೦೦೦ ಸೂ ತಿಳುಹಿದನು ...{Loading}...
ಸೂ. ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವಿದುರನು ಧೃತರಾಷ್ಟ್ರನಿಗೆ ನ್ಯಾಯ, ನೀತಿ, ಧರ್ಮಗಳ ಒಳ್ಳೆಯ ವಿಷಯಗಳನ್ನು ತಿಳಿಸಿದನು. ಆ ಒಳ್ಳೆಯ ಸಂಗತಿಗಳ ಚರ್ಚೆಯಲ್ಲಿ ಅವರು ರಾತ್ರಿಯನ್ನು ಕಳೆದರು.
ಮೂಲ ...{Loading}...
ಸೂ. ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ
೦೦೧ ಬನ್ದನಾ ಧೃತರಾಷ್ಟ್ರ ...{Loading}...
ಬಂದನಾ ಧೃತರಾಷ್ಟ್ರ ರಾಯನ
ಮಂದಿರಕೆ ಕಂಡನು ಮಹೀಶನ
ನೊಂದೆರಡು ಮಾತಿನಲಿ ಸೂಚಿಸಿ ಮರಳಿದನು ಮನೆಗೆ
ಅಂದಿನಿರುಳೊಳು ನಿದ್ರೆ ಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಧೃತರಾಷ್ಟ್ರನ ಅರಮನೆಗೆ ಬಂದು ಪಾಂಡವರೊಡನೆ ನಡೆದ ಸಂಭಾಷಣೆಗಳನ್ನು ಒಂದೆರಡು ಮಾತಿನಲ್ಲಿ ತಿಳಿಸಿ ಮನೆಗೆ ಹಿಂತಿರುಗಿದನು. ಆ ರಾತ್ರಿ ಧೃತರಾಷ್ಟ್ರನಿಗೆ ನಿದ್ರೆ ಬಾರದೆ ನೊಂದು ವಿದುರನನ್ನು ಕರೆಸಿ ನಿಟ್ಟುಸಿರು ಬಿಡುತ್ತ ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಬಿಸುಸುಯ್ಯುತ್ತ-ನಿಟ್ಟುಸಿರು ಬಿಡುತ್ತ
ಮೂಲ ...{Loading}...
ಬಂದನಾ ಧೃತರಾಷ್ಟ್ರ ರಾಯನ
ಮಂದಿರಕೆ ಕಂಡನು ಮಹೀಶನ
ನೊಂದೆರಡು ಮಾತಿನಲಿ ಸೂಚಿಸಿ ಮರಳಿದನು ಮನೆಗೆ
ಅಂದಿನಿರುಳೊಳು ನಿದ್ರೆ ಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ ॥1॥
೦೦೨ ನಾಳೆ ಸಭೆಯಲಿ ...{Loading}...
ನಾಳೆ ಸಭೆಯಲಿ ಬಂದ ಹದನನು
ಹೇಳುವನು ಸಂಜಯನು ಸಂಧಿಯೊ
ಕಾಳಗವೊ ಮುಂದರಿಯಬಾರದು ದುಗುಡವಾಯÉ್ತುನಗೆ
ಹೇಳು ನಿರುತವನಿಂದಿನಿರುಳನು
ಬೀಳುಕೊಟ್ಟುದು ನಿದ್ರೆಯೆನೆ ಭೂ
ಪಾಲಕನ ಸಂತೈಸಿ ಮತ್ತಿಂತೆಂದನಾ ವಿದುರ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ನಾಳೆ ಸಭೆಯಲ್ಲಿ ಬಂದು ವಿಷಯವನ್ನು ತಿಳಿಸುವನು. ಸಂಧಿಯಾಗುವುದೊ ? ಯುದ್ಧವಾಗುವುದೊ, ಮುಂದಿನದು ತಿಳಿಯಲಾಗದೆ ನನಗೆ ದುಗುಡವಾಗುತ್ತಿದೆ. ಈ ರಾತ್ರಿ ನನಗೆ ನಿದ್ರೆ ಬಾರದಾಗಿದೆ. ಸತ್ಯವನ್ನು ಹೇಳು ಎಂದು ಕೇಳಲು ವಿದುರನು ಧೃತರಾಷ್ಟ್ರನನ್ನು ಸಂತೈಸುತ್ತ ಹೇಳಿದನು
ಪದಾರ್ಥ (ಕ.ಗ.ಪ)
ನಿರುತ-ಸತ್ಯ
ಮೂಲ ...{Loading}...
ನಾಳೆ ಸಭೆಯಲಿ ಬಂದ ಹದನನು
ಹೇಳುವನು ಸಂಜಯನು ಸಂಧಿಯೊ
ಕಾಳಗವೊ ಮುಂದರಿಯಬಾರದು ದುಗುಡವಾಯÉ್ತುನಗೆ
ಹೇಳು ನಿರುತವನಿಂದಿನಿರುಳನು
ಬೀಳುಕೊಟ್ಟುದು ನಿದ್ರೆಯೆನೆ ಭೂ
ಪಾಲಕನ ಸಂತೈಸಿ ಮತ್ತಿಂತೆಂದನಾ ವಿದುರ ॥2॥
೦೦೩ ಬಲವಿಹೀನನು ಬಲ್ಲಿದನ ...{Loading}...
ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಿದವಂಗೆ ಕಾಮದ
ಕಳವಳದಲಿರ್ದಂಗೆ ಧನದಳಲಿಂದ ಮರುಗುವಗೆ
ಕಳವಿನಲಿ ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಹಾರಾಜ ! ಬಲಶಾಲಿಯ ಆಕ್ರಮಣಕ್ಕೆ ಸಿಲುಕಿದ ದುರ್ಬಲನಿಗೆ, ಕಾಮಾತುರನಿಗೆ, ಹಣದ ಚಿಂತೆಯಿಂದ ಕಂಗೆಟ್ಟವನಿಗೆ, ಕಳ್ಳತನದಿಂದ ಕುದಿವವನಿಗೆ, ದೈವದ ಮಹಿಮೆ ತಿಳಿಯದವನಿಗೆ ಮನಶ್ಯಾಂತಿ ಇಲ್ಲದೆ ಸತ್ಯವಾಗಿಯೂ ನಿದ್ರೆ ಬಾರದು.’ ಎಂದು ವಿದುರನು ಹೇಳಿದನು.
ಮೂಲ ...{Loading}...
ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಿದವಂಗೆ ಕಾಮದ
ಕಳವಳದಲಿರ್ದಂಗೆ ಧನದಳಲಿಂದ ಮರುಗುವಗೆ
ಕಳವಿನಲಿ ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನು ಭೂಪತಿಗೆ ವಿದುರ ॥3॥
೦೦೪ ಒನ್ದರಿನ್ದೆರಡಹುದನರಿ ಮೂ ...{Loading}...
ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರದೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳ್ ಎಂದ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು ! ಒಂದೇ ಅದ್ವಿತೀಯ ವಸ್ತುವಿನಿಂದ ದ್ವಂದ್ವವಾಗಿ ಕಾಣುವ ಈ ಜಗತ್ತು ಹುಟ್ಟಿತೆಂದು ತಿಳಿ, ಸತ್ವ, ರಜಸ್ಸು, ತಮೋಗುಣಗಳ ಸ್ವರೂಪವನ್ನರಿತು (ತ್ರಿಗುಣ) ನಾಲ್ಕು ಪುರುಷಾರ್ಥಗಳಲ್ಲಿ (ಧರ್ಮ, ಅರ್ಥ, ಕಾಮ, ಮೋಕ್ಷ) ನಿಷ್ಠೆಯಿಂದಿರು. ಪಂಚೇಂದ್ರಿಯಗಳಲ್ಲಿ ಆಸಕ್ತನಾಗದೆ ಅರಿಷಡ್ವರ್ಗಗಳನ್ನು ಗೆದ್ದು ಸಪ್ತವ್ಯಸನಗಳನ್ನು ತ್ಯಜಿಸು. ಯೋಗದ ಅಷ್ಟಾಂಗಗಳನ್ನು ವಿಚಾರಿಸಿ ನವ ವಿಧ ಭಕ್ತಿ ಮಾರ್ಗಗಳಲ್ಲಿ ಮುಂದುವರಿ. ಹತ್ತು ಸಾಮಾನ್ಯ ಧರ್ಮಗಳನ್ನು ಉಪೇಕ್ಷಿಸಬೇಡ.
ಟಿಪ್ಪನೀ (ಕ.ಗ.ಪ)
ವಿಶೇಷಗಳು : ಅರಿಷಡ್ವರ್ಗ : ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ.
ಸಪ್ತ ವ್ಯಸನಗಳು : ಮಧ್ಯಪಾನ, ಜೂಜು, ಸ್ತ್ರೀ, ಬೇಟೆ, ಕ್ರೂರದಂಡನೆ, ಕಠೋರವಾದ ಮಾತು, ದುಂದುಗಾರಿಕೆ,
ಅಷ್ಟಾಂಗಗಳು : ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣಾ, ಸಮಾಧಿ,
ನವವಿಧಭಕ್ತಿ : ಶ್ರವಣ, ಸ್ಮರಣ, ಕೀರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ.
ಹತ್ತು ಸಾಮಾನ್ಯ ಧರ್ಮಗಳು : ಸಂತೋಷ, ತಾಳ್ಮೆ, ಮನೋನಿಗ್ರಹ, ಪರದ್ರವ್ಯದ ಅನಪೇಕ್ಷೆ, ಕೋಪಿಸದಿರುವುದು, ಶುಚಿತ್ವ, ಇಂದ್ರಿಯ ನಿಗ್ರಹ, ಶಾಸ್ತ್ರ ವಿಚಾರ, ಆತ್ಮಜ್ಞಾನ, ಸತ್ಯ. - ಮನುಸ್ಮೃತಿ (6-92)
ಶಾಸ್ತ್ರೀಯ ಸಂ 4, ಪು. 202 - 204 ನೋಡಿ
ಏಕಯಾದ್ವೇ ವಿನಿಶ್ಚಿತ್ಯ ತ್ರೀಂಶ್ಚತು ರ್ಬಿಃವಶೇಕರು
ಪಂಚ ಜಿತ್ವಾ ವಿದಿತ್ವಾ ಷಟ್ ಸಪ್ತಹಿತ್ವಾ ಸುಖೀಭವ ||
ಮೂಲ ...{Loading}...
ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರದೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ ॥4॥
೦೦೫ ತನ್ನ ಚಿನ್ತೆಯದೊನ್ದು ...{Loading}...
ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನಮುಖ ನಾಲ್ಕು
ತನ್ನ ನೆನಹಿನವೋಲು ಕಾರ್ಯವು
ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯನು ಒಂದನ್ನು ಅಲೋಚಿಸಿದರೆ ದೈವ ಎರಡನ್ನು ಬಗೆಯುತ್ತದೆ. ಗುರಿ ಸಾಧಿಸಲು ಮೂರು ದಾರಿಯನ್ನು ಹುಡುಕಿದರೆ ದೈವ ನಾಲ್ಕು ವಿಧಗಳಿಂದ ಅದನ್ನು ಕೆಡಿಸುತ್ತದೆ. ಎಲ್ಲವೂ ತನ್ನಿಚ್ಛೆಯಂತೆಯೇ ನಡೆಯುವುದಾದರೆ, ದೈವವು ಏಕೆ ? ನಾನೇ ದೇವರೆಂದು ಮನುಷ್ಯ ಹೇಳಿಕೊಳ್ಳುತ್ತಾನೆ !
ಪದಾರ್ಥ (ಕ.ಗ.ಪ)
ಗನ್ನಕತಕ-ಮೋಸ/ವಂಚನೆ
ಮೂಲ ...{Loading}...
ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನಮುಖ ನಾಲ್ಕು
ತನ್ನ ನೆನಹಿನವೋಲು ಕಾರ್ಯವು
ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ ॥5॥
೦೦೬ ಒನ್ದು ವರ್ಣವನರುಹಿದವ ...{Loading}...
ಒಂದು ವರ್ಣವನರುಹಿದವ ಗುರು
ವೊಂದಪಾಯದಲುಳಿಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲ ಯೋನಿಯೊಳರಸ ಕೇಳ್ ಎಂದ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದಕ್ಷರವನ್ನು ಹೇಳಿಕೊಟ್ಟವನೂ ಗುರು. ಆಪತ್ಕಾಲದಲ್ಲಿ ತನ್ನನ್ನು ಉಳಿಸಿದವನೂ ಗುರುವೇ, ಯುದ್ಧದಲ್ಲಿ ರಕ್ಷಿಸಿದವನು ಪರಮಗುರು. ಅವರಿಂದಾದ ಉಪಕಾರವನ್ನು ಉಪೇಕ್ಷಿಸಿ ನಾನೇ ಹೆಚ್ಚೆಂದು ಗರ್ವಿಸುವವನು ಮುಂದೆ ನೀಚನಾಗಿ ಹುಟ್ಟಬೇಕಾಗುತ್ತದೆ.
ಪದಾರ್ಥ (ಕ.ಗ.ಪ)
ವಿಗ್ರಹ-ಯುದ್ಧ
ಮೂಲ ...{Loading}...
ಒಂದು ವರ್ಣವನರುಹಿದವ ಗುರು
ವೊಂದಪಾಯದಲುಳಿಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲ ಯೋನಿಯೊಳರಸ ಕೇಳೆಂದ ॥6॥
೦೦೭ ತನ್ನ ಕಾರಿಯ ...{Loading}...
ತನ್ನ ಕಾರಿಯ ಕಾರಣವನುಳಿ
ದನ್ಯಥಾ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಕರ್ತವ್ಯವೇನು ? ಯಾವುದು ನನಗೆ ಶ್ರೇಯಸ್ಸು ಎಂದು ಯೋಚಿಸಿ ಕಾರ್ಯದಲ್ಲಿ ತೊಡಗದೆ , ಬೇರೆ ಚಿಂತನೆ ಮಾಡುವುದು ನೀತಿವಂತರಿಗೆ ಉಚಿತವಲ್ಲ. ನಮ್ಮ ಉನ್ನತಿಯನ್ನು ಸಾಧಿಸುತ್ತ ಉಳಿದ ಸಮಯವನ್ನು ಪರೋಪಕಾರಕ್ಕಾಗಿಯೇ ವಿನಿಯೋಗಿಸಬೇಕು. ಅದಲ್ಲದೇ ಆತ್ಮವನ್ನೇ ಮರೆತು ನಡೆಯುವುದು ಸರಿಯಲ್ಲ ಎಂದು ವಿದುರನು ಹೇಳಿದನು.
ಪದಾರ್ಥ (ಕ.ಗ.ಪ)
ಕಾರಿಯ-ಕಾರ್ಯ
ಮೂಲ ...{Loading}...
ತನ್ನ ಕಾರಿಯ ಕಾರಣವನುಳಿ
ದನ್ಯಥಾ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ ॥7॥
೦೦೮ ಹಾವು ಹಲವನು ...{Loading}...
ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿ ಭಾರಕರ
ಭಾವಿಸಲು ಸರ್ವಜ್ಞ ಸರ್ವಗು
ಣಾವಲಂಬನನೊಬ್ಬನರ್ಜುನ
ದೇವ ಸಾಲದೆ ನಾಡ ನಾಯಿಗಳೇನು ಫಲವೆಂದ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾವು ಹಲವು ಮರಿಗಳನ್ನು ಹಡೆದು ಲೋಕಕ್ಕೆ ಸಾವು ತರುವಂತೆ ನೀನು ಭೂಮಿಗೆ ಭಾರವಾದ ನೂರು ಮಕ್ಕಳನ್ನು ಹಡೆದು ಕೆಡೆಸಿದೆ. ವಿಚಾರಿಸಿದರೆ ಸರ್ವಜ್ಞನೂ ಸರ್ವಗುಣ ಸಂಪನ್ನನೂ ಆದ ಅರ್ಜುನನಂತಹ ಒಬ್ಬ ಮಗನು ಸಾಲದೆ ? ಕೆಲಸಕ್ಕೆ ಬಾರದ ನಾಡನಾಯಿಗಳಿಂದೇನು ಫಲ !
ಪದಾರ್ಥ (ಕ.ಗ.ಪ)
ನಾಡನಾಯಿ-ಊರನಾಯಿ/ಬೀದಿನಾಯಿ
ಮೂಲ ...{Loading}...
ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿ ಭಾರಕರ
ಭಾವಿಸಲು ಸರ್ವಜ್ಞ ಸರ್ವಗು
ಣಾವಲಂಬನನೊಬ್ಬನರ್ಜುನ
ದೇವ ಸಾಲದೆ ನಾಡ ನಾಯಿಗಳೇನು ಫಲವೆಂದ ॥8॥
೦೦೯ ದೀಪ ದೀಪವ ...{Loading}...
ದೀಪ ದೀಪವ ತೊಳಲಿ ಕರ್ಮ ಕ
ಳಾಪದಲಿ ಕುದಿಕುದಿದು ನಾನಾ
ರೂಪಿನಿಂದಾರ್ಜಿಸುವ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೀಪವನ್ನು ಹಿಡಿದು ಅತ್ತಿಂದಿತ್ತ ಹುಡುಕಾಡುತ್ತ ಪರದಾಡುವಂತೆ, ನಾನಾ ರೂಪದಿಂದ ಸಂಪಾದಿಸುವ ಧರ್ಮದ ಗೊಡವೆ ಏಕೆ ? ಮಹಾರಾಜಾ ಕೇಳು ಸ್ವರ್ಗಕ್ಕೆ ಸತ್ಯವೊಂದೆ ಮೆಟ್ಟಿಲು. ಸತ್ಯವೇ ಸಂಸಾರಸಾಗರವನ್ನು ದಾಟಿಸುವ ನಾವೆಯಾಗಿದೆ.
ಪದಾರ್ಥ (ಕ.ಗ.ಪ)
ಆರ್ಜಿಸು-ಸಂಪಾದಿಸು, ಸೋಪಾನ-ಮೆಟ್ಟಿಲು
ಕೂಪಾರ - ಕೂಪರ - ಸಾಗರ
ಮೂಲ ...{Loading}...
ದೀಪ ದೀಪವ ತೊಳಲಿ ಕರ್ಮ ಕ
ಳಾಪದಲಿ ಕುದಿಕುದಿದು ನಾನಾ
ರೂಪಿನಿಂದಾರ್ಜಿಸುವ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ ॥9॥
೦೧೦ ಪಾಪದಿನ್ದಾರ್ಜಿಸಿದೊಡರ್ಥವ ...{Loading}...
ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಾರ್ಜಿಸಿದುರಗನಂದದಲಿ
ಕಾಪಥವನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಧರ್ಮದಿಂದ ಸಂಪಾದಿಸಿದ ಹಣದಿಂದ ಸಂಪಾದಿಸಿದವನಿಗೆ ಮಾತ್ರವೇ ಪಾಪವು ಗಂಟು ಬೀಳುತ್ತದೆ. ಅದನ್ನು ಅನುಭವಿಸುವ ಇತರರಿಗೆ ಆ ಪಾಪವು ತಟ್ಟುವುದಿಲ್ಲ, ಪಾಪವು ಸರ್ಪವಿದ್ದಂತೆ. ಅದು ಯಾರನ್ನು ಕಚ್ಚುವುದೋ ಅವರಿಗೆ ಮಾತ್ರ ವಿಷ ಬಾಧೆ. ದುರ್ಮಾರ್ಗದಿಂದ ಕೋಪಾಟೋಪದೊಡನೆ ಉತ್ತಮರ ಧನವನ್ನು ದೋಚುವುದು ಯಾವ ಗುಣ ?
ಪದಾರ್ಥ (ಕ.ಗ.ಪ)
ಕಾಪಥ-ಕೆಟ್ಟದಾರಿ
ಮೂಲ ...{Loading}...
ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಾರ್ಜಿಸಿದುರಗನಂದದಲಿ
ಕಾಪಥವನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ ॥10॥
೦೧೧ ಬವರ ಮುಖದಲಿ ...{Loading}...
ಬವರ ಮುಖದಲಿ ವೈರಿ ರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಶತ್ರುಗಳಿಂದ ಗೆದ್ದು ತಂದ ಹಣವನ್ನು ಬ್ರಾಹ್ಮಣರಿಗೆ ದಾನ ಮಾಡಿದ್ದರ ಫಲ ಎಷ್ಟೆಂಬುದನ್ನು ಹೇಳಲು ದೇವೇಂದ್ರನಿಗೂ ಸಾಧ್ಯವಿಲ್ಲ. ದಾನಮಾಡುವುದು ರಾಜರಿಗೆ ಉತ್ತಮ ಧರ್ಮ ಮಹಾರಾಜ ! ನಿನ್ನ ಮಗನು ಈ ನೀತಿ ರಹಸ್ಯವನ್ನು ತಿಳಿದಿಲ್ಲ.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಅವಗಡ-ತೊಂದರೆ
ಮೂಲ ...{Loading}...
ಬವರ ಮುಖದಲಿ ವೈರಿ ರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತ ಫಲವಿನಿತೆಂದು ಗಣಿಸುವಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈ ಧೃತರಾಷ್ಟ್ರ ಕೇಳೆಂದ ॥11॥
೦೧೨ ಧರಣಿಯಮರರ ಧನದಿ ...{Loading}...
ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರು ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜಬೇಕೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರ ಹಣದಿಂದ ಆನೆ, ಕುದುರೆ ಮುಂತಾದ ಸೈನಿಕ ದಳವನ್ನು ಹೆಚ್ಚಿಸಿದರೆ ಅಂತಹವು ಬಹಳ ಕಾಲ ನಿಲ್ಲದು. ಯುದ್ಧದಲ್ಲಿ ಅಂತಹ ಸೇನೆಯು ನದಿಗೆ ಹಾಕಿದ ಮರಳ ಅಡ್ಡ ಗೋಡೆಯಂತೆ ನಾಶವಾಗುತ್ತದೆ. ಇದನ್ನು ತಿಳಿದು ವರ್ಣೋತ್ತಮರಿಗೆ ಭಯಪಟ್ಟು ನಡೆಯಬೇಕೆಂದ.
ಪದಾರ್ಥ (ಕ.ಗ.ಪ)
ನಸಿ-ಸೊರಗು
ಮೂಲ ...{Loading}...
ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರು ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜಬೇಕೆಂದ ॥12॥
೦೧೩ ಉರಗನೌಡಿದೊಡದರ ವಕ್ತ್ರದೊ ...{Loading}...
ಉರಗನೌಡಿದೊಡದರ ವಕ್ತ್ರದೊ
ಳಿರದೆ ಮೇಣಾ ದಷ್ಟ ದೇಹದೊ
ಳಿರದೆ ರುಧಿರವು ಪೋಪವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರಿವುದರಸಂಗಲಸಿದಾ ಪ್ರಜೆ
ಗಿರದುಭಯ ಪಿಂಗುವುದನರಿ ಭೂಪಾಲ ಕೇಳ್ ಎಂದ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾವು ಕಚ್ಚಿದಂತೆ ಮನುಷ್ಯನ ರಕ್ತ ಹಾವಿಗೂ ದಕ್ಕದೇ, ಆ ಮನುಷ್ಯನ ದೇಹದಲ್ಲಿಯೂ ಉಳಿಯದಿರುವಂತೆ, ದುಷ್ಟ ಅಧಿಕಾರಿಗಳಿಂದ ಪ್ರಜೆಗಳನ್ನು ನೋಯಿಸಿ ತಂದ ಐಶ್ವರ್ಯವು ರಾಜನಿಗೂ ದಕ್ಕದು ! ಪ್ರಜೆಗಳಿಗೂ ಉಳಿಯದು !
ಪದಾರ್ಥ (ಕ.ಗ.ಪ)
ವಕ್ತ್ರ್-ಬಾಯಿ, ಒರಸೊರಸು-ಹಿಂಸೆ
ಮೂಲ ...{Loading}...
ಉರಗನೌಡಿದೊಡದರ ವಕ್ತ್ರದೊ
ಳಿರದೆ ಮೇಣಾ ದಷ್ಟ ದೇಹದೊ
ಳಿರದೆ ರುಧಿರವು ಪೋಪವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರಿವುದರಸಂಗಲಸಿದಾ ಪ್ರಜೆ
ಗಿರದುಭಯ ಪಿಂಗುವುದನರಿ ಭೂಪಾಲ ಕೇಳೆಂದ ॥13॥
೦೧೪ ಉರಗನಗಿದೊಡೆ ಮೇಣು ...{Loading}...
ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿನೃಪಾಲಕರ
ಧರೆ ಸಹಿತ ತತ್ಸಕಲ ಬಲ ಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪವು ಕಚ್ಚಿದರೂ, ಆಯುಧದಿಂದ ಹೊಡೆದರೂ ಒಬ್ಬನೇ ಸಾಯುತ್ತಾನೆ. ಆದರೆ ರಾಜನೀತಿಯನ್ನು ಸರಿಯಾಗಿ ಪ್ರಯೋಗಿಸಿದಾಗ ಶತ್ರುಗಳೆಲ್ಲರೂ ಸೇನಾ ಸಮೇತರಾಗಿ ನಾಶವಾಗುತ್ತಾರೆ. ಅವರ ರಾಜ್ಯವು ವಶವಾಗುತ್ತದೆ. ಮಹಾರಾಜಾ ! ನಿನಗೆ ವಿವೇಚನಾ ಪೂರ್ಣವಾದ ಮಂತ್ರಾಲೋಚನೆಗೆ ಸಮನಾದ ಮಂತ್ರಿ ಮಂಡಲ ನಿನಗಿದೆಯೇ ? ಎಂದನು.
ಮೂಲ ...{Loading}...
ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿನೃಪಾಲಕರ
ಧರೆ ಸಹಿತ ತತ್ಸಕಲ ಬಲ ಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ ॥14॥
೦೧೫ ಏಸು ಧರ್ಮದಲಾರ್ಜಿಸಿದ ...{Loading}...
ಏಸು ಧರ್ಮದಲಾರ್ಜಿಸಿದ ಧನ
ವೈಸು ಸಿರಿ ವದಿರ್sಸುವುದದರಿಂ
ದೇಶಮಂಗಳ ಪುತ್ರ ಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮವ ಹಿಡಿಯಧರ್ಮವ ಬಿಟ್ಟು ಕಳೆಯೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಮಾರ್ಗದಿಂದ ಧನವನ್ನು ಸಂಪಾದಿಸಿದರೆ ಅದು ಹೆಚ್ಚುತ್ತಾ ಹೋಗುತ್ತದೆ. ಅದರಿಂದ ದೇಶಕ್ಕೆ ಮಂಗಳವಾಗುತ್ತದೆ. ಪತ್ನೀ ಪುತ್ರರಿಗೆ ಹಿತವುಂಟು. ವೈರಿಗಳೂ ಹಿಮ್ಮೆಟ್ಟುತ್ತಾರೆ. ಇದನ್ನರಿತು ಮಹಾರಾಜ ! ನೀನು ಅಧರ್ಮಮಾರ್ಗವನ್ನು ತ್ಯಜಿಸಿ, ಧರ್ಮಮಾರ್ಗವನ್ನು ಅನುಸರಿಸು.
ಪದಾರ್ಥ (ಕ.ಗ.ಪ)
ಕಳತ್ರ-ಪತ್ನಿ, ಪೈಸರಿಸು-ಹಿಮ್ಮೆಟ್ಟು
ಮೂಲ ...{Loading}...
ಏಸು ಧರ್ಮದಲಾರ್ಜಿಸಿದ ಧನ
ವೈಸು ಸಿರಿ ವದಿರ್sಸುವುದದರಿಂ
ದೇಶಮಂಗಳ ಪುತ್ರ ಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿ
ದಾಸುರದ ಪಥವಿದನರಿದು ಭೂ
ಮೀಶ ಧರ್ಮವ ಹಿಡಿಯಧರ್ಮವ ಬಿಟ್ಟು ಕಳೆಯೆಂದ ॥15॥
೦೧೬ ಹರಿವ ನದಿ ...{Loading}...
ಹರಿವ ನದಿ ತನ್ನಿಚ್ಛೆಯಲಿ ದಡ
ವೆರಡ ಕೆಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದಡುಭಯ ವಂಶವನು
ನೆರಹುವಳು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದಲಿ ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳ್ ಎಂದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಯುವ ನದಿಯು ತನ್ನಿಚ್ಛೆಯಂತೆ ನಡೆದು ಎರಡು ದಡವನ್ನು ಕೆಡಿಸುವಂತೆ, ಸ್ತ್ರೀಯರು ಸಂಭ್ರಮದಿಂದ ಮನಬಂದಂತೆ ನಡೆದರೆ ಎರಡೂ ಕುಲಗಳನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಹಾಗೆಯೇ ಮೇರೆ ಮೀರದೆ ರಾಜನು ತನ್ನ ದಾರಿಯಲ್ಲಿ ಮತ್ಸರವನ್ನು ಹೊಂದದೆ ಪ್ರೀತಿಯಿಂದ ಆಳುವುದು ಉತ್ತಮವು ಮಹಾರಾಜ ಕೇಳು.
ಪದಾರ್ಥ (ಕ.ಗ.ಪ)
ಉರವಣಿ-ಸಂಭ್ರಮ
ಮೂಲ ...{Loading}...
ಹರಿವ ನದಿ ತನ್ನಿಚ್ಛೆಯಲಿ ದಡ
ವೆರಡ ಕೆಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದಡುಭಯ ವಂಶವನು
ನೆರಹುವಳು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದಲಿ ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ ॥16॥
೦೧೭ ಧರೆಯೊಳಗೆ ಕಡು ...{Loading}...
ಧರೆಯೊಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರಿಯೋಧನನು ದಶ
ಶಿರನು ಗೋಗ್ರಹಣದಲಿ ವನ ಭಂಗದಲಿ ಮುಂಕೊಂಡು
ಅರಿನೃಪರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಭೂಪಾಲ ಕೇಳ್ ಎಂದ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಈ ಲೋಕದಲ್ಲಿ ಇಬ್ಬರು ಕಡು ಮೂರ್ಖರು. ಒಬ್ಬ ನಿನ್ನ ಮಗ ದುರ್ಯೋಧನ, ಮತ್ತೊಬ್ಬನು ರಾವಣ ವಿರಾಟನಗರದ ಗೋಗ್ರಹಣದಲ್ಲಿ ಅರ್ಜುನನ ಶೌರ್ಯವನ್ನು ಕಂಡ ನಿನ್ನ ಮಗ ಹಾಗೂ ಅಶೋಕ ವನದಲ್ಲಿ ಹನುಮಂತನ ಅಬ್ಬರವನ್ನು ಕಂಡ ರಾವಣ ಇಬ್ಬರೂ ಎದುರಾಳಿಗಳ ಅತಿಶಯವಾದ ಸತ್ವವನ್ನು ಕಂಡೂ ಕಂಡೂ ಎಚ್ಚರಗೊಳ್ಳದೆ ಮರುಳತನದಿಂದಿರುವುದು ಯೋಗ್ಯವೇ ?
ಮೂಲ ...{Loading}...
ಧರೆಯೊಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರಿಯೋಧನನು ದಶ
ಶಿರನು ಗೋಗ್ರಹಣದಲಿ ವನ ಭಂಗದಲಿ ಮುಂಕೊಂಡು
ಅರಿನೃಪರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಭೂಪಾಲ ಕೇಳೆಂದ ॥17॥
೦೧೮ ಕರಣಿಕನ ಹಗೆಗೊಣ್ಡವಙ್ಗೈ ...{Loading}...
ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಗಳು
ಅರಸ ಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವವು ತಪ್ಪದವನೀ
ಸುರರ ಬದ್ಧದ್ವೇಷ ಲೇಸಲ್ಲೆಂದನಾ ವಿದುರ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೆಕ್ಕಿಗನನ್ನು (ಗುಮಾಸ್ತನನ್ನು) ಹಗೆತನದಿಂದ ನೋಡಿದರೆ ಧನಹಾನಿ. ವೈದ್ಯನೊಡನೆ ಅನಾದರವನ್ನು ಬೆಳೆಸಿಕೊಂಡರೆ ಆಯುಷ್ಯ ಹೆಚ್ಚುವುದಿಲ್ಲ. ಮಹಾರಾಜ ! ಬ್ರಾಹ್ಮಣರನ್ನು ದ್ವೇಷಿಸಿದರೆ ಧನ, ಆಯುಷ್ಯ ಎರಡೂ ಹಾನಿಗೆ ಒಳಗಾಗುತ್ತವೆ. ಆದ್ದರಿಂದ ಬ್ರಾಹ್ಮಣರೊಡನೆಯ ಬದ್ಧ ದ್ವೇಷ ಒಳ್ಳೆಯದಲ್ಲ.
ಪದಾರ್ಥ (ಕ.ಗ.ಪ)
ಕರಣಿಕ-ಲೆಕ್ಕಿಗ/ಗುಮಾಸ್ತ
ಮೂಲ ...{Loading}...
ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಾಭಿವೃದ್ಧಿಗಳು
ಅರಸ ಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವವು ತಪ್ಪದವನೀ
ಸುರರ ಬದ್ಧದ್ವೇಷ ಲೇಸಲ್ಲೆಂದನಾ ವಿದುರ ॥18॥
೦೧೯ ಧರೆಯೊಳಗೆ ರವಿ ...{Loading}...
ಧರೆಯೊಳಗೆ ರವಿ ಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು ಕಣಾ ಸನ್ಯಾಸಿಯಾಗಿಯೆ ಯೋಗ ಮಾರ್ಗದಲಿ
ಹರಣವನು ಬಿಟ್ಟವರುಗಳು ಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳ್ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಪಂಚದಲ್ಲಿ ಮರಣಾನಂತರ ಸದ್ಗತಿಯನ್ನು ಪಡೆಯತಕ್ಕವರು ಇಬ್ಬರು. ಒಬ್ಬ ಯೋಗ ಮಾರ್ಗದಲ್ಲಿ ಪ್ರಾಣವನ್ನು ಬಿಡತಕ್ಕ ಸಂನ್ಯಾಸಿ. ಮತ್ತೊಬ್ಬ ಯುದ್ಧಭೂಮಿಯಲ್ಲಿ ವೈರಿಗಳೊಡನೆ ಹೋರಾಡುತ್ತ ಪ್ರಾಣವನ್ನು ಬಿಡುವ ವೀರ ಎಂಬುದನ್ನು ತಿಳಿ ಎಂದನು ವಿದುರ.
ಮೂಲ ...{Loading}...
ಧರೆಯೊಳಗೆ ರವಿ ಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು ಕಣಾ ಸನ್ಯಾಸಿಯಾಗಿಯೆ ಯೋಗ ಮಾರ್ಗದಲಿ
ಹರಣವನು ಬಿಟ್ಟವರುಗಳು ಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ ॥19॥
೦೨೦ ಮಾತೃಪಿತೃಗಳು ಶತ್ರು ...{Loading}...
ಮಾತೃಪಿತೃಗಳು ಶತ್ರು ಭಾವವ
ನಾಂತು ನಿಜಸಂತಾನದಲಿ ಸಂ
ಪ್ರೀತಿಯನು ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿ-ತಂದೆಯರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡದಿದ್ದರೆ, ಮಕ್ಕಳಿಗೆ ತಾಯಿ-ತಂದೆಯರೇ ಶತ್ರುಗಳಾಗುತ್ತಾರೆ. ವಿದ್ಯಾಹೀನರು ವಿದ್ವಾಂಸರ ಖ್ಯಾತ ಸಭೆಯಲ್ಲಿ ಹಂಸಗಳ ಮಧ್ಯದಲ್ಲಿರುವ ಬಕಪಕ್ಷಿಗಳಂತೆ ಕಾಣುತ್ತಾರೆ.
ಮೂಲ ...{Loading}...
ಮಾತೃಪಿತೃಗಳು ಶತ್ರು ಭಾವವ
ನಾಂತು ನಿಜಸಂತಾನದಲಿ ಸಂ
ಪ್ರೀತಿಯನು ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ ॥20॥
೦೨೧ ಸುರರ ಮೇಳದಲಾಡುವವರಿ ...{Loading}...
ಸುರರ ಮೇಳದಲಾಡುವವರಿ
ಬ್ಬರು ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸೆಂದನಾ ವಿದುರ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಂಡಿಸುವ ಸಾಮಥ್ರ್ಯವಿದ್ದರೂ ಕ್ಷಮಿಸತಕ್ಕವನು ದರಿದ್ರನಾಗಿದ್ದರೂ ದಾನಿ ಎನಿಸುವನು. ಅವರಿಬ್ಬರು ಸ್ವರ್ಗದಲ್ಲಿ ದೇವತೆಗಳೊಡನೆ ನಲಿಯುತ್ತಾರೆ. ಧನವಂತನು ಮಾಡುವ ದಾನ, ದುರ್ಬಲನ ಸೈರಣೆಯು ಯೋಗ್ಯವೆನಿಸದು, ಕೇಳು ಮಹಾರಾಜ ! ಎಂದನು ವಿದುರ.
ಮೂಲ ...{Loading}...
ಸುರರ ಮೇಳದಲಾಡುವವರಿ
ಬ್ಬರು ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸೆಂದನಾ ವಿದುರ ॥21॥
೦೨೨ ಧರಣಿ ನುಙ್ಗುವಳಿಬ್ಬರನು ...{Loading}...
ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರಸಿದ್ಧವಲೆ
ಅರಸು ಕುಲದಲಿ ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯ
ಲುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಜಯಿಸದ ದೊರೆಯನ್ನೂ, ದೇಶ ಸಂಚಾರ ಮಾಡದೇ ಒಂದೇ ಸ್ಥಳದಲ್ಲಿರುವ ವಿದ್ವಾಂಸನನ್ನೂ ಭೂದೇವಿ ನುಂಗುತ್ತಾಳೆ ! ಇದು ಶಾಸ್ತ್ರ ಸಿದ್ಧ ವಿಷಯ. ಕ್ಷತ್ರಿಯ ಕುಲದಲ್ಲಿ ಹುಟ್ಟಿಯೂ ಶತ್ರುಗಳಿದ್ದರೂ ಹಾವಿನಂತೆ ದೇಹಾಭಿಮಾನದಿಂದ ಒಳಗೆ ಅಡಗಿಕೊಳ್ಳುವುದು ಧರ್ಮವಲ್ಲ ಎಂದನು.
ಪದಾರ್ಥ (ಕ.ಗ.ಪ)
ಸಾಪತ್ನರು-ಶತ್ರುಗಳು, ವೈರಿಗಳು
ಮೂಲ ...{Loading}...
ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರಸಿದ್ಧವಲೆ
ಅರಸು ಕುಲದಲಿ ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯ
ಲುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ ॥22॥
೦೨೩ ನರ ಜನುಮವತ್ಯಧಿಕವದರೊಳು ...{Loading}...
ನರ ಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀ ಎರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲ ಜನ್ಮಗಳಿಗಿಂತ ನರಜನ್ಮವು ಶ್ರೇಷ್ಠವಾದುದು. ಅದರೊಳಗೆ ಗುರುಗಳು ಯಾರು, ಹಿರಿಯರು ಯಾರು ಎಂದೂ, ದಾನಕ್ಕೆ ಪಾತ್ರರು ಯಾರು, ಅಪಾತ್ರರು ಯಾರು ಎಂದು ವಿಚಾರಿಸದೆ, ಮೂರ್ಖತನದಿಂದ ಅಪಾತ್ರನಿಗೆ ದಾನ ಮಾಡಿ ಪಾತ್ರನನ್ನು ದೂರ ಮಾಡುವುದು ಅಧರ್ಮ. ಅದರಿಂದ ಸಂಪಾದಿಸಿದ ಸಂಪತ್ತು ನಾಶವಾಗುತ್ತದೆ.
ಮೂಲ ...{Loading}...
ನರ ಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀ ಎರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳೆಂದ ॥23॥
೦೨೪ ತನ್ದೆ ತಾಯಿಗಳಿಬ್ಬರಾತ್ಮಜ ...{Loading}...
ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಲು ತಜ್ಜನಪದದ ಧನವ
ಕುಂದಿಸದೆ ನೃಪ ಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ತಂದೆ ತಾಯಂದಿರು ಮಕ್ಕಳನ್ನು ಸಾಕಿ ಸಲಹಿದರೆ ಅವರು ಮಕ್ಕಳು-ಮೊಮ್ಮಕ್ಕಳಿಂದ ಸುಖ-ಸಂತೋಷಗಳನ್ನು ಕಾಣುವಂತೆ, ಜನತೆಯ ಧನವನ್ನು ಕುಗ್ಗಿಸದೆ ರಾಜನು ಮಂತ್ರಿಗಳನ್ನು ಪ್ರಜೆಗಳನ್ನು ಪ್ರೀತಿಯಿಂದ ರಕ್ಷಿಸಿದರೆ ಅವರಿಂದ ಸುಖ-ಸಂಪತ್ತುಗಳು ಹೆಚ್ಚುತ್ತವೆ.
ಪದಾರ್ಥ (ಕ.ಗ.ಪ)
ಕುಂದಿಸದೆ-ಕುಗ್ಗಿಸದೆ
ಮೂಲ ...{Loading}...
ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಲು ತಜ್ಜನಪದದ ಧನವ
ಕುಂದಿಸದೆ ನೃಪ ಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ ॥24॥
೦೨೫ ಕಾಮಿನಿಯರುಗಳಾರು ಕೆಲಬರು ...{Loading}...
ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಕರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಡುವರಲ್ಲದೆ
ಸೀಮೆವಿಡಿದಿಹುದಾಗದೆಂಬುದ
ನಾ ಮದಾಂಧರು ಬಲ್ಲರೇ ಧೃತರಾಷ್ಟ್ರ ಕೇಳ್ ಎಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಮಾಂಧರಾದ ಕೆಲವು ಕಾಮಿನಿಯರು ತಮ್ಮ ಇಷ್ಟಾರ್ಥವನ್ನೀಡೇರಿಸಿಕೊಳ್ಳುವುದಕ್ಕಾಗಿ ಪ್ರೀತಿಸುವರೋ ಹಾಗೆಯೇ ಧೂರ್ತರು ತಮ್ಮ ಇಷ್ಟವನ್ನು ನೆರವೇರಿಸಿಕೊಳ್ಳುವುದಕ್ಕಾಗಿ ಮೂರ್ಖರನ್ನು ಗೌರವಿಸುತ್ತಾರೆ. ತಾವು ಅರ್ಹರೇ ಎಂಬುದನ್ನು ತಮೋಗುಣದ ಮದಾಂಧರು ಯೋಚಿಸುವುದಿಲ್ಲ ಎಂದನು ವಿದುರ.
ಮೂಲ ...{Loading}...
ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಕರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಡುವರಲ್ಲದೆ
ಸೀಮೆವಿಡಿದಿಹುದಾಗದೆಂಬುದ
ನಾ ಮದಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ ॥25॥
೦೨೬ ತನ್ನ ಸುಖದುಃಖಙ್ಗಳಿಗೆ ...{Loading}...
ತನ್ನ ಸುಖದುಃಖಂಗಳಿಗೆ ನಿ
ಬಿರ್sನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡು ಜಾರುವ ಗಾವಿಲರ ಕೂಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಕೇಳು, ತನ್ನ ಸುಖ ದುಃಖಗಳಿಗಾಗುವ ಬಂಧುಗಳನ್ನು ತೊರೆದು, ಕಪಟತನದಿಂದ ನಯವಾದ ಮಾತುಗಳನ್ನಾಡಿ ಉಂಡು ಹೋಗುವ ನೀಚರನ್ನೂ ಕೂಡಿ, ಅವರನ್ನು ಪುರಸ್ಕರಿಸುವುದು ತನ್ನನ್ನು ತಾನೇ ಕೊಂದುಕೊಂಡಂತೆ !
ಪದಾರ್ಥ (ಕ.ಗ.ಪ)
ಗಾವಿಲರು-ಮೂರ್ಖರು
ಮೂಲ ...{Loading}...
ತನ್ನ ಸುಖದುಃಖಂಗಳಿಗೆ ನಿ
ಬಿರ್sನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡು ಜಾರುವ ಗಾವಿಲರ ಕೂಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ ॥26॥
೦೨೭ ಪಿತನಿರಲು ದಾತಾರನಿರೆ ...{Loading}...
ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳ್ ಎಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ಇರುವಾಗ ಮಗನೂ, ಒಡೆಯನಿರುವಾಗ ಸೇವಕನೂ, ಗಂಡನಿರುವಾಗ ಹೆಂಡತಿಯೂ ಈ ಮೂವರೂ ಯಾವ ಕಾಲದಲ್ಲಿಯೂ ಸ್ವಾತಂತ್ರ್ಯದಿಂದ ನಡೆಯಲಾಗದು. ಮಹಾರಾಜ ! ಈ ಜಗತ್ತಿನಲ್ಲಿ ಉತ್ತಮ, ಮಧ್ಯಮ, ಕನಿಷ್ಠರೆಂಬ ಮೂರು ವರ್ಗದ ಜನರು ಇರುತ್ತಾರೆ. ಅವರವರ ಲಕ್ಷಣ ಉದ್ದೇಶ ಕಾರ್ಯ ವ್ಯಾಪ್ತಿಯನ್ನು ಸರಿಯಾಗಿ ತಿಳಿದಿರಬೇಕು.
ಪದಾರ್ಥ (ಕ.ಗ.ಪ)
ದಾತಾರ-ಒಡೆಯ,
ಕ್ಷಿತಿ-ಭೂಮಿ
ಮೂಲ ...{Loading}...
ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ ॥27॥
೦೨೮ ಬೆಳಸು ಘನ ...{Loading}...
ಬೆಳಸು ಘನ ತೃಣವಧಿಕ ಜಲ ನಿ
ರ್ಮಳವೆನಿಪ ಕಾಲದಲಿ ಪರ ಮಂ
ಡಲಕೆ ನಡೆವುದು ಘೃಷ್ಟಪುಷ್ಟವಿಹಾರನೆಂದೆನಿಸಿ
ಬಲುಹಹುದು ನಿಜಬಲಕೆ ಬಲವಾ
ನೆಲನ ಮೆಟ್ಟಲು ವೈರಿ ಸೇನಾ
ವಳಿಗೆ ಹೀನತೆ ದೊರಕುವುದು ಧೃತರಾಷ್ಟ್ರ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧಾನ್ಯ, ಹುಲ್ಲು, ನೀರು ಸಮೃದ್ಧಿಯಾಗಿ ದೊರಕುವಾಗ ಪರರಾಷ್ಟ್ರಗಳ ಮೇಲೆ ದಂಡೆತ್ತಿ ಹೋಗಬೇಕು. ಆಗ ತನ್ನ ಸೇನೆಗೆ ಯಾವ ಕೊರತೆಯೂ ಆಗುವುದಿಲ್ಲ. ನಮ್ಮ ಬಲ ಅಧಿಕವಾಗಿ ಶತ್ರುವಿನ ಭೂಮಿಯನ್ನು ತುಳಿಯಲು ಶತ್ರುಗಳ ಸೈನ್ಯಕ್ಕೆ ತೊಂದರೆಯಾಗುತ್ತದೆ.
ಪದಾರ್ಥ (ಕ.ಗ.ಪ)
ಪರಮಂಡಲ-ಹೊರದೇಶ
ಮೂಲ ...{Loading}...
ಬೆಳಸು ಘನ ತೃಣವಧಿಕ ಜಲ ನಿ
ರ್ಮಳವೆನಿಪ ಕಾಲದಲಿ ಪರ ಮಂ
ಡಲಕೆ ನಡೆವುದು ಘೃಷ್ಟಪುಷ್ಟವಿಹಾರನೆಂದೆನಿಸಿ
ಬಲುಹಹುದು ನಿಜಬಲಕೆ ಬಲವಾ
ನೆಲನ ಮೆಟ್ಟಲು ವೈರಿ ಸೇನಾ
ವಳಿಗೆ ಹೀನತೆ ದೊರಕುವುದು ಧೃತರಾಷ್ಟ್ರ ಕೇಳೆಂದ ॥28॥
೦೨೯ ಮಾಲೆಗಾರ ಸಿಳೀಮುಖನ ...{Loading}...
ಮಾಲೆಗಾರ ಸಿಳೀಮುಖನ ಪಶು
ಪಾಲಕನವೊಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೂವಾಡಿಗನು ಗಿಡಮರಗಳಿಂದ ಹೂವುಗಳನ್ನು ಬಿಡಿಸುವಂತೆ, ದುಂಬಿಯು ಹೂವುಗಳಿಂದ ಮಧುವನ್ನು ಹೀರುವಂತೆ, ಗೋಪಾಲಕರು ಪಶುಗಳನ್ನು ಪ್ರೀತಿಯಿಂದ ಸಾಕುವಂತೆ ದೊರೆಯು ಪ್ರಜೆಗಳನ್ನು ಪೀಡಿಸದೆ ಮೃದುವಾಗಿ ಕಂದಾಯವನ್ನು ವಸೂಲಿ ಮಾಡಬೇಕು, ಇದ್ದಿಲು ಮಾಡುವವನು ಗಿಡ ಮರಗಳನ್ನು ನಾಶಮಾಡುವಂತೆ, ಕಣಜವು ಹೂಗಳನ್ನು ನಾಶ ಮಾಡುವಂತೆ ಹುಲಿಯು ದನಗಳನ್ನು ಕೋಟಳೆಗೆ ಈಡು ಮಾಡಿದಂತೆ ಅರಸನು ಪ್ರಜೆಗಳನ್ನು ಹಿಂಸಿಸಿದರೆ, ಪ್ರಜೆಗಳು ಕಂಗೆಟ್ಟು ಅರಸನ ಬಾಳಿಗೆ ತೊಂದರೆಯಾಗುತ್ತದೆ , ಅರಸನೇ ತಿಳಿ ಎಂದು ವಿದುರನು ಹೇಳಿದನು.
ಪದಾರ್ಥ (ಕ.ಗ.ಪ)
ಸೀಳಿಮುಖ-ತುಂಬಿ, ವಿತಾಳಿಸು-ಮೀರು ಚಿಂತಿಸು, ಅಂಗಾರಕಾರಕ-ಇದ್ದಿಲು ಮಾರುವವ , ಕಡದುರು - ಕಣಜ
ಮೂಲ ...{Loading}...
ಮಾಲೆಗಾರ ಸಿಳೀಮುಖನ ಪಶು
ಪಾಲಕನವೊಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ ॥29॥
೦೩೦ ಎಲ್ಲಿಹುದು ಋಣಭಯವು ...{Loading}...
ಎಲ್ಲಿಹುದು ಋಣಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಣಭಯವಿದ್ದಲ್ಲಿ ದೇವಾಂಶವಿದೆ. ಸನ್ಮಾರ್ಗವಿದ್ದಲ್ಲಿ ಬ್ರಾಹ್ಮಣ್ಯವಿದೆ. ಪರಸ್ತ್ರೀಯರ ಕುರಿತಾಗಿ ಭಯವಿದ್ದರೆ ವಿವೇಕವಿದೆ. ಇವುಗಳನ್ನು ಅರಿಯದೆ ನಡೆದರೆ ಇಹ ಪರಗಳೆರಡೂ ಇರುವುದಿಲ್ಲ ಕೇಳು ಎಂದು ವಿದುರನು ಹೇಳಿದನು.
ಪದಾರ್ಥ (ಕ.ಗ.ಪ)
ಬ್ರಾಹ್ಮಣ್ಯ-ಬ್ರಾಹ್ಮಣನ ಆಚಾರ
ವಿಜ್ಞಾನ - ವಿಶೇಷವಾದ ಜ್ಞಾನ , ವಿವೇಕ
ಮೂಲ ...{Loading}...
ಎಲ್ಲಿಹುದು ಋಣಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ ॥30॥
೦೩೧ ರಕ್ಷಿಸಿದ ಧನದಿಮ್ ...{Loading}...
ರಕ್ಷಿಸಿದ ಧನದಿಂ ಪುರಂಧಿ್ರಯ
ರಕ್ಷಿಸುವುದು ಪುರಂಧಿ್ರಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದಲಿ
ಲಕ್ಷ ಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮ ರಕ್ಷÉಯ
ನೀಕ್ಷಿಸುವುದನುನಯವಲೈ ಭೂಪಾಲ ಕೇಳ್ ಎಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಗಳಿಸಿ ಉಳಿಸಿದ ಹಣದಿಂದ ಹೆಂಡತಿಯನ್ನು ಸಲಹಬೇಕು. ಹೆಂಡತಿಯಿಂದ ತನ್ನ ಹಿತವನ್ನು ಸಾಧಿಸಬೇಕು. ಯಾವುದು ಹಿತ ಯಾವುದು ಅಹಿತವೆಂದು ಭೇದವನ್ನು ತಿಳಿದು ಆತ್ಮೋನ್ನತಿಯನ್ನು ಸಾಧಿಸುತ್ತ ಒಂದು ಗುರಿಯತ್ತ ನಡೆವುದೇ ಸರಿಯಾದ ರೀತಿ.
ಪದಾರ್ಥ (ಕ.ಗ.ಪ)
ಸ್ತ್ರೀ-ಮಡದಿ, ಪುರಂಧ್ರಿ-ಹೆಂಡತಿ
ಮೂಲ ...{Loading}...
ರಕ್ಷಿಸಿದ ಧನದಿಂ ಪುರಂಧಿ್ರಯ
ರಕ್ಷಿಸುವುದು ಪುರಂಧಿ್ರಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದಲಿ
ಲಕ್ಷ ಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮ ರಕ್ಷÉಯ
ನೀಕ್ಷಿಸುವುದನುನಯವಲೈ ಭೂಪಾಲ ಕೇಳೆಂದ ॥31॥
೦೩೨ ತಿಳಿದು ನಾಲ್ವರೊಳೊರೆದ ...{Loading}...
ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೀರ್ಮಾನವೊಂದನ್ನು ಕೈಗೊಳ್ಳುವಾಗ ನಾಲ್ವರಲ್ಲಿ ಪರ್ಯಾಲೋಚಿಸಿ, ಅನಂತರ ಅವರಲ್ಲಿ ಇಬ್ಬರನ್ನು ಬಿಟ್ಟು ಇನ್ನಿಬ್ಬರೊಡನೆ ವಿಚಾರಿಸಿ, ಅನಂತರ ಅವರಲ್ಲೊಬ್ಬನನ್ನು ಕಳೆದು, ಒಬ್ಬನೊಡನೆಯೇ ಆಲೋಚಿಸಿ ಕೊನೆಗೆ ತಾನೊಬ್ಬನೇ ಚಿಂತಿಸಿ ತೀರ್ಮಾನಿಸುವ ಕಾರ್ಯದಲ್ಲಿ ದೋಷ ಉಳಿಯುವುದುಂಟೇ ಗಮನಿಸು ಮಹಾರಾಜ ಎಂದನು ವಿದುರ.
ಪದಾರ್ಥ (ಕ.ಗ.ಪ)
ಹಳಿವು-ದೋಷ
ಮೂಲ ...{Loading}...
ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ ॥32॥
೦೩೩ ನಿವಡಿಸಿದ ವಿದ್ಯಕ್ಕೆ ...{Loading}...
ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮ ಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮ ಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಳಿಸಿದ ವಿದ್ಯೆಗೆ ಸಮನಾದ ಬಂಧು, ರೋಗಗಳಿಗೆ ಸಮನಾದ ಶತ್ರು, ಸಂತಾನಕ್ಕೆ ಸಮನಾದ ಸಂತೋಷ ಮತ್ತೊಂದಿಲ್ಲ. ಸೂರ್ಯನಿಗಿಂತ ಅಧಿಕ ತೇಜಸ್ಸು, ಇಂದ್ರನ ಭೋಗಕ್ಕಿಂತ ಅಧಿಕ ಭೋಗ ಪರಮೇಶ್ವರನಿಗಿಂತ ಅಧಿಕ ಬಲಶಾಲಿಯನ್ನು ನಾನು ಕಾಣೆನು.
ಪದಾರ್ಥ (ಕ.ಗ.ಪ)
ನಿವಡಿಸು-ಗಳಿಸು,
ವಾಸವ-ಇಂದ್ರ
ಮೂಲ ...{Loading}...
ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮ ಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮ ಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ ॥33॥
೦೩೪ ಹಿರಿದು ಮಾನೋನ್ನತಿಕೆಯನು ...{Loading}...
ಹಿರಿದು ಮಾನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮಧರ್ಮವನಾವ ಬಯಸುವನವನ ಭವನದಲಿ
ನಿರುತ ವೃದ್ಧಜ್ಞಾನಿ ವಂಶೋ
ತ್ತರ ದರಿದ್ರಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಚ್ಚಿನ ಮಾನವನ್ನೂ, ಏಳಿಗೆಯನ್ನೂ ಮನಸ್ಸಿಗೆ ಹಿತವಾದ ಧನವನ್ನು, ಗೃಹಸ್ಥರ ಪರಮ ಧರ್ಮವನ್ನು ಬಯಸತಕ್ಕವನ ಮನೆಯಲ್ಲಿ ಸದಾ ವಯೋವೃದ್ಧ ಜ್ಞಾನಿ, ಬೇರೆ ವಂಶದ ಉತ್ತಮ ಕುಲದವನು, ಪ್ರಿಯನಾದ ಒಬ್ಬ ಬಡವ ಮತ್ತು ಮಕ್ಕಳಿಲ್ಲದ ಸಹೋದರಿ, ಈ ನಾಲ್ವರೂ ಇರಬೇಕೆಂದನು.
ಪದಾರ್ಥ (ಕ.ಗ.ಪ)
ಗಾರು ಹಸ್ತ್ರ-ಗೃಹಸ್ಥ, ಅಪತ್ಯಾಂತರ ಭಗಿನಿ-ಮಕ್ಕಳಿಲ್ಲದ ಸೋದರಿ
ಮೂಲ ...{Loading}...
ಹಿರಿದು ಮಾನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮಧರ್ಮವನಾವ ಬಯಸುವನವನ ಭವನದಲಿ
ನಿರುತ ವೃದ್ಧಜ್ಞಾನಿ ವಂಶೋ
ತ್ತರ ದರಿದ್ರಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ ॥34॥
೦೩೫ ಧರಣಿಪತಿ ಚಿತ್ತವಿಸು ...{Loading}...
ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣ ಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ದೇವ ಗುರುವಾದ ಬೃಹಸ್ಪತಿಯು ದೇವೇಂದ್ರನಿಗೆ, ದೇವರಲ್ಲಿ ನಂಬಿಕೆಯಿಡಬೇಕು, ವಿದ್ಯಾವಂತರೊಡನೆ ವಿನಯದಿಂದಿರಬೇಕು. ಹಿರಿಯರಿಗೆ ಗೌರವವನ್ನು ತೋರಿಸಬೇಕು. ಪಾಪಕಾರ್ಯದಲ್ಲಿ ನಿರತನಾಗಬಾರದೆಂಬ ನಾಲ್ಕು ಅಂಶಗಳನ್ನು ಉಪದೇಶಿಸಿದನು.
ಮೂಲ ...{Loading}...
ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣ ಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ ॥35॥
೦೩೬ ಆವುದೀ ಲೋಕಕ್ಕೆ ...{Loading}...
ಆವುದೀ ಲೋಕಕ್ಕೆ ಹಿತವದ
ನೋವಿ ನಡೆವ ಜನಕ್ಕೆ ನಿಂದೆಯ
ದಾವುದದನಾಚರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣದ ತತ್ವವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವುದರಿಂದ ಲೋಕಕ್ಕೆ ಹಿತ, ಯಾವುದರಿಂದ ಜನಕ್ಕೆ ಕೆಡಕು ಎಂಬುದನ್ನು ವಿಚಾರಿಸಿ, ಅದಕ್ಕನುಗುಣವಾಗಿ ನಡೆಯುತ್ತ, ನಾಸ್ತಿಕತೆಯ ಸ್ಪರ್ಶವಿಲ್ಲದೇ ತತ್ವಜ್ಞಾನಿಯಾಗಿ ವಿವೇಕಿಯಾಗಿರುವವನು ಜಗತ್ತಿನಲ್ಲಿ ಉತ್ತಮನೆನಿಸುತ್ತಾನೆ.
ಮೂಲ ...{Loading}...
ಆವುದೀ ಲೋಕಕ್ಕೆ ಹಿತವದ
ನೋವಿ ನಡೆವ ಜನಕ್ಕೆ ನಿಂದೆಯ
ದಾವುದದನಾಚರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣದ ತತ್ವವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ ॥36॥
೦೩೭ ಪಿತನು ಗುರು ...{Loading}...
ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನಂ ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಪೂಜಿಸಿದನಾವವ
ಪಿತನ ಕೀರ್ತಿಯ ಧರ್ಮವನು ಪಡೆವವನೆ ಸುತನೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದನ್ನು ಬಯಸತಕ್ಕವರು, ತಂದೆ, ತಾಯಿ, ಗುರು, ಅಗ್ನಿ ಮತ್ತು ತನ್ನ ಆತ್ಮ ಈ ಪಂಚಾಗ್ನಿಗಳ ಪರಿಚರ್ಯೆಯನ್ನು ಪ್ರತಿದಿನವೂ ಮಾಡಬೇಕು. ಪಿತೃಗಳನ್ನು, ದೇವರನ್ನು, ಹಿರಿಯನ್ನು, ಅತಿಥಿಗಳನ್ನು ಪೂಜಿಸುತ್ತ ಯಾರು ತನ್ನ ತಂದೆಯ ಕೀರ್ತಿಯುತವಾದ ಧರ್ಮಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾನೋ ಅವನೇ ಮಗನೆನಿಸಲು ಯೋಗ್ಯನು.
ಪದಾರ್ಥ (ಕ.ಗ.ಪ)
ಶಿಖಿ-ಅಗ್ನಿ, ಪರಿಚರಿಯ-ಪರಿಚರ್ಯೆ/ಪೂಜೆ
ಮೂಲ ...{Loading}...
ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನಂ ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಪೂಜಿಸಿದನಾವವ
ಪಿತನ ಕೀರ್ತಿಯ ಧರ್ಮವನು ಪಡೆವವನೆ ಸುತನೆಂದ ॥37॥
೦೩೮ ಸಿರಿಯನುಳ್ಳವನವನೆ ಕುಲಜನು ...{Loading}...
ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳ್ ಎಂದ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣವನ್ನುಳ್ಳವನೇ ಉತ್ತಮ ಕುಲದವನು, ಹಣವಂತನೇ ವಿದ್ಯಾವಂತ, ಮಹಾತ್ಮ, ಅವನೇ ಗುಣವಂತ, ಶೀಲವಂತ ಎಂದು ಜನರು ನಂಬುತ್ತಾರೆ. ಹಣವಿಲ್ಲದವನು ಸಾಕ್ಷಾತ್ ಶಿವನೆ ಆದರೂ ಲೋಕವು ಅವನನ್ನು ಗೌರವಿಸದು.
ಪದಾರ್ಥ (ಕ.ಗ.ಪ)
ವಿದಗ್ಧ -ವಿದ್ಯಾವಂತ,
ಸರಕು ಮಾಡು - ಪರಿಗಣಿಸು, ಲೆಕ್ಕಿಸು
ಮೂಲ ...{Loading}...
ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ ॥38॥
೦೩೯ ಸಿರಿ ನೆಲೆಯೆ ...{Loading}...
ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಐಶ್ವರ್ಯವಾಗಲಿ, ಯೌವ್ವನವಾಗಲಿ ಸ್ಥಿರವಲ್ಲ. ಮೈಯ ಸೌಂದರ್ಯ, ದೇಹಗಳು ಮುಪ್ಪು ಬಂದಾಗ ನಶಿಸುತ್ತವೆ. ಜಯದ ಸಿರಿಯೂ ನಿಲ್ಲುವುದಿಲ್ಲ. ಆದ್ದರಿಂದ ನೀನು ಅರಸನಾಗಿರುವವರೆಗೂ ನೀತಿಯಿಂದ ರಾಜ್ಯವನ್ನಾಳು. ಬಂಧುಗಳನ್ನು ಉದ್ಧರಿಸು. ಧರ್ಮವನ್ನು ಸಾಧಿಸು. ಇದು ಎಲ್ಲ ರಾಜರಿಗೂ ನೀತಿ ಮಾರ್ಗವೇ ಆಗಿದೆ.
ಪದಾರ್ಥ (ಕ.ಗ.ಪ)
ನೆಲೆ-ಸ್ಥಿರ, ಜವ್ವನ-ಯವ್ವನ
ಮೂಲ ...{Loading}...
ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ ॥39॥
೦೪೦ ವರುಷವೈದರೊಳರಸೆನಿಸಿ ದಶ ...{Loading}...
ವರುಷವೈದರೊಳರಸೆನಿಸಿ ದಶ
ವರುಷ ದಾಸತ್ವವನು ಭಾವಿಸಿ
ವರುಷ ಹದಿನಾರರಲಿ ಪುತ್ರನ ಮಿತ್ರನೆಂದೆನಿಸಿ
ಪರಿವಿಡಿಗಳಲಿ ನಡೆಸಿ ಮದ ಮ
ತ್ಸರವ ಮಾಣಿಸಿ ನೆರೆದ ಮಕ್ಕಳ
ನರಮೃಗವ ಮಾಡುವರೆ ಭೂಮೀಪಾಲ ಕೇಳ್ ಎಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕ್ಕಳನ್ನು ಮೊದಲ ಐದು ವರ್ಷ ರಾಜನಂತೆ ಪ್ರೀತಿಸಬೇಕು. ಆಮೇಲೆ ಹತ್ತು ವರ್ಷ ಸೇವಕನಂತೆ ಕಂಡು ಬುದ್ಧಿ ಹೇಳಿ ತಿದ್ದಬೇಕು. ಹದಿನಾರು ವರ್ಷದ ನಂತರ ಸ್ನೇಹಿತರಂತೆ ಕಾಣಬೇಕು. ಮದ, ಮತ್ಸರ ಮೊದಲಾದ ದೋಷಗಳು ಬೆಳೆಯದಂತೆ ನೋಡಿಕೊಳ್ಳಬೇಕು, ಹಾಗಲ್ಲದೇ ಬೆಳೆದ ಮಕ್ಕಳನ್ನು ನರಪಶುಗಳಂತೆ ಬೆಳೆಸುತ್ತಾರೆಯೆ ?
ಪದಾರ್ಥ (ಕ.ಗ.ಪ)
ಪರಿವಿಡಿ-ಒಪ್ಪು, ನೆರವು-ಕೂಡಿದ/ಬೆಳೆದ
ಮೂಲ ...{Loading}...
ವರುಷವೈದರೊಳರಸೆನಿಸಿ ದಶ
ವರುಷ ದಾಸತ್ವವನು ಭಾವಿಸಿ
ವರುಷ ಹದಿನಾರರಲಿ ಪುತ್ರನ ಮಿತ್ರನೆಂದೆನಿಸಿ
ಪರಿವಿಡಿಗಳಲಿ ನಡೆಸಿ ಮದ ಮ
ತ್ಸರವ ಮಾಣಿಸಿ ನೆರೆದ ಮಕ್ಕಳ
ನರಮೃಗವ ಮಾಡುವರೆ ಭೂಮೀಪಾಲ ಕೇಳೆಂದ ॥40॥
೦೪೧ ಧನಮದದಿ ಕುಲಮದದಿ ...{Loading}...
ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತ ಹೂಂಕರಿಸಿ
ಮುನಿಸಿನಲಿ ಸಾತ್ವಿಕರೊಳೊಬ್ಬರ
ನನುಗಡಿಸಿ ಗರ್ಜಿಸಲು ನರಕದಿ
ಮುಣುಗಿದಲ್ಲದೆ ಬೇರೆ ಗತಿಯಿಲ್ಲೆಂದನಾ ವಿದುರ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧನಮದ, ಕುಲಮದ, ವಿದ್ಯೆಯಮದ, ಯೌವ್ವನದ ಮದದಿಂದ ಬ್ರಾಹ್ಮಣ, ಗುರುಗಳನ್ನು ನಿಂದಿಸಿ, ನೀನು, ತಾನು ಎಂದು ಕೋಪದಿಂದ ಸಾತ್ವಿಕನೊಬ್ಬನಿಗೆ ತೊಂದರೆಯುಂಟು ಮಾಡಿ ಗರ್ಜಿಸುತ್ತ ನಡೆದರೆ ಅಂತಹವರಿಗೆ ನರಕದಲ್ಲಿ ಮುಳುಗುವುದೇ ಗತಿ ಬೇರೆ ಗತಿ ಇಲ್ಲ ಎಂದನು.
ಪದಾರ್ಥ (ಕ.ಗ.ಪ)
ವಿಭಾಡಿಸು-ನಿಂದಿಸು
ಮೂಲ ...{Loading}...
ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತ ಹೂಂಕರಿಸಿ
ಮುನಿಸಿನಲಿ ಸಾತ್ವಿಕರೊಳೊಬ್ಬರ
ನನುಗಡಿಸಿ ಗರ್ಜಿಸಲು ನರಕದಿ
ಮುಣುಗಿದಲ್ಲದೆ ಬೇರೆ ಗತಿಯಿಲ್ಲೆಂದನಾ ವಿದುರ ॥41॥
೦೪೨ ಸಲಹಿದೊಡೆಯನ ದಿವ್ಯ ...{Loading}...
ಸಲಹಿದೊಡೆಯನ ದಿವ್ಯ ಮಂತ್ರವ
ಕಲಿಸಿದಾಚಾರ್ಯನನು ಅನುವರ
ದೊಳಗೆ ತಲೆಗಾಯಿದನ ದುಬಿರ್sಕ್ಷದಲಿ ಸಲಹಿದನ
ಜಲದೊಳಾಳ್ದನನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ನಿಳಿವನೈ ಕುಲಕೋಟಿ ಸಹಿತ ಮಹಾಂಧ ನರಕದಲಿ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನ್ನ ಬಟ್ಟೆಗಳನ್ನಿತ್ತು ಕಾಪಾಡಿದವನನ್ನು, ವಿದ್ಯೆಯನ್ನು ಕಲಿಸಿದ ಗುರುವನ್ನೂ, ಯುದ್ಧ ಕಾಲದಲ್ಲಿ ಪ್ರಾಣ ಉಳಿಸಿದವನನ್ನೂ, ಬರಗಾಲದಲ್ಲಿ ಸಲಹಿದವನನ್ನೂ, ನೀರಿನಲ್ಲಿ ಬಿದ್ದಾಗ ಎತ್ತಿದವನನ್ನೂ, ಬೆಂಕಿಯಲ್ಲಿ ಸಿಕ್ಕಾಗ ಬದುಕಿಸಿದವನನ್ನೂ - ಈ ಆರು ಮಂದಿಯನ್ನು ಮರೆತವನು ಕುಲಕೋಟಿ ಸಹಿತ ಮಹಾನರಕದಲ್ಲಿ ಇಳಿಯುತ್ತಾನೆ.
ಪದಾರ್ಥ (ಕ.ಗ.ಪ)
ಆಚಾರ್ಯ-ಗುರು, ಅನುವರ-ಯುದ್ಧ, ದುರ್ಭಿಕ್ಷ-ಬರ
ಮೂಲ ...{Loading}...
ಸಲಹಿದೊಡೆಯನ ದಿವ್ಯ ಮಂತ್ರವ
ಕಲಿಸಿದಾಚಾರ್ಯನನು ಅನುವರ
ದೊಳಗೆ ತಲೆಗಾಯಿದನ ದುಬಿರ್sಕ್ಷದಲಿ ಸಲಹಿದನ
ಜಲದೊಳಾಳ್ದನನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ನಿಳಿವನೈ ಕುಲಕೋಟಿ ಸಹಿತ ಮಹಾಂಧ ನರಕದಲಿ ॥42॥
೦೪೩ ಒಲಿದವಳ ಬಿಸುಟೊಲ್ಲದವಳಿಗೆ ...{Loading}...
ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬವನ
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಲಿದವಳ ಬಿಟ್ಟು ಒಲ್ಲದವಳಿಗೆ ಹಂಬಲಿಸುವವನು, ಕೆಟ್ಟವರಲ್ಲಿ ಸ್ನೇಹ ಬೆಳೆಸತಕ್ಕವನು, ತಿಳಿಯದಿದ್ದರೂ ತಿಳಿದಿದೆ ಎಂಬುವವನು, ಪ್ರೀತಿಯಿಂದ ಕೇಳದಿದ್ದರೂ ತಾನೇ ಹೇಳುವವನು, ತನ್ನ ಕೈಲಾಗದ ಮಹಾಕಾರ್ಯಗಳಿಗೆ ಕೈಹಾಕಿ ಮರುಗುವವನು ಇವರೆಲ್ಲರು ಮೂಢರೇ ಸರಿ.
ಮೂಲ ...{Loading}...
ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬವನ
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ॥43॥
೦೪೪ ಹರುಷ ದರ್ಪ ...{Loading}...
ಹರುಷ ದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೆ ೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನೊಂದು ಕಾರ್ಯವನ್ನಾರಂಭಿಸಿದಾಗ ಸಂತೋಷ, ದರ್ಪ, ಕೋಪ, ನಾಚಿಕೆ, ಮಾನ, ಅಪಮಾನಗಳ ಪ್ರಸಂಗಗಳೇನೆ ಬಂದರೂ ಭಯ , ಶೀತೋತ್ಕರಗಳು ಒದಗಿದರೂ ಅದಾವುದನ್ನೂ ಲಕ್ಷಿಸದೇ, ಹಿಡಿದ ಕಾರ್ಯವನ್ನು ಬಿಡದೆ ಸಾಧಿಸುವವನೇ ಪಂಡಿತನು.
ಪದಾರ್ಥ (ಕ.ಗ.ಪ)
ವಿಮಾನ-ಅಪಮಾನ,
ಒಡ್ಡೈಸು -ಒದಗಿಬರು
ಮೂಲ ...{Loading}...
ಹರುಷ ದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು ॥44॥
೦೪೫ ಕರೆಕರೆದು ಮೃಷ್ಟಾನ್ನವನು ...{Loading}...
ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿ ಹೋತ್ರಾ
ಚರಿತನಹ ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳಭಿವಂದಿಸುವರೈ ಮೂರು ಮೂರ್ತಿಗಳು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಗ್ಯರಾದ ಜ್ಞಾನಿಗಳನ್ನು, ಬ್ರಾಹ್ಮಣರನ್ನು ಕರೆದು ಭೋಜನವನ್ನು ನೀಡುವವನು, ಸದಾ ಅಗ್ನಿ ಹೋತ್ರವನ್ನು ಮಾಡುವವನು, ವೇದಾಂತವನ್ನು ಬಲ್ಲವನು, ಪತಿವ್ರತೆಯಾದ ಸ್ತ್ರೀ, ಒಂದು ತಿಂಗಳವರೆಗೆ ಶ್ರೇಷ್ಠವಾದ ಉಪವಾಸ ಮಾಡುವವರು, ಒಂದು ಸಾವಿರ ತಿಂಗಳು - ಅಂದರೆ ಸುಮಾರು ಎಂಬತ್ತು ಮೂರು ವರ್ಷಗಳನ್ನು ಮೀರಿದ ವೃದ್ಧರು ಪೂಜಾರ್ಹರು. ತ್ರಿಮೂರ್ತಿಗಳು ಸಹ ಈ ಮಹಾತ್ಮರನ್ನು ಅಭಿವಂದಿಸುತ್ತಾರೆ.
ಪದಾರ್ಥ (ಕ.ಗ.ಪ)
ಮೃಷ್ಟಾನ್ನ-ಸವಿಯನ್ನ, ವೇದಿ-ತಿಳಿದವ, ಉರುತರ-ಉಗ್ರ
ಟಿಪ್ಪನೀ (ಕ.ಗ.ಪ)
ಸಾವಿರ ಮಾಸಗಳನ್ನು ಮೀರಿದವರು - ಸಹಸ್ರ ಚಂದ್ರ ದರ್ಶನ ಮಾಡಿದವರು
ಮೂಲ ...{Loading}...
ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿ ಹೋತ್ರಾ
ಚರಿತನಹ ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳಭಿವಂದಿಸುವರೈ ಮೂರು ಮೂರ್ತಿಗಳು ॥45॥
೦೪೬ ಬಿಸುಟು ಕಳೆವುದು ...{Loading}...
ಬಿಸುಟು ಕಳೆವುದು ನೀತಿ ಶಾಸ್ತ್ರವ
ನುಸುರದಾಚಾರಿಯನ ವೇದ
ಪ್ರಸರವಿಲ್ಲದ ಋಷಿಜನವ ರಕ್ಷಿಸದ ಭೂಭುಜನ
ಒಸೆಯದಬಲೆಯನೂರೊಳಾಡುವ
ಪಶುವ ಕಾಯ್ದನನಡವಿಗುರಿಯಹ
ನುಸಿಯನಾ ಪಿತನಿಂತರುವರನು ರಾಯ ಕೇಳ್ ಎಂದ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀತಿಯನ್ನು ಬೋಧಿಸದ ಗುರು, ವೇದಾಭ್ಯಾಸವನ್ನು ಮಾಡದ ಬ್ರಾಹ್ಮಣ ಪ್ರಜೆಗಳನ್ನು ಪಾಲಿಸದ ರಾಜ, ಪ್ರೀತಿ ತೋರದ ಹೆಂಡತಿ, ಋಷಿ ಜನರನ್ನು ರಕ್ಷಿಸದಿರುವ ರಾಜ, ಊರಿನಲ್ಲಿಯೇ ಅಲೆದಾಡುವ ದನಕಾಯುವವನು. ಕಾಡಿನಲ್ಲಿಯೇ ತಿರುಗಾಡುವ ಕ್ಷೌರಿಕ - ಈ ಆರು ಜನರನ್ನು ದೂರವಿಡಬೇಕು.
ಪದಾರ್ಥ (ಕ.ಗ.ಪ)
ಪ್ರಸರ-ಗುಂಪು, ಭೂಭುಜ-ಅರಸು, ಒಸೆ-ಪ್ರೀತಿಸು, ನಾಪಿತ-ಕ್ಷೌರಿಕ
ಮೂಲ ...{Loading}...
ಬಿಸುಟು ಕಳೆವುದು ನೀತಿ ಶಾಸ್ತ್ರವ
ನುಸುರದಾಚಾರಿಯನ ವೇದ
ಪ್ರಸರವಿಲ್ಲದ ಋಷಿಜನವ ರಕ್ಷಿಸದ ಭೂಭುಜನ
ಒಸೆಯದಬಲೆಯನೂರೊಳಾಡುವ
ಪಶುವ ಕಾಯ್ದನನಡವಿಗುರಿಯಹ
ನುಸಿಯನಾ ಪಿತನಿಂತರುವರನು ರಾಯ ಕೇಳೆಂದ ॥46॥
೦೪೭ ವ್ಯಸನವೇಳರ ಕಾಲುಕಣ್ಣಿಯ ...{Loading}...
ವ್ಯಸನವೇಳರ ಕಾಲುಕಣ್ಣಿಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುಬಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯನೀಕ್ಷಿಸದೆ ತಾ
ಮಸದೊಳಿರುತಿಹುದುಚಿತವೇ ಹೇಳೆಂದನಾ ವಿದುರ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಪ್ತ ವ್ಯಸನಗಳೆಂಬ ಹಗ್ಗಗಳು ಕಾಲುಗಳನ್ನು ಕಟ್ಟಿರುವಾಗ, ಅಧಿಕವಾದ ಕಷ್ಟಗಳ ಇಕ್ಕಟ್ಟಿನಲ್ಲಿ ಮುಳುಗಿ, ಮಾಯಾಮಯವಾದ ಆಮಿಷಕ್ಕೆ ಪಕ್ಕಾಗಿ ಅರಿಷಡ್ವರ್ಗಗಳ ಬಾಧೆಯನ್ನು ತಪ್ಪಿಸಿಕೊಳ್ಳುವ ಮಾರ್ಗವನ್ನು ತಿಳಿಯದೆ, ತಾಮಸ ಮಾರ್ಗದಲ್ಲಿಯೇ ಇರುವುದು ಯೋಗ್ಯವೇ?
ಪದಾರ್ಥ (ಕ.ಗ.ಪ)
ಕಾಲುಕಣ್ಣಿ - ಕಾಲಿಗೆ ಕಟ್ಟುವ ಹಗ್ಗ, ಹಸರ-ಹರಡಿರುವಿಕೆ , ಇರುಬು-ಇಕ್ಕಟ್ಟು , ತೋಹು-ಮೋಹ, ವೇಧೆ-ಉಪದ್ರವ, ನುಸುಳುಗಂಡಿ-ರಹಸ್ಯ ಮಾರ್ಗ
ಟಿಪ್ಪನೀ (ಕ.ಗ.ಪ)
É
ಮೂಲ ...{Loading}...
ವ್ಯಸನವೇಳರ ಕಾಲುಕಣ್ಣಿಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುಬಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯನೀಕ್ಷಿಸದೆ ತಾ
ಮಸದೊಳಿರುತಿಹುದುಚಿತವೇ ಹೇಳೆಂದನಾ ವಿದುರ ॥47॥
೦೪೮ ಅತಿಬಲನ ಹಗೆಗೊಳುವನಿಹಪರ ...{Loading}...
ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತತ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳ್ ಎಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನಗಿಂತಲೂ ಅಧಿಕ ಬಲಶಾಲಿಯಾದವನೊಡನೆ ವೈರವನ್ನು ಬೆಳೆಸುವ, ಇಹ-ಪರಗಳನ್ನು ವಿಚಾರಿಸದಿರುವ, ಲೋಕಮರ್ಯಾದೆಯನ್ನು ಮೀರಿ ನಡೆಯುವ , ತಿಳಿದವರನ್ನು ವಿರೋಧಿಸುವ , ಅತಿಯಾಗಿ ಮಾತನಾಡುವ . ತನ್ನ ಆಶಯವನ್ನು ಅರಿಯದ, ಪರರ ಅಭಿಪ್ರಾಯವನ್ನು ಅರಿತುಕೊಳ್ಳದಿರುವ ರಾಜನು ಮೂಢಾತ್ಮನೆ ಸರಿ.
ಪದಾರ್ಥ (ಕ.ಗ.ಪ)
ಆಯತ- ಭಾವನೆ,ನೆಲೆ
ವಿತತರ-ಉದ್ದುದ್ದ,
ಉಲ್ಲಂಘಿಸು-ಮೀರು/ದಾಟು,
ಮರ್ಮಜ್ಞ-ಗುಟ್ಟುತಿಳಿದವನು,
ಮೂಲ ...{Loading}...
ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತತ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳೆಂದ ॥48॥
೦೪೯ ಬಲುಹರಿದು ಕೋಪಿಸುವ ...{Loading}...
ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮ ಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗಾ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳ್ ಎಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂದರ್ಭೋಚಿತವಾಗಿ ಕೋಪಿಸಿಕೊಳ್ಳುವ, ಅರ್ಹತೆಗೆ ತಕ್ಕಂತೆ ದಾನಮಾಡುವ ಆತ್ಮಹಿತ ಸಾಧನೆ ಮಾಡಿಕೊಳ್ಳುವ ಮುಂದೆ ಬರಬಹುದಾದ ಏರು-ಪೇರುಗಳನ್ನು ಅರಿತು, ಆಳವಾದ ಗಂಗೆಯ ಮಡುವಿನಂತೆ ಸುಖ-ದುಃಖಗಳಲ್ಲಿ ಸ್ಥಿತಪ್ರಜ್ಞನಾಗಿರುವವನೇ ಪಂಡಿತನು.
ಪದಾರ್ಥ (ಕ.ಗ.ಪ)
ಬಳಿ-ದಾರಿ, ಗುರುತು, ತಾಗುಬಾಗು-ಹಿಗ್ಗುಕುಗ್ಗು
ಮೂಲ ...{Loading}...
ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮ ಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗಾ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ ॥49॥
೦೫೦ ದಾನವಿಲ್ಲದ ವಿತ್ತ ...{Loading}...
ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ಧಾನವಿಲ್ಲದ ಸುದತಿ ಧೀಮಾನಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳ್ ಎಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾನ ಮಾಡದ ಹಣ, ವಿದ್ವಾಂಸರಿಗೆ ಮಾನ್ಯತೆ ಇಲ್ಲದ ರಾಜ್ಯ, ರಕ್ಷಣೆಯಿಲ್ಲದ ಹೆಂಗಸು, ಜ್ಞಾನಿಯಿಲ್ಲದ ಸಭೆ, ಜ್ಞಾನವಿಲ್ಲದ ತಪಸ್ಸು, ವೇದಾಧ್ಯಯನವನ್ನು ಮಾಡದ ಬ್ರಾಹ್ಮಣ, ಬಾಣಗಳ ಹೊಡೆತವಿಲ್ಲದ ಯುದ್ಧಗಳು ಶೋಭಿಸವು.
ಪದಾರ್ಥ (ಕ.ಗ.ಪ)
ಸುಯಿದಾನ-ರಕ್ಷಣೆ, ನೆಮ್ಮದಿ,
ವಿತ್ತ-ಸಂಪತ್ತು,
ಬುಧ-ವಿದ್ವಾಂಸ,
ಧೀಮಾನ್-ಬುದ್ಧಿವಂತ
ಮೂಲ ...{Loading}...
ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ಧಾನವಿಲ್ಲದ ಸುದತಿ ಧೀಮಾನಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ ॥50॥
೦೫೧ ದಿನವ ಬಞ್ಜೆಯ ...{Loading}...
ದಿನವ ಬಂಜೆಯ ಮಾಡದಿಹಪರ
ವಿನಯನಹ ವರ ದೈವಗುರುಪೂ
ಜನೆಯ ಬುಧಸೇವನೆಯ ಕಾಲೋಚಿತದ ವಿತರಣವ
ಮನನದಿಂ ಶ್ರವಣದಿ ನಿದಿಧ್ಯಾ
ಸನದಿ ದಿನವನು ಕಳೆವನಾತನು
ಮನುಜರೊಳಗುತ್ತಮನೆಲೇ ಭೂಪಾಲ ಕೇಳ್ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು ! ಕಾಲವನ್ನು ವ್ಯರ್ಥ ಮಾಡದೆ, ಇಹ-ಪರಗಳ ಬಗ್ಗೆ ವಿನಯದಿಂದ ತಿಳಿಯುತ್ತ, ದೇವರು, ಗುರುಗಳು, ಹಿರಿಯರನ್ನು ಸೇವಿಸುತ್ತ, ವಿದ್ವಾಂಸರ ಕಾಲೋಚಿತವಾದ ಸಲಹೆಗಳನ್ನು ಕೇಳಿ, ಅದನ್ನು ಕುರಿತಾದ ಮನನ, ಶ್ರವಣ ಮತ್ತು ನಿಧಿದ್ಯಾಸನಗಳಲ್ಲಿ ನಿರತನಾಗಿರುವವನು ಮನುಷ್ಯರೊಳಗೆ ಉತ್ತಮನು.
ಪದಾರ್ಥ (ಕ.ಗ.ಪ)
ಬಂಜೆ-ಗೊಡ್ಡು/ವ್ಯರ್ಥ,
ನಿಧಿದ್ಯಾಸನ - ಆಳವಾದ ಚಿಂತನೆ
ವಿತರಣ - ದಾನಾದಿಗಳು
ಪಾಠಾನ್ತರ (ಕ.ಗ.ಪ)
ಮನನದಿಂದಾ ಶ್ರವಣ ವಿದ್ಯಾಸನದಿ ನಿವನನುಗೊಳಿಪನಾವನು
-ಮನನದಿಂ ಶ್ರವಣದಿ ನಿಧಿದ್ಯಾಸನದಿ ದಿನವನು ಕಳೆವನಾತನು
ಉದ್ಯೋಗ ಪರ್ವ,
ಪ್ರಾಚ್ಯ ಸಂಶೋಧನಾ ಕೇಂದ್ರ. ಮೈಸೂರು. ಸ್ವೀಕರಿಸಲಾಗಿದೆ
ಮೂಲ ...{Loading}...
ದಿನವ ಬಂಜೆಯ ಮಾಡದಿಹಪರ
ವಿನಯನಹ ವರ ದೈವಗುರುಪೂ
ಜನೆಯ ಬುಧಸೇವನೆಯ ಕಾಲೋಚಿತದ ವಿತರಣವ
ಮನನದಿಂ ಶ್ರವಣದಿ ನಿದಿಧ್ಯಾ
ಸನದಿ ದಿನವನು ಕಳೆವನಾತನು
ಮನುಜರೊಳಗುತ್ತಮನೆಲೇ ಭೂಪಾಲ ಕೇಳೆಂದ ॥51॥
೦೫೨ ಸಲುವೆನೆನ್ದನ್ತಃಪುರಕೆ ಸಂ ...{Loading}...
ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೊಳಗೆ ಮೂಢಾತ್ಮನೈ ಧೃತರಾಷ್ಟ್ರ ಕೇಳ್ ಎಂದ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಲಿಗೆಯಿದೆಯೆಂದು ಪರರ ಅಂತಃಪುರದಲ್ಲಿ ಸಂಚರಿಸುವವನು, ಆಪ್ತರನ್ನು ದೂರಮಾಡಿ ವೈರಿಗಳಲ್ಲಿ ಬೆರೆಯುವವನು, ಧರ್ಮವನ್ನು ಬಿಟ್ಟು ಅಧರ್ಮವನ್ನು ಮಾಡುವವನು, ಮತ್ತೊಬ್ಬರ ಏಕಾಂತಸ್ಥಳಗಳಿಗೆ ಹೋಗುವವನು, ಹಸಿವಿಲ್ಲದಿದ್ದರೂ ಊಟ ಮಾಡುವವನು ಮೂಢನು.
ಮೂಲ ...{Loading}...
ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೊಳಗೆ ಮೂಢಾತ್ಮನೈ ಧೃತರಾಷ್ಟ್ರ ಕೇಳೆಂದ ॥52॥
೦೫೩ ಬುಧರೊಳಗೆ ಹಗೆಗೊಳುವ ...{Loading}...
ಬುಧರೊಳಗೆ ಹಗೆಗೊಳುವ ಬುಧರಂ
ನಿಧನಗೆಯ್ದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರಂ ಪೊಗಳ್ದರಂ ಪಳಿವ
ಬುಧರನಧಮರ ಮಾಳ್ವ ಬುಧರಂ
ವಿಧಿಗೊಳಿಪ ಬುಧರ್ಗೀವರಂ ಕವ
ರ್ವಧಮ ಭೂಪರಿಗಂಟದಿಹುದೆ ವಿನಾಶಕರವೆಂದ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದ್ವಾಂಸರಲ್ಲಿ ವೈರವನ್ನು ಬೆಳೆಸುವ, ಅವರನ್ನು ಕೊಲ್ಲಿಸುವ, ನಿಂದಿಸುವ, ಅವರನ್ನು ಜರೆದರೆ ಸಂತೋಷಿಸುವ, ಅವರನ್ನು ಹೊಗಳಿದವರನ್ನು ನಿಂದಿಸುವ, ವಿದ್ವಾಂಸರನ್ನು ಅಧಮರಂತೆ ಕಾಣುವ, ಅವರಿಗೆ ಆಜ್ಞೆ ಮಾಡುವ, ಅವರಿಗೆ ಸನ್ಮಾನ ಮಾಡತಕ್ಕವರನ್ನು ಅಸೂಯೆಯಿಂದ ಕಾಣುವ ರಾಜರಿಗೆ ವಿನಾಶವು ಆಗದೇ ಇರುವುದೆ ?
ಪದಾರ್ಥ (ಕ.ಗ.ಪ)
ಏಳಿಪ-ಹೊರಗೆಹಾಕುವ, ಏಳಿಸು-ಹಂಗಿಸು, ಕವರು-ದೋಚು
ಮೂಲ ...{Loading}...
ಬುಧರೊಳಗೆ ಹಗೆಗೊಳುವ ಬುಧರಂ
ನಿಧನಗೆಯ್ದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರಂ ಪೊಗಳ್ದರಂ ಪಳಿವ
ಬುಧರನಧಮರ ಮಾಳ್ವ ಬುಧರಂ
ವಿಧಿಗೊಳಿಪ ಬುಧರ್ಗೀವರಂ ಕವ
ರ್ವಧಮ ಭೂಪರಿಗಂಟದಿಹುದೆ ವಿನಾಶಕರವೆಂದ ॥53॥
೦೫೪ ಕುಸುಮ ಫಲ ...{Loading}...
ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನ ಗಮನ ನೆನಹಿಂ
ದೆಸೆವ ಕಾರ್ಯದೊಳಿನಿಬರೊರಗಿದಡೊಬ್ಬನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೂವು, ಹಣ್ಣು, ತಾಂಬೂಲ, ಗಂಧ ಭೋಜನ ಇವುಗಳನ್ನು ಅನುಭವಿಸುವಾಗ, ಉಳಿದವರೆಲ್ಲಾ ಮೈಮರೆತರೂ ತಾನು ಮಾತ್ರ ಎಚ್ಚರದಿಂದಿರಬೇಕು. ಹಾಗಿಲ್ಲದಿರುವುದು ರಾಜರಿಗೆ ಕ್ಷೇಮವೆನಿಸದು.
ಪದಾರ್ಥ (ಕ.ಗ.ಪ)
ಸಸಿನ-ಕ್ಷೇಮ, ಪ್ರಸರ-ಗುಂಪು, ಒರಗು-ಮಲಗು, ಮರೆ-ಎಚ್ಚರ ತಪ್ಪು / ಯೋಗ್ಯ
ಮೂಲ ...{Loading}...
ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನ ಗಮನ ನೆನಹಿಂ
ದೆಸೆವ ಕಾರ್ಯದೊಳಿನಿಬರೊರಗಿದಡೊಬ್ಬನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ ॥54॥
೦೫೫ ಕಳಿದ ತರಣಿಯ ...{Loading}...
ಕಳಿದ ತರಣಿಯ ಕಿರಣದಲಿ ನಿ
ರ್ಮಲಿನ ಜಲದಲಿ ದುಗ್ಧಪಾನಂ
ಗಳಲಿ ವರ ಯುವತಿಯರ ಸಂಭೋಗಾಂತರಂಗದಲಿ
ತಳಿತ ಹೋಮದ ಹೊಗೆಗಳಲಿ ದಿನ
ಬಲದೊಳಾಯುಷ್ಯಾಭಿವೃದ್ಧಿಯ
ಬೆಳವಿಗೆಗಳಹವರಸ ಚಿತ್ತೈಸೆಂದನಾ ವಿದುರ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜೆಯ ಸೂರ್ಯನಕಿರಣ, ನಿರ್ಮಲವಾದ ನೀರು, ಕ್ಷೀರಪಾನ, ಯುವತಿಯರ ಸಂಭೋಗ, ಹೋಮದ ಹೊಗೆ ಇವುಗಳಿಂದ ಆಯುಷ್ಯದ ಅಭಿವೃದ್ಧಿ, ಬೆಳವಣಿಗೆಗಳಾಗುತ್ತವೆ.
ಪದಾರ್ಥ (ಕ.ಗ.ಪ)
ಕಳಿದ - ಮಾಗಿದ, ಇಲ್ಲಿ ಸಂಜೆಯ
ದುಗ್ಧ-ಹಾಲು,
ತಳಿತ-ಹೆಚ್ಚಿದ
ಬೆಳವಿಗೆ - ಅಭಿವೃದ್ಧಿ
ಮೂಲ ...{Loading}...
ಕಳಿದ ತರಣಿಯ ಕಿರಣದಲಿ ನಿ
ರ್ಮಲಿನ ಜಲದಲಿ ದುಗ್ಧಪಾನಂ
ಗಳಲಿ ವರ ಯುವತಿಯರ ಸಂಭೋಗಾಂತರಂಗದಲಿ
ತಳಿತ ಹೋಮದ ಹೊಗೆಗಳಲಿ ದಿನ
ಬಲದೊಳಾಯುಷ್ಯಾಭಿವೃದ್ಧಿಯ
ಬೆಳವಿಗೆಗಳಹವರಸ ಚಿತ್ತೈಸೆಂದನಾ ವಿದುರ ॥55॥
೦೫೬ ಎಳೆಯ ರವಿ ...{Loading}...
ಎಳೆಯ ರವಿ ರಶ್ಮಿಯಲಿ ಪ್ರೇತಾಂ
ಗಳದ ಧೂಮಜ್ವಾಲೆಯಲಿ ಗಾ
ವಿಲ ವಯೋವೃದ್ಧೆಯರ ಸಂಭೋಗಾಂತರಂಗಳಲಿ
ಕೊಳಚೆ ನೀರಿನ ಬಳಕೆಯಲಿ ಕ
ತ್ತಲೆಯ ದಧ್ಯೋದನದಲಾಯುಷ
ವಿಳಿದು ಹೋಗದೆ ದಿನ ದಿನದೊಳವನೀಶ ಕೇಳ್ ಎಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಿನ ಸೂರ್ಯಕಿರಣ, ಸ್ಮಶಾನದ ಹೊಗೆ, ಹೆಡ್ಡ, ವೃದ್ಧ ಸ್ತ್ರೀಯರ ಸಂಭೋಗ, ಕೊಳಚೆಯ ನೀರು, ರಾತ್ರಿಯಲ್ಲಿ ಮೊಸರನ್ನದ ಊಟ - ಇವುಗಳು ದಿನದಿನಕ್ಕೆ ಆಯುಷ್ಯವನ್ನು ಕ್ಷಯಿಸುವಂತೆ ಮಾಡುತ್ತವೆ.
ಪದಾರ್ಥ (ಕ.ಗ.ಪ)
ರಶ್ಮಿ-ಕಿರಣ, ಪ್ರೇತಾಂಗಳ-ಶ್ಮಶಾನ, ಗಾವಿಲ-ಹೆಡ್ಡ/ಪೆದ್ದ
ಮೂಲ ...{Loading}...
ಎಳೆಯ ರವಿ ರಶ್ಮಿಯಲಿ ಪ್ರೇತಾಂ
ಗಳದ ಧೂಮಜ್ವಾಲೆಯಲಿ ಗಾ
ವಿಲ ವಯೋವೃದ್ಧೆಯರ ಸಂಭೋಗಾಂತರಂಗಳಲಿ
ಕೊಳಚೆ ನೀರಿನ ಬಳಕೆಯಲಿ ಕ
ತ್ತಲೆಯ ದಧ್ಯೋದನದಲಾಯುಷ
ವಿಳಿದು ಹೋಗದೆ ದಿನ ದಿನದೊಳವನೀಶ ಕೇಳೆಂದ ॥56॥
೦೫೭ ಮಸುಳಿಸಿದ್ದ ದುಕೂಲ ...{Loading}...
ಮಸುಳಿಸಿದ್ದ ದುಕೂಲ ರದನದೊ
ಳೆಸೆವ ಹಾವಸೆ ಭುಕ್ತದುನ್ನತ
ದೆಸಕ ನಿಷ್ಠುರ ವಾಕ್ಯವುದಯಾಸ್ತಮಯ ಕಾಲದಲಿ
ಎಸೆವ ನಿದ್ರಾಂಗನೆಯೊಳೊಂದಿರೆ
ಬಿಸಜಲೋಚನನಾದೊಡೆಯು ವ
ರ್ಜಿಸುವಳವರನು ಭಾಗ್ಯಸಿರಿ ಭೂಪಾಲ ಕೇಳ್ ಎಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳೆಯಾದ ಬಟ್ಟೆ, ಹಲ್ಲಿನಲ್ಲಿ ಕೊಳೆ, ಅತಿಯಾದ ಭೋಜನ, ನಿಷ್ಠುರವಾದ ಮಾತು, ಸೂರ್ಯೋದಯ ಮತ್ತು ಸೂರ್ಯಾಸ್ತಮಯ ಕಾಲದಲ್ಲಿ ನಿದ್ರಿಸುವುದು ಇವುಗಳಿಂದ ವಿಷ್ಣುವಾದರೂ ಸರಿಯೆ, ಭಾಗ್ಯಲಕ್ಷ್ಮಿಯು ಅಂತಹವರನ್ನು ತ್ಯಜಿಸುತ್ತಾಳೆ.
ಪದಾರ್ಥ (ಕ.ಗ.ಪ)
ಮಸುಳಿಸು-ಮಾಸು, ದುಕೂಲ-ಬಟ್ಟಿ, ರದನ-ಹಲ್ಲು, ಹಾವಸೆ-ಪಾಚಿ , ಬಿಸಜಲೋಚನ-ವಿಷ್ಣು
ಮೂಲ ...{Loading}...
ಮಸುಳಿಸಿದ್ದ ದುಕೂಲ ರದನದೊ
ಳೆಸೆವ ಹಾವಸೆ ಭುಕ್ತದುನ್ನತ
ದೆಸಕ ನಿಷ್ಠುರ ವಾಕ್ಯವುದಯಾಸ್ತಮಯ ಕಾಲದಲಿ
ಎಸೆವ ನಿದ್ರಾಂಗನೆಯೊಳೊಂದಿರೆ
ಬಿಸಜಲೋಚನನಾದೊಡೆಯು ವ
ರ್ಜಿಸುವಳವರನು ಭಾಗ್ಯಸಿರಿ ಭೂಪಾಲ ಕೇಳೆಂದ ॥57॥
೦೫೮ ಒನ್ದು ಮೊದಲಾರನ್ತ್ಯವಾದಾ ...{Loading}...
ಒಂದು ಮೊದಲಾರಂತ್ಯವಾದಾ
ಸಂದ ಪೂಗಫಲ ಕ್ರಮಂಗಳ
ಚಂದವನು ಚಿತ್ತೈಸು ಲಾಭಾಲಾಭ ಸುಖದುಃಖ
ಕುಂದದಿಹುದಾಯುಷ್ಯ ಮರಣವಿ
ದೆಂದು ತತ್ಕಾಲದಲಿ ಭೋಗಿಸು
ವಂದವನು ಚಿತ್ತೈಸುವುದು ತಾಂಬೂಲಧಾರಕರು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ತಾಂಬೂಲವನ್ನು ಸ್ವೀಕರಿಸುವವರು ಸೇವಿಸಬೇಕಾದ ಅಡಕೆಯ ಸಂಖ್ಯೆಗಳು ಎಷ್ಟೆಂಬುದನ್ನು, ಏನು ಫಲವೆಂಬುದನ್ನು ಕೇಳು, ಒಂದು ಅಡಕೆಯಿಂದ ಲಾಭ, ಎರಡರಿಂದ ನಷ್ಟ, ಮೂರರಿಂದ ಸುಖ, ನಾಲ್ಕರಿಂದ ದುಃಖ, ಐದರಿಂದ ಆಯಸ್ಸು ಹೆಚ್ಚುತ್ತದೆ. ಆರರಿಂದ ಮರಣ. (ಆದ್ದರಿಂದ ಸರಿಸಂಖ್ಯೆಯ ಅಡಕೆಯು ಸೇವನೆಗೆ ಯೋಗ್ಯವಲ್ಲ !)
ಮೂಲ ...{Loading}...
ಒಂದು ಮೊದಲಾರಂತ್ಯವಾದಾ
ಸಂದ ಪೂಗಫಲ ಕ್ರಮಂಗಳ
ಚಂದವನು ಚಿತ್ತೈಸು ಲಾಭಾಲಾಭ ಸುಖದುಃಖ
ಕುಂದದಿಹುದಾಯುಷ್ಯ ಮರಣವಿ
ದೆಂದು ತತ್ಕಾಲದಲಿ ಭೋಗಿಸು
ವಂದವನು ಚಿತ್ತೈಸುವುದು ತಾಂಬೂಲಧಾರಕರು ॥58॥
೦೫೯ ನಾಗವಲ್ಲಿಯ ಹಿನ್ದು ...{Loading}...
ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳ್ ಎಂದ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀಳ್ಯದೆಲೆಯ ಹಿಂದು ಮುಂದನ್ನು ತೆಗೆಯದೆ ಸುಣ್ಣವನ್ನು ಹಚ್ಚಿಕೊಳ್ಳದೆ ಹಲ್ಲನ್ನು ತೊಳೆಯದೆ, ತಾಂಬುಲವನ್ನು ಸೇವಿಸುವವನು ದೇವೇಂದ್ರನೇ ಆಗಲಿ, ಪರಮೇಶ್ವರನೇ ಆಗಲಿ ಭಾಗ್ಯಲಕ್ಷ್ಮಿಯು ಅಂತಹವರನ್ನು ತ್ಯಜಿಸುತ್ತಾಳೆ.
ಪದಾರ್ಥ (ಕ.ಗ.ಪ)
ನಾಗವಲ್ಲಿ-ವೀಳೆಯದೆಲೆ, ಚೂರ್ಣ-ಸುಣ್ಣ, ಪರ್ಣ-ಎಲೆ, ನಾಗಭೂಷಣ-ಶಿವ
ಮೂಲ ...{Loading}...
ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ ॥59॥
೦೬೦ ಸ್ಥಾನ ಪಞ್ಚಕದಿನ್ದ್ರಿಯದ ...{Loading}...
ಸ್ಥಾನ ಪಂಚಕದಿಂದ್ರಿಯದ ಸಂ
ಸ್ಥಾನದಲಿ ನಿದ್ರಾಂಗನೆಯ ಸ
ನ್ಮಾನಿಸುವೊಡಾ ಸಾಧನದ ಪಂಚಕದ ಪರಿವಿಡಿಯ
ಸ್ಥಾನವರಿದಾರೋಗಣೆಯ ಸಂ
ಧಾನದಲಿ ಚಿತ್ತೈಸುವುದು ರಾ
ಜಾನುಮತವಿದು ಸಕಲ ಸುಖಕರವೆಂದನಾ ವಿದುರ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚೇಂದ್ರಿಯಗಳಿಗೆ ಆವರಿಸುವ ನಿದ್ರೆಯನ್ನು ಅನುಭವಿಸಬೇಕಾದರೆ, ಸಾಧನ ಪಂಚಕದ ಕ್ರಮವನ್ನನುಸರಿಸಿ ಆಹಾರವನ್ನು ಸೇವಿಸುವುದು ಸಕಲ ರೀತಿಯಲ್ಲೂ ಸುಖಕರ. ಇದು ರಾಜನೀತಿ.
ಪದಾರ್ಥ (ಕ.ಗ.ಪ)
ಪ್ರವೃತ್ತಿ-ಗುಣ/ಸ್ವಭಾವ
ಮೂಲ ...{Loading}...
ಸ್ಥಾನ ಪಂಚಕದಿಂದ್ರಿಯದ ಸಂ
ಸ್ಥಾನದಲಿ ನಿದ್ರಾಂಗನೆಯ ಸ
ನ್ಮಾನಿಸುವೊಡಾ ಸಾಧನದ ಪಂಚಕದ ಪರಿವಿಡಿಯ
ಸ್ಥಾನವರಿದಾರೋಗಣೆಯ ಸಂ
ಧಾನದಲಿ ಚಿತ್ತೈಸುವುದು ರಾ
ಜಾನುಮತವಿದು ಸಕಲ ಸುಖಕರವೆಂದನಾ ವಿದುರ ॥60॥
೦೬೧ ಜನಜನಿತ ಮಲ ...{Loading}...
ಜನಜನಿತ ಮಲ ಮೂತ್ರ ಮೂರಾ
ರೆನಿಸುವುದು ರತಿಯೊಂದು ನಿಜ ಭೋ
ಜನವೆರಡು ಸುಯಿಲೊಂದು ವರ ತಾಂಬೂಲ ಹದಿನೈದು
ಇನಿತುವನು ತಪ್ಪದೆ ನಡೆಸಲಾ
ಜನಪನಾರೋಗಣೆಗೆ ಸುಖ ಸಂ
ಜನಿಸುವುದು ದಿನಚರಿಯದಿಂದವನೀಶ ಕೇಳ್ ಎಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೊಬ್ಬನ ದಿನಚರಿಯಲ್ಲಿ ಮೂರು ಸಲ ಮಲ ವಿಸರ್ಜನೆ, ಆರು ಸಲ ಮೂತ್ರ ವಿಸರ್ಜನೆ, ಒಂದು ಸಲ ರತಿ, ಎರಡು ಸಲ ಭೋಜನ, ಒಂದು ಸಲ ನಿದ್ರೆ, ಹದಿನೈದು ತಾಂಬೂಲ ಚರ್ವಣ- ಈ ರೀತಿ ತಪ್ಪದೇ ಆಚರಿಸಿದರೆ ಉತ್ತಮವಾದ ಆರೋಗ್ಯವು ಕಾಣುವುದು.
ಪದಾರ್ಥ (ಕ.ಗ.ಪ)
ಸುಯಿಲು-ಒರಗು
ಮೂಲ ...{Loading}...
ಜನಜನಿತ ಮಲ ಮೂತ್ರ ಮೂರಾ
ರೆನಿಸುವುದು ರತಿಯೊಂದು ನಿಜ ಭೋ
ಜನವೆರಡು ಸುಯಿಲೊಂದು ವರ ತಾಂಬೂಲ ಹದಿನೈದು
ಇನಿತುವನು ತಪ್ಪದೆ ನಡೆಸಲಾ
ಜನಪನಾರೋಗಣೆಗೆ ಸುಖ ಸಂ
ಜನಿಸುವುದು ದಿನಚರಿಯದಿಂದವನೀಶ ಕೇಳೆಂದ ॥61॥
೦೬೨ ನೆರೆದ ಸಚರಾಚರವಿದೆಲ್ಲವು ...{Loading}...
ನೆರೆದ ಸಚರಾಚರವಿದೆಲ್ಲವು
ನರರ ನಿಜಭೋಜನಕೆ ಜನಿಸಿದ
ವರಸ ಕೇಳಿದರೊಳಗೆ ಭೋಜ್ಯಾಭೋಜ್ಯವನು ತಿಳಿದು
ಪರಿಹರಿಸ ಬಲ್ಲವರುಗಳು ಘನ
ತರದ ಸುಕೃತವನೈದುವರು ಭೂ
ವರರೊಳಗೆ ಸಂದೇಹವೇ ಭೂಪಾಲ ಕೇಳ್ ಎಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಜಗತ್ತಿನಲ್ಲಿ ತುಂಬಿರುವ ಚರಾಚರ ವಸ್ತುಗಳೆಲ್ಲವೂ ಮನುಷ್ಯನು ಅನುಭವಿಸುವುದಕ್ಕಾಗಿಯೇ ಇದೆ ; ಇದರಲ್ಲಿ ಭೋಗಿಸಲು ಯೋಗ್ಯವಾದುದು ಯಾವುದು, ಯೋಗ್ಯವಲ್ಲದ್ದು ಯಾವುದು ಎಂಬುದನ್ನು ತಿಳಿದು ಭೋಗ್ಯವಲ್ಲದ್ದನ್ನು ತ್ಯಜಿಸತಕ್ಕ ರಾಜರು ಅಧಿಕವಾದ ಪುಣ್ಯವನ್ನು ಪಡೆಯುತ್ತಾರೆ.
ಪದಾರ್ಥ (ಕ.ಗ.ಪ)
ಭೋಜ್ಯ-ಉಣ್ಣುವ, ಸುಕೃತ-ಪುಣ್ಯ
ಮೂಲ ...{Loading}...
ನೆರೆದ ಸಚರಾಚರವಿದೆಲ್ಲವು
ನರರ ನಿಜಭೋಜನಕೆ ಜನಿಸಿದ
ವರಸ ಕೇಳಿದರೊಳಗೆ ಭೋಜ್ಯಾಭೋಜ್ಯವನು ತಿಳಿದು
ಪರಿಹರಿಸ ಬಲ್ಲವರುಗಳು ಘನ
ತರದ ಸುಕೃತವನೈದುವರು ಭೂ
ವರರೊಳಗೆ ಸಂದೇಹವೇ ಭೂಪಾಲ ಕೇಳೆಂದ ॥62॥
೦೬೩ ತುರಗಹೃದಯ ಧ್ವನಿಯ ...{Loading}...
ತುರಗಹೃದಯ ಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರಿರವ ಪುರುಷನ ಭಾಗ್ಯದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತೃಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಯ ನಾಡಿಮಿಡಿತವನ್ನು, ಸಿಡಿಲಿನ ಗರ್ಜನೆಯನ್ನೂ, ಹೆಂಗಸರ ಮನಸ್ಸನ್ನು, ಪುರುಷನಿಗೆ ಭಾಗ್ಯೋದಯವಾಗುವ ಕಾಲವನ್ನೂ, ಮಳೆ ಬರುವ ಕಾಲವನ್ನು ಕ್ಷಾಮವು ಬರುವುದನ್ನೂ ತಿಳಿಯಲು ದೇವತೆಗಳಿಗೂ ಶಕ್ಯವಿಲ್ಲ, ಮಾನವರಿಗೆ ತಿಳಿದೀತೆ ?
ಪದಾರ್ಥ (ಕ.ಗ.ಪ)
ಧರಧುರ-ಅಬ್ಬರ, ವಿಧಾತೃ-ಬ್ರಹ್ಮ
ಮೂಲ ...{Loading}...
ತುರಗಹೃದಯ ಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರಿರವ ಪುರುಷನ ಭಾಗ್ಯದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತೃಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ ॥63॥
೦೬೪ ಬಡತನಗಳಡಸಿದೊಡೆ ಬನ್ಧುಗ ...{Loading}...
ಬಡತನಗಳಡಸಿದೊಡೆ ಬಂಧುಗ
ಳೆಡಹಿ ಕಾಣರು ಭಂಟ ತಾನಾ
ದೊಡೆಯು ಬಂದಾಪತ್ತಿನೊಳಗೆ ಪರಾಙ್ಮುಖನೆಯಾಗಿ
ನುಡಿಸದವನೇ ಹಗೆ ಶರೀರದೊ
ಳಡಸಿದಾ ರುಜೆ ಬಾಧೆಗಡವಿಯ
ಗಿಡ ಮರಂಗಳು ರಕ್ಷಿಸವೆ ಹೇಳೆಂದನಾ ವಿದುರ ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಮನುಷ್ಯನಿಗೆ ಹಸಿವು, ರೋಗಗಳು ಬಾಧಿಸಿದಾಗ ಅಡವಿಯ ಗಿಡ ಮೂಲಿಕೆಗಳು ನೆರವಿಗೆ ಬರುತ್ತವೆ ; ಆದರೆ ಬಡತನದಲ್ಲಿದ್ದಾಗ ಯಾವ ನೆಂಟರೂ ತಿರುಗಿಯೂ ನೋಡುವುದಿಲ್ಲ. ಆಪತ್ತಿನಲ್ಲಿ ಕಡೆಗಣಿಸಿದ ಭಂಟರೂ ಶತ್ರುಗಳು.
ಪದಾರ್ಥ (ಕ.ಗ.ಪ)
ಅಡಸು-ಮೈಮೇಲೆ ಬೀಳು, ಪರಾ-ಮೋರೆ ತಿರುವುವುದು, ರುಜೆ-ರೋಗ
ಮೂಲ ...{Loading}...
ಬಡತನಗಳಡಸಿದೊಡೆ ಬಂಧುಗ
ಳೆಡಹಿ ಕಾಣರು ಭಂಟ ತಾನಾ
ದೊಡೆಯು ಬಂದಾಪತ್ತಿನೊಳಗೆ ಪರಾಙ್ಮುಖನೆಯಾಗಿ
ನುಡಿಸದವನೇ ಹಗೆ ಶರೀರದೊ
ಳಡಸಿದಾ ರುಜೆ ಬಾಧೆಗಡವಿಯ
ಗಿಡ ಮರಂಗಳು ರಕ್ಷಿಸವೆ ಹೇಳೆಂದನಾ ವಿದುರ ॥64॥
೦೬೫ ಕಾಲದೊಳಗೆ ವಸನ್ತ ...{Loading}...
ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನ್ಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲದಲ್ಲಿ ವಸಂತ, ವಿದ್ಯೆಯಲ್ಲಿ ಕವಿತ್ವ, ಗಜಾರೋಹಣ ವೈಭವದಲ್ಲಿ ದೇವೇಂದ್ರ , ಮಿತ್ರರಲ್ಲಿ ವಾಣಿ, ದೈವದಲ್ಲಿ ಶಿವ, ಬಿಲ್ಲಾಳುಗಳಲ್ಲಿ ಮನ್ಮಥ, ಧನದಲ್ಲಿ ಅಭಿಮಾನ ಇವುಗಳೇ ಉತ್ತಮವಾದವು.
ಪದಾರ್ಥ (ಕ.ಗ.ಪ)
ವೈಹಾಳಿ-ಆನಯ ಸವಾರಿ
ಭಾಳ ನೇತ್ರ-ಹಣೆಗಣ್ಣ-ಶಿವ
ಮೂಲ ...{Loading}...
ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನ್ಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ ॥65॥
೦೬೬ ಮುನ್ದೆ ಗುರುವನು ...{Loading}...
ಮುಂದೆ ಗುರುವನು ಬಂಧು ಜನವನು
ಹಿಂದೆ ಕರ್ಮಾಂತ್ಯದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಭಾವವಿದು
ಹಿಂದು ಮುಂದಾವಾಗ ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರುಹಿರಿಯರನ್ನು ಮುಂದೆ, ಬಂಧುಗಳನ್ನು ಹಿಂದೆ, ಸೇವಕರನ್ನು ಕಾರ್ಯಗಳಾದ ಮೇಲೆ ಹೊಗಳಬೇಕು. ಮಕ್ಕಳನ್ನೂ, ಹೆಂಡತಿಯರನ್ನು ಯಾವಾಗಲೂ ಹೊಗಳಬಾರದು.
ಪದಾರ್ಥ (ಕ.ಗ.ಪ)
ಕರ್ಮಾಂತ್ಯ-ಕೆಲಸದ ಕೊನೆ,
ಸಾಹಿತ್ಯ ಭಾವ-ಒಳ್ಳೆಯ ಅನ್ನಿಸಿಕೆ
ಮೂಲ ...{Loading}...
ಮುಂದೆ ಗುರುವನು ಬಂಧು ಜನವನು
ಹಿಂದೆ ಕರ್ಮಾಂತ್ಯದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಭಾವವಿದು
ಹಿಂದು ಮುಂದಾವಾಗ ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ ॥66॥
೦೬೭ ತುರಗದೆಡಬಲ ಗಜದ ...{Loading}...
ತುರಗದೆಡಬಲ ಗಜದ ಸಮ್ಮುಖ
ತರುಣಿಯರುಗಳ ಸರ್ವತೋಮುಖ
ಹಿರಿದು ದುರ್ಜನನಿದ್ದ ದೇಶವದೆಯÉ್ದು ವ್ಯಾಘ್ರಮುಖ
ಭರದಿನಾ ದೇಶವನು ಬಿಟ್ಟರ
ವರಿಸದನ್ಯಗ್ರಾಮಗಳ ವನಾಂ
ತರವನೈದುವುದಲ್ಲದಲ್ಲಿಹುದುಚಿತವಲ್ಲೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಯ ಎಡ ಬಲ ಪಕ್ಕದಲ್ಲಿ, ಆನೆಯ ಎದುರಿನಲ್ಲಿ, ತರುಣಿಯರ ಸಮೀಪದಲ್ಲಿ ಸುಳಿಯಬಾರದು. ದುರ್ಜನರು ಇರುವ ಸ್ಥಳವಂತೂ ಹುಲಿಯಿದ್ದ ಸ್ಥಳದಂತೆ. ಆ ಊರನ್ನೇ ಬಿಟ್ಟು ಬೇರೆಯ ಊರಿಗೆ ಹೋಗಬೇಕು. ಕಾಡಿಗೆ ಹೋದರೂ ಚಿಂತೆಯಿಲ್ಲ ಆದರೆ ಅಲ್ಲಿರುವುದು ಯೋಗ್ಯವಲ್ಲ.
ಪದಾರ್ಥ (ಕ.ಗ.ಪ)
ಸಮ್ಮುಖ-ಎದುರು, ವ್ಯಾಘ್ರ-ಹುಲಿ, ಅರಿವರಿಸು-ಕಡೆಗಣಿಸು
ಮೂಲ ...{Loading}...
ತುರಗದೆಡಬಲ ಗಜದ ಸಮ್ಮುಖ
ತರುಣಿಯರುಗಳ ಸರ್ವತೋಮುಖ
ಹಿರಿದು ದುರ್ಜನನಿದ್ದ ದೇಶವದೆಯÉ್ದು ವ್ಯಾಘ್ರಮುಖ
ಭರದಿನಾ ದೇಶವನು ಬಿಟ್ಟರ
ವರಿಸದನ್ಯಗ್ರಾಮಗಳ ವನಾಂ
ತರವನೈದುವುದಲ್ಲದಲ್ಲಿಹುದುಚಿತವಲ್ಲೆಂದ ॥67॥
೦೬೮ ಎತ್ತಲೆತ್ತಲು ಪೋಪ ...{Loading}...
ಎತ್ತಲೆತ್ತಲು ಪೋಪ ಮನುಜಂ
ಗತ್ತಲತ್ತಲೆ ದೈವ ಕೂಡೆ ಬ
ರುತ್ತಿಹುದು ಬೆಂಬಿಡದೆ ನಾನಾ ದೇಶ ದೇಶದಲಿ
ಮಿತ್ರನುರು ಮಧ್ಯಸ್ಥಪುರುಷನ
ಮಿತ್ರನೌದಾಸೀನನೊಬ್ಬನು
ಕೃತ್ರಿಮನು ಸಹಜೀವಿಯಿಂತಿವರರಸ ಕೇಳ್ ಎಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು ! ಮನುಷ್ಯನು ಎಲ್ಲಿ ಹೋದರೂ ದೈವವು ಅವನ ಬೆನ್ನ ಹಿಂದೆಯೇ ಬರುತ್ತದೆ. ಹಾಗೆಯೇ ಶ್ರೇಷ್ಠನಾದ ಮಿತ್ರ, ಮಧ್ಯಸ್ಥ, ಶತ್ರು, ಕಪಟಿ ಇವರುಗಳು ಕೂಡಾ ಹಾಗೆಯೇ ಜೊತೆಯಲ್ಲಿಯೇ ಇರುತ್ತಾರೆ.
ಮೂಲ ...{Loading}...
ಎತ್ತಲೆತ್ತಲು ಪೋಪ ಮನುಜಂ
ಗತ್ತಲತ್ತಲೆ ದೈವ ಕೂಡೆ ಬ
ರುತ್ತಿಹುದು ಬೆಂಬಿಡದೆ ನಾನಾ ದೇಶ ದೇಶದಲಿ
ಮಿತ್ರನುರು ಮಧ್ಯಸ್ಥಪುರುಷನ
ಮಿತ್ರನೌದಾಸೀನನೊಬ್ಬನು
ಕೃತ್ರಿಮನು ಸಹಜೀವಿಯಿಂತಿವರರಸ ಕೇಳೆಂದ ॥68॥
೦೬೯ ಗುರು ವಿರೋಧ ...{Loading}...
ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಾ
ಗರನ ಬಂಧು ದ್ವೇಷವತ್ಯಾಲೀಢ ದೀನತನ
ಶರಣಜನ ಪಾಂಡಿತ್ಯವೆಂಬಿವ
ನರವರಿಸದಂಗೈಸೆ ಭೂಪನ
ಸಿರಿಗೆ ಮೊಳೆಯದೆ ಕೇಡು ಚಿತ್ತೈಸೆಂದನಾ ವಿದುರ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರುಗಳಲ್ಲಿ ವಿರೋಧ, ಬ್ರಾಹ್ಮಣರಲ್ಲಿ ದ್ವೇಷ, ದೈವದ್ರೋಹ, ಗುಣವಂತರಾದ ಬಂಧುಗಳೊಡನೆ ಹಗೆತನ, ಅತಿಯಾದ ದೈನ್ಯ, ಶರಣಾಗತರಲ್ಲಿ ತನ್ನ ಪಾಂಡಿತ್ಯ ಪ್ರದರ್ಶನ, ಇವು ರಾಜನ ಸಿರಿತನಕ್ಕೆ ಕೇಡಾಗುತ್ತವೆ.
ಪದಾರ್ಥ (ಕ.ಗ.ಪ)
ಮಹೀಬುಧ-ಬ್ರಾಹ್ಮಣ, ಅತ್ಯಾಲೀಢ-ಬಾಯಿ ತುಂಬ ಹೇಳುವ
ಮೂಲ ...{Loading}...
ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಾ
ಗರನ ಬಂಧು ದ್ವೇಷವತ್ಯಾಲೀಢ ದೀನತನ
ಶರಣಜನ ಪಾಂಡಿತ್ಯವೆಂಬಿವ
ನರವರಿಸದಂಗೈಸೆ ಭೂಪನ
ಸಿರಿಗೆ ಮೊಳೆಯದೆ ಕೇಡು ಚಿತ್ತೈಸೆಂದನಾ ವಿದುರ ॥69॥
೦೭೦ ಬಲು ಪ್ರಧಾನನ ...{Loading}...
ಬಲು ಪ್ರಧಾನನ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು ! ಅತಿ ಮುಖ್ಯರಾದವರಲ್ಲಿ ವೈರ, ಹಿತವನ್ನು ಬಯಸುವ ಹೆಂಗಸರ ಮನಸ್ಸಿಗೆ ನೋವುಂಟು ಮಾಡುವುದು, ಶತ್ರುಗಳಲ್ಲಿನ ಮೃದುವರ್ತನೆ, ಕೀಳು ಜನರೊಡನೆ ಸ್ನೇಹ, ಸೈನಿಕರನ್ನು ಪೀಡಿಸುವುದು, ಧರ್ಮದ ನೆಲೆಯನ್ನರಿಯದೆ ಮಾಡುವ ದಾನಿಗಳ ಸಂಪತ್ತು - ಇವುಗಳು ಬಿರುಗಾಳಿಗೆ ಸಿಕ್ಕಿದ ದೀಪದಂತೆ. ಮನುಷ್ಯನು ಇವುಗಳಿಂದ ಹಾಳಾಗುತ್ತಾನೆ.
ಪದಾರ್ಥ (ಕ.ಗ.ಪ)
ಳಲು-ನೋವು, ಅಂತಸ್ಮೃತೆ-ವಿಶ್ವಾಸ, ಅನಾಮಿಕ-ಹೆಸರಿಲ್ಲದ
ಮೂಲ ...{Loading}...
ಬಲು ಪ್ರಧಾನನ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ ॥70॥
೦೭೧ ಹುಸಿ ಪರದ್ರೋಹವು ...{Loading}...
ಹುಸಿ ಪರದ್ರೋಹವು ಪರ ಸ್ತ್ರೀ
ವ್ಯಸನಪೇಯವಸೂಯೆ ಮಾನ್ಯ
ದ್ವಿಷತೆ ಪತಿತ ಸಮೇತವಾತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದಲಿ ವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆ ಯಾವನೈ ಭೂಪಾಲ ಕೇಳ್ ಎಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಳ್ಳು, ಪರದ್ರೋಹ, ಪರಸ್ತ್ರೀ ವ್ಯಸನ, ಕುಡಿತ, ಮತ್ಸರ, ನೀಚರ ಸಹವಾಸ, ಆತ್ಮಸ್ತುತಿ ಇವುಗಳನ್ನು ಬಿಟ್ಟು ಸತ್ಯ, ಪರೋಪಕಾರ ಮುಂತಾದ ಉತ್ತಮ ಗುಣವನ್ನು ಅವಲಂಬಿಸಿದವನು ಉತ್ತಮ ರಾಜನಾಗುತ್ತಾನೆ. ಜಗತ್ತಿನಲ್ಲಿ ಅಂಥವರಿಗೆ ಸಮಾನರು ಯಾರಿರುತ್ತಾರೆ.
ಪದಾರ್ಥ (ಕ.ಗ.ಪ)
ಅಪೇಯ-ಕುಡಿಯಬಾರದ್ದು, ಸೆರೆ (ಕುಡಿತ), ದ್ವಿಷತೆ-ಹಗೆತನ/ವೈರ
ಮೂಲ ...{Loading}...
ಹುಸಿ ಪರದ್ರೋಹವು ಪರ ಸ್ತ್ರೀ
ವ್ಯಸನಪೇಯವಸೂಯೆ ಮಾನ್ಯ
ದ್ವಿಷತೆ ಪತಿತ ಸಮೇತವಾತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದಲಿ ವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆ ಯಾವನೈ ಭೂಪಾಲ ಕೇಳೆಂದ ॥71॥
೦೭೨ ಇದು ಸಮಾಹಿತವಿದು ...{Loading}...
ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲವಿದಾಮಾ್ನ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಒಪ್ಪಿಗೆಯಗುವಂತಹದು, ಇದು ಶುಭೋದಯ, ಇದು ಸಕಲ ಪುರುಷಾರ್ಥ ಸಾಧನ, ಇದು ಸಜ್ಜನರಿಗೆ ಗೌರವವಾದುದು. ಇದರಿಂದ ಸಂಸಾರದಲ್ಲಿ ಸೌಖ್ಯ ಫಲ, ಇದು ಪ್ರಬಲವಾದುದು, ಇದು ದುರ್ಬಲವಾದುದು, ಇದು ವೇದವಿದಿತವಾದುದು ಎಂಬುದನ್ನು ನಿರ್ಧರಿಸಿ, ಕಾರ್ಯನೀತಿಯನ್ನು ಅನುಸರಿಸುವವನೇ ಪಂಡಿತನು.
ಪದಾರ್ಥ (ಕ.ಗ.ಪ)
ಸಮಾಹಿತ-ಒಟ್ಟಿಗೆ ಸೇರಿದ, ಅಮ್ನಾಯ-ವೇದ, ಶ್ರುತಿ
ಮೂಲ ...{Loading}...
ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲವಿದಾಮಾ್ನ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು ॥72॥
೦೭೩ ಶತ್ರುಕಾಲ ಸುದೇಶ ...{Loading}...
ಶತ್ರುಕಾಲ ಸುದೇಶ ವರ್ಗ ಸು
ಮಿತ್ರರುದಯೋಪಾಯಕರಣ ಸು
ಪಾತ್ರವೆಂಬಿವು ಮೂರು ತೆರನಾಗಿಪ್ಪವಿದರೊಳಗೆ
ಕ್ಷತ್ರಧರ್ಮ ವಿವೇಕವೆಂಬಿವ
ನ್ತೋತ್ರಗೊಳಿಪನೆ ರಾಯನವಗೆ ಧ
ರಿತ್ರಿಯೊಳಗೆಣೆ ಯಾವನೈ ಭೂಪಾಲ ಕೇಳ್ ಎಂದ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು, ಮಿತ್ರ, ದೇಶ, ಕಾಲ, ಏಳಿಗೆ, ಉಪಾಯ ಪಾತ್ರ ಇವುಗಳಲ್ಲಿ ಉತ್ತಮ, ಮಧ್ಯಮ ಕನಿಷ್ಠವೆಂದು ಮೂರು ಬಗೆಗಳಿರುತ್ತವೆ. ಇವುಗಳನ್ನು ಕ್ಷತ್ರ ಧರ್ಮದ ವಿವೇಕದಿಂದ ಒಪ್ಪಿ ನಡೆಯುವವನೇ ರಾಜನು. ಅಂತಹ ಶ್ರೇಷ್ಠನಿಗೆ ಭೂಮಿಯೊಳಗೆ ಯಾರು ಸಮ?
ಪದಾರ್ಥ (ಕ.ಗ.ಪ)
ಕ್ಷತ್ರಧರ್ಮ-ಕ್ಷತ್ರಿಯ ಧರ್ಮ
ಮೂಲ ...{Loading}...
ಶತ್ರುಕಾಲ ಸುದೇಶ ವರ್ಗ ಸು
ಮಿತ್ರರುದಯೋಪಾಯಕರಣ ಸು
ಪಾತ್ರವೆಂಬಿವು ಮೂರು ತೆರನಾಗಿಪ್ಪವಿದರೊಳಗೆ
ಕ್ಷತ್ರಧರ್ಮ ವಿವೇಕವೆಂಬಿವ
ನ್ತೋತ್ರಗೊಳಿಪನೆ ರಾಯನವಗೆ ಧ
ರಿತ್ರಿಯೊಳಗೆಣೆ ಯಾವನೈ ಭೂಪಾಲ ಕೇಳೆಂದ ॥73॥
೦೭೪ ಎಲ್ಲಿ ಸುಲಲಿತ ...{Loading}...
ಎಲ್ಲಿ ಸುಲಲಿತ ವಿದ್ಯೆ ಬಹು ಗುಣ
ವೆಲ್ಲಿ ಗಣಿಕಾ ನಿಕರ ಮಣಿ ಗಣ
ವೆಲ್ಲಿ ಗಜ ಜಾತ್ಯಶ್ವವೆಲ್ಲಿ ವರೂಥ ಸಂದೋಹ
ಎಲ್ಲಿ ಸುಭಟ ನಿಕಾಯ ನೆರೆದಿಹು
ದಲ್ಲಿ ತನ್ನಾಧೀನ ಮಾಡಲು
ಬಲ್ಲವನೆ ನೃಪನಾತಗಿದಿರಾರೈ ಧರಿತ್ರಿಯಲಿ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತಮವಾದ ವಿದ್ಯೆ, ಉತ್ತಮ ಗುಣಗಳು, ಗಣಿಕೆಯರು, ರತ್ನಗಳು, ಆನೆಗಳು ಜಾತಿಯ ಕುದುರೆಗಳು, ರಥಸಮೂಹ, ವೀರಸೈನಿಕರು, ಇವುಗಳನ್ನು ಎಲ್ಲಿದೆಯೆಂದು ಶೋಧಿಸಿ ತನ್ನವುಗಳನ್ನಾಗಿ ಮಾಡಿಕೊಳ್ಳುವವನು ಶ್ರೇಷ್ಠನಾದ ರಾಜ. ಅಂತಹವನಿಗೆ ಭೂಮಿಯಲ್ಲಿ ಎದುರಾರು?
ಪದಾರ್ಥ (ಕ.ಗ.ಪ)
ಸಂದೋಹ-ಗುಂಪು, ಗಣಿಕೆ-ವೇಶ್ಯೆ, ಸುಲಲಿತವಿದ್ಯೆ (ಸಂಗೀತ, ನೃತ್ಯ-ಚಿತ್ರಕಲೆ)
ಮೂಲ ...{Loading}...
ಎಲ್ಲಿ ಸುಲಲಿತ ವಿದ್ಯೆ ಬಹು ಗುಣ
ವೆಲ್ಲಿ ಗಣಿಕಾ ನಿಕರ ಮಣಿ ಗಣ
ವೆಲ್ಲಿ ಗಜ ಜಾತ್ಯಶ್ವವೆಲ್ಲಿ ವರೂಥ ಸಂದೋಹ
ಎಲ್ಲಿ ಸುಭಟ ನಿಕಾಯ ನೆರೆದಿಹು
ದಲ್ಲಿ ತನ್ನಾಧೀನ ಮಾಡಲು
ಬಲ್ಲವನೆ ನೃಪನಾತಗಿದಿರಾರೈ ಧರಿತ್ರಿಯಲಿ ॥74॥
೦೭೫ ದ್ವಾರವೊಮ್ಬತ್ತಿನ್ದ್ರಿಯದಹಂ ...{Loading}...
ದ್ವಾರವೊಂಬತ್ತಿಂದ್ರಿಯದಹಂ
ಕಾರಕರಣಚತುಷ್ಟಯಂಗಳ
ಸಾರ ಭೂತಾಧಿಕದ ಸುಳಿವಿನ ಪಂಚವಾಯುಗಳ
ಹೋರಟೆಗಳಲಿ ಬಳಲಿ ಜೀವನ
ಧೀರನಹವೊಲು ಪಾಂಡುಪುತ್ರರ
ಕೌರವರ ಬೇಳಂಬದಲಿ ಬೆಂಡಾದೆ ನೀನೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯನ ದೇಹದಲ್ಲಿ ಒಂಬತ್ತು ರಂಧ್ರಗಳು, ಐದು ಇಂದ್ರಿಯಗಳು, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳೆಂಬ ನಾಲ್ಕು ಕರಣಗಳೂ ಇವೆ. ಇದರೊಂದಿಗೆ ಪಂಚಭೂತಗಳೂ, ಪಂಚವಾಯುಗಳೂ ಸೇರಿವೆ. ಇಂತಹ ದೇಹದಲ್ಲಿರುವ ಜೀವಾತ್ಮನು ಅವುಗಳ ಘರ್ಷಣೆಯಲ್ಲಿ ಆಯಾಸಪಡುವಂತೆ ನೀನು ಪಾಂಡವ - ಕೌರವರ ಚಿಂತೆಯಲ್ಲಿ ಬಳಲಿ ಬೆಂಡಾಗಿದ್ದೀಯೆ !
ಪದಾರ್ಥ (ಕ.ಗ.ಪ)
ಹೋರಟಿ-ಹೋರಾಟ/ಕಾದಾಟ
ಬೇಳಂಬ-ಚಿಂತೆ/ಆಲೋಚನೆ, ತೊಂದರೆ
ದ್ವಾರ-ಬಾಗಿಲು,
ಟಿಪ್ಪನೀ (ಕ.ಗ.ಪ)
ನವದ್ವಾರ-2 ಕಣ್ಣುಗಳು, 2 ಕಿವಿಗಳು, ಮೂಗಿನ ಹೊಳ್ಳೆಗಳು ಬಾಯಿ, ಮೂತ್ರದ್ವಾರ, ಗುದದ್ವಾರ
ಪಂಚೇಂದ್ರಿಯ-ಕಣ್ಣು, ಕಿವಿ, ಮೂಗು ನಾಲಿಗೆ ಮತ್ತು ಚರ್ಮ ಐದು ಇಂದ್ರಿಯಗಳು
ಕರಣ ಚತುಷ್ಟಯ-ಮನಸ್ಸು ಬುದ್ಧಿ, ಚಿತ್ತ , ಅಹಂಕಾರÉಂಬ ನಾಲ್ಕು ಕರಣಗಳು
ಪಂಚಭೂತ-ಭೂಮಿ, ಆಕಾಶ, ವಾಯು, ಅಗ್ನಿ, ಜಲವೆಂಬ ಐದು ಮೂಲವಸ್ತುಗಳು
ಪಂಚವಾಯು-ಪ್ರಾಣ, ಆಪಾನ, ವ್ಯಾಸ, ಉದಾನ, ಸಮಾನ,
ಮೂಲ ...{Loading}...
ದ್ವಾರವೊಂಬತ್ತಿಂದ್ರಿಯದಹಂ
ಕಾರಕರಣಚತುಷ್ಟಯಂಗಳ
ಸಾರ ಭೂತಾಧಿಕದ ಸುಳಿವಿನ ಪಂಚವಾಯುಗಳ
ಹೋರಟೆಗಳಲಿ ಬಳಲಿ ಜೀವನ
ಧೀರನಹವೊಲು ಪಾಂಡುಪುತ್ರರ
ಕೌರವರ ಬೇಳಂಬದಲಿ ಬೆಂಡಾದೆ ನೀನೆಂದ ॥75॥
೦೭೬ ಮತ್ತನತಿಶ್ರಾನ್ತನು ಪ್ರಮದೋ ...{Loading}...
ಮತ್ತನತಿಶ್ರಾಂತನು ಪ್ರಮದೋ
ನ್ಮತ್ತನತಿಕುಪಿತಾನನನು ಚಲ
ಚಿತ್ತನತಿ ಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತು ಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳ್ ಎಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದ್ಯಪಾನದ ಮತ್ತಿನಲ್ಲಿರುವವನು, ಬಳಲಿದವನು, ಅಹಂಕಾರಿ, ಹುಚ್ಚ, ಕೋಪಗೊಂಡವನು, ಚಂಚಲ ಮನಸ್ಸುಳ್ಳವನೂ, ಕಾಮುಕ, ಶೂರ, ಲೋಭಿ, ಮತ್ತು ಹಸಿದವನು, ಈ ಹತ್ತು ಜನರಿಗೆ ಧರ್ಮಾಧರ್ಮಗಳ ಪರಿವೆ ಇರುವುದಿಲ್ಲ.
ಪದಾರ್ಥ (ಕ.ಗ.ಪ)
ತತ್ತವಣೆ-ನಿಜಸ್ಥಿತಿ,
ಅತಿಶಾಂತ-ಬಳಲಿದ,
ಪ್ರಮದಾ-ಅಹಂಕಾರಿ
ಉನ್ಮತ್ರ-ಹುಚ್ಚಿನ,
ಲುಬ್ಧ-ಜಿಪುಣ,
ಕ್ಷುತ್ತು -ಹಸಿವು
ಮೂಲ ...{Loading}...
ಮತ್ತನತಿಶ್ರಾಂತನು ಪ್ರಮದೋ
ನ್ಮತ್ತನತಿಕುಪಿತಾನನನು ಚಲ
ಚಿತ್ತನತಿ ಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತು ಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳೆಂದ ॥76॥
೦೭೭ ದಾನವಿಷ್ಟಾಪೂರ್ತ ವಿನಯ ...{Loading}...
ದಾನವಿಷ್ಟಾಪೂರ್ತ ವಿನಯ ಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಮಹಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥಬಂಧು ವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟವನ್ನರಿತು ಯೋಗ್ಯದಾನ, ಪರೋಪಕಾರದ ಕಾರ್ಯಗಳು, ವಿನಯ, ಆತ್ಮಾಭಿಮಾನ, ದೇವತಾರ್ಚನೆ, ಬ್ರಾಹ್ಮಣ ಗೋವುಗಳಿಗೆ ಸಂತರ್ಪಣೆ, ಮಹಾ ತಿಥಿ ಪೂಜೆ, ಗುರುಭಕ್ತಿ, ಧ್ಯಾನ, ದೀನರಿಗೆ, ಅನಾಥರಿಗೆ ಮತ್ತು ಬಂಧುಗಳಿಗೆ ನೆರವು ನೀಡುವುದು, ಶರಣಾಗತರ ರಕ್ಷಣೆ, ತೀರ್ಥಸ್ನಾನ, ಇವುಗಳನ್ನು ರಾಜನಾದವನು ಆಸಕ್ತಿಯಿಂದ ಮಾಡಬೇಕು.
ಪದಾರ್ಥ (ಕ.ಗ.ಪ)
ಇಷ್ಟಾಪೂರ್ತ-ಇಷ್ಟವಾದ್ದು, ಮಹೀಸುರ-ಬ್ರಾಹ್ಮಣ, ವಿತಾನ-ಗುಂಪು
ಮೂಲ ...{Loading}...
ದಾನವಿಷ್ಟಾಪೂರ್ತ ವಿನಯ ಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಮಹಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥಬಂಧು ವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು ॥77॥
೦೭೮ ಧರೆಯೊಳೀ ಹೊತ್ತಿನಲಿ ...{Loading}...
ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೊಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನ ಮಿ
ತ್ರರಲದಾವುದು ಕೊರತೆ ಕೌಂತೇ
ಯರನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳ್ ಎಂದ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹೊತ್ತಿನಲ್ಲಿ ಇಂದು ನಿನಗೆ ಐಶ್ವರ್ಯ, ಮಕ್ಕಳು, ವಿಜಯಲಕ್ಷ್ಮಿ ,ಸೋದರರು, ಅಮಾತ್ಯರು, ಭಂಡಾರ ಮುಂತಾದ ಸಪ್ತಾಂಗಗಳು, ಪತ್ನಿ, ಗುರು, ಪಿತಾಮಹ, ಬಂಧು-ಬಳಗ, ಮಿತ್ರರು ಹೀಗೆ ಯಾವುದಕ್ಕೆ ಕೊರತೆಯಿದೆ ? ಹೀಗಿರುವಾಗ ಪಾಂಡವರನ್ನು ಅನ್ಯರೆಂದು ಬಗೆದು ದಿಕ್ಕಿಲ್ಲದವರನ್ನಾಗಿ ಮಾಡಬಹುದೆ ?
ಪದಾರ್ಥ (ಕ.ಗ.ಪ)
ಎರವಿಗರು-ಹೊರಗಿನವರು
ಖಂಡೆಯ ಸಿರಿ-ಕತ್ತಿಯ ಬಲ,
ಸಪ್ತಾಂಗ-ಒಡೆಯ, ಮಂತ್ರಿ, ಜನಪದ, ಕೋಟೆ, ಸೈನ್ಯ, ಮಿತ್ರ ಮತ್ತು ಕೋಶ
ಮೂಲ ...{Loading}...
ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೊಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನ ಮಿ
ತ್ರರಲದಾವುದು ಕೊರತೆ ಕೌಂತೇ
ಯರನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳೆಂದ ॥78॥
೦೭೯ ಉಭಯಕುಲಶುದ್ಧಿಯಲಿ ಹೆಚ್ಚಿದ ...{Loading}...
ಉಭಯಕುಲಶುದ್ಧಿಯಲಿ ಹೆಚ್ಚಿದ
ವಿಭವದಲಿ ವಿಗ್ರಹದಲಧಿಕ
ಪ್ರಭೆಗಳಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಅಭವನಂಘ್ರಿಯ ಸೇವೆಯಲಿ ಹರಿ
ನಿಭನೆನಿಸಿ ಬದುಕುವನು ರಾಜ್ಯಕೆ
ವಿಭುವೆನಿಸುವನು ರಾಯ ಚಿತ್ತೈಸೆಂದನಾ ವಿದುರ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ-ತಾಯಿಯರ ವಂಶಕ್ಕೆ ಕೀರ್ತಿವಂತನಾಗಿ, ವೈಭವದಿಂದ ಬಾಳುತ್ತ ಯುದ್ಧದಲ್ಲಿ ಶೂರನೆನಿಸಿ ಸತ್ಯ, ಸಾಹಿತ್ಯ ವಿನಯಗಳಲ್ಲಿ ಪ್ರಬಲನೆನಿಸಿ, ಭಗವಂತನ ಪಾದಸೇವೆಯಲ್ಲಿ ನಿಷ್ಠನಾಗಿ ದೇವೇಂದ್ರನಂತೆ ಬಾಳುವವನು ರಾಜ್ಯಕ್ಕೆ ಒಡೆಯನೆನಿಸುವನು.
ಪದಾರ್ಥ (ಕ.ಗ.ಪ)
ವಿಭವ-ಸಂಪತ್ತು, ವಿಗ್ರಹ-ಕಾಳಗ, ಅಭವ-ಶಿವ, ನಿಭ-ಸಮಾನನಾದವನು, ಎಣೆ-ಸಮಾನ, ವಿಭು-ಒಡೆಯ
ಮೂಲ ...{Loading}...
ಉಭಯಕುಲಶುದ್ಧಿಯಲಿ ಹೆಚ್ಚಿದ
ವಿಭವದಲಿ ವಿಗ್ರಹದಲಧಿಕ
ಪ್ರಭೆಗಳಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿ
ಅಭವನಂಘ್ರಿಯ ಸೇವೆಯಲಿ ಹರಿ
ನಿಭನೆನಿಸಿ ಬದುಕುವನು ರಾಜ್ಯಕೆ
ವಿಭುವೆನಿಸುವನು ರಾಯ ಚಿತ್ತೈಸೆಂದನಾ ವಿದುರ ॥79॥
೦೮೦ ವೇಸಿಯಹ ಪರಿಯಙ್ಕದಲಿ ...{Loading}...
ವೇಸಿಯಹ ಪರಿಯಂಕದಲಿ ನಿಜ
ದಾಸಿಯಹ ಶಿಶ್ರೂಷೆಯಲಿ ನಿ
ರ್ದೋಷಿಯಹ ಪತಿಭಕ್ತಿಯಲಿ ಮೋಹದಲಿ ತಾಯೆನಿಸಿ
ಏಸು ಕಾರ್ಯಕೆ ಮಂತ್ರಿಯೆನಿಸುವ
ಮೈಸಿರಿಯನುಳ್ಳವಳು ರಾಣೀ
ವಾಸವೆಂದೆನಿಸುವಳೆಲೈ ಭೂಪಾಲ ಕೇಳ್ ಎಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಡದಿಯಾದವಳು ಏಕಕಾಲದಲ್ಲಿ ವೇಶ್ಯೆಯಂತೆ ಮನಸ್ಸನ್ನು ರಂಜಿಸಿ, ದಾಸಿಯಂತೆ ಉಪಚರಿಸಿ, ಪತಿ ಭಕ್ತಿಯಲ್ಲಿ ಕೊರತೆಯಿಲ್ಲದೆ, ವಾತ್ಸಲ್ಯದಲ್ಲಿ ತಾಯಿಯಂತೆ ಕಾರ್ಯದಲ್ಲಿ ಮಂತ್ರಿಯಂತೆ ಆಲೋಚಿಸುವ ಲಕ್ಷಣಗಳನ್ನುಳ್ಳವಳು ರಾಣಿ ಎನಿಸುವಳು.
ಪದಾರ್ಥ (ಕ.ಗ.ಪ)
ವೇಸಿಯ-ವೇಶ್ಯೆ, ಪರಿಯಂಕ-ಹಾಸಿಗೆ
ಮೂಲ ...{Loading}...
ವೇಸಿಯಹ ಪರಿಯಂಕದಲಿ ನಿಜ
ದಾಸಿಯಹ ಶಿಶ್ರೂಷೆಯಲಿ ನಿ
ರ್ದೋಷಿಯಹ ಪತಿಭಕ್ತಿಯಲಿ ಮೋಹದಲಿ ತಾಯೆನಿಸಿ
ಏಸು ಕಾರ್ಯಕೆ ಮಂತ್ರಿಯೆನಿಸುವ
ಮೈಸಿರಿಯನುಳ್ಳವಳು ರಾಣೀ
ವಾಸವೆಂದೆನಿಸುವಳೆಲೈ ಭೂಪಾಲ ಕೇಳೆಂದ ॥80॥
೦೮೧ ತನ್ದೆ ತಾಯಿಗಳಾಏ್ಞÉಯನು ...{Loading}...
ತಂದೆ ತಾಯಿಗಳಾಜ್ಞೆಯನು ಸಾ
ನಂದದಲಿ ಪಾಲಿಸುತ ಮದವನು
ಮುಂದುಗೆಡಿಸಿ ಸುಧರ್ಮದಲಿ ರಾಜ್ಯವನು ಪಾಲಿಸುತ
ಬಂಧು ಬಳಗವ ಸಲಹಿ ಭೂಸುರ
ವೃಂದವನು ನೆರೆ ಹೊರೆವಡೆವ ಸುತ
ವಂದ್ಯನೈ ಲೋಕಕ್ಕೆ ಚಿತ್ತೈಸೆಂದನಾ ವಿದುರ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ-ತಾಯಿಗಳ ಆಜ್ಞೆಯನ್ನು ಸಂತೋಷದಿಂದ ಪಾಲಿಸುತ್ತ, ವಿನಯದಿಂದ ನಡೆಯುತ್ತ, ಧರ್ಮದಿಂದ ರಾಜ್ಯವನ್ನು ಪಾಲಿಸುತ್ತ ಬಂಧು ಬಳಗವನ್ನು ಸಲಹಿ, ಬ್ರಾಹ್ಮಣರಿಗೆ ರಕ್ಷಣೆಯನ್ನೀಯುವ ಪುತ್ರನು ಲೋಕದಲ್ಲಿ ಪೂಜ್ಯನಾಗುತ್ತಾನೆ.
ಪದಾರ್ಥ (ಕ.ಗ.ಪ)
ನೆರೆ-ಚೆನ್ನಾಗಿ, ಹೊರೆ-ಕಾಪಾಡು
ಮೂಲ ...{Loading}...
ತಂದೆ ತಾಯಿಗಳಾಜ್ಞೆಯನು ಸಾ
ನಂದದಲಿ ಪಾಲಿಸುತ ಮದವನು
ಮುಂದುಗೆಡಿಸಿ ಸುಧರ್ಮದಲಿ ರಾಜ್ಯವನು ಪಾಲಿಸುತ
ಬಂಧು ಬಳಗವ ಸಲಹಿ ಭೂಸುರ
ವೃಂದವನು ನೆರೆ ಹೊರೆವಡೆವ ಸುತ
ವಂದ್ಯನೈ ಲೋಕಕ್ಕೆ ಚಿತ್ತೈಸೆಂದನಾ ವಿದುರ ॥81॥
೦೮೨ ಇಹಪರದ ಸುಖ ...{Loading}...
ಇಹಪರದ ಸುಖ ಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳ್ ಎಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಹಪರಗಳಲ್ಲಿ ಸುಖವನ್ನು ನೀಡುವಂತಹ ವಿಷಯಗಳನ್ನು ಸಂಗ್ರಹಿಸುತ್ತ ವೇದೋಕ್ತವಾದ ಆಚಾರಗಳನ್ನು ಆಚರಿಸುತ್ತ, ಸಮಸ್ತ ಕಲೆಗಳಲ್ಲಿ ಪಾರಂಗತನಾಗಿ ಶತ್ರುಗಳನ್ನು ಯುದ್ಧದಲ್ಲಿ ಜಯಿಸಿ, ಶರಣಾಗತರನ್ನು ರಕ್ಷಿಸತಕ್ಕವನು ರಾಜಪುತ್ರನಾಗಲು ಅರ್ಹನಾಗುತ್ತಾನೆ.
ಪದಾರ್ಥ (ಕ.ಗ.ಪ)
ಸನ್ನಿಹಿತನಾಗು-ತೊಡಗು, ಅಹಿತ-ವೈರಿ, ಕಳೆ-ಕಲೆ, ಅಭಿಜ್ಞ-ಬಲ್ಲವ
ಮೂಲ ...{Loading}...
ಇಹಪರದ ಸುಖ ಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ ॥82॥
೦೮೩ ಇನ್ದ್ರಿಯವನೊಡೆತುಳಿದು ...{Loading}...
ಇಂದ್ರಿಯವನೊಡೆತುಳಿದು ಕರ್ಮದ
ಬಂದಿಯನು ತಲೆಬಳಚಿ ವಿಷಯದ
ದಂದುಗವನೀಡಾಡಿ ಮಾಯಾ ಪಾಶವನು ಹರಿದು
ದ್ವಂದ್ವವಿರಹಿತನಾಗಿ ವಿಶ್ವದ
ಲೊಂದಿ ಮೆರೆಯಲು ಬಲ್ಲವನು ಗುರು
ವೆಂದೆನಿಸುವನು ರಾಯ ಚಿತ್ತೈಸೆಂದನಾ ವಿದುರ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಿಯಗಳನ್ನು ಜಯಿಸಿ, ಕರ್ಮದ ಕೋಟಲೆಗಳಿಗೆ ಸಿಲುಕದೆ, ವಿಷಯ ಸುಖಗಳನ್ನು ಕಿತ್ತೊಗೆದು, ಮಾಯಾಪಾಶವನ್ನು ಕತ್ತರಿಸಿ, ಸುಖದುಃಖಗಳ ದ್ವಂದ್ವವನ್ನು ಮೀರಿ, ಲೋಕದಲ್ಲಿ ಒಂದಾಗಿ ಖ್ಯಾತಿಯಾಗಲು ಬಲ್ಲವನು ಗುರುವೆನಿಸಲು ಅರ್ಹನಾಗುತ್ತಾನೆ.
ಪದಾರ್ಥ (ಕ.ಗ.ಪ)
ದಂದುಗ-ಉಪದ್ರವ, ಒಡೆತುಳಿ-ಚೆನ್ನಾಗಿತುಳಿ, ಬಂದಿ-ಕಟ್ಟು, ತಲೆಬಳಚು-ತಲೆಕತ್ತರಿಸು
ಮೂಲ ...{Loading}...
ಇಂದ್ರಿಯವನೊಡೆತುಳಿದು ಕರ್ಮದ
ಬಂದಿಯನು ತಲೆಬಳಚಿ ವಿಷಯದ
ದಂದುಗವನೀಡಾಡಿ ಮಾಯಾ ಪಾಶವನು ಹರಿದು
ದ್ವಂದ್ವವಿರಹಿತನಾಗಿ ವಿಶ್ವದ
ಲೊಂದಿ ಮೆರೆಯಲು ಬಲ್ಲವನು ಗುರು
ವೆಂದೆನಿಸುವನು ರಾಯ ಚಿತ್ತೈಸೆಂದನಾ ವಿದುರ ॥83॥
೦೮೪ ಒಡಲೊಡವೆ ಮೊದಲಾದುವೆಲ್ಲವ ...{Loading}...
ಒಡಲೊಡವೆ ಮೊದಲಾದುವೆಲ್ಲವ
ತಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳಗನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳ್ ಎಂದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಶರೀರವನ್ನೂ, ಧನವನ್ನೂ ಒಪ್ಪಿಸಿ, ಗುರುವಿನ ಪಾದಗಳನ್ನು ನಂಬಿ, ಗುರುವು ಕೊಟ್ಟ ಕೆಲಸಗಳೆಲ್ಲವನ್ನು ಬಿಡದೆ ಶ್ರದ್ಧೆಯಿಂದ ಮಾಡುತ್ತ, ಗುರುವಿಗೆ ಮಾರುತ್ತರವನ್ನು ಕೊಡದೆ, ತಪ್ಪದೆ ಭಯ-ಭಕ್ತಿಯಿಂದ ನಡೆಯಬಲ್ಲವನೇ ಶಿಷ್ಯನು.
ಮೂಲ ...{Loading}...
ಒಡಲೊಡವೆ ಮೊದಲಾದುವೆಲ್ಲವ
ತಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳಗನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳೆಂದ ॥84॥
೦೮೫ ಯುಕುತಿವಿದರುಗಳಾಗಿ ವಿದ್ಯಾ ...{Loading}...
ಯುಕುತಿವಿದರುಗಳಾಗಿ ವಿದ್ಯಾ
ಧಿಕರೆನಿಸಿ ಸಮಬುದ್ಧಿಗಳ ನಾ
ಟಕವ ನಟಿಸುತ ಪರಮ ತತ್ವಜ್ಞಾನಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳ್ ಎಂದ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾಸ್ತ್ರ ಸಮ್ಮತವಾದ ಯುಕ್ತಿಗಳನ್ನು ಬಲ್ಲವರಾಗಿ, ವಿದ್ಯಾವಂತರೆನಿಸಿಕೊಂಡು ಸಮಬುದ್ಧಿಯಿಂದ ತತ್ವಜ್ಞಾನಿಗಳೂ, ಸಕಲ ಕಲಾಭಿಜ್ಞರೂ, ಧಾರ್ಮಿಕರು, ಮೋಕ್ಷ ಮಾರ್ಗದಲ್ಲಿರತಕ್ಕವರು ವೇದಾರ್ಥಗಳನ್ನು ಬಲ್ಲವರು - ವಿದ್ವಾಂಸರೆನಿಸಿಕೊಳ್ಳುತ್ತಾರೆ.
ಪದಾರ್ಥ (ಕ.ಗ.ಪ)
ವಿದ-ತಿಳಿದ, ಕಳೆ-ಕಲೆ, ಅಭಿಜ್ಞ-ತಿಳಿದವರು
ನಟಿಸು - ಆಚರಿಸು
ಮೂಲ ...{Loading}...
ಯುಕುತಿವಿದರುಗಳಾಗಿ ವಿದ್ಯಾ
ಧಿಕರೆನಿಸಿ ಸಮಬುದ್ಧಿಗಳ ನಾ
ಟಕವ ನಟಿಸುತ ಪರಮ ತತ್ವಜ್ಞಾನಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳೆಂದ ॥85॥
೦೮೬ ದಣ್ಡನೀತಿ ಸ್ಮಾರ್ತ ...{Loading}...
ದಂಡನೀತಿ ಸ್ಮಾರ್ತ ಶೌಚೋ
ದ್ದಂಡ ವೇದಾಧ್ಯಯನ ನಿಪುಣನ
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮದೀಧಿತನ
ಚಂಡ ದೈವಜ್ಞನನಧಿಕ ಗುಣ
ಮಂಡನನ ಬಹುಶಾಸ್ತ್ರಪಠಣನ
ಪಂಡಿತನ ಪೌರೋಹಿತನ ಮಾಡುವುದರಸ ಕೇಳ್ ಎಂದ ॥86॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಕೇಳು, ರಾಜನೀತಿ, ಸ್ಮೃತಿಸಹಿತವಾದ ವೇದಾಧ್ಯಯನಗಳಲ್ಲಿ ನಿಪುಣನಾಗಿ, ಪಂಡಿತರಿಗೆ ಪ್ರಿಯನಾಗಿ, ಶಾಂತಿ-ಪೌಷ್ಠಿಕಕರ್ಮಗಳಲ್ಲಿ ದಕ್ಷನಾಗಿ, ಜ್ಯೋತಿಷಿಯಾಗಿ, ಅಧಿಕಗುಣಶಾಲಿಯಾಗಿ ಅನೇಕ ಶಾಸ್ತ್ರಗಳನ್ನು ಓದಿಕೊಂಡಿರತಕ್ಕ ಪಂಡಿತನನ್ನು ಪುರೋಹಿತನನ್ನಾಗಿ ಮಾಡಬೇಕು.
ಪದಾರ್ಥ (ಕ.ಗ.ಪ)
ಸ್ಮಾರ್ತ-ಸ್ಮೃತಿಯನ್ನು ಅರಿತವನು,
ಶೌಚ-ಶುದ್ಧಿ, ದೀಧಿತ-ಬೆಳಗುವವನು
ಮೂಲ ...{Loading}...
ದಂಡನೀತಿ ಸ್ಮಾರ್ತ ಶೌಚೋ
ದ್ದಂಡ ವೇದಾಧ್ಯಯನ ನಿಪುಣನ
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮದೀಧಿತನ
ಚಂಡ ದೈವಜ್ಞನನಧಿಕ ಗುಣ
ಮಂಡನನ ಬಹುಶಾಸ್ತ್ರಪಠಣನ
ಪಂಡಿತನ ಪೌರೋಹಿತನ ಮಾಡುವುದರಸ ಕೇಳೆಂದ ॥86॥
೦೮೭ ಸ್ಥೂಲಸೂಕ್ಷ ್ಮ ...{Loading}...
ಸ್ಥೂಲಸೂಕ್ಷ ್ಮ ಕೃತಜ್ಞನುತ್ಸವ
ಶೀಲನಕ್ರೋಧಿಯನ ದೀರ್ಘ ವಿ
ಶಾಲ ಸೂತ್ರಿಯ ವೃದ್ಧಸೇವಕ ಸತ್ಯ ವಾಕ್ಶುಚಿಯ
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ಸತ್ಕೃತಿ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾರ್ಯದಲ್ಲಿನ ಸೂಕ್ಷ್ಮ - ಸ್ಥೂಲತೆಗಳನ್ನು ಬಲ್ಲವನೂ, ಉತ್ಸಾಹಶಾಲಿಯೂ ಶಾಂತಸ್ವಭಾವದವನೂ, ಸಾವಕಾಶವಾಗಿ ಕಾರ್ಯವನ್ನು ಮಾಡುವವನೂ, ಹಿರಿಯರ ಸೇವೆಗೆ ನಿಲ್ಲಬಲ್ಲವನೂ, ಒಳ್ಳೆಯ ಮಾತನಾಡುವವನೂ, ಸತ್ಯವಂತನೂ ಪರಿಶುದ್ಧನೂ ಕಾಲಾಕಾಲಗಳನ್ನು ಬಲ್ಲವನೂ ವಿನೀತನೂ, ದುಷ್ಟ ವ್ಯಸನಗಳಿಲ್ಲದವನು ರಾಜರಹಸ್ಯಗಳನ್ನು ಹೊರಗೆ ಬಿಡದೇ, ಸತ್ಕರ್ಮಗಳಿಂದ ಕೂಡಿದ ಮಂತ್ರಿ ನಿನಗೆ ಉಂಟೆ ? ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಸ್ಥೂಲ-ನಿಖರವಲ್ಲದ, ಅಕ್ರೋಧಿ-ಸಿಟ್ಟಿಲ್ಲದ, ಸೂಕ್ಮ-ನಿಖರವಾದ, ವಿನೀತ-ನಮ್ರ, ಸೂರಿ-ಪಂಡಿತ, ಅನ್ವಿತ-ಕೂಡಿ
ಮೂಲ ...{Loading}...
ಸ್ಥೂಲಸೂಕ್ಷ ್ಮ ಕೃತಜ್ಞನುತ್ಸವ
ಶೀಲನಕ್ರೋಧಿಯನ ದೀರ್ಘ ವಿ
ಶಾಲ ಸೂತ್ರಿಯ ವೃದ್ಧಸೇವಕ ಸತ್ಯ ವಾಕ್ಶುಚಿಯ
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ಸತ್ಕೃತಿ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ ॥87॥
೦೮೮ ತುರುಗ ಗಜ ...{Loading}...
ತುರುಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹನ ಜಿತಶ್ರಮ
ನರಿಕಟಕ ಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರಸದಾರನನೂಧ್ರ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳ್ ಎಂದ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವ, ಗಜ ಮತ್ತು ಸೈನಿಕರ ಬಲಾಬಲಗಳನ್ನು ತಿಳಿದುಕೊಳ್ಳಬಲ್ಲವನೂ, ಆಯಾಸವನ್ನರಿಯದ ರಣೋತ್ಸಾಹಿಯೂ, ವೈರಿಸೇನೆಯನ್ನು ನಾಶಗೊಳಿಸಬಲ್ಲ ದಕ್ಷನೂ ನಾನಾ ಆಯುಧ ಪ್ರಯೋಗ ವಿಶಾರದನೂ, ಧೀರನೂ, ಸ್ವಾಮಿಭಕ್ತನೂ ಉತ್ಸಾಹಿಯೂ ಆದವನನ್ನು ಸೇನಾಪತಿಯನ್ನಾಗಿ ಮಾಡಬೇಕು.
ಪದಾರ್ಥ (ಕ.ಗ.ಪ)
ಅಳವು-ಸಾಮಥ್ರ್ಯ,
ಜಿತಶ್ರಮ-ದಣಿವಿಲ್ಲದ,
ಅರಿಕಟಕ-ಹಗೆಯಸೈನ್ಯ,
ಊಧ್ರ್ವ-ಸೆಟೆದ
ಮೂಲ ...{Loading}...
ತುರುಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹನ ಜಿತಶ್ರಮ
ನರಿಕಟಕ ಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರಸದಾರನನೂಧ್ರ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳೆಂದ ॥88॥
೦೮೯ ತಿಳಿದವನ ಮತಿವಿದನ ...{Loading}...
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರನ ಮಂ
ಡಳಿಕ ಸಾವಂತರ ವಿಶೇಷದಲವಸರವನರಿದು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕರ ದುಷ್ಕರ
ತಿಳಿವ ಹೃದಯನ ಸಂಧಿವಿಗ್ರಹರೆನಿಸಬೇಕೆಂದ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವೇಚನಾ ಶೀಲನಾಗಿ, ಪರರ ಮನಸ್ಸನ್ನು ತಿಳಿಯುವ ಸೂಕ್ಷ್ಮಗ್ರಾಹಿಯಾಗಿ, ವಿವಿಧ ಭಾಷೆಗಳನ್ನು, ಲಿಪಿಗಳನ್ನು ತಿಳಿದವನಾಗಿ, ಸಾಮಂತರೇ ಮೊದಲಾದ ವರನ್ನು ಯಾವಾಗ ಕಾಣಬೇಕು - ಕರೆಸಬೇಕೆಂಬುದನ್ನು ಅರಿತವನಾಗಿ, ಯಾವುದು ಸುಲಭ, ಯಾವುದು ಕಷ್ಟ ಎಂಬುದನ್ನು ತಿಳಿಯುವ ಸಹೃದಯಿಯನ್ನು ರಾಯಭಾರಿಯನ್ನಾಗಿ ನೇಮಿಸಬೇಕು.
ಪದಾರ್ಥ (ಕ.ಗ.ಪ)
ಅವಳಿ-ಗುಂಪು, ಬಳಗ, ಲಿಪಿಜ್ಞ-ಬರಹ ಬಲ್ಲವನ್ನು (ಅಕ್ಷರಜ್ಞ), ಬಲುಹು-ಯೋಗ್ಯತೆ, ಸಂಧಿವಿಗ್ರಹ-ರಠಯಭಾರಿ
ಮೂಲ ...{Loading}...
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರನ ಮಂ
ಡಳಿಕ ಸಾವಂತರ ವಿಶೇಷದಲವಸರವನರಿದು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕರ ದುಷ್ಕರ
ತಿಳಿವ ಹೃದಯನ ಸಂಧಿವಿಗ್ರಹರೆನಿಸಬೇಕೆಂದ ॥89॥
೦೯೦ ಮಿಸುಪ ಮಣಿಗಣ ...{Loading}...
ಮಿಸುಪ ಮಣಿಗಣ ಲೋಹ ಕಾಂಚನ
ವಿಸರ ಭೇದವನರಿವ ಕೊಟ್ಟುದ
ನಸಿಯಲೀಯದೆ ತಾನು ಭಕ್ಷಿಸದಹಿ ನಿಧಾನವನು
ಒಸೆದು ಕಾದಿಪ್ಪಂತೆ ಕಾದಿಹ
ಹುಸಿಯದಾಪ್ತನ ಬಹುಕುಟುಂಬ
ವ್ಯಸನವುಳ್ಳನ ಮಾಳ್ಪುದೈ ಭಂಡಾರ ರಕ್ಷಕನ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರತ್ನ, ಚಿನ್ನ, ಕಬ್ಬಿಣ ಮುಂತಾದ ಲೋಹಗಳ ಸಮೂಹದಲ್ಲಿ ಭೇದವನ್ನು ತಿಳಿಯಬಲ್ಲ, ತನ್ನ ವಶಕ್ಕೆ ಬಂದ ಹಣವನ್ನು ಕ್ಷಯಿಸದಂತೆಯೂ, ತಾನು ಬಳಸದಂತೆಯೂ ಸರ್ಪವು ನಿಧಿಯನ್ನು ಕಾಯುವಂತೆ ಕಾಯಬಲ್ಲ, ಸುಳ್ಳು ಹೇಳದ ಆಪ್ತನೂ ದೊಡ್ಡ ಕುಟುಂಬಿಯೂ ಆದವನನ್ನು ಭಂಡಾರ ರಕ್ಷಕ(ಕೋಶಾಧಿಕಾರಿ)ನನ್ನಾಗಿ ನೇಮಿಸಬೇಕು.
ಪದಾರ್ಥ (ಕ.ಗ.ಪ)
ಮಿಸುಪ-ಹೊಳೆಯುವ, ವಿಸರ-ಗುಂಪು, ನಸಿ-ಕೆಡು, ಅಹಿ-ಹಾವು, ನಿಧಾನ-ನಿಧಿ, ಒಸೆ-ಪ್ರೀತಿಸು
ಪಾಠಾನ್ತರ (ಕ.ಗ.ಪ)
ಮಿಸುಪ ಮಣಿಗಣ - ವಸನ ಮಣಿಗಣ ಎಂಬ ಪಾಠಾಂತರವೂ ಇದೆ.
ಉದ್ಯೋಗಪರ್ವ, ಓರಿಯೆಂಟಲ್ ಲೈಬ್ರರಿ ಮುದ್ರಣ
ಮೂಲ ...{Loading}...
ಮಿಸುಪ ಮಣಿಗಣ ಲೋಹ ಕಾಂಚನ
ವಿಸರ ಭೇದವನರಿವ ಕೊಟ್ಟುದ
ನಸಿಯಲೀಯದೆ ತಾನು ಭಕ್ಷಿಸದಹಿ ನಿಧಾನವನು
ಒಸೆದು ಕಾದಿಪ್ಪಂತೆ ಕಾದಿಹ
ಹುಸಿಯದಾಪ್ತನ ಬಹುಕುಟುಂಬ
ವ್ಯಸನವುಳ್ಳನ ಮಾಳ್ಪುದೈ ಭಂಡಾರ ರಕ್ಷಕನ ॥90॥
೦೯೧ ಮನ ವಚನ ...{Loading}...
ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾ ನತಮುಖನ ನಿಷ್ಕಳಿತ ರೋಷಕನ
ಮುನಿವವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಂಬೂಲಧಾರಕನು ಮನೋವಾಕ್ಕಾಯುಗಳಲ್ಲಿ ಉದಾರಿಯೂ, ವಿನಯಶೀಲನೂ ಸ್ತ್ರೀಯರೆದುರಿಗೆ ತಲೆ ತಗ್ಗಿಸಿ ನಡೆಯತಕ್ಕವನೂ, ಕೋಪರಹಿತನೂ ಮತ್ತೊಬ್ಬರ ಕೋಪಕ್ಕೆ ಸಿಲುಕದವನೂ, ವಿಶೇಷ ಕಲಾಪರಿಣತನೂ ಆಗಿರಬೇಕು.
ಪದಾರ್ಥ (ಕ.ಗ.ಪ)
ದಾತಾರ-ಒಡೆಯ, ವಿನುತ-ಹೊಗಳಲ್ಪಡುವ/ಸ್ತುತಿಗೊಂಡ, ವಿನೀತ-ಸರಳ/ನಿರಾಡಂಬರ, ರೋಷಕ-ಸಿಟ್ಟಿನವನು, ನಿಷ್ಕಳಿತ-ಕಳೆದ, ಕಳಾಪ್ರವೀಣ-ಕಲೆಗಳನ್ನು ಬಲ್ಲವನು
ಮೂಲ ...{Loading}...
ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾ ನತಮುಖನ ನಿಷ್ಕಳಿತ ರೋಷಕನ
ಮುನಿವವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ ॥91॥
೦೯೨ ಪಿತೃ ಪಿತಾಮಹ ...{Loading}...
ಪಿತೃ ಪಿತಾಮಹ ಸೂಪ ಶಾಸ್ತ್ರಾ
ಯುತನ ಕೈಕರಣೆಗಳಲಧಿಕನ
ನತಿ ಶುಚಿಯ ಸಾಧಕನನಕ್ರೋಧಿಯನನಾಲಸನ
ಪತಿಹಿತನ ಷಡುರಸ ವಿಶೇಷಾ
ನ್ವಿತನನಿತರಾಲಯವಿದೂರನ
ಪತಿಕರಿಸುವುದು ಸೂಪಕಾರತೆಗರಸ ಕೇಳ್ ಎಂದ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಂಪರೆಯಿಂದಲೂ ಪಾಕಶಾಸ್ತ್ರದಲ್ಲಿ ನುರಿತವನೂ, ಕೈ ಮತ್ತು ಸಲಕರಣೆಗಳನ್ನು ಉಪಯೋಗಿಸುವುದರಲ್ಲಿ ಚತುರನೂ, ಅತಿಶುಚಿವಂತನೂ, ಸಾಧಕನೂ, ಕ್ರೋಧವಿಲ್ಲದವನೂ, ಆಲಸ್ಯವಿಲ್ಲದವನೂ, ಒಡೆಯನಿಗೆ ಹಿತಬಯಸುವವನೂ, ಷಡ್ರಸವನ್ನು ಬಳಸುವುದರಲ್ಲಿ ನಿಪುಣನೂ, ಇತರರ ಮನೆಗೆ ಹೋಗದಿರುವಂತಹವನೂ ಆದ ವ್ಯಕ್ತಿಯನ್ನು ಅಡುಗೆ ಕೆಲಸಕ್ಕೆ ನೇಮಿಸಬೇಕು.
ಪದಾರ್ಥ (ಕ.ಗ.ಪ)
ಸೂಪಶಾಸ್ತ-ಪಾಕಶಾಸ್ತ್ರ (ಅಡುಗೆ ವಿದ್ಯೆ),
ಕೈಕರಣೆ-ಕೈಮಾಟ (ಕೈಚಳಕ),
ಅನಾಲಸ-ಆಲಸ್ಯವಿಲ್ಲದವನು
ಷಡುರಸ-ಸಿಹಿ, ಕಹಿ, ಉಪ್ಪು, ಖಾರ, ಹುಳಿ, ಒಗರ, ಎಂಬ ಆರು ರಸಗಳು,
ಪತಿಕರಿಸು-ಒಪ್ಪಿಕೊಳ್ಳುವುದು
ಸೂಪಕಾರತೆ - ಅಡುಗೆ ಕೆಲಸ
ಮೂಲ ...{Loading}...
ಪಿತೃ ಪಿತಾಮಹ ಸೂಪ ಶಾಸ್ತ್ರಾ
ಯುತನ ಕೈಕರಣೆಗಳಲಧಿಕನ
ನತಿ ಶುಚಿಯ ಸಾಧಕನನಕ್ರೋಧಿಯನನಾಲಸನ
ಪತಿಹಿತನ ಷಡುರಸ ವಿಶೇಷಾ
ನ್ವಿತನನಿತರಾಲಯವಿದೂರನ
ಪತಿಕರಿಸುವುದು ಸೂಪಕಾರತೆಗರಸ ಕೇಳೆಂದ ॥92॥
೦೯೩ ನಿಶಿತ ಪರಿಮಳ ...{Loading}...
ನಿಶಿತ ಪರಿಮಳ ಮೋದದಿಂ ಮೋ
ದಿಸುವ ಗಂಧದ್ರವ್ಯದಲಿ ಪಂ
ಠಿಸಿದ ಜೀವನ ಜೀವ ತನ್ನಯ ಜೀವನವೆಯೆಂದು
ವಸುಮತೀಶರಿಗಿತ್ತು ತಾ ಭೋ
ಗಿಸದೆ ಬಳಸದೆ ರಾಜನನೋಲ
ಗಿಸುವವನೆ ಪಾನೀಯಧಾರಕನರಸ ಕೇಳ್ ಎಂದ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಿಗೆ ಪಾನೀಯವನ್ನು ಸಿದ್ಧಪಡಿಸಿ ನೀಡತಕ್ಕವನು, ಉತ್ತಮ ಪರಿಮಳದಿಂದ ಆನಂದಿಸತಕ್ಕವನು, ಸುಗಂಧ ದ್ರವ್ಯವನ್ನು ಬಳಸುವ ರಾಜನ ಜೀವವೇ ತನ್ನ ಜೀವನಕ್ಕೆ ಆಧಾರವೆಂದು ಭಾವಿಸತಕ್ಕವನು, ತಾನು ತಯಾರಿಸಿದ ಪಾನೀಯವನ್ನು ತಾನು ಕುಡಿಯದೆ ರಾಜನಿಗಿತ್ತು ಅವನ ಸೇವೆಯನ್ನು ಮಾಡುವವನು ಉತ್ತಮವಾದ ಪಾನೀಯಧಾರಕನು.
ಪದಾರ್ಥ (ಕ.ಗ.ಪ)
ನಿಶಿತ-ಚುರುಕು, ಮೋದಿಸು-ತಣಿಸು, ಪಂಠಿಸು-ಸುತ್ತುವರಿ, ವಸುಮತಿ-ಭೂಮಿ
ಮೂಲ ...{Loading}...
ನಿಶಿತ ಪರಿಮಳ ಮೋದದಿಂ ಮೋ
ದಿಸುವ ಗಂಧದ್ರವ್ಯದಲಿ ಪಂ
ಠಿಸಿದ ಜೀವನ ಜೀವ ತನ್ನಯ ಜೀವನವೆಯೆಂದು
ವಸುಮತೀಶರಿಗಿತ್ತು ತಾ ಭೋ
ಗಿಸದೆ ಬಳಸದೆ ರಾಜನನೋಲ
ಗಿಸುವವನೆ ಪಾನೀಯಧಾರಕನರಸ ಕೇಳೆಂದ ॥93॥
೦೯೪ ಉನ್ನತನ ರೂಪಾಧಿಕನ ...{Loading}...
ಉನ್ನತನ ರೂಪಾಧಿಕನ ಸಂ
ಪೂರ್ಣದಕ್ಷನನನ್ಯರೆನ್ನವ
ರೆನ್ನದನ ಪರರಿಂಗಿತಾಕಾರ ಪ್ರಭೇದಕನ
ಮನ್ನಣೆಗೆ ಬೆರೆಯದನನಾಪ್ತನ
ನನ್ಯ ಕಾರ್ಯೋಚಿತ ಸಮಪ್ರತಿ
ಪನ್ನ ಪಡಿಹಾರಕನ ಮಾಡುವುದರಸ ಕೇಳ್ ಎಂದ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉನ್ನತವ್ಯಕ್ತಿತ್ವದ, ಒಳ್ಳೆಯ ರೂಪವನ್ನುಳ್ಳ, ಪರರು - ತನ್ನವರೆಂಬ ಭೇದವಿಲ್ಲದೇ ಜನರನ್ನು ನೋಡಿದೊಡನೆ ಅವರ ಇಂಗಿತ ತಿಳಿಯಬಲ್ಲವನೂ, ಜನರ ಸ್ತುತಿಗೆ ಗರ್ವಿಸದೆ ಬಂದ ಕಾರ್ಯವನ್ನು ಅರಿತುಕೊಳ್ಳುವ ವ್ಯಕ್ತಿಯನ್ನು ದ್ವಾರಪಾಲಕನನ್ನಾಗಿ ನಿಯಮಿಸಬೇಕು.
ಪದಾರ್ಥ (ಕ.ಗ.ಪ)
ಉನ್ನತ-ಎತ್ತರದ, ಪ್ರಭೇದಕ-ಅರಿಯುವವ, ಪ್ರತಿಪನ್ನ-ಬಲ್ಲ
ಮೂಲ ...{Loading}...
ಉನ್ನತನ ರೂಪಾಧಿಕನ ಸಂ
ಪೂರ್ಣದಕ್ಷನನನ್ಯರೆನ್ನವ
ರೆನ್ನದನ ಪರರಿಂಗಿತಾಕಾರ ಪ್ರಭೇದಕನ
ಮನ್ನಣೆಗೆ ಬೆರೆಯದನನಾಪ್ತನ
ನನ್ಯ ಕಾರ್ಯೋಚಿತ ಸಮಪ್ರತಿ
ಪನ್ನ ಪಡಿಹಾರಕನ ಮಾಡುವುದರಸ ಕೇಳೆಂದ ॥94॥
೦೯೫ ಗ್ರಾಮ ಮೂರರ ...{Loading}...
ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಹೆಂಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಯಲ್ಲಿ ಸ
ನಾಮನೆನಿಸುವನವನೆ ಗಾಯಕನರಸ ಕೇಳ್ ಎಂದ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ದೊರೆಯೆ, ಷಡ್ಜ, ಮಧ್ಯಮ, ಗಾಂಧಾರ ಈ ಸ್ವರಗ್ರಾಮಗಳಲ್ಲಿ ಸಪ್ತಸ್ವರಗಳ ಆರೋಹಣ ಅವರೋಹಣÉಗಳಲ್ಲಿ ಗಮಕ ಮತ್ತು ಜಾರುಗಳಲ್ಲಿ ನಿಪುಣನಾಗಿ ಕೋಮಲ ಶಾರೀರವನ್ನು ಹೊಂದಿ ಮನೋಹರವಾದ ರಚನೆಗ¼ನ್ನು ಹಾಡುವವನೇ ನಿಜವಾದ ಗಾಯಕನು.
ಟಿಪ್ಪನೀ (ಕ.ಗ.ಪ)
ಗ್ರಾಮತ್ರಯ-ಮತಂಗನ ಹೇಳಿಕೆಯಂತೆ ಯಾವುದಾದರೊಂದು ಆಧಾರ ಸ್ವರದಿಂದ ಸ್ವರ ಸಪ್ತಕವನ್ನು ಪೂರೈಸಿದರೆ ಅದು ಗ್ರಾಮವೆನಿಸುತ್ತದೆ. ಪುರಾತನ ಸಂಗೀತದ ಷಡ್ಜ, ಮಧ್ಯಮ ಮತ್ತು ಗಾಂಧಾರ ಗ್ರಾಮಗಳು, ಗ್ರಾಮ ತ್ರಯಗಳು,
ಷಡ್ಜ-ಸಪ್ತ ಸ್ವರಗಳಲ್ಲಿ ಪ್ರಥಮಸ್ವರ, ಇದರ ಸಂಕೇತಾಕ್ಷರವು ‘ಸ’. ಸಪ್ತ ಸ್ವರಗಳಲ್ಲಿ ರಿಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ ಮತ್ತು ನಿಷಾದವೆಂಬ ಆರು ಸ್ವರಗಳು. ಆಧಾರ ಸ್ವರವಾದ ‘ಸ’ ಎಂಬುದರಿಂದ ಹುಟ್ಟಿರುವುದರಿಂದ ಇದಕ್ಕೆ ‘ಷಡ್ಜ’ ವೆಂದು ಹೆಸರು.
ಮಧ್ಯಮ-ಸಪ್ತ ಸ್ವರಗಳಲ್ಲಿ ನಾಲ್ಕನೆಯ ಸ್ವರ. ಸ್ವರ ಸಪ್ತಕಗಳಲ್ಲಿ ಮಧ್ಯ ಸ್ಥಾನದಲ್ಲಿರುವುದರಿಂದ ಮಧ್ಯಮವೆನಿಸಿಕೊಂಡಿದೆ.
ಗಾಂಧಾರ-ಸಪ್ತಸ್ವರಗಳಲ್ಲಿ ಮೂರನೆಯ ಸ್ವರ. ಇದು ಗಾಂಧರ್ವ ಸುಖವನ್ನು ಕೊಡುವುದರಿಂದ ಇದಕ್ಕೆ ಗಾಂಧಾರವೆಂದು ಹೆಸರು.
ಸಪ್ತಸ್ವರಗಳು-ಶ್ರುತಿಗಳಿಂದ ಆವಿರ್ಭಾವ ಹೊಂದಿರುವ ಏಳು ಸ್ವರಗಳಾದ ಷಡ್ಜ, ರಿಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ ಮತ್ತು ನಿಷಾದ ಇವುಗಳ ಹೆಸರು. ಮೊಟ್ಟ ಮೊದಲು ನಾರದ ಪರಿವ್ರಾಜಕ ಉಪನಿಷತ್ಗಳಲ್ಲಿ ಕಂಡುಬರುತ್ತದೆ. ಇವುಗಳ ನಾಮ ಸಂಕೇತಗಳು ಸ,ರಿ,ಗ,ಮ,ಪ,ದ,ನಿ.
ಷಡ್ಜ-ಇತರ ಆರುಸ್ವರಗಳ ಆವಾಸಸ್ಥಾನ. ಇದು ಮನುಷ್ಯನ ದೇಹದಲ್ಲಿ ನಾಭಿಯಿಂದ ಉತ್ಪತ್ತಿಯಾಗುವ ನಾದ, ನಾಸಿಕ, ಕಂಠ, ಉರಸ್ಸು, ಕಾಲು (ಅಂಗುಳು) ಜಿಹ್ವೆ, ದಂತ, ಎಂಬ ಆರು ಸ್ಥಾನಗಳ ಮುಖೇನ ಹೊರ ಬೀಳುವ ಶಬ್ಧ ವಿಶೇಷ - ನವಿಲಿನ ಕೇಕೆಯು ಷಡ್ಜವನ್ನು ಸೂಚಿಸುತ್ತದೆ. ರೌದ್ರರಸವನ್ನು ಪ್ರತಿಪಾದಿಸುತ್ತದೆ.
ರಿಷಭ-ಶೀಘ್ರವಾಗಿಹೃದಯ ತಲಸ್ಪರ್ಶಮಾಡುವ ಧ್ವನಿ ವಿಶೇಷ ಎತ್ತಿನ ಕೂಗು ರಿಷಭವನ್ನು ಸೂಚಿಸುತ್ತದೆ. ವೀರ ರಸವನ್ನು ಪ್ರತಿಪಾದಿಸುತ್ತದೆ.
ಗಾಂಧಾರ-ಉಚ್ಛಾರಣೆ ಮಾಡುವಾಗ ಸುಖಾನುಭವವನ್ನುಂಟು ಮಾಡುವ ಶಬ್ಧ, ಕುರಿ ಮುಂತಾದವುಗಳ ಕೂಗು ಗಾಂಧಾರವನ್ನು ಸೂಚಿಸುತ್ತದೆ. ಕರುಣ ಮತ್ತು ಶಾಂತ ರಸಗಳನ್ನು ಪ್ರತಿಪಾದಿಸುತ್ತದೆ.
ಮಧ್ಯಮ-ಸ್ವರ ಸಪ್ತಕದ ಸ್ಥಾನವನ್ನು ಹೊಂದಿ ನಾಲ್ಕನೆಯ ಸ್ವರವಾಯಿತು. ಕ್ರೌಂಚ ಪಕ್ಷಿಯ ಕೂಗನ್ನು ಸೂಚಿಸುತ್ತದೆ. ಹಾಸ್ಯರಸವನ್ನು ಪ್ರತಿಪಾದಿಸುತ್ತದೆ.
ಪಂಚಮ-ಐದನೆಯ ಸ್ವರ, ರಾಗದ ವಿಸ್ತರಣೆಗೆ ಯೋಗ್ಯವಾದ ಸ್ವರವಾದುದರಿಂದ ಪಂಚಮವೆನಿಸಿಕೊಂಡಿದೆ. ವಸಂತ ಕಾಲದಲ್ಲಿ ಕೋಗಿಲೆಯ ಧ್ವನಿ, ಪಂಚಮವನ್ನು ಸೂಚಿಸುತ್ತದೆ. ಶೃಂಗಾರ ರಸವನ್ನು ಪ್ರತಿಪಾದಿಸುತ್ತದೆ.
ದೈವತ-ಧ್ವನಿ ದಾಢ್ರ್ಯತೆಯನ್ನು ಹೊಂದಿ ವೀರರಸ ಪ್ರಚೋದಕವಾಗಿರುವುದರಿಂದ ದೈವತವೆನಿಸುತ್ತದೆ. ಕುದುರೆಯ ಹೇಷಾರವವು ದೈವತವನ್ನು ಸೂಚಿಸುತ್ತದೆ. ಬೀಭತ್ಸ ಮತ್ತು ಭಯಾನಕ ರಸಗಳನ್ನು ಪ್ರತಿಪಾದಿಸುತ್ತದೆ.
ನಿಷಾದ-ಸಪ್ತ ಸ್ವರಗಳಲ್ಲಿ ಕೊನೆಯಸ್ವರ ಆನೆಯು ಘೀಳಿಡುವ ಧ್ವನಿ ನಿಷಾದವನ್ನು ಸೂಚಿಸುತ್ತದೆ. ಅದ್ಭುತರಸವನ್ನು ಪ್ರತಿಪಾದಿಸುತ್ತದೆ.
ಮೂಲ ...{Loading}...
ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಹೆಂಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಯಲ್ಲಿ ಸ
ನಾಮನೆನಿಸುವನವನೆ ಗಾಯಕನರಸ ಕೇಳೆಂದ ॥95॥
೦೯೬ ತಾಳಲಯ ಬೊಮ್ಬಾಳ ...{Loading}...
ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ಠಾಯ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೆ ಕೇಳು, ಉತ್ತಮ ಗಾಯಕನೆಂದರೆ ತಾಳದಲ್ಲಿಯೂ, ಗತಿಯಲ್ಲಿಯೂ ಉಚ್ಛಶ್ರುತಿ (ಬೊಂಬಾಳ)ಯನ್ನು ಅವಲಂಬಿಸುವುದರಲ್ಲಿಯೂ, ಸ್ಥಾಯಿಶುದ್ಧವಾಗಿಯೂ ಸಾಳಗವೇ ಮೊದಲಾದ ಸಂಕೀರ್ಣ ರಾಗಗಳ ಮತ್ತು ಶುದ್ಧ ದೇಶೀಯಾ ರಾಗಗಳ ವಿವಿಧ ರೀತಿಯ ಕೃತಿಗಳಲ್ಲಿ ಸಾಹಿತ್ಯ ರಚನೆಗಳ ನಿಪುಣನು, ಹಾಡುಗಾರಿಕೆಯ ಜೊತೆಗೆ ಹಿಮ್ಮೇಳದ ವಾದ್ಯ ಸಾಧನಗಳನ್ನು ಹದವರಿತು ಉಪಯೋಗಿಸಿಕೊಳ್ಳಬಲ್ಲವನು. ಶುದ್ಧ ಮಾರ್ಗ ರೀತಿಯ ಸಾಹಿತ್ಯದ ವಿವಿಧ ಪ್ರಕಾರಗಳ ಛಂದಸ್ಸು ಗತಿಗಳನ್ನು ಅರಿತಿರಬೇಕು.
ಪದಾರ್ಥ (ಕ.ಗ.ಪ)
ಠಾಯ -ಸಂಗೀತದ ರಚನ
ಟಿಪ್ಪನೀ (ಕ.ಗ.ಪ)
ತಾಳ-ಹಾಡುವಾಗ ಗೀತೆ ಅಥವಾ ಕೀರ್ತನೆಯ ಕಾಲ ಪ್ರಮಾಣವನ್ನು ಕೈಯಿಂದಾಗಲೀ, ತಾಳ ಯಂತ್ರಗಳಿಂದಾಗಲೀ ಹೊಡೆದು ತೋರಿಸುವುದಕ್ಕೆ ತಾಳವೆಂದು ಹೆಸರು. “ಶ್ರುತಿರ್ಮಾತಾ ಲಯಃ ಪಿತಾ” ಎಂಬಂತೆ ಲಯವು ಸಂಗೀತಕ್ಕೆ ಪಿತೃ ಸಮಾನವಾದುದು ತಾಳವು ಮಾರ್ಗತಾಳ, ದೇಶೀ ತಾಳವೆಂದು ಎರಡು ವಿಧ.
ಲಯ-ಭಾವ ಪೂರ್ಣವಾದ ಸಾಹಿತ್ಯವನ್ನು ಒಂದು ನಿಯಮಕ್ಕೆ ಒಳಪಡಿಸುವುದು ಲಯದ ಮುಖ್ಯ ಗುಣ. ಲಯದ ಮಹತ್ವವನ್ನು ತಾಳಗತಿಯಿಂದ ಅರಿಯಬಹುದು. ವಿಳಂಬಿತಲಯ, ಮಧ್ಯ ಲಯ ಮತ್ತು ಧ್ರುತಲಯ ಎಂಬ ಮೂರು ವಿಧಗಳಿವೆ.
ಬೊಂಬಾಳ-ನಾಲ್ಕು ಧ್ವನಿ ಭೇದಗಳಲ್ಲಿ ಒಂದು (ಧ್ವನಿಯನ್ನು ಉಚ್ಛ ಶ್ರುತಿಯಲ್ಲಿ ಪ್ರಯೋಗಿಸುವುದು)
ಮಿಶ್ರ-ಉಮಾಪತಿಯ ಔಮಪತಂ ಎಂಬ ಗ್ರಂಥದಲ್ಲಿ ಸಂಗೀತವನ್ನು ಸಜೀವ ಎಂದರೆ ಮಾನವನ ಗಾಯನ, ನಿರ್ಜೀವ ಎಂದರೆ ವಾದ್ಯ ಸಂಗೀತ ಮಿಶ್ರ ಎಂದರೆ ಕೊಳಲಿನ ಸಂಗೀತ ಎಂದು ಮೂರು ಬಗೆಗಳಾಗಿ ವರ್ಗೀಕರಿಸಿದ್ದಾರೆ. ಕೊಳಲಿನ ಸಂಗೀತ, ಮನುಷ್ಯನ ಉಸಿರಿನಿಂದುಂಟಾದುದು. ವಸ್ತುವಿನಿಂದ ಸಂಗೀತವು ಉಂಟಾಗುತ್ತದೆ. ಆದ್ದರಿಂದ ಇದು ಮಿಶ್ರ ಸಂಗೀತ. (ಸಂಕೀರ್ಣ ರಾಗಕ್ಕೆ ಮಿಶ್ರರಾಗವೆಂದು ಹೆಸರು).
ಠಾಯ-ಸಂಗೀತದ ರಚನೆ; ಗಾಯನಕ್ಕೂ, ವಾದ್ಯಗಳಿಗೂ ಬೇರೆ ಬೇರೆ ರಚಿಸಿದ್ದರು. ಇವು 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಪ್ರಾರಂಭವಾಗಿ 18ನೇ ಶತಮಾನದ ಮಧ್ಯದವರೆಗೂ ಬಳಕೆಯಲ್ಲಿದ್ದುವು. ಪುರಂದರದಾಸರು, ವೆಂಕಟ ಮುಖಿ ಮುಂತಾದವರು ಠಾಯ ರಚನೆಯಲ್ಲಿ ಪ್ರಸಿದ್ಧರಾದವರು, ಇವುಗಳನ್ನು ರಾಗಾಲಾಪನೆಗೆ ಮುಂಚೆ ಹಾಡುತ್ತಿದ್ದರು.
ರಾಗಕ್ಕೆ ಸಂಬಂಧಿಸಿದಂತೆ
ಶುದ್ಧ-ಆರು ಸಾಧಾರಣ ರಾಗ ಜಾತಿಗಳಲ್ಲಿ ಒಂದು. ಶುದ್ಧ ಭಿನ್ನಗೌಡಲ ಅಷ್ಟ ಸಾಧಾರಣ ಸಪ್ತ ಸಾಧಾರಣಷಟ್ಸ್ವರ ವೆಂಬಾರು ಸಾಧಾರಣ (ವಿವೇಕ) ಜಾತಿಗಳು, ಶುದ್ಧ ಸಾಳಗ ಮತ್ತು ಸಂಕೀರ್ಣಗಳೆಂಬ ಮೂರು ರಾಗ ಭೇದಗಳಲ್ಲಿ ಒಂದು, ಬೇರೆಯ ರಾಗಗಳ ಅವಲಂಬನೆಯಿಲ್ಲದ ರಾಗ
ಸಾಳಗ-ಮೂರು ರಾಗಭೇದಗಳಲ್ಲಿ ಒಂದು
ಸಂಕೀರ್ಣ-ರಾಗದ ಶುದ್ಧ ಸಂಕೀರ್ಣ ಸಾಳಗಗಳೆಂಬ ಮೂರು ಭೇದಗಳಲ್ಲಿ ಒಂದು, ಯಾವುದಾದರೋ ಒಂದು ರಾಗದ ಮೂಲಭಾವದ ಛಾಯೆಯಿಂದ ರಂಜಿಸುವ ರಾಗ.
ತಾಳಕ್ಕೆ ಸಂಬಂಧಿಸಿದಂತೆ
ಶುದ್ಧ ಮೃದಂಗ ವಾದನದ ನಾಲ್ಕು ಭೇದಗಳಲ್ಲಿ ಒಂದು. ಶುದ್ಧ ಸಾಳಗ ಸಂಕೀರ್ಣ ಠವಣೆಗಳೆಂಬ ಚತುರ್ವಿಧ ಮೃದಂಗಮಂ ಮೇಳೈಸಿ ತಾಳದ ಆರು ಭೇದಗಳಲ್ಲಿ ಒಂದು.
ಭಂಗತಾಳ, ಉಪಭಂಗ ತಾಳ ವಿಭಂಗ ತಾಳ, ವಿತಾಳ ಶುದ್ಧ ತಾಳ ಅನುತಾಳವೆಂಬುದು ವರ್ಗ ಸಂಖ್ಯಾ ಭೇದ ಮಾಗಿಹುವೆಂದು ಪೇಳ ಭರತಶಾಸ್ತ್ರ ಪರಿಣತರಪ್ಪ ತಾಳಧಾರಿಗಳು.
ಸಾಳಗ-ಮದ್ದಳೆಯ ನಾಲ್ಕು ಬಗೆಯ ವಾದನ ಕ್ರಮಗಳಲ್ಲಿ ಒಂದು.
ಸಂಕೀರ್ಣ-ನಾಲ್ಕು ವಿಧದ ಮೃದಂಗ ತಾಡನಗಳಲ್ಲಿ ಒಂದು, ತಾಳದ ಅಂಗಗಳಲ್ಲಿ ಒಂದು. 9 ಲಘುಗಳ ಕಾಲದ ಮಿತಿಯುಳ್ಳ ಒಂದು ತಾಳ.
ದೇಶೀ-ವಿವಿಧ ಪ್ರಾಂತ್ಯಗಳಲ್ಲಿ ಪ್ರಚಲಿತವಿದ್ದ ಸಂಗೀತಕ್ಕೆ ದೇಶೀ ಸಂಗೀತ ಎಂದು ಹೆಸರು. ಮಾರ್ಗ ಸಂಗೀತವು ಮುಖ್ಯವಾಗಿ ಗಾಯನಕ್ಕೆ ಸಂಬಂಧಿಸಿತ್ತು, ಆದರೆ ದೇಶೀ ಸಂಗೀತವು ಗೀತ, ವಾದ್ಯ ನೃತ್ಯಗಳನ್ನು ಒಳಗೊಂಡಿತ್ತು, ರಾಗ, ತಾಳ, ಪ್ರಬಂಧಗಳನ್ನು ಮಾರ್ಗ ಹಾಗೂ ದೇಶೀ ಎಂಬುದಾಗಿ ವರ್ಗೀಕರಿಸಿವೆ.
ಮೂಲ ...{Loading}...
ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ಠಾಯ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು ॥96॥
೦೯೭ ಗಾಯದಲಿ ಮೇಣ್ ...{Loading}...
ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ಕೇಳು ಧೃತರಾಷ್ಟ್ರ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರಾಳಿಗೆ ಪೆಟ್ಟುಗಳನ್ನು ಕೊಡುವ ವಿಧಾನ, ವರಸೆಗಳನ್ನು, ವಿವಿಧ ಉಪಾಯಗಳನ್ನು ಆಶ್ರಯಿಸುವ ಬಗೆಯನ್ನು ಬಲ್ಲವನೂ, ದೇಹದ ಅಂಗಾಂಶಗಳನ್ನು ವಿನೂತನವಾಗಿ ತಿರುಗಿಸಿ, ನಿಲ್ಲುವ ನಡೆಯುವ ಬಗೆಯಲ್ಲಿ ನಿಪುಣನೂ, ನಾನಾ ವಿಧದ ಚಮತ್ಕಾರದ ಪಟ್ಟುಗಳನ್ನು ತಿಳಿzವನು - ಆಗಿರುವವನೇ ಜಟ್ಟಿ ಎನಿಸಿಕೊಳ್ಳುತ್ತಾನೆ.
ಪದಾರ್ಥ (ಕ.ಗ.ಪ)
ಚೊಕ್ಕೆಯ-ಕುಸ್ತಿಪಟ್ಟು, ಅಡುಪಾಯ-ಅಡ್ಡಕೆಡೆವುದು, ನವಾಯಿ-ವೇಗ, ದಾಯ-ಪಟ್ಟು+ರೀತಿ
ಮೂಲ ...{Loading}...
ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ಕೇಳು ಧೃತರಾಷ್ಟ್ರ ॥97॥
೦೯೮ ಎಡಬಲನನಾರೈವುತೊಬ್ಬನ ಬಿಡದೆ ...{Loading}...
ಎಡಬಲನನಾರೈವುತೊಬ್ಬನ
ಬಿಡದೆ ನೋಡುತ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿ ಕಾರ್ಯದ
ಕಡೆಯೆನಿಸುತಾವಾಗ ಸೇವೆಗೆ
ಸೆಡೆಯದವನೇ ಚಮರಧಾರಕನರಸ ಕೇಳ್ ಎಂದ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಿಗೆ ಚಾಮರವನ್ನು ಬೀಸತಕ್ಕವನು ಎಡಬಲಗಳನ್ನು ಪರೀಕ್ಷಿಸುತ್ತ ಒಡೆಯನತ್ತ ಲಕ್ಷ್ಯವಿಟ್ಟು ನೊಣ ಮೊದಲಾದವನ್ನು ಚದುರಿಸುತ್ತ, ಕಿರುಗಣ್ಣನ್ನಿಟ್ಟು ಎಡಬಲಗಳ ಜನರು ಬರದಂತೆ ತಡೆಯತಕ್ಕವನೂ, ಸ್ವಾಮಿ ಕಾರ್ಯದಲ್ಲಿ ಸದಾ ನಿಷ್ಠೆಯಿಂದಿರುವವನೇ ಚಾಮರ ಬೀಸತಕ್ಕವನಾಗಿರಬೇಕು.
ಪದಾರ್ಥ (ಕ.ಗ.ಪ)
ಮಕ್ಷಿಕ - ನೊಣ, ಆರೈ-ವಿಚಾರಿಸು, ಕಿಗ್ಗಣ್ಣು-ಕೆಳಗಣ್ಣು, ಕೆಳಮೋರೆ, ಸೆಡೆ-ಹಿಂಜರಿ
ಮೂಲ ...{Loading}...
ಎಡಬಲನನಾರೈವುತೊಬ್ಬನ
ಬಿಡದೆ ನೋಡುತ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿ ಕಾರ್ಯದ
ಕಡೆಯೆನಿಸುತಾವಾಗ ಸೇವೆಗೆ
ಸೆಡೆಯದವನೇ ಚಮರಧಾರಕನರಸ ಕೇಳೆಂದ ॥98॥
೦೯೯ ಗುಳಿ ತೆವರನೀಕ್ಷಿಸುತ ...{Loading}...
ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯ ಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಡಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳ್ ಎಂದ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾರಿಯಲ್ಲಿನ ಏರು, ತಗ್ಗುಗಳನ್ನೂ ಮೆಳೆ, ಮರಗಳನ್ನು ನೋಡುತ್ತ ಅವುಗಳ ಪೆಟ್ಟನ್ನು ತಪ್ಪಿಸಿ ರಾಜನನ್ನು ಕರೆದುಕೊಂಡು ಹೋಗುವ, ತನ್ನ ಸ್ವಾಮಿಗೆ ನೆರಳಾಗುವುದನ್ನೇ ಗುರಿಯಾಗಿಟ್ಟುಕೊಂಡು ಸಮಯಾನುಸಾರವಾಗಿ ವೇಗವಾಗಿಯೂ, ಸಾಮಾನ್ಯವಾಗಿಯೂ ನಡೆಯುತ್ತ ಪ್ರಯಾಣ ಕಾಲದಲ್ಲಿ ತನಗಾಗುವ ಬಿಸಿಲಿನ ತಾಪವನ್ನು ಸಹಿಸಿಕೊಳ್ಳಬಲ್ಲವನೇ ಛತ್ರಿಯನ್ನು ಹಿಡಿಯತಕ್ಕವನು.
ಪದಾರ್ಥ (ಕ.ಗ.ಪ)
ಹೊಯ್ಲು-ಪೆಟ್ಟು, ಮೆಳೆ-ಪೊದರು , ಗುಳಿ-ತೆಗ್ಗು, ತೆವರು-ದಿನ್ನೆ, ಬಟ್ಟೆ-ದಾರಿ, ಅರಸು-ಹುಡುಕು, ಬಳಿವಿಡಿ-ಹಿಂಬಾಲಿಸು, ಯಾನ-ಪಯಣ, ಢಗೆ-ಬಿಸಿಲು/ಝಳ
ಮೂಲ ...{Loading}...
ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯ ಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಡಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ॥99॥
೧೦೦ ಹರುಷದಲಿ ನಿಜಜನನಿ ...{Loading}...
ಹರುಷದಲಿ ನಿಜಜನನಿ ಗರ್ಭವ
ಧರಿಸಿಕೊಂಡಾಡುವವೊಲುತ್ತಮ
ಪುರುಷರಂತರ್ಯಾಮಿಯನು ತಾಳ್ವಂತೆ ಭೂಭುಜರ
ಧರಿಸಿ ಸುಖ ಸಂಗತಿಗಳಲಿ ಸಂ
ಚರಿಸುತಾಳ್ದನ ಹಾನಿ ವೃದ್ಧಿಯ
ಲಿರಲು ಬೆಸದವರೆನಿಸುವರು ಭೂಪಾಲ ಕೇಳ್ ಎಂದ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರ್ಭದಲ್ಲಿರುವ ತನ್ನ ಶಿಶುವನ್ನು ತಾಯಿಯು ರಕ್ಷಿಸುವಂತೆ, ಯೋಗಿಗಳು ಪರಮಾತ್ಮನನ್ನು ತಮ್ಮ ಅಂತರಂಗದಲ್ಲಿಟ್ಟು ಧ್ಯಾನಿಸುವಂತೆ, ರಾಜರನ್ನು ಗಮನಿಸುತ್ತ. ಅವರಿಗೆ ಹಾನಿಯಾಗದಂತೆ, ಏಳಿಗೆಗೆ ಅನುಕೂಲವಾಗುವಂತೆ ನೋಡಿಕೊಳ್ಳುವವನೇ ಉತ್ತಮ ಅಂಗರಕ್ಷಕ (ಕೆಲಸಗಾರ).
ಪದಾರ್ಥ (ಕ.ಗ.ಪ)
ಬೆಸದ-ಕೆಲಸಗಾರ/ಕಾರ್ಮಿಕ, ಆಳ್ದ-ಒಡೆಯ
ಮೂಲ ...{Loading}...
ಹರುಷದಲಿ ನಿಜಜನನಿ ಗರ್ಭವ
ಧರಿಸಿಕೊಂಡಾಡುವವೊಲುತ್ತಮ
ಪುರುಷರಂತರ್ಯಾಮಿಯನು ತಾಳ್ವಂತೆ ಭೂಭುಜರ
ಧರಿಸಿ ಸುಖ ಸಂಗತಿಗಳಲಿ ಸಂ
ಚರಿಸುತಾಳ್ದನ ಹಾನಿ ವೃದ್ಧಿಯ
ಲಿರಲು ಬೆಸದವರೆನಿಸುವರು ಭೂಪಾಲ ಕೇಳೆಂದ ॥100॥
೧೦೧ ಹಿನ್ದೆ ಮಾಡಿದ ...{Loading}...
ಹಿಂದೆ ಮಾಡಿದ ಸುಕೃತ ಫಲವೈ
ತಂದು ಸಾರುವವೋಲು ನಾನಾ
ಚಂದದಾಪತ್ತಿನಲಿ ಹರಿನಿಜಭಕ್ತ ಸಂತತಿಯ
ಮುಂದೆ ನಿಲುವವೊಲವನಿಪಾಲರ
ದಂದುಗದ ಹೊತ್ತಿನಲಿ ಗಜ ಹಯ
ವೃಂದವನೆ ಚಾಚುವನು ವಾಹಕನರಸ ಕೇಳ್ ಎಂದ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯನು ಹಿಂದೆ ಮಾಡಿದ ಪುಣ್ಯಕಾರ್ಯಗಳಿಗೆ ಫಲವು ಸಮಯದಲ್ಲಿ ಬಂದೊದಗುವಂತೆ, ಆಪತ್ತುಗಳು ಒದಗಿ ಬಂದಾಗ ಶ್ರೀಹರಿಯು ತನ್ನ ಭಕ್ತರ ಮುಂದೆ ಬಂದು ನಿಲ್ಲುವಂತೆ, ರಾಜರ ವಿಪತ್ತಿನ ಸಮಯದಲ್ಲಿ ಆನೆ-ಕುದುರೆಗಳ ಹಿಂಡನ್ನೇ ತಂದು ನೆರವಿಗೆ ಒದಗಿಸತಕ್ಕವನು ವಾಹನವನ್ನು ನಡೆಸುವವನು. ಅವನೇ ನಿಜವಾದ ಸಾರಥಿ.
ಪದಾರ್ಥ (ಕ.ಗ.ಪ)
ದಂದುಗ-ವ್ಯಥೆ/ತೊಂದರೆ, ವಾಹಕ-ಸಾರಥಿ, ವೃಂದ-ಹಿಂಡು, ಸುಕೃತ-ಪುಣ್ಯ
ಮೂಲ ...{Loading}...
ಹಿಂದೆ ಮಾಡಿದ ಸುಕೃತ ಫಲವೈ
ತಂದು ಸಾರುವವೋಲು ನಾನಾ
ಚಂದದಾಪತ್ತಿನಲಿ ಹರಿನಿಜಭಕ್ತ ಸಂತತಿಯ
ಮುಂದೆ ನಿಲುವವೊಲವನಿಪಾಲರ
ದಂದುಗದ ಹೊತ್ತಿನಲಿ ಗಜ ಹಯ
ವೃಂದವನೆ ಚಾಚುವನು ವಾಹಕನರಸ ಕೇಳೆಂದ ॥101॥
೧೦೨ ಪರ್ಬತವನೊಡೆದುಳಿಸಿ ಭೂಮಿಯ ...{Loading}...
ಪರ್ಬತವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ರಥ ಗಜ
ದೊಬ್ಬುಳಿಯ ಹರೆಗಡಿಸಿ ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರವಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳ್ ಎಂದ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತವನ್ನು ಒಡೆಯುವನೋ, ಭೂಮಿಯನ್ನು ಸೀಳುವನೋ ಎಂಬಂತೆ ನುಗ್ಗಿ, ಶತ್ರುರಾಜರ ರಥ, ಆನೆ ಮೊದಲಾದವುಗಳನ್ನೂ ಚದುರಿಸಿ, ಆನೆಗಳ ಮೇಲೆ ಯುದ್ಧಮಾಡುತ್ತಾ , ಆರ್ಭಟಿಸಿ ಶರವೃಷ್ಟಿಗಳನ್ನು ಸುರಿಸಿ, ಅತಿಶಯವಾದ ಯುದ್ಧದೊಳಗೆ, ಶತ್ರುಗಳಿಗೆ ಸಂಕಟವನ್ನುಂಟುಮಾಡತಕ್ಕವನೇ ಯೋಧನು.
ಪದಾರ್ಥ (ಕ.ಗ.ಪ)
ಉಬ್ಬರ-ಒತ್ತಡ, ಉಬ್ಬಸ-ಸಂಕಟ, ಕಷ್ಟ, ಜೋಧ-ಯೋಧ, ಬವರ-ಕದನ, ಒಬ್ಬುಳಿ-ಹಿಂಡು, ಇಬ್ಬಗೆಯ ಮಾಡು-ಸೀಳು
ಮೂಲ ...{Loading}...
ಪರ್ಬತವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ರಥ ಗಜ
ದೊಬ್ಬುಳಿಯ ಹರೆಗಡಿಸಿ ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರವಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ॥102॥
೧೦೩ ಕುದುರೆಗಳನಾರೈದು ರಥವನು ...{Loading}...
ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೊಲವು
ತ್ತಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೇ ರಥಿಕರಿಗೆ ಧೃತರಾಷ್ಟ್ರ ಕೇಳ್ ಎಂದ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು ! ತನ್ನ ಕುದುರೆಗಳನ್ನು , ರಥವನ್ನು ರಕ್ಷಿಸುತ್ತ, ಸಾರಥಿಯಲ್ಲಿ ಪ್ರೀತಿಯನ್ನು ತೋರಿಸುತ್ತ, ಎದುರು ಬಂದವರನ್ನು ನಿವಾರಿಸುತ್ತ ತನ್ನನ್ನು ತಾನು ಕಾಯ್ದುಕೊಳ್ಳುತ್ತ, ಎಡಬಲಗಳಲ್ಲಿ ಹೊಡೆದು ಹಿಂತಿರುಗುವ ಒಳ್ಳೆಯ ಕೈಚಳಕದ ಯುದ್ಧದಲ್ಲಿ ಪ್ರಳಯಕಾಲದ ಅಗ್ನಿಯಂತಿರುವವನೇ ರಥಿಕರಲ್ಲಿ ಶ್ರೇಷ್ಠನು.
ಪದಾರ್ಥ (ಕ.ಗ.ಪ)
ಹದುಳಿಸು-ಕಾಯು, ಕಾಲಾನಲ-ಪ್ರಳಯ ಕಾಲದ ಬೆಂಕಿ, ಲಾಗುವೇಗ-ಕೈಚಳಕ
ಮೂಲ ...{Loading}...
ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೊಲವು
ತ್ತಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೇ ರಥಿಕರಿಗೆ ಧೃತರಾಷ್ಟ್ರ ಕೇಳೆಂದ ॥103॥
೧೦೪ ಬಿಟ್ಟ ಸೂಟಿಯಲರಿ ...{Loading}...
ಬಿಟ್ಟ ಸೂಟಿಯಲರಿ ನೃಪಾಲರ
ಮುಟ್ಟಿ ಮೂದಲಿಸುತ್ತ ಮೋಹಿದ
ಥಟ್ಟ ನೊಡೆಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ವಟ್ಟಾ
ವಟ್ಟಿ ಮಸಗಲು ಕಳನ ಚೌಕದ
ಲಟ್ಟಿಯಾಡಿಸಬಲ್ಲಡವ ರಾವುತನು ಕೇಳ್ ಎಂದ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚುರುಕುತನದಿಂದ ಶತ್ರುರಾಜರನ್ನು ಹಿಡಿದು ಮೂದಲಿಸುತ್ತ, ವ್ಯಾಪಿಸಿಕೊಂಡ ಸೈನ್ಯವನ್ನು ಸವರುತ್ತ ಆನೆಯಂತೆ ಒಳನುಗ್ಗಿ, ಧ್ವಂಸ ಮಾಡುತ್ತ, ಹೆಣದ ರಾಶಿಗಳನ್ನು ಬೀಳಿಸುವಂತೆ ಮಾಡುತ್ತಾ, ವಿಜೃಂಭಿಸಲು, ರಣರಂಗದ ಅಂಗಳದಲ್ಲಿ ಬೆನ್ನು ಹತ್ತಿ ವೈರಿಗಳನ್ನು ಓಡಾಡಿಸಬಲ್ಲವನೇ ಉತ್ತಮ ಕುದುರೆ ಸವಾರ.
ಪದಾರ್ಥ (ಕ.ಗ.ಪ)
ಹಿಟ್ಟುಗುಟ್ಟು-ಧ್ವಂಸಮಾಡು, ಮಸಗು-ವಿಜೃಂಭಿಸು, ಕಳ-ರಣರಂಗ, ಅಟ್ಟಿಆಡು-ಬೆನ್ನತ್ತಿಹೋಗು, ರಾವುತ-ಕುದುರೆಸವಾರ, ಸೂಟಿ-ಚುರುಕು, ಆನೆವರಿದು-ಆನೆಯಂತೆ ಮುನ್ನುಗ್ಗುತ್ತ,
ಮೂಲ ...{Loading}...
ಬಿಟ್ಟ ಸೂಟಿಯಲರಿ ನೃಪಾಲರ
ಮುಟ್ಟಿ ಮೂದಲಿಸುತ್ತ ಮೋಹಿದ
ಥಟ್ಟ ನೊಡೆಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ವಟ್ಟಾ
ವಟ್ಟಿ ಮಸಗಲು ಕಳನ ಚೌಕದ
ಲಟ್ಟಿಯಾಡಿಸಬಲ್ಲಡವ ರಾವುತನು ಕೇಳೆಂದ ॥104॥
೧೦೫ ಬೇಸರದೆ ಕಾಳೋರಗನನ ...{Loading}...
ಬೇಸರದೆ ಕಾಳೋರಗನನ
ಡ್ಡೆ ೈಸಿ ಕಟ್ಟಿರುವೆಗಳು ಖಂಡವ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳ್ ಎಂದ ॥105॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಟ್ಟಿರುವೆಗಳು ಕಾಲಸರ್ಪನನ್ನು ಅಡ್ಡಗಟ್ಟಿ ಮುತ್ತಿ ಕಡಿ ಕಡಿದು ಪೀಡಿಸುವಂತೆ, ವೈರಿಸೇನೆಯಲ್ಲಿ ಹಿಂದೆಗೆಯದೆ ಒಳಹೊಕ್ಕು ಯುದ್ಧದ ಸಂಭ್ರಮವನ್ನು ಹೆಚ್ಚಾಗಿ ಮೆರೆದು ಪರಸ್ಪರ ತಲೆಗೂದಲನ್ನು ಎಳೆದಾಡುತ್ತ ಯುದ್ಧ ಮಾಡುವವನೇ ಕಾಲಾಳು ಎನಿಸಿಕೊಳ್ಳುವವನು.
ಪದಾರ್ಥ (ಕ.ಗ.ಪ)
ಕೇಶಾಕೇಶಿ-ಪರಸ್ಪರ ಕೂದಲು ಎಳೆದು ಯುದ್ಧ ಮಾಡುವುದು, ಕಾಳೋರಗ-ಕರಿಹಾವು, ಓಸರಿಸು-ಹಿಮ್ಮೆಟ್ಟು, ವಿಳಾಸ-ಬೆಡಗು
ಮೂಲ ...{Loading}...
ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಖಂಡವ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳೆಂದ ॥105॥
೧೦೬ ಬರಲು ಕಣ್ಡಡೆ ...{Loading}...
ಬರಲು ಕಂಡಡೆ ವಂದಿಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಿದ
ನರವರಿಸದಾಕ್ಷಣಕೆ ಮಾಡುವನವನೆ ಸೇವಕನು ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಸ್ವಾಮಿಯನ್ನು ಕಂಡೊಡನೆ ವಂದಿಸಿ, ಅತಿಹತ್ತಿರದಲ್ಲಾಗಲಿ, ಅತಿದೂರದಲ್ಲಿಯಾಗಲೀ ನಿಲ್ಲದೆ ಮಧ್ಯವರ್ತಿಯಂತಿದ್ದು, ಓಡಾಡುತ್ತ ಸೇವೆ ಮಾಡುತ್ತ ಅರಸನ ಮುಖವನ್ನು ನೋಡುತ್ತ, ಆಜ್ಞಾಪಿಸಿದ್ದನ್ನು ಆ ಕ್ಷಣವೆ ಮಾಡುವವನೇ ಸೇವಕನು.
ಮೂಲ ...{Loading}...
ಬರಲು ಕಂಡಡೆ ವಂದಿಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಿದ
ನರವರಿಸದಾಕ್ಷಣಕೆ ಮಾಡುವನವನೆ ಸೇವಕನು ॥106॥
೧೦೭ ಕುನಖಿ ಕುಷ್ಠಿ ...{Loading}...
ಕುನಖಿ ಕುಷ್ಠಿ ಕುಚೇಲನನು ಕು
ಬ್ಜನನು ವಿಧವಾಂಗನೆಯ ದಾಸಿಯ
ತನುವಿಕಾರಿಯನಂಗಹೀನನ ಪಂಗುಳಾಂಧಕನ
ಘನ ರುಜಾಂಗನ ಬಿಡುದಲೆಯ ರೋ
ದನಿಯನುಪ್ಪವಡಿಸುವ ಸಮಯದೊ
ಳಿನಿಬರನು ಕಾಣ್ಬುದು ಮಹೀಶರಿಗಂಗವಲ್ಲೆಂದ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುನಖರೋಗವುಳ್ಳವನು (ರೋಗಗ್ರಸ್ತ ಉಗುರುಗಳನ್ನು ಉಳ್ಳವನು) ಕುಷ್ಠರೋಗಿ, ಕೆಟ್ಟ ಮಲಿನವಸ್ತ್ರಧಾರಿ ಕುಬ್ಜ. ವಿಧವೆ, ನಪುಂಸಕ, ದಾಸಿ, ಅಂಗಹೀನ, ಹೆಳವ, ಕುರುಡ, ದೊಡ್ಡ ರೋಗಿ, ಬಿಡುದಲೆಯವನು, ಅಳುವªನನ್ನು - ಇವರನ್ನೆಲ್ಲ ಬೆಳಗಿನ ಹೊತ್ತು ಹಾಸಿಗೆಯಿಂದೇಳುವ ಸಮಯದಲ್ಲಿ ರಾಜನಾದವನು ನೋಡುವುದು ರೀತಿಯಲ್ಲ.
ಪದಾರ್ಥ (ಕ.ಗ.ಪ)
ಕುಬ್ಜ-ಕುಳ್ಳ, ಪಂಗುಳ-ಹೆಳವ, ರುಜಾಂಗ-ರೋಗಿ, ರೋಧಿನಿ-ಅಳುವವಳು
ಕುಚೇಲ - ಮಲಿನ ವಸ್ತ್ರಧಾರಿ
ಕುನಖ-ಉಗುರುಗಳಿಗೆ, ಏಟುಬಿದ್ದು ಕೆಟ್ಟು ಹೋಗಿ, ರೋಗಗ್ರಸ್ತವಾದ ಉಗುರು
ಪಾಠಾನ್ತರ (ಕ.ಗ.ಪ)
ಕುಶೀಲನನು -ಕುಚೇಲನನು
ವಿಧವಲಿಂಗಿ - ವಿಧವಾಂಗನೆಯ ಎಸ್ ಎನ್ ಕೃಷ್ಣಜೋಯಿಸ್ ಆವೃತ್ತಿ , ಪ್ರಾಚ್ಯ ಸಂಶೋಧನ ಕೇಂದ್ರ, ಮೈಸೂರು
ಮೂಲ ...{Loading}...
ಕುನಖಿ ಕುಷ್ಠಿ ಕುಚೇಲನನು ಕು
ಬ್ಜನನು ವಿಧವಾಂಗನೆಯ ದಾಸಿಯ
ತನುವಿಕಾರಿಯನಂಗಹೀನನ ಪಂಗುಳಾಂಧಕನ
ಘನ ರುಜಾಂಗನ ಬಿಡುದಲೆಯ ರೋ
ದನಿಯನುಪ್ಪವಡಿಸುವ ಸಮಯದೊ
ಳಿನಿಬರನು ಕಾಣ್ಬುದು ಮಹೀಶರಿಗಂಗವಲ್ಲೆಂದ ॥107॥
೧೦೮ ಕಲಶ ಕನ್ನಡಿ ...{Loading}...
ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧನಿಚಯ ಗಿರಿ ಸಂ
ಕುಳ ಸುವಾಸಿನಿ ಮಾತೃಪಿತೃ ವರವಾಹಿನೀನಿಚಯ
ಜಲಧಿವಸನಚ್ಛತ್ರ ಉರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪವಡಿಸುವ ಸಮಯದೊಳರಸ ಕೇಳ್ ಎಂದ ॥108॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಶ, ಕನ್ನಡಿ, ಆನೆ, ಕುದುರೆ, ಹಸು, ಎತ್ತು, ವಿದ್ವಾಂಸರು, ಬೆಟ್ಟ, ಸುವಾಸಿನಿಯರು, ತಾಯಿ, ತಂದೆ, ಸೈನ್ಯ, ಸಮುದ್ರ, ವಸ್ತ್ರ, ಛತ್ರಿ, ಹುಲುಸಾದ ಗದ್ದೆ ಮತ್ತು ಸ್ತ್ರೀಯರುಗಳನ್ನು ಬೆಳಗಿನ ಹೊತ್ತು ಏಳುವಾಗ ರಾಜರು ನೋಡುವುದು ಒಳ್ಳೆಯದು.
ಪದಾರ್ಥ (ಕ.ಗ.ಪ)
ವೃಷಭ-ಎತ್ತು, ಬುಧ-ಬ್ರಾಹ್ಮಣ, ನಿಚಯ-ಗುಂಪು, ಸಂಕುಳ-ಗುಂಪು, ವಾಹಿನಿ-ಸೈನ್ಯ ವಸನ-ಬಟ್ಟಿ, ಉರ್ವಿ-ನೆಲ
ಮೂಲ ...{Loading}...
ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧನಿಚಯ ಗಿರಿ ಸಂ
ಕುಳ ಸುವಾಸಿನಿ ಮಾತೃಪಿತೃ ವರವಾಹಿನೀನಿಚಯ
ಜಲಧಿವಸನಚ್ಛತ್ರ ಉರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪವಡಿಸುವ ಸಮಯದೊಳರಸ ಕೇಳೆಂದ ॥108॥
೧೦೯ ಶ್ವಾನ ಕುಕ್ಕಟ ...{Loading}...
ಶ್ವಾನ ಕುಕ್ಕಟ ಕಾಕ ಬಕ ಪವ
ಮಾನ ಖಗಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ದಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗಪೋತಕನ ಗುಣ
ವಾ ನರೇಂದ್ರನೊಳಿರಲು ಬೇಹುದು ಭೂಪ ಕೇಳ್ ಎಂದ ॥109॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಯಿ, ಕೋಳಿ, ಕಾಗೆ, ಬಕ, ಗಾಳಿ, ಗರುಡ, ದೇವತೆ, ರಾತ್ರಿ, ಅಗ್ನಿ, ಕತ್ತೆ, ಎತ್ತು, ಮೊಸಳೆ, ಕಪಿ, ಕುದುರೆ, ಆನೆ, ಸಿಂಹ, ಜಿಂಕೆಮರಿ ಇವುಗಳಲ್ಲಿಯೂ ಉತ್ತಮಗುಣಗಳಿವೆ. ಆ ಗುಣಗಳು ರಾಜನಲ್ಲಿ ನೆಲೆಸಿರಬೇಕು.
ಟಿಪ್ಪನೀ (ಕ.ಗ.ಪ)
ವಿಶೇಷ : ಈ ಪದ್ಯದಲ್ಲಿ ಉದಹರಿಸುವ ಎಲ್ಲ ಪ್ರಾಣಿಗಳಿಂದ ಮತ್ತು ಪ್ರಕೃತಿಯಿಂದ ಮನುಷ್ಯನು ಕಲಿಯಬೇಕಾದ ಲಕ್ಷಣಗಳಿವೆ ಎಂದೂ, ಯಾರಿಂದ ಯಾವುದನ್ನು ಗ್ರಹಿಸಬೇಕೆಂಬುದನ್ನು ಇಲ್ಲಿ ಸೂಚಿಸಿದೆ.
ನಾಯಿ - ಸದಾ ಎಚ್ಚರಿಕೆ, ಕೋಳಿ - ಆಹಾರವನ್ನು ಶೋಧಿಸಿ ತಿನ್ನುವುದು, ಕಾಗೆ - ಬಾಂಧವರೊಡನೆ ಭೋಜನ,
ಬಕ - ಏಕಾಗ್ರತೆ,
ಗಾಳಿ - ಸರ್ವಸಮತೆ,
ಗರುಡ- ದೂರದೃಷ್ಟಿ,
ದೇವತೆ - ವೈಭವ,
ರಾತ್ರಿ - ಅಭೇದ್ಯತೆ,
ಅಗ್ನಿ - ಉಗ್ರತೆ,
ಕತ್ತೆ - ಶ್ರಮ ಸಹಿಷ್ಣುತೆ,
ಎತ್ತು - ಗಾಂಭೀರ್ಯ,
ಮೊಸಳೆ - ಗೂಢವಾಗಿ ಶತ್ರುವನ್ನು ಪ್ರಹರಿಸುವುದು,
ಕಪಿ - ಕಾರ್ಯ ಸಾಧನೆಯಲ್ಲಿ ಛಲ,
ಕುದುರೆ - ಅಲ್ಪ ನಿದ್ರೆ,
ಆನೆ - ಸೂಕ್ಷ್ಮ ದೃಷ್ಟಿ,
ಸಿಂಹ - ಶೌರ್ಯ,
ಜಿಂಕೆ ಮರಿ - ಚಟುವಟಿಕೆ.
ಮೂಲ ...{Loading}...
ಶ್ವಾನ ಕುಕ್ಕಟ ಕಾಕ ಬಕ ಪವ
ಮಾನ ಖಗಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ದಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗಪೋತಕನ ಗುಣ
ವಾ ನರೇಂದ್ರನೊಳಿರಲು ಬೇಹುದು ಭೂಪ ಕೇಳೆಂದ ॥109॥
೧೧೦ ಪರಿಪರಿಯ ದಾನಙ್ಗಳನು ...{Loading}...
ಪರಿಪರಿಯ ದಾನಂಗಳನು ಕರೆ
ಕರೆದು ಲೋಗರಿಗಿತ್ತು ಪರರನು
ಹೊರೆದು ತನ್ನಾಶ್ರಿತರನತಿಗಳೆದಾಪ್ತ ಬಾಂಧವರ
ಸರಕು ಮಾಡದೆ ಗರ್ವದಿಂದು
ಬ್ಬರಿಸುತಿಹ ಪಾತಕರ ಪದವಿಯ
ನರಸ ಬಣ್ಣಿಸಲಾರು ಬಲ್ಲರು ಯಮನ ನಗರಿಯಲಿ ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನನ್ನು ನಂಬಿ ಬದುಕುವ ಆಶ್ರಿತರನ್ನು ಲಕ್ಷಿಸದೆ, ನಾನಾ ರೀತಿಯ ದಾನಗಳನ್ನು ಪರರಿಗೆ ಕರೆಕರೆದು ಕೊಟ್ಟು, ಆಪ್ತರನ್ನು, ಬಾಂಧವರನ್ನು ಗೌರವಿಸದೆ ಪರರನ್ನು ಕಾಪಾಡಿ, ಗರ್ವದಿಂದಿರುವ ಪಾಪಿಗಳು ಯಮಲೋಕದಲ್ಲಿ ಯಾವ ಸ್ಥಿತಿಯಲ್ಲಿರುತ್ತಾರೆಂಬುದನ್ನು ವರ್ಣಿಸಲು ಯಾರು ತಿಳಿಯಬಲ್ಲರು?
ಪದಾರ್ಥ (ಕ.ಗ.ಪ)
ಸರಕು - ಗೌರವ/ಮನ್ನಣೆ, ಲೋಗರು - ಪರರು, ಅತಿಗಳೆ-ಕೀಳುಮಾಡು, ಉಬ್ಬರಿಸು-ಬೀಗು
ಮೂಲ ...{Loading}...
ಪರಿಪರಿಯ ದಾನಂಗಳನು ಕರೆ
ಕರೆದು ಲೋಗರಿಗಿತ್ತು ಪರರನು
ಹೊರೆದು ತನ್ನಾಶ್ರಿತರನತಿಗಳೆದಾಪ್ತ ಬಾಂಧವರ
ಸರಕು ಮಾಡದೆ ಗರ್ವದಿಂದು
ಬ್ಬರಿಸುತಿಹ ಪಾತಕರ ಪದವಿಯ
ನರಸ ಬಣ್ಣಿಸಲಾರು ಬಲ್ಲರು ಯಮನ ನಗರಿಯಲಿ ॥110॥
೧೧೧ ಮೂರು ಕೋಟಿಯ ...{Loading}...
ಮೂರು ಕೋಟಿಯ ಕೋಟಿಧರ್ಮವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದಲಿ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬುದು ತಪ್ಪದವನೀಪಾಲ ಕೇಳ್ ಎಂದ ॥111॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
111 ತನ್ನ ಪತಿಯೊಡನೆ ಸಹಗಮನವನ್ನು ಮಾಡಿ ದೇಹವನ್ನು ರಾಣಿಯರು ತ್ಯಜಿಸುವುದರಿಂದ ಅವರ ರಾಜರುಗಳು ಅವಳಿಗೆ ತನ್ನ ಶರೀರದಲ್ಲಿ ಎಷ್ಟು ರೋಮಗಳು ಇರುತ್ತವೆಯೋ ಅಷ್ಟು ವರ್ಷಗಳವರೆಗೆ, ಆರು ಮಡಿಯಾಗಿ ಸ್ವರ್ಗ ಸುಖವನ್ನು ಅನುಭವಿಸುತ್ತಾರೆ.
ಪದಾರ್ಥ (ಕ.ಗ.ಪ)
ರೋಮಾಳಿ-ಕೂದಲಗುಂಪು
ಮೂಲ ...{Loading}...
ಮೂರು ಕೋಟಿಯ ಕೋಟಿಧರ್ಮವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದಲಿ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬುದು ತಪ್ಪದವನೀಪಾಲ ಕೇಳೆಂದ ॥111॥
೧೧೨ ಆವನೊಬ್ಬನು ಸತ್ಯಕೋಸುಗ ...{Loading}...
ಆವನೊಬ್ಬನು ಸತ್ಯಕೋಸುಗ
ಭಾವಶುದ್ಧಿಯಲೊರಡಿಚುವ ಶಪ
ಥಾವಸಾನದಲವನಧರ್ಮದಲರ್ಧವನು ಯಮನು
ಓವನನ್ಯಾಯದಲಿ ಸೂರುಳ
ನೋವಿ ರಚಿಸಿದವಂಗೆ ಗತಿಯಿ
ನ್ನಾವುದೆಂಬುದನಾರು ಬಲ್ಲರು ಭೂಪ ಕೇಳ್ ಎಂದ ॥112॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಯಾರು ಸತ್ಯಕ್ಕಾಗಿ ಪ್ರತಿಜ್ಞೆ ಮಾಡುವರೋ ಅವರಿಗೆ ಶಪಥ ಮಾಡಿದ್ದರಿಂದಲೇ ಯಮನು ಅವರ ಧರ್ಮದ ಅರ್ಧ ಭಾಗವನ್ನುಳಿಸುತ್ತಾನೆ. ಇನ್ನು ಅಧರ್ಮದಲ್ಲಿ ಅನ್ಯಾಯದಲ್ಲಿ ಶಪಥ ಮಾಡಿದವನಿಗೆ ಯಾವ ದುರ್ಗತಿಯು ಒದಗುತ್ತದೋ ಯಾರು ಬಲ್ಲರು ?
ಪದಾರ್ಥ (ಕ.ಗ.ಪ)
ಒರಡಿಸು-ಪ್ರಯತ್ನಿಸು, ಓವು-ಮೆಚ್ಚು, ಸೂರುಳ್-ಪ್ರತಿಜ್ಞೆ
ಮೂಲ ...{Loading}...
ಆವನೊಬ್ಬನು ಸತ್ಯಕೋಸುಗ
ಭಾವಶುದ್ಧಿಯಲೊರಡಿಚುವ ಶಪ
ಥಾವಸಾನದಲವನಧರ್ಮದಲರ್ಧವನು ಯಮನು
ಓವನನ್ಯಾಯದಲಿ ಸೂರುಳ
ನೋವಿ ರಚಿಸಿದವಂಗೆ ಗತಿಯಿ
ನ್ನಾವುದೆಂಬುದನಾರು ಬಲ್ಲರು ಭೂಪ ಕೇಳೆಂದ ॥112॥
೧೧೩ ಕೋಪವೆಮ್ಬುದನರ್ಥ ಸಾಧನ ...{Loading}...
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ॥113॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪವೆಂಬುದು ಅನರ್ಥಕ್ಕೆ ಕಾರಣ. ಕೋಪವೇ ಸಂಸಾರ ಬಂಧನ, ಕೋಪದಿಂದ ಇಹಪರಗಳ ಪುಣ್ಯವು ನಾಶವಾಗುತ್ತದೆ. ಆದ್ದರಿಂದ ಕೋಪವನ್ನು ಬಿಡಬೇಕು. ಕೋಪವುಳ್ಳವನು ಯಾರೇ ಆಗಿರಲಿ ಅವನು ಹೀನ ಮನುಷ್ಯನಾಗುತ್ತಾನೆ.
ಪದಾರ್ಥ (ಕ.ಗ.ಪ)
ಅನರ್ಥ-ಕೇಡು, ಸುಕೃತ-ಪುಣ್ಯ, ಲಯ-ನಾಶ, ವರ್ಜಿಸು-ಬಿಡು/ತ್ಯಜಿಸು, ಕಾಪುರುಷ-ಕೆಟ್ಟಮನುಷ್ಯ
ಮೂಲ ...{Loading}...
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ॥113॥
೧೧೪ ವೈದ್ಯನಲಿ ಮಾಂಸದಲಿ ...{Loading}...
ವೈದ್ಯನಲಿ ಮಾಂಸದಲಿ ದ್ವಿಜನಲಿ
ನಿದ್ರೆಯಲಿ ತರುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸಂಖ್ಯಾಸಂಖ್ಯವೆಸರುಗಳ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ಸದ್ಯಫಲವದು ತಪ್ಪದವನೀಪಾಲ ಕೇಳ್ ಎಂದ ॥114॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈದ್ಯ, ಮಾಂಸ, ಬ್ರಾಹ್ಮಣ, ನಿದ್ರೆ, ವೃಕ್ಷ, ವನ, ವಿದ್ಯೆ ಪದವಿ - ಈ ಶಬ್ದಗಳ ಹಿಂದೆ ‘ಮಹಾ’ ಎಂಬ ಶಬ್ದವನ್ನು ಉಪಯೋಗಿಸಿದರೆ ಅಪಾರ್ಥವಾಗುವುದು, ಅನರ್ಥಕಾರಿಯಾಗುವುದು.
ಪದಾರ್ಥ (ಕ.ಗ.ಪ)
ದ್ವಿಜ-ಬ್ರಾಹ್ಮಣ, ತರು-ಗಿಡ/ಮರ
ಟಿಪ್ಪನೀ (ಕ.ಗ.ಪ)
ವೈದ್ಯಾದಿ ಶಬ್ಧಗಳ ಹಿಂದೆ ‘ಮಹಾ’ ಶಬ್ದವನ್ನಿಟ್ಟರೆ ಅರ್ಥಾಂತರವಾಗುತ್ತದೆ. ಮಹಾವೈದ್ಯ - ಯಮ, ಮಹಾಮಾಂಸ - ನರಮಾಂಸ ಮಹಾಬ್ರಾಹ್ಮಣ-ಮೂರ್ಖ, ಮಹಾನಿದ್ರೆ-ಮರಣ, ಮಹಾವೃಕ್ಷ-ನೇಣಿಗೇರಿಸುವ ಮರ
ಮಹಾವನ-ಸ್ಮಶಾನ, ಮಹಾವಿದ್ಯೆ-ಕಳ್ಳತನ, ಮಹಾಪದವಿ-ಯಮಲೋಕದ ದಾರಿ,
ಮೂಲ ...{Loading}...
ವೈದ್ಯನಲಿ ಮಾಂಸದಲಿ ದ್ವಿಜನಲಿ
ನಿದ್ರೆಯಲಿ ತರುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸಂಖ್ಯಾಸಂಖ್ಯವೆಸರುಗಳ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ಸದ್ಯಫಲವದು ತಪ್ಪದವನೀಪಾಲ ಕೇಳೆಂದ ॥114॥
೧೧೫ ಗರುವ ಮಾನ್ಯನುಮನಿತ ...{Loading}...
ಗರುವ ಮಾನ್ಯನುಮನಿತ ದೈವಾ
ಪರನು ಕಡುಸುಖಿ ಭೋಗಿ ರೂಪೋ
ತ್ಕರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರುಜನಕೆ ಬಹು ವಿದ್ಯವುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥಕರವೆಂದ ॥115॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಬಹುವಿದ್ಯೆಯುಳ್ಳವನು ದೊಡ್ಡವನು, ಮಾನ್ಯನು ದೇವಸಮಾನ, ಹೆಚ್ಚು ಸುಖವಂತ, ರೂಪವಂತ ಮತ್ತು ಧನವಂತ ರಾಜರಿಗೆ ಪೂಜ್ಯನಾಗುತ್ತಾನೆ, ಕೀರ್ತಿವಂತನಾಗುತ್ತಾನೆ, ಜನರಿಗೆ ಗುರುವಾಗುತ್ತಾನೆ, ವಿದ್ಯೆಯಿಲ್ಲದವನು ಮನುಷ್ಯ ರೂಪದ ಪಶು, ಅವನ ಜನ್ಮ ನಿರರ್ಥಕ.
ಪದಾರ್ಥ (ಕ.ಗ.ಪ)
ಗರುವ-ಗರ್ವ, ಅನಿತ-ಹೆಚ್ಚಿದ, ವಲ್ಲಭ-ಒಡೆಯ
ಮೂಲ ...{Loading}...
ಗರುವ ಮಾನ್ಯನುಮನಿತ ದೈವಾ
ಪರನು ಕಡುಸುಖಿ ಭೋಗಿ ರೂಪೋ
ತ್ಕರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರುಜನಕೆ ಬಹು ವಿದ್ಯವುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥಕರವೆಂದ ॥115॥
೧೧೬ ವಿದ್ಯೆ ಸತ್ಕುಲ ...{Loading}...
ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯೊಗವು ಮೊದಲಾದ ಗುಣಗಳಿ
ವಿದ್ದು ಫಲವೇನರಸ ಭಾಗ್ಯದ
ಬುದ್ಧಿ ಹೊದ್ದದ ನರಗೆ ದಾರಿದ್ರಾಂಗನವನೆಂದ ॥116॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರ್ಭಾಗ್ಯನಾದ ಬಡವನಿಗೆ ವಿದ್ಯೆ, ಸತ್ಕುಲ, ಅತೀವ ವಿವೇಕ, ಬುದ್ಧಿ, ಜಾಣತನದ ಮಾತು, ಒಳ್ಳೆಯ ಮನಸ್ಸು, ನಡತೆಗಳಿದ್ದು, ಪರಾಕ್ರಮಿ ಎಂದೆನಿಸಿ ಶ್ರದ್ಧೆ, ಆಸಕ್ತಿ ಮೊದಲಾದ ಎಲ್ಲ ಗುಣಗಳಿದ್ದೂ ಏನು ಫಲ ?
ಪದಾರ್ಥ (ಕ.ಗ.ಪ)
ಭದ್ರ-ಗಟ್ಟಿಗ, À್ಯ
ಪಾಠಾನ್ತರ (ಕ.ಗ.ಪ)
ಉದ್ಯುಗವು - ಉದೊಗವು
ಫಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಾಂಗನಾವರಗೆ - ಫಲವೇನರಸ ಭಾಗ್ಯದ ಬುದ್ಧಿ ಹೊದ್ದದ ನರಗೆ ದಾರಿದ್ರಾಂಗನವನೆಂದ
ಉದ್ಯೋಗ ಪರ್ವ, ಓರಿಯೆಂಟಲ್ ಲೈಬ್ರರಿ ಮುದ್ರಣ.
ಮೂಲ ...{Loading}...
ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯೊಗವು ಮೊದಲಾದ ಗುಣಗಳಿ
ವಿದ್ದು ಫಲವೇನರಸ ಭಾಗ್ಯದ
ಬುದ್ಧಿ ಹೊದ್ದದ ನರಗೆ ದಾರಿದ್ರಾಂಗನವನೆಂದ ॥116॥
೧೧೭ ಧರೆಯೊಳಗೆ ಶುಚಿಯಹನು ...{Loading}...
ಧರೆಯೊಳಗೆ ಶುಚಿಯಹನು ವೈಶ್ವಾ
ನರನು ಕಾಂತಾದರ್ಶಿಯಹ ಕವಿ
ವರನು ಸುವ್ರತ ಕಾಮನೆನಿಸುವ ಬ್ರಾಹ್ಮಣೋತ್ತಮನು
ಹರಿಹರಾತ್ಮಕ ನಾಮಕೀರ್ತನ
ವೆರಸಿ ಬದುಕುವನೊಬ್ಬನೀ ನಾ
ಲ್ವರುಗಳಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ॥117॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ್ನಿ, ಕಾಂತಾದರ್ಶಿಯೆನಿಸಿದ ಕವಿ, ವ್ರತನಿಷ್ಠನಾದ ಬ್ರಾಹ್ಮಣ, ಹರಿಹರರ ನಾಮಕೀರ್ತನೆಯನ್ನು ಮಾಡುತ್ತ ಬದುಕುವವನು, ಈ ನಾಲ್ವರಲ್ಲದೇ ಬೇರೆ ಶುಚಿವಂತರು ಈ ಲೋಕದೊಳಗಿಲ್ಲ.
ಪದಾರ್ಥ (ಕ.ಗ.ಪ)
ವೈಶ್ಯಾನರ-ಬೆಂಕಿ, ಆತ್ಮಕ-ಒಳಗೊಂಡು, ಭುವನ-ಲೋಕ
ಟಿಪ್ಪನೀ (ಕ.ಗ.ಪ)
ಕವಯ-ಕ್ರಾಂತದರ್ಶಿನಃ
ಕಾಂತಾದಶಿ-ಕಾಂತಾದರ್ಶಿನ್-ಮನೋಹರವಾದ ಆದರ್ಶ ಉಳ್ಳವನು ಎಂದು ಉಲ್ಲೇಖಿಸಿದೆ.
ಮೂಲ ...{Loading}...
ಧರೆಯೊಳಗೆ ಶುಚಿಯಹನು ವೈಶ್ವಾ
ನರನು ಕಾಂತಾದರ್ಶಿಯಹ ಕವಿ
ವರನು ಸುವ್ರತ ಕಾಮನೆನಿಸುವ ಬ್ರಾಹ್ಮಣೋತ್ತಮನು
ಹರಿಹರಾತ್ಮಕ ನಾಮಕೀರ್ತನ
ವೆರಸಿ ಬದುಕುವನೊಬ್ಬನೀ ನಾ
ಲ್ವರುಗಳಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ॥117॥
೧೧೮ ಹರಿಭಕುತಿ ಲೋಲುಪನೆನಿಸಿ ...{Loading}...
ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕವಾಗಿಯು ವೈಷ್ಣವರ ಮೇಲೆ
ಎರಕವಿಲ್ಲದ ಕರ್ಮ ಚಾಂಡಾ
ಲರುಗಳೆಪ್ಪತ್ತೈದು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳ್ ಎಂದ ॥118॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಯ ಭಕ್ತನೆನಿಸಿ ಶಂಕರನ ದ್ವೇಷಿಯಾಗಿರುವ, ಶಂಕರನ ಭಕ್ತನಾಗಿ ವಿಷ್ಣುವಿನ ಮೇಲೆ ಭಕ್ತಿಯಿಲ್ಲದವರುಗಳು ಎಪ್ಪತ್ತೈದು ಕೋಟಿ ನರಕದೊಳಗೆ ತೂಗಾಡುತ್ತಿರುವರು.
ಪದಾರ್ಥ (ಕ.ಗ.ಪ)
ಲೋಲುಪ-ತೊಡಗಿದ, ಎರಕ-ಪ್ರೀತಿ
ಟಿಪ್ಪನೀ (ಕ.ಗ.ಪ)
ಪದ್ಯ ಪ್ರಕ್ಷಿಪ್ತವೆನಿಸುತ್ತದೆ
ಶ್ರೀಕೃಷ್ಣ ಜೋಯಿಸರ ಸಂಪಾದಿತ ಕೃತಿಯಲ್ಲಿ ಎಪ್ಪತ್ತೇಳು ಕೋಟಿ ಎಂದಿರುತ್ತದೆ.
ಮೂಲ ...{Loading}...
ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕವಾಗಿಯು ವೈಷ್ಣವರ ಮೇಲೆ
ಎರಕವಿಲ್ಲದ ಕರ್ಮ ಚಾಂಡಾ
ಲರುಗಳೆಪ್ಪತ್ತೈದು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ ॥118॥
೧೧೯ ಯತಿ ಕೆಡುಗು ...{Loading}...
ಯತಿ ಕೆಡುಗು ದುಸ್ಸಂಗದಲಿ ಭೂ
ಪತಿ ಕೆಡುಗು ದುರ್ಮಂತ್ರಿಯಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷÉಯಲಿ
ಮತಿ ಕೆಡುಗು ಮಧುಪಾನದಲಿ ಸ
ದ್ಗತಿ ಕೆಡುಗು ದುಶ್ಚರಿತದಲಿ ನಿಜ
ಸತಿ ಕೆಡುಗು ದುವ್ರ್ಯಸನದಲಿ ಭೂಪಾಲ ಕೇಳ್ ಎಂದ ॥119॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಜನರ ಸಹವಾಸದಿಂದ ಯತಿಯು ಕೆಡುತ್ತಾನೆ; ದುಷ್ಟಮಂತ್ರಿಯಿಂದ ರಾಜನು ಕೆಡುತ್ತಾನೆ, ಮುದ್ದಿನಿಂದ ಮಗನು ಕೆಡುತ್ತಾನೆ. ಉಪೇಕ್ಷೆಯಿಂದ ಕೃಷಿಯು ಹಾಳಾಗುತ್ತದೆ. ಮದ್ಯಪಾನದಿಂದ ಬುದ್ಧಿಯು ಕೆಡುತ್ತದೆ. ಕೆಟ್ಟ ನಡತೆಯಿಂದ ಸದ್ಗತಿಯು ತಪ್ಪುತ್ತದೆ. ಕೆಟ್ಟ ಹವ್ಯಾಸಗಳಿಂದ ಹೆಂಗಸು ಕೆಡುತ್ತಾಳೆ.
ಮೂಲ ...{Loading}...
ಯತಿ ಕೆಡುಗು ದುಸ್ಸಂಗದಲಿ ಭೂ
ಪತಿ ಕೆಡುಗು ದುರ್ಮಂತ್ರಿಯಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷÉಯಲಿ
ಮತಿ ಕೆಡುಗು ಮಧುಪಾನದಲಿ ಸ
ದ್ಗತಿ ಕೆಡುಗು ದುಶ್ಚರಿತದಲಿ ನಿಜ
ಸತಿ ಕೆಡುಗು ದುವ್ರ್ಯಸನದಲಿ ಭೂಪಾಲ ಕೇಳೆಂದ ॥119॥
೧೨೦ ಉಣ್ಡು ತೀರಿಸಬೇಕು ...{Loading}...
ಉಂಡು ತೀರಿಸಬೇಕು ತಾ ಮುಂ
ಕೊಂಡು ಮಾಡಿದ ಪುಣ್ಯ ಪಾಪದ
ತಂಡವನು ತರಹರಣವಿಲ್ಲದೆ ಭವ ಭವಂಗಳಲಿ
ಹಿಂಡಿ ಹಿಳಿವುದು ಬೆಂಬಿಡದೆ ಸಮ
ದಂಡಿಯಲಿ ಹಗೆ ಕೆಳೆಗಳೆನ್ನದೆ
ಗಂಡುಗೆಡಿಸದೆ ಬಿಡುವುದೇ ವಿಧಿಯೆಂದನಾ ವಿದುರ ॥120॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಮಾಡಿದ ಪುಣ್ಯ ಪಾಪಗಳ ಫಲವನ್ನು ತಾನೇ ಅನುಭವಿಸಬೇಕು. ಜನ್ಮಜನ್ಮಾಂತರಗಳಲ್ಲಿಯೂ ಅದು ತನ್ನ ಬೆನ್ನು ಬಿಡದೇ ಬರುತ್ತದೆ. ಶತ್ರು ಮಿತ್ರರೆಂಬ ಭೇದವಿಲ್ಲದೇ ಎಲ್ಲರನ್ನೂ ಅದು ದಂಡಿಸುತ್ತದೆ. ಅದು ಯಾರನ್ನೂ ಬಿಡದು.
ಪದಾರ್ಥ (ಕ.ಗ.ಪ)
ಸಮದಂಡಿ-ಒಂದೇ ರೀತಿಯಲ್ಲಿ, ತರಹರಣ-ತಾಳ್ಮೆ, ಕೆಳೆ-ಗೆಳೆತನ, ಭವ-ಜನ್ಮ, ಹಿಳಿ-ಹಿಪ್ಪೆಮಾಡು
ಮೂಲ ...{Loading}...
ಉಂಡು ತೀರಿಸಬೇಕು ತಾ ಮುಂ
ಕೊಂಡು ಮಾಡಿದ ಪುಣ್ಯ ಪಾಪದ
ತಂಡವನು ತರಹರಣವಿಲ್ಲದೆ ಭವ ಭವಂಗಳಲಿ
ಹಿಂಡಿ ಹಿಳಿವುದು ಬೆಂಬಿಡದೆ ಸಮ
ದಂಡಿಯಲಿ ಹಗೆ ಕೆಳೆಗಳೆನ್ನದೆ
ಗಂಡುಗೆಡಿಸದೆ ಬಿಡುವುದೇ ವಿಧಿಯೆಂದನಾ ವಿದುರ ॥120॥
೧೨೧ ಸ್ನೇಹಪೂರ್ವಕದಿನ್ದ ಮನದೊಳು ...{Loading}...
ಸ್ನೇಹಪೂರ್ವಕದಿಂದ ಮನದೊಳು
ಗಾಹಿಸಲು ಲಕ್ಷಿ ್ಮೀಶನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ ॥121॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ! ಆಮೆಯು ಸಂಚರಿಸದೇ ಒಂದೇ ಕಡೆಯಲ್ಲಿಯೇ ಇದ್ದರೂ ಅದರ ಸಂತತಿಯ ಪೋಷಣೆಯು ನಡೆಯುತ್ತಲೆ ಇರುವಂತೆ, ಲಕ್ಷ್ಮೀರಮಣನನ್ನು ಭಕ್ತಿಪೂರ್ವಕವಾಗಿ ಮನಸ್ಸಿನಲ್ಲ್ಲಿಯೇ ಧ್ಯಾನಿಸಿದವರಿಗೆ ಬೇಕಾದ ಪುರುಷಾರ್ಥಗಳನ್ನು ಅವರಿದ್ದಲ್ಲಿಯೇ ನೀಡುವನು.
ಪದಾರ್ಥ (ಕ.ಗ.ಪ)
ಹದನ-ಕ್ಷೇಮ, ಕೂರ್ಮ-ಆಮೆ
ಟಿಪ್ಪನೀ (ಕ.ಗ.ಪ)
‘ಳ’ ಬದಲು ‘ಳು’ ಅರ್ಥಾನುಕೂಲಕ್ಕೆ ಬಳಸಿದೆ - ಈ ಪದ್ಯವು ಪ್ರಕ್ಷಿಪ್ತವೆನಿಸುತ್ತದೆ.
ಮೂಲ ...{Loading}...
ಸ್ನೇಹಪೂರ್ವಕದಿಂದ ಮನದೊಳು
ಗಾಹಿಸಲು ಲಕ್ಷಿ ್ಮೀಶನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ ॥121॥
೧೨೨ ಕೂಡಿದೆಡೆಯಲಕೃತ್ಯ ಶತವನು ...{Loading}...
ಕೂಡಿದೆಡೆಯಲಕೃತ್ಯ ಶತವನು
ಜೋಡಿಸಿದವರು ಮಿತ್ರರುಗಳಿಗೆ
ಕೇಡ ಚಿಂತಿಸಿದವರುಗಳು ಪುರುಷಾರ್ಥವನು ತಮಗೆ
ಮಾಡಿದವರುಗಳಿಗೆ ವಿಘಾತಿಯ
ಹೂಡಿದವದಿರು ನರಕದೊಳಗೋ
ಲಾಡದಿಹರೇ ರಾಯ ಚಿತ್ತೈಸೆಂದನಾ ವಿದುರ ॥122॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋದೆಡೆಯಲ್ಲಿ ಪಾಪಕೃತ್ಯವನ್ನೆಸಗಿದವರು, ಸ್ನೇಹಿತರಿಗೆ ಕೇಡನ್ನು ಚಿಂತಿಸಿದವರು, ತಮಗೆ ಉಪಕಾರವನ್ನು ಮಾಡಿದವರಿಗೆ ಅಪಕಾರವನ್ನು ಮಾಡಿದವರು, ಇವರೆಲ್ಲರೂ ನರಕದಲ್ಲಿ ತೂಗಾಡುತ್ತಾರೆ.
ಪದಾರ್ಥ (ಕ.ಗ.ಪ)
ಅಕೃತ್ಯಶತ-ನೂರುಕೇಡು, ವಿಘಾತಿ-ಕೇಡು
ಮೂಲ ...{Loading}...
ಕೂಡಿದೆಡೆಯಲಕೃತ್ಯ ಶತವನು
ಜೋಡಿಸಿದವರು ಮಿತ್ರರುಗಳಿಗೆ
ಕೇಡ ಚಿಂತಿಸಿದವರುಗಳು ಪುರುಷಾರ್ಥವನು ತಮಗೆ
ಮಾಡಿದವರುಗಳಿಗೆ ವಿಘಾತಿಯ
ಹೂಡಿದವದಿರು ನರಕದೊಳಗೋ
ಲಾಡದಿಹರೇ ರಾಯ ಚಿತ್ತೈಸೆಂದನಾ ವಿದುರ ॥122॥
೧೨೩ ಕುಲಜನಾಗಲಕುಲಜನಾಗಲಿ ...{Loading}...
ಕುಲಜನಾಗಲಕುಲಜನಾಗಲಿ
ಜಲರುಹಾಕ್ಷನ ನಾಮ ಕೀರ್ತನ
ದೊಳಗೆ ಬದುಕುವನಾವನಾತನೆ ಸುಕೃತಿಯೆಂಬವನು
ಉಳಿದ ಜಪ ತಪ ನಿಯಮ ಹೋಮಂ
ಗಳಲಿ ಸಂಸಾರಾರ್ಣವವನು
ಚ್ಚಳಿಸಬಹುದೇ ರಾಯ ಚಿತ್ತೈಸೆಂದನಾ ವಿದುರ ॥123॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತಮ ಕುಲದವನಾಗಲಿ, ದುಷ್ಕುಲದಲ್ಲಿ ಹುಟ್ಟಿದವನಾಗಲಿ ಯಾರು ಶ್ರೀಮನ್ನಾರಾಯಣನನ್ನು ಸದಾಸ್ಮರಿಸುತ್ತ ಬದುಕುತ್ತಾರೋ ಅವರೇ ಪುಣ್ಯಶಾಲಿ, ದೇವರಲ್ಲಿ ಭಕ್ತಿಯಿಡದೆ ಜಪ-ತಪ-ಹೋಮ ಮುಂತಾದವುಗಳಲ್ಲಿ ತೊಡಗಿದರೆ ಈ ಸಂಸಾರಸಮುದ್ರವನ್ನು ದಾಟಬಹುದೆ ?
ಪದಾರ್ಥ (ಕ.ಗ.ಪ)
ಸುಕೃತಿ-ಪುಣ್ಯವಂತ, ಆರ್ಣವ-ಸಮುದ್ರ, ಉಚ್ಚಳಿಸು-ದಾಟು
ಅಕುಲಜ - ಹೀನಕುಲದವನು
ಮೂಲ ...{Loading}...
ಕುಲಜನಾಗಲಕುಲಜನಾಗಲಿ
ಜಲರುಹಾಕ್ಷನ ನಾಮ ಕೀರ್ತನ
ದೊಳಗೆ ಬದುಕುವನಾವನಾತನೆ ಸುಕೃತಿಯೆಂಬವನು
ಉಳಿದ ಜಪ ತಪ ನಿಯಮ ಹೋಮಂ
ಗಳಲಿ ಸಂಸಾರಾರ್ಣವವನು
ಚ್ಚಳಿಸಬಹುದೇ ರಾಯ ಚಿತ್ತೈಸೆಂದನಾ ವಿದುರ ॥123॥
೧೨೪ ಜಾತರೂಪದಲೇಸು ಹೊಲ್ಲೆಹ ...{Loading}...
ಜಾತರೂಪದಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತವೆಂಬುದನರಸ ಚಿತ್ತೈಸೆಂದನಾ ವಿದುರ ॥124॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿನ್ನದ ಗುಣ ದೋಷಗಳನ್ನು ಬೆಂಕಿಯಲ್ಲಿ ಕಾಯಿಸಿ ಪರೀಕ್ಷಿಸುವಂತೆ ಜನರಲ್ಲಿಯೂ ಇವನು ಉತ್ತಮ, ಇವನು ಮಧ್ಯಮ, ಇವನ ಕನಿಷ್ಠ ಎಂಬುದನ್ನು ನೀತಿಯ ಒರೆಗಲ್ಲಿನಿಂದ ಪರೀಕ್ಷಿಸಿ ತಿಳಿಯಬೇಕು.
ಪದಾರ್ಥ (ಕ.ಗ.ಪ)
ಜಾತರೂಪ - ಚಿನ್ನ ವೀತಿಹೋತ್ರ-ಅಗ್ನಿ, ಕನೀಯಸ-ಕನಿಷ್ಠ, ಹೊಲ್ಲೆಹ-ರೀತಿ/ಬಗೆ
ಸದಸತ್ತು -ಸತ್ಯ, ಅಸತ್ಯ
ಮೂಲ ...{Loading}...
ಜಾತರೂಪದಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತವೆಂಬುದನರಸ ಚಿತ್ತೈಸೆಂದನಾ ವಿದುರ ॥124॥
೧೨೫ ಅವನಿಯಲಿ ಜನಜನಿತ ...{Loading}...
ಅವನಿಯಲಿ ಜನಜನಿತ ಧನ ಧಾ
ನ್ಯವನು ಕಳಹಲಗೈದು ಸಂತೋ
ಷವನು ಮಾಡುವ ಕಡೆಯಲೊಂದಕೆ ನೂರು ಮಡಿಯಾಗಿ
ಲವಲವಿಕೆ ಮಿಗಲಿತ್ತು ಸಪ್ತಾಂ
ಗವನು ಸಲಹುತ್ತಿರಲುಬೇಹುದು
ರವಿಯವೊಲು ಸಾವಿರ ಮುಖದೊಳವನೀಶ ಕೇಳ್ ಎಂದ ॥125॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನು ಧನ ಧಾನ್ಯಗಳನ್ನು ಆಶ್ರಿತರ ಸಂರಕ್ಷಣೆಗೆ ವಿನಿಯೋಗಿಸಿ ಅವರಿಗೆ ಸಂತೋಷವನ್ನುಂಟು ಮಾಡಿದರೆ, ಅವು ಒಂದಕ್ಕೆ ನೂರು ಮಡಿಯಾಗಿ ಫಲವನ್ನು ಅರಸನಿಗೇ ಹಿಂತಿರುಗಿಸುತ್ತದೆ. ಸೂರ್ಯನು ತನ್ನ ಸಹಸ್ರ ಕಿರಣಗಳನ್ನು ಬೀರಿ ಜಗತ್ತನ್ನು ಪಾಲಿಸುವಂತೆ ರಾಜನು ಸಾವಿರ ಬಗೆಯಿಂದ ತನ್ನ ಸಪ್ತಾಂಗವನ್ನು ಪಾಲಿಸಬೇಕು.
ಪದಾರ್ಥ (ಕ.ಗ.ಪ)
ಕಳಹಲ- ? ಶಬ್ದ ರೂಪ ಸ್ಪಷ್ಟವಿಲ್ಲ. ಕಳವಲಗೈದು - ಸೂರೆಮಾಡು, ಲೂಟಿಮಾಡು, ಸೂರೆಗೊಡು ಹರಿಶ್ಚಂದ್ರ ಕಾವ್ಯ, ರಾಘವಾಂಕ
ಟಿಪ್ಪನೀ (ಕ.ಗ.ಪ)
ಸಪ್ತಾಂಗಗಳು- ರಾಜ, ಮಂತ್ರಿ, ಮಿತ್ರ, ಕೋಶ, ರಾಷ್ಟ್ರ, ಕೋಟೆ, ಸೈನ್ಯ.
ಕಳಹಲ - ವಿನಿಯೋಗ ? ಈ ಶಬ್ದ ರೂಪ ಸ್ಪಷ್ಟವಾಗಿಲ್ಲ.
ಮೂಲ ...{Loading}...
ಅವನಿಯಲಿ ಜನಜನಿತ ಧನ ಧಾ
ನ್ಯವನು ಕಳಹಲಗೈದು ಸಂತೋ
ಷವನು ಮಾಡುವ ಕಡೆಯಲೊಂದಕೆ ನೂರು ಮಡಿಯಾಗಿ
ಲವಲವಿಕೆ ಮಿಗಲಿತ್ತು ಸಪ್ತಾಂ
ಗವನು ಸಲಹುತ್ತಿರಲುಬೇಹುದು
ರವಿಯವೊಲು ಸಾವಿರ ಮುಖದೊಳವನೀಶ ಕೇಳೆಂದ ॥125॥
೧೨೬ ಇನನುದಯಿಸಲಿ ...{Loading}...
ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡಿದೆರಡನಾಡರು
ಮನವಚನ ಕಾಯದಲಿ ಚಿತ್ತೈಸೆಂದನಾ ವಿದುರ ॥126॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಪಶ್ಚಿಮದಿಕ್ಕಿನಲ್ಲಿ ಹುಟ್ಟಬಹುದು, ಬೆಂಕಿಯು ಹಿಮಾಂಶುವೆನಿಸಿದ ಚಂದ್ರನಂತೆ ತಂಪಾಗಬಹುದು, ಮೇರು ಪರ್ವತವು ಅಲ್ಲಾಡಬಹುದು, ತಾವರೆಯ ಹೂವು ಬೆಟ್ಟದ ತುದಿಯಲ್ಲಿ ಅರಳಬಹುದು ಆದರೆ ಸತ್ಪುರುಷರು ಸದಾ ಕಾಯಾ, ವಾಚಾ, ಮನಸಾ ಕೊಟ್ಟ ಮಾತಿನಂತೆ ನಡೆಯುತ್ತಾರೆ.
ಪದಾರ್ಥ (ಕ.ಗ.ಪ)
ಇನ-ಸೂರ್ಯ, ಅನಲ-ಬೆಂಕಿ, ಹಿಮಾಂಶು-ಚಂದ್ರ, ವನ-ನೀರು
ಮೂಲ ...{Loading}...
ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡಿದೆರಡನಾಡರು
ಮನವಚನ ಕಾಯದಲಿ ಚಿತ್ತೈಸೆಂದನಾ ವಿದುರ ॥126॥
೧೨೭ ಹರನ ಕೊರಳಿಙ್ಗಾಭರಣವಾ ...{Loading}...
ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ ॥127॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪವು ಪರಮೇಶ್ವರನ ಕೊರಳಿನಲ್ಲಿ ಆಭರಣವಾಗಿದ್ದರೂ ಗಾಳಿಯೇ ಅದಕ್ಕೆ ಆಹಾರವಾದಂತೆ, ಪಾಂಡವರು ನಿನ್ನ ಮಕ್ಕಳಾದರೂ, ನೀನಿದ್ದೂ ನರಪಶುಗಳಂತೆ ವನವಾಸದಲ್ಲಿ ಸದಾ ಸೊಪ್ಪುಗಳನ್ನು ತಿಂದು ಜೀವಿಸಬೇಕಾಯಿತೆ ?
ಪದಾರ್ಥ (ಕ.ಗ.ಪ)
ಉರಗ-ಹಾವು, ಅನವರತ-ಯಾವಾಗಲೂ, ಪವನ-ಗಾಳಿ, ಅಶನ-ಊಟ
ಮೂಲ ...{Loading}...
ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ ॥127॥
೧೨೮ ದೇವತಾಸ್ಥಾನದಲಿ ವಿಪ್ರ ...{Loading}...
ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ರವಿ ಶಶಿಗಳುದಯಾಸ್ತಮಯ ಕಾಲದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ವಿದುರ ॥128॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಸ್ಥಾನ, ಬ್ರಾಹ್ಮಣಸಭೆ, ರಾಜಪುರುಷರ ಸೇವಾಕಾರ್ಯಗಳಲ್ಲಿ ಸೂರ್ಯ ಚಂದ್ರರು ಉದಯಿಸುವ ಮತ್ತು ಅಸ್ತಮಿಸುವ ಸಮಯದಲ್ಲಿ, ಗೋವುಗಳ ಗುಂಪಿನಲ್ಲಿ, ಶ್ರೇಷ್ಠವಾದ ವೃಂದಾವನದಲ್ಲಿ ಕೇಡನ್ನುಂಟು ಮಾಡುವುದು ಹಿರಿಯರಿಗೆ ಯೋಗ್ಯವಲ್ಲ.
ಪದಾರ್ಥ (ಕ.ಗ.ಪ)
ಉಪಹತಿ-ಕೇಡು.
ಮೂಲ ...{Loading}...
ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ರವಿ ಶಶಿಗಳುದಯಾಸ್ತಮಯ ಕಾಲದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ವಿದುರ ॥128॥
೧೨೯ ನಾಯ ನಡುಬೋನವನು ...{Loading}...
ನಾಯ ನಡುಬೋನವನು ನೆಚ್ಚಿ ವೃ
ಥಾಯ ಕೆಡಬೇಡಾ ಯುಧಿಷ್ಠಿರ
ರಾಯನನು ಕರೆಸುವುದು ಭೀಷ್ಮಾದಿಗಳ ಮುಂದಿಟ್ಟು
ನ್ಯಾಯಮುಖದಲಿ ಸಕಲ ರಾಜ್ಯ
ಶ್ರೀಯನರ್ಧವನಿತ್ತು ಬದುಕುವು
ದಾಯತಿಕೆಯೊಳಗಹುದು ಚಿತ್ತೈಸೆಂದನಾ ವಿದುರ ॥129॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಯಿಯ ತಲೆಯ ಮೇಲಿನ ಆಹಾರವನ್ನು ನಂಬಿ ವೃಥಾ ಕೆಡಬೇಡ. ಭೀಷ್ಮರೇ ಮೊದಲಾದವರನ್ನು ಮುಂದಿಟ್ಟುಕೊಂಡು ನ್ಯಾಯವಾಗಿ ಪಾಂಡವರಿಗೆ ಸಲ್ಲಬೇಕಾದ ಅರ್ಧ ರಾಜ್ಯ ಸಂಪತ್ತನ್ನು ನೀಡಿ ಬದುಕುವುದರಿಂದ ಮುಂದೆ ನಿನಗೆ ಒಳ್ಳೆಯದಾಗುತ್ತದೆ ಗಮನಿಸು ಎಂದನು ವಿದುರ.
ಪದಾರ್ಥ (ಕ.ಗ.ಪ)
ಆಯತಿಕೆ-ಯೋಗ್ಯ, ಬೋನು-ಅನ್ನ, ರಾಜ್ಯಶ್ರೀ-ರಾಜಲಕ್ಷ್ಮಿ
ಪಾಠಾನ್ತರ (ಕ.ಗ.ಪ)
ನಡು ಬೋನವನು ನೆಚ್ಚಿ , ಈ ಪದವು ಶ್ರೀಕೃಷ್ಣ ಜೋಯಿಸರ ಸಂಪಾದಿತ ಕೃತಿಯಲ್ಲಿ ನುಡಿಗೇಳಿ ನೀನು ಎಂದಿರುತ್ತದೆ.
ಮೂಲ ...{Loading}...
ನಾಯ ನಡುಬೋನವನು ನೆಚ್ಚಿ ವೃ
ಥಾಯ ಕೆಡಬೇಡಾ ಯುಧಿಷ್ಠಿರ
ರಾಯನನು ಕರೆಸುವುದು ಭೀಷ್ಮಾದಿಗಳ ಮುಂದಿಟ್ಟು
ನ್ಯಾಯಮುಖದಲಿ ಸಕಲ ರಾಜ್ಯ
ಶ್ರೀಯನರ್ಧವನಿತ್ತು ಬದುಕುವು
ದಾಯತಿಕೆಯೊಳಗಹುದು ಚಿತ್ತೈಸೆಂದನಾ ವಿದುರ ॥129॥
೧೩೦ ಚಕ್ರವರ್ತಿಗಳಾರಲೇ ಭೂ ...{Loading}...
ಚಕ್ರವರ್ತಿಗಳಾರಲೇ ಭೂ
ಚಕ್ರದೊಳಗವರಿಗೆ ಮುರಾರಿಯ
ಚಕ್ರವೇ ಬೆಸಗೆಯ್ವುದಲ್ಲದೆ ಪಾಂಡು ತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ ॥130॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ! ಈ ಭೂಮಿಯೊಳಗೆ ಪಾಂಡವರನ್ನು ಎದುರಿಸುವವರು ಯಾರಿದ್ದಾರೆ. ಶ್ರೀಕೃಷ್ಣನ ಸುದರ್ಶನ ಚಕ್ರವೇ ಎಲ್ಲರಿಗೂ ಆಜ್ಞೆಯನ್ನು ಮಾಡುವುದು. ಅಲ್ಲದೇ ಶ್ರೀಕೃಷ್ಣನೇ ಪಾಂಡವರ ಸೇವೆಗೆ ನಿಂತಿದ್ದಾನೆ. ಯುಧಿಷ್ಠಿರ ಚಕ್ರವರ್ತಿಗೆ ಸರಿಸಾಟಿಯಾದವರು ಮತ್ತೆ ಯಾರಿದ್ದಾರೆ.
ಪದಾರ್ಥ (ಕ.ಗ.ಪ)
ಚಕ್ರ-ಸಮೂಹ, ಸೈನ್ಯ, ಚಕ್ರಿ-ಕೃಷ್ಣ
ಮೂಲ ...{Loading}...
ಚಕ್ರವರ್ತಿಗಳಾರಲೇ ಭೂ
ಚಕ್ರದೊಳಗವರಿಗೆ ಮುರಾರಿಯ
ಚಕ್ರವೇ ಬೆಸಗೆಯ್ವುದಲ್ಲದೆ ಪಾಂಡು ತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ ॥130॥
೧೩೧ ನಳನೃಪತಿ ದಮಯನ್ತಿ ...{Loading}...
ನಳನೃಪತಿ ದಮಯಂತಿ ಸೀತಾ
ಲಲನೆ ರಾಘವದೇವ ದ್ರೌಪದಿ
ಕಲಿಯುಧಿಷ್ಠಿರದೇವನಿವರಿಂತಾರು ಮಾನಿಸರು
ಇಳೆಯೊಳುತ್ತಮ ಕೀರ್ತಿಗಳು ಜಾ
ವಳದ ಪುರುಷರೆ ಧರ್ಮಪುತ್ರನ
ಗೆಲುವ ಪರಿಯೆಂತೈ ಮಹಾದೇವೆಂದನಾ ವಿದುರ ॥131॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಳಮಹಾರಾಜ, ದಮಯಂತಿ, ಸೀತಾಮಾತೆ ಮತ್ತು ರಾಮಚಂದ್ರ, ದ್ರೌಪದಿ ಮತ್ತು ವೀರ ಯುಧಿಷ್ಠಿರ ದೇವ ಇವರುಗಳಂತೆ ಮನುಷ್ಯರು ಯಾರಿದ್ದಾರೆ ? ಭೂಮಿಯಲ್ಲಿ ಇವರೆಲ್ಲರೂ ಕೀರ್ತಿವಂತರು. ಇವರುಗಳೇನು ಸಾಮಾನ್ಯರೆ ? ಧರ್ಮರಾಯನನ್ನು ಗೆಲ್ಲುವ ರೀತಿ ಹೇಗೆ? ಮಹಾದೇವ !
ಪದಾರ್ಥ (ಕ.ಗ.ಪ)
ಜಾವಳರು - ಸಾಮಾನ್ಯರು, ಪರಿ - ರೀತಿ.
ಟಿಪ್ಪನೀ (ಕ.ಗ.ಪ)
ನಳ-ದಮಯಂತಿ : ಭರತ ಖಂಡದ ಅತ್ಯಂತ ಪ್ರಾಚೀನ ಕಥೆಗಳಲ್ಲಿ ಒಂದು ನಳ-ದಮಯಂತಿ ಕಥೆ. ಶ್ರೀ ಹರ್ಷನ ನೈಷಧ ಚರಿತ್ರೆ ಪ್ರಸಿದ್ಧವಾಗಿದೆ. ಕ್ಷೇಮೇಂದ್ರ ಹೇಮಚಂದ್ರಾಚಾರ್ಯ ಸೋಮಪ್ರಭಾಚಾರ್ಯ ವಿನಯ ಚಂದ್ರಸೂರಿ ಶುಭ ಶೀಲಗಾಮಿ ಹರದತ್ತ ಸೂರಿ ತ್ರಿವಿಕ್ರಮಭಟ್ಟ, ಚಂಡಪಾಲ ಮೊದಲಾದ ಅಸಂಖ್ಯ ಕವಿಗಳೂ ನಳ-ದಮಯಂತಿಯರ ಕಥೆಗಳನ್ನು ಕುರಿತು ಕಾವ್ಯ-ನಾಟಕಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ, ಕನ್ನಡದಲ್ಲಿ ಚೌಂಡರಸ, ಕನಕದಾಸ ಬಸವಪ್ಪ ಶಾಸ್ತ್ರಿ, ಅಯ್ಯಶಾಸ್ತ್ರಿ ಮೊದಲಾದ ಹಲವರು ಬರೆದಿದ್ದಾರೆ.
ನಳಚರಿತ್ರೆಯು ಮಹಾಭಾರತಕ್ಕಿಂತ ತುಂಬ ಹಳೆಯದಾಗಿದೆ. ಅದು ಮಹಾಭಾರತದ ವನಪರ್ವದಲ್ಲಿ ಒಂದು ಉಪಾಖ್ಯಾನವಾಗಿ ಸೇರಿಕೊಂಡಿದೆ. ವಾಸ್ತವವಾಗಿ ಮಹಾಭಾರತವು ನಳಚರಿತ್ರೆಗೆ ಋಣಿಯಾಗಿರಬೇಕು. ನಳಚರಿತ್ರೆಯ ಕಥೆಯ ಚೌಕಟ್ಟನ್ನು ಮಹಾಭಾರತ ತನ್ನ ಕಥಾ ಗರ್ಭದಲ್ಲಿ ಸೇರಿಸಿಕೊಂಡಿತು ಎಂದು ವಿದ್ವಾಂಸರು ಆಧಾರಪೂರ್ವಕವಾಗಿ ಹೇಳುತ್ತಾರೆ.
ನಳನು ಪಗಡೆಯ ಜೂಜಿನಲ್ಲಿ ಪುಷ್ಕರನಿಗೆ ರಾಜ್ಯವನ್ನು ಸೋಲುವುದು, ವನವಾಸ ಮಾಡುವುದು, ವೇಷ ಮರೆಸಿಕೊಂಡು ಬಾಹುಕನ ವೇಷದಲ್ಲ್ಲಿ ಅಜ್ಞಾತ ಜೀವನ ನಡೆಸುವುದು. ಇಂದ್ರ, ಅಗ್ನಿ ಮೊದಲಾದ ನಾಲ್ವರು ದೇವತೆಗಳು ದಮಯಂತಿ ಸ್ವಯಂವರದಲ್ಲಿ ನಳನ ವೇಷದಲ್ಲಿ ಬಂದು ಒಟ್ಟು ಐವರು ನಳರು ದಮಯಂತಿಯನ್ನು ಬಯಸುವುದು (ಪಂಚಪಾಂಡವರು ದ್ರೌಪದಿಯನ್ನು ಬಯಸಿದುದನ್ನು ನೆನಪಿಸಿಕೊಳ್ಳಬಹುದು) ದಮಯಂತಿಯು ಚೇದಿರಾಜನ ಅಂತಃಪುರದಲ್ಲಿ ಕೆಲಸ ಮಾಡುವುದು ಈ ಎಲ್ಲ ಘಟನೆಗಳು ಮಹಾಭಾರತದ ಕಥೆಯ ಬೆಳವಣಿಗೆಗೆ ಪ್ರೇರಣೆ ನೀಡಿರುವುದು ಸ್ಪಷ್ಟವಾಗಿದೆ.
ಜೂಜಿನಲ್ಲಿ ರಾಜ್ಯ ನಷ್ಟ, ವನವಾಸ, ಅಜ್ಞಾತವಾಸ, ಸೈರಂಧ್ರಿ ವೃತ್ತಿ ಈ ಅಂಶಗಳನ್ನು ಎರಡು ಕಾವ್ಯಗಳಿಗೂ ಇರುವ ಸೌಮ್ಯವನ್ನು U್ಪಮನಿಸಿ. ನಳನು ಜೂಜಿನಲ್ಲಿ ರಾಜ್ಯವನ್ನು ಸೋತಾಗ ಹೆಂಡತಿಯನ್ನು ಒಡ್ಡುವಂತೆ ಪುಷ್ಕರನು ಹೇಳಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. (ಆದರೆ ವಿವೇಕಿಯಾದ ನಳನು ಹಾಗೆ ಮಾಡಲಿಲ್ಲ ಎಂಬುದು ಬೇರೆ ವಿಷಯ!)
ನಳ ನಿಷಧ ದೇಶದ ವೀರಸೇನನ ಮಗ. ಮಹಾಸ್ಫುರದ್ರೂಪಿ. ದಮಯಂತಿ ಕುಂಡಿನಪುರದ ಭೀಮರಾಜನ ಮಗಳು. ಇವರ ಸ್ವಯಂವರಕ್ಕೆ ಇಂದ್ರನೇ ಮೊದಲಾದ ನಾಲ್ವರು ದೇವತೆಗಳು ಬಂದು ನಳನ ಮೇಲೆ ಈಕೆಗೆ ಅನುರಾಗವಿರುವುದನ್ನು ತಿಳಿದು ನಳನ ವೇಷ ಧರಿಸಿ ನಿಲ್ಲುತ್ತಾರೆ. ಇಕ್ಕಟ್ಟಿಗೆ ಸಿಕ್ಕಿದ ದಮಯಂತಿ ದೇವತೆಗಳನ್ನೇ ಪ್ರಾರ್ಥಿಸಿ ಕೊನೆಗೆ ನಳನನ್ನು ಮದುವೆಯಾಗುತ್ತಾಳೆ. ಆದರೆ ನಳ ಜೂಜಿನಲ್ಲಿ ರಾಜ್ಯ ಕಳೆದುಕೊಂಡು ಕಾಡಿಗೆ ಹೋಗುತ್ತಾನೆ. ನಳ ದಮಯಂತಿಯನ್ನು ಅರ್ಧ ರಾತ್ರಿಯಲ್ಲಿ ಕೈಬಿಟ್ಟು ಹೋಗುತ್ತಾನೆ. ಅವಳು ಅಲ್ಲಲ್ಲಿ ಅಲೆದು ಸೈರಂಧ್ರಿಯಾಗಿ ಕೆಲಸ ಮಾಡಿ ಕೊನೆಗೆ ತಂದೆಯ ಬಳಿ ಹೋಗುತ್ತಾಳೆ.
ಇತ್ತ ನಳನು ಕಾರ್ಕೋಟಕನಿಂದ ಕಚ್ಚಲ್ಪಟ್ಟು ರೂಪವಿಕಾರ ಹೊಂದಿ ಬಾಹುಕ ಎಂಬ ಹೆಸರಿನಿಂದ ಋತುಪರ್ಣ ರಾಜನ ಆಶ್ರಯದಲ್ಲಿರುತ್ತಾನೆ. ದಮಯಂತಿಯು ಪುನಃ ಸ್ವಯಂವರದ ನಾಟಕವಾಡಿ ನಳನನ್ನು ಮತ್ತೆ ಪಡೆಯುತ್ತಾಳೆ. ಪುಷ್ಕರನು ನಳನಿಗೆ ರಾಜ್ಯವನ್ನು ಒಪ್ಪಿಸಿಕೊಡುತ್ತಾನೆ.
ಶೃಂಗಾರ ಸಾಹಸ, ವಿಧಿಲೀಲೆ, ನಳ-ದಮಯಂತಿಯರ ಕ್ಲೇಶಾನುಭವ ವರ್ಣನೆಗಳಿಂದ ಇಡಿಕಿರಿದ ನಳ-ದಮಯಂತಿಯರ ಕಥನವು ಚಿತ್ರ ಕಲಾವಿದರನ್ನು, ಶಿಲ್ಪಿಗಳನ್ನೂ, ಕವಿಗಳನ್ನೂ, ಏಕಪ್ರಕಾರವಾಗಿ ಆಕರ್ಷಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಮಹಾಭಾರತದಂಥ ವಿಶ್ವಶ್ರೇಷ್ಠ ಕೃತಿಯೊಂದರ ಹಂದರವನ್ನು ವಿಸ್ತರಿಸುವುದರಲ್ಲಿ ನಳಚರಿತ್ರೆಯ ಪಾತ್ರವೂ ಮಹತ್ವದ್ದು ಎಂಬುದನ್ನು ಮರೆಯಬಾರದು. ನಳಚರಿತ್ರೆ, ಪಾಪ, ತನ್ನ ನಿವೇಶನವನ್ನು ಮಹಾಭಾರತಕ್ಕೆ ಮಾರಿಕೊಂಡು ತನ್ನ ಸವಂತ ಅಸ್ತಿತ್ವವನ್ನೂ ಕಳೆದುಕೊಂಡು ‘ಭಾರತ್ ಮ್ಯಾನ್ಷನ್ಸ್’ನ ಒಂದು ಫ್ಲಾಟಿನಲ್ಲಿ ವಾಸ ಮಾಡುತ್ತಿದೆ.
ಮೂಲ ...{Loading}...
ನಳನೃಪತಿ ದಮಯಂತಿ ಸೀತಾ
ಲಲನೆ ರಾಘವದೇವ ದ್ರೌಪದಿ
ಕಲಿಯುಧಿಷ್ಠಿರದೇವನಿವರಿಂತಾರು ಮಾನಿಸರು
ಇಳೆಯೊಳುತ್ತಮ ಕೀರ್ತಿಗಳು ಜಾ
ವಳದ ಪುರುಷರೆ ಧರ್ಮಪುತ್ರನ
ಗೆಲುವ ಪರಿಯೆಂತೈ ಮಹಾದೇವೆಂದನಾ ವಿದುರ ॥131॥
೧೩೨ ಜನಪ ಕೇಳೈ ...{Loading}...
ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ ॥132॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಾಜ ಕೇಳು ! ಷಣ್ಮುಖ, ರಾಮ, ಹನುಮಂತ, ಭೀಮಸೇನನನ್ನು ಮತ್ತು ವಿನತೆಯ ಮಗನಾದ ಗರುಡನನ್ನು - ಈ ಐವರನ್ನು ಪರಿಶುದ್ಧ ಭಾವದಿಂದ ನೆನೆದರೆ ಪಾಪಗಳು ಪರಿಹಾರವಾಗುವುದೆನ್ನುವಾಗ, ನೀವು ವಾಯುಪುತ್ರನಾದ ಭೀಮಸೇನನನ್ನು ಯುದ್ಧದಲ್ಲಿ ಹೇಗೆ ಜಯಸುವಿರಿ ಎಂದನು ವಿದುರ.
ಪದಾರ್ಥ (ಕ.ಗ.ಪ)
ಅನುವರ-ಯುದ್ಧ, ಸ್ಕಂದ-ಷಣ್ಮುಖ, ವಿನತೆಯಾತ್ಮಜ-ಗರುಡ, ದುರಿತ-ಪಾಪ
ಟಿಪ್ಪನೀ (ಕ.ಗ.ಪ)
ಕದ್ರು-ವಿನತೆ-ಗರುಡ-ಸರ್ಪ : ಕದ್ರು, ವಿನತೆಯರು ಅಕ್ಕ-ತಂಗಿಯರು ಕಶ್ಯಪನ ಪತ್ನಿಯರು. ಅಮೃತಕ್ಕಾಗಿ ಸಮುದ್ರಮಂಥನ ಕಾಲದಲ್ಲಿ ಹುಟ್ಟಿದ ಉಚ್ಚೈಶ್ರವಸ್ ಎಂಬ ಕುದುರೆಯನ್ನು ನೋಡಲು ಕದ್ರು, ವಿನತೆಯರು ಹೊರಟರು. ಅದರ ಬಾಲ ಕಪ್ಪಗಿದೆ ಎಂದು ಕದ್ರು ಹೇಳಿದಳು. ಬೆಳ್ಳಗಿದೆ ಎಂದು ವಿನತೆ. ಸೋತವರು ಗೆದ್ದವರ ದಾಸಿಯಾಗಬೇಕೆಂದು ಪಂಥ ತೊಟ್ಟರು. ಕದ್ರು ತನ್ನ ಮಕ್ಕಳನ್ನು ಕರೆದು ಕಪ್ಪಾಗಿ ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಮಾಡಿದ್ದರಿಂದ ವಿನತೆ ಕದ್ರುವಿಗೆ ದಾಸಿಯಾಗಬೇಕಾಯಿತು.
ಕಶ್ಯಪರ ವರದಿಂದ ಕದ್ರು ಈಗಾಗಲೇ ಸಾವಿರಾರು ಸರ್ಪಪುತ್ರರನ್ನು ಪಡೆದಿದ್ದಳಷ್ಟೆ. ಆದರೆ ವಿನತೆಯ ಗರ್ಭದಿಂದ ಬಂದ ಮೊಟ್ಟೆ ಇನ್ನೂ ಒಡೆದಿರಲಿಲ್ಲ. ಈಗ ಅದು ಒಡೆದು ಮಹಾಪ್ರತಾಪಶಾಲಿಯಾದ ಗರುಡ ಹುಟ್ಟಿದ. ಇವನು ಪ್ರತ್ಯಕ್ಷ ಅಗ್ನಿಯಂತೆ ತೇಜಸ್ವಿಯಾಗಿದ್ದಾನೆಂದು ದೇವತೆಗಳು ಹೊಗಳಿದರು. ತನ್ನ ತತ್ತಿಯಿದ್ದ ಪಕ್ಕದಲ್ಲೇ ಹೆಳವನಾಗಿ ನವೆಯುತ್ತಿದ್ದ ಅಣ್ಣ ಅರುಣನನ್ನು ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಸಾಗರದ ಆಚೆಯಿದ್ದ ತನ್ನ ತಾಯಿಯ ಬಳಿಗೆ ಸಾಗಿದನು. ಲೋಕವನ್ನೇ ಸುಡುತ್ತಿದ್ದ ಸೂರ್ಯನಿಗೆ ಅಡ್ಡವಾಗಿ ನಿಂತು ಅವನ ರಥವನ್ನು ನಡೆಸಲು ಬ್ರಹ್ಮದೇವನು ಈ ಅರುಣನನ್ನು ಸೂರ್ಯನ ಸಾರಥಿಯಾಗಿ ಮಾಡಿದನು.
ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡಬೇಕಾದರೆ ದೇವಲೋಕದಿಂದ ಅಮೃತವನ್ನು ತಂದುಕೊಡಬೇಕು ಎಂದು ನಾಗಗಳು ಷರತ್ತು ಹಾಕಿದುವು. ಗರುಡನು ಧೈರ್ಯವಾಗಿ ತಂದುಕೊಡಬೇಕು ಎಂದು ನಾಗಗಳು ಷರತ್ತು ಹಾಕಿದುವು. ಗರುಡನು ಧೈರ್ಯವಾಗಿ ಆಕಾಶಕ್ಕೆ ಹಾರಿ ದೇವತೆಗಳ ಸೈನ್ಯವ್ಯೂಹವನ್ನು ಛೇದಿಸಿ ಅಮೃತದ ಕುಂಭವನ್ನು ಹೊತ್ತುಕೊಂಡು ಹೊರಟನು. ಮಧ್ಯೆ ಈತನ ಪರಾಕ್ರಮಕ್ಕೆ ಮೆಚ್ಚಿದ ವಿಷ್ಣುವಿನ ಕೋರಿಕೆಯಂತೆ ವಿಷ್ಣುವಿಗೆ ವಾಹವನಾಗಲು ಗರುಡನು ಒಪ್ಪಿದ. ಮುಂದೆ ಇಂದ್ರನ ಹೊಡೆತಕ್ಕೆ ಗರುಡನ ಒಂದು U್ಪರಿ ಭೂಮಿಗೆ ಬಿದ್ದುದರಿಂದ ಗರುಡನಿಗೆ ಸುಪರ್ಣ ಎಂದು ಹೆಸರಾಯಿತು. ಇಂದ್ರನು ಗರುಡನ ಮನೋಭಿಪ್ರಾಯವನ್ನು ಮೆಚ್ಚಿ ‘ಸರ್ಪಭಕ್ಷಕನಾಗು’ ಎಂದು ವರವನ್ನು ಕೊಟ್ಟ.
ಗರುಡನು ತಂದುಕೊಟ್ಟ ಅಮೃತ ಕಲಶವನ್ನು ಸ್ವೀಕರಿಸಿ ಸರ್ಪಗಳು ವಿನತೆಯನ್ನು ವಿಮುಕ್ತಗೊಳಿಸಿದರು. ಆದರೆ ಸ್ನಾನ ಮಾಡಿಕೊಂಡ ಆ ಸರ್ಪಗಳು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ಆ ಕೊಡವನ್ನು ಅಪಹರಿಸಿದ್ದ. ಸರ್ಪಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದು ಎಂಬ ಭ್ರಮೆಯಿಂದ ದರ್ಭೆಗಳನ್ನು ನೆಕ್ಕಿದ್ದರಿಂದ ಅವುಗಳಿಗೆ ‘ಸೀಳುನಾಲಿಗೆ’ ಆಯಿತು. ಆ ದರ್ಭೆಗಳು ‘ಪವಿತ್ರ’ ಎಂಬ ಹೆಸರು ಪಡೆದುವು.
‘ಈ ಅರಿವು ಅರೆಹೊರೆದ ಮೊಟ್ಟೆ’ ಎಂದಿರುವ ಗೋಪಾಲಕೃಷ್ಣ ಅಡಿಗರು ಮೈಗೂಡಿ ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ ಎಂದು ಗರುಡಶಕ್ತಿಯನ್ನು ಸ್ಮರಿಸಿದ್ದಾರೆ. ಅಕ್ಕ-ತಂಗಿಯರ ಮಾತ್ಸರ್ಯ ಬುದ್ದಿ, ಗರುಡನ ಮಾತೃಭಕ್ತಿಗಳು ಈ ಪ್ರಸಂಗದಲ್ಲಿ ಎದ್ದುಕಾಣುತ್ತವೆ. ವಿಷ್ಣುವಿಗೆ ವಾಹನವಾಗಿ ಬೆಳೆದು ಲೋಕ ಮನ್ನಣೆ ಗಳಿಸಿದ ಕೀರ್ತಿ ಈತನಾಗಿದೆ.
ಮೂಲ ...{Loading}...
ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ ॥132॥
೧೩೩ ಹರಿಹಯನು ಗುಹ ...{Loading}...
ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವನರಿಯ ಮರುಳ
ಹರೆ ಪವನಜನೊಡನೆ ಸಮಗೈಯೆ ನೀನೆಂದ ॥ 133 ॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು ! ಇಂದ್ರ, ಷಣ್ಮುಖ, ರಾಮ, ಬಾಣಾಸುರ, ರಾವಣ, ಭೀಮಸೇನ, ಇವರೆಲ್ಲರೂ, ಗಿರಿಜಾರಮಣನಾದ ಪರಮೇಶ್ವರನ ಭಕ್ತರು. ಮಹಾರಾಜ ! ಮೃತ್ಯುಂಜಯನ ಕೂಡೆ ವಿನೋದವೆ ? ನಿನ್ನ ಶಕ್ತಿಯನ್ನು ನೀನು ಅರಿತುಕೋ. ಮರುಳನಂತೆ ಪವನಜನೊಡನೆ ನೀವು ಸರಿಸಮಾನವೇ?
ಪದಾರ್ಥ (ಕ.ಗ.ಪ)
ಅಳವು-ಶಕ್ತಿ, ಹರಿಹಯ-ಇಂದ್ರ, ಗುಹ-ಕಾರ್ತಿಕೇಯ, ದಶಶಿರ-ರಾವಣ, ಡಿಂಗರಿಗ-ಭಕ್ತ, ಅಳವು-ಸಾಮಥ್ರ್ಯ
ಪಾಠಾನ್ತರ (ಕ.ಗ.ಪ)
ಹರಿ
ಸುರರೊಡನೆ ಹಗೆಗೊಂಬನೇ
ಹರನು-ಹಯನು ಎಂಬ ಪಾಠಾಂತರವಿದೆ (ಕೃ. ಜೋ)
ಮೂಲ ...{Loading}...
ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವನರಿಯ ಮರುಳ
ಹರೆ ಪವನಜನೊಡನೆ ಸಮಗೈಯೆ ನೀನೆಂದ ॥ 133 ॥
೧೩೪ ಬಲಿ ವಿಭೀಷಣ ...{Loading}...
ಬಲಿ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದದೇವನು
ಜಲರುಹಾಕ್ಷನ ನಚ್ಚು ಮೆಚ್ಚಿನ ಭಕುತರಿವರುಗಳು
ಸುಲಭವೇ ನಿನಗವರ ಕೂಡಣ
ಕಲಹ ಬೀಭತ್ಸುವಿನ ಕೈ ಮನ
ದಳವನರಿಯಾ ಕಂಡು ಕಾಣುತ ಮರುಳಹರೆಯೆಂದ ॥134॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಿ ಚಕ್ರವರ್ತಿ, ವಿಭೀಷಣ , ಭೀಷ್ಮ, ನಾರದ, ಪ್ರಹ್ಲಾದ ಮತ್ತು ಅರ್ಜುನ ಇವರುಗಳು ತಾವರೆಗಣ್ಣಿನವನಾದ ಶ್ರೀಕೃಷ್ಣನ (ವಿಷ್ಣುವಿನ) ನಂಬುಗೆಯ ಮೆಚ್ಚಿನ ಭಕ್ತರು. ಇಂಥವರ ಕೂಡೆ ಕಲಹ ಮಾಡುವುದು ಸುಲಭವೆ ? ಅರ್ಜುನನ ತೋಳ ಬಲ, ಮನೋದಾಢ್ರ್ಯತೆಗಳನ್ನು ತಿಳಿಯೆಯಾ ? ಕಂಡೂ ಕಂಡೂ ಮೋಸ ಹೋಗುವರೆ ?
ಪದಾರ್ಥ (ಕ.ಗ.ಪ)
ಜಲರುಹ + ಅಕ್ಷ - ಜಲರುಹಾಕ್ಷ-ಕಮಲದ ಕಣ್ಣಿನವನು, ಬೀಭತ್ಸು-ಅರ್ಜುನ
ಟಿಪ್ಪನೀ (ಕ.ಗ.ಪ)
ಬೀಭತ್ಸು - ಅರ್ಜುನನ ಹಲವಾರು ಹೆಸರುಗಳಲ್ಲಿ ಒಂದು.
ಶ್ಲೋಕ : ಅರ್ಜುನಃ ಫಲ್ಗುಣಃ ಪಾಥರ್ಃ ಕಿರೀಟೀ ಶ್ವೇತವಾಹನಃ |
ಬೀಭತ್ಸುರ್ವಿಜಯಃ ಕೃಷ್ಣಃ ಸವ್ಯಸಾಚೀ ಧನಂಜಯಃ ||
ಮೂಲ ...{Loading}...
ಬಲಿ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದದೇವನು
ಜಲರುಹಾಕ್ಷನ ನಚ್ಚು ಮೆಚ್ಚಿನ ಭಕುತರಿವರುಗಳು
ಸುಲಭವೇ ನಿನಗವರ ಕೂಡಣ
ಕಲಹ ಬೀಭತ್ಸುವಿನ ಕೈ ಮನ
ದಳವನರಿಯಾ ಕಂಡು ಕಾಣುತ ಮರುಳಹರೆಯೆಂದ ॥134॥
೧೩೫ ಎಲ್ಲಿ ಯೋಗಾಧಿಪತಿ ...{Loading}...
ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನದೇವನಿಹನ
ಲ್ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರು ಬಲ್ಲರು ಕಣಾ ನೀ
ನಿಲ್ಲಿ ಪಾಂಡು ಕುಮಾರರಿಗೆ ಸರಿ
ಯಿಲ್ಲ ಬಲ್ಲೆ ೈ ಹಿಂದೆ ಬಂದ ವಿಪತ್ಪರಂಪರೆಯ ॥135॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಗೇಶ್ವರನಾದ ಶ್ರೀಕೃಷ್ಣನೂ, ಅರ್ಜುನನೂ ಎಲ್ಲಿರುವರೋ ಅಲ್ಲಿ ವಿಜಯಲಕ್ಷ್ಮಿಯು ಇರುತ್ತಾಳೆ. ಈ ರಹಸ್ಯವನ್ನು ಬಲ್ಲವರೇ ಬಲ್ಲರು. ನೀನು ಪಾಂಡವರಿಗೆ ಸರಿಸಮಾನನಲ್ಲ. ಹಿಂದೆ ಬಂದ ವಿಪತ್ತಿನ ಸಾಲುಗಳು ತಿಳಿಯದೇ ?
ಪದಾರ್ಥ (ಕ.ಗ.ಪ)
ವಿಪತ್ಸರಂಪರೆ-ಸಂಕಟಗಳ ಸಾಲು
ಮೂಲ ...{Loading}...
ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನದೇವನಿಹನ
ಲ್ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರು ಬಲ್ಲರು ಕಣಾ ನೀ
ನಿಲ್ಲಿ ಪಾಂಡು ಕುಮಾರರಿಗೆ ಸರಿ
ಯಿಲ್ಲ ಬಲ್ಲೈ ಹಿಂದೆ ಬಂದ ವಿಪತ್ಪರಂಪರೆಯ ॥135॥
೧೩೬ ಹಿನ್ದೆ ಗೋಗ್ರಹಣದಲಿ ...{Loading}...
ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲಿ ಬಳಿ
ಸಂದ ಗಂಧರ್ವಕನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡು ಕಂಡೇ
ನೆಂದು ಪಾಂಡು ಕುಮಾರರೊಡನನು
ಸಂಧಿಸುವೆ ಕಲಹವನು ಚಿತ್ತೈಸೆಂದನಾ ವಿದುರ ॥136॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ವಿರಾಟ ನಗರದಲ್ಲಿನ ಗೋಗ್ರಹಣದಲ್ಲಿ, ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ, ಘೋಷ ಯಾತ್ರೆಯ ಸಮಯದಲ್ಲಿ ಚಿತ್ರರಥನೆಂಬ ಗಂಧರ್ವನೊಡನೆ ನಡೆದ ಯುದ್ಧದಲ್ಲಿ ಆದ ಸೋಲುಗಳನ್ನು ಕಂಡೂ ಕಂಡು ಪಾಂಡವರೊಡನೆ ಏನೆಂದು ಯುದ್ಧವನ್ನು ಏರ್ಪಡಿಸುವೆ ?
ಪದಾರ್ಥ (ಕ.ಗ.ಪ)
ವೈವಾಹ-ವಿವಾಹ ಸಂದರ್ಭ, ಭಂಗ-ಅಡ್ಡಿ/ಕೋಲು
ಮೂಲ ...{Loading}...
ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲಿ ಬಳಿ
ಸಂದ ಗಂಧರ್ವಕನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡು ಕಂಡೇ
ನೆಂದು ಪಾಂಡು ಕುಮಾರರೊಡನನು
ಸಂಧಿಸುವೆ ಕಲಹವನು ಚಿತ್ತೈಸೆಂದನಾ ವಿದುರ ॥136॥
೧೩೭ ಸಕಲ ನೀತಿ ...{Loading}...
ಸಕಲ ನೀತಿ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳಬ್ರಹ್ಮವಿದ್ಯಾ
ಪ್ರಕಟವನು ನೆರೆ ಮಾಡಿ ಚಿತ್ತದ
ವಿಕಳತೆಯನೊಡೆಮೆಟ್ಟಿ ಸಲಹುವನೆಂದು ಬೋಧಿಸಿದ ॥137॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿಯವರೆಗೂ ಎಲ್ಲ ನೀತಿ ರಹಸ್ಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನೂ ಹೆಚ್ಚಿನ ತತ್ವವಿಚಾರ ಬೇಕೆಂದಿದ್ದರೆ ಸನತ್ಸುಜಾತರನ್ನು ನೆನೆ. ಅವರು ಮೋಕ್ಷಕ್ಕೆ ಕಾರಣವಾದ ಬ್ರಹ್ಮವಿದ್ಯೆಯನ್ನು ಬೋಧಿಸಿ ನಿನ್ನ ಮನಸ್ಸಿನ ನ್ಯೂನತೆಯನ್ನು ದೂರ ಮಾಡಿ ಕಾಪಾಡುವರೆಂದು ವಿದುರನು ಎಚ್ಚರಿಸಿದ.
ಪದಾರ್ಥ (ಕ.ಗ.ಪ)
ವಿಕಳತೆ-ಹೊಲಸು, ಸವ್ಯಕುತ-ಸ್ಪಷ್ಟವಾಗಿ ಒಡೆಮಟ್ಟು-ತುಳಿ
ಟಿಪ್ಪನೀ (ಕ.ಗ.ಪ)
ಸನತ್ಸುಜಾತ (ಸನತ್ ಕುಮಾರ) - ಉದ್ಯೋಗ ಪರ್ವದ ಒಂದು ಅವಾಂತರ ಪರ್ವದಲ್ಲಿ ಸನತ್ಸುಜಾತನ ಪ್ರಸಕ್ತಿಯಿದೆ. ಸನಾತನ, ಸನಕ, ಸನಾದ, ಸತನ್ಸುಜಾತ ಮೊದಲಾದವರು ಬ್ರಹ್ಮನ ಮಾನಸ ಪುತ್ರರೆಂದೂ ಜಿರಂಜೀವಿಗಳೆಂದೂ ನಿತ್ಯ ಯವ್ವನಿಗರೆಂದೂ ಪ್ರಕೀರ್ತತರಾಗಿದ್ದಾರೆ. ಇವರು ಬ್ರಹ್ಮನ ಸಾತ್ವಿಕ ಗುಣದಿಂದ ಹುಟ್ಟಿದವರಾದುದರಿಂದ ಬ್ರಹ್ಮಚಾರಿಗಳಾಗಿಯೇ ಉಳಿದರೆ. ನಾಲ್ಕನೆಯ ವಯಸ್ಸಿಗೇ ವೇದಗಳಲ್ಲಿ ಪರಾಯಣನಾಗಿದ್ದ ಸನತ್ಸುಜಾತನು ವಿಷ್ಣುವಿನ ಭಕ್ತಪರಂಪರೆಯಲ್ಲಿ ದೊಡ್ಡ ಸ್ಥಾನವನ್ನು ಪಡೆದಿದ್ದಾನೆ. ನಾರಾಯಣನನ್ನು ಹಗಲಿರುಳೂ ಧ್ಯಾನಮಾಡುವ ಇವನನ್ನೂ ಇವನ ಸೋದರನನ್ನೂ ‘ನಾರಾಯಣಾತ್ಮರು’ ಎಂದೇ ಕರೆಯಲಾಗಿದೆ.
ಮಹಾಭಾರತದಲ್ಲಿ ‘ಸನತ್ಸುಜಾತೀಯ’ ಎಂದು ಪ್ರಸಿದ್ಧವಾದ ತತ್ತವೋಪದೇಸ ಭಾಗವಿದೆ. ಭಗವದ್ಗೀತೆ, ವಿದುರ ನೀತಿ, ನಹುಷೋಪಾಖ್ಯಾನ, ಧರ್ಮವ್ಯಾಧೋಪಾಖ್ಯಾನಗಳಲ್ಲಿ ಬರುವಂತೆ ಸನತ್ ಸುಜಾತೀಯದಲ್ಲಿಯೂ ನೀತಿ ವಿವೇಚನೆ ಅದ್ಭುತವಾಗಿ ಮೂಡಿಬಂದಿದೆ.
ಮಹಾಭಾರತದ ಯುದ್ಧದಕಾರ್ಮೋಡಗಳು ಕವಿಯುತ್ತಿದ್ದಂತೆ ಧೃತರಾಷ್ಟ್ರನಿಗೆ ರಾತ್ರಿಯೆಲ್ಲ ನಿದ್ದೆ ಬರುವುದಿಲ್ಲ. ಆಗ ವಿದುರನನ್ನು ಕರೆಸಿಕೊಂಡು ಧೃತರಾಷ್ಟ್ರನು ತನ್ನ ಸಂಕಟವನ್ನು ತೋಡಿಕೊಳ್ಳುತ್ತಾನೆ. ಆಗ ವಿದುರನು ನಿದ್ರಾರಹಿತ ಸ್ಥಿತಿಗೆ ಕಾರಣವನ್ನು ವಿಶ್ಲೇಷಿಸಿ ತುಂಬ ದೀರ್ಘ ಕಾಲ ಧೃತರಾಷ್ಟ್ರನಿಗೆ ಉಪದೇಶ ಮಾಡುತ್ತಾನೆ. ದುರ್ಯೋಧನನಿಗೆ ಹೇಳು ಎಂದು ಒತ್ತಾಯಿಸಿ ಯುದ್ಧವನ್ನು ತಪ್ಪಿಸುವುದೇ ವಿದುರನ ಗುರಿಯಾಗಿತ್ತು. ಆದುದರಿಂದ ತಾನು ಹೇಳುವುದನ್ನೆಲ್ಲ ಹೇಳಿ ಅದಕ್ಕೆ ಬೆಂಬಲವಾಗುವಂತೆ ವಿದುರನು ಸನತ್ಸುಜಾತನನ್ನು ಸ್ಮರಿಸಿ ಕರೆಸುತ್ತಾನೆ. ಮಹಾತ್ಮಾ ಸನತ್ಸುಜಾತರು ಧೃತರಾಷ್ಟ್ರನಿಗೆ ಮಾಡಿದ ಬೋಧೆಯೇ ಸನತ್ಸುಜಾತೀಯ, ಪ್ರಜಾಗರ ‘ಸನತ್ ಸುಜಾತಪರ್ವ’ ಎಂಬುದು ಮಹಾಭಾರತದ ಅರವತ್ತು ಉಪಪರ್ವಗಳಲ್ಲಿ ಪ್ರಸಿದ್ಧವಾದ ಒಂದು ಪರ್ವ. ಧೃತರಾಷ್ಟ್ರನು ಕೇಳಿದ ನಾನಾ ಪ್ರಶ್ನೆಗಳಿಗೆ ಸನತ್ಸುಜಾತರು ಸಮರ್ಪಕ ಉತ್ತರ ನೀಡುತ್ತಾರೆ. ಸಾವು, ಕರ್ಮಾಚರಣೆಗಳ ವೈಶಿಷ್ಟ್ಯ ಮೊದಲಾದ ವಿಷಯಗಳ ಬಗೆಗೆ ಸನತ್ಸುಜಾತರು ಗಂಭೀರವಾಗಿ Z್ಪರ್ಚಿಸುತ್ತಾರೆ.
ಮೂಲ ...{Loading}...
ಸಕಲ ನೀತಿ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳಬ್ರಹ್ಮವಿದ್ಯಾ
ಪ್ರಕಟವನು ನೆರೆ ಮಾಡಿ ಚಿತ್ತದ
ವಿಕಳತೆಯನೊಡೆಮೆಟ್ಟಿ ಸಲಹುವನೆಂದು ಬೋಧಿಸಿದ ॥137॥