೦೦೦ ಸೂ ರಾಯ ...{Loading}...
ಸೂ. ರಾಯ ಪಾಂಡವ ಜೀವ ಭಕ್ತ ನಿ
ಕಾಯ ಲಂಪಟನಮಲ ಯಾದವ
ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಶ್ರೀಕೃಷ್ಣನು ಪಾಂಡವ ಜೀವನಾದವನು. ಭಕ್ತರ ಸಮೂಹವನ್ನು ಅತಿಯಾಗಿ ಬಯಸುವವನು. ಇಂಥ ಯಾದವರಾಯನು ಅಭಿಮನ್ಯುವಿನ ಪರಿಣಯಕ್ಕೆಂದು ಬಂದನು.
ಪದಾರ್ಥ (ಕ.ಗ.ಪ)
ರಾಯ-ರಾಜ, ಪಾಂಡವ ಜೀವ-1. ಪಾಂಡವರ ಪಾಲಿಗೆ ಜೀವ ಎನಿಸಿದವನು. 2. ಪಾಂಡವರೇ ತನ್ನ ಜೀವ ಎಂದು ಭಾವಿಸಿದವನು. ಭಕ್ತ ನಿಕಾಯ ಲಂಪಟ, ನಿಕಾಯ-ಸಮೂಹ, ಲಂಪಟ-ಆಸಕ್ತಿಯುಳ್ಳವನು, ಅತಿಯಾದ ಗೀಳು ಹಚ್ಚಿಸಿಕೊಂಡವನು. ಭಕ್ತರಿಗೆ ಕೃಷ್ಣ ಪ್ರೇಮ ಇರುವಂತೆಯೇ ಕೃಷ್ಣನಿಗೂ ಭಕ್ತರನ್ನು ಅಗಲಿರಲು ಮನಸ್ಸಿರಲಿಲ್ಲವಂತೆ! ಬಿಜಯಂಗೈ-ಪ್ರಯಾಣ ಮಾಡು, (ಬಾ), ಪರಿಣಯ-ವಿವಾಹ
ಟಿಪ್ಪನೀ (ಕ.ಗ.ಪ)
ಯಾದವರು - ಭರತಖಂಡದಲ್ಲಿ ಪ್ರಸಿದ್ಧವಾದ ವಂಶಗಳೆಂದರೆ ಸೂರ್ಯವಂಶ ಮತ್ತು ಚಂದ್ರವಂಶ. ಸೂರ್ಯವಂಶದಲ್ಲಿ ರಘು, ಇಕ್ಷ್ವಾಂಕುಗಳಂತೆ ಚಂದ್ರವಂಶದಲ್ಲಿ ಕುರುಭರತ ಮೊದಲಾದವರು ಬೆಳಗಿದ್ದಾರೆ. ಹೀಗೆ ಬೆಳಗಿದವರಲ್ಲಿ ಒಬ್ಬನೆಂದರೆ ಯಯಾತಿ. ಇವನಿಗೆ ದೇವಯಾನಿಯಲ್ಲಿ ಹುಟ್ಟಿದವg
ಮೂಲ ...{Loading}...
ಸೂ. ರಾಯ ಪಾಂಡವ ಜೀವ ಭಕ್ತ ನಿ
ಕಾಯ ಲಂಪಟನಮಲ ಯಾದವ
ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನು ಮಂಡಲದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಯನೇ ಕೇಳು. ಪಾಂಡವರು ಒಂದು ವರ್ಷದ ಅಜ್ಞಾತ ವಾಸವನ್ನು ಮುಗಿಸಿ ಅದಕ್ಕೆ ವಿದಾಯ ಹೇಳಿದರು. ಆ ರಾತ್ರಿಯನ್ನು ಬಹಳ ಆನಂದದಿಂದ ಕಳೆದರು. ಅವರಿಗೆ ಇನ್ನು ಮುಂದೆ ಮಂಗಳವನ್ನು ಪ್ರಸಾದಿಸುವ ಹಾಗೆ ಸೂರ್ಯನು ಪೂರ್ವದ ಪರ್ವತದಲ್ಲಿ ಕೆಂಪಾಗಿ ಕಾಣಿಸಿಕೊಂಡ.
ಪದಾರ್ಥ (ಕ.ಗ.ಪ)
ಚರಿತಜ್ಞಾತವಾಸ-ಕಳೆದ ಅಜ್ಞಾತವಾಸ, ಚರಿತ=ನಡೆದ, ಗತಿಸಿದ, ನೆರವೇರಿಸಿದ, ಮೇಲಣ-ಮುಂದಿನ,
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನು ಮಂಡಲದ ॥1॥
೦೦೨ ಏಳು ಕುದುರೆಯ ...{Loading}...
ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನ ಏಳು ಕುದುರೆಗಳ ಖುರ ಪುಟದಿಂದೆದ್ದ ಕೆಂಪು ಧೂಳಿನ ಪರಿಣಾಮವಾಗಿ ಆಗಸವೆಲ್ಲ ಕೆಂಪಾಯಿತೋ ಅಥವಾ ಕುಂತೀಕುಮಾರರ ಅಭ್ಯುದಯದ ರಾಗರಸವೇ ವೈಭವದಿಂದ ಹರಡಿಕೊಂಡಿತ್ತೋ ಅಥವಾ ಇಂದ್ರ ದಿಕ್ಕು (ಪೂರ್ವ ದಿಕ್ಕು) ಎಂಬ ಬಾಲಕಿಯ ಬೈತಲೆಯ ಕುಂಕುಮವೋ ಎನ್ನುವಂತೆ ಸೂರ್ಯನ ಕೆಂಗಿರಣಗಳು ರಂಜಿಸಿದವು.
ಪದಾರ್ಥ (ಕ.ಗ.ಪ)
ಖುರಪುಟ-ಕಾಲಿನ ಗೊರಸು, ಉಬ್ಬರಿಸಿ-ವಿಜೃಂಭಿಸಿ, ಪಸರಿಸು-ಹರಡು, ಮಹೇಂದ್ರವರ ದಿಗ್ ಬಾಲಕಿ-ಇಂದ್ರ ದಿಕ್ಕು ಅಂದರೆ ಪೂರ್ವದಿಕ್ಕು ಎಂಬ ಬಾಲಕಿ, ಚೂಣಿ-ಮುಂಭಾಗ, ತನಿರಾಗ-ಪ್ರೀತಿ
ಟಿಪ್ಪನೀ (ಕ.ಗ.ಪ)
ಸೂರ್ಯೋದಯದ ಸೊಗಸನ್ನು ಕವಿ ಇಲ್ಲಿ ವರ್ಣಿಸುತ್ತಿದಾನೆ.
ಏಳುಕುದುರೆ-ಸೂರ್ಯನು ಸಪ್ತಾಶ್ವವನ್ನೇರಿ ಬರುತ್ತಾನೆ ಎಂಬ ನಂಬಿಕೆಯಿದೆ,
ಮೂಲ ...{Loading}...
ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು ॥2॥
೦೦೩ ಸರಸಿಜದ ಪರಿಮಳಕೆ ...{Loading}...
ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲ ಸಿರಿಯ ಸೂರೆಯ
ತರಿಸಿದನು ರಿಪುರಾಯ ರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಉದಯಿಸುವುದರಿಂದ ತಾವರೆಗಳ ಪರಿಮಳದ ಮೂಲಕ ಸೂರ್ಯನು ತುಂಬಿಗಳಿಗೆ ಆಹ್ವಾನ ನೀಡಿದನು. ಚಕ್ರವಾಕ ಪಕ್ಷಿಗಳ ವಿರಹಾವಸ್ಥೆಯನ್ನು ಬಿಡಿಸಿದನು. ಹಾಗೆಯೇ ಕತ್ತಲಲ್ಲಿ ಮೆರೆಯುವ ನೈದಿಲೆಯ ಸಂಪತ್ತನ್ನೆಲ್ಲ ಲೂಟಿ ಮಾಡಿದನು. ಹೀಗೆ ಪೂರ್ವಪರ್ವತದಲ್ಲಿ ಸಭೆಯನ್ನು ಕರೆದ ಸೂರ್ಯನು ಕತ್ತಲೆಯೆಂಬ ಶತ್ರುಗಳ ರಾಜ್ಯವನ್ನು ಒರಸಿಹಾಕಿದ.
ಪದಾರ್ಥ (ಕ.ಗ.ಪ)
ಸರಸಿಜ-ತಾವರೆ, ಬರವ ಕೊಟ್ಟ-ಆಹ್ವಾನಿಸಿದ, ಜಕ್ಕವಕ್ಕಿ-ಚಕ್ರವಾಕ ಪಕ್ಷಿ, ಮೂಡಣ-ಪೂರ್ವದ, ಅದ್ರಿ-ಬೆಟ್ಟ
ಟಿಪ್ಪನೀ (ಕ.ಗ.ಪ)
ಎಣೆವಕ್ಕಿಗಳು ಎನ್ನುತ್ತಾರೆ. ಕತ್ತಲಲ್ಲಿ ಅವು ಅಗಲುತ್ತವೆ. ಬೆಳಗಾಯಿತೆಂದರೆ ಅವುಗಳ ಅಗಲಿಕೆಯ ಬಂಧನ ಕಳಚಿದಂತಲ್ಲವೆ ?
ಪಾಂಡವರು ಶತ್ರುಗಳನ್ನು ಗೆಲ್ಲುತ್ತಾರೆ ಎಂಬ ಪೂರ್ವಸೂಚನೆಯೂ ಇಲ್ಲಿ ಧ್ವನಿತವಾಗಿರುವುದನ್ನು ಗಮನಿಸಬೇಕು.
ಮೂಲ ...{Loading}...
ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲ ಸಿರಿಯ ಸೂರೆಯ
ತರಿಸಿದನು ರಿಪುರಾಯ ರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ ॥3॥
೦೦೪ ಹರ ಹರ ...{Loading}...
ಹರ ಹರ ಶ್ರೀಕಾಂತನೆನುತೈ
ವರು ಕುಮಾರಕರುಪ್ಪವಡಿಸಿದ
ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ
ವರ ವಿಭೂಷಣ ಗಂಧ ಮಾಲ್ಯಾಂ
ಬರದಿ ಪರಿವೃತರಾದರವನೀ
ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಾದಾಗ ಪಾಂಡವರು ಶಿವ ಕೃಷ್ಣರ ಸ್ಮರಣೆ ಮಾಡುತ್ತ ಎದ್ದರು. ಈ ಶತ್ರು ವಿನಾಶಕರು ಮಂಗಳ ಮಜ್ಜನ (ಸ್ನಾನ)ವನ್ನು ಮಾಡಿದರು. ಅನಂತರ ಶ್ರೇಷ್ಠವಾದ ಆಭರಣಗಳಿಂದ ಗಂಧ ಮಾಲ್ಯಾದಿಗಳಿಂದ ಸೊಗಸಾದ ವಸ್ತ್ರಗಳಿಂದ ಭೂಷಿತರಾದರು. ಅನಂತರ ಬ್ರಾಹ್ಮಣರಿಗೆ ಅಪಾರವಾದ ಗೋವುಗಳನ್ನು ಮಣಿಕನಕಾದಿ ವಸ್ತುಗಳನ್ನು ದಾನವಾಗಿ ಇತ್ತರು.
ಪದಾರ್ಥ (ಕ.ಗ.ಪ)
ಉಪ್ಪವಡಿಸು-ಏಳು, ಉಪ್ಪವಡ, ಉತ್+ಪವಡಿಸು, ಮಲಗಿದ್ದವರು ಏಳುವಿಕೆ, ಅರಿವಿದಾರ-ಶತ್ರು ವಿನಾಶಕ, ಮಾಂಗಲ್ಯ ಮಜ್ಜನ-ಮಂಗಳ ಸ್ನಾನ, ಅಂಬರ-ವಸ್ತ್ರ, ಪರಿವೃತ-ಸುತ್ತಿಕೋ, ಅವನೀಸುರ-ಬ್ರಾಹ್ಮಣ, ಧೇನು-ಹಸು
ಟಿಪ್ಪನೀ (ಕ.ಗ.ಪ)
(ಹೀಗೆ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು).
ಮೂಲ ...{Loading}...
ಹರ ಹರ ಶ್ರೀಕಾಂತನೆನುತೈ
ವರು ಕುಮಾರಕರುಪ್ಪವಡಿಸಿದ
ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ
ವರ ವಿಭೂಷಣ ಗಂಧ ಮಾಲ್ಯಾಂ
ಬರದಿ ಪರಿವೃತರಾದರವನೀ
ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ ॥4॥
೦೦೫ ತಮದ ಗಣ್ಟಲನೊಡೆದ ...{Loading}...
ತಮದ ಗಂಟಲನೊಡೆದ ಹರುಷ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ
ವಿಮಲ ಬಹಳ ಕ್ಷತ್ರ ರಶ್ಮಿಗ
ಳಮರಿ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಕತ್ತಲನ್ನು ಭೇದಿಸಿಕೊಂಡು ಬರುವಂತೆ ಧರ್ಮರಾಯನು ಅಜ್ಞಾತವಾಸದ ಕತ್ತಲನ್ನು ಸೀಳಿಕೊಂಡು ಬಂದ. ಬದುಕಿನ ಭ್ರಮೆಯ ಕವಚವನ್ನು ಸೀಳಿ ಹೊರಬಂದ ಆತ್ಮನಂತೆ ಹೊಳೆಯುತ್ತಿದ್ದ. ಅಜ್ಞಾತವಾಸದಿಂದ ಮುಕ್ತಿಹೊಂದಿದ ಧರ್ಮರಾಯನು ಪರಿಶುದ್ಧವಾದ ತೇಜಸ್ಸಿನಿಂದ ಸೂರ್ಯನು ದಿಕ್ಕುಗಳನ್ನು ಬೆಳಗುವಂತೆ ರಾಜತೇಜಸ್ಸಿನಿಂದ ಮೆರೆದ.
ಪದಾರ್ಥ (ಕ.ಗ.ಪ)
ತಮ-ಕತ್ತಲು, ದ್ಯುಮಣಿ-ಸೂರ್ಯ, ಕ್ಷತ್ರರಶ್ಮಿ-ಕ್ಷಾತ್ರತೇಜಸ್ಸು
ಟಿಪ್ಪನೀ (ಕ.ಗ.ಪ)
- ಸೂರ್ಯೋದಯವಾದಂತೆಯೇ ಧರ್ಮರಾಜನ ಅಭ್ಯುದಯವೂ ಆರಂಭವಾಯಿತೆಂಬುದನ್ನು ಈ ಪದ್ಯ ಸೂಚಿಸುತ್ತದೆ. ಈ ಉದಯದ ಸ್ವರೂಪವನ್ನು ಉಪಮೆಗಳ ಮೂಲಕ ಕವಿ ವಿವರಿಸಿದ್ದಾನೆ. ಹರುಷ ದ್ಯುಮಣಿ ಎಂದರೆ ಸಂತೋಷದ ಸೂರ್ಯಮಂಡಲ.
ಆತ್ಮನ ಉಪಮೆ ಎರಡನೆಯದು. ಧರ್ಮರಾಯನೂ ಈಗ ಜಂಜಡದಿಂದ ಪಾರಾಗಿ ಬಂದನೆಂಬುದನ್ನು ಇದು ಸೂಚಿಸುತ್ತದೆ.
ಮೂಲ ...{Loading}...
ತಮದ ಗಂಟಲನೊಡೆದ ಹರುಷ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ
ವಿಮಲ ಬಹಳ ಕ್ಷತ್ರ ರಶ್ಮಿಗ
ಳಮರಿ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ ॥5॥
೦೦೬ ಪರಮ ಸತ್ಯವ್ರತ ...{Loading}...
ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮ ಸತ್ಯವ್ರತನಾದ ಧರ್ಮರಾಯನು ಒಂದು ಮಹಾಯಾಗವನ್ನು ತೃಪ್ತಿಕರವಾಗಿ ಪೂರೈಸಿ ಯಾಗಾಂತದಲ್ಲಿ ಅವಭೃತ ಸ್ನಾನಮಾಡಿ ತಮ್ಮಂದಿರೊಡನೆ ವಿರಾಟನ ಅರಮನೆಗೆ ಬಂದ. ಅಲ್ಲಿ ಓಲಗಶಾಲೆಯಲ್ಲಿ ರತ್ನ ಖಚಿತವಾದ ಸಿಂಹಾಸನವನ್ನು ಏರಿ ಕುಳಿತ. ಸೋದರರೆಲ್ಲ ಸಂಭ್ರಮದಿಂದ ಅವನ ಪಾದಸೇವೆ ಮಾಡಿದರು.
ಪದಾರ್ಥ (ಕ.ಗ.ಪ)
ಮಹಾಕ್ರತು-ಮಹಾಯಾಗ (ಸತ್ಯಪಾಲನೆ ಎಂಬುದೇ ಅವರು 13 ವರ್ಷಗಳ ಕಾಲ ಮಾಡಿದ ಮಹಾಯಾಗ.), ಮಜ್ಜನ-ಸ್ನಾನ, ಕೇಸರಿಯ ಪೀಠ-ಸಿಂಹಾಸನ, ಅಡರು-ಏರು, ನಿಜ-ತನ್ನ , ಪರುಟವಿಸು-ಪುರಸ್ಕರಿಸು, ಅಣಿಯಾಗು
ಮೂಲ ...{Loading}...
ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ ॥6॥
೦೦೭ ಅವನಿಪನ ಸಿಂಹಾಸನವನೇ ...{Loading}...
ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರ ತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಾದ ಮೇಲೆ ಓಲಗಸಾಲೆಯಲ್ಲಿ ಧರ್ಮರಾಯ ಸಿಂಹಾಸನವನ್ನು ಏರಿ ಕುಳಿತಿದ್ದುದನ್ನು ನೋಡಿ, ಅರಮನೆಯ ಕಂಚುಕಿಗಳು ತಮ್ಮ ರಾಜನ ಪೀಠವನ್ನು ಇವರಾರೋ ಏರಿದ್ದಾರಲ್ಲ ಇಂಥ ಮಹಾಗರ್ವಿಯಾರು, ಎಂದುಕೊಂಡು ನೋಡಿದರೆ ಕಣ್ಣು ಕೋರೈಸುವಂತಹ ಮಹಾತೇಜಸ್ಸಿನಿಂದ ಯಾರೋ ಕುಳಿತಿದ್ದಾರೆ. ಅವರ ಕ್ಷಾತ್ರ ತೇಜಸ್ಸನ್ನು ಎದುರಿಸಲು ಇವರಿಗೆ ಹೆದರಿಕೆ. ಆದುದರಿಂದ ಇನ್ನೂ ಮಲಗಿದ್ದ ವಿರಾಟ ರಾಜನ ಬಳಿಗೆ ಹೋಗಿ ಅವನನ್ನು ಎಬ್ಬಿಸಿ ತಾವು ಕಂಡ ದೃಶ್ಯವನ್ನು ಬಣ್ಣಿಸಿದರು.
ಪದಾರ್ಥ (ಕ.ಗ.ಪ)
ಅವನಿಪ=(ಅವನಿ=ಭೂಮಿ, ಪ=ಒಡೆಯ), ಸಗರ್ವಿತ-ಧಾಷ್ಟ್ರ್ಯ ಉಳ್ಳವನು, ಕಂಚುಕಿ-ಅಂತಃಪುರದ ಅಧಿಕಾರಿ, ಐತರು-ಬಾ, ಈಕ್ಷಿಸು-ನೋಡು, ಅವಗಡಿಸು-ವಿರೋಧಿಸು, ಕೆಣಕು, ಹರಿತಂದು-ಓಡಿಬಂದು
ಮೂಲ ...{Loading}...
ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರ ತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ ॥7॥
೦೦೮ ಜೀಯ ಸಿಂಹಾಸನಕೆ ...{Loading}...
ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಭು ! ಯಾರೋ ಒಬ್ಬನು ಸಿಂಹಾಸನ ಏರಿ ಕುಳಿತಿದ್ದಾನೆ. ಅವನು ದೇವೇಂದ್ರನಿರಬಹುದೆ ? ಅಥವಾ ಶಿವನಿರಬಹುದೆ ? ಅಥವಾ ನಾರಾಯಣ ಇರಬಹುದೆ ? ಅವನು ಮನುಷ್ಯನಂತೂ ಅಲ್ಲ. ದೇವರು (ನೀವು) ಬಂದು ನೋಡಬೇಕು. ನಮಗೆ ಅವನನ್ನು ಓಡಿಸಿ ಸಿಂಹಾಸನವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹೀಗೆ ಧೈರ್ಯದಿಂದ ಸಿಂಹಾಸನವನ್ನೇರಿ ಕುಳಿತ ದೇವಪುರುಷನು ಯಾರು ಎಂಬ ಪ್ರಶ್ನೆಯನ್ನು ಬಗೆಹರಿಸಲು ವಿರಾಟನಿಗೆ ಆಗಲಿಲ್ಲ. ಆ ದೇವನು ಯಾರಿರಬಹುದು ಎಂದು ಚಿಂತಿಸಿದ.
ಪದಾರ್ಥ (ಕ.ಗ.ಪ)
ದಿವಿಜರ ರಾಯ-ದೇವೇಂದ್ರ, ದೇವರು (ಅಧಿಕಾರಿಗಳು ಮಹಾರಾಜನನ್ನು ಸಂಬೋಧಿಸುವ ರೀತಿ ಇದು) (ವಿರಾಟ) = ನೀವು, ಕಾಯಿ-ಕಾಪಾಡು, ಅಸದಳ-ಅಸಾಧ್ಯ , ನಿರ್ದಾಯ-ಖಚಿತವಾಗಿ, ನಿರ್ಜರರಾಯ-ಆ ದೇವತೆಗಳ ಒಡೆಯ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಈ ರೀತಿ ಇಲ್ಲ. ಕಂಚುಕಿ ಬಂದು ವಿರಾಟನಿಗೆ ಹೇಳುವ ಸುದ್ದಿ ಇಲ್ಲ. ವಿರಾಟನೇ ಎಂದಿನಂತೆ ರಾಜಸಭೆಗೆಂದು ಬಂದು ನೋಡಿದ ದೃಶ್ಯ ಅಲ್ಲಿದೆ. ಅಷ್ಟೇ ಅಲ್ಲ. ಅವರನ್ನೆಲ್ಲ ಗುರುತಿಸಿಯೂ ಇದ್ದಾನೆ. ಕಂಕಭಟ್ಟನ ಮೇಲೆ ರೇಗುತ್ತಾ “ನಿನ್ನನ್ನು ನಾನು ಸಭಾಸ್ತಾರನನ್ನಾಗಿ ನೇಮಿಸಿದ್ದೆ ಅಲ್ಲವೆ ? ಚೆನ್ನಾಗಿ ಅಲಂಕರಿಸಿಕೊಂಡು ಸಿಂಹಾಸನದ ಮೇಲೆ ಕುಳಿತಿದ್ದೀಯಲ್ಲ” ಎನ್ನುತ್ತಾನೆ.
ಕುಮಾರವ್ಯಾಸನು ಕಾವ್ಯದ ಉದ್ದಕ್ಕೂ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿರುವುದಕ್ಕೆ ಅವನು ನೋಡಿರಬಹುದಾದ ಕನ್ನಡ ಮರಾಠಿ ನಾಟಕಗಳು, ಯಕ್ಷಗಾನಗಳು, ಕೇಳಿದ ಹರಿಕಥೆಗಳು ಕಾರಣವಿರಬಹುದು.
ಮೂಲ ...{Loading}...
ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ ॥8॥
೦೦೯ ಕರೆಸಿಕೊಣ್ಡು ಪುರೋಹಿತನನು ...{Loading}...
ಕರೆಸಿಕೊಂಡು ಪುರೋಹಿತನನು
ತ್ತರನನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
9 ವಿರಾಟನು ಆಸ್ಥಾನದ ಪುರೋಹಿತರನ್ನು ಮಗ ಉತ್ತರ ಕುಮಾರನನ್ನು ಎಲ್ಲ ಮಂತ್ರಿಗಳನ್ನು ತನ್ನ ಅರಮನೆಗೆ ಬರಹೇಳಿ, ಎಲ್ಲರೊಂದಿಗೆ ಓಲಗ ಶಾಲೆಗೆ ಬಂದ. ಕರಗಿ ಸೂಸಿದ ಚಂದ್ರ ಬಿಂಬದ ಕಾಂತಿಯ ಅಲೆಗಳಂತೆ ಅನೇಕ ಬಗೆಯ ಆಭರಣ ಮುತ್ತುಗಳ ಕಾಂತಿ ಅವನಿಗೆ ದೂರದಿಂದಲೇ ಕಾಣಿಸಿತು.
ಪದಾರ್ಥ (ಕ.ಗ.ಪ)
ಪುರೋಹಿತ-ರಾಜಪುರೋಹಿತ, ಸಲಹೆಗಾರನಾದ ಸಚಿವ, ಕರಗಿ ಸೂಸಿದ ಚಂದ್ರಬಿಂಬದ ಕಿರಣ ಲಹರಿ-ಕರಗಿ ಹೊರಸೂಸಿದ, ಬೆಳುದಿಂಗಳಿನ ಕಾಂತಿಯ ಅಲೆ, ಮುಕ್ತಾ ಪ್ರಭೆ-ಮುತ್ತಿನ ಕಾಂತಿ
ಮೂಲ ...{Loading}...
ಕರೆಸಿಕೊಂಡು ಪುರೋಹಿತನನು
ತ್ತರನನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ ॥9॥
೦೧೦ ಹರನ ನಾಲುಕು ...{Loading}...
ಹರನ ನಾಲುಕು ಮುಖದ ಮಧ್ಯ
ಸ್ಫುರಿತದೀಶಾನದ ವೊಲಾ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿ ರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಶ್ವರನ ಇತರ ನಾಲ್ಕು ಮುಖಗಳ ಮಧ್ಯೆ ಹೊಳೆಯುವ ಈಶಾನ ಮುಖದಂತೆ ನಾಲ್ವರು ಸೋದರರ ಮಧ್ಯದಲ್ಲಿ ಮೆರೆಯುವ ಯುಧಿಷ್ಠಿರನನ್ನು ವಿರಾಟನು ಕಂಡ. ಅವನ ಎಡಕ್ಕೆ ರಾಣಿ ! ಅವಳು ವಿವಿಧ ಆಭರಣಗಳ ರಾಶಿಯಲ್ಲಿ ಕಣ್ಣು ಕೋರೈಸುವಂತಿದ್ದಳು. ಉಳಿದ ನಾಲ್ವರೂ ಆಭರಣಗಳಿಂದ ಶೋಭಿತರಾಗಿದ್ದರು. ವಿರಾಟನಿಗೆ ಇವರಾರೆಂಬುದೇ ತಿಳಿಯದಂತಾಗಿತ್ತು.
ಪದಾರ್ಥ (ಕ.ಗ.ಪ)
ಈಶಾನ-ಶಿವ, ಶಿವನ ಐದನೆಯ ಮುಖ (ನಾಲ್ವರು ಪಾಂಡವರು ಶಿವನ ನಾಲ್ಕು ಮುಖಗಳು. ಧರ್ಮರಾಯ ಈಶಾನನಂತೆ ಮಧ್ಯದಲ್ಲಿದ್ದ ಶಿವನ ಐದನೆಯ ಮುಖ) ಸ್ಫುರಿತ-ಹೊಳೆಯುವ, ಚತುಷ್ಟಯ-ನಾಲ್ವರು, ವಾಮ-ಎಡಭಾಗ, ಹೊದರಿನ ಹೊರಳಿ-(ಆಭರಣಗಳ) ಗುಂಪಿನ ಕಾಂತಿ.
ಪಾಠಾನ್ತರ (ಕ.ಗ.ಪ)
ಸ್ಫುರಿತದೀಶಾನನದೊಲಿರೆ- ಸ್ಫುರಿತದೀಶಾನದವೊಲಾ
ಕುಮಾರವ್ಯಾಸ ಭಾರತ ಸಂಗ್ರಹ, ಎಂ.ವಿ.ಸೀ.
ಟಿಪ್ಪನೀ (ಕ.ಗ.ಪ)
ಶಿವನಿಗೆ ಐದು ಮುಖಗಳು ಅದಕ್ಕೆ ಅವನಿಗೆ ಪಂಚಾನನ, ಪಂಚಾಸ್ಯ ಎಂಬ ಹೆಸರುಗಳೂ ಇವೆ. ಪಂಚ ಪರಮೇಶ್ವರ ಎಂದು ಹೇಳುತ್ತಾರೆ.
- ಪರವ್ಯೂಹ, 2. ವಿಭವ, 3. ಅರ್ಚ, 4. ಅಂತರ್ಯಾಮಿ, 5. ಪರಮೇಶ್ವರ
ಶಿವನ ಪಂಚ ಮುಖಗಳು - ಸದ್ಯೋಜಾತ, 2. ವಾಮದೇವ, 3. ಅಘೋರ, 4 ತತ್ಪುರುಷ ಮುಖ, 5. ಈಶಾನ ಮುಖ
ಮೂಲ ...{Loading}...
ಹರನ ನಾಲುಕು ಮುಖದ ಮಧ್ಯ
ಸ್ಫುರಿತದೀಶಾನದ ವೊಲಾ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿ ರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ ॥10॥
೦೧೧ ಮೇಳವೇ ಫಡ ...{Loading}...
ಮೇಳವೇ ಫಡ ಮನದ ಮತ್ಸರ
ಕಾಲಿಡಲು ತೆರಹಿಲ್ಲ ಮನುಜರ
ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು
ಆಲಿಗಳು ಮೇಲಿಕ್ಕಲಮ್ಮವು
ಶೂಲಪಾಣಿಯ ಪರಮ ತೇಜದ
ಚೂಳಿಯೋ ಶಿವ ಶಿವ ಎನುತ್ತ ವಿರಾಟ ಬೆರಗಾದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನುಷ್ಯರಾಗಿದ್ದರೆ ಅವರ ಮೇಲೆ ವಿರಾಟನಿಗೆ ಮಾನವ ಸಹಜ ಮಾತ್ಸರ್ಯ ಬರಬೇಕಾಗಿತ್ತು. ಆದರೆ ಆ ಮಾತ್ಸರ್ಯ ಭಾವವೇ ಈಗ ಅವನಿಗಿಲ್ಲ. ಇವರು ಯಾರೋ ಮನುಷ್ಯರ ರೂಪದಲ್ಲಿ ನಿಂತಿರುವ ದೇವಲೋಕದವರು ! ವಿರಾಟನಿಗೆ ಕಣ್ಣಾಲಿಗಳನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಇವರು ಯಾರು ? ಶಿವನ ಪರಮ ತೇಜಸ್ಸಿನವರೇ ಆಗಿರಬಹುದೆ ? ಶಿವ ಶಿವ ! ಎನ್ನುತ್ತ ವಿರಾಟನು ಬೆರಗಾದ.
ಪದಾರ್ಥ (ಕ.ಗ.ಪ)
ಮೇಳವೇ ಫಡ !-ಯಾಕೋ ಹೊಂದಿಕೆಯಾಗುತ್ತಿಲ್ಲವಲ್ಲ ಎಂಬ ಬೆರಗಿನ ಭಾವ, ಮತ್ಸರ-ದ್ವೇಷ, ತೆರಹು-ಅವಕಾಶ, ನಿರ್ಜರ-ದೇವತೆ, ಆಲಿ-ಕಣ್ಣರೆಪ್ಪೆ, ಚೂಳಿ-ಆರಂಭ,
ಟಿಪ್ಪನೀ (ಕ.ಗ.ಪ)
ಮನುಜರ ಹೋಲುವ ನಿರ್ಜರ ಮಂಡಲೇಶ್ವರರು… ಮನುಷ್ಯರ ರೂಪವನ್ನು ಅನುಕರಿಸುತ್ತಿರುವ ನಟನಾ ಸಾಮಥ್ರ್ಯವುಳ್ಳ ದೇವಲೋಕದ ಮಂಡಲೇಶ್ವರರು ಇವರು
ಮೂಲ ...{Loading}...
ಮೇಳವೇ ಫಡ ಮನದ ಮತ್ಸರ
ಕಾಲಿಡಲು ತೆರಹಿಲ್ಲ ಮನುಜರ
ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು
ಆಲಿಗಳು ಮೇಲಿಕ್ಕಲಮ್ಮವು
ಶೂಲಪಾಣಿಯ ಪರಮ ತೇಜದ
ಚೂಳಿಯೋ ಶಿವ ಶಿವ ಎನುತ್ತ ವಿರಾಟ ಬೆರಗಾದ ॥11॥
೦೧೨ ವಲಲ ಕಙ್ಕ ...{Loading}...
ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಅವರ ಮುಖಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಇವರು ವಲಲ, ಕಂಕ, ಬೃಹನ್ನಳೆಯರ ರೂ¥ವನ್ನು ಹೋಲುತ್ತಾರೆ ಎಂದು ಊಹೆ ಮಾಡಿದರು. ಇನ್ನು ಕೆಲವರಿಗೆ ಇವರೆಲ್ಲ ನಿಜವಾಗಿ ಮನುಷ್ಯರೇ ಅಲ್ಲ. ದೇವತೆಗಳು ಎಂಬ ಭಾವನೆ. ಉಳಿದವರು “ಇವರು ಯಾರೆಂದು ಊಹಿಸಲು ಆಗುತ್ತಿಲ್ಲ” ಎಂದರು. ಈ ಜನರೆಲ್ಲ ಹೀಗೆ ದಿಕ್ಕು ತೋಚದೆ ಇದ್ದರು. ಆಗ ಆ ಜನಗಳನ್ನು ನೂಕಿಕೊಂಡು ಮುಂದೆ ಬಂದ ಉತ್ತರ ಕುಮಾರನು ಅಪ್ಪನ ಎದುರು ನಿಂತು ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ಮೈಸುಳಿವು-ರೂಪು, ಚಹರೆ, ಅರಿದು-ಅಸಾಧ್ಯ, ತಳವೆಳಗು-ತಲ್ಲಣ, ದಿಗ್ಭ್ರಮೆ
ಟಿಪ್ಪನೀ (ಕ.ಗ.ಪ)
ಆಸ್ಥಾನದ ಕೆಲವರಾದರೂ ಈ ರಾಜಪುತ್ರರು ಕಂಕ, ವಲಲ, ಬೃಹನ್ನಳೆಯರ ರೂಪು ಇವರಿಗಿದೆ ಎಂದು ಸರಿಯಾಗಿ ಊಹಿಸಿದ್ದಾರೆ ಆದರೆ ವಿರಾಟನಿಗೆ ಇದು ಗೊತ್ತಾಗುವುದಿಲ್ಲ. ಸಾರ್ವಜನಿಕ ಅಭಿಪ್ರಾಯಗಳು ಎಷ್ಟು ಬಗೆಯವಾಗಿರುತ್ತವೆಂಬುದಕ್ಕೆ ಇವರ ವಿಭಿನ್ನ ಹೇಳಿಕೆಗಳೇ ಸಾಕ್ಷಿ.
ಮೂಲ ...{Loading}...
ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ ॥12॥
೦೧೩ ತಾತ ಬಿನ್ನಹ ...{Loading}...
ತಾತ ಬಿನ್ನಹ ನಿನ್ನೆ ವೈರಿ
ವ್ರಾತವನು ಗೆಲಿದಾತನೀ ತೋ
ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು
ಈತ ನಕುಲನು ವಾಮದಲಿ ನಿಂ
ದಾತ ಸಹದೇವಾಂಕನನಿಬರಿ
ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಪ್ಪ ! ಕೇಳು, ನಿನ್ನೆಯ ಗೋಗ್ರಹಣ ಯುದ್ಧದಲ್ಲಿ ಕೌರವರನ್ನೆಲ್ಲ ಗೆದ್ದವನು ಈತ” ಹೀಗೆ ಹೇಳುವಾಗ ಅವನು ಅರ್ಜುನನ ಕಡೆ ಬೊಟ್ಟು ಮಾಡಿದ. ಅನಂತರ ಭೀಮನ ಕಡೆ ಕೈತೋರಿ ಈತನೇ ಕೀಚಕನನ್ನು ಕೊಂದವನು. ಹಾಗೆಯೇ ಈತ ನಕುಲ. ಎಡಭಾಗದಲ್ಲಿ ನಿಂತಿರುವಾತನೇ ಸಹದೇವ. ಇವನು ನೋಡಿ ಎಲ್ಲರಿಗಿಂತ ಹಿರಿಯನಾದ ಧರ್ಮರಾಯ” ಎಂದು ಉತ್ತರ ಎಲ್ಲರನ್ನೂ ತೋರಿಸಿದ.
ಪದಾರ್ಥ (ಕ.ಗ.ಪ)
ತಾತ-ತಂದೆ, ವೈರಿವ್ರಾತ-ಶತ್ರುಸಮೂಹ, ಈ ತೋರ್ಪಾತ-ಇಲ್ಲಿ ಕಾಣುವವನು, ಕೀಚಕಾಂತಕ-ಭೀಮ, ಕೀಚಕನ ಪಾಲಿಗೆ ಅಂತಕ-ಯಮನಾದವನು, ವಾಮ-ಎಡ, ಸಹದೇವಾಂಕ-ಸಹದೇವ ಎಂಬ ಅಂಕ-ಹೆಸರಿನವನು
ಮೂಲ ...{Loading}...
ತಾತ ಬಿನ್ನಹ ನಿನ್ನೆ ವೈರಿ
ವ್ರಾತವನು ಗೆಲಿದಾತನೀ ತೋ
ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು
ಈತ ನಕುಲನು ವಾಮದಲಿ ನಿಂ
ದಾತ ಸಹದೇವಾಂಕನನಿಬರಿ
ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ॥13॥
೦೧೪ ರಮಣಿಯೈವರಿಗೀಕೆ ಕೆಲದಲಿ ...{Loading}...
ರಮಣಿಯೈವರಿಗೀಕೆ ಕೆಲದಲಿ
ಕಮಲಮುಖಿಯನು ನೋಡು ತಾವಿವ
ರಮಳ ಗುಣ ಗಂಭೀರ ರಾಯರು ಪಾಂಡು ನಂದನರು
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ
ಮಮತೆಯಾಯ್ತಿನ್ನೇನು ನೃಪಪದ
ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು " ಈ ಐವರ ಪತ್ನಿಯಾಗಿರುವ ದ್ರೌಪದಿಯನ್ನು ಇಲ್ಲಿ ನೋಡು" ಎಂದು ಹೇಳಿ ಉಳಿದವರನ್ನು ತೋರಿಸಿ ಇವರೆಲ್ಲ ಪವಿತ್ರವಾದ ಗಂಭೀರ ಗುಣವುಳ್ಳ ರಾಜಪುತ್ರರು, ಪಾಂಡುವಿನ ಮಕ್ಕಳು. ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆ ಲಭಿಸಿದೆ. ಇನ್ನೇಕೆ ತಡ ! ಆ ರಾಜ ಧರ್ಮರಾಯನ ಪಾದಕಮಲಕ್ಕೆ ಎರಗೋಣ, ಎರಗಿ ಧನ್ಯರಾಗೋಣ, ಬಾ" ಎಂದ.
ಪದಾರ್ಥ (ಕ.ಗ.ಪ)
ನೃಪಪದ ಕಮಲ-ರಾಜ ಧರ್ಮರಾಯನ ಪಾದಕಮಲ, ಅಹೆವು-ಆಗುತ್ತೇವೆ, ಆಗೋಣ
ಮೂಲ ...{Loading}...
ರಮಣಿಯೈವರಿಗೀಕೆ ಕೆಲದಲಿ
ಕಮಲಮುಖಿಯನು ನೋಡು ತಾವಿವ
ರಮಳ ಗುಣ ಗಂಭೀರ ರಾಯರು ಪಾಂಡು ನಂದನರು
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ
ಮಮತೆಯಾಯ್ತಿನ್ನೇನು ನೃಪಪದ
ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ॥14॥
೦೧೫ ಈತನೇ ಧರ್ಮಜನು ...{Loading}...
ಈತನೇ ಧರ್ಮಜನು ದಿಟ ತಾ
ನೀತನೇ ಪವನಜನು ನಿಶ್ಚಯ
ವೀತನೇ ಫಲುಗುಣನು ಮಾದ್ರೀತನುಜರೇ ಇವರು
ಈ ತಳೋದರಿ ದ್ರುಪದ ಸುತೆಯೇ
ಕೌತುಕವಲೇ ಭುವನಜನ ವಿ
ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನು “ಇವನು ಧರ್ಮರಾಯ ಎಂಬುದು ನಿಜ. ಈತ ಭೀಮ, ಈತ ಅರ್ಜುನ ಇವರಿಬ್ಬರೂ ಮಾದ್ರಿಯ ಮಕ್ಕಳು. ಎಲ್ಲ ನಿಜ. ಈಕೆ ದ್ರೌಪದಿ ಎಂಬುದನ್ನೂ ಒಪ್ಪುತ್ತೇನೆ ಆದರೆ ಇದು ಆಶ್ಚರ್ಯಕರ ! ಈ ಲೋಕ ಪ್ರಸಿದ್ಧರಾದ ಆರು ಮಂದಿ ಎಲ್ಲಿಂದ ಮೂಡಿ ಬಂದರು” ಇಲ್ಲಿಗೆ ಹೇಗೆ ಬಂದರು ?" ಎಂದ.
ಪದಾರ್ಥ (ಕ.ಗ.ಪ)
ಪವನಜ-ಭೀಮ, ತನುಜ-ಮಗ, ತಳೋದರಿ-ಸುಂದರಿ, ಹೆಂಗಸು, ಭುವನಜನವಿಖ್ಯಾತ-ಲೋಕಪ್ರಸಿದ್ಧ
ಟಿಪ್ಪನೀ (ಕ.ಗ.ಪ)
ಇಲ್ಲಿ ಉತ್ತರನು ಧರ್ಮರಾಯನ ಪರಿಚಯ ಮಾಡಿಕೊಡುತ್ತಾನೆ. ಆದರೆ ಮೂಲದಲ್ಲಿ ಆ ಕೆಲಸ ಮಾಡುವವನು ಅರ್ಜುನ. “ಧರ್ಮರಾಯನಿಗೆ ಗೊತ್ತಿರುವ ಅಸ್ತ್ರಗಳನ್ನು ಬೇರೆ ಯಾರೂ ತಿಳಿದಿಲ್ಲ” ಎಂದು ಅಣ್ಣನ ಪರಾಕ್ರಮದ ಪ್ರಶಂಸೆ ಮಾಡಿದ್ದಾನೆ.
ವಿರಾಟನಿಗೆ ಕಂಕಭಟ್ಟ, ವಲಲ, ಬೃಹನ್ನಳೆ, ಸೈರಂಧ್ರಿ ಮೊದಲಾದವರೇ ಈಗ ಪಾಂಡವರಾಗಿ, ದ್ರೌಪದಿಯಾಗಿ ನಿಂತಿದ್ದಾರೆ ಎಂಬುದು ಹೊಳೆಯಲಿಲ್ಲ ಆದ್ದರಿಂದ ಹೀಗೆ ಬೆರಗಿನ ಪ್ರಶ್ನೆಗಳನ್ನು ಹಾಕುತ್ತಾನೆ.
ಮೂಲ ...{Loading}...
ಈತನೇ ಧರ್ಮಜನು ದಿಟ ತಾ
ನೀತನೇ ಪವನಜನು ನಿಶ್ಚಯ
ವೀತನೇ ಫಲುಗುಣನು ಮಾದ್ರೀತನುಜರೇ ಇವರು
ಈ ತಳೋದರಿ ದ್ರುಪದ ಸುತೆಯೇ
ಕೌತುಕವಲೇ ಭುವನಜನ ವಿ
ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ॥15॥
೦೧೬ ವರುಷವೊನ್ದಜ್ಞಾತ ವಾಸವ ...{Loading}...
ವರುಷವೊಂದಜ್ಞಾತ ವಾಸವ
ನಿರದೆ ನೂಕಿದರಿಲ್ಲಿ ಬಳಕೆಯ
ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ
ಮರುಳನಂತಿರೆ ಜಗಕೆ ತೋರನೆ
ಪರಮ ತತ್ವಜ್ಞಾನಿ ನಮ್ಮೀ
ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು “ಈ ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ನಮ್ಮ ಊರಿನಲ್ಲಿ ಕಳೆದರು. ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡಿದ್ದರು. ಆದರೆ ಅವರ ಗಾಂಭೀರ್ಯವೇ ನಡವಳಿಕೆಯೇ ಬೇರೆ ಬಗೆಯದಾಗಿತ್ತು. ಪರಮ ತತ್ತ್ವಜ್ಞಾನಿಯಾದವನು ತನ್ನ ಸುಳಿವು ಬಿಟ್ಟು ಕೊಡದೆ ನೋಡುವವರಿಗೆ ಮಹಾ ಮರುಳನಂತೆ ಕಾಣಿಸಿಕೊಳ್ಳುವುದಿಲ್ಲವೆ ? ಹಾಗೆ ಇವರು ! ನಾವು ದೊರೆತನಕ್ಕೆ ಪುಣ್ಯದ ಫಲ ನಮಗೆ ಸಿಕ್ಕಿದೆ. ನಡೆ” ಎಂದ.
ಪದಾರ್ಥ (ಕ.ಗ.ಪ)
ಬಳಕೆಯ ಹೊರೆಯ ಹೆಸರು-ರೂಢಿಯಲ್ಲಿ ಇಟ್ಟುಕೊಂಡ ಹೆಸರು, ವ್ಯವಹಾರ ನಾಮ
ಮೂಲ ...{Loading}...
ವರುಷವೊಂದಜ್ಞಾತ ವಾಸವ
ನಿರದೆ ನೂಕಿದರಿಲ್ಲಿ ಬಳಕೆಯ
ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ
ಮರುಳನಂತಿರೆ ಜಗಕೆ ತೋರನೆ
ಪರಮ ತತ್ವಜ್ಞಾನಿ ನಮ್ಮೀ
ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ॥16॥
೦೧೭ ದರುಶನಕೆ ಮಣಿ ...{Loading}...
ದರುಶನಕೆ ಮಣಿ ರತುನ ಕನಕವ
ತರಿಸಿ ಮುದದಲಿ ಮುಳುಗಿ ನಿಜಪರಿ
ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ
ವರನೃಪಾಲ ತ್ರಾಹಿ ಭುವನೇ
ಶ್ವರ ಪರಿತ್ರಾಯಸ್ವ ಕರುಣಿಸು
ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ದರ್ಶನ ತೆಗೆದುಕೊಳ್ಳಲು ವಜ್ರ, ರತ್ನ, ಚಿನ್ನಗಳನ್ನು ತರಿಸಿಕೊಂಡು ಸಂತೋಷದಲ್ಲಿ ಮುಳುಗಿ ತನ್ನ ಪರಿವಾರ ಸಮೇತ ಧರ್ಮರಾಯನಿಗೆ ಕಾಣಿಕೆಯೊಪ್ಪಿಸಿ ಕೈಮುಗಿದ. ಹರ್ಷದಿಂದ ಧರ್ಮರಾಯನ ಕಾಲುಗಳಿಗೆ ನಮಸ್ಕರಿಸುತ್ತ “ಮಹಾರಾಜ, ಕಾಪಾಡು ! ಭುವನೇಶ್ವರನೇ ನಮ್ಮನ್ನು ಕಾಪಾಡು, ಕರುಣಿಸು, ಕರುಣಿಸು, ಕೃಪೆ ಮಾಡು’ ಎಂದು ಕೇಳಿಕೊಂಡ.
ಪದಾರ್ಥ (ಕ.ಗ.ಪ)
ಮುದ-ಸಂತೋಷ, ಪರಿಕರ-ಪರಿವಾರದವರು, ವರ-ಶ್ರೇಷ್ಠ, ತ್ರಾಹಿ-ಕಾಪಾಡು, ಪರಿತ್ರಾಯಸ್ವ-ಕಾಪಾಡು, ಅಂಘ್ರಿ-ಪಾದ,
ಮೂಲ ...{Loading}...
ದರುಶನಕೆ ಮಣಿ ರತುನ ಕನಕವ
ತರಿಸಿ ಮುದದಲಿ ಮುಳುಗಿ ನಿಜಪರಿ
ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ
ವರನೃಪಾಲ ತ್ರಾಹಿ ಭುವನೇ
ಶ್ವರ ಪರಿತ್ರಾಯಸ್ವ ಕರುಣಿಸು
ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ॥17॥
೦೧೮ ಬಗೆದೆನಪರಾಧವನು ಕರುಣಾ ...{Loading}...
ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ
ಮಿಗೆ ಭಕುತಿ ಭಾವದಲಿ ನಿಜ ಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಭು! ನಾನು ನಿಮಗೆ ಅಪರಾಧ ಮಾಡಿದ್ದೇನೆ. ಕರುಣಾಶಾಲಿಗಳ ಒಡೆಯನಾದ ನೀನು ಅದನ್ನೆಲ್ಲ ಮರೆ, ನನ್ನ ಈ ತಲೆಯನ್ನು ನಿನ್ನ ಪಾದಗಳ ಸೇವಕ ಎಂದು ತಿಳಿ. ನನ್ನನ್ನು ಕಾಪಾಡು” ಎಂದು ಹೇಳುತ್ತ ತನ್ನ ಮಂತ್ರಿಗಳು ಮಕ್ಕಳು ಸಹಿತ ವಿರಾಟನು ಧರ್ಮರಾಯನಿಗೆ ಭಕ್ತಿ ಶ್ರದ್ಧೆಗಳ ಭಾವದಿಂದ ನಮಸ್ಕರಿಸಿದ.
ಪದಾರ್ಥ (ಕ.ಗ.ಪ)
ಬಲ್ಲಹ-ವಲ್ಲಭ, ಒಡೆಯ, ಬಂಟ-ಸೇವಕ, ಅಂಘ್ರಿ-ಪಾದ
ಟಿಪ್ಪನೀ (ಕ.ಗ.ಪ)
ಪಂಪಭಾರತದಲ್ಲಿ ಅರ್ಜುನನು ಯುದ್ಧದಲ್ಲಿ ಗೆದ್ದು ಬಂದ ಕೂಡಲೇ ವಿರಾಟನು ಪಾಂಡವರನ್ನೆಲ್ಲ ಕರೆಸಿ ಸತ್ಕರಿಸುತ್ತಾನೆ.
“ಇರದುೞÉದಾವ ಮಂಡಲದೊಳಂ ನೃಪ ನೀಂ ದಯೆಯಿಂದಮಿಲ್ಲಿ ಬಂ
ದಿರೆ ದೊರೆವೆತ್ತುದೆನ್ನ ಮೆಱಿವಾಳ್ವೆಸನಂ” (ಅಯ್ಯಾ ಧರ್ಮರಾಯ ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದಿದ್ದೀರಿ. ಇದರಿಂದ ನನ್ನ ದೊರೆತನಕ್ಕೆ ಕೋಡು ಮೂಡಿದೆ) ಎನ್ನುತ್ತಾನೆ.
ಮೂಲ ...{Loading}...
ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ
ಮಿಗೆ ಭಕುತಿ ಭಾವದಲಿ ನಿಜ ಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ॥18॥
೦೧೯ ಆ ಸುದೇಷ್ಣೆ ...{Loading}...
ಆ ಸುದೇಷ್ಣೆ ಕುಮಾರಿಯೊಡನೆ ವಿ
ಳಾಸಿನೀಜನ ಸಹಿತ ರಾಣೀ
ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು
ಆ ಸಕಲ ಪರಿವಾರ ಪುರಜನ
ದೇಶಜನ ಕಾಣಿಕೆಯನಿತ್ತು ಮ
ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಅಂತಃಪುರದ ಕಡೆಯಿಂದ ಸುದೇಷ್ಣೆಯು ತನ್ನ ಮಗಳು, ವಿಲಾಸಿನೀಜನರೊಡನೆ ಬಂದು ದ್ರೌಪದಿಗೆ ಕಾಣಿಕೆಯಿತ್ತು ನಮಸ್ಕರಿಸಿದಳು. ಪರಿವಾರದವರು, ಪುರಜನ, ಧರ್ಮರಾಯನಿಗೆ ಸಂತೋಷದಿಂದ ನಮಸ್ಕರಿಸಿ ಕಾಣಿಕೆಯನ್ನಿತ್ತರು.
ಪದಾರ್ಥ (ಕ.ಗ.ಪ)
ವಿಳಾಸಿನೀಜನ-ಅರಮನೆಯ ಸುಂದರಿಯರು, ಪೊರಮಟ್ಟು-ಹೊರಟು, ಮಹೀಶ-ರಾಜ
ಟಿಪ್ಪನೀ (ಕ.ಗ.ಪ)
ಇಲ್ಲಿ ರಾಣೀವಾಸವೆಂದರೆ ದ್ರೌಪದಿ. ಧರ್ಮರಾಯ ಸೋದರರೊಡನೆ ಸಿಂಹಾಸನದ ಮೆಲೆ ಕುಳಿತಗಲೇ ದ್ರ
ಔಪದಿ ರಾಣಿಯಾದಳು. ಅಲ್ಲಿಯವರೆಗೆ ರಾಣಿಯಾಗಿದ್ದವಳು ಈಗ ಕೇವಲ ಸುದೇಷ್ಣೆಯಾಗಿದ್ದಳೆ.
ಮೂಲ ...{Loading}...
ಆ ಸುದೇಷ್ಣೆ ಕುಮಾರಿಯೊಡನೆ ವಿ
ಳಾಸಿನೀಜನ ಸಹಿತ ರಾಣೀ
ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು
ಆ ಸಕಲ ಪರಿವಾರ ಪುರಜನ
ದೇಶಜನ ಕಾಣಿಕೆಯನಿತ್ತು ಮ
ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ॥19॥
೦೨೦ ಮುಗುಳು ನಗೆಯಲಿ ...{Loading}...
ಮುಗುಳು ನಗೆಯಲಿ ಭೀಮ ಪಾರ್ಥರ
ಮೊಗವ ನೋಡಿದನವನಿಪತಿ ಕೈ ಮು
ಗಿದು ತಲೆವಾಗಿದರು ತಮ್ಮಂದಿರು ಮಹೀಪತಿಗೆ
ತೆಗೆಸಿದರು ಕಾಣಿಕೆಯನಾ ಮಂ
ತ್ರಿಗಳನಾ ಪರಿವಾರವನು ದೃಗು
ಯುಗದ ಕರುಣಾರಸದಲನಿಬರ ಹೊರೆದು ಮನ್ನಿಸಿದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೆಲ್ಲರೂ ಕಾಣಿಕೆಯಿತ್ತಾಗ ಧರ್ಮರಾಯನು ಪ್ರಸನ್ನ ಮುಖದಿಂದ ಭೀಮಾರ್ಜುನರ ಮುಖವನ್ನು ನೋಡಿದ. ಆಗ ತಮ್ಮಂದಿರು ತಾವೂ ಅವನಿಗೆ ತಲೆಬಾಗಿ ಕೈಮುಗಿದರು. ಅನಂತರ ಜನಗಳು ಕೊಟ್ಟ ಕಾಣಿಕೆಗಳನ್ನೆಲ್ಲ ಸ್ವೀಕರಿಸಿದರು. ಧರ್ಮರಾಯನು ಆ ಮಂತ್ರಿವರ್ಗ ಪರಿವಾರವರ್ಗ ಎಲ್ಲರನ್ನು ತುಂಬ ಕರುಣೆಯ ದೃಷ್ಟಿಯಿಂದ, ಕಾಪಾಡುವ ಭರವಸೆಯ ದೃಷ್ಟಿಯಿಂದ ನೋಡಿದ.
ಪದಾರ್ಥ (ಕ.ಗ.ಪ)
ಅವನಿಪತಿ-ಮಹೀಪತಿ-ರಾಜ, ದೃಗುಯುಗ-ಎರಡು ಕಣ್ಣು, ಅನಿಬರ-ಎಲ್ಲರನ್ನು, ಹೊರೆದು-ಕಾಪಾಡಿ.
ಮೂಲ ...{Loading}...
ಮುಗುಳು ನಗೆಯಲಿ ಭೀಮ ಪಾರ್ಥರ
ಮೊಗವ ನೋಡಿದನವನಿಪತಿ ಕೈ ಮು
ಗಿದು ತಲೆವಾಗಿದರು ತಮ್ಮಂದಿರು ಮಹೀಪತಿಗೆ
ತೆಗೆಸಿದರು ಕಾಣಿಕೆಯನಾ ಮಂ
ತ್ರಿಗಳನಾ ಪರಿವಾರವನು ದೃಗು
ಯುಗದ ಕರುಣಾರಸದಲನಿಬರ ಹೊರೆದು ಮನ್ನಿಸಿದ ॥20॥
೦೨೧ ಶಿರವನೆತ್ತಿ ವಿರಾಟ ...{Loading}...
ಶಿರವನೆತ್ತಿ ವಿರಾಟ ಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಧರ್ಮರಾಯನು ವಿರಾಟನ ಬಾಗಿದ ತಲೆಯನ್ನು ಪ್ರೀತಿಯಿಂದ ಮೇಲೆತ್ತಿ ಕರೆದು ತನ್ನ ಬಳಿಯೇ ಕುಳ್ಳಿರಿಸಲು ಹೋದರೆ ವಿರಾಟನು ಒಲ್ಲೆನೆಂದು ಪಕ್ಕಕ್ಕೆ ತಿರುಗಿ ಇನ್ನೊಂದು ಪೀಠದಲ್ಲಿ ಕುಳಿತುಕೊಂಡ. ಅನಂತರ “ಪ್ರಭು ! ನನ್ನ ಪುಣ್ಯ ! ಮಹಾರಾಜನ ದರ್ಶನವಾಯಿತು. ನನಗಿಂತ ಲೋಕದಲ್ಲಿ ಧನ್ಯರು ಬೇರೆ ಯಾರು, ನನಗೆ ಸರಿ ಯಾರು ?” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಒಡೆ ಮುರುಚು-ಪಕ್ಕಕ್ಕೆ ತಿರುಗು, ಗದ್ದುಗೆ-ಸಿಂಹಾಸನ, ಸುಕೃತ-ಪುಣ್ಯ
ಮೂಲ ...{Loading}...
ಶಿರವನೆತ್ತಿ ವಿರಾಟ ಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ ॥21॥
೦೨೨ ದೇಶ ನಿಮ್ಮದು ...{Loading}...
ದೇಶ ನಿಮ್ಮದು ನಗರ ಹೆಚ್ಚಿದ
ಕೋಶ ನಿಮ್ಮದು ನನ್ನ ಜೀವ ವಿ
ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ
ಈ ಸಮಂಜಸ ದಿವಸದಲಿ ಸಿಂ
ಹಾಸನದಲಭಿಷೇಕವನು ಭೂ
ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಪ್ರಭು ! ಈ ಸಮಸ್ತ ದೇಶವೂ ನಿಮ್ಮದೇ ನನ್ನ ನಗರ, ತುಂಬಿಕೊಂಡಿರುವ ಖಜಾನೆ ಎಲ್ಲ ನಿಮ್ಮದೇ. ಅಷ್ಟೇ ಏಕೆ ? ನನ್ನ ಜೀವ ವಿಲಾಸವೂ ನಿಮ್ಮದೇ. ಈಗ ನನ್ನದೊಂದು ಪ್ರಾರ್ಥನೆ. ಏನೆಂದರೆ ನಿಮ್ಮನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ವಿಧಿಪೂರ್ವಕವಾಗಿ ಅಭಿಷೇಕಮಾಡಲು ಅವಕಾಶ ಮಾಡಿಕೊಡಿ” ಎಂದು ವಿರಾಟನು ಯುಧಿಷ್ಠಿರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹೆಚ್ಚಿದ ಕೋಶ-ತುಂಬಿದ ಖಜಾನೆ, ಜೀವವಿಳಾಸ-ಬದುಕಿನ ಶೋಭೆ, ಸಮಂಜಸ-ತೃಪ್ತಿಕರವಾದ, ಅನುಕೂಲಕರವಾದ
ಮೂಲ ...{Loading}...
ದೇಶ ನಿಮ್ಮದು ನಗರ ಹೆಚ್ಚಿದ
ಕೋಶ ನಿಮ್ಮದು ನನ್ನ ಜೀವ ವಿ
ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ
ಈ ಸಮಂಜಸ ದಿವಸದಲಿ ಸಿಂ
ಹಾಸನದಲಭಿಷೇಕವನು ಭೂ
ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ॥22॥
೦೨೩ ಎನಲು ನಗುತೆನ್ದನು ...{Loading}...
ಎನಲು ನಗುತೆಂದನು ಮಹೀಪತಿ
ವಿನಯ ಮಧುರ ರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ತಾನುಪಚಾರ ನಮಗೇಕೆಂದನಾ ಭೂಪ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಸಂತೋಷದಿಂದ “ವಿರಾಟರಾಜ ನಿನ್ನ ವಿನಯದಿಂದ, ಮಧುರ ರಸಾಭಿಷೇಕದಿಂದ ನಾನು ತೃಪ್ತನಾಗಿದ್ದೇನೆ. ಮತ್ತೆ ಅಭಿಷೇಕ ಮಾಡುವುದು ಎರಡನೆಯ ಅಭಿಷೇಕದಂತೆ ಆದೀತು ಅದರ ಅಗತ್ಯವಿಲ್ಲ. ಈ ಜನ ಎಲ್ಲ ನನ್ನವರೇ. ನೀನು ಕೂಡ ನಮ್ಮವನೇ ಸರಿ. ಈ ರಾಜ್ಯವೇ ನಮ್ಮದು ಎಂದು ಜ್ಞಾಪಿಸಿದರೆ ಅದು ಉಪಚಾರದ ಮಾತಾಗುತ್ತದೆ. ನಮಗೆ ಅವೆಲ್ಲ ಅಗತ್ಯವಿಲ್ಲ”
ಪದಾರ್ಥ (ಕ.ಗ.ಪ)
ಧರಿತ್ರಿ-ಭೂಮಿ, ರಾಜ್ಯ, ಮಹೀಪತಿ-ಅರಸ
ಮೂಲ ...{Loading}...
ಎನಲು ನಗುತೆಂದನು ಮಹೀಪತಿ
ವಿನಯ ಮಧುರ ರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ತಾನುಪಚಾರ ನಮಗೇಕೆಂದನಾ ಭೂಪ ॥23॥
೦೨೪ ನೊನ್ದವರು ಭೀಮಾರ್ಜುನರು ...{Loading}...
ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವವ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ
ಕೊಂದು ಕಳದಲಿ ಮತ್ತೆ ಗಜ ಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾನೇ ಬಲ್ಲರೆಂದನು ಧರ್ಮನಂದನನು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿರಾಟ, ಶತ್ರು ಕೌರವನು ನಮ್ಮನ್ನು ವನವಾಸಕ್ಕೆಂದು ಕಳಿಸಿದ ದಿನದಿಂದ ಕಾಡು ಹೊಕ್ಕು ನೊಂದಿರುವ ಭೀಮ ಅರ್ಜುನರಿಗೆ ದ್ವೇಷ ಸೇಡುಗಳ ಭಾವನೆ ಮಾಸಿಲ್ಲ. ಆ ಕೌರವಾದಿಗಳನ್ನು ಯುದ್ಧದಲ್ಲಿ ಕೊಂದು ಮತ್ತೆ ಹಸ್ತಿನಾವತಿಗೆ ಹೋಗುವ ತವಕದಿಂದ ಅವರು ತಪಿಸುತ್ತಿದ್ದಾರೆ” ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಹಳುವ-ಕಾಡು, ಕಂದು ಕಸರಿಕೆ-ಕುಂದು ಕೊರತೆ, ದುಃಖ ನೋವು, ಕಳ-ಯುದ್ಧ (ರಂಗ) ಗಜಪುರಿ-ಹಸ್ತಿನಾವತಿ, ಗಮಿಸು-ಹೋಗು, ತವಕಿಗ-ಕಾತರಪಡುತ್ತಿರುವವ.
ಮೂಲ ...{Loading}...
ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವವ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ
ಕೊಂದು ಕಳದಲಿ ಮತ್ತೆ ಗಜ ಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾನೇ ಬಲ್ಲರೆಂದನು ಧರ್ಮನಂದನನು ॥24॥
೦೨೫ ಎನ್ದನುತ್ತರನರಸನಙ್ಘ್ರಿಯೊ ...{Loading}...
ಎಂದನುತ್ತರನರಸನಂಘ್ರಿಯೊ
ಳಂದು ಮಕುಟವ ಚಾಚಿ ಬಿನ್ನಹ
ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ
ಎಂದಡೇಳೇಳೆಂದು ನಸು ನಗೆ
ಯಿಂದ ಪಾರ್ಥನ ನೋಡೆ ಕೈ ಮುಗಿ
ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು ಧರ್ಮರಾಯನ ಪಾದಕ್ಕೆ ನಮಿಸಿ ಹೇಳಿದ. “ಪ್ರಭು ! ಒಂದು ಪ್ರಾರ್ಥನೆ. ಅರ್ಜುನನಿಗೆ ನನ್ನ ತಂಗಿ ಉತ್ತರೆಯನ್ನು ಕೊಟ್ಟು ಮದುವೆ ಮಾಡಲು ಅಪ್ಪಣೆಕೊಡಿ”. ಧರ್ಮರಾಯನು ಉತ್ತರನನ್ನು ಮೇಲಕ್ಕೆ ಎಬ್ಬಿಸಿ ನಸುನಗುತ್ತ ಅರ್ಜುನನ ಕಡೆನೋಡಿದ. ಅರ್ಜುನನಿಗೆ ಅರ್ಥವಾಯಿತು ಅವನು ಅಣ್ಣನಿಗೆ ನಮಸ್ಕರಿಸಿ ತನ್ನ ನಿರ್ಧಾರವನ್ನು ತಿಳಿಸಿದ.
ಪದಾರ್ಥ (ಕ.ಗ.ಪ)
ಅಂಘ್ರಿ-ಪಾದ, ನೇಮ-ಅಪ್ಪಣೆ
ಟಿಪ್ಪನೀ (ಕ.ಗ.ಪ)
- “ಉತ್ತರಾಂ ಪ್ರತಿಗೃಹ್ಣಾತು ಸವ್ಯಸಾಚೀ ಧನಂಜಯ
ಅಯಂ ಹ್ಯೌಪಯಿಕೋ ಭರ್ತಾ ತಸ್ಯಾ ಃ ಪುರುಷಸತ್ತಮ”
(“ಈ ಧನಂಜಯನು ಉತ್ತರೆಯನ್ನು ಸ್ವೀಕರಿಸಲಿ ಅವನೇ ಆಕೆಗೆ ತಕ್ಕ ಪತಿ”) - ಇಲ್ಲಿ ಉತ್ತರನು ಈ ಮದುವೆಯ ಸಲಹೆ ಕೊಡುತ್ತಿದ್ದಾನೆ. ಆದರೆ ಮೂಲದಲ್ಲಿ ಈ ವಿಷಯವನ್ನು ಎತ್ತುವವನು ವಿರಾಟ.
ಮೂಲ ...{Loading}...
ಎಂದನುತ್ತರನರಸನಂಘ್ರಿಯೊ
ಳಂದು ಮಕುಟವ ಚಾಚಿ ಬಿನ್ನಹ
ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ
ಎಂದಡೇಳೇಳೆಂದು ನಸು ನಗೆ
ಯಿಂದ ಪಾರ್ಥನ ನೋಡೆ ಕೈ ಮುಗಿ
ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ॥25॥
೦೨೬ ವರುಷವಿವಳಲಿ ನಾಟ್ಯವಿದ್ಯೆಯ ...{Loading}...
ವರುಷವಿವಳಲಿ ನಾಟ್ಯವಿದ್ಯೆಯ
ಪರುಟವಿಸಿದೆನು ತಂದೆಯಂತೀ
ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ
ಗುರುತನದ ಗರುವಾಯಿಯೆತ್ತಲು
ಅರಸಿಯೆಂಬುದಿದಾವ ಮತವೀ
ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಣ್ಣ ನಾನು ಒಂದು ವರ್ಷ ಈ ಕುಮಾರಿಗೆ ನಾಟ್ಯಶಾಸ್ತ್ರವನ್ನು ಕಲಿಸಿದ್ದೇನೆ. ಅವಳು ನನ್ನನ್ನು ತಂದೆಗೆ ಸಮಾನವೆಂದೇ ಭಾವಿಸಿ ನಾವಿಬ್ಬರೇ ಇದ್ದಾಗ ಗೌರವದಿಂದ ನಡೆದುಕೊಂಡಿದ್ದಾಳೆ. ನೀನೆ ಹೇಳು. ಗುರು ಎಂಬ ಪಟ್ಟದಿಂದ ಮೆರೆಯುವ ಗರ್ವ ಎಲ್ಲಿ ? ಈಗ ಇವಳನ್ನು ನನ್ನ ಹೆಂಡತಿಯಂತೆ ನಡೆಸಿಕೊಳ್ಳುವುದು ಸರಿಯೇನು ? ಒಂದು ವೇಳೆ ಇವಳ ಮದುವೆ ಮಾಡುವುದಾದರೆ ನನ್ನ ಮಗನಾದ ಅಭಿಮನ್ಯುವಿಗೆ ಕೊಡಲಿ.” ಎಂದು ಅರ್ಜುನ ಹೇಳಿದ.
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಉತ್ತರೆಯನ್ನು ಸೊಸೆಯಾಗಿ ಸ್ವೀಕರಿಸುತ್ತೇನೆ ಎಂದೇ ಅರ್ಜುನ ಹೇಳುತ್ತಾನೆ.
ಅಭಿಶಾಪಾದಹಂ ಭೀತೋ ಮಿಥ್ಯಾವಾದಾತ್ ಪರಂತಪ
ಸ್ನುಷಾರ್ಥಂ ಉತ್ತರಾಂ ರಾಜನ್ ಪ್ರತಿಗೃಹ್ಣಾಮಿ ತೇ ಸುತಾಂ.
ಕುಮಾರವ್ಯಾಸನು ಈ ಮದುವೆಯ ಪ್ರಸ್ತಾವವನ್ನು ಉತ್ತರನಿಂದ ಯಾಕೆ ಮಾಡಿಸಿದನೋ ತಿಳಿಯುವುದಿಲ್ಲ. ಮೂಲದಲ್ಲಿ ವಿರಾಟನೇ ಈ ಪ್ರಸ್ತಾವ ಮಾಡುತ್ತಿದ್ದಾನೆ. ಆದರಿಂದ ಅರ್ಜುನನು ಉತ್ತರೆಯ ತಂದೆಗೆ ಈ ಮಾತು ಹೇಳುತ್ತಾನೆ.
ಅಜ್ಞಾತವಾಸ ಕಾಲದಲ್ಲಿ ಅರ್ಜುನ ಅರಮನೆಯಲ್ಲೇ ಇದ್ದನಷ್ಟೆ. ಆಗ ಉತ್ತರೆಯೊಂದಿಗೆ ಸ್ನೇಹ ಬೆಳೆಸಿದ್ದನೆಂಬ ಅಪವಾದ ಬಂದೀತು. ಆ ಲೋಕ ನಿಂದೆಯನ್ನು ತಪ್ಪಿಸಲು ಅರ್ಜುನ ಹೀಗೆ ಹೇಳಿದ್ದಾನೆ.
ಮೂಲ ...{Loading}...
ವರುಷವಿವಳಲಿ ನಾಟ್ಯವಿದ್ಯೆಯ
ಪರುಟವಿಸಿದೆನು ತಂದೆಯಂತೀ
ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ
ಗುರುತನದ ಗರುವಾಯಿಯೆತ್ತಲು
ಅರಸಿಯೆಂಬುದಿದಾವ ಮತವೀ
ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ॥26॥
೦೨೭ ಎವಗೆ ನೀವೇನಾತನೇನು ...{Loading}...
ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ
ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಮಗೆ ನೀವೇನು : ಅಭಿಮನ್ಯು ಏನು ? ಅಂತಹ ವ್ಯತ್ಯಾಸವೇನೂ ಇಲ್ಲ” ಎಂದು ವಿರಾಟನು ಒಪ್ಪಿಕೊಂಡ. . ಧರ್ಮರಾಯನಿಗೂ ಅವನು ವಿರಾಟನಿಗೆ ವೀಳೆಯವನ್ನು ಕೊಟ್ಟು ಮನ್ನಿಸಿದ. ನಂತರ “ನಮಗೆ ಪರಮಸ್ವಾಮಿಯೂ, ನಮ್ಮ ಉತ್ಸವದ ನೆಲೆಯೂ, ನಮ್ಮೈವರ ಪ್ರಾಣವೂ ಆದ ಶ್ರೀಕೃಷ್ಣನು ಒಪ್ಪಿದರೆ ಅದೇ ನಮ್ಮ ಒಪ್ಪಿಗೆಯೆಂದು ತಿಳಿ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಉತ್ಸವ-ಸಂಭ್ರಮ, ಅಸು-ಪ್ರಾಣ, ಅಭಿಮತ-ಒಪ್ಪಿಗೆ, ಅಭಿಪ್ರಾಯ
ಟಿಪ್ಪನೀ (ಕ.ಗ.ಪ)
ಸುಭದ್ರೆ ಕೃಷ್ಣನಿಗೆ ತಂಗಿ ತಾನೆ. ಆದುದರಿಂದ ಅವನ ಅಭಿಮತ ಕೋರಿದರೆ ತಪ್ಪೇನಿಲ್ಲ. ಆದರೆ ಪಾಂಡವರಿಗೆ ಶ್ರೀಕೃಷ್ಣನಲ್ಲಿ ಇದ್ದ ಶ್ರದ್ಧೆ ಯಾವ ಪ್ರಮಾಣದ್ದೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ರಾಜಸೂಯಯಾಗದ ಸಂದರ್ಭದಲ್ಲಿ ಮಾಡಿದಂತೆ ಗೋವಿಂದ ಮತದಲ್ಲಿ ತೂಗಿ ನೋಡುವ ಸ್ವಭಾವ ಧರ್ಮರಾಯನದು. [ಜೂಜಾಡುವಾಗ ಮಾತ್ರ ಈ ಪ್ರಜ್ಞೆ ಧರ್ಮರಾಯನಿಗಿರಲಿಲ್ಲ, ಎಂಬುದು ಬೇರೆಯ ಸಂಗತಿ !]
ಮೂಲ ...{Loading}...
ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ
ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ ॥27॥
೦೨೮ ಪೊಡವಿಯೊಡೆತನವೆಮಗೆಯತಿ ಕ ...{Loading}...
ಪೊಡವಿಯೊಡೆತನವೆಮಗೆಯತಿ ಕ
ಟ್ಟೊಡೆಯ ಕೃಷ್ಣನು ಕೃಷ್ಣನೊಡಬ
ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು
ಒಡಬಡಲಿ ಮೇಣಿರಲಿ ಗುರು ನಿ
ಮ್ಮಡಿ ಮುರಾರಿಯ ತೋರಿಸುವಿರಾ
ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಬರಿಯ ರಾಜ್ಯವಾಳುವ ಅರಸರು. ಆದರೆ ನಮ್ಮ ಒಡೆಯ ಶ್ರೀಕೃಷ್ಣನಲ್ಲವೆ ! ಆ ಕೃಷ್ಣ ಸಮ್ಮತಿಸಿದರೆ ಈ ಮದುವೆ ನಿರಾತಂಕವಾಗಿ ನಡೆಯುತ್ತದೆ. ಈ ಬಗೆಗೆ ನಿಮಗೆ ಚಿಂತೆ ಬೇಡ. ರಾಜ್ಯದ ಒಡೆತನವೂ ಅವನ ಕೃಪೆಯಿಂದಲೇ ಲಭ್ಯವಾಗುತ್ತದೆ”.
ಎಂದು ಧರ್ಮರಾಯನು ಹೇಳಿದನು.
“ಶ್ರೀಕೃಷ್ಣ ಒಪ್ಪಲಿ ಬಿಡಲಿ. ಗುರುವಾದ ಆ ಮುರಾರಿಯ ದರ್ಶನ ಮಾಡಿಸುವಿರಾದರೆ ನನ್ನ ಬದುಕು ಸಾರ್ಥಕವಾಗುತ್ತದೆ” ಎನ್ನುತ್ತಾ ವಿರಾಟನು ಹಿಗ್ಗಿದ.
ಪದಾರ್ಥ (ಕ.ಗ.ಪ)
ಪೊಡವಿ-ರಾಜ್ಯ, ಭೂಮಿ, ಒಡಬಡು-ಸಮ್ಮತಿಸು, ನಿರಂತರಾಯ-ನಿರ್ವಿಘ್ನ, ನಿಮ್ಮಡಿ-ತಾವು, ನೀವು (ಗೌರವ ಸೂಚಕ ಶಬ್ದ), ಕೃತಾರ್ಥ-ನೆರವೇರಿದ ಆಸೆಯುಳ್ಳವ.
ಪಾಠಾನ್ತರ (ಕ.ಗ.ಪ)
ಪೊಡವಿಯೊಡೆತನವೆಮಗೆ -ಪೊಡವಿಯೊಡೆತನವೆಮಗೆಯತಿ ವಿರಾಟಪರ್ವ, ಮೈ.ವಿ.ವಿ., ಎಸ್. ಎನ್. ಕೃಷ್ಣಜೋಯಿಸ್ ಮೂಲಪಾಠದಲ್ಲಿ ಛಂದೋದೋಷವಿರುವುದರಿಂದ ಈ ಪಾಠಾಂತರವನ್ನು ಅಂಗೀಕರಿಸಿದೆ.
ಟಿಪ್ಪನೀ (ಕ.ಗ.ಪ)
ಮಹಾಭಾರತದಲ್ಲಿ ಬರುವ ಎಲ್ಲ ಪಾತ್ರಗಳೂ ಶ್ರೀಕೃಷ್ಣನ ಮಹಿಮೆಯನ್ನು ಬಲ್ಲವರೇ ಆಗಿದ್ದಾರೆಂದು ಹೇಳುವುದು ಕುಮಾರವ್ಯಾಸನ ಉದ್ದೇಶ. ಅವನ ಕಾವ್ಯದಲ್ಲಿ ಎಲ್ಲರೂ ಕೃಷ್ಣ ಭಕ್ತರೇ !
ಮೂಲ ...{Loading}...
ಪೊಡವಿಯೊಡೆತನವೆಮಗೆಯತಿ ಕ
ಟ್ಟೊಡೆಯ ಕೃಷ್ಣನು ಕೃಷ್ಣನೊಡಬ
ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು
ಒಡಬಡಲಿ ಮೇಣಿರಲಿ ಗುರು ನಿ
ಮ್ಮಡಿ ಮುರಾರಿಯ ತೋರಿಸುವಿರಾ
ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ ॥28॥
೦೨೯ ಪರಿಪರಿಯ ಪಾವುಡವ ...{Loading}...
ಪರಿಪರಿಯ ಪಾವುಡವ ಕಟ್ಟಿಸಿ
ಹರುಷದಲಿ ಬಿನ್ನಹದ ವೋಲೆಯ
ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ
ಚರರು ಪಯಣದ ಮೇಲೆ ಪಯಣದ
ಭರದಿ ಬಂದರು ಕೃಷ್ಣರಾಯನ
ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನೇಕ ಬಗೆಯ ಉಡುಗೊರೆಗಳನ್ನು ಕಟ್ಟಿಸಿ ಸಂಭ್ರಮದಿಂದ ಶ್ರೀಕೃಷ್ಣನಿಗೆ ಒಂದು ಪ್ರಾರ್ಥನಾ ಪತ್ರವನ್ನು ಬರೆಸಿ ಅದನ್ನು ಶೀಘ್ರವಾಗಿ ಒಯ್ಯುವ ದೂತರ ಮೂಲಕ ಕಳಿಸಿಕೊಟ್ಟ. ಆ ವೇಗದೂತರು ಪ್ರಯಾಣದ ಮೇಲೆ ಪ್ರಯಾಣ ಮಾಡುತ್ತ ದ್ವಾರಕಿಗೆ ಬಂದು ರಾಜಮಂದಿರವನ್ನು ಸಂತೋಷದಿಂದ ಹೊಕ್ಕರು.
ಪದಾರ್ಥ (ಕ.ಗ.ಪ)
ಪಾವುಡ-ಕಾಣಿಕೆ, ಉಡುಗೊರೆ, ವೇಗಾಯ್ಲ-ವೇಗವಾಗಿ ಸಾಗುವ, ಪರಿತೋಷ-ಸಂತಸ
ಮೂಲ ...{Loading}...
ಪರಿಪರಿಯ ಪಾವುಡವ ಕಟ್ಟಿಸಿ
ಹರುಷದಲಿ ಬಿನ್ನಹದ ವೋಲೆಯ
ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ
ಚರರು ಪಯಣದ ಮೇಲೆ ಪಯಣದ
ಭರದಿ ಬಂದರು ಕೃಷ್ಣರಾಯನ
ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ ॥29॥
೦೩೦ ಬರವ ಬಿನ್ನಹ ...{Loading}...
ಬರವ ಬಿನ್ನಹ ಮಾಡೆ ಪಡಿಹಾ
ರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಾರರು ಬಂದು ತಾವು ಧರ್ಮರಾಯನ ಕಡೆಯಿಂದ ಬಂದಿರುವುದಾಗಿ ದ್ವಾರಪಾಲಕರಿಗೆ ತಿಳಿಸಿದರು. ಅವರು ಒಳಗೆ ಹೋಗಿ ಕೃಷ್ಣನ ಅಪ್ಪಣೆ ಪಡೆದು ಬಂದು ಆ ಚಾರರಿಗೆ ಸಭೆಗೆ ಹೋಗುವಂತೆ ತಿಳಿಸಿದರು. ಚಾರರು ಕೃಷ್ಣನ ದರ್ಶನ ಮಾಡಿ ಆತನ ಪಾದಗಳಿಗೆ ನಮಸ್ಕರಿಸಿ ಧರ್ಮರಾಯನು ಕಳುಹಿಸಿದ್ದ ಬಿನ್ನವತ್ತಳೆಯ ಪತ್ರವನ್ನು ಶ್ರೀ ಕೃಷ್ಣನ ಮುಂದೆ ಇರಿಸಿದರು.
ಪದಾರ್ಥ (ಕ.ಗ.ಪ)
ಪಡಿಹಾರ-ದ್ವಾರಪಾಲಕ (ಪಡಿ=ಬಾಗಿಲು) ಕಾವಲುಗಾರ, ಚರಣಾಂಬುರುಹ, ಚರಣ ಅಂಬುರುಹ-ಪಾದಕಮಲ, ಹೊರೆ-ಸಮೀಪ, ಬಿನ್ನವತ್ತಳೆ-ಪ್ರಾರ್ಥನಾ ಪತ್ರ
ಮೂಲ ...{Loading}...
ಬರವ ಬಿನ್ನಹ ಮಾಡೆ ಪಡಿಹಾ
ರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ ॥30॥
೦೩೧ ನಸುನಗುತ ಮುರವೈರಿ ...{Loading}...
ನಸುನಗುತ ಮುರವೈರಿ ಮಿಗೆ ಮ
ನ್ನಿಸಿದನವರನು ಪಾಂಡುತನಯರ
ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು
ಕುಶಲರನಿಬರು ಜೀಯ ಭಕ್ತ
ವ್ಯಸನ ಭಾರವು ನಿಮ್ಮಲಿರೆ ಜೀ
ವಿಸುವುದರಿದೇ ಪಾಂಡುನಂದನರೆಂದರಾ ಚರರು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ನಸುನಗುತ್ತ ಆ ಚಾರರನ್ನು ಸನ್ಮಾನಿಸಿದ. ಅನಂತರ ಪಾಂಡವರ ಕುಶಲ ವಾರ್ತೆಯನ್ನು ಕೇಳಿದ. ದ್ರೌಪದಿಯು ಕ್ಷೇಮವಾಗಿದ್ದಾಳೆಯೆ ಎಂದು ವಿಚಾರಿಸಿದ ಆಗ ಚರರು. “ಜೀಯ ! ಎಲ್ಲರೂ ಕ್ಷೇಮವಾಗಿದ್ದಾರೆ. ಭಕ್ತರನ್ನು ಕಾಪಾಡುವ ಭಾರವು ನಿಮ್ಮದಾಗಿರುವಾಗ ಅವರಿಗೆ ಏನೂ ಕಷ್ಟವಿಲ್ಲ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಮುರವೈರಿ-ಕೃಷ್ಣ, ಮುರ ಎಂಬ ರಾಕ್ಷಸನನ್ನು ಕೊಂದವನು, ವ್ಯಸನ-ಕಾರ್ಯ, ಅರಿದೇ-ಅಸಾಧ್ಯವೇ ?
ಮೂಲ ...{Loading}...
ನಸುನಗುತ ಮುರವೈರಿ ಮಿಗೆ ಮ
ನ್ನಿಸಿದನವರನು ಪಾಂಡುತನಯರ
ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು
ಕುಶಲರನಿಬರು ಜೀಯ ಭಕ್ತ
ವ್ಯಸನ ಭಾರವು ನಿಮ್ಮಲಿರೆ ಜೀ
ವಿಸುವುದರಿದೇ ಪಾಂಡುನಂದನರೆಂದರಾ ಚರರು ॥31॥
೦೩೨ ಕಳುಹಿದುಡುಗೊರೆ ಜೀಯ ...{Loading}...
ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲ ಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಚಾರರು “ಪ್ರಭು ! ಧರ್ಮರಾಯನು ನಿಮಗೆ, ನಿಮ್ಮ ಅಂತಃಪುರದವರಿಗೆ, ಬಲರಾಮನಿಗೆ, ವಸುದೇವನಿಗೆ ದೇವಕಿಗೆ ಉಗ್ರಸೇನನಿಗೆ ಕುಲಗುರುಗಳಿಗೆ ಅಕ್ರೂರ ಉದ್ಧವ ಕೃತವರ್ಮ ಸಾತ್ಯಕಿ ಗಾಗ್ರ್ಯರಿಗೆ, ಸಾಂಬ ಕುಮಾರ, ಪ್ರದ್ಯುಮ್ನ, ಅನಿರುದ್ಧರಿಗೆ ಬೇರೆ ಬೇರೆ ಉಡುಗೊರೆಗಳನ್ನು ಕಳಿಸಿದ್ದಾನೆ” ಎಂದು ತಿಳಿಸಿದರು.
ಟಿಪ್ಪನೀ (ಕ.ಗ.ಪ)
ಬಲ-ಬಲರಾಮ, ವಸುದೇವ-ಉಗ್ರಸೇನನ ಮಗ, ಕೃಷ್ಣನ ತಂದೆ,
ದೇವಕಿ-ವಸುದೇವನ ಪತ್ನಿ, ಕೃಷ್ಣನ ತಾಯಿ, ಕಂಸನ ತಂಗಿ,
ಅಕ್ರೂರ-ಇವನು ಒಬ್ಬಯಾದವ ಪ್ರಮುಖ, ಕಂಸನ ಮಂತ್ರಿಯಾಗಿದ್ದವನು. ನಂದಗೋಕುಲದಿಂದ ಕೃಷ್ಣನನ್ನು ಮಧುರೆಗೆ ಕರೆ ತಂದವನು. ಶ್ರೀಕೃಷ್ಣನ ಭಕ್ತ.
ಉದ್ಧವ-ಉದ್ಧವನು ಶ್ರೀಕೃಷ್ಣ ಸ್ನೇಹಿತನೂ ಮಂತ್ರಿಯೂ ಆಗಿದ್ದ. ಕಂಸನನ್ನು ಕೃಷ್ಣನು ಕೊಂದ ಸಂಗತಿ ಈತನಿಂದಲೇ ನಂದಗೋಕುಲಕ್ಕೆ ತಲಪಿತು.
ಕೃತವರ್ಮ-ವೃಷ್ಣಿವಂಶದ ಒಬ್ಬ ದೊರೆ. ಅಕ್ರೂರನ ಗೆಳೆಯ. ಮುಂದೆ ನಡೆದ ಮಹಾಭಾರತ ಯುದ್ಧದಲ್ಲಿ ಕೌರವರ ಕಡೆ ಇದ್ದವನು.
ಸಾತ್ಯಕಿ-ಸಾತ್ಯಕಿಗೆ ಯುಯುಧಾನ ಎಂಬ ಹೆಸರೂ ಇದೆ. ಇವನು ವೃಷ್ಣಿವಂಶದ ಯೋಧ. ಶ್ರೀಕೃಷ್ಣನ ಒಡನಾಡಿ. ಮುಂದೆ ಮಹಾಭಾರತ ಯುದ್ಧದಲ್ಲಿ ಪಾಂಡವರ ಕಡೆ ಸೇರಿ ಹೋರಾಡಿದವನು.
ಸಾಂಬ-ಶ್ರೀಕೃಷ್ಣ ಮತ್ತು ಜಾಂಬವತಿಯರ ಮಗ.
ಕಂದರ್ಪ-ಶ್ರೀ ಕೃಷ್ಣನ ಮಗ,
ಅನಿರುದ್ಧ ಶ್ರೀಕೃಷ್ಣನ ಮೊಮ್ಮಗ, ಉಷಾ-ಅನಿರುದ್ಧರ ಕಥೆ ಜನಪ್ರಿಯವಾಗಿದೆ
ಮೂಲ ...{Loading}...
ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲ ಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ ॥32॥
೦೩೩ ಎನಲು ನಸುನಗೆಯಿನ್ದ ...{Loading}...
ಎನಲು ನಸುನಗೆಯಿಂದ ಕುಂತಿಯ
ತನುಜರಟ್ಟಿದ ಪಾವುಡಂಗಳ
ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ
ದನುಜಹರನೀಕ್ಷಿಸಲು ಲಿಖಿತವ
ನನುನಯದೊಳಳವಡಿಸಿ ಬಿನ್ನಹ
ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಪ್ರಸನ್ನನಾಗಿ ಪಾಂಡವರು ಕಳಿಸಿದ ಪಾವುಡಗಳನ್ನೆಲ್ಲ ತೆಗೆದುಕೊಂಡು ಹೋಗುವಂತೆ ತನ್ನ ಕಡೆಯವರಿಗೆ ಸೂಚಿಸಿದ ಅನಂತರ ಸಂಧಿವಿಗ್ರಹಿಯ ಕಡೆಗೆ ನೋಡಿದ. ಸಂಧಿವಿಗ್ರಹಿಯು ‘ಅಪ್ಪಣೆ’ ಎನ್ನುತ್ತ ಗೌರವದಿಂದ ಆ ಪತ್ರವನ್ನು ತೆಗೆದುಕೊಂಡು ಸಭೆಯ ಸದ್ದು ಅಡಗಿದಾಗ ಓದಲು ಆರಂಭಿಸಿದ.
ಪದಾರ್ಥ (ಕ.ಗ.ಪ)
ತನುಜ-ಪುತ್ರ, ಪಾವುಡ-ಕಾಣಿಕೆ, ಅನಿತುವನು-ಅಷ್ಟನ್ನು,
ಬಿನ್ನಹ-ವಿಜ್ಞಾಪನೆ, ನೇಮ-ಅಪ್ಪಣೆ, ಕಳವಳವಡಗೆ-ಸಭೆಯ ಗುಜುಗುಜು ನಿಂತ ಮೇಲೆ
ಟಿಪ್ಪನೀ (ಕ.ಗ.ಪ)
ಸಂಧಿವಿಗ್ರಹಿ-ರಾಜರ ಆಸ್ಥಾನದಲ್ಲಿ ಒಬ್ಬ ಅಧಿಕಾರಿ, ವಿದೇಶಾಂಗ ಸಚಿವ. ಯುದ್ಧ ಸಂಧಿಗಳ ವಿಷಯದಲ್ಲಿ ರಾಜನಿಗೆ ಸಲಹೆ ಕೊಡುತ್ತಿದ್ದವನು.
ಮೂಲ ...{Loading}...
ಎನಲು ನಸುನಗೆಯಿಂದ ಕುಂತಿಯ
ತನುಜರಟ್ಟಿದ ಪಾವುಡಂಗಳ
ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ
ದನುಜಹರನೀಕ್ಷಿಸಲು ಲಿಖಿತವ
ನನುನಯದೊಳಳವಡಿಸಿ ಬಿನ್ನಹ
ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ ॥33॥
೦೩೪ ಸ್ವಸ್ತಿ ದಾನವ ...{Loading}...
ಸ್ವಸ್ತಿ ದಾನವ ರಾಯ ಕುಂಜರ
ಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ
ಹಸ್ತಕಲಿತ ಸುದರುಶನೋಧ್ರ್ವಗ
ಭಸ್ತಿಲವಶಮಿತಾರ್ಕ ಪರಿವೃಢ
ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಂಗಳ ! ದಾನವ ರಾಜರುಗಳೆಂಬ ಆನೆಗಳ ನೆತ್ತಿಗಳ ಮೇಲೆ ಅಂಕುಶವನ್ನಿಟ್ಟು ಆಡುವುದರಲ್ಲಿ ನಿರತನಾಗಿರುವ ಎಲೈ ಯದುಕುಲ ಸಿಂಹವೇ ! ಜನ್ಮ ಜನ್ಮಗಳಲ್ಲಿ ನಾವು ಮಾಡಿರುವ ಪಾಪದ ಭಯವನ್ನು ಹೋಗಲಾಡಿಸುವ ಮಹಾಪುರುಷನೇ ! ಕೈಯಲ್ಲಿ ವಿರಾಜಿಸುವ ಸುದರ್ಶನ ಚಕ್ರದ ಮಹಾಕಾಂತಿಯ ಒಂದು ಲೇಶ ಮಾತ್ರದಿಂದ ಸೂರ್ಯಪ್ರಭೆಯನ್ನು ಮಂಕಾಗಿಸುವ ಶ್ರೀಕೃಷ್ಣನೇ ! ನಮಗೆ ಪ್ರಭುವೂ ದೇವನೂ ಆದ ಮಹಾದೇವನೇ ! ಕುಂತಿಯ ಮಕ್ಕಳಾದ ಪಾಂಡವರ ಬಿನ್ನಹವನು ದಯವಿಟ್ಟು ಆಲಿಸು”.
ಪದಾರ್ಥ (ಕ.ಗ.ಪ)
ಸ್ವಸ್ತಿ-ಮಂಗಳ, ದಾನವ ರಾಯ ಕುಂಜರ-ದಾನವ ರಾಜ ಎಂಬ ಆನೆ, ಮಸ್ತಕ-ನೆತ್ತಿ, ಅಂಕುಶ-ಆನೆಯನ್ನು ತಹಬಂದಿಗೆ ತರಲು ಬಳಸುವ ಚೂಪಾದ ಕೋಲು, ಖೇಲನಾ-ಕ್ರೀಡಿಸು, ಆಡು, ಪರಿಯಸ್ತ-ಆವರಿಸು, ಚಲ್ಲಾಪಿಲ್ಲಿ ಮಾಡು, ಸಂಹೃತ-ನಾಶಗೊಳಿಸಿದ, ಜನ್ಮ ದುರಿತ-ಜನ್ಮದ ಪಾತಕ, ಹಸ್ತ ಕಲಿತ-ಕೈಯಲ್ಲಿ ಇರುವ (ಬಿಡಲ್ಪಟ್ಟ, ಎಸೆದ ಎಂಬರ್ಥಗಳೂ ಇವೆ) ಸುದರ್ಶನ ಊಧ್ರ್ವಗಭಸ್ತಿ- ಸುದರ್ಶನ ಚಕ್ರದ ಮಹತ್ತಾದ ಕಾಂತಿ, ಲವ-ಅದರ ಒಂದೇ ಒಂದು ಅಂಶ ಮಾತ್ರದಿಂದ ಶಮಿತ ಅರ್ಕ-ಸೂರ್ಯನ ತೇಜಸ್ಸನ್ನು ಮಂಕುಗೊಳಿಸುವವ. ಪರಿವೃಢ=ಪ್ರಭು, ಒಡೆಯ, ದಟ್ಟ, ವಿಸ್ತರಣ-ಸ್ನೇಹಿತ, ಪೀಠ, ಉನ್ನತ ನೆಲೆಯವನು.
ಟಿಪ್ಪನೀ (ಕ.ಗ.ಪ)
ಈ ಪತ್ರ ಕುಮಾರವ್ಯಾಸನ ಕಾಲದ ವ್ಯಾವಹಾರಿಕ ಪತ್ರದ ಮಾದರಿಯಲ್ಲಿದ್ದು ಸಹಜವಾಗಿ ಸಂಸ್ಕೃತ ಭೂಯಿಷ್ಠವಾಗಿದೆ. ಮಣಿ ಪ್ರವಾಳ ಶೈಲಿಯಲ್ಲಿದೆ. ನಿಜವಾಗಿ ದ್ವಾರಕಿಯ ಅಧಿಕಾರ ನಡೆಸುತ್ತಿದ್ದವನು ಉಗ್ರಸೇನ, ವಸುದೇವ ಬಲರಾಮರುಗಳನ್ನು ಕೈಬಿಟ್ಟು ಶ್ರೀಕೃಷ್ಣ ಸ್ತುತಿಗೇ ಮೀಸಲಾಗಿರುವ ಸಂದೇಶ ಪತ್ರ ಇದು. ಒಂದು ಬಗೆಯ ಬಿನ್ನವತ್ತಳೆಯ ಶೈಲಿಯಲ್ಲಿದೆ. :
ಈ ಅರ್ಥವನ್ನು ನಿರ್ಣಯಿಸಲು ಹಲವಾರು ಕೋಶಗಳ ಮತ್ತು ವಿದ್ವಾಂಸರ ನೆರ ವುಪಡೆಯಬೇಕಾಯಿತು. ಇನ್ನೂ ಹಲವಾರು ಅರ್ಥಗಳು ವಿದ್ವಾಂಸರಿಗೆ ಸ್ಫುರಿಸಿದರೂ ಆಶ್ಚರ್ಯವಿಲ್ಲ. ಖೇಲನಾ ಪರಿಯಸ್ತ ಎನ್ನುವುದಕ್ಕೆ ಅಂಕುಶವಾಡಿಸಿ ಚೆಲ್ಲಾಪಿಲ್ಲಿ ಮಾಡುವ ವೀರನೇ ಎಂಬರ್ಥವೂ ಇರಬಹುದು. ಭಾಷೆ ತುಂಬ ಪೆಡಸಾಗಿದ್ದು ಸಂಸ್ಕೃತಾರಣ್ಯ ಸಂಚಾರಿಸಿದ ವಿದ್ವನ್ಮತ್ತೇಭ ದಂತಿರುವ ಒಬ್ಬ ಆಸ್ಥಾನ ವಿದ್ವಾಂಸನ ಶೈಲಿಯನ್ನು ಕುಮಾರವ್ಯಾಸನು ಅನುಸರಿಸಿರುವಂತಿದೆ. ಇಂಥ ಒಕ್ಕಣೆಗಳನ್ನು ಚೂರ್ಣಿಕೆಗಳೆಂದೂ ಕರೆಯುತ್ತಾರೆ.
ಮೂಲಭಾರತದಲ್ಲಿ ಈ ಬಗೆಯ ಪತ್ರವಿಲ್ಲ. ಎಲ್ಲರಂತೆ ಕೃಷ್ಣನಿಗೂ ಮದುವೆಗೆ ಆಹ್ವಾನವಿದೆ ಅಷ್ಟೆ.
ತತೋಮಿತ್ರೇಷು ಸರ್ವೇಷು ವಾಸುದೇವಂಚ ಭಾರತ,
ಪ್ರೇಷಯಾಮಾಸ ಕೌಂತೇಯ ವಿರಾಟಶ್ಚ ಮಹೀಪತಿ
“ಕೃಷ್ಣನಿಗೂ ಅವನ ಸ್ನೇಹಿತರಿಗೂ ಧರ್ಮರಾಯನು ಪತ್ರ ಕಳಿಸಿದ”
ಮೂಲ ...{Loading}...
ಸ್ವಸ್ತಿ ದಾನವ ರಾಯ ಕುಂಜರ
ಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ
ಹಸ್ತಕಲಿತ ಸುದರುಶನೋಧ್ರ್ವಗ
ಭಸ್ತಿಲವಶಮಿತಾರ್ಕ ಪರಿವೃಢ
ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ ॥34॥
೦೩೫ ದೇವ ನಿಮ್ಮಡಿಗಳ ...{Loading}...
ದೇವ ನಿಮ್ಮಡಿಗಳ ಕೃಪಾಸಂ
ಜೀವನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ
ಈ ವರುಷದಜ್ಞಾತವಾಸ ಗ
ತಾವಶೇಷಣವಾಯ್ತು ಕಂಗಳಿ
ಗೀವುದವಯವ ದರುಶನಾಮೃತಪಾನ ಸಂಪದವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ದೇವ ! ಶ್ರೀ ಕೃಷ್ಣ ! ನಿಮ್ಮ ಕೃಪೆ ನಮ್ಮ ಪಾಲಿಗೆ ಸಂಜೀವಿನಿ. ಅದರ ಬಲದಿಂದ ನಮ್ಮ ಜೀವ ಇನ್ನೂ ಈ ದೇಹಕ್ಕೆ ಅಂಟಿಕೊಂಡಿದೆ. ವನವಾಸದ ಕಾಡಿನ ಮನೆಯನ್ನು ಕಿತ್ತು ಹಾಕಿ ಮುಂದೆ ಸಾಗಿದೆ. ಅಜ್ಞಾತವಾಸವು ಕೂಡ ಈಗ ಮುಗಿದು ಹೋದ ಕಥೆಯಾಗಿದೆ. ಈಗ ನೀವು ದಯಮಾಡಿ ನಮ್ಮಲ್ಲಿಗೆ ಬಂದು ತಮ್ಮ ದೇಹದ ದರ್ಶನ ಎಂಬ ಅಮೃತ ಪಾನದ ಸಂಪತ್ತನ್ನು ಕರುಣಿಸಬೇಕು.
ಪದಾರ್ಥ (ಕ.ಗ.ಪ)
ಸಂಜೀವನಿ-ಸಂಜೀವನಿ ಎಂದರೆ ಬದುಕನ್ನು ಕೊಡುವ ಒಂದು ಬಳ್ಳಿ,
ಅಸು-ಜೀವ,
ವಿಪಿನ ಮಂದಿರ-ಕಾಡು (ವನವಾಸ) ಎಂಬ ಮನೆ,
ಗತಾವಶೇಷಣ-ಗತ ಅವಶೇಷಣ, ಕಳೆದು ಹೋದ ಘಟನೆ
ಟಿಪ್ಪನೀ (ಕ.ಗ.ಪ)
ರೂಪಕಗಳಲ್ಲಿ ಮಾತಾಡುವುದು ಕುಮಾರವ್ಯಾಸನ ಒಂದು ಸಿದ್ಧಿ ಎನ್ನಬಹುದು.
(ಶ್ರೀ ಕೃಷ್ಣನ ಕೃಪಾ ಬಲದಿಂದಲೇ ತಾವು ವನವಾಸ ಅಜ್ಞಾತವಾಸಗಳನ್ನು ಕಳೆದೆವೆಂಬ ನಂಬಿಕೆ ಧರ್ಮರಾಯನದು).
ಮೂಲ ...{Loading}...
ದೇವ ನಿಮ್ಮಡಿಗಳ ಕೃಪಾಸಂ
ಜೀವನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ
ಈ ವರುಷದಜ್ಞಾತವಾಸ ಗ
ತಾವಶೇಷಣವಾಯ್ತು ಕಂಗಳಿ
ಗೀವುದವಯವ ದರುಶನಾಮೃತಪಾನ ಸಂಪದವ ॥35॥
೦೩೬ ದಾಟಿದೆವು ನುಡಿದವಧಿಯನು ...{Loading}...
ದಾಟಿದೆವು ನುಡಿದವಧಿಯನು ವೈ
ರಾಟ ಪುರದಲಿ ತುರುವಿಡಿದು ಮೈ
ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ
ತೋಟಿ ಜಯಿಸಿದೊಡೆಮ್ಮನರಿದು ವಿ
ರಾಟ ಮನ್ನಿಸಿ ತನ್ನ ಮಗಳ ಕಿ
ರೀಟಿ ತನಯಂಗೀವ ಭರವಿದ ದೇವರವಧರಿಸಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವ ! ನಾವು ವನವಾಸದ ನಂತರ ಅಜ್ಞಾತವಾಸದ ಅವಧಿಯನ್ನು ಜಯಪ್ರದವಾಗಿ ವಿರಾಟನಗರಿಯಲ್ಲಿ ಕಳೆದೆವು. ಅನಂತರ ಗೋಗ್ರಹಣ ಮಾಡಿ ಆ ಮೂಲಕ ನಮ್ಮನ್ನು ಪತ್ತೆ ಹಚ್ಚಲು ಬಂದ ಕೌರವರು ಮತ್ತು ಅವರ ಸೇನೆ ನುಚ್ಚು ನೂರಾಯಿತು. ಯುದ್ಧದಲ್ಲಿ ನಾವು ಗೆದ್ದೆವು. ವಿರಾಟನು ನಮ್ಮನ್ನು ಗೌರವಿಸಿ ಅಭಿಮನ್ಯುವಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವ ಆಲೋಚನೆಯಲ್ಲಿದ್ದಾನೆ. ನೀವು ದಯವಿಟ್ಟು ಮನಸ್ಸಿಗೆ ತಂದುಕೊಳ್ಳಬೇಕು.”.
ಪದಾರ್ಥ (ಕ.ಗ.ಪ)
ನುಡಿದವಧಿ-ಗೊತ್ತು ಪಡಿಸಿದ ಕಾಲ, ತುರು-ದನ, ಮೈನೋಟ-ನಮ್ಮನ್ನು ಕಂಡುಹಿಡಿಯುವುದು, ಕಣ್ಣಾರೆ ಕಾಣುವುದು, ಕಿರೀಟಿ ತನಯ-ಅರ್ಜುನನ ಮಗ ಅಭಿಮನ್ಯು, ಅವಧರಿಸು-ಕೇಳು, ತೋಟಿ-ಯುದ್ಧ
ಮೂಲ ...{Loading}...
ದಾಟಿದೆವು ನುಡಿದವಧಿಯನು ವೈ
ರಾಟ ಪುರದಲಿ ತುರುವಿಡಿದು ಮೈ
ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ
ತೋಟಿ ಜಯಿಸಿದೊಡೆಮ್ಮನರಿದು ವಿ
ರಾಟ ಮನ್ನಿಸಿ ತನ್ನ ಮಗಳ ಕಿ
ರೀಟಿ ತನಯಂಗೀವ ಭರವಿದ ದೇವರವಧರಿಸಿ ॥36॥
೦೩೭ ಮೊಳಗುತ್ತಿರುವ ...{Loading}...
ಮೊಳಗುತ್ತಿರುವ ವಾದ್ಯಘೋಷದಿಂದಾಗಿ ಸೈನ್ಯವು ಸಾಲುಗೆಡದೆ ನಡೆಯುತ್ತ ಹೆಣಗಳನ್ನು ತುಳಿಯಲು ಕೌರವೇಂದ್ರನ ಮೊಗಸನ್ನೆಯಿಂದ ಒಟ್ಟಾಗಿ ಶತ್ರುಗಳ ಮೇಲೆ ಬಿದ್ದಿತು. ಆಗ ಅರ್ಜುನನು ಹುಗ್ಗಿಗರ (ಅಹಂಕಾರಿಗಳ) ಶಕ್ತಿಯನ್ನು ನಿಗುಚುತ್ತೇನೆ ಎನ್ನುತ್ತ ಅಗಣಿತವಾದ ಬಾಣಗಳಿಂದ ಕರೆz ಕುರುಸೇನೆಯನ್ನು ಅಗ್ಗಡಲಿನಲ್ಲಿ (ರಕ್ತ ಸಮುದ್ರದಲ್ಲಿ) ಮುಳುಗಿಸಿದನು.
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮದುವೆ ಎಂಬುದು ಒಂದು ನೆಪ ಅಷ್ಟೆ. ಮುಖ್ಯವಾದ ಸಂಗತಿ ಎಂದರೆ ಈ ನೆಪದಲ್ಲಿ ನೀವು ನಮಗೆ ದರ್ಶನಭಾಗ್ಯವನ್ನು ದಯಪಾಲಿಸಬೇಕು. ಕೃಷ್ಣ ! ನಾವು ವನವಾಸ ಅಜ್ಞಾತವಾಸಗಳ ಅವಧಿಯಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಿದ್ದೇವೆ. ನಿಮ್ಮ ದರ್ಶನವಾದರೆ ನಮಗೆ ಆ ಕಷ್ಟಗಳನ್ನೆಲ್ಲ ಮರೆಯಲು ಸಾಧ್ಯವಾಗುತ್ತದೆ. ಹಾಗೆ ನಮ್ಮನ್ನು ಕ್ಷೇಮದಲ್ಲಿರಿಸಿ ಆ ಸಂದರ್ಭಕ್ಕೆ ಸೂಕ್ತವಾದ ಮಾತುಗಳ ಹದವಾದ ಮಳೆಸುರಿಸಿ ನಮ್ಮಲ್ಲಿನ ಉತ್ಸಾಹದ ಸಸಿಯನ್ನು ಚಿಗುರಿಸಬೇಕು” ಇದೇ ಅವನ ಪ್ರಾರ್ಥನೆ.
ಪದಾರ್ಥ (ಕ.ಗ.ಪ)
ನಿಜ-ನಿಮ್ಮ, ಪರೀಕ್ಲೇಶಾನು ಸಂತಾಪ-(ವನವಾಸದ) ಕಠಿಣ ಕಾರ್ಯದ ಫಲವಾಗಿ ಬಂದ ಸಂಕಟ, ಹದುಳ-ಕ್ಷೇಮ, ಬೀಳ್ಕೊಡಿಸು-ದೂರ ಮಾಡು, ಹದವಳೆ-ಒಳ್ಳೆಯ ಮಳೆ
ಟಿಪ್ಪನೀ (ಕ.ಗ.ಪ)
ಮದುವೆಗೆ ಬನ್ನಿ ಎಂದು ನಂಟರಿಷ್ಟರನ್ನು ಬಂಧುಗಳನ್ನು ಕರೆಯಬಯಸುವವರಿಗೆಲ್ಲ ಕುಮಾರವ್ಯಾಸನ ಮಾತು ಮನದಲ್ಲಿ ಅಚ್ಚಳಿಯದೆ ಮೂಡುತ್ತದೆ.
ಕುಮಾರವ್ಯಾಸನ ಪ್ರಸಿದ್ಧ ಸೂಕ್ತಿಗಳಲ್ಲಿ ಇದು ಒಂದು. ಇದಲ್ಲದೆ ಇನ್ನು ಕೆಲವು ಕಾರಣಗಳನ್ನು ಧರ್ಮರಾಯ ಕೊಡುತ್ತಿದ್ದಾನೆ
ಅಲ್ಲದೆ ಶ್ರೀ ಕೃಷ್ಣ ದರ್ಶನ ಎಂದರೆ ಅವನು ಬಂದು ಪಾಂಡವರಿಗೂ ದ್ರೌಪದಿಗೂ ಧೈರ್ಯ ತುಂಬುತ್ತಾನಲ್ಲವೆ ?
ಮೂಲ ...{Loading}...
ಮೊಳಗುತ್ತಿರುವ ವಾದ್ಯಘೋಷದಿಂದಾಗಿ ಸೈನ್ಯವು ಸಾಲುಗೆಡದೆ ನಡೆಯುತ್ತ ಹೆಣಗಳನ್ನು ತುಳಿಯಲು ಕೌರವೇಂದ್ರನ ಮೊಗಸನ್ನೆಯಿಂದ ಒಟ್ಟಾಗಿ ಶತ್ರುಗಳ ಮೇಲೆ ಬಿದ್ದಿತು. ಆಗ ಅರ್ಜುನನು ಹುಗ್ಗಿಗರ (ಅಹಂಕಾರಿಗಳ) ಶಕ್ತಿಯನ್ನು ನಿಗುಚುತ್ತೇನೆ ಎನ್ನುತ್ತ ಅಗಣಿತವಾದ ಬಾಣಗಳಿಂದ ಕರೆz ಕುರುಸೇನೆಯನ್ನು ಅಗ್ಗಡಲಿನಲ್ಲಿ (ರಕ್ತ ಸಮುದ್ರದಲ್ಲಿ) ಮುಳುಗಿಸಿದನು.
೦೩೮ ಕರುಣಿ ಬಿಜಯಙ್ಗೈದು ...{Loading}...
ಕರುಣಿ ಬಿಜಯಂಗೈದು ಭಕ್ತರ
ಹೊರೆಯ ಬೇಹುದು ಬೇಡಿಕೊಂಬೆನು
ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ
ಚರಣಭಜಕ ಕುಟುಂಬನೆಂಬೀ
ಬಿರುದ ಪಾಲಿಸಿ ಬಿನ್ನಹವನವ
ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರುಣಾ ಶಾಲಿಯಾದ ಶ್ರೀಕೃಷ್ಣ. ನೀನು ಇಲ್ಲಿಗೆ ದಯಮಾಡಿ ಬಂದು ಭಕ್ತರನ್ನು ಕಾಪಾಡಬೇಕು. ಇದೇ ನನ್ನ ಪ್ರಾರ್ಥನೆ. ಹಾಗೆ ನೋಡಿದರೆ ಎಳೆಯಕರು ತನ್ನ ತಾಯಿಯನ್ನು ಹುಡುಕಬೇಕಿಲ್ಲ. ತಾಯಿಯೇ ತನ್ನ ಎಳಗಂದಿಯನ್ನು ಹುಡುಕಿಕೊಂಡು ಬರುತ್ತದೆ. ಹಾಗೆಯೇ ನೀನು ನಿನ್ನ ಪಾದಸೇವಕರ ಕುಟುಂಬಕ್ಕೆ ಸೇರಿದವನು ಎಂಬ ಬಿರುದು ಪಡೆದವನಲ್ಲವೆ ? ಆ ಬಿರುದನ್ನು ಉಳಿಸಿಕೊಂಡು ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ನಮಗೆಲ್ಲ ದರ್ಶನ ಪ್ರಸಾದವನ್ನು ದಯಪಾಲಿಸಬೇಕು”.
ಪದಾರ್ಥ (ಕ.ಗ.ಪ)
ಬಿಜಯಂಗೈದು-ದಯಮಾಡಿಸಿ, ಹೊರೆ-ಪೊರೆ, ಕಾಪಾಡು, ಎಳಗಂದಿ-ಎಳೆಯ ಕರು
ಮೂಲ ...{Loading}...
ಕರುಣಿ ಬಿಜಯಂಗೈದು ಭಕ್ತರ
ಹೊರೆಯ ಬೇಹುದು ಬೇಡಿಕೊಂಬೆನು
ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ
ಚರಣಭಜಕ ಕುಟುಂಬನೆಂಬೀ
ಬಿರುದ ಪಾಲಿಸಿ ಬಿನ್ನಹವನವ
ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು ॥38॥
೦೩೯ ಕೇಳಿ ಹರುಷಿತನಾಗಿ ...{Loading}...
ಕೇಳಿ ಹರುಷಿತನಾಗಿ ಕಡು ಕರು
ಣಾಳು ಹೊಂಪುಳಿಯೋಗಿ ಭಕ್ತರ
ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು
ಕೇಳಿದೆವೆ ಹರ ಹರ ಯುಧಿಷ್ಠಿರ
ನೇಳಿಗೆಯನಾ ಕೌರವೇಶ್ವರ
ನೂಳಿಗವನೆನುತಸುರರಿಪು ನೋಡಿದನು ಕೆಲಬಲನ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬಿನ್ನಪವನ್ನು ಕೇಳಿ ಕರುಣಾಳುವಾದ ಶ್ರೀ ಕೃಷ್ಣನು ಸಂತೋಷದಿಂದ ಉಬ್ಬಿಹೋದ. ಭಕ್ತ ಜನಗಳ ಮೇಲೆ ಇದ್ದ ಪ್ರೀತಿಯ ಸ್ನೇಹಭಾವ ಅವನಲ್ಲಿ ವ್ಯಾಪಿಸಿತು. “ಆಹಾ ? ಯುಧಿಷ್ಠರನ ಏಳಿಗೆಯ ಸುದ್ದಿಯನ್ನು ಕೇಳುತ್ತಿದ್ದೇನಲ್ಲ ! ಹಾಗೆಯೇ ಕೌರವನ ಊಳಿಗದ ಸುದ್ದಿಯೂ ಬಂದಿತಲ್ಲ,” ಎನ್ನುತ್ತ ಅಕ್ಕ ಪಕ್ಕದವರನ್ನು ನೋಡಿದ.
ಪದಾರ್ಥ (ಕ.ಗ.ಪ)
ಹೊಂಪುಳಿ-ಬೀಗು, ಊಳಿಗ-ಸೇವೆ, ದೀನತೆ,
ಟಿಪ್ಪನೀ (ಕ.ಗ.ಪ)
ಮೂರನೆಯ ಸಾಲಿನ ಕೊನೆಯಲ್ಲಿ ಬರುವ ಭಕ್ತರ ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು-ವ್ಯಾಕರಣ ರೀತ್ಯಾ ಅರ್ಥವಾಗುವುದಿಲ್ಲ. ‘ಕರುಣಾಳುವಿಗೆ’ ಎಂದಿರಬೇಕಾಗಿತ್ತು. ಅಥವಾ ‘ಪಸರಿಸಲು’ ಎಂಬ ಪಾಠವಿದ್ದರೆ ಅರ್ಥ ಸರಿಹೋಗುತ್ತಿತ್ತು. ಈಗಿರುವ ಪಾಠವೂ ಸುಲಭವಾಗಿ ಅರ್ಥವಾಗುತ್ತದೆ.
ಇಲ್ಲಿ ಕೌರವೇಶ್ವರನ ಊಳಿಗ ಎಂದರೆ ಗೋಗ್ರಹಣದ ಸಂದರ್ಭದಲ್ಲಿ ಅವನಿಗೆ ಬಂದ ದೀನ ಸ್ಥಿತಿ ಎಂದು ಅರ್ಥಮಾಡುವುದು ಸಮಂಜಸವೆನಿಸುತ್ತದೆ. (ಹುಬ್ಬಳ್ಳಿ ಕುಮಾರವ್ಯಾಸ ಸೇವಾ ಸಂಘದ ವಿರಾಟಪರ್ವದಲ್ಲಿ ಊಳಿಗಕ್ಕೆ ಕ್ಷುಲ್ಲಕತನ ಎಂಬರ್ಥ ಕೊಡಲಾಗಿದೆ).
ಮೂಲ ...{Loading}...
ಕೇಳಿ ಹರುಷಿತನಾಗಿ ಕಡು ಕರು
ಣಾಳು ಹೊಂಪುಳಿಯೋಗಿ ಭಕ್ತರ
ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು
ಕೇಳಿದೆವೆ ಹರ ಹರ ಯುಧಿಷ್ಠಿರ
ನೇಳಿಗೆಯನಾ ಕೌರವೇಶ್ವರ
ನೂಳಿಗವನೆನುತಸುರರಿಪು ನೋಡಿದನು ಕೆಲಬಲನ ॥39॥
೦೪೦ ಚಿನ್ತೆ ಬೀತುದು ...{Loading}...
ಚಿಂತೆ ಬೀತುದು ಪಾಂಡು ಮಾವನ
ಸಂತತಿಗಳಜ್ಞಾತ ವಾಸವ
ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು
ಕುಂತಿ ದೇವಿಯರುಮ್ಮಳಿಸೆ ನಾ
ವೆಂತು ಬದುಕುವೆವಕಟೆನುತ್ತ ನಿ
ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣ ಸಭೆಗೆ ಹೇಳುತ್ತಿದ್ದಾನೆ :
“ಸದ್ಯ ನಮ್ಮ ಚಿಂತೆ ಪರಿಹಾರವಾಯಿತು. ಪಾಂಡು ಮಾವನ ಮಕ್ಕಳು ಅಜ್ಞಾತವಾಸದ ಅವಧಿಯನ್ನು ಎಷ್ಟು ಕಷ್ಟದಿಂದ ಕಳೆದರೋ ಏನೋ ! ನಮ್ಮ ಪುಣ್ಯದಿಂದ ಆ ಅವಧಿಯನ್ನು ದಾಟಿದ್ದಾರೆ. ಅದು ಬಿಟ್ಟು ಪಾಂಡವರ ತಾಯಿ ಕುಂತೀದೇವಿಯು ದುಃಖಿಸುವಂತೆ ಆಗಿದ್ದರೆ ನಾವು ತಾನೇ ಹೇಗೆ ಬದುಕುತ್ತಿದ್ದೆವು ? ಎಂದುಕೊಂಡು, ಇದನ್ನು ಕುರಿತು ನಮ್ಮ ತಂದೆ ವಸುದೇವ ಸದಾ ಮರುಗುತ್ತಿದ್ದ”.
ಪದಾರ್ಥ (ಕ.ಗ.ಪ)
ಬೀತುದು-ಪರಿಹಾರವಾಯಿತು, ಪಂಥ-ಛಲ, ಹಠ, ನಿರಂತರ-ಸದಾ, ಬೊಪ್ಪ-ತಂದೆ, ಉಮ್ಮಳಿಸು-ಸಂಕಟಪಡು
ಮೂಲ ...{Loading}...
ಚಿಂತೆ ಬೀತುದು ಪಾಂಡು ಮಾವನ
ಸಂತತಿಗಳಜ್ಞಾತ ವಾಸವ
ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು
ಕುಂತಿ ದೇವಿಯರುಮ್ಮಳಿಸೆ ನಾ
ವೆಂತು ಬದುಕುವೆವಕಟೆನುತ್ತ ನಿ
ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ॥40॥
೦೪೧ ಭವಣಿಗೆಯ ಬನ್ದಡವಿಯಲಿ ...{Loading}...
ಭವಣಿಗೆಯ ಬಂದಡವಿಯಲಿ ಪಾಂ
ಡವರು ನವೆದರು ರಾಜ್ಯವನು ಯಾ
ದವರು ನಾವನುಭವಿಸುತಿದ್ದೆವು ನವೆದರಿನ್ನೆಬರ
ಅವರ ಸೊಗಸೇ ನಮ್ಮ ಸೊಗಸುಗ
ಳವರ ದುಗುಡವೆ ನಮ್ಮದದರಿಂ
ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣ ತನ್ನ ಸಭೆಯವರಿಗೆ ಪಾಂಡವರ ವಿಷಯವನ್ನೇ ಹೇಳುತ್ತಿದ್ದಾನೆ.
“ಪಾಂಡವರು ವನವಾಸದ ಅವಧಿಯಲ್ಲಿ ಅಲೆಯುತ್ತ ಕಾಲವನ್ನು ಕಳೆದು ಸಂಕಟಪಟ್ಟರು. ನಾವು ಯಾದವರು ಮಾತ್ರ ರಾಜ್ಯ ಸುಖವನ್ನು ಅನುಭವಿಸುತ್ತ ಸುಖವಾಗಿದ್ದೆವಲ್ಲ. ಅವರು 13 ವರ್ಷಗಳಷ್ಟು ದೀರ್ಘಕಾಲ ಕಷ್ಟವನ್ನನುಭವಿಸಿದರು. ನಿಜ ಹೇಳುವುದಾದರೆ ಅವರ ಸೊಗಸನ್ನೇ ನಮ್ಮ ಸೊಗಸೆಂದು ಭಾವಿಸುತ್ತಿದ್ದೆವು. ಅವರ ದುಃಖವು ನಮ್ಮದೇ ಎಂದು ಕೊರಗುತ್ತಿದ್ದೆವು. ಆದುದರಿಂದ ಈಗ ಅವರ ಏಳಿಗೆಯು ನಮ್ಮ ಏಳಿಗೆ ಎಂದು ಭಾವಿಸುತ್ತೇವೆ.
ಪದಾರ್ಥ (ಕ.ಗ.ಪ)
ಭವಣಿಗೆ-ಬವಣಿಗೆ, ಸುತ್ತಾಟ, ಸಂಚಾರ, ಸಂಕಟ, ಇನ್ನೆಬರ-ಇಲ್ಲಿಯವರೆಗೆ
ಮೂಲ ...{Loading}...
ಭವಣಿಗೆಯ ಬಂದಡವಿಯಲಿ ಪಾಂ
ಡವರು ನವೆದರು ರಾಜ್ಯವನು ಯಾ
ದವರು ನಾವನುಭವಿಸುತಿದ್ದೆವು ನವೆದರಿನ್ನೆಬರ
ಅವರ ಸೊಗಸೇ ನಮ್ಮ ಸೊಗಸುಗ
ಳವರ ದುಗುಡವೆ ನಮ್ಮದದರಿಂ
ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ॥41॥
೦೪೨ ಕಾಲ ಕೈಗೂಡುವೊಡೆ ...{Loading}...
ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳ ಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಿ ಕಾಲವು ಕೈಗೂಡಿದಾಗ ಒಳಿತಿನ ಮೇಲೆ ಒಳಿತುಗಳು ಒದಗಿ ಬರುತ್ತವೆ. ಈಗ ನೋಡಿ ಪಾಂಡವರ ಬೆಳವಣಿಗೆ ಎಂಬುದು ಮೊದಲನೆಯ ಮಂಗಳಕರ ಸುದ್ದಿ. ಅದರ ಮೇಲೆ ನನ್ನ ತಂಗಿ ಸುಭದ್ರೆಯ ಮಗ ಅಭಿಮನ್ಯುವಿನ ವಿವಾಹದ ಸುದ್ದಿ ಬಂದಿದೆ. ಇದು ತುಂಬ ಸಂತೋಷದ ಸುದ್ದಿ. ಕೂಡಲೇ ನಮ್ಮ ಸಮಸ್ತ ಯಾದವವರ್ಗ ಮದುವೆಗೆಂದು ಹೊರಡಲು ಸಿದ್ಧರಾಗಲಿ” ಎಂದು ಕೃಷ್ಣನು ನೇಮಿಸಿದ.
ಪದಾರ್ಥ (ಕ.ಗ.ಪ)
ಭೂಪಾಲ-ದೊರೆ (ಪಾಂಡು), ನಿಖಿಳ-ಸಮಸ್ತ, ಜಾಲ-ಸಮೂಹ
ಟಿಪ್ಪನೀ (ಕ.ಗ.ಪ)
ಕಾಲಕೈಗೂಡುವಡೆ… ಇದೊಂದು ಗಾದೆಯ ಮಾತು
‘ಸುಖ ತಾನು ಬರುವಾಗ ಗುಳೆ ಎದ್ದು ಬರುವದು
ಒಂದಲ್ಲ ಎರಡಲ್ಲ - ಪರಿವಾರವೆ !’
ಎಂಬ ಬೇಂದ್ರೆಯವರ ಮಾತನ್ನು ನೆನಪಿಸಿಕೊಳ್ಳಬಹುದು.
ಮೂಲ ...{Loading}...
ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳ ಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ॥42॥
೦೪೩ ಚರರಿಗುಡುಗೊರೆ ಗನ್ಧ ...{Loading}...
ಚರರಿಗುಡುಗೊರೆ ಗಂಧ ನಿಖಿಲಾ
ಭರಣ ಕತ್ತುರಿ ಕರ್ಪುರವನಿ
ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ
ಮರಳಿ ದೂತರು ಬಂದು ಮತ್ಸ್ಯನ
ಪುರವ ಹೊಕ್ಕರು ಕೃಷ್ಣರಾಯನ
ಕರುಣದಳತೆಯ ಬಿನ್ನವಿಸಿದರು ಪಾಂಡುತನಯರಿಗೆ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣನು ಧರ್ಮರಾಯನಿಗೆ ಪ್ರತ್ಯುತ್ತರದ ರಾಯಸವನ್ನು ಬರೆಸಿದ. ಅಲ್ಲದೆ ಉಡುಗೊರೆ ಗಂಧ ಆಭರಣ ಕಸ್ತೂರಿ ಕರ್ಪೂರಗಳನ್ನು ಕೊಡಿಸಿ ಶತ್ರು ವಿಧ್ವಂಸಕನಾದ ಶ್ರೀ ಕೃಷ್ಣ ಆ ಸೇವಕರನ್ನು ಬೀಳುಕೊಟ್ಟ. ಆ ಚಾರರು ವಿರಾಟನಗರಿಗೆ ಹಿಂದಿರುಗಿ ಬಂದರು. ಪಾಂಡುಪುತ್ರರನ್ನು ಕಂಡು ಶ್ರೀ ಕೃಷ್ಣರಾಯನ ಕರುಣೆಯ ಪ್ರಮಾಣ ಎಷ್ಟೆಂಬುದನ್ನು ತಿಳಿಸಿದರು.
ಪದಾರ್ಥ (ಕ.ಗ.ಪ)
ಚರ-ಸೇವಕ, ವಾರ್ತಾಹರ, ಅರಿದಿಶಾಪಟ-ಶತ್ರುಗಳನ್ನು ಧ್ವಂಸ ಮಾಡುವವ, ದಿಕ್ಕು ದಿಕ್ಕಿಗೆ ಚೆದುರಿಸುವವನು. ರಾಯಸ-ರಾಜಪತ್ರ, ರಾಜಸಂದೇಶದ ಪತ್ರ (ತೆಲುಗಿನಲ್ಲಿ ರಾಯಸ, ವ್ರಾಯಸಮು=ರಾಜಲೇಖ)
ಮೂಲ ...{Loading}...
ಚರರಿಗುಡುಗೊರೆ ಗಂಧ ನಿಖಿಲಾ
ಭರಣ ಕತ್ತುರಿ ಕರ್ಪುರವನಿ
ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ
ಮರಳಿ ದೂತರು ಬಂದು ಮತ್ಸ್ಯನ
ಪುರವ ಹೊಕ್ಕರು ಕೃಷ್ಣರಾಯನ
ಕರುಣದಳತೆಯ ಬಿನ್ನವಿಸಿದರು ಪಾಂಡುತನಯರಿಗೆ ॥43॥
೦೪೪ ಬಳಿಕ ಸುಮುಹೂರ್ತದಲಿ ...{Loading}...
ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಪಾಂಡವರು ಒಳ್ಳೆಯ ಮುಹೂರ್ತದಲ್ಲಿ ವಿರಾಟನಗರಿಯಿಂದ ಉತ್ತರ ದಿಕ್ಕಿನಲ್ಲಿ ರಚಿಸಿದ್ದ ಉಪಪ್ಲಾವ್ಯ ನಗರಕ್ಕೆ ಪ್ರಯಾಣ ಮಾಡಿದರು. ವಿಸ್ತಾರವಾಗಿ ನಗರವನ್ನು ನಿರ್ಮಿಸಿ ಕೇರಿಗಳನ್ನು ಹೊಂದಿಸಿದರು. ಸಕಲ ರಾಜರುಗಳಿಗೆ ಈ ಸುದ್ದಿಯನ್ನು ಹೇಳಿ ಆಹ್ವಾನಿಸಿದರು. ಹೀಗೆ ಮೇಲಿಂದ ಮೇಲೆ ಮೇಲೆ ಪಾಂಡವರಿಗೆ ಏಳಿಗೆಯಾಯಿತು.
ಪದಾರ್ಥ (ಕ.ಗ.ಪ)
ಹೊಳಲು-ನಗರ, ಉಪಪ್ಲಾವಾಖ್ಯ-ಉಪಪ್ಲಾವ್ಯ ಎಂಬ ಹೆಸರಿನ, ಬಳಿಯನಟ್ಟು-ದೂತರನ್ನು ಕಳುಹಿಸು
ಮೂಲ ...{Loading}...
ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ॥44॥
೦೪೫ ಜೋಳಿ ಹರಿದವು ...{Loading}...
ಜೋಳಿ ಹರಿದವು ನಿಖಿಳ ರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ
ನೀಲನು ಯುಧಾಮನ್ಯು ಸಮರ ಕ
ರಾಳ ಧೃಷ್ಟದ್ಯುಮ್ನ ಕೀರ್ತಿ ವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಂದೇಶವನ್ನು ಹೊತ್ತ ಪತ್ರದ ಚೀಲಗಳನ್ನು ಓಲೆ ಉಡುಗೊರೆಗಳ ಸಮೇತ ಎಲ್ಲ ರಾಜರುಗಳಿಗೂ ಕಳಿಸಲಾಯಿತು. ಪತ್ರ ತಲುಪಿದ ಕೂಡಲೇ ಪಾಂಚಾಲರಾಯನು ಮೂರು ಅಕ್ಷೋಹಿಣೀ ಸೇನೆಯ ಸಹಿತ ಉಪಪ್ಲಾವ್ಯ ನಗರಕ್ಕೆ ಬಂದ. ಅವನೊಂದಿಗೆ ನೀಲ ಯುಧಾಮನ್ಯು ಸಮರಭಯಂಕರನಾದ ಧೃಷ್ಟದ್ಯುಮ್ನ ಧೀರ ಶಿಖಂಡಿ ಎಲ್ಲರೂ ಇದ್ದರು.
ಪದಾರ್ಥ (ಕ.ಗ.ಪ)
ಜೋಳಿ-ರಾಯಸ, ರಾಜಸಂದೇಶ,
ನಿಖಿಳ-ಸಮಸ್ತ
ಹೊರವಡು-ಹೊರಡು,
ಟಿಪ್ಪನೀ (ಕ.ಗ.ಪ)
ಒಂದು ವೇಳೆ ಯುದ್ಧ ಸಂಭವಿಸಿದರೆ ಸೇನಾ ಸಹಾಯ ಬೇಕೆಂದು ಯಾಚಿಸುವುದು ಮದುವೆಗೆ ಬನ್ನಿರೆಂದು ಬೇಡುವುದು ಧರ್ಮರಾಯನ ಪತ್ರಗಳ ಉದ್ದೇಶವಾಗಿತ್ತು.
ಅಕ್ಷೋಹಿಣೀ ಬಲ-ಸೇನೆಯನ್ನು ಗಣಿಸುವಾಗ ಅಕ್ಷೋಹಿಣಿಯ ಮಾಪನ ಬಳಕೆಯಲ್ಲಿದೆ. ಇದು ಮೂಲಭಾರತದಲ್ಲಿ ‘ಅಕ್ಷೌಹಿಣಿ”. ಪತ್ತಿ ಸೇನಾಮುಖ ಗುಲ್ಮ, ಗಣ, ವಾಹಿನೀ, ಪೃತನ, ಚಮೂ, ಅನೀಕಿನೀಗಳ ಗಣನಾಕ್ರಮವಿದೆ ಒಂದೊಂದು ಮಂಡಲದ ಸಂಖ್ಯೆಯ ಮೂರರಷ್ಟು ಎರಡನೆಯದರಲ್ಲಿರುತ್ತದೆ.
ಆನೆ ರಥ ಕುದುರೆ ಕಾಲಾಳು
ಪತ್ತಿ 1 3 3 5
ಸೇನಾಮುಖ 3 3 9 15
ಗುಲ್ಮ 9 9 27 45
ಗಣ 27 27 81 135
ವಾಹಿನೀ 81 81 243 405
ಪೃತನಾ 243 243 729 1215
ಚಮೂ 729 729 2187 3645
ಅನೀಕಿನಿ 2187 2187 6561 10935
ಅಕ್ಷೋಹಿಣೀ 21870 21870 65610 109350
10 ಅನೀಕಿನಿ ಒಂದು ಅಕ್ಷೋಹಿಣಿ
ನೀಲ-ಅನೂಪದೇಶದ ಅರಸ. ಮಹಾಭಾರತ ಯುದ್ಧದಲ್ಲಿ ಪಾಂಡವರ ಕಡೆ ಸೇರಿ ಹೋರಾಡಿದವನು, ಯುದ್ಧದಲ್ಲಿ ಈತ ಅಶ್ವತ್ಥಾಮನಿಂದ ಹತನಾದ.
ಯುಧಾಮನ್ಯು-ದ್ರುಪದನ ಮಗ. ಮಹಾಭಾರತ ಯುದ್ಧದಲ್ಲಿ ಅಶ್ವತ್ಥಾಮನಿಂದ ಹತನಾದವನು.
ಧೃಷ್ಟದ್ಯುಮ್ನ-ದ್ರುಪದನ ಪುತ್ರ. ಅಗ್ನಿ ಸಂಭವ, ಪಾಂಡವ ಸೇನಾ ನಾಯಕನಾಗಿದ್ದವನು. ದ್ರೋಣರನ್ನು ಕೊಂದ. ಅಶ್ವತ್ಥಾಮನಿಂದ ಹತನಾದ.
ಶಿಖಂಡಿ-ದ್ರುಪದನ ಮಗ. ಹುಟ್ಟಿದಾಗ ಹೆಣ್ಣು. ಆದರೆ ಗಂಡು ವೇಷದಲ್ಲಿ ಬೆಳೆದ. ಮುಂದೆ ಒಬ್ಬ ಯಕ್ಷನಿಂದ ಗಂಡಸುತನವನ್ನು ಪಡೆದ. ಭೀಷ್ಮರ ಪತನಕ್ಕೆ ಈ ಶಿಖಂಡಿಯೇ ಕಾರಣನಾದ.
ಮೂಲ ...{Loading}...
ಜೋಳಿ ಹರಿದವು ನಿಖಿಳ ರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ
ನೀಲನು ಯುಧಾಮನ್ಯು ಸಮರ ಕ
ರಾಳ ಧೃಷ್ಟದ್ಯುಮ್ನ ಕೀರ್ತಿ ವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ॥45॥
೦೪೬ ಇದಿರುಗೊಣ್ಡರು ಹರುಷದಲಿ ...{Loading}...
ಇದಿರುಗೊಂಡರು ಹರುಷದಲಿ ದುರು
ಪದಿಯ ಬಾಂಧವ ಪೈಕವನು ಮಿಗೆ
ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ
ಒದಗಿತಖಿಳಕ್ಷೋಣಿ ಬಲ ಸಂ
ಪದವನುನ್ನತ ವಸ್ತುಗಳ ಸೊಂ
ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಲರಾಜ, ದ್ರೌಪದಿಯ ಬಳಗದ ಇತರ ಸಮಸ್ತರನ್ನು ಹಾಗೂ ಪಾಂಚಾಲರಾಜನ ಸೇನೆಯನ್ನು ಪಾಂಡವರು ಸಂತೋಷದಿಂದ ಸ್ವಾಗತಿಸಿದರು. ಅಲ್ಲದೆ ಮದುವೆಗೆ ಮತ್ತು ಸೇನಾ ಸಹಾಯಕ್ಕೆ ಬಂದಿದ್ದ ಸಮಸ್ತ ರಾಜರನ್ನು ಸಂತೋಷದಿಂದ ಎದುರುಗೊಂಡರು. ಅಕ್ಷೋಹಿಣೀ ಬಲವೂ ಒದಗಿಬಂದಿತು. ಸೇನೆ ಮತ್ತು ಉನ್ನತ ವಸ್ತುಗಳ ಸಂಪತ್ತು ಸೇರಿಕೊಂಡವು. ಎಲ್ಲ ಅಣಿಮಾಡಿಕೊಂಡು ಮದುವೆಯ ಮಂಗಳಾಭ್ಯುದಯಕ್ಕೆ ಪಾಂಡವರು ಸಿದ್ಧರಾದರು.
ಪದಾರ್ಥ (ಕ.ಗ.ಪ)
ಪೈಕ-ಬಳಗ, ಬಂಧು, ಮಹಾಮಹೀಶ್ವರರು-ಮಹಾರಾಜರುಗಳು, ಕೈಗೈದು-ಅಲಂಕರಿಸಿ, ಸಜ್ಜಾಗಿ, ಸೊಂಪು-ಸೊಗಸು
ಮೂಲ ...{Loading}...
ಇದಿರುಗೊಂಡರು ಹರುಷದಲಿ ದುರು
ಪದಿಯ ಬಾಂಧವ ಪೈಕವನು ಮಿಗೆ
ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ
ಒದಗಿತಖಿಳಕ್ಷೋಣಿ ಬಲ ಸಂ
ಪದವನುನ್ನತ ವಸ್ತುಗಳ ಸೊಂ
ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ॥46॥
೦೪೭ ದೇವನೀ ಬಹನೆನ್ದು ...{Loading}...
ದೇವನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾರ್ಗ ಮಧ್ಯದಲ್ಲೆಲ್ಲ ಸಡಗರ. ಶ್ರೀ ಕೃಷ್ಣ ಈ ಮಾರ್ಗವಾಗಿ ಬರುವನೆಂಬ ನಂಬಿಕೆಯಿಂದ ಸಾಲುಸಾಲಾಗಿ ಬಂದು ಊರವರು ತಮ್ಮ ತಮ್ಮ ನಗರಿಗಳನ್ನು ಸೊಗಸಾಗಿ ಅಲಂಕರಿಸಿದರು. ಬೀದಿ ಬೀದಿಗಳು ರಂಗವಲ್ಲಿ, ರತ್ನಾಲಂಕರಣ, ಹೂವಿನ ಗೊಂಡೆಗಳಿಂದ ಶೋಭಿಸಿದುವು. ಭದ್ರವಾದ ಚಾವಣಿಯ ಚೌಕಟ್ಟುಗಳಿಂದ ಅಲಂಕರಿಸಿದ ಮನೆಯ ಬಾಗಿಲುಗಳಿಂದ, ಕೇರಿಕೇರಿಗಳು ಸಜ್ಜಾಗಿ ನಿಂತವು.
ಪದಾರ್ಥ (ಕ.ಗ.ಪ)
ದಾವಣಿ-ಗುಂಪು, ಸಾಲು, ಹೂವಲಿ-ರಂಗವಲ್ಲಿ (ಯಂತೆ ಮಾಡಿದ ಅಲಂಕಾರ), ವೀಧಿ-ಬೀದಿ, ಸೂಸಕ-ಕುಚ್ಚು, ಗೊಂಡೆ, ಲೋವೆ-ಚಾವಣಿಯ ಚೌಕಟ್ಟು, ಲಂಬಳ-ಬಾಗಿಲಿನ ಚೌಕಟ್ಟು
ಮೂಲ ...{Loading}...
ದೇವನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ॥47॥
೦೪೮ ಚಾರುತರ ಕತ್ತುರಿಯ ...{Loading}...
ಚಾರುತರ ಕತ್ತುರಿಯ ಸಾದಿನ
ಸಾರಣೆಯ ಕುಂಕುಮದ ರಸಗಳ
ಕಾರಣೆಯ ನವ ಚಿತ್ರಪತ್ರದ ಬಹಳ ಭಿತ್ತಿಗಳ
ಓರಣದ ಬೀದಿಗಳ ತಳಿಗೆಯ
ತೋರಣದ ಹೊಂಜಗುಲಿಗಳ ಪ
ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೋಹರ ಕಸ್ತೂರಿ ಹಾಗೂ ಕಂಪಿನ ಸಾರಣೆಗಳು ಕುಂಕುಮದ ರಸದ ಕಾರಣೆಗಳ ಚಿತ್ರಗಳಿಂದ ಅಲಂಕರಣಗೊಂಡ ಗೋಡೆಗಳು ಮೆರೆದವು. ಓರಣವಾಗಿ ಬೀದಿಗಳನ್ನು ಇರಿಸಲಾಗಿತ್ತು. ತೋರಣಗಳನ್ನು ಕಟ್ಟಿ ತಟ್ಟೆಗಳನ್ನು ಸಿದ್ಧ ಪಡಿಸಿಕೊಂಡು ಪನ್ನೀರುಗಳ ಸಾಧನಗಳಿಂದ ಸಜ್ಜಾಗಿ ಮನೆ ಮನೆಗಳು ಶೋಭಿಸಿದವು.
ಪದಾರ್ಥ (ಕ.ಗ.ಪ)
ಚಾರುತರ-ಮನೋಹರ, ಕತ್ತುರಿ-ಕಸ್ತೂರಿ, ಸಾದು- ಒಂದು ಬಗೆಯ ಸುಗಂಧ ದ್ರವ್ಯ, ಸಾರಣೆ-ನೆಲಗಾರೆ, ಸುಗಂಧ ದ್ರವ್ಯಗಳನ್ನು ಗೋಡೆಗೆ ಹಚ್ಚಿ ಅಲಂಕರಿಸುವಿಕೆ, ಕಾರಣೆ-ಗೋಡೆಯ ಕೆಳಭಾಗದ ಕೆಂಪು ಬಣ್ಣದ ಗೆರೆ, ಪತ್ರ-ಎಲೆ, ತಳಿಗೆ-ಆರತಿಯ ತಟ್ಟೆ, ಚಳೆಯ-ಸಿಂಪಡಿಸುವ ಸಾಧನ
ಮೂಲ ...{Loading}...
ಚಾರುತರ ಕತ್ತುರಿಯ ಸಾದಿನ
ಸಾರಣೆಯ ಕುಂಕುಮದ ರಸಗಳ
ಕಾರಣೆಯ ನವ ಚಿತ್ರಪತ್ರದ ಬಹಳ ಭಿತ್ತಿಗಳ
ಓರಣದ ಬೀದಿಗಳ ತಳಿಗೆಯ
ತೋರಣದ ಹೊಂಜಗುಲಿಗಳ ಪ
ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು ॥48॥
೦೪೯ ಕಟ್ಟಿದವು ಗುಡಿ ...{Loading}...
ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ತೋರುವ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಪಪ್ಲಾವ್ಯ ನಗರದಲ್ಲಿ ಪ್ರತಿಯೊಂದು ಮನೆಗೂ ಧ್ವಜಗಳನ್ನು ಕಟ್ಟಿ ಹಾರಿಸಲಾಗಿತ್ತು. ಮನೆಮನೆಗಳಿಗೂ ಮೇಲ್ಕಟ್ಟು ಬಿಗಿಯಲಾಗಿತ್ತು. ಊರಿನ ಹೆಂಗಸರೆಲ್ಲ ಅಲಂಕೃತರಾಗಿ ಕಳಶ ಕನ್ನಡಿ ಹಿಡಿದು ಮನಮೋಹಕವಾಗಿ ನಿಂತರು. ಆನೆ ಕುದುರೆ ರಥಗಳ ಸಾಲುಸಾಲುಗಳು ಮೆರೆದವು. ಹೀಗೆ ಸಿದ್ದರಾಗಿ ಪಾಂಡವರು ರಾಕ್ಷಸರ ಪಾಲಿಗೆ ವಿನಾಶಕಾರಿಯಾದ ಶ್ರೀ ಕೃಷ್ಣರಾಯನನ್ನು ಎದುರುಗೊಂಡರು.
ಪದಾರ್ಥ (ಕ.ಗ.ಪ)
ಗುಡಿ-ಧ್ವಜ, ದೇಶಿ-ಮನೋಹರ, ಇಟ್ಟಣಿಸಿ-ಒತ್ತೊತ್ತಾಗಿ, ದನುಜರಾಯ ಘರಟ್ಟ, ದನುಜರಾಯ-ರಾಕ್ಷಸರುಗಳು, ಘರಟ್ಟ-ಬೀಸುವ ಕಲ್ಲು (ಅಂದರೆ ಶತ್ರು ರಾಕ್ಷಸರ ಪಾಲಿಗೆ ಬೀಸುವ ಕಲ್ಲಿನಂತಿದ್ದ ಶ್ರೀಕೃಷ್ಣ) ಅರೆಯುವವನು.
ಮೂಲ ...{Loading}...
ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ತೋರುವ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು ॥49॥
೦೫೦ ಕಳಶ ಕನ್ನಡಿ ...{Loading}...
ಕಳಶ ಕನ್ನಡಿ ವಾದ್ಯರವ ಮಂ
ಗಳ ಮಹಾಂಬುಧಿ ಮಸಗಿದವೊಲು
ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ
ಹೊಳೆವ ಕಂಗಳ ಮುಖದ ಕಾಂತಿಯ
ಮೊಲೆಗಳೊಡ್ಡಿನ ಮಂದ ಗಮನದ
ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಮಂಗಲಿಯರು ಭಾರಿಯ ಸಂಖ್ಯೆಯಲ್ಲಿ ಶ್ರೀಕೃಷ್ಣನನ್ನು ಎದುರುಗೊಳ್ಳಲು ಕಳಶ ಕನ್ನಡಿ ಸಹಿತ ನಿಂತರು. ವಾದ್ಯಗಳ ಧ್ವನಿಯಂತೂ ಮಹಾ ಸಮುದ್ರವನ್ನೇ ಕಡೆದಂತಾಗಿತ್ತು. ಹೊಳೆ ಹೊಳೆಯುವ ಪತಾಕೆ, ಛತ್ರ ಚಾಮರಗಳನ್ನು ಹಿಡಿದವರು ಮತ್ತು ಆಕರ್ಷಕ ಕಣ್ಣುಗಳ ಭಾರವಾದ ಮೊಲೆಗಳ ನಿಧಾನ ನಡಿಗೆಯ ಮುಸುಕುಧರಿಸಿದ ಸುಂದರಿಯರು ಅಲ್ಲಿ ನೆರೆದಿದ್ದರು.
ಪದಾರ್ಥ (ಕ.ಗ.ಪ)
ರವ-ಶಬ್ದ, ಮಹಾಂಬುಧಿ-(ಮಹಾ) ಸಮುದ್ರ, ಮಸಗು-ತಾಗು, ಘರ್ಷಿಸು, ಉಜ್ಜು, ಪತಾಕೆ-ಧ್ವಜ, ಪತಾಕಾವಳಿ-ಧ್ವಜಸಮೂಹ, ಮೌಳಿಕಾತಿ-ಚೆಲುವೆ, ಗುಂಪಿನ ನಾಯಕಿ
ಮೂಲ ...{Loading}...
ಕಳಶ ಕನ್ನಡಿ ವಾದ್ಯರವ ಮಂ
ಗಳ ಮಹಾಂಬುಧಿ ಮಸಗಿದವೊಲು
ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ
ಹೊಳೆವ ಕಂಗಳ ಮುಖದ ಕಾಂತಿಯ
ಮೊಲೆಗಳೊಡ್ಡಿನ ಮಂದ ಗಮನದ
ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ ॥50॥
೦೫೧ ಹೊಳಹು ಮಿಗೆ ...{Loading}...
ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಂದಣಂಗಳ
ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು
ಬಳಿಕ ಭೂಪರು ಕಾಲು ನಡೆಯಲಿ
ನಲಿದು ಬರುತಿರಲಾನೆಯಿಂದಿಳೆ
ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲರೂ ಉತ್ಸಾಹದ ನಿರೀಕ್ಷೆಯಲ್ಲಿರುವಾಗ ದೂರದಿಂದಲೇ ಕಾಂತಿಯುಕ್ತವಾದ ಗರುಡ ಧ್ವಜವನ್ನು ಕಂಡರು. ಪಲ್ಲಕ್ಕಿಗಳಿಂದ ಇಳಿದು ಬಂದ ದ್ರುಪದ, ವಿರಾಟ, ಪಾಂಡವಾದಿಗಳು ಕೃಷ್ಣನಿಗೆ ನಮಸ್ಕರಿಸಿದರು. ಅನಂತರ ರಾಜರುಗಳು ಕಾಲು ನಡಿಗೆಯಲ್ಲಿ ಸಂಭ್ರಮದಿಂದ ಬಂದರು. ಆಗ ಶ್ರೀಕೃಷ್ಣನು ಆನೆಯಿಂದ ಇಳಿದು ಬಂದ.
ಪದಾರ್ಥ (ಕ.ಗ.ಪ)
ಹೊಳಹುಮಿಗೆ-ಕಾಂತಿ ಉಕ್ಕಲು, ಅಂದಣ-ಪಲ್ಲಕ್ಕಿ, ಬಿಜಯಂಗೈ-ಬಾ, ಅಸುರಾರಾತಿ-ಅಸುರ-ರಾಕ್ಷಸರ, ಅರಾತಿ-ಶತ್ರು-ಕೃಷ್ಣ, ಮೈಯಿಕ್ಕು-ನಮಸ್ಕರಿಸು
ಮೂಲ ...{Loading}...
ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಂದಣಂಗಳ
ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು
ಬಳಿಕ ಭೂಪರು ಕಾಲು ನಡೆಯಲಿ
ನಲಿದು ಬರುತಿರಲಾನೆಯಿಂದಿಳೆ
ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ ॥51॥
೦೫೨ ಇತ್ತನವರಿಗೆ ಸಮಯವನು ...{Loading}...
ಇತ್ತನವರಿಗೆ ಸಮಯವನು ದೇ
ವೋತ್ತಮನು ನಿಗಮೌಘವರಸಿದ
ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ
ಹೆತ್ತ ಮಕ್ಕಳು ನಿಲಲಿ ಭಕ್ತರ
ನಿತ್ತ ಕರೆ ನೆನೆವರಿಗೆ ತನ್ನನು
ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿಗೆಲ್ಲ ಆ ದೇವೋತ್ತಮ ಸಂದರ್ಶನಕ್ಕೆ ಅವಕಾಶ ನೀಡಿದ. ವೇದಶಾಸ್ತ್ರಗಳೆಲ್ಲ ಎಷ್ಟು ಹುಡುಕಿದರೂ ಸಿಗದೆ ಆಚೆ ಈಚೆ ಸರಿಯುವ, ಋಷಿಗಳ ಧ್ಯಾನಸ್ಥ ಮನಸ್ಸಿಗೆ ಲಕ್ಷ್ಯ ಕೊಡದ ದೇವನು ಈ ಪಾಂಡವರಿಗೆ ಮತ್ತು ಅವರ ಗಣಕ್ಕೆ ಕಾಣಿಸಿಕೊಂಡ. ಭಕ್ತರ ವಿಷಯದಲ್ಲಿ ತನ್ನ ಮಕ್ಕಳೂ ಕೂಡ ಸ್ವಲ್ಪ ಕಾದಿರಲಿ ಭಕ್ತರನ್ನು ಮಾತ್ರ ಇಲ್ಲಿಗೆ ಮೊದಲು ಕಳಿಸಿ ಎನ್ನುವವ ಕೃಷ್ಣ. ಏಕೆಂದರೆ ನೆನೆಯುವವರಿಗೆ ತನ್ನನ್ನು ತೆತ್ತುಕೊಂಡಿರುವುದಾಗಿ ಘೋಷಿಸಿರುವ ದೇವ ನಾಯಕನಲ್ಲವೇ ಅವನು !
ಪದಾರ್ಥ (ಕ.ಗ.ಪ)
ಸಮಯ-ಸಂದರ್ಶನದ ಭಾಗ್ಯ, ಅವಕಾಶ, ನಿಗಮೌಘ-ನಿಗಮ-ಶಾಸ್ತ್ರ ಓಘ-ಸಮೂಹ, ಬೋಳೆಯರು-ದೇವತೆಗಳು
ಮೂಲ ...{Loading}...
ಇತ್ತನವರಿಗೆ ಸಮಯವನು ದೇ
ವೋತ್ತಮನು ನಿಗಮೌಘವರಸಿದ
ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ
ಹೆತ್ತ ಮಕ್ಕಳು ನಿಲಲಿ ಭಕ್ತರ
ನಿತ್ತ ಕರೆ ನೆನೆವರಿಗೆ ತನ್ನನು
ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ ॥52॥
೦೫೩ ಬಲದ ಪದಘಟ್ಟಣೆಯ ...{Loading}...
ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಬರುತ್ತಿದ್ದಾಗ ಸೈನಿಕರೂ ಬರುತ್ತಿದ್ದರಷ್ಟೆ. ಅವರ ಪಾದಗಳ ಧೂಳಿನಿಂದ ಆಕಾಶ ಮಾರ್ಗವೆಲ್ಲ ಬೆಳುಪನ್ನು ಕಳೆದುಕೊಂಡಿತ್ತು. ಮಾರ್ಗಾಯಾಸದಿಂದ ಕೃಷ್ಣನ ಕಪೋಲ ಮಂಡಲವು ಬಿಸಿಲಿನ ಝಳಕ್ಕೆ ಸಣ್ಣದಾಗಿ ಬೆವರಿಡುತ್ತಿದ್ದಿತು. ಪಕ್ಕದಲ್ಲೇ “ಎಚ್ಚರಿಕೆ ಎಚ್ಚರಿಕೆ ಶ್ರೀಕೃಷ್ಣ ಬರುತ್ತಿದ್ದಾನೆ” ಎಂಬ ಕಳಕಳ ಬೇರೆ. ಹೀಗೆ ಎಲ್ಲರ ಮೇಲೆ ಪ್ರಸಾದ ದೃಷ್ಟಿ ಹಾಯಿಸಿ ನಸುನಗುತ್ತಾ ಬರುತ್ತಿದ್ದ ಶ್ರೀಕೃಷ್ಣನನ್ನು ಆ ಸೇನೆ ನೋಡಿತು.
ಪದಾರ್ಥ (ಕ.ಗ.ಪ)
ಪದಘಟ್ಟನೆ-ಕಾಲ ತುಳಿತ, ರಜ-ಧೂಳು, ಅಂಬರ-ಆಕಾಶ, ಪಾಯವಧಾರು-ಅವಧಾರು (ಎಚ್ಚರಿಕೆ) ಎಂಬ ಕಳಕಳ
ಮೂಲ ...{Loading}...
ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ ॥53॥
೦೫೪ ಬಾಗಿದವು ಬರಿಕೈಗಳನು ...{Loading}...
ಬಾಗಿದವು ಬರಿಕೈಗಳನು ಹಣೆ
ಗಾಗಿ ಮುರುಹಿದವಾನೆಗಳು ತಲೆ
ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು
ತೂಗಿ ತನುವನು ಪುಳಕದಲಿ ಮನ
ಲಾಗು ಮಿಗೆ ಮೈಮರೆದು ಹರುಷದ
ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳೆಲ್ಲ ಸೊಂಡಿಲುಗಳನ್ನು ಹಣೆಯ ಬಳಿ ಇರಿಸಿಕೊಂಡು ನಮಸ್ಕರಿಸಿದುವು. ಹೇಷಾರವ ಮಾಡುತ್ತ ಕುದುರೆಗಳು ಶ್ರೀಕೃಷ್ಣನಿಗೆ ತಲೆ ಬಾಗಿ ಸಂಭ್ರಮಿಸಿದುವು. ಸೈನಿಕರೂ ಅಷ್ಟೆ. ದೇಹವನ್ನು ತೂಗುತ್ತ ಪುಳಕಗೊಂಡು ಆನಂದದಿಂದ ಮೈಮರೆತು ಸಂತೋಷ ಸಮುದ್ರದಲ್ಲಿ ಓಲಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಮುರುಹಿದವು-ಬಾಗಿದುವು, ಗುಡಿಗಟ್ಟು-ಉತ್ಸಾಹಿಸು, ಹೇಷಾರವ-ಕುದುರೆಗಳ ಧ್ವನಿ, ಲಾಗುಮಿಗು-ಅತಿಶಯವಾಗು, ತಳತಂತ್ರ-ಸೇನೆ
ಮೂಲ ...{Loading}...
ಬಾಗಿದವು ಬರಿಕೈಗಳನು ಹಣೆ
ಗಾಗಿ ಮುರುಹಿದವಾನೆಗಳು ತಲೆ
ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು
ತೂಗಿ ತನುವನು ಪುಳಕದಲಿ ಮನ
ಲಾಗು ಮಿಗೆ ಮೈಮರೆದು ಹರುಷದ
ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ ॥54॥
೦೫೫ ಅಙ್ಗನೆಯರರವಿನ್ದನಾಭನ ಮಙ್ಗಳ ...{Loading}...
ಅಂಗನೆಯರರವಿಂದನಾಭನ
ಮಂಗಳ ಶ್ರೀಮೂರ್ತಿ ಸುಧೆಯನು
ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ
ಅಂಗಜನ ಪೆತ್ತಯ್ಯ ನೀ ರೂ
ಹಿಂಗೆ ಬಡವನೆಯೆನುತ ಮುರಹರ
ನಂಗಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿದ್ದ ಸುಮಂಗಲಿಯರೆಲ್ಲ ತಾವರೆಯ ಹೊಕ್ಕಳಿನ ಶ್ರೀಕೃಷ್ಣನ ಮಂಗಳಕರ ಶ್ರೀಮೂರ್ತಿ ಎಂಬ ಅಮೃತವನ್ನು ತಮ್ಮ ಕಣ್ಣುಗಳಿಂದ ಕುಡಿ ಕುಡಿದು ಆಯಾಸವನ್ನೇ ಕಾಣದಾದರು. ಮನ್ಮಥನ ತಂದೆಯಾದ ಶ್ರೀಕೃಷ್ಣನಿಗೆ ರೂಪದಲ್ಲಿ ಬಡತನವೆಲ್ಲಿ ಬಂತು ಎನ್ನುತ್ತಾ ಅವರೆಲ್ಲ ಶ್ರೀ ಕೃಷ್ಣನ ದೇಹಕಾಂತಿಯ ಸೆರೆಯಲ್ಲಿ ಸಿಕ್ಕವರಾಗಿದ್ದರು.
ಪದಾರ್ಥ (ಕ.ಗ.ಪ)
ಅಂಗನೆ-ಸ್ತ್ರೀ, ಅರವಿಂದನಾಭ-ತಾವರೆಯ ಹೊಕ್ಕಳು ಉಳ್ಳವ, ಕೃಷ್ಣ, ಅಂಗಜ-ಮನ್ಮಥ, ಸತಿನಿವಹ-ಹೆಂಗಸರ ಗುಂಪು
ಮೂಲ ...{Loading}...
ಅಂಗನೆಯರರವಿಂದನಾಭನ
ಮಂಗಳ ಶ್ರೀಮೂರ್ತಿ ಸುಧೆಯನು
ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ
ಅಂಗಜನ ಪೆತ್ತಯ್ಯ ನೀ ರೂ
ಹಿಂಗೆ ಬಡವನೆಯೆನುತ ಮುರಹರ
ನಂಗಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ ॥55॥
೦೫೬ ಎರಡು ಸೇರೆಯ ...{Loading}...
ಎರಡು ಸೇರೆಯ ತುಂಬಿ ರತ್ನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ
ನರ ವೃಕೋದರ ನಕುಲ ಸಹದೇ
ವರು ವಿರಾಟ ದ್ರುಪದ ಮೊದಲಾ
ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಎರಡು ಬೊಗಸೆಗಳಲ್ಲೂ ರತ್ನವನ್ನು ತುಂಬಿಕೊಂಡು ಶ್ರೀ ಕೃಷ್ಣನ ಕಾಲಮೇಲೆ ಸುರಿದು ವಿಮಲ ಭಕ್ತಿಯಿಂದ ಆ ಬ್ರಹ್ಮನ ತಂದೆಯಾದ ಅವನ ಪಾದಗಳಿಗೆ ಎರಗಿದ. ಅನಂತರ ಅರ್ಜುನ ಭೀಮ ನಕುಲ ಸಹದೇವ ವಿರಾಟ ದ್ರುಪದ ಮೊದಲಾಗಿ ಸಮಸ್ತ ರಾಜವರ್ಗದವರೂ ನಮಸ್ಕರಿಸಿದರು.
ಪದಾರ್ಥ (ಕ.ಗ.ಪ)
ಸೇರೆ-ಬೊಗಸೆ, ಚತುರಾಸ್ಯ ಜನಕ-ಬ್ರಹ್ಮನ ಸೃಷ್ಟಿಕರ್ತ-ವಿಷ್ಣು, ಕೃಷ್ಣ, ಒಗ್ಗು-ಸಮೂಹ, ಗುಂಪು
ಮೂಲ ...{Loading}...
ಎರಡು ಸೇರೆಯ ತುಂಬಿ ರತ್ನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ
ನರ ವೃಕೋದರ ನಕುಲ ಸಹದೇ
ವರು ವಿರಾಟ ದ್ರುಪದ ಮೊದಲಾ
ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ ॥56॥
೦೫೭ ಶಿರವ ನೆಗಹಿ ...{Loading}...
ಶಿರವ ನೆಗಹಿ ಯುಧಿಷ್ಠಿರನ ಮೈ
ಮುರಿಯಲೀಯದೆ ಕೃಷ್ಣನಪ್ಪಿದ
ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು
ಹರುಷದಲಿ ತೆಗೆದಪ್ಪಿ ಭೂಮೀ
ಶ್ವರರ ಮನ್ನಿಸಿದನು ವಿಳಾಸಿನಿ
ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದವನೇ ಶ್ರೀ ಕೃಷ್ಣನು ಧರ್ಮರಾಯನನ್ನು ಪೂರ್ತಿ ಬಗ್ಗಲು ಬಿಡದೆ ಅವನ ತಲೆಯನ್ನು ಎತ್ತಿ ಅವನನ್ನು ಅಪ್ಪಿಕೊಂಡನು. ಹಾಗೆಯೇ ಪ್ರೇಮಭಾವದಿಂದ ಭೀಮ ಅರ್ಜುನ ನಕುಲ ಸಹದೇವರುಗಳನ್ನು ಆಲಂಗಿಸಿದನು. ಉಳಿದ ರಾಜರುಗಳನ್ನೆಲ್ಲ ಗೌರವ ಭಾವದಿಂದ ನೋಡಿಕೊಂಡ. ಆಗ ತನ್ನ ಗೆಳತಿಯರೊಂದಿಗೆ ವೈಭವದಿಂದ ದ್ರೌಪದಿಯು ಬಂದು ಶ್ರೀ ಕೃಷ್ಣನ ಸಂದರ್ಶನವನ್ನು ಪಡೆದಳು.
ಪದಾರ್ಥ (ಕ.ಗ.ಪ)
ನೆಗಹು-ಎತ್ತು, ಯಮಳ-ಜವಳಿ (ನಕುಲ ಸಹದೇವ), ವಿಡಾಯಿ-ವೈಭವ, ಮುರಹರ-ಕೃಷ್ಣ
(ಮುರ ಎಂಬ ರಾಕ್ಷಸನನ್ನು ಕೊಂದವನು) ಮುರಾಸುರನು ನರಕಾಸುರನ ಅಣ್ಣ. ಕೃಷ್ಣ ಈತನನ್ನು ಕೊಲ್ಲುತ್ತಾನೆ.
ಮೂಲ ...{Loading}...
ಶಿರವ ನೆಗಹಿ ಯುಧಿಷ್ಠಿರನ ಮೈ
ಮುರಿಯಲೀಯದೆ ಕೃಷ್ಣನಪ್ಪಿದ
ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು
ಹರುಷದಲಿ ತೆಗೆದಪ್ಪಿ ಭೂಮೀ
ಶ್ವರರ ಮನ್ನಿಸಿದನು ವಿಳಾಸಿನಿ
ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ ॥57॥
೦೫೮ ಕಾಣಿಕೆಯ ಕೈಕೊಣ್ಡು ...{Loading}...
ಕಾಣಿಕೆಯ ಕೈಕೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರೆಗೆ ನೇಮವ ಕೊಟ್ಟು ಕಳುಹಿದನು
ರಾಣಿ ರುಕುಮಿಣಿಯಾದಿಯಾದ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ದ್ರೌಪದಿಯಿಂದ ಕಾಣಿಕೆ ಸ್ವೀಕರಿಸಿ ಗೌರವಿಸಿದ ನಂತರ ತನ್ನ ರಾಣಿವಾಸದವರಲ್ಲಿಗೆ ಅವಳನ್ನು ಕಳುಹಿಸಿಕೊಟ್ಟ. ರುಕ್ಮಿಣಿಯೇ ಮೊದಲಾದ ಕೃಷ್ಣನ ರಾಣಿಯರುಗಳನ್ನೆಲ್ಲ ಕಂಡು ದ್ರೌಪದಿ ಕಾಣಿಕೆಯಿತ್ತು ನಮಸ್ಕರಿಸಿ ಪ್ರೀತಿಯಿಂದ ಮಾತಾಡಿಸಿದಳು.
ಪದಾರ್ಥ (ಕ.ಗ.ಪ)
ಕ್ಷೋಣಿ ಧರ-ಭೂಮಿಯನ್ನು ಹೊತ್ತವನು, ಅಂದರೆ ವರಾಹರೂಪಿಯಾದ ವಿಷ್ಣು, ಶ್ರೀಕೃಷ್ಣ,
ಟಿಪ್ಪನೀ (ಕ.ಗ.ಪ)
ರಾಣಿ ರುಕುಮಿಣಿಯಾದಿಯಾದ… ಕೃಷ್ಣನ ಅಷ್ಟ ಮಹಿಷಿಯರೆಂದರೆ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಕಾಳಿಂದಿ, ಮಿತ್ರವಿಂದ, ಸತ್ಯಕೀರ್ತಿ, ಭದ್ರ ಮತ್ತು ಲಕ್ಷಣೆ ಕೆಲವು ಪಾಠಗಳಲ್ಲಿ ನಾಗ್ನಜಿತೆಯ ಹೆಸರಿದೆ.
ಮೂಲ ...{Loading}...
ಕಾಣಿಕೆಯ ಕೈಕೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರೆಗೆ ನೇಮವ ಕೊಟ್ಟು ಕಳುಹಿದನು
ರಾಣಿ ರುಕುಮಿಣಿಯಾದಿಯಾದ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ ॥58॥
೦೫೯ ದರುಶನವನೊಲಿದಿತ್ತು ವಸುದೇ ...{Loading}...
ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಕಿಯರ ಸಂ
ಕರುಷಣನ ಮಹದುಗ್ರಸೇನನ ಕಂಡನವನೀಶ
ವರ ಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಧರ್ಮರಾಯನು ವಸುದೇವ, ದೇವಕಿ, ಬಲರಾಮ ಉಗ್ರಸೇನ ಮೊದಲಾದವರನ್ನು ಕಂಡನು. ಅಲ್ಲಿ ಸುಭದ್ರಾ ದೇವಿಯು ಭಾವನವರಿಗೆ ನಮಸ್ಕರಿಸಿದಳು. ಕುಮಾರ ಅಭಿಮನ್ಯು ಸಂತೋಷದಿಂದ ಪಾಂಡವರನ್ನೆಲ್ಲ ಅಪ್ಪಿಕೊಂಡ.
ಪದಾರ್ಥ (ಕ.ಗ.ಪ)
ಸಂಕರುಷಣ-ಬಲರಾಮ, ಅವನೀಶ-ರಾಜ (ಧರ್ಮರಾಯ),
ಟಿಪ್ಪನೀ (ಕ.ಗ.ಪ)
“ಉಗ್ರಸೇನ - ಕಂಸನ ತಂದೆಯಾದ ಉಗ್ರಸೇನನಿಗೆ ಆಹುಕ, ಭೋಜ, ಕುಕುರಾಧಿಪ ಎಂಬ ನಾಮಾಂತರಗಳೂ ಇವೆ. ಮಗ ಕಂಸನ ದಬ್ಬಾಳಿಕೆಗೆ ತುತ್ತಾಗಿ ಸೆರೆಮನೆಯಲ್ಲಿ ಬಹುಕಾಲ ಇರಬೇಕಾಗಿ ಬಂದದ್ದು ಉಗ್ರಸೇನನ ಅಸಹಾಯಕ ಸ್ಥಿತಿಯನ್ನು ಸ್ರಚಿಸುತ್ತದೆ. ಮಹಾಭಾರತದ ಪ್ರಕಾರ ಕಂಸನು ರಾಕ್ಷಸನಾದ ಕಾಲನೇಮಿಯ ಅಪರಾವತಾರ. ಅಲ್ಲದೆ ಅವನು ಉಗ್ರಸೇನನ ಮಗನೂ ಅಲ್ಲ. ಉಗ್ರಸೇನನ ಹೆಂಡತಿಯ ಬಳಿಗೆ ದ್ರಮಿಲನೆಂಬ ಗಂಧರ್ವನು ಉಗ್ರಸೇನನ ವೇಷದಲ್ಲಿ ಬಂದು ಕೂಡಿದ ಸಂದರ್ಭದಲ್ಲಿ ಹುಟ್ಟಿದವನಿವನು. ಕಂಸನೇ ಅಲ್ಲದೆ ಅಹುಕನಿಗೆ ನೂರು ಜನ ಮಕ್ಕಳಿದ್ದರು. ಇವರೆಲ್ಲ ಮುಂದೆ ಸಾಲ್ವ ರಾಜನು ದ್ವಾರಕೆಯನ್ನು ಮುತ್ತಿದಾಗ ಭೀಕರವಾಗಿ ಹೋರಾಡಿ ದ್ವಾರಕೆಯನ್ನು ಉಳಿಸಿಕೊಂಡರು.
ವಾಸ್ತವವಾಗಿ ಉಗ್ರಸೇನನಿಗೆ ಮಧುರೆಯ ಆಧಿಪತ್ಯ ಬಂದದ್ದು ಆಕಸ್ಮಿಕ ಎಂದು ದೇವಿ ಭಾಗವತದಲ್ಲಿ ಹೇಳಲಾಗಿದೆ. ಯಮುನಾ ನದಿಯ ಬಯಲಿನಲ್ಲಿ ಮಧು ಎಂಬ ರಾಕ್ಷಸನ ಕ್ಷೇತ್ರ ಮಧುವನ. ಮಧುವಿನ ಮಗ ಲವಣಾಸುರನನ್ನು ಕೊಂದ ಮೇಲೆ ಮಧುರಾ ಎಂಬ ಹೆಸರು ಕೊಟ್ಟ ಶತ್ರುಘ್ನ ಆ ರಾಜ್ಯವನ್ನಾಳಿದ ಯಾದವರ ದೊರೆ ಶೂರಸೇನ, ಮಧುರೆಯ ದೊರೆ ಶೂರಸೇನನ ಮಗ ವಸುದೇವ.
ಮಹಾಭಾರತದ ಪ್ರಕಾರ ವಸುದೇವನು ಉಗ್ರಸೇನನ ಮಂತ್ರಿ, ಕಂಸನು ತಂದೆಯನ್ನು ಸೆರೆಯಲ್ಲಿಟ್ಟು ತಾನೇ ರಾಜ್ಯಭಾರ ಮಾಡುತ್ತಿದ್ದ. ತಂಗಿ ದೇವಕಿಯನ್ನೂ ವಸುದೇವನಿಗೆ ಕೊಟ್ಟು ಮದುವೆ ಮಾಡಿದ್ದ. ಈ ವಸುದೇವನ ಮೊದಲ ಪತ್ನಿ ರೋಹಿಣಿಯ ಮಕ್ಕಳೇ ಬಲರಾಮ, ಸಾರಣ, ದುರ್ಧರ ಮೊದಲಾದವರು, ಎರಡನೆಯ ಪತ್ನಿ ದೇವಕಿಯ ಪುತ್ರನೇ ಕೃಷಣ ಮತ್ತು ಪುತ್ರಿ ಸುಭದ್ರೆ, ಕೃಷ್ಣನು ತನ್ನ ಸೋದರಮಾವನಾದ ಕಂಸನನ್ನು ಕೊಂದು ಉಗ್ರಸೇನನಿಗೆ ಮತ್ತೆ ರಾಜ್ಯಭಾರವನ್ನು ವಹಿಸಿಕೊಟ್ಟನು.
ಜರಾಸಂಧನು ಉಗ್ರಸೇನನಿಗೆ ಬೀಗನಾಗಬೇಕು. ಆದರೆ ಉಗ್ರಸೇನನು ಮಗನನ್ನು ಕೊಲ್ಲಿಸಿದನೆಂದು ಸಿಟ್ಟಿಗೆ ಜರಾಸಂಧನು ಉಗ್ರಸೇನ-ಕೃಷ್ಣರ ಮೇಲೆ ಹಗೆ ಸಾಧಿಸಿದ. ಕೊನೆಗೆ ಜರಾಸಂಧನ ಉಪಟಳ ತಡೆಯಲಾರದೆ ಉಗ್ರಸೇನನು ಯಾದವರೊಂದಿಗೆ ಮಧುರೆಯನ್ನು ಬಿಟ್ಟು ಪಶ್ಚಿಮ ತೀರದ ದ್ವಾರಕೆಗೆ ಬರಬೇಕಾಯಿತು. ದ್ವಾರಕೆಯಲ್ಲಿಯೂ ಉಗ್ರಸೇನನು ಬಹುಕಾಲ ಜೀವಿಸಿದ್ದ.
ಯಾದವರ ಏಳಿಗೆಯನ್ನೂ ಕಂಡ ಉಗ್ರಸೇನ ತನ್ನ ವೃದ್ಧಾಪ್ಯದಲ್ಲಿ ಅದೇ ಯಾದವರ ಪತನವನ್ನೂ ಕಾಣಬೇಕಾಗಿ ಬಂದದ್ದು ಅವನ ದುರದೃಷ್ಟ. ಸಾಂಬನ ಹೊಟ್ಟೆಯಲ್ಲಿ ಹುಟ್ಟಿದ ಒನಕೆಯನ್ನು ಪುಡಿಪುಡಿ ಮಾಡಿ ಸಮುದ್ರಕ್ಕೆ ಎಸೆಯುವಂತೆ ಉಗ್ರಸೇನ ಆಜ್ಞೆ ಮಾಡುತ್ತಾನೆ. ಏಕೆಂದರೆ ಈ ಒನಕೆ ಯಾದವರ ವಿನಾಶಕ್ಕೆ ಕಾರಣವಾಗುತ್ತದೆ ಎಂಬ ಶಾಪದ ವಿಷಯ ಅವನಿಗೆ ತಿಳಿದಿತ್ತು. ಅಲ್ಲದೆ ಮಹಾಕುಡುಕರಾದ ಯಾದವ ವರ್ಗವನ್ನು ವಿಪತ್ತಿನಿಂದ ಕಾಪಾಡುವ ದೃಷ್ಟಿಯಿಂದ ಮದ್ಯಪಾನ ನಿಷೇಧಾಜ್ಞೆಯನ್ನು ಭಾರತದಲ್ಲಿ ಮೊತ್ತಮೊದಲು ಜಾರಿಗೊಳಿಸಿದವನು ಉಗ್ರಸೇನ. ಆದರೇನು? ಮತಾಂಧರೂ ಮದ್ಯವ್ಯಸನಿಗಳೂ ಆದ ಯಾದವರು ಪರಸ್ಪರ ಕಾದಾಡಿ ಸಾಯುವುದನ್ನು ತಪ್ಪಿಸಲು ಇವನಿಗೆ ಸಾಧ್ಯವೇ ಆಗಲಿಲ್ಲ.”
“ಉಗ್ರಸೇನ:- ಕಂಸನ ತಂದೆ. ಕಂಸನು ಇವನನ್ನು ಬಂಧಿಸಿ ತಾನೇ ರಾಜ್ಯವನ್ನು ಆಳುತ್ತಿದ್ದ. ಕಂಸನನ್ನು ಕೊಂದ ನಂತರ ಕೃಷ್ಣನು ಈತನಿಗೆ ಮತ್ತೆ ಪಟ್ಟ ಕಟ್ಟಿದ.
ವಸುದೇವ : ಕೃಷ್ಣನ ತಂದೆ. ಶೂರಸೇನ ಮಾರಿಶರಿಗೆ ಒಟ್ಟು 11 ಮಕ್ಕಳು. 6 ಗಂಡು 5 ಹೆಣ್ಣು- ಅವರಲ್ಲಿ ವಸುದೇವ ಒಬ್ಬ.
ಸಂಕರ್ಷಣ- ಬಲರಾಮ. ಮೊದಲು ದೇವಕಿಯ ಗರ್ಭದಲ್ಲಿ ಸೇರಿ ಯೋಗ ಮಾಯೆಯು ಸಂಕಲ್ಪಿಸಿದ್ದರಿಂದ ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಜಾರಿದ್ದರಿಂದ ಬಲರಾಮನಿಗೆ ಸಂಕರ್ಷಣ ಎಂಬ ಹೆಸರು ಬಂದಿದೆ.ಬೇರಾವುದೇ ಕಾವ್ಯದಲ್ಲಿ ಅಭಿಮನ್ಯುವಿನಂಥ ತೇಜಸ್ವೀ ಬಾಲಕನ ಅದ್ಭುತ ಸಾಹಸದ ವರ್ಣನೆ ಸಿಗುವದಿಲ್ಲ. ತಂದೆ, ಚಇಕ್ಕಪ್ಪ ದೊಡ್ಡಪ್ಪಂದಿದಿರಲಿ ಶತ್ರುಪಕ್ಷದ ನಾಯಕರು ಕೂಡ ಮುಕ್ತಕಂಠಧಿಂದ ಪ್ರಶಂಶಿಸಿ ಕಣ್ಣೀರು ಕರೆಯುವಂತೆ ಮಾಡುವ ಸಾಹಸಕಾರ್ಯ ಆತನದು. ಯುದ್ಧರಂಗದಲ್ಲಿ ಅವನ ನಿರ್ಭಯದ ವ್ಯಕ್ತಿತ್ವವನ್ನೂ ಸಾವಿನ ಸುದ್ದಿಯನ್ನೂ ಕೇಳಿ ಬಾಯಿ ಸುಭದ್ರೆಯಿರಲಿ ದ್ರೌಪದಿ ಕೂಡ ಬಿದ್ದು ಹೊರಳಾಡಿದ್ದಾಳೆ.
ಸುಭದ್ರೆ-ಅರ್ಜುನರ ಮಗನದ ಅಭಿಮನ್ಯು ತಮ್ಮ ಬದುಕಿನ ಬಹುಭಾಗವನ್ನು ದ್ವಾರಕಿಯಲ್ಲಿ ಅಮ್ಮ ಮಾವಂದಿರುಗಳೊಂದಿಗೆ ಕಳೆದವನು. ಆದುದರಿಂದ ಆವು ವಾಸ್ತವವಾಗಿ ಅವನನ್ನು ಕಾಣುವುದು ಉತ್ತರೆಯೊಂದಿಗೆ ಮದುವೆಯಾಗುವ ಸಂದರ್ಭದಲ್ಲಿ, ವಿರಾಟನಗರದಲ್ಲಿ. ಶ್ರೀಕೃಷ್ಣ ಮತ್ತು ಅರ್ಜುನರೇ ಅವನ ಶಿಕ್ಷಾಗುರುಗಳಾಗಿದ್ದರು. ಪಾಂಡವರು ತನ್ನ ಸ್ನೇಹಿತರಾದುದರ ಕುರುಹಾಗಿ ವಿರಾಟನು ಆ ವಂಶದೊಂದಿಗೆ ರಕ್ತಸೆಂಬಂಧವನ್ನು ಬೆಳೆಸಿದ. ಈ ಮದುವೆಯ ಸಮಾರಂಭವೇ ಪಾಂಡವರ ಬದುಕಿನ ಮಹತ್ವದ ಘಟ್ಟಗಳಲ್ಲಿ ಒಂದಾಗಿದೆ.
ಅಭಿಮನ್ಯುವಿನದು ಕೋಮಲವಾದ ಶರೀರ ಎಂದೇ ಎಲ್ಲರೂ ಭಾವಿಸುತ್ತಾರೆ. ಕುಮಾರನೆಂದೇ ಅವನನ್ನು ಸಂಬೋಧಿಸುತ್ತಾರೆ. ಆದರೆ ಈ ಚಿಕ್ಕ ಪ್ರಾಯದ ಅಭಿಮನ್ಯುವಿನ ಶಸ್ತ್ರಾಸ್ತ್ರಗಳು ಚಿಕ್ಕಪ್ರಾಯದವಲ್ಲ ಎಂಬುದು ಮಹಾಭಾರತ ಯುದ್ಧದ ಮೊದಲ ದಿನದಿಂದಲೇ ನಮ್ಮ ಅರಿವಿಗೆ ಬರುತ್ತದೆ. ಈತ ಕೌರವ ಪಕ್ಷದ ಎಲ್ಲ ನಾಯಕರ ಜತೆಗೂ ಯುದ್ಧ ಮಾಡಿ ಸೈ ಎನ್ನಿಸಿಕೊಂಡಿರುವನು. ದ್ರೋಣಪರ್ವದಲ್ಲಿ ಆಚಾರ್ಯರು ಚಕ್ರವ್ಯೂಹವನ್ನು ಒಡ್ಡಿನಿಂತಾಗಲಂತೂ ನಮ್ಮೆಲ್ಲರ U್ಪಮನವನ್ನು ಸೆಳೆಯುವ ಕೇಂದ್ರ ವ್ಯಕ್ತಿಯಾಗುತ್ತಾನೆ. ‘ತಂದೆ ಹೊರಗೆ ಯುದ್ಧಕ್ಕೆ ಹೋಗಿದ್ದರೇನಂತೆ ನಾನಿಲ್ಲವೆ?’ ಎಂಬ ಹುಮ್ಮಸ್ಸು ಅವನಿಗೆ. ಮಹಾಧೈರ್ಯಶಾಲಿ. ಎಲ್ಲ ಮಹಾವೀರರನ್ನೂ ಲೀಲಾಜಾಲವಾಗಿ ಎದುರಿಸಿ ಹೋರಾಡುವ ಆತ್ಮಪ್ರತ್ಯಯ ಇದ್ದವನು. ಏಕಾಂಗಿಯಾಗಿ ಹೋರಾಡಬಲ್ಲೆ ಎಂದು ತೋರಿಸಿಕೊಟ್ಟವನು. ಎಳೆವಯಸ್ಸಿನವನು. ಹೀಗಾಗಿ ಅಭಿಮನ್ಯು ನಮ್ಮ ಕರುಣೆ ಪ್ರೀತಿ ಮೆಚ್ಚಿಕೆಗಳಿಗೆ ಪಾತ್ರನಾಗುತ್ತಾನೆ. ಚಕ್ರವ್ಯೂಹ ತಂತ್ರದ ಪೂರ್ಣವಿವರಗಳು ಆತನಿಗೆ ತಿಳಿಯವಾದರೂ ನಿರ್ಲಕ್ಷ್ಯದಿಂದ ಒಳನುಗ್ಗುವುದರಲ್ಲಿ ಎತ್ತಿದ ಕೈ. ಶತ್ರುಸೇನೆಯಲ್ಲಿ ಅವನ ಬಾಣಗಳ ರುಚಿ ನೋಡದ ನಾಯಕರೇ ಇಲ್ಲ ಎನ್ನಬಹುದು. ಒಬ್ಬೊಬ್ಬರಾಗಿ ಇವನನ್ನು ಎದುರಿಸಿ ಸೋತ ಎಲ್ಲ ಕೌರವ ಪಕ್ಷದ ವೀರರೂ ಕೊನೆಗೆ ದ್ರೋಣನ ಆಜ್ಞೆಯಂತೆ ಒಟ್ಟಾಗಿ ಸೇರಿ ಅಭಿಮನ್ಯುವಿನ ಮೇಲೆ ಸಮೂಹಯುದ್ದ ಮಾಡುವ ಮಟ್ಟಕ್ಕೆ ಇಳಿಯಬೇಕಾಯಿತು. ಹಿಂದಿನಿಂದ ಬಂದು ಬಿಲ್ಲುಬಾಣ ಕತ್ರಿಗಳನ್ನು ತುಂಡರಿಸಬೇಕಾಯಿತು. ಪಳಗಿದ ಮಹಾರಥಿಗಳು ಯುದ್ಧ ನೀತಿ ವಿಶಾರದರು ಎಲ್ಲ ಕೌರವ ಪಕ್ಷದವರೂ ಸೇರಿ ಇವನಿಗಾಗಿ ತಮ್ಮ ನೈತಿಕ ನಿಲುವುಗಳನ್ನು ತಾತ್ಕಾಲಿಕವಾಗಿಯಾದರೂ ಮಾರ್ಪಡಿಸಿಕೊಳ್ಳಬೇಕಾಯಿತು. ಕೌರವಸೇನೆ-ನಾಯಕರವಿರುದ್ದ ದಿಟ್ಟತನದಿಂದ ಸೆಣೆಸಿದ ಅಭಿಮನ್ಯು ರಣೋತ್ಸಾಹವನ್ನು ಕೊನೆಯ ಗಳಿಗೆಯವರೆಗೂ ಕಳೆದುಕೊಳ್ಳದೆ ಹೋರಾಡಿದ್ದು ಮರೆಯಲಾರದ ಸಂಗತಿಯಾಗಿದೆ. ಈಗಲೂ ಅವನ ಯುದ್ಧ ಸಂದರ್ಭವನ್ನು ಓದಿದಾಗ ಅಥವಾ ಅಭಿಮನ್ಯು ಕಾಳಗದಂಥ ಯಕ್ಷಗಾನ ನಾಟಕಕೃತಿಗಳನ್ನು ರಂಗ ಮೇಲೆ ಕಂಡಾಗ ಜನ ಕಣ್ಣೀರು ಸುರಿಸುತ್ತಾರೆ. ಡಾ.ಎಚ್.ಕೆ. ರಂಗನಾಥರು ಕರೆದೊಯ್ದಿದ್ದ ಒಂದು ಬಾಲಕರ ಯಕ್ಷಗಾನ ತಂಡ ಅಭಿನಯಿಸಿದ ‘ಅಬಿಮನ್ಯು’ ಯಕ್ಷಗಾನವನ್ನು ನೋಡಿ ಯುರೂಪಿನ ಮಕ್ಕಳೂ ಮತ್ತು ರಂಗಪ್ರೇಮಿಗಳು ಕೂಡ ಅಬಿಮನ್ಯುವಿನ ಪಾತ್ರವನ್ನು ಮೆಚ್ಚಿಕೊಂಡಿದ್ದರೆಂಬ ವರದಿಗಳು ಬಂದಿವೆ.”
ಮೂಲ ...{Loading}...
ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಕಿಯರ ಸಂ
ಕರುಷಣನ ಮಹದುಗ್ರಸೇನನ ಕಂಡನವನೀಶ
ವರ ಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ ॥59॥
೦೬೦ ಕೈದಣಿಯೆ ವಸುದೇವನಳಿಯನ ...{Loading}...
ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬೈದು ಮಾಡುವುದೇನು ದುರುಪದಿ
ಯೈದೆತನುವುಂಟಾಗಿ ದುರಿತವ
ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಸುದೇವನಿಗೆ ಧರ್ಮರಾಯನನ್ನು ಕಂಡು ಆನಂದ ! ತನ್ನ ಕೈಬಳಲುವವರೆಗೆ ಅಳಿಯನ ಮೈದಡವಿದ. “ಮಗನೇ ! ವಿಧಿಯು ನಿಮ್ಮನ್ನೆಲ್ಲ ವನವಾಸದ ಬದುಕಿಗೆ ಕಟ್ಟಿ ಹಾಕಿತಲ್ಲ. ಇರಲಿ, ಈ ಬಗೆಗೆ ದೈವವನ್ನು ನಿಂದಿಸಿ ಪ್ರಯೋಜನವಿಲ್ಲ. ದ್ರೌಪದಿಯ ಮುತ್ತೈದೆತನದಿಂದಾಗಿ ನೀವೆಲ್ಲ ಅಪಾಯಗಳನ್ನು ದಾಟಿಕೊಂಡು ನಮ್ಮ ಪುಣ್ಯದಿಂದ ಸಾರ್ವಜನಿಕ ಜೀವನಕ್ಕೆ ಬಂದಿದ್ದೀರಿ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಐದೆತನ-ಮುತ್ತೈದೆತನ, ಪಾತಿವ್ರತ್ಯ, ದುರಿತ-ಪಾತಕ
ಮೂಲ ...{Loading}...
ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬೈದು ಮಾಡುವುದೇನು ದುರುಪದಿ
ಯೈದೆತನುವುಂಟಾಗಿ ದುರಿತವ
ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ ॥60॥
೦೬೧ ಅರಸಿಯೈದೆತನಕ್ಕೆ ನಮ್ಮೈ ...{Loading}...
ಅರಸಿಯೈದೆತನಕ್ಕೆ ನಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯವೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿಯ ಮುತ್ತೈದೆತನಕ್ಕೆ, ನಮ್ಮ ಐವರ ಆಯುಸ್ಸಿಗೆ, ರಾಜ್ಯದ ಸಂಪತ್ತಿಗೆ ಎಲ್ಲಕ್ಕೂ ನಿಮ್ಮ ಮಗನಾದ ಕೃಷ್ಣನೇ ಹೊಣೆಗಾರನಾಗಿದ್ದಾನೆ. ಅವನ ಸಹಾಯದಿಂದಾಗಿ ನಮಗೆ ದೇವತೆಗಳು ಕೂಡ ಸಮನಲ್ಲ ! ಎಂದ ಮೇಲೆ ಉಳಿದವರು ಗಣ್ಯವೆ ?” ಎಂದು ವಸುದೇವನಿಗೆ ಧರ್ಮರಾಯನು ಹೇಳಿದ.
ಪದಾರ್ಥ (ಕ.ಗ.ಪ)
ಐದೆತನ-ಮುತ್ತೈದೆತನ
ಮೂಲ ...{Loading}...
ಅರಸಿಯೈದೆತನಕ್ಕೆ ನಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯವೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ ॥61॥
೦೬೨ ತನ್ದೆ ಬೇಡೆಮಗವ್ವೆ ...{Loading}...
ತಂದೆ ಬೇಡೆಮಗವ್ವೆ ಬೇಡೆಮ
ಗಿಂದುಮುಖಿಯರನೊಲ್ಲೆವಾವ್ ಮನ
ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ
ನೊಂದೆನೆಂಬನು ತನ್ನವರು ಮನ
ನೊಂದರಾದೊಡೆ ತನ್ನವರ ಸುಖ
ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯ ! ನಿಜ. ಶ್ರೀಕೃಷ್ಣನು ಏನು ಹೇಳುತ್ತಾನೆ ಗೊತ್ತೆ ? ‘ನಮಗೆ ತಂದೆ ಬೇಡ, ಅವ್ವೆ ಬೇಡ, ಪತ್ನಿಯರು ಬೇಕಾಗಿಲ್ಲ. ನನ್ನ ಭಕ್ತರನ್ನು ಮನಸಾರೆ ಮೆಚ್ಚಿಕೊಂಡಿದ್ದೇನೆ’ ಇದನ್ನು ಯಾವಾಗಲೂ ಹೇಳುತ್ತಿರುತ್ತಾನೆ ತನ್ನವರು ಸ್ವಲ್ಪ ನೊಂದರೆ ತನಗೂ ನೋವಾಗುತ್ತದೆ ಎನ್ನುತ್ತಾನೆ. ತನ್ನವರ ಸುಖ ದುಃಖಗಳೆಲ್ಲ ತನ್ನವೇ ಎಂದು ಹೇಳುವುದೇ ಶ್ರೀಕೃಷ್ಣನ ತತ್ವವಾಗಿದೆ”.ಎಂದು ವಸುದೇವನು ಧರ್ಮರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಇಂದುಮುಖಿ-ಸ್ತ್ರೀ, ಅನವರತ-ಯಾವಾಗಲೂ, ಕೃಷ್ಣ ಮತ-ಶ್ರೀಕೃಷ್ಣನ ಅಭಿಪ್ರಾಯ.
ಟಿಪ್ಪನೀ (ಕ.ಗ.ಪ)
ಪಾಂಡವರೆಂದರೆ ಶ್ರೀಕೃಷ್ಣನು ಬಸಿದು ಬೀಳುತ್ತಾನೆ ಎಂಬ ಮಾತನ್ನು ಅನೇಕ ಸಂದರ್ಭಗಳಲ್ಲಿ ಅನೇಕ ಪಾತ್ರಗಳಿಂದ ಕುಮಾರವ್ಯಾಸ ಹೇಳಿಸಿದ್ದಾನೆ. ದ್ರೌಪದಿ ಕೃಷ್ಣರ ಸಂಬಂಧ ಅನ್ಯಾದೃಶವಾದದ್ದು, ನಿವ್ರ್ಯಾಜವಾದದ್ದು. ನನ್ನ ಮಗನಿಗೆ ತಂದೆ ತಾಯಿ ಪತ್ನಿಯರು ಎಲ್ಲರಿಗಿಂತ ಪಾಂಡವರ ಮೇಲೆ ಪ್ರೀತಿ ಹೆಚ್ಚು ಎಂದು ಅವನ ತಂದೆಯಿಂದಲೇ ಹೇಳಿಸಿರುವುದು ಅಪೂರ್ವ ಘಟನೆಯಾಗಿದೆ.
ಮೂಲ ...{Loading}...
ತಂದೆ ಬೇಡೆಮಗವ್ವೆ ಬೇಡೆಮ
ಗಿಂದುಮುಖಿಯರನೊಲ್ಲೆವಾವ್ ಮನ
ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ
ನೊಂದೆನೆಂಬನು ತನ್ನವರು ಮನ
ನೊಂದರಾದೊಡೆ ತನ್ನವರ ಸುಖ
ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ ॥62॥
೦೬೩ ಅರಸಿಯರ ಬಗೆಗೊಳ್ಳ ...{Loading}...
ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶ ಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಸಕಲ ಸಂಪದವ
ಹರಿ ಪರಾಯಣರೆಂದೊಡವರಿಗೆ
ಹರಹಿಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಸುದೇವನು “ನಮ್ಮ ಕೃಷ್ಣ ತನ್ನ ರಾಣಿಯರನ್ನು ಲಕ್ಷಿಸುವುದಿಲ್ಲ. ಮಕ್ಕಳನ್ನು ಅಷ್ಟೊಂದು ಹಚ್ಚಿಕೊಳ್ಳುವುದಿಲ್ಲ. ರಾಜ್ಯ, ಸಂಪತ್ತು ಯಾವುದೂ ಅವನಿಗೆ ಲಕ್ಷ್ಯವಿಲ್ಲ. ಸಮಸ್ತ ಸಂಪದವನ್ನು ಕೂಡ ಲೆಕ್ಕಿಸುವುದಿಲ್ಲ. ಆದರೆ ಹರಿಪರಾಯಣರಾದ ವ್ಯಕ್ತಿಗಳನ್ನು ಕಂಡರೆ ಅವರಿಗೆ ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ. ಈ ಮಗನ ನಡವಳಿಕೆ ಇತರ ಮನುಷ್ಯರ ಪರಿಯದಲ್ಲ”. ಎಂದು ಧರ್ಮರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಬಗೆಗೊಳ್-ಲಕ್ಷಿಸು, ಸರಕು ಮಾಡು-ಅವರನ್ನು ಗಮನಿಸಬೇಕಾದ ಸರಕು (ವಸ್ತು) ಎಂದು ಭಾವಿಸು, ಖಡ್ಡಿಗೊಳ್-ಲೆಕ್ಕಿಸು, ಪರಿಗಣಿಸು, ಹರಹಿಕೊ-ತನ್ನನ್ನೇ ಅರ್ಪಿಸಿಕೊ, ಹರಡಿಕೊ,
ಮೂಲ ...{Loading}...
ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶ ಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಸಕಲ ಸಂಪದವ
ಹರಿ ಪರಾಯಣರೆಂದೊಡವರಿಗೆ
ಹರಹಿಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ॥63॥
೦೬೪ ಲೋಗರೇ ನೀವೆಮಗೆ ...{Loading}...
ಲೋಗರೇ ನೀವೆಮಗೆ ನಿವಗರ
ಗಾಗಿ ಕರಗುವನದು ನಿಲಲಿ ತನ
ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ
ಲೋಗರೆನ್ನವರೆಂದು ಲೋಗರಿ
ಗಾಗಿ ಬದುಕುವೆನೆಂಬ ಬಿರುದಿನ
ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವೇನೂ ನಮಗೆ ಹೊರಗಿನವರಲ್ಲವಲ್ಲ ! ನಿಜ ಹೇಳಬೇಕೆಂದರೆ ಪಾಂಡವರು ಎಂದರೆ ಸಾಕು. ನಮ್ಮ ಕೃಷ್ಣನು ಅರಗಿನಂತೆ ಕರಗಿ ಹೋಗುತ್ತಾನೆ. ತನ್ನ ಭಕ್ತರಿಗಿರಲಿ ತನ್ನನ್ನು ಕೊಲ್ಲಲು ಬರುವ ಹಗೆಗಳಿಗೆ ಕೂಡ ತನ್ನನ್ನೇ ಅರ್ಪಿಸಿಕೊಳ್ಳುವ ಗುಣವಿದೆ ಕೃಷ್ಣನಿಗೆ. ಎಲ್ಲರೂ ನನ್ನವರು, ಎಲ್ಲರಿಗಾಗಿ ನನ್ನ ಬದುಕು ಮೀಸಲು ಎಂದು ಹೇಳಿಕೊಳ್ಳುವ ಶ್ರೀ ಕೃಷ್ಣನ ಬಗೆಗೆ ನಾನು ಏನು ತಾನೇ ಹೇಳಲಿ ? ಎಂದು ವಸುದೇವ ಹೇಳಿದ.
ಪದಾರ್ಥ (ಕ.ಗ.ಪ)
ಲೋಗ-ಸಾಮಾನ್ಯ ಜನ,
ಪಾಠಾನ್ತರ (ಕ.ಗ.ಪ)
ಬಲುಗೈ ಬಾಗಿ - ಬಿರುದಿನ ಚಾಗಿ
ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಲೋಗರೇ ನೀವೆಮಗೆ ನಿವಗರ
ಗಾಗಿ ಕರಗುವನದು ನಿಲಲಿ ತನ
ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ
ಲೋಗರೆನ್ನವರೆಂದು ಲೋಗರಿ
ಗಾಗಿ ಬದುಕುವೆನೆಂಬ ಬಿರುದಿನ
ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ॥64॥
೦೬೫ ಬೊಪ್ಪನವರೇಯೆಮ್ಮ ದೂರದೆ ...{Loading}...
ಬೊಪ್ಪನವರೇಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಪ ಸಿಕ್ಕಿದರೆ ಸಾಕು. ತಂದೆಯವರು ನನ್ನನ್ನು ದೂರದೆ ಇರುವವರೇ ಅಲ್ಲ ! ಹೀಗೆ ಹೇಳುತ್ತ ಕೃಷ್ಣನು ಧರ್ಮರಾಯನನ್ನು ತನ್ನ ಹತ್ತಿರಕ್ಕೆ ಕರೆದ. ಬೆನ್ನು ಚಪ್ಪರಿಸುತ್ತ “ಧರ್ಮರಾಯ ! ಕೌರವರು ದನಕರುಗಳನ್ನು ವಿರಾಟನ ಹಿಡಿತದಿಂದ ತಪ್ಪಿಸಲು ಹೋದರಲ್ಲ. ಆ ಕಥೆ ಹೇಳು. ಪಾರ್ಥನ ಪರಾಕ್ರಮವು ವ್ಯಕ್ತಗೊಂಡ ಬಗೆ ಯಾವುದು ? ಹೇಳು” ಎಂದು ಕೃಷ್ಣನು ಕೇಳಿದ.
ಪದಾರ್ಥ (ಕ.ಗ.ಪ)
ಬೊಪ್ಪ-ತಂದೆ, ಅವನಿಪ-ರಾಜ, ಮುರರಿಪು-ಕೃಷ್ಣ, ತುರು-ದನ, ದರ್ಪದನುವು -ದರ್ಪದ ಅನುವು (ಪರಾಕ್ರಮದ ರೀತಿ)
ಟಿಪ್ಪನೀ (ಕ.ಗ.ಪ)
ತನ್ನ ಪ್ರಶಂಸೆಯನ್ನು ಕೇಳಿ ಕೃಷ್ಣನಿಗೆ ಮುಜುಗರವಾಗಿತ್ತು ಆದ್ದರಿಂದ ಮಾತು ಬದಲಾಯಿಸಿದ.
ಮೂಲ ...{Loading}...
ಬೊಪ್ಪನವರೇಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ ॥65॥
೦೬೬ ಹೂಹೆಗೆಲ್ಲಿಯ ದರ್ಪ ...{Loading}...
ಹೂಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗೊಂಬೆಗಳಿಗೆ ದರ್ಪ ಎಲ್ಲಿ ಬಂದೀತು ಹೇಳು. ಮನುಷ್ಯನ ಸಾಹಸ ಎಂಬುದು ಬೇರೆಯೇನಲ್ಲ. ಏಕೆಂದರೆ ಯಂತ್ರದ ಗೊಂಬೆ ಯಂತ್ರವನ್ನು ಬಿಟ್ಟು ಸ್ವತಂತ್ರವಾಗಿ ಇರಬಲ್ಲುದೇನು ? ನೀನು ದೇಹಿ ನಾವೆಲ್ಲ ನಿನ್ನ ದೇಹಗಳು. ವಸ್ತು ಸ್ಥಿತಿ ಹೀಗಿರುವಾಗ ಗರ್ವ ಪ್ರದರ್ಶನ ಎಲ್ಲಿಂದ ಬಂದೀತು” ಎಂದು ಧರ್ಮರಾಯನು ಹೇಳಿದನು. .
ಪದಾರ್ಥ (ಕ.ಗ.ಪ)
ಹೂಹೆ-ಗೊಂಬೆ, ನೆರಳು, ಹಾಹೆ-ನೆರಳು, ಗೊಂಬೆ, ದೇಹಿ-ದೇಹವನ್ನುಳ್ಳ ಜೀವ, ಗಾಹು- ವಂಚನೆ, ಯಮಸೂನು-ಯಮನ ಮಗ ಧರ್ಮರಾಯ
ಮೂಲ ...{Loading}...
ಹೂಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು ॥66॥
೦೬೭ ಎಸಳು ಮೊನೆಯೊನ್ದಾಗಿ ...{Loading}...
ಎಸಳು ಮೊನೆಯೊಂದಾಗಿ ತಾವರೆ
ಮುಸುಕುತಿದೆ ನೈದಿಲೆಯ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
67.“ಕೃಷ್ಣ ! ತಾವರೆಯ ಮೊನೆ ಮತ್ತು ಎಸಳುಗಳೆರಡು ಒಂದಾಗಿವೆ. ಅಂದರೆ ಅರಳಿದ್ದ ತಾವರೆ ಈಗ ಮುಚ್ಚಿಕೊಳ್ಳುತ್ತಿದೆ. ನೈದಿಲೆಯ ಹೂಗಳ ನೆತ್ತಿಯ ಮೇಲೆ ಸೂರ್ಯನು ಹಾಕಿದ್ದ ಬೆಸುಗೆ ಈಗ ಬಿಡುತ್ತಿದೆ. ಅಂದರೆ ನೈದಿಲೆಗಳು ಅರಳಲಾರಂಭಿಸಿವೆ. ಚಕ್ರವಾಕ ಪಕ್ಷಿಗಳ ಜೊತೆ ಅಗಲುತ್ತಿದೆ. ಸುತ್ತಲೂ ಎಲ್ಲ ಕಡೆ ಇದ್ದ ಹೊಂಬಿಸಿಲು ಮಾಯವಾಗುತ್ತಿದೆ. ಪ್ರಭು ! ಬಿನ್ನಹ ! ಭೂಮಿ ತಂಪಾಗುತ್ತಿದೆ ಅಂದರೆ ಸಂಧ್ಯಾ ಸಮಯವಾಗುತ್ತಿದೆ”.
ಪದಾರ್ಥ (ಕ.ಗ.ಪ)
ತಾಣಾಂತರ-ಜಾಗಗಳು, ಬೀತುದು-ಮಾಯವಾಯಿತು, ವಸುಧೆ-ಭೂಮಿ ಎಸಳ್-ಹೂವಿನ ದಳ, ಮೊನೆ-ಹೂವಿನ ದಳದ ತುದಿ. ಜಕ್ಕವಕ್ಕಿ-ಚಕ್ರವಾಕ ಪಕಿ
ಟಿಪ್ಪನೀ (ಕ.ಗ.ಪ)
ಕತ್ತಲಾಯಿತು ಎಂದು ಧರ್ಮರಾಯನು ಪ್ರಕೃತಿಯ ಪರಿಭಾಷೆಯಲ್ಲಿ ಹೇಳುತ್ತಿದಾನೆ.
ಜಕ್ಕವಕ್ಕಿ-ಚಕ್ರವಾಕ ಪಕ್ಷಿ, ಇವಕ್ಕೆ ಎಣೆವಕ್ಕಿ ಎಂಬ ಹೆಸರೂ ಇದೆ. ಸೂರ್ಯೋದಯವಾದಾಗ ಇವು ಜೊತೆಯಾಗಿರುತ್ತವೆ. ಅನಂತರ ಸೂರ್ಯಾಸ್ತದ ನಂತರ ಅಗಲುತ್ತವೆ ಎಂಬ ಕವಿಸಮಯ ಇದು.
ಮೂಲ ...{Loading}...
ಎಸಳು ಮೊನೆಯೊಂದಾಗಿ ತಾವರೆ
ಮುಸುಕುತಿದೆ ನೈದಿಲೆಯ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ ॥67॥
೦೬೮ ನಗುತ ಹರಿ ...{Loading}...
ನಗುತ ಹರಿ ನಿಂದಿರಲು ಕೈ ದಂ
ಡಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣೀವಾಸದಂದಣ
ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ತನ್ನ ಸಮ್ಮತಿ ಸೂಚಿಸಿ ನಗುತ್ತ ನಿಂತ. ಕೂಡಲೇ ಮೇನೆಯವರು ಹತ್ತಿರಬಂದರು. ಕೃಷ್ಣ ಅದರಲ್ಲಿ ಕುಳಿತ. ದೇವತೆಗಳು ಅದನ್ನು ನೋಡಿ ಉಘೇ ಎಂದು ವಿಜಯ ಧ್ವನಿ ಮಾಡಿದರು. ಪರದೆಗಳನ್ನು ಹಾಕಿ ಭದ್ರಪಡಿಸಿದ್ದ ರಾಣಿವಾಸದ ಮೇನೆಗಳು ಮುಂದೆ ಸಾಗಿದುವು. ಯದುಸೇನೆ ಸಂತೋಷದಿಂದ ಮುನ್ನಡೆಯಿತು.
ಪದಾರ್ಥ (ಕ.ಗ.ಪ)
ಕೈದಂಡಿಗೆ-ಕೈಯಿಂದ ಎತ್ತಿ ಸಾಗುವ ಮೇನೆ, ಪಲ್ಲಕ್ಕಿ, ಹೊದ್ದು-ಹತ್ತಿರಬಾ, ರೂವಾರಿಗೆ-ಅಲಂಕೃತ ಪಲ್ಲಕ್ಕಿ, ಬಿಜಯಂಗೈ-ಬರುವಿಕೆ, ಉಘೇ-ಜಯಕಾರ, ಸುರಸ್ತೋಮ-ದೇವತೆಗಳ ಗುಂಪು, ದಡ್ಡಿ-ತೆರೆ, ಬದ್ದರ-ಭದ್ರ, ಬೀಯಗ-ಬೀಗ, ಅಂದಣ-ಪಲ್ಲಕ್ಕಿ
ಮೂಲ ...{Loading}...
ನಗುತ ಹರಿ ನಿಂದಿರಲು ಕೈ ದಂ
ಡಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣೀವಾಸದಂದಣ
ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ॥68॥
೦೬೯ ಹೊಕ್ಕನಸುರಾರಾತಿ ಪಾಣ್ಡವ ...{Loading}...
ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರ ಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಸುತಿಗಳಿಗೆ ಕೈ
ಮಿಕ್ಕ ಕಳ್ಳನು ಪಾಂಡು ಸುತರಿಗೆ
ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಪಲ್ಲಕ್ಕಿಯಲ್ಲಿ ಹೊರಟ. ಪಾಂಡವರು ಎರಡೂ ಕಡೆಗಳಲ್ಲಿ ಅವನ ಪಕ್ಕದಲ್ಲೇ ನಡೆದು ಬಂದರು. ನಗರ ಜನ ಮತ್ತೆ ಕೃಷ್ಣನ ದರ್ಶನ ಪಡೆದು ನಮಸ್ಕರಿಸಿದರು. ಪಲ್ಲಕ್ಕಿಯವರ ಮತ್ತು ಸೈನಿಕರ ಕಾಲು ಧೂಳು ಎದ್ದಿತು. ಎಲ್ಲ ಬಗೆಯಲ್ಲಿ ಸ್ತೋತ್ರ ಮಾಡುವ ಶ್ರುತಿ (ವೇದ)ಗಳಿಗೆ ಸಿಕ್ಕದೆ ನುಣುಚಿಕೊಳ್ಳುವ ಕಳ್ಳ ಕೃಷ್ಣನು ಪಾಂಡವರ ಕೈಗೆ ಸುಲಭವಾಗಿ ಸಿಕ್ಕಿದ್ದಾನಲ್ಲ ಎಂದು ವಿದ್ವಾಂಸರ ಸಮೂಹ ಆಶ್ಚರ್ಯಪಟ್ಟಿತು.
ಪದಾರ್ಥ (ಕ.ಗ.ಪ)
ಅಸುರಾರಾತಿ-ಅಸುರ-ರಾಕ್ಷಸ, ಅರಾತಿ-ಶತ್ರು-ರಾಕ್ಷಸ ಶತ್ರುವಾದ ಶ್ರೀಕೃಷ್ಣ, ಇಕ್ಕೆಲ-ಎರಡು ಪಕ್ಕ, ಸುತಿ-ವೇದ (ಸುತಿ<ಶ್ರುತಿ), ಕೈಮಿಗು-ಸಿಗದೆ ತಪ್ಪಿಸಿಕೊ, ಸೂರಿ ಸಂದೋಹ-ಸೂರಿ-ವಿದ್ವಾಂಸರ, ಸಂದೋಹ-ಸಮೂಹ
ಮೂಲ ...{Loading}...
ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರ ಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಸುತಿಗಳಿಗೆ ಕೈ
ಮಿಕ್ಕ ಕಳ್ಳನು ಪಾಂಡು ಸುತರಿಗೆ
ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ॥69॥
೦೭೦ ಮೇಲೆ ಬೀಳುವ ...{Loading}...
ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳ ವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ದರ್ಶನ ಪಡೆಯಲು ಜನ ಕಾತರದಿಂದ ಮುಂದೆ ನುಗ್ಗಿದಾಗ ಅಲ್ಲೇ ಕೈಗೋಲು ಹಿಡಿದಿದ್ದ ಕಾವಲಿನವರು ಹೊಡೆದು ಓಡಿಸಲು ಮುಂದಾದರು. ಆಗ ಕೃಷ್ಣ ಆ ಕೈಗೋಲಿನವರನ್ನು ಗದರಿಸಿ ಆ ಜನಕ್ಕೆ ಕಾಣಿಸಿಕೊಂಡ. ಮಹಡಿಯ ಮೇಲಿಂದಲೂ ಹೆಂಗಸರು ತಮ್ಮ ಕಣ್ಣುಗಳ ಆರತಿಯನ್ನು ಬೆಳಗಿದರೆ ಸಂತೋಷದಿಂದ ಸ್ವೀಕರಿಸಿ ಶ್ರೀಕೃಷ್ಣನು ರಾಜಮಂದಿರಕ್ಕೆ ಬಂದ.
ಟಿಪ್ಪನೀ (ಕ.ಗ.ಪ)
ಕೈಗೋಲಿನವರು-ಇವರನ್ನು ಕಂಬಿಯವರು ಎಂದು ಕರೆಯುತ್ತಾರೆ. ಜನ ಮಧ್ಯೆ ನುಗ್ಗದಂತೆ ತಡೆದು ಹದ್ದು ಬಸ್ತಿನಲ್ಲಿಡಲು ಅವರು ಕೈಯಲ್ಲಿ ಕೋಲು ಹಿಡಿದಿರುತ್ತಾರೆ, ನಿವಾಳಿ-ಆರತಿ, ಹೆಂಗಸರು ಮಂಗಳ ಸೂಚನೆಗಾಗಿ ಅನಿಷ್ಟ ನಿವಾರಣೆಗಾಗಿ ಆರತಿ ಎತ್ತುವ ಸಂಪ್ರದಾಯವಿದೆ. ಇಲ್ಲಿ ಮಹಡಿಯಲ್ಲಿದ್ದ ಸುಮಂಗಲಿಯರು ತಮ್ಮ ಕಣ್ಣಿನಿಂದಲೇ ಆರತಿ ಬೆಳಗುತ್ತಿದ್ದರು ಎಂದು ಕವಿ ಹೇಳುತ್ತಿದ್ದಾನೆ. ಅಂದರೆ ಮನ ತಣಿಯುವಂತೆ ಅವರೆಲ್ಲ ಕೃಷ್ಣನನ್ನು ನೋಡುತ್ತಿದ್ದರು ಎಂದರ್ಥ.
ಮೂಲ ...{Loading}...
ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳ ವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ॥70॥
೦೭೧ ಹಿಡಿದರಾರತಿಗಳನು ಬಣ್ಣದ ...{Loading}...
ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುತ್ತ ಕಾಂತಿಯ
ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಣ್ಣ ಬಣ್ಣದ ಸೊಡರುಗಳನ್ನು ಹಿಡಿದ ಮಂಗಳಾಂಗಿಯರು ಕೃಷ್ಣನಿಗೆ ಆರತಿಗಳನ್ನು ಎತ್ತಿದರು. ಭೀಮಾರ್ಜುನರು ನೆಲವೇ ಉಗ್ಗಡಿಸುತ್ತಿದೆಯೋ ಎಂಬಂತೆ ಒಟ್ಟಾಗಿ ಘೋಷಣೆ ಮಾಡುತ್ತಿದ್ದರು. ಭೀಮಾರ್ಜುನರು ಸಂತೋಷದಿಂದ ಕೈದೀವಿಗೆಗಳನ್ನು ಹಿಡಿದು ನಡೆದು ಬರುತ್ತಿದ್ದರು. ಮುತ್ತುರತ್ನಗಳ ಕಾಂತಿ ಆ ಕೈದೀವಿಗೆಗಳೊಂದಿಗೆ ಸ್ಪರ್ಧಿಸುತ್ತಿದ್ದುವು. ಅಂಥ ಕಾಂತಿಯುಕ್ತ ರತ್ನ ಸಿಂಹಾಸನದ ಮೇಲೆ ಶ್ರೀಕೃಷ್ಣನು ಕುಳಿತ.
ಪದಾರ್ಥ (ಕ.ಗ.ಪ)
ಉಗ್ಗಡಿಸು-ಉದ್ಘೋಷಿಸು, ಕೂಗು, ಮೇಳಾಪ-ಜೊತೆ, ಮಂಡಿಸು-ಕುಳಿತುಕೊ
ಮೂಲ ...{Loading}...
ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುತ್ತ ಕಾಂತಿಯ
ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ॥71॥
೦೭೨ ಬೀಳುಗೊಟ್ಟನು ಸಕಲ ...{Loading}...
ಬೀಳುಗೊಟ್ಟನು ಸಕಲ ಭೂಮೀ
ಪಾಲರನು ಕುಂತಿಯ ಕುಮಾರರ
ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ
ಸೋಲದಲಿ ಮೈದಣಿದು ಕುರು ಭೂ
ಪಾಲನುಚಿತವ ಮಾಡಿ ರಾಜ್ಯವ
ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅಲ್ಲಿ ನೆರೆದಿದ್ದ ರಾಜರುಗಳನ್ನೆಲ್ಲ ಶ್ರೀ ಕೃಷ್ಣನು ಕಳುಹಿಸಿಕೊಟ್ಟ. ಕೆಲವೇ ಜನರೊಂದಿಗೆ ಪಾಂಡವರೊಂದಿಗೆ ನಗುತ್ತ ಕುಳಿತ. ಅನಂತರ ಪಾಂಡವರನ್ನು ಕೇಳಿದ :“ಗೋಗ್ರಹಣದ ಸೋಲು ಆ ಕೌರವನಿಗೆ ಬುದ್ಧಿ ಕಲಿಸಿರಬೇಕಲ್ಲವೆ ? ನಿಮ್ಮನ್ನು ಕರೆಸಿ ಸೂಕ್ತವಾಗಿ ಸತ್ಕರಿಸಿ ನಿಮ್ಮ ಪಾಲಿನ ರಾಜ್ಯವನ್ನು ಹಿಂದಕ್ಕೆ ಕೊಡುವ ಯೋಚನೆ ಕೌರವನಿಗೆ ಇದೆಯೇನು ? ಈ ವಿಚಾರದಲ್ಲಿ ನೀವು ಏನನ್ನುತ್ತೀರಿ?”
ಪದಾರ್ಥ (ಕ.ಗ.ಪ)
ಮೇಳ-ಜೊತೆ, ಸೋಲ-ಸೋಲು (ಗೋಗ್ರಹಣದಲ್ಲಿ ಅರ್ಜುನನಿಂದ ಆದ ಸೋಲು)
ಟಿಪ್ಪನೀ (ಕ.ಗ.ಪ)
ಕೌರವನ ಸ್ವಭಾವ ಚೆನ್ನಾಗಿ ತಿಳಿದಿದ್ದರೂ, ಸಂಧಿ ನಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಪೂರ್ಣ ಸಂಗತಿ ಪಾಂಡವರಿಂದಲೇ ಬರಲಿ ಎಂಬ ಕಾರಣಕ್ಕೆ ಕೃಷ್ಣನು ಹೀಗೆ ಪೀಠಿಕೆ ಹಾಕಿದ್ದಾನೆ.
ಮೂಲ ...{Loading}...
ಬೀಳುಗೊಟ್ಟನು ಸಕಲ ಭೂಮೀ
ಪಾಲರನು ಕುಂತಿಯ ಕುಮಾರರ
ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ
ಸೋಲದಲಿ ಮೈದಣಿದು ಕುರು ಭೂ
ಪಾಲನುಚಿತವ ಮಾಡಿ ರಾಜ್ಯವ
ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ॥72॥
೦೭೩ ಮರಳಿದವು ತುರುವಿತ್ತಲಹಿತರು ...{Loading}...
ಮರಳಿದವು ತುರುವಿತ್ತಲಹಿತರು
ಸರಿದರತ್ತಲು ಮತ್ಸ್ಯನೆಮ್ಮೈ
ವರನು ನಾವೆಂದರಿದು ಕೊಂಡಾಡಿದನು ವಿನಯದಲಿ
ವರ ಸುಭದ್ರಾ ನಂದನಂಗು
ತ್ತರೆಯನೀವರ್ಥಿಯಲಿಯಿರಲಾ
ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಕೃಷ್ಣ ! ಗೋಗ್ರಹಣದ ದನಕರುಗಳು ಸುಖವಾಗಿ ಮನೆ ಸೇರಿದುವು. ಶತ್ರುಗಳು ಆ ಕಡೆ ಹೋದರು. ಅನಂತರ ಮತ್ಸ್ಯಾಧಿಪತಿ ನಾವು ಯಾರು ಎಂಬುದನ್ನು ತಿಳಿದು ವಿನಯದಿಂದ ನಮ್ಮನ್ನೆಲ್ಲ ಕೊಂಡಾಡಿದ. ಈಗಿನ ಸಂಗತಿ ಇಷ್ಟೇ. ಸುಭದ್ರೆಯ ಮಗ ಅಭಿಮನ್ಯುವಿಗೆ ಉತ್ತರೆಯನ್ನು ಕೊಡುವ ಆಸೆ ಆತನಿಗಿದೆ. ಆದ್ದರಿಂದ ನಾವು ನಿನಗೆ ಹೇಳಿ ಕಳುಹಿಸಿದೆವು” ಎಂದು ಧರ್ಮರಾಯ ಹೇಳಿದ.
ಪದಾರ್ಥ (ಕ.ಗ.ಪ)
ತುರು-ದನ, ಅಹಿತ-ಶತ್ರು, ಕೌರವ, ಅರ್ಥಿ- ಬಯಕೆ, ಆ-(ಆವು) ನಾವು, ಆ=(ಆವು, ನಾವು)
ಪಾಠಾನ್ತರ (ಕ.ಗ.ಪ)
(ಅರ್ಥಿ-ಇದನ್ನು ಅರ್ತಿ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ)
ಮೂಲ ...{Loading}...
ಮರಳಿದವು ತುರುವಿತ್ತಲಹಿತರು
ಸರಿದರತ್ತಲು ಮತ್ಸ್ಯನೆಮ್ಮೈ
ವರನು ನಾವೆಂದರಿದು ಕೊಂಡಾಡಿದನು ವಿನಯದಲಿ
ವರ ಸುಭದ್ರಾ ನಂದನಂಗು
ತ್ತರೆಯನೀವರ್ಥಿಯಲಿಯಿರಲಾ
ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ ॥73॥
೦೭೪ ಕೊಳುಗೊಡೆಗೆ ಸೇರುವರೆ ...{Loading}...
ಕೊಳುಗೊಡೆಗೆ ಸೇರುವರೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೃಷ್ಣ ! ಈ ಸಂಬಂಧ ಸೂಕ್ತ ಎನಿಸಿದರೆ ನೀನು ದೊಡ್ಡ ಮನಸ್ಸುಮಾಡಿ ಮದುವೆಮಾಡು. ಅನಂತರ ರಾಜ್ಯಕ್ಕೆ ಸಂಬಂಧಿಸಿದಂತೆ ನಾವು ಏನು ಮಾಡಬೇಕು ಎಂಬುದನ್ನು ಹೇಳಿ ಬುದ್ಧಿಯನ್ನು ಕಲಿಸಿ ನಮ್ಮನ್ನು ಉದ್ಧರಿಸಿ ನೀನು ದ್ವಾರಕೆಗೆ ಪ್ರಯಾಣ ಮಾಡಬೇಕು. ಇದು ಸದ್ಯದ ಕಾರ್ಯ” ಎಂದಾಗ ಶ್ರೀ ಕೃಷ್ಣನು ಧರ್ಮರಾಯನ ಬೇಡಿಕೆಯ ಮಾತುಗಳಿಗೆ ಒಪ್ಪಿ ಹೇಳಿದ.
ಪದಾರ್ಥ (ಕ.ಗ.ಪ)
ಕೊಳು ಕೊಡೆ (ವಿವಾಹ) ಸಂಬಂಧ, ಬಿನ್ನಹ-ಕೋರಿಕೆ
ಮೂಲ ...{Loading}...
ಕೊಳುಗೊಡೆಗೆ ಸೇರುವರೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ॥74॥
೦೭೫ ಕೊಳುಗೊಡೆಗೆ ತಪ್ಪೇನು ...{Loading}...
ಕೊಳುಗೊಡೆಗೆ ತಪ್ಪೇನು ವಸುವಿನ
ಕುಲ ವಿರಾಟನು ಇಂದು ವಂಶಾ
ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು
ಒಳುನುಡಿಗಳಲಿ ದೈವ ಶಕುನಾ
ವಳಿಗಳಾದೊಡೆ ಹರುಷದಲಿ ಮಂ
ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯ ! ಈ ವಿವಾಹ ಸಂಬಂಧದಲ್ಲಿ ಏನೂ ತೊಡಕಿಲ್ಲ. ವಿರಾಟರಾಜನು ವಸುಕುಲದವನು. ನೀವು ಚಂದ್ರವಂಶದವರು. ಆಭಿಜಾತ್ಯದಲ್ಲಿ (ಕುಲೀನತೆಯಲ್ಲಿ) ಏನೂ ದೋಷವಿಲ್ಲ. ದೈವ, ಶಕುನಗಳು ಒಳ್ಳೆಯದನ್ನು ಹೇಳಿದರೆ ಸಂತೋಷದಿಂದ ಮಂಗಳ ಮುಹೂರ್ತವನ್ನು ನಿಶ್ಚಯಿಸಿ” ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಆಭಿಜಾತ್ಯ-ಅಭಿಜಾತತೆ, ಕುಲೀನತೆ, ಉತ್ತಮಕುಲದಲ್ಲಿ ಹುಟ್ಟುವಿಕೆ. ಶಕುನಾವಳಿ-ಶಕುನಗಳು.
ಟಿಪ್ಪನೀ (ಕ.ಗ.ಪ)
ವಸುವಿನ ಕುಲ : ವಿರಾಟನ ಮೂಲವಂಶಜ ಉಪರಿಚರವಸು ಎಂಬಾತ. ಈತ ದೇವೇಂದ್ರನಿಂದ ಸನ್ಮಾನಿತನಾಗಿ ವಿಮಾನದ ಉಡುಗೊರೆ ಪಡೆದು ಅಂತರಿಕ್ಷ ಮಾರ್ಗದಲ್ಲಿ ಸಂಚರಿಸುತ್ತಿದ್ದವನು. ಅದಕ್ಕೇ ಈ ಹೆಸರು. ಇವನ ಹೆಂಡತಿ ಗಿರಿಕೆ. ಒಮ್ಮೆ ಇವನು ಪತ್ನಿಗೆ ಜಿಂಕೆಯ ಮಾಂಸ ತರಲು ಬೇಟೆಗೆ ಹೋಗಿದ್ದ. ಅಲ್ಲಿ ಪತ್ನಿಯ ಸ್ಮರಣೆಯಿಂದ ರೇತಃ ಪತನವಾಗಿ ಅದನ್ನು ಒಂದು ಎಲೆಯ ದೊನ್ನೆಯಲ್ಲಿಟ್ಟು ಪತ್ನಿಯೆಡೆಗೆ ತೆಗೆದುಕೊಂಡು ಹೋಗಿ ಕೊಡುವಂತೆ ಒಂದು ಡೇಗೆಯನ್ನು ಕೇಳಿಕೊಂಡ. ಅದು ಹಾರುವಾಗ ಆ ದೊನ್ನೆ ನೀರಿನೊಳಗೆ ಬಿತ್ತು. ಅದನ್ನು ಒಂದು ಮೀನು ಸ್ವೀಕರಿಸಿ ಗರ್ಭವತಿಯಾಯಿತು. ಆಕೆಯ ಗರ್ಭದಲ್ಲಿ ಹುಟ್ಟಿದ ಮಕ್ಕಳೇ ಮತ್ಸ್ಯಗಂಧಿ (ಸತ್ಯವತಿ) ಮತ್ತು ಮತ್ಸ್ಯ. ಈ ಮಕ್ಕಳನ್ನು ದಾಶರಾಜನು ಸಾಕಿದ. ಗಂಡು ಮಗನನ್ನು ಮತ್ಸ್ಯದೇಶದ ರಾಜನಿಗೆ ಕೊಟ್ಟ. ಹೀಗೆ ಮತ್ಸ್ಯ ವಿರಾಟನು ವಸುವಂಶದವನಾಗುತ್ತಾನೆ.
(ಎಂ.ವಿ. ಸೀತಾರಾಮಯ್ಯನವರು ಈ ವಸುವನ್ನು ಜಮದಗ್ನಿಯ ಐವರು ಮಕ್ಕಳಲ್ಲಿ ಮೂರನೆಯವನು ಎಂದು ಗುರುತಿಸಿದ್ದಾರೆ. ಆದರೆ ವಿರಾಟನು ಈ ಕುಲದವನು ಎಂಬುದಕ್ಕೆ ಆಧಾರ ಸಾಲದು)
ಶಕುನಾವಳಿ -ಎಲ್ಲ ನಿಶ್ಚಯಮಾಡುವುದಕ್ಕೆ ಮುಂಚೆ ಶಕುನವನ್ನು ನೋಡುವ ಪದ್ಧತಿಯಿದೆ.
ಮೂಲ ...{Loading}...
ಕೊಳುಗೊಡೆಗೆ ತಪ್ಪೇನು ವಸುವಿನ
ಕುಲ ವಿರಾಟನು ಇಂದು ವಂಶಾ
ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು
ಒಳುನುಡಿಗಳಲಿ ದೈವ ಶಕುನಾ
ವಳಿಗಳಾದೊಡೆ ಹರುಷದಲಿ ಮಂ
ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ॥75॥
೦೭೬ ಒಸಗೆಯಲಿ ನಿಸ್ಸಾಳ ...{Loading}...
ಒಸಗೆಯಲಿ ನಿಸ್ಸಾಳ ತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಮತ್ಸ್ಯ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂಗಳ ವಾದ್ಯಗಳು ಭೋರಿಟ್ಟುವು. ಎಲ್ಲ ಜನಗಳೂ ಉತ್ಸಾಹಭರಿತರಾಗಿದ್ದರು. ವೇದಕ್ರಮದಂತೆ ಕನ್ಯಾವರಣವಾಯಿತು. ಮದುವೆಯ ಗಂಡನ್ನು ಅಲಂಕರಿಸಿದರು. ಯಾದವರು ಪಾಂಚಾಲರು ಮತ್ಸ್ಯರು ಎಲ್ಲರ ಸಮ್ಮುಖದಲ್ಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲ ಸಿದ್ಧವಾಯಿತು.
ಪದಾರ್ಥ (ಕ.ಗ.ಪ)
ಕನ್ಯಾವರಣ-ಕನ್ಯೆಯನ್ನು, ವರಣ-ವರಿಸುವುದು, ವೈದಿಕೋಕ್ತಿ-ವೇದ ಘೋಷ, ಒಸಗೆ-ಪ್ರೀತಿ, ಪ್ರಸರ-ಬಳಗ
ಟಿಪ್ಪನೀ (ಕ.ಗ.ಪ)
ಮೆಟ್ಟಕ್ಕಿ ಜೀರಿಗೆ ಬೆಲ್ಲ -[ಕನ್ನಡಿಗರ ಮನೆಯಲ್ಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲ ಪ್ರಸಿದ್ಧವಾದುದು. ವಧು ಮತ್ತು ವರರು ಕಾಲನ್ನು ಒಳಗಿಡುವಂತೆ ಬೆತ್ತದ ತಟ್ಟೆಯಲ್ಲಿ ‘ಮೆಟ್ಟಕ್ಕಿ’ ಸಿದ್ಧವಾಗಿರುತ್ತದೆ. ವಧುವನ್ನು ಸೋದರಮಾವನು ಹಸೆಮಣೆಗೆ ಕರೆತರುತ್ತಾನೆ. ವಧೂವರರಿಬ್ಬರೂ ಮೆಟ್ಟಕ್ಕಿ ಗೂಡಿನಲ್ಲಿ ಕಾಲಿರಿಸುತ್ತಾರೆ. ವಧುವರರಿಬ್ಬರಿಗೂ ಜೀರಿಗೆ ಬೆಲ್ಲ ಕೊಡಲಾಗಿರುತ್ತದೆ. ಇಬ್ಬರ ಮಧ್ಯೆ ಕನ್ಯಾಪಟ ಎಂಬ ತೆರೆಯನ್ನು ಹಾಕಲಾಗಿರುತ್ತದೆ. ಜೋಯಿಸರು ಸುಮುಹೂರ್ತಕ್ಕಾಗಿ ಕಾಯುತ್ತಾರೆ. ತೆರೆ ಎತ್ತಿದ ಕೂಡಲೇ ವಧೂವರರಿಬ್ಬರೂ ಜೀರಿಗೆ ಬೆಲ್ಲವನ್ನು ಪರಸ್ಪರರ ತಲೆಯ ಮೇಲೆ ಎರಚುತ್ತಾರೆ. ಇದೇ ಮೆಟ್ಟಕ್ಕಿ ಜೀರಿಗೆ ಬೆಲ್ಲ. ಇದನ್ನು ಮೆಟ್ಟಕ್ಕಿ ಚಿಬ್ಬಲು ಎಂದೂ ಹೇಳುತ್ತಾರೆ. ಮದುವೆ ಶಾಸ್ತ್ರದ ದಿನ ಕುಟ್ಟಿದ ಬತ್ತವು ಈ ಚಿಬ್ಬಲಿ(ಬಿದಿರಿನ ತಟ್ಟೆ)ನಲ್ಲಿರುತ್ತದೆ. ಅದನ್ನು ವಧೂವರರು ಮೆಟ್ಟಿ ನಿಲ್ಲಬೇಕು].
ಮೂಲ ...{Loading}...
ಒಸಗೆಯಲಿ ನಿಸ್ಸಾಳ ತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಮತ್ಸ್ಯ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ॥76॥
೦೭೭ ವರ ಮುಹೂರ್ತದ ...{Loading}...
ವರ ಮುಹೂರ್ತದ ಘಳಿಗೆವಟ್ಟಲ
ಭರಿತದೊಳು ಪುಣ್ಯಾಹವದ ವಿ
ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘಳಿಗೆ ಬಟ್ಟಲು ತುಂಬಿದಾಗ ಪುಣ್ಯಾಹ ಮಾಡಿ ಅಕ್ಷತೆ ತಳಿದು ವಧುವನ್ನು ಮದುವೆಯ ಮಂಟಪಕ್ಕೆ ಕರೆತರಲಾಯಿತು. ಶ್ರೇಷ್ಠ ಋತ್ವಿಜರು ಹೋಮವನ್ನು ಮಾಡಿ ಅಗ್ನಿ ಪ್ರದಕ್ಷಿಣೆ ಮಾಡಿಸಿದರು. ಉತ್ತರಕುಮಾರಿಯು ವೇದಘೋಷದ ನಡುವೆ ಶಾಸ್ತ್ರೋಕ್ತವಾಗಿ ವರನ ಎಡಗಡೆ ಬಂದು ನಿಂತಳು.
ಪದಾರ್ಥ (ಕ.ಗ.ಪ)
ಘಳಿಗೆ ವಟ್ಟಲು-ಮುಹೂರ್ತ ತಿಳಿಸುವ ನೀರಿನ ಪಾತ್ರೆ, ಭರಿತ-ತುಂಬಿದ, ಪುಣ್ಯಾಹ-ಶುದ್ಧಿಗಾಗಿ ಎಲೆಯ ಕೊನೆಯಲ್ಲಿ ನೀರೆರಚುವ ಕ್ರಮ,
ಶಿಖಿವರ-ಪವಿತ್ರವಾದ ಅಗ್ನಿ,
ಬಲಗೊಳ್-ಪ್ರದಕ್ಷಿಣೆ ಮಾಡು,
ವಾಮ-ಎಡಭಾಗ,
ತಳಿ-ಎರಚು
ಪಾಠಾನ್ತರ (ಕ.ಗ.ಪ)
ಕುಮಾರಿಯ ಎಂದಿದೆ ಇದನ್ನು ಕುಮಾರಿಯು ಎಂದು ತಿದ್ದಿಕೊಂಡರೆ ಅರ್ಥ ಸುಲಭವಾಗುತ್ತದೆ.
ಅಥವಾ ಕುಮಾರಿಯ ಬರಿಸೆ ಎಂದರೂ ಅರ್ಥ ಸುಲಭವಾಗುತ್ತದೆ
ಟಿಪ್ಪನೀ (ಕ.ಗ.ಪ)
ಮುಹೂರ್ತ -ಮುಹೂರ್ತ ಎಂದರೆ ಮೊದಲೇ ಸಿದ್ಧಪಡಿಸಿದ್ದ ಘಳಿಗೆ ಬಟ್ಟಲು ತುಂಬುವುದು. ಕೊನೆಯ ಹನಿ ಬಿದ್ದು ಬಟ್ಟಲ ಮೇಲ್ಭಾಗ ಖಾಲಿಯಾಗುವುದು.
ಪುಣ್ಯಾಹ ಎಂದರೆ ಪುರೋಹಿತರು ಮಾವಿನ ಸೊಪ್ಪಿನ ಕೊನೆಯಲ್ಲಿ ನೀರನ್ನು ಎಲ್ಲ ಕಡೆ ಚಿಮುಕಿಸಿ ದಿಕ್ಕುಗಳನ್ನು ಶುದ್ಧಗೊಳಿಸುವ ಕ್ರಮ.
ಮೂಲ ...{Loading}...
ವರ ಮುಹೂರ್ತದ ಘಳಿಗೆವಟ್ಟಲ
ಭರಿತದೊಳು ಪುಣ್ಯಾಹವದ ವಿ
ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ ॥77॥
೦೭೮ ವಿಭವವೈವಡಿಯಾಗೆ ಸದ್ವಿಜ ...{Loading}...
ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ
ಅಭವ ಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯ ಮದುವೆಗಿಂತ ಐದು ಮಡಿ ವೈಭವದಿಂದ ವಿರಾಟನು ಆ ದ್ವಿಜ ಸಭೆಯನ್ನು ಆರಾಧಿಸಿದ. ಅನೇಕ ರಾಜರುಗಳು ಮುಯ್ಯಿ, ಉಡುಗೊರೆ ರತ್ನ ಭೂಷಣಗಳನ್ನು ವಧೂವರರಿಗೆ ಕೊಟ್ಟರು. ರುದ್ರನಿಗೆ ಸಮಾನ ವೀರನಾಗು ಎಂದು ಮಂಗಳಾಂಗಿಯರು ಅಭಿಜನರ ಅಮಲ ತಿಲಕನಾದ ಅಭಿಮನ್ಯುವನ್ನು ಉತ್ಸಾಹದಿಂದ ಹರಸಿದರು.
ಪದಾರ್ಥ (ಕ.ಗ.ಪ)
ಐವಡಿ-ಐದು ಮಡಿ, ಐದರಷ್ಟು, ಸದ್ವಿಜಸಭೆ-ಬ್ರಾಹ್ಮಣರ ಸದಸ್ಸು, ಆರಾಧಿಸು-ಗೌರವಿಸು, ಅವನೀವಿಭು-ರಾಜ, ಅವನಿ-ಭೂಮಿ ವಿಭು-ಪಾಲಕ, ಒಡೆಯ, ಮುಯ್ಯಿ-ಓದಿಸುವ ಮೆಚ್ಚು ಕಾಣಿಕೆ, ಅಭವ-ರುದ್ರ, ಇಭಗಮನೆ-ಆನೆಯಂತೆ ಮಂದ ಹೆಜ್ಜೆಗಳನ್ನಿರಿಸಿ ಬರುವ ಸ್ತ್ರೀ, ಸನ್ನಿಭ-ಸಮಾನ, ಅಭಿಜನ-ವಂಶ, ಅಮಲ-ಪವಿತ್ರ
ಮೂಲ ...{Loading}...
ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ
ಅಭವ ಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ ॥78॥
೦೭೯ ಇದು ಶುಭೌಘದ ...{Loading}...
ಇದು ಶುಭೌಘದ ಗರುಡಿ ಬಹು ಸಂ
ಪದದ ನೆಲೆಮನೆ ಸೊಂಪಿನಾಗರ
ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು
ಮುದದ ಕೇಳೀಸ್ಥಾನ ವಿಮಲಾ
ಭ್ಯುದಯದೋಲಗಶಾಲೆ ಲಕ್ಷ್ಮೀ
ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆರೆದವರೆಲ್ಲ ಇದು ಶುಭಕಾರ್ಯಗಳ ವ್ಯಾಯಾಮ ಶಾಲೆ, ಬಹಳ ಸಂಪತ್ತಿನ ತವರು, ಸೊಂಪಿನ ಆಶ್ರಯ ಸ್ಥಾನ, ಮಹಾ ಆನಂದ ಪ್ರವಾಹದ ಜನ್ಮ ಭೂಮಿ, ಸಂತೋಷದ ಕ್ರೀಡಾಸ್ಥಳ, ಮಹಾ ಅಭಿವೃದ್ಧಿಯ ಸಭಾಂಗಣ, ಲಕ್ಷ್ಮಿಯ ನೆಲೆವನೆ ಎಂದು ಹೇಳಿಕೊಳ್ಳುತ್ತಿರಲು ಮದುವೆ ನೆರವೇರಿತು.
ಪದಾರ್ಥ (ಕ.ಗ.ಪ)
ಶುಭೌಘ-ಶುಭ ಸಮಾಚಾರಗಳ ಸಮೂಹ, ಗರುಡಿ-ಕಲಿಸುವ ಮನೆ, ಪರಾನಂದ-ಪರಮಾನಂದ, ಮುದ-ಸಂತೋಷ, ಕೇಳಿ-ಆಟ, ಓಲಗಶಾಲೆ-ಸಭಾಂಗಣ, ಸದನ-ಮನೆ
ಮೂಲ ...{Loading}...
ಇದು ಶುಭೌಘದ ಗರುಡಿ ಬಹು ಸಂ
ಪದದ ನೆಲೆಮನೆ ಸೊಂಪಿನಾಗರ
ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು
ಮುದದ ಕೇಳೀಸ್ಥಾನ ವಿಮಲಾ
ಭ್ಯುದಯದೋಲಗಶಾಲೆ ಲಕ್ಷ್ಮೀ
ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ ॥79॥
೦೮೦ ಯಾದವರು ಪಾಞ್ಚಾಲ ...{Loading}...
ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀಜನವವನಿಪನ ಸನ್ಮಾನ ದಾನದಲಿ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾದವರು ಪಾಂಚಾಲರು ಮತ್ಸ್ಯರು ಪಾಂಡು ಸೋಮಕ ಮೊದಲಾದವರ ವಂಶದವರನ್ನು ಅವರ ಅಪಾರ ಸಂಖ್ಯೆಯ ಬಂಧು ಬಳಗದವರನ್ನು ಧರ್ಮರಾಯನು ವಿನಯದಿಂದ ಸತ್ಕರಿಸಿದ. ಸಕಲ ಜನಗಳೂ ಧರ್ಮರಾಯನ ದಾನ ದಕ್ಷಿಣೆಗಳ ಸತ್ಕಾರದಿಂದ ದಣಿದರು.
ಪದಾರ್ಥ (ಕ.ಗ.ಪ)
ಅನ್ವಯ-ವಂಶ, ವಿತ್ತ-ಧನ, ಮೇದಿನೀ ಜನ-ಭೂಮಿಯ ಜನರು, ಅವನಿಪ-ರಾಜ
ಟಿಪ್ಪನೀ (ಕ.ಗ.ಪ)
ಸೋಮಕ : 1. ಸಹದೇವನೆಂಬ ರಾಜನ ಮಗ, ಪಾಂಚಾಲ ರಾಜ. 2. ದಿವೋದಾಸನ ಮೊಮ್ಮಗ, ನೂರ್ವರು ಪತ್ನಿಯರೂ ನೂರು ಮಕ್ಕಳೂ ಇದ್ದರು. ಹಿರಿಯ ರಾಣಿಯು ಹಡೆದ ಜಂತು ಎಂಬ ಮಗ ಇರುವೆಗಳಿಂದ ಕಚ್ಚಿಸಿಕೊಂಡು ಬಾಧೆ ಪಟ್ಟಾಗ ಅವನನ್ನೇ ಯಜ್ಞದಲ್ಲಿ ಬಲಿಕೊಟ್ಟು ಮತ್ತೆ ನೂರು ಮಕ್ಕಳನ್ನು ಪಡೆಯಲು ಪ್ರಯತ್ನಿಸಿದವನು ಈತ. ಸಭಾಪರ್ವ, ವಿರಾಟ ಪರ್ವಗಳಲ್ಲಿ ಈ ಯಜ್ಞದ ವಿಷಯ ಹೇಳಲಾಗಿದೆ. ಇವನನ್ನು ಧರ್ಮರಾಯನು ಸನ್ಮಾನಿಸಿರುವ ಸಂಭವ ಕಡಿಮೆ.
ಮೂಲ ...{Loading}...
ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀಜನವವನಿಪನ ಸನ್ಮಾನ ದಾನದಲಿ ॥80॥
೦೮೧ ವರ ಚತುರ್ಥಿಯೊಳಿರುಳು ...{Loading}...
ವರ ಚತುರ್ಥಿಯೊಳಿರುಳು ಮೆರೆದರು
ಪುರದಲುತ್ಸಾಹದಲಿ ದಂಪತಿ
ವರರು ಭೂಮೀಚಾರ ಚಮರದ ಚಾತುರಂಗದಲಿ
ಮರುದಿವಸವವಭೃತವ ನೆರೆ ವಿ
ಸ್ತರಿಸಿದರು ಪನ್ನೀರ ಹೊಂಗೊ
ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂಗಳಕರವಾದ ನಾಲ್ಕನೆಯ ರಾತ್ರಿ ವಧೂವರರ ಮೆರವಣಿಗೆ. ಚತುರಂಗ ಸೇನೆ ಈ ಮೆರವಣಿಗೆಯಲ್ಲಿ ಭಾಗವಹಿಸಿತ್ತು. ಚಾಮರದವರೂ ಇದ್ದ ಈ ಮೆರವಣಿಗೆಯಲ್ಲಿ ವಧೂವರರು ಕಾಲುನಡಿಗೆಯಲ್ಲಿ ಬಂದರು. ಐದನೆಯ ದಿನ ವಧೂವರರಿಗೆ ಅವಭೃತಸ್ನಾನದ ಕಾರ್ಯಕ್ರಮ. ಪನ್ನೀರಿನ ಚಿನ್ನದ ಪಾತ್ರೆಗಳಲ್ಲಿ ಕುಂಕುಮದ ನೀರಿನ ಕೊಡಗಳಲ್ಲಿ ಓಕುಳಿಯ ಏರ್ಪಾಡು ಮಾಡಲಾಗಿತ್ತು.
ಪದಾರ್ಥ (ಕ.ಗ.ಪ)
ಚತುರ್ಥಿ-ನಾಲ್ಕನೆಯ ದಿನ, ಭೂಮಿಚಾರ= ಕಾಲುನಡಿಗೆ, ಚಮರ-ಚಾಮರ, ಅವಭೃತ-ಮಂಗಳ ಸ್ನಾನ, ಘಟವಾಸಕ-ಸುಗಂಧ ದ್ರವ್ಯಗಳ ಪಾತ್ರೆ, ಕೊಡ
ಮೂಲ ...{Loading}...
ವರ ಚತುರ್ಥಿಯೊಳಿರುಳು ಮೆರೆದರು
ಪುರದಲುತ್ಸಾಹದಲಿ ದಂಪತಿ
ವರರು ಭೂಮೀಚಾರ ಚಮರದ ಚಾತುರಂಗದಲಿ
ಮರುದಿವಸವವಭೃತವ ನೆರೆ ವಿ
ಸ್ತರಿಸಿದರು ಪನ್ನೀರ ಹೊಂಗೊ
ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ ॥81॥
೦೮೨ ಕನಕ ಮಣಿಗಳ ...{Loading}...
ಕನಕ ಮಣಿಗಳ ತೊಟ್ಟು ಜಾಜಿಯ
ನನೆಯ ಆದಳಿಕೆಯಲಿ ಮದನನ
ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು
ದನುಜಹರನರಸಿಯರು ಕುಂತಿಯ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಂಗಸರು ಓಕುಳಿಯನ್ನು ಆರಂಭಿಸಿದರು. ಶ್ರೀಕೃಷ್ಣನ ರಾಣಿಯರು, ಪಾಂಡವರ ರಾಣಿ, ಮತ್ಸ್ಯ ವನಿತೆಯರು ಪಾಂಚಾಲಿನಿಯರು ಎಲ್ಲರೂ ಕನಕಮಣಿಗಳನ್ನು ತೊಟ್ಟು ಜಾಜಿಯ ಮೊಗ್ಗು ಮುಡಿದು ಎದುರು ಬದುರಾಗಿ ನಿಂತರು. ಮನ್ಮಥನ ಕತ್ತಿಯಂತೆ ಹೊಳೆಯುತ್ತಿದ್ದ ಆ ಚೆಲುವೆಯರೆಲ್ಲ ಜಿದ್ದಾ ಜಿದ್ದಿನ ನೀರು ಹೊಯ್ಯುವ ಸ್ಪರ್ಧೆಗೆ ಇಳಿದರು.
ಪದಾರ್ಥ (ಕ.ಗ.ಪ)
ಆದಳಿಕೆ-ಎದುರುಬದುರಾಗಿ ನಿಲ್ಲುವಿಕೆ, ನನೆ-ಮೊಗ್ಗು, ಖಾತಿ-ಕೋಪ, ದನುಜಹರ-ಕೃಷ್ಣ
ಟಿಪ್ಪನೀ (ಕ.ಗ.ಪ)
ಓಕುಳಿಯಾಟವು ಆಕಾಲದ ಮದುವೆ ಸಮಾರಂಭದ ಒಂದು ಕ್ರೀಡೆಯಾಗಿದ್ದಂತೆ ಕಾಣುತ್ತದೆ. ಓಕುಳಿ ಶಾಸ್ತ್ರವೇ ಇದೆ. “ಮದುವೆಯ ಸಂದರ್ಭದಲ್ಲಿ ನೀರಿಗೆ ಅರಿಸಿನ ಮತ್ತು ಸುಣ್ಣ ಬೆರಸಿ ಕೆಂಪು ನೀರು ಮಾಡಿ ಗಂಡು ಹೆಣ್ಣಿಗೆ ಮತ್ತು ಅವರ ಕಡೆಯವರಿಗೆ ಮೈಮೇಲೆ ಎರಚುವ ಶಾಸ್ತ್ರ” (ಕನ್ನಡ ಜಾನಪದ ಕೋಶ ಪು. 135)
ಮೂಲ ...{Loading}...
ಕನಕ ಮಣಿಗಳ ತೊಟ್ಟು ಜಾಜಿಯ
ನನೆಯ ಆದಳಿಕೆಯಲಿ ಮದನನ
ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು
ದನುಜಹರನರಸಿಯರು ಕುಂತಿಯ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು ॥82॥
೦೮೩ ಧರಣಿ ನೆನೆದುದು ...{Loading}...
ಧರಣಿ ನೆನೆದುದು ಗಂಧ ರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನದ
ಪರಮ ಸೌರಭ ಕಲಸಿಕೊಂಡುದು ಸಕಲ ಸುರಕುಲವ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧ ರಸ ಕಸ್ತೂರಿ ಪನ್ನೀರುಗಳ ಪ್ರವಾಹದಿಂದ ಭೂಮಿಯೆಲ್ಲ ನೆನೆದು ಹೋಯಿತು. ಆ ನೀರಿನ ಸಮುದ್ರದ ತುಂತುರು ಹನಿಗಳ ರಭಸಕ್ಕೆ ದಿಕ್ಕು ಸುವಾಸನಾಯುಕ್ತವಾಯಿತು. ಅವರಿವರಿರಲಿ ಸೂರ್ಯನೇ ಪರಿಮಳಭರಿತನಾದ. ಇನ್ನು ಗಾಳಿಯು ಸುವಾಸನೆ ಹರಡುವುದರಲ್ಲಿ ಆಶ್ಚರ್ಯವೇನಿದೆ ? ಆಕಾಶಮಾರ್ಗದಲ್ಲಿ ಹರಡಿದ ಪರಿಮಳವು ಸಕಲ ದೇವತೆಗಳ ಲೋಕಕ್ಕೆ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಹೊನಲು-ಪ್ರವಾಹ, ಕಂಪಿಡು-ಸುವಾಸನೆಯಿಂದ ಕೂಡು, ತುಷಾರ-ತುಂತುರು, ತರಣಿ-ಸೂರ್ಯ, ಪವನ-ವಾಯು, ಸುರಭಿತನ-ಪರಿಮಳಿಸುವಿಕೆ, ಸೌರಭ-ಸುವಾಸನೆ
ಮೂಲ ...{Loading}...
ಧರಣಿ ನೆನೆದುದು ಗಂಧ ರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನದ
ಪರಮ ಸೌರಭ ಕಲಸಿಕೊಂಡುದು ಸಕಲ ಸುರಕುಲವ ॥83॥
೦೮೪ ಬಳುವಳಿಯ ನಿಖಿಳಾವನೀ ...{Loading}...
ಬಳುವಳಿಯ ನಿಖಿಳಾವನೀ ಮಂ
ಡಲವನನುಪಮ ಕೋಶ ವರ್ಗದ
ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ
ಅಳಿಯಗಿತ್ತು ವಿರಾಟನೃಪ ಯದು
ಕುಲವನಾ ಪಾಂಚಾಲ ಚೈದ್ಯಾ
ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳುವಳಿಯಾಗಿ ಭೂಮಿಯನ್ನು ಕೋಶವನ್ನು ಸುವಾಸಿನಿಯರನ್ನು ಆನೆ ಕುದುರೆ ರಥ ಕಾಲಾಳು ಗೋ ಸಮೂಹಗಳನ್ನು ವಿರಾಟನು ತನ್ನ ಅಳಿಯನಿಗೆ ಕೊಟ್ಟನು. ಅನಂತರ ಯಾದವ ಪಾಂಚಾಲ ಚೈದ್ಯರುಗಳಿಗೆ ಉತ್ತಮ ವಸ್ತು ವಾಹನಗಳ ಮೂಲಕ ಸನ್ಮಾನ ಮಾಡಿದನು.
ಪದಾರ್ಥ (ಕ.ಗ.ಪ)
ಬಳುವಳಿ-ಕಾಣಿಕೆ, ಮೆಚ್ಚು, ಅವನೀಮಂಡಲ-ಭೂಮಂಡಲ, ಪಾದಾತಿ-ಸೈನಿಕ, ಗೋವ್ರಜ-ದನಗಳ ಸಮೂಹ, ಆವಳಿ-ಗುಂಪು
ಮೂಲ ...{Loading}...
ಬಳುವಳಿಯ ನಿಖಿಳಾವನೀ ಮಂ
ಡಲವನನುಪಮ ಕೋಶ ವರ್ಗದ
ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ
ಅಳಿಯಗಿತ್ತು ವಿರಾಟನೃಪ ಯದು
ಕುಲವನಾ ಪಾಂಚಾಲ ಚೈದ್ಯಾ
ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ ॥84॥
೦೮೫ ಆದುದಭಿಮನ್ಯುವಿನ ಮದುವೆ ...{Loading}...
ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣ ರಾಯನ
ಪಾದ ದರುಶವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದುದನು ನೀ ಕರುಣಿಸೆಂದರು ವೀರ ನರಯಣನ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಭಿಮನ್ಯುವಿನ ಮದುವೆ ವೈಭವದಿಂದ ನೆರವೇರಿತು. ಜೊತೆಗೆ ಮಹಾಕರುಣಾಶಾಲಿಯಾದ ಶ್ರೀ ಕೃಷ್ಣರಾಯನ ಪಾದ ದರ್ಶನದಿಂದಾಗಿ ನಮ್ಮ ಅಭ್ಯುದಯ ಇಮ್ಮಡಿಸಿದೆ. ನಾವು ಭೂಮಿಯನ್ನೇ ಒತ್ತೆಯಿಟ್ಟು ಸತ್ಯವನ್ನು ರಕ್ಷಿಸಿಕೊಂಡೆವು. ಕೃಷ್ಣ, ಮುಂದೆ ನಮಗೆ ಶುಭವಾಗುವಂತೆ ಕರುಣಿಸು” ಎಂದು ಪಾಂಡವರು ಶ್ರೀಕೃಷ್ಣನನ್ನು ಪ್ರಾರ್ಥಿಸಿದರು.
ಪದಾರ್ಥ (ಕ.ಗ.ಪ)
ಮೇದಿನಿ-ರಾಜ್ಯ (ಭೂಮಿ)
ಮೂಲ ...{Loading}...
ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣ ರಾಯನ
ಪಾದ ದರುಶವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದುದನು ನೀ ಕರುಣಿಸೆಂದರು ವೀರ ನರಯಣನ ॥85॥
೦೮೬ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ವಿರಾಟಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ವಿರಾಟಪರ್ವಂ ಸಮಾಪ್ತಮಾದುದು.