೦೦೦ ಸೂ ಸಕಲ ...{Loading}...
ಸೂ. ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನ್ಯಕ ಶಿರೋಮಣಿ ಧರ್ಮನಂದನ ತೀರ್ಥಯಾತ್ರೆಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅನೇಕ ಮುನಿಗಳೊಂದಿಗೆ ರಾಜಶ್ರೇಷ್ಠನಾದ ಧರ್ಮರಾಜನು ಗಿರಿವನಾಂತರಗಳಲ್ಲಿ ತೀರ್ಥಯಾತ್ರೆ ಮಾಡುತ್ತಾ ಸುತ್ತಾಡಿದನು.
ಮೂಲ ...{Loading}...
ಸೂ. ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನ್ಯಕ ಶಿರೋಮಣಿ ಧರ್ಮನಂದನ ತೀರ್ಥಯಾತ್ರೆಯಲಿ
೦೦೧ ಅರಸ ಕೇಳೈ ...{Loading}...
ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನ ಹದನೇನೊ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮನು
ಮರೆದು ಕಳೆದನಲಾಯೆನುತ ಯಮಸೂನು ಚಿಂತಿಸಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ದೇವೇಂದ್ರನ ಅರಮನೆಯಲ್ಲಿ ಪಾರ್ಥನು ಐದು ವರ್ಷಗಳ ಕಾಲ ಸಕಲ ಸಂಪತ್ತನ್ನು ಅನುಭವಿಸುತ್ತಾ ಸುಖಸಂತೋಷದಲ್ಲಿದ್ದನು. ಇತ್ತ ಕಡೆ ಧರ್ಮರಾಯನು ಅರ್ಜುನ ಎಲ್ಲಿದ್ದಾನೆ, ಅವನ ವಿಚಾರವೇನು, ನಮ್ಮನ್ನೆಲ್ಲಾ ಮರೆತು ಬಿಟ್ಟನೇ ? ಎಂದು ಚಿಂತಿಸಿದ.
ಮೂಲ ...{Loading}...
ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನ ಹದನೇನೊ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮನು
ಮರೆದು ಕಳೆದನಲಾಯೆನುತ ಯಮಸೂನು ಚಿಂತಿಸಿದ ॥1॥
೦೦೨ ಕಳುಹಿದನು ಲೋಮಶನನವನೀ ...{Loading}...
ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲ್ಕಿಕಭ್ರ ಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕಂಡನು ಧರ್ಮನಂದನನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನು ಅರ್ಜುನನ ಸಹೋದರರಿಗೆ ಅವನ ಕ್ಷೇಮಸಮಾಚಾರವನ್ನು ತಿಳಿಸಲು ಲೋಮಶರೆಂಬ ಮುನಿಯನ್ನು ಆಕಾಶಮಾರ್ಗದಲ್ಲಿ ಕಳುಹಿಸಿಕೊಟ್ಟನು. ಆ ಮುನಿಯು ಭೂಮಿಗೆ ಇಳಿದು ಬಂದು, ಕಾಮ್ಯಕವನದಲ್ಲಿ ಪರ್ಣಕುಟೀರ ಕಟ್ಟಿಕೊಂಡಿರುವ ಧರ್ಮರಾಯನನ್ನು ಕಂಡನು.
ಪದಾರ್ಥ (ಕ.ಗ.ಪ)
ಸಿತಹಯ - ಅರ್ಜುನ
ಕೌಶಲ - ಕುಶಲ, ಕ್ಷೇಮ
ಮೂಲ ...{Loading}...
ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲ್ಕಿಕಭ್ರ ಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕಂಡನು ಧರ್ಮನಂದನನ ॥2॥
೦೦೩ ಈತನಿದಿರೆದ್ದಘ್ರ್ಯ ಪಾದ್ಯವ ...{Loading}...
ಈತನಿದಿರೆದ್ದಘ್ರ್ಯ ಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಲ ಸ್ವರ್ಗಸದನ ಸು
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರನ್ನು ಕಂಡ ಧರ್ಮರಾಯನು ಎದ್ದು ನಿಂತು, ಅಘ್ರ್ಯಪಾದ್ಯಗಳನ್ನಿತ್ತು ಮುನಿಯನ್ನು ಉಪಚರಿಸಿ, ಬಂದ ಕಾರಣವನ್ನು ಪ್ರೀತಿಯಿಂದ ವಿಚಾರಿಸಿದನು. ಲೋಮಶರು , ಅರ್ಜುನನು ಅಲ್ಲಿರುವ ಸಂಗತಿಯನ್ನು ಹೇಳಿ, ಅವನಿಗೆ ಅಲ್ಲಿ ದೊರಕುತ್ತಿದ್ದ ಸ್ವರ್ಗದ ಸುಖೋಪಭೋಗವನ್ನೆಲ್ಲಾ ವಿವರಿಸಿದರು.
ಪದಾರ್ಥ (ಕ.ಗ.ಪ)
ವಾರತೆ - ವಾರ್ತೆ, ಸಮಾಚಾರ
ಮೂಲ ...{Loading}...
ಈತನಿದಿರೆದ್ದಘ್ರ್ಯ ಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಲ ಸ್ವರ್ಗಸದನ ಸು
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ ॥3॥
೦೦೪ ನುಡಿನುಡಿಗೆ ಸುಕ್ಷೇಮ ...{Loading}...
ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡು ಪುಳಕದ
ಗುಡಿಯ ಬೀಡಿನ ರೋಮಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವಕುಲ ಸಹಿತ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾತುಮಾತಿಗೆ ಅರ್ಜುನನ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಾ ಸಂತಸಭರಿತನಾದ ಧರ್ಮರಾಯನು ರೋಮಾಂಚನವನ್ನು ಅನುಭವಿಸಿದನು. ಅನಂತರ ಅವನು ತೀರ್ಥಯಾತ್ರೆಗಾಗಿ ಮಡದಿ ಮತ್ತು ಸೋದರರೊಂದಿಗೆ, ವಿಪ್ರಗಡಣ ಸಹಿತ ವಿವಿಧ ಅರಣ್ಯಗಳಲ್ಲಿ ಸಂಚರಿಸಿದನು.
ಮೂಲ ...{Loading}...
ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡು ಪುಳಕದ
ಗುಡಿಯ ಬೀಡಿನ ರೋಮಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವಕುಲ ಸಹಿತ ॥4॥
೦೦೫ ವರ ಪುಲಸ್ತ್ಯ ...{Loading}...
ವರ ಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನಿಗೆ ಪುಲಸ್ತ್ಯರು ಹೇಳಿದ ತೀರ್ಥಕ್ಷೇತ್ರಗಳ ವಿವರವನ್ನು ಲೋಮಶನು ಧರ್ಮರಾಜನಿಗೆ ಹೇಳಿದನು. ಬೃಹದಶ್ವನೆಂಬ ರಾಜರ್ಷಿಯು ಅಲ್ಲಿಗೆ ಬಂದು ರಾಜ್ಯಾಪಹಾರದ ಚಿಂತೆಯನ್ನು ನೀಗಿಸಲು ಧರ್ಮಜನಿಗೆ ಕಥೆಗಳನ್ನು ಹೇಳಿದನು.
ಮೂಲ ...{Loading}...
ವರ ಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ ॥5॥
೦೦೬ ಆತನೀತನ ಸನ್ತವಿಟ್ಟು ...{Loading}...
ಆತನೀತನ ಸಂತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನನ್ನು ಸಮಾಧಾನಪಡಿಸುತ್ತಾ, ಕಲಿಪ್ರಭಾವದಿಂದ ನಳ ಚಕ್ರವರ್ತಿಯು ಜೂಜಾಡಿ ರಾಜ್ಯವನ್ನು ಪುಷ್ಕರನಿಗೆ ಸೋತು, ಹೆಂಡತಿ ಸಹಿತ ಕಾಡುಪಾಲಾದನೆಂದೂ, ಅನಂತರ ಹೆಂಡತಿಯನ್ನೂ ಬಿಟ್ಟು ಹೋದನೆಂದೂ ಹೇಳಿದನು.
ಮೂಲ ...{Loading}...
ಆತನೀತನ ಸಂತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ ॥6॥
೦೦೭ ಬಳಿಕ ಕಾರ್ಕೋಟಕನ ...{Loading}...
ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯ ನಿಜಋತುಪರ್ಣ ಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಂದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳ ಭೂಪತಿಗೆ ನಿಜರಾಜ್ಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಕಾರ್ಕೋಟಕನ ಸಹಾಯದಿಂದ ಬಾಹುಕನಾಗಿ ಋತುಪರ್ಣರಾಜನ ಅರಮನೆಯನ್ನು ಸೇರಿದನು. ಅವನ ಹೆಂಡತಿಯಾದರೋ ತಂದೆಯ ಮನೆಯನ್ನು ಸೇರಿದಳು. ಅನಂತರ ಅವಳಿಂದಾಗಿ ನಳಚಕ್ರವರ್ತಿಗೆ ರಾಜ್ಯ ಮರಳಿ ಲಭಿಸಿತು.
ಟಿಪ್ಪನೀ (ಕ.ಗ.ಪ)
ಕರ್ಕೋಟಕ - ಒಂದು ವಿಷ ಸರ್ಪ ಮಹಾಭಾರತದ ಆಸ್ತಿಕಪರ್ವ ಹಾಗೂ ಅರಣ್ಯಪರ್ವದ ನಳ-ದಮಯಂತೀ ಕಥನಗಳಲ್ಲಿ ಈತನ ವಿಚಾರ ವರ್ಣಿತವಾಗಿದೆ. ಸರ್ಪಕುಲಕ್ಕೆ ಸೇರಿದ ಈತ ಕದ್ರು-ಕಶ್ಯಪರ ಮಗ. ವಾಸುಕಿಯ ತಮ್ಮ. ಇವನು ಶತಶೃಂಗಪರ್ವತದಲ್ಲಿ ಅರ್ಜುನನ ಹುಟ್ಟಿದ ಹಬ್ಬಕ್ಕೆ ಬಂದಿದ್ದನೆಂದು ಹೇಳಲಾಗಿದೆ. ಬಾಹುಕ - ಮಹಾಭಾರತದಲ್ಲಿ ನಳಚರಿತ್ರೆ ಒಂದು ದೀರ್ಘಕಥನ. ಹಾವಿನಿಂದ ಕಚ್ಚಿಸಿಕೊಂಡ ನಂತರ ನಳ ‘ಬಾಹುಕ’ ವೇóಕ್ಕೆ ಪರಿವತ್ನೆ ಹೊಂದಿದ. ಈತನ ರೂಪ ಪರಾವರ್ತನೆ ಯಾರಿಗೂ ತಿಳಿಯದಷ್ಟು ಬದಲಾಗಿ ಹೋಗಿತ್ತು.ನಳನು ಜೂಜಿನಲ್ಲಿ ರಾಜ್ಯವನ್ನು ಕಳೆದುಕೊಂಡು ಹೆಂಡತಿಯೊಂದಿಗೆ ಕಾಡಿಗೆ ಹೋದನಷ್ಟೆ. ಮಧ್ಯೆ ಅವಳನ್ನೂ ಬಿಟ್ಟು ಒಬ್ಬನೇ ಕಾಡಿಗೆ ನುಗ್ಗಿದ. ಆದರೆ ದಾರಿಯಲ್ಲಿ ಕರ್ಕೋಟಕ ಎಂಬ ಸರ್ಪ ಬೆಂಕಿಯಲ್ಲಿ ಸಿಕ್ಕಿ ನರಳುತ್ತಿತ್ತು. ಉಪಕಾರ ಬುದ್ಧಿಯಿಂದ ನಳ ಆ ಹಾವನ್ನು ಬೆಂಕಿಯಿಂದ ಪಾರುಮಾಡಿದ. ಅದರ ಫಲ? ಆ ಹಾವು ನಳನನ್ನು ಕಚ್ಚಿತು. ವಿಷವೂರಿದ ನಳ ಕಪ್ಪನೆಯ, ಗುರುತು ಸಿಗದ ವಿಕಾರ ವೇಷದ ವ್ಯಕ್ತಿಯಾಗಿ ಬದಲಾಗಿ ಹೋದ. ತನಗೆ ಬಂದ ಸ್ಥಿತಿಗಾಗಿ ಸಂಕಟ ಪಡುತ್ತಿರುವಾಗ ಆ ಕರ್ಕೋಟಕ ನಳನಿಗೆ ‘‘ನಿನಗೆ ಮುಂದೆ ಒಳ್ಳೆಯದಾಗುತ್ತದೆ. ಈ ವೇಷದಲ್ಲಿ ಯಾರು ನಿನ್ನನ್ನು ಗುರುತು ಹಿಡಿಯುವುದಿಲ್ಲ. ನೀನು ಋತುಪರ್ಣ ರಾಜನ ಆಶ್ರಯವನ್ನು ಪಡೆದು ಅವನ ರಥದ ಸಾರಥಿಯಾಗಿ ಸೇರಿಕೋ. ಆ ರಾಜನಿಗೆ ಅಶ್ವಹೃದಯವನ್ನು ಹೇಳಿಕೊಡು. ಅವನಿಂದ ಪಗಡೆಯ ಜೂಜಿನ ಮರ್ಮವನ್ನು ತಿಳಿದುಕೋ. ನಿನ್ನ ಪತ್ನಿ ಪುತ್ರರನ್ನು ಮರಳಿ ಪಡೆಯುತ್ತೀಯೆ. ರಾಜ್ಯವನ್ನೂ ಹಿಂದಕ್ಕೆ ಪಡೆಯುತ್ತೀಯೆ. ನಿನಗೆ ಈ ಒಂದು ವಸ್ತ್ರಕೊಡುತ್ತೇನೆ. ಇದನ್ನು ಮುಚ್ಚಿಟ್ಟುಕೊಂಡು ಸೂಕ್ತ ಸಮಯದಲ್ಲಿ ಹೊರತೆಗೆದರೆ ನಿನ್ನ ಮುನ್ನಿನ ನಳ ರೂಪ ಬರುತ್ತದೆ’’ ಎಂದು ಧೈರ್ಯ ಹೇಳಿದ.ಕುದುರೆಸವಾರಿ ಪಾಕ ವಿದ್ಯೆಗಳ ಹಿರಿಮೆಯನ್ನು ತಿಳಿಸಿ ಬಾಹುಕನು ಋತುಪರ್ಣನ ಬಳಿ ಕೆಲಸಕ್ಕೆ ಸೇರಿಕೊಂಡ.ಇತ್ತ ದಮಯಂತಿ ಹಾಗೂ ಭಿಮರಾಜರು ನಳನ ಪತ್ತೆಗೆ ಪ್ರಯತ್ನ ಮಾಡುತ್ತಲೇ ಇದ್ದರು. ಅವರ ಬೇಹುಗಾರರ ಶೋಧನೆಯ ಫಲವಾಗಿ ಬಾಹುಕನೇ ನಳನಿರಬಹುದೇ ಎಂಬ ಅನುಮಾನ ದಮಯಂತಿಯನ್ನು ಕಾಡಿತು. ಆ ಬಾಹುಕನು ಋತುಪರ್ಣನೆಂಭ ರಾಜನಳಿ ಉದ್ಯೋಗದಲ್ಲಿರುವುದೂ ತಿಳಿದುಬಂದಿತು. ಅವನನ್ನು ಕರೆಸಿಕೊಳ್ಳಲು ದಮಯಂತಿ ತಂದೆಗೆ ವಇಷಯ ತಿಳಿಸದೆ ದಮಯಂತಿಯ ಪುನಸ್ವಯಂವರ ಎಂದು ಋತುಪರ್ಣನಿಗೆ ಸುದ್ದಿ ತಿಳಿಸಿ ಮರುದಿನ ಬೆಳಗ್ಗೆಯ ವೇಳೆಗೆ ಬರಬೇಕೆಂದು ಹೇಳಿಕಳಿಸಿದಳು. ಅಯೋಧ್ಯೆಯಿಂದ ಕುಂಡಿನೀ ನಗರಕ್ಕೆ ಒಂದು ದಿವಸದಲ್ಲಿ ಹೇಗೆ ಹೋಗುವುದು ಎಂದು ಚಿಂತಿಸುತ್ತಿದ್ದ ಋತುಪರ್ಣ ಅಶ್ವವಿದ್ಯೆಯನ್ನು ಬಲ್ಲ ಬಾಹುಕನ ಸಹಾಯ ಕೋರಿದ. ಬಾಹುಕನ ಕೈಚಳಕದಿಂದ ಮರುದಿನವೇ ದಮಯಂತಿಯ ಊರನ್ನು ತಲುಪಲು ಸಾಧ್ಯವಾಯಿತು. ಈ ಮಧ್ಯೆ ನಳನು ಋತುಪರ್ಣನಿಂದ ಅಕ್ಷ್ಷಹೃದಯವನ್ನು ವೃಕ್ಷವಿದ್ಯೆಯನ್ನೂ ಕಲಿತು ಅವನಿಗೆ ಅಶ್ವಹೃದಯವನ್ನು ಹೇಳಿಕೊಟ್ಟಿದ್ದ. ದಮಯಂತಿಯ ಪುನಸ್ವಯಂವರದ ಸುದ್ದಿ ಬಾಹುಕ ವೇಷದ ನಳನಿಗೆ ಕಸಿವಿಸಿ ತಂದಿತ್ತು. ಅವನ ಅಶ್ವವಿದ್ಯಾನೈಪುಣ್ಯದಿಂದ ದಮಯಂತಿಗೆ ಇವನೇ ನಳ ಎಂದು ಅನಿಸಿತು. ಅವನ ಪಾಕಚಾತುರ್ಯವನ್ನು ಕಂಡಮೇಲಂತೂ ಅನುಮಾನ ಗಟ್ಟಿಯಾಯಿತು. ಹೆಂಡತಿ ಮಕ್ಕಳನ್ನು ಕಂಡ ನಂತರ, ಮರುಮದುವೆಯ ಸುದ್ದಿಸುಳ್ಳು ಎಂದು ತಿಳಿದಾಗ ಬಾಹುಕ ಸಂತೋಷಪಟ್ಟ.. ಕೊನೆಗೆ ಕರ್ಕೋಟಕನು ಕೊಟ್ಟಿದ್ದ ವಸ್ತ್ರವನ್ನು ಆಚೆಗೆ ತೆಗೆದು ಮುನ್ನಿನ ನಳರೂಪವನ್ನೂ ಪಡೆದ. ಕರ್ಕೋಟಕನು ಹೇಳಿದಂತೆ ಅವನಿಗೆ ಪತ್ನಿ-ಪುತ್ರರು ದೊರೆತು ಮತ್ತು ರಾಜ್ಯಸಂಪತ್ತು ಕೂಡ ಲಭಿಸಿತು. ನಳಚರಿತ್ರೆಯಲ್ಲಿ ಜೂಜಿನಲ್ಲಿ ರಾಜ್ಯ ಕಳೆದುಕೊಳ್ಳುವ ಪ್ರಸಂಗ ಬರುತ್ತದಷ್ಟೆ. ಇದು ಮಹಾಭಾರತದ ಕಥೆಯ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾರೆ. ಹಾಗೆಯೇ ಆಕಸ್ಮಿಕವಾಗಿ ಹಾವು ಕಚ್ಚಿ, ಬರುವ ಅಜ್ಞಾತವಾಸ ಪ್ರಕರಣವೂ ಮಹಾಭಾರತಕ್ಕೆ ಸೇರ್ಪಡೆಯಾಗಿದೆ ಎಂಬ ವಾದವೂ ಇದೆ.
ಮೂಲ ...{Loading}...
ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯ ನಿಜಋತುಪರ್ಣ ಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಂದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳ ಭೂಪತಿಗೆ ನಿಜರಾಜ್ಯ ॥7॥
೦೦೮ ಆತನಾಪತ್ತದು ಮಹೀಪತಿ ...{Loading}...
ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನಿಗೆ ಅಂತಹ ಆಪತ್ತು ಒದಗಿತು. ನೀನಾದರೋ ಹೆಂಡತಿ, ತಮ್ಮಂದಿರೊಡನೆ ಋಷಿಗಳೊಂದಿಗೆ ಕೂಡಿದ್ದರೂ ಚಿಂತಿಸುತ್ತಿದ್ದೀಯೆ. ನಿನ್ನಂತೆ ಕೀರ್ತಿವಂತರೂ, ಪುಣ್ಯವಂತರೂ, ಯಾರಿದ್ದಾರೆ ? ಎಂದು ಆ ಋಷಿಯು ಧರ್ಮಜನನ್ನು ಸಂತೈಸಿದನು.
ಮೂಲ ...{Loading}...
ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ ॥8॥
೦೦೯ ನಳ ಮಹೀಪತಿಯಕ್ಷ ...{Loading}...
ನಳ ಮಹೀಪತಿಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತ ನಳನು ಪುಷ್ಕರನನ್ನು ಗೆದ್ದನು. ಕೌರವ ಶಕುನಿಗಳು ನಿನ್ನಿಂದ ರಾಜ್ಯವನ್ನು ಅಪಹರಿಸಿದರು. ಅವರೊಂದಿಗೆ ಮರಳಿ ಜೂಜಿಗೆ ಹೆದರಬೇಡ ಎಂದು ಮುನಿಯು ಅಕ್ಷಹೃದಯವನ್ನು ಉಪದೇಶಿಸಿದನು.
ಟಿಪ್ಪನೀ (ಕ.ಗ.ಪ)
ಅಕ್ಷಹೃದಯ :ಮಹಾಭಾರತದ ಅಸ್ತ್ರದರ್ಶನ ಪರ್ವ, ತೀರ್ಥಯಾತ್ರೆ ಪರ್ವ ಮೊದಲಾದ ಹಲವಾರು ಭಾಗಗಳಲ್ಲಿ ದಧೀಚಿಯ ಉಲ್ಲೇಖವಿದೆ. ಒಂದು ಉತ್ತಮ ಕಾರ್ಯದಲ್ಲಿ ದೇವತೆಗಳಿಗೆ ನೆರವಾಗಲು ತನ್ನ ಪ್ರಾಣವನ್ನೇ ಸಂತೋಷದಿಂದ ತೆತ್ತ ಮಹಾಪುರುಷನೆಂದು ಪುರಾಣ ಅವನನ್ನು ಕೊಂಡಾಡಿದೆ.
ಪುರಾಣ ಪ್ರಸಿದ್ಧನಾದ ದಧೀಚಿ ಒಬ್ಬ ಪ್ರಾಚೀನ ಋಷಿ. ಪ್ರಜಾಪತಿಯ ಮಗನಾದ ಭೃಗುವಿನ ಮಗ ಇವನು. ಬಲಾಢ್ಯನೂ, ಗಟ್ಟಿಯಾದ ನರಮಂಡಲವುಳ್ಳವನೂ ಆಗಿದ್ದ ಈತ ‘ಲೋಕಸಾರ’ ಎನ್ನಬಹುದಾದ ಕೆಲವೇ ಬಲಶಾಲಿಗಳಲ್ಲಿ ಒಬ್ಬ. ಶ್ರೇಷ್ಠ ಮೈಕಟ್ಟಿನವನು. ಮೇರುಪರ್ವತದಷ್ಟು ಎತ್ತರವಾಗಿ ಬೆಳೆದು ನಿಂತಿದ್ದವನು.
ಈತ ದೇವತಾ ಪ್ರೇಮಿಯಾಗಿದ್ದರೂ ಈತನ ಎತ್ತ ದೃಢಸತ್ವಗಳನ್ನು ಕಂಡ ಇಂದ್ರ ಕೂಡ ಹೆದರಿಕೊಂಡಿದ್ದನಂತೆ! ಒಮ್ಮೆ ಆಲಂಬುಷಿ ಎಂಬ ಅಪ್ಸರಸ್ತ್ರೀಯನ್ನು ಕಂಡಾಗ ಈತನ ವೀರ್ಯ ಸರಸ್ವತೀ ನದಿಗೆ ಬಿದ್ದು ‘ಸಾರಸ್ವತ’ ಎಂಬ ಶ್ರೇಷ್ಠ ಪುತ್ರ ಹುಟ್ಟಿದ. ಈತ ಎಂಥ ಮಹಿಮಾವಂತನೆಂದರೆ ಈತನಿದ್ದ ಜಾಗದಲ್ಲಿ ಕ್ಷಾಮಡಾಮರಗಳೇ ಇರುತ್ತಿರಲಿಲ್ಲವಂತೆ!
ಅಥರ್ವಣ ಮತ್ತು ಶಾಂತಿ (ಚಿತ್ರಿ) ಇವರ ಮಗನಾದ ದಧೀಚಿಗೆ ಸ್ವಯಂ ದೇವೇಂದ್ರನೇ ಪ್ರವರ್ಗ ವಿದ್ಯೆ ಮತ್ತು ಮಧುವಿದ್ಯೆಗಳನ್ನು ಕಲಿಸಿದ್ದ. ಇದನ್ನು ತಿಳಿದ ಅಶ್ವಿನೀ ದೇವತೆಗಳು ದಧೀಚಿಯ ತಲೆ ಒಡೆದು ಆ ವಿದ್ಯೆಗಳನ್ನಪಹರಿಸಿ ಕುದುರೆಯ ರುಂಡವನ್ನು ಜೋಡಿಸಿ ಹೋಗಿದ್ದರು. ಇಂದ್ರನು ಸಿಟ್ಟಿನಿಂದ ಆ ತಲೆಯನ್ನು ಒಡೆದಾಗ ಅಶ್ವಿನೀದೇವತೆUಳು ಮತ್ತೆ ಜೋಡಿಸಿದ್ದರು.
ಈತನಲ್ಲಿ ತುಂಬ ವಿಶ್ವಾಸವಿಟ್ಟಿದ್ದ ದೇವತೆಗಳು ತಮ್ಮ ಅಮೂಲ್ಯ ಶಸ್ತ್ರಾಸ್ತ್ರಗಳನ್ನೆಲ್ಲ ದಧೀಚಿಯ ಬಳಿ ಇರಿಸಿದ್ದರು. ಆದರೆ ದೇವತೆಗಳು ಅವುಗಳನ್ನು ಹಿಂದಕ್ಕೆ ಪಡೆಯಲು ಬರಲೇ ಇಲ್ಲ. ಅವು ಹಾಳಾದವೆಂದು ಹೆದರಿ ದಧೀಚಿ ಜಲದಲ್ಲಿ ಅಭಿಮಂತ್ರಿಸಿ ಕುಡಿದುಬಿಟ್ಟ. ಸ್ವಲ್ಪಕಾಲದ ಮೇಲೆ ದೇವತೆಗಳು ಬಂದರು. ಕಾಲೇಯರೆಂಬ ರಾಕ್ಷಸರು ವೃತ್ರಾಸುರನನ್ನು ಮುಂದಿಟ್ಟುಕೊಂಡು ಇಂದ್ರನಗರಿಗೆ ನುಗ್ಗಿ ಎಲ್ಲರನ್ನೂ ಸೋಲಿಸಿದರು. ದೇವತೆಗಳು ಬಂದು ನಡೆದ ವಿಷಯವನ್ನೆಲ್ಲ ದಧೀಚಿಗೆ ತಿಳಿಸಿದರು. ಆಗ ಆತ ಕನಿಕರದಿಂದ ‘‘ನಿಮ್ಮ ಸಮಸ್ತ ಅಸ್ತ್ರಾಸ್ತ್ರಗಳ ಸತ್ವವೂ ನನ್ನ ಸತ್ವಮೂಳೆಯಲ್ಲಿದೆ’’ ಎಂದು ಹೇಳಿ ಯೋಗ ಬಲದಿಂದ ಪ್ರಾಣತ್ಯಾಗ ಮಾಡಿದ. ಆಗ ಶುಕ್ರಾಚಾರ್ಯರ ಮಗನಾದ ದೇವ ಬಡಗಿ ತ್ವಷ್ಟೃ ಆ ದಧೀಚಿಯ ಮೂಳೆಯಿಂದ ವಜ್ರಾಯುಧವನ್ನು ತಯಾರಿಸಿ ದೇವೇಂದ್ರನಿಗೆ ಕೊಟ್ಟ್ಟ.
‘ವ್ರತ ನಿಬರ್ಹಣ’ ಎನ್ನಿಸಿಕೊಂಡ ಆ ವಜ್ರಾಯುಧವು. ವೃತ್ರನ ತಲೆಯ ಮೇಲೆ ಸಾವಿರ ಚೂರಾಗಿ ಸಿಡಿದು ಅವನನ್ನು ಕೊಂದಿತು.
ದಧೀಚಸ್ಯಾಸ್ಥಿತೋ ವಜ್ರಂ,
ಕೃತಂ ದಾನವ ಸೂದನಂ
ಅಂದರೆ ದಧೀಚಿ ಮಹಿರ್ಷಿಯ ಬೆನ್ನು ಮೂಳೆಯಿಂದ ಮಾಡಿದ ವಜ್ರಾಯುಧವು ದಾನವರನ್ನೆಲ್ಲ ಸದೆಬಡಿಯಲು ಸಹಕಾರಿಯಾಯಿತು. ಲೋಕದ ಮಹಾತ್ಯಾಗಿಗಳ ಪಟ್ಟಿನಲ್ಲಿ ಈತನ ಹೆಸರು ಪ್ರಮುಖವಾದುದು.
ಮೂಲ ...{Loading}...
ನಳ ಮಹೀಪತಿಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ ॥9॥
೦೧೦ ಬಳಿಕ ಲೋಮಶ ...{Loading}...
ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯ ಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಲೋಮಶರೊಂದಿಗೆ ಧರ್ಮರಾಜ ಅಗಸ್ತ್ಯಾಶ್ರಮಕ್ಕೆ ಬಂದು, ಪಾಳೆಯವನ್ನು ನೆಲೆಗೊಳಿಸಿ ಬೀಡುಬಿಟ್ಟನು. ಆ ಮುನೀಶನ ಚರಿತ್ರೆಯನ್ನೂ, ವೃತ್ರಾಸುರ ವಧೆಗಾಗಿ ದೇವತೆಗಳು ದಧೀಚಿಯ ಬೆನ್ನೆಲುಬನ್ನು ಬೇಡಿದ ಕಥೆಯನ್ನೂ ಲೋಮಶರು ವಿಸ್ತರಿಸಿದರು.
ಟಿಪ್ಪನೀ (ಕ.ಗ.ಪ)
ದಧೀಚಿ, ಲೋಮಶ
ದಧೀಚಿ:
ಮಹಾಭಾರತದ ಅಸ್ತ್ರದರ್ಶನ ಪರ್ವ, ತೀರ್ಥಯಾತ್ರೆ ಪರ್ವ ಮೊದಲಾದ ಹಲವಾರು ಭಾಗಗಳಲ್ಲಿ ದಧೀಚಿಯ ಉಲ್ಲೇಖವಿದೆ. ಒಂದು ಉತ್ತಮ ಕಾರ್ಯದಲ್ಲಿ ದೇವತೆಗಳಿಗೆ ನೆರವಾಗಲು ತನ್ನ ಪ್ರಾಣವನ್ನೇ ಸಂತೋಷದಿಂದ ತೆತ್ತ ಮಹಾಪುರುಷನೆಂದು ಪುರಾಣ ಅವನನ್ನು ಕೊಂಡಾಡಿದೆ.
ಪುರಾಣ ಪ್ರಸಿದ್ಧನಾದ ದಧೀಚಿ ಒಬ್ಬ ಪ್ರಾಚೀನ ಋಷಿ. ಪ್ರಜಾಪತಿಯ ಮಗನಾದ ಭೃಗುವಿನ ಮಗ ಇವನು. ಬಲಾಢ್ಯನೂ, ಗಟ್ಟಿಯಾದ ನರಮಂಡಲವುಳ್ಳವನೂ ಆಗಿದ್ದ ಈತ ‘ಲೋಕಸಾರ’ ಎನ್ನಬಹುದಾದ ಕೆಲವೇ ಬಲಶಾಲಿಗಳಲ್ಲಿ ಒಬ್ಬ. ಶ್ರೇಷ್ಠ ಮೈಕಟ್ಟಿನವನು. ಮೇರುಪರ್ವತದಷ್ಟು ಎತ್ತರವಾಗಿ ಬೆಳೆದು ನಿಂತಿದ್ದವನು.
ಈತ ದೇವತಾ ಪ್ರೇಮಿಯಾಗಿದ್ದರೂ ಈತನ ಎತ್ತ ದೃಢಸತ್ವಗಳನ್ನು ಕಂಡ ಇಂದ್ರ ಕೂಡ ಹೆದರಿಕೊಂಡಿದ್ದನಂತೆ! ಒಮ್ಮೆ ಆಲಂಬುಷಿ ಎಂಬ ಅಪ್ಸರಸ್ತ್ರೀಯನ್ನು ಕಂಡಾಗ ಈತನ ವೀರ್ಯ ಸರಸ್ವತೀ ನದಿಗೆ ಬಿದ್ದು ‘ಸಾರಸ್ವತ’ ಎಂಬ ಶ್ರೇಷ್ಠ ಪುತ್ರ ಹುಟ್ಟಿದ. ಈತ ಎಂಥ ಮಹಿಮಾವಂತನೆಂದರೆ ಈತನಿದ್ದ ಜಾಗದಲ್ಲಿ ಕ್ಷಾಮಡಾಮರಗಳೇ ಇರುತ್ತಿರಲಿಲ್ಲವಂತೆ!
ಅಥರ್ವಣ ಮತ್ತು ಶಾಂತಿ (ಚಿತ್ರಿ) ಇವರ ಮಗನಾದ ದಧೀಚಿಗೆ ಸ್ವಯಂ ದೇವೇಂದ್ರನೇ ಪ್ರವರ್ಗ ವಿದ್ಯೆ ಮತ್ತು ಮಧುವಿದ್ಯೆಗಳನ್ನು ಕಲಿಸಿದ್ದ. ಇದನ್ನು ತಿಳಿದ ಅಶ್ವಿನೀ ದೇವತೆಗಳು ದಧೀಚಿಯ ತಲೆ ಒಡೆದು ಆ ವಿದ್ಯೆಗಳನ್ನಪಹರಿಸಿ ಕುದುರೆಯ ರುಂಡವನ್ನು ಜೋಡಿಸಿ ಹೋಗಿದ್ದರು. ಇಂದ್ರನು ಸಿಟ್ಟಿನಿಂದ ಆ ತಲೆಯನ್ನು ಒಡೆದಾಗ ಅಶ್ವಿನೀದೇವತೆUಳು ಮತ್ತೆ ಜೋಡಿಸಿದ್ದರು.
ಈತನಲ್ಲಿ ತುಂಬ ವಿಶ್ವಾಸವಿಟ್ಟಿದ್ದ ದೇವತೆಗಳು ತಮ್ಮ ಅಮೂಲ್ಯ ಶಸ್ತ್ರಾಸ್ತ್ರಗಳನ್ನೆಲ್ಲ ದಧೀಚಿಯ ಬಳಿ ಇರಿಸಿದ್ದರು. ಆದರೆ ದೇವತೆಗಳು ಅವುಗಳನ್ನು ಹಿಂದಕ್ಕೆ ಪಡೆಯಲು ಬರಲೇ ಇಲ್ಲ. ಅವು ಹಾಳಾದವೆಂದು ಹೆದರಿ ದಧೀಚಿ ಜಲದಲ್ಲಿ ಅಭಿಮಂತ್ರಿಸಿ ಕುಡಿದುಬಿಟ್ಟ. ಸ್ವಲ್ಪಕಾಲದ ಮೇಲೆ ದೇವತೆಗಳು ಬಂದರು. ಕಾಲೇಯರೆಂಬ ರಾಕ್ಷಸರು ವೃತ್ರಾಸುರನನ್ನು ಮುಂದಿಟ್ಟುಕೊಂಡು ಇಂದ್ರನಗರಿಗೆ ನುಗ್ಗಿ ಎಲ್ಲರನ್ನೂ ಸೋಲಿಸಿದರು. ದೇವತೆಗಳು ಬಂದು ನಡೆದ ವಿಷಯವನ್ನೆಲ್ಲ ದಧೀಚಿಗೆ ತಿಳಿಸಿದರು. ಆಗ ಆತ ಕನಿಕರದಿಂದ ‘‘ನಿಮ್ಮ ಸಮಸ್ತ ಅಸ್ತ್ರಾಸ್ತ್ರಗಳ ಸತ್ವವೂ ನನ್ನ ಸತ್ವಮೂಳೆಯಲ್ಲಿದೆ’’ ಎಂದು ಹೇಳಿ ಯೋಗ ಬಲದಿಂದ ಪ್ರಾಣತ್ಯಾಗ ಮಾಡಿದ. ಆಗ ಶುಕ್ರಾಚಾರ್ಯರ ಮಗನಾದ ದೇವ ಬಡಗಿ ತ್ವಷ್ಟೃ ಆ ದಧೀಚಿಯ ಮೂಳೆಯಿಂದ ವಜ್ರಾಯುಧವನ್ನು ತಯಾರಿಸಿ ದೇವೇಂದ್ರನಿಗೆ ಕೊಟ್ಟ್ಟ.
‘ವ್ರತ ನಿಬರ್ಹಣ’ ಎನ್ನಿಸಿಕೊಂಡ ಆ ವಜ್ರಾಯುಧವು. ವೃತ್ರನ ತಲೆಯ ಮೇಲೆ ಸಾವಿರ ಚೂರಾಗಿ ಸಿಡಿದು ಅವನನ್ನು ಕೊಂದಿತು.
ದಧೀಚಸ್ಯಾಸ್ಥಿತೋ ವಜ್ರಂ,
ಕೃತಂ ದಾನವ ಸೂದನಂ
ಅಂದರೆ ದಧೀಚಿ ಮಹಿರ್ಷಿಯ ಬೆನ್ನು ಮೂಳೆಯಿಂದ ಮಾಡಿದ ವಜ್ರಾಯುಧವು ದಾನವರನ್ನೆಲ್ಲ ಸದೆಬಡಿಯಲು ಸಹಕಾರಿಯಾಯಿತು. ಲೋಕದ ಮಹಾತ್ಯಾಗಿಗಳ ಪಟ್ಟಿನಲ್ಲಿ ಈತನ ಹೆಸರು ಪ್ರಮುಖವಾದುದು.
ಲೋಮಶ:
ಲೋಮಶ ಮಹರ್ಷಿ - ಅರ್ಜುನನು ದೇವೇಂದ್ರನ ಅರಮನೆಯಲ್ಲಿ ಇದ್ದಾಗ ಇಂದ್ರನು ಅರ್ಜುನನ ಕ್ಷೇಮ ಸಮಾಚಾರವನ್ನು ತಿಳಿಸಲು ಲೋಮಶನನ್ನು ಪಾಂಡವರ ಬಳಿಗೆ ಕಳುಹಿಸಿದನು. ಅಲ್ಲದೆ ಧರ್ಮರಾಯನಿಗೆ ತೀರ್ಥಕ್ಷೇತ್ರಗಳ ಪರಿಚಯವನ್ನು ಮಾಡಿಕೊಡುವಂತೆ ಹೇಳಿಕಳುಹಿಸಿದ್ದನು. ಅದರಂತೆ ಲೋಮಶನು ಪಾಂಡವರ ಬಳಿಗೆ ಬರುತ್ತಾನೆ. ತೀರ್ಥಯಾತ್ರೆ ಪರ್ವದಲ್ಲಿ ಈತ ಧರ್ಮರಾಯನನ್ನು ಕರೆದುಕೊಂಡು ಹೋಗಿ ತೋರಿಸಿದ ತೀರ್ಥಕ್ಷೇತ್ರಗಳ ವಿವರವಿದೆ. ಅಲ್ಲದೆ ಆ ಕ್ಷೇತ್ರಗಳ ಪುರಾಣ ಕಳುಹಿಸಿದನು. ಅಲ್ಲದೆ ಧರ್ಮರಾಯನಿಗೆ ತೀರ್ಥಕ್ಷೇತ್ರಗಳ ಪರಿಚಯವನ್ನು ಮಾಡಿಕೊಡುವಂತೆ ಹೇಳಿಕಳುಹಿಸಿದ್ದನು. ಅದರಂತೆ ಲೋಮಶನು ಪಾಂಡವರ ಬಳಿಗೆ ಬರುತ್ತಾನೆ. ತೀರ್ಥಯಾತ್ರ್ರೆ ಪರ್ವದಲ್ಲಿ ಈತ ಧರ್ಮರಾಯನನ್ನು ಕರೆದುಕೊಂಡು ಹೋಗಿ ತೋರಿಸಿದ ತೀರ್ಥಕ್ಷೇತ್ರಗಳ ವಿವರವಿದೆ. ಅಲ್ಲದೆ ಆ ಕ್ಷೇತ್ರಗಳ ಪುರಾಣ, ಅಲ್ಲಿಯ ಪ್ರಸಿದ್ಧ ವ್ಯಕ್ತಿಗಳ ಕಥೆಗಳನ್ನೆಲ್ಲ ಈ ಋಷಿ ಪಾಂಡವರಿಗೆ ಕಥನಿಸಿದ್ದಾನೆ. ಅಗಸ್ತ್ಯರ ಕಥೆ, ಪರಶುರಾಮರ ಕಥೆ, ವಿಂಧ್ಯ ಪರ್ವತದ ಕಥೆ, ಮಹೇಂದ್ರಾಚಲದ ಕಥೆ, ಸುಕನ್ಯೆಯ ಉಪಖ್ಯಾನ, ಮಾಂಧಾತೃ ಉಪಾಖ್ಯಾನ, ಶ್ವೇನ ಕಪೋತೀಯ ಉಪಖ್ಯಾನ, ಗಂಧ ಮಾಧವ ಗಿರಿಯ ಪರಿಚಯ, ಯವಕ್ರೀತನ ಕಥೆ ಮೊದಲಾದವುಗಳನ್ನು ವಿಸ್ತಾರವಾಗಿ ವಿವರಿಸಿ ಮಹಾಭಾರತವನ್ನು ‘ತೀರ್ಥಯಾತ್ರಾ ಕೋಶ’ವನ್ನಾಗಿ ಮಾಡಿರುವುದರಲ್ಲಿ ಈತನ ಪಾತ್ರ ದೊಡ್ಡದು. ಈ ಮಹರ್ಷಿಯು ಧರ್ಮರಾಯನಿಗೆ ‘ದಿವ್ಯದರ್ಶನ’; ಶಕ್ತಿಯನ್ನು ದಯಪಾಲಿಸಿದ್ದ. ಈ ಲೋಮಶ ದೇವತೆಗಳಿಗೂ ಸಹಾಯಕನಾಗಿದ್ದ ಋಷಿ. ದಧೀಚಿಯ ಮೂಳೆಯಿಂದ ವಜ್ರಾಯುಧವನ್ನು ಮಾಡಿಕೊಂಡು ರಾಕ್ಷಸರನ್ನು ಸಚಿಹರಿಸುವಂತೆ ದೇವೇಂದ್ರನಿಗೆ ಸ್ರಚಿಸಿದವನೂ ಈತನೇ. ವೃತ್ರಾಸುರನ ಸಚಿಹಾರಕ್ಕೆ ಈ ಸಲಹೆ ಸಹಾಯಕವಾಯಿತು. ಧರ್ಮರಾಯನಿಗೆ ಈ ಋಷಿ ಹೇಳಿದ ಕಥೆಗಳಲ್ಲಿ ಪಯೋಷ್ಣಿ ನದಿಯ ಕಥೆ ವೈಢೂರ್ಯ ಪರ್ವತದ ಕಥೆ, ಯಮುನಾ ತೀರ್ಥದ ವೈಭವ, ಶಿಬಿ ಅಷ್ಟಾವಕ್ರರ ಕಥೆಗಳು, ಅರ್ವಾವಸು ಪರಾವಸು, ರೈಭ್ಯ, ಭಾರದ್ವಾಜರ ಕಥೆಗಳು ಆಕರ್ಷಣೀಯವಾಗಿವೆ. ವರಾಹಾವತಾರದ ಕಥೆಯಂತೂ ಮೈನವಿರೇಳಿಸುವಂತಿದೆ. ಕೆಲವು ದೇವಸ್ತ್ರೀಯರ ಶಾಪ ವಿಮೋಚನೆ ಮಾಡಿದ ಕೀರ್ತಿಯೂ ಈತನಿಗಿದೆ. ಭೀಷ್ಮರು ಶರಶಯ್ಯೆಯಲ್ಲಿ ಇದ್ದಾಗ ಬಂದು ನೋಡಿದ ಋಷಿ ಮಂಡಲಿಯಲ್ಲಿ ಈತನೂ ಇದ್ದನೆಂದು ಹೇಳಲಾಗಿದೆ. ವನಪರ್ವದಲ್ಲಿ ಬರುವ ಸುಂದರ ಕಥೆ ಉಪಾಖ್ಯಾನಗಳ ಸೊಗಸಿಗೆ ಈತನ ಕಾಣಿಕೆ ಅಪಾರ ಎಂದು ಹೇಳಬಹುದು. ಆಗಾಗ ಸ್ವರ್ಗಕ್ಕೆ ಹೋಗಿಬರುತ್ತಿದ್ದ ಲೋಮಶ ಒಮ್ಮೆ ಇಂದ್ರನ ಅರ್ಧಾಸನದಲ್ಲಿ ಕುಳಿತಿದ್ದ ಅರ್ಜುನನ ಈ ಪುಣ್ಯಕ್ಕೆ ಕಾರಣವೇನು ಎಂದು ಯೋಚಿಸಿದನಂತೆ. ಅದು ಇಂದ್ರನಿಗೆ ತಿಳಿದು ಅದರ ಬಗೆಗೆ ವಿವರಣೆ ನೀಡಿ ಧರ್ಮರಾಯನ ಬಳಿಗೆ ಬರುವಂತಾಯಿತು. ದೀರ್ಘ ಜೀವಿಯೂ ವ್ಯಕ್ತಿ-ಸ್ಥಳ ಕಥನವನ್ನು ಆಳವಾಗಿ ಬಲ್ಲವನೂ ಆದ ಲೋಮಶನಂಥ ಬಹುಶ್ರುತರು ವಿರಳ.
ಮೂಲ ...{Loading}...
ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯ ಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ ॥10॥
೦೧೧ ಆ ಮುನಿಯ ...{Loading}...
ಆ ಮುನಿಯ ಕಂಕಾಳದಲಿ ಸು
ತ್ರಾಮ ಕೊಂದನು ವೃತ್ರನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ
ಭೀಮ ಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರವರು ಸಹಸ್ರ ಸಂಖ್ಯೆಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದಧೀಚಿಯ ಅಸ್ತಿಗಳಿಂದ ದೇವೇಂದ್ರನು ವೃತ್ರಾಸುರನನ್ನು ಕೊಂದನು. ಅನಂತರ ಅಪಾರ ಸಂಖ್ಯೆಯ ರಾಕ್ಷಸರು ಸಮುದ್ರದಲ್ಲಿ ಅಡಗಿ, ಒಮ್ಮೆ ವಸಿಷ್ಠರ ಆಶ್ರಮಕ್ಕೆ ಒಂದು ಸಾವಿರಾರು ಮುನಿಗಳನ್ನು ತಿಂದರು.
ಪದಾರ್ಥ (ಕ.ಗ.ಪ)
ಕಂಕಾಳ-ಅಸ್ತಿಪಂಜರ
ಮೂಲ ...{Loading}...
ಆ ಮುನಿಯ ಕಂಕಾಳದಲಿ ಸು
ತ್ರಾಮ ಕೊಂದನು ವೃತ್ರನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ
ಭೀಮ ಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರವರು ಸಹಸ್ರ ಸಂಖ್ಯೆಯಲಿ ॥11॥
೦೧೨ ಚ್ಯವನನಾಶ್ರಮದೊಳಗೆ ಮೂರನು ...{Loading}...
ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದನು ದೈತ್ಯದಾನವರ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚ್ಯವನ ಮುನಿಯಾಶ್ರಮದಲ್ಲಿ ಮೂವರು ಋಷಿಗಳನ್ನು ತಿವಿದು, ಭಾರದ್ವಾಜಾಶ್ರಮದಲ್ಲಿ ಎಪ್ಪತ್ತು ಮಂದಿಯನ್ನು ನುಂಗಿದರು. ದೇವತೆಗಳು ಇತ್ತ ಅಗಸ್ತ್ಯರನ್ನು ಪ್ರಾರ್ಥಿಸಲು ಅವರು ಸಮುದ್ರವನ್ನು ಆಪೋಶನ ಮಾಡಿ ದೈತ್ಯ ದಾನವರನ್ನು ಹೊಟ್ಟೆಯೊಳಗೇ ಕೊಂದರು.
ಟಿಪ್ಪನೀ (ಕ.ಗ.ಪ)
ಅಗಸ್ತ್ಯಮುನಿ - ಕಾಲಕೇಯರನ್ನು ಬೇಗೂ ಬಡಿಯುವುದಕ್ಕಾಗಿ ಸಮುದ್ರದ ನೀರನ್ನೆಲ್ಲ ಆಪೋಶನವಾಗಿ ತೆಗೆದುಕೊಂಡವರು ಅಗಸ್ತ್ರು ಹೊಟ್ಟೆ ಸೀಳಿಕೊಂಡು ಬರುತ್ತಿದ್ದ ವಾತಾಪಿಯನ್ನು ಹೊಟ್ಟೆಯೊಳಗೇ ಕರಗಿಸಿದವರು, ದಕ್ಷಿಣ ಉತ್ತರಭಾರತಗಳ ಸಾಂಸ್ಕೃತಿಕ ಸೇತುವಾದವರು, ವಿಂಧ್ಯೆ ಬೆಳೆಯದಂತೆ ನಿಯಂತ್ರಿಸಿದವರು ತಾನು ಸೃಷ್ಟಿಸಿದವಳನ್ನು ತಾನೇ ಮದುವೆಯಾದವರು ಕಾವೇರಿಯ ಹರಿವಿಗೆ ಕಾರಣರಾದವರು ಮುಂತಾಗಿ ಪ್ರಸಿದ್ಧನಾಗಿರುವ ಅಗಸ್ತ್ಯರು, ಭಾರತದ ಕಾವ್ಯ, ಪುರಾಣ, ಐತಿಹ್ಯ ಇತಿಹಾಸಗಳಲ್ಲಿ ಚಿರಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತ ತಮಿಳು ಸಂಸ್ಕೃತಿಯೂ ಅಗಸ್ತ್ಯರು ತನ್ನವೆಂದು ಒಪ್ಪುತ್ತದೆ. ಮಹಾಭಾರತದಲ್ಲಿಯೂ ಅಗಸ್ತ್ಯರು ಹಲವಾರು ಬಾರಿ ಪ್ರಸ್ತಾವಕ್ಕೆ ಒಳಗಾಗಿದ್ದಾರೆ. ಇವರಿಗೆ ಕುಂಭಜ ಎಂಬ ಹೆಸರೂ ಇದೆ. ಮೈತ್ರಾವರುಣಿ ಎಂದೂ ಕರೆಯುತ್ತಾರೆ.
ಅಗಸ್ತ್ರರು ಮಿತ್ರಾವರುಣರ ಮಗ, ಬ್ರಹ್ಮರ್ಷಿ. ಮಿತ್ರಾವರುಣರು ಸಮುದ್ರ ತೀರದಲ್ಲಿ ಹೋಗುತ್ತಿರುವಾಗ ಊರ್ವಶಿಯನ್ನು ನೋಡಿ ವೀರ ಪತನವಾಗಿ ಮಡಿಕೆಯಲ್ಲಿ ಬೆಳೆದು ಅಗಸ್ತ್ಯವಸಿಷ್ಠರು ಹುಟ್ಟಿದರು ಎಂದು ಪುರಾಣ ಹೇಳುತ್ತದೆ. ದ್ರೋಣನ ಅಸ್ತ್ರವಿದ್ಯ ಗುರುವಾಗಿದ್ದ ಅಗ್ನಿವೇಶಿಗೆ ಅಸ್ತ್ರವಿದ್ಯೆಯನ್ನು ಕಲಿಸಿದ ಗುರುವಾಗಿದ್ದ ಬ್ರಹ್ಮಚಾರಿಯಾಗಿದ್ದ ಅಗಸ್ತ್ಯರು ಒಂದುಸಲ ತಾವೇ ಒಬ್ಬಳು ಸುಂದರ ಕನ್ಯೆಯನ್ನು ಸೃಷ್ಟಿಸಿದರು. ಅನಂತರ ಅವಳನ್ನು ವಿದರ್ಭರಾಜನಿಗೆ ದತ್ತು ಮಗಳಾಗಿ ದಾನವಿತ್ತಿದರು ಎಂದು ವನಪರ್ವ ಹೇಳುತ್ತದೆ. ಮುಂದೆ ತಾನು ಮದುವೆಯಾಗಿ ಮಗನನ್ನು ಪಡೆಯದಿದ್ದರೆ ತನ್ನ ಪಿತೃಗಳಿಗೆ ಮೋಕ್ಷಸಿಗುವುದರಲ್ಲಿ ಎಂದು ತಿಳಿದು ಬಂದಾಗ ಮದುವೆಯಾಗುವ ನಿರ್ದಾರ ಮಾಡಿದರು. ಅನಂತರ ತಾನೇ ವಿದರ್ಭರಾಜನ ಬಳಿಗೆ ಹೋಗಿ ನಿನ್ನ ಮಗಳನ್ನು ನನಗೆ ಧಾರೆ ಎರೆದುಕೊಡು ಎಂದು ಕೇಳಿದರು. ಈ ವಿಚಿತ್ರಕ್ಕೆ ಬೆರಗಾದರೂ ರಾಜನು ತುಂಬ ಸಂತಸದಿಂದ ಮದುವೆ ಮಾಡಿಕೊಟ್ಟ. ಇವನ ಪತ್ನಿಯೇ ಪುರಾನ ಪ್ರಸಿದ್ಧಳಾದ ಲೋಪಾಮುದ್ರೆಯ ಇವಳು ಸಿಂಧೂ ತೀರ್ಥದಲ್ಲಿ ಅಗಸ್ತ್ಯರ ಕೈ ಹಿಡಿದಳು. ಈ ತೀರ್ಥದ ಹೆಸರು ಪ್ಲಕ್ಷಾವತರಣ ಅಗಸ್ತ್ಯ-ಲೋಪಾಮುದ್ರೆಯರ ಮಗ ದೃಢಸ್ಸು ಅಥವಾ ಇದ್ಮವಾಹ ಇವಳಿಂದ ಪ್ರೇರಿತಳಾಗಿ ಲೋಪಾಮುದ್ರೆಯನ್ನು ಸುಖವಾಗಿರಿಸಲು ಅಗಸ್ಯರು ಧನಸಂಗ್ರಹಕ್ಕೆ ಹೊರಡುತ್ತಾರೆ. ಇಲ್ವಲನಿಂದಲೂ ಹಣಬೇಡಲು ಬಂದಾಗ ಅನುಷಂಗಿಕವಾಗಿ ವಾತಾಪಿಯನ್ನು ಕೊಲ್ಲಬೇಕಾಯಿತು. ಇಂದ್ರನ ಸ್ಥಾನಕ್ಕೆ ಬಂದು ಸಪ್ತರ್ಷಿಗಳೊಡನೆ ತುಂಬ ಕೆಟ್ಟದಾಗಿ ನಡೆದುಕೊಂಡ ನಹುಷನಿಗೆ ‘‘10000 ವರ್ಷದವರೆಗೆ ಸರ್ಪವಾಗಿರು ಎಂದು ಶಾಪವಿತ್ತು ಅಹಂಕಾರವನ್ನು ತಗ್ಗಿಸಿದ ಕೀರ್ತಿ ಅಗಸ್ತ್ಯರಿಗೆ ಸಲ್ಲುತ್ತದೆ. ಒಂದು ಸಲ ಭಾರಿಯ ಕ್ಷಾಮ 12 ವರ್ಷ ದೇಶವನ್ನು ಕಾಡಿದಾಗ ಈತ ಮಾನಸಿಕ ಅಥವ ಸ್ಪರ್ಶಯಜೂಗಳನ್ನು ತುಂಬ ಶ್ರದ್ಧೆಯಿಂದ ಮಾಡಿದ್ದೇ ಅಲ್ಲದೆ ತಮ್ಮತಮ್ಮ ತಪಶ್ಯಕ್ತಿಯಿಂದ ಯಜ್ಞಕ್ಕೆ ಬೇಕಾದ ಸಂಪತ್ತೆಲ್ಲ ಸ್ವರ್ಗಮೃತ್ಯ ಪಾತಾಳಲೋಕದಿಂದ ತನ್ನೆಡೆಗೆ ತರಿಸಿಕೊಂಡರು. ಸ್ವಯಂ ಇಂದ್ರನೇ ಬಂದು ಯಜ್ಞದಲ್ಲಿ ಹವಿಸ್ಸನ್ನು ಸ್ವೀಕರಿಸಿ ಹರಸಿ ಹೋದನಂತೆ.’
ಸಮಗ್ರ ಭಾರತದಲ್ಲಿ ಓಡಾಡಿದ ಮಹರ್ಷಿ ಎಂದರೆ ಅಗಸ್ತ್ಯರು. ಭಾರತದ ಎಲ್ಲ ಭಾಗಗಳಲ್ಲ ಪ್ರಕೀರ್ತಿತರಾಗಿದ್ದಾರೆ. ದಕ್ಷಿಣ ಭಾರತದಲ್ಲಂತೂ ಅವರು ಮನೆ ಮಾತಾಗಿದ್ದಾರೆ. ಇದು ಭಾರತದ ಅಗಸ್ಯರ ಕಥೆಯಾಗಿ ಲೋಕೋಪಕಾರ ಮತ್ತು ಲೋಕ ಕಲ್ಯಾಣದ ಕಾಳದ ಉಳ್ಲ ವ್ಯಕ್ತಿಯನ್ನು ನಮ್ಮೆದುರಿಗೆ ಇರಿಸುತ್ತದೆ ಇನ್ನು ಪುರಾಣಗ¼ಲ್ಲಂತೂ ಈತನ ಚಿತ್ರವು ವರ್ಣಮಯವಾಗಿ ಸಾಹಸಮಯವಾಗಿ ಕಂಗೊಳಿಸಿದೆ.
ಮೂಲ ...{Loading}...
ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದನು ದೈತ್ಯದಾನವರ ॥12॥
೦೧೩ ಸಗರಸುತ ಚರಿತವನು ...{Loading}...
ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡ ಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯಚರಿತವ ಮುನಿಪ ವರ್ಣಿಸಿದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಗರಕುಮಾರರ ಚರಿತೆ, ಕಪಿಲಮುನಿಯ ದೃಷ್ಟಿಯಿಂದ ಅವರು ಭಸ್ಮೀಭೂತರಾದುದು, ಬಳಿಕ ಭಗೀರಥ ಗಂಗೆಯನ್ನು ಭೂಮಿಗೆ ಕರೆತಂದದ್ದು, ಅಗಸ್ತ್ಯರು ವಾತಾಪಿ ಇಲ್ವಲರನ್ನು ಕೊಂದದ್ದು, ವಿಂಧ್ಯ ಪರ್ವತದ ಬೆಳವಣಿಗೆಯನ್ನು ನಿಲ್ಲಿಸಿದ್ದು, ಹೀಗೆ ಅನೇಕ ಕಥೆಗಳನ್ನು ಮುನಿಯು ವರ್ಣಿಸಿದನು.
ಟಿಪ್ಪನೀ (ಕ.ಗ.ಪ)
ಭಗೀರಥ - ಸಾಹಸಕ್ಕೆ ಬೇರೊಂದು ಹೆಸರು ಎಂದರೆ ‘ಭಗೀರಥ’ ಎನ್ನಬಹುದು. ಭಾಗವತ, ಬ್ರಹ್ಮಾಂಡ ಪುರಾಣ, ವಿಚಿತ್ರ ರಾಮಾಯಣ ಮೊದಲಾದ ಹತ್ತಾರು ಪುರಾಣ-ಕಾವ್ಯಗಳಲ್ಲಿ ಭಗೀರಥನ ಪ್ರಸ್ತಾಪವಿದೆ. ಮಹಾಭಾರತದಲ್ಲಿಯೂ ಅನೇಕ ಸಂದರ್ಭಗಳಲ್ಲಿ, ಮುಖ್ಯವಾಗಿ ವನಪರ್ವದ 85ನೇ ಅಧ್ಯಾಯದಲ್ಲಿ ಹಾಗು ದ್ರೋಣ-ಶಾಂತಿಪರ್ವಗಳಲ್ಲಿ ಭಗೀರಥ ಉಕ್ತನಾಗಿದ್ಧಾನೆ. ದಿಲೀಪ ಚಕ್ರವರ್ತಿಯ ಮಗನಾದ ಭಗೀರಥನಿಗೆ ಕಪಿಲ ಮಹರ್ಷಿಯ ಶಾಪದಿಂದ ಸುಟ್ಟುಹೋದ ತನ್ನ ಸಗರ ವಂಶದ 60000 ಜನರಿಗೆ ಸದ್ಗತಿ ಕಾಣಿಸಲು ಗಂಗಾನದಿಯನ್ನು ಭೂಮಿಗೆ ತರುವ ಹಂಬಲ. ಅದಕ್ಕಾಗಿ ಒಂದು ಸಾವಿರ ವರ್ಷ ಹಿಮಾಲಯದಲ್ಲಿ ತಪಸ್ಸು ಮಾಡಿದ. ತಪಸ್ಸಿಗೆ ಬದಲಿಗೆ ಗಂಗೆ ಮಾನವ ರೂಪದಲ್ಲಿ ಬಂದು ಏನು ವರ ಬೇಕು? ಎಂದಾಗ ತನ್ನ ಅಭಿಲಾಷೆಯನ್ನು ತಿಳಿಸಿದ. ಗಂಗೆ ಇಳಿದು ಬರಲು ಸಿದ್ಧಳಾಗಿದ್ದಳು. ಆದರೆ ಆಕೆಯ ರಭಸ-ಭಾರಗ¼ನ್ನು ಈಶ್ವರನಲ್ಲದೆ ಬೇರೆ ಯಾರೂ ತಡೆಉವ ಶಕ್ತಿ ಹೊಂದಿಲ್ಲವಲ್ಲ ಎಂದು ಗಂಗೆ ಹೇಳಿದಾಗ ಭಗೀರಥ ಮತ್ತೆ ಈಶ್ವರನನ್ನೇ ತಪಸ್ಸಿನಿಂದ ಒಲಿಸಿಕೊಂಡ. ಕೊಟ್ಟ ಮಾತಿನಂತೆ ದೇವ ಗಂಗೆ ಸ್ವರ್ಗದಿಂದ ಬಂದಿಳಿದಳು. ಈಶ್ವರನು ಗಂಗೆಯನ್ನು ಮುತ್ತಿನ ಹಾರದಂತೆ ಜಡೆಯಲ್ಲಿ ಧರಿಸಿಕೊಂಡನೆಂದು ವ್ಯಾಸರು ಹೇಳುತ್ತಾರೆ. ಭಗೀರಥನು ಮುಂದೆ ಗಂಗೆಯನ್ನು ಸಗರನ ಮಕ್ಕಳು ಸತ್ತುಬಿದ್ದಿದ್ದ ಜಾಗಕ್ಕೆ ಕರೆದೊಯ್ದು. ದಾರಿಯಲ್ಲಿ ಮತ್ತ ಜುಹ್ನು ಋಷಿ ಸಿಟ್ಟಿನಿಂದ ಗಂಗೆಯನ್ನು ಆಪೋಶನ ತೆಗೆದುಕೊಂಡಾಗ ಆ ವಿಘ್ನವನ್ನು ಪರಿಹರಿಸಬೇಕಾಯಿತು. ಗಂಗೆಯಲ್ಲಿ ಪಿತೃಗಳಿಗೆ ತರ್ಪಣ ಕೊಟ್ಟ ನಂತರ ಭಗೀರಥ ಆಕೆಯನ್ನು ಸಮುದ್ರಕ್ಕೆ ಸೇರಿಸಿದ. ಸಮುದ್ರರಾಜ ಗಂಗೆಯನ್ನು ಮಗಳಂತೆ ಸ್ವೀಕರಿಸಿದ.
ಸಗರ ಪುತ್ರರು 60000 ಜನ ಸತ್ತುಹೋದಾಗ ಅವರ ಪತ್ನಿಯರು ನಾರಾಯಣನನ್ನು ಆರಾಧಿಸಿದರು. ನಾರಾಯಣನು ‘‘ನಿಮಗೆ ಮಗ ಬೇಕಾದರೆ ನೀವು ಋತುಮತಿಯಾದಾಗ ನಿಮ್ಮ ಶೋಣಿತವನ್ನು ಹೊಸ ಭಾಂಡದಲ್ಲಿ ಹಾಕಿಡಿ. ಅದರಲ್ಲಿ ಒಬ್ಬ ಮಗ ಹುಟ್ಟುತ್ತಾನೆ’ ಎಂದನಂತೆ. ಹಾಗೆ ಹುಟ್ಟಿದ ಮಗನೆ ಭಗೀರಥ ಎಂದು ವಿಚಿತ್ರ ರಾಮಾಯಣದಲ್ಲಿ ಹೇಳಲಾಗಿದೆ. ಆದರೆ ಮಹಾಭಾರತದಲ್ಲಿ ಎಲ್ಲೂ ಈ ಸಂಗತಿ ಪ್ರಸ್ತಾವಿತವಾಗಿಲ್ಲ. ದುರ್ಮರಣ ಹೊಂದಿನ ಪಿತೃಗಳಿಗೆ ಗಂಗೆಯ ಪವಿತ್ರ ಜಲಸ್ನಾನದಿಂದ ಸ್ವರ್ಗಸೋಪಾನ ಪಂಕ್ತಿಯನ್ನು ನಿರ್ಮಿಸಿದ ಕೀರ್ತಿ ಇವನದು ಎಂದು ಕಾಳಿದಾಸ ಹೇಳುತ್ತಾನೆ. ‘ಭಗೀರಥ’ ಎಂಬುದು ಸಾಹಸ, ನಿಷ್ಠೆ, ಛಲ ಮತ್ತು ಲೋಕೋಪಕಾರಗಳಿಗೆ ಒಂದು ಸಮರ್ಥ ಪ್ರತಿಮೆಯಾಗಿದೆ. ಇವನಿಗೆ ಒಲಿದು ಬಂದ ಗಂಗಾನದಿ ‘ಭಾಗೀರಥಿ’ ಎಂಬ ಹೆಸರನ್ನು ತಳೆದಿರುವುದೇ ಈತನ ಸಾಹಸೋದ್ಯಮವನ್ನು ಗಂಗೆ ಮೆಚ್ಚಿಕೊಂಡದ್ದನ್ನು ಸೂಚಿಸುತ್ತದೆ. ಸಂಕಲ್ಪ, ಬಲ, ಕಾರ್ಯನಿಷ್ಠೆ, ಅಪಾರ ಸಹನೆ-ಇವಿಷ್ಟಿದ್ದರೆ ಎಂಥ ಕಷ್ಟದ ಕೆಲಸವನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವನ ಕಥೆ ಸಾಕ್ಷಿಯಾಗಿದೆ. ಭಗೀರಥ ಪ್ರಯತ್ನ, ಭಗೀರಥ ಸಾಹಸ ಎಂಬ ಮಾತುಗಳು ಇಂದಿಗೂ ಪ್ರಚಲಿತವಾಗಿರುವುದು ಈತನ ಹಿರಿಮೆಯನ್ನು ಸಾರುತ್ತದೆ.
ವಾತಾಪಿ ಜೀರ್ಣೋಭವ - ಈ ಹೇಳಿಕೆ ಸಂಸ್ಕೃತದಲ್ಲಿ ಒಂದು ಅರ್ಥಪೂರ್ಣ ಗಾದೆಯೂ ಆಗಿದೆ.
ವಾತಾಪಿ ಮತ್ತು ಇಲ್ವಲ ಎಂಬುವರು ಸೋದರರು. ಇಲ್ವಲ ತನಗೊಬ್ಬ ಇಂದ್ರ ಸಮನಾದ ಪತ್ರ ಬೇಕು ಎಂದು ಬಯಸಿ ಯಾಗಕ್ಕೆ ಸಹಾಯ ಮಾಡಿದರೆಂದು ಬ್ರಾಹ್ಮಣರನ್ನು ಕೇಳಿದ. ಅವರು ಇವನ ಮನವಿಯನ್ನು ತರಿಸ್ಕರಿಸಿದಾಗ ಇಡೀ ಬ್ರಾಹ್ಮಣ ವರ್ಗದ ಮೇಲೆ ಅವನಿಗೆ ಸೇಡಿನ ಭಾವನೆ ಬಂದಿತು. ಸೋದರರಿಬ್ಬರೂ ಮಣಿಮತಿ ನಗರದಲ್ಲಿ ವಾಸಿಸುತ್ತಿದ್ದರು. ತನ್ನ ತಮ್ಮ ವಾತಾಪಿಯನ್ನು ಹೋತರೂಪಕ್ಕೆ ಪರಿವರ್ತಿಸಿ ಅಡುಗೆ ಮಾಡಿಸಿ ಬಂದ ಬ್ರಾಹ್ಮಣರಿಗೆಲ್ಲ ಹಂಚುತ್ತಿದ್ದ. ಎಲ್ಲರೂ ತಿಂದಾದ ಮೇಲೆ ‘ವಾತಾಪಿ ಆಚೆಗೆ ಬಾ’ ಎಂದು ಕೂಗುತ್ತಿದ್ದ. ವಾತಾಪಿ ಅವರೆಲ್ಲರ ಮೈಗಳನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ಕ್ರೌರ್ಯವನ್ನು ಸಮಾಪ್ತಿಗೊಳಿಸಿದ್ದು ಅಗಸ್ತ್ಯರು.
ಇಂಥವನ ಬಳಿಗೆ ಒಮ್ಮೆ ಅಗಸ್ತ್ಯರು ಬರಬೇಕಾಯಿತು. ಇವರು ಮಿತ್ರ ವರುಣರ ಮಗ. ಮಿತ್ರ-ವರುಣ ಇಬ್ಬರೂ ಗಂಡಸರು ಸ್ನೇಹಿತರು ಅಪ್ಸರೆಯನ್ನು ಕಂಡು ಮೋಹಿಸಿ ವೀರ್ಯ ಪತನವಾಗಿ ಮಡಿಕೆಯಲ್ಲಿ ವೀರ್ಯವನ್ನು ಇರಿಸಿ ವಸಿಷ್ಠ ಅಗಸ್ಯ್ಯ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಇವರಿಗೆ ‘ಕುಂಭಜ’ ಎಂದೂ ಹೆಸರು.
ಅಗಸ್ತ್ಯರು ಒಮ್ಮೆ ತಮ್ಮ ಪಿತೃಗಳೆಲ್ಲ ಒಂದು ಹಳ್ಳದಲ್ಲಿ ಬಾವಲಿಗಳಂತೆ ತೂಗಾಡುತ್ತಿದ್ದುದ್ದನ್ನು ನೋಡಿದರು ಆ ಪಿತೃಗಳು ‘ಅಗಸ್ತ್ಯ!’. ನಿನಗೆ ಸಂತಾನವಾದರೆ ನಾವೆಲ್ಲ ಸ್ವರ್ಗಕ್ಕೆ ಹೋಗುತ್ತೇವೆ ಎಂದರು. ಆ ಸಮಯದಲ್ಲಿ ವಿದರ್ಭದ ಮಹಾರಾಜನು ಮಗಳಿಗಾಗಿ ತಪಸ್ಸು ಮಾಡುತ್ತಿದ್ದ. ಅಗಸ್ತ್ಯರು ಎಲ್ಲ ಜೀವಿಗಳ ಸುಂದರ ದೇಹಭಾಗಗಳನ್ನು ಆರಿಸಿ ಲೋಪಾಮುದ್ರೆಯನ್ನು ಸೃಷ್ಟಿಸಿದರು. ತಪಸ್ಸು ಮಾಡುತ್ತಿದ್ದ ಅUಸ್ತ್ಯರು ಎಲ್ಲ ಜೀವಿಗಳ ಸುಂದರ ದೇಹಭಾಗಗಳನ್ನು ಆರಿಸಿ ಲೋಪಾಮುದ್ರೆಯನ್ನು ಸೃಷ್ಟಿಸಿದರು. ತಪಸ್ಸು ಮಾಡುತ್ತಿದ್ದ ವಿದರ್ಭರಾಜನ ಬಳಿಗೆ ಹೋಗಿ ಅವನಿಗೆ ಮಗುವನ್ನು ಕೊಟ್ಟರು. ನಂತರ ಅವಳು ಪಾಪ್ತತ ವಯಸ್ಕಳಾದ ಮೇಲೆ ಅಗಸ್ತ್ಯರೇ ಮದುವೆಯಾಗುವ ಹಂಬಲವನ್ನು ವ್ಯಕ್ತಪಡಿಸಿದರು. ಲೋಪಾಮುದ್ರೆಯನ್ನು ವಿವಾಹವಾಗಿ ದಧೃಸ್ಯು ಅಥವಾ ಇಧ್ಮವಾಹ ಎಂಬ ಮಗನನ್ನು ಪಡೆದರು. ಲೋಪಾಮುದದ್ರೆ ತನಗೆ ಸಂಪತ್ತು ಬೇಕು ಎಂದು ಕೇಳಿದಾಗ ಅದನ್ನು ತರಲು ಶ್ರುತವರ್ಮ ಎಂಬ ಪ್ರಸಿದ್ದ ಅರಸನ ಬಳಿಗೆ ಹೋದರು. ಆದರೆ ಅವನು ತನ್ನ ರಆಜ್ಯ ಕೋಶ ಬಡವಾಗಿದೆ ಎಂದು ತೋರಿಸಿಕೊಟ್ಟ. ಅನಂತರ ಅಗಸ್ತ್ಯರು ಧನಾರ್ಜನೆಗೆ ಕೆಲವರನ್ನು ಕಂಡಾಗ ತ್ರಸದಸ್ಯು-ಬ್ರಧ್ನಶ್ವರಿಂದಲೂ ಇದೇ ಮಾತು ಬಂದಿತ್ತು. ಇಲ್ವಲನ ಬಳಿ ಹಣವಿದೆ ಎಂದು ಹೇಳಿ ಅವರು ಮೂವರೂ ಸೇರಿ ಇಲ್ವಲನ ಬಳಿಗೆ ಅಗಸ್ತ್ಯರೊಂದಿಗೆ ಹೊರಟರು. ಇಲ್ವಲ ತನ್ನ ತಮ್ಮನಾದ ವಾತಾಪಿಯನ್ನು ಒಂದು ಹೋತವಾಗಿ ಮಾಡಿ ಅದನ್ನು ಅಡುಗೆ ಮಾಡಿ ಬ್ರಾಹ್ಮಣರಿಗೆ ಬಡಿಸಿದ. ಎಲ್ಲ ತಿಂದ ಮೇಲೆ ಎಂದಿನಂತೆ ‘ವಾತಾಪಿ ಹೊರಗೆ ಬಾ’ ಎಂದು ಕರೆದ. ಆದರೆ ಅಗಸ್ತ್ಯರು ತಮ್ಮ ಹೊಟ್ಟೆ ಸವರಿಕೊಂಡು ‘ವಾತಾಪಿ ಜೀರ್ಣೋಭವ’ ಎಂದರು. ವಾತಾಪಿ ಸತ್ತ. ಅನಂತರ ಹೆದರಿದ ಇಲ್ವಲ ಇವರೆಲ್ಲರಿಗೂ ಬೇಕಾದಷ್ಟು ಸಂಪತ್ತನ್ನು ಕೊಟ್ಟ. ಹೀಗೆ ಅಗಸ್ತ್ಯರು ತಮ್ಮ ಪತ್ನಿಗೆ ಸಂಪತ್ತನ್ನು ತಂದರು.
ಈ ವಾತಾಪಿಯ ಕಥೆ ಅನೇಕರನ್ನು ಆಕರ್ಷಿಸಿದೆ. ಪುತಿನ ಅವರು ಹುಲುಬಯಕೆ ಬಾ ಎನಲು ಓ ಎಂದು ಬಾರದಿರು ವಾತಾಪಿಯಂದದೊಳು ಬಾಳನೊಡೆದು ಮೊಗ್ಗಿನೊಳು ಕಂಪಂತೆ ಚೇತದೊಳು ಬೆಳೆಯುತ್ತ ಸಮವರಿತಳಿ ಬಾ ನಲವೆ ಒಲಿದು ಎಂದು ಹೇಳಿದ್ದಾರೆ. ಅಂದರೆ ಬಂದವರನ್ನು ಕೊಲ್ಲುವ ಕ್ಷುದ್ರ ಬಯಕೆಗೆ ಬಾಯಿಬಿಟ್ಟೆ ಅದು ವಾತಾಪಿಯಂತೆ ಎದೆಯನ್ನೇ ಸೀಳೆ ಆಚೆಗೆ ಬರುತ್ತದೆ. ಆದುದರಿಂದ ಬಯಕೆಗಳು ಸಾತ್ವಿಕ ರೂಪದವುಗಳಾಗಬೇಕು, ಲೋಕಕಲ್ಯಾಣ ದೃಷ್ಟಿ ಹೊಂದಿರಬೇಕು ಎನ್ನುತ್ತಾರೆ-ಕವಿ.
‘ಹುಲು ಬಯಕೆ ಬಾ ಎನಲು ಓ ಎಂದು ಬಾರದಿರು
ವಾತಾಪಿಯೆಂದದೂಳು ಬಾಳನೂಡದು
ಮೊಗ್ಗಿನೊಳು ಕಂಪಂತೆ ಚೇತದೂಳು ಬೆಳೆಯುತ್ತ
ಸಮಯವರಿತಳಿ ಬಾ ನಲವೆ ಒಲೆದೂ’
ಮೂಲ ...{Loading}...
ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡ ಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯಚರಿತವ ಮುನಿಪ ವರ್ಣಿಸಿದ ॥13॥
೦೧೪ ಕೇಳಿದನು ನೃಪ ...{Loading}...
ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯವನಾಶ್ರಮಕೆ ಬಂದರು ರೇಣುಕಾಸುತನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷ್ಯಶೃಂಗರ ಕಥೆಯನ್ನು ಕೇಳಿ, ಕಳಿಂಗ ದೇಶದ ಅನೇಕ ನದಿಗಳಲ್ಲಿ ಮಿಂದು, ಗಂಗಾನದಿಯ ಸಂಗಮಕ್ಕೆ ಬಂದು, ಅನಂತರ ವೈತರಿಣಿಯ ಉತ್ತರದಡವನ್ನು ದಾಟಿ, ಪರಶುರಾಮನ ಕಾಲಯವನಾಶ್ರಮಕ್ಕೆ ಬಂದರು.
ಟಿಪ್ಪನೀ (ಕ.ಗ.ಪ)
ಋಷ್ಯಶೃಂಗ :
ಸಂಸ್ಕೃತ ಪುರಾಣಗಳಲ್ಲಿ ಅತ್ಯಂತ ರೋಚಕವಾದ ಕಥೆ ಋಷ್ಯಶೃಂಗನದು. ಕನ್ನಡದಲ್ಲಿ ಶ್ರೀ ಚಂದ್ರಶೇಖರ ಕಂಬಾರ, ಜಿ.ಎಸ್.ಸಿದ್ದಲಿಂಗಯ್ಯ ಮೊದಲಾದ ಕವಿಗಳು ಈತನ ವ್ಯಕ್ತಿತ್ವದ ವಿಭಿನ್ನ ರೇಖೆಗಳನ್ನು ಗುರುತಿಸಿದ್ದಾರೆ. ಇವನು ಎಲ್ಲಿ ಹೋದರೆ ಅಲ್ಲಿ ಮಳೆ ಬರುತ್ತಿದ್ದುದರಿಂದ ಈಗಲೂ ಆತನ ಹೆಸರು ಸ್ಮರಣೆಯಲ್ಲಿ ಉಳಿದಿದೆ. ಇಂದ್ರನನ್ನು ಒಲಿಸಿಕೊಂಡಿದ್ದರಿಂದ ಇವನಿಗೆ ಆ ಶಕ್ತಿ ಬಂದಿತ್ತು. ವಿಭಾಂಡಕ ಮುನಿ ಈತನ ತಂದೆ. ತಾಯಿ ಒಂದು ಹೆಣ್ಣು ಜಿಂಕೆ. ಆದುದರಿಂದ ಈತನಿಗೆ ತಲೆಯ ಮೇಲೆ ಜಿಂಕೆಯಕೋಡು.
ಅಪ್ಪಟ ಬ್ರಹ್ಮಚಾರಿಯಾಗಿ ಇವನನ್ನು ಬೆಳೆಸಿದ ತಂದೆ ವಿಭಾಂಡಕರು ಈತನಿಗೆ ಸ್ತ್ರೀ ಸಮಾಜದ ಬಗೆಗೆ ಏನೂ ತಿಳಿಯದಂತೆ ನೋಡಿಕೊಂಡದ್ದು ಒಂದು ವಿಶಿಷ್ಟ ಕಥೆ. ಲೋಮಪಾದ ಮಹಾರಾಜ ತನ್ನ ರಾಜ್ಯದಲ್ಲಿ ಮಳೆ ಬೇಕೆಂದು ಬಯಸಿ ಈತನನ್ನು ಕರೆದು ತರಲು ಆಜ್ಞೆ ಮಾಡಿದ. ಆದರೆ ಇವನು ವಿಚಾರವೆಲ್ಲ ತಿಳಿದ ಮೇಲೆ ಒಂದು ಸುಂದರಿಯರ ತಂಡವನ್ನು ಅವನ ಬಳಿಗೆ ಕಳಿಸಿದ. ನಿಜವಾಗಿ ಹೆಣ್ಣು ಎಂದರೇನೆಂದು ಗೊತ್ತಿಲ್ಲದಿದ್ದ ಆತನನ್ನು ಆ ಸುಂದರಿಯರು ಆಶ್ಚರ್ಯಕರವಾಗಿ ಪರಿವರ್ತಿಸಿದರು. ಕೊನೆಗೆ ಅವನನ್ನು ಉಪಾಯದಿಂದ ತಮ್ಮ ರಾಜ್ಯಕ್ಕೆ ಎಳೆದೊಯ್ದರು. ತಂದೆಯನ್ನು ಬಿಟ್ಟು ಬೇರೆ ಯಾರನ್ನೂ ನೋಡಿರದೆ ಏಕಾಂಗಿಯಾಗಿ ಬೆಳೆದಿದ್ದ ಋಷ್ಯಶೃಂಗ ಈಗ ಕಣ್ಣು ತೆರೆದ. ಅಂಗ ರಾಜನಾದ ಲೋಪಪಾದನು ಒಬ್ಬ ಬ್ರಾಹ್ಮಣನೊಂದಿಗೆ ಮಿಥ್ಯಾ ವ್ಯವಹಾರ ಮಾಡಿದ್ದರಿಂದ ಸಿಟ್ಟು ಮಾಡಿಕೊಂಡ ಬ್ರಾಹ್ಮಣರು ಇವನ ರಾಜ್ಯವನ್ನು ತೊರೆದಿದ್ದರು. ಇಂದ್ರನೂ ಈ ರಾಜನ ಮೇಲೆ ಕೋಪಿಸಿಕೊಂಡು ಮಳೆಯನ್ನೇ ಸುರಿಸಿರಲಿಲ್ಲ. ಬರಗಾಲದಿಂದ ಜನ ಕಂಗೆಟ್ಟಾಗ ರಾಜನಿಗೆ ಜ್ಞಾನೋದಯವಾಯಿತು. ಈ ಕಾರಣದಿಂದ ಲೋಕೋಪಕಾರವಾಗಲೆಂದು ಅವನು ಮತ್ತೆ ಬ್ರಾಹ್ಮಣರೊಂದಿಗೆ ಸ್ನೇಹ ಬೆಳೆಸಿ ಉಪಾಯದಿಂದ ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆಸಿದ.
ಇವನನ್ನು ಸೆಳೆಯುವುದಕ್ಕಾಗಿ ವೇಶ್ಯೆಯರು ಒಂದು ನಾವೆಯಲ್ಲಿಯೇ ಆಶ್ರಯ ರಚಿಸಿಕೊಂಡದ್ದು. ಇವರನನು ಮುನಿಗಳೆಂದೇ ಋಷ್ಯಶೃಂಗನು ತಿಳಿದದ್ದು. ಅಘ್ರ್ಯಪಾದ್ಯಗಳಿಗೆ ಬದಲಾಗಿ ಆಲಿಂಗನ ತಂತ್ರವನ್ನು ವೇಶ್ಯೆ ಅನುಸರಿಸಿದ್ದು. ಕ್ರಮವಾಗಿ ಬಗೆಬಗೆಯ ಭಕ್ಷ್ಯ ಭೋಜ್ಯಗಳ ರುಚಿಯನ್ನು ಅವನಿಗೆ ಹತ್ತಿಸದ್ದು, ಸುಂದರ ವೇಷ-ಭೂಷಣಗಳನ್ನು ಪರಿಚಯಿಸಿದ್ದು, ಸುಗಂಧ ದ್ರವ್ಯಗಳನ್ನು ಪೂಸಿದ್ದು ಕೊನೆಗೆ ಪಾನಿಯದ ಸವಿಯನ್ನು ಮನಗಾಣಿಸಿದ್ದು ಇವೆಲ್ಲ ತುಂಬ ಮನೋಹರವಾಗಿ ಮಹಾಭಾರತದ ವನಪರ್ವ ಮತ್ತು ಪರ್ವ ಸಂಗ್ರಹದಲ್ಲಿ ವರ್ಣಿತವಾಗಿದೆ. ಕೊನೆಗೆ ಲೋಮಪಾದರಾಜನ ಮಗಳು ಶಾಂತೆಯನ್ನು ಋಷ್ಯಶೃಂಗ ಮದುವೆಯಾದ. ಲೋಮಪಾದನು ದಶರಥನ ಸ್ನೇಹಿತನಾಗಿದ್ದುದರಿಮದ ಅವನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಲು ಸೂಕ್ತ ವ್ಯಕ್ತಿ ಎಂಬ ಕಾರಣದಿಂದ ಋಷ್ಯಶೃಂಗನನ್ನು ಅಯೋಧ್ಯೆಗೆ ಕರೆಸಿಕೊಂಡನೆಂಬ ಸಂಗತಿಯೂ ಪ್ರಸಿದ್ಧಿ ಪಡೆದಿದೆ.
ಋಷ್ಯಶೃಂಗನ ಕಥೆ ಲೋಕದ ಅಪೂರ್ವ ಕಥಾನಕಗಳಲ್ಲಿ ಒಂದಾಗಿದೆ. ಕಾಲಯವನ :
ಕಾಲಯವನ ಎಂಬ ರಾಕ್ಷಸ ಸ್ವಭಾವದವನು ಶ್ರೀ ಕೃಷ್ಣನನ ತಂತ್ರಕ್ಕೆ ಬಲಿಯಾದ ಒಬ್ಬ ವ್ಯಕ್ತಿ. ಈತ ಮಹಾತಪಸ್ವಿ ಗರ್ಗನ ಮಗ. ಗರ್ಗನು ಯಾದವರ ಪುರೋಹಿತ.
ಯಾದವರು ಈತನನ್ನು ಪರಿಹಾಸ ಮಾಡಿದಾಗ ಗರ್ಗನು ಕೋಪದಿಂದ ಯಾದವ ಶತ್ರುವಾಗಬಲ್ಲ ಮಗನನ್ನು ಪಡೆಯಲು ಶಿವನನ್ನು ಕುರಿತು ಉಗ್ರತಪಸ್ಸು ಮಾಡಿ ಶಿವನ ಅನುಗ್ರಹದಿಂದ ಕಾಲಯವನನನ್ನು ಪಡೆದ. ಕಾಲಯವನನನ್ನು ಮುಂದೆ ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು ಯಾವ ಯಾದವನಿಂದಲೂ ತನಗೆ ಸಾವು ಬರಬಾರದು ಎಂಬ ವರವನ್ನು ಪಡೆದುಕೊಂಡು ಮಥುರಾ ನಗರಕ್ಕೆ ಮುತ್ರಿಗೆ ಹಾಕಿದ್ದ. ಇವನನ್ನು ಕೊಲ್ಲಲು ಸಾಧ್ಯವಿಲ್ಲದ್ದರಿಂದ ಬೇಸತ್ತ ಕೃಷ್ಣ ಮಥುರೆಯನ್ನು ಬಿಟ್ಟು ದ್ವಾರಕೆಗೆ ಹೋಗಿದ್ದ.
ಕಾಲಯವನನ್ನು ಕೊಲ್ಲಲು ಶ್ರೀಕೃಷ್ಣನು ಈ ಪ್ರಕರಣಕ್ಕೆ ಸಂಬಂಧಪಡದ ಮುಚುಕುಂದನನ್ನು ಆರಿಸಿಕೊಂಡದ್ದು ಕೃಷ್ಣನ ಅದ್ಭುತ ರಾಜಕೀಯ ತಂತ್ರದ ಚಿಹ್ನೆಯಾಗಿದೆ. ಮುಚುಕುಂದನೆಂಬ ರಾಜ ದೇವಾಸುರ ಯುದ್ಧದಲ್ಲಿ ಇಂದ್ರನಿಗೆ ಸಹಾಯ ಮಾಡಿ ಗೆಲುವು ತಂದುಕೊಟ್ಟಿದ್ದ. ಅದರ ಫಲವಾಗಿ ಅವನು ಕೇಳಿದ ವರ ವಿಚಿತ್ರವಾಗಿದೆ. ಅವನು ಇಂದ್ರನನ್ನು ಕೇಳಿದ್ದು ತನಗೆ ಒಂದು ಪ್ರಶಾಂತವಾದ ಗುಹೆಯನ್ನು ತೋರಿಸಬೇಕು, ಅಲ್ಲಿ ತಾನು ಚೆನ್ನಗಿ ನಿದ್ದೆ ಮಾಡಬೇಕು. ಯಾರಾದರೂ ನಿದ್ರಾಭಂಗ ಮಾಡಿದರೆ ಅಂಥವರು ಕೂಡಲೇ ಸುಟ್ಟು ಬೂದಿಯಾಗಬೇಕು-ಎಂಬ ವರ.
ಈ ಸಂಗತಿ ತಿಳಿದಿದ್ದ ಕೃಷ್ಣ ಒಮ್ಮೆ ಕಾಲಯವನನನ್ನು ಅಟ್ಟಿಸಿಕೊಂಡು ಬಂದಾಗ ಹೆದರು ಪಲಾಯನ ಮಾಡುವವನಂತೆ ನಟಿಸಿದ. ಗುಹೆಯೊಳಗೆ ಓಡಿದ. ಕಾಲಯವನ ಅಲ್ಲಿಗೂ ಅಟ್ಟಿಸಿಕೊಂಡು ಬಂದ. ಶ್ರೀಕೃಷ್ಣ ಮರೆಯಾದ. ಒಳಗೆ ಬಂದ ಕಾಲವಯನ ಅಲ್ಲಿ ಮಲಗಿದ್ದ ಮುಚುಕುಂದನನ್ನು ಶ್ರೀ ಕೃಷ್ಣನೆಂದು ತಪ್ಪು ತಿಳಿದು ಅವನನ್ನು ತಿವಿದು ಎಬ್ಬಿಸಿದ. ಬಲವಾಗಿ ಒದ್ದ. ಕೆರಳಿದ ಮುಚುಕುಂದ ಕಣ್ಣು ಬಿಟ್ಟು ನೋಡಿದಾಗ ವರ ಫಲಿಸಿತು. ಕಾಲವಯನ ಸುಟ್ಟು ಬೂದಿಯಾದ. ಇದು ವಾಸ್ತವವಾಗಿ ಭಾಗವತದ ಕತೆಯಾದರೂ ಮಹಾಭಾರತದ ಶಾಂತಿಪರ್ವದಲ್ಲಿ ಈ ಕಥೆ ನಿರೂಪಿತವಾಗಿದೆ.
ಮೂಲ ...{Loading}...
ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯವನಾಶ್ರಮಕೆ ಬಂದರು ರೇಣುಕಾಸುತನ ॥14॥
೦೧೫ ಪರಶುರಾಮನ ಕಾರ್ತವೀರ್ಯನ ...{Loading}...
ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಂದ ಮುಂದೆ ಪರಶುರಾಮರು ಕಾರ್ತವೀರ್ಯನೊಡನೆ ಯುದ್ಧಮಾಡಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತಿ ಕ್ಷತ್ರಿಯರನ್ನು ಕೊಂದು, ಪಿತೃಗಳಿಗೆ ತರ್ಪಣವನ್ನು ಕೊಟ್ಟು ಕೊಡಲಿಯನ್ನು ತೊಳೆದ ನದಿಯ ಕಥೆಯನ್ನು ಧರ್ಮಜ ಕೇಳಿದನು.
ಟಿಪ್ಪನೀ (ಕ.ಗ.ಪ)
ಕಾರ್ತವೀರ್ಯಾರ್ಜುನ - ಹೈಹಯ ವಂಶ ಕೃತವೀರನ ಮಗ ಕಾರ್ತವೀರ್ಯನು ಮಾಹಿಷ್ಮತೀ ನಗರದಲ್ಲಿದ್ದ ಮಹಾಸಾಮ್ರಾಟ, ರಾವಣ, ಇಂದ್ರ ಮೊದಲಾದವರ್ನ್ನು ಮಣಿಸಿದವನು. ವಿಷ್ಣುವನ್ನೇ ಎದುರಿಸಿದವನು. ವರುಣನೊಂದಿಗೆ ಸೆಣಸಿ ‘ನನ್ನ ಪ್ರತಿಸ್ಪರ್ಧಿ ಯಾರಿದ್ದಾರೆ ಹೇಳು’ ಎಂದು ಹೇಳಿ ಪರಶುರಾಮನೆಂದು ತಿಳಿದಾಗ ಅವನೊಂದಿಗೆ ಹೋರಾಡಬಯಸಿದನು. ಹೈಹಯ ವಂಶದವರಿಗಿದ್ದ ಬ್ರಾಹ್ಮಣ ದ್ವೇಷವನ್ನು ಮುಂದುವರಿಸಿಕೊಂಡು ಬಂದವನು. ತಾನು ಮಹಾವೀರನೆಂದೂ ಸರ್ವಶ್ರೇಷ್ಠನೆಂದೂ ಘೋಷಿಸಿಕೊಂಡು ಬಂದವನು. ಯುದ್ಧ ಮಾಡುವಾಗ ತನಗೆ ಸಹಸ್ರ ಬಾಹುಗಳಾಗುವಂತೆ ವರ ಪಡೆದವನು. ಜಗತ್ತನ್ನೇ ಗೆದ್ದವನು. ತನ್ನ ಪತ್ನಿಯರು ಈಜಾಡಲು ನೆರವಾಗಿ ಸಹಸ್ರಬಾಹುಗಳಿಂದ ನದಿಯನ್ನು ಬಂಧಿಸಿ ಕೊಳವನ್ನು ನಿರ್ಮಿಸಿದವನು.
ಭೃಗು ವಂಶದ ಬ್ರಾಹ್ಮಣರಿಗೂ ಹೈಹಯ ಕ್ಷತ್ರಿಯರಿಗೂ ಒಂದು ಕಾಲದಲ್ಲಿ ಸ್ನೇಹವಿತ್ತು. ಬಡವರಾದ ಭೃಗುವಂಶೀಯರಿಗೆ ಹೈಯಹ ರಾಜರು ಹೇರಳವಾಗಿ ಸಂಪತ್ತು ದಾನ ಮಾಡುತ್ತಿದ್ದರು. ಆದರೆ ಒಮ್ಮೆ ಹೈಹಯರಿಗೆ ಆರ್ಥಿಕ ಮುಗ್ಗಟ್ಟು ಬಂದಾಗ ಭೃಗು ವಂಶದ ಬ್ರಾಹ್ಮಣರು ತಮ್ಮಲ್ಲಿ ಹಣವಿಲ್ಲವೆಂದು ಸುಳ್ಳು ಹೇಳಿ ಆ ಜಾಗವನ್ನೇ ಬಿಟ್ಟು ಹಿಮಾಲಯಕ್ಕೆ ಹೋಗಿ ಅಲ್ಲಿ ಸಂಪತ್ತನ್ನೆಲ್ಲ ಬಚ್ಚಿಟ್ಟುಕೊಂಡ ನಂತರ ಈ ಎರಡು ವಂಶಗಳ ನಡುವೆ ವೈರ ಬೆಳೆಯಿತು.
ಜಗದಗ್ನಿ ಭೃಗುವಂಶದ ಒಬ್ಬ ಋಷಿ. ಇವನ ಮಗನೇ ಪರಶುರಾಮ. ಒಮ್ಮೆ ಸೇನಾ ಸಮೇತನಾಗಿ ಬಂದ ಕಾರ್ತವೀರ್ಯನನ್ನು ತಮ್ಮಲ್ಲಿದ್ದ ಕಾಮಧೇನುವಿನ ಮಗಳು ‘ಸುಶೀಲಾ’ ಎಂಬ ಹಸುವಿನ ವರದಿಂದ ಸತ್ಕರಿಸಿದಾಗ ಕಾರ್ತವೀರ್ಯ ಆ ಹಸು ತನಗೆ ಬೇಕೆಂದು ಕೇಳಿದ. ಆಮದಗ್ನಿ ಅಡ್ಡ ಬಂದುದಕ್ಕೆ ಅವನನ್ನು ಕೊಂದು ಹಾಕಿದ. ಹಸು ಓಡಿ ಹೋಯಿತು. ಆಗ ಶುಕ್ರಾಚಾರ್ಯರು ಹಸುವನ್ನು ತಂದು ಜಮದಗ್ನಿಯನ್ನು ಬದುಕಿಸಿದರು. ಆಮದಗ್ನಿಯ ಹೆಂಡತಿ ರೇಣುಕೆ ತನ್ನ ಗಂಡನ ಸಾವಿಗೆ ಇಪ್ಪತ್ತೊಂದು ಸಲ ಎದೆ ಬಡಿದುಕೊಂಡು ಅತ್ತಾಗ ಅಲ್ಲಿಗೆ ಬಂದ ಪರಶುರಾಮನು ಕಾರ್ತವೀರ್ಯನನ್ನು ಕೊಲ್ಲುವುದಾಗಿಯೂ ಇಪ್ಪತ್ತೊಂದು ಸಲ ಭೂಮಿಯನ್ನು ಸುತ್ತಿ ಕ್ಷತ್ರಿಯರನ್ನು ಕೊಲ್ಲುವುದಾಗಿಯೂ ಪ್ರತಿಜ್ಞೆ ಮಾಡಿದ.
ಸೇಡಿನಿಂದ ಕುದಿಯುತ್ತಿದ್ದ ಪರಶುರಾಮನು ತನ್ನ ಶಿಷ್ಯ ಅಕೃತವ್ರಣನೊಂದಿಗೆ ಮಾಹಿಷ್ಮತೀ ನಗರಕ್ಕೆ ಬಂದ. ಕಾರ್ತವೀರ್ಯಾಜುನನು ಸೇನಾ ಸಮೇತನಾಗಿ ಯುದ್ದಕ್ಕೆ ನಿಂತ. ಪರಶುರಾಮನು ಸೇನೆಯನ್ನು ಸೋಲಿಸಿದ. ಯುದ್ಧದಲ್ಲಿ ಕಾರ್ತವೀಯಾರ್ಜುನನ ಸಾವಿರ ತೋಳುಗಳನ್ನೂ ಕತ್ತರಿಸಿದ. ಅವನ ಎಪ್ಪತ್ತಾರು ಮಕ್ಕಳನ್ನೂ ಒಂದ. ಆಕಾಶವಾಣಿಯ ಸಲಹೆಯನ್ನು ಕೂಡ ಧಿಕ್ಕರಿಸಿ ಮರೆತು ನಿಂತ ಕಾರ್ತವೀರ್ಯಾರ್ಜುನನು ಮಹಾಬಲಶಾಲಿಯಾಗಿದ್ದರೂ ತಪೋಶಕ್ತಿಯುಳ್ಳವನಾಗಿದದರೂ ತನ್ನ ಅಹಂಕಾರದಿಂದಾಗಿ ತನ್ನ ಸಾವನ್ನು ತಂದುಕೊಂಡ. ಮಹಾಭಾರತದಲ್ಲಿ ಉಕ್ತರಾಗಿರುವ ಚಕ್ರವರ್ತಿಗಳಲ್ಲಿ ಮಹಾವೀರ ಕಾರ್ತವೀರ್ಯಾರ್ಜುನನೂ ಪ್ರಸಿದ್ಧನಾಗಿದ್ದಾನೆ.ಕಾರ್ತವೀರ್ಯಾರ್ಜುನ :
ಮೂಲ ...{Loading}...
ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು ॥15॥
೦೧೬ ಬನ್ದನವನಿಪನಾ ಪ್ರಭಾಸದ ...{Loading}...
ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಸಂಯಾತಿ ಚ್ಯವನ ಸಂವಾದ ಸಂಗತಿಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಪ್ರಭಾಸತೀರ್ಥಕ್ಕೆ ಬಂದು, ಯಾದವ ಸಮೂಹದ ದರ್ಶನವನ್ನು ಪಡೆದು ಅನೇಕ ತೀರ್ಥಸ್ಥಳಗಳನ್ನು ಸಂದರ್ಶಿಸಿದನು. ಗಯಚರಿತ್ರೆ, ಚ್ಯವನೋಪಾಖ್ಯಾನಗಳನ್ನೂ ಲೋಮಶಮುನಿಯು ಧರ್ಮಜನಿಗೆ ಹೇಳಿದನು.
ಟಿಪ್ಪನೀ (ಕ.ಗ.ಪ)
ಗಯ - ಈ ಹೆಸರಿನವರು ಅನೇಕರಿದ್ದಾರೆ. ಮಹಾಭಾರತದಲ್ಲಿ ವಿಶೇಷವಾಗಿ ಪ್ರಸ್ತಾವಿತನಾಗಿರುವ ಗಯನು ಷೋಡಶ ಚಕ್ರವರ್ತಿಗಳಲ್ಲಿ ಒಬ್ಬನೆಂದು ಪ್ರಕೀರ್ತಿತನಾಗಿರುವ ರಾಜರ್ಷಿ. ‘ಯಜ್ಞ ವಿಭೂತಿಶ್ಚ ಗಯಸ್ಯ’ ಎಂದು ವರ್ಣಿತನಾಗಿರುವ ಗಯ ಚಕ್ರವರ್ತಿ ಅಮೂರ್ತ ರಯನ ಮಗ. ಈತ ತಪಸ್ವಿ, ಕೃಷ್ಣೋಪಾಸಕ, ಅಖಂಡ ಭಾರತದ ತೀರ್ಥಕ್ಷೇತ್ರಗಳನ್ನೂ ಮಹಾಪುರುಷರನ್ನೂ ಸಂದರ್ಶಿಸಿದವನು. ಗಯೆಯಲ್ಲಿ, ಪಯೋಷ್ಣೀ ಸರಸ್ವತೀ ನದಿಗಳ ತೀರಗಳಲ್ಲಿ ನೂರಾರು ಯಜ್ಞಗಳನ್ನು ಮಾಡಿದವನು. ಇವನು ಮಾಡಿದ ಒಂದು ಅಶ್ವಮೇಧ ಯಾಗದ ವರ್ಣನೆ ಅರಣ್ಯಪರ್ವದಲ್ಲಿ ಬರುತ್ತದೆ. ಆಹಾರ ಪದಾರ್ಥಗಳ ನೂರಾರು ಬೆಟ್ಟಗಳು, ತುಪ್ಪದ ಸಾವಿರಾರು ಕಾಲುವೆಗಳು, ನೂರಾರು ಮೊಸರಿನ ನದಿಗಳು, ಹೇರಳವಾಗಿ ದಾನ ಮಾಡುತ್ತಿದ್ದ ಸಂದರ್ಭದಲ್ಲಿ ಮೊಳಗವು ವೇದಘೋಷದಲ್ಲಿ ಉಳಿದೆಲ್ಲ ಸದ್ದುಗಳು ಅಡಗಿಹೋಗಿದ್ದವಂತೆ! ಸರಸ್ವತೀ ನದಿ ಈಯಾಗವನ್ನು ನೋಡಲು ‘ವಿಶಾಲಾ’ ಎಂಬ ಹೆಸರಿನಿಂದ ಆಗಮಿಸಿದ್ದಳಂತೆ! ಈತನ ಯಜ್ಞ ಶಾಲೆ ಇಪ್ಪತ್ತಾರು ಯೋಜನ ಅಗಲ! ಮೂವತ್ತು ಯೋಜನ ಉದ್ದ! ಇಪ್ಪತ್ತನಾಲ್ಕು ಯೋಜನ ಎತ್ತ! ಮಂಟಪಗಳೆಲ್ಲ ಚಿನ್ನದವು! ಇವನ ಯಾಗ ಸಿದ್ಧಿಯಿಂದಾಗಿ ಗಯ ಎಂಬ ಕ್ಷೇತ್ರಕ್ಕೆ ಗಯನ ಹೆಸರೇ ನಿಂತಿತು. ಈ ಗಯನಿಂದಾಗಿ ಅಕ್ಷಯ ವಟವೃಕ್ಷ ಮತ್ತು ಬ್ರಹ್ಮ ಸರೋವರಗಳು ವಿಖ್ಯಾತವಾಗಿವೆ. ಇವನು ಯಮನ ಆಸ್ಥಾನ ಸದಸ್ಯನಾಗಿದ್ದನಂತೆ. ಈತ ಯಾಗ ಮಾಡಿದ ಗಯಾ ಕ್ಷೇತ್ರದಲ್ಲಿ ಒಮ್ಮೆ ಶ್ರಾದ್ಧ ಮಾಡಿದರೆ ವಂಶದ ಇಪ್ಪತ್ತು ತಲೆಗಳು ಉದ್ಧಾರವಾಗುತ್ತವಂತೆ! ನೂರು ವರ್ಷ ಅವಿರತವಾಗಿ ಯಜ್ಞ ಮಾಡಿದರೆ ಅಗ್ನಿದೇವ ಪ್ರಸನ್ನನಾಗದೆ ಇರುತ್ತಾನೆಯೆ! ಅಗ್ನಿ ಸುಪ್ರೀತನಾಗಿ ‘ವರವನ್ನು ಕೇಳು’ ಎಂದರೆ ಈ ರಾಜರ್ಷಿ ಕೇಳಿದ್ದಾದರೂ ಏನು?
- ಯೋಗ ಸಿದ್ಧಿಯಿಂದ ನನಗೆ ಸಮಗ್ರ ವೇದಗಳಜ್ಞಾನ ಲಭಿಸಲಿ.
- ಯಾರಿಗೂ ಹಿಂಸೆ ಕೊಡದೆ ಧರ್ಮಪೂರ್ವಕವಾಗಿ ನಾನು ಅಕ್ಷಯ ಸಂಪತ್ತು ಪಡೆಯುವಂತಾಗಬೇಕು.
- ಬ್ರಾಹ್ಮಣ ಕನ್ನೆಯನ್ನು ವಿವಾಹವಾಗಬೇಕು.
- ತಪಸ್ಸು ಬ್ರಹ್ಮಚರ್ಯ ವ್ರತ, ನಿಯಮ ತೆತ್ತು ಗುರುಕೃಪೆಯಿಂದ ನಡೆಸುವ ಯಾವ ಧರ್ಮಸಂಬಂಧಿ ಕಾರ್ಯಕ್ಕೂ ವಿಘ್ನಗಳು ಬರಬಾರದು ಇತ್ಯಾದಿ.
ರಾಜನಾಗಿ ಋಷಿಯಂತೆ ಬಾಳಿದ ಈತನನ್ನು ರಾಜರ್ಷಿಣಾ ಪುಣ್ಯಕೃತಾಗಯೇ ನಾನುಪಮದೃತೇಃ ಅಮೂರ್ತ ರಯಸೋ ಪುತ್ರಃ ಗಯೋರಾಜರ್ಷಿ ಸನ್ನಿಭಃ (ವನಪರ್ವ 15ನೇ ಅಧ್ಯಾಯ) ಎಂದು ಮಹಾಭಾರತದಲ್ಲಿ ಸ್ತುತಿಸಲಾಗಿದೆ. ಕ್ಷಾತ್ರ ಮತ್ತು ಬ್ರಹ್ಮ ತೇಜಸ್ಸುಗಳ ಸಂಗಮಮೂರ್ತಿಯಾಗಿದ್ದ ಈತ ಸುಪ್ರಸಿದ್ಧರಾದ ಹದಿನಾರು ಚಕ್ರವರ್ತಿಗಳಲ್ಲಿ ಒಬ್ಬನೆಂದು ಹೆಸರು ಪಡೆದಿರುವುದು ಸಮಂಜಸವಾಗಿದೆ. ಚ್ಯವನ : ದೇವಗಣದಲ್ಲಿ ಅಶ್ವಿನೀದೇವತೆಗಳಿಗೆ ಸಮಾನ ಸ್ಥಾನವಿಲ್ಲ ಹವಿಸ್ಸಿನಲ್ಲಿ ಅವರಿಗೆ ಭಾಗವೂ ಇಲ್ಲ. ಏಕೆ ಗೊತ್ತೆ? ಅವರು ಮಾಡುವುದು ವಯದ್ಯ ‘ವೃತ್ತಿ’! ಇವರಿಂದಾಗಿ ಇವರ ಅಂ±ದಿಂದ ಹುಟ್ಟಿದ ನಕುಲ ಸಹದೇವರಿಗೂ ಇದೇ ಗತಿ ಬಂತೇನೋ ಎನ್ನಿಸುತ್ತದೆ. ಅಶ್ವಿನೀದೇವತೆಗಳ ಈ ಪಾಡನ್ನು, ಸ್ಥಾನಹೀನತೆಯನ್ನು ತಪ್ಪಿಸದವನೆಂದರೆ ಚ್ಯವನ ಮಹರ್ಷಿ!
ಚ್ಯವನನು ಭೃಗುಮಹರ್ಷಿಯ ಮಗ. ಈತ ಒಂದು ಸಲ ಸರೋವರ ತೀರದಲ್ಲಿ ತಪಸ್ಸಮಾಧಿಯಲ್ಲಿ ವೀರಾಸ ಹಾಕಿಕೊಂಡು ಕುಳಿತು ನಿಶ್ಚಲನಾಗಿದ್ದ. ಎಷ್ಟು ಜಡವಾಗಿದ್ದನೆಂದರೆ ಸುತ್ತ ಬಳ್ಳಿಗಳು ಹರಡಿ ಹುತ್ತಕಟ್ಟಿ ಮೈಯೆಎಲ್ಲ ಮುಚ್ಚಿಹೋಗಿತ್ತು. ಆ ಪ್ರದೇಶಕ್ಕೆ ವಿಹಾರಕ್ಕೆಂದು ಬಂದಿದ್ದ ಶರ್ಯಾತಿ ರಾಜನ ಮಗಳಾದ ಸುಕನ್ಯೆ ಅಲ್ಲಿಗೆ ಬಂದಳು. ಹುತ್ತದ ಸಂದಿಯಿಂದ ಅವಳನ್ನು ನೋಡಿ ಚ್ಯವನ ಆನಂದಗೊಂಡು ಕೂಗಿದ. ಆದರೆ ಅವನ ದುರ್ಬಲ ಸ್ವರ ಅವಳಿಗೆ ಕೇಳಲಿಲ್ಲ. ಏನೋ ಸದ್ದೆಂದು ತಿಳಿದು ಸಂದಿಯಲ್ಲಿ ನೋಡಿ ಒಂದು ಕಡ್ಡಿಯಿಂದ ಅವನ ಕಣ್ಣನ್ನು ಚುಚಿದಳು. ಕಣ್ಣು ಕಳೆದುಕೊಂಡು ಚ್ಯವನ ಸಿಟ್ಟಿನಿಂದ ಕೊಟ್ಟ ಶಾಪವಾದರೂ ಎಂಥದು?
‘‘ಈ ಶರ್ಯಾತಿಯ ಸೈನಿಕರಿಗೆ ಮಹಾಸಂಕಟ. ಕೊನೆಗೆ ಶರ್ಯಾತಿ ಚ್ಯವನನೊಂದಿಗೆ ಸಂಧಾನ ಮಾಡಿಕೊಂಡ. ಅವನ ಅಪೇಕ್ಷೆಯಂತೆ ಮಗಳನ್ನು ಚ್ಯವನನಿಗೆ ಕೊಟ್ಟು ಮದುವೆ ಮಾಡಿ ಸೈನಿಕರ ಸಂಕಟವನ್ನು ಹೋಗಲಾಡಿಸಿದ.
ಇತ್ತ ಸುಕನ್ಯೆ ಕೂಡ ಶ್ರದ್ಧೆಯಿಂದ ಗಂಡನ ಸೇವೆ ಮಾಡಿಕೊಂಡಿದ್ದಳು. ಈ ರೂಪವತಿ ಒಮ್ಮೆ ಅಲ್ಲಿಗೆ ಬಂದ ಅಶ್ವ್ವಿನೀ-ದೇವತೆಗಳ ಕಣ್ಣಿಗೆ ಬೀಳಬೇಕೆ? ‘‘ನಮ್ಮಲ್ಲಿ ಒಬ್ಬನನ್ನು ವರಿಸಿ ಆನಂದವಾಗಿರು, ಬೇಕಾದರೆ ನಿನ್ನ ಗಂಡನನ್ನು ಕೇಳಿ ತೀರ್ಮಾನಿಸು’’ ಎಂದು ಹೇಳಿದರು. ಸುಕನ್ಯೆ ಈ ಸಂಗತಿಯನ್ನು ಗಂಡನಿಗೆ ತಿಳಿಸಿದಾಗ ಅವನು ಒಪ್ಪಿಕೊಂಡ. ಅಶ್ವಿನೀ ದೇವತೆಗಳು ಅವನಿಗೆ ಸುಂದರ ರೂಪಕೊಡುವುದಾಗಿ ಹೇಳಿ ಕೊಳದಲ್ಲಿ ಮುಳುಗಿಸಿ ತಾವೂ ಮುಳುಗಿದರು. ಏನಾಶ್ಚರ್ಯ! ಮೂವರೂ ಒಂದೆ ರೂಪದಲ್ಲಿ ಮೇಲೆದ್ದು ಬಂದರು. ಆ ಮೂವರಲ್ಲಿ ತನ್ನ ಪತಿಯನ್ನು ಹುಡುಕಿದ್ದು ಸುಕನ್ಯೆಯ ತಪೋ ಪರಿಶ್ರಮವನ್ನೂ ದೃಢಶಕ್ತಿಯನ್ನೂ ಸೂಚಿಸುತ್ತದೆ. ಹೊಸ ರೂಪವಂತ ಚ್ಯವನ-ಸುನಂದೆಯರಿಗೆ ಹೀಗೆ ಹೊಸ ಬಾಳು ಬಂದಿತು. ಸಂತೋಷದಿಂದ ಕೃತಜ್ಞತೆ ಸೂಚಿಸುತ್ತ ತಪಸ್ವಿ ಚ್ಯವನನು ಅವರಿಗೆ ದೇವಸಭೆಯಲ್ಲಿ ಇತರ ದೇವತೆಗಳೊಂದಿಗೆ ಸಮಾನ ಸ್ಥಾನ ಸಿಗಲಿ, ಹವಿಸ್ಸು ದೊರೆಯಲಿ ಎಂದು ಹರಸಿದ.
ಆದರೆ ದೇವೇಂದ್ರ ಇದಕ್ಕೆ ಒಪ್ಪಲಿಲ್ಲ. ಚ್ಯವನನು ಶರ್ಯಾತಿ ಮಹಾರಾಜನಿಂದ ಯಜ್ಞ ಮಾಢಿಸಿದ ಸಂದರ್ಭದಲ್ಲಿ ಅಶ್ವಿನೀ ದೇವತೆಗಳಿಗೆ ಹವಿಸ್ಸು ಕೊಡಬಾರದೆಂದು ಇಂದ್ರನು ವಾದಿಸಿದ. ಈ ವಿಚಾರದಲ್ಲಿ ಇಂದ್ರ-ಚ್ಯವನರ ನಡುವೆ ನಡೆದ ಸಂವಾದ ಅಧ್ಯಯನ ಯೋಗ್ಯವಾಗಿದೆ. ವೈದ್ಯವೃತ್ತಿ ಮಾಡುವ ಮತ್ತು ಭೂಮಿಯಲ್ಲಿ ಎಲ್ಲೆಂದರಲ್ಲಿ ತಿರುಗುವ ಇವರಿಗೆ ಸೋಮಪಾನದ ಅರ್ಹತೆಯಿಲ್ಲ ಎಂದು ವಾದಿಸಿದ. ಪ್ರತಿಯಾಗಿ ವಾದಿಸಿದ ಚ್ಯವನನು ಹವಿಸ್ಸನ್ನು ಅಶ್ವಿನೀ ದೇವತೆಗಳಿಗೆ ಕೊಡಲು ಹೋದಾಗ ಇಂದ್ರನು ವಿರೋಧಿಸಿದ. ಆಗ ಚ್ಯವನನು ಮಂತ್ರಬಲದಿಂದ ‘ಮದ’ ಎಂಬ ರಾಕ್ಷಸನನ್ನು ಕಾವಲಿಗೆ ಹಾಕಿದ. ಕೊನೆಗೆ ಸಿಟ್ಟಿನಿಂದ ಇಂದ್ರನು ವಜ್ರಾಯುಧದಿಂದ ಘಾತಿಸಲು ಕೈ ಎತ್ತಿದ. ಆದರೆ ಚ್ಯವನನ ಮಂತ್ರಶಕ್ತಿಯಿಂದ ಅವನ ಕೈ ಹಾಗೇ ನಿಂತುಹೋಯಿತು. ಕೊನೆಗೆ ಇಂದ್ರನು ಚ್ಯವನನ ಷರತ್ತುಗಳನ್ನೆಲ್ಲ ಒಪ್ಪಿಕೊಂಡ. ದೇವ ಮಹಿಮೆಯನ್ನು ಮೀರಿದ ಋಷಿ ಮಹಿಮೆಗೆ ಈ ಕಥೆ ಒಂದು ನಿದರ್ಶನ.
ಮೂಲ ...{Loading}...
ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಸಂಯಾತಿ ಚ್ಯವನ ಸಂವಾದ ಸಂಗತಿಯ ॥16॥
೦೧೭ ಚ್ಯವನ ಮುನಿಯ ...{Loading}...
ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚ್ಯವನನು ವಿವಾಹವಾದ ಕಥೆ, ಚ್ಯವನನಿಗೆ ಅಶ್ವಿನೀ ದೇವತೆಗಳು ರೂಪವನ್ನು ಕೊಟ್ಟ ಕಥೆ, ಅಶ್ವಿನಿ ದೇವತೆಗಳಿಗೆ ಯಜ್ಞದಲ್ಲಿ ಹವಿಸ್ಸು ನೀಡಿದ್ದು, ಅದಕ್ಕೆ ಇಂದ್ರನ ಮತ್ಸರ, ರಾಕ್ಷಸ ಸೃಷ್ಟಿಯ ವಿಚಾರವನ್ನು ಮತ್ತು ಮಾಂಧಾತ ಚರಿತ್ರೆ ಹೀಗೆ ಅನೇಕ ಕಥೆಗಳನ್ನು ಹೇಳಿದನು.
ಟಿಪ್ಪನೀ (ಕ.ಗ.ಪ)
ಮಾಂಧಾತ :
ಯವನಾಶ್ವನ ಮಗನಾದ ಒಬ್ಬ ಪ್ರಾಚೀನ ದೊರೆ ಮಾಂಧಾತ. ವೈಷ್ಣವ ಯಾಗಗಳನ್ನು ಮಾಡಿ ಸ್ವರ್ಗವೇರಿದ ದೊರೆಗಳಲ್ಲ ಒಬ್ಬನೆಂದು ಮಹಾಭಾರತದ ಭಗವದ್ಯಾನ ಪರ್ವದಲ್ಲಿ ಹೇಳಲಾಗಿದೆ. ಇವನು ಜನಮೇಜಯನಂಥವನ್ನೂ ಸೋಲಿಸಿದ್ದ ವೀರ. ನೂರು ಅಶ್ವಮೇಧ ಯಾಗಗಳನ್ನೂ ನೂರು ರಾಜಸೂಯ ಯಾಗಗಳನ್ನೂ ಮಾಡಿದ ಕೀರ್ತಿ ಈತನದು. ಸೂರ್ಯ ಹುಟ್ಟುವ ಪರ್ವತಗಳಿಂದ ಹಿಡಿದು ಅಸ್ತಂಗತನಾಗುವ ಪರ್ವತಗಳವರೆಗಿನ ಸೀಮೆಯೆಲ್ಲ ಮಾಂಧಾತೃ ಸೀಮೆ ಎನ್ನಿಸಿಕೊಂಡಿದೆ. ಒಂದೇ ರಾತ್ರಿಯಲ್ಲಿ ಜಗತ್ತನನು ಗೆದ್ದವನು ಎಂದೂ ಇವನಿಗೆ ಕೀರ್ತಿಯುಂಟು.
ಮಾಂಧಾತೃವಿನ ಜನನವೂ ವಿಚತ್ರವಾದದ್ಧೆ. ಇವನ ತಂದೆ ಯುವನಾಶ್ವ. ನೂರು ಪತ್ನಿಯರಿದ್ದರೂ ಮಕ್ಕಳಿಲ್ಲದ ಬೇಸರದಿಂದ ಕಾಡಿನಲ್ಲಿ ಅಲೆದಾಡುತ್ತಿದ್ದ. ಚ್ಯವನ ಮಹರ್ಷಿಗಳು ಈತನಿಂದ ಯಜ್ಞ ಮಾಡಿಸಿ ಕುಂಭಜಲವನ್ನು ಪತ್ನಿಗೆ ಕೊಡು ಎಂದು ಹೇಳಿದರು. ದಾರಿಯಲ್ಲಿ ತುಂಬ ಆಯಾಸಗೊಂಡಿದ್ದ ಯುವನಾಶ್ವ ಈ ನೀರನ್ನು ಕುಡಿದ. ಫಲವಾಗಿ ಅವನ ಹೊಟ್ಟೆಯ ಎಡಭಾಗವನ್ನು ಸೀಲಿ ಮಾಂಧಾತ ಹೊರಬಂದ. ತಂದೆಗೂ ಅಪಾಯವಾಗಲಿಲ್ಲ. ಮಗುವಿಗೆ ಸ್ತನ್ಯಪಾನವಿಲ್ಲದ್ದರಿಂದ ದೇವೇಂದ್ರನೇ ಬಂದು ‘ಮಾಂ ಅಯಂ ಧಾಸೃತಿ’ (ನನ್ನ ಬೆರಳನ್ನು ಈತ ಚೀಪುತ್ತಾನೆ) ಎಂದು ಹೇಳಿದ. ಹೀಗೆ ಮಾಂಧಾತೃ ಮಾಂಧಾತ ಹೆಸರು-ಅಮೃತವನ್ನು ಚೀಪಿದ್ದರಿಂದ-ಆತನಿಗೆ ಬಂದಿದೆ. ಹದಿಮೂರು ಗೇಣು ಬೆಳೆದ ಮಾಂಧಾತನಿಗೆ ಸಕಲ ವೇದಗಳೂ ಅವಗತವಾದವು. ಸಕಲ ಶಸ್ತ್ರಾಸ್ತ್ರಗಳೂ ತಾವಾಗಿ ಇವನ ಬಳಿ ಬಂದು ಸೇರಿದುವು.
ಮಾಂಧಾತ ರಾಜ್ಯಭಾರವು ಅದ್ಭುತವಾಗಿತ್ತೆಂದು ಭಾರತ ಹೇಳುತ್ತದೆ. ಲೋಮಶ ಮಹರ್ಷಿಗಳ ಧರ್ಮರಾಯನ ತೀರ್ಥಯಾತ್ರಾ ಪ್ರಸಂಗದ ಅರಣ್ಯಪರ್ವದಲ್ಲಿ ಧರ್ಮರಾಯನಿಗೆ ಯಮುನಾನದೀ ತೀರದಲ್ಲಿ ಮಾಂಧಾತನು ಯಜ್ಞಗಳನ್ನು ಮಾಡಿದ ಸ್ಥಳಗಳನ್ನು ತೋರಿಸುತ್ತ ಅವನ ಮಹಿಮೆಯನ್ನು ಬಹುವಿಧವಾಗಿ ಕೊಂಡಾಡಿದರು. ಮಾಂಧಾತನು ಎಷ್ಟು ಬಲಶಾಲಿಯಾಗಿದ್ದ, ಲೋಕಕಲ್ಯಾಣ ಪ್ರಾಯನಾಗಿದ್ದ ಎಂಬುದಕ್ಕೆ ಒಂದು ಘಟನೆಯನ್ನು ಸ್ಮರಿಸಬಹುದು. 12 ವರ್ಷಗಳವರೆಗೆ ಮಳೆಯಿಲ್ಲದೆ ಘೋರ ಕ್ಷಾಮ ಬಂದಾಗ ಮಾಂಧಾತನು ತಾನೇ ನೇರವಾಗಿ ಮೋಡಗಳಿಗೆ ಮಳೆಸುರಿದರೆಂದು ಆಜ್ಞೆ ಮಾಡಿದನಂತೆ. ತನ್ನನ್ನು ಉಲ್ಲಂಘಿಸಿದನೆಂಬ ಕಾರಣಕ್ಕೆ ದೇವೇಂದ್ರ ಕೋಪಿಸಿಕೊಳ್ಳಲಿಲ್ಲವಂತೆ. ಇವನು ಒಮ್ಮೆ ದಾನ ಮಾಡಿದ ಒಂದು ಚಿನ್ನದ ರೋಹಿತ ಮೀನು ಹತ್ತು ಯೋಜನ ಉದ್ದವೂ ಒಂದು ಯೋಜನ ಅಗಲವೂ ಇದ್ದಿತಂತೆ!
ಮೂಲ ...{Loading}...
ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ ॥17॥
೦೧೮ ಸೋಮಕನ ಚರಿತವ ...{Loading}...
ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಮಕ, ಮರುತ್ತರ ಚರಿತ್ರೆಯನ್ನು ಹೇಳಿ, ಯಯಾತಿಯ ಸತ್ಕಥೆಯನ್ನು ವಿವರಿಸಿದರನು. ಅನಂತರ ಶಿಬಿ ಚಕ್ರವರ್ತಿಯು ತನ್ನ ದೇಹದ ಮಾಂಸವನ್ನೇ ಇಂದ್ರ ಅಗ್ನಿಗಳಿಗೆ ನೀಡಿದ ಕಥನವನ್ನೂ ವಿಸ್ತಾರವಾಗಿ ಹೇಳಿದನು.
ಮೂಲ ...{Loading}...
ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ ॥18॥
೦೧೯ ಕೇಳಲಷ್ಟಾವಕ್ರ ಚರಿತವ ...{Loading}...
ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶಮುನೀಂದ್ರ ನೃ
ಪಾಲಕಂಗರುಹಿದನು ಯಾವತ್ ಋಷಿಯ ಸತ್ಕಥೆಯ
ಬಾಳಡವಿ ಬಯಲಾಯ್ತು ಫಲ ಮೃಗ
ಜಾಲ ಸವೆದುದು ಗಂಧಮಾದನ
ಶೈಲ ವನದಲಿ ವಾಸವೆಂದವನೀಶ ಹೊರವಂಟ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರೋಮಶ ಮಹಾಮುನಿಯು ಅಷ್ಟಾವಕ್ರನೆಂಬ ಮುನಿಯ ಕಥೆಯನ್ನು ಧರ್ಮಜನಿಗೆ ಹೇಳಿದನು. ಅವರಿದ್ದ ಅರಣ್ಯವೆಲ್ಲಾ ಬಯಲಾಗಿ, ಹಣ್ಣುಹಂಪಲು ಬರಿದಾಯಿತು. ಅನಂತರ ಅವರೆಲ್ಲಾ ಗಂಧಮಾದನ ಪರ್ವತದ ಕಡೆಗೆ ಹೊರಟರು.
ಮೂಲ ...{Loading}...
ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶಮುನೀಂದ್ರ ನೃ
ಪಾಲಕಂಗರುಹಿದನು ಯಾವತ್ ಋಷಿಯ ಸತ್ಕಥೆಯ
ಬಾಳಡವಿ ಬಯಲಾಯ್ತು ಫಲ ಮೃಗ
ಜಾಲ ಸವೆದುದು ಗಂಧಮಾದನ
ಶೈಲ ವನದಲಿ ವಾಸವೆಂದವನೀಶ ಹೊರವಂಟ ॥19॥
೦೨೦ ಅರಸ ಬನ್ದನು ...{Loading}...
ಅರಸ ಬಂದನು ಗಂಧಮಾದನ
ಗಿರಿಯ ತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿಜನ ಸಹಿತ
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನು ಗಂಧಮಾದನಗಿರಿಯ ತಪ್ಪಲಿಗೆ ಪತ್ನಿ, ಸಹೋದರರು ಮತ್ತು ಪರಮ ಋಷಿಗಳ ಸಮೂಹದೊಂದಿಗೆ ಬಂದನು. ಅವರ ಸ್ನಾನ-ಪಾನಗಳಿಗೆ ಸರೋವರಗಳೇ ಸಾಲದಾದವು. ಅವರ ಫಲಾಹಾರಗಳಿಗೆ ಮರ ಗಿಡಬಳ್ಳಿಗಳೇ ಸಾಲದಾದವು.
ಪದಾರ್ಥ (ಕ.ಗ.ಪ)
ಸೀವಟ-ಫಲಗಳ ಮಿಶ್ರಣ
ಮೂಲ ...{Loading}...
ಅರಸ ಬಂದನು ಗಂಧಮಾದನ
ಗಿರಿಯ ತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿಜನ ಸಹಿತ
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದ ॥20॥
೦೨೧ ಮರುದಿವಸವಲ್ಲಿನ್ದ ಬೆಟ್ಟದ ...{Loading}...
ಮರುದಿವಸವಲ್ಲಿಂದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿಂಚಿದುದಖಿಳ ದೆಸೆದೆಸೆಗೆ
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿಂಕಕೆ
ನರರ ಕಣುಮನ ಹೂಳೆ ತೂಳಿತು ಮಳೆ ಮಹೀತಳವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರುದಿನ ಅವರೆಲ್ಲರೂ ಬೆಟ್ಟದ ಕಡೆಗೆ ನಡೆದು ಬರಲು, ಆಕಾಶದಲ್ಲಿ ಮೋಡ ಕವಿದಕೊಂಡು ಮಿಂಚುಗಳು ಸುಳಿದವು. ಗುಡುಗು ಸಿಡಿಲುಗಳ ಆರ್ಭಟೆಯಿಂದ ಪರ್ವತ ಬಿರಿಯಿತು. ವರ್ಷಧಾರೆ ಭೂಮಿಯನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಗುಡಿಯಿರಿ - ನೆಟ್ಟಗೆ ನಿಲ್ಲು
ಹೂಳು - ಮುಚ್ಚು , ಕವಿ
ಮೂಲ ...{Loading}...
ಮರುದಿವಸವಲ್ಲಿಂದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿಂಚಿದುದಖಿಳ ದೆಸೆದೆಸೆಗೆ
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿಂಕಕೆ
ನರರ ಕಣುಮನ ಹೂಳೆ ತೂಳಿತು ಮಳೆ ಮಹೀತಳವ ॥21॥
೦೨೨ ಮರನ ಮರ ...{Loading}...
ಮರನ ಮರ ತಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ಗಂಟಿಕ್ಕಿದವು ಸಾಗರದ ಸಾಗರದ
ಧರಣಿ ಕದಡಲು ಸವಡಿಯಡಿಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರ-ಮರಗಳು ತೆಕ್ಕೆಬಿದ್ದವು. ಪರ್ವತ ಪರ್ವತಗಳು ಮುಂಡಾಡಿದವು. ಸಮುದ್ರ ಸಮುದ್ರಗಳು ತೆರೆತೆರೆಗಳಿಂದ ಗಂಟಿಕ್ಕಿದವು. ಭೂಮಿಯ ತಗ್ಗು ಪ್ರದೇಶಕ್ಕೆ ಎತ್ತರದ ಭಾಗ ಜರಿದು ಬೀಳದೆ ಇರುತ್ತದೆಯೆ? ಈ ಜಗತ್ತನ್ನೆಲ್ಲಾ ರಕ್ಷಿಸಲು ವಿಷ್ಣುವಿಗೆ ಹೇಳು ಎನ್ನುವಂತೆ ಬಿರುಗಾಳಿ ಬೀಸಿತು.
ಪಾಠಾನ್ತರ (ಕ.ಗ.ಪ)
ಸಾಗರದ ಸಾಗರದ-ಸಾಗರದ ಸಾಗರವ ಪಾಠಾಂತರಗಳಿವೆ.
ಧರಣಿಗಿಕ್ಕಿದಿಳಿಂಪನಡಕಿಲು - ಧರಣಿ ಕದಡಲು ಸವಡಿಯಡಿಕಿಲು
ಮೂಲ ...{Loading}...
ಮರನ ಮರ ತಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ಗಂಟಿಕ್ಕಿದವು ಸಾಗರದ ಸಾಗರದ
ಧರಣಿ ಕದಡಲು ಸವಡಿಯಡಿಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ॥22॥
೦೨೩ ಕೆದರಿತಲ್ಲಿಯದಲ್ಲಿ ಮಳೆಯಲಿ ...{Loading}...
ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಿಲು
ಕದಳಿಗಳ ಮರೆಗೊಂಡುದಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಳೆಯಿಂದಾಗಿ ಕಾಡು ಕೆದರಿ ಹೋಯಿತು. ಕಣಗಿಲೆ ಕದಳೀ ವೃಕ್ಷಗಳ ಮರೆಹೊಕ್ಕಿತು. ಇವರುಗಳು ಮಳೆಗಾಳಿಗಳ ಉರವಣೆಯಿಂದ ಬೆದರಿದರು. ಭಯಂಕರ ಮಳೆ ಸುರಿದು, ಜನರ ಸುಖಸಂತೋóಷವೇ ನಾಶವಾಯಿತು.
ಪದಾರ್ಥ (ಕ.ಗ.ಪ)
ಕರಕರ - ಹಿಂಸೆ, ಕಾಟ
ಸೇಡುಗೊಳು - ಸೆಡೆತುಕೊಳ್ಳು
ಮೂಲ ...{Loading}...
ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಿಲು
ಕದಳಿಗಳ ಮರೆಗೊಂಡುದಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ ॥23॥
೦೨೪ ಬಗಿದು ಹೊಕ್ಕರು ...{Loading}...
ಬಗಿದು ಹೊಕ್ಕರು ಮೆಳೆಗಳನು ಮಿಂ
ಚುಗಳ ಕಂಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸಂದಣಿ ಮರನ ಹೆಮ್ಮರನ
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದುದರಣ್ಯದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನರು ಮೆಳೆಗಳ ಮಧ್ಯೆ ಒಳಹೊಕ್ಕರು ಮಿಂಚು ಬೆಳಕಿನಲ್ಲೇ ದಾರಿಹುಡುಕಿ ಹೆಮ್ಮರಗಳ ಆಶ್ರಯ ಪಡೆದರು. ಮಳೆಯಿಂದ ರಕ್ಷಣೆ ಪಡೆಯಲು ಕೈಗೊಪ್ಪೆಗಳನ್ನು ಹೊದೆದು ಎಲ್ಲರೂ ಚಳಿಯಿಂದ ನಡುಗುತ್ತಾ ಅರಣ್ಯದೊಳಗೆ ಅಡಗಿ ಕುಳಿತರು.
ಪದಾರ್ಥ (ಕ.ಗ.ಪ)
ಕೈಗೊಪ್ಪೆ - ಕೈಚೀಲಗಳಿಂದ ಮಾಡಿದ ಕೊಪ್ಪೆ, ಗೊರಗು
ಮೂಲ ...{Loading}...
ಬಗಿದು ಹೊಕ್ಕರು ಮೆಳೆಗಳನು ಮಿಂ
ಚುಗಳ ಕಂಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸಂದಣಿ ಮರನ ಹೆಮ್ಮರನ
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದುದರಣ್ಯದಲಿ ॥24॥
೦೨೫ ಹೊಳೆವ ಕಙ್ಗಳ ...{Loading}...
ಹೊಳೆವ ಕಂಗಳ ಕಾಂತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬಂದಳೊಬ್ಬಳೆ ಮಳೆಗೆ ಕೈಯೊಡ್ಡಿ
ಬಲಿದು ಮೈ ನಡನಡುಗಿ ಹಲು ಹಲು
ಹಳಚಿ ನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಘೋರವಾದ ಅಡವಿಯಲ್ಲಿ ಗಾಢಾಂಧಕಾರದಲ್ಲಿ ಕಂಗಳ ಕಾಂತಿಯ ಬೆಳಕಿನಲ್ಲಿ, ದ್ರೌಪದಿಯು ಒಬ್ಬಳೇ ಮಳೆಗೆ ಕೈಯೊಡ್ಡುತ್ತಾ ನಡೆದಳು. ಮೈನಡುನಡುಗುತ್ತಾ, ಚಳಿಯಿಂದ ಹಲ್ಲುಗಳು ನಡುಗುತ್ತಿರಲು, ಮಳೆಯ ನೀರಿನ ಪ್ರವಾಹದಲ್ಲಿ ಕಷ್ಟಪಟ್ಟು ನಡೆಯುತ್ತಾ ಅವಳು ಮಳೆಯಲ್ಲಿ ನೆನೆದು ಬಸವಳಿದಳು.
ಪದಾರ್ಥ (ಕ.ಗ.ಪ)
ಅಳಿಕುಲಾಳಕಿ - ದುಂಬಿಯಂತೆ ಕಪ್ಪನೆಯ ಕೂದಲುಳ್ಳವಳು
ಮೂಲ ...{Loading}...
ಹೊಳೆವ ಕಂಗಳ ಕಾಂತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬಂದಳೊಬ್ಬಳೆ ಮಳೆಗೆ ಕೈಯೊಡ್ಡಿ
ಬಲಿದು ಮೈ ನಡನಡುಗಿ ಹಲು ಹಲು
ಹಳಚಿ ನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ॥25॥
೦೨೬ ಎಡಹು ಬೆರಳಿನ ...{Loading}...
ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಗಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆರಳು ಎಡವಿತು, ಕಾಲಿಗೆ ಮುಳ್ಳು ಚುಚ್ಚಿತು. ಬಿರುಮಳೆಗಾಳಿ, ಸಿಡಿಲು ಮಿಂಚಿನ ಆ ಭಯಂಕರ ಕತ್ತಲೆಯಲ್ಲಿ ಹತ್ತಿರ ಯಾರು ಕರೆದರೂ ಯಾರೂ ಓಗುಡುವವರಿಲ್ಲದ ಸಮಯದಲ್ಲಿ ಎರಡೂ ಕೈಗಳಿಂದ ತಡವರಿಸುತ್ತಾ ಬರುತ್ತಿದ್ದಳು.
ಮೂಲ ...{Loading}...
ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಗಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ ॥26॥
೦೨೭ ಗಾಳಿಗೊರಗಿದ ಕದಳಿಯನ್ತಿರೆ ...{Loading}...
ಗಾಳಿಗೊರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸುರ ಬಲುಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಗೆ ಬಾಳೆಗಿಡ ಬಿದ್ದಂತೆ ದ್ರೌಪದಿ ಬಿದ್ದಳು. ಚೇತನವು ಮರಗಟ್ಟಿ, ಅವಳು ಮೂರ್ಛೆ ಹೋದಳು. ರಾತ್ರಿ ಕಳೆದು ಬೆಳಗಾಯ್ತು. ಮಳೆಗಾಳಿ ಕಡಿಮೆಯಾಯಿತು. ಆಗ ಧರ್ಮಜ ಭೀಮ ನಕುಲರು ದ್ರೌಪದಿಯನ್ನು ಹುಡುಕುತ್ತಾ, ಕಂಡವರಲ್ಲಿ ವಿಚಾರಿಸುತ್ತಾ ಬಂದರು.
ಪದಾರ್ಥ (ಕ.ಗ.ಪ)
ಥಟ್ಟುಗೆಡೆ - ದಿಂಡುಗೆಡೆ, ಕೆಳಕ್ಕೆ ಬೀಳು
ಮೂಲ ...{Loading}...
ಗಾಳಿಗೊರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸುರ ಬಲುಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ ॥27॥
೦೨೮ ಬರುತ ಕಣ್ಡರು ...{Loading}...
ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಬರುತ್ತಾ ದಾರಿಯಲ್ಲಿ ಮೂರ್ಛಾ ಸ್ಥಿತಿಯಲ್ಲಿ ಬಿದ್ದಿದ್ದ ದ್ರೌಪದಿಯನ್ನು ಕಂಡು ಭೀಮನೇ ಮೊದಲಾದವರು ಕುಸಿದು ಬಿದ್ದರು. ಧರ್ಮರಾಜನು ಅವಳನ್ನು ಎತ್ತಿ ತೊಡೆಯ ಮೇಲೆ ಇರಿಸಿಕೊಂಡು ಮಂತ್ರಪೂತವಾದ ನೀರನ್ನು ಅವಳ ಮುಖಕ್ಕೆ ಚಿಮುಕಿಸಿ ರಕ್ಷೆಯನ್ನು ರಚಿಸಿ ಉಪಚರಿಸಿದನು.
ಪದಾರ್ಥ (ಕ.ಗ.ಪ)
ಬಟ್ಟೆ - ದಾರಿ
ಮೂಲ ...{Loading}...
ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ॥28॥
೦೨೯ ಉಪಚರಿಸಿ ರಕ್ಷೋಘ್ನ ...{Loading}...
ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿ ದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಣ್ದೆರೆದು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ಷೋಘ್ನ ಸೂಕ್ತವನ್ನು ಹೇಳಿ, ಜಪವನ್ನು ಮಾಡಿ ಗೋಧನ ಭೂಮಿ ದಾನವನ್ನು ಸಾಂಕೇತಿಕವಾಗಿ ಮಾಡಿದನು. ಒಂದೆರಡು ಗಳಿಗೆಯಲ್ಲಿ ಅವಳು ಮೂರ್ಛೆಯಿಂದ ಎಚ್ಚೆತ್ತು ಕಳಾಹೀನರಾಗಿದ್ದ ಧರ್ಮಜಾದಿಗಳನ್ನು ಕಂಡಳು.
ಪದಾರ್ಥ (ಕ.ಗ.ಪ)
ಸತ್ಯವ್ಯಪಗತ - ದಿಕ್ಕೆಟ್ಟ
ಅಪಹರಿಸು - ಕಳೆದು ಹೋಗು, ನಿವಾರಣೆಯಾಗು
ಮೂಲ ...{Loading}...
ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿ ದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಣ್ದೆರೆದು ॥29॥
೦೩೦ ನೆಲೆವನೆಯ ಮಾಡದಲಿ ...{Loading}...
ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯೊಳೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂತಃಪುರದಲ್ಲಿ, ರತ್ನಾವಳಿಯ ಸೌಮ್ಯವಾದ ಪ್ರಭೆಯಲ್ಲಿ, ಹಂಸತೂಲಿಕಾ ತಲ್ಪದಲ್ಲಿ ಮಲಗಬೇಕಾದ ಇವಳು, ಕಾಡಿನೊಳಗೆ ಕಗ್ಗತ್ತಲೆಯಲ್ಲಿ ಮಳೆಯಲ್ಲಿ ಒಬ್ಬಳೇ ನೆನದುಕೊಂಡು ನಡೆಯುತ್ತಾ, ಕಲ್ಲುನೆಲದಲ್ಲಿ ಒರಗಬೇಕಾದ ಸ್ಥಿತಿ ಬಂದಿತಲ್ಲಾ ಎಂದು ಧರ್ಮರಾಜನು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಹಳುವ-ಕಾಡು
ನುಣ್ಬೆಳಕು - ಸೌಮ್ಯವಾದ ಕಾಂತಿ
ತುಳಿ - ತೂಲ -ಹಂಸೆಯ ತುಪ್ಪಳು
ಮೂಲ ...{Loading}...
ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯೊಳೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ ॥30॥
೦೩೧ ಹರೆದುದುಬ್ಬಿದ ಮೂರ್ಛೆ ...{Loading}...
ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೂರ್ಛೆ ಹರಿಯಿತು. ಇಂದ್ರಿಯದ ಕಳವಳ ಪರಿಹಾರವಾಯಿತು. ಇದರಲ್ಲಿ ತಪ್ಪೇನಿದೆ. ಪೂರ್ವಜನ್ಮದ ಕರ್ಮದಿಂದ ಪ್ರಾಪ್ತವಾದುದಕ್ಕೆ ಅಳುವುದೇಕೆ. ಮುಂದಿನ ಗಿರಿಯ ಕಡೆ ಹೊರಡುವುದರ ಬಗ್ಗೆ ಚಿಂತಿಸಿ’ ಎಂದು ದ್ರೌಪದಿಯು ಧರ್ಮಜನನ್ನು ಸಂತೈಸಿದಳು.
ಪದಾರ್ಥ (ಕ.ಗ.ಪ)
ಪರುಠವಣೆ-ಪ್ರಾಪ್ತಿ, ವಿಸ್ತಾರ
ಮೂಲ ...{Loading}...
ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ ॥31॥
೦೩೨ ಇದೆ ಮುನಿವ್ರಜವಗ್ನಿ ...{Loading}...
ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟುಂಬಿಗಳಾಪ್ತ ಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿಜನ ಸಹಿತ
ಇದೆ ಮಹಾಕಾಂತಾರವಿನಿಬರ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಗಳ ಸಮೂಹ, ಅಗ್ನಿಹೋತ್ರಿಗಳ ಕುಟುಂಬ, ಆಪ್ತಪರಿಜನರು, ಸ್ತ್ರೀಯರು, ಬಾಲರು, ವೃದ್ಧರು, ಸೇವಕರು ಇವರೆಲ್ಲರೊಂದಿಗೆ ಈ ದಟ್ಟವಾದ ಕಾಡಿನ ದಾರಿಯಲ್ಲಿ ಮುನ್ನಡೆಯುವುದು ಹೇಗೆ ? ಶಿವಶಿವಾ ಎಂದು ದ್ರೌಪದಿ ನುಡಿದಳು.
ಪದಾರ್ಥ (ಕ.ಗ.ಪ)
ನಿಯೋಗಿ - ಅಧಿಕಾರಿ
ಮೂಲ ...{Loading}...
ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟುಂಬಿಗಳಾಪ್ತ ಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿಜನ ಸಹಿತ
ಇದೆ ಮಹಾಕಾಂತಾರವಿನಿಬರ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ ॥32॥
೦೩೩ ಆಯತಾಕ್ಷಿಯ ನುಡಿಗೆ ...{Loading}...
ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ಚಿಂತಿಸಿದನು ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ನಾವರಿಯೆವಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಮಾತಿಗೆ ಧರ್ಮರಾಯ ಮೆಚ್ಚಿದನು. ಆದರೆ ಮುಂದೆ ನಡೆದು ಹೋಗುವುದು ಹೇಗೆ ಎಂದು ಯೋಚಿಸಿ, ಘಟೋತ್ಕಚನನ್ನು ಸ್ಮರಿಸಿದನು. ಅರಸನೇ ಕೇಳು, ಕೃಷ್ಣನ ಮಾಯೆಯನ್ನು ನಾವು ತಿಳಿಯಲಾರೆವು. ಕೂಡಲೇ ಘಟೋತ್ಕಚನು ವಾಯುವೇಗದಲ್ಲಿ ಆಕಾಶದಿಂದ ಕೆಳಗೆ ಇಳಿದು ಬಂದನು.
ಮೂಲ ...{Loading}...
ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆಂದೆನುತ ಚಿಂತಿಸಿದನು ಘಟೋತ್ಕಚನ
ರಾಯ ಕೇಳೈ ಕಮಲನಾಭನ
ಮಾಯೆಯೋ ನಾವರಿಯೆವಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ ॥33॥
೦೩೪ ವೀರ ದೈತ್ಯನ ...{Loading}...
ವೀರ ದೈತ್ಯನ ಬಹಳ ದುಷ್ಟರಿ
ವಾರವದನಾರೆಣಿಸುವರು ಮುಂ
ಗಾರಿರುಳ ತನಿಯರಕ ನೀಲಾಚಲದ ಖಂಡರಣೆ
ಘೋರ ರಾಹು ವ್ಯೂಹವೆನೆ ಸುರ
ವೈರಿಗಳ ಮೈಗಾಂತಿ ಲಹರಿಯ
ಪೂರದಲಿ ಜಗ ಮುಳುಗೆ ಬಂದುದು ಲಕ್ಷಸಂಖ್ಯೆಯಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಘಟೋತ್ಕಚನ ರಾಕ್ಷಸ ಪರಿವಾರವನ್ನು ಎಷ್ಟು ಎಂದು ಎಣಿಸಲಾಗದು. ಕಾರಿರುಳನ್ನೇ ಎರಕ ಹೊಯ್ದಂತಿದ್ದ , ನೀಲಗಿರಿಯನ್ನೇ ಕಂಡರಿಸಿದಂತಿದ್ದ, ರಾಹುವಿನ ಭಯಂಕರ ಸೈನಿಕರಂತಿದ್ದ ಹೊಳೆಯುವ ಕಪ್ಪು ಮೈಗಳ ಲಕ್ಷ ಸಂಖ್ಯೆಯ ಅನುಚರರು ಅಲ್ಲಿ ನೆರೆದರು.
ಪದಾರ್ಥ (ಕ.ಗ.ಪ)
ಖಂಡರಣೆ - ಕಲ್ಲಿನಲ್ಲಿ ಅಥವಾ ಲೋಹದಲ್ಲಿ ಮೂರ್ತಿಯನ್ನು ಕೊರೆಯುವುದು.
ವ್ಯೂಹ - ಸೈನ್ಯ
ಮೂಲ ...{Loading}...
ವೀರ ದೈತ್ಯನ ಬಹಳ ದುಷ್ಟರಿ
ವಾರವದನಾರೆಣಿಸುವರು ಮುಂ
ಗಾರಿರುಳ ತನಿಯರಕ ನೀಲಾಚಲದ ಖಂಡರಣೆ
ಘೋರ ರಾಹು ವ್ಯೂಹವೆನೆ ಸುರ
ವೈರಿಗಳ ಮೈಗಾಂತಿ ಲಹರಿಯ
ಪೂರದಲಿ ಜಗ ಮುಳುಗೆ ಬಂದುದು ಲಕ್ಷಸಂಖ್ಯೆಯಲಿ ॥34॥
೦೩೫ ದೇವ ಬೆಸಸಾ ...{Loading}...
ದೇವ ಬೆಸಸಾ ನಮ್ಮ ಬರಿಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ
ಆವುದೆನಗುದ್ಯೋಗವೆನೆ ಸಂ
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ, ನಮ್ಮನ್ನು ಕರೆಸಿದ ಕಾರಣವೇನು? ರಾಜಕಾರ್ಯವೇನೆಂದು ಅಪ್ಪಣೆ ಕೊಟ್ಟರೆ, ಈ ಯುವ ದೈತ್ಯ ಸೇನೆ ಅದನ್ನು ಮಾಡಿ ಮುಗಿಸುತ್ತದೆ. ಕೆಲಸವನ್ನು ಹೇಳು ಎಂದು ಕೇಳಿದನು. ಆಗ ಧರ್ಮರಾಜನು ಅವರನ್ನು ಸನ್ಮಾನಿಸಿ ‘ಹಾರಿ ಹೋಗುವ ಪ್ರಾಣವಾಯುವನ್ನು ನಿನ್ನ ಮಾತು ಮತ್ತೆ ನಿಲ್ಲಿಸಿತು’ ಎಂದನು.
ಪದಾರ್ಥ (ಕ.ಗ.ಪ)
ಹದನು- ಕೆಲಸ
ಜೀವಮರುತ - ಪ್ರಾಣವಾಯು
ಮೂಲ ...{Loading}...
ದೇವ ಬೆಸಸಾ ನಮ್ಮ ಬರಿಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ
ಆವುದೆನಗುದ್ಯೋಗವೆನೆ ಸಂ
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ ॥35॥
೦೩೬ ದುರ್ಗವಿದೆ ...{Loading}...
ದುರ್ಗವಿದೆ ನಮ್ಮಂಘ್ರಿಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ನಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಪರ್ವತವನ್ನು ಹತ್ತಲು ನಮ್ಮ ಕಾಲುಗಳಿಗೆ ಶಕ್ತಿ ಸಾಲದು. ನೀನು ಸಾಹಸಿಗ. ನಿನ್ನವರು ಈ ಪರ್ವತಕ್ಕೆ ಪ್ರತಿ ಪರ್ವತದಂತೆ ಇದ್ದಾರೆ. ನಮ್ಮನ್ನೆಲ್ಲರನ್ನೂ ನೀನು ಹೆಗಲಿಗೇರಿಸಿಕೊಂಡು ಒಂದೇ ಲಗ್ಗೆಯಲ್ಲಿ ನಡೆಸು” ಎಂದು ಧರ್ಮರಾಯ ಹೇಳಲು, ‘ಜೀಯ ಹಸಾದ, ಎಂದು ಅಂಜಲಿಬದ್ಧನಾಗಿ ಘಟೋತ್ಕಚ ಶಿರಬಾಗಿ ನಿಂದನು.
ಪದಾರ್ಥ (ಕ.ಗ.ಪ)
ಮೊಗ್ಗೆಗೈ - ಮುಗಿದ ಕೈ
ಮೂಲ ...{Loading}...
ದುರ್ಗವಿದೆ ನಮ್ಮಂಘ್ರಿಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ನಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ ॥36॥
೦೩೭ ಹೊತ್ತನರಸನನರಸನನುಜರ ...{Loading}...
ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಭಟರೊ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ, ಅವನ ತಮ್ಮಂದಿರು, ದ್ರೌಪದಿಯನ್ನು ಹೊತ್ತುಕೊಂಡು, ಪರಿಜನರನ್ನೆಲ್ಲ ಹೊತ್ತುಕೊಳ್ಳುವುದಕ್ಕೆ ಭಟರಿಗೆ ಸೂಚಿಸಿದನು. ಇವರುಗಳನ್ನು ರಾಕ್ಷಸರು ಬೆನ್ನಿನ ಮೇಲೆ ಹೊತ್ತುಕೊಂಡು ಮೋಡದಂತೆ ಆಕಾಶದಲ್ಲಿ ಹಾರಿಹೋದರು.
ಮೂಲ ...{Loading}...
ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಭಟರೊ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ ॥37॥
೦೩೮ ಅಸುರ ದೇಹಸ್ಪರ್ಶವಸಮಂ ...{Loading}...
ಅಸುರ ದೇಹಸ್ಪರ್ಶವಸಮಂ
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬಂದನಿವರೊಡನೆ
ವಿಷಮ ಗಿರಿಕಾನನ ಕದಧ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಾಯಣಾಶ್ರಮ ವರತಪೋವನವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸದೇಹ ಸ್ಪರ್ಶ ಸಲ್ಲದೆಂದು ಮುನಿಗಳಾದ ರೋಮಶರು ವಾಯುವೇಗದಿಂದ ಬಂದರು. ಎಲ್ಲರೂ ದುರ್ಗಮವಾದ ಕಾಡು, ಪರ್ವತಗಳ ಮಾರ್ಗವನ್ನು ದಾಟಿ, ನರನಾರಾಯಣ ಋಷಿಗಳ ತಪೋವನಕ್ಕೆ ಬಂದರು.
ಮೂಲ ...{Loading}...
ಅಸುರ ದೇಹಸ್ಪರ್ಶವಸಮಂ
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬಂದನಿವರೊಡನೆ
ವಿಷಮ ಗಿರಿಕಾನನ ಕದಧ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಾಯಣಾಶ್ರಮ ವರತಪೋವನವ ॥38॥
೦೩೯ ಅಲ್ಲಿಯಖಿಳ ಋಷಿವ್ರಜವು ...{Loading}...
ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿರುವ ಮುನಿಸಂದೋಹವು ಧರ್ಮರಾಯನನ್ನು ಆತಿಥ್ಯ, ಉಪಚಾರ, ಪ್ರಿಯ ಸಂಭಾಷಣೆಗಳಿಂದ ಮನ್ನಿಸಿತು. ಧರ್ಮರಾಯನೂ ಸಕಲ ಮುನಿಜನರನ್ನು ಸತ್ಕರಿಸಿದನು. ಹೀಗೆ ಅಲ್ಲಿ ಎಂಟು ದಿವಸಗಳನ್ನು ಕಳೆದರು.
ಮೂಲ ...{Loading}...
ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳೆಂದ ॥39॥