೦೦೦ ಸೂ ಅಡವಿಯಲಿ ...{Loading}...
ಸೂ. ಅಡವಿಯಲಿ ಫಣಿಭೋಗದಲಿ ಬಿಗಿ
ವಡೆದು ಬಳಲಿದ ಭೀಮಸೇನನ
ಬಿಡಿಸಿದನು ಯಮಸೂನು ಧರ್ಮಕಥಾ ಪ್ರಸಂಗದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಧರ್ಮಸಂಬಂಧವಾದ ಸಂವಾದದ ಮೂಲಕ ಧರ್ಮರಾಯನು ಕಾಡಿನಲ್ಲಿ ನಹುಷನೆಂಬ ಸರ್ಪಬಂಧನದಿಂದ ಭೀಮಸೇನನನ್ನು ಬಿಡಿಸಿದನು.
ಟಿಪ್ಪನೀ (ಕ.ಗ.ಪ)
ನಹುಷ - ಒಂದು ಉನ್ನತ ಸ್ಥಾನ ಸಂಪಾದನೆ ತುಂಬ ಕಷ್ಟದ ಕೆಲಸ. ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟದ ಕೆಲಸ. ಒಂದು ದೊಡ್ಡ ಸ್ಥಾನ ಸಿಕ್ಕಿತೆಂದು ಅಹಂಕಾರದಿಂದ ಬೀಗಿ ವರ್ತಿಸಿದರೆ ಪತನ ಖಚಿತ ಎಂಬುದಕ್ಕೆ ನಹುಷನ ಕಥೆ ಒಂದು ಉದಾಹರಣೆ.
ಪುರೂರವ ಪುತ್ರನಾದ ಆಯುಸ್ಸಿನ ಮಗನೇ ನಹುಷ. ಶ್ರೇಷ್ಠ ತಪಸ್ವಿಯೂ ಆಗಿದ್ದ ಈತ ಯಜ್ಞಯಾಗಾದಿಗಳಿಂದ ದೇವತೆಗಳ ಪ್ರೀತಿಗೆ ಪಾತ್ರನಾಗಿದ್ದ.
ಒಮ್ಮೆ ವೃತ್ರಾಸುರನೆಂಬ ಬ್ರಾಹ್ಮಣರ ವಧೆ ಮಾಡಿದ್ದಕ್ಕಾಗಿ ತನ್ನ ಸ್ಥಾನ ಕಳೆದುಕೊಂಡ ಇಂದ್ರನು ಮಾನಸ ಸರೋವರದ ಕಮಲದಲ್ಲಿ ಅಡಗಿದ. ಆಗ ದೇವತೆಗಳು ನಹುಷನನ್ನು ತಾತ್ಕಾಲಿಕವಾಗಿ ದೇವೇಂದ್ರನ ಸ್ಥಾನದಲ್ಲಿ ಕೂಡಿಸಿದರು. ಮಹಾವಿನಯವಂತನಾಗಿದ್ದ ನಹುಷನಿಗೆ ಸ್ಥಾನ ಮಹಿಮೆಯಿಮದ ಅಹಂಕಾರ ಹೆಚ್ಚಿತು. ತನ್ನ ಪದವಿ ತಾತ್ಕಾಲಿಕವೆಂದು ತಿಳಿದಿದ್ದರೂ ಇಂದ್ರನ ಹೆಂಡತಿ ಶಚೀದೇವಿಯು ಈತ ತನ್ನ ರಾಣಿಯಾಗಬೇಕೆಂದು ಹಠ ಹಿಡಿದ ಅವಳು ಗುಟ್ಟಾಗಿ ಇಂದ್ರನಿರುವ ಸ್ಥಳವನ್ನು ಪತ್ತೆ ಹಚ್ಚಿ ತನ್ನ ಸಂಕಟವನ್ನು ತೋಡಿಕೊಂಡಳು.
ನಹುಷನ ಪತನಕ್ಕೆ ಇಂದ್ರ ಒಂದು ಹಂಚಿಕೆ ಹೂಡಿದ. ಅವನು ಹೇಳಿ ಕೊಟ್ಟಂತೆಯೇ; ‘ಸಪ್ತರ್ಷಿಗಳು ನಿನ್ನ ರಥವನ್ನು ಎಳೆಯಬೇಕು. ಆ ರಥದಲ್ಲಿ ನನ್ನ ಅರಮನೆಗೆ ಬಂದರೆ ನಾನು ಮದುವೆಯಾಗುತ್ತೇನೆ’ ಎಂದು ಶಚಿ ಹೇಳಿದಳು.
ನಹುಷ ಹಿಗ್ಗಿ ಸಪ್ತರ್ಷಿಗಳಿಗೆ ರಥ ಎಳೆವ ಕಾಯಕವನ್ನು ವಹಿಸಿದ. ಅಗಸ್ತ್ಯರೇ ಈ ಗುಂಪಿನ ನಾಯಕರು. ಋಷಿಗಳು ಪ್ರೀತಿಯಿಂದ ಕೊಟ್ಟ ಹಾರವನ್ನು ತಿರಸ್ಕಾರದಿಂದ ಆನೆಗೆ ಕೊಟ್ಟ. ಅದು ಕಾಲಲ್ಲಿ ಹೊಸಕಿತು. ಋಷಿಗಳು ಆಗಲೇ ಕ್ರುದ್ಧರಾಗಿದ್ದರು. ಅದು ಸಾಲದೆಂದು ತಾನು ಬೇಗ ಹೋಗಬೇಕೆಂಬ ಆತುರದಲ್ಲಿ ಋಷಿಗಳಿಗೆ ಛಡಿ ಏಟು ಕೊಟ್ಟು ‘ಸರ್ಪ ಸರ್ಪ ಎಂದು ಕಿರುಚಿದ್ದು ಎರಡನೆಯ ಮಹಾಪರಾಧ. ಸರ್ಪ ಎಂದರೆ ಮುಂದೆ ಸಾಗು ಎಂಬರ್ಥ ಅವನದು. ಆದರೆ ಏಟು ತಿಂದು ನೊಂದಿದ್ದ ಅಗಸ್ತ್ಯರು ಕೆರಳಿ, ‘ನೀನು ಉದ್ಧಟನಂತೆ ವರ್ತಿಸಿದ್ದೀಯೆ. ಆದ್ದರಿಂದ ಕ್ರೂರ ಸರ್ಪವಾಗಿ ಹುಟ್ಟು’ ಎಂದು ಶಾಪವಿತ್ತರು. ತನ್ನ U್ಪರ್ವದಿಂದಾಗಿ ಈಗಾಗಲೇ ಸ್ವಲ್ಪಸ್ವಲ್ಪವಾಗಿ ಮಹಿಮೆಗಳನ್ನು ಕಳೆದುಕೊಂಡಿದ್ದ ನಹುಷ ಈಗ ತೇಜಸ್ಸನ್ನೆಲ್ಲ ಕಳೆದುಕೋಂಡು ಉಗ್ರಸರ್ಪನಾದ. ಕೂಡಲೇ ಕ್ಷಮೆ ಕೋರಿದ್ದರಿಂದ ಅವರು ‘ಮುಂದೆ ಅಜಾತಶತ್ರು ಧರ್ಮರಾಯನ ಸಂದರ್ಶನದಿಂದ ನೀನು ವಿಗತಕಲ್ಮಷನಾಗಿ ಪುಣ್ಯಲೋಕವನ್ನು ಪಡೆದ’ ಎಂದು ನಿಷ್ಕೃತಿಯನ್ನು ಅನುಗ್ರಹಿಸಿದರು. ಹೀಗೆ ನಹುಷನು ತನ್ನ ದುರ್ವರ್ತನೆಯಿಂದ ಪದವಿ ಕಳೆದುಕೊಂಡ. ಅದು ಮತ್ತೆ ದೇವೇಂದ್ರನಿಗೇ ದಕ್ಕಿತು. ಅರಣ್ಯಪರ್ವದಲ್ಲಿ ನಹುಷೋಪಾಖ್ಯಾನವು ವಿಸ್ತಾರವಾಗಿ ವರ್ಣಿತವಾಗಿದೆ.ನಹುಷ
ಮೂಲ ...{Loading}...
ಸೂ. ಅಡವಿಯಲಿ ಫಣಿಭೋಗದಲಿ ಬಿಗಿ
ವಡೆದು ಬಳಲಿದ ಭೀಮಸೇನನ
ಬಿಡಿಸಿದನು ಯಮಸೂನು ಧರ್ಮಕಥಾ ಪ್ರಸಂಗದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಶುಪತಾಸ್ತ್ರ ವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವ ದಿ
ಶಾ ಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ಬಿಂಬ ದಿನಮಣಿಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೆ ಕೇಳು, ಪ್ರಣವ ಸ್ವರೂಪವೆನಿಸಿದ ಪಾಶುಪತಾಸ್ತ್ರವನ್ನು ಅನುಸಂಧಾನ ಮಾಡಲು ಅಗತ್ಯವಾದ ವೇದಮಂತ್ರಗಳ ಓಂಕಾರ ಸ್ವರೂಪವೋ ಎನ್ನುವಂತೆ, ಕೆಂಪಾದ ಪೂರ್ವ ದಿಗ್ವನಿತೆಯ ಶಿರೋಭೂಷಣದಂತೆ ಸೂರ್ಯನು ಉದಿಸಿದನು.
ಪದಾರ್ಥ (ಕ.ಗ.ಪ)
ಮಂಡನ -ತಲೆ
ಪ್ರಣವ - ಓಂಕಾರ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಶುಪತಾಸ್ತ್ರ ವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವ ದಿ
ಶಾ ಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ಬಿಂಬ ದಿನಮಣಿಯ ॥1॥
೦೦೨ ಅರಸನುಪ್ಪವಡಿಸಿದನೆದ್ದನು ವರ ...{Loading}...
ಅರಸನುಪ್ಪವಡಿಸಿದನೆದ್ದನು
ವರ ವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವೆದ್ದುದು
ತರಣಿ ಸಂಧ್ಯಾಸಮಯ ಸತ್ಕೃತಿ ಜಪ ಸಮಾಧಿಯಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನು ಎದ್ದನು, ಭೀಮಸೇನನು ಎಚ್ಚರಗೊಂಡನು. ಅರ್ಜುನನ ಕಣ್ಣೆಂಬ ಕಮಲಗಳು ಅರಳಿದವು. ನಕುಲ ಸಹದೇವರು ಮೈಮುರಿದೆದ್ದು ಶ್ರೀಹರಿಯನ್ನು ನೆನೆದರು. ಪರಿಜನರು, ಮುನಿಗಳು ಎದ್ದು ಸೂರ್ಯೋದಯದ ಸಮಯದಲ್ಲಿ ಜಪತಪಾದಿಗಳಲ್ಲಿ ಮಗ್ನರಾದರು.
ಪದಾರ್ಥ (ಕ.ಗ.ಪ)
ಉಪ್ಪವಡಿಸು-ಏಳು, ಎಚ್ಚರಗೊಳ್ಳು
ಮೂಲ ...{Loading}...
ಅರಸನುಪ್ಪವಡಿಸಿದನೆದ್ದನು
ವರ ವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವೆದ್ದುದು
ತರಣಿ ಸಂಧ್ಯಾಸಮಯ ಸತ್ಕೃತಿ ಜಪ ಸಮಾಧಿಯಲಿ ॥2॥
೦೦೩ ಮುನಿಜನಕೆ ಕೈಮುಗಿದು ...{Loading}...
ಮುನಿಜನಕೆ ಕೈಮುಗಿದು ಯಮ ನಂ
ದನನ ಚರಣಕ್ಕೆರಗಿ ಶಂಭುವ
ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿವವ
ಜನಪ ಕೇಳೈ ಕೊಪ್ಪಿನಲಿ ಸಿಂ
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗಂತರವೊದರಲೊದರಿಸಿದನು ಮಹಾ ಧನುವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಗಳಿಗೆ ಕೈಮುಗಿದು, ಧರ್ಮರಾಜನಿಗೆರಗಿ, ಪರಶಿವನನ್ನು ಧ್ಯಾನಿಸಿ, ಮುಸುಕಿನಿಂದ ಗಾಂಡಿವ ಧನುಸ್ಸನ್ನು ತೆಗೆದು, ಅದರ ಹೆದೆಯನ್ನು ಕೊಪ್ಪಿಗೆ ಸಿಕ್ಕಿಸಿ, ದಿಗಂತಗಳಲ್ಲೆಲ್ಲ ಪ್ರತಿಧ್ವನಿಗೊಳ್ಳುವಂತೆ ಅದನ್ನು ಝೇಗೈದನು.
ಪದಾರ್ಥ (ಕ.ಗ.ಪ)
ಗವಸಣಿಕೆ - ಮುಸುಕು ,
ಸಿಂಜನಿ - ಹೆದೆ
ಕೊಪ್ಪು - ಬಿಲ್ಲಿನ ತುದಿ
ಮೂಲ ...{Loading}...
ಮುನಿಜನಕೆ ಕೈಮುಗಿದು ಯಮ ನಂ
ದನನ ಚರಣಕ್ಕೆರಗಿ ಶಂಭುವ
ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿವವ
ಜನಪ ಕೇಳೈ ಕೊಪ್ಪಿನಲಿ ಸಿಂ
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗಂತರವೊದರಲೊದರಿಸಿದನು ಮಹಾ ಧನುವ ॥3॥
೦೦೪ ಘೋರತರ ಲಯಭೈರವನ ...{Loading}...
ಘೋರತರ ಲಯಭೈರವನ ಹುಂ
ಕಾರವೋ ಸಂಹಾರ ಸುತಿಯೋಂ
ಕಾರವೋ ಕಲ್ಪಾಂತ ತಾಂಡವ ವೇದಪಂಡಿತನ
ಆರುಭಟೆಯೋ ಮೇಣ್ ತ್ರಿವಿಕ್ರಮ
ವೀರಪದಭಿನ್ನಾಬ್ಜಜಾಂಡ ಕ
ಠೋರ ರವಮೆನೆ ಮೆರೆದುದರ್ಜುನ ಚಾಪ ಟಂಕಾರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಲಯ ಭೈರವನ ಘೋರ ಹುಂಕಾರವೋ, ಸಂಹಾರ ಶ್ರುತಿಯ ಓಂಕಾರವೋ, ಕಲ್ಪಾಂತರದ ತಾಂಡವ ಮೂರ್ತಿಯ ಆರ್ಭಟೆಯೋ, ತ್ರಿವಿಕ್ರಮನ ಪದಾಘಾತಕ್ಕೆ ಬ್ರಹ್ಮಾಂಡ ಅಲುಗಾಡಿದ ಕಠೋರ ಶಬ್ದವೋ ಎಂಬಂತೆ ಅರ್ಜುನನ ಬಿಲ್ಲಿನ ಠೇಂಕಾರ ಕೇಳಿಸಿತು.
ಪದಾರ್ಥ (ಕ.ಗ.ಪ)
ಸುತಿ - ಶ್ರುತಿ
ಮೂಲ ...{Loading}...
ಘೋರತರ ಲಯಭೈರವನ ಹುಂ
ಕಾರವೋ ಸಂಹಾರ ಸುತಿಯೋಂ
ಕಾರವೋ ಕಲ್ಪಾಂತ ತಾಂಡವ ವೇದಪಂಡಿತನ
ಆರುಭಟೆಯೋ ಮೇಣ್ ತ್ರಿವಿಕ್ರಮ
ವೀರಪದಭಿನ್ನಾಬ್ಜಜಾಂಡ ಕ
ಠೋರ ರವಮೆನೆ ಮೆರೆದುದರ್ಜುನ ಚಾಪ ಟಂಕಾರ ॥4॥
೦೦೫ ಏನಿದದ್ಭುತ ರವವೆನುತ ...{Loading}...
ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರ ಗತಿಯಲಮರೇಂದ್ರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನು ಅದ್ಭುತ ಶಬ್ದವೆಂದು ಖೇಚರರು ಭಯಪಟ್ಟರು. ದೇವಲೋಕದ ದೇವತೆಗಳ ಹೆಮ್ಮೆ ಹೊರಟುಹೋಯಿತು. ನಿರುತಿ, ಯಮ, ವರುಣ, ವಾಯು, ಅಗ್ನಿ, ಕುಬೇರ, ಈಶಾನರೊಂದಿಗೆ ದೇವೇಂದ್ರನೂ ಆನೆಯನ್ನೇರಿ ಆಕಾಶಮಾರ್ಗದಲ್ಲಿ ಹೊರಟನು.
ಪದಾರ್ಥ (ಕ.ಗ.ಪ)
ರವ - ಶಬ್ದ
ಐತರಲು - ಬರಲು
ಮೂಲ ...{Loading}...
ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರ ಗತಿಯಲಮರೇಂದ್ರ ॥5॥
೦೦೬ ನೆರೆದುದಭ್ರದೊಳಮರ ಗಣ ...{Loading}...
ನೆರೆದುದಭ್ರದೊಳಮರ ಗಣ ಮುನಿ
ವರರು ಸಹಿತ ಯುಧಿಷ್ಠಿರಾದಿಗ
ಳೆರಡುವಂಕವ ಹೊದ್ದಿದರು ಹರಿತನಯನೆಡಬಲವ
ತರುನಿಕರ ಗಿರಿನಿಚಯವಲ್ಲಿಯ
ಪರಿಜನವು ತರುಬಿದುದು ನನಗಿದ
ನರಸ ಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದಲ್ಲಿ ದೇವತೆಗಳೆಲ್ಲಾ ಸೇರಿದರು. ಋಷಿಮುನಿಗಳು ಧರ್ಮರಾಯ, ಭೀಮ ಮಾದ್ರೀತನಯರು ಅರ್ಜುನರ ಎಡಬಲಗಳಲ್ಲಿ ನಿಂತರು. ಪರಿಜನರೆಲ್ಲರೂ ಗಿಡಮರಗಳನ್ನೇರಿ ಕುಳಿತಿದ್ದರು. ಅರ್ಜುನನ ಈ ಮಹಾಸ್ತ್ರ ಪ್ರದರ್ಶನವನ್ನು ನನಗೆ ವರ್ಣಿಸಲು ಸಾಧ್ಯವೆ?
ಪದಾರ್ಥ (ಕ.ಗ.ಪ)
ಅಭ್ರ - ಆಕಾಶ
ವಂಕ - ಪಾಶ್ರ್ವ , ಪಕ್ಕ
ನಿಚಯ - ಸಮೂಹ, ಗುಂಪು
ಪಾಠಾನ್ತರ (ಕ.ಗ.ಪ)
ವರುಣ - ವರರು
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ನೆರೆದುದಭ್ರದೊಳಮರ ಗಣ ಮುನಿ
ವರರು ಸಹಿತ ಯುಧಿಷ್ಠಿರಾದಿಗ
ಳೆರಡುವಂಕವ ಹೊದ್ದಿದರು ಹರಿತನಯನೆಡಬಲವ
ತರುನಿಕರ ಗಿರಿನಿಚಯವಲ್ಲಿಯ
ಪರಿಜನವು ತರುಬಿದುದು ನನಗಿದ
ನರಸ ಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ ॥6॥
೦೦೭ ಮೊದಲೊಳನಲ ಮಹಾಸ್ತ್ರವನು ...{Loading}...
ಮೊದಲೊಳನಲ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನ ಮಾರ್ಗದಲಿ
ಉದಧಿ ಉದಧಿಯ ತೆರೆಯ ಗಂಟಿ
ಕ್ಕಿದವು ಹರ ಹರ ಹೇಳಬಾರದ
ಹೊದರು ಹೊದಿಸಿತು ಕೀಳುಮೇಲಿನ ಜಗದ ಹಂತಿಗಳ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮೊದಲಿಗೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದನು. ಲೋಕದ ದಶದಿಕ್ಕುಗಳು ಕಂಪಿಸಿದವು. ಸೂರ್ಯನ ರಥವು ಆಕಾಶ ಪಥದಲ್ಲಿ ನಡುಗಿತು. ಶಿವಶಿವಾ, ಸಮುದ್ರ ಸಮುದ್ರಗಳ ತೆರೆಗಳು ಪರಸ್ಪರ ಸಿಕ್ಕು ಹಾಕಿಕೊಂಡವು. ಹೇಳಬಾರದ ರೀತಿಯಲ್ಲಿ ಲೋಕವನ್ನೆಲ್ಲಾ ಮುಸುಕು ಆವರಿಸಿತು.
ಪದಾರ್ಥ (ಕ.ಗ.ಪ)
ಉದಧಿ - ಸಮುದ್ರ
ಪಂಟಿಸು - ಮುಗ್ಗುರಿಸು
ಹಂತಿ - ಸಾಲು
ಮೂಲ ...{Loading}...
ಮೊದಲೊಳನಲ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನ ಮಾರ್ಗದಲಿ
ಉದಧಿ ಉದಧಿಯ ತೆರೆಯ ಗಂಟಿ
ಕ್ಕಿದವು ಹರ ಹರ ಹೇಳಬಾರದ
ಹೊದರು ಹೊದಿಸಿತು ಕೀಳುಮೇಲಿನ ಜಗದ ಹಂತಿಗಳ ॥7॥
೦೦೮ ಅಹಹ ಬೆನ್ದುದು ...{Loading}...
ಅಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ ದು
ಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ ವಿಶ್ವವೇ ಬೆಂದು ಹೋಯಿತಲ್ಲಾ ! ಇದೇನು ಯುದ್ಧದ ಸಮಯವೆ ? ಮೂರು ಲೋಕಗಳಿಗೂ ತಲ್ಲಣವನ್ನುಂಟು ಮಾಡುತ್ತಿದ್ದಾರಲ್ಲಾ ಈ ಅಲ್ಪ ಮತಿಗಳು ? ಏನಿದು ಉತ್ಪಾತ ? ಎಂದು ಗಗನಾಂಗಣದಿಂದ ನಾರದ ಮುನಿಗಳು ಭೂಮಿಗೆ ಬಂದು ‘ಪಾರ್ಥ, ಏನಿದು ದುಸ್ಸಾಹಸ, ಸಾಕು ನಿಲ್ಲಿಸು’ ಎಂದರು.
ಪದಾರ್ಥ (ಕ.ಗ.ಪ)
ವಿಗ್ರಹ - ಯುದ್ಧ
ರಹ - ಸೋಜಿಗ
ದೇವಮುನಿ - ನಾರದ
ಮೂಲ ...{Loading}...
ಅಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ ದು
ಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆಂದ ॥8॥
೦೦೯ ತೊಡಚದಿರು ಬೊಮ್ಮಾಸ್ತ್ರವಿದು ...{Loading}...
ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಗನಿದು ನಿಮಿಷದಲಿ ಭುವನವ
ನುಡುಗಿ ತಣಿಯದಿದೊಂದು ಮತ್ತೀ ಶಾಂಭವಾದಿಗಳ
ತೊಡಚಿದೊಡೆ ಸಂಹಾರ ಸಮಯವ
ನೆಡೆಯನನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆಯೆಂದನಾ ಮುನಿಪ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬೇಡ. ಇದು ನಿಲ್ಲದೆ ನಿಮಿಷದೊಳಗೆ ವಿಶ್ವವನ್ನೇ ನುಂಗಿ ಬಿಟ್ಟೀತು. ಹಾಗೆ ನುಂಗಿದರೂ ತಣಿಯದು. ಪರಶಿವನನ್ನು ಆವಾಹಿಸಿದರೆ ಜಗತ್ತೇ ಸಂಹಾರವಾಗುವ ಕಾಲ ಬಂದೀತು. ಈ ಲೋಕವನ್ನು ಕೆಡಿಸಬೇಡ. ತೆಗೆ ಎಂದು ನಾರದ ಮುನಿ ಹೇಳಿದರು.
ಪದಾರ್ಥ (ಕ.ಗ.ಪ)
ತೊಡಚು - ಹೂಡು
ಬಾಯ್ಗಡಿಗ -ನುಂಗಿ ನಾಶ ಮಾಡುವ
ಮೂಲ ...{Loading}...
ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಗನಿದು ನಿಮಿಷದಲಿ ಭುವನವ
ನುಡುಗಿ ತಣಿಯದಿದೊಂದು ಮತ್ತೀ ಶಾಂಭವಾದಿಗಳ
ತೊಡಚಿದೊಡೆ ಸಂಹಾರ ಸಮಯವ
ನೆಡೆಯನನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆಯೆಂದನಾ ಮುನಿಪ ॥9॥
೦೧೦ ಲಕ್ಷ್ಯವಿಲ್ಲದೆ ತೊಡಚುವರೆ ...{Loading}...
ಲಕ್ಷ್ಯವಿಲ್ಲದೆ ತೊಡಚುವರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನಂಬುಗಳೆ
ಶಿಕ್ಷೆರಕ್ಷೆಗೆ ಬಾಣವೊಂದೇ
ಲಕ್ಷ್ಯವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದನರ್ಜುನಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
10." ಗುರಿಯಿಲ್ಲದೆ ಇದನ್ನು ಹೂಡುತ್ತಾರೆಯೇ? ನೀನು ಸಂಪಾದಿಸಿದ ಈ ಅಸ್ತ್ರವು ನಿರ್ಲಕ್ಷ್ಯ ಶರವೆ? ಪಾರ್ಥ, ಇದು ಕೇವಲ ಸಾಮಾನ್ಯ ಬಾಣವೆ? ಶಿಕ್ಷೆ ಮತ್ತು ರಕ್ಷೆ ಎರಡೂ ಶಕ್ತಿಯಿರುವ ಬಾಣವಿದು. ಇದನ್ನು ನೀನು ತಿಳಿಯಲಿಲ್ಲವಾಗಿ ನಾನು ಕಂಗೆಟ್ಟಿದ್ದೇನೆ" ಎಂದರು.
ಪದಾರ್ಥ (ಕ.ಗ.ಪ)
ಉಪಾರ್ಜಿಸು - ಸಂಪಾದಿಸು
ಮೂಲ ...{Loading}...
ಲಕ್ಷ್ಯವಿಲ್ಲದೆ ತೊಡಚುವರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನಂಬುಗಳೆ
ಶಿಕ್ಷೆರಕ್ಷೆಗೆ ಬಾಣವೊಂದೇ
ಲಕ್ಷ್ಯವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮುನಿ ನುಡಿದನರ್ಜುನಗೆ ॥10॥
೦೧೧ ಹರಮಹಾಸ್ತ್ರಾದಿಗಳ ಲೀಲೆಯ ...{Loading}...
ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ
ಹೊರೆವ ಹೇರಾಳದ ಮಹಾ ಸಂ
ಗರವಹುದು ಮುಂದಣ ಕಥಾ ವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ಮಹಾಸ್ತ್ರದ ಲೀಲೆಯನ್ನು ನೋಡಬೇಕೆಂಬ ಆಸೆಯಿದ್ದರೆ ಅದು ಘಟಿಸುವುದು. ಅಲ್ಲಿಯವರೆಗೆ ಸಹಿಸುವುದು. ಅರಸನ ಕಣ್ಮನಗಳನ್ನು ತಣಿಸುವ ಭಯಂಕರ ಮಹಾಯುದ್ಧ ಮುಂದೆ ನಡೆಯುತ್ತದೆ. ಭವಿಷ್ಯವನ್ನು ಈಗಲೇ ಹೇಳುವುದು ಉಚಿತವಲ್ಲ ಎಂದು ನಾರದರು ಹೇಳಿದರು.
ಪದಾರ್ಥ (ಕ.ಗ.ಪ)
ತತ್ಸಮಯ - ಆ ಸಮಯ
ಮೂಲ ...{Loading}...
ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ
ಹೊರೆವ ಹೇರಾಳದ ಮಹಾ ಸಂ
ಗರವಹುದು ಮುಂದಣ ಕಥಾ ವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ ॥11॥
೦೧೨ ಅರಸ ಕೇಳೈ ...{Loading}...
ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತ
ಹರದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜ ಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ನಾರದರ ಮಹತ್ವದ ಮಾತಿಗೆ ಅರ್ಜುನನು ಒಪ್ಪಿ, ಬಿಲ್ಲನ್ನು ಕೆಳಗಿಟ್ಟನು. ಮೇಲೆ ನೆರೆದ ದೇವತೆಗಳೆಲ್ಲರೂ ಹಿಂತಿರುಗಿದರು. ದಿಕ್ಪಾಲಕರು ತಮ್ಮ ಮನೆಗಳಿಗೆ ಹೋದರು. ನಾರದರು ಆಕಾಶಮಾರ್ಗದಲ್ಲಿ ಹೊರಟರು.
ಪಾಠಾನ್ತರ (ಕ.ಗ.ಪ)
ಗುರುತರದಲೇ-ಗುರುತರವಲೇ
ಸಿ.ಪಿ.ಕೆ. ಮೈಸೂರು ವಿಶ್ವವಿದ್ಯಾನಿಲಯ
ಮೂಲ ...{Loading}...
ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತ
ಹರದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜ ಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ ॥12॥
೦೧೩ ಇವರು ಕಾಮ್ಯಕ ...{Loading}...
ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗವರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಮ್ಯಕವನದಲ್ಲಿ ಇವರು ಕಾಲಕಳೆದು, ಅನಂತರ ಯಮುನಾ ಎಂಬ ಹೆಸರಿನ ಮತ್ತೊಂದು ಪರ್ವತಕ್ಕೆ ಬಂದರು. ಅವರೆಲ್ಲರನ್ನು ಘಟೋತ್ಕಚನು ಬೆಟ್ಟದ ತುದಿಗೆ ಕರೆದೊಯ್ದನು. ಅಲ್ಲಿ ಕೂಡಾ ಕೆಲವು ದಿನವಿದ್ದು ಅನಂತರ ಅಲ್ಲಿಂದ ಹೊರಟರು.
ಪದಾರ್ಥ (ಕ.ಗ.ಪ)
ಆಹ್ವಯ - ಹೆಸರು
ಮೂಲ ...{Loading}...
ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗವರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ ॥13॥
೦೧೪ ಅರಸ ಕೇಳೈ ...{Loading}...
ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥಸೇವಾ
ಪರಮ ಪಾವನಕರಣನಿರ್ದನು ಪರ್ಣಶಾಲೆಯಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಕಾರ್ತಿಕೇಯಾಶ್ರಮಕ್ಕೆ ಹೋಗಿ ಋಷಿಗಳೊಂದಿಗೆ ಒಂದು ವರ್ಷಕಾಲ ಇದ್ದರು. ಅನಂತರ ರಾಜ ಬೃಹದಶ್ವನ ಆಶ್ರಮಕ್ಕೆ ಬಂದು, ಅಲ್ಲಿನ ಪರ್ಣಕುಟೀರದಲ್ಲಿ ತೀರ್ಥಯಾತ್ರಾಸಕ್ತನಾದ ಧರ್ಮರಾಜನು ಕಾಲಕಳೆದನು.
ಮೂಲ ...{Loading}...
ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥಸೇವಾ
ಪರಮ ಪಾವನಕರಣನಿರ್ದನು ಪರ್ಣಶಾಲೆಯಲಿ ॥14॥
೦೧೫ ಬನ್ದನೊಬ್ಬನು ಪವನಸುತನ ...{Loading}...
ಬಂದನೊಬ್ಬನು ಪವನಸುತನ ಪು
ಳಿಂದನಟವೀ ತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದ ನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಡವಿಯೊಳಗೆ ಪಕ್ಷಿಪ್ರಾಣಿಗಳು ತಿರುಗಾಡುವ ಸ್ಥಳ, ಅವುಗಳ ನೀರಿನ ತಾಣಗಳು, ವಾಸಸ್ಥಾನಗಳನ್ನು ಅರಿತ ಒಬ್ಬ ಬೇಡನು ಭೀಮಸೇನನ ಹತ್ತಿರ ಬಂದು ‘ಜೀಯಾ, ಚಿತ್ತವಿಸಬೇಕು’ ಎಂದು ವಿನಂತಿಮಾಡಿದನು.
ಪದಾರ್ಥ (ಕ.ಗ.ಪ)
ಪುಳಿಂದ - ಬೇಡ
ಇಕ್ಕೆ - ಇರುವ ಜಾಗ
ಸೋಹೆ - ಗುರುತು
ಮೂಲ ...{Loading}...
ಬಂದನೊಬ್ಬನು ಪವನಸುತನ ಪು
ಳಿಂದನಟವೀ ತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದ ನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ ॥15॥
೦೧೬ ಇದೆ ಮಹಾ ...{Loading}...
ಇದೆ ಮಹಾ ಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭ ಕ್ರೋಢ ಖಿಳಿ ಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದೊಡೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿರೆ ಜೀಯ ಚಿತ್ತೈಸು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂರದಲ್ಲಿರುವ ದೊಡ್ಡ ಅರಣ್ಯದಲ್ಲಿ ತೋಳ, ಶಾರ್ದೂಲ, ಸಿಂಹ, ಜಿಂಕೆ, ಆನೆಮರಿ, ಹಂದಿ, ಕಾಡುಕೋಣ, ಸಾರಂಗ ಮೊದಲಾದ ಮೃಗಗಳಿವೆ. ಮನುಷ್ಯರು ಹತ್ತಿರ ಬಂದರೂ ಅವುಗಳು ಹೆದರುವುದಿಲ್ಲ. ದೀಹದ ಮೃಗಗಳ ಹಿಂಡಿನಂತೆ(?) ಅವುಗಳು ಹೊಲವನ್ನು ಹಾಳು ಮಾಡಿಬಿಟ್ಟವು, ಜೀಯಾ ಕಾಪಾಡಬೇಕು ಎಂದನು.
ಪದಾರ್ಥ (ಕ.ಗ.ಪ)
ದೀಹ-ದೀಹಮೃಗ
ವೃಕ - ತೋಳ
ಕೇಸರಿ - ಸಿಂಹ
ಕದಲಿ - ಜಿಂಕೆ
ಕಳಭ - ಅನೆಮರಿ
ಕ್ರೋಡ - ಹಂದಿ
ಖಿಳಿ - ಒಂದು ಬಗೆಯ ಕಾಡುಪ್ರಾಣಿ
ಲೂಲಯ - ಕಾಡುಕೋಣ
ಸಾರಂಗ - ಒಂದು ಜಾತಿಯ ಜಿಂಕೆ
ರಹಿ - ಉತ್ಸಾಹ
ಮೂಲ ...{Loading}...
ಇದೆ ಮಹಾ ಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭ ಕ್ರೋಢ ಖಿಳಿ ಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದೊಡೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿರೆ ಜೀಯ ಚಿತ್ತೈಸು ॥16॥
೦೧೭ ಮೇಹುಗಾಡಿನೊಳವರ ಮೈ ...{Loading}...
ಮೇಹುಗಾಡಿನೊಳವರ ಮೈ ಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟಿ ತೀರುವಡೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಬಲು
ಸಾಹಸಕ್ಕಂಜುವೆವೆ ನೀನೇಳೆಂದನಾ ಶಬರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾನುವಾರುಗಳು ತಮ್ಮ ಆಹಾರವನ್ನು ಹುಡುಕಿಕೊಂಡು ಮೇಯುವ ಸ್ಥಳದಲ್ಲಿ ಅಕ್ಕಪಕ್ಕಗಳಲ್ಲಿ ವಿಶೇಷವಾಗಿ ಕೋಲಾಹಲ ಮಾಡಿದರೆ, ಅದು ಸುವ್ವಲಾಲಿ ಹಾಡಿನ ಆಹ್ವಾನವಲ್ಲವೆ? ಬೇಟೆಕಾಳಗದಲ್ಲಿ ತೋಳ ತೀಟೆಯು ತೀರಬೇಕಾದರೆ, ಕಾಡಿನಲ್ಲಿ ಮೋಸವಾಗಿ ಗೋರಿಬೇಟೆಯಲ್ಲಿ ತಪ್ಪಾದರೆ ಸ್ವಲ್ಪ ಹೆಚ್ಚಿನ ಸಾಹಸ ತೋರಲು ನಾವೇನು ಹೆದರುತ್ತೇವೆಯೇ?. ಆದುದರಿಂದ ನೀನು ಬಾ ಎಂದು ಶಬರನು ವಿನಂತಿಸಿದನು.
ಪದಾರ್ಥ (ಕ.ಗ.ಪ)
ಮೇಹುಗಾಡು - ಮೇಯುವ ಜಾಗ, ಹುಲ್ಲುಗಾವಲು
ಸುವ್ವಲೆ - ಸುವ್ವಿ ಹಾಡು
ಸುಬ್ಬಲೆ - ?
ತೊದಳಾಗು - ತಪ್ಪು
ತೋಹು - ತೋಪು, ಮರಗಳ ಗುಂಪು
ಪಾಠಾನ್ತರ (ಕ.ಗ.ಪ)
ತೇಗುವರೆ - ತೀರುವಡೆ
ಅರಣ್ಯ ಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಗೋರಿ ಬೇಟೆ - ಬೇಟೆಯಾಡುವ ಪ್ರಾಣಿಗಳನ್ನು ಆಕರ್ಷಿಸಲು ಆ ಪ್ರಾಣಿಗಳು ಆಹಾರವಾಗಿ ಬಳಸುವ ಪ್ರಾಣಿಗಳ ಧ್ವನಿ ಅನುಕರಿಸಿ ಕೂಗು ಹಾಕಿ ಅವುಗಳನ್ನರಸಿ ಮೃಗಗಳು ಬಂದಾಗ ಅವನ್ನು ಬೇಟೆಯಾಡುತ್ತಾರೆ. ಇದನ್ನು ಗೋರಿಬೇಟೆ ಎನ್ನುತ್ತಾರೆ.
ಮೂಲ ...{Loading}...
ಮೇಹುಗಾಡಿನೊಳವರ ಮೈ ಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟಿ ತೀರುವಡೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಬಲು
ಸಾಹಸಕ್ಕಂಜುವೆವೆ ನೀನೇಳೆಂದನಾ ಶಬರ ॥17॥
೦೧೮ ಕಣ್ಡ ಮೃಗ ...{Loading}...
ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಮೇಕೆಯ
ಮಿಂಡವಂದಿಯ ಲಾವಣಿಗೆಯ ಲುಲಾಯ ಲಾಲನೆಯ
ತೊಂಡು ಮೊಲನ ತೊಡಂಕು ನವಿಲಿನ
ಖಂಡೆಯದ ಮೊಳನೆಡದ ಖಡ್ಗದ
ಹಿಂಡುಗಳ ತೋರಿಸುವೆನೇಳೆಂದನಿಲಜಗೆ ನುಡಿದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಗೋಚರವಾದ ಬೇಟೆಯ ಮೃಗ ಹಿಮ್ಮೆಟ್ಟದು. ಗೊತ್ತಿನಲ್ಲಿ ಗುಂಪಾಗಿ ಗೋಚರಿಸಿದ ಹುಲಿಯ ಗುಂಪುಗೂಡಿದ ಕಾಡೆಮ್ಮೆಯ, ಗುಂಪಿನಲ್ಲಿರುವ ಮೊಲಗಳ, ಕೂಡಿಕೊಂಡಿರುವ ನವಿಲುಗಳ, ಕಾಡುಬೆಕ್ಕುಗಳ ಕೂಟದ, ಖಡ್ಗಮೃಗಗಳ ಹಿಂಡುಗಳನ್ನು ತೋರಿಸುತ್ತೇನೆ ಏಳು " ಎಂದು ಭೀಮನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಲುಲಾಯ-ಕೋಣ
ಮೂಲ ...{Loading}...
ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಮೇಕೆಯ
ಮಿಂಡವಂದಿಯ ಲಾವಣಿಗೆಯ ಲುಲಾಯ ಲಾಲನೆಯ
ತೊಂಡು ಮೊಲನ ತೊಡಂಕು ನವಿಲಿನ
ಖಂಡೆಯದ ಮೊಳನೆಡದ ಖಡ್ಗದ
ಹಿಂಡುಗಳ ತೋರಿಸುವೆನೇಳೆಂದನಿಲಜಗೆ ನುಡಿದ ॥18॥
೦೧೯ ಅಙ್ಗ ಚಿತ್ತವನಿತ್ತನಾ ...{Loading}...
ಅಂಗ ಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗ ಶರಭವನಳವಿಗೊಡಲವ
ರಂಗುಲಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಡನ ವಿನಂತಿಗೆ ಒಪ್ಪಿ ಮೈಮೇಲಣ ವಸ್ತ್ರವನ್ನು ಪಾರಿತೋಷಿಕವಾಗಿ ಕೊಟ್ಟು ಭೀಮಸೇನನು ಬಲೆಗಳನ್ನು ತರಿಸಿದನು. ಹಸಿರಂಗಿಯನ್ನು ತೊಟ್ಟು, ಕಾಲಿನಲ್ಲಿ ಪಾದುಕೆಯನ್ನು ಧರಿಸಿ ಸಿಂಹಶರಭಗಳನ್ನು ಓಡಿಸುವುದಕ್ಕಾಗಿ ಕೈಬೆರಳಿಗೆ ಹರಿತವಾದ ಕವಚವನ್ನು ಜೋಡಿಸಿ ಕಬ್ಬಿಣದ ದೊಣ್ಣೆ ಮತ್ತು ವೇಗಶಾಲಿಯಾದ ನಾಯಿಗಳ ಗುಂಪಿನೊಂದಿಗೆ ಹೊರಟನು.
ಪದಾರ್ಥ (ಕ.ಗ.ಪ)
ಜವಾಯ್ಲ-ಗುಂಪು, ಸಾಲು,
ಜಾಯಿಲ-ನಾಯಿ
ಮೂಲ ...{Loading}...
ಅಂಗ ಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗ ಶರಭವನಳವಿಗೊಡಲವ
ರಂಗುಲಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ ॥19॥
೦೨೦ ಮಡಿದ ಕೊಡಕೆಗಳೊಡ್ಡಿದುರದೊ ...{Loading}...
ಮಡಿದ ಕೊಡಕೆಗಳೊಡ್ಡಿದುರದೊ
ಪ್ಪಿಡಿಯ ನಡುವಿನ ಕೊಂಕಿದುಗುರಿನ
ನಿಡುವೊಡಲ ನಿರ್ಮಾಂಸ ಜಂಘೆಯ ಕೆಂಪಿನಾಲಿಗಳ
ಸಿಡಿಲುಗಳ ಗರ್ಜನೆಯ ಗಗನವ
ತುಡುಕುವಾಗುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೋಲು ಬಿದ್ದ ಕಿವಿಯ , ಸಣ್ಣನಡುವಿನ , ಕೊಂಕಿದ ಉಗುರಿನ, ಉದ್ದವಾದ ದೇಹದ, ಮಾಂಸವಿಲ್ಲದ ತೊಡೆಗಳ, ಕೆಂಪುಕಣ್ಣುಗಳ , ಸಿಡಿಲಗರ್ಜನೆ ಹೊಂದಿದ, ಬೇಟೆನಾಯಿಗಳು ಆಕಾಶವನ್ನೇ ತುಡುಕುವಂತೆ ಬೊಗಳುತ್ತಾ ಹೊರಬಂದವು.
ಪದಾರ್ಥ (ಕ.ಗ.ಪ)
ಕೊಡಕೆ - ಕಿವಿ
ಆಗುಳಿಕೆ - ತೆರೆದ ಬಾಯಿ
ಒಪ್ಪಿಡಿ ನಡು - ಹಿಡಿಯಷ್ಟು ಸಣ್ಣದಾದ ನಡು
ಮೂಲ ...{Loading}...
ಮಡಿದ ಕೊಡಕೆಗಳೊಡ್ಡಿದುರದೊ
ಪ್ಪಿಡಿಯ ನಡುವಿನ ಕೊಂಕಿದುಗುರಿನ
ನಿಡುವೊಡಲ ನಿರ್ಮಾಂಸ ಜಂಘೆಯ ಕೆಂಪಿನಾಲಿಗಳ
ಸಿಡಿಲುಗಳ ಗರ್ಜನೆಯ ಗಗನವ
ತುಡುಕುವಾಗುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ ॥20॥
೦೨೧ ಹೆಸರ ನಾಯ್ಗಳು ...{Loading}...
ಹೆಸರ ನಾಯ್ಗಳು ಹಾಸ ಹರಿದು
ಬ್ಬಸದಲೂಳದವೊದರಿ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಡಿದ ಹಗ್ಗವನ್ನು ಬಿಚ್ಚಿಕೊಂಡು ನಾಯಿಗಳು ಆರ್ಭಟದಿಂದ ಊಳಿದವು. ದೀಹದ ಮೃಗಗಳು ಮುಂದೆ ಹೋಗಲು ಆತುರಪಟ್ಟವು. ಅಶುಭಸೂಚಕವಾಗಿ ಎಳೆದಾಗ ಹದಮಾಡಿದ ಬಿಲ್ಲುಗಳ ಹೆದೆಯು ತಾವಾಗಿಯೇ ಠೇಂಕರಿಸಿದವು. ಮೊಲಗಳು ಹೊಗೆಯ ಮಧ್ಯೆ ನುಗ್ಗಿ ಓಡಿದವು. ಅಕ್ಕಪಕ್ಕದಲ್ಲಿ ಹಸುಬ ಮತ್ತು ಹರಡೆಗಳು ಚೆಲ್ಲಾಪಿಲ್ಲಿಯಾದವು.
ಪದಾರ್ಥ (ಕ.ಗ.ಪ)
ಹಸುಬ - ಒಂದು ಬಗೆಯ ಶಕುನದ ಹಕ್ಕಿ
ಹರಡೆ- ಹಾಲಕ್ಕಿ
ಪಾಠಾನ್ತರ (ಕ.ಗ.ಪ)
ಹರಿದುಬ್ಬಸದಲುಳಿಗದವದಿರ -ಹರಿದುಬ್ಬಸದಲೂಳದವೊದರಿ
ಅರಣ್ಯಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಹಿಡಿ ಮೃಗ -ದೀಹದ ಮೃಗ - ದೊಡ್ಡ ಕಾಡು ಪ್ರಾಣಿಗಳನ್ನು ಹಿಡಿಯಲು ಆಮಿಶವಾಗಿ ಬಳಸುತ್ತಿದ್ದ ಸಾಕು ಮೃಗಗಳು. ಈ ಮೃಗಗಳನ್ನು ತಿನ್ನಲೆಂದು ಬಂದ ಕಾಡು ಮೃಗಗಳನ್ನು ಬೇಟೆಯಾಡುತ್ತಿದ್ದರು.
ಮೂಲ ...{Loading}...
ಹೆಸರ ನಾಯ್ಗಳು ಹಾಸ ಹರಿದು
ಬ್ಬಸದಲೂಳದವೊದರಿ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹೆದೆಯ ಹರವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳೇನನೆಂಬೆನು ಶಕುನ ಸೂಚಕವ ॥21॥
೦೨೨ ಬಗೆಯನಪಶಕುನವ ಮೃಗವ್ಯದ ...{Loading}...
ಬಗೆಯನಪಶಕುನವ ಮೃಗವ್ಯದ
ಸೊಗಸಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲು ಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಟೆಯ ವ್ಯಸನದ ಸೊಗಸಿಗೆ ಮಾರುಹೋದವನ ಮನೋಧರ್ಮದಲ್ಲಿ ವಿವೇಕವಾಗಲೀ, ಧರ್ಮವಿಷಯಕವಾದ ವಿಚಾರಶಕ್ತಿಯಾಗಲೀ ಎಲ್ಲಿರುತ್ತವೆ? ಆದುದರಿಂದ ಭೀಮನು ಅಪಶಕುನಗಳನ್ನು ಲಕ್ಷಿಸಲಿಲ್ಲ. ಬೇಟೆಗಾರರ ಗುಂಪು ಹೊನ್ನಗರಿಯಿಟ್ಟ ಬಿಲ್ಲುಗಳನ್ನು, ಬಾಣಗಳನ್ನು ಹಿಡಿದು ಅಡವಿಯನ್ನು ಹೊಕ್ಕು ಮುಂದೆ ಸಾಗಿತು.
ಪದಾರ್ಥ (ಕ.ಗ.ಪ)
ಪುಳಿಂದ - ಬೇಡ
ಸಂದೋಹ - ಗುಂಪು
ಬೆಗಡುಗೊಳಿಸು - ಬೆಚ್ಚಿಬೀಳಿಸು
ಮೂಲ ...{Loading}...
ಬಗೆಯನಪಶಕುನವ ಮೃಗವ್ಯದ
ಸೊಗಸಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲು ಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ ॥22॥
೦೨೩ ಬಣ್ಡಿಗಳ ಬೆಳ್ಳಾರವಲೆಗಳ ...{Loading}...
ಬಂಡಿಗಳ ಬೆಳ್ಳಾರವಲೆಗಳ
ಖಂಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದಂಡಿವಲೆಗಳ ತೊಡಕುವಲೆಗಳ
ಹಿಂಡುವಲೆಗಳ ಮಯಣದಂಟಿನ
ಮಂಡವಿಗೆ ಬಲೆಗಳ ಕಿರಾತರು ಕೆದರಿತಗಲದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳ್ಳಾರವಲೆ, ಖಂಡವಲೆ, ತಡಿಕೆವಲೆ, ಗುಂಡುವಲೆ, ಬೀಸುವಲೆ, ಕಾಲುಗಣ್ಣಿ, ದಂಡಿವಲೆ, ತೊಡಕುವಲೆ, ಹಿಂಡುವಲೆ, ಮೇಣದ ಅಂಟನ್ನು ಸವರಿದ್ದ ಮಂಡವಿಗೆ ಬಲೆ ಇತ್ಯಾದಿಗಳನ್ನು ಹಿಡಿದುಕೊಂಡು ಶಬರರು ಹೊರಟರು.
ಟಿಪ್ಪನೀ (ಕ.ಗ.ಪ)
ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕನು ಬೇಟೆಯ ಸಂದರ್ಭ ವಿವರಣೆ ಮಾಡುವಾಗ ಬಗೆಬಗೆಯ ಬಲೆಗಳ ಸಂಗತಿ ಹೆಳಿದ್ದಾನೆ. ಹಳಗನ್ನಡ ಕಾವ್ಯಗಳಲ್ಲಿ ಬೇಟೆಯ ವರ್ಣನೆ ಎಂಬೊಂದು ಭಾಗವೇ ಇದೆ.
ಮೂಲ ...{Loading}...
ಬಂಡಿಗಳ ಬೆಳ್ಳಾರವಲೆಗಳ
ಖಂಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದಂಡಿವಲೆಗಳ ತೊಡಕುವಲೆಗಳ
ಹಿಂಡುವಲೆಗಳ ಮಯಣದಂಟಿನ
ಮಂಡವಿಗೆ ಬಲೆಗಳ ಕಿರಾತರು ಕೆದರಿತಗಲದಲಿ ॥23॥
೦೨೪ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನವನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗಂಡ
ಸ್ಥಾನ ದೀರ್ಘದ್ರೋಣಿಗಳಲರಸಿದರು ಮೃಗಕುಲವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಏನು ಹೇಳಲಿ ? ಭೀಮಸೇನನು ಬೇಟೆಗಾರರೊಂದಿಗೆ ಬಲೆಗಳನ್ನು ಬೀಸಿ ಕಾಡಿನ ಕಣಿವೆ, ಕಲ್ಲು ಬಂಡೆ, ಗುಹೆ, ತಿರುವು ಮುರುವುಗಳನ್ನೆಲ್ಲಾ ಸುತ್ತಾಡಿ, ಪ್ರಾಣಿಗಳನ್ನು ಹುಡುಕಾಡಿದನು.
ಪದಾರ್ಥ (ಕ.ಗ.ಪ)
ಬೆಳ್ಳಾರ-ಬಲೆ
ವೇಡೆ - ಬೇಲಿ
ಮೂಲ ...{Loading}...
ಏನನೆಂಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನವನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗಂಡ
ಸ್ಥಾನ ದೀರ್ಘದ್ರೋಣಿಗಳಲರಸಿದರು ಮೃಗಕುಲವ ॥24॥
೦೨೫ ಬೊಬ್ಬೆಗಳ ಪಟಹದ ...{Loading}...
ಬೊಬ್ಬೆಗಳ ಪಟಹದ ಮೃದಂಗದ
ಸರ್ಬ ಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿಂಡೊಡೆದು ಹಾಯ್ದವು ಸೂಸಿದವು ದೆಸೆಗೆ
ತೆಬ್ಬಿದವು ಬೆಳ್ಳಾರವಲೆ ಹರಿ
ದುಬ್ಬಿ ಹಾಯ್ದೊಡೆ ವೇಡೆಯವರಿಗೆ
ಹಬ್ಬವಾಯ್ತೆನೇಂಬೆನಗಣಿತ ಮೃಗ ನಿಪಾತನವ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೇರಿ ಮೃದಂಗಗಳ ಸದ್ದು, ಬೊಬ್ಬೆಗಳನ್ನು ಮಾಡುತ್ತಾ ನುಗ್ಗುವ ಬೇಟೆಗಾರರ ಅಬ್ಬರಕ್ಕೆ ಮೃಗಗಳು ಹಿಂಡಗಲಿ ದಿಕ್ಕು ದಿಕ್ಕಿಗೆ ಓಡಿದವು. ಬಲೆಗಳೊಳಗೆ ಕೆಲವು ಸಿಕ್ಕಿ ಬಿದ್ದವು. ಈ ರೀತಿ ಅವುಗಳು ಬಿದ್ದಾಗ ಬೇಟೆಕಾರರಿಗೆ ಅತ್ಯಂತ ಸಂತೋಷವಾಯಿತು.
ಪದಾರ್ಥ (ಕ.ಗ.ಪ)
ಪಟಹ - ಒಂದು ರೀತಿಯ ವಾದ್ಯ
ಸಬ್ಬ ಲಗ್ಗೆ - ಗುಂಪಾಗಿ ಬೊಬ್ಬೆ ಹಾಕುವುದು
ಸೋಹು - ಹುಡುಕು
ವೇಡೆಯವರು - ಸುತ್ತುವರೆಯುವವರು, ಆಕ್ರಮಣಕಾರರು
ಮೂಲ ...{Loading}...
ಬೊಬ್ಬೆಗಳ ಪಟಹದ ಮೃದಂಗದ
ಸರ್ಬ ಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿಂಡೊಡೆದು ಹಾಯ್ದವು ಸೂಸಿದವು ದೆಸೆಗೆ
ತೆಬ್ಬಿದವು ಬೆಳ್ಳಾರವಲೆ ಹರಿ
ದುಬ್ಬಿ ಹಾಯ್ದೊಡೆ ವೇಡೆಯವರಿಗೆ
ಹಬ್ಬವಾಯ್ತೆನೇಂಬೆನಗಣಿತ ಮೃಗ ನಿಪಾತನವ ॥25॥
೦೨೬ ಹೊಕ್ಕು ತಿವಿದರು ...{Loading}...
ಹೊಕ್ಕು ತಿವಿದರು ಸಬಳದಲಿ ಜಡಿ
ವೆಕ್ಕಲನನಳವಿಯಲಿ ಹರಿಣವ
ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ
ಸೊಕ್ಕಿದರು ಸುರಗಿಯಲಿ ಹೊದರಲಿ
ಹೊಕ್ಕು ಹುಲಿಗಳ ಕೆಣಕಿ ಖಡ್ಗದ
ಲಿಕ್ಕಡಿಯ ತೋರಿದರು ತೂರಿದರಖಿಳ ಮೃಗಕುಳವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರತಿಭಟಿಸಿದ ಕಾಡುಹಂದಿಯನ್ನು ಸಬಳದಿಂದ ತಿವಿದು, ಜಿಂಕೆಗಳನ್ನು ಬಾಣದಿಂದ ಹೊಡೆದು, ಕೋಣಗಳನ್ನು ಸುರಗಿಯಿಂದ ಹೊಡೆದು, ಕತ್ತಿಯಿಂದ ಹೊದರಿನೊಳಗೆ ಹುಲಿಗಳನ್ನು ಖಡ್ಗದಿಂದ ಕತ್ತರಿಸಿ, ಸಮಸ್ತ ಪ್ರಾಣಿ ಸಂಕುಲವನ್ನು ನಾಶ ಮಾಡಿದರು.
ಪದಾರ್ಥ (ಕ.ಗ.ಪ)
ಸೈರಿಭ - ಕೋಣ
ಎಕ್ಕಲ - ಕಾಡುಹಂದಿ
ನರಾಚ - ಬಾಣ
ಇಕ್ಕಡಿ - ಎರಡು ತುಂಡು
ಮೂಲ ...{Loading}...
ಹೊಕ್ಕು ತಿವಿದರು ಸಬಳದಲಿ ಜಡಿ
ವೆಕ್ಕಲನನಳವಿಯಲಿ ಹರಿಣವ
ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ
ಸೊಕ್ಕಿದರು ಸುರಗಿಯಲಿ ಹೊದರಲಿ
ಹೊಕ್ಕು ಹುಲಿಗಳ ಕೆಣಕಿ ಖಡ್ಗದ
ಲಿಕ್ಕಡಿಯ ತೋರಿದರು ತೂರಿದರಖಿಳ ಮೃಗಕುಳವ ॥26॥
೦೨೭ ಕಳಚಿ ಹಾಸವನುಬ್ಬರಿಸಲ ...{Loading}...
ಕಳಚಿ ಹಾಸವನುಬ್ಬರಿಸಲ
ವ್ವಳಿಸಿ ಕಂಠೀರವನ ಮೋರೆಗೆ
ನಿಲುಕಿದವು ಕದುಬಿದವು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿತೆಡಬಲ
ಬಳಸಿದವು ಮೇಲ್ವಾಯ್ದು ನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳಮೃಗಕುಲವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಗ್ಗ ಕಳಚಿದ ಕೂಡಲೇ ಸಿಂಹದ ಮುಖದ ಮೇಲೆಯೇ ನಾಯಿಗಳು ಮುಗಿಬಿದ್ದವು. ಹಾಯ್ದು ತುಡುಕಿ ಎಳೆದಾಡಿ ಎಡಬಲಗಳನ್ನು ಬಳಸಿ ಮೃಗಸಂಕುಲವನ್ನು ಅವುಗಳು ಮೇಲೆ ಬಿದ್ದು ಕೆಡಹಿದವು.
ಪದಾರ್ಥ (ಕ.ಗ.ಪ)
ಹಾಸ - ಪಾಶ - ಹಗ್ಗ
ಕಂಠೀರವ - ಸಿಂಹ
ಕದುಬಿದವು - ಆತುರಪಟ್ಟವು
ಕುಸುಬು - ಮೇಲೆಬೀಳು, ಆಕ್ರಮಿಸು
ಪಾಠಾನ್ತರ (ಕ.ಗ.ಪ)
ಮೆಲುವಯಿದವು ವೆಗ್ಗಳಿಸಿದವು -ಮೇಲ್ವಾಯ್ದು ನಿಂದುಚ್ಚಳಿಸಿದವು
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಕಳಚಿ ಹಾಸವನುಬ್ಬರಿಸಲ
ವ್ವಳಿಸಿ ಕಂಠೀರವನ ಮೋರೆಗೆ
ನಿಲುಕಿದವು ಕದುಬಿದವು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿತೆಡಬಲ
ಬಳಸಿದವು ಮೇಲ್ವಾಯ್ದು ನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳಮೃಗಕುಲವ ॥27॥
೦೨೮ ಗಾಯವಡೆದೆಕ್ಕಲನ ರಭಸದ ...{Loading}...
ಗಾಯವಡೆದೆಕ್ಕಲನ ರಭಸದ
ಜಾಯಿಲಂಗಳ ಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳವಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತುಂಬಾ ಗಾಯಗೊಂಡ ಹಂದಿಗಳ, ಅಬ್ಬರಿಸಿ ನುಗ್ಗುವ ನಾಯಿಗಳ, ಪೆಟ್ಟು ತಿಂದ ಕರಡಿ, ಕಾಡಾನೆಗಳ, ನೋವಿನಿಂದ ಒರಲುತ್ತಿರುವ ಶರಭ, ಸಿಂಹ, ಲುಲಾಯ, ತೋಳ, ಶಾರ್ದೂಲ ಮೊಲ, ನರಿ ಮುಂತಾದ ಅನೇಕ ಪ್ರಾಣಿಗಳ ಕೂಗು ಆಕಾಶಕ್ಕೇರಿತು.
ಪದಾರ್ಥ (ಕ.ಗ.ಪ)
ಎಕ್ಕಲ-ಕಾಡು ಹಂದಿ
ಗೋಮಾಯು - ನರಿ
ಶಶ - ಮೊಲ
ಮೂಲ ...{Loading}...
ಗಾಯವಡೆದೆಕ್ಕಲನ ರಭಸದ
ಜಾಯಿಲಂಗಳ ಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳವಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ ॥28॥
೦೨೯ ಮುಳುದೊಡಕಿನೊಳು ಕೂದಲೊನ್ದೇ ...{Loading}...
ಮುಳುದೊಡಕಿನೊಳು ಕೂದಲೊಂದೇ
ಸಿಲುಕಿ ನಿಂದವು ಚಮರಿಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯನಡಗಲಿಸಿ ನಿಂದವು
ಮಲೆತು ಸಿಂಹದ ಮಿಥುನ ಹಿಂಡಿನ
ಕಳಭವನು ಹಿಂದಿಕ್ಕಿ ವನಕರಿ ತೂಳಿದವು ಪಡೆಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಳ್ಳ ಹಾದಿಯಲ್ಲಿ ಕೂದಲು ಸಿಕ್ಕಿಕೊಂಡು ಚಮರೀ ಮೃಗಗಳು ನಿಂತುಬಿಟ್ಟವು. ಜಿಂಕೆಗಳು ಮರಿಗಳಿಗೆ ಹಾಲೂಡಿಸುತ್ತಾ ಇರುಕಿನಲ್ಲಿ ಅಡಗಿದವು. ಮರಿಗಳನ್ನು ಪಕ್ಕಕ್ಕೆ ಸರಿಸಿದ ಸಿಂಹದ ಜೋಡಿಗಳು ಮಲೆತು ನಿಂತವು. ಮರಿಯಾನೆಗಳನ್ನು ಹಿಂದಿಕ್ಕಿ ಆನೆಗಳು ಬೇಡರ ಪಡೆಯ ಮೆಲೆ ದಾಳಿ ಮಾಡಿದವು.
ಮೂಲ ...{Loading}...
ಮುಳುದೊಡಕಿನೊಳು ಕೂದಲೊಂದೇ
ಸಿಲುಕಿ ನಿಂದವು ಚಮರಿಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯನಡಗಲಿಸಿ ನಿಂದವು
ಮಲೆತು ಸಿಂಹದ ಮಿಥುನ ಹಿಂಡಿನ
ಕಳಭವನು ಹಿಂದಿಕ್ಕಿ ವನಕರಿ ತೂಳಿದವು ಪಡೆಯ ॥29॥
೦೩೦ ಪಡೆ ಬೆದರೆ ...{Loading}...
ಪಡೆ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದನಾನೆಗಳನವ
ಗಡಿಸಿ ಸಿಂಹವ ಸೀಳಿದನು ಹಾಯ್ದೆತ್ತುವೆಕ್ಕಲನ
ಮಡದಲುರೆ ಗಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡಿಯ
ಕೊಡಹಿದನು ಕೊಂದನು ವನಾಂತದೊಳಖಿಳ ಮೃಗಕುಲವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಟೆಗಾರರು ಹೆದರಿದರೂ, ಭೀಮನು ಆನೆಗಳನ್ನು ಹಿಡಿದು ಬೀಸಿದನು, ಸಿಂಹಗಳನ್ನು ಸೀಳಿದನು. ಮೈಮೇಲೆ ಬೀಳುವ ಹಂದಿಗಳನ್ನು ಹಿಮ್ಮಡಿಯಿಂದ ಜಾಡಿಸಿ ಒದೆದನು. ಹುಲಿಗಳಿನ್ನು ಮುಷ್ಟಿಯಿಂದ ತಿವಿದನು. ಕರಡಿಗಳನ್ನು ಕೊಡಹಿ ಕೊಂದನು. ಹೀಗೆ ಕಾಡಿನೊಳಗಿನ ಎಲ್ಲ ಮೃಗ ಸಂಕುಲವನ್ನು ಭೀಮನು ಕೊಂದನು.
ಮೂಲ ...{Loading}...
ಪಡೆ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದನಾನೆಗಳನವ
ಗಡಿಸಿ ಸಿಂಹವ ಸೀಳಿದನು ಹಾಯ್ದೆತ್ತುವೆಕ್ಕಲನ
ಮಡದಲುರೆ ಗಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡಿಯ
ಕೊಡಹಿದನು ಕೊಂದನು ವನಾಂತದೊಳಖಿಳ ಮೃಗಕುಲವ ॥30॥
೦೩೧ ಈತನುರುಬೆಗೆ ಬೆದರಿತುರು ...{Loading}...
ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತ ವ್ರಜವನೊಡೆದುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾ ಗಿರಿಗಹನಗಹ್ವರವ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಡ್ಡ ಹಂದಿಯೊಂದು ಭೀಮನ ಸಾಹಸಕ್ಕೆ ಬೆದರಿ, ಬೇಡರ ಪಡೆಯನ್ನೇ ಹಾದು ಮುಂದೆ ಓಡಲು ಅದನ್ನು ಅಟ್ಟಿಕೊಂಡು ಭೀಮನು ಮುಂದೆ ಹೋದನು. ಕಿರಾತರ ಪಡೆ ಹಿಂದೆ ಬಿದ್ದಿತು. ಆ ಹಂದಿಯು ಭಯದಿಂದ ಮಹಾ ಪರ್ವತದ ಗುಹೆಯೊಂದರ ಒಳಹೊಕ್ಕಿತು.
ಪದಾರ್ಥ (ಕ.ಗ.ಪ)
ಉರುಬೆ - ಆರ್ಭಟ
ಸಂಘಾತ - ಹೊಡೆತ
ಮೂಲ ...{Loading}...
ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತ ವ್ರಜವನೊಡೆದುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾ ಗಿರಿಗಹನಗಹ್ವರವ ॥31॥
೦೩೨ ಮುಡುಹು ಸೋಙ್ಕಿದಡುಲಿದು ...{Loading}...
ಮುಡುಹು ಸೋಂಕಿದಡುಲಿದು ಹೆಮ್ಮರ
ನುಡಿದು ಬಿದ್ದುದು ಪಾದ ಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
ಜಡಿದುದಬುಜಭವಾಂಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆದು ತಿಳಿದುದು ನಿದ್ರೆ ಮುರಿದಿಕ್ಕೆಯ ಮಹೋರಗನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಭುಜ ಸೋಕಿದಾಗ ಹೆಮ್ಮರವೊಂದು ನೆಲಕಚ್ಚಿತು. ಕಾಲಿನ ಘಾvಕ್ಕೆ ಭೂಮಿಯೇ ಕುಸಿಯಿತು. ಬ್ರಹ್ಮಾಂಡವೇ ಬಿರಿಯಿತೋ ಎಂಬ ಭೀಮನ ಕೋಲಾಹಲಕ್ಕೆ ನಿದ್ರೆಯಲ್ಲಿದ್ದ ಮಹಾಸರ್ಪವೊಂದು ಎಚ್ಚರಗೊಂಡಿತು.
ಪದಾರ್ಥ (ಕ.ಗ.ಪ)
ಮುಡುಹು - ಭುಜ
ನೆಗ್ಗು - ಕುಸಿ
ಅಬುಜಭವಾಂಡ - ಬ್ರಹ್ಮಾಂಡ
ಮೂಲ ...{Loading}...
ಮುಡುಹು ಸೋಂಕಿದಡುಲಿದು ಹೆಮ್ಮರ
ನುಡಿದು ಬಿದ್ದುದು ಪಾದ ಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
ಜಡಿದುದಬುಜಭವಾಂಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆದು ತಿಳಿದುದು ನಿದ್ರೆ ಮುರಿದಿಕ್ಕೆಯ ಮಹೋರಗನ ॥32॥
೦೩೩ ತೆಕ್ಕೆ ಸಡಲಿತು ...{Loading}...
ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈ ಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಡಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತರಗೆಲೆರಾಶಿಯೊಳಗೆ ಹಾವು ಸುರುಳಿಯನ್ನು ಬಿಚ್ಚಿ ಮೈಮುರಿಯಲು, ಅದನ್ನು ನೋಡದೆ ಅದರ ಮೇಲೆ ಭೀಮಸೇನನು ಕಾಲಿಟ್ಟನು. ಆಗ ಅವನ ದೊಡ್ಡದಾದ ತೊಡೆಗಳು ಹಾವಿನ ತೆಕ್ಕೆಗೆ ಸಿಕ್ಕಿದವು. ಆ ಕೂಡಲೇ ಹಾವು ಭೀಮನ ದೊಡ್ಡ ದೇಹವನ್ನು ಬಿಗಿಯಿತು.
ಪದಾರ್ಥ (ಕ.ಗ.ಪ)
ಎಕ್ಕತುಳ - ಆತುರದ ನಡಿಗೆ
ಡೆಂಡಣಿಸು - ಕಂಪಿಸು
ಡೊಕ್ಕರ - ತೆಕ್ಕೆ
ಮೂಲ ...{Loading}...
ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈ ಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಡಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ ॥33॥
೦೩೪ ಭಟ ಮರಳಿ ...{Loading}...
ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ
ಪುಟಿದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಗಿಡಗನೆರಕೆಯ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕೂಡಲೇ ಸಾವರಿಸಿಕೊಂಡು, ತನ್ನ ಗದೆಯಲ್ಲೇ ಬಡಿದು ಹಾವಿನ ಬಿಗುಪನ್ನು ಬಿಚ್ಚಿ, ಅದನ್ನು ಒತ್ತಿ ಹಿಡಿದು ಬೊಬ್ಬೆಹಾಕಿದನು. (ಪುಟಿದೇಳುವ ಚೆಂಡಿನಂತೆ ) ಹಾವು ಮತ್ತೆ ಒತ್ತಿ ಹಿಡಿಯಲು, ಭೀಮನು ಗಿಡುಗನಿಗೆ ಸಿಕ್ಕಿದ ಗಿಳಿಯಂತೆ ಬಳಲಿದನು.
ಪದಾರ್ಥ (ಕ.ಗ.ಪ)
ಕಂತುಕ-ಚೆಂಡು
ಅಟಮಟಿಸು -ತಪ್ಪಿಸು
ಕಟಕ - ಸುರುಳಿ
ಎರಕೆ - ರೆಕ್ಕೆ
ಮೂಲ ...{Loading}...
ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ
ಪುಟಿದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಗಿಡಗನೆರಕೆಯ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ ॥34॥
೦೩೫ ಜಾಡಿಸಲು ಜಾಡಿಸಲು ...{Loading}...
ಜಾಡಿಸಲು ಜಾಡಿಸಲು ಬಿಗುಹತಿ
ಗಾಢಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ
ರೂಢಿಸಿದ ಭುಜಬಲದ ಸಿರಿಯ
ಕ್ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾಡಿಸಿದಷ್ಟೂ ಬಿಗಿಪು ಇನ್ನಷ್ಟು ಭದ್ರವಾಯಿತು. ಕೊಡಹಿದಷ್ಟು ಮತ್ತಷ್ಟು ಬಿಗಿಯಿತು. ವಾಸುಕಿಯು ಮಂದರ ಪರ್ವತವನ್ನು ಬಿಗಿದಂತೆ ಬಂಧನ ಹೆಚ್ಚಾಗಲು, ಖಾಡಾಖಾಡಿಯಲ್ಲಿ ಹೋರಾಡುತ್ತ, ತನ್ನ ಶೌರ್ಯ ಕುಂದಿತಲ್ಲಾ ಎಂದು ಕಲಿಭೀಮನು ಕಳವಳಿಸಿದನು.
ಪದಾರ್ಥ (ಕ.ಗ.ಪ)
ಗಾಢಿಸು - ಗಾಢವಾಗು
ಅಕ್ಕಾಡು - ನಾಶವಾಗು
ಮೂಲ ...{Loading}...
ಜಾಡಿಸಲು ಜಾಡಿಸಲು ಬಿಗುಹತಿ
ಗಾಢಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ
ರೂಢಿಸಿದ ಭುಜಬಲದ ಸಿರಿಯ
ಕ್ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ ॥35॥
೦೩೬ ಅರಸ ಕೇಳಿತ್ತಲು ...{Loading}...
ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಠುರವಿದೇನೋ ದೈವಕೃತ ಫಲವಾವುದಿದಕೆನುತ
ಕರೆಸಿ ಧೌಮ್ಯಂಗರುಹಲಿದು ನ
ಮ್ಮರಸುಗಳಿಗಪಘಾತ ಸೂಚಕ
ವರಿದಿದರ ನಿರ್ವಾಹವೆಂದೊಡೆ ನೃಪತಿ ಚಿಂತಿಸಿದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಇತ್ತ ಧರ್ಮರಾಯನು ಇರುವೆಡೆ ಅನೇಕ ಉತ್ಪಾತಗಳು ಗೋಚರಿಸಿದವು. ‘ಏನೀ ಅಪಶಕುನ ? ಇದರ ಫಲವೇನು ?’ ಎಂದು ಅವನು ಧೌಮ್ಯ ಋಷಿಗಳಲ್ಲಿ ಕೇಳಲು, ಅವರು ‘ನಮ್ಮ ಅರಸರಿಗೆ ಅಪಘಾತ ಸೂಚನೆ ಇದು, ಇದನ್ನು ತಿಳಿದು ಪರಿಹರಿಸಬೇಕು’ ಎಂದರು. ಆಗ ಧರ್ಮರಾಯನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಅರಿದು - ಅಸಾಧ್ಯ, ಕಷ್ಟ
ನಿರ್ವಾಹ - ಪರಿಹಾರ
ಮೂಲ ...{Loading}...
ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಠುರವಿದೇನೋ ದೈವಕೃತ ಫಲವಾವುದಿದಕೆನುತ
ಕರೆಸಿ ಧೌಮ್ಯಂಗರುಹಲಿದು ನ
ಮ್ಮರಸುಗಳಿಗಪಘಾತ ಸೂಚಕ
ವರಿದಿದರ ನಿರ್ವಾಹವೆಂದೊಡೆ ನೃಪತಿ ಚಿಂತಿಸಿದ ॥36॥
೦೩೭ ಭೀಮನಾವೆಡೆಯೆನೆ ಕಿರಾತ ...{Loading}...
ಭೀಮನಾವೆಡೆಯೆನೆ ಕಿರಾತ
ಸ್ತೋಮ ಸಹಿತ ಮೃಗವ್ಯ ಕೇಳೀ
ಕಾಮನೈದಿದನೆನಲು ನೃಪ ಹೊರವಂಟನಾಶ್ರಮವ
ಭೂಮಿಸುರರೊಡನೈದಿ ಬರೆ ಸಂ
ಗ್ರಾಮಧೀರನ ಹೆಜ್ಜೆವಿಡಿದು ಮ
ಹೀ ಮನೋಹರನರಸಿ ಹೊಕ್ಕನು ಘೋರ ಕಾನನವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನೆಲ್ಲಿದ್ದಾನೆ ?’ ಎಂದು ಕೇಳಲು, ಅವನು ಬೇಡರೊಂದಿಗೆ ಬೇಟೆಗಾಗಿ ಹೊರಟನೆಂಬುದು ತಿಳಿಯಿತು. ಆ ಕೂಡಲೇ ಋಷಿಮುನಿಗಳೊಂದಿಗೆ ಆಶ್ರಮವನ್ನು ಬಿಟ್ಟು, ಧರ್ಮಜನು ಭೀಮನನ್ನು ಹುಡುಕುತ್ತಾ ಅರಣ್ಯವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಮಹೀಮನೋಹರ - ರಾಜ
ಮೃಗವ್ಯಕೇಳಿ - ಬೇಟೆ
ಮೂಲ ...{Loading}...
ಭೀಮನಾವೆಡೆಯೆನೆ ಕಿರಾತ
ಸ್ತೋಮ ಸಹಿತ ಮೃಗವ್ಯ ಕೇಳೀ
ಕಾಮನೈದಿದನೆನಲು ನೃಪ ಹೊರವಂಟನಾಶ್ರಮವ
ಭೂಮಿಸುರರೊಡನೈದಿ ಬರೆ ಸಂ
ಗ್ರಾಮಧೀರನ ಹೆಜ್ಜೆವಿಡಿದು ಮ
ಹೀ ಮನೋಹರನರಸಿ ಹೊಕ್ಕನು ಘೋರ ಕಾನನವ ॥37॥
೦೩೮ ಹುದುಗಿದಗ್ಗದ ಸತ್ವ ...{Loading}...
ಹುದುಗಿದಗ್ಗದ ಸತ್ವ ದುಸ್ಸಹ
ಸದ ನಿರೂಢಶ್ವಾಸಮಯ ಗದು
ಗದಿತ ಕಂಠದ ತಳಿತಭಂಗದ ತಿರುಗುವಾಲಿಗಳ
ಹೆದರೆದೆಯ ಹೊಳ್ಳಾದ ದರ್ಪದ
ಕೆದರುಗೇಶದ ಕೆಲಕೆ ಜಾರಿದ
ಗದೆಯ ಗರುವಾಯಳಿದ ಭೀಮನ ಕಂಡನಾ ಭೂಪ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ತ್ವಹೀನನಾದ, ಸಾಹಸರಹಿತನಾದ, ದೀರ್ಘ ಶ್ವಾಸದ ಗದ್ಗದಿತ ಸ್ವರದ, ಕೆದರು ಕೂದಲಿನಲ್ಲಿ, ಗದೆ ಜಾರಿ, ದರ್ಪವಡಗಿದ ತಿರುಗುವ ಕಣ್ಣಾಲಿಗಳ ವಿಶಾಲವಕ್ಷದ ಭೀಮನನ್ನು ಧರ್ಮರಾಯನು ಕಂಡನು.
ಪದಾರ್ಥ (ಕ.ಗ.ಪ)
ಹುದುಗು - ಇಂಗಿಹೋಗು
ಪಾಠಾನ್ತರ (ಕ.ಗ.ಪ)
ನಿರೂಢಿಯ ಸೋಸಮಯ - ನಿರೂಢಶ್ವಾಸಮಯ
ಹೇರಾಳ ಶೋಕದ -ಹೊಳ್ಳಾದ ದರ್ಪದಅರಣ್ಯ ಪರ್ವ , ಮೈ.ವಿ.ವಿ.
ಮೂಲ ...{Loading}...
ಹುದುಗಿದಗ್ಗದ ಸತ್ವ ದುಸ್ಸಹ
ಸದ ನಿರೂಢಶ್ವಾಸಮಯ ಗದು
ಗದಿತ ಕಂಠದ ತಳಿತಭಂಗದ ತಿರುಗುವಾಲಿಗಳ
ಹೆದರೆದೆಯ ಹೊಳ್ಳಾದ ದರ್ಪದ
ಕೆದರುಗೇಶದ ಕೆಲಕೆ ಜಾರಿದ
ಗದೆಯ ಗರುವಾಯಳಿದ ಭೀಮನ ಕಂಡನಾ ಭೂಪ ॥38॥
೦೩೯ ಅಕಟ ಹಿನ್ದನುಭವಿಸಿದೆನು ...{Loading}...
ಅಕಟ ಹಿಂದನುಭವಿಸಿದೆನು ಕಂ
ಟಕ ಹಲವನೀ ಪರಿಯ ಬಲು ಕಂ
ಟಕ ಮಹಾ ಕರ್ದಮದೊಳದ್ದಿತೆ ವಿಧಿ ಮಹಾದೇವ
ವಿಕಟ ನಾಗಾಯತ ಮದತ್ತ್ರಾ
ಣಕನ ಸಾಹಸವಡಗಿತೇ ವನ
ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಟಾ, ಈ ಹಿಂದೆ ಅನೇಕ ವಿಪತ್ತುಗಳನ್ನು ನಾನು ಅನುಭವಿಸಿದ್ದೆ. ವಿಧಿಯು ಈ ರೀತಿಯ ಮಹಾಕಂಟಕದಲ್ಲಿ ಸಿಲುಕಿಸಿತೇ, ಶಿವಶಿವಾ, ಮದಗಜದ ಹಾಗೆ ಶಕ್ತಿಶಾಲಿಯಾದ ಈ ಭೀಮನ ಪರಾಕ್ರಮ ಕಾಡಿನ ಈ ಹಾವಿನೊಡನೆ ಮಸುಕಿತೆ ? ಎಂದು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ನಾಗಾಯತ - ಆನೆಯ ಬಲ
ಕರ್ದಮ - ಕೆಸರು
ಭುಜಗ - ಸರ್ಪ
ಮೂಲ ...{Loading}...
ಅಕಟ ಹಿಂದನುಭವಿಸಿದೆನು ಕಂ
ಟಕ ಹಲವನೀ ಪರಿಯ ಬಲು ಕಂ
ಟಕ ಮಹಾ ಕರ್ದಮದೊಳದ್ದಿತೆ ವಿಧಿ ಮಹಾದೇವ
ವಿಕಟ ನಾಗಾಯತ ಮದತ್ತ್ರಾ
ಣಕನ ಸಾಹಸವಡಗಿತೇ ವನ
ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ ॥39॥
೦೪೦ ಏನು ಕುನ್ತೀಸುತಗಪಾಯವಿ ...{Loading}...
ಏನು ಕುಂತೀಸುತಗಪಾಯವಿ
ದೇನು ಫಣಿಬಂಧನ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವ ಶಿವಯೆನುತ ನುಡಿಸಿದನನಿಲನಂದನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನಗೆ ಹೀಗೇಕೆ ಅಪಾಯ ಉಂಟಾಯಿತು ? ಈ ಸರ್ಪಬಂಧನ ವಿನೋದವೋ ಅಥವಾ ಅಪಜಯದ ಹಣೆಬರಹವೋ ? ಇದಕ್ಕೇನು ಮಾಡಬೇಕು. ಶಿವಶಿವಾ, ಈ ಕೆಟ್ಟದೆಸೆಗೆ ಕಾರಣವೇನು ? ಎಂದು ಭೀಮನನ್ನು ಧರ್ಮಜ ಮಾತಾಡಿಸಿದನು.
ಪದಾರ್ಥ (ಕ.ಗ.ಪ)
ಫಣಿ ಬಂಧನ - ಹಾವಿನ ಬಂಧನ
ತ್ರಾಣಾಪಜಯ - ಸೋಲು
ಟಿಪ್ಪನೀ (ಕ.ಗ.ಪ)
ಭೀಮನಂತಹ ವೀರನಿಗೆ ಈ ಸ್ಥಿತಿ ಬರಬಹುದೆಂಬ ಕಲ್ಪನೆಯೂ ಇರದಿದ್ದ ಧರ್ಮರಾಯನ ಬೆರಗು ಇಲ್ಲಿ ವ್ಯಕ್ತವಾಗಿದೆ.
ಮೂಲ ...{Loading}...
ಏನು ಕುಂತೀಸುತಗಪಾಯವಿ
ದೇನು ಫಣಿಬಂಧನ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವ ಶಿವಯೆನುತ ನುಡಿಸಿದನನಿಲನಂದನನ ॥40॥
೦೪೧ ನೋಡಿದನು ಕನ್ದೆರೆದು ...{Loading}...
ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ನೀನೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕಣ್ಣು ತೆರೆದು, ಕೊರಳಿಗೆ ಸುತ್ತು ಹಾಕಿದ ಸರ್ಪಬಂಧನದಿಂದ ಮಾತಾಡಲಾಗದೆ, ಬೆರಳ ಸನ್ನೆಯಲ್ಲಿ ಸೂಚಿಸಿದನು. ಆಗ ಧರ್ಮರಾಯನು ತುಂಬಾ ನೊಂದುಕೊಂಡು ‘ಅಯ್ಯಾ ಸರ್ಪವೆ, ನೀನು ಸಾಮಾನ್ಯವಾದ ಹಾವಲ್ಲ, ಯಾರು ನೀನು ? ಎಂದು ಮಾತನಾಡಿಸಿದನು.
ಪದಾರ್ಥ (ಕ.ಗ.ಪ)
ಎಗ್ಗು - ಕ್ಷೀಣವಾಗು
ಖೇಡನಾಗು - ಹೆದರಿಕೊಳ್ಳು
ಮೂಲ ...{Loading}...
ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ನೀನೆಂದ ॥41॥
೦೪೨ ಅನಿಲಸುತನಪರಾಧಿಯೋ ನೀ ...{Loading}...
ಅನಿಲಸುತನಪರಾಧಿಯೋ ನೀ
ವಿನಯ ಹೀನನೊ ಮೇಣು ಪರ ಪೀ
ಡನ ವೃಥಾ ದುಷ್ಕರ್ಮ ಸಂಗ್ರಹ ಬೇಹುದೇ ನಿನಗೆ
ದನುಜನೋ ಗಂಧರ್ವನೋ ಯ
ಕ್ಷನೊ ಸರೀಸೃಪರೂಪ ದಿವಿಜೇಂ
ದ್ರನೊ ನಿಧಾನಿಸಲರಿಯೆ ನೀನಾರೆಂದನವನೀಶ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನೇ ಅಪರಾಧಿಯೆ ? ಅಥವಾ ನೀನೇ ಅವಿನೀತನೆ ? ನಿನಗೆ ಬೇರೊಬ್ಬರನ್ನು ವೃಥಾ ಪೀಡಿಸುವ ಕೆಟ್ಟ ಕರ್ಮ ಬೇಕೆ ? ನೀನು ರಾಕ್ಷಸನೆ ? ಗಂಧರ್ವನೆ ? ಯಕ್ಷ ಉರಗ ರೂಪದ ದೇವೇಂದ್ರನೆ ? ತಡಮಾಡಬೇಡ. ನೀನಾರೆಂದು ಹೇಳು ಎಂದು ಧರ್ಮಜನು ಕೇಳಿದನು.
ಪದಾರ್ಥ (ಕ.ಗ.ಪ)
ಸರೀಸೃಪ - ಉರಗ
ದಿವಿಜೇಂದ್ರ - ದೇವೇಂದ್ರ
ಮೂಲ ...{Loading}...
ಅನಿಲಸುತನಪರಾಧಿಯೋ ನೀ
ವಿನಯ ಹೀನನೊ ಮೇಣು ಪರ ಪೀ
ಡನ ವೃಥಾ ದುಷ್ಕರ್ಮ ಸಂಗ್ರಹ ಬೇಹುದೇ ನಿನಗೆ
ದನುಜನೋ ಗಂಧರ್ವನೋ ಯ
ಕ್ಷನೊ ಸರೀಸೃಪರೂಪ ದಿವಿಜೇಂ
ದ್ರನೊ ನಿಧಾನಿಸಲರಿಯೆ ನೀನಾರೆಂದನವನೀಶ ॥42॥
೦೪೩ ಕೇಳಿದನು ಫಣಿ ...{Loading}...
ಕೇಳಿದನು ಫಣಿ ಭೀಮಸೇನನ
ಮೌಳಿ ತಲ್ಪದ ತಲೆಯ ಹೊಳಹಿನ
ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
ಮೇಲು ಮೊಗದಲಿ ನೃಪನ ನುಡಿಗಳ
ನಾಲಿಸುತ ನುಡಿದನು ಕರಾಳಾ
ಭೀಳ ದಂಷ್ಟ್ರಾಂತರ ವಿಸಂಸ್ಥುಳ ಜಿಹ್ವೆಗಳ ಜಡಿದು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನ ಶಿರದ ಮೇಲಿರುವ ಸರ್ಪವು ಹೊಳೆಯುವ ನಾಲಗೆ, ಚಲಿಸುವ ಕಣ್ಣಾಲಿಗಳಿಂದ ಮೇಲೆ ಮುಖ ಮಾಡಿ, ಧರ್ಮಜನ ಮಾತನ್ನು ಕೇಳುತ್ತಾ, ಕೋರೆ ಹಲ್ಲುಗ¼ ಮಧ್ಯದಲ್ಲಿ ಹೊರಳುತ್ತ್ತಿರುವ ಕರಾಳವಾದ ನಾಲಿಗೆಗಳನ್ನು ಹೊರಸೂಸುತ್ತಾ ಮಾತಾಡಿತು.
ಪದಾರ್ಥ (ಕ.ಗ.ಪ)
ದಂಷ್ಟ್ರಾಂತರ - ಕೋರೆ ಹಲ್ಲುಗಳ ಮಧ್ಯೆ
ವಿಸಂಸ್ಥುಳ - ಅಲುಗಾಡುತ್ತಿರುವ
ಆಭೀಳ - ಭಯಂಕರ
ಚೂರಣ - ?
ಮೂಲ ...{Loading}...
ಕೇಳಿದನು ಫಣಿ ಭೀಮಸೇನನ
ಮೌಳಿ ತಲ್ಪದ ತಲೆಯ ಹೊಳಹಿನ
ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
ಮೇಲು ಮೊಗದಲಿ ನೃಪನ ನುಡಿಗಳ
ನಾಲಿಸುತ ನುಡಿದನು ಕರಾಳಾ
ಭೀಳ ದಂಷ್ಟ್ರಾಂತರ ವಿಸಂಸ್ಥುಳ ಜಿಹ್ವೆಗಳ ಜಡಿದು ॥43॥
೦೪೪ ಏನಹನು ನಿನಗೀತ ...{Loading}...
ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ವನಕೆ ಬರವು ನಿ
ದಾನವನು ಹೇಳೆನಲು ಕುಂತೀ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವನು ನಿನಗೇನಾಗಬೇಕು ? ನೀನು ಯಾರು ? ನಿನ್ನ ಹೆಸರೇನು ? ನೀನು ಬ್ರಾಹ್ಮಣನೊ ? ಕ್ಷತ್ರಿಯನೊ ? ವೈಶ್ಯನೊ ? ಶೂದ್ರನೊ ? ಈ ಕಾಡಿಗೆ ಬಂದದ್ದೇಕೆ ?” ಎಂದು ಸರ್ಪವು ಪ್ರಶ್ನಿಸಲು, ಧರ್ಮರಾಯನು ತನ್ನ ಪೂರ್ವಾಪರ ವೃತ್ತಾಂತವನ್ನು ತಿಳಿಸಿದನು.
ಪದಾರ್ಥ (ಕ.ಗ.ಪ)
ಅಭಿದಾನ - ಹೆಸರು
ನಿದಾನ - ಕಾರಣ
ಪೂರ್ವಾಪರ - ಹಿಂದು ಮುಂದು
ಮೂಲ ...{Loading}...
ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ವನಕೆ ಬರವು ನಿ
ದಾನವನು ಹೇಳೆನಲು ಕುಂತೀ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ ॥44॥
೦೪೫ ಸೋಮವಂಶ ಪರಮ್ಪರೆಯೊಳು ...{Loading}...
ಸೋಮವಂಶ ಪರಂಪರೆಯೊಳು
ದ್ದಾಮ ಪಾಂಡು ಕ್ಷಿತಿಪನುದಿಸಿದ
ನಾ ಮಹೀಶನ ಸುತ ಯುಧಿಷ್ಠಿರನೆಂಬುದಭಿಧಾನ
ಭೀಮನೀತನು ಪಾರ್ಥ ನಕುಲ ಸ
ನಾಮ ಸಹದೇವಾಖ್ಯ ಪಾಂಡವ
ನಾಮಧೇಯರು ನಾವೆಯೆಂದನು ಭೂಪನಾ ಫಣಿಗೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಚಂದ್ರವಂಶದಲ್ಲಿ ಜನಿಸಿದ ಪಾಂಡುರಾಜನಿಗೆ ನಾವು ಮಕ್ಕಳು. ನಾನು ಯುಧಿಷ್ಠಿರ. ಇವನೇ ಭೀಮಸೇನ. ಪಾರ್ಥ, ನಕುಲ, ಸಹದೇವರೆಂಬವರು ತಮ್ಮಂದಿರು. ನಾವೇ ಪಾಂಡವರು’ ಎಂದು ಧರ್ಮಜನು ಹೇಳಿದನು.
ಪದಾರ್ಥ (ಕ.ಗ.ಪ)
ಸನಾಮ - ಪ್ರಸಿದ್ಧ
ಮೂಲ ...{Loading}...
ಸೋಮವಂಶ ಪರಂಪರೆಯೊಳು
ದ್ದಾಮ ಪಾಂಡು ಕ್ಷಿತಿಪನುದಿಸಿದ
ನಾ ಮಹೀಶನ ಸುತ ಯುಧಿಷ್ಠಿರನೆಂಬುದಭಿಧಾನ
ಭೀಮನೀತನು ಪಾರ್ಥ ನಕುಲ ಸ
ನಾಮ ಸಹದೇವಾಖ್ಯ ಪಾಂಡವ
ನಾಮಧೇಯರು ನಾವೆಯೆಂದನು ಭೂಪನಾ ಫಣಿಗೆ ॥45॥
೦೪೬ ಬೀತುದಖಿಳೈಶ್ವರ್ಯ ಕಪಟ ...{Loading}...
ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊಂಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ
ಈತನೆನ್ನೊಡಹುಟ್ಟಿದನು ನೀ
ನೀತನನು ಬಿಡಬಹುದೆ ಬಿಡು ವಿ
ಖ್ಯಾತರಿಗೆ ಪರಪೀಡೆ ಧರ್ಮ ವಿನಾಶಕರವೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಕಲ ಸಂಪತ್ತುಗಳೂ ಕಳೆದು ಹೋದವು. ಕೌರವರು ಕಪಟದ ಜೂಜನ್ನಾಡಿ ನಮ್ಮ ರಾಜ್ಯವನ್ನು ಕಸಿದುಕೊಂಡರು. ನಮಗೆ ವನವಾಸ ಉಂಟಾಯಿತು. ಇವನು ನನ್ನ ಸಹೋದರನು. ಈತನನ್ನು ಬಿಡಬಹುದಾದರೆ ಬಿಡು. ಪ್ರಖ್ಯಾತರಿಗೆ ಪರಪೀಡೆ ಒಳಿತಲ್ಲ. ಧರ್ಮನಾಶಕ್ಕೆ ಕಾರಣವಾಗುವುದು’ ಎಂದನು.
ಪದಾರ್ಥ (ಕ.ಗ.ಪ)
ಬೀತುದು - ನಾಶವಾಯಿತು
ಅಟವಿ - ಕಾಡು
ಪರಿಭ್ರಮಣ - ಸುತ್ತಾಟ
ಮೂಲ ...{Loading}...
ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊಂಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ
ಈತನೆನ್ನೊಡಹುಟ್ಟಿದನು ನೀ
ನೀತನನು ಬಿಡಬಹುದೆ ಬಿಡು ವಿ
ಖ್ಯಾತರಿಗೆ ಪರಪೀಡೆ ಧರ್ಮ ವಿನಾಶಕರವೆಂದ ॥46॥
೦೪೭ ಆದೊಡೆಲೆ ಧರಣೀಶ ...{Loading}...
ಆದೊಡೆಲೆ ಧರಣೀಶ ಧರ್ಮವ
ನಾದರಿಸುವೈ ಧರ್ಮವೆಂಬುದು
ವೇದ ಮಾರ್ಗವಲೇ ಸುಧರ್ಮದ ಸಾರ ಸಂಗತಿಯ
ಕೈದುವುಳ್ಳೊಡೆ ಕಾದು ನಿನ್ನಯ
ಸೋದರನ ಬಿಡುವೆನು ಮನಃಪರಿ
ಖೇದವನು ಬಿಸುಟೆನ್ನು ಧರ್ಮರಹಸ್ಯ ವಿಸ್ತರವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸ, ಹಾಗಾದರೆ ನೀನು ಧರ್ಮವನ್ನು ಪಾಲಿಸುವವನು. ಧರ್ಮವು ವೇದಮಾರ್ಗದಲ್ಲಿರುವಂತಹುದು. ಧರ್ಮದ ಸಾರವೆಂಬ ಆಯುಧ ನಿನ್ನ ಬಳಿ ಇದ್ದರೆ ಅದರಲ್ಲಿ ಹೋರಾಡು, ನಿನ್ನ ತಮ್ಮನನ್ನು ಬಿಡುತ್ತೇನೆ. ದುಃಖವನ್ನು ಬಿಟ್ಟು , ಧರ್ಮ ರಹಸ್ಯವನ್ನು ವಿವರಿಸುತ್ತೀಯಾ’ ಎಂದು ಹಾವು ಕೇಳಿತು.
ಪದಾರ್ಥ (ಕ.ಗ.ಪ)
ಪರಿಖೇದ - ಸಂಕಟ
ಪಾಠಾನ್ತರ (ಕ.ಗ.ಪ)
ಮನಃ ಪರಿಭೇದ -ಮನಃ ಪರಿಖೇದ
ಅರಣ್ಯಪರ್ವ, ಮೈ.ವಿ.ವಿ
ಮೂಲ ...{Loading}...
ಆದೊಡೆಲೆ ಧರಣೀಶ ಧರ್ಮವ
ನಾದರಿಸುವೈ ಧರ್ಮವೆಂಬುದು
ವೇದ ಮಾರ್ಗವಲೇ ಸುಧರ್ಮದ ಸಾರ ಸಂಗತಿಯ
ಕೈದುವುಳ್ಳೊಡೆ ಕಾದು ನಿನ್ನಯ
ಸೋದರನ ಬಿಡುವೆನು ಮನಃಪರಿ
ಖೇದವನು ಬಿಸುಟೆನ್ನು ಧರ್ಮರಹಸ್ಯ ವಿಸ್ತರವ ॥47॥
೦೪೮ ಉಸುರಬಹುದೇ ಧರ್ಮತತ್ವ ...{Loading}...
ಉಸುರಬಹುದೇ ಧರ್ಮತತ್ವ
ಪ್ರಸರಣವಿದೇನೆಂದು ನೀ ಶಂ
ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮವನರುಹುವೆನು ನೀ
ಬೆಸಗೊಳೆಂದನು ಧರ್ಮಸುತ ನಹುಷಂಗೆ ವಿನಯದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮತತ್ವ ವಿಚಾರಗಳನ್ನು ಹೇಳಬಹುದೇ ಎಂದು ಸಂದೇಹಪಟ್ಟರೆ, ವೇದೋಪನಿಷತ್ತುಗಳು ಶಕ್ತಿ ಹೀನವಾಗುವುದಿಲ್ಲವೆ (?) ವಿಪ್ರರ ಮತಿಗೆ ಒಪ್ಪುವಂತೆ ಧರ್ಮವನ್ನು ನಾನು ಹೇಳುತ್ತೇನೆ, ನೀನು ಕೇಳು’ ಎಂದು ಧರ್ಮರಾಯನು ಹಾವಿಗೆ ವಿನಯದಿಂದ ಹೇಳಿದನು.
ಪದಾರ್ಥ (ಕ.ಗ.ಪ)
ತುಟ್ಟಿಸು -ಶಕ್ತಿಹೀನವಾಗು
ಟಿಪ್ಪನೀ (ಕ.ಗ.ಪ)
ಇಲ್ಲಿನ ಸರ್ಪ ನಹುಷ ಎಂಬ ಪ್ರಸ್ತಾಪ ಮುಂದೆ ಬರುತ್ತದೆ
ಮೂಲ ...{Loading}...
ಉಸುರಬಹುದೇ ಧರ್ಮತತ್ವ
ಪ್ರಸರಣವಿದೇನೆಂದು ನೀ ಶಂ
ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮವನರುಹುವೆನು ನೀ
ಬೆಸಗೊಳೆಂದನು ಧರ್ಮಸುತ ನಹುಷಂಗೆ ವಿನಯದಲಿ ॥48॥
೦೪೯ ಎಸೆವ ವಿಪ್ರರ ...{Loading}...
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆಂದೈ ಭೂಪತಿಯೆ ಭೂದೇವಕುಲದೊಳಗೆ
ಎಸೆವ ವಿಪ್ರನದಾರು ಪರಿಶೋ
ಭಿಸುವುದೈ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನ ಹೇಳೆನೆ ಭೂಪನಿಂತೆಂದ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠರಾದ ಬ್ರಾಹ್ಮಣರ ಬುದ್ಧಿಗೆ ತಿಳಿಯುವಂತಹ ಧರ್ಮ ವಿಚಾರವನ್ನು ಹೇಳುವೆನೆಂದೆಯಲ್ಲಾ ? ಅರಸನೇ, ಬ್ರಾಹ್ಮಣ ಕುಲದಲ್ಲಿ ಶ್ರೇಷ್ಠ ಬ್ರಾಹ್ಮಣ ಯಾರು ? ಎಲ್ಲಿ ಬ್ರಾಹ್ಮಣ್ಯವು ಕಂಗೊಳಿಸುತ್ತದೆ ? ಇದನ್ನೇ ಮೊದಲು ಹೇಳು ಎನ್ನಲು ಧರ್ಮರಾಯ ಹೀಗೆಂದನು.
ಮೂಲ ...{Loading}...
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆಂದೈ ಭೂಪತಿಯೆ ಭೂದೇವಕುಲದೊಳಗೆ
ಎಸೆವ ವಿಪ್ರನದಾರು ಪರಿಶೋ
ಭಿಸುವುದೈ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನ ಹೇಳೆನೆ ಭೂಪನಿಂತೆಂದ ॥49॥
೦೫೦ ಉರಗ ಕೇಳ್ ...{Loading}...
ಉರಗ ಕೇಳ್ ಪಿತೃಮಾತೃ ವಂಶೋ
ತ್ಕರ ವಿಶುದ್ಧ ಸದಾಗ್ನಿ ಹೋತ್ರದ
ಭರದಮಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ
ವರ ಗುಣಂಗಳಿವಾವನಲಿ ಗೋ
ಚರಿಸಿದಾತನೆ ವಿಪ್ರನೆಂಬರು
ಹಿರಿಯರೆಂದನು ಧರ್ಮಸುತ ನಹುಷಂಗೆ ವಿನಯದಲಿ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪನೇ, ಕೇಳು ಪಿತೃ ಮಾತೃ ವಂಶಕ್ಕೆ ಕೀರ್ತಿ ತರುವಂತಹವನಾಗಿ ಸದಾ ಅಗ್ನಿ ಹೋತ್ರ ಮಾಡುವವನಾಗಿ ದಮ ಸ್ವಾಧ್ಯಾಯ, ಸತ್ಯ, ಅಹಿಂಸೆ, ಸಂತೋಷವೇ ಮೊದಲಾದ ಸದ್ಗುಣಗಳು ಯಾವ ವ್ಯಕ್ತಿಯಲ್ಲಿರುವುದೋ ಅವನೇ ಬ್ರಾಹ್ಮಣನು ಎಂದು ಹಾವಿಗೆ ಧರ್ಮರಾಯನು ಹೇಳಿದನು.
ಮೂಲ ...{Loading}...
ಉರಗ ಕೇಳ್ ಪಿತೃಮಾತೃ ವಂಶೋ
ತ್ಕರ ವಿಶುದ್ಧ ಸದಾಗ್ನಿ ಹೋತ್ರದ
ಭರದಮಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ
ವರ ಗುಣಂಗಳಿವಾವನಲಿ ಗೋ
ಚರಿಸಿದಾತನೆ ವಿಪ್ರನೆಂಬರು
ಹಿರಿಯರೆಂದನು ಧರ್ಮಸುತ ನಹುಷಂಗೆ ವಿನಯದಲಿ ॥50॥
೦೫೧ ಆಯಿತಿದು ಮತವಾವುದೈ ...{Loading}...
ಆಯಿತಿದು ಮತವಾವುದೈ ಸ್ವಾ
ಧ್ಯಾಯವೆಂಬುದದೇನು ಸತ್ಯದ
ಕಾಯವಾವುದಹಿಂಸೆ ಪರಿತೋಷಂಗಳಿಂದೇನು
ರಾಯ ಹೇಳಿವರರಿವ ನಿಜಗುಣ
ದಾಯತವನೆನೆ ಧರ್ಮವತಿ ರಮ
ಣೀಯವೆನೆ ನಹುಷಂಗೆ ವಿವರಿಸಿದನು ಮಹೀಪಾಲ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯಿತು ಸ್ವಾಧ್ಯಾಯ ಎಂದರೇನು ? ಸತ್ಯ ಹೇಗಿರುತ್ತದೆ ? ಅಹಿಂಸೆ ಸಂತೋಷಗಳೆಂದರೇನು ? ಇವುಗಳನ್ನು ತಿಳಿಯುವ ಉಪಾಯವೆಂತು ? ಎಂದು ಕೇಳಲು, ಧರ್ಮರಾಯನು ಧರ್ಮವು ತುಂಬ ರಮಣೀಯವಾಗಿದೆ ಎಂದು ವಿವರಿಸಿದನು.
ಪದಾರ್ಥ (ಕ.ಗ.ಪ)
ಸ್ವಾಧ್ಯಾಯ- ವೇದಾಧ್ಯಯನ
ದಮ - ನಿಯಂತ್ರಣ
ಪರಿತೋಷ - ಸಂತೋಷ
ಮೂಲ ...{Loading}...
ಆಯಿತಿದು ಮತವಾವುದೈ ಸ್ವಾ
ಧ್ಯಾಯವೆಂಬುದದೇನು ಸತ್ಯದ
ಕಾಯವಾವುದಹಿಂಸೆ ಪರಿತೋಷಂಗಳಿಂದೇನು
ರಾಯ ಹೇಳಿವರರಿವ ನಿಜಗುಣ
ದಾಯತವನೆನೆ ಧರ್ಮವತಿ ರಮ
ಣೀಯವೆನೆ ನಹುಷಂಗೆ ವಿವರಿಸಿದನು ಮಹೀಪಾಲ ॥51॥
೦೫೨ ನಿಯತವೀ ಶ್ರೋತ್ರಾದಿ ...{Loading}...
ನಿಯತವೀ ಶ್ರೋತ್ರಾದಿ ಪಂಚೇಂ
ದ್ರಿಯದ ನಿಗ್ರಹ ದಮವೆನಿಪ್ಪುದು
ಭಯವನಿತರರಿಗಾಚರಿಸದಿಹುದೇಯಹಿಂಸೆ ಕಣ
ನಯವಿದನೆ ಚಿತ್ತೈಸು ಲೋಕ
ತ್ರಯವನೊಂದೇ ಸತ್ಯದಿಂದವೆ
ಜಯಿಸಬಹುದಾ ಸತ್ಯವುಳ್ಳೊಡೆ ವಿಪ್ರನವನೆಂದ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಂಚೇಂದ್ರಿಯಗಳ ನಿಗ್ರಹವೇ ದಮ. ಬೇರೆಯವರಿಗೆ ಭೀತಿಯನ್ನುಂಟು ಮಾಡದೇ ಇರುವುದೇ ಅಹಿಂಸೆ. ಮೂರು ಲೋಕವನ್ನೇ ಸತ್ಯದಿಂದ ಗೆಲ್ಲಬಹುದು. ಇವುಗಳಿರುವಾತನೇ ಬ್ರಾಹ್ಮಣ’ ಎಂದನು.
ಪದಾರ್ಥ (ಕ.ಗ.ಪ)
ಶ್ರೋತ್ರ - ಕಿವಿ
ಮೂಲ ...{Loading}...
ನಿಯತವೀ ಶ್ರೋತ್ರಾದಿ ಪಂಚೇಂ
ದ್ರಿಯದ ನಿಗ್ರಹ ದಮವೆನಿಪ್ಪುದು
ಭಯವನಿತರರಿಗಾಚರಿಸದಿಹುದೇಯಹಿಂಸೆ ಕಣ
ನಯವಿದನೆ ಚಿತ್ತೈಸು ಲೋಕ
ತ್ರಯವನೊಂದೇ ಸತ್ಯದಿಂದವೆ
ಜಯಿಸಬಹುದಾ ಸತ್ಯವುಳ್ಳೊಡೆ ವಿಪ್ರನವನೆಂದ ॥52॥
೦೫೩ ಸತ್ಯವೇ ಸ್ವಾಧ್ಯಾಯ ...{Loading}...
ಸತ್ಯವೇ ಸ್ವಾಧ್ಯಾಯ ಸತ್ಯವೆ
ನಿತ್ಯಕರ್ಮ ವಿಧಾನವೊಂದೇ
ಸತ್ಯವೇ ಜಪ ಹೋಮಯಜ್ಞ ವಿಧಾನ ದಾನ ತಪ
ಸತ್ಯವುಳ್ಳೊಡೆ ಶೂದ್ರನವನಿಂ
ದತ್ಯಧಿಕನಾ ದ್ವಿಜರೊಳಗೆ ವರ
ಸತ್ಯಹೀನನೆ ಹೀನಜಾತಿಗನೆಂದನಾ ಭೂಪ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ಯವೇ ಸ್ವಾಧ್ಯಾಯ. . ಸತ್ಯವೇ ನಿತ್ಯ ಕರ್ಮಾನುಷ್ಠಾನ.. ಸತ್ಯವೇ ಜಪಹೋಮ ಯಜ್ಞದಾನ ತಪಸ್ಸುಗಳು. ಈ ಸತ್ಯವಿರುವಾತ ಶೂದ್ರನಾದರೂ ಶ್ರೇಷ್ಠನೇ. ಬ್ರಾಹ್ಮಣರಲ್ಲಿ ಸತ್ಯಹೀನನಿದ್ದರೆ ಅವನೇ ಶೂದ್ರ ಎಂದು ಧರ್ಮರಾಯ ಹೇಳಿದನು.
ಮೂಲ ...{Loading}...
ಸತ್ಯವೇ ಸ್ವಾಧ್ಯಾಯ ಸತ್ಯವೆ
ನಿತ್ಯಕರ್ಮ ವಿಧಾನವೊಂದೇ
ಸತ್ಯವೇ ಜಪ ಹೋಮಯಜ್ಞ ವಿಧಾನ ದಾನ ತಪ
ಸತ್ಯವುಳ್ಳೊಡೆ ಶೂದ್ರನವನಿಂ
ದತ್ಯಧಿಕನಾ ದ್ವಿಜರೊಳಗೆ ವರ
ಸತ್ಯಹೀನನೆ ಹೀನಜಾತಿಗನೆಂದನಾ ಭೂಪ ॥53॥
೦೫೪ ಧೀರನಾವನು ದಿಟ್ಟನಾರು ...{Loading}...
ಧೀರನಾವನು ದಿಟ್ಟನಾರು ವಿ
ಕಾರಿ ಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿ ಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವನು ಧೀರ ? ಯಾವನು ದಿಟ್ಟ ? ವಿಕಾರವುಳ್ಳವನು ಯಾರು ? ವಿನೀತನು ಯಾರು ? ಆಚಾರ ಹೀನನಾರು ? ವ್ರತನಿಷ್ಠನಾರು ? ಯಾರು ಶಠ ? ಯಾರು ಕ್ರೂರಿ ? ಅತಿ ಕಷ್ಟನೂ, ವಿಚಾರಿಯೂ ಯಾರ್ಯಾರು ? ಇಹಪರಗಳಿಂದ ವಿಮುಕ್ತನೂ, ವಿದೂರನೂ ಯಾರು ? ಅರಸನೇ ಹೇಳು” ಎಂದನು.
ಮೂಲ ...{Loading}...
ಧೀರನಾವನು ದಿಟ್ಟನಾರು ವಿ
ಕಾರಿ ಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿ ಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ ॥54॥
೦೫೫ ನಾರಿಯರ ಕಡೆಗಣ್ಣ ...{Loading}...
ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರಪರನೆ ವಿನೀತನನ್ಯಾ
ಚಾರಯುತನಾಚಾರ ಹೀನನು ಫಣಿಪ ಕೇಳ್ ಎಂದ ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸ್ತ್ರೀಯರ ಕುಡಿನೋಟಕ್ಕೆ ಸಿಲುಕದವನೆ ಧೀರನು. ಅವನೇ ದಿಟ್ಟನು. ಸ್ತ್ರೀಯರು ನೀಡುವ ಉದ್ದೀಪನಗೊಳಿಸುವ ತಾಂಬೂಲದಿಂದ ಮೇರೆ ತಪ್ಪುವವನೇ ವಿಕಾರಿ. ವಿಚಾರಯುಕ್ತನೇ ವಿನಯಶಾಲಿಯು. ಬೇರೆ ಕೆಟ್ಟ ಆಚಾರಗಳನ್ನು ಅವಲಂಬಿಸಿದಾತನೇ ಆಚಾರಹೀನನು. ಉರಗಾಧಿಪತಿಯೇ ಕೇಳು’ ಎಂದನು.
ಪದಾರ್ಥ (ಕ.ಗ.ಪ)
ಉಬ್ಬುಗವಳ - ಉದ್ದೀಪಕ ತಾಂಬೂಲ
ಮೂಲ ...{Loading}...
ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರಪರನೆ ವಿನೀತನನ್ಯಾ
ಚಾರಯುತನಾಚಾರ ಹೀನನು ಫಣಿಪ ಕೇಳೆಂದ ॥55॥
೦೫೬ ಕೃತಕವಲ್ಲ ದ್ವನ್ದ್ವಸಹನೇ ...{Loading}...
ಕೃತಕವಲ್ಲ ದ್ವಂದ್ವಸಹನೇ
ವ್ರತಿ ಮುಮುಕ್ಷು ವಿಚಾರಯುಕ್ತನು
ಕೃತಕನೇ ಶಠನಪ್ರಗಲ್ಭ ಕೃತಘ್ನನೇ ಕ್ರೂರ
ಕ್ಷಿತಿಗೆ ಲೋಭಿಯೆ ಕಷ್ಟನಾತ್ಮಾ
ರತನೆ ಮುಕ್ತನು ವೇದ ಮಾರ್ಗ
ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳ್ ಎಂದ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ವಂದ್ವಗಳನ್ನು ಸಹಿಸುವಾತನೇ ವ್ರತಿಯು. ವಿಚಾರಶೀಲನೇ ಮುಮುಕ್ಷು (ಮೋಕ್ಷಾಕಾಂಕ್ಷಿ) ಕೃತಕನೇ ಶಠನು. ಕೃತಘ್ನನೇ ಕ್ರೂರಿ. ಭೂಮಿಯಲ್ಲಿ ಜಿಪುಣನೇ ಕಠಿಣ ಮನಸ್ಸಿನವನು. ಪರಮಾತ್ಮನಲ್ಲಿ ಮನಸ್ಸಿಟ್ಟವನೇ ಮುಕ್ತ. ವೇದಮಾರ್ಗ ಬಾಹಿರನೇ ಲೋಕ ದೂರನು, ಫಣಿಪತಿಯೇ ಕೇಳು” ಎಂದು ಧರ್ಮರಾಯನು ಉತ್ತರಿಸಿದನು.
ಮೂಲ ...{Loading}...
ಕೃತಕವಲ್ಲ ದ್ವಂದ್ವಸಹನೇ
ವ್ರತಿ ಮುಮುಕ್ಷು ವಿಚಾರಯುಕ್ತನು
ಕೃತಕನೇ ಶಠನಪ್ರಗಲ್ಭ ಕೃತಘ್ನನೇ ಕ್ರೂರ
ಕ್ಷಿತಿಗೆ ಲೋಭಿಯೆ ಕಷ್ಟನಾತ್ಮಾ
ರತನೆ ಮುಕ್ತನು ವೇದ ಮಾರ್ಗ
ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳೆಂದ ॥56॥
೦೫೭ ಆರು ಭಣ್ಡರು ...{Loading}...
ಆರು ಭಂಡರು ಸುಜನ ನಿಂದ್ಯರ
ದಾರು ಹಾಲಾಹಲ ಸ್ವರೂಪರ
ದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು
ಆರು ಹಗೆ ಸಖನಾರು ಸೇವ್ಯನ
ದಾರು ದುರ್ಲಭನಾರು ದುಸ್ಸಹ
ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆಂದ ॥57॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭಂಡನಾರು ? ಸುಜನರಿಂದ ನಿಂದಿಸಲ್ಪಡುವವನು ಯಾರು ? ವಿಷ ಸ್ವರೂಪರು ಯಾರು ? ಸಾಹಸಿ, ಸಜ್ಜನ, ಶುಚಿ ಯಾರ್ಯಾರು ? ಶತ್ರು-ಮಿತ್ರರು ಯಾರು ? ಗೆಳೆಯ, ಸ್ವಾಮಿ ಯಾರು ? ದುರ್ಲಭ, ದುಸ್ಸಹ, ದುರ್ಮತಿಗಳು ಯಾರು ? ಹೇ ಧರ್ಮಜನೇ ಇವುಗಳನ್ನು ತಿಳಿಯಪಡಿಸು ಎಂದನು.
ಮೂಲ ...{Loading}...
ಆರು ಭಂಡರು ಸುಜನ ನಿಂದ್ಯರ
ದಾರು ಹಾಲಾಹಲ ಸ್ವರೂಪರ
ದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು
ಆರು ಹಗೆ ಸಖನಾರು ಸೇವ್ಯನ
ದಾರು ದುರ್ಲಭನಾರು ದುಸ್ಸಹ
ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆಂದ ॥57॥
೦೫೮ ವ್ಯಸನಿ ನಿನ್ದ್ಯನು ...{Loading}...
ವ್ಯಸನಿ ನಿಂದ್ಯನು ರಣದೊಳೊಡೆಯನ
ಬಿಸುಟು ಹೋಹನೆ ಭಂಡನತಿ ಸಾ
ಹಸಿಕನೇ ಸೇವಕನು ಮಿತ್ರದ್ರೋಹಿಯೇ ವಿಷವು
ಪಿಸುಣನೇ ಹಗೆ ಪರಸತಿಗೆ ಮನ
ಮಿಸುಕದವನೇ ಶುಚಿ ಪರಾರ್ಥ
ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳ್ ಎಂದ ॥58॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಶ್ಚಟಗಳಿಗೆ ಬಿದ್ದವನೇ ನಿಂದ್ಯನು. ಯುದ್ಧದಲ್ಲಿ ಸ್ವಾಮಿಯನ್ನು ಬಿಟ್ಟು ಓಡಿಹೋಗುವವನೇ ಭಂಡನು. ನಿಜವಾದ ಸೇವಕನೆ ಸಾಹಸಿಯು. ಮಿತ್ರ ದ್ರೋಹಿಯೇ ವಿಷರೂಪನು. ಚಾಡಿಕೋರನೇ ವೈರಿ. ಪರನಾರಿಯರನ್ನು ಬಯಸದವನೇ ಶುಚಿವಂತನು. ಪರಮಾರ್ಥದಲ್ಲಿ ಆಸಕ್ತನಾದವನು ಸಜ್ಜನನು’ ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಪರಾರ್ಥ - ಪರಮಾರ್ಥ
ಪಿಸುಣ - ಚಾಡಿಕೋರ
ಮೂಲ ...{Loading}...
ವ್ಯಸನಿ ನಿಂದ್ಯನು ರಣದೊಳೊಡೆಯನ
ಬಿಸುಟು ಹೋಹನೆ ಭಂಡನತಿ ಸಾ
ಹಸಿಕನೇ ಸೇವಕನು ಮಿತ್ರದ್ರೋಹಿಯೇ ವಿಷವು
ಪಿಸುಣನೇ ಹಗೆ ಪರಸತಿಗೆ ಮನ
ಮಿಸುಕದವನೇ ಶುಚಿ ಪರಾರ್ಥ
ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳೆಂದ ॥58॥
೦೫೯ ವಿನುತ ಪರತತ್ವಜ್ಞನತಿ ...{Loading}...
ವಿನುತ ಪರತತ್ವಜ್ಞನತಿ ಸೇ
ವ್ಯನು ಸುದುರ್ಲಭನೇ ಜಿತೇಂದ್ರಿಯ
ನನುಗುಣನೆ ಸಖನಾರು ಸೈರಿಸದವನೆ ದುಸ್ಸಹನು
ಮನುಜರಲಿ ದುರ್ಮತಿಯಲಾ ದು
ರ್ಜನರಿಗಾಶ್ರಯವೆಂದು ತೋರಿದು
ದೆನಗೆ ನಿನಗಭಿಮತವೆ ಕೈಕೊಳ್ಳೆಂದನಾ ಭೂಪ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರತತ್ತ್ವವನ್ನು ತಿಳಿದವನೇ ಪೂಜ್ಯನು. ಇಂದ್ರಿಯಗಳನ್ನು ಗೆದ್ದವನು ಬಲು ದುರ್ಲಭನು. ಅನುಸರಣೆಯ ಗುಣ ಉಳ್ಳವನೇ ಗೆಳೆಯನು. ಅಸೂಯಾಪರನಾದವನೇ ದುಸ್ಸಹನು. ದುಷ್ಟರಿಗೆ ಆಶ್ರಯ ನೀಡುವಾತನೇ ದುರ್ಮತಿಯು ಎಂದು ನನಗನಿಸುತ್ತದೆ. ಇದು ನಿನಗೆ ಒಪ್ಪಿಗೆಯೇ ? ಎಂದು ಧರ್ಮಜನು ಕೇಳಿದನು.
ಪದಾರ್ಥ (ಕ.ಗ.ಪ)
ಪರತತ್ವಜ್ಞ - ಅಧ್ಯಾತ್ಮ ವಿದ್ಯೆಯನ್ನು ಬಲ್ಲವನು
ಮೂಲ ...{Loading}...
ವಿನುತ ಪರತತ್ವಜ್ಞನತಿ ಸೇ
ವ್ಯನು ಸುದುರ್ಲಭನೇ ಜಿತೇಂದ್ರಿಯ
ನನುಗುಣನೆ ಸಖನಾರು ಸೈರಿಸದವನೆ ದುಸ್ಸಹನು
ಮನುಜರಲಿ ದುರ್ಮತಿಯಲಾ ದು
ರ್ಜನರಿಗಾಶ್ರಯವೆಂದು ತೋರಿದು
ದೆನಗೆ ನಿನಗಭಿಮತವೆ ಕೈಕೊಳ್ಳೆಂದನಾ ಭೂಪ ॥59॥
೦೬೦ ಅಹುದಲೇ ಬಳಿಕೇನು ...{Loading}...
ಅಹುದಲೇ ಬಳಿಕೇನು ವಿದ್ಯಾ
ಮಹಿಮೆ ದಾನ ತಪೋಗುಣಕೆ ಸ
ನ್ನಿಹಿತನೀ ಧರ್ಮದಲಿ ಸತ್ಯಾಚಾರ ಶೀಲದಲಿ
ಕುಹಕಿಯಲ್ಲ ವಿರೋಧಿಯಲ್ಲತಿ
ಸಹಸಿಯೈ ಸಾರಜ್ಞನಲ್ಲೆನ
ಬಹುದೆ ನಿನ್ನುಕುತಿಗಳನೆಂದನು ನಹುಷನರಸಂಗೆ ॥60॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು, ನೀನಂತೂ ವಿದ್ಯೆ, ದಾನ, ತಪಸ್ಸು, ಸದ್ಗುಣಗಳ ನಿಧಿ. ಧರ್ಮ, ಸತ್ಯ, ಆಚಾರ, ಶೀಲಗಳಲ್ಲಿ ಕಪಟವಿಲ್ಲದವನು. ವಿರೋಧವಿಲ್ಲದವನು. ಹಾಗೂ ಮಹಾ ಪರಾಕ್ರಮಿಯು ಎಲ್ಲವನ್ನೂ ತಿಳಿದವನು ನಿನ್ನ ಮಾತನ್ನು ಅಲ್ಲವೆನ್ನಲಾದೀತೆ ? ಎಂದು ನಹುಷನು ಧರ್ಮಜನಿಗೆ ಹೇಳಿದನು.
ಮೂಲ ...{Loading}...
ಅಹುದಲೇ ಬಳಿಕೇನು ವಿದ್ಯಾ
ಮಹಿಮೆ ದಾನ ತಪೋಗುಣಕೆ ಸ
ನ್ನಿಹಿತನೀ ಧರ್ಮದಲಿ ಸತ್ಯಾಚಾರ ಶೀಲದಲಿ
ಕುಹಕಿಯಲ್ಲ ವಿರೋಧಿಯಲ್ಲತಿ
ಸಹಸಿಯೈ ಸಾರಜ್ಞನಲ್ಲೆನ
ಬಹುದೆ ನಿನ್ನುಕುತಿಗಳನೆಂದನು ನಹುಷನರಸಂಗೆ ॥60॥
೦೬೧ ಅರಸ ಕೇಳೈ ...{Loading}...
ಅರಸ ಕೇಳೈ ಕ್ಷಾತ್ರತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜು ಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸನೇ ಕೇಳು. ಕ್ಷತ್ರಿಯ ತೇಜಸ್ಸನ್ನು ಪೋಷಿಸುವುದೇ ಬ್ರಾಹ್ಮಣ್ಯ. ನೀನು ಈ ಋಷಿಮುನಿಗಳ ಸ್ನೇಹದೊಂದಿಗೆ ಸೌಖ್ಯದಿಂದಿರುವೆ. ವಿಪ್ರರಿಗೆ ಅವಮಾನ ಮಾಡುವುದೇ ಸಂಪತ್ತಿಗೆ ವಿಷಕಾರಿಯಾದುದು. ಈ ಬ್ರಾಹ್ಮಣ ಭಕ್ತಿಯಿಂದ ನೀನು ಕೃತಕೃತ್ಯನಾಗಿರುವೆ” ಎಂದನು.
ಮೂಲ ...{Loading}...
ಅರಸ ಕೇಳೈ ಕ್ಷಾತ್ರತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜು ಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ ॥61॥
೦೬೨ ನೂರು ಯಜ್ಞದ ...{Loading}...
ನೂರು ಯಜ್ಞದ ಹೊಯ್ಹೊರೆಗೆ ಹರಿ
ದೇರಿದೆನು ಸುರಪತಿಯ ಪೀಠವ
ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ
ಮಾರು ಮಾತೇನೈ ಮಹೀಸುರ
ರೇರಿಸಿದರೇರುವುದು ಮುನಿದರೆ
ಹಾರಿಸುವರೈ ನೂರು ಯಜ್ಞವನೆಂದನಾ ನಹುಷ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತಯಾಗಗಳನ್ನು ಮಾಡಿ, ನಾನು ದೇವೇಂದ್ರನ ಪದವಿಗೇರಿದೆ. ಆದರೆ ವಿಪ್ರರನ್ನು ಅವಮಾನಿಸಿದ್ದರಿಂದ ಇಂದ್ರಪೀಠದಿಂದ ಪರಿತ್ಯಕ್ತನಾದೆ. ಮತ್ತೆ ಮರುಮಾತಿಲ್ಲ. ಬ್ರಾಹ್ಮಣರು ಅನುಗ್ರಹಿಸಿದರೆ ಸುಖ ಪ್ರಾಪ್ತಿಯಾಗುವುದು, ಮುನಿದರೆ ನೂರು ಯಾಗ ಫಲವೂ ನಾಶವಾಗುವುದು ಎಂದನು.
ಪದಾರ್ಥ (ಕ.ಗ.ಪ)
ಓರುಗುಡಿಸು - ಒರೆಸಿ ಹಾಕು, ನಾಶ ಮಾಡು
ಮೂಲ ...{Loading}...
ನೂರು ಯಜ್ಞದ ಹೊಯ್ಹೊರೆಗೆ ಹರಿ
ದೇರಿದೆನು ಸುರಪತಿಯ ಪೀಠವ
ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ
ಮಾರು ಮಾತೇನೈ ಮಹೀಸುರ
ರೇರಿಸಿದರೇರುವುದು ಮುನಿದರೆ
ಹಾರಿಸುವರೈ ನೂರು ಯಜ್ಞವನೆಂದನಾ ನಹುಷ ॥62॥
೦೬೩ ಎನ್ನ ವೃತ್ತಾನ್ತದ ...{Loading}...
ಎನ್ನ ವೃತ್ತಾಂತದ ನಿಧಾನವ
ಮುನ್ನವೇ ಬೆಸ ಗೊಳಲು ಹೇಳಿದೆ
ನಿನ್ನು ನಿನ್ನಭಿಧಾನವನು ನೀನಾವನೆಂಬುದನು
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವರ ಯಯಾತಿಯಯ್ಯನು
ನನ್ನ ನಾಮವೆ ನಹುಷನೆಂಬುದು ನೃಪತಿ ಕೇಳ್ ಎಂದ ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಧರ್ಮರಾಯನು ‘ನೀನು ವಿಚಾರಿಸಿದಾಗ ನನ್ನ ವೃತ್ತಾಂತವನ್ನು ಮೊದಲೇ ಹೇಳಿದೆ. ಈಗ ನೀನು ಯಾರು, ನಿನ್ನ ಹೆಸರೇನು’ ಎಂಬುದನ್ನು ಹೇಳು ಎನ್ನಲು ‘ನಿಮ್ಮ ಪೂರ್ವಜನಾದ ಯಯಾತಿಯ ತಂದೆ ನಹುಷನೆಂಬವನು ನಾನೇ’ ಎಂದು ಉತ್ತರಿಸಿದನು.
ಮೂಲ ...{Loading}...
ಎನ್ನ ವೃತ್ತಾಂತದ ನಿಧಾನವ
ಮುನ್ನವೇ ಬೆಸ ಗೊಳಲು ಹೇಳಿದೆ
ನಿನ್ನು ನಿನ್ನಭಿಧಾನವನು ನೀನಾವನೆಂಬುದನು
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವರ ಯಯಾತಿಯಯ್ಯನು
ನನ್ನ ನಾಮವೆ ನಹುಷನೆಂಬುದು ನೃಪತಿ ಕೇಳೆಂದ ॥63॥
೦೬೪ ಮಾಡಿದೆನು ಮಖಶತವನದು ...{Loading}...
ಮಾಡಿದೆನು ಮಖಶತವನದು ಹೋ
ಗಾಡಿತಿಂದ್ರನನಲ್ಲಿ ತನಗೆಡೆ
ಮಾಡಿತರಮನೆ ಕಂಡುದಾ ತೆತ್ತೀಸ ಕೋಟಿಗಳು
ನಾಡು ಬೀಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ಜಾಡಿಸುವೆನದನೇನ ಹೇಳುವೆನೆನುತ ಬಿಸುಸುಯ್ದ ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೂರು ಯಾಗಗಳನ್ನು ಮಾಡಿ, ಇಂದ್ರನನ್ನೇ ಓಡಿಸಿ, ಮೂವತ್ತ ಮೂರು ಕೋಟಿ ದೇವತೆಗಳ ಜೊತೆಗೆ ಸಕಲ ಸುಖೋಪಭೋಗದಲ್ಲಿ ನಾನಿದ್ದೆನು. ಇಂದ್ರ ಪದವಿಯ ಮದದಿಂದ ಮತ್ತೇನಾಯಿತೆಂಬುದನ್ನು ಏನು ಹೇಳಲಿ’ ಎಂದು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ತೆತ್ತೀಸ - ಮುವ್ವತ್ತಮೂರು
ಶಕ್ರಪದ -ಇಂದ್ರಪದವಿ
ಮೂಲ ...{Loading}...
ಮಾಡಿದೆನು ಮಖಶತವನದು ಹೋ
ಗಾಡಿತಿಂದ್ರನನಲ್ಲಿ ತನಗೆಡೆ
ಮಾಡಿತರಮನೆ ಕಂಡುದಾ ತೆತ್ತೀಸ ಕೋಟಿಗಳು
ನಾಡು ಬೀಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ಜಾಡಿಸುವೆನದನೇನ ಹೇಳುವೆನೆನುತ ಬಿಸುಸುಯ್ದ ॥64॥
೦೬೫ ಅರಸ ಕೇಳೈ ...{Loading}...
ಅರಸ ಕೇಳೈ ರಂಭೆಯೂರ್ವಶಿ
ವರ ತಿಲೋತ್ತಮೆ ಗೌರಿ ಮೇನಕೆ
ಸುರಸೆ ಸುವದನೆ ಮಂಜುಘೋಷೆ ಸುಕೇಶಿ ಮೊದಲಾದ
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆಂದನಾ ನಹುಷ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ರಂಭೆ, ಊರ್ವಶಿ, ತಿಲೋತ್ತಮೆ, ಗೌರಿ, ಮೇನಕೆ, ಸುರಸೆ, (ಸುವದನೆ) ಮಂಜುಘೋಷೆ, ಸುಕೇಶಿ ಮುಂತಾದ ಮೂರು ಲಕ್ಷದ ಮೂವತ್ತಾರು ಸಾವಿರ ಅಪ್ಸರ ಸ್ತ್ರೀಯರು ನನ್ನ ಅರಮನೆಯ ದಾಸಿಯರಾದರು.
ಪದಾರ್ಥ (ಕ.ಗ.ಪ)
ತೊತ್ತು - ದಾಸಿ
ಟಿಪ್ಪನೀ (ಕ.ಗ.ಪ)
ತಿಲೋತ್ತಮೆ - ಹೆಣ್ಣಿನ ಸೌಂದರ್ಯವನ್ನು ‘ಕೊಲ್ಲುವ ಸೌಂದರ್ಯ’ ಎಂದು ವರ್ಣಿಸುವ ಸಂಪ್ರದಾಯ ಇಂಗ್ಲೀಷಿನಲ್ಲಿದೆ. ತಿಲೋತ್ತಮೆಯ ವಿಷಯ್ಕಕೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಸುಂದೋಪಸುಂದರೆಂಬ ರಾಕ್ಷಸ ಸೋದರನನ್ನು ಕೊಲ್ಲಲೆಂದೇ ಹುಟ್ಟಿದ ರೂಪವತಿ ಅವಳು. ಸುಂದೋಪ ಸುಂದರ ಕಾಟವನ್ನು ತಡೆಯಲಾರದೆ ದೇವಗಣ ಬ್ರಹ್ಮನ ಬಳಿಗೆ ಬಂದಾಗ ಮೊದಲು ಬ್ರಹ್ಮನು ಮುತ್ತು ಹವಳಗಳ ಸಾರವನ್ನು ತೆಗೆದುಕೊಂಡು ಒಂದು ಮಾದರಿಯನ್ನು ಸಿದ್ಧಪಡಿಸಿದನಂತೆ. ಅನಂತರ ವಿಶ್ವಕರ್ಮನನ್ನು ಕರೆದು ಈ ಮಾದರಿಯಂತೆ ಲೋಕದಲ್ಲಿರುವ ಸಮಸ್ತ ವಸ್ತುಗಳ ರೂಪಸಾರವನ್ನುಕೂಡಿಸಿ ‘ತಿಲೋತ್ತಮೆ’ಯನ್ನು ಸೃಷ್ಟಿಸುವಂತೆ ಹೇಳಿದನಂತೆ. (ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪೌಃ) ಅನಂತರ ಕಶ್ಯಪ-ಪ್ರಧಾ ದಂಪತಿಗಳ ಮಗುವಾಗಿ ತಿಲೋತ್ತಮೆ ಹುಟ್ಟಿದಳಂತೆ. ವಿಶ್ವಕರ್ಮ-ಅರಿಷ್ಮಾದೇವಿಯರ ಮಗಳು ತಿಲೋತ್ತಮೆ ಎಂಬ ಮಾತೂ ಇದೆ. ಆದಿಪರ್ವದ 65ನೇ ಅಧ್ಯಾಯ ಈ ವಿಷಯವನ್ನು ತಿಳಿಸುತ್ತದೆ. 211ನೆಯ ಪರ್ವದಲ್ಲಿ ಇದರ ವಿವರಗಳಿವೆ.
ಸಂದೋಪಸುಂದರರಿರಲಿ, ಸಮಸ್ತ ದೇವಗಣವೇ ಇವಳ ರೂಪಕ್ಕೆ ಮರುಳಾದ ಬಗೆಯನ್ನು ಈ ಅಧ್ಯಾಯ ವಿವರಿಸುತ್ತದೆ. ತಿಲೋತ್ತಮೆ ಬ್ರಹ್ಮನ ಸಭೆಗೆ ಬಂದು ನಮಸ್ಕಾರ ಮಾಡಿದಳಂತೆ. ದೇವಗಣದ ಎದುರಿಗೆ ಸುಳಿದಾಡಿದಳಂತೆ! ಮಹೇಶ್ವರನೂ ಬ್ರಹ್ಮನ ದಕ್ಷಿಣ ಭಾಗದಲ್ಲಿ ಕುಳಿತಿದ್ದ. ತಿಲೋತ್ತಮೆ ಓಡಾಡಿದ ಕಡೆಗೆಲ್ಲ ನೋಡುವ ಶಿವನ ಚಪಲದಿಂದಾಗಿ ಅವನಿಗೆ ಮೂರು ಹೊಸಮುಖಗಳು ಹುಟ್ಟಿಕೊಂಡವಂತೆ! ಇಂದ್ರರಾಜನಿಗೆ ಮೈಯೆಲ್ಲ ಕಣ್ಣಾಗಿ ಅವನು ಸಹಸ್ರನೇತ್ರನಾದನಂತೆ! ಬ್ರಹ್ಮನಿಂದ ಮೊದಲುಗೊಂಡು ಸಮಸ ್ತಋಷಿಗಣದವರೆಗೆ ಎಲ್ಲರ ಕಣ್ಣುಗಳೂ ತಿಲೋತ್ತಮೆಯ ಕಡೆಗೆ ತಿರುಗಿದ್ದವಂತೆ! ಕೊನೆಗೆ ಒಂದು ಸುತ್ತು ಹಾಕಿ ತಿಲೋತ್ತಮೆ ಬ್ರಹ್ಮನ ಬಳಿಗೆ ಬಂದಾಗ ‘ದೇವಕಾರ್ಯವನ್ನು ಮಾಡಿ ಬಾ’ ಎಂಬ ಆದೇಶ ಬಂದಿತು.
ತಿಲೋತ್ತಮೆ ತಾನಾಗಿ ಸುಂದೋಸುಂದರಿಯರ ಬಳಿಗೆ ಬಂದದ್ದು, ತ್ರಿಲೋಕಗಳಲ್ಲಿ ಅಜೇಯರಾಗಿದ್ದ ಈ ರಾಕ್ಷಸ ಸೋದರರು ಈಕೆಯ ರೂಪದ ಬಲೆಗೆ ಬಿದ್ದು ವಿವೇಚನೆ ಕಳೆದುಕೊಂಡು ಅವಳನ್ನು ಮದುವೆಯಾಗಬಯಸಿದ್ದು, ‘ನಿಮ್ಮಿಬ್ಬರಲ್ಲಿ ಯಾರು ಮಹಾಬಲಶಾಲಿಯೋ ಅವನನ್ನೇ ಮದುವೆಯಾಗುತ್ತೇನೆ’ ಎಂದು ತಿಲೋತ್ತಮೆ ಘೋಷಿಸಿದ್ದು, ರೂಪದ ಹಿಂದಿದ್ದ ಕೃತ್ರಿಮ ಭಾವವನ್ನು ತೋರುವುದಕ್ಕಾಗಿ ಪರಸ್ಪರ ಗದಾಯುದ್ಧದಲ್ಲಿ ತೊಡಗಿದ್ದು, ಕೊನೆಗೆ ಒಬ್ಬರಿಂದೊಬ್ಬರು ಹತಿಗೆ ಒಳಗಾಗಿ ಇಬ್ಬರೂ ಪ್ರಾಣವನ್ನು ಬಿಟ್ಟಿದ್ದು ಇವೆಲ್ಲ ಎಲ್ಲರಿಗೂ ತಿಳಿದಿರುವ ಪುರಾಣಕಥೆಯೇ ಆಗಿದೆ.
‘‘ಅಹಂ ಪೂರ್ವಮಹಂ ಪೂರ್ವಮಿತಿ ಅನ್ಯೋನಂ ನಿಜಘ್ನತುಃ ತೌಗದಾಭಿ ಹತೌ ಭೀಮೌ ಪೇತ ತುರ್ಧರಣೀತಲೇ’’ ಎಂದು ವ್ಯಾಸರು ಇವರಿಬ್ಬರ ಇತಿಶ್ರೀಯರನ್ನು ಹಾಡಿದ್ದಾರೆ.
ಅನಂತರ ಆಕೆ ದೇವೇಂದ್ರನ ಅಪ್ಷರ ಗಣದಲ್ಲಿ ಒಬ್ಬಳಾಗಿ ಉಳಿದದ್ದು ಇತಿಹಾಸದ ಸಂಗತಿ.
ಮೂಲ ...{Loading}...
ಅರಸ ಕೇಳೈ ರಂಭೆಯೂರ್ವಶಿ
ವರ ತಿಲೋತ್ತಮೆ ಗೌರಿ ಮೇನಕೆ
ಸುರಸೆ ಸುವದನೆ ಮಂಜುಘೋಷೆ ಸುಕೇಶಿ ಮೊದಲಾದ
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆಂದನಾ ನಹುಷ ॥65॥
೦೬೬ ಈಸು ನಾರಿಯರಿರಲು ...{Loading}...
ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾಣೀ
ವಾಸದಲಿ ಗರಿಗಟ್ಟಿ ತಂದುದು ತನ್ನನೀ ವಿಧಿಗೆ
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ನಾ
ನೈಸಲೇ ದೃಷ್ಟಾಂತವೆಂದನು ನಹುಷನರಸಂಗೆ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟೊಂದು ಸ್ತ್ರೀಯರೊಂದಿಗೆ ಇದ್ದರೂ, ಇಂದ್ರನ ರಾಣಿಯಾದ ಶಚಿಯ ಅಂತಃಪುರಕ್ಕೆ ಹೋಗುವ ಹಂಬಲ ನನ್ನನ್ನು ಈ ಸ್ಥಿತಿಗೆ ನೂಕಿತು. ಮಾನವರ ದುರ್ಯಶಕ್ಕೆ ಪರನಾರೀವ್ಯಾಮೋಹವೇ ಕಾರಣವೆಂಬುದಕ್ಕೆ ನಾನೇ ಉದಾಹರಣೆ ಎಂದು ನಹುಷನು ಹೇಳಿದನು.
ಮೂಲ ...{Loading}...
ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾಣೀ
ವಾಸದಲಿ ಗರಿಗಟ್ಟಿ ತಂದುದು ತನ್ನನೀ ವಿಧಿಗೆ
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ನಾ
ನೈಸಲೇ ದೃಷ್ಟಾಂತವೆಂದನು ನಹುಷನರಸಂಗೆ ॥66॥
೦೬೭ ಆಧಿ ಬಿದ್ದುದು ...{Loading}...
ಆಧಿ ಬಿದ್ದುದು ಶಚಿಯ ಮೆಲಣ
ವೇಧೆಯಲಿ ವಿಟಬುದ್ಧಿ ಸಿರಿಗುಪ
ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಬೋಧಿಸಿದಡವರೆನ್ನ ವಾಹನ
ಸಾಧನವೆಯಾದರು ಮುನೀಂದ್ರ ವಿ
ರೋಧವಾಯ್ತೆನಗಲ್ಲಿ ಶಪಿಸಿದನಂದಗಸ್ತ್ಯಮುನಿ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನೋವಿಕಾರದ ಫಲದಿಂದ ಶಚಿಯ ಮೇಲೆ ವ್ಯಾಮೋಹವುಂಟಾಯಿತು. ವಿಟಮನಸ್ಸು ಸಂಪತ್ತನ್ನು ನಾಶಮಾಡುವುದಲ್ಲವೆ ? ಶಚಿಯು ಉಪಾಯವನ್ನು ಹೂಡಿ ಋಷಿಗಳಿಗೆ ಸೂಚಿಸಿದಾಗ, ಅವರು ನನ್ನ ವಾಹನ ಸಾಧನ (ಪಲ್ಲಕ್ಕಿ ಹೊರುವವರು) ವಾದರು. ಆಗ ನನಗೆ ಮುನಿ ವಿರೋಧವುಂಟಾಗಿ ಅಗಸ್ತ್ಯ ಋಷಿಗಳು ನನ್ನನ್ನು ಶಪಿಸಿದರು.
ಪದಾರ್ಥ (ಕ.ಗ.ಪ)
ಆಧಿ - ವ್ಯಾಧಿ , ವಿಕಾರ
ಮೂಲ ...{Loading}...
ಆಧಿ ಬಿದ್ದುದು ಶಚಿಯ ಮೆಲಣ
ವೇಧೆಯಲಿ ವಿಟಬುದ್ಧಿ ಸಿರಿಗುಪ
ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಬೋಧಿಸಿದಡವರೆನ್ನ ವಾಹನ
ಸಾಧನವೆಯಾದರು ಮುನೀಂದ್ರ ವಿ
ರೋಧವಾಯ್ತೆನಗಲ್ಲಿ ಶಪಿಸಿದನಂದಗಸ್ತ್ಯಮುನಿ ॥67॥
೦೬೮ ಸರ್ಪಗತಿ ಸರ್ಪತ್ವವೆನೆ ...{Loading}...
ಸರ್ಪಗತಿ ಸರ್ಪತ್ವವೆನೆ ಫಡ
ಸರ್ಪ ನೀನಾಗೆಂದರೆನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆಂ
ದಪ್ಪುದೆನೆ ಧರ್ಮಜನ ವರ ವಾ
ಗ್ದರ್ಪಣದಲಹುದೆಂದನಿಂದಿದು ಘಟಿಸಿತೆನಗೆಂದ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಗ ಮುಂದೆ ಹೋಗಿ ಎಂಬರ್ಥದಲ್ಲಿ ನಾನು ‘ಸರ್ಪ’ ಎನ್ನಲು ಅವರು ‘ನೀನು ಸರ್ಪವೇ ಆಗು’ ಎಂದು ಶಪಿಸಿದರು. ಆಗ ಅಹಂಕಾರ ಅಳಿದು ನಾನು ಮುನಿಚರಣಕ್ಕೆ ಬಿದ್ದು, “ಈ ಸರ್ಪರೂಪ ಯಾವಾಗ ಕೊನೆಯಾಗುತ್ತದೆ” ಎಂದು ಕೇಳಲು, “ಧರ್ಮರಾಜನ ಮಾತಿನಿಂದ ಸಾಧ್ಯವಾಗುತ್ತದೆ” ಎಂದು ಹೇಳಿದರು. “ಈಗ ಇದು ಘಟಿಸಿದೆ” ಎಂದು ನಹುಷನು ಹೇಳಿದನು.
ಮೂಲ ...{Loading}...
ಸರ್ಪಗತಿ ಸರ್ಪತ್ವವೆನೆ ಫಡ
ಸರ್ಪ ನೀನಾಗೆಂದರೆನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆಂ
ದಪ್ಪುದೆನೆ ಧರ್ಮಜನ ವರ ವಾ
ಗ್ದರ್ಪಣದಲಹುದೆಂದನಿಂದಿದು ಘಟಿಸಿತೆನಗೆಂದ ॥68॥
೦೬೯ ಎನುತ ದಿವ್ಯಾವಯವ ...{Loading}...
ಎನುತ ದಿವ್ಯಾವಯವ ಕಾಂತಿಯ
ಮಿನುಗು ಮೋಹರದೇಳ್ಗೆ ಮೂಡಿದ
ವನಿಮಿಷಾಂಗದಲುರಗ ಕಾಯದ ಕೋಹಳೆಯನುಗಿದು
ಜನಪ ನಿನ್ನೊಡಹುಟ್ಟಿದನ ಕೊ
ಳ್ಳೆನುತ ಹೇಮ ವಿಮಾನದಲಿ ಸುರ
ವನಿತೆಯರ ವಂಗಡದಲೆಸೆದನು ನಹುಷನಭ್ರದಲಿ ॥69॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ನಹುಷನು ಸರ್ಪ ದೇಹವನ್ನು ಬಿಸುಟು ತೇಜಃಶರೀರವನ್ನು ಪಡೆದು, ದಿವ್ಯವಾದ ಅಂಗಗಳ ಹೆಚ್ಚಿನ ಕಾಂತಿಯನ್ನು ಹೊಂದಿ, ದೇವತಾ ಸ್ವರೂಪಿಯಾಗಿ, ‘ಅರಸನೇ, ನಿನ್ನ ತಮ್ಮನನ್ನು ಪಡೆದುಕೊ’ ಎಂದು ಸುವರ್ಣ ವಿಮಾನದಲ್ಲಿ ಸುರಸ್ತ್ರೀಯರ ಸಂಗಡ ಆಕಾಶದಲ್ಲಿ ಕಂಗೊಳಿಸಿದನು.
ಮೂಲ ...{Loading}...
ಎನುತ ದಿವ್ಯಾವಯವ ಕಾಂತಿಯ
ಮಿನುಗು ಮೋಹರದೇಳ್ಗೆ ಮೂಡಿದ
ವನಿಮಿಷಾಂಗದಲುರಗ ಕಾಯದ ಕೋಹಳೆಯನುಗಿದು
ಜನಪ ನಿನ್ನೊಡಹುಟ್ಟಿದನ ಕೊ
ಳ್ಳೆನುತ ಹೇಮ ವಿಮಾನದಲಿ ಸುರ
ವನಿತೆಯರ ವಂಗಡದಲೆಸೆದನು ನಹುಷನಭ್ರದಲಿ ॥69॥
೦೭೦ ದುಗುಡದಲಿ ಬರೆ ...{Loading}...
ದುಗುಡದಲಿ ಬರೆ ಭೀಮಸೇನನ
ತೆಗೆದು ಬಿಗಿಯಪ್ಪಿದನು ಖೇದದ
ಹೊಗರಿದೇಕೆ ವೃಥಾ ಮನೋವ್ಯಥೆಯೇನು ತಾಳದಿರು
ಜಗವರಿಯೆ ನಮ್ಮನ್ವಯದ ಪೂ
ರ್ವಿಗನಲಾ ನಹುಷಂಗೆ ಬಂದು
ಬ್ಬೆಗದ ಹದನಿದು ನಮ್ಮ ಪಾಡೇನೆಂದನಾ ಭೂಪ ॥70॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಮಸೇನು ದುಃಖದಿಂದ ಬರಲು, ಅವನನ್ನು ಆಲಿಂಗಿಸಿ ‘ವಿಷಾದವೇಕೆ ? ವೃಥಾ ಮನಸ್ಸಿಗೆ ಬೇಸರವನ್ನು ತಂದುಕೊಳ್ಳಬೇಡ. ಇದು ನಮ್ಮ ಪೂರ್ವಜನಾದ ನಹುಷನಿಗೆ ಬಂದ ಸಂಕಟ. ಇನ್ನು ನಮ್ಮ ಪಾಡೇನು ?’ ಎಂದು ಧರ್ಮಜನು ಸಂತೈಸಿದನು.
ಮೂಲ ...{Loading}...
ದುಗುಡದಲಿ ಬರೆ ಭೀಮಸೇನನ
ತೆಗೆದು ಬಿಗಿಯಪ್ಪಿದನು ಖೇದದ
ಹೊಗರಿದೇಕೆ ವೃಥಾ ಮನೋವ್ಯಥೆಯೇನು ತಾಳದಿರು
ಜಗವರಿಯೆ ನಮ್ಮನ್ವಯದ ಪೂ
ರ್ವಿಗನಲಾ ನಹುಷಂಗೆ ಬಂದು
ಬ್ಬೆಗದ ಹದನಿದು ನಮ್ಮ ಪಾಡೇನೆಂದನಾ ಭೂಪ ॥70॥
೦೭೧ ನಿನ್ನ ದೆಸೆಯಿನ್ದಾಯ್ತಲೇ ...{Loading}...
ನಿನ್ನ ದೆಸೆಯಿಂದಾಯ್ತಲೇ ಪ್ರತಿ
ಪನ್ನ ಶಾಪ ವಿಮೋಕ್ಷವಿದರಲಿ
ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು
ತನ್ನರಿಷ್ಟವನೀಕ್ಷಿಸದೆ ಪರ
ರುನ್ನತಿಯ ಬಯಸುವರು ಸಜ್ಜನ
ರಿನ್ನು ಸಾಕೆಂದೊರಸಿದನು ಪವನಜನ ಕಂಬನಿಯ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನಿಂದಾಗಿ ನಹುಷನ ಶಾಪವಿಮೋಚನೆಯಾಯ್ತು. ಇದರಿಂದ ನಿನ್ನ ಪರಾಕ್ರಮಕ್ಕೆ ಹಾನಿಯಾಗಿಲ್ಲ. ಇದು ನಿನ್ನ ಸುಕೃತ ವಿಶೇಷ. ಸಜ್ಜನರು ಯಾವಾಗಲೂ ತಮ್ಮ ಸುಖವನ್ನು ಬಯಸದೆ, ಇತರರ ಒಳಿತನ್ನೇ ಬಯಸುತ್ತಾರೆ. ಸಾಕು ದುಃಖ ಎಂದು ಧರ್ಮಜನು ಭೀಮನ ಕಂಬನಿಯನ್ನು ಒರೆಸಿದನು.
ಪದಾರ್ಥ (ಕ.ಗ.ಪ)
ಪ್ರತಿಪನ್ನ - ಉಂಟಾಗಿದ್ದ
ಅರಿಷ್ಟ - ಕೆಡುಕು
ಮೂಲ ...{Loading}...
ನಿನ್ನ ದೆಸೆಯಿಂದಾಯ್ತಲೇ ಪ್ರತಿ
ಪನ್ನ ಶಾಪ ವಿಮೋಕ್ಷವಿದರಲಿ
ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು
ತನ್ನರಿಷ್ಟವನೀಕ್ಷಿಸದೆ ಪರ
ರುನ್ನತಿಯ ಬಯಸುವರು ಸಜ್ಜನ
ರಿನ್ನು ಸಾಕೆಂದೊರಸಿದನು ಪವನಜನ ಕಂಬನಿಯ ॥71॥
೦೭೨ ತಿಳುಹಿ ತನ್ದನು ...{Loading}...
ತಿಳುಹಿ ತಂದನು ಸಕಲ ಮುನಿಸಂ
ಕುಲ ಸಹಿತ ತನ್ನಾಶ್ರಮಕೆ ಕೋ
ಮಲೆಯ ಕೈಯಿಂದೊರಸಿದನು ಭೀಮನ ಮನೋವ್ಯಥೆಯ
ಹಳಿವು ನಮಗೆಲ್ಲಿಯದಪಾಯದ
ಜಲಧಿಗಳು ಬತ್ತುವುವು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಬುದ್ಧಿಹೇಳಿ (ಸಂತೈಸಿ), ಋಷಿಮುನಿಗಳ ಸಮೂಹದೊಂದಿಗೆ ಭೀಮನನ್ನು ಆಶ್ರಮಕ್ಕೆ ಕರೆತಂದು, ದ್ರೌಪದಿಯ ಮೂಲಕ ಅವನ ಮನೋವ್ಯಥೆಯನ್ನು ನಿವಾರಿಸಿದನು. “ನಮಗೆ ಕಷ್ಟವೆಲ್ಲಿಯದು? ಅಪಾಯದ ಸಾಗರಗಳು ಕೂಡಾ ಯದುಕುಲ ತಿಲಕನಾದ ಗದುಗಿನ ವೀರನಾರಾಯಣನ ಕರುಣಾಕಟಾಕ್ಷದಿಂದ ಬತ್ತಿ ಹೋಗುತ್ತವೆ” ಎಂದನು.
ಪದಾರ್ಥ (ಕ.ಗ.ಪ)
ಸಂಕುಲ - ಗುಂಪು
ಹಳಿವು - ತೊಂದರೆ, ಕೇಡು, ಕಷ್ಟ
ಮೂಲ ...{Loading}...
ತಿಳುಹಿ ತಂದನು ಸಕಲ ಮುನಿಸಂ
ಕುಲ ಸಹಿತ ತನ್ನಾಶ್ರಮಕೆ ಕೋ
ಮಲೆಯ ಕೈಯಿಂದೊರಸಿದನು ಭೀಮನ ಮನೋವ್ಯಥೆಯ
ಹಳಿವು ನಮಗೆಲ್ಲಿಯದಪಾಯದ
ಜಲಧಿಗಳು ಬತ್ತುವುವು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ ॥72॥