೦೦೦ ಸೂ ಭಯಭರಿತ ...{Loading}...
ಸೂ. ಭಯಭರಿತ ಭಕ್ತಿಯಲಿ ಕಾಮಾ
ರಿಯನು ಗೆಲಿದರ್ಜುನನು ಹರ ವೈ
ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಮನ್ಮಥನ ವೈರಿಯಾದ ಶಿವನನ್ನು ಭಯಭಕ್ತಿಯಿಂದ ಗೆದ್ದ ಅರ್ಜುನನು, ಊರ್ವಶಿಯ ಶಾಪವನ್ನು ಪಡೆದರೂ ಧೈರ್ಯದಿಂದ ಶಿವನವೈರಿಯಾದ ಕಾಮನನ್ನು ಗೆದ್ದನು.
ಮೂಲ ...{Loading}...
ಸೂ. ಭಯಭರಿತ ಭಕ್ತಿಯಲಿ ಕಾಮಾ
ರಿಯನು ಗೆಲಿದರ್ಜುನನು ಹರ ವೈ
ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲು ರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳುಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸಹಸ್ರಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೆ ಲಾಲಿಸು. ಮನ್ಮಥನ ಶರಗಳಿಂದ ಪಾರ್ಥನ ಮೈಯಲ್ಲಿರುವ ರೋಮವನ್ನು ಅಲುಗಾಡಿಸಲೂ ಸಾಧ್ಯವಿಲ್ಲ. ಚಿತ್ರಸೇನನನ್ನು ಬೀಳ್ಗೊಟ್ಟ ಆ ಊರ್ವಶಿಯು ತನ್ನ ಸಾವಿರಾರು ಸಖಿಯರನ್ನು ಹರ್ಷದಿಂದ ಕರೆಸಿಕೊಂಡಳು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲು ರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳುಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸಹಸ್ರಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ ॥1॥
೦೦೨ ವನಜಲೋಚನೆ ಮಾಡಿದಳು ...{Loading}...
ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರ್ವಶಿಯು ಸ್ನಾನವನ್ನು ಮಾಡಿ, ಉತ್ತಮವಾದ ವಸನವನ್ನು ಉಟ್ಟುಕೊಂಡು, ರತ್ನಾಭರಣ ಭೂಷಿತೆಯಾಗಿ ಸುಗಂಧಗಳನ್ನು ಲೇಪಿಸಿಕೊಂಡಳು. ಅನುಲೇಪನಕ್ಕಾಗಿ ಭರಣಿಗಳನ್ನು ಸಖಿಯರು ತಂದಿಟ್ಟು, ಹೂವಿನ ಮೊಗ್ಗಿನಿಂದ ಅವಳಿಗೆ ಮುಡಿಯನ್ನು ಕಟ್ಟಿದರು.
ಮೂಲ ...{Loading}...
ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ ॥2॥
೦೦೩ ತಿಗುರ ಗೆಲಿದಳು ...{Loading}...
ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿ ಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಮಳದ್ರವ್ಯವನ್ನು ಪೂಸಿಕೊಂಡಳು. ಸೇವಕಿಯರು ತಿಲಕವನ್ನು ಇಟ್ಟು ಊರ್ವಶಿಗೆ ಬಗೆಬಗೆಯ ಅಲಂಕಾರ ಮಾಡಿದರು. ಈ ಯೌವನದ ಅಪ್ಸರೆಯ ಸೌಂದರ್ಯವು ಶಿವನ ಖಡ್ಗವೋ, ಮನ್ಮಥನ ಮೇಲಿನ ಹಗೆಯಿಂದ ಹುಟ್ಟಿದ ಧೂಮಕೇತುವೋ ಎಂಬಂತೆ ಕಂಗೊಳಿಸಿತು.
ಪದಾರ್ಥ (ಕ.ಗ.ಪ)
ತಿಗುರು-ಪರಿಮಳ ದ್ರವ್ಯ .
ಮೂಲ ...{Loading}...
ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿ ಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ ॥3॥
೦೦೪ ಪರಿಮಳದ ಪುತ್ಥಳಿಯೊ ...{Loading}...
ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಗಂಧದ ಗೊಂಬೆಯೋ, ಸೌಂದರ್ಯದ ಅಚ್ಚಿನ ಎರಕವೊ, ವಿಟರ ಭಾಗ್ಯವೋ, ಕಾಮುಕರ ಅದೃಷ್ಟದ ಕಲ್ಪವೃಕ್ಷ ಫಲವೊ, ಸ್ಮರನ ವಿಜಯ ಪತಾಕೆಯೊ, ಕಾಮಶಾಸ್ತ್ರದ ಮೂಲಮಂತ್ರವೊ, ಅಪ್ಸರೆಯರ ಅಧೀಶ್ವರಿಯೊ ಎಂಂತಿದ್ದ ಅವಳನ್ನು ವರ್ಣಿಸಲು ಸಾಧ್ಯವಾಗದು.
ಮೂಲ ...{Loading}...
ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ ॥4॥
೦೦೫ ಲೋಕವಶ್ಯದ ತಿಲಕವೋ ...{Loading}...
ಲೋಕವಶ್ಯದ ತಿಲಕವೋ ಜಗ
ದೇಕ ರತ್ನವೊ ವಿಗಡ ಮುನಿ ಚಿ
ತ್ತಾಕರುಷಣದ ಮಂತ್ರವಾದವೊ ಋಷಿತಪಃಫಲವೊ
ಲೋಕಸೌಂದರ್ಯೈಕ ಸರ್ಗವೊ
ನಾಕಸುಖ ಸಾಕಾರವೊ ರೂ
ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕವನ್ನು ವಶೀಕರಿಸುವ ತಿಲಕವೊ, ಜಗತ್ತಿನ ಏಕೈಕ ರತ್ನವೊ, ಮುನಿಗಳ ಮನಸ್ಸನ್ನು ಸೆಳೆಯುವ ಮಂತ್ರವೊ, ಋಷಿಗಳ ತಪಸ್ಸಿನ ಫಲವೊ, ಭುವನ ಸೌಂದರ್ಯದ ಏಕೈಕ ಸೃಷ್ಟಿಯೋ, ಸ್ವರ್ಗಸುಖದ ಸಾಕಾರವೊ, ಚೆಲುವಿನ ಏಕೈಕ ತಾಣವೊ, ಎಂಬಂತಿದ್ದ ಊರ್ವಶಿಯ ಆಗಮನವು ಅದ್ಭುತವಾಗಿತ್ತು.
ಪದಾರ್ಥ (ಕ.ಗ.ಪ)
ಸರ್ಗ - ಸೃಷ್ಟಿ
ಚಿತ್ರವಾಯ್ತು - ಅದ್ಭುತವಾಯ್ತು
ವಶ್ಯ - ವಶೀಕರಿಸಬಲ್ಲ
ಟಿಪ್ಪನೀ (ಕ.ಗ.ಪ)
ಊರ್ವಶಿ (ಉರ್ವಶಿ) - ಭಾರತದ ತುಂಬ ಪ್ರಾಚೀನ ಕಾಲದ ಕಥೆ ಊರ್ವಶಿಯದು. ಋಗ್ವೇದದಲ್ಲಿಯೇ ಇವಳ ಕಥೆಯಿದೆ. ಕಾಳಿದಾಸ ಅರವಿಂದರು ಮೊದಲಾದ ಪ್ರತಿಭಾವಂತರೆಲ್ಲ ಈಕೆಯ ಕಥನವನ್ನು ರಚಿಸಿದ್ದಾರೆ. ಕನ್ನಡದಲ್ಲಿ ಕುಮಾರವ್ಯಾಸ, ಪುತಿನ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಮೊದಲಾದ ಹಲವರ ಕಾವ್ಯ-ನಾಟಕಗಳಿಗೆ ಊರ್ವಶಿ ವಸ್ತುವಾಗಿದ್ದಾಳೆ. ಇವಳೊಬ್ಬ ಅಪ್ಸರೆ, ಅಪ್ಸುನಿರ್ಮರ್ಥನಾದೇವ! ರಸಾತ್ತಸ್ಮಾತ್ ವರಸ್ತಿಯಃ (ಕ್ಷೀರಸಾಗರ ಕಡೆಗಾದ ಅದರ ರಸದಿಂದ ಅಪ್ಸರೆಯರು ಹುಟ್ಟಿದರು) ಎನ್ನುತ್ತಾರೆ. ಊರ್ವಶಿ ನಾರಯ ಮಹರ್ಷಿಯಂಥ ಮಹಾತ್ಮನ ತೇಜೋ ಮೂಲದಿಂದ ಹುಟ್ಟಿದವಳು. ಇಂದ್ರನು ಕಳಿಸಿದ ಅಪ್ಸರೆಯರಿಗೆ ಸೊಪ್ಪು ಹಾಕದ ನಾರಾಯಣ ತನ್ನ ತೊಡೆಯ ಕೂದಲಿನಿಂದ ಇವಳನ್ನು ಸೃಷ್ಟಿಮಾಡಿ ಇಂದ್ರನನ್ನು ನಿಸ್ತೇಜನಾಗಿ ಮಾಡಿದ. ಋಗ್ವೇದದಲ್ಲಿ ಕಾಳಿದಾಸ, ಮತ್ಸ್ಯಪುರಾಣ, ವಿಷ್ಣುಪುರಾಣ ಕಥಾಸರಿತ್ಸಾಗರದ ಲಾವಣಿಕ ಲಂಬಿಕಗಳಲ್ಲಿ ಊರ್ವಶಿಯ ಪ್ರಸಕ್ತಿಯಿದೆ. ಈ ಕಥೆಗಳಲ್ಲಿ ಊರ್ವಶಿಯು ಪುರೂರವನನ್ನು ಮೋಹಿಸಿ ಮದುವೆಯಾದ ಸಂಗತಿಯನ್ನೂ ಅವರ ದಾಂಪತ್ಯ ಮುರಿದು ಬಿದ್ದ ಸಂಗತಿಯನ್ನೂ ವಿವರಿಸುತ್ತವೆ. ಮ್ಯಾಕ್ಸ್ ಮುಲ್ಲರ್ ಅವರ ಪ್ರಕಾರ ಇದು ಉಷಸ್ಸು ಸೂರ್ಯ ಇವರ ಸಂಬಂಧದ ಪ್ರತಿಮೆಯಾಗಿದೆ. ಸ್ನೂಕರ್ ಎಂಬ ವಿದ್ವಾಂಸನು ಈ ಅಪ್ಸರೆ ಎಂದರೆ ನೊರೆ ಎಂದೂ ಸೂರ್ಯ ಬೆಳಗಿದಾಗ ನೊರೆಯನ್ನು ಹೀರಿಕೊಳ್ಳುತ್ತಾನೆಂದು ವ್ಯಾಖ್ಯಾನಿಸಿದ್ದಾರೆ.
ಮಹಾಭಾರತದಲ್ಲಿ ಊರ್ವಶಿಯ ಪೂರ್ವ ಸಂಗತಿಗಳು ಪ್ರಸ್ತಾವಿತವಾಗಿದ್ದರೂ ಅದರ ಮುಖ್ಯಭಾಗ ಊರ್ವಶಿಯ ಉತ್ತರ ಚರಿತೆಯಲ್ಲಿದೆ. ಅರ್ಜುನನು ಶಿವನಿಂದ ಪಾಶುಪತಾಸ್ತ್ರ ಪಡೆದು ಇಂದ್ರಲೋಕಕ್ಕೆ ಬರುತ್ತಾನಷ್ಟೆ. ಅಲ್ಲಿ ಊರ್ವಶಿಯ ನೃತ್ಯವನ್ನು ನೋಡಿ ಮೆಚ್ಚುತ್ತಾನೆ. ಈ ಮೆಚ್ಚಿಕೆಯನ್ನು ಪ್ರೇಮವೆಂದು ತಪ್ಪಾಗಿ ಭಾವಿಸಿದ ಊರ್ವಶಿ ಅರ್ಜುನನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅರ್ಜುನನು ಅವಳ ಕೋರಿಕೆಯನ್ನು ಗೌರವದಿಂದಲೆ ತಿರಸ್ಕರಿಸಿ ತನ್ನ ವಂಶದ ಕಥೆಯನ್ನು ಹೇಳಿ ಅವಳನ್ನು ‘ತಾಯಿ’ ಎಂದು ಕರೆಯುತ್ತಾನೆ. ವಿಲಾಸಿನಿಯಾದ ಊರ್ವಶಿಗೆ ಇಂಥ ಮರ್ತೃ ಸಂಬಂಧಗಳಲ್ಲಿ ಆಸಕ್ತಿಯಿಲ್ಲ. ಅವಳ ಅರ್ಜುನನ ನಡವಳಿಕೆಯಿಂದ ಕ್ರುದ್ಧಳಾಗಿ ‘ನೀನು ನಪುಂಸಕನಾಗು’ ಎಂದು ಶಾಪ ಕೊಡುತ್ತಾಳೆ. ತಾನು ಚಿತ್ರಸೇನನೆಂಬ ಗಂಧರ್ವನ ಸಲಹೆಯಂತೆ ಅರ್ಜುನನ ಬಳಿಗೆ ಬಂದುತಿರಸ್ಕಾರಕ್ಕೆ ಪಾತ್ರವಾದದ್ದು ಅವಲ ರೂಪಕ್ಕೆ ವ್ಯಕ್ತಿತ್ವಕ್ಕೆ ಆದ ಅಗೌರವ ಎಂದು ಅವಳು ಭಾವಿಸುತ್ತಾಳೆ.
‘‘ತಸ್ಮಾತ್ ತ್ವಂ ನರ್ತನಃ ಪಾರ್ಥ ಸ್ತ್ರೀ ಮಧ್ಯೇ ಮಾನವರ್ಜಿತಃ
ಅ-ಪ್ರಾಮಾನಿತಿ ವಿಖ್ಯಾತಃ ಷಂಡವತ್ ವಿಚರಿಷ್ಯಸಿ||
(ನೀನು ಹೆಣ್ಣುಗಳ ಮಧ್ಯದಲ್ಲಿ ನಿರಾದರಕ್ಕೆ ಒಳಗಾದವನಾಗಿ ಕುಣಿತದವನಾಗಿ ಬದುಕು. ಎಲ್ಲರೂ ನಿನ್ನನ್ನು ನಪುಂಸಕ ಎನ್ನಲಿ. ನಿನ್ನ ಆಚಾರ ವಿಚಾರ ದೇಹಭಂಗಿ ಇವೆಲ್ಲ ನಪುಂಸಕರಂತೆಯೇ ಆಗಲಿ).
ಊರ್ವಶಿ ಅರ್ಜುನರ ನಡುವೆ ನಡೆದ ಸಚಿವಾದ ಮಹಾಭಾರತದ ಉಜ್ವಲ ಸಚಿವಾದಗಳಲ್ಲಿ ಒಂದಾಗಿದೆ. ದೇವ-ಮಾನವ ಲೋಕಗಳ ವ್ಯವಹಾರಗಳ ಒಳನೋಟಗಳನ್ನು ಕಾಣಿಸಿಕೊಂಡುವಂಥದೂ ಆಗಿದೆ.
ಮೂಲ ...{Loading}...
ಲೋಕವಶ್ಯದ ತಿಲಕವೋ ಜಗ
ದೇಕ ರತ್ನವೊ ವಿಗಡ ಮುನಿ ಚಿ
ತ್ತಾಕರುಷಣದ ಮಂತ್ರವಾದವೊ ಋಷಿತಪಃಫಲವೊ
ಲೋಕಸೌಂದರ್ಯೈಕ ಸರ್ಗವೊ
ನಾಕಸುಖ ಸಾಕಾರವೊ ರೂ
ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ ॥5॥
೦೦೬ ನೆರೆದರಬಲೆಯರಙ್ಗವಟ್ಟದ ...{Loading}...
ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿ ಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಮಳಕ್ಕೆ ದುಂಬಿಗಳು ಮುತ್ತಿದಂತೆ ಚೆಲುವೆಯರೆಲ್ಲ ಊರ್ವಶಿಯತ್ತ ಸೇರಿದರು. ಕತ್ತಲೆಯನ್ನು ಸೀಳುವ ಕಣ್ಣಕಾಂತಿಯಿಂದ, ವಿವಿಧ ಸ್ವರ್ಣಾಭರಣಗಳನ್ನು ಧರಿಸಿದ, ಪರಿಪರಿಯ ವಸ್ತ್ರಾಲಂಕಾರದಿಂದ ಮೆರೆದ, ವೈವಿಧ್ಯಮಯ ಮುಡಿಗಳನ್ನು ಕಟ್ಟಿಕೊಂಡ ನಾರಿಯರು ಊರ್ವಶಿಯನ್ನು ಸುತ್ತುವರಿದರು.
ಮೂಲ ...{Loading}...
ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿ ಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ ॥6॥
೦೦೭ ಹೆಗಲು ಹಡಪದ ...{Loading}...
ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಶದ ತಾಳವೃಂತಕದ
ಮುಗುದೆಯರು ಮನುಮಥನ ಮೊನೆಯಾ
ಳುಗಳ ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಂಬೂಲಚೀಲ, ಕನ್ನಡಿ, ಸೀಗುರಿ, ಹಾವುಗೆ, ಚಿನ್ನದ ಕಲಶ, ತಾಳವಾದ್ಯಗಳನ್ನು ಹಿಡಿದ ನಾರಿಯರ ಸೌಂದರ್ಯ, ಊರ್ವಶಿಯ ಮೈಕಾಂತಿ ಇವು ಮನ್ಮಥನ ಸೈನಿಕರ ಮೇಲೆ ದಾಳಿ ಮಾಡುವಂತೆ ಹರಡಿತು.
ಪದಾರ್ಥ (ಕ.ಗ.ಪ)
ಹಡಪ- ತಾಂಬೂಲದ ಚೀಲ, ಸಂಚಿ
ದೂವಾಳಿ-ಪ್ರಸರಣ, ವ್ಯಾಪಿಸುವುದು.
ಮೂಲ ...{Loading}...
ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಶದ ತಾಳವೃಂತಕದ
ಮುಗುದೆಯರು ಮನುಮಥನ ಮೊನೆಯಾ
ಳುಗಳ ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ ॥7॥
೦೦೮ ತುರಗಮೇಧದ ರಾಜಸೂಯದ ...{Loading}...
ತುರಗಮೇಧದ ರಾಜಸೂಯದ
ವರ ಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲುಗುಣನ
ಪರಮಪುಣ್ಯವದೇನು ತಾನಿ
ದ್ದರಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರ ನಂದನನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವಮೇಧ, ರಾಜಸೂಯಗಳೆಂಬ ಮಹಾಯಜ್ಞಗಳನ್ನು ಮಾಡಿದವರು ಈಕೆಯ ಕಾಲುಂಗುಟದ ತುದಿಯನ್ನೂ ಕಾಣಲು ಸಾಧ್ಯವಿಲ್ಲ. ಅರ್ಜುನನ ಮಹಾಭಾಗ್ಯವೇನಿದು ? ಅವನಿದ್ದ ಅರಮನೆಗೆ ಊರ್ವಶಿ ಬಂದಿರುವುದು ಆಶ್ಚರ್ಯ ಎಂದು ಪಾರ್ಥನನ್ನು ಮಾಗಧರು ಹೊಗಳಿದರು.
ಮೂಲ ...{Loading}...
ತುರಗಮೇಧದ ರಾಜಸೂಯದ
ವರ ಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲುಗುಣನ
ಪರಮಪುಣ್ಯವದೇನು ತಾನಿ
ದ್ದರಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರ ನಂದನನ ॥8॥
೦೦೯ ಧರಣಿಪತಿ ಕೇಳವರ ...{Loading}...
ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಮಯಾಗವನ್ನು ಮಾಡಿದವರು ಕೂಡಾ ಊರ್ವಶಿಯ ದಾಸಿಯರಿಗೆ ಕೂಡಾ ಸಂಭಾವನೆ ಕೊಡಲಾರರು. ಚಂದ್ರ, ಜಯಂತ, ನಳಕೂಬರರು ಇವಳ ಸಮಯಕ್ಕಾಗಿ ಇಡೀ ವರ್ಷ ಇವಳ ಅರಮನೆಯ ಬಾಗಿಲನ್ನು ಕಾಯುತ್ತಾರೆ.
ಪದಾರ್ಥ (ಕ.ಗ.ಪ)
ಪಡಿಗ-ಸಂಭಾವನೆ, ದಾರವಟ್ಟ-ಬಾಗಿಲು
ಮೂಲ ...{Loading}...
ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ ॥9॥
೦೧೦ ಜನಮನದ ಸಙ್ಕಲೆವನೆಯೊ ...{Loading}...
ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನ ದೇವನರಮನೆಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನರ ಮನಸ್ಸನ್ನು ಕಟ್ಟಿ ಹಾಕುವ ಸೆರೆಮನೆಯೊ, ಕಣ್ಣುಗಳೆಂಬ ಮೃಗವನ್ನು ಬೇಟೆಯಾಡುವ ಬೇಟೆಗಾರ್ತಿಯೊ, ಕಾಮದೇವನ ಸಂಜೀವನ ಔಷಧವೊ, ಶಿವಶಿವಾ…. ಮನ್ಮಥನ ಕಾಮ ಚಿಹ್ನೆಯಂತೆ, ಕಾಮುಕರ ಅಪೇಕ್ಷೆಯ ಅಧೀಶ್ವರಿಯೆಂಬಂತೆ ಊರ್ವಶಿಯು ಅರ್ಜುನನ ಅರಮನೆಗೆ ಬಂದಳು.
ಪದಾರ್ಥ (ಕ.ಗ.ಪ)
ಸಂಕಲೆವನೆ - ಸೆರೆಮನೆ
ವೇಂಟೆಕಾತಿ - ಬೇಟೆಗಾರ್ತಿ
ಮಾರಾಂಕ - ಮನ್ಮಥನ ಚಿಹ್ನೆ
ಮೂಲ ...{Loading}...
ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನ ದೇವನರಮನೆಗೆ ॥10॥
೦೧೧ ಮೆಲುನುಡಿಗೆ ಗಿಣಿ ...{Loading}...
ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃದುಮಾತಿಗೆ ಗಿಳಿಗಳು ಮರೆಯಾದವು. ಸ್ವರಕ್ಕೆ ಕೋಗಿಲೆಗಳು ನಾಚಿದವು. ಸುಗಂಧ ಸುವಾಸನೆಗೆ ದುಂಬಿಗಳು ಹಾರಿಹೋದವು. ಮುಖಚಂದ್ರವನ್ನು ನೋಡಿ ಚಕೋರಗಳು ಗುಂಪು ಸೇರಿದವು. ಊರ್ವಶಿಯ ಸಖಿಯರ ಕಾಲಂದುಗೆಯ ಶಬ್ದಕ್ಕೆ ಹಂಸಗಳು ಬೆಚ್ಚಿದವು.
ಮೂಲ ...{Loading}...
ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ ॥11॥
೦೧೨ ಅಲರ್ದ ಪೊನ್ದಾವರೆಯ ...{Loading}...
ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮ ವನವೊ ಕುಸುಮೋ
ಚ್ಚಲಿತ ಕೇತಕಿ ದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೊ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಳಿದ ತಾವರೆಯ ಸಾಲೊ, ಚಿಗುರಿದ ಮಾವಿನ ತೋಟವೊ, ತಮಾಲವೃಕ್ಷಗಳ ಕಾಡಿನ ಕತ್ತಲೆಯೊ, ಆಕಾಶದಲ್ಲಿ ಮಿನುಗುವ ಹವಳದ ಬನವೊ, ಅರಳಿದ ಕೇದಗೆಯ ದಳಗಳೊ, ಬಾಳೆಗಿಡಗಳ ಸಾಲೋ, ನಾರೀ ಸಮೂಹವೊ, ಕಮಲಾನನೆಯ ಮುಂಗುಡಿಯೋ ಎಂಬಂತೆ ಊರ್ವಶಿಯ ಸಖಿಯರು ಬಂದರು.
ಪದಾರ್ಥ (ಕ.ಗ.ಪ)
ಹಂತಿ-ಸಾಲು
ತಮಾಲ - ಹೊಂಗೆ
ವಿದ್ರುಮ - ಹವಳ
ಮುಂಗುಡಿ - ಸೇನೆಯ ಮುಂಭಾಗ
ಮೂಲ ...{Loading}...
ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮ ವನವೊ ಕುಸುಮೋ
ಚ್ಚಲಿತ ಕೇತಕಿ ದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೊ ॥12॥
೦೧೩ ಬನ್ದಳೂರ್ವಶಿ ಬಳ್ಳಿ ...{Loading}...
ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾ ರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಿಂಚಿನ ಬಳ್ಳಿಯ ಸಮೂಹದ ಮಧ್ಯದಲ್ಲಿ ಕಾಣಿಸುವ ಕಿರುಮೋಡದಂತೆ ದಂಡಿಗೆಯಿಂದ ಊರ್ವಶಿ ಕೆಳಗಿಳಿದಳು. ಅರಮನೆಯ ಮುಂದೆ ಗುಂಪಾಗಿ ಅವಳಿಗೆ ಅವಧಾರು ಪಾಯು ಎಂದು ಹೇಳುತ್ತಿರುವ ನಾರಿಯರ ಕಿಂಕಿಣಿಯ ಸೊಗಸಿಗೆ , ಶಬ್ದ ಬ್ರಹ್ಮವೇ ಸೋತದ್ದನ್ನು ಹೇಗೆ ವರ್ಣಿಸಲಿ?
ಪದಾರ್ಥ (ಕ.ಗ.ಪ)
ದಂಡಿಗೆ - ಪಲ್ಲಕ್ಕಿ
ಸಿಂಜಾರವ- ಕಿಂಕಿಣಿ ನಾದ
ಮಿಂಚಿನ ಮಂದಿ - ಮಿಂಚಿನ ಸಮೂಹ
ಸೊರಹು - ಹೇಳು
ಮೂಲ ...{Loading}...
ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾ ರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ ॥13॥
೦೧೪ ಬಾಗಿಲಲಿ ಬಾಗಿಲಲಿ ...{Loading}...
ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೋಗೆಗಣ್ಣಿನ ಕೆಲವು ಚೆಲುವೆಯರು ಸೆಜ್ಜೆಯ ಬಾಗಿಲಲ್ಲಿ ನಿಂತರು. ಚಾಮರವನ್ನು ಬೀಸುತ್ತಿದ್ದ ಇನ್ನು ಕೆಲವು ನಾರಿಯರು ತಾಂಬೂಲಸಂಚಿಯನ್ನು ಹಿಡಿದ ಅಬಲೆಯರು - ಇವರೊಡನೆ ಮಾನಿನಿಯಾದ ಊರ್ವಶಿಯು ಒಳಗೆ ಬಂದು ಮಣಿಮಂಚದ ಮೇಲೆ ಶೇಷಶಾಯಿಯಾದ ಶ್ರೀಹರಿಯಂತೆ ಇರುವ ಇಂದ್ರಸುತ ಅರ್ಜುನನನ್ನು ನೋಡಿದಳು
ಪದಾರ್ಥ (ಕ.ಗ.ಪ)
ಸೋಗೆ - ನವಿಲಿನ ಗರಿ
ಸೆಜ್ಜೆ - ಮಲಗುವ ಮನೆ
ಭೋಗತಲ್ಪ - ಹಾವಿನ ಹಾಸಿಗೆ
ಮೂಲ ...{Loading}...
ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ ॥14॥
೦೧೫ ಹೊಳೆವ ಮಣಿದೀಪಾಂಶುಗಳ ...{Loading}...
ಹೊಳೆವ ಮಣಿದೀಪಾಂಶುಗಳ ಮು
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿ ನಿಂದಳು ತರುಣಿ ನೃಪ ಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಕಡೆಗಣ್ಣಿನ ಕಾಂತಿ ಮಣಿದೀಪಗಳ ಪ್ರಕಾಶವನ್ನು ಹೊರಸೂಸುತ್ತಿದ್ದವು. ಅವಳ ಮೈಕಾಂತಿ ಚಂದ್ರಕಾಂತ ಶಿಲೆಯ ಗೋಡೆಯ ಕಾಂತಿಯನ್ನು ಮಂಕಾಗಿಸಿತು. ತನ್ನ ಕೈಗಳನ್ನು ಗೆಳತಿಯರ ಹೆಗಲ ಮೇಲೆ ಹಾಕಿ, ಊರ್ವಶಿಯು ಅರ್ಜುನನ ಅಂಗಾಂಗಗಳ ಮೇಲೆ ಕಣ್ಣು ಮತ್ತು ಮನಸ್ಸನ್ನು ಹರಡಿದಳು.
ಪದಾರ್ಥ (ಕ.ಗ.ಪ)
ಇಂದೂ ಪಲ-ಚಂದ್ರಕಾಂತ ಶಿಲೆ
ಅಣೆ - ನಂದಿಸು, ಕುಂದಿಸು
ಮೂಲ ...{Loading}...
ಹೊಳೆವ ಮಣಿದೀಪಾಂಶುಗಳ ಮು
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿ ನಿಂದಳು ತರುಣಿ ನೃಪ ಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ ॥15॥
೦೧೬ ಎಳೆಯ ಬೆಳದಿಙ್ಗಳವೊಲೀಕೆಯ ...{Loading}...
ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮ ಪ್ರೀತಿರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಳ ಮುಖಚಂದ್ರಮನಿಂದ ಎಳೆಯ ಬೆಳದಿಂಗಳು ಸುಳಿದಂತೆ, ಸುತ್ತಲೂ ಸುಗಂಧಸೂಸಿದಂತೆ ಅರ್ಜುನನಿಗೆ ನಿದ್ರೆ ಕಳೆದು ಎಚ್ಚರವಾಗಿ, ಇಂದ್ರಿಯಗಳ ಸುಖದ ಭಾರದಲ್ಲಿ ಮುದಗೊಂಡನು.
ಮೂಲ ...{Loading}...
ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮ ಪ್ರೀತಿರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ ॥16॥
೦೧೭ ಹರ ಮಹಾ ...{Loading}...
ಹರ ಮಹಾ ದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣ ಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನು ಹರಮಹಾದೇವಾ…. ಇಂತಹ ಸುವಾಸನೆ ಎಲ್ಲಿಂದ ಬರುತ್ತಿದೆ ಎಂದು ಮೈಮುರಿದು ಸುತ್ತಲೂ ನೋಡಿದನು. ದಿವ್ಯವಾದ ರತ್ನಾಭರಣಗಳ ಕಾಂತಿಯಿಂದ ಕಂಗೊಳಿಸುವ ಮನ್ಮಥಕಾಂಕ್ಷೆಯ ಊರ್ವಶಿಯನ್ನು ಅವನು ಕಂಡನು.
ಪದಾರ್ಥ (ಕ.ಗ.ಪ)
ಮದನಾಲಸೆ - ಮನ್ಮಥಕಾಂಕ್ಷಿ
ಅಘಾಟ - ಅತಿಶಯವಾದ
ಮೂಲ ...{Loading}...
ಹರ ಮಹಾ ದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣ ಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ ॥17॥
೦೧೮ ಹಾ ಮಹಾ ...{Loading}...
ಹಾ ಮಹಾ ದೇವಿಯರಲಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಓಹೋ..ಮಹಾದೇವಿಯವರಲ್ಲವೆ?. ಮನೋಹರವಾದ ನೃತ್ಯದಿಂದ ಇಂದ್ರನ ಸಭೆಯನ್ನು ರಂಜಿಸಿದ ಈಕೆ ನಮ್ಮ ನಿರ್ಮಲವಾದ ಚಂದ್ರವಂಶಕ್ಕೆ ಮಾತೆಯಾದ ಪೂಜ್ಯಳಲ್ಲವೆ?’ ಎಂದು ಶಿವಶಿವ ಎನ್ನುತ್ತ ಮಣಿಮಂಚದಿಂದ ಅರ್ಜುನನು ಕೆಳಗಿಳಿದನು.
ಪದಾರ್ಥ (ಕ.ಗ.ಪ)
ಸುತ್ರಾಮ - ಇಂದ್ರ
ನಿರಾಮಯ - ನಿರ್ಮಲ
ಅಭಿವಂದನೀಯೆ - ಪೂಜ್ಯೆ
ಮೂಲ ...{Loading}...
ಹಾ ಮಹಾ ದೇವಿಯರಲಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ ॥18॥
೦೧೯ ಏನು ಬಿಜಯಙ್ಗೈದಿರಿತ್ತಲು ...{Loading}...
ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವು ಕೃತಾರ್ಥರಲ
ಏನು ಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏನು ಈ ಕಡೆ ಬರೋಣವಾಯಿತು ? ಮಾನನಿಧಿಗಳೆನಿಸಿದ ತಾವು ದೇವೇಂದ್ರನ ಮಾನಿನಿಯರಾದುದರಿಂದ ನಮಗೆ ಅಭಿವಂದನೀಯರಾಗಿದ್ದೀರಿ. ನಾವು ಕೃತಾರ್ಥರು. ಏನು ಅಪ್ಪಣೆ ಮಾಡಿ. ನಿಮಗೆ ನಾನು ಮಗ. ಉಪಚರಿಸುವುದು ಬೇಡ. ನಿಮ್ಮ ಅಂತರಂಗದ ಅಭಿಲಾಷೆಯನ್ನು ನಮಗೆ ಆಜ್ಞೆ ಮಾಡಿರಿ’ ಎಂದು ಪಾರ್ಥನು ವಿನಂತಿಸಿದನು.
ಮೂಲ ...{Loading}...
ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವು ಕೃತಾರ್ಥರಲ
ಏನು ಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ ॥19॥
೦೨೦ ನುಡಿಗೆ ಬೆರಗಾದಳು ...{Loading}...
ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತೆಕ್ಕಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತಿಗೆ ಊರ್ವಶಿ ಅಚ್ಚರಿಹೊಂದಿ, ಕಾಮಾಭಿಲಾಷೆಗೆ ಅಂಜುತ್ತಾ ಪಾರ್ಥನ ನಡತೆಗೆ ಮೆಚ್ಚಿದಳು. ಮನ್ಮಥನ ಶರಗಳಿಗೆ ಸಿಲುಕಿ, ನಾಚಿಕೆ, ಸಂಕೋಚ ಭಯ ಹೀಗೆ ವಿವಿಧ ರೀತಿಯ ರಸಭಾವಗಳಿಗೆ ಒಳಗಾದಳು.
ಪದಾರ್ಥ (ಕ.ಗ.ಪ)
ಬಿಡೆಯ-ಸಂಕೋಚ
ಮೂಲ ...{Loading}...
ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತೆಕ್ಕಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ ॥20॥
೦೨೧ ಏಕೆ ನುಡಿದನೊ ...{Loading}...
ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಕೊಂಡೆನೆತ್ತಣ
ಕಾಕು ಮೂಳಗೆ ಕೋಳುಹೋದೆನೊ ಕಾಮನೆಂಬವಗೆ |
ಲೋಕ ವರ್ತಕವಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿತ್ರಸೇನನು ಏಕೆ ಹೇಳಿದನೊ ? ನಾನು ಏಕೆ ಬಂದೆನೊ ? ಮನ್ಮಥನೆಂಬ ಮೂರ್ಖನಿಗೆ ಏಕೆ ಸಿಕ್ಕಿ ಬಿದ್ದೆನೋ ? ಲೋಕದಲ್ಲಿ ಸರಿಯಾದ ವರ್ತನೆಯಿಲ್ಲದಿರುವ ಈತನನ್ನು ವಿಧಿ ಏಕೆ ಸೃಷ್ಟಿಸಿದನೊ ? ನಾನು ಏಕೆ ? ಈ ನರನೇಕೆ? ಎಂದು ಬ್ರಹ್ಮನನ್ನೇ ನಿಂದಿಸಿ ನಿಟ್ಟುಸಿರಿಟ್ಟಳು.
ಪದಾರ್ಥ (ಕ.ಗ.ಪ)
ನರ - ಮಾನವ, ಅರ್ಜುನ
ಕಾಕು ಮೂಳ -ನಿಷ್ಪ್ರಯೋಜಕ
ಕೋಳುಹೋದೆನೋ - ಸಿಕ್ಕಿಬಿದ್ದೆನೋ
ಲೋಕವರ್ತಕ - ಲೋಕದ ಸಾಮನ್ಯ ಆಚಾರಗಳಂತೆ ನಡೆಯವವನು
ಮೂಲ ...{Loading}...
ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಕೊಂಡೆನೆತ್ತಣ
ಕಾಕು ಮೂಳಗೆ ಕೋಳುಹೋದೆನೊ ಕಾಮನೆಂಬವಗೆ |
ಲೋಕ ವರ್ತಕವಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ ॥21॥
೦೨೨ ವಿಕಳಮತಿಯೋ ಮೇಣಿವ ...{Loading}...
ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತುದು ವಾಮ ಪಾದವ
ನಕಟ ಕೆಟ್ಟೆನಲಾ ಯೆನುತ ಕರಗಿದಳು ನಳಿನಾಕ್ಷಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಹುಚ್ಚನೋ, ನಪುಂಸಕನೊ, ಜಡನೊ, ಶ್ರೋತ್ರಿಯನೊ, ಬಾಧೆ ಕೊಡುವವನೋ, ದುಷ್ಟನೊ, ಕೆಡುಕನೋ, ಅಥವಾ ಇದು ಮನುಷ್ಯ ವಿಕಾರವೊ? ಭೀಕರ ತಪಸ್ಸು ಮಾಡಿದ ದೇವತೆಗಳು, ದೈತ್ಯರು ನನ್ನ ಎಡಗಾಲಿಗೆ ನಮಿಸುತ್ತಿದ್ದರು. ಅಕಟಾ, ಈಗ ನಾನು ಕೆಟ್ಟೆ ಎಂದು ಅವಳು ಮರುಗಿದಳು.
ಪದಾರ್ಥ (ಕ.ಗ.ಪ)
ವಿಕಟ - ಭೀಕರ
ಮೂಲ ...{Loading}...
ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತುದು ವಾಮ ಪಾದವ
ನಕಟ ಕೆಟ್ಟೆನಲಾ ಯೆನುತ ಕರಗಿದಳು ನಳಿನಾಕ್ಷಿ ॥22॥
೦೨೩ ಎಲವೊ ರಾಯನ ...{Loading}...
ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟೆಕ್ಕರಿ
ಗಳೆವುದೇ ವಿಟ ಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದುಮುಖಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರನ ಆಜ್ಞೆಯಿಂದಾಗಿ ಚಿತ್ರಸೇನನು ನನ್ನನ್ನು ಪೀಡಿಸಿದನು. ಇದರಿಂದ ಕಾಮಬಾಣವು ನನ್ನ ಮನಸ್ಸಿಗೆ ನಾಟಿಕೊಂಡಿತು ಹೀಗೆ ಒಲಿದು ಬಂದ ಹೆಣ್ಣನ್ನು ನಿರಾಕರಿಸುವುದು ವಿಟಧರ್ಮವೇ ? ಅಕಟಾ, ನಾನು ಯಾರು ಎಂಬುದನ್ನು ತಿಳಿದುಕೋ - ಎಂದಳು.
ಪದಾರ್ಥ (ಕ.ಗ.ಪ)
ಅಂಡಲೆ - ಪೀಡಿಸು
ಟೆಕ್ಕರಿಗಳೆ - ತಿರಸ್ಕರಿಸು, ಕಡೆಗಣಿಸು
ಮೂಲ ...{Loading}...
ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟೆಕ್ಕರಿ
ಗಳೆವುದೇ ವಿಟ ಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದುಮುಖಿ ॥23॥
೦೨೪ ಶಿವ ಶಿವೀ ...{Loading}...
ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಿವಶಿವಾ, ಇಂತಹ ಮಾತಾಡಬೇಡಿ ನಿಮಗೇನೋ ಕಾಮಬಾಧೆಯಿಂದ ತಿಳಿಯದು. ಇಂದ್ರನ ಆಜ್ಞೆ’ ಚಿತ್ರಸೇನನ ಸೂಚನೆ ಹಾಗಿರಲಿ. ನೀವು ನಮ್ಮ ವಂಶಕ್ಕೆ ಮಾತೆಯೆನಿಸಿದವರು. ಮಾಡಬಾರದ ಕೆಲಸದಲ್ಲಿ ನನ್ನ ಮನವುಂಟಾಗದು ಎಂದು ಅರ್ಜುನ ವಿನಯದಿಂದ ಹೇಳಿದನು.
ಮೂಲ ...{Loading}...
ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ ॥24॥
೦೨೫ ನಾರಿ ನೀ ...{Loading}...
ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರ ರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿ, ಹಿಂದೆ ನಮ್ಮ ಹಿರಿಯನಾದ ಪುರೂರವನಿಗೆ ನೀವು ಹೆಂಡತಿ. ನಿಮಗೆ ಆಯುವೆಂಬ ಮಗನಾದನು. ಅವನಿಗೆ ನಹುಷನು ಪುತ್ರ. ಹೀಗೆ ಚಂದ್ರವಂಶದ ರಾಜಪರಂಪರೆ ಮುಂದುವರಿದು, ಯಾರಿಗೆ ನಾವು ಜನಿಸಿದೆವು ಎಂಬುದನ್ನು ನೀವು ವಿಚಾರಿಸಲಿಲ್ಲ’ ಎಂದು ಅರ್ಜುನನು ವಿನಯದಿಂದ ಹೇಳಿದನು.
ಮೂಲ ...{Loading}...
ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರ ರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ ॥25॥
೦೨೬ ಪ್ರಣವದರ್ಥ ವಿಚಾರವೆತ್ತಲು ...{Loading}...
ಪ್ರಣವದರ್ಥ ವಿಚಾರವೆತ್ತಲು
ಗಣಿಕೆಯರಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತ ವರ್ಷದವದಿರ
ಭಣಿತ ನಮ್ಮೀ ದೇವ ಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರಣವದ ವಿಚಾರವೆತ್ತ? ವೇಶ್ಯೆಯರ ಮನೆಯೊಳಗಿನ ಮಾತುಕತೆ ಎತ್ತ? ರತಿಕೇಳಿ ಬಗೆಗಿನ ಇದು ಕ್ಷುಲ್ಲಕವಾದ ಭಾರತವರ್ಷದವರ ಮಾತು. ನಿಮ್ಮ ಸೆಣಬಿನ ಗಿಡವು ದೇವಲೋಕದಲ್ಲಿರುವ ಕುಬೇರನ ಚೈತ್ರರಥ ಉದ್ಯನದಲ್ಲಿರುವ ನಿಚುಳವೃಕ್ಷಕ್ಕೆ ಸಮಾನವೇ? ಎಂದು ಊರ್ವಶಿ ಹೇಳಿದಳು.
ಪದಾರ್ಥ (ಕ.ಗ.ಪ)
ಆರ -ನಿಚುಳವೃಕ್ಷ
ಚೈತ್ರ ರಥ - ಅಲಕಾಪುರಿಯಲ್ಲಿರುವ ಕುಬೇರನ ಉದ್ಯಾನ
ಪ್ರಣವ - ಓಂಕಾರ
ಬಣಗು - ಕ್ಷುದ್ರ
ಮೂಲ ...{Loading}...
ಪ್ರಣವದರ್ಥ ವಿಚಾರವೆತ್ತಲು
ಗಣಿಕೆಯರಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತ ವರ್ಷದವದಿರ
ಭಣಿತ ನಮ್ಮೀ ದೇವ ಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ ॥26॥
೦೨೭ ಅಯ್ಯನಯ್ಯನು ನಿಮ್ಮವರ ...{Loading}...
ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳ ಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಂದೆ, ತಾತ, ಮುತ್ತಾತ, ಭಾವ, ಮೈದುನ, ಅಣ್ಣ ತಮ್ಮಂದಿರೆಂಬ ಜ್ಞಾತಿ ಬಾಂಧವರಿಗೆ, ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದವರಿಗೆ ಮತ್ತು ಯಜ್ಞ ಮಾಡಿದವರಿಗೆ ಇವರೆಲ್ಲರಿಗೆ ನಾನೊಬ್ಬಳೇ’ ಎಂದು ಊರ್ವಶಿ ನಗುತ್ತ ಹೇಳಿದಳು.
ಮೂಲ ...{Loading}...
ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳ ಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ ॥27॥
೦೨೮ ಮರೆಯ ಮಾತನ್ತಿರಲಿ ...{Loading}...
ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿ ಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈ ಮುಗಿ
ದೆರಗಿ ಮಗುಳೀ ಮಾತನೆಂದನು ಪಾರ್ಥನೂರ್ವಶಿಗೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬಳಸು ಮಾತುಗಳು ಹಾಗಿರಲಿ. ಅದನ್ನು ಮರೆತುಬಿಡು. ಆದರೆ ಹೆಣ್ಣಿನ ಬಯಕೆಯನ್ನು ತಿಳಿಯದವನು ಇಂದ್ರನೇ ಆಗಲಿ, ಚಂದ್ರನೇ ಆಗಲಿ ಅವನು ಕುರಿಯೇ ಸರಿ. ಮೂರ್ಖ, ನಿನಗೆ ಇದು ಹೇಗೆ ತಿಳಿಯುತ್ತದೆ ? ಎನ್ನಲು ಅರ್ಜುನನು ಭಯದಿಂದ ಅಳುಕುತ್ತಾ ಕೈಮುಗಿದು ಊರ್ವಶಿಗೆ ಹೀಗೆ ಹೇಳಿದನು.
ಮೂಲ ...{Loading}...
ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿ ಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈ ಮುಗಿ
ದೆರಗಿ ಮಗುಳೀ ಮಾತನೆಂದನು ಪಾರ್ಥನೂರ್ವಶಿಗೆ ॥28॥
೦೨೯ ಇದು ಮನುಷ್ಯಶರೀರ ...{Loading}...
ಇದು ಮನುಷ್ಯಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಮಾನವ ಶರೀರ. ಸಾಯುವವರೆಗೆ ವ್ಯಭಿಚಾರವೆಸಗದೆ ಧರ್ಮದಲ್ಲಿ ವರ್ತಿಸಿದರೆ, ಬಳಿಕ ದೇವಲೋಕ ಪ್ರಾಪ್ತಿಸುವುದು. ಅಲ್ಲಿಗೆ ಬಂದ ಮೇಲೆ ಆ ರೀತಿ ವ್ಯವಹರಿಸಬಹುದು. ಇದು ನಿಯಮ ಎಂದನು.
ಪದಾರ್ಥ (ಕ.ಗ.ಪ)
ತ್ರಿದಶ - ದೇವತೆ
ಅವ್ಯಭಿಚಾರ - ಋಜು ನಡತೆ
ಮೂಲ ...{Loading}...
ಇದು ಮನುಷ್ಯಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ ॥29॥
೦೩೦ ಅಹುದಹುದಲೇ ಶ್ರೌತ ...{Loading}...
ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರ ಹರಯೆಂದಳಿಂದುಮುಖಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೌದು, ಶ್ರುತಿ ಸ್ಮೃತಿಗಳನ್ನು ನೀವೇ ಅನುಸರಿಸುವವರು ಎಂದು ಮೂರು ಲೋಕದ ಜನರಿಗೂ ತಿಳಿದಿದೆ. ನೀವು ಐವರು ಸಹೋದರರು ಒಬ್ಬಳನ್ನೇ ಮದುವೆಯಾಗಿರುವುದು ಗೊತ್ತಿದೆ. ನಮ್ಮೊಂದಿಗೆ ಮಾತ್ರ ನಿಮಗೆ ನಿಸ್ಪೃಹತೆ, ಶಿವಶಿವಾ’ ಎಂದಳು. ಊರ್ವಶಿ.
ಮೂಲ ...{Loading}...
ಅಹುದಹುದಲೇ ಶ್ರೌತ ಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರ ಹರಯೆಂದಳಿಂದುಮುಖಿ ॥30॥
೦೩೧ ತಾಯ ನೇಮದಲನ್ದು ...{Loading}...
ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಕೂಟವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯ ಸೌಖ್ಯಕೆ ಕಾಮ ಸುಖದ ವಿ
ಡಾಯ ತತುವಕೆ ವೇಡೆಗೊಂಡು ನ
ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಾಯಿಯ ಮಾತನ್ನು ಮೀರುವುದು ಸಾಧುವಲ್ಲ. ಅವಳು ಅಪ್ಪಣೆ ಕೊಟ್ಟಂತೆ ನಮಗೆ ಐವರಿಗೂ ಒಬ್ಬಳೇ ಹೆಂಡತಿಯಾದಳು. ಇದು ತಪ್ಪೇ ? ದೇಹಸೌಖ್ಯಕ್ಕಾಗಿ, ಕಾಮಕೇಳಿಯ ಆನಂದಕ್ಕೆ ಒಳಗಾಗಿ ದುರ್ಗತಿಗೆ ಬೀಳುವವನು ನಾನಲ್ಲ’ ಎಂದನು ಅರ್ಜುನ.
ಪದಾರ್ಥ (ಕ.ಗ.ಪ)
ವೇಡೆ-ಬೇಲಿ, ದುವ್ವಾಳಿಸು-ಧುಮುಕು, ವೇಗವಾಗಿ ಚಲಿಸು
ತತುವ - ತತ್ತ್ವ
ದುವ್ವಾಳಿಸು - ಮುನ್ನುಗ್ಗು
ಮೂಲ ...{Loading}...
ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಕೂಟವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯ ಸೌಖ್ಯಕೆ ಕಾಮ ಸುಖದ ವಿ
ಡಾಯ ತತುವಕೆ ವೇಡೆಗೊಂಡು ನ
ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆಂದ ॥31॥
೦೩೨ ತಾಯ ನೇಮದಲೈವರಿಗೆ ...{Loading}...
ತಾಯ ನೇಮದಲೈವರಿಗೆ ಕಮ
ಲಾಯತಾಕ್ಷಿಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯಿ ಹೇಳಿದಂತೆ ಐವರೂ ಒಬ್ಬಳನ್ನೇ ಮದುವೆಯಾದಿರಿ. ಈಗ ತಂದೆಯಾದ ಇಂದ್ರನು ಹೇಳಿದಂತೆ ಪಿತೃವಚನವನ್ನು ಪಾಲಿಸುವುದು ಸಾಧುವಲ್ಲವೆ ? ದೇವೇಂದ್ರನೇ ಕಳುಹಿಸಿದುದರಿಂದ ಬಂದೆ, ಈ ಕಾಮಬಾಧೆಯಿಂದ ತಪ್ಪಿಸಿಕÉೂಳ್ಳುವ ಉಪಾಯವನ್ನು ನೀನೇ ಬಲ್ಲೆ ಎಂದು ಊರ್ವಶಿ ವಿನಯದಿಂದ ನುಡಿದಳು.
ಮೂಲ ...{Loading}...
ತಾಯ ನೇಮದಲೈವರಿಗೆ ಕಮ
ಲಾಯತಾಕ್ಷಿಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ ॥32॥
೦೩೩ ಸರಸಿಜದ ಮಧು ...{Loading}...
ಸರಸಿಜದ ಮಧು ಮಧುಕರನನನು
ಕರಿಸಿದೊಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿಲಕ್ಷ್ಮಿ ಸುಳಿದರೆ ನಯನ ವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲದ ಮಕರಂದವೇ ದುಂಬಿಯನ್ನು. ಚಂದ್ರಿಕೆಯೇ ಚಕೋರನನ್ನು ಸಂಪತ್ತೇ ಒಬ್ಬನ ದೃಷ್ಟಿಗೆ ಬಿದ್ದರೆ ಸ್ತ್ರೀಯರೇ ಪುರುಷನನ್ನು ಅರಸಿಕÉೂಂಡು ಹೋದರೆ ಆ ಕಮಲ, ಚಂದ್ರಿಕೆ, ಸಂಪತ್ತು, ಸ್ತ್ರೀಯರು ತಿರಸ್ಕರಾರ್ಹರಾಗುತ್ತಾರೆ.
ಪದಾರ್ಥ (ಕ.ಗ.ಪ)
ಚಂದ್ರಿಕೆ - ಬೆಳದಿಂಗಳು
ಗರುವೆಯರು - ಮಾನ್ಯರಾದ ಸ್ತ್ರೀಯರು
ಮೂಲ ...{Loading}...
ಸರಸಿಜದ ಮಧು ಮಧುಕರನನನು
ಕರಿಸಿದೊಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿಲಕ್ಷ್ಮಿ ಸುಳಿದರೆ ನಯನ ವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ ॥33॥
೦೩೪ ತಿಳುಹಿದೊಡೆ ಸುರ ...{Loading}...
ತಿಳುಹಿದೊಡೆ ಸುರ ಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳ ಕಣಾ ನಿಷ್ಕರುಣಿ ನೀ ಸೌಭಾಗ್ಯ ಗರ್ವದಲಿ
ಬಲುಮೆ ಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನೆಲ್ಲಾ ತಿಳಿಸಿದರೆ, ದೇವಲೋಕದ ಸ್ತ್ರೀಯರು ಅತಿಯಾಗಿ ಹರಟುವವರು ಎಂದು ಹೇಳುತ್ತೀಯಾ. ಮನ್ಮಥನು ದುಷ್ಟ ಹಾಗೂ ನಿರ್ದಯಿ. ನಿನ್ನ ಧೈರ್ಯಶೌರ್ಯಗಳ ಸೌಭಾಗ್ಯಕ್ಕೆ ನಾನು ಸೋತು ಹೋಗಿದ್ದೇನೆ . ಕಾಮಶರಕ್ಕೆ ತುತ್ತಾಗಿ ವಿರಹದುರಿಯಿಂದ ಕಂಗೆಟ್ಟಿದ್ದೇನೆ ಎಂದು ಊರ್ವಶಿ ಹೇಳಿದಳು.
ಪದಾರ್ಥ (ಕ.ಗ.ಪ)
ಗಳಹೆ - ಮಾತನಾಡುವವಳು
ಕಂದೊಳಸುಗೊಳ್ - ಕಂಗೆಡು
ಮೂಲ ...{Loading}...
ತಿಳುಹಿದೊಡೆ ಸುರ ಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳ ಕಣಾ ನಿಷ್ಕರುಣಿ ನೀ ಸೌಭಾಗ್ಯ ಗರ್ವದಲಿ
ಬಲುಮೆ ಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ ॥34॥
೦೩೫ ಕಾಡಲಾಗದು ನಿಮ್ಮೊಡನೆ ...{Loading}...
ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಯಿ ನೀವೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಮ್ಮಾ, ಕಾಡಬೇಡಿ. ನಿಮ್ಮೊಂದಿಗೆ ಜಗಳವಾಡಲಾರೆ. ಮನಸ್ಸಿಗೆ ಧೈರ್ಯವನ್ನು ತಂದುಕೊಂಡರೆ ಹೂಬಾಣ ತಾಗದು. ಇದಕ್ಕೆ ಚಿಂತೆಬೇಡ. ಮಕ್ಕಳನ್ನು ತಾಯಿ ನೋಡಲು ಬಂದರೆ ತಿಳಿದವರು ಅಪಾರ್ಥ ಮಾಡುವುದಿಲ್ಲ. ಇನ್ನು ನೀವು ಹೊರಡಬಹುದು’ ಎಂದ ಅರ್ಜುನ.
ಪದಾರ್ಥ (ಕ.ಗ.ಪ)
ನನೆಯಂಬು - ಹೂವಿನ ಬಾಣ, ಕಾಮ ಬಾಧೆ
ಮೂಲ ...{Loading}...
ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಯಿ ನೀವೆಂದ ॥35॥
೦೩೬ ರೋಷವೀರೆಲೆಯಾಯ್ತು ಲಜ್ಜೆಯ ...{Loading}...
ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲು ವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಊರ್ವಶಿಗೆ ಸಿಟ್ಟು ಉಂಟಾಯಿತು. ನಾಚಿಕೆಯೆಂಬುದು ನಾಶವಾಯ್ತು. ಪಂಥಗಾರಿಕೆ ಚಿಗುರಿತು. ಅನುತಾಪ ಕೆರಳಿತು. ಆಶಾಭಂಗವಾಯ್ತು. ಉಸಿರಿನಲ್ಲಿ ಬಿಸಿ ಹೊರಸೂಸಿತು. ಕಣ್ಣುಗಳು ಕೆಂಪಾದವು.
ಪದಾರ್ಥ (ಕ.ಗ.ಪ)
ಪೈಸರ-ಜಾರು, ಇಲ್ಲವಾಗು
ಕೇಸುರಿ - ಕೆಂಪುರಿ
ಈರೆಲೆಯಾಯ್ತು - ಚಿಗುರಿತು, ಉಂಟಾಯಿತು.
ಮೂಲ ...{Loading}...
ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲು ವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ ॥36॥
೦೩೭ ಸೊಮ್ಪಡಗಿತು ಮುಖೇನ್ದು ...{Loading}...
ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಖಚಂದ್ರನ ಸೊಂಪು ಮಾಯವಾಯ್ತು. ದೇಹ ಮತ್ತೆ ಮತ್ತೆ ಕಂಪಿಸಿತು. ತಣಿದ ತನುವು ಬೆವರಿನಿಂದ ಗಮಗಮಿಸುತ್ತಿತ್ತು. ತಂಪಿನಲ್ಲಿ ಬೆಂಕಿ, ಸಿಹಿಯಲ್ಲಿ ಕಹಿ ಅಮೃತದಲ್ಲಿ ವಿಷ ಉಂಟಾದ ಹಾಗೆ ಕೋಲಳಾದ ಊರ್ವಶಿಯಲ್ಲಿ ರೋಷ ಉಕ್ಕಿತು.
ಮೂಲ ...{Loading}...
ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ ॥37॥
೦೩೮ ಕೆತ್ತಿದವು ತುಟಿ ...{Loading}...
ಕೆತ್ತಿದವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿ ಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತುಟಿ ನಡುಗಿತು. ಗಲ್ಲದ ಮೇಲೆ ಕೈಯಿಟ್ಟು, ಶಿರವನ್ನೇ ತೂಗಿದಳು. ಕಂಗಳ ಧಾರೆಯಲ್ಲಿ ರೋಷ ಎನ್ನುವ ಆಯುಧವನ್ನು ಮಸೆದಳು. ಉದ್ವೇಗಕ್ಕೆ ಒಳಗಾದ ಚಿತ್ತ, ಬುದ್ಧಿ, ಮನಸ್ಸುಗಳು ಅಹಂಕಾರದಿಂದ ಊರ್ವಶಿಯ ಆತ್ಮವನ್ನು ವಂಚಿಸಿದವು.
ಪದಾರ್ಥ (ಕ.ಗ.ಪ)
ಜೊತ್ತಿಸು - ವಂಚಿಸು
ಮೂಲ ...{Loading}...
ಕೆತ್ತಿದವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿ ಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ ॥38॥
೦೩೯ ಎಲವೊ ಭಣ್ಡರ ...{Loading}...
ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿನಾಥ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ ಭಂಡರ ಭಾವ, ಖೂಳರ ನಿಲಯ, ಕೆಡುಕರ ಒಡೆಯ, ಮೋಸಗಾರ, ಮೂರ್ಖ, ದುಷ್ಟರ ಬಂಧು, ಮರುಳ, ನಾನು ಯಾರು ಎಂಬುದನ್ನು ತಿಳಿದುಕೋ. ನೀನು ಯಾರೆಂಬುದನ್ನು ಜಗತ್ತೇ ತಿಳಿದಿದೆ. ನೀಚ ತೊಲಗಾಚೆ, ಎಂದಳು.
ಮೂಲ ...{Loading}...
ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿನಾಥ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ ॥39॥
೦೪೦ ಒಲಿದು ಬನ್ದವರಾವು ...{Loading}...
ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಪ್ರೇಮದಿಂದ ಒಲಿದು ಬಂದವರು, ನಮ್ಮನ್ನು ಒಲಿಸಿ ಕಾಡುವ ಮಿಂಡ ನೀನು. ಇಂದ್ರನ ಸಭೆಯಲ್ಲಿ ನಾವು ಸುಲಭರು, ನೀನು ದುರ್ಲಭನು’ (ಎಂಬ ಭಾವನೆ ನಿನ್ನದು) ‘ಎಲಾ ನಪುಂಸಕನೇ. ನಿನಗೆ ಏಕೆ ಈ ಪುರುಷತ್ವದ ಸೋಗು ? ಹಿಡಿ, ಈ ಶಾಪವನ್ನು’ ಎಂದು ಊರ್ವಶಿ ಕೈಎತ್ತಿದಳು.
ಮೂಲ ...{Loading}...
ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ ॥40॥
೦೪೧ ತುಳುಕಿತದ್ಭುತ ರೋಷ ...{Loading}...
ತುಳುಕಿತದ್ಭುತ ರೋಷ ಸುಯ್ಲಿನ
ಝಳ ಹೊಡೆದು ಮೂಗುತಿಯ ಮುತ್ತಿನ
ಬೆಳಕು ಕುಂದಿತು ಕುಂದಿತಮಳಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರ್ಗಳ ಮಯೂಖದ ಮಣಿಯ ಮುದ್ರಿಕೆ
ಗಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಟ್ಟಿನಿಂದೊಡಗೂಡಿದ ನಿಟ್ಟುಸಿರ ಝಳ ಹೊಡೆದು ಊರ್ವಶಿಯ ಮೂಗುತಿಯ ಮುತ್ತಿನ ಬೆಳಕು ಕಂದಿತು. ಮುಖಕಮಲದ ನಿರ್ಮಲ ಕಾಂತಿ ಕುಂದಿತು. ಅವಳ ಎತ್ತಿದ ಕೈಯಲ್ಲಿರುವ ಬೆರಳಿನ ಮಣಿ ಮುದ್ರಿಕೆಯ ಕಾಂತಿಕಿರಣ ಕೆಂಪಾದ ಉಗುರುಗಳಲ್ಲಿ ಹೊಳೆಯಿತು.
ಪಾಠಾನ್ತರ (ಕ.ಗ.ಪ)
ಸೆಳ್ಳುಗುರೊಳ - ಸೆಳ್ಳುಗುರ್ಗಳ
ಅರಣ್ಯ ಪರ್ವ , ಮೈ.ವಿ.ವಿ.
ಮೂಲ ...{Loading}...
ತುಳುಕಿತದ್ಭುತ ರೋಷ ಸುಯ್ಲಿನ
ಝಳ ಹೊಡೆದು ಮೂಗುತಿಯ ಮುತ್ತಿನ
ಬೆಳಕು ಕುಂದಿತು ಕುಂದಿತಮಳಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರ್ಗಳ ಮಯೂಖದ ಮಣಿಯ ಮುದ್ರಿಕೆ
ಗಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ ॥41॥
೦೪೨ ರಾಹು ತುಡುಕಿದ ...{Loading}...
ರಾಹು ತುಡುಕಿದ ಶಶಿಯೊ ಮೇಣ್ ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತ ಸಿಂಹದ ಗುಹೆಯ ಮೃಗಮದವೊ
ಲೋಹ ಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಹುಗ್ರಸ್ತ ಚಂದ್ರನೋ, ಕಾಳಸರ್ಪದ ಹೆಡೆಯ ಮೇಲಿನ ಮಾಣಿಕ್ಯವೋ, ಸರ್ಪಗಾವಲಿನ ಅಮೃತವೋ, ಸಿಟ್ಟಾದ ಸಿಂಹವಿರುವ ಗುಹೆಯೊಳಗಿನ ಕಸ್ತೂರಿಯೋ, ಖಡ್ಗದ ಅಲಗಿನ ಮೇಲಿರುವ ಮಧುವೋ, ಹಾಲಾಹಲದಿಂದ ಮಾಡಿದ ಕಜ್ಜಾಯವೋ ಎಂಬಂತೆ ಊರ್ವಶಿಯ ರೂಪ ಸುಂದರವಾಗಿದ್ದೂ ಭಯಂಕರವಾಗಿತ್ತು.
ಪದಾರ್ಥ (ಕ.ಗ.ಪ)
ಮೃಗಮದ - ಕಸ್ತೂರಿ
ಲೋಹಧಾರೆ - ಖಡ್ಗದ ಅಲಗು
ಹಲಾಹಳ - ಹಾಲಾಹಲ ವಿಷ
ರೂಹು - ರೂಪು
ಮೂಲ ...{Loading}...
ರಾಹು ತುಡುಕಿದ ಶಶಿಯೊ ಮೇಣ್ ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತ ಸಿಂಹದ ಗುಹೆಯ ಮೃಗಮದವೊ
ಲೋಹ ಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ ॥42॥
೦೪೩ ನರಮೃಗಾಧಮ ನಿಮ್ಮ ...{Loading}...
ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಯೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲಾ ನರಾಧಮ, ನೀನು ಒಂದು ವರುಷ ನಿಮ್ಮ ಭಾರತ ವರ್ಷದ ಭೂಮಿಯಲ್ಲಿ ನಪುಂಸಕನಾಗಿರು. ಹರಿ-ಹರ-ಸುರೇಂದ್ರರಿಗೆ ನೀನು ಮೊರೆಹೊಕ್ಕರೂ ಈ ಶಾಪ ಹುಸಿಯಾಗದು-ಎಂದು ಮುಖವನ್ನು ತಿರುಹಿದಳು.
ಪದಾರ್ಥ (ಕ.ಗ.ಪ)
ನಿರಂತರಾಯದಲಿ - ಸತತವಾಗಿ
ಮೂಲ ...{Loading}...
ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಯೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ ॥43॥
೦೪೪ ಮೂಗನಾದನು ಬಹಳ ...{Loading}...
ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಗರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನನಿಗೆ ಮಾತೇ ಹೊರಡಲಿಲ್ಲ. ಧೈರ್ಯದ ಕವಚ ಕಳಚಿ, ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟು ತಲೆ ತೂಗಿದನು. “ಆಗಲಿ, ಸುರಸ್ತ್ರೀಯರು ನಾಗರಿಕರು. ಅವರೆಲ್ಲಿ ? ಭಾರತ ಭೂಮಿಯ ನಾವೆಲ್ಲಿ ? ಈ ವಿಧಿ ನನಗೆ ಒದಗಿತೇ " ಎಂದುಕೊಂಡನು.
ಪದಾರ್ಥ (ಕ.ಗ.ಪ)
ಬೇಗಡೆ - ಕವಚ, ತೆರೆ, ಹೊರ ಆವರಣ
ಮೂಲ ...{Loading}...
ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಗರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ ॥44॥
೦೪೫ ಸುರಪತಿಗೆ ಸೂಚಿಸಿದೆನೇ ...{Loading}...
ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ವರುಷತನಕ ನಪುಂಸಕದಲಾ
ಚರಿಸ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಂದ್ರನಿಗೆ ಹೇಳಿದೆನೇ? ಅಥವಾ ಊರ್ವಶಿಯನ್ನು ನಾನೇ ಕರೆಸಿಕೊಂಡೆನೇ ? ಇವಳು ಕೊಟ್ಟ ಶಾಪೋಕ್ತಿಯಲ್ಲಿ ನನ್ನ ಅಪರಾಧವೇನು ? ಒಂದು ವರ್ಷದ ತನಕ ನಪುಂಸಕತ್ವವನ್ನು ನಾನು ತಾಳಬಲ್ಲೆನೆ ? ಸಾಕು, ಮರಣವೇ ಒಳಿತು”, ಎಂದುಕೊಂಡನು.
ಪದಾರ್ಥ (ಕ.ಗ.ಪ)
ದೇಹಾಂತರ - ಸಾವು
ಮೂಲ ...{Loading}...
ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ವರುಷತನಕ ನಪುಂಸಕದಲಾ
ಚರಿಸ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ ॥45॥
೦೪೬ ಎಲೆ ವಿಧಾತ್ರ ...{Loading}...
ಎಲೆ ವಿಧಾತ್ರ ಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೇ ವಿಧಿಯೇ ! ಅಪರಾಧವೆಸಗಿದರೆ ಶಿಕ್ಷೆ ಸರಿ. ಆದರೆ ವೇದ ಶಾಸ್ತ್ರಗಳ ಸನ್ಮಾರ್ಗದಲ್ಲಿದ್ದವರಿಗೆ ಶಿಕ್ಷೆಯಾಗಲು ಏನು ಕಾರಣ ? ಅಕಟಾ. ಪುರುಷತ್ವಹೀನನಾಗಿ ನಾನು ಬದುಕಲಾರೆ’ ಎಂದುಕೊಂಡನು.
ಮೂಲ ...{Loading}...
ಎಲೆ ವಿಧಾತ್ರ ಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ ॥46॥
೦೪೭ ತಪವನಾಚರಿಸಿದೊಡೆ ವರ ...{Loading}...
ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾಯೆಂದರಿದು ನಡೆದರೆ ಷಂಡತನವಾಯ್ತು
ತಪವೆರಡು ಸರಿ ಫಲದೊಳಾದುದು
ವಿಪರಿತದ ಗತಿ ಗಹನ ತರವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಪಸ್ಸನ್ನು ಮಾಡಿದುದರಿಂದ ಪಾಶುಪತಾಸ್ತ್ರ ದೊರಕಿತು. ಧರ್ಮವೆ ತಪಸ್ಸೆಂದು ಭಾವಿಸಿ ಹಾಗೆ ನಡೆದುದರಿಂದ ನಪುಂಸಕತ್ವ ಪ್ರಾಪ್ತವಾಯಿತು. ಈ ಎರಡೂ ತಪಸ್ಸುಗಳೇ ಆದರೂ ಫಲ ಮಾತ್ರ ಬೇರೆಯಾಯಿತು. ಇದು ಕರ್ಮವಶದಿಂದ ಆದುದು.” ಎಂದು ತಲೆ ತೂಗಿದನು.
ಮೂಲ ...{Loading}...
ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾಯೆಂದರಿದು ನಡೆದರೆ ಷಂಡತನವಾಯ್ತು
ತಪವೆರಡು ಸರಿ ಫಲದೊಳಾದುದು
ವಿಪರಿತದ ಗತಿ ಗಹನ ತರವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ ॥47॥
೦೪೮ ಶಿವನ ಶರವೆನಗಾಯ್ತು ...{Loading}...
ಶಿವನ ಶರವೆನಗಾಯ್ತು ರಿಪು ಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾ ಮುಡಿಯನೆಂಬೆನು ದುರುಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಶುಪತಾಸ್ತ್ರದಿಂದ ವೈರಿಗಳ ರಕ್ತವನ್ನೇ ಹರಿಸುತ್ತೇನೆ ಮಡದಿಯಾದ ದ್ರೌಪದಿಗೆ ಮುಡಿಕಟ್ಟಿಕೋ ಎನ್ನುತ್ತೇನೆ. ಆದರೆ ಊರ್ವಶಿಯ ಶಾಪವಿಚಾರವನ್ನು ಯಾರಿಗೆ ಹೇಳೋಣ ? ತರುಣೀಮಣಿಯಾದ ದ್ರೌಪದಿಗೆ ಈ ಮಾತು ರುಚಿಸೀತೇ ? ಹಾ ಎಂದು ನಿಟ್ಟುಸಿರುಬಿಟ್ಟನು.
ಪದಾರ್ಥ (ಕ.ಗ.ಪ)
ರಾಟಳ - ರಾಟೆ
ಬೂತುಗೆಡಹು - ತುಚ್ಛವಾಗಿ ಮಾತನಾಡು
ಮೂಲ ...{Loading}...
ಶಿವನ ಶರವೆನಗಾಯ್ತು ರಿಪು ಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾ ಮುಡಿಯನೆಂಬೆನು ದುರುಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ ॥48॥
೦೪೯ ಅರಸ ಕೇಳೈ ...{Loading}...
ಅರಸ ಕೇಳೈ ಚಿತ್ರಸೇನನ
ಕರೆಸಿಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಪಾರ್ಥನ ದುರುಳತನವನ್ನು ಊರ್ವಶಿಯು ಚಿತ್ರಸೇನನಿಗೆ ವಿವರಿಸಿದಳು. ಅವನಾದರೋ ಆಕೆಯನ್ನು ಸಮಾಧಾನಪಡಿಸಿ, ಅವರಿಬ್ಬರ ಕಲಹವನ್ನು ಇಂದ್ರನಿಗೆ ಸುರಪಾಲನಿಗೆ ತಿಳಿಸಿದನು. ಆ ಕೂಡಲೆ, ದೇವೇಂದ್ರನು ಅರ್ಜುನನ ಅರಮನೆಗೆ ಬಂದನು.
ಮೂಲ ...{Loading}...
ಅರಸ ಕೇಳೈ ಚಿತ್ರಸೇನನ
ಕರೆಸಿಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ ॥49॥
೦೫೦ ಮಗನಪ್ಪಿದನೆನ್ನ ತನ್ದೆಗೆ ...{Loading}...
ಮಗನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಗಡಿನ್ನರಸಂಗಿದೆತ್ತಣ ದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳೊಲದ್ದುದು ನಿಜ ಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನನ್ನು ಆಲಿಂಗಿಸಿ, ಎನ್ನ ಕಂದನಿಗೆ ದುಃಖವೇಕೆ, ಎನ್ನ ಮುದ್ದು ಆನೆಗೆ ತಳಮಳವೇಕೆ, ಎನ್ನ ರಾಜನಿಗೆ ದುಮ್ಮಾನವೇಕೆ, ಮುಖದ ಗ್ಲಾನಿ, ಕಣ್ಣಲ್ಲಿ ಅಶ್ರುಬಿಂದು ಇವುಗಳಿಂದ ನಿನಗೆ ಮಾತೇ ಬಾರದಲ್ಲಾ ? ಏನಿದು ವಿಚಿತ್ರ ? ಎಂದು ದೇವೇಂದ್ರ ಕೇಳಿದನು.
ಪದಾರ್ಥ (ಕ.ಗ.ಪ)
ಹಳಹಳಿಕೆ - ತಳಮಳ
ಮೂಲ ...{Loading}...
ಮಗನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಗಡಿನ್ನರಸಂಗಿದೆತ್ತಣ ದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳೊಲದ್ದುದು ನಿಜ ಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ ॥50॥
೦೫೧ ನುಡಿಸೆ ತಲೆವಾಗಿದನು ...{Loading}...
ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಮ್ಮೇರಿದಂತೆವೆ
ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ
ಬಿಡು ಮನೋಗ್ಲಾನಿಯನು ಸತಿ ಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲೇನುಂಟು ಗುಣವೆನ್ನಾಣೆ ಹೇಳೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ತಲೆಬಾಗಿ ನಾಚಿಕೆಯಿಂದ ನಿಂತಿರಲು, ಇಂದ್ರನು ಅವನನ್ನು ಮತ್ತೆ ಆಲಿಂಗಿಸಿ ಮುಖವನ್ನೆತ್ತಿ ಮುಂಡಾಡಿ ‘ಮಗುವೇ, ಮನಸ್ಸಿನ ವ್ಯಥೆಯನ್ನು ಬಿಡು, ಊರ್ವಶಿಯ ಬಿರುನುಡಿಯನ್ನು ನನಗಾಗಿ ಸೈರಿಸು. ಹೆಂಗಸರ ಮಾತಿನಲ್ಲಿ ಏನಿದೆ ? - ಎಂದನು.
ಮೂಲ ...{Loading}...
ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಮ್ಮೇರಿದಂತೆವೆ
ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ
ಬಿಡು ಮನೋಗ್ಲಾನಿಯನು ಸತಿ ಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲೇನುಂಟು ಗುಣವೆನ್ನಾಣೆ ಹೇಳೆಂದ ॥51॥
೦೫೨ ಎಲೆ ಕಿರೀಟಿ ...{Loading}...
ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣ
ಹಳುವದಲಿ ಹನ್ನೆರಡು ವರುಷದ
ತಲಹಿನಜ್ಞಾತದಲಿ ವರುಷವ
ಕಳೆವಡಿದು ಸಾಧನವೆಯಾಯ್ತು ಶಿಖಂಡಿತನವೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೈ ಪಾರ್ಥ, ವೃಥಾ ಚಿಂತಿಸದಿರು. ಊರ್ವಶಿಯ ಶಾಪವು ನಿನಗೆ ಉಪಕಾರವೇ ಆಗಿ ಪರಿಣಮಿಸಿದೆ. ಹನ್ನೆರಡು ವರ್ಷ ವನವಾಸದ ಬಳಿಕ ಒಂದು ವರ್ಷ ಅಜ್ಞಾತವಾಸ ಮಾಡಬೇಕಾಗಿ ಬಂದಾಗ, ಶಿಖಂಡಿತನವೆ ನಿನಗೆ ಸಾಧನವಾಗುತ್ತದೆ’ ಎಂದನು.
ಪದಾರ್ಥ (ಕ.ಗ.ಪ)
ಹಳುವ - ಕಾಡು
ತಲಹು - ಅಂತ್ಯ , ಕೊನೆ
ಮೂಲ ...{Loading}...
ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣ
ಹಳುವದಲಿ ಹನ್ನೆರಡು ವರುಷದ
ತಲಹಿನಜ್ಞಾತದಲಿ ವರುಷವ
ಕಳೆವಡಿದು ಸಾಧನವೆಯಾಯ್ತು ಶಿಖಂಡಿತನವೆಂದ ॥52॥
೦೫೩ ಖೋಡಿಯಿಲ್ಲೆಲೆ ಮಗನೆ ...{Loading}...
ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನೇ, ಕೆಡುಕೇನೂ ಆಗಿಲ್ಲ. ಚಿಂತಿಸಬೇಡ. ಜಾಣ ವೈರಿಗಳ ದೃಷ್ಟಿಯೆಂಬ ಬಾಣಕ್ಕೆ ಇದು ಜೋಡಾಗಿ ಅಜ್ಞಾತವಾಸದಲ್ಲಿ ನೆರವಿಗೆ ಬರುತ್ತದೆ. ಇದು ಪುಣ್ಯಫಲವೇ ಆಗಿದೆ. ಊರ್ವಶಿಯು ಮಾಡಿದ ಅನ್ಯಾಯವು ನಿನ್ನ ಭಾಷೆಯನ್ನು ಕಾಪಾಡುತ್ತದೆ. ನೀನು ಇದನ್ನು ತಿಳಿಯದ ಅಜ್ಞಾನಿಯಾಗಿರುವೆ’ ಎಂದನು.
ಪದಾರ್ಥ (ಕ.ಗ.ಪ)
ಜಾಣಯ್ಲ-ಜಾಣತನ
ಅಪಕೃತಿ - ಅಪಕಾರ
ಸಾಹಿತ್ಯ - ವಿದ್ವಾಂಸ, ತಿಳುವಳಿಕೆಯಿರುವವನು.
ಮೂಲ ...{Loading}...
ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ ॥53॥
೦೫೪ ಎನ್ದು ಪಾರ್ಥನ ...{Loading}...
ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ
ತಂದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಅರ್ಜುನನನ್ನು ಸಮಾಧಾನಪಡಿಸಿ, ದೇವೇಂದ್ರನು ತನ್ನ ಅರಮನೆಗೆ ಅವನನ್ನು ವಿವಿಧ ವೈಭವಾದಿಗಳಿಂದ ಕರೆತಂದನು. ಅಗ್ನಿ, ವಾಯುವೇ ಮೊದಲಾದವರು ಅರ್ಜುನನಿಗೆ ಮಂತ್ರಾಸ್ತ್ರಗಳನ್ನು ಅನುಗ್ರಹಿಸಿದರು. ಅಮರನಾರಿಯರೆಲ್ಲರೂ ಸೇಸೆಯನ್ನು ತಳಿದು ಅವನಿಗೆ ಜಯಕಾರವನ್ನು ಘೋಷಿಸಿದರು.
ಪದಾರ್ಥ (ಕ.ಗ.ಪ)
ಶಿಖಿ - ಅಗ್ನಿ
ಪವನ - ವಾಯು
ಅಮರಿ - ಅಪ್ಸರೆ
ಮೂಲ ...{Loading}...
ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ
ತಂದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ ॥54॥
೦೫೫ ಸುರಪನರುಹಿದನಸ್ತ್ರ ಶಸ್ತ್ರೋ ...{Loading}...
ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನಮರ ಭುವನದ
ಭರತ ವಿದ್ಯೆಯನರುಹಿಸಿದನಾ ಶಾಸ್ತ್ರವಿಧಿಯಿಂದ
ಸುರರಿಗಲಗಣಸಾದ ದೈತ್ಯರ
ನೊರಸಿದನು ತತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಾಯಣನ ಮೈದುನನ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸ್ತ್ರಗಳ ರಹಸ್ಯವನ್ನು ದೇವೇಂದ್ರನು ಅರ್ಜುನನಿಗೆ ಉಪದೇಶಿಸಿದನು. ಅನಂತರ ಭರತನಾಟ್ಯಶಾಸ್ತ್ರವನ್ನು ಕುರಿತು ಉಪದೇಶ ದೊರಕಿಸಿದನು. ಸುರರಿಗೆ ಪ್ರತಿಸ್ಪರ್ಧಿಗಳಾದ ಕೆಲವು ದೈತ್ಯರನ್ನು ಅರ್ಜುನನು ಕೊಂದನು. ಈ ಕೀರ್ತಿ ಸರ್ವತ್ರ ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಅಲಗಣಸು - ಪ್ರತಿಸ್ಪರ್ಧಿ
ಮೂಲ ...{Loading}...
ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನಮರ ಭುವನದ
ಭರತ ವಿದ್ಯೆಯನರುಹಿಸಿದನಾ ಶಾಸ್ತ್ರವಿಧಿಯಿಂದ
ಸುರರಿಗಲಗಣಸಾದ ದೈತ್ಯರ
ನೊರಸಿದನು ತತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಾಯಣನ ಮೈದುನನ ॥55॥