೧೯

೦೦೦ ಸೂ ರಾಯದಳವನು ...{Loading}...

ಸೂ. ರಾಯದಳವನು ಮುರಿದು ಕೌರವ
ರಾಯನನುಜರು ಸಹಿತ ಗಗನಕೆ
ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸೂಲ ದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ ॥1॥

೦೦೨ ಜೀಯ ದುಗುಡವಿದೇಕೆ ...{Loading}...

ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ ॥2॥

೦೦೩ ನೇಮವಾಯಿತು ಸುಭಟರೊಳಗೆ ...{Loading}...

ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿ ಮ
ಹಾ ಮಹಿಮರನುವಾಯ್ತು ಗಜ ಹಯ ರಥ ನಿಕಾಯದಲಿ ॥3॥

೦೦೪ ನೂಕಿದರು ಮುಙ್ಗುಡಿಯವರು ...{Loading}...

ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಬಿದ್ದು ತಿವಿದರು ಬೆರಸಿ ಪರಬಲವ ॥4॥

೦೦೫ ಮತ್ತೆ ಮುರಿದುದು ...{Loading}...

ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ಕವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟವ್ರಜವ
ತೆತ್ತಿಸಿದ ಶರದೇರ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ ॥5॥

೦೦೬ ಹೊಯ್ಯಲಾದುದು ಚಿತ್ರಸೇನನ ...{Loading}...

ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆ ಗಾಯದ
ಮೈಯಬಿಸುಟಾಯಧದ ಬೆನ್ನಲಿ ಬಿಟ್ಟ ಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವದೆ ಜಾರುವುದು ಹಿತ ನಿಮಗೆ ॥6॥

೦೦೭ ಕಳವಳಿಸದಿರಿ ಧನುವ ...{Loading}...

ಕಳವಳಿಸದಿರಿ ಧನುವ ತಾ ಹೆ
ಬ್ಬಲವ ಕರೆ ಕರೆ ಹುಲು ಮನುಷ್ಯರ
ಬಲಹು ಗಡ ಬಯಲಾಯ್ತು ಗಡ ಗಂಧರ್ವರಾಟೋಪ
ನೆಲನೊಳೊಕ್ಕರೆ ಶೋಣಿತಕೆ ರಾ
ಟಳವ ಹಿಡಿ ಬರಹೇಳು ಶಾಕಿನಿ
ಕುಲವ ಡಾಕಿನಿಯರನು ನೆತ್ತರುಗುಡುಹಿ ಕೈನೆಯರ ॥7॥

೦೦೮ ಏನ ಹೇಳುವೆನರಸ ...{Loading}...

ಏನ ಹೇಳುವೆನರಸ ದಿವಿಜರ
ಸೇನೆಯಲ್ಲಾ ಛತ್ರ ಚಮರ ವಿ
ತಾನದಲಿ ನಭವಿಲ್ಲ ನೆಗಹಿದ ಸಬಳ ಶಲ್ಲೆಹಕೆ
ಮೈನುಸುಳ ಕಾಣೆನು ಸಮೀರನ
ಭಾನುಕಿರಣದ ಸುಳಿವನೀಶ್ವರ
ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ ॥8॥

೦೦೯ ತಿನ್ನಡಗ ಕೊಯ್ನೆಣನ ...{Loading}...

ತಿನ್ನಡಗ ಕೊಯ್ನೆಣನ ಮನುಜರ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರುದ್ಯಾನ ವನವನು ಕೆಡಿಸಿ ಕಳೆದಿರಲ
ಮುನ್ನ ಮುರಿದವರಾರೆನುತ ವಿ
ತ್ಪನ್ನರನು ತೊಲಗಿಸುತ ಸುರಪನ
ಮನ್ನಣೆಯ ಗಂಧರ್ವಬಲ ಬೆರಸಿದುದು ಪರಬಲವ ॥9॥

೦೧೦ ಹೊಯ್ದರೊಳಬಿದ್ದವರ ಮುನ್ದಲೆ ...{Loading}...

ಹೊಯ್ದರೊಳಬಿದ್ದವರ ಮುಂದಲೆ
ವಾಯ್ದು ತಿವಿದರು ಮುರಿದ ಮೂಳೆಯ
ಹೊಯ್ದ ಕರುಳಿನ ಮಿದುಳ ಜೋರಿನ ಬಸಿವ ಶೋಣಿತದ
ಕಯ್ದುಗಳ ಖಣಿ ಖಟಿಲ ಹೊಯ್ಲಿನ
ಬಾಯ್ದಣಿಯೆ ಬೈಗುಳಿನಲುಭಯದ
ಕಯ್ದುಗಾರರು ನೀಗಿದರು ನಿಜಪತಿಯ ಹಣ ರುಣವ ॥10॥

೦೧೧ ಬಿಟ್ಟ ಸೂಟಿಯ ...{Loading}...

ಬಿಟ್ಟ ಸೂಟಿಯ ಕುದುರೆಗಾರರ
ನಿಟ್ಟೆಡೆಯಲೌಕಿದ ಮದೇಭದ
ಥಟ್ಟುಗಳನುಬ್ಬೆದ್ದು ಹರಿಸುವ ರಥದ ವಾಜಿಗಳ
ಬಿಟ್ಟ ನಾರಾಚದ ವಿಘಾತದೊ
ಳಿಟ್ಟ ಸೆಲ್ಲೆಹ ಸಬಳ ಬಿಟ್ಟೇ
ರಿಟ್ಟೆಗಳ ಮಳೆ ನಾದಿದವು ಕಾದಿದರು ಚೂಣಿಯಲಿ ॥11॥

೦೧೨ ಮುರಿದ ಚೂಣಿಯ ...{Loading}...

ಮುರಿದ ಚೂಣಿಯ ಭಟರು ತಂದರು
ಬಿರಿಸಿನರೆನೆಲೆಗಿದು ನಿಹಾರದೊ
ಳಿರಿದು ನೆರೆ ಸೊಪ್ಪಾಗಿ ಸಾರಿತು ಸರಿದು ಹಿನ್ನೆಲೆಗೆ
ಸುರಿಯಲಂಬರುಣಾಂಬುಗಳ ನದಿ
ಹೊರಮುರಿಯೆ ದೊರೆಗಿಕ್ಕಿದರು ಬೊ
ಬ್ಬಿರಿದಿರಿವ ದನಿ ದಟ್ಟಿಸಿತು ನಿಸ್ಸಾಳಯದ ದನಿಯ ॥12॥

೦೧೩ ನೂಕಿದೊಡೆ ಕರ್ಣಾದಿ ...{Loading}...

ನೂಕಿದೊಡೆ ಕರ್ಣಾದಿ ದೊರೆಗಳ
ಡಾಕನಾನುವರಾರು ದಿವಿಜಾ
ನೀಕದಲಿ ದಕ್ಕಡರುಸುರು ದುವ್ವಾಳಿಸಿತು ನಭಕೆ
ತೋಕಿದವು ನಾರಾಚ ದೆಸೆ ದೆಸೆ
ಯೋಕರಿಸಿದವೊ ಸರಳನೆನೆ ಸ
ವ್ಯಾಕುಳರ ಹಿಂದಿಕ್ಕಿ ಹಿಂಡಿದವಸುವನತಿಬಲರ ॥13॥

೦೧೪ ಮುರಿದುದಾ ಗನ್ಧರ್ವಬಲ ...{Loading}...

ಮುರಿದುದಾ ಗಂಧರ್ವಬಲ ಹೊ
ಕ್ಕಿರಿದು ಕೌರವ ರಾಯ ದಳದಲಿ
ಕುರುಹಿನವರಪ್ಪಿದರು ಖಚರೀಜನದ ಕುಚಯುಗವ
ಉರುಬಿತರೆನೆಲೆ ಚಿತ್ರಸೇನನ
ಸೆರಗ ಹಿಡಿದುದು ಸಮರ ಹೊಯ್ ಹೊಯ್
ಕುರಿ ಮನದ ಕುನ್ನಿಗಳನೆನುತೇರಿದನು ಮಣಿರಥವ ॥14॥

೦೧೫ ಧನುವ ಕೊಣ್ಡನು ...{Loading}...

ಧನುವ ಕೊಂಡನು ತನ್ನ ತೂಕದ
ವಿನುತ ಭಟರೊಗ್ಗಾಯ್ತು ವಾದ್ಯ
ಧ್ವನಿಯ ದಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ
ಮನುಜರಿವದಿರ ಮುರಿದು ಬಹ ಭಟ
ರನಿಮಿಷರು ಬಯಲಾಯ್ತ ಕಟಕಟ
ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ ॥15॥

೦೧೬ ನೂಕಿದನು ಗನ್ಧರ್ವ ...{Loading}...

ನೂಕಿದನು ಗಂಧರ್ವ ಸೇನೆಯೊ
ಳಾಕೆವಾಳರ ಮುಂದೆ ತಾನವಿ
ವೇಕಿಯೋ ದೊರೆತನದಲಿದ್ದನು ಸಕಲದಳ ಸಹಿತ
ಸೋಕಬಹುದೇ ಕರ್ಣ ಕೆಲಬಲ
ದಾಕೆವಾಳರ ಕೊಂಬನೇ ನೆರೆ
ತೋಕಿದನು ಗಂಧರ್ವಜಲಧಿಯನೊಂದು ನಿಮಿಷದಲಿ ॥16॥

೦೧೭ ಗಾಯವಡೆದರು ಕೆಲರು ...{Loading}...

ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆ ದೆಸೆಗೆ
ಆಯುಧದ ಮೆದೆಯೊಟ್ಟಿತಾ ಕ
ರ್ಣಾಯತಾಸ್ತ್ರನ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆ ಹೊಕ್ಕನು ಮಹಾಹವವ ॥17॥

೦೧೮ ತೊಲಗು ಮತ್ರ್ಯರಿಗೀಸು ...{Loading}...

ತೊಲಗು ಮತ್ರ್ಯರಿಗೀಸು ದರ್ಪದ
ಕಲಿತನವೆ ಫಡ ನಿಮಿಷ ಸೈರಿಸು
ಹುಲು ಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ
ಅಳುಕುವುದೆ ಖಚರೇಂದ್ರ ಜಲಧರ
ನೆಲವೊ ತೋರಾ ಚಾಪ ವಿದ್ಯಾ
ಕಲೆಯದೆನ್ನೊಡನೆನುತ ಬೊಬ್ಬಿರಿದೆಚ್ಚನಿನಸುತನ ॥18॥

೦೧೯ ಹೇಳಬಹುದೆ ಸುರೇನ್ದ್ರ ...{Loading}...

ಹೇಳಬಹುದೆ ಸುರೇಂದ್ರ ಭವನದ
ಸೂಳೆಯರ ಸೂಳಾಯತದ ವಾ
ಚಾಳತನವೇ ನೆರವೆ ನಟರಿಗೆ ಮುಖ್ಯ ವಿದ್ಯೆಯಲ
ಆಳುತನದಂಗದಲಿ ಬಹರೆ ಶ
ರಾಳಿಯಲಿ ಮಾತಾಡೆನುತ ಕೆಂ
ಗೋಲಿನಲಿ ಸಲೆ ಹೂಳಿದನು ಉದ್ಯಾನವನತಳದ ॥19॥

೦೨೦ ಪೂತು ಮಝ ...{Loading}...

ಪೂತು ಮಝ ಮತ್ರ್ಯರಲಿ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ತಾ
ನೀತ ಕರ್ಣನೆ ಕೌರವೇಂದ್ರಗೆ ಬೇಹ ಭಟನಿವನೆ
ಆತುಕೊಳ್ಳಾದೊಡೆಯೆನುತ ದಿ
ಗ್ವ್ರಾತವಂಬಿನಲಡಗೆ ರಿಪು ಶರ
ಜಾತವನು ಹರೆಗಡಿದು ಕರ್ಣನ ಧನುವ ಖಂಡಿಸಿದ ॥20॥

೦೨೧ ಇದು ಶರಾವಳಿಯಹುದು ...{Loading}...

ಇದು ಶರಾವಳಿಯಹುದು ಸರಿಗಮ
ಪದನಿಗಳ ಸರವಲ್ಲಲಾ ಸೇ
ರಿದ ಧನುರ್ವಿದ್ಯಾತಿಶಯ ಯೋಗ್ಯತೆ ವಿಶೇಷವಲ
ಇದೆ ಮನುಷ್ಯರ ಕಲುಹೆ ನೋಡೆನು
ತೊದರಿ ಹೊಸ ಚಾಪದಲಿ ಕಲಿ ಚಿ
ಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ ॥21॥

೦೨೨ ಕಡಿದು ಗನ್ಧರ್ವನ ...{Loading}...

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಗೆಡಹಿದವು ಕಿಂಪುರುಷ ಗುಹ್ಯಕ ಯಕ್ಷ ರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಿಸಿ ತಲೆವರಿಗೆಯಲಿ ಕರ್ಣನ
ಬಿಡುಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ ॥22॥

೦೨೩ ಸನ್ಧಿಸಿತು ಪಡೆ ...{Loading}...

ಸಂಧಿಸಿತು ಪಡೆ ಚಿತ್ರಸೇನನ
ಹಿಂದೆ ನಿಲಿಸಿ ವಿರೋಧಿ ಶರ ಹತಿ
ಗಂದವಳಿಯದೆ ಮುತ್ತಿದುದು ಕಟ್ಟಳವಿಯಲಿ ರಥವ
ಮುಂದುಗೆಟ್ಟನು ಕರ್ಣನೆನೆ ಕೈ
ಗುಂದಿದರು ಸೌಬಲ ಸುಯೋಧನ
ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ ॥23॥

೦೨೪ ನೊರಜಿನೆರಕೆಯ ಗಾಳಿಯಲಿ ...{Loading}...

ನೊರಜಿನೆರಕೆಯ ಗಾಳಿಯಲಿ ಹೆ
ಮ್ಮರದ ಮೊದಲಳುಕುವುದೆ ಫಡ ಕಾ
ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದ
ಶರನಿಧಿಗೆ ವಡಬಾಗ್ನಿ ಮುನಿವವೊ
ಲುರುವಣಿಪ ಹೆಬ್ಬಲವನೊಂದೇ
ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ ॥24॥

೦೨೫ ಗೆದ್ದುದೇ ರಣವೆಲವೊ ...{Loading}...

ಗೆದ್ದುದೇ ರಣವೆಲವೊ ದಿವಿಜರ
ದೊದ್ದೆಯದ ಸೂಳೆಯರ ಚೌರಿಗೆ
ಬಿದ್ದಿನರ ವೀಳಯದ ಬದಗರು ಭಟರ ಮೋಡಿಯಲಿ
ಹೊದ್ದಿದೊಡೆ ಹುರುಳಹರೆ ಭಯರಸ
ಗದ್ದುಗೆಯ ಮಂಜಿಡಿಕೆ ಮನದವ
ರಿದ್ದು ಫಲವೇನೆನುತ ಕೈ ಮಾಡಿದನು ಕಲಿಕರ್ಣ ॥25॥

೦೨೬ ನೊನ್ದುದಾತನ ಪೊರೆಯ ...{Loading}...

ನೊಂದುದಾತನ ಪೊರೆಯ ಸುಭಟರ
ಸಂದಣಿಗಳಿಕ್ಕಿಲಿಸಿ ಬಿದ್ದುದು
ಮುಂದೆ ಬಲು ಗಂಧರ್ವಬಲವಿನಸುತನ ಶರಹತಿಗೆ
ಒಂದು ನಿಮಿಷಕೆ ಮತ್ತೆ ಪಡಿಬಲ
ಬಂದುದಗಣಿತ ಯಕ್ಷರಾಕ್ಷಸ
ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ ॥26॥

೦೨೭ ಅರಸ ಕೇಳೀಚೆಯಲಿ ...{Loading}...

ಅರಸ ಕೇಳೀಚೆಯಲಿ ಕೌರವ
ರರಸ ಬಂದನು ಸರ್ವದಳ ಸಹಿ
ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ
ನರ ವೃಕೋದರ ನಕುಲ ಮೊದಲಾ
ದರು ಕುತೂಹಲವಿವರ ಸುತ್ತಣ
ಮೊರಡಿಗಳ ಮೇಲಿದ್ದು ನೋಡಿದರೀ ಮಹಾಹವವ ॥27॥

೦೨೮ ತೆಗೆಸಿದನು ನೃಪನಿನಸುತನ ...{Loading}...

ತೆಗೆಸಿದನು ನೃಪನಿನಸುತನ ಮು
ತ್ತಿಗೆಯ ನೆರೆದೊಡ್ಡಿನಲಿ ಸೂಸುವ
ಹೊಗರಗಣೆಗಳ ಹೊಯ್ವಡಾಯುಧ ಕಡಿವ ಪರಶುಗಳ
ಬಿಗಿವ ಸಬಳದ ಲೋಟಿಸುವ ಲೌ
ಡಿಗಳ ಚಿಮ್ಮುವ ಸುರಗಿಗಳ ಕಾ
ಳಗದ ರೌದ್ರಾಟೋಪ ರಂಜಿಸಿತಮರರಾಲಿಗಳ ॥28॥

೦೨೯ ನೂಕಿತಿದು ತೋಪಿನ ...{Loading}...

ನೂಕಿತಿದು ತೋಪಿನ ತುದಿಗೆ ಮಗು
ಳೌಕಿತದು ಪಾಳಯಕೆ ಮುರಿದುದಿ
ವೌಕಸರು ಜಾರಿದರು ಜೋಡಿಸಿ ಮತ್ತೆ ಕುರುಬಲವ
ತೋಕುವರು ಗಂಧರ್ವರುಭಯಾ
ನೀಕದೋಹರಿ ಸಾಹರಿಯ ಸು
ವ್ಯಾಕುಲರನೀಕ್ಷಿಸುತಲಿದ್ದರು ಪವನಜಾದಿಗಳು ॥29॥

೦೩೦ ಈಸು ಕೊಣ್ಡಾಡಿದರೆ ...{Loading}...

ಈಸು ಕೊಂಡಾಡಿದರೆ ಸುರರುಪ
ಹಾಸವಾಡುವರೆಮ್ಮನೆನುತ ಮ
ಹಾ ಸಗರ್ವರು ಚಿತ್ರಸೇನನ ಮನ್ನಣೆಯ ಭಟರು
ಪಾಶ ಚಕ್ರ ಮುಸುಂಡಿ ಪರಿಘ
ಪ್ರಾಸ ಪರಶು ಕೃಪಾಣ ಸಬಳ ಶ
ರಾಸನಾದಿಯ ಕೈದುಗಾರರು ಕದನಕನುವಾಯ್ತು ॥30॥

೦೩೧ ಜೋಡು ಮಾಡಿತು ...{Loading}...

ಜೋಡು ಮಾಡಿತು ಖಚರಬಲ ಕೈ
ಗೂಡಿ ಕವಿದುದು ಚಿತ್ರಸೇನನ
ಜೋಡಿಯಲಿ ಜಝ್ಝಾರರಿದ್ದರು ಮುಂದೆ ಮುಂಗುಡಿಯ
ಆಡಿದೊಡೆ ಹಾವಿಂಗೆ ಹದ್ದಿನ
ಕೂಡೆ ಮುರುಕವೆ ಫಡಯೆನುತ ಕೈ
ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ ॥31॥

೦೩೨ ಗಿಳಿಯ ಹಿಣ್ಡಿನ ...{Loading}...

ಗಿಳಿಯ ಹಿಂಡಿನ ಮೇಲೆ ಗಿಡಗನ
ಬಳಗ ಕವಿದಂದದಲಿ ಸೂಟಿಯ
ಲಳವಿಗೊಡ್ಡಿದ ಚಾತುರಂಗವ ಚಿನಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರ ರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ ॥32॥

೦೩೩ ಗರುವರೇ ನೀವೆಲವೊ ...{Loading}...

ಗರುವರೇ ನೀವೆಲವೊ ಸುರಪನ
ಪುರದ ನಟ್ಟವಿಗರು ಸುಯೋಧನ
ನರಮನೆಯ ನಟ್ಟವಿಗಳಿಗೆ ಪಾಡಹರೆ ತೊಡಕುವೊಡೆ
ಅರಸು ಪರಿಯಂತಾರು ನೀವೆನು
ತರಿಭಟರಿಗಾಗ್ನೇಯ ವಾರುಣ
ನಿರುತಿ ಮೊದಲಾದಸ್ತ್ರ ಚಯವನು ಕವಿಸಿದನು ಕರ್ಣ ॥33॥

೦೩೪ ನೈರುತಕ್ಕಾಗ್ನೇಯ ಯಾಮ್ಯಕ ...{Loading}...

ನೈರುತಕ್ಕಾಗ್ನೇಯ ಯಾಮ್ಯಕ
ವಾರುಣಕೆ ಸುರರೊಡೆಯರೆಮ್ಮಲಿ
ವೈರ ಬಂಧವಿದುಂಟೆ ಸಾಧನವಹರೆ ದಿವ್ಯಶರ
ಸೇರಿದರೆ ನಿನಗಾದರಿದಕೋ
ವಾರುಣ ಪ್ರತಿಕಾರ ಪಾವಕ
ನೈರುತಾದಿಗೆ ಕೊಳ್ಳೆನುತ ಗಂಧರ್ವಪತಿಯೆಚ್ಚ ॥34॥

೦೩೫ ಗಬ್ಬರಿಸಿದವು ದಿವ್ಯಶರ ...{Loading}...

ಗಬ್ಬರಿಸಿದವು ದಿವ್ಯಶರ ಚಯ
ಗರ್ಭವಪ್ರತಿಕಾರ ಶರ ಮಗು
ಳೆಬ್ಬಿಸಿದನಿನಸೂನು ಪರ್ವತ ತಿಮಿರ ಫಣಿಶರವ
ಪರ್ಬತಕೆ ವಜ್ರಾಸ್ತ್ರ ತಿಮಿರದ
ಹಬ್ಬುಗೆಗೆ ರವಿಬಾಣ ಹಾವುಗ
ಳೊಬ್ಬುಳಿಗೆ ಗರುಡಾಸ್ತ್ರವನು ಗಂಧರ್ವಪತಿಯೆಚ್ಚ ॥35॥

೦೩೬ ಸವೆದವಿನಸುತನಮ್ಬು ಖೇಚರ ...{Loading}...

ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಗೆ
ಡವರಿಸಿದವಡಿಗಡಿಗೆ ಕರ್ಣನ ರಥದ ವಾಜಿಗಳು ॥36॥

೦೩೭ ಜೋಡು ಹರಿದುದು ...{Loading}...

ಜೋಡು ಹರಿದುದು ಸೀಸಕದ ದಡಿ
ಬೀಡು ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಭಸ
ಖೋಡಿ ಕೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲೈಸುತಿದ್ದುದು ಭಾನುನಂದನನ ॥37॥

೦೩೮ ಮತ್ತೆ ಕೊಣ್ಡನು ...{Loading}...

ಮತ್ತೆ ಕೊಂಡನು ಬಿಲು ಸರಳ ನಭ
ಕೊತ್ತಿದನು ರಣ ಭಯವನಹಿತನ
ಕುತ್ತಿದನು ಕಂಗಳಲಿ ಕುಡಿದನು ಮನದಲರಿಭಟನ
ಕೆತ್ತಿದನು ಕೂರಲಗಿನಲಿ ಮುಳು
ಮುತ್ತ ಹೂತಂದದಲಿ ಹುದುಗಿದ
ನೆತ್ತರಿನ ನೆಣ ವಸೆಯಲೆಸೆದನು ರಣದೊಳಾ ಖಚರ ॥38॥

೦೩೯ ನೊನ್ದಡುಬ್ಬಿತು ದರ್ಪಶಿಖಿ ...{Loading}...

ನೊಂದಡುಬ್ಬಿತು ದರ್ಪಶಿಖಿ ಖತಿ
ಗೊಂಡು ಮದದುಬ್ಬಿನಲಿ ಘಾತದ
ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ
ನೊಂದುದಿನಿಸಿಲ್ಲಕಟ ದೈತ್ಯರ
ದಂದುಗದಲಾವಿಂದು ಮತ್ರ್ಯರು
ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ ॥39॥

೦೪೦ ಖತಿಯಲುಗಿದನು ದಿವ್ಯಬಾಣ ...{Loading}...

ಖತಿಯಲುಗಿದನು ದಿವ್ಯಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತುದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯಥಿಕರದಲಾಗ್ನೇಯ ಶರ ಚಿ
ಮ್ಮಿತು ಚಡಾಳಿಸಿ ಕೆಂಡ ಕೆದರಲು ಕರ್ಣ ಬೆರಗಾದ ॥40॥

೦೪೧ ವಿರಥನಾದನು ಹಲಗೆ ...{Loading}...

ವಿರಥನಾದನು ಹಲಗೆ ಖಡ್ಗದ
ಲರಿಭಟನ ಸಮ್ಮುಖಕೆ ಚಿಮ್ಮಿದ
ರೆರಡನೊಂದಂಬಿನಲಿ ಕಡಿದನು ಜಡಿದನಿನಸುತನ
ತಿರುಗಿ ಹಾಯ್ದನು ಬಳಿಕ ಕರ್ಣನ
ಮುರಿವ ಕಂಡು ವಿಕರ್ಣ ತನ್ನಯ
ವರ ರಥವ ಚಾಚಿದನು ಬೋಳೈಸಿದನು ರವಿಸುತನ ॥41॥

೦೪೨ ಪೈಸರಿಸಿತೋ ಕುರು ...{Loading}...

ಪೈಸರಿಸಿತೋ ಕುರು ಚತುರ್ಬಲ
ಗಾಸಿಯಾದನು ಕರ್ಣನಿದು ದೊರೆ
ಗೈಸಲೇ ದುಮ್ಮಾನವೆನುತಲ್ಲಲ್ಲಿ ಕುರುಸೇನೆ
ಓಸರಿಸಿತಡತರದ ಮುಖದಲಿ
ಸೂಸಿದರು ಸಮರಥರು ಸೋಲವ
ನಾ ಸುಯೋಧನ ನಗುತ ಕಂಡನು ನೋಡಿ ಕೆಲಬಲನ ॥42॥

೦೪೩ ಅವನಿಪನ ಮೊಗಸನ್ನೆಯಲಿ ...{Loading}...

ಅವನಿಪನ ಮೊಗಸನ್ನೆಯಲಿ ಸೂ
ಳವಿಸಿದವು ನಿಸ್ಸಾಳ ಕೋಟಿಗ
ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ
ತವತವಗೆ ಧುರ ತೋರಹತ್ತರು
ತವಕಿಸುತ ಹುರಿಯೇರಿದರು ಕೌ
ರವರು ಕರ್ಣನ ಹರಿಬದಾಹವವೆಮಗೆ ತಮಗೆನುತ ॥43॥

೦೪೪ ಮುರಿದ ದಳ ...{Loading}...

ಮುರಿದ ದಳ ಸಂವರಿಸಿ ಪಡಿಮುಖ
ಕುರುಬಿದುದು ದುರಿಯೋಧನಾನುಜ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದ ಸಹಸವ ತೋರೆನುತ ಬೆರಸಿದರು ಪರಬಲವ ॥44॥

೦೪೫ ಅರಸನನುಜರೆ ನೀವು ...{Loading}...

ಅರಸನನುಜರೆ ನೀವು ಕರ್ಣನ
ಹರಿಬದವರೇ ಹರ ಹರೆಮಗಿ
ನ್ನರಿದಲೈ ನಿವಗೀಸು ಖತಿ ಜೋಂಪಿಸಿದುದಿನ್ನೇನು
ತರಹರವು ನಮಗಿಲ್ಲಲಾ ಪೂ
ತುರೆಯೆನುತ ಪಡಿತಳಿಸಿ ಗಂಧ
ರ್ವರ ಚಮೂಪರು ನೂಕಿದರು ತರುಬಿದರು ಪರಬಲವ ॥45॥

೦೪೬ ಎಚ್ಚರಿರಿದರು ಹೊಯ್ದರಿಟ್ಟರು ...{Loading}...

ಎಚ್ಚರಿರಿದರು ಹೊಯ್ದರಿಟ್ಟರು
ಚುಚ್ಚಿದರು ಸೀಳಿದರು ನೂಕಿದ
ರಿಚ್ಚಟರ ಸೇದಿದರು ದಡಿವಲೆ ಕಣ್ಣಿವಲೆಗಳಲಿ
ಕೊಚ್ಚಿದರು ನುಗ್ಗಿದರು ಕೊಯ್ದರು
ನುಚ್ಚುನುರಿ ಮಾಡಿದರು ಹರಿಬಕೆ
ಹೆಚ್ಚಿ ಹೊಗುವವನೀಶನನುಜರ ಮನ್ನಣೆಯ ಭಟರ ॥46॥

೦೪೭ ಗಾಯವಡೆಯದರಿಲ್ಲ ಸಾಯದೆ ...{Loading}...

ಗಾಯವಡೆಯದರಿಲ್ಲ ಸಾಯದೆ
ನೋಯದವರಿಲ್ಲೆರಡು ಬಲದಲಿ
ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು
ರಾಯನನುಜರ ಧಟ್ಟಿದನು ದೀ
ರ್ಘಾಯುವನು ಹಿಡಿದನು ವಿಕರ್ಣನ
ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ ॥47॥

೦೪೮ ಫಡಯೆನುತ ಕುರುರಾಯನಾತನ ...{Loading}...

ಫಡಯೆನುತ ಕುರುರಾಯನಾತನ
ಪಡಿಮುಖಕೆ ನೂಕಿದನು ಜೋಡಿಸಿ
ಜಡಿವ ನಿಸ್ಸಾಳಾಯತದ ಕಹಳೆಗಳ ಕಳಕಳದ
ಬಿಡುರಥದ ದಟ್ಟಣೆಯ ಧಾಳಿಯ
ಕಡುಗುದುರೆಗಳ ನೆತ್ತಿಯಂಕುಶ
ದೆಡೆಯ ಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ ॥48॥

೦೪೯ ನುಗ್ಗನಿವ ಕೈಕೊಮ್ಬನೇ ...{Loading}...

ನುಗ್ಗನಿವ ಕೈಕೊಂಬನೇ ರಣ
ದಗ್ಗಳರ ಮೂಳೆಯಲಿ ಕದನದ
ಹುಗ್ಗಿಗರ ಸಾಕಿದನು ಶಾಕಿನಿ ಡಾಕಿನೀ ಗಣವ
ಒಗ್ಗಿ ಕವಿವರನಿಂದ್ರ ಲೋಕದ
ಸುಗ್ಗಿಯಲಿ ಸೇರಿಸಿದನಾಹವ
ದುಗ್ಗಡವನೇನೆಂಬೆನೈ ಗಂಧರ್ವ ವಿಕ್ರಮವ ॥49॥

೦೫೦ ಮೀಟೆನಿಪ ಗನ್ಧರ್ವರೊನ್ದೇ ...{Loading}...

ಮೀಟೆನಿಪ ಗಂಧರ್ವರೊಂದೇ
ಕೋಟಿ ಕವಿದುದು ಕುರುಬಲಕೆ ಪಡಿ
ಗೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ
ದಾಟಿತರಸನ ಧೈರ್ಯ ಕೈದುಗ
ಳಾಟ ನಿಂದುದು ಕರದ ಹೊಯ್ಲಿನ
ನೋಟಕರು ಗೊಳ್ಳೆಂದರಿತ್ತಲು ಪಾಂಡವರ ವನದಿ ॥50॥

೦೫೧ ಅರರೆ ದೊರೆ ...{Loading}...

ಅರರೆ ದೊರೆ ದೊರೆ ಡೊಂಬಿನಲಿ ಡಾ
ವರಿಸುವರ ಹೊಯ್ ಹೊಯ್ಯೆನುತ ಖೇ
ಚರರ ಕಂಬಿಗಳಾಡಿದವು ಸುತ್ತಲು ಸುಯೋಧನನ
ಅರಸರಂಜದಿರಂಜ ಬೇಡೆನು
ತುರವಣಿಸಿ ಕೌರವ ನರೇಂದ್ರನ
ಕರದ ಧನುವನು ಕಳೆದು ಕೊಂಡನು ಖಚರಪತಿ ನಗುತ ॥51॥

೦೫೨ ಹಯದ ಪಡಿವಾಘೆಯಲಿ ...{Loading}...

ಹಯದ ಪಡಿವಾಘೆಯಲಿ ಬಾಹು
ದ್ವಯವ ಬಿಗಿದನು ತನ್ನ ರಥದಲಿ
ಜಯವಿಹೀನನ ತಂದು ಕುಳ್ಳಿರಿಸಿದನು ಕೌರವನ
ಭಯಭರಿತ ದುಶ್ಯಾಸನನ ದು
ರ್ಜಯನ ಚಿತ್ರಾಂಗದ ವಿಕರ್ಣನ
ನಯವಿದೂರರ ತಂದರಿಪ್ಪತ್ತೈದು ಸಹಭವರ ॥52॥

೦೫೩ ಇಳಿದು ಗಜವನು ...{Loading}...

ಇಳಿದು ಗಜವನು ಕೈದುಗಳ ನೆಲ
ಕಿಳುಹಿ ಜೋಧರು ವಾರುವದಿನಿಳೆ
ಗಿಳಿದು ರಾವ್ತರು ಹಾಯ್ಕಿದರು ದೂಹತ್ತಿ ಲೌಡಿಗಳ
ಬಿಲು ಸರಳ್ಗಳ ಬಿಸುಟು ರಥಿಕರು
ನೆಲಕೆ ಹಾಯ್ದರು ಕೈಯ ಕೈದುವ
ನಿಳುಹಿ ಪಯದಳ ಬೀಳುಗೊಂಡುದು ಖೇಚರೇಶ್ವರನ ॥53॥

೦೫೪ ಮುಟ್ಟದಿರಿ ಪರಿವಾರ ...{Loading}...

ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡ ದೆಸೆಗವನೀಶ ಕೇಳ್ ಎಂದ ॥54॥

೦೫೫ ಖಿನ್ನನಾದನು ಪಾರ್ಥನನಿಲಜ ...{Loading}...

ಖಿನ್ನನಾದನು ಪಾರ್ಥನನಿಲಜ
ನುನ್ನತೋತ್ಸವನಾದನತಿ ಸಂ
ಪನ್ನ ಸಮ್ಮುದರಾದರಾ ಮಾದ್ರೀಕುಮಾರಕರು
ಇನ್ನು ಪಾಂಡವ ರಾಜ್ಯಸಿರಿಯೆಮ
ಗಿನ್ನು ಲೇಸಹುದಕಟ ದೈವದ
ಗನ್ನಗತಕವೆಯೆನುತ ಹಿಗ್ಗಿತು ಮುನಿವಧೂನಿಕರ ॥55॥

೦೫೬ ಭಾವನವರರ್ತಿಯಲಿ ಜಲ ...{Loading}...

ಭಾವನವರರ್ತಿಯಲಿ ಜಲ ಕೇ
ಳೀ ವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದಿರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿ ಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯಸಂಪದವ ॥56॥

೦೫೭ ಕೇಳಿದನು ಯಮಸೂನು ...{Loading}...

ಕೇಳಿದನು ಯಮಸೂನು ದುಗುಡವ
ತಾಳಿದನು ನಳ ನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿ ನಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲ ಚಿತ್ತನು ನೆನೆವುತಿದ್ದನು ವೀರ ನರಯಣನ ॥57॥|

+೧೯ ...{Loading}...