೧೬

೦೦೦ ಸೂ ವಿಪಿನದಲಿ ...{Loading}...

ಸೂ. ವಿಪಿನದಲಿ ಪಾಂಚಾಲೆ ಭಕುತಿಯ
ತಪದಲಿರೆ ದೂರ್ವಾಸನುಗ್ರವ
ನಪಹರಿಸಿ ಹರಿ ಮರಳಿ ಹೊಕ್ಕನು ದೋರಕಾಪುರಿಯ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಂತರದೊಳನುಭವಿಸಿದರು ಸಂವತ್ಸರಾಷ್ಟಕವ
ಲೀಲೆ ಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ ॥1॥

೦೦೨ ಆ ಸುಯೋಧನನೇಕಛತ್ರ ...{Loading}...

ಆ ಸುಯೋಧನನೇಕಛತ್ರ ವಿ
ಳಾಸದುರ್ವೀರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿಜನ ಸಹಿತ ವರ ದೂ
ರ್ವಾಸ ಮುನಿಪತಿ ಬಂದು ಹೊಕ್ಕನು ಹಸ್ತಿನಾಪುರವ ॥2॥

೦೦೩ ಮುನಿಯ ಬರವನು ...{Loading}...

ಮುನಿಯ ಬರವನು ಕೇಳಿ ದುರ್ಯೋ
ಧನನು ಭೀಷ್ಮ ದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊಂಡು
ವಿನುತ ಭೂಸುರ ನಿವಹ ಕಾಂತಾ
ಜನದ ಕನ್ನಡಿ ಕಲಶ ವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು ॥3॥

೦೦೪ ವನ್ದನೆಯ ಕೈಗೊಳುತ ...{Loading}...

ವಂದನೆಯ ಕೈಗೊಳುತ ಗಂಗಾ
ನಂದನನ ಕೈವಿಡಿದು ಬರೆ ಕೃಪ
ಮುಂದೆ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ
ಬಂದನಂಗನೆ ಸಹಿತ ನಮಿಸಿದ
ನಂಧ ನೃಪನನು ಹರಸಿ ಹರುಷದ
ಲಂದು ಮುನಿ ಮಂಡಿಸಿದನುನ್ನತ ಸಿಂಹಪೀಠದಲಿ ॥4॥

೦೦೫ ಹೊಳೆವ ಹೊಙ್ಗಳಶದಲಿ ...{Loading}...

ಹೊಳೆವ ಹೊಂಗಳಶದಲಿ ತುಂಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಯಿಂದ ಸತ್ಕರಿಸಿ
ಬಳಿಕ ಕುಶಲವ ಕೇಳ್ದು ಮುನಿ ಸಂ
ಕುಲವನೊಲಿದಾದರಿಸಲಿತ್ತಲು
ವೊಲವು ಮಿಗೆ ಯೆಡೆಯಾದುದಾರೋಗಣೆಗೆ ಮುನಿ ಹೊಕ್ಕ ॥5॥

೦೦೬ ಷಡುರಸಾನ್ನದಲಾದರಣೆಯಿಂ ...{Loading}...

ಷಡುರಸಾನ್ನದಲಾದರಣೆಯಿಂ
ದುಡುಗೊರೆಗಳಿಂ ತುಷ್ಟಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆಂದ ॥6॥

೦೦೭ ಅರಸ ಕೇಳಙ್ಗೈತಳದಲಿಹ ...{Loading}...

ಅರಸ ಕೇಳಂಗೈತಳದಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಅರಸ ಕೌರವನೆಂದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆಂದ ॥7॥

೦೦೮ ಭೂಪ ಕೇಳೆರಡುಣ್ಟೆ ...{Loading}...

ಭೂಪ ಕೇಳೆರಡುಂಟೆ ನಿನ್ನಾ
ಳಾಪವನು ಕೈಕೊಂಡೆನೆನುತ ಮ
ಹಾ ಪರಾಕ್ರಮಿಯೇಳಲೊಡನೆದ್ದುದು ನೃಪಸ್ತೋಮ
ತಾಪಸರು ಬಳಿವಿಡಿದು ಬರೆ ಬಳಿ
ಕಾ ಪುರವ ಹೊರವಂಟು ಭವನಿ
ರ್ಲೇಪ ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ ॥8॥

೦೦೯ ಅಗಡು ಕೌರವನೊಡ್ಡಿದನಲಾ ...{Loading}...

ಅಗಡು ಕೌರವನೊಡ್ಡಿದನಲಾ
ವಿಗಡವನು ಮುನಿಯುಗ್ರರೋಷದ
ಸೆಗಳಿಕೆಗೆ ಪಾಂಡವರು ಸವಿದುತ್ತಾದರಕಟೆನುತ
ದುಗುಡದಲಿ ಗಾಂಗೇಯ ವಿದುರಾ
ದಿಗಳು ಮನೆಯೊಳಗಿತ್ತ ಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ ॥9॥

೦೧೦ ಮರುದಿವಸ ಸತಿಯುಣ್ಡ ...{Loading}...

ಮರುದಿವಸ ಸತಿಯುಂಡ ಸಮಯವ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲನೆ ಯುಧಿಷ್ಠಿರನೆದ್ದು ಸಭೆಸಹಿತ
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವಂತೆ ನೃಪ ಬಂ
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ ॥10॥

೦೧೧ ಕುಶಲವೇ ನಿಮಗೆನುತಲೈವರ ...{Loading}...

ಕುಶಲವೇ ನಿಮಗೆನುತಲೈವರ
ನೊಸಲ ನಿಜಕರತಳದಲೆತ್ತುತ
ಲೊಸೆದು ಧೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನಘ್ರ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿಂತೆಂದ ॥11॥

೦೧೨ ದೇಶ ಕಾನನ ...{Loading}...

ದೇಶ ಕಾನನ ವಸನ ವಲ್ಕಲ
ಭೂಸುರವ್ರಜ ಆತ್ಮಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕಂದಮೂಲಫಲ
ಈ ಸರಿತ್ಪಾನೀಯ ಮಜ್ಜನ
ವಾಸವೇ ಗುರುಭವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತೈಸೆಂದ ಯಮಸೂನು ॥12॥

೦೧೩ ಧಾರುಣೀಪತಿ ಹೇಳಬಹುದುಪ ...{Loading}...

ಧಾರುಣೀಪತಿ ಹೇಳಬಹುದುಪ
ಚಾರವೇಕಿದು ರಾಜ್ಯಪದ ವಿ
ಸ್ತಾರವಾದುದು ರಾಜಋಷಿ ನಿನಗಾರು ಸರಿಯಿನ್ನು
ಸಾರೆಯಾಯ್ತಸ್ತಮಯ ಸಮಯ ಕು
ಧಾರ ವಹ್ನಿಯ ವಿವಿಧ ಪೀಡಾ
ಕಾರಕುಂಟೆ ಚಿಕಿತ್ಸೆಯೆಂದನು ಮುನಿ ನೃಪಾಲಂಗೆ ॥13॥

೦೧೪ ಆವ ಜನ್ಮದ ...{Loading}...

ಆವ ಜನ್ಮದ ಸುಕೃತಫಲ ಸಂ
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡ ಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದುರುಪದಿಯ ॥14॥

೦೧೫ ಅರಸಿಯಾರೋಗಿಸಿದ ಭಾವವ ...{Loading}...

ಅರಸಿಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಕರಣದ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾಂಬು
ಉರಿ ಹೊಡೆದ ಕೆಂದಾವರೆಯವೋಲ್
ಕರುಕುವಡೆದುದು ಮುಖ ಕಪೋಲಕೆ
ಕರವನಿಟ್ಟನು ಮುಂದೆಗೆಟ್ಟು ಮಹೀಶ ಚಿಂತಿಸಿದ ॥15॥

೦೧೬ ತುಡುಕಿ ಸುರಪನ ...{Loading}...

ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕಂಜೆನೆನ್ನಯ
ನುಡಿಗನೃತ ಸಂಭಾವಿಸಿತಲಾ ಕೆಟ್ಟೆ ನಾನೆಂದ ॥16॥

೦೧೭ ಏನಿದೇನೆಲೆ ನೃಪತಿ ...{Loading}...

ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯುಂಟೇ ಸದೆವೆ ಸುರಪನ ಸಗ್ಗ ಗಿಗ್ಗವನು
ಆನೆವರಿವರಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ ಪವ
ಮಾನಸುತ ನಿಜಗದೆಯ ಜಡಿದನು ಬೇಗ ಬೆಸಸೆನುತ ॥17॥

೦೧೮ ಬರಿಯ ನುಡಿಯೇಕಕಟ ...{Loading}...

ಬರಿಯ ನುಡಿಯೇಕಕಟ ನಿಮ್ಮಯ
ಹೊರಿಗೆವಾಳನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದೋಷ ದರಿದ್ರ ಮೃತ್ಯುಭಯ
ಮರೆದಿರೈ ಸೆಳೆಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ ॥18॥

೦೧೯ ಕ್ಷತ್ರತೇಜದ ತೀವ್ರಪಾತ ...{Loading}...

ಕ್ಷತ್ರತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯ ಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ ॥19॥

೦೨೦ ನಾಮವನು ನಮ್ಬಿದ ...{Loading}...

ನಾಮವನು ನಂಬಿದ ಮಹಾತ್ಮರ
ನಾಮವನು ನೆನೆದವರು ಪಡೆವರು
ಕಾಮಿತವನೆಲೆ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ ॥20॥

೦೨೧ ಭೂಸುರರ ಕಳವಳವ ...{Loading}...

ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿ ಮಂ
ತ್ರೋಪದೇಶದ ಬಲುಮೆಯಿಂದವೆ ನೆನೆದಳಚ್ಯುತನ ॥21॥

೦೨೨ ಮುಗುದೆ ಮಿಗೆ ...{Loading}...

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮುಗಿದ ಕೈಗಳ ಮಗುಳೆಯೆವೆಯನು ಮುಚ್ಚಿ ನಾಸಿಕವ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದು ಹೊನಲಾಗಿರಲು ಹಿಮ್ಮಡಿ
ಗೊಗುವ ಕುಂತಳದಬಲೆ ಕಾಮಿಸಿ ನೆನೆದಳಚ್ಯುತನ ॥22॥

೦೨೩ ಶ್ರೀರಮಾವರ ದೈತ್ಯಕುಲ ...{Loading}...

ಶ್ರೀರಮಾವರ ದೈತ್ಯಕುಲ ಸಂ
ಹಾರ ಭಕ್ತಜನಾರ್ತಿಹರ ಭವ
ದೂರ ಸಕಲ ಚರಾಚರಾತ್ಮಕ ದುಷ್ಟ ಕಂಸಹರ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ ॥23॥

೦೨೪ ನೀಲಕಣ್ಠನ ನೇತ್ರವಹ್ನಿ ...{Loading}...

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮಗ್ಗಿದ
ಕಾಲ ಕಾಮನ ಪಥವ ಪಡೆದರು ಪಾಂಡು ನಂದನರು
ಏಳು ದಿಟವೈಯೆನ್ನ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣ ಮೈದೋರೆಂದಳಿಂದುಮುಖಿ ॥24॥

೦೨೫ ಹಿನ್ದೆ ನಾನಾಪಾಯದಿರುಬಿನ ...{Loading}...

ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪು ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ ॥25॥

೦೨೬ ಅರಸುವೆನೆ ಪರಿಪೂರ್ಣ ...{Loading}...

ಅರಸುವೆನೆ ಪರಿಪೂರ್ಣ ಕೇಳೆಂ
ದರುಹುವೆನೆ ಸವರ್ಜ್ಞ ಸಾಕೆಂ
ದೊರಲಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಪುಳ ಘರಟ್ಟರಾರುಂಟೆಂದಳಿಂದುಮುಖಿ ॥26॥

೦೨೭ ಮುನ್ನವೇ ಮುನಿದಮ್ಬರೀಷನ ...{Loading}...

ಮುನ್ನವೇ ಮುನಿದಂಬರೀಷನ
ಬೆನ್ನನೆತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣ ರಕ್ಷಿಸು
ಪನ್ನಗಾಸನ ಹರಿಯೆ ರಕ್ಷಿಸು
ಅನ್ಯಗತಿಯೆನಗಾರೆನುತ ಹಲುಬಿದನು ಭೂಪಾಲ ॥27॥

೦೨೮ ಬಳಿಕ ನಿನ್ನಯ ...{Loading}...

ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕ ಮೂರರಲಿ
ಬಲುಬಿಸಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನ ರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ ॥28॥

೦೨೯ ಅಗಿದು ಬೆಮ್ಬತ್ತಿದೊಡೆ ...{Loading}...

ಅಗಿದು ಬೆಂಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಸುತಿಸಾರೂಪ್ಯಮಾನದಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದುಮುಖಿ ॥29॥

೦೩೦ ಅವನಿಪತಿ ಕೇಳಖಿಳ ...{Loading}...

ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ನಿನ್ನವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜಕೇತನವ ॥30॥

೦೩೧ ಮುಗುಳು ನಗೆಗಳ ...{Loading}...

ಮುಗುಳು ನಗೆಗಳ ಹೊಂಗುವಂಗದ
ನಗೆಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡೆಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ ॥31॥

೦೩೨ ರಥವನಿಳಿದಸುರಾರಿ ಸುಮನೋ ...{Loading}...

ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆ ತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ ॥32॥

೦೩೩ ಧ್ಯಾನಗೋಚರನಾಗಿ ವನಿತೆಯ ...{Loading}...

ಧ್ಯಾನಗೋಚರನಾಗಿ ವನಿತೆಯ
ಮಾನಿಸದಲಿಹ ಪರಮಹಂಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ
ಮಾನಿನಿಯ ಮೈದಡಹಿ ಚಿಂತೆಯ
ದೇನು ತಂಗಿ ಲತಾಂಗಿ ಹೇಳೌ
ಮೌನ ಮುದ್ರೆಯದೇನೆನಲು ಕಂದೆರದಳಿಂದುಮುಖಿ ॥33॥

೦೩೪ ಉಬ್ಬಿದಳು ಹರುಷದಲಿ ...{Loading}...

ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕ ವಾರಿಯೊ
ಳೊಬ್ಬುಳಿಯೊಳೊಡೆಹಾಯ್ದು ನಿಂದುವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ ॥34॥

೦೩೫ ಧರಣಿಯನು ಬಿಡದಳೆದು ...{Loading}...

ಧರಣಿಯನು ಬಿಡದಳೆದು ಹೆಚ್ಚಿದ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಕಲ್ಲಾದಹಲ್ಯಾಶಾಪ ನಿರುಹರಣ
ಚರಣವಿದು ಕಾಳಿಂಗಮರ್ದನ
ಚರಣವಿದು ಶಕಟಪ್ರಭಂಜನ
ಚರಣವಿದೆಲಾಯೆನುತ ಕೊಂಡಾಡಿದಳು ಹರಿಪದವ ॥35॥

೦೩೬ ಸ್ತೋತ್ರಕೀಗಳು ಸಮಯವೇ ...{Loading}...

ಸ್ತೋತ್ರಕೀಗಳು ಸಮಯವೇ ಹೇ
ಳೇತಕೀ ಸ್ತುತಿ ತಂಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತ ತರು ಶುಕನಿಕರಕೀವುದೆ
ಔತಣವ ಸಲೆ ತುಷ್ಟಿಬಡಿಸುವ
ನೀತಿಯನು ನೀ ಬಲ್ಲೆಯೆಂದಳು ಕಮಲಮುಖಿ ನಗುತ ॥36॥

೦೩೭ ಶೌರಿ ಕೇಳ್ ...{Loading}...

ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತಂದೊಡಾಭಾಗ್ಯತೆಯ ನೃಪನಿತ್ತ
ತೀರಿತಕ್ಷಯದನ್ನವಿಂದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆಂದಳಿಂದುಮುಖಿ ॥37॥

೦೩೮ ನಾವು ಹಸಿದೈತನ್ದರೀ ...{Loading}...

ನಾವು ಹಸಿದೈತಂದರೀ ಪರಿ
ದೇವಿ ನಾನಾ ದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈ ಮುಗಿದು
ದೇವ ನಿಮ್ಮಯ ಹಸಿವು ಕಳೆವೊಡೆ
ಭಾವಶುದ್ಧಿಯ ಭಕುತಿ ಬೇಹುದು
ನಾವು ಚಂಚಲ ಚಿತ್ತರೆಂದಳು ಕಮಲಮುಖಿ ನಗುತ ॥38॥

೦೩೯ ಮಾತುಗಳು ಸೊಗಸುವುದೆ ...{Loading}...

ಮಾತುಗಳು ಸೊಗಸುವುದೆ ಹಸಿವಿಂ
ದಾತುರರಿಗೆಲೆ ತಂಗಿ ತಾರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು
ಏತಕೀ ಜಂಜಡವೆನಲು ಜಲ
ಜಾತಮುಖಿ ಕಂಪಿಸುತ ಕುಮುದಾ
ರಾತಿ ಕೊಟ್ಟಾ ಸ್ಥಾಲಿಯನು ತಡವಿದಳು ಕರದಿಂದ ॥39॥

೦೪೦ ಕಣ್ಡು ಕಿಞ್ಚಿತ್ಪಾಕಶೇಷವ ...{Loading}...

ಕಂಡು ಕಿಂಚಿತ್ಪಾಕಶೇಷವ
ಕೊಂಡು ಬಂದೊಡೆ ಕೃಷ್ಣನದ ಕೈ
ಗೊಂಡು ಸವಿದನು ತಣಿದು ತಲೆದೂಗಿದನು ತೇಗಿದನು
ಪಾಂಡವರ ಪತಿಕರಿಸಿ ನಲಿವುತ
ಜಾಂಡ ನುಡಿದನು ಹೃದಯ ಕ್ಷುಧೆಯನು
ಖಂಡಿಸಿದೆಲಾಯೆನುತ ಕೊಂಡಾಡಿದನು ದ್ರೌಪದಿಯ ॥40॥

೦೪೧ ಅರಸ ಕೇಳೀಚೆಯಲಿ ...{Loading}...

ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಳಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯ
ಚ್ಚರಿಯವಾಳುತ ತನ್ನೊಳರಿದನು ಮುರಹರನ ಬರವ ॥41॥

೦೪೨ ಬನ್ದನೇ ಗೋವಿನ್ದ ...{Loading}...

ಬಂದನೇ ಗೋವಿಂದ ಭಕುತರ
ಬಂಧುವಲ್ಲಾತನೊಳು ಮನಸಿಗೆ
ಸಂದ ಮನುಜರ ಸೆಣಸ ಮಾಡುವರಾರು ಭುವನದಲಿ
ಎಂದೆನುತ ದೂರ್ವಾಸ ಮುನಿಪತಿ
ಬಂದು ಕಂಡನು ಪರ್ಣಶಾಲೆಯ
ಲಂದು ಕುಂತೀಸುತ ಸಹಾಯನ ಕೃಷ್ಣರಾಯನನು ॥42॥

೦೪೩ ಕಾಣುತಿದಿರೆದ್ದಸುರಮರ್ದನ ...{Loading}...

ಕಾಣುತಿದಿರೆದ್ದಸುರಮರ್ದನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರವೆತ್ತಣಿಂದಾಯ್ತೆನುತ ಕೈಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ ॥43॥

೦೪೪ ಯತಿಗಳೈತರೆ ಗಾರುಹತ್ಯ ...{Loading}...

ಯತಿಗಳೈತರೆ ಗಾರುಹತ್ಯ
ಪ್ರತತಿ ವಂದಿಸಬೇಹುದಾ ಪ
ದ್ಧತಿಯ ತೋರುವ ಪಂಥವೈಸಲೆ ನೀನು ಮನ್ನಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿಶಿರೋಮಣಿ ಕುಳ್ಳಿರೈ ವ್ಯಾ
ಹೃತಗೃಹಸ್ಥನು ಕುಳ್ಳಿರೆನುತವೆ ಮುನಿಪ ಮಂಡಿಸಿದ ॥44॥

೦೪೫ ತುಮ್ಬಿ ಕುಳ್ಳಿರ್ದಖಿಳ ...{Loading}...

ತುಂಬಿ ಕುಳ್ಳಿರ್ದಖಿಳ ಮುನಿ ನಿಕು
ರುಂಬ ಸಭೆಯೊಳಗಿದ್ದ ಮುನಿಪಂ
ಗಂಬುಜಾನನೆ ನಮಿಸೆ ಹರಸಿದನೈದೆಯಾಗೆನುತ
ಹಂಬಲಿಸುತಿಹ ನಿಗಮ ಶಾಸ್ತ್ರಗ
ಳಿಂಬುಗಾಣದ ಗಾಢ ದೈವದ
ಬೆಂಬಳಿಯಲಿರಲಿನ್ನದಾವುದಸಾಧ್ಯ ನಿಮಗೆಂದ ॥45॥

೦೪೬ ಮೈ ವಶವ ...{Loading}...

ಮೈ ವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ ॥46॥

೦೪೭ ಎಲೆ ಮುನೀಶ್ವರ ...{Loading}...

ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನಸಖನಪರಾಂಬು ರಾಸಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು ॥47॥

೦೪೮ ಬೇರು ನೀರುಣ್ಡಾಗ ...{Loading}...

ಬೇರು ನೀರುಂಡಾಗ ದಣಿಯವೆ
ಭೂರುಹದ ಶಾಖೋಪಶಾಖೆಗ
ಳೋರಣೆಯ ನಿಜದೇಹವಂಗೋಪಾಂಗನೆಂದೆನಿಪ
ಶ್ರೀರಮಣ ಸಂತುಷ್ಟನಾದೊಡೆ
ಬೇರೆ ಭೋಜನವೆಮಗೆ ಬೇಹುದೆ
ಭೂರಮಣ ಕೇಳೆನುತ ಮತ್ತಿಂತೆಂದನಾ ಮುನಿಪ ॥48॥

೦೪೯ ಮೃಷ್ಟಭೋಜನದಿನ್ದ ನಾವ್ ...{Loading}...

ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ ॥49॥

೦೫೦ ಎನ್ದು ಹರಿಯನು ...{Loading}...

ಎಂದು ಹರಿಯನು ಹೊಗಳಿ ನಾನಾ
ಚಂದದಲಿ ಪಾಂಡವರ ತಿಳುಹಿ ಮು
ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ
ಅಂದು ಕುಂತೀ ನಂದನರಿಗಾ
ನಂದ ಸುಖವನು ಕರೆದು ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥50॥

+೧೬ ...{Loading}...