳು
ಕಾಳೆಗದೊಳರಿ ದಶಸಹಸ್ರ ನೃ
ಪಾಲಕರ ಮಣಿಖಚಿತನಿರ್ಮಲ
ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪನೇ ಕೇಳು, ಜಯದ್ರಥನೇ ಆಲಿಸು. ದುಶ್ಶಾಸನನೇ, ವಿಕರ್ಣನೇ ಶಲ್ಯ ದ್ರೋಣರೇ ಕೇಳಿರಿ. ಪ್ರತಿದಿನವೂ ಯುದ್ಧರಂಗದಲ್ಲಿ ರತ್ನಮಯ ತೇಜೋವಂತ ಕಿರೀಟಗಳನ್ನು ಧರಿಸಿರುವ (ಪಟ್ಟಾಭಿಷಕ್ತರಾದ) ಹಗೆಗಳಾದ ಹತ್ತು ಸಾವಿರ ರಾಜರುಗಳನ್ನು ದಿಗ್ದೇವತೆಗಳಿಗೆ ಬಲಿಕೊಡುವೆನು.
ಮೂಲ ...{Loading}...
ಕೇಳು ಕೃಪ ಕೇಳೈ ಜಯದ್ರಥ
ಕೇಳು ಗುರುಸುತ ಶಲ್ಯ ಕುಂಭಜ
ಕೇಳು ದುಶ್ಯಾಸನ ವಿಕರ್ಣ ಸುಲೋಚನಾದಿಗಳು
ಕಾಳೆಗದೊಳರಿ ದಶಸಹಸ್ರ ನೃ
ಪಾಲಕರ ಮಣಿಖಚಿತನಿರ್ಮಲ
ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ ॥40॥
೦೪೧ ಹರಿಯ ಚಕ್ರವ ...{Loading}...
ಹರಿಯ ಚಕ್ರವ ತುಡುಕಿಸುವೆ ವಾ
ನರಪತಾಕನ ರಥವ ಹಿಂದಕೆ
ಮುರಿಯಲಿಸುವೆನು ಮಹಿಮರಿಬ್ಬರ ನಡೆವಳಿಯ ಕೆಡಿಸಿ
ಸುರನರೋರಗರೊಳಗೆ ಮೀಟಾ
ದರಿಗೆ ಕಟ್ಟಿದ ತೊಡರು ಇವನು
ಬ್ಬರಿಸಿ ನುಡಿದರೆ ನೊರಜ ಕೊಲುವರೆ ಕೈದುವೇಕೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೇನೆಯಲ್ಲಿ ಮಹಾಸಾಹಸಿಗಳಾದ ಕೃಷ್ಣಾರ್ಜುನರ ಯುದ್ಧದ ರೀತಿನೀತಿಗಳನ್ನು ನಾಶಮಾಡಿ, ಶ್ರೀಕೃಷ್ಣನ ಕೈಯಲ್ಲಿ ಚಕ್ರಾಯುಧವನ್ನು ಹಿಡಿಸುವೆನು. ಕಪಿ ಧ್ವಜನಾದ ಅರ್ಜುನನ ರಥವನ್ನು ಹಿಂದಕ್ಕೆ ತಿರುಗಿ ಹೋಗುವಂತೆ ಬಾಣಗಳ ಸುರಿಮಳೆ ಸುರಿಸುವೆನು. ಸ್ವರ್ಗದ ದೇವತೆಗಳಲ್ಲಿ, ಭೂಲೋಕದ ಮಾನವರಲ್ಲಿ, ಪಾತಾಳಲೋಕದ ನಾಗರಲ್ಲಿ ಅಧಿಕಶೂರರಾದವರಿಗೆ ಸಾಹಸ ತೋರಿಸಲು ಪಣತೊಟ್ಟ ಬಿರುದಿನ ಪೆಂಡೆಯ ಧರಿಸಿದ್ದೇನೆ. ಇನ್ನು, ಈ ಕರ್ಣನು ಮಿತಿಮೀರಿ ಮಾತನಾಡಿದರೆ ಗುಂಗಾಡಿ (ನೊರಜು) ಯಂತಿರುವ ಇವನನ್ನು ಕೊಲ್ಲಲು ಆಯುಧವೇಕೆ ಎಂದು ಕರ್ಣನನ್ನು ಭೀಷ್ಮನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ನಡೆವಳಿ-ಯುದ್ಧ ವ್ಯಾಪಾರ, ಮೀಟಾದರಿಗೆ ಕಟ್ಟಿದ ತೊಡರು-ಸವಾಲಾಗಿ ಸಾಹಸ ತೋರಿದವರೆಗೆ ಬುದ್ಧಿ ಕಲಿಸಲು ಧರಿಸಿದ ಬಿರುದಿನ ಬಳೆ, ನೊರಜು-ಗುಂಗಾಡಿ, ಸಣ್ಣಸೊಳ್ಳೆ, ಕೈದು-ಆಯುಧ, ಉಬ್ಬರಿಸಿ-ಹದ್ದು ಮೀರಿ.
ಮೂಲ ...{Loading}...
ಹರಿಯ ಚಕ್ರವ ತುಡುಕಿಸುವೆ ವಾ
ನರಪತಾಕನ ರಥವ ಹಿಂದಕೆ
ಮುರಿಯಲಿಸುವೆನು ಮಹಿಮರಿಬ್ಬರ ನಡೆವಳಿಯ ಕೆಡಿಸಿ
ಸುರನರೋರಗರೊಳಗೆ ಮೀಟಾ
ದರಿಗೆ ಕಟ್ಟಿದ ತೊಡರು ಇವನು
ಬ್ಬರಿಸಿ ನುಡಿದರೆ ನೊರಜ ಕೊಲುವರೆ ಕೈದುವೇಕೆಂದ ॥41॥
೦೪೨ ಜಲಧಿಯುಬ್ಬಿದವೊಲು ಸಭಾಮಂ ...{Loading}...
ಜಲಧಿಯುಬ್ಬಿದವೊಲು ಸಭಾಮಂ
ಡಲಿಯ ಸೌಹೃದವಾಗ್ವಿವಾದದ
ಕಳಕಳಿಕೆ ದಿಗುತಟವ ಗಬ್ಬರಿಸಿದುದು ಗಾಢದಲಿ
ಕೆಲರು ಭೀಷ್ಮನನಿನತನೂಜನ
ಕೆಲರು ಕೊಂಡಾಡಿದರು ಕೌರವ
ನಳುಕಿ ಭೀಷ್ಮನ ಬೇಡಿಕೊಂಡನು ವಿನಯಪರನಾಗಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಮಿತ್ರರಿಗೂ ಭೀಷ್ಮನ ಮಿತ್ರರಿಗೂ ಇಬ್ಬರಿಗೂ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಅದು ಸಾಗರ ಉಕ್ಕಿದಂತೆ ದಟ್ಟವಾಗಿ ಎಲ್ಲ ದಿಕ್ಕುಗಳನ್ನು ವ್ಯಾಪಿಸಿತು. ಆಗ ಭೀಷ್ಮನನ್ನು ಕೆಲವರು ಕೊಂಡಾಡಿದರು. ಮತ್ತೆ ಕೆಲವರು ಕರ್ಣನನ್ನು ಕೊಂಡಾಡತೊಡಗಿದರು. ಸಭೆ ಇಬ್ಭಾಗವಾಯಿತು. ಅದನ್ನು ಕಂಡು ಅಂಜಿದ ದುರ್ಯೋಧನನು ವಿನಯಪರನಾಗಿ ಭೀಷ್ಮನಲ್ಲಿ ಸಿಟ್ಟನ್ನು ಬಿಡಬೇಕೆಂದು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಸೌಹೃದ ವಾಗ್ವಿವಾದ-ಮಿತ್ರರ ನಡುವೆ ನಡೆದ ಚರ್ಚೆ, ಗಬ್ಬರಿಸಿದುದು-ವ್ಯಾಪಿಸಿತು, ಭೇದಿಸಿತು, ಅತಿಕ್ರಮಿಸಿತು,
ಮೂಲ ...{Loading}...
ಜಲಧಿಯುಬ್ಬಿದವೊಲು ಸಭಾಮಂ
ಡಲಿಯ ಸೌಹೃದವಾಗ್ವಿವಾದದ
ಕಳಕಳಿಕೆ ದಿಗುತಟವ ಗಬ್ಬರಿಸಿದುದು ಗಾಢದಲಿ
ಕೆಲರು ಭೀಷ್ಮನನಿನತನೂಜನ
ಕೆಲರು ಕೊಂಡಾಡಿದರು ಕೌರವ
ನಳುಕಿ ಭೀಷ್ಮನ ಬೇಡಿಕೊಂಡನು ವಿನಯಪರನಾಗಿ ॥42॥
೦೪೩ ಬೀಳುಕೊಣ್ಡುದು ರಜನಿ ...{Loading}...
ಬೀಳುಕೊಂಡುದು ರಜನಿ ಮರುದಿನ
ವಾಳು ಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿ ಕಳೆಯಿತು. ಮಾರನೇದಿನ ದುರ್ಯೋಧನನು ವೀರರನ್ನೂ ಅಶ್ವಗಳನ್ನೂ ಒಗ್ಗೂಡಿಸಿ ಸುಲಗ್ನದಲ್ಲಿ ಊರ ಹೊರಗಡೆ ಡೇರೆ ಹಾಕಿಸಿ ಬಾವುಟ ಏರಿಸಿದನು. ಅಸಂಖ್ಯಾತ ರಣಭೇರಿಗಳು ಮೇಲಿಂದ ಮೇಲೆ ಬಾರಿಸಲ್ಪಟ್ಟವು. ಸಮಸ್ತರಾಜಾಧಿರಾಜರು ಅಪಾರ ಚತುರಂಗ ಸೇನೆಯೊಂದಿಗೆ ಪ್ರಯಾಣ ಮಾಡಿದರು.
ಮೂಲ ...{Loading}...
ಬೀಳುಕೊಂಡುದು ರಜನಿ ಮರುದಿನ
ವಾಳು ಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು ॥43॥
೦೪೪ ವೀರ ಧೃತರಾಷ್ಟ್ರಙ್ಗೆ ...{Loading}...
ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ದುರ್ಯೋಧನನು ಯುದ್ಧಕ್ಕೆ ಸಿದ್ಧನಾಗಿ, ಧೃತರಾಷ್ಟ್ರನಿಗೂ ಗಾಂಧಾರಿಗೂ ನಮಸ್ಕಾರ ಮಾಡಿದನು. ಬ್ರಾಹ್ಮಣರಿಗೆ ನಮಿಸಿ ಅವರ ಅನಂತ ಆಶೀರ್ವಾದಗಳನ್ನು ಪಡೆದನು. ಚಾಮರ ಪರಿವಾರದವರು ಚಾಮರ ಬೀಸುತ್ತಿರಲು ಜಯಕಾರದ ರಭಸ ಎಲ್ಲೆಡೆಗೆ ವ್ಯಾಪಿಸಲು ಅರಮನೆಯಿಂದ ಬೀಳ್ಕೊಂಡು ಹೊರಬಿದ್ದನು.
ಮೂಲ ...{Loading}...
ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ ॥44॥
೦೪೫ ಒಡನೊಡನೆ ಕರಿತುರಗವೇರಿದ ...{Loading}...
ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವು ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನÉೂಡನೆ ಹುಟ್ಟಿದ ನೂರು ಮಂದಿ ಸೋದರರು ಕರ್ಣ, ಶಕುನಿ, ಜಯದ್ರಥ ಮೊದಲಾದವರೂ ಅಂತರಂಗದ ಮಿತ್ರ ಪರಿವಾರವೂ ಒಟ್ಟೊಟ್ಟಿಗೆ ಆನೆ ಕುದುರೆಗಳನ್ನು ಏರಿ ಹೊರಟರು. ಚಾಮರಗಳು ಆಕಾಶವನ್ನು ಆವರಿಸಿದವು, ವಾದ್ಯಗಳು ಮೊಳಗಿದವು, ಪ್ರಳಯ ಕಾಲದ ಪ್ರಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ಮಾಡುತ್ತಾ ಸೇನೆ ಸಾಗಲು ದುರ್ಯೋಧನನು ಹಸ್ತಿನಾಪುರ ಬಿಟ್ಟು ತೆರಳಿದನು.
ಮೂಲ ...{Loading}...
ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವು ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ ॥45॥
೦೪೬ ಭುಗುಭುಗಿಪ ಚಮ್ಬಕನ ...{Loading}...
ಭುಗುಭುಗಿಪ ಚಂಬಕನ ಗಜಕೋ
ಟಿಗಳ ಮುಂದಣ ಡೌಡೆಗಳ ಭೂ
ಗಗನವೊಡನೊಡನೊದರೆ ಮೊರೆವ ಗಭೀರಭೇರಿಗಳ
ಅಗಿವ ಪಟಹ ಮೃದಂಗ ಕಹಳಾ
ದಿಗಳ ಕಳಕಳ ರಭಸ ದಶದಿ
ಕ್ಕುಗಳ ಮಾತಾಡಿಸೆ ಮಹಾಬಲ ತೆರಳಿತಿಭಪುರಿಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭುಗುಭುಗು ಎಂದು ಶಬ್ದ ಮಾಡುವ ಚಂಬಕವಾದ್ಯಗಳು, ಅಸಂಖ್ಯಾತ ಗಜಸೇನೆಯ ಮುಂದಿದ್ದ ಡೌಡೆ ವಾದ್ಯಗಳು. ಆಕಾಶ ಭೂಮಿ ಎರಡರಲ್ಲೂ ಒಟ್ಟಿಗೆ ಪ್ರತಿಧ್ವನಿಸುವ, ಒದರುತ್ತಿರುವ ಪಟಹವೆಂಬ ನಗಾರಿ, ಮೃದಂಗ, ಕಹಳೆ ಮೊದಲಾದ ಕರ್ಣ ವಾದ್ಯಗಳ ರಭಸದ ಕಲಕಲರವ ಹತ್ತುದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತಿದ್ದಂತೆ ಹಸ್ತಿನ ಪುರಿಯ ಸೇನೆ ಮುಂದಕ್ಕೆ ಚಲಿಸಿತು.
ಪದಾರ್ಥ (ಕ.ಗ.ಪ)
ಭುಗುಭುಗು ಎಂದು ಶಬ್ದ ಮಾಡುವ (ಅನುಕರಣಾವ್ಯಯ) ಚಂಬಕ (ಚರ್ಮವಾದ್ಯ) ಡೌಡೆ (ನಗಾರಿ ಢಕ್ಕೆ) ಅಗಿವ-ಕಂಪಿಸುವ ಒದಗುವ,
ಇಭಪುರಿ-ಹಸ್ತಿನಾವತಿ
ಟಿಪ್ಪನೀ (ಕ.ಗ.ಪ)
ದಶದಿಕ್ಕುಗಳು,
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ, ಮೇಲೆ, ಕೆಳಗೆ,
ಮೂಲ ...{Loading}...
ಭುಗುಭುಗಿಪ ಚಂಬಕನ ಗಜಕೋ
ಟಿಗಳ ಮುಂದಣ ಡೌಡೆಗಳ ಭೂ
ಗಗನವೊಡನೊಡನೊದರೆ ಮೊರೆವ ಗಭೀರಭೇರಿಗಳ
ಅಗಿವ ಪಟಹ ಮೃದಂಗ ಕಹಳಾ
ದಿಗಳ ಕಳಕಳ ರಭಸ ದಶದಿ
ಕ್ಕುಗಳ ಮಾತಾಡಿಸೆ ಮಹಾಬಲ ತೆರಳಿತಿಭಪುರಿಯ ॥46॥
೦೪೭ ಅಗಿವ ವಜ್ರದ ...{Loading}...
ಅಗಿವ ವಜ್ರದ ಹೊಳೆಕೆಗಳೊ ದಿಟ
ಹಗಲ ತಗಡೋ ಮೇಣು ಮಿಂಚಿನ
ಬಗೆಯ ಸೆಕ್ಕೆಯೊ ಸೂರ್ಯಕಾಂತಚ್ಛವಿಯ ತೆಕ್ಕೆಗಳೊ
ಜಗುಳಿದೊರೆಗಳ ಜಾಳಿಗೆಯ ಹೊಗ
ರೊಗಲು ಝಳಪಿಸೆ ಹೊಳೆಹೊಳೆವ ಕೈ
ದುಗಳ ಹಬ್ಬುಗೆವೆಳಗು ಗಬ್ಬರಿಸಿದುದು ದಿಗುತಟವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಥಳಿಥಳಿಸುವ ವಜ್ರದ ತುಣುಕುಗಳೋ, ಹಗಲಲ್ಲಿ ಹೊಳೆವ ರೇಕುಗಳೋ ಮಿಂಚಿನ ಚೂರುಗಳೋ, ಸೂರ್ಯಕಾಂತ ಶಿಲೆಗಳಿಂದ ಹೊರಹೊಮ್ಮಿದ ಕಾಂತಿಯ ಪದರಗಳೋ ಎಂಬಂತೆ ಒರೆಗಳಿಂದ ಕಳಚಿ ಝಳಪಿಸಿದ ಬಗೆಬಗೆಯ ಆಯುಧಗಳ ಪ್ರಕಾಶಮಾನವಾದ ಕಾಂತಿ ದಿಕ್ಕುಗಳನ್ನೆಲ್ಲಾ ಆವರಿಸಿತು.
ಪದಾರ್ಥ (ಕ.ಗ.ಪ)
ಅಗಿವ-ಥಳಿಥಳಿಸುವ, ಹೊಳಕೆಗಳೊ-ಕಾಂತಿಯೋ, ತುಣುಕುಗಳೋ, ತಗಡೋ-ರೇಖೆಗಳೊ, ತೆಕ್ಕೆ-ಚೆಕ್ಕೆ, ಜಗುಳಿದ-ಕಳಚಿದ,
ಮೂಲ ...{Loading}...
ಅಗಿವ ವಜ್ರದ ಹೊಳೆಕೆಗಳೊ ದಿಟ
ಹಗಲ ತಗಡೋ ಮೇಣು ಮಿಂಚಿನ
ಬಗೆಯ ಸೆಕ್ಕೆಯೊ ಸೂರ್ಯಕಾಂತಚ್ಛವಿಯ ತೆಕ್ಕೆಗಳೊ
ಜಗುಳಿದೊರೆಗಳ ಜಾಳಿಗೆಯ ಹೊಗ
ರೊಗಲು ಝಳಪಿಸೆ ಹೊಳೆಹೊಳೆವ ಕೈ
ದುಗಳ ಹಬ್ಬುಗೆವೆಳಗು ಗಬ್ಬರಿಸಿದುದು ದಿಗುತಟವ ॥47॥
೦೪೮ ಜಲಧಿಗಳ ಕುಡಿದುದು ...{Loading}...
ಜಲಧಿಗಳ ಕುಡಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದಾತಿ ಸೇನೆಯ ಸಂಚಾರದಿಂದ ಮೇಲೆದ್ದ ಧೂಳು ಸಾಗರಗಳನ್ನೆಲ್ಲ ನುಂಗಿತು, ಆಕಾಶವನ್ನೆಲ್ಲ ಸೆಳೆಯಿತು. ಗಂಗೆಯನ್ನೇ ಮುಕ್ಕುಳಿಸಿತು. ಎಲ್ಲ ಪರ್ವತಗಳನ್ನು ಕಬಳಿಸಿತು, ಸ್ವರ್ಗವನ್ನೇ ಅಂಜಿಸಿತು. ಭೂಲೋಕವನ್ನೇ ಕುಂದಿಸಿತು. ಸೂರ್ಯನ ಕಣ್ಣುಗಳನ್ನೇ ಕುಕ್ಕಿತು ನೆನೆಯಲು ಅಶಕ್ಯವೆನಿಸಿತು, ಬ್ರಹ್ಮನೇ ಹರನಾದನು ಎನ್ನುವಂತಾಯಿತು.
ಪದಾರ್ಥ (ಕ.ಗ.ಪ)
ಉಚ್ಚಳಿಸೆ-ಕಾಲ್ತುಳಿತದಿಂದ ಮೇಲೆದ್ದ, ಕದುಕಿತು-ಕುಕ್ಕಿತು, ನಳಿನಭವ-ಬ್ರಹ್ಮ,
ಮೂಲ ...{Loading}...
ಜಲಧಿಗಳ ಕುಡಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ ॥48॥
೦೪೯ ಸುರಿವ ಗಜಮದಧಾರೆಯಲಿ ...{Loading}...
ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರ ಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಮದಜಲದ ಪ್ರವಾಹ ಹರಿದು ಹೊಸಸಾಗರಗಳು ಉದ್ಭವಿಸಿದವು. ರಾಜರ ಕಿರೀಟದ ರತ್ನಗಳಲ್ಲಿ ಸೂರ್ಯಚಂದ್ರರು ಕಾಣಿಸಿದರು. ಆನೆಗಳಲ್ಲಿ ಪರ್ವತಗಳು ಕಾಣಿಸಿದವು. ಛತ್ರ ಚಾಮರಗಳಲ್ಲಿ ಪ್ರತಿ ಭೂಮಂಡಲವೇ ಹುಟ್ಟಿತು. ಅರರೇ ! ಬ್ರಹ್ಮನ ಸೃಷ್ಟಿಯಲ್ಲಿ ಹೊಸ ನಿರ್ಮಾಣವೇ ಆಯಿತು.
ಪದಾರ್ಥ (ಕ.ಗ.ಪ)
ಶರಧಿ-ಸಾಗರ, ದಂತಿ-ಆನೆ, ಪಡಿಧರಣಿ-ಪ್ರತಿಭೂಮಂಡಲ, ವಿರಿಂಚಸೃಷ್ಟಿ-ಬ್ರಹ್ಮನ ಸೃಷ್ಟಿ
ಮೂಲ ...{Loading}...
ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರ ಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ ॥49॥
೦೫೦ ಅರರೆ ನಡೆದುದು ...{Loading}...
ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಫಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ ! ಎರಡು ಕುಲಪರ್ವತಗಳು ಕೂರ್ಮ, ಆದಿಶೇಷ ಇಬ್ಬಿಬ್ಬರು, ಹದಿನಾರು ದಿಗ್ಗಜಗಳು ಅಳವಡಿಸಿ ಬ್ರಹ್ಮನು ಸೃಷ್ಟಿ ಮಾಡದೆ ಇದ್ದರೆ ಈ ಭಾರವನ್ನು ಭೂಮಿ ಧರಿಸಲು ಶಕ್ತವಾದೀತೆ ? ಎನ್ನುವಂತೆ ಕೌರವಸೇನೆ ಸಾಗಿತು. ಪಯಣದ ಮೇಲೆ ಪಯಣ ಮಾಡಿ ಕುರುಕ್ಷೇತ್ರಕ್ಕೆ ಬಂದಿತು.
ಪದಾರ್ಥ (ಕ.ಗ.ಪ)
ಕೂರ್ಮ-ಆಮೆ, ಫಣಿಪ-ಆದಿಶೇಷ, ದಿಶಾಮಾತಂಗ-ಅಷ್ಟದಿಗ್ಗಜಗಳು, ಸರಸಿಜೋದ್ಭವ-ಬ್ರಹ್ಮ, ಧರಣಿ-ಭೂಮಿ, ಕುರುಧರೆ-ಕುರುಕ್ಷೇತ್ರ
ಮೂಲ ...{Loading}...
ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಫಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ ॥50॥
೦೫೧ ನಡೆದು ಬನ್ದುದು ...{Loading}...
ನಡೆದು ಬಂದುದು ಕೌರವೇಂದ್ರನ
ಪಡೆ ಕುರುಕ್ಷೇತ್ರಕ್ಕೆ ಮೂಡಣ
ಕಡೆಯಲಳವಡಿಸಿದರು ಬೀಡಾಯಿತ್ತು ವಹಿಲದಲಿ
ಗುಡಿಗಳನು ಬಿಡಿಸಿದರು ಲೋಹದ
ತಡಿಕೆಗಳನಳವಡಿಸಿ ಬೀಡಿನ
ನಡುವೆ ರಚಿಸಿದರವನಿಪಾಲನ ರಾಜಮಂದಿರವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಕ್ಷೇತ್ರದ ಪೂರ್ವ ದಿಕ್ಕಿನಲ್ಲಿ ಬೀಡುಬಿಟ್ಟರು. ಗುಡಾರಗಳನ್ನು ನಿರ್ಮಿಸಿದರು. ಲೋಹದ ತಗಡುಗಳನ್ನು ಹೊಂದಿಸಿ ಬೀಡಿನ ನಡುವೆ ದುರ್ಯೋಧನನ ಶಿಬಿರವನ್ನು ನಿರ್ಮಿಸಿದರು.
ಪಾಠಾನ್ತರ (ಕ.ಗ.ಪ)
‘ಬಿಡಿಸಿದರು’ ಎಂಬ ಪಾಠಕ್ಕೆ ಬದಲು ಡಿ.ಎಲ್.ಎನ್. ಓರಿಯಂಟಲ್ ಮುದ್ರಣದಲ್ಲಿ ಬೀಸಿದರು ಎಂಬ ಪಾಠ ಕೊಟ್ಟಿದ್ದಾರೆ.
ಮೂಲ ...{Loading}...
ನಡೆದು ಬಂದುದು ಕೌರವೇಂದ್ರನ
ಪಡೆ ಕುರುಕ್ಷೇತ್ರಕ್ಕೆ ಮೂಡಣ
ಕಡೆಯಲಳವಡಿಸಿದರು ಬೀಡಾಯಿತ್ತು ವಹಿಲದಲಿ
ಗುಡಿಗಳನು ಬಿಡಿಸಿದರು ಲೋಹದ
ತಡಿಕೆಗಳನಳವಡಿಸಿ ಬೀಡಿನ
ನಡುವೆ ರಚಿಸಿದರವನಿಪಾಲನ ರಾಜಮಂದಿರವ ॥51॥
೦೫೨ ಅಳವಿ ನಾಲ್ವತ್ತೆಣ್ಟರೊಳಗಿ ...{Loading}...
ಅಳವಿ ನಾಲ್ವತ್ತೆಂಟರೊಳಗಿ
ಟ್ಟಳಿಸಿ ಬಿಟ್ಟುದು ಸೇನೆ ಕೋಟಾ
ವಳಯವಗಳಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು
ಕೆಲದೊಳೊಪ್ಪುವ ಭೋಗವತಿ ನಿ
ರ್ಮಲ ಗಭೀರೋದಕದ ನದಿ ಕುರು
ಬಲದ ಪಾಳಯದಂಗವಿದು ಕೇಳೈ ಮಹೀಪಾಲ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಲವತ್ತೆಂಟು ಯೋಜನದ ವ್ಯಾಪ್ತಿಯಲ್ಲಿ (ಅಳತೆಯಲ್ಲಿ) ಕೌರವ ಸೇನೆ ದಟ್ಟವಾಗಿ ಬೀಡು ಬಿಟ್ಟಿತು. ಕೋಟೆಯ ಪ್ರದೇಶದಲ್ಲಿ ಅಲ್ಲಲ್ಲಿ ಸುತ್ತಲೂ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ನೆಡುತ್ತಿದ್ದರು. ಅದರ ಸುತ್ತಲೂ ಮುಳ್ಳಿನ ಬೇಲಿ ಬಿಗಿಯುತ್ತಿದ್ದರು. ಈ ಮುಳ್ಳು ಬೇಲಿಗಳ ನಡುವೆ ಬಾಗಿಲುಗಳಿರುತ್ತಿದ್ದವು. ಬಳಿಯಲ್ಲೇ ಸೊಗಸಾದ ಭೋಗವತಿ ನದಿಯ ನಿರ್ಮಲ ಜಲ ಗಂಭೀರದನಿಯಲ್ಲಿ ಹರಿಯುತ್ತಿತ್ತು. ಈ ರೀತಿ ಕುರುಸೇನೆ ಬೀಡಿನ ಭಾಗ ಮೆರೆಯುತ್ತಿತ್ತು ಎಂದು ವೈಶಂಪಾಯನನು ಜನಮೇಜಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
- ಭೋಗವತಿ ನದಿ ?
ಟಿಪ್ಪನೀ (ಕ.ಗ.ಪ)
ತಳಿ ಮುಳುವೇಲಿ-ಶತ್ರುಗಳಿಂದ ತೊಂದರೆ ಉಂಟಾಗದಿರಲು ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ನೆಡುತ್ತಿದ್ದರು.
ಇದೇ ‘ತಳಿ’ . ಇದರ ಸುತ್ತಲೂ ಮುಳ್ಳಿನ ಬೇಲಿ ಬಿಗಿಯುತ್ತಿದ್ದರು.
(ಕನ್ನಡ ಕಾವ್ಯಗಳಲ್ಲಿ ಸಮರ ಚಿತ್ರಗಳು : ಡಾ.ಕೆ. ಶ್ರೀಕಂಠಯ್ಯ)
ಮೂಲ ...{Loading}...
ಅಳವಿ ನಾಲ್ವತ್ತೆಂಟರೊಳಗಿ
ಟ್ಟಳಿಸಿ ಬಿಟ್ಟುದು ಸೇನೆ ಕೋಟಾ
ವಳಯವಗಳಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು
ಕೆಲದೊಳೊಪ್ಪುವ ಭೋಗವತಿ ನಿ
ರ್ಮಲ ಗಭೀರೋದಕದ ನದಿ ಕುರು
ಬಲದ ಪಾಳಯದಂಗವಿದು ಕೇಳೈ ಮಹೀಪಾಲ ॥52॥
೦೫೩ ಪಡೆಯ ಮುಙ್ಗುಡಿ ...{Loading}...
ಪಡೆಯ ಮುಂಗುಡಿ ಭೀಷ್ಮನದು ಬಲ
ನೆಡನು ಪಿಂಗುಡಿಯಾತನದು ನೃಪ
ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ
ನಡೆವಡಾತನ ನೇಮ ಮರಳಿದು
ಬಿಡುವಡಾತನ ಮಾತು ಕೌರವ
ಪಡೆಗೆ ಭಾರಿಯ ವಜ್ರ ಪಂಜರವಾದನಾ ಭೀಷ್ಮ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವಸೇನೆಯ ಮುಂಭಾಗದ ರಕ್ಷಣೆ ಭೀಷ್ಮನದು, ಸೇನೆಯ ಬಲಭಾಗ ಎಡಭಾಗಗಳಲ್ಲಿ ಇರುವ, ಹಿಂಭಾಗಗಳಲ್ಲಿದ್ದ ಸೇನೆಯ ರಕ್ಷಣೆ ಸಹ ಆತನದೇ ಆಗಿತ್ತು. ಸಮರದಲ್ಲಿ ಪಾಲ್ಗೊಂಡ ರಾಜ ಸಮೂಹದ ಬಿಡಾರಗಳ ರಕ್ಷಣೆ ಆತನಿಗೇ ಸೇರಿತ್ತು. ಹೀಗಾಗಿ ಭೀಷ್ಮನ ಹೊಣೆ ಅಧಿಕತರ ಜವಾಬ್ದಾರಿಯಿಂದ ಕೂಡಿತ್ತು, ಪಾಳೆಯದಲ್ಲಿ ಎಲ್ಲೇ ಸಂಚರಿಸಬೇಕಾದರೂ ಆತನ ಅಪ್ಪಣೆ ಬೇಕಿತ್ತು. ಬೀಡನ್ನು ಬಿಟ್ಟು ಹಿಂತಿರುಗಲು ಆತನ ಅನುಮತಿ ಬೇಕಿತ್ತು. ಹೀಗಾಗಿ ಕೌರವ ಸೇನಾ ಪಡೆಗೆ ಆತ ಅಭೇದ್ಯ ಸರ್ವತೋಮುಖವಾದ ರಕ್ಷಕನಾಗಿದ್ದನು.
ಪದಾರ್ಥ (ಕ.ಗ.ಪ)
ನೇಮ-ಕಟ್ಟಪ್ಪಣೆ, ಮರಳಿದು ಬಿಡುವಡೆ-ಶಿಬಿರ ತ್ಯಜಿಸಲು, ವಜ್ರಪಂಜರ-ಸರ್ವತೋಭದ್ರ ರಕ್ಷಣೆ, ಅಳವು-ಅಳತೆ, ವ್ಯಾಪ್ತಿ, ಇಟ್ಟಳಿಸು(ಇಟ್ಟಣಿಸು)-ದಟ್ಟವಾಗಿ ಒತ್ತೊತ್ತಾಗಿ, ಪಡಿಯ-ಬಾಗಿಲು
ಮೂಲ ...{Loading}...
ಪಡೆಯ ಮುಂಗುಡಿ ಭೀಷ್ಮನದು ಬಲ
ನೆಡನು ಪಿಂಗುಡಿಯಾತನದು ನೃಪ
ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ
ನಡೆವಡಾತನ ನೇಮ ಮರಳಿದು
ಬಿಡುವಡಾತನ ಮಾತು ಕೌರವ
ಪಡೆಗೆ ಭಾರಿಯ ವಜ್ರ ಪಂಜರವಾದನಾ ಭೀಷ್ಮ ॥53॥
೦೫೪ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನೆಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು, ಧೃತರಾಷ್ಟ್ರನಿಗೆ ತನ್ನ ಮಕ್ಕಳು ನೆನಪಿಗೆ ಬಂದರು. ಆಗ ಅವರ ಸ್ಥಿತಿ ನೆನೆದು ವಿಪರೀತ ದುಃಖ ಉದ್ವೇಗಗಳು ಕುಡಿಯಿಟ್ಟವು. ತನ್ನ ಮಕ್ಕಳು ರಣರಂಗದಲ್ಲಿ ಯಾವ ಸ್ಥಿತಿಯಲ್ಲಿದ್ದಾರೋ ಎಂದು ಚಿಂತಿಸಿದ. ತಾನು ಕುರುಡನಾದುದರಿಂದ ಅಸಹಾಯಕನಾಗಿದ್ದೇನೆ, ಲೋಕದಲ್ಲಿ ಅಂಧರಾದವರ ಜೀವನ ನಾಶವಾಗಲಿ ಎಂದು ತನಗೆ ತಾನೇ ನಿಂದಿಸಿಕೊಳ್ಳುತ್ತಾ ತನ್ನ ಮನಸ್ಸಿನಲ್ಲೇ ವಿಪರೀತ ಶೋಕಾಕುಲನಾದನು.
ಪದಾರ್ಥ (ಕ.ಗ.ಪ)
ದೃಗುವಿಹೀನ-ಕುರುಡ, ದೃಷ್ಟಿ ಹೀನ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನೆಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ ॥54॥
೦೫೫ ಆ ಸಮಯದಲಿ ...{Loading}...
ಆ ಸಮಯದಲಿ ರಾಯ ವೇದ
ವ್ಯಾಸಮುನಿ ನಡೆತಂದು ಗತಪರಿ
ತೋಷನನು ಸಂತೈಸಿ ಕರೆಸಿದನಂದು ಸಂಜಯನ
ಆ ಸಮರವೃತ್ತಾಂತ ನಿನಗೆ ಸ
ಮಾಸ ವಿಸ್ತಾರವಾಗಿರಲಿ ಭೂ
ಮೀಶತಿಲಕಂಗರುಹುವುದು ನೀನೆಂದು ನೇಮಿಸಿದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಧೃತರಾಷ್ಟ್ರ ಚಿಂತಾಕ್ರಾಂತನಾಗಿರುವಾಗ ವೇದವ್ಯಾಸ ಮುನಿಶ್ರೇಷ್ಠನು ಆಗಮಿಸಿ ಸಂತೋಷವಿಲ್ಲದವನಾಗಿದ್ದ ಧೃತರಾಷ್ಟ್ರನನ್ನು ಸಮಾಧಾನ ಮಾಡಿ, ಆ ಸಮಯಕ್ಕೆ ಸರಿಯಾಗಿ ಸಂಜಯನನ್ನು ಕರೆಸಿದನು. ಎಲೈ ಸಂಜಯನೇ ಆ ಕುರುಕ್ಷೇತ್ರದಲ್ಲಿ ನಡೆಯುವ ಸಮಸ್ತ ವಿದ್ಯಮಾನಗಳು ನಿನಗೆ ಸಮಗ್ರವಾಗಿ ತಿಳಿಯುವಂತೆ ದಿವ್ಯಚಕ್ಷು ಅನುಗ್ರಹಿಸಿದ್ದೇನೆ. ನೀನು ನೃಪವರನಿಗೆ ಎಲ್ಲವನ್ನು ವಿವರಿಸು ಎಂದು ಸಂಜಯನಿಗೆ ಅಪ್ಪಣೆ ಮಾಡಿದನು.
ಪದಾರ್ಥ (ಕ.ಗ.ಪ)
ಗತ ಪರಿತೋಷನು-ದುಃಖಿತನಾದವನು, ಸಂತೈಸು-ಸಮಾಧಾನ ಮಾಡು, ಸಮರ ವೃತ್ತಾಂತ-ಯುದ್ಧವಿವರಗಳು, ಸಮಾಸವಿಸ್ತರ-ಸಮಸ್ತ ವಿವರಗಳು, ಸಮಾಸ-ಒಟ್ಟು ಎಲ್ಲ, ಅರುಹು-ತಿಳಿಸು, ನೇಮಿಸಿದ-ಅಪ್ಪಣೆ ಮಾಡಿದನು,
ಮೂಲ ...{Loading}...
ಆ ಸಮಯದಲಿ ರಾಯ ವೇದ
ವ್ಯಾಸಮುನಿ ನಡೆತಂದು ಗತಪರಿ
ತೋಷನನು ಸಂತೈಸಿ ಕರೆಸಿದನಂದು ಸಂಜಯನ
ಆ ಸಮರವೃತ್ತಾಂತ ನಿನಗೆ ಸ
ಮಾಸ ವಿಸ್ತಾರವಾಗಿರಲಿ ಭೂ
ಮೀಶತಿಲಕಂಗರುಹುವುದು ನೀನೆಂದು ನೇಮಿಸಿದ ॥55॥
೦೫೬ ಪರಮ ವೇದವ್ಯಾಸ ...{Loading}...
ಪರಮ ವೇದವ್ಯಾಸ ಮುನಿಪನ
ಕರುಣವಾಗಲು ಕಂಗಳಿಗೆ ಗೋ
ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ
ಧುರದ ವೃತ್ತಾಂತವನು ಚಿತ್ತೈ
ಸರಸ ತಿಳುಹುವೆನೆಂದು ಸಲೆ ವಿ
ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರ ಭೂಪತಿಗೆ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠಮುನಿ ವೇದವ್ಯಾಸನು ಅನುಗ್ರಹಿಸಿದ ಕೂಡಲೆ ಸಂಜಯನ ಕಣ್ಣುಗಳಿಗೆ ದಿವ್ಯದೃಷ್ಟಿ ಉಂಟಾಯಿತು. ಕುರುಕ್ಷೇತ್ರದಲ್ಲಿಯ ಭಾರತ ಮಹಾ ಸಮರದ ಸಡಗರ ಸಂಭ್ರಮಗಳೆಲ್ಲ ಕಾಣತೊಡಗಿತು. ಆಗ ಸಂಜಯನು, ದೊರೆಯೇ ರಣರಂಗದ ಸಮಸ್ತ ವಿವರಗಳನ್ನು ಹೇಳುತ್ತೇನೆ ಆಲಿಸು ಎಂದು ಧೃತರಾಷ್ಟ್ರ ದೊರೆಗೆ ವಿವರವಾಗಿ ಹೇಳಲು ತೊಡಗಿದನು.
ಪದಾರ್ಥ (ಕ.ಗ.ಪ)
ಸೌರಂಭ-ಸಡಗರ, ಸಂಭ್ರಮ,
ಧುರ-ಸಮರ,
ವಿಸ್ತರಿಸ ಬಗೆದನು-ವಿವರವಾಗಿ ಹೇಳಲು ತೊಡಗಿದನು.
ಟಿಪ್ಪನೀ (ಕ.ಗ.ಪ)
ಸಂಜಯ, ವಿಚಿತ್ರ ವೀರ್ಯನ ಸಾರಥಿಯಾದ ಗೌಲ್ಗಣನ ಮಗ (ಭಾರತ ಸಾರೋದ್ಧಾರ, ಪುಟ. 297)
ಮೂಲ ...{Loading}...
ಪರಮ ವೇದವ್ಯಾಸ ಮುನಿಪನ
ಕರುಣವಾಗಲು ಕಂಗಳಿಗೆ ಗೋ
ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ
ಧುರದ ವೃತ್ತಾಂತವನು ಚಿತ್ತೈ
ಸರಸ ತಿಳುಹುವೆನೆಂದು ಸಲೆ ವಿ
ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರ ಭೂಪತಿಗೆ ॥56॥
೦೫೭ ಅವಧರಿಸು ಧೃತರಾಷ್ಟ್ರ ...{Loading}...
ಅವಧರಿಸು ಧೃತರಾಷ್ಟ್ರ ಗಂಗಾ
ಭವನ ನೇಮದಲಂದು ಮಹದಾ
ಹವಕೆ ನಡೆದುದು ಕಟಕವಲ್ಲಿಯುಲೂಕನೆಂಬುವನು
ಇವರು ಕಳುಹಿದೊಡವನು ರಿಪು ಪಾಂ
ಡವರ ಹೊರಗೈತಂದನಿನ್ನಾ
ಹವಕೆ ನಿಂದಿರು ಧರ್ಮಪುತ್ರ ವಿಳಂಬವೇಕೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಧೃತರಾಷ್ಟ್ರ ದೊರೆಯೇ ಆಲಿಸುವಂಥವನಾಗು. ಭೀಷ್ಮನ ಆಜ್ಞಾನುಸಾರ ಅಂದು ಕೌರವನ ಸೇನೆ ಮುನ್ನಡೆಯಿತು. ಉಲೂಕ ಎಂಬುವನನ್ನು ಕೌರವರು ತಮ್ಮ ಕಡೆಯಿಂದ ಪಾಂಡವರತ್ತ ಕಳಿಸಿದಾಗ ಆ ಉಲೂಕನು ಶತ್ರುಗಳಾದ ಪಾಂಡವರ ಬಳಿಗೆ ಬಂದನು. ಧರ್ಮರಾಜನೇ ಇನ್ನು ಸಮರಕ್ಕೆ ಸಿದ್ಧನಾಗು ತಡವೇಕೆ ಮಾಡುವೆ ? ಎಂದನು.
ಮೂಲ ...{Loading}...
ಅವಧರಿಸು ಧೃತರಾಷ್ಟ್ರ ಗಂಗಾ
ಭವನ ನೇಮದಲಂದು ಮಹದಾ
ಹವಕೆ ನಡೆದುದು ಕಟಕವಲ್ಲಿಯುಲೂಕನೆಂಬುವನು
ಇವರು ಕಳುಹಿದೊಡವನು ರಿಪು ಪಾಂ
ಡವರ ಹೊರಗೈತಂದನಿನ್ನಾ
ಹವಕೆ ನಿಂದಿರು ಧರ್ಮಪುತ್ರ ವಿಳಂಬವೇಕೆಂದ ॥57॥
೦೫೮ ಅಗ್ಗಳೆಯನೆಮ್ಮರಸ ಸಮ್ಪ್ರತಿ ...{Loading}...
ಅಗ್ಗಳೆಯನೆಮ್ಮರಸ ಸಂಪ್ರತಿ
ನೆಗ್ಗಿ ಕೆಟ್ಟಿರಿ ನೀವು ನಿಮಗೀ
ಹುಗ್ಗಿಗರು ಹುರಿಗೂಡಿ ಗೆಲಿದಿನ್ನಿಳೆಯ ಕೊಡಿಸುವರೆ
ಅಗ್ಗಿತಾ ಮಾತೇಕೆ ರಣದಲಿ
ನುಗ್ಗು ನುಗ್ಗಾಗದೆ ಸಹೋದರ
ರೊಗ್ಗು ಮುರಿಯದೆ ಮಾಣದರೆಗೇಡಾಯ್ತ ನಿಮಗೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ದೊರೆ (ದುರ್ಯೋಧನ) ಅತಿ ಶ್ರೇಷ್ಠನು. ನೀವು ಸಂಧಿಯನ್ನು ನಂಬಿ ವ್ಯರ್ಥವಾಗಿ ಕೆಟ್ಟಿರಿ, ಇನ್ನಾದರೂ ನಿಮ್ಮ ಕಡೆಯ ಉತ್ಸಾಹಿಸೈನಿಕರು ಬಲಗೊಂಡು ಒಂದಾಗಿ ರಾಜ್ಯವನ್ನು ನಿಮಗೆ ಗೆದ್ದು ಕೊಡಿಸುವರೇ ? ಹಾಳಾಗಲಿ ಇನ್ನೇಕೆ ಆ ಮಾತು. ರಣರಂಗದಲ್ಲಿ ನಿಮ್ಮ ಸೇನೆ ನುಚ್ಚುನೂರು ಆಗದೆ ? ನಿಮ್ಮೈವರ ಒಗ್ಗಟ್ಟು ನಾಶವಾಗದೇ ಇರದು. ಅಯ್ಯೋ ಪಾಪ ನಿಮಗೆ ಅಪಾರಹಾನಿಯಾಯ್ತು ಎಂದನು.
ಪದಾರ್ಥ (ಕ.ಗ.ಪ)
ಸಂಪ್ರತಿ-ಸಂಧಿ, ನೆಗ್ಗಿ-ವ್ಯರ್ಥವಾಗಿ, ಅನ್ಯಾಯವಾಗಿ, ಹುಗ್ಗಿಗರು-ಉತ್ಸಾಹಿಗಳು (ಜಂಭಗಾರರು), ಹುರಿಗೂಡಿ-ಒಂದಾಗಿ, ಅಗ್ಗಿತು-ಹಾಳಾಗಲಿ !, ನುಗ್ಗುನುಗ್ಗಾಗದೆ ?-ನುಚ್ಚು ನೂರಾಗದೆ ? ಒಗ್ಗು-ಒಗ್ಗಟ್ಟು, ಅರೆಕೇಡು-ತೀವ್ರನಾಶ
ಮೂಲ ...{Loading}...
ಅಗ್ಗಳೆಯನೆಮ್ಮರಸ ಸಂಪ್ರತಿ
ನೆಗ್ಗಿ ಕೆಟ್ಟಿರಿ ನೀವು ನಿಮಗೀ
ಹುಗ್ಗಿಗರು ಹುರಿಗೂಡಿ ಗೆಲಿದಿನ್ನಿಳೆಯ ಕೊಡಿಸುವರೆ
ಅಗ್ಗಿತಾ ಮಾತೇಕೆ ರಣದಲಿ
ನುಗ್ಗು ನುಗ್ಗಾಗದೆ ಸಹೋದರ
ರೊಗ್ಗು ಮುರಿಯದೆ ಮಾಣದರೆಗೇಡಾಯ್ತ ನಿಮಗೆಂದ ॥58॥
೦೫೯ ಬೆಮ್ಬಲಕೆ ತಾನೆನ್ದು ...{Loading}...
ಬೆಂಬಲಕೆ ತಾನೆಂದು ಬಯಲ ವಿ
ಡಂಬದಲಿ ಕಾಳೆಗವ ಮಸೆದರೆ
ನಂಬಿ ಕೆಟ್ಟಿರಿ ಕೃಷ್ಣನನು ನೀವೇನ ಮಾಡುವಿರಿ
ಇಂಬುಗೆಟ್ಟುದು ರೀತಿ ರಣಕೆ ತ್ರಿ
ಯಂಬಕನನಮರಾಧಿಪನ ಕೈ
ಕೊಂಬನೇ ಕೌರವನೆನಲು ಖತಿಗೊಂಡನಾ ಭೀಮ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಸಹಾಯಕ್ಕೆ ಕೃಷ್ಣನಿದ್ದಾನೆಂದು ಒಣ ಹೆಮ್ಮೆಯಲ್ಲಿ ಯುದ್ಧಕ್ಕೆ ಸಿದ್ಧರಾದಿರಿ, ಕೃಷ್ಣನನ್ನು ನಂಬಿ ಕೆಟ್ಟಿರಿ. ಪಾಪ ನೀವೇನು ಮಾಡಬಲ್ಲಿರಿ? ನೀವು ಅನುಸರಿಸಿದ ದಾರಿ ದಿಕ್ಕು ತಪ್ಪಿತು. ರಣರಂಗದಲ್ಲಿ ಈಶ್ವರನನ್ನಾಗಲೀ, ಇಂದ್ರನನ್ನಾಗಲಿ ಕೌರವನು ಲಕ್ಷಿಸುತ್ತಾನೆಯೇ ? ಎಂದು ಉಲೂಕ ಹೇಳಿದಾಗ ಆ ಮಾತನ್ನು ಕೇಳಿ ಭೀಮಸೇನನು ಕೆರಳಿದನು.
ಪದಾರ್ಥ (ಕ.ಗ.ಪ)
ಬಯಲ ವಿಡಂಬ-ಒಣಹೆಮ್ಮೆ, ಸುಳ್ಳುಭ್ರಮೆ, ಕಾಳೆಗವ ಮಸೆ-ಯುದ್ಧಕ್ಕೆ ಸಿದ್ಧನಾಗು, ಇಂಬುಗೆಟ್ಟದು ರೀತಿ-ರೀತಿಯ ನೆಲೆ ತಪ್ಪಿತು, ಅನುಸರಿಸಿದ ದಾರಿ ದಿಕ್ಕೆಟ್ಟಿತು, ತ್ರಯಂಬಕ-ಈಶ್ವರ, ಅಮರಾಧಿಪ-ಇಂದ್ರ, ಕೈಕೊಂಬನೇ-ಲಕ್ಷಿಸುವನೇ
ಮೂಲ ...{Loading}...
ಬೆಂಬಲಕೆ ತಾನೆಂದು ಬಯಲ ವಿ
ಡಂಬದಲಿ ಕಾಳೆಗವ ಮಸೆದರೆ
ನಂಬಿ ಕೆಟ್ಟಿರಿ ಕೃಷ್ಣನನು ನೀವೇನ ಮಾಡುವಿರಿ
ಇಂಬುಗೆಟ್ಟುದು ರೀತಿ ರಣಕೆ ತ್ರಿ
ಯಂಬಕನನಮರಾಧಿಪನ ಕೈ
ಕೊಂಬನೇ ಕೌರವನೆನಲು ಖತಿಗೊಂಡನಾ ಭೀಮ ॥59॥
೦೬೦ ಸೀಳು ಕುನ್ನಿಯ ...{Loading}...
ಸೀಳು ಕುನ್ನಿಯ ಬಾಯನೆಲವೋ
ತೋಳ ತೀಟೆಯನವನ ನೆತ್ತಿಯ
ಮೇಲೆ ಕಳೆವೆನು ಕಲಕುವೆನು ಕೌರವ ಬಲಾಂಬುಧಿಯ
ಹೇಳು ಹೋಗೀ ನಾಯನಾಡಿಸಿ
ಕೇಳುತಿರಲೇಕಹಿತ ಕುರುಕುಲ
ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಲೂಕನ ಮಾತನ್ನು ಕೇಳಿ ಭೀಮನಿಗೆ ಕೋಪ ನೆತ್ತಿಗೇರಿತು. ಆಗ ಹೇಳಿದನು ಆ ದುರ್ಯೋಧನನೆಂಬ ಕುನ್ನಿಯ ಬಾಯನ್ನು ಸೀಳುವೆನು ಕೇಳೆಲೈ ನನ್ನ ತೋಳಿನ ಚಪಲವನ್ನು. ಅವನ ತಲೆಯನ್ನು ಒಡೆದು ಕೋಪ ತೀರಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ಕೌರವ ವಂಶ ಸಾಗರವನ್ನೇ ಕದಡಿ ಅಲ್ಲೋಲ ಕಲ್ಲೋಲ ಮಾಡಿ ಬಿಡುವೆನು ಎಂದು ತಿಳಿಸು ಹೋಗು. ಎಲೈ ಸೋದರರೆ, ಈ ಕ್ಷುದ್ರ ಕುನ್ನಿಯನ್ನು ಆಡಿಸಿ ಅವನ ಮಾತನ್ನೇಕೆ ಕೇಳುತ್ತಿದ್ದೀರಿ ? ಶತ್ರುಗಳಾದ ಕುರುವಂಶದವರ ಪಾಲಿಗೆ ಈ ಭೀಮ ಕಾಲಭೈರವನೆಂದು ನಿನ್ನ ಒಡೆಯ ಆ ದುರ್ಯೋಧನನಿಗೆ ತಿಳಿಸು ಹೋಗೆಂದ ಭೀಮ.
ಪದಾರ್ಥ (ಕ.ಗ.ಪ)
ಕುನ್ನಿ-ಕ್ಷುದ್ರಜೀವಿ, ನಾಯಿಮರಿ, ತೋಳತೀಟೆ-ತೋಳಿನ ಚಪಲ, ನೆತ್ತಿಯ ಮೇಲೆ ಕಳೆವನು-ತಲೆ ಓಡೆದು ತೀರಿಸಿಕೊಳ್ಳುವೆ, ಕಲಕುವೆನು-ಕದಡುವೆನು, ಅಹಿತ-ಶತ್ರು, ಕಾಲಭೈರವ-ಪ್ರಳಯಕಾಲದ ಶಿವ
ಮೂಲ ...{Loading}...
ಸೀಳು ಕುನ್ನಿಯ ಬಾಯನೆಲವೋ
ತೋಳ ತೀಟೆಯನವನ ನೆತ್ತಿಯ
ಮೇಲೆ ಕಳೆವೆನು ಕಲಕುವೆನು ಕೌರವ ಬಲಾಂಬುಧಿಯ
ಹೇಳು ಹೋಗೀ ನಾಯನಾಡಿಸಿ
ಕೇಳುತಿರಲೇಕಹಿತ ಕುರುಕುಲ
ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ ॥60॥
೦೬೧ ಮಾಡಲಿದ್ದುದು ಬಹಳ ...{Loading}...
ಮಾಡಲಿದ್ದುದು ಬಹಳ ಪೌರುಷ
ವಾಡಿ ಕೆಡಿಸಲದೇಕೆ ಕೌರವ
ರಾಡಿ ಕೆಡಿಸಲಿ ಮಾಡಿ ಕೆಡಿಸಲಿ ಚಿಂತೆ ನಮಗೇಕೆ
ಮಾಡಿದೆವು ಗುರುಭಾರವನು ಮುರ
ಗೇಡಿಯಲಿ ರಣಪಾರಪತ್ಯವ
ಮಾಡುವಾತನು ಕೃಷ್ಣನೆಂದನು ಧರ್ಮಸುತ ನಗುತ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಆಗ ಭೀಮನಿಗೆ ಹೇಳಿದನು. ಮಾಡಬೇಕಾದುದು ಬಹಳ ಇದೆ. ಏಕೆ ಸುಮ್ಮನೆ ಜಂಭದ ಮಾತುಗಳನ್ನಾಡಿ ಕೆಲಸ ಕೆಡಿಸುವುದು. ಕೌರವನ ಕಡೆಯವನು ಮಾತಿನಲ್ಲಿ ನಮಗೆ ಕೆಡಕು ಮಾಡಲು ಯತ್ನಿಸಲಿ, ಇಲ್ಲವೇ ಪ್ರಯತ್ನ ಮಾಡಿ ಕೆಡಿಸಲು ಯತ್ನಿಸಲಿ ನಮಗೆ ಆ ಚಿಂತೆ ಬೇಡ. ನಮ್ಮ ಭಾರಿ ಹೊಣೆಗಾರಿಕೆಯನ್ನು ಶ್ರೀಕೃಷ್ಣನಲ್ಲಿ ಒಪ್ಪಿಸಿದ್ದೇವೆ. ಕೃಷ್ಣನು ರಣರಂಗದ ಹೊಣೆ ಹೊತ್ತು ನಮ್ಮನ್ನು ಕಾಪಾಡುವನು ನಮಗೇಕೆ ಚಿಂತೆ ? ಎಂದು ಧರ್ಮರಾಜ ನಗುನಗುತ್ತ ಹೇಳಿದನು.
ಟಿಪ್ಪನೀ (ಕ.ಗ.ಪ)
ಮುರಗೇಡಿ-ಮುರನೆಂಬ ರಾಕ್ಷಸನಿಗೆ ಕೇಡನ್ನು, ತಂದವನು-ಶ್ರೀಕೃಷ್ಣ
ಮೂಲ ...{Loading}...
ಮಾಡಲಿದ್ದುದು ಬಹಳ ಪೌರುಷ
ವಾಡಿ ಕೆಡಿಸಲದೇಕೆ ಕೌರವ
ರಾಡಿ ಕೆಡಿಸಲಿ ಮಾಡಿ ಕೆಡಿಸಲಿ ಚಿಂತೆ ನಮಗೇಕೆ
ಮಾಡಿದೆವು ಗುರುಭಾರವನು ಮುರ
ಗೇಡಿಯಲಿ ರಣಪಾರಪತ್ಯವ
ಮಾಡುವಾತನು ಕೃಷ್ಣನೆಂದನು ಧರ್ಮಸುತ ನಗುತ ॥61॥
೦೬೨ ವೈರಿದೂತನ ಕಳುಹಿದನು ...{Loading}...
ವೈರಿದೂತನ ಕಳುಹಿದನು ಕೈ
ವಾರಿಗಳು ಜಯಜಯಯೆನಲು ಹೊಂ
ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ
ವಾರುವದ ಖುರನಾಲ್ಕರಲಿ ಮಣಿ
ಚಾರು ಕನಕವ ಸುರಿದು ಧರ್ಮಜ
ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಾದ ಕೌರವನ ಕಡೆಯಿಂದ ದೂತನಾಗಿ ಬಂದ ಉಲೂಕನನ್ನು ಬೀಳ್ಕೊಟ್ಟನು. ವಂದಿಮಾಗಧರು ಜಯಕಾರ ಮಾಡುತ್ತಿರಲು ಚಿನ್ನದ ರಥವನ್ನು ತರಿಸಿದನು. ಶ್ರೀಕೃಷ್ಣನ ಚರಣಾರವಿಂದಗಳಿಗೆ ವಂದಿಸಿ, ರಥಕ್ಕೆ ಕಟ್ಟಿದ್ದ ನಾಲ್ಕು ಕುದುರೆಗಳ ಕಾಲುಗಳ ಗೊರಸಿನಬಳಿ ಶ್ರೇಷ್ಠ ಮನೋಹರ ರತ್ನಗಳನ್ನು ಚಿನ್ನವನ್ನು ಅರ್ಪಿಸಿ ಧರ್ಮಜನು ರಥಾರೋಹಣ ಮಾಡಿದನು. ಆಗ ಭೇರಿನಗಾರಿ ಮೊದಲಾದ ವಾದ್ಯ ಸಮೂಹಗಳು ಭೋರ್ಗರೆದವು.
ಪದಾರ್ಥ (ಕ.ಗ.ಪ)
ವಾರುವ-ಕುದುರೆ, ಖುರ-ಗೊರಸು, ನಿಸ್ಸಾಳಕೋಟಿ-ಭೇರಿ ಇತ್ಯಾದಿ ವಾದ್ಯಗಳು, ಒದರಿದವು-ಬಾರಿಸಲ್ಪಟ್ಟವು, ಭೋರ್ಗರೆದವು
ಮೂಲ ...{Loading}...
ವೈರಿದೂತನ ಕಳುಹಿದನು ಕೈ
ವಾರಿಗಳು ಜಯಜಯಯೆನಲು ಹೊಂ
ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ
ವಾರುವದ ಖುರನಾಲ್ಕರಲಿ ಮಣಿ
ಚಾರು ಕನಕವ ಸುರಿದು ಧರ್ಮಜ
ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು ॥62॥
೦೬೩ ಹರಿಯ ಬಲವನ್ದಣ್ಣನಙ್ಘ್ರಿಗೆ ...{Loading}...
ಹರಿಯ ಬಲವಂದಣ್ಣನಂಘ್ರಿಗೆ
ಶಿರವ ಚಾಚಿ ನಿಜಾಯುಧವ ವಿ
ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ
ಧುರಕೆ ನಡೆದರು ದ್ರುಪದ ಸಾತ್ಯಕಿ
ವರ ವಿರಾಟಾದಿಗಳು ಚೂಣಿಯೊ
ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನಿಗೆ ನಮಿಸಿ ಅಣ್ಣ ಧರ್ಮರಾಜನ ಕಾಲಿಗೆ ಶಿರಚಾಚಿ, ತಮ್ಮ ಆಯುಧವನ್ನು ಮುಟ್ಟಿ ಮಿಡಿದು ಭೀಮ, ಅರ್ಜುನ ನಕುಲ ಸಹದೇವರು ರಥಹತ್ತಿ ರಣರಂಗಕ್ಕೆ ಸಾಗಿದರು. ದ್ರುಪದ, ಸಾತ್ಯಕಿ, ವಿರಾಟ ಮೊದಲಾದ ವೀರರು ಸೇನಾ ಮುಂಭಾಗದಲ್ಲಿ ಮುನ್ನಡೆದರು. ಸೇನೆ ದಟ್ಟೈಸಿ ಮುಂದೆ ಸಾಗಿತು.
ಮೂಲ ...{Loading}...
ಹರಿಯ ಬಲವಂದಣ್ಣನಂಘ್ರಿಗೆ
ಶಿರವ ಚಾಚಿ ನಿಜಾಯುಧವ ವಿ
ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ
ಧುರಕೆ ನಡೆದರು ದ್ರುಪದ ಸಾತ್ಯಕಿ
ವರ ವಿರಾಟಾದಿಗಳು ಚೂಣಿಯೊ
ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ ॥63॥
೦೬೪ ಬಳಿಕ ...{Loading}...
ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಧೃಷ್ಟದ್ಯುಮ್ನನ ಅಪ್ಪಣೆಯ ಅನುಸಾರ ಸೈನ್ಯ ಯುದ್ಧಕ್ಕೆ ಸಿದ್ಧವಾಗಿ ನಿಂತಿತು. ಪೂರ್ವ ಸಮುದ್ರಕ್ಕೆ ಪಶ್ಚಿಮ ಸಾಗರ ಎದುರಾಗಿ ತಡೆದು ನಿಂತಿತೋ ಎಂಬಂತೆ ಸೇನೆಯ ರಭಸ ತೀವ್ರವಾಯಿತು. ಧ್ವಜಗಳ ಪಳಹರ ತೋಮರ ಕುಂತಾವಳಿ ಛತ್ರಚಾಮರಗಳೆಲ್ಲ ಗುಂಪಾಗಿ ಆವರಿಸಿದ ರೀತಿ ಪೃಥ್ವಿ ಅಪ್ ತೇಜ ವಾಯು ಎಂಬ ನಾಲ್ಕು ತತ್ವಗಳು ಆಕಾಶ ತತ್ವದಲ್ಲಿ ಲೀನವಾದಂತೆ ಇತ್ತು.
ಪದಾರ್ಥ (ಕ.ಗ.ಪ)
ಅಳವಿಗೊಟ್ಟುದು-ಹತ್ತಿರವಾಯಿತು, ತೋಮರ-ತುದಿಯಲ್ಲಿ ಮೊನಚಾದ ಈಟಿಯಂಥ ಆಯುಧ, ಕುಂತ-ಈಟಿ, ಪಳಹರ-ಒಂದು ಬಗೆ ವಾದ್ಯ
ಟಿಪ್ಪನೀ (ಕ.ಗ.ಪ)
ಭೂತನಾಲ್ಕು ಆಕಾಶವಾಗಿ = ಪೃಥ್ವಿ, ಅಪ್, ತೇಜ, ವಾಯು -ಇವು ಆಕಾಶತತ್ವದಲ್ಲಿ ಲೀನವಾದಂತೆ.
ಮೂಲ ...{Loading}...
ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ ॥64॥