೦೦೦ ಸೂ ಬರುತ ...{Loading}...
ಸೂ. ಬರುತ ಕಂಡನು ಕಣ್ವನಾಶ್ರಮ
ವರದ ಜಂಬೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ ॥ 0 ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ದಾರಿಯಲ್ಲಿ ಬರುತ್ತಾ ಕಣ್ವಾಶ್ರಮದಲ್ಲಿರುವ ಜಂಬೂಫಲವನ್ನು ಕಂಡು ಭೀಮಸೇನನು ಅದನ್ನು ತರಲು, ಧರ್ಮರಾನು ದುಃಖಿಸಲು ಅನಂತರ ಶ್ರೀಕೃಷ್ಣನೇ ಅದನ್ನು ಮರಳಿ ಮರದ ಕೊಂಬೆಗೇರಿಸಿದನು.
ಪದಾರ್ಥ (ಕ.ಗ.ಪ)
ಜಂಬೂಫಲ - ನೇರಿಳೆ ಹಣ್ಣು
ಅಡರಿಸು - ಏರಿಸು
ಮೂಲ ...{Loading}...
ಸೂ. ಬರುತ ಕಂಡನು ಕಣ್ವನಾಶ್ರಮ
ವರದ ಜಂಬೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ ॥ 0 ॥
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನಾದ ಜನಮೇಜಯನೇ ಕೇಳು. ಧರ್ಮರಾಯನು ಸಹೋದರರು ಮತ್ತು ಮುನಿಜನಗಳೊಂದಿಗೆ ಹೊರಟು, ಬಿಸಿಲಿನಬೇಗೆಯಲ್ಲಿ ಬೆಟ್ಟಗಳ ಮೇಲೆ ಭಯಂಕರವಾದ ಅರಣ್ಯದಲ್ಲಿ ಸಂಚರಿಸುತ್ತಾ , ಹಾವುಗಳು, ಆನೆಗಳು, ಸಿಂಹ, ಶಾರ್ದೂಲಗಳನ್ನು ನೋಡಿದನು.
ಪದಾರ್ಥ (ಕ.ಗ.ಪ)
ವ್ಯಾಳ - ಹಾವು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ ॥1॥
೦೦೨ ಬರಬರಲು ಮುನ್ದೊನ್ದು ...{Loading}...
ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಮರ ಪೂ ಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಮುಂದೆ ಬರಲು ಒಂದು ಕಾಡಿನಲ್ಲಿ ಅನೇಕ ವಿಧವಾದ ಪಕ್ಷಿ ಪ್ರಾಣಿಗಳು, ಚಿಗುರಿದ ಹೂಗಳ ಮೇಲೆ ಕುಳಿತ ಮರಿದುಂಬಿಗಳು, ಫಲಪುಷ್ಪಗಳನ್ನು ಕೊಡುವ ಅನೇಕ ಮರಗಳು ಮುಂತಾದವುಗಳು ಕಂಗೊಳಿಸುತ್ತಿದ್ದವು.
ಮೂಲ ...{Loading}...
ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಮರ ಪೂ ಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳೆಂದ ॥2॥
೦೦೩ ತುಮ್ಬುರರಳಿ ಲವಙ್ಗ ...{Loading}...
ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಭಿನಿಯೊಳುಳ್ಳಖಿಲ ವೃಕ್ಷಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತುಂಬುರು, ಅಶ್ವತ್ಥ, ಲವಂಗ, ಪಾದರಿ, ನಿಂಬೆ, ಮಾವು, ಮುತ್ತುಗ , ಹಲಸು, ನೇರಳೆ, ಗುಗ್ಗುಳ, ಅಶೋಕ, ವಟ, ಪುನ್ನಾಗ, ಸಂಪಿಗೆ ಮುಂತಾದ ಅನೇಕ ವೃಕ್ಷಗಳಿರುವ ಅರಣ್ಯದಲ್ಲಿ ಧರ್ಮರಾಯನ ಪರಿವಾರ ಸೇರಿತು.
ಪದಾರ್ಥ (ಕ.ಗ.ಪ)
ತುಂಬುರು -ತೂಪುರ
ಪಲಾಶ - ಮುತ್ತುಗ
ಪುನ್ನಾಗ - ಸುರಹೊನ್ನೆ
ವಟ - ಆಲ
ಪನಸ -ಹಲಸು
ಕುಂಭಿನಿ - ಭೂಮಿ
ಕದಂಬ - ಸಮೂಹ
ಟಿಪ್ಪನೀ (ಕ.ಗ.ಪ)
ತೂಪುರ - ಸಾಮಾನ್ಯವಾಗಿ ಬೀಡಿಯನ್ನು ತಯಾರಿಸಲು ಇದರ ಎಲೆಗಳನ್ನು ಉಪಯೋಗಿಸುತ್ತಾರೆ.
ಮೂಲ ...{Loading}...
ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಭಿನಿಯೊಳುಳ್ಳಖಿಲ ವೃಕ್ಷಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ ॥3॥
೦೦೪ ತಿಳಿಗೊಳನ ಮಧ್ಯದಲಿ ...{Loading}...
ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳದ ನಡುವೆ ಇರುವ ತಾವರೆ, ಭೃಂಗಸಂಗೀತ, ಕೋಗಿಲೆಗಳ ಇಂಚರ, ನವಿಲಿನ ನಾಟ್ಯ, ಕೊಳರ್ವಕ್ಕಿಗಳ ಕುಕಿಲಿಡುವ ನಾದ ಇವುಗಳಿಂದ ಅರಣ್ಯವು ಲಕ್ಷ್ಮೀನಿವಾಸದಂತೆ ಶೋಭಿಸಿತು.
ಪದಾರ್ಥ (ಕ.ಗ.ಪ)
ಮಧುಪ- ಭೃಂಗ , ದುಂಬಿ
ಪಿಕ - ಕೋಗಿಲೆ
ಕೊಳರ್ವಕ್ಕಿ - ಸಾರಸ , ಹಂಸ
ಮೂಲ ...{Loading}...
ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ ॥4॥
೦೦೫ ಬನ್ದು ಭೂಪತಿ ...{Loading}...
ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಮದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಆ ಕೊಳದ ತೀರಕ್ಕೆ ಬಂದು, ಅದನ್ನು ವಾಸಯೋಗ್ಯ ಸ್ಥಳವೆಂದು ಭಾವಿಸಿ ಭೀಮನಿಗೆ ಸೂಚನೆ ಕೊಟ್ಟನು. ಅವನು ಕೂಡಲೇ ತಳಿರನ್ನು ತಂದು, ಎಲೆಮನೆಗಳನ್ನು ರಚಿಸಿದನು. ಬ್ರಾಹ್ಮಣರೆಲ್ಲಾ ಧರ್ಮಜನ ಸುತ್ತಮುತ್ತಲಿನ ಮನೆಗಳಲ್ಲಿ ಬೀಡುಬಿಟ್ಟರು.
ಮೂಲ ...{Loading}...
ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಮದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ ॥5॥
೦೦೬ ದಿನಪನಪರಾಮ್ಬುಧಿಯನೈದಲು ವನಜ ...{Loading}...
ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ
ಕನಕಮಯವರ ರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯಾಸ್ತವಾಗಲು ಕಮಲಗಳು ಮುಚ್ಚಿದವು. ಚಕ್ರವಾಕಗಳಿಗೆ ಬೇಸರವಾಯಿತು. ನೈದಿಲೆಗೆ ಸಂತಸವಾಯಿತು. ರಾತ್ರಿಗೆ ಸುಖವೆನಿಸಿತು. ಚಿನ್ನದ ರಥವೇರಿ ಸೂರ್ಯನು ದನುಜ ಸಂಹಾರಕ್ಕಾಗಿ ಮತ್ತೆ ಉದಯಗಿರಿಯನ್ನು ಏರಿದನು. ಆಗ ಕಮಲಗಳಿಗೆ ಉತ್ಸಾಹವುಂಟಾಯಿತು.
ಪದಾರ್ಥ (ಕ.ಗ.ಪ)
ಯಾಮಿನಿ - ರಾತ್ರಿ
ಕಮಲಿನಿ - ಕಮಲಗಳ ಸಮೂಹ
ಮೂಲ ...{Loading}...
ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ
ಕನಕಮಯವರ ರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ ॥6॥
೦೦೭ ಋಷಿಗಳೊಳು ಮೇಳವು ...{Loading}...
ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿ ಸ್ನಾನ ಭೋಜನ ಕಾಲದಲಿ ಪಾನ
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವನದಲ್ಲಿ ಋಷಿಗಳ ಸಹವಾಸ, ಅರಣ್ಯದಲ್ಲಿರುವ ಉತ್ತಮವಾದ ಆಸನ ,ಗಂಗಾತೀರದಲ್ಲಿ ಅವರೊಡನೆ ಸ್ನಾನ, ಅನ್ನಪಾನಾದಿಗಳು, ಜೊತೆಗೆ ಪ್ರಶಂಸೆಯ ಮಾತುಗಳು - ಇವುಗಳಿಂದ ಅರಸನಾದ ಧರ್ಮರಾಯನು ಶೋಭಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಸಮಾಸಪೂರಿತ - ಸಮೂಹದೊಡಗೂಡಿ
ಟಿಪ್ಪನೀ (ಕ.ಗ.ಪ)
ಎಸೆದ - ಶೋಭಿಸುತ್ತಿದ್ದ
ಮೂಲ ...{Loading}...
ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿ ಸ್ನಾನ ಭೋಜನ ಕಾಲದಲಿ ಪಾನ
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳೆಂದ ॥7॥
೦೦೮ ಇರುತಿರಲು ಕಲಿಭೀಮ ...{Loading}...
ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಇರಲು, ಭೀಮಸೇನನು ಬೇಟೆಯಾಡುವ ಆಸೆಯಿಂದ ಶಬರರೊಂದಿಗೆ ಬೆಟ್ಟಗಳು ಮತ್ತು ಮರಗಳಿಂದ ತುಂಬಿದ ನಿಬಿಡವಾದ ಅರಣ್ಯವನ್ನು ಹೊಕ್ಕನು. ಆಗ ಹಂದಿ, ಜಿಂಕೆ, ಸಾರಂಗ, ಹೆಬ್ಬುಲಿ , ಕರಡಿ, ತೋಳ, ಶಾರ್ದೂಲ, ಸಿಂಹ, ಆನೆಗಳ ಗುಂಪುಗಳು ಹೆದರಿ ದಿಕ್ಕು ದಿಕ್ಕಿಗೆ ಚೆಲ್ಲಾಪಿಲ್ಲಿಯಾದವು.
ಪದಾರ್ಥ (ಕ.ಗ.ಪ)
ಮರೆ - ಒಂದು ಬಗೆಯ ಜಿಂಕೆ.
ವೃಕ - ತೋಳ
ಕೇಸರಿ - ಸಿಂಹ
ಕಳಭ - ಮರಿ.
ಮೂಲ ...{Loading}...
ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ ॥8॥
೦೦೯ ಹಾಸಗಳವಿಡಿದೆಳೆವ ನಾಯ್ಗಳ ...{Loading}...
ಹಾಸಗಳವಿಡಿದೆಳೆವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಯಿಗಳಿಗೆ ಕಟ್ಟಿದ್ದ ಹಗ್ಗವನ್ನು ಹಿಡಿದೆಳೆಯುತ್ತಾ, ಬೀಸುಬಲೆ, ಸೂಸುವಲೆ , ಕಾಲಕಣ್ಣಿಗಳು, ಬಿಲ್ಲುಬಾಣಗಳು - ಇವುಗಳನ್ನೆಲ್ಲಾ ಹಿಡಿದು, ಕವಚಗಳನ್ನು ಧರಿಸಿ, ತಲೆಗೆ ತಳಿರನ್ನು ಸಿಕ್ಕಿಸಿಕೊಂಡು ಬೇಟೆಗಾರರು ಬಹಳ ಸಂಭ್ರಮದಿಂದ ಹೊರಟು, ದೊಡ್ಡ ಬಲೆಗಳನ್ನು ಬೀಸಿ ಅನೇಕ ಪ್ರಾಣಿಗಳನ್ನು ಕೆಡವಿದರು.
ಪದಾರ್ಥ (ಕ.ಗ.ಪ)
ಹಾಸ-ಪಾಶ
ಬೀಸುವಲೆ - ಪ್ರಾಣಿಗಳ ಮೆಲೆ ಬೀಸಿ ಹಿಡಿಯುವ ಬಲೆ
ಸೂಸುವಲೆ -ಚಿಮ್ಮ ಬೀಸುವ ಬಲೆ
ಕಾಲಕಣ್ಣಿ - ಕಾಲಿಗೆ ತೊಡರಿಸುವ ಹಗ್ಗ
ಕುಪ್ಪಸ - ಮೇಲಂಗಿ
ಭಾಸುರದ - ಚೆನ್ನಾಗಿ ಕಾಣುತ್ತಿರುವ
ಮೂಲ ...{Loading}...
ಹಾಸಗಳವಿಡಿದೆಳೆವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ ॥9॥
೦೧೦ ಕೊಡಹಿ ಬಿಸುಟನು ...{Loading}...
ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಂಹವನ್ನು ಕೊಡವಿ ಬಿಸಾಡಿ, ಆನೆಗಳನ್ನು ಕಾಲೆಳೆದು ಸೀಳಿದನು. ಶಾರ್ದೂಲ ಹುಲಿಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ನೆಲಕ್ಕೆ ಅಪ್ಪಳಿಸಿದನು. ಹಂದಿಯ ದೊಡ್ಡಮರಿಯೊಂದನ್ನು ಅಡ್ಡಗಟ್ಟಿ ತುಳಿದು ಹಾಕಿದನು. ಭೀಮಸೇನನ ಕಾಲೊದೆತಕ್ಕೆ ನೆಲವೇ ಕಂಪಿಸಿತು.
ಪದಾರ್ಥ (ಕ.ಗ.ಪ)
ಕೇಸರಿ - ಸಿಂಹ
ಅಡಗೆಡಹು - ಬೀಳಿಸು
ಪೇರ್ಮರಿ - ದೊಡ್ಡ ಮರಿ
ವರಾಹ - ಹಂದಿ
ಮೂಲ ...{Loading}...
ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ ॥10॥
೦೧೧ ಬನ್ದನತಿ ಬೇಣ್ಟೆಯಲೆ ...{Loading}...
ಬಂದನತಿ ಬೇಂಟೆಯಲೆ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರ ನಿಕರಕಿತ್ತನು ಪವನಜಾತ್ಮಜನು
ತಂದರವದಿರು ತವತವಗೆ ಪರಿ
ತಂದು ತರು ಶಿಖಿಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಬೇಟೆಯಾಡುತ್ತಾ ಬಂದ ಭೀಮಸೇನನು, ಮಡಿದು ಬಿದ್ದ ಪ್ರಾಣಿಗಳನ್ನು ಬೇಡರ ಪಡೆಗೆ ಕೊಟ್ಟನು. ಅವರು ತಮತಮಗೆ ಬೇಕಾದ ಪ್ರಾಣಿಗಳನ್ನು ಹಿಡಿದೊಯ್ದು ಮರವನ್ನೊಟ್ಟಿ ಮಾಡಿದ ಬೆಂಕಿಯಲ್ಲಿ ಸುಟ್ಟು, ಮಾಂಸವನ್ನು ಸಂತೋಷದಿಂದ ಉಂಡರು.
ಪದಾರ್ಥ (ಕ.ಗ.ಪ)
ನಿಕರ - ಗುಂಪು
ಮೂಲ ...{Loading}...
ಬಂದನತಿ ಬೇಂಟೆಯಲೆ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರ ನಿಕರಕಿತ್ತನು ಪವನಜಾತ್ಮಜನು
ತಂದರವದಿರು ತವತವಗೆ ಪರಿ
ತಂದು ತರು ಶಿಖಿಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ ॥11॥
೦೧೨ ಮುನ್ದೆ ಕಣ್ಡನು ...{Loading}...
ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆಬರುತ್ತಾ, ಭೀಮಸೇನನು ದೂರದಲ್ಲಿರುವ ಉಪವನದಲ್ಲಿ ಗಿಡಮರಗಳ ಸಂದೋಹವನ್ನೂ, ಚಿಗುರಿರುವ ಹೂಗೊಂಚಲುಗ¼ನ್ನೂ ಕಂಡನು. ಅಲ್ಲಿದ್ದ ಮರಗಳ ನಡುವೆ ಇದ್ದ ಜಂಬೂವೃಕ್ಷವೊಂದನ್ನು ಕಂಡು ಭೀಮನು ಅಚ್ಚರಿಗೊಂಡನು.
ಪದಾರ್ಥ (ಕ.ಗ.ಪ)
ನಂದನ - ವನ
ನಿಕಾಯ - ಗುಂಪು
ಗೊಂದಣ - ಗುಂಪು
ಮೂಲ ...{Loading}...
ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ ॥12॥
೦೧೩ ಇದು ವಿಚಿತ್ರದ ...{Loading}...
ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಹಣ್ಣು ಎಷ್ಟು ದೊಡ್ಡದಾಗಿದೆ ! ಇದು ವಿಚಿತ್ರ ಫಲವೇ ಸರಿ. ಇದನ್ನು ಧರ್ಮರಾಯನಿಗೆ ತೋರಿಸುವುದಕ್ಕಾಗಿ ಕಿತ್ತೊಯ್ಯುತ್ತೇನೆ’ ಎಂದು ಗದೆಯನ್ನು ಕಂಕುಳಲ್ಲಿಟ್ಟುಕೊಂಡು, ಶ್ರೀ ಹರಿಯನ್ನು ನೆನೆಯುತ್ತಾ ಮರವನ್ನೇರಿ ಅದನ್ನು ಕೊಯ್ದು ಕೆಳಗೆ ತಂದನು.
ಪದಾರ್ಥ (ಕ.ಗ.ಪ)
ಮತಂಗಜ-ಆನೆ
ಕಕ್ಷ - ಕಂಕುಳು
ಮೂಲ ...{Loading}...
ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ ॥13॥
೦೧೪ ಫಲವ ಕೊಣ್ಡಾ ...{Loading}...
ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಬೇಗನೇ ಆ ಹಣ್ಣನ್ನು ತಂದು, ಮನೆಯಲ್ಲಿದ್ದ ಧರ್ಮಜನ ಮುಂದೆ ಇಟ್ಟನು. ಅದನ್ನು ಕಂಡು ಅಚ್ಚರಿಗೊಂಡ ಧರ್ಮರಾಜನು, ಹತ್ತಿರದಲ್ಲಿದ್ದ ತಮ್ಮಂದಿರಿಗೂ, ಮುನಿಗಳಿಗೂ ತೋರಿಸಲು, ಅವರು ‘ಶಿವಶಿವಾ, ಇದನ್ನು ಕಮಲನಾಭನೆ ಬಲ್ಲ’ ಎಂದರು.
ಪದಾರ್ಥ (ಕ.ಗ.ಪ)
ನಳಿನಾಭ - ಪದ್ಮನಾಭ , ವಿಷ್ಣು
ಮೂಲ ...{Loading}...
ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು ॥14॥
೦೧೫ ಎನಲು ಸಹದೇವನ ...{Loading}...
ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ತ್ರಿಕಾಲಜ್ಞಾನಿಯಾದ ಸಹದೇವನು - ‘ಅರಸ, ಇದು ಕಣ್ವ ಮುನಿಯ ಆಶ್ರಮದ ಹಣ್ಣು. ಅವನು ಸಿಟ್ಟಾದನೆಂದರೆ ಹರಿಹರ ಬ್ರಹ್ಮಾದಿಗಳಿಗೇ ಶಾಪ ಕೊಡುತ್ತಾನೆ’ ಎಂದು ಅಣ್ಣನಲ್ಲಿ ವಿಜ್ಞಾಪಿಸಿದನು.
ಟಿಪ್ಪನೀ (ಕ.ಗ.ಪ)
ಕಣ್ವಮುನಿ :
ಮೂಲ ...{Loading}...
ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ ॥15॥
೦೧೬ ವರುಷಕೊನ್ದೇ ಫಲವಹುದು ...{Loading}...
ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವಧ್ಯಾನೈಕ ದೃಷ್ಟಿಯೊಳಿಪ್ಪನಾ ಮುನಿಪ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮರವು ವರ್ಷಕ್ಕೆ ಒಂದೇ ಒಂದು ಹಣ್ಣನ್ನು ಬಿಡುತ್ತದೆ. ಅದನ್ನು ಯೋಗಶಕ್ತಿಯಿಂದ ತಿಳಿದು ಮುನಿಯು ಕೈಚಾಚಲು, ಈ ಹಣ್ಣು ಮರದಿಂದ ತಾನಾಗಿಯೇ ಮುನಿಯ ಬೊಗಸೆಗೆ ಬೀಳುತ್ತದೆ. ಆಗ ಶಿವಧ್ಯಾನದಲ್ಲಿರುವ ಮುನಿಯು ಅದನ್ನು ತಿನ್ನುತ್ತಾನೆ.
ಪದಾರ್ಥ (ಕ.ಗ.ಪ)
ಕರಸಂಪುಟ - ಬೊಗಸೆ
ಮೂಲ ...{Loading}...
ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವಧ್ಯಾನೈಕ ದೃಷ್ಟಿಯೊಳಿಪ್ಪನಾ ಮುನಿಪ ॥16॥
೦೧೭ ಕನ್ದೆರೆದು ಮುನಿ ...{Loading}...
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ಮುನಿಯು ಕಣ್ಣುಬಿಟ್ಟು ನೋಡಿದರೆ, ನಮಗೆ ಅಪಾಯವಿದೆ ಎಂದು ಧರ್ಮರಾಯನು ಭಾವಿಸಿ, ತಮ್ಮಂದಿರೊಂದಿಗೆ ವೇಗವಾಗಿ ಅಲ್ಲಿಗೆ ಬಂದನು. ಬಹಳ ಕೊಂಬೆಗಳಿರುವ ಗಗನಚುಂಬಿಯಾದ ಆ ಮಹಾವೃಕ್ಷವನ್ನು ಭೀಮಸೇನನು ತೋರಿಸಿದನು. ಅದನ್ನು ಏನೆಂದು ವರ್ಣಿಸಲಿ?
ಪದಾರ್ಥ (ಕ.ಗ.ಪ)
ಹರುವು-ಅಪಾಯ
ಮೂಲ ...{Loading}...
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ॥17॥
೦೧೮ ಕಣ್ಡು ಯಮಸುತನತಿ ...{Loading}...
ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೃಕ್ಷವನ್ನು ನೋಡಿದ ಧರ್ಮಜನು ಭಯಗೊಂಡು ‘ಶಿವನೇ ಬಲ್ಲ. ನಾವು ಹಿಂದೆ ಮಾಡಿದ ಪಾಪದ ಫಲವಿದು’ ಎಂದು ನಿಟ್ಟುಸಿರುಬಿಟ್ಟನು. ‘ಭೀಮನು ಇದನ್ನು ಅವಿವೇಕದ ಉದ್ದಂಡತನದಿಂದ ಕೊಯ್ದು ತಂದುಬಿಟ್ಟನು. ಅದನ್ನು ಅಲ್ಲೇ ಇರಿಸುವುದು ಅಸಾಧ್ಯ’ ಎಂದನು.
ಪದಾರ್ಥ (ಕ.ಗ.ಪ)
ಹತ್ತಿಸು - ಅಂಟಿಸು
ಖಂಡಪರಶು - ಈಶ್ವರ
ಮೂಲ ...{Loading}...
ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ ॥18॥
೦೧೯ ಹೇಳಿರೈ ಭೂಸುರರು ...{Loading}...
ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ಮರದ ಮೇಲೆ ಹಣ್ಣನ್ನಿರಿಸುವ ಉಪಾಯವನ್ನು ನೀವು ಯಾರಾದರೂ ಹೇಳುವಿರ ಎಂದು ಬ್ರಾಹಣರನ್ನು ಮತ್ತು ಮುನಿಗಳನ್ನೂ ವಿನಂತಿಸಿದಾಗ, ಧೌಮ್ಯರು ನಸುನಕ್ಕು - ‘ಇದನ್ನು ಹೇಳಲು ನಮ್ಮಿಂದ ಸಾಧ್ಯವಿಲ್ಲ. ನಿಮ್ಮನ್ನು ಕಾಪಾಡುವ ಶ್ರೀಕೃಷ್ಣನೇ ಬಲ್ಲನು. ತಡಮಾಡದೆ ಆ ಮಹಾತ್ಮನನ್ನು ಧ್ಯಾನಿಸು’ ಎಂದರು.
ಮೂಲ ...{Loading}...
ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ ॥19॥
೦೨೦ ಎನಲು ಭೂಪತಿ ...{Loading}...
ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಧರ್ಮರಾಯನು - ‘ಕೃಷ್ಣ, ರಕ್ಕಸಾರಿ, ಗೋವಿಂದ, ಪದ್ಮನಾಭ, ಮುಕುಂದ, ರಾವಣಾಂತಕ, ಮನ್ಮಥಜನಕ, ರಾಮಚಂದ್ರ, ಕೇಶವ, ಭಕ್ತವತ್ಸಲ, ಮಾಧವ, ರಕ್ಷಿಸು’ ಎಂದು ಸ್ತುತಿಸಿದನು.
ಮೂಲ ...{Loading}...
ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು ॥20॥
೦೨೧ ಎನ್ದು ಭಜಿಸುತ್ತಿರಲು ...{Loading}...
ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನಜನ ಕತ
ದಿಂದ ಪಾಂಡುಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಧರ್ಮರಾಯನು ಸ್ತುತಿಸಲು, ಸತ್ಯಭಾಮಾದೇವಿಯೊಂದಿಗೆ ಸಂತೋóಷದಿಂದಿದ್ದ ಶ್ರೀಹರಿಯು ದಿವ್ಯಜ್ಞಾನದಿಂದ ಇದನ್ನು ತಿಳಿದು - ‘ಅವಿವೇಕಿಯಾದ ಭೀಮಸೇನನ ನಿಮಿತ್ತದಿಂದ ಪಾಂಡವರಿಗೆ ಋಷಿಶಾಪದ ಕೇಡು ಬಂದೊದಗುತ್ತದೆ, ಶಿವಶಿವಾ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಕತ -ಕಾರಣ, ನಿಮಿತ್ತ
ಮೂಲ ...{Loading}...
ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನಜನ ಕತ
ದಿಂದ ಪಾಂಡುಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ ॥21॥
೦೨೨ ಎನುತ ಸಿಂಹಾಸನವನಿಳಿದಾ ...{Loading}...
ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನ ದುರಿತದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಶ್ರೀಹರಿಯು ಸಿಂಹಾಸನದಿಂದ ಇಳಿದು ‘ಭಾಮಾ, ನೀನು ಇಲ್ಲೇ ಇರು’ ಎಂದು ಹೇಳಿ ಮನೋವೇಗದಿಂದ ಧರ್ಮರಾಯನಿರುವಲ್ಲಿಗೆ ಬಂದನು. ನೆನೆದ ಕೂಡಲೇ ಭಗವಂತನು ಬಂದನೆಂದು ಧರ್ಮರಾಯನು, ಮುನಿಗಳೊಂದಿಗೆ ಶ್ರೀಹರಿಗೆ ಸಾಷ್ಟಾಂಗ ವಂದಿಸಿದನು.
ಮೂಲ ...{Loading}...
ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನ ದುರಿತದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ॥22॥
೦೨೩ ತೆಗೆದು ತಕ್ಕೈಸಿದನು ...{Loading}...
ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನತರುವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಧರ್ಮಜನನ್ನು ಆಲಿಂಗಿಸಿ, ಸಂತೋಷದಿಂದ ಭೀಮಾರ್ಜುನರನ್ನು ಮೇಲೆತ್ತಿ, ನಕುಲ ಸಹದೇವರನ್ನೂ, ದ್ರೌಪದಿಯನ್ನೂ ಮೈದಡವಿದನು. ಧೌಮ್ಯಾದಿ ಋಷಿಮುನಿಗಳನ್ನು ನಲ್ನುಡಿಯಿಂದ ಮನ್ನಿಸಿ, ಜಂಬೂಫಲದ ಮರವನ್ನು ನೋಡಿದನು.
ಮೂಲ ...{Loading}...
ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನತರುವ ॥23॥
೦೨೪ ಕಾಳು ಮಾಡಿದಿರಕಮ್ಕಟ ...{Loading}...
ಕಾಳು ಮಾಡಿದಿರಕmಕಟ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸದೆ ವರ ಮೂರ್ಖತನದಲೆ ನೆನೆದಿರನುಚಿತವ
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲ ಧರ್ಮಂಗಳನು ಬೇಗದಿ ಹೇಳಿ ನೀವೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಕಟಾ, ನೀವು ಅನ್ಯಾಯವನ್ನು ಮಾಡಿದಿರಿ. ಮುಂದಾಗುವ ಅಪಾಯವನ್ನು ತಿಳಿಯದೆ, ಋಷಿಶಾಪದ ಸಂಗತಿಯನ್ನು ಅರಿಯದೆ ಮೂರ್ಖತನದಿಂದ ಅನುಚಿತವಾದುದನ್ನು ಮಾಡಿದಿರಿ. ಎದ್ದೇಳಿ ಈ ಕೂಡಲೇ ಹಣ್ಣನ್ನು ಸಹಜ ಸ್ಥಾನದಲ್ಲಿರಿಸಬೇಕಾಗಿದೆ. ಅದಕ್ಕೆ ಬೇಗನೆ ನೀವು ನಿಮ್ಮ ನಿಜವಾದ ಅಂತರಂಗಧರ್ಮವನ್ನು ತಿಳಿಸಿ’ ಎಂದನು.
ಪದಾರ್ಥ (ಕ.ಗ.ಪ)
ಕಾಳು - ನಾಶ
ಸರಿಸ - ಸಮೀಪ
ಮೂಲ ...{Loading}...
ಕಾಳು ಮಾಡಿದಿರಕmಕಟ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸದೆ ವರ ಮೂರ್ಖತನದಲೆ ನೆನೆದಿರನುಚಿತವ
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲ ಧರ್ಮಂಗಳನು ಬೇಗದಿ ಹೇಳಿ ನೀವೆಂದ ॥24॥
೦೨೫ ಎನಲು ತನ್ದಿರಿಸಿದರು ...{Loading}...
ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಣ್ಣನ್ನು ಕೃಷ್ಣನ ಸೂಚನೆಯಂತೆ ಆ ಕೂಡಲೇ ತಂದಿಟ್ಟರು. ಧರ್ಮರಾಯನನ್ನು ಮೊದಲು ಹೇಳು ಎಂದೆನ್ನಲು, ಅವನು ಕೈಗಳನ್ನು ಮುಗಿದು, ‘ಸೂರ್ಯಚಂದ್ರ ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ, ಈಶಾನರೇ ಕೇಳಿ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಅರಸಕ - ಕುಬೇರ
ಮನುಮಥಾರಿ - ಈಶ್ವರ, ಈಶಾನ
ಮೂಲ ...{Loading}...
ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ॥25॥
೦೨೬ ಪರಸತಿಯೆ ನಿಜಜನನಿ ...{Loading}...
ಪರಸತಿಯೆ ನಿಜಜನನಿ ಪರ ಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರನಾರಿಯರು ಹೆತ್ತ ತಾಯಿಯರು. ಪರದ್ರವ್ಯವು ಕಸಕ್ಕೆ ಸಮಾನ. ಇತರ ಜೀವರಾಶಿಗಳ ನೋವೇ ನನ್ನ ನೋವು ಎಂದು ನನ್ನ ಭಾವನೆ - ಎಂದು ಧರ್ಮರಾಜನು ಹೇಳಲು, ಜಂಬೂ ಫಲವು ನೆಲವನ್ನು ಬಿಟ್ಟು ಒಂದು ಮೊಳದೆತ್ತರ ಮೇಲೇರಿತು. ಆಗ ಕೃಷ್ಣನು ಭೀಮನನ್ನು ಕರೆದನು. ಅವನು ಕೈ ಮುಗಿದು ನುಡಿದ –
ಪದಾರ್ಥ (ಕ.ಗ.ಪ)
ನಿಧಾನ -ನಿಶ್ಚಯ,
ಮೂಲ ...{Loading}...
ಪರಸತಿಯೆ ನಿಜಜನನಿ ಪರ ಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ ॥26॥
೦೨೭ ಜೀವವೀ ಕ್ಷಣವಳಿದು ...{Loading}...
ಜೀವವೀ ಕ್ಷಣವಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಕ್ಷಣವೇ ಪ್ರಾಣ ಹೋದರೂ ಹೋಗಲಿ. ಆದರೆ ಅಭಿಮಾನವನ್ನು ಕಾಪಾಡಿಕೊಳ್ಳಬೇಕು. ಆತ್ಮವು ನಿತ್ಯವಾಗಿರುವಂತೆ, ಮಾನವು ಆಚಂದ್ರಾರ್ಕ. ಇದಲ್ಲದೆ ಬೇರೆ ನನಗೆ ಗೊತ್ತಿಲ್ಲ. ಇದ್ದುದನ್ನು ದೇವರಲ್ಲಿ ನಿವೇದಿಸಿಕೊಂಡಿದ್ದೇನೆ” ಎಂದು ಭೀಮನು ಹೇಳಲು ಹಣ್ಣು ಇನ್ನಷ್ಟು ಮೇಲಕ್ಕೇರಿತು.
ಮೂಲ ...{Loading}...
ಜೀವವೀ ಕ್ಷಣವಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳೆಂದ ॥27॥
೦೨೮ ಏನು ನಿನ್ನಭಿಮತವು ...{Loading}...
ಏನು ನಿನ್ನಭಿಮತವು ಪಾರ್ಥ ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದೆನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ, ನಿನ್ನ ಅಭಿಮತವನ್ನು ತಿಳಿಸು” ಎನ್ನಲು, ಅರ್ಜುನನು ಶ್ರೀಕೃಷ್ಣನನ್ನು ಧ್ಯಾನಿಸಿ, ಶಿವನಿಗೆ ವಂದಿಸಿ, ಚಂದ್ರಸೂರ್ಯದಿಕ್ಪಾಲರಿಗೆ ಕೈಮುಗಿದು ಹೀಗೆ ಹೇಳಿದನು -
ಪದಾರ್ಥ (ಕ.ಗ.ಪ)
ಆಚಂದ್ರಾರ್ಕ - ಸೂಯ್, ಚಂದ್ರರಿರುವವರೆಗೂ
ಅಡರು - ಏರು, ಹತ್ತು
ಪಾಠಾನ್ತರ (ಕ.ಗ.ಪ)
ಗತಿಯೆಂದನುತಲಾ - ಗತಿಯೆಂದೆನುತಲಾ
ಅನುಬಂಧ: , ಅರಣ್ಯ ಪರ್ವ , ಅಡಿಟಿಪ್ಪಣಿ
ಮೈ.ವಿ.ವಿ.
ಮೂಲ ...{Loading}...
ಏನು ನಿನ್ನಭಿಮತವು ಪಾರ್ಥ ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದೆನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ ॥28॥
೦೨೯ ಪರಗೃಹದ ಭೋಜನಕೆ ...{Loading}...
ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬ್ರಾಹ್ಮಣರು ಬೇರೆಯವರ ಮನೆಯ ಊಟಕ್ಕೆ ಹಾತೊರೆಯುವಂತೆ, ಹಸುಗಳು ಹುಲ್ಲು ತಿನ್ನಲು ಆಶಿಸುವಂತೆ, ಹೆಂಡತಿಗೆ ತನ್ನ ಗಂಡನನ್ನು ಕಾಣಲು ಉತ್ಸುಕಳಾಗಿರುವಂತೆ ನಾನು ಯುದ್ಧಮಾಡುವುದರಲ್ಲಿ ಸಂತಸಪಡುತ್ತೇನೆ.’ ಎಂದನು. ಆ ಕೂಡಲೇ ಹಣ್ಣು ಮತ್ತಷ್ಟು ಎತ್ತರಕ್ಕೇರಿತು.
ಪದಾರ್ಥ (ಕ.ಗ.ಪ)
ನೆಗಹು - ಮೇಲಕ್ಕೆತ್ತು
ಮೂಲ ...{Loading}...
ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ ॥29॥
೦೩೦ ಧರ್ಮವನು ನೆರೆ ...{Loading}...
ಧರ್ಮವನು ನೆರೆ ಜಯಿಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮವೇ ಗೆಲ್ಲುವುದಲ್ಲದೆ ಅಧರ್ಮವಲ್ಲ. ಸುಳ್ಳು ಎಂದಿಗೂ ಸತ್ಯವನ್ನು ಜಯಿಸಲಾರದು. ಸಿಟ್ಟು ತಾಳ್ಮೆಯನ್ನು ಗೆಲ್ಲಲಾರದು. ಹಾಗೆಯೇ ದುರ್ಜನರಾದ ರಾಕ್ಷಸರು ಕೃಷ್ಣನನ್ನು ಗೆಲ್ಲಲಾರರು. ಹೀಗೆ ಧರ್ಮತತ್ತ್ವವನ್ನು ನಕುಲನು ಹೇಳಲು, ಹಣ್ಣು ಮತ್ತಷ್ಟು ಮೇಲೇರಿತು.
ಪದಾರ್ಥ (ಕ.ಗ.ಪ)
ಪರಿಣಮಿಸು - ಸಂತೋಷಗೊಳ್ಳು
ಮೂಲ ...{Loading}...
ಧರ್ಮವನು ನೆರೆ ಜಯಿಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು ॥30॥
೦೩೧ ಸತ್ಯವೇ ನಿಜಮಾತೆ ...{Loading}...
ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತ್ನಿ ಕ್ಷಮೆ ಸೂನು
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ಯವೇ ತಾಯಿ, ಜ್ಞಾನವೇ ತಂದೆ. ಧರ್ಮವೇ ತಮ್ಮ . ದಯೆಯೇ ಗೆಳೆಯ. ಶಾಂತಿಯೇ ಹೆಂಡತಿ. ಕ್ಷಮೆಯೇ ಪುತ್ರ..ಹೀಗೆ ಸಹದೇವನು ಹೇಳಲು, ಹಣ್ಣು ಮತ್ತೆ ಇನ್ನಷ್ಟು ಮೇಲಕ್ಕೇರಿತು. ಆಗ ಕೃಷ್ಣನು ದ್ರೌಪದಿಯನ್ನು ಬಾ ಎಂದು ಕರೆದನು.
ಮೂಲ ...{Loading}...
ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತ್ನಿ ಕ್ಷಮೆ ಸೂನು
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ ॥31॥
೦೩೨ ಭಾವವಹ ಪುರುಷರನು ...{Loading}...
ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿದ್ರ್ರವಣ ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾ ವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದರರಾದ ಗಂಡಸರನ್ನು, ತಂದೆ ಮಕ್ಕಳು ತಮ್ಮಂದಿರ ನೆಲೆಯಲ್ಲಿ ನೋಡಿದಾಗಲೂ ಸ್ತ್ರೀಯರಿಗೆ ಕಾಮಾಭಿಲಾಷೆಯುಂಟಾಗುತ್ತದೆ. ಹೀಗೆ ಸತ್ಯವನ್ನು ಮರೆಮಾಚಿ ದ್ರೌಪದಿಯು ನುಡಿಯಲು, ಹಣ್ಣು ಮೇಲೇರಲಿಲ್ಲ. ಆಗ ಕೃಷ್ಣನು - ಯಾವುದೇ ಮುಚ್ಚುಮರೆಯಿಲ್ಲದೇ ಸತ್ಯವನ್ನು ಹೇಳು’ ಎಂದನು.
ಮೂಲ ...{Loading}...
ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿದ್ರ್ರವಣ ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾ ವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ॥32॥
೦೩೩ ಪತಿಗಳೀಶ್ವರನಾಜ್ಞೆಯಿನ್ದವೆ ...{Loading}...
ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷರನು ದು
ರ್ಮತಿಯಲೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವನ ಆಜ್ಞೆಯಂತೆ ನನಗೆ ಐವರು ಗಂಡಂದಿರಿದ್ದಾರೆ. ಮನಸ್ಸು ತೃಪ್ತಿ ಹೊಂದಿದೆ. ಮನಸ್ಸಿನಲ್ಲಿ ಬೇರೇನೂ ಇಲ್ಲ. ಲೋಕದಲ್ಲಿ ಪರಪುರುಷರನ್ನು ದುರ್ಬುದ್ಧಿಯಿಂದ ಒಪ್ಪುವವಳು ಪತಿವ್ರತೆಯೇ ?” ಎಂದು ದ್ರೌಪದಿಯು ಶ್ರೀಹರಿಯಲ್ಲಿ ವಿಜ್ಞಾಪಿಸಲು ಹಣ್ಣು ತೊಟ್ಟಿಗೆ ಅಂಟಿಕೊಂಡಿತು.
ಪಾಠಾನ್ತರ (ಕ.ಗ.ಪ)
ದುರ್ಮತಿಯೊಳಡಬಡುವವಳು -ದುರ್ಮತಿಯಲೊಡಬಡುವವಳು
ಅನುಬಂಧ, ಅರಣ್ಯಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಮನಸ್ಸಿನ ಮನದಲಾರಾಗಿಹುದು ಎಂಬ ಪದಗುಚ್ಛ ಓದುಗರ ಮನಸ್ಸಿನಲ್ಲಿ ಅನೇಕ ಸಂದೇಹಗಳನ್ನು ಮೂಡಿಸುತ್ತ ಬಂದಿದೆ. ಆದರೆ ಇಲ್ಲಿ ಆರಾಗಿಹುದು ಎಂಬುದು ಸಂಖ್ಯೆಯಲ್ಲ ಬದಲಿಗೆ ತೃಪ್ತಿ, ಎಂಬ ಅರ್ಥದ ಪದ. ಈ ಅರ್ಥದಲ್ಲಿ ಪದ್ಯ ಹೆಚ್ಚು ಸ್ಪಷ್ಟವಾಗುತ್ತದೆ.
ಆರ್- ತೃಪ್ತಿಪಡು, ತಣಿ ಮುಂತಾಗಿ ಕನ್ನಡ - ಕನ್ನಡ ನಿಘಂಟಿನಲ್ಲಿ ವಿವರಿಸಲಾಗಿದೆ.
ಪ್ರಯೋಗ ಕಣ್ಣಾರೆ ನೋಡು - ಕಣ್ತಣಿಯುವ ವರೆಗೆ ನೋಡು. , ಇತ್ಯಾದಿ
ಮೂಲ ...{Loading}...
ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷರನು ದು
ರ್ಮತಿಯಲೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು ॥33॥
೦೩೪ ಹರುಷ ಮಿಗೆ ...{Loading}...
ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಪತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿ ನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಗಳಿಗೆಲ್ಲಾ ಸಂತೋಷವಾಯಿತು. ಧೌಮ್ಯರು ಧರ್ಮಜನನ್ನು ಕರೆದು ಕೈಯೆತ್ತಿ ‘ಶ್ರೀಕೃಷ್ಣನ ಸಹಾಯವಿರುವಾಗ ನಿನಗೆ ಯಾವುದು ಅಸಾಧ್ಯ ?’ ಎಂದು ಹೇಳಿ ಸಕಲ ಮುನಿಗಳೊಡನೆ ಶ್ರೀಕೃಷ್ಣನಿಗೆ ನಮಸ್ಕಾರ ಮಾಡಿದರು. ಆ ಮೇಲೆ ಅವರೆಲ್ಲಾ ಹರ್ಷದೊಡನೆ ಅರಣ್ಯದಿಂದ ಹೊರಟರು.
ಪದಾರ್ಥ (ಕ.ಗ.ಪ)
ಆರ್ - ಆರು - ತೃಪ್ತಿಪಡು, ತಣಿ
ಮೂಲ ...{Loading}...
ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಪತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿ ನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ ॥34॥
೦೩೫ ಮುನಿಪ ಕಣ್ವನು ...{Loading}...
ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ವ ಮುನಿಯು ಕಣ್ಣು ತೆರೆದು ಭಗವಂತನನ್ನು ಧ್ಯಾನಿಸಿದನು. ಆಗ ಅವನ ಬೊಗಸೆಗೆ ಜಂಬೂಫಲವು ಬೀಳಲು, ಮನದೊಳಗೆ ಸಂತೋಷಗೊಂಡನು. ಇದು ಶ್ರೀಕೃಷ್ಣನ ತಂತ್ರವೆಂದು ತಿಳಿದು, ಪಾವನಸ್ವರೂಪನಾದ ಅವನನ್ನು ನೋಡುತ್ತೆನೆಂದು ಮುನಿ ಆ ಹಣ್ಣಿನ ಸಹಿತ ಪಾಂಡವರಿರುವ ಸ್ಥಳಕ್ಕೆ ಬಂದು, ಶ್ರೀಕೃಷ್ಣನನ್ನು ಕಂಡನು.
ಪದಾರ್ಥ (ಕ.ಗ.ಪ)
ಜಾನಿಸು - ಧ್ಯಾನಿಸು
ಮೂಲ ...{Loading}...
ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ ॥35॥
೦೩೬ ಇದಿರೊಳಿರಿಸಿದನಾ ಫಲವ ...{Loading}...
ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಭಂಗೆರಗಿ ತೆಗಿ ನೀ ಫಲವನೆಂದೆನಲು
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ವ ಮುನಿಯು ಅತಿಯಾದ ಸಂತೋಷದಿಂದ ರೋಮಾಂಚಿತನಾಗಿ ಜಂಬೂಫಲವನ್ನು ಕೃಷ್ಣನ ಎದುರಿಗಿಟ್ಟು ‘ಈ ಫಲವನ್ನು ಸ್ವೀಕರಿಸಬೇಕು’ ಎಂದು ಪ್ರಾರ್ಥಿಸಿ ನಮಸ್ಕರಿಸಿದನು. ಆಗ ಕೃಷ್ಣನು ನಸುನಗುತ್ತಾ ಮುನಿಯ ಕುಶಲವನ್ನು ವಿಚಾರಿಸಿ, ಶಿರವನ್ನು ಹಿಡಿದೆತ್ತಿ, ಹಣ್ಣನ್ನು ಹಂಚುವಂತೆ ಧರ್ಮರಾಯನಿಗೆ ಸೂಚಿಸಿದನು.
ಪದಾರ್ಥ (ಕ.ಗ.ಪ)
ಹೊಂಪುಳಿ-ರೋಮಾಂಚನ
ಮೂಲ ...{Loading}...
ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಭಂಗೆರಗಿ ತೆಗಿ ನೀ ಫಲವನೆಂದೆನಲು
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ ॥36॥
೦೩೭ ಬರಿಸಿ ಋಷಿಗಳನವರವರ ...{Loading}...
ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ
ಮುರಹರಗೆ ತನ್ಮುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿ ಮುನಿಗಳನ್ನು ಬರಹೇಳಿ, ಅವರೆಲ್ಲರಿಗೆ ಯಥೋಚಿತವಾಗಿ ಧರ್ಮರಾಯನು ಹಣ್ಣನ್ನು ಹಂಚಿದನು. ಉಳಿದ ಭಾಗವನ್ನು ವಿಪ್ರರಿಗೆ, ತಮ್ಮಂದಿರಿಗೆ, ಮುನಿ ಪತ್ನಿಯರಿಗೆ, ದ್ರೌಪದಿಗೆ, ಶ್ರೀಕೃಷ್ಣನಿಗೆ ಹಾಗೂ ಕಣ್ವಮುನಿಗೆ ನೀಡಿದನು. ಅರಸನೇ ಕೇಳು ಹೀಗೆ ಎಲ್ಲರೂ ಸಂತೋಷದಿಂದ ಹಣ್ಣನ್ನು ತಿಂದರು.
ಮೂಲ ...{Loading}...
ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ
ಮುರಹರಗೆ ತನ್ಮುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ ॥37॥
೦೩೮ ಪಾರಣೆಯನುರೆ ಮಾಡಿ ...{Loading}...
ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಯು ಪಾರಣೆಯನ್ನು ಮಾಡಿ, ಧರ್ಮರಾಯನನ್ನು ಬೀಳ್ಕೊಟ್ಟನು. ಶ್ರೀಕೃಷ್ಣನನ್ನು ಬೀಳ್ಗೊಂಡು ಧರ್ಮರಾಯನು ಬೇರೊಂದು ಪುಣ್ಯಾಶ್ರಮಕ್ಕೆ ನಡೆದನು. ಕೃಷ್ಣನ ಅಪಾರವಾದ ಮಹಿಮೆಯನ್ನು ಯಾರು ತಾನೇ ತಿಳಿಯಬಲ್ಲರು ?
ಪದಾರ್ಥ (ಕ.ಗ.ಪ)
ಪಾರಣೆ-ಭೋಜನ
ಮೂಲ ...{Loading}...
ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳೆಂದ ॥38॥
೦೩೯ ದೇವ ನಿಮ್ಮಡಿಯಙ್ಘ್ರಿ ...{Loading}...
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರ ವೇದಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಸಹದೇವನು - ‘ದೇವ, ನಿನ್ನ ಪಾದಕಮಲವನ್ನು ಯಾರು ನೆನೆಯುತ್ತಾರೋ ಅವರಿಗೆ ಜನನ ಮರಣ ಭಯವಿಲ್ಲವೆಂದು ವೇದಶಾಸ್ತ್ರಗಳು ಹೇಳುತ್ತವೆ. ನಿನ್ನ ಸಾಕ್ಷಾತ್ ದರ್ಶನವನ್ನು ಪಡೆದ ನಾವೇ ಧನ್ಯರು ? ಎಂದು.
ಪದಾರ್ಥ (ಕ.ಗ.ಪ)
ಕೃತಕೃತ್ಯರು - ಧನ್ಯರು
ಮೂಲ ...{Loading}...
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರ ವೇದಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ ॥39॥
೦೪೦ ಹರಿಯೊಲಿದು ಮೈದಡವಿಯೈವರ ...{Loading}...
ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗ ಮನನಾದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಯು ಪಾಂಡವರನ್ನು ಪ್ರೀತಿಯಿಂದ ಮೈದಡವಿ, ದ್ರೌಪದಿಯನ್ನು ಸಂತೈಸಿ, ಋಷಿಮುನಿಗಳನ್ನು ಉಪಚರಿಸಿ, ಧರ್ಮರಾಯನಿಗೆ ಬುದ್ಧಿಮಾತುಗಳನ್ನು ಹೇಳಿ, ‘ನಿಮಗೆ ಉತ್ತರೋತ್ತರ ಸಿದ್ಧಿ (ಮುಂದೆ ಶುಭಪ್ರದವಾದ ಸಿದ್ಧಿ)ಉಂಟಾಗುವುದು’ಎಂದು ಹೇಳಿ ದ್ವಾರಕೆಗೆ ಹೊರಟನು.
ಪದಾರ್ಥ (ಕ.ಗ.ಪ)
ಒರೆ- ಹೇಳು
ಉರುತರೋತ್ತರ - ಮುಂದೆ ಶುಭಪ್ರದವಾದ
ಮೂಲ ...{Loading}...
ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗ ಮನನಾದ ॥40॥
೦೪೧ ಬನ್ದನಾ ಭೂಪತಿ ...{Loading}...
ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥ ಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಯಣ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಪಲ್ಲಕ್ಕಿಯ ಬಲಭಾಗದಲ್ಲಿ ಧರ್ಮಜ, ಮುಂಭಾಗದಲ್ಲಿ , ಎಡಭಾಗದಲ್ಲಿ ಅರ್ಜುನ, ಹಿಂಭಾಗದಲ್ಲಿ ನಕುಲಸಹದೇವ ದ್ರೌಪದಿಯರು ಸ್ವಲ್ಪ ದೂರದವರೆಗೆ ಬಂದರು. ಶ್ರೀಕೃಷ್ಣನು ಅಲ್ಲಿಯೇ ನಿಂತು ಅವರೆಲ್ಲರನ್ನೂ ಹಿಂದಕ್ಕೆ ಕಳುಹಿಸಿ ತಾನು ರಥವೇರಿದನು.
ಪದಾರ್ಥ (ಕ.ಗ.ಪ)
ವಾಮ - ಎಡ
ಮೂಲ ...{Loading}...
ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥ ಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಯಣ ॥41॥