೦೦೦ ಸೂ ರಾಯ ...{Loading}...
ಸೂ. ರಾಯ ಕುರುಪತಿ ವಿದುರ ಗುರು ಗಾಂ
ಗೇಯ ಕೃಪರಲ್ಲೆನಲು ಪಾಂಡವ
ರಾಯ ವಿಪಿನಕೆ ಘೋಷಯಾತ್ರೆಯ ನೆವದಲೈತಂದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವಿದುರ, ದ್ರೋಣಾಚಾರ್ಯ, ಭೀಷ್ಮಾಚಾರ್ಯ, ಕೃಪಾಚಾರ್ಯರು ಬೇಡವೆಂದರೂ ಕೇಳದೆ, ದುರ್ಯೋಧನನು ಘೋಷಯಾತ್ರೆಯ ನೆವದಿಂದ ಧರ್ಮಜನಿದ್ದ ಅರಣ್ಯಕ್ಕೆ ಬಂದನು.
ಮೂಲ ...{Loading}...
ಸೂ. ರಾಯ ಕುರುಪತಿ ವಿದುರ ಗುರು ಗಾಂ
ಗೇಯ ಕೃಪರಲ್ಲೆನಲು ಪಾಂಡವ
ರಾಯ ವಿಪಿನಕೆ ಘೋಷಯಾತ್ರೆಯ ನೆವದಲೈತಂದ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಜನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಶ್ರೀಕೃಷ್ಣನು ದ್ವಾರಕೆಗೆ ಹಿಂದಿರುಗಿದನು. ಇತ್ತ ಪಾಂಡವರು ವಿಪರೀತವಾದ ದುಃಖದಿಂದ ಕೂಡಿದ ಮುಖ, ಚಿಂತೆಯಿಂದ ಜಡವಾಗಿದ್ದ ಮನಸ್ಸು, ಬಾರಿ ಬಾರಿಗೂ ಬಿಡುತ್ತಿರುವ ನಿಟ್ಟುಸಿರು, ಮೂಗಿನ ಮೇಲೆ ಬೆರಳು - ಇವುಗಳಿಂದ ಕೂಡಿದ್ದರು.
ಪದಾರ್ಥ (ಕ.ಗ.ಪ)
ಜಾಳಿಗೆ - ಬಲೆ
ಸೂಳು - ಬಾರಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನಿಜನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ ॥1॥
೦೦೨ ಸೂರೆವೋದುದು ರಾಜ್ಯಸಿರಿ ...{Loading}...
ಸೂರೆವೋದುದು ರಾಜ್ಯಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟ ವಿಧಿಯೆಂದಳಲಿದನು ಭೂಪ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ್ಯದ ಐಶ್ವರ್ಯವು ಸೂರೆಹೋಯಿತು. ನಾಚಿಕೆಯೂ ಇಲ್ಲವಾಯಿತು. ನಾವು ಬೆಟ್ಟ, ಗಿರಿ ಪರ್ವತಗಳಲ್ಲಿ ತಿರುಗಾಡಿ ಕಷ್ಟಪಡುವ ಪಾಡು ಹೆಚ್ಚಾಯಿತು. ಶ್ರೀಕೃಷ್ಣನೂ ಕೃಪೆಯನ್ನು ತೋರಿ ನಮ್ಮನ್ನು ಅಗಲಿಹೋದನು. ಅಯ್ಯೋ ವಿಧಿಯೇ ಎಂದು ಧರ್ಮರಾಯನು ದುಃಖಿಸಿದನು.
ಪದಾರ್ಥ (ಕ.ಗ.ಪ)
ಮುಮ್ಮಾರು - ಪರಾಧೀನವಾಗು
ತಾರತಟ್ಟು - ಏರುತಗ್ಗು
ಮೂಲ ...{Loading}...
ಸೂರೆವೋದುದು ರಾಜ್ಯಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟ ವಿಧಿಯೆಂದಳಲಿದನು ಭೂಪ ॥2॥
೦೦೩ ಎಹಗೆ ಸೈರಿಸಿ ...{Loading}...
ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿ ವಿರಹದ
ದಹನತಾಪಸ್ತಂಭದೌಷಧ ದಾನ ಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆ ಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
3.‘ಶ್ರೀಕೃಷ್ಣನು ತಮ್ಮನ್ನು ಬಿಟ್ಟು ಹೋದಾಗ, ವ್ರಜದೇಶದ ಸ್ತ್ರೀಯರು(ಗೋಪಿಯರು) ಆ ವಿರಹವನ್ನು ಹೇಗೆ ಸಹಿಸಿಕೊಂಡರೋ? ಶ್ರೀಹರಿಯ ವಿರಹದಿಂದ ತಪಿಸುತ್ತಿರುವ ನನ್ನ ಶರೀರಕ್ಕೆ ಔಷಧವನ್ನು ಕೊಡುವ ಆಸಕ್ತರಿಗೆ, ಅಹಹ ನನ್ನನ್ನೇ ತೆತ್ತೇನು’ ಎಂದುಕೊಳ್ಳುತ್ತ ವಿಹಾರ ಮುಂತಾದ ತನ್ನ ಯಾವ ನಿತ್ಯಕರ್ಮಗಳಲ್ಲಿಯೂ ಗಮನವಿಲ್ಲದಂತಿದ್ದನು.
ಪದಾರ್ಥ (ಕ.ಗ.ಪ)
ವ್ರಜ -ಗೋಕುಲ
ಶೌಂಡ - ಆಸಕ್ತ
ಉಮ್ಮಹ - ಉತ್ಸಾಹ
ನಿಸ್ಪೃಹ - ನಿರ್ಲಿಪ್ತ
ಪಾಠಾನ್ತರ (ಕ.ಗ.ಪ)
ದಹನದಾಪಸ್ತಂಭಕೌಷಧ -ದಹನತಾಪಸ್ತಂಭದೌಷzs
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿ ವಿರಹದ
ದಹನತಾಪಸ್ತಂಭದೌಷಧ ದಾನ ಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆ ಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ ॥3॥
೦೦೪ ಅರಸ ಕೇಳೈ ...{Loading}...
ಅರಸ ಕೇಳೈ ಹಸ್ತಿನಾಪುರ
ವರಕೆ ಕಾಮ್ಯಕವನದಿನೊಬ್ಬನು
ಧರಣಿಸುರನೈತಂದು ಕರ್ಣಾದಿಗಳ ಮನೆಗಳಲಿ
ಇರಲಿರಲು ಧೃತರಾಷ್ಟ್ರ ಭೂಪತಿ
ಕರೆಸಿ ಬೆಸಗೊಂಡನು ಯುಧಿಷ್ಠಿರ
ನಿರವನಟವೀತಟ ಪರಿಭ್ರಮಣೈಕ ಭೀಷಣವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಕಾಮ್ಯಕವನದಿಂದ ಒಬ್ಬ ಬ್ರಾಹ್ಮಣನು ಹಸ್ತಿನಾವತಿಗೆ ಬಂದು ಕರ್ಣಾದಿಗಳ ಮನೆಗಳಲ್ಲಿದ್ದನು. ನೀಗಿರಲು, ಧೃತರಾಷ್ಟ್ರನು ಅವನನ್ನು ಕರೆಸಿ ಧರ್ಮರಾಜನ ಬದುಕನ್ನು, ಕಾಡಿನ ಓಡಾಟದ ಭಯಂಕರ ಸ್ವರೂಪದ ಕುರಿತಾಗಿ ವಿಚಾರಿಸಿದನು.
ಮೂಲ ...{Loading}...
ಅರಸ ಕೇಳೈ ಹಸ್ತಿನಾಪುರ
ವರಕೆ ಕಾಮ್ಯಕವನದಿನೊಬ್ಬನು
ಧರಣಿಸುರನೈತಂದು ಕರ್ಣಾದಿಗಳ ಮನೆಗಳಲಿ
ಇರಲಿರಲು ಧೃತರಾಷ್ಟ್ರ ಭೂಪತಿ
ಕರೆಸಿ ಬೆಸಗೊಂಡನು ಯುಧಿಷ್ಠಿರ
ನಿರವನಟವೀತಟ ಪರಿಭ್ರಮಣೈಕ ಭೀಷಣವ ॥4॥
೦೦೫ ವಿವಿಧ ವನ ...{Loading}...
ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನಪರ್ಯಟನೆಯ ಶ್ರಮ, ಆ ಪರಿಸರದ ತೊಂದರೆಗಳು, ದೈತ್ಯರ ಉಪಟಳ, ಆಪತ್ತಿನಿಂದ ಉಂಟಾಗುವ ದುಃಖ, ಚಿಂತೆ, ಭಯ, ಲಜ್ಜೆ ಮುಂತಾದವುಗಳನ್ನು ಧೃತರಾಷ್ಟ್ರನಿಗೆ ಅವನು ವಿವರಿಸಿದನು.
ಪದಾರ್ಥ (ಕ.ಗ.ಪ)
ದಕ್ಕಡತನ - ಅತಿ ಸಾಹಸ
ಅವಚಿದ - ಮೆಲೆಬಿದ್ದ
ಮೂಲ ...{Loading}...
ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ ॥5॥
೦೦೬ ಈ ವಿಧಿಯೆ ...{Loading}...
ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾ ಮು
ನ್ನಾವ ನೋಹಿಯನಳಿದೆನೋ ಭವಭವ ಸಹಸ್ರದಲಿ
ಈ ವಿಲಾಸವನೀ ವಿಭವ ಸಂ
ಭಾವನೆಯನೀ ಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಕಟಾ, ಪಾಂಡವರಿಗೆ ಹೀಗಾಯಿತೇ ? ನನಗೆ ಮರಣವು ಬಾರದೇ ಹೋಯಿತೇ ? ಹಿಂದಿನ ಜನ್ಮಗಳಲ್ಲಿ ನಾನು ಯಾವ ವ್ರತವನ್ನು ಕೆಡಿಸಿದೆನೋ ? ನನ್ನ ಈ ವೈಭವ ವೈಭೋಗಗಳು, ಈ ಪದವಿ, ಪುತ್ರರು ಸುಟ್ಟುಹೋಗಲಿ” ಎಂದು ಧೃತರಾಷ್ಟ್ರನು ವಿಪರೀತ ಮರುಗಿದನು.
ಪದಾರ್ಥ (ಕ.ಗ.ಪ)
ಭವ- ಜನ್ಮ
ನೋಹಿ - ವ್ರತ
ಮೂಲ ...{Loading}...
ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾ ಮು
ನ್ನಾವ ನೋಹಿಯನಳಿದೆನೋ ಭವಭವ ಸಹಸ್ರದಲಿ
ಈ ವಿಲಾಸವನೀ ವಿಭವ ಸಂ
ಭಾವನೆಯನೀ ಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ ॥6॥
೦೦೭ ಮರಳಿ ಮರಳಿ ...{Loading}...
ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲುವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರನ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಮನಃಸ್ಥಿತಿ, ಭೀಮನ ಸಿಟ್ಟು, ಪಾರ್ಥನ ರೀತಿ, ನಕುಲನ ನಿಲುವು, ಸಹದೇವನ ಇಂಗಿತ, ದ್ರೌಪದಿಯ ಉದ್ವೇಗ, ಧೌಮ್ಯರ ಮನಃಕ್ಲೇಶ, ದೂರ್ವಾಸ ಮುನಿಯ ಅವಸ್ಥೆ ಇವುಗಳನ್ನು ಪುನಃ ಪುನಃ ಕೇಳಿ ಧೃತರಾಷ್ಟ್ರನು ಮರುಗಿದನು.
ಪದಾರ್ಥ (ಕ.ಗ.ಪ)
ಪರಗತಿ - ಅವಸ್ಥೆ
ಮೂಲ ...{Loading}...
ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲುವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರನ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ ॥7॥
೦೦೮ ಅಳಲುವೀ ಧೃತರಾಷ್ಟ್ರನುರು ...{Loading}...
ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದು ಕರ್ಣ ಶಕುನಿಗ
ಳುಲಿದು ತಂಬುಲ ಸೂಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖಿಸುತ್ತಿರುವ ಧೃತರಾಷ್ಟ್ರನ ಕಳಕಳಿಯನ್ನು ಕರ್ಣ, ಶಕುನಿಗಳು ಕೇಳಿ ತಿಳಿದು, ಕೈತಟ್ಟಿ ತಾಂಬೂಲ ರಸ ಹೊರಚೆಲ್ಲುವಂತೆ ನಕ್ಕರು. ಆ ದುಷ್ಟರು ಧೃತರಾಷ್ಟ್ರನ ಅರಮನೆಗೆ ಬಂದು, ಅವನ ಕಂಬನಿಯನ್ನು ಸೆರಗಿನಿಂದ ಒರೆಸಿ ‘ಯಾಕೆ ದುಃಖಿಸುತ್ತೀರಿ’ ಎಂದು ಕೇಳಿದರು.
ಮೂಲ ...{Loading}...
ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದು ಕರ್ಣ ಶಕುನಿಗ
ಳುಲಿದು ತಂಬುಲ ಸೂಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ ॥8॥
೦೦೯ ಖೇದವೇಕೆನ್ದೇನು ಮಕ್ಕಳು ...{Loading}...
ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಮಯದಲಿ ದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾಕೆ ದುಃಖವೆಂದರೆ, ಪಾಂಡವರು ತಬ್ಬಲಿಗಳಾದರಲ್ಲಾ ಎಂದು. ವನದೊಳಗೆ ಅವರ ಕಷ್ಟಕಾರ್ಪಣ್ಯವನ್ನು ಕೇಳಿ ನನ್ನ ಒಡಲು ಬೆಂದುಹೋಯಿತು. ಸೂರ್ಯನು ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಕತ್ತಲೆಯೊಂದಿಗೆ ಹೋರಾಡುವಂತೆ ಇವರಿಗೆ ಪ್ರತಿನಿತ್ಯವೂ ರಾಕ್ಷಸರು , ದುಷ್ಟರೊಂದಿಗೆ ಹೋರಾಡುವ ತೊಂದರೆ ಅವರನ್ನು ಕಾಡುತ್ತಿದೆ’ ಎಂದು ನಿಟ್ಟುಸಿರು ಬಿಟ್ಟನು.
ಮೂಲ ...{Loading}...
ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಮಯದಲಿ ದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ ॥9॥
೦೧೦ ಈ ಕುಮಾರಕರಲ್ಲಲೇ ...{Loading}...
ಈ ಕುಮಾರಕರಲ್ಲಲೇ ಕುಂ
ತೀ ಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲ ಡೊಂಬೇಕೆಂದನಾ ಶಕುನಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಮಕ್ಕಳು ಅಲ್ಲವಲ್ಲಾ ? ಕುಂತಿಯ ಮಕ್ಕಳು ಕಷ್ಟಪಡುತ್ತಿದ್ದರೆ ಸತ್ತ್ವಯುಕ್ತರೂ ಸಜ್ಜನರೂ ಆದವರಿಗೆ ದುಃಖವೇಕೆ? ಕುರುಭೂಪಾಲನಾದ ದುರ್ಯೋಧನನಲ್ಲಿ ಸ್ವಲ್ಪವಾದರೂ ಅನ್ಯಾಯ ಉಂಟೇ ? ಇದನ್ನು ತಿಳಿದು ಈ ಶೋಕವನ್ನು ಬಿಡಿ. ಬೂಟಾಟಿಕೆ ಬೇಡ ಎಂದು ಶಕುನಿಯು ಹೇಳಿದನು.
ಪದಾರ್ಥ (ಕ.ಗ.ಪ)
ಲವ - ಸ್ವಲ್ಪ
ಡೊಂಬು - ತೋರಿಕೆ, ಬೂಟಾಟಿಕೆ
ಮೂಲ ...{Loading}...
ಈ ಕುಮಾರಕರಲ್ಲಲೇ ಕುಂ
ತೀ ಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲ ಡೊಂಬೇಕೆಂದನಾ ಶಕುನಿ ॥10॥
೦೧೧ ವಿಷಯಲಮ್ಪಟರಕ್ಷ ಲೀಲಾ ...{Loading}...
ವಿಷಯಲಂಪಟರಕ್ಷ ಲೀಲಾ
ವ್ಯಸನಕೋಸುಗ ವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಾಂಡವರು ವಿಷಯಲಂಪಟರಾಗಿ, ಪಗಡೆಯಾಟದ ದುಃಶ್ಚಟದಿಂದ ಭೂಮಿಯನ್ನು ಒತ್ತೆಯಿಟ್ಟರು. ನಿನ್ನ ಮಕ್ಕಳಲ್ಲಿ ಅನ್ಯಾಯವಿಲ್ಲ. ಮತ್ತೆ ಏನೂ ಹೇಳಲಾಗದೆ, ಸತ್ಯಪಾಲನೆಗಾಗಿ ಅವರು ಅರಣ್ಯ ಸೇರಿರುವಾಗ, ಆ ದುವ್ರ್ಯಸನಿಗಳಿಗಾಗಿ ನೀವೇಕೆ ದುಖಿಸುತ್ತೀರಿ ?’ ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಅಕ್ಷ -ಪಗಡೆ
ವಸುಮತಿ - ಭೂಮಿ
ಮೂಲ ...{Loading}...
ವಿಷಯಲಂಪಟರಕ್ಷ ಲೀಲಾ
ವ್ಯಸನಕೋಸುಗ ವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ ॥11॥
೦೧೨ ಅವರು ಕುಹಕೋಪಾಯದಲಿ ...{Loading}...
ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಕುಟಿಲತನದಿಂದ ಕೌರವರನ್ನು ಕೆಡಿಸದೆ ಬಿಡಲಾರರು ದ್ಯೂತಸಭೆಯಲ್ಲಿ ಭೀರ್ಮಾರ್ಜುನರು ಮಾಡಿದ ಪ್ರತಿಜ್ಞೆಯನ್ನು ಮರೆತುಬಿಟ್ಟಿರಾ ? ಈಗ ಅವರು ಸಜ್ಜನರು, ಸಾಧುಗಳು, ಕೌರವರು ದುರ್ಜನರು, ದುಷ್ಟರು ಎಂದು ನಿಮಗೆ ಅನಿಸುತ್ತಿದೆಯೆ ?
ಮೂಲ ...{Loading}...
ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ ॥12॥
೦೧೩ ಗಳಹನನಿಲಜ ಗಾಢಗರ್ವದ ...{Loading}...
ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಗಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮನು ಬಾಯಿಬಡುಕನು. ಅರ್ಜುನನಾದರೋ ಮಹಾ ಗರ್ವಿಷ್ಠ . ನಕುಲ ಸಹದೇವರು ಮಕ್ಕಳಾದರೂ ಅವರ ನೆರಳಿನಂತೆ. ಧರ್ಮರಾಜನ ಬಗೆಗೆ ಅಯ್ಯೋ ಎನ್ನಬಹುದು. ಆದರೆ ಅವನು ಕೂಡಾ ಕ್ಷಣಾರ್ಧದಲ್ಲಿ ತಮ್ಮಂದಿರ ಸಹವಾಸದಿಂದಾಗಿ ನಮಗೆ ಎರಡು ಬಗೆಯುತ್ತಾನೆ.É” ಎಂದು ಶಕುನಿಯು ಹೇಳಿದನು.
ಮೂಲ ...{Loading}...
ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಗಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ ॥13॥
೦೧೪ ಅವರ ವನವಾಸದ ...{Loading}...
ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವರ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿವಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಮರೆವುದುಚಿತವು ಕರ್ಣ ಹೇಳೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವರ ವನವಾಸದ ದಿವಸಗಳು ನಮಗೆ ಸುಖಸಂತೋಷದ ಕಾಲ. ಅವರ ಅವಧಿ ಮುಗಿದ ಬಳಿಕ ಆ ಸಾಧುಗಳ ಪರಿಯನ್ನು ನೋಡು. ನಿಮಗೆ ದುರ್ಯೋಧನನ ಸಾಮ್ರಾಜ್ಯವನ್ನು ನಿರೀಕ್ಷಿಸುವ ಆಸೆಯಿದ್ದರೆ ಪಾಂಡವರನ್ನು ಮರೆತುಬಿಡುವುದು ಲೇಸು. ಕರ್ಣ ನೀನೂ ಹೇಳು.” ಎಂದನು.
ಮೂಲ ...{Loading}...
ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವರ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿವಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಮರೆವುದುಚಿತವು ಕರ್ಣ ಹೇಳೆಂದ ॥14॥
೦೧೫ ಬೇವು ತಾ ...{Loading}...
ಬೇವು ತಾ ಪರಿಪಕ್ವವಾದರೆ
ಹಾವುಮೆಕ್ಕೆಗೆ ಸಾಕ್ಷಿ ಗಡ ಧ
ರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ
ಆ ವಿಡಂಬದ ಶಕುನಿ ಕರ್ಣರು
ಜೀವಸಖರೈ ತಮ್ಮೊಳಗೆ ದು
ರ್ಭಾವ ಭೀಕರ ಹೃದಯ ನುಡಿದನು ಕರ್ಣನರಸಂಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇವಿನ ಹಣ್ಣು ಮಾಗಿದರೆ ಹಾವುಮೆಕ್ಕೆ ಎಂಬ ಕಹಿ ಹಣ್ಣಿಗೆ ನಾವಿಬ್ಬರೂ ಒಂದೇ ಎಂದು ಸಾಕ್ಷಿ ಹೇಳುತ್ತದಂತೆ. ಹಾಗೆಯೇ ಧರ್ಮದೂರನಾದ ಕವಿಗೆ ಅರಿಷಡ್ವರ್ಗಗಳ ನೆರವಿ ಜೊತೆಗಿರುತ್ತದೆ. ಅಂತಹ ಕಹಿ ಮನಸ್ಸಿನ ಹಾಗೂ ಅಧರ್ಮಿಗಳಾದ ಶಕುನಿ ಕರ್ಣರು ಪರಸ್ಪರ ಪ್ರಾಣ ಸ್ನೇಹಿತರು. ಅದರಲ್ಲಿಯೂ ಕೆಟ್ಟ ಭಾವನೆಯ ಭಯಂಕರ ಹೃದಯದ ಕರ್ಣನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹಾವುಮೆಕ್ಕೆ - ಕಹಿಯಾದ ಹಣ್ಣು ಬಿಡುವ ಒಂದು ಗಿಡ.
ನೆರವಿ - ಸಮೂಹ
ಮೂಲ ...{Loading}...
ಬೇವು ತಾ ಪರಿಪಕ್ವವಾದರೆ
ಹಾವುಮೆಕ್ಕೆಗೆ ಸಾಕ್ಷಿ ಗಡ ಧ
ರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ
ಆ ವಿಡಂಬದ ಶಕುನಿ ಕರ್ಣರು
ಜೀವಸಖರೈ ತಮ್ಮೊಳಗೆ ದು
ರ್ಭಾವ ಭೀಕರ ಹೃದಯ ನುಡಿದನು ಕರ್ಣನರಸಂಗೆ ॥15॥
೦೧೬ ಆಹ ಶಕುನಿಯ ...{Loading}...
ಆಹ ಶಕುನಿಯ ಮಾತಿನಲಿ ಸಂ
ದೇಹವೇ ಪಾಂಡವರು ಬಂಧು
ದ್ರೋಹಿಗಳು ತಮ್ಮವಧಿ ತುಂಬಲು ಕೇಡ ತಹರೆಂಬ
ಈ ಹದನು ತಪ್ಪುವುದೆ ನೀವತಿ
ಮೋಹದಲಿ ಬಿಡೆ ಬೀಸಿ ಬಿದ್ದರೆ
ಕಾಹುರರು ಕೌರವರ ಕೆಡಿಸುವರೆಂದನಾ ಕರ್ಣ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಹಾ ! ಶಕುನಿಯ ಮಾತಿನ ಮೇಲೆ ಸಂಶಯವೆ ? ಬಂಧು ದ್ರೋಹಿಗಳಾದ ಪಾಂಡವರು ತಮ್ಮ ವನವಾಸದ ಅವಧಿ ಮುಗಿದ ಬಳಿಕ ಕೆಡುಕುಂಟುಮಾಡುತ್ತಾರೆಂಬ ಅವನ ಅಭಿಪ್ರಾಯ ಸುಳ್ಳಾಗದು. ಹೀಗೆ ನೀವು ಮೋಹಪರವಶರಾದರೆ, ಆ ಕ್ರೂರ ಪಾಂಡವರು ಕೌರವರನ್ನು ಕೆಡಿಸುತ್ತಾರೆ’ ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಕಾಹುರ-ಕ್ರೂರ
ಮೂಲ ...{Loading}...
ಆಹ ಶಕುನಿಯ ಮಾತಿನಲಿ ಸಂ
ದೇಹವೇ ಪಾಂಡವರು ಬಂಧು
ದ್ರೋಹಿಗಳು ತಮ್ಮವಧಿ ತುಂಬಲು ಕೇಡ ತಹರೆಂಬ
ಈ ಹದನು ತಪ್ಪುವುದೆ ನೀವತಿ
ಮೋಹದಲಿ ಬಿಡೆ ಬೀಸಿ ಬಿದ್ದರೆ
ಕಾಹುರರು ಕೌರವರ ಕೆಡಿಸುವರೆಂದನಾ ಕರ್ಣ ॥16॥
೦೧೭ ಈ ಸಿರಿಯ ...{Loading}...
ಈ ಸಿರಿಯ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೀ ನೋಡಿ ಹಿಗ್ಗದೆ ಪಾಂಡು ನಂದನರು
ಗಾಸಿಯಾದರು ಗಟ್ಟ ಬೆಟ್ಟದ
ಪೈಸರದೊಳೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಸಂಪತ್ತಿನ ಸುಖದಲ್ಲಿ ನಿನ್ನವರು ಬದುಕುವ ಬಗೆಯನ್ನು ಕಂಡು ನೀನು ಹಿಗ್ಗುವುದರ ಬದಲು ಪಾಂಡವರು ಕಾಡುಮೇಡುಗಳಲ್ಲಿ ಕಷ್ಟಪಡುವರಲ್ಲಾ ಎಂದು ಮರುಗುತ್ತಾ ತತ್ತ್ವದ ಮಾತುಗಳನ್ನು ಹೇಳುತ್ತಾ ಇರುವೆ ‘ಎಂದನು ಕರ್ಣ.
ಪದಾರ್ಥ (ಕ.ಗ.ಪ)
ಪೈಸರ - ಹಾನಿ, ಕಷ್ಟ
ಮೂಲ ...{Loading}...
ಈ ಸಿರಿಯ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೀ ನೋಡಿ ಹಿಗ್ಗದೆ ಪಾಂಡು ನಂದನರು
ಗಾಸಿಯಾದರು ಗಟ್ಟ ಬೆಟ್ಟದ
ಪೈಸರದೊಳೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ ॥17॥
೦೧೮ ಸೊಗಸು ತಳಿತುದು ...{Loading}...
ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗೆದ್ದ ನೀಲದ ಸರಿಗೆ ಸರಿಯಾಯ್ತು
ಮಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನಿಗೆ ಸುಖವುಂಟಾಗಿ, ಅವನ ಎಳಸು ಮನಸ್ಸು ಮಗುಚಿದ ಹಾಗಾಯ್ತು. ಪಾಂಡವರ ಮೇಲಿನ ಪ್ರೀತಿ ಕಾಡಿಗೆಗೆ ಅದ್ದಿದ ನೀಲಿಸರಿಗೆಯಂತಾಯಿತು. ಮೇಲೆಕೆಳಗಾದ ಅವನ ಕಣ್ಣುಗಳಲ್ಲಿ ಉಕ್ಕಿದ ನೀರಬಿಂದುಗಳನ್ನು ಉಗುರು ಕೊನೆಯಿಂದ ಒರೆಸಿ, ಕರ್ಣನನ್ನು ಹೊಗಳುತ್ತಾ ‘ಉರಿಯಲ್ಲಿ ಸವಿರುಚಿ ಇದೆಯೇ’ ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಸಿಂಗಿ-ಉರಿ
ಮೂಲ ...{Loading}...
ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗೆದ್ದ ನೀಲದ ಸರಿಗೆ ಸರಿಯಾಯ್ತು
ಮಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ ॥18॥
೦೧೯ ಹೋಗಲಾ ಪಾಣ್ಡವರ ...{Loading}...
ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜ ದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೋಗಲಿ ಬಿಡಿ, ಪಾಂಡವರನ್ನು ಕುರಿತು ಚಿಂತಿಸುವುದನ್ನು ಬಿಟ್ಟೆ. ಇನ್ನು ನೀವು ಏನು ಮಾಡಬೇಕೆಂದಿದ್ದೀರಿ ?’ ಎಂದು ಧೃತರಾಷ್ಟ್ರನು ಕೇಳಲು ಕರ್ಣಶಕುನಿಗಳು ನಗುತ್ತಾ ‘ಈಗ ನಮ್ಮ ವೈಭವ ವೈಭೋಗಗಳನ್ನು ಸಾಹಸ ಪರಾಕ್ರಮಗಳನ್ನು ಅವರು ಇರುವ ವನಕ್ಕೆ ಹೋಗಿ ತೋರಿಸಬೇಕು’ ಎಂದರು.
ಮೂಲ ...{Loading}...
ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜ ದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ ॥19॥
೦೨೦ ನಾಡೊಳಗೆ ತುರುಹಟ್ಟಿಯಲಿ ...{Loading}...
ನಾಡೊಳಗೆ ತುರುಹಟ್ಟಿಯಲಿ ಹೊಲ
ನಾಡಿ ಹೆಚ್ಚಿದ ಗೋ ಕದಂಬವ
ನೋಡುವುದು ನೆವ ಕುರುಪತಿಯ ಗಾಢದ ಸಗಾಢಿಕೆಯ
ನೋಡಿ ನಸಿಯಲಿ ಪಾಂಡು ಸುತರವ
ರಾಡುಗಾಡಿನ ಹೊಲನ ಹೊರೆಯಲಿ
ಕೂಡೆ ತನುಪರಿಮಳದಲರಮನೆಯಂಗನಾ ನಿವಹ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಡಿನ ಗೋಶಾಲೆಗಳಲ್ಲಿ ಹೆಚ್ಚಿರುವ ಗೋವುಗಳನ್ನು ನೋಡುವ ನೆವದಿಂದ ಹೋದಾಗ, ಕೌರವನ ವೈಭವಗಳನ್ನು ಕಂಡು ಪಾಂಡವರು ಸೊರಗಲಿ. ಪಾಂಡವರು ಇರುವ ಕಾಡಿನ ಹತ್ತಿರ ಅರಮನೆಯ ಸ್ತ್ರೀಯರು ಮೈಯ ಸುವಾಸನೆ ಹರಡಬೇಕು.
ಮೂಲ ...{Loading}...
ನಾಡೊಳಗೆ ತುರುಹಟ್ಟಿಯಲಿ ಹೊಲ
ನಾಡಿ ಹೆಚ್ಚಿದ ಗೋ ಕದಂಬವ
ನೋಡುವುದು ನೆವ ಕುರುಪತಿಯ ಗಾಢದ ಸಗಾಢಿಕೆಯ
ನೋಡಿ ನಸಿಯಲಿ ಪಾಂಡು ಸುತರವ
ರಾಡುಗಾಡಿನ ಹೊಲನ ಹೊರೆಯಲಿ
ಕೂಡೆ ತನುಪರಿಮಳದಲರಮನೆಯಂಗನಾ ನಿವಹ ॥20॥
೦೨೧ ವನದ ಚಿಮ್ಮಣ್ಡೆಗಳ ...{Loading}...
ವನದ ಚಿಮ್ಮಂಡೆಗಳ ಘೋರ
ಧ್ವನಿಗಳಲಿ ಕಿವಿ ಮೃಗಕುಲದ ಸೊಗ
ಡಿನಲಿ ನಾಸಿಕ ರೌದ್ರ ಭೂತಾಲೋಕನದಿ ನಯನ
ಜನಪರುರೆ ಬೆದರುವರು ನಿನ್ನರ
ಮನೆಯ ಸತಿಯರ ನೇವುರದ ನು
ಣ್ದನಿಗಳಲಿ ತನುಗಂಧದಲಿ ರೂಪುಗಳ ಸೊಗಸಿನಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿರುವ ಜೀರುಂಡೆಗಳ ಧ್ವನಿಗೆ ಪಾಂಡವರ ಕಿವಿ, ಪ್ರಾಣಿಗಳ ಮೈಕಂಪಿಗೆ ಅವರ ಮೂಗು, ಭಯಂಕರ ಮೃಗಗಳ ನೋಟಕ್ಕೆ ಅವರ ಕಣ್ಣುಗಳು ರೂಢಿಯಾಗಿದ್ದು ನಮ್ಮ ಅರಮನೆಯ ಸ್ತ್ರೀಯರ ಕೋಮಲಸ್ವರ, ತನುಗಂಧ, ಚೆಲುವಿನ ರೂಪಗಳಿಗೆ ಬೆದರುತ್ತಾರೆ.
ಪದಾರ್ಥ (ಕ.ಗ.ಪ)
ಚಿಮ್ಮಂಡೆ-ಜೀರುಂಡೆ
ಮೂಲ ...{Loading}...
ವನದ ಚಿಮ್ಮಂಡೆಗಳ ಘೋರ
ಧ್ವನಿಗಳಲಿ ಕಿವಿ ಮೃಗಕುಲದ ಸೊಗ
ಡಿನಲಿ ನಾಸಿಕ ರೌದ್ರ ಭೂತಾಲೋಕನದಿ ನಯನ
ಜನಪರುರೆ ಬೆದರುವರು ನಿನ್ನರ
ಮನೆಯ ಸತಿಯರ ನೇವುರದ ನು
ಣ್ದನಿಗಳಲಿ ತನುಗಂಧದಲಿ ರೂಪುಗಳ ಸೊಗಸಿನಲಿ ॥21॥
೦೨೨ ಸಿರಿಗೆ ಸಫಲತೆಯಹುದು ...{Loading}...
ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸು ನೆರೆ ಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹುರಿಯೇರುವುದು ಮತವಲ್ಲೆಂದನಂಧ ನೃಪ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “(ಇದರಿಂದ) ಐಶ್ವರ್ಯ ಸಾರ್ಥಕವಾಗುತ್ತದೆ. ಆದರೆ ಮುಂದಿನದನ್ನು ನಾನು ಊಹಿಸಲಾರೆ. ನೀವು ಪಾಂಡವರಿದ್ದ ಕಾಡಿಗೆ ಹೋಗುವುದು ಸೂಕ್ತವೆ? ಅವರ ಮನಸ್ಸು ಮುರಿದು ಕೆರಳಿತೆಂದಾದರೆ ಉದ್ದೇಶವು ಹಾಳಾಗುತ್ತದೆ. ಭೀಮಸೇನನ ದುಷ್ಟತನ ಹಾಗೂ ಕೌರವನ ಮತ್ಸರವು ಹೆಚ್ಚಾಗುವುದು ಸರಿಯಲ್ಲ” ಎಂದು ಧೃತರಾಷ್ಟ್ರನು ಹೇಳಿದನು.
ಪದಾರ್ಥ (ಕ.ಗ.ಪ)
ಕಾಳು - ಹಾಳಾಗುವುದು.
ಹುರುಡು - ಮತ್ಸರ, ಪೈಪೋಟಿ
ಮೂಲ ...{Loading}...
ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸು ನೆರೆ ಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹುರಿಯೇರುವುದು ಮತವಲ್ಲೆಂದನಂಧ ನೃಪ ॥22॥
೦೨೩ ಹೂಣೆ ಹೊಗೆವವರೊಡನೆ ...{Loading}...
ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೊಡನೆ ಪರಾಕ್ರಮ ತೋರಿಸಲು ಹೋಗುವುದಿಲ್ಲ. ಸೆಣಸಾಟಕ್ಕೆ ಇಳಿಯುವುದಿಲ್ಲ. ಯುದ್ಧದ ಯೋಚನೆಯೇ ನಮ್ಮ ಮನಸ್ಸಿನಲ್ಲಿಲ್ಲ. ಸಲುಗೆಯನ್ನು ತೋರಿಸುತ್ತಾ, ಯೋಗ್ಯವಾದ ಸಾಮೋಪಾಯದಿಂದ , ರಾಣಿಯರ ಸಡಗರದಿಂದ, ಜಾಣತನದಿಂದ ಹಿಂದಿರುಗುತ್ತೇವೆ. ಅರಸ, ನಿಮ್ಮ ಪಾದದಾಣೆ, ಎಂದು ಅವನನ್ನು ಕೌರವ, ಕರ್ಣ ಶಕುನಿಗಳು ಒಪ್ಪಿಸಿದರು.
ಪದಾರ್ಥ (ಕ.ಗ.ಪ)
ಹೂಣೆ - ಪರಾಕ್ರಮ
ರಹಿ - ಸಡಗರ, ಸಂಭ್ರಮ
ಮೂಲ ...{Loading}...
ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು ॥23॥
೦೨೪ ಪರಿಮಿತದಲೀ ವಾರ್ತೆ ...{Loading}...
ಪರಿಮಿತದಲೀ ವಾರ್ತೆ ನೆಗಳಿದು
ದರಮನೆಯಲಿದನೈದೆ ಕೇಳಿದು
ಗುರು ವಿದುರ ಗಾಂಗೇಯ ಕೃಪರಳಲಿದರು ತಮ್ಮೊಳಗೆ
ಕರೆಸಿ ನುಡಿದರು ಕರ್ಣ ಸೌಬಲ
ಕುರುಪತಿಗಳಿಗೆ ಘೋಷಯಾತ್ರಾ
ಭರವನರಿದೆವು ಹೋಹುದನುಚಿತವೆಂದರನಿಬರಿಗೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಯ ಒಳಗಡೆ ಈ ಸುದ್ದಿ ನಿಧಾನವಾಗಿ ಹಬ್ಬಿತು. ಇದನ್ನು ಕೇಳಿದ ದ್ರೋಣ, ವಿದುರ, ಭೀಷ್ಮ, ಕೃಪಾಚಾರ್ಯರುಗಳು ತಮ್ಮೊಳಗೇ ದುಃಖಿಸಿದರು. ಅವರು ಕರ್ಣ ಶಕುನಿ ಕೌರವರನ್ನು ಕರೆಸಿ, “ಘೋಷಯಾತ್ರೆಯ ವಿಚಾರ ತಿಳಿದೆವು. ಇದು ಉಚಿತವಲ್ಲ” ಎಂದು ಹೇಳಿದರು.
ಮೂಲ ...{Loading}...
ಪರಿಮಿತದಲೀ ವಾರ್ತೆ ನೆಗಳಿದು
ದರಮನೆಯಲಿದನೈದೆ ಕೇಳಿದು
ಗುರು ವಿದುರ ಗಾಂಗೇಯ ಕೃಪರಳಲಿದರು ತಮ್ಮೊಳಗೆ
ಕರೆಸಿ ನುಡಿದರು ಕರ್ಣ ಸೌಬಲ
ಕುರುಪತಿಗಳಿಗೆ ಘೋಷಯಾತ್ರಾ
ಭರವನರಿದೆವು ಹೋಹುದನುಚಿತವೆಂದರನಿಬರಿಗೆ ॥24॥
೦೨೫ ಅವಗಡೆಯನಾ ಭೀಮ ...{Loading}...
ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಯರನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಿಕ್ಕುವುದು ಲೇಸಲ್ಲೆಂದನಾ ಭೀಷ್ಮ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನು ಅಪಾಯಕಾರಿ. ನೀವೂ ನಿಸ್ಸೀಮರು. ಚತುರಂಗಬಲ ನಿಲ್ಲದೆ ಮುಂದೊತ್ತಿ ತಪೋವನವನ್ನು ಹಾಳೆಸಗುವುದು. ಸ್ತ್ರೀಯರು ಋಷಿ ಮುನಿಗಳನ್ನು ಪರಿಹಾಸ್ಯ ಮಾಡುತ್ತಾರೆ. ಅದರಿಂದ ಕದನವೇರ್ಪಡುವುದು ಲೇಸಲ್ಲ’ ಎಂದು ಭೀಷ್ಮನು ಹೇಳಿದನು.
ಪದಾರ್ಥ (ಕ.ಗ.ಪ)
ಅವಗಡೆಯ - ಅಪಾಯಕಾರಿಯಾದವನು
ಮೂಲ ...{Loading}...
ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಯರನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಿಕ್ಕುವುದು ಲೇಸಲ್ಲೆಂದನಾ ಭೀಷ್ಮ ॥25॥
೦೨೬ ಸಾರಿದೆವು ನಿಮ್ಮೊಡನೆ ...{Loading}...
ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪದು ಹೋಗಬೇಡೆನಲು
ದೂರ ತಾರೆವು ನಿವಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಾರಿ ಹೇಳುತ್ತೇವೆ, ನಿಮ್ಮೊಂದಿಗೆ ನಾವು ಬರುವುದಿಲ್ಲ. ನಮ್ಮನ್ನೆಲ್ಲಾ ದೂರಬೇಡಿ. ಮಾತು ಮೀರಿದರೆ ಯುದ್ಧ ಉಂಟಾಗಿ ಸೋಲು ಸಂಭವಿಸೀತು. ಹೋಗಬೇಡಿ” ಎಂದು ಭೀಷ್ಮನು ಹೇಳಲು, ‘ನಿಮಗೆ ನಾವು ದೂರು ತರುವುದಿಲ್ಲ. ಕೈಮೀರಿ ನಡೆಯುವುದಿಲ್ಲ. ಕಾರ್ಯದಲ್ಲಿ ಅನರ್ಥವೆಸಗುವುದಿಲ್ಲ ’ ಎಂದು ಕೌರವನು ಉತ್ತರಿಸಿದನು.
ಮೂಲ ...{Loading}...
ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪದು ಹೋಗಬೇಡೆನಲು
ದೂರ ತಾರೆವು ನಿವಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ ॥26॥
೦೨೭ ಆದರಲ್ಲಿ ಶುಭಾಶುಭವ ...{Loading}...
ಆದರಲ್ಲಿ ಶುಭಾಶುಭವ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಲ್ಲಿ ಒಳಿತು ಕೆಡುಕುಗಳ ಫಲವು ಬೀದಿಗೆ ತಿಳಿಯುವಂತೆ ಮಾಡುವ ಈ ಕೆಟ್ಟ ಹಟ ನಿಮಗೇಕೆ ? ಕೊನೆಗೆ ಇದರ ಫಲವನ್ನು ಅನುಭವಿಸುತ್ತೀರಿ. ಆದುದಾಗಲಿ ಹೋಗಿ’ ಎಂದು ಹೇಳಲು, ದುಷ್ಟತನ, ಅಹಂಕಾರ, ಜಗಳ ಮೊದಲಾದ ದೋಷಗಳಿಂದ ಕೂಡಿದ ಈ ಹುಡುಗಾಟಿಕೆಯ ಕೌರವರು ‘ನೋಡಿ ಬಿಡೋಣ’ ಎಂಬ ಭಾವದಿಂದ ಭುಜವನ್ನು ಹೊಯ್ದರು.
ಮೂಲ ...{Loading}...
ಆದರಲ್ಲಿ ಶುಭಾಶುಭವ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತ ॥27॥
೦೨೮ ಕೇರಿಯಲಿ ಸಾರಿದರು ...{Loading}...
ಕೇರಿಯಲಿ ಸಾರಿದರು ಕೊಟ್ಟರು
ವಾರಕವನಬಲಾಜನಕೆ ಭಂ
ಡಾರ ಸವೆದುದು ಗಣಿಕೆಯರಿಗಾಭರಣ ದಾನದಲಿ
ಸಾರ ಪರಿಮಳ ವಸ್ತುಗಳ ಬಲು
ಭಾರಣೆಯ ಪೆಟ್ಟಿಗೆಗಳೊಟ್ಟಿತು
ತೇರುಗಳ ಮೇಲೊದಗಿತಕ್ಷೋಹಿಣಿಯ ರಾಣಿಯರು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇರಿಗಳಲ್ಲಿ ಘೋಷಯಾತ್ರೆಯ ವಿಚಾರವನ್ನು ಡಂಗುರ ಸಾರಿದರು. ಸ್ತ್ರೀಯರಿಗೆ ಉಡುಗೊರೆಗಳನ್ನು ನೀಡಿದರು. ಗಣಿಕೆಯರಿಗೆ ಆಭರಣಗಳನ್ನು ನೀಡಿ ಭಂಡಾರವೇ ಸವೆಯಿತು. ಸಕಲ ಸುಗಂಧ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ತುಂಬಿಸಿ ರಥದಲ್ಲಿಟ್ಟರು. ಅಕ್ಷೋಹಿಣಿ ಸಂಖ್ಯೆಯ ನಾರಿಯರು ಬಂದು ಸೇರಿದರು.
ಪದಾರ್ಥ (ಕ.ಗ.ಪ)
ವಾರಕ-ಉಡುಗೊರೆ, ಬಳುವಳಿ.
ಗಣಿಕೆ - ವೇಶ್ಯೆ
ಮೂಲ ...{Loading}...
ಕೇರಿಯಲಿ ಸಾರಿದರು ಕೊಟ್ಟರು
ವಾರಕವನಬಲಾಜನಕೆ ಭಂ
ಡಾರ ಸವೆದುದು ಗಣಿಕೆಯರಿಗಾಭರಣ ದಾನದಲಿ
ಸಾರ ಪರಿಮಳ ವಸ್ತುಗಳ ಬಲು
ಭಾರಣೆಯ ಪೆಟ್ಟಿಗೆಗಳೊಟ್ಟಿತು
ತೇರುಗಳ ಮೇಲೊದಗಿತಕ್ಷೋಹಿಣಿಯ ರಾಣಿಯರು ॥28॥
೦೨೯ ಬಿಗಿದ ಬೀಯಗ ...{Loading}...
ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣೀವಾಸದಂದಣ
ತೆಗೆದು ವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಗ ಹಾಕಿದ ಪೆಟ್ಟಿಗೆಗಳನ್ನಿಟ್ಟುಕೊಂಡ ಎತ್ತಿನ ಗಾಡಿಗಳು, ರಾಣೀವಾಸದ ಪಲ್ಲಕ್ಕಿಗಳು, ಕಂಚುಕಿಗಳ ಉದ್ಘೋಷಗಳ ರಭಸ ಇವುಗಳಿಂದ ಕೂಡಿದ ಆ ಯಾತ್ರೆಯ, ಚಿಗುರಿನಂತಿದ್ದ ಸತ್ತಿಗೆಯ ಸಾಲು, ತೋರಣಗಳ ಸಮೂಹ, ಬೀಸುತ್ತಿರುವ ಚಾಮರ, ಸೀಗುರಿಗಳ ಪತಾಕೆಗಳಿಂದ ಆಕಾಶವೇ ಕಾಣದಾಯಿತು.
ಪದಾರ್ಥ (ಕ.ಗ.ಪ)
ಬೀಯಗ-ಬೀಗ
ಬದ್ದರ - ಎತ್ತು, ವೃಷಭ
ಝಲ್ಲರಿ - ಉತ್ಸವಗಳಲ್ಲಿ ಎತ್ತಿ ಹಿಡಿಯುವ ಮಕರ ತೋರಣ
ಮೂಲ ...{Loading}...
ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣೀವಾಸದಂದಣ
ತೆಗೆದು ವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ ॥29॥
೦೩೦ ಸೊವಡಿನಾನೆಯ ಮೇಲೆ ...{Loading}...
ಸೊವಡಿನಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದಗಜಗಳ ಮೇಲೆ ಗಣಿಕಾಂಗನೆಯರು, ಕೆಲವು ಯುವತಿಯರು ಪಲ್ಲಕ್ಕಿಗಳ ಮೇಲೆ, ಮತ್ತೆ ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ ಕುಳಿತು ಹೊರಟರು. ಸೃಷ್ಟಿಯೇ ತರುಣಿಮಯವಾಗಿದೆಯೋ, ಭೂಮಿಯೇ ಯುವತಿಯರನ್ನು ಹೆತ್ತಿತೋ ದಿಕ್ಕುಗಳೇ ಕಾಂತೆಯರನ್ನು ಸುರಿಸಿದವೋ ಎಂಬಂತೆ ಸ್ತ್ರೀಯರು ಎಲ್ಲಾ ಕಡೆಯಿಂದ ಕವಿದರು.
ಪದಾರ್ಥ (ಕ.ಗ.ಪ)
ಸೊವಡಿನಾನೆ - ಮದಗಜ
ಚಯ - ಗುಂಪು
ಪಾಠಾನ್ತರ (ಕ.ಗ.ಪ)
ಸೂಚನೆ: ಸವಡಿನಾನೆಯ ಮೇಲೆ - ಸೊವಡಿನಾನೆಯ ಮೇಲೆ,
ಸೊªಡಿನಾನೆ - ಮದಗಜ
ಮೂಲ ...{Loading}...
ಸೊವಡಿನಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ ॥30॥
೦೩೧ ಅರಸ ಕೇಳೈ ...{Loading}...
ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ಹತ್ತು ಸಾವಿರ ಆನೆಗಳು, ಎಂಟು ಸಾವಿರ ರಥಗಳು, ಸವಾರರೊಡಗೂಡಿದ ಕೋಟಿ ಕುದುರೆಗಳು, ಅಸಂಖ್ಯ ಭಟರುಗಳು ಕೌರವನ ಘೋಷಯಾತ್ರೆಯ ಸಿದ್ಧತೆಗೆ ಒದಗಿದವು.
ಪದಾರ್ಥ (ಕ.ಗ.ಪ)
ವಾಘೆ - ಲಗಾಮು
ಪರುಠವಣೆ - ಸಿದ್ಧತೆ
ಟಿಪ್ಪನೀ (ಕ.ಗ.ಪ)
ಘೋಷಯಾತ್ರೆ :ಘೋಷಯಾತ್ರೆ ಎಂಬುದು ಮಹಾಭಾರತದ ಕಾಲದಲ್ಲಿದ್ದ ಒಂದು ಪಶುಗಣನೆಯ ಸಂಪ್ರದಾಯ. ಸೈನಿಕರನ್ನು ಅಧಿಕಾರಿಗಳನ್ನು ಗಡಿಗ್ರಾಮಗಳಿಗೆ ಕಳಿಸುವುದು, ಗೋಗ್ರಾಮಗಳ ತನಿಖೆ ಮಾಡುವುದು ಗೋವತ್ಸಗಳ ಸಂಖ್ಯಾನ, ಲೇಖನ ಮುದ್ರಣಾದಿ ಕಾರ್ಯಗಳನ್ನು ಜರುಗಿಸುವುದು. ಘೋಷ ಎಂದರೆ ಸಂಸ್ಕೃತದಲ್ಲಿ ಗೊಲ್ಲರಹಳ್ಳಿ ಎಂಬರ್ಥವಿದೆ. ಒಂದು ನಾಡಿನ ಮುಖ್ಯ ಸಂಪತ್ತುಗಳಲ್ಲಿ ಗೋ ಸಂಪತ್ತೂ ಒಂದಲ್ಲವೆ? ಒಂದು ದಿನ ಒಬ್ಬ ಗೊಲ್ಲರವನು ಬಂದು ದ್ವೈತವನದಲ್ಲಿ ಗೋ ಶೇಖರಣೆ ನಡೆದಿದೆಯೆಂದೂ ಅಂಕನ, ಸಂಖ್ಯಾನ, ಮುದ್ರಣಗಳನ್ನು ಮಾಡಲು ಯಾರನ್ನಾದರೂ ಕಳಿಸಬೇಕೆಂದೂ ಕೌರವನ ಅದಿಕಾರಿಗಳನ್ನು ಕೇಳುತ್ತಾನೆ. ಇದೇ ಸಮಯಕ್ಕೆ ಒಬ್ಬನು ಧೃತರಾಷ್ಟ್ರನ ಬಳಿಗೆ ಬಂದು ದ್ವೈತವನದಲ್ಲಿ ಸರಿಯದ ಆಧಾರವಿಲ್ಲದೆ ಪಾಂಡವರು ತುಂಬ ಕಷ್ಟಪಡುತ್ತಿದ್ದಾರೆಂದೂ ಆ ಛಳಿಯಲ್ಲಿ ನೆಲದ ಮೇಲೆ ಮಲಗುತ್ತಿದ್ದಾರೆಂದೂ ದ್ರೌಪದಿಯ ಸ್ಥಿತಿಯಂತೂ ಕರುಣಾಜನಕವಾಗಿದೆಯೆಂದೂ ತಿಳಿಸುತ್ತಾನೆ. ಧೃತರಾಷ್ಟ್ರ ನೊಂದುಕೊಂಡರೆ ಕೌರವರು ಆನಂದಪಡುತ್ತಾರೆ. ಕರ್ಣಶಕುನಿಗಳು ಈ ಸಮಯದಲ್ಲಿ ನಾವೆಲ್ಲ ಅಲ್ಲಿಗೆ ಘೋಷಯಾತ್ರೆಯ ನೆವದಲ್ಲಿ ಹೋಗಿ ಪಾಂಡವರ ಸ್ಥಿತಿಯನ್ನು ಕಂಡು ಆನಂದಿಸುವ ಮತ್ತು ತಮ್ಮ ವೈಭವವನ್ನು ಪ್ರದರ್ಶಿಸಿ ಅವರ ಹೊಟ್ಟೆ ಉರಿಸುವ ಜಂಟಿ ಕಾರ್ಯಕ್ರಮವನ್ನು ಪ್ರಸ್ತಾವಿಸುತ್ತಾರೆ. ಆದರೆ ಅಲ್ಲಿ ಪಾಂಡವರೂ ಇದ್ದುದರಿಂದ ಈ ಹುಡುಗರು ಹೋಗಿ ಏನು ಆಭಾಸ ಮಾಡುತ್ತಾರೋ ಎಂಬ ಹೆದರಿಕೆ ಧೃತರಾಷ್ಟ್ರನಿಗೆ. ಆಗ ಕೌರವರು ಪಾಂಡವರ ಬಳಿಗೆ ಹೋಗುವುದಿಲ್ಲ ಎಂದು ಧೃತರಾಷ್ಟ್ರನಿಗೆ ಹೇಳಿ ಅವನ ಅಪ್ಪಣೆ ಪಡೆದು ಹೊರಡುತ್ತಾರೆ. ಕೌರವ ಸೇನೆ, ಅಸಂಖ್ಯಾತ ವಿಲಾಸಿನಿಯರು ಎಲ್ಲ ಅಲ್ಲಿ ಸೇರುತ್ತಾರೆ. ನೃತ್ಯಗೀತ ವಿಲಾಸಗಳಿಂದ ವಿಜೃಂಭಿಸುತ್ತಾರೆ. ಆದರೆ ಅವರ ದುರದೃಷ್ಟಕ್ಕೆ ಅಲ್ಲೊಂದು ಉದ್ಯಾನ ಸರೋವರ ಎಲ್ಲವೂ ಇದ್ದ ಜಗ ಗಂಧರ್ವಪತಿಗೆ ಸೇರಿದ್ದು. ಆಲ್ಲಿಗೆ ನುಗ್ಗಿದ ಕೌರವನ ದಂಡು ದಾಂಧಲೆ ಎಬ್ಬಿಸಿ ಗಂಧರ್ವನ ಕಾವಲಿನವರ ನಿದ್ರೆ ಕೆಡಿಸುತ್ತದೆ. ಕರ್ಣಾಧಿಗಳೂ ಸೈನಿಕರೂ ಇದ್ದುದರಿಂದ ಕಾವಲು ಸೇನೆಯನ್ನು ಓಡಿಸುತ್ತಾರೆ. ಇದನ್ನು ತಿಳಿದು ಗಂಧರ್ವರ ಒಡೆಯನಾದ ಚಿತ್ರಸೇನನೇ ಬರುತ್ತಾನೆ. ಅವನು ಕೌರವಸೇನೆಯನ್ನೂ, ಕರ್ಣಾದಿಗಳನ್ನೂ ಲೀಲಾಜಾಲವಾಗಿ ಎದುರಿಸಿ ಕರ್ಣನು ವಿಕರ್ಣನ ರಥದಲ್ಲಿ ಕುಳಿತು ಪಲಾಯನ ಮಾಡುವಂತೆ ಹೋರಾಡುತ್ತಾನೆ. ಕೌರವಾದಿಗಳನ್ನು ಹಿಂಗಟ್ಟು ಮುಂಗಟ್ಟು ಕಟ್ಟಿ ರಥದಲ್ಲಿ ಹಾಕಿಕೊಂಡು ಹೋಗುತ್ತಾನೆ. ಅವನ ಸ್ತ್ರೀ ಪರಿವಾರವನ್ನು ಬಂಧಿಸುತ್ತಾನೆ. ಅಳಿದುಳಿದ ಗಾಯಕರು ನರ್ತಕರು ವರ್ತಕರು ಧರ್ಮರಾಯನ ಬಳಿಗೆ ಓಡಿ ಬಂದು ಕೌರವನನ್ನು ಬಿಡಿಸುವಂತೆ ಕೋರುತ್ತಾರೆ. ಕೂಡಲೇ ಧರ್ಮರಾಯನು ಭೀಮನಿಗೆ ಹೇಳುತ್ತಾನೆ. ಆದರೆ ಭೀಮ ಒಪ್ಪದಿದ್ದಾಗ ಅರ್ಜುನನಿಗೆ ಹೇಳುತ್ತಾನೆ. ಅರ್ಜುನನು ಗಂಧರ್ವನ ಮೇಲ ಯುದ್ಧಕ್ಕೆ ಹೊರಟಾಗ ಭೀಮಾದಿಗಳೂ ಸೇರಿಕೊಳ್ಳುತ್ತಾರೆ. ನಾಲ್ವರೂ ಸೇರಿ ಕೌರವಾದಿಗಳನ್ನು ಬಿಡಿಸಿಕೊಂಡು ಬರುತ್ತಾರೆ. ಧರ್ಮರಾಯನು ದುರ್ಯೋಧನನಿಗೆ ಹಿತೋಪದೇಶ ಮಾಡಿ ಪ್ರೀತಿಯಿಂದಲೇ ಕಳಿಸಿಕೊಡುತ್ತಾನೆ. ತುಂಬ ಅವಮಾನಿತನಾದ ಕೌರವನು ಗಂಗಾತೀರದಲ್ಲಿ ಉಳಿದುಕೊಂಡು ಪ್ರಾಯೋಪವೇಶ ಮಾಡಿ ಸಾಯುವ ಮನಸ್ಸು ಮಾಡುತ್ತಾನೆ. ಅಷ್ಟರಮಟ್ಟಿಗೆ ತೇಜೋವಧೆ ಅವನ ಮೇಲೆ ಪರಿಣಾಮ ಮಾಡಿತ್ತು.
ಇದು ವಾಸ್ತವವಾಗಿ ಕೌರವನ ಸ್ವಯಂಕೃತಾಪರಾಧ. ಕರ್ಣನ ಬೊಗಳೆ ಮಾತಿನಲ್ಲಿ ಶಕುನಿಯ ಮಾತಿನಲ್ಲಿ ಇಟ್ಟ ನಂಬಿಕೆಯ ದುಷ್ಫಲ ಇದು. ಪಾಂಡವರನ್ನು ಕೆಣಕಲು ಹೋದವರು ಅವರ ಸಹಾಯದಿಂದಲೇ ಜೀವ ಉಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದರು.
ವಿನಾಕಾರಣ ಮತ್ಸರಿಸುವವರಿಗೆ, ಬೇರೊಬ್ಬರ ತೇಜೋವಧೆ ಮಾಡಲು ಹೋಗುವವರಿಗೆ ಅಹಂಕಾರಿಗಳಿಗೆ ಪ್ರಕೃತಿಯೇ ನ್ಯಾಯ ತೀರ್ಮಾನ ಮಾಡಿ ಶಿಕ್ಷೆ ವಿಧಿಸುತ್ತದಲ್ಲವೆ?
ಮೂಲ ...{Loading}...
ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ ॥31॥
೦೩೨ ನೆರೆದುದಗಣಿತ ವನ್ದಿಗಳು ...{Loading}...
ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೆಕ್ಕವಿಲ್ಲದ ವಂದಿಗಳು, ಕವಿ ವಿದ್ವಾಂಸರು, ನಿರ್ವಾಹಕರು ನರ್ತಕರು, ಕಥೆ ಹೇಳುವವರು, ಹಾಸ್ಯಗಾರರು, ಪಾಠಕರು, ಚಾರಕರು, ಮಲ್ಲರು, ಬೇಟೆಗಾರರು, ಪರಿಜನರು ಇವರೆಲ್ಲರೊಂದಿಗೆ ಕೌರವನು ಪ್ರಯಾಣದ ಮೇಲೆ ಪ್ರಯಾಣ ಬೆಳೆಸಿ, ನಗರವನ್ನು ಬಿಟ್ಟು ಬಂದನು.
ಪದಾರ್ಥ (ಕ.ಗ.ಪ)
ವಿಧಾವಂತ- ನಿರ್ವಾಹಕರು
ಮೂಲ ...{Loading}...
ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ ॥32॥
೦೩೩ ಅರಸ ಕೇಳಿವರತ್ತ ...{Loading}...
ಅರಸ ಕೇಳಿವರತ್ತ ಪಯಣದ
ಭರದಿನೈತರೆ ಮುಂದೆ ವಾಯಸ
ವೆರಡು ತಮ್ಮೊಳು ಕದನಮುಖದಲಿ ವಾಮ ದೆಸೆಗಾಗಿ
ಪರಿದುವಲ್ಲಿಂ ಬಳಿಕ ಹಸುಬನ
ಸರುವು ವಾಮದಿ ಗರ್ದಭನ ಬಲ
ಕರಿಯ ಹಕ್ಕಿಯ ತಡೆದು ಮನ್ನಿಸದೈದಿದನು ಭೂಪ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಇವರು ಭರದಿಂದ ಪ್ರಯಾಣ ಮಾಡುವಾಗ, ಎದುರು ಭಾಗದಲ್ಲಿ ಎರಡು ಕಾಗೆಗಳು ಜಗಳವಾಡುತ್ತಾ ಎಡದಿಕ್ಕಿಗೆ ಹಾರಿಹೋದವು. ಅನಂತರ ಎಡಭಾಗದಲ್ಲಿ ಶಕುನದ ಹಕ್ಕಿ, ಬಲಗಡೆಯಲ್ಲಿ ಕತ್ತೆ, ಕಾಗೆಗಳು ಹೋದರೂ ಆ ಶಕುನಗಳಿಗೆ ಬೆಲೆಕೊಡದೆ, ಕೌರವನು ಮುಂದೆ ಹೋದನು.
ಪದಾರ್ಥ (ಕ.ಗ.ಪ)
ಹಸುಬ-ಶಕುನದ ಹಕ್ಕಿ
ಮೂಲ ...{Loading}...
ಅರಸ ಕೇಳಿವರತ್ತ ಪಯಣದ
ಭರದಿನೈತರೆ ಮುಂದೆ ವಾಯಸ
ವೆರಡು ತಮ್ಮೊಳು ಕದನಮುಖದಲಿ ವಾಮ ದೆಸೆಗಾಗಿ
ಪರಿದುವಲ್ಲಿಂ ಬಳಿಕ ಹಸುಬನ
ಸರುವು ವಾಮದಿ ಗರ್ದಭನ ಬಲ
ಕರಿಯ ಹಕ್ಕಿಯ ತಡೆದು ಮನ್ನಿಸದೈದಿದನು ಭೂಪ ॥33॥
೦೩೪ ಅರಸ ಕೇಳೈ ...{Loading}...
ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ಪಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಚಂಪೆಯ ಭದ್ರಭವನಗಳು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ದ್ವೈತವನದ ಹತ್ತಿರದ ಮನೋಹರವಾದ ನದೀತೀರದಲ್ಲಿ, ವನ, ಸರೋವರ, ಹೊಳೆ, ಕೆರೆ, ಕೊಳಗಳ ಬದಿಯಲ್ಲಿ ಇವರು ಬೀಡು ಬಿಟ್ಟರು. ಅರಸನ ಬಿಡಾರದ ಮೇಲೆ, ಧ್ವಜಗಳು ಎದ್ದು ಕಾಣಿಸಿದವು. ಚಿಕ್ಕ ಚಿಕ್ಕ ಮಂಟಪಗಳು ಮತ್ತು ಮಂಗಳಕರವಾದ ಭವನಗಳು ನಿರ್ಮಾಣಗೊಂಡವು.
ಪದಾರ್ಥ (ಕ.ಗ.ಪ)
ಮಂಡವಿಗೆ-ಗುಡಿಸಲು
ದೀರ್ಘಿಕೆ - ಕೊಳ, ಕೆರೆ
ಚಂಪೆಯ - ಗೂಡಾರ
ಮೂಲ ...{Loading}...
ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ಪಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಚಂಪೆಯ ಭದ್ರಭವನಗಳು ॥34॥
೦೩೫ ಕರೆಸಿದನು ಕೀಲಾರಿಗಳನಾ ...{Loading}...
ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋಪಾಲರನ್ನು ಕರೆಸಿ, ಹಟ್ಟಿಯಲ್ಲಿರುವ ಕೋಟಿಸಂಖ್ಯೆಯ ಹಸುಗಳನ್ನು ನೋಡಿದನು. ಮೆಲ್ಲನೆ ಹೆಜ್ಜೆಯಿಡುವ, ಹಾರುವ, ಕುಣಿಯುವ, ಪ್ರೀತಿತೋರುವ, ಹಿಂಜರಿಯುವ, ಹಿಂದಕ್ಕೆ ಓಡುವ, ನಿಲ್ಲುವ ಎಳೆಗರುಗಳನ್ನು ಅರಸನು ನಗುತ್ತಾ ನೋಡಿದನು.
ಪದಾರ್ಥ (ಕ.ಗ.ಪ)
ಕೀಲಾರೆ-ಗೋಪಾಲಕ
ಮೂಲ ...{Loading}...
ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ ॥35॥
೦೩೬ ಬೆಳೆವಿಣಿಲ ಮಿಡಿಗೊಲವ ...{Loading}...
ಬೆಳೆವಿಣಿಲ ಮಿಡಿಗೊಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲ ಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರು ಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿರ್ದವು ಹಿಂಡು ಹಿಂಡಿನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳೆಯುತ್ತಿರುವ ಹಿಣಿಲು, ಅಲ್ಲಾಡುತ್ತಿರುವ ಬಾಲ, ನೆಲಕ್ಕೆ ತಾಗುವ ಗಂಗೆದೊಗಲು, ಹಲಗೆಯಂತಹ ಬೆನ್ನು, ಹುಂಕರಿಸಿ ಸಿಡಿಲ ಮರಿಯಂತೆ ಮೊರೆಯುವ ಗುಟುರುಗಳಿಂದ ಕೂಡಿ ಪಕ್ಕದಲ್ಲಿ, ಎದುರಿನಲ್ಲಿ ಬರುತ್ತಿದ್ದರೆ ಬೆಟ್ಟ ಬೆಟ್ಟವನ್ನು ಎದುರಿಸುತ್ತಿದೆಯೋ ಎನ್ನುವಂತೆ ಕಾಣುತ್ತಿದ್ದ , ಓಡುತ್ತ, ನೆಗೆಯುತ್ತ, ಧ್ವನಿ ಮಾಡುತ್ತಾ ಹಿಂಡು ಹಿಂಡಾಗಿ ಓಡಾಡುತ್ತಿದ್ದವು.
ಪದಾರ್ಥ (ಕ.ಗ.ಪ)
ಇಣಿಲು - ಹಿಣಿಲು -ಡುಬ್ಬ
ಗಂಗೆದೊಗಲು - ದನಗಳ ಕತ್ತಿನಲ್ಲಿ ಜೋಲುವ ಚರ್ಮ
ಸಲಗ - ಗೂಳಿ
ಮೂಲ ...{Loading}...
ಬೆಳೆವಿಣಿಲ ಮಿಡಿಗೊಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲ ಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರು ಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿರ್ದವು ಹಿಂಡು ಹಿಂಡಿನಲಿ ॥36॥
೦೩೭ ತರಿಸಿ ಹೋರಿಯ ...{Loading}...
ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋ ಲಕ್ಷವಿತ್ತನು ವಿಪ್ರ ಸಂಕುಲಕೆ
ಕರೆಸಿ ಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟವಿಧಾವಂ
ತರಿಗೆ ಬಹುವಿಧ ಬಹಳ ವಂದಿಗೆ ಮಾಗಧವ್ರಜಕೆ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಿ, ಗವಿ, ಗೂಳಿಗಳನ್ನು ತರಿಸಿ, ಕೃಷಿಕರಿಗೆ ಕೊಟ್ಟನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ದಾನಮಾಡಿದನು. ಭಟ್ಟರಿಗೆ, ವೀರಭಟರಿಗೆ, ವಿಟರಿಗೆ, ನಟರಿಗೆ, ನಿರ್ವಾಹಕರಿಗೆ, ವಂದಿ ಮಾಗಧರಿಗೆ ಹಸುಗಳನ್ನು ತರಿಸಿ ಉಡುಗೊರೆಯಾಗಿ ಕೊಟ್ಟನು.
ಪದಾರ್ಥ (ಕ.ಗ.ಪ)
ವಿಧಾವಂತ-ನಿರ್ವಾಹಕ
ಗವಿ - ಆಕಳು, ಹಸು
ಮೂಲ ...{Loading}...
ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋ ಲಕ್ಷವಿತ್ತನು ವಿಪ್ರ ಸಂಕುಲಕೆ
ಕರೆಸಿ ಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟವಿಧಾವಂ
ತರಿಗೆ ಬಹುವಿಧ ಬಹಳ ವಂದಿಗೆ ಮಾಗಧವ್ರಜಕೆ ॥37॥
೦೩೮ ಅಙ್ಗಚಿತ್ತವನಿತ್ತು ಮೊದಲಿನ ...{Loading}...
ಅಂಗಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲ ನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿವಾ
ಗಂಗಳನು ಕೊಡಿಸಿದನು ಪರಿವಾರಕೆ ವಿನೋದದಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋಪಾಲ ನಾಯಕನನ್ನು ಸ್ಕರಿಸಿ, ಉಳಿದೆಲ್ಲ ಗೋವಳರಿಗೂ ಉಡುಗೊರೆಯನ್ನು ಕೊಟ್ಟನು. ಹಸುಕರುಗಳು ಸಂತೃಪ್ತಿಗೊಂಡವು. ಮೃಗಗಳಿಗೆ ಮತ್ತು ಬರುವ ಔಷಧಗಳನ್ನು ಹಾಕಿ ವಿನೋದದಿಂದ ಬೇಟೆಯಾಡಿ ಅವುಗಳನ್ನು ಕಡಿದು ಭಾಗಗಳನ್ನು ತನ್ನ ಪರಿವಾರಕ್ಕೆ ನೀಡಿದನು.
ಪದಾರ್ಥ (ಕ.ಗ.ಪ)
ಪುಂಗವ - ನಾಯಕ
ಅಂಗಚಿತ್ತ-ಬಯಕೆ, ಅಪೇಕ್ಷೆ,
ಕಡಿವಾಗ-ಕತ್ತರಿಸಿದ ಭಾಗ
ಪಾಠಾನ್ತರ (ಕ.ಗ.ಪ)
ಮೊದಲ ಸ ಮಂಗನನು - ಮೊದಲಿನ ಪುಂಗವನ
ಅರಣ್ಯ ಪರ್ವ , ಮೈ.ವಿ.ವಿ.
ಮೂಲ ...{Loading}...
ಅಂಗಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲ ನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿವಾ
ಗಂಗಳನು ಕೊಡಿಸಿದನು ಪರಿವಾರಕೆ ವಿನೋದದಲಿ ॥38॥