೦೦೦ ಸೂ ಸೆಣಸುವದಟರ ...{Loading}...
ಸೂ. ಸೆಣಸುವದಟರ ಗಂಡ ಸಮರಾಂ
ಗಣ ಕಮಲ ಭೇರುಂಡನಾ ದಿನ
ಮಣಿಯ ಮಗನುದ್ದಂಡ ಕರ್ಣನ ಕಂಡಳಾ ಕುಂತಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಹೋರಾಡುವ ವೀರರ ಗಂಡನೂ, ಯುದ್ಧ ಭೂಮಿಯ ಕಮಲಕ್ಕೆ ಬೇರುಂಡನೂ, ಸೂರ್ಯನ ಮಗನೂ, ಪ್ರಚಂಡನೂ ಆದ ಕರ್ಣನನ್ನು ಆ ಕುಂತಿಯು ಭೇಟಿಯಾದಳು.
ಮೂಲ ...{Loading}...
ಸೂ. ಸೆಣಸುವದಟರ ಗಂಡ ಸಮರಾಂ
ಗಣ ಕಮಲ ಭೇರುಂಡನಾ ದಿನ
ಮಣಿಯ ಮಗನುದ್ದಂಡ ಕರ್ಣನ ಕಂಡಳಾ ಕುಂತಿ
೦೦೧ ಒಲಿದವರನುಜ್ಜೀವಿಸುವ ಬಗೆ ...{Loading}...
ಒಲಿದವರನುಜ್ಜೀವಿಸುವ ಬಗೆ
ಬಲುಹು ಮುರಮಥನಂಗೆ ಮುನಿದೊಡೆ
ತಲೆಯ ಬರೆಹವ ತೊಡೆವನಲ್ಲದೆ ಬಳಿಕ ಸೈರಿಸನು
ನಳಿನನಾಭನು ಭಜಕರಿಗೆ ಬೆಂ
ಬಳಿಯ ಬಿರುದನು ಭೇದದಲಿ ಕುರು
ಕುಲವ ಕೊಂದನು ಕೇಳು ಜನಮೇಜಯ ಮಹೀಪಾಲ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜ ಕೇಳು ! ಕೃಷ್ಣನಿಗೆ ಒಲಿದವರನ್ನು ಉದ್ಧಾರ ಮಾಡುವ ಮನಸ್ಸು ಬಹು ದೊಡ್ಡದು. ಕೆರಳಿದರೆ ಹಣೆಯ ಬರಹವನ್ನೇ ಅಳಿಸುವನು. ಅಲ್ಲದೇ ಸಹಿಸಲಾರ. ಪದ್ಮನಾಭನಾದ ಕೃಷ್ಣನು ತನ್ನನ್ನು ಪೂಜಿಸಿ ಸ್ತುತಿಸುವವರಿಗೆ ಬೆಂಬಲಿಸುವನು ಎಂಬ ಬಿರುದನ್ನು ಪಡೆದಿರುವನು. ಭೇದದಿಂದ ಕುರುಕುಲವನ್ನು ಕೊಂದನು.
ಪದಾರ್ಥ (ಕ.ಗ.ಪ)
ಉಜ್ಜೀವಿಸು-ಉದ್ಧರಿಸು.
ತೊಡೆವನು-ಒರೆಸುವನು, ಭಜಕರಿಗೆ-ಪೂಜಿಸುವವರಿಗೆ/ಸ್ತುತಿಸುವವರಿಗೆ, ಭೇದ-ಬಿರುಕು, ಬಲುಹು-ಸಾಮಥ್ರ್ಯ
ಮೂಲ ...{Loading}...
ಒಲಿದವರನುಜ್ಜೀವಿಸುವ ಬಗೆ
ಬಲುಹು ಮುರಮಥನಂಗೆ ಮುನಿದೊಡೆ
ತಲೆಯ ಬರೆಹವ ತೊಡೆವನಲ್ಲದೆ ಬಳಿಕ ಸೈರಿಸನು
ನಳಿನನಾಭನು ಭಜಕರಿಗೆ ಬೆಂ
ಬಳಿಯ ಬಿರುದನು ಭೇದದಲಿ ಕುರು
ಕುಲವ ಕೊಂದನು ಕೇಳು ಜನಮೇಜಯ ಮಹೀಪಾಲ ॥1॥
೦೦೨ ಇನತನೂಜನ ಕೂಡೆ ...{Loading}...
ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ನೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನೊಡನೆ ಮೈದುನತನದ ಪ್ರೀತಿಯನ್ನು ತೋರಿ, ಕೃಷ್ಣನು ಅವನನ್ನು ತನ್ನ ಸಮೀಪಕ್ಕೆ ಎಳೆದುಕೊಂಡು ಆಸನದಲ್ಲಿ ಕೂಡಿಸಿದನು. ‘ನನಗೆ ನಿಮ್ಮ ಪಾದಗಳಲ್ಲಿ ಸಮನಾದ ಉಪಚಾರವೆ ? ದೇವ ! ಮುರಾರಿ ! ಭಯಪಡುವೆನು’. ಎಂದು ಕರ್ಣನು ಹೇಳಲು, ತೊಡೆಗೆ ತೊಡೆ ತಾಗಿಸಿ ಕೃಷ್ಣನು ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಇನತನೂಜ-ಸೂರ್ಯನಮಗ-ಕರ್ಣ
ಮೂಲ ...{Loading}...
ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ನೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ॥2॥
೦೦೩ ಭೇದವಿಲ್ಲೆಲೆ ಕರ್ಣ ...{Loading}...
ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನುಭಯವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಕರ್ಣ ನಿಮ್ಮೊಳಗೆ, ಯಾದವರು ಕೌರವರೊಳಗೆ ಯಾವ ವ್ಯತ್ಯಾಸವೂ ಇಲ್ಲ. ವಿಚಾರಮಾಡಿ ನೋಡಿದರೆ ಈ ವಂಶ ಪ್ರಾರಂಭದಲ್ಲಿ ಎರಡು ಬಾಗವಾಗಿರಲಿಲ್ಲ. ನಿನ್ನಾಣೆ, ನೀನು ರಾಜನು. ನಿನ್ನ ಮನಸ್ಸಿನಲ್ಲಿ ಅದರ ಅರಿವಿಲ್ಲ. ಎಂದು ಹೇಳುತ್ತ ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನ್ನು / ದ್ವಂದ್ವವನ್ನು ಹುಟ್ಟು ಹಾಕಿದನು.
ಪದಾರ್ಥ (ಕ.ಗ.ಪ)
ಸಂವಾದಿಸು-ಮಾತುಕತೆಯಾಡು, ವಿಚಾರ ಮಾಡಿದರೆ, ಅನ್ವಯ-ವಂಶ
ಟಿಪ್ಪನೀ (ಕ.ಗ.ಪ)
ಬಿತ್ತಿದನುಭಯವ - ಬಿತ್ತಿದನು ಭಯವ , ಬಿತ್ತಿದನು ಉಭಯವ ಎರಡೂ ಪ್ರಯೋಗಗಳು ಹೊಂದುತ್ತವೆ. ಕರ್ಣನ ಮನಸ್ಸಿನಲ್ಲಿ ದ್ವಂದ್ವವನ್ನು ಹಾಗೂ ಭಯವನ್ನು ಬಿತ್ತಿದ ಅಂಶ ಸ್ಪಷ್ಟವಾಗುತ್ತದೆ.
ಮೂಲ ...{Loading}...
ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನುಭಯವ ॥3॥
೦೦೪ ದಾನವಾನ್ತಕ ಬೆಸಸು ...{Loading}...
ದಾನವಾಂತಕ ಬೆಸಸು ವಂಶ ವಿ
ಹೀನನನು ನಿಮ್ಮಡಿಗಳೊಡನೆ ಸ
ಮಾನಿಸುವರೇ ಸಾಕೆನುತ ರವಿಸೂನು ಕೈಮುಗಿಯೆ
ಮಾನನಿಧಿ ನಿನ್ನಾಣೆ ಬಾರೈ
ನೀನು ನಮ್ಮೆಲ್ಲರ ಹವಣೆ ವರ
ಭಾನುವಂಶಲಲಾಮ ನೀ ರಾಮಂಗೆ ಸರಿಯೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕೃಷ್ಣಾ ! ಹೇಳು, ಹೀನವಂಶದವನಾದ ನನಗೆ ನಿಮ್ಮ ಕೂಡೆ ಸಮಾನವೆ? ಸಾಕು, ಎನ್ನುತ್ತ ಕರ್ಣನು ಕೈಮುಗಿಯಲು, ಮಾನನಿಧಿ ನಿನ್ನಾಣೆ, ಬಾ, ನೀನು ನಮ್ಮೆಲ್ಲರ ಸಮಾನನು ಶ್ರೇಷ್ಠವಾದ ಸೂರ್ಯವಂಶ ತಿಲಕನು, ನೀನು ಶ್ರೀರಾಮನಿಗೆ ಸರಿ’ ಎಂದನು.
ಪದಾರ್ಥ (ಕ.ಗ.ಪ)
ಹವಣೆ-ಸಮಾನ, ಲಲಾಮ-ತಿಲಕ
ಮೂಲ ...{Loading}...
ದಾನವಾಂತಕ ಬೆಸಸು ವಂಶ ವಿ
ಹೀನನನು ನಿಮ್ಮಡಿಗಳೊಡನೆ ಸ
ಮಾನಿಸುವರೇ ಸಾಕೆನುತ ರವಿಸೂನು ಕೈಮುಗಿಯೆ
ಮಾನನಿಧಿ ನಿನ್ನಾಣೆ ಬಾರೈ
ನೀನು ನಮ್ಮೆಲ್ಲರ ಹವಣೆ ವರ
ಭಾನುವಂಶಲಲಾಮ ನೀ ರಾಮಂಗೆ ಸರಿಯೆಂದ ॥4॥
೦೦೫ ಕಳೆದುಕೊಣ್ಡನು ವೀಳೆಯವನಂ ...{Loading}...
ಕಳೆದುಕೊಂಡನು ವೀಳೆಯವನಂ
ಜುಳಿಯಲಾತಂಗಿತ್ತು ಕರ್ಣನ
ಕೆಲಕೆ ಬರಸೆಳೆದವನ ಕರದೊಳು ಕರತಳವನಿಕ್ಕಿ
ಎಲೆ ದಿವಾಕರತನಯ ನಿನ್ನಯ
ಕುಲವನರಿಯೆಯಲಾ ಸುಯೋಧನ
ನಲಿ ವೃಥಾ ಸೇವಕತನದಲಿಹುದುಚಿತವಲ್ಲೆಂದ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ದೂರ ಸರಿಯಲು ಕೃಷ್ಣನು ತನ್ನ ಎರಡೂ ಕೈಗಳಿಂದ ವೀಳೆಯವನ್ನು ಕರ್ಣನಿಗೆ ಕೊಟ್ಟು ತನ್ನ ಬಳಿಗೆ ಎಳೆದುಕೊಂಡು ಅವನ ಅಂಗೈಲಿ ತನ್ನ ಅಂಗೈಯಿಟ್ಟು, ಎಲೆ ಕರ್ಣ ನಿನ್ನ ಕುಲವನ್ನು ತಿಳಿದಿಲ್ಲವಲ್ಲ ! ಆ ಸುಯೋಧನನಲ್ಲಿ ವ್ಯರ್ಥವಾಗಿ ಸೇವಕನಾಗಿರುವುದು ಯೋಗ್ಯವಲ್ಲ ಎಂದನು.
ಪದಾರ್ಥ (ಕ.ಗ.ಪ)
ಅಂಜುಲಿ-ಬೊಗಸೆ, ದಿವಾಕರ-ಸೂರ್ಯ, ವೃಥಾ-ವ್ಯರ್ಥ
ಮೂಲ ...{Loading}...
ಕಳೆದುಕೊಂಡನು ವೀಳೆಯವನಂ
ಜುಳಿಯಲಾತಂಗಿತ್ತು ಕರ್ಣನ
ಕೆಲಕೆ ಬರಸೆಳೆದವನ ಕರದೊಳು ಕರತಳವನಿಕ್ಕಿ
ಎಲೆ ದಿವಾಕರತನಯ ನಿನ್ನಯ
ಕುಲವನರಿಯೆಯಲಾ ಸುಯೋಧನ
ನಲಿ ವೃಥಾ ಸೇವಕತನದಲಿಹುದುಚಿತವಲ್ಲೆಂದ ॥5॥
೦೦೬ ಲಲನೆ ಪಡೆದೀಯೈದು ...{Loading}...
ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನಾದೆ. ನೀನಾದ ನಂತರ ಯುಧಿಷ್ಠಿರ ದೇವನು. ಮೂರನೆಯವನು ವೀರಭೀಮ. ಅರ್ಜುನನು ನಾಲ್ಕನೆಯವನು, ಐದನೆಯ ಮಂತ್ರದಿಂದ ನಕುಲ ಸಹದೇವರಿಬ್ಬರೂ ಮಾದ್ರಿಯಲ್ಲಿ ಜನಿಸಿದರು.
ಮೂಲ ...{Loading}...
ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ॥6॥
೦೦೭ ಅದರಿನಾ ಪಾಣ್ಡವರಲೈವರ ...{Loading}...
ಅದರಿನಾ ಪಾಂಡವರಲೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿಧಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ನಡೆ ತನ್ನ ಸಂಗಾತ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದ್ದರಿಂದ ಐವರು ಪಾಂಡವರಲ್ಲಿ ಮೊದಲನೆಯವನು ನೀನು ಇರಲು ಎರಡೂ ಪಕ್ಷಗಳಲ್ಲಿ ಭೂಮಿಗಾಗಿ ಯುದ್ಧವು ಅವಶ್ಯವಿಲ್ಲ. ವಿಚಾರಿಸಲು ಇದು ನಿಜವಾದುದು, ಕರ್ಣ. ನಿನ್ನ ಏಳಿಗೆಯನ್ನೇ ಬಯಸುವೆನು. ಪಾಂಡವರೈವರನ್ನೂ ನಿನ್ನ ಪಾದಗಳಿಗೆ ಬೀಳಿಸುವೆನು, ನನ್ನೊಡನೆ ನಡೆ.
ಪದಾರ್ಥ (ಕ.ಗ.ಪ)
ಇತ್ತಂಡ-ಎರಡೂ ತಂಡ, ಕಾಮಿತ-ಬಯಕೆ, ನಿಧಾನ-ನಿಜ
ಮೂಲ ...{Loading}...
ಅದರಿನಾ ಪಾಂಡವರಲೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿಧಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ನಡೆ ತನ್ನ ಸಂಗಾತ ॥7॥
೦೦೮ ನಿನಗೆ ಹಸ್ತಿನಪುರದ ...{Loading}...
ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನಗೆ ಹಸ್ತಿನಾಪುರದ ರಾಜ್ಯದ ಹಿರಿಮೆಯನ್ನು ಮಾಡುವೆನು. ಪಾಂಡವ ರಾಜರು ಕೌರವ ರಾಜರು ನಿನ್ನ ಪೀಠವನ್ನು ಸೇವಿಸುವರು. ನಿನಗೆ ಎರಡೂ ಸಂತತಿಯವರು ಸೇವಕರಾಗಿರುತ್ತಾರೆಂಬುದನ್ನು ಒಪ್ಪದೇ, ನೀನು ದುರ್ಯೋಧನನ ಬಾಯ ತಾಂಬುಲಕ್ಕೆ ಕೈ ಒಡ್ಡುವುದೆ ? ಹೇಳು’ ಎಂದನು.
ಪದಾರ್ಥ (ಕ.ಗ.ಪ)
ಘನತೆ-ಹಿರಿಮೆ, ಒಲ್ಲದೆ-ಒಪ್ಪದೆ, ಆನು-ಒಡ್ಡು
ಮೂಲ ...{Loading}...
ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ॥8॥
೦೦೯ ಎಡದ ಮೈಯಲಿ ...{Loading}...
ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸನ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಡಭಾಗದಲ್ಲಿ ಕೌರವರ ಸಮೂಹ, ಬಲಭಾಗದಲ್ಲಿ ಪಾಂಡುಪುತ್ರರ ಸಮೂಹ ಎದುರಿನಲ್ಲಿ ಮಾದ್ರ, ಮಾಗಧ ಯಾದವರೇ ಮೊದಲಾದವರು. ಮಧ್ಯೆ ನೀನು ಸಭೆಯಲ್ಲಿ ಶೋಭಿಸುವ ಅತಿ ವೈಭವವನ್ನು ಬಿಟ್ಟು ಕೌರವ ರಾಜನು ಮಾತನಾಡಿಸಲು ಸ್ವಾಮಿ, ಅನುಗ್ರಹ, ಪ್ರಸಾದ ಎನ್ನುವುದು ನಿನಗೆ ಕಷ್ಟ’ ಎಂದನು.
ಮೂಲ ...{Loading}...
ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸನ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ॥9॥
೦೧೦ ಶೌರಿಯದಲಿದಿರಿಲ್ಲ ಕುಲದಲಿ ...{Loading}...
ಶೌರಿಯದಲಿದಿರಿಲ್ಲ ಕುಲದಲಿ
ಸೂರಿಯನ ಮಗನೊಡನೆ ಹುಟ್ಟಿದ
ವೀರರೈವರು ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರುಣೀಪತಿಯಾಗು ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಾಕ್ರಮದಲ್ಲಿ ನಿನಗೆ ಎದುರಿಲ್ಲ ಕುಲದಲ್ಲಿ ಸೂರ್ಯನ ಮಗ. ಒಡ ಹುಟ್ಟಿದವರು ಐದು ಜನರು ಪಾಂಡುಪುತ್ರರು. ಕರ್ಣಾ ! ನಿನ್ನ ವೈಭವಕ್ಕೆ ಯಾರು ಸಮ ? ನಡೆ ನಡೆ ಭೂಪಾಲಕನಾಗು, ನೀನಿರಲು ಎರಡು ಗುಂಪುಗಳಿಗೂ ಹಗೆತನ ಮುಂದೆ ಇಲ್ಲ ಎಂದನು ಕೃಷ್ಣ.
ಮೂಲ ...{Loading}...
ಶೌರಿಯದಲಿದಿರಿಲ್ಲ ಕುಲದಲಿ
ಸೂರಿಯನ ಮಗನೊಡನೆ ಹುಟ್ಟಿದ
ವೀರರೈವರು ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರುಣೀಪತಿಯಾಗು ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ ॥10॥
೦೧೧ ಕೊರಳ ಸೆರೆ ...{Loading}...
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಮಾತುಗಳನ್ನು ಕೇಳಿ ಕರ್ಣನ ಕೊರಳ ನರಗಳು ಉಬ್ಬಿದವು. ಕಣ್ಣೀರು ಹರಿದು ಅತಿಯಾಗಿ ವ್ಯಥೆ ಪಟ್ಟನು. ಅಯ್ಯೋ ಕೌರವನಿಗೆ ಕೇಡಾಯಿತೆ ? ಎಂದು ತನ್ನ ಮನದೊಳಗೆ ಅಂದುಕೊಂಡನು. ಕೃಷ್ಣನ ಹಗೆತನವು ಹೊಗೆಯನ್ನು ತೋರಿ ಉರಿಯದೇ ಸುಮ್ಮನೆ ಹೋಗುವುದೆ ? ನನ್ನ ವಂಶವನ್ನು ತಿಳಿಸಿ ಕೊಂದನು. ಹೆಚ್ಚಿನ ಮಾತುಗಳಿಂದೇನು ? ಎಂದು ಕರ್ಣನು ಚಿಂತಿಸಿದನು.
ಮೂಲ ...{Loading}...
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ॥11॥
೦೧೨ ಕಾದಿ ಕೊಲುವೊಡೆ ...{Loading}...
ಕಾದಿ ಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ
ಭೇದದಲಿ ಹೊಕ್ಕಿರಿದನೋ ಮಧು
ಸೂದನಕಟಕಟೆನುತ ಘನ ಚಿಂ
ತೋದಧಿಯಲದ್ದವೊಲು ಮೌನದೊಳಿದ್ದನಾ ಕರ್ಣ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಾಡಿ ಕೊಲ್ಲಬೇಕೆಂದರೆ ಪಾಂಡುಪುತ್ರರು ಸಹೋದರರು, ಕೊಲ್ಲುವಂತಿಲ್ಲ, ಕೊಲ್ಲದೆ ಹಾಗೆಯೇ ಹೋರಾಡಿದರೆ ಕೌರವನಿಗೆ ಭೂಮಿಯಲ್ಲಿ ಸ್ಥಳವಿಲ್ಲ. ಕೃಷ್ಣನು ಭೇದದಲ್ಲಿ ಹೊಕ್ಕು ತಿವಿದನು ‘ಅಯ್ಯೋ’ ಎನ್ನುತ್ತ ಕರ್ಣನು ಚಿಂತೆಯ ಸಮುದ್ರದಲ್ಲಿ ಮುಳುಗಿದಂತೆ ಮೌನದಲ್ಲಿದ್ದನು.
ಮೂಲ ...{Loading}...
ಕಾದಿ ಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ
ಭೇದದಲಿ ಹೊಕ್ಕಿರಿದನೋ ಮಧು
ಸೂದನಕಟಕಟೆನುತ ಘನ ಚಿಂ
ತೋದಧಿಯಲದ್ದವೊಲು ಮೌನದೊಳಿದ್ದನಾ ಕರ್ಣ ॥12॥
೦೧೩ ಏನು ಹೇಳೈ ...{Loading}...
ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳ್ ಎಂದ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರ್ಣ ಏನು ಹೇಳು ? ಮನಸ್ಸಿನ ಸಂಕಟವೇನು? ಕುಂತಿಯ ಮಕ್ಕಳನ್ನು ಕೂಡಿಕೊಳ್ಳುವುದು ಇಷ್ಟವಿಲ್ಲವೆ? ತೊಂದರೆ ಇಲ್ಲ. ನನ್ನಾಣೆ ಮಾತಾಡು, ಮಾತಾಡು ಮೌನವೇತಕ್ಕೆ ? ಹುಚ್ಚುತನ ಬೇಡ. ನಾನು ನಿನ್ನ ಕೇಡನ್ನು ಬಯಸುವವನಲ್ಲ ಕೇಳು’ ಎಂದನು.
ಪದಾರ್ಥ (ಕ.ಗ.ಪ)
ಬೆಸಕೈ-ಸೇವಿಸು ಸೇರು-ಇಷ್ಟ, ಸೂನು-ಮಗ
ಮೂಲ ...{Loading}...
ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ ॥13॥
೦೧೪ ಮರುಳು ಮಾಧವ ...{Loading}...
ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮರುಳು-ಕೃಷ್ಣನೆ ! ಭೂಮಿಯ, ರಾಜ್ಯದ ಸಂಪತ್ತಿಗೆ ನಾನು ಸೋಲುವವನಲ್ಲ. ಕುಂತೀ ಮಕ್ಕಳು, ದುರ್ಯೋಧನರು ನನಗೆ ಸೇವೆ ಮಡಬೇಕೆಂಬುದರಲ್ಲಿ ನನಗೆ ಮನಸ್ಸಿಲ್ಲ. ನನ್ನನ್ನು ಸಲಹಿದ ಯಜಮಾನನಿಗೆ ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುತ್ತೇನೆ ಎಂಬ ಉತ್ಸಾಹದಲ್ಲಿದ್ದೆನು. ನೀನು ಕೌರವೇಂದ್ರನನ್ನು ಕೊಂದೆ; ಎಂದನು.
ಮೂಲ ...{Loading}...
ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ॥14॥
೦೧೫ ಒಡನೆ ಹುಟ್ಟಿದೆವೆಮ್ಬ ...{Loading}...
ಒಡನೆ ಹುಟ್ಟಿದೆವೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ಪಾಂಡವ
ರಡಗ ಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ
ನುಡಿದು ಫಲವೇನಿನ್ನು ಕೇಳೆ
ನ್ನೊಡೆಯನಾದಂತಹೆನು ಬಾರೆನು
ಪೊಡವಿಯಲಿ ನೀ ಹರಹಿಕೊಳು ನಿನ್ನವರ ನಿಲಿಸೆಂದ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡಹುಟ್ಟಿದವರೆಂಬ ಕಥೆಯನ್ನು ಸ್ವಲ್ಪವೂ ಬಿಡದೆ ವಿವರಿಸಿದೆ. ಪಾಂಡವರ ದೇಹವನ್ನು ನನ್ನ ಬಾಣಕ್ಕೆ ಬಲಿಕೊಡುವ ನನ್ನ ¸ಂಕಲ್ಪವನ್ನು ನೀನು ನಿಲ್ಲಿಸಿದೆ ; ಇನ್ನೂ ಹೇಳಿ ಫಲವೇನು ? ನನ್ನ ಒಡೆಯನಂತೆ ನಾನಿರುತ್ತೇನೆ. ನಾನು ಬರುವುದಿಲ್ಲ ಭೂಮಿಯಲ್ಲಿ ನಿನ್ನವರನ್ನು ನೀನು ಹರಡಿಕೋ, ನಿಲ್ಲಿಸು ಎಂದನು.
ಪದಾರ್ಥ (ಕ.ಗ.ಪ)
ಬಣ್ಣಿಸು-ವಿವರಿಸು, ವಿಜಯ-ಅರ್ಜುನ
- ಇಲ್ಲಿ ಅಗಡು ಪದವು ಛಂದಸ್ಸನ್ನು ಕ್ರಮತಪ್ಪಿಸುವುದರಿಂದ ಶ್ರೀಕೃಷ್ಣಾ ಜೋಯಿಸರ ಸಂಪಾದಿತ ಕೃತಿಯಲ್ಲಿ ಪಾಂಡವರಡಗ ಬಾಣಕೆ ಎಂದಿರುತ್ತದೆ.
ಪಾಠಾನ್ತರ (ಕ.ಗ.ಪ)
ವಿಜಯನಗಡು ಬಾಣಕೆ -> ಪಾಂಡವರಡಗ ಬಾಣಕೆ
ಕೃಷ್ಣಜೋಯಿಸ್
ಮೂಲ ...{Loading}...
ಒಡನೆ ಹುಟ್ಟಿದೆವೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ಪಾಂಡವ
ರಡಗ ಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ
ನುಡಿದು ಫಲವೇನಿನ್ನು ಕೇಳೆ
ನ್ನೊಡೆಯನಾದಂತಹೆನು ಬಾರೆನು
ಪೊಡವಿಯಲಿ ನೀ ಹರಹಿಕೊಳು ನಿನ್ನವರ ನಿಲಿಸೆಂದ ॥15॥
೦೧೬ ವೀರ ಕೌರವರಾಯನೇ ...{Loading}...
ವೀರ ಕೌರವರಾಯನೇ ದಾ
ತಾರನಾತನ ಹಗೆಯೆ ಹಗೆ ಕೈ
ವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಸಾರದಲಿ ತೋರುವೆನು ನಿಜ ಭುಜ
ಶೌರಿಯದ ಸಂಪನ್ನತನವನು ಪಾಂಡುತನಯರಲಿ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ವೀರ ಕೌರವನೇ ಒಡೆಯನು. ಅವನ ಶತ್ರುಗಳು ನನ್ನ ಶತ್ರುಗಳು. ಅವನು ಮೆಚ್ಚಿದವರನ್ನು ನಾನೂ ಮೆಚ್ಚುತ್ತೇನೆ. ಕುರುರಾಜನಿಗೆ ಆದದ್ದು ನನಗೂ ಆಗಲಿ, ಕೃಷ್ಣನೇ ಕೇಳು ! ನಾಳಿನ ಯುದ್ಧದ ಸತ್ವದಲ್ಲಿ ನನ್ನ ತೋಳು ಬಲದ ಸಂಪನ್ನತೆಯನ್ನು ಪಾಂಡುವಿನ ಮಕ್ಕಳಲ್ಲಿ ತೋರುತ್ತೇನೆ.
ಮೂಲ ...{Loading}...
ವೀರ ಕೌರವರಾಯನೇ ದಾ
ತಾರನಾತನ ಹಗೆಯೆ ಹಗೆ ಕೈ
ವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಸಾರದಲಿ ತೋರುವೆನು ನಿಜ ಭುಜ
ಶೌರಿಯದ ಸಂಪನ್ನತನವನು ಪಾಂಡುತನಯರಲಿ ॥16॥
೦೧೭ ಹಲವು ಮಾತೇನಖಿಳ ...{Loading}...
ಹಲವು ಮಾತೇನಖಿಳ ಜನಕೆ
ನ್ನುಳಿವು ಸೊಗಸದು ಕೌರವೇಶ್ವರ
ನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ
ಸಲಹಿದನು ಮನ್ನಣೆಯಲೆನಗ
ಗ್ಗಳಿಕೆಯಲ್ಲದೆ ಹೀನ ವೃತ್ತಿಯ
ಬಳಸಿ ನಡೆಸನು ಕೌರವೇಂದ್ರನನೆಂತು ಮರೆದಪೆನು ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಳ ಮಾತೇನು ? ಎಲ್ಲ ಜನರಿಗೂ ನಾನು ಉಳಿಯುವುದು ಇಷ್ಟವಿಲ್ಲ. ಕೌರವರ ಒಡೆಯನ ಪ್ರೀತಿಯನ್ನು ಬಿಟ್ಟು ಈ ಲೋಕದಲ್ಲಿ ನನಗೆ ಬೇರೆ ಆಪ್ತ ಜನರಿಲ್ಲ. ಮನ್ನಣೆಯಲ್ಲಿ ನನ್ನನ್ನು ಕಾಪಾಡಿದನು. ನನಗೆ ಹೆಚ್ಚಿನ ಗೌರವದಿಂದಲ್ಲದೇ ಹೀನ ವೃತ್ತಿಯನ್ನು ಬಳಸಿ ಎಂದೂ ನಡೆಸಿಕೊಳ್ಳುವುದಿಲ್ಲ. ಕೌರವ ರಾಜನನ್ನು ನಾನು ಹೇಗೆ ಮರೆಯಲಿ ?
ಪದಾರ್ಥ (ಕ.ಗ.ಪ)
ಮನ್ನಣೆ-ಗೌರವ
ಮೂಲ ...{Loading}...
ಹಲವು ಮಾತೇನಖಿಳ ಜನಕೆ
ನ್ನುಳಿವು ಸೊಗಸದು ಕೌರವೇಶ್ವರ
ನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ
ಸಲಹಿದನು ಮನ್ನಣೆಯಲೆನಗ
ಗ್ಗಳಿಕೆಯಲ್ಲದೆ ಹೀನ ವೃತ್ತಿಯ
ಬಳಸಿ ನಡೆಸನು ಕೌರವೇಂದ್ರನನೆಂತು ಮರೆದಪೆನು ॥17॥
೦೧೮ ನೋಡಿ ದಣಿಯನು ...{Loading}...
ನೋಡಿ ದಣಿಯನು ಬಿರುದ ಹೊಗಳಿಸಿ
ಹಾಡಿ ದಣಿಯನು ನಿಚ್ಚಲುಚಿತವ
ಮಾಡಿ ತಣಿಯನು ಮಾನನಿಧಿಯನದೆಂತು ಮರೆದಪೆನು
ಕಾಡಲಾಗದು ಕೃಷ್ಣ ಖಾತಿಯ
ಮಾಡಲಾಗದು ಬಂದೆನಾದೊಡೆ
ರೂಢಿ ಮೆಚ್ಚದು ಕೌರವನ ಹಗೆ ಹರಿಬ ತನಗೆಂದ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ನನ್ನನ್ನು ನೋಡಿ ದಣಿಯುವುದಿಲ್ಲ. ಬಿರುದನ್ನು ಹೊಗಳಿ ಹಾಡಿಸಿದರೂ ತೃಪ್ತಿಯಿಲ್ಲ, ನಿತ್ಯವೂ ಗೌರವಿಸಿ, ಆದರಿಸಿ ತೃಪ್ತಿ ಪಡೆಯಲಾರನು. ಅಂತಹ ಮಾನನಿಧಿಯನ್ನು ನಾನು ಹೇಗೆ ಮರೆಯಲಿ ? ಕೃಷ್ಣ ನನ್ನನ್ನು ಪೀಡಿಸಬೇಡ. ಕೋಪ ಮಾಡಿಕೊಳ್ಳಬೇಡ, ನಿನ್ನೊಡನೆ ಬಂದಿದ್ದೇ ಆದರೆ ಲೋಕದ ರೂಢಿ ಮೆಚ್ಚುವುದಿಲ್ಲ. ಕೌರವನ ಶತ್ರು ನನಗೆ ಶತ್ರುವೆಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ನಿಚ್ಚ-ನಿತ್ಯ, ಹರಿಬ-ಹಗೆ
ಮೂಲ ...{Loading}...
ನೋಡಿ ದಣಿಯನು ಬಿರುದ ಹೊಗಳಿಸಿ
ಹಾಡಿ ದಣಿಯನು ನಿಚ್ಚಲುಚಿತವ
ಮಾಡಿ ತಣಿಯನು ಮಾನನಿಧಿಯನದೆಂತು ಮರೆದಪೆನು
ಕಾಡಲಾಗದು ಕೃಷ್ಣ ಖಾತಿಯ
ಮಾಡಲಾಗದು ಬಂದೆನಾದೊಡೆ
ರೂಢಿ ಮೆಚ್ಚದು ಕೌರವನ ಹಗೆ ಹರಿಬ ತನಗೆಂದ ॥18॥
೦೧೯ ಅರುಣಜಲದಾಜ್ಯದಲಿ ಬಮ್ಬಲು ...{Loading}...
ಅರುಣಜಲದಾಜ್ಯದಲಿ ಬಂಬಲು
ಗರುಳ ಚರುವಿನಲೆಲುವಿನೊಟ್ಟಿಲ
ಬೆರಳ ಸಮಿಧೆಯಲಡಗಿನಖಿಳಾಹುತಿಯ ರಚನೆಯಲಿ
ನರಕಪಾಲದ ಪಾತ್ರೆಗಳ ತಿಲ
ದೊರಳೆಗಳ ಕೇಶೌಘದರ್ಭಾಂ
ಕುರದಲಾಹವ ಯಜ್ಞ ದೀಕ್ಷಿತನಹೆನು ತಾನೆಂದ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತ ಜಲವೆಂಬ ತುಪ್ಪದಲ್ಲಿ, ಕರುಳಿನ ಹವಿಸ್ಸು. ಎಲುಬಿನ ರಾಶಿಯೇ ಹೋಮಕ್ಕೆ ಬೇಕಾಗುವ ಬೆರಳ ಸಮಿತ್ತುಗಳು. ಮಾಂಸವೇ ಸಮಸ್ತ ಆಹುತಿ. ಬುರುಡೆಗಳನ್ನೇ ಪಾತ್ರೆಗಳನ್ನಾಗಿ ಮಾಡಿಕೊಂಡು, ಕೋಶಗಳನ್ನೇ ಎಳ್ಳನ್ನಾಗಿ, ಕೂದಲಿನ ರಾಶಿಯನ್ನು ಎಳೆಯ ದರ್ಭೆಗಳನ್ನಾಗಿ, ಮಾಡಿಕೊಂಡು ಯುದ್ಧವೆಂಬ ಯಜ್ಞಕ್ಕೆ ನಾನು ದೀಕ್ಷೆಯನ್ನು ಹೊಂದಿದ್ದೇನೆ ಎಂದನು.
ಪದಾರ್ಥ (ಕ.ಗ.ಪ)
ಅರುಣಜಲ-ರಕ್ತ, ಆಜ್ಯ-ತುಪ್ಪ, ಬಂಬಲು-ತಿರುಳು, ಚರು-ಹವಿಸ್ಸು, ಎಲವು-ಎಲುಬು, ಒಟ್ಟಿಲು-ರಾಶಿ, ದೀಕ್ಷಿತ-ದೀಕ್ಷೆಯನ್ನು ಹೊಂದಿದವನು
ಮೂಲ ...{Loading}...
ಅರುಣಜಲದಾಜ್ಯದಲಿ ಬಂಬಲು
ಗರುಳ ಚರುವಿನಲೆಲುವಿನೊಟ್ಟಿಲ
ಬೆರಳ ಸಮಿಧೆಯಲಡಗಿನಖಿಳಾಹುತಿಯ ರಚನೆಯಲಿ
ನರಕಪಾಲದ ಪಾತ್ರೆಗಳ ತಿಲ
ದೊರಳೆಗಳ ಕೇಶೌಘದರ್ಭಾಂ
ಕುರದಲಾಹವ ಯಜ್ಞ ದೀಕ್ಷಿತನಹೆನು ತಾನೆಂದ ॥19॥
೦೨೦ ಮಾರಿಗೌತಣವಾಯ್ತು ನಾಳಿನ ...{Loading}...
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ರುಣ ಹಿಂಗೆ ರಣದಲಿ ಸುಭಟ ಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾಳೆಯ ಭಾರತ ಯುದ್ಧವು ಮಾರಿಗೆ (ಮೃತ್ಯು ದೇವತೆಗೆ) ಭೋಜನವಾಯಿತು. ಚತುರಂಗ ಸೈನ್ಯದಲ್ಲಿ ಹಂಗು ಕಳೆಯುವಂತೆ ಯುದ್ಧದಲ್ಲಿ ಅಸಂಖ್ಯಾತ ವೀರ ಯೋಧರನ್ನು ಕೊಂದೇ ಒಡೆಯನ ಕಾರ್ಯಕ್ಕೆ ನನ್ನ ಶರೀರವನ್ನು ದೂಡುವೆನು. ಸೂರ್ಯನಾಣೆಗೂ ನಿನ್ನ ಐದು ವೀರರನ್ನೂ ನೋಯಿಸುವುದಿಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಔತಣ-ಭೋಜನ, ಸುಭಟ-ವೀರಯೋಧ, ತೀರಿಸಿ-ಕೊಂದು
ಮೂಲ ...{Loading}...
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ರುಣ ಹಿಂಗೆ ರಣದಲಿ ಸುಭಟ ಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ ॥20॥
೦೨೧ ಎನಲು ಕರ್ಣನ ...{Loading}...
ಎನಲು ಕರ್ಣನ ದೃಢವ ಕಂಡನು
ಮನದೊಳುತ್ಸಾಹಿಸಿದನಾದೊಡೆ
ತನಯರೈವರ ಹದನು ನಿನ್ನದು ಬಲುಹ ಮಾಡುವೊಡೆ
ಮನಕೆ ಖತಿಯಹುದರುಹದಿರ್ದೊಡೆ
ತನಗೆ ಗುಣವಲ್ಲೆಂಬ ಕಾರಣ
ವಿನಿತನೊಡ್ಡೆ ೈಸಿದೆನು ನೀ ಸುಖಿಯಾಗು ಹೋಗೆಂದ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆನ್ನಲು ಕೃಷ್ಣನು ಕರ್ಣನ ಸ್ಥೈರ್ಯತೆಯನ್ನು ಕಂಡನು. ಮನದಲ್ಲಿ ಸಂತೋಷಿಸಿದನು. ಹಾಗಾದರೆ ಐವರು ಮಕ್ಕಳ ಕ್ಷೇಮ ನಿನ್ನದು. ಬಲವಂತ ಮಾಡಿದರೆ ನಿನ್ನ ಮನಸ್ಸಿಗೆ ಕೋಪ, ದುಃಖಗಳಾಗುತ್ತವೆ. ತಿಳಿಸದಿರುವುದು ತನಗೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ ಇಷ್ಟನ್ನೂ ಹೇಳಿದೆನು. ನೀನು ಸುಖಿಯಾಗು ಹೋಗು, ಎಂದನು.
ಪದಾರ್ಥ (ಕ.ಗ.ಪ)
ಹದನು-ಕ್ಷೇಮ, ಒಡ್ಡೈಸು-ಹೇಳು
ಮೂಲ ...{Loading}...
ಎನಲು ಕರ್ಣನ ದೃಢವ ಕಂಡನು
ಮನದೊಳುತ್ಸಾಹಿಸಿದನಾದೊಡೆ
ತನಯರೈವರ ಹದನು ನಿನ್ನದು ಬಲುಹ ಮಾಡುವೊಡೆ
ಮನಕೆ ಖತಿಯಹುದರುಹದಿರ್ದೊಡೆ
ತನಗೆ ಗುಣವಲ್ಲೆಂಬ ಕಾರಣ
ವಿನಿತನೊಡ್ಡೈಸಿದೆನು ನೀ ಸುಖಿಯಾಗು ಹೋಗೆಂದ ॥21॥
೦೨೨ ಬನ್ದರೊಳ್ಳಿತು ಬಾರದಿದ್ದೊಡೆ ...{Loading}...
ಬಂದರೊಳ್ಳಿತು ಬಾರದಿದ್ದೊಡೆ
ಕಂದ ಕೇಳೈ ಮಧುರ ವಚನದಿ
ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು
ಇಂದು ಕೊಡಿಸುವುದುಚಿತ ಸಂಪ್ರತಿ
ಗಿಂದು ಸೇರಿಸು ನಿನ್ನ ಮಾತನು
ಹಿಂದುಗಳೆಯನು ಕೌರವೇಶ್ವರನೆಂದನಸುರಾರಿ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ನೀನು ಬಂದರೆ ಒಳ್ಳೆಯದು, ಬರದಿದ್ದರೆ ಕಂದಾ, ಕೇಳು ಸವಿ ಮಾತುಗಳಿಂದ ದಡ್ಡ ಬುದ್ಧಿಯವನಾದ ನಿನ್ನ ದೊರೆಗೆ ತಿಳಿಸಿ ನಿನ್ನ ತಮ್ಮಂದಿರಿಗೆ ಇಂದು ರಾಜ್ಯವನ್ನು ನೀಡುವುದು ಯೋಗ್ಯ. ಸಂಧಾನಕ್ಕೆ ಇಂದು ಕೌರವನನ್ನು ಒಪ್ಪಿಸು. ಕೌರವೇಶ್ವರನು ನಿನ್ನ ಮಾತನ್ನು ಅಲ್ಲ ಗೆಳೆಯುವುದಿಲ್ಲ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಮಧುರ ವಚನ-ಸವಿಮಾತು
ಮೂಲ ...{Loading}...
ಬಂದರೊಳ್ಳಿತು ಬಾರದಿದ್ದೊಡೆ
ಕಂದ ಕೇಳೈ ಮಧುರ ವಚನದಿ
ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು
ಇಂದು ಕೊಡಿಸುವುದುಚಿತ ಸಂಪ್ರತಿ
ಗಿಂದು ಸೇರಿಸು ನಿನ್ನ ಮಾತನು
ಹಿಂದುಗಳೆಯನು ಕೌರವೇಶ್ವರನೆಂದನಸುರಾರಿ ॥22॥
೦೨೩ ಮಸೆದುದಿತ್ತಣ್ಡಕ್ಕೆ ಮತ್ಸರ ...{Loading}...
ಮಸೆದುದಿತ್ತಂಡಕ್ಕೆ ಮತ್ಸರ
ವಸಮ ಸಂಗರವೀಗ ನೀತಿಯ
ನುಸುರಿದರೆ ಮನಗಾಣನೇ ಕೌರವ ಮಹೀಶ್ವರನು
ವಿಸಸನದ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ವೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಗುಂಪುಗಳಿಗೆ ಅಸಮತೆಯ ಕಿಚ್ಚು ಹೋರಾಟಕ್ಕೆ ಬಂದು ಯುದ್ಧದಲ್ಲಿ ನಿಂತಿದೆ. ಈಗ ನೀತಿಯನ್ನು ಹೇಳಿದರೆ ಕೌರವ ರಾಜನು ಮನಸ್ಸನ್ನು ತಿಳಿಯನೇ ! ಯುದ್ಧದಲ್ಲಿನ ವೀರ ನಾನು ಜಾಣತನದ ಮಾತುಗಳನ್ನು ಆಡಲಾಗದು. ಅದರಿಂದ ನನ್ನ ಪರಾಕ್ರಮಕ್ಕೆ ಮಂಕು ಕವಿದಂತಾಗುತ್ತದೆ. ಕೃಷ್ಣನೇ ! ಸಂಧಿಯು ನನಗೆ ತಿಳಿಯದು ಎಂದನು.
ಪದಾರ್ಥ (ಕ.ಗ.ಪ)
ಸಂಗರ-ಯುದ್ಧ
ಮೂಲ ...{Loading}...
ಮಸೆದುದಿತ್ತಂಡಕ್ಕೆ ಮತ್ಸರ
ವಸಮ ಸಂಗರವೀಗ ನೀತಿಯ
ನುಸುರಿದರೆ ಮನಗಾಣನೇ ಕೌರವ ಮಹೀಶ್ವರನು
ವಿಸಸನದ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ವೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ ॥23॥
೦೨೪ ಕಳುಹಬೇಹುದು ದೇವ ...{Loading}...
ಕಳುಹಬೇಹುದು ದೇವ ದಿನಪತಿ
ಇಳಿದನಪರಾಂಬುಧಿಗೆ ಸಂಪ್ರತಿ
ಯಳಿದ ಹೊತ್ತಿಂದೀಗ ನೆಟ್ಟನೆ ನೀವು ಪಾಂಡವರು
ಹುಲುಸರವಿ ಹಾವಹುದು ಹುತ್ತಿನ
ತಲೆಯಲಿರಲಜ್ಞರಿಗೆ ಹಿಸುಣರ
ಬಳಕೆ ಹೊಗುವುದು ಕಳುಹ ಬೇಕೆಂದೆರಗಿದನು ಕರ್ಣ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಾ ! ನನ್ನನ್ನು ಕಳುಹಿಸಬೇಕು. ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಇಳಿದನು. ಒಪ್ಪಂದವು ಮುರಿದ ಸಮಯದಲ್ಲಿ ನೀವು ನೇರವಾಗಿ ಪಾಂಡವರ ಕಡೆಯವರು. ತಿಳಿಯದವರಿಗೆ ಹುತ್ತದ ಬಳಿಯಲ್ಲಿ ಹುಲ್ಲಿನ ಹಗ್ಗವಿದ್ದರೂ ಹಾವು ಎನಿಸುತ್ತದೆ. ಚಾಡಿಕೋರರ ಮಾತು ಕಿವಿಯನ್ನು ಪ್ರವೇಶಿಸುವುದು ರೂಢಿ. ನನ್ನನ್ನು ಕಳುಹಿಸಿಕೊಡು ಎಂದು ಕರ್ಣನು ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಅಪರಾಂಬುಧಿ-ಪಶ್ಚಿಮಸಮುದ,್ರ ಹುಲುಸರವಿ-ಹುಲ್ಲಿನ ಹಗ್ಗ.
ಮೂಲ ...{Loading}...
ಕಳುಹಬೇಹುದು ದೇವ ದಿನಪತಿ
ಇಳಿದನಪರಾಂಬುಧಿಗೆ ಸಂಪ್ರತಿ
ಯಳಿದ ಹೊತ್ತಿಂದೀಗ ನೆಟ್ಟನೆ ನೀವು ಪಾಂಡವರು
ಹುಲುಸರವಿ ಹಾವಹುದು ಹುತ್ತಿನ
ತಲೆಯಲಿರಲಜ್ಞರಿಗೆ ಹಿಸುಣರ
ಬಳಕೆ ಹೊಗುವುದು ಕಳುಹ ಬೇಕೆಂದೆರಗಿದನು ಕರ್ಣ ॥24॥
೦೨೫ ಬೀಳುಕೊಣ್ಡನು ಮನೆಗೆ ...{Loading}...
ಬೀಳುಕೊಂಡನು ಮನೆಗೆ ಬಂದು ವಿ
ಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ತಂತ್ರ ಮನದಲಿ ನಟ್ಟು ಬೇರೂರಿ
ಕಾಳುಮಾಡಿದನಕಟ ಕೌರವ
ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು ಜೀವವ ಕೊಳ್ಳದಿರನೆಂದ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕೃಷ್ಣನನ್ನು ಬೀಳ್ಕೊಂಡನು. ಮನೆಗೆ ಬಂದನು ವಿಶಾಲಮತಿ ಆಲೋಚಿಸಿದನು. ಆ ಕೃಷ್ಣನು ಮಾಡಿದ ಉಪಾಯ ಮನಸ್ಸಿನಲ್ಲಿ ಬೇರೂರಿ ನಟ್ಟಿತು. ‘ಅಕಟ (ಅಯ್ಯೋ!) ಕೇಡು ಮಾಡಿದನು. ದುರ್ಯೋಧನನು ಬಾಳಲು ತಿಳಿಯದೇ ಕೆಟ್ಟನು. ಈ ಗೋಪಾಲನು ಸುಮ್ಮನೆ ಬಿಡುವುದಿಲ್ಲ. ಜೀವವನ್ನು ತೆಗೆದುಕೊಳ್ಳದೇ ಇರುವುದಿಲ್ಲ’ ಎಂದುಕೊಂಡನು.
ಮೂಲ ...{Loading}...
ಬೀಳುಕೊಂಡನು ಮನೆಗೆ ಬಂದು ವಿ
ಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ತಂತ್ರ ಮನದಲಿ ನಟ್ಟು ಬೇರೂರಿ
ಕಾಳುಮಾಡಿದನಕಟ ಕೌರವ
ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು ಜೀವವ ಕೊಳ್ಳದಿರನೆಂದ ॥25॥
೦೨೬ ವೀರ ರವಿಸುತನೊನ್ದು ...{Loading}...
ವೀರ ರವಿಸುತನೊಂದು ದಿನ ರವಿ
ವಾರದಲಿ ಪರಿತೋಷ ಮಿಗೆ ಭಾ
ಗೀರಥೀ ತೀರದಲಿ ತಾತಂಗಘ್ರ್ಯವನು ಕೊಡುತ
ಸೌರ ಮಂತ್ರವ ಜಪಿಸುತಿರಲೌ
ದಾರಿಯದ ಸುರತರುವ ಕುಂತೀ
ನಾರಿ ಕಾಣಲು ಬಂದಳಾತ್ಮಜನಿದ್ದ ನದಿಗಾಗಿ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಕರ್ಣನು ಒಂದು ದಿನ ಭಾನುವಾರದಂದು ಅಧಿಕವಾದ ಸಂತೋಷದಿಂದ ಗಂಗಾನದಿಯ ತೀರದಲ್ಲಿ ತಂದೆಯಾದ ಸೂರ್ಯದೇವನಿಗೆ ಅಘ್ರ್ಯವನ್ನು ಕೊಡುತ್ತ, ಸೌರಮಂತ್ರವನ್ನು ಹೇಳುತ್ತಿರಲು ಕುಂತಿಯು ಉದಾರತೆಯ ಕಲ್ಪವೃಕ್ಷವನ್ನು ಕಾಣಲು ತನ್ನ ಮಗನು ಇದ್ದ ಗಂಗಾನದಿಗೆ ಬಂದಳು.
ಪದಾರ್ಥ (ಕ.ಗ.ಪ)
ಪರಿತೋಷ-ಸಂತೋಷ, ಸುರತರು-ಕಲ್ಪವೃಕ್ಷ, ಔದಾರ್ಯ-ಉದಾರತೆ
ಮೂಲ ...{Loading}...
ವೀರ ರವಿಸುತನೊಂದು ದಿನ ರವಿ
ವಾರದಲಿ ಪರಿತೋಷ ಮಿಗೆ ಭಾ
ಗೀರಥೀ ತೀರದಲಿ ತಾತಂಗಘ್ರ್ಯವನು ಕೊಡುತ
ಸೌರ ಮಂತ್ರವ ಜಪಿಸುತಿರಲೌ
ದಾರಿಯದ ಸುರತರುವ ಕುಂತೀ
ನಾರಿ ಕಾಣಲು ಬಂದಳಾತ್ಮಜನಿದ್ದ ನದಿಗಾಗಿ ॥26॥
೦೨೭ ಬರಲು ತಾಯ್ಗಿದಿರಾಗಿ ...{Loading}...
ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದಲಿ ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿದಪ್ಪಿದಳು ನೀ
ರುರವಣಿಸಿದವು ನಯನದಲಿ ಸೆರೆ
ಕೊರಳಿಗೌಕಿದುದಳಲಿನಬುಧಿಯೊಳಳ್ದಳಾ ಕುಂತಿ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಬರಲು ತಾನಿರುವ ಸ್ಥಳದಲ್ಲಿ ಇರದೆ ತಾಯಿಗೆ ಎದುರಾಗಿ ಕರ್ಣನು ಬಂದನು. ದಂಡದಂತೆ ಕುಂತಿಯ ಪಾದದಲ್ಲಿ ಮೈಯ ಚಾಚಿದನು. ಕುಂತಿಯು ಅವನ ಹಣೆಯನ್ನು ಎತ್ತಿದಳು. ಎಳೆದುಕೊಂಡು ಬಿಗಿದಪ್ಪಿದಳು; ಕಣ್ಣೀರು ಉಕ್ಕಿದವು. ಕೊರಳಿನ ನರಗಳು ಬಿಗಿದು ಕುಂತಿಯು ಅಳುತ್ತ ದುಃಖದ ಕಡಲಿನಲ್ಲಿ ಮುಳುಗಿದಳು.
ಪದಾರ್ಥ (ಕ.ಗ.ಪ)
ನೊಸಲು-ಹಣೆ, ಚಾಚು-ಒತ್ತು, ಅಳಲು-ದುಃಖ
ಪಾಠಾನ್ತರ (ಕ.ಗ.ಪ)
ಪಾಠಾಂತರ : ಕೊರಳಿಗೌಕಿ ತಾನಳಲಿನಬುಧಿಯೊಳಳ್ದಳಾ-ಕೊರಳಿಗೌಕಿದುದಳಲಿನಬುಧಿಯೊಳಳ್ದಳಾ
ಮೂಲ ...{Loading}...
ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದಲಿ ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿದಪ್ಪಿದಳು ನೀ
ರುರವಣಿಸಿದವು ನಯನದಲಿ ಸೆರೆ
ಕೊರಳಿಗೌಕಿದುದಳಲಿನಬುಧಿಯೊಳಳ್ದಳಾ ಕುಂತಿ ॥27॥
೦೨೮ ಆ ಸಮಯದಲಿ ...{Loading}...
ಆ ಸಮಯದಲಿ ಗಂಗೆ ನಾರೀ
ವೇಷದಲಿ ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸು ದಿನವಿವನಾಗುಹೋಗಿನ
ಗಾಸಿಯನು ತಲೆಗಾಯÉ್ದುನೆನ್ನಯ
ಭಾಷೆ ಸಂದುದೆನುತ್ತ ತಾಯಿಗೆ ಕೊಟ್ಟಳಾತ್ಮಜನ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಗಂಗೆಯು ಹೆಂಗಸಿನ ವೇಷದಲ್ಲಿ ನಡೆದು ಬಂದಳು. ಎಲೆ ಕುಂತಿ ದೇವಿಯೇ ನಿನ್ನ ಮಗನನ್ನು ನೀನು ಕೈಯಾರೆ ಒಪ್ಪಿಕೊ. ಇಷ್ಟು ದಿನ ಇವನ ಆಗು ಹೋಗಿನ ತೊಂದರೆಯನ್ನು ರಕ್ಷಿಸಿದೆನು ನನ್ನ ವಚನ ನೆರವೇರಿತು ಎನ್ನುತ್ತ ಮಗನನ್ನು ತಾಯಿಗೆ ಕೊಟ್ಟಳು.
ಪದಾರ್ಥ (ಕ.ಗ.ಪ)
ಗಾಸಿ-ತೊಂದರೆ, ಭಾಷೆ-ವಚನ
ಮೂಲ ...{Loading}...
ಆ ಸಮಯದಲಿ ಗಂಗೆ ನಾರೀ
ವೇಷದಲಿ ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸು ದಿನವಿವನಾಗುಹೋಗಿನ
ಗಾಸಿಯನು ತಲೆಗಾಯÉ್ದುನೆನ್ನಯ
ಭಾಷೆ ಸಂದುದೆನುತ್ತ ತಾಯಿಗೆ ಕೊಟ್ಟಳಾತ್ಮಜನ ॥28॥
೦೨೯ ಇರಲಿರಲು ರವಿ ...{Loading}...
ಇರಲಿರಲು ರವಿ ಬಂದನೆಕ್ಕಟಿ
ಕರೆದನೀತನ ಕಿವಿಯೊಳೆಲ್ಲವ
ನೊರೆದ ನಿನಗೆಲೆ ಮಗನೆ ಕುಂತೀದೇವಿ ತಾಯಹುದು
ಮುರಹರನ ಮತದಿಂದ ನಿನ್ನಯ
ಸರಳ ಬೇಡಲು ಬಂದಳಂದಿನ
ಹರಿಗೆ ಕವಚವನಿತ್ತವೊಲು ಮರುಳಾಗಬೇಡೆಂದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗಿರಲು ಸೂರ್ಯನು ಬಂದನು, ಕರ್ಣನನ್ನು ರಹಸ್ಯವಾಗಿ ಏಕಾಂತದಲ್ಲಿ ಕರೆದು ಕಿವಿಯಲ್ಲಿ ಎಲ್ಲವನ್ನೂ ಹೇಳಿದನು. ಎಲೆ ಮಗನೆ ನಿನಗೆ ಕುಂತೀದೇವಿ ತಾಯಿ. ಹೌದು, ಕೃಷ್ಣನ ಅಭಿಪ್ರಾಯದಿಂದ ನಿನ್ನಲ್ಲಿರುವ ಬಾಣವನ್ನು ಬೇಡಲು ಬಂದಿರುವಳು. ಅಂದು ದೇವೇಂದ್ರನಿಗೆ ಕವಚವನ್ನು ಕೊಟ್ಟಂತೆ ಮರುಳಾಗಬೇಡ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಎಕ್ಕಟಿ-ಏಕಾಂತ (ರಹಸ್ಯ), ಒರೆ-ಹೇಳು, ಹರಿ-ಇಂದ್ರ
ಮೂಲ ...{Loading}...
ಇರಲಿರಲು ರವಿ ಬಂದನೆಕ್ಕಟಿ
ಕರೆದನೀತನ ಕಿವಿಯೊಳೆಲ್ಲವ
ನೊರೆದ ನಿನಗೆಲೆ ಮಗನೆ ಕುಂತೀದೇವಿ ತಾಯಹುದು
ಮುರಹರನ ಮತದಿಂದ ನಿನ್ನಯ
ಸರಳ ಬೇಡಲು ಬಂದಳಂದಿನ
ಹರಿಗೆ ಕವಚವನಿತ್ತವೊಲು ಮರುಳಾಗಬೇಡೆಂದ ॥29॥
೦೩೦ ಬೆಸಸಿದುದಕೆ ಹಸಾದವೆನ್ದನು ...{Loading}...
ಬೆಸಸಿದುದಕೆ ಹಸಾದವೆಂದನು
ಬಿಸಜಬಂಧುವ ಕಳುಹಿದನು ಮ
ನ್ನಿಸಿದನಿತ್ತಲು ಮಾತೆಯನು ಭಯಭರಿತ ಭಕ್ತಿಯಲಿ
ಒಸೆದು ಬಿಜಯಂಗೈದ ಹದನನು
ವುಸುರ ಬೇಹುದು ತಾಯೆಯೆನೆ ಶೋ
ಕಿಸುತ ನುಡಿದಳು ಕುಂತಿ ಕರ್ಣನ ತೆಗೆದು ಬಿಗಿಯಪ್ಪಿ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೇಳಿದುದಕ್ಕೆ ಕರ್ಣನು ‘ತಿಳಿಯಿತು’ ಎಂದು ಸೂರ್ಯನನ್ನು ಕಳುಹಿಸಿದನು. ಇತ್ತ ಕಡೆ ತಾಯಿಯನ್ನು ಭಯ-ಭಕ್ತಿಯಿಂದ ಗೌರವಿಸಿದನು. ‘ತಾಯೆ ಪ್ರೀತಿಯಲ್ಲಿ ದಯಮಾಡಿಸಿದ ವಿಷಯವನ್ನು ಹೇಳಬೇಕು’ ಎನ್ನಲು ಕುಂತಿಯು ಅಳುತ್ತ ಕರ್ಣನನ್ನು ಬಿಗಿದಪ್ಪಿ ಹೇಳಿದಳು.
ಪದಾರ್ಥ (ಕ.ಗ.ಪ)
ಬೆಸಸು-ಹೇಳು, ಬಿಸಜ ಬಂಧು-ಸೂರ್ಯ, ಒಸೆ-ಪ್ರೀತಿ
ಮೂಲ ...{Loading}...
ಬೆಸಸಿದುದಕೆ ಹಸಾದವೆಂದನು
ಬಿಸಜಬಂಧುವ ಕಳುಹಿದನು ಮ
ನ್ನಿಸಿದನಿತ್ತಲು ಮಾತೆಯನು ಭಯಭರಿತ ಭಕ್ತಿಯಲಿ
ಒಸೆದು ಬಿಜಯಂಗೈದ ಹದನನು
ವುಸುರ ಬೇಹುದು ತಾಯೆಯೆನೆ ಶೋ
ಕಿಸುತ ನುಡಿದಳು ಕುಂತಿ ಕರ್ಣನ ತೆಗೆದು ಬಿಗಿಯಪ್ಪಿ ॥30॥
೦೩೧ ಮಗನೆ ತಮ್ಮನ್ದಿರನು ...{Loading}...
ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ನೀನೋ
ಲಗಿಸುವರೆ ಕುರುಪತಿಯ ನಿನಗಿತ್ತಂಡವನುಜರಲೆ
ಸೊಗಸು ತಾನೆಂದುದನು ಹಿಸುಣರ
ಬಗೆಯ ನೀ ಕೇಳದಿರು ನೀ ಮನ
ಬಿಗಿಸದಿರು ಸಲಿಸೆನ್ನ ವಚನವನೆಂದಳಾ ಕುಂತಿ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನೆ ತಮ್ಮಂದಿರನ್ನು ರಕ್ಷಿಸು, ಹಠವನ್ನು ಬಿಡು ನೀನು ಕುರುರಾಜನ ಸೇವೆ ಮಾಡಬಹುದೆ ? ನಿನಗೆ ಎರಡೂ ಪಂಗಡದವರು ಸೋದರರಲ್ಲವೆ? ಹೇಳಿದುದು ಒಳ್ಳೆಯದೆಂಬ ಚಾಡಿಕೋರರ ಮಾತುಗಳನ್ನು ಕೇಳದಿರು. ಮನಸ್ಸನ್ನು ಬಿಗಿ ಮಾಡದಿರು. ನನ್ನ ಮಾತನ್ನು ಸಲ್ಲಿಸು ಎಂದು ಕುಂತಿಯು ಹೇಳಿದಳು.
ಪದಾರ್ಥ (ಕ.ಗ.ಪ)
ವಿಗಡತನ-ಹಠ, ಓಲಗಿಸು-ಸೇವೆಯ ಮಾಡು
ಪಾಠಾನ್ತರ (ಕ.ಗ.ಪ)
ನಿನಗವರಿದಿರೆಯಿತ್ತಂಡ -> ನಿನಗಿತ್ತಂಡವನುಜರಲೆ ಕೃಷ್ಣಜೋಯಿಸರ ಪಾಠ ಉದ್ಯೋಗ ಪರ್ವ, ಪ್ರಾಚ್ಯ ಸಂಶೋಧನ ಕೇಂದ್ರ, ಮೈಸೂರು
ಮೂಲ ...{Loading}...
ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ನೀನೋ
ಲಗಿಸುವರೆ ಕುರುಪತಿಯ ನಿನಗಿತ್ತಂಡವನುಜರಲೆ
ಸೊಗಸು ತಾನೆಂದುದನು ಹಿಸುಣರ
ಬಗೆಯ ನೀ ಕೇಳದಿರು ನೀ ಮನ
ಬಿಗಿಸದಿರು ಸಲಿಸೆನ್ನ ವಚನವನೆಂದಳಾ ಕುಂತಿ ॥31॥
೦೩೨ ತಾಯಹುದು ತಾ ...{Loading}...
ತಾಯಹುದು ತಾ ಬಲ್ಲೆನದು ಸಂ
ಜಾಯತವು ಪಾಂಡವರು ತಮ್ಮದಿ
ರೀಯುಭಯ ರಾಯರಲಿ ಪಟ್ಟದ ಹಿರಿಯ ತಾನಹುದು
ರಾಯನೆನ್ನನು ನೆಚ್ಚಿ ಹೊರೆದನು
ಸಾಯಲಳುಕುವೆನೇ ಸುಡೇತರ
ದೀಯಿಳೆಯ ಬಾಳಿಕೆ ಕೃತಘ್ನತೆಗೆಲ್ಲಿ ಗತಿಯೆಂದ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಹುದು ನೀನು ನನ್ನ ತಾಯಿ. ಅದನ್ನು ನಾನು ಬಲ್ಲೆ. ಒಡಹುಟ್ಟಿದ ಪಾಂಡವರು ತಮ್ಮಂದಿರು. ಈ ಎರಡೂ ರಾಜರಲ್ಲಿ ಪಟ್ಟದ ಹಿರಿಯನು ನಾನು. ಕುರುರಾಜನು ನನ್ನನ್ನು ನಂಬಿ ಸಲಹಿದನು. ನಾನು ಸಾಯಲು ಭಯಪಡುವೆನೆ? ಸುಡು ! ಇದು ಯಾವ ತರಹದ ಬಾಳು. ಕೃತಘ್ನತೆಗೆ ಗತಿ ಎಲ್ಲಿದೆ’ ಎಂದನು.
ಪದಾರ್ಥ (ಕ.ಗ.ಪ)
ಸಂಜಾಯತ-ಒಡಹುಟ್ಟಿದ, ಹೊರೆ-ಸಲಹು
ಮೂಲ ...{Loading}...
ತಾಯಹುದು ತಾ ಬಲ್ಲೆನದು ಸಂ
ಜಾಯತವು ಪಾಂಡವರು ತಮ್ಮದಿ
ರೀಯುಭಯ ರಾಯರಲಿ ಪಟ್ಟದ ಹಿರಿಯ ತಾನಹುದು
ರಾಯನೆನ್ನನು ನೆಚ್ಚಿ ಹೊರೆದನು
ಸಾಯಲಳುಕುವೆನೇ ಸುಡೇತರ
ದೀಯಿಳೆಯ ಬಾಳಿಕೆ ಕೃತಘ್ನತೆಗೆಲ್ಲಿ ಗತಿಯೆಂದ ॥32॥
೦೩೩ ಮಕ್ಕಳೈವರಿಗಾ ಹಿರಿಯನದು ...{Loading}...
ಮಕ್ಕಳೈವರಿಗಾ ಹಿರಿಯನದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆ ನೆಲೆಯಿಲ್ಲದು ನಿಲಲಿ ಧಾರುಣಿಯ ಬಯಸುವರೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷಿ ್ಮ ತನಗೆಂದ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದು ಮಕ್ಕಳಿಗೂ ನಾನು ಹಿರಿಯನು ಅದು ಒಪ್ಪತಕ್ಕ ಮಾತು. ತಾಯೆ ಇದರಲ್ಲಿ ಸಂದೇಹಕ್ಕೆ ಆಸ್ಪದವಿಲ್ಲ. ಅದು ಹಾಗಿರಲಿ. ಹಾಗೆಂದು ಭೂಮಿಯನ್ನು ಬಯಸುವುದು ಸರಿಯೆ ? ಒಡೆಯನ ಅರಸಿಯ ಜೊತೆಯಲ್ಲಿ ಬಾಳುವೆ ಮಾಡಿದರೆ ಯಾರು ಮೆಚ್ಚುವರು ? ಅಕ್ಕ (ತಾಯಿ) ಹೇಳು. ನನಗೆ ಜಯಲಕ್ಷ್ಮಿ ಅಸಹ್ಯಪಡಲಾರಳೆ ?
ಪದಾರ್ಥ (ಕ.ಗ.ಪ)
ಸಂಜಾಯತ-ಒಡಹುಟ್ಟಿದ, ದಾತಾರ-ಒಡೆಯ, ಹೇಸು-ಅಸಹ್ಯ
ಮೂಲ ...{Loading}...
ಮಕ್ಕಳೈವರಿಗಾ ಹಿರಿಯನದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆ ನೆಲೆಯಿಲ್ಲದು ನಿಲಲಿ ಧಾರುಣಿಯ ಬಯಸುವರೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷಿ ್ಮ ತನಗೆಂದ ॥33॥
೦೩೪ ಇನ್ದು ನೀವರುಹಿದ ...{Loading}...
ಇಂದು ನೀವರುಹಿದ ಬಳಿಕ ರವಿ
ನಂದನನುಯೆಂದರಿದೆನಲ್ಲದೆ
ಹಿಂದೆ ದುರಿಯೋಧನನದಾವುದ ನೋಡಿ ಸಲಹಿದನು
ಬಂದು ಪಾಂಡವರೊಡನೆ ಕೂಡಿದ
ರಿಂದು ನಗದೇ ಲೋಕವಂತಿರ
ಲಿಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ ನೀವೆಂದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದಿನ ನೀವು ಹೇಳಿದ ಮೇಲೆ ನಾನು ಸೂರ್ಯನ ಪುತ್ರನೆಂದು ತಿಳಿದೆನು. ಈ ಮೊದಲು ದುರ್ಯೋಧನನು ನನ್ನಲ್ಲಿ ಅದೇನನ್ನು ನೋಡಿ ಸಲಹಿದನು ! ಇಂದು ನಾನು ಬಂದು ಪಾಂಡವರೊಡನೆ ಕೂಡಿದರೆ ಲೋಕವು ನಗದಿರುವುದೆ ? ಅದು ಹಾಗಿರಲಿ. ನೀವು ಇಲ್ಲಿಗೆ ದಯಮಾಡಿಸಿದ ಕಾರ್ಯವನ್ನು ಹೇಳಿ ಎಂದು ಕರ್ಣನು ಕೇಳಿದನು.
ಪದಾರ್ಥ (ಕ.ಗ.ಪ)
ಬೆಸಸಿ-ಹೇಳಿ
ಮೂಲ ...{Loading}...
ಇಂದು ನೀವರುಹಿದ ಬಳಿಕ ರವಿ
ನಂದನನುಯೆಂದರಿದೆನಲ್ಲದೆ
ಹಿಂದೆ ದುರಿಯೋಧನನದಾವುದ ನೋಡಿ ಸಲಹಿದನು
ಬಂದು ಪಾಂಡವರೊಡನೆ ಕೂಡಿದ
ರಿಂದು ನಗದೇ ಲೋಕವಂತಿರ
ಲಿಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ ನೀವೆಂದ ॥34॥
೦೩೫ ಆದೊಡೈವರ ಮಕ್ಕಳನು ...{Loading}...
ಆದೊಡೈವರ ಮಕ್ಕಳನು ತಲೆ
ಗಾಯ್ದು ತೋರೈ ಕಂದ ನಿನಗಿ
ನ್ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯಲಿ
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಟ್ಟನು ಬಂದನರಮನೆಗೆ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾದರೆ ಐದು ಮಕ್ಕಳ ತಲೆ ಕಾಯ್ದು ತೋರಿಸು ಮಗುವೇ. ಇನ್ನು ನಿನಗೆ ಈ ದುರಾಗ್ರಹವು ಕೌರವನ ಸೇವೆಯಲ್ಲಿರುವಾಗ ಸಾಧ್ಯವೆ? ಒಮ್ಮೆ ಬಿಟ್ಟ ಬಾಣವನ್ನು ಮತ್ತೆ ತೊಡಬೇಡ. ವೈರವನ್ನು ಬಿಟ್ಟು ಬಿಡು. ಎನ್ನಲು ಒಪ್ಪಿದೆ ಎಂದು ಕುಂತಿಯನ್ನು ಬೀಳುಕೊಟ್ಟು ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ದುರಾಗ್ರಹ-ಕೆಟ್ಟಹಠ, ಮಾದು-ಕಳೆ/ಬಿಡು
ಮೂಲ ...{Loading}...
ಆದೊಡೈವರ ಮಕ್ಕಳನು ತಲೆ
ಗಾಯ್ದು ತೋರೈ ಕಂದ ನಿನಗಿ
ನ್ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯಲಿ
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಟ್ಟನು ಬಂದನರಮನೆಗೆ ॥35॥