೦೦೦ ಸೂ ಶರಣದೇಹಿಕ ...{Loading}...
ಸೂ. ಶರಣದೇಹಿಕ ದೇವನೆಂಬೀ
ಬಿರುದ ಮೆರೆಯಲು ರಾಯಭಾರವ
ಧರಿಸಿ ಕೌರವನರಮನೆಗೆ ನಡೆತಂದನಸುರಾರಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ದೇವನು, ಶರಣರ ದೇಹವೇ ಆಗಿರುವನೆಂಬ ಬಿರುದನ್ನು ಆಚರಿಸಿ ತೋರಿಸಲು ಕೃಷ್ಣನು ಪಾಂಡವರ ರಾಯಭಾರವನ್ನು ಹೊತ್ತು ಕೌರವನ ಅರಮನೆಗೆ ಬಂದನು.
ಮೂಲ ...{Loading}...
ಸೂ. ಶರಣದೇಹಿಕ ದೇವನೆಂಬೀ
ಬಿರುದ ಮೆರೆಯಲು ರಾಯಭಾರವ
ಧರಿಸಿ ಕೌರವನರಮನೆಗೆ ನಡೆತಂದನಸುರಾರಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ ನೃ
ಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜ ! ಕೇಳು. ಕೃಷ್ಣನು ಭೀಷ್ಮ, ದ್ರೋಣರನ್ನು ಬೀಳುಕೊಟ್ಟನು. ಕೃಪಾಚಾರ್ಯರನ್ನು ಗೌರವದಿಂದ ಕಳುಹಿಸಿದನು. ಅವನ ಮನೆಗೆ ಬರುವುದಾಗಿ ವಿದುರನಿಗೆ ವೀಳೆಯವನ್ನು ಕೊಟ್ಟನು. ತನ್ನೊಡನೆ ಬಂದ ರಾಜರುಗಳನ್ನು ಮುಖ ಸಂಜ್ಞೆಯಲ್ಲಿ ಮನೆಗಳಿಗೆ ಕಳುಹಿಸಿದನು.
ಪದಾರ್ಥ (ಕ.ಗ.ಪ)
ಸನ್ನೆ - ಸಂಜ್ಞೆ , ವೀಳೆಯ - ತಾಂಬೂಲ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ ನೃ
ಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ ॥1॥
೦೦೨ ಶೌರಿ ಕಾಣಿಸಿಕೊಣ್ಡನಾ ...{Loading}...
ಶೌರಿ ಕಾಣಿಸಿಕೊಂಡನಾ ಗಾಂ
ಧಾರಿಯನು ಸುಕ್ಷೇಮ ಕುಶಲವ
ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ
ಕೌರವನು ತನ್ನರಮನೆಗೆ ಹರಿ
ಬಾರದಿರನೆಂದಖಿಳ ವಿಧದಲಿ
ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಗಾಂಧಾರಿಯನ್ನು ಕಂಡನು. ಕುಶಲಸಮಾಚಾರವನ್ನು ವಿಚಾರಿಸಿ ಕಾಣಿಕೆಯನ್ನು ತೆಗೆದುಕೊಂಡನು. ಉಡುಗೊರೆಯನ್ನು ಕೊಟ್ಟನು. ತನ್ನರಮನೆಗೆ ಕೃಷ್ಣನು ಬರದೇ ಇರನೆಂದು ದುರ್ಯೋಧನನು ಉತ್ತಮವಾದ ವಸ್ತುಗಳನ್ನು ತರಿಸಿ ಸಮಸ್ತ ರೀತಿಯ ಭೋಜನ ವ್ಯವಸ್ಥೆ ಮಾಡಿಸಿದನು.
ಪದಾರ್ಥ (ಕ.ಗ.ಪ)
ಅರಯಿದು-ವಿಚಾರಿಸಿ
ಮೂಲ ...{Loading}...
ಶೌರಿ ಕಾಣಿಸಿಕೊಂಡನಾ ಗಾಂ
ಧಾರಿಯನು ಸುಕ್ಷೇಮ ಕುಶಲವ
ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ
ಕೌರವನು ತನ್ನರಮನೆಗೆ ಹರಿ
ಬಾರದಿರನೆಂದಖಿಳ ವಿಧದಲಿ
ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ ॥2॥
೦೦೩ ನಡುವೆ ಮಣಿಮಞ್ಚದಲಿ ...{Loading}...
ನಡುವೆ ಮಣಿಮಂಚದಲಿ ಮೇಲ್ವಾ
ಸಡಕಿಲನು ಹಚ್ಚಡಿಸಿದರು ಮೇ
ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು
ಉಡುಗೊರೆಯ ತರಿಸಿದನು ರಾಯನ
ಮಡದಿಯರು ಹೊಂಗಳಸ ಜಲವನು
ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಧ್ಯದಲ್ಲಿ ರತ್ನದ ಮಂಚಕ್ಕೆ ಮೇಲು ಬಟ್ಟೆಗಳನ್ನು ಜೋಡಿಸಿ ಹೊದಿಸಿದರು. ಮೇಲೆ ರತ್ನ ಖಚಿತವಾದ ಚಿತ್ರಗಳ ಕಟ್ಟುಗಳನ್ನು (ಚಿತ್ರಪಟಗಳನ್ನು) ಹರಡಿದರು. ದುರ್ಯೋಧನನು ಉಡುಗೊರೆಗಳನ್ನು ತರಿಸಿದನು. ಅವನ ಪತ್ನಿಯರು ಬಂಗಾರದ ಕಳಸಗಳಲ್ಲಿ ನೀರು ಮತ್ತು ಹರಿವಾಣಗಳನ್ನು ಹಿಡಿದು ಕೃಷ್ಣನ ಆಗಮನವನ್ನು ನಿರೀಕ್ಷಿಸಿದರು.
ಪದಾರ್ಥ (ಕ.ಗ.ಪ)
ರನ್ನ-ರತ್ನ, ಹಚ್ಚಡಿಸು-ಹರಡು, ಅಡರು-ಹರಡು, ಮೇಲುಗಟ್ಟು-ಚಿತ್ರಪಟಗಳು
ಮೂಲ ...{Loading}...
ನಡುವೆ ಮಣಿಮಂಚದಲಿ ಮೇಲ್ವಾ
ಸಡಕಿಲನು ಹಚ್ಚಡಿಸಿದರು ಮೇ
ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು
ಉಡುಗೊರೆಯ ತರಿಸಿದನು ರಾಯನ
ಮಡದಿಯರು ಹೊಂಗಳಸ ಜಲವನು
ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು ॥3॥
೦೦೪ ತವತವಗೆ ಗಾಙ್ಗೇಯ ...{Loading}...
ತವತವಗೆ ಗಾಂಗೇಯ ಗುರು ಕೃಪ
ರವಿಸುತಾದಿಗಳಸುರರಿಪು ನಿಜ
ಭವನಕೈತಹನೆಂದು ಸವೆದರು ಸಾರ ವಸ್ತುಗಳ
ಅವನಿಪನ ಬೀಳ್ಕೊಟ್ಟು ಕೌರವ
ಭವನವನು ಹೊರವಂಟು ವರಭಾ
ಗವತಮಸ್ತಕರತ್ನ ವಿದುರನ ಮನೆಗೆ ನಡೆತಂದ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ, ಕೃಪ, ದ್ರೋಣಾಚಾರ್ಯರು, ಕರ್ಣ ಮೊದಲಾದವರು ಕೃಷ್ಣನು ತಮ್ಮ ತಮ್ಮ ಮನೆಗೆ ಬರುವನೆಂದು ಉತ್ತಮ ವಸ್ತುಗಳನ್ನು ತರಿಸಿ ಸಿದ್ಧತೆಯನ್ನು ಮಾಡಿದರು. ಧೃತರಾಷ್ಟ್ರನನ್ನು ಬೀಳ್ಕೊಂಡು ಕೌರವನ ಅರಮನೆಯಿಂದ ಹೊರಟು ಶ್ರೇಷ್ಠ ಭಗವದ್ಭಕ್ತರ ಶಿರೋಮಣಿಯಾದ ವಿದುರನ ಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಸವೆದರು-ಸಿದ್ಧಮಾಡಿದರು, ಭಾಗವತ ಮಸ್ತಕ ರತ್ನ - ಭಕ್ತ ಶಿರೋಮಣಿ.
ಮೂಲ ...{Loading}...
ತವತವಗೆ ಗಾಂಗೇಯ ಗುರು ಕೃಪ
ರವಿಸುತಾದಿಗಳಸುರರಿಪು ನಿಜ
ಭವನಕೈತಹನೆಂದು ಸವೆದರು ಸಾರ ವಸ್ತುಗಳ
ಅವನಿಪನ ಬೀಳ್ಕೊಟ್ಟು ಕೌರವ
ಭವನವನು ಹೊರವಂಟು ವರಭಾ
ಗವತಮಸ್ತಕರತ್ನ ವಿದುರನ ಮನೆಗೆ ನಡೆತಂದ ॥4॥
೦೦೫ ತೊಲಗಿದವು ಜನಮನದ ...{Loading}...
ತೊಲಗಿದವು ಜನಮನದ ಬಲುಗ
ತ್ತಲೆಗಳಿದಿರಲಿ ಕಂಡ ಜೀವರ
ಹಲವು ಜನ್ಮಾಂತರದ ದುರಿತಾಂಬೋಧಿ ಬತ್ತಿದವು
ಬಳಿಕ ಮುನಿಗಳು ಸಹಿತ ಕರುಣಾ
ಜಲಧಿ ತಾನಾ ಕೌರವೇಂದ್ರನ
ಹೊಳಲೊಳಗೆ ನಿಜ ಶರಣನಿಹ ಮನೆಗಾಗಿ ಬರುತಿರ್ದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನನ್ನು ಕಂಡ ಜನರ ಮನದ ಅಂಧಕಾರವು ಮಾಯವಾದವು. ಹಲವು ಜೀವರಾಶಿಗಳ ಎಷ್ಟೋ ಜನ್ಮದ ಪಾಪದ ಸಮುದ್ರವು ಬತ್ತಿ ಹೋದವು. ಮುನಿಗಳನ್ನು ಕೂಡಿಕೊಂಡು ಕರುಣಾಸಮುದ್ರನಾದ ಶ್ರೀಕೃಷ್ಣನು ಕೌರವೇಂದ್ರನ ನಗರದೊಳಗೆ ತನ್ನ ಭಕ್ತನ ಮನೆಗಾಗಿ ಬರುತ್ತಿದ್ದನು.
ಪದಾರ್ಥ (ಕ.ಗ.ಪ)
ದುರಿತ-ಪಾಪ, ಹೊಳಲು-ನಗರ, ಅಂಭೋದಿ-ಸಮುದ್ರ.
ಮೂಲ ...{Loading}...
ತೊಲಗಿದವು ಜನಮನದ ಬಲುಗ
ತ್ತಲೆಗಳಿದಿರಲಿ ಕಂಡ ಜೀವರ
ಹಲವು ಜನ್ಮಾಂತರದ ದುರಿತಾಂಬೋಧಿ ಬತ್ತಿದವು
ಬಳಿಕ ಮುನಿಗಳು ಸಹಿತ ಕರುಣಾ
ಜಲಧಿ ತಾನಾ ಕೌರವೇಂದ್ರನ
ಹೊಳಲೊಳಗೆ ನಿಜ ಶರಣನಿಹ ಮನೆಗಾಗಿ ಬರುತಿರ್ದ ॥5॥
೦೦೬ ಕರಣ ನಿರ್ಮಳವಾಯ್ತು ...{Loading}...
ಕರಣ ನಿರ್ಮಳವಾಯ್ತು ಮನವು
ಬ್ಬರಿಸಿತತಿ ಪರಿತೋಷದೇಳಿಗೆ
ಪರಮ ಸುಖದಲಿ ತನುವ ಮರೆದನು ನಯನಜಲವೊಗಲು
ಎರಡುದೋರದ ಗಾಢಭಕ್ತಿಯ
ಭರದ ಲವಲವಿಕೆಯಲಿ ನಿಜಮಂ
ದಿರವ ಹೊರವಂಡುತ್ತ ಕಂಡನು ವಿದುರನಚ್ಯುತನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನ ಅಂತರಂಗ ನಿರ್ಮಲವಾಯಿತು. ಮನವು ಅತಿಶಯವಾದ ಸಂತೋಷದಿಂದ ತುಂಬಿ ಹೋಯಿತು. ಉನ್ನತಿಯ ಪರಮ ಸುಖದಲ್ಲಿ ಶರೀರವನ್ನು ಮರೆತು, ಕಣ್ಣುಗಳಲ್ಲಿ ನೀರು ಸುರಿಯಿತು. ಅದ್ವೈತ ಭಾವದಲ್ಲಿ ತುಂಬು ಭಕ್ತಿಯ ಭಾರದಲ್ಲಿ ಹುರುಪು ಉತ್ಸಾಹಗಳಿಂದ ವಿದುರನು ತನ್ನ ಮನೆಯಿಂದ ಹೊರಗೆ ಬರುತ್ತ ಅಚ್ಯುತನಾದ ಕೃಷ್ಣನನ್ನು ಕಂಡನು.
ಪದಾರ್ಥ (ಕ.ಗ.ಪ)
ಲವಲವಿಕೆ-ಹುರುಪು/ಉತ್ಸಾಹ, ಭರ-ಭಾರ
ಎರಡುದೋರದ- ಮತ್ತೊಂದಿಲ್ಲವೆಂಬ ಅದ್ವೈತಭಾವ
ಮೂಲ ...{Loading}...
ಕರಣ ನಿರ್ಮಳವಾಯ್ತು ಮನವು
ಬ್ಬರಿಸಿತತಿ ಪರಿತೋಷದೇಳಿಗೆ
ಪರಮ ಸುಖದಲಿ ತನುವ ಮರೆದನು ನಯನಜಲವೊಗಲು
ಎರಡುದೋರದ ಗಾಢಭಕ್ತಿಯ
ಭರದ ಲವಲವಿಕೆಯಲಿ ನಿಜಮಂ
ದಿರವ ಹೊರವಂಡುತ್ತ ಕಂಡನು ವಿದುರನಚ್ಯುತನ ॥6॥
೦೦೭ ಸಿರಿಮೊಗದ ಕಿರುಬೆಮರ ...{Loading}...
ಸಿರಿಮೊಗದ ಕಿರುಬೆಮರ ತೇಜಿಯ
ಖುರಪುಟದ ಕೆಂದೂಳಿ ಸೋಂಕಿದ
ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ
ಖರಮರೀಚಿಯ ಜಳಕೆ ಬಾಡಿದ
ತರುಣ ತುಲಸಿಯ ದಂಡೆಯೊಪ್ಪುವ
ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಮುಖದ ಮೇಲಿನ ಬೆವರಿನ ಸ್ವಲ್ಪ ಬೆವರಿನ ಕುದುರೆಯ ಗೊರಸಿನಿಂದೆದ್ದ ಕೆಂಧೂಳು ತಾಗಿದ ಶ್ರೀಮುಡಿಯ, ಚಿಗುರು ಮೀಸೆಯ ಮೇಲೆ ಕೆಂಪುದೂಳು ಹತ್ತಿದ, ಸೂರ್ಯನಕಿರಣದ ಶಾಖಕ್ಕೆ ಬಾಡಿದ ಎಳೆಯ ತುಳಸಿ ಮಾಲೆಯಲ್ಲಿ ಪ್ರಕಾಶಿಸುವ, ಹಿರಿಯ ದೇವನು ಬರುತ್ತಿರುವುದನ್ನು ತನ್ನ ಮನೆಯ ಬಾಗಿಲಲ್ಲಿ ವಿದುರನು ಕಂಡನು.
ಪದಾರ್ಥ (ಕ.ಗ.ಪ)
ತೇಜ-ಕುದುರೆ,
ಖುರಪುಟ-ಗೊರಸು,
ರೇಣು-ಧೂಳಿನಕಣ,
ಖರಮರೀಚಿ-ಸೂರ್ಯನಕಿರಣ,
ಜಳ -ಶಾಖ,
ಒಪ್ಪುವ-ಪ್ರಕಾಶಿಸುವ.
ಮೂಲ ...{Loading}...
ಸಿರಿಮೊಗದ ಕಿರುಬೆಮರ ತೇಜಿಯ
ಖುರಪುಟದ ಕೆಂದೂಳಿ ಸೋಂಕಿದ
ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ
ಖರಮರೀಚಿಯ ಜಳಕೆ ಬಾಡಿದ
ತರುಣ ತುಲಸಿಯ ದಂಡೆಯೊಪ್ಪುವ
ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ ॥7॥
೦೦೮ ತನುವ ಮರೆದನು ...{Loading}...
ತನುವ ಮರೆದನು ಪುಳಕಜಲದಲಿ
ನನೆದು ನಾರಾಯಣನ ಪದ ದರು
ಶನದ ಹರುಷಾರಣ್ಯದಲಿ ಮನ ಹೊಲಬುದಪ್ಪಿದನು
ನೆನೆವ ಸನಕಾದಿಗಳಿಗೊಮ್ಮೆಯು
ಮನಗೊಡದ ಮಹಿಮಾವಲಂಬನು
ಮನೆಗೆ ಬಹ ಕರುಣಾಳುತನ ಹೊಸತೆಂದು ಹೊಂಗಿದನು ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೈಮರೆತನು, ರೋಮಾಂಚನದಿಂದ ಮೈ ಒದ್ದೆಯಾಗಿ ನಾರಾಯಣನ ಪಾದದರ್ಶನದ ಸಂತೋಷ ಎಂಬ ಅರಣ್ಯದಲ್ಲಿ ಮನದ ದಾರಿ ತಪ್ಪಿದನು. ಯಾವಾಗಲೂ ಪರಮಾತ್ಮನನ್ನೇ ನೆನೆಯುತ್ತಿರುವ ಸನಕರೇ ಮೊದಲಾದವರಿಗೂ ಮನಸ್ಸು ಕೊಡದಿರುವ ಮಹಿಮಾವಂತನು ತನ್ನ ಮನೆಗೆ ಬರುವ ಕಾರುಣ್ಯವು ಹೊಸ ರೀತಿ ಎಂದು ಹಿಗ್ಗಿದನು.
ಪದಾರ್ಥ (ಕ.ಗ.ಪ)
ಪುಳಕ-ರೋಮಾಂಚನ, ನನೆದು-ಒದ್ದೆಯಾಗಿ, ಹೊಂಗು-ಹಿಗ್ಗು.
ಮೂಲ ...{Loading}...
ತನುವ ಮರೆದನು ಪುಳಕಜಲದಲಿ
ನನೆದು ನಾರಾಯಣನ ಪದ ದರು
ಶನದ ಹರುಷಾರಣ್ಯದಲಿ ಮನ ಹೊಲಬುದಪ್ಪಿದನು
ನೆನೆವ ಸನಕಾದಿಗಳಿಗೊಮ್ಮೆಯು
ಮನಗೊಡದ ಮಹಿಮಾವಲಂಬನು
ಮನೆಗೆ ಬಹ ಕರುಣಾಳುತನ ಹೊಸತೆಂದು ಹೊಂಗಿದನು ॥8॥
೦೦೯ ವೇದದರಿಕೆಗಳಡಗದುಪನಿಷ ದಾದಿ ...{Loading}...
ವೇದದರಿಕೆಗಳಡಗದುಪನಿಷ
ದಾದಿ ದಿವ್ಯಸ್ತುತಿಯ ಗಡಣೆಗೆ
ಹೋದ ಹೊಲಬಳವಡದ ಮುನಿಗಳ ಮಖಕೆ ಮನಗುಡದ
ಕಾದಿ ಕಡಗುವ ತಾರ್ಕಿಕರು ಬೆಂ
ಡಾದರಲ್ಲದೆ ನಿಜವನರಿಯದ
ನಾದಿ ಸಿದ್ಧನ ಬರವ ಕಂಡನು ಬಾಗಿಲಲಿ ವಿದುರ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಗಳ ತಿಳಿವಳಿಕೆಗೆ ನಿಲುಕದ, ಉಪನಿಷತ್ತು ಮೊದಲಾದ ದಿವ್ಯ ಸ್ತುತಿಸಮೂಹಕ್ಕೆ ಹೋದ ದಿಕ್ಕು ಕಾಣದ, ಋಷಿಗಳ ಯಾಗ - ಯಜ್ಞಗಳಿಗೆ ಮನಸ್ಸು ಕೊಡದ, ಆವೇಶದಿಂದ ವಾದಗಳನ್ನು ಮಾಡುವ ತರ್ಕಬದ್ಧರು ಬಳಲಿ ಬೆಂಡಾದರಲ್ಲದೆ ಅವನ ನಿಜರೂಪವನ್ನು ತಿಳಿಯದಾದರು. ಅಂತಹ ಆದಿಯಿಲ್ಲದ ದೇವನು ಬರುವುದನ್ನು ಬಾಗಿಲಿನಲ್ಲಿ ವಿದುರನು ಕಂಡನು.
ಪದಾರ್ಥ (ಕ.ಗ.ಪ)
ಅರಿಕೆ-ಜ್ಞಾನ, ಗಡಣ-ಗುಂಪು, ಹೊಲಬು-ರೀತಿ, ಅಳವಡು-ಹೊಂದು, ಮಖ-ಯಜ್ಞ, ತಾರ್ಕಿಕರು-ತರ್ಕವನ್ನು ಮಾಡುವರು
ಮೂಲ ...{Loading}...
ವೇದದರಿಕೆಗಳಡಗದುಪನಿಷ
ದಾದಿ ದಿವ್ಯಸ್ತುತಿಯ ಗಡಣೆಗೆ
ಹೋದ ಹೊಲಬಳವಡದ ಮುನಿಗಳ ಮಖಕೆ ಮನಗುಡದ
ಕಾದಿ ಕಡಗುವ ತಾರ್ಕಿಕರು ಬೆಂ
ಡಾದರಲ್ಲದೆ ನಿಜವನರಿಯದ
ನಾದಿ ಸಿದ್ಧನ ಬರವ ಕಂಡನು ಬಾಗಿಲಲಿ ವಿದುರ ॥9॥
೦೧೦ ತೊಳಲುವುಪನಿಪದರಿಕೆಯಿವು ...{Loading}...
ತೊಳಲುವುಪನಿಪದರಿಕೆಯಿವು ಶ್ರುತಿ
ಗಳ ಸರಾಗದ ಬಳಕೆಯಿವು ಮುನಿ
ಗಳ ಸಮಾಧಿಗಳಾದಿಯಿವು ಯೋಗಿಗಳ ಬಗೆಗಳಿವು
ಎಲೆಲೆ ಬಕುತರ ಭಾಗ್ಯಶಾಲಿಯ
ಬೆಳೆಗಳಿವೆಲಾ ಶಿವಯೆನುತ ಪದ
ನಳಿನಯುಗಳದಲೊಡಲನೀಡಾಡಿದನು ಹರುಷದಲಿ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಲೆದಾಡುವ ಉಪನಿಷತ್ತಿಗೆ ತಿಳಿವಳಿಕೆಯನ್ನು ತೋರುವ ಈ ಪಾದಗಳು, ಶ್ರುತಿಗಳನ್ನು ಪ್ರೀತಿಯಿಂದ ಬಳಸುವ ಈ ಪಾದಗಳು, ಮುನಿಗಳ ಸಮಾಧಿ ಸ್ಥಿತಿಗೆ, ಯೋಗಿಗಳ ಯೋಚನೆಗಳಿಗೆ, ಎಲೆಲೆ ಭಕ್ತರ ಭಾಗ್ಯದ ಶಾಲಿಯ ಬೆಳೆಗಳು ಇವಲ್ಲವೇ ? ಶಿವ ಶಿವ ’ ಎನ್ನುತ್ತ ಎರಡು ಪಾದಕಮಲಗಳಲ್ಲಿ ತನ್ನ ಮೈಯನ್ನು ಸಂತೋಷದಿಂದ ವಿದುರ ಚಾಚಿದನು.
ಪದಾರ್ಥ (ಕ.ಗ.ಪ)
ತೊಳಲುವ-ಅಲೆದಾಡುವ, ಬೆಳವಿಗೆ-ಏಳಿಗೆ/ಬೆಳವಣಿಗೆ.
ಮೂಲ ...{Loading}...
ತೊಳಲುವುಪನಿಪದರಿಕೆಯಿವು ಶ್ರುತಿ
ಗಳ ಸರಾಗದ ಬಳಕೆಯಿವು ಮುನಿ
ಗಳ ಸಮಾಧಿಗಳಾದಿಯಿವು ಯೋಗಿಗಳ ಬಗೆಗಳಿವು
ಎಲೆಲೆ ಬಕುತರ ಭಾಗ್ಯಶಾಲಿಯ
ಬೆಳೆಗಳಿವೆಲಾ ಶಿವಯೆನುತ ಪದ
ನಳಿನಯುಗಳದಲೊಡಲನೀಡಾಡಿದನು ಹರುಷದಲಿ ॥10॥
೦೧೧ ನೋಡಿದನು ಮನದಣಿಯೆ ...{Loading}...
ನೋಡಿದನು ಮನದಣಿಯೆ ಮಿಗೆ ಕೊಂ
ಡಾಡಿದನೂ ಬೀದಿಯಲಿ ಹರಿದೆಡೆ
ಯಾಡಿದನು ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ
ಕೂಡೆ ಕುಣಿದನು ಮನೆಯ ಮುರಿದೀ
ಡಾಡಿದನು ಮೈಮರೆದ ಹರುಷದ
ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನಸ್ಸು ತೃಪ್ತಿಯಾಗುವಂತೆ ನೋಡಿದನು. ಅಧಿಕವಾಗಿ ಹೊಗಳಿದನು. ಬೀದಿಯಲ್ಲಿ ಓಡಾಡಿದನು. ವಿದುರನು ಭ್ರಾಂತಿಗೊಂಡನೆಂಬ ಗದ್ದಲದಲ್ಲಿ ಕುಣಿದನು. ಮನೆಯ ಮುರಿದು ಕಿತ್ತೊಗೆದನು. ಮೈಮರೆತ ಸಂತೋಷದ ಸಂಭ್ರಮದಲ್ಲಿ ಅಸಾಮಾನ್ಯನಾದ ವಿದುರನು ಭಕ್ತಿಕೇಳಿಯಲ್ಲಿ ಇದ್ದನು.
ಪದಾರ್ಥ (ಕ.ಗ.ಪ)
ಹರಿದಾಡು-ಓಡಾಡು, ದಣಿ-ತೃಪ್ತಿ, ಕೊಂಡಾಡು-ಹೊಗಳು, ಗಾವಳಿ-ಗದ್ದಲ, ಗಾಡಿಕೆ-ಸೊಗಸು/ಸಂಭ್ರಮ, ಈಡಾಡು-ಕಿತ್ತೊಗೆ, ಅಪ್ರತಿಮ-ಅಸಾಮಾನ್ಯ.
ಮೂಲ ...{Loading}...
ನೋಡಿದನು ಮನದಣಿಯೆ ಮಿಗೆ ಕೊಂ
ಡಾಡಿದನೂ ಬೀದಿಯಲಿ ಹರಿದೆಡೆ
ಯಾಡಿದನು ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ
ಕೂಡೆ ಕುಣಿದನು ಮನೆಯ ಮುರಿದೀ
ಡಾಡಿದನು ಮೈಮರೆದ ಹರುಷದ
ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ ॥11॥
೦೧೨ ಹಸಿದು ನಾವೈತನ್ದರೀ ...{Loading}...
ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಸಿದು ನಾವು ಬಂದರೆ (ನಾವು ಹಸಿದು ಬಂದರೆ) ಈ ರೀತಿ ಹುಚ್ಚೆದ್ದು ಕುಣಿದಾಡಿದರೆ ಮತ್ತು ಈ ಮನೆಯನ್ನು ಕಿತ್ತೊಗೆದರೆ ನನಗೆ ತೃಪ್ತಿಯಾಗುವುದೆ ? ಅರಸರುಗಳು ಅಧಿಕವಾಗಿ ಪ್ರಾರ್ಥಿಸಿದರೂ ಒಪ್ಪದೇ ನಿನ್ನ ಮನೆಗೆ ಬಂದೆವು. ನನ್ನನ್ನು ನಾಚಿಸಬೇಡ. ವಿದುರ ಬಾ ಎನ್ನುತ ಕೃಷ್ಣನು ಮನೆಯನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಮಸಗಿ-ಹುಚ್ಚೆದ್ದು , ಸುಗಿ-ಮುರಿ
ಮೂಲ ...{Loading}...
ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ ॥12॥
೦೧೩ ನೆರೆಯೆ ಕೃತ್ಯಾಕೃತ್ಯ ...{Loading}...
ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತಿಯು ತುಂಬಿಕೊಳ್ಳಲು ವಿದುರನು ಮಾಡಬಹುದಾದ, ಮಾಡಬಾರದ ಕೆಲಸಗಳ ರೀತಿಯನ್ನು ಮರೆತುಬಿಟ್ಟನು. ಮನಸ್ಸು ಕೃಷ್ಣನನ್ನು ಬಿಗಿಯಾಗಿ ಅಪ್ಪಿಕೊಂಡಿತು. ವಿದುರನ ಕಣ್ಣುಗಳು ಕೃಷ್ಣನ ಪಾದ ಕಮಲಗಳಲ್ಲಿ ನಟ್ಟವು. ತಿಳಿವು ಭಕ್ತಿಯಲ್ಲಿ ಎರಕ ಹೊಯ್ದ ಮೇಣದ ಗೊಂಬೆಯಂತೆ, ಅಧಿಕವಾದ ಬೆರಗಿನ ಹಿಡಿತದಲ್ಲಿ ಸಿಕ್ಕಿಕೊಂಡಂತೆ ಆ ವಿದುರನು ಮಾತನಾಡದೆ ಇದ್ದನು.
ಪದಾರ್ಥ (ಕ.ಗ.ಪ)
ಇರುಕು-ಒತ್ತಿಹಿಡಿ.
ಒಡವೆಚ್ಚು-ಬೆಸುಗೆ ಹಾಕು
ಮಯಣಾಮಯ-ಮೇಣದ ಬೊಂಬೆ,
ಕಡು-ಬಿಗಿ
ಮೂಲ ...{Loading}...
ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ ॥13॥
೦೧೪ ಒಲವರವೆ ಕೌತುಕವು ...{Loading}...
ಒಲವರವೆ ಕೌತುಕವು ಪಾಲ್ಗಡ
ಲೊಳಗೆ ಮಲಗುವ ವಿಷ್ಣು ವಿದುರನ
ನಿಳಯದೊಳಗೊಕ್ಕುಡಿತೆ ಹಾಲಲಿ ಹಸಿವ ನೂಕಿದನು
ಹೊಲಬುಗೆಡಿಸಿದನಖಿಳ ನಿಗಮಂ
ಗಳನು ತನ್ನರಿಕೆಯಲಿ ಭಜಕಂ
ಗೊಲಿದು ತಾನೈತರಲು ಕರುಣದ ಘನತೆಯೆನೆ ಲೋಕ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರೀತಿಯೆಂಬುದು ಬಹಳ ಆಶ್ಚರ್ಯದ ಸಂಗತಿ. ಕ್ಷೀರ ಸಮುದ್ರದಲ್ಲಿ ಮಲಗುವ ವಿಷ್ಣುವು ವಿದುರನ ಮನೆಯೊಳಗೆ ಒಂದು ಗುಟುಕು ಹಾಲಿನಿಂದ ತನ್ನ ಹಸಿವನ್ನು ತಳ್ಳಿದನು. ಎಲ್ಲ ವೇದಗಳ ದಾರಿ ತಪ್ಪಿಸಿದನು. ತನ್ನ ಬಿನ್ನಹದಲ್ಲಿ ತಾನೇ ತನ್ನ ಭಕ್ತನಿಗೆ ಒಲಿದು ಬರುವುದು ಕರುಣೆಯ ಹಿರಿಮೆ ಎಂದು ಲೋಕ ನುಡಿಯಿತು.
ಪದಾರ್ಥ (ಕ.ಗ.ಪ)
ಕುಡಿತೆ-ಬೊಗಸೆ/ಕುಡಿಯುವಿಕೆ, ಹೊಲಬು-ದಾರಿ, ನಿಗಮ-ವೇದ
ಮೂಲ ...{Loading}...
ಒಲವರವೆ ಕೌತುಕವು ಪಾಲ್ಗಡ
ಲೊಳಗೆ ಮಲಗುವ ವಿಷ್ಣು ವಿದುರನ
ನಿಳಯದೊಳಗೊಕ್ಕುಡಿತೆ ಹಾಲಲಿ ಹಸಿವ ನೂಕಿದನು
ಹೊಲಬುಗೆಡಿಸಿದನಖಿಳ ನಿಗಮಂ
ಗಳನು ತನ್ನರಿಕೆಯಲಿ ಭಜಕಂ
ಗೊಲಿದು ತಾನೈತರಲು ಕರುಣದ ಘನತೆಯೆನೆ ಲೋಕ ॥14॥
೦೧೫ ಹರಿಯ ಪದಕಮಲಾಭಿಷೇಕದ ...{Loading}...
ಹರಿಯ ಪದಕಮಲಾಭಿಷೇಕದ
ವರ ಪಯೋಬಿಂದುಗಳು ಕೌರವ
ನರಮನೆಯನೊಳಕೊಂಬವೋಲ್ ಕಡಲಾಗಿ ಕೈಗೊಳಲು
ಅರರೆ ಮುರಹರನೊಡನೆ ಹಾಲಿನ
ಶರಧಿ ಮೇರೆಯನೊಡೆದುದಿಳೆಗ
ಚ್ಚರಿಯೆನುತ ಭೀಷ್ಮಾದಿಗಳು ಹೊಗಳಿದರು ಮುರಹರನ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಯ ಪಾದ ಕಮಲಗಳ ಅಭಿಷೇಕದ ಶ್ರೇಷ್ಠವಾದ ಹಾಲಿನ ಹನಿಗಳು ದುರ್ಯೋಧನನ ಅರಮನೆಯನ್ನು ಮುಳುಗಿಸುವಂತೆ ಸಮುದ್ರವಾಗಿ ಹರಿಯಲು, ಅರರೆ ! ಕೃಷ್ಣನೊಡನೆ ಕ್ಷೀರ ಸಾಗರವೂ ಎಲ್ಲೆಯನ್ನು ಮೀರಿ ಭೂಮಿಗಿಳಿಯಿತು ಆಶ್ಚರ್ಯವೆನುತ ಭೀಷ್ಮರೇ ಮೊದಲಾದವರು ಕೃಷ್ಣನನ್ನು ಹೊಗಳಿದರು.
ಪದಾರ್ಥ (ಕ.ಗ.ಪ)
ಪಯೋಬಿಂದು-ಹಾಲಿನಹನಿ, ಶರಧಿ-ಸಮುದ್ರ
ಮೂಲ ...{Loading}...
ಹರಿಯ ಪದಕಮಲಾಭಿಷೇಕದ
ವರ ಪಯೋಬಿಂದುಗಳು ಕೌರವ
ನರಮನೆಯನೊಳಕೊಂಬವೋಲ್ ಕಡಲಾಗಿ ಕೈಗೊಳಲು
ಅರರೆ ಮುರಹರನೊಡನೆ ಹಾಲಿನ
ಶರಧಿ ಮೇರೆಯನೊಡೆದುದಿಳೆಗ
ಚ್ಚರಿಯೆನುತ ಭೀಷ್ಮಾದಿಗಳು ಹೊಗಳಿದರು ಮುರಹರನ ॥15॥
೦೧೬ ತೊಲಗಿದಸು ಬನ್ದನ್ತೆ ...{Loading}...
ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋದ ಜೀವ ಮರಳಿ ಬಂದಂತೆ, ಸೂರ್ಯ ಕಾಂತಿ ತಾಗಿದ ಚಕ್ರವಾಕ ಪಕ್ಷಿಯ ಬಳಗದಂತೆ ಕೃಷ್ಣನು ಆಗಮಿಸಿದ್ದನ್ನು ಕೇಳಿ ಕುಂತಿಯು ರೋಮಾಂಚನಗೊಂಡು ಬಹಳ ಸಂತೋಷದಿಂದ ದೇವರನ್ನು ಕಾಣುವ ಕಣ್ಣುಗಳಿಗೆ ಸಂತೋಷ ತುಂಬಲು ಓಡಿ ಬಂದಳು.
ಪದಾರ್ಥ (ಕ.ಗ.ಪ)
ಲೋಲುಪತೆ-ಅತ್ಯಾಸಕ್ತಿ, ಹೊಳಹು-ಕಾಂತಿ, ಅಸು-ಜೀವ.
ಮೂಲ ...{Loading}...
ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ ॥16॥
೦೧೭ ಬರಲು ಕಣ್ಡಸುರಾರಿ ...{Loading}...
ಬರಲು ಕಂಡಸುರಾರಿ ಮಂಚದೊ
ಳಿರದೆ ಧಿಮ್ಮನೆ ನಿಂದು ನರರಾ
ಚರಣೆಗಳ ನಾಟಕವ ತಾನೇ ನಟಿಸಿ ತೋರಿದನು
ಹಿರಿಯರಿಗೆ ತಾ ಹಿರಿಯನೆಂಬೀ
ಗರುವತನವನು ಬಿಸುಟು ಕುಂತಿಗೆ
ಕರವ ಮುಗಿದೆರಗಿದನು ಮುನಿಜನನಿಕರ ಘೇಯೆನಲು ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂತಿಯು ಬರುವುದನ್ನು ಕಂಡ ಕೃಷ್ಣನು ಮಂಚದಲ್ಲಿ ಇರದೆ ತಟಕ್ಕನೆ ಎದ್ದು ನಿಂತು ಮಾನವರು ಆಚರಿಸಬೇಕಾದ ರೀತಿಗಳ ನಡವಳಿಕೆಯನ್ನು ತಾನೆ ಮಾಡಿ ತೋರಿಸಿದನು. ಹಿರಿಯರಿಗೆ ತಾನು ಹಿರಿಯನೆಂಬ ದೊಡ್ಡಸ್ತಿಕೆಯನ್ನು ಬಿಟ್ಟು ಮುನಿಗಳ ಸಮೂಹವು ಉಘೇ ಎನ್ನುತ್ತಿರಲು ಕುಂತಿಗೆ ಕೈಮುಗಿದು ಕಾಲಿಗೆ ಬಿದ್ದು ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಗರುವತನ-ದೊಡ್ಡಸ್ತಿಕೆ, ಧಿಮ್ಮನೆ-ತಟಕ್ಕನೆ, ನಿಕರ-ಗುಂಪು.
ಮೂಲ ...{Loading}...
ಬರಲು ಕಂಡಸುರಾರಿ ಮಂಚದೊ
ಳಿರದೆ ಧಿಮ್ಮನೆ ನಿಂದು ನರರಾ
ಚರಣೆಗಳ ನಾಟಕವ ತಾನೇ ನಟಿಸಿ ತೋರಿದನು
ಹಿರಿಯರಿಗೆ ತಾ ಹಿರಿಯನೆಂಬೀ
ಗರುವತನವನು ಬಿಸುಟು ಕುಂತಿಗೆ
ಕರವ ಮುಗಿದೆರಗಿದನು ಮುನಿಜನನಿಕರ ಘೇಯೆನಲು ॥17॥
೦೧೮ ಅಮಿತ ಕರುಣಾಸಿನ್ಧುವಿನ ...{Loading}...
ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಿತಿಯಿಲ್ಲದ ಕರುಣಾ ಸಮುದ್ರನೆನಿಸಿದ ಕೃಷ್ಣನ ಪಾದ ಕಮಲಗಳಲ್ಲಿ ನಮಸ್ಕರಿಸಿ, ರೋಮಾಂಚನದ ಸೆಲೆಯ ಸವಿಸುಖದ ಅನುಭವ ಸಂಭ್ರಮ ಸಡಗರಗಳಲ್ಲಿ ಮುಳುಗಿದ, ಮೇಲಾದ ವೇದಗಳು ಹಿಂದಿರುಗಲಾರವು. ಅಂತಹ ನೀವು ಹೇಗೆ ನಡೆದು ಬಂದು ನಮಗೆ ಕಾಣಿಸಿಕೊಂಡಿರಿ?" ಎನ್ನುತ್ತ ಕುಂತಿಯು ಹೊಗಳಿದಳು.
ಪದಾರ್ಥ (ಕ.ಗ.ಪ)
ಅಮಿತ-ಮಿತಿಯಿಲ್ಲದ, ಸೌರಂಭ-ಸಂಭ್ರಮ.
ಮೂಲ ...{Loading}...
ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ ॥18॥
೦೧೯ ದೇವಕಿಯ ವಸುದೇವನನು ...{Loading}...
ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದುಭೂ
ಪಾವಳಿಯ ಸುಕ್ಷೇಮಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಕಿ, ವಸುದೇವ, ಬಲರಾಮ, ಸುಭದ್ರೆ, ಅಭಿಮನ್ಯು ಮೊದಲಾದವರ ಕುಶಲ ಸಮಾಚಾರಗಳನ್ನು ಕುಂತಿ ಕೇಳಲು, ಕೃಷ್ಣನು ನಗೆ ಮುಖದಿಂದ ವಸುದೇವ ದೇವಕಿ ಮೊದಲಾದ ಯಾದವರ ಕ್ಷೇಮಸಮಾಚಾರವನ್ನು ಕುಂತಿಗೆ ತಿಳಿಸಿದನು.
ಪದಾರ್ಥ (ಕ.ಗ.ಪ)
ವಿಳಾಸ-ಸಂಭ್ರಮ, ಮಹೀಶರ-ದೊರೆಗಳ, ಇರವು-ಬದುಕು
ಮೂಲ ...{Loading}...
ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದುಭೂ
ಪಾವಳಿಯ ಸುಕ್ಷೇಮಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು ॥19॥
೦೨೦ ಯಮತನುಜನಧಿಕನು ಹಿಡಿಮ್ಬಾ ...{Loading}...
ಯಮತನುಜನಧಿಕನು ಹಿಡಿಂಬಾ
ರಮಣನತಿ ಬಲ್ಲಿದನು ಪಾರ್ಥನ
ವಿಮಳ ವಿಗ್ರಹ ಲೇಸು ಸಕಲ ಮಹೀಶಪರಿವೃತರು
ಯಮಳರಿರವತಿ ಚೆಲುವು ನೇಹದ
ರಮಣಿಯಾಕೆಯ ಸುತರು ಮಹದು
ದ್ಯಮರು ಕೇಳ್ ಎಂದಸುರರಿಪು ಕುಂತಿಗೆ ನಿಯಾಮಿಸಿದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮರಾಜನು ಹೆಚ್ಚಿನವನಾಗಿದ್ದಾನೆ. ಹಿಂಡಿಂಬೆಯ ಗಂಡನಾದ ಭೀಮಸೇನ ಬಲಿಷ್ಠನು. ಅರ್ಜುನನ ಲಕ್ಷಣವಾದ ಶರೀರವು ಉತ್ತಮವಾಗಿದೆ. ಎಲ್ಲ ದೊರೆಗಳೂ ಅವರನ್ನು ಸೇರಿದ್ದಾರೆ. ನಕುಲ ಸಹದೇವರು ಬಹಳ ಸೊಗಸಿನಿಂದಿದ್ದಾರೆ. ಪ್ರೀತಿಯ ದ್ರೌಪದಿ ಮತ್ತು ಆಕೆಯ ಮಕ್ಕಳು ಮಹತ್ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಕೃಷ್ಣನು ಕುಂತಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ರಮಣ-ಗಂಡ, ವಿಗ್ರಹ-ಶರೀರ, ಪರಿವೃತರು-ಸುತ್ತುವರಿದವರು, ಸೀಹದ-ಪ್ರೀತಿಯ, ಉದ್ಯಮ-ಕೆಲಸ
ಮೂಲ ...{Loading}...
ಯಮತನುಜನಧಿಕನು ಹಿಡಿಂಬಾ
ರಮಣನತಿ ಬಲ್ಲಿದನು ಪಾರ್ಥನ
ವಿಮಳ ವಿಗ್ರಹ ಲೇಸು ಸಕಲ ಮಹೀಶಪರಿವೃತರು
ಯಮಳರಿರವತಿ ಚೆಲುವು ನೇಹದ
ರಮಣಿಯಾಕೆಯ ಸುತರು ಮಹದು
ದ್ಯಮರು ಕೇಳೆಂದಸುರರಿಪು ಕುಂತಿಗೆ ನಿಯಾಮಿಸಿದ ॥20॥
೦೨೧ ನರನ ಮಗನಭಿಮನ್ಯು ...{Loading}...
ನರನ ಮಗನಭಿಮನ್ಯು ಕುಶಲನು
ವರ ಸುಭದ್ರಾದೇವಿ ಮೊದಲಾ
ಗಿರಲು ಬಾಂಧವರೆಲ್ಲ ಜೀವಂತರು ನಿಧಾನಿಸಲು
ಪರಮ ಮಿತ್ರರು ತಮ್ಮೊಳೊಂದಾ
ದರು ದ್ರುಪದನಕ್ಷೋಣಿಸೇನೆಯ
ನೆರವು ಬಂದುದು ರಾಜಕಾರ್ಯದ ಬಳಕೆ ಲೇಸೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮಗ ಅಭಿಮನ್ಯು ಕ್ಷೇಮದಿಂದಿರುವನು. ಸುಭದ್ರಾ ದೇವಿ ಮೊದಲಾದ ಬಾಂಧವರೆಲ್ಲರೂ ಆರೋಗ್ಯದಿಂದಿದ್ದಾರೆ. ಸ್ನೇಹಿತರೆಲ್ಲರೂ ಒಂದಾಗಿ ಕೂಡಿದ್ದಾರೆ. ದ್ರುಪದರಾಜನ ಅಕ್ಷೋಹಿಣಿ ಸೇನೆಯ ಬೆಂಬಲವು ಬಂದಿರುವುದು ರಾಜ ಕಾರ್ಯದ ಉಪಯೋಗಕ್ಕೆ ಒಳ್ಳೆಯದು ಎಂದು ಕೃಷ್ಣನು ಕುಂತಿಗೆ ತಿಳಿಸಿದನು.
ಪದಾರ್ಥ (ಕ.ಗ.ಪ)
ಬಳಕೆ-ರೂಢಿ/ಉಪಯೋಗ, ನೆರವು-ಬೆಂಬಲ.
ಮೂಲ ...{Loading}...
ನರನ ಮಗನಭಿಮನ್ಯು ಕುಶಲನು
ವರ ಸುಭದ್ರಾದೇವಿ ಮೊದಲಾ
ಗಿರಲು ಬಾಂಧವರೆಲ್ಲ ಜೀವಂತರು ನಿಧಾನಿಸಲು
ಪರಮ ಮಿತ್ರರು ತಮ್ಮೊಳೊಂದಾ
ದರು ದ್ರುಪದನಕ್ಷೋಣಿಸೇನೆಯ
ನೆರವು ಬಂದುದು ರಾಜಕಾರ್ಯದ ಬಳಕೆ ಲೇಸೆಂದ ॥21॥
೦೨೨ ಅದಿತಿ ಮಕ್ಕಳ ...{Loading}...
ಅದಿತಿ ಮಕ್ಕಳ ಹಡೆದುದೇ ಲೋ
ಕದಲಿ ಫಲ ಕೌಸಲೆ ಕುಮಾರರ
ಪದೆದು ಹಡೆದುದೆ ಸಫಲ ವಿನತೆಗೆ ಮಕ್ಕಳಾಯ್ತು ಫಲ
ಮುದದಿ ನೀನೇ ಮಕ್ಕಳನು ಪಡೆ
ದದುವೆ ಫಲ ಕೇಳ್ ಎಂದು ಪರಿತೋ
ಷದಲಿ ಕುಂತಿಯ ಹೊಗಳಿದನು ಮುರವೈರಿಯುಚಿತದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಿತಿಯು ಮಕ್ಕಳನ್ನು ಪಡೆದುದು ಲೋಕದಲ್ಲಿ ಫಲ. ಕೌಸಲ್ಯೆಯು ಮಕ್ಕಳನ್ನು ಬಯಸಿ ಹೆತ್ತದ್ದು ಸಾರ್ಥಕವು. ವಿನತೆಗೆ ಮಕ್ಕಳಾದುದು ಫಲ. ಆನಂದದಿಂದ ನೀನು ಮಕ್ಕಳನ್ನು ಪಡೆದುದೂ ಕೂಡ ಸಾರ್ಥಕವು ಕೇಳು. ಎಂದು ಅತ್ಯಂತ ಸಂತೋಷದಿಂದ ಕೃಷ್ಣನು ಸಂದರ್ಭಾನುಸಾರ ಕುಂತಿಯನ್ನು ಹೊಗಳಿದನು.
ಟಿಪ್ಪನೀ (ಕ.ಗ.ಪ)
“1) ಅದಿತಿ : ಪ್ರಚೇತನ ಪುತ್ರ ದಕ್ಷನ ಮಗಳು, ಈಕೆಯ ಮಕ್ಕಳು ದೇವತೆಗಳು, ಆದ್ದರಿಂದ ಅವರು ಆದಿತ್ಯರು.
2) ಕೌಸಲ್ಯೆ : ದಶರಥನ ಪತ್ನಿ. ಶ್ರೀರಾಮಚಂದ್ರನ ತಾಯಿ
3) ವಿನತೆ (ವಿನತಾ) : ದಕ್ಷನ ಪುತ್ರಿ. ಕಶ್ಯಪನಿಂದ ಈಕೆ ಗರುಡ, ಅರುಣರನ್ನು ಪುತ್ರರನ್ನಾಗಿ ಪಡೆದಳು.ಲೋಕಮಾತೆಯಾದ ಅದಿತಿಯು ಪ್ರಜಾಪತಿ ದಕ್ಷ ಮತ್ತು ಧರಣಿಯವರ ಮಗಳು. ಕಶ್ಯಪನ ಹೆಂಡತಿ. ಇವಳಿಗೆ ದಿತಿ, ಕಾಳ ದನಾಯು, ದನು, ಸಿಂಹಿಕ, ಕ್ರೋಧ, ಪೃಥು, ವಿನತಾ, ಕಪಿಲಾ, ಕದ್ರು ಮೊದಲಾದ ಸೋದರಿಯರೂ ಇದ್ದರು. ದೇವತೆಗಳೆಲ್ಲ ಈಕೆಯ ಸಂತಾನವಾದ್ದರಿಂದ ಅವರನ್ನು ಆದಿತೇಯರೆಂದೂ ಕರೆಯುತ್ತಾರೆ.
ಅದಿತಿಗೆ ಒಟ್ಟು 33 ಮಕ್ಕಳು. ಅವರಲ್ಲಿ ಹನ್ನೆರಡು ಜನರನ್ನು ಅಂದರೆ ಧಾತಾ, ಅರ್ಯಮಾ, ಮಿತ್ರ, ಸಕ್ರ, ವರುಣ, ಅಂಸ, ಭಗ, ವಿವಸ್ವನ್, ಪೂಸ, ಸವಿತಾ, ತೃಷ್ಟ ಮತ್ತು ವಿಷ್ಣು ಇವರುಗಳನ್ನು ದ್ವಾದಶಾದಿತ್ಯರು ಎನ್ನುತ್ತಾರೆ. ಮಹಾವಿಷ್ಣು ಮತ್ತು ವಾಮನರನ್ನು ಹಡೆದ ಕೀರ್ತಿಯೂ ಇವಳದೇ ಆಗಿದೆ. ಬಲಿಚಕ್ರವರ್ತಿಯ ಉಪಟಳ ಹೆಚ್ಚಾದಾಗ ಇವಳು ಅವನ ಸಚಿಹಾರಕ್ಕೆ ತನ್ನ ಹೊಟ್ಟೆಯನ್ನು ವಾಮನನು ಅವತಾರ ಎತ್ತಬೇಕು ಎಂದು ವಿಷ್ಣುವನ್ನು ಪ್ರಾರ್ಥಿಸಿ ಒಪ್ಪಿಗೆ ಪಡೆಯುತ್ತಾಳೆ.
ಮಹಾಭಾರತದ ಉದ್ಯೋಗಪರ್ವದಲ್ಲಿ ಇನ್ನೊಂದು ಸಂಗತಿಯಿದೆ. ನರಕಾಸುರನು ದೇವಲೋಕದ ಮೇಲೆ ಅಕ್ರಮಣ ಮಾಡಿ ದೇವಲೋಕದಲ್ಲಿ ಹಾಹಾಕಾರವೆಬ್ಬಿಸಿದನಷ್ಟೆ. ದಿಗ್ವಿಜಯ ಸಂದರ್ಭದಲ್ಲಿ ಅವನು ಕಶ್ಯಪನ ಆಶ್ರಮಕ್ಕೂ ನುಗ್ಗಿದ. ಕಶ್ಯಪ ಅಲ್ಲಿರಲಿಲ್ಲ. ಸಿಟ್ಟಿನಿಂದ ಇಂದ್ರನ ಛತ್ರಿಯನ್ನು ತಂದಿದ್ದ. ನರಕಾಸುರನು ಅದಿತಿಯ ಕುಂಡಲಗಳನ್ನೂ ಹೊತ್ತುಕೊಂಡು ಹೋದ. ಮುಂದೆ ಶ್ರೀಕೃಷ್ಣನು ನರಕಾಸುರನನ್ನು ಕೊಂದಾಗ ಅವನ ಬಳಿ ಇದ್ದ ಅದಿತಿಯ ಆಭರಣಗಳನ್ನು ಆಕೆಗೆ ಮರಳಿಸಿದನಂತೆ.
ಮಹಾಭಾರತದ ಶಾಚಿತಿಪರ್ವದಲ್ಲಿ ಬುದ್ಧ-ಅದಿತಿಯರಿಗೆ ಸಂಬಂಧಿಸಿದ ಕಥೆಯೊಂದಿದೆ. ಒಮ್ಮೆ ಅದಿತಿಯು ರಾಕ್ಷಸರನ್ನೆಲ್ಲ ಕೊಂದು ಬನ್ನಿರಿ ಎಂದು ಮಕ್ಕಳನ್ನೆಲ್ಲ ಕಳಿಸಿದ್ದಳಂತೆ. ಅನಂತರ ಅಡಿಗೆ ಮಾಡಿ ಅವರಿಗಾಗಿ ಕಾದಿದ್ದಳಂತೆ. ಆಗ ಬುದ್ಧ ಬಂದು ಆಹಾರವನ್ನು ಕೊಡುವಂತೆ ಕೇಳಿದನಂತೆ. ಮಕ್ಕಳಿಗೆ ಮೊದಲು ಎಂಬ ತತ್ವ ತಾಯಿಯದು. ಇದರಿಂದ ಬುದ್ದ ಸಿಟ್ಟು ಮಾಡಿಕೊಂಡು ಶಾಪಕೊಟ್ಟನಂತೆ. ಶಾಪದ ಪರಿಣಾಮವಾಗಿ ಅದಿತಿಗೆ ತುಂಬ ಹೊಟ್ಟೆನೋವು ಕಾಣಿಸಿಕೊಂಡಿತು. ವಿವಸ್ವತನು ಎರಡನೆಯ ಬಾರಿ ಅವಳ ಗರ್ಭದಲ್ಲಿ ಸೇರಿ ಮೊಟ್ಟೆಯೊಡೆದು ಸತ್ತನಂತೆ. ಅದಕ್ಕೇ ವಿವಸ್ವತ್ ಶ್ರಾದ್ಧದೇವನು ಮಾರ್ತಾಂಡ [=ಮೃತವಾದ ಅಂಡ (ಮೊಟ್ಟೆ ಉಳ್ಳವನು)] ಎಂಬ ಹೆಸರು ಪಡೆದನಂತೆ!
ಅದಿತಿ ಮತ್ತು ಅವಳ ಸವತಿಯರ ಸಂಸಾರ, ಸಂತಾನ ಎರಡೂ ದೊಡ್ಡವು. ದಿತಿ, ದನು, ಅದಿತಿ ಎಲ್ಲರೂ ಕಶ್ಯಪನ ಹೆಂಡತಿಯರೇ. ಆದರೆ ಅದಿತಿಯ ಮಕ್ಕಳೆಲ್ಲ ದೇವತೆಗಳಾದರೆ ದಿತಿ, ದನು ಇವನ ಮಕ್ಕಳೆಲ್ಲ ದೈತ್ಯರಾದದ್ದು ಕುಟುಂಬದ ವಿಪರ್ಯಾಸಗಳಲ್ಲಿ ಒಂದು. ‘ಒಂದೆ ತೊಟ್ಟು-ಎರಡು ಹುಟ್ಟು’ ಎಂದು ಪು.ತಿ.ನ. ಅವರು ಹೇಳುವ ಮಾತು ಕಶ್ಯಪನ ಸಂಸಾರಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಅಲ್ಲದೆ ನಮ್ಮ ಅಂತರಂಗದಲ್ಲೇ ರಾಕ್ಷಸ-ದೈವ ಶಾಖೆಗಳೆರಡೂ ಇವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.”
ಮೂಲ ...{Loading}...
ಅದಿತಿ ಮಕ್ಕಳ ಹಡೆದುದೇ ಲೋ
ಕದಲಿ ಫಲ ಕೌಸಲೆ ಕುಮಾರರ
ಪದೆದು ಹಡೆದುದೆ ಸಫಲ ವಿನತೆಗೆ ಮಕ್ಕಳಾಯ್ತು ಫಲ
ಮುದದಿ ನೀನೇ ಮಕ್ಕಳನು ಪಡೆ
ದದುವೆ ಫಲ ಕೇಳೆಂದು ಪರಿತೋ
ಷದಲಿ ಕುಂತಿಯ ಹೊಗಳಿದನು ಮುರವೈರಿಯುಚಿತದಲಿ ॥22॥
೦೨೩ ಲೋಕ ಮೆಚ್ಚಲು ...{Loading}...
ಲೋಕ ಮೆಚ್ಚಲು ನಿನ್ನ ಸುತರು ದೃ
ಢೈಕಸತ್ಯರು ನುಡಿದ ಕಾಲವ
ನೂಕಿದರು ರಾಜ್ಯಾಭಿಲಾಷೆಗೆ ನೆರಹಿದರು ಬಲವ
ಆ ಕುಮಾರರಿಗರ್ಧ ರಾಜ್ಯವ
ನೀ ಕುಠಾರರಲೀಸಿಕೊಡುವ ವಿ
ವೇಕದಲಿ ತಾ ಬಂದೆನೆಂದನು ಕುಂತಿಗಸುರಾರಿ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕ ಮೆಚ್ಚುವಂತೆ ನಿನ್ನ ಮಕ್ಕಳು ಸ್ಥೈರ್ಯದಿಂದ ಸತ್ಯವನ್ನು ನುಡಿದಂತೆ ಕಾಲವನ್ನು ಕಳೆದರು. ಮರಳಿ ರಾಜ್ಯದ ಬಯಕೆಯಿಂದ ಸೈನ್ಯವನ್ನು ಸೇರಿಸಿದರು. ಅವರಿಗೆ (ನಿನ್ನ ಮಕ್ಕಳಿಗೆ) ಅರ್ಧ ರಾಜ್ಯವನ್ನು ಈ ನೀಚರಿಂದ ತೆಗೆದು ಕೊಡಿಸಬೇಕೆಂಬ ವಿವೇಕದಿಂದ ನಾನು ಇಲ್ಲಿಗೆ ಬಂದೆನು ಎಂದು ಕೃಷ್ಣನು ಕುಂತಿಗೆ ತಿಳಿಸಿದನು.
ಪದಾರ್ಥ (ಕ.ಗ.ಪ)
ದೃಢತೆ-ಸ್ಥೈರ್ಯ. ಅಭಿಲಾಷೆ-ಅಪೇಕ್ಷೆ/ಬಯಕೆ.
ಮೂಲ ...{Loading}...
ಲೋಕ ಮೆಚ್ಚಲು ನಿನ್ನ ಸುತರು ದೃ
ಢೈಕಸತ್ಯರು ನುಡಿದ ಕಾಲವ
ನೂಕಿದರು ರಾಜ್ಯಾಭಿಲಾಷೆಗೆ ನೆರಹಿದರು ಬಲವ
ಆ ಕುಮಾರರಿಗರ್ಧ ರಾಜ್ಯವ
ನೀ ಕುಠಾರರಲೀಸಿಕೊಡುವ ವಿ
ವೇಕದಲಿ ತಾ ಬಂದೆನೆಂದನು ಕುಂತಿಗಸುರಾರಿ ॥23॥
೦೨೪ ಪರಮಪರಿತೋಷದಲಿ ಕೃಷ್ಣನ ...{Loading}...
ಪರಮಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ಯಂತ ಆನಂದದಿಂದ ಕೃಷ್ಣನ ಅಮೃತಮಯವಾದ ಮಾತುಗಳನ್ನು ಕೇಳುತ್ತ ಕುಂತಿಯು ಕಣ್ಣೀರಿನಲ್ಲಿ ನೆನೆದಳು. ಕೃಷ್ಣನು ಕುಂತಿಗೆ ಎಲ್ಲವನ್ನು ಹೇಳಿ, ವಿದುರನನ್ನು ಕರೆದು ಕೌರವನ ಅರಮನೆಗೆ ಹೋಗಿ ಅವನ ಸಮಯವನ್ನು ತಿಳಿದು ತನಗೆ ಹೇಳು ಎಂದನು.
ಪದಾರ್ಥ (ಕ.ಗ.ಪ)
ಪಂಕರುಹ-ಕಮಲ,
ನಯನವಾರಿ-ಕಣ್ಣೀರು,
ಸುಧಾಮಯ-ಅಮೃತಮಯ
ಮೂಲ ...{Loading}...
ಪರಮಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ ॥24॥
೦೨೫ ಹೋಗು ನೀನಾತಙ್ಗೆ ...{Loading}...
ಹೋಗು ನೀನಾತಂಗೆ ಪಾಂಡವ
ರಾಗಸಮುದಯ ಬಂದನೆಂಬುದ
ನೀಗಳರುಹುವುದಾತ ಮಾಡಿದ ಗುಣದ ಬೆಳವಿಗೆಯ
ತಾಗು ಬಾಗಿನ ಹವಣನಾತನ
ಲಾಗ ನೋಡುವೆವೆನಲು ಕುರುಕುಲ
ಸಾಗರಾಗ್ನಿಯ ಮನೆಗೆ ಬಂದನು ವಿದುರ ಹರಿ ಬೆಸಸೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಹೋಗು ಅವನಿಗೆ ಪಾಂಡವರಲ್ಲಿ ಪ್ರೀತಿಯನ್ನುಳ್ಳವನಾದ ಕೃಷ್ಣನು ಬಂದನೆಂಬುದನ್ನು ಈಗಲೆ ತಿಳಿಸುವುದು. ಅವನು ಮಾಡಿದ ಗುಣಗಳ ಬೆಳವಣಿಗೆಗಳ ಎದುರಿಸುವಿಕೆಯನ್ನು, ಬಗ್ಗ ಬೇಕಾದ ರೀತಿಯನ್ನು ಅವನನ್ನು ಕಂಡಾಗ ತಿಳಿಯುವೆ’ ಎನ್ನಲು ಕುರುಕುಲವೆಂಬ ಸಾಗರಕ್ಕೆ ಬೆಂಕಿಯಂತಿರುವ ದುರ್ಯೋಧನನ ಮನೆಗೆ ಕೃಷ್ಣನು ಹೇಳಿದಂತೆ ವಿದುರನು ಬಂದನು.
ಪದಾರ್ಥ (ಕ.ಗ.ಪ)
ರಾಗಸಮುದಯ-ಪ್ರೀತಿಪಾತ್ರನು, ಸಾಗರಾಗ್ನಿ ಕಡಲಬೆಂಕಿ
ಮೂಲ ...{Loading}...
ಹೋಗು ನೀನಾತಂಗೆ ಪಾಂಡವ
ರಾಗಸಮುದಯ ಬಂದನೆಂಬುದ
ನೀಗಳರುಹುವುದಾತ ಮಾಡಿದ ಗುಣದ ಬೆಳವಿಗೆಯ
ತಾಗು ಬಾಗಿನ ಹವಣನಾತನ
ಲಾಗ ನೋಡುವೆವೆನಲು ಕುರುಕುಲ
ಸಾಗರಾಗ್ನಿಯ ಮನೆಗೆ ಬಂದನು ವಿದುರ ಹರಿ ಬೆಸಸೆ ॥25॥
೦೨೬ ಓಲಗದೊಳಿರ್ದಖಿಳ ಮೂರ್ಖರ ...{Loading}...
ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಬಂದು ಸಭೆಯೊಳಗಿನ ಸಮಸ್ತ ಮೂರ್ಖರ ಶಿರಸ್ಸಿನಂತಿರುವ ದುರ್ಯೋಧನನನ್ನು ಕಂಡು, ‘ರಾಜನೇ ಕೇಳು ಕೃಷ್ಣನು ದಯಮಾಡಲು ಸಮಯವುಂಟೇ ಹೇಳು’ ಎನ್ನಲು, ‘ನಾಳೆ ಕಾಣಿಸಿಕೊಳ್ಳುವೆನು. ಇನ್ನೇನು ? ದೂತನ ಆಗಮನವು ಶತ್ರುಗಳನ್ನು ಕಾಪಾಡುವ ಭಾರದಲ್ಲಿದ್ದು, ಸಂಧಿಯ ಕಾರ್ಯಕ್ಕೆ ಬರದೇ ಇರಲಾರನು’, ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ಪುಳಿ-ತಲೆ, ಅವಧರಿಸು-ಕೇಳು, ಆಳಿಕಾರ-ದೂತ
ಮೂಲ ...{Loading}...
ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ ॥26॥
೦೨೭ ನೋಡಿರೈ ಪಾಣ್ಡವರು ...{Loading}...
ನೋಡಿರೈ ಪಾಂಡವರು ಪಾತಕ
ರಾಡಿದಾಟವನಾಡಿದೊಡೆ ಯೀ
ನಾಡೊಳಗಹುದು ಸಲುವುದವನಿಯೊಳಧಿಕ ಲೇಸೆನಿಸಿ
ರೂಢಿಯೊಳಗಾಚಾರವಡಗಿತು
ಜೋಡೆಯಲಿ ಜನಿಸಿದರನೀ ಬೀ
ಡಾಡಿ ಕೂಡಿದನೆಂದು ಹೊಯಿದನು ರವಿಸುತನ ಕರವ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೋಡಿರಿ ! ಪಾಂಡವರು ಪಾಪಿಗಳು ಅವರು ಯಾವುದೇ ರೀತಿಯಲ್ಲಿ ಆಡಿದರೂ ಈ ನಾಡಿನಲ್ಲಿ ಅದು ಹೆಚ್ಚಾಗಿ ಒಳ್ಳೆಯದೆನಿಸಿಕೊಳ್ಳುತ್ತದೆ. ರೂಢಿಯಲ್ಲಿ ಒಳ್ಳೆಯ ನಡತೆಯು ಮರೆಯಾಯಿತು. ಹಾದರಗಿತ್ತಿಗೆ ಹುಟ್ಟಿದವರನ್ನು ಈ ನೆಲೆಯಿಲ್ಲದೇ ತಿರುಗಾಡುವವನು ಕೂಡಿದನು’ ಎಂದು ಹೇಳುತ್ತಾ ದುರ್ಯೋಧನನು ಕರ್ಣನ ಕೈಯನ್ನು ತಟ್ಟಿದನು.
ಪದಾರ್ಥ (ಕ.ಗ.ಪ)
ಜೋಡೆಯಲಿ-ಹಾದರಗಿತ್ತಿಯಲಿ, ಬೀಡಾಡಿ-ನೆಲೆಯಿಲ್ಲದವನು, ಆಚಾರ-ಒಳ್ಳೆಯನಡತೆ, ಅಡಗು-ಮರೆಯಾಗು.
ಮೂಲ ...{Loading}...
ನೋಡಿರೈ ಪಾಂಡವರು ಪಾತಕ
ರಾಡಿದಾಟವನಾಡಿದೊಡೆ ಯೀ
ನಾಡೊಳಗಹುದು ಸಲುವುದವನಿಯೊಳಧಿಕ ಲೇಸೆನಿಸಿ
ರೂಢಿಯೊಳಗಾಚಾರವಡಗಿತು
ಜೋಡೆಯಲಿ ಜನಿಸಿದರನೀ ಬೀ
ಡಾಡಿ ಕೂಡಿದನೆಂದು ಹೊಯಿದನು ರವಿಸುತನ ಕರವ ॥27॥
೦೨೮ ನಾಳೆ ಬರಹೇಳೆನ್ದು ...{Loading}...
ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾಳೆ ಬರಲು ಹೇಳು’ ಎಂದು ವಿದುರನನ್ನು ಬೀಳ್ಕೊಟ್ಟನು. ವೀರರಾದ ಸೈನಿಕರಿಗೆ ವೀಳೆಯವನ್ನು ನೀಡಿ ಕಳುಹಿಸಿಕೊಟ್ಟನು. ರಾಜನ ಸಭೆ ಅಂತ್ಯವಾಯಿತು. ಕತ್ತಲೆಯು ಕಳೆಯಿತು; ಪೂರ್ವದ ಬೆಟ್ಟದ ಮೇಲೆ ಸೂರ್ಯನು ಉದಯಿಸಿದನು. ಕೌರವ ರಾಜ ಅಂದಿನ ಸಭೆಯನ್ನು ಸಿದ್ಧಗೊಳಿಸಿದನು.
ಪದಾರ್ಥ (ಕ.ಗ.ಪ)
ಬೇಹಭಟರು-ವೀರ ಭಟರು, ಜಾಳಿಸು-ಕಳೆ, ಒಡ್ಡೋಲಗ-ಸಭೆ.
ಮೂಲ ...{Loading}...
ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು ॥28॥
೦೨೯ ಕರೆಸಿದನು ಮಣಿಮಕುಟ ...{Loading}...
ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿತ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರತ್ನದ ಕಿರೀಟದ ಹೊಳಪಿನ ಬಲಶಾಲಿಗಳನ್ನು ಕರೆಸಿದನು. ಪರಾಕ್ರಮಿಗಳನ್ನು ಬರಮಾಡಿಕೊಂಡನು. ಗೌರವದ ಮಹಾಮಂಡಲಿಕರನ್ನು, ಮುಖಂಡರನ್ನು ಯುದ್ಧದಲ್ಲಿ ವಿಜಯ ಸಾರ್ಥಕರನ್ನೂ ಬರಿಸಿದನು, ಎಲ್ಲಾ ಸಾಮಂತರನ್ನೂ ರಾಜರುಗಳನ್ನೂ ಸೇರಿಸಿ ಬಂಗಾರದ ಸಿಂಹಾಸನಗಳಲ್ಲಿ ಆಸೀನರನ್ನಾಗಿಸಿದನು.
ಪದಾರ್ಥ (ಕ.ಗ.ಪ)
ಮುಕುಟ-ಕಿರೀಟ, ತೂಕದ-ಗೌರವದ, ಧುರ-ಯುದ್ಧ/ಕಾಳಗ, ಗಾಢಪ್ರತಾಪ-ಪರಮಪರಾಕ್ರಮ, ಚಾಮೀಕರ-ಬಂಗಾರ.
ಮೂಲ ...{Loading}...
ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿತ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ ॥29॥
೦೩೦ ಬಲದ ಗದ್ದುಗೆಗಳಲಿ ...{Loading}...
ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯಮಗ ನೃಪ
ತಿಲಕ ದುಶ್ಶಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲದ ಸಿಂಹಾಸನಗಳಲ್ಲಿ ವೀರಶ್ರೇಷ್ಠ ಕರ್ಣ, ಭೀಷ್ಮ, ರಾಜತಿಲಕ ದುರ್ಯೋಧನ, ದುಶ್ಯಾಸನ, ಕೃಪ, ದ್ರೋಣ, ಮೊದಲಾದ ನಾಯಕರು ಹೊಳೆಯುವ ರತ್ನಗಳ ಸಾಲಾದ ಕಿರೀಟದ ಸೌಂದರ್ಯದ ಸಂಭ್ರಮದಲ್ಲಿ ರತ್ನ ಖಚಿತವಾದ ಒಡವೆಗಳ ಅಲಂಕಾರದಿಂದ ಶೋಭಿಸಿದರು.
ಪದಾರ್ಥ (ಕ.ಗ.ಪ)
ಸೌರಂಭ-ಸಂಭ್ರಮ/ಸಡಗರ, ವಿಳಾಸ-ಬೆಡಗು, ಗದ್ದುಗೆ-ಸಿಂಹಾಸನ, ಗಜಗಲಿಸು-ಶೋಭಿಸು/ಹೊಳೆ
ಮೂಲ ...{Loading}...
ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯಮಗ ನೃಪ
ತಿಲಕ ದುಶ್ಶಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ ॥30॥
೦೩೧ ಸತಿಸಹಿತ ಧೃತರಾಷ್ಟ್ರ ...{Loading}...
ಸತಿಸಹಿತ ಧೃತರಾಷ್ಟ್ರ ಭೂಪತಿ
ಸುತನ ಬಲವಂಕದಲಿ ಕನಕೋ
ಚಿತದ ಪೀಠದಲೆಸೆದನಾತನ ಬಲದ ಭಾಗದಲಿ
ಚತುರಚತುರಾನನರು ತರ್ಕ
ಶ್ರುತಿ ಸಮಸ್ತ ಕಳಾಸ್ವತಂತ್ರರು
ನುತಗುಣರು ನೃಪಸಭೆಯೊಳೆಸೆದರು ಭೂರಿ ಸಂದೋಹ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಧಾರಿ ಸಹಿತ ಧೃತರಾಷ್ಟ್ರನು ದುರ್ಯೋಧನನ ಬಲಭಾಗದಲ್ಲಿ ಬಂಗಾರದ ಪೀಠದಲ್ಲಿ ಕುಳಿತಿದ್ದನು. ಅವನ ಬಲಭಾಗದಲ್ಲಿ ಬುದ್ಧಿವಂತರು, ತರ್ಕ, ಶ್ರುತಿ, ಸಮಸ್ತಕಲಾ ಪ್ರವೀಣರು ಸ್ತುತಿ ಮಾಡುವ ಗುಣವಂತರ ದೊಡ್ಡ ಗುಂಪು ರಾಜ ಸಭೆಯಲ್ಲಿ ಶೋಭಿಸಿದರು.
ಪದಾರ್ಥ (ಕ.ಗ.ಪ)
ಚತುರ-ಬುದ್ಧಿವಂತ, ಚತುರಾನನರು-ಬುದ್ಧಿಬ್ರಹ್ಮರು (ಪಂಡಿತರು)
ಮೂಲ ...{Loading}...
ಸತಿಸಹಿತ ಧೃತರಾಷ್ಟ್ರ ಭೂಪತಿ
ಸುತನ ಬಲವಂಕದಲಿ ಕನಕೋ
ಚಿತದ ಪೀಠದಲೆಸೆದನಾತನ ಬಲದ ಭಾಗದಲಿ
ಚತುರಚತುರಾನನರು ತರ್ಕ
ಶ್ರುತಿ ಸಮಸ್ತ ಕಳಾಸ್ವತಂತ್ರರು
ನುತಗುಣರು ನೃಪಸಭೆಯೊಳೆಸೆದರು ಭೂರಿ ಸಂದೋಹ ॥31॥
೦೩೨ ಮದವದತಿಬಲ ಶಕುನಿ ...{Loading}...
ಮದವದತಿಬಲ ಶಕುನಿ ಸೈಂಧವ
ನದಟ ನೃಪ ಕಾಂಭೋಜ ರಥ ಸಂ
ಪದನು ಭೂರಿಶ್ರವ ಸುಲೋಚನ ವೀರ ವೃಷಸೇನ
ಕದನ ಕಾಲಾನಳರು ವರಹೇ
ಮದ ಮಕುಟ ರಚನೆಗಳಲೆಡವಂ
ಕದಲಿ ಕುಳ್ಳಿರ್ದರು ಮಹಾಯಾಸ್ಥಾನ ರಚನೆಯಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿ ಸೊಕ್ಕಿನವನೂ, ಶೂರನೂ ಆದ ಶಕುನಿ, ಶೂರ ಸೈಂಧವ (ಜಯದ್ರಥ) ವೀರ ರಾಜ ಕಾಂಭೋಜ, ರಥೈಶ್ವರ್ಯನಾದ ಭೂರಿಶ್ರವ, ಸುಲೋಚನ, ವೀರವೃಷಸೇನ (ಕರ್ಣನ ಮಗ) ಮೊದಲಾದ ಕದನ ಪ್ರಳಯಾಗ್ನಿಗಳು ಮಹಾಸ್ಥಾನದ ಸಭೆಯೊಳಗೆ ಚಿನ್ನದ ಕಿರೀಟದ ಅಲಂಕಾರಗಳಿಂದ ಎಡಭಾಗದಲ್ಲಿ ಕುಳಿತಿದ್ದರು.
ಪದಾರ್ಥ (ಕ.ಗ.ಪ)
ಅದಟ-ಶೂರ, ಕಾಲಾನಲ-ಪ್ರಳಯದ ಬೆಂಕಿ.
ಮೂಲ ...{Loading}...
ಮದವದತಿಬಲ ಶಕುನಿ ಸೈಂಧವ
ನದಟ ನೃಪ ಕಾಂಭೋಜ ರಥ ಸಂ
ಪದನು ಭೂರಿಶ್ರವ ಸುಲೋಚನ ವೀರ ವೃಷಸೇನ
ಕದನ ಕಾಲಾನಳರು ವರಹೇ
ಮದ ಮಕುಟ ರಚನೆಗಳಲೆಡವಂ
ಕದಲಿ ಕುಳ್ಳಿರ್ದರು ಮಹಾಯಾಸ್ಥಾನ ರಚನೆಯಲಿ ॥32॥
೦೩೩ ತರುಣ ಶೃಙ್ಗಾರದ ...{Loading}...
ತರುಣ ಶೃಂಗಾರದ ಮಹಾ ಬಂ
ಧುರದ ನೂರ್ವರು ಕೌರವೇಂದ್ರನ
ವರ ಕುಮಾರರು ಮುಂದೆ ಮೆರೆದರು ಲಕ್ಷಣಾದಿಗಳು
ವರ ಕಿರೀಟದ ಕಾಲ ತೊಡರಿನ
ಕೊರಳಪದಕದ ಕೈಯ ಸುರಗಿಯ
ಲರಸನನುಜರು ನೂರ್ವರೆಡವಂಕದಲಿ ರಂಜಿಸಿತು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಕ್ಷಣನೇ ಮೊದಲಾದ ನೂರು ಜನ ದುರ್ಯೋಧನನ ಮಕ್ಕಳು ಎಳೆಯರು ಬಹಳ ಚೆಲುವಿನಿಂದ ಮುಂದೆ ಅಲಂಕರಿಸಿದ್ದರು; ಕಾಲಿನ ಕಡಗದ, ಕೊರಳ ಹಾರದ ಕೈಗಳಲ್ಲಿ ಕತ್ತಿಯನ್ನು ಧರಿಸಿದ ದುರ್ಯೋಧನನ ನೂರು ಜನ ತಮ್ಮಂದಿರು ಎಡ ಪಕ್ಕದಲ್ಲಿ ಪ್ರಕಾಶಿಸುತ್ತಿದ್ದರು.
ಮೂಲ ...{Loading}...
ತರುಣ ಶೃಂಗಾರದ ಮಹಾ ಬಂ
ಧುರದ ನೂರ್ವರು ಕೌರವೇಂದ್ರನ
ವರ ಕುಮಾರರು ಮುಂದೆ ಮೆರೆದರು ಲಕ್ಷಣಾದಿಗಳು
ವರ ಕಿರೀಟದ ಕಾಲ ತೊಡರಿನ
ಕೊರಳಪದಕದ ಕೈಯ ಸುರಗಿಯ
ಲರಸನನುಜರು ನೂರ್ವರೆಡವಂಕದಲಿ ರಂಜಿಸಿತು ॥33॥
೦೩೪ ಮಿಸುಪ ತಮ್ಮ ...{Loading}...
ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ತಮ್ಮ ಮುಖ ಚಂದ್ರನನ್ನು ಸಹಿಸಲಾಗದ ಚಂದ್ರನನ್ನು ಆಕಾಶಕ್ಕೆ ಅಟ್ಟಿ ಬೇರುಗಳನ್ನು ಮಾತ್ರವೇ ಹಿಡಿದರೋ ಹೇಳೆನ್ನುವಂತೆ ಸಭೆಯಲ್ಲಿ ಎರಡೂ ಕಡೆಗಳಲ್ಲಿ ಚಂದ್ರಮುಖಿಯರ ಕೈಯ ಚಾಮರಗಳು ಶೋಭಿಸಿದವು. ದುರ್ಯೋಧನನ ಆಸ್ಥಾನವು ಈ ರೀತಿ ವೈಭವದಿಂದ ಸುಂದರವಾಗಿತ್ತು.
ಪದಾರ್ಥ (ಕ.ಗ.ಪ)
ಮಿಸುಪ-ಹೊಳೆಯುವ, ಇಂದು-ಚಂದ್ರ, ಸೀಗುರಿ-ಚಾಮರ, ಚೆಲುವು-ಸುಂದರ.
ಮೂಲ ...{Loading}...
ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು ॥34॥
೦೩೫ ಕಲಹವಿಲ್ಲದೆ ನೂಲಿನೆಳೆಯಲಿ ...{Loading}...
ಕಲಹವಿಲ್ಲದೆ ನೂಲಿನೆಳೆಯಲಿ
ತಲೆಯನರಿವ ವಿರೋಧಿ ರಾಯರ
ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ
ಒಲಿದರೊಳಲಂಚದಲಿ ಛಿದ್ರಿಸಿ
ಕೊಲುವ ಮುನಿದೊಡೆ ಮಂತ್ರ ಶಕ್ತಿಯೊ
ಳಳುಕಿಸುವ ಮಂತ್ರಿಗಳು ಮೆರೆದರು ವಾಮ ಭಾಗದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗಳವಿಲ್ಲದೆ ನೂಲಿನೆಳೆಯಿಂದ ತಲೆಯನ್ನು ಕತ್ತರಿಸುವ, ವಿರೋಧಿ ರಾಜರನ್ನು ಭಯಪಡಿಸುವ, ಸಾಮೋಪಾಯದಿಂದಲೇ ಸಮಸ್ತರಾಜರನ್ನು ತಡೆಯುವ, ಒಲಿದರೆ ಒಳಗೊಳಗೆ ಲಂಚವನ್ನು ಕೊಟ್ಟು ಚೂರುಚೂರಾಗಿ ಕೊಲ್ಲುವ, ತಿರುಗುಬಿದ್ದರೆ ಮಂತ್ರಶಕ್ತಿಯಿಂದ ಭಯಪಡಿಸುವ ಮಂತ್ರಿಗಳು ಎಡಭಾಗದಲ್ಲಿ ಎದ್ದು ಕಾಣುತ್ತಿದ್ದರು.
ಪದಾರ್ಥ (ಕ.ಗ.ಪ)
ಅರಿವ-ಕತ್ತರಿಸುವ, ನಿಖಿಳ-ಎಲ್ಲ, ಛಿದ್ರಿಸು-ಚೂರುಮಾಡು
ಮೂಲ ...{Loading}...
ಕಲಹವಿಲ್ಲದೆ ನೂಲಿನೆಳೆಯಲಿ
ತಲೆಯನರಿವ ವಿರೋಧಿ ರಾಯರ
ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ
ಒಲಿದರೊಳಲಂಚದಲಿ ಛಿದ್ರಿಸಿ
ಕೊಲುವ ಮುನಿದೊಡೆ ಮಂತ್ರ ಶಕ್ತಿಯೊ
ಳಳುಕಿಸುವ ಮಂತ್ರಿಗಳು ಮೆರೆದರು ವಾಮ ಭಾಗದಲಿ ॥35॥
೦೩೬ ನಿಗಮ ತರ್ಕ ...{Loading}...
ನಿಗಮ ತರ್ಕ ಪುರಾಣ ಕಾವ್ಯಾ
ದಿಗಳ ವಿಸಟಂಬರಿಗಳೊತ್ತೊ
ತ್ತುಗಳೊಳಿಟ್ಟೆಡೆಯಾಗಿ ಹಿಗ್ಗಿದ ಜಠರದಗ್ರಿಯರು
ಬಗೆಯುಪನ್ಯಾಸದ ಸುಶಾಖಾ
ಳಿಗಳ ಬೀಳಲು ಬೆಳೆದ ಗಡ್ಡದ
ವಿಗಡ ಭೂಯೋಪಾಧ್ಯರಿದ್ದುದು ರಾಜಸಭೆಯೊಳಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದ, ತರ್ಕ, ಪುರಾಣ, ಕಾವ್ಯ ಮೊದಲಾದವುಗಳಲ್ಲಿ ಮೇರೆ ಮೀರಿ ಪಾರಾಂಗತರಾಗಿ ದೊಡ್ಡ ಹೊಟ್ಟೆಗಳನ್ನು ಬಿಟ್ಟುಕೊಂಡವರಾಗಿರುವರು, ತಿಳಿಯಲು ವಿವಿಧ ಉಪನ್ಯಾಸಗಳನ್ನು ಮಾಡುವ ತರತರದ ಜ್ಞಾನದ ಶಾಖೆಗಳ ಬಿಳಿಲುಗಳಂತೆ ಗಡ್ಡವನ್ನು ಬೆಳೆಸಿಕೊಂಡ ಪ್ರಚಂಡರಾದ ಮಹೋಪಾದ್ಯರು ರಾಜಸಭೆಯೊಳಗಿದ್ದರು.
ಪದಾರ್ಥ (ಕ.ಗ.ಪ)
ವಿಸಟಂಬರಿ-ಹರಡು, ಅಗ್ರಿ-ಮುಂದಿನ
ಮೂಲ ...{Loading}...
ನಿಗಮ ತರ್ಕ ಪುರಾಣ ಕಾವ್ಯಾ
ದಿಗಳ ವಿಸಟಂಬರಿಗಳೊತ್ತೊ
ತ್ತುಗಳೊಳಿಟ್ಟೆಡೆಯಾಗಿ ಹಿಗ್ಗಿದ ಜಠರದಗ್ರಿಯರು
ಬಗೆಯುಪನ್ಯಾಸದ ಸುಶಾಖಾ
ಳಿಗಳ ಬೀಳಲು ಬೆಳೆದ ಗಡ್ಡದ
ವಿಗಡ ಭೂಯೋಪಾಧ್ಯರಿದ್ದುದು ರಾಜಸಭೆಯೊಳಗೆ ॥36॥
೦೩೭ ಸಲೆ ಸಮಸ್ಯದನನ್ತ ...{Loading}...
ಸಲೆ ಸಮಸ್ಯದನಂತ ಪದ್ಯವ
ಘಳಿಲನನ್ವೆ ೈಸುವ ಸುಕಾಂತಿಯ
ಲಲಿತ ಮಧುರ ಸಮಾಧಿ ಸುಕುಮಾರಾದಿ ರಚನೆಯಲಿ
ಹಲವುಪಮೆ ಉತ್ಪ್ರೇಕ್ಷ ರೂಪಕ
ಸುಲಲಿತಾಲಂಕೃತಿ ಚಮತ್ಕೃತಿ
ಗಳ ಚತುರ್ಭಾಷಾ ವಿಶಾರದ ಕವಿಗಳೊಪ್ಪಿದರು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತಮವಾದ ಅನಂತ ಸಮಸ್ಯೆಗಳನ್ನುಳ್ಳ ಪದ್ಯವನ್ನು ಕೂಡಲೆ ಬಿಡಿಸುವ ಬೆಡಗಿನ, ಲಲಿತ, ಮಧುರ, ಸಮಾಧಿ, ಸುಕುಮಾರ ಮುಂತಾದವುಗಳ ರಚನೆಗಳಲ್ಲಿ ಉಪಮಾ, ಉತ್ಪ್ರೇಕ್ಷೆ, ರೂಪಕ, ಮೊದಲಾದ ಮನೋಹರವಾದ ಅಲಂಕಾರ, ಚಮತ್ಕಾರಗಳನ್ನು ತೋರುವ ನಾಲ್ಕು ಭಾಷೆಗಳ ಪಂಡಿತ ವಿಶಾರದರಾದ ಕವಿಗಳು ಪ್ರಕಾಶಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಘಳಿಲನೆ - ಕೂಡಲೆ, ಅನ್ವಯಿಸುವ - ಅನ್ವಯ ಮಾಡುವ ,ಬಿಡಿಸುವ, ಒಪ್ಪು - ಪ್ರಕಾಶಿಸು.
ಮೂಲ ...{Loading}...
ಸಲೆ ಸಮಸ್ಯದನಂತ ಪದ್ಯವ
ಘಳಿಲನನ್ವೈಸುವ ಸುಕಾಂತಿಯ
ಲಲಿತ ಮಧುರ ಸಮಾಧಿ ಸುಕುಮಾರಾದಿ ರಚನೆಯಲಿ
ಹಲವುಪಮೆ ಉತ್ಪ್ರೇಕ್ಷ ರೂಪಕ
ಸುಲಲಿತಾಲಂಕೃತಿ ಚಮತ್ಕೃತಿ
ಗಳ ಚತುರ್ಭಾಷಾ ವಿಶಾರದ ಕವಿಗಳೊಪ್ಪಿದರು ॥37॥
೦೩೮ ನುಡಿದು ತಲೆದೂಗಿಸುವ ...{Loading}...
ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾಹಾಯೆನಿಸಿ ಮೆಚ್ಚನು
ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾತನ್ನಾಡಿ ತಲೆದೂಗಿಸುವ, ಹಳೆಗನ್ನಡಕ್ಕೆ ಹಾಹಾ ಎನಿಸುವುದಲ್ಲದೇ ಮೆಚ್ಚುಗೆ ಪಡೆಯುವ ವಾಗ್ಮಿಗಳು, ವಾಚನ ಮಾಡಿ ಹೊಗಳಿಸಿಕೊಳ್ಳುವ ಗಮಕಿಗಳು, ಕೊಡುವ ಪದ್ಯಕ್ಕೆ ಸಂದರ್ಭಗಳಿಗೆ ಬ್ರಹ್ಮ ಮೊದಲಾದ ದೇವತೆಗಳೂ ಅರ್ಥವನ್ನು ಬಿಡಿಸಲಾಗದು ಎನ್ನುವಂತಹ ಅತಿಶಯವಾದ ವಾದಿಗಳು ಅಲಂಕರಿಸಿದ್ದರು.
ಪದಾರ್ಥ (ಕ.ಗ.ಪ)
ಗಡಣಕೆ-ಗುಂಪಿಗೆ, ಅಬುಜಭವ-ಬ್ರಹ್ಮ, ವಿಭುಗಳು-ದೇವರು
ಟಿಪ್ಪನೀ (ಕ.ಗ.ಪ)
ಹಳೆಯ ಕಾವ್ಯಗಳ ಗಮಕವಾಚನ ವ್ಯಾಖ್ಯಾನಗಳು ಆಗಲೇ ಜನಪ್ರಿಯವಾಗಿತ್ತವೆಂಬುದಕ್ಕೆ ಈ ಪದ್ಯ ಸಾಕ್ಷಿ. ಆದುದರಿಂದ ಕವಿಗಳು ಷಟ್ಪದಿ ಪ್ರಕಾರಕ್ಕೆ ಹೆಚ್ಚಿನ ಹೆಚ್ಚಿನ ಒಲವು ತೋರುತ್ತಿದ್ದರು ಎನಿಸುತ್ತದೆ.
ಮೂಲ ...{Loading}...
ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾಹಾಯೆನಿಸಿ ಮೆಚ್ಚನು
ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು ॥38॥
೦೩೯ ನುತ ಶುಭೋದಯ ...{Loading}...
ನುತ ಶುಭೋದಯ ಜೀಯ ಶತ್ರು
ಪ್ರತತಿ ಸಂಹಾರಕ ಸಮಸ್ತ
ಕ್ಷಿತಿಪತಿ ಬ್ರಹ್ಮಾಯುರಸ್ತು ವೆನುತ್ತ ಕೈನೆಗಹಿ
ನುತಗುಣನ ಬಿರುದಾವಳಿಯ ಸಂ
ಗತಿಯನಭಿವರ್ಣಿಸುವ ಸಮಯೋ
ಚಿತದ ಮನ್ನಣೆವಡೆದು ಮೆರೆದುದು ಭಟ್ಟಸಂದೋಹ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಭು ! ಶುಭವಾಗಲಿ, ಶತ್ರುಗಳ ಸಮೂಹವನ್ನು ಸಂಹಾರ ಮಾಡುವನೇ ಸಮಗ್ರ ಭೂಮಂಡಲದ ಒಡೆಯನಾಗು. ಬ್ರಹ್ಮನಂತೆ ದೀರ್ಘಾಯುಷಿಯಾಗು ಎನ್ನುತ್ತ ಕೈಗಳನ್ನೆತ್ತಿ, ಕೊಂಡಾಡತಕ್ಕಂತ ಗುಣ ಪೂರ್ಣವಾದ ಬಿರುದಾವಳಿಯ ವಿಚಾರಗಳನ್ನು ಉತ್ತಮವಾಗಿ ವರ್ಣಿಸುತ್ತ, ಸಮಯೋಚಿತವಾದ ಗೌರವವನ್ನು ಪಡೆದು ಕೊಂಡಾಡುವ ಪುರೋಹಿತರ ಸಮೂಹವು ಶೋಭಿಸಿತು.
ಪದಾರ್ಥ (ಕ.ಗ.ಪ)
ನುತ-ಕೊಂಡಾಡು, ಪ್ರತತಿ -ಸಮೂಹ, ಸಂದೋಹ-ಸಮೂಹ
ಮೂಲ ...{Loading}...
ನುತ ಶುಭೋದಯ ಜೀಯ ಶತ್ರು
ಪ್ರತತಿ ಸಂಹಾರಕ ಸಮಸ್ತ
ಕ್ಷಿತಿಪತಿ ಬ್ರಹ್ಮಾಯುರಸ್ತು ವೆನುತ್ತ ಕೈನೆಗಹಿ
ನುತಗುಣನ ಬಿರುದಾವಳಿಯ ಸಂ
ಗತಿಯನಭಿವರ್ಣಿಸುವ ಸಮಯೋ
ಚಿತದ ಮನ್ನಣೆವಡೆದು ಮೆರೆದುದು ಭಟ್ಟಸಂದೋಹ ॥39॥
೦೪೦ ಬರೆದ ಬಳಿಕದು ...{Loading}...
ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆ ಬರೆದ ನಂತರ ಅದು ಬ್ರಹ್ಮನ ಬರಹದಂತೆ, ತನ್ನ ಕಾರ್ಯದ ಗುರಿಯ ಗಳಿಕೆ ದೊರೆತರೆ ಒಡೆಯನ ಉದ್ದೇಶವು ನೀರಿನಲ್ಲಿ ಬರೆದ ಲಿಪಿಯಂತೆ, ಮುಚ್ಚಿದ ಕೈಯ ಆಸೆ ಬುರುಕರು, ಲಂಚದಲ್ಲಿಯೇ ಬದುಕುವ ಬುದ್ಧಿವಂತರು ಶ್ರೀಮಂತ ಕರಣಿಕರು ಅರಸನ ಸಭೆಯೊಳಗಿದ್ದರು.
ಪದಾರ್ಥ (ಕ.ಗ.ಪ)
ವಿಧಿ-ಬ್ರಹ್ಮ, ಅರ್ಥ-ಉದ್ದೇಶ, ಲೋಲುಪ-ಆಸೆಬುರುಕ, ಕರಣಿಕ-ಗುಮಾಸ್ತ ಅಥವಾ ಶ್ಯಾನುಭೋಗ.
ಮೂಲ ...{Loading}...
ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ ॥40॥
೦೪೧ ನಳನ ನಹುಷನ ...{Loading}...
ನಳನ ನಹುಷನ ಶಾಲಿಹೋತ್ರನ
ಬಲುಮೆಗಳು ಕಿರಿದೆಂಬ ವಿದ್ಯಾ
ನಿಳಯ ವರ ರೇವಂತನೇರಾಟವನು ನಸುನಗುತ
ಬಲಿದ ದೃಢ ವಾಘೆಗಳು ದೃಷ್ಟಾ
ವಳಿಯ ಹಯಪ್ರೌಢ ಪ್ರತಾಪರು
ಹೊಳೆವ ಮಕುಟದ ಸಾಲುಗಳಲೊಪ್ಪಿದರು ರಾವುತರು ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವವಿದ್ಯೆಯಲ್ಲಿ ನಳನ, ನಹುಷನ, ಶಾಲಿಹೋತ್ರನ ಕೆಚ್ಚು ಅಲ್ಪವೆಂಬಂತೆ ವಿದ್ಯಾಪ್ರವೀಣರು ರೇವಂತನ ಯುದ್ಧವನ್ನು ಉಪೇಕ್ಷಿಸಿ ನಗುತ ಬಿರುಸಾದ ಕಡಿವಾಣಗಳನ್ನು ನೋಡುವುದರಲ್ಲಿಯೇ ಹಿಡಿಯುವ ಪ್ರಬುದ್ಧವಾದ ಶೂರರೂ ಆಗಿರುವ ರಾವುತರು (ಕುದುರೆಯಸವಾರರು) ಹೊಳೆಯುವ ಕಿರೀಟಗಳನ್ನು ಧರಿಸಿ ಸಾಲಿನಲ್ಲಿ ಶೋಭಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಬಲುಮೆ-ಕೆಚ್ಚು, ಬಲ್ಲು-ಬಿರುಸಿನ, ಪ್ರೌಢ-ಪ್ರಬುದ್ಧ, ವಾಘೆ-ಕಡಿವಾಣ
ಮೂಲ ...{Loading}...
ನಳನ ನಹುಷನ ಶಾಲಿಹೋತ್ರನ
ಬಲುಮೆಗಳು ಕಿರಿದೆಂಬ ವಿದ್ಯಾ
ನಿಳಯ ವರ ರೇವಂತನೇರಾಟವನು ನಸುನಗುತ
ಬಲಿದ ದೃಢ ವಾಘೆಗಳು ದೃಷ್ಟಾ
ವಳಿಯ ಹಯಪ್ರೌಢ ಪ್ರತಾಪರು
ಹೊಳೆವ ಮಕುಟದ ಸಾಲುಗಳಲೊಪ್ಪಿದರು ರಾವುತರು ॥41॥
೦೪೨ ಅತಿಮದದಿ ತನು ...{Loading}...
ಅತಿಮದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರು ಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಳ ಮದದಿಂದ ಸೊಕ್ಕಿದ ಐರಾವತವನ್ನು ಕಿವಿಹಿಡಿದು ಎಳೆಯುವ, ದಿಗ್ಗಜಗಳ ಹಿಂಡನ್ನು ಅಂಕುಶದಲ್ಲಿ ಹೆದರಿಸಿ ಅಕ್ಕಪಕ್ಕದಲ್ಲಿ ಬಿಡುವ, ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಮಾವುತರು ಕುರರಾಜನ ಸಮೀಪದಲ್ಲಿ ಇದ್ದರು. ಕೌರವನ ಸಭೆಯು ಅಮರಾವತಿಯ ದೇವೇಂದ್ರನ ಸಭೆಯಂತೆ ಪ್ರಕಾಶಿಸುತ್ತಿತ್ತು.
ಪದಾರ್ಥ (ಕ.ಗ.ಪ)
ತತಿ-ಸಮೂಹ, ಹೊರೆ-ಸಮೀಪ
ಮೂಲ ...{Loading}...
ಅತಿಮದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರು ಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ ॥42॥
೦೪೩ ನಡೆದು ಪರಮಣ್ಡಲದ ...{Loading}...
ನಡೆದು ಪರಮಂಡಲದ ರಾಯರ
ಜಡಿದು ಕಪ್ಪವ ತಪ್ಪ ಶಿಷ್ಟರ
ಗಡಣವೆಸೆದುದು ಪವನ ವೇಗದ ರಾಯಭಾರಿಗಳು
ಕಡುಗಿದರೆ ಕಾಲಂಗೆ ಬಿರುದಿನ
ತೊಡರನಿಕ್ಕುವ ಜವನ ದಾಡೆಯ
ತುಡುಕುವಗ್ಗದ ವೀರರೆಸೆದುದು ದಿಟ್ಟಿವಾರೆಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರದೇಶದ ರಾಜರಲ್ಲಿಗೆ ಹೋಗಿ ರಾಜgನ್ನು ಬೆದರಿಸಿ ಕಪ್ಪಕಾಣಿಕೆಗಳನ್ನು ತರುವ ಶಿಷ್ಟರ ಸಮೂಹವು ಅಲ್ಲಿತ್ತು. ವಾಯುವೇಗದ ರಾಯಭಾರಿಗಳು ಉತ್ಸಾಹದಿಂದ ಕಾಲನಿಗೆ ಬಿರುದಿನ ಕಡಗವನ್ನು ಕಟ್ಟುವ, ಯಮನ ಕೋರೆಹಲ್ಲುಗಳನ್ನು ಹಿಡಿಯುವ ಶ್ರೇಷ್ಠ ವೀರರು ದೃಷ್ಟಿಹರಿಸಿದೆಡೆಯಲ್ಲಿ ಸಾಲಾಗಿ ಕುಳಿತಿದ್ದರು.
ಪದಾರ್ಥ (ಕ.ಗ.ಪ)
ಪವನ-ಗಾಳಿ/ವಾಯು, ಕಡಗು-ಕೆರಳು, ದಿಟ್ಟಿವಾರೆ-ಕಡೆಗಣ್ಣು
ಮೂಲ ...{Loading}...
ನಡೆದು ಪರಮಂಡಲದ ರಾಯರ
ಜಡಿದು ಕಪ್ಪವ ತಪ್ಪ ಶಿಷ್ಟರ
ಗಡಣವೆಸೆದುದು ಪವನ ವೇಗದ ರಾಯಭಾರಿಗಳು
ಕಡುಗಿದರೆ ಕಾಲಂಗೆ ಬಿರುದಿನ
ತೊಡರನಿಕ್ಕುವ ಜವನ ದಾಡೆಯ
ತುಡುಕುವಗ್ಗದ ವೀರರೆಸೆದುದು ದಿಟ್ಟಿವಾರೆಯಲಿ ॥43॥
೦೪೪ ಎಳೆಯ ಮಿಞ್ಚಿನ ...{Loading}...
ಎಳೆಯ ಮಿಂಚಿನ ಕುಡಿಯ ಸೂಸುವ
ನಳಿನದೃಶೆಯರು ಶಶಿಯ ಬಿಂಬವ
ಹಳಿವ ಹುರುಡಿಸುವಬುಜಮುಖಿಯರು ಕೋಮಲಾಂಗಿಯರು
ಸೆಳೆನಡುವಿನಗ್ಗಳೆಯರೊಪ್ಪುವ
ಕಳಶಕುಚೆಯರು ಜಘನ ಚಳ
ದಳಕಿಯರು ಕುರುರಾಯನೆಡವಂಕದಲಿ ಮೋಹಿದರು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಯ ಮಿಂಚಿನ ಕುಡಿಯನ್ನು ಹರಡುವ ತಾವರೆಗಣ್ಣಿನವರು, ಚಂದ್ರ ಬಿಂಬವನ್ನು ನಿಂದಿಸುವಂತೆ ಸ್ಪರ್ಧಿಸುವ ಕಮಲಮುಖಿಯರು, ಕೋಮಲಾಂಗಿಯರು ಎಳೆಯ ನಡುವಿನ ಸ್ತ್ರೀಯರು, ಕಳಸದಂತೆ ಕುಚಗಳನ್ನುಳ್ಳವರು, ಮುಂಗುರುಳಿನ ಹೆಂಗಳೆಯರು ಕೌರವ ರಾಜನ ಎಡಗಡೆಯಲ್ಲಿ ವ್ಯಾಪಿಸಿಕೊಂಡಿದ್ದರು.
ಪದಾರ್ಥ (ಕ.ಗ.ಪ)
ದೃಶೆ-ಕಣ್ಣು, ಅಳಕ-ಮುಂಗುರುಳು, ಮೋಹು-ನೆರೆ
ಮೂಲ ...{Loading}...
ಎಳೆಯ ಮಿಂಚಿನ ಕುಡಿಯ ಸೂಸುವ
ನಳಿನದೃಶೆಯರು ಶಶಿಯ ಬಿಂಬವ
ಹಳಿವ ಹುರುಡಿಸುವಬುಜಮುಖಿಯರು ಕೋಮಲಾಂಗಿಯರು
ಸೆಳೆನಡುವಿನಗ್ಗಳೆಯರೊಪ್ಪುವ
ಕಳಶಕುಚೆಯರು ಜಘನ ಚಳ
ದಳಕಿಯರು ಕುರುರಾಯನೆಡವಂಕದಲಿ ಮೋಹಿದರು ॥44॥
೦೪೫ ಮುರಿದು ನೋಡಿದರಖಿಳ ...{Loading}...
ಮುರಿದು ನೋಡಿದರಖಿಳ ರಾಯರು
ಶಿರವ ಬಾಗಲು ಲಾಳ ಮಾಳವ
ತುರುಕ ಕೊಂಕಣ ಗೌಳ ಗೂರ್ಜರ ವಂಗ ಹಮ್ಮೀರ
ವರತ್ರಿಗರ್ತರು ನೆರೆದು ಜೀಯೆನು
ತಿರಲು ಕೋಮಲಿಕೆಯರು ಸಿತ ಚಾ
ಮರವ ಚಿಮ್ಮಲು ಭೂಪ ಮೆರೆದನು ಸಿಂಹಪೀಠದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗಿ ನೋಡಿದರೆ ಸಮಸ್ತ ರಾಜರೂ ತಲೆ ಬಗ್ಗಿಸಲು ಲಾಳ, ಮಾಳವ, ತುರುಕ, ಕೊಂಕಣ, ಗೌಳ, ಗೂರ್ಜರ, ವಂಗ, ಹಮ್ಮೀರ, ತ್ರಿಗರ್ತದೇಶದವರು ಸೇರಿ ಪ್ರಭು ! ಒಡೆಯ ಎನ್ನುತ್ತಿರಲು, ಕೋಮಲೆಯರು ಬಿಳಿಯ ಚಾಮರವನ್ನು ಬೀಸುತ್ತಿರಲು ದುರ್ಯೋಧನನು ಸಿಂಹಾಸನದಲ್ಲಿ ಶೋಭಿಸಿದನು.
ಮೂಲ ...{Loading}...
ಮುರಿದು ನೋಡಿದರಖಿಳ ರಾಯರು
ಶಿರವ ಬಾಗಲು ಲಾಳ ಮಾಳವ
ತುರುಕ ಕೊಂಕಣ ಗೌಳ ಗೂರ್ಜರ ವಂಗ ಹಮ್ಮೀರ
ವರತ್ರಿಗರ್ತರು ನೆರೆದು ಜೀಯೆನು
ತಿರಲು ಕೋಮಲಿಕೆಯರು ಸಿತ ಚಾ
ಮರವ ಚಿಮ್ಮಲು ಭೂಪ ಮೆರೆದನು ಸಿಂಹಪೀಠದಲಿ ॥45॥
೦೪೬ ಆವ ದೇಸಿಯಿದಾವ ...{Loading}...
ಆವ ದೇಸಿಯಿದಾವ ವಿಸ್ತರ
ವಾವ ದೇಶದ ಸಿರಿಯ ಸಡಗರ
ವಾವ ಪರಿಯ ವಿಳಾಸವಾವ ವಿಡಾಯಿ ತಾನೆನಲು
ಹಾವು ಹಳವಿಗೆಯಾದ ರಾಯನು
ರಾವಣಾರಿಯ ಕಾಣಿಕೆಗೆ ಬಲು
ಠೀವಿಯನು ತೋರಿದನು ಸಾರುವ ಭಟ್ಟರೋಳಿಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಯಾವ ದೇಸಿ ? ಇದು ಎಷ್ಟು ವಿಸ್ತಾರವಾಗಿದೆ? ಈ ಸಂಪತ್ತು, ಈ ಸಡಗರ, ಸಂಭ್ರಮಗಳು ಮತ್ತಾವ ದೇಶದಲ್ಲಿದೆ ? ಈ ಆಡಂಬರ, ವೈಭವಗಳು ತನ್ನದು ಮಾತ್ರ ಎಂಬಂತೆ, ರಾವಣನನ್ನು ಸಂಹರಿಸಿದ ವಿಷ್ಣು ಸ್ವರೂಪಿಯಾದ ಶ್ರೀಕೃಷ್ಣನನ್ನು ಕಾಣಲು ಸರ್ಪವನ್ನು ಧ್ವಜವನ್ನಾಗಿಟ್ಟುಕೊಂಡ ದುರ್ಯೋಧನನು ಹೊಗಳುವ ಭಟ್ಟರ ಸಮೂಹದಲ್ಲಿ ಠೀವಿಯನ್ನು ತೋರುತ್ತಿದ್ದನು.
ಪದಾರ್ಥ (ಕ.ಗ.ಪ)
ವಿಡಾಯಿ-ಆಡಂಬರ, ಹಳವಿಗೆ-ಬಾವುಟ, ಓಳಿ-ಗುಂಪು, ಠೀವಿ-ಗತ್ತು, ದೇಸಿ-ಬೆಡಗು.
ಮೂಲ ...{Loading}...
ಆವ ದೇಸಿಯಿದಾವ ವಿಸ್ತರ
ವಾವ ದೇಶದ ಸಿರಿಯ ಸಡಗರ
ವಾವ ಪರಿಯ ವಿಳಾಸವಾವ ವಿಡಾಯಿ ತಾನೆನಲು
ಹಾವು ಹಳವಿಗೆಯಾದ ರಾಯನು
ರಾವಣಾರಿಯ ಕಾಣಿಕೆಗೆ ಬಲು
ಠೀವಿಯನು ತೋರಿದನು ಸಾರುವ ಭಟ್ಟರೋಳಿಯಲಿ ॥46॥
೦೪೭ ಬರಲಿ ಕರೆ ...{Loading}...
ಬರಲಿ ಕರೆ ಕೈತವದ ಶಿಕ್ಷಾ
ಗುರುವನೆನುತವನೀಶ ದೂತರ
ಹರಿಯ ಬಿಟ್ಟನು ಹರಿಯ ನಿಳಯಕೆ ಹರಿಯ ವೇಗದಲಿ
ಚರರು ಹರಿತಂದಸುರ ರಿಪುವಿನ
ಚರಣದಲಿ ಮೈಯಿಕ್ಕಿ ನೊಸಲಲಿ
ಕರಪುಟಾಂಜಲಿ ಮೆರೆವುತಿರೆ ಬಿನ್ನಹವ ಮಾಡಿದರು ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೋಸದ ಶಿಕ್ಷಣವನ್ನು ನೀಡುವ ಗುರುವಾದ ಶ್ರೀಕೃಷ್ಣನು ಬರಲಿ, ಕರೆ’ ಎನ್ನುತ್ತ. ದುರ್ಯೋಧನನು ಕೃಷ್ಣನ ಮನೆಗೆ ವಾಯುವೇಗದಲ್ಲಿ ದೂತರನ್ನು ಕಳಿಸಿದನು. ಸೇವಕರು ವೇಗದಲ್ಲಿ ಬಂದು ಕೃಷ್ಣನ ಪಾದಗಳಲ್ಲಿ ಮೈ ಚಾಚಿ ಹಣೆಯ ಮೇಲೆ ಮುಗಿದ ಕೈಗಳನ್ನಿಟ್ಟು ವಿಜ್ಞಾಪಿಸಿದರು.
ಟಿಪ್ಪನೀ (ಕ.ಗ.ಪ)
ವಿಶೇಷ : ಕವಿಯು ‘ಹರಿ’ ಪದವನ್ನು ವಾಯುವೇಗ, ಕಳುಹಿಸು ಪದಗಳಿಗೆ ಚಮತ್ಕಾರಕವಾಗಿ ಉಪಯೋಗಿಸಿದ್ದಾನೆ.
ಮೂಲ ...{Loading}...
ಬರಲಿ ಕರೆ ಕೈತವದ ಶಿಕ್ಷಾ
ಗುರುವನೆನುತವನೀಶ ದೂತರ
ಹರಿಯ ಬಿಟ್ಟನು ಹರಿಯ ನಿಳಯಕೆ ಹರಿಯ ವೇಗದಲಿ
ಚರರು ಹರಿತಂದಸುರ ರಿಪುವಿನ
ಚರಣದಲಿ ಮೈಯಿಕ್ಕಿ ನೊಸಲಲಿ
ಕರಪುಟಾಂಜಲಿ ಮೆರೆವುತಿರೆ ಬಿನ್ನಹವ ಮಾಡಿದರು ॥47॥
೦೪೮ ದೇವ ದೇವರ ...{Loading}...
ದೇವ ದೇವರ ಸಮಯವೆನೆ ರಾ
ಜೀವನಾಭನು ಮುಗುಳುನಗೆಯಲಿ
ಭಾವನವರಟ್ಟಿದರೆ ಹರ ಹರ ಬಹೆವು ನಡೆಯೆನುತ
ರಾವಣನ ಪರಿ ನೆಲೆಸಿತಿವನಲಿ
ಸಾವಿಗಂಜುವನಲ್ಲ ಖಳನು ನ
ಯಾವಿಳನು ನಮ್ಮುಕುತಿ ಕೊಳ್ಳದು ವಿದುರ ಕೇಳ್ ಎಂದ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವ ! ದುರ್ಯೋಧನನ ದೇವನ ಭೇಟಿಯ ಸಮಯವಾಗಿದೆ, ಎಂದು ಹೇಳಲು, ಕೃಷ್ಣನು ಮುಗುಳು ನಗುತ್ತ, ಶಿವಶಿವಾ ಭಾವನವರು ಅಟ್ಟಿದರೆ (ಕಳಿಸಿದರೆ) ? ಬರುತ್ತೇವೆ ನಡೆಯಿರಿ ಎನ್ನುತ್ತ. ವಿದುರ ಕೇಳು !’ ರಾವಣ ರೀತಿಯೆ ಇವನದಾಗಿದೆ. ಸಾವಿಗೆ ಭಯ ಪಡುವವನಲ್ಲ, ದುಷ್ಟ, ವಿನಯವಿಲ್ಲದವನು. ನಮ್ಮ ಮಾತು ಇವನಲ್ಲಿ ನಡೆಯದು’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ನಯಾವಿಳ-ಕುತಂತ್ರಿ
ಮೂಲ ...{Loading}...
ದೇವ ದೇವರ ಸಮಯವೆನೆ ರಾ
ಜೀವನಾಭನು ಮುಗುಳುನಗೆಯಲಿ
ಭಾವನವರಟ್ಟಿದರೆ ಹರ ಹರ ಬಹೆವು ನಡೆಯೆನುತ
ರಾವಣನ ಪರಿ ನೆಲೆಸಿತಿವನಲಿ
ಸಾವಿಗಂಜುವನಲ್ಲ ಖಳನು ನ
ಯಾವಿಳನು ನಮ್ಮುಕುತಿ ಕೊಳ್ಳದು ವಿದುರ ಕೇಳೆಂದ ॥48॥
೦೪೯ ಎನುತ ಮಞ್ಚವನಿಳಿದು ...{Loading}...
ಎನುತ ಮಂಚವನಿಳಿದು ವರ ಕಾಂ
ಚನ ವರೂಥಕೆ ಕೈಗೊಡುವ ಯದು
ಜನಪರುಗ್ಗಡಣೆಯಲಿ ಬಿಜಯಂಗೈದನಸುರಾರಿ
ಮುನಿನಿಕರ ಸಂದಣಿಸಿತಭ್ರದೊ
ಳನಿಮಿಷಾವಳಿ ನೆರೆದುದಿಭಪುರ
ಜನವೊಡನೆ ನಡೆತರಲು ಹರಿ ಬರುತಿರ್ದನೋಲಗಕೆ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತ, ಕೃಷ್ಣನು ಮಂಚವನ್ನಿಳಿದನು. ಯಾದವರ ಜಯ ಘೋಷಣೆಯ ನಡುವೆ, ಶ್ರೇಷ್ಠವಾದ ಚಿನ್ನದ ರಥಕ್ಕೆ ಯಾದವರ ಕೈಯಾಸರೆಯಿಂದ ಹತ್ತಿ ಹೊರಟನು. ಮುನಿಗಳ ಗುಂಪು ಸೇರಿತು. ಆಕಾಶದಲ್ಲಿ ದೇವತೆಗಳ ಗುಂಪು ಸೇರಿತು. ಹಸ್ತಿನಾಪುರದ ಜನರೂ ರಥದೊಡನೆ ಬರುತ್ತಿರಲು ಕೃಷ್ಣನು ಸಭಾಸ್ಥಾನಕ್ಕೆ ಬರುತ್ತಿದ್ದನು.
ಪದಾರ್ಥ (ಕ.ಗ.ಪ)
ವರೂಥ-ರಥ, ಅಭ್ರ-ಆಕಾಶ, ಕಾಂಚನ-ಚಿನ್ನ, ಇಭಪುರ-ಹಸ್ತಿನಾವತಿ, ಸಂದಣಿಸು-ನೆರೆ/ಸೇರು
ಮೂಲ ...{Loading}...
ಎನುತ ಮಂಚವನಿಳಿದು ವರ ಕಾಂ
ಚನ ವರೂಥಕೆ ಕೈಗೊಡುವ ಯದು
ಜನಪರುಗ್ಗಡಣೆಯಲಿ ಬಿಜಯಂಗೈದನಸುರಾರಿ
ಮುನಿನಿಕರ ಸಂದಣಿಸಿತಭ್ರದೊ
ಳನಿಮಿಷಾವಳಿ ನೆರೆದುದಿಭಪುರ
ಜನವೊಡನೆ ನಡೆತರಲು ಹರಿ ಬರುತಿರ್ದನೋಲಗಕೆ ॥49॥
೦೫೦ ಕಲಿಮಲದಿ ಹೊಲೆಗಲಸಿದಿಭಪುರಿ ...{Loading}...
ಕಲಿಮಲದಿ ಹೊಲೆಗಲಸಿದಿಭಪುರಿ
ಯೊಳಗೆ ನಿರ್ಮಳವಾಯ್ತು ಕೃಷ್ಣನ
ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ
ಲಲನೆಯರು ತಮತಮ್ಮ ನಯನಂ
ಗಳಿಗೆ ದೇವನ ತೆಗೆದು ಸನುಮತ
ಪುಳಕರಾದರು ಕೇಳು ಜನಮೇಜಯ ಮಹೀಪಾಲ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಪುರುಷನ ಪಾಪದಿಂದ ಅಪವಿತ್ರವಾದ ಹಸ್ತಿನಾಪುರವು ನಿರ್ಮಲವಾಯಿತು. ಕೃಷ್ಣನ ಸುಂದರ ದರ್ಶನದಿಂದ ಹುಟ್ಟಿನಿಂದ ಹುಟ್ಟು ಸಾವುಗಳ ಭಯದ ಬೀಜಗಳೇ ಸುಟ್ಟು ಹೋದವು. ಹೆಂಗೆಳೆಯರು ತಮ್ಮ ತಮ್ಮ ಕಣ್ಣುಗಳಲ್ಲಿ ದೇವನನ್ನು ತುಂಬಿಕೊಂಡು ಒಳ್ಳೆಯ ಭಾವದಿಂದ ರೋಮಾಂಚನಗೊಂಡರು, ಜನಮೇಜಯ ಮಹಾರಾಜ ಕೇಳು ! ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಭವ-ಹುಟ್ಟು, ಸನುಮತಿ-ಒಳ್ಳೆಯ
ಮೂಲ ...{Loading}...
ಕಲಿಮಲದಿ ಹೊಲೆಗಲಸಿದಿಭಪುರಿ
ಯೊಳಗೆ ನಿರ್ಮಳವಾಯ್ತು ಕೃಷ್ಣನ
ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ
ಲಲನೆಯರು ತಮತಮ್ಮ ನಯನಂ
ಗಳಿಗೆ ದೇವನ ತೆಗೆದು ಸನುಮತ
ಪುಳಕರಾದರು ಕೇಳು ಜನಮೇಜಯ ಮಹೀಪಾಲ ॥50॥
೦೫೧ ಕಞ್ಜಸಮ್ಭವ ಪಿತನು ...{Loading}...
ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲದಲ್ಲಿ ಸಂಭವಿಸಿದ ಬ್ರಹ್ಮನ ತಂದೆಯಾದ ವಿಷ್ಣುವು ಬಂದನು. ವಿಷದಲ್ಲಿ ಮಲಗಿದ-ಶೇಷಶಾಯಿಯು ಬಂದನು. ಆನೆಯ ಮೊರೆಯನ್ನು ಕೇಳಿ ಅದನ್ನು ರಕ್ಷಿಸಿದವನು ಬಂದನು. ಅಂಜನಾದೇವಿಯ ಮಗನಾದ ಹನುಮಂತನ ಒಡೆಯನಾದ ರಾಮನು ಬಂದನು. ಭಯಪಟ್ಟ ಪ್ರಹ್ಲಾದನಿಗೆ ಅಭಯವನ್ನು ನೀಡಿದ, ಕುರುಕುಲವನ್ನು ನಾಶಗೈಯಲು ಹಿರಿದಾದ ದೇವನು ದುರ್ಯೋಧನನ ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಕುಂಜರ-ಆನೆ, ಭಂಜನ-ಸಂಹಾರ, ನಂಜು-ವಿಷ.
ಟಿಪ್ಪನೀ (ಕ.ಗ.ಪ)
ಗಜೇಂದ್ರ ಮೋಕ್ಷ - ‘ಕುಂಜರನ ಮೊರೆ ಕೇಳಿ’ - ಇಂದ್ರದ್ಯುಮ್ನ ಪಾಂಡ್ಯದೇಶದ ಅರಸು. ವಿಷ್ಣುಭಕ್ತ ಅಗಸ್ತ್ಯರಿಂದ ಆನೆಯ ಜನ್ಮವನ್ನು ಪಡೆದು. ಶಾಪಗ್ರಸ್ತನಾಗಿ, ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ಮೊಸಳೆಯು ಹಿಡಿಯಿತು. ಆಗ ಪೂರ್ವಜನ್ಮದ ಸಂಸ್ಕಾರದಿಂದ ವಿಷ್ಣುವಿನ ಮೊರೆಹೊಕ್ಕನು. ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಯನ್ನು ಕೊಂದು ಇಂದ್ರದ್ಯುಮ್ನನನ್ನು ಶಾಪದಿಂದ ವಿಮುಕ್ತಗೊಳಿಸಿದನು.
ಮೂಲ ...{Loading}...
ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ ॥51॥
೦೫೨ ದೇವ ಬನ್ದನು ...{Loading}...
ದೇವ ಬಂದನು ತನ್ನ ನೆನೆವರ
ಕಾವ ಬಂದನು ದೈತ್ಯಕುಲ ವನ
ದಾವ ಬಂದನು ಭಾಗವತಜನಲೋಲುಪನು ಬಂದ
ಭಾವಿಸುವಡಘಹಾರಿ ಬಂದನು
ಓವಿ ಬಂದರೆ ತನ್ನ ಬೀರುವ
ದೇವ ಬಂದನು ವೀರ ನರಯಣ ಬಂದನರಮನೆಗೆ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ಬಂದನು. ತನ್ನ ನೆನೆಯುವರನ್ನು ಕಾಪಾಡುವನು ಬಂದನು. ರಾಕ್ಷಸ ಕುಲವೆಂಬ ಕಾಡಿಗೆ ಕಿಚ್ಚಿನಂತಿರುವನು ಬಂದನು. ತನ್ನ ಭಕ್ತರಲ್ಲಿ ಆಸಕ್ತಿ ಉಳ್ಳವನು ಬಂದನು. ವಿಚಾರ ಮಾಡಿದರೆ ಪಾಪನಾಶಕನು ಬಂದನು. ಯಾವ ಮುಚ್ಚು ಮರೆಯಿಲ್ಲದೇ ತನ್ನ ಬಳಿ ಬರುವವರಿಗೆ ತನ್ನನ್ನೇ ಒಪ್ಪಿಸಿಕೊಳ್ಳುವ ದೇವ ಗದುಗಿನ ವೀರನಾರಾಯಣ ಸ್ವರೂಪಿ ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ದಾವ-ಬೆಂಕಿ, ಲೋಲುಪ-ಆಸಕ್ತ, ಅಘ-ಪಾಪ, ವನದಾವ-ಕಾಡುಕಿಚ್ಚು
ಮೂಲ ...{Loading}...
ದೇವ ಬಂದನು ತನ್ನ ನೆನೆವರ
ಕಾವ ಬಂದನು ದೈತ್ಯಕುಲ ವನ
ದಾವ ಬಂದನು ಭಾಗವತಜನಲೋಲುಪನು ಬಂದ
ಭಾವಿಸುವಡಘಹಾರಿ ಬಂದನು
ಓವಿ ಬಂದರೆ ತನ್ನ ಬೀರುವ
ದೇವ ಬಂದನು ವೀರ ನರಯಣ ಬಂದನರಮನೆಗೆ ॥52॥
೦೫೩ ಅರಸ ಬನ್ದನು ...{Loading}...
ಅರಸ ಬಂದನು ಭಾಗವತಜನ
ಪರುಷ ಬಂದನು ಭಕ್ತವತ್ಸಲ
ಕರುಣಿ ಬಂದನು ತನ್ನ ನೆನೆದರೆ ಪರಮಪದವೀವ
ಪರಮ ಪುರುಷೋತ್ತಮನು ಬಂದನು
ದುರಿತದುರ್ಗ ವಿಭಾಡ ಬಂದನು
ಸುರರ ಸಲಹುವ ದೇವ ಬಂದನು ನೃಪತಿಯರಮನೆಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯು ಬಂದನು. ಭಕ್ತರ ಸ್ಪರ್ಶಮಣಿ ಬಂದನು. ಭಕ್ತರನ್ನು ಪ್ರೀತಿಸುವ ಕರುಣಿ ಬಂದನು. ತನ್ನ ನೆನೆದವರಿಗೆ ಶ್ರೇಷ್ಠ ಪದವಿಯನ್ನು ನೀಡುವ ಪುರುಷೋತ್ತಮನು ಬಂದನು. ಪಾಪದ ಕೋಟಿಯನ್ನು ನಾಶಮಾಡುವನು ಬಂದನು. ದೇವತೆಗಳನ್ನು ರಕ್ಷಿಸುವ ದೇವನು ದುರ್ಯೋಧನನ ಅರಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಪರುಷಮಣೀ-ಸ್ಪರ್ಶಮಣಿ (ಮಟ್ಟಿದ್ದನ್ನು ಚಿನ್ನ ಮಾಡುವ ಶಿಲೆ)
ಮೂಲ ...{Loading}...
ಅರಸ ಬಂದನು ಭಾಗವತಜನ
ಪರುಷ ಬಂದನು ಭಕ್ತವತ್ಸಲ
ಕರುಣಿ ಬಂದನು ತನ್ನ ನೆನೆದರೆ ಪರಮಪದವೀವ
ಪರಮ ಪುರುಷೋತ್ತಮನು ಬಂದನು
ದುರಿತದುರ್ಗ ವಿಭಾಡ ಬಂದನು
ಸುರರ ಸಲಹುವ ದೇವ ಬಂದನು ನೃಪತಿಯರಮನೆಗೆ ॥53॥
೦೫೪ ಕ್ಷೀರವಾರಿಧಿಶಯನ ಬನ್ದನು ...{Loading}...
ಕ್ಷೀರವಾರಿಧಿಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆಯಿಳಿಯಲೋಸುಗ ಮನುಜ ವೇಷದಲಿ
ಭೂರಿ ದನುಜರನೊರೆಸಿ ಕೌರವ
ವಾರಿಧಿಯ ಮುಕ್ಕುಳಿಸಲೋಸುಗ
ಭೋರನೈತರುತಿರ್ದನಂಧ ನೃಪಾಲನರಮನೆಗೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಲಿನ ಸಮುದ್ರದಲ್ಲಿ ಮಲಗುವವನು ಬಂದನು. ಕಮಲನಾಭ ಕೃಷ್ಣನು ಬಂದನು. ಭೂಮಿಯ ಹೊರೆಯನ್ನು ಇಳಿಸುವುದಕ್ಕಾಗಿ ಮನುಷ್ಯ ವೇಷದಲ್ಲಿ ಬಂದನು. ಹೇರಳವಾದ ರಾಕ್ಷಸರನ್ನು ನಾಶಮಾಡಿ, ಕೌರವ ಸಮುದ್ರವನ್ನು ಮುಕ್ಕುಳಿಸುವ ಸಲುವಾಗಿ ರಭಸದಿಂದ ಕುರುಡು ದೊರೆಯಾದ ಧೃತರಾಷ್ಟ್ರನ ಅರಮನೆಗೆ ಕೃಷ್ಣ ಬರುತ್ತಿದ್ದನು.
ಪದಾರ್ಥ (ಕ.ಗ.ಪ)
ಭೋರನೆ - ರಭಸದಿಂದ, ಭೂರಿ-ಹೇರಳ, ಒರೆಸು-ನಾಶಮಾಡು.
ಮೂಲ ...{Loading}...
ಕ್ಷೀರವಾರಿಧಿಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆಯಿಳಿಯಲೋಸುಗ ಮನುಜ ವೇಷದಲಿ
ಭೂರಿ ದನುಜರನೊರೆಸಿ ಕೌರವ
ವಾರಿಧಿಯ ಮುಕ್ಕುಳಿಸಲೋಸುಗ
ಭೋರನೈತರುತಿರ್ದನಂಧ ನೃಪಾಲನರಮನೆಗೆ ॥54॥
೦೫೫ ಬರಲು ಮುರಹರನಿದಿರುವನ್ದರು ...{Loading}...
ಬರಲು ಮುರಹರನಿದಿರುವಂದರು
ಗುರುನದೀಜದ್ರೋಣ ಗೌತಮ
ಗುರುಸುತಾದಿ ಸಮಸ್ತ ಭೂಪ ಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರು ಮಕುಟವನಂತತಾರಾ
ಪರವೃತೇಂದುವಿನಂತೆ ಮೆರೆದುದು ಹರಿಯ ಪದನಖವು ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣನು ಬಂದಾಗ ಹಿರಿಯರಾದ ಭೀಷ್ಮರು, ಗುರುದ್ರೋಣರು, ಕೃಪಾಚಾರ್ಯರು, ದ್ರೋಣಪುತ್ರ ಅಶ್ವತ್ಥಾಮ ಮೊದಲಾದ ಸಮಸ್ತ ರಾಜ ಸಮೂಹವು ಇದಿರು ಬಂದಿತು. ಎಲ್ಲ ರಾಜರು ತಮ್ಮ ಕಿರೀಟದ ತಲೆಗಳನ್ನು ಕೃಷ್ಣನ ಪಾದಕ್ಕೆ ಚಾಚಿದರು. ಆಗ ಕೃಷ್ಣನ ಪಾದದ ಉಗುರು ಅನಂತ ನಕ್ಷತ್ರಗಳಿಂದ ಸುತ್ತುವರಿದ ಚಂದ್ರನಂತೆ ಪ್ರಕಾಶಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಪರಿವೃತ-ಸುತ್ತುವರೆದ
ಮೂಲ ...{Loading}...
ಬರಲು ಮುರಹರನಿದಿರುವಂದರು
ಗುರುನದೀಜದ್ರೋಣ ಗೌತಮ
ಗುರುಸುತಾದಿ ಸಮಸ್ತ ಭೂಪ ಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರು ಮಕುಟವನಂತತಾರಾ
ಪರವೃತೇಂದುವಿನಂತೆ ಮೆರೆದುದು ಹರಿಯ ಪದನಖವು ॥55॥
೦೫೬ ಅರಿದಲೈ ಮುರವೈರಿ ...{Loading}...
ಅರಿದಲೈ ಮುರವೈರಿ ಸನಕಾ
ದ್ಯರ ಸಮಾಧಿಗೆ ಸುಳಿಯದಂಘ್ರಿಯ
ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ
ಸುರನರೋರಗರೊಳು ಕೃತಾರ್ಥರು
ನಿರುತ ತಾವಲ್ಲದೊಡೆ ನಿಮ್ಮಯ
ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣಾ ! ನಮಗೆ ತಿಳಿಯದಾಯಿತು. ಸನಕರೇ ಮೊದಲಾದವರ ಸಮಾಧಿಯ ಹತ್ತಿರವೂ ಸುಳಿಯದ ಪಾದದರ್ಶನದ ಫಲಾನುಭವವು ನಮಗೆಲ್ಲರಿಗೂ ದೊರಕಿತು. ದೇವ, ಮಾನವ, ನಾಗರರಲ್ಲೆಲ್ಲ ನಾವು ಪುಣ್ಯವಂತರಲ್ಲದಿದ್ದರೆ ನಿಮ್ಮ ಪಾದ ಕಮಲದ ಸೇವೆ ಯಾವ ಮುನಿಗಳಿಗೆ ದೊರಕುವುದು ?
ಪದಾರ್ಥ (ಕ.ಗ.ಪ)
ಅಂಘ್ರಿ-ಪಾದ, ಅಸ್ಮದ್-ನಮ್ಮ, ಸರಸಿಜ-ಕಮಲ
ಮೂಲ ...{Loading}...
ಅರಿದಲೈ ಮುರವೈರಿ ಸನಕಾ
ದ್ಯರ ಸಮಾಧಿಗೆ ಸುಳಿಯದಂಘ್ರಿಯ
ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ
ಸುರನರೋರಗರೊಳು ಕೃತಾರ್ಥರು
ನಿರುತ ತಾವಲ್ಲದೊಡೆ ನಿಮ್ಮಯ
ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ ॥56॥
೦೫೭ ಎನ್ದು ಗಙ್ಗಾನನ್ದನನು ...{Loading}...
ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ ॥57॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತ ಭೀಷ್ಮನು ಪ್ರೀತಿಯಿಂದ ಕೃಷ್ಣನತ್ತ ಕೈಚಾಚಲು, ದೇವಗಿರಿಯ ತುದಿಯಿಂದ ಮರಿಮಿಂಚುಗಳ ಮೋಡಗಳು ನೆಲಕ್ಕೆ ಇಳಿಯುವಂತೆ, ನೀಲಿಯ ಬೆಟ್ಟಗಳಂತೆ ಸುಂದರ ದೇಹದ ಮೇಲಿನ ರತ್ನಾಭರಣದ ಪ್ರಭೆಯಿಂದ ದೈತ್ಯರ ವೈರಿ, ಕೃಷ್ಣನು ಬಂಗಾರದ ರಥದಿಂದ ಇಳಿದನು.
ಪದಾರ್ಥ (ಕ.ಗ.ಪ)
ಕೌಸ್ತುಭ-ರತ್ನಪ್ರಭೆ-ವಿಷ್ಣುವಿನ ಎದೆಯ ಮೇಲಿನ ಆಭರಣ
ಮೂಲ ...{Loading}...
ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ ॥57॥
೦೫೮ ಸಮರ ಸರ್ವಜ್ಞರುಗಳಙ್ಘ್ರಿಗೆ ...{Loading}...
ಸಮರ ಸರ್ವಜ್ಞರುಗಳಂಘ್ರಿಗೆ
ನಮಿಸಿದರು ಬಹಳೋಲಗದ ಸಂ
ಭ್ರಮದ ಸಿರಿ ತಲೆವಾಗುತಿರ್ದುದು ನೊಸಲಕೈಗಳಲಿ
ಕಮಲನಯನದ ದೇವನೇ ಸಾ
ಕೆಮಗೆ ಮಾಡುವುದೇನೆನುತ ತ
ತ್ಕುಮತಿ ಕೌರವನಿಳಿಯದಿರ್ದನು ಸಿಂಹವಿಷ್ಟರವ ॥58॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ಕುಶಲರು ಕೃಷ್ಣನ ಪಾದಗಳಿಗೆ ನಮಸ್ಕರಿಸಿದರು. ಸಭೆಯಲ್ಲಿದ್ದ ರಾಜ ಮಹಾರಾಜರು ಹಣೆಯ ಮೇಲೆ ಕೈ ಜೋಡಿಸಿ ಸಂಭ್ರಮದಿಂದ ತಲೆಬಾಗಿ ನಮಸ್ಕರಿಸುತ್ತಿದ್ದರು. ಆ ಕಮಲ ನಯನದ ದೇವನೆ ಸಾಕು. ನಮಗೆ ಇವನಿಂದೇನಾಗಬೇಕಿದೆ ? ಎಂದು ದುಷ್ಟ ಬುದ್ಧಿಯ ದುರ್ಯೋಧನನು ಮಾತ್ರ ಸಿಂಹಾಸನವನ್ನು ಬಿಟ್ಟು ಇಳಿಯದೇ ಇದ್ದನು.
ಟಿಪ್ಪನೀ (ಕ.ಗ.ಪ)
ಕಮಲ ನಯನದ ದೇವನು - ಶಿವಪುರಾಣದಲ್ಲಿನ ದೃಷ್ಟಾಂತ ವಿಷ್ಣು ಶಿವಭಕ್ತ. ಈ ಭಕ್ತಿ ಪಾರಾಮ್ಯತೆಯನ್ನು ಒಮ್ಮೆ ಪಾರ್ವತಿಗೆ ತೋರಿಸುವುದಾಗಿ ಶಿವನು ಹೇಳುತ್ತಾನೆ. ಒಮ್ಮೆ ವಿಷ್ಣುವು ಶಿವನಿಗೆ ನಿತ್ಯ ಕಮಲದ ಹೂವನ್ನು ಅರ್ಪಿಸುವ ವ್ರತವನ್ನು ಕೈಗೊಳ್ಳುತ್ತಾನೆ. ದಿನವೂ ಒಂದು, ಎರಡು ಹೀಗೆ ನೂರು ದಿನಗಳ ವ್ರತದ ಆಚರಣೆ ಕೊನೆಯ ದಿನ ನೂರು ಪುಷ್ಪಗಳನ್ನು ಶಿವನಿಗೆ ಅರ್ಪಿಸುವಂತಹ ವ್ರತವಿದು. ಹೀಗೆ ವ್ರತವಾಚರಿಸುತ್ತಿರುವ ಸಂದರ್ಭದಲ್ಲಿ ಕೊನೆಯ ದಿನ ವಿಷ್ಣುವು ತಂದ ನೂರು ಕಮಲದ ಹೂಗಳಲ್ಲಿ ಒಂದನ್ನು ಶಿವನು ಮಾಯ ಮಾಡುತ್ತಾನೆ. ವಿಷ್ಣುವು 99 ಪುಷ್ಪಗಳನ್ನು ಪೂಜಿಸಿದ ನಂತರ ನೂರನೆಯ ಹೂವನ್ನು ಕಾಣದೆ ಕೊನೆಯ ಪುಷ್ಪವಾಗಿ ತನ್ನ ಕಣ್ಣನ್ನೇ ಕಿತ್ತು ನೂರನೆಯ ಪುಷ್ಪವಾಗಿ ಅರ್ಪಿಸುತ್ತಾನೆ. ಶಿವನು ವಿಷ್ಣುವಿನ ಈ ಭಕ್ತಿಯ ಪರಾಕಾಷ್ಠೆಯನ್ನು ಪಾರ್ವತಿಗೆ ತೋರಿಸಿ, ಅಲ್ಲಿದ್ದ ಕಮಲವನ್ನೇ ತೆಗೆದು ವಿಷ್ಣುವಿಗೆ ಕಣ್ಣಾಗಿ ಹಚ್ಚಿದನಂತೆ. ಆದ್ದರಿಂದ ವಿಷ್ಣುವು ‘ಕಮಲನಯನನಾದ’.
ಮೂಲ ...{Loading}...
ಸಮರ ಸರ್ವಜ್ಞರುಗಳಂಘ್ರಿಗೆ
ನಮಿಸಿದರು ಬಹಳೋಲಗದ ಸಂ
ಭ್ರಮದ ಸಿರಿ ತಲೆವಾಗುತಿರ್ದುದು ನೊಸಲಕೈಗಳಲಿ
ಕಮಲನಯನದ ದೇವನೇ ಸಾ
ಕೆಮಗೆ ಮಾಡುವುದೇನೆನುತ ತ
ತ್ಕುಮತಿ ಕೌರವನಿಳಿಯದಿರ್ದನು ಸಿಂಹವಿಷ್ಟರವ ॥58॥
೦೫೯ ಸೆಣಸು ಸೇರದ ...{Loading}...
ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ
ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ
ಮಣಿಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ಮೇಲೆ ಸುರಸಂ
ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಹಂಕಾರವನ್ನು - ತನ್ನೊಡನೆ ಸ್ಪರ್ಧಿಸುವುದನ್ನು ಸಹಿಸದೇ ಕೃಷ್ಣನು ನಮಸ್ಕರಿಸದೇ ಕುಳಿತ ದುರ್ಯೋಧನನನ್ನು ಕಾಣುತ್ತ ಮುಗುಳ್ನಗುತ್ತ ಕಾಲಿನ ಹೆಬ್ಬೆರಳಿನಿಂದ ನೆಲವನ್ನೊತ್ತಿದನು. ರತ್ನ ಖಚಿತ ಚಿನ್ನದ ಸಿಂಹಾಸನದ ಕಾಲಿನ ಕೀಲು ಮುರಿಯಿತು. ಆಕಾಶದಲ್ಲಿದ್ದ ದೇವತೆಗಳ ಸಮೂಹವು ‘ಆ’ ಎನ್ನಲು ದುರ್ಯೋಧನನು ಬೋರಲಾಗಿ ಕೃಷ್ಣನ ಪಾದಗಳಲ್ಲಿ ಬಿದ್ದನು.
ಪದಾರ್ಥ (ಕ.ಗ.ಪ)
ಸೆಣಸು-ಸ್ಪರ್ಧಿಸು, ಮಣಿಯದೇ-ನಮಸ್ಕರಿಸದೆ ಕವಿ-ಬೋರಲು
ಮೂಲ ...{Loading}...
ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ
ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ
ಮಣಿಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ಮೇಲೆ ಸುರಸಂ
ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ ॥59॥
೦೬೦ ಧರಣಿಪತಿ ಸಿಂಹಾಸನದ ...{Loading}...
ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ ॥60॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜನು ಸಿಂಹಾಸನ ಮೇಲೆ ಇರದೆ ಬರುವರೆ ? ನಾವೇ ಬಂದು ಹರಸುತ್ತಿದ್ದೆವು. ಅದರಲ್ಲೇನು ತಪ್ಪು? ಎನ್ನುತ್ತ ಕೃಷ್ಣನು ದುರ್ಯೋಧನನ ತಲೆಯನ್ನು ಎತ್ತಿದನು. ಭೀಷ್ಮನು ಕೈ ನೀಡಲು ಕುರುಕುಲಶ್ರೇಷ್ಠರ ಗೌರವವನ್ನು ಸ್ವೀಕರಿಸುತ್ತ ಕೃಷ್ಣನು ಸಿಂಹಾಸನಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಮಸ್ತಕ-ತಲೆ, ಕೇಸರಿ-ಸಿಂಹ, ಅಗ್ರಣಿ-ಮುಂದಾಳು
ಮೂಲ ...{Loading}...
ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ ॥60॥
೦೬೧ ಹರಿಯ ಹರಿವಿಷ್ಟರದ ...{Loading}...
ಹರಿಯ ಹರಿವಿಷ್ಟರದ ಬಲದಲಿ
ಧರಣಿಪತಿ ಕುಳ್ಳಿರ್ದನಾತನ
ಹಿರಿಯ ಮಗನೆಡವಂಕದಲಿ ಕರ್ಣಾದಿಗಳು ಸಹಿತ
ಹರಿಯ ನೇಮವ ಕೊಂಡು ಸನ್ಮುನಿ
ವರರು ಕುಳ್ಳಿರ್ದರು ನದೀಸುತ
ತರಿಸಿದನು ಪಡಿಗವನು ಹೊಂಗಳಸದ ಸುವಾರಿಗಳ ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಸಿಂಹಾಸನದ ಬಲಭಾಗದಲ್ಲಿ ಧೃತರಾಷ್ಟ್ರನು ಕುಳಿತಿದ್ದನು. ಅವನ ಹಿರಿಯ ಮಗನಾದ ದುರ್ಯೋಧನನು, ಕರ್ಣ ಮೊದಲಾದವರೊಂದಿಗೆ ಎಡಭಾಗದಲ್ಲಿ ಕುಳಿತಿದ್ದನು. ಕೃಷ್ಣನ ಆದೇಶದಂತೆ ಮುನಿವರ್ಯರುಗಳು ಕುಳಿತಿದ್ದರು, ಭೀಷ್ಮನು ಹರಿವಾಣ ಮತ್ತು ಚಿನ್ನದ ಕಳಸಗಳಲ್ಲಿ ಪವಿತ್ರ ಜಲವನ್ನು ತರಿಸಿದನು.
ಪದಾರ್ಥ (ಕ.ಗ.ಪ)
ಹರಿ-ವಿಷ್ಣು, ಪಡಿಗ-ತಟ್ಟಿ, ವಾರಿ-ನೀರು
ಮೂಲ ...{Loading}...
ಹರಿಯ ಹರಿವಿಷ್ಟರದ ಬಲದಲಿ
ಧರಣಿಪತಿ ಕುಳ್ಳಿರ್ದನಾತನ
ಹಿರಿಯ ಮಗನೆಡವಂಕದಲಿ ಕರ್ಣಾದಿಗಳು ಸಹಿತ
ಹರಿಯ ನೇಮವ ಕೊಂಡು ಸನ್ಮುನಿ
ವರರು ಕುಳ್ಳಿರ್ದರು ನದೀಸುತ
ತರಿಸಿದನು ಪಡಿಗವನು ಹೊಂಗಳಸದ ಸುವಾರಿಗಳ ॥61॥
೦೬೨ ಚರಣಯುಗಳವ ತೊಳೆದು ...{Loading}...
ಚರಣಯುಗಳವ ತೊಳೆದು ತೀರ್ಥವ
ಶಿರದೊಳಿಟ್ಟು ಮಹಾನುಭಾವನ
ದರುಶನದಿ ಮಜ್ಜನ್ಮ ಸಫಲವೆನುತ್ತ ಕೈಮುಗಿದು
ಪರಶುರಾಮಾದಿಗಳ ಮಿಗೆ ಸ
ತ್ಕರಿಸಿ ಗಂಧಾಕ್ಷತೆಗಳಿಂದುಪ
ಚರಿಸಿ ಹೊಂಬಟ್ಟಲಲಿ ವೀಳೆಯವಿತ್ತನನಿಬರಿಗೆ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಪಾದಗಳೆರಡನ್ನೂ ತೊಳೆದು, ತೀರ್ಥವನ್ನು ತಲೆಯ ಮೇಲಿಟ್ಟು ಕೊಂಡು ‘ಮಹಾನುಭಾವನದರ್ಶನದಿಂದ ನನ್ನ ಜನ್ಮ ಸಾರ್ಥಕವಾಯಿತೆಂದು’ ಕೈ ಮುಗಿದು ಪರಶುರಾಮರೇ ಮೊದಲಾದ ಮುನಿಗಳನ್ನು ಅಧಿಕವಾಗಿ ಗೌರವಿಸಿ, ಗಂಧಾಕ್ಷತೆಗಳಿಂದ ಉಪಚಾರ ಮಾಡಿ ಅಷ್ಟೂ ಮಂದಿಗೆ ಬಂಗಾರದ ಬಟ್ಟಲಲ್ಲಿ ವೀಳೆಯವನ್ನು ಕೊಟ್ಟನು.
ಪದಾರ್ಥ (ಕ.ಗ.ಪ)
ಯುಗಳ-ಜೋಡಿ
ಮೂಲ ...{Loading}...
ಚರಣಯುಗಳವ ತೊಳೆದು ತೀರ್ಥವ
ಶಿರದೊಳಿಟ್ಟು ಮಹಾನುಭಾವನ
ದರುಶನದಿ ಮಜ್ಜನ್ಮ ಸಫಲವೆನುತ್ತ ಕೈಮುಗಿದು
ಪರಶುರಾಮಾದಿಗಳ ಮಿಗೆ ಸ
ತ್ಕರಿಸಿ ಗಂಧಾಕ್ಷತೆಗಳಿಂದುಪ
ಚರಿಸಿ ಹೊಂಬಟ್ಟಲಲಿ ವೀಳೆಯವಿತ್ತನನಿಬರಿಗೆ ॥62॥
೦೬೩ ಕುಶಲವೇ ಕುರುರಾಯ ...{Loading}...
ಕುಶಲವೇ ಕುರುರಾಯ ಬಾರೈ
ಮುಸುಡ ದುಗುಡವಿದೇಕೆ ಬಾಯೆಂ
ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ
ಉಸುರಲಮ್ಮೆನು ಭಾವತನದೊಂ
ದೆಸಕ ಸಲುಗೆಯ ನೇಮವಾದೊಡೆ
ಬಿಸಜಲೋಚನ ಬಿನ್ನಹವನವಧರಿಸಬೇಕೆಂದ ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ! ಕುಶಲವೆ ? ಬಾ, ಮುಖದಲ್ಲಿ ಚಿಂತೆ ಏತಕ್ಕೆ ? ಬಾ ಎಂದು ಕೃಷ್ಣನು ದುರ್ಯೋಧನನನ್ನು ಎದುರಿಗೆ ಕರೆದನು. ಆಗ ದುರ್ಯೋಧನನು ; ಹೇಳಲಾರೆನು ಭಾವತನದ ಸಲುಗೆಯಿಂದ ಅಪ್ಪಣೆಯನ್ನಿತ್ತರೆ ಕೃಷ್ಣ, ನನ್ನ ಬಿನ್ನಹವನ್ನು ಕೇಳ ಬೇಕೆಂದನು.
ಪದಾರ್ಥ (ಕ.ಗ.ಪ)
ಎಸಕ-ಕೆಲಸ, ಬಿಸಜ-ಕಮಲ
ಮೂಲ ...{Loading}...
ಕುಶಲವೇ ಕುರುರಾಯ ಬಾರೈ
ಮುಸುಡ ದುಗುಡವಿದೇಕೆ ಬಾಯೆಂ
ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ
ಉಸುರಲಮ್ಮೆನು ಭಾವತನದೊಂ
ದೆಸಕ ಸಲುಗೆಯ ನೇಮವಾದೊಡೆ
ಬಿಸಜಲೋಚನ ಬಿನ್ನಹವನವಧರಿಸಬೇಕೆಂದ ॥63॥
೦೬೪ ನೀವು ಬಿಜಯಙ್ಗೈವಿರೆನ್ದು ...{Loading}...
ನೀವು ಬಿಜಯಂಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರಿ
ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯÉ್ತುಂದ ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ದಯಮಾಡಿಸುವಿರಿ ಎಂದು ಬಹಳ ಬೆಡಗಿನಿಂದ ಅನೇಕ ರೀತಿಯ ಷಡ್ರಸಗಳ ಅಡುಗೆಯನ್ನು ಮಾಡಿಸಿದ್ದೆನು. ದೇವ ! ನಮ್ಮ ಅರಮನೆಗೆ ಬರದೇ ನೀವು ವಿದುರನ ಮನೆಯಲ್ಲಿ ಊಟ ಮಾಡಿದಿರಿ, ದನಕಾಯುವದೇ ನಿಮ್ಮ ಮೈ ಸೊಬಗು ತಪ್ಪದಾಯಿತು’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಷಡುರಸ-ಸಿಹಿ, ಕಾರ, ಉಪ್ಪು, ಹುಳಿ, ಒಗರು, ಕಹಿ, ಸವೆಸು-ಮಾಡಿಸು.
ಮೂಲ ...{Loading}...
ನೀವು ಬಿಜಯಂಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರಿ
ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯÉ್ತುಂದ ॥64॥
೦೬೫ ಈ ಕೃಪನನೀ ...{Loading}...
ಈ ಕೃಪನನೀ ದ್ರೋಣ ನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವ ನೂಕಿದಿರಿ
ಸಾಕಿದಾತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕೃಪ, ದ್ರೋಣ, ಭೀಷ್ಮರ ಮನೆಗಳಿಗೆ ಹೋಗದೇ, ಅವಿವೇಕಿಯಾದ, ದಾಸಿಯ ಮಗನ (ವಿದುರ) ಮನೆಯಲ್ಲಿ ಹಸಿವನ್ನು ನೀಗಿದಿರಿ. ನಿಮ್ಮನ್ನು ಸಾಕಿದವನು ನಂದಗೋಪನು. ಈ ದುರ್ವತನೆಯು ನಿಮಗೆ ಒಪ್ಪುವುದೆ ಅಲ್ಲವೆ ? ನಿಮಗೇಕೆ ರಾಜಧರ್ಮವೆಂದು ನಗುತ್ತ ದುಯೋಧನನು ನುಡಿದನು.
ಪದಾರ್ಥ (ಕ.ಗ.ಪ)
ಕಾಕ-ಕೀಳು, ತೊತ್ತು-ದಾಸಿ
ಮೂಲ ...{Loading}...
ಈ ಕೃಪನನೀ ದ್ರೋಣ ನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವ ನೂಕಿದಿರಿ
ಸಾಕಿದಾತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ ॥65॥
೦೬೬ ಕುರುಪತಿಯ ಬಿರುನುಡಿಯ ...{Loading}...
ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಾಗ್ನಿಯುಕ್ಕಲು
ಕೆರಳಿ ನಿಬಿರ್sೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಒರಟು ಮಾತುಗಳನ್ನು ಕೇಳಿ, ಮೈಯಲ್ಲಿ ಕೋಪಾಗ್ನಿ ಉಕ್ಕುತ್ತಿರಲು ಕೆರಳಿ, ನಿರ್ಭಯದಿಂದ ವಿದುರನು ದುರ್ಯೋಧನನಿಗೆ ಹೀಗೆ ಹೇಳಿದನು. ‘ಕೆಟ್ಟವನೇ! ನೀನು ಆಡಿದ ಮಾತಿಗೆ ಉತ್ತರವನ್ನೇಕೆ ಕೊಡಬೇಕು ? ನಿನ್ನ ತಾಯಿಗೆ ಮೊದಲನೆಯ ಗಂಡನು ಯಾರು ಹೇಳು’ ಎಂದನು.
ಪದಾರ್ಥ (ಕ.ಗ.ಪ)
ದುರುಳ - ಕೆಟ್ಟವನು, ಬಿರುನುಡಿ - ಒರಟು ಮಾತು, ಕರಣ - ಮೈ.
ಟಿಪ್ಪನೀ (ಕ.ಗ.ಪ)
ವರಜನನಿಗಾದಿಯಲಿ ಗಂಡನಾರು ? - ಗಾಂಧಾರಿಯು ಹುಟ್ಟಿದಾಗ ಅವಳ ಜಾತಕದಲ್ಲಿ ವಿವಾಹವಾದ ಕೂಡಲೆ ವೈಧವ್ಯ ಪ್ರಾಪ್ತಿ ಎಂದಿತ್ತು. ಈ ದೋಷ ನಿವಾರಣೆಗೆ ಅವಳ ತಂದೆ-ತಾಯಿ ಮೊದಲು ಅವಳನ್ನು ಒಂದು ಕತ್ತೆಗೆ ವಿವಾಹ ಮಾಡಿ ಅದು ಸತ್ತ ನಂತರ ಧೃತರಾಷ್ಟ್ರನಿಗೆ ಮದುವೆ ಮಾಡಿದರು. (ಕೆಲವೆಡೆಯಲ್ಲಿ ಆಡಿನೊಂದಿಗೆ ಮದುವೆಯಾಯಿತೆಂದೂ ಹೇಳಿರುತ್ತದೆ) ನಾನು ತ್ತೊತಿನ ಮಗನಾದರೆ ನೀನು ಕತ್ತೆಯ ಮಗ ಎಂದು ಹೇಳುವುದಷ್ಟೇ ವಿದುರನ ಅಭಿಪ್ರಾಯವಾಗಿತ್ತು.
ಮೂಲ ...{Loading}...
ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಾಗ್ನಿಯುಕ್ಕಲು
ಕೆರಳಿ ನಿಬಿರ್sೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ ॥66॥
೦೬೭ ಕಡು ಮುಳಿಸಿನಲಿ ...{Loading}...
ಕಡು ಮುಳಿಸಿನಲಿ ಭೀಮ ನಿನ್ನಯ
ತೊಡೆಗಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಫಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಳ ಸಿಟ್ಟಿನಿಂದ, “ಭೀಮನು ನಿನ್ನ ತೊಡೆಗಳನ್ನು ಮುರಿಯುವ ಸಮಯದಲ್ಲಿ, ತಡೆದು ನಿನ್ನನ್ನು ಕಾಯಬೇಕೆಂದು ಈ ಬಿಲ್ಲನ್ನು ಉಳಿಸಿಕೊಂಡಿದ್ದೆ. ಕೆಟ್ಟ ಮಾತನ್ನು ಆಡಿಸಿಕೊಂಡು ಇನ್ನು ನಿನ್ನನ್ನು ಕಾಯುವೆನೆ ? ಮಾತನಾಡಿ ಫಲವೇನು ?” ಎನ್ನುತ್ತ ವಿದುರನು ಹಿಡಿದ ಬಿಲ್ಲನ್ನು ಮುರಿದನು. ಅದನ್ನು ಕಂಡು ದುರ್ಯೋಧನನು ಬೆರಗಾದನು.
ಪದಾರ್ಥ (ಕ.ಗ.ಪ)
ಮುಳಿಸು-ಸಿಟ್ಟು
ಮೂಲ ...{Loading}...
ಕಡು ಮುಳಿಸಿನಲಿ ಭೀಮ ನಿನ್ನಯ
ತೊಡೆಗಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಫಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ ॥67॥
೦೬೮ ಧನು ಮುರಿಯೆ ...{Loading}...
ಧನು ಮುರಿಯೆ ಗಾಂಧಾರಿ ಗತ ಲೋ
ಚನರು ಮಮ್ಮಲ ಮರುಗಿದರು ಭೂ
ಪನ ದುಗುಡ ಮಿಗಿಲಾಯ್ತು ಭೀಷ್ಮ ದ್ರೋಣರಳಲಿದರು
ಮನದ ಹರುಷದಿ ನಗುತ ಮಧು ಸೂ
ದನನು ನುಡಿದನು ಮರುಳು ಕೌರವ
ಜನಪ ಕೇಳೈ ಮತ್ತೆ ನಮ್ಮಯ ಶೀಲ ಬೇರೆಂದ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರನು ಬಿಲ್ಲನ್ನು ಮುರಿಯಲು ಗಾಂಧಾರಿ, ಮತ್ತು ಅಂಧನಾದ ಧೃತರಾಷ್ಟ್ರರು ಅತಿಯಾಗಿ ಕೊರಗಿದರು. ದುರ್ಯೋಧನನ ಚಿಂತೆಯೂ ಹೆಚ್ಚಾಯಿತು. ಭೀಷ್ಮ, ದ್ರೋಣರು ದುಃಖಿಸಿದರು. ಮನದಲ್ಲಿಯೇ ಸಂತೋಷದಿಂದ ಕೃಷ್ಣನು ನಗುತ್ತ ಹುಚ್ಚು ಕೌರವ ಅರಸನೇ ಕೇಳು, ಮತ್ತೆ ನಮ್ಮ ನೀತಿ ಬೇರೆಯೇ ಇದೆ ಎಂದನು.
ಪದಾರ್ಥ (ಕ.ಗ.ಪ)
ಮಮ್ಮಲ ಮರುಗು-ಅತಿಯಾಗಿ ಕೊರಗು, ಅಳಲಿದರು-ದುಃಖಿಸಿದರು.
ಮೂಲ ...{Loading}...
ಧನು ಮುರಿಯೆ ಗಾಂಧಾರಿ ಗತ ಲೋ
ಚನರು ಮಮ್ಮಲ ಮರುಗಿದರು ಭೂ
ಪನ ದುಗುಡ ಮಿಗಿಲಾಯ್ತು ಭೀಷ್ಮ ದ್ರೋಣರಳಲಿದರು
ಮನದ ಹರುಷದಿ ನಗುತ ಮಧು ಸೂ
ದನನು ನುಡಿದನು ಮರುಳು ಕೌರವ
ಜನಪ ಕೇಳೈ ಮತ್ತೆ ನಮ್ಮಯ ಶೀಲ ಬೇರೆಂದ ॥68॥
೦೬೯ ಪ್ರಿಯದಲುಮ್ಬುದು ಮೇಣು ...{Loading}...
ಪ್ರಿಯದಲುಂಬುದು ಮೇಣು ವಿಬುಧಾ
ಶ್ರಯದಲುಂಬುದು ಮಾನವರಿಗಿದು
ನಿಯತವಿಂತಲ್ಲದೊಡೆ ಕೇಳೈ ಕೌರವರ ರಾಯ
ಪ್ರಿಯನು ನೀನಲ್ಲೆಮಗೆ ವಿಬುಧಾ
ಶ್ರಯವು ತಾ ಮುನ್ನಿಲ್ಲ ನಿನ್ನಾ
ಲಯದಲೆಮಗೆಂತೂಟ ಸಂಭವಿಸುವುದು ಹೇಳೆಂದ ॥69॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರೀತಿ ಇದ್ದಲ್ಲಿ ಉಣ್ಣಬೇಕು. ಇಲ್ಲವೆ ಪಂಡಿತರ ಆಶ್ರಯದಲ್ಲಿ ಉಣ್ಣಬೇಕು. ಮನುಷ್ಯರಿಗೆ ಇದು ಗೊತ್ತು ಮಾಡಿದ ನೀತಿ. ಹೀಗಿರುವಾಗ ದುರ್ಯೋಧನನೇ ಕೇಳು. ನೀನು ನಮಗೆ ಪ್ರಿಯನಲ್ಲ. ನಿನ್ನಲ್ಲಿ ಜ್ಞಾನಿಗಳ ಆಶ್ರಯವು ಮೊದಲೇ ಇಲ್ಲ. ನಿನ್ನ ಮನೆಯಲ್ಲಿ ನನಗೆ ಊಟವು ಹೇಗೆ ಆಗುವುದು ? ಹೇಳು ಎಂದನು.
ಪದಾರ್ಥ (ಕ.ಗ.ಪ)
ವಿಬುಧರು-ಪಂಡಿತರು
ಮೂಲ ...{Loading}...
ಪ್ರಿಯದಲುಂಬುದು ಮೇಣು ವಿಬುಧಾ
ಶ್ರಯದಲುಂಬುದು ಮಾನವರಿಗಿದು
ನಿಯತವಿಂತಲ್ಲದೊಡೆ ಕೇಳೈ ಕೌರವರ ರಾಯ
ಪ್ರಿಯನು ನೀನಲ್ಲೆಮಗೆ ವಿಬುಧಾ
ಶ್ರಯವು ತಾ ಮುನ್ನಿಲ್ಲ ನಿನ್ನಾ
ಲಯದಲೆಮಗೆಂತೂಟ ಸಂಭವಿಸುವುದು ಹೇಳೆಂದ ॥69॥
೦೭೦ ಹಗೆಯನೊಳಗಿಡಲಾಗದದು ವೈ ...{Loading}...
ಹಗೆಯನೊಳಗಿಡಲಾಗದದು ವೈ
ರಿಗಳ ನಿಳಯದಲನ್ನ ಪಾನಾ
ದಿನಗಳನುಣಲಾಗದು ನಿಧಾನಿಸೆ ರಾಜ ನೀತಿಯಿದು
ಬಗೆಯೆ ನೀ ಪಾಂಡವರಿಗಹಿತನು
ವಿಗಡ ಪಾಂಡವರೆನ್ನ ಜೀವನ
ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ ॥70॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವನ್ನು ಒಳಗಿಟ್ಟುಕೊಳ್ಳಬಾರದು. ಶತ್ರುಗಳ ಮನೆಯಲ್ಲಿ ಅನ್ನ ಪಾನ ಮೊದಲಾದವುಗಳನ್ನು ಮಾಡಬಾರದು. ವಿಚಾರ ಮಾಡಲು ಇದು ರಾಜನೀತಿ. ತಿಳಿದು ನೋಡಿದರೆ ಪಾಂಡವರಿಗೆ ನೀನು ಶತ್ರು. ಶೂರರಾದ ಪಾಂಡವರು ನನ್ನ ಜೀವ. ಶತ್ರುವನ್ನು ಹೇಗೆ ನಂಬಲಿ ಹೇಳು ದುರ್ಯೋಧನ ? ಎಂದನು.
ಪದಾರ್ಥ (ಕ.ಗ.ಪ)
ನಿಧಾನಿಸೆ-ವಿಚಾರಿಸಲು, ಅಹಿತ-ಶತ್ರು, ವಿಗಡ-ಪ್ರಬುದ್ಧ
ಮೂಲ ...{Loading}...
ಹಗೆಯನೊಳಗಿಡಲಾಗದದು ವೈ
ರಿಗಳ ನಿಳಯದಲನ್ನ ಪಾನಾ
ದಿನಗಳನುಣಲಾಗದು ನಿಧಾನಿಸೆ ರಾಜ ನೀತಿಯಿದು
ಬಗೆಯೆ ನೀ ಪಾಂಡವರಿಗಹಿತನು
ವಿಗಡ ಪಾಂಡವರೆನ್ನ ಜೀವನ
ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ ॥70॥
೦೭೧ ಸೇರುವನು ಸಕಳಙ್ಕಚನ್ದ್ರನು ...{Loading}...
ಸೇರುವನು ಸಕಳಂಕಚಂದ್ರನು
ವಾರಿಧಿಗೆ ನೀನಖಿಳ ಗೋಪೀ
ಜಾರ ಜಾರೆಯ ಮಕ್ಕಳಿಗೆ ನೀ ಜೀವ ತಪ್ಪೇನು
ಆರು ತಮ್ಮಂದದ ಮಹಾತ್ಮರ
ಸೇರುವರಲೈ ಪಾಂಡುಪುತ್ರರ
ಕೂರುಮೆಗೆ ನಾನೆನ್ನೆ ನೀ ಬಂದನುವ ಹೇಳೆಂದ ॥71॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೋಷದಿಂದ ಕೂಡಿದ ಚಂದ್ರನು ಕಲ್ಮಶದಿಂದ ಕೂಡಿದ ಸಮುದ್ರವನ್ನು ಸೇರುತ್ತಾನೆ. ನೀನು ಸಮಸ್ತ ಗೋಪಿಯರ ಜಾರ. ಜಾರೆಯ ಮಕ್ಕಳಿಗೆ ನೀನು ಜೀವ. ಇದರಲ್ಲಿ ತಪ್ಪೇನು ? ತಮ್ಮಂತಹ ಮಹಾತ್ಮರನ್ನು ಯಾರು ಸೇರುತ್ತಾರೆ. ಪಾಂಡವರಲ್ಲಿ ನಿನ್ನ ಪ್ರೀತಿಗೆ ನಾನು ಏನನ್ನೂ ಹೇಳಲಾರೆ ! ನೀನೀಗ ಬಂದ ಕಾರಣವನ್ನು ಹೇಳು ಎಂದನು.
ಪದಾರ್ಥ (ಕ.ಗ.ಪ)
ಜಾರ-ವಿಟ, ಕಳಂಕ-ದೋಷ, ವಾರಿಧಿ -ಕಡಲು, ಕೂರುಮೆ-=ಪ್ರೀತಿ, ಅನುವು-ಕಾರ್ಯ
ಮೂಲ ...{Loading}...
ಸೇರುವನು ಸಕಳಂಕಚಂದ್ರನು
ವಾರಿಧಿಗೆ ನೀನಖಿಳ ಗೋಪೀ
ಜಾರ ಜಾರೆಯ ಮಕ್ಕಳಿಗೆ ನೀ ಜೀವ ತಪ್ಪೇನು
ಆರು ತಮ್ಮಂದದ ಮಹಾತ್ಮರ
ಸೇರುವರಲೈ ಪಾಂಡುಪುತ್ರರ
ಕೂರುಮೆಗೆ ನಾನೆನ್ನೆ ನೀ ಬಂದನುವ ಹೇಳೆಂದ ॥71॥
೦೭೨ ಕುಲದವನ ಹೃದಯಾನ್ಧಕಾರವ ...{Loading}...
ಕುಲದವನ ಹೃದಯಾಂಧಕಾರವ
ಕಳಚಲೆಂದು ಹಿಮಾಂಶು ಹರಹಿದ
ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು
ತೊಳಪ ದಶನಮಯೂಖತತಿ ಹೊಳೆ
ಹೊಳೆಯೆ ನುಡಿದನು ತತ್ಸಭಾ ಮಂ
ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು ॥72॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಕುಲದವನ (ದುರ್ಯೋಧನನ) ಎದೆಯಾಳದ ಕತ್ತಲೆಯನ್ನು ತೊಲಗಿಸಬೇಕೆಂದೂ ಚಂದ್ರನು ಎಳೆಯ ಬೆಳದಿಂಗಳನ್ನು ಹರಡಿದನೋ ಎನ್ನುವಂತೆ, ದೈತ್ಯ ಕುಲಕ್ಕೆ ಯಮ ಸ್ವರೂಪಿಯಾದ ಕೃಷ್ಣನ ಬೆಳಗುವ ಹಲ್ಲುಗಳ ಹೊಳಪು ಥಳ ಥಳ ಹೊಳೆಯುತ್ತಿರಲು ಸಭೆಯೆಂಬ ಮಹಾ ಸಮುದ್ರದ, ಮಾತುಗಳೆಂಬ ತೆರೆಗಳ ಸದ್ದು ಅಡಗಿದಾಗ ಕೃಷ್ಣನು ಮಾತನಾಡಿದನು.
ಪದಾರ್ಥ (ಕ.ಗ.ಪ)
ಅಂಧಕಾರ-ಕತ್ತಲೆ, ಹಿಮಾಂಶು-ಚಂದ್ರ, ದಶನ-ಹಲ್ಲು, ಅಂತಕ-ಯಮ, ಮಯೂಖ-ಕಿರಣ, ತತಿ-ಗುಂಪು
ಮೂಲ ...{Loading}...
ಕುಲದವನ ಹೃದಯಾಂಧಕಾರವ
ಕಳಚಲೆಂದು ಹಿಮಾಂಶು ಹರಹಿದ
ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು
ತೊಳಪ ದಶನಮಯೂಖತತಿ ಹೊಳೆ
ಹೊಳೆಯೆ ನುಡಿದನು ತತ್ಸಭಾ ಮಂ
ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು ॥72॥