೨೧

೦೦೦ ಸೂ ಕಳುಹಿದನು ...{Loading}...

ಸೂ. ಕಳುಹಿದನು ಯಮಸೂನು ವಂಶ
ಪ್ರಳಯನನು ಪ್ರಾಯೋಪವೇಶವ
ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ ॥1॥

೦೦೨ ಕೊಳ್ಳಿ ಸೆರೆಯನು ...{Loading}...

ಕೊಳ್ಳಿ ಸೆರೆಯನು ನಿಮ್ಮ ಸಹಭವ
ರೆಲ್ಲರೂ ಕಡುಮೂರ್ಖರಿದು ನಿ
ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು
ಖುಲ್ಲರಿವದಿರ ಬಿಡಿಸಿದೊಡೆ ತಳು
ವಿಲ್ಲದಹುದಪಘಾತ ಸಾಕಿ
ನ್ನೆಲ್ಲಿಯದು ನಯ ಬೀಳುಗೊಡಿ ನೀವೆಂದನಾ ಖಚರ ॥2॥

೦೦೩ ಮಾನಭಙ್ಗವೆ ಬರಲಿ ...{Loading}...

ಮಾನಭಂಗವೆ ಬರಲಿ ಮೇಣಭಿ
ಮಾನವಾಲಿಂಗಿಸಲಿ ಚರಣದೊ
ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು
ನೀನೆಮಗೆ ಬಾಂಧವನೆನುತ ಸ
ನ್ಮಾನದಲಿ ಕಳುಹಿದನು ಬಳಿಕು
ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ ॥3॥

೦೦೪ ಕಳುಹಿದನು ಖೇಚರನನವನಿಪ ...{Loading}...

ಕಳುಹಿದನು ಖೇಚರನನವನಿಪ
ತಿಲಕ ನೋಡಿದನೀತನನು ನಿಜ
ಲಲನೆಯನು ಕರೆದನು ಸುಯೋಧನ ನೊಂದನಕಟೆನುತ
ನಳಿನಮುಖಿ ಹೆಡಗೈಯ ಬಿಡುಕಲು
ನೆಲನು ಹಾಸಿಕೆ ಹಂಸತಲ್ಪದ
ತಳುಕಿನಲಿ ಪವಡಿಸುವಗೀ ವಿಧಿಯೇ ಶಿವಾಯೆಂದ ॥4॥

೦೦೫ ಬನ್ದಳಬುಜಾನನೆ ಸುಯೋಧನ ...{Loading}...

ಬಂದಳಬುಜಾನನೆ ಸುಯೋಧನ
ನಂದವನು ನೋಡಿದಳು ಸುಯ್ದಳು
ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ
ಒಂದುಕೈ ಗಲ್ಲದಲಿ ಬಿಡಿಸಿದ
ಳೊಂದು ಕೈಯಲಿ ಭುಜದ ಪಾಶವ
ನಿಂದುಮುಖಿ ದುರಿಯೋಧನನ ದುಶ್ಯಾಸನನು ಸಹಿತ ॥5॥

೦೦೬ ಕೆಳದಿಯರ ಕೈಯಿನ್ದ ...{Loading}...

ಕೆಳದಿಯರ ಕೈಯಿಂದ ಕೊಯ್ಸಿದ
ಳುಳಿದ ಕೌರವನನುಜ ವರ್ಗದ
ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ
ಅಳಲಿಸಿದನೇ ಖಚರನಾತನ
ಕೊಲಿಸಬೇಹುದು ಕಳುಹಿ ಕಷ್ಟವ
ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ ॥6॥

೦೦೭ ಅರಸ ನೊನ್ದೈ ...{Loading}...

ಅರಸ ನೊಂದೈ ಮರ್ದನಕೆ ಮ
ಲ್ಲರುಗಳಿಲ್ಲೆಮಗೊತ್ತುವವು ಕಲು
ಹರಳು ಮಜ್ಜನ ಭೋಗಿಸುವರೆ ಸಿತಾಂಬು ತಿಳಿಗೊಳನು
ಹರಿಣ ಶಾರ್ದೂಲಾದಿ ಚರ್ಮಾಂ
ಬರವೆ ಸಮಕಟ್ಟೆಮಗೆ ರತ್ನಾ
ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ ॥7॥

೦೦೮ ವಾರುವವು ವಟಶಾಖೆ ...{Loading}...

ವಾರುವವು ವಟಶಾಖೆ ಗಿರಿಗಳು
ತೋರ ಕರಿಗಳು ಭದ್ರಗಜ ವನ
ಭೂರುಹದ ನೆಳಲೆಮಗೆ ಸತ್ತಿಗೆ ಪಲ್ಲವವ್ರಾತ
ಚಾರು ಚಾಮರ ಕಿರುಮೊರಡಿ ವಿ
ಸ್ತಾರ ಪೀಠವು ಹಂತಿಗಾರರು
ಭೂರಿ ಸರ್ಪಾವಳಿಗಳರಮನೆ ಹೊದರು ಹೊಸ ಮೆಳೆಯ ॥8॥

೦೦೯ ಈ ವಿಪತ್ತಿನ ...{Loading}...

ಈ ವಿಪತ್ತಿನ ನಿಮ್ಮಡಿಯ ಸಂ
ಭಾವಿಸುವರೆಮಗಾದ ವಸ್ತುಗ
ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ
ದೇವನಿರ್ಪನು ಧರ್ಮಸುತನಿ
ನ್ನಾವುದುಚಿತಾನುಚಿತವೆಂಬುದ
ಭಾವನವರೇ ಬಲ್ಲಿರೆಂದಳು ದ್ರೌಪದಾದೇವಿ ॥9॥

೦೧೦ ಮಾನಿನಿಯ ಕಟಕಿಯ ...{Loading}...

ಮಾನಿನಿಯ ಕಟಕಿಯ ಮಹಾಸ್ತ್ರಕೆ
ಮೌನವನು ಮರೆಗೊಂಡು ಕಲುಷ
ಧ್ಯಾನನಿದ್ದನು ಚಿತ್ತದಲಿ ಬೇರೊಂದ ಚಿಂತಿಸುತ
ಭಾನುಮತಿ ಕೈಮುಗಿದಳೀ ಕ
ರ್ಣಾನುಗತ ತಾಟಂಕ ಮುದ್ರೆಯ
ನೀನೆಲೈ ದಯಗೈದೆಯೆಂದೆರಗಿದಳು ಚರಣದಲಿ ॥10॥

೦೧೧ ಎತ್ತಿದನು ರಾಣಿಯನು ...{Loading}...

ಎತ್ತಿದನು ರಾಣಿಯನು ನೃಪ ತಲೆ
ಗುತ್ತಲೇಕೈ ನಿನಗೆ ಬಂದಾ
ಪತ್ತು ನಮ್ಮದು ನಮ್ಮ ತೊಡಕಿನ ತೋಟಿಗಳು ನಿನಗೆ
ಹೆತ್ತ ತಾಯ್ ಗಾಂಧಾರಿ ನದಿ ನಾ
ವಿತ್ತಡಿಗಳಕಟಕಟ ನೀ ದು
ಶ್ಚಿತ್ತನಾಗದಿರೆಂದು ನುಡಿದನು ನೃಪತಿ ಕೌರವಗೆ ॥11॥

೦೧೨ ದ್ರೋಣರೆನ್ದುದ ಮಾಡೆ ...{Loading}...

ದ್ರೋಣರೆಂದುದ ಮಾಡೆ ಭೀಷ್ಮನ
ವಾಣಿ ವಿಷವೈ ನಿನಗೆ ವಿದುರನು
ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯೆ ನೀನಿವರ
ಪ್ರಾಣ ವಾಯುಗಳವರು ಸುಭಟ
ಶ್ರೇಣಿ ದೇಹಕೆ ನಿನ್ನ ತನು ನಿ
ತ್ರಾಣವದರಿಂದಾಯ್ತು ಪರಿಭವವೆಂದನಾ ಭೂಪ ॥12॥

೦೧೩ ಬಿಡಿಸದಧರದ್ವಯ ವಿಷಾದದ ...{Loading}...

ಬಿಡಿಸದಧರದ್ವಯ ವಿಷಾದದ
ತಡಿಯ ಚಿತ್ತದ ನೆಯ್ಗೆ ಬೇರೊಂ
ದೆಡೆಯಲಿದ್ದುದು ಬೀಳುಕೊಂಡನು ಧರ್ಮನಂದನನ
ಒಡನೆ ಬಂದರು ರಾಣಿಯರು ಕೈ
ಗುಡಿಯವರ ಸುದ್ದಿಯಲಿ ಸೂಸಿದ
ಪಡೆಯು ನಿಮಿಷಕೆ ನೆರೆದುದಿನಸುತ ಸೌಬಲರು ಸಹಿತ ॥13॥

೦೧೪ ಭಟರ ಬೊಬ್ಬೆಗಳಡಗಿದವು ...{Loading}...

ಭಟರ ಬೊಬ್ಬೆಗಳಡಗಿದವು ಬಾ
ಯ್ದುಟಿಗಳಾಡವು ವಂದಿ ನಿಕರಕೆ
ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ
ಚಟುಲಗಜ ಹಯ ರಥದವರು ಲಟ
ಕಟಿಸದಿದ್ದರು ಕೌರವೇಂದ್ರನ
ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಕೆ ॥14॥

೦೧೫ ಹೊಗಲಿ ಪಾಳೆಯ ...{Loading}...

ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳಿರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿಯೆ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ ॥15॥

೦೧೬ ತರಿಸಿ ಗಙ್ಗಾಜಲವ ...{Loading}...

ತರಿಸಿ ಗಂಗಾಜಲವ ಗೋಮಯ
ವೆರಸಿ ಕುಶೆ ಸಮ್ಮಾರ್ಜನೆಯ ವಿ
ಸ್ತರಿಸಿ ಪರಿಕರ ಶುದ್ಧಿಯಲಿ ಪಸರಿಸಿದ ಬರ್ಹಿಯಲಿ
ನಿರಶನ ವ್ರತವೆಂದು ಮಂತ್ರೋ
ಚ್ಚರಿತ ಸಂಕಲ್ಪದಲಿ ಕೌರವ
ರರಸ ಪವಡಿಸಿದನು ಕೃತಪ್ರಾಯೋಪವೇಶದಲಿ ॥16॥

೦೧೭ ಹೊಗಿಸಬೇಡಾರುವನು ಕರ್ಣಾ ...{Loading}...

ಹೊಗಿಸಬೇಡಾರುವನು ಕರ್ಣಾ
ದಿಗಳು ಮೊದಲಾಗೆಂದು ದಡ್ಡಿಯ
ನುಗುಳುಗಂಡಿಯ ಕಾಹ ಕೊಟ್ಟನು ತನ್ನ ಬೇಹವರ
ದುಗುಡದಲಿ ಪರಿವಾರ ಬಂದೋ
ಲಗಿಸಿ ಹೊರಗೇ ಹೋಗುತಿರ್ದುದು
ನಗುತ ಹೊಕ್ಕಳು ಭಾನುಮತಿ ಕಂಚುಕಿಯನೊಡೆನೂಕಿ ॥17॥

೦೧೮ ಏನು ದಿಟ ...{Loading}...

ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ ॥18॥

೦೧೯ ತರುಣಿ ನೀ ...{Loading}...

ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದ ನಾ ಧರಿಸುವೆನೆಯೆಂದ ॥19॥

೦೨೦ ಈ ನಿರಾಹಾರವು ...{Loading}...

ಈ ನಿರಾಹಾರವು ನಿರರ್ಥಕ
ವೇನನೆಂಬೆನು ಜೀಯ ಮುರಿದಭಿ
ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
ಆ ನದೀಸುತ ವಿದುರರೆಂದುದ
ನೀನುಪೇಕ್ಷಿಸಿ ಕಳೆವೆ ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ ॥20॥

೦೨೧ ತಮ್ಮ ನೆರೆ ...{Loading}...

ತಮ್ಮ ನೆರೆ ದಟ್ಟೈಸಿ ರಣದಲಿ
ನಮ್ಮ ಬಿಡಿಸಿದರವರು ನೀವಿ
ನ್ನೆಮ್ಮ ಹಿಂದಣ ಹಳಿವ ನೋಡದಿರೆಂದು ಯಮಸುತನ
ನಮ್ಮ ನಗರಿಗೆ ಕರೆಸಿ ಧರೆಯನು
ತಮ್ಮ ಪಟ್ಟಣ ಸಹಿತ ಕೊಟ್ಟರೆ
ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ ॥21॥

೦೨೨ ಕರೆಸಿದರೆ ದಿಟ ...{Loading}...

ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಳದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸು ಮಾಡಿದನೆಂಬುದೀ ಲೋಕ ॥22॥

೦೨೩ ನುಡಿದವಧಿ ಹದಿಮೂರು ...{Loading}...

ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನ ನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ ॥23॥

೦೨೪ ಮರೆವ ಹಗೆಯೇ ...{Loading}...

ಮರೆವ ಹಗೆಯೇ ನಾವು ಮಾಡಿದ
ನರಿಯೆಲಾ ಮೂದಲಿಸಿ ಮರ್ಮವ
ನಿರಿವ ಸುರಗಿ ಕಣಾ ಸದಾ ಪಾಂಚಾಲೆ ಪವನಜರು
ಮರುಗಲೇತಕೆ ಭಾನುಮತಿ ನಿ
ನ್ನುರುವ ಮಗನಲಿ ರಾಜ್ಯಭಾರವ
ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ ॥24॥

೦೨೫ ಸಾಕು ಸಾಕೀ ...{Loading}...

ಸಾಕು ಸಾಕೀ ಮಾತಿನಲಿ ನಮ
ಗೇಕೆ ರಾಜ್ಯದ ಪಟ್ಟವಾಯ್ತು ವಿ
ವೇಕಿಗಳಿಗಧಿದೈವವೇ ತಾನೀಸು ಹಿರಿದಲ್ಲ
ಮೂಕ ಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ ॥25॥

೦೨೬ ಬನ್ದಳಾ ಗಾನ್ಧಾರಿ ...{Loading}...

ಬಂದಳಾ ಗಾಂಧಾರಿ ಸೊಸೆಯರ
ವೃಂದ ಸಹಿತುರವಣಿಸಿ ಹೊಕ್ಕಳು
ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ
ಕಂದಿದಳು ಕಡು ಶೋಕ ಶಿಖಿಯಲಿ
ಬೆಂದಳೇನೈ ಮಗನ ಹಾಸಿಕೆ
ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ ॥26॥

೦೨೭ ಏನು ದರ್ಭಾಸ್ತರಣ ...{Loading}...

ಏನು ದರ್ಭಾಸ್ತರಣ ಶಯನವಿ
ದೇನು ಕಾರಣ ನಿರಶನವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ ॥27॥

೦೨೮ ತಾಯೆ ಹೇಳುವುದೇನು ...{Loading}...

ತಾಯೆ ಹೇಳುವುದೇನು ಪಾಂಡವ
ರಾಯರುಳುಹಿದ ವೊಡಲನಿದನಿದ
ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು
ನೋಯಲೇತಕೆ ನಿಮಗೆ ಮಕ್ಕಳು
ತಾಯೆ ನೂರುಂಟನಿಬರಲಿ ಕುಂ
ದಾಯಿತೊಂದೈ ಸಲೆ ಮನೋವ್ಯಥೆಯೇಕೆ ನಿಮಗೆಂದ ॥28॥

೦೨೯ ಮಾಡಿದೆನು ಸಙ್ಕಲ್ಪವಿದರೊಳು ...{Loading}...

ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸ ಪಡುವುದಾ ದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದೆನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ ॥29॥

೦೩೦ ಉಸುರು ಬೀಯದ ...{Loading}...

ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟ ಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ ॥30॥

೦೩೧ ಆ ಸಮಯದಲಿ ...{Loading}...

ಆ ಸಮಯದಲಿ ವಿಗತ ನಯನ ಮ
ಹೀಶ ಬಂದನು ಜನಪದದ ವಿ
ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ
ಆಸರಿನ ಬೇಗುದಿಯ ಬೆಂಕಿಯ
ಬೇಸರಿನ ಬಿಸುಸುಯ್ಲ ರಾಣೀ
ವಾಸ ಕುಲವಿದಿರೆದ್ದುದಖಿಳಾಭರಣ ರಭಸದಲಿ ॥31॥

೦೩೨ ಸನ್ತವಿಡಿರೇ ಮಗನ ...{Loading}...

ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗವ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚದುರ ಚಿತ್ತಕೆ
ಚಿಂತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನ ವ್ರತವ ॥32॥

೦೩೩ ಸಾಕು ಮಗನೆ ...{Loading}...

ಸಾಕು ಮಗನೆ ದುರಂತ ಚಿಂತೆಯಿ
ದೇಕೆ ಸಂಕಲ್ಪಾಭಿಯೋಗ
ವ್ಯಾಕುಲತೆ ಬೇಡೇಳು ಪಾಲಿಸು ಸಕಲ ಭೂತಳವ
ಆ ಕುಮಾರರ ಕರೆಸಿ ಗುಣದಲಿ
ಸಾಕುವುದು ಜೀವೋಪಕಾರಕೆ
ಕಾಕ ನೆನೆಯದಿರೆನುತ ಮುಂಡಾಡಿದನು ನಂದನನ ॥33॥

೦೩೪ ಸವೆದು ಹೋಯ್ತಾಯುಷ್ಯ ...{Loading}...

ಸವೆದು ಹೋಯ್ತಾಯುಷ್ಯ ತನಗಿ
ನ್ನವನಿಯಾಗದು ಮರೆ ಯುಧಿಷ್ಠಿರ
ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ
ಅವರುಗಳು ನಿಲಿಸುವುದು ನೆಲದ
ರ್ಧವನು ದುಶ್ಯಾಸನಗೆ ಕೊಡುವುದು
ನಿಮಗೆ ಚಿತ್ತಕೆ ಬಹರೆಯೆಂದನು ತಂದೆಗವನೀಶ ॥34॥

೦೩೫ ಆದರವರನ್ತಿರಲಿ ನಿನಗಿ ...{Loading}...

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೊಡೀ ಕುರುವಂಶವಳಿವುಡು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚು ಕುಂದೇನೆಂದನಂಧನೃಪ ॥35॥

೦೩೬ ಕಲಹ ಬೀದಿಯೊಳಾಯ್ತು ...{Loading}...

ಕಲಹ ಬೀದಿಯೊಳಾಯ್ತು ಕಟ್ಟಿದ
ರಳಿ ವಿನೋದದಲಹಿತರದ ಹೊ
ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ
ನಳಿನಮುಖಿ ಕಡು ಮೌಳಿಯಲಿ ಮೂ
ದಲಿಸಿ ಕೊಯ್ದಳು ತನಗೆ ಭಂಗದ
ಲುಳಿವುದೆತ್ತಣ ಮಾತು ಕರುಣಿಸು ಬೊಪ್ಪ ನೀವೆಂದ ॥36॥

೦೩೭ ದೋಷ ನಿಮಗಿಲ್ಲೆನ್ನ ...{Loading}...

ದೋಷ ನಿಮಗಿಲ್ಲೆನ್ನ ಮೇಲಭಿ
ಲಾಷೆಯನು ಬಿಡಿ ನಿಮ್ಮ ಮಗ ಕುಲ
ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ
ರೋಷವುಂಟೇ ತನಗೆ ನಿಮಗಿದು
ದೂಷಣವೆ ತಾನಲ್ಲ ನಾನೇ
ಘೋಷಿಸುವೆನೈ ಪಾಂಡು ಸುತರರಸಾಗಬೇಕೆಂದು ॥37॥

೦೩೮ ಸಾರವೀ ನುಡಿ ...{Loading}...

ಸಾರವೀ ನುಡಿ ಕಟಕಿಯಲ್ಲ ವಿ
ಚಾರಪರರಿಗೆ ನಿಮ್ಮ ಚಿತ್ತಕೆ
ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು
ಸೇರಿಸುವುದವನಿಯನು ಮೇಣಿದು
ಭಾರವೇ ನಿಮ್ಮರಮನೆಗೆ ವಿ
ಸ್ತಾರದಿಂದವೆ ಬಿಜಯ ಮಾಡೆನುತತ್ತ ಮುಂದಾದ ॥38॥

೦೩೯ ಮುನಿಸಿನಲಿ ಧೃತರಾಷ್ಟ್ರ ...{Loading}...

ಮುನಿಸಿನಲಿ ಧೃತರಾಷ್ಟ್ರ ತನ್ನರ
ಮನೆಗೆ ತಿರುಗಿದನಿತ್ತ ನಾರೀ
ಜನವನೆಲ್ಲವ ಬೀಳುಕೊಟ್ಟನು ಬೈದು ಖಾತಿಯಲಿ
ಮನಕತದಿ ಕಾತರಿಸಿ ಗಂಗಾ
ತನುಜ ರವಿಜ ದ್ರೋಣ ಗೌತಮ
ರನುಚಿತ ಪ್ರಾರಂಭಭೀತರು ಬಂದರೊಗ್ಗಿನಲಿ ॥39॥

೦೪೦ ರಾಯನಿಹ ಹದನೇನು ...{Loading}...

ರಾಯನಿಹ ಹದನೇನು ನಿದ್ರಾ
ನಾಯಿಕೆಯ ಮೇಳವದಲೈದನೆ
ಜೀಯಯೆನಲೊಳಹೊಕ್ಕು ನಿಂದರು ನೃಪಸಮೀಪದಲಿ
ಆಯಿತೇ ನಾವೆಂದ ನುಡಿಯಿದು
ಹೋಯಿತನಶನದಿಂದ ದೇಹದ
ಬೀಯದಲಿ ಸಂಕಲ್ಪ ಗಡ ಹೇಳೆಂದನಾ ಭೀಷ್ಮ ॥40॥

೦೪೧ ಈಸು ದಿನ ...{Loading}...

ಈಸು ದಿನ ಸಾಮ್ರಾಜ್ಯ ಸೌಖ್ಯ ವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿ ರಾಜ್ಯದಲಿ
ಆಸೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ ॥41॥

೦೪೨ ಕೇಳಿದೆವು ಹಿನ್ದಾದ ...{Loading}...

ಕೇಳಿದೆವು ಹಿಂದಾದ ಖೇಚರ
ರೂಳಿಗಳವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆನೆಂದನಾ ಭೀಷ್ಮ ॥42॥

೦೪೩ ಮೊದಲು ಧೃತರಾಷ್ಟ್ರಙ್ಗೆ ...{Loading}...

ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ ॥43॥

೦೪೪ ನಾವು ಪಡಿಬಾಹಿರರು ...{Loading}...

ನಾವು ಪಡಿಬಾಹಿರರು ಬೀಯದ
ಸೇವಕರು ಸಮಹಂತಿಗಾರರಿ
ಗೀವುದೈ ದೃಢಮುದ್ರಿತಾಂತರ್ಮಾನಸಾಮೃತವ
ಭೂವಧುವ ಬೋಳೈಸು ಕಾನನ
ಜೀವಿಗಳು ತಮ್ಮೊಲಿದುದಾಗಲಿ
ಸಾವುದನುಚಿತವೆಂದು ನುಡಿದರು ಭೀಷ್ಮ ಗುರು ಕೃಪರು ॥44॥

೦೪೫ ಎಮ್ಮ ನುಡಿಗಳಪಥ್ಯವಾದರೆ ...{Loading}...

ಎಮ್ಮ ನುಡಿಗಳಪಥ್ಯವಾದರೆ
ನಿಮ್ಮ ಕರ್ಣಾದಿಗಳ ಕರೆಸುವು
ದೆಮ್ಮ ನುಡಿಗವರೆಂದ ಮಾತನುಸಾರಿಯೆನಿಸಿದರೆ
ಒಮ್ಮೆ ಕೈಕೊಂಬುದು ವೃಥಾ ನೃಪ
ಧರ್ಮವನು ಬಿಡಬೇಡ ಸಮರವ
ನೆಮ್ಮಿ ಸಾವುದು ಗುಣವು ಗರುವರಿಗೆಂದನಾ ಭೀಷ್ಮ ॥45॥

೦೪೬ ಕದನವಾರಲಿ ಪಾಣ್ಡು ...{Loading}...

ಕದನವಾರಲಿ ಪಾಂಡು ಸುತರಲಿ
ಕದಡ ಮಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ ॥46॥

೦೪೭ ಐಸಲೇ ದೈವೋಪಹತ ...{Loading}...

ಐಸಲೇ ದೈವೋಪಹತ ಮನ
ದಾಸರಾರಿಂದಡಗುವುದು ನಾ
ವೇಸನೊರಲಿದಡಾಗದವರೇ ಬಂದು ನಿಲಿಸುವರು
ಈಸರಲಿ ಮರಳುವೆವೆನುತ ನಿಜ
ವಾಸಕೈದಿದರಿತ್ತ ಮೋಹಿದ
ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ ॥47॥

೦೪೮ ಹೊಕ್ಕು ರಾಯನ ...{Loading}...

ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರ ಹರ
ಮಕ್ಕಳಾಟಿಕೆಯಾವುದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯ ವಿಜಯವೆಂದರು ಕರ್ಣ ಶಕುನಿಗಳು ॥48॥

೦೪೯ ಹರಿಬ ಬೇಕೇ ...{Loading}...

ಹರಿಬ ಬೇಕೇ ಮತ್ತೆ ಗಂಧ
ರ್ವರಿಗೆ ದೂತರನಟ್ಟು ಭೀಮನ
ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ
ತೆರಳಿಚುವೆವಿದಕಕಟ ದರ್ಭೆಯ
ಹರಹಿ ಹಕ್ಕೆಯನಿಕ್ಕಲೇಕೆಂದೊದರಿದರು ಖಳರು ॥49॥

೦೫೦ ದೂತನಮರರಿಗಟ್ಟುವುದು ತಾ ...{Loading}...

ದೂತನಮರರಿಗಟ್ಟುವುದು ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಭೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ ॥50॥

೦೫೧ ನಿನ್ನೊಡನೆ ಹುತವಹನ ...{Loading}...

ನಿನ್ನೊಡನೆ ಹುತವಹನ ಹೊಗುವೆವು
ಮನ್ನಣೆಯ ಮಾತಲ್ಲ ನಿನ್ನಿಂ
ಮುನ್ನ ಮುಂಡಿತ ಶಿರದಲೆಸೆವೆವು ತೀರ್ಥಯಾತ್ರೆಯಲಿ
ಎನ್ನ ಮತ ಸೌಬಲನ ಮತವಿದ
ನಿನ್ನು ಕೆಲರಲಿ ಬೆರಸುವುದೆ ಬೇ
ರಿನ್ನು ಮಾತೇಕೆನುತ ಮುರಿದರು ತಮ್ಮ ಮನೆಗಳಿಗೆ ॥51॥

೦೫೨ ಉಲಿವ ಭಟ್ಟರ ...{Loading}...

ಉಲಿವ ಭಟ್ಟರ ನಿಲಿಸಿದನು ಸಮ
ನೆಲನ ಹೊಗಳುವ ಕಾಹಕರ ಕಳ
ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ
ತಲೆ ಮುಸುಕಿನಲಿ ತಾರಿದೊಡಲಿನ
ತಳಿತ ದುಗುಡದ ಮೋರೆಯಲಿ ಕುರು
ಕುಲಭಯಂಕರನೈದಿದನು ದುಶ್ಯಾಸನನು ನೃಪನ ॥52॥

೦೫೩ ಹೊಕ್ಕನೊಳಗನು ರಾಯನಙ್ಘ್ರಿಯೊ ...{Loading}...

ಹೊಕ್ಕನೊಳಗನು ರಾಯನಂಘ್ರಿಯೊ
ಳೊಕ್ಕನೊಡಲನು ಲೋಚನಾಂಬುಗ
ಳುಕ್ಕಿದವು ಕಳವಳಿಸಿದವು ಕರಣೇಂದ್ರಿಯಾದಿಗಳು
ಬಿಕ್ಕಿದನು ಬಿರಿಬಿರಿದು ಸೆರೆಗಳು
ಮುಕ್ಕುರಿಕಿದವು ಕೊರಳ ಹೃದಯದೊ
ಳೊಕ್ಕಲಿಕ್ಕಿತು ಶೋಕಪಾವಕವಾ ನೃಪಾನುಜನ ॥53॥

೦೫೪ ಅನುಜನದ್ಭುತ ಶೋಕ ...{Loading}...

ಅನುಜನದ್ಭುತ ಶೋಕ ರಸದಲಿ
ಕೊನರಿತರಸನ ಮೋಹ ಕುರುಕುಲ
ವನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ
ನಿನಗಿದೇನುಬ್ಬೇಗವೀ ಹ
ಸ್ತಿನ ಪುರದ ಸಾಮ್ರಾಜ್ಯಸಿರಿ ರಿಪು
ಜನಪರಿಗೆ ಹುರುಡಿಸಳೆ ಹೇಳೆನುತೆತ್ತಿದನು ಹಣೆಯ ॥54॥

೦೫೫ ಸೆಳೆದು ಬಿಗಿಯಪ್ಪಿದನು ...{Loading}...

ಸೆಳೆದು ಬಿಗಿಯಪ್ಪಿದನು ಲೋಚನ
ಜಲವ ತೊಡೆದನು ಪಾಂಡುಪುತ್ರರು
ಸೆಳೆದುಕೊಳ್ಳರೆ ನೆಲನನಕಟಾ ಮತ್ಪರೋಕ್ಷದಲಿ
ಕುಲವ ನೀನುದ್ಧರಿಸು ಸೇಸೆಯ
ತಳಿವೆ ನಾ ಮುಂದಿಟ್ಟು ಬರಿದಿ
ನ್ನಳಲದಿರು ಪ್ರಾಯೋಪವೇಶವ ಬಿಡೆನು ನಾನೆಂದ ॥55॥

೦೫೬ ಅಳಿದರಳಿವೆ ಭವತ್ಪರೋಕ್ಷದೊ ...{Loading}...

ಅಳಿದರಳಿವೆ ಭವತ್ಪರೋಕ್ಷದೊ
ಳುಳಿವೆನೇ ನಿನ್ನರಸಿ ಧರೆಗಾ
ನಳುಪುವೆನೆ ನಿನ್ನಳಿವನೀಕ್ಷಿಪ ಧೈರ್ಯವೇ ತನಗೆ
ನೆಲನ ಕುಂತಿಯ ಮಕ್ಕಳೇ ಕೈ
ಕೊಳಲಿ ಮಾಣಲಿ ಸಿರಿಗೆ ಸೇಸೆಯ
ತಳಿವರಿಗೆ ತಳಿ ನಿನ್ನ ಬಿಡದಿಹ ಭಾಷೆ ನನಗೆಂದ ॥56॥

೦೫೭ ಧಾತುಗೆಡಲೇಕೀಸು ಕಾತರೆ ...{Loading}...

ಧಾತುಗೆಡಲೇಕೀಸು ಕಾತರೆ
ಬೀತು ಹೋಹುದು ಬೀತ ಮರನೇ
ಕಾತಿಹುದಲೈ ಹತ ವಿಧಿಗೆ ವಿಪರೀತ ಕೃತಿ ಸಹಜ
ಆತಗಳು ನಮಗುಪಕರಿಸಿ ವಿ
ಖ್ಯಾತರಾದರು ಮರಳಿ ನಾವಿ
ನ್ನಾತಗಳನಳುಕಿಸುವುಪಾಯವ ಕಂಡೊಡೇನೆಂದ ॥57॥

೦೫೮ ಮರುಳು ತಮ್ಮ ...{Loading}...

ಮರುಳು ತಮ್ಮ ವೃಥಾ ಖಳಾಡಂ
ಬರವಿದಲ್ಲದೆ ಪಾಂಡುಪುತ್ರರ
ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು
ಅರಮನೆಗೆ ನೀ ಹೋಗು ಹಸ್ತಿನ
ಪುರಕೆ ನೀನರಸಾಗು ಮೋಹದ
ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳ್ ಎಂದ ॥58॥

೦೫೯ ಮಗಗೆ ಮುನಿವನು ...{Loading}...

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯವಿದು
ಜಗದ ಪರಿವಿಡಿಯೆಮ್ಮೊಳಲ್ಲದೆ
ಸೊಗಸಿ ರಾಜ್ಯವನಿತ್ತೆ ನಿನಗದು
ಮಗುಚಿದೊಡೆಯೆನ್ನಾಣೆಯೆನುತಪ್ಪಿದನು ಖಳಪತಿಯ ॥59॥

೦೬೦ ಭ್ರಾನ್ತಿಯೇಕೆ ...{Loading}...

ಭ್ರಾಂತಿಯೇಕೆ ಭವತ್ಪರೋಕ್ಷದೊ
ಳಂತಕನ ಪುರವಲ್ಲದುರ್ವೀ
ಕಾಂತೆಗಳುಪಿದೆನಾದರೊಡಹುಟ್ಟಿದೆನೆ ನಿಮ್ಮಡಿಯ
ಸಂತವಿಡುವೀ ಮಾತು ಸಾಕಿ
ನ್ನಂತಿರಲಿ ನಿಮಗೇನು ಹದನಾ
ಯ್ತಂತರದೊಳಾ ಹದನನೀಕ್ಷಿಪೆಯೆನುತ ಹೊರವಂಟ ॥60॥

೦೬೧ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಬಳಿಕ ಹಸ್ತಿನ
ಪುರದ ನಿಖಿಳ ಶ್ರೇಣಿಕುಲ ನಾ
ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ
ಅರಸ ಬಿಜಯಂಗೈದು ನಮ್ಮನು
ಹೊರೆವುದಲ್ಲದೊಡಾ ವನಾಂತರ
ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ ॥61॥

೦೬೨ ಪರಿಜನದೊಳವರವರ ಮುಖ್ಯರ ...{Loading}...

ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪ ನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ ॥62॥

೦೬೩ ರಾಯನೀ ಪರಿ ...{Loading}...

ರಾಯನೀ ಪರಿ ನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯ ನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ ॥63॥

೦೬೪ ಅರಸ ನೀ ...{Loading}...

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಳಸಿದೆಲ
ಸುರರು ಪಾಂಡುಕುಮಾರರಾಗವ
ತರಿಸಿದರು ನೆಲವವರಿಗೈ ನಾ
ವಿರಲು ಸುಡಲೈ ದೈತ್ಯ ಜನ್ಮವನೆಂದರಾ ಖಳರು ॥64॥

೦೬೫ ಸಾಯದಿರು ನಿನಗಿನ್ದು ...{Loading}...

ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾಹವಕೆ ರಿಪು ಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜ ರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ ॥65॥

೦೬೬ ಮಾನವನು ನಾನಿನ್ನು ...{Loading}...

ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯನಾ ಪವ
ಮಾನಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ ॥66॥

೦೬೭ ನರರು ನೀವ್ ...{Loading}...

ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ ॥67॥

೦೬೮ ಎನ್ದು ಭೂಪನ ...{Loading}...

ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದುವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳ ಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ ॥68॥

೦೬೯ ಮತ್ತೆ ನೆಗ್ಗಿತು ...{Loading}...

ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಕಣ್ಣಾಯ್ತಧಮತೆಗೆ ನಗೆ
ಯೊತ್ತಿದಾರಡಿ ಸುಜನ ಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ ॥69॥

೦೭೦ ಮರೆದು ಕಳೆದನು ...{Loading}...

ಮರೆದು ಕಳೆದನು ಬಂದ ಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆನೆನೆದು ಹಿಗ್ಗಿದನು
ಮುರಿದುದಿನ್ನೇನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ ॥70॥

೦೭೧ ಕೇಳಿದರು ಪಾಣ್ಡವರು ...{Loading}...

ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸಖ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ ॥71॥

+೨೧ ...{Loading}...