೦೦೦ ಸೂ ವಿಪಿನದಲಿ ...{Loading}...
ಸೂ. ವಿಪಿನದಲಿ ಪಾಂಚಾಲೆ ಭಕುತಿಯ
ತಪದಲಿರೆ ದೂರ್ವಾಸನುಗ್ರವ
ನಪಹರಿಸಿ ಹರಿ ಮರಳಿ ಹೊಕ್ಕನು ದೋರಕಾಪುರಿಯ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕಾಡಿನಲ್ಲಿ ದ್ರೌಪದಿಯು ಭಕ್ತಿ ಪರಾಯಣೆಯಾಗಿರಲು, ದೂರ್ವಾಸರ ಕೋಪವನ್ನು ಉಪಶಮನ ಮಾಡಿ, ಶ್ರೀ ಹರಿಯು ದ್ವಾರಕೆಗೆ ಹಿಂದಿರುಗಿದನು.
ಮೂಲ ...{Loading}...
ಸೂ. ವಿಪಿನದಲಿ ಪಾಂಚಾಲೆ ಭಕುತಿಯ
ತಪದಲಿರೆ ದೂರ್ವಾಸನುಗ್ರವ
ನಪಹರಿಸಿ ಹರಿ ಮರಳಿ ಹೊಕ್ಕನು ದೋರಕಾಪುರಿಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಂತರದೊಳನುಭವಿಸಿದರು ಸಂವತ್ಸರಾಷ್ಟಕವ
ಲೀಲೆ ಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು. ಪಾಂಡುರಾಜನ ಮಕ್ಕಳು ಹೀಗೆ ಎಂಟು ವರ್ಷಗಳ ವನವಾಸವನ್ನು ಪೂರೈಸಿದರು. ಬಳಿಕ ಯಮುನಾ ನದೀತೀರದಲ್ಲಿ ಸಕಲ ಮುನಿಗಳೊಂದಿಗೆ ತೀರ್ಥ ಸೇವಾಪರರಾಗಿ ಅವರು ಸಂತಸದಿಂದ ದಿನ ಕಳೆದರು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಂತರದೊಳನುಭವಿಸಿದರು ಸಂವತ್ಸರಾಷ್ಟಕವ
ಲೀಲೆ ಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ ॥1॥
೦೦೨ ಆ ಸುಯೋಧನನೇಕಛತ್ರ ...{Loading}...
ಆ ಸುಯೋಧನನೇಕಛತ್ರ ವಿ
ಳಾಸದುರ್ವೀರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿಜನ ಸಹಿತ ವರ ದೂ
ರ್ವಾಸ ಮುನಿಪತಿ ಬಂದು ಹೊಕ್ಕನು ಹಸ್ತಿನಾಪುರವ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಭೂಮಿಯನ್ನು ಏಕಚ್ಛತ್ರ ವೈಭವದಿಂದ ಪಾಲಿಸುತ್ತಾ ಸುಖವಾಗಿದ್ದನು. ಒಮ್ಮೆ ದೂರ್ವಾಸಮುನಿಯು ಬ್ರಾಹ್ಮಣ ಗಡಣ ಸಹಿತ ಹಸ್ತಿನಾಪುರಕ್ಕೆ ಬಂದನು.
ಮೂಲ ...{Loading}...
ಆ ಸುಯೋಧನನೇಕಛತ್ರ ವಿ
ಳಾಸದುರ್ವೀರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿಜನ ಸಹಿತ ವರ ದೂ
ರ್ವಾಸ ಮುನಿಪತಿ ಬಂದು ಹೊಕ್ಕನು ಹಸ್ತಿನಾಪುರವ ॥2॥
೦೦೩ ಮುನಿಯ ಬರವನು ...{Loading}...
ಮುನಿಯ ಬರವನು ಕೇಳಿ ದುರ್ಯೋ
ಧನನು ಭೀಷ್ಮ ದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊಂಡು
ವಿನುತ ಭೂಸುರ ನಿವಹ ಕಾಂತಾ
ಜನದ ಕನ್ನಡಿ ಕಲಶ ವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂರ್ವಾಸನ ಆಗಮನವನ್ನು ತಿಳಿದು ಕೌರವನು ಭೀಷ್ಮ ದ್ರೋಣ ಗೌತಮ ಕರ್ಣ ಅಶ್ವತ್ಥಾಮ ವಿದುರಾದಿಗಳನ್ನು ಒಡಗೂಡಿ, ಬ್ರಾಹ್ಮಣರೊಡನೆ, ನಾರೀ ಸಮೂಹದೊಡನೆ ಕಲಶ ಕನ್ನಡಿಗಳೊಂದಿಗೆ ವಾದ್ಯ ಧ್ವನಿ ಸಹಿತ ಅವನನ್ನು ಸ್ವಾಗತಿಸಿ, ಕಾಣಿಕೆಗಳನ್ನು ಅರ್ಪಿಸಿ ನಮಸ್ಕರಿಸಿದನು.
ಮೂಲ ...{Loading}...
ಮುನಿಯ ಬರವನು ಕೇಳಿ ದುರ್ಯೋ
ಧನನು ಭೀಷ್ಮ ದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊಂಡು
ವಿನುತ ಭೂಸುರ ನಿವಹ ಕಾಂತಾ
ಜನದ ಕನ್ನಡಿ ಕಲಶ ವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು ॥3॥
೦೦೪ ವನ್ದನೆಯ ಕೈಗೊಳುತ ...{Loading}...
ವಂದನೆಯ ಕೈಗೊಳುತ ಗಂಗಾ
ನಂದನನ ಕೈವಿಡಿದು ಬರೆ ಕೃಪ
ಮುಂದೆ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ
ಬಂದನಂಗನೆ ಸಹಿತ ನಮಿಸಿದ
ನಂಧ ನೃಪನನು ಹರಸಿ ಹರುಷದ
ಲಂದು ಮುನಿ ಮಂಡಿಸಿದನುನ್ನತ ಸಿಂಹಪೀಠದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನ ವಂದನೆಯನ್ನು ಸ್ವೀಕರಿಸಿ, ಭೀಷ್ಮರ ಕೈಹಿಡಿದು ಕೃಪ ಕರ್ಣಾದಿಗಳ ಜೊತೆಗೆ ಅರಮನೆಗೆ ಬಂದನು. ಅಲ್ಲಿ ಧೃತರಾಷ್ಟ್ರ ಭೂಪತಿಯು ಗಾಂಧಾರೀ ಸಹಿತನಾಗಿ ಬಂದು ನಮಿಸಲು, ಅವರಿಗೆ ಆಶೀರ್ವದಿಸಿ, ಸಂತೋಷದಿಂದ ಸಿಂಹಾಸನದಲ್ಲಿ ವಿರಾಜಮಾನನಾದನು.
ಪದಾರ್ಥ (ಕ.ಗ.ಪ)
ಸಿಂಹಪೀಠ - ಸಿಂಹಾಸನ
ಮೂಲ ...{Loading}...
ವಂದನೆಯ ಕೈಗೊಳುತ ಗಂಗಾ
ನಂದನನ ಕೈವಿಡಿದು ಬರೆ ಕೃಪ
ಮುಂದೆ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ
ಬಂದನಂಗನೆ ಸಹಿತ ನಮಿಸಿದ
ನಂಧ ನೃಪನನು ಹರಸಿ ಹರುಷದ
ಲಂದು ಮುನಿ ಮಂಡಿಸಿದನುನ್ನತ ಸಿಂಹಪೀಠದಲಿ ॥4॥
೦೦೫ ಹೊಳೆವ ಹೊಙ್ಗಳಶದಲಿ ...{Loading}...
ಹೊಳೆವ ಹೊಂಗಳಶದಲಿ ತುಂಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಯಿಂದ ಸತ್ಕರಿಸಿ
ಬಳಿಕ ಕುಶಲವ ಕೇಳ್ದು ಮುನಿ ಸಂ
ಕುಲವನೊಲಿದಾದರಿಸಲಿತ್ತಲು
ವೊಲವು ಮಿಗೆ ಯೆಡೆಯಾದುದಾರೋಗಣೆಗೆ ಮುನಿ ಹೊಕ್ಕ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊನ್ನ ಕಲಶದಲ್ಲಿ ತುಂಬಿದ ನೀರಿನಿಂದ ಮುನಿಯ ಪಾದವನ್ನು ತೊಳೆದು, ಮಧುಪರ್ಕಗಳನ್ನಿತ್ತು ದೂರ್ವಾಸರನ್ನು ಮತ್ತು ಉಳಿದ ಮುನಿಗಳನ್ನು ಉಪಚರಿಸಿ ಕ್ಷೇಮಸಮಾಚಾರವನ್ನು ಕೇಳಿದನು. ಮತ್ತೆ ಮುನಿಯು ಸಂತಸದಿಂದ ಆರೋಗಣೆಗಾಗಿ ತೆರಳಿದನು.
ಪದಾರ್ಥ (ಕ.ಗ.ಪ)
ಮಧುಪರ್ಕ - ಮೊಸರು, ತುಪ್ಪ, ನೀರು, ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ
ಮೂಲ ...{Loading}...
ಹೊಳೆವ ಹೊಂಗಳಶದಲಿ ತುಂಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಯಿಂದ ಸತ್ಕರಿಸಿ
ಬಳಿಕ ಕುಶಲವ ಕೇಳ್ದು ಮುನಿ ಸಂ
ಕುಲವನೊಲಿದಾದರಿಸಲಿತ್ತಲು
ವೊಲವು ಮಿಗೆ ಯೆಡೆಯಾದುದಾರೋಗಣೆಗೆ ಮುನಿ ಹೊಕ್ಕ ॥5॥
೦೦೬ ಷಡುರಸಾನ್ನದಲಾದರಣೆಯಿಂ ...{Loading}...
ಷಡುರಸಾನ್ನದಲಾದರಣೆಯಿಂ
ದುಡುಗೊರೆಗಳಿಂ ತುಷ್ಟಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆಂದ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಷಡ್ರಸೋಪೇತವಾದ ಭೋಜನ, ದಕ್ಷಿಣೆಗಳಿಂದ ಎಂಬತ್ತೆಂಟು ಸಾವಿರ ಮುನಿಗಳನ್ನು ದೊರೆಯು ಸಂತೃಪ್ತಿ ಪಡಿಸಿದನು. ಈ ಸುಖಾನುಭವದಿಂದ ಪ್ರೀತನಾದ ಸಂನ್ಯಾಸಿ ರೂಪದ ಸಾಕ್ಷಾತ್ ಪರಮೇಶ್ವರನಾದ ದೂರ್ವಾಸನು ಕೌರವನನ್ನು ಮೈದಡವಿ ‘ಮಗನೆ ಮೆಚ್ಚಿದೆ, ನಿನಗೆ ಬೇಕಾದುದನ್ನು ಬೇಡು’ ಎಂದನು.
ಮೂಲ ...{Loading}...
ಷಡುರಸಾನ್ನದಲಾದರಣೆಯಿಂ
ದುಡುಗೊರೆಗಳಿಂ ತುಷ್ಟಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆಂದ ॥6॥
೦೦೭ ಅರಸ ಕೇಳಙ್ಗೈತಳದಲಿಹ ...{Loading}...
ಅರಸ ಕೇಳಂಗೈತಳದಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಅರಸ ಕೌರವನೆಂದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆಂದ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಅಂಗೈಯಲ್ಲಿರುವ ಪರುಷಮಣಿಯನ್ನು ಕಲ್ಲೆಂದು ಭಾವಿಸಿ, ಯಃಕಶ್ಚಿತ್ ಕಲ್ಲಿನ ಹರಳನ್ನು ಕಂಡು ನಲಿಯುವ ಮೂಢ ಮನುಷ್ಯನಂತೆ ಕೌರವನು ‘ದ್ರೌಪದಿ ಊಟ ಮಾಡಿದ ನಂತರ ನೀವೆಲ್ಲರೂ ಒಟ್ಟಿಗೆ ಅಭ್ಯಾಗತರಂತೆ ಹೋಗಿ ಭೋಜನಾಕಾಂಕ್ಷಿಗಳಾಗಿದ್ದೇವೆಂದು ತಿಳಿಸಿ’ ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಟೆಕ್ಕೆ -ಗಾಜಿನ ಮಣಿ
ಪರುಷ - ಸ್ಪರ್ಷಮಣಿ
ಮೂಲ ...{Loading}...
ಅರಸ ಕೇಳಂಗೈತಳದಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಅರಸ ಕೌರವನೆಂದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆಂದ ॥7॥
೦೦೮ ಭೂಪ ಕೇಳೆರಡುಣ್ಟೆ ...{Loading}...
ಭೂಪ ಕೇಳೆರಡುಂಟೆ ನಿನ್ನಾ
ಳಾಪವನು ಕೈಕೊಂಡೆನೆನುತ ಮ
ಹಾ ಪರಾಕ್ರಮಿಯೇಳಲೊಡನೆದ್ದುದು ನೃಪಸ್ತೋಮ
ತಾಪಸರು ಬಳಿವಿಡಿದು ಬರೆ ಬಳಿ
ಕಾ ಪುರವ ಹೊರವಂಟು ಭವನಿ
ರ್ಲೇಪ ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೂಪತಿ, ನೀನು ಹೇಳಿದ ಮೇಲೆ ಆಗದು ಎನ್ನುತ್ತೇವೆಯೇ ? ಅದರಂತೆ ಮಾಡುತ್ತೇವೆ’ ಎಂದು ಮುನಿಯು ಹೊರಡಲು, ನೃಪನ ಪರಿವಾರ ಎದ್ದು ನಿಂತಿತು. ಋಷಿಗಳೊಂದಿಗೆ ಸಂಸಾರ ಬಂಧನದಿಂದ ಮುಕ್ತನಾದ ದೂರ್ವಾಸನು ಭೀಷ್ಮ ದ್ರೋಣಾದಿಗಳನ್ನು ಮನೆಗೆ ಕಳುಹಿಸಿ ಪಟ್ಟಣದಿಂದ ಹೊರಟನು.
ಮೂಲ ...{Loading}...
ಭೂಪ ಕೇಳೆರಡುಂಟೆ ನಿನ್ನಾ
ಳಾಪವನು ಕೈಕೊಂಡೆನೆನುತ ಮ
ಹಾ ಪರಾಕ್ರಮಿಯೇಳಲೊಡನೆದ್ದುದು ನೃಪಸ್ತೋಮ
ತಾಪಸರು ಬಳಿವಿಡಿದು ಬರೆ ಬಳಿ
ಕಾ ಪುರವ ಹೊರವಂಟು ಭವನಿ
ರ್ಲೇಪ ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ ॥8॥
೦೦೯ ಅಗಡು ಕೌರವನೊಡ್ಡಿದನಲಾ ...{Loading}...
ಅಗಡು ಕೌರವನೊಡ್ಡಿದನಲಾ
ವಿಗಡವನು ಮುನಿಯುಗ್ರರೋಷದ
ಸೆಗಳಿಕೆಗೆ ಪಾಂಡವರು ಸವಿದುತ್ತಾದರಕಟೆನುತ
ದುಗುಡದಲಿ ಗಾಂಗೇಯ ವಿದುರಾ
ದಿಗಳು ಮನೆಯೊಳಗಿತ್ತ ಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಷ್ಟನಾದ ಕೌರವನು ವ್ಯೂಹವನ್ನು ಒಡ್ಡಿದನಲ್ಲಾ, ಮುನಿಯ ಕ್ರೋಧಾಗ್ನಿಗೆ ಪಾಂಡವರು ತುತ್ತಾದರಲ್ಲಾ, ಅಕಟಾ..’ ಎಂದು ಭೀಷ್ಮ ವಿದುರಾದಿಗಳು ಮನೆಯೊಳಗೆ ದುಃಖತಪ್ತರಾದರು. ಇತ್ತ ಕೌರವನು ನಗುತ್ತಾ ಕರ್ಣಾದಿಗಳ ಜೊತೆಗೆ ಅರಮನೆಯನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಅಗಡು - ದುಷ್ಟ
ಸೆಗಳಿಕೆ - ಬಿಸಿ
ಮೂಲ ...{Loading}...
ಅಗಡು ಕೌರವನೊಡ್ಡಿದನಲಾ
ವಿಗಡವನು ಮುನಿಯುಗ್ರರೋಷದ
ಸೆಗಳಿಕೆಗೆ ಪಾಂಡವರು ಸವಿದುತ್ತಾದರಕಟೆನುತ
ದುಗುಡದಲಿ ಗಾಂಗೇಯ ವಿದುರಾ
ದಿಗಳು ಮನೆಯೊಳಗಿತ್ತ ಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ ॥9॥
೦೧೦ ಮರುದಿವಸ ಸತಿಯುಣ್ಡ ...{Loading}...
ಮರುದಿವಸ ಸತಿಯುಂಡ ಸಮಯವ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲನೆ ಯುಧಿಷ್ಠಿರನೆದ್ದು ಸಭೆಸಹಿತ
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವಂತೆ ನೃಪ ಬಂ
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾರನೆಯ ದಿನ, ದ್ರೌಪದಿಯು ಊಟ ಮಾಡಿದ ನಂತರ, ಸಮಯ ನೋಡಿ ದೂರ್ವಾಸನು ಬರಲು, ಕಪಟವನ್ನು ತಿಳಿಯದ ಧರ್ಮಜನು ಎಲ್ಲರೊಡನೆ ಸ್ವಲ್ಪದೂರ ಬಂದು ಇದಿರುಗೊಂಡು ವಿನಯಶೀಲನಾಗಿ, ಭಕ್ತಿಯಿಂದ ಬಾಗಿ ತಮ್ಮಂದಿರೊಂದಿಗೆ ಮುನಿಗೆ ನಮಸ್ಕರಿಸಿದನು.
ಮೂಲ ...{Loading}...
ಮರುದಿವಸ ಸತಿಯುಂಡ ಸಮಯವ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲನೆ ಯುಧಿಷ್ಠಿರನೆದ್ದು ಸಭೆಸಹಿತ
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವಂತೆ ನೃಪ ಬಂ
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ ॥10॥
೦೧೧ ಕುಶಲವೇ ನಿಮಗೆನುತಲೈವರ ...{Loading}...
ಕುಶಲವೇ ನಿಮಗೆನುತಲೈವರ
ನೊಸಲ ನಿಜಕರತಳದಲೆತ್ತುತ
ಲೊಸೆದು ಧೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನಘ್ರ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿಂತೆಂದ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕ್ಷೇಮವೇ ನಿಮಗೆ ?” ಎಂದು ಕೇಳುತ್ತಾ ಐವರ ನೆತ್ತಿಯನ್ನೂ ಮುಟ್ಟಿ ಎತ್ತಿ, ಧೌಮ್ಯಾದಿ ಋಷಿಗಳನ್ನು ದೂರ್ವಾಸನು ಮನ್ನಿಸಿದನು. ಧರ್ಮರಾಜನು ದೂರ್ವಾಸನನ್ನು ಹೊಸದಾದ ದರ್ಭಾಸನದ ಮೇಲೆ ಕುಳ್ಳಿರಿಸಿ ಅಘ್ರ್ಯಪಾದ್ಯ ಆಚಮನ ಮಧುಪರ್ಕಗಳನ್ನು ಕೊಟ್ಟು ಉಪಚರಿಸಿ ಹೀಗೆ ಹೇಳಿದನು.
ಮೂಲ ...{Loading}...
ಕುಶಲವೇ ನಿಮಗೆನುತಲೈವರ
ನೊಸಲ ನಿಜಕರತಳದಲೆತ್ತುತ
ಲೊಸೆದು ಧೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನಘ್ರ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿಂತೆಂದ ॥11॥
೦೧೨ ದೇಶ ಕಾನನ ...{Loading}...
ದೇಶ ಕಾನನ ವಸನ ವಲ್ಕಲ
ಭೂಸುರವ್ರಜ ಆತ್ಮಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕಂದಮೂಲಫಲ
ಈ ಸರಿತ್ಪಾನೀಯ ಮಜ್ಜನ
ವಾಸವೇ ಗುರುಭವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತೈಸೆಂದ ಯಮಸೂನು ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಾಡೇ ರಾಜ್ಯ ನಾರುಡೆಯೇ ಬೆಟ್ಟ ಬ್ರಾಹ್ಮಣರೇ ಬಂಧುಗಳು, ಪಲಾಶದ ಎಲೆಯೇ ಪಾತ್ರೆ. ಗಡ್ಡೆಗೆಣಸು ಹಣ್ಣುಗಳೇ ಭಕ್ಷ್ಯ ಭೋಜ್ಯಗಳು. ನದೀ ನೀರೇ ಸ್ನಾನ ಪಾನಗಳು. ಗುರುಮನೆಯಲ್ಲೇ ವಾಸ. ಇದು ನಮ್ಮ ರಾಜ್ಯ ವೈಭವ. ಸ್ವಾಮೀ ಚಿತ್ತವಿಸಬೇಕು ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಪಲಾಶ - ಮುತ್ತುಗ
ಮೂಲ ...{Loading}...
ದೇಶ ಕಾನನ ವಸನ ವಲ್ಕಲ
ಭೂಸುರವ್ರಜ ಆತ್ಮಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕಂದಮೂಲಫಲ
ಈ ಸರಿತ್ಪಾನೀಯ ಮಜ್ಜನ
ವಾಸವೇ ಗುರುಭವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತೈಸೆಂದ ಯಮಸೂನು ॥12॥
೦೧೩ ಧಾರುಣೀಪತಿ ಹೇಳಬಹುದುಪ ...{Loading}...
ಧಾರುಣೀಪತಿ ಹೇಳಬಹುದುಪ
ಚಾರವೇಕಿದು ರಾಜ್ಯಪದ ವಿ
ಸ್ತಾರವಾದುದು ರಾಜಋಷಿ ನಿನಗಾರು ಸರಿಯಿನ್ನು
ಸಾರೆಯಾಯ್ತಸ್ತಮಯ ಸಮಯ ಕು
ಧಾರ ವಹ್ನಿಯ ವಿವಿಧ ಪೀಡಾ
ಕಾರಕುಂಟೆ ಚಿಕಿತ್ಸೆಯೆಂದನು ಮುನಿ ನೃಪಾಲಂಗೆ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರಣೀಶ, ಉಪಚಾರಕ್ಕೆ ಹೀಗೆ ಹೇಳಬಹುದಷ್ಟೆ. ನಿನ್ನ ರಾಜ್ಯ ವಿಸ್ತಾರವಾದುದು, ನೀನು ರಾಜರ್ಷಿ. ನಿನಗೆ ಹೋಲಿಕೆಯಿಲ್ಲ. ಸಂಜೆಯ ಸಮಯ ಸನ್ನಿಹಿತವಾಯ್ತು. ತೀವ್ರವಾದ ಹಸಿವಿನ ಅಗ್ನಿಯ ವಿದವಿಧವಾದ ಬಾಧೆಗಳಿಗೆ ಚಿಕಿತ್ಸೆ ಉಂಟೇ ?’ ಎಂದು ಧರ್ಮಜನಿಗೆ ದೂರ್ವಾಸನು ಕೇಳಿದನು.
ಪದಾರ್ಥ (ಕ.ಗ.ಪ)
ಕುಧರ - ಬೆಟ್ಟ , ಇಲ್ಲಿ ತುಂಬ ಹಸಿವಾಗಿದೆ ಎಂದರ್ಥ
ಮೂಲ ...{Loading}...
ಧಾರುಣೀಪತಿ ಹೇಳಬಹುದುಪ
ಚಾರವೇಕಿದು ರಾಜ್ಯಪದ ವಿ
ಸ್ತಾರವಾದುದು ರಾಜಋಷಿ ನಿನಗಾರು ಸರಿಯಿನ್ನು
ಸಾರೆಯಾಯ್ತಸ್ತಮಯ ಸಮಯ ಕು
ಧಾರ ವಹ್ನಿಯ ವಿವಿಧ ಪೀಡಾ
ಕಾರಕುಂಟೆ ಚಿಕಿತ್ಸೆಯೆಂದನು ಮುನಿ ನೃಪಾಲಂಗೆ ॥13॥
೦೧೪ ಆವ ಜನ್ಮದ ...{Loading}...
ಆವ ಜನ್ಮದ ಸುಕೃತಫಲ ಸಂ
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡ ಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದುರುಪದಿಯ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾವ ಜನ್ಮದ ಪುಣ್ಯಫಲ ಒದಗಿ ಬಂದಿದೆಯೋ ? ಇಲ್ಲವಾದರೆ ನಿಮ್ಮ ಆಗಮನ ಭಾಗ್ಯವನ್ನು ಯಾರು ತಾನೇ ಪಡೆಯಬಲ್ಲರು ? ನೀವು ಅಪೇಕ್ಷಿಸಿದುದನ್ನು ನೀಡುತ್ತೇನೆ.’ ಎಂದು ಧರ್ಮರಾಯನು ಕೈಮುಗಿದು ವಿನಂತಿಸಿಕೊಂಡನು. ಆ ದೂರ್ವಾಸನು ಅನುಷ್ಠಾನಗಳಿಗಾಗಿ ಯಮುನಾ ನದೀ ತೀರಕ್ಕೆ ಹೋಗಲು, ಇತ್ತ ಧರ್ಮಜನು ದ್ರೌಪದಿಯನ್ನು ಕರೆಸಿದನು.
ಪದಾರ್ಥ (ಕ.ಗ.ಪ)
ಅನುಷ್ಠಾನಾವಲಂಬನ - ನಿತ್ಯಕರ್ಮಗಳ ಆಚರಣೆ
ಮೂಲ ...{Loading}...
ಆವ ಜನ್ಮದ ಸುಕೃತಫಲ ಸಂ
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡ ಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದುರುಪದಿಯ ॥14॥
೦೧೫ ಅರಸಿಯಾರೋಗಿಸಿದ ಭಾವವ ...{Loading}...
ಅರಸಿಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಕರಣದ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾಂಬು
ಉರಿ ಹೊಡೆದ ಕೆಂದಾವರೆಯವೋಲ್
ಕರುಕುವಡೆದುದು ಮುಖ ಕಪೋಲಕೆ
ಕರವನಿಟ್ಟನು ಮುಂದೆಗೆಟ್ಟು ಮಹೀಶ ಚಿಂತಿಸಿದ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಿಯು ಊಟ ಮುಗಿಸಿರುವುದನ್ನು ಅವಳು ಬರುವಾಗಿನ ಭಾವನೆಯಿಂದಲೇ ಧರ್ಮರಾಜನು ತಿಳಿದು, ಅವನ ಮನಸ್ಸಿನ ಹರ್ಷವು ಮಾಯವಾಗಿ, ಧೈರ್ಯಗುಂದಿತು. ಕಂಗಳಿಂದ ಬಿಸಿ ಕಂಬನಿ ಸುರಿಯಿತು. ಮುಖವು ಬಿಸಿಲಿಗೆ ಬಾಡಿದ ಕೆಂದಾವರೆಯಂತಾಯಿತು. ಮುಂದೇನು ಮಾಡುವುದೆಂದು ಕೆನ್ನೆಗೆ ಕೈಯಿಟ್ಟು ಅರಸನು ಚಿಂತಿಸಿದ.
ಪದಾರ್ಥ (ಕ.ಗ.ಪ)
ಕರಕುವೊಡೆ - ಶಾಖದಿಂದ ಬಾಡು
ಪಾಠಾನ್ತರ (ಕ.ಗ.ಪ)
ಅರಸನ - ಕರಣದ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಅರಸಿಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಕರಣದ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾಂಬು
ಉರಿ ಹೊಡೆದ ಕೆಂದಾವರೆಯವೋಲ್
ಕರುಕುವಡೆದುದು ಮುಖ ಕಪೋಲಕೆ
ಕರವನಿಟ್ಟನು ಮುಂದೆಗೆಟ್ಟು ಮಹೀಶ ಚಿಂತಿಸಿದ ॥15॥
೦೧೬ ತುಡುಕಿ ಸುರಪನ ...{Loading}...
ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕಂಜೆನೆನ್ನಯ
ನುಡಿಗನೃತ ಸಂಭಾವಿಸಿತಲಾ ಕೆಟ್ಟೆ ನಾನೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16.‘ಈ ದೂರ್ವಾಸನು ಒಮ್ಮೆ ಖತಿಗೊಂಡು ದೇವೇಂದ್ರನ ಸಂಪತ್ತೆಲ್ಲ ನಾಶವಾಗುವಂತೆ ಶಾಪವಿತ್ತಿದ್ದ. ಸಿಟ್ಟು ಬಂದರೆ ಮೂರ್ಲೋಕವನ್ನು ಸುಟ್ಟು ತಿಲಕವಿಟ್ಟು ಕೊಳ್ಳುತ್ತಾನೆ. ಸಾಕ್ಷಾತ್ ರುದ್ರನೇ ಕ್ರೋಧದಿಂದ ಶಾಪಕೊಟ್ಟರೂ ನಾನು ಹೆದರೆನು. ಆದರೆ ನನ್ನ ಮಾತಿಗೆ ಸುಳ್ಳುಂಟಾಯಿತಲ್ಲಾ ! ಕೆಟ್ಟೆ’ ಎಂದು ಧರ್ಮರಾಯನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಮೃಡ - ಶಿವ
ಅನೃತ - ಸುಳ್ಳು
ಮೂಲ ...{Loading}...
ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕಂಜೆನೆನ್ನಯ
ನುಡಿಗನೃತ ಸಂಭಾವಿಸಿತಲಾ ಕೆಟ್ಟೆ ನಾನೆಂದ ॥16॥
೦೧೭ ಏನಿದೇನೆಲೆ ನೃಪತಿ ...{Loading}...
ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯುಂಟೇ ಸದೆವೆ ಸುರಪನ ಸಗ್ಗ ಗಿಗ್ಗವನು
ಆನೆವರಿವರಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ ಪವ
ಮಾನಸುತ ನಿಜಗದೆಯ ಜಡಿದನು ಬೇಗ ಬೆಸಸೆನುತ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೃಪವರ, ಏನಿದು ? ಮನಸ್ಸಿನ ವೇದನೆಯನ್ನು ಬಿಡು. ನಿನ್ನ ಮಾತು ಸುಳ್ಳಗುವುದುಂಟೇ ? ದೇವೇಂದ್ರನ ಸ್ವರ್ಗಲೋಕವನ್ನೇ ಸದೆ ಬಡಿಯುತ್ತೇನೆ. ಅಲ್ಲಿಯ ಕಾಮಧೇನುವನ್ನೇ ದರದರನೆ ಎಳೆತಂದು ನಿಮ್ಮ ಪದತಲಕ್ಕೆ ತರುತ್ತೇನೆ ಬೇಗನೇ ಆಜ್ಞಾಪಿಸಿ ಎಂದು ಭೀಮನು ಗದೆಯನ್ನು ತಿರುಗಿಸುತ್ತಾ ಹೇಳಿದನು.
ಮೂಲ ...{Loading}...
ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯುಂಟೇ ಸದೆವೆ ಸುರಪನ ಸಗ್ಗ ಗಿಗ್ಗವನು
ಆನೆವರಿವರಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ ಪವ
ಮಾನಸುತ ನಿಜಗದೆಯ ಜಡಿದನು ಬೇಗ ಬೆಸಸೆನುತ ॥17॥
೦೧೮ ಬರಿಯ ನುಡಿಯೇಕಕಟ ...{Loading}...
ಬರಿಯ ನುಡಿಯೇಕಕಟ ನಿಮ್ಮಯ
ಹೊರಿಗೆವಾಳನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದೋಷ ದರಿದ್ರ ಮೃತ್ಯುಭಯ
ಮರೆದಿರೈ ಸೆಳೆಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಮ್ಮನೆ ಏಕೆ ಮಾತು ? ನಿಮ್ಮನ್ನು ಕೃಷ್ಣನು ಕಾಪಾಡುತ್ತಾನೆ. ಅವನನ್ನು ಮೊರೆ ಹೊಕ್ಕವರಿಗೆ ದಾರಿದ್ರ್ಯ, ಮೃತ್ಯುದೋಷಗಳು ಬಾರವು. ದ್ರೌಪದಿಯ ಸೀರೆಯನ್ನು ಸೆಳೆಯುವಾಗ, ಕೂಗಿ ಕರೆಯಲು ಅವನು ಅಕ್ಷಯಾಂಬರವಿತ್ತುದನ್ನು ಮರೆತಿರಾ ? ಆ ಮಹಿಮಾನ್ವಿತವನ್ನು ಭಜಿಸಿ ಎಂದು ಧೌಮ್ಯನು ಹೇಳಿದನು.
ಪದಾರ್ಥ (ಕ.ಗ.ಪ)
ಹೊರಿಗೆವಾಳ - ರಕ್ಷಕ
ಮೂಲ ...{Loading}...
ಬರಿಯ ನುಡಿಯೇಕಕಟ ನಿಮ್ಮಯ
ಹೊರಿಗೆವಾಳನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದೋಷ ದರಿದ್ರ ಮೃತ್ಯುಭಯ
ಮರೆದಿರೈ ಸೆಳೆಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ ॥18॥
೦೧೯ ಕ್ಷತ್ರತೇಜದ ತೀವ್ರಪಾತ ...{Loading}...
ಕ್ಷತ್ರತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯ ಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮ್ಮ ಕ್ಷತ್ರಿಯ ತೇಜಸ್ಸಿಗೆ ದೇವೇಂದ್ರನು ಹೆದರುವುದಿಲ್ಲ. ಅಧರ್ಮದ ಮಾರ್ಗವನ್ನು ಹಿಡಿಯಬೇಕೆನಿಸಿದರೆ ಕೌರವನ ಪಟ್ಟಣ ಹತ್ತಿರವೇ ಇದೆ. ಈ ಹಿಂದೆ ನಂದಿನಿಧೇನುವನ್ನು ಬಯಸಿದ ಸತ್ಯಹೀನನಾದ ಕಾರ್ತವೀರ್ಯಾರ್ಜುನನ ಕಥೆಯನ್ನು ಮತ್ತೆ ಹೇಳುತ್ತೇನೆ, ಈಗ ಕೃಷ್ಣನನ್ನು ಭಜಿಸು ಎಂದು ಧರ್ಮರಾಯನಿಗೆ ಧೌಮ್ಯನು ಹೇಳಿದನು.
ಪದಾರ್ಥ (ಕ.ಗ.ಪ)
ಸತ್ಯಮಾರಿ - ಸತ್ಯಹೀನ
ಮೂಲ ...{Loading}...
ಕ್ಷತ್ರತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯ ಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ ॥19॥
೦೨೦ ನಾಮವನು ನಮ್ಬಿದ ...{Loading}...
ನಾಮವನು ನಂಬಿದ ಮಹಾತ್ಮರ
ನಾಮವನು ನೆನೆದವರು ಪಡೆವರು
ಕಾಮಿತವನೆಲೆ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕೃಷ್ಣನ ನಾಮವನ್ನು ನಂಬಿದ ಭಕ್ತರ ಹೆಸರು ಹೇಳಿದವರು ಸಹಾ ಅಭೀಷ್ಟವನ್ನು ಪಡೆಯುತ್ತಾರೆ. ನಿಮ್ಮ ಶಕ್ತಿಯನ್ನು ನೀವು ತಿಳಿಯಲಾರಿರಿ. ಕೃಷ್ಣನಿಗೆ ನಿಮ್ಮ ಮೇಲೆ ವಿಶೇಷವಾದ ಕೃಪೆಯಿದೆ. ಅವನು ದ್ರೌಪದಿಗಾಗಿ ಕರಗಿ ಹೋಗುತ್ತಾನೆ. ಆದ್ದರಿಂದ ಅವಳು ಬೇಗನೇ ಕೃಷ್ಣನನ್ನು ಭಜಿಸಲಿ’ ಎಂದು ಹೇಳಿದನು.
ಮೂಲ ...{Loading}...
ನಾಮವನು ನಂಬಿದ ಮಹಾತ್ಮರ
ನಾಮವನು ನೆನೆದವರು ಪಡೆವರು
ಕಾಮಿತವನೆಲೆ ನಿಮ್ಮ ನೆಲೆ ನಿಮಗರಿಯಬಾರದಲೆ
ನಾಮ ನಿಮ್ಮಲಿ ಕೃಪೆ ವಿಶೇಷವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆಂದನಾ ಧೌಮ್ಯ ॥20॥
೦೨೧ ಭೂಸುರರ ಕಳವಳವ ...{Loading}...
ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿ ಮಂ
ತ್ರೋಪದೇಶದ ಬಲುಮೆಯಿಂದವೆ ನೆನೆದಳಚ್ಯುತನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಾಹ್ಮಣರ ಕಳವಳ, ಧರ್ಮರಾಯನ ದುಃಖ, ಭೀಮಸೇನನ ಸಿಟ್ಟು, ಅರ್ಜುನನ ಪರದಾಟ, ಮಾದ್ರೇಯರ ಚಡಪಡಿಕೆ ಇತ್ಯಾದಿಗಳನ್ನು ದ್ರೌಪದಿಯು ಅತಿಯಾದ ದುಃಖದಿಂದ ನೋಡಿ , ಮುನಿಯಿತ್ತ ಮಂತ್ರೋಪದೇಶದ ಬಲದಿಂದ ಶ್ರೀಕೃಷ್ಣನನ್ನು ದುಗುಡದಿಂದ ಸ್ಮರಿಸಿದಳು.
ಮೂಲ ...{Loading}...
ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿ ಮಂ
ತ್ರೋಪದೇಶದ ಬಲುಮೆಯಿಂದವೆ ನೆನೆದಳಚ್ಯುತನ ॥21॥
೦೨೨ ಮುಗುದೆ ಮಿಗೆ ...{Loading}...
ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮುಗಿದ ಕೈಗಳ ಮಗುಳೆಯೆವೆಯನು ಮುಚ್ಚಿ ನಾಸಿಕವ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದು ಹೊನಲಾಗಿರಲು ಹಿಮ್ಮಡಿ
ಗೊಗುವ ಕುಂತಳದಬಲೆ ಕಾಮಿಸಿ ನೆನೆದಳಚ್ಯುತನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಳವೇಣಿಯಾದ ದ್ರೌಪದಿಯು ನೆಟ್ಟಗೆ ನಿಂತುಕೊಂಡು ಸೂರ್ಯನನ್ನು ನೋಡುತ್ತಾ, ಕೈಮುಗಿದು, ಕಣ್ಮುಚ್ಚಿ, ಆಕಾಶದ ಕಡೆಗೆ ಮುಖಮಾಡಿ ರೋಮಾಂಚನ ಉಂಟಾಗುತ್ತಿರಲು ಶ್ರೀಕೃಷ್ಣನನ್ನು ಸ್ಮರಿಸಿದಳು.
ಪದಾರ್ಥ (ಕ.ಗ.ಪ)
ಹಿಮ್ಮಡಿಗೊಗುವ ಕುಂತಳ - ಹಿಮ್ಮಡಿಯನ್ನು ಮುಟ್ಟುತ್ತಿರುವ ಕೂದಲು
ಮೂಲ ...{Loading}...
ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮುಗಿದ ಕೈಗಳ ಮಗುಳೆಯೆವೆಯನು ಮುಚ್ಚಿ ನಾಸಿಕವ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದು ಹೊನಲಾಗಿರಲು ಹಿಮ್ಮಡಿ
ಗೊಗುವ ಕುಂತಳದಬಲೆ ಕಾಮಿಸಿ ನೆನೆದಳಚ್ಯುತನ ॥22॥
೦೨೩ ಶ್ರೀರಮಾವರ ದೈತ್ಯಕುಲ ...{Loading}...
ಶ್ರೀರಮಾವರ ದೈತ್ಯಕುಲ ಸಂ
ಹಾರ ಭಕ್ತಜನಾರ್ತಿಹರ ಭವ
ದೂರ ಸಕಲ ಚರಾಚರಾತ್ಮಕ ದುಷ್ಟ ಕಂಸಹರ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶ್ರೀರಮೆಯರಸನೇ, ರಾಕ್ಷಸವಂಶನಾಶನೇ, ಭಕ್ತವತ್ಸಲನೇ, ಭವಬಂಧನಹಾರಿಯೇ, ಚರಾಚರಾತ್ಮಕನೇ, ಕಂಸಾರಿಯೇ, ಸದ್ಗುಣನಿಧಿಯೇ, ದಯಾನಿಧಿಯೇ, ಸುವಿಚಾರಪಾರಾವಾರನೇ, ನಿನ್ನ ರೂಪುದೋರು ಎಂದು ಬೇಡಿಕೊಂಡಳು.
ಮೂಲ ...{Loading}...
ಶ್ರೀರಮಾವರ ದೈತ್ಯಕುಲ ಸಂ
ಹಾರ ಭಕ್ತಜನಾರ್ತಿಹರ ಭವ
ದೂರ ಸಕಲ ಚರಾಚರಾತ್ಮಕ ದುಷ್ಟ ಕಂಸಹರ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ ॥23॥
೦೨೪ ನೀಲಕಣ್ಠನ ನೇತ್ರವಹ್ನಿ ...{Loading}...
ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮಗ್ಗಿದ
ಕಾಲ ಕಾಮನ ಪಥವ ಪಡೆದರು ಪಾಂಡು ನಂದನರು
ಏಳು ದಿಟವೈಯೆನ್ನ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣ ಮೈದೋರೆಂದಳಿಂದುಮುಖಿ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶಿವನ ನೇತ್ರಾಗ್ನಿಗೆ ಆಹುತಿಯಾದ ಮನ್ಮಥನಂತೆ, ಪಾಂಡವರು ಸಂಕಟಕ್ಕೆ ತುತ್ತಾಗಿದ್ದಾರೆ. ಇದು ಸತ್ಯ. ನನ್ನ ಮಾತನ್ನು ಪರಿಪಾಲಿಸುವುದಕ್ಕೆ ಬೇಗ ಬಾ. ನನ್ನ ಸಂಕಲ್ಪ ಈಡೇರದೇ ಹೋದರೆ ಸರ್ವನಾಶವಾಗುತ್ತದೆ, ಕೃಷ್ಣ… ಬಾ ಎಂದು ಕರೆದಳು.
ಪದಾರ್ಥ (ಕ.ಗ.ಪ)
ಹಾಳು ಹೊರು - ಸರ್ವನಾಶವಾಗು
ಮೂಲ ...{Loading}...
ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮಗ್ಗಿದ
ಕಾಲ ಕಾಮನ ಪಥವ ಪಡೆದರು ಪಾಂಡು ನಂದನರು
ಏಳು ದಿಟವೈಯೆನ್ನ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣ ಮೈದೋರೆಂದಳಿಂದುಮುಖಿ ॥24॥
೦೨೫ ಹಿನ್ದೆ ನಾನಾಪಾಯದಿರುಬಿನ ...{Loading}...
ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪು ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹಿಂದೆ ಬಂದ ಅನೇಕ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಪಾಡಿದ ಗೋವಿಂದನೇ, ಶರಣಾಗತ ರಕ್ಷಕನೆ, ಮುಕುಂದನೆ, ಗುಣಶೀಲನೇ, ಈಗ ರುದ್ರೂಪಿಯಾದ ದೂರ್ವಾಸನು ನಮ್ಮೊಡನೆ ತಪ್ಪು ಹುಡುಕಿ ಸಾಧಿಸ ಬಂದರೆ ಕಾಪಾಡುವವರು ಯಾರು ? ತಂದೆ ನೀನೇ ಗತಿ ಎಂದು ಬೇಡಿದಳು.
ಮೂಲ ...{Loading}...
ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪು ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ ॥25॥
೦೨೬ ಅರಸುವೆನೆ ಪರಿಪೂರ್ಣ ...{Loading}...
ಅರಸುವೆನೆ ಪರಿಪೂರ್ಣ ಕೇಳೆಂ
ದರುಹುವೆನೆ ಸವರ್ಜ್ಞ ಸಾಕೆಂ
ದೊರಲಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಪುಳ ಘರಟ್ಟರಾರುಂಟೆಂದಳಿಂದುಮುಖಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಡುಕೋಣವೆಂದರೆ ನೀನು ಪರಿಪೂರ್ಣ. ನಿನ್ನನ್ನು ಬೇಡೋಣವೆಂದರೆ ನೀನು ಸರ್ವಜ್ಞ. ನಮ್ಮನ್ನು ಕಾಪಾಡು ಎಂದು ನಿನ್ನನ್ನು ನಾವು ಕೇಳಲಾರೆವು. ನೀನು ತಾಯಿ, ನಾವು ನಿನ್ನ ಮಕ್ಕಳಲ್ಲವೆ? ಭಕ್ತರ ದುಃಖವನ್ನು ತಿಳಿದು ಅದನ್ನು ಪರಿಹಾರ ಮಾಡುವರು ಬೇರೆ ಯಾರಿದ್ದಾರೆ, ಕರುಣೆಯ ಮಳೆಗರೆದು ಬೇಗನೇ ನಿನ್ನ ಕುರುಹು ತೋರು ಎಂದು ಬೇಡಿಕೊಂಡಳು.
ಪದಾರ್ಥ (ಕ.ಗ.ಪ)
ಘರಟ್ಟ - ನಾಶಮಾಡುವವನು
ಮೂಲ ...{Loading}...
ಅರಸುವೆನೆ ಪರಿಪೂರ್ಣ ಕೇಳೆಂ
ದರುಹುವೆನೆ ಸವರ್ಜ್ಞ ಸಾಕೆಂ
ದೊರಲಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಪುಳ ಘರಟ್ಟರಾರುಂಟೆಂದಳಿಂದುಮುಖಿ ॥26॥
೦೨೭ ಮುನ್ನವೇ ಮುನಿದಮ್ಬರೀಷನ ...{Loading}...
ಮುನ್ನವೇ ಮುನಿದಂಬರೀಷನ
ಬೆನ್ನನೆತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣ ರಕ್ಷಿಸು
ಪನ್ನಗಾಸನ ಹರಿಯೆ ರಕ್ಷಿಸು
ಅನ್ಯಗತಿಯೆನಗಾರೆನುತ ಹಲುಬಿದನು ಭೂಪಾಲ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ , ದೂರ್ವಾಸನ ಮುನಿಸಿನಿಂದ ರುದ್ರನೇತ್ರಾಗ್ನಿ ಅಂಬರೀಷನನ್ನು ಬೆನ್ನಟ್ಟಲು, ಅದರಿಂದ ಅವನು ಕಂಗೆಟ್ಟು ಕೃಷ್ಣ, ಹರಿ, ಶೇಷಶಾಯಿ ರಕ್ಷಿಸು, ನೀನೇ ಗತಿ ಎಂದು ಕೂಗಿ ಕರೆದನು.
ಮೂಲ ...{Loading}...
ಮುನ್ನವೇ ಮುನಿದಂಬರೀಷನ
ಬೆನ್ನನೆತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣ ರಕ್ಷಿಸು
ಪನ್ನಗಾಸನ ಹರಿಯೆ ರಕ್ಷಿಸು
ಅನ್ಯಗತಿಯೆನಗಾರೆನುತ ಹಲುಬಿದನು ಭೂಪಾಲ ॥27॥
೦೨೮ ಬಳಿಕ ನಿನ್ನಯ ...{Loading}...
ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕ ಮೂರರಲಿ
ಬಲುಬಿಸಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನ ರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ನಿನ್ನ ಸುದರ್ಶನವು ಕೋಟಿ ಸೂರ್ಯ ಪ್ರಕಾಶವನ್ನು ಬೀರಲು, ಮೂರು ಲೋಕವೂ ಹೊತ್ತಿ ಉರಿಯತೊಡಗಿತು. ನಿನ್ನ ಚಕ್ರದ ಪ್ರತಾಪವೆಂಬ ಬಿರುಬಿಸಲಿನಲ್ಲಿ ಅಡಗಿಹೋದ ಬೆಳದಿಂಗಳಿನಂತೆ ದೂರ್ವಾಸನ ಕೋಪವು ತಣ್ಣಗಾಗಿ ಅವನು ಆಶ್ಚರ್ಯಚಕಿತನಾದನು.
ಪದಾರ್ಥ (ಕ.ಗ.ಪ)
ಬೀತುದು-ನಾಶವಾಗು, ಸಾಯು
ಮೂಲ ...{Loading}...
ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕ ಮೂರರಲಿ
ಬಲುಬಿಸಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನ ರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ ॥28॥
೦೨೯ ಅಗಿದು ಬೆಮ್ಬತ್ತಿದೊಡೆ ...{Loading}...
ಅಗಿದು ಬೆಂಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಸುತಿಸಾರೂಪ್ಯಮಾನದಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದುಮುಖಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಸುದರ್ಶನ ಚಕ್ರವು ದೂರ್ವಾಸನ ಬೆಂಬತ್ತಿ ಸಾಗಲು, ಅವನು ಮೂರು ಲೋಕಗಳನ್ನೂ ಸುತ್ತಾಡಿ, ಕೊನೆಗೆ ಭಕ್ತಿಯಿಂದ ಹರಿಯನ್ನು ವೇದಮಂತ್ರಗಳಿಂದ ಸ್ತುತಿ ಮಾಡಿದನು. ಆಗ ಆಗ ಸುದರ್ಶನ ಚಕ್ರವು ಹಿಂದಿರುಗಿತು. ದೇವತೆಗಳು ಉಘೇ ಎನ್ನುವಂತೆ ಅಂಬರೀಷನ ಭಯವನ್ನು ಪರಿಹರಿಸಿದ ಶ್ರೀಕೃಷ್ಣನೇ ಕಾಪಾಡು ಎಂದಳು.
ಪದಾರ್ಥ (ಕ.ಗ.ಪ)
ಸುತಿ - ಶ್ರುತಿ, ವೇದ
ಬೆಗಡು - ಭಯ
ಮೂಲ ...{Loading}...
ಅಗಿದು ಬೆಂಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಸುತಿಸಾರೂಪ್ಯಮಾನದಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದುಮುಖಿ ॥29॥
೦೩೦ ಅವನಿಪತಿ ಕೇಳಖಿಳ ...{Loading}...
ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ನಿನ್ನವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜಕೇತನವ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿಯೇ ಕೇಳು ಸಕಲ ವೇದಸ್ತುತಿಗಳಿಗೆ ಅವಕಾಶವೀಯದ ಮಹಾಮಹಿಮನನ್ನು ನಿನ್ನವರು ಎಷ್ಟು ಜನ್ಮಗಳಲ್ಲಿ ಭಜಿಸಿದ್ದಾರೆಯೋ ? ದ್ರೌಪದಿಯ ಮೊರೆಯನ್ನು ಕೇಳಿ ಸೈರಿಸಲಾರದೆ ಯಾದವಶಿರೋಮಣಿಯಾದ ಶ್ರೀಕೃಷ್ಣನು ಬಂದನು. ದೂರದಲ್ಲಿ ಅವನ ಗರುಡ ಧ್ವಜವನ್ನು ಪಾಂಡವರು ಕಂಡರು.
ಪದಾರ್ಥ (ಕ.ಗ.ಪ)
ಅಕ್ಕೆ - ದುಃಖ
ಖಗರಾಜ - ಗರುಡ
ಮೂಲ ...{Loading}...
ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ನಿನ್ನವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜಕೇತನವ ॥30॥
೦೩೧ ಮುಗುಳು ನಗೆಗಳ ...{Loading}...
ಮುಗುಳು ನಗೆಗಳ ಹೊಂಗುವಂಗದ
ನಗೆಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡೆಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನನ್ನು ನೋಡಿ ಪಾಂಡವರ ಶರೀರಗಳು ಸಂತೋಷದಿಂದ ಉಬ್ಬಿದವು. ಆನಂದಬಾಷ್ಪದಿಂದ ಅವರ ಕಣ್ಣುಗಳು ತುಂಬಿಕೊಂಡವು. ರೋಮಾಂಚನ ಉಂಟಾಗಿ ನಡುಗುತ್ತ , ಪರವಶರಾದ ಪಾಂಡವರು ಮನಸ್ಸಿನ ಚಿಂತೆಗಳಾವುದನ್ನೂ ಗಣಿಸದೆ ಧೌಮ್ಯಾದಿ ಮುನಿಗಳೊಂದಿಗೆ ಶ್ರೀಕೃಷ್ಣನಿಗೆ ನಮಸ್ಕರಿಸಿದರು.
ಮೂಲ ...{Loading}...
ಮುಗುಳು ನಗೆಗಳ ಹೊಂಗುವಂಗದ
ನಗೆಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡೆಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ ॥31॥
೦೩೨ ರಥವನಿಳಿದಸುರಾರಿ ಸುಮನೋ ...{Loading}...
ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆ ತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ರಥದಿಂದ ಇಳಿದು, ಮನೋರಥವನ್ನು ಈಡೇರಿಸಲು ಬಂದಂತೆ ಕೌಂತೇಯರ ಹೆಗಲಿಗೆ ಕೈ ಹಾಕಿ ಆಲಿಂಗಿಸಿದನು. ಭೂಸುರರ ಆಶೀರ್ವಾದ, ಸ್ತುತಿಗಳಿಗೆ ತಲೆವಾಗುತ್ತ ಹರ್ಷದಿಂದ ಅವನು ದ್ರೌಪದಿಯ ಹತ್ತಿರ ಹೋಗಲು ಸುರರು ಜಯಕಾರವನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಹೊರೆ - ಸಮೀಪ
ಮೂಲ ...{Loading}...
ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆ ತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ ॥32॥
೦೩೩ ಧ್ಯಾನಗೋಚರನಾಗಿ ವನಿತೆಯ ...{Loading}...
ಧ್ಯಾನಗೋಚರನಾಗಿ ವನಿತೆಯ
ಮಾನಿಸದಲಿಹ ಪರಮಹಂಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ
ಮಾನಿನಿಯ ಮೈದಡಹಿ ಚಿಂತೆಯ
ದೇನು ತಂಗಿ ಲತಾಂಗಿ ಹೇಳೌ
ಮೌನ ಮುದ್ರೆಯದೇನೆನಲು ಕಂದೆರದಳಿಂದುಮುಖಿ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಮನದೊಳಗೆ ಧ್ಯಾನಗೋಚರನೆನಿಸಿದ ಪರಮಾತ್ಮನು ಬಹಿರಂಗದಲ್ಲಿ ಮನುಷ್ಯಾಕೃತಿಯಿಂದ ಕಂಡುಬಂದನು. ಅವಳ ಮೈದಡವಿ ‘ಏನು ಚಿಂತೆ ? ತಂಗಿ, ಹೇಳಮ್ಮಾ, ಮಾತಾಡಬಾರದೆ ?’ ಎಂದೆನ್ನಲು ದ್ರೌಪದಿ ಕಣ್ಣು ತೆರೆದಳು.
ಮೂಲ ...{Loading}...
ಧ್ಯಾನಗೋಚರನಾಗಿ ವನಿತೆಯ
ಮಾನಿಸದಲಿಹ ಪರಮಹಂಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ
ಮಾನಿನಿಯ ಮೈದಡಹಿ ಚಿಂತೆಯ
ದೇನು ತಂಗಿ ಲತಾಂಗಿ ಹೇಳೌ
ಮೌನ ಮುದ್ರೆಯದೇನೆನಲು ಕಂದೆರದಳಿಂದುಮುಖಿ ॥33॥
೦೩೪ ಉಬ್ಬಿದಳು ಹರುಷದಲಿ ...{Loading}...
ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕ ವಾರಿಯೊ
ಳೊಬ್ಬುಳಿಯೊಳೊಡೆಹಾಯ್ದು ನಿಂದುವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಗೆ ಅತ್ಯಂತ ಸಂತೋಷವಾಯಿತು. ದುಃಖ ನಾಶವಾಯಿತು. ಕಂಬನಿಯ ಬಿಂದುಗಳು ಪುಳಕ ಸ್ವೇದ ಜಲದಲ್ಲಿ ಕೊಚ್ಚಿಹೋದವು. ಸಭ್ಯತೆ ಎಂಬ ಬಳ್ಳಿಯು ಹೂಬಿಟ್ಟು, ಸುತ್ತಲೂ ಹಬ್ಬಿ ಹಣ್ಣು ನೀಡಿದಂತೆ ಭಗವಂತನ ಪಾದಕಮಲದಲ್ಲಿ ಸಾಷ್ಟಾಂಗ ನಮಸ್ಕರಿಸಿದಳು.
ಮೂಲ ...{Loading}...
ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕ ವಾರಿಯೊ
ಳೊಬ್ಬುಳಿಯೊಳೊಡೆಹಾಯ್ದು ನಿಂದುವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ ॥34॥
೦೩೫ ಧರಣಿಯನು ಬಿಡದಳೆದು ...{Loading}...
ಧರಣಿಯನು ಬಿಡದಳೆದು ಹೆಚ್ಚಿದ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಕಲ್ಲಾದಹಲ್ಯಾಶಾಪ ನಿರುಹರಣ
ಚರಣವಿದು ಕಾಳಿಂಗಮರ್ದನ
ಚರಣವಿದು ಶಕಟಪ್ರಭಂಜನ
ಚರಣವಿದೆಲಾಯೆನುತ ಕೊಂಡಾಡಿದಳು ಹರಿಪದವ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯನ್ನು ಅಳೆದು ಮೀರಿನಿಂತ ಪಾದವಿದು. ಸುರಗಂಗೆಯನ್ನು ಸೃಷ್ಟಿಸಿದ ಪಾದವಿದು. ಕಲ್ಲಾದ ಅಹಲ್ಯೆಯನ್ನು ಉದ್ಧಾರಗೈದ ಪಾದವಿದು. ಕಾಳಿಂಗನನ್ನು ಮರ್ದಿಸಿದ ಪಾದವಿದು. ಶಕಟಾಸುರನನ್ನು ಮೆಟ್ಟಿ ಕೊಂದ ಪಾದವಿದು ಎಂದು ಹರಿಚರಣವನ್ನು ದ್ರೌಪದಿಯು ಕೊಂಡಾಡಿದಳು.
ಪದಾರ್ಥ (ಕ.ಗ.ಪ)
ನಿರುಹರಣ - ವಿಮೋಚನೆ
ಮೂಲ ...{Loading}...
ಧರಣಿಯನು ಬಿಡದಳೆದು ಹೆಚ್ಚಿದ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಕಲ್ಲಾದಹಲ್ಯಾಶಾಪ ನಿರುಹರಣ
ಚರಣವಿದು ಕಾಳಿಂಗಮರ್ದನ
ಚರಣವಿದು ಶಕಟಪ್ರಭಂಜನ
ಚರಣವಿದೆಲಾಯೆನುತ ಕೊಂಡಾಡಿದಳು ಹರಿಪದವ ॥35॥
೦೩೬ ಸ್ತೋತ್ರಕೀಗಳು ಸಮಯವೇ ...{Loading}...
ಸ್ತೋತ್ರಕೀಗಳು ಸಮಯವೇ ಹೇ
ಳೇತಕೀ ಸ್ತುತಿ ತಂಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತ ತರು ಶುಕನಿಕರಕೀವುದೆ
ಔತಣವ ಸಲೆ ತುಷ್ಟಿಬಡಿಸುವ
ನೀತಿಯನು ನೀ ಬಲ್ಲೆಯೆಂದಳು ಕಮಲಮುಖಿ ನಗುತ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ಸ್ತೋತ್ರ ಮಾಡಲು ಹೊತ್ತೇ ? ತಂಗಿ, ಈ ಸ್ತುತಿಗಳು ಏಕೆ ? ಮನಸ್ಸಿನ ಆತುರವೇನು ?” ಎಂದು ಕೃಷ್ಣನು ಅವಳ ಶಿರವನ್ನೆತ್ತಿದನು. ಸತ್ತುಹೋದ ಮರವು ಗಿಳಿಗಳಿಗೆ ಫಲನೀಡಬಲ್ಲುದೆ ? ಪೂರ್ಣವಾಗಿ ಸಂತೃಪ್ತಿಗೊಳಿಸುವ ಬಗೆಯನ್ನು ನೀನೇ ಬಲ್ಲೆ ಎಂದು ನಗುತ್ತಾ ದ್ರೌಪದಿ ಹೇಳಿದಳು.
ಪದಾರ್ಥ (ಕ.ಗ.ಪ)
ಬೀತ ತರು - ಒಣಗಿದ ಮರ
ತುಷ್ಟಿ - ತೃಪ್ತಿ
ಮೂಲ ...{Loading}...
ಸ್ತೋತ್ರಕೀಗಳು ಸಮಯವೇ ಹೇ
ಳೇತಕೀ ಸ್ತುತಿ ತಂಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತ ತರು ಶುಕನಿಕರಕೀವುದೆ
ಔತಣವ ಸಲೆ ತುಷ್ಟಿಬಡಿಸುವ
ನೀತಿಯನು ನೀ ಬಲ್ಲೆಯೆಂದಳು ಕಮಲಮುಖಿ ನಗುತ ॥36॥
೦೩೭ ಶೌರಿ ಕೇಳ್ ...{Loading}...
ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತಂದೊಡಾಭಾಗ್ಯತೆಯ ನೃಪನಿತ್ತ
ತೀರಿತಕ್ಷಯದನ್ನವಿಂದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆಂದಳಿಂದುಮುಖಿ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನೇ, ಶಿವನ ಅವತಾರವಾದ ದೂರ್ವಾಸನು ಪರಿವಾರದೊಂದಿಗೆ ಬರಲು, ಅವನಿಗೆ ಧರ್ಮಜನು ಅಭ್ಯಾಗತೆಯನ್ನು ನೀಡಿದನು. ಅಕ್ಷಯಾನ್ನ ಮುಗಿದಿದೆ. ಮಹರ್ಷಿಯ ಕ್ರೋಧಾವೇಶಕ್ಕೆ ನಿನ್ನ ಮೈದುನನಾದ ಧರ್ಮಜನ ದೇಹವೇ ಉಪಾಹಾರವಾಗುತ್ತದೆ’ ಎಂದಳು.
ಪದಾರ್ಥ (ಕ.ಗ.ಪ)
ಉಪಾರ - ಉಪಾಹಾರ
ಮೂಲ ...{Loading}...
ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತಂದೊಡಾಭಾಗ್ಯತೆಯ ನೃಪನಿತ್ತ
ತೀರಿತಕ್ಷಯದನ್ನವಿಂದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆಂದಳಿಂದುಮುಖಿ ॥37॥
೦೩೮ ನಾವು ಹಸಿದೈತನ್ದರೀ ...{Loading}...
ನಾವು ಹಸಿದೈತಂದರೀ ಪರಿ
ದೇವಿ ನಾನಾ ದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈ ಮುಗಿದು
ದೇವ ನಿಮ್ಮಯ ಹಸಿವು ಕಳೆವೊಡೆ
ಭಾವಶುದ್ಧಿಯ ಭಕುತಿ ಬೇಹುದು
ನಾವು ಚಂಚಲ ಚಿತ್ತರೆಂದಳು ಕಮಲಮುಖಿ ನಗುತ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಿ, ನಾವು ಹಸಿದು ಕೊಂಡು ಬಂದರೆ, ಏನೇನೋ ದೂರು ಹೇಳುವುದು ಸೂಕ್ತವೆ ?’ ಎಂದು ಕೃಷ್ಣನು ಹೇಳಲು, ‘ದೇವ, ನಿಮ್ಮ ಹಸಿವನ್ನು ತಣಿಸಲು ಪರಿಶುದ್ಧವಾದ ಭಕ್ತಿಭಾವ ಬೇಕು. ಆದರೆ ನಾವು ಚಂಚಲ ಮನಸ್ಸಿನವರು’ ಎಂದು ದ್ರೌಪದಿಯು ನಗುತ್ತ ಹೇಳಿದಳು.
ಮೂಲ ...{Loading}...
ನಾವು ಹಸಿದೈತಂದರೀ ಪರಿ
ದೇವಿ ನಾನಾ ದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈ ಮುಗಿದು
ದೇವ ನಿಮ್ಮಯ ಹಸಿವು ಕಳೆವೊಡೆ
ಭಾವಶುದ್ಧಿಯ ಭಕುತಿ ಬೇಹುದು
ನಾವು ಚಂಚಲ ಚಿತ್ತರೆಂದಳು ಕಮಲಮುಖಿ ನಗುತ ॥38॥
೦೩೯ ಮಾತುಗಳು ಸೊಗಸುವುದೆ ...{Loading}...
ಮಾತುಗಳು ಸೊಗಸುವುದೆ ಹಸಿವಿಂ
ದಾತುರರಿಗೆಲೆ ತಂಗಿ ತಾರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು
ಏತಕೀ ಜಂಜಡವೆನಲು ಜಲ
ಜಾತಮುಖಿ ಕಂಪಿಸುತ ಕುಮುದಾ
ರಾತಿ ಕೊಟ್ಟಾ ಸ್ಥಾಲಿಯನು ತಡವಿದಳು ಕರದಿಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಸಿವಿನಿಂದ ಬಳಲಿದವರಿಗೆ ಮಾತು ರುಚಿಸುವುದಿಲ್ಲ. ತಂಗಿ, ಪ್ರೀತಿಯುಳ್ಳವರು ಏನನ್ನು ಕೊಟ್ಟರೂ, ಅಮೃತ ತುಲ್ಯವೆನಿಸುತ್ತದೆ. ಏನಾದರೂ ತಂದುಕೊಡು, ತಡವೇಕೆ?’ ಎನ್ನಲು, ದ್ರೌಪದಿಯು ನಡುಗುತ್ತ ಸೂರ್ಯ ದೇವನು ಕೊಟ್ಟ ಪಾತ್ರೆಯನ್ನು ಮೆಲ್ಲನೆ ತಡವಿ ನೋಡಿದಳು.
ಮೂಲ ...{Loading}...
ಮಾತುಗಳು ಸೊಗಸುವುದೆ ಹಸಿವಿಂ
ದಾತುರರಿಗೆಲೆ ತಂಗಿ ತಾರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು
ಏತಕೀ ಜಂಜಡವೆನಲು ಜಲ
ಜಾತಮುಖಿ ಕಂಪಿಸುತ ಕುಮುದಾ
ರಾತಿ ಕೊಟ್ಟಾ ಸ್ಥಾಲಿಯನು ತಡವಿದಳು ಕರದಿಂದ ॥39॥
೦೪೦ ಕಣ್ಡು ಕಿಞ್ಚಿತ್ಪಾಕಶೇಷವ ...{Loading}...
ಕಂಡು ಕಿಂಚಿತ್ಪಾಕಶೇಷವ
ಕೊಂಡು ಬಂದೊಡೆ ಕೃಷ್ಣನದ ಕೈ
ಗೊಂಡು ಸವಿದನು ತಣಿದು ತಲೆದೂಗಿದನು ತೇಗಿದನು
ಪಾಂಡವರ ಪತಿಕರಿಸಿ ನಲಿವುತ
ಜಾಂಡ ನುಡಿದನು ಹೃದಯ ಕ್ಷುಧೆಯನು
ಖಂಡಿಸಿದೆಲಾಯೆನುತ ಕೊಂಡಾಡಿದನು ದ್ರೌಪದಿಯ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದರೊಳಗೆ ಸ್ವಲ್ಪವೇ ಅನ್ನ ಉಳಿದಿರಲು, ಆಕೆ ಅದನ್ನೇ ತಂದು ನೀಡಿದಳು. ಕೃಷ್ಣನು ಅದನ್ನೇ ಸವಿದು ತಲೆದೂಗುತ್ತಾ ತೃಪ್ತಿಯಿಂದ ತೇಗಿದನು. ಪಾಂಡವರನ್ನು ಸಂತೈಸುತ್ತಾ, ಬ್ರಹ್ಮಾಂಡ ನಾಯಕನಾದ ಶ್ರೀಹರಿಯು ‘ನನ್ನ ಹಸಿವನ್ನು ಪರಿಹರಿಸಿದೆಯಲ್ಲಾ’ ಎಂದು ದ್ರೌಪದಿಯನ್ನು ಕೊಂಡಾಡಿದನು.
ಪದಾರ್ಥ (ಕ.ಗ.ಪ)
ಪಾಕಶೇಷ - ಉಳಿದ ಅನ್ನ
ಮೂಲ ...{Loading}...
ಕಂಡು ಕಿಂಚಿತ್ಪಾಕಶೇಷವ
ಕೊಂಡು ಬಂದೊಡೆ ಕೃಷ್ಣನದ ಕೈ
ಗೊಂಡು ಸವಿದನು ತಣಿದು ತಲೆದೂಗಿದನು ತೇಗಿದನು
ಪಾಂಡವರ ಪತಿಕರಿಸಿ ನಲಿವುತ
ಜಾಂಡ ನುಡಿದನು ಹೃದಯ ಕ್ಷುಧೆಯನು
ಖಂಡಿಸಿದೆಲಾಯೆನುತ ಕೊಂಡಾಡಿದನು ದ್ರೌಪದಿಯ ॥40॥
೦೪೧ ಅರಸ ಕೇಳೀಚೆಯಲಿ ...{Loading}...
ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಳಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯ
ಚ್ಚರಿಯವಾಳುತ ತನ್ನೊಳರಿದನು ಮುರಹರನ ಬರವ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು ಇತ್ತ ಮನಸ್ಸು ಮುದಗೊಂಡು ರೋಮಾಂಚನವಾಗಿ, ತೃಪ್ತಿಯ ತೇಗು ಬಂದು, ಅಳ್ಳೆಗಳು ಹಿಗ್ಗಿ ಹೊಟ್ಟೆ ಕೊರಳವರೆಗೆ ಉಬ್ಬಿ ದೂರ್ವಾಸನಿಗೂ, ಅವನೊಂದಿಗೆ ಬಂದ ಎಲ್ಲ ಋಷಿಗಳಿಗೂ ಅಚ್ಚರಿಯುಂಟಾಯಿತು. ಶ್ರೀಕೃಷ್ಣ ಬಂದನೆಂಬುದು ದೂರ್ವಾಸನಿಗೆ ತಿಳಿಯಿತು.
ಮೂಲ ...{Loading}...
ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಳಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯ
ಚ್ಚರಿಯವಾಳುತ ತನ್ನೊಳರಿದನು ಮುರಹರನ ಬರವ ॥41॥
೦೪೨ ಬನ್ದನೇ ಗೋವಿನ್ದ ...{Loading}...
ಬಂದನೇ ಗೋವಿಂದ ಭಕುತರ
ಬಂಧುವಲ್ಲಾತನೊಳು ಮನಸಿಗೆ
ಸಂದ ಮನುಜರ ಸೆಣಸ ಮಾಡುವರಾರು ಭುವನದಲಿ
ಎಂದೆನುತ ದೂರ್ವಾಸ ಮುನಿಪತಿ
ಬಂದು ಕಂಡನು ಪರ್ಣಶಾಲೆಯ
ಲಂದು ಕುಂತೀಸುತ ಸಹಾಯನ ಕೃಷ್ಣರಾಯನನು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋವಿಂದ ಬಂದನೇ ? ಅವನು ಭಕ್ತವತ್ಸಲನಲ್ಲವೇ ? ಅವನಿಗೆ ಪ್ರಿಯರಾದವರೊಡನೆ ಯಾರಿಗೆ ತಾನೆ ಸೆಣಸುವುದು ಸಾಧ್ಯ? ಎಂದು ದೂರ್ವಾಸಮುನಿಯು ಪರ್ಣ ಕುಟೀರಕ್ಕೆ ಬಂದು ಪಾಂಡವಸಹಾಯಿಯಾದ ಶ್ರೀಕೃಷ್ಣನನ್ನು ಕಂಡನು.
ಪಾಠಾನ್ತರ (ಕ.ಗ.ಪ)
ಸೆಣಸೆ ಮಾಣಿಪರಾರು -ಸೆಣಸ ಮಾಡುವರಾರು
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಬಂದನೇ ಗೋವಿಂದ ಭಕುತರ
ಬಂಧುವಲ್ಲಾತನೊಳು ಮನಸಿಗೆ
ಸಂದ ಮನುಜರ ಸೆಣಸ ಮಾಡುವರಾರು ಭುವನದಲಿ
ಎಂದೆನುತ ದೂರ್ವಾಸ ಮುನಿಪತಿ
ಬಂದು ಕಂಡನು ಪರ್ಣಶಾಲೆಯ
ಲಂದು ಕುಂತೀಸುತ ಸಹಾಯನ ಕೃಷ್ಣರಾಯನನು ॥42॥
೦೪೩ ಕಾಣುತಿದಿರೆದ್ದಸುರಮರ್ದನ ...{Loading}...
ಕಾಣುತಿದಿರೆದ್ದಸುರಮರ್ದನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರವೆತ್ತಣಿಂದಾಯ್ತೆನುತ ಕೈಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನನ್ನು ಕಂಡು ಎದ್ದು ನಿಂತು ಶ್ರೀಹರಿಯು ಕಾಣಿಕೆಗಳನ್ನಿತ್ತು ನಮಸ್ಕರಿಸಿದನು. ಓಹೋಹೋ… ಪರಮೇಶ್ವರನ ಆಗಮನ ಯಾವ ಕಡೆಯಿಂದಾಯಿತು ? ಎಂದು ಕೈಮುಗಿದನು. ‘ಮಾಧವನೇ, ಸಾಕು ಮಾಡು. ಮನುಷ್ಯ ನಾಟಕದ ಈ ಮಾತು ನಿಲ್ಲಿಸು. ನೀನು ಜಾಣನಿದ್ದೀಯ’ ಎಂದು ಮುನಿಯು ಹರಿಯನ್ನು ಆಲಿಂಗಿಸಿದನು.
ಪದಾರ್ಥ (ಕ.ಗ.ಪ)
ಸ್ಥಾಣು - ಶಿವ
ಮೂಲ ...{Loading}...
ಕಾಣುತಿದಿರೆದ್ದಸುರಮರ್ದನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರವೆತ್ತಣಿಂದಾಯ್ತೆನುತ ಕೈಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ ॥43॥
೦೪೪ ಯತಿಗಳೈತರೆ ಗಾರುಹತ್ಯ ...{Loading}...
ಯತಿಗಳೈತರೆ ಗಾರುಹತ್ಯ
ಪ್ರತತಿ ವಂದಿಸಬೇಹುದಾ ಪ
ದ್ಧತಿಯ ತೋರುವ ಪಂಥವೈಸಲೆ ನೀನು ಮನ್ನಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿಶಿರೋಮಣಿ ಕುಳ್ಳಿರೈ ವ್ಯಾ
ಹೃತಗೃಹಸ್ಥನು ಕುಳ್ಳಿರೆನುತವೆ ಮುನಿಪ ಮಂಡಿಸಿದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸನ್ಯಾಸಿಗಳು ಬಂದರೆ ಗೃಹಸ್ಥರು ವಂದಿಸಬೇಕು. ಈ ಪದ್ಧತಿಯನ್ನು ನೀನು ಮನ್ನಿಸುವುದು ಸಹಜವೇ ಆಗಿದೆ. ಕೃಷ್ಣ ನೀನು ಕುಳಿತುಕೋ ದ್ರೌಪದೀ, ನೀನೂ ಕುಳಿತುಕೋ” ಎಂದು ಮುನಿಪತಿಯು ಪೀಠದಲ್ಲಿ ಕುಳಿತುಕೊಂಡನು.
ಪಾಠಾನ್ತರ (ಕ.ಗ.ಪ)
ಸತಿಶಿರೋಮಣಿ - ಶ್ರುತಿ ಶಿರೋಮಣಿ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಯತಿಗಳೈತರೆ ಗಾರುಹತ್ಯ
ಪ್ರತತಿ ವಂದಿಸಬೇಹುದಾ ಪ
ದ್ಧತಿಯ ತೋರುವ ಪಂಥವೈಸಲೆ ನೀನು ಮನ್ನಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿಶಿರೋಮಣಿ ಕುಳ್ಳಿರೈ ವ್ಯಾ
ಹೃತಗೃಹಸ್ಥನು ಕುಳ್ಳಿರೆನುತವೆ ಮುನಿಪ ಮಂಡಿಸಿದ ॥44॥
೦೪೫ ತುಮ್ಬಿ ಕುಳ್ಳಿರ್ದಖಿಳ ...{Loading}...
ತುಂಬಿ ಕುಳ್ಳಿರ್ದಖಿಳ ಮುನಿ ನಿಕು
ರುಂಬ ಸಭೆಯೊಳಗಿದ್ದ ಮುನಿಪಂ
ಗಂಬುಜಾನನೆ ನಮಿಸೆ ಹರಸಿದನೈದೆಯಾಗೆನುತ
ಹಂಬಲಿಸುತಿಹ ನಿಗಮ ಶಾಸ್ತ್ರಗ
ಳಿಂಬುಗಾಣದ ಗಾಢ ದೈವದ
ಬೆಂಬಳಿಯಲಿರಲಿನ್ನದಾವುದಸಾಧ್ಯ ನಿಮಗೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿ ಮುನಿಗಳು ತುಂಬಿದ ಸಭೆಯಲ್ಲಿ, ದೂರ್ವಾಸನಿಗೆ ದ್ರೌಪದಿಯು ನಮಸ್ಕರಿಸಲು, ‘ಮುತ್ತೈದೆಯಾಗು, ವೇದಶಾಸ್ತ್ರಗಳಿಗೆ ಪ್ರಾಪ್ತವಾಗದ ಗಾಢದೈವವು ನಿನ್ನ ಬೆಂಬಲಕ್ಕಿರಲು ಇನ್ನು ನಿಮಗೆ ಯಾವುದು ಅಸಾಧ್ಯ ?’ ಎಂದನು.
ಪದಾರ್ಥ (ಕ.ಗ.ಪ)
ನಿಕುರುಂಬ -ಸಮೂಹ
ಮೂಲ ...{Loading}...
ತುಂಬಿ ಕುಳ್ಳಿರ್ದಖಿಳ ಮುನಿ ನಿಕು
ರುಂಬ ಸಭೆಯೊಳಗಿದ್ದ ಮುನಿಪಂ
ಗಂಬುಜಾನನೆ ನಮಿಸೆ ಹರಸಿದನೈದೆಯಾಗೆನುತ
ಹಂಬಲಿಸುತಿಹ ನಿಗಮ ಶಾಸ್ತ್ರಗ
ಳಿಂಬುಗಾಣದ ಗಾಢ ದೈವದ
ಬೆಂಬಳಿಯಲಿರಲಿನ್ನದಾವುದಸಾಧ್ಯ ನಿಮಗೆಂದ ॥45॥
೦೪೬ ಮೈ ವಶವ ...{Loading}...
ಮೈ ವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗವಂತನನ್ನು ನೀವು ವಶಗೊಳಿಸಿಕೊಂಡಿದ್ದೀರಲ್ಲವೆ? ಕುರುವಂಶದ ಬೇರನ್ನು ಈ ಶ್ರೀಹರಿಯು ಭೀಮಾರ್ಜುನರೆಂಬ ಶಸ್ತ್ರದಿಂದ ಕತ್ತರಿಸುತ್ತಾನೆ. ಅವನೇ ನಿಮ್ಮೈವರನ್ನೂ ಕಾಪಾಡುತ್ತಾನೆ. ರಾಜ್ಯ ಲಕ್ಷ್ಮಿಯ ಕೈ ಹಿಡಿಯುವ ಸಂಕಲ್ಪ ಸಿದ್ಧಿಸುತ್ತದೆ ಎಂದನು.
ಮೂಲ ...{Loading}...
ಮೈ ವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ ॥46॥
೦೪೭ ಎಲೆ ಮುನೀಶ್ವರ ...{Loading}...
ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನಸಖನಪರಾಂಬು ರಾಸಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೇ ಮುನಿಪತಿ, ನಿಮ್ಮ ಮಾತು ಖಂಡಿತವಾದುದು. ಇಹಪರಕ್ಕೆ ಸಾಧನವಾದುದು. ನಿಮ್ಮ ಪ್ರೀತಿ, ಕೃಷ್ಣನ ಸ್ನೇಹ ನಮಗಿರುವಾಗ ಯಾವುದು ತಾನೇ ನಮಗೆ ಅಸಾಧ್ಯ ? ಸೂರ್ಯನು ಪಶ್ಚಿಮ ಸಮುದ್ರದ ಕಡೆಗೆ ಧಾವಿಸುತ್ತಿದ್ದಾನೆ. ಹಸಿದ ಈ ಋಷಿ ಸಮೂಹವೆಲ್ಲಾ ಊಟಕ್ಕೆ ಬರಬೇಕು’ ಎಂದು ಧರ್ಮರಾಯನು ಆಹ್ವಾನಿಸಿದನು.
ಪದಾರ್ಥ (ಕ.ಗ.ಪ)
ಅಸ್ಖಲಿತ - ಖಂಡಿತ
ಕೂಮೆ - ಪ್ರೀತಿ, ಸ್ನೇಹ
ಮೂಲ ...{Loading}...
ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನಸಖನಪರಾಂಬು ರಾಸಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು ॥47॥
೦೪೮ ಬೇರು ನೀರುಣ್ಡಾಗ ...{Loading}...
ಬೇರು ನೀರುಂಡಾಗ ದಣಿಯವೆ
ಭೂರುಹದ ಶಾಖೋಪಶಾಖೆಗ
ಳೋರಣೆಯ ನಿಜದೇಹವಂಗೋಪಾಂಗನೆಂದೆನಿಪ
ಶ್ರೀರಮಣ ಸಂತುಷ್ಟನಾದೊಡೆ
ಬೇರೆ ಭೋಜನವೆಮಗೆ ಬೇಹುದೆ
ಭೂರಮಣ ಕೇಳೆನುತ ಮತ್ತಿಂತೆಂದನಾ ಮುನಿಪ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇರು ನೀರನ್ನು ಕುಡಿದಾಗ ಮರದ ಕೊಂಬೆರೆಂಬೆಗಳೆಲ್ಲಾ ತಣಿಯುವುದಿಲ್ಲವೆ ? ನಮ್ಮ ದೇಹದ ಅಂಗೋಪಾಂಗಗಳಲ್ಲಿ ವ್ಯಾಪಿಸಿರುವ ಶ್ರೀಹರಿಯು ಸಂತೃಪ್ತನಾದ ಮೇಲೆ ನಮಗೆ ಬೇರೆ ಭೋಜನದ ಅಗತ್ಯವಿದೆಯೆ ? ಅರಸನೇ ಕೇಳು’ ಎಂದು ದೂರ್ವಾಸನು ಮತ್ತೆ ಹೀಗೆ ಹೇಳಿದನು.
ಮೂಲ ...{Loading}...
ಬೇರು ನೀರುಂಡಾಗ ದಣಿಯವೆ
ಭೂರುಹದ ಶಾಖೋಪಶಾಖೆಗ
ಳೋರಣೆಯ ನಿಜದೇಹವಂಗೋಪಾಂಗನೆಂದೆನಿಪ
ಶ್ರೀರಮಣ ಸಂತುಷ್ಟನಾದೊಡೆ
ಬೇರೆ ಭೋಜನವೆಮಗೆ ಬೇಹುದೆ
ಭೂರಮಣ ಕೇಳೆನುತ ಮತ್ತಿಂತೆಂದನಾ ಮುನಿಪ ॥48॥
೦೪೯ ಮೃಷ್ಟಭೋಜನದಿನ್ದ ನಾವ್ ...{Loading}...
ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಮೃಷ್ಟಾನ್ನ ಊಟಮಾಡಿ ಸಂತುಷ್ಟರಾಗಿದ್ದೇವೆ. ಬೇಕಾದುದನ್ನು ಬೇಡು’ ಎನ್ನಲು ಕೌರವನು ಧೂರ್ತವಿದ್ಯೆಯನ್ನು ತೋರಿಸುತ್ತಾ ನಮ್ಮನ್ನು ಇಲ್ಲಿ ಕಳುಹಿಸಿದ. ಅವನಿಗೆ ಕಷ್ಟವು ಖಚಿತವಾಯಿತಲ್ಲದೆ ಪಾಂಡವರಿಗೆ ತೊಂದರೆಯಾಯಿತೇ? ನಾರಾಯಣನ ಭಕ್ತರನ್ನು ದುಷ್ಟರು ಮುಟ್ಟಲು ಸಾಧ್ಯವೇ ’ ಎಂದು ದೂರ್ವಾಸ ಮುನಿಯು ಹೇಳಿದನು.
ಮೂಲ ...{Loading}...
ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ ॥49॥
೦೫೦ ಎನ್ದು ಹರಿಯನು ...{Loading}...
ಎಂದು ಹರಿಯನು ಹೊಗಳಿ ನಾನಾ
ಚಂದದಲಿ ಪಾಂಡವರ ತಿಳುಹಿ ಮು
ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ
ಅಂದು ಕುಂತೀ ನಂದನರಿಗಾ
ನಂದ ಸುಖವನು ಕರೆದು ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಶ್ರೀಹರಿಯನ್ನು ಹೊಗಳಿ, ಪಾಂಡವರಿಗೆ ತಿಳಿವಳಿಕೆ ನೀಡಿ ದೂರ್ವಾಸನು ಸಕಲ ಮುನಿಗಳೊಂದಿಗೆ ತನ್ನ ಆಶ್ರಮಕ್ಕೆ ತೆರಳಿದನು. ಕೌಂತೇಯರಿಗೆ ಸಂತೋಷ ಸೌಖ್ಯವನ್ನುಂಟುಮಾಡಿ, ಶ್ರೀಕೃಷ್ಣನು ದ್ವಾರಕಾಪುರವನ್ನು ಪ್ರವೇಶಿಸಿದನು.
ಮೂಲ ...{Loading}...
ಎಂದು ಹರಿಯನು ಹೊಗಳಿ ನಾನಾ
ಚಂದದಲಿ ಪಾಂಡವರ ತಿಳುಹಿ ಮು
ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ
ಅಂದು ಕುಂತೀ ನಂದನರಿಗಾ
ನಂದ ಸುಖವನು ಕರೆದು ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದೋರಕಾಪುರಿಯ ॥50॥