೦೦೦ ಸೂ ಮುನಿವರನ ...{Loading}...
ಸೂ. ಮುನಿವರನ ಕರುಣದಲಿ ಕೌರವ
ಜನಪನಮಳಬ್ರಹ್ಮ ವಿದ್ಯೆಯ
ನನುಕರಿಸಿ ಚರಿತಾರ್ಥಭಾವದಲಿರುಳ ನೂಕಿದನು
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಮುನಿಶ್ರೇಷ್ಠರಾದ ಸನತ್ಸುಜಾತರ ದಯೆಯಿಂದ ಧೃತರಾಷ್ಟ್ರನು ಗಹನವಾದ ವಿದ್ಯೆಯನ್ನು ಸ್ವೀಕರಿಸಿ ಧನ್ಯತೆಯ ಭಾವದಲ್ಲಿ ರಾತ್ರಿಯನ್ನು ಕಳೆದನು.
ಮೂಲ ...{Loading}...
ಸೂ. ಮುನಿವರನ ಕರುಣದಲಿ ಕೌರವ
ಜನಪನಮಳಬ್ರಹ್ಮ ವಿದ್ಯೆಯ
ನನುಕರಿಸಿ ಚರಿತಾರ್ಥಭಾವದಲಿರುಳ ನೂಕಿದನು
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಬೋಧೆಗಂಧನೃ
ಪಾಲನಂತಃಕರಣಶುದ್ಧಿಯನೆಯ್ದಿದನು ಬಳಿಕ
ಹೇಳು ಹೇಳಿನ್ನಾತ್ಮವಿದ್ಯೆಯ
ಮೂಲಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾ ವಿದುರ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಮಹಾರಾಜ, ಕೇಳು, ವಿದುರನು ನೀಡಿದ ತಿಳಿವಳಿಕೆಯಿಂದ ಧೃತರಾಷ್ಟ್ರನು ಮನಃಶುದ್ಧಿಯನ್ನು ಪಡೆದನು. ಅನಂತರ ಆತ್ಮ ವಿದ್ಯೆಯ ಮೂಲಮಂತ್ರದ ಬೀಜಾಕ್ಷರವನ್ನು ಇನ್ನೂ ಹೇಳು, ಕೇಳುತ್ತೇನೆ ಎಂದು ಹೇಳಲು ವಿದುರನು ಕೈ ಮುಗಿದು ನಗುತ್ತ ಹೇಳಿದನು.
ಪದಾರ್ಥ (ಕ.ಗ.ಪ)
ಚರಿತಾರ್ಥ ಭಾವ-ತಾನೆ ಆಚರಿಸಿದ ಭಾವ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಬೋಧೆಗಂಧನೃ
ಪಾಲನಂತಃಕರಣಶುದ್ಧಿಯನೆಯ್ದಿದನು ಬಳಿಕ
ಹೇಳು ಹೇಳಿನ್ನಾತ್ಮವಿದ್ಯೆಯ
ಮೂಲಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾ ವಿದುರ ॥1॥
೦೦೨ ಅವಧರಿಸು ಪರತತ್ವ ...{Loading}...
ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯ ಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳು ಧೃತರಾಷ್ಟ್ರ ! ಮೋಕ್ಷ ತತ್ವದ ವಿದ್ಯೆಯ ವಿವರವಾದ ಜ್ಞಾನವು ಬೇರೆಯವರಿಗೆ ತಿಳಿಯದು. ಅದು ಶ್ರೇಷ್ಠರಾದ ಮುನಿಗಳ ಕೃಪೆಯಿಂದಲೇ ತಿಳಿಯತಕ್ಕದ್ದು. ಬ್ರಹ್ಮ ಜ್ಞಾನದ ಉಪದೇಶವು ಅವರಿವರ ಬಾಯಿಂದ ಒದಗಿ ಬರುವುದೆ ? ಅದರ ರೀತಿ-ನೀತಿಗಳನ್ನು ಯಾರು ಬಲ್ಲರು.
ಪದಾರ್ಥ (ಕ.ಗ.ಪ)
ಅವಧರಿಸು-ಕೇಳು, ಹವಣ-ನೆಲೆ, ಪರತತ್ತ್ವ-ಬ್ರಹ್ಮವಿದ್ಯೆ
ಮೂಲ ...{Loading}...
ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯ ಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ॥2॥
೦೦೩ ಒಬ್ಬನೇ ಬಲ್ಲವನು ...{Loading}...
ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರ್ಣನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವದೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಬಲ್ಲವನು ಒಬ್ಬನೇ. ಲೋಕದಲ್ಲಿ ಮತ್ತೊಬ್ಬರಿಲ್ಲ. ಸರ್ವಗುಣಗಳಿಂದ ಸಂಪೂರ್ಣನಾಗಿರತಕ್ಕ ಸನತ್ಸುಜಾತನನ್ನು ನೀನು ಧ್ಯಾನ ಮಾಡು ಸುಸಂಸ್ಕೃತನಾಗಿರುವೆ, ಎಂದು ಹೇಳಲು, ಕರ್ತವ್ಯ ಪ್ರಜ್ಞೆಯಿಂದ ಧೃತರಾಷ್ಟ್ರನು ಮುನಿಯ ಸ್ವರೂಪವನ್ನು ನೆನೆಯುತ್ತಿರಲು ಜ್ಞಾನಿಗಳ ಸಮೂಹದ ಕಮಲವನ್ನರಳಿಸುವ ಸೂರ್ಯನಂತೆ ಸನತ್ಸುಜಾತನು ಆ ಕ್ಷಣದಲ್ಲಿ ಮೂಡಿದನು.
ಪದಾರ್ಥ (ಕ.ಗ.ಪ)
ಆವಿರ್ಭವಿಸು-ಅವತರಿಸು/ಪ್ರತ್ಯಕ್ಷನಾಗು, ಅರ್ಕ-ಸೂರ್ಯ
ಟಿಪ್ಪನೀ (ಕ.ಗ.ಪ)
ಸನತ್ಸುಜಾತರು ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬರು. ಸದಾ ಕೌಮಾರಾವಸ್ಥೆಯಲ್ಲಿರತಕ್ಕ ಮಹಾತಪಸ್ವಿ ಮತ್ತು ಜ್ಞಾನ ಸಂಪನ್ನರು, ಧೃತರಾಷ್ಟ್ರನಿಗೆ ಅವರು ಮಾಡಿದ ಈ ತತ್ವೋಪದೇಶವು ಸನತ್ಸುಜಾತೀಯವೆಂದೇ ರೂಢಿಯಾಗಿದೆ.
ಮೂಲ ...{Loading}...
ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರ್ಣನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವದೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ॥3॥
೦೦೪ ನೆನೆಯಲೊಡನೆ ಸನತ್ಸುಜಾತನು ...{Loading}...
ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವಹುದೆನಲರುಹಿದನು ಪರಲೋಕಸಾಧನವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆನೆದೊಡನೆ ಸನತ್ಸುಜಾತರು ಅರಮನೆಗೆ ಬಂದರು. ಅವರನ್ನು ಎದುರುಗೊಂಡು, ನಮಸ್ಕರಿಸಿ, ಮುನಿಗಳೆ ! ನನಗೆ ಬ್ರಹ್ಮೋಪದೇಶವನ್ನು ಕೃಪೆ ಮಾಡಬೇಕೆಂದು ಕೇಳಲು, ಪ್ರೀತಿಯಿಂದ ಧೃತರಾಷ್ಟ್ರನಿಗೆ ಜನಜನಿತವಾದ ಪರಲೋಕ ಸಾಧನೆಯನ್ನು ಸನತ್ಸುಜಾತರು ತಿಳಿಸಿದರು.
ಪದಾರ್ಥ (ಕ.ಗ.ಪ)
ಅನುನಯ-ನಯವಾದ/ಪ್ರೀತಿ, ಜನಜನಿತ-ಜನರಲ್ಲಿ ಹಬ್ಬಿರುವ ವಿಷಯ
ಮೂಲ ...{Loading}...
ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವಹುದೆನಲರುಹಿದನು ಪರಲೋಕಸಾಧನವ ॥4॥
೦೦೫ ಚಿತ್ತವಿಸು ಧೃತರಾಷ್ಟ್ರನೃಪ ...{Loading}...
ಚಿತ್ತವಿಸು ಧೃತರಾಷ್ಟ್ರನೃಪ ಪರ
ತತ್ವ ವಿದ್ಯಾ ವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಮಹಾರಾಜ ಗಮನವಿಟ್ಟು ಕೇಳು ! ಮೋಕ್ಷ ವಿಷಯಗಳ ವ್ಯತ್ಯಾಸವನ್ನು ಹೇಳುವೆ. ಸ್ಥಾವರ ಮತ್ತು ಜಂಗಮಗಳಿಂದ (ಜಡ ಮತ್ತು ಚೇತನ) ಕೂಡಿದ ಈ ಜಗತ್ತಿನಲ್ಲಿ ನೀನು ಉತ್ತಮ, ಅಧಮ ಮತ್ತು ಕನಿಷ್ಠರೆನ್ನದೆ, ಸುಖ-ದುಃಖಗಳಲ್ಲಿ ಮುಳುಗದೆ ಸಮಸ್ಥಿತಿಯಲ್ಲಿರುವುದೇ ನಿನಗೆ ಹಿತವಾಗುವುದು.
ಮೂಲ ...{Loading}...
ಚಿತ್ತವಿಸು ಧೃತರಾಷ್ಟ್ರನೃಪ ಪರ
ತತ್ವ ವಿದ್ಯಾ ವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ॥5॥
೦೦೬ ಅವನಿಪತಿ ಕೇಳಾತ್ಮನಿಂ ...{Loading}...
ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿಯಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿಯೋಷಧಿಗಳಿಂ
ದವತರಿಸಿತಾನಾದಿ ಪುರುಷ ಪ್ರಕೃತಿ ವಿಕೃತಿಗಳು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೇತನದಿಂದ ಆಕಾಶವು, ಆಕಾಶದಿಂದ ಗಾಳಿಯು, ಗಾಳಿಯಿಂದ ಬೆಂಕಿಯು, ಬೆಂಕಿಯಿಂದ ಈ ಜಗತ್ತು ಆಯಿತು. ಜಗತ್ತಿನಿಂದ ಭೂಮಿ, ಭೂಮಿಯಿಂದ ಸಸ್ಯ ಮೂಲಿಕೆಗಳು ಹುಟ್ಟಿದವು. ಅವುಗಳಿಂದ ಸಮಸ್ತ ಪುರುಷ, ಪ್ರಕೃತಿಗಳು ಮತ್ತು ಅದರ ರೂಪಾಂತರಗಳು ಭೂಮಿಗೆ ಇಳಿದವು.
ಪದಾರ್ಥ (ಕ.ಗ.ಪ)
ಭುವನ-ನೀರು, ಔಷಧಿ-ಸತ್ಯ
ಮೂಲ ...{Loading}...
ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿಯಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿಯೋಷಧಿಗಳಿಂ
ದವತರಿಸಿತಾನಾದಿ ಪುರುಷ ಪ್ರಕೃತಿ ವಿಕೃತಿಗಳು ॥6॥
೦೦೭ ನೇತ್ರ ನಾಸಿಕ ...{Loading}...
ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ಣು, ಮೂಗು, ಕಾಲು, ಕೈ, ಕಿವಿಗಳಾದ ಈ ಪಂಚೇಂದ್ರಿಯಗಳು ಒಂದು ನಿಯಮದಲ್ಲಿ ನಿರ್ಮಾಣವಾದಂತೆ, ಸಮಾನ ಬುದ್ಧಿಯಲ್ಲಿ ಈ ಶರೀರವನ್ನು ಹಿಡಿದಿರುವಂತೆ, ಲೋಕದಲ್ಲಿ ಯೋಗ್ಯವಾದುದು, ಅಯೋಗ್ಯವಾದುದು ಎಂಬ ಭೇದವಿಲ್ಲದೇ ಸಮಾನತೆಯಲ್ಲಿ ಬದುಕುವುದು ಒಳ್ಳೆಯ ಗುಣವು.
ಪದಾರ್ಥ (ಕ.ಗ.ಪ)
ನೇತ್ರ-ಕಣ್ಣು, ನಾಸಿಕ-ಮೂಗು, ಪಾಣಿ-ಕೈ, ಶ್ರೋತ್ರ-ಕಿವಿ
ಸಂಸೃಷ್ಟ - ಜೊತೆಗೂಡಿದ, ಒಟ್ಟಾಗಿ ಸೇರಿದ
ಮೂಲ ...{Loading}...
ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ॥7॥
೦೦೮ ಸೃಷ್ಟಿ ಸಂಹಾರದಲಿ ...{Loading}...
ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳ್ ಎಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ಪತ್ತಿ ನಾಶಗಳಲ್ಲಿ, ಜೀವಿಗಳ ವ್ಯವಸ್ಥೆ - ಅವ್ಯವಸ್ಥೆಗಳ ನಿಯಮದಲ್ಲಿ ಜ್ಞಾನ-ಅಜ್ಞಾನಗಳಲ್ಲಿ, ಸುಖ-ದುಃಖಗಳಲ್ಲಿ ಮನಸ್ಸು ಇಡದೇ ಕಾಲ ಮತ್ತು ಕರ್ಮಗಳನ್ನು ಮೀರಿ ನಿಂತರೆ ಭಗವಂತನೆನಿಸುವೆ.
ಪದಾರ್ಥ (ಕ.ಗ.ಪ)
ವಿದ್ಯಾ-ಬ್ರಹ್ಮವಿದ್ಯೆ, ಅವಿದ್ಯಾ-ಲೌಕಿಕವಿದ್ಯೆ
ಮೂಲ ...{Loading}...
ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ॥8॥
೦೦೯ ಅಣುವಿನಲಿ ಲಘುವಿನಲಿ ...{Loading}...
ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ಪ್ರಕಟಿತದ ಪರಿವಿಡಿಯ
ಕುಣಿಕೆಗಳಲಿ ವಶಿತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗ ಸಿದ್ಧಿಗೆ ಲಕ್ಷಣವಿದೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂಕ್ಷ್ಮ ರೂಪವನ್ನು ಧರಿಸುವಲ್ಲಿ, ಹಗುರವಾಗುವುದರಲ್ಲಿ, ಭಾರವಾಗುವ ಆಲೋಚನೆಯಲ್ಲಿ, ಬೃಹತ್ ರೂಪವನ್ನು ತಾಳುವಲ್ಲಿ, ಪಡೆಯಲಾಗದ್ದನ್ನು ಪಡೆಯುವ ಮಾತುಕತೆಗಳಲ್ಲಿ, ಪ್ರಭಾವವನ್ನು ಬೀರುವುದರಲ್ಲಿ, ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ, ಇಂದ್ರಿಯ ನಿಗ್ರಹವನ್ನು ಬಳಸಿಕೊಂಡು. ಅತ್ಯಂತ ನಿಖರವಾದ ಪ್ರಾಣಾಯಾಮಗಳ ಪ್ರಕಾರವಾದ ಉಚ್ವಾಸ - ನಿಶ್ವಾಸಗಳ ಹರಿದಾಡುವಿಕೆಯನ್ನು ತಿಳಿದುಕೊಳ್ಳುವುದೇ ಯೋಗ ಸಿದ್ಧಿಯ ಗುರಿ.
ಪದಾರ್ಥ (ಕ.ಗ.ಪ)
ಭಣಿತೆ-ಮಾತು, ವೆಂಟಣಿಸು-ಸುತ್ತುವರಿ, ಅಣು-ಸೂಕ್ಷ್ಮ, ಲಘು-ಹಗುರ, ಗುರು-ಭಾರ, ಮಹಿಮಾ-ದೊಡ್ಡರೂಪ
ಟಿಪ್ಪನೀ (ಕ.ಗ.ಪ)
ಮೇಲಿನ ವರ್ಣನೆಯು ಅಷ್ಟ ಸಿದ್ಧಿಗಳ ಲಕ್ಷಣ.
ಅಷ್ಟ ಸಿದ್ಧಿಗಳು : ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಷಿತ್ವ, ವಶಿತ್ವ.
ಮೂಲ ...{Loading}...
ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ಪ್ರಕಟಿತದ ಪರಿವಿಡಿಯ
ಕುಣಿಕೆಗಳಲಿ ವಶಿತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗ ಸಿದ್ಧಿಗೆ ಲಕ್ಷಣವಿದೆಂದ ॥9॥
೦೧೦ ತ್ಯಜಿಸುವುದು ದುಸ್ಸಙ್ಗವನು ...{Loading}...
ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋ ರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟರ ಸಹವಾಸವನ್ನು ಬಿಡು, ಸಜ್ಜನರನ್ನು ಸೇರು, ಗಲಿಬಿಲಿಗೊಳ್ಳದಿರು. ಹಗಲು ರಾತ್ರಿ ಎನ್ನದೆ ಧರ್ಮವನ್ನು ಶೇಖರಿಸು. ಅನಂತಾನಂತವಾದ ನಿತ್ಯಾನಿತ್ಯ ವಸ್ತುಗಳನ್ನು ಧ್ಯಾನಿಸು, ವಿಜಯಿಯಾಗುತ್ತೀಯೆ, ಇಹಪರಗಳಿಗೆ ಇದು ಸತ್ಯವಾದುದು ಎಂದರು ಸನತ್ಸುಜಾತರು.
ಪದಾರ್ಥ (ಕ.ಗ.ಪ)
ತ್ಯಜಿಸು-ಬಿಡು, ಗಜಬಜಿಸು-ತಳಮಳಿಸು, ಅಹಃ-ಹಗಲು
ಮೂಲ ...{Loading}...
ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋ ರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ ॥10॥
೦೧೧ ಕಾಯವಿದು ನೆಲೆಯಲ್ಲ ...{Loading}...
ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದೇಹವು ಸ್ಥಿರವಲ್ಲ, ಸಂಪತ್ತು ನಮ್ಮನ್ನು ಆಕ್ರಮಿಸುವ ಮಾಯಾರೂಪಿನ ಮೃತ್ಯುದೇವತೆ, ಈತನ ಅಂತ್ಯ ಸಮಯ ಯಾವುದೆಂದು ಬಾಯಿ ಬಿಡುತ್ತಿದ್ದಾಳೆ. ಮಹಾತ್ಮರಾದವರು ಇದರಿಂದ ದೂರವಾಗಲು ಸಹಾಯವಾಗುವ ನಿಯಮವನ್ನು ಪೂರ್ಣವಾಗಿ ಅನುಸರಿಸಿ ಮೋಕ್ಷವನ್ನು ಪಡೆಯುವರು.
ಪದಾರ್ಥ (ಕ.ಗ.ಪ)
ನೆಲೆ-ಸ್ಥಿರ, ದಾಯ-ಸಮಯ, ನಿರ್ದಾಯ-ಸಂಪೂರ್ಣ
ಮೂಲ ...{Loading}...
ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ॥11॥
೦೧೨ ಕೆಟ್ಟ ...{Loading}...
ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟು ಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ, ಕೇಳು, ಶಬ್ದ , ಸ್ಪರ್ಶ, ರೂಪ, ರಸ, ಗಂಧಗಳ ಸಹವಾಸದಲ್ಲಿ ಸದಾ ಇದ್ದು, ಜಿಗುಪ್ಸೆ ಹೊಂದಿ, ಮನಸ್ಸಿಗೆ ಕೊರತೆಯಾದರೂ, ನಿತ್ಯ ಸಂಸಾರದ ಸುಖದ ಆಕರ್ಷಣೆಗೊಳಗಾಗಿ, ಕಂಗೆಟ್ಟು, ಹುಟ್ಟು - ಸಾವಿನ ತೊಂದರೆಯನ್ನು ಅನುಭವಿಸುತ್ತ ನಾನಾ ಜನ್ಮಗಳಲ್ಲಿ ಬಳಲುವುದು ಯೋಗ್ಯವೆ ?
ಪದಾರ್ಥ (ಕ.ಗ.ಪ)
ಚಿಟ್ಟುಮುರಿಯಾಟ-ಮುಟ್ಟಾಟ/ಲಟಿಕೆ ಮುರಿತ, ಸಂದಷ್ಟ-ಕಚ್ಚಿದ, ಎಳಸು-ಬಯಸು
ವಿಲಗ-ತೊಂದರೆ, ತಟಗುಟ್ಟು-ಬಳಲು
ಮೂಲ ...{Loading}...
ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟು ಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ॥12॥
೦೧೩ ಹಲವು ವರ್ಣದೊಳೆಸೆವ ...{Loading}...
ಹಲವು ವರ್ಣದೊಳೆಸೆವ ಗೋಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮೂಹದಲ್ಲಿ ಶೋಭಿಸುವ ಗೋವುಗಳು ಅನೇಕ ಬಣ್ಣದವಾದರೂ ಅವು ನೀಡುವ ಹಾಲು ಮಾತ್ರ ಒಂದೇ ಬಣ್ಣದ್ದಾಗಿರುವಂತೆ, ದಾರಿತಪ್ಪಿದ ಚರಾಚರಗಳಲ್ಲಿ ಸಂಚರಿಸಿ, ಮರೆಯಾದರೂ, ಕೊನೆಯಲ್ಲಿನ ಸ್ಥಿತಿ ಮಾತ್ರ ಒಂದೇ ಹೊರತು ಮತ್ತೊಂದಿಲ್ಲವೆಂಬುದು ಮಾತ್ರ ನಿಜ.
ಪದಾರ್ಥ (ಕ.ಗ.ಪ)
ಸಂಕಲ-ಹಿಂಡು, ಹೊಲಬು-ನೆಲೆ
ಮೂಲ ...{Loading}...
ಹಲವು ವರ್ಣದೊಳೆಸೆವ ಗೋಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ॥13॥
೦೧೪ ಅತಿಶಯದ ಸುಕೃತವನು ...{Loading}...
ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳ್ ಎಂದನಾ ಮುನಿಪ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯನು ಹೆಚ್ಚಿನ ಪುಣ್ಯವನ್ನು ಸಂಪಾದಿಸಿ, ಸ್ವರ್ಗವೇ ಮೊದಲಾದ ಸುಖಗಳ ಹಿರಿಮೆಯನ್ನು ಅನುಭವಿಸಿದರೂ, ಕೆಲವು ಕಾಲದ ನಂತರ ಮತ್ತೆ ಭೂಮಿಗೆ ಬೀಳುವುದು ತಪ್ಪದು. ಆದ್ದರಿಂದ ಮರಳಿ ಜನ್ಮವನ್ನು ಪಡೆಯದಂತಹ ಮಹಾನುಭಾವರ ಮಾರ್ಗವನ್ನು ಹಿಡಿದು ನಡೆಯುವುದು ನ್ಯಾಯ.
ಪದಾರ್ಥ (ಕ.ಗ.ಪ)
ಸುಕೃತ-ಪುಣ್ಯ, ಉನ್ನತಿಕೆ-ಹೆಚ್ಚಳ
ಮೂಲ ...{Loading}...
ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ॥14॥
೦೧೫ ಸಕಲ ಧರ್ಮದ ...{Loading}...
ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದ ಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಧರ್ಮದ ಸಾರಾಂಶವನ್ನು ಬುದ್ಧಿಗೆ ಯಾವ ಕೊರತೆಯೂ ಇಲ್ಲದಂತೆ ಗಮನವಿಟ್ಟು ಕೇಳು. ನಿನಗೆ ಯಾವುದು ಅಡ್ಡಿಯೋ ಅದನ್ನು ಸಮಯೋಚಿತ ಜ್ಞಾನದಿಂದ ಬೇರೆಯವರಿಗೆ ಮಾಡದಿದ್ದರೆ ನಿನಗೆ ಮುಕ್ತಿ ದೊರೆಯುವುದು. ಅದಕ್ಕೆ ಸಂಸಾರದಲ್ಲಿ ಇದೇ ಸಾಧನವೆಂಬುದು ಸಕಲ ಜನರ ಅಭಿಪ್ರಾಯವೆಂದು ಸನತ್ಸುಜಾತನು ಹೇಳಿದನು.
ಪದಾರ್ಥ (ಕ.ಗ.ಪ)
ಸಾರ-ತಿರುಳು, ಮತಿವಿಕಳ-ಬುದ್ಧಿಗೆಟ್ಟ, ನಿರ್ಮುಕ್ತ-ಬಿಡುಗಡೆಯ
ಮೂಲ ...{Loading}...
ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದ ಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ॥15॥
೦೧೬ ಒನ್ದು ವಸ್ತುವನೆರಡು ...{Loading}...
ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇರುವ ಒಂದೇ ಒಂದು ಪರಾತ್ಪರ ವಸ್ತುವನ್ನು ಅನೇಕವೆಂಬ ತಪ್ಪು ತಿಳುವಳಿಕೆಯಲ್ಲಿ ಮನಸ್ಸಿನ ಭೇದದಿಂದ ಸಂಪೂರ್ಣಜ್ಞಾನವನ್ನು ಪಡೆಯಲಾಗದೇ, ಸತ್ಯದ ಹಿಂದು ಮುಂದನ್ನು ಅರಿಯದೆ, ಮಹಾತ್ಮರ ಮಾರ್ಗವನ್ನು ಅನುಸರಿಸದೆ ಈ ಜಗತ್ತು ಕೆಡುತ್ತಿದೆ.
ಪದಾರ್ಥ (ಕ.ಗ.ಪ)
ಸಮ್ಯಗ್ ಜ್ಞಾನ - ಸಂಪೂರ್ಣ ಜ್ಞಾನ, ಮನಸಂದು-ಮನದೊಳೊಪ್ಪಿ, ದಂದುಗಬಡು-ಗೊಂದಲಕ್ಕೀಡಾಗು, ಪಥ-ದಾರಿ
ಮೂಲ ...{Loading}...
ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ॥16॥
೦೧೭ ಪ್ರಣವದೊನ್ದಾ ವರ್ಣಮೂರರ ...{Loading}...
ಪ್ರಣವದೊಂದಾ ವರ್ಣಮೂರರ
ಗುಣವಿಡಿದು ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರು ಅಕ್ಷರಗಳು ಒಂದುಗೂಡಿ ಆಗಿರುವ ‘ಓಂ’ಕಾರದಂತೆ ಚರಾಚರಗಳು ವಿಶ್ವದಲ್ಲಿ ಬೆರೆತಿರುವಾಗ ಅದರಲ್ಲಿ ಭೇದವನ್ನೆಣಿಸಬಾರದು. ವಿಶ್ವವ್ಯಾಪಿಯಾಗಿರುವ ಜಡ-ಚೇತನಗಳಲ್ಲಿ ಅದನು ಗಣನೆಗೆ ತೆಗೆದುಕೊಳ್ಳದೇ ಸೂರ್ಯ-ಚಂದ್ರರು ಹೊಳೆ ಹೊಳೆದು ಬೆಳಗಿ ಕಾಣುವಂತೆ ನಿರ್ಗುಣನ ನಿಜಸ್ವರೂಪವು ಇರುತ್ತದೆ.
ಪದಾರ್ಥ (ಕ.ಗ.ಪ)
ಪ್ರಣವ-ಓಂಕಾರ, ಹಣಿ-ಹೊಡೆ,
ಮೂಲ ...{Loading}...
ಪ್ರಣವದೊಂದಾ ವರ್ಣಮೂರರ
ಗುಣವಿಡಿದು ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ॥17॥
೦೧೮ ನಳಿನಮಿತ್ರನು ...{Loading}...
ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು
ಕಳೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರಿದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಪಶ್ಚಿಮ ದಿಕ್ಕಿನ ಸಮುದ್ರದಲ್ಲಿ ಮುಳುಗಿದಾಗ, ನಾನಾ ಪಕ್ಷಿಗಳು ಧ್ವನಿ ಮಾಡುತ್ತ ಮರವನ್ನು ಸೇರಿ, ರಾತ್ರಿಯನ್ನು ಕಳೆದು, ಬೆಳಿಗ್ಗೆ ಬೇರೆ ಬೇರೆ ದಿಕ್ಕುಗಳಿಗೆ ಹಾರಿ ಹೋಗುವಂತೆ, ಜನರು ಸುಖ, ದುಃಖಗಳನ್ನು ಅನುಭವಿಸಿದ ನಂತರ ಪರಲೋಕವನ್ನು ಹೊಂದುವರು.
ಪದಾರ್ಥ (ಕ.ಗ.ಪ)
ನಳಿನ ಮಿತ್ರ-ಸೂರ್ಯ, ಅಂಬುಧಿ-ಸಮುದ್ರ
ಲೋಕಂತರವನೈದು - ನಿಧನನಾಗು
ಮೂಲ ...{Loading}...
ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು
ಕಳೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರಿದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ॥18॥
೦೧೯ ಪೊಡವಿಯೊಳಗುದಯಿಸಿದ ...{Loading}...
ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಕವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೊಳಗೆ ಹುಟ್ಟಿದ ಪಾರ್ಪಕರ್ಮವು ರಾಜನನ್ನು ಬಿಡದು. ರಾಜನಿಗೆ ವೇದೋಕ್ತ ವಿಧಿಗಳನ್ನು ಮಾಡಿಸುವ ಪುರೋಹಿತನ ಸಮೀಪಕ್ಕೂ ಅನಂತರ ಬರುವುದು; ಮೂರ್ಖ ಶಿಷ್ಯನು ಮಾಡಿದ ತಪ್ಪುಗಳು ಗುರುವಿನಿದಾಗುತ್ತದೆ. ಇದು ಪರಮಸತ್ಯ. ಈ ಅನುಕ್ರಮವನ್ನು ತಿಳಿಯದೆ ಜಗತ್ತು ಕೆಡುವುದು ಎಂದರು ಸನತ್ಸುಜಾತರು.
ಪದಾರ್ಥ (ಕ.ಗ.ಪ)
ಪೊಡವಿ-ಭೂಮಿ, ದುಷ್ಕೃತ-ಪಾಪ, ಪರಮಾರ್ಥ-ಮೋಕ್ಷ
ಮೂಲ ...{Loading}...
ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಕವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ॥19॥
೦೨೦ ದುರ್ಜನರಿಗಞ್ಜುವುದು ಲೋಕವು ...{Loading}...
ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾಕ್ಷ್ರ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಜೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದ ಜನರು ದುಷ್ಟರಿಗೆ ಭಯ ಪಡುತ್ತಾರೆ. ಸಜ್ಜನರನ್ನು ಲಕ್ಷಿಸುವುದಿಲ್ಲ. ಗರುಡನ ಹಾಸಿಗೆಯಲ್ಲಿರುವ ಸರ್ಪನನ್ನು ಆಸಕ್ತಿಯಿಂದ ಭಯಭರಿತ ಭಕ್ತಿಯಲಿ ಅರ್ಚಿಸುತ್ತಾರೆ. ಅವಿವೇಕಿಗಳು ಲೋಕದಲ್ಲಿಡುವ ಹೆಜ್ಜೆಯಿದು.
ಪದಾರ್ಥ (ಕ.ಗ.ಪ)
ತಾಕ್ಷ್ರ್ಯ-ಗರುಡ, ದಂದಶೂಕ-ಸರ್ಪ, ಸಜ್ಜೆ-ಹಾಸಿಗೆ, ಉಜ್ವಲಿತ-ಹೊಳೆವ, ವಿತರ್ಜೆ-ಹೆದರಿಕೆ,
ಮೂಲ ...{Loading}...
ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾಕ್ಷ್ರ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಜೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ॥20॥
೦೨೧ ತಳಪಟದೊಳಾಯುಷ್ಯ ರಾಶಿಯ ...{Loading}...
ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋ ರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ
ಬಳಸುವುದು ಸನ್ಮಾರ್ಗದಲಿ ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡುವರ್ಗದಲಿ ಕೇಳ್ ಎಂದನಾ ಮುನಿಪ |\21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೊಳಗಿನ ಆಯುಷ್ಯ ರಾಶಿಯನ್ನು ಅಳೆಯುವ ಪಾತ್ರೆ ಸೂರ್ಯನೆಂಬುದನ್ನು ತಿಳಿದು, ಹಗಲು-ರಾತ್ರಿಯೆನ್ನದೇ, ದಿನಗಳ ಎಣಿಕೆಯನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯುದು, ಒಳ್ಳೆಯ ಧರ್ಮಾಚರಣೆಯಲ್ಲಿ ಮುಂದೆ ಸಾಗಿ, ಅರಿಷಡ್ವರ್ಗಗಳನ್ನು ಕುರಿತು ಚಿಂತಿಸದೆ ಇರು.
ಪದಾರ್ಥ (ಕ.ಗ.ಪ)
ತಳಪಟ-ಭೂಮಿ, ಅಂಕಿಸು-ಗುರುತಿಸು, ಆಹೋರಾತ್ರಿ-ಹಗಲಿರುಳು
ಟಿಪ್ಪನೀ (ಕ.ಗ.ಪ)
ಅರಿಷಡ್ವರ್ಗ : ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ.
ಮೂಲ ...{Loading}...
ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋ ರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ
ಬಳಸುವುದು ಸನ್ಮಾರ್ಗದಲಿ ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡುವರ್ಗದಲಿ ಕೇಳೆಂದನಾ ಮುನಿಪ |\21॥
೦೨೨ ನಷ್ಟಿಯಿದು ಸಂಸಾರದೊಳಗು ...{Loading}...
ನಷ್ಟಿಯಿದು ಸಂಸಾರದೊಳಗು
ತ್ಕೃಷ್ಟವಿದು ಮನ್ವಾದಿ ಮಾರ್ಗದ
ದೃಷ್ಟವಿದು ಲೋಕಾಂತರದ ಸುಖ ದುಃಖದೇಳಿಗೆಯ
ಹುಟ್ಟುಮೆಟ್ಟಿನ ಕಾಲಕರ್ಮದ
ಕಟ್ಟಳೆಯಿದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈ ಹೇಳೆಂದನಾ ಮುನಿಪ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಸಂಸಾರದೊಳಗೆ ಕುಂದು, ಇದು ಉತ್ತಮವಾದುದು. ಇದು ಮನುಷ್ಯನ ಅನುಭವಕ್ಕೆ ಬಂದುದು. ಇದು ಪರಲೋಕದಲ್ಲಿ ಸುಖ-ದುಃಖದ ಏಳಿಗೆ. ಇದು ಜನ್ಮತಾಳಿದ ಕಾಲಕರ್ಮದ ರೀತಿ-ನೀತಿ ಎಂದು ತಿಳಿಯುತ್ತ ನಡೆಯುವವನಿಗೆ ಯಾವ ಕೋಟಲೆಗಳು ಬರುವುದು ಹೇಳು ಎಂದು ಸನಸತ್ಸುಜಾತನು ನುಡಿದನು.
ಪದಾರ್ಥ (ಕ.ಗ.ಪ)
ಇಟ್ಟಣಿಸು-ಅಡೆತಡೆ, ದೃಷ್ಟ-ನೋಟ, ಕಟ್ಟಳೆ-ನಿಯಮ
ಮೂಲ ...{Loading}...
ನಷ್ಟಿಯಿದು ಸಂಸಾರದೊಳಗು
ತ್ಕೃಷ್ಟವಿದು ಮನ್ವಾದಿ ಮಾರ್ಗದ
ದೃಷ್ಟವಿದು ಲೋಕಾಂತರದ ಸುಖ ದುಃಖದೇಳಿಗೆಯ
ಹುಟ್ಟುಮೆಟ್ಟಿನ ಕಾಲಕರ್ಮದ
ಕಟ್ಟಳೆಯಿದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈ ಹೇಳೆಂದನಾ ಮುನಿಪ ॥22॥
೦೨೩ ಶಿಲೆಯ ರೂಹನು ...{Loading}...
ಶಿಲೆಯ ರೂಹನು ಮೂಢರುಗಳ
ಗ್ಗಳೆಯ ಪಾವಕನನು ಮಹೀಸುರ
ರಿಳೆಯೊಳಗೆ ಪರಮಾತ್ಮನೇ ಪರದೈವ ತಾನೆಂದು
ಒಲಿದು ಪೂಜಿಸುತಿಹರು ಹೃದಯಾಂ
ಗಳದೊಳಗೆ ವರಯೋಗಿಗಳು ಕೈ
ವಳಸುವುದು ಜನವೀ ಪ್ರಕಾರದೊಳರಸ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವೇಚನೆಯಿಲ್ಲದವರು ಚೆಂದದ ಕಲ್ಲಿನ ಆಕೃತಿಯನ್ನು ದೈವವೆಂದು ಪೂಜಿಸುತ್ತಾರೆ. ಪಾವನವಾದ ಅಗ್ನಿಯನ್ನು ಬ್ರಾಹ್ಮಣರು ಪರಮಾತ್ಮ, ಪರದೈವ ಎಂದು ಕರೆಯುತ್ತಾರೆ. ಶ್ರೇಷ್ಠರಾದ ಯೋಗಿಗಳು ತಮ್ಮ ಹೃದಯದಲ್ಲಿ ಭಗವಂತನನ್ನು ಕಾಣುತ್ತಾರೆ. ಜನರು ಈ ರೀತಿ ನಾನಾ ಬಗೆಯಲ್ಲಿ ದೇವರನ್ನು ಕಾಣುತ್ತಾರೆ.
ಪದಾರ್ಥ (ಕ.ಗ.ಪ)
ಅಗ್ಗಳೆಯ-ಶ್ರೇಷ್ಠ,
ಪಾವಕ-ಅಗ್ನಿ
ಕೈವಳಿಸು-ಬಳಸು
ಮೂಲ ...{Loading}...
ಶಿಲೆಯ ರೂಹನು ಮೂಢರುಗಳ
ಗ್ಗಳೆಯ ಪಾವಕನನು ಮಹೀಸುರ
ರಿಳೆಯೊಳಗೆ ಪರಮಾತ್ಮನೇ ಪರದೈವ ತಾನೆಂದು
ಒಲಿದು ಪೂಜಿಸುತಿಹರು ಹೃದಯಾಂ
ಗಳದೊಳಗೆ ವರಯೋಗಿಗಳು ಕೈ
ವಳಸುವುದು ಜನವೀ ಪ್ರಕಾರದೊಳರಸ ಕೇಳೆಂದ ॥23॥
೦೨೪ ಜ್ಞಾನಿಗಳನೊಡಬಡಿಸಬಹುದ ...{Loading}...
ಜ್ಞಾನಿಗಳನೊಡಬಡಿಸಬಹುದ
ಜ್ಞಾನಿಗಳನಹುದೆನಿಸಬಹುದು
ಜ್ಞಾನಲವವನು ಕೂಡಿಕೊಂಡಿಹ ದುರ್ವಿದಗ್ಧರನು
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜ್ಞಾನಿಗಳನ್ನು ಒಪ್ಪಿಸಬಹುದು. ಅಜ್ಞಾನಿಗಳನ್ನು ಅಹುದೆನ್ನಿಸಬಹುದು. ಅಲ್ಪ ಜ್ಞಾನವನ್ನು ಪಡೆದವರನ್ನು ಹೇಗೆ ಒಪ್ಪಿಸುವುದು? ಅಂತಹವರನ್ನು ಒಪ್ಪಿಸಲು ಸಾಕ್ಷಾತ್ ವಿಷ್ಣುವಿಗೇ ಸಾಧ್ಯವಾಗದೆಂದ ಮೇಲೆ ಸಾಮಾನ್ಯರ ಪಾಡೇನು ಹೇಳು ? ಎಂದರು ಸನತ್ಸುಜಾತರು.
ಪದಾರ್ಥ (ಕ.ಗ.ಪ)
ಲವ-ತುಸು/ಸ್ವಲ್ಪ, ದುರ್ವಿದಗ್ಧ-ಅವಿವೆಕಿ/ಕೆಟ್ಟಪಂಡಿತ, ವಿ-ಷ್ವಕ್ಸೇನ-ವಿಷ್ಣು
ಮೂಲ ...{Loading}...
ಜ್ಞಾನಿಗಳನೊಡಬಡಿಸಬಹುದ
ಜ್ಞಾನಿಗಳನಹುದೆನಿಸಬಹುದು
ಜ್ಞಾನಲವವನು ಕೂಡಿಕೊಂಡಿಹ ದುರ್ವಿದಗ್ಧರನು
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ॥24॥
೦೨೫ ದಾನವೊನ್ದಾ ಪಾಲನೆಯ ...{Loading}...
ದಾನವೊಂದಾ ಪಾಲನೆಯ ಫಲ
ದಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲಕಿ
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾನವನ್ನು ನೀಡುವುದು ಪೋಷಣೆಯನ್ನು ಮಾಡಿದ ಫಲ. ದಾನ ಮಾಡುವುದರಿಂದಲೇ ಎರಡನ್ನೂ ಮಾಡಿದಂತಾಗುತ್ತದೆ. ದಾನದಿಂದ ಇಹಪರಗಳ ಸುಖ, ನೆಮ್ಮದಿ, ಏಳಿಗೆಗಳು, ದಾನವೇ ಸಂಸಾರದಲ್ಲಿ ಸಿದ್ಧಿಯನ್ನು ಪಡೆಯಲು ನೆರೆವಾಗುವುದು. ದಾನದಿಂದ ಪಾಲನೆಯ ಫಲವೂ ಬರಲು ಮತ್ತೇನು ? ಅದರಿಂದ ಕೊನೆಗೆ ವಿಷ್ಣುವಿನ ಪದವಿಯ ಫಲವೂ ದೊರಕುವುದು.
ಪದಾರ್ಥ (ಕ.ಗ.ಪ)
ಉಭಯ-ಎರಡು, ಅಚ್ಯುತ-ಚ್ಯುತಿ ಇಲ್ಲದ (ವಿಷ್ಣು)
ಮೂಲ ...{Loading}...
ದಾನವೊಂದಾ ಪಾಲನೆಯ ಫಲ
ದಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲಕಿ
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ॥25॥
೦೨೬ ಅರಸನೊಡೆಯನು ದಣ್ಡನಾಥನು ...{Loading}...
ಅರಸನೊಡೆಯನು ದಂಡನಾಥನು
ಗುರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀವವಿರುವವರೆಗೂ ಮನುಷ್ಯನನ್ನು ಅರಸ, ಯಜಮಾನ, ಸೇನಾನಿ, ಗುರು, ಹಿರಿಯ, ಉತ್ತಮ ವ್ಯಕ್ತಿ, ದೇವಭಕ್ತ, ಸಹಚರ, ಸಂಬಂಧಿ ಮತ್ತು ಸತ್ಪುರುಷ (ಸಜ್ಜನ) ಎಂದು ನಾನಾ ರೀತಿಯಲ್ಲಿ ಹೆಮ್ಮೆಯಿಂದ ಕರೆಯುತ್ತಾರೆ. ದೇಹದಲ್ಲಿನ ಪ್ರಾಣಹೋದ ಮರು ಘಳಿಗೆಯಲ್ಲಿಯೇ ಹೆಣವೆಂದು ಹೇಳುವುದಿಲ್ಲವೆ ?
ಪದಾರ್ಥ (ಕ.ಗ.ಪ)
ಸಾಹಿತ್ಯ-ಸಹಚರ್ಯ/ಸಂಬಂಧಿ, ಅರಸ-ಒಡೆಯ, ದಂಡನಾದ-ಗುರು ಹಿರಿಯ
ಮೂಲ ...{Loading}...
ಅರಸನೊಡೆಯನು ದಂಡನಾಥನು
ಗುರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ ॥26॥
೦೨೭ ವರುಷ ಮೂರೊಳು ...{Loading}...
ವರುಷ ಮೂರೊಳು ಮಾಸ ಮೂರರೊ
ಳಿರದೆ ಪಕ್ಷತ್ರಯದೊಳಗೆ ಬಂ
ದರುಹುವುದು ದಿನ ಮೂರರಲಿ ಸಂದೇಹ ಬೇಡಿದಕೆ
ಧರೆಯೊಳುತ್ಕಟ ಪುಣ್ಯ ಪಾಪೋ
ತ್ಕರದ ಫಲವಿದು ತಪ್ಪಬಾರದು
ಮರಳುವುದು ಪರಲೋಕದೆಸೆಗವನೀಶ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯನು ಮಾಡಿದ ಪುಣ್ಯ-ಪಾಪಗಳ ಫಲವು ಮೂರು ವರ್ಷಗಳಲ್ಲಿಯೇ, ಮೂರು ತಿಂಗಳಿನಲ್ಲಿಯೇ, ಮೂರು ಪಕ್ಷಗಳಲ್ಲಿಯೇ ಅಥವಾ ಮೂರು ದಿನಗಳಲ್ಲಿಯೇ ಅವನನ್ನು ಬಂದು ಸೇರುತ್ತದೆ. ಇದಕ್ಕೆ ಯಾವ ಸಂದೇಹವೂ ಇಲ್ಲ. ಈ ಭೂಮಿಯೊಳಗೆ ಮಾಡಿದ ಅಧಿಕವಾದ ಪಾಪ-ಪುಣ್ಯಗಳ ರಾಶಿಯಿಂದ ಉಂಟಾದ ಫಲವಿದು. ಈ ಕರ್ಮಫಲ ತಪ್ಪದು. ಅದು ಕರ್ಮಫಲ. ಅವಧಿ ತೀರಿದ ನಂತರ ಪರಲೋಕಕ್ಕೆ ತೆರಳುವುದು ಖಚಿತ.
ಪದಾರ್ಥ (ಕ.ಗ.ಪ)
ಎಸಗು-ಅಂಟು
ಮೂಲ ...{Loading}...
ವರುಷ ಮೂರೊಳು ಮಾಸ ಮೂರರೊ
ಳಿರದೆ ಪಕ್ಷತ್ರಯದೊಳಗೆ ಬಂ
ದರುಹುವುದು ದಿನ ಮೂರರಲಿ ಸಂದೇಹ ಬೇಡಿದಕೆ
ಧರೆಯೊಳುತ್ಕಟ ಪುಣ್ಯ ಪಾಪೋ
ತ್ಕರದ ಫಲವಿದು ತಪ್ಪಬಾರದು
ಮರಳುವುದು ಪರಲೋಕದೆಸೆಗವನೀಶ ಕೇಳೆಂದ ॥27॥
೦೨೮ ಒನ್ದು ಭೂಪಿಣ್ಡದಲಿ ...{Loading}...
ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು
ಒಂದು ಪರವಸ್ತುವಿನ ಬಳಿಯಲಿ
ಬಂದುದಬುಜಭವಾಂಡ ಕೋಟಿಗ
ಳೆಂದÉೂಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಭೂಮಿಯಲ್ಲಿ ಅಂದದ, ಸೊಗಸಿನ ನಾನಾ ಪ್ರಾಣಿಗಳು ಹುಟ್ಟುವುವು. ಒಂದೆ ತೇಜಸ್ಸಿನಲ್ಲಿ ನಾನಾ ಜ್ಯೋತಿಗಳು ಹುಟ್ಟುವುವು. ಅದರಂತೆಯೇ ಒಂದು ಪರವಸ್ತುವಿನಿಂದ ಇಡೀ ಬ್ರಹ್ಮಾಂಡವೇ ಸೃಷ್ಟಿಯಾಗಿ, ಕೋಟಿ ಬ್ರಹ್ಮಾಂಡಗಳು ಉದಯಿಸಿದವು. ಇದಕ್ಕೆಲ್ಲ ಕಾರಣವು ಬೇರೆ ಯಾವುದೂ ಇಲ್ಲ. ಎಲ್ಲವೂ ವಿಷ್ಣುಮಯವೇ ! ಮಹಾರಾಜ ಕೇಳು.
ಪದಾರ್ಥ (ಕ.ಗ.ಪ)
ಕಳೆ-ಮಿತ್ರ/ಗೆಳೆಯ
ಮೂಲ ...{Loading}...
ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು
ಒಂದು ಪರವಸ್ತುವಿನ ಬಳಿಯಲಿ
ಬಂದುದಬುಜಭವಾಂಡ ಕೋಟಿಗ
ಳೆಂದÉೂಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ॥28॥
೦೨೯ ತಾನಿದಿರು ಹಗೆ ...{Loading}...
ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ತನ್ನ ವೈರಿಗಳು ಮಿತ್ರರು, ತನಗೆ ಪ್ರಾಪ್ತವಾದ ವಿವೇಕ, ಜ್ಞಾನ ಮತ್ತು ಅಜ್ಞಾನ ಇಹಪರಗಳ ಸಾಧಕ-ಬಾಧಕಗಳು, ಏಳಿಗೆಗಳ ಮಾರ್ಗವನ್ನು ಅರಿತು, ಒಂದೇ ಚಿತ್ತದಲ್ಲಿ ದಾನ, ಧರ್ಮ. ಪರೋಪಕಾರಗಳ ನೀತಿ-ನಿಯಮಗಳನ್ನು ಅನುಸರಿಸುತ್ತ ವ್ರತಾನುಷ್ಠಾನದಿಂದ ಕರ್ಮ ಶ್ರದ್ಧೆಯುಳ್ಳವರು ಮಾನ್ಯರಾಗಿರುತ್ತಾರೆ.
ಮೂಲ ...{Loading}...
ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ ॥29॥
೦೩೦ ಕರಣಗುಣ ಸಂಹರಣ ...{Loading}...
ಕರಣಗುಣ ಸಂಹರಣ ಸಂಧ್ಯಾಂ
ತರದವಸ್ಥಾಂತರದ ಲೋಕೋ
ತ್ಕರದ ತಾಪತ್ರಯದ ಲಕ್ಷಣ ಲಕ್ಷಿತವನರಿದು
ಪರಿವಿಡಿಯ ಮೂರ್ತಿತ್ರಯಂಗಳ
ಗುರು ಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರಣ, ಗುಣ, ಸಂಹರಣಗಳನ್ನು ಸಂಧ್ಯೆಯ ಅವಸ್ಥೆಯಂತರಗಳನ್ನೂ ಲೋಕಕ್ಕೆ ಅಧಿಕಾಧಿಕವಾದ ತಾಪತ್ರಯಗಳನ್ನು, ಅವುಗಳ ಲಕ್ಷಣ, ಲಕ್ಷಿತಗಳನ್ನು ತಿಳಿದು ಅನುಕ್ರಮದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಹಿರಿಯತನ, ಪೂಜ್ಯತೆಗಳನ್ನು ಗಮನಿಸಿ ಬಾಳುವವರಿಗೆ ಅಸಾಧ್ಯವು ಯಾವುದು ಹೇಳು ಎಂದರು ಸನತ್ಸುಜಾತರು.
ಟಿಪ್ಪನೀ (ಕ.ಗ.ಪ)
ತ್ರಿಕರಣ - ಕಾಯ, ವಾಕ್, ಮನಸ್ಸು
ತ್ರಿಗುಣ - ಸತ್ವ, ರಜ, ತಮಸ್ಸು
ಸಂಹರಣ - ನಿತ್ಯ, ನೈಮಿತ್ತಿಕ, ಅತ್ಯಂತಿಕ
ಸಂಧ್ಯೆಗಳು - ಬೆಳಗು, ಮಧ್ಯಾಹ್ನ -ಸಂಜೆ.
ಅವಸ್ಥೆಗಳು - ಜಾಗೃತ, ಸಪ್ನ, ಸುಪುಷ್ತಿ
ಲೋಕಗಳು - ಸ್ವರ್ಗ, ಮತ್ಯ್ರ್ಸ - ಪಾತಾಳ
ತಾಪತ್ರಯಗಳು - ಆಧ್ಯಾತ್ಮಿಕ, ಆದಿ ಭೌತಿಕ, ಆದಿ ದೈವಿಕ
ಮೂಲ ...{Loading}...
ಕರಣಗುಣ ಸಂಹರಣ ಸಂಧ್ಯಾಂ
ತರದವಸ್ಥಾಂತರದ ಲೋಕೋ
ತ್ಕರದ ತಾಪತ್ರಯದ ಲಕ್ಷಣ ಲಕ್ಷಿತವನರಿದು
ಪರಿವಿಡಿಯ ಮೂರ್ತಿತ್ರಯಂಗಳ
ಗುರು ಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ॥30॥
೦೩೧ ವೇದ ನಾಲ್ಕಾಶ್ರಮವು ...{Loading}...
ವೇದ ನಾಲ್ಕಾಶ್ರಮವು ತಾ ನಾ
ಲ್ಕಾದಿಮೂರುತಿ ನಾಲ್ಕು ವರ್ಣ ವಿ
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತಿ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕು ವೇದಗಳು, ನಾಲ್ಕು ಆಶ್ರಮಗಳು ನಾಲ್ಕು ಆದಿ ಮೂರ್ತಿಗಳು, ನಾಲ್ಕು ವರ್ಣಗಳು, ನಾಲ್ಕು ಕರಣಗಳು, ನಾಲ್ಕು ಉಪಾಯಗಳು, ನಾಲ್ಕು ವಿಧ ಪುರುಷಾರ್ಥಗಳನ್ನು ಅರಿತು ಆ ಮಾರ್ಗದಲ್ಲಿ ಸಾಗುವವನಿಗೆ ಮುಕ್ತಿಯ ವಿಶಿಷ್ಟವಾದ ನಾಲ್ಕು ಹಂತಗಳನ್ನು ಪಡೆಯುವುದು ಸಂದೇಹವೆ ? ಹೇಳು.
ಟಿಪ್ಪನೀ (ಕ.ಗ.ಪ)
ನಾಲ್ಕು ವೇದಗಳು : ಋಗ್ , ಯಜುರ್, ಸಾಮ, ಅಥರ್ವ
ನಾಲ್ಕು ಆಶ್ರಮಗಳು : ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ
ನಾಲ್ಕು ಆದಿಮೂರ್ತಿಗಳು : ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ.
ನಾಲ್ಕು ಕರಣಗಳು : ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ
ಮುಕ್ತಿಯ ನಾಲ್ಕು ಹಂತ : ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ
ಮೂಲ ...{Loading}...
ವೇದ ನಾಲ್ಕಾಶ್ರಮವು ತಾ ನಾ
ಲ್ಕಾದಿಮೂರುತಿ ನಾಲ್ಕು ವರ್ಣ ವಿ
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತಿ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ ॥31॥
೦೩೨ ಭೂತ ವರ್ಣಸ್ಥಾನ ...{Loading}...
ಭೂತ ವರ್ಣಸ್ಥಾನ ಸರ್ಗ ನಿ
ಪಾತವದರೊಳು ಕೃತ್ಯಗಳ ಸಂ
ಜಾತಮುಖವಾವರಣಶರಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿವುದು
ಪ್ರೀತಿಯಿಂದಿಹಪರವ ಗೆಲುವುದು
ಭೂತಳದೊಳುತ್ತಮವಲೇ ಭೂಪಾಲ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚಭೂತಗಳು, ಪಂಚ ವರ್ಣಗಳು, ಪಂಚಸ್ಥಾನಗಳು, ಪಂಚಸರ್ಗಗಳು, ಪಂಚಸೃಷ್ಟಿಗಳು, ಇವುಗಳ ಪಂಚಾವರಣ, ಪಂಚಹೊದಿಕೆಗಳು, ಪಂಚ ಸೆಳೆತಗಳು, ಪಂಚ ಧಾತುಗಳು - ಪಂಚ ಮೂಲಗಳು ಇತ್ಯಾದಿಗಳನ್ನು ಅರಿತುಕೊಳ್ಳಬೇಕು. ಈ ಜಗತ್ತಿನಲ್ಲಿ ಪ್ರೀತಿಯಿಂದ ಇಹ-ಪರಗಳನ್ನು ಗೆಲ್ಲುವುದು ಉತ್ತಮ.
ಟಿಪ್ಪನೀ (ಕ.ಗ.ಪ)
ಪಂಚ ಭೂತಗಳು : ಭೂಮಿ, ನೀರು, ಅಗ್ನಿ , ಗಾಳಿ, ಆಕಾಶ.
ಪಂಚ ವರ್ಣಗಳು : ಬಿಳಿ, ಹಳದಿ, ಕೆಂಪು, ಹಸಿರು ಮತ್ತು ಕಪ್ಪು.
ಪಂಚ ಸೃಷ್ಟಿಗಳು : ಆಲೀಢ, ಪ್ರತ್ಯಾಲೀಢ, ಸಮಪಾದ, ವೈಷ್ಣವ, ಮಂಡಲಾಗ್ರ.
ಪಂಚ ಸರ್ಗಗಳು : ವೃಕ್ಷ, ಗುಲ್ಮ, ವೀರುತ್, ಲತಾ ಮತ್ತು ತೃಣ.
ಪಂಚ ನಿಹಾತಗಳೂ ; ಸಾಮಾನ್ಯ, ಅನುಕರಣ, ಭಾವಸೂಚಕ, ಕ್ರಮಾರ್ಧ ಮತ್ತು ಸಂಬಂಧಾರ್ಧ (ವ್ಯಾಕರಣಕ್ಕೆ ಸಂಬಂಧಿಸಿದ್ದು)
ಕೃತ್ಯಗಳು : ಸೃಷ್ಟಿ, ನೆಲೆ, ಲಯ, ತಿರೋಭಾವ, ಅನುಗ್ರಹ.
ಪಂಚಾವರಣ : ಮಾಯೆ, ಅವಿದ್ಯೆ, ಭ್ರಾಂತಿ, ಅಜ್ಞಾನ, ಸಂವೃತ್ತಿ
ಪಂಚಧಾತು : ರಕ್ತ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಜೆ
ಪಂಚಮೂಲ ; ಲಘು, ಬೃಹತ್, ಶಾತವರ್ಯಾದಿ, ತೃಣ, ಜೀವಕಾದಿ.
ಮೂಲ ...{Loading}...
ಭೂತ ವರ್ಣಸ್ಥಾನ ಸರ್ಗ ನಿ
ಪಾತವದರೊಳು ಕೃತ್ಯಗಳ ಸಂ
ಜಾತಮುಖವಾವರಣಶರಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿವುದು
ಪ್ರೀತಿಯಿಂದಿಹಪರವ ಗೆಲುವುದು
ಭೂತಳದೊಳುತ್ತಮವಲೇ ಭೂಪಾಲ ಕೇಳೆಂದ ॥32॥
೦೩೩ ಆರು ಗುಣ ...{Loading}...
ಆರು ಗುಣ ಋತುವರ್ಣ ವರ್ಗವ
ದಾರು ದರ್ಶನ ಪಾತ್ರವಂಗವ
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ
ತೋರುವೀ ಮಾಯಾಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರು ಗುಣಗಳು, ಆರು ಋತುಗಳು, ಆರು ವರ್ಣಗಳೂ, ಆರು ವರ್ಗಗಳು, ಆರು ದರ್ಶನ, ಆರು ಅಂಗಗಳು, ಆರು ಪಾತ್ರಗಳು ಇವುಗಳ ವ್ಯತ್ಯಾಸಗಳನ್ನು ತಿಳಿದು ಯೋಗ್ಯಮಾರ್ಗದಲ್ಲಿ ನಡೆಯಬೇಕು. ಹೊರಗೆ ಕಾಣುವ ಈ ಮಾಯಾ ಪ್ರಪಂಚವನ್ನು ಮೀರಿ ಯಾವ ಆಪತ್ತೂ ಇಲ್ಲದ ಮುಕ್ತಿಯನ್ನು ಪಡೆಯುವುದು ಉತ್ತಮ ಆಲೋಚನೆ.
ಟಿಪ್ಪನೀ (ಕ.ಗ.ಪ)
ಆರು ಗುಣಗಳು : ಉದಯ, ಸಾಹಸ, ಧೈರ್ಯ, ಬಲ, ಬುದ್ಧಿ, ಪರಾಕ್ರಮ.
ಆರು ಋತುಗಳು : ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ.
ಆರು ವರ್ಣಗಳು : ಬಿಳಿ, ಹಳದಿ, ಕೆಂಪು, ಹಸಿರು, ಕಪ್ಪು, ಕಂದು.
ಆರು ವರ್ಗಗಳು :
-
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ
-
ಆಯ, ವ್ಯಯ, ದಕ್ಷ, ಯೋನಿ, ತಿಥಿ, ವಾರ (ಪಂಚಾಂಗ)
-
ಲಗ್ನ, ಹೋರೆ, ಪ್ರಿಕ್ಕಾಣ, ನವಾಂಶ, ದ್ವಾದಶಾಂಶ, ತ್ರಿಶಾಂಶ (ಜ್ಯೋತಿಷ ವರ್ಗ)
ಆರು ದರ್ಶನಗಳು : ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ.
ಆರು ಅಂಗಗಳು (ಷಡಂಗ) : -
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ
-
ಹಸ್ತಿ, ಅಶ್ವ, ರಥ, ಪದಾತಿ, ದಿವಿಜ, ಖೇಚರ (ಆರು ಸೈನ್ಯಗಳು)
-
ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ (ಯೋಗಕ್ಕೆ ಸಂಬಂಧಿಸಿದ್ದು)
ಆರು ಪಾತ್ರಗಳು : 1) ಸ್ರುಕ್, ಸ್ರುವೆ, ಇಡೆ, ಚಮಸ, ಪ್ರಶಿತ್ರ ,ಗ್ರಹ (ಆರು ಯಜ್ಞ ಪಾತ್ರಗಳು)
2) ದರ್ವೀ, ಆಜ್ಯಸ್ಥಲೀ, ಪ್ರೋಕ್ಷಣಪತ್ರ, ಇದ್ಮ, ಸ್ರುವ, ಸ್ರುಕ್ಕು.
ಮೂಲ ...{Loading}...
ಆರು ಗುಣ ಋತುವರ್ಣ ವರ್ಗವ
ದಾರು ದರ್ಶನ ಪಾತ್ರವಂಗವ
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ
ತೋರುವೀ ಮಾಯಾಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ॥33॥
೦೩೪ ಜಲಧಿ ಮಾತೃಕೆ ...{Loading}...
ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ರಾಜ್ಯವನು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಪ್ತ ಸಮುದ್ರಗಳು, ಸಪ್ತ ಮಾತೃಕೆಯರು, ಸಪ್ತವಾರಗಳು, ಸಪ್ತ ಕುಲ ಗಿರಿಗಳು, ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳು, ಸಪ್ತ ಸರ್ಪಗಳು, ಸಪ್ತ ಮುನೀಶ್ವರರು, ಸಪ್ತ ಧಾತು ಸಮೂಹಗಳು, ಸಪ್ತ ಗತಿಗಳು, ಸಪ್ತ ಗಮಕಗಳು, ಇವೆಲ್ಲವನ್ನೂ ತಿಳಿದು ನಡೆಯುವವರು ಶುದ್ಧರಾಗಿ ಎಲ್ಲಿಯೂ ಮುಗ್ಗರಿಸದೆ ಮುಕ್ತಿ ರಾಜ್ಯವನ್ನು ಕೂಡಿಕೊಳ್ಳುವರು.
ಟಿಪ್ಪನೀ (ಕ.ಗ.ಪ)
ಅಂಗೀರಸ - ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ತುಂಬ ವಿಚಾರವಂತನಾದ ಈತನನ್ನು ‘ಪ್ರಜ್ಞಾನಾಂಪತಿ’ ಎನ್ನುತ್ತಾರೆ. ಅರಣ್ಯಪರ್ವದ 218ನೇ ಪರ್ವದಲ್ಲಿ ಈತನ ಬಗೆಗೆ ವಿವರಗಳಿವೆ. ಅಂಗೀರಸನ ಹೆಂಡತಿ ಸುಭಾ. ಈ ದಂಪತಿಗಳಿಗೆ ಬೃಹಸ್ಪತಿ, ಉತಥ್ಯ, ಸಮವರ್ತ ಎಂಬ ಮೂವರು ಪ್ರಸಿದ್ಧ ಮಕ್ಕಳಿದ್ದರು. ಬೃಹಸ್ಪತಿ ಮುಂದೆ ದೇವಗುರುವಾಗಿ ಬೆಳೆದ ಹೆಣ್ಣು ಮಕ್ಕಳು ಭಾನುಮತಿ, ರಾಘಾ, ಸಿನೀವಾಲಿ (ಅಮಾವಾಸ್ಯೆಯಂತೆ ಕಣ್ಣಿಗೆ ಕಾಣುವ ಕಾಣದ ಎರಡೂ ಗುಣ ಈಕೆಗಿತ್ತು) ಅರ್ಚಿಷ್ಮತಿ ಹವಿಷ್ಮತಿ ಮಹಿಷ್ಮತಿ ಮಹಾಮತಿ ಮತ್ತು ಕುಹೂ ಎಂಬುವರು.
ಅಂಗಿರಸನಿಗೆ ಎರಡನೆಯ ಅಗ್ನಿ ಎಂದೂ ಹೆಸರಿದೆ. ಬ್ರಹ್ಮನಿಂದ ಅಗ್ನಿ ಸೃಷ್ಟಿಯಾಗಿದ್ದು ಸರಿಯಷ್ಟೆ. ದೇವಗಣದಲ್ಲಿ ಅಗ್ನಿ ತುಂಬ ಮಹತ್ವದ ದೇವ. ಅಗ್ನಿಯು ಒಮ್ಮ ಜಲದಲ್ಲಿ ಮುಳುಗಿ ತಪೋನಿರತನಾಗಿದ್ದ. ಆಗ ಮಹಾತೇಜಸ್ವಿಯಾದ ಅಂಗಿರಸನು ಘೋರ ತಪಶ್ಚರ್ಯೆಯಿಂದ ಅಗ್ನಿಯಂತೆ ಪ್ರಕಾಶಿಸಿದ. ಲೋಕಕ್ಕೆ ಕಾಂತಿಯನ್ನೂ ಉಷ್ಣತೆಯನ್ನೂ ನೀಡಿದ.
ಅಗ್ನಿ ನೀರಿನಿಂದ ಎದ್ದು ಬಂದ ಮೇಲೆ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ಅಂಗಿರಸನನ್ನು ನೋಡಿದ. ಬಹುಶಃ ಬ್ರಹ್ಮನೇ ಇವನನ್ನು ಸೃಷ್ಟಿಸಿ ತನ್ನ ಬದಲಿಗೆ ನೇಮಿಸಿದ್ದಾನೆಂದು ಭಾವಿಸಿದ. ಅಂಗರಿಸನ ಆಶ್ರಮಕ್ಕೆ ಬಂದು ನಿಂತ. ಅಂಗಿರಸನು ಅಗ್ನಿಯನ್ನು ಕಂಡು ಅಗ್ನಿಯ ಕೆಲಸದಿಂದ ತಮಗೆ ಬಿಡುಗಡೆ ಬೇಕು ಎಂದು ಕೋರಿದರು. ಈತನ ವಿನಯ, ಶಕ್ತಿ ಎರಡೂ ಅಗ್ನಿಗೆ ಮೆಚ್ಚಿಕೆಯಾಯಿತು. ಇವರಿಬ್ಬರ ನಡುವೆ ನಡೆದ ಸಚಿವಾದ ಅರ್ಥಪೂರ್ಣವಾಗಿದೆ. ಮೊದಲು ಅಗ್ನಿ ಹುಟ್ಟಿದುದರಿಂದ ಅವನಿಗೇ ಈ ಸ್ಥಾನ ಸಲ್ಲತಕ್ಕದ್ದು ಎಂಬುದು ಅಂಗೀರಸನ ವಾದ. ಆದರೆ ಅಗ್ನಿಯ ತರ್ಕವೇ ಬೇರೆ. ತಾನು ಜಲದಲ್ಲಿ ಬಹುಕಾಲ ತಪಸ್ಸನ್ನು ಆಚರಿಸಿದ್ದರಿಂದ ಮೊದಲಿನ ಕಾಂತಿ ಉಷ್ಣತೆಗಳಿಲ್ಲವೆಂದೂ ಅಗ್ನಿತ್ವವಿರುವ ಹೊಸ ನಾಯಕ ಅಂಗೀರಸನಿಗೆ ಆ ಸ್ಥಾನ ಬಿಟ್ಟುಕೊಡುವುದಾಗಿಯೂ ಅಗ್ನಿ ವಾದಿಸಿದ. ಈ ಸಂದರ್ಭದಲ್ಲಿ ಇಬ್ಬರೂ ದೊಡ್ಡದಾಗಿಯೇ ನಡೆದುಕೊಳ್ಳುತ್ತಾರೆ. ಕೊನೆಗೆ ಅಂಗೀರಸನೇ ಒಂದು ದಾರಿ ಸ್ರಚಿಸುತ್ತಾನೆ. ಆನ ನಿರ್ಲಕ್ಷಿಸಿರುವುದರಿಂದ ಅಗ್ನಿಯು ತಾನೇ ಅಂಗಿರಸನಲ್ಲಿ ಹೊಕ್ಕು ಎರಡನೇ ಸ್ಥನ ಪಡೆಯುವುದಾಗಿಯೂ ಪ್ರಜಾಪತ್ಯಕ ಎಂಬ ವಿರಾಟ್ ಪುರುಷನಾಗುವುದಾಗಿಯೂ ಹೇಳಿದಾಗ ಅಂಗಿರಸನಿಗೆ ಹೊಳೆದ ದಾರಿ ಇದು. ಅಗ್ನಿಗೇ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅಂಗಿರಸನು ಅಗ್ನಿದೇವನು ತನ್ನನ್ನು ಮಗನೆಂಬ ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಮನವೊಲಿಸಿದ.
‘‘ಕುರುಪುಣ್ಯ ಪ್ರಜಾಸ್ವರ್ಗಂ ಭವಾಗ್ನಿಸ್ತಿಮಿರಾಪಹಃ
‘‘ಮಾಂಚದೇವ ಕುರುಷ್ಯಾಗ್ನೇ ಪ್ರಥಮಂ ಪುತ್ರಮಂಜಸಾ’’
ಅಗ್ನಿಗೇ ಮೊದಲಿನ ಸ್ಥಾನವನ್ನು ನೀಡಿದ. ‘‘ನಷ್ಟಕೀರ್ತಿರಹಂ ಲೋಕೇ’’ ಎಂದು ಭಾವಿಸಿಕೊಂಡಿದ್ದ ಅಗ್ನಿಯನ್ನು ಪುನರ್ ಪ್ರತಿಷ್ಠಾಪಿಸಿದ ಅಂಗಿರಸ ಉಳಿದವರಿಗೆ ಮಾದರಿಯಾಗಿದ್ದಾನೆ.
ಸಪ್ತ ಸಮುದ್ರ : ಲವಣ, ಇಕ್ಷು, ಸುರಾ, ಸರ್ಪಿಷ್, ದಧಿ, ಕ್ಷೀರ, ಜಲ
ಸಪ್ತ ಮಾತೃಕೆಯರು : ಬ್ರಾಹ್ಮೀ, ಮಾಹೇಶ್ವರಿ, ಕೌಮಾರಿ, ವೈಷ್ಣವೀ, ವಾರಾಹಿ, ಇಂದ್ರಾಣಿ, ಚಾಮುಂಡಿ.
ಸಪ್ತ ವಾರಗಳು : ರವಿ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ.
ಸಪ್ತ ಕುಲಗಿರಿಗಳು : 1) ಮೇರು, ಮಂದರ, ಕೈಲಾಸ, ಹಿಮಾಚಲ, ನಿಷಧ, ಗಂಧಮಾದನ, ರಮಣ
2) ಮಲಯ, ಮಹೇಂದ್ರ ಸಹ್ಯ ಶುಕ್ತಿಮಾನ್, ವೃಕ್ಷವಾನ್, ವಿಂಧ್ಯ, ಪಾರಿಯಾತ್ರ
ಸಪ್ತವಿಭಕ್ತಿಗಳು : ಪ್ರಥಮಾ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ.
ಸಪ್ತ ದ್ವೀಪಗಳು ; ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರ.
ಸಪ್ತ ಸರ್ಪಗಳು : ವಾಸುಕಿ, ಕಂಕ, ವೀರ, ತಕ್ಷಕ, ನಾಗ, ಇಳಾಪುತ್ರ, ಐರಾವತ, ಧನಂಜಯ, ಮಹಾಪದ್ಮ, ಸಂಖಪಾಲ, ಕಾರ್ಕೋಟ, ಕಂಬಳ, ಅಶ್ವತರ (ಇವುಗಳಲ್ಲಿ ಯಾವುದೇ ಏಳು) ?
ಸಪ್ತ ಋಷಿಗಳು ; ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಶಿಷ್ಠ
; ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಶಿಷ್ಠ, ಕಶ್ಯಪ
ಸಪ್ತ ಧಾತುಗಳು : ರಸ, ರಕ್ತ, ಮಾಂಸ, ಮೇಧಸ್, ಅಸ್ತಿ, ಮಜ್ಜಾ, ಶುಕ್ರ, .
ಸಪ್ತ ಕಾಲಗಳು : ನಿಮೇಷ, ಕಾಷ್ಠೆ, ಕಳೆ, ಕ್ಷಣ, ಘಳಿಗೆ, ಮುಹೂರ್ತ, ಆಹೋರಾತ್ರಿ/ಹಗಲಿರುಳು
ಸಪ್ತ ಗತಿಗಳು : ಆಧಾನ, ವಿಸರ್ಗ, ಪ್ರೈಷ , ನಿಷೇಧ, ಅರ್ಥವಚನ, ವ್ಯವಹಾರ, ದಂಡಶುದ್ಧಿ
ಸಪ್ತಗಮಕಗಳು : ಕಂಪಿತ, ಸ್ಫುರಿತ, ಲೀನ, ತ್ರಿಭಿನ್ನ, ತಿರಿಪ, ಆಂದೋಲಿತ, ಆಹತ
ಮೂಲ ...{Loading}...
ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ರಾಜ್ಯವನು ॥34॥
೦೩೫ ಕಾಯದಿಗ್ಬನ್ಧ ಪ್ರಣಾಮ ...{Loading}...
ಕಾಯದಿಗ್ಬಂಧ ಪ್ರಣಾಮ ವಿ
ಧೇಯವರ್ಚನೆ ಯೋಗಸಿದ್ಧಿ ನಿ
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು
ಆಯವನು ವಿವರಿಸುತ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು, ಸಾಷ್ಟಾಂಗ ದಿಗ್ಭಂಧನ ನಿಯಂತ್ರಣ ಶರೀರದ ಕಟ್ಟುನಿಟ್ಟುಗಳು, ನಮಸ್ಕಾರದಲ್ಲಿನ ಶ್ರದ್ಧೆ ನಮ್ರತೆಯ ಪೂಜೆ, ಯೋಗಸಿದ್ಧಿ ಇವುಗಳ ಪರಿಣಾಮವು ಇಂದ್ರಿಯಗಳ ಮೇಲೆ ಏನಾಗಬಲ್ಲದೆಂಬ ರಹಸ್ಯವನ್ನು ತಿಳಿದು ಅವುಗಳ ಫಲಾಫಲಗಳು ಮಾತ್ರ ತನ್ನದೆಂದು ಸಂಪೂರ್ಣವಾಗಿ ನಿರ್ಧರಿಸಬೇಕು.
ಪದಾರ್ಥ (ಕ.ಗ.ಪ)
ನಿರ್ದಾಯ - ಸಂಪೂರ್ಣ, ಆಯ-ಮರ್ಮ/ರಹಸ್ಯ.
ಟಿಪ್ಪನೀ (ಕ.ಗ.ಪ)
ಕಾಯ : ಔದಾರಿಕ, ಔದಾರಿಕ ಮಿಶ್ರ ವೈಕ್ತಿಯಿಕ, ವೈಕ್ತಿಯ ಕಮಿಶ್ರ ಆಹಾರಕ, ಆಹಾರ ಕಮಿಶ್ರ ಕಾರ್ಮಣ, ಕಾರ್ಮಣಮಿತ್ರ.
ದಿಕ್ಕುಗಳು : ಇಂದ್ರ (ಪೂರ್ವ) ಆಗ್ನೇಯ (ಅಗ್ನಿ)ಯಮ (ದಕ್ಷಿಣ) ನೈರುತ್ಯ (ನಿರ್ಋತಿ)ವರುಣ (ಪಶ್ಚಿಮ) ವಾಯವ್ಯ (ವಾಯು) ಕುಬೇರ (ಉತ್ತರ) ಈಶಾನ್ಯ ( ಈಶಾನ/ಈಶ)
ಬಂಧ : ದಯೆ, ಜುಗುಪ್ಸೆ, ಮೋಹ, ಭಯ, ಸಂಶಯ, ಕುಲ, ಬಲ, ಶೀಲ.
ಪ್ರಣಾಮ : ಉರಿಸ್ಸು, ಶಿರಸ್ಸು, ದೃಷ್ಟಿ, ಮನಸ್ಸು ಶ್ರದ್ಧೆ ಪಾದ, ಕರ, ವರ್ಣ.
ಅರ್ಚನೆ : ಜಲ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ.
ಯೋಗಸಿದ್ಧಿ : ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಣಮ್ಯ, ಈಶಿತ್ವ, ವಶಿತ್ವ
ಮೂಲ ...{Loading}...
ಕಾಯದಿಗ್ಬಂಧ ಪ್ರಣಾಮ ವಿ
ಧೇಯವರ್ಚನೆ ಯೋಗಸಿದ್ಧಿ ನಿ
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು
ಆಯವನು ವಿವರಿಸುತ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳೆಂದ ॥35॥
೦೩೬ ನವ ನವ ...{Loading}...
ನವ ನವ ವ್ಯೂಹಂಗಳಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧಗ್ರಹ ನಾಟಕಂಗಳ ಲಕ್ಷಣವನರಿದು
ನವವಿಧಾಮಳ ಭಕ್ತಿ ರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದು ಭೂಪ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನವ ನವ ವ್ಯೂಹಗಳು ಬ್ರಹ್ಮನ ಸರದಿ ನವರಸ, ನವವಿಧ ಗ್ರಹಗಳ, ಖಂಡಗಳ ರಚನೆಯ ಗುಣಗಳನ್ನು ತಿಳಿದು ನಿರ್ಮಲವಾದ ನವವಿಧ ಭಕ್ತಿಯ ರಸವನ್ನು ಅನುಭವಿಸಿ ನಿತ್ಯ, ಅನಿತ್ಯ ವಸ್ತುಗಳ ನವರಸವನ್ನು ಹುಡುಕುತ್ತ ಪಡೆಯಬೇಕು.
ಟಿಪ್ಪನೀ (ಕ.ಗ.ಪ)
ನವವ್ಯೂಹಗಳು ; ಗರುಡ, ಮಕರ, ಶೇನ, ಅರ್ಧಚಂದ್ರ, ವಜ್ರ, ಶಕಟ, ಮಂಡಲಿ, ಸರ್ವತೋಭದ್ರಚಕ್ರ
ಬ್ರಹ್ಮನ ನವಮಾನಸಪುತ್ರರು : ಭೃಗು, ಪುಲಸ್ಯ, ಪುಲಹ, ಕ್ರತು, ಅಂಗೀರಸ, ಮರೀಚಿ, ದಕ್ಷ, ಅತ್ರಿ ವಸಿಷ್ಠ
ನವಖಂಡಗಳು : ಇಂದ್ರ, ದ್ವೀಪ, ಕಶೇರು, ತಾಮ್ರ ಪರ್ಣ ಗಭಸ್ತಿಮಾನ್, ನಾಗದ್ವೀಪ, ಸೌಮ್ಯ, ಗಂಧರ್ವ, ವಾರುಣಸಾಗರ,
ನವಗ್ರಹಗಳು : ಸೂರ್ಯ, ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ರಾಹುಕೇತು
ನವರಸಗಳು : ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ
ನವನಾಟಕ ಲಕ್ಷಣಗಳು : ಭಾವ, ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸ್ವರ, ಆರೋಗ್ಯ, ಗಾನ
ನವವಿಧಭಕ್ತಿ : ಶ್ರವಣ, ಕೀರ್ತನ, ಸ್ಮರಣ, ಪಾದ ಸೇವನ ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ.
ಮೂಲ ...{Loading}...
ನವ ನವ ವ್ಯೂಹಂಗಳಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧಗ್ರಹ ನಾಟಕಂಗಳ ಲಕ್ಷಣವನರಿದು
ನವವಿಧಾಮಳ ಭಕ್ತಿ ರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದು ಭೂಪ ಕೇಳೆಂದ ॥36॥
೦೩೭ ಹತ್ತು ಮುಖದಲಿ ...{Loading}...
ಹತ್ತು ಮುಖದಲಿ ಲೋಕದೊಳಗು
ತ್ಪತ್ತಿಯಾದ ಚರಾಚರಂಗಳ
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ
ಸುತ್ತುವನು ನಾನಾ ತೆರದಲಿ ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಹತ್ತು ರೀತಿಯಲ್ಲಿ, ಉತ್ಪತ್ತಿಯಾದ ಚರಾಚರವಸ್ತುಗಳಲ್ಲಿ ಉತ್ತಮ ಅಧಮವೆನ್ನದೇ ಹರಿಯು ಎಲ್ಲದರಲ್ಲಿಯೂ ಒಂದಾಗಿ, ಎಲ್ಲ ಪ್ರಾಣಿಗಳಲ್ಲಿಯೂ ಸುತ್ತುತ್ತಾನೆ. ನಾನಾ ರೀತಿಯಲ್ಲಿ ಆವರಿಸುತ್ತಾನೆ. ಆಶ್ಚರ್ಯಕರವಾದ ನಡವಳಿಕೆಯುಳ್ಳವನು. ಅವನು ಕಪಟನಾಟಕ ಸೂತ್ರಧಾರಿಯೆಂದು ತಿಳಿದು ಸುಖವಾಗಿರು.
ಪದಾರ್ಥ (ಕ.ಗ.ಪ)
ಸರ್ವಗತ - ಅಂತರ್ಯಾಮಿ, ಚರಿತ - ನಡವಳಿಕೆಯುಳ್ಳವನು
ಮೂಲ ...{Loading}...
ಹತ್ತು ಮುಖದಲಿ ಲೋಕದೊಳಗು
ತ್ಪತ್ತಿಯಾದ ಚರಾಚರಂಗಳ
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ
ಸುತ್ತುವನು ನಾನಾ ತೆರದಲಿ ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೆಂದ ॥37॥
೦೩೮ ಲೇಸು ಮಾಡಿದಿರೆನ್ನ ...{Loading}...
ಲೇಸು ಮಾಡಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗ ಲೋಭದ
ಮೀಸಲಳಿದುದು ನಿನ್ನ ದೆಸೆಯಿಂ
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಒಳ್ಳೆಯದನ್ನು ಮಾಡಿದಿರಿ, ನನ್ನ ಮನಸ್ಸಿನ ಬೇಸರ ನೀಗಿತು. ನಿಮ್ಮ ಉಪದೇಶದಿಂದ ಕೃತಾರ್ಥನಾದೆನು. ಇಹ-ಪರಗಳನ್ನು ಗೆದ್ದೆನು. ಕೋಪಕ್ಕೆ ಬವಣೆ ಬಂದಿತು. ಆಸೆಯು ದೂರವಾಯಿತು. ನಿಮ್ಮ ಕೃಪೆಯಿಂದ ನಾನು ಎಷ್ಟು ಧನ್ಯನಾದೆನೋ ಎಂದನು ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಬಯಲು-ಶೂನ್ಯ, ಗಾಸಿ-ತೊಂದರೆ/ಬವಣೆ, ರಾಗ-ಪ್ರೀತಿ/ಕೋಪ, ಲೋಭ-ಆಸೆ
ಮೂಲ ...{Loading}...
ಲೇಸು ಮಾಡಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗ ಲೋಭದ
ಮೀಸಲಳಿದುದು ನಿನ್ನ ದೆಸೆಯಿಂ
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ॥38॥
೦೩೯ ಸ್ವರ್ಗವಾವುದು ನರಕವಾವುದು ...{Loading}...
ಸ್ವರ್ಗವಾವುದು ನರಕವಾವುದು
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವರ್ಗ ಯಾವುದು ? ನರಕ ಯಾವುದು ? ದೇಹದಲ್ಲಿ ಸಾಧಿಸುವ ಸಿದ್ಧಿ ಯಾವುದು ? ಅನುಗ್ರಹಕ್ಕೆ ಏನಿರಬೇಕು ? ಪಾತ್ರ, ಅಪಾತ್ರಗಳೇನು ? ದೈವದೊಳಗೆ ಉಗ್ರ ಯಾವುದು ? ಧರ್ಮದೊಳಗೆ ಸಮಗ್ರ ಯಾವುದು ? ಸಮಚಿತ್ತದಿಂದ ಉಪದೇಶಿಸಿರಿ ಎಂದನು.
ಪದಾರ್ಥ (ಕ.ಗ.ಪ)
ವಿಗ್ರಹ-ದೇಹ, ಅವ್ಯಗ್ರ-ಸಮಚಿತ್ತ
ಮೂಲ ...{Loading}...
ಸ್ವರ್ಗವಾವುದು ನರಕವಾವುದು
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ॥39॥
೦೪೦ ಸುಲಭನತಿ ಸಾಹಿತ್ಯ ...{Loading}...
ಸುಲಭನತಿ ಸಾಹಿತ್ಯ ಮಂಗಳ
ನಿಳಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿ ಸರಾಗದ ವ್ಯಕ್ತಿ, ಮಂಗಳಕರ ಮನೆಯಿಂದ ಬಂದವನು - ಉತ್ತಮ ಪರಂಪರೆಯವನು, ಮಿತಿಮೀರಿದ ಮಹಿಮಾವಂತನು. ಶ್ರೇಷ್ಠವಂಶದವನು, ಉತ್ತಮ ನಡವಳಿಕೆಯವನು, ದೈವಭಕ್ತ, ಪುಣ್ಯವಂತ, ಕುಲವಂತ, ಜಾಣನು, ದಯಾವಂತ, ಆಶ್ಚರ್ಯಪಡತಕ್ಕ ಯುಕ್ತಿವಂತ ಎಂದು ಭೂಮಿಯಲ್ಲಿ ಜನರು ಹೊಗಳುತ್ತಿದ್ದರೆ ಅದೇ ಸ್ವರ್ಗ, ಕೇಳು ಎಂದರು ಸನತ್ಸುಜಾತರು.
ಪದಾರ್ಥ (ಕ.ಗ.ಪ)
ಸುಲಭ-ಸಲೀಸು / ಸರಾಗ, ಸಾಹಿತ್ಯ-ಸಂಬಂಧ, ಕೋವಿದ-ಜಾಣ, ಅನ್ವಯ-ವಂಶ, ಅನುಪಮ-ಹೋಲಿಕೆಯಿಲ್ಲದ
ಮೂಲ ...{Loading}...
ಸುಲಭನತಿ ಸಾಹಿತ್ಯ ಮಂಗಳ
ನಿಳಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ॥40॥
೦೪೧ ಪಾತಕನು ಪತಿತನು ...{Loading}...
ಪಾತಕನು ಪತಿತನು ಕೃತಘ್ನನು
ಘಾತಕನು ಮರ್ಮನು ದುರಾಢ್ಯನ
ಭೀತಕನು ದೂಷಕನು ದುರ್ಜನನಪ್ರಯೋಜಕನು
ನೀತಿಹೀನನು ಜಾತಿಧರ್ಮ ಸ
ಮೇತ ದೈವ ದ್ರೋಹಿಯೆಂಬುದು
ಭೂತದೊಳೇ ನರಕ ಚಿತ್ತೈಸೆಂದನಾ ಮುನಿಪ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಪಗಳನ್ನು ಮಾಡಿದವನು, ಪಾಪಿ, ಉಪಕಾರಗಳನ್ನು ನೆನೆಯದವನು. ದ್ರೋಹಿ, ಮನಸ್ಸಿಗೆ ಪೆಟ್ಟು ನೀಡುವವನು. ಕೆಟ್ಟದ್ದನ್ನು ಸಮರ್ಥಿಸಿಕೊಳ್ಳುವವನು, ಭೀತಿ ಇಲ್ಲದವನು, ನಿಂದನೆಯ ಮಾಡುವವನು, ಕೆಟ್ಟವನು, ಪ್ರಯೋಜನಕ್ಕೆ ಬಾರದವನು, ಹೀನ ನೀತಿಯವನು ಜಾತಿ, ಧರ್ಮ ಸಹಿತ ದೈವ ದ್ರೋಹ ಮಾಡಿದವನು ಎಂದು ಈ ಭೂಮಿಯೊಳಗೆ ಎನಿಸಿಕೊಳ್ಳುತ್ತಿರಲು ಅದೇ ಭೂಮಿಯ ಮೇಲಿನ ನರಕ ಎನಿಸುವುದು.
ಪದಾರ್ಥ (ಕ.ಗ.ಪ)
ಘಾತಕ-ದ್ರೋಹಿ, ಆಢ್ಯತೆ-ಸಮರ್ಥತೆ
ಮೂಲ ...{Loading}...
ಪಾತಕನು ಪತಿತನು ಕೃತಘ್ನನು
ಘಾತಕನು ಮರ್ಮನು ದುರಾಢ್ಯನ
ಭೀತಕನು ದೂಷಕನು ದುರ್ಜನನಪ್ರಯೋಜಕನು
ನೀತಿಹೀನನು ಜಾತಿಧರ್ಮ ಸ
ಮೇತ ದೈವ ದ್ರೋಹಿಯೆಂಬುದು
ಭೂತದೊಳೇ ನರಕ ಚಿತ್ತೈಸೆಂದನಾ ಮುನಿಪ ॥41॥
೦೪೨ ದೇಹವಿಡಿದಿಹ ಧರ್ಮವದು ...{Loading}...
ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥ ಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹವನ್ನು ಇರಿಸಿಕೊಂಡಿದ್ದಾಗ ಇರುವ ಧರ್ಮವು ದೇಹವಿಲ್ಲದೇ ದೊರಕುವುದೆ ? ಎಲ್ಲ ರೀತಿಯ ಪುರುಷಾರ್ಥಗಳನ್ನು ಸಾಧಿಸಲು ದೇಹವೇ ಸಾಧನ. ಇಹಲೋಕಕ್ಕೆ ಸಂಬಂಧಿಸಿದ ಮತ್ತು ಪರಲೋಕದ ಅವಸ್ಥೆಗಳಿಗೆ ಶರೀರವೇ ಸಾಧನ. ಇದರಲ್ಲಿ ಯಾವ ಸಂದೇಹವೂ ಇಲ್ಲ.
ಪದಾರ್ಥ (ಕ.ಗ.ಪ)
ಗತಿ-ಅವಸ್ಥೆ, ಐಹಿಕ-ಇಹದ, ಆಯುಷ್ಮಿಕ-ಪರಲೋಕದ,
ಮೂಲ ...{Loading}...
ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥ ಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ ॥42॥
೦೪೩ ಗರುಡ ...{Loading}...
ಗರುಡ ಪಂಚಾಕ್ಷರಿಯೊಳಲ್ಲದೆ
ಗರಳ ಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಷದ ಭಯವು ಗರುಡನ ಪಂಚಾಕ್ಷರ ಮಂತ್ರದಿಂದಲ್ಲದೆ ಬೇರೆಯದರಿಂದ ಕಳೆಯುವುದೆ ? ವಿಷ್ಣುವಿನ ಸ್ಮರಣೆಯನ್ನು ಮಾಡದೇ ಮಹಾಪಾಪಗಳು ಕೊನೆಯಾಗುವುದೆ ? ಈ ದೊಡ್ಡ ಸಂಸಾರ ಸಮುದ್ರವನ್ನು ದಾಟಲು ಗುರುವಿನ ಉಪದೇಶಕ್ಕಿಂತ ಹೆಚ್ಚಿನದು ಮತ್ತೇನಿದೆ? ಹೇಳು ಎಂದರು ಮುನಿಗಳು.
ಪದಾರ್ಥ (ಕ.ಗ.ಪ)
ನಿರತಿಶಯ-ಹೆಚ್ಚಿನದು, ಗರಳ-ವಿಷ, ಅಂಬುಧಿ-ಸಮುದ್ರ, ಉತ್ತರಿಸು-ದಾಟು,
ಟಿಪ್ಪನೀ (ಕ.ಗ.ಪ)
ಗರುಡ ಪಂಚಾಕ್ಷರಿ, ಓಂ ಗರುತ್ಮಾಂತಯ ಎಂಬ ಮಂತ್ರ
ಮೂಲ ...{Loading}...
ಗರುಡ ಪಂಚಾಕ್ಷರಿಯೊಳಲ್ಲದೆ
ಗರಳ ಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ॥43॥
೦೪೪ ತನ್ನ ಮನೆಯಲಿ ...{Loading}...
ತನ್ನ ಮನೆಯಲಿ ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯವೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರ್ಖನು ತನ್ನ ಮನೆಯಲ್ಲಿ ಅತಿ ಸಂಪನ್ನನು, ಪೂಜ್ಯನೆನಿಸುತ್ತಾನೆ. ರಾಜನು ತನ್ನ ರಾಜ್ಯದಲ್ಲಿ ಹೆಚ್ಚಿನವನು. ತನ್ನ ಗ್ರಾಮದಲ್ಲಿಯ ಯಜಮಾನನು ಪೂಜ್ಯನು. ವಿದ್ವಾಂಸರು ಹೋದ ಸ್ಥಳಗಳಲ್ಲೆಲ್ಲ ಭೇದವಿಲ್ಲದೆ, ಬೇರೆಯವರೆನಿಸದೆ ಇಡೀ ವಿಶ್ವದಲ್ಲಿಯೇ ಸಂಪನ್ನತೆಯಿಂದ ಪೂಜ್ಯಪಾತ್ರರಾಗಿರುತ್ತಾರೆ.
ಪದಾರ್ಥ (ಕ.ಗ.ಪ)
ಭಿನ್ನ-ಭೇದ, ಠಾವು-ಸ್ಥಳ
ಮೂಲ ...{Loading}...
ತನ್ನ ಮನೆಯಲಿ ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯವೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ॥44॥
೦೪೫ ಒಬ್ಬನಹನೈ ಶೂರ ...{Loading}...
ಒಬ್ಬನಹನೈ ಶೂರ ನೂರರೊ
ಳೊಬ್ಬನಹ ಸಾವಿರಕೆ ಪಂಡಿತ
ನೊಬ್ಬನಹನೈ ವಕ್ತ ಶತ ಸಾವಿರಕೆ ಲೋಕದಲಿ
ಒಬ್ಬ ದಾನಿಯ ಕಾಣೆ ನಾನಿ
ನ್ನೊಬ್ಬರೊಬ್ಬರಿಗೊಂದು ಗುಣವದು
ಸರ್ಬಗುಣ ಸಂಪನ್ನರೈ ವಿದ್ಯಾಂಸರುಗಳೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ಜನರಲ್ಲಿ ಒಬ್ಬ ಶೂರನಿರುತ್ತಾನೆ. ಒಂದು ಸಾವಿರ ಜನರಲ್ಲಿ ಒಬ್ಬ ಪಂಡಿತನಿರುತ್ತಾನೆ. ಲಕ್ಷ ಜನರಲ್ಲಿ ಒಬ್ಬ ವಾಗ್ಮಿ ಇರುತ್ತಾನೆ. ಆದರೆ ದಾನಿಯೊಬ್ಬನನ್ನು ಮಾತ್ರ ನಾನು ಕಾಣೆನು. ಒಬ್ಬೊಬ್ಬನಲ್ಲಿ ಒಂದೊಂದು ಗುಣವಿರುತ್ತದೆ. ವಿದ್ವಾಂಸರು ಸರ್ವಗುಣ ಸಂಪನ್ನರಾಗಿರುತ್ತಾರೆ.
ಪದಾರ್ಥ (ಕ.ಗ.ಪ)
ವಕ್ತ-ವಾಗ್ಮಿ, ಹುತವಹ-ಅಗ್ನಿ, ಭೂದೇವ-ಬ್ರಾಹ್ಮಣ, ಕ್ಷಿತಿ-ನೆಲ
ಮೂಲ ...{Loading}...
ಒಬ್ಬನಹನೈ ಶೂರ ನೂರರೊ
ಳೊಬ್ಬನಹ ಸಾವಿರಕೆ ಪಂಡಿತ
ನೊಬ್ಬನಹನೈ ವಕ್ತ ಶತ ಸಾವಿರಕೆ ಲೋಕದಲಿ
ಒಬ್ಬ ದಾನಿಯ ಕಾಣೆ ನಾನಿ
ನ್ನೊಬ್ಬರೊಬ್ಬರಿಗೊಂದು ಗುಣವದು
ಸರ್ಬಗುಣ ಸಂಪನ್ನರೈ ವಿದ್ಯಾಂಸರುಗಳೆಂದ ॥45॥
೦೪೬ ಸತಿಯರಿಗೆ ಗತಿ ...{Loading}...
ಸತಿಯರಿಗೆ ಗತಿ ಯಾವುದೈ ನಿಜ
ಪತಿಗಳಲ್ಲದೆ ವಿಪ್ರಜಾತಿಗೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳತಿಶಯವಾವುದೈ ಭೂ
ಪತಿಯೆ ಕೇಳಿಹಪರಕೆ ಸುಖ ಸಂ
ಗತಿಯನೊಲುವೊಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು ! ಹೆಂಡತಿಯರಿಗೆ ತನ್ನ ಗಂಡನ ಹೊರತು ಬೇರೆ ಯಾರುಗತಿ ? ಬ್ರಾಹ್ಮಣ ಜಾತಿಗೆ ಅಗ್ನಿದೇವ. ಕ್ಷತ್ರಿಯ, ವೈಶ್ಯ, ಶೂದ್ರ, ವರ್ಣರಿಗೆ ಬ್ರಾಹ್ಮಣರಿರಲು ಭೂಮಿಯೊಳಗೆ ಅತಿಶಯವಾದುದೇನು ? ಇಹಪರಗಳಲ್ಲಿ ಸುಖದ ಸಹವಾಸವನ್ನು ಬಯಸಬೇಕಾದರೆ ಬ್ರಾಹ್ಮಣೋತ್ತಮರನ್ನು ಪೂಜಿಸುವುದು.
ಪದಾರ್ಥ (ಕ.ಗ.ಪ)
ಹುತವಹ-ಅಗ್ನಿ, ಕ್ಷಿತಿ-ಭೂಮಿ, ಒಲು-ಬಯಸು/ಒಪ್ಪು
ಮೂಲ ...{Loading}...
ಸತಿಯರಿಗೆ ಗತಿ ಯಾವುದೈ ನಿಜ
ಪತಿಗಳಲ್ಲದೆ ವಿಪ್ರಜಾತಿಗೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳತಿಶಯವಾವುದೈ ಭೂ
ಪತಿಯೆ ಕೇಳಿಹಪರಕೆ ಸುಖ ಸಂ
ಗತಿಯನೊಲುವೊಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ॥46॥
೦೪೭ ಚೋರನನು ಕಣ್ಟಕನ ...{Loading}...
ಚೋರನನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯವಿ
ಕಾರ ಭೇದಿಯನಿಂತರುವರನು ಕಂಡು ಮನ್ನಿಸದೆ
ದೂರದಲಿ ವರ್ಜಿಸುವುದು ಬಹಿ
ಷ್ಕಾರಿಗಳು ಸರ್ವಕ್ಕಿವರುಗಳು
ಸಾರಿದುದು ಸರ್ವೇಶ್ವರನ ಮತವರಸ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು ! ಕಳ್ಳನನ್ನು, ವಿಪತ್ತನ್ನು ಒಡ್ಡುವನನ್ನು, ಚಾಡಿಕೋರರನ್ನು ವ್ಯಭಿಚಾರಿಯನ್ನು, ನಪುಂಸಕನನ್ನು, ಕಾಳುಹರಟೆಗಾರರನ್ನು, ಹೀಗೆ ಈ ಆರು ಜನರನ್ನು ಕಂಡಾಗ ಗೌರವಿಸದೇ ದೂರದಿಂದಲೇ ತೊರೆಯಬೇಕು. ಇವರುಗಳು ಎಲ್ಲದರಿಂದ ಹೊರದೂಡಬೇಕಾದವರು. ಇದು ಸರ್ವೇಶ್ವರನ ಅಭಿಪ್ರಾಯ ಎಂದು ಘೋಷಿತವಾಗಿದೆ.
ಪದಾರ್ಥ (ಕ.ಗ.ಪ)
ಕಂಟಕ-ವಿಪತ್ತು. ಹಿಸುಣ-ಚಾಡಿಕೋರ, ವರ್ಜಿಸು-ತೊರೆ, ಸಮಯ ವಿಕಾರ ಭೇದಿ-ಗೊಡ್ಡು ಹರಟೆಯಲ್ಲಿ ಹೊತ್ತು ಕಳೆಯುವವನು
ಮೂಲ ...{Loading}...
ಚೋರನನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯವಿ
ಕಾರ ಭೇದಿಯನಿಂತರುವರನು ಕಂಡು ಮನ್ನಿಸದೆ
ದೂರದಲಿ ವರ್ಜಿಸುವುದು ಬಹಿ
ಷ್ಕಾರಿಗಳು ಸರ್ವಕ್ಕಿವರುಗಳು
ಸಾರಿದುದು ಸರ್ವೇಶ್ವರನ ಮತವರಸ ಕೇಳೆಂದ ॥47॥
೦೪೮ ಮೊದಲಲಾ ಮಾಹಿಷಿಕನನು ...{Loading}...
ಮೊದಲಲಾ ಮಾಹಿಷಿಕನನು ಮ
ಧ್ಯದಲಿ ವೃಷಲೀ ವಲ್ಲಭನನಂ
ತ್ಯದಲಿ ವಾರ್ಧುಷಿಕನನು ಕಂಡವರುಗಳ ಭಾಗ್ಯನಿಧಿ
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥ ನಿಶ್ಚಯ
ವಿದನರಿದು ನಡೆವುದು ನಯವು ಭೂಪಾಲ ಕೇಳ್ ಎಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ಹೆಂಡತಿಯನ್ನು ಸೂಳೆಗಾರಿಕೆಗೆ ಒಡ್ಡಿ ಹಣವನ್ನು ಗಳಿಸುವವನನ್ನು , ಮಧ್ಯದಲ್ಲಿ ಶೂದ್ರಸ್ತ್ರೀಯ ಬ್ರಾಹ್ಮಣ ಪತಿಯನ್ನು, ಕೊನೆಗೆ ತಪ್ಪು ಮಾತನಾಡುವವನನ್ನು ಕಂಡವರ ಸಂಪತ್ತು ಕಂಡಕಂಡ ಕಡೆಗೆ ಹರಿದು ಅಶಾಂತಿಯಾಗುತ್ತದೆ; ಇದು ಉತ್ತಮ ಶಾಸ್ತ್ರದ ಅರ್ಥ. ಇದನ್ನು ತಿಳಿದು ನಡೆಯುವುದು ನೀತಿ.
ಪದಾರ್ಥ (ಕ.ಗ.ಪ)
ಮಾಹಿಷಿಕ-ಹೆಂಡತಿಯ ವ್ಯಭಿಚಾರದಿಂದ ಹಣಗಳಿಸುವವನು, ವೃಷಳು - ಶೂದ್ರಳು, ವಾರ್ಧುಷಿಕ-ವಾರ್ಧುಷಿಕ-ಬಡ್ಡಿ ಹಣದಿಂದ ಜೀವಿಸುವವನು
ಪಾಠಾನ್ತರ (ಕ.ಗ.ಪ)
ವಾಗ್ದೋಷಿಕ -ವಾರ್ಧುಷಿಕ-
ಪ್ರಾಚ್ಯ ಸಂಶೋಧನಾ ಸಂಸ್ಥೆ ಕೃಷ್ಣ ಜೋಯಿಸ್.
ಮೂಲ ...{Loading}...
ಮೊದಲಲಾ ಮಾಹಿಷಿಕನನು ಮ
ಧ್ಯದಲಿ ವೃಷಲೀ ವಲ್ಲಭನನಂ
ತ್ಯದಲಿ ವಾರ್ಧುಷಿಕನನು ಕಂಡವರುಗಳ ಭಾಗ್ಯನಿಧಿ
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥ ನಿಶ್ಚಯ
ವಿದನರಿದು ನಡೆವುದು ನಯವು ಭೂಪಾಲ ಕೇಳೆಂದ ॥48॥
೦೪೯ ಕುಲಮಹಿಷಿ ದುರ್ಮಾರ್ಗ ...{Loading}...
ಕುಲಮಹಿಷಿ ದುರ್ಮಾರ್ಗ ಮುಖದಲಿ
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು
ಇಳೆಯೊಳವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತ
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳ್ ಎಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಹೆಂಡತಿಯ ಕೆಟ್ಟ ಮಾರ್ಗದಿಂದ ಗಳಿಸಿದ ಹಣವನ್ನು ಅನುಭವಿಸಿ ಕಾಲಕಳೆಯುವ ದರಿದ್ರರು ಮಾಹಿಷಿಕರೆನಿಸಿಕೊಳ್ಳುವವರು. ಈ ಭೂಮಿಯಲ್ಲಿ ಇಂತಹವರೊಡನೆ ಕೂಡುವ ಸ್ನೇಹಿತರಿಗೆ ನರಕ ಸಮುದ್ರದಲ್ಲಿ ತೇಲುತ್ತ ಮುಳುಗುವುದಲ್ಲದೇ ಬೇರೆ ಗತಿಯಿಲ್ಲ.
ಪದಾರ್ಥ (ಕ.ಗ.ಪ)
ಆರ್ಣವ-ಸಮುದ್ರ, ಒಡನಾಡಿ-ಸ್ನೇಹಿತ
ಮೂಲ ...{Loading}...
ಕುಲಮಹಿಷಿ ದುರ್ಮಾರ್ಗ ಮುಖದಲಿ
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು
ಇಳೆಯೊಳವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತ
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳೆಂದ ॥49॥
೦೫೦ ದೈವದಾಧೀನದಲಿ ಜಗವಾ ...{Loading}...
ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾಧೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವಹ
ದೈವವೆಂಬುದದಾವುದೈ ಹೇಳೆಂದನಾ ಮುನಿಪ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಜಗತ್ತು ದೈವದ ಅಧೀನದಲ್ಲಿದೆ. ಆ ದೈವವು ಮಂತ್ರಾಧೀನವಾಗಿದೆ. ಮಂತ್ರವು ಬ್ರಾಹ್ಮಣರ ವಶದಲ್ಲಿದೆ. ಲೋಕದಲ್ಲಿ ದೈವವೇ ಬ್ರಾಹ್ಮಣನಲ್ಲದೆ ಆಲೋಚಿಸಿದರೆ ಬ್ರಾಹ್ಮಣರಿಗಿಂತ ಹೆಚ್ಚಿನ ದೈವ ಯಾವುದಿದೆ ಹೇಳು !
ಪದಾರ್ಥ (ಕ.ಗ.ಪ)
ಭೂವಿಬುಧ-ಬ್ರಾಹ್ಮಣ, ಅಧೀನ-ವಶ
ಮೂಲ ...{Loading}...
ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾಧೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವಹ
ದೈವವೆಂಬುದದಾವುದೈ ಹೇಳೆಂದನಾ ಮುನಿಪ ॥50॥
೦೫೧ ಕೆಲಸ ಗತಿಯಲಿ ...{Loading}...
ಕೆಲಸ ಗತಿಯಲಿ ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ
ಸಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲ್ಲುಕುಟಿಕನು ತನ್ನ ಕರಕುಶಲತೆಯಿಂದ ಶಿಲೆಯನ್ನು ವಿಗ್ರಹವನ್ನಾಗಿ ನಿಲ್ಲಿಸುವನು. ಅದನ್ನು ಲೋಕಕ್ಕೆ ನಾನಾ ವಿಧಾನದಿಂದ (ಆಗಮೋಕ್ತ ವಿಧಿ ವಿಧಾನಗಳಿಂದ) ದೈವವನ್ನು ಮಾಡಿ ನೀಡುವ ಬ್ರಾಹ್ಮಣರನ್ನು ಬಿಟ್ಟು ದೇವದಾನವರಲ್ಲಿ ಬೇರೆ ಉಂಟೆ ? ಜಗತ್ತಿನಲ್ಲಿ ನಿಜವಾದ ದೈವವು ಬ್ರಾಹ್ಮಣರಲ್ಲದೆ ಮತ್ತೆ ಯಾವುದು ?
ಮೂಲ ...{Loading}...
ಕೆಲಸ ಗತಿಯಲಿ ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ
ಸಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ॥51॥
೦೫೨ ಎಣಿಸ ಬಹುದೂರ್ವರೆಯ ...{Loading}...
ಎಣಿಸ ಬಹುದೂರ್ವರೆಯ ಸೈಕತ
ಮಣಿಯನೊಯಾ್ಯರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊಳಬಹುದು
ಎಣಿಸಬಾರದದೊಂದು ದಿವಿಜರ
ಗಣಕೆ ಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು ! ಈ ಭೂಮಿಯಲ್ಲಿರುವ ಮರಳಿನ ಕಣಗಳನ್ನೆಣಿಸಬಹುದು. ಆಕಾಶದ ಆವರಣದಲ್ಲಿ ಬೀಳುತ್ತಿರುವ ಬೆಡಗಿನ ಮಳೆಯ ಹನಿಗಳನ್ನು ಲೆಕ್ಕ ಮಾಡಬಹುದು. ಆದರೆ ಒಂದನ್ನು ಮಾತ್ರ ಎಣಿಸಲಾಗದು. ಬ್ರಾಹ್ಮಣ ಸಮೂಹದಲ್ಲಿ ಕಣ್ಣಿಗೆ ಕಾಣತಕ್ಕ ಒಬ್ಬ ಒಳ್ಳೆಯ ಬ್ರಾಹ್ಮಣನನ್ನು ರಕ್ಷಿಸಿದ ಫಲವಿಷ್ಟೇ ಎಂದು ಎಣಿಸಲಾಗದು.
ಪದಾರ್ಥ (ಕ.ಗ.ಪ)
ಸೈಕತ - ಉಸುಕು-ಮರಳು, ಊರ್ವರೆ-ಭೂಮಿ, ವೈಯ್ಯಾರ-ಬೆಡಗು, ವೃಷ್ಟಿಬಿಂದು-ಮಳೆಯಹನಿ, ಗೋಚರ-ಕಣ್ಣಿಗೆ ಕಾಣತಕ್ಕ, ದಿವಿಜ-ದೇವತೆ, ಗಣ-ಗುಂಪು
ಮೂಲ ...{Loading}...
ಎಣಿಸ ಬಹುದೂರ್ವರೆಯ ಸೈಕತ
ಮಣಿಯನೊಯಾ್ಯರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊಳಬಹುದು
ಎಣಿಸಬಾರದದೊಂದು ದಿವಿಜರ
ಗಣಕೆ ಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ ॥52॥
೦೫೩ ಜಾತಿಧರ್ಮವನನುಸರಿಸಿ ವರ ...{Loading}...
ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತೆ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಹಿರಿದಿರಲದುವೆ ಕೇಳ್ ಸುಕೃತಕ್ಕೆ ಕಡೆಯೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾತಿಧರ್ಮವನ್ನು ಪಾಲಿಸಿ, ತಾಯಿ-ತಂದೆಯರ ಸೇವೆಯಲ್ಲಿ ಪ್ರೀತಿಯನ್ನು ಕಾಣುತ್ತ, ಪರರ ನಿಂದೆ-ಸ್ತುತಿಗಳನ್ನು ತೊರೆದು, ಈಶ್ವರನಲ್ಲಿ ಭಕ್ತಿಯಿಟ್ಟು, ಹೆಸರಾದ ಗುರು-ದೈವಗಳ ಭಯ-ಭೀತಿ ಹೆಚ್ಚಿರಲು ಅದೇ ಪರಮ ಪುಣ್ಯಕ್ಕೆ ಕೊನೆ.
ಪದಾರ್ಥ (ಕ.ಗ.ಪ)
ಪರಿಚರಿಯ-ಸೇವೆ, ಸುಕೃತ-ಪುಣ್ಯ, ಭೂತನಾಥ-ಈಶ್ವರ.
ಮೂಲ ...{Loading}...
ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತೆ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಹಿರಿದಿರಲದುವೆ ಕೇಳ್ ಸುಕೃತಕ್ಕೆ ಕಡೆಯೆಂದ ॥53॥
೦೫೪ ಅರ್ಥದಿನ್ದಹ ಸಿದ್ಧಿ ...{Loading}...
ಅರ್ಥದಿಂದಹ ಸಿದ್ಧಿ ಯಾವುದ
ನರ್ಥವೆಂಬುದದೇನು ತನಗೆ
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ
ತೀರ್ಥವಾವುದು ವಿಪ್ರರೊಳಗೆ ಸ
ಮರ್ಥರಾರು ಸುಧಾತ್ರಿಯೊಳಗೆಯು
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣದಿಂದ ಮುಟ್ಟ ಬಹುದಾದ ಗುರಿ ಯಾವುದು ? ಅನರ್ಥ (ಕೇಡು) ವೆಂಬುದು ಏನು ? ತನಗೆ ಸ್ವಾರ್ಥ ಯಾವುದು? ಪರಾರ್ಥದಿಂದ ಈ ಭೂಮಿಯಲ್ಲಿ ಸಾಧಿಸಬೇಕಾದುದು ಏನಿದೆ ? ತೀರ್ಥ ಕ್ಷೇತ್ರ ಯಾವುದು ? ಬ್ರಾಹ್ಮಣರೊಳಗೆ ಸಮರ್ಥರು ಯಾರು ? ಈ ಪವಿತ್ರ ಭೂಮಿಯಲ್ಲಿ ಯಾರು ವ್ಯರ್ಥ ಜೀವಿಗಳು ? ಎಲ್ಲವನ್ನೂ ಹೇಳುತ್ತೇನೆ ಗಮನವಿಟ್ಟು ಕೇಳು.
ಪದಾರ್ಥ (ಕ.ಗ.ಪ)
ಅರ್ಥ-ಹಣ, ಸ್ವಾರ್ಥ-ತನ್ನದು, ಪರಾರ್ಥ-ಬೇರೆಯವರಿಗಾಗಿ, ಸುಧಾತ್ರಿ-ಪವಿತ್ರ ಭೂಮಿ, ಸಿದ್ಧಿ-ಗುರಿ ಮುಟ್ಟುವುದು.
ಮೂಲ ...{Loading}...
ಅರ್ಥದಿಂದಹ ಸಿದ್ಧಿ ಯಾವುದ
ನರ್ಥವೆಂಬುದದೇನು ತನಗೆ
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ
ತೀರ್ಥವಾವುದು ವಿಪ್ರರೊಳಗೆ ಸ
ಮರ್ಥರಾರು ಸುಧಾತ್ರಿಯೊಳಗೆಯು
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ॥54॥
೦೫೫ ಧನವನುಳ್ಳ ಮಹಾತ್ಮನಾವುದ ...{Loading}...
ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತಸುಖ ಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣವುಳ್ಳ ಘನವಂತನು ಯಾವುದನ್ನು ಬಯಸಿದರೂ ಅದು ಕೈಗೂಡುತ್ತದೆ. ಹಣವಿಲ್ಲದ ಬಡವನು ಬಯಸಿದ ಅಪೇಕ್ಷೆ ವ್ಯರ್ಥವಾಗುತ್ತದೆಯಲ್ಲದೇ ಶ್ರೀಮಂತನಂತೆ ಎಲ್ಲ ಸುಖವೂ ದೊರಕುವುದೆ ? ಎಲ್ಲದಕ್ಕೂ ಸಾಧನವು ಹಣವಲ್ಲದೇ ಬೇರೆಯಿಲ್ಲ.
ಪದಾರ್ಥ (ಕ.ಗ.ಪ)
ಮಹಾತ್ಮ-ಘನವಂತ/ಶ್ರೇಷ್ಠ, ಬಯಕೆ-ಅಪೇಕ್ಷೆ, ಬಯಲು-ವ್ಯರ್ಥ.
ಮೂಲ ...{Loading}...
ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತಸುಖ ಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ॥55॥
೦೫೬ ವ್ಯರ್ಥರುಗಳೊಡನಾಟ ತಮ್ಮ ...{Loading}...
ವ್ಯರ್ಥರುಗಳೊಡನಾಟ ತಮ್ಮ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ
ಅರ್ಥವಿಲ್ಲದ ಸಿರಿಯ ಸಡಗರ
ಆರ್ಥಿಯಿಲ್ಲದ ಬಾಳುವೆಗಳಿವ
ನರ್ಥ ಪಾರಂಪರೆಯಲೇ ಕೇಳ್ ಎಂದನಾ ಮುನಿಪ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯರ್ಥಜನರೊಡನಾಟ, ತಮ್ಮ ಸ್ವಾರ್ಥವಿಲ್ಲದವರ ಸಹವಾಸ, ಪರರ ಹಣದಿಂದ ಬದುಕುವವನ ಬಾಳು, ಅರ್ಥವಿಲ್ಲದ ಶ್ರೀಮಂತಿಕೆಯ ಸಂಭ್ರಮ, ಪ್ರೀತಿಯಿಲ್ಲದ ಬಾಳು, ಇವುಗಳು ಕೇಡಿನ ಸಾಲಿನಲ್ಲಿರುವುವು.
ಪದಾರ್ಥ (ಕ.ಗ.ಪ)
ಉಜ್ಜೀವಿಸು-ಬದುಕು, ಆರ್ಥಿ-ಪ್ರೀತಿ, ಪಾರಂಪರೆ-ಸಾಲು
ಮೂಲ ...{Loading}...
ವ್ಯರ್ಥರುಗಳೊಡನಾಟ ತಮ್ಮ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ
ಅರ್ಥವಿಲ್ಲದ ಸಿರಿಯ ಸಡಗರ
ಆರ್ಥಿಯಿಲ್ಲದ ಬಾಳುವೆಗಳಿವ
ನರ್ಥ ಪಾರಂಪರೆಯಲೇ ಕೇಳೆಂದನಾ ಮುನಿಪ ॥56॥
೦೫೭ ಮಾಡುವುದು ಧರ್ಮವನು ...{Loading}...
ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಸುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮಸ್ವಾರ್ಥಕರವೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮವನ್ನು ಮಾಡಬೇಕು, ಸಜ್ಜನರೊಡನೆ ಕೂಡಬೇಕು, ಇತರರಿಗೆ ತೊಂದರೆ ಮಾಡಬಾರದು ಕಾಯಾ, ವಾಚಾ, ಮನಸಾ ಒಲ್ಲದ ಕಾರ್ಯವನ್ನು ಮಾಡಬಾರದು. ದುಷ್ಟರೊಡನೆ ಸೇರಬಾರದು. ಈ ದಾರಿಯಲ್ಲಿ ನೋಡಿ ನಡೆಯುವುದು ಪರಮ ಶ್ರೇಯಸ್ಕರ.
ಮೂಲ ...{Loading}...
ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಸುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮಸ್ವಾರ್ಥಕರವೆಂದ ॥57॥
೦೫೮ ಕರಿತುರಗ ಮೊದಲಾದ ...{Loading}...
ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರ ಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆ ಕುದುರೆ ಮೊದಲಾದವು ಅರಮನೆಯಲ್ಲಿಯೇ ಉಳಿಯುವುವು, ಮಕ್ಕಳು, ಸ್ನೇಹಿತರು, ಪತ್ನಿಯರು, ಒಡಹುಟ್ಟಿದವರು, ಕುಲಬಾಂಧವರು, ಸ್ಮಶಾನದಲ್ಲಿ ಚಿತೆಗೆ ಸಂಸ್ಕಾರ ಮಾಡಿ ಹಿಂತಿರುಗುವರು. ತಾನು ಮಾಡಿದ ಪಾಪ, ಪುಣ್ಯಗಳು ಮಾತ್ರ ಮನುಷ್ಯನನ್ನು ಸತ್ತನಂತರವೂ ಬೆನ್ನು ಬಿಡದೆ ಹಿಂಬಾಲಿಸುತ್ತವೆ. ಮಹಾರಾಜ ! ಈ ಧರ್ಮರಹಸ್ಯದ ವ್ಯಾಪ್ತಿಯನ್ನು ಬಲ್ಲವರು ಯಾರು.
ಪದಾರ್ಥ (ಕ.ಗ.ಪ)
ವಿಸ್ತರ-ವ್ಯಾಪ್ತಿ, ಸುಕೃತ-ಪುಣ್ಯ, ದುಷ್ಕತ-ಪಾಪ, ಗೋತ್ರಜ-ಒಂದೇ ಕುಲ / ಗೋತ್ರದವರು
ಮೂಲ ...{Loading}...
ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರ ಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ॥58॥
೦೫೯ ಧರ್ಮದಾಧಾರದಲಿಹುದು ಜಗ ...{Loading}...
ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂತರದ ಪಾತಕವ
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸ ಕೇಳ್ ಎಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಜಗತ್ತು ಧರ್ಮದ ಆಧಾರದಿಂದಲೇ ಇದೆ. ಧರ್ಮವನ್ನು ಅವಲಂಬಿಸಿದವನನ್ನು ಆಶ್ರಯಿಸಬೇಕು. ಜನ್ಮಾಂತರದ ಪಾಪವನ್ನು ಧರ್ಮವೇ ಕಳೆಯುವುದು. ಧರ್ಮವೇ ಎಲ್ಲ ರೀತಿಯಲ್ಲಿಯೂ ಗಣ್ಯವಾದುದು. ಧರ್ಮವೆಂಬುದೇ ಮೋಕ್ಷ ಆ ಧರ್ಮವನ್ನು ಬಿಟ್ಟಿರುವುದು ಬದುಕಲ್ಲ.
ಪದಾರ್ಥ (ಕ.ಗ.ಪ)
ಪ್ರತಿಷ್ಠಿತ -ಗಣ್ಯ, ಪರಮ ಪದ - ಮೋಕ್ಷ
ಮೂಲ ...{Loading}...
ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂತರದ ಪಾತಕವ
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸ ಕೇಳೆಂದ ॥59॥
೦೬೦ ಪರಿಪರಿಯ ಯಜ್ಞವನು ...{Loading}...
ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಬಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದ್ವಯದೊಳವನೀಶ ಕೇಳ್ ಎಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು ! ನಾನಾ ತರದ ಯಜ್ಞಗಳನ್ನು ಮಾಡಿ ದೇವೇಂದ್ರನನ್ನು ಸಂತೋಷಪಡಿಸಿದರೆ ಜಗತ್ತಿಗೆ ಸಂಪೂರ್ಣವಾಗಿ ಒಳ್ಳೆಯ ಮಳೆಯನ್ನು ಸುರಿಸುವನು. ಭೂಮಿ, ಸ್ವರ್ಗ ಎರಡೂ ಲೋಕಗಳಲ್ಲಿ ಇಂದ್ರನು ಸಸ್ಯಗಳನ್ನು ಕಾಪಾಡಲು ತನ್ನ ಮೈ ತುಂಬಾ ಎಚ್ಚರದಿಂದಿರುವನು.
ಪದಾರ್ಥ (ಕ.ಗ.ಪ)
ಹರಿಹಯ-ದೇವೇಂದ್ರ, ಹೊರೆಯಲು-ಕಾಪಾಡಲು, ಸುವೃಷ್ಟಿ-ಒಳ್ಳೆಯ ಮಳೆ, ಭುವನ್ವಯ-ಸ್ವರ್ಗ, ಭೂಲೋಕ
ಮೂಲ ...{Loading}...
ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಬಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದ್ವಯದೊಳವನೀಶ ಕೇಳೆಂದ ॥60॥
೦೬೧ ಎತ್ತಲಾನು ಸುತೀರ್ಥವೆಮ್ಬುದ ...{Loading}...
ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವ ತೀರ್ಥದ
ಸತ್ವವನು ಸನ್ನಿಹಿತವಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯ ತೀರ್ಥ ಎಲ್ಲಿದೆ ಎಂದು ಕೇಳಿದರೆ, ಎಲ್ಲ ಸತ್ವವನ್ನು ಒಳಗೊಂಡ ತೀರ್ಥವು ಯಾವುದೆಂದು ನಾನು ನಿನಗೆ ಹೇಳುವೆನು. ಬ್ರಾಹ್ಮಣರ ಪಾದದಿಂದಿಳಿದ ಪವಿತ್ರವಾದ ನೀರನ್ನು ಯಾರು ತಮ್ಮ ನೆತ್ತಿಯಲ್ಲಿ ಧರಿಸುವರೋ ಅವರು ಪುಣ್ಯವಂತರು.
ಪದಾರ್ಥ (ಕ.ಗ.ಪ)
ಸನ್ನಿಹಿತ-ಒಳಗೊಂಡ/ಕೂಡಿಕೊಂಡ, ಅವಧರಿಸು-ಕೇಳು
ಮೂಲ ...{Loading}...
ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವ ತೀರ್ಥದ
ಸತ್ವವನು ಸನ್ನಿಹಿತವಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ॥61॥
೦೬೨ ಶರಧಿಯೊಳು ಹರಿ ...{Loading}...
ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷಿ ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷೀರಸಮುದ್ರದಲ್ಲಿ ಶ್ರೀವಿಷ್ಣುವು ಯೋಗ ನಿದ್ರೆಯಲ್ಲಿದ್ದಾಗ ಭೃಗುಋಷಿ ಬಂದು ಲಕ್ಷ್ಮಿಯ ವಾಸಸ್ಥಾನವಾದ ಅವನ ಎದೆಗೆ ಒದೆಯಲು, ವಿಷ್ಣುವು ಮುನಿಯ ಪಾದವನ್ನು ತನ್ನ ಹೊಟ್ಟೆಯ ಮೇಲಿಟ್ಟುಕೊಂಡು ಒತ್ತಿದನು. ಬ್ರಾಹ್ಮಣರ ಪಾವಿತ್ರ್ಯವನ್ನು ಮೆರೆಸಿದನು. ಆದ್ದರಿಂದ ಬ್ರಾಹ್ಮಣರ ಪಾದತೀರ್ಥಕ್ಕಿಂತ ಪವಿತ್ರವಾದ ತೀರ್ಥ ಮತ್ತೊಂದಿಲ್ಲ.
ಪದಾರ್ಥ (ಕ.ಗ.ಪ)
ವಕ್ಷಸ್ಥಳ-ಎದೆಯ ಪ್ರದೇಶ, ಶರಧಿ-ಸಮುದ್ರ
ಮೂಲ ...{Loading}...
ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷಿ ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ॥62॥
೦೬೩ ಮಾಡುತಿಹ ಯಜ್ಞವನು ...{Loading}...
ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಯಜ್ಞವನ್ನು ಮಾಡುತ್ತ, ಇತರರಿಂದ ಮಾಡಿಸುತ್ತ ವೇದಾಧ್ಯಯನವನ್ನು ಮಾಡುತ್ತ ಇತರರಿಗೂ ಹೇಳಿಕೊಡುತ್ತ, ಯೋಗ್ಯರನ್ನಾಗಿ ಮಾಡುತ್ತ ದಾನವನ್ನು ಮಾಡುತ್ತ, ಇತರರು ದಾನ ಮಾಡಿದಾಗ ಸ್ವೀಕರಿಸುತ್ತ ಇರುವ ಗುಣಗಳನ್ನು ಕೂಡಿಕೊಂಡವನು ಸಮರ್ಥ ಬ್ರಾಹ್ಮಣೋತ್ತಮನೆನಿಸುತ್ತಾನೆ.
ಮೂಲ ...{Loading}...
ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ ॥63॥
೦೬೪ ವೇದಪುರುಷನ ವಿಗ್ರಹದಲಿ ...{Loading}...
ವೇದಪುರುಷನ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜ ಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ನೇದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳ್ ಎಂದನಾ ಮುನಿಪ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಾಧ್ಯಯನ ಮಾಡಿದವನ ದೇಹದಲ್ಲಿ ಯಾವ ಭೇದವೂ ಇಲ್ಲದೇ ಬ್ರಹ್ಮನೇ ಮೊದಲಾದ ದೇವತೆಗಳು ಹಾಸುಹೊಕ್ಕಾಗಿ ಮನೆ ಮಾಡಿಕೊಂಡಿರುವರು. ಆಕಾರಣದಿಂದಾಗಿ ಯಾವ ವಾದವನ್ನು ಮಾಡದೆ ಅಂತಹ ಶ್ರೇಷ್ಠ ಬ್ರಾಹ್ಮಣರನ್ನು ಗೌರವಿಸುವುದು ಉತ್ತಮ.
ಪದಾರ್ಥ (ಕ.ಗ.ಪ)
ಬಿಸಜಸಂಭವ-ಬ್ರಹ್ಮ, ಅಭಿವಾದಿಸು- ಗೌರವಿಸು
ಮೂಲ ...{Loading}...
ವೇದಪುರುಷನ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜ ಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ನೇದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ ॥64॥
೦೬೫ ಯುವತಿಯರು ಗಾಯಕರು ...{Loading}...
ಯುವತಿಯರು ಗಾಯಕರು ಕವಿಗಳು
ತವತವಗೆ ಕೈವಾರಿಸುವರಾ
ವವನವನೆ ಯಾವಗಲು ದೂಷಕನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತ್ರೀಯರು, ಗಾಯಕರು, ಕವಿಗಳು ಯಾರನ್ನು ತಮತಮಗೆ ಹೊಗಳಿಕೊಳ್ಳುತ್ತಾರೋ ಅಂತಹವರು ನಿಜಕ್ಕೂ ಇಹ-ಪರಗಳಲ್ಲಿ ನಿಂದಕರಾಗಿರುತ್ತಾರೆ. ಈ ಮೂವರು ಯಾರನ್ನು ನಿಂದಿಸುತ್ತಾರೋ ಅವರು ನಿಜಕ್ಕೂ ಸರ್ವಜ್ಞರೆನಿಸುತ್ತಾರೆ. ಇದು ಧರ್ಮ ರಹಸ್ಯ.
ಪದಾರ್ಥ (ಕ.ಗ.ಪ)
ಕೈವಾರಿಸು-ಹೊಗಳು, ಮೆಚ್ಚು-ಒಪ್ಪು, ದೂಷಕ-ನಿಂದಕ
ಮೂಲ ...{Loading}...
ಯುವತಿಯರು ಗಾಯಕರು ಕವಿಗಳು
ತವತವಗೆ ಕೈವಾರಿಸುವರಾ
ವವನವನೆ ಯಾವಗಲು ದೂಷಕನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ॥65॥
೦೬೬ ಜ್ಞಾತವಾವ್ದಜ್ಞಾತವಾವುದು ...{Loading}...
ಜ್ಞಾತವಾವ್ದಜ್ಞಾತವಾವುದು
ನೀತಿ ಯಾವುದನೀತಿ ಯಾವುದು
ದ್ವೆ ೈತವಾವ್ದದ್ವೆ ೈತವಾವುದು ವೈದಿಕಾಂಗದಲಿ
ಖ್ಯಾತಿಯಾವ್ದಖ್ಯಾತಿ ಯಾವುದು
ಜಾತಿಯಾವುದಜಾತಿ ಯಾವುದು
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ! ಲೋಕದಲ್ಲಿ ತಿಳಿದುದು ಯಾವುದು? ತಿಳಿಯದ್ದು ಯಾವುದು? ನೀತಿ ಯಾವುದು? ಅನೀತಿ ಯಾವುದು? ವೈದಿಕ ಶಾಸ್ತ್ರದಲ್ಲಿ ದ್ವೈತ ಯಾವುದು? ಅದ್ವೈತ ಯಾವುದು? ಖ್ಯಾತಿ ಯಾವುದು? ಅಪಖ್ಯಾತಿ ಯಾವುದು? ಎಂಬುದನ್ನು ಹೇಳುತ್ತೇನೆ ಕೇಳು.
ಪದಾರ್ಥ (ಕ.ಗ.ಪ)
ಜಾತಿ-ಸ್ವಭಾವ, ಜ್ಞಾತ-ತಿಳಿದ, ಅಜ್ಞಾತ-ತಿಳಿಯದ, ಖ್ಯಾತಿ-ಕೀರ್ತಿ, ಅಪಖ್ಯಾತಿ-ತೆಗಳಿಕೆ, ದ್ವೈತ-ಎರಡು, ಅದ್ವೈತ-ಒಂದು
ಮೂಲ ...{Loading}...
ಜ್ಞಾತವಾವ್ದಜ್ಞಾತವಾವುದು
ನೀತಿ ಯಾವುದನೀತಿ ಯಾವುದು
ದ್ವೈತವಾವ್ದದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯಾವ್ದಖ್ಯಾತಿ ಯಾವುದು
ಜಾತಿಯಾವುದಜಾತಿ ಯಾವುದು
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ॥66॥
೦೬೭ ಧರಣಿಯಮರರ ಸೇವೆಯನು ...{Loading}...
ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರ ಸೇವೆಯನ್ನು ಮಾಡಿ ಗೌರವದಿಂದ ಆದರಿಸಿ ಸಂಭಾವನೆಯನ್ನು ನೀಡಿದ ಮಹಾತ್ಮರಿಗೆ ಸಂಪದ್ಯುಕ್ತವಾದ ಸ್ವರ್ಗ ಮೋಕ್ಷಗಳು ದೊರೆಯುವುದಿಲ್ಲವೆ? ಇದನ್ನು ತಿಳಿದು ನಡೆವವನಿಗೆ ತಿಳಿಯದ್ದು ಯಾವುದೆಂದು ಹೇಳಿದನು ಮುನಿ.
ಪದಾರ್ಥ (ಕ.ಗ.ಪ)
ಅಪವರ್ಗ-ಮೋಕ್ಷ, ಬಹುಮಾನ-ಸಂಭಾವನೆ, ಎರವು-ಕುಂದು.
ಮೂಲ ...{Loading}...
ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ॥67॥
೦೬೮ ಯೋನಿಮುಖವೆಮ್ಬತ್ತುನಾಲ್ಕು ...{Loading}...
ಯೋನಿಮುಖವೆಂಬತ್ತುನಾಲ್ಕು ನ
ವೀನ ಜನ್ಮಂಗಳೊಳಗುದಯಿಸಿ
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ
ಮಾನವರ ಬಸುರಿನಲಿ ಬಂದ
ಜ್ಞಾನತರರಾಗಳಿವುದಿದು ಕ
ರ್ಮಾನುಗತವಾಗಿಹುದಲೇ ಭೂಪಾಲ ಕೇಳ್ ಎಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂಬತ್ತು ನಾಲ್ಕು ಲಕ್ಷ ಉತ್ಪತ್ತಿ ಸ್ಥಾನಗಳಲ್ಲಿ ಹೊಸ ಜನ್ಮಗಳನ್ನು ತಳೆದು ಲಾಭ-ನಷ್ಟಗಳನ್ನೂ, ಏಳು - ಬೀಳುಗಳನ್ನು ಅನುಭವಿಸಿ, ಕೊನೆಯಲ್ಲಿ ಜ್ಞಾನದ ತುತ್ತ ತುದಿ ಎಂದು ಮಾನವ ಜನ್ಮವನ್ನು ಪಡೆದು ಹಾಳಾಗುವುದು, ಅಜ್ಞಾನಿಯಾಗುವುದು ಸಂಬಂಧಪಟ್ಟವರ ಕರ್ಮವೇ ಆಗಿರುತ್ತದೆ.
ಪದಾರ್ಥ (ಕ.ಗ.ಪ)
ಯೋನಿ-ಉತ್ಪತ್ತಿಸ್ಥಾನ, ಅನುಗತ-ಸಂಬಂಧಪಟ್ಟ, ಕಣೆಯ-ಸಲ, ನವೀನ-ಹೊಸದು
ಮೂಲ ...{Loading}...
ಯೋನಿಮುಖವೆಂಬತ್ತುನಾಲ್ಕು ನ
ವೀನ ಜನ್ಮಂಗಳೊಳಗುದಯಿಸಿ
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ
ಮಾನವರ ಬಸುರಿನಲಿ ಬಂದ
ಜ್ಞಾನತರರಾಗಳಿವುದಿದು ಕ
ರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ॥68॥
೦೬೯ ಪಾನದಿಂ ಸೂಕರನು ...{Loading}...
ಪಾನದಿಂ ಸೂಕರನು ಬುಧರವ
ಮಾನದಿಂ ಕ್ಷಯರೋಗಿ ಗುರುಜನ
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು
ಹೀನಗತಿಯಿಂದುರಗ ನಾನಾ
ಯೋನಿಗಳಲಿ ಚರಾಚರವು ಕ
ರ್ಮಾನುಗತವಾಗುದಯಿಸುವುದವನೀಶ ಕೇಳ್ ಎಂದ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಡಿತದಿಂದ ಹಂದಿಯ ಜನ್ಮವು, ಬ್ರಾಹ್ಮಣರನ್ನು ಅಪಮಾನಿಸುವುದರಿಂದ ಕ್ಷಯರೋಗಿಯಾಗಿ, ಗುರುಜನರಿಗೆ ಕೇಡುಂಟುಮಾಡುವುದರಿಂದ ಕುಷ್ಠರೋಗಿಯಾಗಿ, ಗರ್ವದಿಂದ ಕೋಳಿಯಾಗಿ, ಕೆಟ್ಟ ನಡತೆಯಿಂದ ಹಾವಿನ ಜನ್ಮವು ನಾನಾ ಉತ್ಪತ್ತಿ ಸ್ಥಾನಗಳಲ್ಲಿ ಚರಾಚರಗಳಲ್ಲಿ (ಸ್ಥಾವರ-ಜಂಗಮಗಳಲ್ಲಿ) ತಮ್ಮ ಕರ್ಮದನುಸಾರವಾಗಿ ಹುಟ್ಟಿ ಬರುವುದು.
ಪದಾರ್ಥ (ಕ.ಗ.ಪ)
ಸೂಕರ-ಹಂದಿ, ಕುಕ್ಕುಟ-ಕೋಳಿ, ಉರಗ-ಹಾವು, ಕುಷ್ಠಿ-ಕುಷ್ಠರೋಗಿ, ಆಹ್ವಯ-ಕರೆ
ಮೂಲ ...{Loading}...
ಪಾನದಿಂ ಸೂಕರನು ಬುಧರವ
ಮಾನದಿಂ ಕ್ಷಯರೋಗಿ ಗುರುಜನ
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು
ಹೀನಗತಿಯಿಂದುರಗ ನಾನಾ
ಯೋನಿಗಳಲಿ ಚರಾಚರವು ಕ
ರ್ಮಾನುಗತವಾಗುದಯಿಸುವುದವನೀಶ ಕೇಳೆಂದ ॥69॥
೦೭೦ ಪರರ ಪಟುತನವಾದದಲಿ ...{Loading}...
ಪರರ ಪಟುತನವಾದದಲಿ ಮೂ
ಗರವೊಲಿಹ ಪರ ವಚನದುತ್ಕಟ
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕ್ಷಾ
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳ್ ಎಂದ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನ್ಯರು ಜಾಣತನದಿಂದ ವಾದವನ್ನು ನಡೆಸುತ್ತಿರುವಾಗ, ಮೂಗನಂತಿದ್ದು ಅನ್ಯರ ಮಾತಿನ ಜಾಣ್ಮೆಗೆ ಕಿವುಡರಂತಿದ್ದು, ಪರರ ಗುಣದೋಷಗಳನ್ನು ಕಂಡಾಗ ಹುಟ್ಟು ಕುರುಡರಂತಿದ್ದು, ವರ್ತಿಸುವ ಪುರುಷನು ಸಾಕ್ಷಾತ್ (ಪ್ರತ್ಯಕ್ಷವಾಗಿ) ಪರಮಪುರುಷನೆನಿಸುತ್ತಾನೆ.
ಪದಾರ್ಥ (ಕ.ಗ.ಪ)
ಪರ-ಅನ್ಯ, ಪಟುತನ-ಜಾಣ್ಮೆ, ಬಧಿರತ್ವ-ಕಿವುಡು, ಜಾತ್ಯಂಧ-ಹುಟ್ಟುಗುರುಡ, ಉತ್ಕಟ-ಹೆಚ್ಚಿನ
ಮೂಲ ...{Loading}...
ಪರರ ಪಟುತನವಾದದಲಿ ಮೂ
ಗರವೊಲಿಹ ಪರ ವಚನದುತ್ಕಟ
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕ್ಷಾ
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ ॥70॥
೦೭೧ ಇಪ್ಪ ಸನ್ತರ್ಪಣವ ...{Loading}...
ಇಪ್ಪ ಸಂತರ್ಪಣವ ಮಾಡಿ ವಿ
ಶಿಷ್ಟ ಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜರನೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳ್ ಎಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರೀತಿಪಾತ್ರರಿಗೆ ಹಿತವಾದುದನ್ನು ನೀಡಿ, ಸಂತೃಪ್ತಿಪಡಿಸಿ, ವಿಶೇಷವಾದ ಪೂಜ್ಯತೆಗೆ ಪಾತ್ರರಾದವನ್ನು ಸಂತೃಪ್ತಿ (ಸಂತೋಷ) ಪಡಿಸಿ, ಧರ್ಮದಿಂದ ಕೂಡಿದ ರಾಜ್ಯವನ್ನು ಪರಿಪಾಲಿಸುತ್ತ, ಕೊಟ್ಟವರು, ತೆಗೆದುಕೊಂಡವರೊಡನೆ, ಒಪ್ಪಿದವರನ್ನು, ತಮ್ಮಂದಿರು ಮಕ್ಕಳನ್ನು ತನ್ನೊಳಗೆ ಕೂಡಿಕೊಂಡಿರುವುದು ಯೋಗ್ಯವಾದುದು.
ಪದಾರ್ಥ (ಕ.ಗ.ಪ)
ಸಂತರ್ಪಣ-ತೃಪ್ತಿಪಡಿಸುವುದು, ಅನುಜ-ತಮ್ಮ, ಆತ್ಮಜ-ಮಗ, ವಿಶಿಷ್ಟ-ವಿಶೇಷ/ಶ್ರೇಷ್ಠ
ಮೂಲ ...{Loading}...
ಇಪ್ಪ ಸಂತರ್ಪಣವ ಮಾಡಿ ವಿ
ಶಿಷ್ಟ ಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜರನೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ ॥71॥
೦೭೨ ನುಡಿದುದನು ಪೂರೈಸಿ ...{Loading}...
ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಟ್ಟಮಾತಿನಂತೆ ನಡೆದುಕೊಂಡು, ಕಾಲವಶವಾದವರನ್ನು ಯೋಗ್ಯರೀತಿಯಲ್ಲಿ ಬೀಳ್ಕೊಡುತ್ತ, ಹಿಂದಿನವರನ್ನು, ಆಪ್ತರನ್ನು ಗೌರವಿಸುತ್ತ, ತನ್ನವರನ್ನು ಬಿಡದೆ, ಸೇವೆಯನ್ನು ಮಾಡುವವರನ್ನು ಗ್ರಹಿಸಿ ನಾನಾರೀತಿಯ ಅಧಿಕಾರವನ್ನು ಕೊಡುತ್ತಿರುವುದು ನೀತಿ ಎನಿಸಿಕೊಳ್ಳುತ್ತದೆ.
ಪದಾರ್ಥ (ಕ.ಗ.ಪ)
ಹಳೆಯ-ಹಿಂದಿನ, ಪದವಿ-ಅಧಿಕಾರ/ಸ್ಥಾನ
ಮೂಲ ...{Loading}...
ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ॥72॥
೦೭೩ ವಿಲಗ ಸಾಗರನಾಗಿ ...{Loading}...
ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು
ಗಳಿಗೆ ಸಂಖ್ಯೆಗೆ ದಂಡ ದೋಷವ
ಕೊಳುತ ಕಡೆಯಲಧೋಗತಿಗಳೊಳ
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಶದ ಜನರಿಗೆ ತೊಂದರೆಯನ್ನು ಕೊಡುತ್ತ, ಸಂಕಟ-ನೋವುಗಳನ್ನು ನೀಡುತ್ತ, ದಾನ-ಧರ್ಮಗಳನ್ನು ಬಿಟ್ಟು, ದೇವಬ್ರಾಹ್ಮಣರು ಎನ್ನದೇ ಕಂಡಕಂಡವರನ್ನೆಲ್ಲ ಎಳೆದು ಹಾಕಿ, ದೋಷಗಳನ್ನು ಮಾಡುತ್ತ ಕೊನೆಯಲ್ಲಿ ನರಕಕ್ಕೆ ಹೋಗುವುದು ಅನೀತಿ ಎಂದನು ಆ ಮುನಿಯು.
ಪದಾರ್ಥ (ಕ.ಗ.ಪ)
ವಿಲಗ-ತೊಂದರೆ, ಹಿಂಡು-ಸಂಕಟಪಡಿಸು, ಅಧೋಗತಿ-ನರಕ
ಮೂಲ ...{Loading}...
ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು
ಗಳಿಗೆ ಸಂಖ್ಯೆಗೆ ದಂಡ ದೋಷವ
ಕೊಳುತ ಕಡೆಯಲಧೋಗತಿಗಳೊಳ
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ॥73॥
೦೭೪ ಯೋನಿಯಲ್ಲದ ಠಾವುಗಳಲಿ ...{Loading}...
ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತತ್ಪಿಗೆ ಅವಕಾಶವಾದ ಸ್ಥಳಗಳಲ್ಲಿ ಮತ್ತು ಸಂಬಂಧಪಡದ ಭೋಗಾಭಿಲಾಷೆಗಳಲ್ಲಿ, ಪಶುಯೋನಿಗಳಲ್ಲಿ, ಸುರತವನ್ನು ಅನುಭವಿಸುವ ಪಾಪಿಗಳ ಕ್ರಮಕ್ಕೆ ಏನು ಹೇಳಬಹುದು ? ನರಕ ಸಾಮ್ರಾಜ್ಯದಲ್ಲಿ ತೂಗಾಡುತ್ತ ಅನಂತರ ನಾಯಿಯ ಜನ್ಮದಲ್ಲಿ ಹುಟ್ಟುವರು.
ಪದಾರ್ಥ (ಕ.ಗ.ಪ)
ಠಾವು-ಸ್ಥಳ/ಸ್ಥಾನ, ವಿತಾನ-ಸಾಮ್ರಾಜ್ಯ, ಸಂಭೋಗ-ಸುರತ, ಓಲಾಡು-ತೂಗಾಡು, ಶ್ವಾನ-ನಾಯಿ
ಮೂಲ ...{Loading}...
ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ॥74॥
೦೭೫ ಜೀವ ಪರಮನಭೇದವನು ...{Loading}...
ಜೀವ ಪರಮನಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರ ವಿ
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ
ಕೋವಿದರ ಸಂಗವನುಳಿದು ಮಾ
ಯಾ ವಿಲಾಸದ ನೆಲೆಯ ನೋಡದೆ
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀವಾತ್ಮ ಪರಮಾತ್ಮಗಳು ಭಿನ್ನವಲ್ಲವೆಂಬುದನ್ನು ತಿಳಿದೂ ಗೌರವಿಸದೆ, ಸ್ವರೂಪವನ್ನರಿಯದೇ ವೇದಾಂತ ಶಾಸ್ತ್ರವು ಯಾವ ಮುಖವೆಂದು ತಿಳಿಯದೆ ಬರಿಯೇ ನಾನು ದಾಸನೆಂದುಕೊಳ್ಳುತ್ತ ವಿದ್ವಾಂಸರ ಸಹವಾಸವನ್ನೂ ಮಾಡದೇ ಮಾಯೆಯ ಬೆಡಗಿನ ಮೂಲವನ್ನು ಕಾಣದೇ ಸಾಯುತ್ತಿರುವುದೇ ದ್ವೈತ(ದ್ವಂದ್ವ)ವೆಂದಾಗುತ್ತದೆ.
ಪದಾರ್ಥ (ಕ.ಗ.ಪ)
ದಾಸೋಹ - ನಾನು ದಾಸ ಎಂಬ ಭಾವನೆ, ಕೋವಿದ-ವಿದ್ವಾಂಸ, ವಿಲಾಸ-ಬೆಡಗು, ದ್ವೈತ-ದ್ವಂದ್ವ
ಮೂಲ ...{Loading}...
ಜೀವ ಪರಮನಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರ ವಿ
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ
ಕೋವಿದರ ಸಂಗವನುಳಿದು ಮಾ
ಯಾ ವಿಲಾಸದ ನೆಲೆಯ ನೋಡದೆ
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ॥75॥
೦೭೬ ಉತ್ತಮರ ಸಙ್ಗದೊಳಗೋಲಾ ...{Loading}...
ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಜ್ಜನರ ಸಹವಾಸದಲ್ಲಿದ್ದು, ಕೆಟ್ಟ ವಿಷಯಗಳಿಂದ ದೂರವಾಗಿ ಚರಾಚರದ ಸುಖ ದುಃಖಗಳಲ್ಲಿ ತಾನು ಪಾಲ್ಗೊಂಡು ನಡೆಯುತ್ತ ಪಾಪ, ಪುಣ್ಯಗಳು ತನಗೆ ಎಲ್ಲಿದೆ ಎಂಬ ನಿರೀಕ್ಷಣೆಯಲ್ಲಿ ನಡೆಯುವುದೆ ಭವಿಷ್ಯದಲ್ಲಿ ಸಿದ್ಧಿಯನ್ನು ನೀಡುತ್ತದೆ.
ಪದಾರ್ಥ (ಕ.ಗ.ಪ)
ಉತ್ತರೋತ್ತರ-ಮುಂದೆ/ಭವಿಷ್ಯದಲ್ಲಿ
ಕಾಣಿಕೆ- ಕಾಣ್ಕೆ
ಮೂಲ ...{Loading}...
ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ॥76॥
೦೭೭ ಪೊಡವಿಯೊಳಗೆ ಪುರೋಹಿತರನವ ...{Loading}...
ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕುವರಧೋಗತಿಗೆ
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗಬಲವನು
ಹುಡಿಹುಡಿಯ ಮಾಡುವರು ನಿರ್ಜರರರಸ ಕೇಳ್ ಎಂದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ ಕೇಳು ! ಭೂಮಿಯೊಳಗೆ ಪುರೋಹಿತರನ್ನು ವಿರೋಧಿಸಿ ಧರ್ಮಗಳ ಮೂಲಕವೇ ಸ್ವರ್ಗಕ್ಕೆ ಹೋಗಬಲ್ಲೆ ಎಂಬ ದೊರೆಗಳನ್ನು ದೇವತೆಗಳು ಹೊಡೆದು ಭೂಮಿಯಲ್ಲಿ ನರಕಕ್ಕೆ ತಳ್ಳುವರು. ರಾಷ್ಟ್ರವನ್ನು ಹಾಳು ಮಾಡಿ ಕ್ಷಾತ್ರ ತೇಜಸ್ಸನ್ನು ತಡೆದು ಕೆಡೆಸಿ ಚತುರಂಗ ಸೈನ್ಯವನ್ನು ಧೂಳೀಪಟ ಮಾಡುವರು.
ಪದಾರ್ಥ (ಕ.ಗ.ಪ)
ಅವಗಡಿಸು-ವಿರೋಧಿಸು, ನಿರ್ಜರರು-ದೇವತೆಗಳು
ಮೂಲ ...{Loading}...
ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕುವರಧೋಗತಿಗೆ
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗಬಲವನು
ಹುಡಿಹುಡಿಯ ಮಾಡುವರು ನಿರ್ಜರರರಸ ಕೇಳೆಂದ ॥77॥
೦೭೮ ಬಲಿಯ ರಾಜ್ಯ ...{Loading}...
ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳ್ ಎಂದ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಿಯ ರಾಜ್ಯವನ್ನು, ವಿಭೀಷಣನ ಸಂಪತ್ತನ್ನು, ಸಮುದ್ರನ ಗಾಂಭೀರ್ಯವನ್ನು, ಬಾಣಾಸುರನ ಶಕ್ತಿಯನ್ನೂ, ಹನುಮಂತನ ಬಲವನ್ನು, (ತೋಳ್ಬಲ) ವೀರರಾಮಚಂದ್ರನ ಛಲವನ್ನು, ದದೀಚಿಯ ದಾನ, ಅರ್ಜುನನ ಗೆಳೆತನ, ಧರ್ಮರಾಯನ ಸಹನೆ, ತಾಳ್ಮೆಯನ್ನು ಹೋಲುವ ಬದುಕು ಇದ್ದರೆ ಅದು ಕೀರ್ತಿಪ್ರದವೆನಿಸುತ್ತದೆ.
ಪದಾರ್ಥ (ಕ.ಗ.ಪ)
ಕೆಳೆ-ಗೆಳೆತನ, ಸೈರಣೆ-ಸಹನೆ
ಮೂಲ ...{Loading}...
ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ ॥78॥
೦೭೯ ಇರುಳು ಹಗಲನವರತ ...{Loading}...
ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರ ಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳ್ ಎಂದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ ಕೇಳು ! ಹಗಲುರಾತ್ರಿಯೆನ್ನದೆ ಸದಾಪತಿಯ ಸೇವೆ ಮಾಡುತ್ತ, ಪರಪುರುಷರನ್ನು ನೆನೆಸದೇ, ಹಲವು ಮಕ್ಕಳ ತಾಯಿಯಾಗಿ ದೇವ ಬ್ರಾಹ್ಮಣರನ್ನು ಸದಾ ಸತ್ಕರಿಸುತ್ತ, ಮನೆಯೊಳಗೇ ಇರುವ ಗೃಹಿಣಿಯು ಸದ್ಗೃಹಿಣಿಯೆನಿಸುವಳು.
ಪದಾರ್ಥ (ಕ.ಗ.ಪ)
ನಿರುತ-ಸದಾ, ಅನವರತ-ಸದಾ
ಮೂಲ ...{Loading}...
ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರ ಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ ॥79॥
೦೮೦ ಮಡದಿ ನಿಜನಿಳಯವನು ...{Loading}...
ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಂಡತಿಯಾದವಳು ಆಗಾಗ್ಗೆ ತನ್ನ ಮನೆಯನ್ನು ಬಿಟ್ಟು, ಮತ್ತೊಬ್ಬನ ಮನೆಯಲ್ಲಿ ಹರಟೆ ಹೊಡೆಯುತ್ತ, ಮನೆಮನೆಯ ಸುದ್ದಿ ಎನ್ನದೆ, ಜಗಳವನ್ನು ಹುಟ್ಟಿಸುತ್ತ, ಗಂಡನೊಬ್ಬನು ಇರುವನೆಂಬುದನ್ನು ಎಡವಿ ಬಿದ್ದರೂ ಕಾಣದ ಧೈರ್ಯಸ್ಥೆ ಹತ್ತನ್ನು ಹಡೆದಿದ್ದರೂ ಉತ್ತಮ ಪುರುಷರಿಂದ ತ್ಯಜಿಸಲ್ಪಡುವಳು.
ಪದಾರ್ಥ (ಕ.ಗ.ಪ)
ಒಡರಿಚು-ಹುಟ್ಟಿಸು, ದಿಟ್ಟೆ-ಧೈರ್ಯಸ್ಥೆ, ವರ್ಜಿಸು-ಬಿಡು/ತ್ಯಜಿಸು
ಮೂಲ ...{Loading}...
ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ॥80॥
೦೮೧ ಮುಡಿಯನೋಸರಿಸುತ್ತ ಮೇಲುದ ...{Loading}...
ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರ ವನಿತೆಯ
ಗೊಡವೆಗೊಳಗಾಗದವರುತ್ತಮ ಪುರುಷರುಗಳೆಂದ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಯ ಕೂದಲನ್ನು ಹಿಂದಕ್ಕೆ ತಳ್ಳುತ್ತ, ಮೇಲಿನ ಸೆರಗನ್ನು ಆಗಾಗ್ಗೆ ಸರಿಮಾಡಿಕೊಳ್ಳುತ್ತ ಮೌನದಿಂದ, ಮುಖವನ್ನು ಕೆಳಗೆ ಮಾಡಿ, ಕೆಳಗಣ್ಣಿನಿಂದ ಎಡಬಲಗಳನ್ನು ನೋಡುತ್ತ, ಮುಗುಳು ನಗುತ್ತ ಕಾಲ್ಗೆಜ್ಜೆಯ ಸದ್ದು ಮಾಡುತ್ತ, ಜಾರಿಕೊಳ್ಳುವ ವೇಶ್ಯೆಯರ ವಿಚಾರಕ್ಕೆ ಒಳಗಾಗದವರು ಉತ್ತಮ ಪುರುಷರು.
ಪದಾರ್ಥ (ಕ.ಗ.ಪ)
ಮುಡಿ-ಹೆಳಲು, ಅಧೋಮುಖ-ಕೆಳಗೆ ಮಾಡಿದ ಮುಖ, ಕಿಗ್ಗಣ್ಣು-ಕೆಳಕಣ್ಣು, ಓಸರಿಸು-ಹಿಂದಕ್ಕೆ ತಳ್ಳು.
ಮೂಲ ...{Loading}...
ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರ ವನಿತೆಯ
ಗೊಡವೆಗೊಳಗಾಗದವರುತ್ತಮ ಪುರುಷರುಗಳೆಂದ ॥81॥
೦೮೨ ಗುರುವಿನಲಿ ತನ್ದೆಯಲಿ ...{Loading}...
ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರುವಿನಲ್ಲಿ ತಂದೆ-ತಾಯಿಯರಲ್ಲಿ ಹಿರಿಯರಲ್ಲಿ ದೈವದಲ್ಲಿ ಪಾಪ ಭೀರುವಿನಲ್ಲಿ, ಗೋವಿನಲ್ಲಿ, ತೀರ್ಥದಲ್ಲಿ, ಹೆಚ್ಚಾಗಿ ತನ್ನನ್ನು ಕಾಪಾಡುವ ಯಜಮಾನನಲ್ಲಿ, ಮಂತ್ರದ ಶ್ರೇಷ್ಠ ಸೇವೆಗಳಲ್ಲಿ ಮತ್ತು ಬ್ರಾಹ್ಮಣರಲ್ಲಿ ಹೆಚ್ಚಿನ ಭಕ್ತಿ-ಭಯಗಳಿರಬೇಕು.
ಪದಾರ್ಥ (ಕ.ಗ.ಪ)
ದಾತಾರ-ಒಡೆಯ(ಯಜಮಾನ), ಇರುಬು-ಇಕ್ಕಟ್ಟು
ಮೂಲ ...{Loading}...
ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ॥82॥
೦೮೩ ನೀತಿವಿದನಲ್ಲದ ಕುಮನ್ತ್ರೀ ...{Loading}...
ನೀತಿವಿದನಲ್ಲದ ಕುಮಂತ್ರೀ ವಿ
ನೀತಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲ ಸಂಪದವರಸ ಕೇಳ್ ಎಂದ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯ ನಡತೆಯಿಲ್ಲದ, ರಾಜನೀತಿಯನ್ನು ತಿಳಿಯದ ಕೆಟ್ಟಮಂತ್ರಿ, ಸೌಜನ್ಯತೆ ಸರಳತೆಯನ್ನು ಹೊಂದದಿರುವ ಪುರೋಹಿತ ಇವರುಗಳೇತಕೆ ? ಇವರುಗಳಿಂದ ಯಾವ ಪುರುಷಾರ್ಥಗಳು ಈಡೇರುವುವು ? ಕಳವಳದಿಂದ ಯುದ್ಧಭೂಮಿಗೆ ಭಯ ಅಂಜಿಕೆಗಳಿಂದ ಹೋಗುವ ಅರಸನಿಂದ ಸಕಲ ಸಂಪದಗಳು ಹಾಳಾಗುವುದಿಲ್ಲವೇ ?
ಪದಾರ್ಥ (ಕ.ಗ.ಪ)
ಕಾತರಿಸಿ-ಕಳವಳಿಸಿ, ಭೂಭುಜ-ಅರಸು, ಬೀಯು-ಹಾಳಾಗು
ಮೂಲ ...{Loading}...
ನೀತಿವಿದನಲ್ಲದ ಕುಮಂತ್ರೀ ವಿ
ನೀತಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲ ಸಂಪದವರಸ ಕೇಳೆಂದ ॥83॥
೦೮೪ ಧರ್ಮವಾವುದು ಮೇಣು ...{Loading}...
ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜ ಮಂತ್ರದ
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತಿನಲ್ಲಿ ಧರ್ಮ ಯಾವುದು ? ಅಧರ್ಮ ಯಾವುದು ? ರಾಜ ನೀತಿಯ ಧರ್ಮ ಯಾವುದು ? ಹೋಗಬೇಕಾದ ದಾರಿ ಯಾವುದು ? ದಾರಿಯಲ್ಲದ್ದು ಯಾವುದು ? ಹಾಗಂದರೇನು ? ಶಾಸ್ತ್ರದಲ್ಲಿ ಹೇಳಿದ ಕರ್ಮ ಮತ್ತು ದುಷ್ಕರ್ಮಗಳಾವುವು? ಈ ವ್ಯತ್ಯಾಸಗಳನ್ನು ತಿಳಿಸು ವಿವರಿಸು ಸಾಕು ಎಂದು ಬಿನ್ನೈಸಿದನು ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ವಿಧಿವಿಹಿತ-ಶಾಸ್ತ್ರದಲ್ಲಿ ಹೇಳಿದ, ನಿರ್ಮಿಸು-ವಿವರಿಸು
ಮೂಲ ...{Loading}...
ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜ ಮಂತ್ರದ
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ॥84॥
೦೮೫ ಸತಿಸಹಿತ ವಿರಚಿಸಿದ ...{Loading}...
ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗಳಲ್ಲದೆ ತನ್ನ ಸ್ವಾತಂತ್ರ ್ಯದಲಿ ಮಾಡಿದುದು
ಅತಿಶಯವನೆಯ್ದದು ಕಣಾ ಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೇ ಫಲಿಸುವುದು ಹುಸಿಯೆಂದ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಂಡತಿಯನ್ನು ಕೂಡಿಕೊಂಡು ಮಾಡಿದ ಧರ್ಮಕಾರ್ಯವು ಅಧಿಕವಾಗಿ ರಕ್ಷಿಸುವುದು. ಅದರ ಹೊರತು ಪತಿಯು ಸ್ವತಂತ್ರವಾಗಿ ಮಾಡಿದುದೇ ಆದರೆ ಅದರಿಂದ ಅಸಾಧಾರಣ ಫಲಗಳು ಏನೂ ದೊರಕವು. ಮಹಾರಾಜ ! ಇಹ ಪರದ ಭಾಗ್ಯವು ಹೆಂಡತಿಯಿಂದಲ್ಲವೇ ಬೇರೆ ರೀತಿಯಲ್ಲಿ ಫಲಿಸುವುದು ಸುಳ್ಳು ಎಂದು ಮುನಿಯು ಹೇಳಿದನು.
ಪದಾರ್ಥ (ಕ.ಗ.ಪ)
ಸಮೃದ್ಧಿ-ಅಧಿಕ, ಅತಿಶಯ-ಅಸಾಧಾರಣ,
ಗತಿ-ಭಾಗ್ಯ
ಮೂಲ ...{Loading}...
ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗಳಲ್ಲದೆ ತನ್ನ ಸ್ವಾತಂತ್ರ ್ಯದಲಿ ಮಾಡಿದುದು
ಅತಿಶಯವನೆಯ್ದದು ಕಣಾ ಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೇ ಫಲಿಸುವುದು ಹುಸಿಯೆಂದ ॥85॥
೦೮೬ ಅತಿಥಿ ಪೂಜೆಯನುಳಿದ ...{Loading}...
ಅತಿಥಿ ಪೂಜೆಯನುಳಿದ ಜೀವ
ಸ್ಥಿತರ ಧರ್ಮಸ್ಥಿತಿಯನಪಹರಿ
ಸುತ ಬಲದಲಿಯವನಿಯಲಿ ನಿರಿಯಣದ ಕಾಲದಲಿ
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕನರಕದೊಳಗ
ದ್ದುತ ಬಹನು ಕುಲಕೋಟಿ ಸಹಿತವನೀಶ ಕೇಳ್ ಎಂದ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಥಿಪೂಜೆಯನ್ನು ಬಿಟ್ಟು ಉಳಿದ ಜೀವಿಗಳ ಧರ್ಮಸ್ಥಿತಿಯನ್ನು ಕಿತ್ತುಕೊಳ್ಳುತ್ತ ಭೂಮಿಯಲ್ಲಿ ಬಲವನ್ನು ತೋರುತ್ತಿರಲು, ಅಂತ್ಯಕಾಲದಲ್ಲಿ ಅವರ ಗತಿಕೆಡಿಸಿ ಯಮನು ಎಳೆದೊಯ್ದು ರೌರವ ನರಕದಲ್ಲಿ ಕುಲಸಹಿತ ಅದ್ದುತ್ತಲಿರುವನು.
ಪದಾರ್ಥ (ಕ.ಗ.ಪ)
ಅಪಹರಿಸು-ಕಿತ್ತುಕೊ, ವೈವಸ್ವತ-ಯಮ, ನಿರಿಯಣ-ಅಂತ್ಯ.
ಮೂಲ ...{Loading}...
ಅತಿಥಿ ಪೂಜೆಯನುಳಿದ ಜೀವ
ಸ್ಥಿತರ ಧರ್ಮಸ್ಥಿತಿಯನಪಹರಿ
ಸುತ ಬಲದಲಿಯವನಿಯಲಿ ನಿರಿಯಣದ ಕಾಲದಲಿ
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕನರಕದೊಳಗ
ದ್ದುತ ಬಹನು ಕುಲಕೋಟಿ ಸಹಿತವನೀಶ ಕೇಳೆಂದ ॥86॥
೦೮೭ ತಮ್ಮ ಕಾರ್ಯ ...{Loading}...
ತಮ್ಮ ಕಾರ್ಯ ನಿಮಿತ್ತ ಗರ್ವವ
ನೆಮ್ಮಿದರೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮತ್ರ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಶ್ರುತಿ
ಗುಮ್ಮಹವನೈದುವವೊಲೌಕುವ
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳ್ ಎಂದ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ಕಾರ್ಯದ ಉದ್ದೇಶದಿಂದ ಅಹಂಕಾರವನ್ನು ನಂಬಿದರೆ ಆ ಅಹಂಕಾರವೇ ಹೆಚ್ಚಾಗಿ ಅವರಿಗೆ ಆ ಕಾರ್ಯದಲ್ಲಿ ಅಡ್ಡಿಯಾಗುತ್ತದೆ. ಮನುಷ್ಯನು ಚರಾಚರ ವಸ್ತುಗಳಲ್ಲಿ ಅಹಂಕಾರವಿಲ್ಲದೇ ನಡೆದರೂ ವೇದಾಂಗಗಳಿಗೆ ದ್ರೋಹ ಮಾಡುತ್ತಾರೆ. ಇಂತಹ ಮೋಸಗಾರರನ್ನು ದೈವವು ಒತ್ತಿ ಒಳಗೆ ಪೆಟ್ಟನ್ನು ನೀಡುವುದು.
ಪದಾರ್ಥ (ಕ.ಗ.ಪ)
ನೆಮ್ಮು-ನಂಬು, ಉರೆ-ಹೆಚ್ಚಾಗಿ, ಮತ್ರ್ಸ-ಮನುಷ್ಯ, ನಿಮಿತ್ತ-ಉದ್ದೇಶ, ಉಪಶ್ರುತಿ-ವೇದಾಂಗ, ಉಮಹ-ಚಿಂತೆ, ಹೊಯ್ದು-ಪೆಟ್ಟು ನೀಡು, ಔಕು-ಒತ್ತು, ಮರ್ಮಿ-ಮೋಸಗಾರ
ಮೂಲ ...{Loading}...
ತಮ್ಮ ಕಾರ್ಯ ನಿಮಿತ್ತ ಗರ್ವವ
ನೆಮ್ಮಿದರೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮತ್ರ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಶ್ರುತಿ
ಗುಮ್ಮಹವನೈದುವವೊಲೌಕುವ
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳೆಂದ ॥87॥
೦೮೮ ಅರಸ ಕೇಳೈ ...{Loading}...
ಅರಸ ಕೇಳೈ ಮಾರ್ಗ ಮೂರಾ
ಗಿರುತಿಹವು ಸಂಪೂರ್ಣಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳ್ ಎಂದ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು ! ತನ್ನ ಬದುಕಿನ ಪರಿವರ್ತನೆಗೆ ಸಂಪೂರ್ಣವಾಗಿ ಮೂರು ಮಾರ್ಗಗಳುಂಟು. ಅವು ಧನ, ಗುರುಸೇವೆ, ಸಮಯಕ್ಕೆ ತಕ್ಕಂತೆ ವರ್ತಿಸುವುದು ಇವುಗಳನ್ನು ನಿರ್ಲಕ್ಷಿಸಿ ಅರವತ್ತು ನಾಲ್ಕು ಕಲೆಗಳನ್ನು ಕೂಡಿಕೊಂಡರು ರಾಜರಿಗೆ ನಾಲ್ಕನೆಯ ಮಾರ್ಗ ದೊರಕುವುದುಂಟೆ?
ಪದಾರ್ಥ (ಕ.ಗ.ಪ)
ಪರಿವರ್ತನೆ-ಮಾರ್ಪಾಟು, ಸಂವರಿಸು-ಕೂಡಿಹಾಕು, ಪರಿಚರಿಯ-ಸೇವೆ
ಮೂಲ ...{Loading}...
ಅರಸ ಕೇಳೈ ಮಾರ್ಗ ಮೂರಾ
ಗಿರುತಿಹವು ಸಂಪೂರ್ಣಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ ॥88॥
೦೮೯ ಕಾದುದಕದಾಸ್ನಾನ ಸಿದ್ಧಿಯ ...{Loading}...
ಕಾದುದಕದಾಸ್ನಾನ ಸಿದ್ಧಿಯ
ವೈದಿಕಾಂಗದ ಮಂತ್ರ ಸಾಧನ
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ
ಐದದಿಹ ದಕ್ಷಿಣೆಗಳೆಂಬಿವು
ಬೂದಿಯಲಿ ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ಭೂಪ ಕೇಳ್ ಎಂದ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು ! ಬಿಸಿನೀರಿನ ಸ್ನಾನ, ವೇದಗಳಿಗೆ ಸಂಬಂಧಿಸದೆ ಇರುವ ಮಂತ್ರ ಸಿದ್ಧಿಸದು, ವೇದವನ್ನು ಓದದ, ತಿಳಿಯದವರಿಗೆ ನೀಡುವ ಫಲ, ಶ್ರಾದ್ಧ ಕರ್ಮದಲ್ಲಿ ಕೊಡುವ ದಕ್ಷಿಣೆ ಮುಂತಾದವು ಬೂದಿಯಲ್ಲಿ ಅರ್ಪಿಸಿದ ಯಜ್ಞದ ಆಹುತಿಯಂತೆ ನಿಷ್ಫಲವಾಗುವುದು.
ಪದಾರ್ಥ (ಕ.ಗ.ಪ)
ಅವೈದಿಕ-ವೇದಗಳಿಗೆ ಸಂಬಂಧಿಸದಿರುವ, ವೇದಹೀನರು-ವೇದಗಳನ್ನು ತೊರೆದವರು, ಬೇಳಿದ-ಅರ್ಪಿಸಿದ, ಹವಿಸ್ಸು-ಯಜ್ಞಾಹುತಿ.
ಮೂಲ ...{Loading}...
ಕಾದುದಕದಾಸ್ನಾನ ಸಿದ್ಧಿಯ
ವೈದಿಕಾಂಗದ ಮಂತ್ರ ಸಾಧನ
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ
ಐದದಿಹ ದಕ್ಷಿಣೆಗಳೆಂಬಿವು
ಬೂದಿಯಲಿ ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ಭೂಪ ಕೇಳೆಂದ ॥89॥
೦೯೦ ಇಹಪರದ ಗತಿ ...{Loading}...
ಇಹಪರದ ಗತಿ ದಾನ ಧರ್ಮದ
ಬಹುಳತೆಗಳನು ತತ್ಸ ್ವಭಾವದ
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ
ಬಹುದು ಸದ್ವಂಶದಲಿ ಜನಿಸಿಹ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳ್ ಎಂದ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ಕೇಳು ! ಇಹ ಪರದ ಗತಿ, ದಾನ ಧರ್ಮದ ಅಧಿಕ ಪ್ರಮಾಣದ ಪ್ರಭಾವಗಳನ್ನೂ, ಅದರ ಪುಣ್ಯದ ಏಳಿಗೆಯ ಫಲವೂ ಸದ್ವಂಶದಲ್ಲಿ ಜನಿಸಿದ ಮಹಾತ್ಮನಿದ್ದರೆ ಒಂದು ನೂರಾಗಿ ಬರುತ್ತದೆ. ಪರಲೋಕದಲ್ಲಿ ಸುಖವೂ ಸಂತಾನಾಭಿವೃದ್ಧಿಯೂ ದೊರಕುತ್ತದೆ.
ಪದಾರ್ಥ (ಕ.ಗ.ಪ)
ವಿಹಿತ-ಯೋಗ್ಯ, ಬೆಳವಿಗೆ-ಏಳಿಗೆ, ಲೋಕಾಂತರ-ಪರಲೋಕ
ಮೂಲ ...{Loading}...
ಇಹಪರದ ಗತಿ ದಾನ ಧರ್ಮದ
ಬಹುಳತೆಗಳನು ತತ್ಸ ್ವಭಾವದ
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ
ಬಹುದು ಸದ್ವಂಶದಲಿ ಜನಿಸಿಹ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳೆಂದ ॥90॥
೦೯೧ ಚೋರನನು ಕಾಣುತ್ತ ...{Loading}...
ಚೋರನನು ಕಾಣುತ್ತ ಮರಳಿದು
ಚೋರನೆಂದೊಡೆ ಪತಿತನನು ನಿ
ಷ್ಠೂರತನದಿಂ ಪತಿತನೆಂದೊಡೆ ಸಾಮ್ಯದೋಷವದು
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪದವನೀಪಾಲ ಕೇಳ್ ಎಂದ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳ್ಳನನ್ನು ಕಂಡು ಮತ್ತೆ ಕಳ್ಳನೆಂದು ಕರೆದರೆ, ಪಾಪಿಯನ್ನು ಕ್ರೂರತನದಿಂದ ಪಾಪಿ ಎಂದರೆ ಹೋಲಿಕೆಯ ದೋಷವು. ವಿಚಾರ ಮಾಡದೆ ಮುಂದೆ ಸುಳ್ಳನ್ನು ಹೇಳುತ್ತ ಹಿಂದೆ ಮತ್ತೊಂದನ್ನು ಹೇಳುತ್ತ, ಮಿಥ್ಯಾ ರೀತಿಯ ಆರೋಪ ಮಾಡಿದರೆ ಇಮ್ಮಡಿ ನರಕ ಪ್ರಾಪ್ತವಾಗುತ್ತದೆ.
ಪದಾರ್ಥ (ಕ.ಗ.ಪ)
ಸಾಮ್ಯ-ಹೋಲಿಕೆ, ಪತಿತ-ಪಾಪಿ, ನಿಷ್ಠುರ-ಕ್ರೂರ, ಮಿಥ್ಯೋತ್ತರ-ಸುಳ್ಳು ಉತ್ತರ
ಮೂಲ ...{Loading}...
ಚೋರನನು ಕಾಣುತ್ತ ಮರಳಿದು
ಚೋರನೆಂದೊಡೆ ಪತಿತನನು ನಿ
ಷ್ಠೂರತನದಿಂ ಪತಿತನೆಂದೊಡೆ ಸಾಮ್ಯದೋಷವದು
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪದವನೀಪಾಲ ಕೇಳೆಂದ ॥91॥
೦೯೨ ವಿನುತ ಮಧುಕೈಟಭರ ...{Loading}...
ವಿನುತ ಮಧುಕೈಟಭರ ಮೇಧ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳ್ ಎಂದ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತುತಿಸುವ ಮಧು ಕೈಟಭರೆಂಬ ರಾಕ್ಷಸರ ಮಿದುಳಿನಿಂದ ಈ ಭೂಮಿಯು ಸೃಷ್ಟಿಯಾಯಿತು. ಈ ಭೂಮಿಯನ್ನು ಅನುಭವಿಸುವುದಾದರೆ ಪುಣ್ಯ ಕೀರ್ತಿಯೆಂಬ ಪರಿಮಳ ಪ್ರವಾಹದಲ್ಲಿ ಹೊಂದಿಕೊಂಡು ಒಳ್ಳೆಯ ರೀತಿಯಲ್ಲಿ ಅನುಭವಿಸಬೇಕು. ಇಲ್ಲದಿದ್ದರೆ ಮನುಷ್ಯ ಮಾಂಸವನ್ನು ತಿಂದ ಫಲವು ಬರುತ್ತದೆ.
ಪದಾರ್ಥ (ಕ.ಗ.ಪ)
ಮೇಧಸ್ಸು-ಮೆದುಳು, ಮೇದಿನಿ-ಭೂಮಿ, ಹೊನಲು-ಹರಿ, ತರವಿಡಿ-ಹೊಂದಿಕೊ, ಭಕ್ಷಿಸಿದ-ತಿಂದ.
ಟಿಪ್ಪನೀ (ಕ.ಗ.ಪ)
ಸೋದರರಾದ ಮಧು ಕೈಟಭರು ವಿಷ್ಣು ದ್ವೇಷಿಗಳಾದ ರಾಕ್ಷಸರು. ಇವರ ಜನನ ವೃತ್ತಾಂತವೂ ತುಂಬ ರೋಚಕವಾಗಿದೆ. ವಿಷ್ಣು ಕ್ಷೀರಸಾಗರದಲ್ಲಿ ಮಲಗಿದ್ದಾಗ ಅವನ ನಾಭಿಯಿಂದ ಬ್ರಹ್ಮನೂ ಕಿವಿಯಿಂದ ಮಧು ಮತ್ತು ಕೈಟಭರೂ ಹುಟ್ಟಿದರಂತೆ. ಹುಟ್ಟಿದ ಕೂಡಲೇ ದೊಡ್ಡವರಾದವರಿಗೆ ತಾವು ಎಲ್ಲಿ ಹುಟ್ಟಿದೆವೆಂಬ ಸಂಗತಿ ತಿಳಿದಿರಲಿಲ್ಲ. ತಾವು ಶಕ್ತಿ ಪ್ರಸಾದದಿಂದ ಹುಟ್ಟಿರುವುದಾಗಿ ಭಾವಿಸಿ ಗರ್ವದಿಂದ ಬ್ರಹ್ಮನಬಳಿ ಹೋಗಿ ಅವನನ್ನು ಯುದ್ಧಕ್ಕೆ ಆಹ್ವಾನಿಸಿದರು. ಇವರ ಉಪಟಳಕ್ಕೆ ಹೆದರಿ ಬ್ರಹ್ಮ, ವಿಷ್ಣುವಿನ ಬಳಿಗೆ ಓಡಿ ಬಂದ. ವಿಷ್ಣುವು ಬ್ರಹ್ಮನಿಗೆ ಅಭಯನೀಡಿ ಮಧು ಕೈಟಭರಿಗೆ ಪ್ರಸನ್ನನಾಗಿ ‘ನಿಮಗೆ ಏನು ವರಬೇಕು?’ ಎಂದು ಕೇಳಿದ. ದುರಹಂಕಾರದಿಂದ ಸೊಕ್ಕಿದ್ದ ಮಧು ಕೈಟಭರು ‘ನೀನೇ ವರ ಕೋರಿಕೋ’ ಎಂದು ಉತ್ತರ ಕೊಟ್ಟರು. ಆಗ ವಿಷ್ಣು ಮಾರ್ಮಿಕವಾಗಿ ‘ನನ್ನ ಕೈಯಿಂದಲೇ ನೀವು ಸಾಯುವಂತೆ ವರ ಕೊಡಿ’ ಎಂದು ಕೇಳಿದ. ನಿರ್ವಾಹವಿಲ್ಲದೆ ಮಧು ಕೈಟಭರು ಒಪ್ಪಿಕೊಂಡರು. ಅಲ್ಲದೆ ಅವರು ವಿಷ್ಣುವಿಗೆ ‘ನಿನ್ನ ಕೈಯಿಂದ ಮಾತ್ರ ನಮಗೆ ನೀರಿಲ್ಲದ ಸ್ಥಳದಲ್ಲಿ ಮರಣ ಬರಬೇಕು!’ ಎಂದು ಕೇಳಿದರು. ಮುಂದೆ ವಿಷ್ಣುವು ಮಧು ಕೈಟಭರನ್ನು ಕೊಂದನು. ಮಧುವನ್ನು ಕೊಂದಿದ್ದರಿಂದ ವಿಷ್ಣುವಿಗೆ ‘ಮಧುಸೂದನ’ ಎಂಬ ಹೆಸರಿದೆ. ವಿಷ್ಣುವು ತನ್ನ ಬಲಿಷ್ಠ ದೇಹಶಕ್ತಿಯಿಂದ ಅವರಿಬ್ಬರನ್ನೂ ತೊಡೆಯ ಮಧ್ಯದಲ್ಲಿ ಇರುಕಿಸಿಕೊಂದನು. ಅವನು ರಾಕ್ಷಸರನ್ನು ಹಿಸುಕಿದಾಗ ದೈತ್ಯ ಬಾಯಿಂದ ಮೇದಸ್ಸು ಹೊರ ಬಂದು ಸಮುದ್ರವನ್ನು ವ್ಯಾಪಿಸಿತು. ಅದಕ್ಕೇ ಭೂಮಿಗೆ ‘ಮೇದಿನಿ’ ಎಂಬ ಹೆಸರು ಬಂದಿದೆ. ಹಾಗಯೇ ಮಧು ಬಾಲಕನಾಗಿದ್ದಾಗ ತುಂಬ ಮೆತ್ತಗಾಗಿದ್ದನಂತೆ! ಅದಕ್ಕೆ ಅವನಿಗೆ ಮದು ಎಂಬ ಹೆಸರು ಬಂದಿದೆ. ಇನ್ನೊಬ್ಬ ರಾಕ್ಷ ಕೈಟಭಾರಿ. ಬೆರಳುಗಳಿಗೆ ತುಂಬ ಕಠಿಣವಾಗಿ ತೋರಿ ಅವನಿಗೆ ಕೈಟಭ ಎಂಬ ಹೆಸರು! ರಜಸ್ತಮೋವಿಷ್ಟ ತನುಗಳಾಗಿದ್ದ ಇವರು ಬ್ರಹ್ಮನಿಂದ ವೇದವನ್ನು ಕದ್ದರೆಂದೂ ಉಲ್ಲೇಖವಿದೆ. ಮಹಾಭಾರತದ ವನಪರ್ವದಲ್ಲಿ ಮಾತ್ರವಲ್ಲದೆ ಶಿವಪುರಾಣ, ದೇವಿ ಭಾಗವತ, ಮಾರ್ಕಂಡೇಯ ಪುರಾಣ ಮತ್ತು ಕಾಳಿಕಾ ಪುರಾಣಗಳಲ್ಲಿಯೂ ಇವರ ವಿಷಯ ಬರುತ್ತದೆ. ಅವುಗಳಲ್ಲಿ ಮಧುಕೈಟಭರು ವಿಷ್ಣುವಿನ ಕಿವಿಯ ಕೆಸರಿನಿಂದ (ಕುಗ್ಗೆ) ಹುಟ್ಟಿದವರೆಂದು ಹೇಳಲಾಗಿದೆ. ಹಾಗೆಯೇ ಇವರ ಉಪಟಳವನ್ನು ಸಹಿಸಲಾರದೆ ಬ್ರಹ್ಮನು ಶ್ರೀಹರಿಯ ನಾಭಿಯ ಕಮಲ ಕೋಶದಲ್ಲಿ ಅವಿತಿಟ್ಟು ಕೊಂಡನೆಂದೂ ಹೇಳಲಾಗಿದೆ.
ಮೂಲ ...{Loading}...
ವಿನುತ ಮಧುಕೈಟಭರ ಮೇಧ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ ॥92॥
೦೯೩ ತನ್ನ ದಾನವನಪಹರಿಸಿಕೊಂ ...{Loading}...
ತನ್ನ ದಾನವನಪಹರಿಸಿಕೊಂ
ಡನ್ಯರಿತ್ತುದಕಡ್ಡ ಬೀಳುವ
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಕೊಟ್ಟ ದಾನವನ್ನು ಕದ್ದು ಮತ್ತೊಬ್ಬರ ದಾನಕ್ಕೆ ಅಡ್ಡಿ ಮಾಡುವ ಪುಣ್ಯವಂತರು ಅರವತ್ತು ಸಾವಿರ ವರ್ಷಗಳವರೆಗೆ ನೋವು ತುಂಬಿದ ಹೊಲಸಿನಲ್ಲಿ ಹುಳುಗಳಾಗಿ ಜನ್ಮ ಪಡೆದುಕೊಳ್ಳುತ್ತಾರೆ. ಇದನ್ನು ತಿಳಿದೂ ಕೊಟ್ಟಿದ್ದನ್ನು ನೀನು ಉಳಿಸಿಕೊಳ್ಳುವುದು ಧರ್ಮವಲ್ಲ !
ಪದಾರ್ಥ (ಕ.ಗ.ಪ)
ಧನ್ಯರು-ಪುಣ್ಯವಂತರು, ಖಿನ್ನ-ನೋವು, ವಿಷ್ಠೆ-ಹೊಲಸು, ಕ್ರಿಮಿ-ಹುಳು.
ಮೂಲ ...{Loading}...
ತನ್ನ ದಾನವನಪಹರಿಸಿಕೊಂ
ಡನ್ಯರಿತ್ತುದಕಡ್ಡ ಬೀಳುವ
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ॥93॥
೦೯೪ ಕರಣ ಮೂರರೊಳಿತ್ತ ...{Loading}...
ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸ ಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನಿರಿಸಿಕೊಂಡಿಹ ದಾನ ನರಕವ
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರಿಕರಣ ಪೂರ್ವಕವಾಗಿ ಕೊಟ್ಟ ದಾನವನ್ನು ಇಟ್ಟುಕೊಂಡರೆ ಅದು ತಿಂಗಳು ತಿಂಗಳೂ ಹಿಂದಕ್ಕೆ ನೂರ್ಮಡಿಯಾಗಿ ಕೋಟ್ಯಾಂತರ ಪುಣ್ಯವನ್ನು ಗಳಿಸುವುದು. ಆ ದಾನದ ಹೊಗಳಿಕೆಯನ್ನು ಇಟ್ಟುಕೊಂಡರೆ ಅವನಿಗೆ ನರಕ ಪ್ರಾಪ್ತಿಯಾಗುತ್ತದೆ. ಇವೆರಡಕ್ಕೂ ದಾನವೇ ಕಾರಣವೆಂದು ಮುನಿಗಳು ಹೇಳಿದರು.
ಪದಾರ್ಥ (ಕ.ಗ.ಪ)
ಪ್ರಶಂಸೆ-ಹೊಗಳಿಕೆ
ಮೂಲ ...{Loading}...
ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸ ಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನಿರಿಸಿಕೊಂಡಿಹ ದಾನ ನರಕವ
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ॥94॥
೦೯೫ ದ್ಯೂತದಲಿ ಮದ್ಯದಲಿ ...{Loading}...
ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳ್ ಎಂದ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೂಜು, ಮದ್ಯ, ಅತೀವವಾದ ತುರಿಕೆ, ನಿದ್ರೆ, ಕಲಹ, ಹೊಡೆದಾಟ, ಸಂಭೋಗ, ಊಟ, ಮೋಸದ ಕೆಲಸ, ಕೆಟ್ಟ ನಡತೆ ಪರಸ್ತ್ರೀಯರಲ್ಲಿ ಪ್ರೀತಿಯ ಸ್ನೇಹ-ಇವುಗಳಲ್ಲಿ ಹೆಚ್ಚಿನ ಪ್ರೀತಿ, ಆಸಕ್ತಿಗಳನ್ನು ಬೆಳೆಸಿಕೊಂಡರೆ ಅವು ಹೆಚ್ಚು ಹೆಚ್ಚು ಕೆದುಕುತ್ತವೆ.
ಪದಾರ್ಥ (ಕ.ಗ.ಪ)
ಕಂಡೂತಿ-ತುರಿಕೆ, ಕೈತವ-ಮೋಸ, ವಿಘಾತ-ಹೊಡೆತ, ಬಲಿವುದು-ಹೆಚ್ಚಾಗುವುದು.
ಮೂಲ ...{Loading}...
ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ ॥95॥
೦೯೬ ದುಷ್ಕೃತವನೆಸಗುವರು ಫಲದಲಿ ...{Loading}...
ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕ ದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನವರು ಕೆಟ್ಟ ಕೆಲಸವನ್ನು ಮಾಡಿ ಫಲಕ್ಕಾಗಿ ಹಂಬಲಿಸುವರು. ಒಳ್ಳೆಯ ಕಾರ್ಯವನ್ನು ಲಕ್ಷಿಸುವುದಿಲ್ಲ. ಅದರ ಫಲವನ್ನಷ್ಟೇ ಬಯಸುವರು. ಇಡದೆ (ಬಿತ್ತದೆ) ನೀರು ಹಾಕದೆ, ಬೆಳೆಯದೇ ಪುಕ್ಕಟ್ಟಿಯ (ಬಿಟ್ಟಿಯ) ಸ್ವರ್ಗವೇ ಮೊದಲಾದ ಸುಖವು ಸಿಕ್ಕುವುದೇ ? ಕೇಳು ಎಂದನು.
ಪದಾರ್ಥ (ಕ.ಗ.ಪ)
ದುಷ್ಕೃತ-ಕೆಟ್ಟಕೆಲಸ, ಸುಕೃತ-ಒಳ್ಳೆಯ-ಕೆಲಸ, ಕಕ್ಕುಲಿಸು-ಹಂಬಲಿಸು, ಇಕ್ಕು-ಇಡು.
ಮೂಲ ...{Loading}...
ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕ ದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ॥96॥
೦೯೭ ವರಶ್ರುತಿ ಸ್ಮ ...{Loading}...
ವರಶ್ರುತಿ ಸ್ಮ ೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಶ್ರುತಿ ಮತ್ತು ಸ್ಮೃತಿಗಳು ಬ್ರಾಹ್ಮಣರ ಕಣ್ಣುಗಳು. ಇವುಗಳಲ್ಲಿ ಒಂದಕ್ಕೆ ಕೊರತೆಯಾದರೂ ತಿಳಿಯದವನೆನಿಸುತ್ತಾನೆ. ಎರಡನ್ನೂ ತಿಳಿಯದಿದ್ದರೆ ಸತ್ಯವಾಗಿಯೂ ಹುಟ್ಟುಗುರುಡನೆನಿಸುತ್ತಾನೆ. ಅರಸಾ ಕೇಳು ಇವೇ ನಿಜವಾದ ಕಣ್ಣುಗಳು, ಮಾಂಸದ ಕಣ್ಣುಗಳು ಯಾವತ್ತೂ ಸರ್ವದಾ ಎರವಲುಗಳೇ.
ಪದಾರ್ಥ (ಕ.ಗ.ಪ)
ನಿರುತ-ಸತ್ಯ, ಶ್ರುತಿ-ವೇದ, ಸ್ಮೃತಿ-ಧರ್ಮಶಾಸ್ತ್ರ, ಎರವಲು-ಸಾಲ
ಮೂಲ ...{Loading}...
ವರಶ್ರುತಿ ಸ್ಮ ೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ॥97॥
೦೯೮ ವಾಚಿಸದೆ ವೇದಾರ್ಥ ...{Loading}...
ವಾಚಿಸದೆ ವೇದಾರ್ಥ ನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚನಾಗಿ ಪರಾನ್ನಪೂರಿತ ತಪ್ತ ತನುವಾದ
ನೀಚನಹ ಭೂಸುರನ ಕರುಳನು
ತೋಚುವಳಲೈ ಮೃತ್ಯುವವನು ನಿ
ಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಾರ್ಥಗಳನ್ನು ಓದದೇ, ಅವುಗಳನ್ನು ಆಚರಿಸದೇ ಸೋಮಾರಿತನದಿಂದ ಲಂಚಕೋರನಾಗಿ, ಮೋಸ ಮಾಡುತ್ತ ಪರಾನ್ನದಿಂದ ಸೊಕ್ಕಿನ ಮೈಯುಳ್ಳ ನೀಚ ಬ್ರಾಹ್ಮಣನ ಕರುಳನ್ನು ಮೃತ್ಯುದೇವತೆ ದೋಚುವಳು. ಅವನು ರಾಕ್ಷಸನೇ ಹೊರತು ಬ್ರಾಹ್ಮಣನಲ್ಲ.
ಪದಾರ್ಥ (ಕ.ಗ.ಪ)
ಉತ್ಕೋಚ-ಲಂಚ/ಮೋಸ, ತೋಚು-ದೋಚು, ತಪ್ತ-ಬಿಸಿ, ವಾಚಿಸದೆ-ಓದದೆ, ನಿಚಯ-ರಾಶಿ/ಗುಂಪು
ಮೂಲ ...{Loading}...
ವಾಚಿಸದೆ ವೇದಾರ್ಥ ನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚನಾಗಿ ಪರಾನ್ನಪೂರಿತ ತಪ್ತ ತನುವಾದ
ನೀಚನಹ ಭೂಸುರನ ಕರುಳನು
ತೋಚುವಳಲೈ ಮೃತ್ಯುವವನು ನಿ
ಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ॥98॥
೦೯೯ ಸರಸಿಜಾಕ್ಷನ ವಿಷ್ಣು ...{Loading}...
ಸರಸಿಜಾಕ್ಷನ ವಿಷ್ಣು ನಾಮ
ಸ್ಮರಣೆಯಲಿ ಶ್ರುತಿ ಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು
ಪರವಚನವನು ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲಗಣ್ಣಿನ ವಿಷ್ಣು ನಾಮ ಸ್ಮರಣೆಯಲ್ಲಿ ಶೃತಿಮೂಲದ ಮಾತುಗಳ ಮೇಲ್ಮೆಯಲ್ಲಿ ಜೀವಿಗಳಿಗೆ ಹಿತವಾದ ವರ್ತನೆಯನ್ನು ತಿಳಿದು ನಡೆಯುವವನು ಮತ್ತೊಬ್ಬನ ಮಾತನ್ನು ಕಾಯಾ, ವಾಚಾ, ಮನಸಾ ಹೇಳಬಾರದು. ಖಂಡಿತವಾಗಿಯೂ ಇದು ಸತ್ಪುರುಷರ ಅಭಿಪ್ರಾಯ.
ಪದಾರ್ಥ (ಕ.ಗ.ಪ)
ಉತ್ಕರುಷೆ-ಮೇಲ್ಮೆ/ ಏಳಿಗೆ, ಭೂತ-ಜೀವಿ, ನಡವಳಿ-ವರ್ತನೆ.
ಮೂಲ ...{Loading}...
ಸರಸಿಜಾಕ್ಷನ ವಿಷ್ಣು ನಾಮ
ಸ್ಮರಣೆಯಲಿ ಶ್ರುತಿ ಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು
ಪರವಚನವನು ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ॥99॥
೧೦೦ ಲೋಕ ಸಮ್ಮತವಾವುದದನು ...{Loading}...
ಲೋಕ ಸಮ್ಮತವಾವುದದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳಿವರಲ್ಲ ಚಿತ್ತೈಸೆಂದನಾ ಮುನಿಪ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜಾ ! ಲೋಕಕ್ಕೆ ಒಪ್ಪಿಗೆಯಾದುದನ್ನು ನಿರಾಕರಿಸುವವರು ತಾವೇನು ಜಗತ್ತಿಗೆ ಶೂರರೆ ? ಅವರನ್ನು ಬಲ್ಲವರು ಯಾರು ? ಬೇಕು ಬೇಡಗಳನ್ನು ತಿಳಿದುಕೊಳ್ಳಲು ಅವರು ಅವಿವೇಕಿಗಳು. ಅವರು ಪ್ರಾಮಾಣಿಕರಲ್ಲ.
ಪದಾರ್ಥ (ಕ.ಗ.ಪ)
ಆಕೆವಾಳ-ಶೂರ
ಮೂಲ ...{Loading}...
ಲೋಕ ಸಮ್ಮತವಾವುದದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳಿವರಲ್ಲ ಚಿತ್ತೈಸೆಂದನಾ ಮುನಿಪ ॥100॥
೧೦೧ ಉತ್ತಮರುಗಳ ನಿನ್ದಿಸುತ ...{Loading}...
ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮ ಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಗಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಜ್ಜನರನ್ನು ತೆಗಳುತ್ತ, ಕೆಟ್ಟ ನಡತೆಯುಳ್ಳವನಾಗಿ ಅಧರ್ಮದ ಕೋಟಿಯೇ ತನ್ನ ನಿತ್ಯವಿಧಿಯಾಗಿ ಧರ್ಮದ ವ್ಯತ್ಯಾಸವನ್ನು ಯಾವ ಕಡೆಯಿಂದಲೂ ತಿಳಿಯದೇ ಜಗತ್ತಿನಲ್ಲಿ ಭಾರವಾಗಿರುವ ವೇದದ ಹೊರಗಾದವರನ್ನು ಮೃತ್ಯುದೇವತೆ ಮುರಿದು ಮುಗಿಸದೆ ಬಿಡುವಳೇ ?
ಪದಾರ್ಥ (ಕ.ಗ.ಪ)
ದುರ್ವೃತ್ತ-ಕೆಟ್ಟನಡತೆಯವನು ತಾರತಮ್ಯ-ವ್ಯತ್ಯಾಸ, ಮುರಿ-ಕೊಂದು
ಮೂಲ ...{Loading}...
ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮ ಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಗಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ॥101॥
೧೦೨ ಲೋಕದೊಳಗಣ ಪುಣ್ಯ ...{Loading}...
ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದೊಳಗಿನ ಪುಣ್ಯ-ಪಾಪಗಳ ರಾಶಿಯನ್ನು ಯಮಧರ್ಮರಾಯನ ಮನೆಯ ದೂತರು ತಿಳಿಸುವರು. ಹದಿನಾಲ್ಕು ಮುಖಗಳಿಂದ, ನಾಲ್ಕು ಕಡೆಯಿಂದ ಅದರ ಫಲಗಳಿಗೆ ಮುತ್ತಿ ದಿನದಿನವೂ ಒತ್ತಿ ಬರುವಂತೆ ಮಾಡುವರು. ಅಹಂಕಾರದಿಂದ, ಉದ್ವೇಗದಿಂದ ಮೈಮರೆತು ಕೆಡಬೇಡ.
ಪದಾರ್ಥ (ಕ.ಗ.ಪ)
ಆನೀಕ-ರಾಶಿ (ಗುಂಪು), ಕವಿದು-ಮುತ್ತಿ, ಉದ್ರೇಕ-ಉದ್ವೇಗ
ಮೂಲ ...{Loading}...
ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ॥102॥
೧೦೩ ಚಕ್ರಿಯೊಬ್ಬಗೆ ಹತ್ತು ...{Loading}...
ಚಕ್ರಿಯೊಬ್ಬಗೆ ಹತ್ತು ಕಡಿಕರ
ಲೆಕ್ಕವಂತಾ ಚಕ್ರಿ ಹತ್ತರ
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ
ಮಿಕ್ಕ ವೇಸಿಗೆ ವೇಸಿ ಹತ್ತರ
ಲೆಕ್ಕವೊಬ್ಬರಸಂಗೆ ಪಾತಕ
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣರಂಗದಲ್ಲಿ ಹತ್ತು ಕತ್ತಿಯ ಭಟರಿಗೆ ಚಕ್ರವನ್ನು ಬಳಸುವ ಒಬ್ಬ ವೀರನು ಸಮ. ಅಂತಹ ಹತ್ತು ಚಕ್ರಗಳಿಗೆ ಧ್ವಜದ ಕಾವಲುಗಾರ ಸಮ. ಹತ್ತು ಜನ ಧ್ವಜ ವೀರರಿಗೆ ರಾಜರಂತೆ ವೇಷಭೂಷಣಗಳನ್ನು ಹೊಂದಿದ ಒಬ್ಬ ವೇಷಗಾರ ಸಮ. ಅಂತಹ ಹತ್ತು ವೇಷಗಾರರಿಗೆ ಒಬ್ಬ ಅರಸನು ಸಮ. ಹೀಗೆ ಹತ್ತು ವೇಷಗಾರರಲ್ಲಿ ಅಡಕವಾದ ಪಾಪವು ಒಬ್ಬ ಅರಸನನ್ನು ಹೊಡೆದು ನಾಶ ಮಾಡುವುದು, ಆದ್ದರಿಂದ ಅರಸುತನ ಸಾಮಾನ್ಯವಲ್ಲ.
ಪದಾರ್ಥ (ಕ.ಗ.ಪ)
ವೇಸಿ-ವೇಷಗಾರ, ಒಕ್ಕಲಿಕ್ಕು-ಹೊಡೆದು ನಾಶ ಮಾಡು.
ಟಿಪ್ಪನೀ (ಕ.ಗ.ಪ)
ಯುದ್ಧದಲ್ಲಿ ಅರಸರ ವೇಷವನ್ನು ಧರಿಸಿದವರನ್ನು ಬಳಸಿಕೊಳ್ಳುವ ರೂಢಿ ಕುಮಾರವ್ಯಾಸನ ಕಾಲದಲ್ಲಿಯೇ ಇತ್ತೆಂಬುದು ಈ ಪದ್ಯದಿಂದ ಸ್ಪಷ್ಟವಾಗುತ್ತದೆ.
ಮೂಲ ...{Loading}...
ಚಕ್ರಿಯೊಬ್ಬಗೆ ಹತ್ತು ಕಡಿಕರ
ಲೆಕ್ಕವಂತಾ ಚಕ್ರಿ ಹತ್ತರ
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ
ಮಿಕ್ಕ ವೇಸಿಗೆ ವೇಸಿ ಹತ್ತರ
ಲೆಕ್ಕವೊಬ್ಬರಸಂಗೆ ಪಾತಕ
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ॥103॥
೧೦೪ ಬಲುಕರಿಸಿ ಭೂಮಿಯೊಳಗೊನ್ದಂ ...{Loading}...
ಬಲುಕರಿಸಿ ಭೂಮಿಯೊಳಗೊಂದಂ
ಗುಲವನೊತ್ತಿದವಂಗೆ ಪಶು ಸಂ
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ
ಅಳುಪಿ ಕನ್ಯಾ ರತ್ನ ದೊಳಗೊ
ಬ್ಬಳನು ಭೋಗಿಸಿದಂಗೆ ನರಕದೊ
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲತ್ಕಾರದಿಂದ ನೆಲದಲ್ಲಿ ಒಂದಂಗುಲವನ್ನು ಆಕ್ರಮಿಸಿದವನಿಗೂ, ಗೋವುಗಳ ಹಿಂಡಿನಲ್ಲಿ ಒಂದೇ ಗೋವನ್ನು ಅಪಹರಿಸಿದವನಿಗೂ, ದುರಾಸೆಯಿಂದ ಕನ್ಯೆಯರಲ್ಲಿ ಒಬ್ಬಳನ್ನು ಸಂಭೋಗಿಸಿದವನಿಗೂ ನರಕದಲ್ಲಿ ಇಳಿಯುವುದೊಂದೇ ಗತಿ, ಬೇರೆ ಗತಿಯಿಲ್ಲ.
ಪದಾರ್ಥ (ಕ.ಗ.ಪ)
ಆಳುಪು-ದುರಾಸೆ, ಸಂಕುಲ-ಹಿಂಡು/ಸಮೂಹ.
ಮೂಲ ...{Loading}...
ಬಲುಕರಿಸಿ ಭೂಮಿಯೊಳಗೊಂದಂ
ಗುಲವನೊತ್ತಿದವಂಗೆ ಪಶು ಸಂ
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ
ಅಳುಪಿ ಕನ್ಯಾ ರತ್ನ ದೊಳಗೊ
ಬ್ಬಳನು ಭೋಗಿಸಿದಂಗೆ ನರಕದೊ
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ॥104॥
೧೦೫ ದಾನವಿರಹಿತರಾಗಿ ಜನಿಸಿದ ...{Loading}...
ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನ ಮಾಡಿಯು ಬೆನ್ನಬಿಡದವನೀಶ ಕೇಳ್ ಎಂದ ॥105॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾನ ಮಾಡದೆ ಹುಟ್ಟಿದ ಮನುಷ್ಯರು ಕಡು ಬಡವರು. ಅದರಿಂದ ಪುಣ್ಯ ಹೀನರು, ಅದರಿಂದ ಅವರಿಗೆ ಭಯಂಕರ ನರಕ ಪ್ರಾಪ್ತಿ. ಆ ನರಕದಿಂದ ಮತ್ತೆ ಪಾಪ ಜನ್ಮ ಬಂದು ಮತ್ತೆ ಬಡತನವು ಬರುವುದು. ಏನೂ ಮಾಡಿದರೂ ಅದು ಬೆನ್ನು ಬಿಡದು.
ಪದಾರ್ಥ (ಕ.ಗ.ಪ)
ವಿರಹಿತ-ಇಲ್ಲದ, ಸುಕೃತಿ-ಪುಣ್ಯ, ಘೋರ-ಭಯಂಕರ
ಮೂಲ ...{Loading}...
ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನ ಮಾಡಿಯು ಬೆನ್ನಬಿಡದವನೀಶ ಕೇಳೆಂದ ॥105॥
೧೦೬ ಪಾಕಶಾಸನನೈದಿ ವೃತ್ರನ ...{Loading}...
ಪಾಕಶಾಸನನೈದಿ ವೃತ್ರನ
ಢಾಕುಗೆಡಿಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ
ತೂಕ ಕುಂದಿ ಜಲಾಧಿ ದೇವತೆ
ಯಾ ಕಪರ್ದಿಯ ಕರುಣದಲಿ ದ
ರ್ಭಾಕೃತಿಯ ಕೈಕೊಂಡುದವನೀಪಾಲ ಕೇಳ್ ಎಂದ ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನು ವೃತ್ರಾಸುರನ ಬಲವನ್ನು ಕುಂದಿಸಿ, ದಧೀಚಿಯ ಮೂಳೆಯಿಂದ ಒತ್ತಿ ಹೊಡೆಯಲು ವೃತ್ರಾಸುರನ ದೇಹವು ನೀರಲ್ಲಿ ಬಿದ್ದು ಜಲದೇವತೆಯ ತೂಕ ಕುಗ್ಗಿತು. ಶಿವನ ಕೃಪೆಯಿಂದ ದರ್ಭೆಯ ರೂಪದಲ್ಲಿ ಅದು ಬೆಳೆಯಿತು.
ಪದಾರ್ಥ (ಕ.ಗ.ಪ)
ಪಾಕಶಾಸನ-ದೇವೇಂದ್ರ, ಅಸ್ಥಿ-ಮೂಳೆ, ಔಕಿ-ಒತ್ತಿ, ಕುಂದು-ಕುಗ್ಗು.
ಮೂಲ ...{Loading}...
ಪಾಕಶಾಸನನೈದಿ ವೃತ್ರನ
ಢಾಕುಗೆಡಿಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ
ತೂಕ ಕುಂದಿ ಜಲಾಧಿ ದೇವತೆ
ಯಾ ಕಪರ್ದಿಯ ಕರುಣದಲಿ ದ
ರ್ಭಾಕೃತಿಯ ಕೈಕೊಂಡುದವನೀಪಾಲ ಕೇಳೆಂದ ॥106॥
೧೦೭ ಆದಿಯಲಿ ಕಮಲಾಸನನು ...{Loading}...
ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ
ಕಾದು ಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳ್ ಎಂದ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ಬ್ರಹ್ಮ ಮಧ್ಯದಲಿ ವಿಷ್ಣುವು ಮೇಲೆ ತುದಿಯಲಿ ಶಿವನಿರಲು ಹೀಗೆ ತ್ರಿಮೂರ್ತಿಗಳು ದರ್ಭೆಯಲ್ಲಿ ನಿಂತು ಸಮಸ್ತ ಲೋಕವನ್ನು ಕಾಯುತ್ತಿದ್ದಾರೆ. ಹೀಗಿರುವಾಗ ದರ್ಭೆಯ ಮಹಿಮೆಯನ್ನು ವಿವರಿಸುವವರು ಯಾರು ?
ಪದಾರ್ಥ (ಕ.ಗ.ಪ)
ಅಂಕುರ-ಮೊಳಕೆ/ಬೆಳೆ, ಬಣ್ಣಿಸು-ವಿವರಿಸು.
ಮೂಲ ...{Loading}...
ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ
ಕಾದು ಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ ॥107॥
೧೦೮ ಬೆರಳ ಮೊದಲಲಿ ...{Loading}...
ಬೆರಳ ಮೊದಲಲಿ ಭೂಸುರರು ನಡು
ವೆರಳೆಡೆಗಳಲಿ ಪಾರ್ಥಿವರು ತುದಿ
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು
ಧರಿಸಬೇಹುದು ದಕ್ಷಿಣ ಕರಾಂ
ಬುರುಹದಲಿ ದಿನದಿನದ ಸಂಧ್ಯಾಂ
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ॥108॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆರಳ ಮೊದಲಿಗೆ ಬ್ರಾಹ್ಮಣರು, ಬೆರಳಿನ ನಡುವೆ ಕ್ಷತ್ರಿಯರು, ಬೆರಳ ತುದಿಯಲ್ಲಿ ವೈಶ್ಯರು. ಈ ಕ್ರಮದಲ್ಲಿ ದರ್ಭೆಯ ಉಂಗುರವನ್ನು ಪ್ರತಿದಿನವೂ ಸಂಧ್ಯಾವಂದನೆಯ ಸಮಯದಲ್ಲಿ ಬಲಗೈಯ್ಯಲ್ಲಿ ಧರಿಸಬೇಕು.
ಪದಾರ್ಥ (ಕ.ಗ.ಪ)
ಪಾರ್ಥಿವ-ಕ್ಷತ್ರಿಯ, ದಕ್ಷಿಣಕರ-ಬಲಗೈ, ಅಂಬುರುಹ-ಕಮಲ, ಪವಿತ್ರ-ದರ್ಭೆ/ದರ್ಭೆಯ ಉಂಗುರ.
ಮೂಲ ...{Loading}...
ಬೆರಳ ಮೊದಲಲಿ ಭೂಸುರರು ನಡು
ವೆರಳೆಡೆಗಳಲಿ ಪಾರ್ಥಿವರು ತುದಿ
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು
ಧರಿಸಬೇಹುದು ದಕ್ಷಿಣ ಕರಾಂ
ಬುರುಹದಲಿ ದಿನದಿನದ ಸಂಧ್ಯಾಂ
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ॥108॥
೧೦೯ ಮೇರೆದಪ್ಪಿದ ಜಪ ...{Loading}...
ಮೇರೆದಪ್ಪಿದ ಜಪ ಸುಕಲ್ಪಿತ
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು
ಪಾರವೆಯ್ದದ ಶೌಚ ವಿನಯ ವಿ
ಹಾರವಿಲ್ಲದ ಪೂಜನೆಗಳುಪ
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ॥109॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಿತಿಮೀರಿದ ಜಪ, ಒಳ್ಳೆಯ ಸಂಕಲ್ಪವಿಲ್ಲದ ದಾನ, ದರ್ಭೆಯು ಇಲ್ಲದ ಸಂಧ್ಯಾವಂದನೆ ಮೊದಲಾದವುಗಳು, ಕೊನೆಯಿಲ್ಲದ ಶುಚಿತ್ವ, ನಮ್ರತೆ-ನಲಿವು ಇಲ್ಲದ ಪೂಜೆ ಇವುಗಳಿಂದ ಯಾವ ಪ್ರಯೋಜನವಿದೆ ?
ಪದಾರ್ಥ (ಕ.ಗ.ಪ)
ಪಾರ-ತುದಿ/ಕೊನೆ, ವಿನಯ-ನಮ್ರತೆ, ವಿಹಾರ-ನಲಿವು, ಶೌಚ-ಸ್ವಚ್ಛ
ಮೂಲ ...{Loading}...
ಮೇರೆದಪ್ಪಿದ ಜಪ ಸುಕಲ್ಪಿತ
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು
ಪಾರವೆಯ್ದದ ಶೌಚ ವಿನಯ ವಿ
ಹಾರವಿಲ್ಲದ ಪೂಜನೆಗಳುಪ
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ॥109॥
೧೧೦ ದೇವತಾಸ್ಥಾನದಲಿ ವಿಪ್ರ ...{Loading}...
ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಸ್ಥಾನಗಳಲ್ಲಿ, ಬ್ರಾಹ್ಮಣರ ಸಭೆಗಳಲ್ಲಿ, ರಾಜರ ಸೇವೆಯಲ್ಲಿ ಗುರುಗಳ ಮನೆಯಲ್ಲಿ, ನದಿ, ಕೆರೆಗಳಲ್ಲಿ, ಗೋವುಗಳ ಗುಂಪಿನಲ್ಲಿ ಶ್ರೇಷ್ಠವಾದ ತುಳಸಿ ತೋಟಗಳಲ್ಲಿ ಹಿರಿಯರಿಗೆ ಕೇಡುಂಟು ಮಾಡುವುದು ಯಾವ ಒಳ್ಳೆಯ ಗುಣ ?
ಪದಾರ್ಥ (ಕ.ಗ.ಪ)
ತಟಾಕ-ಕೆರೆ, ಉಪಹತಿ-ಕೇಡು, ಗರುವರು-ಹಿರಿಯರು
ಮೂಲ ...{Loading}...
ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ॥110॥
೧೧೧ ದೆಸೆಗಳೇ ವಾಸಸ್ಸು ...{Loading}...
ದೆಸೆಗಳೇ ವಾಸಸ್ಸು ರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ದೂಸರದ ಗಂಗಾಧರನವೋಲು
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ॥111॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕುಗಳೇ ಮೈ ಮೇಲಿನ ಬಟ್ಟೆಯಾಗಿಟ್ಟುಕೊಂಡು ನಾಚಿಕೆಯಿಲ್ಲದೇ ಓಡಾಡುವ ಭಸ್ಮವನ್ನು ಹಚ್ಚಿಕೊಂಡು ಶಿವನಂತಿದ್ದರೂ ಈ ಭೂಮಿಯಲ್ಲಿ ಮಕ್ಕಳಿಲ್ಲದಿದ್ದರೆ ಒಪ್ಪುವುದೆ? ಅದು ಅಧಿಕ ಪುಣ್ಯವಂತರಿಗಲ್ಲದೇ ಮತ್ತಾರಿಗೆ ಉಂಟು ?
ಪದಾರ್ಥ (ಕ.ಗ.ಪ)
ವಾಸಸ್ಸು-ಬಟ್ಟೆ, ಪ್ರಸರಣ-ಹರವು, ದೂಸರ-ಮೆತ್ತಿಗೆ, ವಸುಧೆ-ಭೂಮಿ/ನೆಲ
ಮೂಲ ...{Loading}...
ದೆಸೆಗಳೇ ವಾಸಸ್ಸು ರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ದೂಸರದ ಗಂಗಾಧರನವೋಲು
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ॥111॥
೧೧೨ ಗುರುಸುತನವೋಲಾಯು ನೀಲಾಂ ...{Loading}...
ಗುರುಸುತನವೋಲಾಯು ನೀಲಾಂ
ಬರನವೊಲು ಬಲ ದಶರಥನವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು
ಅರಿವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲು ಗತಿ ಸಂ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ॥112॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನಂತೆ ಆಯುಷ್ಯ, ಬಲರಾಮನಂತೆ ದೇಹಶಕ್ತಿ, ದಶರಥನಂತೆ ಸಂಪತ್ತು, ಭೀಷ್ಮನಂತೆ ಶೌರ್ಯ, ಶ್ರೀರಾಮಚಂದ್ರನ ರೀತಿಯಲ್ಲಿ ಶತ್ರುನಾಶ, ನಹುಷನಂತೆ ಐಶ್ವರ್ಯ, ಮಾರುತಿಯ ವೇಗ ಇವು ಶಿವನಿಗೊಲಿದವರಿಗಲ್ಲದೆ ಮತ್ತೊಬ್ಬರಿಗಿಲ್ಲ.
ಪದಾರ್ಥ (ಕ.ಗ.ಪ)
ಆಯು-ಆಯುಷ್ಯ, ನೀಲಾಂಬರ-ಬಲರಾಮ, ನದೀಜ-ಭೀಷ್ಮ, ಗತಿ-ವೇಗ, ಸಂವರಿಸುವುದು-ಹೊಂದುವುದು
ಮೂಲ ...{Loading}...
ಗುರುಸುತನವೋಲಾಯು ನೀಲಾಂ
ಬರನವೊಲು ಬಲ ದಶರಥನವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು
ಅರಿವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲು ಗತಿ ಸಂ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ॥112॥
೧೧೩ ಕ್ಷಿತಿಯವೊಲು ಪಾವನತೆ ...{Loading}...
ಕ್ಷಿತಿಯವೊಲು ಪಾವನತೆ ಕುರು ಭೂ
ಪತಿಯವೋಲಭಿಮಾನ ಲಕ್ಷಿ ್ಮೀ
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ॥113॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯಂತೆ ಪವಿತ್ರವಾದುದು, ದುರ್ಯೋಧನನ ಅಭಿಮಾನ, ಶ್ರೀ ಕೃಷ್ಣನ ಸತ್ಕೀರ್ತಿ ವಿದುರನ ವಿಶೇಷ ಶಾಸ್ತ್ರ ವಿಚಾರಗಳ ಜ್ಞಾನ, ಭೂಮಿಯ ಸೈರಣೆ, ಗೆಳೆಯರ, ಒಳ್ಳೆಯ ಮಕ್ಕಳು ಉಂಟುಮಾಡುವ ಪರಿಣಾಮ, ಕುಂತೀ ಮಕ್ಕಳಿಗಿರುವ ಸತ್ಯವಂತಿಕೆ ಲೋಕದಲ್ಲಿ ಯಾವುದೂ ಇಲ್ಲ.
ಪದಾರ್ಥ (ಕ.ಗ.ಪ)
ಸುಹೃತ್ಸಂತತಿ-ಒಳ್ಳೆಯ ಮಕ್ಕಳು
ಮೂಲ ...{Loading}...
ಕ್ಷಿತಿಯವೊಲು ಪಾವನತೆ ಕುರು ಭೂ
ಪತಿಯವೋಲಭಿಮಾನ ಲಕ್ಷಿ ್ಮೀ
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ॥113॥
೧೧೪ ಗಗನದಗಲದಿನುಗುವ ವೃಷ್ಟಿಯೊ ...{Loading}...
ಗಗನದಗಲದಿನುಗುವ ವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ
ಒಗುಮಿಗೆಯ ದೈವದ ಪದಾಂಬುಜ
ಯುಗಳದರ್ಚನೆ ಪೂಜನೆಗಳಿವು
ಜಗದುದರನನು ಮುಟ್ಟವೇ ಭೂಪಾಲ ಕೇಳ್ ಎಂದ ॥114॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದ ಅಗಲಕ್ಕೂ ಹೊರಹೊಮ್ಮಿ ಬರುವ ಮಳೆಯಿಂದ ಬಿದ್ದ ನೀರು ಸಮುದ್ರವನ್ನು ಸೇರುವಂತೆ, ನಾನಾ ರೂಪದಲ್ಲಿ ಪ್ರಕಾಶಿಸುವ ಹುರುಪು ಉತ್ಸಾಹಗಳ ನೆಲೆಯಾದ ದೈವದ ಪಾದ ಕಮಲಗಳ ಅರ್ಚನೆ, ಪೂಜೆಗಳು, ಜಗತ್ತನ್ನೇ ತನ್ನ ಹೊಟ್ಟೆಯಲ್ಲಿಟ್ಟು ಕೊಂಡ ದೇವರಿಗೆ ಸೇರದೆ ?
ಪದಾರ್ಥ (ಕ.ಗ.ಪ)
ವೃಷ್ಟಿ-ಮಳೆ, ಕಿಲಾಲ-ನೀರು, ಒಗುಮಿಗೆ-ಹುರುಪು ಉತ್ಸಾಹ, ಪಾದಾಂಬುಜ-ಪಾದಕಮಲ, ಯುಗಳ-ಜೋಡಿ
ಮೂಲ ...{Loading}...
ಗಗನದಗಲದಿನುಗುವ ವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ
ಒಗುಮಿಗೆಯ ದೈವದ ಪದಾಂಬುಜ
ಯುಗಳದರ್ಚನೆ ಪೂಜನೆಗಳಿವು
ಜಗದುದರನನು ಮುಟ್ಟವೇ ಭೂಪಾಲ ಕೇಳೆಂದ ॥114॥
೧೧೫ ಜಲದೊಳಗೆ ವಾರಾಹ ...{Loading}...
ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು
ಸಲಹುತಿಹನೊಮ್ಮೆಯು ಜಗತ್ರಯ
ದೊಳಗು ಹೊರಗೆಂದೆನ್ನದನುದಿನ
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ॥115॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಷ್ಣುವು ನೀರಿನೊಳು ವರಾಹವಾಗಿ, ಭೂಮಿಯಲ್ಲಿ ವಾಮನನಾಗಿ, ವನ ಸಮೂಹದಲ್ಲಿ ನರಸಿಂಹನಾಗಿ ಭಕ್ತರ ಗುಂಪನ್ನು ಒಳಗು ಹೊರಗು ಎನ್ನದೇ ಮೂರು ಜಗತ್ತಿನಲ್ಲಿಯೂ (ಲೋಕದಲ್ಲಿ) ಪ್ರತಿದಿನವೂ ರಕ್ಷಿಸುತ್ತಿದ್ದಾನೆ; ಕಮಲಾಕ್ಷ ವಿಷ್ಣುವು ಕೃಷ್ಣ ಕೇಶವನಲ್ಲದೇ ಬೇರೆಯಲ್ಲ.
ಪದಾರ್ಥ (ಕ.ಗ.ಪ)
ಸ್ಥಳ-ಭೂಮಿ, ವನಸಂಕುಲ-ವನಸಮೂಹ, ನಿಕರ-ಗುಂಪು
ಮೂಲ ...{Loading}...
ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು
ಸಲಹುತಿಹನೊಮ್ಮೆಯು ಜಗತ್ರಯ
ದೊಳಗು ಹೊರಗೆಂದೆನ್ನದನುದಿನ
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ॥115॥
೧೧೬ ಕತ್ತಲೆಯ ಕಾಲಾಟ ...{Loading}...
ಕತ್ತಲೆಯ ಕಾಲಾಟ ಸೂರ್ಯನ
ನೊತ್ತುವುದೆ ದುಷ್ಕರ್ಮ ಕೋಟಿಗ
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ
ತತ್ತುದೇ ವಿಷ ಕೃಷ್ಣರಾಯನ
ಭಕ್ತರನು ಪರಿಭವಿಸುವುದು ತಾ
ನೆತ್ತಣದು ಜಡಜೀವರಿಗೆ ಹೇಳೆಂದನಾ ಮುನಿಪ ॥116॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಲೆಯ ಸುಳಿದಾಟ ಸೂರ್ಯನನ್ನು ಆಕ್ರಮಿಸುವುದೆ ? ಲೆಕ್ಕವಿಲ್ಲದ ಕೆಟ್ಟ ಕೆಲಸಗಳು ಮಹಾಪುರುಷರನ್ನು ಹೇಗೆ ಮುಟ್ಟುವುವು? ವಿಷವು ಗರುಡನನ್ನು ಮುಟ್ಟುವುದೆ? ಮಂದ ಬುದ್ಧಿಯ ಜೀವಿಗಳಿಗೆ ಶ್ರೀಕೃಷ್ಣನ ಭಕ್ತರಿಗೆ ಕಷ್ಟವನ್ನು ನೀಡುವುದು ಸಾಧ್ಯವೇ?
ಪದಾರ್ಥ (ಕ.ಗ.ಪ)
ಒತ್ತು-ಆಕ್ರಮಿಸು, ಜಡಜೀವರು-ಮಂದಬುದ್ಧಿಯವರು, ಪಥ್ಯ-ಯೋಗ್ಯ, ಖಗಪತಿ-ಪಕ್ಷಿರಾಜ (ಗರುಡ)
ಪಾಠಾನ್ತರ (ಕ.ಗ.ಪ)
ಭಕ್ತರುಗಳನುಭವಿಸುವುದು ತಾ
ಪಥ್ಯವೇ ಜಡಜೀವರಿಗೆ ಹೇಳೆಂದನಾ ಮುನಿಪ –>ಭಕ್ತರನು ಪರಿಭವಿಸುವುದು ತಾನೆತ್ತಣದು ಜಡಜೀವರಿಗೆ ಹೇಳೆಂದನಾ ಮುನಿಪ
ಮೂಲ ...{Loading}...
ಕತ್ತಲೆಯ ಕಾಲಾಟ ಸೂರ್ಯನ
ನೊತ್ತುವುದೆ ದುಷ್ಕರ್ಮ ಕೋಟಿಗ
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ
ತತ್ತುದೇ ವಿಷ ಕೃಷ್ಣರಾಯನ
ಭಕ್ತರನು ಪರಿಭವಿಸುವುದು ತಾ
ನೆತ್ತಣದು ಜಡಜೀವರಿಗೆ ಹೇಳೆಂದನಾ ಮುನಿಪ ॥116॥
೧೧೭ ಅರುಹಬಾರದು ಮುನ್ದೆ ...{Loading}...
ಅರುಹಬಾರದು ಮುಂದೆ ಬಹ ದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ॥117॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭವಿಷ್ಯವನ್ನು ಹೇಳಬಾರದು, ಮುಂದೆ ಬರುವ ದಿನಗಳು ಕಷ್ಟದ ದಿನಗಳು. ನೀನು ಎಚ್ಚರದಿಂದ ನಡೆ ಮೈ ಮರೆಯಬೇಡ. ನಿನ್ನ ಮಕ್ಕಳ ವೈರತ್ವ ಸಂಬಂಧದಲ್ಲಿ ಬ್ರಹ್ಮಾಂಡವೇ ಬರಿದಾಗುತ್ತದೆ. ನೀನು ಅದನ್ನು ತಿಳಿಯಲಾರೆ, ಇದರ ಮೇಲಿನ ಏಳು ಬೀಳಿನ ಜವಾಬ್ದಾರಿಯು ದೈವದ ಅಧೀನವಾಗಿರುವುದು.
ಪದಾರ್ಥ (ಕ.ಗ.ಪ)
ಅನುಬಂಧ-ಸಂಬಂಧ, ಹೊರಿಗೆ-ಜವಾಬ್ದಾರಿ.
ಮೂಲ ...{Loading}...
ಅರುಹಬಾರದು ಮುಂದೆ ಬಹ ದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ॥117॥
೧೧೮ ತೆರಹುಗುಡದೆ ...{Loading}...
ತೆರಹುಗುಡದೆ ಧರಿತ್ರಿಯೊಳಗೀ
ಡಿರಿದ ದೈತ್ಯ ಸಹಸ್ರ ಕೋಟಿಯ
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು
ಹರಿದು ಹಾಯಿಕಿ ಭಕ್ತರನು ನೆರೆ
ಮೆರೆಯಲೋಸುಗ ಜನಿಸಿದನು ಹರಿ
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ॥118॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಭೂಮಿಯೊಳಗೆ ಕಿಕ್ಕಿರಿದು ತುಂಬಿದ ಸಾವಿರ ಕೋಟಿ ರಾಕ್ಷಸರನ್ನು ಕೊಂದು ಭೂ ಭಾರವನ್ನು ಇಳಿಸಿ (ಕಡಿಮೆ ಮಾಡಿ) ದೇವತೆಗಳ ವ್ಯಸನವನ್ನು ಹೋಗಲಾಡಿಸಿ ಭಕ್ತರನ್ನು ಸಮೀಪದಲ್ಲಿದ್ದು ರಕ್ಷಿಸುವುದಕ್ಕಾಗಿ ಹರಿಯು ಹುಟ್ಟಿದನು. ಅವನು ಶ್ರೀಕೃಷ್ಣನು, ಮನುಷ್ಯನಲ್ಲ ತಿಳಿದುಕÉೂ ಎಂದನು.
ಪದಾರ್ಥ (ಕ.ಗ.ಪ)
ಈಡಿರಿದ-ತುಂಬಿದ (ಕಿಕ್ಕಿರಿದು), ನಿರ್ಜರರು-ದೇವತೆಗಳು
ಟಿಪ್ಪನೀ (ಕ.ಗ.ಪ)
ಶ್ರೀಕೃಷ್ಣ - ವಸುದೇª-ದೇವಕಿಯರ ಮಗ ಶ್ರೀಕೃಷ್ಣ. ಸೆರೆಮನೆಯಲ್ಲಿ ಹುಟ್ಟು ನಂದಗೋಕುಲದಲ್ಲಿ ಬೆಳೆದವರು. ಚಿಕ್ಕಂದಿನಲ್ಲೇ ಮಾವನಾದ ಕಂಸನನ್ನು ಕೊಂದು ಕೀರ್ತಿ ಗಳಿಸಿದವನು. ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಷ್ಟು ವೈವಿಧ್ಯಮಯವಾದ ಪಾತ್ರ ಇನ್ನೊಂದಿಲ್ಲ. ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಷ್ಟು ವೈವಿಧ್ಯಮಯವಾದ ಪಾತ್ರ ಇನ್ನೊಂದಿಲ್ಲ. ಅವನ ಆಧ್ಯಾತ್ಮಿಕ ಉನ್ನತಿ, ದೈವೀನೆಲೆ, ತಂತ್ರಪ್ರ¥ಂಚ, ಪಾಂಡವ ಪ್ರೇಮ, ಕುಟುಂಬ ವಾತ್ಸಲ್ಯ, ದ್ರೌಪದೀ ರಕ್ಷಣ, ಸಂಚಾರ ಪ್ರಿಯತೆ, ತರ್ಕಕೌಶಲ, ಸಾರಥಿತನ, ಭಕ್ತರನ್ನು ಪ್ರೀತಿಯಿಂದ ಕಾಣುವ ಗುಣ ಇವುಗಳಲ್ಲಿ ಒಂದೊಂದು ಉತ್ತಮವಾದುದೇ ಆಗಿದೆ. ಕೌರವ ಸಭೆಯಲ್ಲಿ ತೋರಿದ ವಿಶ್ವರೂಪದಂತೆಯೇ ಈ ಮೇಲಿನ ಗುಣಗಳು ವಿಶ್ವರೂಪದರ್ಶನವನ್ನೇ ಮಾಡಿಸುವಂತಿವೆ. ‘ವಿಶ್ವರೂಪ ವಿಹಾರಿ’ ಎಂಬ ವಿಶೇಷಣವೂ ಅವನಿಗಿರುವುದು ಸಾರ್ಥಕವಾಗಿದೆ. ದ್ರೌಪದಿಯನ್ನು ಪ್ರೀತಿಯ ತಂಗಿಯಂತೆ ತಾಯಿಯಂತೆ ಗೌರವಿಸುವ ಈತ ಹಲವಾರು ಪತ್ನಿಯರನ್ನು ಕಟ್ಟಿಕೊಂಡ ಈತ ಅರ್ಜುನನಿಗೆ ಮಾಡುವ ಗೀತೋಪದೇಶದಲ್ಲಿ ಎಲ್ಲವೂ ಮಾಯೆ, ನಶ್ವರ ಎಂದು ಎಷ್ಟು ಸರಳವಾಗಿ ತಿಳಿಸುತ್ತಾನೆ! ಉಳಿದ ಯಾವ ನಾಯಕರಿಗೂ ಇಲ್ಲದಷ್ಟು ವಿನೋದ ಪ್ರವೃತ್ತಿ ಈತನಲ್ಲಿರುವುದೂ ಒಂದು ವಿಶೇóಷ ಸಂಗತಿಯೇ ಆಗಿದೆ. ಇವನ ಸಾಧನೆಯೇನೂ ಕಡಿಮೆಯದಲ್ಲ. ಗಂಧಮಾದನದಲ್ಲಿ, ಪುಷ್ಕರದಲ್ಲಿ, ಪ್ರಭಾತೀರ್ಥದಲ್ಲಿ, ಬದರಿಯಲ್ಲಿ, ಸರಸ್ವತೀ ನದೀ ತೀರದಲ್ಲಿ ಘೋರ ತಪಸ್ಸು ಮಾಡಿ ಅಪಾರ ಶಕ್ತಿಯನ್ನು ಪಡೆದವನು. ರುಕ್ಮಿಣೀ ಸಹಿತನಾಗಿ ಹಿಮವತ್ಪರ್ವದಲ್ಲಿ ತಪಸ್ಸು ಮಾಡಿ ಚಕ್ರವನ್ನು ಪಡೆದವನು. ಸಾಂದೀಪನಿಯಿಂದ ಸಕಲ ವಿದ್ಯೆಗಳನ್ನು ಕಲಿತು ಸತ್ತ ಮಗನನ್ನು ಬದುಕಿಸಿ ತಂದು ಗುರುದಕ್ಷಿಣೆಯಾಗಿ ಕೊಟ್ಟವನು. ಸಂಧಿಯ ನೆವದಲ್ಲಿ ಹಸ್ತಿನಾವತಿಗೆ ಬಂದು ಯುದ್ದ ಭಾವವನ್ನೇ ಕೌರವರಲ್ಲಿ ಬೆಳೆಸಿ ಕರ್ಣನ ಮನಸ್ಸಿನಲ್ಲಿ ದ್ವಂದ್ವವನ್ನು ಹೂಡುವುದರಲ್ಲಿ ಯಶಸ್ವಿಯಾದವನು. ಭಗವದ್ಗೀತೆಯಂಥ ವಿಶ್ವನೀತಿ ಕಾವ್ಯವನ್ನು ಲೋಕಕ್ಕೆ ಬಿಟ್ಟುಹೋದ ತತ್ತ್ವಜ್ಞಾನಿ. ಭೀಮನಿಂದ ಜರಾಸಂಧನನ್ನು ಕೊಲ್ಲಿಸಿದ್ದು ಅವನ ರಾಜತಂತ್ರಜ್ಞತೆಯ ಒಂದು ಶ್ರೇಷ್ಠ ಮಾದರಿ ಎನ್ನಬಹುದು. ಏಕೆಂದರೆ ಅಳಿಯನಾದ ಕಂಸನನ್ನು ಕೃಷ್ಣನು ಕೊಂದನೆಂಬ ಸಿಟ್ಟಿಗೆ ಜರಾಸಂಧ ಶ್ರೀಕೃಷ್ಣ ಮತ್ತು ಅವನ ಪರಿವಾರದವರಿಗೆ ತುಂಬ ಕಿರುಕುಳ ನೀಡಿದ್ದ. ಜರಾಸಂಧನ ಕಾಟ ತಡೆಯಲಾರದೆ ಕೃಷ್ಣನು ತನ್ನ ಗುಂಪನ್ನು ಕರೆದುಕೊಂಡು ದ್ವಾರಕೆಗೆ ಹೋಗಿ ನೆಲೆಸಬೇಕಾಗಿತ್ತು. ಈ ಮಹಾಪ್ರಸ್ಥಾನದಿಂದ ಯಾದವರಿಗೆ ಆರ್ಥಿಕ ಭದ್ರತೆ ಒದಗುವಂತಾಯಿತು.
ಮಹಾಯುದ್ಧದಲ್ಲಿ ರಥವನ್ನು ನಡೆಸಿದ ಶ್ರೀಕೃಷ್ಣ ಪಾಂಡವರ ಮನೋರಥವನ್ನು ನಡೆಸಿದ ರೀತಿ ಅದ್ಭುತವಾಗಿದೆ. ಯುದ್ಧದ ಎಲ್ಲ ಮಜಲುಗಳನ್ನೂ ದಿಗ್ದರ್ಶಿಸಿದವನು ಕೃಷ್ಣನೇ. ಭೀಷ್ಮ, ದ್ರೋಣರು ತಾವಾಗಿ ತಮ್ಮ ಗುಟ್ಟುಗಳನ್ನು ಹೇಳಿಕೊಂಡು ಸೋಲನ್ನು ಆಹ್ವಾನಿಸುವಂತೆ ಮಾಡಿದವನು ಕೃಷ್ಣನೇ. ಕರ್ಣನ ಅಂತರಂಗದ ಕೌರವ ಕೋಟೆಯನ್ನು ಭೇದದಿಂದ ಒಡೆದವನೂ ಕೃಷ್ಣನೇ. ಘಟೋತ್ಕಚನನ್ನು ಮುಂದೆ ಬಿಟ್ಟು ಕರ್ಣನ ಶಕ್ತ್ಯಾಯುಧವನ್ನು ನಾಶಪಡಿಸಿದ್ದು ಶ್ರೀಕೃಷ್ಣನ ಯಶಸ್ವೀ ಕಾರ್ಯತಂತ್ರವೇ ಆಗಿದೆ. ಧೃತರಾಷ್ಟ್ರನ ಸಿಟ್ಟಿನಿಂದ ಭೀಮನನ್ನು ಪಾರುಮಾಡಲು ಕಬ್ಬಿಣದ ಭೀಮಪ್ರತಿಮೆಯನ್ನು ತಿರಿಸ ಪರಿಸ್ಥಿತಿಯನ್ನು ನಿಯಂತ್ರಿಸಿದವನು ಶ್ರೀಕೃಷ್ಣ. ‘ಕಪಟನಾಟಕಸೂತ್ರಧಾರಿ’ ಎಂದು ಈತನ ಬಗೆಗೆ ಎಲ್ಲರೂ ಬಳಸುವ ಪುರಾಣ ವಾಕ್ಯ ಈತನ ಎಲ್ಲ ಗುಣಗಳನ್ನೂ ವ್ಯಾಖ್ಯಾನಿಸುವ ಸೂತ್ರವಾಕ್ವವಾಗಿದೆ.
ಇಷ್ಟಾದರೂ ಅಂತ್ಯಕಾಲ್ಲಕೆ ಕೃಷ್ಣನಿಗೆ ಸಮಾಧಾನವಿರಲಿಲ್ಲ. ತಾನೇ ಕಷ್ಟಪಟ್ಟು ಬೆಳೆಸಿದ ದ್ವಾರಕಿ ಮತ್ತು ಯದುಕುಲದ ಏಳಿಗೆಯ ಬೇರುಗಳು ತನ್ನ ಕಾಲದಲ್ಲೇ ನಶಿಸುವಂತಾಯಿತಲ್ಲ ಎಂಬ ಕೊರಗು ಅವನದು. ದ್ವಾರಕಾನಗರ ಸಮುದ್ರದಲ್ಲಿ ಮುಳುಗಿದಂತೆ ಯಾದವರು ಮದ್ದದ ಸಮುದ್ರದಲ್ಲಿ ಮುಳುಗಿ ಹಾಳಾದರು. ಪರಸ್ಪರ ಕಾದಾಡಿ ಸತ್ತರು. ಕೊನೆಗೆ ಅವನ ಪತ್ನಿಯರನ್ನು ಕಳ್ಳರು ಹೊತ್ತುಕೊಂಡು ಹೊರಟರೆ ಅವರನ್ನು ಕಾಪಾಡಲೆಂದೇ ಬಂದ ಅರ್ಜುನನೂ ಕೈಲಾಗದವನಾಗಿಬಿಟ್ಟ.
ಸ್ವಂತ ಕಷ್ಟನಷ್ಟಗಳ ನಡುವೆ ಸಮಾಜವನ್ನು ಬೆಳೆಸುವ ಮಹತ್ ಪ್ರಯತ್ನವನ್ನು ನಡೆಸಿಕೊಂಡೇ ಬಂದ ಶ್ರೀಕೃಷ್ಣನದು ದೊಡ್ಡ ಕುಟುಂಬ. ದ್ರೌಪದಿಯನ್ನು ಅವನು ನೋಡಿಕೊಂಡ ರೀತಿ ಆದರ್ಶಪ್ರಾಯವಾದದ್ದು. ಅರ್ಜುನನ ಸಖ್ಯವನ್ನು ಪರಮಪ್ರಿಯವೆಂದು ಭಾವಿಸಿದ್ದು ಶ್ರೀಕೃಷ್ಣನ ಮಹಿಮೆ. ಎಲ್ಲ ರೀತಿಯಲ್ಲೂ ಬಲು ದೊಡ್ಡ ವ್ಯಕ್ತಿತ್ವ ಆತನದು.
ಮೂಲ ...{Loading}...
ತೆರಹುಗುಡದೆ ಧರಿತ್ರಿಯೊಳಗೀ
ಡಿರಿದ ದೈತ್ಯ ಸಹಸ್ರ ಕೋಟಿಯ
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು
ಹರಿದು ಹಾಯಿಕಿ ಭಕ್ತರನು ನೆರೆ
ಮೆರೆಯಲೋಸುಗ ಜನಿಸಿದನು ಹರಿ
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ॥118॥
೧೧೯ ಆತನಾ ಪಾಣ್ಡವರ ...{Loading}...
ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ॥119॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೃಷ್ಣನು ಪಾಂಡವರ ಸಂಕಷ್ಟವನ್ನು ತಿಳಿದು ಪಾರ್ಥನ ರಥಕ್ಕೆ ತಾನೇ ಸಾರಥಿಯಾದನು. ಮಹಾರಾಜಾ ! ನಿಮಗೆ ಜಯವು ಎಲ್ಲಿಯದು ? ಈ ಕ್ಷಣವೇ ಭೂಮಿಯನ್ನು ಒಪ್ಪಿಸಿ ಶ್ರೀ ಕೃಷ್ಣನನ್ನು ಮೊರೆಹೊಗುವುದು, ಬದುಕುವುದು. ಇಲ್ಲದಿದ್ದರೆ ಅಯ್ಯೋ ! ನೀವು ಕೆಡುವಿರಿ ಎಂದನು.
ಪದಾರ್ಥ (ಕ.ಗ.ಪ)
ಹರಿಬ-ಸಂಕಷ್ಟ, ಅಸುರಾರಾತಿ-ದೈತ್ಯವಿರೋಧಿ (ಕೃಷ್ಣ)
ಮೂಲ ...{Loading}...
ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ॥119॥
೧೨೦ ಜಲಧಿಯೊಳು ದುಗ್ಧಾಬ್ಧಿ ...{Loading}...
ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನೆ ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ॥120॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಮನವಿಟ್ಟು ಕೇಳು ! ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥ ಸಮೂಹಗಳಲ್ಲಿ ಗಂಗಾನದಿ, ಮುನಿ ಶ್ರೇಷ್ಠರಲ್ಲಿ ವೇದವ್ಯಾಸರು ವ್ರತಸ್ಥರಲ್ಲಿ ಹನುಮಂತನು, ದೈವಗಳಲ್ಲಿ ವಿಷ್ಣುವು (ಶ್ರೀಕೃಷ್ಣನು) ಉಳಿದ ರಾಜರುಗಳಲ್ಲಿ ಧರ್ಮರಾಜ ಶ್ರೇಷ್ಠ.
ಪದಾರ್ಥ (ಕ.ಗ.ಪ)
ದುಗ್ಧಾಬ್ದಿ-ಕೀರ ಸಮುದ್ರ, ಅಗ್ಗಳೆಯ-ಶ್ರೇಷ್ಠ
ಮೂಲ ...{Loading}...
ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನೆ ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ॥120॥
೧೨೧ ಈ ಪರಿಯ ...{Loading}...
ಈ ಪರಿಯ ಬೋಧೆಯಲಿ ನೃಪನನು
ತಾಪವನು ಮಾಣಿಸಿ ಕುಬುದ್ಧಿ
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ
ಕಾಪಥಂಗಳ ನಿಲಿಸಿ ತತ್ವ ಕ
ಳಾಪ ವಿಮಲಜ್ಞಾನದುದಯದ
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ॥121॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿಯ ಎಚ್ಚರಿಕೆಯ ತಿಳಿವಳಿಕೆಯಲ್ಲಿ ಧೃತರಾಷ್ಟ್ರನ ಸಂಕಟವನ್ನು ಕಡಿಮೆ ಮಾಡಿ, ಧೃತರಾಷ್ಟ್ರನೆಂದರೆ ಕೆಟ್ಟ ಬುದ್ಧಿಯನ್ನು ಹರಡುವವನೆಂಬ ಅಪಕೀರ್ತಿಯನ್ನು ಬಿಡಿಸಿ, ಕೆಟ್ಟ (ಕಷ್ಟದ) ದಾರಿಗಳನ್ನು ನಿಲ್ಲಿಸಿ ತತ್ವೋಪದೇಶದಿಂದ ಪವಿತ್ರ ಜ್ಞಾನದ ಉದಯವಾದ ರೂಪು ತಾನೋ ಎಂಬಂತೆ ಸೂರ್ಯೋದಯವಾಯಿತು.
ಪದಾರ್ಥ (ಕ.ಗ.ಪ)
ಮಾಣಿಸು-ಕಡಿಮೆ ಮಾಡು, ಕಾಪಥ-ಕೆಟ್ಟದಾರಿ
ಮೂಲ ...{Loading}...
ಈ ಪರಿಯ ಬೋಧೆಯಲಿ ನೃಪನನು
ತಾಪವನು ಮಾಣಿಸಿ ಕುಬುದ್ಧಿ
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ
ಕಾಪಥಂಗಳ ನಿಲಿಸಿ ತತ್ವ ಕ
ಳಾಪ ವಿಮಲಜ್ಞಾನದುದಯದ
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ॥121॥
೧೨೨ ಧರಣಿಪನ ಸನ್ತೈಸಿದನು ...{Loading}...
ಧರಣಿಪನ ಸಂತೈಸಿದನು ಮುನಿ
ವರನು ತನ್ನಾಶ್ರಮಕೆ ತಿರುಗಿದ
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು
ಹರಿಯದಮಳಾನಂದ ರಸದಲಿ
ಹೊರೆದು ಹೊಂಪುಳಿಯೋಗಿ ಲಕ್ಷಿ ್ಮೀ
ಧರನ ನೆನೆದನು ರಾಯ ಗದುಗಿನ ವೀರ ನರಯಣನ ॥122॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಶ್ರೇಷ್ಠರಾದ ಸನತ್ಸುಜಾತರು ಧೃತರಾಷ್ಟ್ರನನ್ನು ಸಮಾಧಾನಿಸಿದರು. ಬಹಳ ಪ್ರೇಮದಿಂದ ತನ್ನ ಆಶ್ರಮಕ್ಕೆ ಹಿಂತಿರುಗಿದರು. ಧೃತರಾಷ್ಟ್ರನು ನಿರಂತರವಾದ ನಿರ್ಮಲವಾದ ಆನಂದ ರಸದಲ್ಲಿ ರೋಮಾಂಚನದಿಂದ ಗದುಗಿನ ವೀರ ನಾರಾಯಣ ಸ್ವಾಮಿಯಾದ ಲಕ್ಷ್ಮೀಧರನನ್ನು ನೆನೆದನು.
ಪದಾರ್ಥ (ಕ.ಗ.ಪ)
ಹೊಂಪುಳಿ-ರೋಮಾಂಚನ, ಅಮಳ-ನಿರ್ಮಲ
ಮೂಲ ...{Loading}...
ಧರಣಿಪನ ಸಂತೈಸಿದನು ಮುನಿ
ವರನು ತನ್ನಾಶ್ರಮಕೆ ತಿರುಗಿದ
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು
ಹರಿಯದಮಳಾನಂದ ರಸದಲಿ
ಹೊರೆದು ಹೊಂಪುಳಿಯೋಗಿ ಲಕ್ಷಿ ್ಮೀ
ಧರನ ನೆನೆದನು ರಾಯ ಗದುಗಿನ ವೀರ ನರಯಣನ ॥122॥