೦೦೦ ಸೂ ವೈರಿಭಟ ...{Loading}...
ಸೂ. ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟ ನಂದನಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುಗಳ ಪಾಲಿಗೆ ಬಿರುಗಾಳಿಯಾದ ನವಭೈರವ ಎನ್ನಿಸಿಕೊಂಡ ವೀರ ಪಾರ್ಥನು ವಿರಾಟನಂದನ ಉತ್ತರನಿಗೆ ಸಮರದಲ್ಲಿ ಉದ್ಧಾರ ಮಾಡಬಲ್ಲ ಸಾರಥಿಯಾದನು.
ಪದಾರ್ಥ (ಕ.ಗ.ಪ)
ವೈರಿಭಟ ಸಂವರ್ತ-ಶತ್ರು ಸೈನಿಕರ ಪಾಲಿಗೆ ಬಿರುಗಾಳಿ (ಅರ್ಜುನ) ನೂತನ ಭೈರವ-ಅಭಿನವ ಭೈರವ (ಅರ್ಜುನ) ಸಮರೋದ್ಧಾರ ಸಾರಥಿ… ಉತ್ತರನನ್ನು ಯುದ್ಧ ಭೂಮಿಯಲ್ಲಿ ಉದ್ಧಾರ ಮಾಡಿದ ಸಾರಥಿಯಾದನು.
ಮೂಲ ...{Loading}...
ಸೂ. ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟ ನಂದನಗೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನರು ಜನಮೇಜಯನಿಗೆ ಹೇಳಿದರು. ದುರ್ಯೋಧನನ ಸೇನೆ ವಿರಾಟ ನಗರದ ದನಕರುಗಳ ಮೇಲೆ ದಾಳಿ ನಡೆಸಿತು. ಭೀಷ್ಮ ದ್ರೋಣ ಕರ್ಣ ಮೊದಲಾದ ಮಹಾವೀರರೇ ಯುದ್ಧಕ್ಕೆ ಬಂದಿದ್ದರು. ಅವರು ಸುರಿಸಿದ ವೇಗದ ಬಾಣಗಳಿಂದ ದನದ ಕಾವಲಿನ ಪಡೆ ಘಾಸಿಗೊಂಡಿತು. ಕರ್ಣ ದುಶ್ಶಾಸನ ಸೈಂಧವ ಮೊದಲಾದವರು ದಂಡಿನ ಸಮೇತ ನುಗ್ಗಿ ಗೋಪಾಲಕರ ಸಾಲುಗಳನ್ನು ಬಡಿಯುತ್ತ ಬಂದರು.
ಪದಾರ್ಥ (ಕ.ಗ.ಪ)
ಮೇಲಾಳು-ವೀರಪ್ರಮುಖ, ಕೋಲ ಸೂಟಿಯ ಸರಿವಳೆ-ವೇಗದ ಬಾಣಗಳ ಮಳೆ, ಮುಗ್ಗು-ಕುಸಿ
ಟಿಪ್ಪನೀ (ಕ.ಗ.ಪ)
ಅತ್ತಕಡೆ ದಕ್ಷಿಣ ಭಾಗದಿಂದ ಬಂದ ತ್ರಿಗರ್ತ ಸೈನಿಕರು ಮತ್ತು ಕೌರವ ಸೈನಿಕರುಗಳನ್ನು ಎದುರಿಸಿ ದನಗಳನ್ನು ಹಿಂದಕ್ಕೆ ತರಲು ವಿರಾಟರಾಜನು ಹೋದ. ತ್ರಿಗರ್ತನಿಗೆ ಸೆರೆ ಸಿಕ್ಕಿದ್ದ ಅವನು ಭೀಮನಿಂದಾಗಿ ಬಿಡುಗಡೆ ಹೊಂದಿ ಹಿಂದಿರುಗಿದ. ಶತ್ರುಗಳನ್ನು ಗೆದ್ದು ದನಗಳನ್ನು ಹಿಂದಕ್ಕೆ ಕಳಿಸಿ ಪಾಂಡವರು ಆ ರಾತ್ರಿಯನ್ನು ರಣರಂಗದಲ್ಲೇ ಕಳೆದರು ಎಂದು ಮೂಲಭಾರತ ಹೇಳುತ್ತದೆ (ಸಂಗ್ರಾಮ ಶಿರಸೋ ಮಧ್ಯೇ ತಾಂ ರಾತ್ರಿಂ ಸುಖಿನೋ„ವಸನ್) ಮರುದಿವಸ ಉತ್ತರದ ಕಡೆಯಿಂದ ಕೌರವರ ದಾಳಿ ನಡೆಯಿತು.
ಮೂಲ ...{Loading}...
ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು ॥1॥
೦೦೨ ರಾಯ ಚೂಣಿಯ ...{Loading}...
ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು
ಸಾಯಲಲಸದ ಗೋವರನು ಕೈ
ಗಾಯದೆಸುತವೆ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆಯ ಚತುರಂಗ ಬಲದ ನಾಯಕರು ಒಟ್ಟಾಗಿ ಸೇರಿದರು. ಸಮರ ತಂತ್ರದಿಂದ ಶತ್ರುಗಳನ್ನು ಹಿಂದಿಕ್ಕಿ ಕೋಡುಗಳನ್ನು ಹಿಡಿದು ಹಸುಗಳನ್ನು ಸುತ್ತುವರಿದರು. ಸಾಯಲು ಹೆದರದೆ ಧೈರ್ಯದಿಂದ ಮುನ್ನುಗ್ಗಿದ ಗೊಲ್ಲವೀರರನ್ನು ಬಿಡದೆ ಗಾಯಗೊಳಿಸಿ ಸೆರೆ ಹಿಡಿದರು. ಯುದ್ಧರಂಗದಿಂದ ಆ ಗೊಲ್ಲರ ಪಡೆ ಕಾಣದಾಯಿತು.
ಪದಾರ್ಥ (ಕ.ಗ.ಪ)
ರಾಯಚೂಣಿ-ಕೌರವ ಸೇನೆ, ರಾಜರುಗಳಿದ್ದ ಸೇನೆಯ ಆಗ್ರ ಭಾಗ, ಚಾತುರಂಗ- ಆನೆ ಕುದುರೆ ರಥ ಕಾಲಾಳು ಈ ನಾಲ್ಕು ಅಂಗದ ಸೇನೆ. ಕೋಡಕೈಯವರು-ದನಗಳ ಕೋಡು ಹಿಡಿದವರು, ಆಯುಧ ಹಿಡಿದವರು, ಅಲಸದ-ಹೆದರದ, ಹಿಂದೆ ಮುಂದೆ ನೋಡದ, ಬೇಸರಿಸದ, ಎಸು-ಬಾಣ ಪ್ರಯೋಗ ಮಾಡು, ಹರಿಬಕಾರ-ಕೆಲಸಗಾರ, ಗೋಪಾಲಕ, ಕೈಗಾಯದೆಸುತವೆ-ರಕ್ಷಿಸದೆ ಹೊಡೆದು ಕೈಗಾಯದೆ ಕೈಯ ಕಾಯದೆ, ಎಸುತ-ಬಾಣ ಆಯುಧಗಳಿಂದ ಘಾತಿಗೊಳಿಸುತ್ತ, ಕೈಗಾಯದೆ+ಎಸುತವೆ-ರಕ್ಷಿಸದೆ ಬಾಣ ಬಿಡುತ್ತ ಎಂದೂ ಆಗಬಹುದು.
ಟಿಪ್ಪನೀ (ಕ.ಗ.ಪ)
ಕೋಡಕೈವರು - ಕೋಡಕೈಯ+ಅವರು-ಕೋಡಕೈ ಅಂದರೆ ಒಂದು ಬಗೆಯ ಆಯುಧವನ್ನು ಹಿಡಿದವರು ಎಂದು ಕೃಷ್ಣಜೋಯಿಸ್ ಅರ್ಥಮಾಡಿದ್ದಾರೆ)
ಕೋಡಕೈಯವರು - ಇದಕ್ಕೆ ಕೋಡಗೈಯವರು ಎಂಬ ಪಾಠವೂ ಇದೆ.
ಮೂಲ ...{Loading}...
ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು
ಸಾಯಲಲಸದ ಗೋವರನು ಕೈ
ಗಾಯದೆಸುತವೆ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ ॥2॥
೦೦೩ ಮೇಲುದಳಕಿದಿರಾಗಿ ಬರೆ ...{Loading}...
ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದುಬಿಟ್ಟರು ಹಗೆಯ ಪಟ್ಟಣಕೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಉತ್ತಮ ಸೇನೆ ಎದುರಾಗಿ ಬಂದಾಗ ತುರು ಹರಿಕಾಳಗದಲ್ಲಿ ಅಂದರೆ ಗೋಸಂಬಂಧವಾದ ಕಾಳಗದಲ್ಲಿ ಭಂಗಿತರಾಗಿ ಗೋಪಾಲಕರು ಯಮನ ವಶವಾದರು. [ದೇವತೆಗಳ ರಾಜಧಾನಿಗಳ (ಯಮಪುರ) ಧೂಳಿಕೋಟೆಯನ್ನು ಮುತ್ತಿದರು] ಗೋಪಾಲಕರ ಗುಂಪು ಛಿದ್ರವಾದಾಗ ಕೌರವ ಸೈನಿಕರು ಒಬ್ಬ ಗೊಲ್ಲನನ್ನು ಹಿಡಿದು ಮೂಗಿನ ಮೇಲೆ ಸುಣ್ಣದಿಂದ ಗುರುತು ಮಾಡಿ ರಾಜಧಾನಿಗೆ ಕಳಿಸಿಕೊಟ್ಟರು.
ಪದಾರ್ಥ (ಕ.ಗ.ಪ)
ಬರೆಹರಿಗಾಳೆಗ-ಇದಕ್ಕೆ ತುರುಹರಗಾಳೆಗ ಎಂಬ ಪಾಠಾಂತರವಿದೆ (ವಿರಾಟಪರ್ವ, ಮೈಸೂರು ವಿ.ವಿ.)ಅಂದರೆ ದನಗಳನ್ನು ಅಪಹರಿಸಿದ ಸಂದರ್ಭದ ಕಾಳಗದ, ದೂಳಿ ಕೋಟೆ, ಅಮರರ ರಾಜಧಾನಿ ದೇವ ನಗರಿ (ಯಮಪುರಿ ಇತ್ಯಾದಿ) ಅಮರರ ರಾಜಧಾನಿಗಳ ದೂಳಿಕೋಟೆಯನ್ನು ಕೊಂಡರು. ಅಂದರೆ ಯಮನ ಕೋಟೆಯ ಮೇಲೆ ದಂಡೆತ್ತಿ ಹೋಗಿ ಕೋಟೆಯನ್ನು ಹಾಳುಗೆಡವಿದರು, ಅಂದರೆ ಸತ್ತರು ಎಂದರ್ಥ.
ಟಿಪ್ಪನೀ (ಕ.ಗ.ಪ)
ಅಷ್ಟಾಗಿ ಶಸ್ತ್ರ ಸಜ್ಜಿತರಲ್ಲದ ಗೊಲ್ಲರ ಪಡೆಯನ್ನು ಧ್ವಂಸಗೊಳಿಸಿ ಒಬ್ಬಗೊಲ್ಲನ ಹಣೆಯ ಮೇಲೆ ನಾಮ ಹಾಕಿ ಕಳಿಸುವುದು ವೀರ ಸೇನೆಯ ಲಕ್ಷಣವಲ್ಲ. ಆದರೆ ‘ಗೋಗ್ರಹಣ’ ವೂ ಹಿಂದಿನ ಕಾಲದ ಒಂದು ಯುದ್ಧಕ್ರಮವಾಗಿತ್ತು. “ತುಱುಗೋಳೊಳ್ ಪೆಣ್ಪುಯ್ಯಲೊಳ್” ಎಂದು ರನ್ನ ಹೇಳುತ್ತಾನೆ. ಪಶುಸಂಪತ್ತು ದೇಶಕ್ಕೆ ಸುಭದ್ರ ಆರ್ಥಿಕ ಸ್ಥಿತಿಯನ್ನು ಒದಗಿಸುತ್ತಿದ್ದುದರಿಂದ ಆಗಾಗ ರಾಜರುಗಳು ಶತ್ರು ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ದನಗಳನ್ನು ತಮ್ಮ ರಾಜ್ಯಕ್ಕೆ ಕರೆದೊಯ್ಯುತ್ತಿದ್ದರು. ಆದರೆ ಇಲ್ಲಿ ಕೌರವನ ಗುರಿ ಅದಲ್ಲ. ಗೋಗ್ರಹಣದ ನೆಪದಲ್ಲಿ ವೀರಪಾಂಡವರನ್ನು ಪತ್ತೆ ಹಚ್ಚುವ ಗುರಿ ಅವನದಾಗಿತ್ತು. “ಮೂಗಿಗಿಡರೇ ಸುಣ್ಣವನು” ಎಂಬ ತಿಮ್ಮಾಮಾತ್ಯನ ಮಾತುಗಳನ್ನು ಜ್ಞಾಪಿಸಿಕೊಳ್ಳಬಹುದು (ಶ್ರೀರಾಮಾಭ್ಯುದಯ ಕಥಾ ಕುಸುಮ ಮಂಜರಿ ಯುದ್ಧಕಾಂಡ 2-8)
ಮೂಲ ...{Loading}...
ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದುಬಿಟ್ಟರು ಹಗೆಯ ಪಟ್ಟಣಕೆ ॥3॥
೦೦೪ ಗರುವ ಗೋವರು ...{Loading}...
ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೇನೆಯ ಆರ್ಭಟಕ್ಕೆ ಆ ಗೋಪಾಲಕರು ಓಡಿ ಹೋಗುತ್ತ ಕೆಳಗೆ ಬಿದ್ದರು. ಕೌರವನ ಸೇನೆ ದನಕರುಗಳನ್ನು ಸೆರೆ ಹಿಡಿದು ತಮ್ಮ ಹಿಂದೆ ಇರಿಸಿಕೊಂಡಿತ್ತು. ಅನಂತರ ನಿಮ್ಮಲ್ಲಿರುವ ವೀರರನ್ನು ಯುದ್ಧಕ್ಕೆ ಬರಹೇಳು ಹೋಗು ಎಂದು ಗೋಪಾಲನೊಬ್ಬನಿಗೆ ಹೇಳಿದರು. ಪಾಪ, ಅವನು ಹೆದರಿ ಕೈಯಲ್ಲಿ ಇದ್ದ ಬಿಲ್ಲನ್ನು ಬಿಸಾಡಿ “ಬದುಕಿದೆಯಾ ಬಡ ಜೀವವೇ !” ಎಂದು ತಲೆ ಸವರಿಕೊಳ್ಳುತ್ತ ಊರಿಗೆ ಓಡಿ ಬಂದ.
ಪದಾರ್ಥ (ಕ.ಗ.ಪ)
ಗರುವ-ವೀರ, ಹುಯ್ಯಲು-ಆರ್ಭಟ, ಕಿರುಚಾಟ, ಹರಿಹರಿದು-ಓಡಿ ಓಡಿ, ಕೆಡೆ-ಬೀಳು, ಮೋಹರ-ಸೇನೆ, ಬಿರುದ-ವೀರ, ಹರಿತಂದ-ಹರಿತರು ಬಾ (ಬಂದ) ಧಾವಿಸು
ಮೂಲ ...{Loading}...
ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ ॥4॥
೦೦೫ ಗಣನೆಯಿಲ್ಲದು ಮತ್ತೆ ...{Loading}...
ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣೆ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರಜನಗಳೆಲ್ಲ ಗೋಪಾಲಕನು ಓಡಿ ಬರುವಾಗಿನ ಸ್ಥಿತಿಯನ್ನು ನೋಡಿದರು. “ಓಹೋ ನಿನ್ನೆಯ ದಾಳಿ ಲೆಕ್ಕಕ್ಕಿಲ್ಲ. ಈಗ ಇನ್ನೊಂದು ಕಡೆಯಿಂದ ವಿಪತ್ತು ಬಂದಂತೆ ಕಾಣುತ್ತದೆ. ಅಯ್ಯಾ ! ಯುದ್ಧದ ಸುದ್ದಿ ಹೇಳು” ಎಂದು ಆ ಗೊಲ್ಲನನ್ನು ಕೇಳಿದರು. ಜನರ ಗಜಿಬಿಜಿ ಹೆಚ್ಚಾಗಿತ್ತು. ಆದರೆ ಆ ಗೊಲ್ಲ ಓಡಿಬಂದದ್ದರಿಂದ ಆಯಾಸಗೊಂಡಿದ್ದ. “ಓ ! ಯುದ್ಧವೇನೂ ಚಿಕ್ಕದಲ್ಲ” ಎಂದು ಹೇಳುತ್ತ ಧಗೆಯಿಂದ ಸಂಕಟಪಡುತ್ತ ಅವನು ಅರಮನೆಯ ಕಡೆಗೆ ಓಡಿದ. ಅಲ್ಲಿ ಮೇಳದ ಗಣಿಕಾ ಸ್ತ್ರೀಯರ ಮಧ್ಯದಲ್ಲಿ ಮೆರೆಯುತ್ತಿದ್ದ ರಾಜಪುತ್ರ ಉತ್ತರನನ್ನು ನೋಡಿದ.
ಪದಾರ್ಥ (ಕ.ಗ.ಪ)
ಗಣನೆ-ಲೆಕ್ಕ, ಮೇಲಂಕಣದ ಭಾರಣೆ-ಮತ್ತೊಂದು ಯುದ್ಧದ ದಾಳಿ, ಢಗೆ-ಧಗೆ, ಗಣಿಕೆ-ವಿಲಾಸಿನಿ
ಟಿಪ್ಪನೀ (ಕ.ಗ.ಪ)
ಉತ್ತರನಿಗೆ ಭೂಮಿಂಜಯ ಎಂಬ ಹೆಸರೂ ಇದೆ. ಗವಾಧ್ಯಕ್ಷಸ್ತು ಸಂತ್ರಪ್ತೋ ನೃಪವೇಶ್ಮಾಬ್ಭಯಾತ್ತತಃ ದೃಷ್ಟಾ ಭೂಮಿಂಜಯಂ ಸರ್ವಮಾಚಷ್ಟ ಪಶುಕರ್ಷಣಂ (ಗೊಲ್ಲಪತಿಯು ಗೊಂದಲಗೊಂಡವನಾಗಿ ಹೆದರಿಕೆಯಿಂದ ಅರಮನೆಗೆ ಬಂದ. ಅಲ್ಲಿ ಭೂಮಿಂಜಯ (ಉತ್ತರ ಕುಮಾರ)ನನ್ನು ಕಂಡು ಗೋಗ್ರಹಣವಾಗಿರುವ ವಿಷಯವನ್ನೆಲ್ಲ ಹೇಳಿದ)
ಮೂಲ ...{Loading}...
ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣೆ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ ॥5॥
೦೦೬ ಬೆಗಡು ಮುಸುಕಿದ ...{Loading}...
ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯ ತುಂಬಿದ ಮುಖದ, ಹೆದರಿಕೊಂಡಿದ್ದ, ಏದುಸಿರು ಬಿಡುತ್ತಿದ್ದ, ತೊದಲು ಮಾತಾಡುತ್ತಿದ್ದ ಬೆರಗಿನಿಂದ ಗಂಟಲು ಒಣಗಿ ಹೋಗಿದ್ದ ಹೆದರಿ ನರಳುತ್ತಿದ್ದ ಆ ಗೊಲ್ಲನು ಸಭೆಗೆ ಬಂದು ವಿರಾಟನ ಮಗನ ಕಾಲಿಗೆ ಬಿದ್ದ. ನಡೆದ ಸಂಗತಿಯನ್ನೆಲ್ಲ ಹೇಳಿದ.
ಪದಾರ್ಥ (ಕ.ಗ.ಪ)
ಬೆಗಡು-ಭಯ, ಬರತ-ಒಣಗಿದ, ತಾಳಿಗೆ-ಕಂಠ (ನಾಲಿಗೆ) ತಾಳಿಗೆ-ಗಂಟಲಿನ ಮೇಲುಭಾಗ ಅಂಗುಳು, ಅಗಿ-ನಡುಗು, ಹುಯ್ಯಲುಗಾರ-ಬೊಬ್ಬೆಯಿಡುತ್ತಿದ್ದವ
ಮೂಲ ...{Loading}...
ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ ॥6॥
೦೦೭ ಏಳು ಮನ್ನೆಯ ...{Loading}...
ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯಾ ! ಮಾನ್ಯ ರಾಜಪುತ್ರ ! ನೀನೀಗ ವೀರನಾಗು. ಕೌರವರಾಯನು ಸೇನೆಯೊಂದಿಗೆ ಬಂದು ನಮ್ಮ ದನಗಳನ್ನೆಲ್ಲ ಸೆರೆಹಿಡಿದ. ಭೂಮಿಯುದ್ಧಕ್ಕೂ ಎಲ್ಲಿ ನೋಡಿದರೂ ಅವನ ಸೈನ್ಯವೇ ನಿಂತಿದೆ. ಕೌರವ ಸೇನೆ ದಾಳಿಯಿಡುತ್ತ ಬರುತ್ತಿದೆ. ಈಗ ನಿನ್ನ ಆಳು ಕುದುರೆಗಳನ್ನೆಲ್ಲ ಕರೆಸಿಕೋ. ಈ ಅಂತಃಪುರದ ಪಾಳಯವನ್ನು ಮೊದಲು ತೆಗೆಸು ಎಂದು ಪ್ರಾರ್ಥನೆಯ ರೂಪದ ಒರಟು ಮಾತುಗಳನ್ನಾಡಿದ.
ಪದಾರ್ಥ (ಕ.ಗ.ಪ)
ಮನ್ನೆಯ-ಮಾನ್ಯ, ಗಂಡನಾಗು-ವೀರತನದಿಂದ ಎದುರು ನಿಲ್ಲು, ಕೋಳಹಿಡಿ-ಸೆರೆಹಿಡಿ, ಗೂಳೆಯ-ಬಿಡಾರ, ಬಿರುಬು-ಕಠಿಣ, ಪ್ರಬಲ, ಉಗ್ರ, ಬಿನ್ನಹದ ಬಿರುಬು-ಉಗ್ರ ಪ್ರಾರ್ಥನೆ, ಆವೇಶದ ಮಾತು
ಮೂಲ ...{Loading}...
ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ॥7॥
೦೦೮ ಏನೆಲವೊ ತುದಿ ...{Loading}...
ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಕುಮಾರನು “ಏನಯ್ಯಾ ಇದು. ಮೂಗಿನಲ್ಲಿ ಬಿಳುಪು ಏನಿದು ? ಏದುಸಿರು ಬಿಡುತ್ತ ಏಕೆ ಬಂದೆ ? ಏನಿದು? ನಿನ್ನೆ ಯುದ್ಧದಲ್ಲಿ ಅಪ್ಪ ವಿರಾಟನು ಗೆದ್ದ ಸುದ್ದಿ ಬಂದಿತ್ತಲ್ಲ. ಅದು ಏನಾಯ್ತು! ಹೇಳು ಹೆದರಬೇಡ. ಯುದ್ಧದ ಮೂಲ ವಾರ್ತೆ ಏನೆಂದು ಹೇಳು. (ಮತ್ತೇಕೆ ಯುದ್ಧ ಆರಂಭವಾಯಿತು ಹೇಳು)” ಎಂದು ಕೇಳಿದ. ಆಗ ಗೊಲ್ಲನು “ರಾಜಪುತ್ರ ! ಕೌರವನ ಸೈನ್ಯವು ಉತ್ತರ ದಿಕ್ಕಿನಿಂದ ಬಂದಿದೆ. ಅವರು ನಮ್ಮ ದನಕರುಗಳನ್ನೆಲ್ಲ ಬಡಿದು ಸೆರೆಯಲ್ಲಿ ಇರಿಸಿದ್ದಾರೆ ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಅಯ್ಯ-ತಂದೆ (ವಿರಾಟ), ಕಲಹ ನಿಧಾನ ವಾರ್ತೆ-(ಮತ್ತೆ) ಯುದ್ಧವು ಆರಂಭವಾಗುವುದಕ್ಕೆ ಕಾರಣವಾದ ಸುದ್ದಿ, ಬಡಗು-ಉತ್ತರ
ಟಿಪ್ಪನೀ (ಕ.ಗ.ಪ)
ಷಷ್ಟಿಂಗವಾ ಸಹಸ್ರಾಣಿ, ಅಂದರೆ ಉತ್ತರದಲ್ಲಿ ಕೌರವರು ಅರವತ್ತು ಸಾವಿರ ಗೋವುಗಳನ್ನು ಹಿಡಿದಿದ್ದರು ಎಂಬ ಸಂಗತಿ ಮೂಲ ಭಾರತದಲ್ಲಿದೆ.
ಮೂಲ ...{Loading}...
ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ ॥8॥
೦೦೯ ರಾಯ ತಾನೈತನ್ದನಾತನ ...{Loading}...
ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತ ಬಲ್ಲೆನು ಹೊಕ್ಕು ಹೊಗಳುವರೆ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೊಲ್ಲನು ಮಾತನ್ನು ಮುಂದುವರಿಸುತ್ತ “ಕೌರವ ರಾಜನು ತಾನೇ ಬಂದಿದ್ದಾನೆ. ಆತನ ನಾಯಕರು ಅಶ್ವತ್ಥಾಮ, ದ್ರೋಣ,ಭೀಷ್ಮ, ಶಕುನಿ, ವಿಕರ್ಣ, ಕರ್ಣ, ಜಯದ್ರಥ ಮೊದಲಾದವರು ಬಂದಿದ್ದಾರೆ. ಪ್ರಭು ! ಸೈನ್ಯ ದಟ್ಟಣೆ ಎಷ್ಟು ದೊಡ್ಡದಾಗಿದೆಯೆಂದರೆ ಸಮುದ್ರದ ಅಡಿಮಳಲೇ ಕಾಣುವ ಪ್ರಮಾಣದಷ್ಟು ! (ಇನ್ನೇನೂ ಉಳಿಯದೆ ಇಡೀ ಸೈನ್ಯವೆಲ್ಲಾ ಹೊರಟು ಬಂದಿದೆ ಎಂಬ ಅರ್ಥದಲ್ಲಿ) ಆ ಸೇನೆಯ ವಿಸ್ತಾರವನ್ನು ಹೊಗಳುವುದಕ್ಕೆ ನನಗೇನು ಮಹಾ ತಿಳಿದಿದೆ ಹೇಳು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ರಾಯ-ಕೌರವ, ಬಿನ್ನಹ-ವಿಜ್ಞಾಪನೆ, ತೆರಳಿಕೆ-ಚಲನೆ, ಮೋಹರ-ಸೇನೆ, ಆಯತ-ವಿಸ್ತಾರ, ಹೊಗಳು-ವರ್ಣಿಸು, ಹೊಗಳು<ಪುಗಳ್ ಹಳೆಗನ್ನಡದಲ್ಲಿ ಪುಗಳ್-ಹೊಗಳು ಎಂದರೆ ವಿವರ ಹೇಳು ಎಂದರ್ಥ ಅಷ್ಟೇ. ಈಗಲೂ ಸಬ್ ರಿಜಿಸ್ಟ್ರಾರರ ಕಛೇರಿಯಲ್ಲಿ ಜಮೀನಿನ ಚೆಕ್ಕು ಬಂದಿ ಇತ್ಯಾದಿಗಳನ್ನು ಹೊಗಳಿ (ವಿವರಿಸಿ) ಹೇಳುತ್ತಾರೆ, ತಾಯಿ ಮಳಲು-ಸಮುದ್ರದ ತಳ, ದಳದ ತೆರಳಿಕೆ ತಾಯಿ ಮರಳಂಬುಧಿಗೆ-ಈ ಮಾತು ಸರಿಯಾಗಿ ಅರ್ಥವಾಗುವುದಿಲ್ಲ.
ಮೂಲ ...{Loading}...
ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತ ಬಲ್ಲೆನು ಹೊಕ್ಕು ಹೊಗಳುವರೆ ॥9॥
೦೧೦ ಎತ್ತ ದುವ್ವಾಳಿಸುವಡಾಲಿಗ ...{Loading}...
ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಣವಾಜಿ ರೂಢಿಯ ರಾಯ ರಾವುತರು
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಭು ! ಕಣ್ಣು ಎತ್ತೆತ್ತ ತಿರುಗಿದರೆ ಅಲ್ಲೆಲ್ಲ ಆನೆಯ ಗುಂಪು, ಯೋಧರ ಗುಂಪು, ಕುದುರೆಯ ರಾವುತರ ಗುಂಪು ಕಾಣುತ್ತವೆ. ಈ ಸೇನೆ ಸುತ್ತಲೂ ಹರಡಿಕೊಂಡಿದೆ. ಮನಸ್ಸು ಹರಿಯುವ ಕಡೆಯೆಲ್ಲ ಸೇನೆಯೇ ಹೊರತು ಬೇರೇನೂ ಕಾಣುವುದಿಲ್ಲ. ಒಡೆಯ ! ಇದೇ ಕೌರವ ಸೇನೆ ಇರುವ ರೀತಿ” ಎಂದು ಆ ಗೋಪಾಲಕನು ಒಕ್ಕಣಿಸಿದ.
ಪದಾರ್ಥ (ಕ.ಗ.ಪ)
ದುವ್ವಾಳಿಸು-ಸಂಚರಿಸು, ವೇಗವಾಗಿ ತಿರುಗು, ಥಟ್ಟು-ಗುಂಪು, ರಣವಾಜಿ-ಯುದ್ಧದ ಕುದುರೆ, ಮೋಹರ-ಸೇನೆ (ಗುಂಪು) ವೈರಿವಾಹಿನಿ-ಶತ್ರು ಸೇನೆ
ಮೂಲ ...{Loading}...
ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಣವಾಜಿ ರೂಢಿಯ ರಾಯ ರಾವುತರು
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ ॥10॥
೦೧೧ ಒಡ್ಡಿದರೊ ಪಡಿನೆಲನನವನಿಯ ...{Loading}...
ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಪುತ್ರ ! ಈ ವಿಸ್ತಾರವಾದ ಸೇನೆಯನ್ನು ನೋಡಿದರೆ ಭೂಮಿಯ ಎದುರಿಗೆ ಇನ್ನೊಂದು ನೆಲ ಇದ್ದಹಾಗೆ ಅನ್ನಿಸುತ್ತಿದೆ. ಭೂಮಿಯ ಮೇಲೆ ಹರಡಿದ ಪರದೆ ಇಟ್ಟಂತಿದೆ. ಅಗಲವಾದ ತಾಳಗಳ ಸಮೂಹ, ಚಾಮರ, ಬೀಸಣಿಗೆ ಧ್ವಜಗಳ ಸಮೂಹ ! ಇವುಗಳ ಎದುರಿಗೆ ಅಡ್ಡಹಾಯುವ ಸೂರ್ಯನ ಕಿರಣದ ಗಾಳಿಯ ಸೊಕ್ಕು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಆ ಕೌರವನ ಸೇನೆಯನ್ನು ವರ್ಣಿಸುವುದಕ್ಕೆ ನನಗೆ ಶಕ್ತಿಯಿಲ್ಲ” ಎಂದು ಆ ಗೊಲ್ಲನು ಉತ್ತರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಒಡ್ಡು-ಸಿದ್ಧಮಾಡು, ಇಡು, ಪಡಿನೆಲ-ಇನ್ನೊಂದು ನೆಲ, ಅವನಿಯ-ಭೂಮಿಯ, ದಡಿ-ಪರದೆ, ಇನ-ಸೂರ್ಯ, ಪವನ-ಗಾಳಿ, ಖಡ್ಡತನ-ಸೊಕ್ಕು, ಮದ, ಒಡ್ಡು-ಸೇನೆ, ಅಭಿವರ್ಣಿಸು-ವಿವರಿಸು
ಮೂಲ ...{Loading}...
ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ ॥11॥
೦೧೨ ಒಳಗೆ ನೀ ...{Loading}...
ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡುತುತ್ತರ ಬಿರುದ ಕೆದರಿದನು ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜಕುಮಾರ ! ಒಳಗೇ ಇದ್ದುಕೊಂಡು ಹೋರಾಡುತ್ತೇನೆ ಎಂದು ನೀನು ಹೇಳುವುದಾದರೆ ಕೂಡಲೇ ಕೋಟೆಯನ್ನು ಭದ್ರಪಡಿಸು ಅಥವಾ ಹಿಂಜರಿಯದೆ ಯುದ್ಧ ಮಾಡುತ್ತೇನೆ ಎನ್ನುವುದಾದರೆ ಕೂಡಲೇ ಸೇನಾ ಸಮೇತನಾಗಿ ಯುದ್ಧಕ್ಕೆ ಹೊರಡು” ಎಂದು ಗೋಪಾಲಕನು ಹೇಳಿದ. ಆಗ ಉತ್ತರ ಕುಮಾರನು ಜಂಬದಿಂದ ಎಡಬಲಗಳನ್ನು ನೋಡಿದ (ಅಲ್ಲಿದ್ದವರೆಲ್ಲ ಹೆಂಗಸರು). ಮೀಸೆಯನ್ನು ಹುರಿಮಾಡಿದ ತನ್ನ ಎದುರಿಗೆ ಇದ್ದ ಮೇಳದ ವಿಲಾಸಿನಿಯರ ಕಡೆ ನೋಡುತ್ತ ತನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳಲು ಆರಂಭಿಸಿದ.
ಪದಾರ್ಥ (ಕ.ಗ.ಪ)
ಬಲಿಸು-ಬಲಪಡಿಸು, ಅಲುಗು-ಸರಿಪಡಿಸು, ಬಿರುದ ಕೆದರು-(ತನ್ನ) ಪೌರುಷದ ಬಗೆಗೆ ಕೊಚ್ಚಿಕೊ
ಟಿಪ್ಪನೀ (ಕ.ಗ.ಪ)
ಹೊರಗೆ ಜನರೆದುರು ತಮ್ಮ ಬಗೆಗೆ ಕೊಚ್ಚಿಕೊಳ್ಳುವವರು ವಾಸ್ತವವನ್ನು ಎದುರಿಸುವಾಗ ಎಷ್ಟು ಅಧೀರರಾಗುತ್ತಾರೆ ಎಂಬುದು ಉತ್ತರನ ಪ್ರಸಂಗದಿಂದ ಸ್ಪಷ್ಟವಾಗುತ್ತದೆ. ಅಥವಾ ತಮ್ಮ ಅಂತರಂಗದ ಟೊಳ್ಳನ್ನು ಮುಚ್ಚಿಕೊಳ್ಳಲು ಕೆಲವರು ಮಾತಿನಲ್ಲಿ ಪ್ರತಾಪಿಗಳಾಗುತ್ತಾರೋ ಏನೋ ? ವ್ಯಾಸರು ಇಂಥದೊಂದು ವೈದೃಶ್ಯವನ್ನು ಹಾಸ್ಯ ಮುಖದಿಂದ ವಿವರಿಸುತ್ತಾರೆ. ಸಹಜವಾಗಿ ಹಾಸ್ಯ ಪ್ರಿಯನಾದ ಕುಮಾರವ್ಯಾಸನು ಈ ಪ್ರಕರಣವನ್ನು ಹಾಸ್ಯಕ್ಕೇ ಮೀಸಲಿರಿಸಿರುವುದು ಗಮನಿಸಬೇಕಾದ ಅಂಶವಾಗಿದೆ.
ಮೂಲಭಾರತದಲ್ಲಿ ಈ ವಿಡಂಬನೆಯಿಲ್ಲ. ಗೊಲ್ಲನು ಉತ್ತರನ ಬಳಿಗೆ ಬಂದಾಗ ಈ ಹಿಂದೆ ವಿರಾಟನು ಉತ್ತರನ ಪೌರುಷದ ಬಗೆಗೆ ಹೇಳಿದ್ದ ಮಾತು. ನೆನಪಿಗೆ ಬರುತ್ತದೆ ಉತ್ತರನು ಬಾಣಪ್ರಯೋಗ ಸಮರ್ಥ, ಸದಾವೀರ (ಇಷ್ವಸ್ತ್ರೇ ನಿಪುಣೋ ಯೋಧ : ಸದಾ ವೀರಾಶ್ಚ ಮೇಮತಃ) ಎಂದು ಹೊಗಳಿದ್ದುದನ್ನು ಜ್ಞಾಪಿಸಿಕೊಂಡು ಈ ಮಾತನ್ನು ಸತ್ಯ ಎನ್ನಿಸು ಎಂದು ಕೇಳಿಕೊಳ್ಳುತ್ತಾನೆ.
ಮೂಲ ...{Loading}...
ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡುತುತ್ತರ ಬಿರುದ ಕೆದರಿದನು ॥12॥
೦೧೩ ನೂಕು ಕುನ್ನಿಯನಾಹವದ ...{Loading}...
ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನಗೆ
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಛೀ ! ಈ ನಾಯಿಯನ್ನು ಓಡಿಸಿ. ಹೆದರಿ ಕಂಗಾಲಾಗಿರುವ ಈತ ತನ್ನ ಹೆಂಡಿರನ್ನು ಸಾಕುತ್ತ ಬದುಕಬೇಕೆಂದು ಆಸೆಪಟ್ಟು ಮನೆಯ ಕಡೆಗೆ ಓಡೋಡಿ ಬಂದಿದ್ದಾನೆ. ಇಂಥ ಹೇಡಿ ನನ್ನ ಬಗೆಗೇ ಅಪಹಾಸ್ಯ ಮಾಡುತ್ತಿದ್ದಾನೆ ! ನನ್ನ ಸಂಗತಿ ಅವನಿಗೆ ಗೊತ್ತಿಲ್ಲ. ನಾನು ಕೆರಳಿ ನಿಂತರೆ ಯುದ್ಧದಲ್ಲಿ ಪಿನಾಕಪಾಣಿಯಾದ ರುದ್ರನು ಕೂಡ ನನ್ನ ಎದುರಿಗೆ ನಿಲ್ಲಲಾರ” ಎಂದು ಹೆಂಗಸರ ಎದುರಿನಲ್ಲಿ ಉತ್ತರನು ಕೂಗಾಡಿದ.
ಪದಾರ್ಥ (ಕ.ಗ.ಪ)
ಕುನ್ನಿ-ನಾಯಿಮರಿ, ಆಹವ-ಯುದ್ಧ, ಭೀತಾಕುಳ-ಹೆದರಿದವನು, ವ್ಯಾಕುಲಗೊಂಡವನು, ಲೌಲ್ಯತೆ-ಲೋಲುಪತೆ, ಮೋಹ, ಆಸೆ, ಕಾಕು-ವ್ಯಂಗ್ಯದ ಮಾತು, ಉದ್ರೇಕಿಸಿ-ಕೆರಳಿಸಿ, ಪಿನಾಕಧರ-ಪಿನಾಕಪಾಣಿ-ಪಿನಾಕ ಎಂಬ ಧನುಸ್ಸನ್ನು ಧರಿಸಿದ ಈಶ್ವರ.
ಟಿಪ್ಪನೀ (ಕ.ಗ.ಪ)
ಉದ್ದಕ್ಕೂ ಸತಿಯರ ಇದಿರಿನಲಿ ಎಂದು ಕುಮಾರವ್ಯಾಸನು ಹೇಳಿರುವುದರ ಅಂತರಾರ್ಥವನ್ನು ಗಮನಿಸಬೇಕು. ಇಂಥ ಬಡಾಯಿ ಮಾತುಗಳನ್ನು ಉತ್ತರನ ಬಡಾಯಿ ಎಂದೇ ಕರೆಯಲಾಗುತ್ತಿದೆ. ಗೋಪಾಲಕನ ಮಾತಿನಲ್ಲಿ ಉತ್ತರನು ಹೇಡಿ ಎಂಬ ಸಾರ್ವಜನಿಕ ಅಭಿಪ್ರಾಯದ ಪ್ರತಿ ಧ್ವನಿಯಿರುವಂತೆ ಕಾಣುತ್ತದೆ. ಈಶ್ವರನಿಗಿಂತಲೂ ತಾನು ಮಹಾವೀರ ಎಂದು ಕೊಚ್ಚಿಕೊಂಡಿರುವುದಂತೂ ಉತ್ತರನ ಮಾತಿನ ಚಟವನ್ನು ಒತ್ತಿಹೇಳುವಂಥದಾಗಿದೆ. ಆ ಸಭೆಯಲ್ಲಿ ಸೈನಿಕರು ಕೂಡ ಇರಲಿಲ್ಲ. ಅಲ್ಲಿ ಇದ್ದುದು ಬರಿಯ ಸಖಿಯರ, ವಿಲಾಸಿನಿಯರ ಸಭೆ ಎಂದು ಅವನಿಗೆ ಗೊತ್ತು. ಇಂಥ ಕಡೆ ವಿಜೃಂಭಿಸುವ ವ್ಯಕ್ತಿತ್ವ ಇವನದು. ತೆಲುಗಿನಲ್ಲಿ “ಚೆಟ್ಟು ಲೇನಿ ಚೋಟ ಆಮುದಂ ಚೆಟ್ಟೇ ಮಹಾವೃಕ್ಷಮು” ಎಂಬ ಸಾಮತಿಯಿದೆ ಅಂದರೆ “ಭಾರಿಯ ವೃಕ್ಷಗಳಿಲ್ಲದ ಜಾಗದಲ್ಲಿ ಹರಳಿನ ಗಿಡವೇ ಮಹಾವೃಕ್ಷ” ಎಂದರ್ಥ. ವಾಕ್ ಚಾಪಲ್ಯ ಉಳ್ಳವರು ವಾಸ್ತವದ ರೇಖೆಗಳನ್ನು ದಾಟಿ ವಿಜೃಂಭಿಸುತ್ತಾರೆ. ದೊಡ್ಡ ದೊಡ್ಡ ಮಾತಿನ ಬಲೂನು ಹಿಗ್ಗಿದಾಗ್ಗೆಲ್ಲ ತಾಕಿಸು ನಿಜದ ಸೂಜಿ ಮೊನೆ" ಎಂದು ಅಡಿಗರು ಹೇಳುವಾಗ ಈ ಪ್ರಸಂಗ ಅವರ ಮನಸ್ಸಿನಲ್ಲಿದ್ದಿರಬಹುದು.
- ಮೂಲಭಾರತದಲ್ಲಿಯೂ ಉತ್ತರನ ಆರ್ಭಟವಿದೆ ಇಲ್ಲವೆಂದಲ್ಲ. ಆದರೆ ಕುಮಾರವ್ಯಾಸನ ಪ್ರಮಾಣದಲಿಲ್ಲ ಕೇವಲ ಏಳು ಶ್ಲೋಕಗಳಲ್ಲ ಅವುಗಳಲ್ಲೂ ಉತ್ತರನು ಕೊಚ್ಚಿ ಕೊಂಡಿರುವುದು. ಮೂರೇ ಶ್ಲೋಕ.
ಪೃಶ್ಯೇಯುರದ್ಯಮೇ ವೀರ್ಯಂ ಕುರವಸ್ತೇ ಸಮಾಗತಾ:
ಕಿಂನು ಪಾರ್ಥೋರ್ಜುನ: ಸಾಕ್ಷಾತ್ ಅಯಮಸ್ಮನ್ ಪ್ರಬಾಧತೇ
“ಕೌರವನು ಇದೇನು ಅರ್ಜುನನೇ ಬಂದು ನಮ್ಮನ್ನು ಪೀಡಿಸುತ್ತಿದ್ದಾನೆ ಎಂದು ಕೊಳ್ಳುವ ಹಾಗೆ ಪರಾಕ್ರಮ ತೋರುತ್ತೇನೆ” ಎಂದು ಮೂಲದಲ್ಲೂ ಉತ್ತರನು ಹೆಂಗಸರ ಇದಿರಲ್ಲಿ ಹೇಳಿದ್ದಾನೆ. - ಇನ್ನೊಂದು ಸಂಗತಿ. ಉತ್ತರನು ನಿಜವಾಗಿ ಬಾಲಕನೆ ? ಅವನಿಗೆ ಸಾಕಷ್ಟು ವಯಸ್ಸಾಗಿತ್ತು. ವಿರಾಟನು ಪಾಂಚಾಲೀ ಸ್ವಯಂವರಕ್ಕೆ ಮಕ್ಕಳಾದ ಶಂಖ ಉತ್ತರರೊಂದಿಗೆ ಬಂದಿದ್ದನೆಂದು ಭಾರತ ಹೇಳುತ್ತದೆ. “ವಿರಾಟಸ್ಸಹ ಪುತ್ರಾಭ್ಯಾಂ ಶಂಖೇನೈವೋತ್ತರೇಣಚ” ಆದಿಪರ್ವ 186
ಮೂಲ ...{Loading}...
ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನಗೆ
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ ॥13॥
೦೧೪ ಎನಿತು ಬಲ ...{Loading}...
ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ನಿರೀಕ್ಷೆಗೆ ತಕ್ಕಂತೆ ಅಲ್ಲಿದ್ದ ಹೆಂಗಸರ ಗುಂಪು ಅವನನ್ನು ಉಬ್ಬಿಸಿರುವುದನ್ನು ನೋಡಿ. “ಅಯ್ಯ ಉತ್ತರಕುಮಾರ ! ಶತ್ರು ಸೇನೆ ಎಷ್ಟು ಘನವಾಗಿದ್ದರೆ ಏನಂತೆ ! ನಿನಗೆ ಅದೇನೂ ದೊಡ್ಡದಲ್ಲವಲ್ಲ ! ಅಲ್ಲ, ಸೂರ್ಯನ ಎದುರಿಗೆ ಹೋರಾಟಕ್ಕೆ ನಿಲ್ಲಲು ಕತ್ತಲೆಯ ಗುಂಪಿಗೆ ಧೈರ್ಯವಿದೆಯೇ ? ಆ ಕೌರವರ ಬಿಂಕವು ಗೊಲ್ಲರನ್ನು ತಿವಿಯುವಷ್ಟಕ್ಕೇ ನಿಂತರೆ ಸಾಕು (ಮುಂದುವರಿದರೆ ನಿನ್ನಿಂದ ಕೌರವರಿಗೆ ಕೇಡು ಎಂಬ ಭಾವ). ನೀನು ಎದ್ದು ನಿಲ್ಲು. ದೊರೆ ! ಕೌರವರ ಸೇನೆಯ ಮುಂದೆ ನಿನ್ನ ಕೈಗುಣವನ್ನು ಪ್ರದರ್ಶಿಸು”
ಪದಾರ್ಥ (ಕ.ಗ.ಪ)
ಗಹನವೆ-ದೊಡ್ಡದೆ ? ದಿನಪ-ಸೂರ್ಯ, ತಮದಗಾವಳಿ-ಕತ್ತಲೆಯ ಸಮೂಹ (ಗಾವಳಿ-ಗುಂಪು, ಅಬ್ಬರ) ಬಿನುಗು-ಅಲ್ಪ, ಮೊನೆ-ಯುದ್ಧ, ಥಟ್ಟು-ಸೇನೆ
ಟಿಪ್ಪನೀ (ಕ.ಗ.ಪ)
ಗೊಲ್ಲನಿಗೆ ಕೂಡ ಉತ್ತರನು ಹೇಡಿ ಎಂಬುದು ಗೊತ್ತಿರುವಾಗ ಅರಮನೆಯ ಹೆಂಗಸರಿಗೆ ಗೊತ್ತಾಗದೆ ಇದ್ದೀತೆ ? ಆದರೂ ಅವರು ಅವನನ್ನು ಉಬ್ಬಿಸಿ ಸಂತೋಷಪಟ್ಟುಕೊಳ್ಳುತ್ತಿದ್ದರೆಂದು ಕಾಣುತ್ತದೆ. ಅಂತಃಪುರದವರ ಮುಂದೆ ಕೊಚ್ಚಿಕೊಂಡರೆ ಪ್ರತಿಯಾಗಿ ಏನೂ ಹೇಳುವ ಸ್ವಾತಂತ್ರ್ಯ ಅವರಿಗಿಲ್ಲ ಎಂಬುದು ಗೊತ್ತಾಗಿ ಉತ್ತರ ಹೀಗಾಡಿದ್ದಾನೆ.
ಮೂಲ ...{Loading}...
ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ ॥14॥
೦೧೫ ಎನ್ದಡುಬ್ಬರಿಸಿದನು ತಾ ...{Loading}...
ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲ ಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹೆಂಗಸರು ಉತ್ತರನನ್ನು ಮಹಾವೀರ ಎಂದು ಉಬ್ಬಿಸಿದರೆ ಉತ್ತರನು ಅವರ ಮಾತನ್ನು ನಿಜವೆಂದೇ ತಿಳಿದು ಬೀಗಿದ. ತಾನೂ ಕಲಿ ಎಂದು ಭಾವಿಸಿಕೊಂಡ. ಮೀಸೆಯನ್ನು ತಿರುಗಿಸುತ್ತ ಮುಗುಳುನಗುತ್ತ ಸಂತೋಷದಲ್ಲಿ ಮೈಮರೆದ. ಅವನಿಗೆ ರೋಮಾಂಚನವಾಗಿತ್ತು. ಅಕ್ಕಪಕ್ಕದ ಸುಂದರಿಯರನ್ನು ನೋಡಿದ. ಪ್ರೀತಿಯಿಂದಲೇ ತನ್ನ ಮಹಾಪೌರುಷದ ಪಕ್ವ ಸ್ಥಿತಿಯನ್ನು ಹೇಳಿಕೊಳ್ಳಲಾರಂಭಿಸಿದ.
ಪದಾರ್ಥ (ಕ.ಗ.ಪ)
ಉಬ್ಬರಿಸು-ಬೀಗು, ಸಂದಣಿಸಿ-ಉಂಟಾಗಿ, ದಟ್ಟವಾಗಿ, ಇಂದುಮುಖಿ-ಹೆಂಗಸು, ಪರಿಣತೆ-ಪಕ್ವತೆ
ಮೂಲ ...{Loading}...
ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲ ಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ ॥15॥
೦೧೬ ಅಹುದಹುದು ತಪ್ಪೇನು ...{Loading}...
ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು ಹೇಳಿದ ಮಾತು ಇದು. “ಹೌದು ಹೌದು ತಪ್ಪೇನು ? ಆ ಕೌರವನು ಮೋಸದ ಜೂಜನ್ನು ಆಡಿ ಕುತಂತ್ರದಿಂದ ಪಾಂಡವರನ್ನು ಸೋಲಿಸಿ ರಾಜ್ಯವನ್ನು ಕಿತ್ತುಕೊಂಡ ಹಾಗೆ ನನ್ನನ್ನು ಸುಲಭವಾಗಿ ಬೊಗ್ಗು ಬಡಿಯಲೆಂದು ಬಂದು ನನ್ನನ್ನು ಕೆಣಕಿದ್ದಾನೆಯೆ ? ನಾನು ಈಗ ಹೋಗಿ ಸಾಹಸದಿಂದ ಲೀಲಾಜಾಲವಾಗಿ ಹಸುಗಳನ್ನು ಹಿಂದಕ್ಕೆ ಹೊಡೆಸಿಕೊಂಡು ಬರುತ್ತೇನೆ. ಅನಂತರ ಕೌರವನನ್ನು ಅಷ್ಟಕ್ಕೇ ಬಿಡುತ್ತೇನೆಯೆ ? ಅವನು ರಾಜ್ಯವನ್ನು ಆಳಲು ನಾನು ಬಿಡುವುದಿಲ್ಲ. ಹಸ್ತಿನಾಪುರದ ಮೇಲೆಯೇ ಧಾಳಿ ಮಾಡುತ್ತೇನೆ”
ಪದಾರ್ಥ (ಕ.ಗ.ಪ)
ಮಹಿ-ರಾಜ್ಯ, ಸಹಸ-ಸಾಹಸ (ಪ್ರಾಸ ಸೌಕರ್ಯಕ್ಕಾಗಿ ಬದಲಾವಣೆ) ಮರಳಿಚಿ-ಮರಳಿಸಿ, ನಿರ್ವಹಿಸು-ರಾಜ್ಯವನ್ನು ಆಳು
ಮೂಲ ...{Loading}...
ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ॥16॥
೦೧೭ ಹಿಡಿದು ರಾಜ್ಯವ ...{Loading}...
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನ ಪೌರುಷದ ಮಾತುಗಳು ಮುಂದುವರಿದಿವೆ.
“ಅಲ್ಲ ! ಧರ್ಮರಾಯನನ್ನು ಹಿಡಿದು ಜೂಜಿನಲ್ಲಿ ರಾಜ್ಯವನ್ನು ಕಿತ್ತುಕೊಂಡು ಪಾಪ ಹೆಂಗಸಾದ ಆ ದ್ರೌಪದಿಗೆ ಅವಮಾನ ಮಾಡಿ ಪಾಂಡವರನ್ನು ರಾಜ್ಯದಿಂದ ಓಡಿಸಿ ಕೊಬ್ಬಿದ ತನ್ನ ಸಾಹಸವನ್ನು ನನ್ನ ಮೇಲೆ ತೋರಿಸುತ್ತಿದ್ದಾನೇನು ಆ ಕೌರವ ? ನನ್ನನ್ನು ಪಾಪ ಬಡಪಾಯಿ ಧರ್ಮರಾಯ ಎಂದು ಭಾವಿಸಿದ್ದಾನೆಯೆ ? ನಾನು ಕೆರಳಿ ನಿಂತರೆ ಕೌರವನ ಕೀರ್ತಿಯನ್ನೇ ಅಳಿಸಿಹಾಕಬಲ್ಲೆ. ಪಾಪ ಇದು ಕೌರವನಿಗೆ ತಿಳಿಯದು ಎಂದು ಆ ಸುಕುಮಾರ ಸಿಟ್ಟಿನಿಂದ ನುಡಿದ.
ಪದಾರ್ಥ (ಕ.ಗ.ಪ)
ಹೊರವಡಿಸು-ಹೊರಗೆ ಓಡಿಸು, ಹೊರಡಿಸು, ಕಡುಗು-ಕೆರಳು, ಅರಿ-ತಿಳಿ
ಟಿಪ್ಪನೀ (ಕ.ಗ.ಪ)
ಸುಕುಮಾರ ಎಂದು ಉತ್ತರನನ್ನು ಬಣ್ಣಿಸಿರುವುದು ಕುಮಾರವ್ಯಾಸನ ಹಾಸ್ಯ ಪ್ರಜ್ಞೆಯನ್ನು ಪ್ರಕಟಿಸುವ ವರ್ಣನೆಯಾಗಿದೆ. ಇಂಥ ಜಂಬದ ಮಾತುಗಳನ್ನು ಹೆಬ್ಬಾಗಿಲಿನ ಅಬ್ಬರ ಎಂದು ಜನಪದರು ಹೇಳುತ್ತಾರೆ. “ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹುಕ್ಕೇರಿಯ ತನಕ ಪಂಜು ಹಿಡಿಸುತ್ತೇನೆ” ಎಂಬ ಗ್ರಾಮೀಣ ಭಾಷೆಗೆ ಇವನ ಪರಾಕ್ರಮವನ್ನು ಹೋಲಿಸಬಹುದು.
ಉತ್ತರನ ಈಗಿನ ಭಾವಸ್ಥಿತಿಯಲ್ಲಿ ಧರ್ಮರಾಯನು ಬಡಯುಧಿಷ್ಠಿರನಾಗುತ್ತಾನೆ ! ಮುಂದಿನ ಪದ್ಯದಲ್ಲಿ ಪಾಂಡವರೆಲ್ಲ ಬಡಪಾಂಡವರಾಗುತ್ತಾರೆ.
ಮೂಲ ...{Loading}...
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ॥17॥
೦೧೮ ತನಗೆ ಬಡ ...{Loading}...
ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನ ಪೌರುಷದ ಮಾತು ಮುಂದುವರಿದಿದೆ. “ಪಾಪ ! ಆ ಕೌರವನಿಗೆ ಬಡಪಾಂಡವರನ್ನು ದೋಚಿದೆನೆಂಬ ಮನಸ್ಸಿನ ಗರ್ವದ ಕೊಬ್ಬು ಹೆಚ್ಚಿರುವಂತೆ ಕಾಣುತ್ತದೆ. ಅದೇ ಯಮನ ಮನೆಯನ್ನು ಆಳುವಂತೆ ಪ್ರೇರಿಸುತ್ತದೆ. ಅಂದರೆ ಕೌರವನ ಮೃತ್ಯುವನ್ನು ಸೂಚಿಸುತ್ತದೆ. ಅಲ್ಲದಿದ್ದರೆ (ಅಂದರೆ ಕೌರವನು ಸಮಸ್ಥಿತಿಯಲ್ಲಿ ಇದ್ದಿದ್ದರೆ) ನನ್ನಂಥ ವೀರನ ಶತ್ರುತ್ವವನ್ನು ನೆನೆದೂ ಕೌರವನು ರಾಜ್ಯವನ್ನು ಆಳುತ್ತಿದ್ದನೇನು ? ಹಾ ! ಮಹಾದೇವ!” ಎನ್ನುತ್ತ ಉತ್ತರನು ಹೆಂಗಸರ ಮುಂದೆ ತನ್ನ ಬಡಾಯಿ ಕೊಚ್ಚಿಕೊಂಡ.
ಪದಾರ್ಥ (ಕ.ಗ.ಪ)
ತೆವರು-ದೋಚು, ಸುಲಿ, ಮೇದಿನಿ-ಭೂಮಿ, ರಾಜ್ಯ, ಕಾಲನ ಮನೆಯನಾಳ್ವಿಪುದು-ಯಮನ ಮನೆಯ ಮೇಲೆ ಅಧಿಕಾರ ಮಾಡುತ್ತದೆ (ಅಂದರೆ ಸಾಯಿಸುತ್ತದೆ)
ಮೂಲ ...{Loading}...
ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ॥18॥
೦೧೯ ಜವನ ಮೀಸೆಯ ...{Loading}...
ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನ ಪ್ರತಾಪವಾಣಿ ಮುಂದುವರಿದಿದೆ. “ಆಹಾ! ಆ ಕೌರವನು ನನ್ನ ಮೇಲೆ ದಾಳಿ ಇಡಲು ಬಂದದ್ದು ಯಮನ ಮೀಸೆಯನ್ನು ಮುಟ್ಟಲು ಬಂದಂತಾಗಿದೆಯಲ್ಲವೆ ? ಭೈರವನ ದಾಡೆಯನ್ನು ಮುಟ್ಟಿನೋಡಲು ಬಂದಂತಾಗಿದೆಯಲ್ಲವೆ ? ಮೃತ್ಯುದೇವತೆಯ ಸೆರಗನ್ನು ಸೆಳೆದಂತಾಗಿದೆಯಲ್ಲವೆ ? ಸಿಂಹವನ್ನು ಕೆಣಕಿದಂತಾಗಿದೆ ಅಲ್ಲವೆ ? ಅಯ್ಯೋ ! ಆ ಕೌರವನಿಗೆ ಯುದ್ಧದ ಹುಚ್ಚು” ಎಂದು ಉತ್ತರನು ಆ ಸುಂದರಿಯರ ಮುಖ ನೋಡುತ್ತ ಕೊಚ್ಚಿಕೊಳ್ಳುತ್ತಿದ್ದನು.
ಪದಾರ್ಥ (ಕ.ಗ.ಪ)
ಜವ-ಯಮ, ದಾಡೆ-ಹಲ್ಲು, ಮೇಲುದು-ಸೆರಗು, ಕೇಸರಿ-ಸಿಂಹ, ಬವರ-ಯುದ್ಧ
ಮೂಲ ...{Loading}...
ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು ॥19॥
೦೨೦ ಆರೊಡನೆ ಕಾದುವೆನು ...{Loading}...
ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು ಹೇಳಿಕೊಳ್ಳುತ್ತಾನೆ : “ನಾನು ಯಾರೊಡನೆ ಹೋರಾಡಲಿ ? (ಕೌರವನ ಸೇನೆಯಲ್ಲಿ ಅಂಥ ವೀರರು ಯಾರಿದ್ದಾರೆ ? ಎಂಬ ಧ್ವನಿ) ಕೆಲವರು ಬ್ರಾಹ್ಮಣರು (ದ್ರೋಣ, ಅಶ್ವತ್ಥಾಮ, ಕೃಪ); ಕೆಲವರು ಯಮನ ಪಕ್ಕದ ಊರಿನವರು (ಭೀಷ್ಮನಂಥವರು) ಕೆಲವರು ಹೀನಕುಲದಲ್ಲಿ ಹುಟ್ಟಿ ಬಂದವರು (ಕರ್ಣ). ನಿಜವಾದ ವೀರರೆಂದರೆ ಇವರೇ ಅಂತೆ ! ಇವರನ್ನು ಬಿಟ್ಟು ಬೇರೆ ಯಾರ ಹೆಸರು ಅವರ ಪಕ್ಷದಲ್ಲಿದೆ ಹೇಳಿ ?” ಎಂದು ಉತ್ತರನು ನೆಣಗೊಬ್ಬಿನಲ್ಲಿ ಹೆಂಗಸರ ಎದುರಿಗೆ ಬಡಾಯಿ ತೋರಿದ.
ಪದಾರ್ಥ (ಕ.ಗ.ಪ)
ಅಂತಕನ ನೆರೆಯೂರವರು-ಈಗಲೋ ಆಗಲೋ ಸಾಯುವಷ್ಟು ವಯಸ್ಸಾದವರು, ನೆಣಗೊಬ್ಬು- ನೆಣಕೊಬ್ಬು, ದುರಹಂಕಾರ, ಮೇದಸ್ಸು, ಶಕ್ತಿ
ಟಿಪ್ಪನೀ (ಕ.ಗ.ಪ)
ಇಲ್ಲಿ ಉತ್ತರನ ಬಡಾಯಿ ಮಿತಿಮೀರಿದೆ. ಕುಮಾರವ್ಯಾಸನ ಹಾಸ್ಯಪ್ರಜ್ಞೆಯ ಗಟ್ಟಿ ಎಳೆಗಳನ್ನು ಇಲ್ಲಿ ಕಾಣಬಹುದು. ಈ ಸುಳ್ಳಿನ ಕಂತೆಯಲ್ಲೂ ಉತ್ತರನಿಗೆ ಕೌರವನ ಸೇನಾ ನಾಯಕರ ಬಗೆಗೆ ಒಳ್ಳೆಯ ತಿಳಿವಳಿಕೆ ಇತ್ತು ಎಂಬುದೇ ಒಂದು ಸಮಾಧಾನದ ಅಂಶವಾಗಿದೆ. ಕಂಠ-ದೇಹಗಳ ನಡುವಣ ವೈರುಧ್ಯವೇ ಇಲ್ಲಿ ಹಾಸ್ಯಕ್ಕೆ ಪ್ರೇರಕವಾಗಿದೆ.
ಮೂಲ ...{Loading}...
ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ ॥20॥
೦೨೧ ಪೊಡವಿಪತಿಗಳು ಬನ್ದು ...{Loading}...
ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕುವನಾವನೆಂದನು ಖಂಡೆಯವ ಜಡಿದು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ರಾಜರುಗಳಾಗಿ ಬಂದು ದನಕರುಗಳನ್ನು ಹಿಡಿಯುವ ಪದ್ಧತಿ ಲೋಕದಲ್ಲಿ ಇದೆಯೆ ? ಯಾಕೋ ಕೌರವನಿಗೆ ಅಧಮರ, ಬಡ ಮನಸ್ಸಿನವರ ಪರಾಕ್ರಮ ತುಂಬಿಕೊಂಡಿರುವಂತೆ ಕಾಣುತ್ತದೆ. ಕೊನೆಗೆ ಅವನಿಗೆ ಕೆಟ್ಟ ಹೆಸರು ಮಾತ್ರ ಉಳಿಯುತ್ತದೆ. ನಾನೇನೂ ಅವನು ಗೋಸಂಪತ್ತನ್ನು ಕದ್ದುಕೊಂಡು ಹೋಗಲು ಬಿಡುವುದಿಲ್ಲ. ನನ್ನನ್ನು ತಡೆದು ಯಾವನು ತಾನೆ ಬದುಕಬಲ್ಲ ?” ಎಂದು ಹೇಳಿದ ಉತ್ತರನು ಕೈಯಲ್ಲಿದ್ದ ಕತ್ತಿಯನ್ನು ಬಡಿದ.
ಪದಾರ್ಥ (ಕ.ಗ.ಪ)
ಪೊಡವಿಪತಿ-ರಾಜ, ಮನ್ನೆಯ-ಮಾನ್ಯ, ದುರಿಯಶ-ಅಪಕೀರ್ತಿ, ಗೋಧನ-ಗೋಸಂಪತ್ತು, ತೊಡಕು-ಎದುರು ಹಾಕಿಕೊ, ಖಂಡೆಯ-ಕತ್ತಿ, ಜಡಿದು-ಬಾರಿಸು ಕುಟ್ಟು, ಝಳಪಿಸು
ಟಿಪ್ಪನೀ (ಕ.ಗ.ಪ)
ಪಂಪಭಾರತದಲ್ಲೂ ಉತ್ತರನು ಹೀಗೆಯೇ ಕೊಚ್ಚಿಕೊಳ್ಳುತ್ತಾನೆ ?
“ಎನ್ನಿದಿರ್ಗೆ ರಾವಣಕೋಟಿಯುಂ ಆಂತುಂ ಏಂ ? ಗೆಲಲ್ ನೆಱಿಗುಮೇ ? ತನ್ನಿಮಿನ್ನೆನಗೆ ಸಾರಥಿಯಪ್ಪನನೀಗಳ್” (ನನ್ನ ಎದುರಿಗೆ ಕೋಟಿ ರಾವಣರು ಬಂದರೂ ನನ್ನನ್ನು ಗೆಲ್ಲಲು ಸಾಧ್ಯವಿಲ್ಲ. ಸಾರಥಿಯಾಗುವವನನ್ನು ಕರೆತನ್ನಿರಿ…”) 8-96
ಆದರೆ ಪಂಪನು ಉತ್ತರಕುಮಾರನ ಪ್ರಕರಣವನ್ನು ಹಾಸ್ಯ ಪ್ರಸಂಗವಾಗಿ ಮಾಡಿಲ್ಲ.
ಮೂಲ ...{Loading}...
ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕುವನಾವನೆಂದನು ಖಂಡೆಯವ ಜಡಿದು ॥21॥
೦೨೨ ಖಳನ ಮುರಿವೆನು ...{Loading}...
ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಮುಂದುವರಿಸಿ ಹೇಳಿದ : “ನಾನು ಆ ದುಷ್ಟ ಕೌರವನನ್ನು ಭಂಗಿಸುತ್ತೇನೆ. ಅನಂತರ ಹಸ್ತಿನಾಪುರದೊಳಗೆ ವಾಸ್ತವ್ಯ ಹೂಡುತ್ತೇನೆ. ಕೌರವರ ಸೇನೆಯನ್ನು ಧೂಳಿಪಟಮಾಡಿ ಇಲ್ಲವೆನ್ನಿಸಿ ಬಿಡುತ್ತೇನೆ. ನಮ್ಮ ಸೇನೆಗೆ ವಿಜಯವನ್ನು ತಂದುಕೊಡುತ್ತೇನೆ” ಆ ಕೋಮಲೆಯರ ಎದುರಿನಲ್ಲಿ ಉತ್ತರನು ತನ್ನ ಬಾಯಿಗೆ ಬಂದಂತೆ ಹರಟುತ್ತಿದ್ದ. ಅವನಿಗೆ ಬೇಕು ಬೇಡ ಎನ್ನುವವರು ಕೂಡ ಅಲ್ಲಿರಲಿಲ್ಲ. (ತಡೆಯೇ ಇಲ್ಲದೆ ಅವನ ಹರಟೆ ಸಾಗಿತ್ತು ಎಂದರ್ಥ).
ಪದಾರ್ಥ (ಕ.ಗ.ಪ)
ಮುರಿ-ಭಂಗಿಸು, ಸೋಲಿಸು, ಠಾಣಾಂತರ-ಪಾಳೆಯ, ತಹೆನು-ತರುತ್ತೇನೆ, ಗಳಹು-ಹರಟು
ಟಿಪ್ಪನೀ (ಕ.ಗ.ಪ)
ಉತ್ತರನ ಮಾತೆಲ್ಲ ಶುದ್ಧ ಸುಳ್ಳು ಎಂದು ಕವಿಯೇ ಸ್ಪಷ್ಟವಾಗಿ ಹೇಳುತ್ತಿದ್ದಾನೆ.
ಮೂಲ ...{Loading}...
ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ ॥22॥
೦೨೩ ಅರಿಯೆನೇ ಗಾಙ್ಗೇಯನನು ...{Loading}...
ಅರಿಯೆನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಹಾ ! ಆ ಭೀಷ್ಮ ನನಗೇನು ಗೊತ್ತಿಲ್ಲವೆ ? ಆ ದ್ರೋಣ ನನಗೆ ತಿಳಿಯದವನೇನು ? ಕುಲದಲ್ಲಿ ಕೊರತೆಯುಳ್ಳವನಾದ ಆ ಕರ್ಣ ಎನ್ನುವವನು ನನ್ನ ಸಮಾನನಾದ ವೀರನೇನು ? ಅಲ್ಲ. ಈ ಕೌರವರು ಬರಿಯ ಬಯಲ ಆಡಂಬರದಿಂದ (ಒಣ ಪ್ರತಾಪದಿಂದ) ಬರಿಯ ದನಗಳನ್ನು ಹಿಡಿದುಕೊಂಡರೆ ಅವರುಗಳ ಹೆಂಡತಿಯರನ್ನು ಸೆರೆಹಿಡಿದು ತರದೆ ಬಿಡುವುದಿಲ್ಲ” ಎಂದು ನಾರಿಯರ ಮುಂದೆ ಉತ್ತರ ಹೇಳಿಕೊಂಡ.
ಪದಾರ್ಥ (ಕ.ಗ.ಪ)
ಗಾಂಗೇಯ-ಗಂಗಾಪುತ್ರ, ಭೀಷ್ಮ, ಬಯಲಾಡಂಬರ-ಪ್ರದರ್ಶನದ ವೈಭವ, ಮಾಣು-ಬಿಡು
ಟಿಪ್ಪನೀ (ಕ.ಗ.ಪ)
- ಉಚ್ಚಂಗಿ ಪಾಂಡ್ಯರ ಒಂದು ಶಾಸನವು ಹೇಡಿಯ ಬಗೆಗೆ ಆಕ್ಷೇಪಿಸಿ ವೀರನನ್ನು ಮೆಚ್ಚುವ ಗುಣ ತೋರುತ್ತದೆ “ವನಿತಾನೀಕದ ಮುಂದೆ ಪೊಟ್ಟಳಿಸಿ, ಗೇಣಂ ಕಿರ್ತು ತೂೞ್ದಟ್ಟಿ ಗಿಱೆನಲೀಡಾಡಿ ಕುರುಳ್ಚಿ ಕುಪ್ಪಳಿಸಿ ಮುಂತು ಪಿಂತುಮಂ ನೋಡಿ ಭೋಂಕೆನೆ ಸಿಂಹಧ್ವನಿಯಿಂದೆ ಗರ್ಜಿಪ ಸಭಾಶೂರರ್ಭರಂ ಗೆಯ್ದುದಯಾದಿತ್ಯಂಗೆ ಬಯಲ್ವರ್ಪರೊಳರೇ ವಿಶ್ವಂಭರಾ ಚಕ್ರದೊಳ್ ?
- “ಕಾಣದವನಿಗೆ ಕೋಣೆಯೇ ಪರ್ವತ” ಎಂಬ ಗಾದೆ ಈ ಉತ್ತರನ ವಿಷಯಕ್ಕೆ ಚೆನ್ನಾಗಿ ಅನ್ವಯಿಸುವಂತಿದೆ.
ಮೂಲ ...{Loading}...
ಅರಿಯೆನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ ॥23॥
೦೨೪ ನುಡಿದು ಫಲವೇನಿನ್ನು ...{Loading}...
ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದೆನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಒಂದು ಕೊರತೆ ಉತ್ತರನಿಗೆ ಕಾಣಿಸುತ್ತದೆ. “ಹೆಚ್ಚು ಹೇಳಿ ಏನು ಪ್ರಯೋಜನ ? ನಿನ್ನಿನ ಯುದ್ಧದಲ್ಲಿ ಸಾರಥಿ ಸತ್ತು ಹೋದ. ಅದರಿಂದ ನಾನು ಶಕ್ತಿ ಕುಂದಿದವನಾಗಿದ್ದೇನೆ. ಶಿವಶಿವಾ ? ಇಂದು ನನ್ನ ಕೈಚಳಕ ಮತ್ತು ಮನಶ್ಶಕ್ತಿಗಳಿಗೆ ಹೊಂದಿಕೊಳ್ಳುವ ಒಬ್ಬ ಸಾರಥಿ ಸಿಕ್ಕಿದರೆ ಕೌರವನ ಸೇನೆಗೆ ಸರಿಯಾದ ಹಬ್ಬ ಮಾಡುತ್ತೇನೆ. ನನ್ನ ಕೈಗುಣ ಏನೆಂಬುದನ್ನು ಕೌರವನಿಗೆ ತೋರಿಸುತ್ತೇನೆ….”
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಗಡಣಿಸು-ಜೊತೆಗೆ ಬಾ, ಹೊಂದಿಕೊ, ಉಡುಹ-ಶಕ್ತಿ ಕುಂದಿದವನು, ಅಂಗಹೀನ.
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಸ್ಪಷ್ಟವಿವರವಿದೆ.
“ಅಷ್ಟಾವಿಂಶತಿ ರಾತ್ರಂವಾ ಮಾಸಚಿವಾ ನೂನಮಂತತಃ
ತತ್ರಮೇ ಸಾರಥಿರ್ಹತಃ….”
“ಇಪ್ಪತ್ತೆಂಟು ದಿನಕ್ಕೋ ಒಂದು ತಿಂಗಳ ಹಿಂದೆಯೋ ನಡೆದ ಯುದ್ಧದಲ್ಲಿ ನನ್ನ ಸಾರಥಿ ಸತ್ತ”.
ಮೂಲ ...{Loading}...
ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದೆನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ॥24॥
೦೨೫ ಸಾರಥಿಯ ಶಿವ ...{Loading}...
ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಶ್ವರನು ನನಗೆ ಒಬ್ಬ ಸಾರಥಿಯನ್ನು ಕರುಣಿಸಬಾರದೆ ; ಹಾಗೆ ಕರುಣಿಸಿದರೆ ರಣಮಾರಿ ತಿಂದು ಉಬ್ಬಸ ಪಡುತ್ತಾಳೆ. ಯಮನ ನಗರಿ ತುಂಬಿಕೊಳ್ಳುತ್ತದೆ. ರಣ ಪಿಶಾಚಿಗಳಿಗೆ ಹೊಟ್ಟೆಯ ಪಾಡು ನೀಗುತ್ತದೆ. ಮೃತ ಯೋಧರ ದೋರೆಗರುಳನ್ನು ತಿಂದು ರಾಕ್ಷಸಿಯರಿಗೆ ಹೊಟ್ಟೆ ಉಬ್ಬುತ್ತದೆ. ಭೂರಿಭೇತಾಳಗಳಿಗೆ ಹಬ್ಬವಾಗುತ್ತದೆ ಹಾಗೆ ಮಾಡದೆ ಯುದ್ಧವು ಸುಮ್ಮನೆ ಜರುಗುವುದಿಲ್ಲ” ಎಂದು ಉತ್ತರ ಹೇಳಿದ.
ಪದಾರ್ಥ (ಕ.ಗ.ಪ)
ಉಬ್ಬಸ-ಉಸಿರುಕಟ್ಟು, ದೊಳ್ಳು-ಹೊಟ್ಟೆ, ಏರು-ಉಬ್ಬು
ಮೂಲ ...{Loading}...
ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ॥25॥
೦೨೬ ಕೇಳಿದನು ಕಲಿಪಾರ್ಥನೀತನ ...{Loading}...
ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿದ್ದ ಬೃಹನ್ನಳೆಯ ವೇಷದ ಅರ್ಜುನನು ಇವನ ಬಾಲ ಭಾಷೆಗಳನ್ನೆಲ್ಲ ಕೇಳಿಸಿಕೊಂಡ. ಸಾರಥಿಯ ಕೊರತೆಯ ವಿಚಾರ ಬಂದಾಗ ದ್ರೌಪದಿಯ ಬಳಿಗೆ ಹೋಗಿ ಏಕಾಂತದಲ್ಲಿ ಮಾತಾಡಿದ : “ದ್ರೌಪದಿ ! ನಮ್ಮ ಅಜ್ಞಾತವಾಸದ ಅವಧಿ ಮುಗಿದಿದೆ. ನಾವೀಗ ನಮ್ಮ ಸಾಮ್ರಾಜ್ಯವನ್ನು ಹಿಂದಕ್ಕೆ ಪಡೆಯಬೇಕು. ಈ ಕೌರವ ಸೇನೆ ನಮ್ಮನ್ನು ಪತ್ತೆ ಹಚ್ಚುವುದಕ್ಕಾಗಿಯೇ ಬಂದಿದೆ” ಎಂದು ಪಿಸುಗುಟ್ಟಿದ.
ಪದಾರ್ಥ (ಕ.ಗ.ಪ)
ಎಕ್ಕಟಿ-(ಒಬ್ಬಳನ್ನೇ ಕರೆದು) ಒಂಟಿಯಾಗಿ, ಏಕಾಂತದಲ್ಲಿ, ಮತ-ಸರಿ, ಸಮರ್ಥನೀಯ
ಟಿಪ್ಪನೀ (ಕ.ಗ.ಪ)
ಅರ್ಜುನ - ದೇವೇಂದ್ರನ ಸತ್ವದಿಂದ ಕುಂತಿಯಲ್ಲಿ ಹುಟ್ಟಿದ ಅರ್ಜುನನಿಗೆ ಪಾರ್ಥ, ಕೌಂತೇಯ, ಗಾಂಡಿವಿ, ಸವ್ಯಸಾಚಿ, ಕೃಷ್ಣ ಕಿರೀಟಿ, ವಿಜಯ ಮೊದಲಾಗಿ ಹಲವಾರು ನಾಮಗಳಿವೆ. ದೇಹಶಕ್ತಿ, ತಪಶ್ಯಕ್ತಿ, ಮನೋಶ್ಯಕ್ತಿಗಳನ್ನು ಅದ್ವಿತೀಯನಾದ ಅರ್ಜುನ ಲಕ್ಷ್ಯ ಸಾಧನೆಯಲ್ಲಿ ಎಷ್ಟು ಎತ್ತರದವನು ಎಂಬುದಕ್ಕೆ ಅವನು ದ್ರೋಣರಿಂದ ಕತ್ತಲಲ್ಲಿ ಗುರಿಯಿಡುವ ವಿದ್ಯೆ ಕಲಿಯಲು ಮತ್ತು ಶಿವನಿಂದ ಪಾಶುಪತಾಸ್ತ್ರ ಪಡೆಯಲು ಪಟ್ಟ ಶ್ರಮಗಳೇ ಸಾಕ್ಷಿಯಾಗಿವೆ. ಸೋಲನ್ನೇ ಕಂಡರಿಯದ ಈ ವೀರನಿಗೆ ‘ವಿಜಯ’ ಎಂಬ ಹೆಸರು ಅನ್ವರ್ಥವಾಗಿದೆ. ಚಿತ್ರಾಂಗದ, ಅಂಗಾಪರ್ಣ, ದೇವೇಂದ್ರ ಮತ್ತು ಕೌರವ ಪಡೆಯ ವೀರರುಗಳೆಲ್ಲ ಇವನ ಬಾಣಗಳ ರುಚಿ ನೋಡಿದವರೇ ಆಗಿದ್ದಾರೆ. ಆಚಾರ್ಯ ದ್ರೋಣರನ್ನು ಮೊಸಳೆ ಹಿಡಿದಾಗ ಪ್ರಾಣಭಯವನ್ನು ತೊರೆದು ಅವರನ್ನು ಬದುಕಿಕೊಂಡದ್ದು ಅವನ ಧೈರ್ಯ ಮತ್ತು ಗುರುಭಕ್ತಿಗಳನ್ನು ತೋರಿಸುತ್ತದೆ. ಚಿಕ್ಕವಯಸ್ಸಿನಲ್ಲೇ ಅವನು ವಿದ್ಯಾಪ್ರದರ್ಶನದಲ್ಲಿ ತೋರಿದ ಕೈಚಳಕ, ದ್ರುಪದನನ್ನು ಎಳೆದು ತಂದ ರೀತಿಗಳನ್ನು U್ಪಮನಿಸಿದರೆ ಅವನ ಶಕ್ತಿಯ ಪರಿಚಯವಾಗುತ್ತದೆ. ವನವಾಸದ ಬಹುಭಾಗವನ್ನು ಇವನು ತಪಸ್ಸು ಮತ್ತು ಸಾಧನೆಗಳಿಗೆ ಮೀಸಲಾಗಿರಿಸಿದ್ದಾನೆ. ವಿರಾಟರಾಯನ ಅಂತಃಪುರದ ಹೆಂಗೆಳೆಯರಿಗೆ ನೃತ್ಯ-ಸಂಗೀತ ಪಾಠಗಳನ್ನು ಹೇಳಿಕೊಂಡು ಬದುಕುಸಾಗಿಸುವ ಬೃಹನ್ನಳೆಯ ವೇಷದಲ್ಲಿ ಕೂಡ ಆತ್ಮೋನ್ನತಿಯನ್ನು ಮೆರೆದಿದ್ದಾನೆ. ಅವನ ಭ್ರಾರ್ತಭಕ್ತಿ ಶ್ರೀಕೃಷ್ಣಭಕ್ತಿ ಎರಡೂ ಅಸದೃಶವಾದುವು. ಇವನಿಗೆ ದ್ರೌಪದಿಯ ಬಗೆಗೆ ಎಷ್ಟು ಪ್ರೀತಿ ಇತ್ತೋ ಅಷ್ಟೇ ಭಯವೂ ತಿಳಿದುಬರುತ್ತದೆ. ಊರ್ವಶಿಯೊಡನೆ ಈತ ನಡೆಸಿದ ಸಚಿವಾದವು ದೇವ-ಮತ್ರ್ಯ ಲೋಕಗಳ ನೀತಿ ಸಂಹಿತೆಯ ಎರಡು ಮಜಲುಗಳನ್ನು ಒಂದೇ ವೇದಿಕೆಯಲ್ಲಿ ಪ್ರಕಾಶಗೊಳಿಸುವಂಥದಾಗಿದೆ.
ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕುಲಕೊಲೆಗೆ ಬೇಸರಪಟ್ಟು ಯುದ್ಧ ಬೇಡ ಎಂದು ಕೊರಗಿದ ಇವನ ಮಾನವೀಯ ಕಾಳಜಿ ಅರ್ಥಪೂರ್ಣವಾದದ್ದು. ಭಗವದ್ಗೀತೆಯಂಥ ಮಹಾಭಾರತ ಯುದ್ಧದಲ್ಲಿ ಇವನಿಂದ ಬಾಧೆಪಡದ ಶತ್ರುವೀರರೇ ಇಲ್ಲ ಎಂದರೂ ಸಲ್ಲುತ್ತದೆ. ತೇಜಸ್ವಿಯಾದವನು ಇನ್ನೊಬ್ಬ ತೇಜಸ್ವಿಯನ್ನು ಸಹಿಸುವುದಿಲ್ಲ ಎಂಭ ಮಾತಿಗೆ ಇವನೇನೂ ಅಪವಾದವಲ್ಲ ಎಂಬುದಕ್ಕೆ ಕರ್ಣ-ಏಕಲವ್ಯರುಗಳೇ ಸಾಕ್ಷಿ. ದ್ರೌಪದೀ ಸ್ವಯಂವರದಲ್ಲಿ ಲಕ್ಷ್ಯಸಿದ್ಧಿಯಲ್ಲಿ ಏಕೈಕ ಬಿಲ್ಲುಗಾರನಾಗಿ ಮೆರೆದು ದ್ರೌಪದಿಯನ್ನು ವಿವಾಹವಾಗುವ ಯೋಗ್ಯತೆಯನ್ನು ಪಡೆದರೂ ತಾಯಮಾತಿಗೆ ಮಣಿದು ಅಣ್ಣತಮ್ಮಂದಿರನ್ನೆಲ್ಲ ಮದುವೆಯ ಹಸೆಯಲ್ಲಿ ಕುಳ್ಳಿರಿಸಿ ತಾವೆಲ್ಲ ಒಬ್ಬಳನ್ನೇ ಮದುವೆಯಾಗಲು ನಿರ್ಧರಿಸಿದುದರ ಹಿಂದೆ ಅವನ ಔದಾರ್ಯ ಕಂಡುಬರುತ್ತದೆ. ರಾಜಸೂಯಯಾಗಕ್ಕೆ ಮುನ್ನ ಅವನ ಪೂರ್ವ ಭಾರತ ದಿಗ್ವಿಜಯ ಪ್ರಸಂಗವು ಒಂದು ರೋಚಕ ವೀರಕಥನವಾಗಿ ನಿಲ್ಲುತ್ತದೆ.
ಅರ್ಜುನನು ಅಣ್ಣನಾದ ಧರ್ಮರಾಯನ ಬಗೆಗೆಇಟ್ಟಿದ್ದ ಭಕ್ತಿ ಗಾಢವಾದದ್ದು. ನೆಚ್ಚಿನ ಅಣ್ಣನು ಜೂಜಿನಲ್ಲಿ ಸೋತು ಕಾಡುಪಾಲಾದಾಗ ಕೂಡ ಅವನ ಸಂಗಡವೇ ಇದ್ದು ಕಷ್ಟವನ್ನು ಹಂಚಿಕೊಂಡನೇ ಹೊರತು ಅಣ್ಣಯ್ಯನ ತಪ್ಪಿಗೆ ಅವನನ್ನು ಛೇಡಿಸುವ ಕೆಲಸವನ್ನು ಎಂದಿಗೂ ಮಾಡಲಿಲ್ಲ. ತನ್ನ ಪರಾಕ್ರಮವನ್ನು ಕೀಳುಗಳೆದು ಕರ್ಣನನ್ನೇ ಧರ್ಮರಾಯನು ಹೊಗಳಿದಾಗ ಅರ್ಜುನನು ಸಹನೆ ಕಳೆದುಕೊಂಡದ್ದು ನಿಜವಾದರೂ ಅವನಿಗೆ ತನ್ನ ಶಕ್ತಿಯ ಬಗೆಗೆ ತುಂಬ ನಂಬಿಕೆಯಿತ್ತು ಎಂಬುದನ್ನು ಧರ್ಮರಾಯ-ಅರ್ಜುನರ ಕಲಹವು ಸ್ಪಷ್ಟಪಡಿಸುತ್ತದೆ.
ಅರ್ಜುನನ ರಥವು ಯುದ್ಧಭೂಮಿಯಲ್ಲಿ ಬರುತ್ತಿದ್ದರೆ ಶತ್ರುಗಳಿಗೆ ಭಯಜ್ವರವೂ ಮಹೇಶ್ವರ ಜ್ವರವೂ ಬರುತ್ತಿತ್ತೆಂದು ಪಂಪ ಹೇಳುತ್ತಾನೆ. ಹಾಗೆ ಹದಿನೆಂಟು ದಿನವೂ ಶತ್ರುಗಳಿಗೆ ನಡುಕ ತಂದವನು ಅರ್ಜುನ. ಮಹಾಭಾರತದ ಮಹತ್ತರ ವೀರದೃಶ್ಯಗಳಲ್ಲಿ ಭಗದತ್ತ-ಅರ್ಜುನರ ಯುದ್ಧ, ಕರ್ಣಾರ್ಜುನ ಯುದ್ಧ, ಅರ್ಜುನ ಸಂಶಪ್ತಕರ ನಡುವಣ ಯುದ್ಧಗಳು ಪ್ರಮುಖವಾದುವು. ಲೋಕವೀರ, ಅಪ್ರತಿಮ ಧನುರ್ವಿದ್ಯಾಕುಶಲಿ ಎಂಬ ಮಾತು ಅವನಿಗೆ ಸರಿಯಾಗಿ ಅನ್ವಯಿಸುತ್ತದೆ. ಭೀಮ-ಅರ್ಜುನರಂಥ ಇಬ್ಬರು ಮಹಾತೇಜಸ್ವಿಗಳು ವಾಗ್ಮಿಗಳು ಒಂದೇ ಕುಟುಂಬದಲ್ಲಿ ಇದ್ದರೂ ಪರಸ್ಪರ ಕಿತ್ತಾಡದೆ ಹೊಂದಿಕೊಂಡು ಹೋದದ್ದು ಮಹಾಭಾರತದಲ್ಲಿ ಒಂದು ವಿಶಿಷ್ಟ ಅಂಶವಾಗಿದೆ.
ಬೃಹನ್ನಳೆ - “ಮೂಲಭಾರತದಲ್ಲಿ ಅರ್ಜುನನು ದ್ರೌಪದಿಗೆ ““ನೀನು ಹೋಗಿ ಉತ್ತರನಿಗೆ ಹೇಳು. ಈತ (ಬೃಹನ್ನಳೆ) ಹಿಂದೆ ಅರ್ಜುನನಿಗೆ ಸಾರಥಿಯಾಗಿದ್ದ ಎಂದು ಹೇಳು. ಯುದ್ಧದ ಅನುಭವವುಳ್ಳ ಆತನು ಬೇಕಾದರೆ ನಿನಗೂ ಸಾರಥಿಯಾಗುತ್ತಾನೆ ಎಂದು ಹೇಳು”” ಎಂದ.
ಅಯಂ ವೈ ಪಾಂಡವಸ್ಯಾಸೀತ್ ಸಾರಥಿ: ಸಮ್ಮತೋಃ ದೃಢ:
ಮೂಲ ...{Loading}...
ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ ॥26॥
೦೨೭ ನರನ ಸಾರಥಿಯೆನ್ದು ...{Loading}...
ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ನಾನು ಅರ್ಜುನನಿಗೆ ಸಾರಥಿಯಾಗಿದ್ದೆನೆಂದು ನೀನು ಕೂಡಲೇ ಉತ್ತರೆಯ ಬಳಿಗೆ ಹೋಗಿ ಹೇಳು. ಈಗಲೇ ಉತ್ತರನು ನನ್ನನ್ನು ಕರೆಸುವಂತೆ ತಂಗಿಯಿಂದ ಹೇಳಿಸು” ಎಂದಾಗ ದ್ರೌಪದಿ ಸಂತೋಷದಿಂದ ಉತ್ತರೆಯ ಬಳಿಗೆ ಬಂದಳು.
“ತರುಣಿ ಕೇಳು ಈ ಬೃಹನ್ನಳೆಯು ಹಿಂದೆ ಅರ್ಜುನನಿಗೆ ಸಾರಥಿಯಾಗಿದ್ದುಂಟು. ಖಾಂಡವನದಹನದ ಸಂದರ್ಭದಲ್ಲಿ ಇವನು ಅರ್ಜುನನ ರಥ ನಡೆಸಿದ್ದ” ಎಂದು ಹೇಳಿದಳು.
ಟಿಪ್ಪನೀ (ಕ.ಗ.ಪ)
ಖಾಂಡವಾಗ್ನಿಯ ಹೊರೆದನಿವ….
ಖಾಂಡವ ವನವು ಇಂದ್ರನಿಗೆ ಸೇರಿತ್ತು. ಶ್ವೇತಕಿ ಎಂಬ ಒಬ್ಬ ರಾಜರ್ಷಿ ನಡೆಸಿದ ಯಾಗಗಳಲ್ಲಿ ಹವಿಸ್ಸಿನ ತುಪ್ಪವನ್ನು ತಿಂದು ತಿಂದು ಅಗ್ನಿಗೆ ಅಜೀರ್ಣವಾಗಿತ್ತು. ಬ್ರಹ್ಮನ ಸಲಹೆಯಂತೆ ಅಗ್ನಿಯು ಕೃಷ್ಣ ಅರ್ಜುನರ ಸಹಾಯ ಪಡೆದು ಖಾಂಡವವನವನ್ನು ಭಕ್ಷಿಸಿ ತನ್ನ ಅಜೀರ್ಣತೆಯನ್ನು ಹೋಗಲಾಡಿಸಿಕೊಂಡ. ವಿವರಗಳಿಗೆ ‘ಶ್ವೇತಕಿ’ ನೋಡಿ. “ಮಹಾಭಾರತ ಪಾತ್ರ-ಸಂಗತಿಗಳು” (ಅ.ರಾ.ಮಿತ್ರ)
ಶ್ವೇತಕಿ -
ಮೂಲ ...{Loading}...
ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು ॥27॥
೦೨೮ ಕೇಳಿ ಹರುಷಿತೆಯಾದಳುತ್ತರೆ ...{Loading}...
ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರೆಗೆ ಸಾರಥ್ಯದ ಸಮಸ್ಯೆ ಪರಿಹಾರವಾದುದಕ್ಕೆ ಸಂತೋಷವಾಯಿತು. ಅವಳು ಓಲಗಸಾಲೆಗೆ ಬಂದು ಅಣ್ಣನಿಗೆ ನಮಸ್ಕರಿಸಿದಳು. ಕೈಮುಗಿದು ಈ ವಿಷಯವನ್ನು ತಿಳಿಸಿದಳು.
“ಅಣ್ಣ ಸಾರಥಿಯನ್ನು ಪತ್ತೆ ಮಾಡಿ ಅವನ ವಿಷಯವನ್ನು ಕೇಳಿ ತಿಳಿದಿದ್ದೇನೆ. ನೀನೀಗ ಧೈರ್ಯವಾಗಿ ಯುದ್ಧಭೂಮಿಗೆ ತೆರಳಬಹುದು. ಕೌರವ ರಾಜರುಗಳನ್ನು ಗೆದ್ದು ಬಾ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಲೋಲಲೋಚನೆ-ಚಂಚಲಗಣ್ಣಿನ (ಉತ್ತರೆ), ಬೆಸಗೊಳ್-ಕೇಳು
ಮೂಲ ...{Loading}...
ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ ॥28॥
೦೨೯ ತಙ್ಗಿ ಹೇಳೌ ...{Loading}...
ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನ ಉತ್ಸಾಹ ಮಿತಿಮೀರಿತ್ತು “ತಂಗಿ ! ಹೇಳು ತಾಯಿ ? ನಿನಗೆ ಈ ಸಂಗತಿಯನ್ನು ಹೇಳಿದವರು ಯಾರು ? ಅವನು ಒಳ್ಳೆಯ ಮೈಕಟ್ಟು ಉಳ್ಳವನೇನು ? ಸಾರಥಿತನದ ಉದ್ಯೋಗದಲ್ಲಿ ಪರಿಶ್ರಮ ಆಸಕ್ತಿ ಉಳ್ಳವನೇನು ? ಹಾಗಿದ್ದರೆ ಒಳ್ಳೆಯದು. ನಾನು ಯುದ್ಧ ಭೂಮಿಯಲ್ಲಿ ಅಭಂಗನಾಗುತ್ತೇನೆ (ವಿಜಯ ಖಚಿತ) ನಿನ್ನಾಣೆ. ಸದ್ಯ ನನ್ನ ಶಕ್ತಿಯನ್ನು ಪ್ರದರ್ಶಿಸುವ ಅವಕಾಶವನ್ನು ಕೊಟ್ಟಿದ್ದೀಯೆ ! ಹೇಳು ನಿಜ ಹೇಳು” ಎಂದ.
ಪದಾರ್ಥ (ಕ.ಗ.ಪ)
ಅಂಗವಣೆ-ಧೈರ್ಯ, ಕೈಮೆ-ಉದ್ಯೋಗ, ಅಭಂಗನಹೆ-ನಾನು ವಿಜಯಿಯಾಗುತ್ತೇನೆ, ಅಡ್ಡಿಯಿಲ್ಲದವನಾಗುತ್ತೇನೆ.
ಟಿಪ್ಪನೀ (ಕ.ಗ.ಪ)
ಉತ್ತರನ ಪಾತ್ರವನ್ನು ಕುಮಾರವ್ಯಾಸನು ಸಂದಿಗ್ಧವಾಗಿಯೂ ಇರಿಸಿದ್ದಾನೆ. ಅವನು ಒಳಗೆ ಹೇಡಿಯಾಗಿದ್ದು ಮೇಲೆ ಕೊಚ್ಚಿಕೊಂಡಿದ್ದರೆ ಈಗ ಸಾರಥಿ ಸಿಕ್ಕಿದಾಗ ಇಷ್ಟೊಂದು ಬೀಗಬೇಕಾಗಿರಲಿಲ್ಲ. ನಿಜವಾಗಿ ಯುದ್ಧಕ್ಕೆ ಹೋಗಬೇಕಾಗುತ್ತದೆಂಬ ಕಳವಳವೂ ಅವನಿಗಿದ್ದಂತಿಲ್ಲ. ಅಥವಾ ಕೀಚಕನು ಇರುವವರೆಗೆ ವಿರಾಟಸೇನೆಗೆ ಭಯವೇ ಇರಲಿಲ್ಲವಾದ್ದರಿಂದ ಉತ್ತರನೇ ಮೊದಲಾದವರು ಯುದ್ಧದಲ್ಲಿ ಭಾಗವಹಿಸಿಲ್ಲದಿರಬಹುದು.
ಮೂಲ ...{Loading}...
ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ ॥29॥
೦೩೦ ಎನ್ದಳೀ ಸೈರೇನ್ಧ್ರಿ ...{Loading}...
ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ
ಹಿಂದುಗಳೆಯದೆ ಕರೆಸು ನಮ್ಮ ಬೃ
ಹಂದಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರಂಧ್ರಿಗಿಂತೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವೇಂದ್ರನ ಖಾಂಡವವನವನ್ನು ಸುಡುವಾಗ ಈ ಬೃಹನ್ನಳೆಯು ಪಾರ್ಥನಿಗೆ ಸಾರಥಿಯಾಗಿದ್ದನಂತೆ ! ಹಾಗೆಂದು ಈ ಸೈರಂಧ್ರಿ ಹೇಳಿದಳು. ಆದರೆ ನಮಗೆ ಇದು ಗೊತ್ತಿರಲಿಲ್ಲ. ಈಗ ತಡಮಾಡದೆ ನಮ್ಮ ಬೃಹನ್ನಳೆಯನ್ನು ಇಲ್ಲಿಗೆ ಕರೆಸು” ಎಂದು ಉತ್ತರೆ ಹೇಳಿದಳು. ಆಗ ನಗುತ್ತ ಪರಮ ಉತ್ಸಾಹದಿಂದ ಉತ್ತರನು ಸೈರಂಧ್ರಿಗೆ ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ಉಳುಹು-ಕಾಪಾಡು, ಹದನು-ಸುದ್ದಿ
ಪಾಠಾನ್ತರ (ಕ.ಗ.ಪ)
ಬೃಹನ್ನಳೆ - ಬೃಹಂದಳೆ
ವಿರಾಟಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಛಂದಸ್ಸಿನ ದೃಷ್ಟಿಯಿಂದ ಐದನೆಯ ಸಾಲಿನಲ್ಲಿ ಬರುವ ಬೃಹನ್ನಳೆಯನೆನೆ’, ಎಂಬುದು ಸರಿಹೋಗುವುದಿಲ್ಲ. ಬಹುಶಃ ಅದು ಬೃ’ಹಂದಳೆಯನೆನೆ’ ಇದ್ದೀತು. ಅಲ್ಲದೆ ಪಂಪನು ತನ್ನ ಮಹಾಭಾರತದಲ್ಲಿ ‘ಬೃಹಂದಳೆ’ ಎಂಬ ಮಾತನ್ನೇ ಹಲವಾರು ಬಾರಿ ಬಳಸಿದ್ದಾನೆ.
ಬೃಹನ್ನಳೆ ಎಂದು ಬಳಸಿದರೆ ವರ್ಗಪ್ರಾಸವಾಗುವುದೇನೋ ನಿಜ. ಆದರೆ ‘ಬೃಹಂದಳೆ’ ಸಹಜ ಅಕ್ಷರ ಪ್ರಾಸವಾಗುತ್ತದೆಯಲ್ಲವೆ ?
ಮೂಲ ...{Loading}...
ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ
ಹಿಂದುಗಳೆಯದೆ ಕರೆಸು ನಮ್ಮ ಬೃ
ಹಂದಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರಂಧ್ರಿಗಿಂತೆಂದ ॥30॥
೦೩೧ ಸಾರಥಿಯ ಕೊಟ್ಟೆನ್ನನುಳುಹಿದೆ ...{Loading}...
ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವುದು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರನು ಸೈರಂಧ್ರಿಯನ್ನು ಕುರಿತು “ಸುಂದರಿ, ಸಾರಥಿಯನ್ನು ಕೊಟ್ಟು ನೀನು ನನ್ನನ್ನು ಕಾಪಾಡಿದ್ದೀಯೆ. ನಿನ್ನದು ಒಳ್ಳೆಯ ಸಲಹೆ. ನಾನು ಯುದ್ಧಕ್ಕೆ ತಡಮಾಡದೆ ಹೋಗಿ ಕೌರವನನ್ನು ಎದುರಿಸಿ ಯುದ್ಧಮಾಡಿ ಅವನ ಕರುಳನ್ನು ಬಗೆಯುತ್ತೇನೆ. ಸೈರಂಧ್ರಿ ನೀನೇ ಹೋಗಿ ಪಾರ್ಥ ಸಾರಥಿಯನ್ನು ಕರೆದುಕೊಂಡು ಬಾ” ಎಂದು ಕೇಳಿಕೊಂಡ. ಆಗ ಸೈರಂಧ್ರಿಯು “ಆ ವೀರ ಬೃಹನ್ನಳೆ ನಮ್ಮ ಮಾತಿಗೆ ಅಷ್ಟಾಗಿ ಗೌರವ ಕೊಡುವುದಿಲ್ಲ. ಆದ್ದರಿಂದ ನಿಮ್ಮ ತಂಗಿಯನ್ನು ಕಳಿಸಿ ಬೃಹನ್ನಳೆ ಇಲ್ಲಿಗೆ ಬರುವಂತೆ ಮಾಡುವುದು.” ಎಂದಳು.
ಪದಾರ್ಥ (ಕ.ಗ.ಪ)
ವಾರಿಜಾನನೆ-ತಾವರೆಯ ಕಣ್ಣಿನವಳು, ತನಿಗರುಳು- ಚನ್ನಾಗಿ ಬೆಳೆದ ಕರುಳು
ಮೂಲ ...{Loading}...
ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವುದು ॥31॥
೦೩೨ ತಾಯೆ ನೀನೇ ...{Loading}...
ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲ ದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರನು ತಂಗಿಯನ್ನು ಕುರಿತು “ನೀನೇ ಹೋಗಿ ಸಾರಥಿಯನ್ನು ಕರೆದುಕೊಂಡು ಬಾ” ಎಂದು ಕೇಳಿಕೊಂಡ. ಉತ್ತರೆಯು ಒಪ್ಪಿ ಮನ್ಮಥನ ಮರಿಯಾನೆಯಂತೆ ಗಂಭೀರವಾಗಿ ನಡೆದುಕೊಂಡು ಹೋದಳು. ಆ ರಾಜಕುಮಾರಿಯು ಹೊಸ ಬಗೆಯ ಗಾಂಭೀರ್ಯದಿಂದ ಬರುವುದನ್ನು ನೋಡಿದ ವಿಟರುಗಳ ಮನಸ್ಸು ಅಲ್ಲಿ ಸಿಕ್ಕಿಕೊಂಡವು. ಉತ್ತರೆ ಎಲ್ಲ ಜನರ ಕಣ್ಣು ಮನಸ್ಸುಗಳನ್ನು ಸೆಳೆಯುತ್ತ ನಡೆದಳು.
ಪದಾರ್ಥ (ಕ.ಗ.ಪ)
ಸೂತ-ಸಾರಥಿ ‘ತಾಯೆ…. ಸೂತನ ತಾ’ ಶಬ್ದಗಳು ಮೂಡಿರುವ ಸೊಬಗನ್ನು ನೋಡಿ, ಮನೋಭವ-ಮನ್ಮಥ, ಕರಣ-ಇಂದ್ರಿಯ, ಕರಣದಲಾಯ- ಕರಣದಲಿ+ಆಯ, ತೊಡಕು-ಸಿಕ್ಕು
ಟಿಪ್ಪನೀ (ಕ.ಗ.ಪ)
ವಿಟರುಗಳು ಉತ್ತರೆಯ ರೂಪವನ್ನು ನಡಿಗೆಯ ಶೈಲಿಯನ್ನು ನೋಡಿ ಮೆಚ್ಚಿದರೆಂದು ಕವಿ ಹೊಗಳುತ್ತಾನೆ. ಈ ಸನ್ನಿವೇಶಕ್ಕೆ ಇಂಥ ಶೃಂಗಾರ ಹೊಂದುವುದಿಲ್ಲ. ಮುಂದಿನ ಪದ್ಯವಂತೂ ಅನಗತ್ಯವೆನ್ನಿಸುತ್ತದೆ. ಮುಂದೆ ಅವಳ ಸೌಂದರ್ಯ ಮತ್ತು ನಡಿಗೆಯ ಬೆಡಗುಗಳನ್ನು ವರ್ಣಿಸಲು ಇನ್ನಷ್ಟು ಪದ್ಯಗಳು ಅನಗತ್ಯವಾಗಿ ಬಂದಿವೆ.
ಮೂಲ ...{Loading}...
ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲ ದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ ॥32॥
೦೩೩ ಐದು ಶರವೇಕೊನ್ದು ...{Loading}...
ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
ಒಯ್ದುಕೊಳ್ಳನೆ ಮುನಿ ಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರೆಯ ಸೌಂದರ್ಯವನ್ನು ಕಂಡು ಆಸ್ಥಾನದಲ್ಲಿದ್ದ ವಿಟ ಜನರು ಹೇಳುವ ಮಾತುಗಳಿವು. ಮನ್ಮಥನು ಐದು ಬಾಣಗಳನ್ನು ಯಾಕೆ ಉಪಯೋಗಿಸುತ್ತಾನೆ. ಈ ಉತ್ತರಕುಮಾರಿಯಂಥ ಒಂದೇ ಒಂದು ಸುಂದರ ಬಾಣವೇ ಆ ಐದರ ಕೆಲಸವನ್ನು ಸಮರ್ಪಕವಾಗಿ ಪೂರೈಸುವುದಿಲ್ಲವೆ ? ಆ ಮನ್ಮಥನ ಆಯುಧ ಕೌಶಲಕ್ಕೆ ನಡುಗದೆ ಬಾಗದೆ ಇರುವವರು ಯಾರಿದ್ದಾರೆ ? ಈ ಮನ್ಮಥನು (ಇಂಥವಳ ಸಹಾಯದಿಂದ) ಋಷಿಗಳ ಮನಸ್ಸನ್ನು ಸೆಳೆಯುವುದಿಲ್ಲವೆ ? ದೊಡ್ಡವರನ್ನೆಲ್ಲಾ ಅಡ್ಡಗಟ್ಟಿ ಹಿಡಿಯದಿರುತ್ತಾನೆಯೆ ? ಅಯ್ಯೋ ! ವಿಧಿ ನಮ್ಮ ಕೊರಳನ್ನು ಕೊಯ್ಯುತ್ತಿದ್ದಾನೆ” ಎಂದು ಆ ವಿಟರ ಸಮೂಹ ನಗುತ್ತ ಅವಳನ್ನು ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಐದುಶರ-ಪಂಚ ಬಾಣ (ಮನ್ಮಥನ ಆಯುಧ), ಐದದೇ-(ಆತನ ಕೆಲಸವನ್ನು) ಮಾಡುವುದಿಲ್ಲವೆ, ಕೈದುಗಾರತನ-ಆಯುಧ ಪ್ರಯೋಗ ಕೌಶಲ, ಕೋಡು-ನಡುಗು, ಕೊಂಕು-ಬಾಗು, ಅಡಹಾಯ್ದು-ಅಡ್ಡಗಟ್ಟಿ
ಟಿಪ್ಪನೀ (ಕ.ಗ.ಪ)
ಬಹುಶಃ ಇದು ಹಾಸ್ಯ ಪ್ರಸಂಗವಾಗಿರುವುದರಿಂದ ಇದರೊಳಗೆ ಇನ್ನೊಂದು ಬಗೆಯ ಶೃಂಗಾರ ಹಾಸ್ಯ ತರಲು ಪ್ರಯತ್ನಿಸಿದ್ದಾನೆ ಕವಿ ಎನ್ನಿಸುತ್ತದೆ. ಕಥಾ ಸಂದರ್ಭದ ಕುಣಿಕೆ ಇಲ್ಲಿ ತಪ್ಪಿರುವಂತೆ ಕಾಣುತ್ತದೆ ಮುಂದಿನ ಪದ್ಯವು ಇದೇ ಧೋರಣೆಯನ್ನು ವರ್ಣಿಸುತ್ತದೆ. ಜನಪದ ಶೃಂಗಾರವನ್ನು ಚೆನ್ನಾಗಿ ಬಲ್ಲ ಕವಿ ಇಲ್ಲಿ ಅಭಿಜಾತ ಕಾವ್ಯದ ಶೃಂಗಾರವನ್ನೇಕೆ ತಂದಿದ್ದಾನೋ ಗೊತ್ತಾಗುವುದಿಲ್ಲ.
ಮೂಲ ...{Loading}...
ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
ಒಯ್ದುಕೊಳ್ಳನೆ ಮುನಿ ಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ ॥33॥
೦೩೪ ಅರಳುಗಙ್ಗಳ ಬೆಳಗು ...{Loading}...
ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರೆಯ ಅರಳಿದ ಕಣ್ಣುಗಳ ಬೆಳಗು ಹೊಯ್ದು ಅಬ್ಬರಿಸಿದಾಗ ನೋಡುತ್ತಿದ್ದ ವಿಟಜನರ ಮನಸ್ಸಿನ ಕತ್ತಲೆ ಹೆಚ್ಚಿತು. ಅವಳ ತಲೆಗೂದಲ ಕಪ್ಪಿನಿಂದ ಅವರ ಮುಖಗಳೆಲ್ಲ ಬಿಳುಪೇರಿದುವು. ಅವಳ ಸರಸತರವಾದ ಸೌಂದರ್ಯ ರಸದಿಂದ ವಿಟರ ಮನಸ್ಸಿನಲ್ಲಿ ಉರಿ ಹೊತ್ತಿಕೊಂಡಿತು. ಮೈಯ ಸುವಾಸನೆಯನ್ನು ಹರಡುತ್ತ ಆ ಸುಂದರಿ ಉತ್ತರೆ ಪ್ರೀತಿಯಿಂದ ನಡೆದಳು.
ಪದಾರ್ಥ (ಕ.ಗ.ಪ)
ತಿಮಿರ-ಕತ್ತಲು, ಕುರುಳು-ತಲೆಗೂದಲು,ಕಾಳಿಕೆ-ಕಪ್ಪು, ಮಸಗೆ-ಹೊತ್ತಿಕೊಳ್ಳಲು, ಪಸರ-ಹರಡುವಿಕೆ
ಟಿಪ್ಪನೀ (ಕ.ಗ.ಪ)
ಇಲ್ಲಿ ಮೂರು ವರ್ಣನೆಗಳನ್ನು ವಿರುದ್ಧ ಫಲ ಕೊಡುವ ದಿಕ್ಕಿನಲ್ಲಿ ಬಳಸಿದ್ದಾನೆ ಅವಳ ಕಣ್ಣುಗಳು ಅರಳಿದ್ದುವಲ್ಲ. ಅವುಗಳ ಕಾಂತಿ ಕೋರೈಸಿದ್ದರಿಂದ ವಿಟಜನರ ಮನಸ್ಸಿನ ಕತ್ತಲೆ ಹೆಚ್ಚಿತಂತೆ ! ತಲೆಗೂದಲ ಬಣ್ಣ ಕಪ್ಪು. ಆದರೆ ಅವರ ಮುಖಗಳೆಲ್ಲ ಅವಳ ಸೌಂದರ್ಯವನ್ನು ಕಂಡು ಬಿಳುಪೇರಿದುವಂತೆ ! ಸೌಂದರ್ಯದ ರಸ ಆದ್ರ್ರಗೊಳಿಸುವ ದ್ರವ್ಯವಾದರೂ ಅದರಿಂದ ಜನರ ಮನಸ್ಸಿನಲ್ಲಿ ಉರಿ ಮಸಗಿತ್ತಂತೆ !
ಮೂಲ ...{Loading}...
ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ ॥34॥
೦೩೫ ನಡೆ ನಡೆಯ ...{Loading}...
ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಉತ್ತರ ಕುಮಾರಿಯ ನಡಿಗೆಯ ವೈಖರಿಯು ನೋಡುತ್ತಿದ್ದ ಜನಗಳ ಮನಸ್ಸಿನ ಚಲನೆಯನ್ನು ಬಂಧಿಸಿತ್ತು. ಅವಳ ಕಣ್ಣಿನ ಕುಡಿ ನೋಟವು ಜನಗಳ ನೋಟವನ್ನು ಉಡುಗಿಸಿತು. ಅವಳು ಸಖಿಯರೊಂದಿಗೆ ಆಡಿದ ಮಾತು. ಸಖಿಯರ ಮಾತು ಇವು ಸೇರಿ ಜನಗಳ ಮಾತನ್ನು ಕಟ್ಟಿಹಾಕಿದುವು. ಅವಳ ತುಟಿಯ ಕೆಂಪು ಅವರುಗಳ ಮೈಯ ಕೆಂಪನ್ನು ಕೆಡಿಸಿತ್ತು. ಅವಳ ಸೊಂಟದ ತೆಳುತನ (ಬಡತನವು) ವಿಟಜನರ ಬಡತನವನ್ನು ಹೆಚ್ಚಿಸಿತು (ಅಂದರೆ ಅವಳ ಸೌಂದರ್ಯದ ಶ್ರೀಮಂತಿಕೆಯ ಮುಂದೆ ಅವರ ಬಡತನ ಎದ್ದು ಕಾಣಿಸುವಂತಿತ್ತು) ಹೀಗೆ ಆ ಉತ್ತರೆ ನಡೆದುಕೊಂಡು ಬಂದಳು.
ಪದಾರ್ಥ (ಕ.ಗ.ಪ)
ಉಡುಗಿಸು-ಸ್ತಂಭಿಸು, ತಡೆ, ಸಮೇಳದ ಮಾತು-ಸಖಿಯರ ಗುಂಪಿನೊಂದಿಗಿನ ಮಾತು, ರಾಗ-ಕೆಂಪುತನ, ದೇಹದ ಕೆಂಪು ಬಣ್ಣ, ಅಧರ-ತುಟಿ
ಮೂಲ ...{Loading}...
ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ ॥35॥
೦೩೬ ಕುರುಳ ತಿದ್ದುತ ...{Loading}...
ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಹಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರು ಬೆಮರಿಡುತ ನಡೆತರುತಿರ್ದಳಿಂದುಮುಖಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರೆಯು ತನ್ನ ಮುಂಗೂದಲನ್ನು ತಿದ್ದಿಕೊಳ್ಳುತ್ತ ಎದೆಯಿಂದ ಜಾರಿದ್ದ ಮೇಲುವಸ್ತ್ರವನ್ನು ಸರಿಪಡಿಸಿಕೊಳ್ಳುತ್ತ ತನ್ನ ಮುತ್ತಿನ ಸರವನ್ನು ಮೆಲ್ಲಗೆ ತಿರುಗಿಸುತ್ತ ತನ್ನ ಬಿಚ್ಚಿದ ಜಡೆಯನ್ನು ಎಡಗೈಯಿಂದ ಸರಿಪಡಿಸಿಕೊಳ್ಳುತ್ತಿದ್ದಳು. ತನ್ನ ನಿಖಾರಿಯು (ಅಂದರೆ ವಸ್ತ್ರದ ನಿರಿಯು) ಸೊಗಸಿನಿಂದ ಕೂಡಿತ್ತು. ರಭಸದ ಕಾಲ್ಗೆಜ್ಜೆಯ ಧ್ವನಿಯಿಂದ ಕೂಡಿ ನಡೆವ ವೇಗದಿಂದಾಗಿ ಹರಿದ ಕಿರು ಬೆವರಿನ ಹನಿಗಳಿಂದ ಕೂಡಿದ ಆಕೆ ನಡೆದು ಬರುತ್ತಿದ್ದಳು.
ಪದಾರ್ಥ (ಕ.ಗ.ಪ)
ಕುರುಳು-ತಲೆಗೂದಲು, ಮೇಲುದು-ಮೇಲುವಸ್ತ್ರ, ನಿಖಾರಿ-ವಸ್ತ್ರ, ಅಂದುಗೆ-ಕಡಗ, ಗಮನ-ನಡಿಗೆ
ಮೂಲ ...{Loading}...
ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಹಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರು ಬೆಮರಿಡುತ ನಡೆತರುತಿರ್ದಳಿಂದುಮುಖಿ ॥36॥
೦೩೭ ಬರವ ಕಣ್ಡನು ...{Loading}...
ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಉತ್ತರ ಕುಮಾರಿಯು ಬಂದುದನ್ನು ನೋಡಿದ. “ಏನಿದು ಉತ್ತರೆ ! ವೇಗದ ಹೆಜ್ಜೆಯಿಡುತ್ತ ನೀನು ಬರುತ್ತಿರುವುದನ್ನು ನೋಡಿದರೆ ಏನೋ ಭಾರಿಯ ಕೆಲಸದ ಮೇಲೆ ಬಂದಂತಿದೆ. ನಿನ್ನ ನಡಿಗೆಯೇ ಅದನ್ನು ಸೂಚಿಸುತ್ತಿದೆ” ಎಂದು ಹೇಳಿದ. ಉತ್ತರೆ ನಗುತ್ತ “ಬೇರೆ ಏನೂ ಇಲ್ಲ. ನೆರವೇರಿಸುತ್ತೇನೆ ಎಂದು ಹೇಳಿದರೆ ಮಾತ್ರ ನಾನೊಂದು ಮಾತು ಹೇಳುತ್ತೇನೆ.” ಎಂದು ಹೇಳಿದಳು. ಆಗ ಅರ್ಜುನನು “ಮಗಳೆ ! ನಿನ್ನ ಮಾತನ್ನು ನಾನು ಮೀರುತ್ತೇನೆಯೆ ?” ಎಂದ.
ಪದಾರ್ಥ (ಕ.ಗ.ಪ)
ಬರವು-ಆಗಮನ, ಕಠೋರಗತಿ-ಅವಸರದ ನಡಿಗೆ, ಒರಟು ನಡಿಗೆ, ಹುರುಳುಗೆಡಿಸು-ಸತ್ವ ಕೆಡಿಸು, ಅರುಹಿದಪೆನು-ಹೇಳುತ್ತೇನೆ.
ಟಿಪ್ಪನೀ (ಕ.ಗ.ಪ)
ಅರ್ಜುನನು ಉತ್ತರೆಗೆ ನಾಟ್ಯಾಚಾರ್ಯ. ಆತನು ಉತ್ತರೆಯನ್ನು ಮಗಳಂತೆ ಪ್ರೀತಿಯಿಂದ ನೋಡಿಕೊಂಡು ಬಂದಿದ್ದರಿಂದ ಅವಳಿಗೆ ಅವನಲ್ಲಿ ತುಂಬ ಸಲಿಗೆ ಬೆಳೆದಿತ್ತು.
ಮೂಲ ...{Loading}...
ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ ॥37॥
೦೩೮ ಪುರಕೆ ಹಾಯ್ದರು ...{Loading}...
ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನಿಲ್ಲ . ಹಸ್ತಿನಾವತಿಯ ರಾಜ ಕೌರವ ಮತ್ತು ಅವನ ರಾಜರುಗಳು ನಮ್ಮ ಊರಿನ ಮೇಲೆ ದಂಡೆತ್ತಿ ಬಂದಿದ್ದಾರಂತೆ. ನಮ್ಮ ಊರಿನ ಬಯಲಿನಲ್ಲಿ ನೂರು ಸಾವಿರ ದನಕರುಗಳನ್ನು ಸೆರೆ ಹಿಡಿದಿದ್ದಾರೆ. ನಮ್ಮ ಗೊಲ್ಲರ ಪಡೆಯವರು ಅವರೊಂದಿಗೆ ಹೋರಾಡುತ್ತ ಪ್ರಾಣ ಕಳೆದುಕೊಂಡಿದ್ದಾರೆ. ಆ ದನಗಳನ್ನು ಹಿಂದಕ್ಕೆ ತರಲು ಅಣ್ಣ ಉತ್ತರ ಸಿದ್ಧನಾಗಿದ್ದಾನೆ. ಆದರೆ ಅವನಿಗೆ ಸರಿಯಾದ ಸಾರಥಿಯಿಲ್ಲ. ನೀವು ಆ ಅರ್ಜುನನಿಗೆ ಸಾರಥಿಯಾಗಿದ್ದಿರಿ ಎಂಬ ಮಾತನ್ನು ಕೇಳಿದ್ದೇವೆ….” ಎಂದಳು.
ಪದಾರ್ಥ (ಕ.ಗ.ಪ)
ಹಾಯಿ-ನುಗ್ಗು, ಹೊಲ-ಬಯಲು, ಧುರ-ಯುದ್ಧ
ಮೂಲ ...{Loading}...
ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ ॥38॥
೦೩೯ ಇನ್ನು ನೀವೇ ...{Loading}...
ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುಂದಿನ ವಿಷಯ ನಿಮಗೇ ಚೆನ್ನಾಗಿ ತಿಳಿದಿದೆ” ಎಂದು ಉತ್ತರೆ ಹೇಳಿದಾಗ ಅರ್ಜುನನು “ಉತ್ತರೆ ! ನಿನ್ನ ಮಾತನ್ನು ಮೀರುತ್ತೇನೆಯೇ ? ಮೊದಲಿಗೆ ಸಾರಥಿಯಾಗಿದ್ದೆ. ನೋಡೋಣ ನಡೆ” ಎನ್ನುತ್ತ ಬೇಗ ಬೇಗ ಉತ್ತರೆಯ ಹಿಂದೆಯೇ ಆ ರಾಜಸಭೆಗೆ ಬಂದ. ಆಗ ತುಂಬ ಸಂತೋಷದಿಂದ ಉತ್ತರ ಕುಮಾರನು ಅರ್ಜುನನನ್ನು ಕರೆದು ಗೌರವದಿಂದ ಮನ್ನಿಸಿದ.
ಪದಾರ್ಥ (ಕ.ಗ.ಪ)
ವಹಿಲ-ಬೇಗ, ಅಹೆನು-ಆಗುತ್ತೇನೆ, ಬೆನ್ನಲಿ-ಹಿಂದೆಯೇ
ಮೂಲ ...{Loading}...
ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ ॥39॥
೦೪೦ ಎಲೆ ಬೃಹನ್ನಳೆ ...{Loading}...
ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಬೃಹನ್ನಳೆ ! ನಾನೀಗ ಮಹಾವೀರರುಗಳ ಮೇಲೆ ಯುದ್ಧ ಮಾಡುವ ಅವಕಾಶ ಬಂದಿದೆ. ನನ್ನ ಸಾರಥಿ ಸತ್ತಿದ್ದಾನೆ. ನೀನು ಸಾರಥಿಯಾಗಿ ಯುದ್ಧದಲ್ಲಿ ನನ್ನನ್ನು ಕಾಪಾಡಬೇಕು. ನೀನು ಮಹಾ ಸಮರ್ಥನಾದ ಸಾರಥಿಯಂತೆ ! ಅರ್ಜುನನ ರಥ ನಡೆಸಿದ್ದೀಯಲ್ಲವೆ ? ನೀನು ಒಪ್ಪಿಕೊಂಡರೆ ನಾನು ಶತ್ರು ಸೇನೆಯ ಮೇಲೆ ಧಾಳಿ ನಡೆಸಿ ನನ್ನ ಪರಾಕ್ರಮವನ್ನು ತೋರಿಸುತ್ತೇನೆ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ತೆತ್ತುದು-ಸಂಭವಿಸಿದೆ ಉಂಟಾಗಿದೆ, ಅಗ್ಗಳೆಯರು-ವೀರರು, ವಿಗ್ರಹ-ಯುದ್ಧ, ಅಹಿತಸೇನೆ-ಶತ್ರು ಸೈನ್ಯ
ಟಿಪ್ಪನೀ (ಕ.ಗ.ಪ)
ಹೋಲಿಸಿ-ಮೂಲಭಾರತದಲ್ಲಿ ಉತ್ತರಕುಮಾರನು ಅರ್ಜುನನಿಗೆ ಹೇಳುವ ಮಾತು
“ಸಂಯಚ್ಚ ಮಾಮಕಾನಶ್ವಾಂ ಸ್ತಥೈವ ತ್ವಂ ಬೃಹನ್ನಲೇ ಕುರುಭಿರ್ಯೋತ್ಸಮಾನಸ್ಯ ಗೋಧನಾನಿ ಪರೀಪ್ಸತಃ”
“ಕೌರವರೊಂದಿಗೆ ಯುದ್ಧಕ್ಕೆ ಹೊರಟಿದ್ದೇನೆ, ಗೋವುಗಳನ್ನು ಹಿಂದಕ್ಕೆ ತರಬೇಕಾಗಿದೆ. ನೀನು ನನ್ನ ಸಾರಥಿಯಾಗು”
ಮೂಲ ...{Loading}...
ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ॥40॥
೦೪೧ ಭರತ ವಿದ್ಯಾ ...{Loading}...
ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಬೃಹನ್ನಳೆಯು ವಿನಯದಿಂದ “ನನಗೆ ಭರತನಾಟ್ಯದ ವಿಷಯದಲ್ಲಿ ಪರಿಚರ್ಯತನವಿದೆ ಅಷ್ಟೆ. ಯುದ್ಧರಂಗದಲ್ಲಿ ಸಾರಥಿತನವನ್ನು ಮಾಡಿದ್ದು ನಿಜ. ಆದರೆ ಅದನ್ನು ಮರೆಯುವಷ್ಟು ಕಾಲವಾಗಿದೆ. ಅಲ್ಲದೆ ಎದುರು ನಿಲ್ಲುವವರು ಭೀಷ್ಮಾದಿ ವೀರರುಗಳು. ಅವರೆದುರು ನಿಲ್ಲಲು ನನಗಾಗದು. ಅಲ್ಲ, ಸಾರಥಿತನದ ಕೈಮನಸ್ಸುಗಳು ಬರಡಾಗಿರುವವರಿಗೆ ಸಿಕ್ಕುವುದುಂಟೇ ರಣಸೂರೆಯಲ್ಲಿ?” ಎಂದು ಹೇಳಿಕೊಂಡ
ಪದಾರ್ಥ (ಕ.ಗ.ಪ)
ಪರಿಚರಿಯತನ ಇದು ಕುಮಾರವ್ಯಾಸನ ಪ್ರಯೋಗ-ಸೇವಾನುಭವ ಎಂಬರ್ಥದಲ್ಲಿ. (ಪರಿಚರ್ಯತನ), ಸಂಗರ-ಸಂಗ್ರಾಮ, ಅರಿಭಟ-ಶತ್ರುವೀರ, ಅರಿದು-ಅಸಾಧ್ಯ, ಮನಬರಡ-ಶುಷ್ಕವಾದ ಮನಸ್ಸುಳ್ಳವ, ಕೈಯ್-ವೃತ್ತಿಪರಿಣತಿ, ರಣಸೂರೆ-ಯುದ್ಧ
ಟಿಪ್ಪನೀ (ಕ.ಗ.ಪ)
ಮೂಲಭಾರತದ ಅರ್ಜುನನೂ ಹೀಗೆಯೇ ಹೇಳುತ್ತಾನೆ.
(ಕಾಶಕ್ತಿರ್ಮಮ ಸಾರಥ್ಯಂ ಕರ್ತುಂ ಸಂಗ್ರಾಮ ಮೂರ್ಧನಿ.
ಗೀತಂ ವಾ ಯದಿವಾ ನೃತ್ಯಂ ವಾದಿತ್ವಂ ವಾ ಪೃಥಗ್ವಿಧಂ
ತತ್ ಕರಿಷ್ಯಾಮಿ ಭದ್ರಂತೇ ಸಾರಥಿಂತು ಕುತೋಮಮ)
“ಯುದ್ಧ ಭೂಮಿಯಲ್ಲಿ ನಿಂತು ಸಾರಥ್ಯವನ್ನು ನಿರ್ವಹಿಸುವ ಶಕ್ತಿ ನನಗೆಲ್ಲಿದೆ? ಹಾಡು ಕುಣಿತಗಳನ್ನು ಮಾತ್ರ ನಾನು ಬಲ್ಲೆ "
ಮೂಲ ...{Loading}...
ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ ॥41॥
೦೪೨ ಆನಿರಲು ಭೀಷ್ಮಾದಿಗಳು ...{Loading}...
ಆನಿರಲು ಭೀಷ್ಮಾದಿಗಳು ನಿನ
ಗೇನ ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಅಯ್ಯಾ ಬೃಹನ್ನಳೆ ! ನಾನೇ ಇರುವಾಗ ಆ ಭೀಷ್ಮಾದಿಗಳು ನಿನಗೆ ಏನು ಮಾಡಿಯಾರು ? ನೀನು ಹೆದರದೆ ರಥ ನಡೆಸಿದರೆ ಸಾಕು. ನಿಮಿಷಕ್ಕೆ ಶತ್ರುಗಳನ್ನು ಗೆಲ್ಲುತ್ತೇನೆ. ನಿನಗೆ ನಾನು ಎಂಥ ವೀರ ಎಂಬುದು ಗೊತ್ತಿಲ್ಲ. ಆ ಅಶ್ವತ್ಥಾಮ ಕರ್ಣ ದ್ರೋಣ ಎನ್ನುವವರೇನೂ ನಾನರಿಯದವರಲ್ಲ. ನೀನು ಸುಮ್ಮನೆ ಸಾರಥಿಯಾಗು ಸಾಕು ಎಂದು ಉತ್ತರ ಹೇಳಿದ.
ಪದಾರ್ಥ (ಕ.ಗ.ಪ)
ಅಳುಕದೆ-ಹಿಂಜರಿಯದೆ
ಟಿಪ್ಪನೀ (ಕ.ಗ.ಪ)
ಇಲ್ಲಿ ವಿಸಂಗತಿ ಇರುವುದು ನಿಜವಾಗಿ ತನಗೆ ಕೌರವರ ಎದುರು ನಿಲ್ಲುವ ಸಾಮಥ್ರ್ಯವಿಲ್ಲ ಎಂದು ನಟಿಸಿದ ವೀರ ಅರ್ಜುನ ಮತ್ತು ಏನೂ ಸತ್ವವಿಲ್ಲದಿದ್ದರೂ ಕೌರವರನ್ನೆಲ್ಲ ಬಲ್ಲೆ ಒಂದು ನಿಮಿಷಕ್ಕೆ ಅವರನ್ನೆಲ್ಲ ಸೋಲಿಸುತ್ತೇನೆ ಹೆದರಬೇಡ ಎಂದು ಧೈರ್ಯ ತುಂಬುವ ಉತ್ತರ ಇವರ ಸಂಭಾಷಣೆಯಲ್ಲಿ ಈ ವಿಸಂಗತಿ ಕೂಡ ಹಾಸ್ಯಸ್ಫೋಟಕವಾಗಿದೆ.
ಮೂಲ ...{Loading}...
ಆನಿರಲು ಭೀಷ್ಮಾದಿಗಳು ನಿನ
ಗೇನ ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ ॥42॥
೦೪೩ ವೀರನಹೆ ಬಳಿಕೇನು ...{Loading}...
ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೃಹನ್ನಳೆಯು “ಉತ್ತರಕುಮಾರ ! ನೀನು ಮಹಾವೀರ ಎಂದ ಮೇಲೆ ನನಗೇಕೆ ಹೆದರಿಕೆ ? ರಾಜಕುಮಾರನಾದ ನೀನು ಹೋರಾಡಲು ತರುಣನಲ್ಲವೆ ! ಆಯಿತು. ರಥ ನಡೆಸುತ್ತೇನೆ, ರಥವನ್ನು ತರಿಸು” ಎಂದ. ತಾನೇ ಕುದುರೆಯ ಲಾಯಕ್ಕೆ ಹೋಗಿ ಉತ್ತಮವಾದ ಕುದುರೆಗಳನ್ನು ಆಯ್ದು ರಥಕ್ಕೆ ಸಿದ್ಧಪಡಿಸಿದ. ತೇರನ್ನು ಸಂವರಿಸಿ ರಥವನ್ನು ಏರಿದ.
ಪದಾರ್ಥ (ಕ.ಗ.ಪ)
ಹರೆಯ-ಪ್ರಾಯ, ವಾರುವದ ಮಂದಿರ-ಕುದುರೆ ಲಾಯ, ಚಾರು-ಮನೋಹರ, ತುರಗಾವಳಿ-ಕುದುರೆಗಳು, ಸಂವರಿಸು-ಸಿದ್ಧಪಡಿಸು
ಮೂಲ ...{Loading}...
ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ ॥43॥
೦೪೪ ಮಙ್ಗಳಾರತಿಯೆತ್ತಿದರು ನಿಖಿ ...{Loading}...
ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜ ಕುಮಾರನನುವಾದ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನಿಗೆ ಸುಮಂಗಲಿಯರು ವಿಜಯವನ್ನು ಕೋರಿ ಮಂಗಳಾರತಿ ಎತ್ತಿದರು. ಆನಂದದಿಂದ ಉತ್ತರನು ಸರ್ವಾಂಗ ಶೃಂಗಾರ ಮಾಡಿಕೊಂಡು ಹೊಳೆ ಹೊಳೆಯುತ್ತ ಬಂದು ರಥವನ್ನು ಏರಿದ. ಅರ್ಜುನನಿಗೆ ಚಿನ್ನದ ಕುಸುರಿ ಕೆಲಸ ಮಾಡಿದ್ದ ಕವಚವನ್ನು ಕೊಟ್ಟ. ಜೋಡು ಸೀಸದ ಅಂಗಿಗಳನ್ನು ಅಳವಡಿಸಿ ಯುದ್ಧಕ್ಕೆ ಹೊರಡಲು ಸಿದ್ಧನಾದ.
ಪದಾರ್ಥ (ಕ.ಗ.ಪ)
ನಿಖಿಳ-ಎಲ್ಲ, ಹೊಂಗೆಲಸಮಯ ಕವಚ… ಚಿನ್ನದ ರೇಕುಗಳಿಂದ ಕುಸುರಿ ಕೆಲಸ ಮಾಡಿದ್ದ ಕವಚ.
ಹೊಂಗೆಲಸಮಯ ಕವಚ ಅರಿಸಮಾಸದ ಬಗೆಯ ಸಮುಚ್ಚಯ ಎಂದು ವೆಂಕಟಾಚಲಶಾಸ್ತ್ರೀ ಹೇಳುತ್ತಾರೆ,
ಸೀಸಕ-ಶಿರಸ್ತ್ರಾಣ, ಜೋಡು-ಕವಚ,
ಮೂಲ ...{Loading}...
ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜ ಕುಮಾರನನುವಾದ ॥44॥
೦೪೫ ನರನು ತಲೆ ...{Loading}...
ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಬೃಹನ್ನಳೆ ಆ ಕವಚವನ್ನು ತಲೆಕೆಳಗಾಗಿ ಸರಿಸಿಕೊಳ್ಳಲು ಪ್ರಯತ್ನಿಸಿದ. ಆಗ ಅಂತಃಪುರದ ರಾಣಿಯರು ಚಪ್ಪಾಳೆ ತಟ್ಟುತ್ತ ಘೊಳ್ಳೆಂದು ನಕ್ಕರು. ಅದನ್ನು ಕಂಡು ನಾಚಿದಂತೆ ಅರ್ಜುನನು ಮತ್ತೆ ತೊಡಲು ಹೋದ. ಈ ಬಾರಿ ಮೇಲ್ಮುಖವಾಗಿ ತೊಡಲು ಪ್ರಯತ್ನಿಸಿದ. ಉತ್ತರೆಗೂ ನಗು ಬಂತು. ಆಗ ಉತ್ತರ ಕುಮಾರನು “ಉತ್ತರೆ ! ಹಾಗೆ ಮಾಡಬಾರದು. ಪಾಪ, ಸಾರಥಿಗೆ ಇವೆಲ್ಲ ಗೊತ್ತಿಲ್ಲ. ಇದರಲ್ಲಿ ತಪ್ಪಿಲ್ಲವಲ್ಲ” ಎಂದು ಹೇಳಿ ತಾನೇ ಆ ಕವಚವನ್ನು ಸಾರಥಿಗೆ ತೊಡಿಸಿದ.
ಪದಾರ್ಥ (ಕ.ಗ.ಪ)
ಸರಿ-ಸರಿಸು
ಮೂಲ ...{Loading}...
ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು ॥45॥
೦೪೬ ಕವಚವನು ತೊಡಲರಿಯದವನಾ ...{Loading}...
ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೃಹನ್ನಳೆಯ ಪಾಡನ್ನು ನೋಡಿ ಅಂತಃಪುರದ ಸ್ತ್ರೀಯರು “ಆಹಾ ! ಕವಚವನ್ನು ತೊಡಲುಬರದವನು ಯುದ್ಧದಲ್ಲಿ ಸಾರಥಿತನವನ್ನು ಹೇಗೆ ಮಾಡುತ್ತಾನೆ ?” ಎಂದು ಆಡಿಕೊಳ್ಳುತ್ತಿದ್ದರು. ಉತ್ತರೆಯು ನಿಟ್ಟಿನಲ್ಲಿ “ನಮ್ಮಣ್ಣನು ಯುದ್ಧದಲ್ಲಿ ಗೆಲ್ಲುತ್ತಾನೆ. ನೀನು ಶತ್ರುವೀರರ ರತ್ನಾಭರಣಗಳನ್ನು ವಸ್ತ್ರಗಳನ್ನೂ ತೆಗೆದುಕೊಂಡು ಬಾ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಪರಿಧಾನ-ವಸ್ತ್ರ, ಸರಿ-ಸರಿಸು, ಆಹವ-ಯುದ್ಧ, ಹವಣು-ಕ್ರಮ, ವಿಧ,
ವ್ಯಾಸರು “ಊಧ್ರ್ವಮುತ್ಕ್ಷಿಪ್ಯ ಕವಚಂ ಶರೀರೇ ಪ್ರತ್ಯಮುಂಚತ” ಎಂದು ಹೇಳಿರುವ ಮಾತಿನ ಅನುವಾದ ಇದು.
ಮೂಲ ...{Loading}...
ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ ॥46॥
೦೪೭ ನಸುನಗುತ ಕೈಕೊಣ್ಡನರ್ಜುನ ...{Loading}...
ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ತಾನೂ ನಗುನಗುತ್ತ ರಥವನ್ನು ಏರಿ ನಡೆಸಿದ. ಆಗ ವಾಯುವೇಗದಿಂದ ಆ ಕುದುರೆಗಳ ಮುನ್ನುಗ್ಗಿದುವು. ಉಳಿದ ಚತುರಂಗ ಸೇನೆ ಅರ್ಜುನನ ಹಿಂದೆ ಬರಬೇಕಿತÉಷ್ಟೇ. ಆದರೆ “ಇವನು ಹೊಸಬಗೆಯ ಸಾರಥಿ. ಈತನ ಹಿಂಬಾಲಿಸುವುದು ನಮಗೆ ಸಾಧ್ಯವಿಲ್ಲ” ಎನ್ನುತ್ತ ಚತುರಂಗ ಬಲದವರೆಲ್ಲ ಹಿಂದ್ಕೆ ಉಳಿದುಬಿಟ್ಟರು.
ಪದಾರ್ಥ (ಕ.ಗ.ಪ)
ಎಸಗು=(ರಥ) ನಡೆಸು
ಸಮೀರನ ಮಿಸುಕಲೀಯದೆ… ಸಮೀರ-ವಾಯು, ಗಾಳಿಯ ವೇಗ ಗಾಳಿಯ ವೇಗವನ್ನು ಮೀರಿಸಿದ ವೇಗ, ವಿಗಡ-ವೀರ, ಅಸದಳ-ಆಗುವುದಿಲ್ಲ, ಸಂಗಾತ-ಜೊತೆಗೆ
(ಚತುರಂಗ ಬಲದ ವಿಷಯವೇ ಮೂಲಭಾರತದಲ್ಲಿಲ್ಲ ಇದು ವಿಚಿತ್ರ !)
ಮೂಲ ...{Loading}...
ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ ॥47॥
೦೪೮ ಗತಿಗೆ ಕುಣಿದವು ...{Loading}...
ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂಗಿನ ಹೊಳ್ಳೆಗಳಿಂದ ಹೂಂಕರಿಸುತ್ತ ಗಾಳಿಯನ್ನು ಅಪಹಾಸ್ಯ ಮಾಡುವ ವೇಗದಲ್ಲಿ ಅರ್ಜುನನ ವೇಗ ಚಾಲನೆಗೆ ಕುಣಿಯುತ್ತ ಪಂಚಧಾರಾ ಗತಿಯಿಂದ ಆ ಪ್ರೌಢ ಕುದುರೆಗಳು ಸಾಗಿದುವು. ಒಂದೇ ಸಮನೆ ರಥದ ಗಾಲಿ ಮತ್ತು ಕುದುರೆಗಳಿಂದ ಮೇಲೆದ್ದ ಧೂಳೀಪಟಲದಿಂದ ಚುಂಬಿತ ದಿಶಾಮುಖನಾದ ಅರ್ಜುನನು ಕೌರವ ಸೇನೆಯ ಕಡೆಗೆ ಸಾಗಿದ.
ಪದಾರ್ಥ (ಕ.ಗ.ಪ)
ನಾಸಿಕ-ಮೂಗು, ಹುಂಕೃತಿ-ಶಬ್ದ, ಲುಳಿ-ಕಾಂತಿ, ಸಂಚಿತ-ಕೂಡಿದ, ಪಂಚಧಾರಾ ಪ್ರೌಢ ವಾಜಿಗಳು - ಐದು ಬಗೆಯ ನಡಿಗೆಯ ಕುದುರೆಗಳು
ಟಿಪ್ಪನೀ (ಕ.ಗ.ಪ)
- ಆಸ್ಕಂದಿತ (ಎಳೆಯ ನಡಿಗೆ) 2, ಧೌರಿತಕ (ಬಿರುನಡಿಗೆ) 3. ರೇಚಿತ (ಲಯಕ್ಕೆ ತಕ್ಕ ನಡಿಗೆ ಬಿಗು ನಡಿಗೆ) 4. ವಲ್ಗಿತ (ಕಾಲು ಹಾರಿಸುತ್ತ ಸಾಗುವಿಕೆ) 5. ಪ್ಲುತ-ಕುಣಿಯುತ್ತ ಸಾಗುವಿಕೆ ಪ್ಲುತ-ನೆಗೆತ, ವಿತತ-ಶ್ರೇಷ್ಠವಾದ ರಥಪದ ದಳಿತ ಪರಿಚುಂಬಿತ ದಿಶಾಮುಖ… ರಥದ ಕುದುರೆಗಳ ಪಾದದ ಧೂಳಿನಿಂದ ಆವರಿಸಲ್ಪಟ್ಟ ದಿಕ್ಕುಗಳ ಮುಖವುಳ್ಳವನು (ಅರ್ಜುನ) ಈ ವಿವರಣೆ ಎಂ.ವಿ.ಸೀತಾರಾಮಯ್ಯನವರದು, ಧಾರಾಪಂಚಕ ಎಂಬ ಇನ್ನೊಂದು ವರ್ಗವಿದೆ 1. ವಿಕ್ರಯಾ (ಸಾಮಾನ್ಯ ನಡಿಗೆ) ಪುಲಕಾ : ನಾಗಾಲೋಟ, 2. ಪೂರ್ಣ ಕಂಠೀ (ಮುಖ ನೆಟ್ಟಗಿಟ್ಟುಕೊಂಡು ಧಾವಿಸುವಿಕೆ, 3. ತ್ವರಿತಾ (ಸ್ವ ಇಚ್ಛೆಯಿಂದ ವೇಗವಾಗಿ ಓಡುವಿಕೆ, 5. ನಿರಾಲಂಬಾ (ಪೆಟ್ಟು ಕೊಟ್ಟಾಗ ಓಡುವುದು)
ಮೂಲ ...{Loading}...
ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ ॥48॥