೦೦೦ ಸೂ ಕಳುಹಿದನು ...{Loading}...
ಸೂ. ಕಳುಹಿದನು ಯಮಸೂನು ವಂಶ
ಪ್ರಳಯನನು ಪ್ರಾಯೋಪವೇಶವ
ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಧರ್ಮರಾಯನು ದುರ್ಯೋಧನನನ್ನು ಮರಳಿ ಹಸ್ತಿನಾವತಿಗೆ ಕಳುಹಿಸಿಕೊಟ್ಟನು. ಅನಂತರ ಕೌರವನು ಪ್ರಾಯೋಪವೇಶಕ್ಕೆ ಸಿದ್ಧನಾಗಲು ರಾಕ್ಷಸರು ಬಂದು ಸಮಾಧಾನ ಹೇಳಿದರು.
ಪದಾರ್ಥ (ಕ.ಗ.ಪ)
ಪ್ರಾಯೋಪವೇಶ - ಉಪವಾಸದಿಂದ ಮರಣ ಹೊಂದುವ ವ್ರತ
ಮೂಲ ...{Loading}...
ಸೂ. ಕಳುಹಿದನು ಯಮಸೂನು ವಂಶ
ಪ್ರಳಯನನು ಪ್ರಾಯೋಪವೇಶವ
ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಅರ್ಜುನನು ಕೌರವನನ್ನು ಬಿಡಿಸಿ ತಂದು ಧರ್ಮರಾಯನ ಪದತಲದಲ್ಲಿ ಕೆಡಹಿದನು. ಸಹೋದರ ಸಹಿತನಾದ ಕೌರವನ ಕೈಗಳು ಹಿಂಬದಿಯಲ್ಲಿ ಕಟ್ಟಲ್ಪಟ್ಟಿದ್ದವು. ಅವನ ಮುಖ ಕಪ್ಪಿಟ್ಟಿತ್ತು. ಕೇಶ ಕೆದರಿತ್ತು. ಕಣ್ಣುಗಳಲ್ಲಿ ಕಂಬನಿ ತುಂಬಿತ್ತು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ ॥1॥
೦೦೨ ಕೊಳ್ಳಿ ಸೆರೆಯನು ...{Loading}...
ಕೊಳ್ಳಿ ಸೆರೆಯನು ನಿಮ್ಮ ಸಹಭವ
ರೆಲ್ಲರೂ ಕಡುಮೂರ್ಖರಿದು ನಿ
ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು
ಖುಲ್ಲರಿವದಿರ ಬಿಡಿಸಿದೊಡೆ ತಳು
ವಿಲ್ಲದಹುದಪಘಾತ ಸಾಕಿ
ನ್ನೆಲ್ಲಿಯದು ನಯ ಬೀಳುಗೊಡಿ ನೀವೆಂದನಾ ಖಚರ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೆರೆಯನ್ನು ಸ್ವೀಕರಿಸಿ. ಇವರನ್ನು ಬಿಡುಗಡೆ ಮಾಡಬೇಕೆಂಬುದು ನಿಮ್ಮೆಲ್ಲರ ಅಭಿಪ್ರಾಯ. ನಿಮ್ಮ ತಮ್ಮಂದಿರೆಲ್ಲರೂ ಮೂರ್ಖರು. ಇದನ್ನು ನೀವೇ ತಿಳಿದಿದ್ದೀರಿ. ನಾವು ಹೇಳಿ ಪ್ರಯೋಜನವೇನು ? ಈ ದುಷ್ಟರನ್ನು ಬಿಡಿಸಿದರೆ ತಡವಿಲ್ಲದೆ ನಿಮಗೆ ತುಂಬಾ ತೊಂದರೆಯುಂಟಾಗುತ್ತದೆ. ನೀತಿ ಇನ್ನೆಲ್ಲಿಯದು. ನಮ್ಮನ್ನು ಕಳುಹಿಸಿ’ ಎಂದು ಚಿತ್ರಸೇನನು ಹೇಳಿದನು.
ಮೂಲ ...{Loading}...
ಕೊಳ್ಳಿ ಸೆರೆಯನು ನಿಮ್ಮ ಸಹಭವ
ರೆಲ್ಲರೂ ಕಡುಮೂರ್ಖರಿದು ನಿ
ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು
ಖುಲ್ಲರಿವದಿರ ಬಿಡಿಸಿದೊಡೆ ತಳು
ವಿಲ್ಲದಹುದಪಘಾತ ಸಾಕಿ
ನ್ನೆಲ್ಲಿಯದು ನಯ ಬೀಳುಗೊಡಿ ನೀವೆಂದನಾ ಖಚರ ॥2॥
೦೦೩ ಮಾನಭಙ್ಗವೆ ಬರಲಿ ...{Loading}...
ಮಾನಭಂಗವೆ ಬರಲಿ ಮೇಣಭಿ
ಮಾನವಾಲಿಂಗಿಸಲಿ ಚರಣದೊ
ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು
ನೀನೆಮಗೆ ಬಾಂಧವನೆನುತ ಸ
ನ್ಮಾನದಲಿ ಕಳುಹಿದನು ಬಳಿಕು
ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಾನಭಂಗವೋ, ಸನ್ಮಾನವೋ ಯಾವುದೇ ಇರಲಿ. ಶರಣು ಬಂದವರನ್ನು ಪಾಲಿಸುವುದು ಕ್ಷತ್ರಿಯರ ಧರ್ಮ. ನೀನು ನಮಗೆ ಬಂಧು’ ಎಂದು ಧರ್ಮರಾಯನು ಚಿತ್ರಸೇನನನ್ನು ಉಪಚರಿಸಿ ಕಳುಹಿಸಿಕೊಟ್ಟನು. ಬಳಿಕ ಉದ್ಯಾನದಲ್ಲಿ ಸತ್ತುಬಿದ್ದಿದ್ದ ಗಂಧರ್ವರನ್ನು ದೇವೇಂದ್ರನು ಬದುಕಿಸಿದನು.
ಮೂಲ ...{Loading}...
ಮಾನಭಂಗವೆ ಬರಲಿ ಮೇಣಭಿ
ಮಾನವಾಲಿಂಗಿಸಲಿ ಚರಣದೊ
ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು
ನೀನೆಮಗೆ ಬಾಂಧವನೆನುತ ಸ
ನ್ಮಾನದಲಿ ಕಳುಹಿದನು ಬಳಿಕು
ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ ॥3॥
೦೦೪ ಕಳುಹಿದನು ಖೇಚರನನವನಿಪ ...{Loading}...
ಕಳುಹಿದನು ಖೇಚರನನವನಿಪ
ತಿಲಕ ನೋಡಿದನೀತನನು ನಿಜ
ಲಲನೆಯನು ಕರೆದನು ಸುಯೋಧನ ನೊಂದನಕಟೆನುತ
ನಳಿನಮುಖಿ ಹೆಡಗೈಯ ಬಿಡುಕಲು
ನೆಲನು ಹಾಸಿಕೆ ಹಂಸತಲ್ಪದ
ತಳುಕಿನಲಿ ಪವಡಿಸುವಗೀ ವಿಧಿಯೇ ಶಿವಾಯೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವನನ್ನು ಕಳುಹಿಸಿದ ಮೇಲೆ ಧರ್ಮಜನು ಕೌರವನನ್ನು ನೋಡಿ, ದ್ರೌಪದಿಯನ್ನು ಕರೆದನು. “ಸುಯೋಧನನು ತುಂಬಾ ನೊಂದಿದ್ದಾನೆ. ಇವನ ಹೆಡಗೈಗಳನ್ನು ಬಿಡಿಸು. ಹಂಸತೂಲಿಕಾ ತಲ್ಪದಲ್ಲಿ ಮಲಗುವಾತನಿಗೆ ಕಲ್ಲುನೆಲವೇ ಮಂಚವಾಯಿತಲ್ಲಾ, ಹಾ ವಿಧಿಯೇ ಶಿವಶಿವಾ” ಎಂದನು.
ಪದಾರ್ಥ (ಕ.ಗ.ಪ)
ತಳುಕು - ಅಪ್ಪುಗೆ
ಪಾಠಾನ್ತರ (ಕ.ಗ.ಪ)
ಪಳಿಕಿನಲಿ –> ತಳುಕಿನಲಿ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಕಳುಹಿದನು ಖೇಚರನನವನಿಪ
ತಿಲಕ ನೋಡಿದನೀತನನು ನಿಜ
ಲಲನೆಯನು ಕರೆದನು ಸುಯೋಧನ ನೊಂದನಕಟೆನುತ
ನಳಿನಮುಖಿ ಹೆಡಗೈಯ ಬಿಡುಕಲು
ನೆಲನು ಹಾಸಿಕೆ ಹಂಸತಲ್ಪದ
ತಳುಕಿನಲಿ ಪವಡಿಸುವಗೀ ವಿಧಿಯೇ ಶಿವಾಯೆಂದ ॥4॥
೦೦೫ ಬನ್ದಳಬುಜಾನನೆ ಸುಯೋಧನ ...{Loading}...
ಬಂದಳಬುಜಾನನೆ ಸುಯೋಧನ
ನಂದವನು ನೋಡಿದಳು ಸುಯ್ದಳು
ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ
ಒಂದುಕೈ ಗಲ್ಲದಲಿ ಬಿಡಿಸಿದ
ಳೊಂದು ಕೈಯಲಿ ಭುಜದ ಪಾಶವ
ನಿಂದುಮುಖಿ ದುರಿಯೋಧನನ ದುಶ್ಯಾಸನನು ಸಹಿತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಬಂದು ಕೌರವನ ಸ್ಥಿತಿಯನ್ನು ನೋಡಿ ನಿಟ್ಟುಸಿರುಬಿಟ್ಟಳು. ‘ಸಾರ್ವಭೌಮರಿಗೆ ಕೆಟ್ಟ ವಿಧಿಯು ಇಂತಹ ಬಂಧನವನ್ನು ಉಂಟುಮಾಡಿತೇ’ ಎನ್ನುತ್ತಾ ಒಂದು ಕೈಯನ್ನು ತನ್ನ ಗಲ್ಲದ ಮೇಲಿಟ್ಟುಕೊಂಡು ಮತ್ತೊಂದು ಕೈಯಿಂದ ಅವನ ಮತ್ತು ದುಶ್ಶಾಸನನ ಕೈಗಳ ಕಟ್ಟುಗಳನ್ನು ಬಿಡಿಸಿದಳು.
ಮೂಲ ...{Loading}...
ಬಂದಳಬುಜಾನನೆ ಸುಯೋಧನ
ನಂದವನು ನೋಡಿದಳು ಸುಯ್ದಳು
ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ
ಒಂದುಕೈ ಗಲ್ಲದಲಿ ಬಿಡಿಸಿದ
ಳೊಂದು ಕೈಯಲಿ ಭುಜದ ಪಾಶವ
ನಿಂದುಮುಖಿ ದುರಿಯೋಧನನ ದುಶ್ಯಾಸನನು ಸಹಿತ ॥5॥
೦೦೬ ಕೆಳದಿಯರ ಕೈಯಿನ್ದ ...{Loading}...
ಕೆಳದಿಯರ ಕೈಯಿಂದ ಕೊಯ್ಸಿದ
ಳುಳಿದ ಕೌರವನನುಜ ವರ್ಗದ
ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ
ಅಳಲಿಸಿದನೇ ಖಚರನಾತನ
ಕೊಲಿಸಬೇಹುದು ಕಳುಹಿ ಕಷ್ಟವ
ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸಹೋದರ ವರ್ಗದ ಹಗ್ಗಗಳ ಕಟ್ಟುಗಳನ್ನು ದ್ರೌಪದಿಯು ತನ್ನ ಸಖಿಯರಿಂದ ಬಿಡಿಸಿದಳು. ಆಗ ಅವರ ಕುತ್ತಿಗೆಗಳು ಮಣಿದವು. “ಚಿತ್ರಸೇನನು ನಿಮ್ಮನ್ನೆಲ್ಲಾ ಬಳಲಿಸಿದನೇ? ಅವರನ್ನು ಕೊಲ್ಲಿಸಬೇಕು.ಭೂಪತಿ, ತುಂಬಾ ಸಂಕಟವನ್ನು ಅನುಭವಿಸಿದಿರಲ್ಲಾ?” ಎಂದು ನಗುತ್ತಾ ದ್ರೌಪದಿ ಮಾತಾಡಿದಳು.
ಪದಾರ್ಥ (ಕ.ಗ.ಪ)
ನೇಣು - ಹಗ್ಗ
ಮೂಲ ...{Loading}...
ಕೆಳದಿಯರ ಕೈಯಿಂದ ಕೊಯ್ಸಿದ
ಳುಳಿದ ಕೌರವನನುಜ ವರ್ಗದ
ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ
ಅಳಲಿಸಿದನೇ ಖಚರನಾತನ
ಕೊಲಿಸಬೇಹುದು ಕಳುಹಿ ಕಷ್ಟವ
ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ ॥6॥
೦೦೭ ಅರಸ ನೊನ್ದೈ ...{Loading}...
ಅರಸ ನೊಂದೈ ಮರ್ದನಕೆ ಮ
ಲ್ಲರುಗಳಿಲ್ಲೆಮಗೊತ್ತುವವು ಕಲು
ಹರಳು ಮಜ್ಜನ ಭೋಗಿಸುವರೆ ಸಿತಾಂಬು ತಿಳಿಗೊಳನು
ಹರಿಣ ಶಾರ್ದೂಲಾದಿ ಚರ್ಮಾಂ
ಬರವೆ ಸಮಕಟ್ಟೆಮಗೆ ರತ್ನಾ
ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ, ನೊಂದೆಯಾ ? ಕೈಕಾಲುಗಳನ್ನು ಒತ್ತಲು ನಮ್ಮಲ್ಲಿ ಮಲ್ಲರುಗಳಿಲ್ಲ, ಕಲ್ಲು ಗುಂಡೇ ಗತಿ. ಸ್ನಾನಕ್ಕೆ ತಣ್ಣೀರಿನ ಕೆರೆಕೊಳಗಳೇ ಗತಿ. ಉಡುವುದಕ್ಕೆ ಜಿಂಕೆ ಸಿಂಹಗಳ ಚರ್ಮವೇ ನಮಗೆ ಗತಿ. ರುದ್ರಾಕ್ಷಿಯೇ ನಮಗೆ ರತ್ನಾಭರಣಗಳು ಎಂದು ನಗುತ್ತಾ ದ್ರೌಪದಿಯು ಹೇಳಿದಳು.
ಪದಾರ್ಥ (ಕ.ಗ.ಪ)
ಮಜ್ಜನ - ಸ್ನಾನ
ಸಿತಾಂಬು - ತಣ್ಣೀರು
ಮೂಲ ...{Loading}...
ಅರಸ ನೊಂದೈ ಮರ್ದನಕೆ ಮ
ಲ್ಲರುಗಳಿಲ್ಲೆಮಗೊತ್ತುವವು ಕಲು
ಹರಳು ಮಜ್ಜನ ಭೋಗಿಸುವರೆ ಸಿತಾಂಬು ತಿಳಿಗೊಳನು
ಹರಿಣ ಶಾರ್ದೂಲಾದಿ ಚರ್ಮಾಂ
ಬರವೆ ಸಮಕಟ್ಟೆಮಗೆ ರತ್ನಾ
ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ ॥7॥
೦೦೮ ವಾರುವವು ವಟಶಾಖೆ ...{Loading}...
ವಾರುವವು ವಟಶಾಖೆ ಗಿರಿಗಳು
ತೋರ ಕರಿಗಳು ಭದ್ರಗಜ ವನ
ಭೂರುಹದ ನೆಳಲೆಮಗೆ ಸತ್ತಿಗೆ ಪಲ್ಲವವ್ರಾತ
ಚಾರು ಚಾಮರ ಕಿರುಮೊರಡಿ ವಿ
ಸ್ತಾರ ಪೀಠವು ಹಂತಿಗಾರರು
ಭೂರಿ ಸರ್ಪಾವಳಿಗಳರಮನೆ ಹೊದರು ಹೊಸ ಮೆಳೆಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ವಟವೃಕ್ಷದ ಕೊಂಬೆಗಳೇ ಕುದುರೆಗಳು. ಬೆಟ್ಟಗಳೇ ಆನೆಗಳು. ಮರದ ನೆರಳೇ ನಮಗೆ ಛತ್ರಿ. ಮರದ ಚಿಗುರೆಲೆಗಳೇ ಚಾಮರಗಳು. ಚಿಕ್ಕ ಕಲ್ಲಿನ ಗುಡ್ಡವೇ ಸಿಂಹಾಸನ. ಹರಿದಾಡುವ ಹಾವುಗಳೇ ಸೇವಕರು. ಪರ್ಣಕುಟೀರವೇ ನಮಗೆ ಅರಮನೆ ಎಂದಳು.
ಪದಾರ್ಥ (ಕ.ಗ.ಪ)
ವಾರುವ - ಕುದುರೆ
ಮೊರಡಿ - ಗುಡ್ಡ
ಭೂರುಹ - ಮರ
ಪಲ್ಲವ - ಚಿಗುರು
ಮೂಲ ...{Loading}...
ವಾರುವವು ವಟಶಾಖೆ ಗಿರಿಗಳು
ತೋರ ಕರಿಗಳು ಭದ್ರಗಜ ವನ
ಭೂರುಹದ ನೆಳಲೆಮಗೆ ಸತ್ತಿಗೆ ಪಲ್ಲವವ್ರಾತ
ಚಾರು ಚಾಮರ ಕಿರುಮೊರಡಿ ವಿ
ಸ್ತಾರ ಪೀಠವು ಹಂತಿಗಾರರು
ಭೂರಿ ಸರ್ಪಾವಳಿಗಳರಮನೆ ಹೊದರು ಹೊಸ ಮೆಳೆಯ ॥8॥
೦೦೯ ಈ ವಿಪತ್ತಿನ ...{Loading}...
ಈ ವಿಪತ್ತಿನ ನಿಮ್ಮಡಿಯ ಸಂ
ಭಾವಿಸುವರೆಮಗಾದ ವಸ್ತುಗ
ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ
ದೇವನಿರ್ಪನು ಧರ್ಮಸುತನಿ
ನ್ನಾವುದುಚಿತಾನುಚಿತವೆಂಬುದ
ಭಾವನವರೇ ಬಲ್ಲಿರೆಂದಳು ದ್ರೌಪದಾದೇವಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮಗೆ ಬಂದೊದಗಿದ ಆಪತ್ತನ್ನು ಪರಿಹರಿಸಲು ನಮಗೆ ಇವೇ ಸಾಧನಸಲಕರಣೆಗಳು. ನಮ್ಮ ಬದುಕಿಗೆ ಈ ವಿಧಿಯಾಯಿತಲ್ಲಾ ಎಂದು ಧರ್ಮರಾಯನು ದುಃಖಿಸುತ್ತಿದ್ದಾನೆ. ಯಾವುದು ಉಚಿತ, ಯಾವುದು ಅನುಚಿತವೆಂಬುದನ್ನು ಭಾವನವರಾದ ನೀವೇ ತಿಳಿದಿದ್ದೀರಿ’ ಎಂದಳು.
ಮೂಲ ...{Loading}...
ಈ ವಿಪತ್ತಿನ ನಿಮ್ಮಡಿಯ ಸಂ
ಭಾವಿಸುವರೆಮಗಾದ ವಸ್ತುಗ
ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ
ದೇವನಿರ್ಪನು ಧರ್ಮಸುತನಿ
ನ್ನಾವುದುಚಿತಾನುಚಿತವೆಂಬುದ
ಭಾವನವರೇ ಬಲ್ಲಿರೆಂದಳು ದ್ರೌಪದಾದೇವಿ ॥9॥
೦೧೦ ಮಾನಿನಿಯ ಕಟಕಿಯ ...{Loading}...
ಮಾನಿನಿಯ ಕಟಕಿಯ ಮಹಾಸ್ತ್ರಕೆ
ಮೌನವನು ಮರೆಗೊಂಡು ಕಲುಷ
ಧ್ಯಾನನಿದ್ದನು ಚಿತ್ತದಲಿ ಬೇರೊಂದ ಚಿಂತಿಸುತ
ಭಾನುಮತಿ ಕೈಮುಗಿದಳೀ ಕ
ರ್ಣಾನುಗತ ತಾಟಂಕ ಮುದ್ರೆಯ
ನೀನೆಲೈ ದಯಗೈದೆಯೆಂದೆರಗಿದಳು ಚರಣದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಈ ವ್ಯಂಗ್ಯನುಡಿಯು ಚುಚ್ಚಲು, ಕೌರವನು ಕಲ್ಮಷಚಿತ್ತನಾಗಿ ಬೇರೊಂದನ್ನೇ ಮನಸ್ಸಿನಲ್ಲಿ ಎಣಿಸುತ್ತಾ ಸುಮ್ಮನಿದ್ದನು. ಆಗ ಭಾನುಮತಿಯು ಕೈಮುಗಿದು ‘ಈ ಓಲೆಭಾಗ್ಯವನ್ನು ನೀನಲ್ಲವೇ ನನಗೆ ಕರುಣಿಸಿದ್ದು ?" ಎಂದು ಧರ್ಮರಾಯನ ಪಾದಕ್ಕೆ ವಂದಿಸಿದಳು.
ಪದಾರ್ಥ (ಕ.ಗ.ಪ)
ತಾಟಂಕ-ಕಿವಿಯೋಲೆ
ಮೂಲ ...{Loading}...
ಮಾನಿನಿಯ ಕಟಕಿಯ ಮಹಾಸ್ತ್ರಕೆ
ಮೌನವನು ಮರೆಗೊಂಡು ಕಲುಷ
ಧ್ಯಾನನಿದ್ದನು ಚಿತ್ತದಲಿ ಬೇರೊಂದ ಚಿಂತಿಸುತ
ಭಾನುಮತಿ ಕೈಮುಗಿದಳೀ ಕ
ರ್ಣಾನುಗತ ತಾಟಂಕ ಮುದ್ರೆಯ
ನೀನೆಲೈ ದಯಗೈದೆಯೆಂದೆರಗಿದಳು ಚರಣದಲಿ ॥10॥
೦೧೧ ಎತ್ತಿದನು ರಾಣಿಯನು ...{Loading}...
ಎತ್ತಿದನು ರಾಣಿಯನು ನೃಪ ತಲೆ
ಗುತ್ತಲೇಕೈ ನಿನಗೆ ಬಂದಾ
ಪತ್ತು ನಮ್ಮದು ನಮ್ಮ ತೊಡಕಿನ ತೋಟಿಗಳು ನಿನಗೆ
ಹೆತ್ತ ತಾಯ್ ಗಾಂಧಾರಿ ನದಿ ನಾ
ವಿತ್ತಡಿಗಳಕಟಕಟ ನೀ ದು
ಶ್ಚಿತ್ತನಾಗದಿರೆಂದು ನುಡಿದನು ನೃಪತಿ ಕೌರವಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಭಾನುಮತಿಯ ಶಿರವನ್ನೆತ್ತಿ, ಕೌರವನಿಗೆ ಹೀಗೆಂದನು - “ಯಾಕೆ ದುಃಖಿಸುವೆ ? ನಿನಗೆ ಬಂದ ಸಂಕಷ್ಟ ನಮ್ಮದು ಕೂಡಾ ಹೌದು. ನಮ್ಮ ತೊಂದರೆಗಳು ನಿನ್ನದೂ ಹೌದು. ನಮ್ಮ ತಾಯಿ ಗಾಂಧಾರಿ ಎಂಬ ನದಿಗೆ ನಾವಿಬ್ಬರೂ ಎರಡು ದಡಗಳು. ನೀನು ಕೆಟ್ಟದ್ದನ್ನು ಯೋಚಿಸಬೇಡ. "
ಪಾಠಾನ್ತರ (ಕ.ಗ.ಪ)
ಸತಿ - ನದಿ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಎತ್ತಿದನು ರಾಣಿಯನು ನೃಪ ತಲೆ
ಗುತ್ತಲೇಕೈ ನಿನಗೆ ಬಂದಾ
ಪತ್ತು ನಮ್ಮದು ನಮ್ಮ ತೊಡಕಿನ ತೋಟಿಗಳು ನಿನಗೆ
ಹೆತ್ತ ತಾಯ್ ಗಾಂಧಾರಿ ನದಿ ನಾ
ವಿತ್ತಡಿಗಳಕಟಕಟ ನೀ ದು
ಶ್ಚಿತ್ತನಾಗದಿರೆಂದು ನುಡಿದನು ನೃಪತಿ ಕೌರವಗೆ ॥11॥
೦೧೨ ದ್ರೋಣರೆನ್ದುದ ಮಾಡೆ ...{Loading}...
ದ್ರೋಣರೆಂದುದ ಮಾಡೆ ಭೀಷ್ಮನ
ವಾಣಿ ವಿಷವೈ ನಿನಗೆ ವಿದುರನು
ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯೆ ನೀನಿವರ
ಪ್ರಾಣ ವಾಯುಗಳವರು ಸುಭಟ
ಶ್ರೇಣಿ ದೇಹಕೆ ನಿನ್ನ ತನು ನಿ
ತ್ರಾಣವದರಿಂದಾಯ್ತು ಪರಿಭವವೆಂದನಾ ಭೂಪ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ದ್ರೋಣಾಚಾರ್ಯರು ಹೇಳಿದುದನ್ನು ಮಾಡುವುದಿಲ್ಲ. ಭೀಷ್ಮಾಚಾರ್ಯರ ಮಾತು ನಿನಗೆ ವಿಷ. ವಿದುರನೊಡನೆ ನಿನಗೆ ಹೊಂದಾಣಿಕೆ ಇಲ್ಲ. ನೀನು ಇವರಾರನ್ನೂ ಲೆಕ್ಕಿಸುವುದಿಲ್ಲ. ನಿನ್ನ ಯುದ್ಧದ ಪರಾಕ್ರಮದ ದೇಹಕ್ಕೆ ಪ್ರಾಣವಾಯುವಿನಂತೆ ಅವರಿದ್ದಾರೆ. ಆದರೆ ಅವರನ್ನು ಬಿಟ್ಟುದರಿಂದ ನಿನ್ನ ದೇಹಕ್ಕೆ ನಿತ್ರಾಣವುಂಟಾಗಿ ಸೋಲು ಸಂಭವಿಸಿತು’ ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ರಾಣಿಕ-ಹೊಂದಾಣಿಕೆ
ಮೂಲ ...{Loading}...
ದ್ರೋಣರೆಂದುದ ಮಾಡೆ ಭೀಷ್ಮನ
ವಾಣಿ ವಿಷವೈ ನಿನಗೆ ವಿದುರನು
ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯೆ ನೀನಿವರ
ಪ್ರಾಣ ವಾಯುಗಳವರು ಸುಭಟ
ಶ್ರೇಣಿ ದೇಹಕೆ ನಿನ್ನ ತನು ನಿ
ತ್ರಾಣವದರಿಂದಾಯ್ತು ಪರಿಭವವೆಂದನಾ ಭೂಪ ॥12॥
೦೧೩ ಬಿಡಿಸದಧರದ್ವಯ ವಿಷಾದದ ...{Loading}...
ಬಿಡಿಸದಧರದ್ವಯ ವಿಷಾದದ
ತಡಿಯ ಚಿತ್ತದ ನೆಯ್ಗೆ ಬೇರೊಂ
ದೆಡೆಯಲಿದ್ದುದು ಬೀಳುಕೊಂಡನು ಧರ್ಮನಂದನನ
ಒಡನೆ ಬಂದರು ರಾಣಿಯರು ಕೈ
ಗುಡಿಯವರ ಸುದ್ದಿಯಲಿ ಸೂಸಿದ
ಪಡೆಯು ನಿಮಿಷಕೆ ನೆರೆದುದಿನಸುತ ಸೌಬಲರು ಸಹಿತ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಷಾದಯುಕ್ತವಾದ ಮನಸ್ಸಿನ ದುರ್ಯೋಧನನು ಬೇರೇನನ್ನೋ ಯೋಚಿಸತ್ತಾ , ಮೌನವಾಗಿ ಧರ್ಮರಾಜನಲ್ಲಿಂದ ಹೊರಟನು. ಅವನೊಂದಿಗೆ ರಾಣಿಯರು ಬಂದರು. ಸೇವಕರ ಮೂಲಕ ಸೂಚನೆ ನೀಡಿದ ಕೂಡಲೇ ಕರ್ಣ ಶಕುನಿಯರು, ಚೆದರಿಹೋಗಿದ್ದ ಸೈನಿಕರು ಕೌರವನ ಜೊತೆಯಲ್ಲಿ ಸೇರಿಕೊಂಡರು.
ಮೂಲ ...{Loading}...
ಬಿಡಿಸದಧರದ್ವಯ ವಿಷಾದದ
ತಡಿಯ ಚಿತ್ತದ ನೆಯ್ಗೆ ಬೇರೊಂ
ದೆಡೆಯಲಿದ್ದುದು ಬೀಳುಕೊಂಡನು ಧರ್ಮನಂದನನ
ಒಡನೆ ಬಂದರು ರಾಣಿಯರು ಕೈ
ಗುಡಿಯವರ ಸುದ್ದಿಯಲಿ ಸೂಸಿದ
ಪಡೆಯು ನಿಮಿಷಕೆ ನೆರೆದುದಿನಸುತ ಸೌಬಲರು ಸಹಿತ ॥13॥
೦೧೪ ಭಟರ ಬೊಬ್ಬೆಗಳಡಗಿದವು ...{Loading}...
ಭಟರ ಬೊಬ್ಬೆಗಳಡಗಿದವು ಬಾ
ಯ್ದುಟಿಗಳಾಡವು ವಂದಿ ನಿಕರಕೆ
ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ
ಚಟುಲಗಜ ಹಯ ರಥದವರು ಲಟ
ಕಟಿಸದಿದ್ದರು ಕೌರವೇಂದ್ರನ
ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಕೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನಾಯೋಧರ ಕೂಗು ನಿಂತಿತು. ವಂದಿಮಾಗಧರು ತುಟಿ ಬಿಚ್ಚದೇ ಇದ್ದರು. ಭೇರಿಮೃದಂಗಾದಿ ವಾದ್ಯಗಳು ಮೌನವಾಗಿದ್ದವು. ಆನೆ ಕುದುರೆ ರಥಗಳನ್ನೇರಿದವರು ಮಾತಾಡದೇ ಸುಮ್ಮನಿದ್ದರು. ಕೌರವೇಂದ್ರನ ಸೇನೆ ದುಃಖದಿಂದ ಹಸ್ತಿನಾಪುರಕ್ಕೆ ಬಂದಿತು.
ಪದಾರ್ಥ (ಕ.ಗ.ಪ)
ಪಟಹ - ಒಂದು ಬಗೆಯ ವಾದ್ಯ
ಪಣಹ - ಒಂದು ಬಗೆಯ ವಾದ್ಯ
ಮೂಲ ...{Loading}...
ಭಟರ ಬೊಬ್ಬೆಗಳಡಗಿದವು ಬಾ
ಯ್ದುಟಿಗಳಾಡವು ವಂದಿ ನಿಕರಕೆ
ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ
ಚಟುಲಗಜ ಹಯ ರಥದವರು ಲಟ
ಕಟಿಸದಿದ್ದರು ಕೌರವೇಂದ್ರನ
ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಕೆ ॥14॥
೦೧೫ ಹೊಗಲಿ ಪಾಳೆಯ ...{Loading}...
ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳಿರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿಯೆ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಪಟ್ಟಣ ಪ್ರವೇಶ ಮಾಡಲಿ ಎಂದು ಹೇಳಿ, ತುಂಬಿದ ಉದ್ವೇಗದಿಂದ ಕೂಡಿದ ಕೌರವನು ಗಂಗಾತೀರದಲ್ಲಿ ವಿಷಾದಭರಿತನಾಗಿ ಕುಳಿತನು. ಮುಖ ಮ್ಲಾನವಾಗಿ, ಕಣ್ಣು ನೆಲವನ್ನು ನೋಡುತ್ತಾ ಅಂಗಾಂಗಗಳೆಲ್ಲಾ ಸೋತುಹೋಗಿ, ಬೇಸರದಿಂದ ನಿಟ್ಟುಸಿರು ಬಿಡುತ್ತಿದ್ದನು.
ಪದಾರ್ಥ (ಕ.ಗ.ಪ)
ಸುರನದಿ - ಗಂಗಾನದಿ
ಮೂಲ ...{Loading}...
ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳಿರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿಯೆ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ ॥15॥
೦೧೬ ತರಿಸಿ ಗಙ್ಗಾಜಲವ ...{Loading}...
ತರಿಸಿ ಗಂಗಾಜಲವ ಗೋಮಯ
ವೆರಸಿ ಕುಶೆ ಸಮ್ಮಾರ್ಜನೆಯ ವಿ
ಸ್ತರಿಸಿ ಪರಿಕರ ಶುದ್ಧಿಯಲಿ ಪಸರಿಸಿದ ಬರ್ಹಿಯಲಿ
ನಿರಶನ ವ್ರತವೆಂದು ಮಂತ್ರೋ
ಚ್ಚರಿತ ಸಂಕಲ್ಪದಲಿ ಕೌರವ
ರರಸ ಪವಡಿಸಿದನು ಕೃತಪ್ರಾಯೋಪವೇಶದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16.ಗಂಗಾಜಲವನ್ನು ತರಿಸಿ, ಗೋಮಯವನ್ನು ಬೆರೆಸಿ, ದರ್ಭೆಯಿಂದ ಅದನ್ನು ಪ್ರೋಕ್ಷಿಸಿ ನೆಲವನ್ನು ಶುದ್ಧೀಕರಿಸಿದನು. ಅನಂತರ ಉಪವಾಸವ್ರತದೀಕ್ಷೆಯ ಸಂಕಲ್ಪ ಮಾಡಿ, ಕೌರವನು ಪ್ರಾಯೋಪವೇಶಕ್ಕೆ ಮಲಗಿದನು.
ಪದಾರ್ಥ (ಕ.ಗ.ಪ)
ಕುಶೆ -ದರ್ಭೆ
ನಿರಶನ - ಉಪವಾಸ
ಮೂಲ ...{Loading}...
ತರಿಸಿ ಗಂಗಾಜಲವ ಗೋಮಯ
ವೆರಸಿ ಕುಶೆ ಸಮ್ಮಾರ್ಜನೆಯ ವಿ
ಸ್ತರಿಸಿ ಪರಿಕರ ಶುದ್ಧಿಯಲಿ ಪಸರಿಸಿದ ಬರ್ಹಿಯಲಿ
ನಿರಶನ ವ್ರತವೆಂದು ಮಂತ್ರೋ
ಚ್ಚರಿತ ಸಂಕಲ್ಪದಲಿ ಕೌರವ
ರರಸ ಪವಡಿಸಿದನು ಕೃತಪ್ರಾಯೋಪವೇಶದಲಿ ॥16॥
೦೧೭ ಹೊಗಿಸಬೇಡಾರುವನು ಕರ್ಣಾ ...{Loading}...
ಹೊಗಿಸಬೇಡಾರುವನು ಕರ್ಣಾ
ದಿಗಳು ಮೊದಲಾಗೆಂದು ದಡ್ಡಿಯ
ನುಗುಳುಗಂಡಿಯ ಕಾಹ ಕೊಟ್ಟನು ತನ್ನ ಬೇಹವರ
ದುಗುಡದಲಿ ಪರಿವಾರ ಬಂದೋ
ಲಗಿಸಿ ಹೊರಗೇ ಹೋಗುತಿರ್ದುದು
ನಗುತ ಹೊಕ್ಕಳು ಭಾನುಮತಿ ಕಂಚುಕಿಯನೊಡೆನೂಕಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರ್ಣಾದಿಗಳು ಮೊದಲಾಗಿ ಯಾರೇ ಬಂದರು ಒಳಗೆ ಬಿಡಬೇಡ’. ಎಂದು ಆದೇಶವಿತ್ತು, ಭದ್ರವಾದ ಬಾಗಿಲ ಪಹರೆಯನ್ನು ಮಾಡಿದನು. ಪರಿವಾರವೆಲ್ಲ ದುಃಖದಿಂದ ಬಂದು, ಒಳಹೊಗಲಾರದೇ ಹೊರಗಿನಿಂದಲೇ ಹೊರಟು ಹೋಗುತ್ತಿತ್ತು. ಆಗ ತಡೆದ ಕಂಚುಕಿಯನ್ನು ದೂಡಿ, ಭಾನುಮತಿಯೇ ಒ¼ಗೆ ಬಂದಳು.
ಪದಾರ್ಥ (ಕ.ಗ.ಪ)
ಕಾಹ - ಕಾಹು - ಕಾಪು - ಕಾವಲು
ಮೂಲ ...{Loading}...
ಹೊಗಿಸಬೇಡಾರುವನು ಕರ್ಣಾ
ದಿಗಳು ಮೊದಲಾಗೆಂದು ದಡ್ಡಿಯ
ನುಗುಳುಗಂಡಿಯ ಕಾಹ ಕೊಟ್ಟನು ತನ್ನ ಬೇಹವರ
ದುಗುಡದಲಿ ಪರಿವಾರ ಬಂದೋ
ಲಗಿಸಿ ಹೊರಗೇ ಹೋಗುತಿರ್ದುದು
ನಗುತ ಹೊಕ್ಕಳು ಭಾನುಮತಿ ಕಂಚುಕಿಯನೊಡೆನೂಕಿ ॥17॥
೦೧೮ ಏನು ದಿಟ ...{Loading}...
ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ಯವಾಗಿಯೂ ಹೇಳು. ಏನಿದು ನಿನ್ನ ಸಂಕಲ್ಪ. ಅದಕ್ಕೆ ನಾನು ಸಂಬಂಧಿಸಿದವಳಲ್ಲವೆ ? ಏಳು. ಹಾಗಿದ್ದರೆ ಅಗ್ನಿಗೋ, ಗಂಗಾನದಿಗೋ ಹಾರೋಣ. ಅಥವಾ ವಿಷಪ್ರಾಶನ ಮಾಡೋಣ. ಮಾನವಂತನೇ ಈ ನಿರಶನ ವ್ರತವಾದರೂ ಏಕೆ ? ಎಂದು ಭಾನುಮತಿ ಕೇಳಿದಳು.
ಪದಾರ್ಥ (ಕ.ಗ.ಪ)
ಕೃಶಾನು - ಬೆಂಕಿ
ಮೂಲ ...{Loading}...
ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ ॥18॥
೦೧೯ ತರುಣಿ ನೀ ...{Loading}...
ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದ ನಾ ಧರಿಸುವೆನೆಯೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಡದಿ, ನೀನು ಹೇಳಿದ ಈ ಎಲ್ಲ ಮಾರ್ಗಗಳೂ ದುರ್ಮರಣಕ್ಕೆ ಸಾಧನಗಳು. ದರ್ಭಾಸ್ತರಣದ ಮೇಲೆ ಮಲಗಿ ಪ್ರಾಯೋಪವೇಶ ಮಾಡುವುದು ಶ್ರೇಷ್ಠವಾದುದು. ಪಾಂಡವರ ಕರುಣೆಯಿಂದ ಕಲುಷಿತಗೊಂಡ ಈ ದೇಹವನ್ನು ನಾನು ಹೇಗೆ ಧರಿಸಿರಲಿ? ಅರಸುತನವನ್ನು ಸುಡಲಿ. ಈ ದೇಹವನ್ನು ಕಳೆಯುತ್ತೇನೆ ? ಎಂದನು.
ಮೂಲ ...{Loading}...
ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದ ನಾ ಧರಿಸುವೆನೆಯೆಂದ ॥19॥
೦೨೦ ಈ ನಿರಾಹಾರವು ...{Loading}...
ಈ ನಿರಾಹಾರವು ನಿರರ್ಥಕ
ವೇನನೆಂಬೆನು ಜೀಯ ಮುರಿದಭಿ
ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
ಆ ನದೀಸುತ ವಿದುರರೆಂದುದ
ನೀನುಪೇಕ್ಷಿಸಿ ಕಳೆವೆ ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ನಿರಾಹಾರವ್ರತವು ನಿರರ್ಥಕ. ಏನು ಹೇಳಲಿ. ಒಡೆಯ, ಕಳೆದು ಹೋದ ಮಾನವು ಮತ್ತೆ ಬರುವುದೆ ? ಅವಮಾನವು ಅಳಿಯಲು ಸಾಧ್ಯವೆ ? ಭೀಷ್ಮ ವಿದುರಾದಿಗಳು ಹೇಳಿದ ನೀತಿಯನ್ನು ನೀನು ಉಪೇಕ್ಷಿಸುತ್ತೀಯೆ. ‘ಎಲಾ ಹೆಂಗಸೇ, ನೀನು ಇದನ್ನೆಲ್ಲ ತಿಳಿಯೆ’ ಎಂದು ಹೇಳಬೇಡ. ಒಂದು ವಿನಂತಿಯನ್ನು ಮಾಡುತ್ತೇನೆ, ಚಿತ್ತೈಸಬೇಕು” ಎಂದಳು.
ಮೂಲ ...{Loading}...
ಈ ನಿರಾಹಾರವು ನಿರರ್ಥಕ
ವೇನನೆಂಬೆನು ಜೀಯ ಮುರಿದಭಿ
ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
ಆ ನದೀಸುತ ವಿದುರರೆಂದುದ
ನೀನುಪೇಕ್ಷಿಸಿ ಕಳೆವೆ ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ ॥20॥
೦೨೧ ತಮ್ಮ ನೆರೆ ...{Loading}...
ತಮ್ಮ ನೆರೆ ದಟ್ಟೈಸಿ ರಣದಲಿ
ನಮ್ಮ ಬಿಡಿಸಿದರವರು ನೀವಿ
ನ್ನೆಮ್ಮ ಹಿಂದಣ ಹಳಿವ ನೋಡದಿರೆಂದು ಯಮಸುತನ
ನಮ್ಮ ನಗರಿಗೆ ಕರೆಸಿ ಧರೆಯನು
ತಮ್ಮ ಪಟ್ಟಣ ಸಹಿತ ಕೊಟ್ಟರೆ
ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ತಮ್ಮ ಸಾಮಥ್ರ್ಯದಿಂದ ಯುದ್ಧಗೈದು ನಮ್ಮನ್ನು ಬಿಡಿಸಿದರು. ನಾವು ಈ ಹಿಂದೆ ಮಾಡಿದ ಅನ್ಯಾಯವನ್ನು ನೋಡದೆ, ನಮ್ಮ ನಗರಕ್ಕೆ ಬನ್ನಿ ಎಂದು ಧರ್ಮರಾಯನನ್ನು ಕರೆಯಿರಿ. ಕರೆದು ಭೂಮಿಯನ್ನು ಅವರಿಗೆ ಕೊಟ್ಟರೆ, ಲೋಕವು ನಿಮ್ಮನ್ನು ಮೆಚ್ಚುತ್ತದೆ ಎಂದು ಭಾನುಮತಿ ಹೇಳಿದಳು.
ಮೂಲ ...{Loading}...
ತಮ್ಮ ನೆರೆ ದಟ್ಟೈಸಿ ರಣದಲಿ
ನಮ್ಮ ಬಿಡಿಸಿದರವರು ನೀವಿ
ನ್ನೆಮ್ಮ ಹಿಂದಣ ಹಳಿವ ನೋಡದಿರೆಂದು ಯಮಸುತನ
ನಮ್ಮ ನಗರಿಗೆ ಕರೆಸಿ ಧರೆಯನು
ತಮ್ಮ ಪಟ್ಟಣ ಸಹಿತ ಕೊಟ್ಟರೆ
ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ ॥21॥
೦೨೨ ಕರೆಸಿದರೆ ದಿಟ ...{Loading}...
ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಳದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸು ಮಾಡಿದನೆಂಬುದೀ ಲೋಕ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಾಗೆ ಕರೆದರೂ ಅವರು ಬರುವುದಿಲ್ಲ. ಅವರು ಕಾಡಿನಲ್ಲೇ ಇರುತ್ತಾರೆ. ಹದಿಮೂರು ವರ್ಷ ಕಳೆಯದೆ ಅವರು ನಮ್ಮ ನಾಡಿನ ನೆಲಕ್ಕೆ ಕಾಲಿಡಲಾರರು. ಆದರೆ ವೈರಿಗಳ ಉಪಟಳದಿಂದ ಬಿಡಿಸಿ, ಜೀವಕೊಟ್ಟು ಉಪಕರಿಸಿದ್ದಕ್ಕೆ ಕೌರವ ಸರಿಯಾದುದನ್ನೇ ಮಾಡಿದ’ ಎಂದು ಈ ಲೋಕ ಹೇಳುತ್ತದೆ ಎಂದು ಭಾನುಮತಿ ಹೇಳಿದಳು.
ಮೂಲ ...{Loading}...
ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಳದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸು ಮಾಡಿದನೆಂಬುದೀ ಲೋಕ ॥22॥
೦೨೩ ನುಡಿದವಧಿ ಹದಿಮೂರು ...{Loading}...
ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನ ನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹದಿಮೂರು ವರ್ಷದ ಅವಧಿಯನ್ನು ನುಡಿದಂತೆಯೇ ಅವರು ಪೂರೈಸಿ, ನಮ್ಮ ರಾಜ್ಯಾರ್ಧಕ್ಕಾಗಿ ಅವರು ಬಲೆ ಬೀಸದೇ ಇರುತ್ತಾರೆಯೇ ? ಅವರು ಈ ಪ್ರತಿಜ್ಞೆ ಪೂರೈಸುವುದರೊಳಗೆ ನೀನೇ ಅರ್ಧ ರಾಜ್ಯ ಕೊಟ್ಟರೆ, ನಿನಗೊದಗುವ ಕೃತಘ್ನತೆ ತಪ್ಪುತ್ತದೆ. ಇದಕ್ಕಿಂತ ಹೆಚ್ಚಿನ ರಾಜಕಾರ್ಯವನ್ನು ತಿಳಿಯಹೇಳಲಾರೆ’ ಎಂದು ಭಾನುಮತಿ ಹೇಳಿದಳು.
ಮೂಲ ...{Loading}...
ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನ ನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ ॥23॥
೦೨೪ ಮರೆವ ಹಗೆಯೇ ...{Loading}...
ಮರೆವ ಹಗೆಯೇ ನಾವು ಮಾಡಿದ
ನರಿಯೆಲಾ ಮೂದಲಿಸಿ ಮರ್ಮವ
ನಿರಿವ ಸುರಗಿ ಕಣಾ ಸದಾ ಪಾಂಚಾಲೆ ಪವನಜರು
ಮರುಗಲೇತಕೆ ಭಾನುಮತಿ ನಿ
ನ್ನುರುವ ಮಗನಲಿ ರಾಜ್ಯಭಾರವ
ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಕೌರವನು ‘ಈ ವೈರವು ಮರೆಯುವಂತಹುದಲ್ಲ. ನಾವು ಮಾಡಿದುದನ್ನು ಮರೆತೆಯಾ ? ದ್ರೌಪದಿ ಭೀಮಸೇನರಂತೂ ಸದಾ ಮೂದಲಿಸುತ್ತಾ ಮರ್ಮವನ್ನು ಚುಚ್ಚುತ್ತಾರೆ. ಭಾನುಮತಿ, ನೀನೇಕೆ ಚಿಂತಿಸುವುದು? ನಿನ್ನ ಹಿರಿಯ ಮಗನಿಗೆ ರಾಜ್ಯಭಾರವನ್ನು ವಹಿಸಿ ಬಾಳು. ನನ್ನನ್ನು ಕಾಡಬೇಡ, ಹೋಗು’ ಎಂದನು.
ಮೂಲ ...{Loading}...
ಮರೆವ ಹಗೆಯೇ ನಾವು ಮಾಡಿದ
ನರಿಯೆಲಾ ಮೂದಲಿಸಿ ಮರ್ಮವ
ನಿರಿವ ಸುರಗಿ ಕಣಾ ಸದಾ ಪಾಂಚಾಲೆ ಪವನಜರು
ಮರುಗಲೇತಕೆ ಭಾನುಮತಿ ನಿ
ನ್ನುರುವ ಮಗನಲಿ ರಾಜ್ಯಭಾರವ
ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ ॥24॥
೦೨೫ ಸಾಕು ಸಾಕೀ ...{Loading}...
ಸಾಕು ಸಾಕೀ ಮಾತಿನಲಿ ನಮ
ಗೇಕೆ ರಾಜ್ಯದ ಪಟ್ಟವಾಯ್ತು ವಿ
ವೇಕಿಗಳಿಗಧಿದೈವವೇ ತಾನೀಸು ಹಿರಿದಲ್ಲ
ಮೂಕ ಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾಕು ಈ ಮಾತು. ನಮಗೆ ರಾಜ್ಯದ ಪಟ್ಟವಾದರೂ ಏಕಾಯಿತೋ ? ನಾನೇನು ಹಿರಿಯ ವಿವೇಕಿಯಲ್ಲ. ನನಗೆ ಮೌನದೀಕ್ಷೆಯೇ ಸಾಕು’ ಎಂದು ಭಾನುಮತಿಯಿದ್ದಳು. ಆಗ ಅರಮನೆಯಿಂದ ದಂಡಿಗೆಗಳು ಸಾಲುಸಾಲಾಗಿ ಬಂದವು.
ಮೂಲ ...{Loading}...
ಸಾಕು ಸಾಕೀ ಮಾತಿನಲಿ ನಮ
ಗೇಕೆ ರಾಜ್ಯದ ಪಟ್ಟವಾಯ್ತು ವಿ
ವೇಕಿಗಳಿಗಧಿದೈವವೇ ತಾನೀಸು ಹಿರಿದಲ್ಲ
ಮೂಕ ಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ ॥25॥
೦೨೬ ಬನ್ದಳಾ ಗಾನ್ಧಾರಿ ...{Loading}...
ಬಂದಳಾ ಗಾಂಧಾರಿ ಸೊಸೆಯರ
ವೃಂದ ಸಹಿತುರವಣಿಸಿ ಹೊಕ್ಕಳು
ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ
ಕಂದಿದಳು ಕಡು ಶೋಕ ಶಿಖಿಯಲಿ
ಬೆಂದಳೇನೈ ಮಗನ ಹಾಸಿಕೆ
ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೊಸೆಯರನ್ನೆಲ್ಲ ಕರೆದುಕೊಂಡು ಗಾಂಧಾರಿಯು ಒಳಗೆ ಬಂದು, ಕೌರವನು ದರ್ಭೆಯ ಮೇಲೆ ಮಲಗಿರುವುದನ್ನು ಕಂಡು, ದುಃಖಿಸಿದಳು. ಶೋಕಾಗ್ನಿಯಲ್ಲಿ ಬೆಂದು, ಮಗನ ಹತ್ತಿರ ಕುಳಿತು ‘ನಿನ್ನ ಹಾಸಿಗೆಯ ಪರಿ ಲೇಸಾಯ್ತು’ ಎಂದಳು.
ಮೂಲ ...{Loading}...
ಬಂದಳಾ ಗಾಂಧಾರಿ ಸೊಸೆಯರ
ವೃಂದ ಸಹಿತುರವಣಿಸಿ ಹೊಕ್ಕಳು
ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ
ಕಂದಿದಳು ಕಡು ಶೋಕ ಶಿಖಿಯಲಿ
ಬೆಂದಳೇನೈ ಮಗನ ಹಾಸಿಕೆ
ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ ॥26॥
೦೨೭ ಏನು ದರ್ಭಾಸ್ತರಣ ...{Loading}...
ಏನು ದರ್ಭಾಸ್ತರಣ ಶಯನವಿ
ದೇನು ಕಾರಣ ನಿರಶನವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ದರ್ಭಾಸ್ತರಣದ ಮೇಲೆ ಮಲಗಿರುವುದು ಏಕೆ ? ಈ ನಿರಶನವ್ರತ ಏಕೆ ? ಪ್ರಾಯೋಪವೇಶದಿಂದ ಯಾವ ಸಿದ್ಧಿಯಾಗುತ್ತದೆ ? ಈ ಮೌನವನ್ನು ಬಿಟ್ಟು ಮಾತಾಡದಿದ್ದರೆ ನನ್ನಾಣೆ’ ಎಂದು ತನ್ನ ಹಣೆಯನ್ನು ಮಗನ ಹಣೆಯ ಮೇಲಿಟ್ಟಳು.
ಮೂಲ ...{Loading}...
ಏನು ದರ್ಭಾಸ್ತರಣ ಶಯನವಿ
ದೇನು ಕಾರಣ ನಿರಶನವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ ॥27॥
೦೨೮ ತಾಯೆ ಹೇಳುವುದೇನು ...{Loading}...
ತಾಯೆ ಹೇಳುವುದೇನು ಪಾಂಡವ
ರಾಯರುಳುಹಿದ ವೊಡಲನಿದನಿದ
ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು
ನೋಯಲೇತಕೆ ನಿಮಗೆ ಮಕ್ಕಳು
ತಾಯೆ ನೂರುಂಟನಿಬರಲಿ ಕುಂ
ದಾಯಿತೊಂದೈ ಸಲೆ ಮನೋವ್ಯಥೆಯೇಕೆ ನಿಮಗೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯೇ, ಏನು ಹೇಳಲಿ ? ಪಾಂಡವರಿಂದ ಉಳಿಸಲ್ಪಟ್ಟ ಈ ದೇಹಕ್ಕೆ ಉಂಟಾದ ಆಯಾಸವನ್ನು ಹೇಳಲಾರೆ. ಅದನ್ನು ಹೊರಗೆ ಇದ್ದವರಲ್ಲಿ ಕೇಳುವುದು. ನಿಮಗೆ ನೂರು ಮಕ್ಕಳಿರುವಾಗ, ಅವರಲ್ಲಿ ಒಬ್ಬ ಮಾತ್ರ ಇಲ್ಲ ಎಂದು ಭಾವಿಸಿದರೆ ಸರಿ. ಇದಕ್ಕೆ ಮನೋವೇದನೆ ಏಕೆ ? ಎಂದು ದುಯೋಧನನು ಕೇಳಿದನು.
ಮೂಲ ...{Loading}...
ತಾಯೆ ಹೇಳುವುದೇನು ಪಾಂಡವ
ರಾಯರುಳುಹಿದ ವೊಡಲನಿದನಿದ
ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು
ನೋಯಲೇತಕೆ ನಿಮಗೆ ಮಕ್ಕಳು
ತಾಯೆ ನೂರುಂಟನಿಬರಲಿ ಕುಂ
ದಾಯಿತೊಂದೈ ಸಲೆ ಮನೋವ್ಯಥೆಯೇಕೆ ನಿಮಗೆಂದ ॥28॥
೦೨೯ ಮಾಡಿದೆನು ಸಙ್ಕಲ್ಪವಿದರೊಳು ...{Loading}...
ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸ ಪಡುವುದಾ ದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದೆನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಕಲ್ಪವನ್ನು ಮಾಡಿ ಆಗಿದೆ. ಇದರಿಂದಲೇ ನನ್ನ ತನುವನ್ನು ಕಳೆದುಕೊಳ್ಳುತ್ತೇನೆ. ದುಶ್ಯಾಸನಾದಿಗಳನ್ನು ನೋಡಿ ನೀವು ಸಂತೋಷದಿಂದಿರಿ. ನನ್ನನ್ನು ಕುರುಕುಲಗೇಡಿ ಎಂದು ಲೋಕವೆಲ್ಲಾ ಕರೆಯುತ್ತಿದೆ. ಹೀಗೆ ಹುಟ್ಟಿದ ನಾನು ಸತ್ತರೆ ಕುರುವಂಶಕ್ಕೆ ಲೇಸು ತಾನೇ ಎಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸ ಪಡುವುದಾ ದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದೆನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ ॥29॥
೦೩೦ ಉಸುರು ಬೀಯದ ...{Loading}...
ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟ ಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರಾಣ ಹೋಗುವ ಮೊದಲೇ ರಾಜ್ಯವನ್ನು ಬಿಟ್ಟುಕೊಟ್ಟಿದ್ದೇನೆ. ಪಟ್ಟಾಭಿಷೇಕದ ಸುದ್ದಿಯನ್ನು ಕಿವಿಯಾರೆ ಕೇಳುತ್ತೇನೆ. ಸ್ವಲ್ಪವೂ ಅಂಜದೆ ಪ್ರಾಣ ಬಿಡುತ್ತೇನೆ. ಯಾವ ಆಲೋಚನೆಯನ್ನೂ ಮಾಡದೆ ದುಶ್ಶಾಸನನಿಗೆ ಪಟ್ಟವನ್ನು ಕಟ್ಟಿ. ಅಮ್ಮಾ… ನೀವಿನ್ನು ಹೊರಡಿ’ ಎಂದನು.
ಪದಾರ್ಥ (ಕ.ಗ.ಪ)
ಬೀಯ - ನಿಂತು ಹೋಗುವುದು, ನಾಶ
ಮೂಲ ...{Loading}...
ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟ ಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ ॥30॥
೦೩೧ ಆ ಸಮಯದಲಿ ...{Loading}...
ಆ ಸಮಯದಲಿ ವಿಗತ ನಯನ ಮ
ಹೀಶ ಬಂದನು ಜನಪದದ ವಿ
ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ
ಆಸರಿನ ಬೇಗುದಿಯ ಬೆಂಕಿಯ
ಬೇಸರಿನ ಬಿಸುಸುಯ್ಲ ರಾಣೀ
ವಾಸ ಕುಲವಿದಿರೆದ್ದುದಖಿಳಾಭರಣ ರಭಸದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ಧೃತರಾಷ್ಟ್ರ ಭೂಪತಿಯು ಜನರ ಜಯ ಜಯಕಾರದೊಂದಿಗೆ ವಿದುರನ ಹೆಗಲ ಮೇಲೆ ಕೈಯಿಟ್ಟುಕೊಂಡು ಬಂದನು. ಆಗ ಬಾಯಾರಿ ಬಳಲಿ ಬೇಸರದಿಂದ ಬಿಸುಸುಯ್ಯುತ್ತಿರುವ ರಾಣಿಯರೆಲ್ಲಾ ಆಭರಣದ ಸದ್ದಿನೊಂದಿಗೆ ಎದ್ದು ನಿಂತರು.
ಮೂಲ ...{Loading}...
ಆ ಸಮಯದಲಿ ವಿಗತ ನಯನ ಮ
ಹೀಶ ಬಂದನು ಜನಪದದ ವಿ
ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ
ಆಸರಿನ ಬೇಗುದಿಯ ಬೆಂಕಿಯ
ಬೇಸರಿನ ಬಿಸುಸುಯ್ಲ ರಾಣೀ
ವಾಸ ಕುಲವಿದಿರೆದ್ದುದಖಿಳಾಭರಣ ರಭಸದಲಿ ॥31॥
೦೩೨ ಸನ್ತವಿಡಿರೇ ಮಗನ ...{Loading}...
ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗವ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚದುರ ಚಿತ್ತಕೆ
ಚಿಂತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನ ವ್ರತವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸ್ವಾಮೀ, ಮಗನನ್ನು ಸಮಾಧಾನಿಸಿ. ಪ್ರಾಯೋಪವೇಶದ ಸಂಕಲ್ಪ ಮಾಡಿದ ಅವನ ಮನಸ್ಸನ್ನು ಬದಲಾಯಿಸಿ” ಎಂದು ಗಾಂಧಾರಿ ದುಃಖಿಸಿದಳು. ಅವನಿಗೆ ಭ್ರಮೆ ಆವರಿಸಿದೆ. ಮನಸ್ಸಿಗೆ ಚಿಂತೆ ಮುಸುಕಿದೆ. ಅವನ ಆಪ್ತ ಸ್ನೇಹಿತರು ಬಂದು ಉಪವಾಸವ್ರತವನ್ನು ನಿಲ್ಲಿಸಲಿ ಎಂದು ಅತ್ತಳು.
ಮೂಲ ...{Loading}...
ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗವ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚದುರ ಚಿತ್ತಕೆ
ಚಿಂತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನ ವ್ರತವ ॥32॥
೦೩೩ ಸಾಕು ಮಗನೆ ...{Loading}...
ಸಾಕು ಮಗನೆ ದುರಂತ ಚಿಂತೆಯಿ
ದೇಕೆ ಸಂಕಲ್ಪಾಭಿಯೋಗ
ವ್ಯಾಕುಲತೆ ಬೇಡೇಳು ಪಾಲಿಸು ಸಕಲ ಭೂತಳವ
ಆ ಕುಮಾರರ ಕರೆಸಿ ಗುಣದಲಿ
ಸಾಕುವುದು ಜೀವೋಪಕಾರಕೆ
ಕಾಕ ನೆನೆಯದಿರೆನುತ ಮುಂಡಾಡಿದನು ನಂದನನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಗನೆ, ಸಾಕು ಮಾಡು. ಈ ಚಿಂತೆ ಏಕೆ ? ಈ ದೀಕ್ಷೆಯನ್ನು ಬಿಡು. ಏಳು ಭೂಮಿಯನ್ನು ಪಾಲಿಸು. ಜೀವಕ್ಕೆ ಉಪಕರಿಸಿದ ಪಾಂಡು ಕುಮಾರರನ್ನು ಕರೆಸಿಕೊಂಡು ಚೆನ್ನಾಗಿ ನೋಡಿಕೊ. ಕೆಟ್ಟುದನ್ನು ಯೋಚಿಸಬೇಡ’ ಎಂದು ಮಗನನ್ನು ಮುದ್ದಾಡಿದನು.
ಮೂಲ ...{Loading}...
ಸಾಕು ಮಗನೆ ದುರಂತ ಚಿಂತೆಯಿ
ದೇಕೆ ಸಂಕಲ್ಪಾಭಿಯೋಗ
ವ್ಯಾಕುಲತೆ ಬೇಡೇಳು ಪಾಲಿಸು ಸಕಲ ಭೂತಳವ
ಆ ಕುಮಾರರ ಕರೆಸಿ ಗುಣದಲಿ
ಸಾಕುವುದು ಜೀವೋಪಕಾರಕೆ
ಕಾಕ ನೆನೆಯದಿರೆನುತ ಮುಂಡಾಡಿದನು ನಂದನನ ॥33॥
೦೩೪ ಸವೆದು ಹೋಯ್ತಾಯುಷ್ಯ ...{Loading}...
ಸವೆದು ಹೋಯ್ತಾಯುಷ್ಯ ತನಗಿ
ನ್ನವನಿಯಾಗದು ಮರೆ ಯುಧಿಷ್ಠಿರ
ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ
ಅವರುಗಳು ನಿಲಿಸುವುದು ನೆಲದ
ರ್ಧವನು ದುಶ್ಯಾಸನಗೆ ಕೊಡುವುದು
ನಿಮಗೆ ಚಿತ್ತಕೆ ಬಹರೆಯೆಂದನು ತಂದೆಗವನೀಶ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನನ್ನ ಆಯುಷ್ಯ ತೀರಿತು. ಇನ್ನು ಈ ಸಾಮ್ರಾಜ್ಯ ಬೇಡ. ಇದನ್ನು ಮರೆತುಬಿಡು. ಧರ್ಮಜ ಭೀಮಾದಿಗಳು ನಿನಗೆ ಬೇರೆಯವರೇ ? ಅವರನ್ನು ಕರೆಸಿಕೊಂಡು ರಾಜ್ಯದಲ್ಲಿ ಅವರನ್ನು ನೆಲೆಗೊಳಿಸು. ನಿಮ್ಮ ಮನಸ್ಸಿಗೆ ಬಂದರೆ, ಅರ್ಧ ರಾಜ್ಯವನ್ನು ದುಶ್ಶಾಸನನಿಗೆ ಕೊಡಿ. ಎಂದು ತಂದೆಗೆ ಕೌರವನು ಹೇಳಿದನು.
ಮೂಲ ...{Loading}...
ಸವೆದು ಹೋಯ್ತಾಯುಷ್ಯ ತನಗಿ
ನ್ನವನಿಯಾಗದು ಮರೆ ಯುಧಿಷ್ಠಿರ
ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ
ಅವರುಗಳು ನಿಲಿಸುವುದು ನೆಲದ
ರ್ಧವನು ದುಶ್ಯಾಸನಗೆ ಕೊಡುವುದು
ನಿಮಗೆ ಚಿತ್ತಕೆ ಬಹರೆಯೆಂದನು ತಂದೆಗವನೀಶ ॥34॥
೦೩೫ ಆದರವರನ್ತಿರಲಿ ನಿನಗಿ ...{Loading}...
ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೊಡೀ ಕುರುವಂಶವಳಿವುಡು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚು ಕುಂದೇನೆಂದನಂಧನೃಪ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೆಲ್ಲಾ ಹಾಗಿರಲಿ. ನಿನಗೆ ಇನ್ನು ಈ ದುರಾಗ್ರಹ ಬೇಡ. ನೀನು ಸತ್ತೆ ಎಂದಾದರೆ ಕುರುವಂಶ ಸರ್ವನಾಶವಾಗುತ್ತದೆ. ಯಾರಿಗೆ ಪಟ್ಟಕಟ್ಟುವುದು ? ಬೀದಿಯ ಕಲಹದಲ್ಲಿ ಒಮ್ಮೆ ಹಿನ್ನಡೆಯುಂಟಾದರೂ ಈಗ ಪರಿಹರಿಸಿದವರು ಎಷ್ಟಾದರೂ ಸೋದರರಲ್ಲವೇ ? ಇದರಿಂದ ಏನು ಕುಂದು ? ಎಂದು ಧೃತರಾಷ್ಟ್ರನು ಕೇಳಿದನು.
ಪದಾರ್ಥ (ಕ.ಗ.ಪ)
ಪೈಸರ - ಹಿನ್ನಡೆ
ಮೂಲ ...{Loading}...
ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೊಡೀ ಕುರುವಂಶವಳಿವುಡು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚು ಕುಂದೇನೆಂದನಂಧನೃಪ ॥35॥
೦೩೬ ಕಲಹ ಬೀದಿಯೊಳಾಯ್ತು ...{Loading}...
ಕಲಹ ಬೀದಿಯೊಳಾಯ್ತು ಕಟ್ಟಿದ
ರಳಿ ವಿನೋದದಲಹಿತರದ ಹೊ
ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ
ನಳಿನಮುಖಿ ಕಡು ಮೌಳಿಯಲಿ ಮೂ
ದಲಿಸಿ ಕೊಯ್ದಳು ತನಗೆ ಭಂಗದ
ಲುಳಿವುದೆತ್ತಣ ಮಾತು ಕರುಣಿಸು ಬೊಪ್ಪ ನೀವೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀದಿಕಾಳಗದಲ್ಲಿ, ಅರ್ಜುನನು ವೈರಿಗಳೊಡನೆ ಕಾದಿ ನನ್ನನ್ನು ಕರೆತಂದನು. ದ್ರೌಪದಿಯು ತೋಳಬಂಧವನ್ನು ಬಿಚ್ಚಿ ಕಟುವ್ಯಂಗ್ಯದಿಂದ ಮೂದಲಿಕೆಯ ಮಾತನ್ನಾಡಿದಳು. ಇನ್ನು ಈ ಅವಮಾನದಿಂದ ಹೇಗೆ ಬದುಕಲಿ ? ನೀನೇ ಹೇಳು ಅಪ್ಪಾ ! ಎಂದನು.
ಪದಾರ್ಥ (ಕ.ಗ.ಪ)
ಮೌಳಿ - ಮಹುಳಿ - ವ್ಯಂಗ್ಯ, ಚುಚ್ಚುಮಾತು
ಮೂಲ ...{Loading}...
ಕಲಹ ಬೀದಿಯೊಳಾಯ್ತು ಕಟ್ಟಿದ
ರಳಿ ವಿನೋದದಲಹಿತರದ ಹೊ
ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ
ನಳಿನಮುಖಿ ಕಡು ಮೌಳಿಯಲಿ ಮೂ
ದಲಿಸಿ ಕೊಯ್ದಳು ತನಗೆ ಭಂಗದ
ಲುಳಿವುದೆತ್ತಣ ಮಾತು ಕರುಣಿಸು ಬೊಪ್ಪ ನೀವೆಂದ ॥36॥
೦೩೭ ದೋಷ ನಿಮಗಿಲ್ಲೆನ್ನ ...{Loading}...
ದೋಷ ನಿಮಗಿಲ್ಲೆನ್ನ ಮೇಲಭಿ
ಲಾಷೆಯನು ಬಿಡಿ ನಿಮ್ಮ ಮಗ ಕುಲ
ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ
ರೋಷವುಂಟೇ ತನಗೆ ನಿಮಗಿದು
ದೂಷಣವೆ ತಾನಲ್ಲ ನಾನೇ
ಘೋಷಿಸುವೆನೈ ಪಾಂಡು ಸುತರರಸಾಗಬೇಕೆಂದು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮಗೇನೂ ದೋಷವಿಲ್ಲ. ನನ್ನ ಮೇಲಿನ ಮೋಹವನ್ನು ಬಿಡಿ. ಧರ್ಮರಾಯ ನಿಮ್ಮ ಕುಲಕ್ಕೆ ಭೂಷಣನಲ್ಲವೆ ? ಅವನಲ್ಲಿ ಕಾದಾಡುವ ಸಾಹಸ ನನ್ನಲ್ಲಿಲ್ಲ. ನಿಮಗೆ ಇದು ಅಪ್ರಿಯವಾದುದೂ ಅಲ್ಲ. ಪಾಂಡವರೆ ಅರಸಾಗಬೇಕೆಂದು ನಾನೇ ಘೋಷಿಸುತ್ತೇನೆ’ ಎಂದನು.
ಪಾಠಾನ್ತರ (ಕ.ಗ.ಪ)
ನಾನಾ - ನಾನೇ
ಕುಮಾರವ್ಯಾಸ ಭಾರತ, ಅರಾಸೇ.
ಮೂಲ ...{Loading}...
ದೋಷ ನಿಮಗಿಲ್ಲೆನ್ನ ಮೇಲಭಿ
ಲಾಷೆಯನು ಬಿಡಿ ನಿಮ್ಮ ಮಗ ಕುಲ
ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ
ರೋಷವುಂಟೇ ತನಗೆ ನಿಮಗಿದು
ದೂಷಣವೆ ತಾನಲ್ಲ ನಾನೇ
ಘೋಷಿಸುವೆನೈ ಪಾಂಡು ಸುತರರಸಾಗಬೇಕೆಂದು ॥37॥
೦೩೮ ಸಾರವೀ ನುಡಿ ...{Loading}...
ಸಾರವೀ ನುಡಿ ಕಟಕಿಯಲ್ಲ ವಿ
ಚಾರಪರರಿಗೆ ನಿಮ್ಮ ಚಿತ್ತಕೆ
ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು
ಸೇರಿಸುವುದವನಿಯನು ಮೇಣಿದು
ಭಾರವೇ ನಿಮ್ಮರಮನೆಗೆ ವಿ
ಸ್ತಾರದಿಂದವೆ ಬಿಜಯ ಮಾಡೆನುತತ್ತ ಮುಂದಾದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಸರಿಯಾದ ಮಾತು. ವ್ಯಂಗ್ಯವಿಲ್ಲ. ಇದು ನಿಮ್ಮ ವಿಚಾರಶೀಲವಾದ ಮನಸ್ಸಿಗೆ ಸರಿಬಾರದಿದ್ದರೆ ಬಿಟ್ಟುಬಿಡಿ. ದುಶ್ಶಾಸನನನ್ನು ಕರೆಸಿ ಭೂಮಿಯನ್ನು ಪಟ್ಟಗಟ್ಟಿ. ಇದು ಕೂಡಾ ಸಮಂಜಸವೆನಿಸದಿದ್ದರೆ ನಿಮ್ಮ ಅರಮನೆಯ ಕಡೆ ಹೊರಟುಹೋಗಿ ಎಂದು ಮುಖವನ್ನು ತಿರುಗಿಸಿದನು.
ಮೂಲ ...{Loading}...
ಸಾರವೀ ನುಡಿ ಕಟಕಿಯಲ್ಲ ವಿ
ಚಾರಪರರಿಗೆ ನಿಮ್ಮ ಚಿತ್ತಕೆ
ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು
ಸೇರಿಸುವುದವನಿಯನು ಮೇಣಿದು
ಭಾರವೇ ನಿಮ್ಮರಮನೆಗೆ ವಿ
ಸ್ತಾರದಿಂದವೆ ಬಿಜಯ ಮಾಡೆನುತತ್ತ ಮುಂದಾದ ॥38॥
೦೩೯ ಮುನಿಸಿನಲಿ ಧೃತರಾಷ್ಟ್ರ ...{Loading}...
ಮುನಿಸಿನಲಿ ಧೃತರಾಷ್ಟ್ರ ತನ್ನರ
ಮನೆಗೆ ತಿರುಗಿದನಿತ್ತ ನಾರೀ
ಜನವನೆಲ್ಲವ ಬೀಳುಕೊಟ್ಟನು ಬೈದು ಖಾತಿಯಲಿ
ಮನಕತದಿ ಕಾತರಿಸಿ ಗಂಗಾ
ತನುಜ ರವಿಜ ದ್ರೋಣ ಗೌತಮ
ರನುಚಿತ ಪ್ರಾರಂಭಭೀತರು ಬಂದರೊಗ್ಗಿನಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ಸಿಟ್ಟಿನಿಂದಲೇ ಅರಮನೆಗೆ ಹಿಂತಿರುಗಿದನು. ಸ್ತ್ರೀಯರನ್ನೆಲ್ಲಾ ಬೈದು ಸಿಟ್ಟಿನಿಂದ ಕಳುಹಿಸಿದನು. ಮನದೊಳಗೆ ಕಳವಳದಿಂದ ಕೆಡುಕುಂಟಾಗುವುದೆಂಬ ಭಯದಿಂದ ಭೀಷ್ಮ, ಕರ್ಣ, ದ್ರೋಣ, ಗೌತಮರು ಅಲ್ಲಿಗೆ ಒಟ್ಟಾಗಿ ಬಂದರು.
ಪದಾರ್ಥ (ಕ.ಗ.ಪ)
ಗೌತಮ - ಕೃಪ
ಮೂಲ ...{Loading}...
ಮುನಿಸಿನಲಿ ಧೃತರಾಷ್ಟ್ರ ತನ್ನರ
ಮನೆಗೆ ತಿರುಗಿದನಿತ್ತ ನಾರೀ
ಜನವನೆಲ್ಲವ ಬೀಳುಕೊಟ್ಟನು ಬೈದು ಖಾತಿಯಲಿ
ಮನಕತದಿ ಕಾತರಿಸಿ ಗಂಗಾ
ತನುಜ ರವಿಜ ದ್ರೋಣ ಗೌತಮ
ರನುಚಿತ ಪ್ರಾರಂಭಭೀತರು ಬಂದರೊಗ್ಗಿನಲಿ ॥39॥
೦೪೦ ರಾಯನಿಹ ಹದನೇನು ...{Loading}...
ರಾಯನಿಹ ಹದನೇನು ನಿದ್ರಾ
ನಾಯಿಕೆಯ ಮೇಳವದಲೈದನೆ
ಜೀಯಯೆನಲೊಳಹೊಕ್ಕು ನಿಂದರು ನೃಪಸಮೀಪದಲಿ
ಆಯಿತೇ ನಾವೆಂದ ನುಡಿಯಿದು
ಹೋಯಿತನಶನದಿಂದ ದೇಹದ
ಬೀಯದಲಿ ಸಂಕಲ್ಪ ಗಡ ಹೇಳೆಂದನಾ ಭೀಷ್ಮ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಹೇಗಿದ್ದಾನೆ ? ನಿದ್ರೆಗೆ ಹೋಗಿದ್ದಾನೆಯೇ ? ಎಂದು ಅವರು ಒಳಗೆ ಬಂದು ನೃಪತಿಯ ಹತ್ತಿರ ನಿಂತುಕೊಂಡರು. ‘ನಾವು ಹೇಳಿದಂತೆಯೇ ಆಯಿತು. ಈ ನಿರಾಹಾರದಿಂದ ಆ ದೋಷವನ್ನು ಪರಿಹಾರ ಮಾಡಿಕೊಳ್ಳುವಿಯೆಂದು ಸಂಕಲ್ಪ ಮಾಡಿರುವೆಯಲ್ಲವೇ? ಹೇಳು ?’ ಎಂದು ಭೀಷ್ಮನು ಕೇಳಿದನು.
ಮೂಲ ...{Loading}...
ರಾಯನಿಹ ಹದನೇನು ನಿದ್ರಾ
ನಾಯಿಕೆಯ ಮೇಳವದಲೈದನೆ
ಜೀಯಯೆನಲೊಳಹೊಕ್ಕು ನಿಂದರು ನೃಪಸಮೀಪದಲಿ
ಆಯಿತೇ ನಾವೆಂದ ನುಡಿಯಿದು
ಹೋಯಿತನಶನದಿಂದ ದೇಹದ
ಬೀಯದಲಿ ಸಂಕಲ್ಪ ಗಡ ಹೇಳೆಂದನಾ ಭೀಷ್ಮ ॥40॥
೦೪೧ ಈಸು ದಿನ ...{Loading}...
ಈಸು ದಿನ ಸಾಮ್ರಾಜ್ಯ ಸೌಖ್ಯ ವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿ ರಾಜ್ಯದಲಿ
ಆಸೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ಸಮಯ ಸಾಮ್ರಾಜ್ಯವನ್ನು ಅನುಭವಿಸಿದೆ ಸಾಕು. ಈ ದೇಹವನ್ನು ಬಿಟ್ಟು ಇನ್ನು ಮುಂದೆ ಮುಕ್ತಿ ಸಾಮ್ರಾಜ್ಯದಲ್ಲಿರುತ್ತೇನೆ. ಭೂಮಿಯ ಮೇಲೆ ಆಸೆಯಿಲ್ಲ. ವಿಷಯ ಸುಖದಲ್ಲಿದ್ದವನಿಗೂ ಒಮ್ಮೆ ವೈರಾಗ್ಯ ಉಂಟಾಗುವುದು ತಾನೇ ? ಗುರುಗಳೇ ನೀವು ಹೇಳಿ’ ಎಂದನು.
ಮೂಲ ...{Loading}...
ಈಸು ದಿನ ಸಾಮ್ರಾಜ್ಯ ಸೌಖ್ಯ ವಿ
ಲಾಸದಲಿ ಬಳಸಿದೆನು ಸಾಕಿ
ನ್ನೀ ಶರೀರವ ನೂಕಿ ನಿಲುವೆನು ಮುಕ್ತಿ ರಾಜ್ಯದಲಿ
ಆಸೆಯವನಿಯೊಳಿಲ್ಲ ವಿಷಯಾ
ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು
ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ ॥41॥
೦೪೨ ಕೇಳಿದೆವು ಹಿನ್ದಾದ ...{Loading}...
ಕೇಳಿದೆವು ಹಿಂದಾದ ಖೇಚರ
ರೂಳಿಗಳವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆನೆಂದನಾ ಭೀಷ್ಮ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಡೆದ ಗಂಧರ್ವ ಕಾಳಗವನ್ನೂ, ಅದರಲ್ಲಿ ನಿನಗೆ ಪಾಂಡವರು ಸಹಕಾರಿಯಾದ ಸಂಗತಿಯನ್ನೂ ಕೇಳಿದೆವು. ಇದರಿಂದ ನಿನಗೆ ಉಂಟಾದ ಅವಮಾನವನ್ನು ಮುಂದೆ ಮನದಲ್ಲಿರಿಸಿಕೊಳ್ಳದಂತೆ ಪಾಂಡವರನ್ನು ಕರೆಸಿ, ಭೀಮಾರ್ಜುನರನ್ನು ನಿನ್ನ ಸೇವಕರ ಹಾಗೆ ನಡೆಸುತ್ತೇನೆ’ ಎಂದು ಭೀಷ್ಮನು ಹೇಳಿದನು.
ಮೂಲ ...{Loading}...
ಕೇಳಿದೆವು ಹಿಂದಾದ ಖೇಚರ
ರೂಳಿಗಳವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆನೆಂದನಾ ಭೀಷ್ಮ ॥42॥
೦೪೩ ಮೊದಲು ಧೃತರಾಷ್ಟ್ರಙ್ಗೆ ...{Loading}...
ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರಂಭದಲ್ಲಿ ಧೃತರಾಷ್ಟ್ರನಿಗೆ ಈ ದೇಹ ಹುಟ್ಟಿತು. ಅನಂತರ ಧರ್ಮರಾಯನಿಂದ ಇದು ಬದುಕಿತು. ಹಾಗಾಗಿ ಅವರೊಡನೆ ಮತ್ಸರವೆ ? ಆ ದುಷ್ಟತನ ಸಾಕು. ಈಗ ವೈರಾಗ್ಯದಿಂದ ದೇಹವನ್ನು ಬಿಡುತ್ತೇನೆಯೇ ವಿನಾ ಹೆದರಿಕೆ, ಅವಮಾನಗಳಿಂದಲ್ಲ. ನೀವು ಹೊರಡಿರಿ ಎಂದು ಕೌರವನು ಹೇಳಿದನು.
ಮೂಲ ...{Loading}...
ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ ॥43॥
೦೪೪ ನಾವು ಪಡಿಬಾಹಿರರು ...{Loading}...
ನಾವು ಪಡಿಬಾಹಿರರು ಬೀಯದ
ಸೇವಕರು ಸಮಹಂತಿಗಾರರಿ
ಗೀವುದೈ ದೃಢಮುದ್ರಿತಾಂತರ್ಮಾನಸಾಮೃತವ
ಭೂವಧುವ ಬೋಳೈಸು ಕಾನನ
ಜೀವಿಗಳು ತಮ್ಮೊಲಿದುದಾಗಲಿ
ಸಾವುದನುಚಿತವೆಂದು ನುಡಿದರು ಭೀಷ್ಮ ಗುರು ಕೃಪರು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ನಿನ್ನಿಂದ ಪಡಿಯನ್ನು ಪಡೆಯಲೂ ಅನರ್ಹರು. ದಂಡದ ಸೇವಕರು. ನಿನ್ನ ಮನಸ್ಸಿನಲ್ಲಿ ದೃಢವಾಗಿ ಬೇರೂರಿರುವ ಅಭಿಪ್ರಾಯವನ್ನು ನಿನ್ನ ಆಪ್ತರಿಗಾದರೂ ತಿಳಿಸು. ಭೂಮಿಯನ್ನು ಪಾಲಿಸು. ವನವಾಸಿಗಳಾದ ಪಾಂಡವರು ಏನು ಬೇಕಾದರೂ ಮಾಡಲಿ ನೀನು ಸಾಯುವುದು ಅನುಚಿತವಾದುದು.’ ಎಂದು ಭೀಷ್ಮದ್ರೋಣ ಕೃಪಾಚಾರ್ಯರೆಂದರು.
ಪದಾರ್ಥ (ಕ.ಗ.ಪ)
ಸಮಹಂತಿಗಾರರು - ಆಪ್ತರು
ಮೂಲ ...{Loading}...
ನಾವು ಪಡಿಬಾಹಿರರು ಬೀಯದ
ಸೇವಕರು ಸಮಹಂತಿಗಾರರಿ
ಗೀವುದೈ ದೃಢಮುದ್ರಿತಾಂತರ್ಮಾನಸಾಮೃತವ
ಭೂವಧುವ ಬೋಳೈಸು ಕಾನನ
ಜೀವಿಗಳು ತಮ್ಮೊಲಿದುದಾಗಲಿ
ಸಾವುದನುಚಿತವೆಂದು ನುಡಿದರು ಭೀಷ್ಮ ಗುರು ಕೃಪರು ॥44॥
೦೪೫ ಎಮ್ಮ ನುಡಿಗಳಪಥ್ಯವಾದರೆ ...{Loading}...
ಎಮ್ಮ ನುಡಿಗಳಪಥ್ಯವಾದರೆ
ನಿಮ್ಮ ಕರ್ಣಾದಿಗಳ ಕರೆಸುವು
ದೆಮ್ಮ ನುಡಿಗವರೆಂದ ಮಾತನುಸಾರಿಯೆನಿಸಿದರೆ
ಒಮ್ಮೆ ಕೈಕೊಂಬುದು ವೃಥಾ ನೃಪ
ಧರ್ಮವನು ಬಿಡಬೇಡ ಸಮರವ
ನೆಮ್ಮಿ ಸಾವುದು ಗುಣವು ಗರುವರಿಗೆಂದನಾ ಭೀಷ್ಮ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಮಾತುಗಳು ನಿನಗೆ ಹಿಡಿಸದೇ ಹೋದರೆ, ನಿನ್ನವರೇ ಆದ ಕರ್ಣಾದಿಗಳನ್ನು ಕರೆಸು. ನಮ್ಮ ಮಾತಿಗೆ ಅನುಗುಣವಾಗಿಯೇ ಅವರ ಮಾತೂ ಇದ್ದರೆ ಒಮ್ಮೆ ಇದನ್ನು ಈಡೇರಿಸು. ಕ್ಷತ್ರಿಯ ಧರ್ಮವನ್ನು ವೃಥಾ ಬಿಡಬೇಡ. ಶೂರರಾದವರಿಗೆ ರಣರಂಗದ ಸಾವೇ ಶ್ರೇಷ್ಠ ಎಂದು ಭೀಷ್ಮನು ಹೇಳಿದನು.
ಮೂಲ ...{Loading}...
ಎಮ್ಮ ನುಡಿಗಳಪಥ್ಯವಾದರೆ
ನಿಮ್ಮ ಕರ್ಣಾದಿಗಳ ಕರೆಸುವು
ದೆಮ್ಮ ನುಡಿಗವರೆಂದ ಮಾತನುಸಾರಿಯೆನಿಸಿದರೆ
ಒಮ್ಮೆ ಕೈಕೊಂಬುದು ವೃಥಾ ನೃಪ
ಧರ್ಮವನು ಬಿಡಬೇಡ ಸಮರವ
ನೆಮ್ಮಿ ಸಾವುದು ಗುಣವು ಗರುವರಿಗೆಂದನಾ ಭೀಷ್ಮ ॥45॥
೦೪೬ ಕದನವಾರಲಿ ಪಾಣ್ಡು ...{Loading}...
ಕದನವಾರಲಿ ಪಾಂಡು ಸುತರಲಿ
ಕದಡ ಮಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾರ ಜೊತೆಗೆ ಯುದ್ಧ? ಪಾಂಡವರೊಡನೆ ಯುದ್ಧ ಮಾಡುವುದು ಸೂಕ್ತವೆ ? ನಮಗೆ ಇಡೀ ಭಾರತ ವರ್ಷದಲ್ಲೇ ಎದುರು ನಿಲ್ಲುವ ವೀರರು ಯಾರಿದ್ದಾರೆ ? ಇದನ್ನು ತಿಳಿದು, ಈ ನನ್ನ ಸಂಕಲ್ಪವನ್ನು ಮುರಿಯುವುದು ಶ್ರೇಯಸ್ಕರವೇ ? ದಯವಿಟ್ಟು ನೀವು ಅರಮನೆಗೆ ನಡೆಯಿರಿ’ ಎಂದು ಕೌರವನೆಂದನು.
ಮೂಲ ...{Loading}...
ಕದನವಾರಲಿ ಪಾಂಡು ಸುತರಲಿ
ಕದಡ ಮಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ ॥46॥
೦೪೭ ಐಸಲೇ ದೈವೋಪಹತ ...{Loading}...
ಐಸಲೇ ದೈವೋಪಹತ ಮನ
ದಾಸರಾರಿಂದಡಗುವುದು ನಾ
ವೇಸನೊರಲಿದಡಾಗದವರೇ ಬಂದು ನಿಲಿಸುವರು
ಈಸರಲಿ ಮರಳುವೆವೆನುತ ನಿಜ
ವಾಸಕೈದಿದರಿತ್ತ ಮೋಹಿದ
ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವಹೀನನಾಗಿರುವ ನಿನ್ನ ಮನಸ್ಸಿನ ಉದ್ದೇಶವನ್ನು ಯಾರು ತಾನೇ ನಿಲ್ಲಿಸಬಲ್ಲರು? ನಾವು ಎಷ್ಟು ಹೇಳಿದರೂ ಅದಾಗದು. ಅವರೇ ಬಂದು ನಿನ್ನನ್ನು ನಿಲ್ಲಿಸುತ್ತಾರೆ. ಇಷ್ಟರಲ್ಲೇ ನಾವು ಹಿಂದಿರುಗುತ್ತೇವೆ, ಎಂದು ಅವರು ಮರಳಲು, ಇತ್ತ ಶಕುನಿಕರ್ಣಾದಿಗಳ ದಂಡಿಗೆಗಳು ಒಟ್ಟಿಗೆ ಬಂದವು.
ಮೂಲ ...{Loading}...
ಐಸಲೇ ದೈವೋಪಹತ ಮನ
ದಾಸರಾರಿಂದಡಗುವುದು ನಾ
ವೇಸನೊರಲಿದಡಾಗದವರೇ ಬಂದು ನಿಲಿಸುವರು
ಈಸರಲಿ ಮರಳುವೆವೆನುತ ನಿಜ
ವಾಸಕೈದಿದರಿತ್ತ ಮೋಹಿದ
ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ ॥47॥
೦೪೮ ಹೊಕ್ಕು ರಾಯನ ...{Loading}...
ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರ ಹರ
ಮಕ್ಕಳಾಟಿಕೆಯಾವುದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯ ವಿಜಯವೆಂದರು ಕರ್ಣ ಶಕುನಿಗಳು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನಿರುವಲ್ಲಿಗೆ ಬಂದು, ಅವನನ್ನು ನೋಡಿ ‘ಹರಹರಾ, ಏನಿದು ಈ ದರ್ಭೆಯ ಮೇಲೆ ಮಕ್ಕಳಾಟಿಕೆ ? ಚಕ್ರವರ್ತಿಗಳು ಹೀಗಿರುವುದೆ ? ಶತ್ರು ತನಗೆ ಸಿಗುವನು. ಇನ್ನೊಮ್ಮೆ ತಾನೇ ಶತ್ರುಗಳಿಗೆ ಸಿಗುವನು. ಲೋಕದಲ್ಲಿ ಸೋಲು ಗೆಲುವುಗಳು ಆಶ್ಚರ್ಯವೇ ‘ಎಂದು ಕರ್ಣ ಶಕುನಿಗಳು ಹೇಳಿದರು.
ಪದಾರ್ಥ (ಕ.ಗ.ಪ)
ಅಕ್ಕಜ- ಅಚ್ಚರಿ
ಮೂಲ ...{Loading}...
ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರ ಹರ
ಮಕ್ಕಳಾಟಿಕೆಯಾವುದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯ ವಿಜಯವೆಂದರು ಕರ್ಣ ಶಕುನಿಗಳು ॥48॥
೦೪೯ ಹರಿಬ ಬೇಕೇ ...{Loading}...
ಹರಿಬ ಬೇಕೇ ಮತ್ತೆ ಗಂಧ
ರ್ವರಿಗೆ ದೂತರನಟ್ಟು ಭೀಮನ
ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ
ತೆರಳಿಚುವೆವಿದಕಕಟ ದರ್ಭೆಯ
ಹರಹಿ ಹಕ್ಕೆಯನಿಕ್ಕಲೇಕೆಂದೊದರಿದರು ಖಳರು ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ಮಾಡಬೇಕೆಂದರೆ ಮತ್ತೆ ಗಂಧರ್ವರನ್ನು ದೂತರ ಮೂಲಕ ಕರೆಸಿಕೊ. ನಾವು ಬೆಂಬಲಕ್ಕಿದ್ದೇವೆ. ಭೀಮಾರ್ಜುನರಲ್ಲಿ ಸಂಧಾನವೇ ? ಇನ್ನು ನಾಲ್ಕೆಂಟು ದಿನದಲ್ಲಿ ಭೂಮಿಯಲ್ಲಿ ಅವರನ್ನು ಇಲ್ಲವಾಗಿಸುತ್ತೇವೆ. ಅಕಟಾ ಇದಕ್ಕಾಗಿ ದರ್ಭಾಶಾಯಿಯಾಗಿರುವುದೇ ? ಎಂದು ಆ ದುಷ್ಟರು ಹೇಳಿದರು.
ಪದಾರ್ಥ (ಕ.ಗ.ಪ)
ಹರಿಬ-ಯುದ್ಧ
ಮೂಲ ...{Loading}...
ಹರಿಬ ಬೇಕೇ ಮತ್ತೆ ಗಂಧ
ರ್ವರಿಗೆ ದೂತರನಟ್ಟು ಭೀಮನ
ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ
ತೆರಳಿಚುವೆವಿದಕಕಟ ದರ್ಭೆಯ
ಹರಹಿ ಹಕ್ಕೆಯನಿಕ್ಕಲೇಕೆಂದೊದರಿದರು ಖಳರು ॥49॥
೦೫೦ ದೂತನಮರರಿಗಟ್ಟುವುದು ತಾ ...{Loading}...
ದೂತನಮರರಿಗಟ್ಟುವುದು ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಭೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವಲೋಕಕ್ಕೆ ಚರರನ್ನು ಕಳುಹಿಸುವುದಾಗಲೀ, ಭೀಮಾರ್ಜುನರ ಕೂಡೆ ಸೆಣಸುವುದಾಗಲೀ ಅನುಚಿತ. ಲೋಕವು ಅದನ್ನು ನಿಂದಿಸುತ್ತದೆ. ಹಾಗಾಗಿ ಈ ದೇಹವನ್ನು ಈ ರೀತಿಯಿಂದಲೇ ನೀಗುತ್ತೇನೆ. ಸಹೋದರನಾದ ದುಶ್ಶಾಸನನಿಗೆ ರಾಜ್ಯವನ್ನು ಒಪ್ಪಿಸಿ ನೀವು ಬಾಳಿರಿ ಎಂದನು.
ಮೂಲ ...{Loading}...
ದೂತನಮರರಿಗಟ್ಟುವುದು ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಭೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ ॥50॥
೦೫೧ ನಿನ್ನೊಡನೆ ಹುತವಹನ ...{Loading}...
ನಿನ್ನೊಡನೆ ಹುತವಹನ ಹೊಗುವೆವು
ಮನ್ನಣೆಯ ಮಾತಲ್ಲ ನಿನ್ನಿಂ
ಮುನ್ನ ಮುಂಡಿತ ಶಿರದಲೆಸೆವೆವು ತೀರ್ಥಯಾತ್ರೆಯಲಿ
ಎನ್ನ ಮತ ಸೌಬಲನ ಮತವಿದ
ನಿನ್ನು ಕೆಲರಲಿ ಬೆರಸುವುದೆ ಬೇ
ರಿನ್ನು ಮಾತೇಕೆನುತ ಮುರಿದರು ತಮ್ಮ ಮನೆಗಳಿಗೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಜೊತೆಯಲ್ಲೇ ಅಗ್ನಿ ಪ್ರವೇಶ ಮಾಡುತ್ತೇವೆ. ನಿನಗಿಂತಲೂ ಮೊದಲೇ ತಲೆಯನ್ನು ಬೋಳಿಸಿ ತೀರ್ಥಯಾತ್ರೆ ಮಾಡುತ್ತೇವೆ. ಇದು ಆಡಂಬರದ ಮಾತಲ್ಲ. ನನ್ನ ಮಾತೂ, ಶಕುನಿಯ ಮಾತೂ ಇದೇ ಆಗಿದೆ. ಇದನ್ನು ಬೇರೆಯವರಲ್ಲಿ ಹೇಳಬಹುದೆ ? ಬೇರೆ ಮಾತೇಕೆ ? ಎಂದು ಮನೆಗಳಿಗೆ ಹಿಂದಿರುಗಿದರು.
ಮೂಲ ...{Loading}...
ನಿನ್ನೊಡನೆ ಹುತವಹನ ಹೊಗುವೆವು
ಮನ್ನಣೆಯ ಮಾತಲ್ಲ ನಿನ್ನಿಂ
ಮುನ್ನ ಮುಂಡಿತ ಶಿರದಲೆಸೆವೆವು ತೀರ್ಥಯಾತ್ರೆಯಲಿ
ಎನ್ನ ಮತ ಸೌಬಲನ ಮತವಿದ
ನಿನ್ನು ಕೆಲರಲಿ ಬೆರಸುವುದೆ ಬೇ
ರಿನ್ನು ಮಾತೇಕೆನುತ ಮುರಿದರು ತಮ್ಮ ಮನೆಗಳಿಗೆ ॥51॥
೦೫೨ ಉಲಿವ ಭಟ್ಟರ ...{Loading}...
ಉಲಿವ ಭಟ್ಟರ ನಿಲಿಸಿದನು ಸಮ
ನೆಲನ ಹೊಗಳುವ ಕಾಹಕರ ಕಳ
ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ
ತಲೆ ಮುಸುಕಿನಲಿ ತಾರಿದೊಡಲಿನ
ತಳಿತ ದುಗುಡದ ಮೋರೆಯಲಿ ಕುರು
ಕುಲಭಯಂಕರನೈದಿದನು ದುಶ್ಯಾಸನನು ನೃಪನ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನು ಹೊಗಳು ಭಟ್ಟರನ್ನು ಮೌನವಾಗಿರುವಂತೆ ಹೇಳಿದನು. ಕಾವಲು ಭಟರ ಕಳವಳವು ಇನ್ನಷ್ಟು ಹೆಚ್ಚುವಂತೆ, ಕೊಂಬುಕಹಳೆಗಳ ಧ್ವನಿಗೆ ಸಿಟ್ಟಾದನು. ತಲೆಗೆ ಬಟ್ಟೆಯ ಮುಸುಕು ಹಾಕಿ, ಸೊರಗಿದ ದೇಹ, ದುಃಖತಪ್ತ ಮುಖದಿಂದ ಕುರುಕುಲಭಯಂಕರನಾದ ದುಶ್ಶಾಸನನು ಕೌರವನಿದ್ದಲ್ಲಿಗೆ ಹೋದನು.
ಪದಾರ್ಥ (ಕ.ಗ.ಪ)
ತಾರು - ಸೊರಗು, ಬಡಕಲಾಗು
ಮೂಲ ...{Loading}...
ಉಲಿವ ಭಟ್ಟರ ನಿಲಿಸಿದನು ಸಮ
ನೆಲನ ಹೊಗಳುವ ಕಾಹಕರ ಕಳ
ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ
ತಲೆ ಮುಸುಕಿನಲಿ ತಾರಿದೊಡಲಿನ
ತಳಿತ ದುಗುಡದ ಮೋರೆಯಲಿ ಕುರು
ಕುಲಭಯಂಕರನೈದಿದನು ದುಶ್ಯಾಸನನು ನೃಪನ ॥52॥
೦೫೩ ಹೊಕ್ಕನೊಳಗನು ರಾಯನಙ್ಘ್ರಿಯೊ ...{Loading}...
ಹೊಕ್ಕನೊಳಗನು ರಾಯನಂಘ್ರಿಯೊ
ಳೊಕ್ಕನೊಡಲನು ಲೋಚನಾಂಬುಗ
ಳುಕ್ಕಿದವು ಕಳವಳಿಸಿದವು ಕರಣೇಂದ್ರಿಯಾದಿಗಳು
ಬಿಕ್ಕಿದನು ಬಿರಿಬಿರಿದು ಸೆರೆಗಳು
ಮುಕ್ಕುರಿಕಿದವು ಕೊರಳ ಹೃದಯದೊ
ಳೊಕ್ಕಲಿಕ್ಕಿತು ಶೋಕಪಾವಕವಾ ನೃಪಾನುಜನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಹೊಕ್ಕು ಕೌರªನ ಪಾದಗಳ ಮೇಲೆ ಬಿದ್ದು ನಮಸ್ಕರಿಸಿದನು. ಕಣ್ಣುಗಳಲ್ಲಿ ನೀರುಕ್ಕಿತು. ಇಂದ್ರಿಯಗಳು ಕಳವಳದಿಂದ ಕೂಡಿದವು. ಕೊರಳ ಸೆರೆಯುಕ್ಕುವಂತೆ ಬಿಕ್ಕಿಬಿಕ್ಕಿ ಅತ್ತು ದುಶ್ಶಾಸನನ ಹೃದಯದಲ್ಲಿ ಶೋಕಾಗ್ನಿಯೇ ನೆಲೆಗೊಂಡಿತು.
ಮೂಲ ...{Loading}...
ಹೊಕ್ಕನೊಳಗನು ರಾಯನಂಘ್ರಿಯೊ
ಳೊಕ್ಕನೊಡಲನು ಲೋಚನಾಂಬುಗ
ಳುಕ್ಕಿದವು ಕಳವಳಿಸಿದವು ಕರಣೇಂದ್ರಿಯಾದಿಗಳು
ಬಿಕ್ಕಿದನು ಬಿರಿಬಿರಿದು ಸೆರೆಗಳು
ಮುಕ್ಕುರಿಕಿದವು ಕೊರಳ ಹೃದಯದೊ
ಳೊಕ್ಕಲಿಕ್ಕಿತು ಶೋಕಪಾವಕವಾ ನೃಪಾನುಜನ ॥53॥
೦೫೪ ಅನುಜನದ್ಭುತ ಶೋಕ ...{Loading}...
ಅನುಜನದ್ಭುತ ಶೋಕ ರಸದಲಿ
ಕೊನರಿತರಸನ ಮೋಹ ಕುರುಕುಲ
ವನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ
ನಿನಗಿದೇನುಬ್ಬೇಗವೀ ಹ
ಸ್ತಿನ ಪುರದ ಸಾಮ್ರಾಜ್ಯಸಿರಿ ರಿಪು
ಜನಪರಿಗೆ ಹುರುಡಿಸಳೆ ಹೇಳೆನುತೆತ್ತಿದನು ಹಣೆಯ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮನ ದುಃಖವನ್ನು ಕಂಡು ಕೌರವನ ಮೋಹ ಚಿಗುರಿತು. ಕುಲಕಂಟಕನಾದ ದುರ್ಯೋಧನನು ಸುಮ್ಮನೆ ಭಾನುಮತಿಯನ್ನು ಒರಗಿ ಕುಳಿತುಕೊಂಡಿದ್ದನು. ‘ನಿನಗೇಕೆ ಈ ಉದ್ವೇಗ ? ಹಸ್ತಿನಾವತಿಯ ಸಾಮ್ರಾಜ್ಯಲಕ್ಷ್ಮಿಯು ಶತ್ರುಗಳತ್ತ ಆಸೆ ಪಡುವುದಿಲ್ಲವೆ? ಹೇಳು ?’ ಎಂದು ದುಶ್ಶಾಸನನ ಹಣೆಯನ್ನು ಎತ್ತಿದನು.
ಪದಾರ್ಥ (ಕ.ಗ.ಪ)
ಹುರುಡಿಸು-ಆಸೆ ಪಡು
ಮಲಗು - ಒರಗು
ಮೂಲ ...{Loading}...
ಅನುಜನದ್ಭುತ ಶೋಕ ರಸದಲಿ
ಕೊನರಿತರಸನ ಮೋಹ ಕುರುಕುಲ
ವನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ
ನಿನಗಿದೇನುಬ್ಬೇಗವೀ ಹ
ಸ್ತಿನ ಪುರದ ಸಾಮ್ರಾಜ್ಯಸಿರಿ ರಿಪು
ಜನಪರಿಗೆ ಹುರುಡಿಸಳೆ ಹೇಳೆನುತೆತ್ತಿದನು ಹಣೆಯ ॥54॥
೦೫೫ ಸೆಳೆದು ಬಿಗಿಯಪ್ಪಿದನು ...{Loading}...
ಸೆಳೆದು ಬಿಗಿಯಪ್ಪಿದನು ಲೋಚನ
ಜಲವ ತೊಡೆದನು ಪಾಂಡುಪುತ್ರರು
ಸೆಳೆದುಕೊಳ್ಳರೆ ನೆಲನನಕಟಾ ಮತ್ಪರೋಕ್ಷದಲಿ
ಕುಲವ ನೀನುದ್ಧರಿಸು ಸೇಸೆಯ
ತಳಿವೆ ನಾ ಮುಂದಿಟ್ಟು ಬರಿದಿ
ನ್ನಳಲದಿರು ಪ್ರಾಯೋಪವೇಶವ ಬಿಡೆನು ನಾನೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ತಮ್ಮನ್ನು ಆಲಿಂಗಿಸಿ, ಅವನ ಕಂಬನಿಯನ್ನು ಒರೆಸಿದನು. ‘ಭೂಮಿಯನ್ನು ಪಾಂಡವರು ಸೆಳೆಯದೇ ಇರುತ್ತಾರೆಯೆ ? ಅಕಟಾ… ನಾನಿಲ್ಲದೇ ಹೋದಾಗ ನಮ್ಮ ಕುಲವನ್ನು ನೀನು ಉದ್ಧರಿಸಬೇಕು. ನಿನಗೆ ಸೇಸೆ ತಳಿದು ಆಶೀರ್ವದಿಸುತ್ತೇನೆ. ವ್ಯರ್ಥವಾಗಿ ಅಳಬೇಡ. ನಾನು ಮಾತ್ರ ಪ್ರಾಯೋಪವೇಶವನ್ನು ಬಿಡುವುದಿಲ್ಲ.’ ಎಂದನು.
ಪದಾರ್ಥ (ಕ.ಗ.ಪ)
ಸೇಸೆ - ಅಕ್ಷತೆ
ಮೂಲ ...{Loading}...
ಸೆಳೆದು ಬಿಗಿಯಪ್ಪಿದನು ಲೋಚನ
ಜಲವ ತೊಡೆದನು ಪಾಂಡುಪುತ್ರರು
ಸೆಳೆದುಕೊಳ್ಳರೆ ನೆಲನನಕಟಾ ಮತ್ಪರೋಕ್ಷದಲಿ
ಕುಲವ ನೀನುದ್ಧರಿಸು ಸೇಸೆಯ
ತಳಿವೆ ನಾ ಮುಂದಿಟ್ಟು ಬರಿದಿ
ನ್ನಳಲದಿರು ಪ್ರಾಯೋಪವೇಶವ ಬಿಡೆನು ನಾನೆಂದ ॥55॥
೦೫೬ ಅಳಿದರಳಿವೆ ಭವತ್ಪರೋಕ್ಷದೊ ...{Loading}...
ಅಳಿದರಳಿವೆ ಭವತ್ಪರೋಕ್ಷದೊ
ಳುಳಿವೆನೇ ನಿನ್ನರಸಿ ಧರೆಗಾ
ನಳುಪುವೆನೆ ನಿನ್ನಳಿವನೀಕ್ಷಿಪ ಧೈರ್ಯವೇ ತನಗೆ
ನೆಲನ ಕುಂತಿಯ ಮಕ್ಕಳೇ ಕೈ
ಕೊಳಲಿ ಮಾಣಲಿ ಸಿರಿಗೆ ಸೇಸೆಯ
ತಳಿವರಿಗೆ ತಳಿ ನಿನ್ನ ಬಿಡದಿಹ ಭಾಷೆ ನನಗೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಸತ್ತರೆ ನಾನೂ ಸಾಯುತ್ತೇನೆ. ನೀನಿಲ್ಲದೇ ನಾನು ಉಳಿಯುವೆನೆ? ನಿನ್ನ ರಾಜ್ಯಲಕ್ಷ್ಮಿಗೆ ನಾನು ಆಸೆ ಪಡುತ್ತೇನೆಯೇ? ನಿನ್ನ ಸಾವನ್ನು ನೋಡುವ ಧೈರ್ಯ ನನಗಿದೆಯೆ? ರಾಜ್ಯವನ್ನು ಕುಂತಿಯ ಮಕ್ಕಳೇ ಕೈಗೊಳ್ಳಲಿ ಅಥವಾ ಬಿಡಲಿ. ರಾಜ್ಯಸಿರಿಯ ಸೇಸೆಯನ್ನು ಯಾರಮೇಲಾದರೂ ತಳಿ. ಆದರೆ ನಾನು ಮಾತ್ರ ನಿನ್ನನ್ನು ಬಿಡಲಾರೆ ಎಂಬುದು ನನ್ನ ಪ್ರತಿಜ್ಞೆ’ ಎಂದು ದುಶ್ಶಾಸನನು ಹೇಳಿದನು.
ಪಾಠಾನ್ತರ (ಕ.ಗ.ಪ)
ನಿನ್ನಳಿವನೀಕ್ಷಿಸಿ - ನಿನ್ನಳಿವನೀಕ್ಷಿಪ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಅಳಿದರಳಿವೆ ಭವತ್ಪರೋಕ್ಷದೊ
ಳುಳಿವೆನೇ ನಿನ್ನರಸಿ ಧರೆಗಾ
ನಳುಪುವೆನೆ ನಿನ್ನಳಿವನೀಕ್ಷಿಪ ಧೈರ್ಯವೇ ತನಗೆ
ನೆಲನ ಕುಂತಿಯ ಮಕ್ಕಳೇ ಕೈ
ಕೊಳಲಿ ಮಾಣಲಿ ಸಿರಿಗೆ ಸೇಸೆಯ
ತಳಿವರಿಗೆ ತಳಿ ನಿನ್ನ ಬಿಡದಿಹ ಭಾಷೆ ನನಗೆಂದ ॥56॥
೦೫೭ ಧಾತುಗೆಡಲೇಕೀಸು ಕಾತರೆ ...{Loading}...
ಧಾತುಗೆಡಲೇಕೀಸು ಕಾತರೆ
ಬೀತು ಹೋಹುದು ಬೀತ ಮರನೇ
ಕಾತಿಹುದಲೈ ಹತ ವಿಧಿಗೆ ವಿಪರೀತ ಕೃತಿ ಸಹಜ
ಆತಗಳು ನಮಗುಪಕರಿಸಿ ವಿ
ಖ್ಯಾತರಾದರು ಮರಳಿ ನಾವಿ
ನ್ನಾತಗಳನಳುಕಿಸುವುಪಾಯವ ಕಂಡೊಡೇನೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಷ್ಟೊಂದು ಧೈರ್ಯ ಕುಂದಬೇಡ. ಹೂಬಿಟ್ಟ ಮರಗಳು ಬಾಡುವುದು ಸಹಜ. ಬಾಡಿದ ಮರವೇ ಹೂಬಿಡುವುದು ಸಾಧ್ಯ. ವಿಧಿಗೆ ವಿಪರ್ಯಾಸಗಳು ಸಹಜವಾದುದು. ಪಾಂಡವರು ನಮಗೆ ಉಪಕಾರವನ್ನು ಮಾಡಿ ಪ್ರಸಿದ್ಧಿಯನ್ನು ಪಡೆದರು. ನಾವು ಮತ್ತೆ ಅವರನ್ನೇ ಸೋಲಿಸುವ ಮಾರ್ಗಾಂತರವನ್ನು ಹುಡುಕಬಹುದಲ್ಲವೇ ?’ ಎಂದು ದುಶ್ಶಾಸನನು ಹೇಳಿದನು.
ಮೂಲ ...{Loading}...
ಧಾತುಗೆಡಲೇಕೀಸು ಕಾತರೆ
ಬೀತು ಹೋಹುದು ಬೀತ ಮರನೇ
ಕಾತಿಹುದಲೈ ಹತ ವಿಧಿಗೆ ವಿಪರೀತ ಕೃತಿ ಸಹಜ
ಆತಗಳು ನಮಗುಪಕರಿಸಿ ವಿ
ಖ್ಯಾತರಾದರು ಮರಳಿ ನಾವಿ
ನ್ನಾತಗಳನಳುಕಿಸುವುಪಾಯವ ಕಂಡೊಡೇನೆಂದ ॥57॥
೦೫೮ ಮರುಳು ತಮ್ಮ ...{Loading}...
ಮರುಳು ತಮ್ಮ ವೃಥಾ ಖಳಾಡಂ
ಬರವಿದಲ್ಲದೆ ಪಾಂಡುಪುತ್ರರ
ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು
ಅರಮನೆಗೆ ನೀ ಹೋಗು ಹಸ್ತಿನ
ಪುರಕೆ ನೀನರಸಾಗು ಮೋಹದ
ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳ್ ಎಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಮ್ಮಾ, ಮರುಳೇ. ಸುಮ್ಮನೆ ಇದು ದುಷ್ಟರ ಆಟೋಪವೆನಿಸುತ್ತದೆ. ಪಾಂಡವರನ್ನು ಸೋಲಿಸಲು ವಿದುರಾದಿ ಬಾಹಿರರು ಬಿಡುತ್ತಾರೆಯೇ ? ಹೋಗು. ಅರಮನೆಗೆ ಹಿಂತಿರುಗಿ ಹಸ್ತಿನಾವತಿಗೆ ದೊರೆಯಾಗು. ಈ ಕ್ಷತ್ರಿಯಧರ್ಮದಲ್ಲಿ ಮೋಹಪರವಶತೆ ಎಂಬುದಿಲ್ಲ’ ಎಂದು ಕೌರವನೆಂದನು.
ಪದಾರ್ಥ (ಕ.ಗ.ಪ)
ಬಾಹಿರ -ಅಲ್ಪ
ಮೂಲ ...{Loading}...
ಮರುಳು ತಮ್ಮ ವೃಥಾ ಖಳಾಡಂ
ಬರವಿದಲ್ಲದೆ ಪಾಂಡುಪುತ್ರರ
ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು
ಅರಮನೆಗೆ ನೀ ಹೋಗು ಹಸ್ತಿನ
ಪುರಕೆ ನೀನರಸಾಗು ಮೋಹದ
ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳೆಂದ ॥58॥
೦೫೯ ಮಗಗೆ ಮುನಿವನು ...{Loading}...
ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯವಿದು
ಜಗದ ಪರಿವಿಡಿಯೆಮ್ಮೊಳಲ್ಲದೆ
ಸೊಗಸಿ ರಾಜ್ಯವನಿತ್ತೆ ನಿನಗದು
ಮಗುಚಿದೊಡೆಯೆನ್ನಾಣೆಯೆನುತಪ್ಪಿದನು ಖಳಪತಿಯ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಗನಿಗೆ ತಂದೆ, ತಂದೆಗೆ ಮಗ ಎರಡು ಬಗೆಯುವುದುಂಟು. ಒಡಹುಟ್ಟಿದವರೂ ಹಗೆಗಳ ಹಾಗಿರುವುದುಂಟು. ಇದು ಕ್ಷತ್ರಿಯರ ದುಃಸ್ವಭಾವ. ಈ ಲೋಕರೂಢಿಯಂತೆ ನಾನಿರದೆ ಈ ರಾಜ್ಯವನ್ನು ನಿನಗೆ ಸ್ವಯಿಚ್ಛೆಯಿಂದಲೇ ನೀಡಿದ್ದೇನೆ. ಅದು ನಿನಗೆ ಅಪಥ್ಯವಾದರೆ ನನ್ನಾಣೆ’ ಎಂದು ದುಶ್ಶಾಸನನನ್ನು ಆಲಿಂಗಿಸಿದನು.
ಪದಾರ್ಥ (ಕ.ಗ.ಪ)
ಖಳಪತಿ - ದುಷ್ಟನಾಯಕ- ಇಲ್ಲಿ ದುಶ್ಶಾಸನ
ಮೂಲ ...{Loading}...
ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯವಿದು
ಜಗದ ಪರಿವಿಡಿಯೆಮ್ಮೊಳಲ್ಲದೆ
ಸೊಗಸಿ ರಾಜ್ಯವನಿತ್ತೆ ನಿನಗದು
ಮಗುಚಿದೊಡೆಯೆನ್ನಾಣೆಯೆನುತಪ್ಪಿದನು ಖಳಪತಿಯ ॥59॥
೦೬೦ ಭ್ರಾನ್ತಿಯೇಕೆ ...{Loading}...
ಭ್ರಾಂತಿಯೇಕೆ ಭವತ್ಪರೋಕ್ಷದೊ
ಳಂತಕನ ಪುರವಲ್ಲದುರ್ವೀ
ಕಾಂತೆಗಳುಪಿದೆನಾದರೊಡಹುಟ್ಟಿದೆನೆ ನಿಮ್ಮಡಿಯ
ಸಂತವಿಡುವೀ ಮಾತು ಸಾಕಿ
ನ್ನಂತಿರಲಿ ನಿಮಗೇನು ಹದನಾ
ಯ್ತಂತರದೊಳಾ ಹದನನೀಕ್ಷಿಪೆಯೆನುತ ಹೊರವಂಟ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಭ್ರಾಂತಿ ನಿಮಗೇಕೆ ? ನೀವಿಲ್ಲದಿರುವಾಗ ಈ ಸಾಮ್ರಾಜ್ಯವನ್ನು ಭೋಗಿಸಿದೆನಾದರೆ ನಾನು ನಿಮ್ಮ ಸಹೋದರನೇ. ನೀವಿಲ್ಲದಿರುವಾಗ ನಾನೂ ಸಾಯುತ್ತೇನಲ್ಲದೆ ಈ ಭೂಮಿಗೆ ಆಸೆಪಡುತ್ತೇನೆಯೇ? ನನ್ನನ್ನು ಸಂತೈಸುವ ಈ ಮಾತು ಸಾಕು. ನಿಮಗೇನು ಸ್ಥಿತಿಯಾಗುತ್ತದೆಯೋ ಅದನ್ನೇ ನಾನು ಅನುಸರಿಸುತ್ತೇನೆ’ ಎಂದು ಹೇಳಿ ದುಶ್ಶಾಸನನು ಹೊರಟನು.
ಮೂಲ ...{Loading}...
ಭ್ರಾಂತಿಯೇಕೆ ಭವತ್ಪರೋಕ್ಷದೊ
ಳಂತಕನ ಪುರವಲ್ಲದುರ್ವೀ
ಕಾಂತೆಗಳುಪಿದೆನಾದರೊಡಹುಟ್ಟಿದೆನೆ ನಿಮ್ಮಡಿಯ
ಸಂತವಿಡುವೀ ಮಾತು ಸಾಕಿ
ನ್ನಂತಿರಲಿ ನಿಮಗೇನು ಹದನಾ
ಯ್ತಂತರದೊಳಾ ಹದನನೀಕ್ಷಿಪೆಯೆನುತ ಹೊರವಂಟ ॥60॥
೦೬೧ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಬಳಿಕ ಹಸ್ತಿನ
ಪುರದ ನಿಖಿಳ ಶ್ರೇಣಿಕುಲ ನಾ
ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ
ಅರಸ ಬಿಜಯಂಗೈದು ನಮ್ಮನು
ಹೊರೆವುದಲ್ಲದೊಡಾ ವನಾಂತರ
ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನನು ಜನಮೇಜಯನೆ ಕೇಳು, ಅನಂತರ ಹಸ್ತಿನಾವತಿಯ ಸಮಸ್ತ ವ್ಯಾಪಾರಿಗಳು, ನಾಗರಿಕರು, ಪರಿವಾರಗಳು, ಪುರಜನ ಪರಿಜನರು ಆಗಮಿಸಿ - ‘ರಾಜನೇ ನೀನು ಹಿಂತಿರುಗಿ ಬಂದು ನಮ್ಮನ್ನು ಪಾಲಿಸಬೇಕು. ಇಲ್ಲವೇ ನಮಗೆ ವನವಾಸಕ್ಕೆ ಅಪ್ಪಣೆಕೊಡು’ ಎಂದು ಹೇಳಿದರು.
ಮೂಲ ...{Loading}...
ಧರಣಿಪತಿ ಕೇಳ್ ಬಳಿಕ ಹಸ್ತಿನ
ಪುರದ ನಿಖಿಳ ಶ್ರೇಣಿಕುಲ ನಾ
ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ
ಅರಸ ಬಿಜಯಂಗೈದು ನಮ್ಮನು
ಹೊರೆವುದಲ್ಲದೊಡಾ ವನಾಂತರ
ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ ॥61॥
೦೬೨ ಪರಿಜನದೊಳವರವರ ಮುಖ್ಯರ ...{Loading}...
ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪ ನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುರಜನರ ನೇತಾರರನ್ನು ಕರೆಸಿ ಅವರಲ್ಲಿ - ‘ನಿಮಗೆ ದುಶ್ಶಾಸನನೇ ಅರಸನು. ಅವನು ನೀತಿಯಿಂದ ರಾಜ್ಯವಾಳುತ್ತಾನೆ. ಈ ಸಾಮ್ರಾಜ್ಯವನ್ನು ಅವನಿಗೆ ಕೊಟ್ಟೆನು. ನಾನು ಈ ಗಂಗಾತೀರದಲ್ಲಿ ಕಾಶೀಶ್ವರನ ಸನ್ನಿಧಿ ದೊರೆತಿದೆ.’ ಎಂದು ಕೌರವನೆಂದನು.
ಮೂಲ ...{Loading}...
ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪ ನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ ॥62॥
೦೬೩ ರಾಯನೀ ಪರಿ ...{Loading}...
ರಾಯನೀ ಪರಿ ನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯ ನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಹೀಗೆ ಹೇಳಿ ಎಲ್ಲರನ್ನೂ ಹಿಂದಕ್ಕೆ ಕಳಿಸಿ, ರಾತ್ರಿಯಲ್ಲಿ ಸಮಾಧಿಸ್ಥಿತಿಯಲ್ಲಿ ಮನಸ್ಸನ್ನು ಇರಿಸಿದ್ದಾಗ ರಾಕ್ಷಸರ ಗುಂಪೊಂದು ಬಂದು, ಕೌರವನನ್ನು ಪಾತಾಳಕ್ಕೆ ಕೊಂಡೊಯ್ದು - ‘ಈ ಕೆಲಸ ನಮ್ಮದು’ ಎಂದು ಸಾಮದಿಂದ ದುರ್ಯೋಧನನಿಗೆ ತಿಳಿಯ ಹೇಳಿದರು.
ಮೂಲ ...{Loading}...
ರಾಯನೀ ಪರಿ ನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯ ನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ ॥63॥
೦೬೪ ಅರಸ ನೀ ...{Loading}...
ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಳಸಿದೆಲ
ಸುರರು ಪಾಂಡುಕುಮಾರರಾಗವ
ತರಿಸಿದರು ನೆಲವವರಿಗೈ ನಾ
ವಿರಲು ಸುಡಲೈ ದೈತ್ಯ ಜನ್ಮವನೆಂದರಾ ಖಳರು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ನೀನು ಪ್ರಾಯೋಪವೇಶದಿಂದ ಮರಣ ದೀಕ್ಷಿತನಾದರೆ ಇದು ಕ್ಷತ್ರಿಯ ಕುಲಕ್ಕೆ ಅನುಚಿತವಾಗುತ್ತದೆ. ಅನ್ಯಾಯವನ್ನು ಮಾಡಬೇಡ. ದೇವತೆಗಳೇ ಪಾಂಡುಸುತರಾಗಿ ಹುಟ್ಟಿ ರಾಜ್ಯವನ್ನು ಪಡೆದುಕೊಂಡರೆ ನಾವು ಇದ್ದೇನು ಪ್ರಯೋಜನ ? ಈ ರಾಕ್ಷಸ ಜನ್ಮಕ್ಕೆ ಬೆಂಕಿ ಹಾಕಲಿ ಎಂದು ದೈತ್ಯರು ಹೇಳಿದರು.
ಮೂಲ ...{Loading}...
ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಳಸಿದೆಲ
ಸುರರು ಪಾಂಡುಕುಮಾರರಾಗವ
ತರಿಸಿದರು ನೆಲವವರಿಗೈ ನಾ
ವಿರಲು ಸುಡಲೈ ದೈತ್ಯ ಜನ್ಮವನೆಂದರಾ ಖಳರು ॥64॥
೦೬೫ ಸಾಯದಿರು ನಿನಗಿನ್ದು ...{Loading}...
ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾಹವಕೆ ರಿಪು ಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜ ರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಸಾಯಬಾರದು. ನಿನ್ನ ಯುದ್ಧದಲ್ಲಿ ಸಹಾಯಕ್ಕಾಗಿ ನಾವು ಇಂದಿನಿಂದಲೇ ಸಿದ್ಧವಾಗಿದ್ದೇವೆ. ವೈರಿಗಳಾದ ಪಾಂಡವರಿಗೆ ಎಳ್ಳಿನಷ್ಟು ಭೂಮಿಯನ್ನು ಕೊಡಬೇಡ. ಈ ಆನೆ ರಥ ಕುದುರೆ ಪದಾತಿಗಳನ್ನು ನಿನಗೆ ಕೊಡುತ್ತಿದ್ದೇವೆ. ರಾಕ್ಷಸ ಅಮಾತ್ಯರನ್ನು ನಿನಗೆ ಒಪ್ಪಿಸಿದ್ದೇವೆ. ನಿಮ್ಮ ಯುದ್ಧದಲ್ಲಿ ನಾವು ಹೋರಾಡುತ್ತೇವೆ ಎಂದರು.
ಪದಾರ್ಥ (ಕ.ಗ.ಪ)
ಪಸಾಯತ - ಮಂತ್ರಿ
ಮೂಲ ...{Loading}...
ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾಹವಕೆ ರಿಪು ಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜ ರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ ॥65॥
೦೬೬ ಮಾನವನು ನಾನಿನ್ನು ...{Loading}...
ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯನಾ ಪವ
ಮಾನಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನಾದರೋ ಮನುಷ್ಯ. ನೀವು ರಾಕ್ಷಸರು. ಗಂಧರ್ವರಿಂದ ನನ್ನ ಮಾನಭಂಗವಾಯಿತು. ಅದನ್ನೇನು ಹೇಳಲಿ ? ಆ ದ್ರೌಪದಿಯ ಮೂದಲಿಕೆಯನ್ನು, ಭೀಮಸೇನನ ಕ್ರೋಧವಾಕ್ಯಗಳನ್ನು ಏನೆಂದು ಹೇಳಲಿ ? ಎಂದು ಸುಯೋಧನನು ನಿಟ್ಟುಸಿರು ಬಿಟ್ಟನು.
ಮೂಲ ...{Loading}...
ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯನಾ ಪವ
ಮಾನಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ ॥66॥
೦೬೭ ನರರು ನೀವ್ ...{Loading}...
ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಮನುಷ್ಯರು, ನಾವು ರಾಕ್ಷಸರು ಎಂಬ ಭೇದವಿಲ್ಲದೆ ಸಹೋದರರಂತೆ ಇರೋಣ. ನಿಮಗೆ ಇನ್ನು ಮುಂದೆ ದೈತ್ಯ ವೀರರೆಲ್ಲಾ ಸಹಾಯಿಗಳು. ದೇವಲೋಕದ ಅಪ್ಸರೆಯರ ಸೇವೆಗೈಯ್ಯುವ ಗಂಧರ್ವರನ್ನು ಬಡಿದು, ಅವರ ಕರುಳನ್ನು ನಾವು ತಿನ್ನುತ್ತೇವೆ, ಎಂದು ರಾಕ್ಷಸರು ಗರ್ಜಿಸಿದರು.
ಮೂಲ ...{Loading}...
ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ ॥67॥
೦೬೮ ಎನ್ದು ಭೂಪನ ...{Loading}...
ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದುವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳ ಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ಕೌರವನನ್ನು ಅವರು ಕಳುಹಿಸಿಕೊಟ್ಟರು. ದುರ್ಯೋಧನನು ಭೂಮಿಗೆ ಹಿಂತಿರುಗಿ, ಹೆಂಡತಿಯ ಮಾತಿಗನುಗುಣವಾಗಿ ಅರಮನೆಗೆ ಅವನಾಗಿ ಬಂದನು. ಆಗ ಸಕಲ ಜನರೂ ಸಂತೋಷಸಾಗರದಲ್ಲಿ ಮುಳುಗಿದರು. ಧ್ವಜಗಳು ಹಾರಾಡಿದವು. ಉತ್ಸಾಹಭರಿತವಾಗಿ ಬಹುವಾದ್ಯಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಲಳಿ-ಉತ್ಸಾಹ, ಲಗ್ಗೆ-ಬಹುವಾದ್ಯ
ಮೂಲ ...{Loading}...
ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದುವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳ ಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ ॥68॥
೦೬೯ ಮತ್ತೆ ನೆಗ್ಗಿತು ...{Loading}...
ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಕಣ್ಣಾಯ್ತಧಮತೆಗೆ ನಗೆ
ಯೊತ್ತಿದಾರಡಿ ಸುಜನ ಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಈ ಮನಸ್ಸಮಾಧಾನದಿಂದಾಗಿ ಅಧರ್ಮವು ಮತ್ತೆ ತಲೆ ಎತ್ತಿತು. ಸತ್ಯದ ಬೀಜವೇ ನಾಶವಾಯಿತು. ಕೃತಘ್ನತೆಗೆ ಪಟ್ಟ ದೊರಕಿತು. ಕೆಡುಕಿಗೆ ಉತ್ಕರ್ಷವಾಯಿತು. ಸಂತೋಷವನ್ನು ನಾಶಮಾಡುವಂತಹ ಹಿಂಸೆ ಸಜ್ಜನರ ಮಾರ್ಗದಲ್ಲಿ ಮುಳ್ಳಾಯಿತು.
ಪದಾರ್ಥ (ಕ.ಗ.ಪ)
ಆರಡಿ - ಹಿಂಸೆ, ಸುಲಿಗೆ, ದರೋಡೆ
ಮೂಲ ...{Loading}...
ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಕಣ್ಣಾಯ್ತಧಮತೆಗೆ ನಗೆ
ಯೊತ್ತಿದಾರಡಿ ಸುಜನ ಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ ॥69॥
೦೭೦ ಮರೆದು ಕಳೆದನು ...{Loading}...
ಮರೆದು ಕಳೆದನು ಬಂದ ಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆನೆನೆದು ಹಿಗ್ಗಿದನು
ಮುರಿದುದಿನ್ನೇನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನಗೊದಗಿದ ನಾಚಿಕೆಯ ಪ್ರಸಂಗವನ್ನು ಮರೆತನು. ಮುಂದೊದಗುವ ಕಾಳಗಕ್ಕೆ ಒದಗಿದ ರಾಕ್ಷಸ ಸ್ನೇಹವನ್ನು ನೆನೆದು ಹಿರಿಹಿರಿ ಹಿಗ್ಗಿದನು. ಶತ್ರುಗಳ ಸಾಹಸವನ್ನು ಮುರಿದೇಬಿಡುತ್ತೇನೆಂಬ ಉತ್ಸಾಹದಿಂದ ಕೌರವನು ಯಾಗ ಶಾಲೆಯಲ್ಲಿ ಮಹಾಯಜ್ಞವೊಂದನ್ನು ಮಾಡಿದನು.
ಮೂಲ ...{Loading}...
ಮರೆದು ಕಳೆದನು ಬಂದ ಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆನೆನೆದು ಹಿಗ್ಗಿದನು
ಮುರಿದುದಿನ್ನೇನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ ॥70॥
೦೭೧ ಕೇಳಿದರು ಪಾಣ್ಡವರು ...{Loading}...
ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸಖ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸಂಕಲ್ಪ, ಅವನಿಗೆ ದೊರತ ರಾಕ್ಷಸರ ಗೆಳೆತನದ ಸಂಗತಿ-ಇವುಗಳನ್ನು ಪಾಂಡವರು ಕೇಳಿ ತಿಳಿದುಕೊಂಡರು. ಕೌರವನು ಕೈಗೊಂಡ ಯಾಗವನ್ನು ಕೇಳಿ ಪಾಂಡವರು ನಗುತ್ತಾ ವೀರನಾರಾಯಣನ ಪಾದಸ್ಮರಣೆಯಲ್ಲಿದ್ದರು.
ಮೂಲ ...{Loading}...
ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸಖ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ ॥71॥