೦೦೦ ಸೂ ರಾಯದಳವನು ...{Loading}...
ಸೂ. ರಾಯದಳವನು ಮುರಿದು ಕೌರವ
ರಾಯನನುಜರು ಸಹಿತ ಗಗನಕೆ
ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ದೇವೇಂದ್ರನ ಆಜ್ಞೆಯಂತೆ ಚಿತ್ರಸೇನನು ಕೌರವನ ಸೇನೆಯನ್ನು ಸೋಲಿಸಿ, ಸಹೋದರರ ಸಹಿತ ಕೌರವನನ್ನು ಎತ್ತಿಕೊಂಡು ಆಕಾಶಕ್ಕೆ ಹೋದನು.
ಮೂಲ ...{Loading}...
ಸೂ. ರಾಯದಳವನು ಮುರಿದು ಕೌರವ
ರಾಯನನುಜರು ಸಹಿತ ಗಗನಕೆ
ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸೂಲ ದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಭೂಪತಿ, ಕೇಳು ವನಪಾಲಕರ ಜಗಳದಲ್ಲಿ ಸೇನೆ ಸೋತುಹೋಗಿ ಕಾಡಿನಲ್ಲಿ ಧರಾಶಾಯಿಯಾಯಿತು. ಕಣ್ಣುಗಳನ್ನು ತಗ್ಗಿಸಿ, ತಲೆನೋವಿನಿಂದ , ವಿಷಾದಚಿತ್ತದಲ್ಲಿ ಕೌರವರಾಯನಿದ್ದನು.
ಪದಾರ್ಥ (ಕ.ಗ.ಪ)
ತೋಟಿ -ಕಲಹ
ತೋಹು - ತೋಪು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸೂಲ ದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ ॥1॥
೦೦೨ ಜೀಯ ದುಗುಡವಿದೇಕೆ ...{Loading}...
ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯ, ಯಾಕಿಷ್ಟು ಚಿಂತೆ ? ದೇವೇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನರ ಪರಾಕ್ರಮಕ್ಕೆ ಮೂರು ಮಡಿಯಷ್ಟು ಶಕ್ತಿಯನ್ನು ಹೊಂದಿದ ವೀರ ಭಟರಿದ್ದಾರೆ. ನಿನ್ನ ಆಜ್ಞೆಯಾದರೆ ಸಾಕು, ಸುರಲೋಕದ ಗಾಯಕರಾದ ಗಂಧರ್ವರ ಪೌರುಷ ಎಷ್ಟೆಂದು ನೋಡೋಣ ಎಂದು ಕರ್ಣನೆಂದನು.
ಪದಾರ್ಥ (ಕ.ಗ.ಪ)
ಹಾಡುಗ - ಹಾಡುವವನು, ಗಾಯಕ
ಜಲಧಿಪ - ವರುಣ
ಮೂಲ ...{Loading}...
ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ ॥2॥
೦೦೩ ನೇಮವಾಯಿತು ಸುಭಟರೊಳಗೆ ...{Loading}...
ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿ ಮ
ಹಾ ಮಹಿಮರನುವಾಯ್ತು ಗಜ ಹಯ ರಥ ನಿಕಾಯದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಜ್ಞೆಯಾದ ಕೂಡಲೇ ಸುಭಟರು ಎದ್ದು ಹೊರಟರು. ಕರ್ಣ, ಶಕುನಿ, ದುಃಶಾಸನ, ಬಾಹ್ಲಿಕ, ಶಲ್ಯಕುಮಾರ, ಸೋಮದತ್ತಸುತ, ಕಳಿಂಗರಾಜ, ಸುಧಾಮ, ಚಿತ್ರ ಮಹಾರಥ ಮೊದಲಾದ ವೀರರು ಆನೆ ಕುದುರೆ ರಥಗಳನ್ನೇರಿ ಹೊರಟರು.
ಮೂಲ ...{Loading}...
ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿ ಮ
ಹಾ ಮಹಿಮರನುವಾಯ್ತು ಗಜ ಹಯ ರಥ ನಿಕಾಯದಲಿ ॥3॥
೦೦೪ ನೂಕಿದರು ಮುಙ್ಗುಡಿಯವರು ...{Loading}...
ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಬಿದ್ದು ತಿವಿದರು ಬೆರಸಿ ಪರಬಲವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಾಳುಗಳು ಮುಂದೊತ್ತಿ ವನಪಾಲಕರನ್ನು ಹೊಡೆದರು. ಶತ್ರುಗಳಾದ ಗಂಧರ್ವರನ್ನು ಬಡಿದು, ಅವರ ಹೊಟ್ಟೆಯನ್ನು ಸಬಳದಿಂದ ಸೀಳಿದರು. ಕರ್ಣ ಶಕುನಿಗಳೇ ಮೊದಲಾದ ವೀರರೇಕೆ ? ಉಳಿದ ಅನೇಕ ಭಟರುಗಳೇ ವನದ ಒಳ ಹೊಕ್ಕು ವೈರಿ ಬಲವನ್ನು ತಿವಿದರು.
ಪದಾರ್ಥ (ಕ.ಗ.ಪ)
ದಿವೌಕಸ - ದೇವತೆಗಳು
ಮೂಲ ...{Loading}...
ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಬಿದ್ದು ತಿವಿದರು ಬೆರಸಿ ಪರಬಲವ ॥4॥
೦೦೫ ಮತ್ತೆ ಮುರಿದುದು ...{Loading}...
ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ಕವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟವ್ರಜವ
ತೆತ್ತಿಸಿದ ಶರದೇರ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವರ ಶಕ್ತಿ ಮತ್ತೆ ಕುಗ್ಗಿತು. ಕೌರವನ ಸೇನೆ ಅವರನ್ನು ಎತ್ತಿ ಬಿಸಾಡಿತು. ಬಾಣ ಹೊಕ್ಕ ರಥ, ಸುರಿವ ಕರುಳನ್ನು ಒತ್ತಿಹಿಡಿದ ಕೈಗಳು, ನೆತ್ತಿ ತಲೆಗಳಲ್ಲಿ ರಕ್ತ ಸುರಿಯುತ್ತಿರಲು ಗಂಧರ್ವ ಸೇನೆ ದೇವಲೋಕಕ್ಕೆ ಓಡಿತು.
ಮೂಲ ...{Loading}...
ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ಕವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟವ್ರಜವ
ತೆತ್ತಿಸಿದ ಶರದೇರ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ ॥5॥
೦೦೬ ಹೊಯ್ಯಲಾದುದು ಚಿತ್ರಸೇನನ ...{Loading}...
ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆ ಗಾಯದ
ಮೈಯಬಿಸುಟಾಯಧದ ಬೆನ್ನಲಿ ಬಿಟ್ಟ ಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವದೆ ಜಾರುವುದು ಹಿತ ನಿಮಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶತ್ರುಗಳು ನಮ್ಮನ್ನು ಹೊಡೆದು ಹಾಕಿದರು. ಚಿತ್ರಸೇನನನ್ನು ಬೈಯ ಬೇಡಿ. ಜೀಯ, ಕರ್ಣನ ಕೈಯಲ್ಲಿ ಗಂಧರ್ವರ ಪ್ರಾಣ ಹೋಗುವುದು ನಿಮಗೆ ಹಿತವೆ ?’ ಎಂದು ಗಾಯವಾದ ಮೈ, ಆಯುಧವನ್ನು ಬಿಸಾಡಿ, ಬೆನ್ನಿನ ಮೆಲೆ ಕೆದರಿದ ತಲೆಕೂದಲುಗಳುಳ್ಳ ದೇವಭಟರು ತೊದಲುತ್ತಾ ದೂರು ಕೊಟ್ಟರು.
ಮೂಲ ...{Loading}...
ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆ ಗಾಯದ
ಮೈಯಬಿಸುಟಾಯಧದ ಬೆನ್ನಲಿ ಬಿಟ್ಟ ಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವದೆ ಜಾರುವುದು ಹಿತ ನಿಮಗೆ ॥6॥
೦೦೭ ಕಳವಳಿಸದಿರಿ ಧನುವ ...{Loading}...
ಕಳವಳಿಸದಿರಿ ಧನುವ ತಾ ಹೆ
ಬ್ಬಲವ ಕರೆ ಕರೆ ಹುಲು ಮನುಷ್ಯರ
ಬಲಹು ಗಡ ಬಯಲಾಯ್ತು ಗಡ ಗಂಧರ್ವರಾಟೋಪ
ನೆಲನೊಳೊಕ್ಕರೆ ಶೋಣಿತಕೆ ರಾ
ಟಳವ ಹಿಡಿ ಬರಹೇಳು ಶಾಕಿನಿ
ಕುಲವ ಡಾಕಿನಿಯರನು ನೆತ್ತರುಗುಡುಹಿ ಕೈನೆಯರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಳವಳಿಸಬೇಡಿ ಧನುಸ್ಸನ್ನು ತನ್ನಿ. ಹಿರಿದಾದ ಬಲವನ್ನು ಕರೆಯಿರಿ. ಹುಲುಮಾನವರ ಪರಾಕ್ರಮ ಇಷ್ಟಿದೆಯೆ ? ಗಂಧರ್ವರ ಸಾಮಥ್ರ್ಯವೇನಾದರೂ ಭೂಮಿಯಲ್ಲಿ ಪ್ರಕಟವಾದರೆ, ರಕ್ತದ ಹೊಳೆಯೇ ಹರಿದೀತು. ಶಾಕಿನಿ ಡಾಕಿನಿಯರನ್ನು ರಕ್ತಪಾನ ಮಾಡಲು ಬರಹೇಳಿರಿ.’ ( ಎಂದು ಚಿತ್ರಸೇನನು ಹೇಳಿದನು.)
ಮೂಲ ...{Loading}...
ಕಳವಳಿಸದಿರಿ ಧನುವ ತಾ ಹೆ
ಬ್ಬಲವ ಕರೆ ಕರೆ ಹುಲು ಮನುಷ್ಯರ
ಬಲಹು ಗಡ ಬಯಲಾಯ್ತು ಗಡ ಗಂಧರ್ವರಾಟೋಪ
ನೆಲನೊಳೊಕ್ಕರೆ ಶೋಣಿತಕೆ ರಾ
ಟಳವ ಹಿಡಿ ಬರಹೇಳು ಶಾಕಿನಿ
ಕುಲವ ಡಾಕಿನಿಯರನು ನೆತ್ತರುಗುಡುಹಿ ಕೈನೆಯರ ॥7॥
೦೦೮ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ದಿವಿಜರ
ಸೇನೆಯಲ್ಲಾ ಛತ್ರ ಚಮರ ವಿ
ತಾನದಲಿ ನಭವಿಲ್ಲ ನೆಗಹಿದ ಸಬಳ ಶಲ್ಲೆಹಕೆ
ಮೈನುಸುಳ ಕಾಣೆನು ಸಮೀರನ
ಭಾನುಕಿರಣದ ಸುಳಿವನೀಶ್ವರ
ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ಏನು ಹೇಳುವುದು ? ದೇವಲೋಕದ ಸೇನೆ ಅಲ್ಲವೆ ? ಛತ್ರ ಚಾಮರಗಳಿಂದ ಗಗನವೇ ಕಾಣದಾಯಿತು. ಖಡ್ಗ ಶರಾವಳಿಗಳನ್ನು ಎತ್ತಿದಾಗ ವಾಯುವಿಗಾಗಲೀ, ಸೂರ್ಯ ಕಿರಣಕ್ಕಾಗಲೀ ಸುಳಿಯಲು ಸ್ಥಳವಿಲ್ಲದಾಯಿತು. ಇದನ್ನು ಪರಶಿವನೆ ಬಲ್ಲನು. ಶಿವಶಿವಾ… ನಿಮಿಷದಲ್ಲಿ ಸೇನೆ ಸಿದ್ಧವಾಯಿತು.
ಮೂಲ ...{Loading}...
ಏನ ಹೇಳುವೆನರಸ ದಿವಿಜರ
ಸೇನೆಯಲ್ಲಾ ಛತ್ರ ಚಮರ ವಿ
ತಾನದಲಿ ನಭವಿಲ್ಲ ನೆಗಹಿದ ಸಬಳ ಶಲ್ಲೆಹಕೆ
ಮೈನುಸುಳ ಕಾಣೆನು ಸಮೀರನ
ಭಾನುಕಿರಣದ ಸುಳಿವನೀಶ್ವರ
ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ ॥8॥
೦೦೯ ತಿನ್ನಡಗ ಕೊಯ್ನೆಣನ ...{Loading}...
ತಿನ್ನಡಗ ಕೊಯ್ನೆಣನ ಮನುಜರ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರುದ್ಯಾನ ವನವನು ಕೆಡಿಸಿ ಕಳೆದಿರಲ
ಮುನ್ನ ಮುರಿದವರಾರೆನುತ ವಿ
ತ್ಪನ್ನರನು ತೊಲಗಿಸುತ ಸುರಪನ
ಮನ್ನಣೆಯ ಗಂಧರ್ವಬಲ ಬೆರಸಿದುದು ಪರಬಲವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಮಾಂಸವನ್ನು ತಿನ್ನಿ, ನೆಣವನ್ನು ಕೊಯ್ಯಿರಿ. ಮನುಷ್ಯರ ಬೆನ್ನನ್ನು ಕತ್ತರಿಸಿ ಕರುಳನ್ನು ಎಳೆಯಿರಿ. ಎಲೆ ನಾಯಿಗಳಾ ಉದ್ಯಾನವನ್ನು ಕೆಡಿಸಿಬಿಟ್ಟಿರಲ್ಲಾ ? ಮೊದಲು ಯಾರು ಹಾಳೆಸಗಿದವರು ? ಎನ್ನುತ್ತಾ ಅವರನ್ನು ಬಡಿಯುತ್ತಾ ಇಂದ್ರನ ವಿಶೇಷ ಮನ್ನಣೆಯ ಗಂಧರ್ವ ಬಲ ಕೌರವ ಸೇನೆಯೊಡನೆ ಪರಾಕ್ರಮವನ್ನು ತೋರಿತು.
ಪದಾರ್ಥ (ಕ.ಗ.ಪ)
ವಿತ್ಪನ್ನ - ಕಾರಣರಾದವರು
ಮೂಲ ...{Loading}...
ತಿನ್ನಡಗ ಕೊಯ್ನೆಣನ ಮನುಜರ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರುದ್ಯಾನ ವನವನು ಕೆಡಿಸಿ ಕಳೆದಿರಲ
ಮುನ್ನ ಮುರಿದವರಾರೆನುತ ವಿ
ತ್ಪನ್ನರನು ತೊಲಗಿಸುತ ಸುರಪನ
ಮನ್ನಣೆಯ ಗಂಧರ್ವಬಲ ಬೆರಸಿದುದು ಪರಬಲವ ॥9॥
೦೧೦ ಹೊಯ್ದರೊಳಬಿದ್ದವರ ಮುನ್ದಲೆ ...{Loading}...
ಹೊಯ್ದರೊಳಬಿದ್ದವರ ಮುಂದಲೆ
ವಾಯ್ದು ತಿವಿದರು ಮುರಿದ ಮೂಳೆಯ
ಹೊಯ್ದ ಕರುಳಿನ ಮಿದುಳ ಜೋರಿನ ಬಸಿವ ಶೋಣಿತದ
ಕಯ್ದುಗಳ ಖಣಿ ಖಟಿಲ ಹೊಯ್ಲಿನ
ಬಾಯ್ದಣಿಯೆ ಬೈಗುಳಿನಲುಭಯದ
ಕಯ್ದುಗಾರರು ನೀಗಿದರು ನಿಜಪತಿಯ ಹಣ ರುಣವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಗೆ ಬಿದ್ದವರನ್ನು ಹೊಡೆದರು. ಮುಂದಲೆಯನ್ನು ಎಳೆದು ತಿವಿದರು. ಮೂಳೆ ಮುರಿದು, ಕರುಳು ಕತ್ತರಿಸಿ ರಕ್ತ ಹರಿಯುತ್ತಿತ್ತು. ಆಯುಧಗಳು ಖಣಿ ಖಟಿಲೆಂದು ಸದ್ದು ಮಾಡುತ್ತಿರಲು ಎರಡೂ ಕಡೆಯ ಭಟರು ಪರಸ್ಪರ ಬಾಯಿ ತಣಿಯುವಷ್ಟು ಬೈದುಕೊಳ್ಳುತ್ತಾ, ಒಡೆಯನ ಸಂಬಳದ ಋಣವನ್ನು ತೀರಿಸಿದರು.
ಮೂಲ ...{Loading}...
ಹೊಯ್ದರೊಳಬಿದ್ದವರ ಮುಂದಲೆ
ವಾಯ್ದು ತಿವಿದರು ಮುರಿದ ಮೂಳೆಯ
ಹೊಯ್ದ ಕರುಳಿನ ಮಿದುಳ ಜೋರಿನ ಬಸಿವ ಶೋಣಿತದ
ಕಯ್ದುಗಳ ಖಣಿ ಖಟಿಲ ಹೊಯ್ಲಿನ
ಬಾಯ್ದಣಿಯೆ ಬೈಗುಳಿನಲುಭಯದ
ಕಯ್ದುಗಾರರು ನೀಗಿದರು ನಿಜಪತಿಯ ಹಣ ರುಣವ ॥10॥
೦೧೧ ಬಿಟ್ಟ ಸೂಟಿಯ ...{Loading}...
ಬಿಟ್ಟ ಸೂಟಿಯ ಕುದುರೆಗಾರರ
ನಿಟ್ಟೆಡೆಯಲೌಕಿದ ಮದೇಭದ
ಥಟ್ಟುಗಳನುಬ್ಬೆದ್ದು ಹರಿಸುವ ರಥದ ವಾಜಿಗಳ
ಬಿಟ್ಟ ನಾರಾಚದ ವಿಘಾತದೊ
ಳಿಟ್ಟ ಸೆಲ್ಲೆಹ ಸಬಳ ಬಿಟ್ಟೇ
ರಿಟ್ಟೆಗಳ ಮಳೆ ನಾದಿದವು ಕಾದಿದರು ಚೂಣಿಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯಲ್ಲಿ ಕುದುರೆ ಸವಾರರನ್ನು ಮದಗಜಗಳು ಮೆಟ್ಟಿದವು. ಅವುಗಳ ಮೇಲೆ ರಥ ಕುದುರೆಗಳು ಸಂಚರಿಸಿದವು. ಬಾಣಗಳನ್ನು, ಸಬಳ ಸಲ್ಲೆಹಗಳನ್ನು ಪ್ರಯೋಗಿಸಿ, ಶತ್ರುಗಳ ಮೇಲೆ ನಾಟುವಂತೆ ಉದ್ದವಾದ ಈಟಿಗಳ ಸುರಿಮಳೆಯನ್ನು ಕರೆದರು.
ಮೂಲ ...{Loading}...
ಬಿಟ್ಟ ಸೂಟಿಯ ಕುದುರೆಗಾರರ
ನಿಟ್ಟೆಡೆಯಲೌಕಿದ ಮದೇಭದ
ಥಟ್ಟುಗಳನುಬ್ಬೆದ್ದು ಹರಿಸುವ ರಥದ ವಾಜಿಗಳ
ಬಿಟ್ಟ ನಾರಾಚದ ವಿಘಾತದೊ
ಳಿಟ್ಟ ಸೆಲ್ಲೆಹ ಸಬಳ ಬಿಟ್ಟೇ
ರಿಟ್ಟೆಗಳ ಮಳೆ ನಾದಿದವು ಕಾದಿದರು ಚೂಣಿಯಲಿ ॥11॥
೦೧೨ ಮುರಿದ ಚೂಣಿಯ ...{Loading}...
ಮುರಿದ ಚೂಣಿಯ ಭಟರು ತಂದರು
ಬಿರಿಸಿನರೆನೆಲೆಗಿದು ನಿಹಾರದೊ
ಳಿರಿದು ನೆರೆ ಸೊಪ್ಪಾಗಿ ಸಾರಿತು ಸರಿದು ಹಿನ್ನೆಲೆಗೆ
ಸುರಿಯಲಂಬರುಣಾಂಬುಗಳ ನದಿ
ಹೊರಮುರಿಯೆ ದೊರೆಗಿಕ್ಕಿದರು ಬೊ
ಬ್ಬಿರಿದಿರಿವ ದನಿ ದಟ್ಟಿಸಿತು ನಿಸ್ಸಾಳಯದ ದನಿಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗೊಂಡವರನ್ನು ಭಟರು ಬೀಡಾರಕ್ಕೆ ಕರೆತಂದರು. ಅಬ್ಬರದಿಂದ ಯುದ್ಧ ಮಾಡಿ ಸೋತು ಸೊಪ್ಪಾಗಿ ಅವರು ಹಿಂದಿರುಗಿದರು. ಒಂದೇ ಸಮನಾಗಿ ಸುರಿಯುತ್ತಿದ್ದ ಬಾಣಗಳಿಂದಾಗಿ ನೆತ್ತರು ನದಿಯಾಗಿ ಹರಿಯಲು, ಅವರು ಒಡೆಯನಲ್ಲಿ ಮೊರೆಯಿಟ್ಟರು. ಇವರ ಆಕ್ರಂದನ ಭೇರಿಯ ನಿನಾದಕ್ಕಿಂತ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ನಿಹಾರ-ಅಬ್ಬರ, ಬೊಬ್ಬೆ,
ಅರೆನೆಲೆ-ಬೀಡಾರ
ಮೂಲ ...{Loading}...
ಮುರಿದ ಚೂಣಿಯ ಭಟರು ತಂದರು
ಬಿರಿಸಿನರೆನೆಲೆಗಿದು ನಿಹಾರದೊ
ಳಿರಿದು ನೆರೆ ಸೊಪ್ಪಾಗಿ ಸಾರಿತು ಸರಿದು ಹಿನ್ನೆಲೆಗೆ
ಸುರಿಯಲಂಬರುಣಾಂಬುಗಳ ನದಿ
ಹೊರಮುರಿಯೆ ದೊರೆಗಿಕ್ಕಿದರು ಬೊ
ಬ್ಬಿರಿದಿರಿವ ದನಿ ದಟ್ಟಿಸಿತು ನಿಸ್ಸಾಳಯದ ದನಿಯ ॥12॥
೦೧೩ ನೂಕಿದೊಡೆ ಕರ್ಣಾದಿ ...{Loading}...
ನೂಕಿದೊಡೆ ಕರ್ಣಾದಿ ದೊರೆಗಳ
ಡಾಕನಾನುವರಾರು ದಿವಿಜಾ
ನೀಕದಲಿ ದಕ್ಕಡರುಸುರು ದುವ್ವಾಳಿಸಿತು ನಭಕೆ
ತೋಕಿದವು ನಾರಾಚ ದೆಸೆ ದೆಸೆ
ಯೋಕರಿಸಿದವೊ ಸರಳನೆನೆ ಸ
ವ್ಯಾಕುಳರ ಹಿಂದಿಕ್ಕಿ ಹಿಂಡಿದವಸುವನತಿಬಲರ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣಾದಿಗಳು ಮುಂದೊತ್ತಿ ಬರಲು, ಅವರ ಪೌರುಷವನ್ನು ಎದುರಿಸುವವರಾರು ? ಸುರಸಮೂಹದಲ್ಲೂ ಸುಭಟರ ಉಸಿರು ಕಟ್ಟಿತು. ಬಾಣಗಳು ಗಗನಕ್ಕೆ ಹಾರಿದವು. ದಿಕ್ಕು ದಿಕ್ಕುಗಳಿಗೆ ಬಾಣಗಳು ನುಗ್ಗಿದವೋ ಎಂಬಂತೆ ಬೆದರಿದವರನ್ನು ಹಿಂದಿಕ್ಕಿ, ಸಾಹಸಿಗಳನ್ನು ಹಿಂಡಿದವು.
ಪದಾರ್ಥ (ಕ.ಗ.ಪ)
ಡಾಕು - ಆಕ್ರಮಣ
ದಕ್ಕಡ - ಶೂರ,ದಿಟ್ಟ
ತೋಕು - ಚೆಲ್ಲು
ಮೂಲ ...{Loading}...
ನೂಕಿದೊಡೆ ಕರ್ಣಾದಿ ದೊರೆಗಳ
ಡಾಕನಾನುವರಾರು ದಿವಿಜಾ
ನೀಕದಲಿ ದಕ್ಕಡರುಸುರು ದುವ್ವಾಳಿಸಿತು ನಭಕೆ
ತೋಕಿದವು ನಾರಾಚ ದೆಸೆ ದೆಸೆ
ಯೋಕರಿಸಿದವೊ ಸರಳನೆನೆ ಸ
ವ್ಯಾಕುಳರ ಹಿಂದಿಕ್ಕಿ ಹಿಂಡಿದವಸುವನತಿಬಲರ ॥13॥
೦೧೪ ಮುರಿದುದಾ ಗನ್ಧರ್ವಬಲ ...{Loading}...
ಮುರಿದುದಾ ಗಂಧರ್ವಬಲ ಹೊ
ಕ್ಕಿರಿದು ಕೌರವ ರಾಯ ದಳದಲಿ
ಕುರುಹಿನವರಪ್ಪಿದರು ಖಚರೀಜನದ ಕುಚಯುಗವ
ಉರುಬಿತರೆನೆಲೆ ಚಿತ್ರಸೇನನ
ಸೆರಗ ಹಿಡಿದುದು ಸಮರ ಹೊಯ್ ಹೊಯ್
ಕುರಿ ಮನದ ಕುನ್ನಿಗಳನೆನುತೇರಿದನು ಮಣಿರಥವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವಸೇನೆಯನ್ನು ಹೊಕ್ಕಿರಿದು ಅದನ್ನು ಗಂಧರ್ವಬಲ ಮುರಿಯಿತು. ಶೂರರೆಂದು ಪ್ರಸಿದ್ಧರಾದವರು ಗಂಧರ್ವ ಕನ್ಯೆಯರನ್ನು ಆಲಿಂಗಿಸಿದರು. ಸೇನೆಯ ಹಿನ್ನೆಲೆಯ ಅರೆಯಟ್ಟಿನವರು ಉಬ್ಬಿ ಚಿತ್ರಸೇನನ ಸೆರಗು ಹಿಡಿದು - ‘ಹೇಡಿಗಳಾದ ಕುನ್ನಿಗಳನ್ನು ಹೊಡೆಯೋಣ’ ಎಂದರು. ಚಿತ್ರಸೇನನು ಮಣಿರಥವನ್ನೇರಿದನು.
ಪದಾರ್ಥ (ಕ.ಗ.ಪ)
ಅರೆನೆಲೆ-ಬೀಡಾರ
ಮೂಲ ...{Loading}...
ಮುರಿದುದಾ ಗಂಧರ್ವಬಲ ಹೊ
ಕ್ಕಿರಿದು ಕೌರವ ರಾಯ ದಳದಲಿ
ಕುರುಹಿನವರಪ್ಪಿದರು ಖಚರೀಜನದ ಕುಚಯುಗವ
ಉರುಬಿತರೆನೆಲೆ ಚಿತ್ರಸೇನನ
ಸೆರಗ ಹಿಡಿದುದು ಸಮರ ಹೊಯ್ ಹೊಯ್
ಕುರಿ ಮನದ ಕುನ್ನಿಗಳನೆನುತೇರಿದನು ಮಣಿರಥವ ॥14॥
೦೧೫ ಧನುವ ಕೊಣ್ಡನು ...{Loading}...
ಧನುವ ಕೊಂಡನು ತನ್ನ ತೂಕದ
ವಿನುತ ಭಟರೊಗ್ಗಾಯ್ತು ವಾದ್ಯ
ಧ್ವನಿಯ ದಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ
ಮನುಜರಿವದಿರ ಮುರಿದು ಬಹ ಭಟ
ರನಿಮಿಷರು ಬಯಲಾಯ್ತ ಕಟಕಟ
ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನು ಧನುಸ್ಸನ್ನು ಹಿಡಿದುಕೊಂಡು, ತನ್ನಷ್ಟೇ ಶೂರರಾದ ವೀರಭಟರೊಂದಿಗೆ ಬಂದನು. ಮೊಳಗಿದ ವಾದ್ಯ ಧ್ವನಿ ಬ್ರಹ್ಮಾಂಡವನ್ನೇ ಭೇದಿಸಿತು. ‘ಮನುಷ್ಯರನ್ನು ಗೆಲ್ಲಬೇಕಾದ ದೇವಸೇನೆ ನಾಶವಾಗುತ್ತಿದೆ. ಅಕಟಾ ಬಯಲಾಯಿತು. ದೇವತೆಗಳ ಭಾಗ್ಯ ಅಳಿದು ಹೋಯಿತೇ? ಶಿವಶಿವಾ’ ಎಂದು ಚಿತ್ರಸೇನನು ಹೇಳಿಕೊಂಡನು.
ಮೂಲ ...{Loading}...
ಧನುವ ಕೊಂಡನು ತನ್ನ ತೂಕದ
ವಿನುತ ಭಟರೊಗ್ಗಾಯ್ತು ವಾದ್ಯ
ಧ್ವನಿಯ ದಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ
ಮನುಜರಿವದಿರ ಮುರಿದು ಬಹ ಭಟ
ರನಿಮಿಷರು ಬಯಲಾಯ್ತ ಕಟಕಟ
ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ ॥15॥
೦೧೬ ನೂಕಿದನು ಗನ್ಧರ್ವ ...{Loading}...
ನೂಕಿದನು ಗಂಧರ್ವ ಸೇನೆಯೊ
ಳಾಕೆವಾಳರ ಮುಂದೆ ತಾನವಿ
ವೇಕಿಯೋ ದೊರೆತನದಲಿದ್ದನು ಸಕಲದಳ ಸಹಿತ
ಸೋಕಬಹುದೇ ಕರ್ಣ ಕೆಲಬಲ
ದಾಕೆವಾಳರ ಕೊಂಬನೇ ನೆರೆ
ತೋಕಿದನು ಗಂಧರ್ವಜಲಧಿಯನೊಂದು ನಿಮಿಷದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನು ವಿರೋಧಿಗಳ ಸೇನೆಯ ಮುಂದೆ ತನ್ನ ಸೇನೆಯ ಶೂರರನ್ನು ಕಳಿಸಿದನು. ತಾನು ಅವಿವೇಕಿಯಂತೆ ಹಿಂದೆ ಇದ್ದನು. ಅಂತಹ ಸಾಮಾನ್ಯರಾದ ವೀರರನ್ನು ಕರ್ಣನು ಗಣಿಸುತ್ತಾನೆಯೆ? ಒಂದೇ ನಿಮಿಷದಲ್ಲಿ ಗಂಧರ್ವ ಸೇನಾ ಸಾಗರವನ್ನು ಬಾಣಗಳಿಂದ ಕಲಕಿದನು.
ಪದಾರ್ಥ (ಕ.ಗ.ಪ)
ತೋಕು - ಕಲಕು
ಮೂಲ ...{Loading}...
ನೂಕಿದನು ಗಂಧರ್ವ ಸೇನೆಯೊ
ಳಾಕೆವಾಳರ ಮುಂದೆ ತಾನವಿ
ವೇಕಿಯೋ ದೊರೆತನದಲಿದ್ದನು ಸಕಲದಳ ಸಹಿತ
ಸೋಕಬಹುದೇ ಕರ್ಣ ಕೆಲಬಲ
ದಾಕೆವಾಳರ ಕೊಂಬನೇ ನೆರೆ
ತೋಕಿದನು ಗಂಧರ್ವಜಲಧಿಯನೊಂದು ನಿಮಿಷದಲಿ ॥16॥
೦೧೭ ಗಾಯವಡೆದರು ಕೆಲರು ...{Loading}...
ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆ ದೆಸೆಗೆ
ಆಯುಧದ ಮೆದೆಯೊಟ್ಟಿತಾ ಕ
ರ್ಣಾಯತಾಸ್ತ್ರನ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆ ಹೊಕ್ಕನು ಮಹಾಹವವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನನ್ನು ಕೆಣಕಿ ಕೆಲವರು ಗಾಯಗೊಂಡರು. ಕೆಲವರು ನೆಲಕ್ಕೆ ಒರಗಿದರು. ಪ್ರಬಲವಾದ ಶರ ಪ್ರಯೋಗದಿಂದ ಭಟರು ದಿಕ್ಕು ದಿಕ್ಕಿಗೆ ಬಿದ್ದರು. ಆಯುಧಗಳು ರಾಶಿಬಿದ್ದವು. ಗಂಧರ್ವಸೇನೆ ಮತ್ತೆ ಬಸವಳಿಯಲು, ಚಿತ್ರಸೇನನು ಮಹಾಯುದ್ಧಕ್ಕೆ ಮುಂದಾದನು.
ಪದಾರ್ಥ (ಕ.ಗ.ಪ)
ಪೂರಾಯ-ಪ್ರಬಲ, ಪೂರ್ಣ, ಪೂರ್ತಿ
ಮೂಲ ...{Loading}...
ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆ ದೆಸೆಗೆ
ಆಯುಧದ ಮೆದೆಯೊಟ್ಟಿತಾ ಕ
ರ್ಣಾಯತಾಸ್ತ್ರನ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆ ಹೊಕ್ಕನು ಮಹಾಹವವ ॥17॥
೦೧೮ ತೊಲಗು ಮತ್ರ್ಯರಿಗೀಸು ...{Loading}...
ತೊಲಗು ಮತ್ರ್ಯರಿಗೀಸು ದರ್ಪದ
ಕಲಿತನವೆ ಫಡ ನಿಮಿಷ ಸೈರಿಸು
ಹುಲು ಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ
ಅಳುಕುವುದೆ ಖಚರೇಂದ್ರ ಜಲಧರ
ನೆಲವೊ ತೋರಾ ಚಾಪ ವಿದ್ಯಾ
ಕಲೆಯದೆನ್ನೊಡನೆನುತ ಬೊಬ್ಬಿರಿದೆಚ್ಚನಿನಸುತನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮನುಷ್ಯರಿಗೆ ಇಷ್ಟೊಂದು ದರ್ಪವೆ? ಇಷ್ಟೊಂದು ಪೌರುಷವೆ? ಒಂದು ಕ್ಷಣ ಸೈರಿಸು. ಹುಲುಭಟರನ್ನು ಈ ವಿಕ್ರಮದ ಬೆಂಕಿಯಲ್ಲಿ ಹುರಿದು ತೊಲಗಿಸುತ್ತೇನೆ. ಅಳುಕುತ್ತೇನೆಯೇ? ಎಲಾ, ನಿನ್ನ ಧನುರ್ವಿದ್ಯೆಯನ್ನು ತೋರು’ ಎಂದು ಚಿತ್ರಸೇನನು ಬೊಬ್ಬಿರಿದು ಕರ್ಣನ ಮೇಲೆ ಶರಪ್ರಯೋಗ ಮಾಡಿದನು.
ಮೂಲ ...{Loading}...
ತೊಲಗು ಮತ್ರ್ಯರಿಗೀಸು ದರ್ಪದ
ಕಲಿತನವೆ ಫಡ ನಿಮಿಷ ಸೈರಿಸು
ಹುಲು ಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ
ಅಳುಕುವುದೆ ಖಚರೇಂದ್ರ ಜಲಧರ
ನೆಲವೊ ತೋರಾ ಚಾಪ ವಿದ್ಯಾ
ಕಲೆಯದೆನ್ನೊಡನೆನುತ ಬೊಬ್ಬಿರಿದೆಚ್ಚನಿನಸುತನ ॥18॥
೦೧೯ ಹೇಳಬಹುದೆ ಸುರೇನ್ದ್ರ ...{Loading}...
ಹೇಳಬಹುದೆ ಸುರೇಂದ್ರ ಭವನದ
ಸೂಳೆಯರ ಸೂಳಾಯತದ ವಾ
ಚಾಳತನವೇ ನೆರವೆ ನಟರಿಗೆ ಮುಖ್ಯ ವಿದ್ಯೆಯಲ
ಆಳುತನದಂಗದಲಿ ಬಹರೆ ಶ
ರಾಳಿಯಲಿ ಮಾತಾಡೆನುತ ಕೆಂ
ಗೋಲಿನಲಿ ಸಲೆ ಹೂಳಿದನು ಉದ್ಯಾನವನತಳದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಂಧರ್ವರಿಗೆ ದೇವಲೋಕದ ಅಪ್ಸರೆಯರ ಜೊತೆ ಮಾತಾಡುತ್ತಾ ನಟಿಸುವುದೇ ಮುಖ್ಯ ವಿದ್ಯೆಯಲ್ಲವೆ ? ಆ ಮಾತುಗಾರಿಕೆ ಹೋರಾಟದಲ್ಲಿ ನೆರವಿಗೆ ಬರುವುದೆ ? ಅಸ್ತ್ರಗಳಲ್ಲಿ ಮಾತಾಡು " ಎಂದು ಕರ್ಣನು ಬಾಣದಿಂದ ಉದ್ಯಾನವನ್ನೇ ಹೂಳಿದನು.
ಮೂಲ ...{Loading}...
ಹೇಳಬಹುದೆ ಸುರೇಂದ್ರ ಭವನದ
ಸೂಳೆಯರ ಸೂಳಾಯತದ ವಾ
ಚಾಳತನವೇ ನೆರವೆ ನಟರಿಗೆ ಮುಖ್ಯ ವಿದ್ಯೆಯಲ
ಆಳುತನದಂಗದಲಿ ಬಹರೆ ಶ
ರಾಳಿಯಲಿ ಮಾತಾಡೆನುತ ಕೆಂ
ಗೋಲಿನಲಿ ಸಲೆ ಹೂಳಿದನು ಉದ್ಯಾನವನತಳದ ॥19॥
೦೨೦ ಪೂತು ಮಝ ...{Loading}...
ಪೂತು ಮಝ ಮತ್ರ್ಯರಲಿ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ತಾ
ನೀತ ಕರ್ಣನೆ ಕೌರವೇಂದ್ರಗೆ ಬೇಹ ಭಟನಿವನೆ
ಆತುಕೊಳ್ಳಾದೊಡೆಯೆನುತ ದಿ
ಗ್ವ್ರಾತವಂಬಿನಲಡಗೆ ರಿಪು ಶರ
ಜಾತವನು ಹರೆಗಡಿದು ಕರ್ಣನ ಧನುವ ಖಂಡಿಸಿದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
20.” ಪೂತುರೇ, ಮಾನವರಲ್ಲಿ ಇಷ್ಟಾದರೂ ಧನುರ್ವಿದ್ಯೆ ಇದೆಯಲ್ಲಾ ? ಕೌರವೇಂದ್ರನಿಗೆ ಅಚ್ಚುಮೆಚ್ಚಿನ ಭಟನಾದ ಕರ್ಣ ಇವನೇ. ಹಾಗಾದರೆ ಈ ಬಾಣಗಳನ್ನು ಸಹಿಸಿಕೊ" ಎಂದು ದಿಕ್ಕುಗಳನ್ನೇ ಶರಗಳಿಂದ ಮರೆಗೊಳಿಸಿ, ವೈರಿಬಾಣಗಳನ್ನು ಖಂಡಿಸಿ, ಕರ್ಣನ ಬಿಲ್ಲನ್ನು ತುಂಡು ಮಾಡಿದನು.
ಪದಾರ್ಥ (ಕ.ಗ.ಪ)
ಬೇಹ - ಆಪ್ತ, ನೆಚ್ಚಿನ
ಮೂಲ ...{Loading}...
ಪೂತು ಮಝ ಮತ್ರ್ಯರಲಿ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ತಾ
ನೀತ ಕರ್ಣನೆ ಕೌರವೇಂದ್ರಗೆ ಬೇಹ ಭಟನಿವನೆ
ಆತುಕೊಳ್ಳಾದೊಡೆಯೆನುತ ದಿ
ಗ್ವ್ರಾತವಂಬಿನಲಡಗೆ ರಿಪು ಶರ
ಜಾತವನು ಹರೆಗಡಿದು ಕರ್ಣನ ಧನುವ ಖಂಡಿಸಿದ ॥20॥
೦೨೧ ಇದು ಶರಾವಳಿಯಹುದು ...{Loading}...
ಇದು ಶರಾವಳಿಯಹುದು ಸರಿಗಮ
ಪದನಿಗಳ ಸರವಲ್ಲಲಾ ಸೇ
ರಿದ ಧನುರ್ವಿದ್ಯಾತಿಶಯ ಯೋಗ್ಯತೆ ವಿಶೇಷವಲ
ಇದೆ ಮನುಷ್ಯರ ಕಲುಹೆ ನೋಡೆನು
ತೊದರಿ ಹೊಸ ಚಾಪದಲಿ ಕಲಿ ಚಿ
ಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಬಾಣಗಳ ಸಂದೋಹ ಹೌದು ಸಂಗೀತದ ಸಪ್ತಸ್ವರವಲ್ಲ. ಕಲಿತ ಬಿಲ್ವಿದ್ಯೆ ವಿಶೇಷವಾಗಿಯೇ ಇದೆ. ಮಾನವರ ವಿಕ್ರಮವನ್ನು ನೋಡು” ಎಂದು ಗರ್ಜಿಸಿ, ಚಿನ್ನದ ರೇಖೆಗಳಿದ್ದ ಶರವನ್ನು ಕರ್ಣನು ಚಿಮ್ಮಿದನು.
ಪದಾರ್ಥ (ಕ.ಗ.ಪ)
ಚಾಮೀಕರ -ಚಿನ್ನ
ಸುರೇಖಾವಳಿ - ರೇಕುಗಳ ಗುಂಪು
ಶಿಲೀಮುಖ - ಬಾಣ
ಮೂಲ ...{Loading}...
ಇದು ಶರಾವಳಿಯಹುದು ಸರಿಗಮ
ಪದನಿಗಳ ಸರವಲ್ಲಲಾ ಸೇ
ರಿದ ಧನುರ್ವಿದ್ಯಾತಿಶಯ ಯೋಗ್ಯತೆ ವಿಶೇಷವಲ
ಇದೆ ಮನುಷ್ಯರ ಕಲುಹೆ ನೋಡೆನು
ತೊದರಿ ಹೊಸ ಚಾಪದಲಿ ಕಲಿ ಚಿ
ಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ ॥21॥
೦೨೨ ಕಡಿದು ಗನ್ಧರ್ವನ ...{Loading}...
ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಗೆಡಹಿದವು ಕಿಂಪುರುಷ ಗುಹ್ಯಕ ಯಕ್ಷ ರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಿಸಿ ತಲೆವರಿಗೆಯಲಿ ಕರ್ಣನ
ಬಿಡುಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಪ್ರಯೋಗಿಸಿದ ಅಸ್ತ್ರಗಳು ಚಿತ್ರಸೇನನ ಬಾಣಗಳನ್ನು ಕತ್ತರಿಸಿದವು. ಕಿಂಪುರುಷ, ಗುಹ್ಯಕ, ಯಕ್ಷರಾಕ್ಷಸರನ್ನು ಕರ್ಣನ ಶರ ಕೆಡವಿದವು. ಪುನಃ ಚೇತರಿಸಿಕೊಂಡ ಗಂಧರ್ವಸೇನೆ ಕರ್ಣನ ಬಾಣಗಳನ್ನು ಸೂಕ್ತ ರಕ್ಷಣೆಯೊಂದಿಗೆ ನಿವಾರಿಸಿಕೊಂಡು ಕಾನನದೊಳಗೆ ಮುನ್ನಡೆಯಿತು.
ಮೂಲ ...{Loading}...
ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಗೆಡಹಿದವು ಕಿಂಪುರುಷ ಗುಹ್ಯಕ ಯಕ್ಷ ರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಿಸಿ ತಲೆವರಿಗೆಯಲಿ ಕರ್ಣನ
ಬಿಡುಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ ॥22॥
೦೨೩ ಸನ್ಧಿಸಿತು ಪಡೆ ...{Loading}...
ಸಂಧಿಸಿತು ಪಡೆ ಚಿತ್ರಸೇನನ
ಹಿಂದೆ ನಿಲಿಸಿ ವಿರೋಧಿ ಶರ ಹತಿ
ಗಂದವಳಿಯದೆ ಮುತ್ತಿದುದು ಕಟ್ಟಳವಿಯಲಿ ರಥವ
ಮುಂದುಗೆಟ್ಟನು ಕರ್ಣನೆನೆ ಕೈ
ಗುಂದಿದರು ಸೌಬಲ ಸುಯೋಧನ
ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನನ್ನು ಹಿಂದೆ ನಿಲ್ಲಿಸಿ, ಸೇನಾಪಡೆ ಮುಂದೊತ್ತಿತು. ವೈರಿಗಳ ಬಾಣಪ್ರಯೋಗಕ್ಕೆ ಹೆದರದೆ ಮುಂದಕ್ಕೆ ನುಗ್ಗಿ ರಥದಲ್ಲಿದ್ದ ಕರ್ಣನನ್ನು ಆಕ್ರಮಿಸಿತು. ಕರ್ಣನು ಧೃತಿಗೆಟ್ಟನು. ಶಕುನಿ ದುರ್ಯೋಧನ ಸುತರು, ದುಶ್ಯಾಸನ ಮೊದಲಾದ ಎಲ್ಲರೂ ಕೈಸೋತರು.
ಮೂಲ ...{Loading}...
ಸಂಧಿಸಿತು ಪಡೆ ಚಿತ್ರಸೇನನ
ಹಿಂದೆ ನಿಲಿಸಿ ವಿರೋಧಿ ಶರ ಹತಿ
ಗಂದವಳಿಯದೆ ಮುತ್ತಿದುದು ಕಟ್ಟಳವಿಯಲಿ ರಥವ
ಮುಂದುಗೆಟ್ಟನು ಕರ್ಣನೆನೆ ಕೈ
ಗುಂದಿದರು ಸೌಬಲ ಸುಯೋಧನ
ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ ॥23॥
೦೨೪ ನೊರಜಿನೆರಕೆಯ ಗಾಳಿಯಲಿ ...{Loading}...
ನೊರಜಿನೆರಕೆಯ ಗಾಳಿಯಲಿ ಹೆ
ಮ್ಮರದ ಮೊದಲಳುಕುವುದೆ ಫಡ ಕಾ
ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದ
ಶರನಿಧಿಗೆ ವಡಬಾಗ್ನಿ ಮುನಿವವೊ
ಲುರುವಣಿಪ ಹೆಬ್ಬಲವನೊಂದೇ
ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನುಸಿಯ ರೆಕ್ಕೆಯಿಂದ ಉಂಟಾದ ಗಾಳಿಗೆ ಹೆಮ್ಮರದ ಬೇರು ಅಲುಗಾಡುತ್ತದೆಯೆ ? ಕಳವಳಿಸಬೇಡಿ ಎಂದು ಕರ್ಣನು ಕೌರವರಿಗೆ ಧೈರ್ಯ ಹೇಳಿದನು. ರಥದಲ್ಲಿದ್ದ ಕರ್ಣನು ಸಮುದ್ರಕ್ಕೆ ವಡಬಾನಿಲ ಮುನಿಯುವಂತೆ, ಮೇಲೇರಿ ಬರುವ ಸೇನೆಯನ್ನು ಒಂದೇ ಬಾಣದಿಂದ ಕತ್ತರಿಸಿದನು.
ಪದಾರ್ಥ (ಕ.ಗ.ಪ)
ನೊರಜು-ಸೊಳ್ಳೆ, ನುಡಿ, ಎರಕೆ-ರೆಕ್ಕೆ
ಮೂಲ ...{Loading}...
ನೊರಜಿನೆರಕೆಯ ಗಾಳಿಯಲಿ ಹೆ
ಮ್ಮರದ ಮೊದಲಳುಕುವುದೆ ಫಡ ಕಾ
ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದ
ಶರನಿಧಿಗೆ ವಡಬಾಗ್ನಿ ಮುನಿವವೊ
ಲುರುವಣಿಪ ಹೆಬ್ಬಲವನೊಂದೇ
ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ ॥24॥
೦೨೫ ಗೆದ್ದುದೇ ರಣವೆಲವೊ ...{Loading}...
ಗೆದ್ದುದೇ ರಣವೆಲವೊ ದಿವಿಜರ
ದೊದ್ದೆಯದ ಸೂಳೆಯರ ಚೌರಿಗೆ
ಬಿದ್ದಿನರ ವೀಳಯದ ಬದಗರು ಭಟರ ಮೋಡಿಯಲಿ
ಹೊದ್ದಿದೊಡೆ ಹುರುಳಹರೆ ಭಯರಸ
ಗದ್ದುಗೆಯ ಮಂಜಿಡಿಕೆ ಮನದವ
ರಿದ್ದು ಫಲವೇನೆನುತ ಕೈ ಮಾಡಿದನು ಕಲಿಕರ್ಣ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯದ್ಧವನ್ನು ಗೆದ್ದಿರೇ? ಸುರಸಮೂಹದ ವೇಶ್ಯೆಯರ ಆತಿಥ್ಯ ಸ್ವೀಕರಿಸುವವರಿಗೆ ವೀಳೆಯವನ್ನು ಕೊಡುವ ಅಲ್ಪರು ವೀರರವೇಷವನ್ನು ತೊಟ್ಟು ಬಂದರೆ ಏನು ಸಾರ್ಥಕ? ನಮ್ಮ ಆಘಾತವನ್ನು ತಡೆದುಕೊಳ್ಳಬಲ್ಲರೇ ? ಭಯದಿಂದ ಮಂಕಾಗಿರುವ ಬುದ್ಧಿಯ ಈ ವೀರರು ಇದ್ದು ಪ್ರಯೋಜನವೇನೆಂದು ಕರ್ಣನು ಕೈಮಾಡಿದನು.
ಪದಾರ್ಥ (ಕ.ಗ.ಪ)
ಮಂಜಿಡಿಕೆ-ಮಂಕು ಕವಿಯುವುದು. ಬದಗ-ಬದೆಗ, ಸೇವಕ, ದೊದ್ದೆ-ಗುಂಪು, ಬಿದ್ದಿನ-ಆತಿಥ್ಯ
ಮೂಲ ...{Loading}...
ಗೆದ್ದುದೇ ರಣವೆಲವೊ ದಿವಿಜರ
ದೊದ್ದೆಯದ ಸೂಳೆಯರ ಚೌರಿಗೆ
ಬಿದ್ದಿನರ ವೀಳಯದ ಬದಗರು ಭಟರ ಮೋಡಿಯಲಿ
ಹೊದ್ದಿದೊಡೆ ಹುರುಳಹರೆ ಭಯರಸ
ಗದ್ದುಗೆಯ ಮಂಜಿಡಿಕೆ ಮನದವ
ರಿದ್ದು ಫಲವೇನೆನುತ ಕೈ ಮಾಡಿದನು ಕಲಿಕರ್ಣ ॥25॥
೦೨೬ ನೊನ್ದುದಾತನ ಪೊರೆಯ ...{Loading}...
ನೊಂದುದಾತನ ಪೊರೆಯ ಸುಭಟರ
ಸಂದಣಿಗಳಿಕ್ಕಿಲಿಸಿ ಬಿದ್ದುದು
ಮುಂದೆ ಬಲು ಗಂಧರ್ವಬಲವಿನಸುತನ ಶರಹತಿಗೆ
ಒಂದು ನಿಮಿಷಕೆ ಮತ್ತೆ ಪಡಿಬಲ
ಬಂದುದಗಣಿತ ಯಕ್ಷರಾಕ್ಷಸ
ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಶರಹತಿಯಿಂದ ಸೇನೆಯ ಮುಂಭಾದಲ್ಲಿದ್ದ ವೀರಭಟರು ಹೊಡೆತದಿಂದ ನುಗ್ಗಾಗಿ ಬಿದ್ದರು. ಕೂಡಲೇ ಒಂದೇ ನಿಮಿಷದಲ್ಲಿ ಯಕ್ಷ ರಾಕ್ಷಸರ ಸಹಾಯಕ ಸೇನೆ ಮತ್ತೆ ದಾಳಿಮಾಡಿ ಕರ್ಣರಥನ ಮೂಕಿಯನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಪೊರೆಯ - ಹೊರಭಾಗದ
ಮುಂಕಣಿ - ಮುಂಭಾಗ, ಮೂಕಿ
ಮೂಲ ...{Loading}...
ನೊಂದುದಾತನ ಪೊರೆಯ ಸುಭಟರ
ಸಂದಣಿಗಳಿಕ್ಕಿಲಿಸಿ ಬಿದ್ದುದು
ಮುಂದೆ ಬಲು ಗಂಧರ್ವಬಲವಿನಸುತನ ಶರಹತಿಗೆ
ಒಂದು ನಿಮಿಷಕೆ ಮತ್ತೆ ಪಡಿಬಲ
ಬಂದುದಗಣಿತ ಯಕ್ಷರಾಕ್ಷಸ
ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ ॥26॥
೦೨೭ ಅರಸ ಕೇಳೀಚೆಯಲಿ ...{Loading}...
ಅರಸ ಕೇಳೀಚೆಯಲಿ ಕೌರವ
ರರಸ ಬಂದನು ಸರ್ವದಳ ಸಹಿ
ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ
ನರ ವೃಕೋದರ ನಕುಲ ಮೊದಲಾ
ದರು ಕುತೂಹಲವಿವರ ಸುತ್ತಣ
ಮೊರಡಿಗಳ ಮೇಲಿದ್ದು ನೋಡಿದರೀ ಮಹಾಹವವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಈ ಕಡೆಯಲ್ಲಿ ಕೌರವರಾಯನು ಸಕಲ ಸೇನೆಯೊಂದಿಗೆ ಬಂದನು. ಎರಡೂ ಕಡೆಯ ಸೇನಾರವಕ್ಕೆ ಭೂತಳವೇ ಬಿರಿಯಿತು. ಸುತ್ತಲಿರುವ ಬೆಟ್ಟಗಳ ಮೇಲೇರಿ ಅರ್ಜುನ ಭೀಮ ನಕುಲಾದಿಗಳು ಈ ಮಹಾಯುದ್ಧವನ್ನು ಕುತೂಹಲದಿಂದ ನೋಡಿದರು.
ಪದಾರ್ಥ (ಕ.ಗ.ಪ)
ಮೊರಡಿ-ಬೆಟ್ಟ, ಎತ್ತರ ಪ್ರದೇಶ
ಮೂಲ ...{Loading}...
ಅರಸ ಕೇಳೀಚೆಯಲಿ ಕೌರವ
ರರಸ ಬಂದನು ಸರ್ವದಳ ಸಹಿ
ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ
ನರ ವೃಕೋದರ ನಕುಲ ಮೊದಲಾ
ದರು ಕುತೂಹಲವಿವರ ಸುತ್ತಣ
ಮೊರಡಿಗಳ ಮೇಲಿದ್ದು ನೋಡಿದರೀ ಮಹಾಹವವ ॥27॥
೦೨೮ ತೆಗೆಸಿದನು ನೃಪನಿನಸುತನ ...{Loading}...
ತೆಗೆಸಿದನು ನೃಪನಿನಸುತನ ಮು
ತ್ತಿಗೆಯ ನೆರೆದೊಡ್ಡಿನಲಿ ಸೂಸುವ
ಹೊಗರಗಣೆಗಳ ಹೊಯ್ವಡಾಯುಧ ಕಡಿವ ಪರಶುಗಳ
ಬಿಗಿವ ಸಬಳದ ಲೋಟಿಸುವ ಲೌ
ಡಿಗಳ ಚಿಮ್ಮುವ ಸುರಗಿಗಳ ಕಾ
ಳಗದ ರೌದ್ರಾಟೋಪ ರಂಜಿಸಿತಮರರಾಲಿಗಳ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನನ್ನು ಸುತ್ತುವರಿದವರನ್ನು ಕೌರವನು ಓಡಿಸಿದನು. ಈ ಕಾಳಗದಲ್ಲಿ ಚಿಮ್ಮಿ ಬರುತ್ತಿರುವ ಬಾಣಗಳು, ಹೊಯ್ಯುವ ಅಡಾಯುಧ, ಕಡಿಯುತ್ತಿರುವ ಗಂಡುಗೊಡಲಿಗಳ, ಚಿಮ್ಮುವ ಸುರಗಿಗಳ, ಪ್ರಹರಿಸುವ ಸಬಳಗಳ, ಹೊಡೆದುರುಳಿಸುವ ಲೌಡಿಗಳ ರೌದ್ರಾಟೋಪ ದೇವತೆಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು.
ಪದಾರ್ಥ (ಕ.ಗ.ಪ)
ಲೌಡಿ -ದೊಣ್ಣೆಯಂತಹ ಕಬ್ಬಿಣದ ಆಯುಧ.
ಮೂಲ ...{Loading}...
ತೆಗೆಸಿದನು ನೃಪನಿನಸುತನ ಮು
ತ್ತಿಗೆಯ ನೆರೆದೊಡ್ಡಿನಲಿ ಸೂಸುವ
ಹೊಗರಗಣೆಗಳ ಹೊಯ್ವಡಾಯುಧ ಕಡಿವ ಪರಶುಗಳ
ಬಿಗಿವ ಸಬಳದ ಲೋಟಿಸುವ ಲೌ
ಡಿಗಳ ಚಿಮ್ಮುವ ಸುರಗಿಗಳ ಕಾ
ಳಗದ ರೌದ್ರಾಟೋಪ ರಂಜಿಸಿತಮರರಾಲಿಗಳ ॥28॥
೦೨೯ ನೂಕಿತಿದು ತೋಪಿನ ...{Loading}...
ನೂಕಿತಿದು ತೋಪಿನ ತುದಿಗೆ ಮಗು
ಳೌಕಿತದು ಪಾಳಯಕೆ ಮುರಿದುದಿ
ವೌಕಸರು ಜಾರಿದರು ಜೋಡಿಸಿ ಮತ್ತೆ ಕುರುಬಲವ
ತೋಕುವರು ಗಂಧರ್ವರುಭಯಾ
ನೀಕದೋಹರಿ ಸಾಹರಿಯ ಸು
ವ್ಯಾಕುಲರನೀಕ್ಷಿಸುತಲಿದ್ದರು ಪವನಜಾದಿಗಳು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆ ವನದ ತುದಿಗೆ ಗಂಧರ್ವರನ್ನು ಕೌರವರು ನೂಕಿದರೆ, ಮತ್ತೊಮ್ಮೆ ಗಂಧರ್ವರು ಕೌರವರನ್ನು ಪಾಳಯಕ್ಕೆ ಓಡಿಸುವರು. ಒಮ್ಮೆ ಗಂಧರ್ವರು ಓಡಿ ಹೋದರೂ ಮತ್ತೊಮ್ಮೆ ಅವರು ಕೌರವರನ್ನು ಸದೆ ಬಡಿಯುವರು. ಎರಡೂ ಬಲಗಳ ಉತ್ಸಾಹ ಹಾಗೂ ಆವೇಶಗಳನ್ನು ಭೀಮಾದಿಗಳು ನೋಡುತ್ತಾ ಇದ್ದರು.
ಮೂಲ ...{Loading}...
ನೂಕಿತಿದು ತೋಪಿನ ತುದಿಗೆ ಮಗು
ಳೌಕಿತದು ಪಾಳಯಕೆ ಮುರಿದುದಿ
ವೌಕಸರು ಜಾರಿದರು ಜೋಡಿಸಿ ಮತ್ತೆ ಕುರುಬಲವ
ತೋಕುವರು ಗಂಧರ್ವರುಭಯಾ
ನೀಕದೋಹರಿ ಸಾಹರಿಯ ಸು
ವ್ಯಾಕುಲರನೀಕ್ಷಿಸುತಲಿದ್ದರು ಪವನಜಾದಿಗಳು ॥29॥
೦೩೦ ಈಸು ಕೊಣ್ಡಾಡಿದರೆ ...{Loading}...
ಈಸು ಕೊಂಡಾಡಿದರೆ ಸುರರುಪ
ಹಾಸವಾಡುವರೆಮ್ಮನೆನುತ ಮ
ಹಾ ಸಗರ್ವರು ಚಿತ್ರಸೇನನ ಮನ್ನಣೆಯ ಭಟರು
ಪಾಶ ಚಕ್ರ ಮುಸುಂಡಿ ಪರಿಘ
ಪ್ರಾಸ ಪರಶು ಕೃಪಾಣ ಸಬಳ ಶ
ರಾಸನಾದಿಯ ಕೈದುಗಾರರು ಕದನಕನುವಾಯ್ತು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟು ಯುದ್ಧವನ್ನು ಮಾತ್ರ ಮಾಡಿದರೆ, ದೇವತೆಗಳು ನಮ್ಮನ್ನು ಅಪಹಾಸ್ಯ ಮಾಡುತ್ತಾರೆಂದು ಚಿತ್ರಸೇನನ ಕಡೆಯ ವೀರರು ಪಾಶ, ಚಕ್ರ, ಮುಸುಂಡಿ, ಪರಿಘ, ಪರಶು, ಕೃಪಾಣ, ಸಬಳ, ಬಿಲ್ಲುಗಳನ್ನು ಹಿಡಿದು ಹೋರಾಡಲಾರಂಭಿಸಿದರು.
ಮೂಲ ...{Loading}...
ಈಸು ಕೊಂಡಾಡಿದರೆ ಸುರರುಪ
ಹಾಸವಾಡುವರೆಮ್ಮನೆನುತ ಮ
ಹಾ ಸಗರ್ವರು ಚಿತ್ರಸೇನನ ಮನ್ನಣೆಯ ಭಟರು
ಪಾಶ ಚಕ್ರ ಮುಸುಂಡಿ ಪರಿಘ
ಪ್ರಾಸ ಪರಶು ಕೃಪಾಣ ಸಬಳ ಶ
ರಾಸನಾದಿಯ ಕೈದುಗಾರರು ಕದನಕನುವಾಯ್ತು ॥30॥
೦೩೧ ಜೋಡು ಮಾಡಿತು ...{Loading}...
ಜೋಡು ಮಾಡಿತು ಖಚರಬಲ ಕೈ
ಗೂಡಿ ಕವಿದುದು ಚಿತ್ರಸೇನನ
ಜೋಡಿಯಲಿ ಜಝ್ಝಾರರಿದ್ದರು ಮುಂದೆ ಮುಂಗುಡಿಯ
ಆಡಿದೊಡೆ ಹಾವಿಂಗೆ ಹದ್ದಿನ
ಕೂಡೆ ಮುರುಕವೆ ಫಡಯೆನುತ ಕೈ
ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವ ಸೇನೆ ಚಿತ್ರಸೇನನೊಂದಿಗೆ ಸೇರಿಕೊಂಡಿತು. ಸೇನೆಯ ಮುಂಭಾಗದಲ್ಲಿ ವೀರಪರಾಕ್ರಮಿಗಳಿದ್ದರು. ಆಟವಾಡುತ್ತಿರುವ ಹಾವು ಹದ್ದಿನ ಮೇಲೆ ದರ್ಪವನ್ನು ತೋರಿಸಲಾದೀತೆ? ಎನ್ನುತ್ತಾ ಗಂಧರ್ವ ಭಟರು ಕೂಡಲೇ ಎದುರು ನಿಂತರು.
ಪದಾರ್ಥ (ಕ.ಗ.ಪ)
ಜಝ್ಹಾರ -ಪರಾಕ್ರಮಿ
ಮೂಲ ...{Loading}...
ಜೋಡು ಮಾಡಿತು ಖಚರಬಲ ಕೈ
ಗೂಡಿ ಕವಿದುದು ಚಿತ್ರಸೇನನ
ಜೋಡಿಯಲಿ ಜಝ್ಝಾರರಿದ್ದರು ಮುಂದೆ ಮುಂಗುಡಿಯ
ಆಡಿದೊಡೆ ಹಾವಿಂಗೆ ಹದ್ದಿನ
ಕೂಡೆ ಮುರುಕವೆ ಫಡಯೆನುತ ಕೈ
ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ ॥31॥
೦೩೨ ಗಿಳಿಯ ಹಿಣ್ಡಿನ ...{Loading}...
ಗಿಳಿಯ ಹಿಂಡಿನ ಮೇಲೆ ಗಿಡಗನ
ಬಳಗ ಕವಿದಂದದಲಿ ಸೂಟಿಯ
ಲಳವಿಗೊಡ್ಡಿದ ಚಾತುರಂಗವ ಚಿನಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರ ರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವರು ಗಿಳಿವಿಂಡಿನ ಮೇಲೆ ಗಿಡಗಗಳು ದಾಳಿಮಾಡಿದಂತೆ ಗಂಧರ್ವರು ಕೌರವನ ಚಾತುರಂಗವನ್ನು ಮೆಟ್ಟಿ ‘ಎಲಾ ಸುಯೋಧನ, , ಗಂಧರ್ವರಾಯನಾದ ಚಿತ್ರಸೇನನ ಪಾದಗಳಿಗೆ ಶರಣಾಗು’, ‘ಎಲಾ ಕರ್ಣ ತೊಲಗು ‘ಎಂದು ಗರ್ಜಿಸಿ ಮೇಲೆ ಬಿದ್ದರು.
ಪದಾರ್ಥ (ಕ.ಗ.ಪ)
ಚಿನಕರಡಿ ಮಾಡು - ಸಣ್ಣಗೆ ಕತ್ತರಿಸು.
ಮೂಲ ...{Loading}...
ಗಿಳಿಯ ಹಿಂಡಿನ ಮೇಲೆ ಗಿಡಗನ
ಬಳಗ ಕವಿದಂದದಲಿ ಸೂಟಿಯ
ಲಳವಿಗೊಡ್ಡಿದ ಚಾತುರಂಗವ ಚಿನಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರ ರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ ॥32॥
೦೩೩ ಗರುವರೇ ನೀವೆಲವೊ ...{Loading}...
ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯ ನಟ್ಟವಿಗಳಿಗೆ ಪಾಡಹರೆ ತೊಡಕುವೊಡೆ
ಅರಸು ಪರಿಯಂತಾರು ನೀವೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರ ಚಯವನು ಕವಿಸಿದನು ಕರ್ಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ, ನೀವು ಪರಾಕ್ರಮಿಗಳೇ ? ಸುರಲೋಕದ ನರ್ತಕರಾದ ನೀವು ಕೌರವನ ಅರಮನೆಯ ನರ್ತಕರಿಗೆ ಸಮಾನರೆ ? ನಿಮ್ಮ ಅರಸನೂ ಸೇರಿದಂತೆ ನೀವು ನಮಗೆ ಸಮಾನರಲ್ಲ’ ಎಂದು ಕರ್ಣನು ಅಗ್ನಿ, ವರುಣ, ನಿರುತಿಯೇ ಮೊದಲಾದ ಮಂತ್ರಾಸ್ತ್ರಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನಟ್ಟವಿಗ-ನೃತ್ಯಪಟು, ನರ್ತಕ
ಮೂಲ ...{Loading}...
ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯ ನಟ್ಟವಿಗಳಿಗೆ ಪಾಡಹರೆ ತೊಡಕುವೊಡೆ
ಅರಸು ಪರಿಯಂತಾರು ನೀವೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರ ಚಯವನು ಕವಿಸಿದನು ಕರ್ಣ ॥33॥
೦೩೪ ನೈರುತಕ್ಕಾಗ್ನೇಯ ಯಾಮ್ಯಕ ...{Loading}...
ನೈರುತಕ್ಕಾಗ್ನೇಯ ಯಾಮ್ಯಕ
ವಾರುಣಕೆ ಸುರರೊಡೆಯರೆಮ್ಮಲಿ
ವೈರ ಬಂಧವಿದುಂಟೆ ಸಾಧನವಹರೆ ದಿವ್ಯಶರ
ಸೇರಿದರೆ ನಿನಗಾದರಿದಕೋ
ವಾರುಣ ಪ್ರತಿಕಾರ ಪಾವಕ
ನೈರುತಾದಿಗೆ ಕೊಳ್ಳೆನುತ ಗಂಧರ್ವಪತಿಯೆಚ್ಚ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರುತಿ, ಯಮ, ವರುಣಾದಿ ದೇವತೆಗಳು ನಮಗೆ ಮಿತ್ರರು. ಅವರ ದಿವ್ಯಶರಗಳು ನಮಗೆ ಸಾಧನ ಸಹಕಾರಿಗಳೇ ಆಗುತ್ತವೆ. ಇದೋ, ವರುಣಾಸ್ತ್ರ, ಆಗ್ನೇಯಾಸ್ತ್ರ, ನೈರುತ್ಯಾಸ್ತ್ರಗಳಿಗೆ ಪ್ರತಿಯಾದ ಶರಗಳನ್ನು ಸಹಿಸಿಕೋ ಎಂದು ಗಂಧರ್ವಪತಿಯಾದ ಚಿತ್ರಸೇನನು ಶರಗಳನ್ನು ಬಿಟ್ಟನು.
ಮೂಲ ...{Loading}...
ನೈರುತಕ್ಕಾಗ್ನೇಯ ಯಾಮ್ಯಕ
ವಾರುಣಕೆ ಸುರರೊಡೆಯರೆಮ್ಮಲಿ
ವೈರ ಬಂಧವಿದುಂಟೆ ಸಾಧನವಹರೆ ದಿವ್ಯಶರ
ಸೇರಿದರೆ ನಿನಗಾದರಿದಕೋ
ವಾರುಣ ಪ್ರತಿಕಾರ ಪಾವಕ
ನೈರುತಾದಿಗೆ ಕೊಳ್ಳೆನುತ ಗಂಧರ್ವಪತಿಯೆಚ್ಚ ॥34॥
೦೩೫ ಗಬ್ಬರಿಸಿದವು ದಿವ್ಯಶರ ...{Loading}...
ಗಬ್ಬರಿಸಿದವು ದಿವ್ಯಶರ ಚಯ
ಗರ್ಭವಪ್ರತಿಕಾರ ಶರ ಮಗು
ಳೆಬ್ಬಿಸಿದನಿನಸೂನು ಪರ್ವತ ತಿಮಿರ ಫಣಿಶರವ
ಪರ್ಬತಕೆ ವಜ್ರಾಸ್ತ್ರ ತಿಮಿರದ
ಹಬ್ಬುಗೆಗೆ ರವಿಬಾಣ ಹಾವುಗ
ಳೊಬ್ಬುಳಿಗೆ ಗರುಡಾಸ್ತ್ರವನು ಗಂಧರ್ವಪತಿಯೆಚ್ಚ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿವ್ಯಶರಗಳ ಸೃಷ್ಟಿ ಹಾಗೂ ಅವುಗಳ ಸಂಹಾರ ಉಂಟಾಯಿತು. ಕರ್ಣನು ಪರ್ವತಾಸ್ತ್ರ, ತಿಮಿರಾಸ್ತ್ರ, ನಾಗಾಸ್ತ್ರಗಳನ್ನು ಪ್ರಯೋಗಿಸಿದನು. ಅವುಗಳಿಗೆ ಪ್ರತಿಯಾಗಿ ಚಿತ್ರಸೇನನು ವಜ್ರಾಸ್ತ್ರ, ಸೂರ್ಯಾಸ್ತ್ರ, ಗರುಡಾಸ್ತ್ರಗಳನ್ನು ಕ್ರಮವಾಗಿ ಪ್ರಯೋಗಿಸಿದನು.
ಮೂಲ ...{Loading}...
ಗಬ್ಬರಿಸಿದವು ದಿವ್ಯಶರ ಚಯ
ಗರ್ಭವಪ್ರತಿಕಾರ ಶರ ಮಗು
ಳೆಬ್ಬಿಸಿದನಿನಸೂನು ಪರ್ವತ ತಿಮಿರ ಫಣಿಶರವ
ಪರ್ಬತಕೆ ವಜ್ರಾಸ್ತ್ರ ತಿಮಿರದ
ಹಬ್ಬುಗೆಗೆ ರವಿಬಾಣ ಹಾವುಗ
ಳೊಬ್ಬುಳಿಗೆ ಗರುಡಾಸ್ತ್ರವನು ಗಂಧರ್ವಪತಿಯೆಚ್ಚ ॥35॥
೦೩೬ ಸವೆದವಿನಸುತನಮ್ಬು ಖೇಚರ ...{Loading}...
ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಗೆ
ಡವರಿಸಿದವಡಿಗಡಿಗೆ ಕರ್ಣನ ರಥದ ವಾಜಿಗಳು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಬಾಣಾವಳಿಗಳು ಸವೆದವು. ಚಿತ್ರಸೇನನ ಶರ ಪ್ರಯೋಗಕ್ಕೆ ಅವನ ಕವಚ ಸೀಸಕಗಳು ಕವಚಗಳ ಮೇಲೆ , ಬಾಣಗಳು ಕವಚದಂತೆ ಚುಚ್ಚಿಕೊಂಡವು. ಎಡಬಲ ಭಾಗಗಳಿಂದ ಗಂಧರ್ವಸೇನೆ ಕವಿದವು. ಈ ಸೇನೆ ಪ್ರಯೋಗಿಸಿದ ಬಾಣ ವರ್ಷಕ್ಕೆ ಕರ್ಣನ ರಥಾಶ್ವಗಳು ಅತ್ತಿಂದಿತ್ತ ಓಡುತ್ತಿದ್ದವು.
ಪದಾರ್ಥ (ಕ.ಗ.ಪ)
ಡವರಿಸು - ಡಾವರಿಸು - ಅತ್ತಿತ್ತ ಚಲಿಸು.
ಮೂಲ ...{Loading}...
ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಗೆ
ಡವರಿಸಿದವಡಿಗಡಿಗೆ ಕರ್ಣನ ರಥದ ವಾಜಿಗಳು ॥36॥
೦೩೭ ಜೋಡು ಹರಿದುದು ...{Loading}...
ಜೋಡು ಹರಿದುದು ಸೀಸಕದ ದಡಿ
ಬೀಡು ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಭಸ
ಖೋಡಿ ಕೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲೈಸುತಿದ್ದುದು ಭಾನುನಂದನನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಕವಚ ಕತ್ತರಿಸಿ ಹೋಯಿತು. ಶಿರಸ್ತ್ರಾಣದ ದಿಂಡು ಒಡೆದು, ತಲೆಯ ಚಿಪ್ಪು ಬಿರಿಯಿತು. ಯುದ್ಧದ ಭೀಕರತೆಯ ವಾಸನೆ ಮನಸ್ಸಿಗೆ ತಟ್ಟಿತು. ಈ ಕೊರತೆ ಧೈರ್ಯವನ್ನು ಕುಗ್ಗಿಸಿತು. ಅಪಯಶಸ್ಸು ವ್ಯಾಪಿಸಿದಂತೆ ಅವನ ಮನಸ್ಸಿನಲ್ಲಿ ಹೆದರಿಕೆ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ಖೋಡಿ-ಹೆದರಿಕೆ. ಖೇಡತನ-ಹೆದರಿಕೆ.
ಪಾಠಾನ್ತರ (ಕ.ಗ.ಪ)
ವಿಕಳಿಸಿ - ವಿಟಾಳಿಸಿ
ಅರಣ್ಯಪರ್ವ, ಮೈ.ವಿ.ವಿ
ಮೂಲ ...{Loading}...
ಜೋಡು ಹರಿದುದು ಸೀಸಕದ ದಡಿ
ಬೀಡು ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಭಸ
ಖೋಡಿ ಕೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲೈಸುತಿದ್ದುದು ಭಾನುನಂದನನ ॥37॥
೦೩೮ ಮತ್ತೆ ಕೊಣ್ಡನು ...{Loading}...
ಮತ್ತೆ ಕೊಂಡನು ಬಿಲು ಸರಳ ನಭ
ಕೊತ್ತಿದನು ರಣ ಭಯವನಹಿತನ
ಕುತ್ತಿದನು ಕಂಗಳಲಿ ಕುಡಿದನು ಮನದಲರಿಭಟನ
ಕೆತ್ತಿದನು ಕೂರಲಗಿನಲಿ ಮುಳು
ಮುತ್ತ ಹೂತಂದದಲಿ ಹುದುಗಿದ
ನೆತ್ತರಿನ ನೆಣ ವಸೆಯಲೆಸೆದನು ರಣದೊಳಾ ಖಚರ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಮತ್ತೆ ಧನುಸ್ಸನ್ನು ಹಿಡಿದು ಬಾಣವನ್ನು ಬಿಟ್ಟನು. ಯುದ್ಧ ಭೀತಿಯನ್ನು ನಿವಾರಿಸಿಕೊಂಡು ಕಣ್ಣುಗಳಲ್ಲಿ ಅವರನ್ನು ಭಯಂಕರವಾಗಿ ನೋಡುತ್ತಾ ವೈರಿಗಳನ್ನು ಕತ್ತರಿಸಿದನು. ಚೂಪಾದ ಬಾಣಗಳಿಂದ ಧಾರೆಯಾಗಿ ಹರಿಯುತ್ತಿದ್ದ ರಕ್ತದಿಂದ ಚಿತ್ರಸೇನನು (ಕೆಂಪಾದ) ಹೂಬಿಟ್ಟ ಮುಳ್ಳು ಮುತ್ತುಗದ ಮರದಂತೆ ಕಾಣಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಮುಳುಮುತ್ತ-ಪಲಾಶ, ಮುತ್ತುಗ
ಹೂತ -ಹೂಬಿಟ್ಟ
ಮೂಲ ...{Loading}...
ಮತ್ತೆ ಕೊಂಡನು ಬಿಲು ಸರಳ ನಭ
ಕೊತ್ತಿದನು ರಣ ಭಯವನಹಿತನ
ಕುತ್ತಿದನು ಕಂಗಳಲಿ ಕುಡಿದನು ಮನದಲರಿಭಟನ
ಕೆತ್ತಿದನು ಕೂರಲಗಿನಲಿ ಮುಳು
ಮುತ್ತ ಹೂತಂದದಲಿ ಹುದುಗಿದ
ನೆತ್ತರಿನ ನೆಣ ವಸೆಯಲೆಸೆದನು ರಣದೊಳಾ ಖಚರ ॥38॥
೦೩೯ ನೊನ್ದಡುಬ್ಬಿತು ದರ್ಪಶಿಖಿ ...{Loading}...
ನೊಂದಡುಬ್ಬಿತು ದರ್ಪಶಿಖಿ ಖತಿ
ಗೊಂಡು ಮದದುಬ್ಬಿನಲಿ ಘಾತದ
ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ
ನೊಂದುದಿನಿಸಿಲ್ಲಕಟ ದೈತ್ಯರ
ದಂದುಗದಲಾವಿಂದು ಮತ್ರ್ಯರು
ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನಿಗೆ ನೊಂದಷ್ಟೂ ಸಿಟ್ಟು ಹೆಚ್ಚಿತು. ಮುಕ್ಕಾದ ಮಾನದಿಂದ ಅಭಿಮಾನ ಭಂಗಿತವಾದ ಚಿತ್ರಸೇನನ ಮನಸ್ಸಿನ ವ್ಯಥೆ ಪುಟವಿಟ್ಟ ಚೆಂಡಿನಂತೆ ಹೆಚ್ಚಾಯಿತು. ರಾಕ್ಷಸರೊಡನೆ ಯುದ್ಧ ಮಾಡಿದಾಗಲೂ ಇಷ್ಟು ನೋವನ್ನು ಅನುಭವಿಸಿರಲಿಲ್ಲ. ಈ ಹುಲುಮಾನವರು ನಮ್ಮ ಪರಾಕ್ರಮವನ್ನು ಮೀರಿಸಿದರೇ ಎನ್ನುತ್ತ ಚಿತ್ರಸೇನನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಕಂದುಕ - ಚೆಂಡು
ಮೂಲ ...{Loading}...
ನೊಂದಡುಬ್ಬಿತು ದರ್ಪಶಿಖಿ ಖತಿ
ಗೊಂಡು ಮದದುಬ್ಬಿನಲಿ ಘಾತದ
ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ
ನೊಂದುದಿನಿಸಿಲ್ಲಕಟ ದೈತ್ಯರ
ದಂದುಗದಲಾವಿಂದು ಮತ್ರ್ಯರು
ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ ॥39॥
೦೪೦ ಖತಿಯಲುಗಿದನು ದಿವ್ಯಬಾಣ ...{Loading}...
ಖತಿಯಲುಗಿದನು ದಿವ್ಯಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತುದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯಥಿಕರದಲಾಗ್ನೇಯ ಶರ ಚಿ
ಮ್ಮಿತು ಚಡಾಳಿಸಿ ಕೆಂಡ ಕೆದರಲು ಕರ್ಣ ಬೆರಗಾದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಟ್ಟಿನಿಂದ ಗಂಧರ್ವನು ದಿವ್ಯಶರಗಳನ್ನು ಬಿಟ್ಟು ರಥ, ಸೂತ, ಕುದುರೆ, ಬಿಲ್ಲು, ಪತಾಕೆ, ದಂಡ, ಛತ್ರಚಾಮರಾದಿಗಳೆಲ್ಲವನ್ನೂ ಬೆಂಕಿಯಿಂದ ಸುಟ್ಟನು. ಈ ಆಗ್ನೇಯಾಸ್ತ್ರದ ಕೆಂಡದ ಕೆನ್ನಾಲಗೆಯನ್ನು ಕಂಡು ಕರ್ಣನು ಬೆರಗಾದನು.
ಮೂಲ ...{Loading}...
ಖತಿಯಲುಗಿದನು ದಿವ್ಯಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತುದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯಥಿಕರದಲಾಗ್ನೇಯ ಶರ ಚಿ
ಮ್ಮಿತು ಚಡಾಳಿಸಿ ಕೆಂಡ ಕೆದರಲು ಕರ್ಣ ಬೆರಗಾದ ॥40॥
೦೪೧ ವಿರಥನಾದನು ಹಲಗೆ ...{Loading}...
ವಿರಥನಾದನು ಹಲಗೆ ಖಡ್ಗದ
ಲರಿಭಟನ ಸಮ್ಮುಖಕೆ ಚಿಮ್ಮಿದ
ರೆರಡನೊಂದಂಬಿನಲಿ ಕಡಿದನು ಜಡಿದನಿನಸುತನ
ತಿರುಗಿ ಹಾಯ್ದನು ಬಳಿಕ ಕರ್ಣನ
ಮುರಿವ ಕಂಡು ವಿಕರ್ಣ ತನ್ನಯ
ವರ ರಥವ ಚಾಚಿದನು ಬೋಳೈಸಿದನು ರವಿಸುತನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರxನಾದ ಕರ್ಣನು ಗುರಾಣಿ ಖಡ್ಗಗಳನ್ನು ಹಿಡಿದು ಚಿಮ್ಮಿ ಮುಂದಕ್ಕೆ ಬಂದನು. ಚಿತ್ರಸೇನನು ಅವುಗಳೆರಡನ್ನೂ ಒಂದೇ ಶರದಿಂದ ಕಡಿದು, ಕರ್ಣನನ್ನು ಬಡಿದನು. ಕರ್ಣನ ಸೋಲನ್ನು ಕಂಡು ವಿಕರ್ಣನು ತನ್ನ ರಥವನ್ನು ಮುಂದಕ್ಕೆ ತಂದು ಅವನನ್ನು ಸಂತೈಸಿದನು.
ಪದಾರ್ಥ (ಕ.ಗ.ಪ)
ಬೋಳೈಸು-ಸಂತೈಸು
ಹಲಗೆ - ಗುರಾಣಿ
ಮೂಲ ...{Loading}...
ವಿರಥನಾದನು ಹಲಗೆ ಖಡ್ಗದ
ಲರಿಭಟನ ಸಮ್ಮುಖಕೆ ಚಿಮ್ಮಿದ
ರೆರಡನೊಂದಂಬಿನಲಿ ಕಡಿದನು ಜಡಿದನಿನಸುತನ
ತಿರುಗಿ ಹಾಯ್ದನು ಬಳಿಕ ಕರ್ಣನ
ಮುರಿವ ಕಂಡು ವಿಕರ್ಣ ತನ್ನಯ
ವರ ರಥವ ಚಾಚಿದನು ಬೋಳೈಸಿದನು ರವಿಸುತನ ॥41॥
೦೪೨ ಪೈಸರಿಸಿತೋ ಕುರು ...{Loading}...
ಪೈಸರಿಸಿತೋ ಕುರು ಚತುರ್ಬಲ
ಗಾಸಿಯಾದನು ಕರ್ಣನಿದು ದೊರೆ
ಗೈಸಲೇ ದುಮ್ಮಾನವೆನುತಲ್ಲಲ್ಲಿ ಕುರುಸೇನೆ
ಓಸರಿಸಿತಡತರದ ಮುಖದಲಿ
ಸೂಸಿದರು ಸಮರಥರು ಸೋಲವ
ನಾ ಸುಯೋಧನ ನಗುತ ಕಂಡನು ನೋಡಿ ಕೆಲಬಲನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಚತುರಂಗಬಲ ನಾಶವಾಯಿತು. ಕರ್ಣನಿಗೆ ಆಘಾತವುಂಟಾಯಿತು. ಕೌರವರಾಯನಿಗೆ ದುಮ್ಮಾನ ಉಂಟಾಯಿತು ಎಂದು ಕುರುಸೇನೆ ಬದಿಗೆ ಸರಿಯಿತು. ಸಮರಥಿಗಳು ಅವನತ ಮುಖಿಗಳಾದರು. ಆಗ ಕೌರವನು ನಗುತ್ತಾ ಎಡಬಲಗಳನ್ನು ನೋಡಿದನು.
ಪದಾರ್ಥ (ಕ.ಗ.ಪ)
ಪೈಸರಿಸು -ನಾಶವಾಗು ಓಸರಿಸು-ಒಂದೆಡೆ ಸರಿ
ಮೂಲ ...{Loading}...
ಪೈಸರಿಸಿತೋ ಕುರು ಚತುರ್ಬಲ
ಗಾಸಿಯಾದನು ಕರ್ಣನಿದು ದೊರೆ
ಗೈಸಲೇ ದುಮ್ಮಾನವೆನುತಲ್ಲಲ್ಲಿ ಕುರುಸೇನೆ
ಓಸರಿಸಿತಡತರದ ಮುಖದಲಿ
ಸೂಸಿದರು ಸಮರಥರು ಸೋಲವ
ನಾ ಸುಯೋಧನ ನಗುತ ಕಂಡನು ನೋಡಿ ಕೆಲಬಲನ ॥42॥
೦೪೩ ಅವನಿಪನ ಮೊಗಸನ್ನೆಯಲಿ ...{Loading}...
ಅವನಿಪನ ಮೊಗಸನ್ನೆಯಲಿ ಸೂ
ಳವಿಸಿದವು ನಿಸ್ಸಾಳ ಕೋಟಿಗ
ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ
ತವತವಗೆ ಧುರ ತೋರಹತ್ತರು
ತವಕಿಸುತ ಹುರಿಯೇರಿದರು ಕೌ
ರವರು ಕರ್ಣನ ಹರಿಬದಾಹವವೆಮಗೆ ತಮಗೆನುತ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸನ್ನೆಯಿಂದಲೇ ವಾದ್ಯಗಳು ಮೊಳಗಿದವು. ಆ ವಾದ್ಯರವ ದಿಕ್ಕುಗಳನ್ನು ತಲುಪಿತು. ಕರ್ಣನ ಪಾಲಿನ ಯುದ್ಧವು ತಮತಮಗೆಂದು ಉತ್ಸಾಹದಿಂದ ವೀರಭಟರು ಕಾದಾಡಿದರು.
ಪದಾರ್ಥ (ಕ.ಗ.ಪ)
ಧುರ ತೋರಹತ್ತರು - ಯುದ್ಧವೀರರು
ಹುರಿಯೇರು - ಉತ್ಸಾಗೊಳ್ಳು
ಮೂಲ ...{Loading}...
ಅವನಿಪನ ಮೊಗಸನ್ನೆಯಲಿ ಸೂ
ಳವಿಸಿದವು ನಿಸ್ಸಾಳ ಕೋಟಿಗ
ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ
ತವತವಗೆ ಧುರ ತೋರಹತ್ತರು
ತವಕಿಸುತ ಹುರಿಯೇರಿದರು ಕೌ
ರವರು ಕರ್ಣನ ಹರಿಬದಾಹವವೆಮಗೆ ತಮಗೆನುತ ॥43॥
೦೪೪ ಮುರಿದ ದಳ ...{Loading}...
ಮುರಿದ ದಳ ಸಂವರಿಸಿ ಪಡಿಮುಖ
ಕುರುಬಿದುದು ದುರಿಯೋಧನಾನುಜ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದ ಸಹಸವ ತೋರೆನುತ ಬೆರಸಿದರು ಪರಬಲವ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲ್ಲಾಪಿಲ್ಲಿಯಾದ ಸೇನೆ ಮತ್ತೆ ಒಟ್ಟುಗೂಡಿ ಮುಂಭಾಗಕ್ಕೆ ನುಗ್ಗಿತು. ಕೌರವನ ಸಹೋದರರು ಚಿತ್ರಸೇನನೆಲ್ಲಿದ್ದಾನೆಂದು ತೋರಿಸು, ಯುದ್ಧದಲ್ಲಿ ಒಮ್ಮೆ ಜಯವಾಗುವುದು, ಮತ್ತೊಮ್ಮೆ ಸೋಲಾಗುವುದು. ಇದರಲ್ಲಿ ತಪ್ಪೇನು? ಕರ್ಣನನ್ನು ಸೋಲಿಸಿದ ಪರಾಕ್ರಮವನ್ನು ನಮ್ಮಲ್ಲಿ ತೋರು ಎನ್ನುತ್ತಾ ಶತ್ರುಸೇನೆಯ ಮೇಲೆ ಬಿದ್ದರು.
ಮೂಲ ...{Loading}...
ಮುರಿದ ದಳ ಸಂವರಿಸಿ ಪಡಿಮುಖ
ಕುರುಬಿದುದು ದುರಿಯೋಧನಾನುಜ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದ ಸಹಸವ ತೋರೆನುತ ಬೆರಸಿದರು ಪರಬಲವ ॥44॥
೦೪೫ ಅರಸನನುಜರೆ ನೀವು ...{Loading}...
ಅರಸನನುಜರೆ ನೀವು ಕರ್ಣನ
ಹರಿಬದವರೇ ಹರ ಹರೆಮಗಿ
ನ್ನರಿದಲೈ ನಿವಗೀಸು ಖತಿ ಜೋಂಪಿಸಿದುದಿನ್ನೇನು
ತರಹರವು ನಮಗಿಲ್ಲಲಾ ಪೂ
ತುರೆಯೆನುತ ಪಡಿತಳಿಸಿ ಗಂಧ
ರ್ವರ ಚಮೂಪರು ನೂಕಿದರು ತರುಬಿದರು ಪರಬಲವ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಕೌರವನ ಸಹೋದರರೇ ? ಕರ್ಣನ ಸಹಾಯಕ್ಕೆ ಬಂದವರೇ ? ಹರಹರಾ, ನಮಗೆ ಇನ್ನು ಶಕ್ತಿಯಿಲ್ಲ. ನಿಮಗೆ ಇಷ್ಟೊಂದು ಪೌರುಷವೆ ? ನಾವು ಹೆದರುವುದಿಲ್ಲ. ಭಲರೇ….’ ಎನ್ನುತ್ತ ಗಂಧರ್ವಸೇನಾಪತಿಗಳು ಶತ್ರುಸೇನೆಯನ್ನು ಎದುರಿಸಿದರು.
ಮೂಲ ...{Loading}...
ಅರಸನನುಜರೆ ನೀವು ಕರ್ಣನ
ಹರಿಬದವರೇ ಹರ ಹರೆಮಗಿ
ನ್ನರಿದಲೈ ನಿವಗೀಸು ಖತಿ ಜೋಂಪಿಸಿದುದಿನ್ನೇನು
ತರಹರವು ನಮಗಿಲ್ಲಲಾ ಪೂ
ತುರೆಯೆನುತ ಪಡಿತಳಿಸಿ ಗಂಧ
ರ್ವರ ಚಮೂಪರು ನೂಕಿದರು ತರುಬಿದರು ಪರಬಲವ ॥45॥
೦೪೬ ಎಚ್ಚರಿರಿದರು ಹೊಯ್ದರಿಟ್ಟರು ...{Loading}...
ಎಚ್ಚರಿರಿದರು ಹೊಯ್ದರಿಟ್ಟರು
ಚುಚ್ಚಿದರು ಸೀಳಿದರು ನೂಕಿದ
ರಿಚ್ಚಟರ ಸೇದಿದರು ದಡಿವಲೆ ಕಣ್ಣಿವಲೆಗಳಲಿ
ಕೊಚ್ಚಿದರು ನುಗ್ಗಿದರು ಕೊಯ್ದರು
ನುಚ್ಚುನುರಿ ಮಾಡಿದರು ಹರಿಬಕೆ
ಹೆಚ್ಚಿ ಹೊಗುವವನೀಶನನುಜರ ಮನ್ನಣೆಯ ಭಟರ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವರು ಆ ಸೈನಿಕರನ್ನು ಹೊಡೆದರು, ಇರಿದರು, ಬಡಿದರು, ಚುಚ್ಚಿದರು, ಸೀಳಿದರು, ನೂಕಿದರು, ಕೊಚ್ಚಿದರು, ನುಗ್ಗಿದರು, ಕೊಯ್ದರು, ನುಚ್ಚುನುರಿ ಮಾಡಿದರು. ದಡಿವಲೆ, ಕಣ್ಣಿವಲೆಗಳಲ್ಲಿ ಸೇರಿಸಿದ ಹಾಗೆ ಮಾಡಿ ಕೌರವಾನುಜರನ್ನು ಹಿಂಸಿಸಿದರು.
ಮೂಲ ...{Loading}...
ಎಚ್ಚರಿರಿದರು ಹೊಯ್ದರಿಟ್ಟರು
ಚುಚ್ಚಿದರು ಸೀಳಿದರು ನೂಕಿದ
ರಿಚ್ಚಟರ ಸೇದಿದರು ದಡಿವಲೆ ಕಣ್ಣಿವಲೆಗಳಲಿ
ಕೊಚ್ಚಿದರು ನುಗ್ಗಿದರು ಕೊಯ್ದರು
ನುಚ್ಚುನುರಿ ಮಾಡಿದರು ಹರಿಬಕೆ
ಹೆಚ್ಚಿ ಹೊಗುವವನೀಶನನುಜರ ಮನ್ನಣೆಯ ಭಟರ ॥46॥
೦೪೭ ಗಾಯವಡೆಯದರಿಲ್ಲ ಸಾಯದೆ ...{Loading}...
ಗಾಯವಡೆಯದರಿಲ್ಲ ಸಾಯದೆ
ನೋಯದವರಿಲ್ಲೆರಡು ಬಲದಲಿ
ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು
ರಾಯನನುಜರ ಧಟ್ಟಿದನು ದೀ
ರ್ಘಾಯುವನು ಹಿಡಿದನು ವಿಕರ್ಣನ
ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯವಾಗದೇ ಇದ್ದವರಿಲ್ಲ, ಸಾಯದೆ ನೋಯದವರಿಲ್ಲ. ಎರಡೂ ಕಡೆಗಳಲ್ಲಿ ಭಟರು ನಾಶವಾದರೆಂಬುದನ್ನು ಕೇಳಿ ಚಿತ್ರಸೇನನಿಗೆ ಕ್ರೋಧವುಂಟಾಯಿತು. ಅವನು ಕೌರವನ ಸಹೋದರರನ್ನು ಕಟ್ಟಿ, ದೀರ್ಘಾಯುವನ್ನು ಹಿಡಿದು, ವಿಕರ್ಣನನ್ನು ಬಡಿದು, ಚತುರಂಗ ಸೇನೆಯನ್ನು ಕೆದರಿದನು.
ಮೂಲ ...{Loading}...
ಗಾಯವಡೆಯದರಿಲ್ಲ ಸಾಯದೆ
ನೋಯದವರಿಲ್ಲೆರಡು ಬಲದಲಿ
ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು
ರಾಯನನುಜರ ಧಟ್ಟಿದನು ದೀ
ರ್ಘಾಯುವನು ಹಿಡಿದನು ವಿಕರ್ಣನ
ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ ॥47॥
೦೪೮ ಫಡಯೆನುತ ಕುರುರಾಯನಾತನ ...{Loading}...
ಫಡಯೆನುತ ಕುರುರಾಯನಾತನ
ಪಡಿಮುಖಕೆ ನೂಕಿದನು ಜೋಡಿಸಿ
ಜಡಿವ ನಿಸ್ಸಾಳಾಯತದ ಕಹಳೆಗಳ ಕಳಕಳದ
ಬಿಡುರಥದ ದಟ್ಟಣೆಯ ಧಾಳಿಯ
ಕಡುಗುದುರೆಗಳ ನೆತ್ತಿಯಂಕುಶ
ದೆಡೆಯ ಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಫಡ’, ಎಂದು ಕೌರವನು ಚಿತ್ರಸೇನನ ಮುಂಭಾಗಕ್ಕೆ ಬಂದನು. ನಿಸ್ಸಾಳ ಕಹಳೆಗಳ ಧ್ವನಿಯಲ್ಲಿ, ರಥಗಳ ದಟ್ಟಣೆಯಲ್ಲಿ, ಕುದುರೆಗಳ ದಳ, ನೆತ್ತಿಯಮೇಲೆ ಅಂಕುಶದಿಂದ ತಿವಿಯಲ್ಪಟ್ಟ ಆನೆಗಳ ಸಮೂಹದೊಂದಿಗೆ ಸೇನೆ ಮುನ್ನುಗ್ಗಿತು.
ಮೂಲ ...{Loading}...
ಫಡಯೆನುತ ಕುರುರಾಯನಾತನ
ಪಡಿಮುಖಕೆ ನೂಕಿದನು ಜೋಡಿಸಿ
ಜಡಿವ ನಿಸ್ಸಾಳಾಯತದ ಕಹಳೆಗಳ ಕಳಕಳದ
ಬಿಡುರಥದ ದಟ್ಟಣೆಯ ಧಾಳಿಯ
ಕಡುಗುದುರೆಗಳ ನೆತ್ತಿಯಂಕುಶ
ದೆಡೆಯ ಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ ॥48॥
೦೪೯ ನುಗ್ಗನಿವ ಕೈಕೊಮ್ಬನೇ ...{Loading}...
ನುಗ್ಗನಿವ ಕೈಕೊಂಬನೇ ರಣ
ದಗ್ಗಳರ ಮೂಳೆಯಲಿ ಕದನದ
ಹುಗ್ಗಿಗರ ಸಾಕಿದನು ಶಾಕಿನಿ ಡಾಕಿನೀ ಗಣವ
ಒಗ್ಗಿ ಕವಿವರನಿಂದ್ರ ಲೋಕದ
ಸುಗ್ಗಿಯಲಿ ಸೇರಿಸಿದನಾಹವ
ದುಗ್ಗಡವನೇನೆಂಬೆನೈ ಗಂಧರ್ವ ವಿಕ್ರಮವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಆಕ್ರಮಣವನ್ನು ಚಿತ್ರಸೇನನು ಲೆಕ್ಕಿಸುತ್ತಾನೆಯೇ? ರಣವಿಕ್ರಮಿಗಳ ಮೂಳೆಗಳಿಂದ ಶಾಕಿನಿ ಡಾಕಿನೀ ಜನರಿಗೆ ಔತಣವನ್ನು ಮಾಡಿದನು. ಮೇಲೆ ಬೀಳುವವರನ್ನು ಕೊಂದು ಸ್ವರ್ಗಕ್ಕೆ ಕಳುಹಿಸಿದನು. ಯುದ್ಧದ ಅತಿಶಯವನ್ನು , ಗಂಧರ್ವರ ಪರಾಕ್ರಮವನ್ನು ಏನೆಂದು ಹೇಳಲಿ.
ಪದಾರ್ಥ (ಕ.ಗ.ಪ)
ನುಗ್ಗು - ಆಕ್ರಮಣ
ಉಗ್ಗಡ - ಅತಿಶಯ
ಮೂಲ ...{Loading}...
ನುಗ್ಗನಿವ ಕೈಕೊಂಬನೇ ರಣ
ದಗ್ಗಳರ ಮೂಳೆಯಲಿ ಕದನದ
ಹುಗ್ಗಿಗರ ಸಾಕಿದನು ಶಾಕಿನಿ ಡಾಕಿನೀ ಗಣವ
ಒಗ್ಗಿ ಕವಿವರನಿಂದ್ರ ಲೋಕದ
ಸುಗ್ಗಿಯಲಿ ಸೇರಿಸಿದನಾಹವ
ದುಗ್ಗಡವನೇನೆಂಬೆನೈ ಗಂಧರ್ವ ವಿಕ್ರಮವ ॥49॥
೦೫೦ ಮೀಟೆನಿಪ ಗನ್ಧರ್ವರೊನ್ದೇ ...{Loading}...
ಮೀಟೆನಿಪ ಗಂಧರ್ವರೊಂದೇ
ಕೋಟಿ ಕವಿದುದು ಕುರುಬಲಕೆ ಪಡಿ
ಗೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ
ದಾಟಿತರಸನ ಧೈರ್ಯ ಕೈದುಗ
ಳಾಟ ನಿಂದುದು ಕರದ ಹೊಯ್ಲಿನ
ನೋಟಕರು ಗೊಳ್ಳೆಂದರಿತ್ತಲು ಪಾಂಡವರ ವನದಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಒಂದು ಕೋಟಿ ಸಂಖ್ಯೆಯ ಗಂಧರ್ವಸೇನೆ ಮುತ್ತಲು, ಕೌರವಸೇನೆಗೆ ಭೇದಿಸಲಸಾಧ್ಯವಾದ ಕೋಟೆಯಂತಾಯಿತು. ಕೌರವನು ಗಂಧರ್ವರ ಸೇನಾವ್ಯೂಹದೊಳಗೆ ಸಿಕ್ಕಿ ಬಿದ್ದನು. ಅವನ ಧೈರ್ಯ ಅಡಗಿ ಹೋರಾಟ ನಿಂತು ಹೋಯಿತು. ಇತ್ತ ಪಾಂಡವರ ಕಡೆಯಲ್ಲಿ ನೋಡುತ್ತಿದ್ದವರೆಲ್ಲಾ ಕೈತಟ್ಟಿ ಗೊಳ್ಳೆಂದು ನಕ್ಕರು.
ಪದಾರ್ಥ (ಕ.ಗ.ಪ)
ಮೀಟು - ಶ್ರೇಷ್ಠ
ಮೂಲ ...{Loading}...
ಮೀಟೆನಿಪ ಗಂಧರ್ವರೊಂದೇ
ಕೋಟಿ ಕವಿದುದು ಕುರುಬಲಕೆ ಪಡಿ
ಗೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ
ದಾಟಿತರಸನ ಧೈರ್ಯ ಕೈದುಗ
ಳಾಟ ನಿಂದುದು ಕರದ ಹೊಯ್ಲಿನ
ನೋಟಕರು ಗೊಳ್ಳೆಂದರಿತ್ತಲು ಪಾಂಡವರ ವನದಿ ॥50॥
೦೫೧ ಅರರೆ ದೊರೆ ...{Loading}...
ಅರರೆ ದೊರೆ ದೊರೆ ಡೊಂಬಿನಲಿ ಡಾ
ವರಿಸುವರ ಹೊಯ್ ಹೊಯ್ಯೆನುತ ಖೇ
ಚರರ ಕಂಬಿಗಳಾಡಿದವು ಸುತ್ತಲು ಸುಯೋಧನನ
ಅರಸರಂಜದಿರಂಜ ಬೇಡೆನು
ತುರವಣಿಸಿ ಕೌರವ ನರೇಂದ್ರನ
ಕರದ ಧನುವನು ಕಳೆದು ಕೊಂಡನು ಖಚರಪತಿ ನಗುತ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಯೋಧನನ ಸುತ್ತಮುತ್ತ ಇದ್ದ ಗಂಧರ್ವರು ‘ಅರಸ ಸಿಕ್ಕಿದ. ಗುಂಪುಕೂಡಿ ಕಾದಾಡಿದವರನ್ನು ಹೊಡೆ’ ಎಂದು ಹೇಳಿದರು. ಆಗ ಚಿತ್ರಸೇನನು ನಗುತ್ತಾ ‘ಅರಸರೆ, ಹೆದರಬೇಡಿ’ ಎಂದು ಕೌರವನ ಕೈಯಲ್ಲಿದ್ದ ಬಿಲ್ಲನ್ನು ಸೆಳೆದುಕೊಂಡನು.
ಮೂಲ ...{Loading}...
ಅರರೆ ದೊರೆ ದೊರೆ ಡೊಂಬಿನಲಿ ಡಾ
ವರಿಸುವರ ಹೊಯ್ ಹೊಯ್ಯೆನುತ ಖೇ
ಚರರ ಕಂಬಿಗಳಾಡಿದವು ಸುತ್ತಲು ಸುಯೋಧನನ
ಅರಸರಂಜದಿರಂಜ ಬೇಡೆನು
ತುರವಣಿಸಿ ಕೌರವ ನರೇಂದ್ರನ
ಕರದ ಧನುವನು ಕಳೆದು ಕೊಂಡನು ಖಚರಪತಿ ನಗುತ ॥51॥
೦೫೨ ಹಯದ ಪಡಿವಾಘೆಯಲಿ ...{Loading}...
ಹಯದ ಪಡಿವಾಘೆಯಲಿ ಬಾಹು
ದ್ವಯವ ಬಿಗಿದನು ತನ್ನ ರಥದಲಿ
ಜಯವಿಹೀನನ ತಂದು ಕುಳ್ಳಿರಿಸಿದನು ಕೌರವನ
ಭಯಭರಿತ ದುಶ್ಯಾಸನನ ದು
ರ್ಜಯನ ಚಿತ್ರಾಂಗದ ವಿಕರ್ಣನ
ನಯವಿದೂರರ ತಂದರಿಪ್ಪತ್ತೈದು ಸಹಭವರ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋತುಹೋದ ಕೌರವನ ಕೈಗಳನ್ನು ಕುದುರೆಯ ಲಗಾಮಿನಲ್ಲಿ ಕಟ್ಟಿ, ತನ್ನ ರಥದಲ್ಲಿ ಕುಳ್ಳಿರಿಸಿದನು. ಭೀತರಾದ ದುಶ್ಶಾಸನ, ದುರ್ಜಯ, ಚಿತ್ರಾಂಗದ, ವಿಕರ್ಣನೇ ಮೊದಲಾದ ಇಪ್ಪತ್ತೈದು ದುಷ್ಟ ಸೋದರರನ್ನು ಗಂಧರ್ವರು ಹಿಡಿದು ತಂದರು.
ಮೂಲ ...{Loading}...
ಹಯದ ಪಡಿವಾಘೆಯಲಿ ಬಾಹು
ದ್ವಯವ ಬಿಗಿದನು ತನ್ನ ರಥದಲಿ
ಜಯವಿಹೀನನ ತಂದು ಕುಳ್ಳಿರಿಸಿದನು ಕೌರವನ
ಭಯಭರಿತ ದುಶ್ಯಾಸನನ ದು
ರ್ಜಯನ ಚಿತ್ರಾಂಗದ ವಿಕರ್ಣನ
ನಯವಿದೂರರ ತಂದರಿಪ್ಪತ್ತೈದು ಸಹಭವರ ॥52॥
೦೫೩ ಇಳಿದು ಗಜವನು ...{Loading}...
ಇಳಿದು ಗಜವನು ಕೈದುಗಳ ನೆಲ
ಕಿಳುಹಿ ಜೋಧರು ವಾರುವದಿನಿಳೆ
ಗಿಳಿದು ರಾವ್ತರು ಹಾಯ್ಕಿದರು ದೂಹತ್ತಿ ಲೌಡಿಗಳ
ಬಿಲು ಸರಳ್ಗಳ ಬಿಸುಟು ರಥಿಕರು
ನೆಲಕೆ ಹಾಯ್ದರು ಕೈಯ ಕೈದುವ
ನಿಳುಹಿ ಪಯದಳ ಬೀಳುಗೊಂಡುದು ಖೇಚರೇಶ್ವರನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳಿಂದ ಯೋಧರು ಇಳಿದು ಆಯುಧಗಳನ್ನು ನೆಲದ ಮೇಲಿಟ್ಟರು. ರಾವುತರು ಕುದುರೆಗಳಿಂದ ಇಳಿದು ಖಡ್ಗಗಳನ್ನು ಬಿಸಾಡಿದರು. ರಥಿಕರು ಬಿಲ್ಲುಬಾಣಗಳನ್ನು ನೆಲಕ್ಕೆ ಇಳಿಸಿದರು. ಕೈಯಾಯುಧಗಳನ್ನು ಬಿಟ್ಟು, ಪದಾತಿದಳ ಹಿಂದಿರುಗಿತು.
ಪದಾರ್ಥ (ಕ.ಗ.ಪ)
ಲವುಡಿ-ಆಯುಧ ವಿಶೇಷ, ದೂಹತ್ತಿ-ಎರಡಲಗಿನ ಖಡ್ಗ
ಮೂಲ ...{Loading}...
ಇಳಿದು ಗಜವನು ಕೈದುಗಳ ನೆಲ
ಕಿಳುಹಿ ಜೋಧರು ವಾರುವದಿನಿಳೆ
ಗಿಳಿದು ರಾವ್ತರು ಹಾಯ್ಕಿದರು ದೂಹತ್ತಿ ಲೌಡಿಗಳ
ಬಿಲು ಸರಳ್ಗಳ ಬಿಸುಟು ರಥಿಕರು
ನೆಲಕೆ ಹಾಯ್ದರು ಕೈಯ ಕೈದುವ
ನಿಳುಹಿ ಪಯದಳ ಬೀಳುಗೊಂಡುದು ಖೇಚರೇಶ್ವರನ ॥53॥
೦೫೪ ಮುಟ್ಟದಿರಿ ಪರಿವಾರ ...{Loading}...
ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡ ದೆಸೆಗವನೀಶ ಕೇಳ್ ಎಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಮ್ಮ ದೊರೆಯನ್ನು ಸೆರೆಯಾಗಲು ಬಿಟ್ಟ ಪರಿವಾರದವರನ್ನು, ಶತ್ರು ಸೈನ್ಯವನ್ನು ಮುಟ್ಟಬೇಡಿ . ಅವರೆಲ್ಲ ಆಯುಧಗಳನ್ನು ಬಿಟ್ಟು ಹಿಂದಕ್ಕೆ ಹೋಗಲಿ. ಇದಕ್ಕೆ ದೇವೆಂದ್ರನಾಣೆ ಇದೆ” ಎಂದು ಸಾರಿದರು. ಇತ್ತ ಕಡೆ ಕೌರವನ ಸೇನೆಯ ಮಹಾವೀರರೆಲ್ಲರೂ ಕಂಗೆಟ್ಟರು. ಕರ್ಣಾದಿ ವೀರರು ಮುಖಕ್ಕೆ ಮುಸುಕು ಹಾಕಿ ಕಂಡ ಕಡೆಗೆ ಪಲಾಯನ ಮಾಡಿದರು.
ಮೂಲ ...{Loading}...
ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡ ದೆಸೆಗವನೀಶ ಕೇಳೆಂದ ॥54॥
೦೫೫ ಖಿನ್ನನಾದನು ಪಾರ್ಥನನಿಲಜ ...{Loading}...
ಖಿನ್ನನಾದನು ಪಾರ್ಥನನಿಲಜ
ನುನ್ನತೋತ್ಸವನಾದನತಿ ಸಂ
ಪನ್ನ ಸಮ್ಮುದರಾದರಾ ಮಾದ್ರೀಕುಮಾರಕರು
ಇನ್ನು ಪಾಂಡವ ರಾಜ್ಯಸಿರಿಯೆಮ
ಗಿನ್ನು ಲೇಸಹುದಕಟ ದೈವದ
ಗನ್ನಗತಕವೆಯೆನುತ ಹಿಗ್ಗಿತು ಮುನಿವಧೂನಿಕರ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನಿಗೆ ಬೇಸರವಾಯಿತು. ಭೀಮನಿಗೆ ತುಂಬಾ ಹರ್ಷವುಂಟಾಯಿತು. ನಕುಲಸಹದೇವರಿಗೆ ಅತಿಯಾದ ಆನಂದವಾಯಿತು. ಮುನಿ ವಧುಗಳೆಲ್ಲರೂ ‘ವಿಧಿಯ ಈ ಆಟದಿಂದ ಇನ್ನು ಪಾಂಡವರಿಗೆ ರಾಜ್ಯ ಲಭಿಸಿ ನಮಗೆ ಒಳಿತಾಗುತ್ತದೆ,’ ಎಂದು ಹಿಗ್ಗಿದರು.
ಮೂಲ ...{Loading}...
ಖಿನ್ನನಾದನು ಪಾರ್ಥನನಿಲಜ
ನುನ್ನತೋತ್ಸವನಾದನತಿ ಸಂ
ಪನ್ನ ಸಮ್ಮುದರಾದರಾ ಮಾದ್ರೀಕುಮಾರಕರು
ಇನ್ನು ಪಾಂಡವ ರಾಜ್ಯಸಿರಿಯೆಮ
ಗಿನ್ನು ಲೇಸಹುದಕಟ ದೈವದ
ಗನ್ನಗತಕವೆಯೆನುತ ಹಿಗ್ಗಿತು ಮುನಿವಧೂನಿಕರ ॥55॥
೦೫೬ ಭಾವನವರರ್ತಿಯಲಿ ಜಲ ...{Loading}...
ಭಾವನವರರ್ತಿಯಲಿ ಜಲ ಕೇ
ಳೀ ವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದಿರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿ ಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯಸಂಪದವ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಾವನವರು ವಿನೋದಕ್ಕಾಗಿ ಜಲಕ್ರೀಡೆಗೆ ಬಂದು ಗಂಧರ್ವರೊಂದಿಗೆ ಸೆಣಸಿದರಲ್ಲಾ " ಎಂದು ದ್ರೌಪದೀದೇವಿ ಮನಸ್ಸಿನ ಆಸ್ಥಾನದಲ್ಲಿ ಸಾಮ್ರಾಜ್ಯ ಸೌಖ್ಯದ ಸಂಪತ್ತನ್ನು ಕಲ್ಪಿಸಿಕೊಂಡು ನಸುನಕ್ಕಳು.
ಮೂಲ ...{Loading}...
ಭಾವನವರರ್ತಿಯಲಿ ಜಲ ಕೇ
ಳೀ ವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದಿರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿ ಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯಸಂಪದವ ॥56॥
೦೫೭ ಕೇಳಿದನು ಯಮಸೂನು ...{Loading}...
ಕೇಳಿದನು ಯಮಸೂನು ದುಗುಡವ
ತಾಳಿದನು ನಳ ನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿ ನಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲ ಚಿತ್ತನು ನೆನೆವುತಿದ್ದನು ವೀರ ನರಯಣನ ॥57॥|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿದ ಧರ್ಮರಾಯನು ದುಃಖಿಸಿದನು. “ನಳನಹುಷ ಭರತಾದಿ ಭೂಪತಿಗಳು ಜನಿಸಿದ ಚಂದ್ರವಂಶದ ಕೀರ್ತಿಗೆ ಭಂಗಬಂದಿತಲ್ಲಾ ! ನಮ್ಮ ಬದುಕಿಗೆ ಧಿಕ್ಕಾರವಿರಲಿ” ಎಂದು ಚಿಂತಿಸುತ್ತಾ ವೀರನಾರಾಯಣನನ್ನು ಸ್ಮರಿಸಿದನು.
ಮೂಲ ...{Loading}...
ಕೇಳಿದನು ಯಮಸೂನು ದುಗುಡವ
ತಾಳಿದನು ನಳ ನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿ ನಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲ ಚಿತ್ತನು ನೆನೆವುತಿದ್ದನು ವೀರ ನರಯಣನ ॥57॥|