೦೦೦ ಸೂ ಕದನ ...{Loading}...
ಸೂ. ಕದನ ಚೌಪಟಮಲ್ಲ ಪರ ಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧದಲ್ಲಿ ಚತುರಂಗ ಸೇನೆಯನ್ನು ಸೋಲಿಸಬಲ್ಲ ಮಲ್ಲ, ಶತ್ರುಸೇನೆ ಎಂಬ ಮನ್ಮಥನ ಮದವನ್ನು ಇಳಿಸುವ ರುದ್ರ ಎನ್ನಿಸಿಕೊಂಡ ಅರ್ಜುನನು ಶತ್ರು ಕೌರವ ಸೇನೆಯನ್ನು ಸದೆದು ದನಕರುಗಳನ್ನು ಬಿಡಿಸಿಕೊಂಡು ತಂದ.
ಪದಾರ್ಥ (ಕ.ಗ.ಪ)
ಚೌಪಟಮಲ್ಲ-ಮಹಾವೀರ, ಪರಬಲ-ಶತ್ರು ಸೇನೆ , ಮದನ-ಮನ್ಮಥನ ಮದಹರ-ಮದವನ್ನು ಇಳಿಸುವ, ರುದ್ರ-ಈಶ್ವರ, ಅಹಿತ-ಶತ್ರು
ಟಿಪ್ಪನೀ (ಕ.ಗ.ಪ)
“ಶತಮಾರ್ಗಾ ಭವಿಷ್ಯಂತಿ
ಪಾವಕಸ್ಯೇವ ಕಾನನೇ” (ವಿರಾಟಪರ್ವ 61-22)
ಈ ಕೌರವ ಸೇನೆಯನ್ನು ಒಂಟಿಯಾಗಿ ಗೆಲ್ಲುವ ಬಿಲ್ಲುಗಾರನಾದ ನನಗೆ ಒಂಟಿಯಾಗಿದ್ದರೂ ಅಡವಿಯನ್ನು ಸುಡುವ ದಾವಾಗ್ನಿಯಂತೆ ನೂರುದಾರಿ ಕಾಣುತ್ತಿದೆ" ಎಂಬ ಮೂಲಭಾರತದ ಅರ್ಜುನನ ಮಾತನ್ನು ಗಮನಿಸಬೇಕು.
ಅಂದು ಅಷ್ಟಮಿ. ಸಪ್ತಮಿಯ ದಿನದಂದೇ ಪಾಂಡವರ ಅಜ್ಞಾತ ವಾಸದ ಅವಧಿ ಮುಗಿದಿತ್ತು ಎಂದು ವ್ಯಾಖ್ಯಾನಕಾರ ನೀಲಕಂಠ ಹೇಳಿದ್ದಾನೆ. (ಭಾರತ ಭಾವದೀಪ)
“ಶಾರ್ವರಿ ಸಂವತ್ಸರ ಶ್ರಾವಣ ಬಹುಳ ಷಷ್ಠ್ಯೋಪರಿ ಸಪ್ತಮ್ಯಾಮೇವ ಪಾಂಡವಾನಾಂ ವ್ರತಂ ಪರಿಪೂರ್ಣಮಭೂದಿತಿ ಸಾಂಪ್ರತಂ (ಈ ದಿನ) ಅಷ್ಟಮಿ ತಿಥಿ : ತಸ್ಮಾದೇವ ಅರ್ಜುನೋ ನಿರ್ಗತ ಇತ್ಯಭಿಪ್ರಾಯಃ”
ಪಾಂಡವರು ವನವಾಸ ಅಜ್ಞಾತವಾಸಗಳ ಅವಧಿಯನ್ನು ಸರಿಯಾಗಿ ಪೂರೈಸಿದ್ದಾರೆಂದು ಭೀಷ್ಮರು (ವ್ಯಾಸಭಾರತ) ಹೇಳುತ್ತಾರೆ.
ತೆಲುಗು ವ್ಯಾಖ್ಯಾನಕಾರರು ಈ ಬಗೆಗೆ ವಿವರಗಳನ್ನು ನೀಡಿದ್ದಾರೆ. ಒಂದು ಕಾಲಗಣನಾ ಕೋಷ್ಟಕವನ್ನು ಕೊಟ್ಟಿದ್ದಾರೆ.
18 ರೆಪ್ಪೆ ಬಡಿತ = 1 ಕಾಷ್ಠ
20 ಕಾಷ್ಠ = 1 ಕಲಾ (ಕ್ಷಣ)
12 ಕಲಾ (ಕ್ಷಣ) = 1 ಮುಹೂರ್ತ (48 ನಿಮಿಷದ ಅವಧಿ)
30 ಮುಹೂರ್ತ = ಒಂದು ದಿನ ಅಂದರೆ 60 * 48 = 2880 ನಿಮಿಷ
15 ದಿನ = 1/2 ತಿಂಗಳು (ಮಾಸ) 2 ಅರ್ಧಮಾಸ=1 ಮಾಸ
ಎರಡೆರಡು ಮಾಸಗಳಿಗೆ ಒಂದು ಋತು, 12 ಮಾಸ = ಸಂವತ್ಸರ
ಈ ಪಕ್ಷ ಮಾಸ ಸಂವತ್ಸರ ಕಾಲಗಳಲ್ಲಿ ಅಧಿಕ ನ್ಯೂನ ಹೆಚ್ಚು ಕಡಮೆ ಇರುತ್ತದೆ ಉದಾ : ಐದೈದು ವರ್ಷಕ್ಕೆ ಎರಡು ತಿಂಗಳು ಅಧಿಕವಾಗಿ ಬರುತ್ತವೆ (ಅಧಿಕಮಾಸ) ಈ ಪ್ರಕಾರ 13 ವರ್ಷ (ಈ ಅವಧಿ ಮುಗಿದಿದೆ) ಅಂದರೆ 13 ವರ್ಷ + ಐದು ತಿಂಗಳು + ಹನ್ನೆರಡು ದಿನ ಚಂದ್ರ ಸಂವತ್ಸರ ಎಂದರೆ 354. ದಿನ ಸೌರ ಸಂವತ್ಸರ ಎಂದರೆ 365ದಿನ + 7 1/2 ಮುಹೂರ್ತ
ಅಂದರೆ ಚಾಂದ್ರಮಾನ ಸಂವತ್ಸರ 13+5 ತಿಂಗಳು
ಪಾಂಡವರು ಸೌರಮಾನದ ಲೆಕ್ಕಾಚಾರವಿರಿಸಿಕೊಂಡಿದ್ದಾರೆ ಆದುದರಿಂದ ಅಧಿಕ ಮಾಸದ ಲೆಕ್ಕ ಬರುವುದಿಲ್ಲ. ಅವರ ಸೌರಮಾನ ಲೆಕ್ಕದಲ್ಲಿ ಈಗ 13 ವರ್ಷ ಸರಿಯಾಗಿ ಮುಗಿದಿದೆ.
ಚಾಂದ್ರಮಾನ ಸೌರಮಾನ ದಿನಗಣನೆಯಲ್ಲಿ ಈ ರೀತಿ ಭೇದವಿದೆ. ವಾಸ್ತವವಾಗಿ ಸೌರಮಾನ ಗಣನೆಯಲ್ಲಿ ಈಗ 13 ವರ್ಷ + 6 ದಿನ ಕಳೆದಿದೆ - ಭೀಷ್ಮರು ನಿರೂಪಿಸಿದ ಲೆಕ್ಕ ಇದು.
(ವಿರಾಟ ಪರ್ವಮು : ಕಪ್ಪಗಂತುಲ ಲಕ್ಷ್ಮಣ ಶಾಸ್ತ್ರಿ - ಪು 150-151)
ಮೂಲ ...{Loading}...
ಸೂ. ಕದನ ಚೌಪಟಮಲ್ಲ ಪರ ಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ
೦೦೧ ಭಯವು ಭಾರವಿಸಿತ್ತು ...{Loading}...
ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರಿಗೆ ಭಯದ ಭಾರ ಹೆಚ್ಚಾಯಿತು. ಜನಮೇಜಯನೇ ಕೇಳು ಕೌರವ ಸೇನೆಯಲ್ಲಿ ಭೀಷ್ಮ ಹಾಗೂ ದ್ರೋಣರಿಗೆ ಇವನು ಪಾರ್ಥ ಎಂದು ಗೊತ್ತಾಯಿತು. ಆಗ ದ್ರೋಣರು ಭೀಷ್ಮರಿಗೆ “ನಾವು ಗೆಲ್ಲುವುದು ಸಾಧ್ಯವಿಲ್ಲ. ಇದು ಸಂಶಯದ ಸುಳಿವು. ಉತ್ಪಾತ (ಕೆಟ್ಟ ಶಕುನ) ಶತ, ಇದು ಲಯದ ಬೀಜ. ಭೀಷ್ಮರೇ ಇದನ್ನು ಗಮನಿಸಿ” ಎಂದರು.
ಪದಾರ್ಥ (ಕ.ಗ.ಪ)
ಭಾರವಿಸು-ಹೆಚ್ಚಾಗು, ಮಹೀಪತಿ-ಅರಸ, ಸುಳಿವು-ಸೂಚನೆ, ಉತ್ಪಾತಶತ-ನೂರಾರು ಉತ್ಪಾತ, ಲಯ-ವಿನಾಶ, ಚಿತ್ತವಿಸು-ಕೇಳು
ಮೂಲ ...{Loading}...
ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ॥1॥
೦೦೨ ಸುರಿಸುತಿವೆ ಕಮ್ಬನಿಗಳನು ...{Loading}...
ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲ ಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಷ್ಮ ! ನಮ್ಮ ಸೇನೆಯ ಆನೆ ಕುದುರೆಗಳು ಕಣ್ಣೀರು ಸುರಿಸುತ್ತಿವೆ. ಒರೆಯಿಂದ ತೆಗೆದ ಕಿರುಗತ್ತಿಗಳು (ಅಡಾಯುಧ) ಮುರಿದು ಬೀಳುತ್ತಿವೆ. ಸೇನೆ ತಲ್ಲಣಗೊಳ್ಳುವ ಹಾಗೆ ಬಿರುಗಾಳಿ ಬೀಸುತ್ತಿದೆ. ಇನ್ನೊಂದು ಸೂರ್ಯಮಂಡಲವೇ ನಾನಾ ಬಗೆಯಾಗಿ ಕಾಣಿಸುತ್ತಿದೆ. ನಕ್ಷತ್ರಗಳು ಚಲಿಸುತ್ತಿವೆ. ಆಕಾಶದಲ್ಲಿ ರಕ್ತ ವರ್ಣದ ಜಲಧಾರೆ ಸುರಿಯುತ್ತಿದೆ.” ಎಂದು ದ್ರೋಣರು ಹೇಳಿದರು
ಪದಾರ್ಥ (ಕ.ಗ.ಪ)
ಗಜ-ಆನೆ, ತುರಗ-ಕುದುರೆ, ಚಯ-ಸಮೂಹ, ಉಗಿದ-ಸೆಳೆದ, ಅಡಾಯುಧ-ಕತ್ತಿ, ಅಭ್ರ-ಮೋಡ, ಅರುಣಮಯ-ರಕ್ತವರ್ಣ, ಪಡಿಸೂರ್ಯಮಂಡಲ-ಬೇರೊಂದು ಸೂರ್ಯಮಂಡಲ
ಮೂಲ ...{Loading}...
ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲ ಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ॥2॥
೦೦೩ ಇದೆ ಬಹಳ ...{Loading}...
ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೂಮಿ ಕಂಪಿಸುವುದು ಹೆಚ್ಚಾಗುತ್ತಿದೆ. ದಿಕ್ಕುಗಳೆಲ್ಲ ಭಯಾನಕವಾಗಿವೆ. ಧೂಮಕೇತುಗಳಿವೆ. ಧ್ವಜಗಳು ಮುರಿದು ಬೀಳುತ್ತಿವೆ. ತಿರುಗು ಮುರುಗಾದ ಪರಿವೇಷ. ಇದೆಲ್ಲ ನೋಡಿದರೆ ಸಮಾಧಾನ ತರುವ ವಿಷಯವಲ್ಲ. ಕೌರವ ರಾಜನಿಗೆ ಮಂಗಳಕರವೂ ಅಲ್ಲ. ಭೀಷ್ಮರೇ, ಅರ್ಜುನನು ನಮ್ಮನ್ನೆಲ್ಲ ಸದೆಯದೆ ಬಿಟ್ಟುಬಿಡುತ್ತಾನೆಯೆ ?” ಎಂದು ದ್ರೋಣರು ಹೇಳಿದರು.
ಪದಾರ್ಥ (ಕ.ಗ.ಪ)
ದಿಶಾವಳಿ-ದಿಕ್ಕುಗಳು, ಪತಾಕಾಭಂಗ-ಧ್ವಜ ಮುರಿದು ಬೀಳುವಿಕೆ, ವಿಪರೀತ-ತಿರುಗು ಮುರುಗು, ಸಮಾಹಿತ-ಸಮಾಧಾನ
ಮೂಲ ...{Loading}...
ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ ॥3॥
೦೦೪ ಬಿರಿಯಲಬುಜಭವಾಣ್ಡವಿದೆ ಕಪಿ ...{Loading}...
ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಿ ! ಹನುಮಂತನ ಗರ್ಜನೆ, ದೇವದತ್ತ ಶಂಖದ ಶಬ್ದ…. ಗಾಂಡಿವದ ಬೊಬ್ಬೆಗಳೆಲ್ಲ ಇವೆ. ಬ್ರಹ್ಮಾಂಡ ಬಿರಿಯುವಂತೆ ಮಾಡುತ್ತಿದೆ. ಅಲ್ಲದೆ ಅರ್ಜುನನ ಜೋರಾದ ಸಿಂಹ ಧ್ವನಿಯಿದೆ. ಕುದುರೆಗಳ ಕೊಬ್ಬಿನ ಮೆರೆದಾಟ ಕೂಡ ಯುದ್ಧಕ್ಕೆ ಅರ್ಜುನನು ಬಂದಿದ್ದಾನೆ ಎಂದು ಸಾರುತ್ತಿದೆ” ಎಂದು ದ್ರೋಣರು ಭೀಷ್ಮರಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅಬುಜಭವಾಂಡ-ಬ್ರಹ್ಮಾಂಡ, ಧರಧುರದ-ಉದ್ದಾಮ, ಭಯಾನಕ, ದೆಖ್ಖಾಳ-ಅತಿಶಯತೆ, ಆಡಂಬರ, ದಳ್ಳುರಿ-ಕೊಬ್ಬಿನ ಮೆರೆದಾಟ.
ಮೂಲ ...{Loading}...
ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ ॥4॥
೦೦೫ ಬಲವ ಬೆದರಿಸಿ ...{Loading}...
ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸ್ವಾಮಿಯ
ನಿಳಿಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ನಮ್ಮ ಸೇನೆಯನ್ನು ಹೆದರಿಸಿ ಶತ್ರುವಿನ ಭುಜಬಲದ ಹಿರಿಮೆಯನ್ನು ಕೊಂಡಾಡುತ್ತೀರಿ. ನಮ್ಮ ಒಡೆಯ ಕೌರವನನ್ನೇ ಕೀಳಾಗಿ ಕಾಣುತ್ತೀರಿ. ನಿಮ್ಮಂಥವರಿಗೆ ಈ ಖುಲ್ಲತನ (ನೀಚತನ) ಸಹಜ. ನಾನು ಹಾಗೆಲ್ಲ ಮಾಡುವುದಿಲ್ಲ. ಎದುರಿಗಿರುವವನು ಅರ್ಜುನನಾದರೇನಂತೆ ? ದೇವೇಂದ್ರನಾಗಿದ್ದರೇನಂತೆ ? ಪರಶುರಾಮನೇ ಆಗಿದ್ದರೂ ಏನೀಗ ? ನಾನು ಯುದ್ಧ ಮಾಡಿ ನಿಮಿಷಕ್ಕೆ ಕೌರವನಿಗೆ ವಿಜಯವನ್ನು ತಂದುಕೊಡುತ್ತೇನೆ” ಎಂದು ಭೀಷ್ಮ ದ್ರೋಣರಿಗೆ ಕರ್ಣ ಹೇಳಿದ.
ಪದಾರ್ಥ (ಕ.ಗ.ಪ)
ಅಗ್ಗಳಿಕೆ-ಶ್ರೇಷ್ಠತೆ, ಇಳಿಕೆಗಾಣ್-ಕೀಳಾಗಿ ಕಾಣುÉ, (ಒಂದು ಸುಂದರ ಪ್ರಯೋಗ), ಪೈಕ-ಗುಂಪು, ಬಳಗ, ಖುಲ್ಲತನ-ನೀಚತನ
ಮೂಲ ...{Loading}...
ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸ್ವಾಮಿಯ
ನಿಳಿಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ॥5॥
೦೦೬ ನರನು ನರನೆನ್ದನವರತ ...{Loading}...
ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಆಕ್ಷೇಪ ಮುಂದುವರಿದಿದೆ. “ದ್ರೋಣ, ಭೀಷ್ಮರೆ ! ಸದಾ ಅರ್ಜುನ ಅರ್ಜುನ ಎಂದು ಯಾವಾಗಲೂ ತಲೆಬಿರಿಯುವಂತೆ ಹೊಗಳುತ್ತೀರಿ. ನಾನು ಯುದ್ಧಕ್ಕೆ ನಿಂತರೆ ಲೋಕಪಾಲಕರನ್ನು ಕೂಡ ಧ್ವಂಸಮಾಡಬಲ್ಲೆ. ಒಂದು ಕಡೆ ನೀವು ಅರ್ಜುನನ ಸೇವಕರಂತೆ ಸೇರಿದರೆ , ಇನ್ನೊಂದು ಕಡೆ ಊರಿನಲ್ಲಿ ಕೌರವ ಮತ್ತು ಅವನ ಕಡೆಯವರು ದುರ್ಜನರು ಎನ್ನುತ್ತ ಎರಡು ಬಗೆಯುತ್ತಿದ್ದೀರಿ. ದುಷ್ಟರಾದ ನಿಮ್ಮ ಬಳಿ ನನಗೇನು ಕೆಲಸ” ಎಂದು ಕರ್ಣನು ಹೇಳಿದ.
ಪದಾರ್ಥ (ಕ.ಗ.ಪ)
ಸಂಗರ-ಯುದ್ಧ, ತೆತ್ತಿಗ-ಸೇವಕ, ಅಹಿರಿ-ಆಗಿದ್ದೀರಿ.
ತತ್ತರೆ- ಸೇರಿದರೆ, ಕೂಡಿದರೆ, ತಳ್ತಡೆ> ತಳ್ತರೆ> ತತ್ತರೆ
ಮೂಲ ...{Loading}...
ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ॥6॥
೦೦೭ ಹೊಕ್ಕು ತಾ ...{Loading}...
ಹೊಕ್ಕು ತಾ ಬಳಿಸಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ಮೊದಲು ಧೈರ್ಯದಿಂದ ಪ್ರವೇಶ ಮಾಡಿ, ಅಟ್ಟಿಸಿಕೊಂಡು ಹೋದರೆ ಕಾಪಾಡುವುದು ಯಾರಿಗೆ ಸಾಧ್ಯ ? ಗರುಡನ ಕೊಕ್ಕಿಗೆ ಸಿಕ್ಕಿದ ಹಾವನ್ನು ಸೆಳೆಯಬಲ್ಲವನು ಯಾರು ? (ಇಲ್ಲಿ ನಾನು ಗರುಡನಂಥ ವೀರ ‘ನನ್ನ ಕೊಕ್ಕಿಗೆ ಪಾರ್ಥ ಸಿಕ್ಕಿದ್ದಾನೆ’ ಅವನನ್ನು ಯಾರೂ ಬಿಡಿಸಬಲ್ಲವರಿಲ್ಲ ಎಂಬರ್ಥ.) ಒಂಟಿಯಾಗಿ ಹೋಗಿ ಪಾರ್ಥನನ್ನು ಧ್ವಂಸಮಾಡುತ್ತೇನೆ. ಎಲೈ ರಾಜ ಕೌರವನೇ! ಈ ಚುಕ್ಕಿಗಳ (ನಗಣ್ಯ-ಅಲ್ಪರ) ಚಪಲದ ಮಾತುಗಳಿಗೆ ಕಿವಿಗೊಡಬೇಡ” ಎಂದು ಕರ್ಣನು ಕೌರವನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ತುಂಡ-ಕೊಕ್ಕು, ಎಕ್ಕತುಳ-ಅತಿಶಯ, ದ್ವಂದ್ವಯುದ್ಧ, ಒಕ್ಕಲಿಕ್ಕು-ನಾಶ ಮಾಡು, ಚುಕ್ಕಿ-ಕ್ಷುದ್ರರು ಅಲ್ಪರು ಎಂಬರ್ಥದಲ್ಲಿ, ಚಾಪಲ-ಚಂಚಲತೆ, ಅಸ್ಥಿರತೆ,
ಮೂಲ ...{Loading}...
ಹೊಕ್ಕು ತಾ ಬಳಿಸಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ॥7॥
೦೦೮ ಎನಲು ಭುಗಿಲೆನ್ದನು ...{Loading}...
ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಷರಿಗಳವಲ್ಲ ಬಲ್ಲೈ ಪಾರ್ಥನದಟುಗಳ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಹಾಗೆಂದ ಕೂಡಲೇ ಕೃಪಾಚಾರ್ಯರು ಉರಿದೆದ್ದರು. “ಅಯ್ಯ ದುರ್ಯೋಧನ ! ಕೇಳು ! ಈ ರಾಧೇಯ ಬೊಗಳಿದರೆ ಅವನು ಹೇಳಿದುದೆಲ್ಲ ನಿಜ ಎಂದು ನಂಬಬೇಡ. ನೋಡು. ಯುದ್ಧರಂಗದಲ್ಲಿ ಅರ್ಜುನನನ್ನು ಎದುರಿಸಿ ಗೆಲ್ಲುವುದು ನನಗೆ ಸಾಧ್ಯವಿಲ್ಲ. ನಿನಗೆ ಸಾಧ್ಯವಿಲ್ಲ. ಈ ಕರ್ಣನಿಗೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಕೆಲವರು ದೇವತೆಗಳಿಗೂ ಸಾಧ್ಯವಿಲ್ಲ. ಏಕೆಂದರೆ ಅರ್ಜುನನ ಪರಾಕ್ರಮ ನಿನಗೆ ಗೊತ್ತೇ ಇದೆಯಲ್ಲ.” ಎಂದರು.
ಪದಾರ್ಥ (ಕ.ಗ.ಪ)
ಭುಗಿಲ್ ಎನ್ನು-ಕೆರಳು, ರಾಧಾತನಯ-ಕರ್ಣನು ರಾಧೆ ಅಧಿರಥ ಎಂಬ ಬೆಸ್ತ ದಂಪತಿಗಳ ಸಾಕು ಮಗ, ಆದ್ದರಿಂದ ರಾಧೇಯ, ಅನುವರ-ಯುದ್ಧ, ಅನಿಮಿಷರು-ದೇವತೆಗಳು, ಅಳವಲ್ಲ-(ಎಣಿಕೆಗೆ ಮೀರಿದ) ಸಾಧ್ಯವಿಲ್ಲ ಎಂದರ್ಥ, ಅದಟು-ಪರಾಕ್ರಮ,
ಮೂಲ ...{Loading}...
ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಷರಿಗಳವಲ್ಲ ಬಲ್ಲೈ ಪಾರ್ಥನದಟುಗಳ ॥8॥
೦೦೯ ಮಾಡಿದನು ಹರನೊಡನೆ ...{Loading}...
ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡು ದುರ್ಯೋಧನ ಈ ಅರ್ಜುನನು ಸಾಕ್ಷಾತ್ ರುದ್ರನೊಂದಿಗೆ ಮಲ್ಲಯುದ್ಧ ಮಾಡಿದವನು. ದೇವೇಂದ್ರನಿಗೆ ಸೇರಿದ್ದ ಖಾಂಡವವು ತನಗೆ ಬೇಕು ಎಂದು ಅಗ್ನಿ ಪ್ರಾರ್ಥಿಸಿದಾಗ ಅದಕ್ಕೆ ಅವಕಾಶವನ್ನು ಕೊಟ್ಟವನು ಅರ್ಜುನ. ಕುರುವಂಶದ ಪ್ರಾಚೀನ ಕವಲು ಎನ್ನಿಸಿಕೊಂಡ ಉತ್ತರ ಕುರುಗಳಿಂದ ಹಣವನ್ನು ಇಂದ್ರಪ್ರಸ್ಥಕ್ಕೆ (ರಾಜಸೂಯಯಾಗದ ಸಂದರ್ಭದಲ್ಲಿ) ತರಿಸಿಕೊಂಡವನು. ಅಲ್ಲದೆ ಹಿರಣ್ಯಕಪುರ ನಿವಾಸಿಗಳ ಮನೆಗಳನ್ನು ಖಾಲಿ ಮಾಡಿದವನು.” ಎಂದರು.
ಪದಾರ್ಥ (ಕ.ಗ.ಪ)
ಖಾಡಾಖಾಡಿ-ಘೋರ ಯುದ್ಧ, ಸುರಪತಿ-ಇಂದ್ರ, ಬೇಳು-ಅಹುತಿಕೊಡು
ಟಿಪ್ಪನೀ (ಕ.ಗ.ಪ)
ಕಾಲಕೇಯರು - ಕಾಲಕೇಯ ಎಂಬುದು ಒಂದು ರಾಕ್ಷಸ ಗುಂಪಿನ ಹೆಸರು. ಕಶ್ಯಪ ಕಾಲಾ ದಂಪತಿಗಳ ಮಕ್ಕಳೆಲ್ಲ ಕಾಲಕೇಯರು. ಇವರ ಸಂಖ್ಯೆ ಸುಮಾರು 60,000. ಅವರು ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ರಾಕ್ಷಸ ರಾಜರುಗಳೊಡನೆ ಸೇರಿ ದೇವತೆಗಳ ಮತ್ತು ಶತ್ರುಗಳ ವಿರುದ್ದ ಹೋರಾಡಿದ್ದಾರೆ. ಹಿರಣ್ಯಪುರ ಇವರ ರಾಜಧಾನಿಯಾಗಿತ್ತು.
ಯಜ್ಞಯಾಗಾದಿಗಳು ಎಲ್ಲಿ ನಡೆಯುತ್ತಿದ್ದರೂ ಹೋಗಿ ಕೆಡಿಸುವುದು ಇವರ ಕೆಲಸವಾಗಿತ್ತು. ರಾತ್ರಿಯ ವೇಳೆ ಇವರು ಆಶ್ರಮಗಳಿಗೆ ನುಗ್ಗಿ ಕೊಲೆ ಸುಲಿಗೆಗಳಲ್ಲಿ ತೊಡಗುತ್ತಿದ್ದರು. ದೇವತೆಗಳ ಶತ್ರುಗಳಾದ ಇವರಿಗೆ ದೇವರಿಗೆ ಹವಿಸ್ಸು ಅರ್ಪಿಸುವ ಬ್ರಾಹ್ಮಣರುಗಳ ಮೇಲೂ ಅಸಾಧ್ಯ ಕೋಪವಿತ್ತು.
ತಪಸ್ವಿಗಳಿಗೆ ಕಾಲಕೇಯರ ಉಪಟಳ ಹೆಚ್ಚಾಯಿತು. ಕೊನೆಗೆ ದೇವತೆಗಳೂ, ತಪಸ್ವಿಗಳೂ ಅಗಸ್ತ್ಯ ಮಹರ್ಷಿಯ ಬಳಿಗೆ ದೂರನ್ನು ಒಯ್ದರು. ಅಗಸ್ಯರು ಕೂಡಲೇ ಕಾಲಕೇಯರನ್ನು ಧ್ವಂಸ ಮಾಡಲು ಹೊರಟರು ಇದರ ಸುಳಿವು ತಿಳಿದ ಕಾಲಕೇಯರೆಲ್ಲ ಓಡಿ ಹೋಗಿ ಹೇಗೋ ಸಮುದ್ರದಲ್ಲಿ ಅವಿತುಕೊಂಡರು. ಈ ಗುಪ್ತ ನೆಲೆಯಿಂದ ಅವರು ಮೂರು ಲೋಕಗಳಿಗೂ ಹಾನಿ ಮಾಡುತ್ತಿದ್ದರು.
ವಸಿಷ್ಠ ಮತ್ತು ಚ್ಯವನ ಮಹರ್ಷಿಗಳ ಆಶ್ರಮಗಳಿಗೂ ಕೇಡು ಬಂದಿತು. ಇದನ್ನೆಲ್ಲ ತಿಳಿದ ಅಗಸ್ತ್ಯರು ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿ ಸಮುದ್ರತೀರಕ್ಕೆ ಬಂದರು.
ಅಗಾಧವಾದ ಸಮುದ್ರದಲ್ಲಿ ಈ ರಾಕ್ಷಸರನ್ನು ಹುಡುಕಲು ಸಾಧ್ಯವೇ? ಅದಕ್ಕೆ ಸಮುದ್ರದ ನೀರನ್ನು ಆಪೋಶನ ತೆಗೆದುಕೊಂಡು ಬರಿದು ಮಾಡಿದರು. ಕಾಲಕೇರು ಭಾರಿ ಸಂಖ್ಯೆಯಲ್ಲಿ ಸತ್ತರು.
ಮುಂದೆ ಕಾಲಕೇಯರು ನಿವಾತ ಕವಚರೆಂಬ ರಾಕ್ಷಸರೊಂದಿಗೆ ಸೇರಿ ದೇವಲೋಕಕ್ಕೆ ಮುತ್ತಿಗೆ ಹಾಕಿದರು. ಆಗ ಇಂದ್ರನು ಅರ್ಜುನನನ್ನು ಯುದ್ಧಕ್ಕೆ ಕರೆಸಿದ. ಈ ಯುದ್ಧವನ್ನು ಮಹಾಭಾರತದಲ್ಲಿ ದೀರ್ಘವಾಗಿ ವರ್ಣಿಸಲಾಗಿದೆ. ಕೊನೆಗೆ ಅರ್ಜುನನು ಕಾಲಕೇಯರನ್ನು ನಿವಾತ ಕವಚರನ್ನು ಧ್ವಂಸ ಮಾಡಿದ.
ಕಿರಾತಾರ್ಜುನೀಯ - ಅರಣ್ಯಪರ್ವದಲ್ಲಿ ದೇವ-ಮಾನವ ಯುದ್ಧದ ಇನ್ನೊಂದು ಮುಖವನ್ನೂ ಕಾಣಬಹುದಾಗಿದೆ. ಪಾಂಡವರು ಕಾಡಿನಲ್ಲಿದ್ದಾಗ ಕರ್ಣನು ದಿಗ್ವಿಜಯ ಮಾಡಿಕೊಂಡು ವಿಜಯಶಾಲಿಯಾಗಿ ಬಂದು ಕೌರವನಿಂದ ವೈಷ್ಣವಯಾಗವನ್ನು ವೈಭವದಿಂದ ಮಾಡಿಸಿ ಕೌರವರು ಬಲಿಷ್ಠರಗುವಂತೆ ಮಾಡಿದ. ಈ ಸುದ್ದಿ ಧರ್ಮರಾಯನಿಗೆ ತಿಳಿಯಿತು. ಅಗ ವೇದವ್ಯಾಸರು ಬಂದು ‘‘ಅರ್ಜುನನನ್ನು ತಪಸ್ಸಿಗೆ ಕಳಿಸು. ಅಲ್ಲಿ ಅವನು ಶಿವನನ್ನು ಒಲಿಸಿಕೊಂಡು ಪಾಶಪತಾಸ್ತ್ರವನನು ಪಡೆದು ಬರಲಿ’’ ಎಂದು ಸಲಹೆ ಕೊಟ್ಟರು. ಅದಕ್ಕೆ ಅಗತ್ಯವಾದ ‘ಪ್ರತಿಸ್ಮೃತಿ’ ಮಂತ್ರವನ್ನೂ ಧರ್ಮರಾಯನಿಗೆ ಹೇಳಿಕೊಟ್ಟರು. ಹೀಗೆ ಪಾಂಡವರ ಶಸ್ತ್ರಸಂಪತ್ತನ್ನು ವೃದ್ಧಿಸುವುದಕ್ಕಾಗಿ ಅರ್ಜುನನು ಇಂದ್ರನ ಅಪ್ಪಣೆ ಆಶೀರ್ವಾದಗಳನ್ನೂ ಪಡೆದು ಇಂದ್ರಕೀಲದಲ್ಲಿ ತಪಸ್ಸು ಮಾಡುತ್ತಾನೆ. ತನ್ನ ಪರಮಭಕ್ತನಾದ ಅರ್ಜುನನ ಶಕ್ತಿ ಪರೀಕ್ಷೆ ಮಾಡಿ ವರವನ್ನು ಕೊಡುವುದಕ್ಕಾಗಿ ಶಿವನೇ ಕಿರಾತವೇಷದಲ್ಲಿ ಸಮಸ್ತಗಣಗಳೊಂದಿಗೆ ಬಂದದ್ದು ಒಂದು ಅದ್ಭುತ ಸನ್ನಿವೇಶ. ಅಲ್ಲದೆ ಅಲ್ಲಿ ಹಂದಿಯರೂಪದಲ್ಲಿ ವಾಸಮಾಡುತ್ತ ಸುತ್ತಮುತ್ತಣವರಿಗೆ ಕಿರುಕುಳ ಕೊಡುತ್ತಿದ್ದ ಮೂಕದಾನವನನ್ನು ಕೊಲ್ಲುವುದೂ ಶಿವನ ಉದ್ದೇಶವಾಗಿತ್ತು. ಕಿರಾತಗಣಗಳ ಗಲಭೆಗೆ ಎಚ್ಚರಗೊಂಡ ಹಂದಿಯರೂಪದ ಮೂಕದಾನವ ಕೆರಳಿ ಕಾಡಿನಲ್ಲಿ ನುಗ್ಗುತ್ತಾನೆ. ಅರ್ಜುನ ಕಿರಾತ ಇಬ್ಬರ ಬಾಣಗಳಿಗೂ ಸಿಕ್ಕಿ U್ಪರ್ಜಿಸುತ್ತಾ ಸತ್ತು ಬೀಳುತ್ತಾನೆ. ಇದೇ ಕಿರಾತ-ಅರ್ಜುನರ ದ್ವಂದ್ವ ಯುದ್ಧಕ್ಕೆ ಕಾರಣವಾಗುತ್ತದೆ. ಆ ಹಂದಿಯನ್ನು ಹೊಡೆದವನು ನಾನು ಎಂದು ಇಬ್ಬರೂ ಹೇಳಿಕೊಂಡು ಜಗಳ ತೆಗೆಯುತ್ತಾರೆ. ಕೊನೆಗೆ ಇಬ್ಬರೂ ಸೋಲದೆ ನೇರವಾಗಿ ಯುದ್ಧಕ್ಕೇ ಇಳಿಯುತ್ತಾರೆ.
ಮೂಲ ...{Loading}...
ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ ॥9॥
೦೧೦ ಬಾಗಿಸಿದ ಬಿಲ್ಲಿನಲಿ ...{Loading}...
ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪರು ಕರ್ಣನಿಗೆ ಹೇಳುತ್ತಾರೆ. “ಅಯ್ಯಾ, ದ್ರೌಪದಿಯ ಸ್ವಯಂವರ ಸಂದರ್ಭದಲ್ಲಿ ಯುದ್ಧಕ್ಕೆ ಬಂದ ರಾಜರುಗಳನ್ನೆಲ್ಲ ಸೋಲಿಸಿದವನು ಯಾರು ? ಈಗ ನೀನು ಬಡಾಯಿ ಕೊಚ್ಚುತ್ತಿದ್ದೀಯೆ. ಹಿಂದೆ ಚಿತ್ರಾಂಗದನು ಕೌರವನನ್ನು ಹಿಡಿದಿದ್ದಾಗ ನೀನು ಹೋಗಿ ಬಿಡಿಸಿಕೊಂಡು ಬಂದೆಯಲ್ಲವೆ ? ಹೋಗಲಿ ಆ ದುರಹಂಕಾರದ ಸೈಂಧವನ ಮುಡಿಯನ್ನು ಎರಡು ಭಾಗ ಮಾಡಿದ ವೀರ ಯಾರು ಹೇಳು. ಆ ಅರ್ಜುನನ ಕೈಚಳಕವನ್ನು ಬಲ್ಲವರು ಯಾರು ?”
ಟಿಪ್ಪನೀ (ಕ.ಗ.ಪ)
ಮೂಗಕೊಯ್-ಭಂಗಿಸು, ದರ್ಪವಿಳಿಸು (ಪಡೆನುಡಿ)
ಬಾಗಿಸಿದ ಬಿಲ್ಲಿನಲಿ.. ಇದು ಅರ್ಜುನನು ಬಿಲ್ಲನ್ನು ಬಾಗಿಸಿ ಮತ್ಸ್ಯ ಯಂತ್ರವನ್ನು ಭೇದಿಸಿದ ಸಂಗತಿಗೆ ಸಂಬಂಧಿಸಿದ ಉಲ್ಲೇಖ. ಮದುವೆಯ ಸಂದರ್ಭದಲ್ಲಿ ದ್ರೌಪದೀ ಸ್ವಯಂವರಕ್ಕೆಂದು ಬಂದಿದ್ದ ರಾಜರೆಲ್ಲ ಅರ್ಜುನನೊಂದಿಗೆ ಯುದ್ಧಕ್ಕೆ ನಿಂತಾಗ ಅರ್ಜುನ ಅವರನ್ನೆಲ್ಲ ಸೋಲಿಸಿದ ಸಂದರ್ಭದ ಉಲ್ಲೇಖ ಇಲ್ಲಿದೆ.
ಆ ಗರುವ ಸೈಂಧವನ… ಪಾಂಡವರು ಕಾಡಿನಲ್ಲಿದ್ದಾಗ ಸೈಂಧವನು ದ್ರೌಪದಿ ಒಬ್ಬಳೇ ಇದ್ದಾಗ ಅಪಹರಿಸಿಕೊಂಡು ಹೋದ ಪ್ರಸಂಗ- ಆ ಸುದ್ದಿ ತಿಳಿದು ಭೀಮಾರ್ಜುನರು ಅವನನ್ನು ಬೆನ್ನಟ್ಟಿ ಹಿಡಿದು ಅವನ ಮುಡಿ ಮೀಸೆಗಳನ್ನು ಕತ್ತರಿಸಿದ ಪ್ರಕರಣ ಅರಣ್ಯಪರ್ವದಲ್ಲಿದೆ.
ಮೂಲ ...{Loading}...
ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ ॥10॥
೦೧೧ ಮರುಳ ಕಣ್ಣಿಗೆ ...{Loading}...
ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕೃಪಾಚಾರ್ಯರಿಗೆ ಹೇಳುತ್ತಾನೆ. “ಹುಚ್ಚನ ಕಣ್ಣಿಗೆ ಸಾಸವೆ ಕೂಡ ಒಂದು ಕೊಡದಷ್ಟು ದಪ್ಪಕ್ಕೆ ಕಾಣುತ್ತದ್ದಲ್ಲವೆ? ಹಾಗೆಯೇ ನಿಮ್ಮ ಕಣ್ಣಿಗೆ ಅರ್ಜುನನೇ ದೊಡ್ಡವನು. ಉಳಿದ ವೀರರುಗಳಿಗೆ ಅವನು ಅಲ್ಪನು. ಅಯ್ಯ ಮರುಳು ಬ್ರಾಹ್ಮಣ ! ನಿಮ್ಮದೇನಿದ್ದರೂ ಸರಸಗದ್ಯ ಪದ್ಯಗಳ ಕಾಲ್ಪನಿಕ ರಚನೆಯೇ ಹೊರತು ಯುದ್ಧದ ಕಠಿಣ ವಿದ್ಯೆ ನಿಮಗೆ ಏಕೆ ಹೇಳಿ”
ಟಿಪ್ಪನೀ (ಕ.ಗ.ಪ)
ಮರುಳ ಕಣ್ಣಿಗೆ ಕೊಡನ ತೋರದಲಿರದೆ ಸಾಸವೆ (ಇದೊಂದು ಗಾದೆಯ ನುಡಿ. ಕುಮಾರವ್ಯಾಸನ ಜಾನಪದ ಶಬ್ದ ಭಂಡಾರದಲ್ಲಿ ಗಾದೆ, ಪಡೆಮಾತು, ಸಾಮತಿ, ಸೂಕ್ತಿ ಎಲ್ಲ ಧಾರಾಳವಾಗಿದೆ), ದೊಡ್ಡಿತು-ದೊಡ್ಡವನು, ಕರ್ಕಶ-ಕಠಿಣ,
ಮೂಲ ...{Loading}...
ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ ॥11॥
೦೧೨ ಹಣೆಗೆ ಮಟ್ಟಿಯ ...{Loading}...
ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕೃಪಾಚಾರ್ಯನಿಗೆ ಹೇಳಿದ. “ಹಣೆಗೆ ಮಟ್ಟಿಯನ್ನು ಬಳಿದುಕೊಂಡು ದರ್ಭೆಯನ್ನು ಮಡಿಸಿ ಬೆರಳೊಳಗೆ ಇಟ್ಟುಕೊಂಡು ಮಡಿಪಂಚೆಯ ನಿರಿಹಿಡಿದು ತಿಥಿಯ ಮನೆಯ ಚೌಕದಲ್ಲಿ ಮಣೆಯಲ್ಲಿ ಕುಳಿತು ಚೆನ್ನಾಗಿ ತಿನ್ನುವ ಔತಣದ ವಿದ್ಯೆ ನಿಮಗೆ ಗೊತ್ತು. ಅಷ್ಟೇ ಹೊರತು ರಣವಿದ್ಯೆ ನಿಮಗೆ ಏಕೆಬೇಕು ಹೇಳಿ”.
ಪದಾರ್ಥ (ಕ.ಗ.ಪ)
ಮಟ್ಟಿ-ಮಣ್ಣು, ದಣಿಬ-ಮಡಿಬಟ್ಟೆ, ಮಹಳ-ಭಾದ್ರಪದ ಕೃಷ್ಣ ಅಮಾವಾಸ್ಯೆಯಂದು ಸರ್ವಪಿತೃಗಳಿಗೆ ಮಾಡುವ ಶ್ರಾದ್ಧ, ಮಹಾಲಯ>ಮಹಳ, ಮಾಹಳ
ಮೂಲ ...{Loading}...
ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ॥12॥
೦೧೩ ಇನ್ದು ಪಿತೃದಿನವಿನ್ದು ...{Loading}...
ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂದು ತಂದೆಯವರ ಶ್ರಾದ್ಧ. ಇಂದು ಸಂಕ್ರಮಣ, ಇಂದು ಸೂರ್ಯಗ್ರಹಣ, ಇಂದು ಹರಿದಿನ. ಇಂದು ಯಜ್ಞಾರಂಭದ ದಿನ ಇಂದು ಹುಟ್ಟಿದ ಹಬ್ಬ (ವಡ್ಡಂತಿ), ಇದು ಒಳ್ಳೆಯ ದಿನ ಎನ್ನುತ್ತ ಬಂದು ನಾನಾ ಬಗೆಯ ದಾನಗಳಿಗೆ ಕೈ ಚಾಚಿ ಹೊಳ್ಳಿಸಿ (ಖಾಲಿಮಾಡಿ) ತಿಂದು ಕೊಬ್ಬಿರುವ ನಿಮಗೆ ವೀರರ ಮಾತು ಏಕೆ ?” ಎಂದು ಕರ್ಣನು ಕೃಪಾಚಾರ್ಯರನ್ನು ಗೇಲಿ ಮಾಡಿದ.
ಪದಾರ್ಥ (ಕ.ಗ.ಪ)
ಪಿತೃದಿನ-ತಂದೆಯವರ ಶ್ರಾದ್ಧದ ದಿನ, ಹರಿದಿನ-ಏಕಾದಶಿ ದ್ವಾದಶಿ, ವಿಷ್ಣು ಪೂಜೆ, ಕೀರ್ತನೆ ಜಾಗರಣೆಗಳ ದಿನ, ವಡ್ಡಂತಿ < ವರ್ಧಂತಿ ಹುಟ್ಟಿದ ಹಬ್ಬ, ಹೊಳ್ಳಿಸಿ (ಗಡದ್ದಾಗಿ ತಿಂದು) ಖಾಲಿ ಮಾಡುವಿಕೆ, ಸುಭಟ-ವೀರ
ಟಿಪ್ಪನೀ (ಕ.ಗ.ಪ)
11, 12ನೇ ಪದ್ಯಗಳು ಪ್ರಕ್ಷೇಪವಾಗಿರಬಹುದೆಂದು ಊಹಿಸಲು ಅವಕಾಶವಿದೆ. ಇಲ್ಲದಿದ್ದರೆ ಕುಮಾರವ್ಯಾಸನಿಗೆ ಔಚಿತ್ಯ ಜ್ಞಾನವಿರಲಿಲ್ಲ. ಎನ್ನಬೇಕಾದೀತು. ಅನೇಕ ಕಡೆ ಇಂಥ ಅನಗತ್ಯ ವಿಸ್ತರಣ ಕಂಡುಬರುತ್ತದೆ. ಮುಂದಿನ ಪದ್ಯವೂ ಪ್ರಕ್ಷಿಪ್ತವಿರಬಹುದು.
ಮೂಲ ...{Loading}...
ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ॥13॥
೦೧೪ ಬಲ್ಲಿರೈ ಕೌರವನ ...{Loading}...
ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ
ಬಿಲ್ಲ ವಿದ್ಯಾವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೃಪ ! ಒಡೆಯನ ಸಂಪತ್ತನ್ನು ಖಾಲಿ ಮಾಡಿಸುವ ವಿದ್ಯೆಯಲ್ಲಿ ನೀವು ಪರಿಣತರು. ಮೃಷ್ಟಾನ್ನವನ್ನು ತಿಂದು ಡೊಳ್ಳು ಬೆಳೆಸಿಕೊಂಡು ರಾಜಗುರುಗಳೆನ್ನಿಸಿ ಬೀಗುತ್ತಿದ್ದೀರಿ. ಧನುರ್ವಿದ್ಯೆಯ ವಿಷಯ ಹಾಗೂ ಶತ್ರುಗಳಲ್ಲಿ ಮಹಾವೀರರೊಂದಿಗೆ ಕಾದಾಡುವ ವಿಷಯ ನಿಮ್ಮಂಥ ಜಡರಿಗೆ ಜಪತಪ ಅನುಷ್ಠಾನದಷ್ಟು ಸುಲಭವಲ್ಲ” ಎಂದು ಕರ್ಣನು ಕೃಪರನ್ನು ಜರೆದ.
ಪದಾರ್ಥ (ಕ.ಗ.ಪ)
ಹೊಳ್ಳಿಸು-ಖಾಲಿಮಾಡು, ಮೃಷ್ಟಾನ್ನ-ರಸಕವಳ
ಮೂಲ ...{Loading}...
ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ
ಬಿಲ್ಲ ವಿದ್ಯಾವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ॥14॥
೦೧೫ ಕೇಳಿದಶ್ವತ್ಥಾಮ ಕಿಡಿಗಳ ...{Loading}...
ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗಳಲುಗುಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿದ ಅಶ್ವತ್ಥಾಮನ ಕಣ್ಣುಗಳಲ್ಲಿ ಬೆಂಕಿ ಕರೆಯುತ್ತ ಕರ್ಣನಿಗೆ ಹೇಳಿದ: “ಅಯ್ಯಾ ಖೂಳ ಸೂತನ ಮಗನೆ, ವೀರರ ಗುಂಪಿನಲ್ಲಿ ನೀನು ನಿಜವಾದ ವೀರನಲ್ಲವೆ ! ಕೀಳುಜಾತಿಯವರಿಗೆ ತಕ್ಕ ಮಾತುಗಳು ನಿನ್ನಲ್ಲಿ ಸೇರಿಕೊಂಡಿವೆ. ‘ನಾಲಗೆ ಕುಲವನ್ನು ಹೇಳಿತು’ ಎಂಬ ಮಾತು ನಿನ್ನ ವಿಷಯಕ್ಕೆ ಸತ್ಯವಾಯಿತು”.
ಪದಾರ್ಥ (ಕ.ಗ.ಪ)
ಆಲಿ-ಕಣ್ಣಾಲಿ, ಸುಭಟಾಂಗದಲಿ ಖರೆಯನಲ…. ವೀರರಲ್ಲಿ ನೀನು ನಿಜವಾದ ವೀರನಲ್ಲವೆ !
ಕುಲವ ನಾಲಗೆ ಹೇಳಿತು ಇದೊಂದು ಗಾದೆ. ಪಂಪನು “ಕುಲಮಂ ನಾಲಿಗೆ ತುಬ್ಬುವ ವೋಲ್” (ಕುಲವನ್ನು ನಾಲಗೆ ನಿಶ್ಚಯಿಸುವ ಹಾಗೆ) ಎಂಬ ಗಾದೆ ಬಳಸಿದ್ದಾನೆ.
ಮೂಲ ...{Loading}...
ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗಳಲುಗುಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ ॥15॥
೦೧೬ ನಗುವೆ ವಿಪ್ರರನಾವ ...{Loading}...
ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗ್ರಹ ಯೋಗ್ಯವಲ್ಲೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಕರ್ಣನಿಗೆ ಹೇಳಿದ. “ಅಯ್ಯಾ , ಕರ್ಣ ! ಬ್ರಾಹ್ಮಣರೆಂದರೆ ನೀನು ಅಪಹಾಸ್ಯ ಮಾಡುತ್ತೀಯೆ. ನೀನು ಯಾವ ರಾಜನ ಮಗ ಎಂಬುದನ್ನು ಹೇಳು (ಅಂದರೆ ನೀನು ಕ್ಷತ್ರಿಯನಲ್ಲ ಕೀಳು ಜಾತಿಯವನು ಎಂಬ ಧ್ವನಿ) ದಾನ ಧರ್ಮಾದಿಗಳಲ್ಲಿ ಅರ್ಧವನ್ನು ದ್ವಿಜರನ್ನು ಬಿಟ್ಟರೆ ಬೇರೆ ಯಾರು ಪಡೆಯುತ್ತಾರೆ ? ನಾವು ಲೋಕ ರಕ್ಷಣೆಗಾಗಿ ದಾನವನ್ನು ಸ್ವೀಕರಿಸುತ್ತೇವೆ. ಮತ್ತೆ ಕೊಡುತ್ತೇವೆ. ನಮಗೆ ಕ್ಷತ್ರಿಯರು ವೈಶ್ಯರು ದಾನ ಕೊಡುತ್ತಾರೆ. ಆದರೆ ಆ ಎರಡು ವರ್ಗದವರು ದಾನ ಸ್ವೀಕರಿಸುವುದು ಸೂಕ್ತವಲ್ಲ.
ಪದಾರ್ಥ (ಕ.ಗ.ಪ)
ಮಗುಳೆ-ಮತ್ತೆ, ಪ್ರತಿಗ್ರಹ-ಸ್ವೀಕರಿಸುವುದು.
ಟಿಪ್ಪನೀ (ಕ.ಗ.ಪ)
ಮುಖ್ಯ ಸಂದರ್ಭದಿಂದ ತುಂಬ ದೂರ ಉಳಿದು ಸಮಸ್ಯೆಯ ಉಪಶಾಖೆಗಳಲ್ಲಿ ವ್ಯವಹರಿಸುವ ಇಂಥ ದೂರಾಂತರದ ಅನಗತ್ಯ ಸಂಭಾಷಣೆಯಿಂದ ಯಾರಿಗೆ ಪ್ರಯೋಜನ ? ಔಚಿತ್ಯ ಪ್ರಜ್ಞೆಯಿಂದ ಮಾರುದೂರ ಉಳಿಯುವ ಇಂಥ ಮಾತುಗಳು ಪ್ರಕ್ಷೇಪವಿರಬಹುದೆ ? ಈ ನಿರರ್ಥಕ ಚರ್ಚೆಗಳಲ್ಲಿ ಹುರುಳಿಲ್ಲ. ಮುಂದಿನ ಪದ್ಯದಲ್ಲೂ ಇದೇ ಹುರುಳಿಲ್ಲದ ಚರ್ಚೆಯಿದೆ.
ಮೂಲ ...{Loading}...
ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗ್ರಹ ಯೋಗ್ಯವಲ್ಲೆಂದ ॥16॥
೦೧೭ ಉಳಿದ ವರ್ಣತ್ರಯಕೆ ...{Loading}...
ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬುವೆನೊ ಕೊಡುವವನೊ
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನಯ ಭವವ ನೆನೆಯೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ ಮುಂದುವರಿಸಿ ಹೇಳಿದ : “ಕ್ಷತ್ರಿಯ ವೈಶ್ಯ ಬ್ರಾಹ್ಮಣ ವರ್ಣಗಳವರಿಗೆ (ತ್ರಿವರ್ಣ) ಸೇವೆ ಮಾಡುವುದರಲ್ಲಿ ಶೂದ್ರನು ಕೃತಾರ್ಥ ! ಅಯ್ಯಾ ಕರ್ಣ ! ಇವರಲ್ಲಿ ನೀನು ಯಾರು ಎಂಬುದನ್ನು ಹೇಳು. ದಾನ ಕೊಡುವವನೋ ? ತೆಗೆದುಕೊಳ್ಳುವವನೋ ? ಅಲ್ಲ ಕುಲಹೀನನಾದ ನಿನ್ನನ್ನು ಕರೆತಂದು ಕೌರವನು ಗೌರವಿಸಿದರೆ ನಿನ್ನ ನಾಲಗೆಯಲ್ಲಿ ಇಂಥ ಮಾತು ಬರುತ್ತಿವೆ. ಕರ್ಣ ನೀನು ಯಾವ ಕುಲದವನೆಂಬುದನ್ನು ನೆನೆ”
ಪದಾರ್ಥ (ಕ.ಗ.ಪ)
ಉಳಿದ ವರ್ಣತ್ರಯ-ಬ್ರಾಹ್ಮಣ ಕ್ಷತ್ರಿಯ ವೈಶ್ಯ ಎಂಬ ತ್ರಿವರ್ಣ, ಬೆಸಕೈವ-ಸೇವೆ ಮಾಡುವ, ಅಳತೆ-ಮಟ್ಟ. ಪತಿಕರಿಸು-ಮಾನ್ಯ ಮಾಡು ಗೌರವಿಸು, ಭವ-ಜನ್ಮ, ಹುಟ್ಟು
ಟಿಪ್ಪನೀ (ಕ.ಗ.ಪ)
ಕರ್ಣ ಕೃಪರಿಗೆ ವಾಗ್ವಾದ ನಡೆಯುತ್ತಿದ್ದರೆ ಅಶ್ವತ್ಥಾಮನು ಮಧ್ಯೆ ಬಾಯಿ ಹಾಕಿ ಶೂದ್ರ ಕುಲವನ್ನು ಆಡಿಕೊಳ್ಳುತ್ತಾನೆ. ಇದು ಅನಾಹ್ವಾನಿತ ಮತ್ತು ಅಸಭ್ಯ.
ಮೂಲ ...{Loading}...
ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬುವೆನೊ ಕೊಡುವವನೊ
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನಯ ಭವವ ನೆನೆಯೆಂದ ॥17॥
೦೧೮ ಪರರು ಪತಿಕರಿಸಿದೊಡೆ ...{Loading}...
ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ ಮತ್ತೆ ಮುಂದುವರಿಸಿ ಕರ್ಣನಿಗೆ ಹೇಳಿದ : “ಅಲ್ಲಯ್ಯ ? ಮರ್ಯಾದಸ್ಥರಾದವರು ಯಾರಾದರೂ ಹೊಗಳಿದರೆ ನಾಚಿಕೆಯಿಂದ ತಲೆ ತಗ್ಗಿಸುತ್ತಾರೆ. ನೀನಾದರೆ ದುಷ್ಟ, ಒರಟ. ನಿನ್ನನ್ನೇ ನೀನು ಹೊಗಳಿಕೊಂಡರೆ ಮಾನ್ಯರಾದವರು ಅದನ್ನು ಮೆಚ್ಚುವುದಿಲ್ಲ. ಸುಮ್ಮನಿರು. ಮಹಾತ್ಮರಾದವರು ಯಾರೂ ನಿನಗೆ ಉತ್ತರವನ್ನು ಕೊಡುವುದಿಲ್ಲ. (ಕೃಪಾಚಾರ್ಯರು ಸುಮ್ಮನಿದ್ದಾರೆ ಎಂಬ ಧ್ವನಿ) ಸುಮ್ಮನೆ ನಮ್ಮೊಡನೆ ಹರಟಬೇಡ”
ಪದಾರ್ಥ (ಕ.ಗ.ಪ)
ಪತಿಕರಿಸು-ಗೌರವಿಸು, ಮೆಚ್ಚು, ದುರುದುಂಬಿತನ-ಒರಟುತನ, ಸಸಿನಿರು-ಸುಮ್ಮನೆ (ಸಸಿನೆ) ಇರು, ಮೌನವಾಗಿರು, ಗಳಹತನ-ಹರಟೆಕೋರತನ
ಮೂಲ ...{Loading}...
ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ॥18॥
೦೧೯ ತೆಗೆದು ತಾಳಿಗೆಗಡಿತನಕ ...{Loading}...
ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಕರ್ಣ ! ಗಂಟಲವರೆಗೆ ನಿನ್ನ ನಾಲಗೆಯನ್ನು ಕಿತ್ತು ಹಾಕುತ್ತೇನೆ. ಆಗ ಕೌರವನಿಗೆ ಕೋಪ ಬರಬಹುದು. ನನ್ನನ್ನು ರಾಜಸಭೆಯಿಂದ ಉಚ್ಚಾಟಿಸಬಹುದು. ನಿನ್ನ ಮೇಲಿನ ಪ್ರೀತಿಯಿಂದ ಹೀಗೆಲ್ಲ ಮಾಡಬಹುದು. ಚಿಂತೆಯಿಲ್ಲ. ಆದರೆ ನೀನು ಅನೇಕ ಮಾನ್ಯರನ್ನು ಅವಹೇಳನ ಮಾಡಿ ನಗುತ್ತಿದ್ದೀಯೆ. ನಿನ್ನನ್ನು ಕೊಂದು ಬಿಡುತ್ತೇನೆ ಎಂದು ವೀರನಾದ ಅಶ್ವತ್ಥಾಮನು ತನ್ನ ಖಡ್ಗವನ್ನು ಸೆಳೆದುಕೊಂಡನು.
ಪದಾರ್ಥ (ಕ.ಗ.ಪ)
ತಾಳಿಗೆಗಡಿ-ಗಂಟಲ ವರೆಗೆ, ಓಲಗ-ಸಭೆ, ತೆಗೆಸು-ಕಿತ್ತುಹಾಕು, ಪತಿಕರಿಸಿ-ಗೌರವಿಸಿ, ಅಗಣಿತ-ಅ-ಗಣಿತ-ಲೆಕ್ಕವಿಲ್ಲದಷ್ಟು, ಆಳುಗಳ ದೇವ-ವೀರ (ಅಶ್ವತ್ಥಾಮ)
ಟಿಪ್ಪನೀ (ಕ.ಗ.ಪ)
- ಆಳುಗಳ ದೇವ ಎಂಬ ಮಾತಿಗೆ ಇಲ್ಲಿ ಔಚಿತ್ಯವಿಲ್ಲ. ಪ್ರಾಸಸ್ಥಾನವನ್ನು ನಿರ್ವಹಿಸಲು ಇಂಥ ಶಬ್ದರೂಪ ಅಗತ್ಯವೆಂದು ಕಾಣುತ್ತದೆ.
- ಕರ್ಣನನ್ನು ನಿಂದಿಸುವ ಅಶ್ವತ್ಥಾಮ ತಾನೇ ಮರ್ಯಾದಸ್ಥನಂತೆ ನಡೆದುಕೊಳ್ಳುತ್ತಿಲ್ಲ.
ಮೂಲ ...{Loading}...
ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ॥19॥
೦೨೦ ಆಳು ಮತ್ಸರದಧಿಕ ...{Loading}...
ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗದನುಚಿತೋಕ್ತಿಯಲಿ ಸಂತೈಸಿ
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈಯಕ್ತಿಕ ಮಾತ್ಸರ್ಯದ ಅಧಿಕ ರೋಷದಲ್ಲಿ ತಾನು ಹೆಚ್ಚು ತಾನು ಹೆಚ್ಚು ಎಂಬ ಮೇಲುನುಡಿ ಹುಟ್ಟಿಕೊಂಡಾಗ ಕೌರವನು ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಒಳ್ಳೆಯ ಮಾತುಗಳಿಂದ ಸಮಾಧಾನಪಡಿಸಿದ. “ಅಲ್ಲ ನಿಮ್ಮ ನಿಮ್ಮ ನಡುವೆಯೇ ಹೋರಾಡಲು, ಪರಾಕ್ರಮ ಪ್ರದರ್ಶಿಸಲು ನಿಲ್ಲುವುದು, ಒಳಗೊಳಗೇ ಛಲವನ್ನು ಕಲಹವನ್ನು ನೀವು ಆರಂಭಿಸುವುದು, ಬೇಡ” ಎಂದು ದುರ್ಯೋಧನನು ಅವರಿಬ್ಬರ ಕಲಹವನ್ನು ತಪ್ಪಿಸಿದ.
ಪದಾರ್ಥ (ಕ.ಗ.ಪ)
ಅಂಕುರಿಸು-ಮೊಳಕೆಗೊಳ್ಳು, ವಾಸಿ-ಛಲ, ಮಾಣಿಸು-ನಿಲ್ಲಿಸು, ತೋಟಿ-ಸ್ಪರ್ಧೆ
ಮೂಲ ...{Loading}...
ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗದನುಚಿತೋಕ್ತಿಯಲಿ ಸಂತೈಸಿ
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ॥20॥
೦೨೧ ಬನ್ದು ಭೀಷ್ಮಙ್ಗೆರಗಿ ...{Loading}...
ಬಂದು ಭೀಷ್ಮಂಗೆರಗಿ ಕೈ ಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತ ವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಅಶ್ವತ್ಥಾಮರ ಜಗಳವನ್ನು ನಿಲ್ಲಿಸಿ ಕೌರವನು ಭೀಷ್ಮರ ಬಳಿಗೆ ಬಂದ. ಕಾಲಿಗೆ ಬಿದ್ದು ನಮಸ್ಕರಿಸಿ ಅವರಿಗೆ ಹೇಳಿದ. “ಈತನು ಅರ್ಜುನನೇ ಆದರೆ ಮೊದಲಿನಿಂದ ಮತ್ತೆ ಹದಿಮೂರು ವರ್ಷಗಳನ್ನು ಕಳೆಯ ಬೇಕಾಗುತ್ತದೆ. ಇವರ ಹದಿಮೂರು ವರ್ಷದ ಅವಧಿ ಇನ್ನೂ ತೀರಿಲ್ಲ. ಅಜ್ಞಾತವಾಸ ಮುಗಿಯಲು ನನ್ನ ಲೆಕ್ಕದಲ್ಲಿ ಇನ್ನೂ ಕೆಲವು ದಿನಗಳು ಉಳಿದಿವೆ” ಎಂದು ಹೇಳಿದ. ಆಗ ಭೀಷ್ಮರು ನಗುತ್ತಾ ಹೇಳಿದರು.
ಪದಾರ್ಥ (ಕ.ಗ.ಪ)
ಎರಗು-ನಮಸ್ಕರಿಸು (ಕಾಲಿಗೆ ಬೀಳು)
ಮೂಲ ...{Loading}...
ಬಂದು ಭೀಷ್ಮಂಗೆರಗಿ ಕೈ ಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತ ವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ॥21॥
೦೨೨ ಮಗನೆ ಕೇಳೀರೈದು ...{Loading}...
ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ನಗುತ್ತಾ “ಮಗು ! ಕೌರವ ! ಕೇಳು. ಹತ್ತುವರುಷಕ್ಕೆ ಎರಡೇ ಎರಡು ತಿಂಗಳು ಅಧಿಕವಾಗಿ ಉಳಿಯುತ್ತವೆ. ಈ ಮಾಸಾದಿಗಳನ್ನು ಅವರು ಹದಿಮೂರು ವರ್ಷಗಳವರೆಗೆ ಕಳೆದಿದ್ದಾರೆ. ಮಿಗುವ ಅವಧಿ ಎಷ್ಟು ಗೊತ್ತೆ ? ವಿದ್ವಾಂಸರ ಲೆಕ್ಕಾಚಾರದ ಪ್ರಕಾರ ನಿನ್ನೆ ಮಧ್ಯಾಹ್ನದವರೆಗಿನ ಅವಧಿ ನಿನಗೆ ಸೇರಿದ್ದು. ಪಾಂಡವರು ಕಾಣಿಸಿಕೊಂಡಿರುವ ಇಂದಿನ ದಿವಸ ಪಾಂಡವರದು” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಈರೈದು-ಹತ್ತು (ಈರ್=ಎರಡು), ವತ್ಸರ-ವರ್ಷ, ಬುಧ-ವಿದ್ವಾಂಸ
ಟಿಪ್ಪನೀ (ಕ.ಗ.ಪ)
ನಿನ್ನಿನ ಹಗಲು ನಿನ್ನದು…. ಅವರದು…. ಅಂದರೆ ನಿನ್ನೆ ಮಧ್ಯಾಹ್ನದ ಒಳಗೆ ಅವರು ಸಿಕ್ಕಿದ್ದರೆ ಆ ಅವಧಿ ನಿನ್ನದಾದುದರಿಂದ ಮತ್ತೆ ವನವಾಸವಿರುತ್ತಿತ್ತು. ಆದರೆ ನಿನ್ನೆ ಮಧ್ಯಾಹ್ನದ ನಂತರ ಅವರ ಬಿಡುಗಡೆಯ ಅವಧಿಯಾದುದರಿಂದ ಇಂದು ಅವರ ಅವಧಿಯಾಗಿದೆ. ಅಂದರೆ ಅವರು ತಮ್ಮ ವನವಾಸ ಅಜ್ಞಾತವಾಸದ ಅವಧಿಗಳನ್ನು ಸಮರ್ಪಕವಾಗಿ ಕಳೆದಿದ್ದಾರೆ ಎಂದರ್ಥ.
ಮೂಲ ...{Loading}...
ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ ॥22॥
೦೨೩ ಜಲಧಿ ಮೇರೆಯನೊದೆದು ...{Loading}...
ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಮಾತನ್ನು ಮುಂದುವರಿಸುತ್ತಿದ್ದಾರೆ : “ಮಗು ! ಕೌರವ ! ಒಂದು ವೇಳೆ ಸಮುದ್ರವು ಎಲ್ಲೆಯನ್ನು ಮೀರಿ ಹಾದರೂ ಹಾದೀತು. ದಿಕ್ಕಿನ ಆನೆ ತಾವು ಹೊತ್ತಿರುವ ಭೂಮಿಯನ್ನು ಕೆಳಗಿಳಿಸಿದರೂ ಇಳಿಸಿಯಾವು. ಸೂರ್ಯಮಂಡಲವು ಕಪ್ಪಾದರೂ ಆದೀತು. ಕುಲಪರ್ವತಗಳು ಚಲಿಸಿದರೂ ಚಲಿಸಿಯಾವು. ಆದರೆ ಧರ್ಮರಾಯನು ಮಾತ್ರ ಸತ್ಯ ಭಾಷೆಯನ್ನು ಮೀರಿ ನಡೆಯುವುದಿಲ್ಲ. ಆ ರಾಜನು ವಂಶ ವಿಭೂಷಣನಲ್ಲವೆ ?”
ಪದಾರ್ಥ (ಕ.ಗ.ಪ)
ಜಲಧಿ-ಸಮುದ್ರ, ದಿಗಿಭ-ದಿಕ್ಕಿನ ಆನೆ, ಕಾಳಿಕೆ-ಕಪ್ಪು, ಅಳುಪು-ಭಂಗತರು, ದಿಕ್ಕು ತಪ್ಪಿಸು, ಅನ್ವಯ ತಿಲಕ-ವಂಶಕ್ಕೇ ತಿಲಕಪ್ರಾಯ.
ಟಿಪ್ಪನೀ (ಕ.ಗ.ಪ)
- ದಿಗಿಭ-ದಿಕ್ಕಿನ ಆನೆಗಳು. ಎಂಟು ದಿಕ್ಕುಗಳಿವೆ. ಈ ಎಂಟನ್ನು ಆನೆಗಳು ಹೊತ್ತುಕೊಂಡಿವೆ ಎಂಬ ಪೌರಾಣಿಕ ನಂಬಿಕೆಯಿದೆ ಆ ಎಂಟು ಆನೆಗಳು : ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ, ಸುಪ್ರತೀಕ,
ಕುಲಪರ್ವತಗಳು 7 : ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನ್, ಋಕ್ಷವಾನ್, ವಿಂಧ್ಯ, ಪಾರಿಯಾತ್ರ,
ಇನ್ನೊಂದು ವಿವರದ ಪ್ರಕಾರ,
ಕುಲಪರ್ವತಗಳು - 8 : ನೀಲ, ನಿಷಧ, ವಿಂಧ್ಯಾಚಲ, ಮಾಲ್ಯವಾನ್, ಮಲಯ, ಗಂಧಮಾದನ, ಹೇಮಕೂಟ, ಹಿಮಾದ್ರಿ
ಮೂಲ ...{Loading}...
ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ॥23॥
೦೨೪ ಸಾಕದನ್ತಿರಲಿನ್ನು ಕಾಳಗ ...{Loading}...
ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವೊಡೆ
ಬೇಕು ಬೇಡೆಂಬವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಕೌರವನಿಗೆ “ಅಯ್ಯಾ ಕುರುರಾಯ ! ಆ ಮಾತು ಅಲ್ಲಿಗೆ ಸಾಕು. ಇನ್ನು ಯುದ್ಧವನ್ನು ನಿಭಾಯಿಸಲು ಸಾಧ್ಯವಿಲ್ಲ. ಪಾರ್ಥನು ಕೊಲ್ಲಲು ಹೊರಟರೆ ಬೇಕು ಬೇಡ ಎಂದು ಅವನನ್ನು ನಿಯಂತ್ರಿಸುವವರು ಯಾರೂ ಇಲ್ಲ. ಹೆಚ್ಚು ಮಾತೇಕೆ ? ನೀನು ಈಗ ಆ ಪಾಂಡುಕುಮಾರರನ್ನು ಕರೆಸಿ ಆ ವೀgರೊಂದಿಗೆ ಸಂಧಿಯನ್ನು ಮಾಡಿಕೋ. ಆಗ ಮೂರು ಲೋಕಗಳಲ್ಲಿಯೂ ನಿನಗೆ ಸಮಾನರಾದವರು ಇರುವುದಿಲ್ಲ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ನೂಕು-ನಿಭಾಯಿಸು, ಆಕೆವಾಳ-ವೀರ
ಟಿಪ್ಪನೀ (ಕ.ಗ.ಪ)
ಸಂಧಿಗೆ ಮೊದಲ ಪ್ರಯತ್ನ ಭೀಷ್ಮರದು, ಆದರೆ ಕೌರವ ತಿರಸ್ಕರಿಸುತ್ತಾನೆಂಬುದು ಮುಂದಿನ ಪದ್ಯದಲ್ಲಿ ಸ್ಪಷ್ಟವಾಗುತ್ತದೆ.
ಮೂಲ ...{Loading}...
ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವೊಡೆ
ಬೇಕು ಬೇಡೆಂಬವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳೆಂದ ॥24॥
೦೨೫ ಕಣ್ಡುದಳವಿ ವಿರೋಧಿಗೆಮಗೆಯು ...{Loading}...
ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನಮಗೂ ವೈರಿ ಪಾಂಡವರಿಗೂ ಯುದ್ಧ ಘಟಿಸುವಂತೆ ಕತ್ತಿ ಎತ್ತುವ ಸಂಗತಿಯೊಂದೇ ನಮಗೆ ಕಾಣಿಸುತ್ತಿದೆ. ನನ್ನ ಮನಸ್ಸು ಮೊದಲು ಆಲೋಚಿಸುತ್ತಿರುವುದು ಯುದ್ಧವನ್ನೊಂದೇ. ಅದು ಬಿಟ್ಟು ಪಾಂಡುಸುತರೊಡನೆ ಸಹಬಾಳ್ವೆ ನಡೆಸಿ ಉಂಡು ತೊಟ್ಟು ಬದುಕುವ ಭಂಡ ಜೀವನ ನನಗೆ ಬೇಕಾಗಿಲ್ಲ. ವೈರವನ್ನು ಸಾಧಿಸಬೇಕು” ಎಂದು ಕೌರವನು ಭೀಷ್ಮರಿಗೆ ನಿವೇದಿಸಿಕೊಂಡ.
ಪದಾರ್ಥ (ಕ.ಗ.ಪ)
ಅಳವಿ-ಯುದ್ಧ, ಬಲುಗೈದು-ಕತ್ತಿ, ಆಯುಧ, ಮುಂಕೊಂಡು-ಮೊದಲಿಗೆ, ಈ ಮುನ್ನವೇ, ಕಳ-ಯುದ್ಧ
ಟಿಪ್ಪನೀ (ಕ.ಗ.ಪ)
ಭೀಷ್ಮರ ಸಂಧಿ ಪ್ರಯತ್ನವನ್ನು ಕೌರವ ತಿರಸ್ಕರಿಸುತ್ತಾನೆಂದು ವ್ಯಾಸರು ಹೇಳುತ್ತಾರೆ.
“ಪಿತಾಮಹ, ನಾನು ಪಾಂಡವರಿಗೆ ರಾಜ್ಯವನ್ನು ಹಳ್ಳಿ ಸೇನೆ ಅಥವಾ ಸೇವಕರನ್ನು ಹಿಂದಕ್ಕೆ ಕೊಡುವುದಿಲ್ಲ. ಸ್ವಲ್ಪ ಹಣವನ್ನು ಕೂಡ ಕೊಡುವುದಿಲ್ಲ. ಯುದ್ಧವೇ ನಡೆಯಲಿ
ನಾಹಂ ರಾಜ್ಯಂ ಪ್ರದಾಸ್ಯಾಮಿ ಪಾಂಡವೇಭ್ಯ : ಪಿತಾಮಹ
ಗ್ರಾಮಂ ಸೇನಾಂಚ ದಾಸಾಂಶ್ಚ ಸ್ವಲ್ಪ ದ್ರವ್ಯಮಪಿ ಪ್ರಭೋ
ಯುದ್ಧೌಪಚಾರಿಕಂ ಯತ್ತು ತತ್ಸರ್ವಂ ಸಂವಿಧೀಯತಾಂ
ಭೀಷ್ಮರಿಗೆ ವನ-ಅಜ್ಞಾತವಾಸಗಳ ಅವಧಿ ಮುಗಿದ ಸಂಗತಿ ತಿಳಿದಿತ್ತು. ಉತ್ತರನನ್ನು ಅರ್ಜುನನು ಬೆನ್ನಟ್ಟಿ ಹೊರಟ ದೃಶ್ಯ ನೋಡಿದಾಗಲೇ ಅವರಿಗೆ ತಿಳಿದಿರುತ್ತದೆ. ಈ ವಿಷಯವಾಗಿ ಭೀಷ್ಮ ದ್ರೋಣರು ಸಂಕೇತದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆಂದು ವ್ಯಾಸರು ಹೇಳಿದ್ದಾರೆ. “ಅವಧಿ ಮುಗಿಯಿತು. ಅಂದೇ ನನಗೆ ತಿಳಿದಿತ್ತು. ಆದರೆ ದುರ್ಯೋಧನನು ಪಾಠ ಕಲಿಯಲಿ ಎಂದು ಅವನಿಗೆ ಹೇಳಿರಲಿಲ್ಲ” ಎಂದು ಭೀಷ್ಮರು ದ್ರೋಣರಿಗೆ ಹೇಳುತ್ತಾರೆ.
ಮೂಲ ...{Loading}...
ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ ॥25॥
೦೨೬ ಮೇಲೆ ನೆಗಳುವ ...{Loading}...
ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು, “ಹಾಗಾದರೆ ಮುಂದೆ ಮಾಡಬೇಕಾದ ಕೆಲಸವನ್ನು ನೀನೇ ಬಲ್ಲೆ” ಎಂದು ಕೌರವನಿಗೆ ಹೇಳಿದರು. “ಅಯ್ಯೋ ! ಕೌರವನು ಕೆಟ್ಟ” ಎಂದುಕೊಂಡು ನಿಟ್ಟುಸಿರು ಬಿಟ್ಟರು. ಅನಂತರ “ಅಯ್ಯಾ ಕೌರವ ! ನಾವು ಯುದ್ಧ ಮಾಡುತ್ತೇವೆ. ನೀನು ಸ್ವಲ್ಪ ಸೇನೆಯನ್ನು ತೆಗೆದುಕೊಂಡು ದನಕರುಗಳನ್ನು ಹಿಡಿದುಕೊಂಡು ಊರಿಗೆ ಹೋಗು” ಎಂದು ಹೇಳಿದ ಭೀಷ್ಮರು ಸೇನೆಯನ್ನು ಎರಡು ಭಾಗ ಮಾಡಿಸಿದರು.
ಪದಾರ್ಥ (ಕ.ಗ.ಪ)
ನೆಗಳು-ಮಾಡು, ಆಚರಿಸು, ಹದನ-ರೀತಿ, ಕಾರ್ಯವಿಧಾನ, ಆನು-ವಹಿಸಿಕೋ, ಪಶುಜಾಲ-ದನಗಳ ಗುಂಪು
ಟಿಪ್ಪನೀ (ಕ.ಗ.ಪ)
ಕೌರವನನ್ನು ಗೋವುಗಳೊಂದಿಗೆ ಭೀಷ್ಮರು ಹಸ್ತಿನಾವತಿಯ ಕಡೆ ಹೋಗುವಂತೆ ಹೇಳಿದರು. ಕೌರವನೊಂದಿಗೆ ಕಾಲು ಭಾಗದ ಸೇನೆ, ದನಗಳ ಕಾವಲಿಗೆ ಕಾಲು ಭಾಗದ ಸೇನೆ ಇರಿಸಿ. ಉಳಿದ ಅರ್ಧವನ್ನು ತಾವೇ ಇರಿಸಿಕೊಂಡರು. ತಮ್ಮ ದುರ್ಭೇದ್ಯವಾದ ವಜ್ರಗರ್ಭ, ವ್ರೀಹಿಮುಖ, ಅರ್ಧಚಕ್ರಾಂಕಮಂಡಲ ಎಂಬ ವ್ಯೂಹಗಳನ್ನು ರಚಿಸಿ ಸೇನೆಯ ಹಿಂದೆ ಸ್ವಯಂ ಭೀಷ್ಮರೇ ಸುವರ್ಣ ಮಯ ತಾಳಧ್ವಜವನ್ನು ರಥಕ್ಕ ಕಟ್ಟಿ ನಿಂತರು ಎಂದು ವ್ಯಾಸಭಾರತ ಹೇಳುತ್ತದೆ.
ಮೂಲ ...{Loading}...
ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ ॥26॥
೦೨೭ ಕೌರವೇನ್ದ್ರನ ಕೂಡೆ ...{Loading}...
ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ತಾವೇ ಮುಂದೆ ನಿಂತು ಸೇನೆಯ ತುಕಡಿಯೊಂದನ್ನು ಒಪ್ಪಿಸಿಕೊಟ್ಟು ಕೌರವನನ್ನು ಊರಿಗೆ ಹೋಗುವಂತೆ ಹೇಳಿ ಕಳುಹಿಸಿದರು. ಅನಂತರ ಆರ್ಭಟಿಸುತ್ತ ತಮ್ಮ ಸೇನೆಯನ್ನು ಒಗ್ಗೂಡಿಸಿಕೊಂಡು ವೀರರಾದ ಕರ್ಣ, ದ್ರೋಣ, ಕೃಪ ವೀರ ಅಶ್ವತ್ಥಾಮ ಶಕುನಿ ಮಹಾರಥರು ಮೊದಲಾದವರೊಂದಿಗೆ ಸೇರಿಕೊಂಡು ಅರ್ಜುನನ ಮೇಲೆ ಯುದ್ಧಕ್ಕೆ ನಿಂತರು.
ಪದಾರ್ಥ (ಕ.ಗ.ಪ)
ಪರುಠವಿಸು-ಜೋಡಿಸು, ಒಪ್ಪಿಸು, ಥಟ್ಟು-ಸೇನೆ, ಗೌತಮ-ಕೃಪ, ಸಂಗರ-ಯುದ್ಧ
ಮೂಲ ...{Loading}...
ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ॥27॥
೦೨೮ ಇತ್ತಲಖಿಳ ಮಹಾರಥಾದಿಯ ...{Loading}...
ಇತ್ತಲಖಿಳ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ “ಅಖಿಳ ಮಹಾರಥರೇ ಮೊದಲಾದವರನ್ನು ಒಂದು ಪಕ್ಕಕ್ಕೆ ಸರಿಸಿ ದುರ್ಯೋಧನನು ದನಗಳನ್ನು ಹೊಡೆದುಕೊಂಡು ಹಸ್ತಿನಾವತಿಯ ಕಡೆಗೆ ಹೊರಟಿದ್ದಾನೆ. ಭೇಷ್ ! ಮುತ್ತಯ್ಯನು (ಭೀಷ್ಮ) ಮಾಡಿರುವ ಕಾರ್ಯವಿಂಗಡಣೆ ಚೆನ್ನಾಗಿದೆ.ಉತ್ತರ ಕುಮಾರ! ನೀನು ಈಗ ಬೇಗನೆ ಎಡವಾಘೆಯನ್ನು ಹಿಡಿದುಕೊ” ಎಂದು ಪಾರ್ಥನು ಉತ್ತರನಿಗೆ ಆಜ್ಞೆ ಮಾಡಿದ.
ಪದಾರ್ಥ (ಕ.ಗ.ಪ)
ಒತ್ತಲಿಕ್ಕು-ಪಕ್ಕಕ್ಕೆ ಸರಿಸಿ, ಆಕ್ರಮಣಕ್ಕೆ ಬಿಟ್ಟು, ಪೂತು ಮಝುರೆ-ಭೇಷ್ ಎಂಬ ಮೆಚ್ಚುಗೆಯ ಮರಾಠಿ ಶಬ್ದಗಳು, ಗೋಕುಲ-ದನಗಳ ಹಿಂಡು, ನಿಯೋಗ-ವ್ಯವಸ್ಥೆ, ತತ್ತವಣೆ-ರೀತಿ, ಜೋಡಣೆ, ಹಂಚಿಕೆ, ವಾಘೆ-ಲಗಾಮು.
ಮೂಲ ...{Loading}...
ಇತ್ತಲಖಿಳ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ॥28॥
೦೨೯ ತುರುಗಳನು ಮರಳಿಚುವದಿದು ...{Loading}...
ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗು ವೇಗವ ನೋಡು ನೀನೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡು ಉತ್ತರ. ನಮ್ಮ ದನಕರುಗಳನ್ನು ಹಿಂದಕ್ಕೆ ತರುವುದಿದೆಯಲ್ಲ. ಅದು ನಮಗೆ ಮೊದಲು ಮಾಡಬೇಕಾದ ಉತ್ತಮ ಕಾರ್ಯ. ಈ ಮಿಕ್ಕಿರುವ ಕೆಲಸದ ಜವಾಬ್ದಾರಿಯನ್ನು ಮೊದಲು ನಿರ್ವಹಿಸಿ ಅನಂತರ ಕೌರವ ವೀರರ ಸಾಹಸವೆಷ್ಟೆಂಬುದನ್ನು ತಿಳಿದುಕೊಳ್ಳುತ್ತೇನೆ. ಆದುದರಿಂದ ಉತ್ತರ, ಮೊದಲು ವಾಘೆಯನ್ನು ಹಿಡಿ. ಶತ್ರುಗಳ ಇರಿತದ ಭಯ ಬೇಡ. ಅತ್ಯಂತ ವೇಗದಲ್ಲಿ ಕ್ಷಿಪ್ರವಾಗಿ ಸಾಗುವ ಕೆಲಸವನ್ನು ನೀನು ನೋಡಿಕೊ” ಎಂದು ಅರ್ಜುನನು ಹೇಳಿದ.
ಪದಾರ್ಥ (ಕ.ಗ.ಪ)
ತುರು-ದನ, ಉರುವ-ಶ್ರೇಷ್ಠ, ಪವಿತ್ರ, ಹೊರಿಗೆ-ಜವಾಬ್ದಾರಿ, ಲಾಗುವೇಗ-ಕ್ಷಿಪ್ರ ಚಲನೆಯ ಚಳಕ, ತರಿದು-ನಿಶ್ಚಯಿಸಿ
ಟಿಪ್ಪನೀ (ಕ.ಗ.ಪ)
ಭೀಷ್ಮರ ತಂತ್ರ ಅರ್ಜುನನಿಗೆ ಅರ್ಥವಾಯಿತು. ಗೋಗ್ರಹಣಕ್ಕೆಂದೇ ಕೌರವರು ಬಂದಿದ್ದರಲ್ಲವೆ ? ಅವರಲ್ಲಿ ಕೌರವನು ದನಕರುಗಳನ್ನು ತನ್ನ ಊರಿಗೆ ತೆಗೆದುಕೊಂಡು ಹೊರಟು ಬಿಟ್ಟರೆ ತಾನಿಲ್ಲಿ ಯುದ್ಧ ಮಾಡುತ್ತ ಕಾಲಹರಣ ಮಾಡಿದ್ದು ವ್ಯರ್ಥವಾಗುತ್ತದೆಂದು ಭಾವಿಸಿ ಅರ್ಜುನನು ತಾನೇ ಮೊದಲು ದನಕರುಗಳ ಬಳಿಗೆ ಹೋಗಿ ಕೌರವನನ್ನು ಎದುರಿಸಬೇಕೆಂದು ತೀರ್ಮಾನಿಸಿದ್ದು ಒಂದು ಅದ್ಭುತ ರಣತಂತ್ರವಾಗಿದೆ.
ಮೂಲ ...{Loading}...
ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗು ವೇಗವ ನೋಡು ನೀನೆಂದ ॥29॥
೦೩೦ ಎನಲು ಚಪ್ಪರಿಸಿದನು ...{Loading}...
ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಉತ್ತರನು ಕುದುರೆಗಳನ್ನು ಚಪ್ಪರಿಸಿದ. ಕುದುರೆಗಳು ವಾಯುವೇಗದಲ್ಲಿ ಮುಂದೆ ನುಗ್ಗಿದುವು. ಉತ್ತರನು ಮುಂಚೂಣಿಯಲ್ಲಿ ಇದ್ದ ಶತ್ರು ಸೈನಿಕರಿಗೆ ಹೆದರದೆ ಕೌರವನನ್ನು ಬೆಂಬತ್ತಿದ. ತಾನೇ ಘೋಷಿಸಿದ : “ಅಯ್ಯಾ ಕೌರವ ! ದನಗಳನ್ನು ಬಿಡು ಬಿಡು. ಬಂದವನು ಯಾರೆಂದು ತಿಳಿದೆ ? ಅರ್ಜುನನು ಬಂದಿದ್ದಾನೆ ಗೊತ್ತೆ ? ಕುರುವಂಶದ ಪಾಲಿಗೆ ದಾವಾಗ್ನಿಯಾದ ಫಲುಗುಣ ಗೊತ್ತೆ ?”.
ಪದಾರ್ಥ (ಕ.ಗ.ಪ)
ಚಪ್ಪರಿಸು-(ಬೆನ್ನು) ತಟ್ಟು, ತೇಜಿ-ಕುದುರೆ, ಅನಿಲಜವ-ವಾಯುವೇಗ, ನಿಗುರು-ಮುಂದೆ ಸಾಗು (ಉದ್ದವಾಗು) ಜನಪ-ರಾಜ(ಕೌರವ), ಕುರುಕುಲವನ ದವಾನಳ-(ಕುರುವಂಶ ಎಂಬ ಕಾಡಿನ ಪಾಲಿಗೆ ದಾವಾಗ್ನಿಯಾದ) ಅರ್ಜುನ
ಟಿಪ್ಪನೀ (ಕ.ಗ.ಪ)
ಸಹವಾಸ ದೋಷಕ್ಕೆ ಹಲವಾರು ಉದಾಹರಣೆಗಳಿವೆ. ‘ಸಹವಾಸ ಭಾಗ್ಯ’ಕ್ಕೆ ಉತ್ತರನೇ ಒಳ್ಳೆಯ ಉದಾಹರಣೆ. ಯುದ್ಧ ರಂಗವನ್ನು ಕಂಡು ನಡುಗಿದ್ದ ಉತ್ತರನು ಈಗ ಅರ್ಜುನನ ಬೆಂಬಲದಿಂದ ಎಂಥ ವೀರಾವೇಶದ ಮಾತುಗಳನ್ನಾಡುತ್ತಿದ್ದಾನೆ !
ಮೂಲ ...{Loading}...
ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ ॥30॥
೦೩೧ ಎಲೆಲೆ ನರ ...{Loading}...
ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೋಣ ಕೃಪ ಇವರುಗಳು “ಎಲೆಲೆ ! ಈ ಅರ್ಜುನನು ಜಾರಿಕೊಂಡ. ಈಗ ಕೌರವನ ಬೆನ್ನು ಹತ್ತಿದ್ದಾನೆ. ಅಡ್ಡ ಹಾಕಿ ಆ ವೀರನನ್ನು ನಮ್ಮ ಕಡೆಗೆ ತಿರುಗಿಸಿಕೊಳ್ಳಿ” ಎಂದು ಕೂಗುತ್ತ ಬಂದರು. ಬಾಣವನ್ನು ಧನುಸ್ಸಿನಿಂದ ಕೆನ್ನೆಯವರೆಗೆ ಸೆಳೆದುಕೊಂಡು ಅರ್ಜುನನನ್ನು ಅಡ್ಡಗಟ್ಟಿದರು. “ಎಲವೊ ಫಲುಗುಣ, ನಿಲ್ಲು ! ನಮ್ಮ ಜತೆ ಹೋರಾಡು. ಅನಂತರ ಠೀವಿಯಿಂದ ಹೋಗುವೆಯಂತೆ” ಎಂದರು.
ಪದಾರ್ಥ (ಕ.ಗ.ಪ)
ನರ-ಅರ್ಜುನ, ಬಳಿಯಹತ್ತು-ಬೆನ್ನು ಬೀಳು, ಹಿಂಬಾಲಿಸು, ಗೌತಮ-ಕೃಪ, ಹಿಳುಕು-ಬಾಣದ ಹಿಂತುದಿ, ಒಟ್ಟೈಸಿ-ಒಟ್ಟಯಿಸಿ, ಠೀವಿಯನ್ನು ತೋರಿ, ಕಡೆಗಣಿಸಿ
ಟಿಪ್ಪನೀ (ಕ.ಗ.ಪ)
ದ್ರೋಣ ಗೌತಮರು ಅರ್ಜುನನು ದುರ್ಯೋಧನನ ಬಳಿಗೆ ಹೋಗದಂತೆ ಅವನನ್ನು ತಮ್ಮ ಮೇಲೆ ಯುದ್ಧಕ್ಕೆ ಎಳೆಯಲು ನೋಡುತ್ತಾರೆ. ಕಾಲಹರಣ ಮಾಡಿದರೆ ಕೌರವನು ಹಸ್ತಿನಾವತಿಯ ಕಡೆ ದನಗಳ ಸಮೇತ ಹೋಗಲು ಅನುಕೂಲವಾಗಲಿ ಎಂಬುದು ಅವರ ಹಂಚಿಕೆ.
ಮೂಲ ...{Loading}...
ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ॥31॥
೦೩೨ ನಗುತ ಫಲುಗುಣನೆರಡೆರಡು ...{Loading}...
ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಅರ್ಜುನನು ದ್ರೋಣ ಕೃಪರನ್ನು ಎದುರಿಸಲು ಹೋಗಲಿಲ್ಲ. ನಗುತ್ತ ಎರಡು ಬಾಣಗಳನ್ನು ಅವರುಗಳ ಪಾದಗಳಿಗೆ ಎರಗಿಸಿದ. ಅನಂತರ ದಾಟಿಕೊಂಡು ಕೌರವನ ಸೇನೆಯ ಮುಂದೆ ಬಂದ. ಎಡಕ್ಕೆ ಬಲಕ್ಕೆ ಎದುರು ಭಾಗಕ್ಕೆ ಕಾಂತಿ ಬೀರುವ ಹೊಸ ಬಾಣದ ತೆರೆಯನ್ನು ಹಾಕಿದ. ಕೂಡಲೇ ಸುಡುಬಿಸಿಲಿಗೆ ಸಿಕ್ಕಿದ ಸಸಿಯಂತೆ ಆಗಿತ್ತು ಕೌರವನ ಸೇನೆಯ ಸ್ಥಿತಿ !
ಪದಾರ್ಥ (ಕ.ಗ.ಪ)
ಕೋಲು-ಬಾಣ, ಅಂಘ್ರಿ-ಪಾದ, ಎಚ್ಚ, ಎಸು-ಬಿಡು, ಎಚ್ಚ-ಬಿಟ್ಟನು, ಮೋಹರ-ಸೇನೆ, ಹೊಗರೊಗು-ಕಾಂತಿ ಸೂಸು, ಸೆಗಳಿಗೆ-ಸೆಗಳಿಕೆ (ಪ್ರಾಸಕ್ಕಾಗಿ ಬದಲಾವಣೆ) ಧಗೆ, ಬೆಂಕಿ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಅರ್ಜುನನು ಕೌರವನನ್ನು ಎದುರಿಸಿ “ನಾನು ಅರ್ಜುನ, ಧರ್ಮರಾಯನ ಆಜ್ಞೆಯಂತೆ ಬಂದಿರುವವನು, ಕುಂತಿಯ ಮೂರನೇ ಮಗ. ಯುದ್ಧಕ್ಕೆ ಬಂದಿದ್ದೇನೆ. ಮುಖ ತಿರುಗಿಸಬೇಡ ಯುದ್ಧ ಮಾಡು” ಎಂದು ಹೇಳುತ್ತಾನೆ.
“ಯುಧಿಷ್ಠಿರ ಸ್ಯಾಮಿ ನಿದೇಶಕಾರೀ
ಪಾರ್ಥಸ್ತೃತೀಯೋ ಯುಧಿ ಸಂಸ್ಥಿತೋಸ್ಮಿ
ತವರ್ಥಮಾವೃತ್ಯ ಮುಖ ಪ್ರಯಚ್ಛ
ನರೇಂದ್ರ ವೃತ್ತಂ ಸ್ಮರ ಧಾರ್ತರಾಷ್ಟ್ರ”
ಮೂಲ ...{Loading}...
ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ ॥32॥
೦೩೩ ಬಿರಿದವಾನೆಗಳರ್ಜುನನ ಬಿಲು ...{Loading}...
ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಢ ಗರ್ಜನೆಗೆ
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖ ಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಧನುಷ್ಟಂಕಾರದ ಅಬ್ಬರಕ್ಕೆ ಆನೆಗಳು ಬಿರಿದವು. ಜೊತೆಗಿದ್ದ ವೀರ ಹನುಮನ ಮಹಾಗರ್ಜನೆಗೆ ಅತಿರಥರುಗಳ ಬಾಯ ಮೂಲಕ ನೀರುಗಂಟು, (ಜೊಲ್ಲು) ಹೊರಬಂದುವು. ಅರ್ಜುನನು ದೇವದತ್ತ ಶಂಖವನ್ನು ಊದಿದಾಗ ಕುರುಸೇನೆ ಶಿರವೊಡೆದು ಸಿಡಿಯಿತು. ಸೇನೆಯ ಗುಂಪು ಚೆದುರಿತು. ಎಲ್ಲ ಹೆದರಿ ಹಾರಿಬಿದ್ದು, ಮೂರ್ಛೆಹೋದರು.
ಪದಾರ್ಥ (ಕ.ಗ.ಪ)
ತಿರುವು-ಹಗ್ಗ, ತೊರಳೆ-ಗುಲ್ಮ, ಪ್ಲೀಹ (ಹೊಟ್ಟೆಯ ಎಡಭಾಗದಲ್ಲಿ ಇರುವ ಮಾಂಸಗ್ರಂಥಿ), ನೀರುಗಂಟು- ಜೊಲ್ಲು, ಹೊರಳಿ-ಗುಂಪು, ಹಮ್ಮೈಸಿ-ಮೂರ್ಛೆಹೋಗಿ
ಟಿಪ್ಪನೀ (ಕ.ಗ.ಪ)
ಹಾರಿ ಬಿದ್ದರು ಹೆದರಿ ಹಮ್ಮೈಸಿ ಇಲ್ಲಿ ಶಬ್ದಗಳ ನುಡಿಗುಣಿತವನ್ನು ಗಮನಿಸಿ.
ಮೂಲ ...{Loading}...
ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಢ ಗರ್ಜನೆಗೆ
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖ ಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ ॥33॥
೦೩೪ ಎಲೆಲೆ ನರನೋ ...{Loading}...
ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಯ್ಯೋ ! ಈತನೇನು ಅರ್ಜುನನೋ ಅಥವಾ ವೀರರ ಬದುಕನ್ನು ಧ್ವಂಸ ಮಾಡುವವನೋ ? ಅಥವಾ ವೀರ ರಾಜರುಗಳ ಪಾಲಿಗೆ ಕಾಳ್ಗಿಚ್ಚೋ ? ಇವನೇನು ಪಾರ್ಥನೋ ಕಾಲಭೈರವನೋ ? ಕೌರವರು ಗೆಲ್ಲಲು ಹೇಗೆ ಸಾಧ್ಯ ? ಕರ್ಣ ಕೌರವ ಶಕುನಿ ಜಯದ್ರಥ ಎಂಬವರ ನಾಲಗೆಗಳು ಹಿಂದಲೆ ಸೇರಿಕೊಂಡಿವೆಯಲ್ಲ” ಎಂದು ಕುರು ಸೇನೆ ಸಂಕಟಪಡುತ್ತಿತ್ತು.
ಪದಾರ್ಥ (ಕ.ಗ.ಪ)
ಸುಭಟ ಜೀವನದ ಅಳವುಳಿಗ-ವೀರರ ಬದುಕನ್ನು ನಾಶಪಡಿಸುವಾತ, ಅಳವುಳಿಗ-(ದಳವುಳಿಗ) ಎಂಬ ಪಾಠವನ್ನು ಸ್ವೀಕರಿಸಲಾಗಿದೆ ದಳದುಳಿಗ-ಸೂರೆಕಾರ, ದಳವನ್ನು ನಾಶ ಮಾಡುವವನು ದಾವಾನಲ-ಕಾಳ್ಗಿಚ್ಚು, ಹೆಡತಲೆ-ಹಿಂದಲೆ,
ಪಾಠಾನ್ತರ (ಕ.ಗ.ಪ)
(ದಳವುಳಿಗನೋ ಇದಕ್ಕೆ “ದಳದುಳಿಗನೋ” ಎಂಬ ಪಾಠವಿದೆ (ಕೃಷ್ಣಜೋಯಿಸ್))
ಮೂಲ ...{Loading}...
ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ॥34॥
೦೩೫ ಮರಳಿ ಹೊಡೆ ...{Loading}...
ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯರಿದಿರಿನಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಡೆಯ ಸೈನಿಕರಿಗೆ ತಮ್ಮ ದೊರೆ ಕೌರವ ದನಗಳನ್ನು ಸೆರೆಹಿಡಿದದ್ದು ತಪ್ಪು ಎನ್ನಿಸಿತ್ತು. ಕೂಡಲೇ ಅವರೆಲ್ಲ “ಆ ದನಕರುಗಳನ್ನು ಹಿಂದಕ್ಕೆ ಕಳಿಸಿಬಿಡಿ. ಗೊಲ್ಲರನ್ನೆಲ್ಲ ಬಿಟ್ಟು ಬಿಡಿ. ಅವರ ಬಂಧನದ ಹಗ್ಗವನ್ನು ಬಿಚ್ಚಿಹಾಕಿ. ಯಾಕೋ ನಮ್ಮ ಚಕ್ರವರ್ತಿ ನೀತಿಗೆ ತಪ್ಪಿದ್ದಾನೆ. ಅಲ್ಲ ! ರಾಜರಾದವರು ಹಸುಗಳನ್ನು ಸೆರೆ ಹಿಡಿಯುವುದು ಸರಿಯೆ ? ತಲೆ ಕತ್ತರಿಸುವ ಸಂಕಲ್ಪದಿಂದ ಬಂದಿರುವ ಶತ್ರುವಿನ ಬಾಣಗಳಿಗೆ ಪ್ರಾಣಗಳನ್ನು ಬಲಿ ಕೊಡಲು ಸಿದ್ಧರಾಗಿರಿ” ಎಂದು ಅಬ್ಬರಿಸುತ್ತ ರಾಜರುಗಳ ಎದುರಿಗೆ ಬಂದರು.
ಪದಾರ್ಥ (ಕ.ಗ.ಪ)
ಹಿಂಡಾಕಳು-ಗೋ ಸಮೂಹ, ಗೋವ-ಗೊಲ್ಲ, ಗೋಪಾಲಕ, ಹೆಡಗೈ-ಹಿಂಗೈ, ಸರಳು-ಬಾಣ
ಮೂಲ ...{Loading}...
ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯರಿದಿರಿನಲಿ ॥35॥
೦೩೬ ಬೊಬ್ಬಿರಿದು ನರನೆಸಲು ...{Loading}...
ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರ್ಭಟಿಸುತ್ತ ಅರ್ಜುನನು ಬಾಣ ಪ್ರಯೋಗ ಮಾಡುತ್ತಿದ್ದ. ಆ ಬಾಣಗಳು ಎಲ್ಲ ಕಡೆ ಆವರಿಸಿದುವು. ತೀವ್ರವಾಗಿ ಶತ್ರು ವೀರರ ಗುಂಪನ್ನು ಚೆದುರಿಸಿದವು. ಆನೆಗಳನ್ನು ಕೆಡವಿ ಮೆದೆ ಒಟ್ಟಿದವು. ಬಿಲ್ಲಿನ ಹಗ್ಗದಿಂದ ಹಾರಿದ ಬಳಿಕ ಮೊರೆದು ಅಬ್ಬರಿಸಿ ಕಬ್ಬಕ್ಕಿಗಳು ಆಕಾಶವನ್ನು ಆವರಿಸುವ ಹಾಗೆ ಅರ್ಜುನನ ಶರಜಾಲ ಶೋಭಿಸಿತು.
ಪದಾರ್ಥ (ಕ.ಗ.ಪ)
ಎಸು-ಬಿಡು, ಪ್ರಯೋಗ ಮಾಡು, ಕಣೆ-ಬಾಣ, ಹೂಣಿಗ-ವೀರ, ಸಾಹಸಿ, ಒಬ್ಬುಳಿ-ಗುಂಪು, ಹರೆಗಡಿ-ಛಿದ್ರಿಸು,
ತೆಬ್ಬು-ಹೆದೆ, ಕಬ್ಬಕ್ಕಿ-ಕೊಕ್ಕರೆ ಜಾತಿಯ ಒಂದು ಹಕ್ಕಿ.
ಮೂಲ ...{Loading}...
ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ॥36॥
೦೩೭ ತುಡುಕಿ ಖಣ್ಡವ ...{Loading}...
ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆರಗಿ ದೇಹದ ಖಂಡವನ್ನು ಬಿಗಿಯಾಗಿ ಹಿಡಿದು ಹಾರುವ ಗಿಡಗನ ಹಾಗೆ ಆ ಸೈನಿಕರ ಗಂಟಲನ್ನು ಕಡಿದು ಹಾಯ್ದ ಬಾಣಗಳು ಕೆಳಗೆ ಸತ್ತು ಬಿದ್ದವರ ತಲೆಗಳಿಗೆ ಅಂಟಿಕೊಂಡವು. ನಿಟಿಲು ನಿಟಿಲೆನ್ನುವಂತೆ ಎಲುಬುಗಳನ್ನು ಚೂರು ಚೂರು ಮಾಡಿದುವು. ಗುಂಪು ಒಡೆದ ಆನೆಗಳನ್ನು ಅಡ್ಡಗಟ್ಟಿದುವು. ಅರ್ಜುನನ ಬಾಣಗಳು ತಮ್ಮ ಗರಿ (ಪುಂಖ) ಗಳ ಸಮೇತ ಕುದುರೆಗಳ ಹೊಟ್ಟೆಗಳಿಗೆ ಅಂಟಿಕೊಂಡವು.
- ಮೇಲೆರಗಿ ದೇಹದ ಖಂಡವನ್ನು ಬಿಗಿಯಾಗಿ ಹಿಡಿದು ಹಾರುವ ಗಿಡಗನ ಹಾಗೆ ಆ ಸೈನಿಕರ ಗಂಟಲನ್ನು ಕಡಿದು ಹಾಯ್ದ ಬಾಣಗಳು ಕೆಳಗೆ ಸತ್ತು ಬಿದ್ದವರ ತಲೆಗಳಿಗೆ ಅಂಟಿಕೊಂಡವು. ನಿಟಿಲು ನಿಟಿಲೆನ್ನುವಂತೆ ಎಲುಬುಗಳನ್ನು ಚೂರು ಚೂರು ಮಾಡಿದುವು. ಗುಂಪು ಒಡೆದ ಆನೆಗಳನ್ನು ಅಡ್ಡಗಟ್ಟಿದುವು. ಅರ್ಜುನನ ಬಾಣಗಳು ತಮ್ಮ ಗರಿ (ಪುಂಖ) ಗಳ ಸಮೇತ ಕುದುರೆಗಳ ಹೊಟ್ಟೆಗಳಿಗೆ ಅಂಟಿಕೊಂಡವು.
ಪದಾರ್ಥ (ಕ.ಗ.ಪ)
ತುಡುಕಿ-ಹಿಡಿದು, ಖಂಡ-ಶರೀರದ ಭಾಗ, ಅಂಟು-ಬಾಣ, ಅಡಸು-ಆವರಿಸು, ನಿರಿನಿಟಿಲುಗರೆದು, ನಿರಿನಿಟಿಲು-ಇದು ಅನುಕರಣ ಶಬ್ದ, ಎಲು-ಎಲುಬು, ಥಟ್ಟುಗಿ-ಥಟ್ಟು (ಗುಂಪು) ಉಗಿ-ಒಡೆ, ಹಯ-ಕುದುರೆ
ಮೂಲ ...{Loading}...
ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ ॥37॥
೦೩೮ ಕರುಳ ಬಾಯಲಿ ...{Loading}...
ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮಸೀಳಾಗಿ ಬಿದ್ದುವು ಗಜದ ಹೋಳುಗಳು
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರಗರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನಿಕರು ಬಾಣಗಳ ಹೊಡೆತದಿಂದಾಗಿ ಕರುಳನ್ನು ಕಾರಿದರು. ಕಾಲಾಳುಗಳು ಕಿರುಚುತ್ತಾ ಕೆಳಗೆ ಉರುಳಿದರು. ಅರ್ಜುನನ ಹರಿತವಾದ ಬಾಣಗಳು ಆನೆಗಳನ್ನು ಕತ್ತರಿಸಿ ಅವು ಸಮಸೀಳಾಗಿ ಕೆಳಗೆ ಬಿದ್ದುವು. ಕುದುರೆ ರಥಗಳ ಯೋಧ ಸಮೂಹದ ಕೊರಳುಗಳು ಕತ್ತರಿಸಿ ರಕ್ತದ ಹೊಳೆಯಲ್ಲಿ ಮುಳುಗಿದವು. ರಣರಂಗವು ಮರಗಳನ್ನು ಕಡಿದ ಕಾಡಿನಂತೆ ಕಾಣುತ್ತಿತ್ತು.
ಪದಾರ್ಥ (ಕ.ಗ.ಪ)
ಕಾಲಾಳು-ಯೋಧ, ಒರಳಿ-ಕಿರುಚಿ, ಗುಂಪು, ಹರಿದೊರೆವೆದ್ದ-ಕೃಷ್ಣಜೋಯಿಸರ ಪಾಠ ಹಱÉದೊಱವೆದ್ದ-ಹಱಿದು (ಹರಿದು) ಒರವೆದ್ದ (ಒಱವು ಎದ್ದ) ಬುಗ್ಗೆಯಾದ ಒರತೆಯಾದ ; ಹೊರಳಿ-ಆಧಿಕ್ಯ, ಕುಮ್ಮರಿ-ಮರ ಕಡಿದ ಕಾಡು. (ಒರವು-ಒರತೆ) ಬೋಳೆಯಂಬು- ಒಂದು ಬಗೆಯ ಹರಿತವಾದ ಬಾಣ, ಒರವು-ಒರತೆ
ಮೂಲ ...{Loading}...
ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮಸೀಳಾಗಿ ಬಿದ್ದುವು ಗಜದ ಹೋಳುಗಳು
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರಗರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ॥38॥
೦೩೯ ಹರಿಗೆ ಖಣ್ಡಿಸಿ ...{Loading}...
ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಕೆಲವರ ಗುರಾಣಿಗಳು ಮುರಿದು ಬಿದ್ದುವು. ಕವಚ, ಶಿರಸ್ತ್ರಾಣಗಳು ಜಾರಿದವು. ತೋಳುಗಳು ಮುರಿದು ಬಿದ್ದಿದ್ದುವು. ಕೊರಳು ಅರ್ಧ ಹರಿದು ನಿಟ್ಟೆಲುಬುಗಳು ಮುರಿದು ತೊಡೆ ಅರ್ಧ ಕತ್ತರಿಸಿ ಹೋಗಿ ತಲೆ ಒಡೆದು ನರ ಹರಿದು ಕರುಳೆಲ್ಲ ಈಚೆಗೆ ಬಂದು ಕೊಬ್ಬು (ಮೇದಸ್ಸು) ಉಬ್ಬರಿಸಿ, ಪಿತ್ತಾಶಯಕ್ಕೆ ಘಾತವಾಗಿ ರಕ್ತ ಸುರಿದು ಚರ್ಮ ಹರಿದು ಕೌರವನ ಸೇನೆ ಹೊರಳಾಡುತ್ತಿತ್ತು.
ಪದಾರ್ಥ (ಕ.ಗ.ಪ)
ಹರಿಗೆ-ಗುರಾಣಿ, ಖಂಡಿಸು-ಮುರಿದು ಬೀಳು, ಜೋಡು -ಕವಚ, ಸೀಸಕ - ಶಿರಸ್ತ್ರಾಣ,, ಗೋಣು-ಕೊರಳು, ಒಕ್ಕು-ಈಚೆ ಬಂದು, ನೆಣ-ಕೊಬ್ಬು, ಮೇದಸ್ಸು, ಕಾಳಿಜ-ಪಿತ್ತಾಶಯ, ಪಾಯದಳ-ಕಾಲಾಳುಗಳ ಸೇನೆ
ಪಾಠಾನ್ತರ (ಕ.ಗ.ಪ)
ಕೃಷ್ಣ ಜೋಯಿಸ್ ಹರಿದೊಱವೆದ್ದ > ಪಾಠ ಸ್ವೀಕರಿಸಿದ್ದಾರೆ ಹರಿದೊರವೆದ್ದ ಹರಿದು + ಒರವು + ಎದ್ದ
ಮೂಲ ...{Loading}...
ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ॥39॥
೦೪೦ ಮುನ್ದೆ ಕವಿವಮ್ಬುಗಳು ...{Loading}...
ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ನುಗ್ಗಿದ ಬಾಣಗಳು ಸೈನಿಕರನ್ನು ಕೊಂದು ಬಿದ್ದುವು. ಅರ್ಜುನನು ಬಿಲ್ಲಿಗೆ ಬಾಣ ಹೂಡಿದಾಗ ಒಂದರ ಹಿಂದೆ ಮತ್ತೊಂದು ಬರುತ್ತಿತ್ತು. ಮೊದಲ ಬಾಣವೇ ಸೈನಿಕರನ್ನು ಕೊಲ್ಲುತ್ತಿದ್ದುದರಿಂದ ಎರಡನೆಯ ಬಾಣಕ್ಕೆ ಯಾವ ಗುರಿಯೂ ಇಲ್ಲದಂತಾಗಿತ್ತು. ಈ ಅದ್ಭುತವನ್ನು ಏನೆಂದು ಹೇಳಲಿ ? ಆದುದರಿಂದ ಅರ್ಜುನನು ಬಿಡುತ್ತಿದ್ದ ಮಂತ್ರಾಸ್ತ್ರಗಳೇ ಅರ್ಜುನನ ಬಳಿಗೆ ಬಂದು “ಅಯ್ಯಾ ! ಅರ್ಜುನ ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ” ಎಂದು ಬೇಡಿಕೊಂಡವು.
ಪದಾರ್ಥ (ಕ.ಗ.ಪ)
ಅಂಬು-ಬಾಣ, ಸುಭಟ-ವೀರ, ಬಳಿ-ಅನಂತರ, ಸಂದ-ಪ್ರಯೋಗಿಸಿದ, ಮಂತ್ರಾಸ್ತ್ರ-ದಿವ್ಯಾಸ್ತ್ರಗಳು. ಇವುಗಳನ್ನು ಮಂತ್ರ ಪೂರ್ವಕವಾಗಿ ಬಿಡಬೇಕಾಗಿತ್ತು.
ಟಿಪ್ಪನೀ (ಕ.ಗ.ಪ)
ಒಂದು ಗುರಿಗೆರಡಂಬ ತೊಡಬೇಡ… ಮೊದಲನೆಯ ಬಾಣ ವ್ಯರ್ಥವಾದರೆ ಎರಡನೆಯದಾದರೂ ಗುರಿ ಮುಟ್ಟಲಿ ಎಂಬ ಆಶಯದಿಂದ ಎರಡು ಅಥವಾ ಹೆಚ್ಚು ಬಾಣ ಬಿಡುತ್ತಾರೆ. ಆದರೆ ಅರ್ಜುನನ ಮೊದಲ ಬಾಣವೇ ಖಚಿತವಾಗಿ ಗುರಿಯನ್ನು ಭೇದಿಸುತ್ತಿದ್ದುದರಿಂದ ಮುಂದಿನ ಬಾಣಗಳಿಗೆ ಕೆಲಸವೇ ಇರುತ್ತಿರಲಿಲ್ಲ ಎಂಬ ಭಾವ.
ಮೂಲ ...{Loading}...
ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ॥40॥
೦೪೧ ಹಿಕ್ಕಿದವು ಹಯಬಲದ ...{Loading}...
ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ರಣಧೀರನಾದ ಅರ್ಜುನನ ಬಾಣಗಳು ಅಶ್ವಗಳನ್ನು ಕತ್ತರಿಸಿ ತುಂಡು ಮಾಡಿದವು. ಬಲಶಾಲಿಗಳಾದ ವೀರರನ್ನು ಭೇದಿಸಿ ಹೊರಬಂದವು. ಆನೆಗಳ ಸಮೂಹವನ್ನು ಒಕ್ಕಿ ಅವುಗಳ ಸೊಂಡಿಲುಗಳನ್ನು ರಕ್ತದ ಕೆಸರಿನಲ್ಲಿ ಹೂಳಿದವು. ಪ್ರತಿಭಟಿಸಿದವರ ದೇಹದ ಮಾಂಸಖಂಡಗಳನ್ನು ಹದ್ದುಗಳಿಗೆ ಆಹಾರವಾಗಿಕೊಟ್ಟವು. ನಾನಾ ದಿಕ್ಕುಗಳಲ್ಲಿ ಆಹಾರದ ವಸತಿ ಕಲ್ಪಿಸಿದವು.
ಪದಾರ್ಥ (ಕ.ಗ.ಪ)
ಹಿಕ್ಕು-ಛೇದಿಸು, ಒಕ್ಕು-ಬಡಿ (ಒಕ್ಕಿ ತೂರುವುದು ಬತ್ತದ ಗದ್ದೆಯಲ್ಲಿ ನಡೆಯುವ ಕ್ರಿಯೆಯಿಂದ ಪ್ರಭಾವಿತವಾದ ಒಂದು ಪ್ರತಿಮೆ)
ದ್ವಿಜ-ಹದ್ದು (ಹಕ್ಕಿ) (ದ್ವಿಜ- ಎರಡು ಬಾರಿ ಹುಟ್ಟುವ ಜೀವಿ) ಅಂಬು-ಬಾಣ
ಮೂಲ ...{Loading}...
ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ॥41॥
೦೪೨ ಒಗ್ಗೊಡೆಯದೌಕಿದ ಮಹೀಶರು ...{Loading}...
ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಂಪು ಒಡೆಯದೆ ಒಟ್ಟಾಗಿ ಬಂದು ಅರ್ಜುನನ ಮೇಲೆ ನುಗ್ಗಿದ ರಾಜರುಗಳು ಕುಸಿದು ಬಿದ್ದರು. ಭಾರಿಯ ಸಂಖ್ಯೆಯಲ್ಲಿ ಸೇರಿ ಒತ್ತೊತ್ತಾಗಿ ನುಗ್ಗಿದ ವೀರರು ಪ್ರಾಣಗಳನ್ನು ಬಿಟ್ಟರು. ಅತಿರಥರ ಗುಂಪು ನುಗ್ಗು ನುಸಿಯಾಯಿತು. ಆನೆಯ ಸೈನ್ಯದ ಅಗ್ರಭಾಗವು ಭಂಗಗೊಂಡು ಯಮನ ಚೀಲವನ್ನು ಎಳೆದಾಗ ಸುರಿಯುವಂತೆ ರಕ್ತ ಹರಿಯಿತು.
ಪದಾರ್ಥ (ಕ.ಗ.ಪ)
ಒಗ್ಗು ಒಡೆ-ಗುಂಪು ಒಡೆದುಹೋಗು (ಒಗ್ಗೊಡೆಯದ-ಹಾಗೆ ಬೇರೆಯಾಗದ), ಮಹೀಶ-ರಾಜ, ಬಿರುದ-ವೀರ, ಮೊಗ್ಗರ-ಸೈನ್ಯ, ಮೊನೆ-ಮುಂಭಾಗ, ಸಗ್ಗಳೆ-ಚರ್ಮದ ಚೀಲ.
ಟಿಪ್ಪನೀ (ಕ.ಗ.ಪ)
ಪಂಪನು ಆ ಶತ್ರುಗಳ ತಲೆ “ತಾೞಪಣ್ ಕೆದಱಿದಂತೆ ನಿರಂತರಂ ಆಜಿರಂಗದೊಳ್ ಪರೆದಿರೆ” (ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡುವ ಹಾಗೆ ಯುದ್ಧ ಭೂಮಿಯಲ್ಲಿ ವ್ಯಾಪಕವಾಗಿ ಚೆದುರಿದವು”) ಎನ್ನುತ್ತಾನೆ. ಪಂಪಭಾರತ 8-106 ಸಮಸ್ತ ಕೌರವ ವೀರರನ್ನು ಪಂಪನು ‘ಮನಂಗಲಿಗಳ್’ ಎನ್ನುತ್ತಾನೆ. ಅಂದರೆ ಮನಸ್ಸಿನಲ್ಲಿ ಮಾತ್ರ ಅವರೆಲ್ಲ ಶೂರರು ಎಂದರ್ಥ 8-108.
ಮೂಲ ...{Loading}...
ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು ॥42॥
೦೪೩ ಕಾಲದಲಿ ಪರಿಪಕ್ವವಾದ ...{Loading}...
ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲದಲ್ಲಿ ಪರಿಪಕ್ವಗೊಂಡು ಬೆಳೆದು ನಿಂತ ಸ್ಥಾವರ ಜಂಗಮ ಜಾಲವನ್ನು ಕಾಲಾಗ್ನಿ ಸುಡುವ ಹಾಗೆ ತನ್ನ ಬಾಣ ಜ್ವಾಲೆಯಲ್ಲಿ ಕುರುಸೇನೆ ಎಂಬ ಕಾಡಿನ ಸಮೂಹವನ್ನು ಅರ್ಜುನನೆಂಬ ಅಗ್ನಿ ರೋಷದಿಂದ ಸುಟ್ಟು ಹಾಕಿದ.
ಪದಾರ್ಥ (ಕ.ಗ.ಪ)
ಸ್ಥಾವರ-ಜqವಾಗಿರುವ ಮರ ಗಿಡ ಮುಂತಾದುವು, ಜಂಗಮ-ಚಲಿಸುವ (ಪ್ರಾಣಿ, ಜನ, ಇತ್ಯಾದಿ) ಪಾವಕ-ಅಗ್ನಿ
ಟಿಪ್ಪನೀ (ಕ.ಗ.ಪ)
ಕಾಲದಲ್ಲಿ ಪರಿಪಕ್ವ…. ಜಂಗಮ ಜಾಲವನು (=ಸ್ಥಾವರ ಮರ ಮೊದಲಾದವು ಜಂಗಮ=ಮನುಷ್ಯ ಪ್ರಾಣಿ ಮುಂತಾದವರು) ವಯಸ್ಸಾದ ಮರ ಪ್ರಾಣಿಗಳೆಲ್ಲವೂ ಕಾಲವೆಂಬ ಅಗ್ನಿಗೆ ಆಹುತಿಯಾಗುತ್ತವಷ್ಟೆ. ಹಾಗೆಯೇ ಮೇಲಿಂದ ಮೇಲೆ ಬಿದ್ದ ಬಾಣಗಳ ಜ್ವಾಲೆಯು ಕೌರವ ಸೇನೆ ಎಂಬ ಕಾಡಿನ ಸಮೂಹವನ್ನು ಸುಟ್ಟು ಹಾಕಿತು.
ಮೂಲ ...{Loading}...
ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು ॥43॥
೦೪೪ ಯಾವ ಬಿಲ್ಲಾಳಾವ ...{Loading}...
ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹನುಮಂತನು ಬೆರಗಾಗಿ " ಎಂಥ ಅದ್ಭುತ ಬಿಲ್ಲಾಳು ! ಈ ಶರಲಾಘವವನ್ನು ಏನೆಂದು ಹೇಳಲಿ ! ಎಂಥ ಮನೋಹರ ! ಎಂತಹ ಚಳಕ ! ಎಂತಹ ಶರಸಂಧಾನ! ಎಂತಹ ವಿಹಾರ ! ಎಂತಹ ವಿಧಾನ ! ಈ ಹಿಂದೆ ರಾವಣ ಇಂದ್ರಜಿತ್ ರಾಮಲಕ್ಷ್ಮಣರುಗಳಲ್ಲೂ ಈ ಶೋಭೆ ಕಾಣಲಿಲ್ಲ ? ಎಂಥ ಅದ್ಭುತ ಶರವಿದ್ಯೆ ! ಭೇಷ್ ಭೇಷ್” ಎಂದು ಹೊಗಳಿದ.
ಪದಾರ್ಥ (ಕ.ಗ.ಪ)
ಲಾಘವ-ಕೈಚಳಕ, ಗಾಡಿಕೆ-ಚೆಲುವು, ಶರಸಂಧಾನ-ಬಾಣ ಬಿಡುವ ವೈಖರಿ (ಹೂಡುವ, ಬಿಡುವ ವೈಖರಿ), ಇಂದ್ರಾರಿ-ಇಂದ್ರನ ಶತ್ರು, ಇಂದ್ರಜಿತ್ (ಮೇಘನಾದ)
ಮೂಲ ...{Loading}...
ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ॥44॥
೦೪೫ ಕಾಣಬಾರದು ಬಿಡುವ ...{Loading}...
ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮತ್ರ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು ಕೂಡ ಬೆರಗಾಗಿ ಹೀಗೆಂದರು: ಅಬ್ಬ ! ಈ ಅರ್ಜುನನು ಬಾಣವನ್ನು ಹೂಡುವ, ಬಿಡುವ ಆವೇಶವೇನೆಂದು ಹೇಳೋಣ. ಏಕೆಂದರೆ ನಮ್ಮ ಕಣ್ಣು ಮನುಷ್ಯ ನೇತ್ರಗಳಂತಲ್ಲವಲ್ಲ. ಆದ್ದರಿಂದ ನಮ್ಮ ಕಣ್ಣುಗಳು ಸೂಕ್ಷ್ಮ ಕಣಗಳನ್ನೂ ಕಾಣಬಲ್ಲವು. ಇದು ನಿಜವಾದ ಜಾಣತನ ! ಶಿವ ವಿಷ್ಣುಗಳಿಗೆ ಮಾತ್ರ ಈ ಜಾಣತನ, ಚಳಕ ಸಾಧ್ಯ, ದೇವೇಂದ್ರನ ಆಣೆ ! ನಾವೇನೂ ಸುಳ್ಳು ಹೇಳುತ್ತಿಲ್ಲ”
ಪದಾರ್ಥ (ಕ.ಗ.ಪ)
ಕೇಣ-(ಮಾತ್ಸರ್ಯ) ಆವೇಶ, ಪರಮಾಣುಪುಂಜ-ಸೂಕ್ಷ್ಮ ಕಣಗಳ ಗುಂಪು, ಆಲಿ-ಕಣ್ಣು, ಜಾಣಪಣ-ಜಾಣತನ, ಶೌರ್ಯ, ಪಣ, ಜಾಣಪಣ ಇಂಥ ಶಬ್ದಗಳು ಹಲವಾರಿವೆ. ಪಣ ಎಂಬದು ತನ ಎಂಬರ್ಥದ ಮರಾಠೀ ಪ್ರತ್ಯಯ, ಅಮರಪತಿ ಪದ-ದೇವೇಂದ್ರನ ಪಾದ
ಮೂಲ ...{Loading}...
ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮತ್ರ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ ॥45॥
೦೪೬ ಏರುವಡೆದರು ಕೆಲರು ...{Loading}...
ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಸೇನೆಯಲ್ಲಿ ಕೆಲವರು ಗಾಯಗೊಂಡರು. ಕೆಲವರ ಪ್ರಾಣ ಸೂರೆಹೋಯಿತು. ಮತ್ತೆ ಕೆಲವರ ಎದೆ ಹಳ್ಳ ಬಿದ್ದು ತುಂಬ ಗಾಯವಾಗಿ ಉತ್ಕಟಾವಸ್ಥೆಗೆ ಏರಿದರು. ಕೆಲವರು ರಕ್ತ ಕಾರಿದರು. ಕೆಲವರು ಸ್ವರ್ಗಕ್ಕೆ ಗೂರು ಮಾರಾಡಿದರು.(ಗೂರು ಮಾರಾಡುವುದು ಎಂದರೆ ಒಂದನ್ನು ಕೊಟ್ಟು ಒಂದನ್ನು ತೆಗೆದುಕೊಳ್ಳುವ ವಿನಿಮಯ ಪದ್ಧತಿ ಎಂಬರ್ಥವಿದೆ.) ಹಲವರು ಒಟ್ಟಿಗೆ ಕಾಲರಾಯನ ಅರಮನೆಗೆ ಜೀವಗಳನ್ನು ಕಳುಹಿಸಿದರು.
ಪದಾರ್ಥ (ಕ.ಗ.ಪ)
ಏರು-ಗಾಯ, ಅಸು-ಪ್ರಾಣ, ಡೋರು-ಹಳ್ಳ, ಸಗ್ಗ-ಸ್ವರ್ಗ,
ಗೂರು ಮಾರು ಆಡು ? - ಈ ಶಬ್ದದ ಖಚಿತ ಅರ್ಥಹೇಳಲಾಗುವುದಿಲ್ಲ. ಗೂರು ಮಾರಾಡುವುದು ಎಂದರೆ ಒಂದನ್ನು ಕೊಟ್ಟು ಒಂದನ್ನು ತೆಗೆದುಕೊಳ್ಳುವ ವಿನಿಮಯ ಪದ್ಧತಿ ಎಂಬರ್ಥವಿದೆ. ತಮ್ಮ ತಲೆಗಳನ್ನು ಯಮನಿಗೆ ಒಪ್ಪಿಸಿಕೊಟ್ಟು ವೀರಸ್ವರ್ಗ ಪಡೆದರು ಎಂದು ಅರ್ಥಹೇಳಬಹುದೆಂದು ಕಾಣುತ್ತದೆ, ೋಡು ಎಂಬರ್ಥವೂ ಇದೆ (ಸ್ವರ್ಗಕ್ಕೆ ದಾರಿಯನ್ನು ತೋಡಿಕೊಂಡರು), ಹರಣ-ಪ್ರಾಣ
ಮೂಲ ...{Loading}...
ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ ॥46॥
೦೪೭ ಚೆಲ್ಲಿ ಹೋಯಿತು ...{Loading}...
ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗೆಲ್ಲಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನ ಬಾಣಗಳ ತೋಪಿನಲ್ಲಿ ಕುರುಸೇನೆ ಅಕ್ಕಪಕ್ಕಕ್ಕೆ ಸರಿದು ಹೋಯಿತು. ಕೆಲವರು ಸೈನಿಕರು ಬಿಲ್ಲುಗಳನ್ನು ಬಾಣಗಳನ್ನು ಎಸೆದರು. ಕೆಲವರು ಪಾರ್ಥನ ಬಾಣಗಳ ತೋಪಿನಲ್ಲಿ ಸಿಕ್ಕಿಕೊಂಡು ಸೋಲೊಪ್ಪಿದರು. ಕೌರವನು ಮೆಲ್ಲಮೆಲ್ಲನೆ ಸರಿಯುತ್ತಿದ್ದುದನ್ನು ಕಂಡು ಅರ್ಜುನನು ಅವನನ್ನು ಅಟ್ಟಿಸಿಕೊಂಡು ಹೋಗಿ " ದನಗಳ್ಳ ! ನಿಲ್ಲು ಓಡಬೇಡ" ಎಂದು ಮೂದಲಿಸಿದ.
ಪದಾರ್ಥ (ಕ.ಗ.ಪ)
ಬಿರುಕೋಲು-ಕಠಿಣವಾಗಿದ್ದ ಬಾಣ, ಗೆಲ್ಲಕೆಡೆ-ಗೆಲುವನ್ನು ಕಳೆದುಕೋ, ಸೋಲು, ತೋಹು-ತೋಪು (ಸಮೂಹ)
ಮೂಲ ...{Loading}...
ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗೆಲ್ಲಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ॥47॥
೦೪೮ ಕಾಯಲಾಪರೆ ಕರೆಯಿರಾ ...{Loading}...
ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವನನ್ನು ರಕ್ಷಿಸಿಕೊಳ್ಳುವುದಾದರೆ ಆ ಮಹಾವೀರರನ್ನೆಲ್ಲ ಕರೆಯಿರಿ. ಕೌರವರಾಯ ಸಿಕ್ಕಿಕೊಂಡಿದ್ದಾನೆ. ಭೀಷ್ಮ ದ್ರೋಣ ಗುರು ಕೃಪ ಎಲ್ಲರೂ ಎಲ್ಲಿ ?” ಎಂದು ಕುರುಸೇನೆ ಮೊರೆಯಿಟ್ಟಿತು. ಆಗ ವಿಕರ್ಣ, ಕೃಪ, ರಾಧೇಯ, ಚಿತ್ರಸೇನ, ಸೈಂಧವಾದಿಗಳೆಲ್ಲ ಮುಂದೆ ಬಂದರು.
ಪದಾರ್ಥ (ಕ.ಗ.ಪ)
ಕಾಯಲಾಪರೆ-ರಕ್ಷಿಸಲು ಸಾಧ್ಯವಿದ್ದರೆ, ಕರ್ಣಾಯತಾಸ್ತ್ರರು-ಕರ್ಣ + ಆಯತ + ಅಸ್ತ್ರರು-ಕಿವಿಯವರೆಗೆ ಎಳೆದಿರುವ ಬಾಣಗಳನ್ನು ಹಿಡಿದವರು, ಕರ್ಣ-ಕಿವಿ, ಆಯತ-ವಿಸ್ತಾರ
ಚಿತ್ರಸೇನ ಧೃತರಾಷ್ಟ್ರನ ಮಗ.
ಮೂಲ ...{Loading}...
ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ॥48॥
೦೪೯ ಇತ್ತ ತುರುಗಳ ...{Loading}...
ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳ ಸಂಗರ ವಿಜಯ ಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಕೌರವನ ಸೈನಿಕರು ದನಕರುಗಳನ್ನು ಬಿಟ್ಟು ಗಾಬರಿಯಿಂದ ಓಡಿ ಹೋದರು. ಕೌರವ ಕಡೆಯ ಗೆಲುವಿನ ಸಂಭ್ರಮದಲ್ಲಿದ್ದ ಗರ್ವಶಾಲಿಗಳ ಮೋರೆಗಳು ಸುಟ್ಟಂತಾದುವು. ಗೋಪಾಲಕರು ಸನ್ನೆ ಮಾಡುತ್ತ ದನಕರುಗಳನ್ನು ಊರಿನ ಕಡೆಗೆ ಕರೆದೊಯ್ದರು. ಉತ್ತರನು ಸಂತೋಷ ಪ್ರವಾಹದಲ್ಲಿ ಮುಳುಗಿದ.
ಪದಾರ್ಥ (ಕ.ಗ.ಪ)
ತುರು-ದನ, ತೆತ್ತಿಗರು-ಸೇವಕರು, ತಲ್ಲಣಿಸಿ-ಗಾಬರಿಯಿಂದ, ತಳಮಳಿಸುತ್ತ, ಮುಸುಡು-ಮೋರೆ, ಪಶುವ್ರಜ-ದನಗಳ ಸಮೂಹ,
ಮೂಲ ...{Loading}...
ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳ ಸಂಗರ ವಿಜಯ ಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ॥49॥
೦೫೦ ಬಿಗಿದ ಕೆಚ್ಚಲ ...{Loading}...
ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಗಿದಿದ್ದ ಕೆಚ್ಚಲನ್ನು ತೊರೆದು ಹಾಲು ಸುರಿಸಿ ಬಾಲವು ಮೇಲೆದ್ದಿರಲು ಮುಖವೆತ್ತಿ ದನಗಳು ದಿಕ್ಕು ದಿಕ್ಕುಗಳಿಗೆ ಕಣ್ಣಾಡಿಸಿದುವು. ಬೆಚ್ಚಿ ಓಡುತ್ತಿದ್ದುವು. ತಟಕ್ಕನೆ ಹಿಂದೆಗೆದು ಜಿಗಿದು ನಿಲ್ಲುತ್ತಿದ್ದುವು. ಹೊಸಬರ ವಾಸನೆಗೆ ಮುಖ ಸಿಂಡರಿಸಿಕೊಂಡವು. ಗೋಪಾಲಕರು ತೋರಿಸಿದ ದಾರಿಯಲ್ಲಿ ನಡೆಯುವಾಗ ದನಗಳ ಹಿಂಡು ಹೀಗೆಲ್ಲ ಮಾಡಿತು.
ಪದಾರ್ಥ (ಕ.ಗ.ಪ)
ಒಗು-ಹೊರಸೂಸು, ಸೂಳೆದ್ದ-ಬೆದೆಗೆ ಬಂದ, ಸರದಿಗೆ ಬಂದ, ನೆಗಹಿ-ಎತ್ತಿ, ಅಗಿದು-ಹಿಂಜರಿದು, ಸರಳಿಸಿ-ಜಿಗಿದು, ಸೊಗಡು-ವಾಸನೆ, ತೆಕ್ಕವರಿ-ಒತ್ತೊತ್ತಾಗಿ ಸಾಗು, ಬಿರುವರಿ-ಜೋರಾಗಿ ಓಡು
ಮೂಲ ...{Loading}...
ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ॥50॥
೦೫೧ ಕೆಲವು ಕಡೆಗನ್ದಿಗಳು ...{Loading}...
ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವು ಕಡೆಗಂದಿಗಳು ಬಾಲವನ್ನು ಮೂಸುತ್ತ ಸಂತೋಷದಿಂದ ಮುಖವೆತ್ತಿ ಮತ್ತೆ ಓಡುತ್ತ ಕಾಲಲ್ಲಿ ನೆಲವನ್ನು ಕೆರೆದು ಅಪ್ಪಳಿಸುತ್ತ ಸಾಗಿದುವು. ಎದುರಿಗೆ ಇನ್ನೊಂದು ಗೂಳಿ ಬಂದರೆ ಅದನ್ನು ಕೊಂಬಿನಿಂದ ಉಜ್ಜುತ್ತ ಹಿಂಡು ಹಿಂಡುಗಳೊಂದಿಗೆ ಆಟವಾಡುತ್ತಿದ್ದುವು.
ಪದಾರ್ಥ (ಕ.ಗ.ಪ)
ಕಡೆಗಂದಿ-ಕರುವನ್ನುಳ್ಳ ಹಸು, ಸುಕ್ಕಿಸಿ-ಮಂಕುಗೊಳಿಸಿ, ಹರಿಹರಿದು-ಓಡಿ, ಧಾವಿಸಿ, ಸಲಗ-ಗೂಳಿ, ಈಡಿರಿ-ಕೊಂಬಿನಿಂದ ಉಜ್ಜು
ಮೂಲ ...{Loading}...
ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ ॥51॥
೦೫೨ ತಿರುಗಿ ಕೆನ್ದೂಳಿಡುತ ...{Loading}...
ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದಕ್ಕೆ ಬಂದ ತುರುಗಳು ಕೆಲವು ಧೂಳನ್ನು ಎಬ್ಬಿಸುತ್ತ ನಗರಕ್ಕೆ ಓಡಿದವು. ಅವು ಹೋದದ್ದನ್ನು ಕಂಡು ಸಂತೋಷದಿಂದ ಉತ್ತರ ಅರ್ಜುನರು ಮತ್ತೆ ಯುದ್ಧವನ್ನಾರಂಭಿಸಿದರು. ಮತ್ತೆ ಅರ್ಜುನ ಕೂಗಿದ: “ಕುರುಸೇನೆಯನ್ನು ಮುರಿದಿದ್ದೇನೆ. ಮತ್ತೆ ತಡೆಯಬಲ್ಲ ವೀರರಿದ್ದರೆ ಯುದ್ಧಕ್ಕೆ ಬರಹೇಳು” ಹೀಗೆ ಹೇಳುತ್ತ ಅರ್ಜುನನು ಬಾಣವನ್ನು ತೂಗಿದ.
ಪದಾರ್ಥ (ಕ.ಗ.ಪ)
ಮೋಹರ-ಸೇನೆ, ಹರಿಬ-ಕರ್ತವ್ಯ, ಧುರ-ಯುದ್ಧ, ಕಿರೀಟಿ-ಅರ್ಜುನ
ಮೂಲ ...{Loading}...
ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ॥52॥