೧೭

೦೦೦ ಸೂ ರಾಯ ...{Loading}...

ಸೂ. ರಾಯ ಕುರುಪತಿ ವಿದುರ ಗುರು ಗಾಂ
ಗೇಯ ಕೃಪರಲ್ಲೆನಲು ಪಾಂಡವ
ರಾಯ ವಿಪಿನಕೆ ಘೋಷಯಾತ್ರೆಯ ನೆವದಲೈತಂದ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ನಿಜನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ ॥1॥

೦೦೨ ಸೂರೆವೋದುದು ರಾಜ್ಯಸಿರಿ ...{Loading}...

ಸೂರೆವೋದುದು ರಾಜ್ಯಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟ ವಿಧಿಯೆಂದಳಲಿದನು ಭೂಪ ॥2॥

೦೦೩ ಎಹಗೆ ಸೈರಿಸಿ ...{Loading}...

ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿ ವಿರಹದ
ದಹನತಾಪಸ್ತಂಭದೌಷಧ ದಾನ ಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆ ಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ ॥3॥

೦೦೪ ಅರಸ ಕೇಳೈ ...{Loading}...

ಅರಸ ಕೇಳೈ ಹಸ್ತಿನಾಪುರ
ವರಕೆ ಕಾಮ್ಯಕವನದಿನೊಬ್ಬನು
ಧರಣಿಸುರನೈತಂದು ಕರ್ಣಾದಿಗಳ ಮನೆಗಳಲಿ
ಇರಲಿರಲು ಧೃತರಾಷ್ಟ್ರ ಭೂಪತಿ
ಕರೆಸಿ ಬೆಸಗೊಂಡನು ಯುಧಿಷ್ಠಿರ
ನಿರವನಟವೀತಟ ಪರಿಭ್ರಮಣೈಕ ಭೀಷಣವ ॥4॥

೦೦೫ ವಿವಿಧ ವನ ...{Loading}...

ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ ॥5॥

೦೦೬ ಈ ವಿಧಿಯೆ ...{Loading}...

ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾ ಮು
ನ್ನಾವ ನೋಹಿಯನಳಿದೆನೋ ಭವಭವ ಸಹಸ್ರದಲಿ
ಈ ವಿಲಾಸವನೀ ವಿಭವ ಸಂ
ಭಾವನೆಯನೀ ಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ ॥6॥

೦೦೭ ಮರಳಿ ಮರಳಿ ...{Loading}...

ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲುವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರನ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ ॥7॥

೦೦೮ ಅಳಲುವೀ ಧೃತರಾಷ್ಟ್ರನುರು ...{Loading}...

ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದು ಕರ್ಣ ಶಕುನಿಗ
ಳುಲಿದು ತಂಬುಲ ಸೂಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ ॥8॥

೦೦೯ ಖೇದವೇಕೆನ್ದೇನು ಮಕ್ಕಳು ...{Loading}...

ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಮಯದಲಿ ದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ ॥9॥

೦೧೦ ಈ ಕುಮಾರಕರಲ್ಲಲೇ ...{Loading}...

ಈ ಕುಮಾರಕರಲ್ಲಲೇ ಕುಂ
ತೀ ಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲ ಡೊಂಬೇಕೆಂದನಾ ಶಕುನಿ ॥10॥

೦೧೧ ವಿಷಯಲಮ್ಪಟರಕ್ಷ ಲೀಲಾ ...{Loading}...

ವಿಷಯಲಂಪಟರಕ್ಷ ಲೀಲಾ
ವ್ಯಸನಕೋಸುಗ ವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ ॥11॥

೦೧೨ ಅವರು ಕುಹಕೋಪಾಯದಲಿ ...{Loading}...

ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ ॥12॥

೦೧೩ ಗಳಹನನಿಲಜ ಗಾಢಗರ್ವದ ...{Loading}...

ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಗಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ ॥13॥

೦೧೪ ಅವರ ವನವಾಸದ ...{Loading}...

ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವರ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿವಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಮರೆವುದುಚಿತವು ಕರ್ಣ ಹೇಳೆಂದ ॥14॥

೦೧೫ ಬೇವು ತಾ ...{Loading}...

ಬೇವು ತಾ ಪರಿಪಕ್ವವಾದರೆ
ಹಾವುಮೆಕ್ಕೆಗೆ ಸಾಕ್ಷಿ ಗಡ ಧ
ರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ
ಆ ವಿಡಂಬದ ಶಕುನಿ ಕರ್ಣರು
ಜೀವಸಖರೈ ತಮ್ಮೊಳಗೆ ದು
ರ್ಭಾವ ಭೀಕರ ಹೃದಯ ನುಡಿದನು ಕರ್ಣನರಸಂಗೆ ॥15॥

೦೧೬ ಆಹ ಶಕುನಿಯ ...{Loading}...

ಆಹ ಶಕುನಿಯ ಮಾತಿನಲಿ ಸಂ
ದೇಹವೇ ಪಾಂಡವರು ಬಂಧು
ದ್ರೋಹಿಗಳು ತಮ್ಮವಧಿ ತುಂಬಲು ಕೇಡ ತಹರೆಂಬ
ಈ ಹದನು ತಪ್ಪುವುದೆ ನೀವತಿ
ಮೋಹದಲಿ ಬಿಡೆ ಬೀಸಿ ಬಿದ್ದರೆ
ಕಾಹುರರು ಕೌರವರ ಕೆಡಿಸುವರೆಂದನಾ ಕರ್ಣ ॥16॥

೦೧೭ ಈ ಸಿರಿಯ ...{Loading}...

ಈ ಸಿರಿಯ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೀ ನೋಡಿ ಹಿಗ್ಗದೆ ಪಾಂಡು ನಂದನರು
ಗಾಸಿಯಾದರು ಗಟ್ಟ ಬೆಟ್ಟದ
ಪೈಸರದೊಳೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ ॥17॥

೦೧೮ ಸೊಗಸು ತಳಿತುದು ...{Loading}...

ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗೆದ್ದ ನೀಲದ ಸರಿಗೆ ಸರಿಯಾಯ್ತು
ಮಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ ॥18॥

೦೧೯ ಹೋಗಲಾ ಪಾಣ್ಡವರ ...{Loading}...

ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜ ದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ ॥19॥

೦೨೦ ನಾಡೊಳಗೆ ತುರುಹಟ್ಟಿಯಲಿ ...{Loading}...

ನಾಡೊಳಗೆ ತುರುಹಟ್ಟಿಯಲಿ ಹೊಲ
ನಾಡಿ ಹೆಚ್ಚಿದ ಗೋ ಕದಂಬವ
ನೋಡುವುದು ನೆವ ಕುರುಪತಿಯ ಗಾಢದ ಸಗಾಢಿಕೆಯ
ನೋಡಿ ನಸಿಯಲಿ ಪಾಂಡು ಸುತರವ
ರಾಡುಗಾಡಿನ ಹೊಲನ ಹೊರೆಯಲಿ
ಕೂಡೆ ತನುಪರಿಮಳದಲರಮನೆಯಂಗನಾ ನಿವಹ ॥20॥

೦೨೧ ವನದ ಚಿಮ್ಮಣ್ಡೆಗಳ ...{Loading}...

ವನದ ಚಿಮ್ಮಂಡೆಗಳ ಘೋರ
ಧ್ವನಿಗಳಲಿ ಕಿವಿ ಮೃಗಕುಲದ ಸೊಗ
ಡಿನಲಿ ನಾಸಿಕ ರೌದ್ರ ಭೂತಾಲೋಕನದಿ ನಯನ
ಜನಪರುರೆ ಬೆದರುವರು ನಿನ್ನರ
ಮನೆಯ ಸತಿಯರ ನೇವುರದ ನು
ಣ್ದನಿಗಳಲಿ ತನುಗಂಧದಲಿ ರೂಪುಗಳ ಸೊಗಸಿನಲಿ ॥21॥

೦೨೨ ಸಿರಿಗೆ ಸಫಲತೆಯಹುದು ...{Loading}...

ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸು ನೆರೆ ಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹುರಿಯೇರುವುದು ಮತವಲ್ಲೆಂದನಂಧ ನೃಪ ॥22॥

೦೨೩ ಹೂಣೆ ಹೊಗೆವವರೊಡನೆ ...{Loading}...

ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು ॥23॥

೦೨೪ ಪರಿಮಿತದಲೀ ವಾರ್ತೆ ...{Loading}...

ಪರಿಮಿತದಲೀ ವಾರ್ತೆ ನೆಗಳಿದು
ದರಮನೆಯಲಿದನೈದೆ ಕೇಳಿದು
ಗುರು ವಿದುರ ಗಾಂಗೇಯ ಕೃಪರಳಲಿದರು ತಮ್ಮೊಳಗೆ
ಕರೆಸಿ ನುಡಿದರು ಕರ್ಣ ಸೌಬಲ
ಕುರುಪತಿಗಳಿಗೆ ಘೋಷಯಾತ್ರಾ
ಭರವನರಿದೆವು ಹೋಹುದನುಚಿತವೆಂದರನಿಬರಿಗೆ ॥24॥

೦೨೫ ಅವಗಡೆಯನಾ ಭೀಮ ...{Loading}...

ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಯರನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಿಕ್ಕುವುದು ಲೇಸಲ್ಲೆಂದನಾ ಭೀಷ್ಮ ॥25॥

೦೨೬ ಸಾರಿದೆವು ನಿಮ್ಮೊಡನೆ ...{Loading}...

ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪದು ಹೋಗಬೇಡೆನಲು
ದೂರ ತಾರೆವು ನಿವಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ ॥26॥

೦೨೭ ಆದರಲ್ಲಿ ಶುಭಾಶುಭವ ...{Loading}...

ಆದರಲ್ಲಿ ಶುಭಾಶುಭವ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತ ॥27॥

೦೨೮ ಕೇರಿಯಲಿ ಸಾರಿದರು ...{Loading}...

ಕೇರಿಯಲಿ ಸಾರಿದರು ಕೊಟ್ಟರು
ವಾರಕವನಬಲಾಜನಕೆ ಭಂ
ಡಾರ ಸವೆದುದು ಗಣಿಕೆಯರಿಗಾಭರಣ ದಾನದಲಿ
ಸಾರ ಪರಿಮಳ ವಸ್ತುಗಳ ಬಲು
ಭಾರಣೆಯ ಪೆಟ್ಟಿಗೆಗಳೊಟ್ಟಿತು
ತೇರುಗಳ ಮೇಲೊದಗಿತಕ್ಷೋಹಿಣಿಯ ರಾಣಿಯರು ॥28॥

೦೨೯ ಬಿಗಿದ ಬೀಯಗ ...{Loading}...

ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣೀವಾಸದಂದಣ
ತೆಗೆದು ವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ ॥29॥

೦೩೦ ಸೊವಡಿನಾನೆಯ ಮೇಲೆ ...{Loading}...

ಸೊವಡಿನಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ ॥30॥

೦೩೧ ಅರಸ ಕೇಳೈ ...{Loading}...

ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ ॥31॥

೦೩೨ ನೆರೆದುದಗಣಿತ ವನ್ದಿಗಳು ...{Loading}...

ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ ॥32॥

೦೩೩ ಅರಸ ಕೇಳಿವರತ್ತ ...{Loading}...

ಅರಸ ಕೇಳಿವರತ್ತ ಪಯಣದ
ಭರದಿನೈತರೆ ಮುಂದೆ ವಾಯಸ
ವೆರಡು ತಮ್ಮೊಳು ಕದನಮುಖದಲಿ ವಾಮ ದೆಸೆಗಾಗಿ
ಪರಿದುವಲ್ಲಿಂ ಬಳಿಕ ಹಸುಬನ
ಸರುವು ವಾಮದಿ ಗರ್ದಭನ ಬಲ
ಕರಿಯ ಹಕ್ಕಿಯ ತಡೆದು ಮನ್ನಿಸದೈದಿದನು ಭೂಪ ॥33॥

೦೩೪ ಅರಸ ಕೇಳೈ ...{Loading}...

ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ಪಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಚಂಪೆಯ ಭದ್ರಭವನಗಳು ॥34॥

೦೩೫ ಕರೆಸಿದನು ಕೀಲಾರಿಗಳನಾ ...{Loading}...

ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ ॥35॥

೦೩೬ ಬೆಳೆವಿಣಿಲ ಮಿಡಿಗೊಲವ ...{Loading}...

ಬೆಳೆವಿಣಿಲ ಮಿಡಿಗೊಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲ ಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರು ಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿರ್ದವು ಹಿಂಡು ಹಿಂಡಿನಲಿ ॥36॥

೦೩೭ ತರಿಸಿ ಹೋರಿಯ ...{Loading}...

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋ ಲಕ್ಷವಿತ್ತನು ವಿಪ್ರ ಸಂಕುಲಕೆ
ಕರೆಸಿ ಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟವಿಧಾವಂ
ತರಿಗೆ ಬಹುವಿಧ ಬಹಳ ವಂದಿಗೆ ಮಾಗಧವ್ರಜಕೆ ॥37॥

೦೩೮ ಅಙ್ಗಚಿತ್ತವನಿತ್ತು ಮೊದಲಿನ ...{Loading}...

ಅಂಗಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲ ನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿವಾ
ಗಂಗಳನು ಕೊಡಿಸಿದನು ಪರಿವಾರಕೆ ವಿನೋದದಲಿ ॥38॥

+೧೭ ...{Loading}...