೦೦೦ ಸೂ ರಾಯ ...{Loading}...
ಸೂ. ರಾಯ ಕುರುಬಲ ವಿರಹನಬು
ಜಾಯತಾಕ್ಷಿಯ ಸಲಹಿ ಕೀಚಕ
ರಾಯ ವಂಶಾರಣ್ಯವನು ಸವರಿದನು ಕಲಿಭೀಮ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವ ಮತ್ತು ಅವನ ಸೇನೆ ಎರಡನ್ನೂ ಅಗಲಿ ವಿರಹಸ್ಥಿತಿಯನ್ನು ಅನುಭವಿಸುತ್ತಿದ್ದ ಭೀಮನು (ಅಂದರೆ ಕೌರವನನ್ನು ಸೇನಾ ಸಮೇತ ಮುಗಿಸಲು ಅವಕಾಶಕ್ಕೆ ಕಾದು ತಪಿಸುತ್ತಿದ್ದವನು ಎಂದರ್ಥ) ಈಗ ಕೀಚಕ ವಂಶವನ್ನು ಸವರಿಹಾಕಿದ.
ಪದಾರ್ಥ (ಕ.ಗ.ಪ)
ವಿರಹ-ಅಗಲಿಕೆಯ ತಾಪ, ಕೀಚಕರಾಯ ವಂಶಾರಣ್ಯ : ಕೀಚಕ ಮತ್ತು ಅವನ 105 ತಮ್ಮಂದಿರು ಎಂಬ ಕಾಡು.
ಟಿಪ್ಪನೀ (ಕ.ಗ.ಪ)
ಕೀಚಕ ಎಂದರೆ ಬಿದಿರು ಎಂಬ ಅರ್ಥವಿರುವುದರಿಂದ ಇಲ್ಲಿ ಕೀಚಕ-ಬಿದಿರು, ವಂಶ-ನಾನಾ ಕವಲಿನ ಬಿದಿರಿನಗಳುಎಂದರ್ಥ. ವಂಶಿ, ಬನ್ಸಿ ಎರಡೂ ಬಿದಿರಿನ ಅರ್ಥ ಕೊಡುವ ಶಬ್ದಗಳು. ಕೊಳಲು ಎಂಬ ಅರ್ಥವೂ ಬೆಳೆದಿದೆ.
ಮೂಲ ...{Loading}...
ಸೂ. ರಾಯ ಕುರುಬಲ ವಿರಹನಬು
ಜಾಯತಾಕ್ಷಿಯ ಸಲಹಿ ಕೀಚಕ
ರಾಯ ವಂಶಾರಣ್ಯವನು ಸವರಿದನು ಕಲಿಭೀಮ
೦೦೧ ಬಯಸಿದಳು ಮೃತ್ಯುವನು ...{Loading}...
ಬಯಸಿದಳು ಮೃತ್ಯುವನು ಕಡು ಪಾ
ಪಿಯ ಮನೋಧರ್ಮವನು ಜನಮೇ
ಜಯ ಮಹೀಪತಿ ಕೇಳು ಪಾಂಚಾಲಿಯನು ಕರಸಿದಳು
ನಯವಿಹೀನೆ ಸುದೇಷ್ಣೆ ಬಂದಾ
ಕೆಯನು ಬೆಸಸಿದಳೆಲೆಗೆ ಅನುಜಾ
ಲಯದಲುತ್ತಮ ಮಧುವ ನೀ ಝಡಿತೆಯಲಿ ತಹುದೆಂದು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀತಿಯ ಪ್ರಜ್ಞೆಯನ್ನು ಕಳೆದುಕೊಂಡಿದ್ದ ಸುದೇಷ್ಣೆಯು ಮಹಾಪಾಪಿಯ ಮನಸ್ಸುಳ್ಳವಳಾಗಿ ತಮ್ಮನಿಗೆ ಮೃತ್ಯುವನ್ನು ಬಯಸಿ ಪಾಂಚಾಲಿಯನ್ನು ತನ್ನ ಬಳಿಗೆ ಕರೆಸಿಕೊಂಡಳು” ಎಂದು ವೈಶಂಪಾಯನರು ಜನಮೇಜಯನಿಗೆ ಹೇಳುತ್ತಿದ್ದಾರೆ. ದ್ರೌಪದಿ ಒಡತಿಯ ಬಳಿಗೆ ಬಂದಳು. “ಸೈರಂಧ್ರಿ ಈಗಲೇ ಹೋಗಿ ನನ್ನ ತಮ್ಮನ ಮನೆಯಲ್ಲಿ ಉತ್ತಮ ಮಧುವನ್ನು ಬೇಗನೆ ತೆಗೆದುಕೊಂಡು ಬಾ” ಎಂದು ಸುದೇಷ್ಣೆ ಹೇಳಿದಳು.
ಪದಾರ್ಥ (ಕ.ಗ.ಪ)
ಮಹೀಪತಿ-ರಾಜ, ಬೆಸಸು-ಅಪ್ಪಣೆಮಾಡು, ಅನುಜಾಲಯ-ತಮ್ಮನಾದ ಕೀಚಕನ ಮನೆ, ಝಡಿತೆ- ತ್ವರೆ, ಬೇಗ
ಟಿಪ್ಪನೀ (ಕ.ಗ.ಪ)
ಸುದೇಷ್ಣೆ ಮಾಡಿದ್ದು ವಿಶ್ವಾಸದ್ರೋಹ ಎಂದು ವ್ಯಾಸರು ಹೇಳುತ್ತಾರೆ
“ವಿಶ್ವಾಸಂ ಪ್ರತಿಪನ್ನಾನಾಂ ವಂಚನೇ ಕಾ ವಿದಗ್ಧತಾ
ಅಂಕಮಾರುಹ್ಯ ಸುಪ್ತಾನಾಂ ಹಂತುಂ ಕಿಂ ನಾಮ ಪೌರುಷಂ ?”
ವಿಶ್ವಾಸದಿಂದ ತಮ್ಮ ಬಳಿಗೆ ಬಂದವರಿಗೆ ವಿಷ ಹಾಕಿದರೆ ಕಾಪಾಡುವವರಾರು ?
ಕುಮಾರವ್ಯಾಸನಿಗೂ ಸುದೇಷ್ಣೆಯ ವರ್ತನೆ ಹಿಡಿಸಿಲ್ಲ. ಪಾಪಿ, ನಯವಿಹೀನೆ ಎಂದು ಆಕೆಯನ್ನು ದೂಷಿಸಿದ್ದಾನೆ. ಇದರಿಂದ ತನ್ನ ತಮ್ಮನಿಗೆ ಕೇಡು ಎಂಬುದು ತಿಳಿದಿದ್ದರೂ ಆಕೆ ಹೀಗೆ ಮಾಡಿದ್ದು ತಮ್ಮನ ಮೇಲಣ ಮೋಹದಿಂದ. ಮೂಲದಲ್ಲಿ ಸುದೇಷ್ಣೆ ನಯವಾಗಿ “ಪಾನಮಾನಯ ಕಲ್ಯಾಣೀ ಪಿಪಾಸಾ ಮಾಂ ಪ್ರಬಾಧತೇ” (ನನಗೆ ಬಾಯಾರಿಕೆಯಾಗಿದೆ ಮಧುವನ್ನು ತಾ) ಎನ್ನುತ್ತಾಳೆ.
ಪಂಪನು ಈ ಪ್ರಸಂಗದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾನೆ. ಕೀಚಕನು ಅಕ್ಕನಿಗೆ ಸೈರಂಧ್ರಿಯ ಕೈಯಲ್ಲಿ ನನಗೆ ಸುಗಂಧದ್ರವ್ಯಗಳನ್ನು ಕಳಿಸಿಕೊಡು ಎನ್ನುತ್ತಾನೆ.
(‘ಘಟ್ಟಿವೞಿ್ತಯ ಕೆಯ್ಯೊಳಪೂರ್ವ ವಿಲೇಪನಂಗಳನಟ್ಟುವುದು’)
ಅಲ್ಲದೆ ತಮ್ಮನಾದ ಕೀಚಕನ ಮನಸ್ಸಿನ ನೀಚ ಬುದ್ಧಿಯನ್ನು ತಿಳಿಯದ ಸೈರಂಧ್ರಿಯು ಒಪ್ಪಿ ಅವನ ಮನೆಗೆ ಹೋದಳು ಎಂದು ಪಂಪ ಹೇಳುತ್ತಾನೆ.
ಮೂಲ ...{Loading}...
ಬಯಸಿದಳು ಮೃತ್ಯುವನು ಕಡು ಪಾ
ಪಿಯ ಮನೋಧರ್ಮವನು ಜನಮೇ
ಜಯ ಮಹೀಪತಿ ಕೇಳು ಪಾಂಚಾಲಿಯನು ಕರಸಿದಳು
ನಯವಿಹೀನೆ ಸುದೇಷ್ಣೆ ಬಂದಾ
ಕೆಯನು ಬೆಸಸಿದಳೆಲೆಗೆ ಅನುಜಾ
ಲಯದಲುತ್ತಮ ಮಧುವ ನೀ ಝಡಿತೆಯಲಿ ತಹುದೆಂದು ॥1॥
೦೦೨ ಅಮ್ಮೆನಲ್ಲಿಗೆ ದೇವಿ ...{Loading}...
ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮ ತಾಗುವುದಾತನಳಿದರೆ ಬಳಿಕ ಹಳಿವೆಮಗೆ
ನಿಮ್ಮ ನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವದು ನಮಗದು
ಧರ್ಮವಲ್ಲುಳಿದವರ ಕಳುಹುವುದೆಂದಳಿಂದುಮುಖಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುದೇಷ್ಣೆಯ ಅಪ್ಪಣೆಯನ್ನು ನಯವಾಗಿ ನಿರಾಕರಿಸುತ್ತ ಸೈರಂಧ್ರಿಯು “ದೇವಿ, ನಾನು ಆ ಕೀಚಕನ ಮನೆಗೆ ಹೋಗುವುದಿಲ್ಲ. ಏಕೆಂದರೆ ನಿಮ್ಮ ತಮ್ಮ ಮಹಾದುಷ್ಟ. ಅವನಿಗಾಗಿ ಒಳಿತು. ಕೆಡಕುಗಳೆರಡಕ್ಕೂ ನಾವು ಬಾಧ್ಯರಾಗಬೇಕಾಗುತ್ತದೆ. ಆತ ಸತ್ತರೆ ಅಪಕೀರ್ತಿ ನಮಗೆ ತಗುಲಿಕೊಳ್ಳುತ್ತದೆ. ನಾವು ಶ್ರದ್ಧೆಯಿಂದ ಇಷ್ಟುದಿನ ನಿಮ್ಮ ಸೇವೆಯನ್ನು ಮಾಡಿ ಈಗ ಇಂಥ ಕೊಲೆಗೆಲಸ ಮಾಡಿಸುವುದು ಧರ್ಮವಲ್ಲ. ಆದುದರಿಂದ ದಯವಿಟ್ಟು ಬೇರೆ ಯಾರನ್ನಾದರೂ ಕಳಿಸಿ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಅಮ್ಮೆನು-ನಾನು ಹೋಗುವುದಿಲ್ಲ, ಹೋಗಲಾರೆ, ಲೇಸು ಹೊಲ್ಲೆಹ-ಒಳ್ಳೆಯದು ಕೆಟ್ಟದ್ದು, ಹಳಿವು-ನಿಂದೆ, ಅಪವಾದ, ವಿಕರ್ಮ-ಕೆಟ್ಟ ಕೆಲಸ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೂಡ ಸ್ಪಷ್ಟವಾಗಿ ದ್ರೌಪದಿ
ನ ಗಚ್ಛೇಯಂ ಅಹಂ ತಸ್ಯ, ರಾಜಪುತ್ರಿ, ನಿವೇಶನಂ
ತ್ವಮೇವ ರಾಜ್ಞಿ ಜಾನಾಪಿ ಯಥಾ ಸ ನಿರಪತ್ರಪಃ
(ಕೀಚಕನು ನಾಚಿಕೆಯಿಲ್ಲದವನು. ಅದು ನಿನಗೇ ಗೊತ್ತು. ನಾನು ಅವನ ಮನೆಗೆ ಹೋಗುವುದಿಲ್ಲ).
ಮೂಲ ...{Loading}...
ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮ ತಾಗುವುದಾತನಳಿದರೆ ಬಳಿಕ ಹಳಿವೆಮಗೆ
ನಿಮ್ಮ ನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವದು ನಮಗದು
ಧರ್ಮವಲ್ಲುಳಿದವರ ಕಳುಹುವುದೆಂದಳಿಂದುಮುಖಿ ॥2॥
೦೦೩ ಎನಲು ಭುಗಿಲೆನ್ದಳು ...{Loading}...
ಎನಲು ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತುಕೇಳಿ ಸುದೇಷ್ಣೆ ಕೂಡಲೇ ಸಿಟ್ಟಿಗೆದ್ದಳು “ಛೀ ! ಸುಡು. ತುಂಬ ಜಂಬದ ಮಾತಾಡುತ್ತಿದ್ದೀಯೆ. ನಿನ್ನಂಥ ಅಲ್ಪಳಿಂದ ನನಗಾಗಲಿ ನನ್ನವರಿಗಾಗಲಿ ಹಾನಿಯಾಗುವುದುಂಟೆ ? ನನ್ನ ತಮ್ಮ ಎಂಥ ವೀರ ಎಂಬುದು ನಿನಗೆ ಗೊತ್ತಿಲ್ಲ. ಈಗ ಆ ಮಾತೆಲ್ಲ ಯಾಕೆ ? ಸುಮ್ಮನೆ ಆತನ ಬಳಿಗೆ ಹೋಗಿ ಬಾ, ನಡಿ” ಎಂದಾಗ ಅಬಲೆಯಾದ ಸೈರಂಧ್ರಿಯು ವಿಧಿಯಿಲ್ಲದೆ ಅವಳ ಮಾತಿಗೆ ಒಪ್ಪಿ ಅರಮನೆಯಿಂದ ಹೊರಟಳು.
ಪದಾರ್ಥ (ಕ.ಗ.ಪ)
ಭುಗಿಲ್ ಎನ್ನು = ಕೂಡಲೇ ಸಿಟ್ಟಿಗೇಳು, ಹಾನಿ ಹರಿಬ-ಕೆಡುಕು, ತೊಂದರೆ, ಅನುಜ-ತಮ್ಮ, ಹೊರವಡು-ಹೊರಡು, ನಿಜ-ತನ್ನ
ಟಿಪ್ಪನೀ (ಕ.ಗ.ಪ)
ವ್ಯಾಸಭಾರತದಲ್ಲಿ ಸುದೇಷ್ಣೆ ಹೀಗೆ ಕೆರಳುವುದಿಲ್ಲ. ನಾನು ನಿನ್ನನ್ನು ಕಳಿಸಿರುವಾಗ ಆತ ನಿನ್ನನ್ನು ಬಾಧಿಸುವುದಿಲ್ಲ. (ನೈವ ತ್ವಾಂ ಜಾತು ಹಿಂಸ್ಯಾತ್ ಸ ಇತಃ ಸಂ ಪ್ರೇಷಿತಾ ಮಯಾ) ಎನ್ನುತ್ತಾಳೆ.
‘ಎನಲು’ ಎಂಬ ಶಬ್ದನೋಡಿ ಹೀಗೆ ಸಮುಚ್ಚಯದಿಂದ ವಾಕ್ಯಾರಂಭ ಮಾಡುವುದನ್ನು ಹಲವೆಡೆ ಕಾಣಬಹುದು.
ಮೂಲ ...{Loading}...
ಎನಲು ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ ॥3॥
೦೦೪ ದೇವಿ ನೇಮಿಸಲರಿಯೆನೆನ್ದೊಡಿ ...{Loading}...
ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧ ವಿಘಾತಿಯಿದು ಬಲುಹು
ಸೇವಿಸುವದೇ ಕಷ್ಟವೆಂಬುದು
ಕೋವಿದರ ಮತ ಶಿವ ಶಿವಾ ರಾ
ಜೀವಲೋಚನ ಕೃಷ್ಣ ಬಲ್ಲನೆನುತ್ತ ಗಮಿಸಿದಳು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನ ಮನೆಗೆ ಹೋಗುವಾಗ ಸೈರಂಧ್ರಿಗೆ ಬಂದ ಯೋಚನೆ ಇದು. “ಅಲ್ಲ, ದೇವಿ ಸುದೇಷ್ಣೆ ತನ್ನ ತಮ್ಮನನ್ನೇ ನಿಯಂತ್ರಿಸಲಾರಳೆಂದು ಹೇಳಿದರೆ ಇದು ಯಾವ ಧರ್ಮ ? ಶಿವ ಶಿವ ಅವಳ ಈ ನಡವಳಿಕೆ ಅವರುಗಳಿಗೆ ಸಾವನ್ನು ತರುತ್ತದೆ. ಈ ಬಲವಾದ ಪೆಟ್ಟು ತಪ್ಪಿಸಿಕೊಳ್ಳಲಾಗದ್ದು. ಪರರನ್ನು ಸೇವಿಸುವದೇ ಕಷ್ಟ ಎಂದು ತಿಳಿದವರು ಹೇಳುತ್ತಾರೆ. ಶಿವಶಿವಾ ಶ್ರೀಕೃಷ್ಣನೇ ಬಲ್ಲ”
ಪದಾರ್ಥ (ಕ.ಗ.ಪ)
ನೇಮಿಸು-ಅಪ್ಪಣೆ ಮಾಡು (ತಮ್ಮನನ್ನು) ನಿಯಂತ್ರಿಸು, ಬದ್ಧ ವಿಘಾತಿ-ಖಚಿತವಾದ ಸಂಗತಿ. ತಪ್ಪಿಸಿಕೊಳ್ಳಲಾಗದ ಪೆಟ್ಟು, ಕೋವಿದ-ವಿದ್ವಾಂಸ, ಬಲ್ಲವ.
ಪಾಠಾನ್ತರ (ಕ.ಗ.ಪ)
ಹದನಾವನವರಿಗೆ- ಹದ ಸಾವನವರಿಗೆ
ವಿರಾಟಪರ್ವ - ಮೈ.ವಿ.ವಿ.
ಮೂಲ ...{Loading}...
ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧ ವಿಘಾತಿಯಿದು ಬಲುಹು
ಸೇವಿಸುವದೇ ಕಷ್ಟವೆಂಬುದು
ಕೋವಿದರ ಮತ ಶಿವ ಶಿವಾ ರಾ
ಜೀವಲೋಚನ ಕೃಷ್ಣ ಬಲ್ಲನೆನುತ್ತ ಗಮಿಸಿದಳು ॥4॥
೦೦೫ ಹರಿ ಹರಿ ...{Loading}...
ಹರಿ ಹರಿ ಶ್ರೀಕಾಂತ ದಾನವ
ಹರ ಮುರಾರಿ ಮುಕುಂದ ಗತಿಶೂ
ನ್ಯರಿಗೆ ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರಿ ಹರಿ ! ಶ್ರೀಕಾಂತ ! ದಾನವಹರ ! ಮುರಾರಿ ! ಮುಕುಂದ ! ಅನಾಥರಾದವರಿಗೆ ನೀನೇ ಗತಿಯಲ್ಲವೆ ? ನನ್ನ ಗೌರವ ಹಾಳಾಗುವುದರಲ್ಲಿದೆ. ಹಿಂದೆ ದುಶ್ಶಾಸನನು ನನ್ನ ಸೀರೆಯನ್ನು ಎಳೆದಿದ್ದನಲ್ಲವೆ ? ಅಂಥದೇ ಭಯ ಈಗ ಮತ್ತೆ ಬಂದಿದೆ. ಏನು ಮಾಡಬೇಕೆಂಬುದನ್ನು ಕರುಣಾಶಾಲಿಯಾದ ನೀನೇ ಬಲ್ಲೆ” ಎನ್ನುತ್ತ ಮುಂದೆ ದ್ರೌಪದಿ ಸಾಗಿದಳು.
ಪದಾರ್ಥ (ಕ.ಗ.ಪ)
ಗರುವಾಯಿ-ಪ್ರತಿಷ್ಠೆ, ಕುರುಕುಲಾಗ್ರಣಿ-ಕೌರವಕುಲದ ವೀರ-ದುಶ್ಶಾಸನ, ವಸ್ತ್ರಾಕರುಷಣ-ಸೀರೆಯನ್ನು ಸೆಳೆಯುವಿಕೆ,
ಮೂಲ ...{Loading}...
ಹರಿ ಹರಿ ಶ್ರೀಕಾಂತ ದಾನವ
ಹರ ಮುರಾರಿ ಮುಕುಂದ ಗತಿಶೂ
ನ್ಯರಿಗೆ ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ ॥5॥
೦೦೬ ಸುರಪ ಶಿಖಿ ...{Loading}...
ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಿಗಿ
ದರೆಗಳಿಗೆ ನಿಂದಬುಜಮಿತ್ರನ ಭಜಿಸಿ ಕಂದೆರೆಯೆ
ಮುರಿವ ದೈತ್ಯನ ಕಾಹ ಕೊಟ್ಟನು
ತರಣಿ ತರುಣಿಗೆ ಮಂದ ಮಂದೋ
ತ್ತರದ ಗಮನದೊಳಬಲೆ ಬಂದಳು ಕೀಚಕನ ಮನೆಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರುತ್ತಾ ದಾರಿಯಲ್ಲಿ ದ್ರೌಪದಿಯು ದೇವೇಂದ್ರ ಅಗ್ನಿ, ಯಮ, ನಿರುತಿ, ವರುಣ ಮೊದಲಾದ ದಿಕ್ಪಾಲರಿಗೆ ನಮಸ್ಕಾರ ಮಾಡಿದಳು. ಅನಂತರ ಸ್ವಲ್ಪ ಹೊತ್ತು ನಿಂತಲ್ಲೇ ನಿಂತು ಕಣ್ಣು ಮುಚ್ಚಿ ಸೂರ್ಯನನ್ನು ಧ್ಯಾನಿಸಿ ಅನಂತರ ಕಣ್ಣು ತೆರೆದಳು. ಆಗ ಸೂರ್ಯನು ಒಬ್ಬ ಬಲಶಾಲಿಯಾದ ರಾಕ್ಷಸನನ್ನು ಅವಳ ಕಾವಲಿಗೆ ಬಿಟ್ಟನು. ನಿಧಾನವಾಗಿ ಹೆಜ್ಜೆ ಹಾಕುತ್ತ ಸೈರಂಧ್ರಿ ಕೀಚಕನ ಮನೆಗೆ ಬಂದಳು.
ಪದಾರ್ಥ (ಕ.ಗ.ಪ)
ಸುರಪ-ಇಂದ್ರ, ಶಿಖಿ-ಅಗ್ನಿ, ಅಬುಜಮಿತ್ರ-ಸೂರ್ಯ (ತಾವರೆಯ ಸ್ನೇಹಿತ) ತರಣಿ-ಸೂರ್ಯ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೂಡ ಸೈರಂಧ್ರಿ ‘ಉಪಾತಿಷ್ಠತ ಸಾ ಸೂರ್ಯಂ’ ಎಂಬ ಮಾತಿದೆ. ಆಗ “ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥ ಮಾದಿಶತ್; ತಚ್ಚೈ ನಾ ಜಹತ್ ತತ್ರಸರ್ವಾವಸ್ಥಾಸ್ವನಿಂದಿತಾ” (ಅವಳ ರಕ್ಷೆಗೆ ಸೂರ್ಯನು ಅದೃಶ್ಯ ರಾಕ್ಷಸನನ್ನು ಕಳಿಸಿದ. ಆ ರಾಕ್ಷಸನು ನಿರ್ದೋಷಿಯಾದ ದ್ರೌಪದಿಯನ್ನು ಎಲ್ಲ ದಿಕ್ಕುಗಳಿಂದ ಕಾಪಾಡಲು ಸಿದ್ಧನಾಗಿದ್ದ)
ಸೂರ್ಯನಂಥ ದೇವ ಪುರುಷನು ರಾಕ್ಷಸನನ್ನೇಕೆ ದ್ರೌಪದಿಯ ರಕ್ಷಣೆಗೆ ಕಳುಹಿಸಿದ ಎಂಬುದು ಸೋಜಿಗದ ಸಂಗತಿಯಾಗಿದೆ ಅಥವಾ ರಾಕ್ಷಸರೂ ಅವನ ಭೃತ್ಯ ವರ್ಗದಲ್ಲಿದ್ದರೋ ಏನೋ ಅಥವಾ ಕೀಚಕನನ್ನು ಎದುರಿಸಲು ರಾಕ್ಷಸನೇ ತಕ್ಕವನು ಎಂದು ಸೂರ್ಯನು ಭಾವಿಸಿರಬಹುದು.
ಮೂಲ ...{Loading}...
ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಿಗಿ
ದರೆಗಳಿಗೆ ನಿಂದಬುಜಮಿತ್ರನ ಭಜಿಸಿ ಕಂದೆರೆಯೆ
ಮುರಿವ ದೈತ್ಯನ ಕಾಹ ಕೊಟ್ಟನು
ತರಣಿ ತರುಣಿಗೆ ಮಂದ ಮಂದೋ
ತ್ತರದ ಗಮನದೊಳಬಲೆ ಬಂದಳು ಕೀಚಕನ ಮನೆಗೆ ॥6॥
೦೦೭ ಚಾರು ನೂಪುರ ...{Loading}...
ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಳಂಗನೆ ಕೀಚಕಾಲಯಕೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ಮನೋಹರವಾದ ಕಾಲ್ಗೆಜ್ಜೆಯ ಮಣಿಗಳ ಝಣ ಝಣ ಶಬ್ದ ಕೇಳಿ ಮನೆಯಲ್ಲಿದ್ದ ನವಿಲುಗಳು ಸಂಭ್ರಮದಿಂದ ಕುಣಿದಾಡಿದುವು (ಅವಳ ಕಾಲ್ಗೆಜ್ಜೆ ಸದ್ದನ್ನು ಕವಿ ಇಲ್ಲಿ ನವಿಲನ್ನು ಆಕರ್ಷಿಸಿದ ಗುಡುಗಿನ ಧ್ವನಿಯಂತಿತ್ತು ಎನ್ನುತ್ತಾನೆ. ಅವಳ ಕಡೆಗಣ್ಣ ನೋಟದ ಮೀನೂ ಇಲ್ಲಿ ಸೇರಿಕೊಂಡಿದೆ) ಆ ದ್ರೌಪದಿಯ ದೇಹದ ಪರಿಮಳದ ಭರಕ್ಕೆ ತುಂಬಿಗಳು ಸಾಲು ಸಾಲಾಗಿ ಬಂದುವು. ಹೀಗೆ ದ್ರೌಪದಿ ಕೀಚಕನ ಅರಮನೆಗೆ ಬಂದಳು.
ಪದಾರ್ಥ (ಕ.ಗ.ಪ)
ಚಾರು-ಮನೋಹರ, ನೂಪುರ-ಕಾಲ್ಗೆಜ್ಜೆ, ರವ-ಶಬ್ದ, ಮಯೂರ-ನವಿಲು, ಕಟಾಕ್ಷ-ಕಡೆಗಣ್ಣು, ಅಂಗವಟ್ಟ-ದೇಹದ ಸೌಂದರ್ಯ, ಭಾರಣೆ-ಭರ, ಸಾರ-ಸಾಲು
ಟಿಪ್ಪನೀ (ಕ.ಗ.ಪ)
ಕಾಳಿದಾಸನು ಮೇಘದೂತದಲ್ಲಿ ಅಗರು ಚಂದನಗಳ ಕಂಪುಳ್ಳ ಮೋಡವನ್ನು ಕಂಡು ಆ ಭವನದ ಮಯೂರಗಳು ಆನಂದದಿಂದ ನೃತ್ಯೋಪಹಾರ ಮಾಡುತ್ತಿದ್ದುವು ಎಂದು ಹೇಳಿದ್ದಾನೆ. (“ಬಂಧು ಪ್ರೀತ್ಯಾ ಭವನ ಶಿಖಿಭಿರ್ದತ್ತ ನೃತ್ತೋಪಹಾರಃ”)
ಮೂಲ ...{Loading}...
ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಳಂಗನೆ ಕೀಚಕಾಲಯಕೆ ॥7॥
೦೦೮ ಮನುಮಥನ ಮದದಾನೆ ...{Loading}...
ಮನುಮಥನ ಮದದಾನೆ ಕಂದ
ರ್ಪನ ಮಹಾ ಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸೃತಿಸುಖದ ಸಾಕಾರೆ
ಮನಸಿಜನ ಮಸೆದಲಗು ಮುನಿ ಮೋ
ಹನತಿಲಕ ಲಾವಣ್ಯಸಾಗರ
ಜನಿತ ಲಕ್ಷ್ಮಿ ಲತಾಂಗಿ ಬಂದಳು ಕೀಚಕನ ಮನೆಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನ್ಮಥನು ಸಾಕಿದ್ದ ಮದದಾನೆಯಂತೆ ! ಅಥವಾ ಮನ್ಮಥನ ಮಹಾಮಂತ್ರದ ಅಧಿದೇವತೆಯಂತೆ ! ಜನರನ್ನು ಮರುಳುಗೊಳಿಸುವ ಮತ್ತೇರಿಸುವ ಮದ್ದಿನಂತೆ, ಸಂಸಾರ ಸುಖವೇ ಆಕಾರ ಪಡೆದು ಬಂದಂತೆ, ಮನ್ಮಥನ ಮಸೆದ ಕತ್ತಿಯ ಅಲಗಿನಂತೆ, ಋಷಿಗಳನ್ನು ಕೂಡ ಮೋಹಗೊಳ್ಳುವಂತೆ ಮಾಡುವ ತಿಲಕದಂತೆ, ಸೌಂದರ್ಯವೆಂಬ ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯಂತಿದ್ದ ಲತಾಂಗಿ ದ್ರೌಪದಿ ಕೀಚಕನ ಮನೆಗೆ ಬಂದಳು.
ಪದಾರ್ಥ (ಕ.ಗ.ಪ)
ಮನುಮಥನ-ಮನ್ಮಥನ, ಕಂದರ್ಪ-ಮನ್ಮಥ, ಮದ್ದು-ವಶಪಡಿಸಿಕೊಳ್ಳಲು ಬಳಸುವ ಔಷಧ (ವಶೀಕರಣದ ಔಷಧ) ದೂರದಿಂದ ದ್ರೌಪದಿಯನ್ನು ಕಂಡಾಗ ಕೀಚಕನ ಕಲ್ಪನೆ ಗರಿಗೆದರಿದೆಯೆಂದು ಭಾವಿಸಬಹುದು.
ಟಿಪ್ಪನೀ (ಕ.ಗ.ಪ)
(ನೋಡುತ್ತಿರುವವನು ಕೀಚಕನೆಂದು ಭಾವಿಸಿದರೆ ಈ ವರ್ಣನೆಗೆ ಅರ್ಥ ಬರುತ್ತದೆ. ಬರಿಯ ಕವಿಯದೆಂದು ಭಾವಿಸಿದರೆ ಅವನು ತೋರುವ ಉತ್ಸಾಹ ಸಮರ್ಥನೀಯವಾಗುವುದಿಲ್ಲ).
ಮೂಲ ...{Loading}...
ಮನುಮಥನ ಮದದಾನೆ ಕಂದ
ರ್ಪನ ಮಹಾ ಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸೃತಿಸುಖದ ಸಾಕಾರೆ
ಮನಸಿಜನ ಮಸೆದಲಗು ಮುನಿ ಮೋ
ಹನತಿಲಕ ಲಾವಣ್ಯಸಾಗರ
ಜನಿತ ಲಕ್ಷ್ಮಿ ಲತಾಂಗಿ ಬಂದಳು ಕೀಚಕನ ಮನೆಗೆ ॥8॥
೦೦೯ ಕುಡಿತೆಗಙ್ಗಳ ಚಪಲೆಯುಙ್ಗುರ ...{Loading}...
ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ನಲವಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನ ತನು ನಡ
ನಡುಗಿ ನಿಂದುದದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ಬೊಗಸೆಗಣ್ಣಿನ ಚಪಲೆ ! ಉಂಗುರದಷ್ಟು ಸಣ್ಣದಾದ ಸೊಂಟದ ರೂಪವತಿ ಅವಳು ! ಹಂಸದ ನಡಿಗೆಯ ಠೀವಿಯುಳ್ಳ ನಾಯಕಿ, ತಾವರೆಯ ಸುವಾಸನೆಯ ಕಡು ಚೆಲುವೆ. ಅವಳನ್ನು ಕಂಡು ಕೀಚಕನ ದೇಹ ಕಂಪಿಸಿತು. ಆಹಾ ! ಇಂಥ ಚೆಲುವು ಬೇರೆ ಯಾವ ಹೆಂಗಸಿಗಿದೆ ಎನ್ನುತ್ತ ಕೀಚಕನು ಅವಳ ಕಡೆ ನೋಡ ತೊಡಗಿದ.
ಪದಾರ್ಥ (ಕ.ಗ.ಪ)
ಕುಡಿತೆ-ಬೊಗಸೆ, ಉಂಗುರವಿಡಿಯ ನಡು-ಉಂಗುರದಷ್ಟು ತೆಳು ಸೊಂಟ, ಕಾಳಿದಾಸನು ಹೇಳುವ ‘ಒರ್ಪಿಡಿಯೊಳಾನುವವೊಲಿಹುದು ತನುವು’ ಎಂಬ ಮಾತನ್ನು ನೆನೆಯಬಹುದು. ಮೌಳಿಕಾತಿ<ಮೌಳಿಕಾರ್ತಿ ನಾಯಕಿ, ಪಯೋಜ-ತಾವರೆ
ಪಾಠಾನ್ತರ (ಕ.ಗ.ಪ)
ಗಮನದ - ನಲವಿನ
ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ನಲವಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನ ತನು ನಡ
ನಡುಗಿ ನಿಂದುದದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ ॥9॥
೦೧೦ ಅರಿದು ನೆತ್ತರುಗಾಣದಲಗಿದು ...{Loading}...
ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ರೂಪ ಹರಿತವಾದ ಕತ್ತಿಯ ಅಲಗಿನಂತಿತ್ತು. ಆದರೆ ಅದು ಕತ್ತರಿಸಿದರೂ ರಕ್ತ ಬರುತ್ತಿರಲಿಲ್ಲ. ಹಾಗೆ ಅವಳ ರೂಪ ಅವನನ್ನು ಕತ್ತರಿಸಿಕೊಲ್ಲುವಂತಿತ್ತು. ಬಾರಿಸಿದರೂ ಬಾಸುಂಡೆ ಏಳಿಸದ ಚಾವಟಿಯ ಹುರಿಯಂತೆ ಅವಳ ರೂಪ. ಹಾಗೆಯೇ ಅವಳ ರೂಪವೆಂಬುದು ಬಲಿಷ್ಠವಾದ ನೇಣಿನ ಹಗ್ಗದಂತಿತ್ತು. ಅವಳ ರೂಪವು ಕಣ್ಣಿಗೆ ಬಡಿದರೆ ಹೊಗೆಯೇ ಹರಡದೆ ಎದೆಯು ಧಗಧಗನೆ ಹೊತ್ತಿ ಉರಿಯುವಂತಿತ್ತು. ಅರರೆ ! ಅವಳ ಕಣ್ಣುಗಳ ಕತ್ತಿಯ ಹರಿತವಾದ ಅಂಚು ಯಾರ ಕೊರಳನ್ನು ತಾನೇ ಕೊಯ್ಯುವುದಿಲ್ಲ ? ಎಂಥ ವಿವೇಕವಂತನನ್ನೂ ಸತ್ವ ಹೀನನಾಗುವಂತೆ ಮಾಡುವುದಿಲ್ಲ ? ಅಬ್ಬಾ ಈಕೆಯ ರೂಪದ ಎದುರಿಗೆ ಯಾರು ನಿಲ್ಲಬಲ್ಲರು ಎಂದು ಕೀಚಕ ಆಶ್ಚರ್ಯಪಟ್ಟ.
ಪದಾರ್ಥ (ಕ.ಗ.ಪ)
ಅರಿದು-ಕತ್ತರಿಸಿ, ನೆತ್ತರುಗಾಣದ-ರಕ್ತ ಸುರಿಯದ, ಅಲಗು ಇದು-(ದ್ರೌಪದಿಯ ರೂಪವು ಅಂಥ) ಅಲಗು, ಕತ್ತಿಯ ಅಂಚು, ಬಾಸುಳು-ಬಾಸುಂಡೆ, ಮೈಮೇಲೆ ಗುಳ್ಳೆ, ನೇಣ್-ಹಗ್ಗ ಹುರಿ, ಮಸಗದ-ಹೊತ್ತಿಕೊಳ್ಳದ, ಅರಿಕೆ-ವಿವೇಕ
ಟಿಪ್ಪನೀ (ಕ.ಗ.ಪ)
ಬರಿಯ ಸಾಂಪ್ರದಾಯಕ ವರ್ಣನೆ ಕವಿ ಸಮಯಗಳಲ್ಲೇ ಮುಳುಗಿದ್ದ ಕವಿ ಇಲ್ಲಿ ತಟಕ್ಕನೆ ತನ್ನ ಪ್ರತಿಭೆಯ ಮಿಂಚಿನ ದರ್ಶನ ಮಾಡಿಸುತ್ತಾನೆ. ಕೀಚಕನು ವೀರನೂ ಕ್ಷತ್ರಿಯನೂ ತಾಮಸ ಸ್ವಭಾವದವನೂ ಆದುದರಿಂದ ಅವನ ಮನೋಧರ್ಮಕ್ಕೆ ಹೊಂದುವ ಪರಿಭಾಷೆಯನ್ನು ಬಳಸಿದ್ದಾನೆ. ಕೊಲ್ಲುವ ಸೌಂದರ್ಯ ಎಂದರೆ ಇದೇ ಅಲ್ಲವೆ ? ಆದರೆ ಈ ಕಾರ್ಯ ಒಳಗಿನಿಂದಲೇ ಚುಚ್ಚುತ್ತದೆ. ಬಾರಿಸುತ್ತದೆ, ಸುಡುತ್ತದೆ, ಎಂಥವರನ್ನೂ ವಿವೇಕಶೂನ್ಯರನ್ನಾಗಿ ಪರಿವರ್ತಿಸುತ್ತದೆ ಎಂಬುದನ್ನು ಕವಿ ಅತ್ಯಂತ ಸೂಕ್ತ ರೂಪಕಗಳಿಂದ ಸ್ಪಷ್ಟಪಡಿಸುತ್ತಾನೆ.
ಈ ವರ್ಣನೆಯಲ್ಲಿ ಇನ್ನೊಂದು ವಿಶೇಷವಿದೆ. ಕೀಚಕ ತನಗೆ ತಿಳಿಯದಂತೆ ತನ್ನ ಅವಸಾನದ ಚಿತ್ರಗಳನ್ನೇ ಕೊಡುತ್ತ ಹೋಗಿರುವುದು, ಕವಿಯ ಮಾರ್ಮಿಕ ವರ್ಣನಾ ಕುಶಲತೆಯನ್ನು ಸಾರುವಂಥದು. ಒಳಮನಸ್ಸಿನಲ್ಲಿ ಮೂಡುವ ಚಿತ್ರಗಳಲ್ಲೂ ಈ ಬಗೆಯ ಅವಸಾನದ ಧ್ವನಿಯನ್ನು ಪಡಿಮೂಡಿಸಿರುವುದು ಕವಿಯ ಕೌಶಲದ ಕುರುಹಾಗಿದೆ.
ಮೂಲ ...{Loading}...
ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ ॥10॥
೦೧೧ ಆವ ಜನ್ಮದ ...{Loading}...
ಆವ ಜನ್ಮದ ಸುಕೃತ ಫಲ ನೆರೆ
ದೀ ವಧುವ ಸೇರಿದರೊ ಧನ್ಯರು
ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ
ಭಾವಿಸಲು ಸುಕೃತಾವಳಿಗಳಿಂ
ದೀ ವನಿತೆಯಲ್ಲಿಂದ ಮೇಣಿ
ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವಳ ಪತಿಗಳು ತಮ್ಮ ಯಾವ ಜನ್ಮದ ಪುಣ್ಯದ ಫಲವೆಲ್ಲ ಒಂದುಗೂಡಿದಂತಾಗಿ ಈ ವಧುವನ್ನು ಪತ್ನಿಯಾಗಿ ಪಡೆದರೋ ! ಅವರು ಎಲ್ಲರೂ ಧನ್ಯರು ? ಅವರಿಗೆ ಪೂರ್ವಜನ್ಮದ ಸುಖದ ಸರ್ವಸ್ವ ಈಗ ಲಭಿಸಿದೆ. ಹಾಗೆ ನೋಡಿದರೆ ಈ ವನಿತೆಯ ಮೂಲಕವಾಗಿಯೇ ಅವರಿಗೆ ಪುಣ್ಯ ಲಭಿಸಿದೆ. ಇದನ್ನು ಬಿಟ್ಟರೆ ಬೇರೆ ಅತಿಶಯವೇನಿದೆ ?” ಹೀಗೆ ಹೇಳಿಕೊಂಡು ಆ ದುಷ್ಟ ಕೀಚಕನು ಅವಳನ್ನು ಸ್ವಾಗತಿಸಲು ಮೇಲೆದ್ದ.
ಪದಾರ್ಥ (ಕ.ಗ.ಪ)
ಸುಕೃತ ಫಲ-ಪುಣ್ಯದ ಫಲ, ನೆರೆದು-ಒಟ್ಟುಗೂಡಿ, ಸುಕೃತಾವಳಿ-ಪುಣ್ಯ ಸಮೂಹ,
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೀಚಕನು ಬಗೆಬಗೆಯ ಅಡಿಗೆ ಮಾಡಿಸಿ ಸೈರಂಧ್ರಿಗಾಗಿ ಕಾಯುತ್ತಿರುತ್ತಾನೆ.
ಮೂಲ ...{Loading}...
ಆವ ಜನ್ಮದ ಸುಕೃತ ಫಲ ನೆರೆ
ದೀ ವಧುವ ಸೇರಿದರೊ ಧನ್ಯರು
ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ
ಭಾವಿಸಲು ಸುಕೃತಾವಳಿಗಳಿಂ
ದೀ ವನಿತೆಯಲ್ಲಿಂದ ಮೇಣಿ
ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ ॥11॥
೦೧೨ ತರುಣಿ ಬಾ ...{Loading}...
ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತರುಣಿ ! ಬಾ. ಕುಳಿತುಕೋ, ನನಗೆ ಮನಸ್ಸಿನೊಳಗೆ ನೀನು ಬರುತ್ತೀಯೋ ಇಲ್ಲವೋ ಎಂಬ ಹೊಯ್ದಾಟವಿತ್ತು. ಈಗ ಆ ತೊಡಕು ಇಲ್ಲವಾಗಿದೆ. ನೀನು ನಿನಗೆ ಸಹಾಯಕಳಾಗಿ ನಿಂತರೆ ನಾನು ಮನ್ಮಥನ ಉಪಟಳಗಳಿಗೆ ಹೆದರಬೇಕಾಗಿಲ್ಲ. ಚಂದ್ರನಿಗೆ ದುಂಬಿಗೆ ಕೋಗಿಲೆಗೆ ನಾನು ಹಬ್ಬ ಮಾಡುತ್ತೇನೆ” ಎಂದು ಕೀಚಕನು ಅಬ್ಬರಿಸಿ ನುಡಿದ. ದ್ರೌಪದಿ ಕೆರಳಿ ಅವನಿಗೆ ಹೀಗೆ ಹೇಳಿದಳು.
ಪದಾರ್ಥ (ಕ.ಗ.ಪ)
ಮದಂತಃಕರಣ-ಮತ್-ನನ್ನ, ಅಂತಃಕರಣ-ಮನಸ್ಸು, ಎಡರು-ಅಡ್ಡಿ, ಬಿರುದು-<ವಿರುಂದು>ಬಿರ್ದು>ಬಿರುದು=ಹಬ್ಬ, (ಭೋಜನ) ಪ್ರಶಸ್ತಿ, ಖತಿಗೊಳ್-ಕೋಪಗೊಳ್ಳು
ಮೂಲ ...{Loading}...
ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ॥12॥
೦೧೩ ಬಾಯಿ ಹುಳುವುದು ...{Loading}...
ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೆಡದಿರು
ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ನೀನು ಹೀಗೆ ಅಸಭ್ಯವಾಗಿ ಮಾತಾಡಿದರೆ ನಿನ್ನ ಬಾಯಲ್ಲಿ ಹುಳ ಸುರಿದೀತು. ಇಂಥ ನಾಯಿತನ (ಅಂದರೆ ಅಕ್ಕನನ್ನಾಶ್ರಯಿಸಿ ನನ್ನನ್ನು ಕರೆಸುವ ಪುಕ್ಕಲು ಸ್ವಭಾವ) ಬೇಡ. ನೀನು ಹಾಳಾಗಬೇಡ. ನಾನು ಬಂದದ್ದು ನಿನಗಾಗಿ ಅಲ್ಲ. ರಾಣಿಯು ಮಧುವನ್ನು ತರಲು ಹೇಳಿದ್ದರಿಂದ ನಿನ್ನ ಮನೆಗೆ ಬಂದೆ ಅಷ್ಟೆ. ನಿನಗೆ ನಿಜವಾಗಿ ಸಾಯುವ ಆಸೆ ಇದ್ದರೆ ಹಸಿದುಕೊಂಡು ನಿನಗಾಗಿ ಕಾಯುತ್ತಿರುವ ಶೂಲವನ್ನು ಹಾಯಿ.” ದ್ರೌಪದಿ ಹೀಗೆ ಹೇಳಿದಾಗ ಕೀಚಕನು ಭಂಡತನದಿಂದ “ಅಯ್ಯೋ ! ನಿನ್ನ ಬೈಗುಳ ನನ್ನನ್ನು ನೋಯಿಸಬಲ್ಲವೇ? ಎಂಥದೂ ಇಲ್ಲ” ಎಂದು ಹೇಳುತ್ತ ಅವಳನ್ನು ಹಿಡಿದುಕೊಂಡ.
ಪದಾರ್ಥ (ಕ.ಗ.ಪ)
ಹುಳುವುದು- ಹುಳುವುದು (ಹುಳ ಸುರಿದೀತು)
ಬಯಲನುಡಿ-ಅರ್ಥವಿಲ್ಲದ ಮಾvನ್ನು ಆಡು, ರಾಯನ ಅಂಗನೆ-ಸುದೇಷ್ಣೆ, ಹಸಿದ ಶೂಲವ… ಶೂಲ ಹಸಿದಿದೆ. ಅದಕ್ಕೆ ಏನಾದರೂ ಬೇಕು. ನೀನು ಅದನ್ನು ಚುಚ್ಚಿಕೊಂಡು ಸಾಯಿ, ಅದಕ್ಕೆ ಆಹಾರವಾಗು (ಬಸಿದ ಶೂಲವ ಹಾಯಿ ಹೋಗೆನೆ ಇದು ಎಂ.ವಿ.ಸೀ. ಅವರ ಪಾಠ ಬಸಿದ-ಹರಿತವಾದ)
ಕ್ಷಿಪ್ರ ಆಕ್ರಮಣದಿಂದ ದ್ರೌಪದಿಯನ್ನು ಅತಂತ್ರಗೊಳಿಸುವುದು ಕೀಚಕನ ಉದ್ದೇಶವಾಗಿತ್ತು. ಮತ್ತೆ ಅವಳು ತಿರಸ್ಕರಿಸಿ ಒರಟು ಮಾತಾಡಿದ್ದರಿಂದ ಅವನು ಕೆರಳಿ ಹೀಗೆ ಮಾಡಿರಲೂ ಬಹುದು.
ಟಿಪ್ಪನೀ (ಕ.ಗ.ಪ)
ಕಂಕಭಟ್ಟ - ಕಂಕ ಎಂದರೆ ಯಮಧರ್ಮರಾಯ. ಇವನಿಗೆ ಜಯ, ವೈಯಘ್ರಪಾದ ಎಂಬ ಹೆಸರುಗಳೂ ಇದ್ದುವು. ಕೈಯ ಗಂಟಿನಲ್ಲಿ ಬಹುಬಗೆಯ ಪಗಡೆಯ ಹಾಸು, ದಾಳಗಳನ್ನು ಇಟ್ಟುಕೊಂಡೇ ಧರ್ಮರಾಯನು ವಿರಾಟನ ಬಳಿಗೆ ಬರುತ್ತಾನೆ.
ವೈಯಾಘ್ರಪದ್ಯಃ ಪುನರಸಿ ವಿಪ್ರಃ
ಅಕ್ಷನ್ ಪ್ರಯೋಕ್ತುಂ ಕುಶಲೋ„ಪಿ ದೇವಿತಾ
ಕಂಕೇತಿ ನಾಮಾಸ್ಮಿ
ಎಂದು ಪರಿಚಯ ಮಾಡಿಕೊಳ್ಳುವಾಗಲೇ ತನ್ನ ಹೆಸರು ವೈಯಾಘ್ರಪಾದ ಎಂದು ಹೇಳಿಕೊಂಡು ಪಗಡೆಯಾಟದಲ್ಲಿ ತನಗಿರುವ ಪರಿಣತಿಯನ್ನೂ ಹೇಳಿಕೊಳ್ಳುತ್ತಾನೆ. ವಿರಾಟನು ಕಂಕನಿಂದ ಎಷ್ಟರಮಟ್ಟಿಗೆ ಪ್ರಭಾವಿತನಾದನೆಂದರೆ ಅವನು ಪ್ರಜೆಗಳಿಗೆ ‘‘ನೋಡಿ, ನನ್ನಂತೆ ಕಂಕಭಟ್ಟ ಕೂಡ ಈ ನಾಡಿನ ಪ್ರಭು. ಈತನಿಗೆ ಅಪ್ರಿಯವಾದುದನ್ನು ಯಾರಾದರೂ ಮಾಡಿದರೆ ಅವರನ್ನು ಕೊಲ್ಲುತ್ತೇನೆ.’’ ಎಂದು ಘೋಷಿಸುತ್ತಾನೆ. ರಾಜನ ಜೊತೆ ಪಗಡೆಯಾಡುವುದು, ಸರಸಸಂಭಾಷಣೆ ನಡೆಸುವುದು ಮತ್ತು ಹಿತವಚನಗಳನ್ನು ಹೇಳುವುದು ಕಂಕಭಟ್ಟನ ಕೆಲಸವಾಯಿತು. ಜೂಜಾಡಿ ಗೆದ್ದ ಹಣವನ್ನು ತಮ್ಮಂದಿರಿಗೆ ಕೊಡುತ್ತಿದ್ದ. ಮುಂಗೋಪಿಯಾದ ಭೀಮನು ಎಲ್ಲರೆದುರಿಗೆ ಕೀಚಕನನ್ನು ಕೊಲ್ಲಲು ಸಿದ್ಧನಾದಾಗ ತುಮಬ ಬುದ್ಧಿವಂತಿಕೆಯಿಂದ ಅದನ್ನು ತಪ್ಪಿಸಿ ತಮ್ಮ ವೇಷ ಬಯಲಾಗದಂತೆ ಎಚ್ಚರವಹಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.
ಸದಾ ವಿರಾಟನ ಅಭ್ಯುದಯವನ್ನು ಬಯಸುತ್ತಿದ್ದ ಕಂಕಭಟ್ಟನು ಗೋಗ್ರಹಣದ ಸಂದರ್ಭದಲ್ಲಿ ತಮ್ಮಂದಿರೊಂದಿಗೆ ತಾನೂ ಸುಶರ್ಮನ ಮೇಲೆ ಆಕ್ರಮಣಕ್ಕೆ ಹೊರಡುತ್ತಾನೆ. ಸುಮ್ಮನೆ ವಿರಾಟನ ಜೊತೆಗೆ ಹೊರಟಂತೆ ನಟಿಸಿದರೂ ವಿರಾಟನು ಗೋಗ್ರಹಣದ ಸಂದರ್ಭದಲ್ಲಿ ವಿಪತ್ತಿಗೆ ಸಿಲುಕಿದಾಗ ತಮಂ್ಮದಿರಿಗೆ ಹೇಳು ಸುಶರ್ಮನನ್ನು ಸೋಲಿಸುವ ವ್ಯವಸ್ಥೆ ಮಾಡುತ್ತಾನೆ. ಇಲ್ಲೂ ಕೂಡ ಶತ್ರುಗಳಿಗೆ ಪತ್ತೆಯಾಗದಂತೆ ಎಚ್ಚರ ವಹಿಸಲು ಭೀಮ ನಕುಲಾದಿಗಳಿಗೆ ಹೇಳಿದ್ದು ಕಂಕಭಟ್ಟನ ಮುನ್ನೆಚ್ಚರಿಕೆಯ ಗುಣವನ್ನು ತೋರಿಸುತ್ತದೆ. ಇತ್ತ ಕೌರವರೂ ಗೋಗ್ರಹಣಕ್ಕೆ ಬಂದು ಅರ್ಜುನನು ಉತ್ತರನ ಜತೆಯಲ್ಲಿ ಹೋಗಿ ಕೌರವರೊಂದಿಗೆ ಸೆಣಸಿ ಗೆದ್ದ ಸುದ್ದಿ ವಿರಾಟನನ್ನು ಮುಟ್ಟಿದಾಗ ನಡೆದ ನಟಕ ಆಸಕ್ತಿದಾಯಕವಾಗಿದೆ. ಮಗನೇ ಗೆದ್ದ ವೀರನೆಂಬ ಹೆಮ್ಮೆ ವಿರಾಟನಿಗಾದರೆ ಬೃಹನ್ನಳೆ ಸಾರಥಿಯಾಗಿದ್ದುದರಿಂದ ಇದೆಲ್ಲ ಸಾಧ್ಯವಾಯಿತು ಎಂದು ಕಂಕಭಟ್ಟನು ತಿದ್ದುಪಡಿ ಸೂಚಿಸುತ್ತಾನೆ. ಇದನ್ನು ಹಲವಾರು ಬಾರಿ ಕೇಳಿದ. ವಿರಾಟನಿಗೆ ದಾಳಗಳನ್ನೇ ಕಂಕಭಟ್ಟನ ಮುಖಕ್ಕೆ ರಾಚುವಷ್ಟು ಸಿಟ್ಟುಬರುತ್ತದೆ. ಅವನ ಹಣೆಯಿಂದ ರಕ್ತ ನೆಲಕ್ಕೆ ಸೋರದಂತೆ ಅಲ್ಲೇ ಇದ್ದ ಸೈರಂಧ್ರಿ ತನ್ನ ಸೀರೆಯ ಒಂದು ಭಾಗವನ್ನೇ ಹರಿದು ಮುಚ್ಚಿದಾಗ ವಿರಾಟನಿಗೆ ಆಶ್ಚರ್ಯವಾಗುತ್ತದೆ. ಆಗಲೂ ವಿರಾಟನಿಗೆ ಈ ಘಟನೆಗಳ ಕಾಲು-ಕೀಲುಗಳು ಅರ್ಥವಾಗುವುದಿಲ್ಲ. ಕೊನೆಗೆ ಉತ್ತರಕುಮಾರನೇ ನಡೆದ ವಾಸ್ತವ ಘಟನೆಗಳನ್ನು ವಿವರಿಸಿದಾಗ ವಿರಾಟನಿಗೆ ಕಂಕಭಟ್ಟ ಮತ್ತು ಬೃಹನ್ನಳೆಯರ ಶಕ್ತಿ ತಿಳಿದುಬರುತ್ತದೆ. ಮರುದಿನವಂತೂ ಪಾಂಡವರೇ ಕ್ಷತ್ರಿಯ ವೇಷ ಧರಿಸಿ ರಾಜಪೋಷಾಕುಗಳಲ್ಲಿ ಸಿಂಹಾಸನಗಳನ್ನು ಅಲಂಕರಿಸಿ ಕುಳಿತಾಗ ಇವನಿಗ ಎಲ್ಲವೂ ಕ್ರಮೇಣ ತಿಳಿಯುತ್ತದೆ. ಪಾಂಡವರ ಗುರುತುಹಿಡಿದು ಕ್ಷಮೆಯಾಚಿಸಿ ತುಂಬ ಗೌರವದಿಂದ ಕಾಣುತ್ತಾನೆ. ಅಲ್ಲದೆ ಅರ್ಜುನನ ಮಗನಿಗೆ ತನ್ನ ಮಗಳು ಉತ್ತರೆಯನ್ನು ಕೊಟ್ಟು ಮದುವೆ ಮಾಡಿ ಕಂಕಭಟ್ಟನನ್ನು ಬೀಗನನ್ನಾಗಿ ಮಾಡಿಕೊಳ್ಳುತ್ತಾನೆ.
ವೇಷಾಂತರದಲ್ಲಿ ಧರ್ಮರಾಯನ ವಾಕ್ಪ್ರತಿಭೆ, ಜ್ಞನ ಸಂಪತ್ತಿ ಮತ್ತು ಕಾರ್ಯಯೋಜನಾ ಕುಶಲತೆ ಎದ್ದು ಕಾಣುವಂತಿವೆ. ವಿರಾಟಪರ್ವದಲ್ಲಿ ಅವನು ಹೋಮಶೇವನ್ನು ಮಾತ್ರ ತಿಂದುಕೊಂಡು ಕಾಲ ಕಳೆದ, ನೆಲದ ಮೇಲೆ ಮಲಗಿದ, ತಮ್ಮಂದಿರನ್ನು ಚೆನ್ನಾಗಿ ವಿಚಾರಿಸಿಕೊಂಡದ್ದು ಅವನ ಹಿರಿಮೆಯನ್ನು ಹೇಳುತ್ತದೆ.
ಗುಪ್ತ ವೇಷದಲ್ಲಿರುವುದರಿಂದ ಅವಳು ಕಂಕಭಟ್ಟ ಎಂದು ಕರೆದಿದ್ದರೂ ಧರ್ಮ ಎಂಬ ಶಬ್ದವನ್ನು ಧ್ವನಿಪೂರ್ಣವಾಗಿ ಬಳಸಿರುವುದನ್ನು U್ಪಮನಿಸಬೇಕು ನಾವು ಇಬ್ಬರೂ ದೇಶಿಗರಲ್ಲ ಎಂಬ ಮಾತಿಗೂ ಈ ಧ್ವನಿಶಕ್ತಿಯಿದೆ. ಬೇರೆಯವರಿಗೆ ತಿಳಿಯದಂತೆ ಅವಳು ನೇರವಾಗಿ ಧರ್ಮರಾಯನಿಗೆ ಹೇಳುತ್ತಿದ್ದಾಳೆ. ಬರಿಯ ಧರ್ಮೋಪದೇಶಮಾಡಿದರೆ ಏನು ಪ್ರಯೋಜನ ? ಅದನ್ನು ಸಂದರ್ಭ ಬಂದಾಗ ಆಚರಿಸಿ ತೋರಿಸಬೇಕು ಎಂಬ ಭಾವ ಇಲ್ಲಿದೆ.
ಮೂಲ ...{Loading}...
ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೆಡದಿರು
ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ ॥13॥
೦೧೪ ಕರವನೊಡೆಮುರುಚಿದಳು ಬಟ್ಟಲ ...{Loading}...
ಕರವನೊಡೆಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ದ್ರೌಪದಿ ಕೀಚಕನ ಕೈಯನ್ನು ತಿರುಚಿದಳು. ತಾನು ತಂದಿದ್ದ ಪಾನಪಾತ್ರೆಯನ್ನು ನೆಲಕ್ಕೆ ಎಸೆದಳು. ಮುಖ ತಿರುವಿ ಬಾಗಿಲು ದಾಟಿ ಭಯದಿಂದ ನಡುಗುತ್ತ ಸಾಗಿದಳು. ಅವಳ ಸ್ತನಗಳ ಮತ್ತು ಹಿಂಭಾಗದ ಭಾರಕ್ಕೆ ಬಡನಡು ಮುರಿಯದಿದ್ದುದೇ ಪುಣ್ಯ. ಆ ಸೈರಂಧ್ರಿ ರಭಸದಿಂದ ವಿರಾಟನ ರಾಜಸಭೆಯ ಬಳಿಗೆ ಓಡಿದಳು.
ಪದಾರ್ಥ (ಕ.ಗ.ಪ)
ಮುರುಚು-ತಿರುಗಿಸು, ತಿರುಚು, ಡೆಂಡಣಿಸು-ಕೊರಗು
ಮೂಲ ...{Loading}...
ಕರವನೊಡೆಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ॥14॥
೦೧೫ ಒಡನೆ ಬೆಮ್ಬತ್ತಿದನು ...{Loading}...
ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೆ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆಯೊರಳಿದಳು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ಅವಳನ್ನು ಅಟ್ಟಿಸಿಕೊಂಡು ಹೋದ. ಅವಳ ಜಡೆಯನ್ನು ಹಿಡಿದು “ದಾಸಿಯ ಮಗಳೆ ನೀನು ಓಡಿಬಿಟ್ಟರೆ ನಾನು ಬಿಡುತ್ತೇನೆಯೆ ?” ಎಂದು ಗದರಿಸುತ್ತ ಕಾಲಲ್ಲಿ ಅವಳನ್ನು ಮೆಟ್ಟಿ ಹೊಡೆದ. ದ್ರೌಪದಿ ಕೆಳಗೆ ಬಿದ್ದಳು. ರಕ್ತ ಕಾರಿದಳು. ಅವಳ ಮುಡಿ ದೂಳಿನಲ್ಲಿ ಹೊರಳಾಡಿತ್ತು. ಬಿರುಗಾಳಿಗೆ ಸಿಕ್ಕಿ ಕೆಳಗೆ ಬಿದ್ದ ಬಾಳೆಯಂತೆ ಬಿದ್ದು ನರಳಾಡಿದಳು.
ಪದಾರ್ಥ (ಕ.ಗ.ಪ)
ಒಡೆಮೆಟ್ಟು-ಬಲವಾಗಿ ತುಳಿ, ಬೆಂಬತ್ತು-ಅಟ್ಟಿಸಿಕೊಂಡು ಹೋಗು, ಸೈಗೆಡೆ-ಬೀಳು, ಕದಳಿ-ಬಾಳೆ, ಒರಳಿದಳು-ಕಿರುಚಿಕೊಂಡಳು (ಒರಳು-ಕಿರುಚು), ಹುಡಿ - ದೂಳು
ಟಿಪ್ಪನೀ (ಕ.ಗ.ಪ)
ಅವಳು ಓಡಿದುದು ವಿರಾಟನ ಆಸ್ಥಾನದ ಬಳಿಗೆ. ಅಲ್ಲಿ ಜನ ಜಂಗುಳಿಯಿತ್ತು. ರಾಜಭಟರೂ ಇದ್ದರು. ಅಲ್ಲಿ ತನಗೆ ರಕ್ಷಣೆ ಸಿಗಬಹುದು ಎಂಬ ಆಶೆಯಿಂದ ಅವಳು ಅಲ್ಲಿಗೆ ಓಡಿ ಬಂದಿದ್ದಳು.
ಮೂಲ ...{Loading}...
ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೆ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆಯೊರಳಿದಳು ॥15॥
೦೧೬ ಕರುಳ ತೆಗೆ ...{Loading}...
ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟ ದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು
ದುರುಳನಡೆಗೆಡೆದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾದಖಿಳಜನ ನಡುಗಿತ್ತು ಭಯ ಹೊಯ್ದು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಗ ಸೂರ್ಯನು ದ್ರೌಪದಿಯ ಕಾವಲಿಗೆ ಕಳಿಸಿದ್ದ ರಾಕ್ಷಸನು ಅದೃಶ್ಯವಾಗಿಯೇ “ನಿನ್ನ ಕರುಳು ಕೀಳ ! ಮಾಂಸ ತಿನ್ನ ! ಎಂದು ಕೂಗಾಡುತ್ತ ಸಂಭ್ರಮದಿಂದ ಕೀಚಕನಿಗೆ ಎರಡು ಬಾರಿಸಿದ. ಅವನನ್ನು ಹಿಡಿದು ಕುಕ್ಕಿದ. ಪೆಟ್ಟು ತಿಂದ ದುಷ್ಟ ಕೀಚಕನು ಕೆಳಗೆ ಬಿದ್ದು ಅನಂತರ ಎದ್ದು ಕಿರುಚಿಕೊಳ್ಳುತ್ತ ತನ್ನ ಮನೆಯ ಕಡೆಗೆ ಓಡಿದ. ಈ ಕಡೆ ವಿರಾಟರಾಯನೇ ಮೊದಲಾದ ಎಲ್ಲರೂ ಈ ದೃಶ್ಯವನ್ನು ಕಂಡು ನಡುಗಿದರು. ಹಠಾತ್ತಾಗಿ ನಡೆದ ಈ ದೃಶ್ಯಾವಳಿಯಿಂದ ಅವರೆಲ್ಲ ಭಯಭೀತರಾಗಿದ್ದರು.
ಪದಾರ್ಥ (ಕ.ಗ.ಪ)
ಅಡಗು-ಮಾಂಸ, ಕುಸುಬು-ಬಟ್ಟೆ ಕುಕ್ಕಿ ಹಾಕುವಂತೆ ಕುಕ್ಕು, ಅಡೆಗೆಡೆ-ಅಡ್ಡವಾಗಿ ಬೀಳು, ಬಿದ್ದುಹೋಗು
ಟಿಪ್ಪನೀ (ಕ.ಗ.ಪ)
ಕೀಚಕನು ಅವಳನ್ನು ಅಟ್ಟಿಸಿಕೊಂಡು ಅಟ್ಟಹಾಸ ಮಾಡಿದ್ದು ಅವಳನ್ನು ಒದ್ದು ಕೆಳಗೆ ಕೆಡವಿದ್ದು ಅನಂತರ ಅವನು ಕಿರುಚಿಕೊಳ್ಳುತ್ತ ಓಡಿದ್ದು ರಾಜನಿಗೆ, ಎಲ್ಲ ಸಭಾಸದರಿಗೆ ವಿಚಿತ್ರ ಭಯ ತಂದಿತ್ತು. ಸೂರ್ಯನು ಕಳಿಸಿದ್ದ ದಾನವನು ಅದೃಶ್ಯವಾಗಿಯೇ ತನ್ನ ಕೆಲಸ ಮಾಡಿದ್ದ. ಕೀಚಕ ಹೆದರಿ ಓಡಿದನೆಂದು ಅವರಿಗಾರಿಗೂ ತಿಳಿಯಲಿಲ್ಲವಾದ್ದರಿಂದ ಭಯಗೊಂಡರು.
ಮೂಲ ...{Loading}...
ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟ ದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು
ದುರುಳನಡೆಗೆಡೆದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾದಖಿಳಜನ ನಡುಗಿತ್ತು ಭಯ ಹೊಯ್ದು ॥16॥
೦೧೭ ಹೊಡೆ ಮರಳಿ ...{Loading}...
ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದಮೌನದ ಹೊತ್ತು ಲೇಸೆಂದಬಲೆ ಹಲುಬಿದಳು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನಿಂದ ಹೊಡೆತವನ್ನು ತಿಂದಿದ್ದ ದ್ರೌಪದಿಯು ಬಿದ್ದಿದ್ದವಳು ಮತ್ತೆ ಮೇಲೆ ಎದ್ದಳು. ತಲೆಗೂದಲಿಗೆ ಅಂಟಿಕೊಂಡಿದ್ದ ಧೂಳನ್ನೆಲ್ಲ ಕೊಡವಿಕೊಂಡಳು. ಎದೆಯಿಂದ ಜಾರಿದ್ದ ಸೆರಗನ್ನು ಮತ್ತೆ ಹೊದ್ದುಕೊಂಡಳು. ಗಲ್ಲದ ಬಳಿ ಸುರಿಯುತ್ತಿದ್ದ ರಕ್ತವನ್ನು ತನ್ನ ಬೆರಳಿಂದ ಮತ್ತೆ ಮತ್ತೆ ಮಿಡಿಯುತ್ತಿದ್ದಳು. ಅನಂತರ ಸಭೆಯ ಕಡೆಗೆ ತಿರುಗಿ.
“ಆಹಾ ! ನೀವು ಯಾರೂ ಮಾತಾಡಬಾರದೆ ? ಆ ದುಷ್ಟನು ಹೆಣ್ಣನ್ನು ಬಡಿದರೆ ಸುಮ್ಮನೆ ನೋಡುತ್ತ ನಿಂತಿರಬಹುದೆ ? ಆಹಾ ! ಇಲ್ಲಿಯ ಹಿರಿಯರು ಮೌನವ್ರತವನ್ನು ಆರಂಭಿಸಿದ ಸಮಯ ಬಹಳ ಪ್ರಶಸ್ತವಾಗಿದೆ” ಎಂದು ಸಂಕಟಪಟ್ಟಳು.
ಪದಾರ್ಥ (ಕ.ಗ.ಪ)
ಹೊಡಮರಳಿ-ಹೊರಳು, ಮಗುಚಿಕೊ, ಮೇಲುದು-ಸೆರಗು, ಮೇಲುವಸ್ತ್ರ,
ಟಿಪ್ಪನೀ (ಕ.ಗ.ಪ)
ಹಿರಿಯರು ಹಿಡಿದ ಮೋನದ ಹೊತ್ತು ಲೇಸು ಇದು ದ್ರೌಪದಿಯ ವ್ಯಂಗ್ಯೋಕ್ತಿ. ಶಾಂತ ಪರಿಸ್ಥಿತಿಯಲ್ಲಿ ಮೌನ ಒಳ್ಳೆಯದು ಆದರೆ ಕೀಚಕನ ದೌರ್ಜನ್ಯ ಒಬ್ಬ ಹೆಂಗಸಿನ ಮೇಲೆ ನಡೆದುದನ್ನು ಕಣ್ಣಾರೆ ಕಂಡಾಗಲೂ ಹೀಗೆ ಮೌನವ್ರತವನ್ನು ಹಿಡಿದದ್ದು ಸರಿಯಲ್ಲ ಎಂಬ ಅಣಕ ಇಲ್ಲಿದೆ.
ಮೂಲ ...{Loading}...
ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದಮೌನದ ಹೊತ್ತು ಲೇಸೆಂದಬಲೆ ಹಲುಬಿದಳು ॥17॥
೦೧೮ ಶಿವ ಶಿವಾ ...{Loading}...
ಶಿವ ಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿದ್ದ ಸಭಾಸದರನ್ನು ದೂಷಿಸುತ್ತಾ ದ್ರೌಪದಿಯು “ಶಿವ ಶಿವಾ ! ಸುಮ್ಮನೆ ನೋಡುತ್ತಿರುವವರೆಲ್ಲ ಪಾಪಿಗಳು. ನನ್ನ ನಿಟ್ಟುಸಿರು ಪತಿಗಳನ್ನೆಲ್ಲ ತಾಕಲಿ ! ನನ್ನ ಸ್ಥಿತಿ ಏನಾಯ್ತು ? ನಾಲ್ಕು ಜನರ ಮಧ್ಯೆ ಹಾವು ಸಾಯುವುದಿಲ್ಲ ಎಂಬ ಗಾದೆಯಂತಾಯಿತು. ಏನೂ ತಪ್ಪು ಮಾಡದ ನಿರಪರಾಧಿಯಾದ ನನಗೆ ಈ ದುಷ್ಟ ಕೀಚಕ ಅವಮಾನ ಮಾಡಿದ್ದಾನೆ. ಇಲ್ಲಿರುವ ಜನರೋ ಧರ್ಮದ ಚರ್ಚೆಯನ್ನೇ ಮಾಡುತ್ತಿಲ್ಲವಲ್ಲ ! ಆಹಾ ! ಘೋರವಾದ ಕಾಡಿಗೆ ಬಂದಂತಾಯಿತು ? ಎಂದು ದ್ರೌಪದಿ ಸಂಕಟಪಟ್ಟಳು.
ಟಿಪ್ಪನೀ (ಕ.ಗ.ಪ)
ಸುಯ್ಲು-ಸಂಕಟ, ನಿಟ್ಟುಸಿರು, ಪತಿಯಾದವರ ತಾಗಲಿ ಸುಯ್ಲು-ಸೂಕ್ಷ್ಮವಾಗಿ ಇಲ್ಲಿ ದ್ರೌಪದಿ ತನ್ನ ಪತಿಗಳನ್ನೇ ಕುರಿತು ಆಡುತ್ತಿದ್ದಾಳೆ. ನಾಲುವರ ನಡುವಣ ಹಾವು ಸಾಯದು > ಇದೊಂದು ನಾಣ್ಣುಡಿ ಕುಮಾರವ್ಯಾಸನು ಅನೇಕ ಕಡೆ ಬಳಸಿದ್ದಾನೆ. ಹಾವು ಬಂದಾಗ ಒಬ್ಬನೇ ಇದ್ದರೆ ನೇರವಾಗಿ ಅಟ್ಟಿಸಿಕೊಂಡು ಹೋಗಿ ಬಡಿಯುತ್ತಾನೆ. ಏಕೆಂದರೆ ಪ್ರಾಣಭಯ ಅವನನ್ನು ಹಾಗೆ ಪ್ರೇರಿಸುತ್ತದೆ. ಆದರೆ ನಾಲ್ಕು ಜನ ಇದ್ದರೆ ಅವನು ಕೊಲ್ಲಲಿ, ಇವನು ಕೊಲ್ಲಲಿ ಎಂದು ಹಾವನ್ನು ಹೊಡೆಯುವಂತೆ ನಟಿಸಿ ಸುಮ್ಮನಾಗುತ್ತಾರೆ. ತಪ್ಪಿಸಿಕೊಳ್ಳಲು ನೋಡುತ್ತಾರೆಯೇ ಹೊರತು ಅದನ್ನು ಕೊಲ್ಲುವುದರಲ್ಲಿ ಆಸಕ್ತಿ ತೋರುವುದಿಲ್ಲ.
ಧರ್ಮದ ವಿವರ ಸುದ್ದಿಯನಾಡದೀಜನ- ಸಭಾಸದರು ಧರ್ಮಸೂಕ್ಷ್ಮಗಳನ್ನು ಕುರಿತು ಚರ್ಚೆ, ಸಂವಾದ ಜರುಗಿಸಬೇಕು. ಹಾಗೆ ಮಾಡುತ್ತಿಲ್ಲವಲ್ಲ ಎಂಬ ಸಂಕಟ ದ್ರೌಪದಿಯದು.
ಮೂಲಭಾರತದಲ್ಲಿ ದ್ರೌಪದಿಯು ವಿರಾಟರಾಯನನ್ನು ಆಕ್ಷೇಪಿಸುವ ಪ್ರಸಂಗವಿದೆ. “ಕೀಚಕನು ಧರ್ಮಜ್ಞ ನಲ್ಲ ! ಈ ಮತ್ಸ್ಯರಾಜನೂ ಅಷ್ಟೆ. ಇಂಥ ರಾಜನನ್ನು ಆರಾಧಿಸುವ ಸಭಾಸದರು ಕೂಡ ಧರ್ಮದ ತಿಳಿವಳಿಕೆಯುಳ್ಳವರಲ್ಲ. !”
“ಕೀಚಕೋ ನ ಧರ್ಮಜ್ಞೋ ನಚಮತ್ಸ್ಯ : ಕಥಂಚನ
ಸಭಾಸದೋಪ್ಯಧರ್ಮಜ್ಞಾ ಯ ಏನಂ ಪರ್ಯುಪಾಸತೇ”
ಮೂಲಭಾರತದಲ್ಲಿ ಕೆಲವರು ಸಭಾಸದರು ಕಿಮಿಯಂ ವಧ್ಯತೇ ಬಾಲಾ ಕೃಪಣಾಚಾಪ್ಯ ಬಾಂಧವಾ’ ಈ ಕೀಚಕನು ಈ ಅನಾಥೆಯನ್ನು ಬಾಂಧವರಿಲ್ಲದವಳನ್ನು ಹಿಂಸಿಸಿದ್ದು ಸರಿಯಲ್ಲ ಎಂದುಕೊಂಡರೇ ಹೊರತು ಎದ್ದು ನಿಂತು ಪ್ರತಿಭಟಿಸಲಿಲ್ಲ.
ಮೂಲ ...{Loading}...
ಶಿವ ಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ ॥18॥
೦೧೯ ಎಲವೊ ದೇಶಿಗ ...{Loading}...
ಎಲವೊ ದೇಶಿಗ ಕಂಕ ಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವುದೇನು ಸನ್ಯಾಸಿಗಳಿಗುಚಿತವಿದು
ತಿಳಿಯೆ ದೇಶಿಗರಿಂಗೆ ದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲೆಂದಬಲೆಯೊರಲಿದಳು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
É19. “ಎಲವೋ ! ದೇಶಿಗನಾದ (ಪರದೇಶದಿಂದ ಬಂದಿರುವ) ಕಂಕ ಭಟ್ಟನೆ ! ನೀನು ಹಲವು ಧರ್ಮಗಳನ್ನು ಬಲ್ಲೆಯಲ್ಲವೆ ? ಮಹಾರಾಜನಿಗೆ ನೀನು ಉಪದೇಶವನ್ನು ಮಾಡುತ್ತಲೇ ಇರುತ್ತೀಯಲ್ಲ. ಇದು ಸನ್ಯಾಸಿಗಳಿಗೆ ಯುಕ್ತವಾದದ್ದಲ್ಲವೆ ? ಆದರೆ ಒಂದು ಸಂಗತಿ ತಿಳಿದುಕೋ. ನೀನು ದೇಶಿಗ. ನಾನೂ ದೇಶಿಗಳು (ಅಂದರೆ ಇಬ್ಬರೂ ಬೇರೆ ಊರಿನವರು ಪರಕೀಯರು) ಲೋಕಧರ್ಮ ಏನು ಗೊತ್ತೆ ? ದೇಶಿಗರಿಗೆ ದೇಶಿಗರು ಪ್ರೀತಿ ತೋರಿಸಬೇಕು (ಬೇರೆ ಯಾರು ಮಾತಾಡಿಸುತ್ತಾರೆ ? ಎಂಬ ಭಾವ) ಇಂಥ ರಾಜಸಭೆಯಲ್ಲಿ ಎಷ್ಟೊಂದು ಜನ ಇದ್ದಾರೆ. ಆದರೆ ನನ್ನಂಥ ಬಲಹೀನರಿಗೆ ಯಾರೂ ಆಪ್ತರಿಲ್ಲ”
ಪದಾರ್ಥ (ಕ.ಗ.ಪ)
ದೇಶಿಗ-ಪರನಾಡಿನವನು, ದಿಕ್ಕಿಲ್ಲದವರು, ನಿಸ್ಸಹಾಯಕ, ಸಮನಿಸು-ಉಂಟಾಗು, ದೊರೆಯುವಿಕೆ,
ಟಿಪ್ಪನೀ (ಕ.ಗ.ಪ)
ಕಂಕಭಟ್ಟ - ಕಂಕ ಎಂದರೆ ಯಮಧರ್ಮರಾಯ. ಇವನಿಗೆ ಜಯ, ವೈಯಘ್ರಪಾದ ಎಂಬ ಹೆಸರುಗಳೂ ಇದ್ದುವು. ಕೈಯ ಗಂಟಿನಲ್ಲಿ ಬಹುಬಗೆಯ ಪಗಡೆಯ ಹಾಸು, ದಾಳಗಳನ್ನು ಇಟ್ಟುಕೊಂಡೇ ಧರ್ಮರಾಯನು ವಿರಾಟನ ಬಳಿಗೆ ಬರುತ್ತಾನೆ.
ವೈಯಾಘ್ರಪದ್ಯಃ ಪುನರಸಿ ವಿಪ್ರಃ
ಅಕ್ಷನ್ ಪ್ರಯೋಕ್ತುಂ ಕುಶಲೋ„ಪಿ ದೇವಿತಾ
ಕಂಕೇತಿ ನಾಮಾಸ್ಮಿ
ಎಂದು ಪರಿಚಯ ಮಾಡಿಕೊಳ್ಳುವಾಗಲೇ ತನ್ನ ಹೆಸರು ವೈಯಾಘ್ರಪಾದ ಎಂದು ಹೇಳಿಕೊಂಡು ಪಗಡೆಯಾಟದಲ್ಲಿ ತನಗಿರುವ ಪರಿಣತಿಯನ್ನೂ ಹೇಳಿಕೊಳ್ಳುತ್ತಾನೆ. ವಿರಾಟನು ಕಂಕನಿಂದ ಎಷ್ಟರಮಟ್ಟಿಗೆ ಪ್ರಭಾವಿತನಾದನೆಂದರೆ ಅವನು ಪ್ರಜೆಗಳಿಗೆ ‘‘ನೋಡಿ, ನನ್ನಂತೆ ಕಂಕಭಟ್ಟ ಕೂಡ ಈ ನಾಡಿನ ಪ್ರಭು. ಈತನಿಗೆ ಅಪ್ರಿಯವಾದುದನ್ನು ಯಾರಾದರೂ ಮಾಡಿದರೆ ಅವರನ್ನು ಕೊಲ್ಲುತ್ತೇನೆ.’’ ಎಂದು ಘೋಷಿಸುತ್ತಾನೆ. ರಾಜನ ಜೊತೆ ಪಗಡೆಯಾಡುವುದು, ಸರಸಸಂಭಾಷಣೆ ನಡೆಸುವುದು ಮತ್ತು ಹಿತವಚನಗಳನ್ನು ಹೇಳುವುದು ಕಂಕಭಟ್ಟನ ಕೆಲಸವಾಯಿತು. ಜೂಜಾಡಿ ಗೆದ್ದ ಹಣವನ್ನು ತಮ್ಮಂದಿರಿಗೆ ಕೊಡುತ್ತಿದ್ದ. ಮುಂಗೋಪಿಯಾದ ಭೀಮನು ಎಲ್ಲರೆದುರಿಗೆ ಕೀಚಕನನ್ನು ಕೊಲ್ಲಲು ಸಿದ್ಧನಾದಾಗ ತುಮಬ ಬುದ್ಧಿವಂತಿಕೆಯಿಂದ ಅದನ್ನು ತಪ್ಪಿಸಿ ತಮ್ಮ ವೇಷ ಬಯಲಾಗದಂತೆ ಎಚ್ಚರವಹಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.
ಸದಾ ವಿರಾಟನ ಅಭ್ಯುದಯವನ್ನು ಬಯಸುತ್ತಿದ್ದ ಕಂಕಭಟ್ಟನು ಗೋಗ್ರಹಣದ ಸಂದರ್ಭದಲ್ಲಿ ತಮ್ಮಂದಿರೊಂದಿಗೆ ತಾನೂ ಸುಶರ್ಮನ ಮೇಲೆ ಆಕ್ರಮಣಕ್ಕೆ ಹೊರಡುತ್ತಾನೆ. ಸುಮ್ಮನೆ ವಿರಾಟನ ಜೊತೆಗೆ ಹೊರಟಂತೆ ನಟಿಸಿದರೂ ವಿರಾಟನು ಗೋಗ್ರಹಣದ ಸಂದರ್ಭದಲ್ಲಿ ವಿಪತ್ತಿಗೆ ಸಿಲುಕಿದಾಗ ತಮಂ್ಮದಿರಿಗೆ ಹೇಳು ಸುಶರ್ಮನನ್ನು ಸೋಲಿಸುವ ವ್ಯವಸ್ಥೆ ಮಾಡುತ್ತಾನೆ. ಇಲ್ಲೂ ಕೂಡ ಶತ್ರುಗಳಿಗೆ ಪತ್ತೆಯಾಗದಂತೆ ಎಚ್ಚರ ವಹಿಸಲು ಭೀಮ ನಕುಲಾದಿಗಳಿಗೆ ಹೇಳಿದ್ದು ಕಂಕಭಟ್ಟನ ಮುನ್ನೆಚ್ಚರಿಕೆಯ ಗುಣವನ್ನು ತೋರಿಸುತ್ತದೆ. ಇತ್ತ ಕೌರವರೂ ಗೋಗ್ರಹಣಕ್ಕೆ ಬಂದು ಅರ್ಜುನನು ಉತ್ತರನ ಜತೆಯಲ್ಲಿ ಹೋಗಿ ಕೌರವರೊಂದಿಗೆ ಸೆಣಸಿ ಗೆದ್ದ ಸುದ್ದಿ ವಿರಾಟನನ್ನು ಮುಟ್ಟಿದಾಗ ನಡೆದ ನಟಕ ಆಸಕ್ತಿದಾಯಕವಾಗಿದೆ. ಮಗನೇ ಗೆದ್ದ ವೀರನೆಂಬ ಹೆಮ್ಮೆ ವಿರಾಟನಿಗಾದರೆ ಬೃಹನ್ನಳೆ ಸಾರಥಿಯಾಗಿದ್ದುದರಿಂದ ಇದೆಲ್ಲ ಸಾಧ್ಯವಾಯಿತು ಎಂದು ಕಂಕಭಟ್ಟನು ತಿದ್ದುಪಡಿ ಸೂಚಿಸುತ್ತಾನೆ. ಇದನ್ನು ಹಲವಾರು ಬಾರಿ ಕೇಳಿದ. ವಿರಾಟನಿಗೆ ದಾಳಗಳನ್ನೇ ಕಂಕಭಟ್ಟನ ಮುಖಕ್ಕೆ ರಾಚುವಷ್ಟು ಸಿಟ್ಟುಬರುತ್ತದೆ. ಅವನ ಹಣೆಯಿಂದ ರಕ್ತ ನೆಲಕ್ಕೆ ಸೋರದಂತೆ ಅಲ್ಲೇ ಇದ್ದ ಸೈರಂಧ್ರಿ ತನ್ನ ಸೀರೆಯ ಒಂದು ಭಾಗವನ್ನೇ ಹರಿದು ಮುಚ್ಚಿದಾಗ ವಿರಾಟನಿಗೆ ಆಶ್ಚರ್ಯವಾಗುತ್ತದೆ. ಆಗಲೂ ವಿರಾಟನಿಗೆ ಈ ಘಟನೆಗಳ ಕಾಲು-ಕೀಲುಗಳು ಅರ್ಥವಾಗುವುದಿಲ್ಲ. ಕೊನೆಗೆ ಉತ್ತರಕುಮಾರನೇ ನಡೆದ ವಾಸ್ತವ ಘಟನೆಗಳನ್ನು ವಿವರಿಸಿದಾಗ ವಿರಾಟನಿಗೆ ಕಂಕಭಟ್ಟ ಮತ್ತು ಬೃಹನ್ನಳೆಯರ ಶಕ್ತಿ ತಿಳಿದುಬರುತ್ತದೆ. ಮರುದಿನವಂತೂ ಪಾಂಡವರೇ ಕ್ಷತ್ರಿಯ ವೇಷ ಧರಿಸಿ ರಾಜಪೋಷಾಕುಗಳಲ್ಲಿ ಸಿಂಹಾಸನಗಳನ್ನು ಅಲಂಕರಿಸಿ ಕುಳಿತಾಗ ಇವನಿಗ ಎಲ್ಲವೂ ಕ್ರಮೇಣ ತಿಳಿಯುತ್ತದೆ. ಪಾಂಡವರ ಗುರುತುಹಿಡಿದು ಕ್ಷಮೆಯಾಚಿಸಿ ತುಂಬ ಗೌರವದಿಂದ ಕಾಣುತ್ತಾನೆ. ಅಲ್ಲದೆ ಅರ್ಜುನನ ಮಗನಿಗೆ ತನ್ನ ಮಗಳು ಉತ್ತರೆಯನ್ನು ಕೊಟ್ಟು ಮದುವೆ ಮಾಡಿ ಕಂಕಭಟ್ಟನನ್ನು ಬೀಗನನ್ನಾಗಿ ಮಾಡಿಕೊಳ್ಳುತ್ತಾನೆ.
ವೇಷಾಂತರದಲ್ಲಿ ಧರ್ಮರಾಯನ ವಾಕ್ಪ್ರತಿಭೆ, ಜ್ಞನ ಸಂಪತ್ತಿ ಮತ್ತು ಕಾರ್ಯಯೋಜನಾ ಕುಶಲತೆ ಎದ್ದು ಕಾಣುವಂತಿವೆ. ವಿರಾಟಪರ್ವದಲ್ಲಿ ಅವನು ಹೋಮಶೇವನ್ನು ಮಾತ್ರ ತಿಂದುಕೊಂಡು ಕಾಲ ಕಳೆದ, ನೆಲದ ಮೇಲೆ ಮಲಗಿದ, ತಮ್ಮಂದಿರನ್ನು ಚೆನ್ನಾಗಿ ವಿಚಾರಿಸಿಕೊಂಡದ್ದು ಅವನ ಹಿರಿಮೆಯನ್ನು ಹೇಳುತ್ತದೆ.
ಗುಪ್ತ ವೇಷದಲ್ಲಿರುವುದರಿಂದ ಅವಳು ಕಂಕಭಟ್ಟ ಎಂದು ಕರೆದಿದ್ದರೂ ಧರ್ಮ ಎಂಬ ಶಬ್ದವನ್ನು ಧ್ವನಿಪೂರ್ಣವಾಗಿ ಬಳಸಿರುವುದನ್ನು U್ಪಮನಿಸಬೇಕು ನಾವು ಇಬ್ಬರೂ ದೇಶಿಗರಲ್ಲ ಎಂಬ ಮಾತಿಗೂ ಈ ಧ್ವನಿಶಕ್ತಿಯಿದೆ. ಬೇರೆಯವರಿಗೆ ತಿಳಿಯದಂತೆ ಅವಳು ನೇರವಾಗಿ ಧರ್ಮರಾಯನಿಗೆ ಹೇಳುತ್ತಿದ್ದಾಳೆ. ಬರಿಯ ಧರ್ಮೋಪದೇಶಮಾಡಿದರೆ ಏನು ಪ್ರಯೋಜನ ? ಅದನ್ನು ಸಂದರ್ಭ ಬಂದಾಗ ಆಚರಿಸಿ ತೋರಿಸಬೇಕು ಎಂಬ ಭಾವ ಇಲ್ಲಿದೆ.
ಮೂಲ ...{Loading}...
ಎಲವೊ ದೇಶಿಗ ಕಂಕ ಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವುದೇನು ಸನ್ಯಾಸಿಗಳಿಗುಚಿತವಿದು
ತಿಳಿಯೆ ದೇಶಿಗರಿಂಗೆ ದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲೆಂದಬಲೆಯೊರಲಿದಳು ॥19॥
೦೨೦ ಧೈರ್ಯವನು ನೆರೆ ...{Loading}...
ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು
ಶೌರ್ಯಕವಸರವಲ್ಲ ನಮಗೀ
ಯಾರ್ಯನಾಜ್ಞೆಯೆನುತ್ತ ಬಳಿಕಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಧರ್ಮರಾಯನು ಧೈರ್ಯ ಕಳೆದುಕೊಳ್ಳದೆ ತುಂಬ ಸ್ಥೈರ್ಯದಿಂದ ಮುಂದಿನ ಕೆಲಸದ ಬಗೆಗೆ ಯೋಚಿಸುತ್ತ ಅವಳ ಕಡೆ ನೋಡದೆ ಅವಳನ್ನು ಮಾತಾಡಿಸದೆ ಸುಮ್ಮನಿದ್ದನು. ಇದನ್ನು ನೋಡಿ ಪಾರ್ಥ, ಯಮಳರು “ನಾವು ಶೌರ್ಯವನ್ನು ತೋರಿಸಲು ಇದು ಸಕಾಲವಲ್ಲ. ಇದೇ ನಮಗೆ ಧರ್ಮರಾಯನ ಆಜ್ಞೆ ಎಂದು ಭಾವಿಸಬೇಕಾಗಿದೆ” ಅವರೆಲ್ಲ ಎಷ್ಟೋ ಕಾರ್ಯತುರರಾಗಿದ್ದರೂ ಅವರಿಗೆಲ್ಲ ಒಳಗೇ ತುಂಬ ದುಃಖವಿದ್ದರೂ ವಿಧಿಯಿಲ್ಲದೆ ಸುಮ್ಮನಾಗಿದ್ದರು.
ಪದಾರ್ಥ (ಕ.ಗ.ಪ)
ನೆರೆ ಬಲಿದು-ಗಟ್ಟಿ ಮಾಡಿಕೊಂಡು, ನೃಪಜನವರ್ಯ-ರಾಜಸಮೂಹದಲ್ಲಿ ಶ್ರೇಷ್ಠನಾದ (ಧರ್ಮರಾಯ) ಅವಸರ-ಸಮಯ, ಆತುರ್ಯರು-ದ್ರೌಪದಿ ಅಪಮಾನಗೊಂಡುದಕ್ಕೆ ಕೀಚಕನ ಮೇಲೆ ಸೇಡು ತೀರಿಸಿಕೊಳ್ಳುವ ಆತುರ ಇದ್ದವರು. ಯಮಳ-(ನಕುಲ ಸಹದೇವ) ಜೋಡಿ,
ಮೂಲ ...{Loading}...
ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು
ಶೌರ್ಯಕವಸರವಲ್ಲ ನಮಗೀ
ಯಾರ್ಯನಾಜ್ಞೆಯೆನುತ್ತ ಬಳಿಕಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ ॥20॥
೦೨೧ ನೊನ್ದಳಕಟಾ ಸತಿಯೆನುತ ...{Loading}...
ನೊಂದಳಕಟಾ ಸತಿಯೆನುತ ಮನ
ನೊಂದು ಸೈವೆರಗಾಗಿ ಖತಿಯಲಿ
ಕಂದಿ ನಸು ಮೈ ಬಾಗಿ ರೋಷದೊಳೌಡನೊಡೆಯವುಚಿ
ಮಂದಿಯರಿಯದವೊಲು ಕುಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮುಂದಣ ಮರನನಾ ಭೀಮ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮಾತ್ರ ತನ್ನ ದ್ರೌಪದಿ ತುಂಬ ನೊಂದಿದ್ದಾಳೆ ಎಂಬ ಸಂಕಟದಿಂದ ವಿಸ್ಮಯದಿಂದ ಸ್ತಬ್ಧನಾಗಿ ನಿಂತ. ಅನಂತರ ಕೋಪದಿಂದ ಬಾಡಿ ಸ್ವಲ್ಪ ಮೈ ಬಗ್ಗಿಸಿದ. ತುಂಬ ರೋಷಭಾವದಿಂದ ಅವುಡು ಕಚ್ಚಿದ. ಜನರಿಗೆ ಗೊತ್ತಾಗದಂತೆ ಕುಚೇಷ್ಟೆ ಮಾಡುವವನ ಹಾಗೆ ಮೆಲ್ಲನೆ ಬಾಗಿ ರಾಜಾಲಯದ ಮುಂದೆ ಇದ್ದ ದೊಡ್ಡ ಮರದ ಕಡೆ ನೋಡಿದ
ಪದಾರ್ಥ (ಕ.ಗ.ಪ)
ಸೈವೆರಗು-ದಿಗ್ಭ್ರಮೆ, ಆಶ್ಚರ್ಯ, ವಿಸ್ಮಯ, ಖತಿ-ಕೋಪ, ಔಡು-ಅವಡು, ದವಡೆ
ಟಿಪ್ಪನೀ (ಕ.ಗ.ಪ)
ಭೀಮನಿಗೆ ಸಹಿಸಲಾಗಲಿಲ್ಲ. ಆದರೆ ಮಾತಾಡುವಂತಿಲ್ಲವಲ್ಲ. ಆದರೂ ಅಣ್ಣನಿಗೆ ತಿಳಿಯುವ ಹಾಗೆ ತನ್ನ ದೇಹಚೇಷ್ಟೆಯನ್ನು ಪ್ರಕಟಿಸಿದ್ದು ತುಂಬ ಅರ್ಥಪೂರ್ಣವಾದ ಧ್ವನಿಗಾರಿಕೆಯ ಚಟುವಟಿಕೆಯಾಗಿದೆ. ಮೂಲದಲ್ಲೂ ಈ ದೃಶ್ಯವಿದೆ. ಮದಿಸಿದ ಆನೆಯಂತೆ ಆ ಮರವನ್ನು ನೋಡುತ್ತ ಭೀಮನು ಧರ್ಮರಾಯನ ಕಡೆ ತಿರುಗಿದನೆಂದು ವ್ಯಾಸರು ಹೇಳುತ್ತಾರೆ (ತಂ ಮತ್ತಮಿವ ಮಾತಂಗಂ ವೀಕ್ಷಮಾಣಂ ವನಸ್ಪತಿಂ ಸತಾಮಾವಾರಯಾಮಾಸ ಭೀಮಸೇನಂ ಯುಧಿಷ್ಠಿರಂ)
ಮರ ಒಂದು ಧ್ವನಿಪೂರ್ಣ ಸಂಕೇತ. ಭೀಮನಿಗೆ ಅಡಿಗೆಗೆ ಸೌದೆ ಬೇಕಾಗಿದೆ. ಆದುದರಿಂದ ಮರವನ್ನು ಕತ್ತರಿಸಲು ನೋಡಿದ ಎಂಬುದು ವಾಚ್ಯಾರ್ಥ. ಕೀಚಕನೆಂಬ ಮರ ವಿರಾಟನ ಆಸ್ಥಾನದಲ್ಲಿ ಕೊಬ್ಬಿ ಬೆಳೆದಿದೆ ಅದನ್ನು ಮುರಿಯಬೇಕು ಎಂಬುದು ಅವನ ಅರ್ಥ ! ಅವನ ಮನಸ್ಸಿನ ಭಾವವನ್ನು ಮುಂದಿನ ಪದ್ಯ ವಿವರಿಸುತ್ತದೆ.
ಮೂಲ ...{Loading}...
ನೊಂದಳಕಟಾ ಸತಿಯೆನುತ ಮನ
ನೊಂದು ಸೈವೆರಗಾಗಿ ಖತಿಯಲಿ
ಕಂದಿ ನಸು ಮೈ ಬಾಗಿ ರೋಷದೊಳೌಡನೊಡೆಯವುಚಿ
ಮಂದಿಯರಿಯದವೊಲು ಕುಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮುಂದಣ ಮರನನಾ ಭೀಮ ॥21॥
೦೨೨ ಒಳಗೆ ನಿಶ್ಚೈಸಿದನು ...{Loading}...
ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದೀ
ಖಳನನಿವನೊಡಹುಟ್ಟಿದರನಿವನಖಿಳ ಬಾಂಧವರ
ಬಳಿಕ ವಿಗಡ ವಿರಾಟ ರಾಯನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯೋದನಾ ಭೀಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊದಲು ಈ ದ್ರೌಪದಿಯನ್ನು ಬಡಿದ ಆ ದುಷ್ಟ ಕೀಚಕನನ್ನು ಹಿಂಡಿ ಹೊಸಕಿ ಹಾಕುತ್ತೇನೆ. ಇವನ ತಮ್ಮಂದಿರನ್ನೂ ಬಾಂಧವರನ್ನೂ ಕೊಲ್ಲುತ್ತೇನೆ. ಬಳಿಕ (ಇದಕ್ಕೆ ಅವಕಾಶ ಮಾಡಿಕೊಟ್ಟ) ದುಷ್ಟ ವಿರಾಟರಾಯನನ್ನು ಕೊಲ್ಲುತ್ತೇನೆ. ಈ ಸಂಗತಿ ಕೌರವರಿಗೆ ತಿಳಿದು ಅವರು ನಮ್ಮನ್ನು ಹುಡುಕಿಕೊಂಡು ಬರುವರೆಂದಾದರೆ ನಾನೇ ಅಲ್ಲಿಗೆ ಹೋಗಿ ಆ ಕೌರವವಂಶವನ್ನು ನಿರ್ನಾಮ ಮಾಡುತ್ತೇನೆ.
ಪದಾರ್ಥ (ಕ.ಗ.ಪ)
ಹಿಳಿದು ಹಿಂಡು-ಹಿಂಡಿರಸವನ್ನು ತೆಗೆ
ಟಿಪ್ಪನೀ (ಕ.ಗ.ಪ)
ಭೀಮನ ಸಿಟ್ಟಿನಲ್ಲೂ ಮುಂದಿನ ಘಟನಾವಳಿಗಳನ್ನು ಊಹಿಸಿಕೊಂಡು ಪರಿಹರಿಸುವ ಯೋಚನೆ ಇದೆ.
ಅರಮನೆಯ ಬಳಿ ಇದ್ದ ದೊಡ್ಡ ವೃಕ್ಷ ಆಲದ ಮರ. ಇಲ್ಲಿ ಒಂದು ದೊಡ್ಡ ಸಂಕೇತವಾಗಿ ಬಳಕೆಗೊಂಡಿದೆ. ವ್ಯಾಸರು ಈ ಪ್ರತಿಮೆಯನ್ನು ಅರ್ಥಪೂರ್ಣವಾಗಿ ಬಳಸಿದ್ದಾರೆ.
ಮೂಲ ...{Loading}...
ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದೀ
ಖಳನನಿವನೊಡಹುಟ್ಟಿದರನಿವನಖಿಳ ಬಾಂಧವರ
ಬಳಿಕ ವಿಗಡ ವಿರಾಟ ರಾಯನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯೋದನಾ ಭೀಮ ॥22॥
೦೨೩ ಆತನಿಙ್ಗಿತದನುವನರಿತು ಮ ...{Loading}...
ಆತನಿಂಗಿತದನುವನರಿತು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯವೂರ ಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮರದ ಕಡೆ ನೋಡಿದ್ದು ಎಲ್ಲರಿಗೂ ಗೊತ್ತು. ಅದರ ಒಳ ಅರ್ಥ ತಿಳಿದಿರಲಿಲ್ಲ. ಧರ್ಮರಾಯನು ಸೂಕ್ಷ್ಮ ಭಾಷೆಯಲ್ಲೇ ದ್ವಂದ್ವವಾಡುತ್ತಾನೆ. “ಆಹಾ ವಲಲ ! ತುಂಬ ಆತುರ ಪಡಬೇಡ. ಈ ಮರ ಮುರಿಯಲು ಹೊರಟಿದ್ದೀಯಲ್ಲವೆ ? ಸ್ವಲ್ಪ ಸೈರಿಸು ಈ ಮರವನ್ನು ಮುರಿಯಬೇಡ. ಏಕೆಂದರೆ ಇದು ಸುಜನರಿಗೆ ಆಶ್ರಯ ಕೊಡುತ್ತಿದೆ. ನಿನ್ನ ಅಡಿಗೆ ಮನೆಗೆ ಸೌದೆ ಬೇಕಾದರೆ ಊರ ಹೊರಗೆ ಒಂದು ದೊಡ್ಡದಾದ ಮರವಿದೆ. ಅದು ನಿನ್ನ ಅಡುಗೆಯ ಸೌದೆಯಾಗುತ್ತದೆ”.
ಪದಾರ್ಥ (ಕ.ಗ.ಪ)
ಮಹೀತಳಾಧಿಪ-ರಾಜ (ಧರ್ಮರಾಯ), ತರು-ಮರ, ಸುಜನವ್ರಾತಕಾಶ್ರಯ-ಸಜ್ಜನರಿಗೆ ನೆರಳನ್ನು ಕೊಡುತ್ತಿದೆ (ಅಂದರೆ ನಮ್ಮಂಥವರಿಗೆ ಆಶ್ರಯಕೊಡುತ್ತಿದೆ ಎಂದರ್ಥ)
ಟಿಪ್ಪನೀ (ಕ.ಗ.ಪ)
ಈ ಮರದ ಕೊಂಬೆಗಳನ್ನು ಕಿತ್ತು ಕೀಚಕನನ್ನು ಬಡಿಯುತ್ತೇನೆ ಎಂದು ಭೀಮನು ಸೂಚಿಸಿದ. ಈ ಮರ ಸಜ್ಜನರಿಗೆ ನೆರಳನ್ನು ಕೊಡುತ್ತಿರುವುದರಿಂದ ಇದರ ಕೊಂಬೆಗಳನ್ನು ಕಿತ್ತು ಕೀಚಕನನ್ನು ಕೊಲ್ಲುವುದು ಸರಿಯಲ್ಲ. ಊರ ಹೊರಗೆ (ನಾಟ್ಯಮಂದಿರದ ಬಳಿ?) ಒಂದು ದೊಡ್ಡ ಮರವಿದೆಯಲ್ಲ. ಆ ಮರದ ಕೊಂಬೆಗಳನ್ನು ಕಿತ್ತು ನಿಮ್ಮ ಅಡಿಗೆಗೆ ಬಳಸಿಕೋ. ಅಂದರೆ ಯಾರಿಗೂ ತಿಳಿಯದಂತೆ ಊರ ಹೊರಗೆ ಕೀಚಕನನ್ನು ಕೊಲ್ಲುವ ಕೆಲಸ ಮಾಡು ಎಂದರ್ಥ ! ಕೀಚಕನು ದುಷ್ಟ ಮರ ಎಂಬುದು ನಿಜ. ಆದರೆ ಸದ್ಯಕ್ಕೆ ಕೀಚಕನ ಕಡೆಯವರು ನಮಗೆ ಆಶ್ರಯದಾತರಾಗಿರುವುದರಿಂದ ಎಲ್ಲರೆದುರಿಗೆ ಈ ಕಾರ್ಯ ಮಾಡಬಾರದು ಎಂಬುದು ಧರ್ಮರಾಯನ ಧ್ವನಿ. ಇಬ್ಬರೂ ಸಂಕೇತದ ಭಾಷೆಯಲ್ಲೇ ಮಾತಾಡುತ್ತಿರುವುದನ್ನು ಗಮನಿಸಬೇಕು.
ಮೂಲ ...{Loading}...
ಆತನಿಂಗಿತದನುವನರಿತು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯವೂರ ಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ ॥23॥
೦೨೪ ಧರ್ಮಮಯ ತರುವಿದನು ...{Loading}...
ಧರ್ಮಮಯ ತರುವಿದನು ಮುರಿಯದಿ
ರೆಮ್ಮ ಮಾತನು ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯ ಭೂಪತಿಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯ ವಲಲ ! ಇದು ಧರ್ಮಮಯ ವೃಕ್ಷ. ನಮಗೆಲ್ಲ ಆಶ್ರಯ ಕೊಡುತ್ತಿದೆ. ಆದ್ದರಿಂದ ಈ ಮರದ ಕೊಂಬೆ ಮುರಿದು ಅಡಿಗೆಗೆ ಬಳಸಿಕೊಳ್ಳಬೇಡ. ನಮ್ಮ ಮಾತನ್ನು ಅರ್ಥಮಾಡಿಕೋ” ಎಂದು ಧರ್ಮರಾಯ ಹೇಳಿದಾಗ ಭೀಮನಿಗೆ ಅದು ಅರ್ಥವಾಯಿತಾದರೂ ಈಗಲೇ ಮಾಡುವಂತಿಲ್ಲವಲ್ಲ ಎಂಬ ಸಂಕಟದಿಂದ ಭೀಮ ಹಿಂದಿರುಗಿದ. ಅನಂತರ ಧರ್ಮರಾಯನು ದ್ರೌಪದಿಯ ಕಡೆ ತಿರುಗಿ. “ಮಾನಿನಿ ! ಇದು ನಿನ್ನ ಕರ್ಮದ ಫಲ. ಇಂಥವನ್ನು ಅನುಭವಿಸಲೇಬೇಕು. ಈಗ ಚರ್ಚೆಬೇಡ. ಸುಮ್ಮನೆ ನಿನ್ನ ಮನೆಗೆ ಹೋಗು. ಈ ಸಭೆ ಅವನನ್ನು ಶಿಕ್ಷಿಸಲಾರದು. ಏಕೆ ಗೊತ್ತೆ ? ಆ ಕೀಚಕನು ವಿರಾಟರಾಯನ ಶಿಕ್ಷೆಗೆ ಹೆದರುವುದಿಲ್ಲವಾದ್ದರಿಂದ ದೊರೆ ಕೀಚಕನನ್ನು ಶಿಕ್ಷಿಸಲಾರ”
ಪದಾರ್ಥ (ಕ.ಗ.ಪ)
ಓಲಗ-ರಾಜಸಭೆ, ದುಗುಡ-ವ್ಯಥೆ, ಅಮ್ಮದು-ಆರದು, ಸಾಧ್ಯವಿಲ್ಲ
ಮೂಲ ...{Loading}...
ಧರ್ಮಮಯ ತರುವಿದನು ಮುರಿಯದಿ
ರೆಮ್ಮ ಮಾತನು ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯ ಭೂಪತಿಯ ॥24॥
೦೨೫ ಕೋಪಕವಸರವಲ್ಲ ಪತಿಗಳು ...{Loading}...
ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆ ಪುಣ್ಯವಧು ನೀನು
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯ ಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದಳಿಂದುಮುಖಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೈರಂಧ್ರಿ ಇದು ಕೋಪದ ಸಂದರ್ಭವಲ್ಲ. ನಿನ್ನ ಗಂಡಂದಿರು ಸಾಮಾನ್ಯ ಮನುಷ್ಯರೇನು? ದುಃಖಿಸಬೇಡ. ನೀನು ಪರಮ ಪತಿವ್ರತೆ, ಪುಣ್ಯ ವಧು. ಕ್ಷಮೆ ಎಂಬುದು ಒಂದು ಬೆಳಕಲ್ಲವೆ ? ಅದು ಎಲ್ಲ ವಿಧವಾದ ದೋಷಗಳನ್ನು ಹೋಗಲಾಡಿಸುತ್ತದೆ. ಕ್ಷಮೆ ಎಂಬುದು ಶೌರ್ಯ ಮತ್ತು ಧರ್ಮದ ರೂಪದಲ್ಲಿ ವಾಸಿಸುತ್ತದೆ” ಎಂದಾಗ ಸೈರಂಧ್ರಿ ಹೇಳಿದಳು.
ಪದಾರ್ಥ (ಕ.ಗ.ಪ)
ಅವಸರ-ಸಮಯ, ಕಾಪುರುಷ-ಸಾಮಾನ್ಯ ಮಾನವ, ಪರಿತಾಪ-ಸಂಕಟ,
ಟಿಪ್ಪನೀ (ಕ.ಗ.ಪ)
ಕುಮಾರವ್ಯಾಸನ ವಿರಾಟರಾಜನು ಈ ಪ್ರಸಂಗದಲ್ಲಿ ಬಾಯಿ ಬಿಡುವುದೇ ಇಲ್ಲ. ಆದರೆ ಅವಳು ಸಭಾಸದರನ್ನೆಲ್ಲ ಆಕ್ಷೇಪಿಸಿದಾಗ ವಿರಾಟನು ಅವಳ ನಡತೆಯು ಸಭಾಗೌರವಕ್ಕೆ ತಕ್ಕುದಲ್ಲ ಎಂದು ಹೇಳುತ್ತಾರೆ. ವಿರಾಟನು ಬಲಗರ್ವಿತನಾದ ಕೀಚಕನನ್ನು ಶಿಕ್ಷಿಸಲಾರದೆ ಸಾಮನೀತಿಯನ್ನು ಅನುಸರಿಸಿದ ಎಂದು ವ್ಯಾಸರು ಹೇಳುತ್ತಾರೆ. ಅವನ ಜಾರಿಕೆಯ ಮಾತು ನೋಡಿ “ಹೊರಗೆ ನಡೆದದ್ದು ನನಗೆ ತಿಳಿಯದು ಆದುದರಿಂದ ಪೂರ್ತಿ ತಿಳಿಯದೆ ನಾನು ಏನು ಹೇಳಲಿ?”
“ಪರೋಕ್ಷಂ ನಾಭಿ ಜಾನಾಮಿ ವಿಗ್ರಹಂ ಯುವ ಯೋ„ರಹಂ
ಅರ್ಥತತ್ವ ಮವಿಜ್ಞಾಯ ಕಿಂನುಸ್ಯಾತ್ ಕೌಶಲಂ ಮಮ ?”
“ಸೈರಂಧ್ರಿ ! ನನ್ನ ಪರೋಕ್ಷದಲ್ಲಿ ನಿಮ್ಮಿಬ್ಬರಿಗೆ ಕಲಹವಾಗಿದ್ದರೆ ಅದು ನನಗೆ ತಿಳಿಯದು. ಅದನ್ನು ತಿಳಿದುಕೊಳ್ಳದೆ ನಿರ್ಣಯ ಮಾಡುವಂತಿಲ್ಲ” ಎಂದು ಹೇಳಿದ.
ಧರ್ಮರಾಯನು ದ್ರೌಪದಿಗೆ ಹೇಳಿದ ಮಾತು ಕೂಡ ಅರ್ಥಗರ್ಭಿತವಾಗಿದೆ ಮೂಲಭಾರತದಲ್ಲಿ. “ಸೈರಂಧ್ರಿ. ವರ್ಷಕ್ಕೆ ಎರಡು ಭಾಗ (ಉತ್ತರಾಯಣ-ದಕ್ಷಿಣಾಯನ) ಹನ್ನೆರಡು ತಿಂಗಳು - ಅವಯವಗಳು. ಇಪ್ಪತ್ತನಾಲ್ಕು ಪರ್ವಗಳು ಪಕ್ಷಗಳು. ಮುನ್ನೂರ ಅರವತ್ತು ಅರಗಳು (ಬಂಡಿಯ ಚಕ್ರದ ಕಡ್ಡಿಗಳು ಅಂದರೆ ದಿನಗಳು). ಅಂಥ ಕಾಲ ಮುಗಿಯಲು ಒಂದೇ ಒಂದು ತಿಂಗಳು ಮಿಕ್ಕಿದ್ದ ಸಂದರ್ಭದಲ್ಲಿ ಆ ಅವಧಿಯನ್ನು ಕಾಯಬೇಕು….”
ಮೂಲ ...{Loading}...
ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆ ಪುಣ್ಯವಧು ನೀನು
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯ ಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದಳಿಂದುಮುಖಿ ॥25॥
೦೨೬ ನೀರು ಹೊರಗಿಕ್ಕುವುದು ...{Loading}...
ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಜಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷವು ಕಡು ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಿ, ಯಾರಾದರೂ ನೀರಿಗೆ ಬಿದ್ದರೆ ನೀರು ಕೂಡ ಮೂರು ಬಾರಿ ಕ್ಷಮಿಸಿ ಮೇಲಕ್ಕೆ ಎತ್ತುತ್ತದೆ. ಆದರೆ ನಾಲ್ಕನೆಯ ಬಾರಿ ಮುಳುಗಿಸುತ್ತದೆ. ಅದಕ್ಕೆ ಆಗ ಸೈರಣೆ ಇರುವುದಿಲ್ಲ. ನನ್ನ ವಿಷಯವೂ ಹಾಗೆಯೇ ಆಗಿದೆ. ಅನ್ಯಾಯ ಒಂದೋ ಎರಡೋ ಮೂರೋ ಆದರೆ ಸಹಿಸಬಹುದು. ಆದರೆ ಅನ್ಯಾಯಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದರೆ ಏನು ಮಾಡಬೇಕು ? ಸಹನೆಗೂ ಒಂದು ಅವಧಿ ಇರುತ್ತದಲ್ಲವೆ ? ನಿಮ್ಮಲ್ಲೆಲ್ಲ ಪೌರುಷವೆಂಬುದು ನಿಷ್ಫಲಗೊಂಡಿದೆ. ಅವರಿವರನ್ನು ಓಲೈಸುವುದರಲ್ಲಿ ತೊಡಗಿ ಜಾರಿಕೊಳ್ಳುತ್ತೀರಿ.
ಪದಾರ್ಥ (ಕ.ಗ.ಪ)
ಬಹುಳತೆ-ಹೆಚ್ಚು ಸಂಖ್ಯೆ , ಅಧಿಕ ಪ್ರಮಾಣ, ಜುಣುಗು-ಹಿಂದೆಗೆ
ಮೂಲ ...{Loading}...
ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಜಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷವು ಕಡು ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ ॥26॥
೦೨೭ ಅರರೆ ಹೆಙ್ಗಸು ...{Loading}...
ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲಿದಾವಂತರವು ರಾಯನ
ಹೊರೆಯಲೀ ಬಾಯ್ಬಡಿಕತನ ಗರುವಾಯಿಯೇಯೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ದ್ರೌಪದಿಗೆ ಹೇಳಿದ. “ಸೈರಂಧ್ರಿ ನೀನು ಹೆಂಗಸು, ಧೈರ್ಯಸ್ಥೆ. ಸ್ವಲ್ಪ ಮೌನದಿಂದಿದ್ದರೆ ಏನು ಕೊಳ್ಳೆಹೋಗುತ್ತದೆ? ಅಲ್ಲದೆ ಮಹಾರಾಜನ ಬಳಿಯಲ್ಲಿ ಈ ಬಗೆಯ ಬಾಯಿಬಡಿಕತನ ಮರ್ಯಾದೆ ತರುವಂಥದ್ದೇನು ?” ಈ ಮಾತು ಕೇಳಿದ ಸೈರಂಧ್ರಿ ಕೆರಳಿದಳು. ಅನಂತರ “ಈ ಹಿರಿಯರಲ್ಲಿ ಏನೂ ಹುರುಳಿಲ್ಲ. ಈ ವಿಷಯವನ್ನು ಮೊದಲು ಭೀಮನೊಡನೆ ಪ್ರಸ್ತಾಪಿಸುತ್ತೇನೆ. ಆಮೇಲೆ ಏನಾಗುತ್ತದೋ ನೋಡೋಣ” ಎಂದುಕೊಂಡು ಮನೆಗೆ ಹೊರಟಳು.
ಪದಾರ್ಥ (ಕ.ಗ.ಪ)
ಮೋನ-ಮೌನ, ಅಂತರ-ವ್ಯತ್ಯಾಸ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ದ್ರೌಪದಿ ಭೀಮನನ್ನು ಸ್ಮರಿಸಿದ್ದಾಳೆ. ಕಿಂಕರೋಮಿ ? (ಏನು ಮಾಡಲಿ), ಕಿಂಗಚ್ಛಾಮಿ (ಎಲ್ಲಿ ಹೋಗಲಿ?) ಕಥಂ ಕಾರ್ಯಂಭವೇನ್ಮಮ ಎಂದು ಮನಸ್ಸಿನಲ್ಲೇ ಕೇಳಿಕೊಂಡು ಭೀಮಂ ವೈ ಮನಸಾಗಮತ್ ಭೀಮನನ್ನು ಸ್ಮರಿಸಿದಳು ಎಂಬ ಮಾತಿದೆ.
ಮೂಲ ...{Loading}...
ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲಿದಾವಂತರವು ರಾಯನ
ಹೊರೆಯಲೀ ಬಾಯ್ಬಡಿಕತನ ಗರುವಾಯಿಯೇಯೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು ॥27॥
೦೨೮ ಆ ಸುದೇಷ್ಣೆಯ ...{Loading}...
ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದುರುಪದಿ ನುಡಿದಳೊಡತಿಯನು ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈರಂಧ್ರಿ ಸುದೇಷ್ಣೆಯ ಮನೆಗೆ ಬಂದಳು. ಸುದೇಷ್ಣೆ ಸೈರಂಧ್ರಿಯನ್ನು ಮಾತಾಡಿಸಿ “ತಂಗಿ ಏನಿದು ? ನಿನ್ನ ಮುಖದಲ್ಲಿ ಕಾಂತಿಯೇ ಇಲ್ಲವಾಗಿದೆ. ದುಃಖಕ್ಕೆ ಕಾರಣವೇನು ಹೇಳು.” ಎಂದಳು. ದ್ರೌಪದಿಗೆ ಸ್ವಲ್ಪ ಸಿಟ್ಟು ಬಂದಿತ್ತು. ತಾನೇ ಕೀಚಕನ ಬಳಿಗೆ ಕಳಿಸಿದವಳು. ಈಗ ಏನೂ ಗೊತ್ತಿಲ್ಲ ಎಂಬಂತೆ ಆಡುವುದನ್ನು ಕಂಡು” ನಿಮಗೆ ಇಷ್ಟೊಂದು ಮರವೆಯಾಯಿತೆ ? ಇದು ನಿಮ್ಮ ತಪ್ಪಲ್ಲ. ರಾಜ ಮನೆತನದವರ ದರ್ಪವೇ ಇದಕ್ಕೆ ಕಾರಣ. ಆದುದರಿಂದ ನೀವು ಈಗ ನನ್ನನ್ನು ಅಪಹಾಸ್ಯ ಮಾಡುತ್ತಿದ್ದೀರಿ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ವಿಳಾಸವಳಿದಿದೆ-ಶೋಭೆ ಮಂಕಾಗಿದೆ, ಸಗಾಢಿಕೆ-ಗರ್ವ
ಮೂಲ ...{Loading}...
ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದುರುಪದಿ ನುಡಿದಳೊಡತಿಯನು ॥28॥
೦೨೯ ದುರುಳ ನಿಮ್ಮೊಡಹುಟ್ಟಿದನು ...{Loading}...
ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲು ಬಾರದು ನೃಪತಿ ತಪ್ಪಿದೊಡಾರು ಕಾವವರು
ಕರೆಸಿ ಬುದ್ಧಿಯ ಹೇಳಿ ಎನ್ನನು
ಹೊರೆಯಲಾಪರೆ ಹೊರೆಯಿರಲ್ಲದ
ಡರಸಿ ಕಳುಹುವುದೆನ್ನನೆನಲಿಂತೆಂದಳಾ ರಾಣಿ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಸುದೇಷ್ಣೆಗೆ ಹೇಳಿದಳು : “ರಾಣಿ; ಆ ದುಷ್ಟ ಕೀಚಕ ನಿಮ್ಮ ತಮ್ಮನಲ್ಲವೆ ? ನೀವೆಲ್ಲ ರಾಜಕುಲದವರು. ನಾವು ತಿರುಪೆಯವರು. ಇನ್ನು ಇಲ್ಲಿ ಇರುವುದು ಸೂಕ್ತವಲ್ಲ. ರಾಜನೇ ನಮ್ಮನ್ನು ಕಾಪಾಡಲಿಲ್ಲ ಎಂದ ಮೇಲೆ ನಮ್ಮನ್ನು ಸಲಹುವವರು ಯಾರು ? ಒಂದು ಕೆಲಸ ಮಾಡಿ. ಅವನನ್ನು ಕರೆಸಿ ಬುದ್ಧಿ ಹೇಳಿ ನನ್ನನ್ನು ಉಳಿಸಿ. ಆಗದಿದ್ದರೆ ನನ್ನನ್ನು ಕಳಿಸಿಬಿಡಿ”. ಆಗ ಸುದೇಷ್ಣೆ ಹೀಗೆಂದಳು.
ಪದಾರ್ಥ (ಕ.ಗ.ಪ)
ದುರುಳ-ದುಷ್ಟ, ಒಡಹುಟ್ಟಿದನು-ಸೋದರ, ತಿರುಕುಳಿ-ತಿರುಪೆ ಎತ್ತುವ ಜನ, ಆಪರೆ-ಆಗುವುದಾದರೆ
ಮೂಲ ...{Loading}...
ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲು ಬಾರದು ನೃಪತಿ ತಪ್ಪಿದೊಡಾರು ಕಾವವರು
ಕರೆಸಿ ಬುದ್ಧಿಯ ಹೇಳಿ ಎನ್ನನು
ಹೊರೆಯಲಾಪರೆ ಹೊರೆಯಿರಲ್ಲದ
ಡರಸಿ ಕಳುಹುವುದೆನ್ನನೆನಲಿಂತೆಂದಳಾ ರಾಣಿ ॥29॥
೦೩೦ ಲಲನೆ ಕೇಳನ್ಯಾಯದವರನು ...{Loading}...
ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯಬೇಡ ಪರ ಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು
ಕೊಲಿಸುವೊಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೈರಂಧ್ರಿ ಕೇಳು. ಅನ್ಯಾಯ ಮಾಡಿದವರನ್ನು ಕೊಲ್ಲಿಸುತ್ತೇನೆ. ನೀನೇನೂ ಹೆದರಬೇಕಾಗಿಲ್ಲ. ಪರಸ್ತ್ರೀಯನ್ನು ಬಯಸಿದವನು ನನ್ನ ತಮ್ಮನಲ್ಲ. ಅವನು ನನಗೆ ಶತ್ರು, ಮಹಾಪಾಪಿ” ಎಂದು ಸುದೇಷ್ಣೆಯು ಹೇಳಿದಾಗ ಸೈರಂಧ್ರಿಯು
“ಹಾಗೆ ಕೊಲ್ಲಿಸಬೇಕೆಂದರೆ ನೀವು ತಾನೇ ಏಕೆ ? ತಪ್ಪು ಮಾಡಿದ ಅವನನ್ನು ನನ್ನ ಪತಿಗಳೇ ಅವನ ಕುಲ ಸಹಿತ ಕೊಂದು ಹಾಕುತ್ತಾರೆ. ಆದ್ದರಿಂದ ನನಗೆ ಹೆದರುವ ಕಾರಣವಿಲ್ಲ. ನಿಮಗೂ ತಿಳಿದಿರಲಿ ಎಂಬ ಕಾರಣಕ್ಕೆ ತಿಳಿಸಿದ್ದೇನೆ ಅಷ್ಟೆ” ಎಂದಳು.
ಪದಾರ್ಥ (ಕ.ಗ.ಪ)
ಅಳುಪು-ಬಯಸು, ಆಸೆಪಡು
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಸುದೇಷ್ಣೆಗೆ ದ್ರೌಪದಿ ಹೇಳುತ್ತಾಳೆ. “ಮಹಾರಾಣಿ ಕೀಚಕನನ್ನು ನನ್ನ ಪತಿಗಳು ಕೊಲ್ಲುತ್ತಾರೆ. ನೀನು ಇಂದೇ ಸಜೀವ ಶ್ರಾದ್ಧವನ್ನು ಮಾಡು. ಕಣ್ಣು ತುಂಬ ಒಮ್ಮೆ ಈಗಲೇ ನೋಡಿ ಬಿಡು”
ಮೂಲ ...{Loading}...
ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯಬೇಡ ಪರ ಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು
ಕೊಲಿಸುವೊಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು ॥30॥
೦೩೧ ಎನ್ದು ಬೀಳ್ಕೊಣ್ಡಬಲೆ ...{Loading}...
ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದುಕೊಂಬೆನೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ರಾಣಿಯನ್ನು ಬೀಳ್ಕೊಂಡು ಸೈರಂಧ್ರಿಯು ತನ್ನ ವಾಸದ ಮನೆಗೆ ಬಂದಳು. ಅಂತಸ್ತಾಪ ಹೆಚ್ಚಾಗಿ ಮನಸ್ಸಿನಲ್ಲೇ ನೊಂದು, ಪೆಚ್ಚಾಗಿ, ಕೊರಗಿ ಆ ಹಗಲನ್ನು ಹೇಗೋ ಕಳೆದಳು. ಅವಳ ಅಂತರಂಗದಲ್ಲಿ ಎದ್ದ ತುಮುಲ ಇದು. “ಆತ್ಮಹತ್ಯೆ ಮಾಡಿಕೊಳ್ಳೋಣ ಎಂದರೆ ಆತ್ಮಹತ್ಯಾ ಪಾಪ ಅಂಟಿಕೊಳ್ಳದೆ ಇರುವುದಿಲ್ಲ. ಏನು ಮಾಡಲಿ ?”
ಪದಾರ್ಥ (ಕ.ಗ.ಪ)
ಸೈವೆರಗು-ಸ್ತಬ್ಧತೆ, ಚಕಿತತೆ, ಹಿಂದೆ ಹತ್ತದೆ-ಜೊತೆಯಲ್ಲೇ ಅಂಟಿಕೊಳ್ಳದೆ, ಮಾಣದು-ಬಿಡುವುದಿಲ್ಲ. ಏಗುವೆ-ಏನಂ+ಗೈವೆ, ಏಗೈವೆ, ಏಗುವೆ-ಏನು ಮಾಡಲಿ ?
ಮೂಲ ...{Loading}...
ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದುಕೊಂಬೆನೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ॥31॥
೦೩೨ ಆರಿಗುಸುರುವೆನಾರ ಸಾರುವೆ ...{Loading}...
ಆರಿಗುಸುರುವೆನಾರ ಸಾರುವೆ
ನಾರಿಗೊರಲುವೆನಾರಿಗರುಹುವೆ
ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ
ಘೋರ ಪಾತಕಿಯೆನ್ನವೊಲು ಮು
ನ್ನಾರು ನವೆದವರುಂಟು ಮರಣವು
ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ದ್ರೌಪದಿ ತನ್ನ ಮುಂದಿನ ಕಾರ್ಯದ ಬಗೆಗೆ ಚಿಂತಿಸಿದ್ದಾಳೆ. “ನನಗಾದ ಅವಮಾನವನ್ನು ಯಾರಿಗೆ ಹೇಳಲಿ ? ಯಾರ ಬಳಿಗೆ ಹೋಗಲಿ ? ಯಾರಿಗೆ ಹೇಳಲಿ ? ಯಾರನ್ನು ಬೇಡಿಕೊಳ್ಳಲಿ ? ಛಿ ! ಹೆಣ್ಣಿನ ಜನ್ಮಕ್ಕೆ ಧಿಕ್ಕಾರವಿರಲಿ. ಮಹಾಪಾಪಿಷ್ಠಳಾದ ನನ್ನಂತೆ ನವೆದವರು ಈ ಹಿಂದೆ ಯಾರಿದ್ದಾರೆ ? ಅಯ್ಯೋ ನನಗೆ ಸಾವು ಬರುತ್ತಿಲ್ಲವಲ್ಲ” ಎಂದು ತನ್ನ ಹೊಟ್ಟೆಯ ಮೇಲೆ ಹೊಡೆದುಕೊಂಡು ಸಂಕಟಪಟ್ಟಳು.
ಪದಾರ್ಥ (ಕ.ಗ.ಪ)
ಅರುಹು-ತಿಳಿಸು, ಸಾರು-ಸಮೀಪಿಸು
ಮೂಲ ...{Loading}...
ಆರಿಗುಸುರುವೆನಾರ ಸಾರುವೆ
ನಾರಿಗೊರಲುವೆನಾರಿಗರುಹುವೆ
ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ
ಘೋರ ಪಾತಕಿಯೆನ್ನವೊಲು ಮು
ನ್ನಾರು ನವೆದವರುಂಟು ಮರಣವು
ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ ॥32॥
೦೩೩ ಯಮಸುತಙ್ಗರುಹುವೆನೆ ಧರ್ಮ ...{Loading}...
ಯಮಸುತಂಗರುಹುವೆನೆ ಧರ್ಮ
ಕ್ಷಮೆಯ ಗರ ಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧರ್ಮರಾಯನಿಗೆ ಹೇಳೋಣ ಎಂದರೆ ಅವನಿಗೆ ಧರ್ಮದ ಕ್ಷಮೆಯ ಗರ ಬಡಿದುಕೊಂಡಿದೆ. ಅರ್ಜುನನಿಗೆ ನನ್ನ ಮೇಲೆ ಮಮತೆಯುಂಟು ನಿಜ. ಆದರೆ ಅವನಿಗೆ ತನ್ನ ಅಣ್ಣನ ಆಜ್ಞೆಯ ಭ್ರಮೆ ಕವಿದಿದೆ. ಉಳಿದ ಇಬ್ಬರು ನಕುಲ ಸಹದೇವರನ್ನು ಕೇಳೋಣ ಎಂದರೆ ಅವರು ಈ ಕೀಚಕ ನಾಯಿಯನ್ನು ಕೊಲ್ಲಲು ಸಮರ್ಥರಲ್ಲ. ಈ ವಿಷಯದಲ್ಲಿ ನನಗೆ ಸಂದೇಹವಿಲ್ಲ” ಎಂದುಕೊಳ್ಳುತ್ತಾಳೆ.
ಪದಾರ್ಥ (ಕ.ಗ.ಪ)
ಧರ್ಮಕ್ಷಮೆ-ಧರ್ಮಕಾಪಾಡಿಕೊಳ್ಳುವುದಕ್ಕಾಗಿ ಸಹನೆ, ಗರ-ಗ್ರಹ, ಅಕ್ಷಮರು-ಅಸಮರ್ಥರು
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ದ್ರೌಪದಿ ನಾಲ್ವರು ಸೋದರರನ್ನೂ ತೂಗಿ ನೋಡಿರುವ ಬಗೆ ಅದ್ಭುತವಾಗಿದೆ. ಧರ್ಮರಾಯ ಅವಳ ದೃಷ್ಟಿಯಲ್ಲಿ ಧರ್ಮಕ್ಷಮೆಯ ಗ್ರಹ ಬಡಿದಂತಾಡುವವನು. ಅಂದರೆ ಇವೆಲ್ಲ ಎದುರಿಸಿ ಮರೆಯಬೇಕಾದ ಸಂಗತಿಗಳು ಎಂಬಷ್ಟು ಸಹನೆ ಅವನದು. ವಿರಾಟನ ಸೇವಾ ವೃತ್ತಿಯಲ್ಲಿರುವಾಗ ಮುಜುಗರ ತರುವ ಯಾವ ಕೆಲಸವನ್ನೂ ಮಾಡಬಾರದು ಎಂಬ ಮತ್ತು ಗುಪ್ತವೇಷದಲ್ಲಿರುವಾಗ ಸಿಕ್ಕಿಬೀಳುವ ಕೆಲಸ ಮಾಡಬಾರದು ಎಂಬ ಧರ್ಮಪ್ರಜ್ಞೆ ಅವನಿಗಿದೆ. ಅರ್ಜುನನಿಗೆ ದ್ರೌಪದಿಯ ಮೇಲೆ ಅಪಾರ ಮಮತೆ ಇರುವುದೇನೋ ನಿಜ. ಆದರೆ ಅವನ ಮನಸ್ಸಿನ ಪಟ್ಟಿಯಲ್ಲಿ ಮೊದಲ ಪ್ರಾಶಸ್ತ್ಯವಿರುವುದು ಧರ್ಮರಾಯನ ಆಜ್ಞೆಯ ಮೇಲೇ ಹೊರತು ಬೇರೆ ಯಾವುದರ ಮೇಲೂ ಅಲ್ಲ. ಆದುದರಿಂದ ಅಣ್ಣನಿಗೆ ಇಷ್ಟವಿಲ್ಲದ ಕೆಲಸವನ್ನು ಅವನು ಮಾಡಲಾರ. ನಕುಲ ಸಹದೇವರು ಮಹಾವೀರರಾದರೂ ಕೀಚಕನಂಥ (ಅವನ ಹೆಸರು ‘ಸಿಂಹ ಬಲ’) ಮಹಾವೀರ ರಾಕ್ಷಸನನ್ನು ಎದುರಿಸಿ ಗೆಲ್ಲುವ ಚಾಕಚಕ್ಯ ಅವರಿಗಿಲ್ಲ. ಆ ಕೀಚಕ ನಾಯನ್ನು ಕೊಲ್ಲಲು ಖಂಡಿತ ಅವರಿಗೆ ಆಗದು. ಆ ಸಂದರ್ಭವನ್ನು ಬಳಸಿಕೊಂಡು ಕುಮಾರವ್ಯಾಸನು ನಾಲ್ವರು ಸೋದರರ ಸ್ವರೂಪ ಸ್ವಭಾವಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾನೆ.
ಮೂಲ ...{Loading}...
ಯಮಸುತಂಗರುಹುವೆನೆ ಧರ್ಮ
ಕ್ಷಮೆಯ ಗರ ಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ ॥33॥
೦೩೪ ಎಲ್ಲರೊಳು ಕಲಿಭೀಮನೇ ...{Loading}...
ಎಲ್ಲರೊಳು ಕಲಿಭೀಮನೇ ಮಿಡು
ಕುಳ್ಳ ಗಂಡನು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡುಹೀಹಾಳಿಯುಳ್ಳವನು
ಖುಲ್ಲನಿವನುಪಟಳವನಾತಂ
ಗೆಲ್ಲವನು ಹೇಳುವೆನು ಬಳಿಕವ
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಐವರು ಪಾಂಡವರಲ್ಲಿ ಮಿಡುಕು ಉಳ್ಳವನೆಂದರೆ ಕಲಿಭೀಮ ಮಾತ್ರ. ನನಗೆ ವಿಪತ್ತು ಬಂದಿದೆಯೆಂದು ತಿಳಿದರೆ ತಡಮಾಡದೆ ಪ್ರತಿಕ್ರಿಯಿಸುತ್ತಾನೆ. ತುಂಬ ಪೈಪೋಟಿಯ ಸ್ವಭಾವವನ್ನು ಉಳ್ಳವನು. ಆದುದರಿಂದ ಈ ದುಷ್ಟ ಕೀಚಕನು ಕೊಡುತ್ತಿರುವ ಹಿಂಸೆಯ ವಿಷಯವನ್ನೆಲ್ಲ ಭೀಮನಿಗೆ ಹೇಳಿಬಿಡುತ್ತೇನೆ. ಉಳಿದ ಸೋದರರಂತೆ ಅವನಲ್ಲೂ ಹುರುಳಿಲ್ಲ ಎಂದು ಗೊತ್ತಾದರೆ ನಾನು ಘೋರವಾದ ವಿಷವನ್ನು ಸೇವಿಸಿ ಪ್ರಾಣ ತ್ಯಾಗ ಮಾಡುತ್ತೇನೆ. ಎಂದು ದ್ರೌಪದಿಯು ಯೋಚಿಸಿದಳು.
ಪದಾರ್ಥ (ಕ.ಗ.ಪ)
ಮಿಡುಕು- ಪರಾಕ್ರಮ, ಹಾನಿ ಹರಿಬ-ಕೆಡುಕು, ತೊಂದರೆ, ಅಂಗೈಸು-ಒಪ್ಪು, ಸಮ್ಮತಿಸು, ಹೀಹಾಳಿ-ಪಂಥ, ಪ್ರತಿಜ್ಞೆ, ಹುರುಡು
ಟಿಪ್ಪನೀ (ಕ.ಗ.ಪ)
- ಎಲ್ಲ ಪ್ರಯತ್ನಗಳನ್ನು ಮಾಡಿ ವಿಫಲಗೊಂಡಾಗ ಮಾತ್ರ ಆತ್ಮಹತ್ಯೆಯ ನಿರ್ಧಾರಕ್ಕೆ ದ್ರೌಪದಿ ಬಂದುದನ್ನು ನೋಡಿದರೆ ಅವಳ ಆತ್ಮಸ್ಥೈರ್ಯ ಶ್ಲಾಘನೀಯವೆನ್ನಿಸುತ್ತದೆ.
- ಸೌಗಂಧಿಕ ಪುಷ್ಪವನ್ನು ತರಲು ಭೀಮನಿಗೇ ಹೇಳಿದ್ದುದನ್ನು ನೆನಪಿಸಿಕೊಂಡರೆ ಈಗಲೂ ಅವಳಿಗೆ ಭೀಮನ ಮೇಲೆ ಇರುವ ನಂಬಿಕೆ ಸ್ಪಷ್ಟವಾಗುತ್ತದೆ.
ಮೂಲ ...{Loading}...
ಎಲ್ಲರೊಳು ಕಲಿಭೀಮನೇ ಮಿಡು
ಕುಳ್ಳ ಗಂಡನು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡುಹೀಹಾಳಿಯುಳ್ಳವನು
ಖುಲ್ಲನಿವನುಪಟಳವನಾತಂ
ಗೆಲ್ಲವನು ಹೇಳುವೆನು ಬಳಿಕವ
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ ॥34॥
೦೩೫ ನಿಳಯವನು ಹೊರವಣ್ಟು ...{Loading}...
ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೆಯಿಂದ ಭೀಮನಿದ್ದ ಪಾಕಶಾಲೆಯ ಕಡೆಗೆ ದ್ರೌಪದಿ ಹೊರಟಳು. ಆಗ ಕಗ್ಗತ್ತಲು. ಆದರೆ ಅವಳ ಕಣ್ಣಿನ ಕಾಂತಿಯು ಆ ಕತ್ತಲೆಯನ್ನು ಹೋಗಲಾಡಿಸಿತ್ತು. ಕೈಬಳೆಗಳ ಝಣ ಝಣ ಧ್ವನಿಯಿಂದ ಅವಳ ಎಡ ಭುಜಲತೆ ತೂಗುತ್ತಿತ್ತು. ಅವಳ ಸೆರಗು ಜಾರಿ ಎದೆ ನಡುಗುತ್ತಿತ್ತು. ರಭಸವಾಗಿ ಹೆಜ್ಜೆ ಹಾಕುತ್ತ ತುಂಬ ಕಳವಳದ ಮನಸ್ಸಿನ ಆ ಮುಗ್ಧ ದ್ರೌಪದಿಯು ಪಾಕಶಾಲೆಯನ್ನು ಪ್ರವೇಶಿಸಿದಳು.
ಪದಾರ್ಥ (ಕ.ಗ.ಪ)
ಹೊರವಂಟು-ಹೊರಟು, ತಿಮಿರ-ಕತ್ತಲೆ, ವಾಮ-ಎಡ, , ಒಲೆವ-ಅಲುಗಾಡುವ, ಅತ್ತಿತ್ತ ತೂಗುವ
ಟಿಪ್ಪನೀ (ಕ.ಗ.ಪ)
ಒಲಿದು ಮೇಲುದ ನೂಕಿ-(ಇಲ್ಲಿ ಒಲಿದು ಎಂಬ ಶಬ್ದಕ್ಕೆ ಅರ್ಥ ಕಷ್ಟವಿಲ್ಲವಾದರೂ ಇದು ಒಲೆವ ಎಂದೋ ಬಲಿದು ಎಂದೋ ಇದ್ದಿದ್ದರೆ ಚೆನ್ನಾಗಿತ್ತೆನಿಸುತ್ತದೆ)
ಮೂಲ ...{Loading}...
ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ ॥35॥
೦೩೬ ಕೆಲದಲೊಟ್ಟಿದ ಪತ್ರ ...{Loading}...
ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ತಳಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಡಿಗೆ ಮನೆಯ ಚಿತ್ರ ಇಲ್ಲಿದೆ. ಒಂದು ಕಡೆ ಒಟ್ಟಿದ್ದ ಸೊಪ್ಪು ತರಕಾರಿ ಹಣ್ಣುಗಳ ರಾಶಿ.
ಹೊಳೆ ಹೊಳೆಯುತ್ತಿದ್ದ ರಾಜಾನ್ನದಕ್ಕಿಯ ಸಾಲು ಸಾಲಾದ ಪಾತ್ರೆಗಳು. ಅಕ್ಕಪಕ್ಕದಲ್ಲೇ ಸಂಭಾರದ ಪುಡಿಗಳು. ಸುರುಚಿರ ಆಹಾರ ಪದಾರ್ಥಗಳು. ವಿಧವಿಧವಾದ ಭಕ್ಷ್ಯ ವಸ್ತುಗಳ ಸಮೂಹದಿಂದ ಕೂಡಿದ ಆ ಪಾಕಶಾಲೆಗೆ ಮದಿಸಿದ ಆನೆಯಂತೆ ಗಂಭೀರವಾದ ಹೆಜ್ಜೆಯನ್ನಿಟ್ಟು ದ್ರೌಪದಿ ಬಂದಳು.
ಪದಾರ್ಥ (ಕ.ಗ.ಪ)
ಒಟ್ಟು-ರಾಶಿ ಹಾಕು, ಪತ್ರ-ಸೊಪ್ಪು, ಶಾಕಾವಳಿ-ತರಕಾರಿಗಳ ಸಮೂಹ, ಕಳವೆ-ಬತ್ತ, ಅಕ್ಕಿ, ಹರಿಯಣ-ಹರಿವಾಣ ಪಾತ್ರೆ, ಬೋನ-ಆಹಾರ, ಬಾಣಸ-ಅಡಿಗೆ ಮನೆ
ಪಾಠಾನ್ತರ (ಕ.ಗ.ಪ)
ಲಲಿತ - ತಳಿತ
ವಿರಾಟ ಪರ್ವ, ಮೈ.ವಿ.ವಿ
ಮೂಲ ...{Loading}...
ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ತಳಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ ॥36॥
೦೩೭ ತರಿದ ಕುರಿಗಳ ...{Loading}...
ತರಿದ ಕುರಿಗಳ ಹಂದಿಯಡಗಿನ
ಜುರಿತ ರಕುತದ ಮೊಲನ ಖಂಡದ
ತಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಸಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪಾಕಶಾಲೆಯಲ್ಲಿ ಕತ್ತರಿಸಿದ ಕುರಿಗಳ ರಾಶಿ. ಹಂದಿಯ ಮಾಂಸದ ರಾಶಿ. ರಕ್ತ ಜಿನುಗುವ ಮೊಲದ ತುಂಡುಗಳ ರಾಶಿ. ತಿರುಚಿ ಹಾಕಿದ ಗುಬ್ಬಿಗಳ ರಾಶಿ. ಕಿತ್ತು ಸೀಳಿಹಾಕಿದ ನವಿಲು ಲಾವುಗೆ ಪಕ್ಷಿಗಳ ರಾಶಿ. ಒಂದು ಕಡೆ ತುಂಬಿದ್ದ ಎಲುಬುಗಳ ಸಾಲು, ಮಾಂಸದ ಸಾಲುಗಳು, ಹರಿದ ರೆಕ್ಕೆಗಳು ಇವನ್ನು ಕಂಡು ದ್ರೌಪದಿ ಮಾಂಸ ತುಂಬಿದ್ದ ಪಾಕಶಾಲೆಯನ್ನು ಹೊಗಳಿದಳು.
ಪದಾರ್ಥ (ಕ.ಗ.ಪ)
ತರಿ-ತುಂಡುಮಾಡು, ಅಡಗು-ಮಾಂಸ, ಜುರಿತ-ಸೋರುವ, ಖಂಡ-ಭಾಗ, ತಿರಿ-ತಿರುಚು, ಕೀಸು-ಕೊರೆದು ಹಾಕು, ತುರುಗು-ರಾಶಿಹಾಕು, ಸುಂಟಿಗೆ-ಮಾಂಸ, ಹರದೆರಕೆ-ಹರಿದೆರಕೆ ಇರಬಹುದು (ಹರಿದ=ಕತ್ತರಿಸಿ ಹಾಕಿದ) ಎರಕೆ-ರೆಕ್ಕೆ ಅಡಬಳ-ಮಾಂಸ,
ಟಿಪ್ಪನೀ (ಕ.ಗ.ಪ)
ಇವೆಲ್ಲ ಭೀಮನ ಅಚ್ಚುಕಟ್ಟುತನ ಎಂಬ ಭಾವ ಅವಳಲ್ಲಿದೆ. ಕುಮಾರವ್ಯಾಸನಿಗೆ ಅರಮನೆಯ ಪಾಕಶಾಲೆಗಳ ಪರಿಚಯ ಚೆನ್ನಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಮೂಲ ...{Loading}...
ತರಿದ ಕುರಿಗಳ ಹಂದಿಯಡಗಿನ
ಜುರಿತ ರಕುತದ ಮೊಲನ ಖಂಡದ
ತಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಸಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ ॥37॥
೦೩೮ ಆರಲರಿದನೊ ಭೀಮನೀ ...{Loading}...
ಆರಲರಿದನೊ ಭೀಮನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ
ನಾರಿ ನಸುನಗುತೊಳಗೆ ಹೊಕ್ಕು ಬ
ಕಾರಿ ಮಂಚದೊಳಿರಲು ನಿದ್ರಾ
ಭಾರ ವಿಹ್ವಲಕರಣನನು ಹೊದ್ದಿದಳು ಲಲಿತಾಂಗಿ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಭೀಮನು ಸೂಪವಿದ್ಯೆಯನ್ನು (ಪಾಕಕಲೆ) ಯಾರಿಂದ ಕಲಿತನೋ ಏನೋ. ಭೇಷ್. ವಿಧಿ ಕೆರಳಿದಾಗ ಎಂಥವರನ್ನೂ ಎಂಥ ಸ್ಥಿತಿಗೆ ತರುತ್ತದೆ ! ಶಿವಶಿವಾ !” ಎಂದುಕೊಂಡು ದ್ರೌಪದಿ ನಗುನಗುತ್ತ ಒಳಗೆ ಹೊಕ್ಕಳು. ಆ ಬಕವೈರಿ ಭೀಮನು ಮಂಚದಲ್ಲಿ ಮಲಗಿದ್ದ. ನಿದ್ರಾಭಾರದಿಂದ ಮೈಮರೆತಿದ್ದ ಆ ಭೀಮನ ಬಳಿಗೆ ದ್ರೌಪದಿ ಬಂದಳು.
ಪದಾರ್ಥ (ಕ.ಗ.ಪ)
ಅರಿ-ತಿಳಿ, ಸೂವಾರ ವಿದ್ಯೆ-ಅಡಿಗೆಯ ಕಲೆ, ಸೂಪಕಾರ> ಸೂವಾರ> ಸುವಾರ, ಬಕಾರಿ-ಬಕನೆಂಬ ರಾಕ್ಷಸನನ್ನು ಕೊಂದ ಭೀಮ (ವಿವರಗಳಿಗೆ ಆದಿಪರ್ವದ ಬಕವಧಾ ಪ್ರಸಂಗವನ್ನು ಗಮನಿಸಿ) ನಿದ್ರಾಭಾರವಿಹ್ವಲಕರಣ-ತುಂಬ ನಿದ್ದೆಯ ಭಾರದಿಂದಾಗಿ ಗೊಂದಲಗೊಂಡ ಇಂದ್ರಿಯಗಳು, ಹೊದ್ದು-ಸಮೀಪಿಸು.
ಟಿಪ್ಪನೀ (ಕ.ಗ.ಪ)
ತನ್ನ ಬದುಕಿನ ದುರಂತಮಯ ಸನ್ನಿವೇಶದಲ್ಲಿ, ಆತ್ಮಹತ್ಯೆಯ ಬಗೆಗೆ ಯೋಚಿಸುವ ಸ್ಥಿತಿ ತಲಪಿದ್ದ ದ್ರೌಪದಿ ಇಲ್ಲಿ ಭೀಮನ ಪಾಕ ನೈಪುಣ್ಯದ ಪರಿಯನ್ನು ಕಂಡು ಪ್ರಸನ್ನಳಾಗಿ ಮೈಮರೆತಿದ್ದಾಳೆ. ಇಂಥ ದುರಂತ ಬಿಡುವು ಕುಮಾರವ್ಯಾಸನ ಸೃಷ್ಟಿ.
ಮೂಲ ...{Loading}...
ಆರಲರಿದನೊ ಭೀಮನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ
ನಾರಿ ನಸುನಗುತೊಳಗೆ ಹೊಕ್ಕು ಬ
ಕಾರಿ ಮಂಚದೊಳಿರಲು ನಿದ್ರಾ
ಭಾರ ವಿಹ್ವಲಕರಣನನು ಹೊದ್ದಿದಳು ಲಲಿತಾಂಗಿ ॥38॥
೦೩೯ ಎಬ್ಬಿಸಲು ಭುಗಿಲೆಮ್ಬನೋ ...{Loading}...
ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ
ತುಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಭೀಮ ಎಬ್ಬಿಸಿದರೆ ಕೆರಳುತ್ತಾನೋ ಏನೋ ಅಥವಾ ‘ಒಬ್ಬಳೇ ಏಕೆ ಬಂದೆ ? ಮುಖ ಏಕೆ ಮಂಕಾಗಿದೆ ?” ಎಂದು ನನ್ನನ್ನು ಸಮಾಧಾನದಿಂದ ಸಂತೈಸುತ್ತಾನೋ ? ನಾನು ಬಂದ ಗಳಿಗೆ ಚೆನ್ನಾಗಿದೆಯೋ ಇಲ್ಲವೋ ಅಥವಾ ಅತಿಶಯವಾದುದೋ ನೋಡುವ ಜನರ ಮನಸ್ಸಿಗೆ ಇದು ನಿಬ್ಬರವಲ್ಲವೆ ? ಏನು ಮಾಡಲಿ. ಎಬ್ಬಿಸಿಯೇ ನೋಡಿಬಿಡುತ್ತೇನೆ” ಎಂದುಕೊಂಡು ದ್ರೌಪದಿ ಭೀಮನ ಸಮೀಪಕ್ಕೆ ಬಂದಳು.
ಪದಾರ್ಥ (ಕ.ಗ.ಪ)
ಭುಗಿಲೆನ್ನು -ತಟಕ್ಕನೆ ಕೆರಳು, ಮೇಣ್-ಅಥವಾ, ಸಾಮ-ಸಾಮ ಬುದ್ಧಿಯಿಂದ , ರಮಿಸುವ ಧ್ವನಿಯಿಂದ, ತುಬ್ಬು-ಹರಡು, ವ್ಯಾಪಿಸು, ನಿಬ್ಬರ-ಅತಿಶಯ
ಮೂಲ ...{Loading}...
ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ
ತುಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ ॥39॥
೦೪೦ ಮೆಲ್ಲ ಮೆಲ್ಲನೆ ...{Loading}...
ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲ ನಂದನೆಯ
ವಲ್ಲಭೆಯೆ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ಮಲಗಿದ್ದ ಭೀಮನ ಮುಸುಕನ್ನು ಸಡಿಲಿಸಿ ಅವನ ಗಲ್ಲವನ್ನು ಹಿಡಿದು ಅಲುಗಿಸಿದಳು. ಆ ಮಹಾವೀರ ಕೂಡಲೇ ಎದ್ದು ದ್ರೌಪದಿಯನ್ನು ನೋಡಿದ. “ರಮಣಿ ! ಏಕೆ ಬಂದೆ ? ನಿನ್ನ ಮುಖದಲ್ಲಿ ತುಂಬಗೊಂದಲ ಕಾಣುತ್ತಿದೆ. ತಡಮಾಡದೆ ಬೇಗ ಹೇಳು. ರಾತ್ರಿಯ ಈ ಹೊತ್ತಿನಲ್ಲಿ ಏಕೆ ಬಂದೆ ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಅಪ್ರತಿಮಲ್ಲ, ಪ್ರತಿಮಲ್ಲ ಅಂದರೆ ಎದುರಾಳಿ. ಅಪ್ರತಿಮಲ್ಲ ಎದುರಾಳಿಯೇ ಇಲ್ಲದವನು, ತಳುವಿಲ್ಲದೆ-ತಡಮಾಡದೆ
ಟಿಪ್ಪನೀ (ಕ.ಗ.ಪ)
- ಮೂಲಭಾರತದಲ್ಲಿ ದ್ರೌಪದಿಯು ಭೀಮನ ಬಳಿಗೆ ಬಂದು ಏಳು ಏಳು ಏಕೆ ಮಲಗಿದ್ದೀ ? ಭೀಮ ! ಸತ್ತವನಂತೆ ಏಕೆ ಮಲಗಿದ್ದೀಯೆ ಎನ್ನುತ್ತಾಳೆ : ಉತ್ತಿಷ್ಠೋತ್ತಿಷ್ಠ ಕಿಂ ಶೇಷೇ ಭೀಮಸೇನ ಯಥಾ ಮೃತ:
- ಮೂಲಭಾರತದಲ್ಲಿ ಮಹಾವೀರನಾದ ಭೀಮನು ಅಡಿಗೆಯ ಭಟ್ಟನಾದ ಬಗೆಗೆ ದ್ರೌಪದಿಗೆ ತುಂಬ ಸಂಕಟವಿದೆ.
“ಸೂತ ಕರ್ಮಣಿ ಹೀನೇ ತ್ವಂ ಅಸಮೇ ಭರತರ್ಷಭ
ಬ್ರುವನ್ ವಲ್ಲವ ಜಾತೀಯ: ಕಸ್ಯ ಶೋಕಂ ನ ವರ್ಧಯೆ”
ಮೂಲ ...{Loading}...
ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲ ನಂದನೆಯ
ವಲ್ಲಭೆಯೆ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ ॥40॥
೦೪೧ ಸೈರಿಸರು ಬಾಣಸದ ...{Loading}...
ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ನೀನು ಈ ವೇಳೆಯಲ್ಲಿ ನನ್ನ ಬಳಿಗೆ ಬಂದುದನ್ನು ಇಲ್ಲಿಯ ಪಾಕಶಾಲೆಯ ಹೆಂಗಸರು ಸೈರಿಸುವುದಿಲ್ಲ. ಅವರು ಕೆಟ್ಟ ಜನ, ದುಷ್ಟ ಬುದ್ಧಿಯ ಕ್ರೂರ ಜನ, ಅರಮನೆಯ ನಾಯಿಗಳು. ನಾವುಗಳೋ , ಹೊರಗಿನವರು ! ಆದ್ದರಿಂದ ಕಷ್ಟವಾಗುತ್ತದೆ. ಅಕ್ಕಪಕ್ಕದವರಿಗೆ ಎಚ್ಚರವಾಗದಂತೆ ನೀನು ಮೆಲುಧ್ವನಿಯಲ್ಲಿ ಹೇಳು. ನಿನ್ನ ಈ ಸಂಕಟ ಯಾರಿಂದ ಬಂದದ್ದು” ಎಂದು ಭೀಮ ಕೇಳಿದ. ಆಗ ದ್ರೌಪದಿ ಹೀಗೆ ಹೇಳಿದಳು.
ಪದಾರ್ಥ (ಕ.ಗ.ಪ)
ಬಾಣಸ-ಅಡಿಗೆ
ಟಿಪ್ಪನೀ (ಕ.ಗ.ಪ)
- ಈ ಪದ್ಯದಲ್ಲಿ ಉದ್ಯೋಗವರ್ಗದವರ ಮನೋಧರ್ಮ ಎಂಥದೆಂಬ ಬಗೆಗೆ ಸೂಕ್ಷ್ಮ ಉಲ್ಲೇಖವಿದೆ. ಮೂಲಭಾರತದಲ್ಲಿ ಹೆಚ್ಚಿನ ವಿವರಗಳಿವೆ. ಭೀಮನು ಆನೆಗಳೊಂದಿಗೆ ಹೋರಾಡುತ್ತಿದ್ದಾಗ ವಿರಾಟನ ಅಂತಃಪುರದ ಸ್ತ್ರೀಯರೆಲ್ಲ ಭೀಮನನ್ನು ಮೆಚ್ಚುಗೆಯ ಕಂಗಳಿಂದ ನೋಡುತ್ತಿದ್ದರಂತೆ ? ಹುಲಿಯೊಂದಿಗೆ ಭೀಮನು ಹೋರಾಡುತ್ತಿದ್ದಾಗ ಸುದೇಷ್ಣೆ ಮೆಚ್ಚು ಕಂಗಳಿಂದ ಭೀಮನ ಕಡೆ ನೋಡುತ್ತಿದ್ದಳಂತೆ. ದ್ರೌಪದಿಗೆ ಈ ಎರಡು ದೃಶ್ಯಗಳನ್ನು ಕಂಡು ಮಾತ್ಸರ್ಯವಾಗಿತ್ತೆಂದು ವ್ಯಾಸರು ಹೇಳುತ್ತಾರೆ.
- ಭೀಮ-ಸೈರಂಧ್ರಿಯನ್ನು ಬೇರೆ ಬೇರೆಯಾಗಿ ನೋಡಿದ ಅಂತಃಪುರದವರು ಕೂಡ ಇವರಿಬ್ಬರೂ ಅರಮನೆಗೆ ಒಟ್ಟಿಗೆ ಬರುತ್ತಾರೆಂದು ಕೂಡ ಆಡಿಕೊಳ್ಳುತ್ತಿದ್ದರಂತೆ :
“ಕಲ್ಯಾಣ ರೂಪಾ ಸೈರಂಧ್ರೀ ವಲ್ಲವಶ್ಚಾಪಿ ಸುಂದರ”
ಸೈರಂಧ್ರಿ ಮಹಾಸುಂದರಿ, ವಲಲನೂ ತುಂಬ ಸುಂದರ, ಅವರಿಬ್ಬರೂ ಒಬ್ಬರಿಗೊಬ್ಬರು ಸಮಜೋಡಿ, ಇತ್ಯಾದಿಯಾಗಿ ಮಾತಾಡಿಕೊಳ್ಳುತ್ತಿದ್ದರಂತೆ.
ಹಾಗೆಯೇ ಭೀಮನು ಜೀಮೂತಮಲ್ಲನನ್ನು ಮಲ್ಲಯುದ್ಧದಲ್ಲಿ ಕೊಂದ ಮೇಲೆ ಮುಂದೆ ಕ್ರೂರ ಮೃಗಗಳೊಡನೆ ಹೋರಾಡಿ ರಾಜನಿಗೆ ರಂಜನೆ ಒದಗಿಸಿದಾಗ ದ್ರೌಪದಿಯ ದುಗುಡವನ್ನು ಕಂಡು ಸ್ತ್ರೀಯರು ಅವಳಿಗೂ ವಲಲನಿಗೂ ಸಂಬಂಧ ಕಲ್ಪಿಸಿ ಆಡಿಕೊಂಡಿದ್ದರೆಂಬ ವಿಷಯವನ್ನು ದ್ರೌಪದಿಯೇ ಹೇಳಿದ್ದಾಳೆ. - ಮೂಲದಲ್ಲಿ ಈ ಬಗೆಯ ಸಂಭಾಷಣೆಯಿಲ್ಲ. ಭೀಮನು ದ್ರೌಪದಿಯ ಕೈಹಿಡಿದು ಜೋರಾಗಿ ಅಳುತ್ತಾನೆ.
ಮೂಲ ...{Loading}...
ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ ॥41॥
೦೪೨ ನಿನ್ನೆ ಹಗಲರೆಯಟ್ಟಿ ...{Loading}...
ನಿನ್ನೆ ಹಗಲರೆಯಟ್ಟಿ ಕೀಚಕ
ಕುನ್ನಿಯೊದೆದನು ರಾಜ ಸಭೆಯಲಿ
ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯ ಬಿಡ ನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಭೀಮನಿಗೆ ಹೇಳಿದಳು. “ನಿನ್ನೆ ಮಧ್ಯಾಹ್ನ ಕೀಚಕ ನಾಯಿ ಎಲ್ಲರೆದುರಿಗೆ ರಾಜಸಭೆಯ ಬಳಿ ನನ್ನನ್ನು ಒದ್ದ. ನಿನ್ನಂಥ ವೀರರಿರುವಾಗ ನನಗೆ ಅವಮಾನವಾದದ್ದು ಸರಿಯೆ ? ಅಷ್ಟೇ ಅಲ್ಲ. ಅವನು ನನ್ನನ್ನು ಹಿಂಬಾಲಿಸದೆ ಬಿಡುವುದಿಲ್ಲ. ಹಾಗಿದ್ದರೆ ನಾನು ಬದುಕುವುದಿಲ್ಲ. ಹಾಗೆ ನಾನು ಆತ್ಮಹತ್ಯೆ ಮಾಡಿಕೊಂಡರೆ ಆ ಪಾತಕ ನಿನ್ನನ್ನು ತಾಗುತ್ತದೆ”. ಈ ಮಾತು ಕೇಳಿ ಭೀಮನಿಗೆ ತುಂಬ ಕೋಪ ಬಂದಿತು.
ಪದಾರ್ಥ (ಕ.ಗ.ಪ)
ಅರೆಯಟ್ಟಿ-ಅಟ್ಟಿಸಿಕೊಂಡು ಬಂದು, ನಿನ್ನವಂದಿಗರು-ನಿನ್ನಂಥ (ವೀರರು), ಪರಿಭವ-ಸೋಲು, ಬೆಂಬಳಿ-ಹಿಂಬಾಲಿಸುವುದನ್ನು
ಟಿಪ್ಪನೀ (ಕ.ಗ.ಪ)
ಮೂಲದಲ್ಲಿ ಭೀಮನು ಸಭೆಯಲ್ಲಿ ಧರ್ಮರಾಯನು ತನಗೆ ಮರವನ್ನು ಮುರಿಯಬೇಡವೆಂದು ಹೇಳಿದುದನ್ನು ಸಮರ್ಥಿಸುತ್ತಾನೆ.
ಮೂಲ ...{Loading}...
ನಿನ್ನೆ ಹಗಲರೆಯಟ್ಟಿ ಕೀಚಕ
ಕುನ್ನಿಯೊದೆದನು ರಾಜ ಸಭೆಯಲಿ
ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯ ಬಿಡ ನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ ॥42॥
೦೪೩ ಉಸುರಲಾಗದು ನಿನ್ನ ...{Loading}...
ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರುಹು ಹೋಗೆಂದ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ನಾನು ಮಾತಾಡುವಂತಿಲ್ಲ. ನಿನ್ನ ಕ್ಷೇಮಕ್ಕೆ ನಾವು ಮುಂದೆ ಬರುವಂತಿಲ್ಲ. ಹೆಂಡತಿಯ ಯಾತನೆಗೆ ನಾನು ಸ್ಪಂದಿಸುವಂತಿಲ್ಲ. ಈ ಬಗೆಯ ಹೆಂಡತಿಯನ್ನು ಹಂಚಿಕೊಂಡು ಬಾಳುವ ಈ ಗಂಡಸುತನವನ್ನಷ್ಟು ಸುಡಬೇಕು. ನಿನಗೆ ಇಂಥ ಸ್ಥಿತಿ ತಂದವನು ನಾನಲ್ಲ. ಆದುದರಿಂದ ನನ್ನ ಸಹಾಯ ಕೇಳಬೇಡ. ಮಹಾವೀರರುಗಳಾದ ನಿನ್ನ ಉಳಿದ ನಾಲ್ವರು ಗಂಡಂದಿರಿದ್ದಾರಲ್ಲವೆ ? ಹೋಗಿ ಅವರಿಗೆ ಹೇಳಿಕೋ”. ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಉಸುರು-ಹೇಳು, ಹರಿಬ-ಕೆಲಸ, ಗಸಣಿಸೊಳ್-ತೊಂದರೆಯನ್ನು ಅನುಭವಿಸು, ಹುದುವಿನ ಗಂಡತನ-ಐವರು ಒಬ್ಬಳನ್ನು ಹಂಚಿಕೊಂಡಿದ್ದು. ಇಂಥ ಹಂಚಿಕೆಯ ಗಂಡತನ, ಅಸಮಸಾಹಸರು-ಮಹಾವೀರರು.
ಟಿಪ್ಪನೀ (ಕ.ಗ.ಪ)
ಭೀಮನು ತನ್ನ ಅಣ್ಣ ತಮ್ಮಂದಿರ ಧೋರಣೆಯ ಬಗೆಗೆ ತನಗಿದ್ದ ಅಸಮಾಧಾನವನ್ನು ಈ ಮುಂದಿನ ಪದ್ಯಗಳಲ್ಲಿ ತೋಡಿಕೊಂಡಿದ್ದಾನೆ. ಜನಪದ ಚಿಂತನೆಯಿಂದ ಪ್ರಭಾವಿತನಾಗಿರುವ ಕುಮಾರವ್ಯಾಸನ ಸ್ವಂತ ಚಿಂತನೆ ಇಲ್ಲಿ ಹರಿದಿದೆ. ಮೂಲಭಾರತದಲ್ಲಿ ಈ ಬಗೆಯ ಮಾತುಗಳಿಲ್ಲ.
ಮೂಲ ...{Loading}...
ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರುಹು ಹೋಗೆಂದ ॥43॥
೦೪೪ ರಮಣ ಕೇಳುಳಿದವರು ...{Loading}...
ರಮಣ ಕೇಳುಳಿದವರು ತನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು
ಮಮತೆಯಲಿ ನೀ ನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮ ! ಕೇಳು. ಉಳಿದ ನಾಲ್ವರು ಪತಿಗಳು ನನ್ನನ್ನು ಮುದ್ದು ಮಾಡುತ್ತಾರೆ ನಿಜ. ಆದರೆ ಅವರೆಲ್ಲ ಮರ್ಯಾದೆ ಪ್ರತಿಷ್ಠೆಗಳ ಪ್ರಶ್ನೆ ಬಂದಾಗ ಅಲ್ಲಿ ನಿಲ್ಲದೆ ಹೊರಟು ಹೋಗುವಂಥವರು. ನಿನ್ನನ್ನು ಬಿಟ್ಟರೆ ಉಳಿದವರೆಲ್ಲ ಅಗತ್ಯವಾದ ಕಾರ್ಯ ಮಾಡಲಾಗದವರಾಗಿದ್ದಾರೆ. ಆದುದರಿಂದ ನೀನು ನನ್ನನ್ನು ತುಂಬ ಕರುಣೆಯಿಂದ ನೋಡು. ಮನಸ್ಸಿನ ಶಾಂತತೆಯನ್ನು ದೂರವಿಡು. ಆ ಕ್ರೂರಿ ಕೀಚಕನಿಗೆ ಯಮದರ್ಶನ ಮಾಡಿಸಿ ಕರುಣಿಸು” ಎಂದು ದ್ರೌಪದಿ ಭೀಮನಿಗೆ ಕೈಮುಗಿಯುತ್ತ ಹೇಳಿದಳು.
ಪದಾರ್ಥ (ಕ.ಗ.ಪ)
ಮಾನಾರ್ಥ : ಮರ್ಯಾದೆ ಉಳಿಸುವ ಪ್ರಶ್ನೆ ಬಂದಾಗ, ಕುಠಾರ-ಕ್ರೂರಿ (ಕೀಚಕ)
ಟಿಪ್ಪನೀ (ಕ.ಗ.ಪ)
ಭೀಮನನ್ನು ಮೆಚ್ಚಿಸಲು ದ್ರೌಪದಿಯು ಉಳಿದ ನಾಲ್ವರನ್ನು ತುಂಬ ತುಚ್ಛವಾಗಿ ಕಂಡಿರುವುದು ಉಚಿತವೆನಿಸುವುದಿಲ್ಲ. ಅವಳು ಸಮಯಸಾಧಕಿ. ಮಾತು ಬದಲಿಸುವವಳು ಎಂಬ ಅಭಿಪ್ರಾಯ ಬರಲು ಆಸ್ಪದವಾಗುತ್ತದೆ. ಮೂಲ ಭಾರತದಲ್ಲಿ ಈ ಬಗೆಯ ಹೀಯಾಳಿಕೆಯಿಲ್ಲ. ಮೂಲದಲ್ಲಿ ದ್ರೌಪದಿ ಒಂದು ಅಧ್ಯಾಯದಷ್ಟು ಸಮಯ ತೆಗೆದುಕೊಂಡು ಧರ್ಮರಾಯನನ್ನು ನಿಂದಿಸಿದ್ದಾಳೆ ನಿಜ. ಜೂಜಾಡಿದ ಧರ್ಮರಾಯನಿಂದಲೇ ಎಲ್ಲ ಕಷ್ಟಗಳೂ ಬಂದಿವೆ ಎನ್ನುತ್ತಾಳೆ. ಉಳಿದವರ ಬಗೆಗೆ ಹಾಗೆಲ್ಲ ಹೇಳುವುದಿಲ್ಲ. ಅರ್ಜುನನು ಅಂತಃಪುರವನ್ನು ಸೇರಿ ‘ಕೂಪೇ„ಗ್ನಿರಿವ ಸಂವೃತ’ ನಾಗಿದ್ದಾನಂತೆ ಅರ್ಜುನ. ಎಲ್ಲರೂ ಈಗ ಯಾವ ಸ್ಥಿತಿಗೆ ಇಳಿದಿದ್ದಾರೆ ಎಂದು ಸೂಚಿಸಿ ಕನಿಕರ ಪಡುತ್ತಾಳೆ.
ಮೂಲ ...{Loading}...
ರಮಣ ಕೇಳುಳಿದವರು ತನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು
ಮಮತೆಯಲಿ ನೀ ನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು ॥44॥
೦೪೫ ಕಲಹಕಾದೊಡೆ ನಾವು ...{Loading}...
ಕಲಹಕಾದೊಡೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬುದು ನಾವು ಭೀತರು ಧರ್ಮಜನ ಹೊರೆಗೆ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಾಡುವುದಕ್ಕೆ ನಾನು ; ನಿನ್ನನ್ನು ರಮಿಸಲು ಅವರುಗಳು! ಚೆನ್ನಾಗಿದೆ. ಗಾದೆಯ ಮಾತು ಕೇಳಿಲ್ಲವೆ ? ಕೆಲವರು ಸಂಪಾದನೆ ಮಾಡಿ ಹಣ ತರುತ್ತಾರೆ. ಉಳಿದವರು ಆನಂದವಾಗಿ ಉಂಡು ತಿಂದು ಕೆಲಸ ಮಾಡದೆ ಜಾರಿಕೊಳ್ಳುತ್ತಾರೆ. ಅವರು ಎಂದಿಗೂ ಯಾರಿಗೂ ಹೆದರಿ ನಡೆಯುವವರಲ್ಲ. ನೀನೀಗ ಅವರ ಬಳಿ ಹೋಗು. ನಿನಗಾದ ಅವಮಾನ, ಈಗ ಮಾಡಬೇಕಾದ ಕೆಲಸ ಎರಡನ್ನೂ ಹೇಳಿ ಅವರು ಕಾರ್ಯ ಪ್ರವೃತ್ತರಾಗುವಂತೆ ಮಾಡು. ನಾನು ಮಾತ್ರ ಹೊರಗೆ. ಏಕೆಂದರೆ ಅಣ್ಣ ಧರ್ಮರಾಯನನ್ನು ಕಂಡರೆ ನನಗೆ ತುಂಬ ಭೀತಿ. (ಅವನು ಏನನ್ನುತ್ತಾನೊ ಎಂಬ ಭಯ!)
ಪದಾರ್ಥ (ಕ.ಗ.ಪ)
ಅಳುಕಿ-ಅಂಜಿ, ಹಿಂಜರಿದು, ಹರಿಬ-ಕರ್ತವ್ಯ, ಕೆಲಸ
ಟಿಪ್ಪನೀ (ಕ.ಗ.ಪ)
ಮೂಲದಲ್ಲಿ ಭೀಮ ಹೀಗೆ ಆಕ್ಷೇಪಿಸುವುದಿಲ್ಲ. ಕೆಲವು ವಾರಗಳವರೆಗೆ ಸಹನೆಯಿಂದ ಇರುವಂತೆ ಮತ್ತು ತಾವು ಕೌರವನ ಕೈಗೆ ಸಿಕ್ಕಿ ಬೀಳದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳುತ್ತಾನೆ. ಆದರೆ ಮುಂದೆ ದ್ರೌಪದಿಯು ಕೀಚಕನ ಉಪಟಳವನ್ನು ದೀರ್ಘವಾಗಿ ವಿವರಿಸಿದಾಗ “ಅವನನ್ನು ಕೊಲ್ಲುತ್ತೇನೆ. ನರ್ತನ ಶಾಲೆಗೆ ಕರೆದುತಾ” ಎನ್ನುತ್ತಾನೆ.
ಮೂಲ ...{Loading}...
ಕಲಹಕಾದೊಡೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬುದು ನಾವು ಭೀತರು ಧರ್ಮಜನ ಹೊರೆಗೆ ॥45॥
೦೪೬ ಹೆಣ್ಡತಿಯ ಹರಿಬದಲಿಯೊಬ್ಬನೆ ...{Loading}...
ಹೆಂಡತಿಯ ಹರಿಬದಲಿಯೊಬ್ಬನೆ
ಗಂಡುಗೂಸೇ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೆಂಡತಿಗೆ ವಿಪತ್ತು ಬಂದಾಗ ಒಬ್ಬನೇ ಗಂಡ ಇದ್ದರೂ ವೈರಿಯನ್ನು ತುಂಡರಿಸುತ್ತಾನೆ. ಅಥವಾ ತನ್ನೊಡಲನ್ನೇ ಬಲಿಕೊಡುತ್ತಾನೆ. ನೀವು ಐದು ಜನ ಗಂಡಂದಿರಿದ್ದೀರಿ. ನೀವೇನೂ ಸಾಮಾನ್ಯರಲ್ಲ. ಮೂರು ಲೋಕದ ವೀರರು. ಆದರೆ ಒಬ್ಬಳನ್ನು ನೀವು ಆಳಲಾರಿರಿ. ನಿಮ್ಮನ್ನು ಗಂಡರು ಎನ್ನಲೊ ? ಭಂಡರು ಎನ್ನಲೋ. ನೀವೇ ಹೇಳಿ” ಎಂದು ದ್ರೌಪದಿ ಆರ್ಭಟಿಸಿದಳು.
ಪದಾರ್ಥ (ಕ.ಗ.ಪ)
ಹರಿಬ-ಕಾರ್ಯ, ಕರ್ತವ್ಯ, ಕಡಿಖಂಡಮಾಡು-ತುಂಡು ತುಂಡಾಗಿ ಕತ್ತರಿಸು
ಟಿಪ್ಪನೀ (ಕ.ಗ.ಪ)
ಇಲ್ಲಿ ದ್ರೌಪದಿಯ ಆಕ್ಷೇಪವು ಜಾನಪದೀಯ ಭಾಷೆಯ ಸತ್ತ್ವವನ್ನು ಪಡೆದುಕೊಂಡಿದೆ. ರಾಜಪುತ್ರಿಯೊಬ್ಬಳ ಬಾಯಿಂದ ಇಂಥ ಮಾತು ಬರಲು ಸಾಧ್ಯವೆ ? ಆದರೆ ಜಾನಪದರು ಇಂಥ ಆಕ್ಷೇಪಣೆ ಮಾಡಲು ಹಿಂದೆಗೆಯುವವರಲ್ಲ. ಕುಮಾರವ್ಯಾಸನಲ್ಲಿ ಜಾನಪದೀಯ ಅಂಶಗಳನ್ನು ಕಾಣಬಯಸುವವರಿಗೆ ಇಂಥ ಪ್ರಸಂಗಗಳು ಸಹಾಯಕಾರಿ. ಮುಂದಿನ ಪದ್ಯದಲ್ಲಿ ಭೀಮನ ಉತ್ತರವೂ ಇದೇ ಧಾಟಿಯನ್ನು ಅನುಸರಿಸಿದೆ.
ಮೂಲ ...{Loading}...
ಹೆಂಡತಿಯ ಹರಿಬದಲಿಯೊಬ್ಬನೆ
ಗಂಡುಗೂಸೇ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ ॥46॥
೦೪೭ ಅನ್ದು ಕೌರವ ...{Loading}...
ಅಂದು ಕೌರವ ನಾಯಿ ಸಭೆಯಲಿ
ತಂದು ತೋರಿದನುನ್ನತಿಯ ಬಳಿ
ಕಿಂದು ಕೀಚಕ ಕುನ್ನಿಯೊದೆದನು ರಾಜಸಭೆಯೊಳಗೆ
ಅಂದು ಮೇಣಿಂದಾದ ಭಂಗಕೆ
ಕುಂದದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮ ! ಅಂದು ಆ ಕೌರವ ನಾಯಿ ರಾಜಸಭೆಗೆ ನನ್ನನ್ನು ಎಳೆದು ತನ್ನ ಪ್ರತಿಷ್ಠೆಯನ್ನು ತೋರಿಸಿಕೊಂಡ. ಈಗ ಈ ಕೀಚಕನಾಯಿ ರಾಜಸಭೆಯಲ್ಲಿ ನನ್ನನ್ನು ಒದ್ದ. ಅಂದು, ಇಂದು ಆದ ಭಂಗಕ್ಕೆ ನಾನು ಮಾಡಿದ ತಪ್ಪು ಏನು ಹೇಳು. ನೀವು ಮಹಾವೀರರು, ತಿಳಿದವರು ಎಂದು ನಿಮ್ಮನ್ನು ಆಶ್ರಯಿಸಿದೆ. ನೀವೋ ನನ್ನನ್ನು ಕೊಂದಿರಿ !” ಎಂದು ದ್ರೌಪದಿ ಆಕ್ಷೇಪಿಸಿದಳು
ಪದಾರ್ಥ (ಕ.ಗ.ಪ)
ಉನ್ನತಿ-ಪ್ರತಿಷ್ಠೆ,
ಟಿಪ್ಪನೀ (ಕ.ಗ.ಪ)
ಕೀಚಕ, ದುರ್ಯೋಧನ, ಜಯದ್ರಥ ಮೊದಲಾದವರನ್ನು ನಾಯಿಗಳು ಎಂದು ಕರೆದು ಮೂದಲಿಸಿರುವುದನ್ನು ಕಾವ್ಯದ ಉದ್ದಕ್ಕೂ ಗಮನಿಸಬಹುದು.
ಮೂಲ ...{Loading}...
ಅಂದು ಕೌರವ ನಾಯಿ ಸಭೆಯಲಿ
ತಂದು ತೋರಿದನುನ್ನತಿಯ ಬಳಿ
ಕಿಂದು ಕೀಚಕ ಕುನ್ನಿಯೊದೆದನು ರಾಜಸಭೆಯೊಳಗೆ
ಅಂದು ಮೇಣಿಂದಾದ ಭಂಗಕೆ
ಕುಂದದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ ॥47॥
೦೪೮ ದಾನವರು ಮಾನವರೊಳೆನ್ನಭಿ ...{Loading}...
ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದೊಡೆ ಖಾತಿಯಿಲ್ಲೆಮಗೆ
ಈ ನಪುಂಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ನನಗೇನೂ ಕೋಪ ಬರುವುದಿಲ್ಲ. ದಾನವ ಮಾನವರಲ್ಲಿ ನನ್ನ ಮರ್ಯಾದೆಯನ್ನು ಕಳೆಯುವವನನ್ನು ನಾನು ಏನೆಂದು ಹೆಸರು ಹಿಡಿದು ಹೇಳಲಿ ? ನೀನು ನಿನಗಾದ ನೋವಿನಿಂದಾಗಿ ಹೀಗೆ ಮಾತಾಡಿದರೆ ನನಗೆ ಮನಸ್ಸಿನಲ್ಲಿ ಸ್ವಲ್ಪವೂ ಕೋಪವಿಲ್ಲ.
ನಿಜ ಹೇಳಲೆ ದ್ರೌಪದಿ ! ಈ ನಪುಂಸಕ ಸೋದರೊಡನೆ ಹುಟ್ಟಿದ ನನಗೆ ಮೂಗಿದೆ ಎಂದು ಯಾರಾದರೂ ಹೇಳುತ್ತಾರೆಯೆ ? ಆದುದರಿಂದ ಮಾನಿನಿಯಾದ ದ್ರೌಪದಿ ! ನಿನಗೆ ತೋಚಿದ ಹಾಗೆ ಹೇಳು, ಹೆದರಬೇಡ. ಏನು ಬೇಕಾದರೂ ಹೇಳಿಕೋ (ನಾನು ಜಗ್ಗುವುದಿಲ್ಲ ಎಂದರ್ಥ)
ಪದಾರ್ಥ (ಕ.ಗ.ಪ)
ಖಾತಿ-ಕೋಪ
ಪಾಠಾನ್ತರ (ಕ.ಗ.ಪ)
ಮೊದಲ ಸಾಲು: ಮಾನವರು ದಾನವರೊಳೆನ್ನಭಿಮಾನವನು ಇದು ಸರಿಯಾದ ಪಾಠ.
ಟಿಪ್ಪನೀ (ಕ.ಗ.ಪ)
ಮೂಗುಳ್ಳವನೆ - ನಡುಗನ್ನಡದಲ್ಲಿ ಮೂಗು ಪೌರುಷದ ಸಂಕೇತವಾಗಿತ್ತು. ಮೂಗುಮೇಲೆತ್ತಿ ನಡೆಯುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಮೂಗಿರದವನು ಎಂದರೆ ಹೇಡಿ ಎನ್ನಿಸಿಕೊಳ್ಳುತ್ತಿದ್ದ.
ಮೂಲ ...{Loading}...
ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದೊಡೆ ಖಾತಿಯಿಲ್ಲೆಮಗೆ
ಈ ನಪುಂಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ ॥48॥
೦೪೯ ಅನ್ದು ದುಶ್ಯಾಸನನ ...{Loading}...
ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದನಾ ವ್ಯಥೆಯ
ಇಂದು ಕೀಚಕ ನಾಯನೆರಗುವೆ
ನೆಂದು ಮರನನು ನೋಡಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ, ಈ ಹಿಂದೆ ರಾಜಸಭೆಯಲ್ಲಿ ನಿನಗೆ ಅವಮಾನ ಮಾಡಿದ ಈ ದುಶ್ಶಾಸನನ ಕರುಳನ್ನು ಕಿತ್ತು ತಿನ್ನದಿದ್ದರೆ ತೃಪ್ತಿ ಸಿಗುವುದಿಲ್ಲ ಎಂದು ಸಿಟ್ಟಿನಿಂದ ಅವನ ಮೇಲೆ ನುಗ್ಗಲು ಎದ್ದೆ. ಆದರೆ ನಮ್ಮಣ್ಣನು ಹಲ್ಲು ಕಿರಿದು ಆ ಕೋಪವನ್ನು ತಡೆದ. ಇಂದು ತಾನೇ ಏನು ? ನಿನ್ನನ್ನು ಒದ್ದ ಆ ಕೀಚಕ ನಾಯಿಯ ಮೇಲೆ ಎರಗಲು ಆ ಮರದ ಕಡೆ ನೋಡಿದೆ. ಧರ್ಮರಾಯನು ಬೇಡ ಎಂದು ಹೇಳಿದ ದೃಶ್ಯವನ್ನು ನೀನು ಕಂಡೆಯಲ್ಲವೆ ? ಹೇಳು ! ಇದರಲ್ಲಿ ನನ್ನ ಅಪರಾಧ ಏನಿದೆ ?
ಪದಾರ್ಥ (ಕ.ಗ.ಪ)
ದೊರಕೊಳದು-ಉಂಟಾಗುವುದಿಲ್ಲ.
ಟಿಪ್ಪನೀ (ಕ.ಗ.ಪ)
ಭೀಮನು ಮರದ ಕೊಂಬೆ ಮುರಿದು ಕೀಚಕನನನ್ನು ಕೊಲ್ಲುವ ಇಂಗಿತ ವ್ಯಕ್ತ ಪಡಿಸಿದರೆ ಧರ್ಮರಾಯನು ಕಣ್ಣಿನಿಂದಲೇ ಅದನ್ನು ತಪ್ಪಿಸಿದ (ಕಟಾಕ್ಷೇಣ ನೃವಾರಯೇತ್) ಎಂದು ವ್ಯಾಸರು ಹೇಳುತ್ತಾರೆ.
ಮೂಲ ...{Loading}...
ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದನಾ ವ್ಯಥೆಯ
ಇಂದು ಕೀಚಕ ನಾಯನೆರಗುವೆ
ನೆಂದು ಮರನನು ನೋಡಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ ॥49॥
೦೫೦ ಹೆಣ್ಣ ಹರಿಬಕ್ಕೋಸುಗವೆ ...{Loading}...
ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿದನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯವು ರಾಯನಾಜ್ಞೆಯ
ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳ್ ಎಂದ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ! ಈಗ ನಾನು ಈ ಕೀಚಕನನ್ನು ಕೊಂದರೆ. ಆಹಾ ! ಹೆಣ್ಣಿನ ಕೆಲಸಕ್ಕಾಗಿ ಈ ಕುಂತಿಯ ಮಗ ಭೀಮನು ತನ್ನ ಅಣ್ಣನ ಆಜ್ಞೆಯನ್ನು ಮೀರಿ ನಡೆದುಕೊಂಡು ಬದುಕಿದ ಎಂದು ದುರ್ಜನರು ನನ್ನನ್ನು ಆಡಿಕೊಳ್ಳುತ್ತಾರೆ (ಅಂದರೆ ಅಣ್ಣನನ್ನು ಧಿಕ್ಕರಿಸಿ ಕೀಚಕನನ್ನು ಕೊಂದ ಎಂದು ಆಡಿಕೊಳ್ಳುತ್ತಾರೆ ಎಂಬ ಭಾವ !). ಆದುದರಿಂದ ನಾವು ಆ ತಂಟೆಗೇ ಹೋಗುವುದಿಲ್ಲ. ನೀನು ಈಗ ಅಣ್ಣನವರ ಬಳಿ ಹೋಗಿ ದೂರು ಹೇಳಿಕೋ. ಇದು ನಾವು ನುಂಗಲಾರದ ಕೆಂಡ. ನಾವೀಗ ಅಣ್ಣನ ಆಜ್ಞೆ ಎಂಬ ಹಗ್ಗದಿಂದ ಬಂಧಿತರಾಗಿ ಬಿದ್ದಿದ್ದೇವೆ ಏನೂ ಮಾಡಲಾರೆವು” ಎಂದು ಭೀಮನು ದ್ರೌಪದಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಹರಿಬ-ಕಾರ್ಯ, ಚಿಣ್ಣ-ಹುಡುಗ (ಕುಂತಿಯ ಚಿಣ್ಣ-ಕುಂತಿಯ ಮಗ, ಭೀಮ), ಕಣ್ಣಿ-ಹಗ್ಗ
ಮೂಲ ...{Loading}...
ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿದನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯವು ರಾಯನಾಜ್ಞೆಯ
ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ ॥50॥
೦೫೧ ಹೊದ್ದುವುದು ಫಲುಗುಣನ ...{Loading}...
ಹೊದ್ದುವುದು ಫಲುಗುಣನ ಪಾದಕೆ
ಬಿದ್ದು ಯಮನಂದನನ ಮನವನು
ತಿದ್ದುವುದು ಸಹದೇವ ನಕುಲರ ಕೈಯಲೆನಿಸುವುದು
ಗೆದ್ದು ಕೊಡುವರು ನಿನ್ನ ಪಾಲಿಸ
ದಿದ್ದರಾದೊಡೆ ದೋಷವವರನು
ಹೊದ್ದುವುದು ನೀನೆನ್ನ ಬರಿದೇ ಕಾಡ ಬೇಡೆಂದ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ! ನೀನು ಅರ್ಜುನನ ಬಳಿ ಹೋಗು. ಧರ್ಮರಾಯನ ಪಾದಕ್ಕೆ ಬಿದ್ದು ಕೇಳಿಕೊಂಡು ಅವನ ಮನಸ್ಸನ್ನು ತಿರುಗಿಸು. ನಕುಲ ಸಹದೇವರ ಕೈಯಲ್ಲೂ ಹೇಳಿಸು. ಅವರು ಗೆದ್ದು ಕೊಡುತ್ತಾರೆ. ಯಾರೂ ನಿನ್ನನ್ನು ಕಾಪಾಡಲಿಲ್ಲವಾದರೆ ಆ ದೋಷ ಅವರುಗಳನ್ನೇ ತಾಗುತ್ತದೆ. ಆದ್ದರಿಂದ ಅವರ ಬಳಿ ಹೋಗುವುದನ್ನು ಬಿಟ್ಟು ವ್ಯರ್ಥವಾಗಿ ನನ್ನನ್ನು ಕಾಡಬೇಡ” ಎಂದು ಭೀಮನು ದ್ರೌಪದಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಹೊದ್ದು-ಸಮೀಪಿಸು, ಹತ್ತಿರ ಹೋಗು, ತಾಕು
ಮೂಲ ...{Loading}...
ಹೊದ್ದುವುದು ಫಲುಗುಣನ ಪಾದಕೆ
ಬಿದ್ದು ಯಮನಂದನನ ಮನವನು
ತಿದ್ದುವುದು ಸಹದೇವ ನಕುಲರ ಕೈಯಲೆನಿಸುವುದು
ಗೆದ್ದು ಕೊಡುವರು ನಿನ್ನ ಪಾಲಿಸ
ದಿದ್ದರಾದೊಡೆ ದೋಷವವರನು
ಹೊದ್ದುವುದು ನೀನೆನ್ನ ಬರಿದೇ ಕಾಡ ಬೇಡೆಂದ ॥51॥
೦೫೨ ಗಣ್ಡ ಗರ್ವವ ...{Loading}...
ಗಂಡ ಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ಮೇಣರ್ಜುನಗೆ ಹೇಳೆಂದ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೌಪದಿ ! ನಾವು ನಮ್ಮ ಬಗ್ಗೆ ಜಂಬದಿಂದ ಪೌರುಷವನ್ನು ಕುರಿತು ಹೇಳಬಯಸುವುದಿಲ್ಲ. ನಮ್ಮ ವಿಧಾನವೇ ಬೇರೆ ಬಗೆಯದು. ನಾವು ಭಂಡತನದಲ್ಲಿ ಬದುಕುವುದನ್ನು ಕಲಿತವರಲ್ಲ. ಧರ್ಮಗಿರ್ಮ ಎಂದು ಅವುಗಳನ್ನು ಸ್ವೀಕರಿಸಿ ಸಂತೋಷಪಡುವವರಲ್ಲ. ನೀನೇ ಹೋಗಿ ಧರ್ಮರಾಯನನ್ನು ಪೀಡಿಸಿ ಅವನು ಕೀಚಕನ ತಲೆಯನ್ನು ಕತ್ತರಿಸಿ ಹಾಕುವಂತೆ ಮಾಡು ಅಥವಾ ಅರ್ಜುನನಿಗೆ ಹೇಳಿಕೊ.” ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಗಂಡಗರ್ವ-ಪೌರುಷದ ಜಂಬದ ಮಾತು, ದಂಡಿ-ರೀತಿ, ವಿಧಾನ, ಮಾರ್ಗ, ಕೊಂಡು ಕೊನರು-ಸ್ವೀಕರಿಸಿ ಉಬ್ಬು, ಅಂಡಲೆ-ಪೀಡಿಸು
ಮೂಲ ...{Loading}...
ಗಂಡ ಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ಮೇಣರ್ಜುನಗೆ ಹೇಳೆಂದ ॥52॥
೦೫೩ ತರುಣಿ ದಿಟ ...{Loading}...
ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀ ನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನನು ಪ್ರಾರ್ಥಿಸುವುದರ್ಜುನ
ವರ ನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲೆಂದ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದ್ರೌಪದಿಗೆ ಹೇಳುತ್ತಿದ್ದಾನೆ “ದ್ರೌಪದಿ ನನಗೆ ಹೇಳಿಕೊಂಡರೂ ಏನೂ ಪ್ರಯೋಜನವಿಲ್ಲ. ನಿಜ ಹೇಳುತ್ತೇನೆ ಕೇಳು. ಇವತ್ತಿನಿಂದ ನೀನು ಉಳಿದ ನಾಲ್ವರು ಸೋದರರಿಗೆ ಮಾತ್ರ ಪತ್ನಿ ಎಂದು ಭಾವಿಸಿಕೋ. ನಾನು ಸಂಪರ್ಕ ಕಡಿದುಕೊಂಡಿದ್ದೇನೆ. ನಿನ್ನ ಸರದಿಯ ಪತಿತ್ವವನ್ನು ಕೈ ಬಿಟ್ಟಿದ್ದೇನೆಂದು ಭಾವಿಸು. ಆದುದರಿಂದ ಧರ್ಮರಾಯನನ್ನು ಬೇಡಿಕೋ, ಅರ್ಜುನನಿಗಾಗಲಿ ನಕುಲ ಸಹದೇವರಿಗಾಗಲಿ ವಿಸ್ತಾರವಾಗಿ ನಿನ್ನ ಕಥೆ ಹೇಳಿಕೊ.
ಪದಾರ್ಥ (ಕ.ಗ.ಪ)
ಎಡೆ ಮುರಿದವರು- ಮಧ್ಯದಲ್ಲಿಯೇ ಸಂಪರ್ಕ ಕಡಿದುಕೊಂಡವರು. ಸೂಳು ಪಾಳೆಯ- ಸರದಿ ಕಾಯುತ್ತ ಬದುಕುವಿಕೆ.
ಮೂಲ ...{Loading}...
ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀ ನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನನು ಪ್ರಾರ್ಥಿಸುವುದರ್ಜುನ
ವರ ನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲೆಂದ ॥53॥
೦೫೪ ಕೇಳುತಿದ್ದಳು ಕೊರಳ ...{Loading}...
ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಲೋಲಲೋಚನೆಯಕಟ ನೆನೆದಳು ಬಾಷ್ಪವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳ ತಾಗಿದವೊಲುದರ
ಜ್ವಾಲೆ ನೆತ್ತಿಗೆ ನಿಲುಕೆ ಹಲುಬಿದಳಬಲೆ ಬಿಸುಸುಯ್ದು ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಭೀಮನ ಮಾತುಗಳನ್ನು ಕೇಳುತ್ತಿದ್ದಳು. ಅವಳ ಕೊರಳ ಸೆರೆ ಗೋನಾಳಿಯನ್ನು ಅವುಕಿತು. ಅಂದರೆ ಅವಳ ಕೊರಳಿನ ನರವು ಕಂಠದ ಮಣಿಗೆ ಅಂಟಿಕೊಂಡಿತ್ತು. ಬಿಕ್ಕಿ ಬಿಕ್ಕಿ ಅಳುತ್ತ ಆ ಚಂಚಲನೇತ್ರದ ದ್ರೌಪದಿ ಕಣ್ಣೀರಿನಲ್ಲಿ ನೆನೆದುಹೋದಳು. ಶೂಲವು ಹೊಟ್ಟೆಯಿಂದ ಹೊರಟು ಬೆನ್ನಿನಿಂದ ಆಚೆ ಬಂದ ಹಾಗೆ ಆಯಿತು. ಬೆಂಕಿ ತಾಕಿದ ಬಾಳೆಯಂತಾದಳು. ಉದರಜ್ವಾಲೆ ನೆತ್ತಿಯನ್ನು ಆವರಿಸಿದಂತಾಗಿ ಅವಳು ನಿಟ್ಟುಸಿರು ಬಿಡುತ್ತ ಗೋಳಾಡಿದಳು.
ಪದಾರ್ಥ (ಕ.ಗ.ಪ)
ಕೊರಳ ಸೆರೆ-ಕೊರಳಿನ ನರ, ಗೋನಾಳಿ-ಕಂಠದ ಮಣಿ, ಬಾಷ್ಪವಾರಿ-ಕಣ್ಣೀರು, ಶೂಲ ಮರುಮೊನೆಗೊಳ್-ಎದೆಗೆ ನೆಟ್ಟ ಶೂಲವು ಬೆನ್ನಿಂದ ಆಚೆ ಬಂದ ಹಾಗೆ.
ಟಿಪ್ಪನೀ (ಕ.ಗ.ಪ)
- ಸೀತಾದೇವಿಯಷ್ಟು ಸಿರಿಯನುಂಡವರಿಲ್ಲ ದ್ರೌಪದಿಯಷ್ಟು ಹರಲಿಯ ಹೊತ್ತವರು (ಹರಲಿ-ನಿಂದೆ, ಅಪವಾದ) ಈ ಲೋಕದಾಗ ಯಾರಿಲ್ಲ” ಎಂಬ ಜನಪದ ಗೀತೆಯೊಂದಿದೆ.
- ಕಣ್ಣೀರಿನ ಪ್ರಭಾವ ಇಲ್ಲಿ ಧ್ವನಿತವಾಗಿದೆ.
ಮೂಲ ...{Loading}...
ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಲೋಲಲೋಚನೆಯಕಟ ನೆನೆದಳು ಬಾಷ್ಪವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳ ತಾಗಿದವೊಲುದರ
ಜ್ವಾಲೆ ನೆತ್ತಿಗೆ ನಿಲುಕೆ ಹಲುಬಿದಳಬಲೆ ಬಿಸುಸುಯ್ದು ॥54॥
೦೫೫ ಕೆನ್ದಳದ ಸೆಕೆಯಲಿ ...{Loading}...
ಕೆಂದಳದ ಸೆಕೆಯಲಿ ಕಪೋಲವು
ಕಂದಿ ಕಸರಿಕೆಯಾಯ್ತು ನಿಡುಸು
ಯ್ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು
ಸಂದಣಿಸಿದೆವೆಗಳಲಿ ಬಾಷ್ಪದ
ಬಿಂದು ತಳಿತುದು ನಟ್ಟ ದೃಷ್ಟಿಯೊ
ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರವ ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಕೆಂಪಾದ ಅಂಗೈಯ ಧಗೆಗೆ ಕಪೋಲವು ಒಣಗಿ ಬಾಡಿತ್ತು. ನಿಟ್ಟುಸಿರಿನಿಂದ ಏಕಾವಳಿಯ ಮುತ್ತುಗಳು ಸುಟ್ಟು ಸೀಕಲಾದವು. ಅವಳ ದಟ್ಟವಾದ ಕಣ್ಣ ರೆಪ್ಪೆಗಳಲ್ಲಿ ಕಣ್ಣೀರಿನ ಬಿಂದುಗಳು ತುಂಬಿಕೊಂಡವು. ನಟ್ಟ ದೃಷ್ಟಿಯಿಂದ ನೋಡುತ್ತ ದ್ರೌಪದಿಯು ಒಂದೇ ಸಮನೆ ಅಳುತ್ತ ಆಗಾಗ ತಲೆದೂಗುತ್ತಿದ್ದಳು.
ಪದಾರ್ಥ (ಕ.ಗ.ಪ)
ಕೆಂದಳ-ಕೆಂಪಾದ ಅಂಗೈ, ಕೆಂಪನೆಯ ಕರತಳ, ಕಂದಿ ಕಸರಿಕೆಯಾಗು-ಬಾಡಿ ಮಂಕಾಗು, ಸೀಕರಿವೋಗು-ಕಪ್ಪಾಗು, ಸೈಗರೆ-(<ಸಯ್ಗರೆ) ಸತತವಾಗಿ (ಒಂದೇ ಸಮನೆ) ಅಳು
ಟಿಪ್ಪನೀ (ಕ.ಗ.ಪ)
ಭೀಮನ ಮಾತಿನಿಂದ ನಿರಾಶೆಗೊಂಡ ದ್ರೌಪದಿಯ ದೇಹಸ್ಥಿತಿಯನ್ನು ಕವಿ ಈ ಕವಿಸಮಯಗಳ ನೆರವಿನಿಂದ ಚಿತ್ರಿಸಿದ್ದಾನೆ.
ಮೂಲ ...{Loading}...
ಕೆಂದಳದ ಸೆಕೆಯಲಿ ಕಪೋಲವು
ಕಂದಿ ಕಸರಿಕೆಯಾಯ್ತು ನಿಡುಸು
ಯ್ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು
ಸಂದಣಿಸಿದೆವೆಗಳಲಿ ಬಾಷ್ಪದ
ಬಿಂದು ತಳಿತುದು ನಟ್ಟ ದೃಷ್ಟಿಯೊ
ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರವ ॥55॥
೦೫೬ ಆವ ಹೆಙ್ಗುಸನಳಲಿಸಿದೆನಿ ...{Loading}...
ಆವ ಹೆಂಗುಸನಳಲಿಸಿದೆನಿ
ನ್ನಾವ ಧರ್ಮವನಳಿದೆನೋ ತಾ
ನಾವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು
ಆವ ಹೆಂಗಸು ನವೆದಳೆನ್ನವೊ
ಲಾವಳಳಲಿದು ಮರುಗಿದಳು ಮ
ತ್ತಾವಳೆನ್ನಂದದಲಿ ಪಡೆದವಳುಂಟೆ ಲೋಕದಲಿ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ “ಅಯ್ಯೋ ! ನಾನು ಹಿಂದೆ ಯಾವ ಹೆಣ್ಣಿನ ಕಣ್ಣಲ್ಲಿ ನೀರು ತರಿಸಿದ್ದೆನೋ ಏನೋ ಅಥವಾ ನಾನು ಯಾವ ಧರ್ಮವನ್ನು ಕೆಡಿಸಿದ್ದೆನೋ ಏನೋ ! ಅಥವಾ ಯಾವ ಪಾಪ ಫಲವನ್ನು ಅನುಭವಿಸಲು ಮುಂಗಡ ಪಡೆದಿದ್ದೆನೋ ಏನೋ ? ನನ್ನಂತೆ ಸಂಕಟಪಟ್ಟಿರುವ ಹೆಂಗಸು ಇನ್ನಾರಿದ್ದಾರೆ ? ನನ್ನಂತೆ ದುಃಖದಿಂದ ಕಣ್ಣೀರಿಟ್ಟವರು ಯಾರಿದ್ದಾರೆ ? ಅಥವಾ ನನ್ನಂತೆ ದುಃಖವನ್ನು ಅನುಭವಿಸಿದಳು ಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ ?”
ಪದಾರ್ಥ (ಕ.ಗ.ಪ)
ಅಳಲಿಸು-ದುಃಖಕ್ಕೆ ಈಡು ಮಾಡು, ಅಳಿ-ನಾಶಪಡಿಸು, ಸಂಚಕಾರ-ಮುಂಗಡ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಸೈರಂಧ್ರಿಯು ಚಂದನಗಳನ್ನು ನುರಿದ ತನ್ನ ಅಂಗೈಗಳಿಗೆ ಆಗಿರುವ ಗಾಯಗಳನ್ನು ಭೀಮನಿಗೆ ತೋರಿಸಿ ಮಾತಾಡುತ್ತಾಳೆ
ಮೂಲ ...{Loading}...
ಆವ ಹೆಂಗುಸನಳಲಿಸಿದೆನಿ
ನ್ನಾವ ಧರ್ಮವನಳಿದೆನೋ ತಾ
ನಾವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು
ಆವ ಹೆಂಗಸು ನವೆದಳೆನ್ನವೊ
ಲಾವಳಳಲಿದು ಮರುಗಿದಳು ಮ
ತ್ತಾವಳೆನ್ನಂದದಲಿ ಪಡೆದವಳುಂಟೆ ಲೋಕದಲಿ ॥56॥
೦೫೭ ಇನ್ನು ಹುಟ್ಟದೆಯಿರಲಿ ...{Loading}...
ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು
ಎನ್ನವೊಲು ಪಾಂಡವರವೊಲು ಸಂ
ಪನ್ನ ದುಃಖಿಗಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು ॥57॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನಂತೆ ಅವಮಾನಕ್ಕೆ ಗುರಿಯಾಗುವ ಹೆಂಗಸರು ಇನ್ನು ಮುಂದೆ ಹುಟ್ಟದಿರಲಿ. ಹಾಗೆಯೇ ಲೋಕದಲ್ಲಿ ಭೀಮನಂಥ ಗಂಡ ಹುಟ್ಟದೆ ಇರಲಿ. ಹಿಂದಿನವರಲ್ಲ್ಲಿ ನನ್ನ ಹಾಗೆ ಮತ್ತು ಪಾಂಡವರ ಹಾಗೆ ಅತಿಶಯ ಸಂಕಟದಿಂದ ನವೆದವರು ಬೇರೆ ಯಾರಿದ್ದಾರೆ ?” ಎಂದು ದ್ರೌಪದಿ ಸಂಕಟಪಟ್ಟಳು.
ಪದಾರ್ಥ (ಕ.ಗ.ಪ)
ಭಂಗಿತ-ಅವಮಾನಕ್ಕೆ ಗುರಿಯಾದವ, ಭುವನ-ಲೋಕ, ಭೀಮ ಸನ್ನಿಭರು-ಭೀಮನಿಗೆ ಸಮನಾದವರು
ಟಿಪ್ಪನೀ (ಕ.ಗ.ಪ)
ಈ ಪದ್ಯ ಮತ್ತು ಮುಂದಿನ ಹಲವು ಪದ್ಯಗಳು ಸಂಪೂರ್ಣವಾಗಿ ಕುಮಾರವ್ಯಾಸನ ಸೃಷ್ಟಿ. ದ್ರೌಪದಿಯ ವಾಗ್ಮಿತೆ ಇಲ್ಲಿ ಪ್ರಕಾಶಗೊಂಡಿದೆ. ಮಾತನ್ನು ಮನವೊಲಿಸುವ ಕಲೆ ಎನ್ನುತ್ತಾರೆ. ಭೀಮನ ಮನಸ್ಸನ್ನು ಕೀಚಕ ವಧೆಗೆ ಸಿದ್ಧಪಡಿಸುವ ಹಂತಗಳನ್ನು ಇಲ್ಲಿ ಕಾಣಬಹುದಾಗಿದೆ. ತನ್ನ ವಂಶದ ಹಿರಿಮೆ, ಗಂಡಂದಿರ ಹಿರಿಮೆ, ಆದರೆ ತನಗೆ ಮೇಲಿಂದ ಮೇಲೆ ಬಂದು ಒದಗುತ್ತಿರುವ ಹಾನಿಕರ ಸಂದರ್ಭಗಳು, ಪಾಂಡವರ ನಿಷ್ಕ್ರಿಯತೆ ತನ್ನ ಆತ್ಮಹತ್ಯೆಯ ನಿರ್ಧಾರ ಎಲ್ಲವನ್ನು ಇಲ್ಲಿ ಬಗೆ ಕರಗುವಂತೆ ಚಿತ್ರಿಸಿ ಭೀಮನ ಮನಸ್ಸನ್ನು ಗೆದ್ದುಕೊಳ್ಳುವ ಸಂಕಲ್ಪದಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ಪಾಂಡವರೆಲ್ಲ ಮಹಾವೀರರೆಂದು ಹೊಗಳುತ್ತಲೇ ಅವರು ಅನ್ನಗೇಡಿಗಳು ಎಂದೂ ನಿಂದಿಸುತ್ತಾಳೆ.
ಮೂಲ ...{Loading}...
ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು
ಎನ್ನವೊಲು ಪಾಂಡವರವೊಲು ಸಂ
ಪನ್ನ ದುಃಖಿಗಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು ॥57॥
೦೫೮ ಆವ ಗರಳವ ...{Loading}...
ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಯಾವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಹೊಗುವೆನೊ
ಸಾವು ಸಮನಿಸದೆನಗೆನುತ ಮರುಗಿದಳು ನಳಿನಾಕ್ಷಿ ॥58॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನೀಗ ಯಾವ ವಿಷವನ್ನು ಕುಡಿಯಲಿ ? ಅಥವಾ ಯಾವ ಬೆಟ್ಟವನ್ನು ಏರಿ ಕೆಳಗೆ ಬೀಳಲಿ ? ಅಥವಾ ಹಾಸು ಬಂಡೆಗಳ ಮಧ್ಯೆ ಇರುವ ಆಳವಾದ ಯಾವ ನೀರಿನ ಮಡುವನ್ನು ಪ್ರವೇಶಿಸಲಿ ? ಯಾವ ಶೂಲವನ್ನು ಹಾಯಲಿ… ? ಅಥವಾ ಎಂಥ ಬೆಂಕಿಯೊಳಗೆ ನುಗ್ಗಲಿ?” ಎಂದು ದ್ರೌಪದಿ ಪ್ರಲಾಪಿಸಿದಳು.
ಪದಾರ್ಥ (ಕ.ಗ.ಪ)
ಗರಳ-ವಿಷ, ಅಡರು-ಏರು, ಹಾಸರೆ-ಹಾಸು ಬಂಡೆ, ಕುಂತ-ಶೂಲ, ಪಾವಕ-ಬೆಂಕಿ, ಸಮನಿಸು-ಉಂಟಾಗು, ಬರು
ಮೂಲ ...{Loading}...
ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಯಾವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಹೊಗುವೆನೊ
ಸಾವು ಸಮನಿಸದೆನಗೆನುತ ಮರುಗಿದಳು ನಳಿನಾಕ್ಷಿ ॥58॥
೦೫೯ ಮನ್ದೆಗೆಳಸಿದ ಪಾಪಿ ...{Loading}...
ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ
ಇಂದು ಕೀಚಕ ನಾಯ ಕಾಲಲಿ
ನೊಂದೆ ನಾನೀ ಮೂರು ಬಾರಿಯೆ
ಬಂದ ಭಂಗವೆ ಸಾಕೆನುತ ಬಸವಳಿದಳಿಂದುಮುಖಿ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಭೆಯಲ್ಲಿ ಎಲ್ಲರ ಮುಂದೆ ಎಳೆ ತರಿಸಿ ಅವಮಾನಿಸಿದವನು ಕೌರವ. ಅನಂತರ ಅರಣ್ಯವಾಸ ಕಾಲದಲ್ಲಿ ಸೈಂಧವನು ನನ್ನ ಮುಂದಲೆಯನ್ನು ಹಿಡಿದು ನನ್ನನ್ನು ಎಳೆದುಕೊಂಡು ಹೋದ. ಇಂದು ಈ ಕೀಚಕ ನಾಯಿಯ ಕಾಲಲ್ಲಿ ಒದೆಸಿಕೊಂಡು ನೊಂದಿದ್ದೇನೆ. ಹೀಗೆ ಮೂರು ಬಾರಿ ಬಂದ ಭಂಗಗಳೇ ಸಾಕಲ್ಲವೆ ?” ಎನ್ನುತ್ತ ದ್ರೌಪದಿ ನರಳಿದಳು.
ಪದಾರ್ಥ (ಕ.ಗ.ಪ)
ಮಂದೆಗೆಳಸಿದ-ಜನರ ನಡುವೆ ಎಳೆಸಿದ. ಬಸವಳಿ-ವಶತಪ್ಪು, ಎಚ್ಚರತಪ್ಪು, ಕೊರಗು
ಪಾಠಾನ್ತರ (ಕ.ಗ.ಪ)
ಮಂದೆಗೆಳಸಿದ : ಕೃಷ್ಣಜೋಯಿಸರ ವಿರಾಟಪರ್ವದಲ್ಲಿ ಮಂದಿಗೆಳೆದನು ಪಾಪಿ… ಎಂಬ ಪಾಠವಿದೆ. ಇದನ್ನೂ ಸ್ವೀಕರಿಸಬಹುದು.
ಟಿಪ್ಪನೀ (ಕ.ಗ.ಪ)
- ಕೌರವನು ಜೂಜಿನಲ್ಲಿ ಧರ್ಮರಾಯನನ್ನು ಸೋಲಿಸಿದ ಮೇಲೆ ದುಶ್ಶಾಸನನ ಮೂಲಕ ದ್ರೌಪದಿಯನ್ನು ಅಂತಃಪುರದಿಂದ ಎಳೆದು ತರಿಸಿ ಅವಮಾನ ಮಾಡಿದ ಪ್ರಸಂಗ. ವಿವರಕ್ಕೆ ಸಭಾಪರ್ವದ 14ನೆಯ ಸಂಧಿಯನ್ನು ನೋಡಿ.
- ಸೈಂಧವ ಬಂದು…….. ವಿವರಗಳಿಗೆ ಅರಣ್ಯಪರ್ವದ ಇಪ್ಪತ್ತೆರಡನೆಯ ಸಂಧಿಯನ್ನು ನೋಡಿ. ಪಾಂಡವರು ಅರಣ್ಯವಾಸದ ಸಂದರ್ಭದಲ್ಲಿ ಸಿಂಧುದೇಶಕ್ಕೆ ಬಂದಾಗ ಪಾಂಡವರೆಲ್ಲ ಬೇಟೆಗೆಂದು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಸೈಂಧವನು ದ್ರೌಪದಿಯ “ಮೇಲುz ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು” ಘಟನೆ ಇಲ್ಲಿ ವರ್ಣಿತವಾಗಿದೆ.
- ಈಗ ಕೀಚಕನು ಮಾಡಿದ ಅವಮಾನ.
ಮೂಲ ...{Loading}...
ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ
ಇಂದು ಕೀಚಕ ನಾಯ ಕಾಲಲಿ
ನೊಂದೆ ನಾನೀ ಮೂರು ಬಾರಿಯೆ
ಬಂದ ಭಂಗವೆ ಸಾಕೆನುತ ಬಸವಳಿದಳಿಂದುಮುಖಿ ॥59॥
೦೬೦ ಜನನವೇ ಪಾಞ್ಚಾಲ ...{Loading}...
ಜನನವೇ ಪಾಂಚಾಲ ರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ॥60॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಹುಟ್ಟಿದ್ದು ಲೋಕ ಪ್ರಸಿದ್ದ ಪಾಂಚಾಲರಾಯನ ಮನೆಯಲ್ಲಿ. ನನ್ನ ಗಂಡಂದಿರ ವಿಷಯ ಹೇಳೋಣ ಎಂದರೆ ಅವರು ಮನುಷ್ಯರಿರಲಿ ದೇವತೆಗಳಿಗಿಂತಲೂ ಮೇಲೆನ್ನಿಸಿದ ವೀರ ಪಾಂಡವರು. ಇಂಥ ನನಗೆ ಈಗ ಬಂದ ಪರಿಸ್ಥಿತಿ ವಿರಾಟನ ರಾಣಿಯರುಗಳ ತಲೆ ಬಾಚುವ ದೇಹಕ್ಕೆ ಸುಗಂಧ ದ್ರವ್ಯ ಲೇಪನ ಮಾಡುವ, ಕಾಲನ್ನು ಒತ್ತುವ ಕೆಲಸದ ಸಂಭ್ರಮ”
ಪದಾರ್ಥ (ಕ.ಗ.ಪ)
ತಿಗುರ ತಿದ್ದು-ಸುಗಂಧ ದ್ರವ್ಯವನ್ನು ಲೇಪಿಸು, ಮನೋವಲ್ಲಭ-ಪತಿ, ಗೀರ್ವಾಣ-ದೇವತೆ, ಜಾಡನ ಹೆಂಡತಿ ಸೀರಿ ಕಾಣದೆ ಸತ್ತಳು ಎಂಬಗಾದೆಯೇ ಇದೆಯಲ್ಲ ! (ಜಾಡ-ನೇಯ್ಗೆಕಾರ)
ಟಿಪ್ಪನೀ (ಕ.ಗ.ಪ)
ಮೂಲದಲ್ಲಿ ಇದೇ ಸ್ವರವಿದೆ. ಪಾರ್ಥಿವಸ್ಯ ಸುತಾನಾಮಕಾನುಜೀವತಿ, ಮಾದೃಶೀ | ಅನುಭೂಯೇ ದೃಶಂದುಃಖ ಮನ್ಯತ್ರ ದ್ರೌಪದಿಂ ಪ್ರಭೋ ! (ಬೇರೆ ಯಾವ ಹೆಣ್ಣು ನನ್ನಂತೆ ಕಷ್ಟಪಟ್ಟಿದ್ದಾಳೆ…. ಇತ್ಯಾದಿ)
ಇಲ್ಲಿಂದ ಮುಂದೆ ದ್ರೌಪದಿಯ ವಾಗ್ಧಾರೆ ಹರಿಯುತ್ತದೆ.
ಮೂಲ ...{Loading}...
ಜನನವೇ ಪಾಂಚಾಲ ರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ॥60॥
೦೬೧ ಹಗೆಗಳಿಗೆ ತಮ್ಪಾಗಿ ...{Loading}...
ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲ ಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂಗು
ರ್ಚಿಗಳದಿನ್ನಾರುಂಟೆನುತ ಮರುಗಿದಳು ನಳಿನಾಕ್ಷಿ ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ, ಶತ್ರುಗಳಿಗೆ ತಂಪಾಗಿ ಬದುಕುವ ಮುಗ್ಧ ಜನ ಈ ಲೋಕದಲ್ಲಿ ಇನ್ನಾರಿದ್ದಾರೆ ? (ಅಂದರೆ ಪಾಂಡವರೇ ಹಾಗೆ ತಂಪಾಗಿ ಬದುಕುವ ಜನ ಎಂದರ್ಥ) ಅವಮಾನಕರ ಪ್ರಸಂಗಗಳಿಗೆ ಹೆಗಲುಕೊಡುವ ವಿರೋಧಿಗಳು ಇದ್ದಾರೆಯೆ ? ತಮ್ಮ ಪರಾಕ್ರಮದ ಬಿರುದನ್ನು ಬಿಟ್ಟು ಬಡಿ ಹೋರಿಗಳಂತೆ (ನಿರ್ವೀರ್ಯಗೊಳಿಸಿಕೊಂಡವರು) ಇರುವ ಮೂಗುದಾರ ಹಾಕಿಸಿಕೊಂಡವರು ಬೇರೆ ಯಾರಿದ್ದಾರೆ ?” ಎಂದು ದ್ರೌಪದಿ ಮರುಗಿದಳು.
ಪದಾರ್ಥ (ಕ.ಗ.ಪ)
ವಿಗಡ-ವೀರ, ಬಡಿಹೋರಿ-ಬೀಜ ಒಡೆಸಿಕೊಂಡು ನಿವೀರ್ಯವಾದ ಹೋರಿ, ಮೂಗುರ್ಚಿ-ಅಧೀನಕ್ಕೆ ಒಳಗಾದವನು. ಮೂಗುದಾರ ಹಾಕಿಸಿಕೊಂಡ ಪ್ರಾಣಿಯಂತೆ ಇರುವವನು.
ಮೂಲ ...{Loading}...
ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲ ಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂಗು
ರ್ಚಿಗಳದಿನ್ನಾರುಂಟೆನುತ ಮರುಗಿದಳು ನಳಿನಾಕ್ಷಿ ॥61॥
೦೬೨ ಕಾಲನನು ಕೆರಳಿದೊಡೆ ...{Loading}...
ಕಾಲನನು ಕೆರಳಿದೊಡೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲ ವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ಪಾಂಡವರು ಎಂಥ ವೀರರೆಂದರೆ ಕೆರಳಿ ನಿಂತರೆ ಯಮನನ್ನೇ ಮುರಿಯಬಲ್ಲ ಸಮರ್ಥರು. ಆದರೆ ನೀವೆಲ್ಲ ಸೇರಿದರೂ ನನ್ನೊಬ್ಬಳನ್ನು ಕಾಪಾಡಿಕೊಳ್ಳಲಾರಿರಿ. ಪಾಪಿಗಳು ! ನಿಮಗೆ ಅಪಕೀರ್ತಿ ಬರುತ್ತದೆಂಬ ಅಂಜಿಕೆಯಾದರೂ ಬೇಡವೆ? ವೀರಕಾರ್ಯಮಾಡದ ಮೇಲೆ ತೋಳುಗಳು ನಿಮಗೆ ಒಂದು ಹೊರೆಯಾಗಿದೆ. ಅವು ನಿಮಗೇಕೆ? ಹೋಗಲಿ ನೀವೆಲ್ಲ ರಾಜವಂಶದಲ್ಲಿ ಏಕೆ ಹುಟ್ಟಬೇಕಾಗಿತ್ತು ಹೇಳಿ. ಆಹಾರ ಧ್ವಂಸಕ್ಕಾಗಿ ನಿಮ್ಮ ದೇಹವನ್ನು ಇಟ್ಟುಕೊಂಡಿದ್ದೀರಿ ಅಷ್ಟೆ” ಎಂದು ದ್ರೌಪದಿ ಹೇಳಿದಳು.
ಪದಾರ್ಥ (ಕ.ಗ.ಪ)
ಎಚ್ಚಾಳುತನ-ವೀರತನ, ಪರಾಕ್ರಮ, ಕೂಳುಗೇಡು-ಅನ್ನಧ್ವಂಸ
ಮೂಲ ...{Loading}...
ಕಾಲನನು ಕೆರಳಿದೊಡೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲ ವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ ॥62॥
೦೬೩ ಧರೆಯ ಭಣ್ಡಾರವನು ...{Loading}...
ಧರೆಯ ಭಂಡಾರವನು ಪುರವನು
ಕರಿತುರಗ ರಥ ಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಹಾ ! ಆ ಕೌರವನು ನಿಮ್ಮ ಭೂಮಿ, ಕೋಶ, ನಗರ, ಆನೆ, ಕುದುರೆ, ರಥ, ಸೇನೆ ಎಲ್ಲವನ್ನೂ ಕಿತ್ತುಕೊಂಡು ನಿಮ್ಮನ್ನು ಕಾಡಿಗೆ ಓಡಿಸಿದ. ಎಲ್ಲ ಕಳೆದುಕೊಂಡವರು ಈಗ ನನ್ನನ್ನು ಕೀಚಕನಿಗೆ ಒಪ್ಪಿಸಿಕೊಟ್ಟಿದ್ದೀರಿ. ನಿಮ್ಮ ಬದುಕು ಸೇವಾವೃತ್ತಿಗೆ ಮೀಸಲಾಗಿದೆ. ಇದು ನಿಮ್ಮೈವರಿಗೆ ಒಳ್ಳೆಯದೇ ಆಯಿತಲ್ಲವೆ ! ಎಂದು ದ್ರೌಪದಿ ಹಲುಬಿದಳು.
ಪದಾರ್ಥ (ಕ.ಗ.ಪ)
ಭಂಡಾರ-ಕೋಶ, ತುರಗ-ಕುದುರೆ, ಕರಿ-ಆನೆ, ಪಾಯದಳ-ಸೇನೆ, ಕಾಲಾಳುಗಳು.
ವಸ್ತುನಿಷ್ಠವಾಗಿ ಪಾಂಡವರ ಬಗೆಗೆ ಏನು ಹೇಳಬಹುದೋ ಅದನ್ನೆಲ್ಲ ದ್ರೌಪದಿ ಹೇಳಿರುವುದನ್ನು ಗಮನಿಸಬೇಕು.
ಮೂಲ ...{Loading}...
ಧರೆಯ ಭಂಡಾರವನು ಪುರವನು
ಕರಿತುರಗ ರಥ ಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು ॥63॥
೦೬೪ ಭಾವ ಭಾಗ್ಯಾಧಿಕನು ...{Loading}...
ಭಾವ ಭಾಗ್ಯಾಧಿಕನು ಕೌರವ
ದೇವನರಸುಗಳೊಡೆಯತನವನು
ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರೀಗ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರುವಿರಿ
ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ವ್ಯಂಗ್ಯೋಕ್ತಿ ಮುಂದುವರಿದಿದೆ “ಆಹಾ ! ನಮ್ಮ ಭಾವ ಕೌರವರಾಯ ಇದ್ದಾನಲ್ಲ. ಅವನು ಮಹಾ ಭಾಗ್ಯಶಾಲಿ. ನೀವುಗಳೋ ಕೃಷ್ಣನ ಕರುಣೆಯಿಂದಾಗಿ ಚಕ್ರಾಧಿಪತ್ಯವನ್ನು ಧರ್ಮದಿಂದ ಪಾಲಿಸುತ್ತಿದ್ದಿರಿ ! ಏನು ಹೇಳಲಿ. ಈಗ ನೀವು ಭಯದಿಂದ ಅನ್ಯರ ಸೇವೆ ಮಾಡುತ್ತ ಬೆಂದ ಒಡಲು ಹೊರೆಯುತ್ತಿದ್ದೀರಿ. ಹೇಗೂ ನಾನು ಸಾಯುವವಳು. ನಿಮಗೆ ಏಕೆ ಹೆದರಲಿ ? ಇದ್ದುದನ್ನು ಇರುವಂತೆಯೇ ಹೇಳಿ ಬಿಡುತ್ತೇನೆ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಭಾವ-ಭಾವನಾದ ಕೌರವ, ಕೂರ್ಮೆ-ಪ್ರೀತಿ, ತಟತಟವಾಗಿ , ತಟಪಟವಾಗಿ - ಪ್ರಾಣಭಯದಿಂದ, ಲೋಗರ-ಜನರ, ಸಾಮಾನ್ಯರ, ಅನ್ಯರ, ಬೆಂದೊಡಲ ಹೊರುವಿರಿ-ಭಂಡಬಾಳನ್ನು ಹೊರುತ್ತಿದ್ದೀರಿ. (ಬೆಂದೊಡಲ ಹೊರೆವಿರಿ ಎಂದೂ ಹೇಳಬಹುದೇನೋ).
ಮೂಲ ...{Loading}...
ಭಾವ ಭಾಗ್ಯಾಧಿಕನು ಕೌರವ
ದೇವನರಸುಗಳೊಡೆಯತನವನು
ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರೀಗ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರುವಿರಿ
ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು ॥64॥
೦೬೫ ಭೀಮ ಕೊಟ್ಟೈ ...{Loading}...
ಭೀಮ ಕೊಟ್ಟೈ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಅಳುತ್ತಲೇ “ಭೀಮ ! ನನಗೆ ಸಾಯಲು ಅಪ್ಪಣೆ ಕೊಟ್ಟೆ. ನಿಮ್ಮಣ್ಣನ ಆಜ್ಞೆಗೆ ಭಂಗತಾರದ ಹಾಗೆ ನೀವೆಲ್ಲ ಧರ್ಮದ ಮಹತ್ವವನ್ನು ತಿಳಿದು ಬದುಕಿ. ಆಗಾಗ ಬೇರೆ ಹೆಣ್ಣಿನ ಸಂಗ ಮಾಡಿದಾಗ ನನ್ನ ನೆನಪನ್ನೂ ಮಾಡಿಕೊಳ್ಳಿ. ನಾನು ತಾಮಸ ಬುದ್ಧಿಯಿಂದ ಎಲ್ಲೆ ಮೀರಿ ಮಾತಾಡಿದ್ದೇನೆ ಈ ಮೀತಿಮೀರಿದ ವರ್ತನೆಯನ್ನು ದಯವಿಟ್ಟು ಕ್ಷಮಿಸಿ ಬಿಡಿ” ಎಂದು ಹೇಳುತ್ತ ಭೀಮನ ಕಾಲಿಗೆ ಬಿದ್ದಳು.
ಪದಾರ್ಥ (ಕ.ಗ.ಪ)
ನೇಮ-ಆಜ್ಞೆ, ವಿರಾಮವಾಗದೆ (ನಿಮ್ಮ ಅಣ್ಣಧರ್ಮರಾಯನ ಆಜ್ಞೆಗೆ) ಕುಂದಿಲ್ಲದಂತೆ, ಉದ್ದಾಮತೆ-ಎಲ್ಲೆ ಮೀರಿದ ವರ್ತನೆ.
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ದ್ರೌಪದಿ ಭೀಮನ ಬಳಿ ವಿವರವಾಗಿ ತೋಡಿಕೊಳ್ಳುವ ಮಾತಿನಲ್ಲಿ ಒಂದು ಲಹರಿ ಇದೆ, ತರ್ಕಬದ್ಧತೆಯಿದೆ.
ಚಕ್ರವತ್ ಪರಿವರ್ತಂತೇ ಹಿ ಅರ್ಥಾಶ್ವ ವ್ಯಸನಾನಿಚ ಇತಿಕೃತ್ವಾ
ಪ್ರತೀಕ್ಷ್ಯಾಮಿ ಭತೂರ್ñಣಾಂ ಉದಯಂ ಪುನಃ
ಎಂಬ ಆಶೆ ಇದೆ. ಅವಳ ಜಡ್ಡುಗಟ್ಟಿದ ಕೈಯನ್ನು ನೋಡಿ ಭೀಮನು ಪರಮ ದುಃಖಾರ್ತನಾಗುತ್ತಾನೆ. ದ್ರೌಪದಿಯು ತನಗೆ ಬಂದ ಸ್ಥಿತಿಯನ್ನು ತೋಡಿಕೊಳ್ಳುತ್ತಾಳೆ. ಪಾಂಡವರೈವರನ್ನು ಒಬ್ಬೊಬ್ಬರನ್ನೇ ತೆಗೆದುಕೊಂಡು ಅವರ ಪರಾಕ್ರಮ ನಡತೆ ಸಾಧನೆಗಳ ವಿಷಯ ಹೇಳಿ ಈಗಿನ ಸ್ಥಿತಿಯೊಂದಿಗೆ ತೂಗಿ ನೋಡುತ್ತಾಳೆ. ಆದರೆ ಕುಮಾರವ್ಯಾಸನ ದ್ರೌಪದಿ ಕೆರಳಿದ್ದಾಳೆ, ನೊಂದಿದ್ದಾಳೆ. ಅವಳ ಭಾಷೆ ತುಂಬ ಕಠೋರವಾಗಿದೆ ಭೀಮನನ್ನು ಕೆರಳಿಸಿ ಕಾರ್ಯ ಪ್ರವೃತ್ತನನ್ನಾಗಿ ಮಾಡುವುದು ಅವಳ ಉದ್ದೇಶ. ಮೂಲದ ಭೀಮ ಅವಳ ದೀರ್ಘವಿವರಣೆಯಿಂದ ಪ್ರಭಾವಿತನಾಗಿ ಚರ್ಚೆಯನ್ನೇ ಮಾಡದೆ ಕೀಚಕನನ್ನು ವಧಿಸುವುದಾಗಿ ಹೇಳಿ ಬಿಡುತ್ತಾನೆ. ಇಲ್ಲಾದರೊ ಕುಮಾರವ್ಯಾಸ ವಿಭಿನ್ನವಾಗಿ ಧ್ವನಿ ಪೂರ್ಣವಾಗಿ ಕಥಾನಕವನ್ನು ಬೆಳೆಸಿದ್ದಾನೆ.
ಮೂಲ ...{Loading}...
ಭೀಮ ಕೊಟ್ಟೈ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ ॥65॥
೦೬೬ ಎನಲು ಕಮ್ಬನಿದುಮ್ಬಿದನು ...{Loading}...
ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ
ತನುಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ
ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಸಾವಿನ ನಿರ್ಧಾರವನ್ನು ಕೇಳಿ ಭೀಮನ ಕಣ್ಣಿನಲ್ಲಿ ನೀರುಕ್ಕಿತು. ಅಂತರಂಗ ಆದ್ರ್ರವಾಯಿತು. ರೋಷವುಕ್ಕಿತು. ಮನಸ್ಸಿನಲ್ಲೇ ಹಗೆಗಳನ್ನು ಹಿಂಡಿದ. ದ್ರೌಪದಿಯನ್ನು ನೋಡಿ ರೋಮಾಂಚನಗೊಂಡು ಮೆಲ್ಲನೆ ಅವಳನ್ನು ಅಪ್ಪಿಕೊಂಡ. ತನ್ನ ಸೆರಗಿನಿಂದ ಅವಳ ಕಣ್ಣುಗಳನ್ನು ಒರೆಸಿದ.
ಪದಾರ್ಥ (ಕ.ಗ.ಪ)
ತನು ಪುಳಕ-ದೇಹದಲ್ಲಿ ರೋಮಾಂಚನ
ಟಿಪ್ಪನೀ (ಕ.ಗ.ಪ)
ಭೀಮನು ಉಳಿದೆಲ್ಲರ ಮೇಲೆ ಕೆರಳಿ ದ್ರೌಪದಿಯ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿದ್ದನಷ್ಟೆ. ಆದರೆ ದ್ರೌಪದಿಯು ಅಂತರಂಗದ ಯಾತನೆಯನ್ನು ವಿವರವಾಗಿ ಬಿಡಿಸಿಟ್ಟ ಮೇಲೆ ಅವನ ಮನಸ್ಸು ಅಷ್ಟೇ ವೇಗದಲ್ಲಿ ದ್ರೌಪದಿಯ ಕಡೆಗೆ ತಿರುಗಿತು. ‘ಹಗೆಗಳನ್ನು ಹಿಂಡಿದನು ಮನದೊಳಗೆ’ ಎಂಬ ಮಾತಿನಲ್ಲಿ ಅವನ ಕ್ಷಿಪ್ರ ಮನಃಕ್ರಿಯೆ ವ್ಯಕ್ತವಾಗಿದೆ. ಒಂದು ರೀತಿಯಲ್ಲಿ ಭೀಮನದು ಎಲ್ಲಾ ಅತಿರೇಕಗಳೇ ಪ್ರೀತಿ ಕೂಡ ಅವನ ಸ್ವಭಾವಕ್ಕೆ ಅನುಗುಣವಾದ ರೀತಿಯ ನಡವಳಿಕೆ.
ಮೂಲ ...{Loading}...
ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ
ತನುಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ
ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ ॥66॥
೦೬೭ ಕುರುಳ ನೇವರಿಸಿದನು ...{Loading}...
ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡು ಬಿಡು ಖಾತಿಯನು ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದ್ರೌಪದಿಯ ತಲೆಗೂದಲನ್ನು ಮೆಲ್ಲಗೆ ಸವರಿದ. ಅವಳ ಗಲ್ಲವನ್ನು ಒರೆಸಿ ಮುದ್ದಾಡಿದ. ಅನಂತರ ಕಣ್ಣೀರಿನಲ್ಲಿ ಮಿಂದಿದ್ದ ಅವಳ ಮುಖವನ್ನು ಅಲ್ಲೇ ಪಕ್ಕದಲ್ಲಿ ಇರಿಸಿದ್ದ ಗಿಂಡಿಯ ನೀರಿನಲ್ಲಿ ಚೆನ್ನಾಗಿ ತೊಳೆದ. ಅನಂತರ ಅವಳನ್ನು ಸಮಾಧಾನಪಡಿಸುತ್ತ “ದ್ರೌಪದಿ ! ದುಃಖವನ್ನು ಹತ್ತಿಕ್ಕಿಕೋ. ನಾನು ವಿವರವಾಗಿ ಏನನ್ನೂ ಹೇಳಬಯಸುವುದಿಲ್ಲ (ಒಂದೇ ಮಾತಿನಲ್ಲಿ ಹೇಳುವುದಾದರೆ) ಇಂದು ನಾನು ನಮ್ಮಣ್ಣನ ಆಜ್ಞೆಯನ್ನು ದಾಟಿದೆ, ದಾಟಿದೆ ಹೋಗು”
ಪದಾರ್ಥ (ಕ.ಗ.ಪ)
ಕುರುಳು-ಕೂದಲು, ಮುಂಡಾಡು-ಮುದ್ದುಮಾಡು, ನೇವರಿಸು, ಹೊರೆ-ಸಮೀಪ, ಗಿಂಡಿ-ಕೊಂಬು ಅಥವಾ ಸೊಂಡಿಲಿರುವ ನೀರಿನ ಪಾತ್ರೆ, ಖಾತಿ-ದುಃಖ
ಟಿಪ್ಪನೀ (ಕ.ಗ.ಪ)
ಕುಮಾರವ್ಯಾಸನ ಭಾಷೆ ತುಂಬ ಹದಗೊಳ್ಳುವುದು ಇಂಥ ಸಂದರ್ಭಗಳಲ್ಲಿ. ಒಂದೇ ಮಾತಿನಲ್ಲಿ ಹೇಳುತ್ತೇನೆ, ವಿಸ್ತಾರವಾಗಿ ಹೇಳಬೇಕಾದುದಿಲ್ಲ ಎನ್ನುತ್ತ ಅವನು ಒಂದೇ ಮಾತಿನಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿ ಅನಂತರ ವಿಸ್ತಾರವಾಗಿ ಹೇಳುವ ತಂತ್ರವನ್ನು ಅನುಸರಿಸಿರುವುದು ಗಮನಿಸಬೇಕಾದ ಅಂಶ. ದಾಟಿದೆ-ದಾಟಿದೆ ಎಂಬ ದ್ವಿರುಕ್ತಿಯು ಭಾಷಾ ಪ್ರಯೋಗದ ಮಟ್ಟದಲ್ಲಿ ಆ ಕವಿಯ ಸಿದ್ಧಿಯನ್ನು ತೋರುತ್ತದೆ.
2 ದಾಂಟಿದೆನು ದಾಂಟಿದೆನು : ಕೇಶಿರಾಜನು ಇಂಥ ಪ್ರಯೋಗಗಳನ್ನು ಯುಗಲೋಚ್ಚರಣ ಎಂದು ಕರೆದಿದ್ದಾನೆ (ಸೂತ್ರ 206) ಕಾವ್ಯದಲ್ಲಿ ಕ್ವಚಿತ್ತಾಗಿ ಬರುವ ಈ ಪ್ರಯೋಗಗಳು ತುಂಬ ಪ್ರಭಾವ ಪೂರ್ಣವಾಗಿರುತ್ತವೆ. ಉದಾ: ರನ್ನರ ಗದಾಯುದ್ಧದಲ್ಲಿ ಬರುವ
ಸತ್ತ ಆನೆಗಳ ಹೆಣಗಳ ರಾಶಿಯನ್ನು ಏರಿ ಏರಿ, ರಕ್ತದ ಪ್ರವಾಹಗಳನ್ನು ದಾಟಿ ದಾಟಿ…. ಎಂಬ ಯುಗಲೋಚ್ಚರಣಗಳಿಂದ ಕುಮಾರವ್ಯಾಸನು ಪ್ರಭಾವಿತನಾಗಿದ್ದಾನೆ.
3 ಸಹನೆ ಮಿತಿಮೀರಿ, ಧರ್ಮರಾಯನ ಧರ್ಮಬಂಧನದಿಂದ
ಕಟ್ಟಲ್ಪಟ್ಟಿದ್ದ ಭೀಮನು (ಧರ್ಮಪಾಶಸ್ಥಿತ ತ್ವೇಹಂ) ಬಿಡಿಸಿಕೊಂಡು ಮಾತಾಡುತ್ತಿದ್ದಾನೆ.
ಮೂಲ ...{Loading}...
ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡು ಬಿಡು ಖಾತಿಯನು ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ ॥67॥
೦೬೮ ಬಸುರ ಬಗಿವೆನು ...{Loading}...
ಬಸುರ ಬಗಿವೆನು ಕೀಚಕನ ನಸು
ಮಿಸುಕಿದೊಡೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೀಚಕನ ಎದೆಯನ್ನು ಸೀಳಿ ಹಾಕುತ್ತೇನೆ. ವಿರಾಟನು ವಂಶದವರು ಪ್ರತಿಭಟಿಸಿದರೆ ಅವನ ವಂಶದ ಹೆಸರೇ ಉಳಿಯದಂತೆ ಒರಸಿಹಾಕುತ್ತೇನೆ. ಕೀಚಕನ ಸಾವಿನಿಂದಾಗಿ ನಾವು ಇಲ್ಲಿರುವ ಸಂಗತಿ ಕೌರವನಿಗೆ ತಿಳಿದರೆ ನಾನು ಮೊದಲೇ ಹೋಗಿ ಕೌರವ ಸಮೂಹವನ್ನೆಲ್ಲ ಕೊಚ್ಚಿ ಹಾಕುತ್ತೇನೆ. ಅನಂತರ ದೇವತೆಗಳು ನನ್ನ ಚರ್ಯೆಯನ್ನು ಒಪ್ಪದೆ ಅಯ್ಯೋ ಭೀಮನು ಕಷ್ಟದ ಕೆಲಸ ಮಾಡಿದ್ದು ಸರಿಯಲ್ಲ ಎಂದು ವಿಮರ್ಶಿಸಿದರೆ ಆ ದೇವ ಸಮೂಹದ ಮುಖಗಳನ್ನು ಕೈಲಾಸ ಪರ್ವತದಲ್ಲಿ (ಕೋಡುಗಲ್ಲಿಗೆ) ತೇಯುತ್ತೇನೆ.
ಪದಾರ್ಥ (ಕ.ಗ.ಪ)
ಮಿಸುಕು-ಪ್ರತಿಭಟಿಸು, ಪ್ರತಿಕ್ರಿಯೆ ತೋರು, ವ್ರಜ-ಸಮೂಹ, ಕುಸುರಿದರಿ-ಕೊಚ್ಚಿ ಹಾಕು
ಟಿಪ್ಪನೀ (ಕ.ಗ.ಪ)
ಭೀಮನ ವಿಚಾರ ಸರಣಿ ಇಲ್ಲಿದೆ. ಪರಿಣಾಮಗಳನ್ನು ಮುಂದೂಹಿಸಿ ಪರಿಹಾರವನ್ನು ಸೂಚಿಸುತ್ತಿದ್ದಾನೆ. ಇಂಥವನ್ನು ಚಕ್ರ ಚಿಂತನೆ ಅಥವಾ ಚಿಂತನ ಚಕ್ರ ಎನ್ನಬಹುದು.
ಪ್ರಳಯಾಂತಕ ಬುದ್ಧಿ ಎನ್ನುವುದು ಇದನ್ನೆ. ಹೋಮರನ ಭಾಷೆಯಲ್ಲಿ ಇವೆಲ್ಲ ವಿಂಗ್ಡ್ ವಡ್ರ್ಸ್. ಈ ಚಕ್ರ ಚಿಂತನೆ ಮುಂದಿನ ಪದ್ಯಕ್ಕೂ ಹಾಯ್ದಿದೆ.
ಮೂಲ ...{Loading}...
ಬಸುರ ಬಗಿವೆನು ಕೀಚಕನ ನಸು
ಮಿಸುಕಿದೊಡೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ ॥68॥
೦೬೯ ಮುನಿದನಾದೊಡೆಯಣ್ಣತನವಿಂ ...{Loading}...
ಮುನಿದನಾದೊಡೆಯಣ್ಣತನವಿಂ
ದಿನಲಿ ಹರಿಯಲಿ ಪಾರ್ಥ ನಕುಲರು
ಕನಲಿದೊಡೆ ಕೈದೋರುವೆನು ಸಹದೇವನಿವರುಗಳ
ಅನುಜನೆಂಬೆನೆ ಕೃಷ್ಣ ಹಾಯ್ದರೆ
ಘನ ಮುರಾರಿಯ ಮೀರುವೆನು ಬಳಿ
ಕೆನಗೆ ಸಮಬಲರಾರು ತರಿವೆನು ಕೀಚಕಾನ್ವಯವ ॥69॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುವರಿದು ಭೀಮ ಹೇಳುತ್ತಾನೆ. “ನಮ್ಮಣ್ಣ ಧರ್ಮರಾಯನಿಗೆ ನನ್ನ ಕೃತ್ಯದಿಂದ ಕೋಪಬಂದರೆ ಅವನೊಂದಿಗೆ ಸೋದರ ಸಂಬಂಧವನ್ನು ಕಡಿದುಕೊಳ್ಳುತ್ತೇನೆ. ಅರ್ಜುನ ನಕುಲರು ಕೆರಳಿ ನಿಂತರೆ ಅವರಿಗೂ ನನ್ನ ಶಕ್ತಿ ಎಷ್ಟೆಂಬುದನ್ನು ತೋರಿಸುತ್ತೇನೆ. ಸಹದೇವನು ಪ್ರತಿಭಟಿಸಲು ಬಂದರೆ ಅವನನ್ನು ನನ್ನ ತಮ್ಮನೆಂದೇ ಪರಿಗಣಿಸುವುದಿಲ್ಲ. ಕೊನೆಗೆ ಶ್ರೀಕೃಷ್ಣನು ನನ್ನ ಮೇಲೆ ಬಿದ್ದರೆ ಆ ಶ್ರೇಷ್ಠ ಮುರಾರಿಯ ಮಾತನ್ನು ಮೀರುತ್ತೇನೆ. ಇಷ್ಟಕ್ಕೆಲ್ಲ ನಾನು ಸಿದ್ಧ. ಅನಂತರ ನನಗೆ ಸಮಾನ ಬಲಶಾಲಿ ಯಾರಿದ್ದಾರೆ ? ಕೀಚಕನ ತಮ್ಮಂದಿರು ಪ್ರತಿಭಟಿಸಿದರೆ ಅವರನ್ನೆಲ್ಲ ಸವರಿ ಹಾಕುತ್ತೇನೆ.
ಪದಾರ್ಥ (ಕ.ಗ.ಪ)
ಕನಲು-ಕೋಪಿಸಿಕೊಳ್ಳು, ಕೈದೋರು-ಶಕ್ತಿಯ ರುಚಿ ತೋರಿಸು
ಟಿಪ್ಪನೀ (ಕ.ಗ.ಪ)
ದ್ರೌಪದಿಗಾಗಿ ಎಲ್ಲರ ವಿರೋಧವನ್ನು ಕಟ್ಟಿಕೊಳ್ಳಲು ಭೀಮನು ಸಿದ್ಧನಾಗಿದ್ದಾನೆಂಬ ಸಂಗತಿ ಇಲ್ಲಿ ಸ್ಪಷ್ಟವಾಗುತ್ತದೆ. ‘ದ್ರೌಪದೀ ವಾಕ್ಯ ಪಾಥೇಯೌ’ (ದ್ರೌಪದಿಯ ಮಾತು ಅವನಿಗೆ ದಾರಿಯ ಬುತ್ತಿ) ಎಂಬ ವ್ಯಾಸರ ಮಾತನ್ನು ಇಲ್ಲಿ ನೆನೆಯಬಹುದು.
ಪಂಪನ ಭೀಮನು ದ್ರೌಪದಿಗೆ “ಈ ಕೀಚಕನು ಮತ್ತೊಬ್ಬ ದುಶ್ಶಾಸನನ ನಂಟ” ಎಂದು ಹೇಳುತ್ತಾನೆ.
ಮೂಲ ...{Loading}...
ಮುನಿದನಾದೊಡೆಯಣ್ಣತನವಿಂ
ದಿನಲಿ ಹರಿಯಲಿ ಪಾರ್ಥ ನಕುಲರು
ಕನಲಿದೊಡೆ ಕೈದೋರುವೆನು ಸಹದೇವನಿವರುಗಳ
ಅನುಜನೆಂಬೆನೆ ಕೃಷ್ಣ ಹಾಯ್ದರೆ
ಘನ ಮುರಾರಿಯ ಮೀರುವೆನು ಬಳಿ
ಕೆನಗೆ ಸಮಬಲರಾರು ತರಿವೆನು ಕೀಚಕಾನ್ವಯವ ॥69॥
೦೭೦ ಈಸು ದಿನವೆಮ್ಮಣ್ಣನಾಜ್ಞೆಯ ...{Loading}...
ಈಸು ದಿನವೆಮ್ಮಣ್ಣನಾಜ್ಞೆಯ
ಪಾಶದಲಿ ಸಿಕ್ಕಿರ್ದೆ ಸಿಂಹದ
ಕೂಸ ನರಿ ಕೆಣಕುವವೊಲೀ ಕುರು ಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳ್ ಎಂದ ॥70॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡು ದ್ರೌಪದಿ, ಇಷ್ಟು ದಿನವೂ ನಮ್ಮ ಅಣ್ಣನ ಆಜ್ಞೆ ಎಂಬ ಹಗ್ಗದಲ್ಲಿ ಕಟ್ಟಲ್ಪಟ್ಟಿದ್ದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಕೌರವರು ಕೀಚಕಾದಿಗಳು ಕೆಣಕಿ ತೊಂದರೆ ತಂದುಕೊಂಡಿದ್ದಾರೆ. ಈ ನಾಯಿಗಳನ್ನು ನಾನು ಸುಮ್ಮನೆ ಬಿಡುತ್ತೇನೆಯೆ? ವೀಸ ಬಡ್ಡಿಯ ಸಮೇತ ಇವರ ಜೀವವನ್ನು ಪಡೆಯುತ್ತೇನೆ. ಇದು ನನ್ನ ಛಲ. ಧರ್ಮದ ಎಲ್ಲೆ ಮೀರಿದಂತಾಗಿದೆ” ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಗಾಸಿಯಾಗು-ತೊಂದರೆಗೊಳಗಾಗು,
ಟಿಪ್ಪನೀ (ಕ.ಗ.ಪ)
ವೀಸಬಡ್ಡಿ-ಒಂದು ವೀಸದಷ್ಟು ಪ್ರಮಾಣದ ಬಡ್ಡಿ, ಒಂದಾಣೆಯ ಹದಿನಾರನೇ ಒಂದು ಭಾಗದ ನಾಣ್ಯ ಅಂದರೆ ಆಲಂಕಾರಿಕವಾಗಿ 1 ಅಥವಾ 3/69 ಮೊತ್ತದ, 1/16 ನೇ ಭಾಗದ ಬಡ್ಡಿಯ ಸಮೇತ, ಬಡ್ಡಿ ಸಹಿತ ಎಂದು ಕೃಷ್ಣ ಜೋಯಿಸರು ಹೇಳುತ್ತಾರೆ.
ಅ.ರಾ.ಸೇ. ಅವರ ಕುಮಾರವ್ಯಸ ಭಾರತದಲ್ಲಿ ವೀಸಬಡ್ಡಿ ಎಂದರೆ ಶೇ.12 1/2 ಎಂದು ತಿಳಿಸಿದೆ.
ಮೂಲ ...{Loading}...
ಈಸು ದಿನವೆಮ್ಮಣ್ಣನಾಜ್ಞೆಯ
ಪಾಶದಲಿ ಸಿಕ್ಕಿರ್ದೆ ಸಿಂಹದ
ಕೂಸ ನರಿ ಕೆಣಕುವವೊಲೀ ಕುರು ಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ ॥70॥
೦೭೧ ತರುಣಿ ಕೀಚಕ ...{Loading}...
ತರುಣಿ ಕೀಚಕ ಕೌರವೇಂದ್ರರ
ಹರಣಕಿದ ಕೋ ಸಂಚಕಾರವ
ಕೆರಳಿದೊಡೆಯೀ ಭೀಮ ಬಗೆವನೆ ನೀತಿಗೀತಿಗಳ
ಕೆರಳಿಚಿದೆಯಿನ್ನೇನು ನಿನ್ನಯ
ಹರಿಬವೆನ್ನದು ನಾಯಿ ಜಾರನ
ಕರೆದು ಸಂಕೇತದಲಿ ಸೂಚಿಸು ನಾಟ್ಯ ಮಂದಿರವ ॥71॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತರುಣಿ ! ಕೀಚಕ ಮತ್ತು ಕೌರವ ಇಬ್ಬರ ಪ್ರಾಣವನ್ನು ತೆಗೆಯುತ್ತೇನೆಂಬ ಶಪಥಕ್ಕೆ ಮುಂಗಡವನ್ನು ಕೊಡುತ್ತಿದ್ದೇನೆ. ಕೆರಳಿದರೆ ಭೀಮನು ನೀತಿ-ಗೀತಿ ಎಂದೆಲ್ಲ ಯೋಚಿಸುತ್ತ ಕೂರುವವನಲ್ಲ, ಹೇಗಾದರೂ ಮಾಡಿ ಅವರಿಬ್ಬರನ್ನೂ ಕೊಲ್ಲುತ್ತೇನೆ. ನೀನು ನನ್ನನ್ನು ತುಂಬ ಕೆರಳಿಸಿದ್ದೀಯೆ. ಇನ್ನೇನು ? ನಿನ್ನ ಕಾರ್ಯ ನನ್ನದು. ಆ ನಾಯಿ ಕೀಚಕನನ್ನು ಕರೆದು ಸಂಕೇತದಲ್ಲಿ ಹೇಳು. ರಾತ್ರಿ ನಾಟ್ಯ ಮಂದಿರಕ್ಕೆ ಬರುವಂತೆ ಆಹ್ವಾನಿಸು.
ಪದಾರ್ಥ (ಕ.ಗ.ಪ)
ಹರಣ-ಪ್ರಾಣ, ಸಂಚಕಾರ-ಮುಂಗಡ (ಮೊದಲು ಘೋಷಿಸಿ ಅನಂತರ ಕೊಲ್ಲುವಿಕೆ), ಕೆರಳಿಚಿ-ಇಸುಗೆ ಬದಲಾಗಿ ‘ಇಚು’ ಪ್ರತ್ಯಯ ಕೆರಳಿಸಿ, ಹರಿಬ-ಕಾರ್ಯ, ಜಾರ-ಸ್ತ್ರೀಲಂಪಟ
ಟಿಪ್ಪನೀ (ಕ.ಗ.ಪ)
ಭೀಮನ ಒರಟು ಭಾಷೆಯ ಲಹರಿಯನ್ನು ಇಲ್ಲಿ ಕಾಣಬಹುದಾಗಿದೆ.
ಈ ಕೀಚಕನು ನಾಳೆ ಸೂರ್ಯನನ್ನು ನೋಡಲಾರ (‘ನ ಚೇದುದ್ಯಾತಮಾದಿತ್ಯಂ ಪ್ರಾತರುತ್ಥಾಯ ಪಶ್ಯತಿ’) ಎಂದು ಮೂಲಭಾರತದಲ್ಲಿ ಭೀಮ ಹೇಳುತ್ತಾನೆ. ನಾಟ್ಯ ಮಂದಿರಕ್ಕೆ ರಾತ್ರಿ ಕರೆಯುವುದರಲ್ಲಿ ಒಂದು ವಿಶೇಷ ಅಂಶವಿದೆ. ಅದು ಹೊಸದಾಗಿ ಕಟ್ಟಿಸಿದ್ದ ನೃತ್ಯ ಮಂದಿರ. ಹಗಲಲ್ಲಿ ನೃತ್ಯಾಭ್ಯಾಸ ಮಾಡುವ ಹುಡುಗಿಯರಿರುತ್ತಾರೆ. ರಾತ್ರಿ ಅದು ನಿರ್ಜನ ಉದ್ಯಾನ. ಅಲ್ಲದೆ ಅದು ಪ್ರೇತವನ. ಅಲ್ಲಿ ಕೀಚಕನಿಗೆ ಅಜ್ಜ ಅಪ್ಪಂದಿರ ದರ್ಶನ ಮಾಡಿಸುತ್ತೇನೆ (ತತ್ರಾಸ್ಯ ದರ್ಶಯಿಷ್ಯಾಮಿ ಪೂರ್ವ ಪ್ರೇತಾನ್ ಪಿತಾಮಹಾನ್) ಎನ್ನುತ್ತಾನೆ. ಈ ಪ್ರಕರಣವು ಕೌರವನಿಗೆ ತಿಳಿದರೆ ಏನುಗತಿ ಎಂಬ ಚಿಂತೆಯೂ ಅವನಿಗಿಲ್ಲ. ಆದುದರಿಂದ ಕೀಚಕನನ್ನು ಅವನ ವಂಶದವರನ್ನು ವಿರೋಧಿಸಿದರೆ ಮತ್ಸ್ಯರಾಜನನ್ನೂ ಕೊಲ್ಲುವುದಾಗಿ ಹೇಳುತ್ತಾನೆ. ಕುಮಾರವ್ಯಾಸನು ಹೇಳದ ಒಂದು ವಿಷಯ ವ್ಯಾಸಭಾರತದಲ್ಲಿದೆ “ಕೌರವನನ್ನು ಕೂಡ ವಧಿಸಿ ನಾನೇ ರಾಜನಾಗುತ್ತೇನೆ. ನಮ್ಮಣ್ಣ ಯುಧಿಷ್ಠಿರ ಇಲ್ಲಿಯೇ ವಿರಾಟನ ಸೇವೆ ಮಾಡಿಕೊಂಡಿರಲಿ”
ಮೂಲ ...{Loading}...
ತರುಣಿ ಕೀಚಕ ಕೌರವೇಂದ್ರರ
ಹರಣಕಿದ ಕೋ ಸಂಚಕಾರವ
ಕೆರಳಿದೊಡೆಯೀ ಭೀಮ ಬಗೆವನೆ ನೀತಿಗೀತಿಗಳ
ಕೆರಳಿಚಿದೆಯಿನ್ನೇನು ನಿನ್ನಯ
ಹರಿಬವೆನ್ನದು ನಾಯಿ ಜಾರನ
ಕರೆದು ಸಂಕೇತದಲಿ ಸೂಚಿಸು ನಾಟ್ಯ ಮಂದಿರವ ॥71॥
೦೭೨ ಅಲ್ಲಿಗಿರುಳೈತನ್ದು ಮರೆಯಲಿ ...{Loading}...
ಅಲ್ಲಿಗಿರುಳೈತಂದು ಮರೆಯಲಿ
ಖುಲ್ಲನುದರವ ಬಗಿದು ರಕುತವ
ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ
ಅಲ್ಲಿ ಕೆಲಬಲನರಿದುದಾದೊಡೆ
ಬಲ್ಲೆನದಕೌಷಧಿಯ ಕರೆ ಮರೆ
ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ ॥72॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- . “ನಾನು ರಾತ್ರಿ ಅಲ್ಲಿಗೆ ಬಂದು ಮರೆಯಲ್ಲಿರುತ್ತೇನೆ. ಕೀಚಕನು ಬಂದಾಗ ಆ ದುಷ್ಟನ ಎದೆಯನ್ನು ಬಗೆದು ಅವನ ರಕ್ತವನ್ನು ಶಾಕಿನಿಯರಿಗೆ ಬಲಿಕೊಡುತ್ತೇನೆ. ಈ ವಿಚಾರದಲ್ಲಿ ಸಂದೇಹವಿಲ್ಲ. ಅವನನ್ನು ಕೊಂದುದನ್ನು ಅಕ್ಕಪಕ್ಕದಲ್ಲಿ ಯಾರಾದರೂ ನೋಡಿದರೆ ಅದಕ್ಕೂ ಏನು ಔಷಧ ಎಂಬುದು ನನಗೆ ಗೊತ್ತು. ಹೆದರಬೇಡ ಹೋಗು” ಹೀಗೆ ಹೇಳಿ ಭೀಮನು ದ್ರೌಪದಿಯನ್ನು ಕಳಿಸಿಕೊಟ್ಟ.
ಪದಾರ್ಥ (ಕ.ಗ.ಪ)
ಖುಲ್ಲ-ದುಷ್ಟ, ಶಾಕಿನಿ-ಶಾಕಿನಿ ಡಾಕಿನಿ ಇವರು ಸ್ತ್ರೀ ಪಿಶಾಚಗಳು ಎಂಬ ಕವಿ ಸಮಯ. ಶಾಕಿನಿ ದುರ್ಗೆಯ ಪರಿಚಾರಕಿಯಲ್ಲಿ ಒಬ್ಬಳು ಕ್ಷುದ್ರದೇವತೆ. ಶಾಕಿನಿ ಡಾಕಿನಿಯರು ನರಭಕ್ಷಕಿಯರು, ರಕ್ತಪಿಪಾಸುಗಳು, ಕೆಲಬಲ-ಅಕ್ಕಪಕ್ಕದವರು.
ಮೂಲ ...{Loading}...
ಅಲ್ಲಿಗಿರುಳೈತಂದು ಮರೆಯಲಿ
ಖುಲ್ಲನುದರವ ಬಗಿದು ರಕುತವ
ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ
ಅಲ್ಲಿ ಕೆಲಬಲನರಿದುದಾದೊಡೆ
ಬಲ್ಲೆನದಕೌಷಧಿಯ ಕರೆ ಮರೆ
ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ ॥72॥
೦೭೩ ಹರುಷದಲಿ ಹೆಚ್ಚಿದಳು ...{Loading}...
ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ॥73॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಗೆ ಸಂತೋಷವಾಗಿತ್ತು. ಹರ್ಷದಿಂದ ಸಂಭ್ರಮಿಸಿದಳು. ನನ್ನ ಗಂಡ ಭೀಮನು ಪುರುಷ ಮಾತ್ರನಲ್ಲ. ಪುರುಷರ ಪುರುಷ ಎಂದುಕೊಂಡಳು “ಆಹಾ ! ಭೀಮ ! ನೀನು ಪತಿಯಾಗಿ ಸಿಕ್ಕಿದ್ದು ನನ್ನ ಪರಮ ಪುಣ್ಯವಲ್ಲವೆ ?” ಎನ್ನುತ್ತ ಗಂಡನನ್ನು ಬೀಳ್ಕೊಂಡು ಹಿಂದಿರುಗಿದಳು. ಕತ್ತಲು ಹರಿದು ಬೆಳಗಾಯಿತು. ಸೂರ್ಯನು ತಾವರೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ತೆರೆದ.
ಪದಾರ್ಥ (ಕ.ಗ.ಪ)
ಹೆಚ್ಚು-ಉಬ್ಬು, ಸಂಭ್ರಮಿಸು, ಸುಕೃತ-ಪುಣ್ಯ, ನಿಜ-ತನ್ನ, ತರಣಿ-ಸೂರ್ಯ, ಬೀಯಗ-ಬೀಗ,
ಟಿಪ್ಪನೀ (ಕ.ಗ.ಪ)
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ : ಇದೊಂದು ಕವಿ ಸಮಯ. ರಾತ್ರಿಯಾದಾಗ ತಾವರೆಯ ಬಾಗಿಲು ಮುಚ್ಚಿಕೊಳ್ಳುತ್ತದೆ ತಾನೆ. ಅಂದರೆ ಸೂರ್ಯ ಅವುಗಳನ್ನು ಒಳದೂಡಿ ಬೀಗ ಹಾಕಿರುತ್ತಾನಂತೆ. ಬೆಳಗಾಗ ಬೀಗವನ್ನು ತೆರೆದು ತಾವರೆ ಅರಳುವಂತೆ ಮಾಡುತ್ತಾನೆ.
ಮೂಲ ...{Loading}...
ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ॥73॥
೦೭೪ ಆ ದಿವಸವರಮನೆಗೆ ...{Loading}...
ಆ ದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡುಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳು ಯುಗವಾಗಿ ಸವೆದುದು
ನೀ ದಯಾಂಬುಧಿ ಕುಸುಮಶರ ಯಮ
ನಾದನದ ನೀ ಬಲ್ಲೆಯೆಂದನು ಕೀಚಕನು ನಗುಗುತ ॥74॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗ್ಗೆ ಕೀಚಕನು ಮತ್ತೆ ಅರಮನೆಯ ಕಡೆ ಬಂದ. ದ್ರೌಪದಿಯನ್ನು ಕಂಡವನು (ಆಕೆ ದ್ರೌಪದಿ ಎನ್ನುವುದಿಲ್ಲ; ಕವಿ ವೃಕೋದರನ ವಲ್ಲಭೆ ! ಎನ್ನುತ್ತಾನೆ.) ಹಿಂದಿನ ದಿನ ಅವಳ ಮೇಲೆ ಕೈ ಮಾಡಿದ್ದಕ್ಕೆ ರಾಕ್ಷಸನಿಂದ ಬಿದ್ದ ಹೊಡೆತದ ನೆನಪಾಗಿ ಈಗ ಅವಳ ಕೈಹಿಡಿಯಲು ಹೆದರಿಕೆಯಾಯಿತು. ಹಾಗೆಯೇ ಅವಳನ್ನು ಮಾತಾಡಿಸಿದ. “ತರುಣಿ ! ನಿನ್ನೆ ರಾತ್ರಿ ನನ್ನ ಪಾಲಿಗೆ ಒಂದು ಯುಗ ಎಂಬಂತೆ ಆಗಿತ್ತು. ನೀನು ಕರುಣೆಯ ಸಾಗರ. ಆ ಮನ್ಮಥನು ನನ್ನ ಪಾಲಿಗೆ ಯಮನಾಗಿ ಬಿಟ್ಟಿದ್ದಾನೆ. ಇದು ನಿನಗೆ ತಿಳಿಯದ ಸಂಗತಿಯೇನೂ ಅಲ್ಲವಲ್ಲ” ಎಂದು ನಗುನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ವೃಕೋದರ-ತೋಳದಂಥ ಹೊಟ್ಟೆ ಉಳ್ಳವ, ಭೀಮ, ಕೈದುಡುಕು-ಕೈಯಲ್ಲಿ ಮುಟ್ಟು, ದಯಾಂಬುಧಿ-ದಯಾ ಸಮುದ್ರ
ಟಿಪ್ಪನೀ (ಕ.ಗ.ಪ)
- ಕೀಚಕನು ತನ್ನನ್ನು ಬಿಡುವುದಿಲ್ಲ ಎಂದು ದ್ರೌಪದಿ ಭೀಮನಿಗೆ ಹೇಳಿದ್ದ ಮಾತು ಇಲ್ಲಿ ನಿಜವಾಗಿದೆ. ಅವನು ಮರುದಿನ ದ್ರೌಪದಿಯ ಬಳಿಗೆ ತಾನೇ ಬಂದು “ರಾಜಸಭೆಯಲ್ಲಿ ನಿನ್ನನ್ನು ಕಾಪಾಡಲು ಯಾರೂ ಇರಲಿಲ್ಲ ಅಲ್ಲವೆ ? ನಿಜವಾಗಿ ವಿರಾಟನು ಹೆಸರಿಗೆ ರಾಜ. ನನ್ನನ್ನು ನೀನು ಸ್ವೀಕರಿಸು” ಎಂದು ಬೇಡಿಕೊಂಡನೆಂದು ವ್ಯಾಸರು ಹೇಳುತ್ತಾರೆ.
- ಭೀಮನು ಕೀಚಕನನ್ನು ಕೊಲ್ಲಲು ಒಪ್ಪಿದ್ದರಿಂದ ದ್ರೌಪದಿ ಈಗ ವೃಕೋದರನ ವಲ್ಲಭೆಯಾಗಿರುವುದು ಸಮಂಜಸವಾಗಿದೆ.
ಮೂಲ ...{Loading}...
ಆ ದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡುಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳು ಯುಗವಾಗಿ ಸವೆದುದು
ನೀ ದಯಾಂಬುಧಿ ಕುಸುಮಶರ ಯಮ
ನಾದನದ ನೀ ಬಲ್ಲೆಯೆಂದನು ಕೀಚಕನು ನಗುಗುತ ॥74॥
೦೭೫ ಕುಸುಮಶರ ಯಮನಹನು ...{Loading}...
ಕುಸುಮಶರ ಯಮನಹನು ಅಮೃತವು
ವಿಷವಹುದು ಬಳಿಕಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರದೆಲೆ ಪಾಪಿ ಕೀಚಕಯೆಂದಳಿಂದುಮುಖಿ ॥75॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಸಿಡುಕು ವ್ಯಂಗ್ಯಗಳು ಬೆರೆತ ಧ್ವನಿಯಲ್ಲಿ “ಕೀಚಕ ! ಪಾಪಿ ! ಕಾಮ ಪೀಡಿತರಾದವರ ಪಾಡು ಇದೇ. ಅವರ ಪಾಲಿಗೆ ಮನ್ಮಥನೇ ಯಮನಂತೆ ಪ್ರಾಣಾಂತಕನಾಗುತ್ತಾನೆ. ಅಮೃತ ಅವರ ಪಾಲಿಗೆ ವಿಷವಾಗುತ್ತದೆ. ತಂಪನೆಯ ಆಲಿಕಲ್ಲುಗಡ್ಡೆಗಳು ಬಿಸಿಬಿಸಿಯಾಗುತ್ತವೆ. ನಂಟರೇ ಇರುವುದಿಲ್ಲ. ಮೆಚ್ಚುತ್ತಿದ್ದವರಿಗೆ ಬೇಡವಾದವರಾಗುತ್ತಾರೆ ಏಕೆಂದರೆ ಅವನ ಸ್ಥಿತಿಗೆ ಕೆರಳಿ ಅವರೆಲ್ಲ ವೈರಿಗಳಾಗುತ್ತಾರೆ. ಅನ್ಯರ ಪತ್ನಿಯನ್ನು ಮೋಹಿಸುವ ದುರಾತ್ಮರನ್ನು ಈ ಭೂಮಿ ಹೊರಲು ಇಷ್ಟಪಡುವುದಿಲ್ಲ” ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಕುಸುಮಶರ-ಮನ್ಮಥ (ಹೂ ಬಾಣವನ್ನು ಆಯುಧವಾಗಿ ಉಳ್ಳವನು) ಆಲಿಕಲು-ಆಲಿಕಲ್ಲು, ಆನೆಯ ಕಲ್ಲು ಎಂದೂ ಹೇಳುತ್ತಾರೆ (ಆನೆಯ ಕಲ್ಮಳೆ) (ತಂಪಾಗಿ ಹರಳುಗಟ್ಟಿದ ಆಲಿಕಲ್ಲುಗಳು ಬಿಸಿಯಾಗುತ್ತವೆ) ಒಸೆದರು-ಪ್ರೀತಿಸಿದವರು, ಒಲ್ಲದರ್ ಅಹರು-ಬೇಡವಾದವರಾಗುತ್ತಾರೆ, ಶಶಿವದನೆ-ಚಂದ್ರನಂತಹ ಮುಖವುಳ್ಳವಳು, ವಸುಧೆ-ಭೂಮಿ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೀಚಕನು ತನ್ನ ವಿರಹವನ್ನು ಹೇಳಿಕೊಳ್ಳುತ್ತ “ವಸಂತ ಪುಷ್ಪದ ಪರಿಮಳದಿಂದ ತಾಡಿತವಾದ ಹಕ್ಕಿಯಂತಾಗಿದ್ದೇನೆ” ಎನ್ನುತ್ತಾನೆ.
ಮೂಲದಲ್ಲಿ ದ್ರೌಪದಿಯು “ಭೀತಾಸ್ಮಿ ಗಂಧರ್ವಾಣಾಂ” ಎಂದು ಹೇಳಿ ನಮ್ಮ ಸಮಾಗಮದ ವಿಷಯವನ್ನು ಯಾರಿಗೂ ತಿಳಿಸದೆ ಏಕಾಕಿಯಾಗಿ ಬರಬೇಕೆಂದು ಹೇಳುತ್ತಾಳೆ.
ಮೂಲ ...{Loading}...
ಕುಸುಮಶರ ಯಮನಹನು ಅಮೃತವು
ವಿಷವಹುದು ಬಳಿಕಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರದೆಲೆ ಪಾಪಿ ಕೀಚಕಯೆಂದಳಿಂದುಮುಖಿ ॥75॥
೦೭೬ ಬಳಿಕ ನಿನ್ನ ...{Loading}...
ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಚವ ತೊಡಿಸಿ ತನ್ನೊಡಲ
ಅಳುಕದೆಸುವ ಮನೋಜನಂಬಿನ
ಹಿಳುಕ ಮುರಿ ಡಿಂಗರಿಗನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ ॥76॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ದ್ರೌಪದಿ, ಇರಲಿ ಈಗ ಬೇಡ. ನಿನ್ನ ಪುರಾಣ ಪ್ರಸಂಗವನ್ನು ಇನ್ನು ಯಾವಾಗಲಾದರೂ ಬಿಡುವಾದಾಗ ಕೇಳಿ ತಿಳಿದುಕೊಳ್ಳುತ್ತೇನೆ. ಆದರೆ ಒಂದು ಬಾರಿ ನಿನ್ನ ಮನೋಹರವಾದ ಕರುಣೆಯಿಂದ ತುಂಬಿದ ಕಡೆಗಣ್ಣ ನೋಟದ ಕವಚವನ್ನು ತೊಡಿಸಿ ಉಪಕಾರ ಮಾಡು. ನನ್ನ ಮೇಲೆ ಹಿಂಜರಿಯದೆ ಬಾಣ ಬಿಡುತ್ತಲೇ ಇರುವ ಮನ್ಮಥನ ಬಾಣದ ಹಿಳುಕನ್ನು (ಹಿಂತುದಿಗೆ ಕಟ್ಟಿರುವ ಪುಕ್ಕ) ಮುರಿದು ಹಾಕು. (ಅಂದರೆ ನನಗೆ ಒಲಿ ಎಂದರ್ಥ) ಆಗ ನಾನು ನಿನ್ನ ಸೇವಕನಾಗುತ್ತೇನೆ” ಎಂದು ಅಳುಕುತ್ತಲೇ ಆ ದುಷ್ಟನು ದ್ರೌಪದಿಗೆ ಹೇಳುತ್ತ ಕೈಮುಗಿದ.
ಪಾಠಾನ್ತರ (ಕ.ಗ.ಪ)
ಹುಳುಕು - ವಾಸ್ತವವಾಗಿ ‘ಹಿಳುಕು’ ಎಂದಿದೆ.
ಕುಮಾರವ್ಯಸ ಭಾರತ ಸಂಗ್ರಹ : ಸಂ: ಎಂ ವಿ.ಸೀ
ಟಿಪ್ಪನೀ (ಕ.ಗ.ಪ)
- ಉಪದೇಶವನ್ನು ಪುರಾಣಶ್ರವಣ, ಧರ್ಮ ಶ್ರವಣ ಎಂದು ರನ್ನ ಕರೆದಿದ್ದಾನೆ. ಉಪದೇಶ ಮಾಡುವಾಗ ಮಾತ್ರ ಎಲ್ಲರೂ ವ್ಯಾಸರು, ಪರಾಶರರು ಎಂಬ ಮಾತು, ಇದೆ (ಪರೋಪ ದೇಶವೇಳಾಯಾಂ ಸರ್ವೇ ವ್ಯಾಸ ಪರಾಶರ:”)
- ಕೀಚಕನು ದ್ರೌಪದಿಯನ್ನು ಕಂಡಾಗಿನಿಂದ ಬರಿಯ ಶೃಂಗಾರದ ಪರಿಭಾಷೆಯನ್ನೇ ಬಳಸಿರುವುದನ್ನು, ಮುಂದೆಯೂ ಬಳಸುವುದನ್ನು, ಗಮನಿಸಬೇಕು. ಕೀಚಕ ದ್ರೌಪದಿಯರಿಬ್ಬರೂ ತೀರ ಎಳೆಯರೇನಲ್ಲ. ಆದುದರಿಂದ ಕೀಚಕ ಬಳಸುವ ಭಾಷೆ ಅವನ ವಯೋಮಾನಕ್ಕೆ ತಕ್ಕುದಲ್ಲ ಎನ್ನಿಸುತ್ತದೆ.
ಮೂಲ ...{Loading}...
ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಚವ ತೊಡಿಸಿ ತನ್ನೊಡಲ
ಅಳುಕದೆಸುವ ಮನೋಜನಂಬಿನ
ಹಿಳುಕ ಮುರಿ ಡಿಂಗರಿಗನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ ॥76॥
೦೭೭ ಅರಿದರಾದೊಡೆ ನಿನ್ನ ...{Loading}...
ಅರಿದರಾದೊಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮರೆಯೊಳಾನೈತಹೆನುಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ ॥77॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಹೇಳಿದಳು. “ಅಯ್ಯಾ! ಕೀಚಕ ! ನನ್ನ ಗಂಡಂದಿರಿಗೆ ಏನಾದರೂ ತಿಳಿದರೆ ನಿನ್ನ ವಂಶವನ್ನೇ ನಿರ್ಮೂಲ ಮಾಡುತ್ತಾರೆ. ಆದುದರಿಂದ ಅಕ್ಕಪಕ್ಕದವರಾರಿಗೂ ಗೊತ್ತಾಗದಂತೆ ರಾತ್ರಿ ಬಂದು ನಾಟ್ಯಾಭ್ಯಾಸ ಮಂದಿರದಲ್ಲಿ ಇರು. ನಿನಗೆ ಆಯುಸ್ಸು ತುಂಬಿದಂತೆ ಕಾಣುತ್ತಿದೆ (ಸಾವು ಬರಲಿದೆ ಎಂದರ್ಥ) ಆ ಕತ್ತಲೆಯ ಮರೆಯಲ್ಲಿ ನಾನು ಬಂದು ಸೇರಿಕೊಳ್ಳುತ್ತೇನೆ. ನನ್ನನ್ನು ಮರೆತು ನೀನು ಸುಮ್ಮನಿರುವಂತೆ ಕಾಣುತ್ತಿಲ್ಲ. ಆದುದರಿಂದ ಆದದ್ದು ಆಗಲಿ, ನೋಡೋಣ”
ಪದಾರ್ಥ (ಕ.ಗ.ಪ)
ತರಿ-ನಿರ್ಮೂಲ ಮಾಡು, ಎನ್ನವರು-ನನ್ನ ಪತಿಗಳು, ಗರುಡಿ-ಅಭ್ಯಾಸದ ಮನೆ, ನಾಟ್ಯಮಂದಿರ, ನೆರೆದುದು-ತುಂಬಿದುದು, ಐತಹೆನು-ಬರುತ್ತೇನೆ.
ಪಾಠಾನ್ತರ (ಕ.ಗ.ಪ)
ಮನೆಯೊಳಾನೈತಹೆನು - ಮರೆಯೊಳಾನೈತಹೆನು
ಕುಮಾರವ್ಯಾಸ ಭಾರತ ಸಂಗ್ರಹ : ಸಂ: ಎಂ ವಿ.ಸೀ ,
ಕನ್ನಡ ಭಾರತ, ಡಾ.ಎ .ವಿ. ಪ್ರಸನ್ನ
ಮೂಲ ...{Loading}...
ಅರಿದರಾದೊಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮರೆಯೊಳಾನೈತಹೆನುಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ ॥77॥
೦೭೮ ಖಳ ಹಸಾದವ ...{Loading}...
ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜ ಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ ॥78॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ಪರಮ ಸಂತೋಷದಿಂದ ಆಯಿತು ಎಂದು ಹಸಾದವನ್ನು ಹಾಕಿ ತನ್ನ ಮನೆಗೆ ಹೋದ. ಸಂಜೆಯಾಯಿತು. ಅಂಬುಜ ಬಾಂಧವ (ತಾವರೆಯ ಮಿತ್ರ) ನಾದ ಸೂರ್ಯನು ಪಶ್ಚಿಮ ಪರ್ವತದ ತಪ್ಪಲ ಕೊಳದಲ್ಲಿದ್ದ ತಾವರೆಯ ಬನಕ್ಕೆ ತೆರಳಿದ. (ಅಂದರೆ ಕತ್ತಲಾಯಿತು) ಈ ಕಡೆ ತಾವರೆಯಂತೆ ಅರಳಿದ ಮುಖದ ದ್ರೌಪದಿಯು ಆ ಕಗ್ಗತ್ತಲೆ ಹರಡಿದ್ದ ಆವರಣದಲ್ಲಿ ತನ್ನ ಕಣ್ಣಿನ ಬೆಳಕೇ ದಾರಿಯನ್ನು ತೋರುತ್ತಿರಲು ಭೀಮನಿದ್ದ ಪಾಕಶಾಲೆಗೆ ಬಂದಳು.
ಪದಾರ್ಥ (ಕ.ಗ.ಪ)
ಖಳ-ದುಷ್ಟ, ಕೀಚಕ, ಹಸಾದವ ಹಾಯ್ಕಿ-ಪ್ರಸಾದ ಎಂದು ಹೇಳುತ್ತ, ಅಂದರೆ ಅಪ್ಪಣೆ ಎನ್ನುತ್ತಾ (ರಾಜರ ಆಸ್ಥಾನದ ಸ್ವಾಮಿಗಳ ಆಲಯದ ಭಾಷೆ ಇದು, ಏನು ಹೇಳಿದರೂ ಪ್ರಸಾದ ಎಂದು ಸ್ವೀಕರಿಸುವ ಪದ್ಧತಿ. ಅರಮನೆಯ ಊಳಿಗದವರದು ತಮ್ಮ ಚಿತ್ತ ಎಂಬರ್ಥ) ಐದಿದ-ಹೋದ, ಅಬುಜಬಾಂಧವ-ತಾವರೆಯ ಬಂಧು, ಸೂರ್ಯ, ಕಂಗಳ ಬೆಳಕು ಬಟ್ಟೆಯ ತೋರೆ-ಇದು ಒಂದು ಕವಿ ಸಮಯ. ದ್ರೌಪದಿಯ ಕಣ್ಣುಗಳು ಮಿಂಚಿನಂತಿದ್ದವಂತೆ. ಆ ಮಿಂಚಿನ ಬೆಳಕಿನಿಂದ ದ್ರೌಪದಿ ಕಗ್ಗತ್ತಲಲ್ಲೂ ದಾರಿಕಂಡುಕೊಳ್ಳುತ್ತಿದ್ದಳು ಎಂದರ್ಥ. ಕಂಗಳ ಬೆಳಕು ತಿಮಿರವ ಕೆಡಿಸೆ (ವಿರಾಟ ಪರ್ವ 3-35) ಎಂಬ ಮಾತಿನ ಅರ್ಥವೂ ಇದೇ. ಬಾಣಸಿನ ಮನೆ-ಪಾಕಶಾಲೆ,
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಪರಮ ಸಂತೋಷದಿಂದ ಮನೆಗೆ ಹಿಂದಿರುಗಿದ ಸಂಗತಿಯಿದೆ. (ಕೀಚಕೋ„ಥ ಗೃಹಂ ಗತ್ವಾ ಭೃಶಂ ಹರ್ಷ ಪರಿಪ್ಲುತ”)
(ಸೂರ್ಯ ಮುಳುಗಿದ ಎಂದರೆ ತಾವರೆ ಮುಚ್ಚಿಕೊಳ್ಳಬೇಕಲ್ಲವೆ ? ಆದರೆ ಇಲ್ಲಿ ದ್ರೌಪದಿಯ ಕಣ್ಣಿನ ತಾವರೆ ಅರಳಿಕೊಂಡಿತು ಎಂಬ ಮಾತಿನ ಸೊಗಸನ್ನು ಪರಿಭಾವಿಸಬೇಕು)
ಮೂಲ ...{Loading}...
ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜ ಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ ॥78॥
೦೭೯ ಭೀಮ ನಿನ್ದಿರು ...{Loading}...
ಭೀಮ ನಿಂದಿರು ನಾಟ್ಯನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸವ ಮಾಡದಿರು ಹೂಡದಿರಲ್ಪ ಬುದ್ಧಿಗಳ
ಕಾಮುಕನನಡೆಗೆಡಹಿ ನಿಜ ಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಘಳಿಯನುಟ್ಟನು ಮಲ್ಲಗಂಟಿನಲಿ ॥79॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಬಳಿ ಬಂದ ದ್ರೌಪದಿಯು, “ಅಯ್ಯಾ ಭೀಮ ! ನಿಲ್ಲು ! ನಾನು ಆ ದುಷ್ಟ ಕೀಚಕನಿಗೆ ನಾಟ್ಯ ಮಂದಿರದ ಬಳಿಗೆ ಬರುವಂತೆ ಹೇಳಿ ಬಂದಿದ್ದೇನೆ. ನೆನಪಿಡು. ನೀನು ಆಲಸ್ಯ ಮಾಡಬೇಡ. ಕುಂಟುನೆವಗಳನ್ನು ಹೇಳುವ ಅಲ್ಪ ಬುದ್ಧಿಯನ್ನು ತೋರಬೇಡ. ಆ ಕಾಮುಕನನ್ನು ಕೆಳಕ್ಕೆ ಕೆಡವಿ(ಕೊಂದು) ನಿನಗೆ ನನ್ನ ಮೇಲಿರುವ ಪ್ರೀತಿಯನ್ನು ತೋರಿಸು” ಎಂದಳು. ಬಲ ಭೀಮನು ನಗುತ್ತಾ ಎದ್ದ. ಮಲ್ಲಗಂಟು ಹಾಕಿದ ವಸ್ತ್ರವ(ಪಂಚೆಯ)ನ್ನು ಉಟ್ಟ.
ಪದಾರ್ಥ (ಕ.ಗ.ಪ)
ತಾಮಸ-ತಡ, ಉದಾಸೀನ, ಛಾನಸ, ಅಡಗೆಡಹಿ-ಕೆಳಗೆ ಬೀಳಿಸಿ, ಘಳಿ - (ಇದಕ್ಕೆ ಕನ್ನಡ ಕನ್ನಡ ನಿಘಂಟಿನಲ್ಲಿ ಕೊಟ್ಟಿರುವ ಅರ್ಥ ಸರಿಹೊಂದಿವುದಿಲ್ಲ. ಕೃಷ್ಣ ಜೋಯಿಸರ ವಿರಾಟಪರ್ವದಲ್ಲಿ ಪಳಿಯನುಟ್ಟನು ಎಂಬ ಪಾಠವಿದೆ. ಪಳಿ ಎಂದರೆ ವಸ್ತ್ರ ಈ ಪಾಠವನ್ನು ಸ್ವೀಕರಿಸಬಹುದು)
(ಅಣ್ಣ ತಮ್ಮಂದಿರ ಮೇಲಿನ ಸಿಟ್ಟಿನಿಂದಾಗಿ ಭೀಮನು ಸಹಾಯಕ್ಕೆ ಬರದೆ ಉಳಿದರೂ ಉಳಿಯಬಹುದು ಎಂಬ ಅನುಮಾನ ದ್ರೌಪದಿಗೆ ಇತ್ತೆಂದು ಕವಿ ಧ್ವನಿಸುತ್ತಾನೆ)
ಪಾಠಾನ್ತರ (ಕ.ಗ.ಪ)
ಘಳಿ - ಪಳಿ
ವಿರಾಟಪರ್ವ - ಮೈ.ವಿ.ವಿ.
ಮೂಲ ...{Loading}...
ಭೀಮ ನಿಂದಿರು ನಾಟ್ಯನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸವ ಮಾಡದಿರು ಹೂಡದಿರಲ್ಪ ಬುದ್ಧಿಗಳ
ಕಾಮುಕನನಡೆಗೆಡಹಿ ನಿಜ ಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಘಳಿಯನುಟ್ಟನು ಮಲ್ಲಗಂಟಿನಲಿ ॥79॥
೦೮೦ ಖಳನ ಮುರಿಯೆನ್ದಬಲೆ ...{Loading}...
ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ ॥80॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಸಂಭ್ರಮದಿಂದ)ದ್ರೌಪದಿಯು ‘ಭೀಮ ಆ ದುಷ್ಟ ಕೀಚಕನನ್ನು ಕೊಲ್ಲು’ ಎಂದು ಹೇಳಿದಳು. ಅವನ ಹಣೆಗೆ ತಿಲಕವನ್ನಿಟ್ಟಳು. ಮಂತ್ರಾಕ್ಷತೆಯನ್ನು ಎರಚಿದಳು. ಸುಗಂಧ ದ್ರವ್ಯವನ್ನು ಲೇಪಿಸಿದಳು. ಹೊಸ ರೀತಿಯಲ್ಲಿ ಅವನ ಜಡೆಯನ್ನು ಬಾಚಿ ಅಲಂಕರಿಸಿದಳು. ಆ ಭುಜಬಲನನ್ನು ಹರಸಿದಳು. ಅನಂತರ ಭೀಮನು ಆ ಕಗ್ಗತ್ತಲೆ ಹರಡಿಕೊಂಡಿದ್ದಾಗ ನಾಟ್ಯ ಮಂದಿರದ ಮಧ್ಯದಲ್ಲಿದ್ದ ರತ್ನ ಖಚಿತ ಮಂಚದ ಮೇಲೆ ಮಲಗಿಕೊಂಡ”
ಪದಾರ್ಥ (ಕ.ಗ.ಪ)
ಖಳ-ದುಷ್ಟ, ನೊಸಲು-ಹಣೆ, ಸೇಸೆ-ಮಂತ್ರಾಕ್ಷತೆ (ಅಕ್ಕಿ ಕಾಳು), ತಿಗುರು-ಸುಗಂಧ ದ್ರವ್ಯ, ಹಿಣಿಲು-ಜಡೆ, ಪವಡಿಸು-ಮಲಗು
(‘ಬಲುಭುಜನ’ ಇದು ಕವಿ ಪ್ರಾಸಕ್ಕಾಗಿ ಮಾಡಿಕೊಂಡಿರುವ ಪ್ರಯೋಗ; ಮಹಾಬಾಹು)
ಮೂಲ ...{Loading}...
ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ ॥80॥
೦೮೧ ಉರಿವ ಮಾರಿಯ ...{Loading}...
ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಹುತಿರುಳೊಬ್ಬನೆ ನಿಜಾಲಯದಿಂದ ಹೊರವಂಟ ॥81॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಂಡದಂಥ ಮಾರಿ (ದ್ರೌಪದಿ)ಯನ್ನು ಪ್ರೇಮಿಸಿದ ಕೀಚಕನು ಅಲಂಕಾರ ಮಾಡಿಕೊಂಡ. ಮಲ್ಲಿಗೆಯ ಮೊಗ್ಗೆಯನ್ನು ಮುಡಿದುಕೊಂಡ. ಸಾದು ಜವಾಜಿ ಕಸ್ತೂರಿಯ ಗಂಧಗಳನ್ನು ಬಳಿದುಕೊಂಡ. ಗಂಡುಡುಗೆಯಲ್ಲಿ ಶೋಭಿಸಿದ. ವಯ್ಯಾರದಿಂದ ಸೆರಗನ್ನು ಕಟ್ಟಿ ಕತ್ತಿಯನ್ನು ತಿರುಗಿಸುತ್ತ ರಾತ್ರಿ ಒಬ್ಬನೇ ತನ್ನ ಮನೆಯಿಂದ ಹೊರಟ.
ಪದಾರ್ಥ (ಕ.ಗ.ಪ)
ಬೇಟ-ಪ್ರೀತಿ, ಉರಿವ ಮಾರಿಯ ಬೇಟದಾತನು-ಕೀಚಕನು, ಉರಿವ ಮಾರಿ. ಉರಿಯುವ ಮಾರಿಯಂತಿದ್ದ ದ್ರೌಪದಿಯನ್ನು ಕೀಚಕ ಪ್ರೀತಿಸಿ…, ತುರುಗು-ತುರುಕು, ಇರಿಸು, ಪೂಸು-ಬಳಿದುಕೋ, ಸಾದು<ಸಾಂದು, ಒಂದು ಸುಗಂಧ ದ್ರವ್ಯ, ಜವಾಜಿ-ಪುನುಗು, ಸುಗಂಧದ್ರವ್ಯ, ಸುರಗಿ-ಕತ್ತಿ, ನಿಜಾಲಯ ತನ್ನ ಮನೆ.
ಮೂಲ ...{Loading}...
ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಹುತಿರುಳೊಬ್ಬನೆ ನಿಜಾಲಯದಿಂದ ಹೊರವಂಟ ॥81॥
೦೮೨ ಕಾಲ ಪಾಶದಲೆಳಸಿಕೊಮ್ಬ ...{Loading}...
ಕಾಲ ಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ ॥82॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮನ ಪಾಶದಲ್ಲಿ ಎಳೆಸಿಕೊಳ್ಳುವವನ ಹಾಗೆ ಆ ಕರಾಳಮತಿ ಕೀಚಕನು ಆ ಪ್ರೇತವನಕ್ಕೆ ಬಂದು ನಾಟ್ಯ ಮಂದಿರವನ್ನು ಹೊಕ್ಕದ್ದು ಹೇಗಿತ್ತು ಗೊತ್ತೆ ? ಯಮನ ಬಾಯನ್ನು ಹೊಕ್ಕಂತೆ ! ಅಲ್ಲದೆ ದಾರಿಯಲ್ಲಿ ಅವನಿಗೆ ಮೇಲಿಂದ ಮೇಲೆ ನೂರಾರು ಅವಶಕುನಗಳು ಆದುವು. ಆದರೆ ಅವುಗಳನ್ನು ಲೆಕ್ಕಿಸದೆ ಸಂತೋಷದಿಂದ ಆ ದುಷ್ಟನು ನಾಟ್ಯ ಮಂದಿರದ ಮಂಚವಿದ್ದೆಡೆಗೆ ತಡವರಿಸಿಕೊಂಡು ಬಂದ.
ಪದಾರ್ಥ (ಕ.ಗ.ಪ)
ಕಾಲ ಪಾಶ-ಯಮನ ಹಗ್ಗ, ಎಳಸಿಕೊಂಬ-ಎಳಸಿಕೊಳ್ಳುವ, ಕರಾಳಮತಿ-ದುಷ್ಟ ಬುದ್ಧಿಯ ಕೀಚಕನು, ಸುಡುಗಾಡಲಿ-ಪರೇತ ವನದಲ್ಲಿ, ಐತಂದು-ಬಂದು, ಕೃತಾಂತ-ಯಮ, ಅವಶಕುನ ಶತ-ನೂರಾರು ಕೆಟ್ಟ ಶಕುನಗಳು, ಸುಮ್ಮಾನ-ಸಂತೋಷ, ಕೇಡಾಳಿ-ಕೇಡುಗ
ಟಿಪ್ಪನೀ (ಕ.ಗ.ಪ)
ಸೈರಂಧ್ರೀ ರೂಪಿಣಂ ಮೂಢೋ ಮೃತ್ಯುಂ ನಾವಬುದ್ಧವಾವಾನ್ ಎಂದು ವ್ಯಾಸಭಾರತ ಹೇಳುತ್ತದೆ (ಸೈರಂಧ್ರಿಯ ರೂಪದಲ್ಲಿದ್ದ ಮೃತ್ಯುವನ್ನು ಆ ಮೂರ್ಖನು ಅರಿಯಲಿಲ್ಲ)
ಮೂಲ ...{Loading}...
ಕಾಲ ಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ ॥82॥
೦೮೩ ವನಜಮುಖಿ ವೀಳೆಯವನನುಲೇ ...{Loading}...
ವನಜಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳ್ ಎಂದ ॥83॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ತನ್ನ ಸಂಗಡವೇ ವೀಳಯವನ್ನು ಅನುಲೇಪನ ಸಾಮಗ್ರಿಗಳನ್ನು ಮಲ್ಲಿಗೆಯ ಹೂವನ್ನು ಆಭರಣಗಳನ್ನು ಶ್ರೇಷ್ಠವಾದ ವಸ್ತ್ರಗಳನ್ನು ತಂದಿದ್ದ. ಅವುಗಳನ್ನೆಲ್ಲ ಅವಳಿಗೆ ಕೊಡುತ್ತಾ ಸುಂದರಿ ನಿನಗೆ ಇಷ್ಟವಾದರೆ ಸ್ವೀಕರಿಸು, ನೋಡು ನಾನು ನಿನಗೆ ಸಮನಾಗಿದ್ದೇನೆ. ನನ್ನಂತೆ ದೇವತೆಗಳಲ್ಲಿ ಕೂಡ ಸುಂದರರಾದವರಿಲ್ಲ. ಇನ್ನು ಮನುಷ್ಯರಲ್ಲಿ ನನಗೆ ಸಮಾನರಾದವರು ಯಾರಿದ್ದಾರೆ ? ಹೇಳು” ಎಂದು ಸೈರಂಧ್ರಿಯನ್ನು ಕೇಳಿದ.
ಪದಾರ್ಥ (ಕ.ಗ.ಪ)
ವನಜಮುಖಿ- ತಾವರೆಯ ಮುಖದವಳು, ವೀಳಯ-ಎಲೆ, ಅನುಲೇಪನ-ಪರಿಮಳ ಸಾಮಗ್ರಿ, ಅರಳು-ಹೂ, ತೊಡಿಗೆ-ಅಲಂಕಾರದ ಆಭರಣ, ಅನುಪಮಾಂಬರ-ಸುಂದರ ವಸ್ತ್ರ, ಮನೋಹರವಹರೆ-ನಿನಗೆ ಸುಂದರವಾಗಿದೆ ಎನಿಸುವುದಾದರೆ, ಇಷ್ಟವಾದರೆ, ಚಿತ್ತೈಸು-ಸ್ವೀಕರಿಸು, ಪಾಸಟಿ-ಸಮ, ಅನಿಮಿಷ-ದೇವತೆ
ಮೂಲ ...{Loading}...
ವನಜಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ ॥83॥
೦೮೪ ಎನ್ನವೋಲ್ ಪುರುಷರಲಿ ...{Loading}...
ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದೊಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ॥84॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೈರಂಧ್ರಿ ! ಪುರುಷ ಸಮೂಹದಲ್ಲಿ ನನ್ನಂಥ ಚೆಲುವರನ್ನು ನೀನು ಈ ಹಿಂದೆ ನೋಡಿಲ್ಲ. ನನ್ನ ಮೇಲಾಣೆ ಮಾಡಿ ಹೇಳುತ್ತಿದ್ದೇನೆ. ಆದರೆ ಈ ಹಿಂದೆ ಕೂಡ ನಿನ್ನಂಥ ರೂಪವತಿಯರು ನನ್ನನ್ನೇ ಬಯಸುತ್ತಿದ್ದರು. ನನ್ನ ರೂಪವನ್ನು ಕಂಡು ಸೋಲದ ಹೆಂಗಸರೇ ಇಲ್ಲ. ನಿನ್ನ ಮೇಲೆ ಆಣೆ.
ಪದಾರ್ಥ (ಕ.ಗ.ಪ)
ಎನ್ನವೋಲ್-ನನ್ನ ಹಾಗೆ, ಮುನ್ನ-ಈ ಹಿಂದೆ
ಟಿಪ್ಪನೀ (ಕ.ಗ.ಪ)
ಕೀಚಕನಿಗೆ ತನ್ನ ದೇಹಸೌಂದರ್ಯದ ಬಗೆಗೆ ಮಿತಿಮೀರಿದ ಅಭಿಮಾನವಿದೆ. ‘ನಿನ್ನಂಥ ರೂಪವತಿಯರು ಎಷ್ಟೋ ಜನ ನನ್ನ ಬಲೆಗೆ ಬಿದ್ದಿದ್ದಾರೆ’ ಎಂದು ಹೇಳುವ ಕೀಚಕನಿಗೆ ನಿಜವಾಗಿ ದ್ರೌಪದಿಯಲ್ಲಿ ಆದರವಿದ್ದಂತಿಲ್ಲ. ಅವಳನ್ನು ವಶಪಡಿಸಿಕೊಂಡು ತನ್ನ ಹಿರಿಮೆಯನ್ನು ಕೊಚ್ಚಿಕೊಳ್ಳುವುದಷ್ಟೇ ಅವನ ಗುರಿಯಾಗಿತ್ತು ಎನ್ನಿಸುತ್ತದೆ.
ಮೂಲ ...{Loading}...
ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದೊಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ॥84॥
೦೮೫ ಎಲವೊ ಕೀಚಕ ...{Loading}...
ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ ॥85॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಹೆಂಗಸಿನ ಧ್ವನಿಯನ್ನು ಅನುಕರಿಸಿ ಅವನಷ್ಟೇ ಜಂಬದ ಉತ್ತರವನ್ನು ಕೊಡುತ್ತಾನೆ. ಅಯ್ಯಾ ಕೀಚಕ ! ನಿನ್ನ ಸಮಾನರಾದ ಚೆಲುವರು ಈ ಲೋಕದಲ್ಲಿಲ್ಲ. ಅದು ಹಾಗಿರಲಿ, ನನ್ನ ವಿಷಯ ಕೇಳು. ನಾನು ಲೋಕದ ಇತರ ಹೆಂಗಸರಂತಲ್ಲ. ನನ್ನ ರೂಪವೇ ಬೇರೆ. (ನನ್ನ ರೂಪವೇ ಬೇರೆ ಎಂದರೆ ನಾನು ಗಂಡಸು ಎಂಬರ್ಥವೂ ಇಲ್ಲಿದೆ !) ಜಗತ್ತಿನಲ್ಲಿ ನನಗೆ ಸಮಾನರಾದವರಿಲ್ಲ. ಈಗ ನಾನೇ ನಿನ್ನನ್ನು ಒಲಿದು ಬಂದಿದ್ದೇನೆ. ನನ್ನ ಸಂಗತಿಯನ್ನು ಆಮೇಲೆ ನೋಡುವೆಯಂತೆ. ಇನ್ನು ಸ್ವಲ್ಪ ಹೊತ್ತಿಗೇ ಅದನ್ನು ತೋರುತ್ತೇನೆ.
ಪದಾರ್ಥ (ಕ.ಗ.ಪ)
ಎಣೆ-ಸಮಾನರಾದವರು,
ಟಿಪ್ಪನೀ (ಕ.ಗ.ಪ)
(ಭೀಮನು ಭಾಷಾಶಾಸ್ತ್ರಜ್ಞನಾಗಿದ್ದನೆಂದು ಜೈನ ಕಾವ್ಯಗಳು ಹೇಳುತ್ತವೆ. ಇಲ್ಲಿ ಅವನು ಧ್ವನಿ ಪರಿವರ್ತನ ಸಮರ್ಥನಾದ ಅನುಕರಣ ಪಟು ಕಲಾವಿದನೆಂಬುದೂ ನಿಜ. ಮುಂದಿನ ಪದ್ಯದಲ್ಲಿಯೂ ಹೆಣ್ಣಿನ ಧ್ವನಿಯಲ್ಲಿ ಮಾತನಾಡುತ್ತ ಕೀಚಕನನ್ನು ಆಡಿಕೊಳ್ಳುತ್ತಾನೆ)
ಮೂಲ ...{Loading}...
ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ ॥85॥
೦೮೬ ಎನಗೆ ಪುರುಷರು ...{Loading}...
ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣು ತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ ॥86॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಣ್ಣಿನ ಧ್ವನಿಯಲ್ಲಿ ಭೀಮ ಕೀಚಕನಿಗೆ ಹೇಳಿದ. “ಕೀಚಕ ! ನನ್ನ ಸೌಂದರ್ಯಕ್ಕೆ ಮರುಳಾಗದ ಗಂಡಸರೇ ಇಲ್ಲ. ನೀನು ನನಗೆ ತಕ್ಕವನಾಗಿದ್ದೀಯೆ. ನಾನು ನಿನ್ನನ್ನು ಮನಸಾರ ಮೆಚ್ಚಿದ್ದೇನೆ. ನಾನೆಂಥ ಹೆಣ್ಣು ಎಂಬುದನ್ನು ಈಗ ನೋಡುವೆಯಂತೆ” ಈ ಮಾತು ಕೇಳಿ ಕೀಚಕ ಸಂತೋಷದಿಂದ ಉಬ್ಬಿ ಹೋದ. ಕತ್ತಲಲ್ಲೆ ಮೈ ತಡವಿದ. ಆದರೆ ದ್ರೌಪದಿಯ ದುಂಡನೆಯ ಸ್ತನಗಳೇ ಕಾಣದಿದ್ದುದರಿಂದ ಹೆದರಿದ. ಮತ್ತೆ ಸಾವರಿಸಿಕೊಂಡು ನಗುತ್ತ ಅವಳಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಪಾಸಟಿ-ಸಮ, ಅನು-ರೀತಿ, ವೃತ್ತಸ್ತನ-ದುಂಡನೆಯ ಮೊಲೆ
ಮೂಲ ...{Loading}...
ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣು ತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ ॥86॥
೦೮೭ ಎಲೆಗೆ ಕಲು ...{Loading}...
ಎಲೆಗೆ ಕಲು ಮೈಯಾದೆ ಕಡುಗೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯ ವೇಷವ ಧರಿಸಿದೆಯೊ ಮೇಣು
ತಿಳುಹೆನಲು ಕೇಳೆಲವೊ ಪರ ಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ ॥87॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳಲ್ಲಿ ಹೆಣ್ಣಿನ ಲಕ್ಷಣವೇ ಕಾಣದೆ ಕೀಚಕನು, “ಏನಿದು ದ್ರೌಪದಿ. ನಿನ್ನ ಮೈ ಒರಟಾಗಿದೆ. ಹೆಣ್ಣಿಗೆ ಇರಬೇಕಾದ ಕೋಮಲತೆ ಎಲ್ಲಿ ? ನಿನ್ನ ಕರ್ಕಶ ಅಂಗಗಳ ಶಕ್ತಿ ಎಲ್ಲಿ ? ಮಾಯಾ ವೇಷವನ್ನು ಧರಿಸಿ ಬಂದಿದ್ದೀಯೋ ಹೇಗೆ ? ಹೇಳು” ಎಂದ. ಆಗ ಭೀಮನು “ಅಯ್ಯಾ ಕೀಚಕ ಕೇಳು, ಪರಸ್ತ್ರೀಯರನ್ನು ಮೋಹಿಸಿದವನಿಗೆ ಅಮೃತ ವಿಷವಾಗುತ್ತದೆ, ಕೋಮಲತೆ ಕರ್ಕಶವಾಗುತ್ತದೆ ಅದು ನಿಜ” ಇಷ್ಟು ಹೇಳಿದ ಭೀಮ ಕೀಚಕನ ತಲೆಗೂದಲಿಗೆ ಕೈ ಹಾಕಿದ.
ಪದಾರ್ಥ (ಕ.ಗ.ಪ)
ಅಳುಪು-ಆಸೆಪಡು, ತುಡುಕು-ಹಿಡಿ
ಮೂಲ ...{Loading}...
ಎಲೆಗೆ ಕಲು ಮೈಯಾದೆ ಕಡುಗೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯ ವೇಷವ ಧರಿಸಿದೆಯೊ ಮೇಣು
ತಿಳುಹೆನಲು ಕೇಳೆಲವೊ ಪರ ಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ ॥87॥
೦೮೮ ಚಪಳೆ ಫಡ ...{Loading}...
ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು ॥88॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೂ ಕೀಚಕನಿಗೆ ಅವಳು ದ್ರೌಪದಿ ಎಂದೇ ಭಾವನೆ. “ದ್ರೌಪದಿ ನೀನು ಚಂಚಲಚಿತ್ತೆ” ಎಂದು ಹೇಳುತ್ತ ಮುಂಗೈಯಿನಿಂದ ಆ ವ್ಯಕ್ತಿಯನ್ನು ಹಿಡಿದುಕೊಂಡ. ಕೂಡಲೇ ಭೀಮನು ಇನ್ನೊಂದು ಭಾಗಕ್ಕೆ ಹಾಯ್ದು ಕೀಚಕನ ತಲೆಗೂದಲನ್ನು ಹಿಡಿದ. ಮಹಾಬಲಶಾಲಿಯಾದ ಕೀಚಕ ಸಂಕಟಪಟ್ಟ. ಅವನಿಗೆ ಅಗಾಧ ಕೋಪವೂ ಬಂದಿತ್ತು. ‘ಇದು ಹೆಂಗಸಲ್ಲ. ಯಾವನೋ ಶತ್ರು ಇವನ ಕರುಳನ್ನು ಕೀಳುತ್ತೇನೆ’ ಎನ್ನುತ್ತ ನುಗ್ಗಿ ಹೆಣಗಾಡಿದ.
ಪದಾರ್ಥ (ಕ.ಗ.ಪ)
ಚಪಳೆ-ಚಂಚಲಚಿತ್ತೆ, ಫಡ- ಒಂದು ಉದ್ಗಾರಶಬ್ದ, ಮರಾಠಿಯಿಂದ ಬಂದದ್ದು. ಕೃಪಣಮತಿ-ತುಚ್ಛವಾದ, ಕ್ಷುದ್ರವಾದ ಬುದ್ಧಿಯುಳ್ಳವನು, ಅಪರಭಾಗ-ಇನ್ನೊಂದು ಪಾಶ್ರ್ವ, ಅಪಸದ-ದುಷ್ಟ, ಖೂಳ
ಮೂಲ ...{Loading}...
ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು ॥88॥
೦೮೯ ತಿವಿದನವನುರವಣಿಸಿ ಮಾರುತಿ ...{Loading}...
ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯ್ದೊಡೆ
ಬವರಿಯಲಿ ಟೊಣದೌಕಿದೊಡೆ ಮಡ ಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ॥89॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ಭೀಮರ ನಡುವೆ ಮಲ್ಲ ಯುದ್ಧ ಆರಂಭವಾಯಿತು. ಕೀಚಕನು ಭೀಮನಿಗೆ ಜೋರಾಗಿ ತಿವಿದ. ಭೀಮ ಅವನ ಮೇಲೆ ಬಿದ್ದು ಹೊಡೆದಾಡಿದ. ಕೀಚಕನು ಅಡಸಿ-ಮೆಟ್ಟಿ ನಿಂತು ಹೊಯ್ದಾಗ ಭೀಮನು ಬವರಿಯಲ್ಲಿ ಟೊಣೆದು ಅವುಕಿದ. (ಅಂದರೆ ಕೀಚಕನನ್ನು ತಿರುಗಿಸಿ ಅವಚಿಕೊಂಡ) ಕೀಚಕನು ಒಳನುಗ್ಗಿದ. ಹೀಗೆ ಜೋಡಿ ಮಂದರ ಪರ್ವತಗಳಂತೆ ಭೀಮ ಕೀಚಕರಿಬ್ಬರೂ ಹೋರಾಡಿದರು. ಸ್ವಲ್ಪದೂರದಲ್ಲೇ ನಿಂತಿದ್ದ ದ್ರೌಪದಿ ಇವರ ಹೋರಾಟದ ಗಲಭೆ ಕೇಳುತ್ತ ನಗುತ್ತಿದ್ದಳು.
ಪದಾರ್ಥ (ಕ.ಗ.ಪ)
ಉರವಣಿಸು-ಸಂಭ್ರಮಪಡು, ಬವರಿ-ಸುತ್ತುವಿಕೆ, ಟೊಣೆ-ಇರಿ, ಚುಚ್ಚು, ಮಡಮುರಿ-ಹಿಂದಕ್ಕೆ ಹೊರಳು, ಸವಡಿ ಮಂದರ-ಜೋಡಿ ಪರ್ವತ, ಹೊಯ್ಲ ಹೋರಟೆ-ಹೊಡೆತದ ಆರ್ಭಟ, ಅಡಸು-ಮೆಟ್ಟಿಕೋ
ಮೂಲ ...{Loading}...
ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯ್ದೊಡೆ
ಬವರಿಯಲಿ ಟೊಣದೌಕಿದೊಡೆ ಮಡ ಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ॥89॥
೦೯೦ ಎರಗಿದೊಡೆ ಕೀಚಕನ ...{Loading}...
ಎರಗಿದೊಡೆ ಕೀಚಕನ ಗಾಯಕೆ
ತರವರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದಲೌಡನೊಡೆಯಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ ॥90॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನ ಜೋರಾಗಿದ್ದ ಹೊಡೆತದ ಗಾಯದಿಂದ ಭೀಮ ಕಕ್ಕಾಬಿಕ್ಕಿಯಾದ. ಹಾಗೇ ಕುಸಿದು ಮೂರ್ಛೆ ಹೋದ. ಕೂಡಲೇ ಮೇಲಕ್ಕೆ ಚಿಮ್ಮಿ ರೋಷದಿಂದ ಅವುಡು ಕಚ್ಚಿದ. ಅನಂತರ ಬರಸಿಡಿಲು ಬೆಟ್ಟದ ಶಿಖರದ ಮೇಲೆ ಅಪ್ಪಳಿಸುವಂತೆ ದುಷ್ಟ ಕೀಚಕನ ನೆತ್ತಿಯನ್ನು ಬಡಿದ. ಭೀಮನ ಬಾಹುಸತ್ವ ಅಂಥದು.
ಪದಾರ್ಥ (ಕ.ಗ.ಪ)
ಎರಗು-ಮೇಲೆ ಬೀಳು, ತರವರಿಸು-ತರಹರಿಸು, ಕಕ್ಕಾಬಿಕ್ಕಿಯಾಗು, ಗೊಂದಲಗೊಳ್ಳು, ಔಡು-ಅವುಡು, ದವಡೆ
ಟಿಪ್ಪನೀ (ಕ.ಗ.ಪ)
ಪಂಪಭಾರತದಲ್ಲಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ಭೀಮನು ಕೀಚಕನ ದೇಹವನ್ನು ನಾಟ್ಯಶಾಲೆಯ ಕಂಬಗಳಿಗೆ ಬಡಿದು ಆಸ್ಫೋಟಿಸಿ ಬೀಸುತ್ತಾನೆ. ಕೀಚಕನ ಬಿಸಿರಕ್ತ ಕೊಬ್ಬು ಮಾಂಸ ಎಲ್ಲವೂ ಸುರಿದುಹೋಗಿ ಕೈಯಲ್ಲಿ ತೊಗಲು ಮಾತ್ರ ಉಳಿಯಿತು.
ಮೂಲ ...{Loading}...
ಎರಗಿದೊಡೆ ಕೀಚಕನ ಗಾಯಕೆ
ತರವರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದಲೌಡನೊಡೆಯಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ ॥90॥
೦೯೧ ಅರಿಯ ಮುಷ್ಟಿಯ ...{Loading}...
ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದುರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳರಾಯ ಹಲು ಮೊರೆದ ॥91॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕೀಚಕನಿಗೆ ಮುಷ್ಟಿಯಿಂದ ಗುದ್ದಿದ. ಕೀಚಕನ ತಲೆ ಬಿರಿಯುವಂತಾಯಿತು. ದೇಹ ನಡುಗಿತು. ಕಣ್ಣುಗಳು ತಿರುಗಿದವು. ಜೋಲಿ ಉರುಳಿದ. ಬಳಲಿಕೆ ಪ್ರಾಣದ ತನಕ ಹರಡಿಕೊಂಡಿತ್ತು. ಆಗ ಕೀಚಕನು ಕೆರಳಿದ ಆನೆ ಸಿಂಹದ ಮೇಲೆ ಆಕ್ರಮಣ ಮಾಡಿ ತಿರುಗುವಂತೆ ಭೀಮಸೇನನ ಪಕ್ಕೆಯನ್ನು ತಿವಿದ. ‘ಉರುಳಿ ಬೀಳು’ ಎಂದು ಕೂಗಿ ಹಲ್ಲನ್ನು ಕಡಿದ.
ಪದಾರ್ಥ (ಕ.ಗ.ಪ)
ಡೆಂಡಣಿಸು-ನಡುಗು, ಅಧೀರವಾಗು, ಜೋಲಿಸು-ಜೋಲಿ ಹೊಡೆ, ಕರಿ-ಆನೆ, ಬರಿ-ಪಕ್ಕೆ
ಮೂಲ ...{Loading}...
ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದುರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳರಾಯ ಹಲು ಮೊರೆದ ॥91॥
೦೯೨ ತಿರುಗಿ ಪೈಸರವೋಗಿ ...{Loading}...
ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬಿರಿದವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ ॥92॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗಿ, ಎರಡು ಹೆಜ್ಜೆ ಹಿಂದಕ್ಕೆ ಇಟ್ಟು ಭೀಮಸೇನನು ಮತ್ತೆ ನುಗ್ಗಿ ಕೀಚಕನನ್ನು ಬಲವಾಗಿ ತಿವಿದ. ಕೀಚಕನ ಎದೆ ಜರ್ಝರಿತವಾಯಿತು. ಅವನ ಕರುಳು ಕಿತ್ತು ಈಚೆಗೆ ಬಂದಿತು. ಕಣ್ಣ ಗುಡ್ಡೆಗಳು ಬಿರಿದುವು. ತಿರುಗಿ ತಿರುಗಿ ಕಣ್ಣುಗಳಿಗೆ ಎನೂ ಕಾಣದಂತಾಗಿ. ಹೊರಳಾಡಿದ ಕೀಚಕನ ಪ್ರಾಣ ಹೋಯಿತು.
ಪದಾರ್ಥ (ಕ.ಗ.ಪ)
ಪೈಸರ-ಹೆಜ್ಜೆ ಹಿಂದಿಡುವಿಕೆ, ಪವನಜ-ಭೀಮ, ಪೇರುರ-ದೊಡ್ಡದಾದ ಎದೆ, ಆಲಿಯ-ಕಣ್ಣಿನ, ಉರುಗು<ಉಱುಗು-ಬಾಡಿಹೋಗು, ಬಾಗು, ಓರೆಯಾಗು, ಹರಣ-ಪ್ರಾಣ
ಮೂಲ ...{Loading}...
ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬಿರಿದವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ ॥92॥
೦೯೩ ತಲೆಯನೆದೆಯೊಳಗಿಕ್ಕಿ ಕೈ ...{Loading}...
ತಲೆಯನೆದೆಯೊಳಗಿಕ್ಕಿ ಕೈ ಕಾ
ಲ್ಗಳನು ಬಸುರೊಳು ಸಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕೀಚಕನ ಹದನ
ಖಳನ ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನನಪ್ಪಿ ಮುಂಡಾಡಿ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ತ ಕೀಚಕನ ತಲೆಯನ್ನು ಭೀಮನು ಎದೆಗೆ ಸಿಕ್ಕಿಸಿದ. ಕೈಕಾಲುಗಳನ್ನು ಹೊಟ್ಟೆಗೆ ಸಿಕ್ಕಿಸಿದ. ಅನಂತರ ದೂರ ಹೋದ. ದ್ರೌಪದಿಯನ್ನು ಕರೆದು ಅವಳಿಗೆ ಕೀಚಕನ ಹೆಣದ ಸ್ಥಿತಿಯನ್ನು ತೋರಿಸಿದ. ಕೀಚಕನ ದೇಹವು ಯಮನ ಕೋಣದಿಂದ ತುಳಿಸಿಕೊಂಡ ಹಾಗೆ ಭೂಮಿಗೆ ಒರಗಿತ್ತು. ಅದನ್ನು ಕಂಡು ದ್ರೌಪದಿಯು ಭೀಮಸೇನನನ್ನು ಅಪ್ಪಿ ಮುದ್ದಾಡಿ ಸಂಭ್ರಮಿಸಿದಳು.
ಪದಾರ್ಥ (ಕ.ಗ.ಪ)
ತೊಲಗು-ಹೋಗು, ಖಳ-ದುಷ್ಟ, ಕಾಲನಕೋಣ-ಯಮನ ವಾಹನವಾದ ಕೋಣ
ಟಿಪ್ಪನೀ (ಕ.ಗ.ಪ)
- ಎಲ್ಲ ಅಂಗಗಳೂ ಉಜ್ಜಲ್ಪಟ್ಟು ಬರಿಯ ಮಾಂಸಪಿಂಡವಾಗಿದ್ದ ಕೀಚಕನ ದೇಹವನ್ನು ಭೀಮನು ದ್ರೌಪದಿಗೆ ತೋರಿಸಿದನೆಂದು ವ್ಯಾಸರು ಹೇಳುತ್ತಾರೆ
“ತಂ ಮಥಿತ ಸರ್ವಾಂಗಂ ಮಾಂಸ ಪಿಂಡೋಪಮಂ ಕೃತಂ
ಕೃಷ್ಣಾಯ ದರ್ಶಯಾಮಾಸ ಭೀಮಸೇನೋ ಮಹಾಬಲಃ” - ಅಲ್ಲಿ ಕತ್ತಲಿದ್ದುದರಿಂದ ಭೀಮನು ತನ್ನ ಎರಡು ಕೈಗಳನ್ನು ಉಜ್ಜಿ ಬೆಂಕಿಯನ್ನು ಸೃಷ್ಟಿಸಿ ಅದರ ಬೆಳಕಿನಲ್ಲಿ ದ್ರೌಪದಿಗೆ ಕೀಚಕನ ಹೆಣವನ್ನು ತೋರಿಸಿದನೆಂದು ವ್ಯಾಸರು ಹೇಳುತ್ತಾರೆ.
- ಹಿಂದೆ ಪರಮೇಶ್ವರನು ಪಶುವಿನ ಅವಯವಗಳನ್ನು ದೇಹದೊಳಗೆ ಸೆಕ್ಕಿಸಿದಂತೆ ಭೀಮನು ಕೀಚಕನ ಕೈಕಾಲು ಕುತ್ತಿಗೆ ತಲೆಗಳನ್ನು ಅವನ ಶರೀರದೊಳಗೆ ಕೂರಿಸಿದನಂತೆ !
ಮೂಲ ...{Loading}...
ತಲೆಯನೆದೆಯೊಳಗಿಕ್ಕಿ ಕೈ ಕಾ
ಲ್ಗಳನು ಬಸುರೊಳು ಸಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕೀಚಕನ ಹದನ
ಖಳನ ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನನಪ್ಪಿ ಮುಂಡಾಡಿ ॥93॥
೦೯೪ ತರುಣಿ ಬಿಡು ...{Loading}...
ತರುಣಿ ಬಿಡು ಸಾರ್ ಎನುತ ಪವನಜ
ಸರಿದನ್ ಅತ್ತಲು ದ್ರುಪದ-ನಂದನೆ
ಕರೆದು ನುಡಿದಳು ಕಾಹಿನ್ ಅವರಿಗೆ ಕೀಚಕನ ಹದನ
ದುರುಳ ಬಲು-ಹಿಂದ್ ಎನ್ನನ್ ಎಳೆದೊಡೆ
ಕೆರಳಿದರು ಗಂಧರ್ವರ್ ಈತಗೆ
ಹರುವ ಕಂಡರು ನೋಡಿಯೆನೆ ಹರಿ-ತಂದರ್ ಅವಳ್ ಒಡನೆ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ! ಸಾಕು ಹೊರಡು ಎಂದು ಹೇಳಿ ಅಪ್ಪುಗೆಯಿಂದ ಬಿಡಿಸಿಕೊಂಡು ಭೀಮನು ಹೊರಟು ಹೋದ. ಈ ಕಡೆ ದ್ರೌಪದಿಯು ನಾಟ್ಯಮಂದಿರದ ಕಾವಲುಗಾರರನ್ನು ಕರೆದು ಕೀಚಕನಿಗಾಗಿರುವ ಸ್ಥಿತಿಯನ್ನು ತೋರಿಸಿ ಹೇಳಿದಳು. “ಆ ದುಷ್ಟ ಕೀಚಕನು ಬಲಾತ್ಕಾರವಾಗಿ ನನ್ನನ್ನು ಎಳೆದುಕೊಂಡು ಹೋದ. ಅದನ್ನು ಕಂಡು ನನ್ನ ಪತಿಗಳಾದ ಗಂಧರ್ವರು ಕೆರಳಿ ಈತನ ಕಥೆಯನ್ನು ಮುಗಿಸಿದರು ನೋಡಿ” ಈ ಮಾತು ಕೇಳಿದ ಕಾವಲ ಭಟರು ಅವಳ ಜತೆಯಲ್ಲೇ ಅವಸರದಿಂದ ನಾಟ್ಯ ಮಂದಿರಕ್ಕೆ ಧಾವಿಸಿದರು.
ಪದಾರ್ಥ (ಕ.ಗ.ಪ)
ಸಾರು-ಹೋಗು, ಕಾಹಿನವರು-ಕಾವಲಿನ ಆಳುಗಳು, ಹರುವು-ಅಂತ್ಯ: ಫಱುವು+++(??)+++-ಪರಿಹಾರ, ಅಂತ್ಯ (ಸಾವು), ಹರಿತರು-ಓಡಿ ಬಾ, ಧಾವಿಸು,
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ದ್ರೌಪದಿಯು ಇದೇ ಮಾತನ್ನೇ ಹೇಳುತ್ತಾಳೆ.
‘ಕೀಚಕೋ„ಯಂ ಹತಃ ಶೇತೇ ಗಂಧರ್ವೈ ಃ ಪತಿಭಿರ್ಮಮ’
ಮೂಲ ...{Loading}...
ತರುಣಿ ಬಿಡು ಸಾರೆನುತ ಪವನಜ
ಸರಿದನತ್ತಲು ದ್ರುಪದನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದರವಳೊಡನೆ ॥94॥
೦೯೫ ಅರಸಿ ಕೈದೀವಿಗೆಯಲವನಿಹ ...{Loading}...
ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ವಿಡುತ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಡುಕಿಕೊಂಡು ಬಂದ ಕಾವಲಿನವರು ಕೈಯಲ್ಲಿ ಕೈದೀವಿಗೆ ತಂದಿದ್ದರು ಅದರ ಬೆಳಕಿನಲ್ಲಿ ಕೀಚಕನ ಹೆಣದ ದುಃಸ್ಥಿತಿಯನ್ನು ಕಂಡರು. ತತ್ಕ್ಷಣ ಓಡಿಹೋಗಿ ಕೀಚಕನ ನೂರೈವರು ಸೋದರರಿಗೆ ಈ ಸುದ್ದಿ ತಿಳಿಸಿದರು. ಅವರು ಈ ಸುದ್ದಿ ತಿಳಿದು ಬಾಯಿ ಬಾಯಿ ಬಡಿದುಕೊಳ್ಳುತ್ತ ಬಂದರು. ಅವರಿಗೆಲ್ಲ ಎದೆಯಲ್ಲಿ ಬೆಂಕಿ ಹೊತ್ತಿದಂತಾಗಿತ್ತು. ಬಿಟ್ಟ ಮಂಡೆಯಲ್ಲಿ ಅವರು ಗೋಳಾಡುತ್ತ ಅಣ್ಣನ ಶವದ ಬಳಿಗೆ ಧಾವಿಸಿದರು.
ಪದಾರ್ಥ (ಕ.ಗ.ಪ)
ಅರಸಿ-ಹುಡುಕಿ, ಕಾಹಿನವದಿರು-ಕಾವಲಭಟರು, ಅನುಜಾತ-ತಮ್ಮ, ಚಡಾಳಿಸು-ಏರು, ಬಿಟ್ಟಮಂಡೆ-ಜುಟ್ಟುಕೂಡ ಕಟ್ಟಿಕೊಳ್ಳದ ಸ್ಥಿತಿ, ಮುಕ್ತ ಕೇಶ
ಮೂಲ ...{Loading}...
ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ವಿಡುತ ॥95॥
೦೯೬ ಆರು ಗತಿಯೆಮಗಕಟ ...{Loading}...
ಆರು ಗತಿಯೆಮಗಕಟ ಕೀಚಕ
ವೀರ ದೇಶಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರಕರ್ಮರು ನಿನ್ನ ಕೊಂದವ
ರಾರು ಹಾ ಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ! ನಮಗೆ ಇನ್ನು ಯಾರುಗತಿ ? ಕೀಚಕ ವೀರ !ನಾವೆಲ್ಲ ಈಗ ಅನಾಥರಾದೆವಲ್ಲ! ಇನ್ನು ಯಾರು ನಮಗೆ ಆಶ್ರಯ?”
ಎನ್ನುತ್ತ ಕೀಚಕನ ದೇಹವನ್ನು ತಬ್ಬಿ ಅಳಲಾರಂಭಿಸಿದರು.“ನಿನ್ನನ್ನು ಕೊಂದ ಕ್ರೂರಕರ್ಮಿಗಳು ಯಾರು? ಹಾ! ಹಾ!” ಎಂದು ಅತ್ತರು. ಆಗ ಅಲ್ಲೇ ಇದ್ದ ದ್ರೌಪದಿ ಮುಗುಳುನಗುತ್ತ ಅವರನ್ನೆಲ್ಲ ನೋಡಿದಳು.
ಪದಾರ್ಥ (ಕ.ಗ.ಪ)
ದೇಶಿಗ-ದಿಕ್ಕಿಲ್ಲದವ, ಅನಾಥ, ಪರಕೀಯ, ವಾರಿಜಾನನೆ-ತಾವರೆಯಂತೆ ಅರಳಿದ ಕಣ್ಣುಳ್ಳವಳು
ಟಿಪ್ಪನೀ (ಕ.ಗ.ಪ)
ಕೀಚಕರ ತಮ್ಮಂದಿರು ಸಂಖ್ಯೆಯಲ್ಲಿ ನೂರೈವರು. ಆದರೆ ಅವರೆಲ್ಲ ವೀರ ಕೀಚಕನ ಅನುಯಾಯಿಗಳು. ಅಣ್ಣ ಸತ್ತ ಸುದ್ದಿ ತಿಳಿದು ಅವರೆಲ್ಲ ಕಂಗಾಲಾದದ್ದು ಏಕೆಂದು ಕುಮಾರವ್ಯಾಸ ಸ್ರಚಿಸಿದ್ದಾನೆ.
ಮೂಲ ...{Loading}...
ಆರು ಗತಿಯೆಮಗಕಟ ಕೀಚಕ
ವೀರ ದೇಶಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರಕರ್ಮರು ನಿನ್ನ ಕೊಂದವ
ರಾರು ಹಾ ಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ ॥96॥
೦೯೭ ಇವಳಿಗೋಸುಗವಳಿದನೇ ಸಹ ...{Loading}...
ಇವಳಿಗೋಸುಗವಳಿದನೇ ಸಹ
ಭವನು ತಪ್ಪೇನೆನುತ ನಡುವಿರು
ಳವದಿರೈತಂದರುಹಿದರು ವೈರಾಟ ರಾಯಂಗೆ
ಅವಳನಾತನ ಕೂಡೆ ಕಳುಹುವೊ
ಡೆವಗೆ ನೇಮವೆಯೆಂದು ಬೀಳ್ಕೊಂ
ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈರಂಧ್ರಿಯನ್ನು ಉಪಕೀಚಕರೆಲ್ಲ ನೋಡಿದರು. ಓಹೋ ಈಕೆಯಿಂದಾಗಿ ನಮ್ಮಣ್ಣ ಸತ್ತನೆ ತಪ್ಪೇನು ? ಎಂದುಕೊಂಡು ಆ ಅಪರಾತ್ರಿಯಲ್ಲಿ ಅವರೆಲ್ಲ ವಿರಾಟರಾಜನ ಬಳಿಗೆ ಹೋಗಿ ಅವನಿಗೆ ಸಂಗತಿಯನ್ನೆಲ್ಲ ತಿಳಿಸಿದರು. ಅನಂತರ ಅಣ್ಣನ ಶವ ಸಂಸ್ಕಾರ ಮಾಡುವಾಗ ಅವಳನ್ನೂ ಬೆಂಕಿಗೆ ಹಾಕುತ್ತೇವೆ. ಅಪ್ಪಣೆ ಕೊಡು ಎಂದು ಕೇಳಿ ಒಪ್ಪಿಸಿ ಮತ್ತೆ ನಾಟ್ಯ ಮಂದಿರದ ಬಳಿಗೆ ಬಂದು ದ್ರೌಪದಿಯನ್ನು ಹಿಡಿದರು.
ಪದಾರ್ಥ (ಕ.ಗ.ಪ)
ಅಳಿ-ಸಾಯಿ, ಸಹಭವ-(ಜತೆಯಲ್ಲಿ ಹುಟ್ಟಿದವ) ಅಣ್ಣ, ನೇಮ-ಅಪ್ಪಣೆ
ಟಿಪ್ಪನೀ (ಕ.ಗ.ಪ)
ಪಂಪಭಾರತದಲ್ಲಿ “ಕೀಚಕನ ಸೋದರರು ಬಂದು”
" ಎಲ್ಲಂ ಈ ಡಾಮರ-ಡಾಕಿನಿಯಿಂದ್ ಆದುದು. ಈಕೆಗಮ್ ಎಮ್ಮಣ್ಣಂಗಂ ಒಂದೆ ವಿಧಿಯಂ ಮಾೞ್ಪೆವು” (ಉಪಕೀಚಕರ ಆರ್ಭಟ 8-79 ವ) ಎಂದು ನಿರ್ಧರಿಸುತ್ತಾರೆ.
ಮೂಲ ...{Loading}...
ಇವಳಿಗೋಸುಗವಳಿದನೇ ಸಹ
ಭವನು ತಪ್ಪೇನೆನುತ ನಡುವಿರು
ಳವದಿರೈತಂದರುಹಿದರು ವೈರಾಟ ರಾಯಂಗೆ
ಅವಳನಾತನ ಕೂಡೆ ಕಳುಹುವೊ
ಡೆವಗೆ ನೇಮವೆಯೆಂದು ಬೀಳ್ಕೊಂ
ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ॥97॥
೦೯೮ ತೆಗೆದು ಮಞ್ಚದಲವನ ...{Loading}...
ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲ ದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳನ್ನು ಅಣ್ಣನ ದೇಹದೊಡನೆ ಸುಡಲು ಅಪ್ಪಣೆ ಪಡೆದಿದ್ದ ಸೋದರರು ಅವಳನ್ನು ಹಿಡಿದು ಮಂಚದಲ್ಲಿ ಕೀಚಕನ ಹೆಣವಿರಿಸಿ ಅದರ ಕಾಲದೆಸೆಯಲ್ಲಿ ದ್ರೌಪದಿಯನ್ನು ಕಟ್ಟಿಹಾಕಿದರು. ನಗುತ್ತಿದ್ದೆಯಲ್ಲವೆ ? ಇನ್ನೊಮ್ಮೆ ನಗು ನೋಡೋಣ, ಎನ್ನುತ್ತಿದ್ದರು. ಗಾಬರಿಗೊಂಡ ದ್ರೌಪದಿ ಉದ್ವೇಗದಿಂದ “ಅಯ್ಯಯ್ಯೋ ! ಪಾಪಿಗಳಿರಾ ! ಎಂದೂ ಮತ್ತೆ ಗಂಧರ್ವಪತಿಗಳಿರಾ” ಎಂದೂ ಕೂಗುತ್ತ ಅಳುತ್ತಿದ್ದಳು.
ಪದಾರ್ಥ (ಕ.ಗ.ಪ)
ಬೆಗಡು-ದಿಗ್ಭ್ರಮೆ, ಅಂಭೋಜ ಮುಖಿ-ತಾವರೆಯ ಮುಖದ (ದ್ರೌಪದಿ)
ಟಿಪ್ಪನೀ (ಕ.ಗ.ಪ)
ಉಪಕೀಚಕರು - ಕೀಚಕನ ಭಾವ ವಿರಾಟರಾಜ ಒಬ್ಬ ಸೂತ ದೊರೆ. ಕ್ಷತ್ರಿಯನಿಗೆ ಬ್ರಾಹ್ಮಣ ಸಂಬಂಧವಾಗಿ ಹುಟ್ಟುವ ಮಕ್ಕಳು ಸೂತರು. ಕೇಕಯನೆಂಬುವನು ಅಂಥ ಪ್ರಸಿದ್ಧ ಸೂತರಾಜರಲ್ಲಿ ಒಬ್ಬ. ಅವನಿಗೆ ಮಾಲವರಾಜ ಕನ್ಯೆ ಮಾಲವಿಯೊಂದಿಗೆ ವಿವಾಹ ಸಂಬಂಧ ಏರ್ಪಟ್ಟು ಕೀಚಕನೂ ಚಿತ್ರಾ ಎಂಬ ಮಗಳು ಹುಟ್ಟಿದರು. ಈ ಚಿತ್ರಾ ಎಂಬುವಳೇ ಸುದೇಷ್ಣೆ ಎಂಬ ಹೆಸರು ಪಡೆದು ವಿರಾಟ ರಾಜನ ಪತ್ನಿಯಾದಳು. ಇವರೆಲ್ಲರ ವಿಚಾರವು ವಿರಾಟಪರ್ವದ ಹದಿನಾರನೆಯ ಅಧ್ಯಾಯದಲ್ಲಿ ಬರುತ್ತದೆ.
ಕಾಲಕ್ರಮದಲ್ಲಿ ಕೀಚಕನಿಗೆ ಒಂದು ನೂರು ಐದು ಜನ ಸೋದರರ ಹುಟ್ಟಿ ಇವರೆಲ್ಲ ಉಪಕೀಚಕರೆನ್ನಿಸಿಕೊಂಡರು. ಅಣ್ಣ ಕೀಚಕನು ವಿರಾಟರಾಯನ ಸೇನಾಪತಿಯೂ ದರ್ಪಿಷ್ಠನೂ ಆಗಿದ್ದುದರ ಜೊತೆಗೆ ಕಾಲೇಜು ರಾಕ್ಷಸರ ಅಂಶೋತ್ವನ್ನನೂ ಆಗಿದ್ದು ಅವನೂ ಅವನ ತಮ್ಮಂದಿರೂ ರಾಕ್ಷಸ ಸ್ವಭಾವವನ್ನು ರೂಢಿಸಿಕೊಂಡವರಾಗಿದ್ದರೆಂದು ವಿರಾಟಪರ್ವದಲ್ಲಿ ಹೇಳಲಾಗಿದೆ.
ದ್ರೌಪದಿಯನ್ನು ಕೆಣಕಿದ ಕೀಚಕನು ನಾಗಾಯುತ ಬಲೀದನೇ (ಯುದ್ಧದಲ್ಲಿ ಹತ್ತುಸಾವಿರ ಆನೆಗಳ ಬಲಹೊಂದಿದ್ದವನು) ಎನ್ನಿಸಿಕೊಂಡ ವೀರನಾಗಿದ್ದರೂ ಮುಖದಲ್ಲಿ ಮುದ್ದೆಯಾಗಿ ಗುರುತೇ ಸಿಕ್ಕದ ವಿರೂಪಿಯಾಗಿ ಸತ್ತನಷ್ಟೇ. ಭೀಮನಿಂದ ಈ ಕೊಲೆ ನಡೆದರೂ ಸೈರಂಧ್ರಿಯ ಪತಿಗಳಾದ ಗಂಧರ್ವರ ಕೃತ್ಯವಿದೆಂದು ಸಾರಲಾಯಿತು. ಅಣ್ಣನ ಕಟ್ಟಾ ಬೆಂಬಲಿಗರಾಗಿದ್ದ ಉಪಕೀಚಕರು ಇದಕ್ಕೆಲ್ಲ ಸೈರಂಧ್ರಿಯೋ ಕಾರಣಳೆಂದು ತಿಳಿದು.
Zಹೃತಾಂ ಶೀಘ್ರಮಸತೀ
ಯತ್ಕೃನೇ ಕೀಚ ಕೋ ಹತಃ
ಅವಳನ್ನು ಕೀಚಕನ ಹೆಣದೊಂದಿಗೇ ಸುಡಲು ಸ್ಮಶಾನಕ್ಕೆ ಹೋಗಲು ನಿರ್ಧರಿಸಿ ವಿರಾಟನ ಅನುಮತಿ ಪಡೆಯಲು ತೆರಳಿದರು. ಕಟ್ಟುವಡೆದ ಸೈರಂಧ್ರಿಯು ಪಾಂಡವರ ಗುಪ್ತನಾಮಗಳನ್ನು ಉಲ್ಲೀಖಿಸಿಃ
‘‘ಜಯೋ ಜಯಂತೋ ವಿಜಯೇ ಜರತ್ಸೇನೋ ಜಯದ್ಬಲಃ
ತೇಮೇ ವಾಚಂ ನಿಜಾನಂತು ಸೂತಪುತ್ರಾ ನಯಂತಿ ಮಾಮ್ ಎಂದು ಮೊರೆಯಿಟ್ಟಳು.
ಆ ಧ್ವನಿ ಕೇಳಿಸಿಕೊಂಡ ಭೀಮನ ಹೆದ್ದಾರಿಯಲ್ಲಿ ಹೋಗದೆ ಪ್ರಹರಿಗೋಡೆಯಿಂದ ಮರದ ಮೇಲೆ ಹತ್ತಿ ಉಪಕೀಚಕರ ಬೆನ್ನಟ್ಟಿ ಹೊರಟ. ಆ ವೇಳೆಗೆ ಅವರು ವಿರಾಟನ ಅನುಮತಿ ಪಡೆದು ದ್ರೌಪದಿಯನ್ನು ಕೀಚಕನ ಜೊತೆಗೆ ಸುಡಲು ಹೊರಟಿದ್ದರು ಭೀಮನ ದೊಡ್ಡ ಮರವೊಂದನ್ನು ಸವರಿ ಎರಡು ಕೈಯಿಂದಲೂ ಎತ್ತಿ ದಂಡ ಹಸ್ತನದ ಯಮನಂತೆ ಹೆಗಲನ್ನೇರಿಸಿಕೊಂಡು ಅವರ ಮೇಲೆ ನುಗ್ಗಿದ. ಸಿಂಹದಂತೆ ನುಗ್ಗಿಬರುತ್ತಿರುವುದು ಇವನನ್ನು ಕಂಡು ಭಯಭೀತರಾದ ಉಪಕೀಚಕರು ಭಯದಿಂದ ಅಡಗಿಕುಳಿತರು. ಸೈರಂಧ್ರಿಯನ್ನು ಬಿಡುಗಡೆ ಮಾಡಿದರೆ ತಮ್ಮ ಜೀವ ಉಳಿದೀತೆಂದು ಅದನ್ನು ಮಾಡಿ ಓಡಿದರು. ಆದರೆ ಭೀಮನು ಹಾಗೆಲ್ಲ ಯಾವ ಕೆಲಸವನ್ನು ಅರ್ಧದಲ್ಲೇ ಬಿಡುವವನಲ್ಲವಲ್ಲ. ಕೈಯಲ್ಲಿ ಭಾರಿಯ ಮರವೂ ಇತ್ತಲ್ಲ. ಅದರ ಪರಿಣಾಮ ಏನು ಗೊತ್ತೆ ವ್ಯಾಸರ ಬಾಯಲ್ಲ್ಲೇ ಕೇಳಬೇಕು;
‘‘ಶತಃ ಪಂಚಾಧಿಕಂ ಭೀಮಃ
ಪ್ರಾಹಿಣನೋದ್ ಯಮಸಾಧನಂ’’
(ಆ ಮರದ ಆಯುದದಿಂದಲೇ ಭೀಮನು ಆ ನೂರೈದು ಉಪಕೀಚಕರನ್ನೂ ಯಮಸದನಕ್ಕೆ ಅಟ್ಟಿದನು)
1 ಉಪ ಕೀಚಕರೆಲ್ಲ ವಿರಾಟನ ಬಳಿ ಹೋಗಿ ಹಿಂದಕ್ಕೆ ಬರುವ ತನಕ ದ್ರೌಪದಿ ಅಲ್ಲೇ ಯಾಕೆ ನಿಂತಿದ್ದಳು ಎಂಬುದು ವಿಚಾರಣೀಯ ಸಂಗತಿಯಾಗಿದೆ. ಉಪಕೀಚಕರು ಮರುದಿವಸವೂ ಗಲಭೆ ಮಾಡಬಹುದು. ಆದುದರಿಂದ ಇಂದೆ ಅವರನ್ನು ಮುಗಿಸಿ ಬಿಡುವುದು ಒಳ್ಳೆಯದೆಂದು ಅವಳು ಈ ಹಂಚಿಕೆ ಮಾಡಿರಬಹುದು. ಭೀಮನೂ ಈ ಒಳಸಚಿಚಿನಲ್ಲಿ ಸೇರಿದ್ದಾನೆ.
2 ಭಾವ ಮೈದುನನ ಶವವನ್ನು ನೋಡಲು ವಿರಾಟನು ಬಾರದಿದ್ದುದಕ್ಕೆ ಗಂಧರ್ವಭಯವೇ ಕಾರಣವಿದ್ದಿರಬಹುದು.
ಮೂಲ ...{Loading}...
ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲ ದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ॥98॥
೦೯೯ ಕೇಳಕಟ ಜಯನೇ ...{Loading}...
ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು
ಬೀಳಿಸುವರಗ್ನಿಯಲಿ ನೀವಕ
ಟೇಳಿ ತಡವೇಕೆನುತ ಮೊರೆಯಿಡೆ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯ ಜಯಂತ ವಿಜಯ ಜಯೋದ್ಭವ ಜಯಸೇನ - ಈ ಐದು ಹೆಸರುಗಳೂ ಅಜ್ಞಾತವಾಸದಲ್ಲಿ ಪಾಂಡವರು ಕ್ರಮವಾಗಿ ಇಟ್ಟುಕೊಂಡಿದ್ದ ಸಂಕೇತನಾಮಗಳು. ಈಗ ದ್ರೌಪದಿ ಅವರನ್ನೆಲ್ಲ ಕರೆಯುತ್ತಿದ್ದಾಳೆ. ನನ್ನನ್ನು ಈ ದುರಾತ್ಮರು ಎಳೆದೊಯ್ದು ಬೆಂಕಿಗೆ ಹಾಕಲಿದ್ದಾರೆ. ನೀವು ತಡಮಾಡದೆ ಬಂದು ನನ್ನನ್ನು ಕಾಪಾಡಿ ಎಂದು ಪ್ರಾರ್ಥಿಸಿದಳು. ಭೀಮನಿಗೆ ತನ್ನ ಹೆಂಡತಿಯ ಅಳುವಿನ ಧ್ವನಿ ಕೇಳಿಸಿತು.
ಪದಾರ್ಥ (ಕ.ಗ.ಪ)
ಆಕ್ರಂದನ-ಅಳು
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಜಯೋ ಜಯಂತೋ ವಿಜಯೋ ಜಯಸೇನೋ ಜಯದ್ಬಲಂ: ಎಂಬ ಅನುಕ್ರಮ ಹೆಸರುಗಳು. ಕುಮಾರವ್ಯಾಸನಲ್ಲಿ ಸ್ವಲ್ಪ ಬದಲಾಗಿದೆ.
ಮೂಲ ...{Loading}...
ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು
ಬೀಳಿಸುವರಗ್ನಿಯಲಿ ನೀವಕ
ಟೇಳಿ ತಡವೇಕೆನುತ ಮೊರೆಯಿಡೆ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ ॥99॥
೧೦೦ ಈ ದುರಾತ್ಮರಿಗಗ್ರಜನ ...{Loading}...
ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲುಬೇಕಲಾ ಕುನ್ನಿಗಳನೀ ಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯ್ದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು “ಈ ದುರಾತ್ಮರಾದ ಉಪಕೀಚಕರಿಗೆ ಅಣ್ಣನಿಗೆ ಬಂದಂತಹ ಸಾವು ಬರಬೇಡವೆ ? ಈ ಕುನ್ನಿಗಳನ್ನು ಅವರ ಅಣ್ಣನ ಬಳಿಗೆ ಹೊಡೆದು ಈಗಲೇ ಕಳುಹಿಸಬೇಕಲ್ಲವೆ ? ಸುಮ್ಮನೆ ಬೈದು ಏನು ಪ್ರಯೋಜನ” ಎಂದು ಹೇಳುತ್ತ ಹಾಯ್ದು ಗದರಿಸುತ್ತ ರುದ್ರಭೂಮಿಗೆ ಹೊರಟನು. ದಾರಿಯಲ್ಲಿ ಒಂದು ದೊಡ್ಡಮರದ ಕೊಂಬೆಯನ್ನು ಕಿತ್ತುಕೊಂಡು ಹೊರಟ.
ಪದಾರ್ಥ (ಕ.ಗ.ಪ)
ಅಗ್ರಜ-ಅಣ್ಣ-ಕೀಚಕ, ಕುನ್ನಿ-ನಾಯಿ, ಮಾರುತಿ-ಭೀಮ (ಮರುತ-ವಾಯು ಪುತ್ರ, ಮಾರುತಿ), ಝಂಕಿಸಿ-ಗದರಿ, ಎಯ್ದು-ಪ್ರವೇಶಿಸು
ಮೂಲ ...{Loading}...
ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲುಬೇಕಲಾ ಕುನ್ನಿಗಳನೀ ಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯ್ದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ ॥100॥
೧೦೧ ಎಲೆಲೆ ಗನ್ಧರ್ವಕನ ...{Loading}...
ಎಲೆಲೆ ಗಂಧರ್ವಕನ ಹೆಂಗುಸ
ಕಳಚಿ ಬಿಡಿರೋ ಪಾಪಿ ಹೋಗಲಿ
ಕೊಲೆಗಡಿಗನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ
ತಲೆಗೆದರಿ ತೆಗೆದೋಡೆ ನಕ್ಕನು
ಕಳಕಳಿಸಿ ಕಲಿಭೀಮನೆಲೆ ನಾ
ಯ್ಗಳಿರ ಹೋದೊಡೆ ಬಿಡುವೆನೇ ಹಾಯೆನುತ ಕೈಕೊಂಡ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯನ್ನು ಕೀಚಕನಿದ್ದ ಮಂಚದಲ್ಲಿ ಕಾಲ ಬಳಿ ಕಟ್ಟಿಹಾಕಿ ಎಳೆದುಕೊಂಡು ಹೋಗುತ್ತಿದ್ದ ಉಪಕೀಚಕರು ಅಲ್ಲಿ ದೈತ್ಯನಂತೆ ನಿಂತಿದ್ದ ಭೀಮನನ್ನು ಕಂಡು ಕತ್ತಲಲ್ಲಿ ಸರಿಯಾಗಿ ಗುರುತಿಸಲಾರದೆ “ಅಯ್ಯಯ್ಯೋ ! ಇವರು ಗಂಧರ್ವರು. ಗಂಧರ್ವ ಪತ್ನಿಯಾದ ಈಕೆಯ ಕಟ್ಟುಗಳನ್ನು ಬಿಚ್ಚಿ ಕಳಿಸಿ ಬಿಡಿ, ಪಾಪಿ ಹೊರಗೆ ಹೋದರೆ ಸಾಕು”. ಎಂದು ಹೇಳುತ್ತಾ ತಾವು ಕೀಚಕನ ಹೆಣವನ್ನು ಅಲ್ಲಿಯೇ ಬಿಟ್ಟು ದೆಸೆದೆಸೆಗೆ ಓಡಲು ಪ್ರಯತ್ನಿಸಿದರು. ಆದರೆ ಭೀಮನು ತಲೆ ಕೆದರಿಕೊಂಡು ಅಟ್ಟಿಸಿಕೊಂಡು ಹೋಗಿ ಜೋರಾಗಿ ನಕ್ಕ. ನಕ್ಕು ಕಲಿಭೀಮನು ಅವರಿಗೆ “ಎಲೆ ಎಲೆ ! ನಾಯಿಗಳಿರಾ ! ನೀವು ಓಡಿದರೆ ನಾನು ಬಿಡುತ್ತೇನೆಯೆ ? ಎಂದು ಹೇಳುತ್ತ ಅಟ್ಟಿಸಿಕೊಂಡು ಹೋದ.
ಟಿಪ್ಪನೀ (ಕ.ಗ.ಪ)
ಪಂಪ : ಭೀಮನು ಆಕ್ರಂದನ ಧ್ವನಿಯನ್ನು ಕೇಳಿ ಉಪಕೀಚಕರನ್ನು ಅಟ್ಟಿಸಿಕೊಂಡು ಬಂದು “ಇಂದು ನಿಮ್ಮ ನಿಷೇಕಂ ನೆರೆದತ್ತು ಸತ್ತಿರಿ” ಎಂದು ಹೇಳುತ್ತಾನೆ
ಮೂಲ ...{Loading}...
ಎಲೆಲೆ ಗಂಧರ್ವಕನ ಹೆಂಗುಸ
ಕಳಚಿ ಬಿಡಿರೋ ಪಾಪಿ ಹೋಗಲಿ
ಕೊಲೆಗಡಿಗನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ
ತಲೆಗೆದರಿ ತೆಗೆದೋಡೆ ನಕ್ಕನು
ಕಳಕಳಿಸಿ ಕಲಿಭೀಮನೆಲೆ ನಾ
ಯ್ಗಳಿರ ಹೋದೊಡೆ ಬಿಡುವೆನೇ ಹಾಯೆನುತ ಕೈಕೊಂಡ ॥101॥
೧೦೨ ತಿರುಹಿದನು ಹೆಮ್ಮರನನವದಿರ ...{Loading}...
ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆ ದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿಯ ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಒಂದು ದೊಡ್ಡಮರದ ಕೊಂಬೆಯನ್ನು ತಂದಿದ್ದನಷ್ಟೆ. ಅದನ್ನು ತಿರುಗಿಸುತ್ತ ಅವರನ್ನೆಲ್ಲ ಬಡಿಯಲಾರಂಭಿಸಿದ. ಪಾಪ ಹೆದರಿ ದಿಕ್ಕು ದಿಕ್ಕಿಗೆ ಕಿರುಚುತ್ತ ಓಡಿದ ಆ ಚಪಲರನ್ನು ಅಟ್ಟಿಸಿಕೊಂಡು ಹೋದ. ಅವರನ್ನೆಲ್ಲ ಚೂರು ಚೂರಾಗಿ ಮಾಡಿದ. ಹೀಗೆ ಆ ನೂರೈವರನ್ನು ಹಿಡಿದು ಬಡಿದು ಕೊಂದು ಅನಂತರ ಮರವನ್ನು ಎಸೆದು ಏನೂ ಆಗದವನಂತೆ ತೆಪ್ಪಗೆ ಮತ್ತೆ ತನ್ನ ಅಡಿಗೆ ಮನೆಗೆ ಹೊಕ್ಕನು.
ಪದಾರ್ಥ (ಕ.ಗ.ಪ)
ತಿರುಹು-ತಿರುಗಿಸು, ಅರೆದು-ಅರೆದುಹಾಕಿ, ಕೊಚ್ಚಿಹಾಕಿ, ನಿಟ್ಟೊರಸು-ಒರಸಿಹಾಕು, ಬರಿಕೈದು-ಸ್ತಬ್ಧರನ್ನಾಗಿ ಮಾಡಿ, ಕುರಿದರಿ-ಕುರಿಯನ್ನು ಕತ್ತರಿಸುವಂತೆ ಕೊಚ್ಚು, ಮಿಣ್ಣನೆ-ತೆಪ್ಪಗೆ, ಏನೂ ಮಾಡದವನಂತೆ
ಮೂಲ ...{Loading}...
ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆ ದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿಯ ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ ॥102॥
೧೦೩ ಸುಳಿಯಲಮ್ಮದು ಪೌರಜನವಿವ ...{Loading}...
ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳಜನ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ದ್ರೌಪದಿಯೂ ಹೊರಟಳು. ಆ ವೇಳೆಗೆ ಜನ ಅಲ್ಲಿ ಘೇರಾಯಿಸಿದ್ದರು. ಅವರು ದೂರದಿಂದ ನೋಡುತ್ತಿದ್ದರೇ ಹೊರತು ಅಲ್ಲಿ ಪ್ರವೇಶಿಸಲು ಹೆದರಿದರು. ಕೀಚಕ, ಉಪಕೀಚಕರ ಸಾವಿನ ವಿಷಯವನ್ನು ಕುರಿತು ಸಂವಾದ ಮಾಡುವುದಕ್ಕೂ ಹೆದರಿ ಸುಮ್ಮನಿದ್ದರು. ಹಾಗೆಯೇ ಸೈರಂಧ್ರಿಯನ್ನು ಅಲುಗಾಡಿಸಲೂ ಅವರಿಗೆ ಹೆದರಿಕೆ, ಅವಳ ಕಡೆ ನೋಡುವುದಕ್ಕೂ ಅವರಿಗೆ ಹೆದರಿಕೆ. ಸುಮ್ಮನೆ ತಮ್ಮ ತಮ್ಮಲ್ಲೇ ಗುಜುಗುಜು ಮಾತಾಡಿಕೊಳ್ಳುತ್ತಿದ್ದರು. ಆದರೆ ನಿರ್ಭಯವಾಗಿ ಆ ಸೈರಂಧ್ರಿ ನಗುನಗುತ್ತ ಅಲ್ಲಿಯ ತಿಳಿಗೊಳದೊಳಗೆ ಪ್ರವೇಶಿಸಿ ಸ್ನಾನ ಮಡಿದಳು. ಅನಂತರ ಬೀದಿಗಳಲ್ಲಿ ಬಂದರೆ ಎಲ್ಲರೂ ಅವಳನ್ನು ನೋಡಿ ಕೈ ಮುಗಿದರು.
ಪದಾರ್ಥ (ಕ.ಗ.ಪ)
ಅಮ್ಮದು-ಆರದೆ, ಸಮರ್ಥವಾಗಿರದೆ, ಇವರಳಿವ-(ಕೀಚಕ-ಉಪಕೀಚಕರ)ಸಾವನ್ನು, ವಚನಿಸು-ಹೇಳು, ಅಲುಕು-ಅಲುಗಾಡಿಸು, ಅತ್ತಿತ್ತ ಚಲಿಸು, ನಳಿನಮುಖಿ-ತಾವರೆ ಮುಖದ ಸೈರಂಧ್ರಿ
ಮೂಲ ...{Loading}...
ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳಜನ ॥103॥
೧೦೪ ಈಕೆಗೋಸುಗವಳಿದನಕಟವಿ ವೇಕಿ ...{Loading}...
ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ ॥104॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ! ಆ ಅವಿವೇಕಿ ಕೀಚಕನು ಈಕೆಯನ್ನು ಕೆಣಕಿ ಸತ್ತನಲ್ಲ !” ಎಂದು ಕೆಲವರು ಹೇಳಿದರೆ ಇನ್ನು ಕೆಲವರು “ನಮಗೇಕೆ ಇದೆಲ್ಲ ಉಸಾಬರಿ, ಶಿವ ಶಿವಾ” ಎಂದರು. ಜನಸಂದಣಿ ಅಪಾರವಾಯಿತು ಮಧ್ಯದಲ್ಲಿ ಈಕೆ ಬರುತ್ತಾ ಪಾಕಶಾಲೆಯ ಬಾಗಿಲ ಬಳಿಯಲ್ಲಿ ಲೋಕೈಕ ವೀರನಾದ ಭೀಮನನ್ನು ಕಂಡಳು.
ಪದಾರ್ಥ (ಕ.ಗ.ಪ)
ಅಳಿ-ಸಾಯಿ, ಅಕಟವಿವೇಕಿ-ಅಕಟಾ+ಅವಿವೇಕಿ, ಬಾಣಸು-ಪಾಕಶಾಲೆ
ಮೂಲ ...{Loading}...
ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ ॥104॥
೧೦೫ ಮುಗುಳು ನಗೆಯಲಿ ...{Loading}...
ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋ ನಮೋಯೆನುತೆ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಳಯಕೆ
ಮುಗುದೆ ಬಂದಳು ಸೂರ್ಯನಡರಿದನುದಯ ಪರ್ವತವ ॥105॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಬಾಗಿಲಲ್ಲಿ ನಿಂತಿದ್ದುದನ್ನು ಕಂಡು ಮುಗುಳು ನಗೆಯನ್ನು ಸೂಸುತ್ತ ದ್ರೌಪದಿಯು ತನ್ನ ಕಣ್ಣಂಚಿನಿಂದಲೇ ಭೀಮನ ಕಡೆಗೆ ನೋಡಿದಳು. ವೀರಭೀಮನನ್ನು ನೋಡಿದವಳೇ ನಾಟಕೀಯವಾಗಿ “ಗಂಧರ್ವ ‘ಪತಿ’ಗೆ ನಮಸ್ಕಾರ ನಮಸ್ಕಾರ ಕೈ ಮುಗಿಯುತ್ತಿದ್ದೇನೆ” ಎಂದು ಹೇಳಿದಳು. ಹರ್ಷ ಉಕ್ಕಿ ಬಂದಿತ್ತು. ರೋಮಾಂಚನಗೊಂಡು ಉತ್ಸಾಹದಿಂದ ತನ್ನ ಮನೆಗೆ ಹೋದಳು. ಆಗ ಬೆಳಗಾಯಿತು. ಸೂರ್ಯನು ಉದಯ ಪರ್ವತವನ್ನು ಏರಿದ್ದ.
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ರೋಮಾಳಿ-ಕೂದಲುಗಳ ಸಮೂಹ, ಗುಡಿ-ಉತ್ಸಾಹ, ಅಡರು-ಏರು
ಟಿಪ್ಪನೀ (ಕ.ಗ.ಪ)
- ದ್ರೌಪದಿಯ ಹಾಸ್ಯ ಪ್ರಜ್ಞೆ ಇಲ್ಲಿ ಮೆಚ್ಚಬೇಕಾದದ್ದು. ಜನರನ್ನು ಲೆಕ್ಕಿಸದೆ ಬಂದ ಅವಳು ಭೀಮನನ್ನು ಗಂಧರ್ವಪತಿಯೊಂದಿಗೆ ಸಮೀಕರಿಸಿದ ಕೌಶಲ ಶ್ಲಾಘನೀಯವಾಗಿದೆ.
- ಮೂಲಭಾರತದಲ್ಲಿ ದ್ರೌಪದಿ ನರ್ತನಶಾಲೆಗೆ ಹೋಗಿ ಅಲ್ಲಿ ದ್ರೌಪದಿ ಅರ್ಜುನರ ನಡುವೆ ನಡೆದ ಮಾತುಕಥೆಗಳ ವಿವರವಿದೆ.
ಮೂಲ ...{Loading}...
ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋ ನಮೋಯೆನುತೆ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಳಯಕೆ
ಮುಗುದೆ ಬಂದಳು ಸೂರ್ಯನಡರಿದನುದಯ ಪರ್ವತವ ॥105॥
೧೦೬ ಊರೊಳಗೆ ಗುಜುಗುಜಿಸಿ ...{Loading}...
ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಧಾನಿಯಲ್ಲೆಲ್ಲ ಗುಜುಗುಜು ಎಂದು ಎಲ್ಲರೂ ಈ ವಿಷಯವನ್ನೇ ಚರ್ಚಿಸುತ್ತಿದ್ದರು. ಈ ಸುದ್ದಿ ಜೋರಾಗಿ ಹರಡಿತು. ಸೇರಿದ ಯಾರ ಬಾಯಲ್ಲಿ ಕೇಳಿದರೂ ಇದೇ ಜಪ. ಆದರೆ ವಿರಾಟನು ದೊಡ್ಡ ಚಿಂತೆಯಲ್ಲಿದ್ದ. (ಪಕ್ಕದ ರಾಜ್ಯಗಳೆಲ್ಲ ಕೀಚಕನಿಗೆ ಹೆದರುತ್ತಿದ್ದುದರಿಂದ ತನ್ನ ರಾಜ್ಯಕ್ಕೆ ಅಪಾಯವಿರಲಿಲ್ಲ. ಈಗ ಏನು ಗತಿ ಎಂಬ ಚಿಂತೆ ಕೂಡ ಅವನದಾಗಿತ್ತು). ಅಲ್ಲದೆ ದ್ರೌಪದಿಯ ಬಗೆಗೆ ಚಿಂತಿಸುತ್ತ “ಇವಳೇನು ಮಾರಿಯೋ ಸೈರಂಧ್ರಿಯೋ” ಎಂದು ಯೋಚಿಸಿ “ಇವಳನ್ನು ಅರಮನೆಯಲ್ಲಿ ಕೆಲಸಕ್ಕೆ ಇರಿಸಿಕೊಳ್ಳಬೇಡ, ಕಳಿಸಿಬಿಡು” ಎಂದು ಸುದೇಷ್ಣೆಗೆ ಆಜ್ಞೆ ಮಾಡಿದ.
ಪದಾರ್ಥ (ಕ.ಗ.ಪ)
ನೆರೆದ ನೆರವಿ-ಸೇರಿದ್ದ ಜನಸಮೂಹ,
ಟಿಪ್ಪನೀ (ಕ.ಗ.ಪ)
ವ್ಯಾಸಭಾರತದಲ್ಲಿ ಕೀಚಕನ ಸಾವಿನ ಸುದ್ದಿ ತಿಳಿದ ವಿರಾಟನು ಗಂಧರ್ವರ ಬಗೆಗೆ ಹೆದರಿ ಸುದೇಷ್ಣೆಯನ್ನು ಕರೆದು ಸೈರಂಧ್ರಿಯನ್ನು ಅರಮನೆಯಿಂದ ಕಳಿಸಿಬಿಡುವಂತೆ ಹೇಳುತ್ತಾನೆ. ಅವಳು ಸೈರಂಧ್ರಿಗೆ ತನ್ನ ಗಂಡನ ಭಯವನ್ನು ತಿಳಿಸಿ
“ಸೈರಂಧ್ರೀ ಗಮ್ಯತಾಂ ಶೀಘ್ರಂ ಯತ್ರಕಾಮಯಸೇ ಗತಿಂ
ರಾಜಾ ಬಿಭೇತಿ ತೇ ಭದ್ರೇ ಗಂಧರ್ವೇಭ್ಯ: ಪರಾಭವಾತ್
ತ್ವಂಚಾಪಿ ತರುಣೀಸುಭ್ರೂ ರೂಪೇಣಾಪ್ರತಿಮೋ ಭುವಿ
ಪುಂಸಾಮಿಷ್ಟಶ್ಚ ವಿಷಯೋ ಗಂಧರ್ವಾಶ್ಚಾತಿ ಕೋಪ ವಾ:”
ಮೂಲ ...{Loading}...
ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ ॥106॥
೧೦೭ ಅಳಲು ಕೈಮಿಗಲಾ ...{Loading}...
ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ನಮ್ಮನೆನಲಿಂತೆಂದಳಿಂದುಮುಖಿ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಸುದೇಷ್ಣೆಗೂ ದುಃಖ ಮಿತಿಮೀರಿತ್ತು. ಅವಳು ಸೈರಂಧ್ರಿಯನ್ನು ಕರೆಸಿದಳು. “ಅಮ್ಮ ! ತಾಯಿ ! ಮಹಾತ್ಮಳು ನೀನು ! ನಾವು ನಿಮಗೆ ತುಂಬ ಹೆದರಿದ್ದೇವೆ. ನಮಸ್ಕಾರ. ನೀವು ಈ ನಗರದಲ್ಲೇ ಇದ್ದರೆ ನಮ್ಮೆಲ್ಲರ ಭೀತಿ ಹೆಚ್ಚಾಗುತ್ತದೆ. ಆದುದರಿಂದ ತಾವು ತಮಗಿಷ್ಟ ಬಂದ ಕಡೆಗೆ ದಯಮಾಡಬಹುದು. ಅಷ್ಟೇ ಅಲ್ಲ, ನಮ್ಮ ಮೇಲೆ ಕೃಪೆಮಾಡಿ ನಮ್ಮನ್ನು ಉಳಿಸಬೇಕು” ಎಂದು ಪ್ರಾರ್ಥಿಸಿದಳು ಆಗ ದ್ರೌಪದಿ ಹೀಗೆ ಹೇಳಿದಳು.
ಪದಾರ್ಥ (ಕ.ಗ.ಪ)
ಅಳಲು-ದುಃಖ, ಕೈಮಿಗು-ಅತಿಶಯವಾಗು, ಹೊಳಲು-ನಗರ, (ರಾಜಧಾನಿ), ಠಾವು-ಜಾಗ, ಬಿಜಯಮಾಡುವುದು-ಪ್ರಯಾಣ ಮಾಡಬಹುದು,
ಪಾಠಾನ್ತರ (ಕ.ಗ.ಪ)
ತಮ್ಮನು - ನಮ್ಮನು
ವಿರಾಟಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಇಲ್ಲಿ ಇದ್ದಕ್ಕಿದ್ದಂತೆ ಸುದೇಷ್ಣೆ ದ್ರೌಪದಿಯನ್ನು ಬಹುವಚನದಿಂದ ಸಂಬೋಧಿಸಿರುವುದನ್ನು ಗಮನಿಸಬೇಕು ಅವಳಿಗೆ ದ್ರೌಪದಿಯ ಬಗೆಗೆ ಹೆದರಿಕೆ ಗೌರವಗಳೆರಡೂ ಜಾಸ್ತಿಯಾಗಿದ್ದರ ಗುರುತು ಇದು.
ಮೂಲ ...{Loading}...
ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ನಮ್ಮನೆನಲಿಂತೆಂದಳಿಂದುಮುಖಿ ॥107॥
೧೦೮ ಎಮ್ಮದೇನಪರಾಧ ದೇವಿಯೆ ...{Loading}...
ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿ ನಡೆದೊಡೆ
ಯೆಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ಧೂರ್ತರು
ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು ॥108॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಸುದೇಷ್ಣೆಗೆ ಹೇಳಿದಳು: “ದೇವಿ ಇದರಲ್ಲಿ ನನ್ನ ತಪ್ಪು ಏನೇನೂ ಇಲ್ಲ. ನಿಮ್ಮ ತಮ್ಮನು ಕ್ರಮತಪ್ಪಿ ನಡೆದುಕೊಂಡುದರಿಂದ ನನ್ನ ಪತಿಗಳು ಆ ದುಷ್ಟರನ್ನೆಲ್ಲ (ಕೀಚಕ ಮತ್ತು ಅವನ ತಮ್ಮಂದಿರನ್ನೆಲ್ಲ) ಕೊಂದು ಹಾಕಿದರು ಅಷ್ಟೇ. ನಾವು ನಿಮ್ಮ ಸೇವೆಗೆಂದು ಬಂದಿದ್ದೇವೆ. ಆದುದರಿಂದ ನಿಮಗೆ ಏನೂ ಅನ್ಯಾಯ ಮಾಡುವುದಿಲ್ಲ. ದುಷ್ಟ ಜನರು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳಲು ಹೋಗಿ ನೀತಿ ಬಾಹಿರರಾಗಿ ತಾವೇ ಹಾಳಾದರು.” ಎಂದಳು.
ಪದಾರ್ಥ (ಕ.ಗ.ಪ)
ಮರಳಿದು-ಮತ್ತೆ, ಓಲೈಸು-ಸೇವಿಸು
ಮೂಲ ...{Loading}...
ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿ ನಡೆದೊಡೆ
ಯೆಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ಧೂರ್ತರು
ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು ॥108॥
೧೦೯ ತಾವು ತಮ್ಮಿನ್ದಳಿದರದು ...{Loading}...
ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು ॥109॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಾಸ್ತವವಾಗಿ ಸುದೇಷ್ಣೆ ಆಕ್ಷೇಪಿಸಿ ಮಾತಾಡಿರಲಿಲ್ಲ. ಸೈರಂಧ್ರಿಯ ಮೇಲೆ ತಪ್ಪನ್ನು ಹೊರಿಸಿರಲಿಲ್ಲ. ಆದರೆ ಸೈರಂಧ್ರಿ ನಡೆದ ಘಟನೆಯನ್ನು ಸಮರ್ಥಿಸಿ ಮಾತಾಡಿದಾಗ.
“ಹೌದು ಸೈರಂಧ್ರಿ ನನ್ನ ತಮ್ಮಂದಿರು ತಾವೇ ನಾಶವಾದರು. ಆ ಮಾತು ಸಾಕು. ನಮಗೆ ನಿಮ್ಮನ್ನು ಕಂಡರೆ ತುಂಬ ಭಯವಿದೆ. ನೀವು ಯಾವುದೇ ತಪ್ಪು ಮಾಡಿಲ್ಲ ನಿಜ. ಆದರೂ ನೀವು ದಯವಿಟ್ಟು ಈ ಊರಿನಲ್ಲಿ ಇರಬೇಡಿ” ಎಂದಳು. ಆಗ ದ್ರೌಪದಿಯು “ಛೆ ! ಛೆ ! ನಾವು ಖಂಡಿತ ಇಲ್ಲಿ ಇರುವವರಲ್ಲ. ಆದರೆ ಇನ್ನು ಹದಿಮೂರು ದಿನ ನಿಮ್ಮ ಸೇವೆಯಲ್ಲಿ ಇರಲು ಬಿಡಿ. ಅಲ್ಲದೆ ನೀವು ಹಿಡಿದು ನೂಕಿದರೂ ನಾವು ಹೋಗುವವರಲ್ಲ. ದೇವಿ ದಯವಿಟ್ಟು ನನ್ನ ಮಾತು ಕೇಳಿ” ಎಂದಳು.
ಪದಾರ್ಥ (ಕ.ಗ.ಪ)
ಅಳಿ-ಸಾಯಿ, ಮುನ್ನಿಹರಲ್ಲ-ಮೊದಲಿಗೆ ನಾನೇ ಇಲ್ಲಿರುವುದಿಲ್ಲ
ಮೂಲ ...{Loading}...
ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು ॥109॥
೧೧೦ ಅಳುಕದಿರಿ ಹದಿಮೂರು ...{Loading}...
ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದುರುಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಸುದೇಷ್ಣೆಗೆ ಹೇಳಿದಳು : ದೇವಿ ಹೆದರಬೇಡಿ. ಹದಿಮೂರೇ ದಿವಸ. ಆ ಅವಧಿ ಕಳೆದ ನಂತರ ನಮಗೆಲ್ಲರಿಗೂ ಲೇಸಾಗುತ್ತದೆ. ದುಷ್ಟರು ಸತ್ತಿರುವುದರಿಂದ ನೀವು ಹೆದರಬೇಕಾಗಿಲ್ಲ. ನಾವು ಜಗಳದ ಮಂದಿಯಲ್ಲ. ನಂಬಿ” ಎಂದು ಹೇಳಿ ತನ್ನ ಮನೆಗೆ ಹೊರಟು ಹೋದಳು. ರಾಜ್ಯದಲ್ಲೆಲ್ಲ ಕೀಚಕನ ಸಾವಿನ ವೃತ್ತಾಂತ ಹರಡಿತು.
ಪದಾರ್ಥ (ಕ.ಗ.ಪ)
ಅಳುಕು-ಹೆದರು, ಹಿಂಜರಿ
ಟಿಪ್ಪನೀ (ಕ.ಗ.ಪ)
- ಹದಿಮೂರು ದಿವಸದ ಗಡುವು ಪಡೆದಿರುವುದನ್ನು ನೋಡಿದರೆ ದ್ರೌಪದಿಯು ಅಧಿಕ ಮಾಸಗಳನ್ನು ಕೂಡ ಸೇರಿಸಿ ಲೆಕ್ಕವಿಟ್ಟಿದ್ದ ಸಂಗತಿ ತಿಳಿಯುತ್ತದೆ. ಮುಂದೆ ಭೀಷ್ಮರೂ ಇದನ್ನೇ ಹೇಳುತ್ತಾರೆ.
ಜ್ಯೋತಿಷ್ಯದ ಲೆಕ್ಕಾಚಾರದಂತೆ 13 ವರ್ಷಗಳಿಗೆ ಒಟ್ಟು 5 ತಿಂಗಳು 12 ದಿನಗಳ ಅಧಿಕಕಾಲ. ಅವಳ ಶಾಸ್ತ್ರಜ್ಞಾನ ವಿವೇಕ ಮೆಚ್ಚಬೇಕಾದದ್ದು - ಹದಿಮೂರು ದಿನ ಮಾತ್ರ ಇರುವುದಾಗಿ ದ್ರೌಪದಿ ಹೇಳಿದಾಗ ವ್ಯಾಸಭಾರತದಲ್ಲಿ ಸುದೇಷ್ಣೆ ದ್ರೌಪದಿಗೆ “ಭದ್ರೆ ! ನಿನ್ನ ಇಷ್ಟವಿದ್ದಷ್ಟು ದಿನ ಇಲ್ಲಿರು. ಆದರೆ ನನ್ನ ಪತಿಯನ್ನು ಮಕ್ಕಳನ್ನು ದಯವಿಟ್ಟು ಕಾಪಾಡು” ಎಂದು ಹೇಳುತ್ತಾಳೆ.
ಮೂಲ ...{Loading}...
ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದುರುಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ॥110॥