೦೦೦ ಸೂ ಲೀಲೆ ...{Loading}...
ಸೂ. ಲೀಲೆ ಮಿಗೆ ನರನಮರಲೋಕದ
ಕಾಲಕೇಯ ನಿವಾತಕವಚರ
ಸೀಳಿ ಬಿಸುಟಂದವನು ಬಣ್ಣಿಸಿದನು ಮಹೀಪತಿಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರ್ಜುನನು, ತಾನು ದೇವಲೋಕದಲ್ಲಿ ಕಾಲಕೇಯ, ನಿವಾತಕವಚರೆಂಬ ರಾಕ್ಷಸರನ್ನು ಕಾಳಗದಲ್ಲಿ ಕೊಂದುದನ್ನು ಧರ್ಮರಾಯನಿಗೆ ವಿವರಿಸಿದನು.
ಟಿಪ್ಪನೀ (ಕ.ಗ.ಪ)
ನಿವಾತ ಕವಚ
ಕಾಲಕೇಯ
ಮೂಲ ...{Loading}...
ಸೂ. ಲೀಲೆ ಮಿಗೆ ನರನಮರಲೋಕದ
ಕಾಲಕೇಯ ನಿವಾತಕವಚರ
ಸೀಳಿ ಬಿಸುಟಂದವನು ಬಣ್ಣಿಸಿದನು ಮಹೀಪತಿಗೆ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳ ಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಧರ್ಮರಾಯನು ಅರ್ಜುನನನ್ನು ಹೊಗಳುತ್ತಾ, ಸಂತೋಷಾತಿರೇಕದಲ್ಲಿ ಮುಳುಗಿದನು. ‘ಪಾರ್ಥನೇ, ಪರಶಿವನ ಪಾಶುಪತಾಸ್ತ್ರವನ್ನು ಸಂಪಾದಿಸಿದ ಸಂಗತಿಯನ್ನು ಹೇಳು’ ಎನ್ನಲು ಅರ್ಜುನನು ಅದನ್ನು ವರ್ಣಿಸಿದನು.
ಪದಾರ್ಥ (ಕ.ಗ.ಪ)
ಉಪಲಾಲಿಸು - ಹೊಗಳು
ಕಪರ್ದಿ - ಈಶ್ವರ
ಅಸ್ತ್ರವ್ಯಾಳ - ಭಯಂಕರವಾದ ಅಸ್ತ್ರ
ಅಭಿವರ್ಣಿಸು - ವಿವರಿಸು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳ ಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ ॥1॥
೦೦೨ ಹರನ ಶರ ...{Loading}...
ಹರನ ಶರ ಲಾಭಾರ್ಥ ಸಿದ್ಧಿಗೆ
ಕರೆಸಿದನು ಸುರನಾಥ ರಾಗದ
ಲರುಹಲಾ ಸುರರಿಪುಗಳೂಳಿಗವನು ಸುರಾಚಾರ್ಯ
ಅರಿಗಳೆವಗೆ ನಿವಾತಕವಚರು
ಸುರಪದವಿ ಸೋಪದ್ರವದ ನಿ
ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ಶರವನ್ನು ಪಡೆದ ಮೇಲೆ, ದೇವೇಂದ್ರನು ಪ್ರೀತಿಯಿಂದ ತನ್ನಲ್ಲಿಗೆ ಕರೆಸಿದನು. ಸುರಗುರುವಾದ ಬೃಹಸ್ಪತಿಯು ರಾಕ್ಷಸರ ಕೃತ್ಯಗಳನ್ನು ಹೇಳಿದನು. ‘ಶತ್ರುಗಳಾದ ನಿವಾತಕವಚರು ಇಂದ್ರ ಪದವಿಯ ಮೇಲೆ ಕಣ್ಣಿಟ್ಟು ತೊಂದರೆ ಕೊಡುತ್ತಿದ್ದಾರೆ’ ಎಂದು ದೇವೇಂದ್ರನು ನನಗೆ ರಹಸ್ಯವಾಗಿ ತಿಳಿಸಿದನು.
ಪದಾರ್ಥ (ಕ.ಗ.ಪ)
ಸುರನಾಥ - ಇಂದ್ರ
ಉಪದ್ರವ - ಕಾಟ, ಹಿಂಸೆ
ಮೂಲ ...{Loading}...
ಹರನ ಶರ ಲಾಭಾರ್ಥ ಸಿದ್ಧಿಗೆ
ಕರೆಸಿದನು ಸುರನಾಥ ರಾಗದ
ಲರುಹಲಾ ಸುರರಿಪುಗಳೂಳಿಗವನು ಸುರಾಚಾರ್ಯ
ಅರಿಗಳೆವಗೆ ನಿವಾತಕವಚರು
ಸುರಪದವಿ ಸೋಪದ್ರವದ ನಿ
ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ ॥2॥
೦೦೩ ಶಿವನ ಶರ ...{Loading}...
ಶಿವನ ಶರ ನಿನಗಾಯ್ತು ನಿರ್ಜರ
ನಿವಹವಿದೆ ನಾಕದಲಿ ಬಲು ದಾ
ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ
ಜವ ಸಭೆಯು ಜೀವರಿಗೆ ದುರ್ಜನ
ರವಗಡವು ಸುಜನರಿಗೆ ತಮ ಶಶಿ
ರವಿಗಳಿಗೆ ಮುನಿವಂತೆ ಖಳರಿದೆಯೆಂದನಮರೇಂದ್ರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಿವನೊಲುಮೆಯ ಅಸ್ತ್ರ ನಿನಗೆ ದೊರೆತಿದೆ. ಸ್ವರ್ಗದಲ್ಲಿ ಸುರಸಮೂಹದ ಸಹಕಾರ ನಿನಗಿದೆ. ಆದರೆ ಸ್ವರ್ಗದ ಸೌಖ್ಯವೇ ದಾನವರ ಉಪಟಳದಿಂದ ಇಲ್ಲವಾಗಿದೆ. ಜೀವರಿಗೆ ನರಕಭೀತಿಯಂತೆ, ಸಜ್ಜನರಿಗೆ ದುಷ್ಟರ ತೊಂದರೆಯಂತೆ, ಶಶಿ ರವಿಗಳಿಗೆ ಕತ್ತಲೆಯ ಕಾಟದಂತೆ ನಮಗೆ ದೈತ್ಯರ ಉಪಟಳ ಉಂಟಾಗಿದೆ’ ಎಂದು ದೇವೇಂದ್ರನು ನನಗೆ ಹೇಳಿದನು.
ಪದಾರ್ಥ (ಕ.ಗ.ಪ)
ವೀಚು - ನಾಶ
ಅವಗಡ - ವಿಪತ್ತು
ಮೂಲ ...{Loading}...
ಶಿವನ ಶರ ನಿನಗಾಯ್ತು ನಿರ್ಜರ
ನಿವಹವಿದೆ ನಾಕದಲಿ ಬಲು ದಾ
ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ
ಜವ ಸಭೆಯು ಜೀವರಿಗೆ ದುರ್ಜನ
ರವಗಡವು ಸುಜನರಿಗೆ ತಮ ಶಶಿ
ರವಿಗಳಿಗೆ ಮುನಿವಂತೆ ಖಳರಿದೆಯೆಂದನಮರೇಂದ್ರ ॥3॥
೦೦೪ ಮುದದ ನೆಲೆ ...{Loading}...
ಮುದದ ನೆಲೆ ಶುಭದಿಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ
ಮದದ ಮಡು ಭೋಗೈಕನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸು ದಿನವಮರಾವತೀ ನಗರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟರವರೆಗೆ ಅಮರಾವತಿಯು ಸುಖದ ನೆಲೆ, ಶುಭದ ಗೂಡು, ಸೌಂದರ್ಯದ ಮನೆ, ಸೌಖ್ಯದ ನಿಧಿ, ಸೊಂಪಿನ ಪದವಿಯ ಲೀಲಾಸ್ಥಾನ, ಆಟ ಪಾಟಗಳ ತವರು, ಅಭಿಮಾನದ ಕೇಂದ್ರ, ಭೋಗಭಾಗ್ಯಗಳ ನಿಧಿ, ಸಂಪತ್ತಿನ ಜನ್ಮಸ್ಥಳ, ಬಯಸಿದ್ದು ಈಡೇರುವ ತಾಣವಾಗಿತ್ತು.
ಪದಾರ್ಥ (ಕ.ಗ.ಪ)
ದುಕ್ಕುಡಿ-ಕಡಿವಾಣ
ದಕ್ಕಡ - ಧೈರ್ಯವಂತ
ತಕ್ಕ - ಸಜ್ಜನ, ಸಾಧು
ಮೂಲ ...{Loading}...
ಮುದದ ನೆಲೆ ಶುಭದಿಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ
ಮದದ ಮಡು ಭೋಗೈಕನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸು ದಿನವಮರಾವತೀ ನಗರ ॥4॥
೦೦೫ ಕಳವಳದ ನೆಲೆ ...{Loading}...
ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯ ಕಟಕ ಭಂಗದ ಸಂಭವಸ್ಥಾನ
ಅಳುಕಿನಂಗಡಿ ಹಳುವಿನಾಡುಂ
ಬೊಲ ನಿರೋಧದ ಶಾಲೆ ದುಗುಡದ
ಕಳನೆನಿಸಿತೀ ನಗರಿ ಈಗಲು ಪಾರ್ಥ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಈಗ ಇದು ಕಳವಳ, ಭಯ, ವಿಷಾದಗಳ ನೆಲೆಯಾಗಿದೆ. ಖಾತಿ, ಭೀತಿ, ಭಂಗಗಳ ಆಗರವಾಗಿದೆ. ಹಿಂಜರಿಕೆ, ಹೇಡಿತನ, ದುಃಖ ದುಮ್ಮಾನಗಳ ಅಂಗಳವಾಗಿದೆ’ ಎಂದು ಪಾರ್ಥನಲ್ಲಿ ದೇವೇಂದ್ರನು ಹೇಳಿದನು.
ಪದಾರ್ಥ (ಕ.ಗ.ಪ)
ಅಂಶುಕ - ಬಟ್ಟೆ
ಕುಂಚಿತ - ಬಾಗಿದ
ಮೂಲ ...{Loading}...
ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯ ಕಟಕ ಭಂಗದ ಸಂಭವಸ್ಥಾನ
ಅಳುಕಿನಂಗಡಿ ಹಳುವಿನಾಡುಂ
ಬೊಲ ನಿರೋಧದ ಶಾಲೆ ದುಗುಡದ
ಕಳನೆನಿಸಿತೀ ನಗರಿ ಈಗಲು ಪಾರ್ಥ ಕೇಳೆಂದ ॥5॥
೦೦೬ ಸಿಡಿಲಕಾಲದೊಳೆರಗುವನ್ತಿರೆ ...{Loading}...
ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ಮಿಕದೊಳಿಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯ ಹುಡಿ
ಹುಡಿಯಹುದು ಸುರ ವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಾರ್ಥನೇ, ಬರಸಿಡಿಲು ಬಡಿವಂತೆ, ಪ್ರಳಯದಲ್ಲಿ ಸಮುದ್ರ ಉಕ್ಕುವಂತೆ, ಭೂಮಿ ಕಂಪಿಸಿ ರಸಾತಳಕ್ಕೆ ಇಳಿವಂತೆ ರಾಕ್ಷಸರ ಭಯದಿಂದ ದೇವತೆಗಳ ವೈಭವ ಅಲುಗಾಡುತ್ತಿದೆ. ನಮಗಿಂತಲೂ ಆ ನಿವಾತಕವಚರು ಇಮ್ಮಡಿ ಬಲಶಾಲಿಗಳಾಗಿದ್ದಾರೆ’ ಎಂದನು.
ಪದಾರ್ಥ (ಕ.ಗ.ಪ)
ಕಲ್ಪ - ಪ್ರಳಯ
ರಸಾತಳ - ಪಾತಾಳ
ಮೂಲ ...{Loading}...
ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ಮಿಕದೊಳಿಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯ ಹುಡಿ
ಹುಡಿಯಹುದು ಸುರ ವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆಂದ ॥6॥
೦೦೭ ಕೆತ್ತ ಕದ ...{Loading}...
ಕೆತ್ತ ಕದ ತೆಗೆಯದು ಸುರೌಘದ
ಹೊತ್ತ ಸರಕಿಳಿಯದು ಸುಕಲ್ಪಿತ
ಮತ್ತಗಜ ರಥವಾಜಿ ತೆಗೆಯವು ಪುರದ ಬಾಹೆಯಲಿ
ತೆತ್ತು ಹರಿಯದು ಕಾದಿ ರಣದಲಿ
ಸತ್ತು ಹಿಂಗದು ಸುರರ ಸತಿಯರು
ತೊತ್ತಿರಾದರು ಖಳರ ಮನೆಗಳಿಗೆಂದನಮರೇಂದ್ರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ರಾಕ್ಷಸರ ಕಾಟದಿಂದ) ಮುಚ್ಚಿದ ಬಾಗಿಲು ತೆಗೆಯುವುದಿಲ್ಲ. ದೇವತೆಗಳನ್ನು ಹೊತ್ತ ಆನೆಗಳು ಸರೋವರಕ್ಕೆ ಇಳಿಯುವುದಿಲ್ಲ. ನಗರದ ಹೊರಗೆ ರಥ ಕುದುರೆಗಳು ಹರಿದಾಡುವುದಿಲ್ಲ. ಕಪ್ಪಕಾಣಿಕೆಯ ರೂಪದಲ್ಲಿ ಎಷ್ಟು ಸಂಪತ್ತನ್ನು ಕೊಟ್ಟರೂ ಯುದ್ಧ ತೀರುವುದಿಲ್ಲ. ಎಷ್ಟು ದೇವತೆಗಳು ಯುದ್ಧದಲ್ಲಿ ಕಾದಾಡಿ ಸತ್ತರೂ ಅದು ಮುಗಿಯುವುದಿಲ್ಲ. ದೇವನಾರಿಯರು ಆ ರಾಕ್ಷಸರ ಮನೆಗಳಲ್ಲಿ ಕೆಲಸದಾಳುಗಳಾಗಿದ್ದಾರೆ’ ಎಂದು ದೇವೇಂದ್ರ ಹೇಳಿದನು.
ಪದಾರ್ಥ (ಕ.ಗ.ಪ)
ಕೆತ್ತ ಕದ - ಮುಚ್ಚಿದ ಕದ
ಕೆತ್ತ- ಕಿಱು - ಮುಚ್ಚು ಕಸಾಪ ನಿಘಂಟು
ಪಾಠಾನ್ತರ (ಕ.ಗ.ಪ)
ಸತ್ತು ಜಂಗಿದು - ಸತ್ತು ಹಿಂಗದು
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಕೆತ್ತ ಕದ ತೆಗೆಯದು ಸುರೌಘದ
ಹೊತ್ತ ಸರಕಿಳಿಯದು ಸುಕಲ್ಪಿತ
ಮತ್ತಗಜ ರಥವಾಜಿ ತೆಗೆಯವು ಪುರದ ಬಾಹೆಯಲಿ
ತೆತ್ತು ಹರಿಯದು ಕಾದಿ ರಣದಲಿ
ಸತ್ತು ಹಿಂಗದು ಸುರರ ಸತಿಯರು
ತೊತ್ತಿರಾದರು ಖಳರ ಮನೆಗಳಿಗೆಂದನಮರೇಂದ್ರ ॥7॥
೦೦೮ ಭಯದ ಬಾಹೆಯಲಪಸರದ ...{Loading}...
ಭಯದ ಬಾಹೆಯಲಪಸರದ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯ ವಿರಾಗದ ತಡಿಯ ಸಂಕಟದ
ಪಯದ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರತೆಯ
ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೆದರಿಕೆ, ಅಪಸ್ವರ, ದುಮ್ಮಾನ, ಲಯ, ವೈರಾಗ್ಯ, ಸಂಕಟ, ನಡುಕ, ಕಂಬನಿ, ಮಾನಸಿಕ ಅಸ್ಥಿರತೆಗಳೊಂದಿಗೆ ಅಪಜಯದ ಅಧಿದೇವತೆಯಿದೆ, ಅದನ್ನು ನೋಡು’ ಎಂದನು.
ಮೂಲ ...{Loading}...
ಭಯದ ಬಾಹೆಯಲಪಸರದ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯ ವಿರಾಗದ ತಡಿಯ ಸಂಕಟದ
ಪಯದ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರತೆಯ
ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ ॥8॥
೦೦೯ ಅವರುಪೇಕ್ಷೆಯ ಉಳಿವಿನಲಿ ...{Loading}...
ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಂದವರುಳಿದರಾ ದಾ
ನವರ ಮರ್ದಿಸಿ ದೇವ ಲೋಕವ
ನೆವಗೆ ನಿರುಪದ್ರವದಲೆಡೆಮಾಡೆಂದನಮರೇಂದ್ರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಾಕ್ಷಸರುಗಳಿಗೆ ನಮ್ಮ ಮೇಲೆ ಉಪೇಕ್ಷೆಯು ಇನ್ನೂ ಉಳಿದುಕೊಂಡೇ ಬಂದಿದೆ. ನಾವು ಬೇಹುಗಾರಿಕೆಯನ್ನು ಮಾಡಿದೆವು. ಅವರನ್ನು ನಾಶ ಮಾಡುವ ವ್ರತ , ಕರ್ಮಾದಿಗಳನ್ನೂ ಮಾಡಿದೆವು. ಆದರೆ ಅವರು ನಮಗೆ ಸೋಲಲಿಲ್ಲ. ನೀನು ಈಗ ಆ ರಾಕ್ಷಸರನ್ನು ಕೊಂದು ನಮಗೆ ಈ ದೇವಲೋಕವಾಸವು ನಿರ್ವಿಘ್ನವಾಗುವಂತೆ ಮಾಡು ಎಂದು ದೇವೇಂದ್ರನು ನನಗೆ ಹೆಳಿದನು.
ಅವರ ನಿರ್ಲಕ್ಷ್ಯದಿಂದಾಗಿ, ನಮ್ಮವರ ಬೇಹುಗಾರಿಕೆಯಿಂದಾಗಿ, ಅಲ್ಲದೆ ಅವರನ್ನು ಹೆದರಿಸುವ ಅಧಿದೈವಿಕ ಕರ್ಮಗಳಿಂದಾಗಿ, ಅವರು ಈ ದೇವತೆಗಳಿಂದ ಉಳಿದುಕೊಂಡರು (?) ಆ ರಾಕ್ಷಸರನ್ನು ಕೊಂದು ಸುರಲೋಕವನ್ನು ನಮಗೆ ಅನುಕೂಲವನ್ನಾಗಿ ಮಾಡು ಎಂದನು.
ಪದಾರ್ಥ (ಕ.ಗ.ಪ)
ಆಧಿದೈವಿಕ ಕರ್ಮ - ದೈವಿಕ ಕಾರ್ಯ, ವ್ರತ, ತಪಸ್ಸು ಇತ್ಯಾದಿ.
ಮೂಲ ...{Loading}...
ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಂದವರುಳಿದರಾ ದಾ
ನವರ ಮರ್ದಿಸಿ ದೇವ ಲೋಕವ
ನೆವಗೆ ನಿರುಪದ್ರವದಲೆಡೆಮಾಡೆಂದನಮರೇಂದ್ರ ॥9॥
೦೧೦ ಹೈ ಹಸಾದವು ...{Loading}...
ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವೇಂದ್ರ, ಆಗಬಹುದು. ನೀವು ದಯೆಯಿಂದ ಇದೇನು ಅಸಾಧ್ಯವಲ್ಲ. ರಾಕ್ಷಸರು ಸಾಹಸಿಗಳೆ ? ಈ ದೇವತೆಗಳಿಗೆ ಸುಖವುಂಟಾಗುವುದಾದರೆ ಅವರನ್ನು ಬಡಿಯುತ್ತೇನೆ. ಪರಶಿವನ ಅಸ್ತ್ರದಿಂದ ಸುರರಿಪುಗಳನ್ನು ಸಂಹರಿಸಬಲ್ಲೆ. ಇದು ನಿಶ್ಚಯ’ ಎಂದು ನಾನು ಬಿನ್ನವಿಸಿದೆ.
ಪದಾರ್ಥ (ಕ.ಗ.ಪ)
ನಿಷ್ಪ್ರತ್ಯೂಹ - ನಿರ್ವಿಘ್ನ
ಮೂಲ ...{Loading}...
ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ ॥10॥
೦೧೧ ಈ ರಥವನೇ ...{Loading}...
ಈ ರಥವನೇ ಹೂಡಿಸಿದೆನೀ
ಸಾರಥಿಯ ಬೆಸಸಿದೆನು ಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನೇ ಕೇಳು, ‘ಇದೇ ರಥವನ್ನೇ ಹೂಡಿದೆ. ಇದೇ ಸಾರಥಿಗೆ ಸೂಚಿಸಿದೆ. ಅಪಾರ ಸಂಖ್ಯೆಯಲ್ಲಿರುವ ಸುರ ಸಮೂಹವನ್ನು ಎಣಿಸಲು ಕೋಟಿ ನಾಲಿಗೆಗಳಿಗೂ ಸಾಧ್ಯವಿಲ್ಲ. ಕರಿ ರಥ ಹಯ ಪದಾತಿಗಳ ಭಾರಕ್ಕೆ ದಿಕ್ಕುಗಳೇ ಸಾಲದಾಯಿತು. ಇಂದ್ರನ ವೀರಭಟರು ನನ್ನ ಬಳಿ ನೆರೆದರು’ ಎಂದನು.
ಪದಾರ್ಥ (ಕ.ಗ.ಪ)
ಭಾರಣೆ-ಭಾರ
ಟಿಪ್ಪನೀ (ಕ.ಗ.ಪ)
ರಾಕ್ಷಸರಿಗೂ ದೇವತೆಗಳಿಗೂ ಯುದ್ಧಗಳಾಗುತ್ತಿದ್ದವು. ಆ ಸಂದರ್ಭಗಳಲ್ಲಿ ದೇವತೆಗಳು ಪುರೂರವ, ದಶರಥ ಮೊದಲಾದವರ ಸಹಾಯವನ್ನು ಪಡೆಯುತ್ತಿದ್ದ ನಿದರ್ಶನಗಳಿವೆ.
ಮೂಲ ...{Loading}...
ಈ ರಥವನೇ ಹೂಡಿಸಿದೆನೀ
ಸಾರಥಿಯ ಬೆಸಸಿದೆನು ಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆಂದ ॥11॥
೦೧೨ ಹೊಲಬಿಗರು ಹರಿದರು ...{Loading}...
ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳಯದಗಲದಲೊಲಿವ ಲಲಿತಚ್ಛತ್ರ ಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ಧ್ವನಿಯ ಡಾವರ
ಸೆಳೆದುದಸುರರ ಧುರದ ಧೈರ್ಯವನರಸ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೂಢಚಾರರು ಹೋದರು. ದೇವೇಂದ್ರನ ಸೇನಾಪತಿಗಳ ಸನ್ನೆಯಿಂದ, ದಿಗ್ವಲಯಗಳಿಗೆಲ್ಲಾ ವ್ಯಾಪಿಸಿದ ಛತ್ರಚಾಮರಗಳನ್ನು ಹಿಡಿದ ಸೈನ್ಯದ ವಾದ್ಯಘೋಷವು ಸಮುದ್ರವು ಸಮುದ್ರಕ್ಕೆ ಡಿಕ್ಕಿ ಹೊಡೆದಂತೆ ಘೋರವಾಗಿದ್ದು ಅಸುರ ಸೇನೆಯ ಧೈರ್ಯವನ್ನೇ ಅಪಹರಿಸಿತು.
ಮೂಲ ...{Loading}...
ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳಯದಗಲದಲೊಲಿವ ಲಲಿತಚ್ಛತ್ರ ಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ಧ್ವನಿಯ ಡಾವರ
ಸೆಳೆದುದಸುರರ ಧುರದ ಧೈರ್ಯವನರಸ ಕೇಳೆಂದ ॥12॥
೦೧೩ ಆಳು ನಡೆದುದು ...{Loading}...
ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ನಡೆದು ಮುಂದೆ ಸಾಗಿತು. ಮುಂಚೂಣಿಯಲ್ಲಿದ್ದ ಕುದುರೆಗಳು ಮುನ್ನುಗ್ಗಿ ಹಿರಣ್ಯನಗರಿಯನ್ನು ತಲುಪಿದವು. ಅಲ್ಲಿರುವ ಕಾವಲಿನವರನ್ನು ಹೊಡೆದು, ರಾಕ್ಷಸನಗರದ ನದೀತೀರದಲ್ಲಿ ಬಿಡಾರ ಹೂಡುವಂತೆ ಸೂಚನೆ ನೀಡಿದೆನು.
ಪದಾರ್ಥ (ಕ.ಗ.ಪ)
ಮುಂಗುಡಿ - ಮುಂಚೂಣಿ
ಹಿರಣ್ಯನಗರಿ - ನಿವಾತಕವಚರ ರಾಜಧಾನಿ
ಬಿನಗು - ಅಲ್ಪರು
ಬಿಚ್ಚಟೆ - ಕ್ಷುದ್ರರು
ಪುರಫಕಂಠ - ನಗರದ ಹೊರವಲಯ
ಕೂಲವತಿ - ನದಿ
ಮೂಲ ...{Loading}...
ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ ॥13॥
೦೧೪ ಅರಿಯದಾ ಪಟ್ಟಣವಿದೇನೋ ...{Loading}...
ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜವೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆ ನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದಸುರ ಬೆಸಗೊಂಡ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಪಟ್ಟಣದ ಜನರು ಏನಿದು ಕೋಲಾಹಲವೆಂದು ತಿಳಿಯದಾದರು. ಹೊರಗೆ ಬಂದು ದೇವತೆಗಳೆಂಬುದನ್ನು ತಿಳಿದು ರಾಕ್ಷಸರು ಅರಮನೆಗೆ ಓಡಿದರು. ಸಂತೋಷ, ಸುಮ್ಮಾನ, ನಗು, ಬಾಷ್ಪ ಬಿಂದುಗಳೊಂದಿಗೆ ವಂದಿಸಿದ ರಾಕ್ಷಸರನ್ನು ಸಂದರ್ಭವೇನೆಂದು ಅಸುರಪತಿ ವಿಚಾರಿಸಿದನು.
ಪದಾರ್ಥ (ಕ.ಗ.ಪ)
ಸುಪರ್ವ - ದೇವತೆ
ಸುಮ್ಮಾನ - ಸಂಭ್ರಮ
ಮೂಲ ...{Loading}...
ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜವೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆ ನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದಸುರ ಬೆಸಗೊಂಡ ॥14॥
೦೧೫ ಜೀಯ ಬಲೆಗಳ ...{Loading}...
ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿದೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊಂಡ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ರಾಕ್ಷಸರು ಉತ್ಸಾಹದಿಂದ, ಜೀಯ, ಬಲೆಗಳನ್ನು ತೆಗೆಸು. ನೀವು ಬೇಟೆಯಾಡಬಹುದಾದ ಮೃಗವೊಂದು ನಗರದ ಹೊರಗೆ ಬಂದಿದೆ. ನಾವು ಹೊಸದಾಗಿ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕಿಲ್ಲ ನಿನಗೆ ಜಯವಾಗಲಿ ಎಂದು ಘೋಷಿಸಿದಾಗ, ಯಾವ ಮೃಗ ಬಂದಿದೆ ಎಂದು ಖಳರಾಯ ಪ್ರಶ್ನಿಸಿದನು.
ಟಿಪ್ಪನೀ (ಕ.ಗ.ಪ)
ರಾಕ್ಷಸರಿಗೆ ದೇವಲೋಕಕ್ಕೆ ಲಗ್ಗೆ ಇಡುವುದು, ದೇವತೆಗಳನ್ನು ಯುದ್ಧದಲ್ಲಿ ಬಗ್ಗುಬಡಿಯುವುದು ಇವರಡೂ ಉತ್ಸಾಹದ ಸುದ್ದಿ. ಆದರೆ ಈ ಬಾರಿ ಆ ಬೇಟೆಯ ಮೃಗಗಳು ಬಲಿಯಾಗಲು ತಾವೇ ಹುಡುಕಿಕೊಂಡು ಬಂದಿವೆಯಲ್ಲ ಎಂಬ ಉದ್ಗಾರ ಭಾವ ಇಲ್ಲಿದೆ.
ಮೂಲ ...{Loading}...
ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿದೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊಂಡ ॥15॥
೦೧೬ ಜೋಡಿಸಿದನಮರೇನ್ದ್ರನಮರರ ...{Loading}...
ಜೋಡಿಸಿದನಮರೇಂದ್ರನಮರರ
ವೇಡೆಯಾಯ್ತು ಹಿರಣ್ಯ ನಗರಿಗೆ
ಗಾಢ ಬಲರಿದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣವೆಲ್ಲವಿದೆ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದೇವೇಂದ್ರನೇ ಯುದ್ಧವನ್ನು ನಿಶ್ಚಯಿಸಿದ್ದಾನೆ. ಈಗ ನಮ್ಮ ಹಿರಣ್ಯನಗರಿಗೆ ದೇವಸೇನೆ ಮುತ್ತಿಗೆ ಹಾಕಿದೆ. ವರುಣ, ಯಮ, ಅಗ್ನಿ, ವಾಯುವೇ ಮೊದಲಾದ ವೀರರು ಬಂದಿದ್ದಾರೆ. ಎಂದಿನಂತಿಲ್ಲದೆ ಇದೇನೋ ಹೊಸರೀತಿಯದಾಗಿದೆ. ಬಂದಿರುವ ಎಲ್ಲಾ ಮೂರ್ಖ ಶಿಖಾಮಣಿಗಳನ್ನು ಹಿಡಿದು ಬೇಗನೇ ಬಂಧಿಸು’ ಎಂದು ದೂತನು ಬಿನ್ನವಿಸಿದನು.
ಮೂಲ ...{Loading}...
ಜೋಡಿಸಿದನಮರೇಂದ್ರನಮರರ
ವೇಡೆಯಾಯ್ತು ಹಿರಣ್ಯ ನಗರಿಗೆ
ಗಾಢ ಬಲರಿದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣವೆಲ್ಲವಿದೆ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ ॥16॥
೦೧೭ ಇವನ ಹೊಯ್ ...{Loading}...
ಇವನ ಹೊಯ್ ಕಟವಾಯ ಕೊಯ್ ತ
ಪ್ಪುವನೆ ಸುರಪತಿ ಶಿವಶಿವಾ ಸುರ
ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ
ಇವನ ಸೀಳೆನೆ ಹೊರಗೆ ಸುರ ಸೈ
ನ್ಯವನು ಸೀಳಿದು ಬಳಿಕ ನೀ ನಿ
ನ್ನವನ ಮನವೊಲಿವಂತೆ ಮಾಡೆನೆ ಖಳನು ಖತಿಗೊಂಡ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನನ್ನು ಬಡಿ. ಬಾಯ ತುದಿಯನ್ನು ಕೊಯ್ದು ಬಿಡು. ದೇವೇಂದ್ರ ಹೇಗೆ ತಪ್ಪಿಸಿಕೊಳ್ಳುತ್ತಾನೆ ? ಹಿರಣ್ಯ ನಗರಿಯಲ್ಲಿ ದೇವತೆಗಳ ಸಮಾಗಮವೆ ? ಈ ದೂತನನ್ನು ಸೀಳಿ ಬಿಡು “ಎಂದು ರಾಕ್ಷಸರಾಜನು ಹೇಳಿದನು. ಇದಕ್ಕೆ ಆ ದೂತನು “ಮೊದಲು ಸುರಸೇನೆಯನ್ನು ಹೊಸೆದು ಹಾಕು. ಆ ಬಳಿಕ ನನ್ನನ್ನು ನಿನ್ನ ಮನಬಂದಂತೆ ಮಾಡು” ಎಂದು ಹೇಳಲು ರಾಕ್ಷಸನಾಥ ಸಿಟ್ಟಾದನು.
ಮೂಲ ...{Loading}...
ಇವನ ಹೊಯ್ ಕಟವಾಯ ಕೊಯ್ ತ
ಪ್ಪುವನೆ ಸುರಪತಿ ಶಿವಶಿವಾ ಸುರ
ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ
ಇವನ ಸೀಳೆನೆ ಹೊರಗೆ ಸುರ ಸೈ
ನ್ಯವನು ಸೀಳಿದು ಬಳಿಕ ನೀ ನಿ
ನ್ನವನ ಮನವೊಲಿವಂತೆ ಮಾಡೆನೆ ಖಳನು ಖತಿಗೊಂಡ ॥17॥
೦೧೮ ಬನ್ದನೇ ಸುರರಾಯನಕಟೈ ...{Loading}...
ಬಂದನೇ ಸುರರಾಯನಕಟೈ
ತಂದು ಮುತ್ತಿತೆ ದಿವಿಜಗಣ ತರು
ಣೇಂದುಧರನೇ ತರಿಸಿದನೊ ಶಿವಶಿವ ವಿಶೇಷವಲ
ಇಂದಿನಲಿ ಕಡೆ ತನಗೆ ಮೇಣು ಪು
ರಂದರನು ನಿರ್ನಾಮನೈಸಲೆ
ಯೆಂದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತು ಕೆಳಿ ರಾಕ್ಷಸೇಂದ್ರನು “ದೇವೇಂದ್ರನು ಬಂದೇ ಬಿಟ್ಟನೇ, ಅಕಟಾ, ಸುರಸೇನೆ ಮುತ್ತಿಗೆ ಹಾಕಿತೆ ? ಶಿವಶಿವಾ, ಪರಮೇಶ್ವರನೇ ಇವರನ್ನು ಇಲ್ಲಿಗೆ ತರಿಸಿದನೆ ? ನನಗೆ ಇಂದೇ ಕೊನೆಯೆ ಅಥವಾ ದೇವೇಂದ್ರನು ನಿರ್ನಾಮಗೊಳುತ್ತಾನೆಯೆ ? ಎಂದುಕೊಂಡು ಪಟುಭಟರ ಬೊಬ್ಬೆಯಲ್ಲಿ ಸೇನೆಯೊಡನೆ ಊರಹೊರಗಿನ ಯುದ್ಧರಂಗಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಚೂಣಿ-ಸೇನೆ
ತರಣೇಂದುಧರ - ಶಿವ
ಮೂಲ ...{Loading}...
ಬಂದನೇ ಸುರರಾಯನಕಟೈ
ತಂದು ಮುತ್ತಿತೆ ದಿವಿಜಗಣ ತರು
ಣೇಂದುಧರನೇ ತರಿಸಿದನೊ ಶಿವಶಿವ ವಿಶೇಷವಲ
ಇಂದಿನಲಿ ಕಡೆ ತನಗೆ ಮೇಣು ಪು
ರಂದರನು ನಿರ್ನಾಮನೈಸಲೆ
ಯೆಂದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ ॥18॥
೦೧೯ ಧರಣಿಪತಿ ಚಿತ್ತೈಸು ...{Loading}...
ಧರಣಿಪತಿ ಚಿತ್ತೈಸು ವೇಲೆಯ
ಶಿರವನೊಡೆದುಬ್ಬೇಳ್ವ ಘನ ಸಾ
ಗರದವೊಲು ಪಿಡಿದೊದರಿ ಕವಿದುದು ಕೂಡೆ ವಂಕದಲಿ
ಕರಿತುರಗ ರಥವಾಜಿ ಕಾಲಾ
ಳುರವಣಿಸಿತೇನೆಂಬೆನಸುರರ
ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಲಾಲಿಸು, ತೀರಕ್ಕೆ ಅಪ್ಪಳಿಸುವ ಸಮುದ್ರದಂತೆ ರಣಾಂಗಣಕ್ಕೆ ಸೇನೆ ಮುತ್ತಿತು. ಆನೆ, ಕುದುರೆ, ರಥ, ಪದಾತಿಗಳು ರಾಕ್ಷಸರೊಡೆಯನ ಸೂಚನೆಗೆ ಅನುಗುಣವಾಗಿ ರಭಸದಿಂದ ಮುನ್ನುಗ್ಗಿದವು. ರಾಜನ ಅಪ್ಪಣೆ ಪಡೆದ ಸೈನಿಕರ ವಾದ್ಯದ ಆರ್ಭಟವನ್ನು ಏನೆಂದು ಹೇಳಲಿ?
ಪದಾರ್ಥ (ಕ.ಗ.ಪ)
ವೇಲೆ- ತೀರ
ಮೂಲ ...{Loading}...
ಧರಣಿಪತಿ ಚಿತ್ತೈಸು ವೇಲೆಯ
ಶಿರವನೊಡೆದುಬ್ಬೇಳ್ವ ಘನ ಸಾ
ಗರದವೊಲು ಪಿಡಿದೊದರಿ ಕವಿದುದು ಕೂಡೆ ವಂಕದಲಿ
ಕರಿತುರಗ ರಥವಾಜಿ ಕಾಲಾ
ಳುರವಣಿಸಿತೇನೆಂಬೆನಸುರರ
ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ ॥19॥
೦೨೦ ಕವಿದುದಸುರರ ಚೂಣಿ ...{Loading}...
ಕವಿದುದಸುರರ ಚೂಣಿ ಬೊಬ್ಬೆಯ
ವಿವಿಧ ವಾದ್ಯಧ್ವನಿಯ ಕಹಳಾ
ರವದ ಕೋಳಾಹಳಕೆ ತುಂಬಿತು ಬಹಳ ಭೇರಿಗಳು
ರವಿಯನಾಕಾಶವ ದಿಗಂತವ
ತಿವಿದು ಕೆದರುವ ಧೂಳಿ ತಿಮಿರಾ
ರ್ಣವವಲೈ ತ್ರೈಜಗವೆನಲು ಜೊಂಪಿಸಿದುದರಿ ಸೇನೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರ ಸೇನೆ ದೇವಸೇನೆಯ ಮೆಲೆ ನುಗ್ಗಿತು. ರಾಕ್ಷಸರ ಸೈನ್ಯದ ಬೊಬ್ಬೆ, ಕಹಳೆ, ಭೇರಿಯೇ ಮೊದಲಾದ ವಿವಿಧ ವಾದ್ಯಗಳ ಧ್ವನಿ ಎಲ್ಲೆಡೆ ಕೇಳಿಸಿತು. ಸೂರ್ಯ, ಆಕಾಶ, ದಿಕ್ಕುಗಳನ್ನು ಧೂಳು ಆವರಿಸಿದಾಗ ಮೂರು ಲೋಕವೂ ಕತ್ತಲೆಯ ಸಮುದ್ರದ ಹಾಗೆ ಕಾಣುವಂತೆ ವೈರಿ ಸೇನೆ ಮುತ್ತಿತು.
ಪದಾರ್ಥ (ಕ.ಗ.ಪ)
ಚೂಣಿ - ಸೇನೆ
ಅರ್ಣವ - ಸಮುದ್ರ
ತಿಮಿರ - ಕತ್ತಲೆ
ಮೂಲ ...{Loading}...
ಕವಿದುದಸುರರ ಚೂಣಿ ಬೊಬ್ಬೆಯ
ವಿವಿಧ ವಾದ್ಯಧ್ವನಿಯ ಕಹಳಾ
ರವದ ಕೋಳಾಹಳಕೆ ತುಂಬಿತು ಬಹಳ ಭೇರಿಗಳು
ರವಿಯನಾಕಾಶವ ದಿಗಂತವ
ತಿವಿದು ಕೆದರುವ ಧೂಳಿ ತಿಮಿರಾ
ರ್ಣವವಲೈ ತ್ರೈಜಗವೆನಲು ಜೊಂಪಿಸಿದುದರಿ ಸೇನೆ ॥20॥
೦೨೧ ದಾನವರ ದಕ್ಕಡತನವನದ ...{Loading}...
ದಾನವರ ದಕ್ಕಡತನವನದ
ನೇನನೆಂಬೆನು ಜೀಯ ತೂಳಿದ
ವಾನೆಗಳು ತರುಬಿದವು ತೇಜಿಗಳುರುಬಿದವು ತೇರು
ಆನಲಳವೇ ಭಟರ ಶರ ಸಂ
ಧಾನವನು ಬಲುಸರಳ ಸೂಟಿಯ
ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರ ಸಾಹಸವನ್ನು ಏನೆಂದು ಹೇಳಲಿ ? ಆನೆ, ಕುದುರೆಗಳು, ತೇರುಗಳು ಮುಂದೆ ನುಗ್ಗಿದವು. ಸೈನಿಕರ ಶರಸಂಧಾನವನ್ನು ಸಹಿಸಲು ಸಾಧ್ಯವೆ ? ಲೋಕವೇ ಬಾಣಗಳ ಮಳೆಯಿಂದ ನೆನೆದು ಹೋಗುವಂತೆ ರಾಕ್ಷಸ ಸೇನೆ ಬಾಣಪ್ರಯೋಗ ಮಾಡಿತು.
ಪದಾರ್ಥ (ಕ.ಗ.ಪ)
ದಕ್ಕಡತನ-ಸಾಹಸ
ಮೂಲ ...{Loading}...
ದಾನವರ ದಕ್ಕಡತನವನದ
ನೇನನೆಂಬೆನು ಜೀಯ ತೂಳಿದ
ವಾನೆಗಳು ತರುಬಿದವು ತೇಜಿಗಳುರುಬಿದವು ತೇರು
ಆನಲಳವೇ ಭಟರ ಶರ ಸಂ
ಧಾನವನು ಬಲುಸರಳ ಸೂಟಿಯ
ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ ॥21॥
೦೨೨ ಮುರಿದುದಮರರ ಚೂಣಿ ...{Loading}...
ಮುರಿದುದಮರರ ಚೂಣಿ ದಾನವ
ರುರುಬೆಗಳುಕಿತು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು
ಹೊರಗೆ ವನವೀಧಿಯಲಿ ಕಾಹಿನ
ಕುರುವದಲಿ ಗೋಪುರದೊಳೌಕಿತು
ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಸೇನೆ ಬಳಲಿತು. ದಾನವರ ಪ್ರತಾಪದ ಎದುರು ಸಿದ್ಧ, ವಿದ್ಯಾಧರ, ಉರಗ, ಯಕ್ಷ, ರಾಕ್ಷಸ, ಗುಹ್ಯಕಾದಿಗಳು ಅಳುಕಿದರು. ವನ, ಬೀದಿ, ಕೋಟೆ, ಗೋಪುರಗಳಲ್ಲಿ ಸುರಾಸುರರಿಗೆ ಭಯಂಕರ ಕದನವಾಗಿ ಅಸುರರ ಕೈ ಮೇಲಾಯಿತು.
ಪದಾರ್ಥ (ಕ.ಗ.ಪ)
ಉರುಬೆ-ಪ್ರತಾಪ
ಕಾಹಿನ ಕುರುವ - ರಕ್ಷಣೆಯ ದಿಬ್ಬ
ಗುಹ್ಯಕ - ದೇವತೆಗಳಲ್ಲಿ ಒಂದು ವರ್ಗ
ಮೂಲ ...{Loading}...
ಮುರಿದುದಮರರ ಚೂಣಿ ದಾನವ
ರುರುಬೆಗಳುಕಿತು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು
ಹೊರಗೆ ವನವೀಧಿಯಲಿ ಕಾಹಿನ
ಕುರುವದಲಿ ಗೋಪುರದೊಳೌಕಿತು
ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ ॥22॥
೦೨೩ ಕೆಣಕಿದಸುರರು ಕೋಲುಗಟ್ಟಿತು ...{Loading}...
ಕೆಣಕಿದಸುರರು ಕೋಲುಗಟ್ಟಿತು
ಬಣಗು ಸುರರೋಸರಸಿ ಭಾರಾಂ
ಕಣವನೆನ್ನಿದಿರಿನಲಿ ಸುಭಟರು ಸೂಸಿ ದೆಸೆದೆಸೆಗೆ
ರಣವನದನೇನೆಂಬೆನೈ ಧಾ
ರುಣಿಪತಿಯೆ ವಿಗ್ರಹದ ವಿಸ್ತಾ
ರಣ ವಿಗುರ್ವಣೆ ವಿಗಡಿಸಿತು ವಿಬುಧರ ವಿಡಾಯಿಗಳ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನೇ ಕೇಳು , ಕೆಣಕುತ್ತಾ ಬಂದ ರಾಕ್ಷಸರ ಪಡೆ ದೇವತೆಗಳ ಬಾಣಗಳನ್ನೆಲ್ಲ ಕಟ್ಟಿಹಾಕಿತು. ದುರ್ಬಲರಾದ ದೇವಸೇನೆ ಪಕ್ಕಕ್ಕೆ ಸರಿದು ಅನಂತರ ದಿಕ್ಕು ದಿಕ್ಕುಗಳಿಗೆ ಚದುರಿತು. ಆ ಯುದ್ಧದ ವಿವರಗಳನ್ನು ಏನೆಂದು ಹೇಳಲಿ? ಮುಂದುವರೆದ ಯುದ್ಧದ ಆರ್ಭಟವು ದೇವತೆಗಳ ವೈಭವವನ್ನು ಅಣಗಿಸಿತು.
ಪದಾರ್ಥ (ಕ.ಗ.ಪ)
ವಿಗುರ್ವಣೆ - ಭಯಾನಕತೆ
ವಿಡಾಯಿ-ಪರಾಕ್ರಮ
ಪಾಠಾನ್ತರ (ಕ.ಗ.ಪ)
ನಿಗುರ್ಗu - ವಿಗುರ್ವಣೆ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಕೆಣಕಿದಸುರರು ಕೋಲುಗಟ್ಟಿತು
ಬಣಗು ಸುರರೋಸರಸಿ ಭಾರಾಂ
ಕಣವನೆನ್ನಿದಿರಿನಲಿ ಸುಭಟರು ಸೂಸಿ ದೆಸೆದೆಸೆಗೆ
ರಣವನದನೇನೆಂಬೆನೈ ಧಾ
ರುಣಿಪತಿಯೆ ವಿಗ್ರಹದ ವಿಸ್ತಾ
ರಣ ವಿಗುರ್ವಣೆ ವಿಗಡಿಸಿತು ವಿಬುಧರ ವಿಡಾಯಿಗಳ ॥23॥
೦೨೪ ಬಳಿಕ ಬಿಟ್ಟನು ...{Loading}...
ಬಳಿಕ ಬಿಟ್ಟನು ರಥವನೀ ಮಾ
ತಲಿ ವಿಭಾಡಿಸಿ ಹೊಕ್ಕು ಚೂಣಿಯ
ಬಲಸಮುದ್ರದ ಮಧ್ಯದಲಿ ಮುಳುಗಿತು ವರೂಥವಿದು
ಬಲದಲೆಚ್ಚೆನು ಹಿಂದು ಮುಂದಿ
ಟ್ಟಿಳಿಸಿದರನಿಟ್ಟೊರೆಸಿದೆನು ಮುಂ
ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಮಾತಲಿಯು ಈ ರಥವನ್ನು ಸೇನಾಸಮುದ್ರದ ಮಧ್ಯಭಾಗಕ್ಕೆ ತಂದು ನಿಲ್ಲಿಸಿದ. ಮೊದಲು ಬಲಭಾಗದಲ್ಲಿದ್ದ ಸೇನೆಯ ಮೇಲೆ ಧಾಳಿ ನಡೆಸಿದೆ. ಅನಂತರ ಹಿಂದೆ, ಮುಂದೆ ಕವಿದ ರಾಕ್ಷಸರನ್ನು ನಾಶಮಾಡಿದೆ. ಕೊನೆಗೆ ಎಡಭಾಗದಿಂದ ನನ್ನ ಮೇಲೆ ಆಕ್ರಮಿಸಲು ಬಂದವರನ್ನು ಧೂಳೀಪಟ ಮಾಡಿದೆ.
ಪದಾರ್ಥ (ಕ.ಗ.ಪ)
ವಿಭಾಡಿಸು - ಸೋಲಿಸು
ಮೂಲ ...{Loading}...
ಬಳಿಕ ಬಿಟ್ಟನು ರಥವನೀ ಮಾ
ತಲಿ ವಿಭಾಡಿಸಿ ಹೊಕ್ಕು ಚೂಣಿಯ
ಬಲಸಮುದ್ರದ ಮಧ್ಯದಲಿ ಮುಳುಗಿತು ವರೂಥವಿದು
ಬಲದಲೆಚ್ಚೆನು ಹಿಂದು ಮುಂದಿ
ಟ್ಟಿಳಿಸಿದರನಿಟ್ಟೊರೆಸಿದೆನು ಮುಂ
ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ ॥24॥
೦೨೫ ಕೆಟ್ಟುದಹಿತರ ಚೂಣಿ ...{Loading}...
ಕೆಟ್ಟುದಹಿತರ ಚೂಣಿ ರಿಪು ಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟ ಮಂಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣ ಸಾ
ಲಿಟ್ಟುದುರೆಯೆನಲರುಣಜಲ ನಗರೋಪಕಂಠದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈರಿಗಳ ಸೇನೆ ಪತನಗೊಂಡಿತು. ಶತ್ರು ಪಕ್ಷದಲ್ಲಿರುವ ಮಹಾವೀರರು ಸೋತರು. ದೇವತೆಗಳ ಪಕ್ಷದಲ್ಲಿ ಭೇರಿಗಳು ಮೊಳಗಿದವು. ರಾಕ್ಷಸರು ಕೆದರಿದ ಕೂದಲಲ್ಲೇ ಸೋತು ಓಡಿಹೋದರು. ಹೆಣಗಳು ಸಾಲಾಗಿ ಭೂಮಿಗೆ ಉರುಳಿ , ಪುರಬಾಹೆಯಲ್ಲಿ ರಕ್ತದ ಹೊಳೆ ಹರಿಯಿತು.
ಮೂಲ ...{Loading}...
ಕೆಟ್ಟುದಹಿತರ ಚೂಣಿ ರಿಪು ಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟ ಮಂಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣ ಸಾ
ಲಿಟ್ಟುದುರೆಯೆನಲರುಣಜಲ ನಗರೋಪಕಂಠದಲಿ ॥25॥
೦೨೬ ನೂಕಿ ದೈತ್ಯರ ...{Loading}...
ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳರು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಮುನ್ನುಗ್ಗಿ ದೈತ್ಯರ ಸೇನೆಯನ್ನು ಸೋಲಿಸಿ, ದೇವತೆಗಳನ್ನು ಕೋಟೆಯೊಳಗೆ ಹೊಗಿಸಿದೆನು. ಆಗ ಪರಾಜಿತರಾದ ದೈತ್ಯರು ದುಃಖದಿಂದ ಈ ಭಯವನ್ನು ನಿವಾತಕವಚರಿಗೆ ಬಿನ್ನವಿಸಿದರು. “ಇವರು ದೇವತೆಗಳ ಹಾಗಲ್ಲ, ಯುದ್ಧವಿದ್ಯಾ ಕೋವಿದರು” ಎಂದು ನನ್ನನ್ನು ಅವರು ದೂರಿದರು.
ಮೂಲ ...{Loading}...
ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳರು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು ॥26॥
೦೨೭ ಕೇಳಿದನು ಕಡುಗೋಪದಲಿ ...{Loading}...
ಕೇಳಿದನು ಕಡುಗೋಪದಲಿ ಸಿಡಿ
ಲೇಳಿಗೆಯಲೆದ್ದನು ಸುರೇಂದ್ರಗೆ
ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ
ಕಾಲಗತಿಯೋ ಮೇಣ್ ಕಪರ್ದಿಯ
ಕೀಲಕವೊ ರವಿಯೊಡನೆ ತಮ ಕೈ
ಮೇಳವಿಸಿತೇ ಶಿವ ಶಿವಾಯೆನುತಸುರ ಹಲು ಮೊರೆದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿ, ನಿವಾತಕವಚರು ಕಡುಕೋಪದಿಂದ ಎದ್ದು ನಿಂತು ಸಿಡಿಲಿನಂತೆ ಆರ್ಭಟಿಸುತ್ತಾ ‘ದೇವೇಂದ್ರನಿಗೆ ಯುದ್ಧದಲ್ಲಿ ಕೈ ಮೇಲಾಯಿತೆ? ದೇವತೆಗಳು ನಮ್ಮನ್ನು ಸದೆದರೆ? ಇದೇನು ಕಾಲಗತಿಯೆ ಅಥವಾ ಶಿವನ ಮಾಯೆಯೆ ? ಸೂರ್ಯನೊಂದಿಗೆ ಕತ್ತಲೆಗೆ ಕದನವೆ ? ಶಿವಶಿವಾ’ ಎಂದು ಹಲ್ಲು ಕಡಿದನು.
ಪದಾರ್ಥ (ಕ.ಗ.ಪ)
ಕೀಲಕ - ಗೂಢ , ಮಾಯೆ
ಸುಪರ್ವ - ದೇವತೆ
ಕಪರ್ದಿ - ಶಿವ
ಕೈ ಮೇಳವಿಸು - ಯುದ್ಧವಾಗು
ಮೂಲ ...{Loading}...
ಕೇಳಿದನು ಕಡುಗೋಪದಲಿ ಸಿಡಿ
ಲೇಳಿಗೆಯಲೆದ್ದನು ಸುರೇಂದ್ರಗೆ
ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ
ಕಾಲಗತಿಯೋ ಮೇಣ್ ಕಪರ್ದಿಯ
ಕೀಲಕವೊ ರವಿಯೊಡನೆ ತಮ ಕೈ
ಮೇಳವಿಸಿತೇ ಶಿವ ಶಿವಾಯೆನುತಸುರ ಹಲು ಮೊರೆದ ॥27॥
೦೨೮ ಭಟರ ಬರಹೇಳೋ ...{Loading}...
ಭಟರ ಬರಹೇಳೋ ಸುರೇಂದ್ರನ
ಕಟಕವಿಕ್ಕಿದ ವೇಡೆಯಲಿ ಲಟ
ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ
ನಿಟಿಲನಯನನನೇಳಿಸುವ ಚಾ
ವಟೆಯರಾವೆಡೆ ಚದುರ ರಣ ಲಂ
ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಭಟರನ್ನು ಬರಹೇಳು, ದೇವತೆಗಳ ಸೇನೆಯ ಆರ್ಭಟದಲ್ಲಿ ನಮ್ಮ ದಾನವರು ಅವಮಾನವನ್ನೆಣಿಸದೆ ಹಿಮ್ಮೆಟ್ಟಿದ್ದಾರೆ. ರುದ್ರನನ್ನು ಅಪಹಾಸ್ಯ ಮಾಡಬಲ್ಲ ಕದನ ಪರಾಕ್ರಮಿಗಳು ಬರಲಿ ಎಂದು ಅವನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಕಟಕ - ಸೇನೆ
ವೇಡೆ - ಮುತ್ತಿಗೆ
ಏಳಿಸು - ಅಪಹಾಸ್ಯ ಮಾಡು
ಚಾವಟೆಯವರು - ಉದ್ಧಟರು - ವೀರರು
ಮೂಲ ...{Loading}...
ಭಟರ ಬರಹೇಳೋ ಸುರೇಂದ್ರನ
ಕಟಕವಿಕ್ಕಿದ ವೇಡೆಯಲಿ ಲಟ
ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ
ನಿಟಿಲನಯನನನೇಳಿಸುವ ಚಾ
ವಟೆಯರಾವೆಡೆ ಚದುರ ರಣ ಲಂ
ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ ॥28॥
೦೨೯ ನೆರೆದುದಸುರರು ಕಾಲಕೂಟದ ...{Loading}...
ನೆರೆದುದಸುರರು ಕಾಲಕೂಟದ
ಕರುವಿನೆರಕವೊ ಸಿಡಿಲ ದಳ್ಳುರಿ
ತಿರುಳ ದಡ್ಡಿಯೊ ವಿಲಯ ಭೈರವನುಬ್ಬಟೆಯ ಪಡೆಯೊ
ಹರನ ನಯನ ಜ್ವಾಲೆಯವದಿರ
ಗರುಡಿಯೋ ಗಾಢಾಯ್ಲ ತೇಜದ
ದುರುಳ ದಾನವ ಭಟರು ಬಂದುದು ಕೋಟಿ ಸಂಖ್ಯೆಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಕೂಟ ವಿಷªನ್ನೇ ಎರಕ ಹೊಯ್ದಿದ್ದಾರೋ ? ಸಿಡಿಲಿನ ದಳ್ಳುರಿಯ ಕಿಡಿಯೊ ? ಪ್ರಲಯ ಭೈರವನ ಪಡೆಯೊ ? ಶಿವನ ಉರಿಗಣ್ಣ ಜ್ವಾಲೆಯೇ ಅವರ ಗರಡಿಯಾಗಿತ್ತೋ? ಎಂಬಂತೆ ಭಯಂಕರ ತೇಜಸ್ಸಿನ ರಾಕ್ಷಸ ಭಟರು ಕೋಟಿ ಸಂಖ್ಯೆಯಲ್ಲಿ ಬಂದರು.
ಮೂಲ ...{Loading}...
ನೆರೆದುದಸುರರು ಕಾಲಕೂಟದ
ಕರುವಿನೆರಕವೊ ಸಿಡಿಲ ದಳ್ಳುರಿ
ತಿರುಳ ದಡ್ಡಿಯೊ ವಿಲಯ ಭೈರವನುಬ್ಬಟೆಯ ಪಡೆಯೊ
ಹರನ ನಯನ ಜ್ವಾಲೆಯವದಿರ
ಗರುಡಿಯೋ ಗಾಢಾಯ್ಲ ತೇಜದ
ದುರುಳ ದಾನವ ಭಟರು ಬಂದುದು ಕೋಟಿ ಸಂಖ್ಯೆಯಲಿ ॥29॥
೦೩೦ ನೆರೆದಿರೈ ಪರಿಭವದ ...{Loading}...
ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುಷ್ಕೃತಿಯಲೊಡಲುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರಾಜಯದ ಮನೆಯಲ್ಲಿ ನೀವು ಸೇರಿದ್ದೀರಿ. ಅಪಕೀರ್ತಿಯೆಂಬ ಹೆಣ್ಣಿನ ಸಹವಾಸ ಮಾಡಿದ್ದೀರಿ. ದುಷ್ಕೃತ್ಯದಿಂದಲೇ ಒಡಲು ಹೊರೆದಿದ್ದೀರಿ. ನೀವೇನು ದೇತೆಗಳಲ್ಲವೆ? ನಿಮ್ಮ ಹೆಂಡಂದಿರ ಮುಂಗುರುಳು ತಿದ್ದುವ ಕಾತರವುಂಟಾಗುತ್ತಿದೆಯಲ್ಲವೆ? . ಆ ದೇವೇಂದ್ರನೊಡನೆ ಇರುವ ಹಗೆತನವನ್ನು ಬಿಟ್ಟು ಬಿಡಿ ಎಂದು ರಾಕ್ಷಸರಾಜನು ತನ್ನವರನ್ನು ಹೀಯಾಳಿಸಿದ.
ಮೂಲ ...{Loading}...
ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುಷ್ಕೃತಿಯಲೊಡಲುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ ॥30॥
೦೩೧ ಜೀಯ ಖಾತಿಯಿದೇಕೆ ...{Loading}...
ಜೀಯ ಖಾತಿಯಿದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾ ತಾ ವೀಳಯವನೆನುತ
ಹಾಯಿದರು ತಮ ತಮಗೆ ಮುಂಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜೀಯ, ಕೋಪವೇಕೆ ? ದೇವೇಂದ್ರನ ರಾಣಿಯನ್ನು ನಿನ್ನ ದಾಸಿಯರ ಮನೆಯಲ್ಲಿರಿಸುತ್ತೇವೆ. ನಮಗೆ ಅಪ್ಪಣೆ ಕೊಡಿ’ ಎಂದು ಅನೇಕ ವಾದ್ಯಗಳ ಘೋಷದಲ್ಲಿ ಅವರೆಲ್ಲರೂ ಮುಂದೆ ಹಾಯ್ದರು.
ಮೂಲ ...{Loading}...
ಜೀಯ ಖಾತಿಯಿದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾ ತಾ ವೀಳಯವನೆನುತ
ಹಾಯಿದರು ತಮ ತಮಗೆ ಮುಂಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ ॥31॥
೦೩೨ ಒಡೆದುದಿಳೆಯೆನೆ ಸಮ ...{Loading}...
ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದರುಬಿತಸುರರು ಸುರರ ಸಂದಣಿಯ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೆ ಬಿರಿಯಿತೋ, ಉರಿಕಡಲು ಉಕ್ಕಿತೋ ಎಂಬಂತೆ ಭಯಂಕರ ದಾನವರು ದೇವತೆಗಳ ಸೇನೆಯ ಮೇಲೆ ಮುತ್ತಿದರು. ಫಡಫಡ, ಆ ದೇವೇಂದ್ರನಿಗೆ ಬರ ಹೇಳು, ಇದಲ್ಲವೇ ಕೆಟ್ಟಕಾಲ, ಎಂದು ರಾಕ್ಷಸರು ದೇವಗಣವನ್ನು ಬಡಿದರು.
ಮೂಲ ...{Loading}...
ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದರುಬಿತಸುರರು ಸುರರ ಸಂದಣಿಯ ॥32॥
೦೩೩ ಮುರಿದುದಮರರು ಮತ್ತೆ ...{Loading}...
ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರ ಬಾಣದಲಿ
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು ಸೋತು ಹಿಂದಿರುಗಿದರು. ಆಗ ನಾನು ಮತ್ತೆ ಬೊಬ್ಬಿರಿದು ಕೋಟಿ ಸಂಖ್ಯೆಯ ರಾಕ್ಷಸ ವೀರರನ್ನು ಇಂದ್ರಬಾಣದಿಂದ ಕೊಂದೆನು. ಉಳಿದ ರಾಕ್ಷಸರು ಪಲಾಯನ ಮಾಡಲಾರಂಭಿಸಿದರು. ಕೋಟೆಯ ಹೊರಗೆ ಇದ್ದ ಸುರಬಲವು ಮುಂದೊತ್ತಿ ಬಂದು ದುರ್ಗದ ಮೇಲಿರುವ ಖಳರನ್ನು ಸಂಹರಿಸಿತು.
ಮೂಲ ...{Loading}...
ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರ ಬಾಣದಲಿ
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ ॥33॥
೦೩೪ ಎಲೆಲೆ ಸುರಪತಿಯಾಳು ...{Loading}...
ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತಿದೆ ನಡೆಯೆನುತ ದಾನವ
ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ
ತಲೆಯ ಹೊಯ್ದಡೆಗೆಡಹು ಸುರಪನ
ಲಲನೆಯರ ಮುಂದಣ ವಿಕಾರಿಗ
ಳೆಲವೊ ಸರಿಯೋ ಪೂತು ಮಝಯೆನುತೈದಿದರು ಭಟರು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ, ದೇವೇಂದ್ರನ ಸೈನಿಕರು ಕೋಟೆಯ ಮೇಲಿಂದ ಇಳಿಯುತ್ತಿದ್ದಾರೆ ನಡೆಯಿರಿ’ ಎಂದು ದಾನವರು ಪ್ರತಿಜ್ಞಾಬದ್ಧರಾಗಿ ಕವಿದರು. ‘ಅವರ ತಲೆಗಳನ್ನು ಕತ್ತರಿಸು. ಅಪ್ಸರೆಯರ ಮುಂದೆ ನಲಿಯುವ ಈ ವಿಕಾರಿಗಳನ್ನು ಬಡಿ ಎಂದು ಭಟರು ಮುನ್ನುಗ್ಗಿದರು. .
ಪದಾರ್ಥ (ಕ.ಗ.ಪ)
ಉಲಿ - ಕೂಗು
ಅಡೆಗೆಡಹು - ಬೀಳಿಸು
ಮೂಲ ...{Loading}...
ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತಿದೆ ನಡೆಯೆನುತ ದಾನವ
ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ
ತಲೆಯ ಹೊಯ್ದಡೆಗೆಡಹು ಸುರಪನ
ಲಲನೆಯರ ಮುಂದಣ ವಿಕಾರಿಗ
ಳೆಲವೊ ಸರಿಯೋ ಪೂತು ಮಝಯೆನುತೈದಿದರು ಭಟರು ॥34॥
೦೩೫ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸು
ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ
ವೈನತೇಯನ ಪಕ್ಷಗತ ಪವ
ಮಾನನಂತಿರೆ ಭಟರ ಸುಯ್ಲಿನ
ಲಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀಯ, ರಾಕ್ಷಸರ ಸಾಹಸವನ್ನು ಏನೆಂದು ಹೇಳಲಿ. ಅವರ ಕೋಲಾಹಲವನ್ನು ಸೈರಿಸಲು ಸಾಧ್ಯವೆ ? ಗರುಡನ ರೆಕ್ಕೆಯ ರಭಸದಿಂದ ಎದ್ದ ಗಾಳಿಯಂತೆ ಇರುವ ರಾಕ್ಷಸಭಟರ ಉಸಿರಿಗೆ ದೇವತೆಗಳು ದೆಸೆ ದೆಸೆಗೆ ಹಾರಿಹೋದರು.
ಪದಾರ್ಥ (ಕ.ಗ.ಪ)
ತರಹರಿಸು - ಸೈರಿಸು
ಉಬ್ಬೆ - ರಭಸ, ಒತ್ತಡ
ವೈನತೇಯ -ಗರುಡ
ನಿರೂಢಿ - ಪ್ರಸಿದ್ಧ
ಟಿಪ್ಪನೀ (ಕ.ಗ.ಪ)
ವೈನತೇಯ -
ಮೂಲ ...{Loading}...
ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸು
ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ
ವೈನತೇಯನ ಪಕ್ಷಗತ ಪವ
ಮಾನನಂತಿರೆ ಭಟರ ಸುಯ್ಲಿನ
ಲಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ ॥35॥
೦೩೬ ತೋರು ತೋರಮರೇನ್ದ್ರನಾವೆಡೆ ...{Loading}...
ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೋರಿಸುಚ್ಚೈಃ ಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರು ಸುತ್ತಲೂ ಹರಿದು ಆರ್ಭಟಿಸುತ್ತಿದ್ದರು. ದೇವೇಂದ್ರನೆಲ್ಲಿದ್ದಾನೆಂದು ತೋರಿಸು, ಐರಾವತ ಎಲ್ಲಿದೆ? ಉಚ್ಚೈಶ್ರವಸ್ಸು ಎಲ್ಲಿದೆ ಎಂದು ತೋರಿಸು. ಅಗ್ನಿ, ಯಮನೇ ಮೊದಲಾದ ದಿಕ್ಪಾಲಕರೆಲ್ಲಿದ್ದಾರೆಂದು ತೋರಿಸು. ರಾಕ್ಷಸರನ್ನು ಸದೆಬಡಿದ ಮದಾಂಧರನ್ನು ಮುಂದೆ ಬರಹೇಳು. ಆಗ ಅವರನ್ನು ವಿಚಾರಿಸಬಹುದೆಂದು ವೀರರು ಮುಂದೊತ್ತಿದರು.
ಪದಾರ್ಥ (ಕ.ಗ.ಪ)
ಅಮರೇಂದ್ರ - ಇಂದ್ರ
ಗಾರುಗೆದರು - ಘಾಸಿಗೊಳಿಸು
ಟಿಪ್ಪನೀ (ಕ.ಗ.ಪ)
ಐರಾವತ -
ಉಚ್ಚೈಶ್ರವಸ್ಸು -
ಮೂಲ ...{Loading}...
ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೋರಿಸುಚ್ಚೈಃ ಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು ॥36॥
೦೩೭ ಕರೆದರವದಿರು ಕಲ್ಪಮೇಘದ ...{Loading}...
ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಶರವ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲ್ಪಾಂತರದ ಮೋಡಗಳಂತೆ ಕವಿದು ಪ್ರಳಯದ ಬಿರುಮಳೆಯಂತೆ ಅವರು ಸುರಿದ ಶರಗಳೆಲ್ಲವನ್ನೂ ತರಿದೆನು. ನಾನು ಯಾರೆಂದು ಅವರಿಗೆ ತಿಳಿಯದು. ನನ್ನನ್ನು ಇಂದ್ರನೆಂದೇ ಭಾವಿಸಿ ದಿಙ್ಮಂಡಲವನ್ನು ಮುಸುಕಿದರು. ಈ ಇರಿತಕ್ಕೆ ಅಂಜದೇ ಇರುವವರು ದೇವತೆಗಳಲ್ಲಿ ಯಾರಿದ್ದಾರೆ ?
ಪದಾರ್ಥ (ಕ.ಗ.ಪ)
ತೆತ್ತಿಸಿದೆನು -ನಾಟಿಸಿದೆನು
ಕಲ್ಪಮೇಘ - ಪ್ರಳಯಕಾಲದ ಮೇಘ
ಮೂಲ ...{Loading}...
ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಶರವ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ ॥37॥
೦೩೮ ಝಗ ಝಗಿಪ ...{Loading}...
ಝಗ ಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣದಿಂದ ಹೊರಬಂದ ಬೆಂಕಿ ಝಗಝಗಿಸಿತು. ದಿವ್ಯಾಸ್ತ್ರಗಳು ಭುಗುಭುಗಿಲೆಂದವು. ಹದಿನಾಲ್ಕು ಲೋಕದೊಳಗೂ ಹೊಗೆ ಆವರಿಸಿತು. ಆದರೆ ಆ ಸಾಹಸಿಗಳು ಅದನ್ನು ಲೆಕ್ಕಿಸದೆ ಹೋರಾಡಿದರು. ಪ್ರಲಯಾಗ್ನಿ - ಕಾಲಯಮನಿಗೆ ಕದನ ನಡೆದಂತೆ ಹೋರಾಟ ನಡೆಯಿತು.
ಪದಾರ್ಥ (ಕ.ಗ.ಪ)
ತತಿ - ಸಮೂಹ
ಲೋಟಿಸು - ಉರುಳಿಸು
ಮೂಲ ...{Loading}...
ಝಗ ಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ ॥38॥
೦೩೯ ದೊರೆಗಳೇರಿತು ರಥ ...{Loading}...
ದೊರೆಗಳೇರಿತು ರಥ ತುರಂಗಮ
ಕರಿಗಳಲಿ ಕಾಲಾಳ ಬಿಂಕವ
ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ
ಸರಿಗರೆದ್ದುದು ಮೂರು ಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈ ಸೋತುದೆನಗೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥ, ಕುದುರೆ, ಆನೆಗಳನ್ನು ರಾಕ್ಷಸ ರಾಜರುಗಳೇರಿದರು. ಆ ರಾಕ್ಷಸ ಯುದ್ಧದಲ್ಲಿ ಕಾಲಾಳುಗಳ ಬಿಂಕವನ್ನು ವಿವರಿಸಲು ಸಾಧ್ಯವಿಲ್ಲ. ಮುಕ್ಕೋಟಿ ರಾಕ್ಷಸರು ಗುಡುಗು ಸಿಡಿಲಿನ ಶರಗಳನ್ನು ಎಸೆದರು. ನನ್ನ ಕೈಕೂಡಾ ಸೋತಿತು.
ಪದಾರ್ಥ (ಕ.ಗ.ಪ)
ತುರಂಗಮ - ಕುದುರೆ
ಅಶನಿ - ಸಿಡಿಲು
ಆಸುರ ಕರ್ಮ ಕಲಹ - ರಾಕ್ಷಸೀ ಯುದ್ಧ
ಸರಿಗ - ಸಮಾನನಾದವನು
ಮೂಲ ...{Loading}...
ದೊರೆಗಳೇರಿತು ರಥ ತುರಂಗಮ
ಕರಿಗಳಲಿ ಕಾಲಾಳ ಬಿಂಕವ
ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ
ಸರಿಗರೆದ್ದುದು ಮೂರು ಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈ ಸೋತುದೆನಗೆಂದ ॥39॥
೦೪೦ ಲಟಕಟಿಸುವಾ ಮೂರು ...{Loading}...
ಲಟಕಟಿಸುವಾ ಮೂರು ಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಟೆಯನದನೇನೆಂಬೆನವದಿರ ಸಮರ ಸಂಭ್ರಮವ
ಕುಟಿಲ ಕದನದೊಳೊದಗಿತದು ಕಲು
ಗುಟಿಗ ಶರ ಶತಕೋಟಿಯಲಿ ಪಡಿ
ಭಟಬಲವ ಬೆದರಿಸಿದೆ ಚಿತ್ತೈಸೆಂದನಾ ಪಾರ್ಥ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಬ್ಬರಿಸುತ್ತಾ ಮೂರು ಕೋಟಿ ರಾಕ್ಷಸರು ಕಲ್ಲಿನ ಮಳೆಯನ್ನು ಸುರಿಸುವ ಆ ಯುದ್ಧ ಸಡಗರವನ್ನು ಏನೆಂದು ವರ್ಣಿಸಲಿ ? ಅವರು ಮಾಯಾ ಯದ್ಧದಲ್ಲಿ ತೊಡಗಿದರು. ಕಲ್ಲುಗಳನ್ನು ಸೀಳುವಂತಹ ಶತಕೋಟಿ ಬಾಣಗಳಲ್ಲಿ ಶತ್ರು ಸೈನ್ಯವನ್ನು ಬೆದರಿಸಿದೆ. ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಲಟಕಟಿಸು - ಅಬ್ಬರಿಸು
ಕುಟಿಲಕದನ - ವಂಚನೆಯ ಯುದ್ಧ
ಮೂಲ ...{Loading}...
ಲಟಕಟಿಸುವಾ ಮೂರು ಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಟೆಯನದನೇನೆಂಬೆನವದಿರ ಸಮರ ಸಂಭ್ರಮವ
ಕುಟಿಲ ಕದನದೊಳೊದಗಿತದು ಕಲು
ಗುಟಿಗ ಶರ ಶತಕೋಟಿಯಲಿ ಪಡಿ
ಭಟಬಲವ ಬೆದರಿಸಿದೆ ಚಿತ್ತೈಸೆಂದನಾ ಪಾರ್ಥ ॥40॥
೦೪೧ ತೆರಳದವದಿರು ಹೂಡಿದರು ...{Loading}...
ತೆರಳದವದಿರು ಹೂಡಿದರು ದ
ಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ
ಸರಕುದೆಗೆದುದು ಸತ್ಯಲೋಕಕೆ
ತರತರದ ಜಗವಿಂದ್ರಸಾರಥಿ
ಜರಿದು ಜವಗುಂದಿದನು ಜಾಡಿಸುವನಲನುಬ್ಬೆಯಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ ಅವರು ಹಿಂತಿರುಗದೆ ದಾವಾನಲದ ಆಜ್ಞೇಯಾಸ್ತ್ರ್ರವನ್ನು ಪ್ರಯೋಗಿಸಿದಾಗ ತ್ರಿಲೋಕಕ್ಕೆ ಅದರ ಝಳ ಬೀಸಿತು. ಸತ್ಯಲೋಕಕ್ಕೂ ಇದರ ಪ್ರಭಾವ ಬೀರಿತು. ಈ ಬೆಂಕಿಯ ಕಾವಿನಿಂದ ಇಂದ್ರ ಸಾರಥಿಯಾದ ಮಾತಳಿಯು ಶಕ್ತಿಗುಂದಿದನು.
ಪದಾರ್ಥ (ಕ.ಗ.ಪ)
ಪಾವಕಾಸ್ತ್ರ -ಆಜ್ಞೇಯಾಸ್ತ್ರ
ಅನಲ - ಬೆಂಕಿ
ಸರಕುದೆಗೆ - ಹೊರಟು ಹೋಗುವುದು
ಮೂಲ ...{Loading}...
ತೆರಳದವದಿರು ಹೂಡಿದರು ದ
ಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ
ಸರಕುದೆಗೆದುದು ಸತ್ಯಲೋಕಕೆ
ತರತರದ ಜಗವಿಂದ್ರಸಾರಥಿ
ಜರಿದು ಜವಗುಂದಿದನು ಜಾಡಿಸುವನಲನುಬ್ಬೆಯಲಿ ॥41॥
೦೪೨ ಸಾರಥಿಯ ಸನ್ತೈಸಿ ...{Loading}...
ಸಾರಥಿಯ ಸಂತೈಸಿ ತೇರಿನ
ವಾರುವಂಗಳ ನೇಣನೋಜೆಯೊ
ಳೋರಣಿಸಿ ಸಂವರಿಸಿ ರಥವನು ವರುಣ ಬಾಣದಲಿ
ವಾರಿಧಿಯ ಕೆದರಿದೆನು ಕೆಟ್ಟವು
ಭೂರಿಗಿಡಿಗಳು ಮಾರುತನ ಕೈ
ವಾರ ಕುಂದಿದುದಸುರ ಮುಖದನಲಾಸ್ತ್ರ ಪರಿಹರಿಸಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯನ್ನು ಸಮಾಧಾನಪಡಿಸಿ, ರಥದ ಕುದುರೆಗಳನ್ನು ಸಂತೈಸಿ, ರಥವನ್ನು ಸಮಸ್ಥಿತಿಗೆ ತಂದೆನು. ವರುಣಾಸ್ತ್ರದಿಂದ ಬೆಂಕಿಯಕಿಡಿಗಳನ್ನು ನಂದಿಸಿ ರಾಕ್ಷಸರು ಪ್ರಯೋಗಿಸಿದ ಆಗ್ನೇಯಾಸ್ತ್ರದ ಉರಿಯನ್ನು, ವರುಣಾಸ್ತ್ರದಿಂದ ಸಮುದ್ರವನ್ನೇ ಸೃಷ್ಟಿಸಿ ಆಗ್ನೇಯಾಸ್ತ್ರವನ್ನು ನಾಶಮಾಡಿದೆ, ಹಾಗೂ ಅದಕ್ಕೆ ನೆರವಾಗಿದ್ದ ಗಾಳಿಯನ್ನು ನಂದಿಸಿದೆ.
ಪದಾರ್ಥ (ಕ.ಗ.ಪ)
ವಾರುವ - ಕುದುರೆ
ನೇಣು - ಹಗ್ಗ
ಭೂರಿ -ದೊಡ್ಡದಾದ
ಮೂಲ ...{Loading}...
ಸಾರಥಿಯ ಸಂತೈಸಿ ತೇರಿನ
ವಾರುವಂಗಳ ನೇಣನೋಜೆಯೊ
ಳೋರಣಿಸಿ ಸಂವರಿಸಿ ರಥವನು ವರುಣ ಬಾಣದಲಿ
ವಾರಿಧಿಯ ಕೆದರಿದೆನು ಕೆಟ್ಟವು
ಭೂರಿಗಿಡಿಗಳು ಮಾರುತನ ಕೈ
ವಾರ ಕುಂದಿದುದಸುರ ಮುಖದನಲಾಸ್ತ್ರ ಪರಿಹರಿಸಿ ॥42॥
೦೪೩ ಅವರು ಮಗುಳೆಚ್ಚರು ...{Loading}...
ಅವರು ಮಗುಳೆಚ್ಚರು ಶಿಲೀಮುಖ
ದವಯವದೊಳುಬ್ಬೆದ್ದು ಗಿರಿಗಳು
ಕವಿಯೆ ಕಡಿದೊಟ್ಟಿದೆನು ಭಾರಿಯ ವಜ್ರಬಾಣದಲಿ
ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದವನಾಗಳೆ
ರವಿಯ ಶರದಲಿ ಮುರಿದೆನಗುಳಿಯನರಸ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದಕ್ಕೆ ಪ್ರತಿಯಾಗಿ ಅವರು ಪರ್ವತಾಸ್ತ್ರವನ್ನು ಬಿಟ್ಟರು. ಅದರಿಂದ ಗಿರಿಗಳು ನಮ್ಮ ಮೇಲೆ ಬೀಳಲು ಅವನ್ನು ವಜ್ರಾಸ್ತ್ರದಿಂದ ಪರಿಹರಿಸಿದೆ. ಲೋಕದ ಬೆಳಕನ್ನೇ ನಂದಿಸುವ ತಿಮಿರಾಸ್ತ್ರವನ್ನು ಅವರು ಬಿಡಲು, ನಾನು ಸೂರ್ಯಾಸ್ತ್ರದಿಂದ ಅದನ್ನು ನಾಶಗೊಳಿಸಿದೆ’ ಎಂದನು.
ಪದಾರ್ಥ (ಕ.ಗ.ಪ)
ಶಿಲೀಮುಖ - ಬಾಣ
ಮೂಲ ...{Loading}...
ಅವರು ಮಗುಳೆಚ್ಚರು ಶಿಲೀಮುಖ
ದವಯವದೊಳುಬ್ಬೆದ್ದು ಗಿರಿಗಳು
ಕವಿಯೆ ಕಡಿದೊಟ್ಟಿದೆನು ಭಾರಿಯ ವಜ್ರಬಾಣದಲಿ
ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದವನಾಗಳೆ
ರವಿಯ ಶರದಲಿ ಮುರಿದೆನಗುಳಿಯನರಸ ಕೇಳೆಂದ ॥43॥
೦೪೪ ಬಳಿಕ ಸುರಿದರು ...{Loading}...
ಬಳಿಕ ಸುರಿದರು ಹಾವುಗಳ ಹೆ
ಮ್ಮಳೆಯನಲ್ಲಿಗೆ ಗರುಡ ಬಾಣವ
ಸುಳಿಸಿದೆನು ಬಳಿಕಾದುದರ್ಧಗ್ರಾಸವಾ ಶರಕೆ
ಉಲಿದು ದನುಜರು ಮತ್ತೆ ಕೆಂಡದ
ಮಳೆಯ ಕರೆದರು ಮರಳಿ ಜಲಧಿಯ
ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅವರು ಉರಗಾಸ್ತ್ರವನ್ನು ಬಿಟ್ಟು ಹಾವುಗಳ ಮಳೆಸುರಿದರು. ಆಗ ಗರುಡಾಸ್ತ್ರದಿಂದ ಅದನ್ನು ತೊಲಗಿಸಿದೆ ; ಅವೆಲ್ಲವನ್ನೂ ನಾಶಮಾಡಿದ ನನ್ನ ಗರುಡಾಸ್ತ್ರಕ್ಕೆ ಅರ್ಧಾಹಾರ ಮಾತ್ರ ದೊರೆತಂತಾಯಿತು. ಮತ್ತೆ ದಾನವರು ಕೆಂಡದ ಮಳೆ ಸುರಿಸಲು, ಸಮುದ್ರವನ್ನೇ ತುಳುಕಿಸಿದೆ. ಆದರೆ ಸಾರಥಿ ಬಸವಳಿದನು.
ಪದಾರ್ಥ (ಕ.ಗ.ಪ)
ಹೆಮ್ಮಳೆ - ಭಾರಿಯ ಮಳೆ
ಗ್ರಾಸ - ಆಹಾರ
ಮೂಲ ...{Loading}...
ಬಳಿಕ ಸುರಿದರು ಹಾವುಗಳ ಹೆ
ಮ್ಮಳೆಯನಲ್ಲಿಗೆ ಗರುಡ ಬಾಣವ
ಸುಳಿಸಿದೆನು ಬಳಿಕಾದುದರ್ಧಗ್ರಾಸವಾ ಶರಕೆ
ಉಲಿದು ದನುಜರು ಮತ್ತೆ ಕೆಂಡದ
ಮಳೆಯ ಕರೆದರು ಮರಳಿ ಜಲಧಿಯ
ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ ॥44॥
೦೪೫ ಸಾರಥಿತ್ವದ ಕೈಮೆ ...{Loading}...
ಸಾರಥಿತ್ವದ ಕೈಮೆ ತತ್ಪ್ರತಿ
ಕಾರ ಶರ ಸಂಧಾನವೆರಡರ
ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು
ಧೀರರಾತ್ಮಸ್ತುತಿಗೆ ನಾಚದ
ರಾರು ಜೀಯ ಮಹಾಹವದ ವಿ
ಸ್ತಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಸಾರಥಿ ಮೈಮರೆದು ಬಿದ್ದಾಗ, ಸಾರಥಿತನದ ಕೆಲಸ ಹಾಗೂ ಅಸ್ತ್ರ ಪ್ರಯೋಗ ಎರಡರ ಹೊಣೆಯೂ ನನ್ನ ಮೇಲೆ ಬಿದ್ದಿತು. ಮೂರು ಕೋಟಿ ರಾಕ್ಷಸರ ಜೊತೆಗೆ ನಡೆದ ಮಹಾಯುದ್ಧವನ್ನು ಮಾತಳಿಯ ಮೂಲಕ ಕೇಳಿರಿ. ಜೀಯ, ಆತ್ಮಸ್ತುತಿ ಮಾಡಿಕೊಳ್ಳಲು ಧೀರನಾದ ನಾನು ನಾಚುತ್ತೇನೆ ಎಂದನು.
ಪದಾರ್ಥ (ಕ.ಗ.ಪ)
ಕೈಮೆ-ಕೆಲಸ
ಚಿತ್ತವಿಸಿ - ಕೇಳಿ
ಮೂಲ ...{Loading}...
ಸಾರಥಿತ್ವದ ಕೈಮೆ ತತ್ಪ್ರತಿ
ಕಾರ ಶರ ಸಂಧಾನವೆರಡರ
ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು
ಧೀರರಾತ್ಮಸ್ತುತಿಗೆ ನಾಚದ
ರಾರು ಜೀಯ ಮಹಾಹವದ ವಿ
ಸ್ತಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆಂದ ॥45॥
೦೪೬ ತೊಡಚಿದೆನು ಬೊಮ್ಮಾಸ್ತ್ರವನು ...{Loading}...
ತೊಡಚಿದೆನು ಬೊಮ್ಮಾಸ್ತ್ರವನು ಹುರಿ
ಯೊಡೆದುದಸುರರು ಮಲೆತವರನಿ
ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ
ಕಡುಹಿನಿಂದ್ರಾಗ್ನೇಯ ವಾರುಣ
ದಡಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟಂತೆ ಕಳಚಿದವಸುರ ಬಲದಸುವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆನು. ಎದುರಾಗಿ ಬಂದ ದಾನವರನ್ನು ಅದು ನಾಶಮಾಡಿತು. ನಿವಾತ ಕವಚರಿಗೆ ಸಾವು ಒದಗಿತು. ಇಂದ್ರಾಸ್ತ್ರ, ಅಗ್ನ್ಯಾಸ್ತ್ರ, ವಾರುಣಾಸ್ತ್ರಗಳು ರಾಕ್ಷಸರನ್ನು ಬಾಚಿಕೊಂಡು ನುಂಗಿದವು. ಸಿಡಿಲ ಸೆರೆಗೆ ಸಿಕ್ಕಂತೆ ಅವರು ಅಸುನೀಗಿದರು.
ಪದಾರ್ಥ (ಕ.ಗ.ಪ)
ತೊಡಚು-ಪ್ರಯೋಗಿಸು
ಹುರಿಯೊಡೆ - ಹುರುಪುಗೊಂಡು
ಅಡಬಳಿಗ - ಮಾಂಸಾಹಾರಿ , ಇಲ್ಲಿ ರಾಕ್ಷಸ
ಮೂಲ ...{Loading}...
ತೊಡಚಿದೆನು ಬೊಮ್ಮಾಸ್ತ್ರವನು ಹುರಿ
ಯೊಡೆದುದಸುರರು ಮಲೆತವರನಿ
ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ
ಕಡುಹಿನಿಂದ್ರಾಗ್ನೇಯ ವಾರುಣ
ದಡಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟಂತೆ ಕಳಚಿದವಸುರ ಬಲದಸುವ ॥46॥
೦೪೭ ಕಾಳ ದನುಜರು ...{Loading}...
ಕಾಳ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿ ನಗರೋಪಕಂಠದಲಿ
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೆಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬಂದೆನು ರಾಯ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರು ಕೋಟಿ ಕಾಳ ರಕ್ಕಸರು ಒಬ್ಬರೂ ಉಳಿಯದಂತೆ ಸತ್ತು ಹೋದರು. ನಗರದೊಳಗೆ ಸೆರೆಯಲ್ಲಿದ್ದ ಅಪ್ಸರೆಯರ ಬಂಧ ವಿಮೋಚನೆಯಾಯಿತು. ಹಿರಣ್ಯಪುರದ ಅರಮನೆ ಧೂಳೀಪಟವಾಯಿತು. ಆ ಬಳಿಕ ನಾನು ಕಾಲಕೇಯರ ಪಟ್ಟಣಕ್ಕೆ ಬಂದೆನು.
ಪದಾರ್ಥ (ಕ.ಗ.ಪ)
ಅಕ್ಕಾಡಿತು - ನಾಶವಾಯಿತು
ಮೂಲ ...{Loading}...
ಕಾಳ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿ ನಗರೋಪಕಂಠದಲಿ
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೆಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬಂದೆನು ರಾಯ ಕೇಳೆಂದ ॥47॥
೦೪೮ ಕೆರಳಿತಲ್ಲಿ ನಿವಾತಕವಚರ ...{Loading}...
ಕೆರಳಿತಲ್ಲಿ ನಿವಾತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿವಾತಕವಚರ ಸಂಹಾರ ಸುದ್ದಿಯನ್ನು ಅವರು ಕೇಳಿ ಕೆರಳಿದರು. ನಗರದ ಹೊರವಲಯದಲ್ಲೇ ರಥವನ್ನು ಅಡ್ಡಗಟ್ಟಿದರು. ನಿವಾತಕವಚರಿಗಿಂತಲೂ ಎರಡು ಸಾವಿರ ಪಾಲು ಹೆಚ್ಚಿನದು ಅವರ ಮಾಯಾವಿದ್ಯೆ.
ಮೂಲ ...{Loading}...
ಕೆರಳಿತಲ್ಲಿ ನಿವಾತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ॥48॥
೦೪೯ ಬೀಸಿದರು ಬಿರುಗಾಳಿಯಾಗಿ ...{Loading}...
ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕು ತೆರೆಯಲಿ
ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಭ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿರುಗಾಳಿಯಾಗಿ ಬೀಸಿ, ಸಮುದ್ರದ ನೂಕು ತೆರೆಗಳಂತೆ ಅಬ್ಬರಿಸಿ, ಬೆಂಕಿಯಾಗಿ ಭೂಮಿಯ ಮೇಲೆ ಕಾಲಕೇಯನ ಸೈನಿಕರು ಒಮ್ಮೆ ದಟ್ಟವಾದ ಕತ್ತಲೆಯಾಗಿ, ಮತ್ತೊಮ್ಮೆ ಸೂರ್ಯನ ಬಿಸಿಲಿನ ತಾಪವನ್ನು ನೂರರಷ್ಟಾಗಿ ಭೂಮಿಯ ಮೇಲೆ ಹರಿದರು. ಮಾಯಾವಿಗಳಾದ ಅಸುರರು ಅಟ್ಟಹಾಸಗೈದುದನ್ನು ಏನೆಂದು ಬಣ್ಣಿಸಲಿ ?
ಪದಾರ್ಥ (ಕ.ಗ.ಪ)
ಆಸುರ - ಭಯಾನಕ
ಮೂಲ ...{Loading}...
ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕು ತೆರೆಯಲಿ
ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಭ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆಂದ ॥49॥
೦೫೦ ಘೋರತರವದು ಬಳಿಕ ...{Loading}...
ಘೋರತರವದು ಬಳಿಕ ತತ್ಪ್ರತಿ
ಕಾರವಿತರರಿಗಿಂದುಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾ ರಚನೆಯಾ ವಿಧದಲಾ ಮಾ
ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತರರಿಗೆ ಅವರ ವಿರುದ್ದ ಆ ಪ್ರತೀಕಾರ ಮಾಡುವುದು ಅಪಾಯಕರವಾಗಿತ್ತು. ಆದರೆ ನನಗೆ ಪರಶಿವನು ಸಾಂಗೋಪಾಂಗವಾಗಿ ಈ ಅಸ್ತ್ರಗಳನ್ನು ಉಪದೇಶಿಸಿದ್ದರಿಂದ ಅವರ ಮಾಯಾರಚನೆಗಳು ನಮ್ಮನ್ನು ಯಾವುದೇ ರೀತಿಯಿಂದ ಬಾಧಿಸಿದರೂ ಅವನ್ನು ನಾನು ಸೀಳಿ ಬಿಸಾಡಿದೆ ಎಂದನು.
ಪಾಠಾನ್ತರ (ಕ.ಗ.ಪ)
ದುತ್ಪ್ರತಿ - ತತ್ಪ್ರತಿ
ಅರಣ್ಯ ಪರ್ವ - ಮೈ.ವಿ.ವಿ.
ಮೂಲ ...{Loading}...
ಘೋರತರವದು ಬಳಿಕ ತತ್ಪ್ರತಿ
ಕಾರವಿತರರಿಗಿಂದುಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾ ರಚನೆಯಾ ವಿಧದಲಾ ಮಾ
ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ ॥50॥
೦೫೧ ಮುರಿದುದಸುರರ ಮಾಯೆ ...{Loading}...
ಮುರಿದುದಸುರರ ಮಾಯೆ ಕಾಹಿನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯ ರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾನವರ ಮಾಯೆ ಮುರಿದು ಹೋಯಿತು. ಅಗ್ನಿಪರ್ವತದಿಂದ ಚಿಮ್ಮಿದ ಶಿಲಾರಸದ ರೀತಿಯಲ್ಲಿ ಅವರು ನಿಜಾಕಾರದಿಂದ ಆನೆ ಕುದುರೆ ರಥಗಳ ಮೇಲೆ ಕುಳಿತು ಬಂದರು. ಆದರೆ ಬಾಣಪ್ರಯೋಗದಿಂದ ಅವರೆಲ್ಲರನ್ನೂ ತರಿದು, ತುಂಡರಿಸಿ, ಸೀಳಿ, ಕೊಯ್ದು, ಕೊರೆದು ಬಿಸಾಡಿಬಿಟ್ಟೆನು.
ಪದಾರ್ಥ (ಕ.ಗ.ಪ)
ಕಾಹು - ತಾಪ ,ಬಿಸಿ
ಮೂಲ ...{Loading}...
ಮುರಿದುದಸುರರ ಮಾಯೆ ಕಾಹಿನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯ ರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ ॥51॥
೦೫೨ ಜೀಯ ವಿಗಡ ...{Loading}...
ಜೀಯ ವಿಗಡ ಬ್ರಹ್ಮಶರವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜೀಯ, ಬ್ರಹ್ಮಾಸ್ತ್ರ, ಇಂದ್ರಾಸ್ತ್ರಗಳಿಂದ ಮಾಯಾವಿಗಳ ಚತುರ್ಬಲ ಸೈನ್ಯವನ್ನೂ ಸಂಹಾರ ಮಾಡಿದೆನು. ಅಸುರ ಸೇನೆಯ ನಾಯಕರು ನಾಶ ಹೊಂದಿ ಸ್ವರ್ಗದ ಭೋಗವನ್ನು ಅನುಭವಿಸಲು ಹೋದರು.’ ಎಂದನು.
ಪದಾರ್ಥ (ಕ.ಗ.ಪ)
ಮೋಹರ - ಸೈನ್ಯ
ಮೂಲ ...{Loading}...
ಜೀಯ ವಿಗಡ ಬ್ರಹ್ಮಶರವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆಂದ ॥52॥
೦೫೩ ಕಡುಹುವಗ್ಗದ ಕಾಲಕೇಯರ ...{Loading}...
ಕಡುಹುವಗ್ಗದ ಕಾಲಕೇಯರ
ಗಡಣವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡುಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಳ ಬೊ
ಬ್ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಕೇಯರ ಅತಿಭಯಂಕರವಾದ ಸೈನ್ಯ ನಾಶವಾದ ಬಳಿಕ ಸುರರು ಸೆರೆಯಿಂದ ಬಿಡುಗಡೆ ಹೊಂದಿದರು. ಅನಂತರ ದೇವತೆಗಳಿಗೆ ತುಂಬಾ ಸಂತೋಷ ಉಂಟಾಯಿತು. ಬಾಹುಗಳನ್ನು ಕುಣಿಸುತ್ತಾ, ಚಪ್ಪಾಳೆ ತಟ್ಟುತ್ತಾ ಭೂಕಂಪವಾಯಿತೆಂಬಂತೆ, ದೇವತೆಗಳು ಸ್ವರ್ಗಲೋಕಕ್ಕೆ ಹೊರಟರು.
ಮೂಲ ...{Loading}...
ಕಡುಹುವಗ್ಗದ ಕಾಲಕೇಯರ
ಗಡಣವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡುಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಳ ಬೊ
ಬ್ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ ॥53॥
೦೫೪ ಕಟ್ಟು ಗುಡಿಯನು ...{Loading}...
ಕಟ್ಟು ಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿ ಹುಡಿಯಾಯ್ತು ದನುಜರ
ಹುಟ್ಟುವುರಿದುದು ಜೀಯ ಚಿತ್ತೈಸೆಂದರಿಂದ್ರಂಗೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸುದ್ದಿಯನ್ನು ದೇವದೂತರು ಹೇಳುತ್ತ, ದೇವೇಂದ್ರನಿಗೆ ‘ಧ್ವಜವನ್ನೇರಿಸು. ಜಗಜಟ್ಟಿಗಳು ಸೋತು ಹೋದರಲ್ಲಾ ! ನೀನು ನೆಟ್ಟ ಸಸಿ ಕಲ್ಪವೃಕ್ಷ ತಾನೇ ? ಅದು ಬೇಡಿದುದನ್ನು ಕೊಡದೇ ಇರುತ್ತದೆಯೆ ? ನಿವಾತ ಕವಚರನ್ನು ಸದೆ ಬಡಿಯಲಾಯಿತು. ದಾನವರ ವಂಶ ನಾಶವಾಯಿತು’ ಎಂದರು
ಪದಾರ್ಥ (ಕ.ಗ.ಪ)
ಸುರಕುಜ - ಕಲ್ಪವೃಕ್ಷ
ಮನೋರಥ - ಬಯಕೆ
ಥಟ್ಟು - ಸೇನೆ
ಮೂಲ ...{Loading}...
ಕಟ್ಟು ಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿ ಹುಡಿಯಾಯ್ತು ದನುಜರ
ಹುಟ್ಟುವುರಿದುದು ಜೀಯ ಚಿತ್ತೈಸೆಂದರಿಂದ್ರಂಗೆ ॥54॥
೦೫೫ ಕಾಲಕೇಯರ ನಗರಿಯಲಿ ...{Loading}...
ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು ದಿವಿಜರ
ಸೂಳೆಯರು ಸೆರೆ ಬಿಟ್ಟು ಬಂದರು ಯಕ್ಷ ಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹು ತೆಗೆಯಲಿಯೆಂದರಾ ಚರರು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಕೇಯರ ಪಟ್ಟಣದಲ್ಲಿ ಮೃತ್ಯು ದಾಳಿ ಮಾಡಿತು. ಸುರಸ್ತ್ರೀಯರನ್ನು ಸೆರೆಯಿಂದ ಬಿಡಿಸಲಾಯಿತು. ಯಕ್ಷ ಕಿನ್ನರರ ಕಾಲಿಗೆ ಬಂಧಿಸಿದ ಸಂಕೋಲೆ ತೆಗೆಯಲಾಯಿತು. ದುಷ್ಟರ ಉಪಟಳ ನಿವಾರಣೆಯಾಯಿತು. ಇನ್ನು ಸ್ವರ್ಗದ ರಕ್ಷಣೆಯ ಆಳುಗಳನ್ನು ತೆಗೆಸಬಹುದು ಎಂದು ಚರರು ಹೇಳಿದರು.
ಪದಾರ್ಥ (ಕ.ಗ.ಪ)
ದುವ್ವಾಳಿಸಿತು - ಆಕ್ರಮಣ ಮಾಡಿತು
ಮೂಲ ...{Loading}...
ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು ದಿವಿಜರ
ಸೂಳೆಯರು ಸೆರೆ ಬಿಟ್ಟು ಬಂದರು ಯಕ್ಷ ಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹು ತೆಗೆಯಲಿಯೆಂದರಾ ಚರರು ॥55॥
೦೫೬ ಪುರದ ಬಾಹೆಯ ...{Loading}...
ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮಡಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖನಿದ್ರೆಗೈಯಲಿ
ನಿರುತ ನಿಜನಿಳಯದೊಳಗೆಂದುದು ಸುರಜನವ್ರಾತ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಣದ ಹೊರಗಿನ ಬಾಗಿಲು ತೆಗೆಯಲಿ. ನಂದನವನದಲ್ಲಿ ನಿಮ್ಮ ರಾಣಿಯರು ಇನ್ನು ಮುಂದೆ ನಿರ್ಭೀತಿಯಿಂದ ನಡೆದಾಡಬಹುದು. ಕೋಟೆ ಕೊತ್ತಲುಗಳ ಕಾವಲಿನ ಭಟರು ಸುಖವಾಗಿ ಮನೆಗಳಲ್ಲಿ ನಿದ್ರಿಸಬಹುದು ಎಂದರು.
ಪದಾರ್ಥ (ಕ.ಗ.ಪ)
ಕೋರಡಿ - ನಿರ್ಬಂಧ
ನಂದನ - ಇಂದ್ರನ ಉದ್ಯನವನ
ನಿರುತ - ಸದಾ , ಯಾವಾಗಲೂ
ವ್ರಾತ - ಸಮೂಹ
ಮೂಲ ...{Loading}...
ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮಡಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖನಿದ್ರೆಗೈಯಲಿ
ನಿರುತ ನಿಜನಿಳಯದೊಳಗೆಂದುದು ಸುರಜನವ್ರಾತ ॥56॥
೦೫೭ ಕೇಳಿದನು ಹರುಷಾಶ್ರು ...{Loading}...
ಕೇಳಿದನು ಹರುಷಾಶ್ರು ಹೊದಿಸಿದ
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ
ಬಾಲೆಯರ ಬರಹೇಳು ರತುನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿಮಂಡಿತಚರಣನೆದ್ದನು ಬಂದನಿದಿರಾಗಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿ ಇಂದ್ರನಿಗೆ ಸಾವಿರ ಕಣ್ಣುಗಳಲ್ಲಿಯೂ ಸಂತೋಷದ ಅಶ್ರುಬಿಂದುಗಳು ಮೂಡಿದವು. ರೋಮಾಂಚನ ಸುಖದಿಂದ, ಅವನು ಉಬ್ಬಿ ಹೋದನು. “ನಾರಿಯರನ್ನು ಬರಹೇಳಿ, ರತ್ನದ ಆರತಿಗಳನ್ನು ತರಹೇಳಿ” ಎಂದು ಅರ್ಜುನನನ್ನು ಸ್ವಾಗತಿಸಲು ಎದ್ದು ಬಂದನು.
ಪದಾರ್ಥ (ಕ.ಗ.ಪ)
ಉಗ್ಗಡಣೆ-ಉದ್ಘೋಷ
ಮೂಲ ...{Loading}...
ಕೇಳಿದನು ಹರುಷಾಶ್ರು ಹೊದಿಸಿದ
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ
ಬಾಲೆಯರ ಬರಹೇಳು ರತುನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿಮಂಡಿತಚರಣನೆದ್ದನು ಬಂದನಿದಿರಾಗಿ ॥57॥
೦೫೮ ಕವಿದುದಮರವ್ರಾತ ಕಾನ್ತಾ ...{Loading}...
ಕವಿದುದಮರವ್ರಾತ ಕಾಂತಾ
ನಿವಹ ಹೊರವಂಟುದು ಸುರೇಂದ್ರನ
ಭವನದಲಿ ಗುಡಿ ನೆಗಹಿತಮರಾವತಿಯ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆಂಬೆನಂದಿನ
ದಿವಸದೊಸಗೆಯನಮರ ಲೋಕದೊಳರಸ ಕೇಳ್ ಎಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಗಡಣ ಮುತ್ತಿತು. ಇಂದ್ರನ ಮನೆಯಿಂದ ಸುರನಾರಿಯರು ಹೊರಟು ನಿಂತರು. ಅಮರಾವತಿಯ ಚೌಕದಲ್ಲಿ ಧ್ವಜ ತಲೆ ಎತ್ತಿತು. ದೇವಲೋಕದಲ್ಲಿ ದೇವತೆಗಳು ತಮ್ಮ ತಮ್ಮಲ್ಲಿ ಸಂತೋಷಿಸುತ್ತಾ ಉತ್ಸವದ ಸಂಭ್ರಮದಲ್ಲಿದ್ದುದನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ನೆಗಹು - ಎತ್ತು
ಗುಡಿ - ಧ್ವಜ
ಮೂಲ ...{Loading}...
ಕವಿದುದಮರವ್ರಾತ ಕಾಂತಾ
ನಿವಹ ಹೊರವಂಟುದು ಸುರೇಂದ್ರನ
ಭವನದಲಿ ಗುಡಿ ನೆಗಹಿತಮರಾವತಿಯ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆಂಬೆನಂದಿನ
ದಿವಸದೊಸಗೆಯನಮರ ಲೋಕದೊಳರಸ ಕೇಳೆಂದ ॥58॥
೦೫೯ ಇದಿರು ಬನ್ದನು ...{Loading}...
ಇದಿರು ಬಂದನು ಪದಯುಗದಲೆರ
ಗಿದರೆ ಬಿಗಿದಪ್ಪಿದನು ಸುಮ್ಮಾ
ನದ ಸಗಾಢವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೆನ್ನ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರಿಗೆ ಬಂದು ಇಂದ್ರನ ಪಾದಗಳಿಗೆ ನಮಸ್ಕಾರ ಮಾಡಿದರೆ, ಇಂದ್ರನು ನನ್ನನ್ನು ಆಲಿಂಗಿಸಿ ಸನ್ಮಾನಿಸಿದನು. ಮತ್ತು ಹರುಷಾಶ್ರುಗಳಿಂದ ತೋಯಿಸಿದನು ಎನ್ನುತ್ತ ಅರ್ಜುನನು ‘ನಿಮ್ಮಡಿಯ ಕೃಪಾಕಟಾಕ್ಷದಿಂದಲೇ ನನ್ನ ಅಭ್ಯುದಯವಾಯಿತು’ ಎಂದು ಧರ್ಮರಾಯನಿಗೆ ಹೇಳಿದನು.
ಮೂಲ ...{Loading}...
ಇದಿರು ಬಂದನು ಪದಯುಗದಲೆರ
ಗಿದರೆ ಬಿಗಿದಪ್ಪಿದನು ಸುಮ್ಮಾ
ನದ ಸಗಾಢವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೆನ್ನ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆಂದ ॥59॥
೦೬೦ ಸುರರು ಕೊಣ್ಡಾಡಿದರು ...{Loading}...
ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು ಕೊಂಡಾಡಿದರು. ದೇವಋಷಿಗಳ ಪರಮಾಶೀರ್ವಾದದ ಫಲದಿಂದಾಗಿ, ನಿನ್ನ ಕೃಪಾದೃಷ್ಟಿಯಿಂದಾಗಿ ಇದು ಸಾಧ್ಯವಾಯಿತು.. ಶತ್ರುಗಳ ಸಂತೋಷ ಸಾಗರವನ್ನು ನನ್ನ ವಡಬಾಗ್ನಿಯಂತಿರುವ ಬಾಣಗಳು ತಮ್ಮ ಭಯಂಕರವಾದ ನಾಲಿಗೆಯಿಂದ ಕುಡಿದು ಹಾಕದೆ ಬಿಡುತ್ತವೆಯೇ?.
ಮೂಲ ...{Loading}...
ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ ॥60॥
೦೬೧ ಲೇಸು ಮಾಡಿದೆ ...{Loading}...
ಲೇಸು ಮಾಡಿದೆ ನಾಕವನು ಖಳ
ರೀಸು ದಿವಸ ವಿಭಾಡಿಸಿದರೆ ಸು
ರೇಶನಾಪತ್ತಾಪ ನಿರ್ವಾಪಣವ ರಚಿಸಿದೆಲ
ಈಸು ಪುಣ್ಯೋದಯಕೆ ಪೂರ್ವಮ
ಹೀಶಕುಲ ನೋಂತುದುಯೆನುತ ಸಂ
ತೋಷಮಯ ಜಲಧಿಯಲಿ ತೇಂಕಾಡಿದನು ಯಮಸೂನು ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದನ್ನೇ ಮಾಡಿದೆ ? ಇಷ್ಟು ದಿವಸ ದನುಜರು ಸ್ವರ್ಗಕ್ಕೆ ಉಪಟಳ ಕೊಟ್ಟರೆ ? ಇಂದ್ರನ ಆಪತ್ತನ್ನು ನಿವಾರಿಸಿದೆಯಲ್ಲಾ ? ನಮ್ಮ ಕುಲದ ಹಿಂದಿನ ರಾಜ ಮಹಾರಾಜರುಗಳ ವ್ರತದಿಂದಾಗಿ ಈ ಪುಣ್ಯ ಪ್ರಾಪ್ತಿಯಾಯಿತು ಎಂದು ಧರ್ಮಜನು ಸಂತೋಷ ಸಾಗರದಲ್ಲಿ ತೇಲಾಡಿದನು.
ಪದಾರ್ಥ (ಕ.ಗ.ಪ)
ವಿಭಾಡಿಸು - ಆಕ್ರಮಿಸು , ಉಪಟಳ ಕೊಡು
ಪೂರ್ವ ಮಹೀಶ - ಹಿಂದಿನ ಚಕ್ರವರ್ತಿ
ನಿರ್ವಾಪಣ - ಪರಿಹಾರ
ಮೂಲ ...{Loading}...
ಲೇಸು ಮಾಡಿದೆ ನಾಕವನು ಖಳ
ರೀಸು ದಿವಸ ವಿಭಾಡಿಸಿದರೆ ಸು
ರೇಶನಾಪತ್ತಾಪ ನಿರ್ವಾಪಣವ ರಚಿಸಿದೆಲ
ಈಸು ಪುಣ್ಯೋದಯಕೆ ಪೂರ್ವಮ
ಹೀಶಕುಲ ನೋಂತುದುಯೆನುತ ಸಂ
ತೋಷಮಯ ಜಲಧಿಯಲಿ ತೇಂಕಾಡಿದನು ಯಮಸೂನು ॥61॥
೦೬೨ ಹೊಗಳಿ ನಿಲ್ಲದು ...{Loading}...
ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮೈ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧ ಭರದಲಿ
ಮುಗಿಯದರಸನ ಗಂಧವಹವವನೀಶ ಕೇಳ್ ಎಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನನ್ನು ಹೊಗಳಿ ಧರ್ಮರಾಯನ ನಾಲಿಗೆ ನಿಲ್ಲದು. ಆಲಿಂಗಿಸಿ ಮೈ ದಣಿಯದು. ನೋಡಿ ಕಣ್ಣುಗಳು ಸೋಲವು. ಮಾತನ್ನು ಕೇಳಿ ಕಿವಿಗಳು ಬಸವಳಿಯವು. ಸ್ವರ್ಗಲೋಕದ ಸುವಾರ್ತೆಯ ಸುಗಂಧವನ್ನು ಆಘ್ರಾಣಿಸಿ ಮೂಗು ಸಾಕೆಂದು ಹೇಳದು.
ಮೂಲ ...{Loading}...
ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮೈ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧ ಭರದಲಿ
ಮುಗಿಯದರಸನ ಗಂಧವಹವವನೀಶ ಕೇಳೆಂದ ॥62॥
೦೬೩ ನೃಪನ ಮುದವನು ...{Loading}...
ನೃಪನ ಮುದವನು ಭೀಮಸೇನನ
ವಿಪುಳ ಸುಮ್ಮಾನವನು ನಕುಲನ
ಚಪಲ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿದು ತನಗೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸಂತೋಷ, ಭೀಮಸೇನನ ಸುಮ್ಮಾನ, ನಕುಲನ ಅಭಿಮಾನ, ಸಹದೇವನ ರೋಮಾಂಚನ, ದ್ರೌಪದಿಯ ಸಂಭ್ರಮ, ಮುನಿ ಜನರ ಹರ್ಷ, ಪರಿಜನರ ಆನಂದ ಇವುಗಳನ್ನೆಲ್ಲಾ ವರ್ಣಿಸಲು ಸಾಧ್ಯವಿಲ್ಲ. ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅಪಗತ ಗ್ಲಾನಿ - ಕಳೆದ ದುಃಖ, ಸಂತೋಷ
ಮೂಲ ...{Loading}...
ನೃಪನ ಮುದವನು ಭೀಮಸೇನನ
ವಿಪುಳ ಸುಮ್ಮಾನವನು ನಕುಲನ
ಚಪಲ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿದು ತನಗೆಂದ ॥63॥
೦೬೪ ಶಿವನಘಾಟದ ಶರ ...{Loading}...
ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲಾ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀ ಶಾಂ
ಭವ ಮಹಾಸ್ತ್ರ ಪ್ರೌಢ ಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶಿವನ ಹತ್ತಿರವಿದ್ದ ಅಸ್ತ್ರವಿದು. ಹದಿನಾಲ್ಕು ಲೋಕಗಳನ್ನೂ ಭಂಜಿಸುವಂತಹುದು. ನಮ್ಮ ಸಂಗ್ರಾಮಕ್ಕೆ ಇದು ಆಯುಧವಾಗಿ ಸೇರಿಕೊಂಡಿದ್ದು ಪುಣ್ಯಫಲ. ಈ ಪಾಶುಪತಾಸ್ತ್ರದ ವಿವರಗಳನ್ನು ಹೇಳಿ ಅದನ್ನು ನಮಗೆ ತೋರಿಸು, ನೋಡಬೇಕೆಂಬ ಆಸೆಯಾಗಿದೆ ಎಂದು ಪಾರ್ಥನಲ್ಲಿ ಧರ್ಮರಾಯ ಹೇಳಿದನು.
ಪದಾರ್ಥ (ಕ.ಗ.ಪ)
ಅರ್ತಿ - ಬಯಕೆ
ಅಘಾಟ - ಅದ್ಭುತ
ಹೂಣಿಗ - ಸಾಧನ, ಸಲಕರಣೆ
ಮೂಲ ...{Loading}...
ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲಾ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀ ಶಾಂ
ಭವ ಮಹಾಸ್ತ್ರ ಪ್ರೌಢ ಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ ॥64॥
೦೬೫ ಜೀಯ ನಿಮ್ಮರ್ತಿಯನು ...{Loading}...
ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣವೈಂದ್ರ ಕೌಬೇರಾಸ್ತ್ರ ಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗ ರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜೀಯ, ನಿಮ್ಮ ಆಸೆಯನ್ನು ಶಿವನ ಶರ ತೋರಿಸಿಯೇ ಈಡೇರಿಸುತ್ತೇನೆ. ಹಾಗೆಯೇ ವರುಣಾಸ್ತ್ರ, ಇಂದ್ರಾಸ್ತ್ರ, ಆಗ್ನೇಯಾಸ್ತ್ರ, ಕೌಬೇರಾಸ್ತ್ರಗಳನ್ನು ತೋರಿಸುತ್ತೇನೆ. ಆದರೆ ಈಗ ಸೂರ್ಯನು ಪಶ್ಚಿಮಗಿರಿಯಲ್ಲಿ ಮುಳುಗುತ್ತ ಸಂಜೆಯಾಗುತ್ತಿರುವುದರಿಂದ ಅದು ಸೂಕ್ತವಲ್ಲ " ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣವೈಂದ್ರ ಕೌಬೇರಾಸ್ತ್ರ ಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗ ರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ ॥65॥
೦೬೬ ಅರಸ ಕಳುಹಿದನಿನ್ದ್ರ ...{Loading}...
ಅರಸ ಕಳುಹಿದನಿಂದ್ರ ಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಚೌಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿ ವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಇಂದ್ರನ ಸಾರಥಿಯನ್ನು ಕಳುಹಿಸಿದನು. ಪಾರ್ಥನು ಋಷಿಮುನಿಗಳೊಂದಿಗೆ ಪರ್ಣಕುಟೀರದೊಳಗೆ ಬಂದನು. ವೀರನಾರಾಯಣನ ಮೈದುನನಾದ ಅರ್ಜುನನಿಗೆ ದ್ರೌಪದಿಯು ದೀಪವನ್ನು ಹಚ್ಚಿದಳು. ಮುನಿ, ವಧುಗಳು ಅಕ್ಷತೆ ಕಾಳು ಹಾಕಿ ಹರಸಿದರು.
ಪದಾರ್ಥ (ಕ.ಗ.ಪ)
ಪರ್ಣದ ಚೌಕಿಗೆ - ಪರ್ಣಕುಟೀರಕ್ಕೆ
ಮೂಲ ...{Loading}...
ಅರಸ ಕಳುಹಿದನಿಂದ್ರ ಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಚೌಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿ ವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ ॥66॥