೦೦೦ ಸೂ ಸಮರದನುಸನ್ಧಾನದಲಿ ...{Loading}...
ಸೂ. ಸಮರದ್ ಅನುಸಂಧಾನದಲಿ ಸಂ
ಭ್ರಮಿಸಿ ಶೌರಿ ಸಮೀರ-ಸುತನಲಿ
ಸಮತೆಯನು+++(=ಯುಕ್ತತೆಯನು)+++ ಸೇರಿಸಿದನ್ ಅಂದು ಸಮಗ್ರ ಸೂಕ್ತಿಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧ ಏರ್ಪಾಟಿನಲ್ಲಿ, ಉತ್ಸಾಹದಿಂದ ಶ್ರೀಕೃಷ್ಣನು ಭೀಮಸೇನನಲ್ಲಿ , ಯುದ್ಧವಾಗಬೇಕೆಂಬ ತನ್ನ ಅಭಿಮತೆಯ ಕುರಿತಾದ ಸಂಪೂರ್ಣವಾಗಿ ಯುಕ್ತತೆಯ ಮಾತುಗಳನ್ನು ಆಡಿದನು.
ಪದಾರ್ಥ (ಕ.ಗ.ಪ)
ಅನುಸಂಧಾನ-ಏರ್ಪಾಟು, ಶೌರಿ-ಕೃಷ್ಣ (ವಿಷ್ಣು) ಸಮತೆ-ಯುಕ್ತತೆ, ಸಮಗ್ರ-ಸಂಪೂರ್ಣ, ಸೂಕ್ತಿ-ಒಳ್ಳೆಯ ಮಾತುಗಳು
ಮೂಲ ...{Loading}...
ಸೂ. ಸಮರದನುಸಂಧಾನದಲಿ ಸಂ
ಭ್ರಮಿಸಿ ಶೌರಿ ಸಮೀರಸುತನಲಿ
ಸಮತೆಯನು ಸೇರಿಸಿದನಂದು ಸಮಗ್ರ ಸೂಕ್ತಿಯಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನಹಿತ ಮಂತ್ರಿಯ
ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ
ಮೇಲಣನುವಿನ್ನೇನು ಲಕ್ಷಿ ್ಮೀ
ಲೋಲ ಕರುಣಿಸು ಕೌರವಕ್ಷಿತಿ
ಪಾಲಕರಲೆಮಗೇನು ಘಟಿಸುವುದೆಂದು ನೃಪ ನುಡಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜಾ ಕೇಳು ! ಧರ್ಮಜನು ಕೌರವರ ಮಂತ್ರಿ ಸಂಜಯನನ್ನು ಕಳುಹಿಸಿದನು. ಶ್ರೀಕೃಷ್ಣನಿದ್ದಲ್ಲಿಗೆ ಬಂದನು. ಶ್ರೀಲಕ್ಷ್ಮಿಯೊಡನೆ ಕೂಡಿದವನೇ ಮುಂದಿನ ಕ್ರಮವೇನು ? ಕೃಪೆದೋರು. ಕೌರವ ರಾಜರೊಡನೆ ನಮಗೆ ಏನು ಸಂಭವಿಸುತ್ತದೆ
ಪದಾರ್ಥ (ಕ.ಗ.ಪ)
ಅನು-ಕ್ರಮ/ರೀತಿ, ಲೋಲ-ಕೂಡಿದ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನಹಿತ ಮಂತ್ರಿಯ
ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ
ಮೇಲಣನುವಿನ್ನೇನು ಲಕ್ಷಿ ್ಮೀ
ಲೋಲ ಕರುಣಿಸು ಕೌರವಕ್ಷಿತಿ
ಪಾಲಕರಲೆಮಗೇನು ಘಟಿಸುವುದೆಂದು ನೃಪ ನುಡಿದ ॥1॥
೦೦೨ ಕ್ಷಮೆಗೆ ಸೇರುವರಲ್ಲ ...{Loading}...
ಕ್ಷಮೆಗೆ ಸೇರುವರಲ್ಲ ಮೂರ್ಖರು
ಕುಮತಿಗಳು ಮುಂದರಿಯದವರ
ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು
ನಮಗೆ ಹದನೇನಿನ್ನು ಸಂಧಿಯೊ
ಸಮರವೋ ಚಿತ್ತೈಸಬೇಹುದು
ಕಮಲಲೋಚನಯೆಂದು ಬಿನ್ನೆ ೈಸಿದನು ಯಮಸೂನು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಕ್ಷಮೆಗೆ ತಕ್ಕವರಲ್ಲ. ಮೂರ್ಖರು ಕೆಟ್ಟ ಬುದ್ಧಿಯವರು ಮುಂದಿನದನ್ನು ತಿಳಿಯದೆ ಅವರಂತೆಯೆ ಕೈಗೊಂಡರೆ ವಂಶದ ಸತ್ಕೀರ್ತಿಗಳು ನಾಶವಾಗುತ್ತವೆ. ನಮಗೆ ಸರಿಯಾದ ರೀತಿ ಯಾವುದು? ಸಂಧಿಯೋ, ಯುದ್ಧವೋ, ಕೃಷ್ಣಾ ! ತಿಳಿಸಬೇಕೆಂದು ಧರ್ಮರಾಯನು ವಿಜ್ಞಾಪಿಸಿದನು.
ಪದಾರ್ಥ (ಕ.ಗ.ಪ)
ನೆಗಳು-ಕೈಗೊಳ್ಳು, ಹದನು-ಸರಿಯಾದ ರೀತಿ.
ಮೂಲ ...{Loading}...
ಕ್ಷಮೆಗೆ ಸೇರುವರಲ್ಲ ಮೂರ್ಖರು
ಕುಮತಿಗಳು ಮುಂದರಿಯದವರ
ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು
ನಮಗೆ ಹದನೇನಿನ್ನು ಸಂಧಿಯೊ
ಸಮರವೋ ಚಿತ್ತೈಸಬೇಹುದು
ಕಮಲಲೋಚನಯೆಂದು ಬಿನ್ನೈಸಿದನು ಯಮಸೂನು ॥2॥
೦೦೩ ಏನು ನಿನ್ನಭಿಮತವು ...{Loading}...
ಏನು ನಿನ್ನಭಿಮತವು ವರ ಸಂ
ಧಾನವೋ ಸಂಗ್ರಾಮವೋ ನಯ
ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ
ನೀನೊಲಿದ ಹದನಾವುದದನೊಲಿ
ದಾನು ಘಟಿಸುವೆನೆಂದು ಕುಂತೀ
ಸೂನುವನು ಬೆಸಗೊಂಡನಸುರ ವಿರೋಧಿ ನಸುನಗುತ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಅಭಿಪ್ರಾಯವು ಏನು ? ಒಪ್ಪಂದವೋ ? ಯುದ್ಧವೋ ? ಉಪಾಯವೇನು ? ಮನಸ್ಸಿನ ಮೂಲೆಯಲ್ಲಿ ಇಟ್ಟುಕೊಳ್ಳದೇ ನಿನ್ನ ನಿಶ್ಚಯವನ್ನು ತಿಳಿಸು. ನೀನು ಬಯಸಿದ ರೀತಿಯನ್ನೇ ನಾನು ಮಾಡುತ್ತೇನೆಂದು ಕೃಷ್ಣನು ನಗುತ್ತ ಧರ್ಮರಾಜನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಅಭಿಮತ-ಅಭಿಪ್ರಾಯ, ಓವರಿ - ಕೊಠಡಿ
ಮೂಲ ...{Loading}...
ಏನು ನಿನ್ನಭಿಮತವು ವರ ಸಂ
ಧಾನವೋ ಸಂಗ್ರಾಮವೋ ನಯ
ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ
ನೀನೊಲಿದ ಹದನಾವುದದನೊಲಿ
ದಾನು ಘಟಿಸುವೆನೆಂದು ಕುಂತೀ
ಸೂನುವನು ಬೆಸಗೊಂಡನಸುರ ವಿರೋಧಿ ನಸುನಗುತ ॥3॥
೦೦೪ ಅಳಿವವೊಡಲಿದು ಅವನಿ ...{Loading}...
ಅಳಿವವೊಡಲಿದು ಅವನಿ ಸಾಗರ
ವಳಿಯಲುಳಿವುದು ಕೀರ್ತಿ ಸೋದರ
ರೊಳಗೊಳಗೆ ಹೊಯಾ್ದಡಿ ಕೆಟ್ಟರುಯೆಂಬ ದುರಿಯಶದ
ಹಳಿವು ಹೊರುವುದು ದೇವ ಸುಡಲಾ
ನೆಲನನಾ ಕೌರವನ ಕೈಯಲಿ
ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದೇಹವು ನಾಶವಾಗುವುದು. ಭೂಮಿ ಸಮುದ್ರಗಳಿರುವವರೆಗೂ ಕೀರ್ತಿಯು ಉಳಿಯುವುದು. ಅಣ್ಣ ತಮ್ಮಂದಿರು ತಮ್ಮ ತಮ್ಮೊಳಗೆ ಹೊಡೆದಾಡಿ ಕೆಟ್ಟರೆಂಬ ಅಪಕೀರ್ತಿಯ ನಿಂದೆಯನ್ನು ಹೊರಬೇಕಾಗುತ್ತದೆ. ದೇವಾ ! ಸುಡು ಆ ನೆಲವನ್ನು ! ಕೌರವನ ಕೈಯಿಂದ ಕೆಲವು ಊರುಗಳನ್ನು ಕೊಡಿಸಿ ನಮ್ಮನ್ನು ಸಮಾಧಾನಗೊಳಿಸಿರಿ ಎಂದನು.
ಪದಾರ್ಥ (ಕ.ಗ.ಪ)
ಒಡಲು-ಶರೀರ/ದೇಹ, ಅಳಿವು-ನಾಶ, ಹಳಿವು-ನಿಂದೆ.
ಮೂಲ ...{Loading}...
ಅಳಿವವೊಡಲಿದು ಅವನಿ ಸಾಗರ
ವಳಿಯಲುಳಿವುದು ಕೀರ್ತಿ ಸೋದರ
ರೊಳಗೊಳಗೆ ಹೊಯಾ್ದಡಿ ಕೆಟ್ಟರುಯೆಂಬ ದುರಿಯಶದ
ಹಳಿವು ಹೊರುವುದು ದೇವ ಸುಡಲಾ
ನೆಲನನಾ ಕೌರವನ ಕೈಯಲಿ
ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ ॥4॥
೦೦೫ ವರ ಕುಶಸ್ಥಳವನು ...{Loading}...
ವರ ಕುಶಸ್ಥಳವನು ವೃಕಸ್ಥಳ
ಪುರವನಾವಂತಿಯನು ಕೌರವ
ಧರಣಿಪಾಲನಲೀಸಿ ಕೊಡುವುದು ವಾರಣವತವ
ಶರಧಿ ಮೇರೆಯೊಳೈದನೆಯ ಪುರ
ವರವನೊಲಿದುದ ಕೊಡಲಿ ಮನ ಮ
ತ್ಸರವ ಮರೆದೋಲೈಸುವೆವು ಧೃತರಾಷ್ಟ್ರನಂಘ್ರಿಗಳ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಶಸ್ಥಳ, ವೃಕಸ್ಥಳ, ಆವಂತಿಪುರ, ವಾರಣಾವತವನ್ನು ಕೌರವನ ಕೈಯಿಂದ ಕೊಡಿಸುವುದು. ಸಮುದ್ರದ ಎಲ್ಲೆಯ ಮೇಲಿನ ತನಗಿಷ್ಟ ಬಂz ಐದನೆಯ ನಗರವನ್ನು ಕೊಡಲಿ. ಮನಸ್ಸಿನ ದ್ವೇಷವನ್ನು ಮರೆತು ಧೃತರಾಷ್ಟ್ರನ ಪಾದಸೇವೆಯನ್ನು ಮಾಡುತ್ತೇವೆ.
ಪದಾರ್ಥ (ಕ.ಗ.ಪ)
ಶರಧಿ-ಸಮುದ್ರ, ಮೇರೆ-ಎಲ್ಲೆ, ಮತ್ಸರ-ದ್ವೇಷ/ಅಸೂಯೆ
ಮೂಲ ...{Loading}...
ವರ ಕುಶಸ್ಥಳವನು ವೃಕಸ್ಥಳ
ಪುರವನಾವಂತಿಯನು ಕೌರವ
ಧರಣಿಪಾಲನಲೀಸಿ ಕೊಡುವುದು ವಾರಣವತವ
ಶರಧಿ ಮೇರೆಯೊಳೈದನೆಯ ಪುರ
ವರವನೊಲಿದುದ ಕೊಡಲಿ ಮನ ಮ
ತ್ಸರವ ಮರೆದೋಲೈಸುವೆವು ಧೃತರಾಷ್ಟ್ರನಂಘ್ರಿಗಳ ॥5॥
೦೦೬ ನೀವು ಬಿಜಯಙ್ಗೈದು ...{Loading}...
ನೀವು ಬಿಜಯಂಗೈದು ಸಂಧಿಯ
ನಾವ ಪರಿಯಲಿ ಘಟಿಸಿ ಕುರುಭೂ
ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವದು
ಲಾವಕರ ನುಡಿಗಳಲಿ ಕೆಡುವುದು
ಕೋವಿದರ ಮತವವರಮೇಲೆಮ
ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ದಯಮಾಡಿ ತೆರಳಿ ಯಾವ ರೀತಿಯಿಂದಲಾದರೂ ಸಂಧಿಯನ್ನು ಮಾಡಿ ಕೌರವ ರಾಜರ ಬಳಗದಲ್ಲಿ ನಾವು ಇರುವಂತೆ ಮಾಡುವುದು. ಪಂಡಿತರ ಮಾತುಗಳು ದುಷ್ಟರ ಅಭಿಪ್ರಾಯಗಳಿಂದ ಕೆಡುವುದು. ಅವರ ಮೇಲೆ ನಮಗೆ ಯಾವ ರೀತಿ ಮುನಿಸೂ ಇಲ್ಲ. ಸಂಧಿಯನ್ನು ಮಾಡಿರಿ ಸಾಕು ಎಂದನು.
ಪದಾರ್ಥ (ಕ.ಗ.ಪ)
ಲಾವಕರು-ದುಷ್ಟರು, ಕೋವಿದರು-ಬುದ್ಧಿವಂತರು.
ಮೂಲ ...{Loading}...
ನೀವು ಬಿಜಯಂಗೈದು ಸಂಧಿಯ
ನಾವ ಪರಿಯಲಿ ಘಟಿಸಿ ಕುರುಭೂ
ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವದು
ಲಾವಕರ ನುಡಿಗಳಲಿ ಕೆಡುವುದು
ಕೋವಿದರ ಮತವವರಮೇಲೆಮ
ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ ॥6॥
೦೦೭ ಎನೆ ಮುರಾನ್ತಕನಳುಕಿ ...{Loading}...
ಎನೆ ಮುರಾಂತಕನಳುಕಿ ಯಮನಂ
ದನನ ನುಡಿ ಸಂಧಾನದಲಿ ಸಂ
ಜನಿಸಿತಾದೊಡೆ ಕಾಣೆನವನಿಯ ಹೊರೆಗೆ ಹರಿವುಗಳ
ಮನದೊಳನುಸಂಧಾನವಂತಕ
ತನುಜನಲಿ ತೊಳಸಾಯ್ತು ತೋಟಿಯ
ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ಹೀಗೆ ಹೇಳಲು, ಕೃಷ್ಣನು ಮನದಲ್ಲಿಯೇ ಅಳುಕಿದನು. ಧರ್ಮರಾಜನ ಮಾತುಗಳು ಸಂಧಾನದಲ್ಲಿ ನೆಲೆಸಿತು. ಹಾಗಾದರೆ ಭೂಭಾರವನ್ನಿಳಿಸಲು ಉಪಾಯವನ್ನು ಕಾಣೆನು. ಧರ್ಮರಾಜನ ಮನಸ್ಸಿನಲ್ಲಿ ಒಪ್ಪಂದವು ಸ್ವಚ್ಛವಾಗಿ ಕುಳಿತಿದೆ. ಇನ್ನು ಹೋರಾಟದ ಆಲೋಚನೆ ಹೇಗೆನುತ ಕೃಷ್ಣನು ಚಿಂತಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಸಂಜನಿಸು-ಹುಟ್ಟು, ಜನಿಸು
ಹರಿವು- ನಾಶ
ತೊಳಸು-ಸ್ವಚ್ಛ,
ತೋಟಿ-ಹೋರಾಟ
ಮೂಲ ...{Loading}...
ಎನೆ ಮುರಾಂತಕನಳುಕಿ ಯಮನಂ
ದನನ ನುಡಿ ಸಂಧಾನದಲಿ ಸಂ
ಜನಿಸಿತಾದೊಡೆ ಕಾಣೆನವನಿಯ ಹೊರೆಗೆ ಹರಿವುಗಳ
ಮನದೊಳನುಸಂಧಾನವಂತಕ
ತನುಜನಲಿ ತೊಳಸಾಯ್ತು ತೋಟಿಯ
ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ ॥7॥
೦೦೮ ಎಲೆ ಕೃತಾನ್ತಜ ...{Loading}...
ಎಲೆ ಕೃತಾಂತಜ ವೈರಿ ಭೂಮಿಪ
ಕುಲ ಕೃತಾಂತ ಸರಾಗನಹೆ ನಿ
ರ್ಮಳಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು
ನೆಲವ ಕೊಡಲರಿಯನು ವೃಥಾ ಕ
ಕ್ಕುಲಿತೆಯಲ್ಲದೆ ಕಾಣೆನಿದರಲಿ
ಫಲವನೆನುತಸುರಾರಿ ನುಡಿದನು ಧರ್ಮತನುಜಂಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಧರ್ಮರಾಯನೇ ! ಶತ್ರುಗಳಿಗೆ ಯಮ ಸ್ವರೂಪನೆ ನಿರ್ಮಲವಾದ ಧರ್ಮದಲ್ಲಿ ಪ್ರೀತಿಯಿಂದಿರುವೆ. ದುರ್ಯೋಧನನು ಹೆಚ್ಚಿನ ಕಳಂಕಿತನು. ನೆಲವನ್ನು ಕೊಡುವ ಬುದ್ಧಿಯವನಲ್ಲ. ವ್ಯರ್ಥವಾಗಿ ಚಿಂತೆ, ಹಂಬಲಗಳಲ್ಲದೇ ಇದರಲ್ಲಿ ಯಾವ ಫಲವನ್ನೂ ಕಾಣೆನು, ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕೃತಾಂತ-ಯಮ, ಕಕ್ಕುಲಿತೆ-ಚಿಂತೆ/ಹಂಬಲ.
ಮೂಲ ...{Loading}...
ಎಲೆ ಕೃತಾಂತಜ ವೈರಿ ಭೂಮಿಪ
ಕುಲ ಕೃತಾಂತ ಸರಾಗನಹೆ ನಿ
ರ್ಮಳಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು
ನೆಲವ ಕೊಡಲರಿಯನು ವೃಥಾ ಕ
ಕ್ಕುಲಿತೆಯಲ್ಲದೆ ಕಾಣೆನಿದರಲಿ
ಫಲವನೆನುತಸುರಾರಿ ನುಡಿದನು ಧರ್ಮತನುಜಂಗೆ ॥8॥
೦೦೯ ಅರಸನಭಿಮತವಿನ್ದು ಸನ್ಧಿಗೆ ...{Loading}...
ಅರಸನಭಿಮತವಿಂದು ಸಂಧಿಗೆ
ಮರಳಿತೆಲೆ ಪವಮಾನಸುತ ನಿ
ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು
ಧರಣಿಪತಿ ತಪ್ಪುವನೆ ಕರ್ಕಶ
ಭರದ ಕದನದಲೇನು ಫಲ ಸೋ
ದರರ ವಧೆಗೊಡಬಡುವನಲ್ಲಸುರಾರಿ ಕೇಳ್ ಎಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ಅಭಿಪ್ರಾಯವು ಇಂದು ಸಂಧಿಗೆ ಹಿಂತಿರುಗಿದೆ. ಎಲೆ ! ಭೀಮಸೇನ ! ನಿನ್ನ ಅಭಿಪ್ರಾಯವೇನು ? ಮನಸ್ಸಿಗೆ ಮೋಸ ಮಾಡದೆ ಹೇಳು ಎಂದು ಕೃಷ್ಣನು ಕೇಳಲು, ಮಹಾರಾಜನು ತಪ್ಪುವನೆ ? ಬಿರುಸಿನ ಯುದ್ಧದಲ್ಲಿ ಏನು ಫಲವಿದೆ ? ಒಡಹುಟ್ಟಿದವರ ಕೊಲೆಗೆ ನಾನು ಒಪ್ಪುವುದಿಲ್ಲ ಕೃಷ್ಣ ಕೇಳು ಎಂದನು.
ಪದಾರ್ಥ (ಕ.ಗ.ಪ)
ಅರಿತ-ಅಭಿಪ್ರಾಯ, ಕರ್ಕಶ-ಬಿರುಸು, ಭರದ-ಹೆಚ್ಚಳದ
ಮೂಲ ...{Loading}...
ಅರಸನಭಿಮತವಿಂದು ಸಂಧಿಗೆ
ಮರಳಿತೆಲೆ ಪವಮಾನಸುತ ನಿ
ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು
ಧರಣಿಪತಿ ತಪ್ಪುವನೆ ಕರ್ಕಶ
ಭರದ ಕದನದಲೇನು ಫಲ ಸೋ
ದರರ ವಧೆಗೊಡಬಡುವನಲ್ಲಸುರಾರಿ ಕೇಳೆಂದ ॥9॥
೦೧೦ ಹಗೆಯೊಳೆಮ್ಮವರೊಳಗೆ ಎದೆಗಿ ...{Loading}...
ಹಗೆಯೊಳೆಮ್ಮವರೊಳಗೆ ಎದೆಗಿ
ಚ್ಚುಗಳ ಖುಲ್ಲ ಕುಠಾರರಪನಂ
ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ
ಬಗೆಯೆನವಮಾನವನು ಕೌರವ
ರಗಡು ಮಾಡಿದರೆಂಬ ಚಿತ್ತದ
ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳಾದ ಕೌರವರಲ್ಲಿ ಮತ್ತು ನಮ್ಮೊಳಗೆ ದುಷ್ಟರು, ನೀಚರು ನಮ್ಮಲ್ಲಿ ಕಿಚ್ಚನ್ನು ಹೊತ್ತಿಸಿದರು. ಅದು ನಮ್ಮ ಹಿಂದಿನ ಕರ್ಮದ ಫಲ. ಆದ ಅಪಮಾನವನ್ನು ಗಣನೆಗೆ ತೆಗೆದುಕೊಳ್ಳೆನು. ಕೌರವರು ತುಂಟತನ ಮಾಡಿದರೆಂದು ಮನಸ್ಸಿನಲ್ಲಿ ಚಿಂತೆಯಿಲ್ಲ. ಸಂಧಿಯನ್ನು ಏರ್ಪಡಿಸು ಸಾಕು ಎಂದು ಭೀಮಸೇನನು ಹೇಳಿದನು.
ಪದಾರ್ಥ (ಕ.ಗ.ಪ)
ಕಿಚ್ಚು-ಸಂಕಟ, ರಚಿಸು-ಏರ್ಪಡಿಸು.
ಮೂಲ ...{Loading}...
ಹಗೆಯೊಳೆಮ್ಮವರೊಳಗೆ ಎದೆಗಿ
ಚ್ಚುಗಳ ಖುಲ್ಲ ಕುಠಾರರಪನಂ
ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ
ಬಗೆಯೆನವಮಾನವನು ಕೌರವ
ರಗಡು ಮಾಡಿದರೆಂಬ ಚಿತ್ತದ
ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ ॥10॥
೦೧೧ ಎಲೆ ಮಹಾದೇವಾಯ್ತು ...{Loading}...
ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳುಗುಳಕೆ ಪವಮಾನನಂದನ
ನಳುಕಿದನು ಮಝ ಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಮಹಾದೇವ ! ಘೋರವಿಷವು ಅಮೃತವಾಯಿತು. ಉಕ್ಕಿದ ಉರಿಯು ಹೆಚ್ಚಿನ ತಂಪಾಯ್ತು. ಸಿಡಿಲಿನ ಆರ್ಭಟವು ನಯವಾಯಿತು. ಯುದ್ಧಕ್ಕೆ ಭೀಮಸೇನನು ಭಯಪಟ್ಟನು, ಭಲೆ ! ಭಾಪುರೆ ! ತಾಯಿ ಕುಂತಿಯು ಒಳ್ಳೆಯ ಮಕ್ಕಳನ್ನೇ ಹೆತ್ತಳು ಎಂದು ಶ್ರೀಕೃಷ್ಣನು ನಗುತ್ತ ಹೇಳಿದನು.
ಪದಾರ್ಥ (ಕ.ಗ.ಪ)
ಹಾಲಾಹಲ-ಘೋರ ವಿಷ, ಶೀತಳ-ತಂಪು, ಆಟೋಪ-ಆರ್ಭಟ, ಕೊಳುಗಳ-ಯುದ್ಧ, ಅಳುಕು-ಭಯ
ಮೂಲ ...{Loading}...
ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳುಗುಳಕೆ ಪವಮಾನನಂದನ
ನಳುಕಿದನು ಮಝ ಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ ॥11॥
೦೧೨ ಈತನಭಿಮತವಿದು ಜಗದ್ವಿ ...{Loading}...
ಈತನಭಿಮತವಿದು ಜಗದ್ವಿ
ಖ್ಯಾತ ಸಾಹಸಿ ಪಾರ್ಥ ಹೇಳೈ
ಮಾತಿನಾಳಾಪವನು ಕೇಳುವೆ ಶ್ರುತಿರಸಾಯನವ
ಭೀತಿ ಬೇಡಿನ್ನೆನಲು ಬೇರೆಮ
ಗೇತರಭಿಮತವೇನ ಬೆಸಸಿದ
ಡಾತುಕೊಂಬೆನು ಶಿರದಲೆಂದನು ಪಾರ್ಥ ವಿನಯದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತಿನಲ್ಲಿಯೇ ಪ್ರಸಿದ್ಧನಾಗಿರುವ ಅರ್ಜುನ ! ಇದು ಭೀಮಸೇನನ ಅಭಿಪ್ರಾಯ. ನಿನ್ನ ಅಭಿಪ್ರಾಯವನ್ನು ಹೇಳು. ಕೇಳೋಣ. ಹೇಳು ! ಇನ್ನು ಭಯಬೇಡ, ಎಂದು ಹೇಳಲು, ನಮಗೆ ಬೇರೆ ಯಾವ ಅಭಿಪ್ರಾಯವಿದೆ. ಹೇಳಿದ್ದನ್ನು ಕೂಡಲೆ ತಲೆಯಲ್ಲಿ ಹೊತ್ತು ನಡೆಸುತ್ತೇನೆ. ಎಂದು ವಿನಯದಿಂದ ಪಾರ್ಥನು ಹೇಳಿದನು.
ಪದಾರ್ಥ (ಕ.ಗ.ಪ)
ಅಭಿಮತ-ಅಭಿಪ್ರಾಯ, ಆತುಕೊ-ಹೊತ್ತಿಕೋ
ಶ್ರುತಿ ರಸಾಯನ - ಕರ್ಣ ರಸಾಯನ, ಸವಿಮಾತುಗಳು
ಮೂಲ ...{Loading}...
ಈತನಭಿಮತವಿದು ಜಗದ್ವಿ
ಖ್ಯಾತ ಸಾಹಸಿ ಪಾರ್ಥ ಹೇಳೈ
ಮಾತಿನಾಳಾಪವನು ಕೇಳುವೆ ಶ್ರುತಿರಸಾಯನವ
ಭೀತಿ ಬೇಡಿನ್ನೆನಲು ಬೇರೆಮ
ಗೇತರಭಿಮತವೇನ ಬೆಸಸಿದ
ಡಾತುಕೊಂಬೆನು ಶಿರದಲೆಂದನು ಪಾರ್ಥ ವಿನಯದಲಿ ॥12॥
೦೧೩ ನಕುಲ ನೀ ...{Loading}...
ನಕುಲ ನೀ ಹೇಳನುಮತವ ನಿ
ನ್ನುಕುತಿ ಸಮರವೊ ಸಾಮವೋ ಮೇಣ್
ಸುಕರ ಮಂತ್ರವನರುಹು ನೀನಿನ್ನಂಜಬೇಡೆನಲು
ಯುಕುತಿ ನಮಗಿನ್ನೇನುಭಯ ರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯನೊಲವಿನಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ ! ನಿನ್ನ ಅಭಿಪ್ರಾಯವನ್ನು ಹೇಳು. ಯುದ್ಧವೊ ? ಸಂಧಾನವೋ ? ಅಥವಾ ಸುಲಭವಾದ ಉಪಾಯವನ್ನು ಹೇಳು. ನೀನು ಇನ್ನು ಭಯಪಡಬೇಡ ಎಂದು ಹೇಳಲು, ನಮಗೆ ಇನ್ನಾವ ಉಪಾಯವಿದೆ ? ಎರಡೂ ಕಡೆಯ ದೊರೆಗಳನ್ನು ಸಮಾಧಾನಿಸುವುದು. ಬೇರೆ ಉಪಾಯವೇನಿದೆ ಎಂದು ಒಲವಿನಿಂದ ಮಾದ್ರಿಯ ಮಗನಾದ ನಕುಲನು ಹೇಳಿದನು.
ಪದಾರ್ಥ (ಕ.ಗ.ಪ)
ಸುಕರ-ಸುಲಭ, ಮಂತ್ರ-ಉಪಾಯ, ಮೇಣ್-ಅಥವಾ, ರಾಜಕ-ದೊರೆ.
ಮೂಲ ...{Loading}...
ನಕುಲ ನೀ ಹೇಳನುಮತವ ನಿ
ನ್ನುಕುತಿ ಸಮರವೊ ಸಾಮವೋ ಮೇಣ್
ಸುಕರ ಮಂತ್ರವನರುಹು ನೀನಿನ್ನಂಜಬೇಡೆನಲು
ಯುಕುತಿ ನಮಗಿನ್ನೇನುಭಯ ರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯನೊಲವಿನಲಿ ॥13॥
೦೧೪ ಆವುದಭಿಮತವೇನು ಹದ ...{Loading}...
ಆವುದಭಿಮತವೇನು ಹದ ಸಹ
ದೇವ ನೀ ಹೇಳೆನಲು ಬಿನ್ನಹ
ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು
ಆವ ವಿಧದಲಿ ಸಮರವನೆ ಸಂ
ಭಾವಿಸುವುದೆನೆ ನಗುತ ವರ ರಾ
ಜೀವನಾಭನು ಕಳುಹಿದನು ದ್ರೌಪದಿಯೆಡೆಗೆ ಚರರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ! ನಿನ್ನ ಅಭಿಪ್ರಾಯವೇನು ? ಏನು ದಾರಿ ! ಹೇಳು ಎನ್ನಲು ದೇವ ! ವಿಜ್ಞಾಪಿಸುತ್ತೇನೆ. ನನಗೆ ಸಂಧಿಯು ಕೂಡದು. ಯುದ್ಧವು ಒಗ್ಗುವುದು. ಯಾವ ವಿಧದಲ್ಲಿಯಾದರೂ ಸರಿ. ಯುದ್ಧವೇ ಸಾಧ್ಯವಾಗುವಂತೆ ಮಾಡುವುದು ಎಂದು ಹೇಳಲು, ನಗುತ್ತ ಕೃಷ್ಣನು ದ್ರೌಪದಿಯ ಕಡೆಗೆ ಆಳುಗಳನ್ನು ಕಳುಹಿಸಿದನು.
ಪದಾರ್ಥ (ಕ.ಗ.ಪ)
ಸಂಗರ-ಸಂಗ್ರಾಮ/ಯುದ್ಧ
ಮೂಲ ...{Loading}...
ಆವುದಭಿಮತವೇನು ಹದ ಸಹ
ದೇವ ನೀ ಹೇಳೆನಲು ಬಿನ್ನಹ
ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು
ಆವ ವಿಧದಲಿ ಸಮರವನೆ ಸಂ
ಭಾವಿಸುವುದೆನೆ ನಗುತ ವರ ರಾ
ಜೀವನಾಭನು ಕಳುಹಿದನು ದ್ರೌಪದಿಯೆಡೆಗೆ ಚರರ ॥14॥
೦೧೫ ದೇವಿ ಚಿತ್ತೈಸುವುದು ...{Loading}...
ದೇವಿ ಚಿತ್ತೈಸುವುದು ವರವಸು
ದೇವನಂದನನಟ್ಟಿದನು ಸಂ
ಭಾವಿಸುವುದರಿರಾಯರಲಿ ಸಂಧಾನ ಸೌರಂಭ
ನೀವು ಬಿಜಯಂಗೈದು ಚಿತ್ತದೊ
ಳಾವ ಹದನಾ ಹದನನಾ ರಾ
ಜೀವನಾಭಾದಿಗಳಿಗರುಹುವುದೆಂದರಾ ಚರರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಿಯವರು ಕೇಳಬೇಕು ! ಶ್ರೇಷ್ಠನಾದ ವಸುದೇವನ ಮಗ ಶ್ರೀಕೃಷ್ಣನು ನಮ್ಮನ್ನು ಕಳುಹಿಸಿದನು. ಶತ್ರುಗಳೊಡನೆ ಸಂಧಾನವು ಸಂಭ್ರಮದಿಂದ ಸಂಭವಿಸುತ್ತಿದೆ. ನೀವು ದಯಮಾಡಿಸಿ ನಿಮ್ಮ ಮನಸ್ಸಿನಲ್ಲಿ ಏನು ವಿಷಯವಿದೆಯೋ ಅದನ್ನು ಶ್ರೀಕೃಷ್ಣನೇ ಮೊದಲಾದವರಿಗೆ ತಿಳಿಸಬೇಕೆಂದು ಆ ದೂತರು ಹೇಳಿದರು.
ಪದಾರ್ಥ (ಕ.ಗ.ಪ)
ಚಿತ್ತೈಸು-ಕೇಳು,
ಸೌರಂಭ-ಸಂಭ್ರಮ/ಸಡಗರ
ಮೂಲ ...{Loading}...
ದೇವಿ ಚಿತ್ತೈಸುವುದು ವರವಸು
ದೇವನಂದನನಟ್ಟಿದನು ಸಂ
ಭಾವಿಸುವುದರಿರಾಯರಲಿ ಸಂಧಾನ ಸೌರಂಭ
ನೀವು ಬಿಜಯಂಗೈದು ಚಿತ್ತದೊ
ಳಾವ ಹದನಾ ಹದನನಾ ರಾ
ಜೀವನಾಭಾದಿಗಳಿಗರುಹುವುದೆಂದರಾ ಚರರು ॥15॥
೦೧೬ ಏನು ಹದನೇನೆಲವೊ ...{Loading}...
ಏನು ಹದನೇನೆಲವೊ ವರ ಸಂ
ಧಾನವೇ ಕೌರವರೊಳದು ಸು
ಮಾ್ಮನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ
ದಾನವಾಂತಕನೆಸಗುವನೆ ತ
ಪ್ಪೇನು ತಪ್ಪೇನೆನುತ ನಸುಮಸು
ಳ್ದಾನನಾಂಬುಜದಬಲೆ ಬಂದಳು ಕೃಷ್ಣನೋಲಗಕೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ವಿಷಯ ! ಎಲವೋ ಏನು ! ಸಂಧಾನವೆ ? ಕೌರವರಲ್ಲಿನ ಸಂಧಾನವು ಗಂಡಂದಿರಿಗೆ ಸಂತೋಷವೆ ? ಪಾಪಿಗಳು ಹೆಂಗಸನ್ನು ಕೊಂದರು. ಶ್ರೀಕೃಷ್ಣನು ಸಂಧಿಯನ್ನು ಮಾಡಿಸುತ್ತಾನೆಯೆ ? ತಪ್ಪೇನು ? ತಪ್ಪೇನು ? ಎನ್ನುತ್ತ ಬಾಡಿದ ಕಮಲಮುಖದ ದ್ರೌಪದಿ ಕೃಷ್ಣನ ಸಭೆಗೆ ಬಂದಳು.
ಪದಾರ್ಥ (ಕ.ಗ.ಪ)
ಸುಮ್ಮಾನ - ಸಂತೋಷ, ಇರಿ - ಕೊಲ್ಲು, ನಸು - ಸ್ವಲ್ಪ, ಮಸುಳ್ದ - ಬಾಡಿದ.
ಪಾಠಾನ್ತರ (ಕ.ಗ.ಪ)
ನಸುಮಸುಳ್ದಾನನಾಂಬುಜವದನೆ -> ನನಾಂಬುಜವದನೆ ಕೃಷ್ಣ ಜೋಯಿಸರ ಉದ್ಯೋಗ ಪರ್ವ - ಪ್ರಾಚ್ಯ ಸಂಶೋಧನ ಕೇಂದ್ರ ಮೈಸೂರು
ಮೂಲ ...{Loading}...
ಏನು ಹದನೇನೆಲವೊ ವರ ಸಂ
ಧಾನವೇ ಕೌರವರೊಳದು ಸು
ಮಾ್ಮನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ
ದಾನವಾಂತಕನೆಸಗುವನೆ ತ
ಪ್ಪೇನು ತಪ್ಪೇನೆನುತ ನಸುಮಸು
ಳ್ದಾನನಾಂಬುಜದಬಲೆ ಬಂದಳು ಕೃಷ್ಣನೋಲಗಕೆ ॥16॥
೦೧೭ ಭ್ರೂಲತೆಯ ಸುರಚಾಪದುರುಕೇ ...{Loading}...
ಭ್ರೂಲತೆಯ ಸುರಚಾಪದುರುಕೇ
ಶಾಳಿಗಳ ಕಾರ್ಮುಗಿಲಪಾಂಗದ
ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆ
ಗಾಲದಂತಿರೆ ಧಾರ್ತರಾಷ್ಟ್ರ ಕು
ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಬ್ಬುಗಳು ಕಾಮನ ಬಿಲ್ಲಿನಂತಿರಲು, ವಿಸ್ತಾರವಾದ ಕೇಶರಾಶಿ ಕಪ್ಪು ಮೋಡದಂತಿರಲು, ಕುಡಿನೋಟವು ಸಾಲ ಮಿಂಚಿನಂತಿರಲು, ಕಾಲುಗೆಜ್ಜೆಯ ಸಿಡಿಲಿನ ಶಬ್ದದ ದ್ರೌಪದಿಯ ಗಮನವೇ ಮಳೆಗಾಲದಂತೆ ಕಾಣುತ್ತಿರಲು ಧೃತರಾಷ್ಟ್ರನ ವಂಶವು ಭೀಮಸೇನನ ಸಂಧಾನಕ್ಕೆ ಹೊಂದಿಕೊಳ್ಳುವುದೆ ?
ಪದಾರ್ಥ (ಕ.ಗ.ಪ)
ಭ್ರೂಲತೆ - ಹುಬ್ಬು, ಸುರಚಾಪ - ಕಾಮನಬಿಲ್ಲು, ಉರುಕೇಶಾಳಿ - ವಿಸ್ತಾರವಾದ ಕೂದಲ ರಾಶಿ, ನೂಪುರ - ಕಾಲುಗೆಜ್ಜೆ, ಅಪಾಂಗ - ಕುಡಿನೋಟ, ಮೊಳಗು - ಧ್ವನಿ /ಸದ್ದು, ಸಂಪ್ರತಿ- ಸಂಧಾನ.
ಮೂಲ ...{Loading}...
ಭ್ರೂಲತೆಯ ಸುರಚಾಪದುರುಕೇ
ಶಾಳಿಗಳ ಕಾರ್ಮುಗಿಲಪಾಂಗದ
ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆ
ಗಾಲದಂತಿರೆ ಧಾರ್ತರಾಷ್ಟ್ರ ಕು
ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ ॥17॥
೦೧೮ ಕವಿದ ಚಿತ್ರಾವಳಿಯ ...{Loading}...
ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯಾ್ಯರದಲಿ ನೃಪಸಭೆಗೆ
ನವ ಬಳಾಹಕದೊಳಗೆ ಮಿಂಚಿನ
ಗವಿಸಹಿತ ಮರಿಮೇಘವಾವಿ
ರ್ಭವಿಸಿತೆನೆ ದಂಡಿಗೆಯನಿಳಿದಳು ಹೊಕ್ಕಳೋಲಗವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವಿಧ ಚಿತ್ರಗಳಿಂದ ಕೂಡಿದ ತೆರೆಯು ಮುಸುಕಿರಲು, ವಿವಿಧ ಸೇವಕರ ಘೋಷಣೆಯೊಡನೆ, ಸಖಿಯರ ಬೆಡಗು, ಸೊಗಸಿನೊಂದಿಗೆ ರಾಜ ಸಭೆಗೆ ದ್ರೌಪದಿಯು ಬಂದಳು. ಹೊಸ ಮೋಡಗಳೊಳಗೆ ಮಿಂಚಿನ ಪ್ರಭೆಯ ಸಹಿತ ಮರಿ ಮೋಡವು ಹುಟ್ಟಿತೋ ಎಂಬಂತೆ ಅವಳು ಪಲ್ಲಕ್ಕಿಯನ್ನಿಳಿದು ಸಭೆಯನ್ನು ಪ್ರವೇಶಿಸಿದಳು.
ಪದಾರ್ಥ (ಕ.ಗ.ಪ)
ದಂಡಿಗೆ - ಪಲ್ಲಕ್ಕಿ, ಆವಿರ್ಭವಿಸು - ಹುಟ್ಟು.
ಮೂಲ ...{Loading}...
ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯಾ್ಯರದಲಿ ನೃಪಸಭೆಗೆ
ನವ ಬಳಾಹಕದೊಳಗೆ ಮಿಂಚಿನ
ಗವಿಸಹಿತ ಮರಿಮೇಘವಾವಿ
ರ್ಭವಿಸಿತೆನೆ ದಂಡಿಗೆಯನಿಳಿದಳು ಹೊಕ್ಕಳೋಲಗವ ॥18॥
೦೧೯ ಎಲೆ ಸಮೀರಕುಮಾರ ...{Loading}...
ಎಲೆ ಸಮೀರಕುಮಾರ ಸಂಪ್ರತಿ
ಗೆಳಸಿದೈ ಕಲಿತನವ ನೀರೊಳು
ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ
ಕಲಿಸಿದೈ ಕೃಷ್ಣಂಗೆ ನೀತಿಯ
ಬಳಸಿದೈ ಬಹುಮತವ ನರಕದೊ
ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಭೀಮಸೇನ ! ಸಂಧಾನಕ್ಕೆ ಬಯಸಿದೆಯಲ್ಲವೇ? ವೀರತನವನ್ನು ನೀರೊಳಗೆ ಕದಡಿದೆಯಾ ? ಕೌರವ ರಾಜರೊಡನೆ ಹೊಂದಾಣಿಕೆಯಾಯಿತೆ ? ಶ್ರೀಕೃಷ್ಣನಿಗೇ ನೀತಿಯನ್ನು ಕಲಿಸಿದೆಯಾ ? ಬಹುಮತವನ್ನುಪಯೋಗಿಸಿಕೊಂಡು ಚಂದ್ರವಂಶವನ್ನು ನರಕದಲ್ಲಿ ತಳ್ಳಿ ಬಿಟ್ಟೆ ಎಂದು ದ್ರೌಪದಿಯು ಭೀಮಸೇನನ್ನು ನೋಡಿದಳು.
ಪದಾರ್ಥ (ಕ.ಗ.ಪ)
ಎಳಸಿದೆ - ಬಯಸಿದೆ, ಕಲಕು - ಕದಡು, ಕೈವಾರ - ಸ್ತುತಿ.
ಮೂಲ ...{Loading}...
ಎಲೆ ಸಮೀರಕುಮಾರ ಸಂಪ್ರತಿ
ಗೆಳಸಿದೈ ಕಲಿತನವ ನೀರೊಳು
ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ
ಕಲಿಸಿದೈ ಕೃಷ್ಣಂಗೆ ನೀತಿಯ
ಬಳಸಿದೈ ಬಹುಮತವ ನರಕದೊ
ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು ॥19॥
೦೨೦ ಬೇಡಲಟ್ಟುವನೇ ಮಹೀಪತಿ ...{Loading}...
ಬೇಡಲಟ್ಟುವನೇ ಮಹೀಪತಿ
ನಾಡೊಳೈದೂರುಗಳನವರಲಿ
ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ
ಕೇಡಿಗನು ಕೌರವ ನೃಪಾಲನ
ಕೂಡಿ ಬದುಕುವ ಭೀಮಸೇನನೆ
ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಡಿನಲ್ಲಿ ಐದು ಊರುಗಳನ್ನು ಬೇಡಲು ಧರ್ಮರಾಜನು ಕಳುಹಿಸುವನೇ ? ಶ್ರೀಕೃಷ್ಣನು ಅವರಲ್ಲಿ ನಿಮಗೆ ಸಂಧಾನವನ್ನು ಮಾಡಿಸುವನೆ ? ಕೇಡಿಗನಾದ ಕೌರವ ರಾಜನೊಡನೆ ಕೂಡಿ ಬದುಕುವನು ಭೀಮಸೇನನೆ ? ನಿಮ್ಮ ಶ್ರೀಮಂತಿಕೆ ಸೋದರರನ್ನು ಕೂಡಿರುವುದಕ್ಕೆ ಪ್ರಸಿದ್ಧಿಯಾಯಿತೆ ?
ಪದಾರ್ಥ (ಕ.ಗ.ಪ)
ಸಿರಿ-ಶ್ರೀಮಂತಿಕೆ, ರೂಢಿ-ಪ್ರಸಿದ್ಧಿ.
ಮೂಲ ...{Loading}...
ಬೇಡಲಟ್ಟುವನೇ ಮಹೀಪತಿ
ನಾಡೊಳೈದೂರುಗಳನವರಲಿ
ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ
ಕೇಡಿಗನು ಕೌರವ ನೃಪಾಲನ
ಕೂಡಿ ಬದುಕುವ ಭೀಮಸೇನನೆ
ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ ॥20॥
೦೨೧ ಯತಿಗಳಾದಿರಿ ನೀವು ...{Loading}...
ಯತಿಗಳಾದಿರಿ ನೀವು ರೋಷ
ಚ್ಯುತರಲೇ ಬಳಿಕೇನು ಧರ್ಮ
ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ
ಕ್ಷಿತಿಯ ಪಾಲಿಸುವುದು ವಿರೋಧಿ
ವ್ಯತಿಕರವ ಬಿಡಿಸುವುದು ಕುಂತೀ
ಸುತರು ಕೌರವರೊಡನೆ ಸುಖದಲಿ ರಾಜ್ಯವಾಳುವುದು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಯತಿಗಳಾದಿರಿ, ರೋಷವನ್ನು ಬಿಟ್ಟವರಲ್ಲವೆ ? ಮತ್ತೇನು ಧರ್ಮದ ತಿಳಿವಳಿಕೆಯ ಮೂಲವನ್ನರಿದ ಮನಸ್ಸು ಯುದ್ಧಕ್ಕೆ ಮುಂದಾಗುವುದೆ ? ನೀವು ಭೂಮಿಯನ್ನು ಪಾಲಿಸಿರಿ. ವೈರಿಗಳ ಸಂಕಟವನ್ನು ಬಿಡಿಸಿರಿ. ಕುಂತೀಮಕ್ಕಳು, ನೀವು ಕೌರವರೊಡನೆ ಸುಖದಿಂದ ರಾಜ್ಯವನ್ನು ಆಳಿರಿ.
ಪದಾರ್ಥ (ಕ.ಗ.ಪ)
ವ್ಯತಿಕರ-ಸಂಕಟ
ಮೂಲ ...{Loading}...
ಯತಿಗಳಾದಿರಿ ನೀವು ರೋಷ
ಚ್ಯುತರಲೇ ಬಳಿಕೇನು ಧರ್ಮ
ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ
ಕ್ಷಿತಿಯ ಪಾಲಿಸುವುದು ವಿರೋಧಿ
ವ್ಯತಿಕರವ ಬಿಡಿಸುವುದು ಕುಂತೀ
ಸುತರು ಕೌರವರೊಡನೆ ಸುಖದಲಿ ರಾಜ್ಯವಾಳುವುದು ॥21॥
೦೨೨ ಸೋಲ ಗೆಲವೇ ...{Loading}...
ಸೋಲ ಗೆಲವೇ ಕೌರವರ ಸಮ
ಪಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆಯೇಕೆಮಗೆ
ಮೇಳವೇ ಸಿರಿ ಗಳಿಸಲರಿದು ಜ
ನಾಳಿ ಹೆಂಡಿರಪೂರ್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮಪರಿಣಾಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯ ಅಪಜಯಗಳಲ್ಲಿ ನೀವು ಸೋದರರು ಸರಿ ಜೋಡಿಗಳು. ಪಾಂಚಾಲರಾದ ನಾವೇ ಹೊರಗಿನವರು. ನೀವಿಬ್ಬರೂ ಕೂಡಿಕೊಂಡಿರುವುದೇ ನಿಮಗೆ ಸಂಪತ್ತು. ನಿಮ್ಮೊಡನೆ ನಮಗೆ ಸಲುಗೆ ಏಕೆ ? ಸಂಪತ್ತು ಗಳಿಸುವುದು ಸುಲಭವಲ್ಲ. ಭೂಮಿಯನ್ನು ಪಾಲಿಸುವವರು ನೀವಾಗಿರಲು ನಿಮಗೆ ಹೆಂಡತಿಯರು ಅಪರೂಪವೆ ? ಇವೆಲ್ಲವೂ ನನಗೆ ಪರಮ ಸಂತೋಷವನ್ನುಂಟು ಮಾಡುತ್ತವೆ.
ಪದಾರ್ಥ (ಕ.ಗ.ಪ)
ಸಮಪಾಳಿ - ಸರಿಸಮ, ಜನಾಳಿ - ಜನರ ಗುಂಪು, ಸೋಲ - ಅಪಜಯ, ಪರಿಣಾಮ - ಸಂತೋಷ.
ಮೂಲ ...{Loading}...
ಸೋಲ ಗೆಲವೇ ಕೌರವರ ಸಮ
ಪಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆಯೇಕೆಮಗೆ
ಮೇಳವೇ ಸಿರಿ ಗಳಿಸಲರಿದು ಜ
ನಾಳಿ ಹೆಂಡಿರಪೂರ್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮಪರಿಣಾಮ ॥22॥
೦೨೩ ಭೀಮ ಬಲವದರಾತಿ ...{Loading}...
ಭೀಮ ಬಲವದರಾತಿ ಸೇನಾ
ಭೀಮ ಕುರುಕುಲ ಕುಸುಮಮಾರ್ಗಣ
ಭೀಮ ಮರೆದೈ ಮಾನಿನಿಯ ಮಾನಾಪಹಾನಿಗಳ
ರಾಮನಬಲೆಗೆ ಕುದಿದ ಘನ ಸಂ
ಗ್ರಾಮವನು ನೀ ಕೇಳಿದರಿಯಾ
ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀದೇವಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ! ವೈರಿಗಳ ಸೇನೆಗೆ ಭಯಂಕರ ಸ್ವರೂಪನೇ ಮನ್ಮಥನಿಗೆ ಈಶ್ವರನಾದ ಭೀಮನೇ ! ನಿನ್ನ ಹೆಂಡತಿಗೆ (ಹೆಂಗಸಿಗೆ) ಆದ ಮಾನಾಪಮಾನಗಳನ್ನು ಮರೆತೆಯಾ ! ರಾಮನು ತನ್ನ ಪತ್ನಿ ಸೀತೆಗಾಗಿ ಸಂಕಟಪಟ್ಟು ಅಧಿಕವಾದ ಯುದ್ಧವನ್ನು ನಡೆಸಿದುದನ್ನು ಕೇಳಿ ತಿಳಿಯೆಯಾ ? ನನ್ನನ್ನು ಪ್ರೇಮದಿಂದ ನೋಡು ಎಂದಳು ದ್ರೌಪದಿ.
ಪದಾರ್ಥ (ಕ.ಗ.ಪ)
ಕುದಿದು-ಸಂಕಟಪಟ್ಟು, ಘನ-ಅಧಿಕ, ಭೀಮ-ಭಯಂಕರ, ಆರಾತಿ-ವೈರಿ, ಮಾರ್ಗಣ-ಬಾಣ.
ಮೂಲ ...{Loading}...
ಭೀಮ ಬಲವದರಾತಿ ಸೇನಾ
ಭೀಮ ಕುರುಕುಲ ಕುಸುಮಮಾರ್ಗಣ
ಭೀಮ ಮರೆದೈ ಮಾನಿನಿಯ ಮಾನಾಪಹಾನಿಗಳ
ರಾಮನಬಲೆಗೆ ಕುದಿದ ಘನ ಸಂ
ಗ್ರಾಮವನು ನೀ ಕೇಳಿದರಿಯಾ
ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀದೇವಿ ॥23॥
೦೨೪ ಧರೆಗೆ ಕಟ್ಟಭಿಮಾನ ...{Loading}...
ಧರೆಗೆ ಕಟ್ಟಭಿಮಾನ ಹೆಂಡಿರ
ಹರಿಬವಾ ಹರಿಬದಲಿ ಕೆಡುಹುವು
ದರಿಯನವಗಡಿಸಿದೊಡೆ ಸಾವರು ಪಂಥವುಳ್ಳವರು
ಸುರ ನರೋರಗರೊಳಗೆ ನಿಮ್ಮೆ ೈ
ವರಿಗೆ ಸರಿಯಿಲ್ಲಬಲೆಯೊಬ್ಬಳ
ಹರಿಬದಲಿ ಹಂಗಾದಿರೆಂಬಪದೆಸೆಗೆ ನೋನುವರೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಲ್ಲಿ ಹೆಂಡತಿಯ ಸಂಕಷ್ಟಕ್ಕೆ ನೆರವಾಗಬೇಕಾದುದು ದೊಡ್ಡ ಅಭಿಮಾನ. ಅದಕ್ಕಾಗಿ ಶತ್ರುಗಳನ್ನು ಕೆಡಹಬೇಕು. ಅವರು ಮೇಲೆ ಬಿದ್ದರೆ ಮಾನಮರ್ಯಾದೆಗಳನ್ನುಳ್ಳವರು ಸಾಯಲು ಸಿದ್ಧರಿರುತ್ತಾರೆ. ದೇವತೆಗಳು, ಮನುಷ್ಯರು, ನಾಗಲೋಕದವರೊಳಗೆ ನಿಮಗೆ ಸರಿಸಮಾನರು ಯಾರೂ ಇಲ್ಲ. ಆದರೂ ಒಬ್ಬ ಹೆಣ್ಣಿನ ಹಂಗಿಗೆ ಒಳಗಾದಿರೆಂಬ ಅಪಕೀರ್ತಿಯನ್ನು ಹೊರುವರೆ ?
ಪದಾರ್ಥ (ಕ.ಗ.ಪ)
ಪಂಥ–ಪ್ರತಿಜ್ಞೆ, ಹರಿಬ-ಸಂಕಷ್ಟ, ನೋನು-ಹೊರು
ಮೂಲ ...{Loading}...
ಧರೆಗೆ ಕಟ್ಟಭಿಮಾನ ಹೆಂಡಿರ
ಹರಿಬವಾ ಹರಿಬದಲಿ ಕೆಡುಹುವು
ದರಿಯನವಗಡಿಸಿದೊಡೆ ಸಾವರು ಪಂಥವುಳ್ಳವರು
ಸುರ ನರೋರಗರೊಳಗೆ ನಿಮ್ಮೈ
ವರಿಗೆ ಸರಿಯಿಲ್ಲಬಲೆಯೊಬ್ಬಳ
ಹರಿಬದಲಿ ಹಂಗಾದಿರೆಂಬಪದೆಸೆಗೆ ನೋನುವರೆ ॥24॥
೦೨೫ ಮುನ್ದಲೆಯ ಹಿಡಿದೆಳೆದು ...{Loading}...
ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದರೆ
ಅಂದು ನೀ ಹಿಂದಿಕ್ಕಿ ಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀದೇವಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದಲೆಯನ್ನು ಹಿಡಿದು ಎಳೆದು ತಂದು ಸಭೆಯಲ್ಲಿ ಸೀರೆಯನ್ನು ಸೆಳೆದಾಗ ಕೌರವರ ಮುಂದೆ ಮೌನದಿಂದ ಸುಮ್ಮನಿದ್ದರಲ್ಲದೆ ಈ ಗಂಡಂದಿರು ಏನಾದರೂ ಹೇಳಿದರೆ ? ಅಂದು ನೀನು ಕಾಪಾಡಿದ್ದನ್ನು ಇಂದು ಮರೆತೆ. ಕೃಷ್ಣಾ ! ಸಂಧಿಗೋಸುಗ ಮುಂದುವರಿಯುತ್ತಿರುವೆ ಎಂದು ದ್ರೌಪದಿಯು ಆಡಿದಳು.
ಮೂಲ ...{Loading}...
ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದರೆ
ಅಂದು ನೀ ಹಿಂದಿಕ್ಕಿ ಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀದೇವಿ ॥25॥
೦೨೬ ತನಯರೈವರು ವೀರ ...{Loading}...
ತನಯರೈವರು ವೀರ ಸಹದೇ
ವನು ಘಟೋತ್ಕಚನೀ ಸುಭದ್ರಾ
ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ
ಇನಿಬರೇ ಕಾದುವರು ದುಶ್ಶಾ
ಸನನ ರಕುತವ ಕುಡಿದು ಕುರುಕುಲ
ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐವರು ಮಕ್ಕಳು, ವೀರಸಹದೇವ, ಘಟೋತ್ಕಚ ಈ ಸುಭದ್ರೆಯ ಮಗನಾದ ಅಭಿಮನ್ಯು, ನಮ್ಮ ತಂದೆ ಮತ್ತು ಮೂರು ಆಕ್ಲೋಹಿಣಿ ಸೈನ್ಯ ಇಷ್ಟೇ ಜನರು ಹೋರಾಡುತ್ತಾರೆ. ದುಶ್ಯಾಸನನ ರಕ್ತವನ್ನು ಕುಡಿದು ಕುರುಕುಲದ ಕಾಡನ್ನು ಸುಡುತ್ತಾರೆ. ನಿಮ್ಮ ದಾಕ್ಷಿಣ್ಯವೇಕೆಂದು ದ್ರೌಪದಿಯು ನುಡಿದಳು.
ಪದಾರ್ಥ (ಕ.ಗ.ಪ)
ಹಂಗು-ದಾಕ್ಷಿಣ್ಯ
ಮೂಲ ...{Loading}...
ತನಯರೈವರು ವೀರ ಸಹದೇ
ವನು ಘಟೋತ್ಕಚನೀ ಸುಭದ್ರಾ
ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ
ಇನಿಬರೇ ಕಾದುವರು ದುಶ್ಶಾ
ಸನನ ರಕುತವ ಕುಡಿದು ಕುರುಕುಲ
ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ ॥26॥
೦೨೭ ವರಸತಿಯ ಬಿಸುಸುಯ್ಲ ...{Loading}...
ವರಸತಿಯ ಬಿಸುಸುಯ್ಲ ಗಾಳಿಯೊ
ಳುರಿ ಚಡಾಳಿಸೆ ರೋಷಮಯದು
ಬ್ಬರದೊಳೌಡೊತ್ತಿದನು ಹಿಡಿದನು ಖತಿಯನಹಿತರೊಳು
ತರುಣಿ ಸೈರಿಸು ಸೈರಿಸಿನ್ನೀ
ಸುರಿವ ಕಂಬನಿಗಳಿಗೆ ಶತ ಸಾ
ವಿರ ಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತಿಯಾದ ದ್ರೌಪದಿಯ ಬಿಸಿ ಉಸಿರಿನ ಗಾಳಿಯು ಉರಿಯನ್ನು ಹೆಚ್ಚಿಸಲು ಅತಿಶಯವಾದ ಕೋಪದಿಂದ ಹಲ್ಲು ಕಡಿದನು. ಶತ್ರುಗಳಲ್ಲಿ ಕೋಪವನ್ನು ತುಂಬಿಕೊಂಡನು. ಹೆಣ್ಣೇ ! ಸಹಿಸು, ತಾಳು, ನೀನು ಸುರಿಸುವ ಕಣ್ಣೀರಿನ ಹನಿಗಳಿಗೆ ಲಕ್ಷದಷ್ಟು ಕಣ್ಣೀರನ್ನು ಶತ್ರುಗಳ ಹೆಂಡಿರಲ್ಲಿ ಸುರಿಸುತ್ತೇನೆ. ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಚಡಾಳಿಸೆ-ಹೆಚ್ಚಿಸಲು, ಉಬ್ಬರ-ಅತಿಶಯ, ಖತಿ-ಕೋಪ, ಸೈರಿಸು-ಸಹಿಸು/ತಾಳು
ಮೂಲ ...{Loading}...
ವರಸತಿಯ ಬಿಸುಸುಯ್ಲ ಗಾಳಿಯೊ
ಳುರಿ ಚಡಾಳಿಸೆ ರೋಷಮಯದು
ಬ್ಬರದೊಳೌಡೊತ್ತಿದನು ಹಿಡಿದನು ಖತಿಯನಹಿತರೊಳು
ತರುಣಿ ಸೈರಿಸು ಸೈರಿಸಿನ್ನೀ
ಸುರಿವ ಕಂಬನಿಗಳಿಗೆ ಶತ ಸಾ
ವಿರ ಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ ॥27॥
೦೨೮ ಉರಿ ಹೊಗುವ ...{Loading}...
ಉರಿ ಹೊಗುವ ಮೀಸೆಗಳ ಬೆರಳಲಿ
ಮುರುಹಿ ವಾಮದ ಕರದಿ ತರುಣಿಯ
ಕುರುಳ ಸಂತೈಸಿದನು ಕಿಡಿಕಿಡಿಯೋಗಿ ಖಾತಿಯಲಿ
ನರಕಮರ್ದನ ಕೇಳು ಕೌರವ
ನರಿಗಳಿದಿರೇ ಕೀಳುವೆನು ಕುಲ
ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯುತ್ತಿರುವ ಮೀಸೆಗಳನ್ನು ಬೆರಳಿನಿಂದ ತಿರುಹಿ ಎಡಗೈಯಿಂದ ದ್ರೌಪದಿಯ ಕೂದಲನ್ನು ನೇವರಿಸುತ್ತ ಸಮಾಧಾನಿಸಿದನು. ಭೀಮನು ಕೋಪದಿಂದ ಕಿಡಿಕಿಡಿಯಾಗಿ, ಕೃಷ್ಣನೇ ಕೇಳು ! ಕೌರವ ನರಿಗಳು ನನಗೆ ಎದುರೆ ? ಕುಲಪರ್ವತಗಳನ್ನೇ ಕಿತ್ತು ಹಾಕುತ್ತೇನೆ. ಅವರ ಕುಲ ಕೋಟಿಗಳನ್ನು ನಾಶ ಮಾಡುವೆನು ; ಯಮನ ಹಣೆ ಬರಹವನ್ನು ಅಳಿಸುವೆನು ಎಂದನು.
ಪದಾರ್ಥ (ಕ.ಗ.ಪ)
ಕುರುಳ-ಕೂದಲನ್ನು, ಕೃತಾಂತ-ಯಮ, ತೊಡೆವೆನು-ನಾಶಮಾಡುವೆನು.
ಮೂಲ ...{Loading}...
ಉರಿ ಹೊಗುವ ಮೀಸೆಗಳ ಬೆರಳಲಿ
ಮುರುಹಿ ವಾಮದ ಕರದಿ ತರುಣಿಯ
ಕುರುಳ ಸಂತೈಸಿದನು ಕಿಡಿಕಿಡಿಯೋಗಿ ಖಾತಿಯಲಿ
ನರಕಮರ್ದನ ಕೇಳು ಕೌರವ
ನರಿಗಳಿದಿರೇ ಕೀಳುವೆನು ಕುಲ
ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ ॥28॥
೦೨೯ ಯಮಸುತನ ಹರುವೆನ್ತುಟೆನ್ದಾ ...{Loading}...
ಯಮಸುತನ ಹರುವೆಂತುಟೆಂದಾ
ಕ್ರಮಕೆ ಮೊಗದಿರುಹಿದೆನು ಬಳಿಕೀ
ಕಮಲವದನೆಯ ಹರಿಬವೆನ್ನದು ಪತಿಗಳಿನಿಬರಲಿ
ಎಮಗೆ ಸಂಪ್ರತಿಗಿಲ್ಲ ಮನ ಘನ
ಸಮರವೇ ಸರ್ವಾರ್ಥ ಕೋಪ
ಶ್ರಮಕೆ ರಿಪುರುಧಿರಾಂಬು ಪಾನವೆ ವಿಪುಳ ಫಲವೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನ ಆಲೋಚನೆಯ ರೀತಿ ಹೇಗಿದೆಯೇ ಎಂದು ಆ ಕೌರವರ ವಿರುದ್ಧ ಆಕ್ರಮಣಕ್ಕೆ ಮುಖವನ್ನು ತಿರುಹಿದೆನು. ಆದರೆ ಈ ದ್ರೌಪದಿಯ ಕಾರ್ಯವು ನನ್ನದಾಗಿರುತ್ತದೆ. ಅಷ್ಟೂ ಜನ ಪತಿಯರಲ್ಲಿ ನನ್ನ ಮನಸ್ಸು ಒಪ್ಪಂದಕ್ಕೆ ಇಲ್ಲ. ಎಲ್ಲದ್ದಕ್ಕೂ ಅಧಿಕವಾದ ಯುದ್ಧವೇ ಸರಿ. ನನ್ನ ಕೋಪದ ಆಯಾಸಕ್ಕೆ ಶತ್ರುಗಳ ರಕ್ತದ ನೀರನ್ನು ಕುಡಿಯುವುದೇ ಅಧಿಕ ಪರಿಹಾರ.
ಪದಾರ್ಥ (ಕ.ಗ.ಪ)
ಹರುವು-ಉಪಾಯ/ನೀತಿ, ಹರಿಬ-ಸಂಕಷ್ಟ, ಸರ್ವಾರ್ಥ-ಎಲ್ಲದ್ದಕ್ಕೂ, ವಿಪುಳ-ಬಹಳ, ಶ್ರಮ-ಆಯಾಸ.
ಮೂಲ ...{Loading}...
ಯಮಸುತನ ಹರುವೆಂತುಟೆಂದಾ
ಕ್ರಮಕೆ ಮೊಗದಿರುಹಿದೆನು ಬಳಿಕೀ
ಕಮಲವದನೆಯ ಹರಿಬವೆನ್ನದು ಪತಿಗಳಿನಿಬರಲಿ
ಎಮಗೆ ಸಂಪ್ರತಿಗಿಲ್ಲ ಮನ ಘನ
ಸಮರವೇ ಸರ್ವಾರ್ಥ ಕೋಪ
ಶ್ರಮಕೆ ರಿಪುರುಧಿರಾಂಬು ಪಾನವೆ ವಿಪುಳ ಫಲವೆಂದ ॥29॥
೦೩೦ ಕೆಡಹಿ ರಿಪುವನು ...{Loading}...
ಕೆಡಹಿ ರಿಪುವನು ಕರುಳ ದಂಡೆಯ
ಮುಡಿಸುವೆನು ಮಾನಿನಿಗೆ ರಕುತವ
ಕುಡಿಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ
ನಡೆದು ಸಂಧಿಯ ಮಾಡಿ ಮುರರಿಪು
ಕೊಡಿಸು ನಾಲ್ಕೂರುಗಳನಿವರಿಗೆ
ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವನ್ನು ಕೆಡವಿ (ಸಾಯಿಸಿ) ಕರುಳಿನ ಮಾಲೆಯನ್ನು ದ್ರೌಪದಿಗೆ ಮುಡಿಸುವೆನು. ಆ ಸಹೋದರರ ರಕ್ತವನ್ನು ಕುಡಿಯಲು ಕ್ಷುದ್ರದೇವತೆಯರಿಗೆ ಸುರಿವೆನು. ಕೃಷ್ಣಾ ! ನೀನು ಹೋಗಿ ಸಂಧಿಯನ್ನು ಮಾಡಿ ಇವರಿಗೆ ನಾಲ್ಕು ಊರನ್ನು ಕೊಡಿಸು ಸಾಕು. ತಡಮಾಡದೆ ನಾನು ದುರ್ಯೋಧನನ ಎರಡು ತೊಡೆಗಳನ್ನು ಬಿಡದೆ ತೆಗೆದುಕೊಳ್ಳುತ್ತೇನೆ. ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಕೆಡಹಿ-ಬೀಳಿಸಿ (ಸಾಯಿಸಿ) ದಂಡೆ-ಮಾಲೆ, ಎರೆ-ಸುರಿ, ಶಾಕಿನಿ-ಒಂದು ಕ್ಷುದ್ರದೇವತೆ,
ಮೂಲ ...{Loading}...
ಕೆಡಹಿ ರಿಪುವನು ಕರುಳ ದಂಡೆಯ
ಮುಡಿಸುವೆನು ಮಾನಿನಿಗೆ ರಕುತವ
ಕುಡಿಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ
ನಡೆದು ಸಂಧಿಯ ಮಾಡಿ ಮುರರಿಪು
ಕೊಡಿಸು ನಾಲ್ಕೂರುಗಳನಿವರಿಗೆ
ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ ॥30॥