೦೦೦ ಸೂ ನಮ್ಬಿದವರಿಗೆ ...{Loading}...
ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತ ಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ತನ್ನನ್ನು ನಂಬಿದವರ ಸೇವಕ ತಾನು ಎಂಬ ಬಿರುದಿಗೆ ತಕ್ಕವನಾಗಿ ಭಕ್ತರ ಸಂಸಾರಿಯಾದ ಮುರವೈರಿ ಶ್ರೀಕೃಷ್ಣನು ಪ್ರೀತಿಯಿಂದೊಪ್ಪಿ ಅರ್ಜುನನಿಗೆ ಸಾರಥಿಯಾದನು.
ಪದಾರ್ಥ (ಕ.ಗ.ಪ)
ತೆತ್ತಿಹ - ಕೊಟ್ಟು ಕೊಂಡಿರುವ
ಟಿಪ್ಪನೀ (ಕ.ಗ.ಪ)
ಮುರವೈರಿ - ಐದು ಮುಖಗಳನ್ನುಳ್ಳ ನರಕಾಸುರನ ಸೇನಾಪತಿ ಮುರನನ್ನು ಶ್ರೀಕೃಷ್ಣನು ಸಂಹರಿಸಿದ್ದರಿಂದ ಮುರವೈರಿಯಾದ
ಮೂಲ ...{Loading}...
ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತ ಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ
ಶ್ರೀಲತಾಂಗಿಯ ರಮಣನಿನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ! ಕುಂತಿಯ ಮಕ್ಕಳ ಏಳಿಗೆಯನ್ನು ಏನೆಂದು ಹೇಳಲಿ. ಕರುಣಾ ಸಮುದ್ರನಾದ ಶ್ರೀಕೃಷ್ಣನು ತನ್ನ ಮೈದುನ ಸಂಬಂಧಿಗಳಾದ ಪಾಂಡವರನ್ನು ಆಳು-ಒಡೆಯರೆಂಬ ಭೇದವಿಲ್ಲದೇ ನಡೆಸಿಕೊಳ್ಳುತ್ತಿದ್ದನು.
ಪದಾರ್ಥ (ಕ.ಗ.ಪ)
ಶ್ರೀಲತಾಂಗಿ-ಶ್ರೀಲಕ್ಷ್ಮಿ,
ಕಾರುಣ್ಯ ಸಿಂಧು-ಕರುಣಾ ಸಮುದ್ರ,
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ
ಶ್ರೀಲತಾಂಗಿಯ ರಮಣನಿನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ॥1॥
೦೦೨ ಹೋಲಿಕೆಗೆ ಬಾಯ್ವಿಡುವ ...{Loading}...
ಹೋಲಿಕೆಗೆ ಬಾಯ್ವಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ತನ್ನದು ಘನತೆಯೆಂಬುದನತ್ತ ಬೇರಿರಿಸಿ
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯಮುನಿ ನುಡಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ್ನು ಹೋಲಿಸುವ ಉಪಮಾನವನ್ನು ಹುಡುಕುವುದರಲ್ಲಿ ವೇದಗಳು ಸೋತು ಹೋದವು. ತನ್ನ ಹಿರಿಮೆ ಮಿಕ್ಕೆಲ್ಲರ ಹಿರಿಮೆಗಿಂತಲೂ ಮೇಲು ಎಂಬುದನ್ನು ಗಣಿಸದೆ ಯುಧಿಷ್ಠಿರಿನ ಕಾಲಿಗೆ ಕೃಷ್ಣನು ನಮಸ್ಕರಿಸುವನು. ಅವನೆದ್ದರೆ ತಾನೂ ಏಳುವನು. ಶ್ರೀ ಕೃಷ್ಣನ ವಿನೋದವು ಶ್ರೇಷ್ಠವಾದುದೆಂದು ವೈಶಂಪಾಯನ ಮುನಿ ಹೇಳಿದನು.
ಪದಾರ್ಥ (ಕ.ಗ.ಪ)
ತಾಳಿಗೆ-ಗಂಟಲು
ಮೂಲ ...{Loading}...
ಹೋಲಿಕೆಗೆ ಬಾಯ್ವಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ತನ್ನದು ಘನತೆಯೆಂಬುದನತ್ತ ಬೇರಿರಿಸಿ
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯಮುನಿ ನುಡಿದ ॥2॥
೦೦೩ ಒನ್ದು ದಿನ ...{Loading}...
ಒಂದು ದಿನ ವೊಡ್ಡೋಲಗಕ್ಕೆ ೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡುತನಯರಿಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಒಂದು ದಿನ ಒಡ್ಡೋಲಗಕ್ಕೆ ಬಂದು ಎಲ್ಲ ರಾಜರ ಸಮೂಹದಲ್ಲಿ ರಾಜಕಾರ್ಯವನ್ನು ಹೇಳಿದನು. ಪಾಂಡವರು ಹಿಂದೆ ಜೂಜಿನ ಜಂಜಾಟದಲ್ಲಿ ಕಾಡನ್ನು ಸೇರಿ ಮನನೊಂದರು. ಅವರು ಮರಳಿ ರಾಜ್ಯವನ್ನು ಪಡೆಯುವ ಉಪಾಯವೇನು? ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ವಿಲಗ-ಜಂಜಾಟ
ಹದನ-ರೀತಿ
ಮೂಲ ...{Loading}...
ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡುತನಯರಿಗೆ ॥3॥
೦೦೪ ದೇವ ನೀನೇ ...{Loading}...
ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ! ನಿಮ್ಮ ಭಾವನಾದ ಧರ್ಮಜನ ಗೌರವ-ಅಪಮಾನಗಳ ಜವಾಬ್ದಾರಿ ನಿಮ್ಮದು. ಅವರ ಪ್ರಾಣ ರಕ್ಷಣೆಗಳನ್ನು ನೀವೇ ಬಲ್ಲಿರಿ. ನೀವು ಕಾಲಿನಲ್ಲಿ ಒದೆದು ತೋರಿಸಿದ್ದನ್ನು, ಪ್ರೀತಿಯಿಂದ ತಲೆಯಲ್ಲಿ ಹೊತ್ತು ನಡೆಸುವದನ್ನು ಮಾತ್ರ ನಾವು ಬಲ್ಲೆವು ಸ್ವಾಮಿ ಎಂದು ದ್ರುಪದ ಮಹಾರಾಜನು ಹೇಳಿದನು.
ಪದಾರ್ಥ (ಕ.ಗ.ಪ)
ಹರಣ-ಪ್ರಾಣ, ಭರಣ-ಪೋಷಣೆ, ಹೊರಿಗೆ-ಜವಾಬ್ದಾರಿ, ಓವಿ-ಪ್ರೀತಿಯಿಂದ
ಮೂಲ ...{Loading}...
ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ ॥4॥
೦೦೫ ಕಳುಹುವುದು ಶಿಷ್ಟರನು ...{Loading}...
ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯನ್ನು ಬೇಡಲು ಸಜ್ಜನರನ್ನು ಕಳುಹಿಸುವುದು. ಬೇಡುವ ಸಂದರ್ಭದಲ್ಲಿ ಸಾಮವನ್ನೇ ಬಳಿಸಿರಿ. ಭೀಷ್ಮರೇ ಮೊದಲಾದ ಹಿರಿಯರನ್ನು ವಿನಯದಿಂದ ಹಿಡಿದಿಡುವುದು. ದುರ್ಯೋಧನನ ಅಭಿಪ್ರಾಯವನ್ನು ತಿಳಿದುಕೊಳ್ಳುವುದು. ನ್ಯಾಯವಿಲ್ಲವೆಂದಾಗ ಮಾತ್ರ ತೋಳ್ಬಲವನ್ನು ತೋರಿಸುವುದೆಂಬುದು ನನ್ನ ಅಭಿಪ್ರಾಯ ಎಂದು ಶ್ರೀ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಶಿಷ್ಟರು-ಸಜ್ಜನರು, ಆಹವ-ಯುದ್ಧ
ಮೂಲ ...{Loading}...
ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ ॥5॥
೦೦೬ ಎಲೆ ಮರುಳೆ ...{Loading}...
ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣನ ಮಾತಿಗೆ ಬಲರಾಮನು ನಗುತ್ತ ಹೇಳುತ್ತಾನೆ : “ಎಲೆ ಮರುಳೇ ! ಕೃಷ್ಣ ! ಈ ರೀತಿಗೆ ಕೌರವನು ಒಪ್ಪುವುದಿಲ್ಲ. ಯುಧಿಷ್ಠಿರನು ಜೂಜುಗಾರನಾಗಿ ಭೂಮಿಯನ್ನು ಸೋತಿದ್ದಾನೆ. ಅದನ್ನು ಅದೇ ಕ್ರಮದಿಂದ ನೆಲವನ್ನು ಒಡ್ಡಿ ಜೂಜಿನಲ್ಲಿ ಪಡೆದುಕೊಳ್ಳಲಿ ಅಥವಾ ಯುದ್ಧ ಮಾಡಲಿ. ಇದರೊಳಗೆ ಸುಯೋಧನನದು ಏನೂ ತಪ್ಪಿಲ್ಲ”
ಪದಾರ್ಥ (ಕ.ಗ.ಪ)
ಇಳೆ-ಭೂಮಿ
ಮೂಲ ...{Loading}...
ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ॥6॥
೦೦೭ ಲೇಸನಾಡಿದೆ ರಾಮ ...{Loading}...
ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
7.ಇದರಿಂದ ಕೋಪಗೊಂಡ ಸಾತ್ಯಕಿ, ‘ಬಲರಾಮ ! ನೀನು ಒಳ್ಳೆಯ ಮಾತನ್ನೇ ಆಡಿದೆ. ಅಂದರೇನು ? ಸುಯೋಧನನು ನೀಚನೆ. ನೀನು ಅವನನ್ನು ಮೇಲಿರಿಸಿಕೊಂಡು ಹೊಗಳುತ್ತಿರುವಿಯಷ್ಟೆ ! ಕಗ್ಗತ್ತಲೆಯು ಗೂಬೆಗಳಿಗೆ ಒಳ್ಳೆಯದಾದರೆ ಇತರರಿಗೂ ಒಳ್ಳೆಯದೆ ?’ ಎಂದು ತಿರಸ್ಕಾರದಿಂದ ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ಉಪಹಾಸ - ತಿರಸ್ಕಾರ, ಆಸುರ-ಅತಿಶಯ / ಬಹಳವಾದ
ಮೂಲ ...{Loading}...
ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ॥7॥
೦೦೮ ಬಲನ ಮಾತೇನಿವರ ...{Loading}...
ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀಕುಮಾರಕನೆ
ನೆಲನನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲರಾಮನ ಮಾತಿನಿಂದ ಪಾಂಡವರ ಭಾಗ್ಯದ ನಿರ್ಣಯವಾಗುತ್ತದೆಯೆ? ಧರ್ಮರಾಯನೇ, ಕೌರವರ ನೂರು ತಲೆಗಳಗೆ, ವೀಳಯವನ್ನು ನೀಡು. ಖಡ್ಗದ ಮೊನೆಯಲ್ಲಿ ಅಲ್ಲದೇ, ಶ್ರೇಷ್ಠರಾದ ಕ್ಷತ್ರಿಯರು ಸಾಮಗೀಮದ ಮೃದು ಮಾತಿನಲ್ಲಿ, ಭೂಮಿಯನ್ನು ಕೊಳ್ಳುವರೆ ?
ಪದಾರ್ಥ (ಕ.ಗ.ಪ)
ಫಡ-ಮೂದಲಿಕೆಯ ಒಂದು ಶಬ್ದ, ಅಲಗು-ಕತ್ತಿ, ವೀಳೆಯವ-ಒಪ್ಪಿಗೆಯನ್ನು, ಸಮ್ಮತಿಯನ್ನು
ಮೂಲ ...{Loading}...
ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀಕುಮಾರಕನೆ
ನೆಲನನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ॥8॥
೦೦೯ ಕಾದಿ ಸಾವುದು ...{Loading}...
ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನನಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷತ್ರಿಯರು ಭೂಮಿಗಾಗಿ ಯುದ್ಧ ಮಾಡಿ ಸಾಯುವುದು ಮೇಲು ಇಲ್ಲವೇ ಶತ್ರು ಸೈನಿಕರ ನೆತ್ತಿಯನ್ನು ಈಟಿಯಲ್ಲಿ ತಿವಿದು ರಾಜ್ಯವನ್ನು ಸಂಪಾದಿಸಬೇಕು. ಭೂಮಿಯನ್ನು ಬೇಡಿ ಸಂಪಾದಿಸುವುದು ದರ್ಭೆಯನ್ನು ಹಿಡಿದು ನಾಮವನ್ನು ಹಾಕಿಕೊಂಡು ಮಂಗಳ ವಾಚನವನ್ನು ಹಾಡುವ ಬ್ರಾಹ್ಮಣರ ಕೆಲಸವೆಂದು ಸಾತ್ಯಕಿ ಹೇಳಿದನು.
ಪದಾರ್ಥ (ಕ.ಗ.ಪ)
ಸಬಳ-ಈಟಿ , ಸ್ವಸ್ತಿ-ಮಂಗಳವಾಚನ/ಶುಭಹಾರೈಕೆ, ಮೇದಿನಿ-ಭೂಮಿ, ಮಟ್ಟಿ-ಮಣ್ಣು,
ಮೂಲ ...{Loading}...
ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನನಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ॥9॥
೦೧೦ ಎನಲು ನಕ್ಕನು ...{Loading}...
ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆ ಒಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬಳಸಿ ನೋಡುವುದು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವೇಶ್ವರನು ಯುದ್ಧದಲ್ಲಿ ಖಡ್ಗದ ಮೊನೆಯಲ್ಲಿ ಅಲ್ಲದೇ ಭೂಮಿಯನ್ನು ಕೊಡುವುದಿಲ್ಲ, ದುರ್ಯೋಧನನ ಬಳಿಗೆ , ಒಬ್ಬ ದೂತನನ್ನು ಕಳುಹಿಸಿ, ಸಾಮನೀತಿಯನ್ನು ಬಳಸಿ ನೋಡುವುದು ನಮ್ಮ ಅಭಿಪ್ರಾಯವೆಂದು ಸಾತ್ಯಕಿಯನ್ನು ಹೊಗಳುತ್ತ, ದ್ರುಪದನು ನಗುತ್ತ ಹೇಳಿದನು.
ಪದಾರ್ಥ (ಕ.ಗ.ಪ)
ಅನುಮತ-ಅಬಿಪ್ರಾಯ, ಸಾಮ-ಚತುರೋಪಾಯಗಳಲ್ಲಿ ಒಂದು, ಸಹನೆ,
ಪಾಠಾನ್ತರ (ಕ.ಗ.ಪ)
ಜನಪರನ್ನಿಬರೊಬ್ಬ - ಜನಪನಲ್ಲಿಗೆ ಒಬ್ಬ
ಕೊಡುವರೆ ಕೌರವೇಶ್ವರರು - ಕೊಡುವನೆ ಕೌರವೇಶ್ವರನು
ಉದ್ಯೋಗ ಪರ್ವ,
ಪ್ರಾಚ್ಯ ಸಂಶೋಧನಾ ಕೇಂದ್ರ. ಮೈಸೂರು.
ಮೂಲ ...{Loading}...
ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆ ಒಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬಳಸಿ ನೋಡುವುದು ॥10॥
೦೧೧ ವಿಹಿತವಿದು ಪಾಞ್ಚಾಲಕನ ...{Loading}...
ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣೆಯಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲಕನ (ದ್ರುಪದನ) ಅಭಿಪ್ರಾಯವು ಯೋಗ್ಯವಾಗಿದೆ, ಯುದ್ಧವು ಹತ್ತಿರವಾಗುತ್ತಿರಲು, ಇತ್ತ ಕಡೆ ಬೇಕಾದ ಕ್ಷತ್ರಿಯ ವೀರರನ್ನು ಯುದ್ಧಕ್ಕೆ ಸಜ್ಜಾಗಲು ಸೂಚನೆ ಕೊಟ್ಟು ಕರೆ ಕಳುಹಿಸಿ, ಅತ್ತಕಡೆ ಭೂಮಿಯನ್ನು ಬೇಡಲು ಕಳುಹಿಸುವುದೆಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವಿಗ್ರಹ-ಯುದ್ಧ, ಸಂವರಣೆ-ಸಜ್ಜು, ಭೂಭುಜರ- ಕ್ಷತ್ರಿಯರು, ವಿಹಿತ-ಯೋಗ್ಯ,
ಮೂಲ ...{Loading}...
ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣೆಯಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ॥11॥
೦೧೨ ಮದುವೆಗೋಸುಗ ಬನ್ದೆವಾವಿ ...{Loading}...
ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಮದುವೆಗೋಸುಗ ಬಂದಿದ್ದೆವು. ಅದರ ಮೇಲೆ ರಾಜಕಾರ್ಯಗಳನ್ನು ನಡೆಸುವುದು. ವಿಶೇಷವಾದುದು ಏನಾದರೂ ಇದ್ದರೆ ಹೇಳಿ ಕಳುಹಿಸಿದರೆ ಬರುವೆವು. ನೆಮ್ಮದಿಯಿಂದ ಇರಬೇಕೆಂದು ಕುಂತಿಯ ಮಕ್ಕಳನ್ನು, ದ್ರೌಪದಿ, ಅಭಿಮನ್ಯು ಮತ್ತು ಸುಭದ್ರೆಯರನ್ನು ಹರಸಿ ಶ್ರೀಕೃಷ್ಣನು ಬೀಳ್ಕೊಂಡನು.
ಪದಾರ್ಥ (ಕ.ಗ.ಪ)
ಹದುಳ-ಕ್ಷೇಮ
ಮೂಲ ...{Loading}...
ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ॥12॥
೦೧೩ ಕೂಡಿಕೊಣ್ಡಿಹುದಿವರ ಮಕ್ಕಳ ...{Loading}...
ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪಾಂಡು ಸುತರನ್ನು ಕೈಬಿಡದೆ, ಜೊತೆಯಲ್ಲಿರುವುದು. ಅವರಲ್ಲಿ ಕುಂದು-ಕೊರತೆಗಳನ್ನು ನೋಡಬೇಡಿ. ಭೂಮಿಯನ್ನು ಬೇಡಲು ಬುದ್ಧಿವಂತರನ್ನು ಕಳುಹಿಸುವುದು. ಅದರೊಂದಿಗೆ ಇವರ ನಿದ್ರೆ, ಊಟ-ಉಪಚಾರಗಳಲ್ಲಿ ಎಚ್ಚರಿಕೆ ವಹಿಸಿ ನೆರವಾಗಿರುವುದು ಎಂದು ದ್ರುಪದ, ವಿರಾಟರಿಗೆ ಶ್ರೀ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಕುಂದು-ತಪ್ಪು/ಕೊರತೆ, ಸೆಜ್ಜೆ-ಹಾಸಿಗೆ
ಮೂಲ ...{Loading}...
ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ॥13॥
೦೧೪ ಎನ್ದು ಕಳುಹಿಸಿಕೊಣ್ಡು ...{Loading}...
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಕುಂದನಾದ ಶ್ರೀ ಕೃಷ್ಣನು ಹೀಗೆ ಹೇಳುತ್ತ ತನ್ನ ನಾರೀವೃಂದ, ಯದುಕುಲ ಬಾಂಧವರೊಡನೆ ದ್ವಾರಕಾಪಟ್ಟಣಕ್ಕೆ ಹೊರಟನು. ನಂತರ ದ್ರುಪದ ಮಹಾರಾಜನು ಸಮಾಲೋಚಿಸಿ, ಹಸ್ತಿನಾವತಿಗೆ ಸಂತೋಷದಿಂದ ಪುರೋಹಿತನೊಬ್ಬನನ್ನು ಕಳುಹಿಸಿದನು.
ಮೂಲ ...{Loading}...
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ ॥14॥
೦೧೫ ಓಲೆಯುಡುಗೊರೆ ಸಹಿತ ...{Loading}...
ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಡುಗೊರೆ ಸಹಿತ ಪತ್ರಗಳನ್ನು ಬರೆದು, ರಾಜರು, ಸಜ್ಜನರು ಯುದ್ಧಕ್ಕೆ ನೆರವಾಗಬೇಕೆಂದು ಪಾಂಡವರು ಹೇಳಿಕಳುಹಿಸಿದರು. ಸೈನಿಕರು, ಕುದುರೆಗಳ ಸಹಿತ, ದಿಕ್ಕು-ದಿಕ್ಕುಗಳಿಂದ, ಮೂಲೆ-ಮೂಲೆಯ ಅರಸರುಗಳು, ಕೆಲವರು ಪಾಂಡವರ ಬಳಿಗೆ, ಮತ್ತೆ ಕೆಲವರು ದುರ್ಯೋಧನನಲ್ಲಿಗೆ ತೆರಳಿದರು.
ಮೂಲ ...{Loading}...
ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ॥15॥
೦೧೬ ಧರಣಿಯೆಡೆಗೆಡೆ ರಾಯ ...{Loading}...
ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯವಹುದಿ
ನ್ನುರುವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೇ ಕುಸಿಯಿತೋ ಎಂಬಂತೆ ಅತ್ತ-ಇತ್ತ, ಎರಡೂ ಕಡೆ ನೆರವು ನೀಡಲು ತುಂಬಿ ಬಂದ ರಾಜರ ಸೈನ್ಯದ ಗುಂಪುಗಳ ಪರಿಮಾಣವನ್ನು ಹೇಳಲಾಗದು. ಶತ್ರುಗಳು ಹೆಚ್ಚಿದರು, ನಾವಿನ್ನು ಮೈಮರೆತರೆ ಗೌರವವನ್ನುಳಿಸಿಕೊಳ್ಳಲಾರೆವು. ಇನ್ನು ಎಚ್ಚರಗೊಳ್ಳಬೇಕೆಂದು ದುರ್ಯೋಧನನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಎಡೆಗೆಡೆ - ಕೆಳಕ್ಕೆ ಬೀಳು
ಮೋಹರ-ಸೈನ್ಯ,
ಉರವಣಿಸು-ಸಂಭ್ರಮಿಸು
ಮೂಲ ...{Loading}...
ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯವಹುದಿ
ನ್ನುರುವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ॥16॥
೦೧೭ ಹದನನಾಪ್ತರಿಗರುಹಿದನು ಗು ...{Loading}...
ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರ ನಂದನನ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇರುವ ವಿಷಯವನ್ನು ತನ್ನ ಆಪ್ತರಿಗೆ ತಿಳಿಸಿ, ರಹಸ್ಯದಲ್ಲಿ ಶ್ರೀ ಕೃಷ್ಣನನ್ನು ತಮ್ಮ ವಶಮಾಡಿಕೊಳ್ಳುವ ಆಸೆಯಿಂದ ಸಂತೋಷದಿಂದ ದುರ್ಯೋಧನನು ದ್ವಾರಕಾ ಪಟ್ಟಣಕ್ಕೆ ಬಂದನು. ಇದನ್ನು ರಹಸ್ಯದಿಂದ ಗೂಢಚಾರರು ಪಾಂಡವರಿಗೆ ಶೀಘ್ರವೇ ತಿಳಿಸಿದರು. ಭಯದಿಂದ ಧರ್ಮರಾಯನು ಇಂದ್ರನ ಮಗನಾದ ಅರ್ಜುನನನ್ನು ದ್ವಾರಕೆಗೆ ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಬೇಹಿನವರು-ಗೂಢಚಾರರು
ಮೂಲ ...{Loading}...
ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರ ನಂದನನ ॥17॥
೦೧೮ ಬೀಳುಕೊಣ್ಡರ್ಜುನನು ಲಕ್ಷಿ ...{Loading}...
ಬೀಳುಕೊಂಡರ್ಜುನನು ಲಕ್ಷಿ ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನನ್ನು ಬೀಳ್ಕೊಂಡು ಮಾರ್ಗದಲ್ಲಿ ಅರ್ಜುನನು ಬರುತ್ತ ಕಾಡಿನ ಮಾರ್ಗದಲ್ಲಿ ವಿನೋದದಿಂದ ನರ್ತಿಸುವ ನವಿಲನ್ನು ಕಂಡನು. ಮೇಲೆ ಶಕುನ ಪಕ್ಷಿಗಳು ಒಟ್ಟಾಗಿ ಹಾರುತ್ತಿರುವುದನ್ನೂ, ಬಲಭಾಗದಲ್ಲಿ ಜಿಂಕೆಯ ಗುಂಪನ್ನು ಕಾಣುತ್ತ, ಎಡಭಾಗದಲ್ಲಿ ಸುತ್ತುತ್ತಿರುವ ದುಂಬಿಗಳ ಝೇಂಕಾರವನ್ನು ಕೇಳಿಸಿಕೊಳ್ಳುತ್ತಾ ಆನಂದದಿಂದ ದ್ವಾರಕೆಯತ್ತ ಬಂದನು.
ಪದಾರ್ಥ (ಕ.ಗ.ಪ)
ಹಂಗ-ಶಕುನ ಪಕ್ಷಿ
ಮೂಲ ...{Loading}...
ಬೀಳುಕೊಂಡರ್ಜುನನು ಲಕ್ಷಿ ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ॥18॥
೦೧೯ ಮೊರೆದು ಮಿಗೆ ...{Loading}...
ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಠುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೋಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಧಿಕವಾದ ಆರ್ಭಟವನ್ನು ಮಾಡುತ್ತ, ಕಠಿನವಾದ ತೆರೆಗಳಿಂದ ಮೈಮುರಿಯುತ್ತ, ಘುಳು ಘುಳು ಧ್ವನಿಯಿಂದ ಆರ್ಭಟವು ಮತ್ತಷ್ಟು ಹೆಚ್ಚಾಗಿ, ಅಲೆ ಅಲೆಗಳನ್ನು ಗುದ್ದುತ್ತ, ಎದ್ದು ಆಕಾಶವನ್ನು ಒದೆಯುತ್ತ (ಹೊಡೆಯುತ್ತ) ಅಧಃ ಪಾತಾಳಕ್ಕೆ(ವಿತಲಕ್ಕೆ) ಸುತ್ತುತ್ತಿರುವ ಆರ್ಭಟಗಳಿಂದ ಹಿಗ್ಗುವ ಉತ್ಸಾಹದಲ್ಲಿರುವ ಸಮುದ್ರರಾಜನು ಉಬ್ಬುಗವಳವನ್ನು ಕಂಡಂತೆ ಕುಣಿದನು.
ಪದಾರ್ಥ (ಕ.ಗ.ಪ)
ಗಜರು-ಆರ್ಭಟಿಸು, ಗಾಢಿಸಿ-ಹೆಚ್ಚಾದ, ವಿತಳ-ಏಳು ಅಧೋಲೋಕಗಳಲ್ಲಿ ಒಂದು
ಉಬ್ಬುಗವಳ - ಉದ್ದೀಪನಗೊಳಿಸುವ ತಾಂಬೂಲದ ಕವಳ
ಮೂಲ ...{Loading}...
ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಠುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೋಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ॥19॥
೦೨೦ ಪೂತು ಮಝ ...{Loading}...
ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪು ಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ ! ಆಹಾ ! ಈ ಸಮುದ್ರ ರಾಜನ ಸಂಯಮವು ಮಹಾತಿಶಯವಾದುದು. ಈ ರಹಸ್ಯವನ್ನರಿತು ಇವನನ್ನು ಭಯಪಡಿಸಲು ರಾಮನ ಸೈನಿಕರು ನೆತ್ತಿಯಲ್ಲಿ ಬೆಟ್ಟವನ್ನು ಹರಡಬೇಕಾಯಿತು. ಇವನು ನಮಗೆ ಭಯಪಡುವನೇ ? ಎಂದುಕೊಳ್ಳುತ್ತ ಶತ್ರುಗಳನ್ನು ಎದುರಿಸುವ ಸಾಮಥ್ರ್ಯವುಳ್ಳ ಅರ್ಜುನನು ಶತ್ರುಬಲವಿನಾಶಕನಾದ ಅರ್ಜುನನು ಪಾಪಗಳ ಹೆಡತಲೆಗೆ ಬಡಿಗೆಯಂತಿರುವ ದ್ವಾರಕಾ ಪಟ್ಟಣವನ್ನು ಕಂಡನು.
ಪದಾರ್ಥ (ಕ.ಗ.ಪ)
ಹೆಡೆತಲೆ-ಕತ್ತಿನ ಹಿಂಭಾಗ
ಟಿಪ್ಪನೀ (ಕ.ಗ.ಪ)
ಇವನನಂಜಿಸಲಾತಗಳು - ರಾಮಾಯಣದಲ್ಲಿ ಶ್ರಿಆರಮನು ಸಾಗರೋಲ್ಲಂಘನದ ಸಂದರ್ಭದಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿದ ಪ್ರಸಂಗ
ಮೂಲ ...{Loading}...
ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪು ಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ॥20॥
೦೨೧ ಅಟ್ಟಿ ಬಳಲಿದ ...{Loading}...
ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೀವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ‘ವೇದಗಳ ಬೆನ್ನು ಹತ್ತಿ, ಭಗವಂತನನ್ನು ಅರಸಿ ಸ್ತುತಿಸಿದಾಗ ಹರಿ ದೊರೆತ ಸ್ಥಳವಿದು. ತಪಸ್ವಿಗಳು ಜಪಮಾಡಿ ಮೊರೆಯಿಟ್ಟಾಗ ಅವರಿಗೆ ಚೈತನ್ಯವನ್ನು ನೀಡಿದ ಸ್ಥಳವಿದು, ಜನನ-ಮರಣಗಳ ಜಂಜಾಟಗಳನ್ನು ಮೀರಿದ ಜೀವಿಗಳ ಸ್ಥಳವಿದು. ಕಾಲ, ಕರ್ಮಗಳ ರಾಶಿಯನ್ನು ನಾಶ ಮಾಡಿದ ಸ್ಥಳವಿದು ಮಂಗಳಕರ. , ಶಿವಶಿವಾ’ ಎಂದುಕೊಂಡನು.
ಪದಾರ್ಥ (ಕ.ಗ.ಪ)
ಠಾವು-ಸ್ಥಳ, ಜಿನುಗು-ಮತ್ತೆ ಮತ್ತೆ ಹೇಳು, ಸ್ತುತಿಸು
ಉಜ್ಜೀವಿಸು-ರಕ್ಷಿಸು, ವಿಲಗ-ಜಂಜಾಟ
ಥಟ್ಟು-ರಾಶಿ
ಮೂಲ ...{Loading}...
ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೀವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ ॥21॥
೦೨೨ ಪರಮ ನಾರಾಯಣ ...{Loading}...
ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
22 ಪರಮ (ಶ್ರೇಷ್ಠನಾದ) ನಾರಾಯಣನ ನಾಮಸ್ಮರಣೆ ಮಾಡುವವರು ಇರುವ ಈ ಸ್ಥಳವೇ ಶ್ರೇಷ್ಠವೆಂದು ಶ್ರೀ ಕೃಷ್ಣನೇ ಹೇಳಿದ್ದಾನೆ. ಇಲ್ಲಿ ಮುಕ್ತಿ ಕರತಲಾಮಲಕವಾಗಿದೆ. ಇದು ತರ್ಕತಂತ್ರ ಮೊದಲಾದವುಗಳಿಗೆ ಒಲಿಯದ ಅತ್ಯಂತ ಭಕ್ತಿಯಿಂದ ಪರಬ್ರಹ್ಮನನ್ನು ಒಲಿಸಿಕೊಳ್ಳುವ ಸ್ಥಳ ಎಂದು ದ್ವಾರಕೆಯನ್ನು ಹೊಗಳುತ್ತಾ ಅರ್ಜುನನು ಬಂದನು.
ಪದಾರ್ಥ (ಕ.ಗ.ಪ)
ಕರತಳಾಮಲಕ-ಕೈವಶ
ಮೂಲ ...{Loading}...
ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ॥22॥
೦೨೩ ಹೊಗಳುತರ್ಜುನನಸುರರಿಪುವಿನ ...{Loading}...
ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಈ ರೀತಿಯಲ್ಲಿ ದ್ವಾರಕಾ ಪಟ್ಟಣವನ್ನು ಹೊಗಳುತ್ತ, ಕೃಷ್ಣನ ಅರಮನೆಯನ್ನು ಪ್ರವೇಶಿಸಿದನು. ಆ ಸಮಯದಲ್ಲಿ ಅಗಧರನಾದ ಶ್ರೀಕೃಷ್ಣನು ಮಂಚದಲ್ಲಿ ನಿದ್ರೆಯ ವಿನೋದದಲ್ಲಿ, ಆನಂದದಿಂದ ಕಣ್ಣುಗಳೆರಡನ್ನೂ ಮುಚ್ಚಿ ಗಾಢನಿದ್ರೆಯ ಹತೋಟಿಯಲ್ಲಿರುವಂತೆ ಭ್ರಮೆಯನ್ನುಂಟುಮಾಡುತ್ತ ಶೋಭಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಅಗಧರ-ಶ್ರೀ ಕೃಷ್ಣ , ಗೋವರ್ಧನ ಪರ್ವತವನ್ನು ಎತ್ತಿ ಹಿಡಿzವನು.
ಮೂಲ ...{Loading}...
ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ॥23॥
೦೨೪ ಮುಕುಳಕರಪುಟನಾಗಿ ಭಯಭರ ...{Loading}...
ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯ ಭರಿತ ಭಕ್ತಿಯಲ್ಲಿ, ಮಲಗಿರುವ ಕಮಲಾಕ್ಷನಾದ ಕೃಷ್ಣನನ್ನು ಎಬ್ಬಿಸಲು ಒಪ್ಪದೇ, ನಿರ್ವಂಚನೆಯ ಸ್ವಭಾವದ ಅರ್ಜುನನು ಮೊಗ್ಗಿನಂತೆ ಕೈಗಳನ್ನು ಜೋಡಿಸಿ, ಕೈ ಮುಗಿದು ಮೆಲ್ಲನೆ ಪಾದದ ಬಳಿ ಬಂದು ಕುಳಿತನು, ನಂತರ ದುಷ್ಟನಾದ ದುರ್ಯೋಧನನು ವೇದಗಳ ರಾಶಿಗೆ ಕಿರೀಟದಂತಿರುವ ಕೃಷ್ಣನ ತಲೆಯ ಬಳಿ ಬಂದು ಕುಳಿತನು.
ಮೂಲ ...{Loading}...
ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ॥24॥
೦೨೫ ಇರಲು ನಿಮಿಷದೊಳಸುರರಿಪು ...{Loading}...
ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವು ನಿಮಿಷಗ¼ ನಂತರ ಕೃಷ್ಣನು ಹಾಸಿಗೆಯಿಂದೆದ್ದನು. ಎದುರಿನಲ್ಲಿ ಅರ್ಜುನನನ್ನು ಕಂಡು ಅವನ ಮುಖದಲ್ಲಿ ಎಳೆಯ ನಗು ಹೊಳೆಯಿತು. ತಿರುಗಿ ನೋಡಲು ತಲೆಯ ಬಳಿಯಲ್ಲಿ ಕುರುಕುಲೇಶ್ವರನಾದ ದುರ್ಯೋಧನನು ತಳಮಳಕ್ಕೊಳಗಾಗಿರುವುದನ್ನು ಕಂಡು ಕೃಷ್ಣನು ಇದೇನು ಇದೇನು ! ಎಂದು ಆಶ್ಚರ್ಯದಿಂದ ಕೇಳಿದನು.
ಪದಾರ್ಥ (ಕ.ಗ.ಪ)
ಉಪ್ಪವಡಿಸು-ಎದ್ದೇಳು
ಸೂನು-ಮಗ
ಮೂಲ ...{Loading}...
ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ॥25॥
೦೨೬ ವೀಳಯವ ತಾ ...{Loading}...
ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷಿ ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡು ಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಮತ್ತು ಅರ್ಜುನನಿಗೆ ವೀಳೆಯವನ್ನು ಕೊಡುತ್ತ, ಎರಡೂ ಪಕ್ಷದ ರಾಯರು ಇಲ್ಲಿಗೆ ಬಂದುದೇನು ಎಂದು ಕೃಷ್ಣನು ಕೇಳಿದನು. ನಿಮ್ಮ ಈ ಬಗೆಯ ಒಟ್ಟಿಗಿನ ಬರವು ಅಸಂಭವವಲ್ಲವೆ? ಅತಿ ಗೌರವಾನ್ವಿತರಾದ ತಾವು ನಮ್ಮ ಮನೆಗೆ ಬರಲು ಏನು ಕಾರಣವೆಂದು ಕೇಳಲು ದುರ್ಯೋಧನನು ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಘತಿತ-ಅಸಂಭವ
ಮೂಲ ...{Loading}...
ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷಿ ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡು ಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ॥26॥
೦೨೭ ಯಾದವರು ಕೌರವರೊಳುಣ್ಟೇ ...{Loading}...
ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗ ಬೇಕೆಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರು ಕೌರವರೊಳಗೆ ಬೇಧವೇನುಂಟು. ನಾವು ಬಂದುದರಿಂದಾದ ಕುಂದೇನು ? ನಿಮ್ಮಂತಹ ಗೆಳೆಯರು ಯಾರು ನಮಗೆ ? ಆಸ್ತಿಯ ವಿಷಯದಲ್ಲಿ ಸೋದರರ ಮನ ಕದಡಿತು. ಭೂಮಿಗಾಗಿ ಕಾದಾಡುವೆವು. ನೀವು ನಮ್ಮಿಬ್ಬರಿಗೂ ನೆರವು ನೀಡಬೇಕೆಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ದಾಯಾದ-ಆಸ್ತಿಯ (ದಾಯ-ಆಸ್ತಿ)
ಮೂಲ ...{Loading}...
ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗ ಬೇಕೆಂದ ॥27॥
೦೨೮ ಕೌರವೇಶ್ವರ ಕೇಳು ...{Loading}...
ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮದೆಂದೇ
ನಾರಕದ ಸಾಮಾ್ರಜ್ಯಕೈದುವರೆಂದು ಹರಿ ನುಡಿದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವೇಶ್ವರ ಕೇಳು ! ಈ ಭೂದೇವಿಯು ಎಲ್ಲರೊಡನೆ ಕೂಡಿ ಬಾಳುವೆಯನ್ನು ನಡೆಸಿದರೂ, ಅವಳು ಯಾರನ್ನು ಮೆಚ್ಚಿದ್ದಾಳೆ? ಯಾರೊಡನೆ ಸಹಗಮನ ಮಾಡಿದ್ದಾಳೆ ? ರಾಜರು ಮಾತ್ರ ವಿಚಾರ ಮಾಡದೇಈ ಭೂಮಿಯು ತಮ್ಮದೆಂದೇ ತಿಳಿದು ನರಕವನ್ನು ಅನುಭವಿಸುತ್ತಾರಷ್ಟೆ ಎಂದು ಕೃಷ್ಣ ಹೇಳಿದನು.
ಪದಾರ್ಥ (ಕ.ಗ.ಪ)
ನಾರಕ-ನರಕ
ಒಕ್ಕತನ - ಕೂಡಿ ಬಾಳುವಿಕೆ
ಮೂಲ ...{Loading}...
ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮದೆಂದೇ
ನಾರಕದ ಸಾಮಾ್ರಜ್ಯಕೈದುವರೆಂದು ಹರಿ ನುಡಿದ ॥28॥
೦೨೯ ನಾಡಿಗೋಸುಗ ಸೋದರರು ...{Loading}...
ನಾಡಿಗೋಸುಗ ಸೋದರರು ಹೊ
ಯಾ್ದಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ್ಯಕ್ಕೋಸ್ಕರ ಸೋದರರು ಹೊಡೆದಾಡಿ ಹಂಚಿಹೋದರೆಂಬುದನ್ನು ಬ್ರಹ್ಮನ ಆಯುಷ್ಯವಿರುವವರೆಗೂ ಜನರು ಆಡದಿರುತ್ತಾರೆಯೇ ? ಅಯ್ಯೋ ! ಬೇಡ ! ನೀವು ಪರಸ್ಪರ ಕೈಗೂಡಿ ಬದುಕುವುದು ಒಳ್ಳೆಯದು. ನೀವು ಒಟ್ಟಾಗಿರುವುದನ್ನು ನೋಡಿ ನಾವು ಸಂತೋಷಪಡುತ್ತೇವೆಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಹರಿಹಂಚಾಗು - ಪಾಲಾಗು, ಚೂರುಚೂರಾಗು
ಮೂಲ ...{Loading}...
ನಾಡಿಗೋಸುಗ ಸೋದರರು ಹೊ
ಯಾ್ದಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ॥29॥
೦೩೦ ತಗರೆರಡ ಖತಿಗೊಳಿಸಿ ...{Loading}...
ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಟಗರುಗಳೆರಡನ್ನು ರೇಗಿಸಿ, ದೊಡ್ಡ ಕಾಳಗವನ್ನು ನೋಡುವಂತೆ ನೀಚರಾದವರು ನಿಮ್ಮನ್ನು ಸೆಳೆ ಸೆಳೆದು, ವೀರರನ್ನಾಗಿ ಮಾಡಿ, ಯುದ್ಧವನ್ನು ಹೊತ್ತಿಸಿ ನೀಚ ಮನುಷ್ಯರು ಕೂಗುತ್ತ ಹಿಂತಿರುಗುವರು. ಕಡೆಯಲ್ಲಿ ನೀವಿಬ್ಬರೇ ಅಪಕೀರ್ತಿಯ ಆದರಕ್ಕೆ ಪಕ್ಕಾಗುತ್ತೀರಿ.
ಪದಾರ್ಥ (ಕ.ಗ.ಪ)
ಖತಿ-ಕೋಪ, ಖುಲ್ಲರು-ನೀಚರು, ಪಿಸುಣ-ಚಾಡಿಕೋರ
ಮೂಲ ...{Loading}...
ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ॥30॥
೦೩೧ ಅವಧರಿಸು ಮುರವೈರಿ ...{Loading}...
ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರವೈರಿ, ಕೇಳು, ಧಮಾಧರ್ಮವನ್ನು ಕೇಳಲು ಇಲ್ಲಿಗೆ ಬರಲಿಲ್ಲ. ಕ್ಷತ್ರಿಯರ ಮಾರ್ಗದಲ್ಲಿನ ಯುದ್ಧದ ಅಪೇಕ್ಷೆ ನಮ್ಮದಾಯಿತು. ನಾವು ಎಂದಿಗೂ ನಿಮಗೆ ನಮ್ಮ ಎರಡು ಪಂಗಡಗಳೂ ಸಮಾನವಾದವು. ಮನಪೂರ್ವಕ ಪ್ರೀತಿಯಿಂದ ಪಾಂಡವರಿಗೂ, ಕೌರವರಿಗೂ ನೆರವು ನೀಡಬೇಕೆಂದನು ಸುಯೋಧನ.
ಪದಾರ್ಥ (ಕ.ಗ.ಪ)
ಪಾರ್ಥಿವ-ರಾಜ/ಆಳುವವ, ಪಂಥ-ದಾರಿ/ಮಾರ್ಗ
ಮೂಲ ...{Loading}...
ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ॥31॥
೦೩೨ ಎನಲು ತಮ್ಬುಲ ...{Loading}...
ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ ್ಯವಿಲ್ಲೆಂದ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಬಾಯಿಯಲ್ಲಿದ್ದ ತಾಂಬೂಲರಸವು ಚಿಮ್ಮುವಂತೆ ನಗುತ್ತ ಅರ್ಜುನನನ್ನು ನೋಡಿದನು. ನಿನ್ನ ರೀತಿ ಏನೆಂದು ಹೇಳು ಅರ್ಜುನನೆ ಎನ್ನಲು, ತಲೆಬಾಗಿ ಕೈಮುಗಿದು ನನಗೆ ಬೇರೆ ಅಭಿಪ್ರಾಯ ಏನುಂಟು ? ದುರ್ಯೋಧನನ ಅಭಿಪ್ರಾಯವೇ ನನ್ನ ಅಭಿಪ್ರಾಯ. ನಿಮ್ಮ ನೀತಿಯೇ ನಮ್ಮ ನೀತಿ. ನಮಗೆ ಬೇರೆ ಸ್ವಾತಂತ್ರ್ಯವಿಲ್ಲವೆಂದು ಅರ್ಜುನನು ಹೇಳಿದನು
ಪದಾರ್ಥ (ಕ.ಗ.ಪ)
ಅನುನಯ, ನಯ-ನೀತಿ,
ಮೂಲ ...{Loading}...
ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ ್ಯವಿಲ್ಲೆಂದ ॥32॥
೦೩೩ ಆದಡಾವಿಹೆವೊನ್ದು ಕಡೆಯಲಿ ...{Loading}...
ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾದರೆ ನಾನೊಂದು ಕಡೆಯಲ್ಲಿರುವೆ. ಕಾದಾಡುವವನು ನಾನಲ್ಲ. ಕಾದಾಡುವ ಯಾದವರು, ಕೃತವರ್ಮ, ನಾರಾಯಣಮಹಾಸೇನೆ ಮತ್ತೊಂದು ಕಡೆಯಲ್ಲಿರುವರು. ನೀನು ಬೇಕಾದುದನ್ನು ಮೆಚ್ಚಿಕೊಂಡು ಆದರದಿಂದ ಆಯ್ದುಕೊ ಎಂದು ಅರ್ಜುನನಿಗೆ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವರಿಸು-ಸ್ವೀಕರಿಸು
ಮೂಲ ...{Loading}...
ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ॥33॥
೦೩೪ ಮುರಮಥನ ಚಿತ್ತೈಸು ...{Loading}...
ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಮಥನ ! ಕೇಳು, ದುರ್ಯೋಧನನು ಅತಿ ಶ್ರೀಮಂತನು. ಬಹಳವಾದ ಯಾದವ ಸೈನ್ಯವನ್ನು ಕಾಪಾಡಲು ಸಮರ್ಥನು. ಭೂಮಿಯ ಸಂಪತ್ತಿಲ್ಲದ, ಕಾಡಿನ ಭಿಕ್ಷುಕರು ನಾವು. ಅಷ್ಟೊಂದು ಜನರನ್ನು ಚೆನ್ನಾಗಿ ಕಾಪಾಡಲು ಸಾಧ್ಯವೆ ? ಕೃಷ್ಣ, ನಮಗೆ ನೀನೆ ಸಾಕು ಎಂದನು ಅರ್ಜುನ.
ಪದಾರ್ಥ (ಕ.ಗ.ಪ)
ಸಂತರಿಸು-ನಿಭಾಯಿಸು
ಮೂಲ ...{Loading}...
ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ॥34॥
೦೩೫ ನಾವು ಬಡವರು ...{Loading}...
ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ! ನಾವು ಬಡವರು, ಬಡವರಿಗೆ ಸತ್ಯವಾಗಿಯೂ ನೀವೆ ಬೆಂಬಲವೆಂಬ ಬಿರುದನ್ನು ಕೇಳಿ ತಿಳಿದಿದ್ದೇನೆಂದು ಕೈಮುಗಿದನು ಪಾರ್ಥ. ನೀವು ಸುಖವಾಗಿ ಪಾಂಡವರನ್ನು ಓಲೈಸುವುದು. ನಮಗೆ ಉಳಿದ ಯಾದವ ಸೈನ್ಯವನ್ನು ಅನುಗ್ರಹಿಸಬೇಕೆಂದು ಸುಯೋಧನನು ಕೇಳಿದನು.
ಪದಾರ್ಥ (ಕ.ಗ.ಪ)
ಉಜ್ಜೀವಿಸು-ಓಲೈಸು
ಮೂಲ ...{Loading}...
ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ॥35॥
೦೩೬ ಮರೆಯ ಮಾತುಗಳೇಕೆ ...{Loading}...
ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಚ್ಚು ಮರೆಯ ಮಾತುಗಳೇಕೆ ? ಪಾಂಡವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚು. ಅದರಲ್ಲಿಯೂ ಅರ್ಜುನನಿಗೆ ಹೆಚ್ಚಿನ ಪ್ರೀತಿಯನ್ನು ತೋರುವಿರಿ. ನಿಮ್ಮ ಮನಸ್ಸು ಅವನನ್ನು ಮೆಚ್ಚುತ್ತದೆ. ಮುಖ್ಯ ಕಾರ್ಯಗಳಿಗೆ ನಾವೇ ಹೊರಗಿನವರು. ಆ ಮಾತುಗಳು ಸಾಕು ಹಾಗಿರಲಿ. ಆದರೆ ಕೃಷ್ಣ ನೀನು ಯುದ್ಧ ಮಾಡಲಾಗದು ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಉರುವ-ಮುಖ್ಯ
ಮೂಲ ...{Loading}...
ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ ॥36॥
೦೩೭ ಮೊಲೆಯನುಮ್ಬನ್ದೊಬ್ಬ ದನುಜೆಯ ...{Loading}...
ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊಲೆಯನ್ನುಣಿಸಲು ಬಂದ ಪೂತನಿಯನ್ನು ನಾಶ ಮಾಡಿದೆವು. ಶಕಟನನ್ನು ಒದೆದವು. ಧೇನುಕ, ವತ್ಸ, ನಗ, ಹಯ, ವೃಷಾಭಾಸುರ, ಭುಜಗರನ್ನು ಸವರಿಹಾಕಿದೆವು. ಮದಿಸಿದ ಆನೆಯನ್ನು, ಮಾವ ಕಂಸನನ್ನು, ಜರಾಸಂಧನ ಬಲವನ್ನು ನಿಶ್ಶಸ್ತ್ರರನ್ನಾಗಿ ಮಾಡಿದೆವು. ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸೆದೆದವು.
ಪದಾರ್ಥ (ಕ.ಗ.ಪ)
ಹಿಳಿದೆವು-ನಾಶಮಾಡಿದೆವು,
ಟಿಪ್ಪನೀ (ಕ.ಗ.ಪ)
ಧೇನುಕ-ಕತ್ತೆಯ ರೂಪದಿಂದ ಬಂದು ಬಲರಾಮನ ಮೇಲೆ ಬಿದ್ದು ಅವನಿಂದ ಹತನಾದ ರಾಕ್ಷಸ,
ವತ್ಸ-ಒಬ್ಬ ಅಸುರ ಬಲರಾಮ-ಕೃಷ್ಣರು ಯಮುನಾ ತೀರದಲ್ಲಿ ಆಡುತ್ತಿದ್ದಾಗ ಕರುವಿನಂತೆ ಬಂದ ಇವನನ್ನು ಕೃಷ್ಣ ಕೊಂದ,
ನಗ-ಗೋವರ್ಧನ
ಹಯ-
ವೃಷಭ
ಶಕಟ-ಕಂಸನ ಪರಿವಾರಕ್ಕೆ ಸೇರಿದ ಒಬ್ಬ ರಾಕ್ಷ ಕಂಸನ ಆದೇಶದಂತೆ ಕೃಷ್ಣನನ್ನು ಬಂಡಿಯ ರೂಪದಲ್ಲಿ ಕೊಲ್ಲಲು ಹೋದಾಗ ಕೃಷ್ಣನ ಅಂಗಾಲಿನ ಹೊಡೆತದಿಂದ ಮುರಿದು ಬಿದ್ದ.
ಮೂಲ ...{Loading}...
ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ॥37॥
೦೩೮ ಕಾಲಯವನನ ದನ್ತವಕ್ತ್ರನ ...{Loading}...
ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಯವನನನ್ನು, ದಂತವಕ್ತ್ರನನ್ನು ಸೀಳಿ ಹಾಕಿದೆವು. ಮುರ, ನರಕ, ಕುಂಭ, ಸಾಲುವ, ಡಿಬಿಕ, ಹಂಸ ಮುಂತಾದ ರಾಕ್ಷಸರ ಮಹಾ ಸೈನ್ಯಗಳನ್ನು ಕಾಳಗದಲ್ಲಿ ಸವರಿ ಹಾಕಿ, ಬಾಣಾಸುರನ ತೋಳುಗಳನ್ನು ಕತ್ತರಿಸಿದಾಗ ಕೋಪದಿಂದ ನಮಗೂ ಚಂದ್ರಶೇಖರನವರೆಗೂ ಸಂಪೂರ್ಣ ಯುದ್ಧವೇ ಆಯಿತು.
ಟಿಪ್ಪನೀ (ಕ.ಗ.ಪ)
ಮುಚುಕುಂದ - ಕಾಲಯವನನನ್ನು ತನ್ನ ದೃಷ್ಟಿಯಿಂದಲೇ ಸುಟ್ಟುಹಾಕಿದ ಮುಚುಕುಂದನ ನಿದ್ರಾಶಕ್ತಿಯನ್ನು, ಬ್ರಹ್ಮವರವನ್ನು ಭಾಗವತ ಹೇಳುತ್ತದೆ. ಮಹಾಭಾರತದಲ್ಲಿ ಬರುವ ಬೇರೆಯ ಮುಚುಕುಂದನ ವಿಷಯ ಇಲ್ಲಿ ಪ್ರಸ್ತಾವಗೊಂಡಿದೆ. ಈತ ವಿಚಿತ್ರ ಧ್ಯೇಯಗಳನ್ನು ಮೈಗೂಡಿಸಿಕೊಂಡು ಅನ್ಯರಿಗೆ ವಿಶಿಷ್ಟವಾಗಿ ಕಾಣಿಸುತ್ತಿದ್ದ ಒಬ್ಬ ಯೋಧ. ತಾನು ಶ್ರಮಪಟ್ಟು ಸಂಪಾದಿಸಿದುದನ್ನು ಬಿಟ್ಟು ದಾನವಾಗಿ ಬಂದುದನ್ನು ಸ್ವೀಕರಿಸಬಾರದು ಎಂಬುದು ಈತನ ನೀತಿಯಾಗಿತ್ತು. ಒಮ್ಮೆ ಮುಚುಕುಂದ ಕುಬೇರನ ಅಲಕಾವತಿಯ ಮೇಲೆ ಯುದ್ಧ ಸಾರಿದ. ಆದರೆ ಮಹಾವೀರರಾಗಿದ್ದ ಅನುಭವೀ ಹೋರಾಟಗಾರರಾಗಿದ್ದ ಕುಬೇರನ ಸೈನಿಕರು ಇವನ ಸೈನ್ಯವನ್ನು ಪರಾಜಯಗೊಳಿಸಿದರು. ಆಗ ವಿಪತ್ತಿಗೆ ಸಿಲುಕಿದ ಮುಚುಉದನು ತನ್ನ ಕುಲಗುರುಗಳಾದ ವಸಿಷ್ಠ ಮಹರ್ಷಿಗಳ ಸಹಾಯವನ್ನು ಯಾಚಿಸಿದ. ವಸಿಷ್ಠರು ಈತನ ಮಾತಿಗೆ ಒಪ್ಪಿದರು. ತಾವು ಮಾಡಿದ ತಪಸ್ಸು ಮಂತ್ರ ಪೂಜೆ ಹೋಮಗಳ ಫಲವಾಗಿ ತಮಗೆ ಬಂದಿದ್ದ ಶಕ್ತಿಯಿಂದ ಮುಚುಕುಂದನ ಸೇನೆಯಲ್ಲಿ ಅಪಾರವಾದ ಶಕ್ತಿಯನ್ನು ತುಂಬಿ ಗೆಲ್ಲಿಸಿದರು. ಆಗ ಯಮನ ಸಭೆಯಲ್ಲಿ ಮರ್ಯಾದೆ ಪಡೆಯುತ್ತಿದ್ದ ಈ ಮುಚುಕುಂದನಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಮನಸ್ಸಾಯಿತು ಕುಬೇರನಿಗೆ.
ಮೂಲ ...{Loading}...
ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ॥38॥
೦೩೯ ಹಸುಳೆತನ ಮೊದಲಾಗಿ ...{Loading}...
ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿ ರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು ಚಕ್ರ ಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮುಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳ್ ಎಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ, ಬಾಲ್ಯದಿಂದಲೂ ಬಲಿಷ್ಠ ರಾಕ್ಷಸರೊಡನೆ ಹೊಡೆದಾಡಿ, ಯುದ್ಧದ ಆಯಾಸವನ್ನು ಸಹಿಸಿಕೊಂಡು,ಕೋಟ್ಯಂತರ ರಾಕ್ಷಸರುಗಳನ್ನು ಕೊಂದೆವು. ಆದರೆ ಈಗ ಆಯುಧಗಳನ್ನು ಹಿಡಿಯಲಾರೆವು. ಸುದರ್ಶನ ಚಕ್ರವೂ ಭಂಡಾರವನ್ನು ಸೇರಿತು. ಮೊದಲಿನ ಯೌವ್ವನದ ಬಲವೂ ಈಗಿಲ್ಲ. ನಾವೀಗ ಸೋಮಾರಿಗಳು’ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಭಂಡಾರಿಸಿತು-ಆಯುಧಾಗಾರಕ್ಕೆ ಸೇರಿತು
ಮೂಲ ...{Loading}...
ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿ ರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು ಚಕ್ರ ಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮುಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳೆಂದ ॥39॥
೦೪೦ ಎನಲು ಕರಲೇಸೆನ್ದು ...{Loading}...
ಎನಲು ಕರಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸು ನಗುತಲಿಂತೆಂದನು ಧನಂಜಯಗೆ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಿದ್ದರೆ ಒಳ್ಳೆಯದೇ ಆಯಿತೆಂದು ದುರ್ಯೋಧನನು ಅಲ್ಲಿಂದ ಬೀಳ್ಕೊಂಡು, ಬಲರಾಮನನ್ನು, ಕೃತವರ್ಮನನ್ನು ಸಮಸ್ತ ಯಾದವ ಸೈನ್ಯ ರಾಶಿಯನ್ನು ಕಂಡು, ಸೈನ್ಯದೊಡನೆ ಸಂತೋಷದಿಂದ ಹಸ್ತಿನಾಪುರಕ್ಕೆ ಹೊರಟನು. ನಂತರ ಅರ್ಜುನನಿಗೆ ಶ್ರೀಕೃಷ್ಣನು ನಸುನಗುತ್ತಾ ಹೀಗೆ ಹೇಳಿದನು.
ಮೂಲ ...{Loading}...
ಎನಲು ಕರಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸು ನಗುತಲಿಂತೆಂದನು ಧನಂಜಯಗೆ ॥40॥
೦೪೧ ಸುರಗಿಯನು ಬಿಸುಟೊರೆಯನಙ್ಗೀ ...{Loading}...
ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯನ್ನು ಬಿಟ್ಟು, ಕತ್ತಿಯ ಒರೆಯನ್ನು ಒಪ್ಪಿಕೊಂಡಂತೆ, ಕಾಳಗದಲ್ಲಿ ಅತಿ ಹೆಚ್ಚಿನ ಕಾದಾಟವನ್ನು ಮಾಡುವ ಯಾದವರ ಮಹಾ ಸೈನ್ಯವನ್ನು ಆರಿಸಿಕೊಳ್ಳದೇ ತಿಳಿಗೇಡಿಯಾಗಿ, ಹೋರಾಡದ, ನನ್ನನ್ನು ವೃಥಾ ಬಯಸಿದೆ. ಇದನ್ನು ಕೇಳಿದರೆ ನಿನ್ನ ಅಣ್ಣತಮ್ಮಂದಿರು ಹಾಸ್ಯಮಾಡದೆ ಬಿಡುವರೆ?
ಪದಾರ್ಥ (ಕ.ಗ.ಪ)
ಸುರಗಿ-ಕತ್ತಿ, ಒರೆ-ಕತ್ತಿಯನ್ನಿಡುವ ಚೀಲ
ಮರುಳುಗುಟ್ಟು - ಹಾಸ್ಯಮಾಡು
ಮೂಲ ...{Loading}...
ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು ॥41॥
೦೪೨ ಎನಲು ಗಹಗಹಿಸಿದನಿದಾರಿಗೆ ...{Loading}...
ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ರೀತಿ ಹೇಳಲು, ಅರ್ಜುನನು ಗಹಗಹಿಸಿ ನಗುತ್ತ, ‘ಯಾರಿಗೆ ನಿಮ್ಮ ಮನಸ್ಸನ್ನು ಮರೆಮಾಚುವಿರಿ. ನಿಮ್ಮ ಶಿಷ್ಯನಲ್ಲಿಯೇ ನಾಟಕದ ಮಾಯಾ ಮಾತುಗಳೆ ? ನಿಮ್ಮ ಗರಡಿಯಲ್ಲಿ ನನಗೆ ಅನುಭವವಿದೆ. ಅದಿರಲಿ, ನಿಮ್ಮ ಅತೀವವಾದ ಮಹತ್ವದ ಆಶ್ರಯವನ್ನು ನನ್ನ ಅಣ್ಣ - ತಮ್ಮಂದಿರು ತಿಳಿಯರೇ ? ’ ಎಂದನು.
ಪದಾರ್ಥ (ಕ.ಗ.ಪ)
ಕದ್ದಾಡು - ಮರೆಮಾಚು
ಮೂಲ ...{Loading}...
ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ॥42॥
೦೪೩ ನಾವು ಬರಿಗೈಯವರು ...{Loading}...
ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವದೇನು ಹೇಳೆಂದ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಬರಿಕೈಲಿ ಬರುವವರು. ಬಂದರೆ ಅಲ್ಲಿ ನಮಗೇನು ಕೆಲಸ ? ನಾವು ಸುಮ್ಮನೆ ತಿಂದು ಕುಳಿತು ಕೊಳ್ಳುವವರಲ್ಲ, ಯುದ್ಧದಲ್ಲಿ ಮತ್ತೊಬ್ಬರ ಹಂಗಿನಲ್ಲಿರುವುದಿಲ್ಲ. ನೀವು ನಮ್ಮನ್ನು ದೇವರೆಂದೇ ತಿಳಿಯುತ್ತೀರಿ. ಆದರೆ ದೇವತನವು ನಮಗೆ ಸ್ವಲ್ಪವೂ ಇಲ್ಲವೆಂಬುದನ್ನು ನಾವು ಬಲ್ಲೆವು. ಬಂದು ಮಾಡುವುದೇನು’ ಹೇಳೆಂದನು ಶ್ರೀಕೃಷ್ಣ
ಮೂಲ ...{Loading}...
ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವದೇನು ಹೇಳೆಂದ ॥43॥
೦೪೪ ದೇವ ಮಾತ್ರವೆ ...{Loading}...
ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ದೇವರಷ್ಟೇ ಅಲ್ಲ. ದೇವರುಗಳಿಗೆಲ್ಲ ಒಡೆಯರು. ನಿಮ್ಮನ್ನು ಹೊಗಳಲು ವೇದಗಳಿಗೂ ಸಾಧ್ಯವಿಲ್ಲ. ಆ ಮಾತು ಹಾಗಿರಲಿ. ನಾವು ಭಕ್ತರು. ಭಕ್ತರ ಸೇವಕರು ನೀವು. ಸಾರಥಿಯಾಗಿ ನಿಮ್ಮ ಸೇವಕನನ್ನು ಕಾಯಬೇಕೆಂದು ಅರ್ಜುನನು ಶ್ರೀ ಹರಿಯ ಪಾದಗಳಿಗೆ ಹಣೆಯನ್ನು ಒಡ್ಡಿದನು.
ಪದಾರ್ಥ (ಕ.ಗ.ಪ)
ಭೃತ್ಯರು - ಸೇವಕರು
ಮೂಲ ...{Loading}...
ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ ॥44॥
೦೪೫ ಎನಲು ನಗುತೆತ್ತಿದನು ...{Loading}...
ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಾಗೆ ಹೇಳುತ್ತಾ ನಮಸ್ಕರಿಸಿದ ಅರ್ಜುನನನ್ನು ಶ್ರೀ ಕೃಷ್ಣನು ನಗುತ್ತ ಮೇಲೆತ್ತಿದನು. ಅವನ ಸಾರಥಿತನವನ್ನು ಕೈಗೊಂಡನು. ಸೇವಕರ ವರ್ಗದಲ್ಲಿ ಕರುಣಿಯಾದವನ ಪ್ರೀತಿ, ಸ್ನೇಹಗಳನ್ನು ನಾವೆತ್ತ ಬಲ್ಲೆವು ? ಅವನಿಗೆ ಅಹಂಕಾರವಿಲ್ಲ. ಅಂದು ವಿರೋಚನನ ಮಗ ಬಲಿಯ ಮನೆಯ ಬಾಗಿಲನ್ನು ಕಾದ ಶ್ರೀಕೃಷ್ಣನು ಇಂದು ಅರ್ಜುನನ ಬಂಡಿಯನ್ನು ಓಡಿಸುವ ಸಾರಥಿಯಾದನು.’ ಎಂದು ವೈಶಂಪಾಯನರು ಜನಮೆಜಯನಿಗೆ ಹೇಳಿದರು..
ಪದಾರ್ಥ (ಕ.ಗ.ಪ)
ಬೋವ - ಸಾರಥಿ, ಭೃತ್ಯ - ಸೇವಕ, ಪಡಿಹಾರಿಕೆ - ಬಾಗಿಲು ಕಾಯುವಿಕೆ.
ಟಿಪ್ಪನೀ (ಕ.ಗ.ಪ)
ವೈರೋಚಿಯ ಪಡಿಹಾರಿಕೆ - ವಿರೋಚನನ ಮಗ ಬಲಿಯ ಬಳಿ ವಾಮನನಾಗಿ ದಾನ ಬೇಡಲು ಬಂದ ಹರಿ, ತ್ರಿವಿಕ್ರಮನಾಗಿ ಬೆಳೆದು ಎರಡು ಪಾದಗಳಲ್ಲಿ ಭೂಮಿ ಅಕಾಶಗಳನ್ನು ಅಳೆದು ಮೂರನೆ ಪಾದವನ್ನೆಲ್ಲಿಡಲಿ ಎಂದು ಕೇಳಿದ. ಬಲಿಯು ತನ್ನ ತಲೆಯ ಮೇಲಿಡು ಎಂದ ; ನಿನ್ನ ಕೊನೆಯ ಆಸೆಯನ್ನು ಈಡೇರಿಸುವೆನೆಂದಾಗ ವಿಷ್ಣುವು ತನ್ನ ಮನೆಯ ಬಾಗಿಲನ್ನು ಕಾಯಬೇಕೆಂದು ಬಲಿ ಕೇಳಿದ. ಈ ಕಾರಣಕ್ಕಾಗಿ ವಿಷ್ಣುವು ಬಲಿಯ ಮನೆಯ ಬಾಗಿಲನ್ನು ಕಾದನು.
ಮೂಲ ...{Loading}...
ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ॥45॥