೦೦೦ ಸೂ ಕುಸುಮಶರನುರವಣೆಯ ...{Loading}...
ಸೂ. ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಮನ್ಮಥನ ಸಂಭ್ರಮದ ಬಾಣದ ಹೊಡೆತಕ್ಕೆ ಸಿಕ್ಕಿ ಕೀಚಕ ಗಾಯಗೊಂಡ. ತನ್ನ ಮಿತಿಯನ್ನು ತಿಳಿಯದೆ, ವಿನಾಶದ ಪ್ರಮಾಣವನ್ನೇ ಗಮನಿಸದೆ ದ್ರೌಪದಿಯನ್ನು ಕೆಣಕಿದ.
ಪದಾರ್ಥ (ಕ.ಗ.ಪ)
ಕುಸುಮಶರ-ಮನ್ಮಥ, ಉರವಣೆಯ-ಅಬ್ಬರದ, ಸಂಭ್ರಮದ, ತೀವ್ರವಾದ, ಅಸು-ಪ್ರಾಣ, ಶಕ್ತಿ, ತುಡುಕು-ಹಿಡಿ, ಎರಗು, ಆಕ್ರಮಿಸು
ಟಿಪ್ಪನೀ (ಕ.ಗ.ಪ)
ಕೀಚಕ -ಕಾಲಕೇಯ ರಾಕ್ಷಸನೇ ಕೀಚಕನ ಅವತಾರ ತಾಳಿ ಬಂದನೆಂದು ಹೇಳಲಾಗಿದೆ. ಕೀಚಕನು ಸೂತ. ಅಂದರೆ ಕ್ಷತ್ರಿಯನಿಗೆ ಬ್ರಾಹ್ಮಣಿಯಲ್ಲಿ ಹುಟ್ಟಿದವನು. ರಾಜಕನ್ಯೆಯಲ್ಲಿ ಹುಟ್ಟಿದ ಕೇಕಯ ರಾಜನ ಮೊದಲ ಪತ್ನಿ ಮೂಲದ ರಾಜಕನ್ಯೆ. ಇವರ ಮಕ್ಕಳೇ ಸುದೇಷ್ಣೆ ಮತ್ತು ಕೀಚಕರು. ಮುಂದೆ ಸುದೇಷ್ಣೆ ವಿರಾಟನ ರಾಣಿಯಾದಳು. ಇವಳಿಗೆ ಚಿತ್ರಾ ಎಂಬ ಹೆಸರೂ ಇತ್ತು. ವಿರಾಟನ ಮೊದಲ ಪತ್ನಿ ಸುರಥಾ ಎಂಬುವಳು. ಅವಳ ಮಗ ಶ್ವೇತ. ಎರಡನೆಯ ಪತ್ನಿ ಸುದೇಷ್ಣೆಯಲ್ಲಿ ವಿರಾಟನಿಗೆ ಉತ್ತರ, ಉತ್ತರೆ, ಎಂಬ ಮಕ್ಕಳು. ಅಕ್ಕನ ಸಂಗಡ ಬಂದ ಕೀಚಕನು ಮಹಾವೀರ. ವಿರಾಟನ ಸೇನೆ, ಕೋಶ ಎರಡೂ ಕೀಚಕನ ವಶದಲ್ಲಿದ್ದುವು ಇವನ ಸಹಾಯವಿದ್ದುದರಿಂದ ವಿರಾಟನಿಗೆ ಶತ್ರುಭಯವಿರಲಿಲ್ಲ. ಮೇಖಲರು ತ್ರಿಗರ್ತರು ದಶಾರ್ಣರು ಕಶೇರುಕರು ಮಾಲವರು ಯವನರು ಪುಳಿಂದರು ಮೊದಲಾದವರೆಲ್ಲ ಕೀಚಕನಿಗೆ ಹೆದರುತ್ತಿದ್ದರು. ಕೀಚಕ ಹತ್ತುಸಾವಿರ ಆನೆಗಳ ಬಲ ಹೊಂದಿದ್ದವನು. ಕೀಚಕನಿಗೆ 105 ಜನ ಸಹೋದರರಿದ್ದು ಎಲ್ಲರೂ ಕೀಚಕನ ಬೆಂಬಲಿಗರಾಗಿದ್ದರು. (ಕೀಚಕನು ಸುದೇಷ್ಣೆಯ ದೊಡ್ಡಮ್ಮನ ಮಗ ಎಂಬ ಪಾಠವೂ ಉಂಟು) ವ್ಯಾಸರು ಕೀಚಕನ ವಿಷಯವಾಗಿ ಹೇಳುವ ಮಾತನ್ನು ಗಮನಿಸಬೇಕು.
ತೃಣವಾನ್ ಕಾಲಪಾಶೇನ ಕಂಠೇಬದ್ಧ: ಪಶುರ್ಯಥಾ
ನಾವಬುಧ್ಯತ ಮೂಢಾತ್ಮಾ ಮರಣಂ ಸಮುಪಸ್ಥಿತಿಂ
“ಕೊರಳಿಗೆ ಉರುಳುಕಟ್ಟಿದ ಹಸುವಿನಂತೆ ಆ ಮೂಢನು ತನ್ನ ಸಾವನ್ನು ತಂದುಕೊಂಡ”
ಮೂಲ ...{Loading}...
ಸೂ. ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟ ನಗರಿಯಲಿ
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನ ಜನಮೇಜಯನಿಗೆ ಹೇಳುತ್ತಿದ್ದಾರೆ “ರಾಜನೇ ಕೇಳು. ನಿಮ್ಮ ಪೂರ್ವರಾಜರುಗಳಾದ ಪಾಂಡವರು ವಿರಾಟನಗರದಲ್ಲಿ ಯಾರ ಕಣ್ಣಿಗೂ ಬೀಳದಂತೆ ಗುಪ್ತ ಜೀವನ ನಡೆಸುತ್ತಿದ್ದರು. ಹತ್ತು ತಿಂಗಳು ಅಲ್ಲಿ ಕಾಲ ಕಳೆದಿದ್ದರು. ಅನಂತರ ನಡೆದ ವಿಶೇಷ ಘಟನೆಯನ್ನು ಕೇಳು. ನಿನಗಾಗಿ ಅದನ್ನು ವಿಸ್ತಾರವಾಗಿ ವರ್ಣಿಸುತ್ತೇನೆ”.
ಪದಾರ್ಥ (ಕ.ಗ.ಪ)
ಪೂರ್ವ ಪೃಥ್ವೀಪಾಲರು-ಜನಮೇಜಯನ ತಂದೆಯ ಅಜ್ಜ ಅರ್ಜುನ, ಹೀಗೆ ಪಾಂಡವರು ಜನಮೇಜಯನಿಗೆ ಹಿರಿಯ ತಲೆಮಾರಿನ ರಾಜರು. ಗುಪುತ-ಗುಪ್ತ, ಗುಪ್ತ>ಗುಪಿತ. ಇದು ನಡುಗನ್ನಡದ ವೈಶಿಷ್ಟ್ಯ.
ಉದಾ: ರತುನ, ಭಕುತಿ, ಯುಕುತಿ, ಶಬುದ ಇತ್ಯಾದಿ. ಅತಿಶಯೋಕ್ತಿ : ಹೆಚ್ಚಿನ ಮಾತು ಅರುಪು-ತಿಳಿಸು.
ಟಿಪ್ಪನೀ (ಕ.ಗ.ಪ)
ಪಾಂಡವರು ಹತ್ತು ತಿಂಗಳು ಆರಾಮವಾಗಿದ್ದರು. ಸಮುದ್ರದಿಂದ ಪರಿವೃತವಾದ ಭೂಮಿಯ ಪಾಲಕರಾಗಿದ್ದ ಪಾಂಡವರು ವಿರಾಟನಗರದಲ್ಲಿ ದುಃಖಿತರಾಗಿದ್ದರೂ ನೆಮ್ಮದಿಯಿಂದ ಕಾಲಕಳೆಯುತ್ತಿದ್ದರೆಂದು ವ್ಯಾಸರು ಹೇಳುತ್ತಾರೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟ ನಗರಿಯಲಿ
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ॥1॥
೦೦೨ ಆ ವಿರಾಟನ ...{Loading}...
ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕ ವಿಡಂಬವ ಕೇಳು ಭೂಪಾಲ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಜನಮೇಜಯ ! ಆ ವಿರಾಟನ ರಾಜಧಾನಿಯಲ್ಲಿ ಪಾಂಡವರು ತಮ್ಮ ವೈಭವವನ್ನು ಮರೆಮಾಚಿ ಪರಸೇವೆಯಲ್ಲಿ ಕಾಲ ಕಳೆದರು. ಹೀಗೆ ಹತ್ತು ತಿಂಗಳು ಕಾಲ ಸಾಗಿದ್ದಾಗ ರಾವಣನು ಸೀತಾದೇವಿಯ ಮೇಲೆ ಮೋಹಗೊಂಡ ಕಥೆಯಂತೆ, ಕೀಚಕನಿಗೆ ಆದ ತೊಂದರೆಯನ್ನು ಈಗ ವರ್ಣಿಸುತ್ತೇನೆ ಕೇಳು”.
ಪದಾರ್ಥ (ಕ.ಗ.ಪ)
ಸಂಭಾವಿಸಿದ-ಸಂಭವಿಸಿದ, ನಡೆದ (ಪ್ರಾಸಕ್ಕಾಗಿ ಆದ ಬದಲಾವಣೆ) ವಿಡಂಬ-ಕಷ್ಟ, ತೊಂದರೆ, ಅಪಹಾಸ್ಯ, ವಂಚನೆ
ಟಿಪ್ಪನೀ (ಕ.ಗ.ಪ)
ಕೀಚಕನು ದ್ರೌಪದಿಯ ಮೇಲೆ ಮೋಹಗೊಂಡ ಸಂಗತಿಯನ್ನು ವೈಶಂಪಾಯನರು ಸೀತೆಯನ್ನು ಮೋಹಿಸಿದ ರಾವಣನ ಕಥೆಗೆ ಸಮೀಕರಿಸಿದ್ದಾರೆ. ರಾವಣನಂತೆಯೇ ಕೀಚಕನೂ ಪತನ ಹೊಂದುತ್ತಾನೆ ಎಂದು ಧ್ವನಿಸಿದ್ದಾರೆ. ವಿಶ್ರವಸ್ಸಿನ ಮಗನೂ ತ್ರಿಲೋಕಾಧಿಪತಿಯೂ ಆದ ರಾವಣನು ಪಂಚವಟಿಯಲ್ಲಿ ಸೀತೆಯನ್ನು ಮೋಹಿಸಿ ಸರ್ವನಾಶ ತಂದುಕೊಂಡ ರಾಮಾಯಣದ ಕಥೆ ಇಲ್ಲಿ ಸೂಚಿತವಾಗಿದೆ.
ಮೂಲ ...{Loading}...
ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕ ವಿಡಂಬವ ಕೇಳು ಭೂಪಾಲ ॥2॥
೦೦೩ ಒನ್ದು ದಿವಸ ...{Loading}...
ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ದಿನ ಸುದೇಷ್ಣೆಯ ಮಂದಿರಕ್ಕೆ ಅಕ್ಕನನ್ನು ಓಲೈಸಲೆಂದು ಅವಳ ತಮ್ಮ ಕೀಚಕನು ಅಂತಃಪುರಕ್ಕೆ ಬಂದ. ಹಿಂದೆ ಮುಂದೆ ಅಕ್ಕ ಪಕ್ಕ ಮೆರೆಯುತ್ತಿದ್ದ ಸಖಿಯರ ಗುಂಪಿನ ಮಧ್ಯದಲ್ಲಿ ಶೋಭಿಸುವ ಸುದೇಷ್ಣೆಯನ್ನು ಕಂಡು ಆ ಮಹಾವೀರನು ತಂದಿದ್ದ ಕಾಣಿಕೆಯನ್ನು ಒಪ್ಪಿಸಿ ನಮಸ್ಕಾರ ಮಾಡಿದ.
ಪದಾರ್ಥ (ಕ.ಗ.ಪ)
ಓಲೈಸು-ಸೇವೆ ಮಾಡು, ಐತರು-ಬಾ, ಇಕ್ಕೆಲ- ಎರಡು ಪಕ್ಕಗಳಲ್ಲೂ, ಅರವಿಂದವದನೆ-ತಾವರೆಯ ಮುಖದ ಸುದೇಷ್ಣೆ, ಪೊಡಮಡು-ನಮಸ್ಕರಿಸು,
ಮೂಲ ...{Loading}...
ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ॥3॥
೦೦೪ ಅನುಜನನು ತೆಗೆದಪ್ಪಿ ...{Loading}...
ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುದೇಷ್ಣೆ ತಮ್ಮನನ್ನು ಪ್ರೀತಿಯಿಂದ ತಬ್ಬಿಕೊಂಡು ಸ್ವಾಗತಿಸಿದಳು. ಸಿಂಹಾಸನದ ಪಕ್ಕದಲ್ಲೇ ಕುಳ್ಳಿರಿಸಿಕೊಂಡಳು. ಮನಸ್ಸು ತಣಿಯುವ ತನಕ ಅವನ ಬಳಿ ಮೆಚ್ಚಿಕೆಯ ಮಾತನ್ನಾಡಿದಳು. ಕೀಚಕನಿಗೆ ಅಕ್ಕನ ವರ್ತನೆಯಿಂದ ಸಂತೋಷವಾಗಿ ಅವನು ರೋಮಾಂಚನಗೊಂಡ. ಅವಳ ಸತ್ಕಾರವನ್ನು ಸ್ವೀಕರಿಸಿ ಹಾಗೆಯೇ ಸುದೇಷ್ಣೆಯ ಸುತ್ತ ಮುತ್ತಲೂ ಇದ್ದ ಸಖಿಯರ ಗುಂಪಿನ ಕಡೆ ಕಣ್ಣಾಡಿಸಿದ.
ಪದಾರ್ಥ (ಕ.ಗ.ಪ)
ಅನುಜ-ತಮ್ಮ, ತತ್ ಸಹೋದರ-ಆ ತಮ್ಮ, ಕಮಳಾನನೆ-ಕಮಲಮುಖಿ, ಮೇಳ-ಬಳಗ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೂಡ ಹೀಗೆಯೇ ವರ್ಣಿತವಾಗಿದೆ “ತಸ್ಮಿನ್ ವರ್ಷಗತ ಪ್ರಾಯೇ ಕೀಚಕಸ್ತು ಮಹಾಬಲ: ಸೇನಾಪತಿರ್ವಿರಾಟಸ್ಯ ದದರ್ಶ ದ್ರುಪದಾತ್ಮಜಾಂ”.
ಮೂಲ ...{Loading}...
ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ॥4॥
೦೦೫ ಅವರ ಮಧ್ಯದಲಮಲ ...{Loading}...
ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳದ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಖಿಯರ ಸಮೂಹದಲ್ಲಿ ದ್ರೌಪದಿ ಅವನ ಕಣ್ಣಿಗೆ ಬಿದ್ದಳು. ಆ ದ್ರೌಪದಿಯು ನಕ್ಷತ್ರ ಮಾಲಿಕೆಯಲ್ಲಿ ರೋಹಿಣಿಯಂತೆಯೂ ದೇವ ಕನ್ಯೆಯರಲ್ಲಿ ಊರ್ವಶಿಯಂತೆಯೂ ನದಿಗಳಲ್ಲಿ ಗಂಗಾನದಿಯಂತೆಯೂ ಕಾಣಿಸಿದಳು. ಅವಳ ದೇಹದ ಪರಿಮಳವು ವ್ಯಾಪಿಸಿದ್ದರಿಂದ ಅವಳ ಸುತ್ತ ದುಂಬಿಗಳು ಝೇಂಕರಿಸುತ್ತಿದ್ದವು. ಆ ಝೇಂಕಾರ ಧ್ವನಿಯನ್ನು ಕೇಳುತ್ತ ಕೀಚಕನು ದ್ರೌಪದಿಯನ್ನು ಕಂಡ.
ಪದಾರ್ಥ (ಕ.ಗ.ಪ)
ಅಮಲ-ಶುದ್ಧವಾದ, ತಾರಾನಿವಹ-ನಕ್ಷತ್ರರಾಶಿ, ಜಾಹ್ನವಿ-ಗಂಗೆ (ಜುಹ್ನು ಮಹರ್ಷಿಯ ಕಿವಿಯಿಂದ ಬಂದವಳು), ಪಸರ-ಹರಡುವಿಕೆ,
ಟಿಪ್ಪನೀ (ಕ.ಗ.ಪ)
- ರೋಹಿಣಿ - ದಕ್ಷ ಪ್ರಜಾಪತಿಯ 27 ಮಕ್ಕಳಲ್ಲಿ ಒಬ್ಬಳು. ಎಲ್ಲರನ್ನೂ ದಕ್ಷನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದ್ದ. ಆದರೆ ಅವಳು ಮಹಾ ರೂಪವತಿಯಾಗಿದ್ದುದರಿಂದ ಚಂದ್ರನು ಉಳಿದವರಿಗಿಂತ ಹೆಚ್ಚಾಗಿ ರೋಹಿಣಿಯನ್ನು ಮೆಚ್ಚಿ ಆಕ್ಷೇಪಣೆಗೂ ಗುರಿಯಾಗಿದ್ದನಂತೆ.
- ಊರ್ವಶಿ ಉರ್ವಶಿ ನರ-ನಾರಾಯಣರು ತಮ್ಮ ತೊಡೆಯ ಕೂದಲಿನಿಂದ ಸೃಜಿಸಿದ ರೂಪವತಿ. ನರ-ನಾರಾಯಣರ ತಪಸ್ಸನ್ನು ಕೆಡಿಸಲು ಅಪ್ಸರೆಯರ ಸೇನೆಯೊಂದಿಗೆ ಇಂದ್ರ ಬಂದಾಗ, ನಕ್ಕು ನರ-ನಾರಾಯಣರು ಈಕೆಯನ್ನು ಸೃಷ್ಟಿಸಿ ಇಂದ್ರನಿಗೆ ಕೊಟ್ಟಿದ್ದರು.
ಮೂಲ ...{Loading}...
ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳದ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ॥5॥
೦೦೬ ಮೊದಲೊಳವನವಳಙ್ಗವಟ್ಟವ ನೊದವಿ ...{Loading}...
ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟವು ಕೀಳಲರಿದಾಯ್ತಾಲಿಗಳನಲುಗಿ
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ (ಸೈರಂಧ್ರಿ) ದೇಹ ಸೌಂದರ್ಯವನ್ನು ಮೊದಲು ನೋಡಿದ ಕೂಡಲೇ ಅವನ ಕಣ್ಣಾಲಿಗಳು ಗಾಢವಾಗಿ ಅವಳಲ್ಲಿಯೇ ನಟ್ಟು ಕೊಂಡವು. ದೃಷ್ಟಿಯನ್ನು ಕೀಳಲು ಎಷ್ಟು ಪ್ರಯತ್ನಿಸಿದರೂ ಕೀಚಕನಿಗೆ ಸಾಧ್ಯವಾಗಲಿಲ್ಲ. ಮನ್ಮಥ ಬಾಧೆ ಹೆಚ್ಚಾಯಿತು. ಅವನ ಹೂಬಾಣಗಳು ಕೀಚಕನ ಎದೆಗೆ ತಾಕಿದುವು. ಶಿವಶಿವಾ ! ಒಂದು ನಿಮಿಷದಲ್ಲೇ ಅವನು ನಡುಗುತ್ತ ಪರವಶನಾಗಿಬಿಟ್ಟ. ಮೂರ್ಛೆಗೆ ಸಂದಂತೆ ಆದ. (ಅವನು ಅವಳ ಅಂಗವಟ್ಟವ ಎಂದು ಬಿಡಿಸಿಕೊಳ್ಳಬೇಕು)
ಪದಾರ್ಥ (ಕ.ಗ.ಪ)
ಅಂಗವಟ್ಟ-ದೇಹಸೌಂದರ್ಯ, ಮೈಕಟ್ಟು, ಒದವು-(ಒದವು ಸಮೃದ್ಧೌ (ಕೇಶಿರಾಜ) ಸಮೃದ್ಧವಾಗಿ, ಅರಿದು-ಕಷ್ಟ, ಅಸಾಧ್ಯ, ಮಸೆದೋರು-ಉರಿಕಾಣಿಸು, ಧಗೆ ಉಂಟು ಮಾಡು (ಮಸೆ-ಉಜ್ಜು) ಹಮ್ಮೈಸು-ಮೂರ್ಛೆ ಹೋಗು, ಸಂಭ್ರಮಪಡು
ಟಿಪ್ಪನೀ (ಕ.ಗ.ಪ)
- ದ್ರೌಪದಿಯು ಕೀಚಕನ ಕಣ್ಣಿಗೆ ಬಿದ್ದದ್ದು ಕಾಡಿನಲ್ಲಿ ನರಿಯು ಸಿಂಹದ ಎದುರು ನಿಂತಂತಾಯಿತು ಎಂದು ವ್ಯಾಸರು ಹೇಳುತ್ತಾರೆ (ಮೃಗೇಂದ್ರ ಕನ್ಯಾಂ ಇವ ಜಂಬುಕೋ ವನೇ)
- ಕೀಚಕನ ಪ್ರಣಯ ವಿಕಾರವನ್ನು ಹತ್ತು ಪದ್ಯಗಳಲ್ಲಿ ವಿವರಿಸಲು ಹೋಗಿರುವ ಕುಮಾರವ್ಯಾಸನು ಕ್ಲೀಷೆ, ಪುನರುಕ್ತಿ, ಸಾಮಾನ್ಯೋಕ್ತಿಗಳ ಮೊರೆ ಹೊಕ್ಕಿದ್ದಾನೆ.
ಮೂಲ ...{Loading}...
ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟವು ಕೀಳಲರಿದಾಯ್ತಾಲಿಗಳನಲುಗಿ
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ॥6॥
೦೦೭ ನಿನ್ದು ನೋಡಿದ ...{Loading}...
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆಯೇ ನಿಂತು ದ್ರೌಪದಿಯ ಮುಖದ ಅಂದವನ್ನು ನೋಡಿ ನೊಂದವನಂತೆ ಬಾಯಿಬಿಟ್ಟ. ಆಗ ಮನ್ಮಥ ಅದಕ್ಕೇ ಕಾದಿದ್ದವನಂತೆ ಬಾಣವನ್ನು ಬಿಟ್ಟನು. ಕೀಚಕನಿಗೆ ಬೆರಗೋ ಬೆರಗು. “ಈ ಸುಂದರಿ ಇಂದು ನನ್ನ ಮನಸ್ಸನ್ನು ಬಂಧಿಸಿದ್ದಾಳೆ. ಇವಳು ಯಾರಿರಬಹುದು” ಎಂದು ಯೋಚಿಸುತ್ತಾ ಕೆನ್ನೆಯ ಮೇಲೆ ಕೈಇಟ್ಟುಕೊಂಡ.
ಪದಾರ್ಥ (ಕ.ಗ.ಪ)
ಮೊಗದ-ಮುಖದ, ಎಚ್ಚು-ಬಾಣ ಬಿಡು, ಕದಪು-ಕೆನ್ನೆ, ತಳೆ-ಬಂಧಿಸು, ಕಟ್ಟಿಹಾಕು.
ಟಿಪ್ಪನೀ (ಕ.ಗ.ಪ)
ಮನ್ಮಥನು ಇಂಥ ಸಮಯವನ್ನು ಕಾಯುತ್ತ ಪ್ರೇಮಿಯ ಮೇಲೆ ಬಾಣ ಬಿಡುತ್ತಿದ್ದ. ಕಾಳಿದಾಸನ ಕುಮಾರಸಂಭವದಲ್ಲಿ ಬರುವ ವರ್ಣನೆಯನ್ನು ನೆನಪಿಸಿಕೊಳ್ಳಬಹುದು.
ಮೂಲ ...{Loading}...
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ॥7॥
೦೦೮ ತಿಳಿಯಿವಳು ಮೂಜಗವ ...{Loading}...
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯನ್ನು ನೋಡಿದ ಕೀಚಕನು “ಇವಳು ಯಾರು ? ಮೂರು ಲೋಕಗಳನ್ನೂ ಮೋಹಿಸುವ ತಿಲಕವೋ, ಕಾಮನಿಗೆ ಎದುರಾಗಿ ಯುದ್ಧ (ಸ್ಪರ್ಧೆ) ಮಾಡಲು ನಿಂತ ಸಾಹಸಿಯೋ ಅಥವಾ ಮನ್ಮಥನ ಕೊಬ್ಬಿದ ಆನೆಯೋ ? ಈ ಸುಂದರಿ ಯಾರ ಹೆಂಡತಿ?” ಎಂದು ಮೋಹದಿಂದ ಅವಳ ಕಡೆ ದೃಷ್ಟಿ ಹರಿಸುತ್ತಿದ್ದ.
ಪದಾರ್ಥ (ಕ.ಗ.ಪ)
ಕಳನ ಭಾಷೆಗೆ ನಿಂದ (ಮನ್ಮಥನೆದುರು) ಹೋರಾಡಲು ನಿಂತ ಸಾಹಸಿಯೇ (ಅಂದರೆ ಮನ್ಮಥನ ಮೇಲೆ ಪಂಥಹೂಡಿ ಸ್ಪರ್ಧೆಗೆ ನಿಂತ ಸಾಹಸಿಯೇ), ಮಾಸಾಳು-ಸಾಹಸಿ, ಕಂದರ್ಪ-ಮನ್ಮಥ, ಕೂರಲಗು-ಕತ್ತಿಯ ಹರಿತವಾದ ಅಂಚು, ನಳಿನಮುಖಿ-ತಾವರೆಯಂಥ ಮುಖವುಳ್ಳವಳು.
ಟಿಪ್ಪನೀ (ಕ.ಗ.ಪ)
ಕಾಮಂಗೆ ಕಟ್ಟಿದ ಕಳನ ಭಾಷೆಗೆ ನಿಂದ ಮಾಸಾಳು…. ಮನ್ಮಥನ ಮೇಲೆ ಸ್ಪರ್ಧಿಸಿ ಯುದ್ಧದ ಪ್ರತಿಜ್ಞೆ ಮಾಡಿ ನಿಂದ ಸಾಹಸಿ (ಅಂದರೆ ಮಹಾರೂಪವತಿ).
ಮೂಲ ...{Loading}...
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ॥8॥
೦೦೯ ಜಗವ ಕೆಡಹಲು ...{Loading}...
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೋಕವನ್ನು ವಶಪಡಿಸಿಕೊಳ್ಳಲು ಪುಷ್ಪ ಬಾಣನಾದ ಮನ್ಮಥನು ಬಿಗಿದ ಬಲೆಯಲ್ಲವೇ ಇವಳು ? ಯೋಗಿಗಳನ್ನು, ಯತಿಗಳನ್ನು ವಶಪಡಿಸಿಕೊಳ್ಳಲು ಮನ್ಮಥನು ಉಜ್ಜಿ ಸಿದ್ಧಪಡಿಸಿಟ್ಟ ಹರಿತವಾದ ಆಯುಧವಲ್ಲವೇ ಇವಳು?” ಎಂದುಕೊಂಡು ಕೀಚಕನು ಮುಗ್ಧನಾಗಿ ನಿಂತ. ಕಾಮನ ಬಾಣಗಳು ಅವನ ಎದೆಗೆ ಬಲವಾಗಿ ನಾಟಿಕೊಂಡವು. ಅವಳ ಮೇಲೆ ಇರಿಸಿದ ದೃಷ್ಟಿಯನ್ನು ತೆಗೆಯಲಾರದೆ ಮನಸೋತ ಕೀಚಕನು ಆಕೆಯನ್ನು ವಶಪಡಿಸಿಕೊಳ್ಳಬೇಕೆಂದು ಪಾಪಕರ್ಮದ ಚಿಂತನೆ ಮಾಡಿದ.
ಪದಾರ್ಥ (ಕ.ಗ.ಪ)
ಜಲಜ ವಿಶಿಖ-ಪುಷ್ಪ ಬಾಣ (ಮನ್ಮಥ), ಎಸು-ಬಾಣ ಬಿಡು, ಕೂರಲಗು-ಹರಿತವಾದ ಕತ್ತಿಯ ಅಂಚು, ಮುಗುದ-ಮುಗ್ಧ, ಅಂಬು-ಬಾಣ
ಟಿಪ್ಪನೀ (ಕ.ಗ.ಪ)
ಕೀಚಕ - ಕಾಲೇಯರೆಂಬ ರಾಕ್ಷಸರ ಹಿರಿಯನಾದ ಬಾಣನೆಂಬ ರಾಕ್ಷಸನೇ ಕೀಚಕನಾಗಿ ಹುಟ್ಟಿದನೆಂದು ವಿರಾಟಪರ್ವದಲ್ಲಿ ಹೇಳಲಾಗಿದೆ. ಇವನು ಕೇಕಯರಾಜನ ಮಗ. ಇವನ ತಂಗಿ ಸುದೇಷ್ಣೆ ವಿರಾಟನನ್ನು ಮದುವೆಯಾದಳು. ಸೋದರಿಯ ಮೇಲೆ ವಿಶ್ವಾಸವುಳ್ಳ ಈತನೂ ವಿರಾಟನಗರದಲ್ಲೇ ನೆಲಸಿದ. ರಾಜ್ಯದ
ಮೂಲ ...{Loading}...
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ॥9॥
೦೧೦ ಸೂರೆವೋಯಿತು ಚಿತ್ತ ...{Loading}...
ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನ ಅಂತರಂಗವು ಸೂರೆಹೋಯಿತು. ಅವನ ಕಣ್ಣುಗಳು ಅವಳಿಗೆ ಮಾರುಹೋದವು. ಆ ದುಷ್ಟನ ಧೈರ್ಯ ಕಳಚಿಹೋಯಿತು. ಅವನ ಅಂತರಂಗ ಕಳವಳದ ನೆಲೆಮನೆಯಾಯಿತು. ಮುನ್ನುಗ್ಗಿ ಬರುವ ಮನ್ಮಥನ ಬಾಣದಿಂದಾಗಿ ಅವನ ಹೃದಯದಲ್ಲಿ ಪೊಟರೆ ಬಿದ್ದಂತಾಗಿತ್ತು. ಹೀಗೆ ನನ್ನ ಕಣ್ಣುಗಳನ್ನು ಇರಿಯುವಂಥ ಸುಂದರಿ ಯಾರಿವಳು ? ಎಂದುಕೊಂಡು ಕೀಚಕನು ಗೊಂದಲಕ್ಕೆ ಈಡಾದ.
ಪದಾರ್ಥ (ಕ.ಗ.ಪ)
ಸೂರೆವೋಗು-ದಾಳಿಗೆ ಒಳಗಾಗು, ಅಂಗಜ-ಮನ್ಮಥ, ಡೋರು-ಡೊಗರೆ, ಪೊಟರೆ, ಕಣ್ಣಿರಿಗಾರೆ-ಕಣ್ಣು ಇರಿಗಾರೆ-ಕಣ್ಣನ್ನು ಇರಿಯುವಂಥವಳು, ಗಜಬಜಿಸು-ಚಡಪಡಿಸು, ಸಂಭ್ರಮಿಸು
ಟಿಪ್ಪನೀ (ಕ.ಗ.ಪ)
ಒಂದೇ ಭಾವವನ್ನು ಏಕತಾನವಾಗಿ ಪುನರುಚ್ಚರಿಸುತ್ತಿದ್ದಾನೆ ಕವಿ.
ಮೂಲ ...{Loading}...
ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ॥10॥
೦೧೧ ರತಿಯ ಚೆಲುವನ್ತಿರಲಿ ...{Loading}...
ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮನ್ಮಥನ ಪತ್ನಿಯಾದ ರತಿಯ ರೂಪ ಒಂದು ಕಡೆ ಇರಲಿ. ಲಕ್ಷ್ಮಿ ಪಾರ್ವತಿಯರ ರೂಪವೂ ಹಾಗಿರಲಿ, ಬ್ರಹ್ಮನ ಪತ್ನಿ ಸರಸ್ವತಿಯ ರೂಪವೂ ಒಂದು ಕಡೆ ಇರಲಿ. ಆದರೆ ಈ ಹುಡುಗಿಯ ರೂಪಕ್ಕೆ ಸಮಾನಳಾದವಳನ್ನು ನಾನು ಕಂಡಿಲ್ಲ. ಆ ಮಹಾರೂಪವತಿಯಾದ ದ್ರೌಪದಿಯ ರೂಪಕ್ಕೆ ಐದು ಮಡಿ ಹೆಚ್ಚಾಗಿರುವ ಈ ಹೆಣ್ಣಿನ ರೂಪ ವೈಭವವು ನನ್ನ ಮನಸ್ಸಿಗೆ ನಾಟಿದೆ” ಎಂಬ ಭಾವನೆ ಕೀಚಕನಲ್ಲಿ ಉದಿಸಿತ್ತು.
ಪದಾರ್ಥ (ಕ.ಗ.ಪ)
ಬೊಮ್ಮನ ಸತಿ-ಬ್ರಹ್ಮನ ಹೆಂಡತಿ, ಸರಸ್ವತಿ, ಸಿರಿ-ಲಕ್ಷ್ಮಿ,
ಟಿಪ್ಪನೀ (ಕ.ಗ.ಪ)
ಇಲ್ಲಿಯೂ ದ್ರೌಪದಿಯ ರೂಪವರ್ಣನೆಗೆ ಸಾಮಾನ್ಯವಾಗಿ ಕವಿಗಳು ಬಳಸುವ ಹೋಲಿಕೆಗಳನ್ನು ಕವಿ ಬಳಸಿದ್ದಾನೆ. ಕೀಚಕನು ದ್ರೌಪದಿಯ ಸ್ವಯಂವರ ಸಂದರ್ಭದಲ್ಲಿ ಅವಳನ್ನು ನೋಡಿದ್ದನಷ್ಟೆ. ಅನಂತರ ಅವಳ ರೂಪದ ಬಗೆಗೆ ಜನರ ಪ್ರಶಂಸೆಯನ್ನು ಕೇಳಿದ್ದನಷ್ಟೆ. ತಟಕ್ಕನೆ ಕೀಚಕನಿಗೆ ದ್ರೌಪದಿಯ ನೆನಪು ಬಂದದ್ದು ಕುತೂಹಲಕಾರಿಯಾಗಿದೆ. ಆದರೆ ಅವಳಿಗಿಂತ ಈಕೆ ರೂಪವತಿ ಎಂಬ ಭಾವ ಈ ನೆನಪನ್ನು ಮರೆಸುವತ್ತ ಸಾಗಿದೆ.
ಮೂಲ ...{Loading}...
ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ॥11॥
೦೧೨ ಅರಿವು ತಲೆಕೆಳಗಾಯ್ತು ...{Loading}...
ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯೆನಾತನ ತನುವಿನಂತಸ್ತಾಪದೇಳ್ಗೆಯನು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಕೀಚಕನ ಮನಃಸ್ಥಿತಿಯನ್ನು ಕವಿ ವರ್ಣಿಸುತ್ತಿದ್ದಾನೆ.) ದ್ರೌಪದಿಯನ್ನು ಕಂಡ ಕೀಚಕನಿಗೆ ವಿವೇಕ ತಲೆ ಕೆಳಗಾಯಿತು. ಧೈರ್ಯದ ಪ್ರದರ್ಶನವು ಹಾಸ್ಯಕ್ಕೆ ಅವಕಾಶ ಮಾಡಿಕೊಡುವಂತಿದ್ದಿತು. ಲಜ್ಜಾ ಭಾರವು ನೀರಿಲ್ಲದ ನದಿಯಂತಾಯಿತು. ಭಯದ ಬೀಜವು ಮೊಳಕೆಯ ಅವಸ್ಥೆಯಲ್ಲೇ ಸುಟ್ಟು ಕರಕಾಯಿತು. ಲೋಕ ಜ್ಞಾನ ಕಣ್ಮರೆಯಾಯಿತು. ಮನ್ಮಥನ ದಾಳಿ ತೀವ್ರವಾಯಿತು. ಆ ಸಮಯದ ಕೀಚಕನ ಮನಸ್ಸಿನ ಯಾತನೆಯು ವೃದ್ಧಿಗೊಂಡ ಬಗೆಯನ್ನು ವರ್ಣಿಸಲು ನನಗೆ ಸಾಧ್ಯವಿಲ್ಲ.
ಪದಾರ್ಥ (ಕ.ಗ.ಪ)
ನಿರಿಗೆ-ಪ್ರದರ್ಶನ, ತೋರುವಿಕೆ, ಸುಕ್ಕು, ಹೊರಿಗೆ-ಭಾರ, ಬರಿದೊರೆ-ಬಱುದೊರೆ, ನೀರು ಇಂಗಿದ ಹೊಳೆ, ಒಣ ನದಿ, ಮರವೆ ಗರಿಗಟ್ಟಿತು-ಮರೆವಿನ ಸಂಭ್ರಮ ಅತಿಯಾಯಿತು, ಮನೋಭವ-ಮನ್ಮಥ, ಇರಿಗೆಲಸ-ಚುಚ್ಚುವ ಕಾರ್ಯ, ಇರಿತ, ಅಂತಸ್ತಾಪ-ಅಂತರಂಗದ ಧಗೆ
ಪಾಠಾನ್ತರ (ಕ.ಗ.ಪ)
ಸೂಚನೆ : ‘ಬರಿದೊರೆಯಾಯ್ತು’ ಈ ರೂಪವನ್ನು ಬರುದೊರೆಯಾಯ್ತು ಎಂದು ತಿದ್ದಿಕೊಳ್ಳಬಹುದು.
ಟಿಪ್ಪನೀ (ಕ.ಗ.ಪ)
ಹಿಂದಿನ ಐದು ಪದ್ಯಗಳಲ್ಲಿ ತನ್ನ ಕಲ್ಪನೆಯನ್ನು ಬತ್ತಿಸಿಕೊಂಡಿದ್ದ ಕುಮಾರವ್ಯಾಸನು ಇಲ್ಲಿ ಸ್ವಲ್ಪ ಎಚ್ಚ್ಚತ್ತಿದಾನೆ ಎನ್ನಿಸುತ್ತದೆ.
ಬರುದೊರೆ- ಒಂದು ಸುಂದರ ಪ್ರತಿಮೆ ತುಂಬಿ ಹರಿಯುವ ನದಿಯ ಪಾತ್ರವು ಒಣಗಿರುವುದನ್ನು ಸೂಚಿಸುವ ಪದ.
ಮೂಲ ...{Loading}...
ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯೆನಾತನ ತನುವಿನಂತಸ್ತಾಪದೇಳ್ಗೆಯನು ॥12॥
೦೧೩ ಬೀಳುಗೊಣ್ಡುದು ಲಜ್ಜೆ ...{Loading}...
ಬೀಳುಗೊಂಡುದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸಗೊಂಡ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ರೂಪಕ್ಕೆ ಮನಸೋತ ಕೀಚಕನಿಗೆ ನಾಚಿಕೆಯ ಭಾವ ಕಾಡಲಿಲ್ಲ್ಲ. ತನ್ನ ಮಹಿಮೆಯ (ಪರಾಕ್ರಮ, ಪ್ರಸಿದ್ಧಿ ಮೊದಲಾದುವುಗಳ) ಕೊಂಡಿ ಕಳಚಿಕೊಂಡಿತು. ಅಂತರಂಗದಲ್ಲಿ ದ್ರೌಪದಿಯ ರೂಪವನ್ನು ಸೆರೆಹಿಡಿದು ನೆಟ್ಟ ಕಣ್ಣುಗಳಿಂದ ಅವಳನ್ನೇ ನೋಡಿದ. ಅನಂತರ ಅಕ್ಕನ ಬಳಿಗೆ ಹೋಗಿ “ಅಕ್ಕ ! ನನ್ನದೊಂದು ಬೇಡಿಕೆ ನಿಮ್ಮ ಸಖಿಯರಲ್ಲಿ ಮಹಾರೂಪವತಿಯೂ ಶ್ರೇಷ್ಠಳೂ ಆದ ಇವಳು ಯಾರು?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಬೀಳುಕೊಳ್-ಹೊರಟು ಹೋಗು, ತನುಜೆ-ಮಗಳು, ಆಲಿ-ಕಣ್ಣುಗುಡ್ಡೆ, ನಿಮ್ಮಡಿ-ನಿಮ್ಮ, ಹಿರಿಯರ ಬಗೆಗೆ ಗೌರವ ಸೂಚಕವಾಗಿ ‘ನಿಮ್ಮ ಪಾದ’ ಎಂದು ಹಿಂದೆ ಸಂಬೋಧಿಸುತ್ತಿದ್ದ ಬಗೆ, ಮೀಟು-ಉನ್ನತಿ, ಶ್ರೇಷ್ಠತೆ, ಅಗ್ರಜೆ-ಅಗ್ರ (ತನಗಿಂತ ಮುಂಚೆ) ಜೆ-ಹುಟ್ಟಿದವಳು-ಅಕ್ಕ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೀಚಕನು :
“ನೇಯಂ ಮಯಾ ಜಾತು ಪುರೇಹ ದೃಷ್ಟಾ
ರಾಜ್ಞೋ ವಿರಾಟಸ್ಯ ನಿವೇಶನೇ ಶುಭಾ
ರೂಪೇಣ ಚೋನ್ಮಾದಯತೀವ ಮಾಂ ಭೃಶಂ
ಗಂಧೇವ ಜಾತಾ ಮದಿರೇವ ಭಾಮಿನೀ”
“ವಿರಾಟ ಭವನದಲ್ಲಿ ಈಕೆಯನ್ನು ನಾನು ಎಂದೂ ನೋಡಿಲ್ಲ. ತನ್ನ ರೂಪದಿಂದ ಈಕೆ ಸುಗಂಧದ ಮದ್ಯದಂತೆಯೇ ನನ್ನನ್ನು ಮತ್ತು ಗೊಳಿಸಿದ್ದಾಳೆ….” ಎನ್ನುತ್ತಾನೆ.
ಮೂಲ ...{Loading}...
ಬೀಳುಗೊಂಡುದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸಗೊಂಡ ॥13॥
೦೧೪ ಈಕೆ ಗನ್ಧರ್ವರ ...{Loading}...
ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸುದೇಷ್ಣೆಗೆ ತಮ್ಮನ ಇಂಗಿತ ಅರ್ಥವಾಯಿತು. ಆದುದರಿಂದ ಹೆಸರು ಮನೆತನ ಒಂದನ್ನೂ ಸರಿಯಾಗಿ ಹೇಳದೆ ಸ್ಥೂಲವಾಗಿ ಹೇಳಿದಳು :
“ಈಕೆ ಗಂಧರ್ವರ ಪತ್ನಿ, ನಮ್ಮ ಸಖಿ, ತುಂಬ ಗೌರವದಿಂದ ಈಕೆಯನ್ನು ನೋಡಿಕೊಳ್ಳುತ್ತಿದ್ದೇವೆ. ಇವಳ ಪತಿಗಳು ಮಹಾಬಲಶಾಲಿಗಳು. ಇಷ್ಟು ವಿವರ ಸಾಕು. ನೀನು ಮನೆಗೆ ಹೋಗು. ಇವಳು ನಿನಗೆ ದಕ್ಕುವವಳಲ್ಲ. ನಿಲ್ಲಿಸು, ಅಸಭ್ಯವಾಗಿ ಏನೂ ಹೇಳಬೇಡ” ಇಷ್ಟು ಹೇಳಿ ಅವನನ್ನು ಕಳುಹಿಸಿದಳು.
ಪದಾರ್ಥ (ಕ.ಗ.ಪ)
ಮಾನ್ಯವೃತ್ತಿ-ಗೌರವಭಾವ, ಬಲ್ಲಿದ-ಬಲಿಷ್ಠ, ಶ್ರೀಮಂತ, ವಲ್ಲಭರು-ಪತಿಗಳು, ಈಕೆ ನಿನಗಹಳಲ್ಲ-ಈಕೆ ಸೈರಂಧ್ರಿ, ನಿನಗೆ ಅಹಳ್ ಅಲ್ಲ-ವಶವಾಗುವಂಥವಳಲ್ಲ, ಕಾಕು-ಕೊಂಕುಮಾತು, ಒರಟುಮಾತು
ಟಿಪ್ಪನೀ (ಕ.ಗ.ಪ)
ಸುದೇಷ್ಣೆಯ ಮಾತಿನ ಸೂಕ್ಷ್ಮತೆಯನ್ನೂ ಅವಳ ಗ್ರಹಿಕೆಯನ್ನೂ ಗಮನಿಸಬೇಕು. ಅವಳು ಯಾರು ? ಎಂದಷ್ಟೇ ಕೀಚಕನು ಕೇಳಿದ್ದರೂ ಈ ತಮ್ಮನು ಅವಳ ರೂಪಕ್ಕೆ ಮರುಳಾಗಿದ್ದಾನೆ, ಅನುಚಿತವಾಗಿ ನಡೆದುಕೊಂಡಾನು ಎಂಬ ಭಯವೂ ಅವಳಿಗಿತ್ತು. ಆದುದರಿಂದ ಸ್ಪಷ್ಟವಾಗಿ ನಿರಾಕರಣೆಯ ಮಾತಾಡಿ ಅವನಲ್ಲಿ ಭಯಹುಟ್ಟಿಸುವ ಮಾತನ್ನು ಆ ಸೈರಂಧ್ರಿ ನಿನಗೆ ಒಲಿಯುವುದಿಲ್ಲ ಎಂಬ ಸಂಗತಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾಳೆ.
ಮೂಲಭಾರತದಲ್ಲಿಯೂ ಸುದೇಷ್ಣೆಯು ಕೀಚಕನಿಗೆ ಗಂಧರ್ವ ಪತಿಗಳ ವಿಷಯವನ್ನು ಹೇಳಿ ಅವಳ ತಂಟೆಗೆ ಹೋಗಬೇಡ ಎನ್ನುತ್ತಾಳೆ. ಜೊತೆಗೆ ತನ್ನ ಗಂಡನಿಗೆ ಕೂಡ ಅವಳ ಮೇಲೆ ಮೋಹ ಉಂಟಾಗಿತ್ತು. ಆದರೆ ಗಂಧರ್ವ ಪತಿಗಳ ಪರಾಕ್ರಮಕ್ಕೆ ಹೆದರಿ ಸುಮ್ಮನಾದನೆಂದು ಹೇಳುತ್ತಾಳೆ.
(ಭಯಾದ್ ಗಂಧರ್ವ ಮುಖ್ಯಾನಾಂ ಜೀವಿತಸ್ಯೋಪ ಘಾತಿನಾಂ
ಮನಸಾಪಿ ತತಸ್ತ್ವೇನಾಂ ನ ಚಿಂತಯತಿ ಪಾರ್ಥಿವ)
ಆದರೆ ಕೀಚಕನು ಇದಕ್ಕೆ ಹೆದರುವುದಿಲ್ಲ ಗಂಧರ್ವರು ನೂರು ಮಂದಿ ಬರಲಿ, ಸಾವಿರ, ಹತ್ತು ಸಾವಿರ ಜನ ಬರಲಿ ಹೆದರುವುದಿಲ್ಲ ಎಂದ ಮೇಲೆ ಈ ಐವರು ಯಾವ ಲೆಕ್ಕ ? ಎನ್ನುತ್ತಾನೆ. “ನಿನಗೇನೋ ಸಾಯುವ ಕಾಲ ಬಂದಿದೆ” ಎಂದು ಸುದೇಷ್ಣೆ ಸುಮ್ಮನಾಗುತ್ತಾಳೆ
ಮೂಲ ...{Loading}...
ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ॥14॥
೦೧೫ ತಾರಿತನ್ತಃಕರಣ ಕಾಮನ ...{Loading}...
ತಾರಿತಂತಃಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದುದು ಮುಸುಕು ಮೋರೆಯಲಿ
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ಹಿಂದಿರುಗಿದ ನಿಜ. ಆದರೆ ಅವನ ಅಂತಃಕರಣ ಬೆಂದು ಹೋಯಿತು. ಮನ್ಮಥನ ಚೂಪಾದ ಬಾಣಗಳು ಅವನ ಅಂತರಂಗವನ್ನು ಹೊಕ್ಕಿದ್ದುವು. ಮನಸ್ಸಿನ ಗಾಯ ಅಲ್ಲೇ ಅವಿತಿತ್ತು. ಸಂಕಟ ಅತಿಯಾಗಿತ್ತು. ಬೆವರುತ್ತ ಮುಖಕ್ಕೆ ಮುಸುಕೆಳೆದುಕೊಂಡು ತನ್ನ ಮನೆಗೆ ಬಂದ. ಆದರೆ ವೇಷ ಮರೆಸಿ ಮಾರನೆಯ ದಿನ ಗುಪ್ತವಾಗಿ ಹೊರಟು ಅರಮನೆಯ ಬಾಗಿಲಲ್ಲಿ ದ್ರೌಪದಿಯನ್ನು ಕಂಡ.
ಪದಾರ್ಥ (ಕ.ಗ.ಪ)
ತಾರು-ಬೆಂದು ಹೋಗು, ಕೂರುಗಣೆ-ಕೂರು ಹರಿತವಾದ ಕಣೆ-ಬಾಣ, ಏರು-ಗಾಯ, ಢಗೆ-ಬೆವರು ಶೆಖೆ, ತಲೆಮಾರಿ-ವೇಷ ಮರೆಸಿಕೊಂಡು, (ಯಾರಿಗೂ ಕಾಣದಂತೆ)
ಟಿಪ್ಪನೀ (ಕ.ಗ.ಪ)
ಕಾಮುಕರು ವಿವೇಕಶೂನ್ಯರು, ನಾಚಿಕೆ ಭಯ ಬಿಟ್ಟವರು, ಎಂಥ ಕೆಲಸ ಮಾಡಲೂ ಹಿಂಜರಿಯುವವರಲ್ಲ. ಆದುದರಿಂದ ಕೀಚಕನು ಅಕ್ಕನ ಮಾತಿಗೆ ಒಪ್ಪಿದಂತೆ ನಟಿಸಿ ಮನೆಗೆ ಹಿಂದಿರುಗಿದ್ದರೂ ಮರುದಿವಸ ಗುಪ್ತ ವೇಷದಲ್ಲಿ ಅರಮನೆಗೆ ಸಾಗಿ ಬಾಗಿಲಲ್ಲಿ ಅವಳನ್ನು ಕಾಣುವ ಧಾಷ್ಟ್ರ್ಯ ತೋರುತ್ತಾನೆ.
ಮೂಲಭಾರತದಲ್ಲಿ
“ತ್ವರಾವಾನ್ ಕಾಲಪಾಶೇನ ಕಂಠೇಬದ್ಧ: ಪಶುರ್ಯಥಾ
ನಾವಬುದ್ಧ್ಯತ ಮೂಢಾತ್ಮಾ ಮರಣಂ ಸಮುಪಸ್ಥಿತಿಂ”
ಎಂಬ ಮಾತು ಅವನ ಪತನದ ಭವಿಷ್ಯವನ್ನೂ ಹೇಳುತ್ತದೆ.
ಮೂಲ ...{Loading}...
ತಾರಿತಂತಃಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದುದು ಮುಸುಕು ಮೋರೆಯಲಿ
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ॥15॥
೦೧೬ ಕಳುಹಿದನು ತನ್ನೊಡನೆ ...{Loading}...
ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ತನ್ನ ಜತೆಯಲ್ಲಿ ಬರುತ್ತಿದ್ದ ಅಬ್ಬರದ ಕೂಗಿನ ಪರಿವಾರದವರನ್ನು ಹಿಂದಕ್ಕೆ ಕಳುಹಿಸಿದ. ತನ್ನ ಹಿಂದೆ ಬರುತ್ತಿದ್ದ ತಾಂಬೂಲದ ಹುಡುಗನನ್ನೂ ಕಳಿಸಿಕೊಟ್ಟ. ಅನಂತರ ನರಿಯು ಸಿಂಹಿಣಿಯ ಬಳಿಗೆ ಮೋಹದಿಂದ ಬರುವಂತೆ, ಗರುಡಪತ್ನಿಯನ್ನು ಹಾವು ಸಂತೋಷದಿಂದ ಸಮೀಪಿಸುವಂತೆ ದ್ರೌಪದಿಯ ಬಳಿಗೆ ಬಂದ.
ಪದಾರ್ಥ (ಕ.ಗ.ಪ)
ಗಾವಳಿ-ಗದ್ದಲ, ಅಬ್ಬರದ ಧ್ವನಿ, ಗುಂಪು, ಹಡಪ-ತಾಂಬೂಲದ ಚೀಲ, ಅಳುಪು-ಸೋಲು, ಮೋಹಗೊಳ್ಳು, ಫಣಿ-ಹಾವು, ಐದಿದ-ಬಂದ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಮೃಗೇಂದ್ರ ಕನ್ಯಾ ಇವ ಜಂಬುಕೋವನೇ.. ಎಂಬ ಮಾತಿನ ಅನುವಾದ ಸಿಂಹದ ಸತಿಗೆ ನರಿ ಮನವಳುಪುವಂತಿರೆ. ಇದರ ಜೊತೆಗೆ ಗರುಡನ ಪತ್ನಿಯ ಬಳಿಗೆ ಪ್ರೀತಿಯಿಂದ ಹಾವು ಬರುವ ಹೋಲಿಕೆ ಕುಮಾರವ್ಯಾಸನದು. ಈ ಎರಡೂ ಉಪಮೆಗಳು ಕೀಚಕನ ಪತನ ಸೂಚಿಗಳಾಗಿವೆ.
ಮೂಲ ...{Loading}...
ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ॥16॥
೦೧೭ ಖಳನ ಮನದಿಙ್ಗಿತವನಾಗಳೆ ...{Loading}...
ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ದ್ರೌಪದಿಯು ದೂರದಿಂದಲೇ ಕೀಚಕನನ್ನು ನೋಡಿದಳು. ತನಗಾಗಿ ಕಾದು ನಿಂತಿದ್ದಾನೆ. ಆತನ ಮನಸ್ಸಿನಲ್ಲಿ ಏನಿದೆ ಎಂಬುದು ಅವಳಿಗೆ ಖಚಿತವಾಗಿ ತಿಳಿಯಿತು. ಹೆದರಿ ಕಂಗಾಲಾದಳು. “ಈ ಕಾಮುಕ ನನ್ನ ಮೇಲೆ ಮೋಹಗೊಂಡಿದ್ದಾನೆ ನಾನು ಕೆಟ್ಟೆ” ಎಂದು ತನ್ನಷ್ಟಕ್ಕೇ ಹೇಳಿಕೊಂಡಳು. ಅವನಿಂದ ತಪ್ಪಿಸಿಕೊಳ್ಳಲು ಹೆಜ್ಜೆಯನ್ನು ಹಿಂದಕ್ಕಿಡುತ್ತ ಹೋದಳು. ಆದರೆ ಕೀಚಕ ಹೆದರದೆ ಮುಂದೆ ಬಂದು ನಿಂತ. “ಏಕೆ, ಸುಂದರಿ; ಮಾತಾಡಿಸುವುದಿಲ್ಲವೆ ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಖಳ-ನೀಚ, ಇಂಗಿತ-ಮನಸ್ಸಿನ ಭಾವ, ಕಳವಳಿಗ-ಕಾಮಿ, ಕಳ್ಳ, ಕಾತರಪಡುತ್ತಿರುವವ, ಅಳುಕದೆ-ಹಿಂಜರಿಯದೆ, ಐತಂದು-ಬಂದು
ಟಿಪ್ಪನೀ (ಕ.ಗ.ಪ)
ಕುಮಾರವ್ಯಾಸನು ಒಳ್ಳೆಯ ನಾಟಕಕಾರನಂತೆ ಸಂಭಾಷಣೆಯ ಸೊಬಗನ್ನು ಈ ಮುಂದಿನ ಪದ್ಯಗಳಲ್ಲಿ ತೋರಿದ್ದಾನೆ. ರನ್ನ ರಾಘವಾಂಕರ ದಾರಿಯಲ್ಲೇ ಕುಮಾರವ್ಯಾಸನೂ ಅಡಿಯಿರಿಸಿದ್ದಾನೆ.
ಮೂಲ ...{Loading}...
ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ॥17॥
೦೧೮ ಎಲೆ ಮರುಳೆ ...{Loading}...
ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ರಾಣಿಯಾದ ದ್ರೌಪದಿ “ಅಯ್ಯೋ ಹುಚ್ಚ ! ಬೇಡ. ನನ್ನನ್ನು ಬಯಸ ಬೇಡ. ನಿನ್ನ ಕುತ್ತಿಗೆಗೆ ಹರಿತವಾದ ಕತ್ತಿಯನ್ನು ಬಯಸಬೇಡ. ಕೂಡಲೇ ನಿನ್ನ ಅರಮನೆಗೆ ತೆರಳು. ನಾನು ನಿನಗೆ ವಶವಾಗುವಷ್ಟು ಸುಲಭಳಲ್ಲ. ನಿನ್ನ ಸ್ಥಿತಿಯನ್ನು ನೋಡಿದ ಕೆಲವರು ನಕ್ಕಾರು. ನಿನಗೆ ಸತ್ತ ಮೇಲೆ ಸದ್ಗತಿ ದೊರಕುವುದಿಲ್ಲ. ಅಯ್ಯೋ ಬೇಡ " ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಅಳುಪು-ಬಯಸು, ಮೋಹಗೊಳ್ಳು, ಕೂರಲಗು-ಹರಿತವಾದ ಕತ್ತಿ, ಕೈಯೊಡನೆ-ಈ ಕೂಡಲೇ, ನಿಂತ ನಿಲುವಿನಲ್ಲೇ
ಟಿಪ್ಪನೀ (ಕ.ಗ.ಪ)
ಸೈರಂಧ್ರಿಯಾಗಿ ಬೆದರಿದ್ದ ದ್ರೌಪದಿ ಈಗ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸುತ್ತ ಗಂಭೀರವಾಗಿ ಮಾತಾಡಿರುವುದನ್ನು
‘ಪಾಂಡವರ ರಾಣಿ’ ಎಂಬ ಮಾತು ಸ್ಪಷ್ಟವಾಗಿ ಧ್ವನಿಸುತ್ತದೆ. ಸಾವಿನ ಭಯ, ಜನಾಪವಾದದ ಭಯ, ದುರ್ಗತಿಯ ಭಯ
ಎಲ್ಲವನ್ನೂ ತನ್ನ ಉತ್ತರದಲ್ಲಿ ಅಡಕಿಸಿದ್ದಾಳೆ.
ಮೂಲಭಾರತದಲ್ಲಿ ಸೈರಂಧ್ರಿಯು “ಛಿ ! ನಾನು ಹೀನ ಜಾತಿಯವಳು, ಸೈರಂಧ್ರಿ, ಅಸಹ್ಯ ವೇಷದಲ್ಲಿದ್ದೇನೆ” ಎನ್ನುತ್ತಾಳೆ.
ಮೂಲ ...{Loading}...
ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ॥18॥
೦೧೯ ನಿಲ್ಲೆಲೆಗೆ ಸೈರನ್ಧ್ರಿ ...{Loading}...
ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನನ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ನಯವಾಗಿಯೇ ದ್ರೌಪದಿಗೆ, “ಎಲೆ, ಸೈರಂಧ್ರಿ ! ನಿಲ್ಲು ! ನನಗೆ ಮನ್ಮಥನ ಆಯುಧದ ಗಾಯ ತಾಗಿದೆ. ಅದನ್ನು ಗುಣಪಡಿಸುವ ಔಷಧವನ್ನು ನೀನು ಬಲ್ಲೆ. ನನ್ನ ಪ್ರಾಣವನ್ನು ಕಾಪಾಡಿಕೊ. ಓಡಿಹೋಗಬೇಡ. ನನ್ನ ಮಾತಿಗೆ ಬೆಲೆಕೊಡು. ನಿನ್ನ ಚಂಚಲವಾದ ಕಣ್ಣುಗಳನ್ನು ನನ್ನ ಮೇಲೆ ಚೆಲ್ಲಿದರೆ ಆಗ ಜೀವ ಕಳೆದುಕೊಂಡಿರುವ ನನಗೆ ಉಸಿರುಬಂದಂತಾಗುತ್ತದೆ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಎಲೆಗೆ-ಎಲೇ, ಎಂಬ ಏಕವಚನದ ಪ್ರಯೋಗ, ಬಲ್ಲೆಹ-ಭಲ್ಲೆ ಎಂಬ ಆಯುಧ, ಚೆಲ್ಲೆಗಂಗಳು-ಹರಿದಾಡುವ ನೋಟ, ಸಪ್ರಾಣಿಸು-ಉಸಿರು ಬರುವಂತೆ ಮಾಡು.
ಪಾಠಾನ್ತರ (ಕ.ಗ.ಪ)
ವಿಗತ ಜೀವನವ -ವಿಗತಜೀವನನ
ಕುಮಾರವ್ಯಾಸ ಭಾರತ ಸಂಗ್ರಹ
ಸಂ: ಎಂ ವಿ.ಸೀ.
ಟಿಪ್ಪನೀ (ಕ.ಗ.ಪ)
ತುಂಬ ನಯವಾಗಿ ಪ್ರೀತಿಯಿಂದ ಮಾತಾಡಿ ಸೈರಂಧ್ರಿಯನ್ನು ಒಲಿಸಿಕೊಳ್ಳುವುದೇ ಕೀಚಕನ ಉದ್ದೇಶವಾಗಿತ್ತು. ಆದುದರಿಂದ ಬೇಡಿಕೊಳ್ಳುವ ಧ್ವನಿಯಲ್ಲಿ ಉದ್ದಕ್ಕೂ ಮಾತಾಡುತ್ತಿದ್ದಾನೆ. ಈ ಮಾತುಗಳ ಮಧ್ಯೆ ‘ಎಲಗೆ’ ಎಂಬ ಒರಟು ಸಂಬೋಧನೆ ತಾಳೆಯಾಗುವುದಿಲ್ಲ ಅಲ್ಲವೆ ?
ಪಾಠ- ವಿಗತ ಜೀವನವ ಎಂದು ಪಠ್ಯದಲ್ಲಿದೆ “ವಿಗತಜೀವನನ” ಎಂಬ ಪಾಠ ಸರಿಯಾದೀತಲ್ಲವೆ ?
ಮೂಲ ...{Loading}...
ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನನ ॥19॥
೦೨೦ ಎಲೆಗೆ ಪಾತಕಿ ...{Loading}...
ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ‘ಎಲೇ ಪಾಪಿ, ನಿನ್ನ ಕಣ್ಣುಗಳು ಎಂಬ ಕತ್ತಿಯ ತುದಿಯಿಂದ ನನ್ನ ಎದೆಯನ್ನು ತಿವಿದು ಹೀಗೆ ಹೊರಟು ಬಿಡುವುದೆ? ನಿನಗೆ ಮನಸ್ಸಿನಲ್ಲಿ ಒಂದಿಷ್ಟಾದರೂ ಕರುಣೆ ಇಲ್ಲವಲ್ಲ. ನಾನಾಗಿ ಒಲಿದು ನಿನ್ನ ಬಳಿಗೆ ಬಂದಿದ್ದೇನೆ. ಈ ಮನ್ಮಥನ ಸೇವೆ ತುಂಬ ಕಷ್ಟದ್ದಾಗಿದೆ. ನನ್ನ ಭಯವನ್ನು ತಗ್ಗಿಸಿ ನನ್ನನ್ನು ಕಾಪಾಡು” ಎಂದು ಹೇಳುತ್ತ ಸೈರಂಧ್ರಿಗೆ ಕೈ ಮುಗಿದ.
ಪದಾರ್ಥ (ಕ.ಗ.ಪ)
ಅಲಗು-ಕತ್ತಿಯ ಅಂಚು, ಕಾಮನ ಊಳಿಗ-ಮನ್ಮಥನ ಸೇವೆ, ಕಾಮನ ಕಾಟ
ಟಿಪ್ಪನೀ (ಕ.ಗ.ಪ)
ಕೀಚಕನಿಗೆ ನಯವಾದ ಮಾತು ಅಭ್ಯಾಸವಿಲ್ಲ. ಅವನ ಆರಂಭದ ಭಾಷೆ ಸ್ವಲ್ಪ ಒರಟಾಗಿದೆ. ಮತ್ತೆ ಬೇಡಿಕೆಯ ಧ್ವನಿ. ಅವನ ಮನಸ್ಸಿನ ಗೊಂದಲವನ್ನು ಈ ಭಾಷೆಯ ನಡವಳಿಕೆಯೇ ಸೂಚಿಸುತ್ತದೆ.
ಮೂಲ ...{Loading}...
ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ॥20॥
೦೨೧ ಪರರ ಸತಿಗಳುಪಿದೊಡೆ ...{Loading}...
ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯೊಳಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪರರ ಸತಿಗೆ ಆಸೆಪಟ್ಟರೆ ಅದರಿಂದ ಪಾತಕ ಮಾಡಿದಂತಾಗುತ್ತದೆ. ನಿನ್ನ ಸಂಪತ್ತು, ಅಧಿಕಾರ ಎಲ್ಲ ನಿನ್ನನ್ನು ತ್ಯಜಿಸುತ್ತವೆ. ಈ ಪ್ರಪಂಚದಲ್ಲಿ ನಿನ್ನ ಕೀರ್ತಿ ಮಾಸುತ್ತದೆ. ಪರಲೋಕದಲ್ಲಿಯೂ ನಿನ್ನ ಗತಿಗೆ ಕೇಡಾಗುತ್ತದೆ. ಹತ್ತು ತಲೆಯ ರಾಕ್ಷಸ ರಾವಣ ಸತ್ತ ಕಥೆ ನಿನಗೆ ಗೊತ್ತಲ್ಲವೆ ? ಪಾಪಿ, ದೂರ ಸಾರು”. ಎಂದು ದ್ರೌಪದಿಯು ಕೀಚಕನಿಗೆ ಹೇಳಿದಳು
ಪದಾರ್ಥ (ಕ.ಗ.ಪ)
ಅಳುಪು-ಬಯಸು, ಮೋಹಿಸು, ತೊಲಗುಗು-ತೊಲಗುತ್ತದೆ, ಅಗ್ಗದ-ಶ್ರೇಷ್ಠವಾದ, ಕೊರಳು ಹಲವಾದ ಅಸುರ-ಹಲವು ಕೊರಳುಗಳಿದ್ದ ರಾಕ್ಷಸ, ರಾವಣ, ಅಂತಕಪುರ-ಯಮನ ಊರು.
ಟಿಪ್ಪನೀ (ಕ.ಗ.ಪ)
ಒಳಗೊಳಗೇ ತನ್ನಲ್ಲಿರುವ ಅಧೈರ್ಯವನ್ನು ಹಿಮ್ಮೆಟ್ಟಿಸಲು ದ್ರೌಪದಿ ಕೀಚಕನಿಗೆ ಪಾತಕದ ಅರಿವು ಮೂಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾಳೆ.
ಮೂಲ ...{Loading}...
ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯೊಳಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ॥21॥
೦೨೨ ಮೇಲೆ ಸದ್ಗತಿ ...{Loading}...
ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳುಹೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ನನಗೆ ಸ್ವರ್ಗ ಸಿಕ್ಕುವುದಿಲ್ಲ ಎಂದೆಯಲ್ಲವೆ ? ಅದು ಸುಟ್ಟು ಹೋಗಲಿ, ಯಾರಿಗೆ ಬೇಕಾಗಿದೆ ? ಯಮಕಿಂಕರನು ನನ್ನನ್ನು ಎಳೆದೊಯ್ಯಲು ಬರಲಿ, ನಾನು ಲೆಕ್ಕಿಸುವುದಿಲ್ಲ. ಬಂಧುಗಳು ನನ್ನ ಶೀಲವನ್ನು ಕುರಿತು ಅಪಹಾಸ್ಯಮಾಡಿದರೆ ಚಿಂತೆಯಿಲ್ಲ. ನನ್ನ ಕಡೆಯವರೆಲ್ಲ ಮತ್ತು ರಾಣಿಯರೆಲ್ಲ ನನ್ನನ್ನು ಕೈಬಿಟ್ಟು ಕಳಚಿಕೊಂಡರೂ ಚಿಂತೆಯಿಲ್ಲ. ಸುಂದರಿ ! ನನಗೆ ನಿನ್ನ ಮೇಲೆ ಮೋಹವುಂಟಾಗಿದೆ. ಮನ್ಮಥನ ಬಾಣವು ನನ್ನನ್ನು ಹಿಂದಿನ ಸ್ಥಿತಿಗೆ ಮರಳಲು ಬಿಡುತ್ತಿಲ್ಲ. ಚಂಚಲ ನೇತ್ರೆಯ ಸುಂದರಿ ! ನೀನು ಒರಟು ಮಾತಿನಲ್ಲಿ ತಿರಸ್ಕಾರವನ್ನು ಹೇಳದೆ ನನ್ನನ್ನು ಕಾಪಾಡು…. ಎಂದು ಕೀಚಕನು ದ್ರೌಪದಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಐತರಲಿ-ಬರಲಿ, ಏಳಿಸು-ನಿಂದಿಸು, ಅಪಹಾಸ್ಯ ಮಾಡು, ಬಿರುಬು-ಕಠಿಣವಾದ ಮಾತು
ಟಿಪ್ಪನೀ (ಕ.ಗ.ಪ)
ಮೋಹಪಾಶಕ್ಕೆ ಸಿಲುಕಿದವರು ಎಂಥ ಭಂಡರಾಗುತ್ತಾರೆ ಎಂಬುದಕ್ಕೆ ಕೀಚಕನ ನಡವಳಿಕೆ ಉತ್ತಮ ನಿದರ್ಶನವಾಗಿದೆ. ಹೇವಗೇಡಿಗಳಿಗೆ ವಾವೆಯೇನು ? ವರಸೆಯೇನು ? ಎಂಬ ಗಾದೆ ಈತನ ಸ್ವಭಾವವನ್ನು ವಿವರಿಸುತ್ತದೆ.
ಮೂಲ ...{Loading}...
ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳುಹೆಂದ ॥22॥
೦೨೩ ಎಳನಗೆಯ ಬೆಳುದಿಙ್ಗಳನು ...{Loading}...
ಎಳನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಕಾಂತೆ, ನೀನು ನನ್ನ ಮೇಲೆ ಎಳನಗೆಯ ಬೆಳುದಿಂಗಳನ್ನು ಚೆಲ್ಲಿ ನನ್ನ ತಾಪವನ್ನು ತಗ್ಗಿಸು. ನಿನ್ನ ಮಧುರವಾದ ಮೆಲುಮಾತಿನ ಅಮೃತದಿಂದ ನನ್ನ ದಾಹವನ್ನು ಅಕಟ ಪರಿಹರಿಸು. ನನ್ನ ಕಾಮುಕ ಮನಸ್ಸಿನ ಬಡತನವನ್ನು ನಿನ್ನ ಸ್ತನಗಳ ಶ್ರೀಮಂತಿಕೆಯಿಂದ ಹೋಗಲಾಡಿಸು. ನಿನ್ನ ಮನಸ್ಸಿನ ಪ್ರೀತಿಯನ್ನು ನನ್ನ ಕಡೆಗೆ ತಿರುಗಿಸು” ಎಂದು ಗೋಗರೆದ.
ಪದಾರ್ಥ (ಕ.ಗ.ಪ)
ತಳಿತು-ತಳ್ತು, ಹರಡಿ, ಧರಿಸಿ, ಸುಧೆ-ಅಮೃತ, ಅಳಿಮನ-ಹೀನ ಮನಸ್ಸು, (ನಿನಗೆ) ಸೋತ ಮನಸ್ಸು, ಕೀಚಕನ ವಿರಹಸ್ಥಿತಿಯ ಬಡತನ, ದ್ರೌಪದಿಯ ದೇಹ ಸಂಪತ್ತಿನ ಶ್ರೀಮಂತಿಕೆ ಇವುಗಳ ಪ್ರಸ್ತಾವ ಇಲ್ಲಿದೆ. ತೃಷ್ಣೆ-ಬಾಯಾರಿಕೆ, ತಿದ್ದು-ತಿರುಗಿಸು.
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೀಚಕನು ಸೈರಂಧ್ರಿಗೆ “ನಿನ್ನಂಥ ಅನಿಂದಿತ ರೂಪ ಸೌಂದರ್ಯವತಿಯರನ್ನು ನಾನು ನೋಡಿಯೇ ಇಲ್ಲ” ಎಂದಿದ್ದಾನೆ. ವಿರಾಟಪರ್ವ 4-15.
ಮೂಲ ...{Loading}...
ಎಳನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ॥23॥
೦೨೪ ಕೇಳಿ ಕಿವಿ ...{Loading}...
ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಕೀಚಕನು ಮಾತುಗಳನ್ನು ಕೇಳಿ ದ್ರೌಪದಿ ಕಿವಿ ಮುಚ್ಚಿಕೊಂಡಳು ತನ್ನ ಪಂಚಪತಿಗಳನ್ನು ನೆನೆದಳು. “ಹರಹರ, ಶಿವ, ಮುಕುಂದ” ಎಂದು ಸ್ಮರಿಸುತ್ತ ಸೂರ್ಯನ ಕಡೆ ನೋಡುತ್ತ “ಅಯ್ಯೋ ! ಈ ದುಷ್ಟನು ಮಹಾ ಅವಿವೇಕಿ, ತನ್ನ ಕ್ಷೇಮದ ಬಗೆಗೆ ಕೂಡ ಅವನಿಗೆ ಲಕ್ಷ್ಯವಿದ್ದಂತಿಲ್ಲವಲ್ಲ ! ಈ ಮದಾಂಧನನ್ನು ಸೋಲಿಸಬಲ್ಲವರು ಯರಾದರೂ ಇದ್ದಾರೆಯೆ” ಎಂದುಕೊಂಡು ಸಂಕಟದಿಂದ ತಲೆಬಾಗಿದಳು.
ಪದಾರ್ಥ (ಕ.ಗ.ಪ)
ಮೇಳದ ಐವರು-ಪಾಂಡವರು, ಕಾಳು ಮೂಳ-ದುಷ್ಟ, ಖಳಾಗ್ರಣಿ-ಮಹಾದುಷ್ಟ, ಮೇಲುಗಾಣನು-ಸದ್ಗತಿಯ ಬಗೆಗೆ ಯೋಚಿಸುತ್ತಿಲ್ಲ, ತನಗೆ ಒಳ್ಳೆಯದು ಯಾವುದು ಎಂದು ಯೋಚಿಸುವ ಮನಸ್ಸು ಅವನಿಗಿಲ್ಲ.
ಮದಾಂಧ-ಕಾಮದಿಂದ ಕುರುಡನಾಗಿರುವವ, ತರಳೆ-ಹೆಂಗಸು.
ಮೂಲ ...{Loading}...
ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ॥24॥
೦೨೫ ಎಲೆ ದುರಾತ್ಮ ...{Loading}...
ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಅಯ್ಯಾ ದುರಾತ್ಮ ! ಹೀಗೆ ಮಹದಪರಾಧವನ್ನು ಮಾಡುತ್ತಾರೆಯೆ ? ಬಯಲಿನಲ್ಲಿ ನಿನ್ನ ಕುಲದ ಬೇರನ್ನು ಹೀಗೆ ಕತ್ತರಿಸಿಕೊಳ್ಳಬಹುದೇ ? ಇದರಿಂದ ಬರುವ ಲಾಭವಾದರೂ ಏನು ?” ಅಪನಿಂದೆ ಕವಿಯದೆ ಇರುತ್ತದೆಯೆ ? ಮರ್ಯಾದೆಯಾಗಿ ತಂದೆ ತಾಯಿಗಳು, ಮಕ್ಕಳು ಎಂಬ ಸಂಸಾರದ ಬಯಕೆಯನ್ನು ಬಿಟ್ಟು ಕೆಟ್ಟದನ್ನು ಬಯಸುವ ಸ್ಥಿತಿ ನಿನಗೆ ಬಂದಿತಲ್ಲ" ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಹಳಿವು-ಅಪಕೀರ್ತಿ, ಆರೋಪ, ಹೊದ್ದು-(ಪೊರ್ದು) ಉಂಟಾಗು, ಆವರಿಸು, ಮಾಣು-ಬಿಡು
ಟಿಪ್ಪನೀ (ಕ.ಗ.ಪ)
ಬಯಲಿನಲ್ಲಿ …. -ವೃಥಾ ನನ್ನನ್ನು ಬಯಸಿ ನಿನ್ನ ಕುಲದ ನಾಶವನ್ನು ನೀನೇ ಮಾಡಿಕೊಳ್ಳುತ್ತಿರುವೆಯಲ್ಲ
ಮೂಲ ...{Loading}...
ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ॥25॥
೦೨೬ ಕಾತರಿಸದಿರು ಮನ್ದಿವಾಳದ ...{Loading}...
ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜ ಧರ್ಮದ ಚಿತ್ತಚಪಲವಲ
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದಳಿಂದುಮುಖಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
" ಕಾತರಿಸದಿರು. ಮಂದಿವಾಳದ ಮಾತು ಸಾಕು. ತೊಲಗು. ನನಗೆ ನೀನು ಸೋತಿರುವುದು ಮನುಷ್ಯನಿಗೆ ಸಹಜವಾದ ಚಾಪಲ್ಯ. ಈ ಕೂಡಲೇ ಇಲ್ಲಿಂದ ಹೊರಟು ಹೋಗು. ನನ್ನ ಗಂಧರ್ವ ಪತಿಗಳಿಗೆ ಈ ವಿಷಯ ತಿಳಿದರೆ ಅವರು ಸಹಿಸುವುದಿಲ್ಲ. ಅಲ್ಲದೆ ಅವರು ದೇವತೆಗಳ ಗುಂಪಿನಲ್ಲಿ ಮಹಾವೀರರು".
ಪದಾರ್ಥ (ಕ.ಗ.ಪ)
ಕಾತರಿಸು - ಬಯಸು, ಮಂದಿವಾಳ-ಜನಸಾಮಾನ್ಯರು, ತತುಕ್ಷಣ-ತತ್ಕ್ಷಣ, ಈ ಕೂಡಲೇ, ವ್ರಾತ-ಸಮೂಹ, ಆತಗಳು-ಅವರುಗಳು (ಅಂದರೆ ಪತಿಗಳು, ಗಂಧರ್ವರು)
ಟಿಪ್ಪನೀ (ಕ.ಗ.ಪ)
ನನ್ನನ್ನು ಪ್ರೀತಿಸಲು ನೀನು ಯೋಗ್ಯನಲ್ಲ ಎಂಬ ಮಾತೂ ಮೂಲಭಾರತದಲ್ಲಿದೆ. ದ್ರೌಪದಿ ಕೀಚಕನನ್ನು ತಕ್ಕಡಿಗೆ ಹೋಲಿಸಿ “ಬೆಟ್ಟವನ್ನು ತಕ್ಕಡಿಯಲ್ಲಿ ತೂಗಬಲ್ಲೆಯಾ ?” ಎನ್ನುತ್ತಾಳೆ.
ಮೂಲ ...{Loading}...
ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜ ಧರ್ಮದ ಚಿತ್ತಚಪಲವಲ
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದಳಿಂದುಮುಖಿ ॥26॥
೦೨೭ ಸಾವು ತಪ್ಪದು ...{Loading}...
ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
" ನನಗೆ ಈಗ ಸಾವು ತಪ್ಪಿದ್ದಲ್ಲ. ಕಾಮನ ಬಾಧೆ ನನ್ನನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದುದರಿಂದ ನಿನ್ನನ್ನು ಕೂಡಿ ಸಾಯುತ್ತೇನೆಯೇ ಹೊರತು ವೃಥಾ ಕಾಮನ ಬಾಧೆಯಿಂದ ಸಾಯುವುದಿಲ್ಲ. ಸುಂದರಿ ! ನನ್ನನ್ನು ನಿರಾಕರಿಸಬೇಡ. ನನ್ನ ಮೇಲೆ ಕೃಪೆ ಮಾಡು ನನ್ನನ್ನು ಉಳಿಸು" ಎನ್ನುತ್ತ ಕೀಚಕನು ಸೈರಂಧ್ರಿಗೆ ಕೈಮುಗಿದ.
ಪದಾರ್ಥ (ಕ.ಗ.ಪ)
ಡಾವರ-ಬಾಧೆ, ನೆರೆದು-ಕೂಡಿ, ಅನುಭವಿಸಿ, ಭಾವೆ-ಸುಂದರಿ, ರಾಜೀವ ಮುಖಿ-ತಾವರೆಯ ಮುಖದವಳು, ಕಮಲಾನನೆಗೂ ಇದೇ ಅರ್ಥ
ಟಿಪ್ಪನೀ (ಕ.ಗ.ಪ)
- ಕೀಚಕ ಈಗ ಎರಡು ಅಂಶಗಳನ್ನು ಹೇಳುತ್ತಿದ್ದಾನೆ ಸೈರಂಧ್ರಿಯ ತಂಟೆಗೆ ಹೋದರೆ ಬಲಿಷ್ಠರಾದ ಗಂಧರ್ವರು ತನ್ನನ್ನು ಕೊಲ್ಲುತ್ತಾರೆ. ಹಾಗೆಂದು ಸುಮ್ಮನಿದ್ದರೂ ಸಾವು ಖಚಿತ. ಏಕೆಂದರೆ ಮನ್ಮಥನ ಕಾಟದಿಂದಾಗಿ ತನಗೆ ದಶಮಾವಸ್ಥೆ ಬಂದಿದೆ. ಹೀಗಿರುವುದರಿಂದ ಆಕೆಯನ್ನು ಪಡೆದೇ ಸಾಯುವುದು ಉತ್ತಮ ಎಂಬ ತೀರ್ಮಾನ.
ಮೂಲ ...{Loading}...
ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ॥27॥
೦೨೮ ಮರುಳುತನ ಬೇಡೆಲವೊ ...{Loading}...
ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆನೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಬಗ್ಗೆ ನನಗೆ ಸ್ವಲ್ಪವೂ ಲಕ್ಷ್ಯವಿಲ್ಲ ಎಂದು ಸೂಚಿಸಲು ಸೈರಂಧ್ರಿಯು ಒಂದು ಹುಲ್ಲು ಕಡ್ಡಿಯನ್ನು ಕೈಯಲ್ಲಿ ಹಿಡಿದು ಕೀಚಕನಿಗೆ ಹೇಳಿದಳು.
“ಅಯ್ಯೊ ! ಮರುಳಾಟ ಬೇಡ. ನಾನು ಗಂಧರ್ವರ ಪತ್ನಿ. ನಿನ್ನ ಕೆಟ್ಟ ನಡತೆ ಅವರಿಗೆ ಹಿಡಿಸುವುದಿಲ್ಲ. ಅಲ್ಲದೆ ಅವರು ಮಹಾ ಬಲಶಾಲಿಗಳು. ಸುಮ್ಮನೆ ಹರಟಬೇಡ. ಅಪಕೀರ್ತಿ ನಾರಿಯ ಆಗಮನವನ್ನು ನೆನೆಯಬೇಡ. ಸುಮ್ಮನೆ ನಿನ್ನ ಮನೆಗೆ ಹೋಗು”
ಪದಾರ್ಥ (ಕ.ಗ.ಪ)
ಬಲ್ಲಿದ-ಬಲಾಢ್ಯ, ಸೊರಹು-ಹರಟು, ತೃಣ-ಹುಲ್ಲುಕಡ್ಡಿ
ಟಿಪ್ಪನೀ (ಕ.ಗ.ಪ)
ರಾಮಾಯಣದಲ್ಲಿ ಅಶೋಕವನದಲ್ಲಿದ್ದ ಸೀತೆ ರಾವಣನ ಎದುರಿಗೆ ಹುಲ್ಲುಕಡ್ಡಿ ಹಿಡಿದು ಮಾತಾಡಿದ ಸಂದರ್ಭ ಇಲ್ಲಿ ಪ್ರೇರಣೆಕೊಟ್ಟಿರಬಹುದು. ‘ನೀನು ಹುಲ್ಲು ಕಡ್ಡಿಗೆ ಸಮ’ ಎಂಬ ತಿರಸ್ಕಾರ ಭಾವ ಇಲ್ಲಿದೆ.
ಮೂಲ ...{Loading}...
ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆನೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ॥28॥
೦೨೯ ದ್ರೌಪದಿಗೆ ಖಳ ...{Loading}...
ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನನೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದುಷ್ಟ ಕೀಚಕನು ದ್ರೌಪದಿಗೆ ಹೇಳಿದ : “ಸೈರಂಧ್ರಿ ನನ್ನ ಪರಾಕ್ರಮ ಎಷ್ಟೆಂಬುದು ನಿನಗೆ ತಿಳಿದಿಲ್ಲ. ನಿನ್ನ ಪತಿಗಳೆಲ್ಲ ನನ್ನೆದುರಿಗೆ ಬಡವರು. ಬಡವರ ಕೋಪ ದವಡೆಗೆ ಮೂಲ ಎಂಬ ಗಾದೆ ಗೊತ್ತು ತಾನೆ ! ಅವರು ನನಗೆ ಏನು ಮಾಡಿಯಾರು ? ಅವರನ್ನೆಲ್ಲ ನಾನು ಎದುರಿಸುತ್ತೇನೆ. ಆ ವಿಷಯ ಈಗೇಕೆ ? ನೀನು ನನಗೆ ಒಲಿದರೆ ಸಾಕು. ನಾನು ಯಾರಿಗೂ ಹೆದರುವುದಿಲ್ಲ. ನಾನು ಕೆರಳಿ ನಿಂತರೆ ಈಶ್ವರನು ಎದುರಿಗೆ ಬಂದರೂ ಹಿಂಜರಿಯುವುದಿಲ್ಲ. ಈಗ ನನ್ನ ಜೊತೆ ಸೇರು. ಮುಂದಿನದನ್ನು ನೋಡುವೆಯಂತೆ”
ಪದಾರ್ಥ (ಕ.ಗ.ಪ)
ಆಟೋಪ-ಹೆಗ್ಗಳಿಕೆ, ಪರಾಕ್ರಮ, ಆಪೆ-(ಅವರನ್ನು ಎದುರಿಸಲು) ಸಮರ್ಥನಾಗಿದ್ದೇನೆ; < ಆರ್ಪೆನ್, ಓಪಳು-ನಲ್ಲೆ, ಪ್ರೀತಿಸುವಾಕೆ, ಮಲೆತಡೆ-(ನಾನು) ಕೆರಳಿ ನಿಂತರೆ, ಪಿನಾಕಿ-ಪಿನಾಕಪಾಣಿಯಾದ ರುದ್ರ , ದೇಗುವರು- ಏಗುವರು
ಟಿಪ್ಪನೀ (ಕ.ಗ.ಪ)
ಕೀಚಕನು ಸಂಧಿ ಸಂಧಿಯೊಳ್ ಸಹಸ್ರ ಸಿಂಹಬಲಂ (ಕೀಲು ಕೀಲುಗಳಲ್ಲೂ ಸಾವಿರ ಸಿಂಹದ ಬಲವುಳ್ಳವನು) ಪಂಪಭಾ 8-78ವ.
ಮೂಲ ...{Loading}...
ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನನೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ॥29॥
೦೩೦ ಹುಳುಕನಲ್ಲಾ ತುಮ್ಬಿ ...{Loading}...
ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆ ಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುಂಬಿ ಹುಳುಕನಲ್ಲವೆ? ಕೋಗಿಲೆ ಹರಟೆಯ ಮಲ್ಲನಲ್ಲವೆ ? ಚಂದ್ರ ಮತ್ತು ವಸಂತನ ಶಕ್ತಿಯು ಎಂಥ ಮಾನ್ಯರನ್ನೂ ಇರಿಯದೆ ಬಿಡುತ್ತದೆಯೆ? ತಂಗಾಳಿ ಧರ್ಮನಿಷ್ಠನೆ? ಮಾವು ಪ್ರೇಮಿಗಳಿಗೆ ದ್ವೇಷಿಯಲ್ಲವೆ ? ಇಂಥ ಪರಿವಾರದೊಂದಿಗೆ ಇರುವ ಆ ಮನ್ಮಥನೆಂಬವನು ಕೊಲೆಗಡಿಕನಲ್ಲವೆ ? ಹೀಗಿರುವಾಗ ನೀನು ನನ್ನನ್ನು ಅಲಕ್ಷಿಸಬಹುದೇ? ಏನು ? ಪಾಪಿ ! ಒಲಿಯದೆ ಹೀಗೆ ನೀನು ನನ್ನನ್ನು ಕೊಲ್ಲಬಹುದೆ ?” ಎಂದು ಕೀಚಕ ದ್ರೌಪದಿಗೆ ಹೇಳಿದ.
ಪದಾರ್ಥ (ಕ.ಗ.ಪ)
ದುಂಬಿ ಹೂ ( ಮನ್ಮಥನ ಆಯುಧ ಈ ಮಾತು ಬಂದಿರಬಹುದು.)
ಹುಳುಕ<ಪುೞುಕ, ಚುಚ್ಚುವ ಗುಣ ಉಳ್ಳವ, ಕೊರೆಯುವಾತ, ಗಳಹ-ಹರಟುವವನು, ಬಲುಹು-ಶಕ್ತಿ, ಮಾಕಂದ-ಮಾವು, ಮಾವಿನಮರ, ಮನೋಭವ-ಮನ್ಮಥ, ಇಳಿಕೆಗೊಳು-ಕೀಳಾಗಿ ಕಾಣು.
ಟಿಪ್ಪನೀ (ಕ.ಗ.ಪ)
[ಇಳಿಕೆಗೊಂಬರೆ ಇದಕ್ಕೆ ‘ಇಳಿಕೆಗಾಂಬರೆ’ ಎಂಬ ಪಾಠವೂ ಇದೆ]
ಮೂಲ ...{Loading}...
ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆ ಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ॥30॥
೦೩೧ ಒಲಿದು ನಿನ್ನನು ...{Loading}...
ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಕೀಚಕನಿಗೆ ಹೇಳಿದಳು : “ಕೀಚಕ, ನಿನ್ನನ್ನು ಪ್ರೇಮಿಸಿ ನಾವು ಕೊಲ್ಲುವುದಿಲ್ಲ. ನಿನ್ನನ್ನು ಕೊಲ್ಲುವ ವೀರರೇ ಬೇರೆ ಇದ್ದಾರೆ. ಸುಮ್ಮನೆ ಬಯಲ ಹರಟೆಯಿಂದ ಏನೂ ಪ್ರಯೋಜನವಿಲ್ಲ. ಈಗಲೂ ಹೇಳುತ್ತೇನೆ ಕೇಳು. ನನ್ನ ಪತಿಗಳಿಗೆ ತಿಳಿಸಿದರೆ ಅವರು ನಿನ್ನ ತಲೆಯನ್ನು ಕತ್ತರಿಸಿದಷ್ಟಕ್ಕೇ ತೃಪ್ತರಾಗುವುದಿಲ್ಲ. ನಿನ್ನ ಇಡೀ ವಂಶವೆಂಬ ಸಮುದ್ರವನ್ನೇ ಕಲಕಿಬಿಡುತ್ತಾರೆ”
ಪದಾರ್ಥ (ಕ.ಗ.ಪ)
ಸುಭಟ-ವೀರ, ಗಳಹು-ಹರಟು, ಅರಿ-ಕತ್ತರಿಸಿಹಾಕು, ಅನ್ವಯಾಬ್ಧಿ ಅನ್ವಯ-ವಂಶ ಅಬ್ಧಿ-ಸಮುದ್ರ (ಅಂದರೆ ನಿನ್ನ ವಂಶದವರನ್ನೆಲ್ಲ)
ಮೂಲ ...{Loading}...
ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ॥31॥
೦೩೨ ಕುಲದೊಳೊಬ್ಬನು ಜನಿಸಿ ...{Loading}...
ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಅಯ್ಯೋ ಅಯ್ಯೋ, ಕುಲದಲ್ಲಿ ಒಬ್ಬನು ಹುಟ್ಟಿಕೊಂಡು ವಂಶವೇ ನಿರ್ಮೂಲವಾಗುವಂತೆ ಮಾಡಿದನಲ್ಲ ಎಂಬ ಕೆಟ್ಟ ಕೀರ್ತಿ ಉಳಿದೀತೇ ಹೊರತು ಬೇರೆ ಯಾವ ಒಳ್ಳೆಯದನ್ನು ನಾನು ಕಾಣೆ. ಕೀಚಕ ! ಸುಮ್ಮನೆ ಹರಟಬೇಡ. ಆಮೇಲೆ ನಿನ್ನ ರಾಣಿಯರೆಲ್ಲ ನನ್ನನ್ನು ಕುರಿತು “ಈಕೆ ಕೊಲೆಗಡಿಕಳಾದ ಪಾಪಿ ಹೆಂಗಸು. ಅನೇಕರನ್ನು ಕೊಲ್ಲಿಸಿದವಳು, ಹಾಳಾಗಲಿ” ಎಂದು ಗೋಳಾಡುವಂತಾದೀತು" ಎಂದು ದ್ರೌಪದಿ ಹೇಳಿದಳು
ಪದಾರ್ಥ (ಕ.ಗ.ಪ)
ಅಳಿ-ನಾಶಪಡಿಸು, ದುರ್ಯಶ-ಅಪಕೀರ್ತಿ, ಗಳಹು-ಹರಟು
ಮೂಲ ...{Loading}...
ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ॥32॥
೦೩೩ ಹರಿ ವಿರಿಞ್ಚಿಗಳಾದೊಡೆಯು ...{Loading}...
ಹರಿ ವಿರಿಂಚಿಗಳಾದೊಡೆಯು ಸಂ
ಗರದೊಳೆನಗಿದಿರಿಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯೆಂದಳಿಂದುಮುಖಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ದ್ರೌಪದಿ ಇಬ್ಬರ ಮಾತುಗಳೂ ಇಲ್ಲಿವೆ : ಕೀಚಕ : “ಆಹಾ ! ವಿಷ್ಣು ಬ್ರಹ್ಮಾದಿಗಳು ಕೂಡ ಯುದ್ಧದಲ್ಲಿ ನನ್ನನ್ನು ಎದುರಿಸಲಾರರು. ಹುಚ್ಚಿ ! ಹುಡುಗಿಯಾದ ನಿನಗೆ ಹೇಳಿ ಏನು ಪ್ರಯೋಜನ ? ಎಲ್ಲಿ ನಿನ್ನ ಗಂಡಂದಿರನ್ನು ತೋರಿಸು”.
ದ್ರೌಪದಿ : “ಕೀಚಕ ಕೇಳು ರಾವಣನು ಪರಸ್ತ್ರೀಯಾದ ಸೀತೆಯನ್ನು ಸೆರೆಹಿಡಿದಾಗ ಕಪಿಗಳ ಹಿಂಡು ಲಂಕೆಯನ್ನು ಮುತ್ತಲಿಲ್ಲವೆ ? ವೀರ ರಾವಣನು ಸತ್ತು ಯಮನಗರಿಗೆ ಹೋದನು. ತಿಳಿಯೆಯಾ ?”
ಪದಾರ್ಥ (ಕ.ಗ.ಪ)
ವಿರಿಂಚಿ-ಬ್ರಹ್ಮ, ಸಂಗರ-ಸಮರ, ಯುದ್ಧ, ವಲ್ಲಭ-ಪತಿ
ಪಾಠಾನ್ತರ (ಕ.ಗ.ಪ)
‘ನಗರಿಗರಿಯಾಯ್ತೆಂದಳಿಂದು ಮುಖಿ’ - ‘ನಗರಿಗರಿಯಾಯೆಂದ’
ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಹರಿ ವಿರಿಂಚಿಗಳಾದೊಡೆಯು ಸಂ
ಗರದೊಳೆನಗಿದಿರಿಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯೆಂದಳಿಂದುಮುಖಿ ॥33॥
೦೩೪ ನೀರೆ ನೂಕದಿರೆನ್ನ ...{Loading}...
ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದುದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ದ್ರೌಪದಿಗೆ ಹೇಳುತ್ತಾನೆ. “ಸುಂದರಿ ! ನನ್ನನ್ನು ತಿರಸ್ಕರಿಸಬೇಡ. ಮೊದಲಿಗೇ ನನ್ನ ಮನಸ್ಸು ನಿನ್ನಲ್ಲಿ ನಟ್ಟುಕೊಂಡಿದೆ. ನೀನು ನನ್ನ ಮನಸ್ಸನ್ನು ಸೆಳೆದು ಮನ್ಮಥನ ಬಾಣಕ್ಕೆ ನನ್ನ ದೇಹವನ್ನು ತುತ್ತಾಗಿಸುತ್ತಿದ್ದೀಯೆ. ಈಗ ಜಾರಿಕೊಳ್ಳಬೇಡ. ನನ್ನ ಹೃದಯಕ್ಕೆ ತಾಪವನ್ನು ತರಬೇಡ. ದಯವಿಟ್ಟು ನನ್ನ ಮೇಲೆ ಕರುಣೆ ತೋರಿ, ಕಮಲಾಕ್ಷಿ, ನನ್ನ ಸಾವನ್ನು ತಪ್ಪಿಸು”.
ಪದಾರ್ಥ (ಕ.ಗ.ಪ)
ನೀರೆ-ಸುಂದರಿ, ಮುಮ್ಮಾರು ಹೋಗು<ಮುಮ್ಮಾಱುವೊಗು, ಮೊದಲೇ ಮೆಚ್ಚಿಕೋ, ಸೆಳೆತಕ್ಕೆ ಸಿಕ್ಕು, ಅಂಬು-ಬಾಣ, ಹೂಣಿಸು<ಪೂಣಿಸು, ಒಡ್ಡು
ಮೂಲ ...{Loading}...
ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದುದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ॥34॥
೦೩೫ ಮರುಳೆ ಮನದ ...{Loading}...
ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ
ಸರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಳು “ಹುಚ್ಚ ! ಮನೋವಿಕಾರವೆಂಬ ಮಾರಿಯ ಸಂಗಡ ಹುಡುಗಾಟವಾಡಬಾರದು. ಸಾವನ್ನು ಬಯಸಬಾರದು. ಉರಿಯುತ್ತಿರುವ ಪ್ರತಿಮೆಯನ್ನು ಅಪ್ಪಲು ಬಯಸಿ ಹಾಳಾಗಬಾರದು. ಮನ್ಮಥನ ಬಾಣಕ್ಕೆ ಯಾರಾದರೂ ಗುರಿಯಾಗುತ್ತಾರೆಯೆ ? ಪಾಪಿ! ನಿನ್ನ ಅರಮನೆಗೆ ನಡೆ. ನನ್ನ ವೀರಪತಿಗಳೇನಾದರೂ ನಿನ್ನನ್ನು ನೋಡಿದಲ್ಲಿ ಕಡಿದು ಹರವಿಬಿಡುತ್ತಾರೆ.’
ಪದಾರ್ಥ (ಕ.ಗ.ಪ)
ನೆರೆ-ಸೇರು, ಕೂಡು, ಸರಳಕಂಗೈಸುವರೆ- ಇದು ಸರಳಿಗಂಗೈಸುವರೆ (ಮನ್ಮಥನ ಬಾಣಗಳಿಗೆ ದೇಹವನ್ನು ಒಪ್ಪಿಸುತ್ತಾರೆಯೆ ?) ಎಂದಿರಬಹುದೆ ? ದಳ್ಳುರಿ-ಕಾಡುಕಿಚ್ಚು, ಕಡಿದುಹರಹು-ಕತ್ತರಿಸಿ ಹರಡು.
ಮೂಲ ...{Loading}...
ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ
ಸರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ॥35॥
೦೩೬ ತೋಳ ತೆಕ್ಕೆಯ ...{Loading}...
ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ದ್ರೌಪದಿಗೆ ಹೇಳಿದ.
“ಕಾಂತೆ, ನೀನು ನನಗೆ ತೋಳ ತೆಕ್ಕೆಯನ್ನು ತೊಡಿಸಿ ಮನ್ಮಥನ ಬಾಣದಿಂದ ನನ್ನನ್ನು ಪಾರು ಮಾಡು. ಆ ದುಷ್ಟ ಮನ್ಮಥನು ಮಾಡುವ ಕಗ್ಗೊಲೆಯ ವಿಷಯವನ್ನು ತಿಳಿದವರು ಮಾತಾಡದಿರುತ್ತಾರೆಯೆ ? ನನ್ನನ್ನು ಸೋಲಿಸುತ್ತಿದ್ದೇನೆಂಬ ಉಬ್ಬಿನಲ್ಲಿ ಬೀಗಿ ನನ್ನನ್ನು ಹರಟೆಕೋರ ಎಂದು ಹೇಳಬೇಡ. ನಾನು ಸಾಯುತ್ತಿದ್ದೇನೆ. ಸಾವಿನೊಂದಿಗೆ ಸರಸವೆ ? ನೀನು ಕಾಪಾಡಬೇಕು”
ಪದಾರ್ಥ (ಕ.ಗ.ಪ)
ಕೋಲು-ಬಾಣ
ಟಿಪ್ಪನೀ (ಕ.ಗ.ಪ)
ಈ ಪದ್ಯದ ಸಮಗ್ರ ಅರ್ಥಕಲ್ಪನೆ ಕಷ್ಟ. “ಮನ್ಮಥನು ಕೊಲೆಗಾರ ಎಂದು ತಿಳಿದವರು ಹೇಳುತ್ತಾರೆ. ನಾನು ನಿನಗೆ ಮನಸೋತಿದ್ದೇನೆ. ಗೆಲುವಿನ ಸಂಭ್ರಮದಲ್ಲಿ ನೀನು ನನ್ನನ್ನು ವಾಚಾಳಿ ಎಂದು ಟೀಕಿಸಬೇಡ. ಇದು ಲಘು ಸಂಗತಿಯಲ್ಲ. ನಾನೇ ಸಾಯುವ ಸ್ಥಿತಿಯಲ್ಲಿ ಇದ್ದೇನೆ…..” ಎಂಬರ್ಥ ಇಲ್ಲಿದೆ.
ಮೂಲ ...{Loading}...
ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ॥36॥
೦೩೭ ಉಳಿದ ತನ್ನರಸಿಯರ ...{Loading}...
ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ದ್ರೌಪದಿಗೆ ಕೈ ಮುಗಿಯುತ್ತ ಹೇಳಿದ. “ಸುಂದರಿ ನನ್ನ ಎಲ್ಲ ರಾಣಿಯರನ್ನು ನಿನ್ನ ಸೇವಕಿಯರನ್ನಾಗಿ ಮಾಡುತ್ತೇನೆ. ಕೇಳು ಸೈರಂಧ್ರಿ. ನನ್ನ ಶರೀರದ ಮೇಲೆ ನಿನಗೆ ಒಡೆತನವನ್ನು ಕೊಟ್ಟಿದ್ದೇನೆ ಸುಂದರಿ. ನಿನ್ನಲ್ಲಿ ನಟ್ಟುಕೊಂಡ ನನ್ನ ಕಣ್ಣು ಬೇರೆಡೆ ತಿರುಗುತ್ತಿಲ್ಲ. ನನ್ನ ದೇಹಕ್ಕೆ ಆಯಾಸ ಮಾಡಬೇಡ ಕೃಪೆಮಾಡು”
ಪದಾರ್ಥ (ಕ.ಗ.ಪ)
ತೊತ್ತಿರು-ಸೇವಕಿಯರು, ಲೋಚನ-ಕಣ್ಣು
ಮೂಲ ...{Loading}...
ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ॥37॥
೦೩೮ ನ್ಯಾಯವನು ಮಿಗೆ ...{Loading}...
ನ್ಯಾಯವನು ಮಿಗೆ ಗೆಲುವುದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೀನು ನ್ಯಾಯಮಾರ್ಗವನ್ನು ಮೀರುವ ಹಾಗೆ ಅನ್ಯಾಯ ಮಾಡುತ್ತಿದ್ದೀಯೆ. ಅಧಮನ ಅನ್ಯಾಯ ಮಾರ್ಗ ಎಂಬ ಕತ್ತಲೆಗೂ ಸ್ಥಿರವಾದ ಧರ್ಮ ಮಾರ್ಗ ಎಂಬ ಬೆಳಕಿಗೂ (ಸೂರ್ಯ) ವ್ಯತ್ಯಾಸವಿದೆ. ನೀನು ಮಿತಿಮೀರಿ ನಡೆದುಕೊಂಡರೆ ನನ್ನ ಪತಿಗಳು ತಡಮಾಡದೆ ನಿನ್ನನ್ನು ವಿಚಾರಿಸಿಕೊಳ್ಳುತ್ತಾರೆ. ಆ ನನ್ನ ಗಂಧರ್ವ ಪತಿಗಳು ಎಂಥ ಮಹಾವೀರರೆಂಬ ಸಂಗತಿಯನ್ನು ಬಲ್ಲವರೇ ಬಲ್ಲರು. ನಾಯಿಯಂತೆ ಇರುವ ನೀನು ಆ ಸಿಂಹಗಳಿಗೆ ಸಮವಲ್ಲ” ಎಂದು ಹೇಳಿ ಸೈರಂಧ್ರಿಯು ಅಲ್ಲಿಂದ ಹೊರಟಳು.
ಟಿಪ್ಪನೀ (ಕ.ಗ.ಪ)
(ಈ ಪದ್ಯದಲ್ಲಿ ಅನ್ವಯ ಕ್ಲೇಶವಿದೆ)
ಮೂಲ ...{Loading}...
ನ್ಯಾಯವನು ಮಿಗೆ ಗೆಲುವುದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ॥38॥
೦೩೯ ಹೂಣೆ ಹೊಕ್ಕುದು ...{Loading}...
ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದುದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಗೆದ್ದೇ ತೀರಬೇಕೆಂಬ ಹಠ ಕೀಚಕನಲ್ಲಿ ಹೊಕ್ಕಿತು. ತನ್ನ ವಿರಹ ಭಾವಕ್ಕೆ ಆಸೆಯು ಆಕೆಯ ಮಾತಿನಲ್ಲಿ ಕಾಣಲಿಲ್ಲ. (ಅವಳ ನಿರ್ಧಾರದ ಮಾತಿನಿಂದ ನಿರಾಶೆಯಾಯಿತು). ಆ ಕೀಚಕನ ಮನಸ್ಸಿನ ಸರ್ವಸ್ವವು ಅವಳ ಬಗೆಗೆ ಮೋಹವನ್ನು ಬೆಳೆಸಿಕೊಂಡಿತ್ತು. ಅವನ ಶಕ್ತಿ ಸಡಿಲವಾಯಿತು. ಬುದ್ಧಿ ಕದಡಿಹೋಯಿತು. ಕೈಯಲ್ಲಿ ಕತ್ತಿ ಹಿಡಿದು ಸುದೇಷ್ಣೆಯ ಅರಮನೆಗೆ ನುಗ್ಗಿದ. ಅಲ್ಲಿ ತನ್ನ ಅಕ್ಕನನ್ನು ನೋಡಿದ.
ಪದಾರ್ಥ (ಕ.ಗ.ಪ)
ಹೂಣೆ-ಛಲ, ಸಂಕಲ್ಪ, ಕೃಪಾಣಪಾಣಿ-ಕೈಯಲ್ಲಿ ಕತ್ತಿ ಹಿಡಿದವನು, ಐದು-ಸೇರು, ನಿಜಾಗ್ರಜೆ-ನಿಜ-ತನ್ನ ಅಗ್ರಜೆ-ಅಕ್ಕ
ಮೂಲ ...{Loading}...
ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದುದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ॥39॥
೦೪೦ ಹಣೆಯನಙ್ಘ್ರಿಗೆ ಚಾಚಲೆತ್ತಿದ ...{Loading}...
ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕನು ಸುದೇಷ್ಣೆಯ ಪಾದಗಳಿಗೆ ಹಣೆಯನ್ನು ಚಾಚಿದ. ಪ್ರೀತಿಯ ತಮ್ಮನನ್ನು ಸುದೇಷ್ಣೆ ಮೇಲೆತ್ತಿ ಅಪ್ಪಿಕೊಂಡು “ನನ್ನ ಮದಿಸಿದ ಆನೆಯೇ ಕುಳಿತುಕೋ” ಎಂದು ಕುಳ್ಳಿರಿಸಿ ಅವನನ್ನೇ ನೋಡುತ್ತಿದ್ದಳು. ಅವನ ಮುಖ ಹೆಣದ ಮುಖದಂತಾಗಿದೆ. “ಸೈರಂಧ್ರಿಯನ್ನು ಇವನು ಕೆಣಕಿದನೋ ಏನೊ ? ಕಡು ಪಾಪಿ ಇವನು ತನ್ನ ವಂಶವನ್ನೇ ನಾಶಮಾಡದೆ ಇರಲಾರನೆಂದು ಕಾಣುತ್ತದೆ. ಏನು ಮಾಡಲಿ ?” ಎಂದುಕೊಂಡು ಮರುಗಿದಳು.
ಪದಾರ್ಥ (ಕ.ಗ.ಪ)
ಅಂಘ್ರಿ-ಪಾದ, ಅಣಕಿಗ- ಪರಾಕ್ರಮಿ, ಶೂರ (ಕೃಷ್ಣ ಜೋಯಿಸ್), ಮದವಾರಣ-ಮದಿಸಿದ ಆನೆ (ದೊಡ್ಡವರು ಚಿಕ್ಕವರನ್ನು ಮಾತಾಡಿಸುವಾಗ ಮುದ್ದಿಗೆ ನನ್ನ ‘ಮದಿಸಿದ ಆನೆಯೇ’ ಎಂದು ಹೇಳುವ ರೂಢಿಯಿದೆ), ಮುಸುಡು-ಮುಖ, ಹಣಿದವಾಡು-ನಾಶಮಾಡು, ಮಾಣನ್-ಬಿಡುವುದಿಲ್ಲ.
ಮೂಲ ...{Loading}...
ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ॥40॥
೦೪೧ ಅಳುಕಿತಗ್ಗದ ಮಹಿಮೆ ...{Loading}...
ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕೀಚಕನ ಶ್ರೇಷ್ಠವಾದ ಹಿರಿಮೆ ಕುಂದಿತು. ಮುಖದ ಬೆಳಕು ಮಸುಕಾಯಿತು. ಚಿಂತೆಯ ಸಮುದ್ರದಲ್ಲಿ ಮುಳುಗಿದ ಹಾಗೆ ದೇಹದ ಕಾಂತಿ ಮಾಸಿತು. ಸುದೇಷ್ಣೆ ಕೀಚಕನನ್ನು ಕೇಳಿದಳು :ಕುಲಶಿರೋಮಣಿ ಕೀಚಕ ! ನಿನ್ನ ಮನಸ್ಸಿನಲ್ಲೇನಿದೆ ಹೇಳು" ಹಾಗೆಂದಾಗ ಕೀಚಕನು ನಸುನಾಚಿದ. ಮನ್ಮಥನ ಬಾಣದ ಹಿಳುಕು ಅವನ ವಿವೇಕವನ್ನು ಸೀಳಿ ಹಾಕಿತ್ತು. ನಗುತ್ತ ಅಕ್ಕನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಅಳುಕು-ಹಿಂದೆ ಸರಿ, ಅಗ್ಗ-ಶ್ರೇಷ್ಠವಾದ, ಮುಸುಡು-ಮುಖ, ಜಲಧಿ-ಸಮುದ್ರ, ಹಿಳುಕು-ಬಾಣದ ಹಿಂತುದಿ
ಮೂಲ ...{Loading}...
ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ॥41॥
೦೪೨ ಬೇರೆ ಬಿನ್ನಹವೇನು ...{Loading}...
ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ಹೇಳಿದ. “ಅಕ್ಕ ಹೇಳಲು ಬೇರೆ ಏನಿದೆ ? ನಿನ್ನ ಸಖಿಯರಲ್ಲಿ ಆ ಸೈರಂಧ್ರಿ ಎಲ್ಲರಿಗಿಂತ ನೂರು ಮಡಿ ಚೆಲುವಿನಿಂದ ನನ್ನ ಮನಸ್ಸನ್ನು ಸೂರೆಗೊಂಡಿದ್ದಾಳೆ. ನನ್ನನ್ನು ಮನ್ಮಥನಿಗೆ ಮಾರಾಟ ಮಾಡಿದ್ದಾಳೆ. ಈಗ ನಾನು ಅವಳಿಲ್ಲದೆ ಜೀವಿಸಲಾರೆ. ನೀನು ಆಕೆಯನ್ನು ಒಪ್ಪ್ಪಿಸಿ ನನ್ನ ವಶಕ್ಕೆ ಕೊಟ್ಟರೆ ನಾನು ಬದುಕಲು ದಾರಿಯಾಗುತ್ತದೆ ಅಷ್ಟೆ”.
ಪದಾರ್ಥ (ಕ.ಗ.ಪ)
ಬಿನ್ನಹ-ಪ್ರಾರ್ಥನೆ, ವಿಜ್ಞಾಪನ, ಅಸುವಿಂಗೆ-ಪ್ರಾಣಕ್ಕೆ, ಇಹುದು ನಿರ್ವಾಹ-ಅವಕಾಶವಾದಂತಾಗುತ್ತದೆ.
ಮೂಲ ...{Loading}...
ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ॥42॥
೦೪೩ ಕೀರ್ತಿಲತೆ ಕುಡಿಯೊಣಗಿತೈ ...{Loading}...
ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನಿನ್ನ ಕೀರ್ತಿಯ ಬಳ್ಳಿಯ ಕುಡಿ ಒಣಗಿದಂತಾಯಿತಲ್ಲ ! ನೀನು ಕಾಮ ಬಾಧೆಗೆ ಸಿಕ್ಕಿದೆಯಲ್ಲ ! ಅಯ್ಯೊ ! ನೀನು ಯಮನಂತೆ ಅವತರಿಸಿ ನಮ್ಮ ಕುಲವನ್ನು ಹಾಳುಮಾಡುತ್ತಿದ್ದೀಯಲ್ಲ ! ಸ್ಫೂರ್ತಿ ಕಳೆದುಕೊಂಡು ನೀನು ಹೀಗೆ ವರ್ತಿಸಿದರೆ ನಿನಗೆ ರಾವಣನಿಗೆ ಬಂದ ಸ್ಥಿತಿಯೇ ಬರುತ್ತದೆ. ಇದು ನಿನಗೆ ಗೊತ್ತಿಲ್ಲವೆ ? ನೋಡು ನಿನ್ನ ದುಷ್ಟತನವನ್ನು ಕಂಡು ನನಗೆ ಬಹಳ ಅಂಜಿಕೆಯಾಗಿದೆ" ಎಂದು ಹೇಳಿದಳು.
ಪದಾರ್ಥ (ಕ.ಗ.ಪ)
ಮದನಾರ್ತ-ಮನ್ಮಥ ಬಾಧೆಯಿಂದ ಕಂಗಾಲಾದವನು, ಆರ್ತಿ-ವ್ಯಥೆ, ಸಂಕಟ, (ರಾವಣನಾರ್ತಿ, ರಾವಣನ+ಆರ್ತಿ)
ಮೂಲ ...{Loading}...
ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ॥43॥
೦೪೪ ಬೇಟವೇ ಪರವಧುವಿನಲಿ ...{Loading}...
ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜಪುತ್ರರಿಗೆ ಅನ್ಯನ ಪತ್ನಿಯಲ್ಲಿ ಅನುರಾಗವೇ? ಪರರ ಧನವನ್ನು ಅಪಹರಿಸಬಹುದೆ ? ಯುದ್ಧದಲ್ಲಿ ಹೆದರಿ ಪಲಾಯನ ಮಾಡುವುದು ಯುಕ್ತವೆ ? (ನೀನು ಹಾಗೆ ಮಾಡುತ್ತಿದ್ದೀ) ಧೂರ್ತರ ಸಹವಾಸ ಮಾಡಿ ಅವರೊಂದಿಗೆ ಕಲಿತು ನೀನು ಈಗ ನಿಮ್ಮ ಭಾವ ವಿರಾಟರಾಯನಿಗೆ ಅವಸಾನ ಕಾಲವನ್ನು ತರುತ್ತಿದ್ದೀಯಲ್ಲ. ನಿನ್ನ ವರ್ತನೆಗಳನ್ನು ಕಂಡು ನನಗೆ ತುಂಬ ಭಯವಾಗಿದೆ” ಎಂದು ಹೇಳುತ್ತ ಸುದೇಷ್ಣೆಯು ಮುಖವನ್ನು ತಿರುಗಿಸಿಕೊಂಡಳು.
ಪದಾರ್ಥ (ಕ.ಗ.ಪ)
ಬೇಟ-ಪ್ರೀತಿ, ಪರವಿತ್ತ-ಅನ್ಯರಧನ, ಕೈಮಾಟ-ಕೈಹಾಕುವುದು, ಆಟವಿಕ-, ಅಡವಿಯ ಜನ, ಧೂರ್ತ
ಮೂಲ ...{Loading}...
ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ॥44॥
೦೪೫ ಅವಳ ಗಣ್ಡರು ...{Loading}...
ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
" ಅವಳ ಪತಿಗಳು ದೇವತೆಗಳು. ನಮಗೂ ದೇವತೆಗಳಿಗೂ ಮಧ್ಯೆ ಎಷ್ಟು ಅಂತರವಿದೆ ಗೊತ್ತೆ ? ಕೋಪಿಸಿಕೊಂಡರೆ ದೇವತೆಗಳ ಎದುರಿಗೆ ನಿಲ್ಲಲು ಯಾರಿಗೆ ಸಾಧ್ಯ ? ನಮ್ಮನ್ನು ಯಾರು ತಾನೇ ಕಾಪಾಡುತ್ತಾರೆ ಹೇಳು. ನನ್ನ ಮಾತು ಕೇಳು. ಅವಳ ಸಹವಾಸವೇ ಬೇಡ. ನನ್ನ ಅಂತಃಪುರದ ಸಖಿಯರ ಸಮೂಹದಲ್ಲಿ ನಿನಗೆ ಯಾರ ಮೇಲೆ ಮನಸ್ಸಿದೆ ಹೇಳು. ಅವಳನ್ನು ಕರೆತರಿಸಿ ಪ್ರೀತಿಯಿಂದ ಮದುವೆ ಮಾಡಿಕೊಡುತ್ತೇನೆ" ಎಂದು ಸುದೇಷ್ಣೆ ಹೇಳಿದಳು.
ಪದಾರ್ಥ (ಕ.ಗ.ಪ)
ದಿವಿಜದಳ-ದೇವ ಸೇನೆ, ನಿವಹ-ಸಮೂಹ
ಮೂಲ ...{Loading}...
ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ॥45॥
೦೪೬ ಅಕ್ಕ ಮರುಳೌ ...{Loading}...
ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಕ್ಕ ನಿನಗೆಲ್ಲೋ ಮರುಳು ! ನನ್ನ ಮನಸ್ಸು ಅವಳಲ್ಲಿ ಸಿಲುಕಿ ಬೇರು ಬಿಟ್ಟಿದೆ. ಮನಸ್ಸನ್ನು ಬೇರೆ ಇರಿಸಿ ಬರಿಯ ದೇಹಕ್ಕೆ ಮದುವೆ ಮಾಡಬಹುದೆ ? ನನ್ನ ವರ್ತನೆಯನ್ನು ಮಕ್ಕಳ ಆಟ ಎಂದು ಯಾರಾದರೂ ಭಾವಿಸಿದರೂ ಚಿಂತೆಯಿಲ್ಲ. ಯೋಗ್ಯರಾದವರು ಈ ವರ್ತನೆ ಸಾಧುವಲ್ಲ ಎಂದು ಹೇಳಲಿ ಚಿಂತೆಯಿಲ್ಲ. ಅಕ್ಕ ನಿಜವಾಗಿ ನಿನಗೆ ನನ್ನನ್ನು ಕಾಪಾಡುವ ಬುದ್ಧಿ ಇದ್ದರೆ ಆ ಸೈರಂಧ್ರಿಯನ್ನು ನನಗೆ ಸೇರಿಸು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಡಿಂಬ-ಶರೀರ, ಬೇರ್ವರಿ ಬೇರು+ಪರಿ-ಬೇರು ಬಿಟ್ಟಿದೆ, ತಕ್ಕರು-ಯೋಗ್ಯರು
ಮೂಲ ...{Loading}...
ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ॥46॥
೦೪೭ ಸೊಗಸದಿತರರ ಮಾತು ...{Loading}...
ಸೊಗಸದಿತರರ ಮಾತು ಕಣ್ಣುಗ
ಳೊಗಡುವವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಅಕ್ಕ ನನಗೆ ಈಗಿನ ಸ್ಥಿತಿಯಲ್ಲಿ ಬೇರೆ ಯಾರ ಮಾತೂ ಹಿಡಿಸುವುದಿಲ್ಲ. ನನ್ನ ಕಣ್ಣುಗಳಿಗೆ ಅವಳನ್ನು ಬಿಟ್ಟು ಇತರರ ರೂಪ ಹಿಡಿಸುವುದಿಲ್ಲ. ನನ್ನ ನಾಲಗೆಗೆ ಇತರರ ಹೆಸರುಗಳು ಶತ್ರುಗಳಾಗಿವೆ. ನಾನೀಗ ಬಿಸಿಲ ಬೇಗೆಗೆ ತತ್ತರಿಸುವ ಸಸಿಯಂತಾಗಿದ್ದೇನೆ. ಅಕ್ಕ ನನ್ನ ಇಷ್ಟಾರ್ಥವನ್ನು ಪೂರೈಸಿಕೊಡು. ಕರುಳು ಹರಿದಂತಾಗಿರುವ ಜಿಂಕೆಯ ಮರಿಯನ್ನು ಕಾಪಾಡಬೇಕು” ಎಂದು ಹೇಳಿ ಕೀಚಕ ಆಕೆಯ ಪಾದಕ್ಕೆ ನಮಸ್ಕರಿಸಿದ.
ಪದಾರ್ಥ (ಕ.ಗ.ಪ)
ಒಗಡು - ಓಕರಿಸು , ರೂಹು-ರೂಪ, ಸೆಗಳಿಕೆ-ಧಗೆ, ಸೆಗಳಿಕೆಯ ಸಸಿ-ಬೇಗೆಗೆ ಬಾಡಿದ ಸಸಿ
ಪಾಠಾನ್ತರ (ಕ.ಗ.ಪ)
ಕಣ್ಣುಗಳೊಗಡಿಸುವುವುಳಿದವರ ರೂಹನು - ಇದು ಎಂ.ವಿ.ಸೀ ಅವರು ಸೂಚಿಸಿರುವ ಪಾಠ
ಕಣ್ಣುಗಳೊಗಡುವವು ಮಿಕ್ಕವರ ರೂಹನು- ಈ ಪಾಠವನ್ನು ಒಪ್ಪಿಕೊಳ್ಳಲಾಗಿದೆ. ವಿರಾಟಪರ್ವ , ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಒಗಡುವವು ಎಂಬ ಪಾಠವನ್ನು ಅಂಗೀಕರಿಸಿದರೆ ಅರ್ಥವಿಸುವುದು ಸುಲಭ (ಇತರರ ಮಾತು ನನಗೆ ಸೇರುವುದಿಲ್ಲ) “ಕಣ್ಣುಗಳಿಗೆ ಇತರರ ರೂಪ ಓಕರಿಕೆ ತರುತ್ತದೆ”
ಮೂಲ ...{Loading}...
ಸೊಗಸದಿತರರ ಮಾತು ಕಣ್ಣುಗ
ಳೊಗಡುವವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ॥47॥
೦೪೮ ಅಲಿ ನೀರೇರಿದವು ...{Loading}...
ಅಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸುದೇಷ್ಣೆಯ ಕಣ್ಣಿನಲ್ಲಿ ನೀರು ತುಂಬಿತು. ತಮ್ಮನ ಮೇಲಣ ಮೋಹ ಹೆಚ್ಚಾಯಿತು. ಅವಳು ತಮ್ಮನು ಯಮನ ಪಾಳೆಯಕ್ಕೆ ಹೋಗಲು ಅನುವು ಮಾಡಿದಳು. ತಮ್ಮನನ್ನು ಮೇಲೆತ್ತಿ " ಏಳು. ನಿನ್ನ ಮನೆಗೆ ಹೋಗು. ನಾಳೆಯ ದಿನ ಸೈರಂಧ್ರಿಯನ್ನು ಕಳಿಸುತ್ತೇನೆ. ಪರಸತಿಯ ಸಹವಾಸ ಒಳ್ಳೆಯದಲ್ಲ" ಎನ್ನುತ್ತ ತಮ್ಮನನ್ನು ಬೀಳ್ಕೊಟ್ಟಳು.
ಪದಾರ್ಥ (ಕ.ಗ.ಪ)
ಆಲಿ-ಕಣ್ಣುಗುಡ್ಡೆ, ತಳಿತುದು-ಆವರಿಸಿತು, ಪಾಳಯ-ಶಿಬಿರ, ನೆಗಹು-ಮೇಲೆತ್ತು
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಕೀಚಕನು ಅಕ್ಕನನ್ನು ಒಲಿಸಿದ ಪರಿಯೇ ಬೇರೆ “ಸೋದರಿ ನಿನಗೆ ಗೊತ್ತಿಲ್ಲ. ರೂಪವಂತನೂ ಬಲಶಾಲಿಯೂ, ವಾಕ್ ಚತುರನೂ ಆದ ಗಂಡಸನ್ನು ಯಾವ ಹೆಂಗಸೂ (ಆಕೆ ಪತಿವ್ರತೆಯಾಗಿದ್ದರೂ ಕೂಡ) ತಿರಸ್ಕರಿಸುವುದಿಲ್ಲ”
[ಕಪ್ಪಗಂತುಲ ಲಕ್ಷ್ಮಣಶಾಸ್ತ್ರಿಗಳ ಮೂಲಭಾರತದ ತೆಲುಗು ಅನುವಾದದಲ್ಲಿ (ವಿರಾಟಪರ್ವಮು) ಪುಟ 60]
ಮೂಲ ...{Loading}...
ಅಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ॥48॥
೦೪೯ ಮನದೊಳಗೆ ಗುಡಿಗಟ್ಟಿದನು ...{Loading}...
ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕ್ಕನ ಆಶ್ವಾಸನೆಯಿಂದ ಕೀಚಕನು ಒಳಗೊಳಗೇ ಸಂಭ್ರಮಪಟ್ಟ. ಆಹಾ ! ಸೈರಂಧ್ರಿಯ ಕೃಪಾಕಟಾಕ್ಷ ಎಂಬ ಮದ್ಯದ ಪಾತ್ರೆಯು ನನ್ನ ಪುಣ್ಯವಲ್ಲವೆ ಎಂದುಕೊಂಡು ಅಕ್ಕನನ್ನು ಬೀಳ್ಕೊಟ್ಟು ಮನಸ್ಸಿನಲ್ಲಿ ಕವಿದಿದ್ದ ಮರುಳುತನದ ಸಂಭ್ರಮದಿಂದ ಮನೆಗೆ ಹೋದ. ಈ ಕಡೆ ಸೂರ್ಯನು ಮುಳುಗುವ ಸಮಯವಾಯಿತು.
ಪದಾರ್ಥ (ಕ.ಗ.ಪ)
ಗುಡಿಗಟ್ಟು-ಸಂಭ್ರಮಿಸು, ಅಪಾಂಗ-ಕಡೆಗಣ್ಣು, ರಸಭಾಜನ-ಮದ್ಯಪಾತ್ರೆ, ದಿನಕರ-ಸೂರ್ಯ, ಅಸ್ತಾಚಲಾದ್ರಿ-(ಸೂರ್ಯನು) ಮುಳುಗುವ ಪಶ್ಚಿಮದ ಬೆಟ್ಟ.
ಮೂಲ ...{Loading}...
ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ॥49॥
೦೫೦ ವರ ದಿಗಙ್ಗನೆಯಿಟ್ಟ ...{Loading}...
ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದೊಳವನಿ ತಳತಳಿಸೆ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಗಂಗನೆ ಇಟ್ಟುಕೊಂಡ ಚಂದನದ ತಿಲಕದಂತೆ, ರತಿಯ ಕೈಯಲ್ಲಿರುವ ಕನ್ನಡಿಯಂತೆ, ಮನ್ಮಥನ ಬಿರುದಾವಳಿಯಂತೆ, ಪ್ರೇಮದಲ್ಲಿ ವಿರಹಿಯಾದವನನ್ನು ಸುಡುವ ಕೆಂಡದ ಉಂಡೆಯಂತೆ ನಡುವೆ ಭೂಮಿ ತಳತಳನೆ ಹೊಳೆಯುವಂತೆ ಚಂದ್ರೋದಯವಾಯಿತು.
ಪದಾರ್ಥ (ಕ.ಗ.ಪ)
ದಿಗಂಗನೆ-ದಿಕ್ಕಿನ ಕನ್ಯೆ, ಒಡ್ಡಣ-ರಾಶಿ, ಸಮೂಹ, ಸುರತವಿರಹಿ-ಕಾಮಬಾಧಿತ ವಿರಹಿ, ಹೊರಳಿ-ಸಮೂಹ, ಉಂಡೆ, ಪುಂಜ, ಹಿಮಕರ-ಚಂದ್ರ, ರಜನಿ-ರಾತ್ರಿ
ಟಿಪ್ಪನೀ (ಕ.ಗ.ಪ)
ವರ ದಿಗಂಗನೆ : ಈ ಪದ್ಯದಲ್ಲಿ ‘ರ’ಕಾರ ಪ್ರಾಸವಿದೆ ಆದರೆ ಎರಡನೆಯ ಸಾಲಿನಲ್ಲಿ ‘ತಿಲಕ’ ಎಂದು ಪ್ರಾಸ ತಪ್ಪಿದೆ. ಇದು ‘ಎರಕ’ ಇರಬಹುದೆ ? (ಕೃಷ್ಣ ಜೋಯಿಸರ ವಿರಾಟಪರ್ವದಲ್ಲಿ ಈ ಪದ್ಯವೇ ಇಲ್ಲ) (ವರದಿಗಂಗನೆ ಯಿಟ್ಟ ಚಂದನದೆರಕವೋ….)
ಮೂಲ ...{Loading}...
ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದೊಳವನಿ ತಳತಳಿಸೆ ॥50॥
೦೫೧ ಬೆಚ್ಚಿದವು ಚಕ್ರಾಙ್ಕಯುಗ ...{Loading}...
ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಗಲಲ್ಲಿ ಒಂದುಗೂಡುವ ಚಕ್ರವಾಕದ ಜೋಡಿಗಳು ಈಗ ಕತ್ತಲಾದುದಕ್ಕೆ ಬೆಚ್ಚಿದುವು. ಮರಿದುಂಬಿಗಳು ಕುಮುದ ಪುಷ್ಪಗಳನ್ನು ಕಚ್ಚಿದುವು. ತಾವರೆಗಳು ತಮ್ಮಷ್ಟಕ್ಕೆ ತಾವೇ ಮುಖಗಳನ್ನು ಮುದುರಿಕೊಂಡುವು. ಸಮುದ್ರದ ಅಲೆಗಳು ಚಂದ್ರೋದಯವಾದ ಕಾರಣ ಉಬ್ಬೆದ್ದುವು. ವಿಟಸ್ತ್ರೀಯರು ಬೆಚ್ಚಿದರು. ಹೀಗೆ ಚಂದ್ರನು ಪ್ರೇಮಿಗಳಿಂದ ದೂರ ಉಳಿದ ಜನರ ಮನಸ್ಸಿನಲ್ಲಿ ಕಿಚ್ಚನ್ನು ಇಟ್ಟನು.
ಪದಾರ್ಥ (ಕ.ಗ.ಪ)
ಚಕ್ರಾಂಕ ಯುಗ-ಚಕ್ರವಾಕ ಪಕ್ಷಿಗಳ ಜೋಡಿ, ಯುಗ-ಜೋಡಿ, ಕುಮುದ-ನೈದಿಲೆ, ಜಾರೆ-ವಿಟಸ್ತ್ರೀ, ವಿಯೋಗ-ಯೋಗ ಘಟಿಸದ, ಪ್ರಿಯ-ಪ್ರಿಯೆಯರಿಂದ ದೂರ ಉಳಿದ.
ಮೂಲ ...{Loading}...
ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ॥51॥
೦೫೨ ಖಳನ ವಿರಹದ ...{Loading}...
ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೀಚಕ ಕಾಮುಕನ ವಿರಹದ ತಾಪವು ಅಧಿಕವಾಗಿ ಆತ ತನ್ನ ಮನೆಗೆ ಬಂದ. ಕಳವಳಿಸುತ್ತ ಚಿಗುರಿನ ಹಾಸಿಗೆಯ ಮೇಲೆ ಮಲಗಿಕೊಂಡ. ಚಂದ್ರನು ಬಂದದ್ದು ತನ್ನನ್ನು ಕೊಲ್ಲಲೆಂದೇ ಎಂದು ಭಾವಿಸಿದ. ಆ ಪಾಪಿಯಾದ ಬ್ರಹ್ಮನು ಈ ಚಂಚಲಗಣ್ಣಿನ ಸೈರಂಧ್ರಿಗೆ ಏಕೆ ಇಷ್ಟೊಂದು ಚೆಲುವನ್ನು ಕೊಟ್ಟ ಎಂದು ಯೋಚಿಸಿದ.
ಪದಾರ್ಥ (ಕ.ಗ.ಪ)
ವೆಗ್ಗಳಿಸು-ಅಧಿಕವಾಗು, ತಳಿರಹಾಸು-ಚಿಗುರಿನ ಹಾಸಿಗೆ, ನಳಿನ ವೈರಿ-ತಾವರೆಯ ವೈರಿಯಾದ ಚಂದ್ರ, ಕಮಲಜ-ಬ್ರಹ್ಮ, ಚಲಿತಲೋಚನೆ-ಚಂಚಲವಾದ ಕಣ್ಣುಳ್ಳವಳು
ಮೂಲ ...{Loading}...
ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ॥52॥
೦೫೩ ಹಾಸಿದೆಳೆದಳಿರೊಣಗಿದುವು ...{Loading}...
ಹಾಸಿದೆಳೆದಳಿರೊಣಗಿದುವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಬಾಧೆ ತಡೆಯಲೆಂದು ಹಾಸಿಕೊಂಡಿದ್ದ ಹಾಸಿಗೆಯ ಎಳೆಯ ಚಿಗುರುಗಳು ಧಗೆಯಿಂದಾಗಿ ಒಣಗಿ ಹೋದವು. ನಿಟ್ಟುಸಿರಿನ ಬೇಗೆಗೆ ಮೆಲ್ಲನೆ ಬೀಸುತ್ತಿದ್ದ ಸುಳಿ ಬಾಳೆಯ ಎಲೆಗಳು ಬಾಡಿ ಹೋದವು. ಇವೆಲ್ಲ ಮನ್ಮಥನು ಕೀಚಕನ ಕೊಲೆಗೆ ಹೂಡಿದ ಆಟ. ಏನು ಮಾಡಿದ ಗೊತ್ತೆ ? ಆ ಶಶಿ, ಆ ಕೋಗಿಲೆ, ಆ ದುಂಬಿ, ಆ ತಾವರೆ, ಆ ಮಲ್ಲಿಗೆ ಎಲ್ಲವನ್ನೂ ಮನ್ಮಥನು ಕೈಬೀಸಿ ಕರೆದಿದ್ದ.
ಪದಾರ್ಥ (ಕ.ಗ.ಪ)
ಎಳದಳಿರು-ಎಳೆಯ ತಳಿರು-ಚಿಗುರು, ಸುಯಿಲು-ನಿಟ್ಟುಸಿರು, ಝಳ-ಬೇಗೆ, ಕುಸುಮಾಸ್ತ್ರ-ಮನ್ಮಥ
ಟಿಪ್ಪನೀ (ಕ.ಗ.ಪ)
ಇವೆಲ್ಲ ಸಾಂಪ್ರದಾಯಿಕ ವರ್ಣನೆಗಳು. ವಿರಹಿಗಳ ಸ್ಥಿತಿಯನ್ನು ವರ್ಣಿಸಲು ಕವಿಗಳು ಬಳಸುವ ಪರಂಪರೆಯ ಕವಿಸಮಯಗಳು. ಪ್ರೇಮದ ಕಾವಿಗೆ ಚಿಗುರು ಒಣಗುತ್ತದೆ, ನಿಟ್ಟುಸಿರಿಗೆ ಎಳೆ ಬಾಳೆಗಳು ಬಾಡುತ್ತವೆ. ಮನ್ಮಥನು ಪುಷ್ಪಗಳನ್ನು ಕೀಟ, ಪಕ್ಷಿಗಳನ್ನು ಬಳಸಿಕೊಂಡು ವಿರಹಿಗಳ ಮೇಲೆ ಧಾಳಿ ನಡೆಸುತ್ತಾನಂತೆ. ಮುಂದಿನ ಪದ್ಯಗಳಲ್ಲೂ ಈ ಬಗೆಯ ವರ್ಣನೆ ಮುಂದುವರಿದಿದೆ.
ಮೂಲ ...{Loading}...
ಹಾಸಿದೆಳೆದಳಿರೊಣಗಿದುವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ॥53॥
೦೫೪ ಉರಿದುದೊಡಲೊಳು ವೀಳೆಯದ ...{Loading}...
ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಪ ತಡೆಯಲಾರದೆ ಆತನು ದೇಹದ ಮೇಲೆ ಇರಿಸಿಕೊಂಡ ವೀಳ್ಯಗಳು ಕರ್ಪೂರದ ಹಳುಕುಗಳು ಉರಿದು ಹೋದವು. ದೇಹಕ್ಕೆ ಹಚ್ಚಿಕೊಂಡಿದ್ದ ಸುಗಂಧದ ಲೇಪ ಹಾಗೆಯೇ ಸುಟ್ಟು ಕರಕಲಾಗಿ ಹೋದವು. ತುಂಬು ಬೆಳುದಿಂಗಳು ಕೀಚಕನ ಪಾಲಿಗೆ ಕರಗಿ ಕುದಿಯುವ ತವರಗಳಂತಾದುವು.
ಪದಾರ್ಥ (ಕ.ಗ.ಪ)
ಹಳಕು-ಹಳುಕು, ತುಂಡು, ಕರ್ದಮ-ಸುಗಂಧದ ನೀರು, ಕರಿಕುವರಿ-ಸುಟ್ಟು ಕಪ್ಪಾಗು, (ಕರುಕು+ಪರಿ) ಕಡುಗು-ಏರಿಬಾ, ಆವೇಶಗೊಳ್ಳು
ಮೂಲ ...{Loading}...
ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ॥54॥
೦೫೫ ಪರಿಮಳದಿ ಸುಳಿವಾಲವಟ್ಟದೊ ...{Loading}...
ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಧೆ ತಡೆಯಲಾರದೆ ಕೀಚಕನು ಎದ್ದು ಚಂದ್ರಕಾಂತ ಶಿಲೆಯ ಮಹಡಿಯ ಮೇಲೆ ತಂಪು ಪಡೆಯಲು ಹೋಗಿ ಮಲಗಿದ. ಅಲ್ಲಿ ಸುವಾಸನೆಯನ್ನು ಬೀರುತ್ತಿದ್ದ ಬೀಸಣಿಗೆಗೂ ಬಾಗದೆ ಲೇಪಿಸಿದ್ದ ಗಂಧ ಕರ್ಪೂರಗಳು ಸೀದು ಹೋದವು. ಅದೆಲ್ಲ ಅವನ ಕಾಮ ತಾಪದ ಫಲ. ಅಲ್ಲೂ ನಿದ್ದೆ ಬರದೆ ಆ ಪಾತಕನು ಮೇಲು ಮಾಡದಲ್ಲಿ ಪರಮ ಪತಿವ್ರತೆ ಸೈರಂಧ್ರಿಯ ಮೇಲೆ ಮೋಹವಿರಿಸಿ ಪ್ರಾಣದಾಸೆಯನ್ನು ಬಿಟ್ಟು ಹೊರಳಾಡುತ್ತಿದ್ದ.
ಪದಾರ್ಥ (ಕ.ಗ.ಪ)
ಆಲವಟ್ಟ-ಬೀಸಣಿಗೆ (ಬಟ್ಟೆಯ ಬೀಸಣಿಗೆ), ಪೂಸು-ಲೇಪಿಸು, ಹರಣ-ಪ್ರಾಣ, ಮೇಲುಮಚ್ಚು-ಮೇಲು ಮಾಡ, ಮಹಡಿ
ಮೂಲ ...{Loading}...
ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ ॥55॥
೦೫೬ ಅರೆಗಳಿಗೆ ಯುಗವಾಗಿ ...{Loading}...
ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುಡದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಕೀಚಕನು ಪ್ರತಿ ಅರ್ಧಗಳಿಗೆಯನ್ನು ಒಂದೊಂದು ಯುಗ ಎಂದು ಭಾವಿಸಿದ್ದ. ಅನಂತರ ಪೂರ್ವಪರ್ವತದ ಶೃಂಗದಲ್ಲಿ ಸೂರ್ಯ ಕಾಣಿಸಿಕೊಂಡು ಲೋಕದ ಕತ್ತಲನ್ನು ತೊಡೆದುಹಾಕಿದ. ತಾವರೆಗಳು ಅರಳಿ ತಮ್ಮ ಪರಿಮಳದ ಉಡುಗೊರೆಯಿಂದ ದುಂಬಿಗಳನ್ನು ತಮ್ಮೆಡೆಗೆ ಸೆಳೆದವು ಎಂಬಂತೆ ಕಾಣಿಸಿತು. ಈಗ ಸೂರ್ಯೋದಯದಿಂದಾಗಿ ಚಂದ್ರನಿಗೆ ವಿರಹದ ಬಾಧೆ ತಗುಲಿ ಕೊಂಡಿತು.
ಪದಾರ್ಥ (ಕ.ಗ.ಪ)
ಉದಯಾಚಲ-ಪೂರ್ವ ಪರ್ವತ, ಶಿರ-ಪರ್ವತದ ಶೃಂಗ, ತರಣಿ-ಸೂರ್ಯ, ಭುವನ-ಲೋಕ, ತೊಡೆ-ಹೋಗಲಾಡಿಸು, ಪಾವುಡ-ಉಡುಗೊರೆ, ಕುಮುದಿನೀ ಪತಿ-ಚಂದ್ರ.
ಟಿಪ್ಪನೀ (ಕ.ಗ.ಪ)
ಕೀಚಕನನ್ನು ರತ್ನಾಕರ ವರ್ಣಿ ಹೇಳುವ ‘ಸ್ಮರಪಿಶಾಚ ವಿಜೃಂಭಿತ’ರ ಗುಂಪಿಗೆ ಸೇರಿಸಬಹುದು.
ಮೂಲ ...{Loading}...
ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುಡದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ॥56॥