೦೦೦ ಸೂ ಪರಿವಿಡಿಯಲಾ ...{Loading}...
ಸೂ. ಪರಿವಿಡಿಯಲಾ ದ್ವೈತ ವನದಲಿ
ಬೆರೆಸಿ ಬಿಟ್ಟುದು ಬೀಡು ಗಂಧ
ರ್ವರಿಗೆ ಕೌರವ ಬಲದೊಡನೆ ಮಸೆದುದು ಮಹಾಸಮರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವರು ದ್ವೈತವನದಲ್ಲಿ ಬೀಡುಬಿಟ್ಟರು. ಗಂಧರ್ವರಿಗೆ ಕೌರವ ಸೈನ್ಯದೊಡನೆ ಮಹಾಯುದ್ಧ ನಡೆಯಿತು.
ಮೂಲ ...{Loading}...
ಸೂ. ಪರಿವಿಡಿಯಲಾ ದ್ವೈತ ವನದಲಿ
ಬೆರೆಸಿ ಬಿಟ್ಟುದು ಬೀಡು ಗಂಧ
ರ್ವರಿಗೆ ಕೌರವ ಬಲದೊಡನೆ ಮಸೆದುದು ಮಹಾಸಮರ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತುರುಪಳ್ಳಿಗಳ ನೋಡಿ ವ
ನಾಳಿ ತಪ್ಪದೆ ಬೇಂಟೆಯಾಡಿ ಸಮಸ್ತಬಲ ಸಹಿತ
ಲೀಲೆ ಮಿಗಲಾ ಪಾಂಡವರ ವನ
ವೇಲೆಯಲಿ ನಿಸ್ಸಾಳ ರಭಸದ
ಸೂಳ ಸಂಕೇತದಲಿ ನೃಪ ಬಿಡಿಸಿದನು ಪಾಳಯವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಸಕಲಸೇನೆಯೊಂದಿಗೆ, ಬೇಟೆಯಾಡಿ, ಗೋವುಗಳಿರುವ ಹಳ್ಳಿಗಳನ್ನು ನೋಡಿ ಅನಂತರ ಪಾಂಡವರಿರುವ ಕಾಡಿನ ಅಂಚಿನಲ್ಲಿ ವಾದ್ಯಗಳು ಮೊಳಗುತ್ತಿರಲು ಸಹಿತ ಕೌರವನು ಬೀಡುಬಿಟ್ಟನು.
ಪದಾರ್ಥ (ಕ.ಗ.ಪ)
ವೇಲೆ - ಎಲ್ಲೆ , ಅಂಚು,ಗಡಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತುರುಪಳ್ಳಿಗಳ ನೋಡಿ ವ
ನಾಳಿ ತಪ್ಪದೆ ಬೇಂಟೆಯಾಡಿ ಸಮಸ್ತಬಲ ಸಹಿತ
ಲೀಲೆ ಮಿಗಲಾ ಪಾಂಡವರ ವನ
ವೇಲೆಯಲಿ ನಿಸ್ಸಾಳ ರಭಸದ
ಸೂಳ ಸಂಕೇತದಲಿ ನೃಪ ಬಿಡಿಸಿದನು ಪಾಳಯವ ॥1॥
೦೦೨ ಲಾಯ ನೀಡಿತು ...{Loading}...
ಲಾಯ ನೀಡಿತು ಮುಂದೆ ರಾವುತ
ಪಾಯಕರಿಗೆಡವಂಕ ಮಂತ್ರಿ ಪ
ಸಾಯತರು ಕರ್ಣಾದಿಗಳಿಗೆಡೆಯಾಯ್ತು ಬಲವಂಕ
ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವ
ರಾಯನೆಲೆವನೆಗಳನು ನಗುತಿದ್ದುದು ನವಾಯಿಯಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗದಲ್ಲಿ ಕುದುರೆಗಳಿಗೆ ಲಾಯ, ರಾವುತರಿಗೆ ಬಿಡಾರವೂ, ಬಲಭಾಗದಲ್ಲಿ ಮಂತ್ರಿ ಮಾಗಧರಿಗೆ ಕರ್ಣಾದಿಗಳಿಗೆ ವಸತಿಯೂ ನಿರ್ಮಾಣವಾಯಿತು. ಕೌರವರಾಯನ ಮುತ್ತಿನ ಕಲಶದ ಕಾಂತಿಯಿಂದಿರುವ ಅರಮನೆಯು ಪಾಂಡವರ ಪರ್ಣಕುಟೀರವನ್ನು ಅಪಹಾಸ್ಯ ಮಾಡಿ ಜಂಬದಿಂದ ನಗುತ್ತಿತ್ತು.
ಪದಾರ್ಥ (ಕ.ಗ.ಪ)
ಎಲೆವನೆ - ಪರ್ಣಕುಟಿ
ನವಾಯಿ - ಜಂಬ
ಮೂಲ ...{Loading}...
ಲಾಯ ನೀಡಿತು ಮುಂದೆ ರಾವುತ
ಪಾಯಕರಿಗೆಡವಂಕ ಮಂತ್ರಿ ಪ
ಸಾಯತರು ಕರ್ಣಾದಿಗಳಿಗೆಡೆಯಾಯ್ತು ಬಲವಂಕ
ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವ
ರಾಯನೆಲೆವನೆಗಳನು ನಗುತಿದ್ದುದು ನವಾಯಿಯಲಿ ॥2॥
೦೦೩ ಅರಸ ಕೇಳೈ ...{Loading}...
ಅರಸ ಕೇಳೈ ಕೌರವೇಶ್ವರ
ನರಸಿಯರು ಲೀಲೆಯಲಿ ಶತ ಸಾ
ವಿರ ಸಖೀಜನ ಸಹಿತ ಹೊರವಂಟರು ವನಾಂತರಕೆ
ಸರಸಿಜದ ನಿಜಗಂಧದಲಿ ತನು
ಪರಿಮಳವ ತಕ್ಕೈಸಿ ವನದಲಿ
ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಕೌರವೇಶ್ವರನ ಅರಸಿಯರು ಲಕ್ಷ ಸಂಖ್ಯೆಯ ಸಖಿಯರೊಂದಿಗೆ ಕಾಡಿನೊಳಗೆ ಪ್ರಯಾಣ ಹೊರಟರು. ಈ ನಾರೀ ಸಮೂಹವು ಕಮಲದ ಸುವಾಸನೆಯಂತಹ ತನುಗಂಧವನ್ನು ಹರಡಲು, ಮರಿದುಂಬಿಗಳು ಎಲ್ಲೆಡೆ ಸಂಚರಿಸಿದವು.
ಮೂಲ ...{Loading}...
ಅರಸ ಕೇಳೈ ಕೌರವೇಶ್ವರ
ನರಸಿಯರು ಲೀಲೆಯಲಿ ಶತ ಸಾ
ವಿರ ಸಖೀಜನ ಸಹಿತ ಹೊರವಂಟರು ವನಾಂತರಕೆ
ಸರಸಿಜದ ನಿಜಗಂಧದಲಿ ತನು
ಪರಿಮಳವ ತಕ್ಕೈಸಿ ವನದಲಿ
ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ ॥3॥
೦೦೪ ಕೆಲರು ಹೊನ್ದಾವರೆಯ ...{Loading}...
ಕೆಲರು ಹೊಂದಾವರೆಯ ಹಂತಿಯ
ಕೊಳನ ಹೊಕ್ಕರು ಬಿಲ್ವಫಲಗಳ
ನಿಲುಕಿ ಕೊಯಿದರು ಕೊಡಹಿ ಮೊಲೆಗಳ ಮೇಲುದಿನ ನಿರಿಯ
ಕೆಲರು ಹೂಗೊಂಚಲಿನ ತುಂಬಿಯ
ಬಳಗವನು ಬೆಂಕೊಂಡರುಲಿವರೆ
ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವು ಸ್ತ್ರೀಯರು ಕೆಂದಾವರೆಗಳಿರುವ ಕೊಳಕ್ಕೆ ಇಳಿದರು. ಮತ್ತೆ ಕೆಲವರು ಎದೆಯ ಮೇಲಿನ ಸೆರಗನ್ನು ಬೀಸಿ ಬಿಲ್ವದ ಹಣ್ಣುಗಳನ್ನು ಕೊಯ್ದರು. ಕೆಲವರು ಹೂಗಳ ಮೇಲಿರುವ ದುಂಬಿಗಳನ್ನು ಬೆನ್ನಟ್ಟಿದರೆ, ಮತ್ತೆ ಕೆಲವರು ಗಿಳಿಗಳನ್ನು ಹಿಡಿಯಲು ತಮ್ಮ ಹಾರಗಳನ್ನೇ ಬಲೆಯಾಗಿ ಬೀಸಿದರು.
ಮೂಲ ...{Loading}...
ಕೆಲರು ಹೊಂದಾವರೆಯ ಹಂತಿಯ
ಕೊಳನ ಹೊಕ್ಕರು ಬಿಲ್ವಫಲಗಳ
ನಿಲುಕಿ ಕೊಯಿದರು ಕೊಡಹಿ ಮೊಲೆಗಳ ಮೇಲುದಿನ ನಿರಿಯ
ಕೆಲರು ಹೂಗೊಂಚಲಿನ ತುಂಬಿಯ
ಬಳಗವನು ಬೆಂಕೊಂಡರುಲಿವರೆ
ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ ॥4॥
೦೦೫ ಪಾರಿವದುಪಾಧ್ಯರನು ನಮಿಸುತೆ ...{Loading}...
ಪಾರಿವದುಪಾಧ್ಯರನು ನಮಿಸುತೆ
ವಾರನಾರಿಯರಾನನದಲಿ ಚ
ಕೋರಗಳ ಚಾಳೈಸಿದರು ಕೆಲರಂಗ ಪರಿಮಳಕೆ
ಸಾರಿದರೆ ಮರಿದುಂಬಿಗಳ ಸುಖ
ಪಾರಣೆಯ ಬೆಸಗೊಳುತ ನಗುತ ವಿ
ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಳಿಯ ಉಡುಗೆಯನ್ನುಟ್ಟಿದ್ದ ವೇದಾಧ್ಯಾಯಿಗಳನ್ನು ವಂದಿಸುತ್ತ, ಆ ವಾರನಾರಿಯರು ಚಕೋರ ಪಕ್ಷಿಗಳನ್ನು ತಮ್ಮ ಮುಖದಲ್ಲಿ ಅನುಕರಿಸಿದರು. ಕೆಲವರು ಮೈಯ ಸುಗಂಧ ದ್ರವ್ಯಗಳನ್ನು ಹುಡುಕಿದರೆ, ಮತ್ತೆ ಕೆಲವರು ಮರಿದುಂಬಿಗಳ ಕುಶಲ ವಿಚಾರಿಸುತ್ತಾ ಧರ್ಮರಾಯನ ಆಶ್ರಮಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಪಾರಿವ - ಪಾರಿವಾಳದ ಬಣ್ಣ , ಇಲ್ಲಿ ಬಿಳಿ
ಚಾಳಯಸು - ಅನುಕರಿಸು
ವೇಡೈಸು - ಸುತ್ತುಗಟ್ಟು
ಮೂಲ ...{Loading}...
ಪಾರಿವದುಪಾಧ್ಯರನು ನಮಿಸುತೆ
ವಾರನಾರಿಯರಾನನದಲಿ ಚ
ಕೋರಗಳ ಚಾಳೈಸಿದರು ಕೆಲರಂಗ ಪರಿಮಳಕೆ
ಸಾರಿದರೆ ಮರಿದುಂಬಿಗಳ ಸುಖ
ಪಾರಣೆಯ ಬೆಸಗೊಳುತ ನಗುತ ವಿ
ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ ॥5॥
೦೦೬ ನೇವುರದ ದನಿ ...{Loading}...
ನೇವುರದ ದನಿ ದಟ್ಟಿಸಿತು ವೇ
ದಾವಳಿಯ ನಿರ್ಘೋಷವನು ನಾ
ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ
ಆ ವಧೂಜನದಂಗ ಗಂಧ
ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದವಳಯದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನಪ್ರದೇಶದಲ್ಲಿ ವೇದಘೋಷದ ಧ್ವನಿಗಳನ್ನು ನಾರಿಯರ ಗೆಜ್ಜೆ ದನಿ ಅಡಗಿಸಿತು. ಋಷಿ ಮುನಿಗಳ ಯೋಗ ಸಮಾಧಿಯನ್ನು ನಾರಿಯರ ವಿವಿಧಾಭರಣಗಳ ಕಾಂತಿ ಕೆಣಕಿತು. ಹೋಮ ಹವನಗಳ ಚರು ಪುರೋಡಾಶದ ಪರಿಮಳವನ್ನು ಆ ನಾರಿಯರ ದೇಹದ ಮತ್ತು ವಸ್ತ್ರಗಳ ಸುವಾಸನೆ ಮುಸುಕಿತು.
ಪದಾರ್ಥ (ಕ.ಗ.ಪ)
ಚರು - ಹೋಮಕ್ಕಾಗಿ ಸಿದ್ಧಪಡಿಸಿದ ಅನ್ನ, ಹವಿಸ್ಸು
ಪುರೋಡಾಶ - ಹೋಮ ಮಾಡಿ ಉಳಿದ ಹವಿಸ್ಸು
ಪ್ರಾವರಣ - ಹೊದೆಯುವ ವಸ್ತ್ರ, ಉತ್ತರೀಯ
ಮೂಲ ...{Loading}...
ನೇವುರದ ದನಿ ದಟ್ಟಿಸಿತು ವೇ
ದಾವಳಿಯ ನಿರ್ಘೋಷವನು ನಾ
ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ
ಆ ವಧೂಜನದಂಗ ಗಂಧ
ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದವಳಯದಲಿ ॥6॥
೦೦೭ ಹೊಕ್ಕರಿವರಾಶ್ರಮವ ತುರುಗಿದ ...{Loading}...
ಹೊಕ್ಕರಿವರಾಶ್ರಮವ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ಧಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನೊಳಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿಮೃಗಾವಳಿಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು ಆಶ್ರಮವನ್ನು ಹೊಕ್ಕು ಅಲ್ಲಿದ್ದ ಸಾಧುಗಳ ಅಂತರಂಗವೆಂಬ ಕುದುರೆಗೆ ಕಡಿವಾಣ ಹಾಕಿ ಎರಡು ಲಗಾಮುಗಳನ್ನು ಹಿಡಿದು ಎಳೆದರು. ಧೀರರೂ, ಸಾಹಸಿಗಳೂ ಆದವರ ಮನಸ್ಸು ಇವರ ದಾಳಿಯಲ್ಲಿ ಸಿಲುಕಿತು. ಮುನಿಗಳೆಂಬ ಮೃಗಗಳು ಈ ನಾರಿಯರ ಕಡೆಗಣ್ಣ ನೋಟವೆಂಬ ಬಲೆಯೊಳಗೆ ಸಿಕ್ಕಿ ಬಿದ್ದವು.
ಮೂಲ ...{Loading}...
ಹೊಕ್ಕರಿವರಾಶ್ರಮವ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ಧಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನೊಳಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿಮೃಗಾವಳಿಗೆ ॥7॥
೦೦೮ ಸ್ರುಕ್ ಸ್ರುವವ ...{Loading}...
ಸ್ರುಕ್ ಸ್ರುವವ ಮುಟ್ಟಿದರು ಧೌತಾಂ
ಶುಕದೊಳಗೆ ತಂಬುಲವ ಕಟ್ಟಿದ
ರಕಟುಪಾಧ್ಯರ ಮೋರೆಯನು ತೇಡಿಸುತ ಬೆರಲಿನಲಿ
ಚಕಿತ ಧೃತಿಯರು ದೀಕ್ಷಿತರ ಚಂ
ಡಿಕೆಗಳನು ತುಡುಕಿದರು ಮುನಿ ವಟು
ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ರುಕ್-ಸ್ರುವಗಳನ್ನು ಮುಟ್ಟಿದರು. ತಮ್ಮ ಬಿಳಿ ಬಟ್ಟೆಯಲ್ಲಿ ವೀಳ್ಯವನ್ನು ಕಟ್ಟಿಕೊಂಡರು. ಉಪಾಧ್ಯಾಯರ ಮುಖವನ್ನು ಬೆರಳಿನಿಂದ ಛೇಡಿಸಿದರು. ಯಜ್ಞ ದೀಕ್ಷಿತರ ಜುಟ್ಟನ್ನು ಈ ದಿಟ್ಟೆಯರು ಎಳೆದರು. ಮುನಿ ವಟುಗಳ ತಲೆಯ ಮೇಲೆ ಬಾಗಿಸಿದ ಕೈಬೆರಳುಗಳನ್ನು ಕುಣಿಸಿದರು.
ಪದಾರ್ಥ (ಕ.ಗ.ಪ)
ಅಂಗವಟ್ಟ - ಶರೀರ
ಮೂಲ ...{Loading}...
ಸ್ರುಕ್ ಸ್ರುವವ ಮುಟ್ಟಿದರು ಧೌತಾಂ
ಶುಕದೊಳಗೆ ತಂಬುಲವ ಕಟ್ಟಿದ
ರಕಟುಪಾಧ್ಯರ ಮೋರೆಯನು ತೇಡಿಸುತ ಬೆರಲಿನಲಿ
ಚಕಿತ ಧೃತಿಯರು ದೀಕ್ಷಿತರ ಚಂ
ಡಿಕೆಗಳನು ತುಡುಕಿದರು ಮುನಿ ವಟು
ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ ॥8॥
೦೦೯ ರಾಯರೆಮ್ಬುವರಿಲ್ಲಲಾ ಸ್ವಾ ...{Loading}...
ರಾಯರೆಂಬುವರಿಲ್ಲಲಾ ಸ್ವಾ
ಧ್ಯಾಯ ಕೆಟ್ಟುದು ಮುಟ್ಟಿದರುಪಾ
ಧ್ಯಾಯರನು ಶೂದ್ರಿಯರು ಸೆಳೆದರು ಮೌಂಜಿ ಮೇಖಲೆಯ
ಹಾಯಿದರು ಯಜ್ಞೋಪವೀತಕೆ
ಬಾಯಲೆಂಜಲಗಿಡಿಯ ಬರುವರ
ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸರೆಂಬರೇ ಇಲ್ಲವಲ್ಲಾ ? ವೇದಾಧ್ಯಯನ ಹಾಳಾಯಿತು. ಗುರುಗಳನ್ನು ಈ ಶೂದ್ರಸ್ತ್ರೀಯರು ಮುಟ್ಟಿ, ಉಡಿದಾರವನ್ನು ಎಳೆದರು. ಜನಿವಾರಕ್ಕೆ ಕೈಹಾಕಿ ಬಾಯ ಎಂಜಲನ್ನು ತುಂಬಲು ಅವರು ಬರುತ್ತಿದ್ದಾರೆ ಎಂದು ಬ್ರಹ್ಮಚಾರಿಗಳು ಕೂಗುತ್ತಾ ಓಡಿದರು.
ಮೂಲ ...{Loading}...
ರಾಯರೆಂಬುವರಿಲ್ಲಲಾ ಸ್ವಾ
ಧ್ಯಾಯ ಕೆಟ್ಟುದು ಮುಟ್ಟಿದರುಪಾ
ಧ್ಯಾಯರನು ಶೂದ್ರಿಯರು ಸೆಳೆದರು ಮೌಂಜಿ ಮೇಖಲೆಯ
ಹಾಯಿದರು ಯಜ್ಞೋಪವೀತಕೆ
ಬಾಯಲೆಂಜಲಗಿಡಿಯ ಬರುವರ
ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು ॥9॥
೦೧೦ ಕೆದರಿದರು ಗಡ್ಡವನುಪಾಧ್ಯರು ...{Loading}...
ಕೆದರಿದರು ಗಡ್ಡವನುಪಾಧ್ಯರು
ಬೆದರಿ ನಿಂದರಿದೇನಿರವು ಮಾ
ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ
ಇದು ಮಹಾಋಷಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿ
ಸಿದವರೇ ಕ್ಷಯವಹರು ಹರ ಹರಯೆಂದರಾ ದ್ವಿಜರು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹೆಂಗಸರು ಉಪಾಧ್ಯರ ಗಡ್ಡಗಳನ್ನು ಕೆದರಿದಾಗ ಅವರು ಹೆದರಿ ನಿಂತರು. ಆ ಬ್ರಾಹ್ಮಣರು “ಇದೇನು ಅವಸ್ಥೆ? ಇದು ಮಹರ್ಷಿಗಳ ಆಶ್ರಮ. ಹರಹರಾ ಇದರ ಶಿಷ್ಟಾಚಾರವನ್ನು ಹಾಳು ಗೈದವರು ನಾಶವಾಗುತ್ತಾರೆ. ಮಾಡಿದ ಅಪಚಾರವನ್ನು ಕುಂತೀಕುಮಾರರಿಗೆ ಹೇಳುತ್ತೇª.” ಎಂದರು.
ಪದಾರ್ಥ (ಕ.ಗ.ಪ)
ವಿಟಾಳ - ಮಾಲಿನ್ಯ, ಇಲ್ಲಿ ಅಪಚಾರ
ಮೂಲ ...{Loading}...
ಕೆದರಿದರು ಗಡ್ಡವನುಪಾಧ್ಯರು
ಬೆದರಿ ನಿಂದರಿದೇನಿರವು ಮಾ
ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ
ಇದು ಮಹಾಋಷಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿ
ಸಿದವರೇ ಕ್ಷಯವಹರು ಹರ ಹರಯೆಂದರಾ ದ್ವಿಜರು ॥10॥
೦೧೧ ಹೇಳಿದೊಡೆ ಕುನ್ತೀ ...{Loading}...
ಹೇಳಿದೊಡೆ ಕುಂತೀ ಕುಮಾರರು
ಕೇಳಿ ಮಾಡುವುದಾವುದೋ ವನ
ಪಾಲಕರು ತಾವಿಂದು ಪೃಥ್ವೀಪಾಲನೆಮ್ಮೊಡೆಯ
ಹೇಳಿ ಬಳಿಕರ್ಜುನನ ಭೀಮನ
ಧಾಳಿಯನು ತಹುದೆನುತಲತಿ ಘಾ
ತಾಳಿಯರು ಮುನಿಜನವ ಬೈದರು ಬಹು ವಿಕಾರದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೇಳಿದರೆ ಆ ಪಾಂಡವರು ಏನು ಮಾಡುತ್ತಾರೆ? ಇಂದು ನಾವೇ ಈ ವನದ ಒಡೆಯರು. ದೂರು ಹೇಳಿ ಆಮೇಲೆ ಅರ್ಜುನನ, ಭೀಮನ ದಾಳಿಯನ್ನು ತನ್ನಿ, ನೋಡೋಣ ಎಂದು ಆ ದುಷ್ಟ ಆಕ್ರಮಣಕಾರಿ ಸ್ತ್ರೀಯರು ಅತ್ಯಂತ ವಿಕಾರವಾಗಿ ಮುನಿಜನರನ್ನು ನಿಂದಿಸಿದರು.
ಪದಾರ್ಥ (ಕ.ಗ.ಪ)
ಘಾತಾಳಿ - ದುಷ್ಟ ಹೆಂಗಸು, ಆಕ್ರಮಣಕಾರಿ ಹೆಂಗಸು
ಮೂಲ ...{Loading}...
ಹೇಳಿದೊಡೆ ಕುಂತೀ ಕುಮಾರರು
ಕೇಳಿ ಮಾಡುವುದಾವುದೋ ವನ
ಪಾಲಕರು ತಾವಿಂದು ಪೃಥ್ವೀಪಾಲನೆಮ್ಮೊಡೆಯ
ಹೇಳಿ ಬಳಿಕರ್ಜುನನ ಭೀಮನ
ಧಾಳಿಯನು ತಹುದೆನುತಲತಿ ಘಾ
ತಾಳಿಯರು ಮುನಿಜನವ ಬೈದರು ಬಹು ವಿಕಾರದಲಿ ॥11॥
೦೧೨ ಶಾನ್ತರುರೆ ...{Loading}...
ಶಾಂತರುರೆ ವಿಜಿತೇಂದ್ರಿಯರು ವೇ
ದಾಂತ ನಿಷ್ಠರು ಸುವ್ರತಿಗಳ
ಶ್ರಾಂತ ವೇದಾಧ್ಯಯನ ಯಾಜ್ಞಿಕ ಕರ್ಮಕೋವಿದರು
ಸಂತತಾನುಷ್ಠಾನಪರರನ
ದೆಂತು ನೀವಾಕ್ರಮಿಸುವಿರಿ ವಿ
ಭ್ರಾಂತರೌ ನೀವೆನುತ ಜರೆದರು ಕಾಮಿನೀಜನವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಾಂತಚಿತ್ತರೂ, ಜಿತೇಂದ್ರಿಯರೂ, ವೇದಾಂತ ನಿಷ್ಠರೂ, ವ್ರತನಿಷ್ಠರೂ, ನಿರಂತರವಾಗಿ ಶಾಸ್ತ್ರಾಧ್ಯಯನವನ್ನು ಮಾಡುವವರೂ, ಯಜ್ಞ ಕರ್ಮಾನುಸರಣೆಯವರೂ, ಸದಾ ಅನುಷ್ಠಾನಪರರೂ ಆಗಿರುವವರನ್ನು ನೀವು ಹೇಗೆ ಆಕ್ರಮಿಸುತ್ತೀರಿ? ನಿಮಗೆ ಭ್ರಾಂತಿಯೇ ?” ಎಂದು ಆ ನಾರಿಯರನ್ನು ಆಶ್ರಮವಾಸಿಗಳು ನಿಂದಿಸಿದರು.
ಮೂಲ ...{Loading}...
ಶಾಂತರುರೆ ವಿಜಿತೇಂದ್ರಿಯರು ವೇ
ದಾಂತ ನಿಷ್ಠರು ಸುವ್ರತಿಗಳ
ಶ್ರಾಂತ ವೇದಾಧ್ಯಯನ ಯಾಜ್ಞಿಕ ಕರ್ಮಕೋವಿದರು
ಸಂತತಾನುಷ್ಠಾನಪರರನ
ದೆಂತು ನೀವಾಕ್ರಮಿಸುವಿರಿ ವಿ
ಭ್ರಾಂತರೌ ನೀವೆನುತ ಜರೆದರು ಕಾಮಿನೀಜನವ ॥12॥
೦೧೩ ಒದೆದು ಪದದಲಿ ...{Loading}...
ಒದೆದು ಪದದಲಿ ಕೆಂದಳಿರ ತೋ
ರಿದೆವಶೋಕೆಗೆ ಮಧ್ಯ ಗಂಡೂ
ಷದಲಿ ಬಳುಕದ ಮರನ ಬುಲ್ಲವಿಸಿದೆವು ಕುರುವಕಕೆ
ತುದಿಮೊಲೆಯ ಸೋಂಕಿನಲಿ ಹೂದೋ
ರಿದೆವು ಕಣ್ಣೋರೆಯಲಿ ತಿಲಕವ
ಕದುಕಿದೆವು ನೀವಾವ ಘನ ಪದವೆಂದರಬಲೆಯರು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶೋಕ ವೃಕ್ಷದ ಚಿಗುರನ್ನು ಕಾಲಲ್ಲಿ ತುಳಿದು ನಡುವನ್ನು ತೋರಿಸಿದೆವು. ಬಾಯಿ ಮುಕ್ಕಳಿಸಿ ಮರವನ್ನು ಫಲಗೊಳಿಸಿದೆವು. ಗೋರಟೆ ಗಿಡಕ್ಕೆ ಮೊಲೆ ತುದಿಯನ್ನು ತಾಗಿಸಿ ಹೂಬಿಡುವಂತೆ ಮಾಡಿದೆವು ತಿಲಕ ಪುಷ್ಪವನ್ನು ಕಣ್ಣೋಟದಿಂದಲೇ ಮುಚ್ಚುವಂತೆ ಮಾಡಿದೆವು. ಹಾಗಿರುವಾಗ ನೀವು ಯಾವ ಲೆಕ್ಕ ಎಂದು ಸ್ತ್ರೀಯರು ಕೇಳಿದರು.
ಪದಾರ್ಥ (ಕ.ಗ.ಪ)
ಗಂಡೂಷ-ಬಾಯಿ ಮುಕ್ಕಳಿಸು, ತಿಲಕ-ಒಂದು ಜಾತಿಯ ಮರ, ಕದುಕು-ಒತ್ತು, ಅದುಮು
ಮೂಲ ...{Loading}...
ಒದೆದು ಪದದಲಿ ಕೆಂದಳಿರ ತೋ
ರಿದೆವಶೋಕೆಗೆ ಮಧ್ಯ ಗಂಡೂ
ಷದಲಿ ಬಳುಕದ ಮರನ ಬುಲ್ಲವಿಸಿದೆವು ಕುರುವಕಕೆ
ತುದಿಮೊಲೆಯ ಸೋಂಕಿನಲಿ ಹೂದೋ
ರಿದೆವು ಕಣ್ಣೋರೆಯಲಿ ತಿಲಕವ
ಕದುಕಿದೆವು ನೀವಾವ ಘನ ಪದವೆಂದರಬಲೆಯರು ॥13॥
೦೧೪ ಬಲುಮೊಲೆಯ ಸೋಙ್ಕಿನಲಿ ...{Loading}...
ಬಲುಮೊಲೆಯ ಸೋಂಕಿನಲಿ ಶಾಂತರ
ತಲೆಕೆಳಕ ಮಾಡುವೆವು ಕಡೆಗ
ಣ್ಣಲಗಿನಲಿ ಕೊಯ್ದೆತ್ತುವೆವು ವಿಜಿತೇಂದ್ರಿಯರ ಮನವ
ಎಳೆನಗೆಗಳಲಿ ವೇದಪಾಠರ
ಕಲಕಿ ಮಿಗೆ ವೇದಾಂತನಿಷ್ಠರ
ಹೊಳಸಿ ದುವ್ವಾಳಿಸುವೆವೆಮಗಿದಿರಾರು ಲೋಕದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತನ ಸ್ಪರ್ಶದಿಂದಲೇ ತಪಸ್ವಿಗಳನ್ನು(ಮುಗ್ಧರನ್ನು) ಮರುಳುಗೊಳಿಸುತ್ತೇವೆ. ಇಂದ್ರಿಯಗಳನ್ನು ಗೆದ್ದವರನ್ನು ಕಡೆಗಣ್ಣನೋಟವೆಂಬ ಖಡ್ಗದಿಂದಲೇ ಕತ್ತರಿಸುತ್ತೇವೆ. ಕಿರುನಗೆಯಿಂದಲೇ ವೇದ ಪಾರಾಯಣ ಮಾಡುವವರ ಮನಸ್ಸನ್ನು ಕಲಕಿ, ವೇದಾಂತ ನಿಷ್ಠರನ್ನು ಹೊರಳಿಸುತ್ತೇವೆ. ನಮ್ಮನ್ನು ಲೋಕದಲ್ಲಿ ಯಾರು ಎದುರಿಸಬಲ್ಲರು?
ಮೂಲ ...{Loading}...
ಬಲುಮೊಲೆಯ ಸೋಂಕಿನಲಿ ಶಾಂತರ
ತಲೆಕೆಳಕ ಮಾಡುವೆವು ಕಡೆಗ
ಣ್ಣಲಗಿನಲಿ ಕೊಯ್ದೆತ್ತುವೆವು ವಿಜಿತೇಂದ್ರಿಯರ ಮನವ
ಎಳೆನಗೆಗಳಲಿ ವೇದಪಾಠರ
ಕಲಕಿ ಮಿಗೆ ವೇದಾಂತನಿಷ್ಠರ
ಹೊಳಸಿ ದುವ್ವಾಳಿಸುವೆವೆಮಗಿದಿರಾರು ಲೋಕದಲಿ ॥14॥
೦೧೫ ಎನುತ ಕವಿದುದು ...{Loading}...
ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದರಿವದಿರು ಮಂದಿ ಸಂದಣಿಸಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತ , ಮತ್ತೆ ದುರ್ಯೋಧನನ ಅರಮನೆಯ ನಾರೀವೃಂದವು ತಪೋವನವನ್ನು ಆಕ್ರಮಿಸಿತು. ಮನ್ಮಥನ ಸೇನೆಯೇ ಇವರನ್ನು ನೂಕಿ ಎಚ್ಚರಿಸಿತೋ ಎಂಬಂತೆ, ಈ ಸ್ತ್ರೀಯರ ಎದುರು ಋಷಿ ಮುನಿಗಳ ಗುಂಪು ಚೆಲ್ಲಾಪಿಲ್ಲಿಯಾಯಿತು.
ಪದಾರ್ಥ (ಕ.ಗ.ಪ)
ನಿಕುರುಂಬ - ಸಮೂಹ
ಮೂಲ ...{Loading}...
ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದರಿವದಿರು ಮಂದಿ ಸಂದಣಿಸಿ ॥15॥
೦೧೬ ಈಕೆ ಪಾಣ್ಡವಸತಿ ...{Loading}...
ಈಕೆ ಪಾಂಡವಸತಿ ಕಣಾ ತೆಗೆ
ಯೀಕೆಯತಿ ದಾರಿದ್ರ ಮಾನುಷೆ
ಯೀಕೆಯಲ್ಲೊಳಗಿಹಳು ರಾಣೀವಾಸವೆಂಬರಲೆ
ಈಕೆಯಹುದಲ್ಲಿದಕೆ ಪಣವೇ
ನೀಕೆ ಬಣಗಕಟೆಂದು ಕಾಂತಾ
ನೀಕ ತಮ್ಮೊಳು ನುಡಿವುತಿದ್ದುದು ತೋರಿ ಬೆರಲಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16.“ಇವಳು ಪಾಂಡವರ ಹೆಂಡತಿ ದ್ರೌಪದಿಯಲ್ಲವೆ? ಇಲ್ಲ, ಇವಳು ಯಾರೋ ಅತಿ ದರಿದ್ರ ಮನುಷ್ಯಳು. ಈಕೆ ದ್ರೌಪದಿಯಲ್ಲ. ಅಲ್ಲಿ ಒಳಗಿದ್ದಾಳೆ ಎನ್ನುತ್ತಾರಲ್ಲ? ಇಲ್ಲ ಇವಳೇ ದ್ರೌಪದಿ, ಇದು ನಿಜ. ಇದಕ್ಕೆ ಏನು ಪಣ? ಇವಳು ಯಾರೋ ಒಬ್ಬಳು ಅಲ್ಪಳು. ಅಯ್ಯೋ” ಎಂದು ಆ ಸ್ತ್ರೀಯರು ಬೆರಳು ತೋರಿಸುತ್ತಾ ತಾವು ತಾವೇ ಮಾತನಾಡಿಕೊಂಡರು.
ಪದಾರ್ಥ (ಕ.ಗ.ಪ)
ಮಾನುಷೆ - ಹೆಂಗಸು
ರಾಣೀವಾಸ - ಹೆಂಡತಿ , ಅಂತಃಪುರದ ಸ್ತ್ರೀ
ಮೂಲ ...{Loading}...
ಈಕೆ ಪಾಂಡವಸತಿ ಕಣಾ ತೆಗೆ
ಯೀಕೆಯತಿ ದಾರಿದ್ರ ಮಾನುಷೆ
ಯೀಕೆಯಲ್ಲೊಳಗಿಹಳು ರಾಣೀವಾಸವೆಂಬರಲೆ
ಈಕೆಯಹುದಲ್ಲಿದಕೆ ಪಣವೇ
ನೀಕೆ ಬಣಗಕಟೆಂದು ಕಾಂತಾ
ನೀಕ ತಮ್ಮೊಳು ನುಡಿವುತಿದ್ದುದು ತೋರಿ ಬೆರಲಿನಲಿ ॥16॥
೦೧೭ ಕುಣಿವರನ್ದುಗೆ ಕಾಲ ...{Loading}...
ಕುಣಿವರಂದುಗೆ ಕಾಲ ಝಣ ಝಣ
ಝಣ ಝಣತ್ಕೃತಿ ರಭಸ ಮಿಗೆ ಕಂ
ಕಣದ ದನಿದೋರುವರು ನುಡಿ ನುಡಿಸಿಕ್ಕಿ ಕಂಧದಲಿ
ಮಣಿಮಯದ ಕುಂಡಲವನಲುಗಿಸಿ
ಯೆಣಿಸುವಂತಿರೆ ಕೊರಳ ಹಾರದ
ಮಣಿಗಳನು ಮುತ್ತುಗಳ ಮೆರೆವರು ಮುರಿದ ಮೌಳಿಯಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಗೆಜ್ಜೆಯ ಝಣತ್ಕಾರ ಕೇಳುವಂತೆ ಕುಣಿದರು. ಕೊರಳಿನ ಮಾತೇ ಕೆಳಿಸದಂತೆ ಕೈಬಳೆಯ ಧ್ವನಿ ಮಾಡಿದರು. ಕಿರೀಟವನ್ನು ಓರೆ ಮಾಡುತ್ತಾ, ಮಣಿಕುಂಡಲಗಳನ್ನು ಅಲುಗಾಡಿಸುತ್ತಾ, ಕಂಠಹಾರದ ಮುತ್ತಿನ ಮಣಿಗಳನ್ನು ಮೆರೆದರು.
ಪದಾರ್ಥ (ಕ.ಗ.ಪ)
ಕಂಧ-ಕೊರಳು
ಮೂಲ ...{Loading}...
ಕುಣಿವರಂದುಗೆ ಕಾಲ ಝಣ ಝಣ
ಝಣ ಝಣತ್ಕೃತಿ ರಭಸ ಮಿಗೆ ಕಂ
ಕಣದ ದನಿದೋರುವರು ನುಡಿ ನುಡಿಸಿಕ್ಕಿ ಕಂಧದಲಿ
ಮಣಿಮಯದ ಕುಂಡಲವನಲುಗಿಸಿ
ಯೆಣಿಸುವಂತಿರೆ ಕೊರಳ ಹಾರದ
ಮಣಿಗಳನು ಮುತ್ತುಗಳ ಮೆರೆವರು ಮುರಿದ ಮೌಳಿಯಲಿ ॥17॥
೦೧೮ ಬಳಿಯಲೈದಿತು ಮುನಿಗಳಿವರುಪ ...{Loading}...
ಬಳಿಯಲೈದಿತು ಮುನಿಗಳಿವರುಪ
ಟಳವನರಸಂಗರುಹಿದರು ವೆ
ಗ್ಗಳಿಸಿ ಭೀಮಂಗೆಂದರರ್ಜುನ ಯಮಳರಿದಿರಿನಲಿ
ಉಳಿದರೆಮಗೀ ವನ ವಿಟಾಳ
ಪ್ರಳಯವಾದುದು ಕಾನನಾಂತರ
ನಿಳಯದಲಿ ನಿಲಿಸೆಮ್ಮನೆಂದುದು ಸಕಲ ಮುನಿನಿಕರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ಉಪಟಳವನ್ನು ಮುನಿ ಸಮೂಹ ಧರ್ಮರಾಯನಲ್ಲಿಗೆ ಹೋಗಿ ತಿಳಿಸಿತು. ಭೀರ್ಮಾರ್ಜುನ ನಕುಲ ಸಹದೇವರಿಗೂ ದೂರಿತು. “ಇಲ್ಲಿ ಉಳಿಯೋಣವೆಂದರೆ ಈ ಅರಣ್ಯದಲ್ಲಿ ಭಯಂಕರ ಪ್ರಳಯವಾಯಿತು. ನಮ್ಮನ್ನು ಬೇರೆ ಯಾವುದಾರೂ ಕಾಡಿಗೆ ಕರೆದುಕೊಂಡು ಹೋಗಿ " ಎಂದು ವಿನಂತಿಸಿತು.
ಪದಾರ್ಥ (ಕ.ಗ.ಪ)
ವಿಟಾಳ - ಭಯಂಕರ
ಮೂಲ ...{Loading}...
ಬಳಿಯಲೈದಿತು ಮುನಿಗಳಿವರುಪ
ಟಳವನರಸಂಗರುಹಿದರು ವೆ
ಗ್ಗಳಿಸಿ ಭೀಮಂಗೆಂದರರ್ಜುನ ಯಮಳರಿದಿರಿನಲಿ
ಉಳಿದರೆಮಗೀ ವನ ವಿಟಾಳ
ಪ್ರಳಯವಾದುದು ಕಾನನಾಂತರ
ನಿಳಯದಲಿ ನಿಲಿಸೆಮ್ಮನೆಂದುದು ಸಕಲ ಮುನಿನಿಕರ ॥18॥
೦೧೯ ಅರಸಲಾ ಕುರುರಾಯನಾತನ ...{Loading}...
ಅರಸಲಾ ಕುರುರಾಯನಾತನ
ಬರವು ತುರುಪಟ್ಟಿಗಳ ಗೋ ವಿ
ಸ್ತರಣೆಗೋಸುಗವೈಸೆ ಪಾಳೆಯ ಸಾರ್ವಭೌಮನದು
ಪರಿಸರದಲಿದ್ದುದು ವಿನೋದಕೆ
ತರುಣಿಯರು ಬರಲೇಕೆ ನೀವ
ಬ್ಬರಿಸುವಿರಿ ನಮ್ಮವರಲಾಯೆಂದನು ಮಹೀಪಾಲ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಂದಿರುವವನು ಕೌರವರಾಯನಲ್ಲವೆ ? ಅವನು ಗೋಶಾಲೆ ಗೋವುಗಳ ವಿಸ್ತರಣೆಗಾಗಿ ಬಂದದ್ದಲ್ಲವೆ ? ಅವನೇ ಸಾರ್ವಭೌಮನಾಗಿರುವಾಗ ಆಡಳಿತ ಅವನದ್ದಲ್ಲವೆ ? ಮನೋರಂಜನೆಗಾಗಿ ಸ್ತ್ರೀಯರು ಈ ಪರಿಸರಕ್ಕೆ ಬಂದರೆ ನೀವೇಕೆ ಸಿಡುಕುತ್ತೀರಿ ? ಅವರು ನಮ್ಮವರೇ ತಾನೇ ?” ಎಂದು ಧರ್ಮರಾಯನು ಕೇಳಿದನು.
ಮೂಲ ...{Loading}...
ಅರಸಲಾ ಕುರುರಾಯನಾತನ
ಬರವು ತುರುಪಟ್ಟಿಗಳ ಗೋ ವಿ
ಸ್ತರಣೆಗೋಸುಗವೈಸೆ ಪಾಳೆಯ ಸಾರ್ವಭೌಮನದು
ಪರಿಸರದಲಿದ್ದುದು ವಿನೋದಕೆ
ತರುಣಿಯರು ಬರಲೇಕೆ ನೀವ
ಬ್ಬರಿಸುವಿರಿ ನಮ್ಮವರಲಾಯೆಂದನು ಮಹೀಪಾಲ ॥19॥
೦೨೦ ಔಡುಗಚ್ಚಿದನಙ್ಘ್ರಿಯಲಿ ನೆಲ ...{Loading}...
ಔಡುಗಚ್ಚಿದನಂಘ್ರಿಯಲಿ ನೆಲ
ಬೀಡು ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ
ನೋಡಿದನು ಕುರುರಾಯನಲಿ ಹೊ
ಯ್ದಾಡಿ ಬರಬೇಕೆಂಬ ಭೀಮನ
ಮೋಡಿಯನು ನೃಪನರಿದು ಸಂತೈಸಿದನು ಸಾಮದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ತುಟಿಕಚ್ಚಿ, ಪಾದದಲ್ಲಿ ನೆಲವನ್ನು ಒಡೆಯುವಂತೆ ಒದೆದನು. ಕೈಬೆರಳಲ್ಲಿ ಗದಾದಂಡವನ್ನು ಸಿಟ್ಟಿನಿಂದ ಮುರಿಯುವಂತೆ ಒತ್ತಿದನು. ಕೌರವನೊಂದಿಗೆ ಕಾದಾಡಬೇಕೆಂಬ ಭೀಮನ ಈ ಅಭಿಪ್ರಾಯವನ್ನು ತಿಳಿದು ಧರ್ಮರಾಯನು ಅವನನ್ನು ಸಾಮ ಮಾತುಗಳಿಂದ ಸಂತೈಸಿದನು.
ಮೂಲ ...{Loading}...
ಔಡುಗಚ್ಚಿದನಂಘ್ರಿಯಲಿ ನೆಲ
ಬೀಡು ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ
ನೋಡಿದನು ಕುರುರಾಯನಲಿ ಹೊ
ಯ್ದಾಡಿ ಬರಬೇಕೆಂಬ ಭೀಮನ
ಮೋಡಿಯನು ನೃಪನರಿದು ಸಂತೈಸಿದನು ಸಾಮದಲಿ ॥20॥
೦೨೧ ಕರೆಸಿದನು ನೃಪ ...{Loading}...
ಕರೆಸಿದನು ನೃಪ ವಾರಿ ಕೇಳಿಗೆ
ವರ ವಧೂವರ್ಗವನು ಕೇಳಿದು
ತಿರುಗಿತಂಗಜ ಥಟ್ಟು ಝಣ ಝಣ ರವದ ರಭಸದಲಿ
ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿ
ಭರದಿ ಗಮನಸ್ವೇದಜಲ ಮಘಮಘಿಸೆ ದೆಸೆದೆಸೆಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಜಲಕೇಳಿಗಾಗಿ ನಾರಿಯರನ್ನು ಕರೆಸಿಕೊಂಡನು. ಮನ್ಮಥನ ಸೇನೆಯಂತೆ ಅವರು ಝಣಝಣತ್ಕಾರದಿಂದ ಹಿಂತಿರುಗಿ ಹೊರಟರು. ಒಂದು ಕೈಯಲ್ಲಿ ಸರಿದು ಜಾರುತ್ತಿರುವ ನಿರಿಗೆ, ಇನ್ನೊಂದು ಕೈಯಲ್ಲಿ ಹೂಚೆಲ್ಲುವ ಮುಡಿಯನ್ನು ಹಿಡಿದುಕೊಂಡು, ದಿಕ್ಕುದಿಕ್ಕಿಗೆ ಬೆವರು ಕಂಪು ಬೀರುತ್ತಿರಲು ಅವರು ಹೊರಟರು.
ಮೂಲ ...{Loading}...
ಕರೆಸಿದನು ನೃಪ ವಾರಿ ಕೇಳಿಗೆ
ವರ ವಧೂವರ್ಗವನು ಕೇಳಿದು
ತಿರುಗಿತಂಗಜ ಥಟ್ಟು ಝಣ ಝಣ ರವದ ರಭಸದಲಿ
ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿ
ಭರದಿ ಗಮನಸ್ವೇದಜಲ ಮಘಮಘಿಸೆ ದೆಸೆದೆಸೆಗೆ ॥21॥
೦೨೨ ಬಲುಮೊಲೆಗಳಳ್ಳಿರಿಯಲೇಕಾ ...{Loading}...
ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದ
ಕಳಚಿ ನಡುಗಿಸಿ ನಡುವನಂಜಿಸಿ ಜಘನಮಂಡಲವ
ಅಳಕ ನಿಕರವ ಕುಣಿಸಿ ಮಣಿ ಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು ತನಿಗೆದರಿ ನಡೆದುದು ಕೂಡೆ ಸತಿ ನಿವಹ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲ್ಮೊಲೆಗಳನ್ನು ಒತ್ತುವ ಏಕಾವಳಿಸರವನ್ನು ಬದಿಗೊತ್ತಿ, ಮೇಲು ಸೆರಗನ್ನು ತೆಗೆದು, ಸೊಂಟವನ್ನು ಬಳುಕಿಸಿ, ಜಘನಗಳನ್ನು ಮುಚ್ಚಿ, ಮುಂಗುರುಳನ್ನು ಕುಣಿಸಿ, ಮಣಿ ಕುಂಡಲಗಳನ್ನು ಅಲುಗಾಡಿಸಿ, ಹಣೆಯಲ್ಲಿರುವ ಮುತ್ತಿನ ತಿಲಕವನ್ನು ಕೆದರಿ ನಾರಿಯರು ಒಟ್ಟಾಗಿ ಹೊರಟರು.
ಪದಾರ್ಥ (ಕ.ಗ.ಪ)
ಅಳ್ಳಿರಿ - ವ್ಯಾಪಿಸು
ಮೂಲ ...{Loading}...
ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದ
ಕಳಚಿ ನಡುಗಿಸಿ ನಡುವನಂಜಿಸಿ ಜಘನಮಂಡಲವ
ಅಳಕ ನಿಕರವ ಕುಣಿಸಿ ಮಣಿ ಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು ತನಿಗೆದರಿ ನಡೆದುದು ಕೂಡೆ ಸತಿ ನಿವಹ ॥22॥
೦೨೩ ತಾರಕಿಗಳುಳಿದಮ್ಬರದ ವಿ ...{Loading}...
ತಾರಕಿಗಳುಳಿದಂಬರದ ವಿ
ಸ್ತಾರವೋ ಗತ ಹಂಸಕುಲ ಕಾ
ಸಾರವೋ ನಿರ್ಮಲ ತಪೋವನವೆನಲು ರಂಜಿಸಿತು
ನಾರಿಯರ ದಳ ತಿರುಗಿದರೆ ತನಿ
ಸೌರಭದ ದಳ ತೆಗೆಯದಾ ಕಾಂ
ತಾರದೊಳಗೇನೆಂಬೆನಾ ಸೌಗಂಧ ಬಂಧುರವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕ್ಷತ್ರಗಳಿಲ್ಲದ ಆಕಾಶದ ವಿಸ್ತಾರವೋ, ಹಂಸೆಗಳು ನಿರ್ಗಮಿಸಿದ ಸರೋವರವೋ ಎಂಬಂತೆ ತಪೋವನವು ನಿರ್ಮಲವಾಗಿ ಶೋಭಿಸಿತು. ನಾರಿಯರು ಹೊರಟುಹೋದ ಮೇಲೂ, ಅವರ ತನು ಗಂಧದಿಂದಾಗಿ ವನಪ್ರದೇಶವು ಪರಿಮಳಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಕಾಸಾರ - ಸರೋವರ
ಮೂಲ ...{Loading}...
ತಾರಕಿಗಳುಳಿದಂಬರದ ವಿ
ಸ್ತಾರವೋ ಗತ ಹಂಸಕುಲ ಕಾ
ಸಾರವೋ ನಿರ್ಮಲ ತಪೋವನವೆನಲು ರಂಜಿಸಿತು
ನಾರಿಯರ ದಳ ತಿರುಗಿದರೆ ತನಿ
ಸೌರಭದ ದಳ ತೆಗೆಯದಾ ಕಾಂ
ತಾರದೊಳಗೇನೆಂಬೆನಾ ಸೌಗಂಧ ಬಂಧುರವ ॥23॥
೦೨೪ ಅರಸ ಕೇಳೈ ...{Loading}...
ಅರಸ ಕೇಳೈ ವಾರಿ ಕೇಳಿಗೆ
ಕುರುಪತಿಯ ನೇಮದಲಿ ಶತ ಸಾ
ವಿರ ಸರೋಜಾನನೆಯರೈದಿತು ವನವನಂಗಳಲಿ
ಪರಿಮಳದ ಪಸರಣದ ಪದ್ಮಾ
ಕರ ಸಹಸ್ರದ ಸಾಲ ಸುಮನೋ
ಹರ ಮಹೋದ್ಯಾನವನು ಕಂಡೈತಂದರಬಲೆಯರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಕೌರವನ ಆಜ್ಞೆಯಂತೆ ಲಕ್ಷ ಸಂಖ್ಯೆಯ ನಾರಿಯರು ಜಲಕೇಳಿಗಾಗಿ ವಿವಿಧ ವನಗಳಿಗೆ ಬಂದರು. ಸುಗಂಧ ಸೂಸುತ್ತಾ ಸಾಲುಸಾಲಾಗಿರುವ ಸಾವಿರ ಕಮಲ ಸರೋವರಗಳಿರುವ ಉದ್ಯಾನವನ್ನು ನೋಡುತ್ತಾ ನಾರಿಯರು ಬಂದರು.
ಪದಾರ್ಥ (ಕ.ಗ.ಪ)
ಪದ್ಮಾಕರ - ಕೊಳ
ಮೂಲ ...{Loading}...
ಅರಸ ಕೇಳೈ ವಾರಿ ಕೇಳಿಗೆ
ಕುರುಪತಿಯ ನೇಮದಲಿ ಶತ ಸಾ
ವಿರ ಸರೋಜಾನನೆಯರೈದಿತು ವನವನಂಗಳಲಿ
ಪರಿಮಳದ ಪಸರಣದ ಪದ್ಮಾ
ಕರ ಸಹಸ್ರದ ಸಾಲ ಸುಮನೋ
ಹರ ಮಹೋದ್ಯಾನವನು ಕಂಡೈತಂದರಬಲೆಯರು ॥24॥
೦೨೫ ರಾಯಕುವರರು ಸಚಿವ ...{Loading}...
ರಾಯಕುವರರು ಸಚಿವ ಮಂತ್ರಿ ಪ
ಸಾಯತರ ಮಕ್ಕಳು ಚಮೂಪರ
ನಾಯಕರ ನಂದನರು ವಿಟರು ವಿನೋದಿಗಳು ಪುರದ
ಆಯತಾಕ್ಷಿಯರೊಡನೆ ರಾವುತ
ಪಾಯಕರ ಸುತರಾಳಿ ಮೇಳ ನ
ವಾಯಿಗಳ ನಾಗರಿಕರೈದಿತು ಕೋಟಿ ಸಂಖ್ಯೆಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಕುಮಾರರು, ಸಚಿವ, ಮಂತ್ರಿ, ಪಸಾಯತರ ಮಕ್ಕಳು, ಸೇನಾಪತಿಗಳ ಮಕ್ಕಳು, ವಿಟರು, ವಿನೋದಿಗಳು, ಕುದುರೆಸವಾರರ ಮಕ್ಕಳು, ಸ್ತ್ರೀಯರು, ನಾಗರಿಕರು ಎಲ್ಲರೂ ಕೋಟಿ ಸಂಖ್ಯೆಯಲ್ಲಿ ವೈಭವದಿಂದ ಹೊರಟು ಬಂದರು.
ಪದಾರ್ಥ (ಕ.ಗ.ಪ)
ಪಸಾಯತರು - ಅಧಿಕಾರಿಗಳು
ಮೂಲ ...{Loading}...
ರಾಯಕುವರರು ಸಚಿವ ಮಂತ್ರಿ ಪ
ಸಾಯತರ ಮಕ್ಕಳು ಚಮೂಪರ
ನಾಯಕರ ನಂದನರು ವಿಟರು ವಿನೋದಿಗಳು ಪುರದ
ಆಯತಾಕ್ಷಿಯರೊಡನೆ ರಾವುತ
ಪಾಯಕರ ಸುತರಾಳಿ ಮೇಳ ನ
ವಾಯಿಗಳ ನಾಗರಿಕರೈದಿತು ಕೋಟಿ ಸಂಖ್ಯೆಯಲಿ ॥25॥
೦೨೬ ತವಗ ತಳಿ ...{Loading}...
ತವಗ ತಳಿ ಮುಳುವೇಲಿ ಬಾಗಿಲ
ಜವಳಿಗದ ಬೀಯಗದಲಿದ್ದುದು
ದಿವಿಜವನವುದ್ದಂಡತರ ಪರಿಮಳದ ಪೂರದಲಿ
ಯುವತಿಯರ ದಳ ನೂಕಿತುದಕೋ
ತ್ಸವ ವೃಥಾಕೇಳಿಯಲಿ ಕನಕೋ
ದ್ಭವ ಕವಾಟವನೊದೆದು ಕರೆದರು ಕಾಹಿನವರುಗಳ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗಲಿ, ಮರದ ಬೇಲಿ, ಮುಳ್ಳು ಬೇಲಿ, ಪ್ರವೇಶ ಸ್ಥಳದಲ್ಲಿದ್ದ ಬೀಗ ಹಾಕಿದ್ದ ಬಾಗಿಲುಗಳು, ಇವುಗಳಿಂದ ಕೂಡಿರುವ ಸುರಸರೋವರವೊಂದು ಪರಿಮಳಯುಕ್ತವಾಗಿತ್ತು. ಅದರ ಬಂಗಾರದ ಬಾಗಿಲನ್ನು ಜಲಕೇಳಿಗಾಗಿ ಹೊರಟ ತರುಣಿಯರ ಗುಂಪು ಕಾಲಿಂದ ಒದೆದು, ಕಾವಲು ಭಟರನ್ನು ಕರೆಯಿತು.
ಪದಾರ್ಥ (ಕ.ಗ.ಪ)
ತವಗ-ಜಗಲಿ ತಳಿ-ಮರದ ಬೇಲಿ
ಮೂಲ ...{Loading}...
ತವಗ ತಳಿ ಮುಳುವೇಲಿ ಬಾಗಿಲ
ಜವಳಿಗದ ಬೀಯಗದಲಿದ್ದುದು
ದಿವಿಜವನವುದ್ದಂಡತರ ಪರಿಮಳದ ಪೂರದಲಿ
ಯುವತಿಯರ ದಳ ನೂಕಿತುದಕೋ
ತ್ಸವ ವೃಥಾಕೇಳಿಯಲಿ ಕನಕೋ
ದ್ಭವ ಕವಾಟವನೊದೆದು ಕರೆದರು ಕಾಹಿನವರುಗಳ ॥26॥
೦೨೭ ಆರಿವರು ಕರೆವವರೆನುತ ...{Loading}...
ಆರಿವರು ಕರೆವವರೆನುತ ಸುರ
ವೀರರೌಕಿತು ಬಾಗಿಲಲಿ ನೀ
ವಾರೆನಲು ತೆಗೆ ಕದವನರಿಯಾ ರಾಯನರಮನೆಯ
ವಾರನಾರಿಯರವನಿಪತಿಯ ಕು
ಮಾರರಿದೆ ಬೇಹವರು ಸರಸಿಯ
ವಾರಿಕೇಳಿಗೆ ಬಂದೆವೆಂದರು ಗಜರಿ ಗರ್ಜಿಸುತ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಗಿಲಿನಲ್ಲಿ ಕರೆಯುವರು ಯಾರೆಂದು ದೇವತೆಗಳು ಬಂದಾಗ, ‘ನೀವು ಯಾರು?’ ಎಂದರು. “ಕದ ತೆಗೆಯಿರಿ. ನಾವು ಕೌರವರಾಯನ ಅರಮನೆಯ ಸ್ತ್ರೀಯರೆಂದು ತಿಳಿಯದೇ? ಅರಸುಕುಮಾರರೊಂದಿಗೆ ಜಲಕೇಳಿಗೆ ಬಂದಿದ್ದೇವೆ” ಎಂದು ರೋಷದಿಂದ ನುಡಿದರು.
ಪದಾರ್ಥ (ಕ.ಗ.ಪ)
ಬೇಹವರು - ಬೇಕಾದವರು
ಮೂಲ ...{Loading}...
ಆರಿವರು ಕರೆವವರೆನುತ ಸುರ
ವೀರರೌಕಿತು ಬಾಗಿಲಲಿ ನೀ
ವಾರೆನಲು ತೆಗೆ ಕದವನರಿಯಾ ರಾಯನರಮನೆಯ
ವಾರನಾರಿಯರವನಿಪತಿಯ ಕು
ಮಾರರಿದೆ ಬೇಹವರು ಸರಸಿಯ
ವಾರಿಕೇಳಿಗೆ ಬಂದೆವೆಂದರು ಗಜರಿ ಗರ್ಜಿಸುತ ॥27॥
೦೨೮ ಹೊಗಬಹುದೆ ಗನ್ಧರ್ವ ...{Loading}...
ಹೊಗಬಹುದೆ ಗಂಧರ್ವ ರಾಯನ
ಮಗನ ವನವಿದು ನೋಡಿದೊಡೆ ದೃಗು
ಯುಗಳದೆವೆ ಸೀವುದು ಕಣಾ ಫಡ ಹೋಗಿ ಹೋಗಿಯೆನೆ
ತೆಗೆ ವಿಕಾರವೆ ನಮ್ಮೊಡನೆ ತೆಗೆ
ತೆಗೆ ಕದವ ಗಂಧರ್ವನಾರಿಗೆ
ಮಗನದಾವವನೆನುತ ಹೊಕ್ಕರು ತಳಿಯ ಮುರಿದೊದೆದು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಗಂಧರ್ವ ರಾಜಕುಮಾರನ ಸರೋವರವಿದು. ಇದನ್ನು ಪ್ರವೇಶಿಸುವಂತಿಲ್ಲ. ನೋಡಿದ ಕೂಡಲೇ ಕಣ್ಣೆವೆಯೇ ಸೀದು ಹೋದೀತು. ಹೋಗಿ, ನಡೆಯಿರಿ’ ಎಂದು ಅವರು ಹೇಳಲು, ‘ಬಿಡು, ನಮ್ಮೊಂದಿಗೆ ವಾಗ್ವಾದವೆ ? ಬಾಗಿಲು ತೆಗೆ, ಗಂಧರ್ವ ಸ್ತ್ರೀಗೆ ಹುಟ್ಟಿದ ಮಗನಾವನು ?’ ಎಂದು ಯುವತಿಯರು ಬೇಲಿಯನ್ನು ಒದೆದು ಮುರಿದು ಒಳಹೊಕ್ಕರು.
ಮೂಲ ...{Loading}...
ಹೊಗಬಹುದೆ ಗಂಧರ್ವ ರಾಯನ
ಮಗನ ವನವಿದು ನೋಡಿದೊಡೆ ದೃಗು
ಯುಗಳದೆವೆ ಸೀವುದು ಕಣಾ ಫಡ ಹೋಗಿ ಹೋಗಿಯೆನೆ
ತೆಗೆ ವಿಕಾರವೆ ನಮ್ಮೊಡನೆ ತೆಗೆ
ತೆಗೆ ಕದವ ಗಂಧರ್ವನಾರಿಗೆ
ಮಗನದಾವವನೆನುತ ಹೊಕ್ಕರು ತಳಿಯ ಮುರಿದೊದೆದು ॥28॥
೦೨೯ ಒರಲಿದವು ಕಹಳೆಗಳು ...{Loading}...
ಒರಲಿದವು ಕಹಳೆಗಳು ಕಾಹಿನ
ಸುರಭಟರು ನೆರೆದಸಿ ಮುಸುಂಡಿಯ
ಪರಶು ಮುದ್ಗರ ಚಾಪ ಮಾರ್ಗಣ ಸಬಳ ಸೂನಗೆಯ
ಹರಿಗೆ ಖಡ್ಗದಲರಿಭಟರ ಚ
ಪ್ಪರಿಸಿದರು ಗಂಧರ್ವ ಭಟರಿಗೆ
ಕುರುಪತಿಯ ಸುಭಟರಿಗೆ ತೊಡಕಿತು ತೋಟಿ ತೋಪಿನಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಹಳೆಗಳು ಮೊಳಗಿದವು. ವನದಲ್ಲಿ ಕಾವಲುಗಾರರು ಗುಂಪುಗೂಡಿ ಖಡ್ಗ, ಮುಸುಂಡಿ, ಪರಶು, ಮುದ್ಗರ, ಬಿಲ್ಲು, ಬಾಣ, ಸಬಳ, ಸೂನಗೆ, ಹರಿಗೆ, ಖಡ್ಗ ಮುಂತಾದ ಆಯುಧಗಳನ್ನು ಹಿಡಿದು ಮುನ್ನುಗ್ಗಿ ಶತ್ರು ಸೈನಿಕರನ್ನು ಛೇಡಿಸಿದರು. ಕೌರವನ ಭಟರಿಗೂ ಗಂಧರ್ವಭಟರಿಗೂ ಕಾದಾಟ ಆರಂಭವಾಯ್ತು.
ಪದಾರ್ಥ (ಕ.ಗ.ಪ)
ಸೂನಗೆ -ಶೂಲ
ಹರಿಗೆ - ಗುರಾಣಿ
ಮೂಲ ...{Loading}...
ಒರಲಿದವು ಕಹಳೆಗಳು ಕಾಹಿನ
ಸುರಭಟರು ನೆರೆದಸಿ ಮುಸುಂಡಿಯ
ಪರಶು ಮುದ್ಗರ ಚಾಪ ಮಾರ್ಗಣ ಸಬಳ ಸೂನಗೆಯ
ಹರಿಗೆ ಖಡ್ಗದಲರಿಭಟರ ಚ
ಪ್ಪರಿಸಿದರು ಗಂಧರ್ವ ಭಟರಿಗೆ
ಕುರುಪತಿಯ ಸುಭಟರಿಗೆ ತೊಡಕಿತು ತೋಟಿ ತೋಪಿನಲಿ ॥29॥
೦೩೦ ಚೆಲ್ಲಿದರು ಚಪಳೆಯರು ...{Loading}...
ಚೆಲ್ಲಿದರು ಚಪಳೆಯರು ಮುನಿಜನ
ವೆಲ್ಲ ಪಾಂಡವರಾಶ್ರಮದ ಮೊದ
ಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ
ಚೆಲ್ಲೆಗಂಗಳ ಯುವತಿಯರ ನಾ
ನಲ್ಲಿ ಕಾಣೆನು ಕಾಮುಕರು ನಿಂ
ದಲ್ಲಿ ನಿಲ್ಲದೆ ಹರಿದರವನೀಪತಿಯ ಪಾಳಯಕೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ತ್ರೀಯರು ಚಲ್ಲಾಪಿಲ್ಲಿಯಾದರು. ಮುನಿಜನರು ಪಾಂಡವರ ಆಶ್ರಮಕ್ಕೆ ಓಡಿಹೋದರು. ಕಾವಲುಗಾರರು ಆಯುಧ ಪ್ರಯೋಗದಿಂದ ಮುಂಚೂಣಿಯ ಸೈನಿಕರನ್ನು ಎದುರಿಸಿದರು. ತರುಣೀ ಮಣಿಯರು ಓಡಿಹೋದರು. ಕಾಮುಕರು ಅಲ್ಲಿ ನಿಲ್ಲಲಾರದೆ ಅರಸನ ಪಾಳಯಕ್ಕೆ ಪಲಾಯನ ಮಾಡಿದರು.
ಮೂಲ ...{Loading}...
ಚೆಲ್ಲಿದರು ಚಪಳೆಯರು ಮುನಿಜನ
ವೆಲ್ಲ ಪಾಂಡವರಾಶ್ರಮದ ಮೊದ
ಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ
ಚೆಲ್ಲೆಗಂಗಳ ಯುವತಿಯರ ನಾ
ನಲ್ಲಿ ಕಾಣೆನು ಕಾಮುಕರು ನಿಂ
ದಲ್ಲಿ ನಿಲ್ಲದೆ ಹರಿದರವನೀಪತಿಯ ಪಾಳಯಕೆ ॥30॥
೦೩೧ ಬರಿಯ ಮಕ್ಕಳ ...{Loading}...
ಬರಿಯ ಮಕ್ಕಳ ತಂಡವೇ ಹೊ
ಕ್ಕಿರಿದುದವದಿರನುರುಬಿ ದಿವಿಜರು
ಜರೆದು ನೂಕಿತು ತೋಪಿನೊಳ ಬಿದ್ದವರ ಹೊರವಡಿಸಿ
ಮುರಿದ ತಳಿಗಳ ಬಲಿದು ಬಾಗಿಲ
ಹೊರಗೆ ನಿಂದರು ವಾರಿ ಕೇಳಿಯ
ಮರೆದು ಶೋಣಿತ ವಾರಿ ಕೇಳಿಗೆ ಬನ್ನಿ ನೀವೆನುತ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕ್ಕಳ ಗುಂಪು ಒಳಗೆ ಪ್ರವೇಶಿಸಿದಾಗ ಗಂಧರ್ವರು ಅವರನ್ನು ಬೈದು ದೂಡಿ, ಒಳಗೆ ಬಂದಿದ್ದವರನ್ನು ಹೊರಗೆ ಹಾಕಿದರು. ಮುರಿದ ಬೇಲಿಯನ್ನು ಬಲಪಡಿಸಿ, ಬಾಗಿಲಿನ ಹೊರಗಡೆ ನಿಂತು ‘ನೀವು ಜಲಕೇಳಿ ಮರೆತು ನೆತ್ತರ ಕೇಳಿಗೆ ಬನ್ನಿ’ ಎಂದು ಕರೆದರು.
ಮೂಲ ...{Loading}...
ಬರಿಯ ಮಕ್ಕಳ ತಂಡವೇ ಹೊ
ಕ್ಕಿರಿದುದವದಿರನುರುಬಿ ದಿವಿಜರು
ಜರೆದು ನೂಕಿತು ತೋಪಿನೊಳ ಬಿದ್ದವರ ಹೊರವಡಿಸಿ
ಮುರಿದ ತಳಿಗಳ ಬಲಿದು ಬಾಗಿಲ
ಹೊರಗೆ ನಿಂದರು ವಾರಿ ಕೇಳಿಯ
ಮರೆದು ಶೋಣಿತ ವಾರಿ ಕೇಳಿಗೆ ಬನ್ನಿ ನೀವೆನುತ ॥31॥
೦೩೨ ನೃಪಸುತರ ಪಡಿಬಲಕೆ ...{Loading}...
ನೃಪಸುತರ ಪಡಿಬಲಕೆ ಬಂದಿತು
ವಿಪುಳ ಬಲ ಹಲ್ಲಣಿಸಿ ಹೊಯ್ ಹೊಯ್
ಅಪಸದರ ಗಂಧರ್ವ ಸುಭಟರನೆನುತ ಸೂಟಿಯಲಿ
ಕುಪಿತರರೆಯಟ್ಟಿದರು ತೋಪಿನ
ಕಪಿಗಳಾವೆಡೆ ಕಾಣಬಹುದೆನು
ತುಪಚರಿತರೊಳ ಸರಿಯೆ ಹೊಗಿಸಿದರವರನಾ ವನವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸು ಮಕ್ಕಳ ಬೆಂಬಲಕ್ಕೆ ಇನ್ನೂ ಹೆಚ್ಚಿನ ಸೇನಾಬಲವು ಬಂದು, ಖೂಳರಾದ ಗಂಧರ್ವರನ್ನು ಹೊಡೆಯಿರಿ ಎನ್ನುತ್ತಾ ಕೋಪಗೊಂಡಿದ್ದ ಅವರು ಬೆನ್ನಟ್ಟಲು, ತೋಟದ ಕಪಿಗಳು ಎಲ್ಲಿ ಕಾಣಿಸುತ್ತಾರೆ ಎಂದು ಸಮೀಪಸ್ಥರಾದ ಗಂಧರ್ವರು ಒಳಗೆ ಸೇರಲು, ಇವರೂ ವನವನ್ನು ಹೊಕ್ಕರು.
ಪದಾರ್ಥ (ಕ.ಗ.ಪ)
ಅಪಸದ- ದುಷ್ಟ
ಮೂಲ ...{Loading}...
ನೃಪಸುತರ ಪಡಿಬಲಕೆ ಬಂದಿತು
ವಿಪುಳ ಬಲ ಹಲ್ಲಣಿಸಿ ಹೊಯ್ ಹೊಯ್
ಅಪಸದರ ಗಂಧರ್ವ ಸುಭಟರನೆನುತ ಸೂಟಿಯಲಿ
ಕುಪಿತರರೆಯಟ್ಟಿದರು ತೋಪಿನ
ಕಪಿಗಳಾವೆಡೆ ಕಾಣಬಹುದೆನು
ತುಪಚರಿತರೊಳ ಸರಿಯೆ ಹೊಗಿಸಿದರವರನಾ ವನವ ॥32॥
೦೩೩ ಬನ್ದ ಬಲ ...{Loading}...
ಬಂದ ಬಲ ಹೇರಾಳ ತೆಗೆ ತೆಗೆ
ಯೆಂದು ತೋಪಿನ ಕಡೆಗೆ ಹಾಯಿದು
ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ
ಬಂದುದದು ನಡುವನಕೆ ಕೌರವ
ವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚ ಸಲಿಲಕ್ರೀಡೆಯಿದೆಯೆನುತ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೇರಳವಾದ ಸೇನೆ ಬಂದಿದೆ ಎಂದು ತಿಳಿದು ಗಂಧರ್ವ ಭಟರೂ ಹೆಚ್ಚು ಸಂಖ್ಯೆಯಲ್ಲಿ ತೋಟದಲ್ಲಿ ನೆರೆದರು. ನಡುವನಕ್ಕೆ ಅವರು ಬಂದಾಗ ‘ವಿನೋದಕ್ಕಾಗಿ ಬಂದಿರಾ ? ಬಾಣಗಳ ಜಲಕ್ರೀಡೆ ನಿಮಗಿದೆ’ ಎಂದು ಕೌರವನ ಕಡೆಯರನ್ನು ಕರೆದರು.
ಪದಾರ್ಥ (ಕ.ಗ.ಪ)
ನಾರಾಚ - ಬಾಣ
ಮೂಲ ...{Loading}...
ಬಂದ ಬಲ ಹೇರಾಳ ತೆಗೆ ತೆಗೆ
ಯೆಂದು ತೋಪಿನ ಕಡೆಗೆ ಹಾಯಿದು
ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ
ಬಂದುದದು ನಡುವನಕೆ ಕೌರವ
ವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚ ಸಲಿಲಕ್ರೀಡೆಯಿದೆಯೆನುತ ॥33॥
೦೩೪ ಮುರಿಯೆಸುತ ಗನ್ಧರ್ವಬಲ ...{Loading}...
ಮುರಿಯೆಸುತ ಗಂಧರ್ವಬಲ ಮು
ಕ್ಕುರಿಕಿ ಕೌರವ ಬಲವ ತತ್ತರಿ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳಯವ
ಹೊರಗುಡಿಯ ಹೊರಪಾಳಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರೆದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವಭಟರು ಮುಂದೊತ್ತಿ ಕೌರವ ಬಲವನ್ನು ಸೋಲಿಸಿ, ಅವರ ಪಾಳಯಕ್ಕೆ ಕಳುಹಿಸಿದರು. ಈ ಸುದ್ದಿಯನ್ನು ಹೊರವಲಯದಲ್ಲಿರುವ ಭಟರು ಕೌರವನಿಗೆ ತಿಳಿಸಿದರು. ಆಗ ಸಿಟ್ಟಿನಿಂದ ಕೌರವನು ಅಕ್ಷೋಹಿಣಿ ಸಂಖ್ಯೆಯ ವೀರರನ್ನು ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಮುಕ್ಕುರಿಕಿ - ಆವರಿಸಿ
ತತ್ತರಿದರಿ - ಕತ್ತರಿಸು
ಮೂಲ ...{Loading}...
ಮುರಿಯೆಸುತ ಗಂಧರ್ವಬಲ ಮು
ಕ್ಕುರಿಕಿ ಕೌರವ ಬಲವ ತತ್ತರಿ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳಯವ
ಹೊರಗುಡಿಯ ಹೊರಪಾಳಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರೆದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ ॥34॥
೦೩೫ ಹಲ್ಲಣಿಸಿತೀ ಚಾತುರಙ್ಗವ ...{Loading}...
ಹಲ್ಲಣಿಸಿತೀ ಚಾತುರಂಗವ
ದೆಲ್ಲ ಕವಿದುದು ಹೊಕ್ಕು ದಿವಿಜರ
ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ
ನಿಲ್ಲದೌಕಿದರಂತಕನ ಪುರ
ದೆಲ್ಲೆಯಲಿ ಹೆಕ್ಕಳದ ಖಡುಗದ
ಘಲ್ಲಣೆಯ ಖಣಿಖಣಿಲ ಗಾಢಿಕೆ ಕಂಟಿಸಿತು ನಭವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿದ್ಧವಾಗಿ ಬಂದ ಚತುರಂಗ ಬಲ ಗಂಧರ್ವ ವೀರರನ್ನು ತೋಟದೊಳಗೆ ಸದೆಬಡಿದು, ಯಮನಾಲಯಕ್ಕೆ ನೂಕಿತು. ಅತಿಶಯವಾದ ಖಡ್ಗಗಳ ಪರಸ್ಪರ ಖಣಿ ಖಣಿಲೆಂಬ ಶಬ್ದ ಆಕಾಶವನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಹೆಕ್ಕಳ - ಅತಿಶಯ
ಮೂಲ ...{Loading}...
ಹಲ್ಲಣಿಸಿತೀ ಚಾತುರಂಗವ
ದೆಲ್ಲ ಕವಿದುದು ಹೊಕ್ಕು ದಿವಿಜರ
ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ
ನಿಲ್ಲದೌಕಿದರಂತಕನ ಪುರ
ದೆಲ್ಲೆಯಲಿ ಹೆಕ್ಕಳದ ಖಡುಗದ
ಘಲ್ಲಣೆಯ ಖಣಿಖಣಿಲ ಗಾಢಿಕೆ ಕಂಟಿಸಿತು ನಭವ ॥35॥
೦೩೬ ಬಲದ ಪದ ...{Loading}...
ಬಲದ ಪದ ಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದುವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶರ ಸಾಲ ಶಮಿ ಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ಕಾಲುನಡೆಗೆ ಸಾಲು ಸಾಲಾದ ಅಡಿಕೆ ಮರಗಳು, ಕಪಿತ್ಥ, ಲವಂಗ, ತುಂಬುರ, ನಿಂಬೆ, ದಾಳಿಂಬೆ, ಪಲಾಶರ, ಸಾಲ , ಶಮಿ, ಗುಗ್ಗುಳ, ಮಧುಕ, ಅಶೋಕ, ಬಿಲ್ವ, ನೆಲ್ಲಿ, ನೇರಳೆ ಮುಂತಾದ ಹೆಮ್ಮರಗಳು ನಿಮಿಷದಲ್ಲಿ ನೆಲಕ್ಕೆ ಉರುಳಿದವು.
ಪದಾರ್ಥ (ಕ.ಗ.ಪ)
ತುಂಬುರ - ಕಾಡು ಮಾವಿನ ಮರ
ಪಲಾಶ- ಮುತ್ತುಗ
ಪೂಗ- ಅಡಿಕೆ
ಕಪಿತ್ಥ - ಬೇಲ
ಮಧುಕ - ಹಿಪ್ಪೆ
ಆಮಲಕ - ನೆಲ್ಲಿ
ಜಂಬೀರ - ನಿಂಬೆ
ಸಾಲ -ಸರ್ಜ ವೃಕ್ಷ
ಮೂಲ ...{Loading}...
ಬಲದ ಪದ ಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದುವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶರ ಸಾಲ ಶಮಿ ಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ ॥36॥
೦೩೭ ಕದಡಿದವು ಸರಸಿಗಳು ...{Loading}...
ಕದಡಿದವು ಸರಸಿಗಳು ಕೆಡೆದವು
ಕದಳಿಗಳು ಗೊನೆಸಹಿತ ಮುಂಡಿಗೆ
ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು
ತುದಿಗೊನೆಯ ಚೆಂದೆಂಗು ಖರ್ಜೂ
ರದಲಿ ಕಾಣೆನು ಹುರುಳ ನಾರಂ
ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುದ್ಧದಿಂದ ಸರೋವರಗಳು ಕಲಕಿ ಹೋದವು. ನಿಮಿಷ ಮಾತ್ರದಲ್ಲಿ ಬಾಳೆಗಿಡಗಳು ಗೊನೆಸಹಿತ ಉರುಳಿದವು. ಮರಗಳು ಮರಿದು ಬಿದ್ದುರಿಂದ ಅದರ ಮೇಲೆ ಹಬ್ಬಿದ್ದ ವೀಳೆಯದೆಲೆಯ ಬಳ್ಳಿಗಳು ನೆಲಕ್ಕೆ ಬಿದ್ದವು. ಕೆಂಪಾದ ಎಳನೀರಿನಗೊನೆ, ಖರ್ಜೂರಗಳು ಸತ್ವವನ್ನು ಕಳೆದುಕೊಂಡವು. ಕಿತ್ತಳೆಗಳು ನಾಶವಾದುದನ್ನು ಏನು ಹೇಳಲಿ?”
ಪದಾರ್ಥ (ಕ.ಗ.ಪ)
ಕದಳಿ - ಬಾಳೆ
ಮುಂಡಿಗೆ -ಮರದ ಕಾಂಡ
ನಾಗವಲ್ಲಿ -ವೀಳೆಯದೆಲೆ
ನಾರಂಗ - ಕಿತ್ತಳೆ
ಮೂಲ ...{Loading}...
ಕದಡಿದವು ಸರಸಿಗಳು ಕೆಡೆದವು
ಕದಳಿಗಳು ಗೊನೆಸಹಿತ ಮುಂಡಿಗೆ
ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು
ತುದಿಗೊನೆಯ ಚೆಂದೆಂಗು ಖರ್ಜೂ
ರದಲಿ ಕಾಣೆನು ಹುರುಳ ನಾರಂ
ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ ॥37॥
೦೩೮ ತೋಟ ಹುಡಿ ...{Loading}...
ತೋಟ ಹುಡಿ ಹುಡಿಯಾಯ್ತು ಮುರಿದುದು
ತೋಟಿಯಲಿ ನಮ್ಮವರು ಹಗೆಗಳ
ಘಾಟದವರಾಚೆಯಲಿ ದುರ್ಬಲ ನಮ್ಮ ದೀಚೆಯಲಿ
ಆಟವಿಕ ದಳ ಹೊಯ್ದು ಮಿಂಡರ
ಮೀಟನೆತ್ತಿದರವರು ಕಾಹಿನ
ಕೋಟಲೆಗೆ ನಾವೊಲ್ಲೆವೆಂದರು ಚಿತ್ರಸೇನಂಗೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನವು ಪುಡಿಪುಡಿಯಾಗಿ ಮುರಿದು ಬಿದ್ದಿತು. ವನದ ಕಾವಲಿನವರು ಚಿತ್ರಸೇನನಲ್ಲಿ - ‘ನಮ್ಮವರು ಹಗೆಗಳ ಸಾಹಸದೆದುರು ದುರ್ಬಲರಾದರು. ಅವರು ನಮ್ಮವರನ್ನು ಬಡಿದು ಸೋಲಿಸಿದರು. ಈ ರಕ್ಷಣೆಯ ಕಷ್ಟ ನಮಗೆ ಬೇಡ’ ಎಂದರು.
ಪದಾರ್ಥ (ಕ.ಗ.ಪ)
ಮಿಂಡ - ಶೂರ
ಪಾಠಾನ್ತರ (ಕ.ಗ.ಪ)
ಗಾಟವವರಾಚೆಯಲಿ - ಘಾಟದವರಾಚೆಯಲಿ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ತೋಟ ಹುಡಿ ಹುಡಿಯಾಯ್ತು ಮುರಿದುದು
ತೋಟಿಯಲಿ ನಮ್ಮವರು ಹಗೆಗಳ
ಘಾಟದವರಾಚೆಯಲಿ ದುರ್ಬಲ ನಮ್ಮ ದೀಚೆಯಲಿ
ಆಟವಿಕ ದಳ ಹೊಯ್ದು ಮಿಂಡರ
ಮೀಟನೆತ್ತಿದರವರು ಕಾಹಿನ
ಕೋಟಲೆಗೆ ನಾವೊಲ್ಲೆವೆಂದರು ಚಿತ್ರಸೇನಂಗೆ ॥38॥
೦೩೯ ಅವರು ಮತ್ರ್ಯರು ...{Loading}...
ಅವರು ಮತ್ರ್ಯರು ನಮ್ಮದಕಟಾ
ದಿವಿಜರೀ ವಿಧಿಯಾದುದೇ ಕವಿ
ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ
ಗವಿಯ ಗರುವರು ಗಾಢಿಸಿತು ಮಾ
ನವರ ಮುರುಕಕೆ ಮುರಿದುದೀ ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಮನುಷ್ಯರು ನಾವು ಗಂಧರ್ವರು ನಮಗೇ ಇಂತಹ ವಿಧಿಯಾಯಿತೇ ? ‘ಬಿಡಬೇಡಿ, ಮುತ್ತಿಗೆ ಹಾಕಿ’ ಎಂದು ಚಿತ್ರಸೇನನು ವೀರಭಟರಿಗೆ ರಣವೀಳ್ಯವನ್ನು ಕೊಟ್ಟನು. ‘ಸುಡಲಿ ಈ ಯುದ್ಧ ’ ಎಂದುಕೊಂಡು ಕೂಡಲೇ ಮನುಷ್ಯರನ್ನು ಸದೆ ಬಡಿಯಲು ಗಂಧರ್ವ ಸೇನೆ ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ಬೇಹವ-ತನ್ನ ಕಡೆಯವರಿಗೆ, ಬೇಕಾದವರಿಗೆ
ಮುರುಕ -ಚಮತ್ಕಾರ, ಕೌಶಲ
ಮೂಲ ...{Loading}...
ಅವರು ಮತ್ರ್ಯರು ನಮ್ಮದಕಟಾ
ದಿವಿಜರೀ ವಿಧಿಯಾದುದೇ ಕವಿ
ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ
ಗವಿಯ ಗರುವರು ಗಾಢಿಸಿತು ಮಾ
ನವರ ಮುರುಕಕೆ ಮುರಿದುದೀ ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ ॥39॥
೦೪೦ ಆತುದಿದು ತೋಪಿನಲಿ ...{Loading}...
ಆತುದಿದು ತೋಪಿನಲಿ ಗಂಧ
ರ್ವಾತಿರೇಕವ ಸೈರಿಸುತ ಪದ
ಘಾತಧೂಳೀಪಟಲ ಪರಿಚುಂಬಿಸಿದುದಂಬರವ
ಭೀತಿ ಬಿಟ್ಟುದೆ ಮನುಜರಿಗೆ ನ
ಮ್ಮಾತಗಳ ಕೂಡಹುದಲೈ ಕಾ
ಲಾತುದೇ ಕಲಿತನವೆನುತ ಕೈಕೊಂಡರವಗಡಿಸಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನದಲ್ಲಿ ಗಂಧರ್ವರ ಅತಿರೇಕವನ್ನು ಸೈರಿಸಿ ಕೌರವ ಸೈನ್ಯ ಮುಂದುವರಿಯಲು, ಆಗಸವನ್ನು ತಲುಪಿತೋ ಎನ್ನುವಂತೆ ಧೂಳೆದ್ದಿತು. ಮನುಷ್ಯರಿಗೆ ಹೆದರಿಕೆ ಹೋಯಿತೇ ? ನಮ್ಮೊಂದಿಗೆ ಕಾದಲು ಬಂದರೇ ? ಎನ್ನುತ್ತ ಕಾಲಾಳುಗಳು ವಿಕ್ರಮವನ್ನು ಕೈಕೊಂಡು ಮುಂದೊತ್ತಿದರು.
ಮೂಲ ...{Loading}...
ಆತುದಿದು ತೋಪಿನಲಿ ಗಂಧ
ರ್ವಾತಿರೇಕವ ಸೈರಿಸುತ ಪದ
ಘಾತಧೂಳೀಪಟಲ ಪರಿಚುಂಬಿಸಿದುದಂಬರವ
ಭೀತಿ ಬಿಟ್ಟುದೆ ಮನುಜರಿಗೆ ನ
ಮ್ಮಾತಗಳ ಕೂಡಹುದಲೈ ಕಾ
ಲಾತುದೇ ಕಲಿತನವೆನುತ ಕೈಕೊಂಡರವಗಡಿಸಿ ॥40॥
೦೪೧ ಆರು ನಿಲುವರು ...{Loading}...
ಆರು ನಿಲುವರು ದೇವಲೋಕದ
ವೀರರಲ್ಲಾ ವಿಗಡರೆಸುಗೆಯ
ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ
ವಾರುವನ ಮುಖದಿರುಹಿದವು ಮದ
ವಾರಣಂಗಳ ಕೊಡಹಿದವು ಹೊಂ
ದೇರು ಮುಗ್ಗಿದವೊಗ್ಗು ಮುರಿದುದು ಮಿಗುವ ಕಾಲಾಳ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧರ್ವವೀರರ ಎದುರು ಯಾರು ತಾನೇ ನಿಲ್ಲ ಬಲ್ಲರು ? ಅವರು ಪ್ರಯೋಗಿಸಿದ ಬಾಣಾವಳಿಗಳು ಮಾನವ ವೀರರನ್ನು ಕೊಚ್ಚಿಹಾಕಿದವು. ಕುದುರೆಗಳನ್ನು ಹಿಂದಕ್ಕೆ ಓಡಿಸಿದವು. ಮದದಾನೆಗಳನ್ನು ತರಿದು ಹಾಕಿದವು. ತೇರುಗಳನ್ನು ಪುಡಿಗುಟ್ಟಿದವು. ಕಾಲಾಳುಗಳನ್ನು ಸೋಲಿಸಿದವು.
ಪದಾರ್ಥ (ಕ.ಗ.ಪ)
ವಾರುವ - ಕುದುರೆ
ಗಂಡಿಗ- ಶೂರ
ವಿಗಡ - ಶೂರ
ಮೂಲ ...{Loading}...
ಆರು ನಿಲುವರು ದೇವಲೋಕದ
ವೀರರಲ್ಲಾ ವಿಗಡರೆಸುಗೆಯ
ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ
ವಾರುವನ ಮುಖದಿರುಹಿದವು ಮದ
ವಾರಣಂಗಳ ಕೊಡಹಿದವು ಹೊಂ
ದೇರು ಮುಗ್ಗಿದವೊಗ್ಗು ಮುರಿದುದು ಮಿಗುವ ಕಾಲಾಳ ॥41॥
೦೪೨ ಮುರಿದುದಿದು ಗನ್ಧರ್ವಬಲ ...{Loading}...
ಮುರಿದುದಿದು ಗಂಧರ್ವಬಲ ಮಿ
ಕ್ಕುರುಬಿಕೊಂಡೇ ಬಂದುದಗ್ಗದ
ಗರುವರಳಿದುದು ಬರಿಯ ದುರುಯಶವುಳಿದುದರಸಂಗೆ
ಕರಿತುರಗ ರಥ ಪಾಯದಳ ಹೆಣ
ದೊರಳಿಗಟ್ಟಿತು ಪಾಳಯದ ಗೋ
ಪುರದ ಹೊರಬಾಹೆಯಲಿ ನಿಂದುದು ಬಲಕೆ ಬೇಹವರು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನ್ಯ ಅವ್ಯವಸ್ಥಿತವಾಯಿತು. ಗಂಧರ್ವ ಸೇನೆ ಆಕ್ರಮಣಕಾರಿಯಾಗಿ ಮುನ್ನುಗ್ಗಿತು. ಶ್ರೇಷ್ಠರಾದ ವೀರರು ಅಳಿದರು. ಕೌರವರಾಯನ ಬಲ ಅಳಿದು ಕೇವಲ ಅಪಕೀರ್ತಿ ಉಳಿಯಿತು. ಆನೆ ಕುದುರೆ ರಥಿಕರು ಪದಾತಿಗಳು ಹೆಣವಾಗಿ ಉರುಳಿದರು. ದುರ್ಯೋಧನನ ಪಾಳೆಯದ ಹೊರಭಾಗದಲ್ಲಿ ಅಳಿದುಳಿದ ಸೈನಿಕರು ಬಂದು ನಿಂತರು.
ಪದಾರ್ಥ (ಕ.ಗ.ಪ)
ದುರುಯಶ - ಅಪಕೀರ್ತಿ
ತೊರಳಿಗಟ್ಟು - ಮಾಂಸದ ಮುದ್ದೆಯಾಗು
ಮೂಲ ...{Loading}...
ಮುರಿದುದಿದು ಗಂಧರ್ವಬಲ ಮಿ
ಕ್ಕುರುಬಿಕೊಂಡೇ ಬಂದುದಗ್ಗದ
ಗರುವರಳಿದುದು ಬರಿಯ ದುರುಯಶವುಳಿದುದರಸಂಗೆ
ಕರಿತುರಗ ರಥ ಪಾಯದಳ ಹೆಣ
ದೊರಳಿಗಟ್ಟಿತು ಪಾಳಯದ ಗೋ
ಪುರದ ಹೊರಬಾಹೆಯಲಿ ನಿಂದುದು ಬಲಕೆ ಬೇಹವರು ॥42॥
೦೪೩ ಮುರಿದು ಬರುತಿದೆ ...{Loading}...
ಮುರಿದು ಬರುತಿದೆ ಜೀಯ ನಾಯಕ
ರುರಿವವರ ಬಲುಗಾಯದಲಿ ಕು
ಕ್ಕುರಿಸಿದರು ಗಂಧರ್ವರಿದೆ ಕಡೆವನದ ಕಾಹಿನಲಿ
ಮರಳಿ ಪಾಳಯ ಬಿಡಲಿ ಮೇಣ್ ಹಗೆ
ಯಿರಿತಕಂಗೈಸುವರ ಬಿಡು ಕೈ
ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀಯ, ಅವರ ಸೇನೆ ಮುಂದೆ ಬರುತ್ತಿದೆ. ನಮ್ಮ ವೀರಭಟರು ಆಘಾತಕ್ಕೊಳಗಾಗಿ ನೆಲಕ್ಕೆ ಕುಸಿದಿದ್ದಾರೆ. ಗಂಧರ್ವರು ವನವನ್ನು ರಕ್ಷಿಸುತ್ತಿದ್ದಾರೆ. ಪಾಳೆಯವು ಮರಳಲಿ ಅಥವಾ ಶತ್ರುಗಳ ಮೇಲೆ ಸಮರ್ಥವಾಗಿ ಕಾದುವವರನ್ನು ಕಳುಹಿಸು. ಎಂದು ದೂತರು ಹೇಳಲು ಕೌರವನು ಮೂಗಿಗೆ ಬೆರಳಿಟ್ಟು ಬೆರಗಾದನು.
ಮೂಲ ...{Loading}...
ಮುರಿದು ಬರುತಿದೆ ಜೀಯ ನಾಯಕ
ರುರಿವವರ ಬಲುಗಾಯದಲಿ ಕು
ಕ್ಕುರಿಸಿದರು ಗಂಧರ್ವರಿದೆ ಕಡೆವನದ ಕಾಹಿನಲಿ
ಮರಳಿ ಪಾಳಯ ಬಿಡಲಿ ಮೇಣ್ ಹಗೆ
ಯಿರಿತಕಂಗೈಸುವರ ಬಿಡು ಕೈ
ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ ॥43॥