೧೧

೦೦೦ ಸೂ ಭೀಮ ...{Loading}...

ಸೂ. ಭೀಮ ಕೊಂದನು ಕಲಿಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕಂಡನು ಪಾರ್ಥನಗ್ರಜನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದವತಿ ರಂಜಿಸಿದವದುಭುತವ
ಕೇಳಿದನಿದೇನೆಂದು ವರ ವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ ॥1॥

೦೦೨ ಸರಸ ಸೌಗನ್ಧಿಕದ ...{Loading}...

ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ ॥2॥

೦೦೩ ಆ ಸಕಲ ...{Loading}...

ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಕ ಪದುಮಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸವನುಯಿದೆ ಬಂದ ಪವನಜನೆಂದುದೀ ಕಟಕ ॥3॥

೦೦೪ ಎನಲು ಬನ್ದನು ...{Loading}...

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ
ಜಿನುಗು ದುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣ ಕೆಂಪಿನ
ಘನ ಭಯಂಕರ ರೂಪ ಭೀಮನ ಕಂಡನವನೀಶ ॥4॥

೦೦೫ ಸೆಳೆದು ತಕ್ಕೈಸಿದನು ...{Loading}...

ಸೆಳೆದು ತಕ್ಕೈಸಿದನು ತಾವರೆ
ಗೊಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನ ಗಂಧದ ಗಾಢತರ ಸುಖ
ದೊಳಗೆ ಹೊಂಪುಳಿವೋಗಿ ಭೂಪತಿ
ತಿಲಕನಿದ್ದನು ಗಂಧಮಾದನ ಗಿರಿಯ ತಪ್ಪಲಲಿ ॥5॥

೦೦೬ ಗಿರಿಯ ತುದಿಗೇರುವ ...{Loading}...

ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬಂದನು ಬದರಿಕಾಶ್ರಮಕೆ
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನಿತ್ತಲು ಬಂದು ಮುತ್ತಿತು ದಾನವರ ಧಾಳಿ ॥6॥

೦೦೭ ಖಳ ಜಟಾಸುರನೆಮ್ಬನಾ ...{Loading}...

ಖಳ ಜಟಾಸುರನೆಂಬನಾ ದ್ವಿಜ
ಕುಲವನಂಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿ ಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆಂಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ ॥7॥

೦೦೮ ತಳಿರ ಕೈಗಳ ...{Loading}...

ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕಂಗಳ ತಾಪದಿಂದೊಳ
ಝಳದಿಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ
ಕಳಕಳದ ಕಾಲುವೆಯ ಭಂಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕಂಡನು ಭೀಮನೇನೇನೆಂದು ಬೆಸಗೊಂಡ ॥8॥

೦೦೯ ಹಿಡಿದರರಸಿಯನವನಿಪತಿ ಹಿಡಿ ...{Loading}...

ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರು ಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ
ಕಡುಹು ಘನವಿದೆ ದಾನವರವಂ
ಗಡವೆನಲು ಘನ ಸಿಂಹ ನಾದದ
ಸಿಡಿಲ ಶಿಕ್ಷಾಗುರುವೆನಲು ಮೊಳಗಿದನು ಕಲಿಭೀಮ ॥9॥

೦೧೦ ಧಾಳಿಯಿಟ್ಟನು ದಾನವರ ...{Loading}...

ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೀ ಬೆಳಸುವೆನು ದಿವಿ
ಜಾಳಿಗಳ ಸಂತೋಷ ಸಸಿಯನೆನುತ್ತ ಗರ್ಜಿಸಿದ ॥10॥

೦೧೧ ಮಸಗಿತಿಬ್ಬರಿಗದುಭುತಾಹವ ...{Loading}...

ಮಸಗಿತಿಬ್ಬರಿಗದುಭುತಾಹವ
ವುಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದಂಡೆಯಲಿ ತಡೆಗಾಲಲೊಡೆ ಹೊಯ್ದು
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ ॥11॥

೦೧೨ ಅರಸ ಕೇಳಾ ...{Loading}...

ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷ ಪರ್ವತಾಶ್ರಮವ ॥12॥

೦೧೩ ಆ ತಪೋವನವಿವರ ...{Loading}...

ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆಂಬವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು ॥13॥

೦೧೪ ಕೊನ್ದನವನನು ವಿಗತ ...{Loading}...

ಕೊಂದನವನನು ವಿಗತ ಶಾಪನು
ನಿಂದನಿದಿರಲಿ ಯಕ್ಷರೂಪಿನ
ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ
ಬಂದನಲ್ಲಿಗೆ ಯಕ್ಷಪತಿ ನಲ
ವಿಂದಲಿವರನು ವಿವಿಧ ವಸ್ತುಗ
ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ ॥14॥

೦೧೫ ಅರಸನತಿ ಸನ್ತೋಷಮಯ ...{Loading}...

ಅರಸನತಿ ಸಂತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ
ಪರಮ ಋಷಿಗಳ ಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆನೆನೆದರಸ ಕೇಳ್ ಎಂದ ॥15॥

೦೧೬ ಅರಸನಲಿ ಬೇರೂರಿ ...{Loading}...

ಅರಸನಲಿ ಬೇರೂರಿ ಮಗುಳಂ
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು
ಅರಸಿಯಲಿ ಸಲೆ ಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದ ಕರಣಾವಳಿಯ ಹಬ್ಬುಗೆಯ ಹರಹಿನಲಿ ॥16॥

೦೧೭ ಮರೆದನೋ ನಮ್ಮಿನಿಬರನು ...{Loading}...

ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇಂದ್ರನ
ಸೆರಗು ಸೋಂಕುವ ಸಲುಗೆಯುಂಟೇ ಮತ್ರ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನಂಗೈಸನೆಂದವನೀಶ ಚಿಂತಿಸಿದ ॥17॥

೦೧೮ ವಾಮ ನಯನ ...{Loading}...

ವಾಮ ನಯನ ಸ್ಫುರಣ ಪರಿಗತ
ವಾಮ ಬಾಹು ಸ್ಪಂದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯವ್ಯಸನ ನಿರಸನ
ಕ್ಕೀ ಮಹಾ ಶಕುನಂಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ ॥18॥

೦೧೯ ಅರಸ ಕೇಳೈ ...{Loading}...

ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದೆಲೆಯ ವನದಲಿ ವಸಂತನ ಬರವಿನಂದದಲಿ
ಸುರ ವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ ॥19॥

೦೨೦ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಕುಂತೀ
ಸೂನು ಕಂಡನು ದೂರದಲಿ ಸುರ
ಮಾನಿನೀಜನದಂಗವಟ್ಟದಪೂರ್ವ ಪರಿಮಳದ
ಆನನೇಂದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆಹೊಳೆದು ಮೆರೆವ ಮಹೇಂದ್ರ ಮಣಿರಥವ ॥20॥

೦೨೧ ಆರದೀ ರಥವೆನುತ ...{Loading}...

ಆರದೀ ರಥವೆನುತ ತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ ॥21॥

೦೨೨ ರಥ ಮಹೇನ್ದ್ರನದೀತನೆಮ್ಮತಿ ...{Loading}...

ರಥ ಮಹೇಂದ್ರನದೀತನೆಮ್ಮತಿ
ರಥನಲಾ ನೆರೆ ನೋಂತು ಪಡೆದಳೊ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿತ ರಿಪುವವಧಾನ ಲೋಕ
ಪ್ರಥಿತ ನಿರುಪಮವೆಂಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ ॥22॥

೦೨೩ ಅರಸ ಕೇಳುಬ್ಬಿನಲಿ ...{Loading}...

ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿವಚನ
ಸ್ಫುರದ ಮಂದಸ್ನೇಹದಲಿ ನೋಡಿದನು ಪರಿಜನವ ॥23॥

೦೨೪ ಬಿಗಿದ ಗವಸಣಿಗೆಯಲಿ ...{Loading}...

ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣಿಕ್ಯ ಮಣಿರ
ಶ್ಮಿಗಳ ರಹಿ ರಂಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನಂದನಂಗೋ
ಲಗಿಸಿ ಭೀಮಂಗಿತ್ತು ನಕುಲಾ
ದಿಗಳ ಮೈಯಲಿ ತೊಡಿಸಿದನು ಕೈಯಾರೆ ಕಲಿಪಾರ್ಥ ॥24॥

೦೨೫ ಕರೆಸಿ ಕಾಣಿಸಿದನು ...{Loading}...

ಕರೆಸಿ ಕಾಣಿಸಿದನು ಧನಂಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದ ಸಕಲ ಶೋಭೆಗಳ
ಅರಸ ಮೊದಲಾದಖಿಳ ಜನ ಭೂ
ಸುರರು ಕಂಡರು ಮಾತಲಿಯ ಸ
ತ್ಕರಿಸಿ ಸಂಭಾವಿಸಿದನವನೀಪತಿ ಸರಾಗದಲಿ ॥25|

೦೨೬ ಕುಶಲವೇ ದೇವೇನ್ದ್ರನಾತನ ...{Loading}...

ಕುಶಲವೇ ದೇವೇಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೆ
ದೆಸೆಯವರು ಮೂಲೆಗಳವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ ॥26॥

೦೨೭ ಭಜಿಸಿದೈ ಭರ್ಗನನು ...{Loading}...

ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ ॥27॥

೦೨೮ ಜೀಯ ಚಿತ್ತೈಸಿನ್ದ್ರನಲ್ಲಿ ...{Loading}...

ಜೀಯ ಚಿತ್ತೈಸಿಂದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇಂದ್ರಸ್ನೇಹ ಸಾಣೆಯಲಿ
ಆಯಿತೇ ಧೂರ್ಜಟಿಯ ಶರಲೋ
ಕಾಯತರಿಗೇನೆಂಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ ॥28॥

೦೨೯ ಹರನ ಕರುಣಾಲಾಭ ...{Loading}...

ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ
ಕರೆಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಪರಿವೃಢರು ಕೊಂಡಾಡಿತೆನ್ನನು ರಾಯ ಕೇಳ್ ಎಂದ ॥29॥

೦೩೦ ಪಾಶುಪತ ಶರ ...{Loading}...

ಪಾಶುಪತ ಶರ ಭುವನದೂಧ್ರ್ವ
ಶ್ವಾಸ ಕೃತಿ ಕೋವಿದನಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ ॥30॥

೦೩೧ ಖ್ಯಾತಿವಡೆದೆನು ಶಿವನ ...{Loading}...

ಖ್ಯಾತಿವಡೆದೆನು ಶಿವನ ಕಾರು
ಣ್ಯಾತಿಶಯಕಿದು ಫಲವೆ ಸಾಕಿ
ನ್ನೇತಕಿದು ರಾಜಸವಿಡಂಬ ವಿಕಾರಕುಚಿತವಲೆ
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾಂಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ ॥31॥

೦೩೨ ಕೇಳಿ ಮಿಗೆ ...{Loading}...

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿಗಳ ಹೂಳಿದವು ತೂಳಿದವಂತರವ್ಯಥೆಯ
ತೋಳ ಹಿಡಿದೆಳೆದಪ್ಪಿ ಪಾರ್ಥನ
ಬೋಳವಿಸಿದೆನು ಪೌರವಾನ್ವಯ
ಪಾಲಕನೆಯೆಂದರಸ ಮುಂಡಾಡಿದನು ಫಲುಗುಣನ ॥32॥

೦೩೩ ಮುರಿದುದಿನ್ನೇನಹಿತ ಬಲ ...{Loading}...

ಮುರಿದುದಿನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ ॥33॥

+೧೧ ...{Loading}...