೦೯

೦೦೦ ಸೂ ಬಿಡು ...{Loading}...

ಸೂ. ಬಿಡು ನೆಲನ ಕೇಡುಗರ ಮಾತಿಂ
ಗೊಡಬಡದಿರಂತಕನ ನಗರಿಗೆ
ನಡೆಯಬೇಡೆಂದಸುರರಿಪು ಕೌರವನನುರೆ ಜರೆದ

೦೦೧ ಅವಧಿ ಸವೆದುದು ...{Loading}...

ಅವಧಿ ಸವೆದುದು ಪಾಂಡವರು ನಿ
ನ್ನವರು ವನವಾಸ ಪ್ರವಾಸದೊ
ಳವರು ನವೆದರು ಕೂಡಿಕೊಂಡಿಹುದಧಿಕ ಗುಣ ನಿನಗೆ
ಅವನಿಯರ್ಧವನೀವುದೀಯ
ದ್ರುವದ ಬಾಳಿಕೆಯೊಳಗೆ ಪುರುಷಾ
ರ್ಥವನು ಸಂಚಿಸೆ ಕಲಿಯಬೇಹುದು ಭೂಪ ಕೇಳ್ ಎಂದ ॥1॥

೦೦೨ ಅರಸುತನ ತನಗಧಿಕವಾಗುತ ...{Loading}...

ಅರಸುತನ ತನಗಧಿಕವಾಗುತ
ಬರಬರಲು ಕಣ್ಣಾಲಿಗಳು ತರ
ಹರಿಸಿ ಕಾಣವು ವರ್ತಮಾನದ ನೃಪರ ಬಳಕೆಯಿದು
ಸಿರಿಯ ಮದವೆಂಬಧಿಕ ತಾಮಸ
ದೊರಕಿದಕ್ಷಿಗೆ ನೀತಿಕಾರರ
ಪರಮವಚನಾಂಜನದಿ ಪ್ರಜ್ವಲಿಸುವುದು ನಯವೆಂದ ॥2॥

೦೦೩ ಕೋಶ ಬಲ ...{Loading}...

ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರ ಮ
ಹೀಶ ಜನವೆಂಬುದು ಕಣಾ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲಿ ಮಿತ್ರಮ
ಹೀಶರೆಂಬುದ ತೊರೆವೆ ಪಾಂಡವ
ರಾ ಸಹಾಯವು ಬರಲು ನಿನಗಿದಿರಿಲ್ಲ ಕೇಳ್ ಎಂದ ॥3॥

೦೦೪ ಹೇಳಿದೀ ಸಪ್ತಾಙ್ಗದೊಳಗೊಂ ...{Loading}...

ಹೇಳಿದೀ ಸಪ್ತಾಂಗದೊಳಗೊಂ
ದೇಳಿ ದಿಟವಾಗಿರ್ದ ನೃಪತಿಯ
ಬಾಳಿಕೆಗೆ ಸಂದೇಹವರಿಯಾ ರಾಜನೀತಿಗಳ
ಹೇಳಲಮ್ಮುವರಿಲ್ಲ ಹಿರಿಯರು
ಹೇಳಿದೊಡೆ ನೀ ಕೇಳೆ ಕುರುಕುಲ
ಮೌಳಿ ನಯದಲಿ ನಡೆಯಕಟಯೆಂದಸುರರಿಪು ನುಡಿದ ॥4॥

೦೦೫ ಸಾಮವೆಮ್ಬುದು ರಾಜನೀತಿಗೆ ...{Loading}...

ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರನಂತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದಲಿ ಸಾಮಾನ್ಯ ತರವೆಂದ ॥5॥

೦೦೬ ಮಾಡಿದಪರಾಧಙ್ಗಳನು ಮರೆ ...{Loading}...

ಮಾಡಿದಪರಾಧಂಗಳನು ಮರೆ
ದಾಡರತಿ ಮೋಹದಲಿ ದಿಟ ನೀ
ಗೂಡಿ ಬದುಕುವ ನುಡಿಯ ನುಡಿವರು ನಮ್ಮ ಮನ ಮೆಚ್ಚೆ
ಕಾಡಿನೊಳಗಾಡಿದರು ದುಃಖವ
ತೋಡಿದರು ನೀನವರಿಗುಚಿತವ
ಮಾಡಿ ನಾಡನು ಕೊಡುವುದೆಂದನು ದಾನವಧ್ವಂಸಿ ॥6॥

೦೦೭ ವಿದುರನುತ್ಸವ ಕೃಪನ ...{Loading}...

ವಿದುರನುತ್ಸವ ಕೃಪನ ಸಮ್ಮದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳ್ ಎಂದಸುರರಿಪು ನಯನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆಯಿರ್ದುದು ರಾಯನಾಸ್ಥಾನ ॥7॥

೦೦೮ ಅವರಿಗಿನ್ದ್ರಪ್ರಸ್ಥದಲಿ ರಾ ...{Loading}...

ಅವರಿಗಿಂದ್ರಪ್ರಸ್ಥದಲಿ ರಾ
ಜ್ಯವನು ಕುಳಸಹಿತಿತ್ತು ನೀ ಪಾಂ
ಡವ ಪ್ರತಿಷ್ಠಾಚಾರ್ಯನೆಂಬೀ ಬಿರುದ ಸಲಿಸಿದೊಡೆ
ಅವನಿಯಲಿ ನಿನ್ನೊಡನೆ ತಲೆಯೆ
ತ್ತುವ ನೃಪಾಲಕರಿಲ್ಲ ನುಡಿಗಳು
ಕಿವಿಗೆ ಕರ್ಕಶವೀಗಲಾದೊಡೆ ಮುಂದೆ ಲೇಸೆಂದ ॥8॥

೦೦೯ ಕಳಕಳಿಕೆ ತಗ್ಗಿದ ...{Loading}...

ಕಳಕಳಿಕೆ ತಗ್ಗಿದ ಸಭಾ ಸ್ಥಳ
ದೊಳಗೆ ಸಿಂಹಧ್ವನಿಯಲವನಿಪ
ಕುಲಕುಠಾರನು ಪರಶುರಾಮನು ನುಡಿದನರಸಂಗೆ
ಎಲೆ ಸುಯೋಧನ ಕೃಷ್ಣರಾಯನ
ಅಳಲಿಸುವರೇ ಲೋಭವೀ ವೆ
ಗ್ಗಳದ ನಿರ್ಬಂಧನವು ಪ್ರಾಜ್ಞರಿಗುಚಿತವಲ್ಲೆಂದ ॥9॥

೦೧೦ ದಿವಿಜರಿದಿರಲ್ಲೆನ್ದು ಡಮ್ಭೋ ...{Loading}...

ದಿವಿಜರಿದಿರಲ್ಲೆಂದು ಡಂಭೋ
ದ್ಭವನು ನರ ನಾರಾಯಣಾಖ್ಯರ
ನವಗಡಿಸಿ ಮುರಿವಡೆದು ಕೆಟ್ಟನು ಗಾಢಗರ್ವದಲಿ
ಅವರೊಳರ್ಜುನ ನರನು ಯದು ಸಂ
ಭವನು ನಾರಾಯಣನು ಬಿಡು ಪಾಂ
ಡವರ ವೈರವನೆಂದು ಭಾರ್ಗವ ನುಡಿದನರಸಂಗೆ ॥10॥

೦೧೧ ತಪ್ಪಿ ನುಡಿಯನು ...{Loading}...

ತಪ್ಪಿ ನುಡಿಯನು ಪರಶುರಾಮನು
ದರ್ಪವಿದು ಲೇಸಲ್ಲ ಕೃಷ್ಣಂ
ಗೊಪ್ಪಿಸುವುದರ್ಧಾವನೀತಳವನು ಸರಾಗದಲಿ
ತಪ್ಪಿ ನುಡಿದೊಡೆ ಗರುಡ ದೇವನ
ದರ್ಪವನು ಹರಿ ಸೆಳೆದು ಬಿಸುಟನು
ಒಪ್ಪಿ ತಾಗದಿರೆಂದು ನುಡಿದನು ಕಣ್ವ ಮುನಿ ನಗುತ ॥11॥

೦೧೨ ಅಹುದು ಕಣ್ವನ ...{Loading}...

ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದು ಗರ್ವ
ಗ್ರಹ ಹಿಡಿದು ಮರುಳಾಗದಿರು ಮುನ್ನೊಬ್ಬ ಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಗಳಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರಮುನಿ ಬಂದು ॥12॥

೦೧೩ ನಿಮ್ಮ ಪೂರ್ವ ...{Loading}...

ನಿಮ್ಮ ಪೂರ್ವ ಯಯಾತಿ ನಾಕದೊ
ಳೆಮ್ಮ ವೋಲಾರುಂಟು ಜಗದಲಿ
ಧರ್ಮಪರನೆನೆ ಸುರರು ಹರಿದಿಕ್ಕಿದರು ಹೆಡತಲೆಗೆ
ಧರ್ಮಪಥ ಹುಲುವಟ್ಟೆಯೆನಿಸಿದ
ಹಮ್ಮಿನಲಿ ಕೆಡಬೇಡ ನೀತಿಯ
ನೆಮ್ಮಿದವ ಕೆಡನೆಂದು ನಾರದ ನುಡಿದನರಸಂಗೆ ॥13॥

೦೧೪ ಅವನಿಪತಿ ಕೇಳಾವು ...{Loading}...

ಅವನಿಪತಿ ಕೇಳಾವು ಪಾಂಡವ
ರವರು ಬನದಲಿ ಕಂದ ಮೂಲವ
ಸವಿದು ಕೊಂಬರು ಋಷಿಗಳಿಗೆ ಹಂಗೇಕೆ ಭೂಮಿಪರ
ಇವರದಾವನ ಪಕ್ಷಪಾತ
ವ್ಯವಹರಣೆಯವರಲ್ಲ ಕೇಳಿ
ನ್ನಿವರ ನುಡಿಗಳನೆಂದು ನುಡಿದನು ಮತ್ತೆ ಮುರವೈರಿ ॥14॥

೦೧೫ ಬೆರಳ ಮೀಸೆಯೊಳಿಡುತ ...{Loading}...

ಬೆರಳ ಮೀಸೆಯೊಳಿಡುತ ಕಿರು ನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತ ಹರಿಯ ನುಡಿಗಳ ಕಿವುಡುಗೇಳುತ್ತ
ಮರುಳುತನದಾಳಾಪವೇತಕೆ
ಮುರಹರನೆ ಪಾಂಡವರ ಹಂಬಲ
ಮರೆದು ಕಳೆ ಕರಣಕ್ಕೆ ಖಾತಿಯ ಬಳಸಬೇಡೆಂದ ॥15॥

೦೧೬ ಅವರು ನಮ್ಮೊಳು ...{Loading}...

ಅವರು ನಮ್ಮೊಳು ಸರಸವಾಡುವ
ಹವಣದಲ್ಲದೆ ರಾಜ ಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿ ಕೊಂಬುದು
ಅವನಿಗಿವನಿಯ ಮಾತ ನೀನಾ
ಡುವರೆ ಪಾಂಡವರೇಕೆ ನೀವೇಕೆಂದು ಖಳ ನುಡಿದ ॥16॥

೦೧೭ ಮಾವ ಮೊದಲು ...{Loading}...

ಮಾವ ಮೊದಲು ಸಹಾಯ ಮಧ್ಯದೊ
ಳಾ ವಿರಾಟನ ಸಖ್ಯ ಕಡೆಯಲಿ
ನೀವು ಮಮ ಪ್ರಾಣಾಹಿ ಯೆಂಬಿರಿ ನಿಮ್ಮ ಪಾಂಡವರ
ನಾವು ಕಡೆಯಲಿ ಹೊರಗು ನಮಗಿ
ನ್ನಾವ ಭೂಪರ ಸಖ್ಯವಿದ್ದುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ ॥17॥

೦೧೮ ಮಾಡು ಸನ್ಧಿಯನೆಮ್ಮ ...{Loading}...

ಮಾಡು ಸಂಧಿಯನೆಮ್ಮ ವಚನಕೆ
ಕೋಡದಿರು ಸವಿವಾತುಗಳ ನಿನ
ಗಾಡುವವರಿಗೆ ಚಿತ್ತಗೊಡದಿರು ಹಿಸುಣ ಹೊಗಿಸದಿರು
ನಾಡನಾಲಗೆ ಗೆಳೆಯರೆಂಬುದ
ಮಾಡದಿರು ಪಾಂಡವ ನೃಪಾಲರ
ಕೂಡುವಾಳಿಕೆ ಪಥ್ಯ ಕೇಳ್ ಎಂದಸುರರಿಪು ನುಡಿದ ॥18॥

೦೧೯ ನೀತಿಗಾಲಯ ನಿಮ್ಮ ...{Loading}...

ನೀತಿಗಾಲಯ ನಿಮ್ಮ ಕುಲ ವಿ
ಖ್ಯಾತವದು ನೆಲೆ ಸಕಲ ಸೌಖ್ಯ
ವ್ರಾತಕಿದು ಸದ್ಬೀಜವೆನಿಸಿತು ಕೌರವಾನ್ವಯವು
ಭೂತಳದ ಲೋಲುಪತೆಯೊಳು ಕುಲ
ಘಾತಕನು ನೀನೆಂಬ ಕೀರ್ತಿಗೆ
ಯೋತು ನೆಲೆಯಾಗದಿರು ಬೇಡಿದೆವೆಂದು ಹರಿ ನುಡಿದ ॥19॥

೦೨೦ ಧರೆಯ ನೃಪರಿಗೆ ...{Loading}...

ಧರೆಯ ನೃಪರಿಗೆ ಹಸ್ತಿನಾಪುರ
ದರಮನೆಯ ಬಾಗಿಲಲಿ ಸಮಯವು
ದೊರಕಲಂತದು ಪುಣ್ಯವೆಂಬೀ ಸಾರ್ವಭೌಮತೆಯ
ಸಿರಿಗೆ ಪಾಂಡವರನ್ಯರಾದೊಡೆ
ಮೆರೆಯಲರಿವುದೆ ನಿಮ್ಮ ಸಿರಿ ಕಾ
ತರಿಗತನವನು ಮಾಣು ಕೇಳ್ ಎಂದಸುರರಿಪು ನುಡಿದ ॥20॥

೦೨೧ ಯಮಜ ನಿನಗೊಳ್ಳಿದನು ...{Loading}...

ಯಮಜ ನಿನಗೊಳ್ಳಿದನು ಪಾರ್ಥನ
ಮಮತೆ ನಿನ್ನಲಿ ಹಿರಿದು ಭೀಮನ
ತಮದ ನುಡಿ ಹಿಂಗಿದವು ನಕುಲನು ನಿನ್ನೊಳೆರಡರಿಯ
ತಮತಮಗೆ ತಮ್ಮೆ ೈವರೂ ನಿ
ನ್ನಮಲ ವಚನವ ಹಾರಿಹರು ಉ
ಭ್ರಮಿತತನವನು ಮಾಡದಿರು ಸೋದರರ ಸಲಹೆಂದ ॥21॥

೦೨೨ ಧರ್ಮಜನ ಕಡು ...{Loading}...

ಧರ್ಮಜನ ಕಡು ಮೋಹವೆಂಬುದು
ನಿಮ್ಮ ಚಿತ್ತದೊಳಿರಲಿ ಭೀಮನ
ಹಮ್ಮು ತಮ್ಮೊಳಗಿರಲಿ ಫಲುಗುಣನೊಲವದಂತಿರಲಿ
ನಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಶಾಸನನ ನೋಡಿದನು ॥22॥

೦೨೩ ಬನ್ಧುಕೃತ್ಯದ ಮಾತು ...{Loading}...

ಬಂಧುಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜ ಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಶಾಸನನು ಗರ್ಜಿಸಿದ ॥23॥

೦೨೪ ಕೆಡಿಸದಿರು ಧೃತರಾಷ್ಟ್ರ ...{Loading}...

ಕೆಡಿಸದಿರು ಧೃತರಾಷ್ಟ್ರ ಕುಲದಲಿ
ಕೊಡಲಿಯನು ನೀ ಹಡೆದು ವಂಶವ
ಕೆಡಿಸಿ ಕಳೆದೊಡೆ ಹಾನಿ ವೃದ್ಧಿಗಳೆಲ್ಲ ನಿನಗಹುದು
ನುಡಿಗೆ ಸನುಮತರಾಗಿ ತಾ ಕುಲ
ಗಡಿಯನಿವ ಮುಂದರಿಯ ನೀವಿಂ
ತೊಡಬಡಿಸಿ ಪಾಂಡವರ ಸ್ವಾಮ್ಯವನೀಸಿ ಕೊಡಿಯೆಂದ ॥24॥

೦೨೫ ಈ ಹರಿಯ ...{Loading}...

ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸಿಕೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಬಾಹಿರವ ನೀನಾಡದಿರು ವೈ
ದೇಹಿಯನು ಸೆರೆವೊಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ ॥25॥

೦೨೬ ನೆಲನ ಬೇಡುವ ...{Loading}...

ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳುಹಲೈತಂದಸುರರಿಪು ಸಾಮಾನ್ಯ ಬಳನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲಲಲಾಮನ ನೇಮವನು ನೀ
ಸಲಿಸು ಕೆಡಿಸದಿರೀ ವಿಳಾಸವನೆಂದನಾ ದ್ರೋಣ ॥26॥

೦೨೭ ಹಲವು ಹೊಲ್ಲೆಹಗಳನು ...{Loading}...

ಹಲವು ಹೊಲ್ಲೆಹಗಳನು ಪಾಂಡವ
ರೊಳಗೆ ನೆನೆದೆನು ಮುಚ್ಚು ಮರೆಯೇ
ನಿಳೆಯ ಲೋಭದ ಬಗೆಗೆ ನೆಗಳಿದೆ ರಾಜಕಾರಿಯವ
ನೆಲನ ಕೊಂಡೆನು ಜೂಜುಗಾರರ
ವಿಲಗದಲಿ ಪಾಂಡವರ್ಗೆ ಪುನರಪಿ
ಹಳುವವೇ ಶರಣಲ್ಲದಿಲ್ಲೆಲೆ ಕೃಷ್ಣ ಕೇಳ್ ಎಂದ ॥27॥

೦೨೮ ತಾಗುವಪಕೀರತಿಗೆ ಹೇಸುವ ...{Loading}...

ತಾಗುವಪಕೀರತಿಗೆ ಹೇಸುವ
ರಾಗಿ ಸತ್ಯವನುಳುಹಿ ಹಳುವವ
ಭೋಗಿಸಿದೊಡದು ಕುಲಕೆ ಕುಂದೇ ಪಾಂಡು ತನಯರಿಗೆ
ನೀಗಿದರು ವನವಾಸವನು ಸರಿ
ಭಾಗದವನಿಯ ಕೊಂಬ ಛಲವನು
ಹೋಗ ಬಿಡುವನೆ ಭೀಮನೆಂದನು ನಗುತ ಮುರವೈರಿ ॥28॥

೦೨೯ ಕೊಡು ವೃಕಸ್ಥಳವನು ...{Loading}...

ಕೊಡು ವೃಕಸ್ಥಳವನು ಕುಶಸ್ಥಳ
ಪೊಡವಿಯಾವಂತಿಯನು ಕುಳವನು
ಕೊಡಿಸಿ ಕಳೆ ಸಿರಿಕರಣದವರಲಿ ವಾರಣಾವತವ
ಕೊಡು ನಿನಗೆ ಮನ ಬಂದುದೊಂದನು
ನಡೆಸಿ ಕೊಡುವೆನು ಪಾಂಡವರನವ
ಗಡೆಯತನ ಬೇಡಿನ್ನು ಕೇಳ್ ಎಂದಸುರರಿಪು ನುಡಿದ ॥29॥

೦೩೦ ಪರಮಪುರುಷನು ಕೃಷ್ಣರಾಯನು ...{Loading}...

ಪರಮಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನಸಮಚಾಪವಿದ್ಯನು ದ್ರೋಣನದರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳುಯೆಂದನಾ ವಿದುರ ॥30॥

೦೩೧ ಬೇಡಿದೊನ್ದೊನ್ದೂರು ನಮ್ಮಯ ...{Loading}...

ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯನೀರಡಿ
ಮಾಡಿಕೊಂಡ ಮಹಾತ್ಮ ನಿನಗಂಜುವೆನು ನಾನೆಂದ ॥31॥

೦೩೨ ಕರೆದು ಮೂರಡಿ ...{Loading}...

ಕರೆದು ಮೂರಡಿ ನೆಲನ ಧಾರೆಯ
ನೆರದ ಬಲಿ ತಳಕಿಳಿದನೆನ್ನೀ
ಧರೆಯೊಳೈದೂರುಗಳನಿತ್ತೆನಗಾವ ಪದವಹುದು
ಪರಮಪುರುಷನು ನೀನು ನಿನಗಾ
ಶರಣು ಹೊಕ್ಕೆನು ಬಂದ ಪಥದಲಿ
ಮರಳಿ ಬಿಜಯಂಗೈವುದೆಂದನು ನಗುತ ಕುರುರಾಯ ॥32॥

೦೩೩ ಸಲಲಿ ನೀ ...{Loading}...

ಸಲಲಿ ನೀ ಪಾಂಡವರೊಳೆತ್ತಿದ
ಛಲದ ಬಳವಿಗೆಯಕಟ ನಿಮ್ಮಯ
ಬಳಗ ಬದುಕಲಿ ಮತ್ತೆ ನವೆಯಲಿ ಧರ್ಮನಂದನನು
ಜಲಧಿ ಮೇರೆಯ ಮಹಿಯಳೊಂದೇ
ಸ್ಥಳವನೈವರಿಗೀವುದೆನೆ ಕಳ
ವಳಿಗನವಗಡಿಸಿದನು ಜಡಿದನು ದನುಜವೈರಿಯನು ॥33॥

೦೩೪ ನೆಲದೊಳರ್ಧವನೀವುದಿಲ್ಲಾ ...{Loading}...

ನೆಲದೊಳರ್ಧವನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸಕೊಟ್ಟಡೆ ನಿನ್ನ ಮೇಲಾಣೆ
ನೆಲನ ಕಡೆಯಲಿ ಮುಳ್ಳುಮೊನೆಯು
ಚ್ಚಳಿಪ ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು ಕದನವ ಕೊಂಡು ಬಾಯೆಂದ ॥34॥

೦೩೫ ದನವ ಕಾದುದು ...{Loading}...

ದನವ ಕಾದುದು ತೀರ್ದುದೇ ಬನ
ಬನಕೆ ತೊಳಲ್ವುದು ಕಡೆಯನೈದಿತೆ
ಮುನಿಗಳೊಳು ಬೊಗಳುಗಳನೆರಗಿಸಿ ಕೊಂಬುದದ ಬಿಸುಟು
ವನನಿಧಿಯನೆಡೆಗೊಂಡು ನಡು ಹಾ
ವಿನಲಿ ಹಕ್ಕೆಯ ಬಿಸುಟು ನಮ್ಮೊಳು
ಮನಕತವ ನೀ ತಿಳುಹಲೋಸುಗ ಬಹರೆ ಹೇಳೆಂದ ॥35॥

೦೩೬ ಖತಿಯ ಹಿಡಿದನು ...{Loading}...

ಖತಿಯ ಹಿಡಿದನು ಶೌರಿ ಮಣಿಯದ
ಮತಗುಡದ ಫಣಿಕೇತನನ ಕಂ
ಡತುಲಬಲ ಗುರು ಸಿಂಧುತನಯಾದಿಗಳ ಮೊಗ ನೋಡಿ
ವ್ಯತಿಕರವನಿವ ಬಯಸಿ ಮಿಗೆ ಬೇ
ಡುತಿರೆ ಕದನವ ನೆನೆಯೆ ಭೂಪನ
ಸತಿಯ ಕಿವಿಯೊಳಗೋಲೆಯಸ್ಥಿರವರಿವೆ ತಾನೆಂದ ॥36॥

೦೩೭ ಕಡೆಗೆ ಧೃತರಾಷ್ಟ್ರಾವನೀಶನು ...{Loading}...

ಕಡೆಗೆ ಧೃತರಾಷ್ಟ್ರಾವನೀಶನು
ಮಡದಿ ಸಹಿತಲನಾಥನಾಗಿಯೆ
ಕೆಡುವನೆಂಬುದ ಬಲ್ಲೆನಾ ಪಾಂಡವರ ರಾಜ್ಯದಲಿ
ಪಡಿಗೆ ಪವಮಾನಜನ ಸಮಯವ
ಹಡೆಯದಿಹ ತರುವಾಯಲೀತನು
ನಡೆಸಿ ಕೊಡುವನು ತಪ್ಪದಕಟಕಟೆಂದನಾ ವಿದುರ ॥37॥

೦೩೮ ಮನದ ಸಙ್ಕೇತದಲಿ ...{Loading}...

ಮನದ ಸಂಕೇತದಲಿ ದುರಿಯೋ
ಧನನ ಕಟ್ಟಲು ವಿದುರ ಗಂಗಾ
ತನಯ ಧೃತರಾಷ್ಟ್ರಾವನಿಪರಾಳೋಚಿಸಿದ ಹದನ
ಮನದೊಳರಿದನು ಬಳಿಕ ದುಶ್ಶಾ
ಸನನು ದುರಿಯೋಧನಗೆಯಿನಿಬರ
ನೆನಹ ಬಿನ್ನಹ ಮಾಡಿದನು ಖಾತಿಯಲಿ ಕಳವಳಿಸಿ ॥38॥

೦೩೯ ಹೆತ್ತವರು ಮರುಳಹರೆ ...{Loading}...

ಹೆತ್ತವರು ಮರುಳಹರೆ ನಾವಿ
ನ್ನೆತ್ತ ತಿರುಗುವೆವಣ್ಣ ದೇವರೆ
ಚಿತ್ತವಿಸಿದಿರೆ ರಾಜಕಾರ್ಯದ ಹದ ವಿಸಂಚಿಸಿತು
ಮುತ್ತಯನ ಕಿರಿಯಯ್ಯನಯ್ಯನ
ಚಿತ್ತ ಕೊಂಕಿತು ಸಾಕು ನಿಂದೆಗೆ
ನುತ್ತಲಗ್ರಜ ಸಹಿತಲೋಲಗದಿಂದ ಹೊರವಂಟ ॥39॥

೦೪೦ ಮುನಿದು ದುರಿಯೋಧನನು ...{Loading}...

ಮುನಿದು ದುರಿಯೋಧನನು ದುಶ್ಶಾ
ಸನನು ಕೆಲದರಮನೆಯೊಳಾಳೋ
ಚನೆಯ ಮಾಡಿದರಂದು ಸೌಬಲ ಕರ್ಣರೊಡಗೂಡಿ
ದನುಜವೈರಿ ಕುಮಂತ್ರದಲಿ ಬೊ
ಪ್ಪನೊಳು ಖಾತಿಯನಿಕ್ಕಿದನು ಕೈ
ಮನದ ಕಲಿಗಳು ಕಟ್ಟಿ ಕೃಷ್ಣನನೆಂದು ಗಜಬಜಿಸೆ ॥40॥

೦೪೧ ಎರಡು ಬಲವನು ...{Loading}...

ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು ನಿಧಾನಿಸ
ಲರಿ ನಮಗೆ ಮುರವೈರಿಯಲ್ಲದೆ ಪಾಂಡು ನಂದನರೆ
ತರಿಸಿ ಹುರಿ ನೇಣುಗಳನೀತನ
ಕರವೆರಡನೊಡೆಬಿಗಿದಡವದಿರು
ಕೆರಳಿ ಮಾಡುವುದಾವುದೆಂದನು ಕೌರವರ ರಾಯ ॥41॥

೦೪೨ ಗಾಳಿಯುಪಶಮಿಸಿದೊಡೆ ವಹ್ನಿ ...{Loading}...

ಗಾಳಿಯುಪಶಮಿಸಿದೊಡೆ ವಹ್ನಿ
ಜ್ವಾಲೆ ತಾನೇ ನಿಲುವುದೀತನ
ತೋಳ ಬಿಗಿದೊಡೆ ಬಳಿಕ ಮನಗುಂದುವರು ಪಾಂಡವರು
ಮೇಳವಿಸಿ ನೇಣುಗಳನೆನುತ ನೃ
ಪಾಲನವದಿರು ಗಜಬಜಿಸುವುದ
ನಾಲಿಸುತ ಸಾತ್ಯಕಿಯೊಡನೆ ಕೃತವರ್ಮನರುಹಿದನು ॥42॥

೦೪೩ ಆಳು ಕುದುರೆಯ ...{Loading}...

ಆಳು ಕುದುರೆಯ ಬಾಗಿಲಿಗೆ ಬರ
ಹೇಳು ಕೈದುವ ಕೊಂಡು ವೀರಭ
ಟಾಳಿ ಹತ್ತಿರೆ ನಿಲಲಿ ಕೈವೀಸಿದರೆ ಕವಿಕವಿದು
ಬೀಳ ಬಡಿವುದು ಹೊಕ್ಕು ದಂಡಿನ
ಮೇಲೆ ದಂಡನು ಕಡಿದು ಕುರು ಭೂ
ಪಾಲಕನ ನೊರೆ ನೆತ್ತರಲಿ ನಾದುವುದು ಮೇದಿನಿಯ ॥43॥

೦೪೪ ಎನ್ದು ಸುಭಟರಿಗರುಹಿ ...{Loading}...

ಎಂದು ಸುಭಟರಿಗರುಹಿ ಸಾತ್ಯಕಿ
ಬಂದು ಕೃಷ್ಣನ ಕಿವಿಯ ಹತ್ತಿರೆ
ನಿಂದು ವದನವ ಚಾಚಿ ಬಿನ್ನಹ ಮಾಡಿದನು ನಗುತ
ಮಂದಮತಿಗಳು ತಪ್ಪಿದರು ಮನ
ಗುಂದಲಾಗದು ಜೀಯ ಚಿತ್ತೈ
ಸೆಂದಡಸುರಾರಾತಿ ನಗುತವೆ ಭೀಷ್ಮಗಿಂತೆಂದ ॥44॥

೦೪೫ ಪರಿಣತ ಪ್ರೌಡಿಗಳಿಗನ್ತಃ ...{Loading}...

ಪರಿಣತ ಪ್ರೌಡಿಗಳಿಗಂತಃ
ಕರಣ ನನೆವುದು ಸುಜನರಿಗೆ ನಿ
ಷ್ಠುರತೆಗಲ್ಲದೆ ಮನವನೀಯದು ಮಹಿಯ ಮೂಢಜನ
ಕರಗುವುದು ಶಶಿಕಾಂತ ಚಂದ್ರನ
ಕಿರಣ ತಾಗಲು ವಜ್ರಹತಿ ಗ
ಬ್ಬರಿಸಿದಲ್ಲದೆ ಗಿರಿಗಳೊಡೆಯವು ಭೀಷ್ಮ ಕೇಳ್ ಎಂದ ॥45॥

೦೪೬ ದೂತರನು ಕಟ್ಟುವುದು ...{Loading}...

ದೂತರನು ಕಟ್ಟುವುದು ರಾಯರಿ
ಗೇತರುಚಿತವು ನಮ್ಮ ಕಟ್ಟಲು
ಕಾತರಿಸುತಿದೆ ನಿಮ್ಮ ಮೊಮ್ಮಂದಿರನು ನೀ ಕರೆಸಿ
ಮಾತನಾಡಿಸಿ ನೋಡು ನಮಗೀ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರಂಗೆ ನುಡಿದನು ಕೌರವನ ಹದನ ॥46॥

೦೪೭ ಅವನಿಪತಿ ಕೇಳಿದನು ...{Loading}...

ಅವನಿಪತಿ ಕೇಳಿದನು ಕನಲಿದು
ಶಿವ ಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಂಬ ಗಾಂಧಾರಿಯನು ಕರೆಯೆಂದ ॥47॥

೦೪೮ ಜನಪನಾಏ್ಞÉಯ ಮೇಲೆ ...{Loading}...

ಜನಪನಾಜ್ಞೆಯ ಮೇಲೆ ದುರಿಯೋ
ಧನನ ತಂದರು ಸಭೆಗೆ ಮತ್ತೀ
ವನಜಮುಖಿಗಿದನೆಂದೊಡಾ ಗಾಂಧಾರಿ ನಡೆತಂದು
ದನುಜವೈರಿಯ ಕಟ್ಟುವೈ ಕೃ
ಷ್ಣನನು ಬಿಗಿವೈ ದಿಟ ಮಗನೆ ಹೆ
ತ್ತೆನಗೆ ಹರುಷವನಿತ್ತೆಯೆಂದಳು ಮುಳಿದು ಗಾಂಧಾರಿ ॥48॥

೦೪೯ ನೆಟ್ಟನೆಲೆ ಧೃತರಾಷ್ಟ್ರ ...{Loading}...

ನೆಟ್ಟನೆಲೆ ಧೃತರಾಷ್ಟ್ರ ನೃಪ ನೀ
ನಿಟ್ಟ ಕಿಚ್ಚಿದು ಪಾಪಿ ಮಗನನು
ಹುಟ್ಟಿದಂದೇ ಬಿಸುಡದಾದೆವು ಬಾಳುಗೇಡಿಯನು
ಕಟ್ಟುವನು ಗಡ ಕೃಷ್ಣನನು ಮೈ
ಮುಟ್ಟುವನು ಗಡ ಗಗನವನು ಬಲು
ದಿಟ್ಟತನ ತಾನೇನು ಹೇಳುವೆನೆಂದಳಿಂದುಮುಖಿ ॥49॥

೦೫೦ ದುರುಳ ಮಗನೇ ...{Loading}...

ದುರುಳ ಮಗನೇ ಕೃಷ್ಣ ರಾಯರ
ಕೆರಳಿಚುವರೇ ಯಾದವರು ನಮ
ಗೆರವಿಗರೆ ವಸುದೇವನಲಿ ತಾ ಭೇದವೇ ನಿನಗೆ
ದುರುಳತನವಿದು ಬೇಡ ಖುಲ್ಲರ
ನೆರವಿಯೊಳಗಾಡಿದೊಡೆ ತಪ್ಪದು
ನರಕವೆಂದನು ಕುರುಪತಿಗೆ ಧೃತರಾಷ್ಟ್ರ ಭೂಪಾಲ ॥50॥

೦೫೧ ಎಲೆ ಮರುಳೆ ...{Loading}...

ಎಲೆ ಮರುಳೆ ಧೃತರಾಷ್ಟ್ರ ನಂಜಿನ
ಬಳಗವೀತನ ಬಂಧುಕೃತ್ಯದ
ಬಳಕೆಯಲಿ ನೀ ನಿನ್ನ ಕಂದನ ಬೇಡಿಕೊಳಲೇಕೈ
ಮುಳಿದು ಬಗಳುವ ನಾಯÉ್ಗು ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳವಹುದೆ ಸಿಂಹಕ್ಕೆಯೆಂದನು ಖಾತಿಯಲಿ ವಿದುರ ॥51॥

೦೫೨ ನೊರಜು ಹೊಕ್ಕೊಡೆ ...{Loading}...

ನೊರಜು ಹೊಕ್ಕೊಡೆ ಕಲಕುವುದೆ ಸಾ
ಗರದ ಜಲ ನೊಣವೆರಗಿದೊಡೆ ಕುಲ
ಗಿರಿಗಳಲ್ಲಾಡುವವೆ ಕೇಳ್ ಧೃತರಾಷ್ಟ್ರ ಭೂಪತಿಯೆ
ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು ನಿನ್ನ ಮಕ್ಕಳ
ದುರುಳತನಕಂಜುವನೆ ಮುರರಿಪುಯೆಂದನಾ ವಿದುರ ॥52॥

೦೫೩ ಲೋಕ ಮೈ ...{Loading}...

ಲೋಕ ಮೈ ಮರೆವಂದು ಜಲಧಿಗ
ಳೌಕಿ ಹಳಚುವ ಹೊತ್ತು ತಾನಿಹ
ನೇಕಮೇವಾದ್ವಿತಿಯ ಪರಮೇಕೈಕಹಂಯೆಂದು
ಏಕಮಾತ್ಮಾಯೆಂದು ವೇದಾ
ನೀಕ ಕೈವಾರಿಸಲು ಮೆರೆವ ನಿ
ರಾಕೃತಿಯ ಪರಬೊಮ್ಮ ರೂಪಿನ ತಾತ ನೋಡೀತ ॥53॥

೦೫೪ ಈತನಾ ಮಧು ...{Loading}...

ಈತನಾ ಮಧು ಕೈಟಭನ ಮುರಿ
ದಾತ ಜಲಧಿಯೊಳಿಳಿದು ವೇದವ
ನೀತ ತಂದನು ಜಯನ ವಿಜಯನ ದೈತ್ಯಜನ್ಮವನು
ಈತನೊದೆದನು ಪೌಂಡ್ರಕನನಂ
ದೀತ ಕೊಂದನು ಹಂಸ ಡಿಬಿಕರ
ನೀತನೊರಸಿದನರಸ ಚಿತ್ತೈಸೆಂದನಾ ವಿದುರ ॥54॥

೦೫೫ ಸಲಿಲಮಯವಾದಖಿಳ ಭುವನಾ ...{Loading}...

ಸಲಿಲಮಯವಾದಖಿಳ ಭುವನಾ
ವಳಿಗಳೊಳಗೆ ವಿರಿಂಚಿಯಾಳುತ
ಮುಳುಗುತೈತಂದಾಲದೆಲೆ ಮಂಚದಲಿ ಪವಡಿಸಿದ
ಹೊಳವು ನೀನಾರೆಂದು ಜಠರದೊ
ಳಿಳಿಯಲಾ ಬ್ರಹ್ಮಾಂಡ ಶತದಲಿ
ಹೊಲಬುಗೆಡೆ ಹೊಕ್ಕುಳಲಿ ಬ್ರಹ್ಮನನೀತನುಗುಳಿದನು ॥55॥

೦೫೬ ಸೂಚಿಸುವ ಶ್ರುತಿನಿಚಯ ...{Loading}...

ಸೂಚಿಸುವ ಶ್ರುತಿನಿಚಯ ಬರಬರ
ನಾಚಿದವು ವೇದಾಂತನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರರಿಯದೆ ಬಿಗಿಯಲಳವಡಿಸಿದರು ನೇಣುಗಳ ॥56॥

೦೫೭ ವಿದುರನಿನ್ತೆನುತಿರಲು ...{Loading}...

ವಿದುರನ್ ಇಂತ್ ಎನುತಿರಲು ಮಿಂಚಿನ
ಹೊದರು+++(=ಸಮೂಹ)+++ ಹುರಿ-ಗೊಂಡ್ ಅಂತೆ ರವಿ-ಶತ
ಉದುರಿದವು ಮೈ-ಮುರಿದು ನಿಂದ್ ಅಡೆ ದೇವರ್ ಅಂಗದಲಿ
ಸದೆದುದ್+++(=ಬಡೆದುದ್)+++ ಆಸ್ಥಾನವನು ಘನ ತೇ-
ಜದ ಲಹರಿ ಲೀಲೆಯಲಿ ಹರಿ ತೋ-
ರಿದನು ನಿರುಪಮ ವಿಶ್ವ-ರೂಪವನ್ ಆ ಮಹಾ ಸಭೆಗೆ ॥57॥+++(5)+++

೦೫೮ ಚರಣದುಙ್ಗುಟದಲ್ಲಿ ದೇವರು ...{Loading}...

ಚರಣದ್ ಉಂಗುಟದಲ್ಲಿ ದೇವರು
ತುರುಗಿದರು+++(=ತುಂಬಿದರು)+++, ನೊಸಲಿನಲಿ+++(=ಹಣೆಯಲ್ಲಿ)+++ ಕಮಲಜ-
ನ್, ಉರದಲ್ ಅಗ್ಗದ ರುದ್ರನ್, ಆಸ್ಯದೊಳ್ ಅಗ್ನಿ ವಾಯುಗಳು
ಬೆರಳಲ್ ಇಂದ್ರಾದಿಗಳು ನಯನಾಂ-
ಬು-ರುಹದಲಿ ರವಿ, ನಾಭಿಯಲ್ ಅಭವ+++(→ಶಿವ??)+++
ವರ-ಭುಜಾಗ್ರದೊಳ್ ಅಖಿಳ ದಿಗು-ಪಾಲಕರು ರಂಜಿಸಿತು ॥58॥+++(5)+++

೦೫೯ ಸುರರು ಖಚರರು ...{Loading}...

ಸುರರು ಖ-ಚರರು ಕಿನ್ನರರು ಕಿಂ-
ಪುರುಷರ್ ಅನುಪಮ-ಸಿದ್ಧ–ವಿದ್ಯಾ-
ಧರರು ವಸುಗಳು ಮನುಗಳ್ ಆದಿತ್ಯರು ಭುಜಂಗಮರು
ಗರುಡ-ಗಂಧರ್ವಾಶ್ವಿನೀ-ದೇ
ವರು ಸುವಿಶ್ವೇ-ದೇವರ್ ಅಖಿಳಾ-
ಪ್ಸರೆಯರ್ ಎಸೆದರು ರೋಮ-ರೋಮದ ಕುಳಿಯ+++(=ಗರ್ತದ)+++ ಚೌಕದಲಿ ॥59॥

೦೬೦ ಬಲದ ಭುಜದಲಿ ...{Loading}...

ಬಲದ ಭುಜದಲಿ ಪಾರ್ಥನ್, ಎಡದಲಿ
ಹಲಧರನು, ಚರಣದಲಿ ಧರ್ಮ-ಜ,
ಕಲಿ ವೃಕೋದರ, ನಕುಲ-ಸಹದೇವಾದಿ ಯಾದವರು
ಲಲಿತ ಕಾಂತಿಯೊಳ್ ಅಖಿಳ ತಾರಾ-
ವಳಿಗಳ್ ಅಮಲಗ್ರಹವಿರಲು ತೊಳ
ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ ॥60॥

೦೬೧ ಕಿವಿಗಳಲಿ ಕಙ್ಗಳಲಿ ...{Loading}...

ಕಿವಿಗಳಲಿ ಕಂಗಳಲಿ ನಾಸಾ
ವಿವರದಲಿ ಹೊಗೆ ಮಸಗಿ ದಳ್ಳುರಿ
ತಿವಿದುದಾಕಾಶವನು ಕವಿದುದು ಕಾಂತಿ ದೆಸೆದೆಸೆಗೆ
ರವಿಯ ತಗಡೆನೆ ತಳಿತವಾಯುಧ
ನಿವಹ ಸಾಸಿರಭುಜದ ಬಹುಳತೆ
ಯವಗಡಿಸಿ ವೈಕುಂಠನೆಸೆದನು ವಿಶ್ವರೂಪದಲಿ ॥61॥

೦೬೨ ಅರಳಮಳೆ ಸೂಸಿದುವು ...{Loading}...

ಅರಳಮಳೆ ಸೂಸಿದುವು ದುಂದುಭಿ
ಮೊರೆದುದಾಕಾಶದಲಿ ಮುದದಲಿ
ಧರಣಿ ಬಿದಿರಿತು ತನುವನುಕ್ಕಿದುದಬುಧಿ ದೆಸೆದೆಸೆಗೆ
ಕರಿ ಕಮಠರುಬ್ಬಾಳುತನ ಮಿ
ಕ್ಕಿರೆ ಮಹಾದ್ಭುತವಾಯ್ತು ಕಂಡುದು
ಹರಿಯ ರೂಪವನೊಬ್ಬ ಕೌರವನಲ್ಲದುಳಿದವರು ॥62॥

೦೬೩ ತಳುಕನುಗಿದೀಡಾಡಿ ಪರಿಣತ ...{Loading}...

ತಳುಕನುಗಿದೀಡಾಡಿ ಪರಿಣತ
ಪುಳಕದಲಿ ನನೆನನೆದು ಹರುಷದ
ಜಲಧಿಯಲಿ ಮನ ಮುಳುಗಿ ಭಕುತಿಯ ಭಾರದಲಿ ಕುಸಿದು
ಅಳುಕಿ ತಮತಮಗೆದ್ದು ಮುನಿ ಸಂ
ಕುಲ ಸಹಿತ ಗಾಂಗೇಯ ಕೃಪ ನಿ
ರ್ಮಲ ವಿದುರ ಗುರು ಸಂಜಯಾದಿಗಳೆರಗಿದರು ಪದಕೆ ॥63॥

೦೬೪ ಒಳಗೆ ಹೊಳೆದನು ...{Loading}...

ಒಳಗೆ ಹೊಳೆದನು ಬಾಹ್ಯದಲಿ ಪ್ರ
ಜ್ವಲಿಸಿದನು ತಾನಲ್ಲದನ್ಯರ
ಬಳಕೆ ಬೇರೊಂದಿಲ್ಲದಂತಿರೆ ಕೂಡೆ ತೋರಿದನು
ಒಳಗೆ ಬಿಗಿವೆವೊ ಹೊರಗೆ ಕೃಷ್ಣನ
ಸಿಲುಕಿಸುವೆವೋ ತಿಳಿಯೆ ಕೃಷ್ಣರು
ಹಲಬರಿಹರಾರಾರ ಕಟ್ಟುವೆವೆಂದರಾ ಖಳರು ॥64॥

೦೬೫ ಅನುಪಮಾದ್ವಯದಲ್ಲಿ ಮುಳ್ಳಿನ ...{Loading}...

ಅನುಪಮಾದ್ವಯದಲ್ಲಿ ಮುಳ್ಳಿನ
ಮೊನೆಗೆ ಮೋಹುವರಿಲ್ಲ ತೆರಹೆಂ
ಬಿನಿತು ಪರಿಪೂರ್ಣದಲಿ ಸಭೆಯಾಣುಮಾತ್ರ ರೂಪದಲಿ
ಮನದ ಬಗೆ ಮುಟ್ಟದ ಮಹಾ ಮಹಿ
ಮನನು ಕಟ್ಟುವೆವೆಂತೆನುತ ತನ
ತನಗೆ ಕರ್ಣಾದಿಗಳು ಕೈಗಳ ಕದಪ ತೂಗಿದರು ॥65॥

೦೬೬ ವಿಮಳ ಕರುಣಾಸಿನ್ಧು ...{Loading}...

ವಿಮಳ ಕರುಣಾಸಿಂಧು ನೀನನು
ಪಮ ಚರಿತ್ರನು ನಿಮ್ಮಡಿಯ ಪದ
ಕಮಲ ದರುಶನದಿಂದ ಹಿಂಗಿದವಘದ ರಾಶಿಗಳು
ಸಮತೆಯಲಿ ನೀ ನೋಡು ಶರಣರ
ಮಮತೆ ಬೇಹುದು ಜೀಯ ಲಕ್ಷಿ ್ಮೀ
ರಮಣ ಕೃಪೆ ಮಾಡೆನುತ ಮೈಯಿಕ್ಕಿದಳು ಗಾಂಧಾರಿ ॥66॥

೦೬೭ ಮಾನ ನಿನ್ನದು ...{Loading}...

ಮಾನ ನಿನ್ನದು ಭಕುತ ಜನದಪ
ಮಾನ ನಿನ್ನದು ನಿನ್ನ ಶರಣರ
ಹಾನಿ ವೃದ್ಧಿಗಳೆಲ್ಲ ನಿನ್ನದು ಬೇರೆ ಗತಿಯುಂಟೆ
ಆನತರ ತೇಜೋಭಿಮಾನವ
ನೀನೊಲಿದು ಸಲಹೆಂದು ಮುದದಲಿ
ಭಾನುಮತಿ ಮೈಯಿಕ್ಕಿದಳು ಮುರಹರನ ಚರಣದಲಿ ॥67॥

೦೬೮ ಕಙ್ಗಳನು ಕರುಣಿಸಿದನನ್ಧ ...{Loading}...

ಕಂಗಳನು ಕರುಣಿಸಿದನಂಧ ನೃ
ಪಂಗೆ ಬಳಿಕೀ ಕೃಷ್ಣರಾಯನ
ಮಂಗಳ ಶ್ರೀಮೂರ್ತಿಯನು ಮನದಣಿಯೆ ತಾ ನೋಡಿ
ಕಂಗಳಡಗಲಿ ದೇವ ನಿಮ್ಮೀ
ಯಂಗವಟ್ಟವ ಕಂಡು ಬಳಿಕೀ
ಕಂಗಳಿತರವ ಕಾಣಲಾಗದು ಕೃಪೆಯ ಮಾಡೆಂದ ॥68॥

೦೬೯ ತಾತ ಹೆದರದಿರೀ ...{Loading}...

ತಾತ ಹೆದರದಿರೀ ಮುಕುಂದನ
ಕೈತವಕೆ ಬೆಚ್ಚದಿರು ಸಂಧಿಯ
ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ
ಈತನಂತರ್ಯಾಮಿ ಜೀವ
ವ್ರಾತದಲಿ ಜನಜನಿತವಿದು ಜಗ
ವೀತನಾಜ್ಞೆಯೊಳೊಲವುದೆಂದನು ಕೌರವರ ರಾಯ ॥69॥

೦೭೦ ಸಙ್ಗಿಯೆನಿಸನು ಜಗವ ...{Loading}...

ಸಂಗಿಯೆನಿಸನು ಜಗವ ಹುಟ್ಟಿಸಿ
ನುಂಗಿದೊಡೆ ನಿಷ್ಕರುಣಿಯೆನಿಸನು
ಅಂಗರಕ್ಷÉಯ ಮಾಡಿ ಮೋಹಿತನಲ್ಲ ಮೂಜಗಕೆ
ಜಂಗಮಸ್ಥಾವರಕೆ ಚೈತ
ನ್ಯಾಂಗರಕ್ಷನು ಘನಕೆ ಘನ ಅಣು
ವಿಂಗೆ ತಾನಣುವೆನಿಪ ಪರತರವಸ್ತು ನೋಡೀತ ॥70॥

೦೭೧ ಎನ್ನ ಹೃದಯದೊಳಿರ್ದು ...{Loading}...

ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರೆವ ತಿಳಿಯಲ
ಭಿನ್ನನೈ ಮುರವೈರಿ ನಾವಿನ್ನಂಜಲೇಕೆಂದ ॥71॥

೦೭೨ ಹಳಚುವುವು ಹಾಹೆಗಳು ...{Loading}...

ಹಳಚುವುವು ಹಾಹೆಗಳು ಸೂತ್ರವ
ನಲುಗಿದೊಡೆ ತತ್ಪುಣ್ಯ ಪಾಪಾ
ವಳಿಗಳಾ ಹಾಹೆಗಳಿಗುಂಟೇ ಸೂತ್ರಧರನಿರಲು
ಕೊಲುವನನ್ಯರನನ್ಯರಿಂದವೆ
ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ ್ಯವಿಲ್ಲೆಂದ ॥72॥

೦೭೩ ಇಳಿದನವನಿಗೆ ಧಾರುಣಿಯ ...{Loading}...

ಇಳಿದನವನಿಗೆ ಧಾರುಣಿಯ ಹೊರೆ
ಗಳೆಯಲೋಸುಗವಿಲ್ಲಿ ನಮ್ಮೊಳ
ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ
ಛಲಕೆ ಮಣಿಯದೆ ರಾವಣಾದಿಗ
ಳಳಿದರಿದಲಾ ಕೀರ್ತಿಕಾಯ ವಿ
ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ ॥73॥

೦೭೪ ನಾವು ಸನ್ಧಿಯನೊಲಿವೆವೆಮ್ಮಯ ...{Loading}...

ನಾವು ಸಂಧಿಯನೊಲಿವೆವೆಮ್ಮಯ
ಭಾವದಲಿ ಹುಳುಕಿಲ್ಲ ಸಂಪ್ರತಿ
ದೇವನಭಿಮತವಲ್ಲ ಬಲ್ಲೆನು ಮುರಹರನ ಬರವ
ನೀವು ಮೇಗರೆಯರಿತದವರೀ
ರಾವಣಾರಿಯ ಬಗೆಯ ಬಲ್ಲೆನು
ಸಾವೆನೀತನ ಕೈಯ ಬಾಯಲಿ ಭೀತಿ ಬೇಡೆಂದ ॥74॥

೦೭೫ ಮಣಿದು ಬದುಕುವನಲ್ಲ ...{Loading}...

ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಡ ಧಾ
ರುಣಿಯ ಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ
ರಣ ಮಹೋತ್ಸವವೆಮ್ಮ ಮತ ಕೈ
ದಣಿಯೆ ಹೊಯಾ್ದಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ॥75॥

೦೭೬ ಎನಲು ನಸುನಗುತಸುರರಿಪು ...{Loading}...

ಎನಲು ನಸುನಗುತಸುರರಿಪು ಮು
ನ್ನಿನ ಮನುಷ್ಯಾಕಾರವನು ಮಗು
ಳನುಕರಿಸಿ ಧೃತರಾಷ್ಟ್ರ ಭೀಷ್ಮರಿಗೆಂದನೀ ಹದನ
ಘನ ಸುಯೋಧನ ಪಾಂಡುವಿನ ನಂ
ದನರೊಳಾದ ವಿವಾದ ನಮಗೇ
ಕೆನುತ ರಾಜಾಲಯವನಸುರಧ್ವಂಸಿ ಹೊರವಂಟ ॥76॥

೦೭೭ ಬನ್ದು ವಿದುರನ ...{Loading}...

ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ॥77॥

೦೭೮ ವಿದುರ ಭಾರದ್ವಾಜ ...{Loading}...

ವಿದುರ ಭಾರದ್ವಾಜ ಗೌತಮ
ನದಿಯಮಗ ಧೃತರಾಷ್ಟ್ರನಾತನ
ಸುದತಿ ಕರ್ಣ ವಿಕರ್ಣ ಶಲ್ಯ ಸುಬಾಹು ಗುರುಸುತರು
ವದನದುತ್ಸವವಡಗಿ ಕೃಷ್ಣನ
ಪದವನೋಲೈಸುತ್ತ ಬರೆ ಕರು
ಣದಲಿ ಮುರಹರನವರನುಚಿತೋಕ್ತಿಯಲಿ ಬೀಳ್ಕೊಟ್ಟ ॥78॥

೦೭೯ ನಯದೊಳೇಕಾನ್ತದಲಿ ಸಲೆ ...{Loading}...

ನಯದೊಳೇಕಾಂತದಲಿ ಸಲೆ ತೋ
ರಿಯೆ ನುಡಿವುದವನಾಶೆಯನು ನೀವ್
ಬಯಸಲಾಗದು ಹಿತವನೇ ಮಾಡುವುದು ಕುರುಕುಲಕೆ
ನಿಯತವಿದು ಪಾಂಡವರೊಡನೆ ಸಂ
ಧಿಯೆ ಸರಸ ಸಮರಾಂಗವೀಯ
ನ್ವಯಕೆ ನಿರ್ಣಯವೆಂದು ನೀವಾತಂಗೆ ಹೇಳುವುದು ॥79॥

೦೮೦ ಎನ್ದು ಗಾಙ್ಗೇಯಾದಿಗಳನರ ...{Loading}...

ಎಂದು ಗಾಂಗೇಯಾದಿಗಳನರ
ವಿಂದನಾಭನು ಬೀಳುಕೊಟ್ಟನು
ನಿಂದು ತಾ ರವಿಸುತನ ಕರೆದನು ರಥದ ಹೊರೆಗಾಗಿ
ಬಂದು ಕಿರಿದೆಡೆಗಾಗಿ ಕಳುಹುವು
ದೆಂದು ನೇಮಿಸಿ ಬಳಿಕ ತಾಪಸ
ವೃಂದವನು ಕಾರುಣ್ಯನಿಧಿ ಕಳುಹಿದ ತಪೋವನಕೆ ॥80॥

+೦೯ ...{Loading}...