೦೮

೦೦೦ ಸೂ ಶರಣದೇಹಿಕ ...{Loading}...

ಸೂ. ಶರಣದೇಹಿಕ ದೇವನೆಂಬೀ
ಬಿರುದ ಮೆರೆಯಲು ರಾಯಭಾರವ
ಧರಿಸಿ ಕೌರವನರಮನೆಗೆ ನಡೆತಂದನಸುರಾರಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ ನೃ
ಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ ॥1॥

೦೦೨ ಶೌರಿ ಕಾಣಿಸಿಕೊಣ್ಡನಾ ...{Loading}...

ಶೌರಿ ಕಾಣಿಸಿಕೊಂಡನಾ ಗಾಂ
ಧಾರಿಯನು ಸುಕ್ಷೇಮ ಕುಶಲವ
ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ
ಕೌರವನು ತನ್ನರಮನೆಗೆ ಹರಿ
ಬಾರದಿರನೆಂದಖಿಳ ವಿಧದಲಿ
ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ ॥2॥

೦೦೩ ನಡುವೆ ಮಣಿಮಞ್ಚದಲಿ ...{Loading}...

ನಡುವೆ ಮಣಿಮಂಚದಲಿ ಮೇಲ್ವಾ
ಸಡಕಿಲನು ಹಚ್ಚಡಿಸಿದರು ಮೇ
ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು
ಉಡುಗೊರೆಯ ತರಿಸಿದನು ರಾಯನ
ಮಡದಿಯರು ಹೊಂಗಳಸ ಜಲವನು
ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು ॥3॥

೦೦೪ ತವತವಗೆ ಗಾಙ್ಗೇಯ ...{Loading}...

ತವತವಗೆ ಗಾಂಗೇಯ ಗುರು ಕೃಪ
ರವಿಸುತಾದಿಗಳಸುರರಿಪು ನಿಜ
ಭವನಕೈತಹನೆಂದು ಸವೆದರು ಸಾರ ವಸ್ತುಗಳ
ಅವನಿಪನ ಬೀಳ್ಕೊಟ್ಟು ಕೌರವ
ಭವನವನು ಹೊರವಂಟು ವರಭಾ
ಗವತಮಸ್ತಕರತ್ನ ವಿದುರನ ಮನೆಗೆ ನಡೆತಂದ ॥4॥

೦೦೫ ತೊಲಗಿದವು ಜನಮನದ ...{Loading}...

ತೊಲಗಿದವು ಜನಮನದ ಬಲುಗ
ತ್ತಲೆಗಳಿದಿರಲಿ ಕಂಡ ಜೀವರ
ಹಲವು ಜನ್ಮಾಂತರದ ದುರಿತಾಂಬೋಧಿ ಬತ್ತಿದವು
ಬಳಿಕ ಮುನಿಗಳು ಸಹಿತ ಕರುಣಾ
ಜಲಧಿ ತಾನಾ ಕೌರವೇಂದ್ರನ
ಹೊಳಲೊಳಗೆ ನಿಜ ಶರಣನಿಹ ಮನೆಗಾಗಿ ಬರುತಿರ್ದ ॥5॥

೦೦೬ ಕರಣ ನಿರ್ಮಳವಾಯ್ತು ...{Loading}...

ಕರಣ ನಿರ್ಮಳವಾಯ್ತು ಮನವು
ಬ್ಬರಿಸಿತತಿ ಪರಿತೋಷದೇಳಿಗೆ
ಪರಮ ಸುಖದಲಿ ತನುವ ಮರೆದನು ನಯನಜಲವೊಗಲು
ಎರಡುದೋರದ ಗಾಢಭಕ್ತಿಯ
ಭರದ ಲವಲವಿಕೆಯಲಿ ನಿಜಮಂ
ದಿರವ ಹೊರವಂಡುತ್ತ ಕಂಡನು ವಿದುರನಚ್ಯುತನ ॥6॥

೦೦೭ ಸಿರಿಮೊಗದ ಕಿರುಬೆಮರ ...{Loading}...

ಸಿರಿಮೊಗದ ಕಿರುಬೆಮರ ತೇಜಿಯ
ಖುರಪುಟದ ಕೆಂದೂಳಿ ಸೋಂಕಿದ
ಸಿರಿಮುಡಿಯ ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ
ಖರಮರೀಚಿಯ ಜಳಕೆ ಬಾಡಿದ
ತರುಣ ತುಲಸಿಯ ದಂಡೆಯೊಪ್ಪುವ
ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ ॥7॥

೦೦೮ ತನುವ ಮರೆದನು ...{Loading}...

ತನುವ ಮರೆದನು ಪುಳಕಜಲದಲಿ
ನನೆದು ನಾರಾಯಣನ ಪದ ದರು
ಶನದ ಹರುಷಾರಣ್ಯದಲಿ ಮನ ಹೊಲಬುದಪ್ಪಿದನು
ನೆನೆವ ಸನಕಾದಿಗಳಿಗೊಮ್ಮೆಯು
ಮನಗೊಡದ ಮಹಿಮಾವಲಂಬನು
ಮನೆಗೆ ಬಹ ಕರುಣಾಳುತನ ಹೊಸತೆಂದು ಹೊಂಗಿದನು ॥8॥

೦೦೯ ವೇದದರಿಕೆಗಳಡಗದುಪನಿಷ ದಾದಿ ...{Loading}...

ವೇದದರಿಕೆಗಳಡಗದುಪನಿಷ
ದಾದಿ ದಿವ್ಯಸ್ತುತಿಯ ಗಡಣೆಗೆ
ಹೋದ ಹೊಲಬಳವಡದ ಮುನಿಗಳ ಮಖಕೆ ಮನಗುಡದ
ಕಾದಿ ಕಡಗುವ ತಾರ್ಕಿಕರು ಬೆಂ
ಡಾದರಲ್ಲದೆ ನಿಜವನರಿಯದ
ನಾದಿ ಸಿದ್ಧನ ಬರವ ಕಂಡನು ಬಾಗಿಲಲಿ ವಿದುರ ॥9॥

೦೧೦ ತೊಳಲುವುಪನಿಪದರಿಕೆಯಿವು ...{Loading}...

ತೊಳಲುವುಪನಿಪದರಿಕೆಯಿವು ಶ್ರುತಿ
ಗಳ ಸರಾಗದ ಬಳಕೆಯಿವು ಮುನಿ
ಗಳ ಸಮಾಧಿಗಳಾದಿಯಿವು ಯೋಗಿಗಳ ಬಗೆಗಳಿವು
ಎಲೆಲೆ ಬಕುತರ ಭಾಗ್ಯಶಾಲಿಯ
ಬೆಳೆಗಳಿವೆಲಾ ಶಿವಯೆನುತ ಪದ
ನಳಿನಯುಗಳದಲೊಡಲನೀಡಾಡಿದನು ಹರುಷದಲಿ ॥10॥

೦೧೧ ನೋಡಿದನು ಮನದಣಿಯೆ ...{Loading}...

ನೋಡಿದನು ಮನದಣಿಯೆ ಮಿಗೆ ಕೊಂ
ಡಾಡಿದನೂ ಬೀದಿಯಲಿ ಹರಿದೆಡೆ
ಯಾಡಿದನು ಭ್ರಮೆಯಾಯ್ತು ವಿದುರಂಗೆಂಬ ಗಾವಳಿಯ
ಕೂಡೆ ಕುಣಿದನು ಮನೆಯ ಮುರಿದೀ
ಡಾಡಿದನು ಮೈಮರೆದ ಹರುಷದ
ಗಾಡಿಕೆಯಲಪ್ರತಿಮನೆಸೆದನು ಬಕುತಿ ಕೇಳಿಯಲಿ ॥11॥

೦೧೨ ಹಸಿದು ನಾವೈತನ್ದರೀ ...{Loading}...

ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ ॥12॥

೦೧೩ ನೆರೆಯೆ ಕೃತ್ಯಾಕೃತ್ಯ ...{Loading}...

ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ ॥13॥

೦೧೪ ಒಲವರವೆ ಕೌತುಕವು ...{Loading}...

ಒಲವರವೆ ಕೌತುಕವು ಪಾಲ್ಗಡ
ಲೊಳಗೆ ಮಲಗುವ ವಿಷ್ಣು ವಿದುರನ
ನಿಳಯದೊಳಗೊಕ್ಕುಡಿತೆ ಹಾಲಲಿ ಹಸಿವ ನೂಕಿದನು
ಹೊಲಬುಗೆಡಿಸಿದನಖಿಳ ನಿಗಮಂ
ಗಳನು ತನ್ನರಿಕೆಯಲಿ ಭಜಕಂ
ಗೊಲಿದು ತಾನೈತರಲು ಕರುಣದ ಘನತೆಯೆನೆ ಲೋಕ ॥14॥

೦೧೫ ಹರಿಯ ಪದಕಮಲಾಭಿಷೇಕದ ...{Loading}...

ಹರಿಯ ಪದಕಮಲಾಭಿಷೇಕದ
ವರ ಪಯೋಬಿಂದುಗಳು ಕೌರವ
ನರಮನೆಯನೊಳಕೊಂಬವೋಲ್ ಕಡಲಾಗಿ ಕೈಗೊಳಲು
ಅರರೆ ಮುರಹರನೊಡನೆ ಹಾಲಿನ
ಶರಧಿ ಮೇರೆಯನೊಡೆದುದಿಳೆಗ
ಚ್ಚರಿಯೆನುತ ಭೀಷ್ಮಾದಿಗಳು ಹೊಗಳಿದರು ಮುರಹರನ ॥15॥

೦೧೬ ತೊಲಗಿದಸು ಬನ್ದನ್ತೆ ...{Loading}...

ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ ॥16॥

೦೧೭ ಬರಲು ಕಣ್ಡಸುರಾರಿ ...{Loading}...

ಬರಲು ಕಂಡಸುರಾರಿ ಮಂಚದೊ
ಳಿರದೆ ಧಿಮ್ಮನೆ ನಿಂದು ನರರಾ
ಚರಣೆಗಳ ನಾಟಕವ ತಾನೇ ನಟಿಸಿ ತೋರಿದನು
ಹಿರಿಯರಿಗೆ ತಾ ಹಿರಿಯನೆಂಬೀ
ಗರುವತನವನು ಬಿಸುಟು ಕುಂತಿಗೆ
ಕರವ ಮುಗಿದೆರಗಿದನು ಮುನಿಜನನಿಕರ ಘೇಯೆನಲು ॥17॥

೦೧೮ ಅಮಿತ ಕರುಣಾಸಿನ್ಧುವಿನ ...{Loading}...

ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ ॥18॥

೦೧೯ ದೇವಕಿಯ ವಸುದೇವನನು ...{Loading}...

ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದುಭೂ
ಪಾವಳಿಯ ಸುಕ್ಷೇಮಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು ॥19॥

೦೨೦ ಯಮತನುಜನಧಿಕನು ಹಿಡಿಮ್ಬಾ ...{Loading}...

ಯಮತನುಜನಧಿಕನು ಹಿಡಿಂಬಾ
ರಮಣನತಿ ಬಲ್ಲಿದನು ಪಾರ್ಥನ
ವಿಮಳ ವಿಗ್ರಹ ಲೇಸು ಸಕಲ ಮಹೀಶಪರಿವೃತರು
ಯಮಳರಿರವತಿ ಚೆಲುವು ನೇಹದ
ರಮಣಿಯಾಕೆಯ ಸುತರು ಮಹದು
ದ್ಯಮರು ಕೇಳ್ ಎಂದಸುರರಿಪು ಕುಂತಿಗೆ ನಿಯಾಮಿಸಿದ ॥20॥

೦೨೧ ನರನ ಮಗನಭಿಮನ್ಯು ...{Loading}...

ನರನ ಮಗನಭಿಮನ್ಯು ಕುಶಲನು
ವರ ಸುಭದ್ರಾದೇವಿ ಮೊದಲಾ
ಗಿರಲು ಬಾಂಧವರೆಲ್ಲ ಜೀವಂತರು ನಿಧಾನಿಸಲು
ಪರಮ ಮಿತ್ರರು ತಮ್ಮೊಳೊಂದಾ
ದರು ದ್ರುಪದನಕ್ಷೋಣಿಸೇನೆಯ
ನೆರವು ಬಂದುದು ರಾಜಕಾರ್ಯದ ಬಳಕೆ ಲೇಸೆಂದ ॥21॥

೦೨೨ ಅದಿತಿ ಮಕ್ಕಳ ...{Loading}...

ಅದಿತಿ ಮಕ್ಕಳ ಹಡೆದುದೇ ಲೋ
ಕದಲಿ ಫಲ ಕೌಸಲೆ ಕುಮಾರರ
ಪದೆದು ಹಡೆದುದೆ ಸಫಲ ವಿನತೆಗೆ ಮಕ್ಕಳಾಯ್ತು ಫಲ
ಮುದದಿ ನೀನೇ ಮಕ್ಕಳನು ಪಡೆ
ದದುವೆ ಫಲ ಕೇಳ್ ಎಂದು ಪರಿತೋ
ಷದಲಿ ಕುಂತಿಯ ಹೊಗಳಿದನು ಮುರವೈರಿಯುಚಿತದಲಿ ॥22॥

೦೨೩ ಲೋಕ ಮೆಚ್ಚಲು ...{Loading}...

ಲೋಕ ಮೆಚ್ಚಲು ನಿನ್ನ ಸುತರು ದೃ
ಢೈಕಸತ್ಯರು ನುಡಿದ ಕಾಲವ
ನೂಕಿದರು ರಾಜ್ಯಾಭಿಲಾಷೆಗೆ ನೆರಹಿದರು ಬಲವ
ಆ ಕುಮಾರರಿಗರ್ಧ ರಾಜ್ಯವ
ನೀ ಕುಠಾರರಲೀಸಿಕೊಡುವ ವಿ
ವೇಕದಲಿ ತಾ ಬಂದೆನೆಂದನು ಕುಂತಿಗಸುರಾರಿ ॥23॥

೦೨೪ ಪರಮಪರಿತೋಷದಲಿ ಕೃಷ್ಣನ ...{Loading}...

ಪರಮಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ ॥24॥

೦೨೫ ಹೋಗು ನೀನಾತಙ್ಗೆ ...{Loading}...

ಹೋಗು ನೀನಾತಂಗೆ ಪಾಂಡವ
ರಾಗಸಮುದಯ ಬಂದನೆಂಬುದ
ನೀಗಳರುಹುವುದಾತ ಮಾಡಿದ ಗುಣದ ಬೆಳವಿಗೆಯ
ತಾಗು ಬಾಗಿನ ಹವಣನಾತನ
ಲಾಗ ನೋಡುವೆವೆನಲು ಕುರುಕುಲ
ಸಾಗರಾಗ್ನಿಯ ಮನೆಗೆ ಬಂದನು ವಿದುರ ಹರಿ ಬೆಸಸೆ ॥25॥

೦೨೬ ಓಲಗದೊಳಿರ್ದಖಿಳ ಮೂರ್ಖರ ...{Loading}...

ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ ॥26॥

೦೨೭ ನೋಡಿರೈ ಪಾಣ್ಡವರು ...{Loading}...

ನೋಡಿರೈ ಪಾಂಡವರು ಪಾತಕ
ರಾಡಿದಾಟವನಾಡಿದೊಡೆ ಯೀ
ನಾಡೊಳಗಹುದು ಸಲುವುದವನಿಯೊಳಧಿಕ ಲೇಸೆನಿಸಿ
ರೂಢಿಯೊಳಗಾಚಾರವಡಗಿತು
ಜೋಡೆಯಲಿ ಜನಿಸಿದರನೀ ಬೀ
ಡಾಡಿ ಕೂಡಿದನೆಂದು ಹೊಯಿದನು ರವಿಸುತನ ಕರವ ॥27॥

೦೨೮ ನಾಳೆ ಬರಹೇಳೆನ್ದು ...{Loading}...

ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು ॥28॥

೦೨೯ ಕರೆಸಿದನು ಮಣಿಮಕುಟ ...{Loading}...

ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿತ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ ॥29॥

೦೩೦ ಬಲದ ಗದ್ದುಗೆಗಳಲಿ ...{Loading}...

ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯಮಗ ನೃಪ
ತಿಲಕ ದುಶ್ಶಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ ॥30॥

೦೩೧ ಸತಿಸಹಿತ ಧೃತರಾಷ್ಟ್ರ ...{Loading}...

ಸತಿಸಹಿತ ಧೃತರಾಷ್ಟ್ರ ಭೂಪತಿ
ಸುತನ ಬಲವಂಕದಲಿ ಕನಕೋ
ಚಿತದ ಪೀಠದಲೆಸೆದನಾತನ ಬಲದ ಭಾಗದಲಿ
ಚತುರಚತುರಾನನರು ತರ್ಕ
ಶ್ರುತಿ ಸಮಸ್ತ ಕಳಾಸ್ವತಂತ್ರರು
ನುತಗುಣರು ನೃಪಸಭೆಯೊಳೆಸೆದರು ಭೂರಿ ಸಂದೋಹ ॥31॥

೦೩೨ ಮದವದತಿಬಲ ಶಕುನಿ ...{Loading}...

ಮದವದತಿಬಲ ಶಕುನಿ ಸೈಂಧವ
ನದಟ ನೃಪ ಕಾಂಭೋಜ ರಥ ಸಂ
ಪದನು ಭೂರಿಶ್ರವ ಸುಲೋಚನ ವೀರ ವೃಷಸೇನ
ಕದನ ಕಾಲಾನಳರು ವರಹೇ
ಮದ ಮಕುಟ ರಚನೆಗಳಲೆಡವಂ
ಕದಲಿ ಕುಳ್ಳಿರ್ದರು ಮಹಾಯಾಸ್ಥಾನ ರಚನೆಯಲಿ ॥32॥

೦೩೩ ತರುಣ ಶೃಙ್ಗಾರದ ...{Loading}...

ತರುಣ ಶೃಂಗಾರದ ಮಹಾ ಬಂ
ಧುರದ ನೂರ್ವರು ಕೌರವೇಂದ್ರನ
ವರ ಕುಮಾರರು ಮುಂದೆ ಮೆರೆದರು ಲಕ್ಷಣಾದಿಗಳು
ವರ ಕಿರೀಟದ ಕಾಲ ತೊಡರಿನ
ಕೊರಳಪದಕದ ಕೈಯ ಸುರಗಿಯ
ಲರಸನನುಜರು ನೂರ್ವರೆಡವಂಕದಲಿ ರಂಜಿಸಿತು ॥33॥

೦೩೪ ಮಿಸುಪ ತಮ್ಮ ...{Loading}...

ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು ॥34॥

೦೩೫ ಕಲಹವಿಲ್ಲದೆ ನೂಲಿನೆಳೆಯಲಿ ...{Loading}...

ಕಲಹವಿಲ್ಲದೆ ನೂಲಿನೆಳೆಯಲಿ
ತಲೆಯನರಿವ ವಿರೋಧಿ ರಾಯರ
ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ
ಒಲಿದರೊಳಲಂಚದಲಿ ಛಿದ್ರಿಸಿ
ಕೊಲುವ ಮುನಿದೊಡೆ ಮಂತ್ರ ಶಕ್ತಿಯೊ
ಳಳುಕಿಸುವ ಮಂತ್ರಿಗಳು ಮೆರೆದರು ವಾಮ ಭಾಗದಲಿ ॥35॥

೦೩೬ ನಿಗಮ ತರ್ಕ ...{Loading}...

ನಿಗಮ ತರ್ಕ ಪುರಾಣ ಕಾವ್ಯಾ
ದಿಗಳ ವಿಸಟಂಬರಿಗಳೊತ್ತೊ
ತ್ತುಗಳೊಳಿಟ್ಟೆಡೆಯಾಗಿ ಹಿಗ್ಗಿದ ಜಠರದಗ್ರಿಯರು
ಬಗೆಯುಪನ್ಯಾಸದ ಸುಶಾಖಾ
ಳಿಗಳ ಬೀಳಲು ಬೆಳೆದ ಗಡ್ಡದ
ವಿಗಡ ಭೂಯೋಪಾಧ್ಯರಿದ್ದುದು ರಾಜಸಭೆಯೊಳಗೆ ॥36॥

೦೩೭ ಸಲೆ ಸಮಸ್ಯದನನ್ತ ...{Loading}...

ಸಲೆ ಸಮಸ್ಯದನಂತ ಪದ್ಯವ
ಘಳಿಲನನ್ವೆ ೈಸುವ ಸುಕಾಂತಿಯ
ಲಲಿತ ಮಧುರ ಸಮಾಧಿ ಸುಕುಮಾರಾದಿ ರಚನೆಯಲಿ
ಹಲವುಪಮೆ ಉತ್ಪ್ರೇಕ್ಷ ರೂಪಕ
ಸುಲಲಿತಾಲಂಕೃತಿ ಚಮತ್ಕೃತಿ
ಗಳ ಚತುರ್ಭಾಷಾ ವಿಶಾರದ ಕವಿಗಳೊಪ್ಪಿದರು ॥37॥

೦೩೮ ನುಡಿದು ತಲೆದೂಗಿಸುವ ...{Loading}...

ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾಹಾಯೆನಿಸಿ ಮೆಚ್ಚನು
ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು ॥38॥

೦೩೯ ನುತ ಶುಭೋದಯ ...{Loading}...

ನುತ ಶುಭೋದಯ ಜೀಯ ಶತ್ರು
ಪ್ರತತಿ ಸಂಹಾರಕ ಸಮಸ್ತ
ಕ್ಷಿತಿಪತಿ ಬ್ರಹ್ಮಾಯುರಸ್ತು ವೆನುತ್ತ ಕೈನೆಗಹಿ
ನುತಗುಣನ ಬಿರುದಾವಳಿಯ ಸಂ
ಗತಿಯನಭಿವರ್ಣಿಸುವ ಸಮಯೋ
ಚಿತದ ಮನ್ನಣೆವಡೆದು ಮೆರೆದುದು ಭಟ್ಟಸಂದೋಹ ॥39॥

೦೪೦ ಬರೆದ ಬಳಿಕದು ...{Loading}...

ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ ॥40॥

೦೪೧ ನಳನ ನಹುಷನ ...{Loading}...

ನಳನ ನಹುಷನ ಶಾಲಿಹೋತ್ರನ
ಬಲುಮೆಗಳು ಕಿರಿದೆಂಬ ವಿದ್ಯಾ
ನಿಳಯ ವರ ರೇವಂತನೇರಾಟವನು ನಸುನಗುತ
ಬಲಿದ ದೃಢ ವಾಘೆಗಳು ದೃಷ್ಟಾ
ವಳಿಯ ಹಯಪ್ರೌಢ ಪ್ರತಾಪರು
ಹೊಳೆವ ಮಕುಟದ ಸಾಲುಗಳಲೊಪ್ಪಿದರು ರಾವುತರು ॥41॥

೦೪೨ ಅತಿಮದದಿ ತನು ...{Loading}...

ಅತಿಮದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರು ಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ ॥42॥

೦೪೩ ನಡೆದು ಪರಮಣ್ಡಲದ ...{Loading}...

ನಡೆದು ಪರಮಂಡಲದ ರಾಯರ
ಜಡಿದು ಕಪ್ಪವ ತಪ್ಪ ಶಿಷ್ಟರ
ಗಡಣವೆಸೆದುದು ಪವನ ವೇಗದ ರಾಯಭಾರಿಗಳು
ಕಡುಗಿದರೆ ಕಾಲಂಗೆ ಬಿರುದಿನ
ತೊಡರನಿಕ್ಕುವ ಜವನ ದಾಡೆಯ
ತುಡುಕುವಗ್ಗದ ವೀರರೆಸೆದುದು ದಿಟ್ಟಿವಾರೆಯಲಿ ॥43॥

೦೪೪ ಎಳೆಯ ಮಿಞ್ಚಿನ ...{Loading}...

ಎಳೆಯ ಮಿಂಚಿನ ಕುಡಿಯ ಸೂಸುವ
ನಳಿನದೃಶೆಯರು ಶಶಿಯ ಬಿಂಬವ
ಹಳಿವ ಹುರುಡಿಸುವಬುಜಮುಖಿಯರು ಕೋಮಲಾಂಗಿಯರು
ಸೆಳೆನಡುವಿನಗ್ಗಳೆಯರೊಪ್ಪುವ
ಕಳಶಕುಚೆಯರು ಜಘನ ಚಳ
ದಳಕಿಯರು ಕುರುರಾಯನೆಡವಂಕದಲಿ ಮೋಹಿದರು ॥44॥

೦೪೫ ಮುರಿದು ನೋಡಿದರಖಿಳ ...{Loading}...

ಮುರಿದು ನೋಡಿದರಖಿಳ ರಾಯರು
ಶಿರವ ಬಾಗಲು ಲಾಳ ಮಾಳವ
ತುರುಕ ಕೊಂಕಣ ಗೌಳ ಗೂರ್ಜರ ವಂಗ ಹಮ್ಮೀರ
ವರತ್ರಿಗರ್ತರು ನೆರೆದು ಜೀಯೆನು
ತಿರಲು ಕೋಮಲಿಕೆಯರು ಸಿತ ಚಾ
ಮರವ ಚಿಮ್ಮಲು ಭೂಪ ಮೆರೆದನು ಸಿಂಹಪೀಠದಲಿ ॥45॥

೦೪೬ ಆವ ದೇಸಿಯಿದಾವ ...{Loading}...

ಆವ ದೇಸಿಯಿದಾವ ವಿಸ್ತರ
ವಾವ ದೇಶದ ಸಿರಿಯ ಸಡಗರ
ವಾವ ಪರಿಯ ವಿಳಾಸವಾವ ವಿಡಾಯಿ ತಾನೆನಲು
ಹಾವು ಹಳವಿಗೆಯಾದ ರಾಯನು
ರಾವಣಾರಿಯ ಕಾಣಿಕೆಗೆ ಬಲು
ಠೀವಿಯನು ತೋರಿದನು ಸಾರುವ ಭಟ್ಟರೋಳಿಯಲಿ ॥46॥

೦೪೭ ಬರಲಿ ಕರೆ ...{Loading}...

ಬರಲಿ ಕರೆ ಕೈತವದ ಶಿಕ್ಷಾ
ಗುರುವನೆನುತವನೀಶ ದೂತರ
ಹರಿಯ ಬಿಟ್ಟನು ಹರಿಯ ನಿಳಯಕೆ ಹರಿಯ ವೇಗದಲಿ
ಚರರು ಹರಿತಂದಸುರ ರಿಪುವಿನ
ಚರಣದಲಿ ಮೈಯಿಕ್ಕಿ ನೊಸಲಲಿ
ಕರಪುಟಾಂಜಲಿ ಮೆರೆವುತಿರೆ ಬಿನ್ನಹವ ಮಾಡಿದರು ॥47॥

೦೪೮ ದೇವ ದೇವರ ...{Loading}...

ದೇವ ದೇವರ ಸಮಯವೆನೆ ರಾ
ಜೀವನಾಭನು ಮುಗುಳುನಗೆಯಲಿ
ಭಾವನವರಟ್ಟಿದರೆ ಹರ ಹರ ಬಹೆವು ನಡೆಯೆನುತ
ರಾವಣನ ಪರಿ ನೆಲೆಸಿತಿವನಲಿ
ಸಾವಿಗಂಜುವನಲ್ಲ ಖಳನು ನ
ಯಾವಿಳನು ನಮ್ಮುಕುತಿ ಕೊಳ್ಳದು ವಿದುರ ಕೇಳ್ ಎಂದ ॥48॥

೦೪೯ ಎನುತ ಮಞ್ಚವನಿಳಿದು ...{Loading}...

ಎನುತ ಮಂಚವನಿಳಿದು ವರ ಕಾಂ
ಚನ ವರೂಥಕೆ ಕೈಗೊಡುವ ಯದು
ಜನಪರುಗ್ಗಡಣೆಯಲಿ ಬಿಜಯಂಗೈದನಸುರಾರಿ
ಮುನಿನಿಕರ ಸಂದಣಿಸಿತಭ್ರದೊ
ಳನಿಮಿಷಾವಳಿ ನೆರೆದುದಿಭಪುರ
ಜನವೊಡನೆ ನಡೆತರಲು ಹರಿ ಬರುತಿರ್ದನೋಲಗಕೆ ॥49॥

೦೫೦ ಕಲಿಮಲದಿ ಹೊಲೆಗಲಸಿದಿಭಪುರಿ ...{Loading}...

ಕಲಿಮಲದಿ ಹೊಲೆಗಲಸಿದಿಭಪುರಿ
ಯೊಳಗೆ ನಿರ್ಮಳವಾಯ್ತು ಕೃಷ್ಣನ
ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ
ಲಲನೆಯರು ತಮತಮ್ಮ ನಯನಂ
ಗಳಿಗೆ ದೇವನ ತೆಗೆದು ಸನುಮತ
ಪುಳಕರಾದರು ಕೇಳು ಜನಮೇಜಯ ಮಹೀಪಾಲ ॥50॥

೦೫೧ ಕಞ್ಜಸಮ್ಭವ ಪಿತನು ...{Loading}...

ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ ॥51॥

೦೫೨ ದೇವ ಬನ್ದನು ...{Loading}...

ದೇವ ಬಂದನು ತನ್ನ ನೆನೆವರ
ಕಾವ ಬಂದನು ದೈತ್ಯಕುಲ ವನ
ದಾವ ಬಂದನು ಭಾಗವತಜನಲೋಲುಪನು ಬಂದ
ಭಾವಿಸುವಡಘಹಾರಿ ಬಂದನು
ಓವಿ ಬಂದರೆ ತನ್ನ ಬೀರುವ
ದೇವ ಬಂದನು ವೀರ ನರಯಣ ಬಂದನರಮನೆಗೆ ॥52॥

೦೫೩ ಅರಸ ಬನ್ದನು ...{Loading}...

ಅರಸ ಬಂದನು ಭಾಗವತಜನ
ಪರುಷ ಬಂದನು ಭಕ್ತವತ್ಸಲ
ಕರುಣಿ ಬಂದನು ತನ್ನ ನೆನೆದರೆ ಪರಮಪದವೀವ
ಪರಮ ಪುರುಷೋತ್ತಮನು ಬಂದನು
ದುರಿತದುರ್ಗ ವಿಭಾಡ ಬಂದನು
ಸುರರ ಸಲಹುವ ದೇವ ಬಂದನು ನೃಪತಿಯರಮನೆಗೆ ॥53॥

೦೫೪ ಕ್ಷೀರವಾರಿಧಿಶಯನ ಬನ್ದನು ...{Loading}...

ಕ್ಷೀರವಾರಿಧಿಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆಯಿಳಿಯಲೋಸುಗ ಮನುಜ ವೇಷದಲಿ
ಭೂರಿ ದನುಜರನೊರೆಸಿ ಕೌರವ
ವಾರಿಧಿಯ ಮುಕ್ಕುಳಿಸಲೋಸುಗ
ಭೋರನೈತರುತಿರ್ದನಂಧ ನೃಪಾಲನರಮನೆಗೆ ॥54॥

೦೫೫ ಬರಲು ಮುರಹರನಿದಿರುವನ್ದರು ...{Loading}...

ಬರಲು ಮುರಹರನಿದಿರುವಂದರು
ಗುರುನದೀಜದ್ರೋಣ ಗೌತಮ
ಗುರುಸುತಾದಿ ಸಮಸ್ತ ಭೂಪ ಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರು ಮಕುಟವನಂತತಾರಾ
ಪರವೃತೇಂದುವಿನಂತೆ ಮೆರೆದುದು ಹರಿಯ ಪದನಖವು ॥55॥

೦೫೬ ಅರಿದಲೈ ಮುರವೈರಿ ...{Loading}...

ಅರಿದಲೈ ಮುರವೈರಿ ಸನಕಾ
ದ್ಯರ ಸಮಾಧಿಗೆ ಸುಳಿಯದಂಘ್ರಿಯ
ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ
ಸುರನರೋರಗರೊಳು ಕೃತಾರ್ಥರು
ನಿರುತ ತಾವಲ್ಲದೊಡೆ ನಿಮ್ಮಯ
ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ ॥56॥

೦೫೭ ಎನ್ದು ಗಙ್ಗಾನನ್ದನನು ...{Loading}...

ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ ॥57॥

೦೫೮ ಸಮರ ಸರ್ವಜ್ಞರುಗಳಙ್ಘ್ರಿಗೆ ...{Loading}...

ಸಮರ ಸರ್ವಜ್ಞರುಗಳಂಘ್ರಿಗೆ
ನಮಿಸಿದರು ಬಹಳೋಲಗದ ಸಂ
ಭ್ರಮದ ಸಿರಿ ತಲೆವಾಗುತಿರ್ದುದು ನೊಸಲಕೈಗಳಲಿ
ಕಮಲನಯನದ ದೇವನೇ ಸಾ
ಕೆಮಗೆ ಮಾಡುವುದೇನೆನುತ ತ
ತ್ಕುಮತಿ ಕೌರವನಿಳಿಯದಿರ್ದನು ಸಿಂಹವಿಷ್ಟರವ ॥58॥

೦೫೯ ಸೆಣಸು ಸೇರದ ...{Loading}...

ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ
ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ
ಮಣಿಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ಮೇಲೆ ಸುರಸಂ
ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ ॥59॥

೦೬೦ ಧರಣಿಪತಿ ಸಿಂಹಾಸನದ ...{Loading}...

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ ॥60॥

೦೬೧ ಹರಿಯ ಹರಿವಿಷ್ಟರದ ...{Loading}...

ಹರಿಯ ಹರಿವಿಷ್ಟರದ ಬಲದಲಿ
ಧರಣಿಪತಿ ಕುಳ್ಳಿರ್ದನಾತನ
ಹಿರಿಯ ಮಗನೆಡವಂಕದಲಿ ಕರ್ಣಾದಿಗಳು ಸಹಿತ
ಹರಿಯ ನೇಮವ ಕೊಂಡು ಸನ್ಮುನಿ
ವರರು ಕುಳ್ಳಿರ್ದರು ನದೀಸುತ
ತರಿಸಿದನು ಪಡಿಗವನು ಹೊಂಗಳಸದ ಸುವಾರಿಗಳ ॥61॥

೦೬೨ ಚರಣಯುಗಳವ ತೊಳೆದು ...{Loading}...

ಚರಣಯುಗಳವ ತೊಳೆದು ತೀರ್ಥವ
ಶಿರದೊಳಿಟ್ಟು ಮಹಾನುಭಾವನ
ದರುಶನದಿ ಮಜ್ಜನ್ಮ ಸಫಲವೆನುತ್ತ ಕೈಮುಗಿದು
ಪರಶುರಾಮಾದಿಗಳ ಮಿಗೆ ಸ
ತ್ಕರಿಸಿ ಗಂಧಾಕ್ಷತೆಗಳಿಂದುಪ
ಚರಿಸಿ ಹೊಂಬಟ್ಟಲಲಿ ವೀಳೆಯವಿತ್ತನನಿಬರಿಗೆ ॥62॥

೦೬೩ ಕುಶಲವೇ ಕುರುರಾಯ ...{Loading}...

ಕುಶಲವೇ ಕುರುರಾಯ ಬಾರೈ
ಮುಸುಡ ದುಗುಡವಿದೇಕೆ ಬಾಯೆಂ
ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ
ಉಸುರಲಮ್ಮೆನು ಭಾವತನದೊಂ
ದೆಸಕ ಸಲುಗೆಯ ನೇಮವಾದೊಡೆ
ಬಿಸಜಲೋಚನ ಬಿನ್ನಹವನವಧರಿಸಬೇಕೆಂದ ॥63॥

೦೬೪ ನೀವು ಬಿಜಯಙ್ಗೈವಿರೆನ್ದು ...{Loading}...

ನೀವು ಬಿಜಯಂಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರಿ
ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯÉ್ತುಂದ ॥64॥

೦೬೫ ಈ ಕೃಪನನೀ ...{Loading}...

ಈ ಕೃಪನನೀ ದ್ರೋಣ ನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವ ನೂಕಿದಿರಿ
ಸಾಕಿದಾತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ ॥65॥

೦೬೬ ಕುರುಪತಿಯ ಬಿರುನುಡಿಯ ...{Loading}...

ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಾಗ್ನಿಯುಕ್ಕಲು
ಕೆರಳಿ ನಿಬಿರ್sೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ ॥66॥

೦೬೭ ಕಡು ಮುಳಿಸಿನಲಿ ...{Loading}...

ಕಡು ಮುಳಿಸಿನಲಿ ಭೀಮ ನಿನ್ನಯ
ತೊಡೆಗಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಫಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ ॥67॥

೦೬೮ ಧನು ಮುರಿಯೆ ...{Loading}...

ಧನು ಮುರಿಯೆ ಗಾಂಧಾರಿ ಗತ ಲೋ
ಚನರು ಮಮ್ಮಲ ಮರುಗಿದರು ಭೂ
ಪನ ದುಗುಡ ಮಿಗಿಲಾಯ್ತು ಭೀಷ್ಮ ದ್ರೋಣರಳಲಿದರು
ಮನದ ಹರುಷದಿ ನಗುತ ಮಧು ಸೂ
ದನನು ನುಡಿದನು ಮರುಳು ಕೌರವ
ಜನಪ ಕೇಳೈ ಮತ್ತೆ ನಮ್ಮಯ ಶೀಲ ಬೇರೆಂದ ॥68॥

೦೬೯ ಪ್ರಿಯದಲುಮ್ಬುದು ಮೇಣು ...{Loading}...

ಪ್ರಿಯದಲುಂಬುದು ಮೇಣು ವಿಬುಧಾ
ಶ್ರಯದಲುಂಬುದು ಮಾನವರಿಗಿದು
ನಿಯತವಿಂತಲ್ಲದೊಡೆ ಕೇಳೈ ಕೌರವರ ರಾಯ
ಪ್ರಿಯನು ನೀನಲ್ಲೆಮಗೆ ವಿಬುಧಾ
ಶ್ರಯವು ತಾ ಮುನ್ನಿಲ್ಲ ನಿನ್ನಾ
ಲಯದಲೆಮಗೆಂತೂಟ ಸಂಭವಿಸುವುದು ಹೇಳೆಂದ ॥69॥

೦೭೦ ಹಗೆಯನೊಳಗಿಡಲಾಗದದು ವೈ ...{Loading}...

ಹಗೆಯನೊಳಗಿಡಲಾಗದದು ವೈ
ರಿಗಳ ನಿಳಯದಲನ್ನ ಪಾನಾ
ದಿನಗಳನುಣಲಾಗದು ನಿಧಾನಿಸೆ ರಾಜ ನೀತಿಯಿದು
ಬಗೆಯೆ ನೀ ಪಾಂಡವರಿಗಹಿತನು
ವಿಗಡ ಪಾಂಡವರೆನ್ನ ಜೀವನ
ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ ॥70॥

೦೭೧ ಸೇರುವನು ಸಕಳಙ್ಕಚನ್ದ್ರನು ...{Loading}...

ಸೇರುವನು ಸಕಳಂಕಚಂದ್ರನು
ವಾರಿಧಿಗೆ ನೀನಖಿಳ ಗೋಪೀ
ಜಾರ ಜಾರೆಯ ಮಕ್ಕಳಿಗೆ ನೀ ಜೀವ ತಪ್ಪೇನು
ಆರು ತಮ್ಮಂದದ ಮಹಾತ್ಮರ
ಸೇರುವರಲೈ ಪಾಂಡುಪುತ್ರರ
ಕೂರುಮೆಗೆ ನಾನೆನ್ನೆ ನೀ ಬಂದನುವ ಹೇಳೆಂದ ॥71॥

೦೭೨ ಕುಲದವನ ಹೃದಯಾನ್ಧಕಾರವ ...{Loading}...

ಕುಲದವನ ಹೃದಯಾಂಧಕಾರವ
ಕಳಚಲೆಂದು ಹಿಮಾಂಶು ಹರಹಿದ
ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು
ತೊಳಪ ದಶನಮಯೂಖತತಿ ಹೊಳೆ
ಹೊಳೆಯೆ ನುಡಿದನು ತತ್ಸಭಾ ಮಂ
ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು ॥72॥

+೦೮ ...{Loading}...