೦೦೦ ಸೂ ರಾಯ ...{Loading}...
ಸೂ. ರಾಯ ದಳವನು ಮುರಿದು ಕೌರವ
ರಾಯನನು ಕೊಂಡೊಯ್ದ ಖೇಚರ
ರಾಯನನು ತಾಗಿದನು ಮರಳಿಚಿ ತಂದನಾ ಪಾರ್ಥ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವನ ಸೇನೆಯನ್ನು ಸೋಲಿಸಿ, ಅವನನ್ನು ಸೆರೆ ಹಿಡಿದು ಒಯ್ಯುತ್ತಿದ್ದ ಚಿತ್ರಸೇನನೊಂದಿಗೆ ಹೋರಾಡಿ, ಕೌರವನನ್ನು ಪಾರ್ಥನು ಮರಳಿ ತಂದನು.
ಮೂಲ ...{Loading}...
ಸೂ. ರಾಯ ದಳವನು ಮುರಿದು ಕೌರವ
ರಾಯನನು ಕೊಂಡೊಯ್ದ ಖೇಚರ
ರಾಯನನು ತಾಗಿದನು ಮರಳಿಚಿ ತಂದನಾ ಪಾರ್ಥ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇವೇಳುವೆನು ಪಾಳಯದ ಗಜಬಜವ
ಆಳು ನಡೆದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿ ಕೇರಿಯಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ಕೌರವನು ಸೆರೆಸಿಕ್ಕ ಬಳಿಕ ಸೇನೆಯ ಗಜಬಜವನ್ನು ಏನೆಂದು ಹೇಳಲಿ ? ಕಂಡಕಂಡ ಕಡೆಗೆ ತಮ್ಮ ಅಂತಸ್ತನ್ನು ಲೆಕ್ಕಿಸದೆ ಸೇನಾಳುಗಳು ಓಡಿದರು. ಅಲ್ಲಿದ್ದ ಶ್ರೀಮಂತರ ಸಂಪತ್ತೆಲ್ಲವೂ ಸೂರೆಯಯಿತು.
ಪದಾರ್ಥ (ಕ.ಗ.ಪ)
ಪೀಳಿಗೆ - ಗುಂಪು, ಸಮಾಜ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇವೇಳುವೆನು ಪಾಳಯದ ಗಜಬಜವ
ಆಳು ನಡೆದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿ ಕೇರಿಯಲಿ ॥1॥
೦೦೨ ಕುದುರೆ ಹಾಯ್ದವು ...{Loading}...
ಕುದುರೆ ಹಾಯ್ದವು ಕಂಡ ಮುಖದಲಿ
ಮದಗಜಾವಳಿಯೋಡಿದವು ರಥ
ಕೆದರಿದವು ಕಾಲಾಳು ಹಾಯ್ದರು ಬಿಟ್ಟ ಮಂಡೆಯಲಿ
ಕದಡಿದುದು ಜನಜಲಧಿ ಜಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು, ಆನೆಗಳು, ರಥಗಳು, ಕಾಲಾಳುಗಳು ಕಂಡ ಕಂಡ ಕಡೆಗೆ ಓಡಿದವು. ಜನಸಾಗರ ಅಲ್ಲೋಲ ಕಲ್ಲೋಲವಾಯಿತು. ಊರುಗಳಲ್ಲೆಲ್ಲಾ ಭೀತಿ ಆವರಿಸಿತು. ಕೌರವನ ಪರಿಯೇನು ಎಂದು ಕಳವಳಿಸುತ್ತಾ ವರ್ತಕರೆಲ್ಲಾ ಓಡಿದರು.
ಪದಾರ್ಥ (ಕ.ಗ.ಪ)
ಹರದರು - ವರ್ತಕರು
ಮೂಲ ...{Loading}...
ಕುದುರೆ ಹಾಯ್ದವು ಕಂಡ ಮುಖದಲಿ
ಮದಗಜಾವಳಿಯೋಡಿದವು ರಥ
ಕೆದರಿದವು ಕಾಲಾಳು ಹಾಯ್ದರು ಬಿಟ್ಟ ಮಂಡೆಯಲಿ
ಕದಡಿದುದು ಜನಜಲಧಿ ಜಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ ॥2॥
೦೦೩ ಗಾಳಿಯರಿಯದು ರವಿಯ ...{Loading}...
ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲು ಬೀಯಗದಂಗರಕ್ಷೆಯ ಕಂಚುಕೀಜನದ
ಮೇಳವವದೇನಾಯ್ತೊ ಬೀದಿಯ
ಗಾಳು ಮಂದಿಯ ನಡುವೆ ಕುರು ಭೂ
ಪಾಲನರಸಿಯರಳುತ ಹರಿದರು ಬಿಟ್ಟ ಮಂಡೆಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಸಿಲು ಗಾಳಿಗಳನ್ನೂ ಎಂದೂ ಕಾಣದ ಕೌರವನ ರಾಣಿಯರು ಕಾವಲಿನವರು, ಅಂಗರಕ್ಷಕರು, ಪರಿಜನರೇ ಮೊದಲಾದವರಿಲ್ಲದೆ, ಬೀದಿಬೀದಿಯಲ್ಲಿ ಜನಸಾಮಾನ್ಯರ ನಡುವೆ ಬಿಟ್ಟಮಂಡೆಯಲ್ಲಿ ಅಳುತ್ತಾ ಓಡಿದರು.
ಪದಾರ್ಥ (ಕ.ಗ.ಪ)
ಬೀಯಗ - ಬೀಗ
ದಡ್ಡಿ - ಬಾಗಿಲು
ಗಾಳು - ಸಾಮಾನ್ಯ
ಮೂಲ ...{Loading}...
ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲು ಬೀಯಗದಂಗರಕ್ಷೆಯ ಕಂಚುಕೀಜನದ
ಮೇಳವವದೇನಾಯ್ತೊ ಬೀದಿಯ
ಗಾಳು ಮಂದಿಯ ನಡುವೆ ಕುರು ಭೂ
ಪಾಲನರಸಿಯರಳುತ ಹರಿದರು ಬಿಟ್ಟ ಮಂಡೆಯಲಿ ॥3॥
೦೦೪ ಕುರುಪತಿಯ ದುಶ್ಯಾಸನಾದಿಗ ...{Loading}...
ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಭಟ ಭಟರೊಳೊದರಿದ
ರರಸನುಪಹತಿಗೊಪ್ಪುಗೊಟ್ಟರೆ ಕರ್ಣ ಶಕುನಿಗಳು
ಗುರು ನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದರಸಿದಳು ಭಾನುಮತಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ದುಶ್ಶಾಸನರ ರಾಣಿಯರು ‘ಕರ್ಣಶಕುನಿಗಳು ದುರ್ಯೋಧನನ ಕೇಡಿಗೆ ಕಾರಣರಾದರೆ’ ಎಂದು ಪ್ರತಿಯೊಬ್ಬ ಭಟನಲ್ಲೂ ಕೇಳಿದರು. ‘ದ್ರೋಣಾಚಾರ್ಯ ಭೀಷ್ಮಾಚಾರ್ಯರಿದ್ದರೆ ಈ ರೀತಿಯ ಸೋಲಾಗುತ್ತಿತ್ತೆ ? ಪಾಂಡವ ಜ್ಯೇಷ್ಠನಾದ ಧರ್ಮಜ ಯಾವ ಕಾಡಿನಲ್ಲಿ ಇದ್ದಾನೆ ?’ ಎಂದು ಭಾನುಮತಿ ವಿಚಾರಿಸುತ್ತಾ ಹುಡುಕಿದಳು.
ಮೂಲ ...{Loading}...
ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಭಟ ಭಟರೊಳೊದರಿದ
ರರಸನುಪಹತಿಗೊಪ್ಪುಗೊಟ್ಟರೆ ಕರ್ಣ ಶಕುನಿಗಳು
ಗುರು ನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದರಸಿದಳು ಭಾನುಮತಿ ॥4॥
೦೦೫ ಅರಸಿಯರು ಸಖಿಯರು ...{Loading}...
ಅರಸಿಯರು ಸಖಿಯರು ಕುಮಾರಕ
ರರಸನನುಜರ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮ ವಂಶೋ
ದ್ಧರಣ ರಕ್ಷಿಸು ಸತ್ಯ ಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಬಿದ್ದಳಂಘ್ರಿಯಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಣಿಯರು, ಸಖಿಯರು, ಪುತ್ರರು, ಓರಗಿತ್ತಿಯರೊಂದಿಗೆ ಭಾನುಮತಿ ಧರ್ಮರಾಯನ ಆಶ್ರಮವನ್ನು ಹುಡುಕುತ್ತಾ ಬಂದಳು. ಅವನನ್ನು ಕಂಡು ‘ದಯಾಮಯಿ, ಕಾಪಾಡು, ಚಂದ್ರವಂಶೋದ್ಧಾರಕನೇ ರಕ್ಷಿಸು, ಸತ್ಯಧರ್ಮನಿಧಿಯೇ ಕಾಪಾಡು’ ಎಂದೆನ್ನುತ್ತಾ ಅವನ ಪಾದಕ್ಕೆ ಧೊಪ್ಪನೆ ಬಿದ್ದಳು.
ಟಿಪ್ಪನೀ (ಕ.ಗ.ಪ)
ಭಾನುಮತಿ - ಮಹಾಭಾರತದಲ್ಲಿ ಅನೇಕರ ಪತ್ನಿಯರು ಕೇವಲ ನಾಮದ ಪಟ್ಟಿಯಲ್ಲಿ ಉಳಿಯುತ್ತಾರೆಯೇ ಹೊರತು ಪ್ರಕರಣದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ದ್ರೌಪದಿ, ಕುಂತಿ, ಸತ್ಯವತಿ, ಗಾಂಧಾರಿಯರು ಭಾಗವಹಿಸುವ ಪ್ರಮಾಣದಲ್ಲಿ ಭಾನುಮತಿ, ಸುಭದ್ರೆ, ಕೃಪೆ ಮೊದಲಾದ
ಮೂಲ ...{Loading}...
ಅರಸಿಯರು ಸಖಿಯರು ಕುಮಾರಕ
ರರಸನನುಜರ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮ ವಂಶೋ
ದ್ಧರಣ ರಕ್ಷಿಸು ಸತ್ಯ ಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಬಿದ್ದಳಂಘ್ರಿಯಲಿ ॥5॥
೦೦೬ ನಾದಿದಳು ನೃಪನಙ್ಘ್ರಿಯನು ...{Loading}...
ನಾದಿದಳು ನೃಪನಂಘ್ರಿಯನು ನಯ
ನೋದಕದ ಧಾರೆಯಲಿ ಭಾಳವ
ತೇದು ತಿಲಕದ ಗಂಧದಲಿ ಬೈತಲೆಯ ಮುತ್ತುಗಳ
ಆದರಿಸಿ ನವ ಕುಸುಮದಲಿ ಘನ
ರೋದನ ಧ್ವನಿ ಮಂತ್ರದಲಿ ನೃಪ
ಪಾದ ಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಬನಿಯ ಧಾರೆಯಲ್ಲಿ ಕಾಲು ತೊಳೆದಳು. ಹಣೆಯನ್ನು ತೇದು, ತಿಲಕದ ಗಂಧವನ್ನು ಹಚ್ಚಿ, ಬೈತಲೆಯ ಮುತ್ತಿನ ಹೂವುಗಳಿಂದ ಅರ್ಚಿಸಿ, ಅಳುವನ್ನೇ ಮಂತ್ರವಾಗಿ ಉಚ್ಚರಿಸಿ ಭಾನುಮತಿ ಪಾದಪೂಜೆಯನ್ನು ಮಾಡುತ್ತಿದ್ದಾಳೋ ಎಂಬಂತೆ ಕಂಡಳು.
ಪದಾರ್ಥ (ಕ.ಗ.ಪ)
ಭಾಳ - ಹಣೆ
ಮೂಲ ...{Loading}...
ನಾದಿದಳು ನೃಪನಂಘ್ರಿಯನು ನಯ
ನೋದಕದ ಧಾರೆಯಲಿ ಭಾಳವ
ತೇದು ತಿಲಕದ ಗಂಧದಲಿ ಬೈತಲೆಯ ಮುತ್ತುಗಳ
ಆದರಿಸಿ ನವ ಕುಸುಮದಲಿ ಘನ
ರೋದನ ಧ್ವನಿ ಮಂತ್ರದಲಿ ನೃಪ
ಪಾದ ಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ ॥6॥
೦೦೭ ಖಳರು ಕೌರವರಿನ್ದು ...{Loading}...
ಖಳರು ಕೌರವರಿಂದು ಸಜ್ಜನ
ಕುಲ ಶಿರೋಮಣಿ ನೀನು ಕರುಣಾ
ಜಲಧಿ ನಿನಗಪರಾಧಿಗಳು ನಾವಹೆವು ಜಗವರಿಯೆ
ಹುಳಿಗೆ ಹಾಲಳುಕಿದರೆ ಹಾಲಿನ
ಜಲಧಿ ಕೆಡುವುದೆ ಜೀಯ ನಿನ್ನವ
ರೆಳಸಿ ಕೊಂಡರು ಕಾಯಬೇಕೆಂದೊರಲಿದಳು ತರಳೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವರು ದುಷ್ಟರು. ನೀನು ಸಜ್ಜನ ಶಿರೋಮಣಿ. ಕರುಣಾನಿಧಿಯಾದ ನಿನಗೆ ಲೋಕವೇ ತಿಳಿದಂತೆ ನಾವು ಅಪರಾಧ ಮಾಡಿದೆವು. ಹುಳಿ ಹಿಂಡಿದರೆ ಹಾಲು ಕೆಡುತ್ತದೆ, ಆದರೆ ಕ್ಷೀರಸಾಗರ ಕೆಡುವುದುಂಟೆ ? ಸ್ವಾಮಿ, ನಿನ್ನ ಕೌರವರು ಬಂಧನದಲ್ಲಿದ್ದಾರೆ, ಕಾಪಾಡಬೇಕು” ಎಂದು ದುಃಖಿಸಿದಳು.
ಮೂಲ ...{Loading}...
ಖಳರು ಕೌರವರಿಂದು ಸಜ್ಜನ
ಕುಲ ಶಿರೋಮಣಿ ನೀನು ಕರುಣಾ
ಜಲಧಿ ನಿನಗಪರಾಧಿಗಳು ನಾವಹೆವು ಜಗವರಿಯೆ
ಹುಳಿಗೆ ಹಾಲಳುಕಿದರೆ ಹಾಲಿನ
ಜಲಧಿ ಕೆಡುವುದೆ ಜೀಯ ನಿನ್ನವ
ರೆಳಸಿ ಕೊಂಡರು ಕಾಯಬೇಕೆಂದೊರಲಿದಳು ತರಳೆ ॥7॥
೦೦೮ ರಾಯರಿಗೆ ಬಿನ್ನಹವ ...{Loading}...
ರಾಯರಿಗೆ ಬಿನ್ನಹವ ಮಾಡೌ
ತಾಯೆ ದುರುಪದಿ ದೇವಿಯೇ ಹಿರಿ
ದಾಯಸವಬಡಿಸಿದನು ಕುರುಪತಿ ನಿನ್ನ ಮೈದುನನು
ನೋಯಿಸಲು ಸಿರಿಖಂಡ ನಿಜ ಗುಣ
ದಾಯತವ ಬಿಡದಂತೆ ನೀವೇ
ಕಾಯಬೇಹುದು ಪತಿಯನೆಂದೊರಲಿದಳು ಭಾನುಮತಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾಯಿ ದ್ರೌಪದಿ, ಧರ್ಮಜನಿಗೆ ವಿನಂತಿ ಮಾಡು. ನಿನ್ನ ಮೈದುನನಾದ ಕೌರವನು ನಿನಗೆ ತುಂಬ ಉಪಟಳವನ್ನಿತ್ತನು. ನೋಯಿಸಿದರೂ ಶ್ರೀಗಂಧವು ತನ್ನ ಸಹಜ ಗುಣವನ್ನು ಬಿಡದಿರುವಂತೆ ನನ್ನ ಪತಿಯನ್ನು ನೀವೇ ಕಾಪಾಡಬೇಕು” ಎಂದು ಬೇಡಿದಳು.
ಪದಾರ್ಥ (ಕ.ಗ.ಪ)
ಸಿರಿಖಂಡ - ಶ್ರೀಗಂಧ
ಮೂಲ ...{Loading}...
ರಾಯರಿಗೆ ಬಿನ್ನಹವ ಮಾಡೌ
ತಾಯೆ ದುರುಪದಿ ದೇವಿಯೇ ಹಿರಿ
ದಾಯಸವಬಡಿಸಿದನು ಕುರುಪತಿ ನಿನ್ನ ಮೈದುನನು
ನೋಯಿಸಲು ಸಿರಿಖಂಡ ನಿಜ ಗುಣ
ದಾಯತವ ಬಿಡದಂತೆ ನೀವೇ
ಕಾಯಬೇಹುದು ಪತಿಯನೆಂದೊರಲಿದಳು ಭಾನುಮತಿ ॥8॥
೦೦೯ ಚುಮ್ಬಿಸಿತು ಕಡುಶೋಕ ...{Loading}...
ಚುಂಬಿಸಿತು ಕಡುಶೋಕ ಮಿಡಿದನು
ಕಂಬನಿಯನುಗುರಿನಲಿ ಘನ ಕರು
ಣಾಂಬುನಿಧಿ ಸೀಗುರಿಸಿ ಮೈಗೂಡಿರಿದ ರೋಮದಲಿ
ಹಂಬಲಿಸಬೇಡಕಟ ಕುರುಪತಿ
ಯೆಂಬನಾರೌ ಬೊಪ್ಪನವರೇ
ನೆಂಬರೇಳೌ ತಾಯೆಯೆನುತೆತ್ತಿದನು ಭಾಮಿನಿಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನಿಗೆ ಶೋಕ ಆವರಿಸಿತು. ಉಗುರಿನಿಂದ ಕಣ್ಣೀರನ್ನು ಒರೆಸಿಕೊಂಡನು. ರೋಮರೋಮಗಳೇ ಚುಚ್ಚಿದಂತಾಗಿ ಅವನು ‘ತಾಯೇ, ಅಳಬೇಡ. ದುರ್ಯೋಧನ ಯಾರು ? (ನನ್ನ ತಮ್ಮನಲ್ಲವೇ ?) ತಂದೆಯವರು ಏನು ಹೇಳುತ್ತಾರೆ ? ಏಳು ಎಂದು ಭಾನಮತಿಯನ್ನು ಮೇಲೆತ್ತಿದನು.
ಮೂಲ ...{Loading}...
ಚುಂಬಿಸಿತು ಕಡುಶೋಕ ಮಿಡಿದನು
ಕಂಬನಿಯನುಗುರಿನಲಿ ಘನ ಕರು
ಣಾಂಬುನಿಧಿ ಸೀಗುರಿಸಿ ಮೈಗೂಡಿರಿದ ರೋಮದಲಿ
ಹಂಬಲಿಸಬೇಡಕಟ ಕುರುಪತಿ
ಯೆಂಬನಾರೌ ಬೊಪ್ಪನವರೇ
ನೆಂಬರೇಳೌ ತಾಯೆಯೆನುತೆತ್ತಿದನು ಭಾಮಿನಿಯ ॥9॥
೦೧೦ ಭೀಮ ಬಾ ...{Loading}...
ಭೀಮ ಬಾ ಕುರುರಾಜಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನೇ, ಬಾ. ಕುರುವಂಶ ಚೂಡಾಮಣಿಯೂ ಯುದ್ಧ ಪರಾಕ್ರಮಿಯೂ, ಶಶಿವಂಶ ಚಂದ್ರನೂ ಆದ ದುರ್ಯೋಧನನನ್ನು ಕರೆದು ತಾ. ಅರಸ ಶಿಖಾಮಣಿಯನ್ನು ಕರೆದುಕೊಂಡು ಬಾ’ ಎಂದು ಹೇಳಲು ಭೀಮನು ಕೈಮುಗಿದು ಹೀಗೆ ವಿನಂತಿಸಿದನು.
ಪದಾರ್ಥ (ಕ.ಗ.ಪ)
ತಾಮರಸ - ಕಮಲ
ಮೂಲ ...{Loading}...
ಭೀಮ ಬಾ ಕುರುರಾಜಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ ॥10॥
೦೧೧ ಬೆಸಸಬೇಹುದು ನೀತಿಶಾಸ್ತ್ರದ ...{Loading}...
ಬೆಸಸಬೇಹುದು ನೀತಿಶಾಸ್ತ್ರದ
ಬೆಸುಗೆ ತಪ್ಪದೆ ರಾಜ ಧರ್ಮದ
ಮುಸುಡು ಕಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇನು ಬಾಧಕವೆಂದನಾ ಭೀಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀತಿಶಾಸ್ತ್ರವನ್ನು ಕೈಬಿಡದೆ, ರಾಜಧರ್ಮಕ್ಕೆ ಚ್ಯುತಿ ತಾರದೆ, ಕೆಡುಕು ಯೋಚಿಸದೆ (ಹಠ ಹಿಡಿಯದೆ ?) ಕುಶಲರಾದ ನೀವು ಅಪ್ಪಣೆ ಕೊಡಬೇಕು. ನಾವು ಮಾಡಬೇಕಾದ ಕಾರ್ಯವನ್ನು ಬೇರೆಯವರು ಕೈಗೊಂಡರೆ ನಮಗೇನು ತೊಂದರೆ.’ ಎಂದು ಭೀಮನು ಕೇಳಿದನು.
ಮೂಲ ...{Loading}...
ಬೆಸಸಬೇಹುದು ನೀತಿಶಾಸ್ತ್ರದ
ಬೆಸುಗೆ ತಪ್ಪದೆ ರಾಜ ಧರ್ಮದ
ಮುಸುಡು ಕಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇನು ಬಾಧಕವೆಂದನಾ ಭೀಮ ॥11॥
೦೧೨ ತಮ್ಮ ಸಙ್ಕಟಕಿವರು ...{Loading}...
ತಮ್ಮ ಸಂಕಟಕಿವರು ವಿನಯವ
ನೆಮ್ಮಿ ಬಿನ್ನಹ ಮಾಡುತಿರ್ದೊಡೆ
ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ
ಎಮ್ಮ ಮನ ಮುಂಚುವುದು ಕಾರ್ಯದ
ಹಮ್ಮುಗೆಯ ನೀವರಿಯಿರೇ ತಮ
ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
12." ತಮ್ಮ ಸಂಕಷ್ಟಕ್ಕಾಗಿ ಇವರು ವಿನಯದಿಂದ ವಿನಂತಿ ಮಾಡುತ್ತಿದ್ದಾರೆ. ಇದು ನಿಮಗೆ ಸಂತೋಷವೇ ? ಕರ್ತವ್ಯ ಪರತೆಯಲ್ಲಿ ನಾವು ಸದಾ ಮುಂದೆ. ಇದು ನಿಮಗೆ ತಿಳಿಯದೆ ? ಅವರವರ ದುಷ್ಕೃತ್ಯ ಅವರವರಿಗೆ ಫಲ ಕೊಡುತ್ತದೆ. ನಿಮಗೇನು ಇದರಲ್ಲಿ ನಷ್ಟ ? “ಎಂದನು.
ಪದಾರ್ಥ (ಕ.ಗ.ಪ)
ಮುಂಚು - ಮುಂದು
ಮೂಲ ...{Loading}...
ತಮ್ಮ ಸಂಕಟಕಿವರು ವಿನಯವ
ನೆಮ್ಮಿ ಬಿನ್ನಹ ಮಾಡುತಿರ್ದೊಡೆ
ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ
ಎಮ್ಮ ಮನ ಮುಂಚುವುದು ಕಾರ್ಯದ
ಹಮ್ಮುಗೆಯ ನೀವರಿಯಿರೇ ತಮ
ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ ॥12॥
೦೧೩ ಅನುಜ ಕೇಳಪಕಾರಿ ...{Loading}...
ಅನುಜ ಕೇಳಪಕಾರಿ ಜನದಲಿ
ನೆನೆವುದುಪಕಾರವನು ಗುಣ ಹೀ
ನನಲಿ ಗುಣವನು ತೋರುವದು ಗರುವರಿಗೆ ತೊಡಿಗೆಯಿದು
ಅನುಜನಲ್ಲಾ ನಮಗೆ ಕೌರವ
ಜನಪನವರಪರಾಧ ಶತವನು
ನೆನೆವೊಡಿದು ಹೊತ್ತೇ ಮಹಾದೇವೆಂದನಾ ಭೂಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಮ್ಮಾ, ಅಪಕಾರಗೈದವರಿಗೂ ಉಪಕಾರ ಮಾಡಬೇಕು. ದುರ್ಜನನಿಗೂ ಸದ್ಗುಣವನ್ನು ತೋರುವುದೇ ಶ್ರೇಷ್ಠರಿಗೆ ಅಲಂಕಾರ. ಕೌರವನು ನಮಗೆ ತಮ್ಮನಲ್ಲವೆ. ಇದು ಅವನ ಎಲ್ಲಾ ಅಪರಾಧಗಳನ್ನು ನೆನಪಿಸಿಕೊಳ್ಳುವ ಸಮಯವೇ? ಶಿವಶಿವಾ’ ಎಂದು ಧರ್ಮಜನು ಹೇಳಿದನು.
ಮೂಲ ...{Loading}...
ಅನುಜ ಕೇಳಪಕಾರಿ ಜನದಲಿ
ನೆನೆವುದುಪಕಾರವನು ಗುಣ ಹೀ
ನನಲಿ ಗುಣವನು ತೋರುವದು ಗರುವರಿಗೆ ತೊಡಿಗೆಯಿದು
ಅನುಜನಲ್ಲಾ ನಮಗೆ ಕೌರವ
ಜನಪನವರಪರಾಧ ಶತವನು
ನೆನೆವೊಡಿದು ಹೊತ್ತೇ ಮಹಾದೇವೆಂದನಾ ಭೂಪ ॥13॥
೦೧೪ ಭರತ ವಂಶದೊಳವರ ...{Loading}...
ಭರತ ವಂಶದೊಳವರ ಭಂಗವೆ
ನಿರುತವೆಮ್ಮದು ನಮ್ಮ ಭಂಗ
ಸ್ಫುರಣವವರದು ತಾವರಿಯರಾವರಿವೆವೀ ಹದನ
ಪರರ ಕಲಹಕೆ ನಾವು ನೂರೈ
ವರುಗಳಂತಃಕಲಹಕದು ನೂ
ರ್ವರು ವಿಚಾರಿಸಲೈವರಾವೆಂದನು ಮಹೀಪಾಲ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭರತ ವಂಶದದಲ್ಲಿ ಅವರ ಅವಮಾನವೇ ನಮ್ಮ ಅವಮಾನ ಕೂಡ. ನಮ್ಮ ಅವಮಾನ ಅವರ ಅವಮಾನವೂ ಹೌದು. ಅವರಿಗಿದು ತಿಳಿದಿಲ್ಲ, ನಮಗೆ ತಿಳಿದಿದೆ. ಅನ್ಯರೊಂದಿಗೆ ಜಗಳವಾದಾಗ ನಾವು ಒಟ್ಟು ನೂರೈವರು. ನಮ್ಮೊಳಗೆ ಜಗಳವಾದಾಗ ಮಾತ್ರ ಅವರು ನೂರ್ವರು, ನಾವು ಐವರು’ ಎಂದು ಧರ್ಮಜನು ಹೇಳಿದನು.
ಮೂಲ ...{Loading}...
ಭರತ ವಂಶದೊಳವರ ಭಂಗವೆ
ನಿರುತವೆಮ್ಮದು ನಮ್ಮ ಭಂಗ
ಸ್ಫುರಣವವರದು ತಾವರಿಯರಾವರಿವೆವೀ ಹದನ
ಪರರ ಕಲಹಕೆ ನಾವು ನೂರೈ
ವರುಗಳಂತಃಕಲಹಕದು ನೂ
ರ್ವರು ವಿಚಾರಿಸಲೈವರಾವೆಂದನು ಮಹೀಪಾಲ ॥14॥
೦೧೫ ಆವನಾಗಲಿ ಬೇಡಿದಙ್ಗೊಲಿ ...{Loading}...
ಆವನಾಗಲಿ ಬೇಡಿದಂಗೊಲಿ
ದೀವುದೇ ನೃಪಧರ್ಮ ಹಗೆ ಕೆಳೆ
ಯಾವನಾಗಲಿ ಸೆಣಸಿದೊಡೆ ಕಾದುವದೆ ನೃಪನೀತಿ
ಆವನಾಗಲಿ ಶರಣುವೊಕ್ಕರೆ
ಕಾವುದೇ ಕ್ಷತ್ರಿಯರ ಮತವಿಂ
ತಾವುದುಚಿತವು ಭೀಮ ನೀ ಹೇಳೆಂದನಾ ಭೂಪ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವನೇ ವ್ಯಕ್ತಿ ಬೇಡಿ ಬಂದಾಗ ನೀಡಬೇಕಾದ್ದು ರಾಜಧರ್ಮ. ಶತ್ರುವಾಗಲೀ ಮಿತ್ರನಾಗಲೀ ಯುದ್ಧಕ್ಕೆ ಕರೆದರೆ ಕಾದುವುದು ಕ್ಷತ್ರಿಯ ನೀತಿ. ಯಾವನು ಶರಣು ಬಂದರೂ ಕಾಪಾಡಬೇಕಾದುದು ನೃಪತಿಗಳ ಮತ. ಯಾವುದು ಸೂಕ್ತವೆಂದು ನೀನು ಹೇಳು” ಎಂದು ಭೀಮನಲ್ಲಿ ಯುಧಿಷ್ಠಿರ ಕೇಳಿದನು.
ಮೂಲ ...{Loading}...
ಆವನಾಗಲಿ ಬೇಡಿದಂಗೊಲಿ
ದೀವುದೇ ನೃಪಧರ್ಮ ಹಗೆ ಕೆಳೆ
ಯಾವನಾಗಲಿ ಸೆಣಸಿದೊಡೆ ಕಾದುವದೆ ನೃಪನೀತಿ
ಆವನಾಗಲಿ ಶರಣುವೊಕ್ಕರೆ
ಕಾವುದೇ ಕ್ಷತ್ರಿಯರ ಮತವಿಂ
ತಾವುದುಚಿತವು ಭೀಮ ನೀ ಹೇಳೆಂದನಾ ಭೂಪ ॥15॥
೦೧೬ ಆರಿಗಾರುಪಕಾರಿಗಳು ಮೇ ...{Loading}...
ಆರಿಗಾರುಪಕಾರಿಗಳು ಮೇ
ಣಾರಿಗಾರಪಕಾರಿಗಳು ತಾ
ನಾರಿಗಾರುಂಟವರವರ ಕೃತಕರ್ಮ ಸಂಸ್ಕಾರ
ಹೋರಿಸುವುದಳಿಸುವುದು ಸೌಖ್ಯಕೆ
ಸೇರಿಸುವುದಿದಕಹಿತ ಹಿತರೆಂ
ದಾರ ಮುರಿವುದು ಮನ್ನಿಸುವದೈ ಭೀಮ ಹೇಳೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾರಿಗೆ ಯಾರು ಉಪಕಾರಿಗಳು ? ಯಾರಿಗೆ ಯಾರು ಅಪಕಾರಿಗಳು. ಯಾರಿಗೆ ಯಾರಿದ್ದಾರೆ ? ಅವರವರ ಪೂರ್ವಾರ್ಜಿತ ಕರ್ಮ, ಸಂಸ್ಕಾರಗಳಿಗೆ ಅನುಸಾರವಾಗಿ ಸುಖ ಕಷ್ಟ, ಲಾಭ ನಷ್ಟ ಉಂಟಾಗುತ್ತದೆ. ಯಾರನ್ನು ಅಹಿತರೆಂದು ದ್ವೇಷಿಸುವುದು, ಯಾರನ್ನು ಹಿತರೆಂದು ಮನ್ನಿಸುವುದು ಹೇಳು ’ ಎಂದು ಭೀಮನಿಗೆಂದನು.
ಮೂಲ ...{Loading}...
ಆರಿಗಾರುಪಕಾರಿಗಳು ಮೇ
ಣಾರಿಗಾರಪಕಾರಿಗಳು ತಾ
ನಾರಿಗಾರುಂಟವರವರ ಕೃತಕರ್ಮ ಸಂಸ್ಕಾರ
ಹೋರಿಸುವುದಳಿಸುವುದು ಸೌಖ್ಯಕೆ
ಸೇರಿಸುವುದಿದಕಹಿತ ಹಿತರೆಂ
ದಾರ ಮುರಿವುದು ಮನ್ನಿಸುವದೈ ಭೀಮ ಹೇಳೆಂದ ॥16॥
೦೧೭ ಅದರಿನಾಚೆಯ ಭವದ ...{Loading}...
ಅದರಿನಾಚೆಯ ಭವದ ದುಷ್ಕೃತ
ವೊದಗಿತೀ ಜನ್ಮದಲಿ ವನ ವಾ
ಸದ ಪರಿಕ್ಲೇಶಾನುಭವಕಿವರೇನ ಮಾಡುವರು
ಒದಗಿದುತ್ಸವದಲ್ಲಿ ಪರರ
ಭ್ಯುದಯವನು ಬಯಸುವದು ಪರರಿಗೆ
ಮುದವನಾಚರಿಸುವದು ಧರ್ಮಜ್ಞರಿಗೆ ಗುಣವೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೋದ ಜನ್ಮದ ಪಾಪಕರ್ಮಗಳಿಗೆ ಅನುಗುಣವಾಗಿ ನಮ್ಮ ಬಾಳಿನಲ್ಲಿ ಬಂದೊದಗಿದ ವನವಾಸ ಮುಂತಾದ ಸಂಕಟಗಳಿಗೆ ಅವರು ಏನು ತಾನೇ ಮಾಡಬಲ್ಲರು ? ಯಾವುದೇ ಸಂದರ್ಭದಲ್ಲಿ ಇತರರ ಒಳಿತನ್ನು ಹಾರೈಸುವುದು, ಇತರರ ಅಭ್ಯುದಯವನ್ನು ಬಯಸುವುದು ಧರ್ಮಜ್ಞರ ಲಕ್ಷಣ.” ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಅದರಿನಾಚೆಯ ಭವದ ದುಷ್ಕೃತ
ವೊದಗಿತೀ ಜನ್ಮದಲಿ ವನ ವಾ
ಸದ ಪರಿಕ್ಲೇಶಾನುಭವಕಿವರೇನ ಮಾಡುವರು
ಒದಗಿದುತ್ಸವದಲ್ಲಿ ಪರರ
ಭ್ಯುದಯವನು ಬಯಸುವದು ಪರರಿಗೆ
ಮುದವನಾಚರಿಸುವದು ಧರ್ಮಜ್ಞರಿಗೆ ಗುಣವೆಂದ ॥17॥
೦೧೮ ಎಣಿಸಲೇಕಿನ್ನದನು ಕೌರವ ...{Loading}...
ಎಣಿಸಲೇಕಿನ್ನದನು ಕೌರವ
ಗಣ ಮರಳಿ ಬಂದಲ್ಲದಾರೋ
ಗಣೆಯ ಮಾಡೆನು ಪಾರ್ಥ ನೀ ನುಡಿ ನಿನ್ನ ಹವಣೇನು
ರಣದೊಳರಿಗಳ ಮುರಿದು ಕುರು ಧಾ
ರುಣಿಪತಿಯ ತಹುದುಂಟೆಯೆನೆ ಬಿಲು
ಗಣೆಗಳನು ತಿದ್ದಿದನು ಫಲುಗುಣ ಹೂಡಿದನು ರಥವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇದನ್ನು ಯೋಚಿಸುವುದೇಕೆ ? ಕೌರವರು ಹಿಂತಿರುಗಿ ಬಾರದಿದ್ದರೆ ನಾನು ಊಟವನ್ನೇ ಮಾಡುವುದಿಲ್ಲ. ಅರ್ಜುನ ನೀನು ಏನು ಹೇಳುತ್ತೀಯಾ ? ಯುದ್ಧಗೈದು ವೈರಿಗಳನ್ನು ಸೋಲಿಸಿ ದುರ್ಯೋಧನನನ್ನು ಕರೆತರುತ್ತೀಯಾ ?’ ಎಂದು ಧರ್ಮರಾಯನು ಕೇಳಲು ಪಾರ್ಥನು ಬಿಲ್ಲುಬಾಣಗಳನ್ನು ತೆಗೆದುಕೊಂಡು ರಥವನ್ನೇರಿದನು.
ಮೂಲ ...{Loading}...
ಎಣಿಸಲೇಕಿನ್ನದನು ಕೌರವ
ಗಣ ಮರಳಿ ಬಂದಲ್ಲದಾರೋ
ಗಣೆಯ ಮಾಡೆನು ಪಾರ್ಥ ನೀ ನುಡಿ ನಿನ್ನ ಹವಣೇನು
ರಣದೊಳರಿಗಳ ಮುರಿದು ಕುರು ಧಾ
ರುಣಿಪತಿಯ ತಹುದುಂಟೆಯೆನೆ ಬಿಲು
ಗಣೆಗಳನು ತಿದ್ದಿದನು ಫಲುಗುಣ ಹೂಡಿದನು ರಥವ ॥18॥
೦೧೯ ಎಮಗೆ ನುಡಿ ...{Loading}...
ಎಮಗೆ ನುಡಿ ಬೇರುಂಟೆ ನೀತಿ
ಭ್ರಮಿತರಾವಲ್ಲನಿಲಸುತನು
ಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು
ನಿಮಿಷದಲಿ ಗಂಧರ್ವಕನನಾ
ಕ್ರಮಿಸಿ ಕೌರವಗಣವನೀ ಪದ
ಕಮಲದಿದಿರಲಿ ಕೆಡಹಿ ತೋರುವೆನೆನುತ ಹೊರವಂಟ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಬೇರೆ ಮಾತಿದೆಯೆ ? ನಾನು ನೀತಿಭ್ರಮಿತನಲ್ಲ. ಕರುಣಾನಿಧಿಯಾದ ನೀನು ಭೀಮಸೇನನ ಸಿಟ್ಟನ್ನು ಸೈರಿಸುವುದು. ಗಂಧರ್ವನನ್ನು ಸೋಲಿಸಿ ಕೌರವರನ್ನು ನಿಮಿಷದೊಳಗೆ ತಂದು ನಿನ್ನ ಚರಣದಲ್ಲಿ ಕೆಡಹಿ ತೋರಿಸುತ್ತೇನೆ “ಎಂದು ಅರ್ಜುನನು ಹೊರಟನು.
ಮೂಲ ...{Loading}...
ಎಮಗೆ ನುಡಿ ಬೇರುಂಟೆ ನೀತಿ
ಭ್ರಮಿತರಾವಲ್ಲನಿಲಸುತನು
ಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು
ನಿಮಿಷದಲಿ ಗಂಧರ್ವಕನನಾ
ಕ್ರಮಿಸಿ ಕೌರವಗಣವನೀ ಪದ
ಕಮಲದಿದಿರಲಿ ಕೆಡಹಿ ತೋರುವೆನೆನುತ ಹೊರವಂಟ ॥19॥
೦೨೦ ಮುರಿದು ಚೆಲ್ಲಿದ ...{Loading}...
ಮುರಿದು ಚೆಲ್ಲಿದ ಸಕಲ ಕುರುಬಲ
ನೆರೆದುದರ್ಜುನನೊಡನೆ ಸೂಟಿಯೊ
ಳರಿ ಭಟನ ಬೆಂಬತ್ತಿದನು ಫಡ ನಿಲ್ಲು ನಿಲ್ಲೆನುತ
ಸೆರೆಯ ಬಿಡು ಗಂಧರ್ವ ಲೋಕವ
ನುರುಹುವೆನು ಹಿಂದಿಕ್ಕಿ ಕೊಂಬನ
ಶಿರವ ಚೆಂಡಾಡುವೆನೆನುತ ಕವಿದೆಚ್ಚನಾ ಪಾರ್ಥ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲ್ಲಾಪಿಲ್ಲಿಯಾಗಿದ್ದ ಕೌರವ ಸೇನೆಯೆಲ್ಲಾ ಅರ್ಜುನನೊಡನೆ ಸೇರಿಕೊಂಡಿತು. ವೇಗವಾಗಿ ರಿಪುಭಟರನ್ನು ಬೆಂಬತ್ತಿ ‘ಕೌರವನ ಸೆರೆಯನ್ನು ಬಿಡು, ಇಲ್ಲವಾದರೆ ಗಂಧರ್ವ ಲೋಕವನ್ನೇ ಭಸ್ಮಗೊಳಿಸುತ್ತೇನೆ, ಅವನನ್ನು ಸೆರೆ ಹಿಡಿದಿಟ್ಟುಕೊಂಡವನ ಶಿರವನ್ನು ಚೆಂಡಾಡುತ್ತೇನೆ’ ಎಂದು ಅರ್ಜುನ ಬಾಣ ಪ್ರಯೋಗ ಮಾಡಿದನು.
ಪದಾರ್ಥ (ಕ.ಗ.ಪ)
ಉರುಹು - ಸುಡು
ಮೂಲ ...{Loading}...
ಮುರಿದು ಚೆಲ್ಲಿದ ಸಕಲ ಕುರುಬಲ
ನೆರೆದುದರ್ಜುನನೊಡನೆ ಸೂಟಿಯೊ
ಳರಿ ಭಟನ ಬೆಂಬತ್ತಿದನು ಫಡ ನಿಲ್ಲು ನಿಲ್ಲೆನುತ
ಸೆರೆಯ ಬಿಡು ಗಂಧರ್ವ ಲೋಕವ
ನುರುಹುವೆನು ಹಿಂದಿಕ್ಕಿ ಕೊಂಬನ
ಶಿರವ ಚೆಂಡಾಡುವೆನೆನುತ ಕವಿದೆಚ್ಚನಾ ಪಾರ್ಥ ॥20॥
೦೨೧ ಸರಳಿನುಬ್ಬೆಗೆ ಸೆಡೆದು ...{Loading}...
ಸರಳಿನುಬ್ಬೆಗೆ ಸೆಡೆದು ಸಮರಕೆ
ತಿರುಗಿ ನಿಂದುದು ಖಚರ ಬಲವು
ಬ್ಬರದ ಬೊಬ್ಬೆಯಲುರುಬಿದುದು ಶರಹತಿಗೆ ಸೈರಿಸುತ
ಉರುಳಿದವು ಗಂಧರ್ವ ಶಿರ ನಭ
ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾ ಪಾರ್ಥ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವ ಸೇನೆಯು ಈ ಬಾಣಾಘಾತವನ್ನು ಎದುರಿಸಿ ನಿಂತಿತು. ದೊಡ್ಡದಾಗಿ ಬೊಬ್ಬೆ ಹಾಕುತ್ತಾ ಕಾದಾಡಿತು. ಗಂಧರ್ವರ ಶಿರಗಳು ನೆಲಕ್ಕುರುಳಿದವು. ಆಗಸವೆಲ್ಲಾ ಆವರಿಸಿದಂತೆ ದಿಕ್ಕುಗಳನ್ನು ಬಾಣದಿಂದ ಹೊದಿಸಿದಂತೆ ಅರ್ಜುನನು ಬಾಣಪ್ರಯೋಗ ಮಾಡಿದನು.
ಮೂಲ ...{Loading}...
ಸರಳಿನುಬ್ಬೆಗೆ ಸೆಡೆದು ಸಮರಕೆ
ತಿರುಗಿ ನಿಂದುದು ಖಚರ ಬಲವು
ಬ್ಬರದ ಬೊಬ್ಬೆಯಲುರುಬಿದುದು ಶರಹತಿಗೆ ಸೈರಿಸುತ
ಉರುಳಿದವು ಗಂಧರ್ವ ಶಿರ ನಭ
ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾ ಪಾರ್ಥ ॥21॥
೦೨೨ ಮೊರೆವ ಗರಿಗಳ ...{Loading}...
ಮೊರೆವ ಗರಿಗಳ ಮೊನೆಯಲುದುರುವ
ಹೊರಳಿಗಿಡಿಗಳ ಬಾಯ ಧಾರೆಗ
ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ
ಸರಳು ಹೊಕ್ಕವು ಹೆಕ್ಕಿದವು ಖೇ
ಚರ ಬಲವನೊಕ್ಕಿದವು ತೂರಿದ
ವರಿ ಭಟನ ಚುಚ್ಚಿದವು ಹೆಚ್ಚಿದವೆಂಟು ದೆಸೆಗಳಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರಿಗಳು ಮೊರೆದು, ಮೊನೆಯಲ್ಲಿ ಕಿಡಿಯುರಿದು, ಹೊಂಬರಹದ ರೇಖೆಗಳನ್ನು ಹೊಂದಿದ ಬಾಣಗಳು ಉರಿಯನ್ನು ಕಾರುತ್ತಾ ಗಂಧರ್ವರನ್ನು ಹೊಕ್ಕು ಇರಿದವು. ಬಿಕ್ಕಿ, ಹೆಕ್ಕಿ, ತೂರಿ ಚುಚ್ಚಿ ದಿಗ್ದೆಸೆಗಳನ್ನು ಆವರಿಸಿದವು.
ಮೂಲ ...{Loading}...
ಮೊರೆವ ಗರಿಗಳ ಮೊನೆಯಲುದುರುವ
ಹೊರಳಿಗಿಡಿಗಳ ಬಾಯ ಧಾರೆಗ
ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ
ಸರಳು ಹೊಕ್ಕವು ಹೆಕ್ಕಿದವು ಖೇ
ಚರ ಬಲವನೊಕ್ಕಿದವು ತೂರಿದ
ವರಿ ಭಟನ ಚುಚ್ಚಿದವು ಹೆಚ್ಚಿದವೆಂಟು ದೆಸೆಗಳಲಿ ॥22॥
೦೨೩ ಕೋಲ ಬಲುವಳೆಗೊಡ್ಡಿ ...{Loading}...
ಕೋಲ ಬಲುವಳೆಗೊಡ್ಡಿ ಹರಿಗೆಯ
ಮೇಳಯವ ಮರೆಗೊಂಡು ಖೇಚರ
ರಾಳು ನಿಂದೆಚ್ಚಿತು ನಿಹಾರದಲರ್ಜುನನ ರಥವ
ಕೋಲುಗಳನಾ ಹರಿಗೆ ಹಲಗೆಯ
ಮೇಳಯವನಾ ಮರೆಯಲುಗಿದೆಸು
ವಾಳನೊಂದಂಬಿನಲಿ ಸಂದಣಿಗೆಡಹಿದನು ಪಾರ್ಥ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶರವರ್ಷಧಾರೆಗೆ ಹಲಗೆಯನ್ನು ಅಡ್ಡಹಿಡಿದು ಗಂಧರ್ವ ಸೇನೆ ಅರ್ಜುನನ ರಥಕ್ಕೆ ಲಗ್ಗೆ ಹೂಡಿತು. ಅವರ ಬಾಣಗಳನ್ನು, ಅವರ ಗುರಾಣಿಯ ಸಂಕುಲವನ್ನು ಒಂದೇ ಬಾಣದಿಂದ ಅರ್ಜುನನು ನಾಶಗೊಳಿಸಿದನು.
ಪದಾರ್ಥ (ಕ.ಗ.ಪ)
ನಿಹಾರ -ಅಬ್ಬರ
ಮೂಲ ...{Loading}...
ಕೋಲ ಬಲುವಳೆಗೊಡ್ಡಿ ಹರಿಗೆಯ
ಮೇಳಯವ ಮರೆಗೊಂಡು ಖೇಚರ
ರಾಳು ನಿಂದೆಚ್ಚಿತು ನಿಹಾರದಲರ್ಜುನನ ರಥವ
ಕೋಲುಗಳನಾ ಹರಿಗೆ ಹಲಗೆಯ
ಮೇಳಯವನಾ ಮರೆಯಲುಗಿದೆಸು
ವಾಳನೊಂದಂಬಿನಲಿ ಸಂದಣಿಗೆಡಹಿದನು ಪಾರ್ಥ ॥23॥
೦೨೪ ಮೆಟ್ಟಿ ಹೆಣನನು ...{Loading}...
ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ಟಿದೊಡೆ ನೃಪನಾಣೆಯೆನುತೊಡ ಹಾಯ್ಸಿದನು ರಥವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲದ ಹೆಣರಾಶಿಗಳನ್ನು ಮೆಟ್ಟಿ, ಗಂಧರ್ವರು ಅರ್ಜುನನ ಆಕ್ರಮಣವನ್ನೆದುರಿಸುತ್ತಾ ಲಾಳವಿಂಡಿಗಡಯಂತಹ ಆಯುಧಗಳಿಂದ ಅರ್ಜುನನ್ನು ಎದುರಿಸಿದರು. ಆಗ ಅರ್ಜುನನು ‘ನೀವು ಧೀರರು. ಆದರೆ ಕೌರವನನ್ನು ಕಟ್ಟಿದವನನ್ನು ಕರೆದು ತನ್ನಿ. ನಿಮ್ಮನ್ನು ನಾನು ಅಣ್ಣನಾಣೆಯಾಗಿಯೂ ಮುಟ್ಟುವುದಿಲ್ಲ’ ಎಂದು ರಥವನ್ನು ಮುಂದೆ ಹಾರಿಸಿದನು.
ಮೂಲ ...{Loading}...
ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ಟಿದೊಡೆ ನೃಪನಾಣೆಯೆನುತೊಡ ಹಾಯ್ಸಿದನು ರಥವ ॥24॥
೦೨೫ ಗಜದ ಪದಘಟ್ಟಣೆಯ ...{Loading}...
ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥಚಕ್ರಹತಿಯಲಿ
ಗಿಜಿಗಿಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಕಾಲತುಳಿತಕ್ಕೆ ಸಿಕ್ಕ ತಾವರೆಗಳಂತೆ ರಥಚಕ್ರಕ್ಕೆ ಸಿಕ್ಕಿದ ಗಂಧರ್ವ ಸೇನೆಯು ನುಜ್ಜುಗುಜ್ಜಾಯಿತು. ನಾನು ಅರ್ಜುನನಲ್ಲವೆ? ‘ಸ್ವರ್ಗಲೋಕದಲ್ಲಿ ಮದ್ದಳೆಬಾರಿಸುವವನು ಎಲ್ಲಿದ್ದಾನೆ ? ಕೌರವ ಬಲವನ್ನು ಮಥಿಸಿದವನನ್ನು ತೋರಿ’ ಎಂದು ಪಾರ್ಥನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಮೌರಜಿಗ -ಮದ್ದಳೆ ಬಾರಿಸುವವನು.
ಮೂಲ ...{Loading}...
ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥಚಕ್ರಹತಿಯಲಿ
ಗಿಜಿಗಿಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ ॥25॥
೦೨೬ ಅಳವಿಯಲಿ ಕೈಮಾಡಿ ...{Loading}...
ಅಳವಿಯಲಿ ಕೈಮಾಡಿ ಖೇಚರ
ರಳಲಿಗರು ಮುಮ್ಮುಳಿತರಾದರು
ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ
ತಳಪಟದೊಳಾ ಸೆರೆ ಸಹಿತ ಕೈ
ಚಳಕದಲಿ ತೆಗೆದೆಸುತ ಸಮರಕೆ
ಮಲೆತು ನಿಂದನು ಚಿತ್ರಸೇನನು ಪಾರ್ಥನಿದಿರಿನಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಗಂಧರ್ವವೀರರು ಕೈಸೋತರು. ದಿಗ್ದೆಸೆಗಳನ್ನು ದಿವ್ಯಾಸ್ತ್ರಗಳು ಬೆಳಗಿದವು. ಕೈಯಲ್ಲಿರುವ ಸೆರೆಸಹಿತ, ಚಿತ್ರಸೇನನು ಅರ್ಜುನನ ಎದುರುಗಡೆ ಬಂದು ಮಲೆತು ನಿಂತನು.
ಪದಾರ್ಥ (ಕ.ಗ.ಪ)
ಅಳವಿ-ಸಾಮಥ್ರ್ಯ
ಮೂಲ ...{Loading}...
ಅಳವಿಯಲಿ ಕೈಮಾಡಿ ಖೇಚರ
ರಳಲಿಗರು ಮುಮ್ಮುಳಿತರಾದರು
ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ
ತಳಪಟದೊಳಾ ಸೆರೆ ಸಹಿತ ಕೈ
ಚಳಕದಲಿ ತೆಗೆದೆಸುತ ಸಮರಕೆ
ಮಲೆತು ನಿಂದನು ಚಿತ್ರಸೇನನು ಪಾರ್ಥನಿದಿರಿನಲಿ ॥26॥
೦೨೭ ಬಿಡು ಸೆರೆಯನವಗಡೆಯತನವೆ ...{Loading}...
ಬಿಡು ಸೆರೆಯನವಗಡೆಯತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದನಂಬಿನಲಿ ಖಚರಾಧಿಪನ ರಥವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೆರೆಹಿಡಿದ ಕೌರವನನ್ನು ಬಿಡು. ಈ ಪೌರುಷ ನಮ್ಮಲ್ಲಿ ನಡೆಯದು. ಸೂಳೆಯರ, ಸುರಾಪಾನ ಮಾಡಿದವರ ಎದುರಿನಲ್ಲಿ ಇದು ನಡೆಯಬಹುದು, ಫಡ " ಎಂದೆನ್ನುತ್ತ ಬಾಣದಿಂದಲೇ ಗಂಧರ್ವನ ರಥವನ್ನು ಎಡಬಲಗಳಲ್ಲಿ, ಹಿಂದು ಮುಂದುಗಳಲ್ಲಿ ಕಟ್ಟಿಹಾಕಿದನು.
ಪದಾರ್ಥ (ಕ.ಗ.ಪ)
ಅವಗಡೆ-ಬಿರುಸು
ಮೂಲ ...{Loading}...
ಬಿಡು ಸೆರೆಯನವಗಡೆಯತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದನಂಬಿನಲಿ ಖಚರಾಧಿಪನ ರಥವ ॥27॥
೦೨೮ ನೂಕದಿರಲಾಹವಕೆ ಸಮ್ಮುಖ ...{Loading}...
ನೂಕದಿರಲಾಹವಕೆ ಸಮ್ಮುಖ
ವೇಕೆನುತ ಹತ್ತಿದನು ಗಗನವ
ನಾ ಕಿರೀಟಿಯ ಗೆಲುವೆನೆಂದುಬ್ಬರದ ಬೊಬ್ಬೆಯಲಿ
ನಾಕ ನಿಳಯರ ಮಾರ್ಗದೊಳಗ
ವ್ಯಾಕುಳನು ಭುಲ್ಲೈಸಿದೊಡೆ ಲೋ
ಕೈಕವೀರನಲಾ ಧನಂಜಯನಡರಿದನು ನಭವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಗೆಲುವು ಕಾಣದಿದ್ದಾಗ ಮುಖಾಮುಖಿಯಾಗಿ ಯಾಕೆ ಹೋರಾಡಬೇಕು ಎಂದುಕೊಂಡು ಚಿತ್ರಸೇನನು ಅರ್ಜುನನನ್ನು ಗೆಲ್ಲುತ್ತೇನೆಂಬ ಗರ್ಜನೆಯಿಂದ ಆಕಾಶಕ್ಕೆ ಹಾರಿದನು. ಸುರವರರು ತಿರುಗುವ ಪಥದಲ್ಲಿ ಚಿತ್ರಸೇನನು ಮೆರೆಯುತ್ತಿರಲು, ಅರ್ಜುನ ಕೂಡಾ ಗಗನಾಂಗಣಕ್ಕೆ ಚಿಮ್ಮಿದನು.
ಪದಾರ್ಥ (ಕ.ಗ.ಪ)
ನಾಕ ನಿಳಯರ ಮಾರ್ಗ - ಆಕಾಶ
ಮೂಲ ...{Loading}...
ನೂಕದಿರಲಾಹವಕೆ ಸಮ್ಮುಖ
ವೇಕೆನುತ ಹತ್ತಿದನು ಗಗನವ
ನಾ ಕಿರೀಟಿಯ ಗೆಲುವೆನೆಂದುಬ್ಬರದ ಬೊಬ್ಬೆಯಲಿ
ನಾಕ ನಿಳಯರ ಮಾರ್ಗದೊಳಗ
ವ್ಯಾಕುಳನು ಭುಲ್ಲೈಸಿದೊಡೆ ಲೋ
ಕೈಕವೀರನಲಾ ಧನಂಜಯನಡರಿದನು ನಭವ ॥28॥
೦೨೯ ಎಲವೊ ಕೌರವ ...{Loading}...
ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲು ನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲಾ, ಕೌರವನೊಂದಿಗೆ ನೀನು ಕೂರ್ಮನ ಅಡಿಗೆ ಇಳಿದರೂ, ಧ್ರುವ ನಕ್ಷತ್ರದ ಎತ್ತರವನ್ನು ಏರಿದರೂ ಬಿಡದೆ ನಿನ್ನನ್ನು ಕೊಲ್ಲುತ್ತೇನೆ. ನಿಲ್ಲು ನಿಲ್ಲು ಎಂದು ಅರ್ಜುನನು ಶರಗಳನ್ನೆಸೆಯಲು, ಸೂರ್ಯಮಂಡಲಕ್ಕೆ ದಿಗ್ಭ್ರಮೆಯಾಯಿತು. ಗಗನಪಥದಲ್ಲಿ ಸಾಗುವ ದೇವತೆಗಳ ವಿಮಾನಗಳು ಚೆಲ್ಲಾಪಿಲ್ಲಿಯಾದವು.
ಮೂಲ ...{Loading}...
ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲು ನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ ॥29॥
೦೩೦ ತಿರುಗಿ ನಿನ್ದನು ...{Loading}...
ತಿರುಗಿ ನಿಂದನು ಖಚರಪತಿ ನಿ
ಷ್ಠುರವಿದೇನೈ ಪಾರ್ಥ ನೀ ಕಡು
ಮರುಳೊ ಮೂಢನೊ ಜಡನೊ ಪಿತ್ತಭ್ರಾಂತಿ ವಿಹ್ವಲನೊ
ಧುರದ ಕೌತುಕ ಗರಳ ಮೂರ್ಛಾಂ
ತರಿತ ಹೃದಯನೊ ನಿಲ್ಲು ಚಾಪದ
ಶರವನುಪಸಂಹರಿಸಿ ನಮ್ಮಯ ಮಾತ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನು ತಿರುಗಿ ನಿಂತು - ‘ಪಾರ್ಥನೇ, ಏನಿದು ? ನೀನು ಮರುಳನೋ, ಮೂರ್ಖನೋ, ಜಡನೊ, ಭ್ರಾಂತನೊ, ಯುದ್ಧದಿಂದ ಕಂಗೆಟ್ಟವನೊ, ನಿಲ್ಲು ಈ ನಿಷ್ಠುರವೇಕೆ ? ಬಾಣಗಳನ್ನು ಉಪಸಂಹರಿಸಿ ನಮ್ಮ ಮಾತನ್ನು ಕೇಳು ಎಂದನು.
ಮೂಲ ...{Loading}...
ತಿರುಗಿ ನಿಂದನು ಖಚರಪತಿ ನಿ
ಷ್ಠುರವಿದೇನೈ ಪಾರ್ಥ ನೀ ಕಡು
ಮರುಳೊ ಮೂಢನೊ ಜಡನೊ ಪಿತ್ತಭ್ರಾಂತಿ ವಿಹ್ವಲನೊ
ಧುರದ ಕೌತುಕ ಗರಳ ಮೂರ್ಛಾಂ
ತರಿತ ಹೃದಯನೊ ನಿಲ್ಲು ಚಾಪದ
ಶರವನುಪಸಂಹರಿಸಿ ನಮ್ಮಯ ಮಾತ ಕೇಳೆಂದ ॥30॥
೦೩೧ ಹುಲಿಯ ಮುರಿದೊತ್ತಿದೊಡೆ ...{Loading}...
ಹುಲಿಯ ಮುರಿದೊತ್ತಿದೊಡೆ ಪಶು ಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದೊಡೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹುಲಿಯನ್ನು ಹಿಂಸಿಸಿದರೆ ಹಸುಗಳಿಗೆ ದುಃಖವೇಕೆ ? ಕಾಗೆಯ ಹಿಂಡನ್ನು ಓಡಿಸಿದರೆ ಕೋಗಿಲೆಗೇನು ಕಷ್ಟ? ದುಷ್ಟರನ್ನು ಬಡಿದರೆ ಸಜ್ಜನರಿಗೆ ಬೇಸರವೇಕೆ? ಕೌರವರನ್ನು ಸದೆಬಡಿದರೆ ನಿನಗೇಕೆ ಹೊಟ್ಟೆ ನೋವು ?” ಎಂದು ಕೇಳಿದನು.
ಮೂಲ ...{Loading}...
ಹುಲಿಯ ಮುರಿದೊತ್ತಿದೊಡೆ ಪಶು ಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದೊಡೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ ॥31॥
೦೩೨ ಹೋದ ಮಾರಿಯ ...{Loading}...
ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದವರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊರಟುಹೋದ ಮಾರಿಯನ್ನು ಮತ್ತೆ ಮನೆಗೆ ಕರೆದು ಉಪಚರಿಸುತ್ತಾರೆಯೇ ? ನೀರಲ್ಲಿ ಮುಳುಗಿಸಿದ ಕೆಂಡವನ್ನು ತಲೆಯಲ್ಲಿ ಮುಡಿಯುತ್ತಾರೆಯೇ ? ಶತ್ರುವಿನ ಕೈಯಾಯುಧ ಮುರಿದಾಗ ಅವನಿಗೆ ಹೊಸ ಶಸ್ತ್ರವನ್ನು ಕೊಡುತ್ತಾರೆಯೆ ? ಕೌರವನು ಸೋತುಹೋದಾಗ ಬಿಡಿಸಿಕೊಳ್ಳುತ್ತಿದ್ದೀರಲ್ಲಾ, ಲೇಸುಲೇಸು” ಎಂದನು.
ಮೂಲ ...{Loading}...
ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದವರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ ॥32॥
೦೩೩ ಜನಪ ನೀತಿಯೊ ...{Loading}...
ಜನಪ ನೀತಿಯೊ ಮೇಣು ಬೋಳೆಯ
ತನವೊ ಬಿಲುಜಾಣಿಕೆಯೊ ಬಿಂಕವೊ
ನಿನಗೆ ಕದನದ ಕಲುಹೆಯೋ ನಾವರಿಯೆವಿದನೀಗ
ಬನಕೆ ಮರಳೈ ಮರುಳೆ ನೀ ಪುದು
ಮನೆಯ ಹಾವನು ಹದ್ದು ಹಿಡಿದರೆ
ಮನಕತವ ಮಾಡುವರೆ ಬಿಜಯಂಗೈಯಿ ನೀವೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ರಾಜನೀತಿಯೋ ಅಥವಾ ಮೂರ್ಖತನವೋ ? ಬಿಲ್ಲುವಿದ್ಯೆಯೋ ಅಥವಾ ಬಿಂಕವೋ ? ಇದು ನಿನ್ನ ರಣತಂತ್ರವೋ ನಾವು ತಿಳಿಯಲಾರೆವು. ಎಲಾ ಮರುಳೆ, ವನಕ್ಕೆ ಹಿಂತಿರುಗು. ಅಡಗುದಾಣವನ್ನು ಹೊಕ್ಕ ಹಾವನ್ನು ಹದ್ದು ಹಿಡಿದಾಗ ಯಾರೂ ಬೇಸರಿಸುವುದಿಲ್ಲ ನಡೆ” ಎಂದನು.
ಪದಾರ್ಥ (ಕ.ಗ.ಪ)
ಪುದುಮನೆ - ಅಡಗುವ ಸ್ಥಳ
ಮೂಲ ...{Loading}...
ಜನಪ ನೀತಿಯೊ ಮೇಣು ಬೋಳೆಯ
ತನವೊ ಬಿಲುಜಾಣಿಕೆಯೊ ಬಿಂಕವೊ
ನಿನಗೆ ಕದನದ ಕಲುಹೆಯೋ ನಾವರಿಯೆವಿದನೀಗ
ಬನಕೆ ಮರಳೈ ಮರುಳೆ ನೀ ಪುದು
ಮನೆಯ ಹಾವನು ಹದ್ದು ಹಿಡಿದರೆ
ಮನಕತವ ಮಾಡುವರೆ ಬಿಜಯಂಗೈಯಿ ನೀವೆಂದ ॥33॥
೦೩೪ ನಟರಲಾ ನೀವ್ ...{Loading}...
ನಟರಲಾ ನೀವ್ ಸುರಪುರ ದಚಾ
ವಟೆಯರೈ ಚತುರೋಕ್ತಿಗಳ ಲಟ
ಮಟಿಸಿದರೆ ನಾ ಮರುಳುವೆನೆ ಬಿಡು ಬಿಡು ಸುಯೋಧನನ
ಕಟು ಮಧುರವುರಿ ಸೀತವತಿ ಸಂ
ಕಟವು ಸುಖ ವಿಷವಮೃತವಾವುದು
ಘಟಿಸಿತಗ್ರಜನಾಜ್ಞೆಯಿದು ನಮಗೆಂದನಾ ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಸುರಲೋಕದ ನಟರು ಚಾತುರ್ಯದಿಂದ ಮಾತಾಡಿದರೆ ನಾನು ಹಿಂತಿರುಗಿ ಹೋಗುವುದಿಲ್ಲ. ದುರ್ಯೋಧನನನ್ನು ಬಿಟ್ಟುಬಿಡು. ಕಹಿಯೋ, ಸಿಹಿಯೋ, ಉಷ್ಣವೋ, ಶೀತವೋ, ಸುಖವೋ, ದುಃಖವೋ, ಅಮೃತವೋ, ವಿಷವೋ ? ನನಗೆ ಅಣ್ಣನಾಜ್ಞೆ ಮುಖ್ಯ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಚಾವಟೆಯ - ದುಷ್ಟ, ಧೂರ್ತ
ಮೂಲ ...{Loading}...
ನಟರಲಾ ನೀವ್ ಸುರಪುರ ದಚಾ
ವಟೆಯರೈ ಚತುರೋಕ್ತಿಗಳ ಲಟ
ಮಟಿಸಿದರೆ ನಾ ಮರುಳುವೆನೆ ಬಿಡು ಬಿಡು ಸುಯೋಧನನ
ಕಟು ಮಧುರವುರಿ ಸೀತವತಿ ಸಂ
ಕಟವು ಸುಖ ವಿಷವಮೃತವಾವುದು
ಘಟಿಸಿತಗ್ರಜನಾಜ್ಞೆಯಿದು ನಮಗೆಂದನಾ ಪಾರ್ಥ ॥34॥
೦೩೫ ಧರ್ಮವಾಗಲಿ ಮೇಣು ...{Loading}...
ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜ ಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ಲೋಕದಲ್ಲಿ ಧರ್ಮವೇ ಆಗಲಿ ಅಥವಾ ಅಧರ್ಮವೇ ಆಗಲಿ. ರಾಜನೀತಿಯೇ ಆಗಲಿ ಅಥವಾ ನೀತಿ ಬಾಹಿರವೇ ಆಗಲಿ. ಅಣ್ಣನಾದ ಧರ್ಮರಾಯ ಏನು ಹೇಳುತ್ತಾನೆಯೋ ಅದು ನನಗೆ ವೇದವಾಕ್ಯ. ಅದೇ ನನಗೆ ಪರಿಶುದ್ಧವಾದ ರಾಜಾಜ್ಞೆ. ಬೇರೆ ಮಾತೇ ಇಲ್ಲ’ ಎಂದನು.
ಪದಾರ್ಥ (ಕ.ಗ.ಪ)
ಬೆಸನು - ಆಜ್ಞೆ
ಮೂಲ ...{Loading}...
ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜ ಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ ॥35॥
೦೩೬ ನುಸುಳುಗಣ್ಡಿಯಿದಲ್ಲ ಕೌರವ ...{Loading}...
ನುಸುಳುಗಂಡಿಯಿದಲ್ಲ ಕೌರವ
ವಸುಮತೀಶನನಕಟ ಬಿಡು ನಿ
ನ್ನುಸುರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ
ಮಸುಗುವರೆ ಹಿಡಿ ಧನುವನೆನುತೆ
ಬ್ಬಿಸಿದನವಿರಳ ಶರವನಾತನ
ಮುಸುಕಿದವು ಮುಕ್ಕುರಿಕಿದವು ರಥ ಸನ್ನಿವೇಶದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನಗೆ ತಪ್ಪಿಸಿಕೊಳ್ಳಲು ದಾರಿ ಇಲ್ಲ. ಕೌರವನೃಪತಿಯನ್ನು ಬಿಟ್ಟರೆ, ನಿನಗೆ ಯಾವ ತೊಂದರೆಯನ್ನೂ ನಾನು ಮಾಡುವುದಿಲ್ಲ. ಇದು ಧರ್ಮರಾಯನ ಆಣೆಯಾಗಿಯೂ ಸತ್ಯ. ಯುದ್ಧಕ್ಕೆ ಸಿದ್ಧನಾಗುವೆ ಎಂದಾದರೆ ಧನುಸ್ಸನ್ನು ಹಿಡಿ ಎಂದು ಅರ್ಜುನನು ಅಸಂಖ್ಯಶರಗಳನ್ನು ಚಿತ್ರಸೇನನ ಮೇಲೆ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನುಸುಳುಗಣ್ಡಿ - ತಪ್ಪಿಸಿಕೊಳ್ಳುವ ಮಾರ್ಗ
ಮೂಲ ...{Loading}...
ನುಸುಳುಗಂಡಿಯಿದಲ್ಲ ಕೌರವ
ವಸುಮತೀಶನನಕಟ ಬಿಡು ನಿ
ನ್ನುಸುರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ
ಮಸುಗುವರೆ ಹಿಡಿ ಧನುವನೆನುತೆ
ಬ್ಬಿಸಿದನವಿರಳ ಶರವನಾತನ
ಮುಸುಕಿದವು ಮುಕ್ಕುರಿಕಿದವು ರಥ ಸನ್ನಿವೇಶದಲಿ ॥36॥
೦೩೭ ಕೋಲ ಬರಿದೇ ...{Loading}...
ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥ ನುಡಿದನು ಚಿತ್ರಸೇನಂಗೆ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನ, ಶರಗಳನ್ನು ಸುಮ್ಮನೆ ಹಾಳುಮಾಡಬೇಡ. ಹಿಂತಿರುಗು. ನಾವು ಈ ಕೌರವನನ್ನು ದೇವೇಂದ್ರನ ಆಜ್ಞೆಯಿಂದಲೇ ಕಟ್ಟಿದ್ದೇವೆ. ನಿನ್ನ ತಂದೆಯ ಮಾತನ್ನು ಮೀರದೆ ಪಾಲಿಸು’ ಎಂದು ಚಿತ್ರಸೇನನು ಹೇಳಲು, ಅರ್ಜುನನು ಶರವೊಂದನ್ನು ಕೈಯಲ್ಲಿ ಹಿಡಿದುಕೊಂಡು ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಬೀಯ - ನಾಶ, ವ್ಯರ್ಥ
ಕೆಂಗರಿಗೋಲು - ಬೆಂಕಿಯನ್ನು ಸೂಸುವಂತಹ ಬಾಣ
ಮೂಲ ...{Loading}...
ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥ ನುಡಿದನು ಚಿತ್ರಸೇನಂಗೆ ॥37॥
೦೩೮ ಕುರುಪತಿಯ ಕಟ್ಟುವೊಡೆ ...{Loading}...
ಕುರುಪತಿಯ ಕಟ್ಟುವೊಡೆ ಸುರಪತಿ
ಕರೆದು ಬೆಸಸಿದ ನಿನಗೆಯವಗೆ
ಮ್ಮರಸ ನೇಮವ ಕೊಟ್ಟನೀ ಕುರುಪತಿಯ ಬಿಡಿಸೆಂದು
ಸುರಪತಿಗೆ ಕೃತಕಾರ್ಯ ನೀನಾ
ಗಿರಲು ನಾವಕೃತಾರ್ಥರಾಗಿಯೆ
ಮರಳಿ ಭೂಪನ ಕಾಂಬೆವೈಸಲೆ ಜಾಣನಹೆಯೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವನನ್ನು ಕಟ್ಟಲು ನಿನಗೆ ದೇವೇಂದ್ರ ಆಜ್ಞಾಪಿಸಿದನು. ನಮಗೆ ಕೌರವನನ್ನು ಬಿಡಿಸುವಂತೆ ಧರ್ಮರಾಜ ಆಣತಿಯಿತ್ತನು. ನೀನು ದೇವೇಂದ್ರನಿಗೆ ಕೃತಕಾರ್ಯನಾಗಿರಬೇಕು, ನಾವು ಕಾರ್ಯ ವೈಫಲ್ಯದಿಂದ ಮರಳಿ ಅಣ್ಣನನ್ನು ನೋಡಬೇಕು, ಅಲ್ಲವೇ ನೀನು ಜಾಣನಿದ್ದೀಯಾ” ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಕುರುಪತಿಯ ಕಟ್ಟುವೊಡೆ ಸುರಪತಿ
ಕರೆದು ಬೆಸಸಿದ ನಿನಗೆಯವಗೆ
ಮ್ಮರಸ ನೇಮವ ಕೊಟ್ಟನೀ ಕುರುಪತಿಯ ಬಿಡಿಸೆಂದು
ಸುರಪತಿಗೆ ಕೃತಕಾರ್ಯ ನೀನಾ
ಗಿರಲು ನಾವಕೃತಾರ್ಥರಾಗಿಯೆ
ಮರಳಿ ಭೂಪನ ಕಾಂಬೆವೈಸಲೆ ಜಾಣನಹೆಯೆಂದ ॥38॥
೦೩೯ ಬಿಡುವೆಯಾದರೆ ನೃಪನ ...{Loading}...
ಬಿಡುವೆಯಾದರೆ ನೃಪನ ಸೆರೆಯನು
ಬಿಡಿಸುವೆನು ಮೇಣಲ್ಲದಿರ್ದೊಡೆ
ಬಿಡಿಸುವೆನು ನಿನ್ನುಸುರ ಸೆರೆಯನು ನಿನ್ನ ದೇಹದಲಿ
ನುಡಿಗೆ ತೆರಹಿಲ್ಲೇಳೆನುತ ಕೈ
ಗಡಿಯಲೆಚ್ಚನು ಕಾಲ ಕೂಟದ
ಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಒಪ್ಪುವೆಯೆಂದಾದರೆ, ಕೌರವನ ಸೆರೆಯನ್ನು ಬಿಡಿಸುತ್ತೇನೆ. ಇಲ್ಲವಾದರೆ ನಿನ್ನ ದೇಹದಿಂದ ಪ್ರಾಣವನ್ನೇ ಬಿಡಿಸುತ್ತೇನೆ. ಈ ಮಾತಿಗೆ ಎರಡಿಲ್ಲ. ಏಳು’ ಎಂದು ಕಾಲಕೂಟದ ಸಮುದ್ರವು ವ್ಯಾಪಿಸಿದ ಹಾಗೆ ಪಾರ್ಥನು ಬಾಣಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಬಿಡುವೆಯಾದರೆ ನೃಪನ ಸೆರೆಯನು
ಬಿಡಿಸುವೆನು ಮೇಣಲ್ಲದಿರ್ದೊಡೆ
ಬಿಡಿಸುವೆನು ನಿನ್ನುಸುರ ಸೆರೆಯನು ನಿನ್ನ ದೇಹದಲಿ
ನುಡಿಗೆ ತೆರಹಿಲ್ಲೇಳೆನುತ ಕೈ
ಗಡಿಯಲೆಚ್ಚನು ಕಾಲ ಕೂಟದ
ಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು ॥39॥
೦೪೦ ಕಡಿದನರ್ಜುನನಮ್ಬನೀಸವ ...{Loading}...
ಕಡಿದನರ್ಜುನನಂಬನೀಸವ
ಗಡವಿದೇಕೈ ಮರುಳೆ ಕೆಂಡವ
ಮಡಿಲೊಳಿಕ್ಕುವುದರ್ತಿಯೇ ಸಂಧಾನ ನಿಮಗೆಮಗೆ
ಬಿಡುವೆನಿನಿಬರ ಸೆರೆಗಳನು ನಿ
ನ್ನೊಡೆಯನಲ್ಲಿಗೆ ಕೊಂಡು ನಡೆಯೆಂ
ದೊಡನೆ ಬಂದನು ಧರ್ಮರಾಯನ ಬಳಿಗೆ ಖಚರೇಂದ್ರ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಬಾಣಗಳನ್ನು ಚಿತ್ರಸೇನನು ಕತ್ತರಿಸಿ ‘ಎಲಾ ಮರುಳೆ, ಇಷ್ಟೊಂದು ಛಲವೇಕೆ ? ಮಡಿಲಲ್ಲಿ ಕೆಂಡವಿಟ್ಟುಕೊಳ್ಳುವುದು ಸರಿಯೆ ? ನಮ್ಮ ನಡುವೆ ಸಂಧಾನ ಮಾಡಿಕೊಳ್ಳೋಣ. ಇವರ ಸೆರೆಗಳನ್ನು ಬಿಡುತ್ತೇನೆ. ನಿನ್ನ ಅಣ್ಣ ಧರ್ಮರಾಯನಿರುವಲ್ಲಿಗೆ ಕರೆದೊಯ್ಯು’ ಎಂದು ಹೇಳಿ ಧರ್ಮರಾಯನಿರುವಲ್ಲಿಗೆ ಬಂದನು.
ಮೂಲ ...{Loading}...
ಕಡಿದನರ್ಜುನನಂಬನೀಸವ
ಗಡವಿದೇಕೈ ಮರುಳೆ ಕೆಂಡವ
ಮಡಿಲೊಳಿಕ್ಕುವುದರ್ತಿಯೇ ಸಂಧಾನ ನಿಮಗೆಮಗೆ
ಬಿಡುವೆನಿನಿಬರ ಸೆರೆಗಳನು ನಿ
ನ್ನೊಡೆಯನಲ್ಲಿಗೆ ಕೊಂಡು ನಡೆಯೆಂ
ದೊಡನೆ ಬಂದನು ಧರ್ಮರಾಯನ ಬಳಿಗೆ ಖಚರೇಂದ್ರ ॥40॥
೦೪೧ ಸೋಲವೆಮ್ಮದು ನಿಮ್ಮ ...{Loading}...
ಸೋಲವೆಮ್ಮದು ನಿಮ್ಮ ತಮ್ಮನೆ
ಮೇಲುಗೈ ನಿಮ್ಮಡಿಗಳಾಜ್ಞಾ
ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು
ಕಾಳಗದೊಳೆಮ್ಮಖಿಳ ಖಚರರ
ಧೂಳಿಪಟ ಮಾಡಿದನು ಲಕ್ಷ್ಮೀ
ಲೋಲ ನಿಮಗೊಲಿದಿಹನು ಗದುಗಿನ ವೀರ ನಾರಯಣ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮದೇ ಸೋಲು, ನಿನ್ನ ತಮ್ಮನದೇ ಮೇಲುಗೈಯಾಯ್ತು. ನಿಮ್ಮ ಆಜ್ಞಾಪಾಲಕರಾಗಿ ಭೀಮಾರ್ಜುನ ನಕುಲ ಸಹದೇವರಿದ್ದಾರೆ. ಅರ್ಜುನನು ಯುದ್ಧದಲ್ಲಿ ಗಂಧರ್ವರೆಲ್ಲರನ್ನೂ ಧೂಳೀಪಟಮಾಡಿದ್ದಾನೆ. ನಿಮಗೆ ಶ್ರೀಹರಿಯ ಕರುಣಾ ಕಟಾಕ್ಷವಿದೆ’ ಎಂದು ಚಿತ್ರಸೇನನು ಹೇಳಿದನು.
ಮೂಲ ...{Loading}...
ಸೋಲವೆಮ್ಮದು ನಿಮ್ಮ ತಮ್ಮನೆ
ಮೇಲುಗೈ ನಿಮ್ಮಡಿಗಳಾಜ್ಞಾ
ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು
ಕಾಳಗದೊಳೆಮ್ಮಖಿಳ ಖಚರರ
ಧೂಳಿಪಟ ಮಾಡಿದನು ಲಕ್ಷ್ಮೀ
ಲೋಲ ನಿಮಗೊಲಿದಿಹನು ಗದುಗಿನ ವೀರ ನಾರಯಣ ॥41॥