೦೦೦ ಸೂ ಕದನ ...{Loading}...
ಸೂ. ಕದನ ಮುಖದಲಿ ಖೋಡಿಯಿಲ್ಲದೆ
ಬೆದರದೊದಗಿದ ನರಗೆ ಕಾರು
ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತ ಶರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧದಲ್ಲಿ ಹೆದರದೆ, ಸರಿಸಮಾನನಾಗಿ ಕಾದಾಡಿದ ಪಾರ್ಥನಿಗೆ ಪರಶಿವನು ಪಾಶುಪತಾಸ್ತ್ರವನ್ನು ಕರುಣಿಸಿದನು.
ಮೂಲ ...{Loading}...
ಸೂ. ಕದನ ಮುಖದಲಿ ಖೋಡಿಯಿಲ್ಲದೆ
ಬೆದರದೊದಗಿದ ನರಗೆ ಕಾರು
ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತ ಶರವ
೦೦೧ ಎಲೆ ಕಿರಾತ ...{Loading}...
ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣನಲಿ
ಗೆಲಿದ ಗರುವನು ನೀನು ನಿನ್ನ
ಗ್ಗಳಿಕೆಗಾವಂಜುವೆವು ನಿನ್ನೀ
ದಳಕೆ ಪತಿಯುಂಟಾದಡಾತನ ಕೊಂಡುಬಾಯೆಂದ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ ಶಬರನೇ, ನನ್ನ ಬಾಣಕ್ಕೆ ತುತ್ತಾಗುವ ಮೃಗವಾಗಬೇಡ. ಕಾಡಿನ ನರಿ ಮೊಲ ಜಿಂಕೆಗಳ ಮೇಲೆ ನಿನ್ನ ಪೌರುಷವನ್ನು ತೋರು. ಅವುಗಳನ್ನು ಗೆದ್ದ ನಿನ್ನ ಹಿರಿಮೆಗೆ ನಾವು ಹೆದರುತ್ತೇವೆ ! ನಿನ್ನ ಕಿರಾತ ಪಡೆಗೆ ಒಡೆಯನೆಂಬುವನಿದ್ದರೆ ಅವನನ್ನು ಕರೆದುಕೊಂಡು ಬಾ’ ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣನಲಿ
ಗೆಲಿದ ಗರುವನು ನೀನು ನಿನ್ನ
ಗ್ಗಳಿಕೆಗಾವಂಜುವೆವು ನಿನ್ನೀ
ದಳಕೆ ಪತಿಯುಂಟಾದಡಾತನ ಕೊಂಡುಬಾಯೆಂದ ॥1॥
೦೦೨ ಎನಲು ನಕ್ಕನು ...{Loading}...
ಎನಲು ನಕ್ಕನು ಶಂಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನಂಗವಣೆಯೇನೆಂದ ॥2॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತನ ಮನೋಬಲವನ್ನೂ, ಭುಜಬಲ ಪರಾಕ್ರಮವನ್ನು ಪಾರ್ವತಿಗೆ ತೋರಿಸುತ್ತಾ ಪರಶಿವನು ನಕ್ಕು, ‘ಎಲಾ ಏನಿದು ಋಷಿಯೆ, ತಪಸ್ಸಿಗೆ ತೊಡಗಿದ ನಿನಗೆ, ಈ ಕತ್ತಿ ಬಿಲ್ಲು ಬಾಣಗಳೇಕೆ ? ನಿನ್ನ ಉದ್ದೇಶವೇನು?’ ಎಂದು ಅರ್ಜುನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ತಮ್ಮಡಿ - ಋಷಿ
ಅಂಗವಣೆ - ಉದ್ದೇಶ
ಮೂಲ ...{Loading}...
ಎನಲು ನಕ್ಕನು ಶಂಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನಂಗವಣೆಯೇನೆಂದ ॥2॥
೦೦೩ ಏಕೆ ನಿನಗೀ ...{Loading}...
ಏಕೆ ನಿನಗೀ ತಪದ ಚಿಂತೆ ವಿ
ವೇಕ ಶಾಸ್ತ್ರ ವಿಚಾರವಿದು ವಿಪಿ
ನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ
ಆಕೆವಾಳರ ಕರೆಸು ನೀನೇ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆಂದು ಕಪಟ ಕಿರಾತನನು ಜರೆದ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವಿವೇಕ ಶಾಸ್ತ್ರ ವಿಚಾರಗಳಿರುವ ಈ ತಪಸ್ಸಿನ ಗೊಡವೆ ನಿನಗೇಕೆ ? ಕಾಡು ಪ್ರಾಣಿಗಳ ಸಂಹಾರ ನಿನ್ನ ವೃತ್ತಿಯಲ್ಲವೆ ? ವೀರಯೋಧರನ್ನು ಕರೆಸು. ಏಕಾಂಗಿಯಾದ ನಿನಗೆ ನನ್ನೊಂದಿಗೆ ಯುದ್ಧ ಸಾಧ್ಯವಿಲ್ಲ. ’ ಎಂದು ಕಿರಾತ ರೂಪಧಾರಿಯಾದ ಶಿವನನ್ನು ಅರ್ಜುನನು ಜರೆದನು.
ಪದಾರ್ಥ (ಕ.ಗ.ಪ)
ಆಕೆವಾಳ - ಶೂರ
ವಿಪಿನೌಕಸ - ಕಾಡುಪ್ರಾಣಿಗಳು
ಹರಿಯದು - ಸಾಧ್ಯವಿಲ್ಲ.
ಮೂಲ ...{Loading}...
ಏಕೆ ನಿನಗೀ ತಪದ ಚಿಂತೆ ವಿ
ವೇಕ ಶಾಸ್ತ್ರ ವಿಚಾರವಿದು ವಿಪಿ
ನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ
ಆಕೆವಾಳರ ಕರೆಸು ನೀನೇ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆಂದು ಕಪಟ ಕಿರಾತನನು ಜರೆದ ॥3॥
೦೦೪ ನೀವು ಬಲ್ಲಿರಿ ...{Loading}...
ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿ ಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆಂದ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮಗೆ ಶಾಸ್ತ್ರಗೊತ್ತು, ನಮಗೆ ಶಸ್ತ್ರ ವಿದ್ಯೆ ಗೊತ್ತು. ಜಾತಿ ಧರ್ಮದಿಂದಾಗಿ ಪಕ್ಷಿ ಪ್ರಾಣಿಗಳ ಬೇಟೆಯನ್ನು ಚೆನ್ನಾಗಿ ಬಲ್ಲೆವು. ಶಕ್ತಿವಂತರಾದ ನಿಮ್ಮೊಂದಿಗೆ ನಾವು ಹೋರಾಡಲಾರೆವು. ನಿಮ್ಮಂತೆ ಶಸ್ತ್ರವಿದ್ಯಾ ಪರಿಣತನಾದ ಋಷಿ ಯಾರಿದ್ದಾರೆ ? ಇದ್ದರೆ ಅವನ ಬಿರುದನ್ನು ಸಮರ್ಥಿಸು ’ ಎಂದು ಕಿರಾತನು ಹೇಳಿದನು.
ಪದಾರ್ಥ (ಕ.ಗ.ಪ)
ತಡೆ - ನಿಲ್ಲು ,ನಿಲ್ಲಿಸು
ಮೂಲ ...{Loading}...
ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿ ಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆಂದ ॥4॥
೦೦೫ ಕಟಕಿಯೇಕೆ ಪುಳಿನ್ದ ...{Loading}...
ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ವಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳ್ ಎಂದ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಬರನೇ, ಈ ವ್ಯಂಗ್ಯೋಕ್ತಿ ಏಕೆ ? ನಾವು ಅತಿಶಯ ತಪಸ್ವಿಗಳೆಂಬುದು ಸ್ಪಷ್ಟ. ಅದರಲ್ಲಿ ತಪ್ಪೇನು? ಅದನ್ನು ನಿನ್ನಲ್ಲಿ ಹೇಳಿ ಏನು ಪ್ರಯೋಜನ ? ಜಟೆ ಮೃಗ ಚರ್ಮ, ಭಸ್ಮಗಳೊಂದಿಗೆ ಬಿಲ್ಲು ಬಾಣ ಖಡ್ಗಗಳನ್ನು ಹಿಡಿದ ಪರಶಿವನಿದ್ದಾನೆ. ನಾವು ಅವನ ಶಿಷ್ಯರು’ ಎಂದು ಪಾರ್ಥನು ಹೇಳಿದನು.
ಪದಾರ್ಥ (ಕ.ಗ.ಪ)
ಉಬ್ಬಟೆ - ಅತಿಶಯ, ಅಸಾಮಾನ್ಯ
ವಿಸ್ಫುಟ - ಸ್ಪಷ್ಟ
ಧೂರ್ಜಟಿ - ಈಶ್ವರ
ಮೂಲ ...{Loading}...
ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ವಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ ॥5॥
೦೦೬ ಲೋಕ ಶಿಕ್ಷಕರಲ್ಲಲೇ ...{Loading}...
ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತ ವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದನೀತನ ಸೈರಣೆಯ ಮನವ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಲೋಕ ಶಿಕ್ಷಕರಲ್ಲವೇ? ನಮಗೆ ನಿಮ್ಮ ತಪಸ್ಸಿನ ಚಿಂತೆಯಾದರೂ ಏಕೆ ? ಪರಶಿವನೇ ಅಡ್ಡ ಬಂದರೂ ನಮ್ಮ ಪ್ರತಿಜ್ಞೆಯನ್ನು ನಾವು ಬಿಡುವುದಿಲ್ಲ. ( ಹಂದಿಯ ದೇಹದಲ್ಲಿ ನೆಟ್ಟಿರುವ) ಈ ಬಾಣವು ನಮ್ಮದು’ ಎಂದು ಮರದ ನೆರಳಲ್ಲಿ ನಿಂತು ಶಬರನು ನುಡಿಯಲು ಪಾರ್ಥನು ತಾಳ್ಮೆಗೆಟ್ಟನು.
ಪದಾರ್ಥ (ಕ.ಗ.ಪ)
ಕಳಂಬ - ಬಾಣ
ವಾಸಿ - ಪ್ರತಿಜ್ಞೆ
ವನೌಕಃ - ಕಾಡಿನ ಮg
ಪಿನಾಕಿ - ಈಶ್ವರ
ಮೂಲ ...{Loading}...
ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತ ವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದನೀತನ ಸೈರಣೆಯ ಮನವ ॥6॥
೦೦೭ ಮಸಗಿದನು ನಿಮ್ಮಾತನುಗಿದೆ ...{Loading}...
ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದ ಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕಾರ್ಬೊಗೆಗಳಾಲಿಯ
ಬಿಸುಗುದಿಯ ಬಲು ಕೆಂಡವಂಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊಂಡ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಡೆದೆಬ್ಬಿಸಿದ ಹುಲಿಯೋ, ಗಾಯಗೊಂಡ ಹಂದಿಯೋ, ಹಸಿದ ಹಾವೋ, ಕಾದ ಕಬ್ಬಿಣದ ಕಿಡಿಯೋ ಎಂಬಂತೆ ಸಿಡಿದೆದ್ದ ಪಾರ್ಥನ ಉಸಿರಿನಲ್ಲಿ ಕಾರುವ ಹೊಗೆ, ಕಣ್ಣಲ್ಲಿ ಕಾದು ಕುದಿಯುವ ಕೆಂಡ, ಹೊಸದಾಗಿ ಹರಿತಮಾಡಿದ ಬಾಣದ ಕಿಡಿಗಳು ಝಳಪಿಸಲು ನಿಮ್ಮ ಅರ್ಜುನನು ಕೋಪಗೊಂಡ. ಎಂದು ಜನಮೇಜಯನಿಗೆ ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಕಟ್ಟುಕ್ಕು - ಗಟ್ಟಿಯಾದ ಕಬ್ಬಿಣ
ಭುಜಗ - ಹಾವು
ಛಡಾಳಿಕೆ - ಉಗ್ರತೆ, ರಭಸ
ಕಾರ್ಬೊಗೆ ಕಪ್ಪು ಹೊಗೆ
ಮೂಲ ...{Loading}...
ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದ ಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕಾರ್ಬೊಗೆಗಳಾಲಿಯ
ಬಿಸುಗುದಿಯ ಬಲು ಕೆಂಡವಂಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊಂಡ ॥7॥
೦೦೮ ಆದಡಿದ ಕೊಳ್ಳೆನುತ ...{Loading}...
ಆದಡಿದ ಕೊಳ್ಳೆನುತ ಕೆನ್ನೆಗೆ
ಸೇದಿಬಿಟ್ಟನು ಸರಳನದು ಹಿಂ
ದಾದುದಾ ಬಳಿ ಸರಳನದ ಹಿಂದಿಕ್ಕಿ ಮತ್ತೊಂದು
ಹೋದುದದ ಹಿಂದಿಕ್ಕಿ ಮತ್ತೊಂ
ದೈದಿತತಿ ವೇಗಾಯ್ಲ ತನದನು
ವಾದಸಾಧ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಾಗಾದರೆ ಇದನ್ನು ತೆಗೆದುಕೊ ’ ಎಂದು ಆಕರ್ಣಾಂತವಾಗಿ ಎಳೆದು ಬಾಣವೊಂದನ್ನು ಪ್ರಯೋಗಿಸಿದನು. ಅದನ್ನು ಹಿಂದಿಕ್ಕುವಂತೆ ಹೆಚ್ಚು ಹೆಚ್ಚು ವೇಗವಾಗಿ ಮತ್ತೆ ಬಾಣಗಳನ್ನು ಬಿಟ್ಟನು. ಹೇಳಲು ಸಾಧ್ಯವಾಗದ ವೇಗದಲ್ಲಿ ಬಾಣಗಳು ಶಿವನನ್ನು ಮುತ್ತಿದವು.
ಪದಾರ್ಥ (ಕ.ಗ.ಪ)
ವೇಗಾಯ್ಲತನ - ಬೇಗ
ಸೂಟಿ - ಬೇಗ, ಚುರುಕು
ಮೂಲ ...{Loading}...
ಆದಡಿದ ಕೊಳ್ಳೆನುತ ಕೆನ್ನೆಗೆ
ಸೇದಿಬಿಟ್ಟನು ಸರಳನದು ಹಿಂ
ದಾದುದಾ ಬಳಿ ಸರಳನದ ಹಿಂದಿಕ್ಕಿ ಮತ್ತೊಂದು
ಹೋದುದದ ಹಿಂದಿಕ್ಕಿ ಮತ್ತೊಂ
ದೈದಿತತಿ ವೇಗಾಯ್ಲ ತನದನು
ವಾದಸಾಧ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ ॥8॥
೦೦೯ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಶರದಭಿ
ಮಾನ ದೇವತೆಯುಂಟಲಾ ಹರಿ
ಸೂನುವರಿಯದಡಂಬೆಯರಿಯಳೆ ಚಂಡಿಕಾದೇವಿ
ಭಾನುಮಂಡಳದಂಧಕಾರದ
ವೈನತೇಯನ ಭುಜಗತತಿಯ ಸ
ಮಾನಧರ್ಮವ ಕಂಡೆನೀಶನೊಳರ್ಜುನಾಸ್ತ್ರದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸ, ಏನನ್ನು ಹೇಳಲಿ ? ಅರ್ಜುನನಗೆ ಅರ್ಜುನನಿಗೆ ತಿಳಿಯದೇ ಹೋದರೂ ಬಾಣದ ಅಭಿಮಾನದೇವತೆಯಾದ ಪಾರ್ವತಿಗೆ ತಿಳಿಯುವುದಿಲ್ಲವೆ ? ಈಶ್ವರನ ಮತ್ತು ಅರ್ಜುನರ ಬಾಣಪ್ರಯೋಗದಲ್ಲಿ ಸೂರ್ಯ - ಕತ್ತಲು , ಗರುಡ - ಸರ್ಪಸಮೂಹ ಇವರುಗಳ ಸಾಮ್ಯವನ್ನು ಕಂಡೆನು. ’ ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಹರಿಸೂನು - ಇಂದ್ರನ ಮಗ ಅರ್ಜುನ
ವೈನತೇಯ - ಗರುಡ
ಮೂಲ ...{Loading}...
ಏನ ಹೇಳುವೆನರಸ ಶರದಭಿ
ಮಾನ ದೇವತೆಯುಂಟಲಾ ಹರಿ
ಸೂನುವರಿಯದಡಂಬೆಯರಿಯಳೆ ಚಂಡಿಕಾದೇವಿ
ಭಾನುಮಂಡಳದಂಧಕಾರದ
ವೈನತೇಯನ ಭುಜಗತತಿಯ ಸ
ಮಾನಧರ್ಮವ ಕಂಡೆನೀಶನೊಳರ್ಜುನಾಸ್ತ್ರದಲಿ ॥9॥
೦೧೦ ಮತ್ತೆ ಸುರಿದನು ...{Loading}...
ಮತ್ತೆ ಸುರಿದನು ಸರಳ ಮಳೆಯನ
ದೆತ್ತ ನಭ ದೆಸೆಯೆತ್ತ ಧಾರುಣಿ
ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ
ಹೊತ್ತ ಹೊಗರಿನ ಮೊರೆವ ಗರಿಗಳ
ಮುತ್ತುಗಿಡಿಗಳ ಹೊಳೆವ ಧಾರೆಯ
ಮೊತ್ತದಂಬೌಕಿದವು ಮೃತ್ಯುಂಜಯನ ಸಮ್ಮುಖಕೆ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪುನಃ ಬಾಣದ ಮಳೆಯನ್ನೇ ಸುರಿಯುತ್ತಿರಲು ಅಕಾಶ, ದಿಕ್ಕುಗಳು ಭೂಮಿ ಅರ್ಜುನ ಕಿರಾತ ಯಾರೂ ಎಲ್ಲಿದ್ದಾರೆ ಎಂಬುದು ತಿಳಿಯದಂತಾಯಿತು. ಶಕ್ತಿಯುತವಾದ ಆ ಬಾಣಗಳು ಗರಿಗಳಿಂದ ಕೂಡಿ ಸದ್ದುಗೈಯ್ಯುತ್ತಾ ಬಾಣಗಳ ಸಮೂಹ ಮೃತ್ಯುಂಜಯನ ಸಮ್ಮುಖಕ್ಕೆ ನುಗ್ಗಿದವು.
ಪದಾರ್ಥ (ಕ.ಗ.ಪ)
ನಭ - ಆಕಾಶ
ಮುತ್ತುಗಿಡಿ - ಹೊಳೆಯುವ ಕಿಡಿ
ಮೃತ್ಯುಂಜಯ - ಮೃತ್ಯುವನ್ನು ಗೆದ್ದವನು , ಶಿವ
ಮೂಲ ...{Loading}...
ಮತ್ತೆ ಸುರಿದನು ಸರಳ ಮಳೆಯನ
ದೆತ್ತ ನಭ ದೆಸೆಯೆತ್ತ ಧಾರುಣಿ
ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ
ಹೊತ್ತ ಹೊಗರಿನ ಮೊರೆವ ಗರಿಗಳ
ಮುತ್ತುಗಿಡಿಗಳ ಹೊಳೆವ ಧಾರೆಯ
ಮೊತ್ತದಂಬೌಕಿದವು ಮೃತ್ಯುಂಜಯನ ಸಮ್ಮುಖಕೆ ॥10॥
೦೧೧ ಮಞ್ಜು ಮುಸುಕಿದೊಡೇನು ...{Loading}...
ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ವಡಬಶಿಖಿ ನನೆವುದೆ ತುಷಾರದಲಿ
ಕಂಜ ನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಜುವಳೆಯಲಿ ಜಾಹ್ನವೀಧರ ಜಾರುವನೆಯೆಂದ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಮ ಮುಸುಕಿದರೆ ಪರ್ವತವು ಹೆದರುತ್ತದೆಯೆ ? ಹಾಲಾಹಲವು ನೊಣದಿಂದ ನಾಶವಾಗುವುದೇ ? ವಡಬಾನಲವು ತುಷಾರದ ಹನಿಯಲ್ಲಿ ನೆನೆಯುತ್ತದೆಯೆ ? ಆನೆಯನ್ನು ನೈದಿಲೆಯ ನಾಳದಿಂದ ಕಟ್ಟಲಾದೀತೆ ? ಅರ್ಜುನನ ಬಾಣಗಳೆಂಬ ತುಂತುರು ಮಳೆಯಲ್ಲಿ ಗಂಗಾಧರನು ಜಾರಿ ಬೀಳುತ್ತಾನೆಯೇ ? ಎಂದು ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ಕಂಜನಾಳ - ನೈದಿಲೆಯ ನಾಳ
ಕುಂಜರ - ಆನೆ
ಜುಂಜುವಳೆ - ತುಂತುರುಮಳೆ
ಪಾಠಾನ್ತರ (ಕ.ಗ.ಪ)
ಜುಂಜುವೊ¼ - ಜುಂಜುವ¼
ಕುಮಾರವ್ಯಾಸ ಭಾರತ ಸಂಗ್ರಹ : ಎಂ.ವಿ.ಸೀ
ಪ್ರಕಾಶನ : ಬಿ ಎಂ ಶ್ರೀ ಪ್ರತಿಷ್ಠಾನ, ಬೆಂಗಳೂರು
ಮೂಲ ...{Loading}...
ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ವಡಬಶಿಖಿ ನನೆವುದೆ ತುಷಾರದಲಿ
ಕಂಜ ನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಜುವಳೆಯಲಿ ಜಾಹ್ನವೀಧರ ಜಾರುವನೆಯೆಂದ ॥11॥
೦೧೨ ಕೆರಳಿದನು ಹೇರಮ್ಬ ...{Loading}...
ಕೆರಳಿದನು ಹೇರಂಬ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರವೀರಭದ್ರಾದ್ಯಖಿಳ ಭೂತಗಣ
ಹರನು ಕಂಡನಿದೇನಿದೆನಗ
ಚ್ಚರಿ ಧನಂಜಯನೆಮಗೆ ನೂರ್ಮಡಿ
ಕರಹಿತವ ನಿಮ್ಮಿಂದ ನೀವ್ ಗಜಬಜಿಸಬೇಡೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಣಪತಿಯು ಕೆರಳಿದನು. ಸುಬ್ರಹ್ಮಣ್ಯ ಗಟ್ಟಿಯಾಗಿ ಕೂಗಿದನು. ವೀರಭದ್ರನೇ ಮೊದಲಾದ ಭೂತಗಣಗಳು ರೋಷದಿಂದ ಸುತ್ತುವರಿದರು. ಇದನ್ನು ಶಿವ ಕಂಡನು. ಇದೇನು ನಿಮ್ಮ ವರ್ತನೆ. ನಮಗೆ ಆಶ್ಚರ್ಯವಾಗಿದೆ. ಅರ್ಜುನನು ನಮಗೆ ( ನಿಮಗಿಂತ) ನೂರುಪಟ್ಟು ಆತ್ಮೀಯನಾಗಿದ್ದಾನೆ. ನಿಮ್ಮಲ್ಲಿ ಗಜಬಜಿಸಬೇಡಿ.
ಪದಾರ್ಥ (ಕ.ಗ.ಪ)
ಹೇರಂಬ - ಗಣಪತಿ
ಗುಹ - ಷಣ್ಮುಖ
ಮೂಲ ...{Loading}...
ಕೆರಳಿದನು ಹೇರಂಬ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರವೀರಭದ್ರಾದ್ಯಖಿಳ ಭೂತಗಣ
ಹರನು ಕಂಡನಿದೇನಿದೆನಗ
ಚ್ಚರಿ ಧನಂಜಯನೆಮಗೆ ನೂರ್ಮಡಿ
ಕರಹಿತವ ನಿಮ್ಮಿಂದ ನೀವ್ ಗಜಬಜಿಸಬೇಡೆಂದ ॥12॥
೦೧೩ ಎನುತ ಕೊಣ್ಡನು ...{Loading}...
ಎನುತ ಕೊಂಡನು ಧನುವನಾ ಪಾ
ರ್ಥನ ಶರೌಘವನೆಚ್ಚಡೀಶನ
ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು
ಕನಲಿ ಕಿವಿವರೆಗುಗಿದು ಫಡ ಹೋ
ಗೆನುತ ಮಗುಳೆಚ್ಚನು ಧನಂಜಯ
ನನಿತು ಶರವನು ಕಡಿದು ಮದನವಿರೋಧಿ ಮಗುಳೆಚ್ಚ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ಬಿಲ್ಲನ್ನು ತೆಗೆದು ಶಿವನು ಬಾಣ ಪ್ರಯೋಗಿಸಲು, ಅರ್ಜುನನ ಬಾಣಗಳು ಬಾಡಿಹೋದವು. ಅಷ್ಟರಲ್ಲಿ ಸಿಟ್ಟಿನಿಂದ ಆಕರ್ಣಾಂತವಾಗಿ ಎಳೆದು ಪಾರ್ಥನು ಮತ್ತೆ ಬಾಣಗಳನ್ನು ಬಿಡಲು, ಶಿವನು ಅವುಗಳೆಲ್ಲವನ್ನು ಕಡಿದು ಪುನಃ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಔಘ - ಸಮೂಹ, ಗುಂಪು
ಕನಲು - ಕೋಪಗೊಳ್ಳು
ಮದನವಿರೋಧಿ - ಶಿವ
ಮೂಲ ...{Loading}...
ಎನುತ ಕೊಂಡನು ಧನುವನಾ ಪಾ
ರ್ಥನ ಶರೌಘವನೆಚ್ಚಡೀಶನ
ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು
ಕನಲಿ ಕಿವಿವರೆಗುಗಿದು ಫಡ ಹೋ
ಗೆನುತ ಮಗುಳೆಚ್ಚನು ಧನಂಜಯ
ನನಿತು ಶರವನು ಕಡಿದು ಮದನವಿರೋಧಿ ಮಗುಳೆಚ್ಚ ॥13॥
೦೧೪ ಎಸುಗೆಯೊಳ್ಳಿತು ಶಬರನತಿ ...{Loading}...
ಎಸುಗೆಯೊಳ್ಳಿತು ಶಬರನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ
ಹೊಸ ಮಸೆಯ ಹೊಗರಲಗುಗಳ ದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ಬಾಣದ ಪ್ರಯೋಗದ ರೀತಿ ಚೆನ್ನಾಗಿದೆ. ಕಿರಾತನು ಸಾಹಸಿಯೇ ಸರಿ. ಒಳ್ಳೆಯ ಬಿಲ್ಲಾಳುವೇ ಹೌದು. ನನ್ನೊಂದಿಗೆ ಸರಿಸಮನಾಗಿ ಹೋರಾಡುತ್ತಿದ್ದಾನೆ, ಭಲಾ….’ ಎಂದು ಹೊಸದಾಗಿ ಮಸೆದ ಹರಿತವಾದ ಕೆಂಪುಗರಿಯ ಬಾಣ ಜಾಲವನ್ನೇ ಪಾರ್ಥನು ಸೃಷ್ಟಿಸಿದನು.
ಪದಾರ್ಥ (ಕ.ಗ.ಪ)
ಎಸುಗೆ - ಬಾಣ ಪ್ರಯೋಗ
ಸರಿಬೆಸನು - ಸರಿಸಮನು
ಮೂಲ ...{Loading}...
ಎಸುಗೆಯೊಳ್ಳಿತು ಶಬರನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ
ಹೊಸ ಮಸೆಯ ಹೊಗರಲಗುಗಳ ದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ ॥14॥
೦೧೫ ಈಡಿರಿದವೊನ್ದೊನ್ದರಲೆ ಹೊಗೆ ...{Loading}...
ಈಡಿರಿದವೊಂದೊಂದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾಂಡಿವವನೊದೆದು ಮಹೇಶನಿದಿರಿನಲಿ
ಕಾಡಿದೊಡೆ ಕಾರುಣ್ಯನಿಧಿ ಕೊಂ
ಡಾಡುತಿರ್ದನು ಪಾರ್ಥನಂಬಿನ
ಮೂಡಿಗೆಯ ಸಂವರಣೆ ಸವೆದುದು ಸವೆಯದಾಟೋಪ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರಿಯಿಟ್ಟು ಹೊಡೆದ ಒಂದೊಂದು ಬಾಣಗಳೂ ಹೊಗೆಯುಗುಳಿ ಬೆಂಕಿ ಕಾರುತ್ತಾ ಗಾಂಡೀವವನ್ನು ತಳ್ಳಿ ಶಿವನೆದುರು ವೇಗವಾಗಿ ಓಡಿಬಂದವು. ಹೀಗೆ ಪಾರ್ಥನ ಬಾಣಗಳು ಸವೆದು ಹೋದರೂ ಅವನ ಸಾಹಸ ಸವೆಯದೇ ಇರಲು, ಶಿವನು ಅವನ ಶರಪ್ರಯೋಗ ಕೌಶಲವನ್ನು ಹೊಗಳುತ್ತಿದ್ದನು.
ಪದಾರ್ಥ (ಕ.ಗ.ಪ)
ಈಡಿರಿದ- ಗುರಿಯಿಟ್ಟು ಹೊಡೆದ
ಮೂಲ ...{Loading}...
ಈಡಿರಿದವೊಂದೊಂದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾಂಡಿವವನೊದೆದು ಮಹೇಶನಿದಿರಿನಲಿ
ಕಾಡಿದೊಡೆ ಕಾರುಣ್ಯನಿಧಿ ಕೊಂ
ಡಾಡುತಿರ್ದನು ಪಾರ್ಥನಂಬಿನ
ಮೂಡಿಗೆಯ ಸಂವರಣೆ ಸವೆದುದು ಸವೆಯದಾಟೋಪ ॥15॥
೦೧೬ ಎಲೆ ಕಿರಾತ ...{Loading}...
ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನು ನಮ್ಮ ವಿಲಗದಲಿ
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮಂತ್ರಿಸಿ ದಿವ್ಯ ಬಾಣಾ
ವಳಿಗಳಲಿ ಬಾಲೇಂದುಮೌಳಿಯನೆಚ್ಚನಾ ಪಾರ್ಥ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ ಶಬರನೇ, ಕಿರಾತರಲ್ಲಿ ಶ್ರೇಷ್ಠನೇ ನೀನು. ನನ್ನನ್ನು ವಿರೋಧಿಸಿ ದೇವತೆಗಳಾಗಲೀ ದೈತ್ಯರಾಗಲೀ ನಿಲ್ಲಬಲ್ಲರೆ ? ಈ ಹೋರಾಟದಲ್ಲಿ ಅಂಜಬೇಡ. ಪರಾಕ್ರಮವನ್ನು ತೋರು ಎಂದು ಬಾಣಗಳನ್ನು ಮಂತ್ರಿಸಿ ಪಾರ್ಥನು ಪರಶಿವನಿಗೆ ಹೊಡೆದನು.
ಪದಾರ್ಥ (ಕ.ಗ.ಪ)
ವಿಲಗ- ವಿರೋಧ ,
ಬಾಲೇಂದುಮೌಳಿ -ಈಶ್ವರ
ಮೂಲ ...{Loading}...
ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನು ನಮ್ಮ ವಿಲಗದಲಿ
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮಂತ್ರಿಸಿ ದಿವ್ಯ ಬಾಣಾ
ವಳಿಗಳಲಿ ಬಾಲೇಂದುಮೌಳಿಯನೆಚ್ಚನಾ ಪಾರ್ಥ ॥16॥
೦೧೭ ಏಸು ಮನ್ತ್ರಾಸ್ತ್ರದಲಿ ...{Loading}...
ಏಸು ಮಂತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನುಂಗಿದನು ಮಗು
ಳೇಸು ಕೂರಂಬುಗಳನೆಚ್ಚರೆ ಕಡಿದನಂಬಿನಲಿ
ಈಸು ವೆಗ್ಗಳರಾರೆನಿಪಭಿ
ಜ್ಞಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳ್ ಎಂದ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟು ಮಂತ್ರಾಸ್ತ್ರಗಳನ್ನು ಬಿಟ್ಟರೂ ಶಿವನು ಅವುಗಳನ್ನು ನುಂಗಿದನು. ಎಷ್ಟು ಹರಿತವಾದ ಶರಗಳನ್ನು ಬಿಟ್ಟರೂ ಶಿವನು ಅವುಗಳನ್ನು ಕಡಿದುಹಾಕಿದನು. ಇಂತಹ ಧೀರನಾರೆಂಬ ಯೋಚನೆ ಅರ್ಜುನನಿಗೆ ಬೇಡವೆ; ಕ್ಷತ್ರಿಯರ ಜಾತಿಗೆ ತಾಮಸ ಎಷ್ಟು ಬಲವತ್ತರವಾದುದು ? ಎಂದು ಜನಮೇಜಯನಿಗೆ ವೈಶಂಪಾಯನನು ಹೇಳಿದನು.
ಪದಾರ್ಥ (ಕ.ಗ.ಪ)
ವೆಗ್ಗಳರು - ಶೂರರು
ಏಸು - ಎಷ್ಟು
ಈಸು - ಇಷ್ಟು
ಮೂಲ ...{Loading}...
ಏಸು ಮಂತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನುಂಗಿದನು ಮಗು
ಳೇಸು ಕೂರಂಬುಗಳನೆಚ್ಚರೆ ಕಡಿದನಂಬಿನಲಿ
ಈಸು ವೆಗ್ಗಳರಾರೆನಿಪಭಿ
ಜ್ಞಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳೆಂದ ॥17॥
೦೧೮ ಅನ್ದು ಖಾಣ್ಡವ ...{Loading}...
ಅಂದು ಖಾಂಡವ ವನದ ದಹನದೆ
ಬಂದುದಕ್ಷಯ ಬಾಣವಿದು ತಾ
ನಿಂದು ಬರತುದು ಬಹಳ ಜಲನಿಧಿ ಬತ್ತುವಂದದಲಿ
ಇಂದುಮೌಳಿಯ ಸೇವೆಗಿಂದು ಪು
ಳಿಂದ ಕಂಟಕನಾದನೇ ಹಾ
ಯೆಂದು ಗರ್ಜಿಸಿ ಚಾಪದಿಂದಪ್ಪಳಿಸಿದನು ಶಿವನ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಖಾಂಡವದಹನ ಸಂದರ್ಭದಲ್ಲಿ ಬಂದ ಈ ಅಕ್ಷಯಾಸ್ತ್ರ ಈಗ ದೊಡ್ಡ ಸಮುದ್ರ ಬತ್ತುವಂತೆ ಬತ್ತಿಹೋಯಿತು. ಪರಶಿವನ ತಪಸ್ಸಿಗೆ ಇಂದು ಈ ಕಿರಾತ ಅಡ್ಡಿಯಾದನೆಂದು ಗರ್ಜಿಸಿ, ಬಿಲ್ಲಿನಿಂದಲೇ ಅವನನ್ನು ಅಪ್ಪಳಿಸಿದನು.
ಪದಾರ್ಥ (ಕ.ಗ.ಪ)
ಜಲನಿಧಿ -ಸಮುದ್ರ
ಮೂಲ ...{Loading}...
ಅಂದು ಖಾಂಡವ ವನದ ದಹನದೆ
ಬಂದುದಕ್ಷಯ ಬಾಣವಿದು ತಾ
ನಿಂದು ಬರತುದು ಬಹಳ ಜಲನಿಧಿ ಬತ್ತುವಂದದಲಿ
ಇಂದುಮೌಳಿಯ ಸೇವೆಗಿಂದು ಪು
ಳಿಂದ ಕಂಟಕನಾದನೇ ಹಾ
ಯೆಂದು ಗರ್ಜಿಸಿ ಚಾಪದಿಂದಪ್ಪಳಿಸಿದನು ಶಿವನ ॥18॥
೦೧೯ ಕಳಚಿದನು ದಣ್ಡೆಯಲಿ ...{Loading}...
ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಹೊಡೆತದಿಂದ ಆಗಬಹುದಾದ ಗಾಯವನ್ನು ಶಿವನು ಮಲ್ಲಯುದ್ಧದ ಒಂದು ನೆಗೆತದಿಂದ (ದಂಡೆಯಲಿ) ನಿವಾರಿಸಿಕೊಂಡನು. ಆಗ ಅರ್ಜುನನು ಶಿವನು ಹಿಂಜರಿದನಲ್ಲ ಎಂದು ಮತ್ತೆ ಶಿವನ ಮೇಲೆ ಜರೆದು ರಭಸದಿಂದ ಹೊಯ್ದು ಅಪ್ಪಳಿಸಿದನು. ಅವನು ಬೈಯುತ್ತಿರುವಾಗ, ಶಿವನು ನಸುನಗುತ್ತಾ ಅವನ ಬಿಲ್ಲನ್ನು ಸೆಳೆದುಕೊಂಡನು. ಇದರಿಂದ ಶಿವನು ಪಾರ್ಥನಿಗೆ ಯಶಸ್ಸನ್ನುಂಟುಮಾಡಿದನು. ಇದನ್ನು ಸುರರು ಹೊಗಳಿದರು.
ಪದಾರ್ಥ (ಕ.ಗ.ಪ)
ದಂಡೆ - ಮಲ್ಲಯುದ್ಧ ಮೊದಲಾದವುಗಳಲ್ಲಿ ಬಳಸುವ ಒಂದು ಪಟ್ಟು (ಇಲ್ಲಿ ಶಿವನು ಬಿಲ್ಲಿನ ಹೊಡೆತದಿಂದ ತಪ್ಪಿಸಿಕೊಂಡ ರೀತಿ.)
ಅಳುಕು - ಹಿಂದೆ ಹೋಗು, ಹಿಂದೆ ಸರಿ
ಮೂಲ ...{Loading}...
ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ ॥19॥
೦೨೦ ತಿಳಿವನುಗಿದಡಿಗಿಕ್ಕಿ ಮರವೆಯ ...{Loading}...
ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನಂಜಯನ
ಸೆಳೆದನೊರೆಯಲಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವೆರೆಯ ನೆಲೆವನೆಯ ಪಶುಪತಿಯ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವೇಕವನ್ನು ಸಂಪೂರ್ಣವಾಗಿ ಕಳೆದುಕೊಂಡು ಅಜ್ಞಾನವಶನಾದ ಅರ್ಜುನನ ಮನಸ್ಸು ತಾಮಸದ ಸಮುದ್ರದಲ್ಲಿ ಮುಳುಗಿತು. ಒರೆಯಲ್ಲಿದ್ದ ಖಡ್ಗವನ್ನು ಸೆಳೆದು, ಬಾಲಚಂದ್ರನನ್ನು ಧರಿಸಿದ ಚಿಗುರೆಲೆ ಸಿಕ್ಕಿಸಿಕೊಂಡ ಶಿವನನ್ನು ಬೀಳು ಶಬರಾ ಎನ್ನುತ್ತಾ ಅರ್ಜುನ ಹೊಡೆದನು.
ಪದಾರ್ಥ (ಕ.ಗ.ಪ)
ಅಡಾಯುಧ - ಒಂದು ಬಗೆಯ ಕತ್ತಿ
ತಾಯ್ಮಳಲು - ( ಸಮುದ್ರದ ತಳದ ಮರಳು)
ಎಲೆವರೆ - ಬಾಲಚಂದ್ರ
ಮೂಲ ...{Loading}...
ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನಂಜಯನ
ಸೆಳೆದನೊರೆಯಲಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವೆರೆಯ ನೆಲೆವನೆಯ ಪಶುಪತಿಯ ॥20॥
೦೨೧ ಆಯುಧದ ಬರಿಮುಷ್ಟಿಯುಳಿಯಲ ...{Loading}...
ಆಯುಧದ ಬರಿಮುಷ್ಟಿಯುಳಿಯಲ
ಡಾಯುಧವ ಶಿವ ಕೊಂಡನೀತನ
ಬಾಯ ಹವಣಿನ ತುತ್ತಹುದೆ ತ್ರಿಪುರಾರಿಯೊಡ್ಡವಣೆ
ರಾಯ ಕೇಳೈ ಪಾರ್ಥನುಬ್ಬಟೆ
ಬೀಯದೀಸರ ಮೇಲೆ ಮತ್ತೆ ವಿ
ಡಾಯಿಯಾಯ್ತತಿ ಚಪಲತನದ ವಿವೇಕ ಮಡಮುರಿಯೆ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧವನ್ನು ಶಿವನು ಸೆಳೆದ ಮೇಲೆ, ಅರ್ಜುನನಲ್ಲಿ ಬರಿ ಮುಷ್ಟಿ ಮಾತ್ರ ಉಳಿಯಿತು. ಅರ್ಜುನನ ಸಾಮಥ್ರ್ಯಕ್ಕೆ ಶಿವನು ತುತ್ತಾಗಲು ಸಾಧ್ಯವೆ? ಆದರೆ ಅರ್ಜುನನ ಅಹಂಕಾರ ಅಲ್ಲಿಗೇ ಮುಗಿಯಲಿಲ್ಲ. ಅಷ್ಟರ ನಂತರವೂ ಅವನಲ್ಲಿದ್ದ ವಿವೇಕವು ಹೆಮ್ಮೆಟ್ಟಿತು. ಅತಿ ಚಪಲತನದ ಆಡಂಬರವೇ ಹೆಚ್ಚಾಯಿತು. ಮತ್ತೆ ಹೋರಾಡಿದನು.
ಮೂಲ ...{Loading}...
ಆಯುಧದ ಬರಿಮುಷ್ಟಿಯುಳಿಯಲ
ಡಾಯುಧವ ಶಿವ ಕೊಂಡನೀತನ
ಬಾಯ ಹವಣಿನ ತುತ್ತಹುದೆ ತ್ರಿಪುರಾರಿಯೊಡ್ಡವಣೆ
ರಾಯ ಕೇಳೈ ಪಾರ್ಥನುಬ್ಬಟೆ
ಬೀಯದೀಸರ ಮೇಲೆ ಮತ್ತೆ ವಿ
ಡಾಯಿಯಾಯ್ತತಿ ಚಪಲತನದ ವಿವೇಕ ಮಡಮುರಿಯೆ ॥21॥
೦೨೨ ಮರನ ಹೆಗ್ಗೊಮ್ಬುಗಳಲಿಟ್ಟನು ...{Loading}...
ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾವನಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳೊಡೆ ಕೊಂಡು ಬಾಯೆಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರಗಳ ಕೊಂಬೆಗಳಿಂದ, ಕಲ್ಲುಗುಂಡುಗಳಿಂದ ಶಿವನನ್ನು ಹೊಡೆದ ಅರ್ಜುನನ ಸಾಹಸವನ್ನು ಏನು ಹೇಳಲಿ? ದಯಾನಿಧಿಯಾದ ಶಿವನು ಅವುಗಳೆಲ್ಲವನ್ನು ಕಡಿದು, ‘ಮರುಳು ಮುನಿಯೇ ಅಸ್ತ್ರಗಳಿದ್ದರೆ ಅವುಗಳನ್ನು ಕೊಂಡುಬಾ ’ ಎಂದನು.
ಪದಾರ್ಥ (ಕ.ಗ.ಪ)
ಹೆಗ್ಗೊಂಬೆ - ಮರದ ದೊಡ್ಡ ಕೊಂಬೆ
ನಾದು - ಹೊಡೆ
ತಮ್ಮಡಿ- ಮುನಿ, ಋಷಿ
ಮೂಲ ...{Loading}...
ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾವನಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳೊಡೆ ಕೊಂಡು ಬಾಯೆಂದ ॥22॥
೦೨೩ ಕೈದುವೇಕೆ ಪುಳಿನ್ದ ...{Loading}...
ಕೈದುವೇಕೆ ಪುಳಿಂದ ನಮ್ಮೊಡ
ನೈದಿಸಾ ಭುಜ ಯುದ್ಧದಲಿ ಬಲು
ಗೈದುವಿದೆಲಾ ಮುಷ್ಟಿ ನಿನಗದುಪಾಯ ಚೊಕ್ಕೆಯವ
ಕಾಯ್ದುಕೊಳ್ಳನುವಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿಂದನು ಪಾರ್ಥನುರೆ ಬೆರಗಾಗೆ ಭೂತಗಣ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲಾ ಕಿರಾತ, ಆಯುಧಗಳೇಕೆ ? ಬಾಹು ಯುದ್ಧವನ್ನೇ ಮಾಡೋಣ. ದೊಡ್ಡ ಆಯುಧವಾದ ಮುಷ್ಟಿ ಇದೆಯಲ್ಲವೇ. ನನ್ನ ಮುಷ್ಟಿಯ ಚೊಕ್ಕೆಯವನ್ನು ಸಹಿಸಿಕೊ. ನಿನ್ನವರು ಬಂದು ನೋಡಲಿ’ ಎಂದು ಭುಜವನ್ನು ತಟ್ಟಿ ಅರ್ಜುನನು ನಿಲ್ಲಲು, ಭೂತಗಣಗಳೆಲ್ಲಾ ಬೆರಗಾದವು.
ಪದಾರ್ಥ (ಕ.ಗ.ಪ)
ಚೊಕ್ಕೆಯ - ಮಲ್ಲಯುದ್ಧದ ಒಂದು ಪಟ್ಟು
ಮೂಲ ...{Loading}...
ಕೈದುವೇಕೆ ಪುಳಿಂದ ನಮ್ಮೊಡ
ನೈದಿಸಾ ಭುಜ ಯುದ್ಧದಲಿ ಬಲು
ಗೈದುವಿದೆಲಾ ಮುಷ್ಟಿ ನಿನಗದುಪಾಯ ಚೊಕ್ಕೆಯವ
ಕಾಯ್ದುಕೊಳ್ಳನುವಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿಂದನು ಪಾರ್ಥನುರೆ ಬೆರಗಾಗೆ ಭೂತಗಣ ॥23॥
೦೨೪ ಕಣ್ಡಿರೇ ದೇವಿಯರು ...{Loading}...
ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆಯೆಂದನು ನಗುತ ಶಶಿಮೌಳಿ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಿಯರು ಅರ್ಜುನನ ಸಾಹಸವನ್ನು ನೋಡಿದಿರೇ ? ನಾಲ್ಕು ತಿಂಗಳ ಕಾಲ ತರಗೆಲೆ ತಿಂದು ಅನಂತರ ಗಾಳಿಯನ್ನು ಮಾತ್ರ ಸೇವಿಸಿ ದೇಹವನ್ನು ದಂಡಿಸಿದ ಈತನು ನನ್ನೊಂದಿಗೆ ಸಮದಂಡಿಯಾಗಿ ಹೋರಾಡಿದನಲ್ಲಾ ?’ ಎಂದು ಪರಶಿವನು ನಗುತ್ತಾ ನುಡಿದನು.
ಮೂಲ ...{Loading}...
ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆಯೆಂದನು ನಗುತ ಶಶಿಮೌಳಿ ॥24॥
೦೨೫ ಹಾರಿತಾಯುಧವೆನ್ದು ಭೀತಿಗೆ ...{Loading}...
ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜಬಾಹು ಶಕ್ತಿಯೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲು ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವೀ… ಆಯುಧ ಹಾರಿ ಹೋಯಿತೆಂದು ಭಯಗೊಳ್ಳಲಿಲ್ಲ. ಇವನ ವೀರರಸವು ಆರಿಹೋಗಲಿಲ್ಲ. ಅವನ ತೋಳ್ಬಲದಲ್ಲಿ ಅನುಮಾನ ಕೊರತೆಗಳಿಲ್ಲ. ಬಲವಾಗಿ ಹೊಡೆದ ಚೆಂಡಿನಂತೆ ಇವನ ಪ್ರತಾಪವು ಪುಟಿದೇಳುತ್ತಿದೆ. ಈಗ ಇವನ ಮಹಾ ಬಾಹುಯುದ್ಧವನ್ನು ನೋಡು. ಎಂದು ಪಾರ್ವತಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಖಯಖೋಡಿ - ಕೊರತೆ
ಹತ - ಹೊಡೆಯಲ್ಪಟ್ಟ
ಕಂತುಕ - ಚೆಂಡು
ಮೂಲ ...{Loading}...
ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜಬಾಹು ಶಕ್ತಿಯೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲು ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ ॥25॥
೦೨೬ ಈತ ನರನೆಮ್ಬವ ...{Loading}...
ಈತ ನರನೆಂಬವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ವೀತಗಳು ಹರಿಯಂಶಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳ್ ಎಂದ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಾಂತೆ ಕೇಳು, ಇವನು ನಾರಾಯಣ ಋಷಿಯ ಸಂಗಾತಿಯಾದ ನರನು. ಇವರು ನಾರಾಯಣ ಅಂಶ ಸಂಭೂತರು. ಮತ್ತು ನನ್ನ ಭಕ್ತನು. ಇವನು ತಪಸ್ಸಿನಲ್ಲಿ ರಾಗದ್ವೇಷಗಳನ್ನು ಗೆದ್ದು ಪಾಶುಪತಾಸ್ತ್ರವೆಂಬ ವಿಖ್ಯಾತ ಶರವನ್ನು ಬೇಡಿದ್ದಾನೆ’ ಎಂದನು.
ಪದಾರ್ಥ (ಕ.ಗ.ಪ)
ವೀತರಾಗದ್ವೇóಷ - ರಾಗ, ದ್ವೇಷಗಳನ್ನು ಗೆದ್ದವನು.
ಪಾಠಾನ್ತರ (ಕ.ಗ.ಪ)
ವೀತರಾಗದ್ವೇಷಿಯಾದನು - ವೀತರಾಗದ್ವೇಷನಾದನು
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ಈತ ನರನೆಂಬವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ವೀತಗಳು ಹರಿಯಂಶಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳೆಂದ ॥26॥
೦೨೭ ಕೊಡುವೆನೀತಙ್ಗೆಮ್ಮ ಶರವನು ...{Loading}...
ಕೊಡುವೆನೀತಂಗೆಮ್ಮ ಶರವನು
ಮಡದಿ ಮತ್ತೆಯು ನೋಡು ಪಾರ್ಥನ
ಕಡುಹನೆನುತಿದಿರಾಂತು ಬಾಹಪ್ಪಳಿಸಿ ಬೊಬ್ಬಿಡುತ
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವನಿಗೆ ನನ್ನ ಶರವನ್ನು ನೀಡುತ್ತೇನೆ. ನೀನು ಅವನ ಆವೇಶವನ್ನು ನೋಡು’ ಎಂದು ಪಾರ್ಥನ ಎದುರಾಗಿ ಬೊಬ್ಬಿಡುತ್ತಾ ಶಿವನು ಬಾಹುಗಳನ್ನು ಚಪ್ಪರಿಸಿದನು. ಇಬ್ಬರೂ ಕೈಗಳನ್ನು ಹಿಡಿದುಕೊಂಡು ಬಹುವಿಧವಾಗಿ ತಮ್ಮ ಕೌಶಲವನ್ನು ತೋರಿಸುತ್ತಾ ಖಾಡಾಖಾಡಿಯಾದ ಯುದ್ಧವನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಕಡುಹು -ಆವೇಶ
ಬಾಹಪ್ಪಳಿಸು - ಕೈತಟ್ಟು
ಹತ್ತಾಹತ್ತಿ - ಬಾಹುಯುದ್ಧ
ಜಡಿತೆ -ವೇಗ
ಚಾಳೈಸಿದರು - ವಿಸ್ತರಿಸು
ಮೂಲ ...{Loading}...
ಕೊಡುವೆನೀತಂಗೆಮ್ಮ ಶರವನು
ಮಡದಿ ಮತ್ತೆಯು ನೋಡು ಪಾರ್ಥನ
ಕಡುಹನೆನುತಿದಿರಾಂತು ಬಾಹಪ್ಪಳಿಸಿ ಬೊಬ್ಬಿಡುತ
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ ॥27॥
೦೨೮ ಬಿಗಿವ ಬಿಡಿಸುವ ...{Loading}...
ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯಲಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆ ಬಿಗಿದು, ಇನ್ನೊಮ್ಮೆ ಬಿಡಿಸಿ, ಬಿಡಿಸಿಕೊಂಡ ತಕ್ಷಣ ಹಿಂದೆ ಬರುವ, ಹಿಡಿದ ವೇಗದಲ್ಲಿ ಮುಂದೆ ನುಗ್ಗುವ , ಕೈಚಳಕವನ್ನು ಸೊಗಸಾಗಿ ತೋರುವ , ನೆಗೆಯುವ, ಕಾಲಿಗೆ ತೊಡರು ಹಾಕುವ ಅಪ್ಪಿ ಬಿಗಿಯಾಗಿ ಹಿಡಿಯುವ, ಹಿಡಿದಾಗ ಬಿಡಿಸಿಕೊಳ್ಳುವ, ತಿವಿಯುವ, ಬಗೆಯುವ , ಬಳಸಿ ಹಿಡಿದುಕೊಳ್ಳುವ, ವಿವಿಧಪಟ್ಟುಗಳನ್ನು ಈ ಲೋಕೈಕವೀರರುಗಳು ತೋರುತ್ತಾ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಲಳಿ - ಕೌಶಲ್ಯ ,
ಚಿಗಿ - ನೆಗೆ,
ತೊಡಚು - ಸಿಕ್ಕಿಸು, ಬಂಧಿಸು
ಬಂದ - ಬಂಧ -ಪಟ್ಟುಗಳು
ಲಗಡಿಸು -ಲಗಡವೆಂಬ ಪಟ್ಟು ಹಾಕು
ಮೂಲ ...{Loading}...
ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯಲಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು ॥28॥
೦೨೯ ಕರವಳಯ ತಳಹತ್ತ ...{Loading}...
ಕರವಳಯ ತಳಹತ್ತ ಡೊಕ್ಕರ
ಶಿರವ ಧಣುಧಣು ವಟ್ಟತಳ ಖೊ
ಪ್ಪರ ದುವಂಗುಲ ಕಂದ ಡೊಕ್ಕರ ತೋರಹತ್ತದಲಿ
ಸರಿಸವಂಕಡ ಬಂಧಪಟ್ಟಸ
ಉರಗ ಬಂಧನ ಬಾಹು ದಣುವಂ
ತರಲಗಡಿಯೆಂಬಿನಿತರಲಿ ತೋರಿದರು ಕೌಶಲವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲವಳಯ, ತಳಹತ್ತ, ಡೊಕ್ಕರ, ವಟ್ಟತಳ, ಖೊಪ್ಪರ, ದುವಂಗುಲ, ಕಂದ ಡೊಕ್ಕರ, ತೋರಹತ್ತ, ಅಂಕಡಬಂಧ, ಪಟ್ಟಸ, ಸರ್ಪಬಂಧ, ಮುಂತಾದ ವಿವಿಧ ಪಟ್ಟುಗಳಿಂದ ಅವರೀರ್ವರೂ ಹೋರಾಡಿದರು.
ಟಿಪ್ಪನೀ (ಕ.ಗ.ಪ)
ಕುಮಾರವ್ಯಾಸ ಭಾರತದಲ್ಲಿ ಕುಸ್ತಿಪಟುಗಳು
ಜನಮನದ ಕವಿ ಕುಮಾರವ್ಯಾಸ ಬಳಸಿರುವ ಕೆಲವು ಕುಸ್ತಿಪಟ್ಟುಗಳ ವಿಶ್ಲೇಷಣೆ ಹೀಗಿದೆ :
ಈ ಪದ್ಯದಲ್ಲಿ ಕುಮಾರವ್ಯಾಸನು 13 ರೀತಿಯ ಕುಸ್ತಿಪಟ್ಟುಗಳನ್ನು ತಿಳಿಸಿದ್ದಾನೆ. ಅವುಗಳ ಕೆಲವು ಪದಗಳ ಅರ್ಥ ಮತ್ತು ಪಟ್ಟುಗಳನ್ನು ಬಳಸುವ ಇಂದಿನ ಕ್ರಮವು ಹೀಗಿದೆ.
ಕುಸ್ತಿ ಪಟ್ಟುಗಳಲ್ಲಿ 2 ಪ್ರಮುಖ ವಿಭಾಗಗಳಿವೆ
- ಕುಸ್ತಿ ಕೆಲಸ = ಪಟ್ಟುಗಳನ್ನು ಹಾಕುವುದು
- ಪ್ರತಿ ಕೆಲಸ = ತೋಡುಗಳು ಅಥವಾ ಪಟ್ಟುಗಳನ್ನು ಬಿಡಿಸಿಕೊಳ್ಳುವುದು
ಕರವಳ(ಲ)ಯ : ಇದರ ಪ್ರಾಚೀನ ಹೆಸರು “ಅರಿರುದ್ರ” ಈಗ ಇದನ್ನು “ಬಾಹರ್ ಟಾಂಗ್” ಎನ್ನುತ್ತಾರೆ. ಚಿತ್ರ ನೋಡಿ 2. ಇದು ಪಟ್ಟುಹಾಕುವ ರೀತಿ. ಈ ಪಟ್ಟನ್ನು ಹಾಕುವುದಕ್ಕೆ ಮುನ್ನ ಸುಪ್ರತೀಕ ಪಟ್ಟು ಹಾಕುವ ರೀತಯು ತಿಳಿದಿರಬೇಕಾಗುತ್ತದೆ (ಚಿತ್ರ 1, 2, 3) ಜನಿವಾರಪಟ್ಟು ಸುಪ್ರತೀಕವನ್ನು ಈಗ “ಟಾಂಗ್ ಅಥವಾ ಪಟ್ಟು” ಎನ್ನುತ್ತಾರೆ. ಇದು ಕುಸ್ತಿಯಲ್ಲಿ ಪ್ರಮುಖವಾದ ದೊಡ್ಡಪಟ್ಟುಗಳ ಸಾಲಗೆ ಸೇರುತ್ತದೆ. ಈ ಪ್ರಕಾರದಲ್ಲಿ ಪ್ರಾವೀಣ್ಯತೆ ಪಡೆದವರ ಕಾಲನ್ನು ಹಿಡಿಯಲು ಎಲ್ಲರೂ ಹಿಂದೆಗೆಯುತ್ತಾರೆ. (ಕುಸ್ತಿ ಕೆಲಸವನ್ನು ಸುಲಭವಾಗಿ ಅರ್ಥೈಸಲು ದ್ವಿತೀಯ ಪುರುಷ ಏಕವಚನವನ್ನು ಬಳಸಲಾಗಿದೆ). ನಿನ್ನ ಎದುರಾಳಿಯು ಎಡಗಾಲನ್ನು ಮುಂದಿಟ್ಟು ನಿಂತಿರುವನೆಂದು ಭಾವಿಸಿವಾ (ಚಿತ್ರ 3) ಈಗ ನೀನು ನಿನ್ನ ಬಲತೋಳನ್ನು ಅವನ ಬಲತೋಳಿಗೆ ಮೇಲುಗಡೆಯಿಂದ ಸುತ್ತಿ, ಅದೇ ಕಾಲದಲ್ಲಿ ನಿನ್ನ ಬೆನ್ನನ್ನು ತಟ್ಟನೆ ಅವನ ಕಡೆಗೆ ತಿರುಗಿಸಿ, ತಿರುಗಿಸುತ್ತಿದ್ದ ಹಾಗೆಯೇ ಮುಂದಿರುವ ಅವನ ಎಡಗಾಲಿನ ಒಳಗಡೆ ನಿನ್ನ ಬಲಗಾಲನ್ನು ಸೇರಿಸಿ ಎಗರಿಸು. ಇದರು ಸರಿಯಾಗಿ ಅಭ್ಯಾಸವಾದರೆ ಕುಸ್ತಿಯ ಅನೇಕ ಸಂದರ್ಭಗಳಲ್ಲಿ ಉಪಯೋಗಿಕ್ಕೆ ಬರುವುದು. ಒಂದುವೇಳೆ ನಿನ್ನ ಎದುರಾಳಿಯು, ನೀನು ಅವನ ಬಲಗೈಯನ್ನು ಹಿಡಿಯಲು ಹೋದಾಗ ಅವನು ಎಡಗೈಯಿಂದ ವಿರೋಧಿಸುವ ಸಂದರ್ಭದಲ್ಲಿ ಅಥವಾ ಅವನು ಜಾಗರೂಕನಾಗಿದ್ದಲ್ಲಿ, ಆಗ ನಿನ್ನ ಬಲಗೈಯನ್ನು ಅವನಿಗೆ ಕಾಣುವಂತೆ ಅವನ ಹಾಯಿಸದೆ, ಅವನ ಭುಜದ ಮೇಲಿರುವ ನಿನ್ನ ಬಲಗೈಯನ್ನು ಅವನ ತಳೆಯ ಮೇಲಿನಿಂದ ಹಾಯಿಸಿ, ಅವನ ತೋಳನ್ನು ಹಿಡಿ. ಎದುರಾಳಿಯು ಬೆನ್ನಹಿಂದೆ ಇರುವಾಗಲೂ ಈ ಕೆಲಸಮಾಡಬಹುದು. ಕರವಲಿಯ ಅಥವಾ ಬಾಹರ್ಟಾಂಗ್ ಎನ್ನುವುದುಇ ಸುಪ್ರತೀಕದ ಸ್ವಲ್ಪ ಬದಲಾವಣೆಯಿಂದ ಮಾಡುವ ಕೆಲಸ. ಸುಪ್ರತೀಕದಲ್ಲಿ ಎದುರಾಳಿಯ ಯಾವ ಕಾಲು ಮುಂದಿದೆಯೋ ಅದರ ಎದುರುಗಡೆಯ ಕೈ ಸುತ್ತಿದರೆ ಬಾಹ್ಯ ಸುಪ್ರತೀಕದಲ್ಲಿ ಎದುರಾಳಿಯು ಯಾವ ಕಾಲು ಮುಂದಿದೆಯೋ, ಆ ಕಡೆಯ ಕೈಯನ್ನು ಸುತ್ತಿ, ಎದುರಾಳಿಯ ಕಡೆಗೆ ಬೆನ್ನು ತಿರುಗಿಸಿ, ನಿನ್ನ ಮುಂದಿನ ಕಾಲಿನಿಂದ, ಎದುರಾಳಿಯ ಮುಂದಿರುವ ಕಾಲನ್ನು ಹೊರಗಡೆಯಿಂದ ಗೆಣ್ಣಿನ ಮೇಲ್ಭಾಗಕ್ಕೆ ಕಟ್ಟಿ ಹೊಡೆಯಬೇಕು. ಈಗ ಎದುರಾಳಿಯು ವಜ್ರದಂತೆ, ಛತ್ರಪತಿ ಅಥವಾ ಮತ್ತಾವ ಕೆಲಸಕ್ಕಾದರೂ, ನಿನ್ನ ಪಕ್ಕದಲ್ಲಿ ಹಾದು ಹೋಗುವಂತೆ ಮಾಡುವಲ್ಲಿ ಬಹಳ ಅನುಕೂಲವಾಗುವುದು.
ತಳಹತ್ತ : ಇದರ ಪ್ರಾಚೀನ ಹೆಸರು ಕೀಚಕ ಬಂಧ
ಡೊಕ್ಕರ : ಇದರ ಹಿಂದಿ ಸಂಸ್ಕೃತ ಹೆಸರು ನೀಲಧ್ವಜ
ವಟ್ಟತಳ : ಇಂದ ಇದನ್ನು ಬೇತಾಳ ಬಂಧ ಎಂದು ಕರೆಯುತ್ತಿದ್ದರು.
ಖೊಪ್ಪರ : ಇದರ ಸಂಸ್ಕೃತನಾಮ ಹಸ್ತಿಮಲ್ಲ. ಈಗ ಇದನ್ನು ದೋಬಿಚಟ್ ಎನ್ನುತ್ತಾರೆ ಚಿತ್ರ : 3ನ್ನು ನೋಡಿ. ಈ ಕೆಲಸವನ್ನು ಎದುರಾಳಿಯು ಅವನ ಕೈಯನ್ನು ನಿನ್ನ ಕತ್ತಿನ ಮೇಲೆ ಹಾಕಿದಾಗ ಆಗಲಿ ಅಥವಾ ಕೈಮಿಲನ ಮಾಡುತ್ತಿರುವಾಗ ಆಗಲೀ ಮಾಡಬಹುದು. ಕೆಲವರು ಎದುರಾಳಿಯು ತಗ್ಗಿದಾಗ ಮಾಡಿದರೆ ಮತ್ತೆ ಕೆಲವರು ಎದುರಾಳಿಯು ಎದೆ ಎತ್ತಿ ನಿಂತಿದ್ದಾಗಲೂ ಮಾಡುವರು. ಇವೆಲ್ಲವೂ ಅವರವರ ಅಭ್ಯಾಸಕ್ಕೆ ಅನುಗುಣವಾಗಿ ಇರುತ್ತದೆ.
ಪ್ರತಿ ಕೆಲಸ : ಪಟ್ಟನ್ನು ಬಿಡಿಸಿಕೊಳ್ಳುವ ವಿವರಣೆ. ಎದುರಾಳಿಯು ಈ ಕೆಲಸ ಪ್ರಯೋಗ ಮಾಡುವುದರೊಳಗೇ ನಿನ್ನ ಎಡಗೈಯನ್ನು ಅವನ ಎರಡು ತೊಡೆಗಳಮಧ್ಯೆ ಪೃಷ್ಠದ ಕೆಳಗಡೆ ತೂರಿಸಿ ಅವನನ್ನು ಮೇಲಕ್ಕೆ ಎತ್ತು.
ಎದುರಾಳಿಯು ನಿನ್ನನ್ನು ಎಗರಿಸುವಷ್ಟರಲ್ಲಿಯೇ, ಅವನ ಬೆನ್ನಿನ ಮೇಲೆ ನಿನ್ನ ಎದೆಯ ಪ್ರದೇಶವನ್ನು ಊರಿ ಚಕ್ರಾಕಾರವಾಗಿ ಅವನ ಎಡಗಡೆಗೆ ತಿರಿಗಿಸಿ ಅವನಿಗೆ ಎದುರಾಗಿ ನಿಲ್ಲು.
ಅವನ ಎಡಸೊಂಟವನ್ನು ನಿನ್ನ ಎಡಗೈಯಿಂದ ಬಲಭಾಗಕ್ಕೆ ತಳ್ಳಿ ನೀನು ಎದುರಾಳಿಯ ಎಡಭಾಗಕ್ಕೆ ಸರಿದು ಹೋಗು. ಹೀಗೆ ಅವನ ಸೊಂಟವನ್ನು ಎಳೆಯುವಾಗ ಅದು ಸರಾಗವಾಗಿ ನಿನ್ನ ಬಲಗಡೆಗೆ ಸರಿದು ಹೋಗಲು ಅನುಕೂಲವಾಗುವಂತೆ ನಿನ್ನ ಕೆಳ ಹೊಟ್ಟೆಯನ್ನು ಹಿಂದಕ್ಕೆ ಸರಿಸು.
ಪಟ್ಟಸ : ಇದು ಒಂದು ಕುಸ್ತಿ ಪಟ್ಟು. ಇದಕ್ಕೆ ‘ಜರಾಸಂಧಿ.” “ಒಂಟಿಕಾಲಿನ ಮೇಲೆ ಬೀಳುವುದು”. ಈ ಪಟ್ಟಿನಲ್ಲಿ ಎದುರಾಳಿಯು ಮುಂದಿಟ್ಟಿರುವ ಕಾಲಿನ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೈಕಾಲಿಗಳನ್ನು ಮುರಿಯುವಂತಹ ಪಟ್ಟೂ ಎಂಬ ಅರ್ಥವೂ ಇದೆ.
‘ಅ’ ಮತ್ತು ‘ಬ’ ಎಂಬ ಇಬ್ಬರು ಕುಸ್ತಿ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ ‘ಬ’ ತನ್ನ ತೂಕ ಮತ್ತು ಶಕ್ತಿಯನ್ನು ಮುಂದಿಟ್ಟಿರುವ ಕಾಲಿನ ಮೇಲೆ ಬಿಟ್ಟಿರುತ್ತಾನೆ. ‘ಅ’ ಮಲ್ಲನು ‘ಬ’ನ ಮುಂದಿಟ್ಟಿರುವ ಕಾಲಿನ ಪಾದದ ಬಳಿ ರಭಸವಾಗಿ ನುಗ್ಗಿ ಗೆಣ್ಣಿನ ಹತ್ತಿರ ಎರಡೂ ಕೈಗಳಿಂದ ಭದ್ರವಾಗಿ ಹಿಡಿಯುತ್ತಾನೆ. ಅದೇ ವೇಗದಲ್ಲಿ ಕಾಲನ್ನು ಎಳೆದು ಕಾಲುಗಳ ಮಧ್ಯೆ ತಟ್ಟನೆ ‘ಬ’ನ ಎದೆಗೆ ತನ್ನ ಭುಜ ತಗಲುವಂತೆ ಮಾಡಿ ಎದುರಾಗಳಿಯ ಕಾಲನ್ನು ತನ್ನ ಎದೆಯವರೆಗೂ ಎತ್ತುತ್ತಾನೆ. ಅತಿ ಶೀಘ್ರದಲ್ಲಿಯೇ ಮತ್ತೊಂದು ಕಾಲಿನಿಂದ ಒಳಭಾಗದಿಂದ ‘ಬ’ನ ಮೊಣಕಾಲಿನ ಹಿಂಭಾಗಕ್ಕೆ ‘ಪಟ್’ಎಂದು ಎಗರಿಸುತ್ತಾನೆ. ಹೀಗೆ ಕುಸ್ತಿ ಕ್ರಿಯೆ ಮುಂದುವರಿಯುತ್ತದೆ.
ಪ್ರತಿ ಕೆಲಸ ಅಥವಾ ಪಟ್ಟನ್ನು ಬಿಡಿಸಿಕೊಳ್ಳುವುದು (ತೋಡ್)
‘ಅ’ ಮತ್ತು ‘ಬ’ನ ಮುಂದಿಟ್ಟ ಕಾಲಿನ ಮೇಲೆ ಪಟ್ಟನ್ನು ಪ್ರಯೋಗ ಮಾಡಲು ನುಗ್ಗುತ್ತಿರುವಾಗ ‘ಬ’ನು ಜಾಗೃತನಾಗಿ ತನ್ನ ಕಾಲನ್ನು ಹಿಂದೆ ಸರಿಸಿ ಬಗ್ಗಿರುವ ‘ಅ’ನನ್ನು ಅದುಮಿ ಹಿಡಿಯುತ್ತಾನೆ (ಮಲ್ಲಪ್ರಪಂಚ ಪು 21 ಎಂ. ನರಸಿಂಹಮೂರ್ತಿ, 2008) ಚಿತ್ರನೋಡಿ
ಉರಗಬಂಧ : ಇದನ್ನು ಉರ್ದುವಿನಲ್ಲಿ ಗಜಾಡೋಲ್ ಎನ್ನುವರು. ನಂದಿಘೋಷ್, ಜಯಭೈರವ, ಜಯಡಿಂಡಿಮ ಅಥವಾ ಮುಲ್ತಾನಿಯಲ್ಲಿಯೂ ಇದರ ಪ್ರಭಾವ (ಛಾಯೆ) ಇದೆ. ಇದೊಂದು ಪಟ್ಟನ್ನು ಬಿಡಿಸಿಕೊಳ್ಳುವ (ಪ್ರತಿ ಕೆಸಲ) ರೀತಿ.
ನಿನ್ನ ಎಡಕೈಯನ್ನು ಹಿಂದಿನಿಂದ ಅವನ ಎಡತೋಡೆಯ ಮೇಲ್ಭಾಗಕ್ಕೆ ಸೇರಿಸಿ ಎದುರಾಳಿಯನ್ನು ಮೇಲಕ್ಕೆ ಎತ್ತು. ಜಯಭೈರವ ಮತ್ತು ಜಯಡಿಂಡಿಮ ಮಲ್ತಾನಿ ಕೆಲಸಗಳಲ್ಲಿ ನಿನ್ನ ಎಡಗೈಯಿಂದ ಎದುರಾಳಿಯ ಬಲಗೈಯನ್ನು ಸುತ್ತಿ ಹಿಡಿದು ನಿನ್ನ ಬಲಗಡೆಗೂ ಮತ್ತು ನಿನ್ನ ಬಲಗೈಯಿಂದ ಎದುರಾಳಿಯ ಎಡಗೈಯನ್ನು ಸುತ್ತಿ ನಿನ್ನ ಎಡಗಡೆಗೇ ಕಲಿ ಹೊಡೆಯುವುದ (ಅಭ್ಯಾಸಮಾಡುವುದು). ಆದರೆ ಸುಪ್ರತೀಕ (ಟಾಂಗ್) ಮಾಡುವಾಗ ಮಾತ್ರ ನೀನು ಸುತ್ತಿಕೊಂಡಿರುವ ಕೈ ಕಡೆಯೇ ಕಲಿಹೊಡೆಯ ಬೇಕು ಈ ವಿಶೇಷ ಬದಲಾವಣೆಯನ್ನು ಗಮನಿಸಬೇಕು.
ಡೊಕ್ಕರ : ಪ್ರತಿಮಲ್ಲನ ಕಾಲುಗಳು, ಕೈಗಳು ಮತ್ತು ತಲೆಯನ್ನು ಕಾಲುಗಳಿಂದ ಸುತ್ತಿ ಒತ್ತುವುದಕ್ಕೆ “ಡೊಕ್ಕರ” (ಡೊಕ್ಕರ?) ಎಂಬ ವಿಜ್ಞಾನವೆಂದು ಹೇಳುತ್ತಾರೆ (ಮನಸೋಲ್ಲಾಸ ಕನ್ನಡ ಅನುವಾದ ದ್ವೀತಿಯ ಸಂಪುಟದ ಪುಟ 487)
ಕರವಲ(ಳ) : ‘ಕರವಲ’ವೆಂಬ ಪಟ್ಟನ್ನು ಪ್ರತಿಮಲ್ಲನು ಹಾಕಿದರೆ, ಹಿಂದಿನಿಂದ ಅವನ ಕಂಕುಳ ಸಂಧಿಯಲ್ಲಿ ಕಾಲಿನ ಬೆರಳನ್ನು ತೂರಿಸಿ ಅವನನ್ನು ಹಿಂದಕ್ಕೆ ತಳ್ಳಬೇಕು. ಹಾಗೆ ಮಾಡಲು ಅಸಾಧ್ಯವಾದರೆ ಅವನ ತೊಡೆಯನ್ನು ತನ್ನ ಎರಡು ತೊಡೆಗಳ ಮಧ್ಯೆ ಸಿಕ್ಕಿಸಿಕೊಂಡು ಅದುಮಿ ಹಿಡಿದು, ಅವನು ಮತ್ತೆ ಏನನ್ನು ಮಾಡದೆ ಆಗದಿರುವ ಹಾಗೆ ನಿಲ್ಲಿಸ ಬೇಕು (ಮಾ,ಲ್ಲಾಸ. ಕ. ಅನು. ದ್ವಿ. ಸಂ. ಪು. 488)
ಕುಮಾರವ್ಯಾಸನು ಉಲ್ಲೇಖಿಸಿರುವ 13 ರೀತಿಯ ಪಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳುವ ರೀತಿಯಲ್ಲಿ ಒಂದೇ ಪದ್ಯದಲ್ಲಿ ಸೆರೆ ಹಿಡಿದಿದ್ದು ಅವುಗಳ ಸರಿಯಾದ ವಿವರ ಕೇವಲ 5 ಪರಿಭಾಷಿಕಶಬ್ದಗಳ ವಿವರಣೆ ಸದ್ಯಕ್ಕೆ ದೊರಕಿದೆ. ಈ ಬಗ್ಗೆ ವಿದ್ವಾಂಸರು ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಂಡರೆ ಆತನ ಕಾಲದ ಮಲ್ಲ ಕ್ರೀಡೆ ಅಥವಾ ಕುಸ್ತಿಯ ವಿವರಗಳು ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತವೆ.
-ಡಾ. ಹರಿಹರ ಶ್ರೀನಿವಾಸ ರಾವ್
ಮೂಲ ...{Loading}...
ಕರವಳಯ ತಳಹತ್ತ ಡೊಕ್ಕರ
ಶಿರವ ಧಣುಧಣು ವಟ್ಟತಳ ಖೊ
ಪ್ಪರ ದುವಂಗುಲ ಕಂದ ಡೊಕ್ಕರ ತೋರಹತ್ತದಲಿ
ಸರಿಸವಂಕಡ ಬಂಧಪಟ್ಟಸ
ಉರಗ ಬಂಧನ ಬಾಹು ದಣುವಂ
ತರಲಗಡಿಯೆಂಬಿನಿತರಲಿ ತೋರಿದರು ಕೌಶಲವ ॥29॥
೦೩೦ ಮುರಿವ ಬಿಡಿಸುವ ...{Loading}...
ಮುರಿವ ಬಿಡಿಸುವ ಢಗೆಯ ಸೈರಿಸಿ
ತೆರಳಿಚುವ ತಳ ಮೇಲುಗಳಲು
ತ್ತರಿಸವೇಳುವ ಬೀಳ್ವ ಹತ್ತುವ ಸುಳಿವ ವಂಚಿಸುವ
ಹೊರಳ್ವ ತನು ಹೋರಟೆಯ ಸತ್ವೋ
ತ್ಕರುಷ ಸರಿಯೆನೆ ಶಂಭು ಶಿಷ್ಯಗೆ
ಪರಿವಿಡಿಯ ತೋರಿಸುವೊಲಿದ್ದನು ಭೂಪ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿಯೇ ಕೇಳು. ತಿರುಚುವ, ಬಿಡಿಸುವ, ಸೆಕೆಯನ್ನು ಸೈರಿಸುವ, ಮೇಲೆ ಕೆಳಗೆ ಹಾರುವ, ಏಳುವ, ಬೀಳುವ, ಸರಿದು ವಂಚಿಸಿ ಹೊರಳುವ, ಶಕ್ತಿಯುತ ಹೋರಾಟದಲ್ಲಿ ಶಿಷ್ಯನಿಗೆ ಪರಶಿವನು ಪಾಠಕ್ರಮವನ್ನು ಹೇಳಿ ಕೊಡುತ್ತಿದ್ದಾನೆ ಎಂಬಂತೆ ಅವರು ಮುಷ್ಟಿಯುದ್ಧವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಮುರಿ - ತಿರುಚು,
ಢಗೆ - ಧಗೆ, ಸೆಕೆ
ಉತ್ತರಿಸು - ಮೇಲಕ್ಕೆ ಎತ್ತು
ಪರಿವಿಡಿ - ಕ್ರಮ
ಮೂಲ ...{Loading}...
ಮುರಿವ ಬಿಡಿಸುವ ಢಗೆಯ ಸೈರಿಸಿ
ತೆರಳಿಚುವ ತಳ ಮೇಲುಗಳಲು
ತ್ತರಿಸವೇಳುವ ಬೀಳ್ವ ಹತ್ತುವ ಸುಳಿವ ವಂಚಿಸುವ
ಹೊರಳ್ವ ತನು ಹೋರಟೆಯ ಸತ್ವೋ
ತ್ಕರುಷ ಸರಿಯೆನೆ ಶಂಭು ಶಿಷ್ಯಗೆ
ಪರಿವಿಡಿಯ ತೋರಿಸುವೊಲಿದ್ದನು ಭೂಪ ಕೇಳೆಂದ ॥30॥
೦೩೧ ಗಾಯವುಣ್ಟೇ ತೋರು ...{Loading}...
ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆನ
ಗಾಯಿತೆನುತ ಪುರಾರಿ ಕಡುಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಗಾಯವಾಯಿತೇ ? ತೋರಿಸು. ಅಡುಪಾಯ ಮತು ಚೊಕ್ಕೆಯ ಮುಂತಾದ ಪಟ್ಟುಗಳನ್ನು ಬಿಡು.’ ಎಂದು ಶಿವನ ಎದುರಿನಲ್ಲಿ ಎದ್ದು ಅವನ ಹೊಟ್ಟೆಗೆ ತಿವಿದನು. ‘ನಿನ್ನ ಹಾಗೆ ನನಗೂ ಆಯಿತು’ ಎಂದು ಶಿವನು ಕೈ ಎತ್ತಿ ಅರ್ಜುನನನ್ನು ನಿಧಾನವಾಗಿ ತಿವಿದನು.
ಪದಾರ್ಥ (ಕ.ಗ.ಪ)
ಪೇರುರ - ದೊಡ್ಡ ಹೊಟ್ಟೆ
ಪುರಾರಿ - ಈಶ್ವರ
ಪೂರಾಯ - ಅತಿಶಯ
ಮೂಲ ...{Loading}...
ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆನ
ಗಾಯಿತೆನುತ ಪುರಾರಿ ಕಡುಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ ॥31॥
೦೩೨ ತರಹರಿಸಿ ನರನಿಕ್ಕಿದನು ...{Loading}...
ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಂತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈರಿಸಿಕೊಂಡು ಅರ್ಜುನನು ಶಿವನ ಎದೆಯೆಡೆಗೆ ಹೊಡೆದರೆ, ಶಿವನು ಪಾರ್ಥನಿಗೆ ಮತ್ತೆ ತಿವಿದನು. ಮರಳಿ ಪಾರ್ಥನು ಅವನಿಗೆ ತಿವಿಯಲು ಅವನು ತಲೆಗೆ ಹೊಡೆದನು. ಹೀಗೆ ಅವರಿಬ್ಬರ ಮುಷ್ಟಿಯುದ್ಧ ಲೋಕವನ್ನೇ ಬೆರಗುಗೊಳಿಸಿತು.
ಪದಾರ್ಥ (ಕ.ಗ.ಪ)
ತರಹರಿಸಿ - ಸೈರಿಸಿಕೊಂಡು
ಮೂಲ ...{Loading}...
ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಂತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ ॥32॥
೦೩೩ ಸುಯ್ಲ ಹೊಗೆಗಳ ...{Loading}...
ಸುಯ್ಲ ಹೊಗೆಗಳ ಹೊದರುದಿವಿಗುಳ
ಮಯ್ಲುಳಿಯ ಮುರಿವುಗಳ ದೃಢ ವೇ
ಗಾಯ್ಲರಿಕ್ಕಿದ ಗಾಯ ಗಾಯಕೆ ಮುಷ್ಟಿ ಕಿಡಿಯೇಳೆ
ಶಯ್ಲಹತಿಗಳ ಭಾರಣೆಯ ಬಲು
ಪೊಯ್ಲಬೆಳೆ ಸಿರಿವಂತರಿವರೆನ
ಲಯ್ಲು ಪೈಲದ ಜರಡುಗಳೆ ನರನಾಥ ಕೇಳ್ ಎಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಿಸಿಯುಸಿರಿನಿಂದ ಬರುತ್ತಿರುವ ಹೊಗೆಗಳ ತಿವಿತಗಳಿಂದ ಉಂಟಾದ ಕಿಡಿಗಳ, ಕ್ಷೀಣವಾದ ಮೈಮಣಿಸುವ ಚಾಯುರ್ಯದ ದೃಢ ಹಾಗೂ ವೇಗವಾದ ಚಲನೆಯುಳ್ಳ ಇವರುಗಳ ಹೊಡೆತದಿಂದ ಕಿಡಿಗಳು ಉಂಟಾಗಲು ಇವರಿಬ್ಬರೂ ಭಯಂಕರವಾಗಿ ಹೊಡೆದಾಡುತ್ತಿದ್ದರು. ಪರಸ್ಪರ ಹೊಡೆದಾಡುತ್ತಿರುವ ಎರಡು ಪರ್ವತಗಳಂತಿದ್ದ ಈ ಮಹಾಶೂರರು ಸಾಮಾನ್ಯರೆ? ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಐಲು ಪೈಲದ ಜರಡುಗಳು - ಸಾಮಾನ್ಯ ಮನುಷ್ಯರು
ಶಯ್ಲ ಹತಿ - ಪರ್ವತಗಳ ಹೊಡೆದಾಟ
ಮೂಲ ...{Loading}...
ಸುಯ್ಲ ಹೊಗೆಗಳ ಹೊದರುದಿವಿಗುಳ
ಮಯ್ಲುಳಿಯ ಮುರಿವುಗಳ ದೃಢ ವೇ
ಗಾಯ್ಲರಿಕ್ಕಿದ ಗಾಯ ಗಾಯಕೆ ಮುಷ್ಟಿ ಕಿಡಿಯೇಳೆ
ಶಯ್ಲಹತಿಗಳ ಭಾರಣೆಯ ಬಲು
ಪೊಯ್ಲಬೆಳೆ ಸಿರಿವಂತರಿವರೆನ
ಲಯ್ಲು ಪೈಲದ ಜರಡುಗಳೆ ನರನಾಥ ಕೇಳೆಂದ ॥33॥
೦೩೪ ತ್ರಾಣವೆನ್ತುಟೊ ಶಿವಶಿವಾ ...{Loading}...
ತ್ರಾಣವೆಂತುಟೊ ಶಿವಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಲಸೂಯವೇತ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂತಹ ಶಕ್ತಿಯಪ್ಪಾ? ಅನೇಕ ದಿವಸಗಳಿಂದ ವಾಯುವೇ ಇವನ ಆಹಾರವಾದರೂ ಜಗಜಟ್ಟಿಯಾಗಿರುವನಲ್ಲಾ? ಇವನಿಗೆ ಸಮಾನರಾದವರನ್ನು ಶಿವನ ಆಣೆಯಾಗಿಯೂ ನಾನು ಕಾಣೆ. ಗುಣಕ್ಕೆ ಮತ್ಸರವುಂಟೆ? ನೋಡು ಶಬರಿ ಎಂದು ನಗುತ್ತಾ ಪರಶಿವನು ಹೇಳಿದನು.
ಪದಾರ್ಥ (ಕ.ಗ.ಪ)
ತ್ರಾಣ - ಶಕ್ತಿ
ಭುವನಪ್ರಾಣ - ಗಾಳಿ
ಮೂಲ ...{Loading}...
ತ್ರಾಣವೆಂತುಟೊ ಶಿವಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಲಸೂಯವೇತ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ ॥34॥
೦೩೫ ನಿನಗೆ ನಾ ...{Loading}...
ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೇಂದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೊ ಕಿರಾತನೊ ನೀನೆನುತ ಮತ್ತೆರಗಿದನು ಶಿವನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನಗೆ ನಾನು ಬೆರಗಾಗಿಬಿಟ್ಟೆ. ನೀನು ನನ್ನನ್ನು ಮೆಚ್ಚಿದೆ. ಸುರಾಸುರರು ನನಗೆ ಸರಿಯಲ್ಲವಾದರೂ ನೀನು ನನ್ನನ್ನು ನಿಯಂತ್ರಿಸಿದೆ. ನೀನು ದೇವೇಂದ್ರನೋ ? ಸುಬ್ರಹ್ಮಣ್ಯನೋ ಹರಿಯೋ, ಹರನೋ ? ಕಿರಾತನೋ ? ಎಂದು ಪುನಃ ಅವನ ಮೇಲೆ ಬಿದ್ದನು.
ಪದಾರ್ಥ (ಕ.ಗ.ಪ)
ಹರತನಿಜ - ಸುಬ್ರಹ್ಮಣ್ಯ
ಹಲ್ಲಣಿಸು - ಜೀನು ಹಾಕು, ನಿಯಂತ್ರಿಸು.
ಮೂಲ ...{Loading}...
ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೇಂದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೊ ಕಿರಾತನೊ ನೀನೆನುತ ಮತ್ತೆರಗಿದನು ಶಿವನ ॥35॥
೦೩೬ ಗಾಯವನು ಮನ್ನಿಸುತ ...{Loading}...
ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯನೊಂದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಏಟಿನ ನೋವನ್ನು ಸಹಿಸಿ ಶಿವನು ಸಂಪೂರ್ಣ ಶಕ್ತಿಯಿಂದ ಕಾಲಿನಿಂದ ಅವನನ್ನು ಮೆಟ್ಟಿ ನಿಲ್ಲಲು, ಅವನ ಬಾಯಲ್ಲಿ ಮೂಗಿನಲ್ಲಿ ರಕ್ತ ಸುರಿಯಿತು. ಅಯ್ಯೊ ನನ್ನ ಏಟಿನಿಂದ ಇವನು ಬಹುವಾಗಿ ನೊಂದನು. ನನ್ನ ಕೋಪವು ಅತಿಯಾಗಲು ಇವನಿಗೆ ಅಪಾಯವುಂಟಾಯಿತು. ಅಕಟಾ ನನ್ನಿಂದ ತಪ್ಪಾಯಿತು" ಎಂದು ಶಿವನು ಮರುಗಿದನು.
ಪದಾರ್ಥ (ಕ.ಗ.ಪ)
ಒಕ್ಕು - ಸುರಿ, ಹರಿ
ಮೂಲ ...{Loading}...
ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯನೊಂದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ ॥36॥
೦೩೭ ಬಿರಿದುದೀತನ ಗರ್ವಗಿರಿ ...{Loading}...
ಬಿರಿದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ಡವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನ ಅಹಂಕಾರ ಮುರಿಯಿತು. ಇವನ ಶಕ್ತಿ ಹ್ರಾಸವಾಯಿತು. ಇಂದ್ರಿಯಗಳು ಸೋತವು. ಮದವಿಳಿಯಿತು. ಬೆವರು ತೊರೆಯಾಗಿ ಹರಿಯಿತು. ಆವೇಶ ಬತ್ತಿಹೋಯಿತು. ಈ ಯುದ್ಧದಲ್ಲಿ ಅರ್ಜುನನು ಬಳಲಿ ಬೆಂಡಾದನು.
ಪದಾರ್ಥ (ಕ.ಗ.ಪ)
ಅಂಗಸ್ವೇದ ಜಲ - ಬೆವರು
ಕಾಹುರತೆ - ಆವೇಶ, ಉದ್ವೇಗ
ಮೂಲ ...{Loading}...
ಬಿರಿದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ಡವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ ॥37॥
೦೩೮ ಆವ ಸುವ್ರತ ...{Loading}...
ಆವ ಸುವ್ರತ ಭಂಗವೋ ಮೇ
ಣಾವ ದೈವ ದ್ರೋಹವೋ ತಾ
ನಾವ ಶಿವಭಕ್ತಾಪರಾಧಿಯೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ಮೇ
ಣಾವ ಧರ್ಮವನಳಿದೆನೋ ತನ
ಗಾವ ಪರಿ ಪರಿಭವಮಹೀರುಹ ಫಲಿತವಾಯ್ತೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾವ ವ್ರತ ಭಂಗ ಮಾಡಿದ್ದೇನೆಯೋ ? ಯಾವ ದೈವಕ್ಕೆ ದ್ರೋಹ ಬಗೆದಿರುವೆನೋ ? ಯಾವ ಶಿವಭಕ್ತರಿಗೆ ಪೂರ್ವಜನ್ಮದಲ್ಲಿ ಅಪರಾಧವೆಸಗಿದ್ದೇನೆಯೋ ? ಯಾವ ಹಿರಿಯರನ್ನು ನಿಂದಿಸಿದ್ದೇನೆಯೋ ? ಯಾವ ಧರ್ಮಕ್ಕೆ ಅಪಚಾರ ಮಾಡಿದ್ದೇನೆಯೋ ? ಸೋಲಿನ ಫಲ ನನಗೆ ದೊರಕಿತಲ್ಲಾ’ ಎಂದನು.
ಪದಾರ್ಥ (ಕ.ಗ.ಪ)
ಪರಿಭವ - ಸೋಲು
ಮಹೀರುಹ - ಮರ
ಮೂಲ ...{Loading}...
ಆವ ಸುವ್ರತ ಭಂಗವೋ ಮೇ
ಣಾವ ದೈವ ದ್ರೋಹವೋ ತಾ
ನಾವ ಶಿವಭಕ್ತಾಪರಾಧಿಯೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ಮೇ
ಣಾವ ಧರ್ಮವನಳಿದೆನೋ ತನ
ಗಾವ ಪರಿ ಪರಿಭವಮಹೀರುಹ ಫಲಿತವಾಯ್ತೆಂದ ॥38॥
೦೩೯ ಈತ ದಿಟಕೆ ...{Loading}...
ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತ ತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆನುತ ಚಿಂತಿಸಿದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವನು ನಿಜವಾಗಿಯೂ ಕಿರಾತನೇ ? ಅಥವಾ ನಾನು ಅರ್ಜುನ ಅಲ್ಲವೇ ? ನಾನು ಪಾರ್ಥನೇ ಹೌದು. ಇವನಂತೂ ಶಬರನಲ್ಲ. ಇವನು ವೇಷ ಮರೆಸಿಕೊಂಡಿರುವವನೋ ಅಥವಾ ಇವನೇ ಅರ್ಜುನನೋ ನಾನಂತೂ ಕುಂತೀ ಕುಮಾರ ಪಾರ್ಥನಲ್ಲ’ ಎಂದು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಪುಳಿಂದ - ಬೇಡ
ನಿಧಾನಿಸು - ವಿಚಾರಿಸು, ಆಲೋಚಿಸು
ಶ್ವೇತತುರಗ - ಅರ್ಜುನ.
ಮೂಲ ...{Loading}...
ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತ ತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆನುತ ಚಿಂತಿಸಿದ ॥39॥
೦೪೦ ಅರಿದನೇ ಶಿವನೆನ್ದು ...{Loading}...
ಅರಿದನೇ ಶಿವನೆಂದು ದೈವದ
ಸರಿಯ ಬಲುಹನು ಕಂಡೊಡೆಯು ದಿಟ
ವರಿಯಬಹುದೆ ರಹಸ್ಯಮಾಯಾ ಗೋಪಿತಾತ್ಮಕನ
ಅರುಹಿಕೊಡವೇ ವೇದ ಶಿರನೆ
ಚ್ಚರಿಸಿ ತನ್ನನಖಂಡ ಚಿನ್ಮಯ
ದರಿವು ತಾನೆಂದಾವನರಿದನು ರಾಯ ಕೇಳ್ ಎಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನನ್ನು ಸಾಕ್ಷಾತ್ ಶಿವನೆಂದು ಅರ್ಜುನನನು ತಿಳಿದುಕೊಂಡನೇ? ಆ ದೈವದ ನಿಜವಾದ ಸಾಮಥ್ರ್ಯ ತನಗೆ ಗೋಚರವಾದರೂ ಅದರ ರಹಸ್ಯವಾದ , ಮಾಯೆ ಕವಿದ, ಆತ್ಮ ಸ್ವರೂಪವನ್ನು ತಿಳಿದುಕೊಳ್ಳುವುದು ಸಾಧ್ಯವೇ? ವೇದಾಂತವು ಇದನ್ನೇ ತಿಳಿಸಿಕೊಟ್ಟರೂ ತಾನು ಅಖಂಡ ಜ್ಞಾನಸ್ವರೂಪನು ಎಂದು ಯಾವನು ತಾನೇ ತಿಳಿಯುತ್ತಾನೆ? ಎಂದು ವೈಶಂಪಾಯನನು ಜನಮೇಜಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಗೋಪಿತಾತ್ಮಕ - ಮಾಯೆಯಿಂದ ಕವಿದ ಆತ್ಮ.
ವೇದಶಿರ - ವೇದಾಂತ
ಮೂಲ ...{Loading}...
ಅರಿದನೇ ಶಿವನೆಂದು ದೈವದ
ಸರಿಯ ಬಲುಹನು ಕಂಡೊಡೆಯು ದಿಟ
ವರಿಯಬಹುದೆ ರಹಸ್ಯಮಾಯಾ ಗೋಪಿತಾತ್ಮಕನ
ಅರುಹಿಕೊಡವೇ ವೇದ ಶಿರನೆ
ಚ್ಚರಿಸಿ ತನ್ನನಖಂಡ ಚಿನ್ಮಯ
ದರಿವು ತಾನೆಂದಾವನರಿದನು ರಾಯ ಕೇಳೆಂದ ॥40॥
೦೪೧ ಹನ್ದಿಯೇತಕೆ ತನಗೆ ...{Loading}...
ಹಂದಿಯೇತಕೆ ತನಗೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದನೇ ಮಾನ್ಯಕನು ನಾವವಮಾನ್ಯರಾದೆವೆಲೆ
ಇಂದುಮೌಳಿಯುಪೇಕ್ಷೆಯೋ ತಾ
ನಿಂದು ಶಿವಪದ ಭಕ್ತಿ ಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಂದಿ ನನಗೆ ಏಕೆ ಬೇಕು ? ಈ ಕಿರತನೊಂದಿಗೆ ಯುದ್ಧವೇಕೆ? ಅವನೇ ವಿಜಯಿಯಾಗಿ ನಾನು ಸೋತು ಹೋದೆನಲ್ಲಾ ! ಪರಶಿವನ ಉಪೇಕ್ಷೆಯಿಂದ ಹೀಗಾಯಿತೇ ? ನನ್ನಲ್ಲಿ ಶಿವಭಕ್ತಿ ಶೂನ್ಯವಾಯಿತೇ ? ನಾನು ದುರದೃಷ್ಟಶಾಲಿಯಲ್ಲವೇ ? ಹಾ’ ಎಂದು ಮರುಗಿದನು.
ಪದಾರ್ಥ (ಕ.ಗ.ಪ)
ಸೆಣಸು - ಯುದ್ಧ
ಮೂಲ ...{Loading}...
ಹಂದಿಯೇತಕೆ ತನಗೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದನೇ ಮಾನ್ಯಕನು ನಾವವಮಾನ್ಯರಾದೆವೆಲೆ
ಇಂದುಮೌಳಿಯುಪೇಕ್ಷೆಯೋ ತಾ
ನಿಂದು ಶಿವಪದ ಭಕ್ತಿ ಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ ॥41॥
೦೪೨ ಏಕೆ ಚಿನ್ತೆ ...{Loading}...
ಏಕೆ ಚಿಂತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ
ಈ ಕಿರಾತನ ಹರಿಬವನು ಬಳಿ
ಕೇಕ ನಿಮಿಷಕೆ ಗೆಲುವೆನೆನುತ ವಿ
ವೇಕಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾಕೆ ಬೇಸರ, ಮನೋವ್ಯಥೆ ಏಕೆ? ನಾನು ಅಜ್ಞಾನಿಯಾದರೆ ಪರಮೇಶ್ವರ ಏನು ಮಾಡುತ್ತಾನೆ ? ಅವನನ್ನೇ ಶರಣು ಹೊಗುತ್ತೇನೆ. ಆ ಮೇಲೆ ಈ ಶಬರನನ್ನು ಒಂದೇ ನಿಮಿಷದಲ್ಲಿ ಗೆಲ್ಲುತ್ತೇನೆ’ ಎಂದು ವಿವೇಕಯುತ ನಿರ್ಧಾರಮಾಡಿದನು.
ಮೂಲ ...{Loading}...
ಏಕೆ ಚಿಂತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ
ಈ ಕಿರಾತನ ಹರಿಬವನು ಬಳಿ
ಕೇಕ ನಿಮಿಷಕೆ ಗೆಲುವೆನೆನುತ ವಿ
ವೇಕಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ ॥42॥
೦೪೩ ಮಣಲ ಲಿಙ್ಗವ ...{Loading}...
ಮಣಲ ಲಿಂಗವ ಮಾಡಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತದಲಿ
ಕಣಗಿಲೆಯ ಬಂದುಗೆಯ ಕಕ್ಕೆಯ
ಸಣಬಸರಿಸದ ಕುಸುಮದಲಿ ರಿಪು
ಗಣ ಭಯಂಕರನರ್ಚಿಸಿದನಂಧಾಸುರಾಂತಕನ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರಳಿನಲ್ಲಿ ಲಿಂಗವನ್ನು ನಿರ್ಮಿಸಿ, ನಿರ್ಗುಣನನ್ನು ಸಗುಣನೆಂದು ಭಾವಿಸಿ, ವಿವಿಧ ಆಗಮೋಕ್ತ ವಿಧಾನಗಳಿಂದ ಪೂಜಿಸಿದನು. ಅಂಧಾಸುರನನ್ನು ಕೊಂದ ಈಶ್ವರನನ್ನು ಕಣಗಿಲೆ, ಬಂದುಗೆ, ಕಕ್ಕೆ, ಸೂಕ್ಷ್ಮವಾದ ಶಿರೀಷ ಮುಂತಾದ ಹೂವುಗಳಿಂದ ಅರ್ಜಿಸಿದನು.
ಪದಾರ್ಥ (ಕ.ಗ.ಪ)
ಬಂದುಗೆ - ಬಂದೂಕ ಪುಷ್ಪ
ಅಂಧಾಸುರಾಂತಕ - ಅಂಧಾಸುರನನ್ನು ಕೊಂದ ಶಿವ
ಪಾಠಾನ್ತರ (ಕ.ಗ.ಪ)
ಸಣಬಸರಿಸz -ಸಣದಸಿರಿಸz
ಕುಮಾರವ್ಯಾಸ ಭಾರತ ಸಂಗ್ರಹ , ಸಂ: ಎಂ. ವಿ.ಸೀ
ಮೂಲ ...{Loading}...
ಮಣಲ ಲಿಂಗವ ಮಾಡಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತದಲಿ
ಕಣಗಿಲೆಯ ಬಂದುಗೆಯ ಕಕ್ಕೆಯ
ಸಣಬಸರಿಸದ ಕುಸುಮದಲಿ ರಿಪು
ಗಣ ಭಯಂಕರನರ್ಚಿಸಿದನಂಧಾಸುರಾಂತಕನ ॥43॥
೦೪೪ ಅಮಲ ಶೈವಸ್ತವವ ...{Loading}...
ಅಮಲ ಶೈವಸ್ತವವ ಹೇಳಿದು
ನಮಿಸಿದನು ಬಲವಂದು ಪುನರಪಿ
ವಿಮಲಮತಿ ಮೈಯಿಕ್ಕಿದನು ನಿಜಭಾವಶುದ್ಧಿಯಲಿ
ಕಮಲಭವ ಸುರವಂದ್ಯ ಗಿರಿಜಾ
ರಮಣ ಭಕ್ತಕುಟುಂಬಿ ದೇವೋ
ತ್ತಮ ತ್ರಿಯಂಬಕ ಪುಷ್ಟಿವರ್ಧನ ಕರುಣಿಸುವುದೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವಸ್ತುತಿಯನ್ನು ಹೇಳುತ್ತಾ, ಶಿವನಿಗೆ ಪ್ರದಕ್ಷಿಣೆ ಬಂದು ಭಕ್ತಿಭಾವದಿಂದ ಸಾಷ್ಟಾಂಗ ನಮಸ್ಕಾರ ಮಾಡಿದನು. ‘ಹೇ ಬ್ರಹ್ಮಾದಿ ವಂದಿತನೇ, ಪಾರ್ವತೀರಮಣನೆ, ಭಕ್ತವತ್ಸಲನೇ, ದೇವೋತ್ತಮನೇ, ಮುಕ್ಕಣ್ಣನೇ, ಪುಷ್ಟಿವರ್ಧನನೇ ಕಾಪಾಡು’ ಎಂದನು.
ಪದಾರ್ಥ (ಕ.ಗ.ಪ)
ಬಲವರು - ಪ್ರದಕ್ಷಿಣೆ ಬರು
ಪುನರಪಿ - ಪುನಃ, ಮತ್ತೆ
ತ್ರಿಯಂಬಕ - ಮುಕ್ಕಣ್ಣ, ಶಿವ
ಟಿಪ್ಪನೀ (ಕ.ಗ.ಪ)
- ‘ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ’ ಎಂಬ ವೇದಮಂತ್ರಾರ್ಥಕ್ಕೆ ಸಮೀಪವಿದೆ.
ಮೂಲ ...{Loading}...
ಅಮಲ ಶೈವಸ್ತವವ ಹೇಳಿದು
ನಮಿಸಿದನು ಬಲವಂದು ಪುನರಪಿ
ವಿಮಲಮತಿ ಮೈಯಿಕ್ಕಿದನು ನಿಜಭಾವಶುದ್ಧಿಯಲಿ
ಕಮಲಭವ ಸುರವಂದ್ಯ ಗಿರಿಜಾ
ರಮಣ ಭಕ್ತಕುಟುಂಬಿ ದೇವೋ
ತ್ತಮ ತ್ರಿಯಂಬಕ ಪುಷ್ಟಿವರ್ಧನ ಕರುಣಿಸುವುದೆಂದ ॥44॥
೦೪೫ ಗೆಲಿದನೆನ್ನನು ಶಬರನೀತನ ...{Loading}...
ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭಂಗಿಸಿತೆನ್ನ ಬಿಂಕದವೊಡೆಯ ನೀನಿರಲು
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯಂಕರ ಭುಜವನೊದರಿಸುತಿತ್ತ ಮುಂದಾದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಿರಾತನು ನನ್ನನ್ನು ಗೆದ್ದಿದ್ದಾನೆ. ಇವನನ್ನು ಗೆಲ್ಲುವ ಶಕ್ತಿಯನ್ನು ನೀಡು. ನನ್ನ ಅಭಿಮಾನದ ದೇವರು ನೀನಿರುವಾಗ ನನಗೆ ಇಂತಹ ಅವಮಾನವೆ ? ಹೆಚ್ಚು ಮಾತೇಕೆ ? ಇವನನ್ನು ಸೋಲಿಸುವ ಶಕ್ತಿಯನ್ನು ಕರುಣಿಸು ಎಂದು ರಿಪುಬಲ ಮಥನನೆನಿಸಿದ ಅರ್ಜುನನು ಭುಜವನ್ನು ಒದರುತ್ತಾ ಮುಂದಾದನು.
ಮೂಲ ...{Loading}...
ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭಂಗಿಸಿತೆನ್ನ ಬಿಂಕದವೊಡೆಯ ನೀನಿರಲು
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯಂಕರ ಭುಜವನೊದರಿಸುತಿತ್ತ ಮುಂದಾದ ॥45॥
೦೪೬ ಕಾಣಬಹುದೋ ಶಬರ ...{Loading}...
ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲಾ ಕಿರಾತನೇ… ನಿನ್ನ ಪ್ರಾಣ ಈಗ ನನ್ನ ಅಧೀನದಲ್ಲಿದೆ. ಪರಶಿವನ ಬಲ ಎನಗಿದೆ. ನಿನ್ನ ಪ್ರಾಣವನ್ನು ಹಿಂಡುತ್ತೇನೆ, ತಲೆಯನ್ನು ಕತ್ತರಿಸುತ್ತೇನೆ. ಇದಕ್ಕೆ ಹಿಂಜರಿದೆನಾದರೆ ಶಿವನಾಣೆ. ಬಾ. ನನ್ನ ಎದುರಿಗೆ ಬಂದು ಯುದ್ಧಕ್ಕೆ ಅನುವಾಗು” ಎಂದು ಕಣ್ಣುಮಿಟುಕಿಸದೆ ನೋಡಿದನು.
ಪದಾರ್ಥ (ಕ.ಗ.ಪ)
ಸ್ಥಾಣು - ಈಶ್ವರ
ಮೂಲ ...{Loading}...
ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ ॥46॥
೦೪೭ ಕಣ್ಡನರ್ಜುನನೀ ಕಿರಾತನ ...{Loading}...
ಕಂಡನರ್ಜುನನೀ ಕಿರಾತನ
ಮಂಡೆಯಲಿ ತಾ ಮಳಲ ಲಿಂಗದ
ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮ ಮಂಜರಿಯ
ಕಂಡನಿತ್ತಲು ಮುರಿದು ಪುನರಪಿ
ಕಂಡನೀ ಶಬರಂಗಿದೆತ್ತಣ
ದಂಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಮಳಲಲಿಂಗದ ಶಿರದ ಮೇಲೆ ತಾನಿಟ್ಟು ಪೂಜಿಸಿದ ವಿವಿಧ ಹೂವುಗಳು ಕಿರಾತನ ತಲೆಯ ಮೇಲಿರುವುದನ್ನು ಅವನು ನೋಡಿದನು. ಮತ್ತೆ ಅವನನ್ನೇ ನೋಡಿ “ಈ ಶಬರನ ವರಸೆಯ ಚಮತ್ಕಾರ ಇದೆಂತಹದು? ಏನಿದು ? ಹಾ” ಎಂದು ಪಾರ್ಥನು ನಿಬ್ಬೆರಗಾದನು.
ಪದಾರ್ಥ (ಕ.ಗ.ಪ)
ದಂಡಿ -ವರಸೆ ( ಚಮತ್ಕಾರಿಕ ವರ್ತನೆ.)
ಮೂಲ ...{Loading}...
ಕಂಡನರ್ಜುನನೀ ಕಿರಾತನ
ಮಂಡೆಯಲಿ ತಾ ಮಳಲ ಲಿಂಗದ
ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮ ಮಂಜರಿಯ
ಕಂಡನಿತ್ತಲು ಮುರಿದು ಪುನರಪಿ
ಕಂಡನೀ ಶಬರಂಗಿದೆತ್ತಣ
ದಂಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ ॥47॥
೦೪೮ ಆಗಲಿದನಾರೈವೆನೆನುತವ ...{Loading}...
ಆಗಲಿದನಾರೈವೆನೆನುತವ
ನಾಗಮೋಕ್ತದಿ ಮತ್ತೆ ಲಿಂಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವಂದು ದಕ್ಷನ
ಯಾಗಹರನೆ ನಮಃಶಿವಾಯೆನುತಿತ್ತ ಮುಂದಾದ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಗಲಿ ವಿಚಾರಿಸಿ ನೋಡುತ್ತೇನೆ.’ ಎಂದು ಲಿಂಗದ ಮೇಲಿರುವ ನಿರ್ಮಾಲ್ಯವನ್ನು ತೆಗೆದಿಟ್ಟು, ಆಗಮೋಕ್ತ ವಿಧಾನದಿಂದ Éಭಕ್ತಿಯಲ್ಲಿ ಬೇರೆ ಹೂಗಳನ್ನು ಅರ್ಪಿಸಿ ಈಶ್ವರನನ್ನು ಪೂಜಿಸಿ, ಪ್ರದಕ್ಷಿಣೆ ಬಂದು, ದಕ್ಷಯಾಗಧ್ವಂಸಿ, ಶಿವನೇ ನಮಸ್ಕಾರ’ ಎಂದು ಈ ಕಡೆಗೆ ಮುಂದಾದನು.
ಪದಾರ್ಥ (ಕ.ಗ.ಪ)
ನಿರ್ಮಾಲ್ಯ - ಪೂಜಿಸಿದ ಹೂಗಳು
ತಿರಿ- ಆಯ್ದು ತರು
ಮೂಲ ...{Loading}...
ಆಗಲಿದನಾರೈವೆನೆನುತವ
ನಾಗಮೋಕ್ತದಿ ಮತ್ತೆ ಲಿಂಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವಂದು ದಕ್ಷನ
ಯಾಗಹರನೆ ನಮಃಶಿವಾಯೆನುತಿತ್ತ ಮುಂದಾದ ॥48॥
೦೪೯ ಮತ್ತೆ ಕಣ್ಡನು ...{Loading}...
ಮತ್ತೆ ಕಂಡನು ಖಂಡಪರಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದುವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕಂಗಳು ಧನಂಜಯನ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ನೋಡಿದರೆ ಆ ಹೂವುಗಳು ಕಿರಾತನ ತಲೆಯ ಮೇಲೆ ಇವೆ. ಲಿಂಗದ ಮೇಲೆ ಅವುಗಳಿಲ್ಲ. ಕುತೂಹಲವು ಹೆಚ್ಚಾಗಿ, ಅದ್ಭುತ ಭಯಾನಕ ರಸಗಳಲ್ಲಿ ಪಾರ್ಥನ ಕಣ್ಣುಗಳು ಮುಳುಗಿದವು.
ಪದಾರ್ಥ (ಕ.ಗ.ಪ)
ಖಂಡಪರಶು - ಈಶ್ವರ
ಉತ್ತಮಾಂಗ - ತಲೆ
ಮೂಲ ...{Loading}...
ಮತ್ತೆ ಕಂಡನು ಖಂಡಪರಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದುವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕಂಗಳು ಧನಂಜಯನ ॥49॥
೦೫೦ ಶಿವನಲಾ ಸಾಕ್ಷಾಚ್ಚತುರ್ದಶ ...{Loading}...
ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ
ಎವಗಿದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವನಲ್ಲವೆ?. ಸಾಕ್ಷಾತ್ ಹದಿನಾಲ್ಕು ಲೋಕಗಳ ಸೃಷ್ಟಿಕರ್ತನಲ್ಲವೆ? ನನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಕಿರಾತ ರೂಪಿನಿಂದ ಬಂದನೇ ? ನನಗಾದರೋ ಉಪವಾಸಯುಕ್ತ ತಪದಿಂದ ಪಿತ್ತಭ್ರಮಣೆ ತಲೆಗೇರಿತೇ ? ಶಿವಶಿವಾ…” ಎಂದು ಪಾರ್ಥನು ಮರುಗಿದನು.
ಪದಾರ್ಥ (ಕ.ಗ.ಪ)
ಭುವನಕರ್ತು - ಲೋಕದ ಸೃಷ್ಟಿಕರ್ತ
ಅಸ್ಮತ್ - ನನ್ನ
ಅನಶನ - ಉಪವಾಸ
ಮೂಲ ...{Loading}...
ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ
ಎವಗಿದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ ॥50॥
೦೫೧ ಹೃದಯವಿಬ್ಬಗಿಯಾಯ್ತು ಕಙ್ಗಳು ...{Loading}...
ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ
ಉದುರಿದವು ನೇತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಖೇದದ ಗಾಯ ಘಾತಿಗೆ ಪಾರ್ಥನೊಳಗಾದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೃದಯವೇ ಎರಡು ಭಾಗವಾಯ್ತು. ಕಣ್ಣುಗಳು ಬೆದರಿದವು. ದೇಹದ ಬಣ್ಣ ಬಿಳಿಚಿಕೊಂಡು ನಡುಗಿ ರೋಮ ಕಂಪಿಸಿತು. ಕಂಬನಿ ಹರಿಯಿತು. ಪಾರ್ಥನಲ್ಲಿ ಏಕಕಾಲದಲ್ಲಿ ಬಿಂಕ-ಭೀತಿ, ಅಜ್ಞಾನ-ಜ್ಞಾನ, ಪ್ರೀತಿ-ಭೇದಗಳ ವಿಭಿನ್ನ ಭಾವನೆಗಳಿಂದ ಆಘಾತಕ್ಕೊಳಗಾದ.
ಪದಾರ್ಥ (ಕ.ಗ.ಪ)
ವೈವರ್ಣ - ಬಣ್ಣಗೆಟ್ಟಿತು
ನೇತ್ರಾಂಬು - ಕಣ್ಣೀರು
ಪಾಠಾನ್ತರ (ಕ.ಗ.ಪ)
ಭೇದ - ಖೇದ
ಕುಮಾರವ್ಯಾಸ ಭಾರತ ಸಂಗ್ರಹ - ಸಂ : ಎಂವಿಸೀ
ಮೂಲ ...{Loading}...
ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ
ಉದುರಿದವು ನೇತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಖೇದದ ಗಾಯ ಘಾತಿಗೆ ಪಾರ್ಥನೊಳಗಾದ ॥51॥
೦೫೨ ಸ್ವೇದ ಜಲದಲಿ ...{Loading}...
ಸ್ವೇದ ಜಲದಲಿ ಮಿಂದು ಪುನರಪಿ
ಖೇದಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವದ
ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆವರಿನಲ್ಲಿ ಮಿಂದು, ದುಗುಡದ ಕೆಸರಲ್ಲಿ ಮುಳುಗಿ , ವಿಷಾದದ ಧೂಳಿನಲ್ಲಿ ಹೊರಳಿ, ಭಯದ ಹೊಳೆಯಲ್ಲಿ ಈಜಾಡಿ, ಹೆದರಿ ಮರಗಟ್ಟಿ ಅರ್ಜುನನ ಮನಸ್ಸು ವಿವಿಧ ಭಾವನೆಗಳಲ್ಲಿ ಹರಿದಾಡುತ್ತಾ ದಿಗ್ಭ್ರಮೆಗೊಂಡಿತು.
ಪದಾರ್ಥ (ಕ.ಗ.ಪ)
ಪಂಕ - ಕೆಸರು
ಮೈದೆಗೆ - ಹೆದರು
ರಜ - ದೂಳು
ಮುಂದುಗೆಡು -ದಿಗ್ಭ್ರಮೆಗೊಳ್ಳು
ಪಾಠಾನ್ತರ (ಕ.ಗ.ಪ)
ಭಾವನ - ಭಾವದ
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ಸ್ವೇದ ಜಲದಲಿ ಮಿಂದು ಪುನರಪಿ
ಖೇದಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವದ
ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ ॥52॥
೦೫೩ ಏಸು ಬಾಣದಲೆಚ್ಚರೆಯು ...{Loading}...
ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನುಂಗಿದಡರಿದೆನೇ ಬಳಿಕ
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತೆನೇ ಹಿಂ
ದೇಸು ಜನ್ಮದ ಜಾಡ್ಯಜವನಿಕೆಯಾಯ್ತು ತನಗೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಷ್ಟು ಬಾಣಗಳಿಂದ ಹೊಯ್ದರೂ ಅವು ತಾಗಲಿಲ್ಲ. ಆದರೂ ನನಗೆ ತಿಳಿಯಲಿಲ್ಲ. ಪ್ರಯೋಗಿಸಿದ ಮಹಾಸ್ತ್ರಗಳ ಸಮೂಹವನ್ನೇ ನುಂಗಿಬಿಟ್ಟರೂ ನನಗೆ ಗೊತ್ತಾಗಲಿಲ್ಲ. ಆ ಮಹಾ ಬಿಲ್ಲು ಮತ್ತು ಖಡ್ಗಗಳನ್ನು ಹಿಡಿದು ಕಸಿದುಕೊಂಡಾಗಲೂ ನಾನು ಎಚ್ಚರಗೊಳ್ಳಲಿಲ್ಲ. ಹಿಂದಿನ ಎಷ್ಟೋ ಜನ್ಮಗಳ ಅಜ್ಞಾನದ ತೆರೆ ನನ್ನನ್ನು ಆವರಿಸಿ ಬಿಟ್ಟಿತು’ ಎಂದುಕೊಂಡನು.
ಪದಾರ್ಥ (ಕ.ಗ.ಪ)
ಜವನಿಕೆ-ತೆರೆ, ಪರದೆ
ಶರಾಸನ - ಬಿಲ್ಲು
ಮೂಲ ...{Loading}...
ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನುಂಗಿದಡರಿದೆನೇ ಬಳಿಕ
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತೆನೇ ಹಿಂ
ದೇಸು ಜನ್ಮದ ಜಾಡ್ಯಜವನಿಕೆಯಾಯ್ತು ತನಗೆಂದ ॥53॥
೦೫೪ ಆವನನು ಜಪ ...{Loading}...
ಆವನನು ಜಪ ಯಜ್ಞದಲಿ ಸಂ
ಭಾವಿಸುವರಾವನ ಪದಾಂಬುಜ
ಸೇವೆಯಲಿ ಸನಕಾದಿಗಳು ಧನ್ಯಾಭಿಮಾನಿಗಳು
ಆವನೊಬ್ಬನು ನಾದಬಿಂದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾರನ್ನು ಜಪತಪಾದಿಗಳಿಂದ ಧ್ಯಾನಿಸುತ್ತಾರೆಯೋ, ಯಾರ ಪಾದಪದ್ಮಗಳ ಸೇವೆಯಲ್ಲಿ ಸನಕಾದಿ ಮಹಾಮುನಿಗಳು ಧನ್ಯರಾಗಿದ್ದಾರೆಯೋ, ಯಾರು ನಾದಬಿಂದು ಕಲಾತೀತನಾಗಿದ್ದಾನೆಯೋ, ಅಂತಹವನಲ್ಲಿ ನಾನು ಯುದ್ಧ ಮಾಡಿದೆನಲ್ಲಾ, ಶಿವಶಿವಾ’ ಎಂದನು.
ಟಿಪ್ಪನೀ (ಕ.ಗ.ಪ)
ನಾದ: -
- ರಾಗ, ಇಚ್ಛೆ, ಕ್ರಿಯೆ, ಪ್ರಯತ್ನಗಳು – ಇವುಗಳನ್ನೊಳಗೊಂಡ ವ್ಯೂಹ. (= ಪರಾ, ಪಶ್ಯಂತಿ, ಮಧ್ಯಮೆ, ವೈಖರೀ)
- ಮೂಲಾಧಾರದಲ್ಲಿರುವ ಓಂಕಾರವು ಉಳಿದ ಚಕ್ರಗಳಲ್ಲಿ ಬೀಜಾಕ್ಷರಗಳಾಗಿ ಮೂಲಮಂತ್ರಗಳಾಗಿ ತೋರಿಕೊಳ್ಳುತ್ತದೆ.
- ಶಕ್ತಿಯಿಂದ ಉದ್ಭವಿಸಿ ಸೃಷ್ಟಿಗೆ ಕಾರಣವಾಗುವುದು ನಾದ. = ನಾದಬ್ರಹ್ಮ, ಸೃಷ್ಟಿಕರ್ತ
ಬಿಂದು: - - ಮೂಲಾಧಾರವೇ ಮೊದಲಾದ ಆರು ಚಕ್ರಗಳ ಸಮುದಾಯ.
- ಶ್ರೀಚಕ್ರದಲ್ಲಿರುವ ಐದು ಕೆಳಮುಖ ತ್ರಿಕೋನಗಳು (ಶಕ್ತಿಚಕ್ರಗಳು), ನಾಲ್ಕು ಮೇಲ್ಮುಖ ತ್ರಿಕೋನಗಳು (ಶಿವಚಕ್ರಗಳು) – ಈ ಒಂಬತ್ತು ಚಕ್ರಗಳಿಗೆ ಆಧಾರಭೂತವಾಗಿರುವುದು.
- ನಾದತತ್ತ್ವದಿಂದ (ಸೃಷ್ಟಿಕರ್ತನಿಂದ) ಹೊರಹೊಮ್ಮುವುದು ಇಚ್ಛಾಶಕ್ತಿ. ಇದನ್ನು ಕೇಂದ್ರೀಕರಿಸಿಕೊಂಡಿರುವುದು ಬಿಂದು. ಬಿಂದುವು ಶಕ್ತಿಪ್ರಧಾನವಾದದ್ದು.
ಕಳೆ: - - ಐವತ್ತು ಕಲಾತ್ಮಕವಾದ ಅಕ್ಷರ ಸಮುದಾಯ.
- ಪ್ರಪಂಚದ ಪ್ರಾದುರ್ಭಾವಕ್ಕೆ ಸಂಬಂಧಪಟ್ಟವುಗಳೆಲ್ಲ ಕಳೆಗಳು (ಪ್ರಾಕೃತ್ರಿಕವಾದವುಗಳು)
- ಕುಂಡಲಿನಿಗೆ ಬಾಹ್ಯಸ್ಫುರಣವುಂಟಾದಾಗ, ಆನಂದ ಮತ್ತು ಪ್ರಾಣಗಳ ರೂಪದಲ್ಲಿ (ಅಗ್ನಿ ಮತ್ತು ಸೋಮದರೂಪದಲ್ಲಿ) ಹೊರಹೊಮ್ಮುತ್ತದೆ. ಇದೇ ಕಳೆ.
- ಕಳೆಯಿಂದಾಗಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಅಭಿವ್ಯಕ್ತಿತಳೆಯುವುದು.
- ಒಟ್ಟರ್ಥದಲ್ಲಿ, ನಾದ, ಬಿಂದು ಮತ್ತು ಕಳೆಗಳು ಭೌತಿಕ ಪ್ರಪಂಚದ ಸೃಷ್ಟಿ, ಪಾಲನೆ, ಆಧ್ಯಾತ್ಮಿಕ ಊಧ್ರ್ವತೆಗೆ ಕಾರಣವಾಗುವ ಶಕ್ತಿಗಳು. ಇವುಗಳು ಬೇರೆ ಬೇರೆ ಹಂತದಲ್ಲಿ ವಿವಿಧ ಸಿದ್ಧಿಗಳಿಗೆ ಕಾರಣವಾಗುತ್ತವೆ. ಇವುಗಳನ್ನು ಮೀರಿರುವಂತಹುದು ಪರಬ್ರಹ್ಮತತ್ತ್ವ..ಆದುದರಿಂದ ಪರಬ್ರಹ್ಮತತ್ತ್ವವುಸೃಷ್ಟಿಗೆ, ಭೌತಿಕ ಪ್ರಪಂಚಕ್ಕೆ ಕಾರಣವಾಗಿಯೂ, ಅದಕ್ಕೆ ಒಳಪಡದಿರುವುದರಿಂದ ಅದನ್ನು ನಾದ ಬಿಂದು ಕಳಾತೀತವಾಗಿರುತ್ತವೆ ಎನ್ನಬಹುದು.
ಮೂಲ ...{Loading}...
ಆವನನು ಜಪ ಯಜ್ಞದಲಿ ಸಂ
ಭಾವಿಸುವರಾವನ ಪದಾಂಬುಜ
ಸೇವೆಯಲಿ ಸನಕಾದಿಗಳು ಧನ್ಯಾಭಿಮಾನಿಗಳು
ಆವನೊಬ್ಬನು ನಾದಬಿಂದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆಂದ ॥54॥
೦೫೫ ಆವನನು ಯಜ್ಞಾದಿ ...{Loading}...
ಆವನನು ಯಜ್ಞಾದಿ ಕರ್ಮದೊ
ಳಾವನನು ನಿಯಮಾದಿ ಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿ ಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವ ಶಿವಾಯೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾರನ್ನು ಯಜ್ಞಯಾಗಾದಿಗಳಲ್ಲಿ, ಯಮ ನಿಯಮಾದಿ ಅಷ್ಟಾಂಗ ಯೋಗಗಳಲ್ಲಿ, ಅರ್ಚನೆಯೇ ಮೊದಲಾದ ವಿವಿಧ ಭಕ್ತಿ ಮಾರ್ಗಗಳಲ್ಲಿ ಸರ್ವಜೀವ ಚೈತನ್ಯ ರೂಪಿಯೆಂದು ಭಜಿಸುತ್ತೇವೆಯೋ ಅವನೊಂದಿಗೆ ಯುದ್ಧದಲ್ಲಿ ಹೋರಾಡಿದೆನೇ ! ಶಿವಶಿವಾ’ ಎಂದನು.
ಟಿಪ್ಪನೀ (ಕ.ಗ.ಪ)
ನಿಯಮಾದಿ ಯೋಗ = ಅಷ್ಟಾಂಗ ಯೋಗ
ಮೂಲ ...{Loading}...
ಆವನನು ಯಜ್ಞಾದಿ ಕರ್ಮದೊ
ಳಾವನನು ನಿಯಮಾದಿ ಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿ ಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವ ಶಿವಾಯೆಂದ ॥55॥
೦೫೬ ಲೋಕವಾವನ ಮಾಯೆಯೀ ...{Loading}...
ಲೋಕವಾವನ ಮಾಯೆಯೀ ಜಗ
ಕಾಕೆವಾಳರದಾರು ಚಂದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ
ಲೋಕರಚನಾ ರಕ್ಷೆ ಸಂಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವ ಶಿವಾಯೆಂದ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಾಯೆ ತುಂಬಿದ ಈ ಲೋಕಕ್ಕೆ ಅಧಿಪತಿಯೂ, ಸಕಲ ಗ್ರಹ ನಕ್ಷತ್ರಗಳಿಗೆ ತೇಜೋಕಾರಕನೂ, ಲೋಕದ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನೂ ಆದ ಪರಬ್ರಹ್ಮ ಸ್ವರೂಪಿಯ ಜೊತೆಗೆ ಹೋರಾಟವೇ ! ಶಿವಶಿವಾ’ ಎಂದನು.
ಪದಾರ್ಥ (ಕ.ಗ.ಪ)
ಸಂಹೃತಿ - ಸಂಹಾರ, ಲಯ
ತೋಟಿ - ಯುದ್ಧ
ಮೂಲ ...{Loading}...
ಲೋಕವಾವನ ಮಾಯೆಯೀ ಜಗ
ಕಾಕೆವಾಳರದಾರು ಚಂದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ
ಲೋಕರಚನಾ ರಕ್ಷೆ ಸಂಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವ ಶಿವಾಯೆಂದ ॥56॥
೦೫೭ ಜೀವರೂಪನು ಸಾಕ್ಷಿ ...{Loading}...
ಜೀವರೂಪನು ಸಾಕ್ಷಿ ಕೂಟ
ಸ್ಥಾವಲಂಬನ ಕರ್ತು ಚೇತನ
ನಾವನೀ ಕ್ಷೇತ್ರಜ್ಞನಂತರ್ಯಾಮಿ ಸಂಜ್ಞೆಯಲಿ
ಆವನಮಲ ಪ್ರತ್ಯಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ಕದನವೆ ಶಿವ ಶಿವಾಯೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜೀವರೂಪನೂ, ಜಗ:ಸಾಕ್ಷಿಯಾಗಿರುವವನೂ, ಪ್ರಾಣಕರ್ತನೂ, ಚೈತನ್ಯದಾಯಕನೂ, ಪರಿಶುದ್ಧನಾದ ಆತ್ಮರೂಪನೂ, ಪರಮೇಶ್ವರನೂ ಆದ ಭಗವಂತನ ಜೊತೆಗೆ ಕದನವನ್ನು ಮಾಡಿದೆನೇ ! ಶಿವಶಿವಾ’ ಎಂದನು.
ಮೂಲ ...{Loading}...
ಜೀವರೂಪನು ಸಾಕ್ಷಿ ಕೂಟ
ಸ್ಥಾವಲಂಬನ ಕರ್ತು ಚೇತನ
ನಾವನೀ ಕ್ಷೇತ್ರಜ್ಞನಂತರ್ಯಾಮಿ ಸಂಜ್ಞೆಯಲಿ
ಆವನಮಲ ಪ್ರತ್ಯಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ಕದನವೆ ಶಿವ ಶಿವಾಯೆಂದ ॥57॥
೦೫೮ ಸ್ಫುರದಲಿಙ್ಗನು ಲಿಙ್ಗ ...{Loading}...
ಸ್ಫುರದಲಿಂಗನು ಲಿಂಗ ಮೂಲೋ
ತ್ಕರನುದಾರವ್ಯಕ್ತ ಸದ ಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿಂಗದಲಿ
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದೆವಲಾ ಶಿವ ಶಿವಾಯೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜ್ಯೋತಿರ್ಲಿಂಗನೂ, ಮೂಲ ರೂಪನೂ, ಶಿವ ಲಿಂಗದಲ್ಲಿ ವ್ಯಕ್ತಗೊಳ್ಳುವವನೂ ನಿರಾಕಾರನೂ ಪರಾತ್ಪರ ಪರತತ್ತ್ವರೂಪನೂ ಆದ ಶಿವನಲ್ಲಿ ನಾನು ಕಾಳಗ ಮಾಡಿದೆನೆಲ್ಲಾ ! ಶಿವಶಿವಾ’ ಎಂದನು.
ಮೂಲ ...{Loading}...
ಸ್ಫುರದಲಿಂಗನು ಲಿಂಗ ಮೂಲೋ
ತ್ಕರನುದಾರವ್ಯಕ್ತ ಸದ ಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿಂಗದಲಿ
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದೆವಲಾ ಶಿವ ಶಿವಾಯೆಂದ ॥58॥
೦೫೯ ಆರಕಾರ ಉಕಾರ ...{Loading}...
ಆರಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾರಿಯಾವನು ಮಾತೃಕಾಕ್ಷರ ರೂಪನಕ್ಷಯನು
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕಲಹವೆ ಶಿವ ಶಿವಾಯೆಂದ ॥59॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಕಾರ ಉಕಾರ ಮಕಾರಗಳು ಸಂಯುಕ್ತಗೊಂಡ ಓಂಕಾರದಲ್ಲಿರುವವನೂ, ಅಕ್ಷಯನೂ, ಬೀಜಾಕ್ಷರಸ್ವರೂಪನೂ, ವಾಙ್ಮಯನೂ, ಮಾತಿಗೆ ಸಿಲುಕದವನೂ, ವಾಕ್ಕನ್ನು ನಿಯಂತ್ರಿಸುವವನೂ , ಆದ ಭಗವಂತನೊಂದಿಗೆ ಕಲಹವೇ ! ಶಿವಶಿವಾ’ ಎಂದನು.
ಪದಾರ್ಥ (ಕ.ಗ.ಪ)
ಮಾತೃಕಾಕ್ಷರ - ಬೀಜಾಕ್ಷರ
ವಾಚೋದೂರ - ಮಾತಿಗೆ ಸಿಲುಕದವನು
ವಚೋನಿಯಮಕ - ವಾಕ್ಕನ್ನು ನಿಯಂತ್ರಿಸುವವನು
ಪಾಠಾನ್ತರ (ಕ.ಗ.ಪ)
ಆ ಅಕಾರ - ಆರಕಾರ
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ಆರಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾರಿಯಾವನು ಮಾತೃಕಾಕ್ಷರ ರೂಪನಕ್ಷಯನು
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕಲಹವೆ ಶಿವ ಶಿವಾಯೆಂದ ॥59॥
೦೬೦ ಗಾಹು ಹತ್ತಾಹತ್ತಿ ...{Loading}...
ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾಶರೌಘಕೆ
ಮೇಹು ಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇಹರಹಿತನೊಂದಿಗೆ ಮುಷ್ಟಾಮುಷ್ಟಿ, ಮೃತ್ಯುಂಜಯನೊಂದಿಗೆ ಶರಸಂಧಾನ, ವೇದಗಳಿಗೆ ಸಿಲುಕದವನನ್ನು ಮೂದಲಿಸುವಿಕೆ, , ಸಾಕ್ಷಾತ್ ಪರಶಿವನೊಂದಿಗೆ ಯುದ್ಧದಲ್ಲಿ ನಾನು ಸಮಜೋಡಿಯಲ್ಲವೆ? ಶಿವಶಿವಾ ಏನಾಶ್ಚರ್ಯ !’ ಎಂದನು.
ಮೂಲ ...{Loading}...
ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾಶರೌಘಕೆ
ಮೇಹು ಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆಂದ ॥60॥
೦೬೧ ಎವಗೆರಡು ಕಣು ...{Loading}...
ಎವಗೆರಡು ಕಣು ವಿಶ್ವತೋ ಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸಂಗ್ರಾಮ
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಡಗಿಸಿ ಗೆಲಲಾವ್ ಸಮರ್ಥರೆ ಶಿವ ಶಿವಾಯೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನ್ನ ಎರಡು ಕಣ್ಣುಗಳು ವಿಶ್ವತಃಶ್ಚಕ್ಷುವನ್ನು ಕ್ರೋಧದಿಂದ ನೋಡುವುದು , ವಿಶ್ವತೋಭುಜನೊಂದಿಗೆ ಈ ಎರಡು ಭುಜಗಳು ಯುದ್ಧಮಾಡುವುದು, ವಿಶ್ವವನ್ನೇ ಪಾದವಾಗಿ ಮತ್ತು ವಿಶ್ವವನ್ನೇ ಮುಖವಾಗಿ ಉಳ್ಳ ಶಿªನನ್ನು ನನ್ನ ಕಾಲು ಮತ್ತು ನಾಲಿಗೆಯಲ್ಲಿ ಅವಮಾನಪಡಿಸುವುದು ಈ ರೀತಿಯಾಗಿ ಅವನನ್ನು ಗೆಲ್ಲಲು ಸಾಧ್ಯವೇ? ಶಿವಾಶಿವಾ” ಎಂದನು.
ಪದಾರ್ಥ (ಕ.ಗ.ಪ)
ಚಕ್ಷು - ಕಣ್ಣು
ಮೂಲ ...{Loading}...
ಎವಗೆರಡು ಕಣು ವಿಶ್ವತೋ ಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸಂಗ್ರಾಮ
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಡಗಿಸಿ ಗೆಲಲಾವ್ ಸಮರ್ಥರೆ ಶಿವ ಶಿವಾಯೆಂದ ॥61॥
೦೬೨ ಹೂಡಿ ಜಗವನು ...{Loading}...
ಹೂಡಿ ಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತ ವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯತೃಪ್ತ ನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಲೋಕವನ್ನು ಸೃಜಿಸಿ, ಅದರಲ್ಲಿ ಜೀವಕೋಟಿಗಳನ್ನು ನಿಲಿಸಿ, ಈ ಐಹಿಕ ಪ್ರಪಂಚದಲ್ಲಿ ವಿಷಯ ಸುಖಗಳನ್ನು ಭೋಗಿಸುತ್ತಾ , ಆದರೆ ಅದರಲ್ಲಿ ಒಂದಾಗದೆ, ಅದರಿಂದ ನಾಶವಾಗದೆ, ಹೋಗಿ ಬಂದು ಮಾಡದ, ಸಂಯೋಗ-ವಿಯೋಗಗಳಾವುದೂ ಇರದೆ ಇರುವ ನಿತ್ಯತೃಪ್ತನೊಂದಿಗೆ ಹೋರಾಡಿದೆನಲ್ಲಾ ! ಶಿವಶಿವಾ’ ಎಂದನು.
ಪದಾರ್ಥ (ಕ.ಗ.ಪ)
ಸೊಗಸು - ಆನಂದಪಡು
ಉಪಭೋಗ ಪ್ರಪಂಚ - ಲೌಕಿಕ ಪ್ರಪಂಚ
ನಿರೂಢ - ಪ್ರಖ್ಯಾತನಾzವನು, ಮಹಾತ್ಮನು
ಮೂಲ ...{Loading}...
ಹೂಡಿ ಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತ ವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯತೃಪ್ತ ನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ ॥62॥
೦೬೩ ಆವನೊಬ್ಬನಣೋರಣೀಯನ ದಾವನುರು ...{Loading}...
ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತಂ ದೃಷ್ಟಿಸಂಗತ ವಿಶ್ವ ಸಮಯದಲಿ
ಆವನೊಬ್ಬನು ನಾಮರೂಪು ಗು
ಣಾವಲಂಬನನಲ್ಲದೀಶ್ವರ
ನಾವನಾತನೊಳೆಮಗೆ ತೋಟಿಯೆ ಶಿವ ಶಿವಾಯೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಣುವಿಗಿಂತ ಅಣುವಾದವನು, ಮಹತ್ತಿಗಿಂತ ಮಹತ್ತಾದವನು, ಕಾಲ ಚಕ್ರದ ಗತಿಗೆ ಸದಾ ಕಾರಣನಾದವನು ನಾಮ ರೂಪಗುಣಗಳಿಗೆ ಸಿಲುಕದೇ ಇರುವವನೂ ಆದ ಪರಶಿವನೊಂದಿಗೆ ನನಗೆ ಯುದ್ಧವೇ’ ಎಂದನು.
ಪದಾರ್ಥ (ಕ.ಗ.ಪ)
ಅಣೋರಣೀಯ -ಅಣುವಿಗಿಂತ ಅಣುವಾದವನು
ಮಹತೋಮಹೀಯ -ಮಹತ್ತಿಗಿಂತ ಮಹತ್ತಾದವನು
ಮೂಲ ...{Loading}...
ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತಂ ದೃಷ್ಟಿಸಂಗತ ವಿಶ್ವ ಸಮಯದಲಿ
ಆವನೊಬ್ಬನು ನಾಮರೂಪು ಗು
ಣಾವಲಂಬನನಲ್ಲದೀಶ್ವರ
ನಾವನಾತನೊಳೆಮಗೆ ತೋಟಿಯೆ ಶಿವ ಶಿವಾಯೆಂದ ॥63॥
೦೬೪ ಸೇವ್ಯನನು ಸತ್ಕೃತಿಗಳಲಿ ...{Loading}...
ಸೇವ್ಯನನು ಸತ್ಕೃತಿಗಳಲಿ ದೃ
ಷ್ಟವ್ಯನನು ದೃಢಚಿತ್ತದಲಿ ಮಂ
ತ್ರವ್ಯನಾ ಶ್ರೋತವ್ಯನನು ಸಂಕೀರ್ತಿತವ್ಯನನು
ಅವ್ಯಯನನಕ್ಷಯನನಭವನ
ನವ್ಯಥನನಜ್ಞಾನದಲಿ ಯೋ
ದ್ಧವ್ಯನೆಂದೇ ಸೆಣಸಿದೆವಲಾ ಶಿವ ಶಿವಾಯೆಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುಣ್ಯದಿಂದ ಸೇವಿಸಲ್ಪಡಬೇಕಾದವನನ್ನೂ, ದೃಢ ಮನಸ್ಸಿನಿಂದ ನೋಡಲ್ಪಡಬೇಕಾದವನನ್ನೂ, ಮಂತ್ರಗಳಿಂದ ಕೀರ್ತಿಸಲ್ಪಡಬೇಕಾದವನನ್ನು, ವೇದಗಳಿಂದ ತಿಳಿಯಲ್ಪಡಬೇಕಾದವನನ್ನು, ಅವ್ಯಯನನ್ನೂ, ಅಕ್ಷಯನನ್ನೂ, ದುಃಖರಹಿತನಾದವನನ್ನೂ ಅಜ್ಞಾನದಲ್ಲಿ ಯೋಧನೆಂದೇ ಎದುರಿಸಿ ನಾನು ಹೋರಾಡಿದೆನಲ್ಲಾ ! ಶಿವಶಿವಾ’ ಎಂದನು.
ಪದಾರ್ಥ (ಕ.ಗ.ಪ)
ಸೇವ್ಯ - ಸೇವಿಸಲ್ಪಡಬೇಕಾದವನು
ದೃಷ್ಟವ್ಯ - ನೋಡಲ್ಪಡಬೇಕಾದವನು
ಮಂತ್ರವ್ಯ - ಮಂತ್ರಗಳಿಂದ ತಿಳಿಯಬೇಕಾದವನು
ಶ್ರೋತವ್ಯ - ವೇದಗಳಿಂದ ತಿಳಿಯಲ್ಪಡಬೇಕಾದವನು
ಅವ್ಯಯ - ನಾಶವಿಲ್ಲದ್ದು
ಅಕ್ಷಯ - ನಾಶವಿಲ್ಲದ್ದು
ಯೋಧವ್ಯ - ಯುದ್ಧದಲ್ಲಿ ಪ್ರತಿಭಟಿಸಿ ನಿಲ್ಲುವವನು.
ಪಾಠಾನ್ತರ (ಕ.ಗ.ಪ)
ಯೋಗವ್ಯ - ಯೋದ್ಧವ್ಯ
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ಸೇವ್ಯನನು ಸತ್ಕೃತಿಗಳಲಿ ದೃ
ಷ್ಟವ್ಯನನು ದೃಢಚಿತ್ತದಲಿ ಮಂ
ತ್ರವ್ಯನಾ ಶ್ರೋತವ್ಯನನು ಸಂಕೀರ್ತಿತವ್ಯನನು
ಅವ್ಯಯನನಕ್ಷಯನನಭವನ
ನವ್ಯಥನನಜ್ಞಾನದಲಿ ಯೋ
ದ್ಧವ್ಯನೆಂದೇ ಸೆಣಸಿದೆವಲಾ ಶಿವ ಶಿವಾಯೆಂದ ॥64॥
೦೬೫ ಸ್ಫುರದಕಾರಾದಿಯ ಹಕಾರೋ ...{Loading}...
ಸ್ಫುರದಕಾರಾದಿಯ ಹಕಾರೋ
ತ್ತರದ ಶಬ್ದಬ್ರಹ್ಮಮಯ ವಿ
ಸ್ತರದಹಂತತ್ವದ ಮಹತ್ತತ್ವಾತಿಶಯ ಪದದ
ಪುರುಷ ಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳ ತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಾರದಿಂದ ಹಕಾರಗಳವರೆಗೆ ಇರುವುದನ್ನ ಮೀರಿದ ಕಾರಗಳ ಶಬ್ದ ಬ್ರಹ್ಮಮಯವಾಗಿರುವಂತಹದನ್ನು ವಿಸ್ತರಿಸುವ, ಪರಮಪದವನ್ನು ವ್ಯಾಪಿಸಿಕೊಂಡಿರುವ, ಮೂಲ ಪ್ರಕೃತಿಗಳನ್ನು ದಾಟಿ, ದಿವ್ಯವಾದ ತೇಜಸ್ಸಿನಿಂದ ಬೆಳಗುವ ಪರಮಪುರುಷನಲ್ಲಿ ನಾನು ಯುದ್ಧ ಮಾಡಿದೆನಲ್ಲಾ ! ಶಿವಶಿವಾ’ ಎಂದನು.
ಮೂಲ ...{Loading}...
ಸ್ಫುರದಕಾರಾದಿಯ ಹಕಾರೋ
ತ್ತರದ ಶಬ್ದಬ್ರಹ್ಮಮಯ ವಿ
ಸ್ತರದಹಂತತ್ವದ ಮಹತ್ತತ್ವಾತಿಶಯ ಪದದ
ಪುರುಷ ಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳ ತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥65॥
೦೬೬ ಸರಸಿಜಾಸನ ವಿಷ್ಣು ...{Loading}...
ಸರಸಿಜಾಸನ ವಿಷ್ಣು ರುದ್ರೇ
ಶ್ವರ ಸzಶಿವರಾವಳೊಬ್ಬಳ
ಚರಣ ಸೇವಾ ಸಂಗದಲ್ಲಿಯೆ ಸುಪ್ರತಿಷ್ಠಿತರು
ಪರಮ ಶಕ್ತಿಯದಾವನಂಘ್ರಿಗೆ
ಶಿರವನೊಡ್ಡಿಹಳಾ ಮಹೋತ್ತಮ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬ್ರಹ್ಮ, ವಿಷ್ಣು ರುದ್ರಾದಿಗಳು ಯಾವ ಶಕ್ತಿಗೆ ನಮಿಸುತ್ತಾರೋ, ಆ ಶಕ್ತಿರೂಪಿಣಿಯೇ ಶಿರಬಾಗಿ ವಂದಿಸುವ ಪರಮೇಶ್ವರನೊಂದಿಗೆ ನಾನು ಸೆಣಸಿದೆನಲ್ಲಾ ! ಶಿವಶಿವಾ’ ಎಂದನು.
ಮೂಲ ...{Loading}...
ಸರಸಿಜಾಸನ ವಿಷ್ಣು ರುದ್ರೇ
ಶ್ವರ ಸzಶಿವರಾವಳೊಬ್ಬಳ
ಚರಣ ಸೇವಾ ಸಂಗದಲ್ಲಿಯೆ ಸುಪ್ರತಿಷ್ಠಿತರು
ಪರಮ ಶಕ್ತಿಯದಾವನಂಘ್ರಿಗೆ
ಶಿರವನೊಡ್ಡಿಹಳಾ ಮಹೋತ್ತಮ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ ॥66॥
೦೬೭ ಈ ಪರಿಯಲರ್ಜುನನ ...{Loading}...
ಈ ಪರಿಯಲರ್ಜುನನ ಮನದನು
ತಾಪವನು ಕಾಣುತ್ತ ಶಾಬರ
ರೂಪ ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪ ರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣಶಶಿಮೌಳಿ ॥67॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿಯಲ್ಲಿ ಅರ್ಜುನನ ಮನೋವೇದನೆಯನ್ನು ನೋಡುತ್ತಾ ,ಶಿವನು ಕಿರಾತವೇಷದ ಹಿಂದೆ ಅಡಗಿದ್ದ ತನ್ನ ನಿಜವಾದ ಚಿನ್ಮಯ ಸ್ವರೂಪವನ್ನು ತೋರಿ ಅವನ ಅಂತರಂಗದ ದುಃಖವನ್ನು ನಿವಾರಿಸಿದನು.
ಮೂಲ ...{Loading}...
ಈ ಪರಿಯಲರ್ಜುನನ ಮನದನು
ತಾಪವನು ಕಾಣುತ್ತ ಶಾಬರ
ರೂಪ ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪ ರಸದಲಿ ನರನ ಚಿತ್ತದ
ತಾಪವಡಗಲು ತಂಪನೆರೆದನು ತರುಣಶಶಿಮೌಳಿ ॥67॥
೦೬೮ ಅರಸ ಕೇಳೈ ...{Loading}...
ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಸನಕ ಸಿದ್ಧಾದ್ಯರಿಗಗೋಚರದ
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ ॥68॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ನಿಮ್ಮ ಅರ್ಜುನನ ಭಾಗ್ಯ ವಿಶೇಷವನ್ನು , ಈಶನ ಕರುಣೆಯನ್ನು ಕೇಳು. ಶುಕ ಸನಕ ಸಿದ್ಧರೇ ಮೊದಲಾದವರಿಗೆ ಅಗೋಚರವಾದ ನಿರುಪಮ ನಿಜಸ್ವರೂಪವನ್ನು ಅವನಿಗೆ ಪರಶಿವನು ದಯಪಾಲಿಸಲು, ಸುರವೃಂದ ಜಯಜಯವೆಂದಿತು.
ಪದಾರ್ಥ (ಕ.ಗ.ಪ)
ನಿರುಪಮ - ಹೋಲಿಸಲಾರದ
ಮೂಲ ...{Loading}...
ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಸನಕ ಸಿದ್ಧಾದ್ಯರಿಗಗೋಚರದ
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ ॥68॥
೦೬೯ ಬಲಿದ ಚನ್ದ್ರಿಕೆಯೆರಕವೆನೆ ...{Loading}...
ಬಲಿದ ಚಂದ್ರಿಕೆಯೆರಕವೆನೆ ತಳ
ತಳಿಸಿ ಬೆಳಗುವ ಕಾಯ ಕಾಂತಿಯ
ಪುಲಿದೊಗಲ ಕೆಂಜೆಡೆಯ ಕೇವಣದಿಂದು ಫಣಿಪತಿಯ
ಹೊಳೆವ ಹರಿಣನ ಅಕ್ಷಮಾಲಾ
ವಲಯದಭಯದ ವರದಕರ ಪರಿ
ಕಲಿತನೆಸೆದನು ಶಂಭು ಸದ್ಯೋಜಾತ ವಕ್ತ್ರದಲಿ ॥69॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳದಿಂಗಳ ಕಾಂತಿಯಂತೆ ಹೊಳೆಯುತ್ತಿರುವ ಶರೀರದವನೂ, ವ್ಯಾಘ್ರ ಚರ್ಮಾಂಬರನೂ, ಕೆಂಪಾದ ಕೇಶವುಳ್ಳವನೂ, ಜೊತೆಗೆ ಉರಗ ಭೂಷಣನೂ, ಮೃಗಧರನೂ , ರುದ್ರಾಕ್ಷಮಾಲಾಧರನೂ, ಚಂದ್ರಶೇಖರನೂ, ಅಭಯ ವರದಹಸ್ತನೂ ಆದ ಶಂಕರನು ತನ್ನ ಸದ್ಯೋಜಾತವೆಂಬ ಮುಖದಿಂದ ಪ್ರಸನ್ನನಾದನು.
ಪದಾರ್ಥ (ಕ.ಗ.ಪ)
ಕೇವಣ-ಕೂಡಿಸಿದ
ಮೂಲ ...{Loading}...
ಬಲಿದ ಚಂದ್ರಿಕೆಯೆರಕವೆನೆ ತಳ
ತಳಿಸಿ ಬೆಳಗುವ ಕಾಯ ಕಾಂತಿಯ
ಪುಲಿದೊಗಲ ಕೆಂಜೆಡೆಯ ಕೇವಣದಿಂದು ಫಣಿಪತಿಯ
ಹೊಳೆವ ಹರಿಣನ ಅಕ್ಷಮಾಲಾ
ವಲಯದಭಯದ ವರದಕರ ಪರಿ
ಕಲಿತನೆಸೆದನು ಶಂಭು ಸದ್ಯೋಜಾತ ವಕ್ತ್ರದಲಿ ॥69॥
೦೭೦ ಹೊಳೆವ ಕುಙ್ಕುಮ ...{Loading}...
ಹೊಳೆವ ಕುಂಕುಮ ಕಾಂತಿಯಲಿ ತಳ
ತಳಿಪ ತನು ಗಜಚರ್ಮದುಡುಗೆಯ
ಲಲಿತ ದಂತಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದ ಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಂಕುಮ ಕಾಂತಿಯಿಂದ ಕೂಡಿದವನೂ, ಗಜಚರ್ಮಾಂಬರನೂ, ಮುಗುಳುನಗೆಯಿಂದ ಶೋಭಿಸುವವನು, ವರದಾಭಯ ಹಸ್ತವುಳ್ಳವನೂ, ಪರಶುಧಾರಿಯೂ, ಅಕ್ಷಮಾಲಾಧರನೂ ಆದ ಶಿವನು ತನ್ನ ವಾಮದೇವನೆಂಬ ಮುಖದಿಂದ ಕಂಗೊಳಿಸಿದನು.
ಮೂಲ ...{Loading}...
ಹೊಳೆವ ಕುಂಕುಮ ಕಾಂತಿಯಲಿ ತಳ
ತಳಿಪ ತನು ಗಜಚರ್ಮದುಡುಗೆಯ
ಲಲಿತ ದಂತಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದ ಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ ॥70॥
೦೭೧ ಕಾಳಮೇಘ ಸುವರ್ಣದುರು ...{Loading}...
ಕಾಳಮೇಘ ಸುವರ್ಣದುರು ದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿ ಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣ ಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರವಕ್ತ್ರದಲಿ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಯಾದ ಕಪ್ಪು ಬಣ್ಣ ಭಯಂಕರವಾದ ದಾಡೆ, ಶುಭ್ರವಾದ ಜಪಮಣಿಮಾಲೆ, ವೇದಮುಖ, ಪಾಶ, ಅಂಕುಶ,ಡಮರು,ತ್ರಿಶೂಲ, ಖಟ್ವಾಂಗ, ಬ್ರಹ್ಮಕಪಾಲ, ಸರ್ಪ, ರುಂಡಮಾಲೆ- ಇತ್ಯಾದಿಗಳಿಂದ ರುದ್ರದೇವನು ಅಘೋರ ರೂಪಿಯಾಗಿ ಪ್ರಕಟನಾದನು.
ಪದಾರ್ಥ (ಕ.ಗ.ಪ)
ಕಾಳಮೇಘ- ಕಪ್ಪು ಮೋಡ
ದಂಷ್ಟ್ರ - ದಾಡೆ
ಸುತಿ - ಶ್ರುತಿ -ವೇದ
ದ್ರುಹಿಣ -ಬ್ರಹ್ಮ
ಕರೋಟಿ - ರುಂಡ
ಖಟ್ವಾಂಗ - ತುದಿಯಲ್ಲಿ ತಲೆಬುರುಡೆ ಇರುವ ಶಿವನ ಆಯುಧ
ಮೂಲ ...{Loading}...
ಕಾಳಮೇಘ ಸುವರ್ಣದುರು ದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿ ಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣ ಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರವಕ್ತ್ರದಲಿ ॥71॥
೦೭೨ ಪರಶು ಡಮರುಗ ...{Loading}...
ಪರಶು ಡಮರುಗ ಖಡ್ಗ ಖೇಟಕ
ಶರ ಧನುಃಶೂಲದ ಕಪಾಲದ
ಕರದ ರಕ್ತಾಂಬರದ ಫಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಳಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶು, ಡಮರುಗ, ಖಡ್ಗ, ಖೇಟಕ, ಬಾಣಬಿಲ್ಲು, ಶೂಲ, ಕಪಾಲ, ರಕ್ತಾಂಬರಗಳಿಂದ ಕೂಡಿದ, ಸರ್ಪಭೂಷಣನೂ, ಮೃಗಧರನೂ ಪ್ರಸನ್ನ ಮುಖದವನೂ ಅಭಯಹಸ್ತಗಳನ್ನು ಹೊಂದಿರುವವನೂ ಆದ ತತ್ಪುರುಷ ಮುಖವನ್ನು ಪ್ರಕಟಿಸಿದನು.
ಪದಾರ್ಥ (ಕ.ಗ.ಪ)
ಖೇಟಕ -ಗುರಾಣಿ
ಮೂಲ ...{Loading}...
ಪರಶು ಡಮರುಗ ಖಡ್ಗ ಖೇಟಕ
ಶರ ಧನುಃಶೂಲದ ಕಪಾಲದ
ಕರದ ರಕ್ತಾಂಬರದ ಫಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಳಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ ॥72॥
೦೭೩ ಎಳೆಯ ಮುತ್ತಿನ ...{Loading}...
ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿದಂಗಚ್ಛವಿಯಭಯವರ
ಲುಳಿತ ಜಪಮಣಿ ವೇದ ಪಾಶಾಂಕುಶದ ಡಮರುಗದ
ಲಲಿತ ಖಟ್ವಾಂಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶಿರೋಮಣಿ ಮೆರೆದನಂದೀಶಾನ ವಕ್ತ್ರದಲಿ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಯ ಮುತ್ತಿನ ಮಣಿಯಂತಹ ದೇಹಕಾಂತಿ, ಅಭಯಹಸ್ತದಲ್ಲಿ ಜಪಮಣಿ, ಪಾಶ, ಅಂಕುಶ, ಡಮರುಗ, ಖಟ್ವಾಂಗ, ಕಪಾಲ, ಶೂಲಗಳನ್ನು ಹಿಡಿದ ಕರಗಳುಳ್ಳ ವೇದವಿನುತನಾದ ಶಿವನು ಈಶಾನ ಸ್ವರೂಪದಲ್ಲಿ ವ್ಯಕ್ತನಾದನು.
ಪದಾರ್ಥ (ಕ.ಗ.ಪ)
ಅಂಗಚ್ಛವಿ - ದೇಹಕಾಂತಿ
ಮೂಲ ...{Loading}...
ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿದಂಗಚ್ಛವಿಯಭಯವರ
ಲುಳಿತ ಜಪಮಣಿ ವೇದ ಪಾಶಾಂಕುಶದ ಡಮರುಗದ
ಲಲಿತ ಖಟ್ವಾಂಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶಿರೋಮಣಿ ಮೆರೆದನಂದೀಶಾನ ವಕ್ತ್ರದಲಿ ॥73॥
೦೭೪ ಬೇರೆ ಬೇರುರಿಗಣ್ಣುಗಳ ...{Loading}...
ಬೇರೆ ಬೇರುರಿಗಣ್ಣುಗಳ ಫೂ
ತ್ಕಾರದಹಿ ಬಂಧದ ಜಟಾ ಕೋ
ಟೀರ ಭಾರದ ಮುಖಚತುಷ್ಟಯ ಭುಜಚತುಷ್ಟಯದ
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪಂಚವಕ್ತ್ರಾ
ಕಾರದಲಿ ಶಿವ ಮೆರೆದ ಪಂಚಬ್ರಹ್ಮರೂಪದಲಿ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಂಡಗಣ್ಣು, ಸರ್ಪ ಭೂಷಣ, ಜಟಾಬಂಧ ಇವುಗಳಿಂದ ಶೋಭಿತವಾದ, ನಾಲ್ಕು ಮುಖ, ನಾಲ್ಕು ಕೈಗಳು ಇವುಗಳಿಂದ ಕಂಗೊಳಿಸುವ ಬ್ರಹ್ಮ, ವಿಷ್ಣು, ರುದ್ರ, ಇವರುಗಳಿಗೆ ಆಧಾರನಾದ ಪಂಚಮುಖಗಳನ್ನುಳ್ಳ ಈಶ್ವರನು ಪಂಚಬ್ರಹ್ಮರೂಪದಿಂದ ವ್ಯಕ್ತನಾದನು.
ಮೂಲ ...{Loading}...
ಬೇರೆ ಬೇರುರಿಗಣ್ಣುಗಳ ಫೂ
ತ್ಕಾರದಹಿ ಬಂಧದ ಜಟಾ ಕೋ
ಟೀರ ಭಾರದ ಮುಖಚತುಷ್ಟಯ ಭುಜಚತುಷ್ಟಯದ
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪಂಚವಕ್ತ್ರಾ
ಕಾರದಲಿ ಶಿವ ಮೆರೆದ ಪಂಚಬ್ರಹ್ಮರೂಪದಲಿ ॥74॥
೦೭೫ ಶ್ರುತಿಗಳುಪನಿಷದಾದ್ಯಖಿಳ ದೇ ...{Loading}...
ಶ್ರುತಿಗಳುಪನಿಷದಾದ್ಯಖಿಳ ದೇ
ವತೆಯರಾಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀಶನ ಸುತ್ತುವಳಯದಲಿ
ಸ್ಮಿತಮಧುರ ಮುಖಕಾಂತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದೋಪನಿಷತ್ತುಗಳು, ಸಕಲ ದೇವತೆಗಳು ಕಿರಾತವೇಷವನ್ನು ಬಿಟ್ಟು ಈಶ್ವರನ ಸುತ್ತ ಬಳಸಿ ನಿಂತರು. ನಗುಮೊಗದ ಮಧುರ ಮುಖಭಾವದಿಂದ ಕುಡಿ ನೋಟದಿಂದ ಕೂಡಿದ ಗೌರೀದೇವಿ ಪರಶಿವನ ಎಡಭಾಗದಲ್ಲಿ ಬಂದು ನಿಂತಳು.
ಪದಾರ್ಥ (ಕ.ಗ.ಪ)
ಆಕಲ್ಪಿತ - ಕಲ್ಪಿಸಿಕೊಂಡಿದ್ದಂತಹ
ಮೂಲ ...{Loading}...
ಶ್ರುತಿಗಳುಪನಿಷದಾದ್ಯಖಿಳ ದೇ
ವತೆಯರಾಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀಶನ ಸುತ್ತುವಳಯದಲಿ
ಸ್ಮಿತಮಧುರ ಮುಖಕಾಂತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು ॥75॥
೦೭೬ ಸನಕ ನಾರದ ...{Loading}...
ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿ ಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ಸನತ್ಕುಮಾರ, ಕಣ್ವ, ಉಪಮನ್ಯು ಮುಂತಾದ ಮುನಿಗಳು ಆ ವನ ಪ್ರದೇಶಕ್ಕೆ ಬಂದು ‘ಪಾರ್ಥನೇ ಕೇಳು ನಿನ್ನ ಸಿದ್ಧಿ ನಮಗೆ ಲೇಸಾಯ್ತು’ ಎಂದೆನ್ನುತ್ತಾ ಶಿವನ ಪದಕಮಲಕ್ಕೆ ವಂದಿಸಿದರು.
ಮೂಲ ...{Loading}...
ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿ ಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ ॥76॥
೦೭೭ ಜಯ ಜಯೆನ್ದುದು ...{Loading}...
ಜಯ ಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ
ನಿಯತವೇನೋ ಜನ್ಮಶತ ಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶಿವನ ದರ್ಶನವನ್ನು ಮಾಡಿ ಸಮಸ್ತ ಜಗವೇ ಜಯ ಜಯ ಎಂದು ಸ್ತುತಿ ಮಾಡುತ್ತಾ ಇರಲು, ಅರ್ಜುನನು ಸಾವಿರ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯದಿಂದ ಕೃತಾರ್ಥನಾದನೆಂದು ಹೇಳುವಂತೆ ದೇವತೆಗಳ ಸಮೂಹದಲ್ಲಿ ಭೇರಿಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಅಕ್ಷಯ - ಈಶ್ವರ
ಗಡಾವಣೆ - ಜಂಗುಳಿ
ಮೂಲ ...{Loading}...
ಜಯ ಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ
ನಿಯತವೇನೋ ಜನ್ಮಶತ ಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ ॥77॥
೦೭೮ ಬಿಟ್ಟ ಸೂಟಿಯೊಳೆದ್ದು ...{Loading}...
ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮ ಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಡೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆಲೇ ಅರ್ಜುನನು ಎದ್ದು ತದೇಕದೃಷ್ಟಿಯಿಂದ ಶಿವನನ್ನು ನೋಡುತ್ತಾ, ಸಂತೋಷದಿಂದ ಕಣ್ಣೀರನ್ನು ಸುರಿಸುತ್ತಾ, ರೋಮಾಂಚಿತನಾಗಿ, ಶಿವನೆಲ್ಲಿದ್ದಾನೆಂದು ಒಮ್ಮೆ ಕಂಡು, ಮತ್ತೊಮ್ಮೆ ಕಾಣಲಾರದೆ, ಮೈತವಕದಿಂದ ವಿಸ್ಮಿತನಾದನು.
ಮೂಲ ...{Loading}...
ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮ ಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಡೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ ॥78॥
೦೭೯ ಹರಹಿನಲಿ ಹೊದರೆದ್ದು ...{Loading}...
ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ ॥79॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಅನೇಕ ಭಾವಗಳಲ್ಲಿ ಹೊರಳಾಡಿ ಹರ್ಷಾಧಿಕ್ಯದಿಂದ ನಡುಗುತ್ತ , ಬುದ್ಧಿಯ ಸಹಾಯದಿಂದ ಮನಸ್ಸನ್ನು ಮತ್ತೆ ನಿಯಂತ್ರಿಸಿಕೊಳ್ಳುತ್ತಾ ಕುಲಾಲ ಚಕ್ರದಂತೆ ಸುತ್ತಿ ಕಾತರಿಸುತ್ತ ಪರಶಿವನಿಗೆ ಸಾಷ್ಟಾಂಗ ನಮಸ್ಕರಿಸಿದನು.
ಮೂಲ ...{Loading}...
ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ ॥79॥
೦೮೦ ಕ್ಷಮಿಸುವುದು ಸರ್ವೇಶ ...{Loading}...
ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ ॥80॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸರ್ವೇಶ್ವರನೇ ಕ್ಷಮಿಸು, ಸುಭಟನೆಂಬ ಅಭಿಮಾನ ಭ್ರಮೆಯಿಂದ, ಮೋಹವೆಂಬ ಅಂಧಕೂಪದಲ್ಲಿ ಮುಳುಗಿ ವೇದಗಳನ್ನು ಸರಿಯಾಗಿ ಅರಿಯದೆ ಮೋಕ್ಷಬಾಹಿರನಾಗಿರುವ ನನ್ನನ್ನು ಕರುಣೆಯಿಂದ ಕಾಪಾಡಬೇಕು’ ಎಂದನು.
ಮೂಲ ...{Loading}...
ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ ॥80॥
೦೮೧ ಅರಿದರಿದು ಮತಿಗೆಟ್ಟ ...{Loading}...
ಅರಿದರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕಂಡು ಕಂಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲ
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆಂದ ॥81॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾನು ತಿಳಿದೂ ಮತಿಗೆಟ್ಟ ಮನುಷ್ಯ ಕುರಿಯೇ ಸರಿ. ಕಂಡೂ ಎಚ್ಚರತಪ್ಪಿದ ಮೂರ್ಖನು. ಅವಿವೇಕಿಯಾಗಿ, ಅಂತರಂಗವನ್ನು ತಿಳಿಯಲಾರದ ನನ್ನ ಅಪರಾಧವನ್ನು ಮರೆತು, ಕರುಣೆಯಿಂದ ಸಲಹಬೇಕು’ ಎಂದನು.
ಪದಾರ್ಥ (ಕ.ಗ.ಪ)
ಮೂಗುಮಾರಿ - ಮಾನಗೇಡಿ
ಮೂಲ ...{Loading}...
ಅರಿದರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕಂಡು ಕಂಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲ
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆಂದ ॥81॥
೦೮೨ ದೇವ ದೇವ ...{Loading}...
ದೇವ ದೇವ ಕೃಪಾಂಬುನಿಧಿ ಭ
ಕ್ತಾವಲಂಬನ ಭಕ್ತದೇಹಿಕ
ಸೇವಕಪ್ರಿಯ ಭೂತಭಾವನ ಭಾವನಾತೀತ
ದೇವವಂದಿತ ಕಾಲರೂಪ ಮ
ಹಾ ವಿಭವ ಭವರಹಿತ ಪಾವನ
ಪಾವಕಾಂಬಕ ಸುತಿಕುಟುಂಬಿಕ ಕರುಣಿಸುವುದೆಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವನೇ ! ಕೃಪಾನಿಧಿಯೇ, ಭಕ್ತವತ್ಸಲನೇ, ಸೇವಕ ಪ್ರಿಯನೇ, ಜೀವಭಾವನೇ, ಭಾವಾತೀತನೇ, ಕಾಲರೂಪನೆ, ದೇವವಂದಿತನೆ, ಭವರಹಿತನೇ, ನಿಟಿಲನಯನನೆ, ಭಜಿಸಿದವರನ್ನು ಪ್ರೀತಿಸುವವನೇ, ನನ್ನನ್ನು ಅನುಗ್ರಹಿಸು’ ಎಂದನು.
ಪದಾರ್ಥ (ಕ.ಗ.ಪ)
ನಿಟಿಲನಯನ - ಹಣೆಗಣ್ಣ ಈಶ್ವರ
ಮೂಲ ...{Loading}...
ದೇವ ದೇವ ಕೃಪಾಂಬುನಿಧಿ ಭ
ಕ್ತಾವಲಂಬನ ಭಕ್ತದೇಹಿಕ
ಸೇವಕಪ್ರಿಯ ಭೂತಭಾವನ ಭಾವನಾತೀತ
ದೇವವಂದಿತ ಕಾಲರೂಪ ಮ
ಹಾ ವಿಭವ ಭವರಹಿತ ಪಾವನ
ಪಾವಕಾಂಬಕ ಸುತಿಕುಟುಂಬಿಕ ಕರುಣಿಸುವುದೆಂದ ॥82॥
೦೮೩ ಜಯ ಜಗತ್ರಯನಾಥ ...{Loading}...
ಜಯ ಜಗತ್ರಯನಾಥ ಭಕ್ತಾ
ಶ್ರಯಸದಾಶಿವ ಭಕ್ತವತ್ಸಲ
ಲಯವಿಹೀನ ಮಹೇಶ ಮನ್ಮಥಹರ ಮಹಾದೇವ
ಭಯರಹಿತ ಭಾಳಾಕ್ಷ ಲೋಕ
ವ್ಯಯಭವನ ದುರ್ಲಕ್ಷಿ ದೇವ
ತ್ರಯ ನಮಸ್ಕೃತ ನಿಗಮ ಸತ್ಕೃತ ಕರುಣಿಸುವುದೆಂದ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜಗನ್ನಾಥನೇ, ಭಕ್ತಾಶ್ರಯನೇ, ಭಕ್ತವತ್ಸಲನೇ ಅನಂತನೇ, ಮದನಹರನಾದ ಮಹಾದೇವನೆ, ಭಯರಹಿತನೆ, ಫಾಲನಯನನೆ, ಅಚ್ಯುತನೆ, ತ್ರಿಮೂರ್ತಿವಂದಿತನೆ, ವೇದವಂದ್ಯನೆ, ಕಾಪಾಡು’ ಎಂದನು.
ಮೂಲ ...{Loading}...
ಜಯ ಜಗತ್ರಯನಾಥ ಭಕ್ತಾ
ಶ್ರಯಸದಾಶಿವ ಭಕ್ತವತ್ಸಲ
ಲಯವಿಹೀನ ಮಹೇಶ ಮನ್ಮಥಹರ ಮಹಾದೇವ
ಭಯರಹಿತ ಭಾಳಾಕ್ಷ ಲೋಕ
ವ್ಯಯಭವನ ದುರ್ಲಕ್ಷಿ ದೇವ
ತ್ರಯ ನಮಸ್ಕೃತ ನಿಗಮ ಸತ್ಕೃತ ಕರುಣಿಸುವುದೆಂದ ॥83॥
೦೮೪ ಸರ್ವಗತ ಸರ್ವಜ್ಞ ...{Loading}...
ಸರ್ವಗತ ಸರ್ವಜ್ಞ ಸರ್ವದ
ಸರ್ವಭಾವನ ಸರ್ವತೋಮುಖ
ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ
ಸರ್ವ ಸರ್ವಾಶ್ರಯ ಸಮಾಹಿತ
ಸರ್ವಮಯ ಸರ್ವೇಶ್ವರೇಶ್ವರ
ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆಂದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸರ್ವಗತನೂ, ಸರ್ವಜ್ಞನೂ, ಸರ್ವದಾಯಕನೂ ಸರ್ವಭಾವನೂ, ಸರ್ವತೋಮುಖನೂ, ಸರ್ವಪೂಜಿತನೂ, ಸರ್ವಸಾಧಕನೂ, ಸರ್ವಗುಣ ಸನ್ನಿಧಾನನೂ, ಸರ್ವಾಶ್ರಯನೂ, ಸರ್ವಮಯನೂ, ಸರ್ವೇಶ್ವರನೂ ಆದ ಸಮಸ್ತ ಸಂಕಟಹರನಾದ ಮಹೇಶ್ವರನೇ ಕಾಪಾಡು’ ಎಂದನು.
ಮೂಲ ...{Loading}...
ಸರ್ವಗತ ಸರ್ವಜ್ಞ ಸರ್ವದ
ಸರ್ವಭಾವನ ಸರ್ವತೋಮುಖ
ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ
ಸರ್ವ ಸರ್ವಾಶ್ರಯ ಸಮಾಹಿತ
ಸರ್ವಮಯ ಸರ್ವೇಶ್ವರೇಶ್ವರ
ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆಂದ ॥84॥
೦೮೫ ರೂಪರಹಿತ ಸರೂಪ ...{Loading}...
ರೂಪರಹಿತ ಸರೂಪ ನಿರ್ಮಲ
ರೂಪ ವಿಶ್ವಾಧಾರ ಸದಸ
ದ್ರೂಪರೂಪ ವ್ಯೋಮ ರೂಪಕ ಸರ್ವತೋರೂಪ
ರೂಪರಸಗಂಧಾದಿ ವಿಷಯ ವಿ
ರೂಪ ರೂಪಾತೀತ ಸಂವಿ
ದ್ರೂಪ ವಿಮಲವಿರೂಪಲೋಚನ ಕರುಣಿಸುವುದೆಂದ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿರಾಕಾರನೂ, ಸಾಕಾರನೂ, ಶಿವಸ್ವರೂಪನೂ, ಜಗದಾಧಾರನೂ, ಸತ್ ಅಸತ್ ರೂಪನೂ, ಆಕಾಶ ವ್ಯಾಪ್ತನೂ, ರೂಪರಸಗಂಧವೇ ಮೊದಲಾದ ವಿಷಯಗಳಿಗೆ ನಿಲುಕದವನೂ ಆದ ವಿರೂಪಾಕ್ಷನೇ ಕಾಪಾಡು’ ಎಂದನು.
ಮೂಲ ...{Loading}...
ರೂಪರಹಿತ ಸರೂಪ ನಿರ್ಮಲ
ರೂಪ ವಿಶ್ವಾಧಾರ ಸದಸ
ದ್ರೂಪರೂಪ ವ್ಯೋಮ ರೂಪಕ ಸರ್ವತೋರೂಪ
ರೂಪರಸಗಂಧಾದಿ ವಿಷಯ ವಿ
ರೂಪ ರೂಪಾತೀತ ಸಂವಿ
ದ್ರೂಪ ವಿಮಲವಿರೂಪಲೋಚನ ಕರುಣಿಸುವುದೆಂದ ॥85॥
೦೮೬ ರಚಿತ ಮಾಯ ...{Loading}...
ರಚಿತ ಮಾಯ ವಿಮಾಯ ಮಾಯಾ
ನಿಚಿತ ಮಾಯಾಧಾರ ಮಾಯಾ
ರುಚಿರ ಮಾಯಾರೂಪ ಮಾಯಾಮಯ ಜಗನ್ಮಾಯ
ಶುಚಿ ಸತೇಜೋಬಲ ಹಿರಣ್ಯ
ಪ್ರಚಯತೇಜ ಸುತೇಜ ಗೌರೀ
ಕುಚಯುಗಾಂಕಿತವಕ್ಷನೀಕ್ಷಿಸಿ ಕರುಣಿಸುವುದೆಂದ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಾಯೆಯನ್ನು ರಚಿಸುವವನೂ, ಪರಿಹರಿಸುವವನು ಮಾಯೆಗೆ ಆಧಾರನೂ, ಮಾಯಾರೂಪನೂ, ಮಾಯೆಯಿಂದ ಕೂಡಿದ ಜಗತ್ತಿಗೆ ಅಧಿಪತಿಯೂ, ತೇಜಸ್ಸು, ಬಲ, ಸಂಪತ್ತುಗಳನ್ನು ನೀಡುವವನೂ ಗೌರಿದೇವಿಗೆ ಆನಂದದಾಯಕನೂ ಆಗಿರುವ ನೀನು ಕರುಣಿಸು’ ಎಂದನು.
ಮೂಲ ...{Loading}...
ರಚಿತ ಮಾಯ ವಿಮಾಯ ಮಾಯಾ
ನಿಚಿತ ಮಾಯಾಧಾರ ಮಾಯಾ
ರುಚಿರ ಮಾಯಾರೂಪ ಮಾಯಾಮಯ ಜಗನ್ಮಾಯ
ಶುಚಿ ಸತೇಜೋಬಲ ಹಿರಣ್ಯ
ಪ್ರಚಯತೇಜ ಸುತೇಜ ಗೌರೀ
ಕುಚಯುಗಾಂಕಿತವಕ್ಷನೀಕ್ಷಿಸಿ ಕರುಣಿಸುವುದೆಂದ ॥86॥
೦೮೭ ಪರಮಹಂಸ ಪರಾತ್ಮ ...{Loading}...
ಪರಮಹಂಸ ಪರಾತ್ಮ ಪರಮೇ
ಶ್ವರ ಪರಬ್ರಹ್ಮೈಕ ವಿಗ್ರಹ
ಪರಮಶಿವ ಪರತತ್ವರೂಪ ಪರಾತ್ಪರಾನಂದ
ಪರಮಗುಣ ಪರಶಕ್ತಿ ವಾಗೀ
ಶ್ವರ ಪರಾರ್ತಿಹರೇಶ ಪರ ಶಂ
ಕರ ಪರಂಜ್ಯೋತಿಯೆ ಪರೋತ್ತಮ ಕರುಣಿಸುವುದೆಂದ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರಮಹಂಸನೂ, ಪರಮಾತ್ಮನೂ, ಪರಮೇಶ್ವರನೂ, ಪರಬ್ರಹ್ಮನೂ, ಪರಶಿವನೂ, ಪರತತ್ತ್ವರೂಪನೂ, ಪರಾತ್ಮರನೂ, ಪರಮಗುಣನೂ, ಪರಶಕ್ತಿಯೂ, ಬ್ರಹ್ಮ ವಿಷ್ಣು ರುದ್ರ ರೂಪನೂ, ಶಂಕರನೂ, ಪರಂಜ್ಯೋತಿ ಸ್ವರೂಪನೂ ಆದ ಶಿವನೇ ರಕ್ಷಿಸು’ ಎಂದನು.
ಮೂಲ ...{Loading}...
ಪರಮಹಂಸ ಪರಾತ್ಮ ಪರಮೇ
ಶ್ವರ ಪರಬ್ರಹ್ಮೈಕ ವಿಗ್ರಹ
ಪರಮಶಿವ ಪರತತ್ವರೂಪ ಪರಾತ್ಪರಾನಂದ
ಪರಮಗುಣ ಪರಶಕ್ತಿ ವಾಗೀ
ಶ್ವರ ಪರಾರ್ತಿಹರೇಶ ಪರ ಶಂ
ಕರ ಪರಂಜ್ಯೋತಿಯೆ ಪರೋತ್ತಮ ಕರುಣಿಸುವುದೆಂದ ॥87॥
೦೮೮ ಲಿಙ್ಗಮಯ ನಿರ್ಲಿಙ್ಗ ...{Loading}...
ಲಿಂಗಮಯ ನಿರ್ಲಿಂಗ ತೇಜೋ
ಲಿಂಗ ಲಿಂಗಾತ್ಮಕ ಸದಾಶಿವ
ಲಿಂಗ ನಿರ್ಮಳ ಲಿಂಗ ಲಿಂಗಸ್ಥಿತ ಮಹಾಲಿಂಗ
ಲಿಂಗ ವಿಲಸಿತ ಲಿಂಗ ಚಿನುಮಯ
ಲಿಂಗ ಚೇತನ ಲಿಂಗ ದುರ್ಗಾ
ಲಿಂಗಿತಾಂಗ ವಿಲಾಸ ಶಂಕರ ಕರುಣಿಸುವುದೆಂದ ॥88॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಲಿಂಗಮಯನೂ, ನಿರ್ಲಿಂಗನೂ, ತೇಜೋಲಿಂಗನೂ, ಲಿಂಗಾತ್ಮಕ ಸದಾಶಿವನೂ, ಲಿಂಗರೂಪದಲ್ಲಿರುವ ಮಹಾಲಿಂಗನೂ, ಲಿಂಗವಿಲಸಿತನೂ, ಚಿನ್ಮಯನೂ, ಚೇತನಕಾರಿಯೂ, ದುರ್ಗಾಲಿಂಗನ ವಿಲಾಸಿಯೂ ಆದ ಶಿವನೇ ರಕ್ಷಿಸಬೇಕು’ ಎಂದನು.
ಮೂಲ ...{Loading}...
ಲಿಂಗಮಯ ನಿರ್ಲಿಂಗ ತೇಜೋ
ಲಿಂಗ ಲಿಂಗಾತ್ಮಕ ಸದಾಶಿವ
ಲಿಂಗ ನಿರ್ಮಳ ಲಿಂಗ ಲಿಂಗಸ್ಥಿತ ಮಹಾಲಿಂಗ
ಲಿಂಗ ವಿಲಸಿತ ಲಿಂಗ ಚಿನುಮಯ
ಲಿಂಗ ಚೇತನ ಲಿಂಗ ದುರ್ಗಾ
ಲಿಂಗಿತಾಂಗ ವಿಲಾಸ ಶಂಕರ ಕರುಣಿಸುವುದೆಂದ ॥88॥
೦೮೯ ನಿರವಧಿಕ ನಿರ್ಮಾಯ ...{Loading}...
ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿದ್ರ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ ॥89॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿರವಧಿಕನೂ, ನಿರ್ಮಾಯನೂ, ನಿಸ್ಪೃಹನೂ, ನಿರುಪಮನೂ, ನಿದ್ರ್ವಂದ್ವನೂ, ನಿರ್ಗುಣನೂ, ಅವಯವ ರಹಿತನೂ, ಲೇಪರಹಿತನೂ, ನಿರವಗ್ರಹನೂ, ನಿರಾಧಾರನೂ, ನಿರಾಮಯನೂ, ನಿರಂತರನೂ, ನಿರವಶೇಷನೂ, ಅಂಗರಹಿತನೂ ನಿರ್ಮಲನೂ, ನಿರತಿಶಯನೂ ನಿಷ್ಕಳನೂ ಆದ ಶಿವನೇ ಕಾಪಾಡು’ ಎಂದನು.
ಮೂಲ ...{Loading}...
ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿದ್ರ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ ॥89॥
೦೯೦ ವಾಮದೇವ ದುರನ್ತವಿಮಲ ...{Loading}...
ವಾಮದೇವ ದುರಂತವಿಮಲ
ವ್ಯೋಮಕೇಶ ಕೃತಾಂತಹರ ನಿ
ಸ್ಸೀಮ ಮೃತ್ಯುಂಜಯ ಸಮಂಜಸ ಸರ್ವತೋಭದ್ರ
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮ ರೂಪತ್ರಯ ವೃಷಧ್ವಜ
ಕಾಮಹರ ಕರುಣಾಮಹಾರ್ಣವ ಕರುಣಿಸುವುದೆಂದ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವಾಮದೇವನೇ, ನಭಕೇಶನೇ, ಕಾಲಕಾಲನೇ, ಮೃತ್ಯುಂಜಯನೇ, ಸರ್ವತೋಭದ್ರನಾದ ಭೀಮ, ಭರ್ಗ, ಕಪರ್ದಿಗಳೆಂಬ ಕಲ್ಪಿತ ಹೆಸರುಗಳುಳ್ಳವನೂ, ರೂಪತ್ರಯನೂ, ವೃಷಭವಾಹನನೂ, ಕಾಮಹರನೂ, ಕರುಣಾಸಿಂಧುವೂ ಆದ ಶಿವನೇ, ರಕ್ಷಿಸು’ ಎಂದನು.
ಮೂಲ ...{Loading}...
ವಾಮದೇವ ದುರಂತವಿಮಲ
ವ್ಯೋಮಕೇಶ ಕೃತಾಂತಹರ ನಿ
ಸ್ಸೀಮ ಮೃತ್ಯುಂಜಯ ಸಮಂಜಸ ಸರ್ವತೋಭದ್ರ
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮ ರೂಪತ್ರಯ ವೃಷಧ್ವಜ
ಕಾಮಹರ ಕರುಣಾಮಹಾರ್ಣವ ಕರುಣಿಸುವುದೆಂದ ॥90॥
೦೯೧ ಹರಹರಾ ತ್ರೈಮೂರ್ತಿ ...{Loading}...
ಹರಹರಾ ತ್ರೈಮೂರ್ತಿ ರೂಪನು
ಧರಿಸಿಯತುಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿ ರಂಜಿಸುವ
ಪರಿಯನರಿವವನಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತ್ರಿಮೂರ್ತಿರೂಪನಾದ ನೀನು ಅಷ್ಟಮೂರ್ತಿಯಾಗಿ, ವಿಶ್ವಮೂರ್ತಿಯಾಗಿ ನಿಂತಿರುವ ಈ ಪರಿಯನ್ನು ಯಾರು ತಾನೇ ಅರಿಯಬಲ್ಲರು ? ಇದು ದೇವತೆಗಳು, ದೈತ್ಯರು, ಮುನಿಗಳಿಗೂ ಅಸಾಧ್ಯ. ನನ್ನನ್ನು ಅನುಗ್ರಹಿಸುವುದಕ್ಕಾಗಿ ಈ ರೂಪತಳೆದೆಯಲ್ಲಾ ಮಹಾದೇವನೇ’ ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಹರಹರಾ ತ್ರೈಮೂರ್ತಿ ರೂಪನು
ಧರಿಸಿಯತುಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿ ರಂಜಿಸುವ
ಪರಿಯನರಿವವನಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ ॥91॥
೦೯೨ ದೇವ ಸುರ ...{Loading}...
ದೇವ ಸುರ ದನುಜೇಶವಂದಿತ
ದೇವ ಮನುಮುನಿನಿಕರಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ಧರಿಪ ಶಿವ ಮಾ
ದೇವ ಕರುಣಿಸಿದೈಯನಾಥಂಗೆಂದನಾ ಪಾರ್ಥ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುರಾಸುರರಿಂದ ಪೂಜೆಗೊಂಡವನೂ, ಮನು ಮುನಿಗಳಿಂದ ಸೇವಿಸಲ್ಪಟ್ಟವನೂ. ಸಾಕಾರನೂ, ನಿರಾಕಾರನೂ, ಆದ ನೀನು ಭಕ್ತರನ್ನು ಕಾಪಾಡುವುದಕ್ಕಾಗಿ ಈ ಆಕಾರವನ್ನು ತಳೆದಿರುವೆಯಲ್ಲಾ, ಈ ಅನಾಥನನ್ನು ಕರುಣಿಸಿದೆಯಲ್ಲಾ’ ಎಂದನು.
ಮೂಲ ...{Loading}...
ದೇವ ಸುರ ದನುಜೇಶವಂದಿತ
ದೇವ ಮನುಮುನಿನಿಕರಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ
ದೇವ ಸಾಕಾರದಲಿ ನಿಜ ಭ
ಕ್ತಾವಳಿಯನುದ್ಧರಿಪ ಶಿವ ಮಾ
ದೇವ ಕರುಣಿಸಿದೈಯನಾಥಂಗೆಂದನಾ ಪಾರ್ಥ ॥92॥
೦೯೩ ಹರನೆ ಗಙ್ಗಾಧರನೆ ...{Loading}...
ಹರನೆ ಗಂಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ಧ್ವರಹರನೆ ಶಂಕರನೆ ನಿಜಭಕ್ತರ ಮನೋಹರನೆ
ಕರುಣಿಸುವುದುದ್ಧರಿಸುವುದು ಸಂ
ಹರಿಸು ಮತ್ಪರಿಭವವನೆಂದುರು
ತರದ ಭಕ್ತಿಯಲಂದು ಸೈಗೆಡೆದಿರ್ದನಾ ಪಾರ್ಥ ॥93॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹರನೆ, ಗಂಗಾಧರನೆ, ಗೌರೀವಲ್ಲಭನೆ, ಚಂದ್ರಶೇಖರನೆ, ದಕ್ಷಯಜ್ಞ ಧ್ವಂಸಿಯೆ, ಶಂಕರನೆ, ಭಕ್ತ ಪ್ರಿಯನೆ, ನೀನು ನನ್ನ ಮೇಲೆ ಕರುಣೆ ತೋರಿ ಉದ್ಧರಿಸಿ, ನನ್ನ ಸೋಲನ್ನು ನಿವಾರಿಸಬೇಕು’ ಎಂದು ಭಕ್ತಿಯಿಂದ ಅರ್ಜುನನು ಪ್ರಾರ್ಥಿಸಿದನು.
ಮೂಲ ...{Loading}...
ಹರನೆ ಗಂಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ಧ್ವರಹರನೆ ಶಂಕರನೆ ನಿಜಭಕ್ತರ ಮನೋಹರನೆ
ಕರುಣಿಸುವುದುದ್ಧರಿಸುವುದು ಸಂ
ಹರಿಸು ಮತ್ಪರಿಭವವನೆಂದುರು
ತರದ ಭಕ್ತಿಯಲಂದು ಸೈಗೆಡೆದಿರ್ದನಾ ಪಾರ್ಥ ॥93॥
೦೯೪ ಧರಣಿಪತಿ ಕೇಳೀಶನೀತನ ...{Loading}...
ಧರಣಿಪತಿ ಕೇಳೀಶನೀತನ
ಹೊರೆಗೆ ಬಿಜಯಂಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು
ಮರುಳು ಮಗನೆ ಮಹಾ ತಪಸ್ಸಂ
ಚರಣೆಯಲಿ ನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ ॥94॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಲಾಲಿಸು. ಪಾರ್ಥನನ್ನು ಪರಶಿವನು ಹಿಡಿದೆತ್ತಿ ಆಲಿಂಗಿಸಿದನು. ‘ಮಗುವೇ, ಈ ಘೋರವಾದ ತಪಸ್ಸಿನಲ್ಲಿ ನೊಂದೆಯಾ ?’ ಎನ್ನುತ್ತಾ ಕರುಣೆಯ ಸಮುದ್ರದಲ್ಲಿ ಅವನನ್ನು ಮುಳುಗಿಸಿದನು.
ಮೂಲ ...{Loading}...
ಧರಣಿಪತಿ ಕೇಳೀಶನೀತನ
ಹೊರೆಗೆ ಬಿಜಯಂಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು
ಮರುಳು ಮಗನೆ ಮಹಾ ತಪಸ್ಸಂ
ಚರಣೆಯಲಿ ನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ ॥94॥
೦೯೫ ಕೂಡೆ ಮೈದಡವಿದನು ...{Loading}...
ಕೂಡೆ ಮೈದಡವಿದನು ಚೈಮುಂ
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ
ಕೋಡದಿರು ಕೊಂಕದಿರು ಭಕ್ತಿಗೆ
ನಾಡೆ ಮೆಚ್ಚಿದೆನೆನ್ನ ಚಿತ್ತಕೆ
ಖೋಡಿಯಿಲ್ಲೆಲೆ ಮಗನೆ ಗುಹ ಗಣಪತಿಗಳಾಣೆಂದ ॥95॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೈಯನ್ನು ತಡಪಿ, ಮುಂಡಾಡಿ ಮನದಲ್ಲಿ ನೊಂದುಕೊಳ್ಳಬೇಡವೆಂದು ಹೇಳುತ್ತಾ ‘ನೀನು ಮಾಡಿದ ಯುದ್ಧವೇ ಅರ್ಚನೆ, ವಂದನೆಗಳು. ಹೆದರಬೇಡ. ‘ನಿನ್ನ ಭಕ್ತಿಗೆ ಮೆಚ್ಚಿದೆ. ಸುಬ್ರಹ್ಮಣ್ಯ, ಗಣಪತಿಗಳ ಆಣೆಯಾಗಿಯೂ ನನಗೆ ಬೇಸರವಿಲ್ಲ’ ಎಂದು ಶಿವನು ಹೇಳಿದನು.
ಮೂಲ ...{Loading}...
ಕೂಡೆ ಮೈದಡವಿದನು ಚೈಮುಂ
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ
ಕೋಡದಿರು ಕೊಂಕದಿರು ಭಕ್ತಿಗೆ
ನಾಡೆ ಮೆಚ್ಚಿದೆನೆನ್ನ ಚಿತ್ತಕೆ
ಖೋಡಿಯಿಲ್ಲೆಲೆ ಮಗನೆ ಗುಹ ಗಣಪತಿಗಳಾಣೆಂದ ॥95॥
೦೯೬ ನರನು ನೀ ...{Loading}...
ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರ ಧನುವ ॥96॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿಂದೆ ನೀನು ನರನೆಂಬ ಋಷಿಯು ನಾರಾಯಣಾಂಶ ಸಂಭೂತನು. ನನ್ನ ಪ್ರೀತಿಯ ಭಕ್ತನು. ಚಿಂತೆ ಮಾಡಬೇಡ. ನಿನಗೆ ನಾನು ಪ್ರಸನ್ನನಾಗಿ ಈ ಖಡ್ಗವನ್ನೂ, ಧನುರ್ಬಾಣಗಳನ್ನೂ ಪ್ರೀತಿಯಿಂದ ಹಿಂದಿರುಗಿಸುತ್ತಿದ್ದೇನೆ” ಎಂದನು.
ಮೂಲ ...{Loading}...
ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರ ಧನುವ ॥96॥
೦೯೭ ಸಲಿಸುವೆನು ನೀ ...{Loading}...
ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ ॥97॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಬೇಡಿದುದನ್ನು ಅನುಗ್ರಹಿಸುತ್ತೇನೆ, ಹೆದರಬೇಡ” ಎಂದು ಶಿವನು ಹೇಳಲು, ಅರ್ಜುನನು ‘ನೀನು ಭಕ್ತರಿಗೆ ಪ್ರಿಯನಾಗಿರುವಾಗ ನಮಗೆ ಭಯವೇಕೆ ? ಕೃಪೆಯಿಂದ ನನಗೆ ಪಾಶುಪತಾಸ್ತ್ರವನ್ನೂ ಬ್ರಹ್ಮಶಿರೋಸ್ತ್ರವನ್ನೂ ಕರುಣಿಸು’ ಎಂದು ಬೇಡಿದನು.
ಮೂಲ ...{Loading}...
ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ ॥97॥
೦೯೮ ಸವಡಿ ನುಡಿಯುಣ್ಟೇ ...{Loading}...
ಸವಡಿ ನುಡಿಯುಂಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ ॥98॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎರಡು ಮಾತಿದೆಯೆ ? ಹದಿನಾಲ್ಕು ಲೋಕಗಳನ್ನೇ ಸುಡುವ ಈ ಬ್ರಹ್ಮಶಿರ ಎಂಬ ಬಾಣವನ್ನು ನೀಡುತ್ತೇನೆ. ದೇವ ದೈತ್ಯೋರಗರಲ್ಲಿ ಯಾರಿಗೂ ಇದನ್ನು ಎದುರಿಸಲಾಗದು. ತಿಣುಕಿದರೆ ಇನ್ನಷ್ಟು ಆಹುತಿ ತೆಗೆದುಕೊಳ್ಳುವ ಉದ್ದಂಡ ಶರವಿದು” ಎಂದನು.
ಪದಾರ್ಥ (ಕ.ಗ.ಪ)
ಸವಡಿ-ಎದುರು, ಎರಡು
ಮೂಲ ...{Loading}...
ಸವಡಿ ನುಡಿಯುಂಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ ॥98॥
೦೯೯ ಸರಸಿಯಲಿ ಮಿನ್ದಾಚಮನ ...{Loading}...
ಸರಸಿಯಲಿ ಮಿಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ ॥99॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರೋವರದಲ್ಲಿ ಮಿಂದು, ಆಚಮನಾದಿಗಳನ್ನು ಮಾಡಿ, ಅರ್ಜುನನು ಪರಶಿವನಿಗೆ ನಮಸ್ಕರಿಸಿ ನಿಂತನು. ಆಗ ಅವನಿಗೆ ಪಾಶುಪತಾಸ್ತ್ರದ ಮಂತ್ರೋಚ್ಚಾರ, ಸಂಹೃತಿ, ಮೋಕ್ಷ ವಿಧಾನಗಳ ರಹಸ್ಯವನ್ನು ಶಿವನು ಕರುಣಿಸಿದನು.
ಮೂಲ ...{Loading}...
ಸರಸಿಯಲಿ ಮಿಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಾಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ ॥99॥
೧೦೦ ಜಗವುಘೇಯೆನ್ದುದು ಜಯಧ್ವನಿ ...{Loading}...
ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸುರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯ ತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕವು ‘ಉಘೇ’ ಎಂದಿತು. ಆಕಾಶದಲ್ಲಿ ಜಯಕಾರ ಮೊಳಗಿತು. ಪರಶಿವನ ಪದಕಮಲದಲ್ಲಿ ಪುಷ್ಪ ವೃಷ್ಟಿಯಾಯಿತು. ಅರ್ಜುನನ ಮನಸ್ಸು ಬುದ್ಧಿಗಳು ಪ್ರಫುಲ್ಲಗೊಂಡು.
ಮೂಲ ...{Loading}...
ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸುರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯ ತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ ॥100॥
೧೦೧ ಹರನ ಕೋಮಲಪಾಣಿ ...{Loading}...
ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗನಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರ ನರರ ಕಣ್ಮನವ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶಿವನ ಮೃದು ಕರ ಸ್ಪರ್ಶಾಮೃತದಿಂದ ಪೊರೆಯನ್ನು ಕಳಚಿದ ಹಾವಿನಂತೆ, ಅರ್ಜುನನ ಮೈಕಾಂತಿ ಹೆಚ್ಚಿ, ಸುರನರರ ಕಣ್ಮನಗಳನ್ನು ಕೋರೈಸಿತು.
ಪದಾರ್ಥ (ಕ.ಗ.ಪ)
ನಿರ್ಮೋಕ-ಪೊರೆ
ಮೂಲ ...{Loading}...
ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗನಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರ ನರರ ಕಣ್ಮನವ ॥101॥
೧೦೨ ಸುರಮುನೀಶರ ವೇದ ...{Loading}...
ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾಸ್ತುತಿರವದ ತುಂಬುರ ನಾರದಾದಿಗಳ
ವರ ರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ ॥102॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುರಮುನಿಗಳ ವೇದಮಂತ್ರೋಚ್ಚಾರ, ಗರುಡ ಗಂಧರ್ವರ ಸ್ತುತಿ, ತುಂಬುರು,ನಾರದರ ಸಂಗೀತ, ಊರ್ವಶಿ ಮೊದಲಾದ ಅಪ್ಸರೆಯರ ನೃತ್ಯ ಇವುಗಳೊಂದಿಗೆ ಪರಶಿವನ ದಯೆಯೆಂಬ ಸಮುದ್ರದಲ್ಲಿ ಪಾರ್ಥನು ತೇಲಾಡಿದನು.
ಮೂಲ ...{Loading}...
ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾಸ್ತುತಿರವದ ತುಂಬುರ ನಾರದಾದಿಗಳ
ವರ ರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ ॥102॥
೧೦೩ ಧರೆಗೆಸೆವ ಧರ್ಮಾರ್ಥ ...{Loading}...
ಧರೆಗೆಸೆವ ಧರ್ಮಾರ್ಥ ಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ಧರಿಪುದೀ
ಪರಮ ಭಕ್ತನನೆನಲು ಕರುಣದೊಳೀಕ್ಷಿಸಿದಳಗಜೆ ॥103॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತಿನಲ್ಲಿ ಶ್ರೇಷ್ಠವಾದ ಧಮಾರ್ಥಕಾಮಗಳನ್ನು, ಅನುಪಮವಾದ ಮೋಕ್ಷಪದವನ್ನೂ, ಯುದ್ಧದಲ್ಲಿ ವೈರಿಗಳನ್ನು ಜಯಿಸುವ ಶೌರ್ಯ ಸಾಹಸಗಳನ್ನು, ಅರ್ಜುನನಿಗೆ ಪರಶಿವನು ಅನುಗ್ರಹಿಸಿ ಆಲಿಂಗಿಸಿದನು. “ಈ ಭಕ್ತಾಗ್ರಾಣಿಯನ್ನು ನೀನು ಉದ್ಧರಿಸಬೇಕು’ ಎಂದು ಪಾರ್ವತಿಯನ್ನು ಕರೆದು ಹೇಳಿದನು. ಅವಳು ಕರುಣೆಯಿಂದ ನೋಡಿದಳು.
ಮೂಲ ...{Loading}...
ಧರೆಗೆಸೆವ ಧರ್ಮಾರ್ಥ ಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ಧರಿಪುದೀ
ಪರಮ ಭಕ್ತನನೆನಲು ಕರುಣದೊಳೀಕ್ಷಿಸಿದಳಗಜೆ ॥103॥
೧೦೪ ಗಿರಿಜೆ ತ್ರಿಜಗನ್ಮಾತೆ ...{Loading}...
ಗಿರಿಜೆ ತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
ಚರಿಸುತಿಹ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾ ಪಾರ್ಥ ॥104॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾರ್ವತಿ, ಜಗನ್ಮಾತೆ, ಕಾಪಾಡು. ಲೋಕದಲ್ಲಿ ಲಕ್ಷ್ಮಿ ಸರಸ್ವತಿ ಚಂಡಿ, ದುರ್ಗೆಯರೆಂಬ ಹೆಸರಲ್ಲಿ ಸಂಚರಿಸುವ ನಿನ್ನ ಮಹಿಮೆಯನ್ನು ಯಾರು ತಿಳಿಯಬಲ್ಲರು ?” ಎಂದು ಆಕೆಯ ಪದಗಳಿಗೆ ಅಭಿನಮಿಸಿ ಪಾರ್ಥನು ಪುಳಕಿತನಾದನು.
ಮೂಲ ...{Loading}...
ಗಿರಿಜೆ ತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
ಚರಿಸುತಿಹ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾ ಪಾರ್ಥ ॥104॥
೧೦೫ ಕಞ್ಜನಾಭನ ಮೈದುನನೆ ...{Loading}...
ಕಂಜನಾಭನ ಮೈದುನನೆ ಬಾ
ರಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮಥ್ರ್ಯದನುವನು ತಳೆದು ರಂಜಿಸುವ
ಅಂಜನಾಸ್ತ್ರವನಿತ್ತೆ ಮಗನೆ ಧ
ನಂಜಯನೆ ನಿನಗೆನುತ ಕರುಣದಿ
ಮಂಜುಳಾರವದಿಂದ ತಚ್ಛಸ್ತ್ರವನು ಬೆಸಸಿದಳು ॥105॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶ್ರೀಕೃಷ್ಣನ ಮೈದುನನೆ, ಬಾ ಹೆದರಬೇಡ. ವೈರಿಗಳನ್ನು ಸಂಹರಿಸುವ ಶಕ್ತಿಯುಳ್ಳ ಅಂಜನಾಸ್ತ್ರವನ್ನು ಮಗನೇ ನಿನಗೆ ನಾನೀಗ ನೀಡುತ್ತಿದ್ದೇನೆ’ ಎಂದು ಅದನ್ನು ಉಪದೇಶಿಸಿದಳು.
ಮೂಲ ...{Loading}...
ಕಂಜನಾಭನ ಮೈದುನನೆ ಬಾ
ರಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮಥ್ರ್ಯದನುವನು ತಳೆದು ರಂಜಿಸುವ
ಅಂಜನಾಸ್ತ್ರವನಿತ್ತೆ ಮಗನೆ ಧ
ನಂಜಯನೆ ನಿನಗೆನುತ ಕರುಣದಿ
ಮಂಜುಳಾರವದಿಂದ ತಚ್ಛಸ್ತ್ರವನು ಬೆಸಸಿದಳು ॥105॥
೧೦೬ ಒನ್ದು ದಶ ...{Loading}...
ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟ ರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರ ರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ ॥106॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಅಸ್ತ್ರವು ಒಂದು, ಹತ್ತು, ನೂರು, ಸಾವಿರ, ಲಕ್ಷ, ಕೋಟಿ, ಅನಂತವಾಗಿ ಪರಿಣಮಿಸಿ ನಿನಗೆ ಎದುರಾದ ಶತ್ರುಗಳನ್ನು ತಿಂದು ತೇಗುವುದು. ಪುನಃ ಬಂದು ಮಾಡಬೇಕಾದ ಕಾರ್ಯವೇನೆಂದು ಕೇಳುವುದು ?” ಎಂದು ತಿಳಿಸಿ ಅದರ ಮಂತ್ರೋಪದೇಶವನ್ನು ಅರ್ಜುನನಿಗೆ ಕರುಣಿಸಿದಳು.
ಪದಾರ್ಥ (ಕ.ಗ.ಪ)
ಅದಟ - ಶೂರ
ಮೂಲ ...{Loading}...
ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟ ರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರ ರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ ॥106॥
೧೦೭ ಕರಿಮುಖನ ಷಣ್ಮುಖನ ...{Loading}...
ಕರಿಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮಭಕ್ತಿಗೆ ಮೆಚ್ಚಿ ತೆಗೆದಪ್ಪಿನು ಕರುಣದಲಿ
ವರ ಮಹಾಸ್ತ್ರಂಗಳನು ಮಂತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆಂದು ಪರಸಿದರಾ ಧನಂಜಯನ ॥107॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಣಪತಿ, ಸುಬ್ರಹ್ಮಣ್ಯರಿಗೂ ಅರ್ಜುನ ವಂದಿಸಿದನು. ಆಗ ಅವರೂ ಅವನನ್ನು ಆಲಿಂಗಿಸಿ ಮಹಾಸ್ತ್ರಗಳನ್ನೂ, ಅವುಗಳ ಮಂತ್ರಗಳನ್ನೂ ಕರುಣಿಸಿ, ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲು ಎಂದು ಆಶೀರ್ವದಿಸಿದರು.
ಮೂಲ ...{Loading}...
ಕರಿಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮಭಕ್ತಿಗೆ ಮೆಚ್ಚಿ ತೆಗೆದಪ್ಪಿನು ಕರುಣದಲಿ
ವರ ಮಹಾಸ್ತ್ರಂಗಳನು ಮಂತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆಂದು ಪರಸಿದರಾ ಧನಂಜಯನ ॥107॥
೧೦೮ ಸರಳ ಸಾಙ್ಗೋಪಾಙ್ಗವನು ...{Loading}...
ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ ॥108॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಸ್ತ್ರದ ಅಂಗೋಪಾಂಗಗಳೆಲ್ಲವನ್ನು ನಿನಗೆ ತಿಳಿಸಿದ್ದೇನೆ. ಇನ್ನು ನೀನು ಇಂದ್ರಪುರಕ್ಕೆ ಹೋಗು. ನಿನ್ನ ಅಭ್ಯುದಯಕ್ಕೆ ಶ್ರೀಹರಿಯು ಸಹಾಯಿಯಾಗುತ್ತಾನೆ. ಅವನು ನಮ್ಮ ಶಕ್ತಿಯ ಸಾತ್ವಿಕ ರೂಪವೇ ಆಗಿದ್ದಾನೆ”. ಎಂದು ಹೇಳಿ ಪರಮೇಶ್ವರನು ಅರ್ಜುನನನ್ನು ಬೀಳ್ಕೊಟ್ಟನು.
ಮೂಲ ...{Loading}...
ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ ॥108॥
೧೦೯ ನಿಮ್ಮ ಕಥೆ ...{Loading}...
ನಿಮ್ಮ ಕಥೆ ವೇದೋಕ್ತವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ
ನಿಮ್ಮ ನಿಂದಿಸುವವರುಗಳು ದು
ಷ್ಕರ್ಮಿಗಳು ಪಾತಕರು ತಾನಿದು
ನಮ್ಮ ಮತವೆಂದಭವ ಹರಸಿದನಾ ಧನಂಜಯನ ॥109॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮ್ಮ ಕಥೆ ವೇದವಚನವಾಗಲಿ, ನಿಮ್ಮ ಬದುಕು ಉತ್ತಮ ಚರಿತೆಯಾಗಲಿ, ನಿಮ್ಮ ಕಥೆಯನ್ನು ಕೇಳಿದವರ ಪಾಪ ನಾಶವಾಗಲಿ. ನಿಮ್ಮನ್ನು ನಿಂದಿಸುವ ಜನರು ದುಷ್ಕರ್ಮಿಗಳು, ಪಾಪಿಷ್ಠರಾಗುತ್ತಾರೆ. - ಇದು ನಮ್ಮ ಅಭಿಪ್ರಾಯ’ ಎಂದು ಪಾರ್ಥನನ್ನು ಶಿವನು ಹರಸಿ ಕಳುಹಿಸಿದನು.
ಮೂಲ ...{Loading}...
ನಿಮ್ಮ ಕಥೆ ವೇದೋಕ್ತವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ
ನಿಮ್ಮ ನಿಂದಿಸುವವರುಗಳು ದು
ಷ್ಕರ್ಮಿಗಳು ಪಾತಕರು ತಾನಿದು
ನಮ್ಮ ಮತವೆಂದಭವ ಹರಸಿದನಾ ಧನಂಜಯನ ॥109॥
೧೧೦ ದೇವಿಯರು ಗುಹ ...{Loading}...
ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮಟ್ಟನವರ ಕೃ
ಪಾವಲೋಕನದಿಂದ ಹೊಂಪುಳಿ ಹೋದನಡಿಗಡಿಗೆ
ದೇವ ಬಿಜಯಂಗೈದ ರಜತ
ಗ್ರಾವಶಿಖರಕೆ ಮನದೊಳಗೆ ಸಂ
ಭಾವಿಸಿದನೀ ವೀರನಾರಾಯಣನ ಮೈದುನನ ॥110॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ವತಿ, ಸುಬ್ರಹ್ಮಣ್ಯ, ಗಣಪತಿಯೇ ಮೊದಲಾದ ಪರಿವಾರಕ್ಕೆ ಅರ್ಜುನನು ನಮಸ್ಕರಿಸಿ, ಅವರ ದಯಾದೃಷ್ಟಿಯಿಂದ ರೋಮಾಂಚನಗೊಂಡನು. ಪರಮೇಶ್ವರನು ಕೈಲಾಸಗಿರಿಗೆ ಹಿಂದಿರುಗಿ, ತನ್ನ ಮನಸ್ಸಿನಲ್ಲಿ ಅರ್ಜುನನನ್ನು ಮೆಚ್ಚಿಕೊಂಡನು.
ಮೂಲ ...{Loading}...
ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮಟ್ಟನವರ ಕೃ
ಪಾವಲೋಕನದಿಂದ ಹೊಂಪುಳಿ ಹೋದನಡಿಗಡಿಗೆ
ದೇವ ಬಿಜಯಂಗೈದ ರಜತ
ಗ್ರಾವಶಿಖರಕೆ ಮನದೊಳಗೆ ಸಂ
ಭಾವಿಸಿದನೀ ವೀರನಾರಾಯಣನ ಮೈದುನನ ॥110॥