೦೦೦ ಸೂ ಭೀಮ ...{Loading}...
ಸೂ. ಭೀಮ ಕೊಂದನು ಕಲಿಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕಂಡನು ಪಾರ್ಥನಗ್ರಜನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಭೀಮಸೇನನು ಜಟಾಸುರ ಮಣಿಮಾನನನ್ನು ಕೊಂದನು. ಅರ್ಜುನನು ಭೂಲೋಕಕ್ಕೆ ಇಳಿದು ಬಂದು ಅಣ್ಣನನ್ನು ಕಂಡನು.
ಮೂಲ ...{Loading}...
ಸೂ. ಭೀಮ ಕೊಂದನು ಕಲಿಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕಂಡನು ಪಾರ್ಥನಗ್ರಜನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದವತಿ ರಂಜಿಸಿದವದುಭುತವ
ಕೇಳಿದನಿದೇನೆಂದು ವರ ವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ಧರ್ಮರಾಯನ ಓಲಗದಲ್ಲಿ ಇವರನ್ನು ಭೀತಿಗೊಳಿಸುವಂತಹ ನೂರಾರು ಉತ್ಪಾತಗಳು ಉಂಟಾದವು. ಧರ್ಮರಾಯನು ಬ್ರಾಹ್ಮಣರನ್ನು ಇದೇನೆಂದು ಕೇಳಲು, ಧೌಮ್ಯರೇ ಮೊದಲಾದ ಋಷಿಗಳು ಆ ಶಕುನಗಳ ಫಲಗಳನ್ನು ತಿಳಿಸಿದರು.
ಮೂಲ ...{Loading}...
ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದವತಿ ರಂಜಿಸಿದವದುಭುತವ
ಕೇಳಿದನಿದೇನೆಂದು ವರ ವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ ॥1॥
೦೦೨ ಸರಸ ಸೌಗನ್ಧಿಕದ ...{Loading}...
ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೌಗಂಧಿಕ ಪುಷ್ಪವನ್ನು ತರಲು ಭೀಮಸೇನನು ಹೋದನೆಂಬ ಸಂಗತಿಯನ್ನು ದ್ರೌಪದಿಯಿಂದ ತಿಳಿದು ಧರ್ಮಜನು ಖಿನ್ನನಾದನು. ಅರ್ಜುನನು ಎಲ್ಲಿರುವನೆಂಬ ವಿಚಾರವೂ ತಿಳಿಯದು. ಭೀಮನಿಗೆ ಏನಾಗಿದೆಯೋ ಎಂದು ಧರ್ಮರಾಯನಿಗೆ ಚಿಂತೆ ಹೆಚ್ಚಿ, ಭೀಮನನ್ನು ನೋಡುವ ತವಕದಿಂದ ಇದ್ದನು.
ಪದಾರ್ಥ (ಕ.ಗ.ಪ)
ಪೂರಾಯ-ಅಧಿಕವಾದ
ಮೂಲ ...{Loading}...
ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ ॥2॥
೦೦೩ ಆ ಸಕಲ ...{Loading}...
ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಕ ಪದುಮಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸವನುಯಿದೆ ಬಂದ ಪವನಜನೆಂದುದೀ ಕಟಕ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಹೋದ ದಾರಿಯಲ್ಲೇ ಅವನನ್ನು ಹುಡುಕುತ್ತಾ ಸಕಲ ಪರಿವಾರ, ರಾಣೀವಾಸ ಸಹಿತ ಧರ್ಮರಾಯನು ಬಂದನು. ಅಷ್ಟರಲ್ಲಿ ಸೌಗಂಧಿಕ ಹೂವಿನ ಪರಿಮಳವು ಅವರನ್ನು ಆವರಿಸಲು , ‘ಭೀಮಸೇನನು ಬಂದನು’ ಎಂದು ಎಲ್ಲರೂ ಹೇಳಿದರು.
ಪದಾರ್ಥ (ಕ.ಗ.ಪ)
ಬಾಸಣಿಸು - ಆವರಿಸು, ಹಬ್ಬು
ಮೂಲ ...{Loading}...
ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಕ ಪದುಮಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸವನುಯಿದೆ ಬಂದ ಪವನಜನೆಂದುದೀ ಕಟಕ ॥3॥
೦೦೪ ಎನಲು ಬನ್ದನು ...{Loading}...
ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ
ಜಿನುಗು ದುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣ ಕೆಂಪಿನ
ಘನ ಭಯಂಕರ ರೂಪ ಭೀಮನ ಕಂಡನವನೀಶ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ತಾವರೆಯ ತೋಟವೇ ಎದುರು ಬಂದಂತೆ, ಪರಿಮಳಭರಿತವಾದ ಸೌಗಂಧಿಕ ತಾವರೆಯನ್ನು ಕೈಯ್ಯಲ್ಲಿ ಹಿಡಿದು ಗುಂಜಾರವ ಮಾಡಿತ್ತಿರುವ ದುಂಬಿಗಳ ಸಹಿತ ಮಿಂಚುತ್ತಿರುವ ಮೋರೆ ಮತ್ತು ಕೆಂಪಾದ ಕಣ್ಣುಗಳಿಂದ ಭಯಂಕರನಾಗಿ ಕಣುತ್ತಿದ್ದ ಭೀಮನನ್ನು ಧರ್ಮಜನು ಕಂಡನು.
ಮೂಲ ...{Loading}...
ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ
ಜಿನುಗು ದುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣ ಕೆಂಪಿನ
ಘನ ಭಯಂಕರ ರೂಪ ಭೀಮನ ಕಂಡನವನೀಶ ॥4॥
೦೦೫ ಸೆಳೆದು ತಕ್ಕೈಸಿದನು ...{Loading}...
ಸೆಳೆದು ತಕ್ಕೈಸಿದನು ತಾವರೆ
ಗೊಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನ ಗಂಧದ ಗಾಢತರ ಸುಖ
ದೊಳಗೆ ಹೊಂಪುಳಿವೋಗಿ ಭೂಪತಿ
ತಿಲಕನಿದ್ದನು ಗಂಧಮಾದನ ಗಿರಿಯ ತಪ್ಪಲಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಭೀಮನನ್ನು ಬರಸೆಳೆದು ಬಿಗಿದಪ್ಪಿ, ಸರೋವರದಲ್ಲಾದ ಯುದ್ಧದ ವಿಷಯವನ್ನು ಕೇಳಿ ಕಂಪಿಸಿ, ಹನುಮದರ್ಶನದ ವಿಚಾರವನ್ನರಿತು ಸಂತೋಷ ಹೊಂದಿದನು. ಸೌಗಂಧಿಕ ಪುಷ್ಪದ ಪರಿಮಳದಿಂದ ಪುಳಕಿತನಾದನು. ನಂತರ ಗಂಧಮಾದನ ಗಿರಿಯ ತಪ್ಪಲಿನಲ್ಲಿ ಸಂತೋಷದಿಂದ ವಾಸವಾಗಿದ್ದನು.
ಪದಾರ್ಥ (ಕ.ಗ.ಪ)
ಹೊಂಪುಳಿವೋಗಿ - ರೋಮಾಂಚನ , ಪುಳಕ
ತೋಟಿ - ಯುದ್ಧ
ಮೂಲ ...{Loading}...
ಸೆಳೆದು ತಕ್ಕೈಸಿದನು ತಾವರೆ
ಗೊಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನ ಗಂಧದ ಗಾಢತರ ಸುಖ
ದೊಳಗೆ ಹೊಂಪುಳಿವೋಗಿ ಭೂಪತಿ
ತಿಲಕನಿದ್ದನು ಗಂಧಮಾದನ ಗಿರಿಯ ತಪ್ಪಲಲಿ ॥5॥
೦೦೬ ಗಿರಿಯ ತುದಿಗೇರುವ ...{Loading}...
ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬಂದನು ಬದರಿಕಾಶ್ರಮಕೆ
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನಿತ್ತಲು ಬಂದು ಮುತ್ತಿತು ದಾನವರ ಧಾಳಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟದ ತುದಿಗೇರುವ ಬಯಕೆಯನ್ನು ಧರ್ಮಜ ಹೊಂದಿದ್ದರೂ, ಅದು ಆಕಾಶವಾಣಿಯಿಂದಾಗಿ ನಿಂತು ಹೋಯಿತು. ಗಿರಿಯಿಂದ ಕೆಳಗಿಳಿದು ಮತ್ತೆ ಬದರಿಕಾಶ್ರಮಕ್ಕೆ ಬಂದನು. ಜನಮೇಜಯನೇ, ವಿಪತ್ತುಗಳ ಪರಿಯನ್ನು ಮತ್ತೆ ಕೇಳು. ಒಮ್ಮೆ ಭೀಮಸೇನನು ಬೇಟೆಗಾಗಿ ಹೋದ ನಂತರ ರಾಕ್ಷಸರು ಆಶ್ರಮದ ಮೇಲೆ ದಾಳಿ ಮಾಡಿದರು.
ಪದಾರ್ಥ (ಕ.ಗ.ಪ)
ಪರುಠವ- ವಿಸ್ತೀರ್ಣ
ಮಾರಿ - ಕೇಡು, ವಿಪತ್ತು
ಮೂಲ ...{Loading}...
ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬಂದನು ಬದರಿಕಾಶ್ರಮಕೆ
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನಿತ್ತಲು ಬಂದು ಮುತ್ತಿತು ದಾನವರ ಧಾಳಿ ॥6॥
೦೦೭ ಖಳ ಜಟಾಸುರನೆಮ್ಬನಾ ...{Loading}...
ಖಳ ಜಟಾಸುರನೆಂಬನಾ ದ್ವಿಜ
ಕುಲವನಂಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿ ಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆಂಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಟಾಸುರನೆಂಬ ದುಷ್ಟನು ಬ್ರಾಹ್ಮಣರನ್ನು ಬೆದರಿಸಿ, ನಕುಲ ಸಹದೇವರನ್ನು ಭಯಂಕರವಾದ ಕಾಳಗದಲ್ಲಿ ಸೋಲಿಸಿ, ದ್ರೌಪದಿಯನ್ನು ಸೆರೆಹಿಡಿದನು. ಅವನೊಂದಿಗೆ ಮತ್ತೆ ಅವರು ಹೋರಾಡಿ ಬಳಲಿದಾಗ ಉಳಿದವರೆಲ್ಲಾ ಅವನನ್ನು ಬೆಂಬತ್ತಿದರು. ಕೆಲವರು ಭೀಮಸೇನನನ್ನು ಹುಡುಕುತ್ತಾ ಹೊರಟರು.
ಪದಾರ್ಥ (ಕ.ಗ.ಪ)
ಬಲುಗಡಿಯ - ಮಹಾಪರಾಕ್ರಮಶಾಲಿ
ಗಾವಳಿ - ಗುಂಪು
ಮೂಲ ...{Loading}...
ಖಳ ಜಟಾಸುರನೆಂಬನಾ ದ್ವಿಜ
ಕುಲವನಂಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿ ಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆಂಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ ॥7॥
೦೦೮ ತಳಿರ ಕೈಗಳ ...{Loading}...
ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕಂಗಳ ತಾಪದಿಂದೊಳ
ಝಳದಿಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ
ಕಳಕಳದ ಕಾಲುವೆಯ ಭಂಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕಂಡನು ಭೀಮನೇನೇನೆಂದು ಬೆಸಗೊಂಡ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಯಲ್ಲಿ ತಳಿರು, ಬಾಯಲ್ಲಿ ಕೂಗು, ಕಂಗಳಲ್ಲಿ ನೀರು, ಅಳ್ಳೆಗಳಲ್ಲಿ ತಾಪ, ಭಯದಿಂದ ಗದ್ಗದಿತವಾಗಿದ್ದ ಕೊರಳು - ಹೀಗೆ ಕಳವಳ, ಬವಣೆ, ಚಿಂತೆಗಳಿಂದ ಕೂಡಿದವರನ್ನು ಕಂಡು ಭೀಮನು ಏನು ಎಂದು ವಿಚಾರಿಸಿದನು.
ಪದಾರ್ಥ (ಕ.ಗ.ಪ)
ಸವ್ಯಾಕುಲ - ಚಿಂತೆಗೊಳಗಾದವನು.
ಮೂಲ ...{Loading}...
ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕಂಗಳ ತಾಪದಿಂದೊಳ
ಝಳದಿಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ
ಕಳಕಳದ ಕಾಲುವೆಯ ಭಂಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕಂಡನು ಭೀಮನೇನೇನೆಂದು ಬೆಸಗೊಂಡ ॥8॥
೦೦೯ ಹಿಡಿದರರಸಿಯನವನಿಪತಿ ಹಿಡಿ ...{Loading}...
ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರು ಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ
ಕಡುಹು ಘನವಿದೆ ದಾನವರವಂ
ಗಡವೆನಲು ಘನ ಸಿಂಹ ನಾದದ
ಸಿಡಿಲ ಶಿಕ್ಷಾಗುರುವೆನಲು ಮೊಳಗಿದನು ಕಲಿಭೀಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರು ದ್ರೌಪದಿಯನ್ನು ಹಿಡಿದರು, ಧರ್ಮಜ, ನಕುಲ ಸಹದೇವರನ್ನು ಬಂಧಿಸಿದರು. ಬ್ರಾಹ್ಮಣರು ಕಾಡಿನಲ್ಲಿ ಓಡಿ ಹೋದರು. ನಿಮ್ಮ ಪರಿವಾರದವರೆಲ್ಲ ಕೈಸೋತರು. ರಾಕ್ಷಸರ ಪರಿವಾರ ದೊಡ್ಡದಾಗಿದೆ. ಎಂದು ಹೇಳಲು, ಸಿಡಿಲ ಶಿಕ್ಷಾ ಗುರುವಿನಂತೆ ಭೀಮನು ಅಬ್ಬರಿಸಿದನು.
ಪದಾರ್ಥ (ಕ.ಗ.ಪ)
ವಂಗಡ - ಪಂಗಡ - ಗುಂಪು
ಹಾಯ್ದರು - ಓಡಿದರು
ಮೂಲ ...{Loading}...
ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರು ಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ
ಕಡುಹು ಘನವಿದೆ ದಾನವರವಂ
ಗಡವೆನಲು ಘನ ಸಿಂಹ ನಾದದ
ಸಿಡಿಲ ಶಿಕ್ಷಾಗುರುವೆನಲು ಮೊಳಗಿದನು ಕಲಿಭೀಮ ॥9॥
೦೧೦ ಧಾಳಿಯಿಟ್ಟನು ದಾನವರ ...{Loading}...
ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೀ ಬೆಳಸುವೆನು ದಿವಿ
ಜಾಳಿಗಳ ಸಂತೋಷ ಸಸಿಯನೆನುತ್ತ ಗರ್ಜಿಸಿದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ದಾಳಿಯಿಟ್ಟು, ರಾಕ್ಷಸರ ಪಡೆಯನ್ನು ಕೊಂದು , ತನ್ನವರ ಬಂಧನವನ್ನು ಬಿಡಿಸಿದನು. “ದೇವತೆಗಳ ಸಂತೋಷವೆಂಬ ಗಿಡವನ್ನು ಈ ನಾಯಿಗಳನ್ನು ಸೀಳಿ ಅವರ ನೆತ್ತರುಗಾಲುವೆಯಿಂದ ಪೋಷಿಸುತ್ತೇನೆ” ಎಂದು ಭೀಮನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ದೆಖ್ಖಾಳ - ಆಧಿಕ್ಯ , ಅತಿಶಯತೆ
ಮೂಲ ...{Loading}...
ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೀ ಬೆಳಸುವೆನು ದಿವಿ
ಜಾಳಿಗಳ ಸಂತೋಷ ಸಸಿಯನೆನುತ್ತ ಗರ್ಜಿಸಿದ ॥10॥
೦೧೧ ಮಸಗಿತಿಬ್ಬರಿಗದುಭುತಾಹವ ...{Loading}...
ಮಸಗಿತಿಬ್ಬರಿಗದುಭುತಾಹವ
ವುಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದಂಡೆಯಲಿ ತಡೆಗಾಲಲೊಡೆ ಹೊಯ್ದು
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನಿಗೂ ಜಟಾಸುರನಿಗೂ ಅದ್ಭುತ ಕಾಳಗ ನಡೆಯಿತು. ವಿವಿಧ ಪಟ್ಟುಗಳಿಂದ ರಭಸವಾಗಿ ಹೊಡೆದು, ಕಾಲಿನಿಂದ ಮೆಟ್ಟಿ, ನವದ್ವಾರಗಳಲ್ಲಿ ಬಿಸಿನೆತ್ತರು ಒಸರುವಂತೆ ತಿವಿದು, ಜಟಾಸುರನನ್ನು ಭೀಮಸೇನನು ಕೊಂದನು.
ಪದಾರ್ಥ (ಕ.ಗ.ಪ)
ಧಾಳಾಧೂಳಿ - ರಭಸ
ಕುಸುಕಿರಿ - ತಿವಿ, ಗುದ್ದು
ಟಿಪ್ಪನೀ (ಕ.ಗ.ಪ)
ಜಟಾಸುರ - ಅರಣ್ಯವಾಸದ ಕಾಲದಲ್ಲಿ ಪಾಂಡವರು ಗಂಧಮಾದನ ಪರ್ವತದಲ್ಲಿದ್ದಾಗ ಜಟಾಸುರನು ದ್ರೌಪದಿಯನ್ನು ಹೊತ್ತೊಯ್ಯಬೇಕೆಂದು ತೀರ್ಮಾನಿಸುತ್ತಾನೆ. ಜತೆಗೆ ಭೀಮನು ಇಲ್ಲದ ಸಮಯವನ್ನು ಸಾಧಿಸಿ ಪಾಂಡವರನ್ನೆಲ್ಲ ಎಳೆದುಕೊಂಡು ಹೋಗುವುದು ಮತ್ತು ಅವರೆಲ್ಲರ ಶಸ್ತ್ರಾಸ್ತ್ರಗಳನ್ನೂ ಅಪಹರಿಸುವುದು ಅವನ ಸಂಕಲ್ಪವಾಗಿತ್ತು. ಅದಕ್ಕೆ ಅಗತ್ಯವಾದ ಬೇಹುಗಾರಿಕೆಯನ್ನು ಅವನು ಮಾಡಿದ. ಒಬ್ಬ ಬ್ರಾಹ್ಮಣನ ವೇಷ ಹಾಕಿಕೊಂಡು ಪಾಂಡವರ ಅತಿಥಿಯಾಗುವಷ್ಟು ಆತ್ಮೀಯ ಸಂಪರ್ಕ ಪಡೆದ. ಅಲ್ಲದೇ ಆಗಾಗ ಧರ್ಮರಾಯನ ಬಳಿಗೆ ಬಂದು ಹೋಗುತ್ತಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಒಂದು ಸೂಕ್ತ ಅವಕಾಶ ಒದಗಿಬಂತು. ಘಟೋತ್ಕಚನು ತನ್ನ ಅನುಚರರೊಂದಿಗೆ ಊರಿಗೆ ಹಿಂದಿರುಗಿದದ. ಲೋಮಶ ಮಹರ್ಷಿಗಳು ತಮ್ಮ ಗುಂಪಿನೊಂದಿಗೆ ಸ್ನಾನಕ್ಕೆ ಮತ್ತು ಪುಷ್ಪಗಳನ್ನು ತರುವುದಕ್ಕೆ ಹೋಗಿದ್ದರು. ಭೀಮನು ಬೇಟೆಗೆಂದು ಹೋಗಿದ್ದ ಈ ಸಮಯದಲ್ಲಿ ಜಟಾಸುರನು ಒಳಗೆ ನುಗ್ಗಿ ದ್ರೌಪದಿ ಧರ್ಮರಾಯ ನಕಲು, ಸಹದೇವರನ್ನು ಹೊತ್ತೊಯ್ದ. ಸಹದೇವನು ಹೇಗೋ ತಪ್ಪಿಸಿಕೊಂಡು ಭೀಮನಿಗೆ ಸುದ್ದಿ ತಿಳಿಸಲು ಕೂಗುತ್ತ ಕೌಶಿಕ ಎಂಬ ಕತ್ತಿಯನ್ನು ಹಿರಿದು ಜಟಾಸುರನ ಮೇಲೆ ಆಕ್ರಮಣಕ್ಕೆ ಸಿದ್ಧನಾದ. ಅಷ್ಟರಲ್ಲಿ ಭೀಮನಿಗೆ ಕೂಗು ಕೇಳಿಸಿದ್ದರಿಂದ ಅವನು ಓಡಿಬಂದ. ಮೊದಲು ರಾಕ್ಷಸನ ಹಿಡಿತದಿಂದ ಧರ್ಮರಾಯಾದಿಗಳನ್ನು ಬಿಡಿಸಿದ. ಅನಂತರ ಅವರಿಬ್ಬರ ಮಧ್ಯೆ ಘೋರ ಯುದ್ಧವಾಯಿತು. ದಾರಿಯಲ್ಲಿ ಸಿಕ್ಕಮರಗಳನ್ನೇ ಕಿತ್ತು ಇಬ್ಬರೂ ಹೊಡೆದಾಡಿದರು. ಅನಂತರ ಶಿಲಾಯುದ್ಧವನ್ನೂ ಮಾಡಿದರು. ಕೊನೆಗೆ ಮಲ್ಲಯುದ್ಧದಲ್ಲಿ ಭೀಮನು ಜಟಾಸುರನನ್ನು ಕೊಂದ. ಧರ್ಮರಾಯನು ಈ ಮುನ್ನ ತನ್ನ ಮಹಿಮೆಯಿಂದ ತನ್ನ ದೇಹವನ್ನು ತುಂಬ ಭಾರಮಾಡಿಕೊಂಡಿದ್ದರಿಂದ ರಾಕ್ಷಸನಿಗೆ ಅವರನ್ನೆಲ್ಲ ಹೊತ್ತು ಓಡಲು ಸಾಧ್ಯವಾಗದೆ ನಿಧಾನವಾಗಿ ನಡೆದು ಭೀಮನ ಕೈಗೆ ಸಿಕ್ಕಿಕೊಂಡ. ಸಹದೇವನು ಕತ್ತಿ ಹಿರಿದು ಯುದ್ಧ ಮಾಡಲು ಹೋದಾಗ ಧರ್ಮರಾಯನು ಅದನ್ನು ತಪ್ಪಿಸಿ ತಾನೇ ಅವನ ದೇಹ ಸತ್ವವನ್ನು ಹೀರಿಕೊಂಡಿರುವುದರಿಂದ ಅವನು ನಡೆಯಲಾರನೆಂದೂ ಯಾರೂ ಹೆದರಬಾರದೆಂದೂ ಹೇಳಿದ. ಅಲ್ಲದೆ ತನ್ನ ಆತಿಥ್ಯವನ್ನು ಸ್ವೀಕರಿಸಿ ತನ್ನ ಮೇಲೇ ಕೈಮಾಡುವುದು ಧರ್ಮವಲ್ಲ ಎಂದು ರಾಕ್ಷಸನಿಗೆ ಹೇಳಿದ. ‘‘ನನ್ನ ಆಯುಧ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಕೊಟ್ಟು ಸರಿಯಾದ ರೀತಿಯಲ್ಲಿ ಯುದ್ಧಮಾಡಿ ಸೋಲಿಸಿದ ನಂತರ ಏನು ಬೇಕಾದರೂ ಮಾಡು. ಹೀಗೆ ಶಸ್ತ್ರಾಸ್ತ್ರವಿಲ್ಲದೆ ನಿರಾಯುಧರಾದವರನ್ನು ಹಿಂಸಿಸುವುದು ಸರಿಯಲ್ಲ’’ ಎಂದು ಹೇಳಿದ. ಮಹಿಳೆಯನ್ನು ಹೊತ್ತೊಯ್ಯುವುದಂತೂ ಆತ್ಮಘಾತಕವಾದ ಪಾಪಚರ್ಯೆಯಾಗುತ್ತದೆ ಎಂದು ಎಚ್ಚರಿಸಿದ. ರಾಕ್ಷಸರು ವಿಚಾರವಂತರು ನೀತಿಪರರು ಎಂದು ತಮ್ಮ ಸಹದೇವನಿಗೆ ಹೇಳಿ ಅವನು ಯುದ್ಧಕ್ಕೆ ಹೋಗದಂತೆ ತಡೆದಿದ್ದ. ಧರ್ಮರಾಯನು ಈ ಪ್ರಕರಣದಲ್ಲಿ ತುಂಬ ವಿಚಿತ್ರ ರೀತಿಯಲ್ಲಿ ಯೋಚಿಸುವವನಂತೆ ಕಾಣುತ್ತಾನೆ ಎಂಬುದು ನಿಜ. ಆದರೆ ಎಂಥ ಉತ್ಕಟ ಪರಿಸ್ಥಿತಿಯಲ್ಲೂ ಧರ್ಮರಾಯನು ತನ್ನ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಜಟಾಸುರನು ಮಹಾಬ್ರಾಹ್ಮಣನಂತೆ ವೇಷಹಾಕಿಕೊಂಡ ತನ್ನ ವೇದ ಜ್ಞಾನವನ್ನು ಪ್ರದರ್ಶಿಸಿ ಧರ್ಮರಾಯನ ಮನಸ್ಸನ್ನು ಗೆದ್ದುಕೊಂಡು ಅನಂತರ ತನ್ನ ರಾಕ್ಷಸೀ ಸ್ವಭಾವವನ್ನು ಕಾಣಿಸಿರುವುದು ರಾಕ್ಷಸರು ಎಂಥ ಮಾಯಾವಿಗಳೆಂಬುದನ್ನು ತೋರಿಸಿಕೊಡುತ್ತದೆ.
ಮೂಲ ...{Loading}...
ಮಸಗಿತಿಬ್ಬರಿಗದುಭುತಾಹವ
ವುಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದಂಡೆಯಲಿ ತಡೆಗಾಲಲೊಡೆ ಹೊಯ್ದು
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ ॥11॥
೦೧೨ ಅರಸ ಕೇಳಾ ...{Loading}...
ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷ ಪರ್ವತಾಶ್ರಮವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಆ ರಾಕ್ಷಸನ ದೇಹವು ಬಿರಿದು ಬೀಳಲು, ಹೆಣದ ಹೊಲಸು ವಾಸನೆ ವನವನ್ನೆಲ್ಲಾ ವ್ಯಾಪಿಸಿತು. ಧರ್ಮರಾಜನು ಆ ಬದರಿಕಾಶ್ರಮವನ್ನು ಬಿಟ್ಟು ದಕ್ಷಿಣದ ಕಡೆಗೆ ಬಂದು ವೃಷಪರ್ವತಾಶ್ರಮವನ್ನು ಸೇರಿದನು.
ಪದಾರ್ಥ (ಕ.ಗ.ಪ)
ಗವಲು - ಘಮಲು, ವಾಸನೆ
ಮೂಲ ...{Loading}...
ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷ ಪರ್ವತಾಶ್ರಮವ ॥12॥
೦೧೩ ಆ ತಪೋವನವಿವರ ...{Loading}...
ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆಂಬವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ತಪೋವನವು ಇವರ ಅಬ್ಬರಗಳನ್ನು ತಾಳಿಕೊಳ್ಳಲು ಸಮರ್ಥವಾಗಲಿಲ್ಲ. ಒಮ್ಮೆ ಭೀಮನು ವಿನೋದಕ್ಕಾಗಿ ಅಲ್ಲಿದ್ದ ಗಿರಿಯ ಶಿಖರದ ಮೇಲಕ್ಕೆ ಹೋದನು. ಅಲ್ಲಿ ಮಣಿಮಾನನೆಂಬ ಒಬ್ಬ ರಾಕ್ಷಸನು ವನ ಮೇಲೆ ಬಿದ್ದನು. ಇಬ್ಬರೂ ಇಡೀ ಪರ್ವತವೇ ನಡುಗುವಂತೆ ಕಾದಾಡಿದರು.
ಪದಾರ್ಥ (ಕ.ಗ.ಪ)
ಘಲ್ಲಣೆ - ಅಬ್ಬರ
ಮೇಖಲೆ - ಶಿಖರ, ಪರ್ವತಾಗ್ರ
ಮೂಲ ...{Loading}...
ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆಂಬವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು ॥13॥
೦೧೪ ಕೊನ್ದನವನನು ವಿಗತ ...{Loading}...
ಕೊಂದನವನನು ವಿಗತ ಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆ ಯಕ್ಷಪತಿ ನಲ
ವಿಂದಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಣಿಮಾನನನ್ನೂ ಭೀಮನು ಕೊಂದನು. ಆಗ ಶಾಪವಿಮೋಚನೆಗೊಂಡ ಆ ರಾಕ್ಷಸನು ಯಕ್ಷ ರೂಪದಲ್ಲಿ ನಿಂತು ಅಗಸ್ತ್ಯಮುನಿಗಳು ಹಿಂದೆ ತನಗೆ ಕೊಟ್ಟ ಶಾಪದ ಕಥೆಯನ್ನು ಹೇಳಿದನು. ಆಗ ಅಲ್ಲಿಗೆ ಯಕ್ಷಪತಿ ಕುಬೇರನು ಬಂದು ಪಾಂಡವರಿಗೆ ವಿವಿಧ ವಸ್ತುಗಳನ್ನು ಕೊಟ್ಟು ಸತ್ಕರಿಸಿ, ಅವರನ್ನು ಹೊಗಳಿದನು.
ಮೂಲ ...{Loading}...
ಕೊಂದನವನನು ವಿಗತ ಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆ ಯಕ್ಷಪತಿ ನಲ
ವಿಂದಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ ॥14॥
೦೧೫ ಅರಸನತಿ ಸನ್ತೋಷಮಯ ...{Loading}...
ಅರಸನತಿ ಸಂತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ
ಪರಮ ಋಷಿಗಳ ಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆನೆನೆದರಸ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ಒಮ್ಮೆ ಸಂತೋಷ ಸಾಗರದಲ್ಲಿ ಮುಳುಗುತ್ತಾನೆ. ಮತ್ತೊಮ್ಮೆ ಅರ್ಜುನನಿಲ್ಲವೆಂಬ ವಿರಹ ದುಃಖದಲ್ಲಿ ಬಳಲುತ್ತಾನೆ. ಒಮ್ಮೆ ಮಹರ್ಷಿಗಳ ಪ್ರಿಯ ಸಂಭಾಷಣೆಯಲ್ಲಿ ಸುಖಿಸುತ್ತಾನೆ. ಮತ್ತೊಮ್ಮೆ ಅರ್ಜುನನನ್ನು ನೆನೆದು ಮರುಳನಂತೆ ದುಃಖಿಸುತ್ತಾನೆ.
ಮೂಲ ...{Loading}...
ಅರಸನತಿ ಸಂತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ
ಪರಮ ಋಷಿಗಳ ಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆನೆನೆದರಸ ಕೇಳೆಂದ ॥15॥
೦೧೬ ಅರಸನಲಿ ಬೇರೂರಿ ...{Loading}...
ಅರಸನಲಿ ಬೇರೂರಿ ಮಗುಳಂ
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು
ಅರಸಿಯಲಿ ಸಲೆ ಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದ ಕರಣಾವಳಿಯ ಹಬ್ಬುಗೆಯ ಹರಹಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದುಃಖವೆಂಬ ಬಳ್ಳಿಯು ಧರ್ಮಜನಲ್ಲಿ ಬೇರೂರಿ, ಭೀಮನಲ್ಲಿ ಮೊಳೆತು, ನಕುಲನಲ್ಲಿ ಎರಡು ಮೂರೆಲೆಯಾಗಿ ಚಿಗುರಿ, ಸಹದೇವನಲ್ಲಿ ಕವಲೊಡೆದು, ದ್ರೌಪದಿಯಲ್ಲಿ ಹೂವಾಗಿ ಕಾಯಾಗಿ, ಅವರ ಸರ್ವೇಂದ್ರಿಯಗಳಲ್ಲಿಯೂ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಉಬ್ಬರಿಸು - ಅತಿಶಯವಾಗು
ಹೂತು - ಹೂಬಿಟ್ಟು
ಕಾತು - ಕಾಯಿಬಿಟ್ಟು
ಮೂಲ ...{Loading}...
ಅರಸನಲಿ ಬೇರೂರಿ ಮಗುಳಂ
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು
ಅರಸಿಯಲಿ ಸಲೆ ಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದ ಕರಣಾವಳಿಯ ಹಬ್ಬುಗೆಯ ಹರಹಿನಲಿ ॥16॥
೦೧೭ ಮರೆದನೋ ನಮ್ಮಿನಿಬರನು ...{Loading}...
ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇಂದ್ರನ
ಸೆರಗು ಸೋಂಕುವ ಸಲುಗೆಯುಂಟೇ ಮತ್ರ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನಂಗೈಸನೆಂದವನೀಶ ಚಿಂತಿಸಿದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮೆಲ್ಲರನ್ನೂ ಮರೆತು ಬಿಟ್ಟನೋ. ಮತ್ರ್ಯದ ಮನುಷ್ಯರಿಗೆ ದೇವೇಂದ್ರನ ಜೊತೆಗಿರುವ ಸಲುಗೆ ದೊರೆತಾಗ ಹೀಗಾಗುವುದು ಸಹಜವೇ. ಆ ದೇವೇಂದ್ರನ ಸ್ವರ್ಗ ಭೋಗಭಾಗ್ಯಗಳಿಂದಾಗಿ ನಮ್ಮ ಈ ವನವಾಸದ ಬಂಧನಕ್ಕೆ ಅರ್ಜುನನು ಯಾಕಾದರೂ ಹಪಹಪಿಸುತ್ತಾನೆ’ ಎಂದು ಧರ್ಮಜ ಚಿಂತಿಸಿದ.
ಪದಾರ್ಥ (ಕ.ಗ.ಪ)
ಅಂಗೈಸು - ಒಪ್ಪು , ಸಮ್ಮತಿಸು
ಮೂಲ ...{Loading}...
ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇಂದ್ರನ
ಸೆರಗು ಸೋಂಕುವ ಸಲುಗೆಯುಂಟೇ ಮತ್ರ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನಂಗೈಸನೆಂದವನೀಶ ಚಿಂತಿಸಿದ ॥17॥
೦೧೮ ವಾಮ ನಯನ ...{Loading}...
ವಾಮ ನಯನ ಸ್ಫುರಣ ಪರಿಗತ
ವಾಮ ಬಾಹು ಸ್ಪಂದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯವ್ಯಸನ ನಿರಸನ
ಕ್ಕೀ ಮಹಾ ಶಕುನಂಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದೀದೇವಿಗೆ ಎಡಗಣ್ಣು, ಎಡಭುಜ ಅದುರಿತು. ಧರ್ಮರಾಯನಿಗೆ ಬಲಭಾಗದಲ್ಲಿ ಅಂಗಸ್ಫುರಣವಾಯ್ತು. ಈ ಶಕುನಗಳು ಮನಸ್ಸಿನ ದುಃಖ ದುಮ್ಮಾನಗಳ ಪರಿಹಾರವನ್ನು ಸೂಚಿಸುತ್ತವೆ ಎಂದು ಧರ್ಮಜನು ಭಾವಿಸಿ, ಅರ್ಜುನನ ಆಗಮನದ ನಿರೀಕ್ಷೆಯಲ್ಲಿದ್ದನು.
ಪದಾರ್ಥ (ಕ.ಗ.ಪ)
ಸ್ಫುರಣ - ಅದುರುವಿಕೆ
ಸ್ಪಂದ - ಅದುರುವಿಕೆ
ಮೂಲ ...{Loading}...
ವಾಮ ನಯನ ಸ್ಫುರಣ ಪರಿಗತ
ವಾಮ ಬಾಹು ಸ್ಪಂದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯವ್ಯಸನ ನಿರಸನ
ಕ್ಕೀ ಮಹಾ ಶಕುನಂಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ ॥18॥
೦೧೯ ಅರಸ ಕೇಳೈ ...{Loading}...
ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದೆಲೆಯ ವನದಲಿ ವಸಂತನ ಬರವಿನಂದದಲಿ
ಸುರ ವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೆ ಕೇಳು, ಹಿಮದ ಹೊಡೆತಕ್ಕೆ ಸಿಕ್ಕ ತಾವರೆಗೆ ಸೂರ್ಯ ಬಂದಂತೆ, ಶಿಶಿರದಲ್ಲಿ ಎಲೆಗಳನ್ನು ಕಳೆದುಕೊಂಡ ವನಕ್ಕೆ ವಸಂತ ಋತು ಆಗಮಿಸಿದಂತೆ, ದೇವವಿಮಾನದಲ್ಲಿ ಅರ್ಜುನನು ಭಾರತ ವರ್ಷಕ್ಕೆ ಇಳಿದು, ಧರ್ಮರಾಯನ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಹೊಯ್ಲು - ಹೊಡೆತ
ಮೂಲ ...{Loading}...
ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದೆಲೆಯ ವನದಲಿ ವಸಂತನ ಬರವಿನಂದದಲಿ
ಸುರ ವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ ॥19॥
೦೨೦ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕುಂತೀ
ಸೂನು ಕಂಡನು ದೂರದಲಿ ಸುರ
ಮಾನಿನೀಜನದಂಗವಟ್ಟದಪೂರ್ವ ಪರಿಮಳದ
ಆನನೇಂದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆಹೊಳೆದು ಮೆರೆವ ಮಹೇಂದ್ರ ಮಣಿರಥವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪೂರ್ವವಾದ ಪರಿಮಳದಿಂದ ಕೂಡಿದ ವಸ್ತ್ರಗಳನ್ನು, ನಕ್ಷತ್ರದಕಾಂತಿಯಿಂದ ಕೂಡಿದ ಆಭರಣಗಳನ್ನು, ಹೊಂದಿರುವ ಅಪ್ಸರೆಯರು ಇದ್ದ ದೇವೇಂದ್ರನ ಮಣಿರಥವನ್ನು ದೂರದಿಂದಲೇ ಧರ್ಮರಾಯನು ನೋಡಿದನು. ಅರಸನೇ, ಇದನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ಅಂಗವಟ್ಟ - ಹೊದೆಯುವ ವಸ್ತ್ರ
ಮಯೂಖ - ಕಾಂತಿ
ಮೂಲ ...{Loading}...
ಏನನೆಂಬೆನು ಜೀಯ ಕುಂತೀ
ಸೂನು ಕಂಡನು ದೂರದಲಿ ಸುರ
ಮಾನಿನೀಜನದಂಗವಟ್ಟದಪೂರ್ವ ಪರಿಮಳದ
ಆನನೇಂದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆಹೊಳೆದು ಮೆರೆವ ಮಹೇಂದ್ರ ಮಣಿರಥವ ॥20॥
೦೨೧ ಆರದೀ ರಥವೆನುತ ...{Loading}...
ಆರದೀ ರಥವೆನುತ ತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಯಾರ ರಥ ? ಎಂದು ಭಾವಿಸಿ ಧರ್ಮಜನು ಆ ಕಡೆಗೆ ದೃಷ್ಟಿ ಹರಿಸಿದನು. ಗಂಭೀರವಾದ ಹೇಷಾರವನ್ನು ಗೈಯುತ್ತಿದ್ದ ಸುಂದರವಾದ ಚಮರದಂತಹ ಬಾಲಗಳನ್ನುಳ್ಳ ತುರಗ ವೃಂದಗ¼ನ್ನು ಹೊಂದಿದ್ದ , ಕೋಟಿನಯನಗಳ ಕಾಂತಿಗಿಂತ ಮಿಗಿಲಾದ ಅಸಂಖ್ಯ ಮಣಿಗಳ ಕಾಂತಿಯಿಂದ ಕೂಡಿದ ದೇವೇಂದ್ರನ ರಥವು ಕೆಳಗೆ ಇಳಿಯಿತು.
ಪದಾರ್ಥ (ಕ.ಗ.ಪ)
ಕೊಲ್ಲಣಿಗೆ - ದಟ್ಟಣೆ
ಮೂಲ ...{Loading}...
ಆರದೀ ರಥವೆನುತ ತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ ॥21॥
೦೨೨ ರಥ ಮಹೇನ್ದ್ರನದೀತನೆಮ್ಮತಿ ...{Loading}...
ರಥ ಮಹೇಂದ್ರನದೀತನೆಮ್ಮತಿ
ರಥನಲಾ ನೆರೆ ನೋಂತು ಪಡೆದಳೊ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿತ ರಿಪುವವಧಾನ ಲೋಕ
ಪ್ರಥಿತ ನಿರುಪಮವೆಂಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಇಂದ್ರನ ರಥ, ಇವನು ನಮ್ಮವನೇ ಆದ ಅತಿರಥ ಅರ್ಜುನ. ನಮ್ಮ ಕುಂತೀದೇವಿ ಇವನನ್ನು ಪಡೆಯಲು ಎಷ್ಟು ಪುಣ್ಯ ಮಾಡಿದ್ದಾಳೋ ! ಎಂದು ಮುನಿ ಗಡಣ ಸುತ್ತಮುತ್ತ ನೆರೆಯಿತು. ‘ರಿಪುಮಥನ, ಲೋಕದಲ್ಲೇ ನಿರುಪಮ, ಸಾವಧಾನ’ ಎಂದು ಸುರಸಾರಥಿ ಉದ್ಘೋಷಿಸುತ್ತಿರುವಾಗ ಅರ್ಜುನನು ನಗುತ್ತಾ ರಥದಿಂದ ಇಳಿದನು.
ಪದಾರ್ಥ (ಕ.ಗ.ಪ)
ಆಖಂಡಲ - ಇಂದ್ರ
ಮೂಲ ...{Loading}...
ರಥ ಮಹೇಂದ್ರನದೀತನೆಮ್ಮತಿ
ರಥನಲಾ ನೆರೆ ನೋಂತು ಪಡೆದಳೊ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿತ ರಿಪುವವಧಾನ ಲೋಕ
ಪ್ರಥಿತ ನಿರುಪಮವೆಂಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ ॥22॥
೦೨೩ ಅರಸ ಕೇಳುಬ್ಬಿನಲಿ ...{Loading}...
ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿವಚನ
ಸ್ಫುರದ ಮಂದಸ್ನೇಹದಲಿ ನೋಡಿದನು ಪರಿಜನವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಧೌಮ್ಯ, ಧರ್ಮಜ, ರೋಮಶ, ಭೀಮಸೇನನ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಮುನಿಸಮೂಹಕ್ಕೆ ಕೈಮುಗಿದನು. ನಕುಲಾದ್ಯರಿಗೆ ಆಶೀರ್ವದಿಸುತ್ತಾ ಪರಿಜನರನ್ನು ಪ್ರೀತಿಯಿಂದ ನೋಡಿ ಮಾತಾಡಿದನು.
ಮೂಲ ...{Loading}...
ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿವಚನ
ಸ್ಫುರದ ಮಂದಸ್ನೇಹದಲಿ ನೋಡಿದನು ಪರಿಜನವ ॥23॥
೦೨೪ ಬಿಗಿದ ಗವಸಣಿಗೆಯಲಿ ...{Loading}...
ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣಿಕ್ಯ ಮಣಿರ
ಶ್ಮಿಗಳ ರಹಿ ರಂಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನಂದನಂಗೋ
ಲಗಿಸಿ ಭೀಮಂಗಿತ್ತು ನಕುಲಾ
ದಿಗಳ ಮೈಯಲಿ ತೊಡಿಸಿದನು ಕೈಯಾರೆ ಕಲಿಪಾರ್ಥ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನು ಕೊಟ್ಟ, ಸೂರ್ಯನ ಕಿರಣಗಳಿಗೂ ಮಿಗಿಲಾದ ಆಭರಣಗಳನ್ನು ಚೀಲದಿಂದ ತೆಗೆದು ಅರ್ಜುನನು ಧರ್ಮರಾಯ, ಭೀಮ, ನಕುಲ, ಸಹದೇವರಿಗೆ ತಾನೇ ಕೈಯಾರೆ-ತೊಡಿಸಿದನು.
ಪದಾರ್ಥ (ಕ.ಗ.ಪ)
ಗವಸಣಿಗೆ-ಚೀಲ,
ಮೂಲ ...{Loading}...
ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣಿಕ್ಯ ಮಣಿರ
ಶ್ಮಿಗಳ ರಹಿ ರಂಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನಂದನಂಗೋ
ಲಗಿಸಿ ಭೀಮಂಗಿತ್ತು ನಕುಲಾ
ದಿಗಳ ಮೈಯಲಿ ತೊಡಿಸಿದನು ಕೈಯಾರೆ ಕಲಿಪಾರ್ಥ ॥24॥
೦೨೫ ಕರೆಸಿ ಕಾಣಿಸಿದನು ...{Loading}...
ಕರೆಸಿ ಕಾಣಿಸಿದನು ಧನಂಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದ ಸಕಲ ಶೋಭೆಗಳ
ಅರಸ ಮೊದಲಾದಖಿಳ ಜನ ಭೂ
ಸುರರು ಕಂಡರು ಮಾತಲಿಯ ಸ
ತ್ಕರಿಸಿ ಸಂಭಾವಿಸಿದನವನೀಪತಿ ಸರಾಗದಲಿ ॥25|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದೇವೇಂದ್ರನ ಸಾರಥಿಯಾದ ಮಾತಳಿಯನ್ನು ಕರೆಸಿ ತೋರಿಸಿದನು. ಇಂದ್ರರಥದ ಸೊಬಗು ಸೌಂದರ್ಯಗಳನ್ನೂ ವಿವರಿಸಿದನು. ಧರ್ಮರಾಯನೇ ಮೊದಲಾದ ಎಲ್ಲ ಜನರೂ ಮಾತಳಿಯನ್ನು ಕಂಡರು. ಧರ್ಮಜನು ಮಾತಳಿಯನ್ನು ಪ್ರೀತಿಯಿಂದ ಉಪಚರಿಸಿ ಗೌರವಿಸಿದನು.
ಪದಾರ್ಥ (ಕ.ಗ.ಪ)
ಸರಾಗ - ಪ್ರೀತಿಯಿಂದ ಕೂಡಿದ
ಮೂಲ ...{Loading}...
ಕರೆಸಿ ಕಾಣಿಸಿದನು ಧನಂಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದ ಸಕಲ ಶೋಭೆಗಳ
ಅರಸ ಮೊದಲಾದಖಿಳ ಜನ ಭೂ
ಸುರರು ಕಂಡರು ಮಾತಲಿಯ ಸ
ತ್ಕರಿಸಿ ಸಂಭಾವಿಸಿದನವನೀಪತಿ ಸರಾಗದಲಿ ॥25|
೦೨೬ ಕುಶಲವೇ ದೇವೇನ್ದ್ರನಾತನ ...{Loading}...
ಕುಶಲವೇ ದೇವೇಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೆ
ದೆಸೆಯವರು ಮೂಲೆಗಳವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನು ಕ್ಷೇಮವೇ ? ಅವನ ಅಪ್ಸರೆಯರು ಕುಶಲಿಗಳೇ ? ದೈತ್ಯರು ಅಂಕೆಯಲ್ಲಿರುವರೇ ? ಸ್ವರ್ಗ ಲೋಕವು ನಿರ್ಭಯದಿಂದ ಇದೆಯೆ ? ದಿಕ್ಪಾಲಕರು ಮನ್ನಿಸುವರೆ ? ಸುರಲೋಕದ ಸುಖಕ್ಕೆ ಸಂಕಷ್ಟವಿಲ್ಲ ತಾನೇ ? ಎಂದು ಧರ್ಮರಾಯನು ಕೇಳಿದನು.
ಮೂಲ ...{Loading}...
ಕುಶಲವೇ ದೇವೇಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೆ
ದೆಸೆಯವರು ಮೂಲೆಗಳವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ ॥26॥
೦೨೭ ಭಜಿಸಿದೈ ಭರ್ಗನನು ...{Loading}...
ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರಶಿವನನ್ನು ಭಜಿಸಿದೆಯಾ ? ಮಹೇಶ್ವರನ ಯಜ್ಞ ಸಾಂಗವಾಯಿತೆ ? ಮನೋಮಾರ್ಗದಲ್ಲಿ ಅಡೆತಡೆಗಳು ನಿವಾರಣೆಯಾಗಿ ಶಿವನಾಮ ನೆಲೆ ನಿಂತಿತೆ ? ಪಾರ್ಥನೆಂಬ ಹೆಸರಿಗೆ ವಿಜಯ ಶಬ್ದವು ಸ್ಥಿರವಾಗಿ ಸೇರಿಕೊಂಡಿತೆ ? ಶತ್ರುಗಳ ಸಂಹಾರ ಸಾಧ್ಯವೆ ?’ ಎಂದು ಧರ್ಮರಾಯ ಕೇಳಿದನು.
ಪದಾರ್ಥ (ಕ.ಗ.ಪ)
ತೆವರು-ದಿಣ್ಣೆ , ದಿಬ್ಬ
ಭರ್ಗ - ಈಶ್ವರ
ಮೂಲ ...{Loading}...
ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ ॥27॥
೦೨೮ ಜೀಯ ಚಿತ್ತೈಸಿನ್ದ್ರನಲ್ಲಿ ...{Loading}...
ಜೀಯ ಚಿತ್ತೈಸಿಂದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇಂದ್ರಸ್ನೇಹ ಸಾಣೆಯಲಿ
ಆಯಿತೇ ಧೂರ್ಜಟಿಯ ಶರಲೋ
ಕಾಯತರಿಗೇನೆಂಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಣ್ಣಾ, ಅವಧರಿಸು. ಇಂದ್ರನ ಸಹಾಯವುಂಟಾಯಿತು. ಅವನ ಸ್ನೇಹವೆಂಬ ಸಾಣೆಯಿಂದಾಗಿ ಶಿವನ ಅನುಗ್ರಹವೆಂಬ ಆಯುಧವು ಮಸೆಯಿತು. ಮಹೇಶ್ವರನು ಪಾಶುಪತಾಸ್ತ್ರವನ್ನು ನನಗೆ ದಯಪಾಲಿಸಿದ’ ಎಂದು ಪಾರ್ಥನು ಹೇಳಿದನು.
ಪದಾರ್ಥ (ಕ.ಗ.ಪ)
ಧೂರ್ಜಟಿ - ಈಶ್ವರ
ಮೂಲ ...{Loading}...
ಜೀಯ ಚಿತ್ತೈಸಿಂದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇಂದ್ರಸ್ನೇಹ ಸಾಣೆಯಲಿ
ಆಯಿತೇ ಧೂರ್ಜಟಿಯ ಶರಲೋ
ಕಾಯತರಿಗೇನೆಂಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ ॥28॥
೦೨೯ ಹರನ ಕರುಣಾಲಾಭ ...{Loading}...
ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ
ಕರೆಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಪರಿವೃಢರು ಕೊಂಡಾಡಿತೆನ್ನನು ರಾಯ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರಶಿವನ ಅನುಗ್ರಹಲಾಭದಿಂದ ಲೋಕೋತ್ತರವಾದ ಸಂತೋಷದಲ್ಲಿ ನಾನಿರುವಾಗ ದೇವೇಂದ್ರನು ಈ ರಥವನ್ನು ಮಾತಳಿಯ ಮೂಲಕ ಕಳುಹಿಸಿ, ಅಮರಾವತಿಗೆ ನನ್ನನ್ನು ಕರೆಸಿಕೊಂಡನು. ದೇವತೆಗಳ ಸಮೂಹ, ಸುರಸ್ತ್ರೀಯರು, ದಿಕ್ಪಾಲರು ಎಲ್ಲರೂ ನನ್ನನ್ನು ಕೊಂಡಾಡಿದರು’ ಎಂದನು.
ಪದಾರ್ಥ (ಕ.ಗ.ಪ)
ಲೋಕೋತ್ತರ - ಅತಿಶಯವಾಗಿ
ಮೂಲ ...{Loading}...
ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ
ಕರೆಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಪರಿವೃಢರು ಕೊಂಡಾಡಿತೆನ್ನನು ರಾಯ ಕೇಳೆಂದ ॥29॥
೦೩೦ ಪಾಶುಪತ ಶರ ...{Loading}...
ಪಾಶುಪತ ಶರ ಭುವನದೂಧ್ರ್ವ
ಶ್ವಾಸ ಕೃತಿ ಕೋವಿದನಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಪಾದಾನುಗ್ರಹದಿಂದ ಲೋಕಭಯಂಕರವಾದ ಶಿವನ ಪಾಶುಪತಾಸ್ತ್ರವು ನನಗೆ ಲಭಿಸಿತು. ಶಿವನ ಕರುಣೆ ದೊರೆತ ಮೇಲೆ ದೇವೇಂದ್ರನು ಅಮರಾವತಿಗೆ ನನ್ನನ್ನು ಕರೆದೊಯ್ದು ಪ್ರೀತಿಯಿಂದ ಮನ್ನಿಸಿದನು.
ಮೂಲ ...{Loading}...
ಪಾಶುಪತ ಶರ ಭುವನದೂಧ್ರ್ವ
ಶ್ವಾಸ ಕೃತಿ ಕೋವಿದನಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ ॥30॥
೦೩೧ ಖ್ಯಾತಿವಡೆದೆನು ಶಿವನ ...{Loading}...
ಖ್ಯಾತಿವಡೆದೆನು ಶಿವನ ಕಾರು
ಣ್ಯಾತಿಶಯಕಿದು ಫಲವೆ ಸಾಕಿ
ನ್ನೇತಕಿದು ರಾಜಸವಿಡಂಬ ವಿಕಾರಕುಚಿತವಲೆ
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾಂಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮೇಶ್ವರನ ಅತಿಶಯವಾದ ಕರುಣೆಯಿಂದಾಗಿ ಕೀರ್ತಿಗೆ ಪಾತ್ರನಾದೆನು. ಇನ್ನು ಈ ರಾಜಸಗುಣೋಪೇತವಾದ ವಿಕಾರಗಳು ನನಗೆ ಸಹಜವಲ್ಲವೆ? ಅಗ್ನಿ, ಯಮ, ಇಂದ್ರ, ವರುಣಾದಿಗಳು ದಿವ್ಯಬಾಣಗಳನ್ನು ಅನುಗ್ರಹಿಸಿ ನನ್ನ ಮನಸ್ಸಿನ ಕೊಳೆಯನ್ನು ತೊಳೆದರು.
ಪದಾರ್ಥ (ಕ.ಗ.ಪ)
ಕರ್ದಮ-ಕೊಳೆ,
ಕಾಂಡವ್ರಾತ-ಬಾಣ
ವೀತಿಹೋತ್ರ - ಅಗ್ನಿ
ಪರೇತಪತಿ - ಯಮ
ಪುರುಹೂತ -ಇಂದ್ರ
ಮೂಲ ...{Loading}...
ಖ್ಯಾತಿವಡೆದೆನು ಶಿವನ ಕಾರು
ಣ್ಯಾತಿಶಯಕಿದು ಫಲವೆ ಸಾಕಿ
ನ್ನೇತಕಿದು ರಾಜಸವಿಡಂಬ ವಿಕಾರಕುಚಿತವಲೆ
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾಂಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ ॥31॥
೦೩೨ ಕೇಳಿ ಮಿಗೆ ...{Loading}...
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿಗಳ ಹೂಳಿದವು ತೂಳಿದವಂತರವ್ಯಥೆಯ
ತೋಳ ಹಿಡಿದೆಳೆದಪ್ಪಿ ಪಾರ್ಥನ
ಬೋಳವಿಸಿದೆನು ಪೌರವಾನ್ವಯ
ಪಾಲಕನೆಯೆಂದರಸ ಮುಂಡಾಡಿದನು ಫಲುಗುಣನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಂಗತಿಗಳನ್ನು ಕೇಳಿ ಧರ್ಮಜನಿಗೆ ಮೈಯಲ್ಲಿ ರೋಮಾಂಚನವುಂಟಾಯಿತು. ಕಣ್ಣಲ್ಲಿ ಆನಂದಬಾಷ್ಪ ಉಕ್ಕಿತು. ಮನದೊಳಗಿನ ವ್ಯಥೆ ದೂರವಾಯಿತು. ಅರ್ಜುನನನ್ನು ಬರಸೆಳೆದು ಬಿಗಿದಪ್ಪಿ ಪುರುವಂಶೋದ್ಧಾರಕನೆಂದು ಕೊಂಡಾಡಿ, ಅವನ ನೆತ್ತಿಯನ್ನು ಆಘ್ರಾಣಿಸಿದನು.
ಮೂಲ ...{Loading}...
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿಗಳ ಹೂಳಿದವು ತೂಳಿದವಂತರವ್ಯಥೆಯ
ತೋಳ ಹಿಡಿದೆಳೆದಪ್ಪಿ ಪಾರ್ಥನ
ಬೋಳವಿಸಿದೆನು ಪೌರವಾನ್ವಯ
ಪಾಲಕನೆಯೆಂದರಸ ಮುಂಡಾಡಿದನು ಫಲುಗುಣನ ॥32॥
೦೩೩ ಮುರಿದುದಿನ್ನೇನಹಿತ ಬಲ ...{Loading}...
ಮುರಿದುದಿನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಬಲ ಇನ್ನೇನು ಮುರಿದೇ ಹೋಯಿತು. ದ್ರೌಪದಿಯ ಸಿರಿ ಮುಡಿಗೆ ಒದಗಿದ ಹಗೆಯು ನಿವಾರಣೆಯಾಯಿತು. ಮತ್ಸರಿಸಿದವರಿಗೆ ಯಮನ ಪಟ್ಟಣವನ್ನು ನೋಡುವ ಹಾಗಾಯ್ತು. ಹರಹರಾ, ಗದುಗಿನ ವೀರನಾರಾಯಣನ ದಯೆಯಿಂದ ಚಂದ್ರಚೂಡನಾದ ಪರಶಿವನು ಕರುಣೆಯ ಮಳೆಯನ್ನೇ ಕರೆದನಲ್ಲಾ’ ಎಂದನು.
ಪದಾರ್ಥ (ಕ.ಗ.ಪ)
ಕರುಬು-ಮತ್ಸರಿಸು,
ಹೆರೆನೊಸಲ ದೈವ -ಫಾಲಚಂದ್ರ, ಶಿವ
ಮೂಲ ...{Loading}...
ಮುರಿದುದಿನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ ॥33॥